ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗ ಳೂರು-ಮಣಿಪಾಲ ನಡುವೆ ಆರಂಭಿಸಿ ರುವ ವೊಲ್ವೋ ಬಸ್ ಸೇವೆ ಅತೀ ಕಡಿಮೆ ಅವಧಿಯಲ್ಲೇ ಜನರ ಮನ ಗೆದ್ದಿದೆ. ಅವಳಿ ಜಿಲ್ಲೆಗಳ ಜನರಿಗೆ ಆಪ್ತವಾಗಿರುವ ವೊಲ್ವೋ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸಾರಿಗೆ ಸಚಿವರು ಕ್ರಮ ಕೈಗೊಳ್ಳ ಬೇಕು. ಈಗ ಸಂಚರಿಸುತ್ತಿರುವ ಬೆರಳೆಣಿಕೆಯ ವೊಲ್ವೋ ಬಸ್‌ಗಳಲ್ಲಿ ಪ್ರಯಾ ಣಿಕರು ತುಂಬಿ ತುಳುಕುತ್ತಿರುತ್ತಾರೆ. ಕುಳಿತುಕೊಳ್ಳಲು ಸೀಟ್‌ಗಳು ಖಾಲಿ ಯಿರು ವುದಿಲ್ಲ. ಕೆಲವು ಸಂದರ್ಭಗಳಲ್ಲಿ ಮಂಗಳೂರಿನಿಂದ ಮಣಿಪಾಲದವರೆಗೂ ನಿಂತು ಕೊಂಡೇ ಪ್ರಯಾಣಿಸ ಬೇಕಾ ಗುತ್ತದೆ. ಆದ್ದರಿಂದ ಜನರ ಸಮಸ್ಯೆಯನ್ನು ಮನಗಂಡು ಈ ರೂಟ್‌ನಲ್ಲಿ ಹೆಚ್ಚುವರಿ ವೊಲ್ವೋ ಬಸ್ ಸೇವೆಯನ್ನು ಶೀಘ್ರವೇ ಆರಂಭಿ ಸಬೇಕು. ಜಿಲ್ಲೆಯಲ್ಲಿ ಸರ ಕಾರಿ ಸಿಟಿ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಖಾಸಗಿ ಬಸ್ ಮಾಲಕರ ಹಾರಾಟವನ್ನು ನಿಯಂತ್ರಿಸಬೇಕಾಗಿ ವಿನಂತಿ.
ಆರ್.ಎಸ್, ಸುರತ್ಕಲ್
ಬೆಟ್ ಕಟ್ಟಿ ಸಾವು ಆಹ್ವಾನಿಸದಿರಿ
ಕ್ರಿಕೆಟ್ ಮ್ಯಾಚ್ ಎಂದಾಕ್ಷಣ ಯುವಕರಿಗೆ ನೆನಪಾಗುವುದು ಬೆಟ್ಟಿಂಗ್. ಯಾರೋ ಕೋಟ್ಯಂತರ ರೂ. ಹಣ ಪಡೆದು ಆಡುತ್ತಾರೆ, ಅದನ್ನು ನೋಡಿ ಆನಂದ ಪಡುವುದನ್ನು ಬಿಟ್ಟು ಎರಡು ತಂಡಗಳಲ್ಲಿ ಒಂದನ್ನು ಆಯ್ದು ಬೆಟ್ ಕಟ್ಟುವ ಹುಚ್ಚು ಜನರಿಗೆ ಯಾಕೆ ಬಂತೋ ತಿಳಿಯುತ್ತಿಲ್ಲ. ಯಾಕೆಂದರೆ ಇಂಥ ಕೆಟ್ಟ ಅಭ್ಯಾಸದಿಂದ ಅವೆಷ್ಟೋ ಮಂದಿ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಬೆಟ್ಟಿಂಗ್ ದಂಧೆ ಜುಗಾರಿ ದಂಧೆಗಿಂತಲೂ ಹೊಲಸಾಗಿದೆ. ಇಲ್ಲಿ ಹಣವೇ ಪ್ರಧಾನ. ಸಾಕಷ್ಟು ಹಣ ಇದ್ದರೂ ಅದನ್ನು ಬೆಟ್ಟಿಂಗ್‌ನಲ್ಲಿ ಕಳೆದು ಕೊಳ್ಳುವುದು ಮೂರ್ಖತನವೇ ಸರಿ. ಹೀಗಾಗಿ ಯುವಜನರೇ, ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಿ ಸಾವನ್ನು ಆಹ್ವಾನಿಸದಿರಿ.
ಭರತೇಶ್, ಗಂಜಿಮಠ
ಕಟೀಲಿನಲ್ಲಿ ಟೂರಿಸ್ಟ್ ವಾಹನಕ್ಕೆ ಪ್ರತ್ಯೇಕ ಜಾಗ ಅಗತ್ಯ
ಇತಿಹಾಸ ಪ್ರಸಿದ್ಧ ಕಟೀಲು ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ಕೊಡುತ್ತಾರೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಇಲ್ಲಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇಲ್ಲಿನ ಮುಖ್ಯ ಸಮಸ್ಯೆಯೇನೆಂದರೆ ಪ್ರವಾಸಿ ಗರ ವಾಹನಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಹೊಸದಾಗಿ ನಿರ್ಮಾಣವಾಗಿರುವ ಬಸ್ ತಂಗು ದಾಣಗಳಲ್ಲೇ ಇವು ಬೀಡು ಬಿಟ್ಟಿರುತ್ತವೆ. ಇದರಿಂದ ಮಂಗಳೂರು ಮತ್ತು ಕಿನ್ನಿಗೋಳಿ ಕಡೆ ಸಾಗುವ ಬಸ್‌ಗಳು ಬಸ್ ತಂಗುದಾಣದೊಳಕ್ಕೆ ಪ್ರವೇಶಿಸದೆ ರಸ್ತೆ ಬದಿಯಲ್ಲೇ ನಿಂತು ಪ್ರಯಾ ಣಿಕರನ್ನು ತುಂಬಿಸಿಕೊಂಡು ಮುಂದು ವರಿಯುತ್ತವೆ. ಬಸ್ ಪ್ರಯಾಣಿಕರು ಸುಸಜ್ಜಿತ ಬಸ್ ತಂಗುದಾಣವಿದ್ದರೂ ಬಿಸಿಲು-ಮಳೆಗೆ ರಸ್ತೆ ಬದಿ ನಿಂತು ಬಸ್ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು. ಕಟೀಲಿಗೆ ಭೇಟಿ ಕೊಡುವ ಭಕ್ತರು ಮಕ್ಕಳನ್ನೆತ್ತಿಕೊಂಡು ರಸ್ತೆಯಲ್ಲಿ ಬಸ್ ಕಾಯುವುದನ್ನು ತಪ್ಪಿಸಬೇಕಾಗಿ ವಿನಂತಿ.
ರಾಮಕೃಷ್ಣ, ಕಿನ್ನಿಗೋಳಿ
ರಸ್ತೆಗಳ ಅಭಿವೃದ್ಧಿ ಯಾವಾಗ?
ಪ್ರಪಂಚದ ಯಾವ ದೇಶದಲ್ಲಿಯೂ ಇಲ್ಲಿಯಷ್ಟು ಕೆಟ್ಟ ರಸ್ತೆಗಳು ಇರಲಿಕ್ಕಿಲ್ಲ. ಬುದ್ಧಿವಂತರ ಜಿಲ್ಲೆಯ ಮುಖ್ಯಮಂತ್ರಿ ಸದಾನಂದ ಗೌಡರು ಒಮ್ಮೆ ಬೆಳ್ತಂಗಡಿ-ಚಾರ್ಮಾಡಿ ರಸ್ತೆಯಾಗಿ ಪ್ರಯಾಣ ಮಾಡಬೇಕು. ಇಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ತಿಳಿಯಬೇಕು. ನಿಜಕ್ಕೂ ಹೆದ್ದಾರಿ ಇಲಾಖೆ ಸೋಮಾರಿ, ಪುಂಡರ ಅಡ್ಡೆಯೇನೋ ಎಂಬಂತೆ ಭಾಸವಾಗುತ್ತಿದೆ. ಚಾರ್ಮಡಿಯಂತಹ ದುರ್ಗಮ ರಸ್ತೆಗಳಲ್ಲಿ ಪ್ರಯಾಣ ಮಾಡುವುದೆಂದರೆ ಜೀವ ಕೈಯ್ಯಲ್ಲಿ ಬರುತ್ತದೆ. ಇದಕ್ಕೆ ಕಾರಣ ಇನ್ನೂ ಬ್ರಿಟಿಷರ ಕಾಲದಲ್ಲೇ ಇರುವ ರಸ್ತೆಗಳು. ಬ್ರಿಟಿಷರು ಬಿಟ್ಟು ಹೋಗಿ ನಮ್ಮನ್ನು ಇಷ್ಟು ವರ್ಷಗಳಾದರೂ ನಮ್ಮ ಆಡಳಿತಗಾರರಿಗೆ ನೆಟ್ಟಗೆ ರಸ್ತೆ ಮಾಡಲೂ ಇನ್ನೂ ಸಾಧ್ಯವಾಗಿಲ್ಲ ಎಂದರೆ ನಾಚಿಕೆ ಪಡಬೇಕು. ಚಾರ್ಮಾಡಿಯ ರಸಗತೆಹಳನ್ನೇ ಗಮನಿಸಿ, ಅಲ್ಲಲ್ಲಿ ತೇಪೆ ಹಾಕಿದ್ದು ಮಳೆಗಾಲ ಆರಂಭವಾಗುವ ಮೊದಲೇ ಎದ್ದು ಹೋಗುತ್ತಿದೆ. ಚಾರ್ಮಾಡಿಯಾಗಿ ಧರ್ಮಸ್ಥಳಕ್ಕೆ ಬರುವ ಯಾತ್ರಿಗಳ ಸಂಖ್ಯೆ ಅನೇಕ. ಧರ್ಮಸ್ಥಳದ ಧರ್ಮಾಧಿಕಾರಿಗಳು ಆಸಕ್ತಿ ವಹಿಸಿದ್ದರೆ ರಸ್ತೆ ಸರಿಯಾಗಬಹುದಿತ್ತು. ಆದರೆ ಅವರು ಈ ಬಗ್ಗೆ ಯಾವುದೇ ಆಸಕ್ತಿ ತೋರಿಸದಿರುವುದು ವಿಷಾದನೀಯ. ಇಕ್ಕಟ್ಟಾದ ರಸ್ತೆಯನ್ನು ಅಗಲ ಗೊಳಿಸಿ ಕಂದರಗಳಿಗೆ ಬೇಲಿ ಹಾಕುವ ಮೂಲಕ ಇಲ್ಲಿ ಸುರಕ್ಷಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳಬೇಕು. ಚಾರ್ಮಾಡಿ ಘಾಟಿ ರಸ್ತೆಯನ್ನು ಅಗಲಗೊಳಿಸುವ ಮೂಲಕ ಇಲ್ಲಿ ವಾಹನಗಳ ಜನದಟ್ಟಣೆಯನ್ನು ನಿವಾರಿಸಬೇಕು. ಸರಕಾರ ಕೂಡಲೇ ಇದಕ್ಕೆ ಮುಂದಾಗಲಿ. ಜಿಲ್ಲೆಯವರೇ ಆದ ಸದಾನಂದ ಗೌಡರು ಕೂಡಲೇ ಚಾರ್ಮಾಡಿ ಘಾಟಿ ರಸ್ತೆಯ ಬಗ್ಗೆ ಆಸಕ್ತಿ ವಹಿಸಿದರೆ ಈ ಭಾಗದಲ್ಲಿ ಸಂಚರಿಸುವ ಜನರು ಸದಾ ಕಾಲ ನೆನಪಿಟ್ಟುಕೊಂಡಾರು.
ಚಂದ್ರ ಚಾರ್ಮಾಡಿ
ಸರಳ ಮದುವೆ ಒಳ್ಳೆಯ ಬೆಳವಣಿಗೆ
ಅಕ್ಷಯ ತದಿಗೆಯ ಶುಭ ಸಂದರ್ಭದಲ್ಲಿ ಕಟೀಲು ದೇವಸ್ಥಾನ ಹಾಗೂ ಇತರೆಡೆಗಳಲ್ಲಿ ಸರಳ ಮದುವೆ ಕಾರ್ಯಕ್ರಮಗಳು ನಡೆದವು. ನೂರಾರು ಮಂದಿ ಜಾತಿ ಬೇಧವಿಲ್ಲದೆ ದೈವೀಶಕ್ತಿಯ ಸನ್ನಿಧಾನದಲ್ಲಿ ವಿವಾಹ ಬಂಧನಕ್ಕೊಳಗಾದರು. ಇಂದಿನ ಆಧು ನಿಕ ಜಗತ್ತಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ. ಯಾಕೆಂದರೆ ಇಂದಿನ ಮದುವೆ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಾರೆ. ಒಬ್ಬರು ಇನ್ನೊ ಬ್ಬರಿಗಿಂತ ಅದ್ಧೂರಿಯಾಗಿ ಮದುವೆ ನಡೆಯಬೇಕು ಎಂಬ ಉದ್ದೇಶದಿಂದ ಹಣದ ಬಗ್ಗೆ ಚಿಂತಿಸದೆ ಧಾರಾಳತನ ತೋರಿಸುತ್ತಾರೆ. ಆದರೆ ಸಮಾಜಕ್ಕೆ ಏನಾದರೂ ಒಳಿತು ಮಾಡುವಲ್ಲಿ ಮಾತ್ರ ಹಿಂದೆ-ಮುಂದೆ ನೋಡು ತ್ತಾರೆ. ಹೀಗಿರುವಾಗ ಜನರು ಮತ್ತೆ ಸರಳ ಮದುವೆಯತ್ತ ಮುಖ ಮಾಡಿ ರುವುದು ಒಳ್ಳೆಯ ಬೆಳವಣಿಗೆಯಾ ಗಿದೆ. ಸಾಮಾಜಿಕ ಸಂಘಟನೆಗಳು ಸರಳ ಮದುವೆಗೆ ಹೆಚ್ಚಿನ ಒತ್ತು ಕೊಡಲಿ.
ಲಕ್ಷ್ಮೀಶ, ಕಲ್ಲಾಪು
ಹೆದ್ದಾರಿ ಸಂಚಾರ ಪ್ರಾಣಕ್ಕೆ ಸಂಚಕಾರ
ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ. ಇದಕ್ಕೆ ಕಾರಣ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಪೂರ್ತಿಗೊಳ್ಳದೇ ಇರುವುದು. ಸುರತ್ಕಲ್, ಕೂಳೂರಿನಲ್ಲಿ ಹಲವು ವರ್ಷಗಳ ಕಾಲ ನೆನೆಗು ದಿಗೆ ಬಿದ್ದಿದ್ದ ಫ್ಲೈ ಓವರ್ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಗಲಿಬಿಲಿ ಸೃಷ್ಟಿಸುತ್ತಿದೆ. ಜನರು ಹೆದ್ದಾರಿ ಚತುಷ್ಪಥವಾದರೆ ನೆಮ್ಮದಿಯಿಂದ ಸಂಚಾರ ನಡೆಸಬಹುದು ಎಂದು ನಂಬಿ ದ್ದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಜಿಲ್ಲೆಯ ಸಚಿವರು, ಶಾಸಕರು ಜನರ ಸಮಸ್ಯೆಯ ಕಡೆ ಗಮನ ಕೊಡುತ್ತಿಲ್ಲ. ರಸ್ತೆ ಅಪಘಾ ತಗಳಿಗೆ ತಡೆಯೇ ಇಲ್ಲದಂತಾಗಿದೆ. ಹೆದ್ದಾರಿಯನ್ನು ಮಳೆಗಾ ಲಕ್ಕೂ ಮುನ್ನ ವ್ಯವಸ್ಥೆ ಮಾಡದಿದ್ದಲ್ಲಿ ಅನಾಹುತಗಳ ಸರ ಮಾಲೆಯೇ ಹೆಚ್ಚುವ ಭೀತಿಯಿದೆ.
ರಾಜೇಶ್, ಕೂಳೂರು
ಹಿಂದೂ ಸಂಸ್ಕೃತಿಯನ್ನು ಉಳಿಸುವವರಾರು?
ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಹಿಂದೂ ಹೆಣ್ಮಕ್ಕಳಿಗೆ ಜಡೆ ಕಟ್ಟುವಂತಿಲ್ಲ, ಕೈಗೆ ಬಳೆ ಧರಿಸುವಂತಿಲ್ಲ, ಹೂವು ಮುಡಿಯುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ. ಇದು ಅಲ್ಲಿನ ನಿಯಮಾವಳಿಗಳಲ್ಲಿ ಒಂದು. ಇದನ್ನು ತಪ್ಪಲ್ಲ ಎಂದು ಒಪ್ಪಿಕೊಳ್ಳಬಹುದು. ಆದರೆ ಇದೇ ನಿಯಮಗಳು ಬೆಳೆಯುತ್ತಾ ಮಕ್ಕಳ ಮೇಲೆ ಗಾಢ ಪರಿಣಾಮವನ್ನು ಬೀರುತ್ತವೆ. ಹೆಣ್ಮಕ್ಕಳು ನಮ್ಮ ಸಂಪ್ರದಾಯಬದ್ಧ ಆಚರಣೆ, ನಂಬಿಕೆಗಳನ್ನು ಮರೆಯುತ್ತಾ ಸಾಗುತ್ತಾರೆ.
ಹಣೆಗೆ ತಿಲಕ, ಜಡೆಗೆ ಹೂವು, ಬಳೆ ಇವೆಲ್ಲ ಹಿಂದೂ ಸಂಸ್ಕೃತಿಯ ಚಿಹ್ನೆಗಳು. ಹಾಗಿದ್ದೂ ಇವೆಲ್ಲವನ್ನು ಧರಿಸಲು ಅವಕಾಶ ಕೊಡಿ ಎಂದು ಹಿಂದೂ ಬಾಂಧವರು ಎಲ್ಲೂ ಹೋರಾಟ ಮಾಡಿಲ್ಲ. ಇದು ನಮ್ಮ ಧಾರ್ಮಿಕ ವ್ಯವಸ್ಥೆ ಎಷ್ಟು ಶಿಥಿಲವಾಗಿದೆ ಎನ್ನುವುದರ ಸಂಕೇತವಲ್ಲವೇ? ಸಂಸ್ಕೃತಿ ರಕ್ಷಣೆ ಎಂದು ಹಿಂದೂ ಸಂಘಟನೆಗಳು ಬೊಬ್ಬೆ ಹೊಡೆದರೆ ಸಾಲದು. ನಿಜವಾದ ಸಂಸ್ಕೃತಿಯನ್ನು ರಕ್ಷಿಸಬೇಕಾದವರು ಹೆಣ್ಮಕ್ಕಳೇ ಆಗಿದ್ದಾರೆ. ಅವರನ್ನು ಈ ನಿಟ್ಟಿಲ್ಲಿ ಕಾಲಕಾಲಕ್ಕೆ ಎಚ್ಚರಿಸುವುದು ಅತ್ಯವಶ್ಯ.
ಕಿರಣ್‌ಕುಮಾರ್, ಪುತ್ತೂರು
ಕೋಡಿಕಲ್ ಕ್ರಾಸ್‌ನಲ್ಲಿ ಅಪಘಾತ ಭಯ ನಿವಾರಿಸಿ
ರಾಷ್ಟ್ರೀಯ ಹೆದ್ದಾರಿಯ ಕೊಟ್ಟಾರ ಚೌಕಿಯಿಂದ ಮುಂದಕ್ಕೆ ಕೋಡಿಕಲ್ ಕ್ರಾಸ್‌ನಲ್ಲಿ ವಾಹನಗಳು ಬೇಕಾಬಿಟ್ಟಿ ತಿರುವು ಪಡೆದು ಸಾಗುವುದರಿಂದ ಅಪಘಾತ ಭಯ ಸಾಮಾನ್ಯವಾಗಿದೆ. ಕೊಟ್ಟಾರ ಮತ್ತು ಕುಂಟಿಕಾನ ಎರಡೂ ಕಡೆಯಿಂದ ಸಾಗಿಬರುವ ವಾಹನಗಳು ಚೌಕಿ ಯಿಂದ ಮುಂದುವರಿದು ಕೋಡಿ ಕಲ್ ಬಳಿ ಪಥವನ್ನು ಬದಲಿಸಿ ಮುಂದುವರಿಯುತ್ತದೆ. ಈ ವೇಳೆ ಇಲ್ಲಿ ಪ್ರಯಾಣಿಕರನ್ನು ಹತ್ತಿಸಲು ಸಿಟಿ, ಸರ್ವಿಸ್ ಬಸ್‌ಗಳು ರಸ್ತೆ ಮಧ್ಯೆಯೇ ನಿಲ್ಲುತ್ತವೆ. ಪ್ರಯಾಣಿ ಕರು ಇಳಿದು ರಸ್ತೆಯ ಮಧ್ಯದಲ್ಲೇ ಬಾಕಿಯಾಗ ಬೇಕಾಗುತ್ತದೆ. ಯಾಕೆಂದರೆ ಕುಂಟಿಕಾನ ಕಡೆಯಿಂದ ಆರಂಭಗೊಳ್ಳುವ ಫ್ಲೈ ಓವರ್‌ನಲ್ಲಿ ವಾಹನಗಳು ಸಾಗಿ ಬಂದು ಇಲ್ಲಿಯೇ ಕೆಳಕ್ಕೆ ಇಳಿಯುತ್ತದೆ.
ಈ ಎಲ್ಲಾ ಕಾರಣಗಳಿಂದ ಕೋಡಿಕಲ್ ಕ್ರಾಸ್ ಅಪಘಾತ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ತಿರುವು ಪಡೆಯುವಾಗ ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅವೈeನಿಕವಾಗಿ ನಿರ್ಮಾಣ ಗೊಂಡಿರುವ ಹೆದ್ದಾರಿ ಕಾಮಗಾರಿ, ಫ್ಲೈ ಓವರ್‌ಗಳಿಂದ ಹೆದ್ದಾರಿಯಲ್ಲಿ ಸಂಚರಿಸುವ ಸವಾರರು ಭಯದಿಂದಲೇ ಸಂಚರಿಸ ಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಅಲ್ಲಲ್ಲಿ ಟ್ರಾಫಿಕ್ ಪೊಲೀಸರನ್ನು ಇಲ್ಲವೇ ಸೂಕ್ತ ಚೂಚನಾಫಲಕಗಳನ್ನು ಮತ್ತು ಸಿ.ಸಿ. ಕ್ಯಾಮರಾವನ್ನು ಇರಿಸುವುದರಿಂದ ಇಲ್ಲಿ ಸಂಚರಿಸುವವರು ಒಂದಿಷ್ಟು ಎಚ್ಚರಿಕೆ ವಹಿಸಬಹುದೇನೋ.
ಸುಮಾ, ಕೋಡಿಕಲ್
ಗೋವನ್ನು ಮಾರುವಿರೇಕೆ?
ಗೋವನ್ನು ಸಾಕಿ, ಸಲಹಿ ಅದರಿಂದ ಎಲ್ಲ ಪ್ರಯೋಜನಗಳನ್ನು ಪಡೆದಾದ ಬಳಿಕ ಕಟುಕರಿಗೆ ಮಾರಾಟ ಮಾಡುತ್ತಾರೆ. ಕೃಷಿ ಕುಟುಂಬಗಳು ತಮ್ಮ ಅವಶ್ಯ ಕತೆಗಳಿ ಗಾಗಿ ಸಾಕಿದ ಜಾನು ವಾರುಗಳನ್ನು ಬೇಸಿಗೆ ಸಮಯದಲ್ಲಿ ಸಾಕಲು ಕಷ್ಟ ವಾಗಿ ಮಾರಾಟ ಮಾಡುತ್ತಾರೆ. ಅದರ ಬದಲು ಗೋವುಗಳನ್ನು ಸಾಕಿ ಅದರ ಸೆಗಣಿ, ಗೋಮೂ ತ್ರವನ್ನು ಬಳಕೆ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸಬಹುದು. ಇದನ್ನು ಕೃಷಿಕರಿಗೆ ತಿಳಿಸಲು ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳು ವುದು ಉತ್ತಮ. ಗೋವನ್ನು ಪ್ರೀತಿ ಯಿಂದ ಸಾಕಿ ಕೊನೆಗೆ ಮಾಂಸದ ಉದ್ದೇಶಕ್ಕಾಗಿ ಮಾರು ವುದು ಪಾಪದ ಕೆಲಸವಲ್ಲವೇ? ಈ ಬಗ್ಗೆ ಹಿಂದೂ ಸಂಘಟನೆಗಳು ಜನಾಂ ದೋಲನ ನಡೆಸಲಿ.
ರಾಘವೇಂದ್ರ, ಕಾವೂರು
ಹೋರಾಟಕ್ಕೆ ಜಯ
ಜನ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳ ಗಾಗಿದ್ದ ಕಾಲೇಜು ರಸ್ತೆಯ ಸಮಸ್ಯೆಗೆ ಪ್ರತಿಭಟನೆ, ರ‍್ಯಾಲಿ ಹಾಗೂ ಕಾರ್ಡ್ ಚಳವಳಿ ನಡೆಸಿ ಇಲಾಖೆಯ ಪ್ರತಿ ಯೊಬ್ಬ ಅಧಿಕಾರಿಗೂ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಿಸಿ ಮುಟ್ಟಿ ಸುವಲ್ಲಿ ಯಶಸ್ವಿಯಾದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಕಡಬ ಗ್ರಾಮ ಸಮಿತಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಎಲ್ಲ ಸಂಘ ಟನೆಗಳ ಹಾಗೆ ಹೆಸರಿಗಾಗಿ ಪ್ರತಿಭಟನೆ ನಡೆಸಲಿಲ್ಲ. ಇನ್ನು ಉಳಿದ ಭಾಗವನ್ನು ಡಾಮರೀಕರಣ ಗೊಳಿಸಲು ಅನುದಾನ ಇರಿಸಿಲ್ಲ. ಜಿ.ಪಂ. ಸದಸ್ಯರು ಮೂಲ ಭೂತ ಸೌಕರ್ಯ ಒದಗಿಸುವ ಬಗ್ಗೆ ಹೆಚ್ಚಿನ ಗಮನ ಹರಿಸ ಬೇಕು.
ಕಾರ್ಯಕರ್ತರು, ಎಸ್‌ಡಿಪಿಐ, ಕಡಬ
ಕಿವುಡುತನದಿಂದ ಮುಕ್ತಿಗೊಳಿಸಿ
ಸುರತ್ಕಲ್ ಸಮೀಪದ ಮಂಗಳಪೇಟೆ ಮಸೀದಿಯಲ್ಲಿ ದಿನಂಪ್ರತೀ ನಡೆಯುವ ಪ್ರಾರ್ಥನೆಯಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ. ದೇವರು ಎಲ್ಲರಿಗೆ ಒಂದೇ ದೇವನೊಬ್ಬನೇ ನಾಮ ಹಲವು ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿನ ಮಸೀದಿಯಲ್ಲಿ ಬೆಳಿಗ್ಗೆ ರಾತ್ರಿಯ ವೇಳೆ ಜೋರಾಗಿ ಇಡು ವಂತಹ ಸೌಂಡ್ ಬಾಕ್ಸ್‌ನಿಂದಾಗಿ ಪರೀಕ್ಷೆಗೆ ಓದಲು ದಿನಂಪ್ರತಿ ತೊಂದರೆ ಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪ್ರಾರ್ಥನೆಯ ಸ್ವರಭಾರ ತುಂಬಾ ಹೆಚ್ಚಳವಾಗಿದ್ದು ಈ ಮಸೀ ದಿಯ ಆಸುಪಾಸಿನ ನಿವಾಸಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ನಿಮ್ಮಲ್ಲಿ ವಿನಂತಿಸುವುದೇನೆಂದರೆ ನಮಗಾ ಗುತ್ತಿರುವ ತೊಂದರೆಯಿಂದ ಮುಕ್ತಿಗೊಳಿಸಿ ಪರೀಕ್ಷೆಗೆ ಓದಲು ಸಹಕರಿಸಿ. ಮೌನದಲ್ಲಿ, ಪ್ರೀತಿಯಲ್ಲಿ ಪ್ರಾರ್ಥನೆಯನ್ನು ಮಾಡಿ ದರೆ ದೇವರು ನಮ್ಮ ಮನಸ್ಸನ್ನು ಸೇರುವನು.
ನೊಂದ ಗ್ರಾಮಸ್ಥರು, ಮಂಗಳಪೇಟೆ