ಮಂಗಳೂರು: ಪಡುಬಿದ್ರಿ ಸಮೀಪದ ಫಲಿಮಾರು ಇನ್ನಾ ಗ್ರಾಮಾಂತರ ರಸ್ತೆಯಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು
ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಗೊಂಡವರನ್ನು ಅನ್ವ್ವಿತಾ(೪), ಆಯುಷ್(೬), ಹಾಗೂ ಮೋಹಿನಿ (೬೩) ಎಂದು ಹೆಸರಿಸಲಾಗಿದೆ.
ಗುಡಿಯಿಂದ ಕಳವು: ನಗರದ ಕೊಂಚಾಡಿಯ ಕೊರಗಜ್ಜನ ಗುಡಿಯಿಂದ ಬೆಳ್ಳಿಯ ಮತ್ತು ಪೂಜಾ ಸಾಮಗ್ರಿಗಳು ರಾತ್ರಿ ಕಳವಾದ ಘಟನೆ ವರದಿಯಾಗಿದೆ. ಕಳವಾದ ಸೊತ್ತಿನ ಮೌಲ್ಯವನ್ನು ಅಂದಾಜಿಸಿಲ್ಲ.
Tagged with
ವಿಟ್ಲ: ಗುರುವಾರ ಮಧ್ಯರಾತ್ರಿ ವಿಟ್ಲ ಉಕ್ಕುಡ-ದರ್ಬೆ ಎಂಬಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಮಾಣಿ ಸಮೀಪದ ಬುಡೋಳಿ-ಪೆರಾಜೆ ಅಹಮ್ಮದ್ ಎಂಬವರ ಪುತ್ರ ಮಹಮ್ಮದ್ ಶರೀಫ್ ಅವರು ತನ್ನ ಕಾರಿನಲ್ಲಿ ಪಾರ್ಸೆಲ್ ತರಲು ಕೇರಳದ ಕಣ್ಣೂರಿಗೆ ತೆರಳಿದ್ದು, ಕಾರು ಚಲಾಯಿಸುತ್ತಿದ್ದ ಸಂದರ್ಭ ಅವರು ನಿದ್ರಿಸಿದ್ದೇ ಘಟನೆ ಕಾರಣ ಎನ್ನಲಾಗುತ್ತಿದೆ.
ಶರೀಫ್ ಅವರಿಗೆ ಕೇರಳದ ವ್ಯಕ್ತಿಯೊಬ್ಬರು ವಿದೇಶದಿಂದ ಪಾರ್ಸಲ್‌ವೊಂದನ್ನು ತಂದಿದ್ದರು. ಅದನ್ನು ಪಡೆಯಲು ಶರೀಫ್ ಅವರು ತನ್ನ ಪತ್ನಿ ಬೀಫಾತಿಮಾ(೨೭) ಇಬ್ಬರು ಮಕ್ಕಳಾದ ಫಾಹಿಮ್(೫), ಮಹಮ್ಮದ್ ಝಾಕೀರ್(೧) ಹಾಗೂ ಅವರ ಅಕ್ಕನ ಮಕ್ಕಳಾದ ನಸ್ರೀನಾ(೧೮), ಮುಬೀನಾ(೧೭), ಮತ್ತು ಕಾಲೇಜು ವಿದ್ಯಾರ್ಥಿನಿ ಸುಮಯ್ಯ(೧೯) ಎಂಬವರನ್ನು ಕರೆದು ಕೇರಳದ ಕಣ್ಣೂರಿಗೆ ಹೋಗಿದ್ದರು.
ಪಾರ್ಸಲ್ ಅನ್ನು ಪಡೆದುಕೊಂಡು ತನ್ನ ಮನೆ ಬುಡೋಳಿಗೆ ಹಿಂತಿರುಗುತ್ತಿದ್ದರು. ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ವಿಟ್ಲ ಸಮೀಪದ ಉಕ್ಕುಡ-ದರ್ಬೆ ಎಂಬ ಅಪಾಯಕಾರಿ ತಿರುವಿನಲ್ಲಿ ಅವರ ಕಾರು ನಿಯಂತ್ರಣ ಕಳೆದು ರಸ್ತೆ ಬದಿಯ ಹೊಂಡಕ್ಕೆ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಧ್ಯ ರಾತ್ರಿ ಘಟನೆಯನ್ನು ನೋಡಿದ ಸ್ಥಳೀಯರು ಕಾರಿನಲ್ಲಿದ್ದ ಆರು ಮಂದಿಯನ್ನು ಮೇಲೆತ್ತಿದ್ದಾರೆ. ಐವರು ಅಪಾಯದಿಂದ ಪಾರಾಗಿದ್ದರು. ಆದರೆ ಶರೀಫ್ ಅವರು ಕಾರಿನಲ್ಲೇ ಮೃತಪಟ್ಟಿದ್ದರು. ಐವರನ್ನು ಅವರ ಮನೆಗೆ ಕರೆದುಕೊಂಡು ಹೋಗಲಾಗಿದೆ. ಮೃತ ಶರೀಫ್‌ರ ಶವವನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಶರೀಫ್ ಅವರು ಕೆಲ ವರ್ಷಗಳ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಎರಡು ವರ್ಷಗಳಿಂದ ಮಾಣಿಯ ಗಡಿಯಾರ ಎಂಬಲ್ಲಿ ಗ್ರೀನ್ ಗ್ರೋ ಎಂಬ ಹೆಸರಿನಲ್ಲಿ ಕಚೆರಿ ತೆರೆದು ಅಲ್ಲಿ ಲ್ಯಾಂಡ್ ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಕಾರಿನಲ್ಲಿ ಹೃದಯಾಘಾತ ಆರಂಭವಾಗಿ ಈ ಘಟನೆ ನಡೆದಿ ರಬಹು ದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲದ ರಾಜಕೀಯ ಹಾಗೂ ಕೆಲ ಸಂಘಟನೆಗಳ ಮುಸ್ಲಿಂ ಮುಖಂ ಡರು ಶರೀಫ್ ಅವರ ಮೃತದೇಹವನ್ನು ಸ್ವಚ್ಛಗೊಳಿಸಲು ವಿಟ್ಲದ ಮೇಗಿನಪೇಟೆ ಕೇಂದ್ರ ಜುಮಾ ಮಸೀದಿಯಲ್ಲಿ ಎಲಾ ವ್ಯವಸ್ಥೆ ಮಾಡಿದ್ದರು. ಅಲ್ಲಿ ಅವರ ಮೃತ ದೇಹವನ್ನು ಸ್ನಾನ ಮಾಡಿಸಿ ಬಳಿಕ ಅಲ್ಲಿಂದ ಅದನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ನಿದ್ರೆ ಬರುತ್ತಿದೆ ಅಂದಿದ್ದ ಶರೀಫ್
ಮೃತ ಶರೀಫ್ ಅವರು ಕಣ್ಣೂರಿನಿಂದ ಬರುತ್ತಿದ್ದಾಗ ದಾರಿ ಮಧ್ಯದಲ್ಲಿ ‘ನನಗೆ ನಿದ್ರೆ ಬರುತ್ತಿದೆ ಉಕ್ಕುಡ ಮಸೀದಿ ಬಳಿ ಗಾಡಿ ನಿಲ್ಲಿಸಿ ಸ್ವಲ್ಪ ಹೊತ್ತು ಮಲಗಿ ನಂತರ ಮುಂದಕ್ಕೆ ತೆರಳುವ ಎಂದು ಕಾರಿನಲ್ಲಿ ತಮ್ಮಲ್ಲಿ ಹೇಳಿದ್ದರು ಎಂದು ಅವರ ಮನೆಯವರು ತಿಳಿಸಿದ್ದಾರೆ. ಆದರೆ ವಿಧಿಯಾಟವೇ ಬೇರೆ ಆಗಿತ್ತು. ಮಸೀದಿ ತಲುಪುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ.
Tagged with
cnews
ಮಂಗಳೂರು: ಲಾರಿ ಇಂಜಿನ್‌ಗೆ ರಿಜಿಸ್ಟ್ರೇಶನ್ ನಂಬರ್ ಇಲ್ಲದೆ ಚಾಲನೆ ಮಾಡುತ್ತಿರುವ ಮಾಹಿತಿಯಾಧಾರದಲ್ಲಿ ಕಂಕನಾಡಿ ಪೊಲೀಸರು ಆರೋಪಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಳಚ್ಚಿಲ್ ನಿವಾಸಿ ಸುಲೈಮಾನ್ ಎಂಬಾತ ಬಂಧಿತ ಆರೋಪಿ. ಈತ ಮರ ಸಾಗಾಟದ ಲಾರಿಯಲ್ಲಿ ಚಾಲಕನಾಗಿದ್ದಾನೆ. ಕಳೆದ ಮಂಗಳವಾರ ಪಡೀಲ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಅವರು ಸುಲೇಮಾನ್ ಚಲಾಯಿಸುತ್ತಿದ್ದ ಲಾರಿಯನ್ನು ತಪಾಸಣೆ ನಡೆಸಿದ್ದರು. ಆ ಸಂದರ್ಭ ಆತನ ಲಾರಿಯಲ್ಲಿ ನಂಬರ್ ಇರಲಿಲ್ಲ. ಲಾರಿಯಲ್ಲಿದ್ದ ಮರವನ್ನು ಹಾರ್ಬರ್‌ನಲ್ಲಿ ಹಾಕಿ ವಾಪಸ್ ತರುವಂತೆ ಆದೇಶ ನೀಡಲಾಗಿತ್ತು. ಆದರೆ ಆತ ಬೇರೆ ಲಾರಿಯ ಇಂಜಿನ್ ಅಳವಡಿಸಿದ್ದು ಇದು ಕಳ್ಳತನದ್ದಾಗಿರಬಹುದು ಎಂದು ಶಂಕಿಸಿ ಆರೋಪಿಯನ್ನು ನಿನ್ನೆ ಬಂಧಿಸಿ ಲಾರಿಯನ್ನು ವಶಪಡಿಸಿಕೊಳ್ಳಲಾ ಗಿದೆ.
ತಾನು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿದ್ದ ಸಂದರ್ಭ ಲಾರಿಯ ಇಂಜಿನ್ ಸೀಝ್ ಆಗಿತ್ತು. ಆ ವೇಳೆ ಗುಜರಿ ಅಂಗಡಿಯಿಂದ ಇಂಜಿನ್ ಖರೀದಿಸಿ ಲಾರಿಗೆ ಅಳವಡಿಸಿದ್ದು ಅದಕ್ಕೆ ನಂಬರ್ ಪ್ಲೇಟ್ ಇರದ ಬಗ್ಗೆ ಗೊತ್ತಿರಲಿಲ್ಲ ಎಂದು ಆರೋಪಿ ಸುಲೈಮಾನ್ ತಿಳಿಸಿದ್ದಾನೆ.
Tagged with
cnews
ಮಂಗಳೂರು: ಬ್ಯಾಗ್ ಕಳವಾಗಿದೆ ಎಂದು ಸುಳ್ಳು ದೂರು ನೀಡಲು ಮುಂದಾಗಿದ್ದ ಮಹಿಳೆಗೆ ಪಾಂಡೇಶ್ವರ ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟ ಘಟನೆ ಗುರವಾರ ರಾತ್ರಿ ನಡೆದಿದೆ. ಗುರುವಾರ ರಾತ್ರಿ ಮಹಿಳೆಯೊಬ್ಬರು ಠಾಣೆಗೆ ಬಂದು ಬೆಲೆಬಾಳುವ ವಸ್ತುಗಳಿದ್ದ ತನ್ನ ಬ್ಯಾಗ್ ಕಳವಾಗಿದೆ ಎಂದು ದೂರು ನೀಡಲು ಮುಂದಾದರು. ಆಕೆಯ ಹೇಳಿಕೆಯ ಬಗ್ಗೆ ಅನುಮಾನಗೊಂಡ ಪೊಲೀಸರು ದೂರು ದಾಖಲಿಸಿಕೊಳ್ಳದೆ ಶುಕ್ರವಾರ
ಬೆಳಗ್ಗೆ ಬರಲು ತಿಳಿಸಿದ್ದರು. ಅದರಂತೆ ಶುಕ್ರವಾರ ಬೆಳಗ್ಗೆ ಬಂದ ಮಹಿಳೆಗೆ ತೀವೃ ವಿಚಾರಣೆಗೆ ಒಳಪಡಿಸಿದಾಗ ಮಹಿಳೆ ಸುಳ್ಳು ಹೇಳುತ್ತಿರುವುದು ಬೆಳಕಿಗೆ ಬಂದಿದೆ. ಆದುದರಿಂದ ಆಕೆಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
Tagged with
cnews
ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣ
ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂ ಧಿಸಿದಂತೆ ಶಶಿಕಲಾ ಮತ್ತಿತರ ಆರೋ ಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇಂದಿಲ್ಲಿ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ಅವರಿದ್ದ ಏಕಸದಸ್ಯ ಪೀಠ, ತಮಗೆ ಜಾಮೀನು ಕೊಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿ ಯನ್ನು ವಿಚಾರಣೆಗೆತ್ತಿ ಕೊಂಡಿದ್ದಲ್ಲದೇ ವಿದ್ಯಾರ್ಥಿಗಳ ಬದುಕಿನ ಜತೆ ಚೆಲ್ಲಾಟ ವಾಡಲು ಹೊರಟ ನಿಮ್ಮ ನಡವಳಿಕೆ ಅಕ್ಷಮ್ಯ ಎಂದಿತಲ್ಲದೇ ಜಾಮೀನು ಅರ್ಜಿಯನ್ನು ರದ್ದುಗೊ ಳಿಸಿತು.
ಮಕ್ಕಳ ಬದುಕಿನ ಜತೆ ಆಟವಾ ಡಲು ಹೋಗಿದ್ದೀರಿ. ನಿಮ್ಮ ನಡವಳಿಕೆ ಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನ ಹಾಳಾಗುತ್ತಿತ್ತು.ಇದು ಅಕ್ಷಮ್ಯ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ ನಿಮಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದ ಅವರು, ಇಂತಹ ಘಟನೆಗಳು ಪುನರಾವರ್ತನೆ ಯಾಗಬಾರದು.ಇಂತಹ ಘಟನೆಗಳು ನಡೆದರೆ ವಿದ್ಯಾರ್ಥಿಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಆಗಲಿದೆ.
ಇದಕ್ಕೂ ಮುನ್ನ ಶಶಿಕಲಾ ಮತ್ತಿತರರು,ಪಿಯೂಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ತಪ್ಪು ಮಾಡಿಲ್ಲ.ಆದರೆ ನಮ್ಮನ್ನು ವಿನಾ ಕಾರಣ ಬಂಧಿಸಲಾಗಿದೆ. ಹೀಗಾಗಿ ನಮಗೆ ಜಾಮೀನು ನೀಡಬೇಕು ಎಂದು ನ್ಯಾಯಾಲಯದೆದುರು ಮನವಿ ಮಾಡಿ ಕೊಂಡಿದ್ದರು.
ಪಿಯೂಸಿ ಪ್ರಶ್ನೆ ಪತ್ರಿಕೆ ಬಹಿರಂಗಕ್ಕೂ ನಮಗೂ ಸಂಬಂಧ ವಿಲ್ಲ. ಹೀಗಾಗಿ ಘನ ನ್ಯಾಯಾಲಯ ನಮಗೆ ಜಾಮೀನು ನೀಡಬೇಕು. ಬಿಡು ಗಡೆಯಾಗಲು ದಾರಿ ಮಾಡಿಕೊಡ ಬೇಕು ಎಂದು ಕೋರಿಕೊಂಡಿ ದ್ದರು.
ಇದಕ್ಕೂ ಮುನ್ನ ಕೆಳ ಹಂತದ ನ್ಯಾಯಾಲಯ ನಮ್ಮ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದ್ದು ಈ ಹಿನ್ನೆಲೆಯಲ್ಲಿ ಯಾವುದೇ ತಪ್ಪು ಮಾಡದ ನಮ್ಮ ಜಾಮೀನು ಅರ್ಜಿ ಯನ್ನು ಹೈಕೋಟ್ ಪುರಸ್ಕರಿಸ ಬೇಕು ಎಂದು ಅರ್ಜಿದಾರರು ನ್ಯಾಯಾ ಲಯವನ್ನು ಕೋರಿಕೊಂಡಿದ್ದರು.
Tagged with
snews
ಉಡುಪಿ: ಮದುವೆ ಆಗದ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೋರ್ವಳು ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವಾರಂಬಳ್ಳಿ ಗ್ರಾಮದ ಗಾಳದಕಟ್ಟೆ ಎಂಬಲ್ಲಿ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಗಾಳದಕಟ್ಟೆ ನಿವಾಸಿ ಸುಜಾತಾ (೨೩) ಆತ್ಮಹತ್ಯೆ ಮಾಡಿಕೊಂಡಾಕೆ. ಈ ಬಗ್ಗೆ ಮೃತಳ ಹತ್ತಿರದ ಸಂಬಂಧಿ ಪ್ರಶಾಂತ್ ನೀಡಿದ ದೂರಿನ ಆಧಾರ ದಲ್ಲಿ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews
ಮಣಿಪಾಲ: ಶುಕ್ರವಾರ ಬೆಳಗ್ಗಿನ ಜಾವ ಸುಮಾರು ೨.೧೫ ರ ಹೊತ್ತಿಗೆ ಬ್ರಹ್ಮಾವರ ರಾ.ಹೆ ೬೬ರ ಬಳಿಯ ಧರ್ಮಾವರ ಆಡಿಟೋರಿಯಂ ಬಳಿ ಬೊಲೆರೋ ಪಿಕ್ ಅಪ್ ಹಾಗೂ ಗೂಡ್ಸ್ ಲಾರಿ ನಡುವೆ ನಡೆದ ಮುಖಾ ಮುಖಿ ಡಿಕ್ಕಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೋರ್ವನಿಗೆ ಗಂಭೀರಗಾಯವಾಗಿದೆ.
ಮಹಾರಾಷ್ಟ್ರ ಕಡೆಯಿಂದ ದಾಳಿಂಬೆ ಹಣ್ಣುಗಳನ್ನು ತುಂಬಿಸಿ ಕೊಂಡು ಬರುತ್ತಿದ್ದ ಪಿಕ್ ಅಪ್ ಹಾಗೂ ಉಡುಪಿ ಕಡೆಯಿಂದ ಕುಂದಾ ಪುರ ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ್ದು, ಪಿಕ್ ಅಪ್ ನಲ್ಲಿದ್ದ ಸಹಸವಾರ ಮಹಾ ರಾಷ್ಟ್ರ ಸಾಂಗ್ಲಿಯ ಪಾಂಡುರಂಗ ಕೊಲೆಕಾರ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರ ಗಾಯ ಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಕ್ಕೆ ಗೂಡ್ಸ್ ಲಾರಿ ಚಾಲಕನ ಅಜಾಗರೂ ಕತೆಯ ವಾಹನ ಚಲಾ ವಣೆಯ ಕಾರಣ ಎನ್ನಲಾಗಿದೆ.
Tagged with
cnews