ದಸಂಸ ಮುಖಂಡನಿಗೆ ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆ

Posted by JAYAKIRANA Kirana on Thursday, 26 April 2012 | 0 comments | Leave a comment...

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ರಾಜ್ಯ ಮುಖಂಡ ಉದಯಕುಮಾರ್ ತಲ್ಲೂರು ಇವರ ಹಣೆಗೆ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮದನ್ ಗಾಂವ್ಕರ್ ಅವರು ತಮ್ಮ ಸರ್ವಿಸ್ ಪಿಸ್ತೂಲ್‌ನ್ನು ಗುರಿ ಇರಿಸಿ ಕೊಲೆ ಮಾಡು ವುದಾಗಿ ಬೆದರಿಕೆ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
 ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಡಾ.ಬೋರಲಿಂಗಯ್ಯ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿ ಸಿದಂತೆ ನಡೆದ ಮೊದಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕುಂದು ಕೊರತೆ ಸಭೆಯಲ್ಲಿ ಸ್ವತಃ ಉದಯಕುಮಾರ್ ತಲ್ಲೂರು ಅವರೇ ಈ ವಿಷಯವನ್ನು ಬಹಿರಂಗಪಡಿಸಿದರು.
ಮದನ್ ಗಾಂವ್ಕರ್ ಅವರು ಹಣೆಗೆ ಪಿಸ್ತೂಲ್ ಇಟ್ಟು ಮುಗಿಸಿಬಿಡುವುದಾಗಿ ಬೆದರಿಕೆ ಹಾಕಿದರು. ಮಾತ್ರವಲ್ಲ, ಹಳೆಯ ಸಣ್ಣ ಪ್ರಕರಣವೊಂದನ್ನು ಮುಂದಿಟ್ಟುಕೊಂಡು ಪ್ರತಿ ಬಾರಿಯೂ ತನ್ನ ಮೇಲೆ ಸೆಕ್ಷನ್ ೧೦೬ನ್ನು ದಾಖಲಿಸಿ ತಹಶೀಲ್ದಾರ್ ಮುಂದೆ ಹಾಜರುಪಡಿಸುತ್ತಾ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದೂ ಆರೋಪಿಸಿದರು.
ಈ ವಿಷಯವನ್ನು ಉದಯಕುಮಾರ್ ತಲ್ಲೂರು ಪ್ರಸ್ತಾಪಿಸಿದ ಬಳಿಕ ದಸಂಸದ ಎಲ್ಲಾ ಬಣಗಳ ನಾಯಕರೂ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮದನ ಗಾಂವ್ಕರ್ ಅವರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಮದನ್ ಗಾಂವ್ಕರ್ ವಿರುದ್ದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಎಸ್‌ಪಿ ಬೋರಲಿಂಗಯ್ಯ ಅವರನ್ನು ಒತ್ತಾಯಿ ಸಿದರು.
ಇತ್ತೀಚೆಗಿನ ಕೆಲವು ತಿಂಗಳುಗಳಿಂದ ಜಿಲ್ಲೆ ಯಾದ್ಯಂತ ಅಲ್ಲಲ್ಲಿ ಇಸ್ಪೀಟ್ ಕ್ಲಬ್‌ಗಳು ತಲೆ ಎತ್ತಿವೆ. ಇವುಗಳನ್ನು ಮಟ್ಟ ಹಾಕಬೇಕೆಂದು ಆಗ್ರಹಿಸಿದ ದಸಂಸ ನಾಯಕ ಜಯನ್ ಮಲ್ಪೆ ಅವರು, ದಲಿತರ ಕುಂದು ಕೊರತೆ ಸಭೆಗೆ ಪತ್ರಕರ್ತರನ್ನು ಹಿಂದೆ ಆಹ್ವಾನಿಸಲಾ ಗುತ್ತಿತ್ತು. ಬಳಿಕ ಕ್ಷುಲ್ಲಕ ಕಾರಣಕ್ಕೆ ಸಭೆಗೆ ಪತ್ರಕರ್ತರು ಪ್ರವೇಶ ಮಾಡುವುದನ್ನು ನಿಷೇಧಿಸಲಾ ಯಿತು. ಇದು ಸರಿಯಲ್ಲ. ಈ ಬಗ್ಗೆ ಚರ್ಚೆ ನಡೆದು ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ಪಡೆದುಕೊಂಡು ಸಕರಾ ತ್ಮಕವಾಗಿ ಸ್ಪಂದಿಸಬೇಕು. ಅಧಿಕಾರಿಗಳು ಇನ್ನಾದರೂ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ತಿಂಗಳಿನಿಂದ ದಲಿತರು ಕೊಂದೆ ಕೊರತೆ ಸಭೆಯಲ್ಲಿ ಭಾಗವಹಿಸುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು. ಕುಂದಾಪುರದ ವಕೀಲರಾದ ಮಂಜುನಾಥ ಗಿಳಿಯಾರು, ದಸಂಸ ಅಂಬೇಡ್ಕರ್ ವಾದದ ಮುಖಂಡರಾದ ಜಯನ್ ಮಲ್ಪೆ, ಸುಂದರ ಮಾಸ್ತಾರ್, ಸುಂದರ ಗುಜ್ಜರಬೆಟ್ಟು, ಮಂಜುನಾಥ ಗಿಳಿಯಾರು, ಮುಂತಾದವರು ಜಯನ್ ಮಲ್ಪೆ ಅವರ ಒತ್ತಾಯಕ್ಕೆ ಸಹಮತ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಪತ್ರಕರ್ತರನ್ನು ಆಮಂತ್ರಿಸುವುದಾಗಿ ಈ ಸಂದರ್ಭದಲ್ಲಿ ಎಸ್ಪಿಯವರು ಭರವಸೆ ನೀಡಿದರು.
 ದಲಿತ ಮುಖಂಡ ಪರಮೇಶ್ವರ ಉಪ್ಪೂರು ವಿರುದ್ದ ದೂರು ನೀಡಿ ಕೇಸು ದಾಖಲಿಸಿದ್ದರು. ಆ ಬಳಿಕ ಆ ಪ್ರಕರಣದ ಆರೋಪಿಗಳೇ ಸ್ವತಃ ಠಾಣೆಗೆ ಆಗಮಿಸಿ ನಮ್ಮ ವಿರುದ್ದ ಮರು ದೂರು ನೀಡಿದ್ದರು. ಈ ಸಂದರ್ಭದಲ್ಲಿ ದಸಂಸ ಮುಖಂಡ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸದೆ ಅವರನ್ನು ಬಿಡುಗಡೆಗೊಳಿಸಿದರು. ಇದೆಂಥ ಕ್ರಮ ಎಂದು ಸುಂದರ ಮಾಸ್ತರ್ ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿ ಮಾತನಾಡಿದ ಎಸ್ಪಿಯವರು ಮೊಕದ್ದಮೆ ದಾಖಲಿಸಿದ ಕೂಡಲೇ ಆರೋಪಿಗಳನ್ನು ಬಂಧಿಸಬೇಕೆಂದೇನೂ ಇಲ್ಲ. ಪ್ರಕರಣದ ಗಂಭೀರತೆ ಇತ್ಯಾದಿಗಳನ್ನು ನೋಡಿಕೊಂಡು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸ್ಪಿಯವರ ಈ ರೀತಿಯ ಉತ್ತರಕ್ಕೆ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
 ಅಂಬೇಡ್ಕರ್ ಜಯಂತಿಯಂದೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರಗರಿಂದ ಅಜಲು ಆಚರಿಸುವ ಮೂಲಕ ಅಸ್ಪೃಶ್ಯತೆಯನ್ನು ಆಚರಿಸಲಾಗಿದೆ. ಈ ಮೂಲಕ ಕರ್ನಾಟಕ ಅಜಲು ನಿರ್ಮೂಲನಾ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಕೊರಗ ಸಂಘಟನೆಯ ನಾಯಕರು ಸಭೆಯ ಗಮನಕ್ಕೆ ತಂದರು. ಎಸ್ಪಿಯವರಿಗೆ ಅಜಲು ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವ ಕಾರಣಕ್ಕೆ ಕೊರಗ ನಾಯಕರ ದೂರಿಗೆ ಸರಿಯಾಗಿ ಸ್ಪಂದಿಸಲು ಎಸ್ಪಿಯವರು ವಿಫಲರಾದರು.
 ಎಸ್ಪಿ ಡಾ.ಬೋರಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಹಾಗೂ ಕುಂದಾಪುರ ಡಿವೈಎಸ್ಪಿ ಜಯಂತ ವಿ.ಶೆಟ್ಟಿ ಮಾತ್ರವೇ ಉಪಸ್ಥಿತರಿದ್ದರು. ಪ್ರತಿ ಸಭೆಗೂ ಹಾಜರಾಗುತ್ತಿದ್ದ ಸರ್ಕಲ್ ಇನ್ಸ್‌ಪೆಕ್ಟರ್‌ಗಳಾಗಲೀ, ಸಬ್ ಇನ್ಸ್‌ಪೆಕ್ಟರ್‌ಗಳಾಗಲೀ ಈ ಸಲದ ಸಭೆಗೆ ಹಾಜರಾಗದೇ ದಲಿತ ನಾಯಕರ ಅಸಮಾಧಾನಕ್ಕೆ ಕಾರಣರಾದರು.

ಉಪ್ಪಿನಂಗಡಿಯಲ್ಲಿ ಲೇಡಿ ಪಿಕ್‌ಪಾಕೆಟ್ ಜಾಲ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಇದೀಗ ಲೇಡಿ ಪಿಕ್‌ಪಾಕೆಟ್ ಜಾಲವೊಂದು ಕ್ರಿಯಾಶೀಲವಾಗಿದ್ದು, ಹಲವು ಮಂದಿ ಈಗಾಗಲೇ ತಮ್ಮ ಚಿನ್ನದ ಸರ ಹಾಗೂ ಹಣ ಕಳೆದುಕೊಂಡಿದ್ದಾರೆ. ಗುರುವಾರದಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಚಿನ್ನದ ಸರವೊಂದನ್ನು ಲಪಟಾಯಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಲತಃ ತಮಿಳುನಾಡಿನ ಈ ತಂಡದ ಶ್ರೀರಂಜಿನಿ ಎಂಬಾಕೆಯನ್ನು ಮಾಲು ಸಮೇತ ಸಾರ್ವಜನಿಕರು ಹಿಡಿದಿದ್ದು, ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಲಾಗಿದೆ. ಮಹಾಲಕ್ಷ್ಮಿ ಎಂಬ ಖಾಸಗಿ ಬಸ್ಸಿನಲ್ಲಿ ಈ ಘಟನೆ ನಡೆದಿದ್ದು, ಈಕೆಯೊಂದಿಗಿದ್ದ ಇನ್ನೋರ್ವ ಮಹಿಳೆ ಪರಾರಿಯಾಗಿದ್ದಾಳೆ. ಕಳೆದ ವಾರ ಈ ತಂಡದ ೫ ಮಂದಿಯನ್ನು ಪೊಲೀಸರಿಗೆ ಸಾರ್ವಜನಿಕರು ಹಿಡಿದು ಒಪ್ಪಿಸಿದ್ದರು. ಪೊಲೀಸರು ಒಂದಷ್ಟು ಎಚ್ಚರಿಕೆ ನೀಡಿ ಅವರನ್ನು ಬಿಡುಗಡೆಗೊಳಿಸಿದ್ದರು.
ಆರೋಪಿ ಯುವತಿಗೆ ಕಪಾಲಮೋಕ್ಷ ಮಾಡಿದ ಪೊಲೀಸ್..
ಬಸ್ಸಿನಲ್ಲಿಯೇ ಆರೋಪಿ ಯುವತಿಯನ್ನು ಕುಳ್ಳಿರಿಸಿ ಪೊಲೀಸರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿದ್ದರು. ಆಗ ಅಲ್ಲಿಗೆ ಬಂದ ಪೊಲೀಸ್ ಸಿಬ್ಬಂದಿ ಸಾರ್ವಜನಿಕವಾಗಿ ಯುವತಿಗೆ ಕಪಾಲಮೋಕ್ಷ ಮಾಡಿದ್ದು, ಸಾರ್ವಜನಿಕರ ಅಸಹನೆಗೂ ಕಾರಣವಾಯಿತು. ಮಹಿಳೆ ಕಳ್ಳತನ ಮಾಡಿದ್ದರೂ ಈಕೆಯನ್ನು ಠಾಣೆ ಒಯ್ದು ವಿಚಾರಿಸಬಹುದಿತ್ತು. ಸಾರ್ವಜನಿಕವಾಗಿ ಹೊಡೆಯುವುದು ಸರಿಯಲ್ಲ ಎಂಬುವುದು ಜನತೆಯ ಅಭಿಪ್ರಾಯವಾಗಿತ್ತು.

ಯುವತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿಗೆ ಸಮೀಪದ ಬೊಳಂ ತ್ತೂರು ಎಂಬಲ್ಲಿಯ ಯುವತಿಯೊ ಬ್ಬಳು ಏ. ೨೧ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.
ವಿಟ್ಲ ಸಮೀಪದ ಬೊಳಂತ್ತೂರು ನಿವಾಸಿ ಇಬ್ರಾಹಿಂ ಅವರ ಪುತ್ರಿ ಅಮೀನಾ (೧೯) ನಾಪತ್ತೆಯಾದವಳು. ಈಕೆ ಏಪ್ರಿಲ್ ೨೧ರ ಮನೆಯಿಂದ ನಾಪತ್ತೆ ಯಾಗಿದ್ದಳು. ಎಲ್ಲೆಡೆ ಆಕೆಯನ್ನು ಹುಡು ಕಾಡಿದ ಮನೆಯವರು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಮಿನಿ ಬಸ್‌ಗೆ ಜೀಪ್ ಡಿಕ್ಕಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಮದುವೆ ದಿಬ್ಬಣದ ಮಿನಿ ಬಸ್ ಹಾಗೂ ಜೀಪ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸುಮಾರು ಅರ್ಧ ತಾಸುಗಳವರೆಗೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಸೇತುವೆಯಲ್ಲಿ ಗುರುವಾರ ಮಧ್ಯಹ್ನ ನಡೆದಿದ್ದು, ಅದೃಷ್ಟವಶಾತ್ ಜೀಪು ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಕಬಕ ನಿವಾಸಿಯೊಬ್ಬರಿಗೆ ಸೇರಿದ ಈ ಜೀಪು ಹಾಗೂ ಕುಡ್ತಮುಗೇರು ಕಡೆಯಿಂದ ಬರುತ್ತಿದ್ದ ಮದುವೆ ಸಮಾರಂಭದ ಮಿನಿ ಬಸ್ ಕೊಡಂಗಾಯಿ ಸೇತುವೆ ಮಧ್ಯದಲ್ಲಿ ಪರಸ್ಪರ ಡಿಕ್ಕಿಯಾಗಿತ್ತು. ಚಾಲಕರ ಮಧ್ಯ ಪರಸ್ಪರ ಮಾತಿನ ಚಕಮಕಿ ಏರ್ಪಡಿಸಿತ್ತು. ಪರಿಣಾಮ ಸಾಲೆತ್ತೂರು ಮಾರ್ಗವಾಗಿ ಮಂಗಳೂರು ಕಡೆಗೆ ಮತ್ತು ವಿಟ್ಲ ಕಡೆಗೆ ತೆರಳುವ ಪ್ರಯಾಣಿಕರು ಅರ್ಧ ತಾಸುಗಳವರೆಗೆ ದಾರಿ ಮಧ್ಯದಲ್ಲಿಯೇ ಉಳಿಯುವಂತಾಗಿದೆ. ಘಟನಾ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಂಬಂಧಿ ಕೊಲೆ: ಆರೋಪ ಸಾಬೀತು

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ವೈಯಕ್ತಿಕ ದ್ವೇಷ ದಿಂದ ಸಂಬಂಧಿಯನ್ನು ಕೊಡಲಿ ಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲಿನ ಆರೋಪ ವಿಚಾರಣೆ ಸಂದ ರ್ಭದಲ್ಲಿ ಸಾಬೀತುಗೊಂಡಿರುವ ಹಿನ್ನೆಲೆ ಯಲ್ಲಿ ಆರೋಪಿ ತಪ್ಪಿತಸ್ಥನೆಂದು ಕಾಸ ರಗೋಡು ಹೆಚ್ಚುವರಿ ನ್ಯಾಯಾಲಯ (ದ್ವಿತೀಯ)ತೀರ್ಪು ನೀಡಿದೆ.
ಪೈವಳಿಕೆ ಶಾಂತಿನಗರದ ಕಂಡನ ಬೆಳ್ಚಪ್ಪಾಡ ಎಂಬವರ ಪುತ್ರ ಬಿ .ಸುಂದರ (೫೧) ಈ ಪ್ರಕರಣದ ಆರೋಪಿಯಾ ಗಿದ್ದು ಆತ ತಪ್ಪಿತಸ್ಥನೆಂದು ನ್ಯಾಯಾ ಲಯ ತೀರ್ಪು ನೀಡಿದೆ. ಶಿಕ್ಷೆ ಘೋಷಣೆ ಯನ್ನು ನ್ಯಾಯಾಲಯ ಮೀಸಲಿರಿಸಿದೆ.
೨೦೦೪ ಡಿ. ೧೪ ರಂದು ಮೀಂಜ ಬೈರೆಗುಡ್ಡೆ ನಿವಾಸಿ ಐತ್ತಪ್ಪ ಬೆಳ್ಚಪ್ಪಾಡ ಎಂಬವರ ಮನೆಗೆ ಅಕ್ರಮವಾಗಿ ನುಗ್ಗಿ ಅವರ ಮಗ ಮೋಹನ (೩೩) ಎಂಬಾ ತನಿಗೆ ಕೊಡಲಿಯಿಂದ ಕಡಿದು ಗಂಭೀರ ಗಾಯಗೊಳಿಸಿ ಆರೋಪಿ ಪರಾರಿಯಾಗಿದ್ದನು. ಗಂಭೀರ ಗಾಯ ಗಳೊಂದಿಗೆ ಚಿಕಿತ್ಸೆಯಲ್ಲಿದ್ದ ಗಾಯಾಳು ೨೦೦೬ ಡಿ. ೧೬ ರಂದು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಸುಂದರನ ವಿರುದ್ದ ಮೂಕದ್ದಮೆ ದಾಖಲಿಸಿ ಆರೋಪಿಯನ್ನು ದಸ್ತಗಿರಿಗೈದಿದ್ದರು. ಸ್ತ್ರೀ ವಿಚಾರಕ್ಕೆ ಕುರಿತಾದ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣವಾಗಿತೆಂದು ಪೊಲೀಸರು ದಾಖಲಿಸಿದ ಮೊಕದ್ದಮೆ ಯಲ್ಲಿ ವಿವರಿಸಲಾಗಿತ್ತು.

ಖರೀದಿ ನೆಪದಲ್ಲಿ ಬ್ಯಾಗ್‌ಗಳ ಕಳವು

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಬ್ಯಾಗ್ ಖರೀದಿಸುವ ನೆಪದಲ್ಲಿ ಸಾವಿರಾರು ಮೌಲ್ಯದ ಬ್ಯಾಗ್‌ಗಳನ್ನೇ ಕದ್ದೊಯ್ದ ಘಟನೆ ಉಜಿ ರೆಯ ಅಂಗಡಿಯೊಂದರಲ್ಲಿ ಬುಧವಾರ ನಡೆದಿದೆ. ಉಜಿರೆಯ ಮುಖ್ಯರಸ್ತೆಯಲ್ಲಿ ರುವ ಮಳಿಗೆಗೆ ಆಗಮಿಸಿದ ವ್ಯಕ್ತಿಯೊಬ್ಬ ಬ್ಯಾಗ್‌ಬೇಕೆಂದು ಕೇಳಿದ. ಕೆಲ ವಿವಿಧ ಬ್ಯಾಗುಗಳನ್ನು ಅಂಗಡಿ ಮಾಲಕರು ತೋರಿಸಿದಾಗ ಇನ್ನಷ್ಟು ಬೇರೆ ರೀತಿಯ ಬ್ಯಾಗ್‌ಗಳನ್ನು ತೋರಿಸಿ ಎಂದ. ಮಾಲಕರು ತರಲೆಂದು ತನ್ನ ಸಂಗ್ರಹದ ಕೋಣೆಗೆ ಹೋಗುತ್ತಿದ್ದಂತೆ ಬಂದ ವ್ಯಕ್ತಿ ಸುಮಾರು ೪೦ ಸಾವಿರ ರೂ.ಮೌಲ್ಯದ ಬ್ಯಾಗ್‌ಗಳನ್ನು ಕಳವು ಮಾಡಿ ಪರಾರಿಯಾದ.

ಯುವತಿಯ ಕರೆದೊಯ್ದ ವ್ಯಕ್ತಿಯ ಕಾರ್ ಪಲ್ಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಕನೋರ್ವ ಯುವತಿಯನ್ನು ಕಾರ್‌ನಲ್ಲಿ ಕರೆದೊ ಯ್ಯುತ್ತಿರುವುದನ್ನು ಗಮನಿಸಿದ ಸಂಘಟನೆಯೊಂದರ ಕಾರ್ಯಕರ್ತರು ಬೈಕ್‌ನಲ್ಲಿ ಬೆನ್ನಟ್ಟಿದ್ದು, ಅಡ್ಡಾದಿಡ್ಡಿ ಚಲಿಸಿದ ಕಾರ್ ಪಲ್ಟಿಯಾದ ಘಟನೆ ನಿನ್ನೆ ಕಡಬ ಸಮೀಪ ಸಂಭವಿಸಿದೆ.
ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಯುವತಿಯನ್ನು ಸ್ಥಳೀಯ ತಾಜುದ್ದೀನ್ ಎಂಬಾತ ಕಾರ್‌ನಲ್ಲಿ ಕರೆದುಕೊಂಡು ಹೋಗು ವುದನ್ನು ಸಂಘಟನೆಯೊಂದರ ಕಾರ್ಯ ಕರ್ತರು ಗಮನಿಸಿದರು. ಕೊಡಿಂಬಾಳ ದಲ್ಲಿ ಆತ ತಪ್ಪಿಸಿಕೊಂಡಿದ್ದ. ಸ್ವಲ್ಪ ಸಮ ಯದ ಬಳಿಕ ಯುವತಿ ರಿಕ್ಷಾದಲ್ಲಿ ಮರಳು ತ್ತಿದ್ದುದನ್ನು ಸಂಘಟನೆಯ ಕಾರ್ಯ ಕರ್ತರು ಗಮನಿಸಿದ್ದರು. ಯುವತಿಯನ್ನು ಮರಳಿ ಕರೆದೊಯ್ದಾಗ ತಾಜುದ್ದೀನನ ಕಾರ್ ಚರಂಡಿಗೆ ಉರುಳಿತ್ತು. ಕಾರ್ಯ ಕರ್ತರು ಆತನಿಗೆ ತದಕಿ ಪೊಲೀಸರಿಗೆ ಒಪ್ಪಿಸಿದ್ದರು.

ಜೋಡಿ ಕೊಲೆ ಪ್ರಕರಣ: ಸಂಬಂಧಿಯ ಮಂಪರು ಪರೀಕ್ಷೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಕೋಟಾ ಠಾಣಾ ವ್ಯಾಪ್ತಿಯ ಪರಂಪಳ್ಳಿ ಎಂಬಲ್ಲಿ ವೃದ್ಧ ದಂಪತಿಯನ್ನು ಕೊಲೆಗೈದು, ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂ ಧಿಸಿ ರಾಜ್ಯ ಸಿಐಡಿ ಪೊಲೀಸರು ದಂಪತಿಯ ಹತ್ತಿರದ ಸಂಬಂಧಿಯೊ ಬ್ಬನನ್ನು ವಿಚಾರಣೆಗೆ ತೆಗೆದುಕೊಂ ಡಿದ್ದು, ಇಂದು ಮಂಪರು ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕೋಟಾದ ಪರಂಪಳ್ಳಿಯ ನಿವಾಸಿಗಳಾದ ಸಂಜೀವ ಕಿಣಿ ಮತ್ತು ವಸಂತಿ ಕಿಣಿ ಅವರನ್ನು ಹತ್ಯೆಗೈದು ಮನೆಯೊಳಗಿದ್ದ ನಗನಗದು ದೋಚಿದ ಘಟನೆ ಕಳೆದ ಆಗಸ್ಟ್‌ನಲ್ಲಿ ನಡೆದಿತ್ತು. ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಪೊಲೀಸರು ದಂಪತಿಯ ಹತ್ತಿರದ ಸಂಬಂಧಿ ನರಸಿಂಹ ಎಂಬಾತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ತಿರುಪತಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ವಿಟ್ಲ: ವ್ಯಕ್ತಿಯೊಬ್ಬರು ತನ್ನ ಕುಟುಂಬದೊಂದಿಗೆ ತಿರುಪತಿಗೆ ತೆರಳಿದ್ದ ಸಂದರ್ಭ ಅಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವಿಟ್ಲ ಕೊಳ್ನಾಡು ಗ್ರಾಮದ ನಿವಾಸಿ ತುಕ್ರ ರೈ ಅವರ ಪುತ್ರ ಬಾಲಕೃಷ್ಣ ರೈ ಎಂಬವರೇ ನಾಪತ್ತೆಯಾದವರು.
ಏಪ್ರಿಲ್೨೧ ರಂದು ಅವರು ತಮ್ಮ ಕುಟುಂಬಸ್ಥರೊಂದಿಗೆ ತಿರುಪತಿಗೆ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಅವರು ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಅವರ ಪತ್ತೆಯಾಗದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಿದವರು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಠಾಣಾಧಿಕಾರಿ ರಕ್ಷಿತ್ ಎ.ಕೆ ತಿಳಿಸಿದ್ದಾರೆ.

ಕಾರ್ಮಿಕ ಮೃತ್ಯು

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ನಾಗಾರ್ಜುನ ಕಂಪೆನಿಯ ಟವರ್ ನಿರ್ಮಾಣ ಕಾಮ ಗಾರಿಯ ವೇಳೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮುಂಡಾಜೆ ಬಳಿ ಬುಧವಾರ ನಡೆದಿದೆ. ಮೃತ ಕಾರ್ಮಿ ಕನನ್ನು ಪ.ಬಂಗಾಲದ ಇನಾವುಲ್ ಹುಸೇನ್(೨೨) ಎಂದು ಗುರುತಿಸಲಾ ಗಿದೆ. ಇವರು ಬೆಂಗಳೂರು ದೀಪಕ್ ಕೇಬಲ್ಸ್ ಕಂಪೆನಿಯ ಮುಖಾಂತರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದರು.

ಆಸ್ತಿ ವಿವಾದ: ಮಹಿಳೆಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಆಸ್ತಿ ವಿವಾದಕ್ಕೆ ಸಂಬಂ ಧಿಸಿದಂತೆ ಮಹಿಳೆಗೆ ಹಲ್ಲೆಯಾದ ಘಟನೆ ತೆಂಕಕಜೆಕಾರು ಗ್ರಾಮದ ತಾಳಿಪಡ್ಪುವಿನಲ್ಲಿ ಬುಧವಾರ ನಡೆದಿದೆ.
ವಜ್ರ ಪೂಜಾರಿ ಅವರ ಪತ್ನಿ ಪ್ರೇಮಾ ಹಲ್ಲೆಗೊಳವಾದವರು. ಅವರು ಜಾಗವೊಂದರಲ್ಲಿ ಹಕ್ಕಿದೆ ಎಂದು ನ್ಯಾಯಾಲಯದ ಮೊರೆ ಹೋಗಿ ೫೯ ಮಂದಿಯ ಮೇಲೆ ಪ್ರತಿಬಂಧಕಾಜ್ಞೆ ತಂದಿದ್ದರು. ಹಾಗಿದ್ದರೂ ವಿವಾದಿತ ಜಾಗದಲ್ಲಿ ಕಟ್ಟಡ ಕಟ್ಟುವ ಯತ್ನ ನಡೆದಿತ್ತು. ಅದನ್ನು ನಿಲ್ಲಿಸಲು ಪೋಲಿಸರಿಗೆ ದೂರು ನೀಡಲಾಗಿತ್ತು. ಪ್ರಯತ್ನ ಕೈಗೂಡದೇ, ನ್ಯಾಯಾಲಯದ ಆದೇಶ ಇದ್ದರೂ ಮನೆ ಕಟ್ಟುವ ಕೆಲಸ ಮುಂದುವರಿದಿತ್ತು. ಇದನ್ನು ಪ್ರೇಮಾ ಆಕ್ಷೇಪಿಸಿದಾಗ ರೋಹಿನಾಥ ಹಾಗೂ ವಿಟ್ಲದ ಕನ್ಯಾನದಲ್ಲಿ ದೈಹಿಕ ಶಿಕ್ಷಣ ಶಿಕ್ಷನಾಗಿರುವ ಜಯ ಕತ್ತು ಹಿಸುಕಿ, ಜಲ್ಲಿ ರಾಶಿಗೆ ದೂಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ನ್ಯಾಯಾಲ ಯದ ಆದೇಶ ಇದ್ದರೂ ಮನೆ ನಿರ್ಮಾ ಣವಾಗುತ್ತಿರುವ ಕುರಿತು ದೂರು ನೀಡಿದ್ದರೂ ಪೊಲೀಸರು ಆರೋಪಿಗಳ ಪರವಾಗಿ ನಿಂತಿದ್ದಾರೆ ಎಂದು ತಾ.ಪಂ.ಸದಸ್ಯ ಮಂಜುನಾಥ ಸಾಲಿಯಾನ್ ಆರೋಪಿಸಿದ್ದಾರೆ.

ವಿಟ್ಲ: ಕಾರ್ ಪಲ್ಟಿ; ಓರ್ವ ಮೃತ್ಯು

Posted by JAYAKIRANA Kirana on | 0 comments | Leave a comment...

ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ಉಕ್ಕುಡ ತಿರುವಿನಲ್ಲಿ ಕಾರೊಂದು ಪಲ್ಟಿ ಹೊಡೆದ ಘಟನೆ ನಿನ್ನೆ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ಸಂಭವಿಸಿದ್ದು, ಚಾಲಕ ಗಂಭೀರ ಗಾಯಗಳೊಂದಿಗೆ ಸ್ಥಳ ದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮಾಣಿ ಸಮೀಪದ ಬುಡೋಳಿ ನಿವಾಸಿ ಮುಹಮ್ಮದ್ ಷರೀಫ್(೩೮) ಎಂದು ಹೆಸರಿಸಲಾಗಿದೆ. ಇವರು ಎರಡು ಗಂಟೆಯ ಸುಮಾರಿಗೆ ಕಾಸರಗೋಡಿನಿಂದ ತಮ್ಮ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭ ಉಕ್ಕುಡ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಮುಹಮ್ಮದ್ ತೀವ್ರ ರಕ್ತಸ್ರಾವದೊಂ ದಿಗೆ ಕಾರಿನೊಳಗೆ ಸಿಕ್ಕಿಹಾಕಿಕೊಂ ಡಿದ್ದು, ಸ್ಥಳೀಯರು ಗಮನಿಸಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸು ವಷ್ಟರಲ್ಲಿ ಮುಹಮ್ಮದ್ ಮೃತಪಟ್ಟಿದ್ದಾಗಿ ಹೇಳಲಾಗಿದೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಕುಂದಾಪುರ: ಸ್ಟವ್ ಸಿಡಿದು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೀಮೆಎಣ್ಣೆ ಸ್ಟವ್ ಸಿಡಿದು ಗಂಭೀರ ಗಾಯಗೊಂಡಿದ್ದ ಯುವತಿ ಮೃತಪಟ್ಟ ಘಟನೆ ಕುಂದಾಪುರ ಸಮೀಪದ ಉಪ್ಪುಂದ-ಕಲ್ಲರಕಟ್ಟೆ ಎಂಬಲ್ಲಿ ನಡೆದಿದೆ. ಮೃತ ಯುವತಿಯನ್ನು ಮೂಕಾಂಬು (೨೨) ಎಂದು ಹೆಸರಿಸಲಾಗಿದೆ.

ನೇಣು ಬಿಗಿದು ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರು ಸಮೀ ಪದ ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ನಿವಾಸಿ ಕುಂಡ(೫೬) ಎಂಬವರು ತಮ್ಮ ಮನೆಯ ಪಕ್ಕದ ಗುಡ್ಡದಲ್ಲಿ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಶಯದ ನಡವಳಿಕೆ: ಓರ್ವನ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ ಠಾಣಾ ಪೊಲೀಸರು ಮೂಡುನಿಡಂಬೂರು ಚಿತ್ತರಂಜನ್ ಸರ್ಕಲ್ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಕಂಡುಬಂದ ಬಳ್ಳಾರಿಯ ಮೊನು ದ್ದೀನ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲು ಡಿಕ್ಕಿ: ಗಾಯಾಳು ಮೃತ್ಯುವಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರು ಸಮೀಪದ ಹಾರಾಡಿ ಎಂಬಲ್ಲಿ ರೈಲು ಡಿಕ್ಕಿ ಹೊಡೆದು ಕಾಲುಗಳು ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ನಿನ್ನೆ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಅಂದಾಜು ೪೫ರಿಂದ ೫೦ ವರ್ಷ ಪ್ರಾಯದ ಇವರ ಗುರುತು ಪತ್ತೆಯಾಗಿಲ್ಲ. ಸಂಬಂಧಪಟ್ಟವರು ಮಂಗಳೂರು ರೈಲ್ವೇ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಓಮ್ನಿಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಸಂಗಮ್ ಎಂಬಲ್ಲಿ ಬಸ್ರೂ ರಿನ ಸುರೇಶ್ ಎಂಬವರಿಗೆ ಸೇರಿದ ಓಮ್ನಿ ಕಾರೊಂದು ಆಕಸ್ಮಿಕ ಬೆಂಕಿ ಅವಘಡಕ್ಕೆ ತುತ್ತಾದ ಘಟನೆ ನಿನ್ನೆ ನಡೆದಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದ್ದು, ಅಂದಾಜು ೫೦-೬೦ ಸಾವಿರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಸರಗಳ್ಳಿಯರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಂಕನಾಡಿ ಬಳಿ ನಿನ್ನೆ ಮಧ್ಯಾಹ್ನ ವ್ಯಕ್ತಿ ಯೊಬ್ಬರ ಚಿನ್ನದ ಸರವನ್ನು ಹಾಡಹಗಲೇ ಎಗರಿಸಿದ ಇಬ್ಬರು ಸರಗಳ್ಳಿಯರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಮಿಳ್ನಾಡಿನ ಸರಿತಾ ಮತ್ತು ಸೀತಾ ಎಂಬವರೇ ಸೆರೆಸಿಕ್ಕಿದವರು.
ಕಂಕನಾಡಿಯಲ್ಲಿ ಸರ ಎಗರಿಸಿದ ಕೆಲವೇ ನಿಮಿಷ ಗಳಲ್ಲಿ ಇವರನ್ನು ಹಿಡಿದು ಕದ್ರಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿ ತಾದರೂ ಇವರ ಬಳಿ ಸರ ಸಿಗದೇ ಇದ್ದ ಕಾರಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ.

ನವವಿವಾಹಿತೆ ಕೊಲೆ: ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಸುಳ್ಯ: ವರದಕ್ಷಿಣೆಗಾಗಿ ನವ ವಿವಾ ಹಿತೆಯನ್ನು ಕೋಣೆಯಲ್ಲಿ ಕೂಡಿಹಾಕಿ ಸೀಮೆ ಎಣ್ನೆ ಸುರಿದು ಬೆಂಕಿಕೊಟ್ಟು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತೀವ್ರ ಸುಟ್ಟಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಳಂಜ ಗ್ರಾಮದ ಮಣಿಮಜಲು ನಿವಾಸಿ ವಾಸು ಮೂಲ್ಯರ ಪುತ್ರ ರವಿ ಮೂಲ್ಯ (೨೭) ಎಂಬಾತನ ಪತ್ನಿ ಸೌಮ್ಯ(೩೨) ಎ.೧೪ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ರವಿ ಮೂಲ್ಯ ಕಾಸರಗೋಡು ತಾಲೂಕು ಕುಂಬ್ಡಾಜೆ ಗ್ರಾಮದ ಪೊಡಿಕಲದ ಸೌಮ್ಯರನ್ನು ಹತ್ತು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ಸೌಮ್ಯಳ ಹೆತ್ತವರು ೮ ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು. ಇನ್ನೂ ಸ್ವಲ್ಪ ಚಿನ್ನ ನೀಡಲು ಬಾಕಿ ಇತ್ತು ಎನ್ನಲಾಗಿದೆ. ಇದಕ್ಕಾಗಿ ಮಾವ ವಾಸು ಮೂಲ್ಯ ಹಾಗೂ ಪತಿ ರವಿ ಮೂಲ್ಯ ಆಗಾಗ ಸೌಮ್ಯರಿಗೆ ಪೀಡಿಸುತ್ತಿದ್ದರು ಮತ್ತು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು ಎನ್ನ ಲಾಗಿದೆ.
ಬೆಂಗಳೂರಿನ ಖಾಸಗಿ ಕಂಪೆನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಮೂಲ್ಯ ಪತ್ನಿಯೊಂದಿಗೆ ಕಳಂಜದ ಮನೆಗೆ ಬಂದಿದ್ದ ಸಂದರ್ಭ ಮನೆಯ ಕೊಣೆಯೊಂದರಲ್ಲಿ ಸೌಮ್ಯರನ್ನು ಕೂಡಿಹಾಕಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟಿದ್ದು, ತೀವ್ರ ಸುಟ್ಟ ಗಾಯ ಗಳಾಗಿದ್ದ ಸೌಮ್ಯರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವರದಕ್ಷಿಣೆಗಾಗಿ ಸೌಮ್ಯರನ್ನು ಆಕೆಯ ಅತ್ತೆ ಲಕ್ಷ್ಮಿ, ಮಾವ ವಾಸು ಮೂಲ್ಯ ಹಾಗೂ ಪತಿ ರವಿ ಮೂಲ್ಯ ಕೂಡಿಕೊಂಡು ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ್ದಾಗಿ ಸೌಮ್ಯರ ಸೋದರ ಮಾವ ಶಿವರಾಮ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಮೂಲ್ಯರನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ಸುವರ್ಣ ನ್ಯೂಸ್ ವಿರುದ್ಧ ಪಾಲೇಮಾರ್ ದಾವೆ

Posted by JAYAKIRANA Kirana on | 0 comments | Leave a comment...

೨೫ ಕೋಟಿ ರೂ. ಪರಿಹಾರಕ್ಕೆ ಕೋರಿಕೆ
ಮಂಗಳೂರು: ತನ್ನ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ವರದಿ ಗಳನ್ನು ಪ್ರಕಟಿಸಿ ತೇಜೋವಧೆಗೈದ ಸುವರ್ಣ ವಾರ್ತಾ ವಾಹಿನಿಯ ಮಾಲಕರು ಹಾಗೂ ಸಂಪಾದಕ ಮಂಡಳಿಯ ವಿರುದ್ಧ ಮಾಜಿ ಸಚಿವ ಕೃಷ್ಣ.ಜೆ.ಪಾಲೇಮಾರ್ ೨೫ ಕೋಟಿ ರೂ. ಪರಿಹಾರ ಕೋರಿ ಮಂಗಳೂರು ನಗರದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ದಾಖಲಿಸಿ ದ್ದಾರೆಂದು ಪಾಲೇಮಾರ್ ವಕೀಲ ಪಿ.ಪಿ.ಹೆಗ್ಡೆ ತಿಳಿಸಿದ್ದಾರೆ.
ವಿಧಾನಸಭೆಯ ಕಲಾಪದ ಅವಧಿಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮೊಬೈಲಿನಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿರುವುದಾಗಿ ಮಾಧ್ಯಮದಲ್ಲಿ ವ್ಯಾಪಕ ವರದಿಯಾಗಿತ್ತು. ಲಕ್ಷ್ಮಣ ಸವದಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಇರಾನ್‌ನಲ್ಲಿ ಓರ್ವ ಮಹಿಳೆಯನ್ನು ನಾಲ್ಕು ಜನ ಅತ್ಯಾಚಾರಗೈದು ಕೊಲೆ ಗೈದಿದ್ದು, ನಂತರ ಆ ನಾಲ್ಕು ಜನ ಯುವಕರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಿರುವುದನ್ನು ಮೊಬೈಲಿನಲ್ಲಿ ನೋಡಿರುವುದಾಗಿ ನೋಡಿರುವ ದೃಶ್ಯಗಳಿಗೂ ಮತ್ತು ಇರಾನ್ ದೃಶ್ಯಗಳಿಗೂ ಸಂಬಂಧವಿಲ್ಲ. ಪಾಲೆಮಾರ್ ಹೆಸರನ್ನು ವಿನಾಕಾರಣ ಎಳೆದು ತಂದಿರುತ್ತಾರೆಂದು ಮೊದಲಿಗೆ ಸುವರ್ಣ ಸುದ್ಧಿವಾಹಿನಿಯೇ ಪ್ರಕಟಿಸಿತ್ತು. ಆದರೆ ತದನಂತರದಲ್ಲಿ ಸುವರ್ಣ ಸುದ್ಧಿವಾಹಿನಿಯು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುವ ದುರುದ್ದೇಶದಿಂದ ನಾನೇ ಅಶ್ಲೀಲ ಚಿತ್ರಗಳನ್ನು ಮೊಬೈಲಿನಿಂದ ಕಳುಹಿಸಿಕೊಟ್ಟಿರುತ್ತೇನೆಂದು ದುರುದ್ದೇಶ ಪೂರಿತವಾಗಿ ಸುಳ್ಳು ವರದಿಯನ್ನು ನಿರಂತರವಾಗಿ ಸುವರ್ಣ೨೪*೭ ಟಿವಿ ಚಾನೆಲ್ ಪ್ರಸಾರ ಮಾಡಿತ್ತು ಎಂದು ಪಾಲೇಮಾರ್ ದೂರಿದ್ದಾರೆ. 'ನನ್ನ ಮೊಬೈಲಿನಲ್ಲಿ ಅಶ್ಲೀಲ ದೃಶ್ಯಗಳು ಯಾವತ್ತೂ ಇರಲಿಲ್ಲ. ತಾನು ಯಾವುದೇ ರೀತಿಯ ಅಶ್ಲೀಲ ಚಿತ್ರಗಳನ್ನು ನೋಡಿರುವುದಿಲ್ಲ ಹಾಗೂ ಅಶ್ಲೀಲ ದೃಶ್ಯಗಳ ವೀಕ್ಷಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ ಕೂಡಾ ಸುವರ್ಣ ಸುದ್ದಿವಾಹಿನಿಯವರು ನಿರಂತರವಾಗಿ ನನ್ನ ಬಗ್ಗೆ ಸುಳ್ಳು ಮತ್ತು ಕಪೋಲಕಲ್ಪಿತ ವರದಿಗಳನ್ನು ಪ್ರದರ್ಶಿಸಿ ನನ್ನ ತೇಜೋವಧೆಗೈದರು. ಸರಕಾರದ ಗೌರವ ಉಳಿಸುವುದಕ್ಕಾಗಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದೆನು. ವಿಧಾನಸಭಾ ಧ್ಯಕ್ಷರಿಂದ ನೇಮಿತವಾದ ಸತ್ಯಾನ್ವೇಷಣ ಸಮಿತಿಯು ನಾನು ಸಂಪೂರ್ಣ ನಿರಪರಾಧಿ ಎಂದು ಘೋಷಿಸಿ ಈಗಾಗಲೇ ವರದಿ ನೀಡಿದೆ. ಆದಕಾರಣ ತಪ್ಪಿತಸ್ಥ ಸುದ್ಧಿವಾಹಿನಿಯ ವಿರುದ್ಧ ೨೫ ಕೋಟಿ ದಂಡ ವಿಧಿಸಬೇಕೆಂದು ಪಾಲೇಮಾರ್ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದಾರೆ.
ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿ ನಾನು ಅಶ್ಲೀಲ ಚಿತ್ರ ವೀಕ್ಷಣೆ ಕೃತ್ಯಕ್ಕೆ ಭಾಗಿಯಾದನೆಂಬ ಸುಳ್ಳು ವೀಡಿಯೋಗಳನ್ನು ಸುವರ್ಣ ಚಾನೆಲ್ ಪ್ರಕಟಿಸಿತ್ತು. ಇದರಿಂದ ನನ್ನ ಸಾರ್ವಜನಿಕ ಜೀವನಕ್ಕೆ ಅಪಾರ ಚ್ಯುತಿಯಾಗಿದೆ. ಆದಕಾರಣ ಸುವರ್ಣ ನ್ಯೂಸ್ ಚಾನೆಲ್‌ನ ಮಾಲಕರು ಮತ್ತು ಸಂಪಾದಕ ಮಂಡಳಿಯವರ ವಿರುದ್ಧ ೨೫ ಕೋಟಿ ರೂ ದಂಡವನ್ನು ವಿಧಿಸಿ ಪರಿಹಾರ ನೀಡುವಂತೆ ಆದೇಶಿಸಬೇಕೆಂದು ಪಾಲೇಮಾರ್ ಸಿವಿಲ್ ವ್ಯಾಜ್ಯ ದಾಖಲಿ ಸಿದ್ದಾರೆ.
ಸುವರ್ಣ ಸುದ್ಧಿವಾಹಿನಿಯ ಮುಖ್ಯ ಸಂಪಾದಕ ವಿಶ್ವೇಶ್ವರ್ ಭಟ್, ಸಂಪಾದಕ ಹಮೀದ್ ಪಾಳ್ಯ, ವರದಿಗಾರ ರಂಗನಾಥ್ ಭಾರಧ್ವಾಜ್, ಸಂಪಾದಕೀಯ ಮಂಡಳಿಯ ಪ್ರತಿಮಾ ಭಟ್, ವೀರೇಂದ್ರ ಉಪ್ಪುಂದ, ವಿನೋದ್ ಕುಮಾರ್ ನಾಯ್ಕ್, ಪ್ರಶಾಂತ್, ಸತ್ಯಬೋಧ ಜೋಷಿ ಹಾಗೂ ಆಡಳಿತ ನಿರ್ದೇಶಕ ಸುರೇಶ್ ಸೆಲ್ವರಾಜ್ ಅಲ್ಲದೆ ಸಂಸ್ಥೆಯ ಮಾಲಕ ಏಶಿಯನೆಟ್ ನ್ಯೂಸ್ ನೆಟ್ ವರ್ಕಿಂಗ್ ಪ್ರೈವೇಟ್ ಲಿಮಿಟೆಡ್‌ನ ವಿರುದ್ಧ ಕೇಸು ದಾಖಲಿಸಲಾಗಿದೆ. ಈಗಾಗಲೇ ಪಾಲೇಮಾರ್ ಸುದ್ಧಿ ವಾಹಿನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು ನ್ಯಾಯಾಲಯದ ಆದೇಶದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಪಿ.ಬಿ.ಸಾವಂತ್‌ರ ಫೋಟೋವನ್ನು ಅವರಿಗೆ ಸಂಬಂಧವಿಲ್ಲದ ಭ್ರಷ್ಟಾಚಾರ ಪ್ರಕರಣವೊಂದರ ವರದಿಯಲ್ಲಿ ಹತ್ತು ಸೆಕೆಂಡ್ ಗಳ ಕಾಲ ತಪ್ಪಾಗಿ 'ಟೈಮ್ಸ್ ನೌ ಸುದ್ದಿ ವಾಹಿನಿ ತೋರಿಸಿತ್ತು. ಈ ತಪ್ಪಿಗೆ ಸುದ್ದಿವಾಹಿನಿ ಪರಿಹಾರವಾಗಿ ನೂರು ಕೋಟಿ ರೂಪಾಯಿ ನೀಡಬೇಕೆಂದು ಇತ್ತೀಚೆಗೆ ಮುಂಬೈ ನ್ಯಾಯಾಲಯ ತೀರ್ಪು ನೀಡಿತ್ತು. ನೂರು ರೂ. ಹಣ ಠೇವಣಿ ಇರಿಸಿದ ನಂತರವೇ ತೀರ್ಪಿನ ವಿರುದ್ಧ ಅಫೀಲಿಗೆ ಅವಕಾಶ ನೀಡಬೇಕೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ತೀರ್ಪನ್ನು ಕೂಡಾ ಪಾಲೇಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ಉಲ್ಲೇಖಿಸಿ, ಪಾಲೇಮಾರ್ ವಿರುದ್ಧ ಹಲವು ಗಂಟೆಗಳ ಕಾಲ ಸುವರ್ಣ ಸುದ್ಧಿ ವಾಹಿನಿ ಸುಳ್ಳು ಸುದ್ಧಿ ಪ್ರಸಾರ ಮಾಡಿ ಮಾನಹಾನಿ ಗೈದಿದ್ದು, ನಷ್ಟ ಪರಿಹಾರವಾಗಿ ೨೫ ಕೋಟಿ ರೂ. ದಂಡ ವಿಧಿಸಬೇಕೆಂದು ಕೋರಿದ್ದಾರೆ. ಕೃಷ್ಣ ಪಾಲೇಮಾರ್ ಪರವಾಗಿ ನ್ಯಾಯವಾದಿ ಪಿ.ಪಿ.ಹೆಗ್ಡೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿ ವಾದಿಸುತ್ತಿದ್ದಾರೆ.

ಆಟೋರಿಕ್ಷಾ ಚಾಲಕನ ಮಗನ ಮದುವೆಯಲ್ಲಿ ಅಮೀರ್‌ಖಾನ್

Posted by JAYAKIRANA Kirana on | 0 comments | Leave a comment...

ವಾರಣಾಸಿ: ರಿಕ್ಷಾ ಡ್ರೈವರ್ ಒಬ್ಬನ ಮದುವೆಗೆಂದು ಹೋಗಿದ್ದ ವೇಳೆ ಅತಿಯಾದ ನೂಕುನುಗ್ಗಲಿನಿಂದಾಗಿ ಬಾಲಿವುಡ್ ನಟ ಅಮೀರ್ ಖಾನ್ ಸ್ಟೇಜ್‌ನಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ.
ಇಲ್ಲಿನ ಆಟೋ ರಿಕ್ಷಾ ಚಾಲಕ ರಾಮ್ ಲಖಾನ್ ಎಂಬಾತನ ಮಗನ ಮದುವೆಗೆಂದು ಹೋಗಿದ್ದರು. ಯಾವುದೇ ಗಾಯಗಳಿಲ್ಲದೆ ಪಾರಾದ ೪೭ ವರ್ಷದ ಅಮೀರ್ ಖಾನ್, ವ್ಯವಸ್ಥೆ ಎಲ್ಲಾ ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ೨೦೦೯ರಲ್ಲಿ ತ್ರೀ ಈಡಿಯಟ್ಸ್ ಚಿತ್ರದ ಪ್ರಚಾರದ ವೇಳೆ ಲಖಾನ್‌ಗೆ ಅಮೀರ್ ಮಾತು ಕೊಟ್ಟ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕನ ಮಗನ ಮದುವೆ ಬಂದಿದ್ದರು.
ಮೆಹಮೂರ್‌ಗಂಜ್ ಚೌರಾಸಿಯಾ ಮದುವೆ ಮಂಟಪಕ್ಕೆ ಅಮೀರ್ ಬರು ವಾಗ ಮಧ್ಯರಾತ್ರಿಯಾಗಿತ್ತು. ಅಮೀರ್ ರಾತ್ರಿ ೯.೩೦ರ ವೇಳೆಗೆ ಮದುವೆ ಹಾಲ್‌ಗೆ ಬರಬೇಕಿತ್ತು. ಆದರೆ ಪಟ್ನಾದಿಂದ ಕಾರಿನಲ್ಲಿ ಬಂದ ಕಾರಣ ಅವರಿಗೆ ಮದುವೆ ಮಂಟಪಕ್ಕೆ ತಲುಪಲು ವಿಳಂಬವಾಗಿತ್ತು. ರಿಕ್ಷಾ ಚಾಲಕನನ್ನು ಅಪ್ಪಿ ಹಿಡಿದ ಅಮೀರ್, ಮದುಮಗ ರಾಜೀವ್ ಮತ್ತು ಮದುಮಗಳು ವಿಜೇತಾಳಿಗೆ ಉಡುಗೊರೆಯನ್ನು ನೀಡಿದರು.
ನಾನು ಯಾವುದೇ ಟಿವಿ ಕಾರ‍್ಯಕ್ರಮ ಅಥವಾ ಚಿತ್ರದ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿಲ್ಲ. ನನ್ನ ಗೆಳೆಯನ ಮಗನ ಮದುವೆ ಬಂದಿದ್ದೇನೆ. ರಾಮ್ ಲಖಾನ್ ನನಗೆ ತ್ರೀ ಈಡಿಯಟ್ಸ್ ಚಿತ್ರದ ವೇಳೆ ಪರಿಚಿತರಾಗಿದ್ದರು. ಒಂದು ವರ್ಷದ ಮೊದಲೇ ಅವರು ನನ್ನ ಮನೆಗೆ ಬಂದು ಆಹ್ವಾನ ನೀಡಿದ್ದರು ಎಂದ ಅಮೀರ್ ಸತ್ಯಮೇವ ಜಯತೇ ಕಾರ‍್ಯಕ್ರಮದ ಪ್ರಚಾರಕ್ಕಾಗಿ ಬಂದಿರುವುದನ್ನು ನಿರಾ ಕರಿಸಿದರು.

ವೆನ್ಲಾಕ್ ಔಷಧ ಹಗರಣ ತನಿಖೆಗೆ ಕ್ರಮ: ಶಾಸಕ ಯೋಗೀಶ್ ಭಟ್

Posted by JAYAKIRANA Kirana on | 0 comments | Leave a comment...

ಮಂಗಳೂರು: ವೆನ್ಲಾಕ್ ಆಸ್ಪತ್ರೆ ಯಲ್ಲಿ ನಡೆಯುತ್ತಿರುವ ಔಷಧ ಕಳ್ಳ ಸಾಗಾಣಿಕೆ ಬಗ್ಗೆ ಜಯಕಿರಣ ಪತ್ರಿಕೆ ಯಲ್ಲಿ ಬಂದಿರುವ ವರದಿಯನ್ನು ಗಮನಿಸಿದ ಶಾಸಕ ಯೋಗೀಶ್ ಭಟ್ ಹಾಗೂ ಡಿಎಂಒ ಹಗರಣದ ಬಗ್ಗೆ ಕೂಡಲೇ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ರೋಗಿಗಳಿಗೆ ಅವಶ್ಯವಿರುವ ಔಷಧವನ್ನು ಸರಕಾರ ಉಚಿತವಾಗಿ ಪೂರೈಕೆ ಮಾಡುತ್ತಿದ್ದು ಇದನ್ನು ಆಸ್ಪತ್ರೆ ಸಿಬ್ಬಂದಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸೂಕ್ತ ಮಾಹಿತಿಯನ್ನು ಕಲೆ ಹಾಕಿದ ಜಯ ಕಿರಣ ಪತ್ರಿಕೆ ವೆನ್ಲಾಕ್‌ನಲ್ಲಿ ನಡೆಯು ತ್ತಿರುವ ಔಷಧ ಕಳ್ಳ ಸಾಗಾಣಿಕೆ ಬಗ್ಗೆ ಸಚಿತ್ರ ವರದಿಯನ್ನು ಇಂಟರ್‌ನೆಟ್ ಆವೃತ್ತಿಯಲ್ಲೂ ಮತ್ತು ಪತ್ರಿಕೆಯಲ್ಲೂ ಪ್ರಕಟಿಸಿತ್ತು. ಈ ವರದಿಯನ್ನು ಗಮನಿ ಸಿದ ಶಾಸಕರಾದ ಯೋಗೀಶ್ ಭಟ್ ಅವರು ಈ ಅವ್ಯವಹಾರವನ್ನು ಕೂಡಲೇ ತನಿಖೆ ಮಾಡುವುದಾಗಿ ತಿಳಿಸಿದ್ದಲ್ಲದೆ ಈ ಬಗ್ಗೆ ಆಸ್ಪತ್ರೆಯ ಡಿಎಂಒ ಬಳಿ ಮಾತುಕತೆ ನಡೆಸಿದ್ದಾರೆ. ಡಿಎಂಒ ಸಂಗಮೇಶ್ವರ್ ಕೂಡಾ ಈ ಅವ್ಯವಹಾರ ನಡೆಯುತ್ತಿರುವುದು ನನ್ನ ಗಮನಕ್ಕೆ ಈವರೆಗೆ ಬಂದಿಲ್ಲ ಪತ್ರಿಕೆ ಮೂಲಕ ತಿಳಿದು ಬಂದಿದೆ. ಹೀಗಾಗಿ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊ ಳ್ಳುವುದಾಗಿ ತಿಳಿಸಿದ್ದಾರೆ.
ನಕಲಿ ದಾಖಲೆಯನ್ನು ಸೃಷ್ಟಿಸಿ ಗೋಡಾನ್‌ನಿಂದಲೇ ಔಷಧವನ್ನು ಪಡೆಯಲಾಗುತ್ತಿರುವುದಲ್ಲದೆ ರೋಗಿ ಗಳಿಗೆ ಅಗತ್ಯವಿಲ್ಲದ ಔಷಧವನ್ನು ಬರೆಸಿ ಕೊಂಡು ಸಿಬ್ಬಂದಿಯೇ ಅದನ್ನು ಹೊರಗಡೆಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿಯೊಂದು ಜಯಕಿರಣಕ್ಕೆ ಲಭ್ಯವಾಗಿದ್ದು ಇದರ ಆಧಾರದಲ್ಲಿ ಜಯಕಿರಣ ಮಾಹಿತಿ ಸಂಗ್ರಹಿಸಿ ವರದಿ ಪ್ರಕಟಿಸಿತ್ತು. ವರದಿ ಓದಿದ ಹಲವಾರು ಮಂದಿ ಓದೂಗರೂ ತಾವು ಆಸ್ಪತ್ರೆಯಲ್ಲಿ ಉಚಿತ ಔಷಧ ಇದ್ದರೂ ಹಣ ಕೊಟ್ಟ ಪಡೆದುಕೊಂಡಿರುವ ಬಗ್ಗೆ ಮತ್ತು ಔಷಧ ಇದ್ದರೂ ಅದನ್ನು ಸಿಬ್ಬಂದಿ ನೀಡದೆ ತೊಂದರೆ ಅನುಭವಿಸಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಇದಲ್ಲದೆ ಪತ್ರಿಕೆಯಲ್ಲಿ ವರದಿಯನ್ನು ಕಂಡ ಆಸ್ಪತ್ರೆ ಸಿಬ್ಬಂದಿ ತಮ್ಮತಮ್ಮೊಳಗೆ ಕದನ ಆರಂಭಿಸಿದ್ದು ಪತ್ರಿಕೆಗೆ ಮಾಹಿತಿ ಸೋರಿಕೆ ಮಾಡಿದ ಬಗ್ಗೆ ದೋಷಾರೋಪಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಮನೆಗೆ ಮರಳಿದ ಬಶೀರ್

Posted by JAYAKIRANA Kirana on | 0 comments | Leave a comment...

ಮಂಗಳೂರು: ವಾರದ ಹಿಂದೆ ಅಪಹರಣಕ್ಕೆ ಒಳಗಾಗಿದ್ದಾನೆ ಎನ್ನಲಾದ ಮೂಡುಶೆಡ್ಡೆಯ ವ್ಯಾಪಾರಿ ಬಶೀರ್ ಮನೆಗೆ ಮರಳಿದ್ದಾನೆ.
ತನ್ನನ್ನು ಕಾರ್‌ನಲ್ಲಿ ಅಪಹರಿಸಿ ಎರಡು ದಿನಗಳ ಕಾಲ ಕೋಣೆಯಲ್ಲಿ ಇಡಲಾಗಿತ್ತು. ಬಳಿಕ ಉಜಿರೆ ಸಮೀಪ ಕಾರ್‌ನಲ್ಲಿ ತಂದು ಬಿಟ್ಟಿದ್ದಾರೆ ಎಂದು ಹೇಳಿರುವ ಬಶೀರ್ ಎರಡು ದಿನಗಳ ಹಿಂದೆ ಉಜಿರೆ ಔಟ್ ಪೋಸ್ಟ್ ಸಿಬ್ಬಂದಿ ಯನ್ನು ಸಂಪರ್ಕಿಸಿದ್ದರು. ಅವರು ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದು ಇಲ್ಲಿಂದ ಉಜಿರೆಗೆ ತೆರಳಿದ ಕಾವೂರು ಎಸೈ ಸಿದ್ದಪ್ಪ ಬಶೀರನನ್ನು ಕರೆದುಕೊಂಡು ಬಂದಿದ್ದಾರೆ.
ಬಶೀರ್‌ನನ್ನು ಅಪಹರಿಸಲಾಗಿತ್ತೇ ಎಂಬ ವಿಷಯವೀಗ ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಲಕ್ಷಾಂತರ ರೂ. ಸಾಲ ಮಾಡಿಕೊಂಡಿರುವ ಬಶೀರ್ ಸಾಲಗಾ ರರಿಂದ ತಾತ್ಕಾಲಿಕ ವಿರಾಮ ಪಡೆ ಯಲು ಈ ರೀತಿಯ ಅಪಹರಣದ ನಾಟಕ ಆಡಿದ್ದಾನೆ ಎಂದು ಹೇಳಲಾಗು ತ್ತಿದೆ. ಇದು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೂಡುಶೆಡ್ಡೆಯಲ್ಲಿ ದಿನಸಿ ಅಂಗಡಿ ನಡೆಸುವ ೩೭ರ ಹರೆಯದ ಹಸನ್ ಬಶೀರ್‌ನನ್ನು ಫೈನಾನ್ಸ್ ವ್ಯವಹಾರದ ರಾಜೇಶ್ ಮಾರ್ಟಿಸ್ ಅಪಹರಿಸಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ರೇಷ್ಮಾ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ಪ್ರಕಾರ ಕಳೆದ ಎ.೧೮ರಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದ ಇಬ್ಬರು ದಣಿ ಕರೆಯುತ್ತಿದ್ದಾರೆ ಎಂದು ಕೆಂಪು ಕಾರ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಅದರ ಬಳಿಕ ಬಶೀರ್‌ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಫೈನಾನ್ಸ್ ವ್ಯವಹಾರದ ರಾಜೇಶರ ಸಹಾಯಕರಿಗೆ ಪೋನ್ ಮಾಡಿ ಕೇಳಿದರೆ ಬಶೀರ್ ತಮ್ಮ ಬಳಿ ಇಲ್ಲ ಎಂದು ಹೇಳಿದ್ದರು ಎಂದು ರೇಷ್ಮಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೆಂಪು ಕಾರ್‌ನಲ್ಲಿ ಅಪಹರಿಸಲಾಗಿದೆ ಎಂದು ರೇಷ್ಮಾ ಹೇಳಿದ್ದರೆ, ಬಶೀರ್ ಹೇಳುತ್ತಿರುವುದು ತನ್ನನ್ನು ಕಪ್ಪು ಕಾರ್‌ನಲ್ಲಿ ಅಪಹರಿಸಲಾಗಿತ್ತು ಎಂದು. ಯಾರು ಅಪಹರಿಸಿದ್ದು, ಯಾಕೆ ಅಪಹರಿಸಿದ್ದು, ಅಪಹರಿಸಿ ಏನು ಮಾಡಿದರು ಎಂಬ ಪ್ರಶ್ನೆಗಳಿಗೆ ಬಶೀರ್‌ನ ಬಳಿಯಲ್ಲಿ ಉತ್ತರ ಇಲ್ಲ. ಬಶೀರ್ ಅಪಹರಣವಾಗಿ ಎರಡು ದಿನಕಳೆದರೂ ಆತನ ಪತ್ನಿ ಪೊಲೀಸರಿಗೆ ಮಾಹಿತಿಯೂ ಕೊಟ್ಟಿರಲಿಲ್ಲ. ದೂರು ದಾಖಲಿಸಿರಲಿಲ್ಲ. ರೇಷ್ಮಾ ತನ್ನನ್ನು ಆರೋಪಿಯಾಗಿಸುವ ಪ್ರಯತ್ನ ದಲ್ಲಿದ್ದಾಳೆ ಎಂಬುದನ್ನು ಅರಿತ ರಾಜೇಶ್ ಪೊಲೀಸರನ್ನು ಸಂಪರ್ಕಿಸಿ ರೇಷ್ಮಾಳಿಂದ ಬಲವಂತದಿಂದ ದೂರು ಕೊಡಿಸಿದ್ದ. ತನಿಖೆಯಾಗಿ ಸತ್ಯ ಹೊರಗೆ ಬರಲಿ ಎಂಬುದು ರಾಜೇಶನ ಉದ್ದೇಶವಾಗಿತ್ತು.
ಫೈನಾನ್ಸ್‌ಗಳಲ್ಲೂ, ಪರಿಚಿತರಿಂದಲೂ ಸಾಲ ಮಾಡಿರುವ ಬಶೀರ್‌ನನ್ನು ಅಪಹರಿಸಿದ್ದು ಯಾರು ಎಂಬ ಸಂಶಯ ಕಾಡುತ್ತಲೆ ಇತ್ತು. ಈಗ ಆತನ ಹಾಗೂ ಆತನ ಮನೆಯವರ ಬಗ್ಗೆ ಶಂಕೆ ಮೂಡುತ್ತಿದೆ. ಬುಧವಾರ ರಾತ್ರಿ ಬಶೀರ್‌ಗೆ ಬೆದರಿಕೆ ಕರೆ ಬಂದಿತ್ತು ಎಂದು ಆತನ ಪತ್ನಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆ ಕರೆ ಯಾರದ್ದು, ಯಾವ ನಂಬರ್‌ನಿಂದ ಬಂದಿತ್ತು, ನಂಬರ್ ಯಾವುದು ಎಂದು ಕೇಳಿದರೆ ಗೊತ್ತಿಲ್ಲ ಎಂಬ ಉತ್ತರ ಇವರದು. ತನಿಖೆ ನಡೆಸುತ್ತೇವೆ ಸತ್ಯ ಏನೆಂದು ಸದ್ಯವೇ ತಿಳಿಯುತ್ತದೆ ಎನ್ನುತ್ತಾರೆ ಪೊಲೀಸರು.

ಅಲೋಶಿಯಸ್ ಕಾಲೇಜ್‌ನಲ್ಲಿ ಬುರ್ಖಾ ನಿಷೇಧ!

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಅಲೋ ಶಿಯಸ್ ಪದವಿಪೂರ್ವ ಕಾಲೇಜ್ ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿ ನಿಯರು ಕ್ಲಾಸ್‌ರೂಂ ಮತ್ತು ಪರೀಕ್ಷಾ ಹಾಲ್‌ನಲ್ಲಿ ಬುರ್ಖಾ ತೊಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕಾಲೇಜ್‌ನ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿ ಯರು ತರಗತಿಯಲ್ಲಿ ಶಿಕ್ಷಣ ಪಡೆ ಯುವ ಸಂದರ್ಭ ಸೂಕ್ತ ಬಟ್ಟೆಬರೆ ಯನ್ನೇ ತೊಡಬೇಕು. ಹೀಗಾಗಿ ಬುರ್ಖಾ ತೊಡುವುದನ್ನು ನಿಷೇಧಿಸಲಾ ಗಿದೆ ಎನ್ನುತ್ತಿದೆ. ಕಾಲೇಜ್ ರಿಜಿಸ್ಟ್ರಾರ್ ಎ.ಎಂ.ನರಹರಿ ಪ್ರಕಾರ, ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜ್ ಕ್ಯಾಂಪಸ್‌ನಲ್ಲಿ ಬುರ್ಖಾ ತೊಡುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ತರಗತಿ ಮತ್ತು ಪರೀಕ್ಷಾ ಹಾಲ್‌ನಲ್ಲಿ ವಿದ್ಯಾರ್ಥಿನಿಯರ ಮುಖ ಕಾಣಬೇಕು ಎಂಬ ಉದ್ದೇಶದಿಂದ ಮಾತ್ರ ಈ ನಿರ್ಧಾರಕ್ಕೆ ಬರಲಾಗಿದೆಯಂತೆ. ಇದೇ ರೀತಿ ನಗರದ ಕೆನರಾ ಕಾಲೇಜ್‌ನಲ್ಲೂ ಬುರ್ಖಾ ನಿಷೇಧಿಸಲಾಗಿದೆ.

ಉಪ್ಪಿನಂಗಡಿ ದೇವಸ್ಥಾನದ ಭೂಮಿ ಖರೀದಿಗೆ ಷಡ್ಯಂತ್ರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಪ್ಪಿನಂಗಡಿ ಸಹ ಸ್ರಲಿಂಗೇಶ್ವರ ದೇವಸ್ಥಾನದ ಆಸ್ತಿಯನ್ನು ದೇವಳದ ಆಡಳಿತ ಸಮಿತಿಯ ಸದಸ್ಯನೇ ಖರೀದಿಗೆ ಮುಂದಾಗಿರುವ ವಿಷಯ ಈಗ ಬಹಿರಂಗಗೊಂಡಿದೆ.
ದೇವಳದ ಆಸ್ತಿ ಖರೀದಿಗೆ ತನಗೆ ಅವಕಾಶ ಕೊಡಬೇಕು ಸರಕಾರ ನಿಗದಿ ಪಡಿಸಿದ ಶುಲ್ಕ ಪಾವತಿಸುತ್ತೇನೆ ಎಂದು ಈ ವ್ಯಕ್ತಿ ಎರಡೆರಡು ಬಾರಿ ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾನೆ. ಆರು ವರ್ಷಗಳ ಹಿಂದೊಮ್ಮೆ ಅರ್ಜಿ ಸಲ್ಲಿಸಿದ ವ್ಯಕ್ತಿ, ಈಗ ಆರು ತಿಂಗಳ ಹಿಂದೆ ಮತ್ತೆ ಅರ್ಜಿ ಸಲ್ಲಿಸಿದ್ದಾನೆ.
ಆರು ವರ್ಷಗಳ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನುದೇವಸ್ಥಾನದ ಆಡಳಿತ ಅಧಿಕಾರಿಯಾಗಿದ್ದ ತಹಶೀಲ್ದಾರ್ ಡಾ.ದಾಸೇಗೌಡ ಮುಂದಿನ ದಿನಗಳಲ್ಲಿ ಆಸ್ತಿ ದೇವಸ್ಥಾನದ ಉಪಯೋಗಕ್ಕೆ ಬೇಕು, ಅಲ್ಲದೆ ದತ್ತಿ ಕಾಯ್ದೆಯಲ್ಲಿ ದೇವಸ್ಥಾನದ ಆಸ್ತಿ ಮಾರಾಟ ಇಲ್ಲವೇ ಗುತ್ತಿಗೆ ನೀಡಲು ಅವಕಾಶ ಇಲ್ಲ ಎಂದು ಕಾರಣ ನೀಡಿ ಅರ್ಜಿ ತಿರಸ್ಕರಿಸಿದ್ದರು.
ಬಳಿಕ ದೇವಸ್ಥಾನದಲ್ಲಿ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಈ ಸಮಿತಿಯ ಸದಸ್ಯತ್ವ ಪಡೆದುಕೊಂಡ ಇದೇ ವ್ಯಕ್ತಿ ತನ್ನ ಪ್ರಭಾವ ಬೀರಿ ದೇವಸ್ಥಾನದ ಆಸ್ತಿ ಖರೀದಿಗೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

ರಾಜಕೀಯ ತಿರುವು ಪಡೆಯುತ್ತಿರುವ ಸಂದೀಪ್ ಕೊಲೆ ಪ್ರಕರಣ

Posted by JAYAKIRANA Kirana on | 0 comments | Leave a comment...

ಕಾರ್ಕಳ: ನಿಟ್ಟೆ ಪದವು ಕಲಂಬಾ ಡಿಯಲ್ಲಿ ಸೋಮವಾರ ತಡರಾತ್ರಿ ನಡೆದಿದ್ದ ಸಂದೀಪ್ ಕುಲಾಲ್ ಕೊಲೆ ಪ್ರಕರಣವು ರಾಜಕೀಯ ತಿರುವು ಪಡೆಯುತ್ತಿದ್ದು, ಕೊಲೆ ಆರೋಪಿಗಳು ಬಿಜೆಪಿ ಕಾರ್ಯಕರ್ತರಾಗಿದ್ದರೆ, ಸಾವಿ ಗೀಡಾದವನು ಕಾಂಗ್ರೆಸ್ ಕಾರ್ಯಕರ್ತ ನಾಗಿರುವುದೇ ಇದಕ್ಕೆ ಕಾರಣ.
ಕಲಂಬಾಡಿ ಲಲಿತಾ ಶೆಡ್ತಿ ಎಂಬ ವರ ಮನೆಯಲ್ಲಿ ಜರಗಿದ್ದ ಮದರಂಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದೀಪ್ ಕುಲಾಲ್ ಅದೇ ದಿನ ತಡರಾತ್ರಿ ಮನೆಯಿಂದ ೧೦೦ ಮೀ ದೂರದಲ್ಲಿ ಹೆಣವಾಗಿದ್ದ.
ಕಾರು ಚಾಲಕ ವೀರೇಂದ್ರ ಪೂಜಾರಿ ಎಂಬಾತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನಿಗೆ ನಾಲ್ವರು ಯುವಕರು ಸಹಕರಿಸಿದ್ದರೆಂಬ ಅಂಶ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿ'ಸೋಜಾ ನೇತೃತ್ವದ ಪೊಲೀಸರ ತಂಡ ಯುವ ಕರಿಬ್ಬರನ್ನು ಮಂಗಳವಾರ ವಶಕ್ಕೆ ತೆಗೆದು ವಿಚಾರಣೆ ನಡೆಸಿದರು. ಇವರಿ ಬ್ಬರು ಸ್ಥಳೀಯ ಬಿಜೆಪಿ ಯುವ ಮೋರ್ಚಾದ ಮುಖಂಡನೊಬ್ಬನ ಸಹೋದರರಾಗಿದ್ದುರಿಂದ ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂಬ ಒತ್ತಡ ತೀವ್ರಗೊಂಡಿರುವುದರಿಂದ ಅದೇ ದಿನ ರಾತ್ರಿ ಬಿಡುಗಡೆಗೊಳಿ ಸಲಾಗಿದೆ.
ಆರೋಪಿ ವೀರೇಂದ್ರ ಪೂಜಾರಿ ತನ್ನ ಕೃತ್ಯವನ್ನು ಸಲೀಸಾಗಿ ನೆರೆವೇರಿಸಿ ಸ್ಥಳೀಯರೊಬ್ಬರ ಮನೆಗೆ ತೆರಳಿ ನೀರಿನಿಂದ ಮಾರಾಕಾಯುಧವನ್ನು ತೊಳೆದು ತೆರಳಿದ್ದಾನೆಂದು ತಿಳಿದು ಬಂದಿದೆ.
ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಆರೋಪಿಯಾಗಿರುವ ವೀರೇಂದ್ರ ಪೂಜಾರಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದನು. ಇದೇ ಕಾರಣ ದಿಂದ ಆತನ ರಕ್ಷಣೆಗೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬಗ್ಗೆ ಅಸಮಾಧಾನಗೊಂಡಿರುವ ಶಾಸಕ ಹೆಚ್. ಗೋಪಾಲ ಭಂಡಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪ್ರಕರಣದ ಬಗ್ಗೆ ಸೂಕ್ತ ರೀತಿ ಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಲೀಲಾಧರ್ ಮೇಲೆ ಕೇಸ್ ಪ್ರಕರಣ: ಇತ್ಯರ್ಥ

Posted by JAYAKIRANA Kirana on | 0 comments | Leave a comment...

ಸುಳ್ಯ: ಪ್ರೊಬೇಷನರಿ ಎಸಿಎಫ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಕೆವಿಜಿ ಆಯುರ್ವೇದಿಕ್ ಕಾಲೇಜಿನ ಆಡಳಿತಾ ಧಿಕಾರಿ ಡಾ.ಲೀಲಾಧರ್ ಮೇಲೆ ದಾಖ ಲಾಗಿದ್ದ ಕೇಸು ಮತ್ತು ಇದರ ವಿರುದ್ಧ ನಡೆಸಲಾದ ಪ್ರತಿಭಟನೆ ಮತ್ತು ವಿವಾದ ಗಳನ್ನು ಸುಳ್ಯ ಶಾಸಕ ಎಸ್.ಅಂಗಾರ ಅವರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಇತ್ಯರ್ಥಗೊಳಿಸಲಾ ಯಿತು. ಮಾತುಕತೆಯಲ್ಲಿ ಲೀಲಾಧರ್ ಮೇಲೆ ದಾಖಲಾದ ಕೇಸನ್ನು ಹಿಂದಕ್ಕೆ ಪಡೆಯುವುದಾಗಿ ಎಸಿಎಫ್ ತಿಳಿಸಿರು ವುದರ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟು ಪ್ರಕರಣವನ್ನು ಇತ್ಯರ್ಥ ಗೊಳಿಸಿದ್ದಾಗಿ ತಿಳಿದುಬಂದಿದೆ.

ಮುರಿದು ಬಿದ್ದ ಮದುವೆ: ಪರಿಹಾರಕ್ಕೆ ಬೇಡಿಕೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಮದುವೆ ಮುರಿದುಬಿದ್ದ ಬಳಿಕ ವರನೊಬ್ಬ ಮಾತುಕತೆಗೂ ಬಾರದೆ ಮೋಸ, ನಂಬಿಕೆ ದ್ರೋಹ ಹಾಗೂ ಅಗೌರವ ತರುವ ಕೆಲಸ ಮಾಡಿದ್ದು, ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಧುವಿನ ತಂದೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಕನಕಮಜಲು ಗ್ರಾಮದ ದೇರ್ಕಜೆಯ ಕುಂಞಿರಾಮ ಮಣಿ ಯಾಣಿಯವರ ಪುತ್ರಿ, ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎಸ್‌ಡಬ್ಲ್ಯೂ ವಿದ್ಯಾರ್ಥಿನಿ ಡಿ.ಸೌಮ್ಯ(೨೧) ವಿವಾಹವು ಸುಳ್ಯ ಕಸಬಾ ಗ್ರಾಮದ ಕುದ್ಪಾಜೆ ನಾರಾಯಣ ಮಣಿ ಯಾಣಿಯವರ ಪುತ್ರ ಕಂದ್ರಪ್ಪಾಡಿ ಶಾಲೆಯಲ್ಲಿ ಶಿಕ್ಷಕ ನಾಗಿರುವ ಕೆ.ಎನ್.ಸುಬ್ರಹ್ಮಣ್ಯ ರೊಂದಿಗೆ ಇದೇ ೨೯ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯುವುದೆಂದು ನಿರ್ಧ ರಿಸಲಾಗಿತ್ತು.
ಈ ಕುರಿತು ಕಳೆದ ಅಕ್ಟೋಬರ್ ೯ರಂದು ವಿವಾಹ ನಿಶ್ಚಿತಾರ್ಥ ಕೂಡಾ ನಡೆದಿತ್ತು.
ಮದುವೆಗೆ ವಧುವಿನ ಕಡೆಯವರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಬಟ್ಟೆ-ಬರೆ, ಚಿನ್ನಾಭರಣ ಸೇರಿದಂತೆ ಸುಮಾರು ೫ ಲಕ್ಷದಷ್ಟು ಖರ್ಚು ಮಾಡಲಾಗಿದೆ. ಇದೀಗ ಕೊನೆ ಘಳಿಗೆಯಲ್ಲಿ ವರನ ಕಡೆಯವರು ಮದುವೆ ನಿರಾಕರಿಸಿದ್ದು, ಮಾತುಕತೆಗೆ ಕರೆದಾಗ ಬಾರದೆ ಮೋಸ ಮಾಡಿದ್ದಾರೆ ಎಂದು ಕುಂಞಿರಾಮ ಮಣಿಯಾಣಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸುರತ್ಕಲ್: ಖಂಡಿಗೆ ಧರ್ಮನೇಮಕ್ಕೆ ಬೂಲ್ಯ ಪ್ರದಾನ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಇತಿಹಾಸ ಪ್ರಸಿದ್ಧ ಮೀನು ಹಿಡಿಯುವ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಖಂಡಿಗೆ ಧರ್ಮರಸು ಉಳ್ಳಾಯ ಕ್ಷೇತ್ರದಲ್ಲಿ ದೈವಗಳಿಗೆ ಕ್ಷೇತ್ರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇದೇ ೨೯ ರಂದು ಧರ್ಮನೇಮೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ದೈವದ ನರ್ತನ ಪಾತ್ರಿಗೆ ಧಾರ್ಮಿಕ ವಿಧಿವಿಧಾ ನಗಳ ಮೂಲಕ ಕ್ಷೇತ್ರದಲ್ಲಿ ಬೂಲ್ಯ ಪ್ರದಾನ ಮಾಡಲಾಯಿತು.
ಗ್ರಾಮದ ಹಿರಿಯರು, ಗಡಿಕಾರರು ಹಾಗೂ ಖಂಡಿಗೆಬೀಡಿನ ಕುಟುಂಬಿಕರ ಸಮ್ಮುಖದಲ್ಲಿ ತುಳು ಸಂಪ್ರದಾಯದಂತೆ ಕ್ಷೇತ್ರದ ಮುಖ್ಯಸ್ಥರಾದ ಆದಿತ್ಯ ಮುಕ್ಕಾಲ್ದಿ ವೀಳ್ಯದೆಲೆ, ಹೂ, ಅಡಿಕೆ ಮತ್ತಿತರ ಸುವಸ್ತುಗಳನ್ನು ದೈವದ ಪಾತ್ರಿಗೆ ನೀಡುವ ಮೂಲಕ ಬೂಲ್ಯ ಪ್ರದಾನ ಮಾಡಿದರು. ಧರ್ಮನೇಮೋತ್ಸವದವ ರೆಗೆ ಕ್ಷೇತ್ರದಲ್ಲಿ ನಿರಂತರ ಅನ್ನದಾನಕ್ಕೆ ಕಳಸೆಗೆ ಅಕ್ಕಿಯನ್ನು ಹಾಕುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಆದಿತ್ಯ ಮುಕ್ಕಾಲ್ದಿ ಖಂಡಿಗೆ ಕ್ಷೇತ್ರದಲ್ಲಿ ಧರ್ಮ ನೇಮೋತ್ಸವದ ಪೂರ್ವಭಾವಿ ದೈವಿಕ ಕಾರ್ಯಗಳು ೨೬ರಿಂದ ಆರಂಭ ಗೊಂಡು ೩೦ರವರೆಗೆ ನಡೆಯಲಿದೆ. ೨೬ರಂದು ಬೆಳಿಗ್ಗೆ ಉಗ್ರಾಣ ಮುಹೂ ರ್ತದೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭ. ೨೯ ರಂದು ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವ ಹಾಗೂ ಮೇ ೧೪ರಂದು ವಾರ್ಷಿಕ ಮೀನು ಹಿಡಿಯುವ ಜಾತ್ರೆ ಹಾಗೂ ೧೫ಕ್ಕೆ ವಾರ್ಷಿಕ ನೇಮೋತ್ಸವ ಸಂಪ್ರದಾಯದಂತೆ ನಡೆಯಲಿದೆ ಎಂದರು.
ಆಡಳಿತ ಸಮಿತಿಯ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಅಧ್ಯಕ್ಷ ದಯಾನಂದ ಬಿ.ಶೆಟ್ಟಿ, ಅಜಿತ್‌ಕುಮಾರ್ ರೈ ಮಾಲಾಡಿ, ಶ್ರೀಪತಿಭಟ್, ಬಾಲಕೃಷ್ಣ ಭಟ್, ದೈವದ ಪಾತ್ರಿ ಪದ್ಮನಾಭ, ಚರಣ್ ಸುವರ್ಣ, ಜಮೇರ್ಶ ಶೆಟ್ಟಿ ಖಂಡಿಗೆ, ಶಂಕರ ಶೆಟ್ಟಿ ಕೆರೆಮನೆ, ದಿವಾಕರ ಸಾಮಾನಿ, ಚೇಳಾರು ಗ್ರಾಪಂ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಇದ್ದರು.

ಸಾರ್ವಜನಿಕ ಶನೀಶ್ವರ ಪೂಜೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಿಂದೂ ಯುವಸೇನೆ ಶ್ರೀ ಮಹಾದೇವಿ ಶಾಖೆ ಬಗಂಬಿಲ, ಕುಂಪಲ ಇಲ್ಲಿ ನಾಳೆ ಬೆಳಗ್ಗೆ ೭.೩೦ಕ್ಕೆ ಸ್ಥಳ ಶುದ್ಧೀಕರಣ, ಗಣಹೋಮ ನಡೆಯ ಲಿದೆ. ೧೦.೩೦ಕ್ಕೆ ಶ್ರೀ ಸಾರ್ವಜನಿಕ ಶನೀಶ್ವರ ಪೂಜೆ ಹಾಗೂ ಮಧ್ಯಾಹ್ನ ಒಂದು ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿರುವುದು. ಸಂಜೆ ೬.೩೦ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಲಿರುವುದು. ಆದಿತ್ಯವಾರ ಸಂಜೆ ೮.೩೦ಕ್ಕೆ ತಲಕಲ ಶ್ರೀ ಕಾಶಿ ವಿಶ್ವ ನಾಥೇಶ್ವರ ಮಹಾಗಣಪತಿ ಪ್ರಸಾದಿತ ಯಕ್ಷಗಾನ ಮಂಡಳಿ-ಕೊಳಂಬೆ ಇವರಿಂದ 'ಮಹಿಮೆದ ಮಂತ್ರ ದೇವತೆ' ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ಕದ್ರಿಕಂಬಳ ಫ್ರೆಂಡ್ಸ್ ವಾರ್ಷಿಕೋತ್ಸವ ಸಮಾರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕದ್ರಿಕಂಬಳ ಫ್ರೆಂಡ್ಸ್‌ನ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಪರಿಷತ್ ಸದಸ್ಯ ಕದ್ರಿ ನವನೀತ ಶೆಟ್ಟಿ ಮುಖ್ಯ ಭಾಷಣಕಾರರಾಗಿದ್ದರು. ಕಾರ್ಪೊ ರೇಟರ್ ಅಶೋಕ್ ಕುಮಾರ್ ಡಿ.ಕೆ., ಉದ್ಯಮಿ ಅಮೃತ್ ವಿ.ಕದ್ರಿ ಶ್ರೀಲಲಿತೆ ಹಾಗೂ ಲಕುಮಿ ತಂಡಗಳ ಸಂಸ್ಥಾಪಕ ಕಿಶೋರ್ ಡಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಂಗಳಾ ಕಿಡ್ನಿ ಫೌಂಡೇಶನ್‌ನ ಡಾ.ಗಣಪತಿ ಪಿ.ಇವರ ಅಧ್ಯಕ್ಷತೆಯಲ್ಲಿ ಲಯನ್ ಕಿಶೋರ್ ಡಿ.ಶೆಟ್ಟಿಯವರ ನೇತೃತ್ವದ ಲಕುಮಿ ಕಲಾ ತಂಡದ ಹಿರಿಯ ಕಲಾವಿದ ಚಂದ್ರಹಾಸ ದೇವಾಡಿಗ ಕದ್ರಿ ಅವರನ್ನು ಸನ್ಮಾನಿಸಲಾಯಿತು. ಕದ್ರಿ ಕಂಬಳ ಫ್ರೆಂಡ್ಸ್‌ನ ಅಧ್ಯಕ್ಷ ಪ್ರವೀಣ್ ಕುಮಾರ್ ಸ್ವಾಗತಿಸಿದರು. ನಾಗೇಶ್ ದೇವಾಡಿಗ ಪ್ರಸ್ತಾವನೆ ಗೈದರು. ನವೀನ್ ಕದ್ರಿ ಕಂಬಳ, ಚೇತನ್ ಕದ್ರಿಕಂಬಳ ಉಪಸ್ಥಿತ ರಿದ್ದರು, ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಕೊನೆಗೂ ಜಯದ ಖಾತೆ ತೆರೆದ ಡೆಕ್ಕನ್

Posted by JAYAKIRANA Kirana on | 0 comments | Leave a comment...

ಕ್ಯಾಮರೊನ್ ಅಬ್ಬರಕ್ಕೆ ಪುಣೆಗೆ ತವರಲ್ಲೇ ಮುಖಭಂಗ
ಪುಣೆ: ಅಂತೂ ಇಂತೂ ಐಪಿಎಲ್-೫ರಲ್ಲಿ ಜಯದಾಖಲಿಸಲು ಡೆಕ್ಕನ್ ಚಾಜರ‍್ಸ್ ಸಫಲವಾಗಿದೆ. ಕ್ಯಾಮರೊನ್ ವೈಟ್ ಪ್ರದರ್ಶಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ನಿನ್ನೆ ಬಲಿಷ್ಠ ಪುಣೆ ವಾರಿಯರ‍್ಸ್ ವಿರುದ್ಧದ ಪಂದ್ಯವನ್ನು ೧೮ ರನ್‌ಗಳಿಂದ ಗೆದ್ದುಕೊಳ್ಳಲು ಡೆಕ್ಕನ್ ಸಫಲವಾಗಿದ್ದು, ಇದು ಈ ಭಾರಿಯ ಐಪಿಎಲ್‌ನಲ್ಲಿ ತಂಡದ ಮೊದಲ ಜಯ ಕೂಡ ಆಗಿದೆ. ಅತ್ತ ಪುಣೆ ತವರಲ್ಲೇ ಮುಖಭಂಗಕ್ಕೀಡಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಡೆಕ್ಕನ್ ನಿಗದಿತ ೨೦ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೭೭ ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿತು. ಗುರಿ ಬೆನ್ನತ್ತಿದ್ದ ಪುಣೆ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೫೯ ರನ್ ಗಳಿಸ ಲಷ್ಟೇ ಶಕ್ತವಾಯಿತು. ಆರಂಭಿಕರಾದ ಜೆಸ್ಸಿ ರೈಡರ್ ಹಾಗೂ ಮನೀಶ್ ಪಾಂಡೆ ಈ ಹಿಂದಿನಂತೆ ಉತ್ತಮ ಅಡಿಪಾಯವನ್ನು ಹಾಕಿಕೊಡಲಿಲ್ಲ. ಅಂಕಿತ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೈಡರ್ (೭) ಹ್ಯಾರಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಪಾಂಡೆ (೨೧) ಹಾಗೂ ಗಂಗೂಲಿ (೨೩) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ತಂಡಕ್ಕೆ ಆಧಾರವಾಗುವ ಲಕ್ಷಣ ತೋರಿಸಿದರೂ ದೊಡ್ಡ ಇನ್ನಿಂಗ್ಸ್‌ನತ್ತ ಗಮನಹರಿಸಲಿಲ್ಲ. ಆದರೆ ರಾಬಿನ್ ಉತ್ತಪ್ಪ (೨೯) ಬೇಜವಾಬ್ದಾರಿ ಹೊಡೆತವನ್ನು ಬಾರಿಸುವ ಯತ್ನದಲ್ಲಿ ಪೆವಿಲಿಯನ್ ಸೇರಿದಾಗ ಅಲ್ಲಿಗೆ ಪುಣೆ ಗೆಲುವಿನ ಕನಸಿಗೆ ಮಂಕು ಕವಿಯಿತು. ಸ್ಯಾಮ್ಯುವೆಲ್ಸ್ (೩) ಕೂಡ ಬ್ಯಾಟಿಂಗ್ ಮರೆತು ಆಡಿದರು. ಈ ವೇಳೆ ತಂಡ ೯೧ ರನ್‌ಗೆ ಐದು ವಿಕೆಟ್ ಕಳಕೊಂಡಿತ್ತು. ಆದರೆ ಆಲ್‌ರೌಂಡರ್ ಸ್ಟೀವ್ ಸ್ಮಿತ್ ಹಾಗೂ ಮನಾಸ್ (೨೨) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಸ್ಮಿತ್ ಕೇವಲ ೧೩ ಎಸೆತಗಳಲ್ಲಿ ೨೬ ರನ್ ದಾಖಲಿ ಸಿದ್ದರು. ಥೆರಾನ್ ಹಾಗೂ ಆಶಿಶ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು.
ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಚಾರ್ಜರ‍್ಸ್‌ಗೆ ಆರಂಭಿಕರಾದ ಧವನ್ (೧೬) ಹಾಗೂ ಪಾರ್ಥಿವ್ ಪಟೇಲ್ (೨೪) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ವೈಟ್ ಪ್ರದರ್ಶಿಸಿದ ಅಬ್ಬರತೆ ಬ್ಯಾಟಿಂಗ್ ಪಂದ್ಯಕ್ಕೆ ತಿರುವು ನೀಡಿತು. ವೈಟ್ ಹಾಗೂ ಡ್ಯುಮಿನಿ (೨೬) ನಾಲ್ಕನೇ ವಿಕೆಟ್‌ಗೆ ೬.೨ ಓವರ್‌ನಲ್ಲಿ ೭೫ ರನ್ ಕಲೆಹಾಕಿದಾಗ ತಂಡ ಉತ್ತಮ ಸ್ಥಿತಿಗೆ ತಲುಪಿತು. ಅದರಲ್ಲೂ ವೈಟ್ ಕೇವಲ ೪೬ ಎಸೆತಗಳಲ್ಲಿ ಐದು ಸಿಕ್ಸ್ ಹಾಗೂ ಆರು ಬೌಂಡರಿ ನೆರವಿನಿಂದ ೭೮ ರನ್ ಸ್ಫೋಟಿಸಿದ ಪರಿಣಾಮ ಮೊತ್ತ ೧೭೦ರ ಗಡಿ ದಾಟಲು ಸುಲಭವಾಯಿತು.

ರಾಜ್ಯಸಭೆಗೆ ಮಾಸ್ಟರ್ ಬ್ಲಾಸ್ಟರ್

Posted by JAYAKIRANA Kirana on | 0 comments | Leave a comment...

ನವದೆಹಲಿ: ಕೇಂದ್ರ ಸರಕಾರ ರಾಜ್ಯಸಭೆಗೆ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿದ್ದು, ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮೊದಲ ಕ್ರಿಕೆಟಿಗನಾಗಿದ್ದಾರೆ.
ಕ್ರಿಕೆಟಿಗೆ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆಯನ್ನು ನೀಡುತ್ತಿರುವ, ಶತಕಗಳ ಶತಕ ಬಾರಿಸಿರುವ ಸಚಿನ್ ಅವರಿಗೆ ಭಾರತ ರತ್ನ ನೀಡಬೇಕೆಂದು ಹಲವು ಸಮಯದಿಂದ ಬೇಡಿಕೆ ಬರುತ್ತಾ ಇದೆ. ಈ ವೇಳೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ನಿನ್ನೆ ಬೆಳಿಗ್ಗೆ ಸಚಿನ್ ಮತ್ತು ಅವರ ಪತ್ನಿ ಅಂಜಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನೆಗೆ ಭೇಟಿ ನೀಡಿದರು. ಶತಕಗಳ ಶತಕ ಬಾರಿಸಿರುವ ಸಚಿನ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅಭಿನಂದಿಸಲು ಬಯಸಿದ್ದು, ಸೋನಿಯಾ ಮನೆಯಲ್ಲಿ ಸಚಿನ್ ಮತ್ತು ಅಂಜಲಿ ಒಂದೂವರೆ ಗಂಟೆ ಕಳೆದರು. ಮಂಗಳವಾರವಷ್ಟೇ ೩೯ನೇ ಹುಟ್ಟುಹಬ್ಬವನ್ನು ಆಚರಿಸಿದ ಸಚಿನ್‌ಗೆ ಒಳ್ಳೆಯ ಉಡುಗೊರೆಯನ್ನು ನೀಡಿದೆ. ಸಚಿನ್ ಮತ್ತು ಬಾಲಿವುಡ್‌ನ ಹಿರಿಯ ನಟಿ ರೇಖಾ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಮಂದಿಯ ಪಟ್ಟಿ ಯಲ್ಲಿದ್ದಾರೆ. ಇತರ ಇಬ್ಬರು ಯಾರೆಂದು ಸರಕಾರ ಇದು ವರೆಗೆ ಬಾಯ್ಬಿಟ್ಟಿಲ್ಲ.

ಸ್ಟೇಡಿಯಂನಲ್ಲಿ ಧೂಮಪಾನ; ನಟ ಶಾರೂಖ್‌ಗೆ ಸಮನ್ಸ್

Posted by JAYAKIRANA Kirana on | 0 comments | Leave a comment...

ಜೈಪುರ್: ಇಲ್ಲಿನ ಸವಾಯ್ ಮಾನ್‌ಸಿಂಗ್ ಸ್ಡೇಡಿಯಂನಲ್ಲಿ ಧೂಮಪಾನ ಮಾಡಿದ್ದ ನಟ ಹಾಗೂ ಕೊಲ್ಕತ್ತಾ ನೈಟ್‌ರೈಡರ್ ತಂಡದ ಮಾಲಕ ಶಾರೂಖ್ ಖಾನ್‌ಗೆ ಜೈಪುರ್ ಹೈಕೋರ್ಟ್ ಸಮನ್ಸ್ ನೀಡಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೆ ಎಪ್ರಿಲ್ ಎಂಟರಂದು ನಡೆದ ರಾಜಸ್ಥಾನ್ ಹಾಗೂ ಕೊಲ್ಕತ್ತಾ ನೈಟ್‌ರೈಡರ್ ಪಂದ್ಯದ ವೇಳೆ ಶಾರುಖ್ ಧೂಮಪಾನದಲ್ಲಿ ನಿರತರಾಗಿದ್ದರು ಎಂದು ಜೈಪುರ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಆನಂದ್ ಸಿಂಗ್ ಸ್ಥಳೀಯ ಕೋರ್ಟ್‌ನಲ್ಲಿ ಎಪ್ರಿಲ್ ಒಂಬತ್ತರಂದು ಧಾವೆ ಹೂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್‌ನ ಹೆಚ್ಚುವರಿ ಮುಖ್ಯಸ್ಥೆ (ಎಸಿಜೆಎಮ್) ಶಿಲ್ಪಾ ಸಮೀರ್ ಶಾರುಖ್‌ಗೆ ಸಮನ್ಸ್ ನೀಡಿದ್ದಾರೆ. ಹಾಗಾಗಿ ಮೇ ೨೬ರ ಒಳಗೆ ಕೋರ್ಟ್‌ಗೆ ಹಾಜರಾಗಬೇಕಾದ ಪರಿಸ್ಥಿತಿ ಶಾರುಖ್‌ಗೆ ಒದಗಿ ಬಂದಿದೆ. ಆದರೆ ಈ ಬಗ್ಗೆ ಶಾರುಖ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡಬಲ್ಸ್‌ನಲ್ಲಿ ಯಾವುದೇ ಬದಲಾವಣೆಯಿಲ್ಲ: ಖುರೇಶಿ

Posted by JAYAKIRANA Kirana on | 0 comments | Leave a comment...

ಇಸ್ಲಾಮಾಬಾದ್: ಪಾಕಿಸ್ತಾನದ ಖ್ಯಾತ ಟೆನಿಸ್ ಆಟಗಾರ ಐಸಾಮ್ ಉಲ್ ಖುರೇಶಿ ತನ್ನ ಡಬಲ್ಸ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಲು ನಿರಾಕರಿಸಿದ್ದಾರೆ. ಸದ್ಯ ಟೆನಿಸ್‌ನ ಡಬಲ್ಸ್ ವಿಭಾಗದಲ್ಲಿ ಜೊತೆಗಾರನಾಗಿರುವ ಜೀನ್ ಜುಲೆನ್ ರೋಜರ್‌ಗೆ ಖೊಕ್ ನೀಡುವ ಯಾವುದೇ ಉದ್ದೇಶ ತನಗಿಲ್ಲ, ಆತನ ಜೊತೆ ಆಡುವುದನ್ನು ಮುಂದುವರೆಸುತ್ತೇನೆ ಎಂದು ಖುರೇಶಿ ತಿಳಿಸಿದ್ದಾರೆ. ನಿನ್ನೆಯಷ್ಟೇ ಸಾನಿಯಾ ಮಿರ್ಜಾ, ತನಗೆ ಮಹೇಶ್ ಭೂಪತಿ ಜೊತೆ ಆಡಲು ಹೆಚ್ಚು ಆಸಕ್ತಿ ಹೊಂದಿದ್ದು, ಐಸಾಮ್ ಜೊತೆ ಆಡುವುದಿಲ್ಲ ಎಂದು ತಿಳಿಸಿದ್ದರು.
ರೋಜರ್ ಒಬ್ಬ ಉತ್ತಮ ಆಟಗಾರನಾಗಿದ್ದು, ಆತನಿಗೆ ತನ್ನ ಡಲಬ್ಸ್ ಜೋಡಿಯಿಂದ ಖೊಕ್ ನೀಡುವ ಇರಾದೆ ತನಗಿಲ್ಲ. ಒಂದು ವೇಳೆ ಡಬಲ್ಸ್‌ನಲ್ಲಿ ಬದಲಾವಣೆ ತರಲೇಬೇಕೆಂದಿದ್ದರೆ ಅದನ್ನು ನಂತರ ಯೋಚಿಸಲಿದ್ದೇನೆ. ಆದರೆ ಸದ್ಯಕ್ಕೆ ಆ ನಿರ್ಧಾರವಿಲ್ಲ. ಎಂದು ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಜೆಕ್ ಗಣರಾಜ್ಯದ ಆಂಡ್ರಿಯಾ ಹ್ಲಾವ್‌ಕೊವಾ ಜೊತೆ ಆಡುವ ಐಸಾಮ್ ತಿಳಿಸಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಮಾಂಟೆ ಕಾರ‍್ಲೊದ ಪ್ರಥಮ ಸುತ್ತಿನಲ್ಲೇ ಐಸಾಮ್ ಜೋಡಿ ಹೊರಬಿದ್ದಿದ್ದು, ಈಗ ಮುಂದೆ ನಡೆಯಲಿರುವ ಪ್ರತಿಷ್ಟಿತ ಮ್ಯಾಡ್ರಿಡ್ ಓಪನ್‌ನತ್ತ ದೃಷ್ಟಿ ಹರಿಸಿದ್ದಾರೆ.

ಗಲಭೆಗೆ ಯತ್ನ: ೨೫ ಮಂದಿ ವಶಕ್ಕೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಾನವೀಯತೆ ಬತ್ತಿ ಹೋಗಿ ಕೋಮು ಸಂಘರ್ಷದ ಕೇಂದ್ರವಾಗಿ ಕುಖ್ಯಾತಿ ಗಳಿಸಿರುವ ಕಾಸರಗೋಡಿನಲ್ಲಿ ಮೊನ್ನೆ ರಾತ್ರಿ ಹಾಗೂ ನಿನ್ನೆ ಮತ್ತೆ ಸಂಘರ್ಷ ಮೇಳೈಸಿದೆ. ವಿವಿಧ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ೨೫ರಷ್ಟು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಗರ ಪೊಲೀಸರು ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿದ್ದು, ಕಂಡರೆ ಗುರುತು ಹಚ್ಚಬಹುದಾದವರ ಸಹಿತ ೧೦೦ರಷ್ಟು ಮಂದಿಯ ವಿರುದ್ಧ ಪ್ರಕರಣ ಹೂಡಿದ್ದಾರೆ. ನಗರದಾದ್ಯಂತ ಬಿಗು ಪೊಲೀಸ್ ಪಹರೆ ಇದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಮೊನ್ನೆ ರಾತ್ರಿ ಆರಾಧನಾಲಯಗಳನ್ನು ಆಕ್ರಮಿಸಿ ಹಾನಿಗೊಳಿಸು ವುದರೊಂದಿಗೆ ಕೋಮು ಸಂಘರ್ಷ ಸ್ಫೋಟಿಸಿತ್ತು. ಬಳಿಕ ಅಲ್ಲಲ್ಲಿ ಮನೆಗಳಿಗೆ ಕಲ್ಲೆಸೆತ, ವಾಹನ ತಡೆ, ವಾಹನಗಳಿಗೆ ಕಲ್ಲೆಸೆತ ನಡೆದಿದ್ದವು. ಹಿಂಸಾಚಾರವನ್ನು ಪ್ರತಿಭಟಿಸಿ ನಗರದ ಅಡ್ಕತ್ತಬೈಲಿನಲ್ಲಿ ವ್ಯಾಪಾರಿಗಳು ಅಂಗಡಿ ಮುಚ್ಚಿ ಬಂದ್ ನಡೆಸಿದರು. ನಿನ್ನೆ ಬೆಳಿಗ್ಗೆ ಅಲ್ಪ ಹೊತ್ತು ಕಾಸರಗೋಡು-ಮಧೂರು ರೂಟಿನಲ್ಲಿ ಬಸ್ ಸಂಚಾರ ಮೊಟಕುಗೊಳಿಸಿತಾದರೂ, ಬಳಿಕ ಪುನರಾರಂಭಿಸಲಾಯಿತು.
ಮೊನ್ನೆ ರಾತ್ರಿ ಮೊಗ್ರಾಲ್ ಪುತ್ತೂರಿನಲ್ಲಿರುವ ಅಯ್ಯಪ್ಪ ಭಜನಾ ಮಂದಿರಕ್ಕೆ, ಉಳಿಯತ್ತಡ್ಕ ನ್ಯಾಶನಲ್ ನಗರದಲ್ಲಿರುವ ಮಸೀದಿಗೆ, ಇದರ ಬಳಿಯ ಎರಡರಷ್ಟು ಮನೆಗಳಿಗೆ ಕಲ್ಲೆಸೆತ ನಡೆದಿತ್ತು. ಮುಂಜಾನೆ ವೇಳೆ ಚೌಕಿ, ಸಿ.ಪಿ.ಸಿ.ಆರ್.ಐ ಬಳಿಯ ಶ್ರೀಮಹಾವಿಷ್ಣು ಕ್ಷೇತ್ರವನ್ನು ಆಕ್ರಮಿಸಿ ಹಾನಿಗೊಳಿಸಿದ ದುಷ್ಕರ್ಮಿಗಳು, ಅಡ್ಕತ್ತಬೈಲು ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರ ಮುಂದಿನ ಕಾಣಿಕೆ ಡಬ್ಬಿ ಹಾಗೂ ನವಿಲಿನ ಸ್ಥೂಪವನ್ನು ನಾಶಗೊಳಿಸಿದ್ದಾರೆ.
ನಾಡಿನ ಶಾಂತ ಬದುಕನ್ನು ಕದಡುವ ಎರಡೂ ಕೋಮಿಗೆ ಸೇರಿದ ಸಮಾಜಘಾತುಕರು ಮತ್ತೆ ಮತ್ತೆ ವಿಕಟ ಅಟ್ಟಹಾಸ ಮೆರೆಯುತ್ತಿದ್ದು, ಇವರನ್ನು ಸಮಾಜದಿಂದ ದೂರವಿರಿಸುವ ಕಾರ್ಯ ಅನಿವಾರ್ಯವಾಗಿದೆ. ಇದಕ್ಕಾಗಿ ಕಾನೂನು ಪಾಲಕರು ಸೂಕ್ತ ಕ್ರಮ ಜರಗಿಸಬೇಕೆಂಬುದೇ ಶಾಂತಿಪ್ರಿಯ ನಾಗರಿಕರ ಕಳಕಳಿ.

ಸರಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ

Posted by JAYAKIRANA Kirana on | 0 comments | Leave a comment...

ಆರೋಪಿ ವಿರುದ್ಧ ಕೇಸ್ ದಾಖಲು
ಮಂಗಳೂರು: ಬೈಕಂಪಾಡಿಯಲ್ಲಿ ರುವ ಸರಕಾರಿ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲ ಯದ ಆದೇಶದಂತೆ ಆರೋಪಿ ವಿರುದ್ಧ ಪಣಂಬೂರು ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಬೈಕಂಪಾಡಿ ಅಂಗರಗುಂಡಿ ನಿವಾಸಿ ಉಮರಬ್ಬ ಎಂಬವರ ಮಗ ಬಿ.ಮಯ್ಯದ್ದಿ ಎಂಬಾತನೇ ವಂಚಕನಾಗಿದ್ದು ಈತನ ವಿರುದ್ಧ ಅದೇ ಊರಿನ ಇಬ್ರಾಹಿಂ ಎಂಬವರ ಮಗ ಮೈಯ್ಯದ್ದಿ ಎಂಬವರು ದೂರು ನೀಡಿದವರು.
ದೂರುದಾರ ಬಿಲ್ಡಿಂಗ್ ಸೂಪರ್ ವೈಸರ್ ಆಗಿದ್ದು ಕಳೆದ ಹಲವಾರು ವರ್ಷಗಳಿಂದ ಅಂಗರಗುಂಡಿ ಸೈಟ್ ನಂಬ್ರ ೫೭ರಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರ ಅಸಹಾಯಕತೆ ಯನ್ನು ಬಳಸಿದ ಆರೋಪಿ, ದೂರು ದಾರ ಹಾಗೂ ಅವರ ಮಿತ್ರ ಜಲೀಲ್ ಅವರನ್ನು ಸಂಪರ್ಕಿಸಿ ಬೈಕಂ ಪಾಡಿ ಗ್ರಾಮದ ಅಂಗರಗುಂಡಿಯಲ್ಲಿರುವ ಎ.ಪಿ.ಎಂ.ಸಿ. ಕಾಲನಿಯ ಸ.ನಂ.೩೪/೨೮ರಲ್ಲಿರುವ ಸರಕಾರಿ ಜಾಗವನ್ನು ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ತಮ್ಮ ಸಂಸ್ಥೆಯಾದ ಬೈಕಂಪಾಡಿ ವಲಯ ನಾಗರಿಕ ಹಿತರಕ್ಷಣಾ ಮತ್ತು ಕ್ರೀಡಾ ವೇದಿಕೆಯ ಮೂಲಕ ನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿ ತೆಗೆಸಿಕೊಡುವುದಾಗಿ ತಿಳಿಸಿದ್ದನು ಎನ್ನಲಾಗಿದೆ. ಅಲ್ಲದೆ ಈಗಾಗಲೇ ೨೫ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿರುವುದಾಗಿ ಹೇಳಿ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಹೆಸರು ಇರುವ ಲೆಟರ್‌ಹೆಡ್ ತೋರಿಸಿ ನಂಬಿಸಿ ಇಬ್ಬರಿಂದಲೂ ತಲಾ ಐದು ಸಾವಿರ ಹಣ ಪಡೆದಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೆಲ್ಲಾ ನಡೆದ ತಿಂಗಳಲ್ಲೇ ಆರೋಪಿ, ದೂರುದಾರರಿಗೆ ತೋರಿಸಿದ ಜಾಗದಲ್ಲಿದ್ದ ನಾಗಬನ ಹಾಗೂ ಮರಗಳನ್ನು ಕಡಿದು ನೆಲಸಮ ಮಾಡಿದ್ದು ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ವಂಚನೆಯನ್ನು ಬಯಲಿಗೆಳೆದು ಆರೋಪಿ ವಿರುದ್ಧ ಸೆ.೨೮/೧೧-೧೨ರಂತೆ ಕೇಸು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಹಣ ನೀಡಿದವರು ಆರೋಪಿ ಬಳಿ ಹಣವನ್ನು ವಾಪಸ್ ಕೇಳಿದ್ದರಿಂದ ಆಕ್ರೋಶಗೊಂಡ ಆರೋಪಿ, ದೂರುದಾರನ ಸಹೋದರ ಮಹಮ್ಮದ್ ಎಂಬವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಬೆದರಿಕೆಯನ್ನೂ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಹೇಳಿದ ಸಂಸ್ಥೆಯು ೨೦೦೨-೦೩ರಲ್ಲಿ ನೋಂದಣಿಯಾಗಿದ್ದರೂ ನಂತರ ನವೀಕರಣ ಆಗಿರಲಿಲ್ಲ. ಅಲ್ಲದೆ ಇಲಾಖೆಗಳ ನಕಲಿ ಮೊಹರು ಹಾಗೂ ಜಾಗದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರನ್ನು ವಂಚಿಸಿದ್ದಲ್ಲದೆ ಇದುವರೆಗೂ ಪಡೆದ ಹಣವನ್ನು ವಾಪಸ್ ನೀಡದಿರುವ ಕಾರಣ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಯ್ಯದ್ದಿ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ೨೦.೪.೧೨ರಂದು ಪಣಂಬೂರು ಠಾಣೆಯಲ್ಲಿ ಸೆ.೧೫೬(೩)ರಂತೆ ಕೇಸು ದಾಖಲಿಸಲಾಗಿದೆ.
ಕ್ರಮ ಕೈಗೊಳ್ಳಲಾಗುತ್ತೆ: ಮ್ಯಯ್ಯದ್ದಿ ಅವರು ಖಾಸಗಿ ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕ್ರಮ ಕೈಗೊಳ್ಳುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ ಎಂದು ಪಣಂಬೂರು ಸಬ್ ಇನ್ಸ್‌ಪೆಕ್ಟರ್ ಪತ್ರಿಕೆಗೆ ತಿಳಿಸಿದ್ದಾರೆ.

ಈದು ಎನ್‌ಕೌಂಟರ್‌ನ ಗಾಯಾಳು ಯಶೋಧಾ ಹಸೆಮಣೆಗೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಾರ್ಕಳ-ಮೂಡಬಿದ್ರೆ ನಡುವಿನ ಗಡಿ ಪ್ರದೇಶವಾದ ಈದುವಿನಲ್ಲಿ ೨೦೦೩ರಲ್ಲಿ ಉಡುಪಿ ಪೊಲೀಸರು ನಕ್ಸಲರ ವಿರುದ್ದ ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡಿನ ಗಾಯಗಳೊಂದಿಗೆ ಸೆರೆಸಿಕ್ಕಿ ದೀರ್ಘ ಕಾಲ ಬಂಧನದಲ್ಲಿದ್ದು, ಸುದೀರ್ಘ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಆರೋಪ ಮುಕ್ತ ಗೊಂಡಿದ್ದ ಕಳಸದ ಯಶೋಧಾ ಮುಜೇಖಾನ್ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಬಂಧನಕ್ಕೆ ಒಳಗಾದ ಬಹುತೇಕ ನಕ್ಸಲೀಯ ಯುವಕ-ಯುವತಿ ಯರು ಜೈಲಿನಿಂದ ಬಿಡುಗಡೆಗೊಂಡ ಕೆಲವು ದಿನಗಳ ಬಳಿಕವೋ, ಕೆಲವು ತಿಂಗಳ ಬಳಿಕವೋ, ಕೆಲವು ವರ್ಷಗಳ ಬಳಿಕವೋ ಇದ್ದಕ್ಕಿದ್ದಂ ತೆಯೇ ಭೂಗತರಾಗಿ ಮರಳಿ ನಕ್ಸಲ್ ಶಿಬಿರಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕರ್ನಾಟಕದಲ್ಲಿ ನಡೆಯುತ್ತಿದೆ. ಹೀಗಿರುವಾಗ ಯಶೋಧಾ ಮರಳಿ ನಕ್ಸಲ್ ಶಿಬಿರ ಸೇರದೆ ನಾಡಲ್ಲೇ ಜನಪರ ಚಳುವಳಿ ಕಟ್ಟುತ್ತಾ, ಹೋರಾಟ ನಡೆಸುತ್ತಾ, ಇದೀಗ ಹಸೆಮಣೆ ಏರಿರುವುದು ಹೊಸದಾದ ಮತ್ತು ಅಪರೂಪದ ಬೆಳವಣಿಗೆಯಾಗಿದೆ.
ಕಳಸ ಮತ್ತು ಶೃಂಗೇರಿ ಠಾಣೆಯ ಪೊಲೀಸರು ಹಾಗೂ ಗುಪ್ತಚರ ಇಲಾಖೆಯವರ ಕಣ್ಗಾವಲಿನೊಂದಿಗೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ತೊಡ್ಲು ಎಂಬಲ್ಲಿನ ಶ್ರೀವೀರನಾರಾಯಣ ಸ್ವಾಮಿ ದೇವಾಲಯದಲ್ಲಿ ಜನಪರ ಚಳುವಳಿಗಳಲ್ಲಿ ಸಕ್ರೀಯ ಕಾರ್ಯಕರ್ತ ಶೃಂಗೇರಿ ತಾಲೂಕಿನ ಕೆ.ಮಸ್ಕಿ ಗ್ರಾಮದ ಬಿಳಗೋಡು ಕೂಡಿಗೆಯ ಬಡ ರೈತ ಕುಟುಂಬದ ಕಳಸಪ್ಪ (ಸುರೇಶ್) ಎಂಬವರನ್ನು ಯಶೋಧಾ ವಿವಾಹವಾಗಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯದ ಪ್ರೊ.ಡಾ.ಬಿ.ಎಂ.ಪುಟ್ಟಯ್ಯ, ಜನಪರ ಹೋರಾಟಗಾರರಾದ ಶ್ರೀನಿವಾಸ ಗೌಡ, ಅಪ್ಪು ಗೌಡ, ಮರಿಯಪ್ಪ, ಕೆ.ಎಲ್.ವಾಸು ಮೊದಲಾದವರು ಕುಟುಂಬ ಸಹಿತ ಮದುವೆಗೆ ಆಗಮಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಶಿವಕುಮಾರ್, ಕುಟುಂಬಸ್ಥರು ಹಾಗೂ ಶೃಂಗೇರಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಎಸ್.ಹಿರೇಮಠ ಇವರೂ ಮದುವೆಗೆ ಆಗಮಿಸಿ ಯಶೋಧಾ ದಂಪತಿಗೆ ಶುಭಾಶಯ ಸಲ್ಲಿಸಿದ್ದು ವಿಶೇಷ ವಾಗಿತ್ತು. ೫೦೦ಕ್ಕೂ ಅಧಿಕ ಮಂದಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈದು ಎನ್‌ಕೌಂಟರ್ ನಡೆದಾಗ ಮತ್ತು ಆ ಬಳಿಕ ಹಲವು ವರ್ಷಗಳ ಕಾಲ ಯಶೋಧಾಗೆ ಬೆಂಬಲವಾಗಿದ್ದು, ಚಳುವಳಿಗಳಲ್ಲಿ ಸಕ್ರಿಯರಾಗಿರುವ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖ ನಾಯಕರ‍್ಯಾರೂ, ಇಂದಿಗೂ ಜನಪರ ಚಳುವಳಿಗಳ ಕಾರ್ಯಕರ್ತರುಗಳೇ ಆಗಿರುವ ಯಶೋಧಾ ಹಾಗೂ ಕಳಸಪ್ಪ ಇವರ ವಿವಾಹಕ್ಕೆ ಆಗಮಿಸದೆ ದೂರವೇ ಉಳಿದಿದ್ದು ಚರ್ಚೆಗೆ ಕಾರಣವಾಗಿದೆ.
ಮದುವೆ ನಡೆದ ತೊಡ್ಲು ಬಗ್ಗೆ...
ಕಳಸ ಹೋಬಳಿಯ ತೊಡ್ಲು ಅತೀ ಸಣ್ಣ ಪ್ರದೇಶ. ಇಲ್ಲಿ ವೀರನಾರಾ ಯಣ ಸ್ವಾಮೀ ದೇವಾಲಯ, ಒಂದು ದೈವಸ್ಥಾನ ಮತ್ತು ಒಂದು ರೆಸಾರ್ಟ್ ಹೊರತುಪಡಿಸಿ ಇರುವುದು ೨೧ ಮನೆಗಳು ಮಾತ್ರ. ೨೧ ಮನೆಗಳ ಪೈಕಿ ೨೦ ಮನೆಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿ ಸಮುದಾಯವಾದ ಗೌಡ್ಲು ಜನಾಂಗದವರದ್ದು. ಯಶೋಧಾ ಸಹ ಇದೇ ಜನಾಂಗಕ್ಕೆ ಸೇರಿದವರು.
ಇಲ್ಲಿರುವ ೨೦ ಗೌಡ್ಲು ಕುಟುಂಬಗಳಿಗೂ ಮನೆಯೇನೋ ಇದೆ. ಆದರೆ ಈ ಮನೆಗಳಿರುವ ಭೂಮಿ ಇವರದಲ್ಲ. ಒಂದು ತುಂಡು ಭೂಮಿ ಸಹಿತ ಬಹುತೇಕ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಈ ಕುಟುಂಬಗಳು, ಸ್ಥಳೀಯ ಭೂಮಾಲಕ ಶಿವಶಂಕರ ರಾವ್ ಎಂಬವರಿಗೆ ಸೇರಿದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ತಲಾ ಒಂದೊಂದು ಎಕ್ರೆ ಭೂಮಿಯಲ್ಲಿ ಗೇಣಿದಾರರು. ಕೃಷಿ ಕೆಲಸ ಮಾಡಿ ಬೆಳೆಯಲ್ಲಿ ಒಂದು ಪಾಲನ್ನು ಶಿವಶಂಕರ್ ರಾವ್ ಅವರಿಗೆ ನೀಡಿ ಉಳಿದ ಬೆಳೆಯನ್ನು ತಮ್ಮ ಬದುಕಿಗಾಗಿ ತೆಗೆದಿರಿಸಬೇಕು. ಈ ೨೦ ಮನೆಗಳ ಜನರು ಶಿವಶಂಕರ್ ರಾವ್ ಅವರ ಭೂಮಿಯಲ್ಲಿ ಕೂಲಿ ನಾಲಿ ಮಾಡಬೇಕು. ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಲೇಬೇಕು. ಪಾಲಿಸದೇ ಹೋದರೆ ೨೦ ಕುಟುಂಬಗಳೂ ಸಮಸ್ಯೆ ಎದುರಿಸಲೇಬೇಕಾದ ಪರಿಸ್ಥಿತಿ. ರಾವ್ ಅವರ ಒಡೆತನದಲ್ಲಿರುವ ಭೂಮಿ ಕಡಿಮೆ ಎಂದರೆ ೧೫೦ ಎಕ್ರೆ.

ಆಡಳಿತದಲ್ಲಿ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್-ಬಿಜೆಪಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಆಡಳಿತ-ವಿರೋಧ ಪಕ್ಷಗಳ ಕಾದಾಟದ ಕೇಂದ್ರವಾಗಿದ್ದ ಮಂಗಳೂರು ಮಹಾನಗರ ಪಾಲಿ ಕೆಯ ನಿನ್ನೆಯ ಸಭೆಯಲ್ಲಿ ಹಿಂದಿನ ಕಾದಾಟಗಳಿಗೆ ಬ್ರೇಕ್ ನೀಡಲಾಗಿದ್ದು ಆರೋಗ್ಯಪೂರ್ಣ ಚರ್ಚೆ ನಡೆದು ಇತಿಹಾಸ ಬರೆಯಿಲ್ಪಟ್ಟಿತು. ಇದು ಎರಡೂ ಪಕ್ಷಗಳು ಆಡಳಿತದಲ್ಲಿ ಹೊಂದಾಣಿಕೆ ಮಾಡಿಕೊಂಡಿರು ವುದಕ್ಕೂ ಸಾಕ್ಷಿಯಾಯಿತು.
ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ನಡೆದ ಬಹುತೇಕ ಸಾಮಾನ್ಯ ಸಭೆಗಳು ಆಡ ಳಿತ ಮತ್ತು ವಿರೋಧ ಪಕ್ಷದ ಆರೋಪ-ಪ್ರತ್ಯಾರೋಪ, ರಾಜ ಕೀಯ ಪ್ರತಿಷ್ಠೆಯ ಕಣವಾಗಿ ಮಾರ್ಪ ಟ್ಟಿತ್ತು. ಪಾಲಿಕೆಗೆ ಕಾಂಗ್ರೆಸ್ ಮೇಯರ್ ಆಯ್ಕೆಯಾದ ಬಳಿಕ ನಡೆದ ಪ್ರಥಮ ಸಭೆಯಲ್ಲೂ ಆರೋಪ ಪ್ರತ್ಯಾರೋಪ ಗಳು ನಡೆದಿದ್ದವು.
ಹೈಕೋರ್ಟ್‌ನಲ್ಲಿ ಮೇಯರ್ ಆಯ್ಕೆ ವಿಚಾರದ ಅರ್ಜಿಯನ್ನು ವಜಾ ಮಾಡಿದ ಬಳಿಕ ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ತಣ್ಣಗಾಗಿದ್ದರು. ಈ ಬಾರಿ ಕಾಂಗ್ರೆಸ್ ಮೇಯರ್ ಇದ್ದ ಕಾರಣ ಆ ಪಕ್ಷದ ಕಾರ್ಪೊರೇಟರ್‌ಗಳ ಹಾರಾ ಟಕ್ಕೂ ಕಡಿವಾಣ ಹಾಕಲಾಗಿತ್ತು. ಈ ಕಾರಣದಿಂದ ನಿನ್ನೆಯ ಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಆರೋಗ್ಯ ಪೂರ್ಣ ಚರ್ಚೆ ನಡೆಯಿತು.
ಸಭೆಯ ಬಹುತೇಕ ಸಮಯವು ನಗರದಲ್ಲಿ ಎದುರಾಗಿರುವ ನೀರಿನ ಸಮ ಸ್ಯೆಯ ಚರ್ಚೆಗೆ ಮೀಸಲಾಗಿತ್ತು. ಎಡಿಬಿ ವತಿಯಿಂದ ನಿರ್ಮಾಣವಾಗುತ್ತಿರುವ ಪೈಪ್‌ಲೈನ್ ಕಾಮಗಾರಿ ಇನ್ನೂ ಪೂರ್ಣ ಗೊಳ್ಳದ ವಿಚಾರದ ಬಗ್ಗೆ ಎಲ್ಲಾ ಸದಸ್ಯರು ಧ್ವನಿ ಎತ್ತಿದರು. ಅಲ್ಲದೆ ತುಂಬೆಯಲ್ಲಿ ವಿಸ್ತರಣೆಗೊಳ್ಳುತ್ತಿರುವ ಡ್ಯಾಂ ಕಾಮಗಾರಿ ಕುಂಟುತ್ತಿರುವ ಬಗ್ಗೆಯೂ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂತೂ ನಗರ ಪಾಲಿಕೆಯಲ್ಲಿ ಪ್ರಥಮ ಬಾರಿಗೆ ಕೋಳಿ ಜಗಳಕ್ಕೆ ವಿರಾಮ ನೀಡಿದ್ದ ಸದಸ್ಯರು ಜನರ ಸಮಸ್ಯೆಗಳತ್ತ ಗಮನಹರಿಸಿದ್ದರು.
ವಿದೇಶ ಪ್ರವಾಸ: ಬಿಜೆಪಿ ಏಟು- ಕಾಂಗ್ರೆಸ್ ಇದಿರೇಟು
ಸಭೆಯ ಆರಂಭದಲ್ಲಿ ಬಿಜೆಪಿ ಸದಸ್ಯ ಸುಧೀರ್ ನಗರದಲ್ಲಿ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲೇ ಮೇಯರ್ ವಿದೇಶಕ್ಕೆ ಸನ್ಮಾನ ಸ್ವೀಕರಿಸಲು ಹೋಗಿದ್ದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದರು. ಆದರೆ ಅದಕ್ಕೆ ಅವಕಾಶ ನೀಡದ ಹರಿನಾಥ್, ಮೇಯರ್ ವಿದೇಶಕ್ಕೆ ಹೋಗಿ ಒಂದೇ ದಿನದಲ್ಲಿ ವಾಪಸ್ ಬಂದಿ ದ್ದಾರೆ. ರಾಜ್ಯ ಬರಗಾಲ ತತ್ತರಿಸಿ ದ್ದರೂ ಸಚಿವರುಗಳು ಕುಟುಂಬ ಸಮೇತರಾಗಿ ವಿದೇಶಕ್ಕೆ ತೆರಳಿ ಮೋಜು ಮಾಡುತ್ತಿದ್ದಾರೆ. ಇದಕ್ಕೇನು ಮಾಡುತ್ತೀರಿ ಎಂದಾಗ ಸುಧೀರ್ ಮೌನವಾದ ಕಾರಣ ಚರ್ಚೆ ಅಲ್ಲಿಗೇ ಮುಕ್ತಾಯವಾಯಿತು.

ಅರಂತೋಡು: ನಾಪತ್ತೆಯಾದ ಯುವತಿ ವಿವಾಹವಾಗಿ ಪತ್ತೆ

Posted by JAYAKIRANA Kirana on | 0 comments | Leave a comment...

ಸುಳ್ಯ: ವಾರದ ಹಿಂದೆ ನಾಪತ್ತೆ ಯಾಗಿದ್ದ ಅರಂತೋಡು ಗ್ರಾಮದ ಕೊಡಂಕೇರಿ ಕೇಪಣ್ಣ ಗೌಡರ ಪುತ್ರಿ ಮಾಲಾಶ್ರೀ(೨೦) ನೆರೆಮನೆಯ ಚೇತನ್ ಕುಮಾರ್ ಜತೆ ಹೆಬ್ರಿಯಲ್ಲಿ ಪತ್ತೆ ಯಾಗಿದ್ದಾಳೆ.
ಇಲ್ಲಿನ ಕಾಲೇಜೊಂದರ ಹಾಸ್ಟೆಲ್ ನಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿರುವ ಮಾಲಾಶ್ರೀ ಜಟ್ಟಿ ಪಳ್ಳದಲ್ಲಿರುವ ಅತ್ತೆಯ ಮನೆಗೆ ಹೋಗುವುದಾಗಿ ತಿಳಿಸಿದ್ದು, ಬಳಿಕ ನಾಪತ್ತೆಯಾಗಿದ್ದಳು. ಆಕೆಯ ನೆರೆಮನೆಯ ಚೇತನ್ ಎಂಬ ಯುವಕನ ಜೊತೆ ಈಕೆ ಹೋಗಿರಬೇಕಂದು ಶಂಕಿಸಲಾಗಿತ್ತು. ಚೇತನ್ ಹಾಗೂ ಮಾಲಾಶ್ರೀ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಬಳಿಕ ಹೆಬ್ರಿಗೆ ತೆರಳಿದ್ದರು. ಅವರನ್ನು ಸುಳ್ಯ ಠಾಣೆಗೆ ಕರೆ ತಂದಾಗ ಚೇತನ್ ಕುಮಾರ್ ಮನೆಯವರು ಇಬ್ಬರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮಾಲಾಶ್ರೀ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ.

ಉಚ್ಚಿಲ ಬಡಾ ಗ್ರಾ.ಪಂ.: ಪಿಡಿಒ ಅವಾಂತರ; ನೀರಿಲ್ಲದ ಜನತೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಇಲ್ಲಿಯ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಪಿ.ಡಿ.ಒ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಉಚ್ಚಿಲ ಗ್ರಾ.ಪಂ.ನ ಜನರು ನೀರಿಲ್ಲದೆ ಕಾಲ ಕಳೆಯುವಂತಾಗಿದೆ.
ಘಟನೆಯ ವಿವರ: ಉಚ್ಚಿಲ ಬಡಾ ಗ್ರಾ.ಪಂ.ನ ಪಂಪಿನ ನಿರ್ವಾಹಕ ಅಶೋಕ ಎಂಬವರ ಮನೆಯಲ್ಲಿ ಶುಭಕಾರ್ಯ ಇದ್ದ ಪ್ರಯುಕ್ತ ನಾಲ್ಕು ದಿನ ರಜೆಗಾಗಿ ಅರ್ಜಿಯನ್ನು ಪಿಡಿಒ ಪ್ರತಾಪ ಚಂದ್ರ ಶೆಟ್ಟಿಯವರಿಗೆ ನೀಡಿದ್ದರು. ಆದರೆ ರಜೆ ನೀಡಲು ನಿರಾಕರಿಸಿದ್ದರು. ಗ್ರಾ.ಪಂ.ನ ಸದಸ್ಯರೂ ಪಂಪ್ ನಿರ್ವಾಹಕನಿಗೆ ರಜೆ ನೀಡಲು ಪಿಡಿಒ ಅವರಲ್ಲಿ ಮನವಿ ಮಾಡಿದ್ದರು. ಆದರೂ ಪಿಡಿಒ ರಜೆ ನಿರಾಕರಿಸಿದ್ದರು.
ಆದರೆ ಮನೆಯಲ್ಲಿ ಶುಭಕಾರ್ಯ ಇದ್ದುದರಿಂದ ಪಂಪ್ ನಿರ್ವಾಹಕ ರಜೆಯಲ್ಲಿ ತೆರಳಲೇಬೇಕಿತ್ತು. ಆದ್ದರಿಂದ ಗುರುವಾರ ಅವರು ಕೆಲಸಕ್ಕೆ ಹಾಜರಾಗಿರಲಿಲ್ಲ. ಗುರುವಾರ ಬೆಳಗ್ಗೆ ಉಚ್ಚಿಲ ಪರಿಸರದಲ್ಲಿ ನಳ್ಳಿಯಲ್ಲಿ ನೀರು ಬರುತ್ತಿಲ್ಲದನ್ನು ಪಂಪ್ ಚಾಲಕನಲ್ಲಿ ವಿಚಾರಿಸಿದಾಗ ಆತ ರಜೆಯಲ್ಲಿದ್ದುದು ಗೊತ್ತಾಗಿದೆ.
ಈ ಬಗ್ಗೆ ಗ್ರಾಮಸ್ಥರು ಪಿಡಿಒ ಅವರನ್ನು ವಿಚಾರಿಸಿದಾಗ, ಆತ ಬಂದಿಲ್ಲ. ಆತ ಬಂದರೆ ನೀರು ಬರಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಿತರಾದ ಜನರು ಉಚ್ಚಿಲ ಬಡಾ ಗ್ರಾ.ಪಂ ಕಚೇರಿಗೆ ಧಾವಿಸಿ ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿದರು. ಆತನಿಗೆ ಬೆಂಬಲವಾಗಿ ಸ್ಥಳೀಯ ವಾರ್ಡುಗಳ ಸದಸ್ಯರೂ ದನಿಗೂಡಿಸಿದರು.
ಈ ಸಂದರ್ಭ ಪಂಚಾಯತ್ ಸದಸ್ಯರಾದ ಶೇಖಬ್ಬ ಹಾಗೂ ಮೈಯ್ಯದಿ ಮಾತನಾಡಿ, ಪಂಚಾಯತ್ ಪಿಡಿಒ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ತಾಳಿದ್ದಾರೆ. ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ ಮಾತಿಗೆ ಬೆಲೆಯೇ ನೀಡುತ್ತಿಲ್ಲ. ಪಂಪ್ ನಿರ್ವಾಹಕ ಈಗಾಗಲೇ ರಜಾ ಅರ್ಜಿ ನೀಡಿದ್ದು, ಎಲ್ಲರ ಗಮನಕ್ಕೂ ಬಂದಿದೆ. ಆದರೂ ರಜೆ ಮಾಡಿದರೆ ಬದಲಿಗೆ ಪಂಪ್ ನಿರ್ವಾಹಕನನ್ನು ಇಡಬೇಕೆಂದು ಪಿಡಿಒ ಹೇಳಿರುವುದು ತಪ್ಪು. ಆತನ ಮನೆಯಲ್ಲಿ ಶುಭಕಾರ್ಯ ಇದ್ದು, ಅದಕ್ಕಾಗಿ ರಜೆ ಕೊಡಲಿಕ್ಕಾಗದು ಎನ್ನುವುದು ಅವರ ಸರ್ವಾಧಿಕಾರಿ ಧೋರಣೆಯಾಗಿದೆ ಎಂದರು.
ಗ್ರಾಮಸ್ಥರ ಹಾಗೂ ಗ್ರಾ.ಪಂ ಸದಸ್ಯರ ಪ್ರತಿಭಟನೆಯ ನಂತರ ಸ್ಥಳೀಯ ಯುವಕನೋರ್ವನನ್ನು ದಿನ ೪೫೦ ರೂ ದಿನಗೂಲಿಯಂತೆ ಪಿಡಿಒ ನೇಮಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪ್ರಕರಣ ಸುಖ್ಯಾಂತ ಕಂಡರೂ ಪಿಡಿಒ ವಿರುದ್ಧ ಜನರು ಆಕ್ರೋಶಿತರಾಗಿದ್ದಾರೆ.

ಕರಂದ್ಲಾಜೆ ಸಹಿತ ಎಂಟು ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಸಚಿವರಾದ ಉದಾಸಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಎಂಟು ಸಟಿವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ಬಳಕೆ ಮಾಡಿಕೊಳ್ಳುವಂತೆ ಬಿಜೆಪಿಯ ಶಾಸಕರು ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಚುನಾವಣೆಗೆ ಒಂದು ವರ್ಷದ ಅವಧಿ ಮಾತ್ರ ಇದ್ದು, ಈ ಸಂದರ್ಭದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆಯ ಅಗತ್ಯವಿದೆ. ಇದಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ಸವೆದಿರುವ ಇವರನ್ನು ಸಂಪುಟದಿಂದ ಹೊರಗಿಟ್ಟು ಪಕ್ಷಕ್ಕಾಗಿ ದುಡಿಸಿ, ಈ ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಅರುಣ್ ಜೇಟ್ಲಿ, ಅನಂತಕುಮಾರ್ ಸೇರಿದಂತೆ ಕೆಲವು ಸಚಿವರನ್ನು ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಯಿತು. ಇತ್ತೀಚೆಗೆ ಕಾಂಗ್ರೆಸ್‌ನಲ್ಲೂ ಕೇಂದ್ರದ ಕೆಲವು ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದೇ ರೀತಿ ಇಲ್ಲಿಯೂ ಮಾಡಿ ಎಂದು ಒತ್ತಾಯಿಸಿದ್ದಾರೆ. ಯಡಿಯೂರಪ್ಪ ವಿರೋಧಿ ಬಣದ ಸಿ.ಟಿ. ರವಿ, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ ಸೇರಿದಂತೆ ಕೆಲವು ಶಾಸಕರು ಇಂತಹ ಒತ್ತಡ ಹೇರುತ್ತಿದ್ದಾರೆ. ಈ ಸಚಿವರು ಆಯಾ ಜಿಲ್ಲೆ ಮತ್ತು ಆ ಭಾಗಗಳಲ್ಲಿ ಬಲಾಢ್ಯರಿದ್ದಾರೆ. ಇವರನ್ನು ಒಂದು ವರ್ಷ ಕಾಲ ಪಕ್ಷಕ್ಕೆ ದುಡಿಸಿಕೊಂಡರೆ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಬಲಿಷ್ಟಗೊಂಡು ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ. ಇವರು ಸಚಿವರಾಗಿಯೇ ಕಾರ್ಯ ನಿರ್ವಹಿಸಿ ಜನತೆ ಮತ್ತು ಪಕ್ಷವನ್ನು ಮರೆತಿದ್ದಾರೆ. ಇಂಥವರನ್ನು ದುಡಿಸಿಕೊಳ್ಳಿ. ಅವರಿಂದ ತೆರವಾಗುವ ಸ್ಥಾನವನ್ನು ಯುವಕರಿಗೆ ನೀಡಿ ಆಡಳಿತದಲ್ಲಿ ಬದಲಾನಣೆ ತನ್ನಿ ಎಂದು ಮನವಿ ಮಾಡಿದ್ದಾರೆ.

27-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ : ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.
ಮಂಗಳೂರು : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕು. ೯೬೮೬೭೧೬೭೦೧.
ಮಂಗಳೂರು : ಇಲೆಕ್ಟ್ರಿಕಲ್ಸ್‌ಗೆ ಲೈಟಿಂಗ್‌ಗೆ ಜನ ಮತ್ತು ಹೆಲ್ಪರ್ ಬೇಕು ೯೮೪೫೦೯೮೨೫೪.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೮೪೪೫೭೩೬೧೫.
ಮಂಗಳೂರು : ಮರೋಳಿಯಲ್ಲಿ ಲೈನ್ ಸೇಲ್‌ಗೆ ಚಾಲಕ ಬೇಕು ೯೩೪೧೭೫೮೫೦೦.
ಕುಲಶೇಖರ: ಕ್ರೈಸ್ತರ ಮನೆಗೆ ಕೆಲಸಕ್ಕೆ ಜನ ಯುವತಿ ಬೇಕು ೮೪೫೩೯೭೨೯೯೪.
ಮಂಗಳೂರು : ಮನೆಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಕಾವೂರು : ಸಿವಿಲ್ ಕಂಟ್ರಾಕ್ಟರ್‌ಗೆ ಸೈಟ್ ಸೂಪರ್‌ವೈಸರ್ ಬೇಕು ೯೪೮೦೭೬೧೬೮೬.
ಹೊಟೇಲ್‌ಗೆ ಅಡುಗೆ ಮಾಡುವವರು ಬೇಕಾಗಿದ್ದಾರೆ: ೯೮೮೦೩೭೮೮೦೬
ಮಂಗಳೂರು: ಲೇಡಿಸ್ ಟೈಲರ್ ಶಾಪ್‌ಗೆ ಲೇಡಿಸ್ ಟೈಲರ್ ಬೇಕು. ೯೫೯೧೦೪೫೮೮೧
ಮೂಡುಬಿದ್ರೆ: ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೮೬೪೨೯೩೪೭.
ಮಾಲೆಮಾರ್: ಹೋಂ ಪ್ರೊಡಕ್ಟ್‌ಗೆ ಲೇಡೀಸ್ ಬೇಕು ೯೪೮೦೧೧೭೮೫೪.
ಮಂಗಳೂರು: ಉರ್ವಾಸ್ಟೋರ್ ವರ್ಕ್ ಶಾಪ್‌ಗೆ ವೆಲ್ಟರ್ ಬೇಕು ೯೨೪೨೪೭೪೧೦೦.
ಮಂಗಳೂರು: ಬ್ಯೂಟೀಷಿಯನ್ ಕೆಲಸಕ್ಕೆ ಜನ ಬೇಕು ೯೪೪೯೫೯೦೯೦೦.
ಮಂಗಳೂರು: ಟೈಲರ್ ಕೆಲಸಕ್ಕೆ ಜನ ಬೇಕು ೯೮೮೦೩೧೪೧೦೫.
ಮಂಗಳೂರು: ಸ್ಕ್ರೀನ್‌ಪ್ರಿಂಟರ್ ಬೇಕು ೯೦೧೯೭೦೯೯೯೩.
ತೊಕ್ಕೊಟ್ಟು: ಕಚೇರಿಗೆ ಕಂಪ್ಯೂಟ್ ಗೊತ್ತಿರುವ ಯುವತಿ ಬೇಕು ೭೨೫೯೩೯೪೭೮೧.
ಕಾರ್ಕಳ: ರೆಸ್ಟೋರೆಂಟ್‌ಗೆ ಸಪ್ಲಾಯರ್, ಕಿಚನ್‌ಗೆ, ಆಲ್‌ರೌಂಡರ್ ಬೇಕು. ೯೯೦೧೮೨೮೩೯೩.
ಮಂಗಳೂರು: ಟೈಲರ್ ಶಾಪ್‌ಗೆ ಅಲ್ಟ್ರೇಶನ್ ತಿಳಿದವರು ಬೇಕು. ೯೮೪೫೭೧೪೦೬೪
ಮಂಗಳೂರು : ಆಫೀಸ್‌ಗೆ ಕಂಪ್ಯೂಟರ್ ಎಕೌಂಟ್, ಟ್ಯಾಲಿ, ಬಿ.ಕಾಂ ತಿಳಿದ ಮ್ಯಾನೇ ಜರ್ ಬೇಕು. ೯೮೪೫೦೮೦೬೬೯.
ಮಂಗಳೂರು: ಟೈಲರ್ ಶಾಪ್‌ಗೆ ಚೂಡಿದಾರ್ ಸ್ಟಿಚ್ ಮಾಡುವ, ಅಳತೆ ತೆಗೆ ಯುವ ಮಹಿಳೆಯರು ಬೇಕು.

27-4-2012

Posted by JAYAKIRANA Kirana on | 0 comments | Leave a comment...

ಮೇಷ : ವಿರೋಧಿಗಳಿಂದ ತೊಂದರೆ ಇರುತ್ತದೆ.
ವೃಷಭ : ಉದ್ಯೋಗದಲ್ಲಿ ಏರುಪೇರಾಗುತ್ತದೆ.
ಮಿಥುನ : ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ.
ಕರ್ಕಾಟಕ : ಜಂಟಿ ವ್ಯವಹಾರದಲ್ಲಿ ಮನಸ್ತಾಪ ಇರುತ್ತದೆ.
ಸಿಂಹ : ಕುಟುಂಬದಲ್ಲಿ ಒಮ್ಮತ ಇರುತ್ತದೆ.
ಕನ್ಯಾ : ಮಕ್ಕಳಿಂದ ಸಮಸ್ಯೆಗಳು ಉಂಟಾಗಲಿದೆ.
ತುಲಾ : ಹಿರಿಯ ಬಂಧುಗಳ ಒತ್ತಡ ಇರುತ್ತದೆ.
ವೃಶ್ಚಿಕ : ದೇವತಾ ದರ್ಶನವನ್ನು ಮಾಡುತ್ತೀರಿ.
ಧನು : ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ.
ಮಕರ : ವ್ಯಾಪಾರದಲ್ಲಿ ಅನಿರೀಕ್ಷಿರ ಲಾಭ ದೊರೆಯಲಿದೆ.
ಕುಂಭ : ಮಕ್ಕಳಿಂದ ಹೆಚ್ಚಿನ ಖರ್ಚು ಬರಲಿದೆ.
ಮೀನ : ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುತ್ತದೆ.

ವಿರೋಧ ಅಂದ್ರೆ ಎಲ್ಲದಕ್ಕೂ ವಿರೋಧ ಎಂದರ್ಥವೇ?

Posted by JAYAKIRANA Kirana on | 0 comments | Leave a comment...

ಅದು ೨೦೦೪ರ ಸೆಪ್ಟೆಂಬರ್ ೧೧. ಅಮೇರಿಕಾ ಎಂಬ ಸೊಕ್ಕಿನ ದೇಶದ ಹೆಮ್ಮೆಯ ಕಿರೀಟಗಳೆರಡಾಗಿ ಶೋಭಿಸುತ್ತಿದ್ದ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡಗಳೆರಡರ ಮೇಲೆ ವಿಮಾನಗಳೆರಡು ಅಪ್ಪಳಿಸಿ ವಿಶ್ವದ ಜನ ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆಯೇ ಅವು ಸಂಪೂರ್ಣವಾಗಿ ನೆಲಸಮಗೊಂಡಿತ್ತು. ಒಂದು ಕಟ್ಟಡದ ಮೇಲಾಗಿದ್ದರೆ ಅದನ್ನು ಅಕಸ್ಮಿಕ ಎನ್ನಬಹುದಿತ್ತೇನೋ! ಆದರೆ ನಿಮಿಷಗಳ ಅಂತರದಲ್ಲಿ ಒಂದೇ ಮಾದರಿಯಲ್ಲಿ ನಾಲ್ಕು ವಿಮಾನಗಳು ನಗರವೊಂದರೆ ಮೇಲೆ ಅಪ್ಪಳಿ ಸುವುದು ಪೂರ್ವಯೋಜಿತ. ಆದರೆ ಕಲ್ಪನಾತೀತ ಭಯೋತ್ಪಾದಕ ದಾಳಿ ಎನ್ನುವುದನ್ನು ಜಗತ್ತು ಗ್ರಹಿಸಿಕೊಂಡಿತು. ಅಮೇರಿಕವೇ ಆ ಭಯಂಕರ ದಾಳಿ ನಡೆಸಿದ ಭಯಂಕರನನ್ನು ಹೆಸರಿಸಿತು. ಆ ಭಯಂಕರ ಮನುಷ್ಯ ಬೇರೆ ಯಾರೂ ಅಲ್ಲ. ಒಂದು ಕಾಲದಲ್ಲಿ ಅಮೇರಿಕಾದ ಆಪ್ತಮಿತ್ರ ಒಸಾಮಾಬಿನ್ ಲಾಡೆನ್ ಎಂಬವನು!
ಅಮೇರಿಕಾದ ಒಸಾಮಾನನ್ನು ಆರೋಪಿಸುವುದಕ್ಕೆ ಮುಂಚೆ ಸಾಕಷ್ಟು ವಿಚಾರ ಮಾಡಿತ್ತು. ಸಮಸ್ತ ವಿಶ್ವವನ್ನು ತನ್ನ ಕೈಬೆರಳಿನ ಸನ್ನೆಯ ಮೂಲಕವೇ ಆಟವಾಡಿಸುತ್ತಿದ್ದ ಅದಕ್ಕೆ ಅಂಥಾ ಪೆಟ್ಟು ಕೊಡಲು ಸಾಮಾನ್ಯ ವಿರೋಧಿಗಳಿಗೆ ಸಾಧ್ಯವೇ ಇಲ್ಲ ಎನ್ನುವುದು ಅದರ ತರ್ಕ ವಾಗಿತ್ತು. ಆ ಕಾರಣವಾಗಿ ಅದು ಜಗತ್ತಿನ ತನ್ನ ಪ್ರಜೆಗಳ ಮೇಲೆ ತನ್ನ ರಚನೆಗಳ ಮೇಲೆ ಆಗಾಗ ದಾಳಿ ನಡೆಸಿ ಅನುಭವ ಗಿಟ್ಟಿಸಿಕೊಂಡಿದ್ದ ಆಲ್‌ಖಾಯಿದಾ ಮುಖಂಡ ಒಸಾಮಾಬಿನ್ ಲಾಡೆನ್ ಆ ದಾಳಿಯ ರೂವಾರಿ ಎಂದು ಘೋಷಿಸಿತು.
ನಿಜ ಹೇಳಬೇಕೆಂದರೆ ಪೆಟ್ಟು ಎಲ್ಲಿಗೆ ಬೀಳಬೇಕಿತ್ತೋ ಅಲ್ಲಿಗೇ ಬಿದ್ದಿತ್ತು. ಸದ್ರಿ ದಾಳಿ ತನಗಾರು ಸಾಟಿ ಎಂದು ಆಕಾಶದಲ್ಲೇ ಹಾರಾ ಡುತ್ತಿದ್ದ ಅಮೇರಿಕಾಗೆ ನೆಲ ತೋರಿಸಿತ್ತು. ಅಷ್ಟರಮಟ್ಟಿಗೆ ದಾಳಿ ಯಶಸ್ವಿ ಯಾಗಿತ್ತು. ಅಂದರೆ ಅದರರ್ಥ ದಾಳಿ ಮಾಡಿದಾತನ ಉದ್ದೇಶ ಈಡೇ ರಿತ್ತು. ಆ ಕಾರಣದಿಂದಾಗಿ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ತನ್ನ ಯಶಸ್ವಿ ಕಾರ್ಯಾಚರಣೆಗಾಗಿ ಹೆಮ್ಮ ಪಟ್ಟು ವಿಜಯೋತ್ಸವ ಆಚರಿಸಬೇಕಾಗಿತ್ತು. ಆದರೆ... ಆದರೆ, ಒಸಾಮಾ ಬಿನ್ ಲಾಡೆನ್ನನೇ ‘ಅಯ್ಯೋ ನಾನು ಆ ದಾಳಿ ಮಾಡಿಯೇ ಇಲ್ಲ. ನನ್ನನ್ನು ನಂಬಿ. ನಾನೊಬ್ಬ ಮುಸ್ಲಿಮನಾಗಿ ಸುಳ್ಳು ಹೇಳುವವನೇ ಅಲ್ಲ. ನಾನು ಆ ದಾಳಿಯೇ ಮಾಡಿಲ್ಲ ನನ್ನನ್ನು ನಂಬಿ...’ ಎನ್ನತೊಡಗಿದ.
ಗೆಳೆಯರೇ ಇದಕ್ಕೇನು ಕಾರಣ ಗೊತ್ತಾ? ನಿಜ ಹೇಳಬೇಕೆಂದರೆ ಇಲ್ಲಿ ಒಸಾಮಾ ಬಿನ್ ಲಾಡೆನ್‌ನ ಲೆಕ್ಕಾಚಾರ ತಲೆಕೆಳಗಾಗಿತ್ತು. ತಾನು ಅಮೆರಿಕಾದ ಮೇಲೆ ಭೀಕರ ದಾಳಿ ನಡೆಸಿ ಅಮೆರಿಕಾವನ್ನು ಭಯಭೀತ ಗೊಳಿಸಿದರೆ ಇಡೀ ಮುಸ್ಲಿಂ ಜಗತ್ತು ತನಗೆ ಶಹಬ್ಬಾಸ್‌ಗಿರಿ ಕೊಡುತ್ತದೆ ಎಂದು ಆತ ಭಾವಿಸಿದ್ದ. ಆದರೆ ದಾಳಿಯ ನಂತರದ ಬೆಳವಣಿಗೆಗಳು ಆತನನ್ನು ಚಿಂತೆಗೀಡು ಮಾಡಿತ್ತು. ಜಗತ್ತಿನ ತುಂಬಾ ತುಂಬಿಕೊಂಡಿದ್ದ ಮುಸ್ಲಿಂ ಸಂಘಟನೆಗಳಲ್ಲಿ ಬಹುತೇಕ ಒಸಾಮಾಬಿನ್ ಲಾಡೆನ್‌ನ ದುಷ್ಕೃತ್ಯವನ್ನು ತಕ್ಷಣವೇ ಖಂಡಿಸಿಬಿಟ್ಟವು. ‘ನಾವು ಅಮೇರಿಕಾದ ಸಿದ್ದಾಂತ ಅಥವಾ ವಿದೇಶಿ ನೀತಿಯನ್ನು ವಿರೋಧಿಸುತ್ತೇವೆ ನಿಜ. ಆದರೆ ಅದಕ್ಕಾಗಿ ಅದರ ಮೇಲೆ ಭಯೋತ್ಪಾದಕ ದಾಳಿ ನಡೆಸುವುದನ್ನು ಒಪ್ಪಲ್ಲ’ ಎಂದವು. ಒಸಾಮಾ ತನ್ನ ಸಮರ್ಥನೆಗಿಳಿದು ಬಿಟ್ಟ. ನನ್ನನ್ನು ನಂಬಿ. ನಾನು ಆ ದಾಳಿ ನಡೆಸಿಯೇ ಇಲ್ಲ. ಆದರೆ ನಡೆಸಿದವರನ್ನು ನಾನು ಖಂಡಿತಾ ಬೆಂಬಲಿಸುತ್ತೇನೆ. ಯಾಕೆಂದರೆ ದಾಳಿ ನಡೆಸಿದವರು ಖಂಡಿ ತವಾಗಿಯೂ ಅಮೇರಿಕಾದಿಂದ ಅನ್ಯಾಯಕ್ಕೊಳಗಾದವರೇ ಆಗಿರುತ್ತಾರೆ. ಅದು ನಡೆಸಿದ ಕ್ರೌರ್ಯ ಎಷ್ಟಿಲ್ಲ ಹೇಳಿ. ಫೆಲೆಸ್ತೀನ್‌ನಲ್ಲಿ ಅದು ನಮ್ಮ ಮುಸ್ಲಿಂ ಮಕ್ಕಳನ್ನು ಯಾವ ರೀತಿ ಹಿಂಸೆ ಕೊಟ್ಟು ಸಾಯಿಸುತ್ತಿಲ್ಲ ಹೇಳಿ’ ಎಂದೆಲ್ಲಾ ಬಡಬಡಾಯಿಸತೊಡಗಿದೆ.
ಒಸಾಮಾನ ಈ ಹೇಳಿಕೆಯನ್ನು ಫೆಲೆಸ್ತೀನಿನ ಪ್ರಶ್ನಾತೀತ ನಾಯಕ ಯಾಸೆರ್ ಅರಾಫತ್ ಆ ಕೂಡಲೇ ಖಂಡಿಸಿಬಿಡುತ್ತಾರೆ. ಒಸಮಾ ತನ್ನ ಕುಕೃತ್ಯದ ಸಮರ್ಥನೆಗಾಗಿ ಫೆಲೆಸ್ತೀನ್ ವಿಚಾರವನ್ನು ಎಳೆದು ತರುವುದು ಬೇಡ. ಫೆಲೆಸ್ತೀನ್ ಹೋರಾಟ ಒಸಮಾನಂಥ ಭಯೋತ್ಪಾದಕನ ಬೆಂಬಲ ವಿಲ್ಲದೆಯು ದಡ ಸೇರುತ್ತದೆ ಎಂಬ ವಿಶ್ವಾಸ ನಮಗಿದೆ. ಫೆಲೆಸ್ತೀನ್ ಹೋರಾಟಕ್ಕೆ ಒಸಾಮಾನಂಥವನ ಬೆಂಬಲ ಖಂಡಿತಾ ಬೇಡ. ಫೆಲೆಸ್ತೀನ್ ಬಗ್ಗೆ ಮಾತೆತ್ತುವ ಎಳ್ಳಷ್ಟು ಅರ್ಹತೆ ಒಸಾಮಾನಿಗೆ ಇಲ್ಲ’ ಎನ್ನುತ್ತಾರವರು. ನೀವು ಹೇಳಿ, ಅಮೇರಿಕಾದ ಸೊಕ್ಕು/ಧಿಮಾಕು/ ವಿದೇಶ ನೀತಿ ವಿಚಾರವಾಗಿ ಯಾರಿಗೆ ತಾನೇ ಅಸಮಾಧಾನವಿಲ್ಲ. ಆದರೆ ಹಾಗಂತಾ ಅಮೇರಿಕಾದ ಮೇಲೆ ಬಾಂಬ್ ಎಸೆಯಲು ಎಷ್ಟು ಮಂದಿ ಇಚ್ಛಿಸಿದ್ದಾರೆ? ಒಸಾಮಾ ನೊಬ್ಬನನ್ನು ಬಿಟ್ಟು. ಅದರ ನಂತರವೂ ಅವನ ವಾದ ಇಷ್ಟಪಟ್ಟವರೆಷ್ಟು ಮಂದಿ? ಮೊನ್ನೆ ಪಾಕಿಸ್ಥಾನದ ಅಬೋಟಾಬಾದ್‌ನಲ್ಲಿ ಹುಚ್ಚುನಾಯಿಯನ್ನು ಕೊಂದಂತೆ ಅಮೇರಿಕಾ ಅವನನ್ನು ಕೊಂದಾಗ ಜಗತ್ತಿನಲ್ಲೆಡೆ ವ್ಯಕ್ತವಾದ ನೀರಸ ಪ್ರತಿಕ್ರಿಯೆ ಅದನ್ನು ಮಗದೊಮ್ಮೆ ಸಾಬೀತುಪಡಿಸುತ್ತದೆ. ಇದು ಗುರಿ ಏನೇ ಆದರೂ ದಾರಿ ಮಾತ್ರ ನೇರವಾಗಿರಲಿ ಎಂದು ಜಗತ್ತು ಬಯಸುತ್ತದೆ ಎನ್ನುವುದಕ್ಕೆ ಸಾಕ್ಷಿಯಲ್ಲವೇ?
ಗೆಳೆಯರೇ, ಈಗ ಒಸಾಮಾನ ಪ್ರಪಂಚ ಬಿಟ್ಟು ನಮ್ಮ ಸ್ವಂತ ಊರಿಗೆ ಬನ್ನಿ. ಇಲ್ಲಿ ದನ ಕದಿಯುವವರ ದೊಡ್ಡ ಸಮಸ್ಯೆ ಇರುವುದು ನಿಮಗೆ ಗೊತ್ತೇ ಇದೆ. ಆದರೆ ಈ ದನಗಳ್ಳರಿಗಿಂತ ದನಗಳ್ಳರನ್ನು ಹಿಡಿಯಲು ಹೊರಟಿರುವವರ ಮೇಲೆಯೇ ನಾಗರಿಕರ ಅಸಹನೆ/ ಆಕ್ರೋಶ ಜಾಸ್ತಿಯಾಗ ವ್ಯಕ್ತವಾಗುತ್ತಿದೆಯಲ್ಲಾ, ಇದಕ್ಕೆ ಕಾರಣ ಏನಿರಬಹುದು ಎಂದು ವಿಶ್ಲೇಷಿಸುತ್ತಾ ಕಳೆದ ವಾರದ ಅಂಕಣದಲ್ಲಿ ಬರೆದಿದ್ದೆ. ಈ ದಿನದ ಅಂಕಣ ಅದರ ಮುಂದುವರಿದ ಭಾಗ ಎಂದು ತೆಗೆದುಕೊಳ್ಳಬಹುದು. ನಿಮಗೆ ಗೊತ್ತು, ದನಗಳ್ಳರು ಯಾವ ಬಗೆಯ ಕರುಣಾಹೀನರೆಂಬ ವಿಚಾರ ನಿಮಗೆ ಗೊತ್ತು. ಇಸ್ಲಾಂ ರೂಪಿಸಿ ಕೊಟ್ಟಿರುವ ಎಲ್ಲಾ ಕಟ್ಟಳೆಗಳನ್ನು ಧಿಕ್ಕರಿಸಿ ದನಗಳ್ಳರು ಅಥವಾ ಕೆಲ ದನದ ವ್ಯಾಪಾರಿಗಳು ಅಮಾನವೀಯವಾಗಿ ದನಗಳನ್ನು ಟೆಂಪೋಗಳಿಗೆ ಗೊಬ್ಬರ ತುಂಬಿಸಿದಂತೆ ತುಂಬಿಸಿ ಸಾಗಾಟ ಮಾಡಿ ಕ್ರೌರ್ಯರ ಮೆರೆಯುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತು. ಕೆಲವು ಕಡೆ ಈ ಕ್ರೂರಿಗಳು ಜಾಗ ಸಾಕಾಗುವುದಿಲ್ಲ ಎಂದು ಜೀವಂತ ಗೋವುಗಳ ಕೈಕಾಲು ಕಡಿದದ್ದು ಇದೆ. ಇಂಥಾ ಕ್ರೂರಿಗಳ ರಾಕ್ಷಸೀ ಕೃತ್ಯವನ್ನು ಕಣ್ಣಲ್ಲಿ ರಕ್ತ ಇರುವ ಯಾವನೇ ವ್ಯಕ್ತಿ ಒಪ್ಪಿಕೊಳ್ಳಲಾರ. ಆದರೆ ನಾಗರಿಕರ ಆಕ್ರೋಶದ ಹೊರತಾಗಿಯೂ ಈ ಸಾಗಾಟದ ತಡೆಗೆ ಆಹೋರಾತ್ರಿ ದುಡಿಯುವ ಬಲಿಷ್ಠ ಸಂಘಟನೆಗಳ ಕಾರ್ಯಾಚರಣೆಯ ಹೊರತಾಗಿಯೂ ಅಕ್ರಮ ಗೋಸಾಗಾಟ, ದನಗಳ್ಳತನ ಮುಂದುವರಿಯುತ್ತಲೇ ಇದೆ. ಇದಕ್ಕೆ ಕಾರಣ ಸ್ಪಷ್ಟವಾಗಿ ನಮಗೆಲ್ಲಾ ಗೊತ್ತಾಗಿ ಹೋಗಿದೆ. ಈ ಕಡೆ ದನಗಳ್ಳರನ್ನು ತಡೆಯಲು ಹೊರಟಿರುವವರದ್ದೂ ಅದೇ ಸಮಸ್ಯೆ. ಅವರಿಗೂ ತಮ್ಮ ದೇಹೇಚ್ಚೆಗಳನ್ನು ಮೀರಿ ಸಂಕುಚಿತ ಮನೋಭಾವವನ್ನು ಮೀರಿ, ವಿಕೃತಿಗಳನ್ನು ಮೀರಿ ಬದುಕಲು ಸಾಧ್ಯವೇ ಆಗದಿರುವುದು. ಇದು ಇಲಿಗಳನ್ನು ನಾಶಮಾಡಲು ಹಾವನ್ನು ಸಾಕಿ ದಂತಾಗಿದೆ.
ಅನೈತಿಕತೆ ತೊಲಗಿಸಿ ನೈತಿಕತೆ ಸ್ಥಾಪಿಸಲು ಆ ‘ನೈತಿಕತೆ’ ಅಳವಡಿಸಿ ಕೊಂಡಿರುವವರಿಂದ ಮಾತ್ರ ಸಾಧ್ಯ. ರೌಡಿಗಳಿಂದ, ಕುಡುಕರಿಂದ, ವೇಶ್ಯೆಯರ ಸಂಗ ಮಾಡುವವರಿಂದ, ಜಾತಿವಾದಿಗಳಿಂದ. ಕೋಮುವಾದಿಗಳಿಂದ ಸಮಾ ಜದಲ್ಲಿ ಸಾಮರಸ್ಯ ಖಂಡಿತಾ ಸಾಧ್ಯವಿಲ್ಲ. ಎಲ್ಲಾ ವಿಚಾರದಲ್ಲೂ ‘ಅರ್ಹತೆ’ ಎಂಬ ಮಾನದಂಡವೊಂದಿರುತ್ತದೆ. ಅದು ಈ ಸಂಸ್ಕೃತಿ ರಕ್ಷಕರೆಂದು ಸ್ವಯಂ ಘೋಷಿಸಿಕೊಂಡವರಲ್ಲಿ ಇಲ್ಲವೇ ಇಲ್ಲ ಒಸಾಮಾಬಿನ್ ಲಾಡೆನ್‌ಗೆ ಇಸ್ಲಾಮಿನ ಹಿತಾಸಕ್ತಿ ಅಥವಾ ಮುಸ್ಲಿಮರ ಹಿತಾಸಕ್ತಿಗಿಂತ ತನ್ನ ವೈಯುಕ್ತಿ (ಸೇಡು ತೀರಿಸುವ) ಹಠವೇ ಮುಖ್ಯವಾಗಿತ್ತು. ಅದಕ್ಕಾಗಿ ಆತ ಇಸ್ಲಾಂನ ಹೆಸರನ್ನು ಬಹಳಷ್ಟು ದುರ್ಬಳಕೆ ಮಾಡಿದ್ದಾನೆ. ತಾನು ಇದನ್ನೆಲ್ಲಾ ಇಸ್ಲಾಮ್‌ಗಾಗಿ ಅಥವಾ ಮುಸ್ಲಿಮರಿಗಾಗಿ ಮಾಡಿದ್ದೇನೆ ಎನ್ನುತ್ತಿದ್ದ ಆತ ಪದೇ ಪದೇ. ಹಾಗೆಯೇ ನಮ್ಮ ದೇಶದಲ್ಲಿ ಹಿಂದೂಗಳ ರಕ್ಷಣೆ ಅಥವಾ ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿ ಎಂದು ಸಾರ್ವಜನಿಕರಿಗೆ ಕಿರಿ ಕಿರಿಯಾಗುವಷ್ಟು ಬೊಬ್ಬೆ ಹಾಕುವ ಧರ್ಮರಕ್ಷಕರಿದ್ದಾರೆ. ಇವರ ಗುರಿ ನಿಜವಾಗಿಯೂ ಬೇರೆಯೇ ಇದೆ. ಇಲ್ಲಿ ಹಿಂದೂ ಧರ್ಮ ಇವರ ಕೈಯಲ್ಲಿ ಗುರಾಣಿಯಾಗಿದೆಯಷ್ಟೆ. ಧರ್ಮವನ್ನು ರಕ್ಷಿಸುವ ಅರ್ಹತೆ ಇವರಲ್ಲಿ ಬಹುತೇಕ ಮಂದಿಗೆ ಇಲ್ಲವೇ ಇಲ್ಲ.
ತೀವ್ರವಾದಿಗಳಿಂದ ಯಾವ ಮೌಲ್ಯವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಮೊನ್ನೆ ಈ ಸಂಸ್ಕೃತಿ ರಕ್ಷಕರ ಸಮಾಜ ವಿರೋಧಿ ಕಾರ್ಯಕ್ರಮಗಳನ್ನು ವಿಮರ್ಶಿಸುತ್ತಲೇ ಬಂದಿರುವ ಮಂಗಳೂರು ವಿವಿಯ ಪಟ್ಟಾಭಿರಾಮ ಸೋಮಯಾಜಿಯವರ ಮುಖಕ್ಕೆ ದುಷ್ಕರ್ಮಿಯೋರ್ವ ಸೆಗಣಿ ಬಳಿದು ಓಡಿ ಹೋಗಿದ್ದ. ಅವನನ್ನು ಇನ್ನೊಬ್ಬ ಸಮರ್ಥಿಸುತ್ತಾರೆ. ಆತ ಸಮರ್ಥಿಸದೆ ಬೇರೇನು ಮಾಡುತ್ತಾರೆ? ಇವರ ಅಜೆಂಡಾ ಕೂಡಾ ಅದೇ ಅಲ್ಲವೇ? ಇವರು ಕೂಡಾ ಅದನ್ನೇ ಮಾಡಿಕೊಂಡು ಬಂದವರಲ್ವೇ? ಇಂಥವರಿಂದ ನೈಜ ಹಿಂದೂ ಧರ್ಮದ ರಕ್ಷಣೆ...?

ಮಂತ್ರವಾದಿಗಳನ್ನು ಕಂಡಲ್ಲಿ ಗುಂಡಿಕ್ಕಲು ಸರಕಾರ ಆಜ್ಞೆ ಹೊರಡಿಸಲಿ

Posted by JAYAKIRANA Kirana on | 0 comments | Leave a comment...


ಮಂತ್ರವಾದಿಗಳು ಹೆಚ್ಚಾಗಿ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಮಾಡಿ ಮೇಲೆ ತಿಳಿಸಿದ ಹೀನ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂತಹಾ ಮಂತ್ರವಾದಿಗಳು ಮಾಡುವ ಹೀನ ಕೃತ್ಯಗಳು ಜನರಿಗೆ ಹೇಸಿಗೆ ಹುಟ್ಟಿಸುತ್ತಿದೆ. ಆದುದರಿಂದ ಮಂತ್ರವಾದಿಗಳನ್ನು ಕಂಡಲ್ಲಿ ಗುಂಡಿಕ್ಕಲು ಸರಕಾರ ಆಜ್ಞೆ ಹೊರಡಿಸಲಿ. ಭಟ್ ಕುಟುಂಬಕ್ಕೆ ಬಂದಂತಹ ದುಸ್ಥಿತಿ ಇನ್ನು ಮುಂದೆ ಯಾರಿಗೂ ಬರದಿರಲಿ. ಈ ವಿಷಯವನ್ನು ಹಿಂದೂ, ಮುಸ್ಲಿಂ ಕ್ರೈಸ್ತರು ಯಾವುದೇ ಜಾತಿ ಧರ್ಮ, ಬೇಧ ಭಾವ ನೋಡದೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.

ಟಿ.ಇಸ್ಮಾಯಿಲ್, ಕೆ.ಸಿ.ನಗರ
ಕಾಸರಗೋಡು ಜಿಲ್ಲೆಯ ಪೆರ್ಲ ಎಂಬ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕೃಷ್ಣ ಭಟ್ ಮತ್ತು ಅವರ ಪತ್ನಿಯನ್ನು ತಮ್ಮ ಮನೆಯ ಅಂಗಳದಲ್ಲಿ ನಿಧಿ ಇದೆ ಎಂದು ನಂಬಿಸಿ ೧೯೯೩ ಅಕ್ಟೋಬರ್ ೯ ರಂದು ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ ಶಿವಮೊಗ್ಗದ ಕ್ರೂರಿ ಇಮಾಂ ಹುಸೈನ್‌ರನ್ನು ಬೆಂಗಳೂರಿನ ಯಶವಂತಪುರದಿಂದ ಕೋಝಿಕ್ಕೋಡು ಕ್ರೈಂಬ್ರಾಂಚ್ ಪೊಲೀಸರು ಬಂಧಿ ಸಿದ್ದಾರೆ.
೧೯ ವರ್ಷಗಳ ಬಳಿಕ ಇವನನ್ನು ಪತ್ತೆ ಹಚ್ಚಿದ್ದು ಹೇಗೆಂದರೆ ಭಟ್‌ರವರ ಮನೆಯಲ್ಲಿ ಇವನು ಕೊಟ್ಟ ವಿಸಿಟಿಂಗ್ ಕಾರ್ಡ್ ಮೂಲಕ ಪತ್ತೆ ಹಚ್ಚಲು ಕಾರ ಣವಾಯಿತು. ಆ ವಿಸಿಟಿಂಗ್ ಕಾರ್ಡ್‌ನಲ್ಲಿ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ವಸತಿ ಗ್ರಹವೊಂದರಲ್ಲಿ ರೂಮ್ ಮಾಡಿದ ವಿಳಾಸ ಇತ್ತು. ಈ ಕೊಠಡಿಯಲ್ಲಿ ಮಾಟ ಮಂತ್ರ ಮಾಡುತ್ತಿದ್ದ ಎನ್ನಲಾಗಿದೆ.
ಈ ವಿಷಯ ಪತ್ರಿಕೆಯಲ್ಲಿ ಜಾಹೀರಾತು ಬರುತ್ತಾ ಇತ್ತು. ಜಾಹೀರಾತನ್ನು ಓದಿದ ಕೃಷ್ಣ ಭಟ್‌ರವರು ಇವನನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಇವನಲ್ಲಿ ಹೇಳಿದಾಗ ಕ್ರೂರಿಯಾದ ಹುಸೈನನು ತಮ್ಮ ಮನೆಯಲ್ಲಿ ನಿಧಿ ಇದೆ ಎಂದು ನಂಬಿಸಿ ೧೯೯೩ರ ಅಕ್ಟೋಬರ್ ೯ ರಂದು ರಾತ್ರಿ ಕೃಷ್ಣಭಟ್‌ರವರ ಮನೆಗೆ ಬಂದ ಈ ಭೂಪ ಅಂದೇ ಮಧ್ಯರಾತ್ರಿ ಭಟ್‌ರವರ ಮನೆಯ ಪಕ್ಕದಲ್ಲಿ ತೆಂಗಿನ ಗಿಡ ನೆಡಲು ತೆಗೆದಿಟ್ಟ ಹೊಂಡದ ಹತ್ತಿರ ಕರೆದುಕೊಂಡು ಹೋಗಿ ಕಣ್ಣು ಮುಚ್ಚಿ ಪ್ರಾರ್ಥಿಸಿ ಎಂದ. ಪಾಪ ಭಟ್ರು ಅದೇ ರೀತಿ ಮಾಡಿದರು. ಆ ಸಂದರ್ಭದಲ್ಲಿ ಅಲ್ಲಿ ಇದ್ದ ಪಿಕ್ಕಾಸ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ ನಂತರ ಮೃತದೇಹವನ್ನು ಅಲ್ಲೇ ಇದ್ದ ತೆಂಗಿನ ಸಸಿ ನೆಡಲು ಹೊಂಡಕ್ಕೆ ಹಾಕಿ ಮಣ್ಣು ಹಾಕಿ ಮುಚ್ಚಿದ. ಆನಂತರ ಭಟ್‌ರವರ ಪತ್ನಿಯ ಬಳಿ ಬಂದು ಕತ್ತು ಹಿಸುಕಿ ಕೊಂದು ಅವರಲ್ಲಿದ್ದ ೨೫ ಪವನ್ ಚಿನ್ನಾಭರಣವನ್ನು ದೋಚಿ ಪರಾರಿ ಯಾಗಿದ್ದನು.
೧೯ ವರ್ಷ ಕಳೆದು ಇವನನ್ನು ಪೊಲೀಸರು ಪತ್ತೆ ಹಚ್ಚಿದ್ದು ಭಟ್ ಕುಟುಂಬಕ್ಕೆ ಸ್ವಲ್ಪ ಸಮಾಧಾನವಾದರೂ ಆ ಕ್ರೂರಿ ಮಾಡಿದ ಕೃತ್ಯ ಭಟ್ ಕುಟುಂಬದ ಮನ ಸ್ಸಿನಿಂದ ತೆಗೆಯಲು ಯಾರಿಗೂ ಸಾಧ್ಯವಿಲ್ಲ.
ಮಂತ್ರವಾದಿಗಳಿಂದ ಆಗುವ ಕೃತ್ಯ ಇದು ಒಂದೇ ಅಲ್ಲ. ಒಂದು ತಿಂಗಳ ಮುಂಚೆ ಒಂದು ಕುಟುಂಬದ ಮೂರು ವರ್ಷದ ಮಗುವನ್ನು ಒಂದು ಮಂತ್ರವಾದಿ ಮಗುವನ್ನು ಬಲಿಕೊಟ್ಟರೆ ತಮ್ಮ ಎಲ್ಲಾ ತೊಂದರೆ ಸರಿಯಾಗುತ್ತದೆ ಎಂದು ನಂಬಿಸಿದ ಮಂತ್ರವಾದಿ ಹೇಳಿದ ತಕ್ಷಣ ಕುಟುಂಬದವರು ಮಗುವನ್ನು ಮುಗಿಸಿಯೇ ಬಿಟ್ಟರು. ಮಾತ್ರವಲ್ಲ ಆರು ತಿಂಗಳ ಮುಂಚೆ ಬೆಂಗಳೂರಿನಲ್ಲಿ ಸಿಗರೇಟ್ ಬಾಬು ಎಂಬವನು ಬಹಳಷ್ಟು ಕುಟುಂಬದವರಿಗೆ ತೊಂದರೆ ಕೊಟ್ಟಿದ್ದಾನೆ.
ಒಂದು ವರ್ಷದ ಮುಂಚೆ ಕೇರಳದಲ್ಲಿ ಕೊಚ್ಚಿ ಎಂಬ ಪ್ರದೇಶದಲ್ಲಿ ಒಂದು ಮಹಿಳೆಯನ್ನು ಇದೇ ಕಾರಣ ಹೇಳಿ ಒಂದು ಮಂತ್ರವಾದಿ ಕೊಲ್ಲಿಸಿದ್ದಾನೆ. ಮಾತ್ರವಲ್ಲ ಕಾರವಾರ ಜಿಲ್ಲೆಯ ಬಿಡಂಗ ಎಂಬ ಪ್ರದೇಶದಲ್ಲಿ ಒಬ್ಬರನ್ನು ಇಂತಹ ಕಾರಣ ಹೇಳಿ ಓರ್ವ ಮಂತ್ರವಾದಿ ಕೊಂದು ಹಾಕಿದ್ದ. ಇಂತಹಾ ಅನೇಕ ಕೃತ್ಯಗಳು ನಡೆಯುತ್ತಾ ಬಂದಿದೆ. ಈಗಲೂ ನಡೆಯುತ್ತಾ ಇದೆ.
ಕೊಲ್ಲುವುದು ಮಾತ್ರವಲ್ಲ. ಇವರ ಕೆಲಸ ಗಂಡ ಹೆಂಡತಿಯನ್ನು ವಿವಾಹ ವಿಚ್ಚೇದನ ಮಾಡಿಸುತ್ತಾರೆ. ಮಾತ್ರವಲ್ಲ ಒಳ್ಳೊಳ್ಳೆಯ ಮನೆಗಳನ್ನು ಮೂರು ಕಾಸಿಗೆ ಮಾರಿ ಎಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿಸಿದವರಿದ್ದಾರೆ. ನೆರೆಮನೆಯವರ ಜೊತೆ ಗಲಾಟೆ ಮಾಡಲು ಪ್ರೇರೇಪಿಸಿದ ವಿಷಯವನ್ನೂ ಮರೆಯುವಂತಿಲ್ಲ.
ಮಂತ್ರದ ಮೂಲಕ ಯಾರನ್ನಾದರೂ ಉದ್ದಾರ ಮಾಡುವುದಾದರೆ ಮೊದಲಿಗೆ ಇಂತಹ ಮಂತ್ರವಾದಿಗಳೇ ಯಾಕೆ ಉದ್ದಾರವಾಗುವುದಿಲ್ಲ. ಇದನ್ನು ಜನರು ಚಿಂತನೆ ಮಾಡಿದರೆ ಖಂಡಿತವಾಗಿ ಯಾರೂ ಮಂತ್ರವಾದಿಗಳ ಬಳಿ ಹೋಗಲಿಕ್ಕಿಲ್ಲ.
ಮಂತ್ರವಾದಿಗಳು ಹೆಚ್ಚಾಗಿ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಮಾಡಿ ಮೇಲೆ ತಿಳಿಸಿದ ಹೀನ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂತಹಾ ಮಂತ್ರವಾದಿಗಳು ಮಾಡುವ ಹೀನ ಕೃತ್ಯಗಳು ಜನರಿಗೆ ಹೇಸಿಗೆ ಹುಟ್ಟಿಸುತ್ತಿದೆ. ಆದುದರಿಂದ ಮಂತ್ರವಾದಿಗಳನ್ನು ಕಂಡಲ್ಲಿ ಗುಂಡಿಕ್ಕಲು ಸರಕಾರ ಆಜ್ಞೆ ಹೊರಡಿಸಲಿ. ಭಟ್ ಕುಟುಂಬಕ್ಕೆ ಬಂದಂತಹ ದುಸ್ಥಿತಿ ಇನ್ನು ಮುಂದೆ ಯಾರಿಗೂ ಬರದಿರಲಿ. ಈ ವಿಷಯವನ್ನು ಹಿಂದೂ, ಮುಸ್ಲಿಂ ಕ್ರೈಸ್ತರು ಯಾವುದೇ ಜಾತಿ ಧರ್ಮ, ಬೇಧ ಭಾವ ನೋಡದೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು.

ಪತಿಗೆ ರಸಿಕತನವಿಲ್ಲ, ಪರಿಹಾರ ಸಾಧ್ಯವಿದೆಯೇ?

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೧ರ ಹರೆಯದ ಯುವತಿ. ಮಧ್ಯಮವರ್ಗದ ಹಿನ್ನೆಲೆಯಿಂದ ಬಂದಿದ್ದೇನೆ. ನನಗೆ ಮೂರು ವರ್ಷಗಳ ಹಿಂದೆ ಮದುವೆ ನಡೆದಿದೆ. ನನ್ನ ಗಂಡ ಸಾಧು ಸ್ವಭಾವದವರು. ನಾನು ಹೇಳಿದ್ದಕ್ಕೆ ವಿರುದ್ಧವಾಗಿ ಮಾತಾಡುವುದಿಲ್ಲ. ನನಗೆ ಅಗತ್ಯವಿದ್ದನ್ನು ತೆಗೆದುಕೊಡಲು ಹಿಂದೆ-ಮುಂದೆ ನೋಡುವುದಿಲ್ಲ. ಆದರೆ ಅವರ ಏಕೈಕ ಸಮಸ್ಯೆಯೆಂದರೆ ಮನೆಯಲ್ಲಿ ತಾಯಿ, ಅಣ್ಣ ಹೇಳಿದ ಮಾತಿಗೆ ತಲೆಯಾಡಿಸುವುದು. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅಣ್ಣನ ಒಪ್ಪಿಗೆ ಪಡೆಯಬೇಕು ಎನ್ನುತ್ತಾರೆ. ಅವರ ಅಣ್ಣ ಕೆಟ್ಟವರು ಎಂದೇನಲ್ಲ. ಆದರೆ ಎಲ್ಲ ವಿಷಯದಲ್ಲೂ ಮಧ್ಯೆ ಮೂಗು ತೂರಿಸುತ್ತಾರೆ. ನಮ್ಮ ಪತಿ-ಪತ್ನಿಯ ನಡುವಿನ ವಿಷಯವಾದರೂ ಸಂಕೋಚವಿಲ್ಲದೆ ಮಾತಾಡುತ್ತಾರೆ. ಇದು ನನಗೆ ಸರಿ ಕಾಣುವುದಿಲ್ಲ. ನಾನು ನನ್ನವರಿಗೆ ಎಷ್ಟು ಹೇಳಿದರೂ ಅವರು ನನ್ನ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ.
ನನ್ನ ಇನ್ನೊಂದು ಸಮಸ್ಯೆ ಏನೆಂದರೆ, ನನ್ನವರಿಗೆ ರಸಿಕತನವಿಲ್ಲ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದರೂ ಒಬ್ಬರೇ ಟಿ.ವಿ. ನೋಡುತ್ತಿರುತ್ತಾರೆ. ಕೇಳಿದರೆ ಸುಸ್ತಾಗಿದೆ ಎನ್ನುತ್ತಾರೆ. ರಾತ್ರಿಯೂ ಟಿ.ವಿ. ನೋಡುತ್ತಾ ಲೇಟ್ ಆಗಿ ಮಲಗುತ್ತಾರೆ. ಇದರಿಂದ ನನಗೆ ಕೆಲವೊಮ್ಮೆ ಚಿಂತೆ ಕಾಡುತ್ತದೆ. ನಾವು ತಿಂಗಳಿಗೆ ಎರಡು ಇಲ್ಲವೇ ಮೂರು ಬಾರಿ ಮಾತ್ರ ಸೆಕ್ಸ್ ಮಾಡುತ್ತೇವೆ. ನನಗೆ ಸೆಕ್ಸ್ ಮೇಲೆ ಆಸಕ್ತಿ ಹೆಚ್ಚು. ಆದರೆ ನನ್ನವರು ಅದನ್ನು ತೋರ್ಪಡಿಸುವುದಿಲ್ಲ. ಇದರಿಂದ ನನಗೆ ಅದೇ ಸಮಸ್ಯೆಯಾಗುತ್ತಿದೆ. ನನಗೆ ಸೆಕ್ಸ್ ವೇಳೆ ಸುಖ ಕೊಡುತ್ತಾರೆ. ಆದರೆ ಆ ಸುಖ ಬೇಕೆನಿಸಿದಾಗ ಸಿಗುವುದಿಲ್ಲ. ಇದಕ್ಕಾಗಿ ರಾತ್ರಿ-ಹಗಲು ಕಾಯುತ್ತೇನೆ. ಆದರೆ ಇದನ್ನು ನನ್ನವರ ಬಳಿ ಹೇಳಿಕೊಳ್ಳಲಾಗುತ್ತಿಲ್ಲ. ನಾನೇನು ಮಾಡಲಿ? ನನ್ನ ಸಮಸ್ಯೆ ಎಲ್ಲ ಗೃಹಿಣಿಯರಲ್ಲೂ ಇರುತ್ತದೆಯೇ? ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಮುಚ್ಚುಮರೆಯಿಲ್ಲದೆ ಸಮಸ್ಯೆಯನ್ನು ವಿವರಿಸಿ ಸಲಹೆ ಕೇಳಿದ್ದೀರಿ. ಇದು ಒಳ್ಳೆಯದು. ಆದರೆ ನೀವು ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಮದುವೆಯ ಮೂಲ ಉದ್ದೇಶ ಲೈಂಗಿಕ ತೃಪ್ತಿ ಮತ್ತು ಸಂತಾನಭಿವೃದ್ಧಿಯಾದರೂ ಇಲ್ಲಿ ಭಾವನೆಗಳಿಗೆ ಅದರದ್ದೇ ಆದ ಬೆಲೆಯಿರುತ್ತದೆ. ಎಲ್ಲರೂ ಒಂದೇ ರೀತಿ ಇರಬೇಕು, ಲೈಂಗಿಕ eನ, ಆಸಕ್ತಿ ಒಂದೇ ರೀತಿ ಇರಬೇಕು ಎಂದೇನೂ ಇಲ್ಲ ಅಲ್ಲವೇ? ನಿಮ್ಮ ಪತಿ ಸಾಧು ಸ್ವಭಾವದವರಾಗಿದ್ದು, ನಿಮ್ಮ ಬೇಡಿಕೆಗೆ ಮನ್ನಣೆ ನೀಡುತ್ತಾರೆಂದಾದರೆ ಭಯವೇಕೆ? ಅವರಿಗೆ ಸಂಕೋಚ ಸ್ವಭಾವ ಜಾಸ್ತಿಯಿರುವ ಸಾಧ್ಯತೆಯೂ ಇದೆ. ನೀವು ಈ ಬಗ್ಗೆ ಅವರಲ್ಲೇ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಿಮ್ಮ ಲೈಂಗಿಕ ಆಸಕ್ತಿಗೆ ಅವರು ಸ್ಪಂದಿಸದೇ ಇರುವುದರಿಂದ ಸಮಸ್ಯೆ ಆರಂಭವಾಗಿದೆ. ಈ ಬಗ್ಗೆ ಅವರಲ್ಲೇ ಚರ್ಚಿಸಿದರೆ ಒಳಿತು. ದುಡಿದು ಕೆಲಸದಿಂದ ಮನೆಗೆ ಬರುವಾಗ ಸುಸ್ತಾಗುವುದು ಸಹಜ. ಆದರೆ ಈ ವೇಳೆ ಮನೆಯಲ್ಲಿ ಪತ್ನಿಯ ಭಾವನೆಗಳಿಗೆ ಸ್ಪಂದಿಸುವುದು ಅವಶ್ಯ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಳ್ಳಿ. ಲೈಂಗಿಕತೆಯ ಬಗ್ಗೆ ಹೆಚ್ಚಿನ ಆಸಕ್ತಿಯು ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗಬಹುದು. ಮನಸ್ಸನ್ನು ನಿಗ್ರಹಿಸುವುದನ್ನು ಕಲಿತುಕೊಳ್ಳಿ. ಗಂಡನ ಸುಖಕ್ಕಾಗಿ ಹಾತೊರೆಯುವುದು ತಪ್ಪಲ್ಲ. ಆದರೆ ಅಲ್ಲಿ ಯಾವುದೇ ಒತ್ತಡವಿರಬಾರದು. ನಿಮ್ಮವರಲ್ಲಿ ರಸಿಕತೆ ಬೆಳೆಸುವುದು ನಿಮಗೇ ತಿಳಿದಿರಬೇಕು. ಅವರನ್ನು ಉತ್ತೇಜಿಸುವ ಬಗೆ ನಿಮಗೆ ಗೊತ್ತಿದ್ದರೆ ನೀವು ಜೀವನದಲ್ಲಿ ಗೆದ್ದಂತೆಯೇ ಸರಿ. ಯಾವುದೇ ಕಾರಣಕ್ಕೂ ನೀವು ಜಗಳಕ್ಕೆ ಇಳಿಯುವುದು ಬೇಡ. ಪದೇ ಪದೇ ಅಣ್ಣ, ತಾಯಿಯ ಅನುಮತಿ ಬೇಕು ಎಂದರೆ ಅದನ್ನು ವಿರೋಧಿ ಸುವುದನ್ನು ಕಲಿಯಿರಿ. ಇಂಥ ಸಮಸ್ಯೆ ಕ್ರಮೇಣ ಸರಿಯಾಗುತ್ತದೆ. ಮನೆಮಂದಿಗೆ ಅಗತ್ಯವಿದ್ದಷ್ಟೇ ಗೌರವ ಕೊಡುವಂತೆ ನೋಡಿಕೊಳ್ಳಿ. ಅವರನ್ನು ಬದಲಾಯಿಸುವುದು ನಿಮ್ಮಲ್ಲೇ ಇದೆ. ಸಮಸ್ಯೆಗಳಿಗೆ ಭಯಪಟ್ಟು ಸಂಸಾರದಲ್ಲಿ ನೊಂದುಕೊಳ್ಳದಿರಿ.

ಅಬ್ಬಕ್ಕ ಸಮಿತಿಯ ಸರ್ವಾಧಿಕಾರಿಯನ್ನು ಕಿತ್ತೆಸೆಯಿರಿ

Posted by JAYAKIRANA Kirana on | 0 comments | Leave a comment...


ಈ ಬಾರಿ ರಾಣಿ ಅಬ್ಬಕ್ಕ ಸಾಕ್ಷ್ಯಚಿತ್ರ ಮಾಡಲು ಹೊರಟಿದ್ದಾರೆ. ಅದೂ ಕಾಟಾಚಾರಕ್ಕೆ ಮಾತ್ರ. ಹೆಸರಾಂತ ಇತಿಹಾಸಕಾರರು ಹಾಗೂ ಮಾಧ್ಯಮ ತಂತ್ರಜ್ಞರನ್ನು ಬಳಸದೆ ಅನನುಭವಿಗಳನ್ನು ಹಿಡಿದು ಸ್ಥಳೀಯ ಛಾನೆಲ್‌ನವರ ಮೂಲಕ ತಯಾರಿಸಲು ಹೊರಟಿರುವ ಈ ಚಿತ್ರ ಒಂದು ಮಾಮೂಲಿ ಲೋಕಲ್ ಟಿ.ವಿ. ಕಾರ್ಯಕ್ರಮವಾದೀತೇ ಹೊರತು ಅಬ್ಬಕ್ಕ ರಾಣಿಯ ಬದುಕು-ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಒಂದು ಬಹುಪಯೋಗಿ ಸಾಕ್ಷ್ಯಚಿತ್ರ ಆಗಲಾರರು.

ಮಾನವ, ಮುಕ್ಕಚ್ಚೇರಿ-ಉಳ್ಳಾಲ
ಇತ್ತೀಚೆಗೆ ಜಯಕಿರಣದ ಬಹಿರಂಗ ಪತ್ರ ವಿಭಾಗದಲ್ಲಿ ‘ಅಬ್ಬಕ್ಕನ ಹೆಸರಿನಲ್ಲಿ ಇಬ್ಭಾಗವಾಯಿತೇ ಹಿಂದೂ ಸಂಘಟನೆ’ ಎಂಬ ಪತ್ರ ಓದಿ ನನ್ನ ಅಭಿಪ್ರಾಯ ತಿಳಿಸಲು ಬಯಸಿದ್ದೇನೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕನ ಹೆಸರಿನಲ್ಲಿ ನಿರ್ದಿಷ್ಟ ಧರ್ಮವೊಂದರ ಸಂಘಟನೆ ಹುಟ್ಟಿಕೊಳ್ಳುವುದನ್ನು ನಾನೂ ವಿರೋಧಿಸುತ್ತೇನೆ. ಉಳ್ಳಾಲದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಆರಂಭದಲ್ಲಿ ಸರ್ವ ಧರ್ಮೀಯರಿಗೂ ಸೇರಿದ ಒಂದು ಉತ್ತಮ ಸಂಘಟನೆಯಾಗಿ ಪ್ರತೀವರ್ಷ ಅಬ್ಬಕ್ಕ ಉತ್ಸವವನ್ನಾಚರಿಸಿ ಪ್ರಸಿದ್ಧವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಮಿತಿ ಸ್ವಪ್ರತಿಷ್ಠೆಯ ವೇದಿಕೆಯಾಗಿ ಓರ್ವ ಸರ್ವಾಧಿಕಾರಿಯ ಕೈಯಲ್ಲಿ ಸಿಕ್ಕಿ ನಲುಗಿ ಹೋಗುತ್ತಿರುವುದು ಸುಳ್ಳಲ್ಲ. ಇಂತಹ ಸಂದರ್ಭದಲ್ಲಿ ರಾಣಿ ಅಬ್ಬಕ್ಕ ಸಾಂಸ್ಕೃತಿಕ ಸೇವಾ ಪರಿಷತ್ ಎಂಬ ಪರ್ಯಾಯ ಸಂಸ್ಥೆಯೊಂದು ಹುಟ್ಟಿ ಕೊಂಡು ಸದ್ರಿ ವ್ಯಕ್ತಿಗೆ ಪಾಠ ಕಲಿಸಲು ಸನ್ನದ್ಧವಾಗಿರುವುದು ಸ್ವಾಗತಾರ್ಹ.
ಉಳ್ಳಾಲ ಕ್ಷೇತ್ರದಲ್ಲಿ ರಾಜಕೀಯವಾಗಿ ಮೇಲೇರಲು ಶತಾಯ ಗತಾಯ ಪ್ರಯತ್ನಿಸಿ ಕೈಸಾಗದೆ, ಒಂದು ಬಾರಿ ಪಂಚಾಯತ್ ಅಧ್ಯಕ್ಷನಾಗಿ ಅವಧಿಗೆ ಮುಂಚೆಯೇ ಕೈಸುಟ್ಟುಕೊಂಡ ವ್ಯಕ್ತಿ ಅಬ್ಬಕ್ಕ ಉತ್ಸವದ ಕಾರ್ಯಾಧ್ಯಕ್ಷನಾಗಿ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾನೆ. ಅಬ್ಬಕ್ಕನ ಬಗ್ಗೆ ಏನೇನೂ ಗೊತ್ತಿಲ್ಲದ ಈ ಮಹಾಶಯ ತಾನೋರ್ವ ಸ್ವಯಂಘೋಷಿತ ನಾಯಕನಾಗಿ ಇಡೀ ಸಮಿತಿಯನ್ನು ನಿಯಂತ್ರಿಸುತ್ತಿದ್ದಾರೆ.
ಈ ಮೊದಲು ಸ್ಥಳೀಯ ಗಣ್ಯರಾದ ಬಿ.ಎಂ. ಇದಿನಬ್ಬ, ಯು.ಟಿ. ಫರೀದ್, ಯು.ಪಿ.ಇಬ್ರಾಹಿಂ, ಯು.ಆರ್.ಚಂದರ್, ಕೆ.ಜಯರಾಮ್ ಶೆಟ್ಟಿ, ಅಮೃತ ಸೋಮೇಶ್ವರ, ವಿವೇಕ ರೈ ಮುಂತಾದ ಹಿರಿಯರಿದ್ದ ಕಾರಣದಿಂದ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿ ಕೆಲವು ವರ್ಷ ಅಬ್ಬಕ್ಕ ಉತ್ಸವವನ್ನು ಸಮಿತಿಯ ಆಶ್ರಯದಲ್ಲಿ ಚೆನ್ನಾಗಿಯೇ ನಡೆಸಲಾಯಿತು.
ಇದೀಗ ಎರಡು ವರ್ಷಗಳಿಂದ ಕರ್ನಾಟಕದ ಬಿಜೆಪಿ ಸರಕಾರ ಸಮಿತಿಗೆ ತಲಾ ೨೫ ಲಕ್ಷ ರೂಪಾಯಿಗಳ ಅನುದಾನ ನೀಡುತ್ತಿರು ವುದರಿಂದ ಉತ್ಸವ ಸಮಿತಿಗೆ ಆರ್ಥಿಕ ಬಲ ಬಂದಂತಾಗಿದೆ. ಇದರೊಂದಿಗೆ ಕಾರ್ಯಾಧ್ಯಕ್ಷರ ನಿಜಬಣ್ಣವೂ ಬಯಲಾಗಿದೆ. ಹಾಲಿ ಶಾಸಕರು ಮತ್ತು ಮಾಜಿ ಶಾಸಕರಿಬ್ಬರನ್ನು ತನ್ನ ಕೈಯೊ ಳಗಿರಿಸಿಕೊಂಡು ಈ ವ್ಯಕ್ತಿ ತನಗೆ ಯಾರೂ ಎದುರಿಲ್ಲವೆಂಬಂತೆ ಮೆರೆಯುತ್ತಿದ್ದಾರೆ. ಶಾಸಕರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಇವರ ವ್ಯವಹಾರದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುವುದಿಲ್ಲ. ತನಗೆ ಬೇಕಾದವರನ್ನು ಸಮಿತಿಗೆ ಸೇರಿಸಿಕೊಂಡು ಅವರನ್ನು ಲೆಕ್ಕಭರ್ತಿಗೆ ಇರಿಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಎರಡು ವರ್ಷಗಳಿಂದ ಹರಿದು ಬರುತ್ತಿರುವ ಲಕ್ಷಾಂತರ ರೂ. ಅನುದಾನವನ್ನು ಸಂಪೂರ್ಣ ನುಂಗಿ ನೀರು ಕುಡಿದಿರುವರು ಅಸೈಗೋಳಿ ಮತ್ತು ಉಚ್ಚಿಲದಲ್ಲಿ ಸ್ಥಳೀಯರನ್ನು ಧಿಕ್ಕರಿಸಿ ವೇದಿಕೆ, ಸಭಾಂಗಣ, ಕೇಟರಿಂಗ್, ಪ್ರಿಂಟಿಂಗ್, ಬ್ಯಾನರ್ ಮೊದಲಾದ ವುಗಳನ್ನು ತನ್ನ ಆಪ್ತ ವಲಯದವರಿಗೇ ಕೊಟ್ಟು ತನಗೆ ಬೇಕಾದಂತೆ ರಶೀದಿ ಮಾಡಿ ಸರಕಾರಕ್ಕೆ ಬೋಗಸ್ ಲೆಕ್ಕ ಕೊಟ್ಟು ಕ್ಲೀನ್ ಚಿಟ್ ಪಡೆದಿರುವುದರ ಬಗ್ಗೆಯೂ ತನಿಖೆಯಾಗಬೇಕು. ಸರಕಾರದ ಸ್ಪಷ್ಟ ನಿರ್ದೇಶನವಿದ್ದರೂ ಮೆರವಣಿಗೆ, ವಿಚಾರಗೋಷ್ಠಿ ಮತ್ತು ಕಲಾ ಕಾರ್ಯಕ್ರಮಗಳಿಗೆ ಶೇಕಡಾ ೮೦ರಷ್ಟು ಹಣ ವ್ಯಯಿಸಿ ಬೇಕೆಂದಿದ್ದರೂ ಈ ಅಸಾಮಿ ಅವುಗಳನ್ನೆಲ್ಲಾ ಚೌಕಾಶಿಯಲ್ಲೇ ಸುಧಾರಿಸಿ ಸಾಹಿತಿ, ಕಲಾವಿದರಿಗೆ ಜುಜುಬಿ ಹಣ ನೀಡಿ ವೇದಿಕೆ ಯಲ್ಲಿ ಹೊಗಳಿಸಿಕೊಂಡಿರುವುದು ಮಾತ್ರವಲ್ಲದೆ ಕಾರ್ಯಕ್ರಮ ಗಳೆಲ್ಲ ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂಬ ದರ್ಪ ಬೇರೆ ಇದೆ. ಕಳೆದ ವರ್ಷ ಕಾಯಕ್ರಮಗಳ ವಿಚಾರದಲ್ಲಿ ಪ್ರಧಾನ ಕಾರ್ಯದರ್ಶಿ ಮೇಲೆ ಕೆಲವು ಆರೋಪಗಳು ಬಂದ ಹಿನ್ನೆಲೆಯಲ್ಲಿ ಈ ಬಾರಿ ಆ ವ್ಯಕ್ತಿ ಸಂಪೂರ್ಣ ನಿಷ್ಕ್ರಿಯ ರಾಗಿದ್ದಾರೆ. ಇದರಿಂದಾಗಿ ಕಾರ್ಯಾಧ್ಯಕ್ಷರು ಈಗ ಎಲ್ಲರನ್ನೂ ಕಡೆಗಣಿಸಿ ತಾನೇ ಸರ್ವಾಧಿಕಾರ ನಡೆಸುತ್ತಿದ್ದಾರೆ.
‘ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬಂತೆ ಸರಕಾರದ ಹಣ ನಮಗೇತರ ಉಸಾಬರಿ ಎಂದು ಊರವರು ತೆಪ್ಪಗಿದ್ದಾರೆ. ಸರಕಾರ ದೊಡ್ಡ ಮೊತ್ತದ ಹಣ ನೀಡಿದ್ದರೂ ಪತ್ರಿಕೆಗಳು ಮತ್ತು ಮಾಧ್ಯಮದವರಿಗೆ ಚಿಕ್ಕಾಸೂ ಖರ್ಚು ಮಾಡದೆ ಪುಕ್ಕಟೆ ಪ್ರಚಾರ ಪಡೆಯುವಲ್ಲಿ ಈತ ನಿಸ್ಸೀಮ. ಕಳೆದ ಬಾರಿ ವಿದ್ವಾಂಸರ ಪರಿ ಶ್ರಮದಿಂದ ‘ಅಬ್ಬಕ್ಕ ಸಂಕಥನ’ ಎಂಬ ಗ್ರಂಥ ಪ್ರಕಟಿಸಿದ್ದನ್ನು ಬಿಟ್ಟರೆ ಈ ಉತ್ಸವ ಸಮಿತಿ ಸಾಧಿಸಿದ್ದೇನೂ ಇಲ್ಲ. ಈ ಬಾರಿ ಸಾಕ್ಷ್ಯಚಿತ್ರ ಮಾಡಲು ಹೊರಟಿದ್ದಾರೆ. ಅದೂ ಕಾಟಾಚಾರಕ್ಕೆ ಮಾತ್ರ. ಹೆಸರಾಂತ ಇತಿಹಾಸಕಾರರು ಹಾಗೂ ಮಾಧ್ಯಮ ತಂತ್ರಜ್ಞರನ್ನು ಬಳಸದೆ ಅನನುಭವಿಗಳನ್ನು ಹಿಡಿದು ಸ್ಥಳೀಯ ಛಾನೆಲ್‌ನವರ ಮೂಲಕ ತಯಾರಿಸಲು ಹೊರಟಿರುವ ಈ ಚಿತ್ರ ಒಂದು ಮಾಮೂಲಿ ಲೋಕಲ್ ಟಿ.ವಿ. ಕಾರ್ಯಕ್ರಮವಾದೀತೇ ಹೊರತು ಅಬ್ಬಕ್ಕ ರಾಣಿಯ ಬದುಕು-ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಪರಿ ಚಯಿಸುವ ಒಂದು ಬಹುಪಯೋಗಿ ಸಾಕ್ಷ್ಯಚಿತ್ರ ಆಗಲಾರರು.
ಇದೀಗ ಅಬ್ಬಕ್ಕ ಉತ್ಸವದ ದಶಮಾನೋತ್ಸನದತ್ತ ದೃಷ್ಟಿ ನೆಟ್ಟಿರುವ ಈ ಅಸಾಮಿ ಈ ಬಾರಿ ಕೋಟ್ಯಂತರ ಅನುದಾನ ಪಡೆಯುವುದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಇನ್ನು ಮುಂದೆ ಸರಕಾರವೇ ಮುಂದೆ ಬಂದು ಇಂತಹ ಸರ್ವಾಧಿಕಾರಿಗಳನ್ನು ಕಿತ್ತೆಸೆದು ಅಬ್ಬಕ್ಕ ಉತ್ಸವವನ್ನು ತಾನೇ ನಡೆಸಿ ಅದಕ್ಕೆ ಸಾರ್ವಜನಿಕ ಸ್ವರೂಪ ನೀಡುವುದು ಒಳಿತು. ಇಲ್ಲವೇ ಅಬ್ಬಕ್ಕ ಉತ್ಸವ ಮತ್ತು ಅಬ್ಬಕ್ಕ ಭವನಗಳ ಜವಾಬ್ದಾರಿಯನ್ನು ಸಾಮಾಜಿಕ ಬದ್ಧತೆಯಿರುವ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರಾಮಾಣಿಕ ವ್ಯಕ್ತಿಗಳನ್ನು ಹೊಂದಿದ ಸಂಘಟನೆಗಳಿಗೆ ವಹಿಸಿಕೊಟ್ಟರೆ ಸರಕಾರದ ಹಣ ಸದ್ವಿನಿಯೋಗವಾದೀತೆಂದು ಭಾವಿಸಬಹುದು.

ಕೋಳಿ ಅಂಕ ನಡೆಸಲು ಅವಕಾಶ ಕೊಡಿ

Posted by JAYAKIRANA Kirana on | 0 comments | Leave a comment...

ಕೋಳಿ ಅಂಕವನ್ನು ಜೂಜಾಟ ಎನ್ನುವ ಕಾರಣಕ್ಕೆ ನಿಷೇಧಿಸಲಾಗಿದೆ. ಜನರು ದುಡಿದ ಲಕ್ಷಾಂತರ ಹಣ ವನ್ನು ಕೋಳಿಅಂಕದಲ್ಲಿ ತೊಡಗಿಸಿ ಕ್ಷಣಮಾತ್ರ ದಲ್ಲಿ ಕಳೆದುಕೊಳ್ಳುವುದನ್ನು ಸರಿಯೆಂದು ಒಪ್ಪಲು ಸಾಧ್ಯವಿಲ್ಲ. ಆದರೆ ಕೋಳಿ ಅಂಕ ಎನ್ನುವುದು ನಮ್ಮ ಜಾನಪದ ಕ್ರೀಡೆ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೂ ಆಗಿದೆ. ಹೀಗಿ ರುವಾಗ ಏಕಾಏಕಿ ಕೋಳಿ ಅಂಕಕ್ಕೆ ನಿಷೇಧ ಹೇರುವುದು ಎಲ್ಲಿಯ ನ್ಯಾಯ? ಕೆಲವು ಕಡೆ ಪೊಲೀಸರಿಗೆ ಇಂತಿಷ್ಟು ಹಣ ಕೊಟ್ಟರೆ ಗುಟ್ಟಾಗಿ ಅಂಕ ನಡೆಸಲು ಅನುಮತಿ ನೀಡುತ್ತಾರೆ. ಆದರೆ ಮತ್ತೂ ಕೆಲವು ಕಡೆ ಕೋಳಿ ಅಂಕ ವನ್ನು ನಡೆಸುವುದಕ್ಕೆ ಅವ ಕಾಶ ನೀಡುವುದೇ ಇಲ್ಲ. ಪೊಲೀಸ್ ಇಲಾಖೆಯ ಈ ಎಡಬಿಡಂಗಿ ನೀತಿ ಯಾಕೆ? ನಿಷೇಧವೆಂ ದಾದರೆ ಎಲ್ಲಾ ಕಡೆ ನಿಷೇಧಿಸಿ, ಹಣ ಪಡೆದು ಕೊಂಡು ಎಲ್ಲಿಯೂ ನಡೆಸುವುದು ಬೇಡ. ಕೋಳಿ ಅಂಕವನ್ನು ನಿಷೇಧಿಸುವ ಮುನ್ನ ಮಟ್ಕಾ, ಜುಗಾರಿ, ಇಸ್ಪೀಟ್ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗಲಿ. ಸುರೇಶ್, ಬೆಳ್ತಂಗಡಿ

ಗುತ್ತಿಗೆ ಕಾರ್ಮಿಕರಿಗೆ ನೇರ ಉದ್ಯೋಗ ದೊರಕೀತೆ?
ನಮ್ಮ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ತನ್ನದೇ ಆಡಳಿತ ಹೊಂದಿರುವ ಅದಿರು ಕೈಗಾರಿಕೆ, ಬಂದರು, ಪೆಟ್ರೋ ಲಿಯಂ ಸಂಸ್ಥೆಗಳು ಸ್ಥಾಪನೆಯಾಗಿದೆ. ಈ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಸ್ಥಳೀಯರು ಗುತ್ತಿಗೆ ಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ ಯಾವುದೇ ಉದ್ಯೋಗ ಭದ್ರತೆ ಯಿಲ್ಲದೆ ದುಡಿಯುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರ ಕೇವಲ ಕನಿಷ್ಠ ವೇತನವೇ ಇವರ ಕುಟುಂಬ ನಿರ್ವಹಣೆಯ ಆಧಾರ ಸ್ತಂಭವಾಗಿದೆ.
ಕೆಲವೊಂದು ಕೇಂದ್ರ ಸರಕಾರಿ ಸಂಸ್ಥೆಗಳು ಪೀಸ್‌ವರ್ಕ್, ತುಂಡುಗುತ್ತಿಗೆ ಎಂಬ ಹೆಸರಿನ ಗುತ್ತಿಗೆಯನ್ನು ಜಾರಿಗೊಳಿ ಸಲು ಶತಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿ ಕರು ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸು ತ್ತಿದ್ದಾರೆ. ಕೆಲವರು ಈಗಾಗಲೇ ಉದ್ಯೋಗವನ್ನು ಕಳೆದು ಕೊಂಡಿದ್ದಾರೆ.
ಜಿಲ್ಲೆಯಲ್ಲಿರುವ ಗಣಿ ಕೈಗಾರಿಕೆ, ಸರ್ವಋತು ಬಂದರು, ಪೆಟ್ರೋಲಿಯಂ ರಿಫೈನರಿ ಸಂಸ್ಥೆಗಳು ಹಲವಾರು ವರ್ಷದಿಂದ ದುಡಿಯುತ್ತಿರುವ ಸ್ಥಳೀಯ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ನೇರ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿದೆ.
ಇದು ಕಾರ್ಮಿಕರ ಭವಿಷ್ಯದ, ಕುಟುಂಬದ ಭದ್ರತೆಯ ಬಗ್ಗೆ ಯಾವುದೇ ಭರವಸೆಯನ್ನು ನೀಡುತ್ತಿಲ್ಲ. ಸ್ಥಳೀಯ ಸಂಸದರು ಇದರ ಬಗ್ಗೆ ಗಮನಹರಿಸಿ ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ನೊಂದ ಗುತ್ತಿಗೆ ಕಾರ್ಮಿಕರು, ನವಮಂಗಳೂರು

ಪುನರೂರುರವರ ಕೈ ಬಲಪಡಿಸಿ
ದೇವಾಲಯದ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲಾದ ಕೇಸರೀಕರಣದ ವಿರುದ್ಧ ಧ್ವನಿಯೆತ್ತಿದ ಹರಿಕೃಷ್ಣ ಪುನರೂರು ರವರ ಹೋರಾಟಕ್ಕೆ ಎಲ್ಲಾ ಸಾರ್ವಜನಿಕ ಭಕ್ತರು ಕೈಜೋಡಿಸ ಬೇಕಾದ ಅಗತ್ಯವಿದೆ.
ಸಮಗ್ರ ದಕ್ಷಿಣ ಕನ್ನಡದ ಕೆಲವು ವಂಶಪಾರಂಪರ್ಯ ಸಾರ್ವಜನಿಕ ದೇವಾಲಯಗಳನ್ನು ಕಾನೂನಿನಿಂದ ಹೊರಗಿಟ್ಟು ಖಾಸಗೀಕರಣ ಮಾಡಲಾಗಿದೆ. ಇನ್ನೂ ಕೆಲವು ದೇವಾಲಯ ಗಳನ್ನು ಡಿನೋಟಿಫಿಕೇಶನ್ ಮಾಡುವ ಬೃಹತ್ ಹುನ್ನಾರ ನಡೆಯುತ್ತಿದೆ. ಶರವು, ಬೆಳ್ಮಣ್ಣು ದೇವಾಲಯಗಳನ್ನು ಪಂಗಡದ ದೇವಾಲಯಗಳು ಎಂದು ಕಾನೂನಿನಿಂದ ಹೊರಗಿಡಲಾಗಿದೆ. ಅಂತೆಯೇ ಕೋಟಿಗಟ್ಟಲೆ ಆದಾಯವಿರುವ ಸಾರ್ವಜನಿಕ ದೇವಾಲಯಗಳಾದ ಅಂಬಲಪಾಡಿ, ಆನೆಗುಡ್ಡೆ ದೇವಾಲಯ ಗಳನ್ನು ಹೊರಗಿಡುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಮೇಲ್ವರ್ಗದವರೇ ನಡೆ ಸುವ ದೇವಾಲಯಗಳನ್ನು ಕಾನೂನಿನಿಂದ ಹೊರಗಿಡುವ ಉದ್ದೇಶವೇನು? ಅಲ್ಲಿಯೂ ಸಾರ್ವಜನಿಕ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಬಹುದಲ್ಲವೇ? ಈ ಬಗ್ಗೆಯೂ ಪುನರೂ ರುರವರು ವಿಶೇಷ ಗಮನ ನೀಡಿ ಅದರ ವಿರುದ್ಧ ಹೋರಾಟ ಕೈಗೊಳ್ಳಬೇಕು.
ಸದಾನಂದ ಕೆ. ಅಮೀನ್, ಕಟಪಾಡಿ

ಕಾನೂನು ಕೈಗೆತ್ತಿಕೊಳ್ಳದಿರಿ
ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪದೇ ಪದೇ ಗೋಸಾಗಾಟ ತಡೆಯುವ ನೆಪದಲ್ಲಿ ಕಾನೂನನ್ನು ಕೈಗೆತ್ತಿ ಕೊಳ್ಳುವುದು ನಡೆಯುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ಬಾರಿ ಗಲಭೆ, ಘರ್ಷಣೆಯ ವಾತಾವರ ಣಕ್ಕೂ ಕಾರಣವಾಗಿದೆ. ಗೋಸಾಗಾಟ ಅಕ್ರಮವಾಗಿ ಮಾಡು ವುದು ಖಂಡಿತಾ ತಪ್ಪು. ಕದ್ದು ಗೋವುಗಳನ್ನು ಸಾಗಿಸುವುದು, ಸತ್ತ ಗೋವುಗಳ ಮಾಂಸ ಮಾರಾಟ ಮಾಡುವುದನ್ನು ಇಸ್ಲಾಂ ಕೂಡಾ ವಿರೋಧಿಸುತ್ತದೆ. ಹೀಗಿರುವಾಗ ಗೋಸಾಗಾಟ ತಡೆಯುವುದು ಸರಿ. ಆದರೆ ಆ ಕೆಲಸವನ್ನು ಪೊಲೀಸ್ ಇಲಾಖೆಯೇ ಮಾಡಲಿ. ರಾತ್ರಿ, ನಸುಕಿನಲ್ಲಿ ಬಜರಂಗಿಗಳು ಗೋಸಾಗಾಟ ತಡೆಯುತ್ತಾ ಹೋದರೆ ಪೊಲೀಸರು ಆರಾ ಮಾಗಿ ಠಾಣೆಯಲ್ಲಿ ನಿದ್ದೆ ಮಾಡುತ್ತಾರೆ. ಆದರೆ ಇದೇ ವಿಚಾರ ದಲ್ಲಿ ಘರ್ಷಣೆ ನಡೆದರೆ ಯಾರು ಹೊಣೆ? ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಕಾನೂನು ಕೈಗೆತ್ತಿ ಕೊಳ್ಳುವವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆ ನೀಡ ಲೇಬೇಕು.
ಇಂತಹ ಕೆಲಸಗಳಿಂದ ದೇಶದಲ್ಲಿನ ಮತೀಯ ಸಾಮ ರಸ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ ಜನರು ಜಾತಿ-ಧರ್ಮದ ಹೆಸರಿನಲ್ಲಿ ವಿಘಟನೆ ಹೊಂದಲು ಅವಕಾಶ ಕೊಟ್ಟಂತಾಗುತ್ತದೆ. ಆದ್ದರಿಂದ ಬಜರಂಗಿಗಳು ಮಾಡುವ ಕೆಲಸವನ್ನು ಪೊಲೀ ಸರೇ ಮಾಡಿ ಶಾಂತಿ ಕಾಪಾಡಲಿ.
ಶಾಂತಿಪ್ರೇಮಿ, ಮಂಗಳೂರು

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಕೊಡಿ
ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಕೆ.ರಘುಪತಿ ಭಟ್ ಶಾಸಕರಾದ ನಂತರವೇ ಉಡುಪಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಶಾಸಕರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಎಲ್ಲದರ ಕಡೆಗೂ ಬಹಳಷ್ಟು ಮಹತ್ವಕೊಟ್ಟು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ಕಡೆ ಬಹಳಷ್ಟು ಪ್ರಗತಿಯ ಕೆಲಸ ಕಾರ್ಯಗಳನ್ನು ಮಾಡಿ ದೀನ-ದಲಿತರ, ಬಡಬಗ್ಗರ, ಕೂಲಿ ಕಾರ್ಮಿಕರ ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗಗಳ ಜನರ ಪ್ರೀತಿಯನ್ನು ಗಳಿಸಿದ್ದಾರೆ.
ಹಳ್ಳಿ-ಹಳ್ಳಿಗಳಿಗೆ ಒಳರಸ್ತೆ ನಿರ್ಮಾಣ, ಹಳೆಯ ರಸ್ತೆ ಕಾಂಕ್ರೀ ಟೀಕರಣ, ಡಾಮರೀಕರಣ, ದೇವಸ್ಥಾನ, ದೈವಸ್ಥಾನ, ಗುಡಿಗೋಪು ರಗಳ ಜೀರ್ಣೋದ್ಧಾರ ಹೀಗೆ ಹತ್ತು-ಹಲವು ಪ್ರಗತಿ ಕಾರ್ಯಗಳು ಇವರಿಂದಾಗಿದೆಯಲ್ಲದೆ ಇನ್ನೂ ಕೂಡಾ ಕೆಲವು ಕೆಲಸ ಕಾರ್ಯಗಳು ಇವರಿಂದ ಆಗಬೇಕಾಗಿದೆ.
ಈಗ ಸಂಪುಟ ವಿಸ್ತರಣೆ ಮಾಡುವ ಸಮಯ ಹತ್ತಿರ ಬಂದಿದೆ. ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್‌ರವರಿಗೆ ಸಚಿವ ಸ್ಥಾನ ನೀಡಿ ಉಡುಪಿ ಜಿಲ್ಲೆ ಇನ್ನಷ್ಟು ಪ್ರಗತಿ ಹೊಂದಲು ಸಹಕರಿಸಬೇಕು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಇದು ಸಹಕಾರಿಯಾಗುತ್ತದೆ.
ಯು.ವಿಠಲ್ ಮಾಸ್ತರ್, ಭದ್ರಗಿರಿ-ಬೈಕಾಡಿ

ಮೇಯರ್ ವಿದೇಶ ಪ್ರವಾಸ ಖಂಡನೀಯ
ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ತಾಂಡವವಾಡುತ್ತಿರುವ ಕಾರಣ ಮುಖ್ಯಮಂತ್ರಿ ಸಮೇತ ಸರಕಾರದ ಶಾಸಕ, ಸಚಿವರುಗಳು ವಿದೇಶ ಪ್ರವಾಸ ಕೈಗೊಳ್ಳದೆ ಬರ ಪರಿಸ್ಥಿತಿ ಅಧ್ಯಯನ, ಬರಪೀಡಿತ ಸ್ಥಳಗಳ ಭೇಟಿಗೆ ಮುಂದಾಗಿದ್ದಾರೆ. ಮಂಗಳೂ ರಿನಲ್ಲೂ ಕುಡಿಯುವ ನೀರಿಗೆ ಬರ ಎದುರಾಗಿದೆ. ಹೀಗಿರುವಾಗ ಇಂಥ ಸಮಯದಲ್ಲಿ ಮಂಗಳೂರಿನ ಮೇಯರ್ ಅವರು ಸನ್ಮಾನ ಸ್ವೀಕರಿ ಸಲು ವಿದೇಶಕ್ಕೆ ತೆರಳಿದ್ದು ಖಂಡನೀ ಯವೇ ಸರಿ. ಮೇಯರ್ ಆಗಿ ಆಯ್ಕೆ ಯಾಗಿ ತಿಂಗಳಾದರೂ ಇನ್ನೂ ಮೇಯರ್ ಅವರು ಸನ್ಮಾನ, ಅಭಿನಂ ದನೆಯ ಗುಂಗಿನಿಂದ ಹೊರಬಂ ದಿಲ್ಲ. ಮೇಯರ್ ವಿದೇಶ ಪ್ರವಾಸಕ್ಕೆ ಈ ಸಮಯ ಸೂಕ್ತವೂ ಆಗಿರಲಿಲ್ಲ. ಆದರೆ ಜನರ ಸಮಸ್ಯೆಯ ಮುಂದೆ ವೈಯಕ್ತಿಕ ಸ್ವಾರ್ಥವೇ ದೊಡ್ಡದಾಗಿ ರುವಾಗ ಮೇಯರ್ ಅವರು ವಿದೇಶಕ್ಕೆ ಹಾರಿದ್ದರಲ್ಲಿ ತಪ್ಪೇನೂ ಇಲ್ಲ ಅನ್ನಬಹುದಾಗಿದೆ.
ಕೆ.ಶ್ರೀಕಾಂತ್, ಮಂಗಳಪುರ

ಬಸ್ ಸಿಬ್ಬಂದಿ 'ಖಾಕಿ' ಏಕೆ ಧರಿಸುವುದಿಲ್ಲ?
ಖಾಕಿ ಬಟ್ಟೆ ಸೇವೆಯ ಪ್ರತೀಕ. ಹೀಗಾಗಿ ಸಮಾಜದಲ್ಲಿ ವಿವಿಧ ಸ್ತರಗಳ ಸೇವೆ ಸಲ್ಲಿಸು ವವರಿಗೆ ಖಾಕಿ ಬಟ್ಟೆಯನ್ನು ಯೂನಿಫಾರ್ಮ್ ಆಗಿ ಮಾಡಲಾಗಿದೆ. ಬಸ್ ಸಿಬ್ಬಂದಿಯೂ ಖಾಕಿ ಬಟ್ಟೆಯನ್ನು ಅವಶ್ಯವಾಗಿ ತೊಡಲೇಬೇಕು. ಆದರೆ ನಗರದ ಒಳಗೆ ಮತ್ತು ಹೊರಗೆ ಸಂಚರಿಸುವ ಬಹುತೇಕ ಸಿಟಿ-ಸರ್ವಿಸ್ ಬಸ್‌ಗಳ ಸಿಬ್ಬಂದಿ ಖಾಕಿ ಬಟ್ಟೆಯನ್ನು ಧರಿಸುವುದಿಲ್ಲ. ಬಣ್ಣಬಣ್ಣದ ಬಟ್ಟೆ ಧರಿಸುವ ಬಸ್ ಚಾಲಕ ಮತ್ತು ನಿರ್ವಾ ಹಕರು ದೂರದಲ್ಲಿ ಪೊಲೀಸರನ್ನು ಕಂಡಕೂ ಡಲೇ ಸೀಟಿನ ಹಿಂಬದಿ ನೇತುಹಾಕಿರುವ ಅಂಗಿ ಯನ್ನು ತೊಟ್ಟುಕೊಳ್ಳುವುದೂ ನಡೆಯುತ್ತದೆ. ಇದೇಕೆ ಹೀಗೆ? ಕೆಲವು ಬಸ್ ಸಿಬ್ಬಂದಿಯ ಆಟಾಟೋಪವನ್ನು ನೋಡಿದರಂತೂ ಅವರು ನಾಗರಿಕ ಸಮಾಜಕ್ಕೆ ಸೇವೆ ಸಲ್ಲಿಸುವವರು ಎನ್ನುವುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅವರಲ್ಲಿ ಸೇವಾ ಮನೋಭಾವ ನೆಗಿಂತ ಬೇಜವಾಬ್ದಾರಿಯೇ ಹೆಚ್ಚಿರುತ್ತದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಅಗತ್ಯ ಗಮನಹರಿಸ ಬೇಕು.
ಖಾಕಿ ಬಟ್ಟೆ ತೊಡದೆ ಬಸ್‌ನಲ್ಲಿ ಬೇಕಾಬಿಟ್ಟಿ ವರ್ತಿಸುವ ಬಸ್ ಸಿಬ್ಬಂದಿಗೆ ಅವಶ್ಯವಾಗಿ ಮೂಗುದಾರ ಹಾಕಬೇಕಾದ ಅಗತ್ಯ ಸದ್ಯಕ್ಕಿದೆ.
ದಾಮೋದರ, ಜೆಪ್ಪು

ಮದ್ಯಪಾನಕ್ಕೆ ಬಲಿಯಾಗುವ ವಿದ್ಯಾರ್ಥಿಗಳು!
ಹಿಂದೆ ವಯಸ್ಕರು ಮಾತ್ರ ಮದ್ಯಪಾನ ಮಾಡುತ್ತಿದ್ದರೆ, ಇಂದು ಹೈಸ್ಕೂಲ್-ಕಾಲೇಜ್ ವಿದ್ಯಾರ್ಥಿಗಳೂ ಸಂಜೆಯ ವೇಳೆ ಬಾರ್, ವೈನ್‌ಶಾಪ್‌ಗಳಲ್ಲಿ ಕಂಡುಬರುತ್ತಿದ್ದಾರೆ. ಕೆಲವು ಬಾರಿ ಕಾಲೇಜ್‌ಗಳಲ್ಲಿ ವಿಶೇಷ ಕಾರ್ಯ ಕ್ರಮವಿದ್ದಾಗ ಕೇಳುವುದೇ ಬೇಡ, ಮಕ್ಕಳು ಬಾರ್‌ನಲ್ಲಿ ಕಂಠಪೂರ್ತಿ ಕುಡಿದೇ ಕಾಲೇಜ್‌ಗೆ ತೆರಳುತ್ತಾರೆ. ಇಲ್ಲಿ ಕಾಲೇಜ್‌ನ ಆಡ ಳಿತ ಮಂಡಳಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ. ಮನೆ ಮಂದಿ ಯಂತೂ ಮಕ್ಕಳು ಏನು ಮಾಡು ತ್ತಾರೆ ಎಂದು ತಿಳಿಯುವ ಗೋಜಿಗೂ ಹೋಗುವುದಿಲ್ಲ. ಇದರಿಂದ ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಹಿರಿಯರ ಅಂಕೆ ಮೀರಿ ಬೆಳೆಯುತ್ತಾರೆ. ಮದ್ಯಪಾನಕ್ಕೆ ಯುವ ಜನತೆ ಬಲಿಯಾಗುತ್ತಿರುವುದು ಅಪಾ ಯಕಾರಿ ಸಂಗತಿ. ಮದ್ಯಪಾನದಿಂದ ಅಪಘಾತಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಈ ಬಗ್ಗೆ ಸಮಾಜ ಮುಖಿ ಸಂಘಟನೆಗಳು ಚಿಂತಿಸುವುದೊಳಿತು.
ನಾಗೇಶ್, ಅಂಗರಗುಂಡಿ

ಜೀವವಿಲ್ಲದ ದ.ಕ. ಜಿಲ್ಲಾ ಜನತಾದಳ
ಇತ್ತೀಚಿನ ಕೆಲವು ದಿನಗಳಿಂದ ದ.ಕ. ಜಿಲ್ಲಾ ಜನತಾದಳದಲ್ಲಿ ಅವರನ್ನು ಉಚ್ಛಾಟಿಸ ಲಾಯಿತು, ಇವರನ್ನು ಉಚ್ಛಾಟಿಸಲಾಯಿತು ಎಂಬ ಹೇಳಿಕೆಯನ್ನು ನೀಡುತ್ತಿರುವ ಕೆಲವು ಸ್ವಯಂಘೋಷಿತ ನಾಯಕರು ದಳದಲ್ಲಿ ಹುದ್ದೆ ಅಲಂಕರಿಸಿಕೊಂಡು ಮಾಡಿರುವ ಘನಂದಾರಿ ಕೆಲಸವಾದರೂ ಏನು?
ರಾಜ್ಯ ಸರಕಾರದ ಬಹಳಷ್ಟು ಜನವಿರೋಧಿ ನೀತಿ, ಜಿಲ್ಲೆಯ ವಿವಿಧ ಸಮಸ್ಯೆಯ ಬಗ್ಗೆ ಪ್ರತಿಭಟಿಸಬೇಕಿದ್ದ ಜಿಲ್ಲಾ ಜನತಾದಳದ ನಾಯ ಕರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿ ಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕುಪ್ಪೆಪದವಿನಂತಹ ಗ್ರಾಮಾಂತರ ಪ್ರದೇಶದಲ್ಲಿನ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಹಾಗೂ ರಾಜ್ಯ ನಾಯಕರನ್ನು ಕಂಡು ದಂಗಾದ ಜಿಲ್ಲಾ ನಾಯಕರೆನಿಸಿ ಕೊಂಡವರು ರಾಜ್ಯ ನಾಯಕರಿಂದ ಛೀಮಾರಿ ಗೊಳಗಾಗಿ ತಮ್ಮ ಮುಖ ಉಳಿಸಿಕೊಳ್ಳಲು ಮೂಡಬಿದ್ರೆಯಲ್ಲಿ ಸಭೆ ನಡೆಸಿದ್ದು ಬಿಟ್ಟರೆ ಇವರು ಜಿಲ್ಲೆಯಲ್ಲಿ ಜನತಾದಳವನ್ನು ಸಂಘಟಿಸುವಲ್ಲಿ ವಿಫಲರಾ ಗಿದ್ದಾರೆ.
ನಾಲ್ಕು ಬಾರಿ ಹೊಟೇಲ್‌ನಲ್ಲಿ ಪತ್ರಿಕಾ ಗೋಷ್ಠಿ, ನಾಮ್‌ಕೇವಾಸ್ತೆ ಪದಾಧಿಕಾರಿಗಳ ನೇಮಕ ಮಾಡಿ ಜಿಲ್ಲೆಯಲ್ಲಿ ಗುಂಪುಗಾರಿಕೆ ಮಾಡಿರುವುದಷ್ಟೇ ಇವರ ಸಾಧನೆ. ಇನ್ನು ಉತ್ತರ ವಲಯದ ಅಧ್ಯಕ್ಷ ತಾನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಕಳೆದ ವರ್ಷದಿಂದಲೇ ನಾನು ಪಕ್ಷ ಸಂಘಟಿಸಿದ್ದೇನೆ ಎಂದು ಬೋಂಗು ಬಿಡು ತ್ತಿದ್ದು, ಇವರು ಯಾವ-ಯಾವ ಕಡೆ ಪಕ್ಷದ ಸಭೆ ನಡೆಸಿದ್ದಾರೆ, ಸಮಸ್ಯೆಯ ಬಗ್ಗೆ ಎಷ್ಟು ಪ್ರತಿಭಟನೆ ನಡೆಸಿದ್ದಾರೆ ಎಂದು ಕಾರ್ಯಕರ್ತ ರಿಗೆ ತಿಳಿಸಬೇಕಾಗಿದೆ. ಕನಿಷ್ಠ ಪಕ್ಷದ ಕಚೇರಿ ಯನ್ನೂ ಕೂಡಾ ಮಾಡಿಕೊಳ್ಳಲಾಗದವರು ಇನ್ನು ಪಕ್ಷ ಸಂಘಟಿಸುವುದಾದರೂ ಹೇಗೆ? ರಾಜ್ಯಾಧ್ಯಕ್ಷರು ದ.ಕ.ಜಿಲ್ಲೆಯ ಜನತಾದಳದ ಕಡೆ ಗಮನಹರಿಸಿ ಎಲ್ಲಾ ಕ್ಷೇತ್ರದ ಅಧ್ಯಕ್ಷರನ್ನು ಕೂಡಲೇ ಉಚ್ಛಾಟಿಸಿ ಪಕ್ಷ ಸಂಘಟಿಸಲು ಉತ್ಸುಕತೆ ತೋರುವ ಯುವ ನಾಯಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲೆಯಲ್ಲಿ ಜನತಾ ದಳವನ್ನು ಪುನರ್ ಸಂಘಟಿಸಬೇಕಾಗಿ ಕೇಳಿ ಕೊಳ್ಳುತ್ತಿದ್ದೇನೆ.
ಕೆ.ಹೆಚ್.ಹ್ಯಾರೀಸ್, ಬಂಗ್ಲೆಗುಡ್ಡೆ-ಗುರುಪುರ

ರಾತ್ರಿ ಕರೆಂಟ್ ನೀಡಿ
ಬೇಸಿಗೆ ಕಾಲಕ್ಕೆ ಸುಡುವ ಬೇಗೆಯ ಜೊತೆಗೆ ಮೆಸ್ಕಾಂನವರ ಅನಿಯಮಿತ ವಿದ್ಯುತ್ ಕಡಿತವು ಗಾಯದ ಮೇಲೆ ಬರೆ ಎಳೆದಂತಾ ಗಿದೆ. ಹಗಲು-ರಾತ್ರಿ ವಿದ್ಯುತ್ ಪೂರೈಕೆ ಸರಿಯಾಗಿರುವುದಿಲ್ಲ. ಹಗಲಾದರೆ ಜನರು ಹೇಗೋ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ರಾತ್ರಿಯ ವೇಳೆ ಬಿಸಿಯಿಂದ ಮಲಗುವುದಾ ದರೂ ಹೇಗೆ? ಇಷ್ಟೇ ಅಲ್ಲದೆ ಸೊಳ್ಳೆ ಗಳಿಂದ ಕಡಿಸಿಕೊಳ್ಳುವುದೂ ಅನಿವಾ ರ್ಯವಾಗುತ್ತಿದೆ. ಸರಕಾರ ಬೃಹತ್ ಕೈಗಾರಿಕೆ, ನಗರ ಪ್ರದೇಶಕ್ಕೆ ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆ ಮಾಡುತ್ತದೆ. ಆದರೆ ಗ್ರಾಮೀಣ, ಹಳ್ಳಿಗಾಡಿನ ಪ್ರದೇಶಗಳ ಜನರನ್ನು ಕತ್ತಲಲ್ಲಿಡುತ್ತಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆ ಜಾಗೃತವಾಗಬೇಕು. ರಾತ್ರಿಯ ವೇಳೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡದಂತೆ ಕ್ರಮ ಕೈಗೊಂಡು ರಾಜ್ಯದ ಜನರನ್ನು ರಕ್ಷಿಸಿ.
ಬಶೀರ್, ಕಂಕನಾಡಿ

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)