ಭಾರೀ ಮಳೆ; ಆರ್‌ಸಿಬಿ-ಸಿಎಸ್‌ಕೆ ಪಂದ್ಯ ರದ್ದು

Posted by JAYAKIRANA Kirana on Wednesday, 25 April 2012 | 0 comments | Leave a comment...

ಬೆಂಗಳೂರು: ೨೦೧೨ರ ಆವೃತ್ತಿಯ ಐಪಿಎಲ್ ನಲ್ಲಿ ಮಳೆಯ ಕಾರಣ ಮತ್ತೊಂದು ಪಂದ್ಯ ರದ್ದಾಗಿದೆ. ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯವೂ ಮಳೆಯಿಂದ ರದ್ದುಗೊಂಡಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರನಾಲ್ಕರ ಸ್ಥಾನಕ್ಕೆ ಜಿಗಿದಿದೆ. ಮಂಗಳವಾರ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನಲ್ಲಿ ನಡೆಯಬೇಕಿದ್ದ ಕೆಕೆಆರ್ ಹಾಗೂ ಡೆಕ್ಕನ್ ಪಂದ್ಯ ಕೂಡ ಇದೇ ಕಾರಣದಿಂದ ರದ್ದಾಗಿತ್ತು.
ಆರ್‌ಸಿಬಿ ಕಪ್ತಾನ ಡ್ಯಾನಿಯಲ್ ವೆಟೊರಿ ಅವರು ಗಾಯಗೊಂಡ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಗೊಂಡಿದ್ದರು. ಟಾಸ್ ಗೆದ್ದ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಆದರೆ ನಿಗದಿತ ೮ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯ ೧೧ಗಂಟೆಯ ವರೆಗೂ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಮೂಲಕ ಪಂದ್ಯ ನೋಡಲು ಮೈದಾನಕ್ಕೆ ಆಗಮಿಸಿದ್ದು ಭಾರೀ ಸಂಖ್ಯೆಯ ಅಭಿಮಾನಿಗಳಿಗೆ ನಿರಾಶೆ ತಂದಿತು. ಆದರೆ ಈಗ ಒಂದೊಂದು ಅಂಕದೊಂದಿಗೆ ಎರಡೂ ತಂಡಗಳು ಅಗ್ರನಾಲ್ಕರ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಚೆನ್ನೈ ಮೂರನೇ ಹಾಗೂ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ನಂತರದೆರಡು ಸ್ಥಾನದಲ್ಲಿ ಕ್ರಮಾವಾಗಿ ರಾಜಸ್ಥಾನ್ ಹಾಗೂ ಪುಣೆ ವಾರಿಯರ‍್ಸ್ ಇದೆ.

ಚಾಂಪಿಯನ್ ಲೀಗ್ ಫೈನಲ್‌ಗೇರಿದ ಚೆಲ್ಸಿ

Posted by JAYAKIRANA Kirana on | 0 comments | Leave a comment...

ಸೆಮೀಸ್‌ನಲ್ಲಿ ಬಾರ್ಸೆಲೊನಾಗೆ ಮರ್ಮಾಘಾತ
ಬಾರ್ಸೆಲೊನಾ: ನಿನ್ನೆ ಇಲ್ಲಿ ನಡೆದ ಚಾಂಪಿಯನ್ ಲೀಗ್ ಸೆಮಿಫೈನಲ್‌ನಲ್ಲಿ ಅಚ್ಚರಿಯ ಫಲಿತಾಂಶವು ಹೊರಬಿದ್ದಿದೆ. ಪಂದ್ಯದಲ್ಲಿ ಬಲಿಷ್ಠ ಬಾರ್ಸೆಲೊನಾ ವಿರುದ್ಧ ೩-೨ರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚೆಲ್ಸಿ ಪ್ರತಿಷ್ಟಿತ ಚಾಂಪಿಯನ್ ಲೀಗ್‌ನ ಫೈನಲ್‌ಗೇರು ವಲ್ಲಿ ಸಫಲವಾಗಿದೆ. ಮೇ ೧೯ರಂದು ನಡೆಯುವ ಫೈನಲ್‌ನಲ್ಲಿ ಚೆಲ್ಸಿ ರಿಯಲ್ ಮಾಡ್ರಿಡ್ ಅಥವಾ ಬಯಾರ್ನ್ ಮ್ಯೂನಿಚ್ ವಿರುದ್ಧ ಆಡಲಿದೆ. ಪಂದ್ಯ ದಲ್ಲಿ ಬಾರ್ಸೆಲೊನಾಗೆ ಲಭಿಸಿದ ಪೆನಾಲ್ಟಿ ಕಿಕ್ ಅನ್ನು ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ವ್ಯರ್ಥ ಮಾಡಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಪ್ರಥಮಾರ್ಧದಲ್ಲಿ ಚೆಲ್ಸಿ ೦-೨ ಗೋಲುಗಳ ಹಿನ್ನೆಡೆಯನ್ನು ಕಂಡಿತ್ತಾದರೂ ದ್ವಿತೀಯ ಸುತ್ತಿನಲ್ಲಿ ಅದು ಬಾರ್ಸೆಲೋನಾಗೆ ತೀವ್ರ ಪೈಪೋಟಿ ನೀಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾ ಗಿತ್ತು. ಪರಿಣಾಮ ತಂಡ ೨-೨ರ ಸಮಬಲ ಸಾಧಿಸಿದ್ದು, ಹೆಚ್ಚುವರಿ ಸಮಯದಲ್ಲಿ ಟೋರಸ್ ಗೋಲನ್ನು ದಾಖಲಿಸುವ ಮೂಲಕ ತಂಡಕ್ಕೆ ೩-೨ರ ಗೆಲುವು ತಂದುಕೊಟ್ಟಿತು. ಈ ಮೂಲಕ ಡಿಫೆಂಡಿಂಗ್ ಚಾಂಪಿಯನ್ ಬಾರ್ಸೆಲೊನಾಗೆ ಚೆಲ್ಸಿ ಗೇಟ್‌ಪಾಸ್ ನೀಡಿತು. ಚೆಲ್ಸಿಯ ಟೋರಸ್ ಅಂತಿಮ ಗೋಲ್ ದಾಖಲಿಸುವ ಮೂಲಕ ತಂಡ ವನ್ನು ಫೈನಲ್‌ಗೇರಿಸುವಲ್ಲಿ ನೆರವಾದರು. ಪಂದ್ಯದಲ್ಲಿ ಚೆಲ್ಸಿ ನಾಯಕ ಜಾನ್ ಟೆರ್ರಿಗೆ ಯಾವುದೇ ಎಚ್ಚರಿಕೆ ನೀಡದೆ ನೇರವಾಗಿ ಕೆಂಪು ಕಾರ್ಡ್ ನೀಡಿ ಹೊರಕಳುಹಿಸಿದಾಗ ತಂಡ ಮೊದಲು ಆಘಾತ ಕಂಡಿತ್ತು. ಪರಿಣಾಮವಾಗಿ ೧೦ ಆಟಗಾರರ ಬಲ ದಿಂದಲೇ ತಂಡ ಫೈನಲ್‌ಗೇರಿತು.

ಐಸಾಮ್ ಜೊತೆ ಆಡಲು ನಿರಾಕರಿಸಿದ ಸಾನಿಯಾ

Posted by JAYAKIRANA Kirana on | 0 comments | Leave a comment...

ದೆಹಲಿ: ಪಾಕಿಸ್ತಾನದ ಖ್ಯಾತ ಟೆನ್ನಿಸ್ ತಾರೆ ಐಸಾಮ್ ಉಲ್ ಹಕ್ ಖುರೇಶಿ ಜೊತೆ ಡಬಲ್ಸ್‌ನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಾರಾ ಸಗಟಾಗಿ ತಳ್ಳಿಹಾಕಿದ್ದಾಳೆ. ತಾನು ಮಹೇಶ್ ಭೂಪತಿ ಜೊತೆ ಆಡಲು ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಸಾನಿಯಾ ತಿಳಿಸಿದ್ದಾಳೆ. ಭೂಪತಿ ಜೊತೆ ಡಬಲ್ಸ್‌ನಲ್ಲಿ ಆಡಲು ಶುರುಮಾಡಿದ ಬಳಿಕ ಸಾನಿಯಾ ಜೋಡಿ ಏಳನೇ ರ‍್ಯಾಂಕಿಗ್ ಅನ್ನು ಸಂಪಾದಿಸಿ ಕೊಂಡಿದ್ದಾಳೆ.
ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ನಾನು ಭೂಪತಿ ಜೊತೆ ಉತ್ತಮವಾಗಿ ಆಡುತ್ತಿದ್ದು, ಹಾಗಾಗಿ ಈ ಜೋಡಿಯನ್ನು ಬದಲಾಯಿಸಲು ನನಗೆ ಇಷ್ಟವಿಲ್ಲ. ಹಾಗಾಗಿ ಐಸಾಮ್ ಜೊತೆ ಆಡಲು ನನಗೆ ಯಾವುದೇ ಇರಾದೆಯಿಲ್ಲ. ಪಾಕ್‌ನಲ್ಲಿ ಚಾರಿಟಿಗಾಗಿ ಆಟವಾಡಲು ನಾನು ಯಾವುದೇ ದೊಡ್ಡ ಮೊತ್ತದ ಚೆಕ್‌ನ್ನು ಕೇಳಿಲ್ಲ, ಅಲ್ಲದೆ ಅಲ್ಲಿ ಸದ್ಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಸಾಧ್ಯತೆಯಿಲ್ಲ. ಹಾಗಾಗಿ ಅಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಸಾನಿಯಾ ಮಿರ್ಜಾ ತಿಳಿಸಿದರು. ಈ ಹಿಂದೆ ಪಾಕಿಸ್ತಾನ್ ಟೆನ್ನಿಸ್ ಫೆಡರೇಶನ್ (ಪಿಕೆಎಫ್) ಸಾನಿಯಾಳನ್ನು ಪಾಕ್‌ನಲ್ಲಿ ಆಡಿಸುವ ಕುರಿತು ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಹಾಗಾಗಿ ಸಾನಿಯಾ ಇದನ್ನು ತಳ್ಳಿಹಾಕಿದ್ದಾರೆ.

ಮುಂಬೈಗೆ ನಾಲ್ಕು ವಿಕೆಟ್ ರೋಚಕ ಜಯ

Posted by JAYAKIRANA Kirana on | 0 comments | Leave a comment...

ರೋಹಿತ್-ರಾಯುಡು ಅಬ್ಬರಕ್ಕೆ ಬೆಂಡಾದ ಪಂಜಾಬ್
ಮೊಹಾಲಿ: ಅಂತೂ ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಮುಂಬೈ ಸಫಲವಾಗಿದೆ. ನಿನ್ನೆಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಅಂತಿಮ ಹಂತದಲ್ಲಿ ಅಂಬಟಿ ರಾಯುಡು ನಡೆಸಿದ ಸ್ಫೋಟಕ ಆಟದ ನೆರವಿನಿಂದ ಮುಂಬೈ ನಾಲ್ಕು ವಿಕೆಟ್ ರೋಚಕ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಿಗದಿತ ೨೦ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೬೮ ರನ್ ದಾಖಲಿಸಿತು. ತಂಡದ ಪರ ಡೇವಿಡ್ ಹಸ್ಸಿ ೪೦ ಎಸೆತಗಳಲ್ಲಿ ತಲಾ ನಾಲ್ಕು ಸಿಕ್ಸ್ ಹಾಗೂ ಬೌಂಡರಿ ನೆರವಿನಿಂದ ಅಜೇಯ ೬೮ ರನ್ ಹಾಗೂ ಅಂತಿಮ ಹಂತದಲ್ಲಿ ಡೇವಿಡ್ ಮಿಲ್ಲರ್ ೧೭ ಎಸೆತಗಳಲ್ಲಿ ೩೪ ರನ್ ಸ್ಫೋಟಿಸಿದ್ದ ಪರಿಣಾಮ ತಂಡ ಉತ್ತಮ ಮೊತ್ತ ಗಳಿಸು ವಂತಾಯಿತು.
ಗುರಿ ಬೆನ್ನತ್ತಿದ್ದ ಮುಂಬೈ ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆ ಆರು ವಿಕೆಟ್ ಕಳಕೊಂಡು ೧೭೧ ರನ್ ಸಿಡಿಸಿ ವಿಜಯ ಪತಾಕೆ ಹಾರಿಸಿತು. ಮುಂಬೈಗೆ ಕೊನೆಯ ಎರಡು ಓವರ್‌ಗಳಲ್ಲಿ ೩೨ ರನ್‌ಗಳ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ಪಿಯೂಷ್ ಚಾವ್ಲಾ ಓವರ್ ನಲ್ಲಿ ಮೂರು ಸಿಕ್ಸ್ ಹಾಗೂ ಎರಡು ಬೌಂಡರಿ ಸೇರಿದ ಒಟ್ಟು ೨೭ ರನ್‌ಗಳನ್ನು ಮುಂಬೈ ಬಾಚಿ ತು. ಇದರಲ್ಲಿ ಪೀಟರ್ಸನ್ (೧೬) ಎರಡು ಬೌಂಡ ರಿ ಹಾಗೂ ಒಂದು ಸಿಕ್ಸ್ ಸಿಡಿಸಿದ್ದರೆ ಅಂತಿಮದ ಎರಡು ಎಸೆತಗಳಲ್ಲಿ ರಾಯುಡು ಎರಡು ಭರ್ಜರಿ ಸಿಕ್ಸರ್ ಎತ್ತಿದ್ದರು. ಹಾಗಾಗಿ ಕೊನೆಯ ಓವರ್‌ನಲ್ಲಿ ಐದು ರನ್ ಗಳಿಸಲು ಮುಂಬೈಗೆ ಯಾವುದೇ ತೊಂದರೆಯಾಗಲಿಲ್ಲ.
ಈ ಮೊದಲು ತಂಡಕ್ಕೆ ಆರಂಭಿಕರಾದ ಸಚಿನ್ (೩೪) ಹಾಗೂ ಜೇಮ್ಸ್ ಫ್ರಾಂಕ್ಲಿನ್ (೨೨) ೫೨ ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಅಡಿಪಾಯ ಹಾಕಿದ್ದರು. ಕಾರ್ತಿಕ್ (೩) ಹಾಗೂ ಪೊಲಾರ್ಡ್ (೩) ವಿಫಲವಾದರೂ ರೋಹಿತ್ ಶರ್ಮಾ ಕೇವಲ ೩೦ ಎಸೆತಗಳಲ್ಲಿ ತಲಾ ಮೂರು ಸಿಕ್ಸ್ ಹಾಗೂ ಬೌಂಡರಿ ಸಿಡಿಸಿದ್ದು, ತಂಡ ಅಂತಿಮ ಹಂತದಲ್ಲಿ ಮೊತ್ತ ಬೆನ್ನತ್ತಲು ಸುಲಭವಾಯಿತು. ರಾಯುಡು ೧೭ ಎಸೆತಗಳಲ್ಲಿ ಅಜೇಯ ೩೪ ರನ್ ಸಿಡಿಸಿದರು. ಪಂಜಾಬ್ ಪರ ಆವಾನ ಮೂರು ವಿಕೆಟ್ ಪಡೆದರು.

ಬರ ಪರಿಸ್ಥಿತಿ ಅಧ್ಯಯನಕ್ಕೆ ಸೋನಿಯಾ ಗಾಂಧಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ತುಮಕೂರು ಸಿದ್ಧ ಗಂಗಾಶ್ರೀಗಳ ಗುರುವಂದನಾ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಏಪ್ರಿಲ್ ೨೮ ಶನಿವಾರದಂದು ಒಂದು ದಿನದ ರಾಜ್ಯ ಪ್ರವಾಸ ಕೈ ಗೊಳ್ಳು ತ್ತಿದ್ದಾರೆ. ಗುರುವಂದನಾ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ರಾಜ್ಯದಲ್ಲಿ ತಲೆದೋರಿರುವ ಬರಪರಿ ಸ್ಥಿತಿಯ ಅಧ್ಯಯನ ನಡೆಸುವ ಸೋನಿ ಯಾ ಪಕ್ಷದ ಸಂಘಟನೆಗೂ ಒತ್ತು ಕೊಡುತ್ತಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನ ದಲ್ಲಿ ನಗರಕ್ಕೆ ಆಗಮಿಸುವ ಅವರು ಹೆಲಿಕ್ಯಾಪ್ಟರ್ ಮೂಲಕ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾಗಸಂದ್ರ ಗ್ರಾಮದಲ್ಲಿ ಬರ ಅಧ್ಯಯನ ನಡೆಸಲಿದ್ದಾರೆ. ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಸ್ಥಳಿಯ ಜನರ ಜೊತೆ ಬೆರೆಯುವ ಸೋನಿಯಾ, ಬರದ ಬೇಗೆಯನ್ನು ಖುದ್ಧಾಗಿ ಅರಿವು ದಲ್ಲದೆ ರಾಜ್ಯ ಸರ್ಕಾರ ಯಾವ ರೀತಿ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಮೊಳಕಾಲ್ಮೂರಿನಿಂದ ತುಮ ಕೂರಿಗೆ ಬೆಳಿಗ್ಗೆ ೧೦.೩೦ಕ್ಕೆ ಆಗಮಿಸಲಿ ರುವ ಅವರು ಗುರವಂದನಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀ ರ್ವಾದ ಪಡೆಯಲಿದ್ದಾರೆ. ನಂತರ ತುಮ ಕೂರಿನ ಬಿರ್ಲಾ ಆಡಿಟೋರಿಯಂನಲ್ಲಿ ಪಕ್ಷದ ಸಂಸದರು, ಉಭಯ ಸದನಗಳ ಶಾಸಕರು, ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯ ಸಚಿವರು, ಕೆಪಿಸಿಸಿ ಪದಾಧಿಕಾರಿ ಗಳು ಹಾಗೂ ಕಳೆದ ೨೦೦೮ರ ವಿಧಾನ ಸಭೆ ಚುನಾವಣೆಯಲ್ಲಿ ಪರಾಭವ ಗೊಂಡ ಅಭ್ಯರ್ಥಿಗಳೂ ಸೇರಿದಂತೆ ೧೮೦೦ ಮಂದಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರದಲ್ಲಿ ಅಸ್ಥಿತ್ವ ಕಳೆದುಕೊಳ್ಳು ತ್ತಿರುವ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಮರು ಜೀವ ನೀಡಿ, ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಗುರು ವಂದನಾ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಅಸ್ತ್ರ ಬಳಸಿಕೊಳ್ಳಲು ಸೋನಿಯಾ ಮುಂದಾಗುವಂತೆ ಕಾಣುತ್ತಿದೆ. ಪಕ್ಷದ ಮುಖಂಡರ ಸಭೆ ಯಲ್ಲಿ ಕಾರ್ಯಕರ್ತರನ್ನು ಉರಿ ದುಂಬಿಸುವ ಹೇಳಿಕೆಗಳನ್ನು ನೀಡು ವುದಲ್ಲದೆ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರಗಳನ್ನು ಬೊಟ್ಟು ಮಾಡುವುದರ ಮೂಲಕ ರಾಜ್ಯದ ಜನತೆಗೆ ಸಂದೇಶ ರವಾನೆ ಮಾಡಲಿದ್ದಾರೆ.

ಬಂಗಾರ‍್ದ ಕುರಲ್ ದ.ಕ. ಮತ್ತು ಉಡುಪಿಯಲ್ಲಿ ನಾಳೆ ತೆರೆಗೆ

Posted by JAYAKIRANA Kirana on | 0 comments | Leave a comment...

ಸುಮಾರು ೩೦ ವರ್ಷಗಳ ಬಳಿಕ ತುಳು ಚಿತ್ರ ನಿರ್ಮಾಣಕ್ಕೆ ಮುಂದಾ ಗಿರುವ ಹಿರಿಯ ನಿರ್ದೇಶಕ, ನಿರ್ಮಾ ಪಕ ರಾಮ್ ಶೆಟ್ಟಿ ಅವರು ಆನಂದ ಫಿಲಂಸ್ ಸಂಸ್ಥೆಯ ಮೂಲಕ ನಿರ್ಮಿಸಿದ ಮೂರನೇ ತುಳು ಚಲನಚಿತ್ರ ಬಂಗಾರ‍್ದ ಕುರಲ್ ಏಪ್ರಿಲ್ ೨೭ರಂದು ದ.ಕ ಮತ್ತು ಉಡುಪಿ ಮೂಡಬಿದ್ರೆ, ಪುತ್ತೂರು. ಬಿ.ಸಿ.ರೋಡ್, ಬೆಳ್ತಂಗಡಿಯಲ್ಲಿ ತೆರೆ ಕಾಣಲಿದೆ. ಇದರಲ್ಲಿ ತಮ್ಮ ಮಗ ಆನಂದ್‌ನನ್ನು ತುಳು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ.
 ಮಂಗಳೂರು, ಸುಂಕದಕಟ್ಟೆ ಮೂಡಬಿದ್ರೆ, ಮೊದಲಾದ ಕಡೆ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಭೋಜ್‌ಪುರಿ ಸಿನಿಮಾಗಳಲ್ಲಿ ಖ್ಯಾತಿಯೆತ್ತಿರುವ ಪಾಕಿ ಹೆಗ್ಡೆ ಅವರು ಈ ಚಿತ್ರದ ನಾಯಕಿಯಾಗಿರುವುದು ಚಿತ್ರದ ಪ್ಲಸ್ ಪಾಯಿಂಟ್. ಅವರ ಪ್ರತಿಯೊಂದು ಅಭಿನಯವೂ ಮತ್ತೆ ಮತ್ತೆ ನೋಡಬೇಕು ಎಂದೆನಿಸುವಂಥದ್ದೇ. ಈ ಚಿತ್ರದಲ್ಲಿ ಏಳು ಹಾಡುಗಳಿವೆ. ಒಂದಕ್ಕಿಂತ ಒಂದು ಅದ್ಬುತ ಹಾಡು ಗಳು. ಅವೆಲ್ಲವುಗಳನ್ನೂ ಪ್ರಕೃತಿ ರಮ ಣೀಯ ಮತ್ತು ಭಕ್ತಿ ಹುಟ್ಟಿಸುವ ಹಾಗೂ ಆಕರ್ಷಕ ಸ್ಥಳಗಳಲ್ಲಿ ಚಿತ್ರೀ ಕರಣ ನಡೆದಿದೆ. ಈ ಸಿನಿಮಾದಲ್ಲಿ ನಾಲ್ಕೆದು ಫೈಟಿಂಗ್ ದೃಶ್ಯಗಳೂ ಇವೆ. ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಶಿಸ್ತಿನಿಂದ ನಿರ್ವಹಿಸಲಾಗಿದೆ. ಮಚ್ಚೇಂದ್ರನಾಥ ಪಾಂಡೇಶ್ವರ ಅವರ ಸಾಹಿತ್ಯವಿರುವ ಸಿನಿಮಾದಲ್ಲಿ ಶಿವಧ್ವಜ್, ಪಾಕಿ ಹೆಗ್ಡೆ, ನಮೃತಾ ಹೆಗ್ಡೆ, ಸುರೇಶ್ ಮಂಗಳೂರು, ಹರೀಶ್ ವಾಸು ಶೆಟ್ಟಿ ಮುಂಬಾಯಿ, ವಿಜಯ ಕುಮಾರ್ ಶೆಟ್ಟಿ ತೋನ್ಸೆ, ಅರವಿಂದ ಬೋಳಾರ್, ಶೋಭಾ ರೈ, ಚಂಚಲಾಕ್ಷಿ, ಜ್ಯೋತಿ ರೈ, ಭಾಗ್ಯ ರೈ, ರವಿ ಸುರತ್ಕಲ್, ಪ್ರದೀಪ ಚಂದ್ರ, ದಿನೇಶ್ ಅತ್ತಾವರ್, ಪ್ರದೀಪ್ ಆಳ್ವ ಕದ್ರಿ, ಕಿಶೋರಿ ಬಳ್ಳಾಲ್, ಚಂದ್ರ ಹಾಸ ಅಡ್ಯಂತಾಯ, ಅಶ್ವಿನಿ, ಇಂದಿರಾ ಶೇಖರ್, ತಮ್ಮ ಲಕ್ಷ್ಮಣ ಅಭಿನಯಿಸಿ ದ್ದಾರೆ. ಸಿನಿಮಾಕ್ಕೆ ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿರುವುದು ಮತ್ತೊಂದು ಪ್ಲಸ್ ಪಾಯಿಂಟ್.
ತಾಂತ್ರಿಕ ವರ್ಗ: ನಿರ್ಮಾಣ ಸಂಸ್ಥೆ-ಆನಂದ ಫಿಲಂಸ್, ನಿರ್ಮಾಪಕರು, ನಿರ್ದೇಶಕರು-ರಾಮ್‌ಶೆಟ್ಟಿ, ಸಂಗೀತ-ವಿ. ಮನೋಹರ್, ಛಾಯಾಗ್ರಹಣ-ರಾಜು ಕೆ.ಜಿ., ಕಥೆ-ರಾಮ್ ಶೆಟ್ಟಿ, ಚಿತ್ರಕಥೆ , ಸಂಭಾಷಣೆ-ಮಚ್ಚೇಂದ್ರನಾಥ ಪಾಂಡೇಶ್ವರ, ಗೀತಾ ಸಾಹಿತ್ಯ- ಮಚ್ಚೇಂದ್ರನಾಥ ಪಾಂಡೇಶ್ವರ, ವಿ.ಮನೋಹರ್, ಕಲಾನಿರ್ದೇಶನ -ತಮ್ಮ ಲಕ್ಷ್ಮಣ, ಸಂಕಲನ-ನಾಸಿರ್ ಹಕೀಂ ಅನ್ಸಾರಿ, ನೃತ್ಯ-ಮದನ್-ಹರಿಣಿ , ಸಾಹಸ-ಹರೀಶ್ ಶೆಟ್ಟಿ, ಸಹನಿರ್ದೇಶನ-ಸಚಿನ್ ಕುಂಬ್ಳೆ, ನಿರ್ಮಾಣ-ನಿರ್ವಹಣೆ-ಶಿವಾ ಅರ್ಜುನ್.

ತೇಜ್ ನಟನೆ ಸವಾಲಿನದ್ದಾಗಿತ್ತು: ಸಮೀರಾ

Posted by JAYAKIRANA Kirana on | 0 comments | Leave a comment...

ಪ್ರಿಯದರ್ಶನ್ ಅವರು ನಿರ್ದೇಶಿಸಿರುವ ಕೆಲವು ಡೇರ್‌ಡೆವಿಲ್ಸ್ ಸ್ಟಂಟ್‌ಗಳನ್ನು ಹೊಂದಿರುವ ತೇಜ್ ಚಿತ್ರದೊಂದಿಗೆ ಆಕ್ಷನ್ ಚಿತ್ರಗಳಲ್ಲಿ ನಟಿಯರಿರುವ ಸಾಲಿಗೆ ಸೇರಿರುವ ಸಮೀರಾ ರೆಡ್ಡಿ ಅವರು, ಇದೊಂದು ಗಾಬರಿಗೊಳಿಸುವ ಮತ್ತು ಛಾಲೆಂಜಿಂಗ್ ನಟನೆಯಾಗಿದೆ ಎಂದಿದ್ದಾರೆ.
ಸಮೀರಾ ರೆಡ್ಡಿ ಅವರ ಜತೆಯಲ್ಲಿ ಅಜಂii ದೇವಗನ್, ಅನಿಲ್ ಕಪೂರ್ ಮತ್ತು ಜಾಯೇದ್ ಖಾನ್ ಅವರು ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಮಾಡುತ್ತಿದ್ದು, ಸಮೀರಾ ರೆಡ್ಡಿ ಅವರೂ ಕೆಲವು ಆಕ್ಷನ್ ಸನ್ನಿವೇಶಗಳನ್ನು ಪ್ರದರ್ಶಿಸಲಿದ್ದಾರೆ.
ಆಕ್ಷನ್ ನಟನೆ ಸುಲಭವಾಗಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಇವೆಲ್ಲವೂ ಅತಿ ಛಾಲೆಂಜಿಂಗ್ ನಟನೆ ಆಗಿದೆ. ಈ ಚಿತ್ರದಲ್ಲಿ ನಾನು ಬೈಕ್ ಚಲಾಯಿಸಿದ್ದೇನೆ. ಚಿತ್ರಕ್ಕೆ ಸಹಿ ಹಾಕಿದ ಸಂದರ್ಭದಲ್ಲೇ ನಾನು ಇದನ್ನು ಇಷ್ಟಪಟ್ಟಿದ್ದೆ. ಆದರೆ ಬೈಕ್ ದೃಶ್ಯವನ್ನು ಪ್ರದರ್ಶಿಸುವ ಸಂದರ್ಭ ನಾನು ಚಿತ್ರವನ್ನು ತ್ಯಜಿಸಿದೆ. ಇದನ್ನು ಮಾಡಲು ನನಗೆ ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ ಸಂದರ್ಭ ಅನುಸಾರವಾಗಿ ಇದು ನಡೆದಿದೆ ಮತ್ತು ನಾನು ಇದನ್ನು ಹೇಗೆ ಮಾಡಿದ್ದೇನೆ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಸಮೀರಾ ರೆಡ್ಡಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಚಿತ್ರದಲ್ಲಿ ಆಕ್ಷನ್ ಇದ್ದಾಗ ಗಾಯಗಳು ಖಚಿತ. ಸಮೀರಾ ರೆಡ್ಡಿ ತೇಜ್ ಚಿತ್ರಕ್ಕಾಗಿ ಬೈಕಿಂಗ್ ತರಬೇತಿ ಪಡೆದು ಸ್ಟಂಟ್ ಪ್ರದರ್ಶಿಸುವ ಸಂದರ್ಭದಲ್ಲಿ ಗಾಯಗೊಂಡಿದ್ದರು.

ಸೂಪರ್ ಛಾಲೆಂಜಿಂಗ್‌ಗೆ ಕರೀನಾ ನಾಯಕಿ

Posted by JAYAKIRANA Kirana on | 0 comments | Leave a comment...

ಕರೀನಾ ಕಪೂರ್ ಅವರು ಮಧುರ್ ಭಂಡಾರ್‌ಕರ್ ಅವರ ಸೂಪರ್ ಛಾಲೆಂಜಿಂಗ್ ಪಾತ್ರದ ಹೀರೊಯಿನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಅಲ್ಲದೇ ಅವರು ೨೦೦೯ರ ತೆಲುಗು ಬ್ಲಾಕ್‌ಬಸ್ಟರ್ ಅರುಂಧತಿ ಚಿತ್ರದ ಹಿಂದಿ ರಿಮೇಕ್ ‘ಕ್ವೀನ್ ಅರುಂಧತಿ’ ಚಿತ್ರದೊಂದಿಗೆ ಇನ್ನೊಂದು ಛಾಲೆಂಜಿಂಗ್ ಪಾತ್ರವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಗ್ರಾಫಿಕ್ಸ್ ಮತ್ತು ತಂತ್ರಜ್ಞಾನದೊಂದಿಗೆ ಅರುಂಧತಿ ಮಹಿಳಾ ಕೇಂದ್ರಿತ ಚಿತ್ರವಾಗಿದೆ. ತೆಲುಗು ಚಿತ್ರೋದ್ಯಮದ ಈ ಚಿತ್ರ ಚಿತ್ರಮಂದಿರಗಳಲ್ಲಿ ರಾರಾಜಿಸಿತ್ತು. ಹಿಂದಿ ಆವೃತ್ತಿಯಲ್ಲಿ ಸೋನು ಸೂದ್ ಅವರು ವಿಲನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ತೆಲುಗು ಚಿತ್ರದಲ್ಲಿಯೂ ವಿಲನ್ ಪಾತ್ರವನ್ನು ನಿರ್ವಹಿಸಿದ್ದರು. ಜೆಮಿನಿ ಫಿಲ್ಮ್ ಸರ್ಕ್ಯುಟ್‌ನಿಂದ
ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಪಡೆಯಲಾಗಿದೆ. ಮಹಿಳಾ ನಟನೆಗೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಈ ಚಿತ್ರದಲ್ಲಿ ನಟಿಸಲು ನಾನು ಉತ್ಸುಕನಾಗಿದ್ದೇನೆ ಎಂದು ತನ್ನ ಪಾತ್ರದ ಬಗ್ಗೆ ಮಾತಾಡಿದ ಕರೀನಾ ಕಪೂರ್ ಹೇಳಿದ್ದಾರೆ. ಈ ಚಿತ್ರ ಆಕ್ಷನ್ ಥ್ರಿಲ್ಲರ್. ತೆಲುಗು ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು.

ಐಟಂ ನಂಬರ್ ತಪ್ಪಲ್ಲ: ನಾಥಲೀಯಾ

Posted by JAYAKIRANA Kirana on | 0 comments | Leave a comment...

ತನ್ನ ಕಠಿನ ಪರಿಶ್ರಮವನ್ನು ಅಂತಿಮವಾಗಿ ಪ್ರೇಕ್ಷಕರು ವೀಕ್ಷಿಸುತ್ತಿರುವುದರಿಂದ ನಾನು ಸಂತುಷ್ಟನಾಗಿದ್ದೇನೆ. ಇದುವರೆಗೆ ಧನ್ ಧನ್ ಸಂಗೀತಕ್ಕೆ ಜನರಿಂದ ನನಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಬ್ರೆಜಿಲ್‌ನಿಂದ ಬಂದಿರುವ ಬಾಲಿವುಡ್ ಬೆಡಗಿ ನಾಥಲೀಯಾ ಕೌರ್ ತಿಳಿಸಿದ್ದಾರೆ.
ನನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂಬ ಬಗ್ಗೆ ನಾನು ಚಿಂತಿಸಿಲ್ಲ. ನನ್ನ ಸಂಗೀತ ಕಥೆಯ ಸಮಗ್ರವಾದ ಭಾಗವಾಗಿದೆ. ಜನರು ಐಟಂ ನಂಬರ್ ಆಗಿ ವಿಮರ್ಶಿಸಿರಲೂಬಹುದು. ಆದರೆ ಐಟಂ ನಂಬರ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವು ಜನರು ಸಂಗೀತ ಮತ್ತು ನೃತ್ಯವನ್ನು ಇಷ್ಟಪಡುತ್ತಾರೆ ಮತ್ತು ನಟನೆಯನ್ನು ಬಯಸುವುದಿಲ್ಲ. ಅದರಲ್ಲಿ ತಪ್ಪೇನಿದೆ? ಇದರ ಜೊತೆಯಲ್ಲಿ ಭಾರತೀಯ ಪ್ರೇಕ್ಷಕರು ಬುದ್ಧಿವಂತರಾಗಿದ್ದು ಏನನ್ನು ಅವರು ಬಯಸಿದ್ದಾರೆ ಎಂದು ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಎರಡು ಚಿತ್ರಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ನಾಥಲೀಯಾ ಅವರು ಚಿತ್ರೋದ್ಯಮಕ್ಕೆ ಇನ್ನೂ ಹೊಸಬಳಾಗಿದ್ದಾರೆ.
ದಕ್ಷಿಣ ಭಾರತದ ಸಂಗೀತ ಮತ್ತು ನೃತ್ಯವನ್ನು ತೋರಿಸುವ ಮತ್ತು ಚಿತ್ರೀಕರಣದ ಶೈಲಿಯನ್ನು ನಾನು ಇಷ್ಟಪಡುತ್ತೇನೆ. ನಾನು ಅಲ್ಲಿ ಹೆಚ್ಚಿನ ಚಿತ್ರಗಳನ್ನು ಮಾಡಲು ಇಷ್ಟಪಡುತ್ತೇನೆ. ಆದರೆ ಪ್ರಸಕ್ತ ನಾನು ನನ್ನ ಬಾಲಿವುಡ್ ವೃತ್ತಿ ಮೇಲೆ ಕೇಂದ್ರೀಕರಿಸುತ್ತಿದ್ದೇನೆ ಎಂದು ಬ್ರೆಜಿಲ್ ಸುಂದರಿ ತಿಳಿಸಿದ್ದಾರೆ.
ಭಾರತದಲ್ಲಿ ನನಗೆ ಬಹಳ ಭಿನ್ನ ಅನುಭವ ದೊರತಿದೆ. ಇಲ್ಲಿನ ಜನರು ಬಾಲಿವುಡ್ ಮತ್ತು ತಾರೆಗಳನ್ನು ಮ್ಯಾಜಿಕ ಜಗತ್ತಾಗಿ ಕಾಣುತ್ತಾರೆ. ಬಾಲಿವುqಟೌ ಅದ್ಭುತವಾದ ತಾಣವಾಗಿದೆ. ಎಲ್ಲ ವಿವಾದಗಳಿಂದಾಗಿ ಬಾಲಿವುಡ್ ಚಿತ್ರಗಳಲ್ಲಿ ಸೇರಿಸಿಕೊಳ್ಳಲು ನಾನು ಪ್ರಾರಂಭದಲ್ಲಿ ಅಂಜಿದ್ದೆ. ಆದರೆ ಈಗ ನಾನು ಬಹಳ ವಿಶ್ವಾಸ ಮತ್ತು ನೆಮ್ಮದಿಯನ್ನು ಕಂಡಿದ್ದೇನೆ. ನಾನು ಇಲ್ಲಿ ನೆಲೆವೂರಲು ಯೋಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

26-2-2012

Posted by JAYAKIRANA Kirana on | 0 comments | Leave a comment...

ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ : ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.
ಮಂಗಳೂರು : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕು. ೯೬೮೬೭೧೬೭೦೧.
ಮಂಗಳೂರು : ಇಲೆಕ್ಟ್ರಿಕಲ್ಸ್‌ಗೆ ಲೈಟಿಂಗ್‌ಗೆ ಜನ ಮತ್ತು ಹೆಲ್ಪರ್ ಬೇಕು ೯೮೪೫೦೯೮೨೫೪.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೮೪೪೫೭೩೬೧೫.
ಮಂಗಳೂರು : ಮರೋಳಿಯಲ್ಲಿ ಲೈನ್ ಸೇಲ್‌ಗೆ ಚಾಲಕ ಬೇಕು ೯೩೪೧೭೫೮೫೦೦.
ಕುಲಶೇಖರ: ಕ್ರೈಸ್ತರ ಮನೆಗೆ ಕೆಲಸಕ್ಕೆ ಜನ ಯುವತಿ ಬೇಕು ೮೪೫೩೯೭೨೯೯೪.
ಮಂಗಳೂರು : ಮನೆಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಕಾವೂರು : ಸಿವಿಲ್ ಕಂಟ್ರಾಕ್ಟರ್‌ಗೆ ಸೈಟ್ ಸೂಪರ್‌ವೈಸರ್ ಬೇಕು ೯೪೮೦೭೬೧೬೮೬.
ಹೊಟೇಲ್‌ಗೆ ಅಡುಗೆ ಮಾಡುವವರು ಬೇಕಾಗಿದ್ದಾರೆ: ೯೮೮೦೩೭೮೮೦೬
ಮಂಗಳೂರು: ಲೇಡಿಸ್ ಟೈಲರ್ ಶಾಪ್‌ಗೆ ಲೇಡಿಸ್ ಟೈಲರ್ ಬೇಕು. ೯೫೯೧೦೪೫೮೮೧
ಮೂಡುಬಿದ್ರೆ: ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೮೬೪೨೯೩೪೭.
ಮಾಲೆಮಾರ್: ಹೋಂ ಪ್ರೊಡಕ್ಟ್‌ಗೆ ಲೇಡೀಸ್ ಬೇಕು ೯೪೮೦೧೧೭೮೫೪.
ಮಂಗಳೂರು: ಉರ್ವಾಸ್ಟೋರ್ ವರ್ಕ್ ಶಾಪ್‌ಗೆ ವೆಲ್ಟರ್ ಬೇಕು ೯೨೪೨೪೭೪೧೦೦.
ಮಂಗಳೂರು: ಬ್ಯೂಟೀಷಿಯನ್ ಕೆಲಸಕ್ಕೆ ಜನ ಬೇಕು ೯೪೪೯೫೯೦೯೦೦.
ಮಂಗಳೂರು: ಟೈಲರ್ ಕೆಲಸಕ್ಕೆ ಜನ ಬೇಕು ೯೮೮೦೩೧೪೧೦೫.
ಮಂಗಳೂರು: ಸ್ಕ್ರೀನ್‌ಪ್ರಿಂಟರ್ ಬೇಕು ೯೦೧೯೭೦೯೯೯೩.
ತೊಕ್ಕೊಟ್ಟು: ಕಚೇರಿಗೆ ಕಂಪ್ಯೂಟ್ ಗೊತ್ತಿರುವ ಯುವತಿ ಬೇಕು ೭೨೫೯೩೯೪೭೮೧.
ಕಾರ್ಕಳ: ರೆಸ್ಟೋರೆಂಟ್‌ಗೆ ಸಪ್ಲಾಯರ್, ಕಿಚನ್‌ಗೆ, ಆಲ್‌ರೌಂಡರ್ ಬೇಕು. ೯೯೦೧೮೨೮೩೯೩.
ಮಂಗಳೂರು: ಟೈಲರ್ ಶಾಪ್‌ಗೆ ಅಲ್ಟ್ರೇಶನ್ ತಿಳಿದವರು ಬೇಕು. ೯೮೪೫೭೧೪೦೬೪
ಮಂಗಳೂರು : ಆಫೀಸ್‌ಗೆ ಕಂಪ್ಯೂಟರ್ ಎಕೌಂಟ್, ಟ್ಯಾಲಿ, ಬಿ.ಕಾಂ ತಿಳಿದ ಮ್ಯಾನೇ ಜರ್ ಬೇಕು. ೯೮೪೫೦೮೦೬೬೯.
ಮಂಗಳೂರು: ಟೈಲರ್ ಶಾಪ್‌ಗೆ ಚೂಡಿದಾರ್ ಸ್ಟಿಚ್ ಮಾಡುವ, ಅಳತೆ ತೆಗೆ ಯುವ ಮಹಿಳೆಯರು ಬೇಕು. ೯೯೪೫೯೨೩೦೨೬.
ಮಂಗಳೂರು : ಹಾಸ್ಟೆಲ್‌ಗೆ ಕುಕ್ ಬೇಕು ೯೪೪೯೭೨೩೧೩೩.

26-4-2012

Posted by JAYAKIRANA Kirana on | 0 comments | Leave a comment...

ಮೇಷ : ಹಣಕಾಸಿನ ಸಮಸ್ಯೆ ಇರುತ್ತದೆ.
ವೃಷಭ : ತಾಳ್ಮೆಯಿಂದ ಕೆಲಸಗಳನ್ನು ಮಾಡಿರಿ.
ಮಿಥುನ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಕರ್ಕಾಟಕ : ರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
ಸಿಂಹ : ಸ್ತ್ರೀಯರಿಂದ ತೊಂದರೆ ಇರುತ್ತದೆ.
ಕನ್ಯಾ : ಮನೆ ರ್ಮಾಣದ ಕೆಲಸವು ಪ್ರಗತಿಯಲ್ಲಿರುತ್ತದೆ.
ತುಲಾ : ಹಣಕಾಸಿನ ಅನುಕೂಲ ಇರುತ್ತದೆ.
ವೃಶ್ಚಿಕ : ಅನಾರೋಗ್ಯದಿಂದಾಗಿ ಮಾನಸಿಕ ನೆಮ್ಮದಿ ಇರುವುದಿಲ್ಲ.
ಧನು : ದೂರ ಪ್ರಯಾಣದಿಂದ ಲಾಭ ಇರುತ್ತದೆ.
ಮಕರ : ಸರಕಾರಿ ನೌಕರರಿಗೆ ಚಿಂತೆ ಇರುತ್ತದೆ.
ಕುಂಭ : ಮನೆ ಬದಲಾವಣೆ ಮಾಡುತ್ತೀರಿ.
ಮೀನ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.

ಪತ್ರಿಕೋದ್ಯಮ ಶಿಕ್ಷಣದಲ್ಲಿ ಪ್ರಯೋಗಶೀಲತೆ ಬೇಡವೇ?

Posted by JAYAKIRANA Kirana on | 0 comments | Leave a comment...


ಅರವತ್ತರ ದಶಕದಲ್ಲಿ ಆರಂಭವಾದ ಮೈಸೂರು ವಿವಿಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಆ ಕಾಲದಲ್ಲೇ ಪತ್ರಿಕೋದ್ಯಮವನ್ನೂ ಅಂಚೆ ತೆರಪಿನ ಶಿಕ್ಷಣ ಕ್ರಮಕ್ಕೆ ಅಳವಡಿಸಿ ದಾಖಲೆ ನಿರ್ಮಿಸಿತ್ತು. ಬೇರೆ ಬೇರೆ ರಾಜ್ಯಗಳ ಪತ್ರಕರ್ತರನ್ನೂ ಆಕರ್ಷಿಸುತ್ತಿತ್ತು. ೧೯೯೬ರಲ್ಲಿ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯನ್ನು ಕೇಂದ್ರ ವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿಯನ್ನು ಸ್ಥಾಪಿಸಲಾಯ್ತ್ತು. ಅಲ್ಲಿಂದ ಮುಂದಕ್ಕೆ ಮುಕ್ತ ವಿವಿಯು ಸಂವಹನ ಮತ್ತು ಪತ್ರಿಕೋದ್ಯಮವನ್ನೂ ಮುಕ್ತ ಶಿಕ್ಷಣ ಪದ್ಧತಿಗೆ ಅಳವಡಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾರಂಭಿಸಿತು. ಇದರಿಂದ ಕರ್ನಾಟಕದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಕಾರ್ಯನಿರತ ಪತ್ರಕರ್ತರಾಗಿದ್ದೂ ಸಾಂಪ್ರದಾಯಿಕ ಪತ್ರಿಕೋದ್ಯಮ ಶಿಕ್ಷಣ ಹೊಂದಿರದ ಬಹಳಷ್ಟು ಪತ್ರಕರ್ತರಿಗೆ ಅನುಕೂಲ ವಾಯ್ತ್ತು. ಈಗ ರಾಜ್ಯ ಮುಕ್ತ ವಿವಿ ಮಾತ್ರವಲ್ಲ, ಹಂಪಿ ಕನ್ನಡ ವಿವಿ, ಧಾರವಾಡದ ಕರ್ನಾಟಕ ವಿವಿಯೂ ಸಮೂಹ ಸಂವಹನ ಹಾಗೂ ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಮುಕ್ತ ವಿವಿ ಮಾದರಿಯಲ್ಲಿ ನಡೆಸುತ್ತಿವೆ.

ಡಾ.ನಿರಂಜನ ವಾನಳ್ಳಿ
ಪತ್ರಿಕೋದ್ಯಮ ಶಿಕ್ಷಣ ಆರಂಭಗೊಂಡಾಗ ಅದರ ಔಚಿ ತ್ಯದ ಕುರಿತೇ ಪ್ರಶ್ನೆಗಳಿದ್ದವು. ಪತ್ರಕರ್ತನ ಕೌಶಲಗಳನ್ನು ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ಕಲಿಸಲು ಸಾಧ್ಯವೇ ಎಂದು ಶಿಕ್ಷಣ ತಜ್ಞರು ಹುಬ್ಬು ಏರಿಸಿದರೆ, ಪತ್ರಿಕೋದ್ಯಮ ಶಿಕ್ಷಣದ ನೆರ ವಿಲ್ಲದೆ ಪತ್ರಕರ್ತರಾದವರು ಹೀಯಾಳಿಸಿದ್ದರು. ಪತ್ರಿಕಾಲಯ ದೊಳಕ್ಕೆ ಕಾಲಿಡುವಾಗ ತರಗತಿಯಲ್ಲಿ ಕಲಿತದ್ದನ್ನು ಮರೆತು ಬರ ಬೇಕು’ ಎಂಬುದು ಪತ್ರಿಕಾಲಯದೊಳಗೆ ಆಗ ಚಾಲ್ತಿಯಲ್ಲಿದ್ದ ಉಡಾಫೆಯ ಮಾತಾಗಿತ್ತು.
ಆದರೂ ಪತ್ರಿಕೋದ್ಯಮ ಶಿಕ್ಷಣ ಕಾಲದ ಪರೀಕ್ಷೆಯನ್ನು ಗೆದ್ದು ಬಂದಿದೆ. ಜಾಗತಿಕವಾಗಿ ಸರ್ವತ್ರ ಮಾನ್ಯತೆ ಗಳಿಸಿಕೊಂ ಡಿದೆ. ಈಗ ಅದು ಪತ್ರಿಕೋದ್ಯಮ ಶಿಕ್ಷಣವೆಂದು ಕರೆಸಿಕೊಳ್ಳದೇ ಸಕಲ ಮಾಧ್ಯಮವನ್ನೂ ಒಳಗೊಂಡ ವಿಸ್ತ್ರತ ಮಾಧ್ಯಮ ಶಿಕ್ಷಣ ವಾಗಿ ಬೆಳೆದಿದೆ. ಕರ್ನಾಟಕದಲ್ಲಿ ಈಗ ಹೆಚ್ಚಿನ ವಿವಿಗಳು, ಬಹು ತೇಕ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಮಾಧ್ಯಮ ಶಿಕ್ಷಣವನ್ನು ವಿವಿಧ ಹೆಸರುಗಳ ಅಡಿಯಲ್ಲಿ ಬೋಧಿ ಸುತ್ತಿವೆ.
ಅರವತ್ತರ ದಶಕದಲ್ಲಿ ಆರಂಭವಾದ ಮೈಸೂರು ವಿವಿಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಆ ಕಾಲದಲ್ಲೇ ಪತ್ರಿಕೋ ದ್ಯಮವನ್ನೂ ಅಂಚೆ ತೆರಪಿನ ಶಿಕ್ಷಣ ಕ್ರಮಕ್ಕೆ ಅಳವಡಿಸಿ ದಾಖಲೆ ನಿರ್ಮಿಸಿತ್ತು. ಬೇರೆ ಬೇರೆ ರಾಜ್ಯಗಳ ಪತ್ರಕರ್ತರನ್ನೂ ಆಕರ್ಷಿ ಸುತ್ತಿತ್ತು. ೧೯೯೬ರಲ್ಲಿ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯನ್ನು ಕೇಂದ್ರ ವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿಯನ್ನು ಸ್ಥಾಪಿ ಸಲಾಯ್ತ್ತು. ಅಲ್ಲಿಂದ ಮುಂದಕ್ಕೆ ಮುಕ್ತ ವಿವಿಯು ಸಂವಹನ ಮತ್ತು ಪತ್ರಿಕೋದ್ಯಮವನ್ನೂ ಮುಕ್ತ ಶಿಕ್ಷಣ ಪದ್ಧತಿಗೆ ಅಳವಡಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾರಂ ಭಿಸಿತು. ಇದರಿಂದ ಕರ್ನಾಟಕದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಕಾರ್ಯನಿರತ ಪತ್ರಕರ್ತರಾಗಿದ್ದೂ ಸಾಂಪ್ರದಾಯಿಕ ಪತ್ರಿಕೋ ದ್ಯಮ ಶಿಕ್ಷಣ ಹೊಂದಿರದ ಬಹಳಷ್ಟು ಪತ್ರಕರ್ತರಿಗೆ ಅನುಕೂಲ ವಾಯ್ತ್ತು. ಈಗ ರಾಜ್ಯ ಮುಕ್ತ ವಿವಿ ಮಾತ್ರವಲ್ಲ, ಹಂಪಿ ಕನ್ನಡ ವಿವಿ, ಧಾರವಾಡದ ಕರ್ನಾಟಕ ವಿವಿಯೂ ಸಮೂಹ ಸಂವ ಹನ ಹಾಗೂ ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ತರಗ ತಿಗಳನ್ನು ಮುಕ್ತ ವಿವಿ ಮಾದರಿಯಲ್ಲಿ ನಡೆಸುತ್ತಿವೆ.
ಪತ್ರಿಕೋದ್ಯಮ ಶಿಕ್ಷಣ ಸಾರ್ವತ್ರಿಕಗೊಂಡು ಎಲ್ಲರಿಗೂ ದೊರೆಯುವಂತಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಮುಕ್ತ ವಿವಿ ಪದ್ಧತಿಯು ಪದವಿಯನ್ನು ಉದಾರಗೊಳಿಸುವ ಭರ ದಲ್ಲಿ ಸಂವಹನ ಶಿಕ್ಷಣವನ್ನು ಲಘುವಾಗಿಸಿದೆಯೋ ಎಂಬ ಅನು ಮಾನ ಬರುತ್ತದೆ. ಯಾಕೆಂದರೆ ಆರಂಭದಲ್ಲಿ ಪತ್ರಿಕೋದ್ಯಮ ತರಗತಿಗಳಿಗೆ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಯೋ ಗಿಕ ತರಗತಿಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು. ಅಂಚೆ ತೆರಪಿನ ಶಿಕ್ಷಣವಿದ್ದಾಗ ಕೂಡ ಸಂಪರ್ಕ ತರಗತಿಗಳಲ್ಲಿ ಭಾಗವ ಹಿಸದೇ ಇದ್ದವರು ಪರೀಕ್ಷೆಗೆ ಕೂರುವಂತಿರಲಿಲ್ಲ.
ವರದಿ ಬರೆಯದೇ ಪದವಿ
ಆದರೆ ಈಗ ನೋಡಿದರೆ ಕನ್ನಡವನ್ನೋ ಚರಿತ್ರೆಯನ್ನೋ ಓದುವ ಹಾಗೆ ಸಮೂಹ ಸಂವಹನವನ್ನೂ ಎಂಎ ಮಟ್ಟದಲ್ಲಿ ತೆಗೆದುಕೊಂಡು ನಿಗದಿತ ಶುಲ್ಕ ಕಟ್ಟಿ ಪರೀಕ್ಷೆ ಬರೆದು ಪಾಸಾಗಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಒಂದು ವರದಿ ಬರೆಯದೇ, ಸುದ್ದಿ ಸಂಪಾದಿಸದೇ ಪತ್ರಿಕೋದ್ಯಮದಲ್ಲಿ ಸ್ನಾತಕೋ ತ್ತರ ಪದವಿ ಪಡೆಯಬಹುದೆಂಬುದು ಆಘಾತಕಾರಿ. ವಿಷಾದವೆಂದರೆ ಎರಡು ವರ್ಷ ತರಗತಿಗಳಲ್ಲಿ ಕುಳಿತು ಅಧ್ಯಯನ ನಡೆಸುವವರಿಗೂ ಇವರಿಗೂ ಕಾನೂ ನಿನ ದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲ. ಅವರಿಗೂ ಇವರಿಗೂ ಸಮಾ ನತೆ! ಹೀಗಾಗಿ ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಯಾವುದೋ ಒಂದು ಪತ್ರಿಕೆಗೆ ಸೇರಿ, ಕೆಲಸ ಮಾಡಿಕೊಂಡು, ಮುಕ್ತ ವಿವಿಗೆ ಶುಲ್ಕ ಕಟ್ಟಿ ಎಂಎ ಪರೀಕ್ಷೆ ಬರೆಯುವುದೇ ಲಾಭದಾಯಕವೆಂದು ಎಣಿಸಿದರೆ ಆಶ್ಚರ್ಯವಿಲ್ಲ.
ಯಾವುದು ಪ್ರಯೋಗಾತ್ಮಕ ವಿಷಯವಲ್ಲವೋ ಅದರಲ್ಲಿ ದೂರಶಿಕ್ಷಣ ದಲ್ಲಿ ಪದವಿ ನೀಡುವ ಕ್ರಮ ತಪ್ಪಲ್ಲ. ಆದರೆ ಪತ್ರಿಕೋದ್ಯಮದಂಥ ಪ್ರಯೋ ಗವೇ ಮೂಲವಾದ ತರಗತಿಗಳಿಗೂ ಕೇವಲ ಶುಲ್ಕ ಕಟ್ಟಿಸಿಕೊಂಡು ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗುವುದನ್ನೂ ಕಡ್ಡಾಯ ಮಾಡದೆ, ಯಾರು ಬೇಕಾ ದರೂ ಪರೀಕ್ಷೆ ಬರೆದು ಪಾಸಾಗಬಹುದು ಎಂಬ ಪರಿಸ್ಥಿತಿ ನಿರ್ಮಾಣ ಮಾಡುವುದು ಪತ್ರಿಕೋದ್ಯಮ ಶಿಕ್ಷಣವನ್ನು ನಗೆಪಾಟಲಿಗೆ ಈಡು ಮಾಡುತ್ತದೆ.
ಅಂದರೆ ಪತ್ರಿಕೋದ್ಯಮ ಶಿಕ್ಷಣದ ಆರಂಭದಲ್ಲಿ ಕೇವಲ ಥಿಯರಿ ಕಲಿ ಸುತ್ತಾ ನೈಜ ಪತ್ರಿಕೋದ್ಯಮದಿಂದ ದೂರ ಉಳಿದುಬಿಟ್ಟಿತ್ತು. ಪತ್ರಕರ್ತರು ಹಾಗೂ ಪ್ರಯೋಗ ನಿಷ್ಠ ಅಧ್ಯಾಪಕರುಗಳ ಪ್ರಯತ್ನದ ಫಲವಾಗಿ ಥಿಯ ರಿಗೂ ಪ್ರಯೋಗಕ್ಕೂ ಇರುವ ಕಂದಕವನ್ನು ಬಹುಪಾಲು ಮುಚ್ಚಲಾಗಿದೆ. ಪ್ರಾಯೋಗಿಕ ಅನುಭವ ಕಡ್ಡಾಯ ಮಾಡಲಾಗಿದೆ. ಸಾಮಾನ್ಯ ವಿವಿಗಳಲ್ಲಿ ಕಲಿಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಥಿಯರಿ ಹಾಗೂ ಪ್ರಾಕ್ಟಿಕಲ್ ಈ ಎರಡರಲ್ಲೂ ಪರೀಕ್ಷೆ ಬರೆಯಬೇಕಾಗುತ್ತದೆ.
ಆದರೆ ಮುಕ್ತ ವಿವಿ ಪದ್ಧತಿಯಲ್ಲಿ ಮತ್ತೆ ಚರಿತ್ರೆಯ ಪದವಿಗೂ ಪತ್ರಿಕೋ ದ್ಯಮ ಪದವಿಗೂ ವ್ಯತ್ಯಾಸವಿಲ್ಲವೆಂಬ ಸ್ಥಿತಿ ತರುವುದು ಪತ್ರಿಕೋದ್ಯಮ ಶಿಕ್ಷಣ ವನ್ನು ಹೊರಟಲ್ಲಿಗೇ ತಂದು ನಿಲ್ಲಿಸಿದ ಕ್ರಮವಾಗಿದೆ. ಈ ಬಗ್ಗೆ ಪತ್ರಿಕಾ ವಲ ಯದಲ್ಲಿ, ಶಿಕ್ಷಣ ತಜ್ಞರುಗಳ ನಡುವೆ ಚರ್ಚೆ ನಡೆಯಲಿ.

ಹೌದು, ಸೆಗಣಿ ಬಳಿಯುವುದು ಹಿಂದೂ ಸಂಸ್ಕೃತಿ

Posted by JAYAKIRANA Kirana on | 0 comments | Leave a comment...


ಧಾರ್ಮಿಕ ಶುದ್ದೀಕರಣದ ಸಂದರ್ಭದಲ್ಲಿ ಗೋಮಯ ಅಂದರೆ ಸೆಗಣಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೈಜ್ಞಾನಿಕವಾಗಿಯೂ ಸೆಗಣಿ ಬಳಿಯುವುದರಿಂದ ಮಾರಕ ರೋಗಗಳನ್ನು ಉಂಟು ಮಾಡುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂದು ಸಾಬೀತಾಗಿದೆ. ಹಾಗಿರುವಾಗ ಸೆಗಣಿ ಅಪವಿತ್ರವಾದದ್ದನ್ನು ಪವಿತ್ರಗೊಳಿಸುವ ಒಂದು ವಸ್ತು.

ದಿವಾಕರ ಕೆ., ತಲಪಾಡಿ
ಇತ್ತೀಚೆಗೆ ಜಯಕಿರಣ ಪತ್ರಿಕೆಯ ನಿಮ್ಮಿಂದ ವಿಭಾಗದಲ್ಲಿ ಮಂಗಳೂ ರಿನ ಓರ್ವ ಹಿಂದೂ ಎನ್ನುವವರು ಸೆಗಣಿ ಬಳಿಯುವುದು ಹಿಂದೂ ಸಂಸ್ಕೃ ತಿಯೇ ಎಂದು ಕೇಳಿದ್ದಾರೆ.
ಹೌದು ಸ್ವಾಮೀ, ಸೆಗಣಿ ಬಳಿಯುವುದು ಹಿಂದೂ ಸಂಸ್ಕೃತಿ. ಪಟ್ಟಣ ಬಿಟ್ಟು ಹಳ್ಳಿಗಳಿಗೆ ಹೋಗಿ ನೋಡಿ ಹಿಂದುಗಳು ಮಾತ್ರವಲ್ಲ ಕೆಲವು ಮುಸ್ಲಿಂ ಮತ್ತು ಕ್ರೈಸ್ತರೂ ತಮ್ಮ ತಮ್ಮ ಮನೆಯ ಅಂಗಳಕ್ಕೆ ಸೆಗಣಿ ಬಳಿಯುತ್ತಾರೆ. ಹಿಂದೆ ಟೈಲ್ಸ್, ಸಿಮೆಂಟು, ಗ್ರಾನೈಟ್ ಅಳವಡಿಸುವುದಕ್ಕೆ ಮೊದಲು ಮನೆಯ ಒಳಗೆ ಸೆಗಣಿ ಬಳಿದು ಸ್ವಚ್ಛಗೊಳಿಸಲಾಗುತ್ತಿತ್ತು. ಹಿಂದುಗಳ ಬ್ರಹ್ಮಕಲಶ, ಜಾತ್ರೆ, ನೇಮ ಇತ್ಯಾದಿಗಳು ನಡೆಯಬೇಕಾದರೂ ಅಂಗಣಗಳಿಗೆ ಸೆಗಣಿ ಬಳಿದು ಅಂದಗೊಳಿಸಲಾಗುತ್ತದೆ. ಧಾರ್ಮಿಕ ಶುದ್ದೀಕರಣದ ಸಂದರ್ಭದಲ್ಲಿ ಗೋ ಮಯ ಅಂದರೆ ಸೆಗಣಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವೈಜ್ಞಾನಿಕವಾ ಗಿಯೂ ಸೆಗಣಿ ಬಳಿಯುವುದರಿಂದ ಮಾರಕ ರೋಗಗಳನ್ನು ಉಂಟು ಮಾಡುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂದು ಸಾಬೀತಾಗಿದೆ. ಹಾಗಿರು ವಾಗ ಸೆಗಣಿ ಅಪವಿತ್ರವಾದದ್ದನ್ನು ಪವಿತ್ರಗೊಳಿಸುವ ಒಂದು ವಸ್ತು.
ಬಹಿರಂಗವಾಗಿ ಸಾರ್ವಜನಿಕವಾಗಿ ಗೋಮಾಂಸ ತಿಂದು ಗೋಮಾಂಸ ತಿನ್ನದವರನ್ನು ಹೀಯಾಳಿಸುವ, ಹಿಂದುಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ವರ ಅಪವಿತ್ರ ಮುಖಕ್ಕೆ ಸೆಗಣಿ ಬಳಿದು ಆ ಮುಖವನ್ನು ಪವಿತ್ರಗೊಳಿಸಲು ಪ್ರಯತ್ನಿಸಿದ ಯುವಕನ ಯತ್ನ ನಿಜವಾಗಿಯೂ ಹಿಂದೂ ಸಂಸ್ಕೃತಿಯೇ ಆಗಿದೆ. ಈ ಘಟನೆ ಸಮಾಜವನ್ನು ಸ್ವಚ್ಛಗೊಳಿಸುವ ಸಂಕೇತವಾಗಿದೆ.
ಸೆಗಣಿ ಬಳಿದು ಓಡಿ ಹೋಗುವುದು ಹಿಂದೂ ಸಂಸ್ಕೃತಿಯಲ್ಲ ಎಂದು ಬರೆದಿದ್ದೀರಿ. ಆದರೆ ಹೆಸರು ಹೇಳಲು ಹೆದರುವುದು ಯಾವ ಸಂಸ್ಕೃತಿ? ಪಟ್ಟಾ ಭಿರಾಮ ಸೋಮಯಾಜಿಯವರು ಮಾತನಾಡುವ ರೀತಿ, ಗೋಮಾಂಸ ಭಕ್ಷಣೆ ಯನ್ನು ಬೆಂಬಲಿಸುವ ವಿಧಾನವನ್ನು ನೋಡಿದರೆ ಕಟ್ಟರ್ ಹಿಂದೂವಾದಿಗೆ ಕೋಪ ಬರುವುದು ಸಹಜ ಎಂದು ಬರೆದಿದ್ದೀರಿ. ಹಾಗಿರುವಾಗ ಹಿಂದೂ ಓರ್ವ ಹೀಗೆ ಕೋಪ ಬರಿಸಿದವರ ಮುಖಕ್ಕೆ ಸೆಗಣಿ ಬಳಿದು ಶುದ್ಧಗೊಳಿಸಿದ್ದು ನೂರಕ್ಕೆ ನೂರು ಸರಿಯಾಗಿದೆ. ಮಸಿ ಬಳಿದು ಅಪವಿತ್ರಗೊಳಿಸಲು ಯತ್ನಿಸು ವವರನ್ನು ಸೆಗಣಿ ಬಳಿದು ಪವಿತ್ರಗೊಳಿಸುವುದು ಸರಿಯಾದ ಕ್ರಮವಾಗಿದೆ.
ಹಿಂದು ಸಂಘಟನೆಗಳ ಕಾರ್ಯಕರ್ತರು ಸಂಸ್ಕೃತಿಯ ಹೆಸರಲ್ಲಿ ಯಾವುದೇ ವಿಕೃತಿಯನ್ನು ಮಾಡುತ್ತಿಲ್ಲ. ಹಿಂದುಗಳು ಮಾತೆ ಎಂದು ಪೂಜಿಸುವ ಗೋ ಸಾಗಾಟವನ್ನು ವಿರೋಧಿಸುತ್ತಿದ್ದಾರೆ. ಅಕ್ರಮ ಗೋಸಾಗಾಟವನ್ನು ತಡೆ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದಾರೆ. ಲೈಂಗಿಕ ವಿಕೃತಿಯನ್ನು ವಿಜೃಂಭಿಸುವ ಪ್ರೇಮಿ ಗಳ ದಿನಾಚರಣೆಯಂತಹಾ ಅನಿಷ್ಠಗಳನ್ನು ವಿರೋಧಿಸುತ್ತಿದ್ದಾರೆ. ಈ ನೆಪದಲ್ಲಿ ಪಾರ್ಕ್, ಬೀಚ್‌ಗಳಲ್ಲಿ ಅಶ್ಲೀಲವಾಗಿ ‘ಲವ್ ನಿರತರಾದವರನ್ನು ಅಲ್ಲಿಂದ ಓಡಿಸಿ ಪರಿಸರವನ್ನು ಕ್ಲೀನ್ ಮಾಡುತ್ತಿದ್ದಾರೆ.
ಅಕ್ರಮ ಪಬ್‌ಗಳಲ್ಲಿ ಕುಡಿದು ಅಶ್ಲೀಲವಾಗಿ ಕುಣಿಯುವ ಗಂಡು ಹೆಣ್ಣು ಜೋಡಿಗಳಿರುವಲ್ಲಿಗೆ ನುಗ್ಗಿ ಅಲ್ಲಿ ನಡೆಯುವ ಅಕ್ರಮಗಳನ್ನು ಖಂಡಿಸುತ್ತಿದ್ದಾರೆ. ಆ ಮೂಲಕ ಮಾದಕ ಪದಾರ್ಥಗಳ ಅಕ್ರಮ ಸಾಗಾಟಗಾರರ ವ್ಯವಸ್ಥೆಗೆ ತಡೆಯೊಡ್ಡುತ್ತಿದ್ದಾರೆ. ಹದಿ ಹರೆಯದ ಯುವಕ ಯುವತಿಯರು ತಮ್ಮ ವಿದ್ಯಾ ಭ್ಯಾಸದ ಸಂದರ್ಭದಲ್ಲಿ ತಮ್ಮ ಮನಸ್ಸಿನಲ್ಲಿ ಕಾಮದ ಭಾವನೆಗಳನ್ನು ತುಂಬಿಕೊ ಳ್ಳುತ್ತಿರುವುದನ್ನು ತಡೆದು ಅವರ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡು ಓದುವಿ ಕೆಯಲ್ಲಿ ತೊಡಗಿಸುವಂತೆ ಪ್ರಯತ್ನಿಸುತ್ತಿದ್ದಾರೆ.
ಆದರೆ ನೀವು ಹೇಳಿದಂತ ಪ್ರಾಧ್ಯಾಪಕರು ಕೆಲವರು ತಾವು ಅಧ್ಯಾಪಕರು ಎಂಬುದನ್ನು ಮರೆತು ಅನಿಷ್ಠವನ್ನೇ ಯುವಕರ ಮನಸ್ಸಿನಲ್ಲಿ ತುಂಬಿಸುತ್ತಿದ್ದಾರೆ. ಗುರುಗಳೆಂಬ ಗುರುತರವಾದ ಜವಾಬ್ದಾರಿಯನ್ನು ವಹಿಸದ ಇವರು ಶಿಷ್ಯರ ಮನಸ್ಸನ್ನು ಕೆಡಿಸುವಲ್ಲಿ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ ಸಮಾಜದಲ್ಲಿ ಅನಿಷ್ಠ ಪರಂಪರೆಗೆ ನಾಂದಿ ಹಾಡುತ್ತಿದ್ದಾರೆ. ಇಂತವರು ಕಾಲೇಜ್ ಕ್ಯಾಂಪಸ್‌ನಲ್ಲಿ ಗೋಮಾಂ ಸವನ್ನು ಕರಿದು ತಿನ್ನುವಲ್ಲಿಯವರೆಗೆ ಮುಂದುವರಿದಿದ್ದಾರೆ. ಇದಕ್ಕೆ ಪೂರಕವಾಗಿ ಶರಾಬಿನ ಬಾಟಲಿಗಳೂ, ಗಾಂಜಾ ತುಂಬಿದ ಬೀಡಿ ಸಿಗರೇಟುಗಳೂ ಕ್ಯಾಂಪಸ್‌ನೊ ಳಗೆ ಪ್ರವೇಶವಾಗುವಂತೆ ಮಾಡುತ್ತಿದ್ದಾರೆ.
ಇಂಥವರನ್ನು ತಡೆಯುವುದು ಹಿಂದೂ ಸಮಾಜಕ್ಕೆ ಖಂಡಿತಾ ಶೋಭೆ ಯನ್ನು ನೀಡುತ್ತದೆ. ಪ್ರಾಧ್ಯಾಪಕರ ಮುಖಕ್ಕೆ ಸೆಗಣಿ ಬಳಿದು ಶುದ್ದಿಮಾಡಿ ಇನ್ನಾ ದರೂ ನಿನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸು ಎಂದು ಸಾಂಕೇತಿಕ ವಾಗಿ ಸೂಚಿಸಿದ ವ್ಯಕ್ತಿ ಖಂಡಿತವಾಗಿಯೂ ಹೇಡಿಯಲ್ಲ. ಸೆಗಣಿಯಿಂದ ಶುದ್ಧೀ ಕರಣಗೊಂಡ ಪ್ರಾಧ್ಯಾಪಕರು ಇನ್ನಾದರೂ ಹಿಂದೂಗಳ ಭಾವನೆಗಳನ್ನು ಅರ್ಥೈಸಿ ಕೊಂಡು ತಮ್ಮ ಕೆಲಸವನ್ನು ಮಾಡಲಿ. ಹಿಂದೂ ಧರ್ಮವನ್ನು ವಿಕೃತಿಗೊಳಿಸುವ ಹೇಳಿಕೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನಿಲ್ಲಿಸಲಿ. ಇಲ್ಲವಾ ದಲ್ಲಿ ಹಿಂದೂ ಭಾವನೆಗಳಿಗೆ ಮಸಿ ಬಳಿದವರ ಮುಖಕ್ಕೆ ಸೆಗಣಿ ಬಳಿದು ಶುದ್ಧೀ ಕರಣ ಮಾಡುವುದು ಅನಿವಾರ‍್ಯವಾಗುತ್ತದೆ.

ಆಕೆಯ ಆಕರ್ಷಣೆ ನನ್ನನ್ನು ತಪ್ಪು ಮಾಡುವಂತೆ ಪ್ರೇರೇಪಿಸಿತು!

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೫೨ ವರ್ಷ ವಯಸ್ಸು. ನಾನು ೨೫ರ ಹರೆಯ ದಲ್ಲಿ ಮದುವೆಯಾಗಿದ್ದೆ. ಮದುವೆಯ ನಾಲ್ಕೇ ವರ್ಷದಲ್ಲಿ ನನ್ನ ಪತ್ನಿ ಅಪಘಾತದಲ್ಲಿ ತೀರಿಕೊಂಡಳು. ನನಗೆ ಒಬ್ಬ ಮಗನೂ ಇದ್ದು, ಆತ ಕಲಿಯುತ್ತಿದ್ದಾನೆ. ನಾನು ಹಿಂದೆ ಸರಕಾರಿ ಕೆಲಸದ ಲ್ಲಿದ್ದು ವಿಆರ್‌ಎಸ್ ಪಡೆದಿದ್ದೇನೆ. ಪತ್ನಿ ತೀರಿದ ಬಳಿಕ ಮರುಮ ದುವೆಯಾಗಲು ಹೇಳಿದರೂ ನಾನು ಆಗಲಿಲ್ಲ. ನನಗೆ ಈಗ ಇನ್ನೊಂದು ಮದುವೆಯಾಗುವ ಆಸೆಯಾಗಿದೆ. ನನ್ನ ಆರೋಗ್ಯ ದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜನನಾಂಗ ಗಡುಸುತನ ಹೊಂದಿದೆ. ನಾನು ಲೈಂಗಿಕ ತೃಪ್ತಿಗಾಗಿ ಪ್ರತಿನಿತ್ಯ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತ ದಾದರೂ ಮಹಿಳೆಯರ ಸಂಗದಷ್ಟು ಸುಖ ಸಿಗುತ್ತಿಲ್ಲ. ನಾನು ನನ್ನ ಗೆಳೆಯನ ಪತ್ನಿಯ ಜತೆ ಎರಡು ವರ್ಷಗಳ ಕಾಲ ಸಂಬಂಧ ವಿರಿಸಿದ್ದೆ, ಆತ ವಿದೇಶದಲ್ಲಿದ್ದಾನೆ. ನಾನು ಆಕೆಯನ್ನು ಇಷ್ಟಪ ಟ್ಟಿದ್ದೆ. ಆಕೆಯ ಮನೆಗೆ ಆಗಾಗ ಹೋಗಿಬರುತ್ತಿದ್ದೆ. ನನ್ನ ಗೆಳೆಯ ಮನೆಯ ಕಡೆ ನೋಡಿಕೊಳ್ಳುವಂತೆ ನನ್ನಲ್ಲಿ ಹೇಳಿದ್ದ. ಈ ಕಾರ ಣದಿಂದ ಆಕೆಯನ್ನು ಆಗಾಗ ಭೇಟಿಯಾಗುತ್ತಿದ್ದೆ. ಒಂದು ದಿನ ಆಕೆ ನನ್ನಲ್ಲಿ ಸೆಕ್ಸ್ ಬಗ್ಗೆ ಪ್ರಸ್ತಾಪ ಮಾಡಿದ್ದಳು. ಆಕೆಯೂ ಗಂಡನ ಸುಖ ಸಿಗದೆ ನೊಂದಿದ್ದಳು. ನನ್ನಲ್ಲಿ ನಾವು ಜೊತೆಯಾಗೋಣ ಎಂದಳು. ನಾನು ಮೊದಲು ಒಪ್ಪಿಗೆ ಕೊಡಲಿಲ್ಲ. ಆದರೆ ಆಕೆಯ ಆಕರ್ಷಣೆ ನನ್ನನ್ನು ತಪ್ಪು ಮಾಡುವಂತೆ ಪ್ರೇರೇಪಿಸಿತು. ಕೊನೆಗೂ ನಾನು ಆಕೆಯ ಸೌಂದರ್ಯಕ್ಕೆ ಕಟ್ಟುಬಿದ್ದು ಆಕೆಯ ಜೊತೆ ಸೇರಿದೆ. ಆಕೆ ನನಗೆ ಸ್ವರ್ಗವನ್ನೇ ತೋರಿಸಿದಳು. ಇದಾದ ಮೇಲೆ ನಾವು ಆಗಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೇರುತ್ತಿದ್ದೆವು. ಆಕೆಗೆ ೪೦ ವರ್ಷ ವಯಸ್ಸಾಗಿದ್ದರೂ ಸೌಂದರ್ಯವನ್ನು ಹೊಂದಿ ದ್ದಳು. ಆಕೆಗೆ ಒಬ್ಬಳೇ ಮಗಳು. ಆಕೆ ಕಾಲೇಜ್‌ಗೆ ಹೋದಾಗಲೆಲ್ಲ ನಮ್ಮ ನಡುವೆ ಸೆಕ್ಸ್ ನಡೆಯುತ್ತಿತ್ತು. ಕೆಲವೊಮ್ಮೆ ನಾನು ಆಕೆಯ ಮನೆಯಲ್ಲಿ ರಾತ್ರಿಯೂ ಉಳಿಯು ತ್ತಿದ್ದೆ. ಆದರೆ ದಿನಕಳೆದಂತೆ ಆಕೆ ನನ್ನ ಮೇಲೆ ಹಕ್ಕು ಚಲಾಯಿಸಲಾರಂಭಿಸಿದಳು. ಆಕೆಗೆ ನಾನು ಅನೇಕ ಬಾರಿ ಹಣಕಾಸಿನ ಸಹಾಯ ನೀಡಿದ್ದು, ಆಕೆ ಕೊನೆಗೆ ನನಗೆ ಮೋಸ ಮಾಡಿದಳು. ನಾನೀಗ ಆಕೆಯ ಜತೆ ಸಂಬಂಧವನ್ನು ಮುರಿದಿದ್ದೇನೆ. ನಾನು ಬೇರೆ ಮದುವೆ ಮಾಡಿಕೊಳ್ಳಲು ಸಾಧ್ಯವಿದೆಯೇ? ವಿಧವೆಯಾದರೂ ಸಾಕು, ಆಕೆಗೆ ಬಾಳು ಕೊಡಲು ತಯಾರಿದ್ದೇನೆ. ಈ ಬಗ್ಗೆ ಮಾಹಿತಿ ಕೊಡಿ. ನನಗೆ ಹಣಕಾಸಿನ ತೊಂದರೆ ಯಾವುದೂ ಇಲ್ಲ. ನನಗೆ ಮಾನಸಿಕವಾಗಿ ಜತೆಗಿರುವ ಮತ್ತು ಲೈಂಗಿಕ ಕ್ರಿಯೆಯಲ್ಲಿ ಸಮರ್ಥಳಾಗಿರುವ ಸಂಗಾತಿ ಬೇಕು. ನಾನು ಏನು ಮಾಡಲಿ?
ಸಲಹೆ: ನಿಮ್ಮ ಪತ್ರದಲ್ಲಿನ ಮಾಹಿತಿ ಅಸ್ಪಷ್ಟವಾಗಿದೆ. ನಿಮ್ಮನ್ನೇ ನಂಬಿದ್ದು, ಪತ್ನಿ, ಮನೆಯ ಕಡೆ ಜೋಪಾನ ಎಂದು ವಿದೇಶಕ್ಕೆ ತೆರ ಳಿದ್ದ ಗೆಳೆಯನ ಹೆಂಡತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ನಿಮಗೆ ಇನ್ನೇನು ಹೇಳಲು ಸಾಧ್ಯವಿದೆ? ಆಕೆಯನ್ನು ಮರಳು ಮಾಡಿ ನಿಮ್ಮ ಕೆಲಸ ಮುಗಿಸಿದ್ದರಿಂದ ಆಕೆ ನಿಮ್ಮನ್ನೇ ಬ್ಲ್ಯಾಕ್‌ಮೇಲ್ ಮಾಡಿರ ಬಹುದು. ಇದು ಈಗೀಗ ಸಹಜವೂ ಕೂಡಾ. ನೀವು ಈ ಬಗ್ಗೆಯೂ ಸ್ವಷ್ಟ ಕಾರಣ ನೀಡಿಲ್ಲ. ಹಸ್ತಮೈಥುನ ಮಾಡುವುದರಿಂದ ಯಾವುದೇ ಅಪಾಯವಿಲ್ಲ. ಲೈಂಗಿಕ ಕ್ರಿಯೆಯಲ್ಲಿ ಸಾಮರ್ಥ್ಯವಿರುವ ತನಕ ಹಸ್ತ ಮೈಥುನ ಮಾಡಬಹುದು. ಆನಂತರ ನೀವು ಮತ್ತೆ ತಿರಸ್ಕಾರಕ್ಕೆ ಒಳಗಾಗ ಬಹುದು, ಆಗೇನು ಮಾಡುತ್ತೀರಿ? ನೀವೀಗ ಮದುವೆಯಾಗುವುದ ರಲ್ಲಿ ಯಾವುದೇ ತೊಂದರೆಯಿಲ್ಲ. ಆರೋಗ್ಯದಿಂದಿದ್ದು, ತಾಕತ್ತು ಇರು ವವರೆಗೆ ಲೈಂಗಿಕ ಕ್ರಿಯೆ ನಡೆಸಬಹುದಾಗಿದೆ. ನಿಮ್ಮನ್ನು ಅರಿತು ಮದುವೆ ಮಾಡಿಕೊಳ್ಳುವವರು ಯಾರಾದರೂ ಇದ್ದರೆ ತಿಳಿಸುತ್ತೇವೆ. ನೀವು ಈ ಬಗ್ಗೆ ನಿಮ್ಮ ಮಗನಲ್ಲಿ ಚರ್ಚೆ ನಡೆಸಿ. ಆತ ಇದನ್ನು ಒಪ್ಪುತ್ತಾನೆಯೇ ಎಂದು ತಿಳಿಯಿರಿ. ವಿಧವೆಗೆ ಜೀವನ ಕೊಡುವುದು ಒಳ್ಳೆಯದೇ. ಆದರೆ ಅಕ್ರಮ ಸಂಬಂಧದಲ್ಲಿ ತೊಡಗಿಕೊಳ್ಳದಿರಿ. ಇದರಿಂದ ಸಮಾಜದಲ್ಲಿ ನೀವು ಕೆಟ್ಟ ಹೆಸರು ಪಡೆಯಬೇಕಾದೀತು. ಕಾನೂನು ಪ್ರಕಾರ ಮದುವೆ ಆಗುವುದರಿಂದ ಯಾವುದೇ ಸಮಸ್ಯೆ ಇರದು. ಆದರೆ ಅದಕ್ಕೂ ಮುನ್ನ ಚೆನ್ನಾಗಿ ಚಿಂತಿಸಿ.

ಅಸೂಯೆಯೇ ವಿಮೋಚನಾ ಯಾತ್ರೆಯ ಉದ್ದೇಶ

Posted by JAYAKIRANA Kirana on | 1 comments | Leave a comment...


ಎ.ಪಿ. ಉಸ್ತಾದರ ಪ್ರಗತಿ ಕಾರ್ಯಗಳಲ್ಲಿ ಅಸೂಯೆಯನ್ನು ತೋರ್ಪಡಿಸುವ ಕೆಲವು ಸಂಘಟನೆಗಳ ನೇತೃತ್ವವನ್ನು ವಹಿಸಿರುವ ಎಸ್‌ಕೆಎಸ್‌ಎಸ್‌ಎಫ್ ಎಂಬ ಸಂಘಟನೆಯು ಎ.ಪಿ. ಉಸ್ತಾದರ ಕೇರಳ ಯಾತ್ರೆಯ ಯಶಸ್ಸಿನಿಂದ ಕಂಗಾಲಾಗಿ ವಿಮೋಚನ ಯಾತ್ರೆ ಪ್ರಾರಂಭಿಸಿರುವುದು ಖೇದಕರವಾಗಿದೆ. ನಿಜವಾಗಿಯೂ ಅವರಿಗೆ ಜನರನ್ನು ಕಷ್ಟಗಳಿಂದ ವಿಮೋಚಿಸುವ ಸದುದ್ದೇಶವಿದ್ದರೆ ಯಾತ್ರೆಯ ಮೊದಲೇ ಬೆಂಬಲ ವ್ಯಕ್ತಪಡಿಸ ಬಹುದಿತ್ತು.

ಎಂ.ಕೆ. ಜುನೈದ್, ಉಳ್ಳಾಲ
ಪ್ರಗಲ್ಪ ವಿದ್ವಾಂಸರೂ ಮರ್ಕಝ ಸಖಾಪತಿ ಸುನ್ನಿಯಾದ ಸಾವಿರಾರು ಬಡ ಅನಾಥ ಕುಟುಂಬಗಳಿಗೆ ಆಸರೆಯಾಗಿರುವ ಕಾಂತಪುರಂ ಎ.ಪಿ. ಉಸ್ತಾದರು ಮಾನವತೆಯ ಜಾಗೃತಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಿಸಿರುವ ಕೇರಳ ಯಾತ್ರೆಯು ಸ್ವಾಗತಾರ್ಹವಾಗಿದೆ.
ಮಾನವೀಯ ಮೌಲ್ಯಗಳನ್ನು ಧ್ವಂಸಗೈಯ್ಯಲ್ಪಡುತ್ತಿರು ವಂತಹ ಈ ವರ್ತಮಾನ ಜಗತ್ತಿನಲ್ಲಿ ತಂದೆಯಿಂದ ಮಗಳ, ಮಗನಿಂದ ತಾಯಿಯ, ಸಹೋದರನಿಂದ ಸಹೋದರಿಯ, ಅಧ್ಯಾಪಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆಗಳಂತಹ ಹೀನ ಕೃತ್ಯಗಳು ಮನುಷ್ಯವರ್ಗದಿಂದ ನಡೆಯುತ್ತಿದ್ದು, ಮನು ಷ್ಯನು ಮೃಗೀಯ ಸ್ವಭಾವದಿಂದ ಮಾನವೀಯ ಸಂಸ್ಕೃತಿಗೆ ಮರಳಬೇಕು ಎಂಬ ಸಂದೇಶವನ್ನು ಎ.ಪಿ. ಉಸ್ತಾದರು ಜನ ರಿಗೆ ತಲುಪಿಸಲು ಅರ್ಹರಾದ ಒಬ್ಬ ವ್ಯಕ್ತಿಯಾಗಿದ್ದಾರೆ.
ಆದರೆ ಎ.ಪಿ. ಉಸ್ತಾದರ ಪ್ರಗತಿ ಕಾರ್ಯಗಳಲ್ಲಿ ಅಸೂ ಯೆಯನ್ನು ತೋರ್ಪಡಿಸುವ ಕೆಲವು ಸಂಘಟನೆಗಳ ನೇತೃತ್ವ ವನ್ನು ವಹಿಸಿರುವ ಎಸ್‌ಕೆಎಸ್‌ಎಸ್‌ಎಫ್ ಎಂಬ ಸಂಘಟನೆಯು ಎ.ಪಿ. ಉಸ್ತಾದರ ಕೇರಳ ಯಾತ್ರೆಯ ಯಶಸ್ಸಿನಿಂದ ಕಂಗಾ ಲಾಗಿ ವಿಮೋಚನ ಯಾತ್ರೆ ಪ್ರಾರಂಭಿಸಿರುವುದು ಖೇದಕರವಾ ಗಿದೆ. ನಿಜವಾಗಿಯೂ ಅವರಿಗೆ ಜನರನ್ನು ಕಷ್ಟಗಳಿಂದ ವಿಮೋ ಚಿಸುವ ಸದುದ್ದೇಶವಿದ್ದರೆ ಯಾತ್ರೆಯ ಮೊದಲೇ ಬೆಂಬಲ ವ್ಯಕ್ತ ಪಡಿಸ ಬಹುದಿತ್ತು. ಅಥವಾ ಎ.ಪಿ. ಉಸ್ತಾದರ ಯಾತ್ರೆ ಸಂಚ ರಿಸದ ಪ್ರದೇಶಗಳಲ್ಲಿ ಯಾತ್ರೆ ಕೈಗೊಂಡು ಅಲ್ಲಿನ ಜನರ ಕಷ್ಟ ಗಳನ್ನು ವಿಮೋಚನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡ ಬಹುದಿತ್ತು. ಇದಕ್ಕೆಲ್ಲ ವ್ಯತಿರಿಕ್ತವಾಗಿ ಎ.ಪಿ. ಉಸ್ತಾದರ ಹಿಂದಿ ನಿಂದಲೇ ಯಾತ್ರೆ ಕೈಗೊಂಡದ್ದು ಅಸೂಯೆ ಹಾಗೂ ಅಸಹಾ ಯಕತೆಯ ಭಾಗವಾಗಿದೆ.
ಉಸ್ತಾದರ ಕೇರಳ ಯಾತ್ರೆಗೆ ಬೆಂಬಲ ಸೂಚಿಸುವ ಸಲು ವಾಗಿ ಮಂಗಳೂರಿನಲ್ಲಿ ನಡೆದ ಬೃಹತ್ ಸೌಹಾರ್ದ ಸಮ್ಮೇಳ ನದಲ್ಲಿ ಭಾಗವಹಿಸಿದ ಹಿಂದೂ ಬಾಂಧವರ ಪರಮೋನ್ನತ ಸ್ವಾಮೀಜಿಗಳಾದ ಶ್ರೀಪೇಜಾವರ ಸ್ವಾಮೀಜಿಯವರು ಸೌಹಾರ್ದ ತೆಗೆ ಮುಸ್ಲಿಮರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ ಎ.ಪಿ. ಉಸ್ತಾದರ ಯಾತ್ರೆಯು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದು ಯಾತ್ರೆಯ ಪ್ರಾರಂಭ ಘಟ್ಟವೇ ಸೌಹಾರ್ದತೆಗೆ ಸಾಕ್ಷಿಯಾಯಿತು.
ಜನಸಮುದಾಯಕ್ಕೆ ಉಂಟಾಗುವ ಉಪಯೋಗಗಳನ್ನು ಕೇವಲ ಅಸೂಯೆಯ ಕಾರಣದಿಂದ ವಿಮರ್ಶಿಸುವ ವಿರೋದಿ ಸುವ ಕೆಲವು ವ್ಯಕ್ತಿಗಳಿಂದಲೇ ಮಾನವೀಯ ಮೌಲ್ಯಗಳು, ಸೌಹಾ ರ್ದತೆಯು ನಶಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಂಡು ಇಂಥವರ ಎಲ್ಲ ಕಾರ್ಯಗಳಿಂದ ಪ್ರಾಮಾಣಿಕ ವರ್ಗವು ದೂರ ನಿಲ್ಲಬೇಕಾಗಿದೆ.

ರಸ್ತೆ ಅಪಘಾತ ತಡೆ ಹೇಗೆ?

Posted by JAYAKIRANA Kirana on | 0 comments | Leave a comment...

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾಲು-ಸಾಲು ಅಪಘಾತ ಗಳು ಸಂಭವಿಸುತ್ತಿವೆ. ಹೆಚ್ಚಿನ ಸಂಖ್ಯೆ ಯಲ್ಲಿ ಯುವಕರೇ ಸಾವಿಗೀಡಾಗು ತ್ತಿರುವುದು ಕಂಡುಬರುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಯುವಕರ ಮಿತಿಮೀರಿದ ವೇಗ. ರಸ್ತೆಯಲ್ಲಿ ತಾವೊ ಬ್ಬರೇ ಸಂಚರಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಾಗುವ ಯುವಕರು ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಮೊಬೈಲ್, ಇಯರ್‌ಫೋನ್ ಇಟ್ಟುಕೊಂಡು ಅತೀ ವೇಗವಾಗಿ ಸಾಗುವ ಯುವಕರು ಅಪಘಾತಕ್ಕೆ ತುತ್ತಾಗಿ ಬಲಿಯಾಗುತ್ತಿರುವುದು ವಿಪರ್ಯಾ ಸವೇ ಸರಿ. ಅಪಘಾತವನ್ನು ತಡೆಯಲು ಟ್ರಾಫಿಕ್ ಪೊಲೀಸರು ಎಷ್ಟು ಪ್ರಯತ್ನ ಪಟ್ಟರೂ ಸಾಲದು. ನೂತನ ತಂತ್ರeನ ಬಳಸಿ ಕೊಂಡರೂ ಅತೀವೇಗವನ್ನು ನಿಯಂತ್ರಿಸಲು ಆಗುತ್ತಿಲ್ಲ. ಆದ್ದರಿಂದ ಯುವ ಕರಿಗೆ ಅವರ ಮನೆಮಂದಿಯೇ ವೇಗವನ್ನು ನಿಯಂತ್ರಿಸಿ ಸಂಚಾರ ನಡೆಸುವಂತೆ ಮನವೊಲಿಸುವ ಕಾರ್ಯ ನಡೆಸಬೇಕು. ಅತೀವೇಗ ಯಾವತ್ತೂ ಅಪಘಾತವನ್ನು ಆಹ್ವಾನಿಸಿದಂತೆ ಎನ್ನುವುದನ್ನು ಮನವರಿಕೆ ಮಾಡಬೇಕು. ಈ ಮೂಲಕ ಅಪಘಾತವನ್ನು ನಿಯಂತ್ರಿಸಬೇಕು.
 ಸುಧೀರ್ ಹೆಚ್., ಜಾರ್ಕಳ

ನಿತ್ಯ ಪ್ರಯಾಣಿಕರಿಗೆ ಕೈಕೊಡುವ ‘ರಾಜರಾಜೇಶ್ವರಿ’
ಕಿನ್ನಿಗೋಳಿಯಿಂದ ಮಂಗಳೂರಿಗೆ ನಸುಕಿನ ಐದೂ ವರೆ ಗಂಟೆಯ ಸುಮಾರಿಗೆ ಸಂಚರಿಸುವ ‘ರಾಜರಾಜೇ ಶ್ವರಿ’ ಸರ್ವಿಸ್ ಬಸ್ ಆಗಾಗ ಪ್ರಯಾಣಿಕರಿಗೆ ಕೈಕೊಡುವ ಕೆಟ್ಟ ಚಾಳಿಯನ್ನು ರೂಢಿಸಿಕೊಂಡಿದೆ. ಕಳೆದ ಸುಮಾರು ೧೫ ವರ್ಷಗಳಿಂದ ಇದೇ ಸಮಯದಲ್ಲಿ ಬೇರೆ-ಬೇರೆ ಬಸ್‌ಗಳು ಓಡಾಟ ನಡೆಸುತ್ತಿದ್ದು, ನಿತ್ಯ ಪ್ರಯಾಣಿಕರು ಯಾವುದೇ ಸಮಸ್ಯೆಯಿಲ್ಲದೆ ಸಂಚಾರ ನಡೆಸುತ್ತಿದ್ದರು. ಈ ಹಿಂದೆ ‘ನಂದಿನಿ’ ಬಸ್ ಇದ್ದಾಗಲೂ ಇಂಥ ಸಮಸ್ಯೆ ಎದುರಾಗಿರಲಿಲ್ಲ.
ಬಸ್ ಚಾಲಕರೂ ಅಷ್ಟೇ, ಬದಲಿಗೆ ಬೇರೆ ಚಾಲಕ ರಿದ್ದರೂ ಬಸ್ ಬರುವುದು ತಪ್ಪುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಓಡುತ್ತಿದ್ದುದರಿಂದ ಬೈಕಂಪಾಡಿ, ಪಣಂಬೂರು, ಎಂಸಿಎಫ್ ಕಾರ್ಮಿಕರು ಈ ಬಸ್ಸನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ಸಮಯಕ್ಕೆ ಸರಿ ಯಾಗಿ ಸಂಚರಿಸುವುದು ಬಿಡಿ, ಕೆಲವು ದಿನ ಎಷ್ಟು ಕಾದರೂ ಬರುವುದೇ ಇಲ್ಲ. ಮರುದಿನ ವಿಚಾರಿಸಿದರೆ ಬದಲಿ ಡ್ರೈವರ್ ಬರಲಿಲ್ಲ, ನಿರ್ವಾಹಕ ಏಳುವಾಗ ಲೇಟ್ ಆಯಿತು, ಕ್ಲೀನರ್ ರಜೆ ಇತ್ಯಾದಿ ನಂಬಲು ಅಸಾಧ್ಯವಾದ ಕಾರಣ ನೀಡುತ್ತಾರೆ. ಇದು ಬಸ್ ಸಿಬ್ಬಂದಿಗೆ ಅಭ್ಯಾಸ ವಾಗಿ ಹೋಗಿದೆ. ಪ್ರಯಾಣಿಕರು ಬಸ್ ಸಿಬ್ಬಂದಿಯ ಆಟಾಟೋಪದಿಂದ ಬೇಸರಪಟ್ಟು ಹಳೆಯಂಗಡಿಯವ ರೆಗೆ ಸಾಗಿ ಹೆದ್ದಾರಿಯಲ್ಲಿ ಸಂಚರಿಸುವ ಬಸ್ ಇಲ್ಲವೇ ಲಾರಿಗಳನ್ನು ಹತ್ತಿಕೊಂಡು ತಮ್ಮ ಕೆಲಸ-ಕಾರ್ಯಗಳಿಗೆ ಸಾಗುತ್ತಾರೆ. ಹೀಗಾಗಿ ನಂದಿನಿ ಸಂಚರಿಸುವಾಗ ಇದ್ದ ಪ್ರಯಾಣಿಕರ ಅರ್ಧದಷ್ಟು ಮಂದಿಯೂ ಈಗ ಬಸ್ ನಲ್ಲಿ ಸಂಚರಿಸುತ್ತಿಲ್ಲ. ನಿತ್ಯ ಪ್ರಯಾಣಿಕರು ದಿನಕ್ಕೊಂದು ಸಮಯಕ್ಕೆ ಬರುವ ಬಸ್ಸಿನ ಮಾಲಕರಿಗೆ ಶಾಪ ಹಾಕುತ್ತಾ ಬೇರೆ ವಾಹನ ಅವಲಂಬಿಸುತ್ತಿದ್ದಾರೆ. ಸಾಧ್ಯವಾದರೆ ರಾಜ ರಾಜೇಶ್ವರಿ ಬಸ್ಸಿನ ಮಾಲಕರು ಗಮನಿಸಲಿ.
ಬಸ್ ಸಿಬ್ಬಂದಿಯೂ ಅಷ್ಟೇ, ಹಿಂದೆ ನಂದಿನಿ ಬಸ್ ಸಂಚರಿಸುತ್ತಿದ್ದಂತೆ ಪ್ರತಿನಿತ್ಯ ಒಂದೇ ಸಮಯಕ್ಕೆ ಸಂಚ ರಿಸಲು ಸಾಧ್ಯವಾದರೆ ಮಾತ್ರ ಬಸ್ ರಸ್ತೆಗಿಳಿಸಬೇಕು. ಡ್ರೈವರ್, ಕಂಡಕ್ಟರ್ ದಿನಕ್ಕೊಬ್ಬರಂತೆ ಬದಲಾಗುತ್ತಿದ್ದರೆ ಪ್ರಯಾಣಿಕರು ಅನಿವಾರ್ಯವಾಗಿ ಬೇರೆ ಬಸ್ಸನ್ನು ಸಂಚಾ ರಕ್ಕೆ ಬಳಸ ಬೇಕಾದೀತು. ಸಂಬಂಧಪಟ್ಟ ಆರ್‌ಟಿಒ ಅಧಿ ಕಾರಿಗಳು ಇನ್ನಾದರೂ ಸಮಸ್ಯೆಯತ್ತ ಕಣ್ತೆರೆದು ಈ ಬಸ್ಸಿನ ಪರ್ಮಿಟ್ ರದ್ದುಗೊಳಿಸಿ ಬೇರೆ ಬಸ್ಸಿಗೆ ನೀಡುವತ್ತ ಚಿಂತಿ ಸುವುದೊಳಿತು. ನೊಂದ ನಿತ್ಯ ಪ್ರಯಾಣಿಕರು, ಪಕ್ಷಿಕೆರೆ

ಬೀಫ್ ಮಾರುವ ಹೊಟೇಲ್ ಮುಚ್ಚಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಗೋವುಗಳ ಅಕ್ರಮ ಸಾಗಾಟ ಸಂಬಂಧವಾಗಿ ಘರ್ಷಣೆ ನಡೆಯುತ್ತದೆ. ಇದನ್ನು ತಪ್ಪಿಸಲು ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಜರುಗಿಸುವುದು ಕಾಣಿಸುತ್ತಿಲ್ಲ. ಗೋವು ಸಾಗಾಟಗಾ ರರ ಮೇಲೆ ಕೇಸ್ ದಾಖಲಾಗುತ್ತದೆ. ಎರಡು ದಿನಗಳಲ್ಲಿ ಬಿಡುಗಡೆಯೂ ಆಗುತ್ತದೆ. ಜೈಲಿನಿಂದ ಹೊರಬಂದ ದಂಧೆಕೋರರು ಮತ್ತೆ ಮಾಮೂಲಿ ದಂಧೆಯಲ್ಲಿ ತೊಡಗಿಕೊಳ್ಳುತ್ತಾರೆ. ಇವರಿಗೆ ಕಾನೂನು, ಪೊಲೀಸರ ಯಾವುದೇ ಭಯವಿರುವುದಿಲ್ಲ. ಹಿಂದೂ ಸಂಘಟನೆಗಳು ಆಗೊಮ್ಮೆ, ಈಗೊಮ್ಮೆ ಗೋಸಾ ಗಾಟವನ್ನು ತಡೆದು ಸುದ್ದಿಯಲ್ಲಿರುತ್ತವೆ. ಆದರೆ ಇದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯ ಹೊರತು ಬೇರೇನೂ ಲಾಭವಿಲ್ಲ. ಸರಕಾರ, ಜನಪ್ರತಿನಿ ಧಿಗಳೂ ಅಷ್ಟೇ, ಗೋಹತ್ಯೆ, ಮತಾಂತರವನ್ನು ಕೇವಲ ಚುನಾವಣೆ ಪ್ರಣಾಳಿ ಕೆಗೋಸ್ಕರ ಮಾತ್ರ ಮೀಸಲಿಟ್ಟಿವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲವನ್ನೂ ಮರೆಯುತ್ತಾರೆ. ನಗರ ಪ್ರದೇಶದ ಬಹುತೇಕ ರೆಸ್ಟೋರೆಂಟ್, ನಾನ್‌ವೆಜ್ ಹೋಟೆಲ್‌ಗಳಲ್ಲಿ ಬೀಫ್ ಮಾಂಸ ಬಹಿರಂಗವಾಗಿಯೇ ಮಾರಾಟವಾಗು ತ್ತಿದೆ. ಸಾಧ್ಯವಾದರೆ ಇದನ್ನು ತಡೆಯಲು ಸಂಬಂಧಪಟ್ಟವರು ಮುಂದಾಗಲಿ. ಬೀಫ್ ಮಾಂಸದ ಖಾದ್ಯವನ್ನು ಮಾರಾಟ ಮಾಡುವಲ್ಲಿ ಹೋಗಿ ನೋಡಿ ದರೆ ನೈಜ ಸ್ಥಿತಿ ಅರಿವಾಗುತ್ತದೆ. ಅಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯಧರ್ಮೀಯರೂ ಮಾಂಸಾಹಾರ ಸೇವನೆ ಮಾಡುತ್ತಾರೆ.
ರಂಜಿತ್ ಸುವರ್ಣ, ಅಂಗಡಿಗುಡ್ಡೆ

ಪೊಲೀಸ್ ಔಟ್‌ಪೋಸ್ಟ್‌ಗಳು ಯಾವ ಪುರುಷಾರ್ಥಕ್ಕಾಗಿ?
ಮಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಬಂದ ನಂತರ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೀದಿ ಬೀದಿ ತಿರುಗುವ ಪಿಸಿಆರ್‌ಗಳಿಂದ ಹಿಡಿದು ನಗರವನ್ನು ಚಿತ್ರೀಕರಿಸುವ ಕ್ಯಾಮರಾಗಳು ಕೂಡ ಬಂದಿವೆ. ಇತ್ತೀಚೆಗಷ್ಟೇ ಇಲಾಖೆ ನಗರದ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಔಟ್‌ಪೋಸ್ಟ್‌ಗ ಳನ್ನು ನಿರ್ಮಿಸಿ, ಪೂಜೆ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿ ಸಿತ್ತು. ಆದರೆ ಇದೀಗ ಕೆಲವೊಂದು ಪ್ರದೇಶಗಳಲ್ಲಿ ಇವುಗಳು ತುಕ್ಕು ಹಿಡಿಯುತ್ತಿವೆ ಎಂದರೆ ತಪ್ಪಿಲ್ಲ.
ಕೆಲವೊಂದು ಕಡೆಗಳಲ್ಲಿ ಈ ಔಟ್‌ಪೋಸ್ಟ್‌ಗಳು ಇದ್ದರೂ ಪೊಲೀ ಸರಿಗೆ ಪಕ್ಕದ ಅಂಗಡಿಗಳೇ ವಾಸಸ್ಥಾನವಾಗಿದೆ. ಈ ಔಟ್‌ಪೋ ಸ್ಟನ್ನು ಕೇಳುವವರೇ ಇಲ್ಲವಾಗಿದೆ. ಇಲಾಖೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಆರಂಭಿಸುವ ಈ ಸೇವೆಗಳು ಒಂದೆರೆಡು ದಿನ ಉಪಯೋಗಕ್ಕೆ ಬರುವುದನ್ನು ಬಿಟ್ಟರೆ ಮತ್ತೆ ಇದರ ಸುಳಿವೇ ಇರುವುದಿಲ್ಲ. ಉದಾಹರಣೆಗೆ ಪಿಸಿಆರ್ ವಾಹನ ತನ್ನ ನೈಜ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಇದು ಎಲ್ಲೋ ಮರದ ಅಡಿಯಲ್ಲಿ ಸಮಯ ಕಳೆಯುತ್ತಿರುತ್ತದೆ. ಇನ್ನು ನಗರದಲ್ಲಿ ಅಳವಡಿಸಲಾದ ಕ್ಯಾಮರಾಗಳು ಕೆಲಸ ನಿರ್ವಹಿಸು ತ್ತಿರುವ ಬಗ್ಗೆಯೂ ಅನುಮಾನಗಳಿವೆ. ನಮ್ಮಲ್ಲಿ ವ್ಯವಸ್ಥೆಗಳು ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಇದೊಂದು ಉದಾಹರ ಣೆಯಷ್ಟೇ ಎನ್ನಬಹುದು. ಇನ್ನಾದರೂ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್‌ರವರು ಇತ್ತ ಗಮನ ಹರಿಸುವರೇ? ಸಂಕೇತ್ ನಾಯಕ್, ಕಂಕನಾಡಿ

ಸರಳ ವಿವಾಹಕ್ಕೆ ಸರಕಾರ ಪ್ರೋತ್ಸಾಹ ಕೊಡಲಿ
ದುಂದುವೆಚ್ಚದ ಮದುವೆ ಎಲ್ಲೆಲ್ಲೂ ನಡೆಯುತ್ತದೆ. ಆದರೆ ಅದರ ನಡುವೆ ಎಲ್ಲೋ ಒಂದೆರಡು ಕಡೆ ಸಾಮಾಜಿಕ ಸಂಘಟನೆಗಳು, ದೇವಾಲ ಯಗಳು ಸರಳ ಮದುವೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿವೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಯಾಕೆಂ ದರೆ ಆಡಂಬರದ ಮದುವೆಗೆ ಖರ್ಚು ಮಾಡುವ ಹಣವನ್ನು ಸಮಾಜದ ಲ್ಲಿನ ಬಡವರಿಗೆ ದಾನ ಮಾಡಿದರೆ ಇದರಿಂದ ಹತ್ತಾರು ಕುಟುಂಬಗಳು ವರ್ಷಪೂರ್ತಿ ಒಂದು ಹೊತ್ತಿನ ಅನ್ನ ಉಣ್ಣಬಹುದು. ಆದರೆ ಸರಳ ವಿವಾ ಹವಾದಲ್ಲಿ ತಮ್ಮ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎಂದೇ ಶ್ರೀಮಂತರು ನಂಬಿ ರುವ ಕಾರಣ ಸರಳ ವಿವಾಹಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರ ಸರಳ ಮದುವೆಯನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆಯನ್ನು ರೂಪಿಸಬೇಕು. ಸರಳ ಮದುವೆಯಾಗುವವರಿಗೆ ಹಣಕಾಸಿನ ನೆರವನ್ನು ಪ್ರಕ ಟಿಸಬೇಕು. ಇದರಿಂದ ಸರಳ ಮದುವೆಯಾಗಲು ಹೆಚ್ಚೆಚ್ಚು ಮಂದಿ ಮುಂದೆ ಬರುವುದರಲ್ಲಿ ಸಂಶಯವಿಲ್ಲ. ಸುಪ್ರಿಯಾ ಎಸ್., ನಾರಾವಿ

ಕಟ್ಟಡ ಕಾರ್ಮಿಕರಿಗೆ ಭದ್ರತೆ ಒದಗಿಸಿ
ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ವೇಳೆ ತಡೆಗೋಡೆ ಕುಸಿದು ಕಾರ್ಮಿಕನೊಬ್ಬ ಏಳು ಘಂಟೆ ಅದರೊಳಗೆ ಸಿಲು ಕಿದ್ದ. ನಂತರ ಆತನನ್ನು ರಕ್ಷಿಸಲಾ ಯಿತಾದರೂ ಇಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯ ಮತ್ತು ಗುತ್ತಿಗೆದಾರರ ಬೇಜ ವಾಬ್ದಾರಿ ಎದ್ದು ಕಾಣುತ್ತಿತ್ತು. ನಾನು ಅಲ್ಲೇ ಇದ್ದು ಸಂಪೂರ್ಣ ರಕ್ಷಣಾ ಕಾರ್ಯವನ್ನು ವೀಕ್ಷಿಸಿದ್ದೇನೆ. ಈ ವೇಳೆ ಅನೇಕ ಲೋಪ ದೋಷಗಳು ನನಗೆ ಕಂಡುಬಂದವು. ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದ ಕಾರಣ ಸಂಸ್ಥೆ ಯಾವುದೇ ಮುನ್ನೆ ಚ್ಚರಿಕೆ ಕ್ರಮವನ್ನು ತೆಗೆದುಕೊಂಡಿ ರಲಿಲ್ಲ. ತಗ್ಗು ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಸುವ ವೇಳೆ ಮಳೆಯ ನೀರು ನಿಲ್ಲುವುದು ಸಾಮಾನ್ಯ. ಇಲ್ಲೂ ಅದೇ ರೀತಿ ನೀರು ನಿಂತಿತ್ತು. ಆದರೆ ಇದನ್ನು ಪಂಪ್ ಮಾಡಿ ಹೊರಹಾಕುವ ಯಾವುದೇ ವ್ಯವಸ್ಥೆಯನ್ನು ಸಂಸ್ಥೆ ಮಾಡಿರಲಿಲ್ಲ. ಇದರಿಂದಾಗಿ ತಳಭಾ ಗದಲ್ಲಿ ನೀರು ನಿಂತ ಪರಿಣಾಮ ಮಣ್ಣು ಇನ್ನಷ್ಟು ಕುಸಿಯಲು ಕಾರಣ ವಾಗಿರಬಹುದು. ಅಷ್ಟೇ ಅಲ್ಲದೇ ಕಾರ್ಮಿಕರಿಗೂ ಸೂಕ್ತ ಭದ್ರತೆ ಒದಗಿ ಸಿರಲಿಲ್ಲ.
ಮುಖ್ಯವಾಗಿ ಕಾರ್ಮಿಕರಿಗೆ ಒದಗಿಸಬೇಕಾದ ತಲೆಯ ರಕ್ಷಣಾ ಕವಚವನ್ನೂ ಒದಗಿಸಿರಲಿಲ್ಲ. ಅಲ್ಲದೇ ಆದಿತ್ಯವಾರವೂ ಕಾರ್ಮಿಕರನ್ನು ಗುತ್ತಿಗೆದಾರ ದುಡಿಸಿಕೊಳ್ಳುತ್ತಿದ್ದ. ಮಳೆ-ಗಾಳಿಗೆ ದುಡಿಯುವ ಕಾರ್ಮಿ ಕರಿಗೆ ಯಾವುದೇ ರಕ್ಷಣೆಯಿರಲಿಲ್ಲ. ಇದು ಕೇವಲ ಇಲ್ಲಿಯ ಪರಿಸ್ಥಿತಿ ಯಲ್ಲ. ಇಂದು ನಗರದಲ್ಲಿ ನಡೆ ಯುತ್ತಿರುವ ಬಹುತೇಕ ಕಟ್ಟಡ ಕಾಮ ಗಾರಿಗಳಲ್ಲಿ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
ವಾಲ್ಟರ್ ಡಿಸೋಜಾ, ತೊಕ್ಕೊಟ್ಟು

ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಮುನ್ನ ಸ್ವಚ್ಚತೆ ಕಾಪಾಡಿ
ನಗರದ ಕೆಲವೊಂದು ಕಡೆಗಳಲ್ಲಿ ಪಾಲಿಕೆಯ ಅಭಯ ಹಸ್ತದೊಂದಿಗೆ ಕೆಲ ಗುತ್ತಿಗೆದಾರರು ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಅದೇ ರೀತಿ ನಗರದ ಹೃದಯ ಭಾಗವಾದ ಸರ್ಕಾರಿ ಕಾಲೇಜಿನ ಮುಂಭಾಗ ಅಂದರೆ ಕುನಿಲ್ ಸೆಂಟರ್‌ನ ಪಕ್ಕದಲ್ಲೂ ಪಾರ್ಕಿಂಗ್ ಶುಲ್ಕ ಪಡೆಯುತ್ತಾರೆ. ಆದರೆ ಇಲ್ಲಿ ಸ್ವಚ್ಚತೆ ಎನ್ನುವುದೇ ಮರೀಚಿಕೆಯಾಗಿದೆ. ಪಕ್ಕದಲ್ಲೇ ಒಂದು ಶೌಚಾಲಯ ವಿದ್ದು, ಅಲ್ಲಿನ ನೀರು ಮತ್ತು ಕಸದ ತೊಟ್ಟಿಯ ಕೊಳಚೆ ತ್ಯಾಜ್ಯ ನೇರವಾಗಿ ವಾಹನ ನಿಲ್ಲಿಸಿದ ಸ್ಥಳಕ್ಕೆ ಹರಿದು ಬರುತ್ತದೆ. ವಾಹನ ನಿಲ್ಲಿಸಿದ್ದಕ್ಕೆ ಇಂತಿಷ್ಟೇ ಎಂದು ಶುಲ್ಕ ವಸೂಲಿ ಮಾಡುವ ಪಾಲಿಕೆ ಇಲ್ಲಿನ ಸ್ವಚ್ಚತೆಯ ಕಡೆಗೆ ಯಾಕೆ ಗಮನ ಹರಿಸುತ್ತಿಲ್ಲ? ಇಲ್ಲಿ ಗುತ್ತಿಗೆದಾರರನ್ನು ದೂರಿ ಪ್ರಯೋಜನವಿಲ್ಲ. ಯಾಕೆಂ ದರೆ ಅವರು ಟೆಂಡರ್ ಪಡೆದು ತಮ್ಮ ಕೆಲಸ ನಿರ್ವಹಿಸುತ್ತಾರೆ. ಆದರೆ ಗುತ್ತಿಗೆ ಕೊಟ್ಟು ತನ್ನ ಬೊಕ್ಕಸ ತುಂಬಿಸುವ ಪಾಲಿಕೆ ಇದನ್ನೆಲ್ಲಾ ಗಮನಿಸಬೇಕಲ್ಲವೇ? ಕೇವಲ ವಾಹನ ನಿಲ್ಲಿಸಿದ್ದಕ್ಕೆ ಶುಲ್ಕ ವಸೂಲಿ ಮಾಡುವ ಪಾಲಿಕೆ ಅದೇ ಹಣದ ಸ್ವಲ್ಪ ಭಾಗವನ್ನು ಉಪಯೋಗಿಸಿದರೂ ಇಲ್ಲಿನ ಸ್ವಚ್ಚತೆ ಕಷ್ಟವೇನಲ್ಲ. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಬೇಕಷ್ಟೇ.
ಮಹಮ್ಮದ್ ಹುನೈಸ್, ಬಂದರ್

ಹರಿದು ಹೋಗಿರುವ ಧ್ವಜ
ಮಂಗಳೂರು ಹಳೇ ಬಂದರಿನಲ್ಲಿ ಸಾಲಾಗಿ ನಿಂತಿರುವ ದೋಣಿ ಗಳಲ್ಲಿ ಹಲವು ದೋಣಿಗಳಲ್ಲಿ ನಮ್ಮ ರಾಷ್ಟ್ರಧ್ವಜ ಇದೆ. ಆದರೆ ಬಹುತೇಕ ಧ್ವಜಗಳು ಹರಿದು ಹೋಗಿದ್ದು, ಇದನ್ನು ಯಾರೂ ಗಮನಿಸುತ್ತಿಲ್ಲವೇಕೆ? ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಧ್ವಜಕ್ಕಾಗುವ ಅವ ಮಾನವನ್ನು ತಡೆಗಟ್ಟಬೇಕೆಂದು ಆಶಿಸುತ್ತೇನೆ.
ರೋಡ್ನಿ ಡಿಮೆಲ್ಲೋ, ಬಿಜೈಕಾಪಿಕಾಡ್

ದೇಶದ್ರೋಹಿ ಆರೋಪ ಸರಿಯಲ್ಲ
ನಕ್ಸಲ್ ಬೆಂಬಲಿಗನೆಂದು ಹಣೆಪಟ್ಟಿ ಕಟ್ಟಲಾಗಿರುವ ವಿಠಲ ಮಲೆ ಕುಡಿಯನ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ. ಆದರೆ ೧೯ ವರ್ಷ ಪ್ರಾಯದ ಪತ್ರಿಕೋದ್ಯಮ ವಿದ್ಯಾರ್ಥಿಯ ಮೇಲೆ ಗುರುತರ ಆರೋಪ ಹೊರಿಸುವ ಮುನ್ನ ನಮ್ಮ ಪೊಲೀಸ್ ಇಲಾಖೆ, ಸರಕಾರ ಗಂಭೀರವಾಗಿ ಚಿಂತಿಸಬೇಕಿತ್ತು. ಯಾಕೆಂದರೆ ವಿಠಲನದ್ದು ಬೆಳೆಯುವ ಮನಸ್ಸು. ಆತ ತಿಳಿದೋ, ತಿಳಿಯದೆಯೋ ನಕ್ಸಲರಿಗೆ ತನ್ನ ಬೆಂಬಲ ನೀಡಿರ ಬಹುದು. ಆದರೆ ಹಾಗೆಂದ ಮಾತ್ರಕ್ಕೆ ಆತ ದೇಶದ್ರೋಹದ ಯಾವುದೇ ಕೃತ್ಯವೆಸಗಿಲ್ಲ. ಎಲ್ಲೂ ಬಾಂಬ್‌ಸ್ಫೋಟ ನಡೆಸಿಲ್ಲ. ಹೀಗಿದ್ದರೂ ದೇಶದ್ರೋಹಕ್ಕೆ ಹೊಂಚು ಹಾಕಿದ್ದ ಎಂದು ಗಂಭೀರ ಆರೋಪ ಮಾಡುವುದು ಸರಿಯೇ?
ರಮೇಶ್ ನಾಯ್ಕ, ವರಂಗ

ಊಟ ಮಾಡಿ ಪ್ರಚಾರ ಬಯಸಬೇಡಿ
ಇತ್ತೀಚೆಗೆ ಬಿಜೆಪಿಯ ದ.ಕ. ಜಿಲ್ಲೆಯ ಸಂಸ ದರು ಮತ್ತು ಇವರ ಬಳಗ ಎಪ್ರಿಲ್ ೧೪ರಂದು ಉಪ್ಪಿನಂಗಡಿಯ ಕಜೆಕ್ಕಾರು ನಿವಾಸಿಯವರ ಮನೆ ಯಲ್ಲಿ ಊಟ ಮಾಡಿ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರಗಿಟ್ಟಿಸಿಕೊಂಡರು. ಇದರಿಂದ ಈ ಪಕ್ಷದವ ರಿಗೆ ಮಾತ್ರ ಲಾಭವಾಗಿದೆ ಹೊರತು ಅಲ್ಲಿನ ದಲಿತ ನಿವಾಸಿಗಳಿಗಲ್ಲ. ದಲಿತರಿಗೆ ಬೇಕಾಗಿರುವುದು ಇಂಥ ಜಾತಿವಾದಿಗಳು ತಮ್ಮ ಮನೆಯಲ್ಲಿ ಊಟ ಮಾಡು ವುದು ಅಲ್ಲ. ಬದಲಾಗಿ ಸರಕಾರದಿಂದ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿರಿಸಿದ ಹಲವು ಸವಲ ತ್ತುಗಳನ್ನು ಈ ಜನಾಂಗದವರಿಗೆ ಪ್ರಾಮಾಣಿಕವಾಗಿ ತಲುಪಿಸುವುದಾಗಿದೆ. ಈ ಧುರೀಣರು ಮಾಡಿರುವ ಈ ಕೃತ್ಯದಿಂದ ಎಲ್ಲ ದಲಿತ ವರ್ಗದವರು ತಲೆತಗ್ಗಿ ಸುವಂತಾಗಿದೆ.
ಜನಪ್ರತಿನಿಧಿಗಳು ಕೆಲವು ವಿಚಾರಗಳನ್ನು ತಿಳಿ ದುಕೊಳ್ಳಬೇಕಿದೆ. ಈ ಹಿಂದೆ ಇದ್ದಂತೆ ದಲಿತ ವರ್ಗ ದಲ್ಲಿ ಅನಕ್ಷರಸ್ಥರು ಯಾರೂ ಇಲ್ಲ. ಎಲ್ಲಾ ಮನೆ ಗಳಲ್ಲೂ ವಿದ್ಯಾವಂತರಿದ್ದಾರೆ. ಇವರು ಮಾಡಿರುವ ಈ ಕೃತ್ಯದಿಂದಾಗಿ ಅದೆಷ್ಟೋ ಬಡ ಹೃದಯಗ ಳಿಗೆ ನೋವಾಗಿದೆ ಎಂದು ಇವರಿಗೆ ತಿಳಿದಿದಿಯೇ? ಈಗ ಎಲ್ಲ ಕಾಲೋನಿಗಳಲ್ಲಿ ಎಲ್ಲಾ ವರ್ಗದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶವನ್ನು ನೋಡಲಾಗದ ಈ ರಾಜಕೀಯ ಜಾತಿವಾದಿಗಳು ಅಲ್ಲಿಗೆ ತೆರಳಿ ಪ್ರಚಾರಕ್ಕೋಸ್ಕರ ಜಾತಿ ವಿಷ ಬೀಜವನ್ನು ಭಿತ್ತಿ ಸಮಾಜವನ್ನು ಒಡೆ ಯುತ್ತಿದ್ದಾರೆ. ಈ ಸಂಸದರು ಚುನಾವಣೆಯಲ್ಲಿ ಗೆದ್ದು ಐದು ವರ್ಷವಾಗುತ್ತಾ ಬಂದಿದೆ. ಇಷ್ಟು ವರ್ಷ ಬಡವರ ಮೇಲೆ ಪ್ರೀತಿ ಗೌರವ ಇಲ್ಲದ ಇವರಿಗೆ ಈಗ ಯಾಕೆ ಬಡವರ ಮೇಲೆ ಕರುಣೆ?
ಇದು ನಿಜವಾಗಿ ಇವರಿಗೆ ಅಗತ್ಯವಿತ್ತೇ? ಅದೆಷ್ಟೋ ದಲಿತ ವರ್ಗದ ಯೋಜನೆಗಳು ಹಳ್ಳ ಹಿಡಿಯುತ್ತಾ ಇದೆ. ಇದಕ್ಕೆ ಚಾಲನೆ ನೀಡಿ ಫಲಾನು ಭವಿಗಳಿಗೆ ಯೋಜನೆಗಳ ಸವಲತ್ತುಗಳನ್ನು ದೊರ ಕಿಸಿ ಕೊಟ್ಟು ಈ ರೀತಿಯಲ್ಲಿಯಾದರೂ ಪ್ರಚಾರ ಪಡೆಯ ಬಹುದಲ್ಲವೇ? ದಲಿತ ವರ್ಗದವರು ಸ್ವಾಭಿ ಮಾನದತ್ತ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕಪಟ ರಾಜಕಾರಣದಿಂದ ದಲಿತ ಸಮುದಾಯವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡಿ. ಊಟ ಮಾಡಿ ಪ್ರಚಾರ ಪಡೆಯುವ ಬದಲು, ಈ ವರ್ಗದ ಜನರಿಗೆ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾ ಜಿಕವಾಗಿ ಹಲವು ಯೋಜನೆಗಳನ್ನು ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿ ದರೆ ಸಂಸದರಿಗೆ ಶೋಭೆ ತರುತ್ತದೆ.
ಆಹಾರವನ್ನು ಈ ಭೂಮಿಯಲ್ಲಿರುವ ಪ್ರತಿ ಯೊಂದು ಜೀವಿಯೂ ಸೇವಿಸುತ್ತದೆ. ತಿನ್ನುವ ಅನ್ನದಲ್ಲಿ ಯಾಕೆ ಮೇಲು ಕೀಳು ಎಂದು ಭಾವಿ ಸುತ್ತೀರಿ. ಎಲ್ಲರು ಹೊಟ್ಟೆಗೆ ಸೇವಿಸುವುದು ಅನ್ನವೇ ಎಂಬುದನ್ನು ರಾಜಕಾರಣಿಗಳು ತಿಳಿದು ಕೊಂಡರೆ ಒಳ್ಳೆಯದು. ರಾಜಕೀಯ ನಾಯಕರ ಇಂತಹ ಕೃತ್ಯಗಳನ್ನು ದಲಿತ ಮುಖಂಡರು ನೇರವಾಗಿ ಖಂಡಿ ಸಬೇಕಾಗಿದೆ. ಪ್ರವೀಣ್, ನೆಕ್ಕಿಲಾಡಿ, ಪುತ್ತೂರು

ರಸ್ತೆ ಅಪಘಾತಕ್ಕೆ ದೈವದ ಮುನಿಸು ಕಾರಣವಂತೆ!

Posted by JAYAKIRANA Kirana on | 0 comments | Leave a comment...



ಕಾರ್ಕಳ: ಮಂಗಳೂರು-ಸೋಲಾ ಪುರ ರಾ. ಹೆ. ೧೩ರ ಬೆಳ್ವಾಯಿ ಸಮೀಪದಲ್ಲಿ  ಸಂಭವಿಸುತ್ತಿರುವ ರಸ್ತೆ ಅಪಘಾತದಲ್ಲಿ ಹಲವು ಜೀವ ಕಳೆದುಕೊಂಡಿದೆ. ಇದಕ್ಕೆ ದೈವಗಳ  ಮುನಿಸು ಕಾರಣವಾಗಿದೆಯಂತೆ. ಇಂಥದೊಂದು ಉತ್ತರ ಕಂಡುಬಂದಿರು ವುದು ಆರೂಢ ಪ್ರಶ್ನೆಯ  ಮೂಲಕ. ಆರೂಢ ಪ್ರಶ್ನೆ ಎಂಬುದು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊ  ಳ್ಳುವ ಹಿನ್ನೆಲೆಯಲ್ಲಿ ಇಡಲಾಗುವ ಜೋತಿ ಷ್ಯಶಾಸ್ತ್ರವಾಗಿದೆ.
ಕಳೆದ ಒಂದು ವರ್ಷದಲ್ಲಿ ಬೆಳ್ವಾಯಿ-ಸಾಣೂರು ನಡುವಿನ ರಾ. ಹೆ. ೧೩ರಲ್ಲಿ ಸಂಭವಿಸಿದ  ರಸ್ತೆ ಅಪಘಾತದಲ್ಲಿ ಸಾವಿಗೀ ಡಾದವರ ಸಂಖ್ಯೆ ಹತ್ತಕ್ಕೂ ಜಾಸ್ತಿ. ಭೀಕರ ವಾಗಿ  ಸಂಭವಿಸಿದ ಈ ಅಪಘಾತದಲ್ಲಿ ಒಮ್ಮೆಗೆ ಒಂದಕ್ಕಿಂತ ಹೆಚ್ಚು ಮಂದಿ ಬಲಿ  ಯಾಗುತ್ತಿದ್ದರು. ಪ್ರಯಾಣಿಸುತ್ತಿದ್ದ ವಾಹ ನಗಳು ನುಜ್ಜುಗುಜ್ಜಾಗುತ್ತಿತ್ತು. ಕೇವಲ  ಎರಡು ಕಿ.ಮೀ ಅಂತರದಲ್ಲಿ ರಸ್ತೆ ಅಪಘಾತ ಸಂಭ ವಿಸುತ್ತಿರುವುದು ಸ್ಥಳೀಯರಲ್ಲಿ  ಆತಂಕಕ್ಕೆ ಕಾರಣವಾಗಿತ್ತು.
ರಾ.ಹೆ ಇಲಾಖೆಯ ಬೇಜವಾಬ್ದಾರಿ ಯಿಂದಾಗಿ ಇಂತಹ ಘಟನೆ ಮರುಕಳಿಸುತ್ತಿದೆ ಎಂಬ  ಆರೋಪದ ನಡುವೆ ನಿವೃತ್ತ ಅರಣ್ಯಾಧಿಕಾರಿ ಸದಾಶಿವಯ್ಯ ಅವರ ನೇತೃತ್ವದಲ್ಲಿ  ಸ್ಥಳೀಯ ಕಾರಣಿಕವುಳ್ಳ ಜಾಗವೊಂದರಲ್ಲಿ ಆರೂಢ ಪ್ರಶ್ನೆಯನ್ನು ಇಡಲಾಗಿತ್ತು.  ಸದಾಶಿವಯ್ಯ ಗುರುಪುರ ಮಠಾಧೀಶರ ಖಾಸ ಸಹೋದರರಾಗಿದ್ದಾರೆ. ಗುರುಪುರ ಮಠಕ್ಕೆ  ಸೇರಿದ್ದ ೫೦ ಎಕರೆ ಜಾಗ ಇದೇ ಪರಿಸರದಲ್ಲಿತ್ತಾದರೂ, ಕಾರಣಾಂತರದಿಂದ ಇದೀಗ  ಒಂದಿಷ್ಟು ಜಾಗ ಮಾತ್ರ ಮಠಕ್ಕೆ ಸೇರಿದೆ. ಈ ಜಾಗದಲ್ಲಿ ಪಾಳುಬಿದ್ದ ಮಠದ ಕೆರೆಯೊಂದು  ಕಂಡುಬರುತ್ತಿದೆ. ಕೆರೆಯ ಮುಂಭಾಗದಲ್ಲಿ ಶಿಥಿಲಾವಸ್ಥೆಯಲ್ಲಿ ಬಿದ್ದುಕೊಂಡಿರುವ  ಕಲ್ಲುಗಳು, ಗೋಡೆಗಳು ಅದರ ಮಧ್ಯೆದಲ್ಲಿ ಬೆಳೆದು ನಿಂತಿರುವ ಹೆಬ್ಬಲಸು ಮರಗಳು  ಕಾಣಬಹುದಾಗಿದೆ. ಇಂತಹ ನಿಗೂಢ ಜಾಗದಲ್ಲಿ ಸುಮಾರು ೬೦೦ ವರ್ಷಗಳ ಹಳೆಯದಾದ ಶಿವನ  ದೇವಸ್ಥಾನವಿತ್ತು. ರಾಜಅರಸ ದೈವನಾಗಿರುವ ಕುಕ್ಕಿಂನತ್ತಾಯ ಗುಡಿಯೊಂದಿತ್ತು. ೨೦೦  ಮೀಟರ್ ದೂರದಲ್ಲಿ ಜಂಗಮ ಮಠವೊಂದಿತ್ತು. ಅದರ ಮುಂಭಾಗದಲ್ಲಿ ಪಂಜುರ್ಲಿ ಹಾಗೂ  ಕಲ್ಲುರ್ಟಿ ದೈವದ ಗುಡಿಯೊಂದಿತ್ತು. ಬಾವಿಗಳು ಇತ್ತು. ದೇವಸ್ಥಾನದ ಎದುರುಗಡೆ ಅಂದರೆ  ರಾ.ಹೆ.ಯ ಮತ್ತೊಂದು ಬದಿಯಲ್ಲಿ ನಾಗಬನ, ರಕ್ತೇಶ್ವರಿ ಗುಡಿ ಇತ್ತು. ಎಂಬುವುದು ಆರೂಢ  ಪ್ರಶ್ನೆಯಲ್ಲಿ ತಿಳಿದುಬಂದಿರುವ ಉತ್ತರವಾಗಿದೆಯಂತೆ.
ವೀರಶೈವ ಜನಾಂಗದವರು ಸುಮಾರು ೬೦೦ ವರ್ಷಗಳ ಹಿಂದೆ ಅವಿಭಜಿತ ದ.ಕ ಜಿಲ್ಲೆಗೆ ಅಗಮಿಸಿ  ಶಿವಾಲಯದ ಜೊತೆಗೆ ಸ್ಥಳೀಯ ದೈವಗಳನ್ನು ಆರಾಧಿಸಿಕೊಂಡು ಬಂದಿರುವುದಕ್ಕೆ  ಕೆಲವೊಂದು ಕುರುಹುಗಳು ಇದೇ ಪರಿಸರದಲ್ಲಿ ಕಂಡುಬಂದಿದೆ. ಅದ್ಯಾವುದೋ  ಕಾರಣಗಳಿಂದಾಗಿ ವೀರಶೈವ ಜನಾಂಗಕ್ಕೆ ಸೇರಿರುವ ಗುರುಪುರದ ಜಂಗಮ ಮಠವನ್ನು  ಹೊರತುಪಡಿಸಿ ಉಳಿದೆಲ್ಲ ಮಠಗಳು ಪಾಳುಬೀಳಲು ಶುರುವಾಯಿತು. ಹೀಗಾಗಿ ದೈವಗಳಿಗೂ  ನೆಲೆ ಇಲ್ಲದಂತಾಗಿರಬಹುದು. ತಮ್ಮ ಇರುವಿಕೆಯನ್ನು ತೋರ್ಪಡಿಸಲು ಮುಂದಾಗಿರುವ  ದೈವಗಳು ಮಾನವ ಜೀವಕ್ಕೆ ಕಂಟಕನಾದಾಗ ಮಾತ್ರವೇ ಅದರ ಶಕ್ತಿ ಎಷ್ಟರಮಟ್ಟಿಗೆ  ಇರುತ್ತದೆ ಎಂಬುವುದನ್ನು ಮನುಷ್ಯ ಅರಿತುಕೊಳ್ಳುತ್ತಾನೆ.

ಹತ್ಯಾ ಆರೋಪಿಗಳಿಗೆ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪೊಲೀಸರಿಗೆ ಶರಣಾ ಗಿರುವ ರೌಡಿ ಗುರುಪ್ರಸಾದ್ ಹತ್ಯಾ ಆರೋಪಿಗಳನ್ನು  ಬಂದರು ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ನ್ಯಾಯಾಲಯ  ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತಲಪಾಡಿ ದೇವಿನಗರ ನಿವಾಸಿ ಶೈಲೇಶ್ ಗಾಣಿಗ (೨೨), ಉಳ್ಳಾಲ ಮೊಗವೀರ ಪಟ್ನ  ಶಿವಾಜಿನಗರ ನಿವಾಸಿ ಪ್ರಸಾದ್ ಯಾನೆ ಪಚ್ಚು (೨೧), ಕೋಡಿಕಲ್ ನಿವಾಸಿ ರಾಕೇಶ್ ಮೊಯ್ಲಿ  (೨೩), ಕುಂಪಲ ಮಿತ್ರನಗರ ನಿವಾಸಿ ಚರಣ್ ರಾಜ್ (೨೫), ಉಳ್ಳಾಲ ಬೈಲ್ ನಿವಾಸಿ ಪ್ರಸಾದ್ (೨೬)  ಎಂಬವರು ಗುರು ಪ್ರಸಾದ್ ನನ್ನು ಕೊಲೆಗೈದಿದ್ದರು.
ಘಟನೆಯ ಬಳಿಕ ಆರೋಪಿಗಳು ತಲೆ ಮರೆಸಿಕೊಳ್ಳುವ ಕೆಲಸ ಮಾಡದೆ ಕೆಲ ತಾಸಿ ನೊಳಗೆ  ಪೊಲೀಸರಿಗೆ ಶರಣಾಗಿದ್ದರು. ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದ ದ್ವೇಷ ದಿಂದ ಈ  ಹತ್ಯೆ ನಡೆಸಿದ್ದಾರೆ ಎನ್ನಲಾಗು ತ್ತಿದೆಯಾದರೂ ಈ ಕೊಲೆಯ ಹಿಂದೆ ಇನ್ನಷ್ಟು ವಿಚಾರ  ಅಡಕವಾಗಿರುವ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ನಿನ್ನೆ  ಸಂಜೆ ನ್ಯಾಯಾಲ ಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾ ಲಯ ಆರೋಪಿಗಳಿಗೆ  ನ್ಯಾಯಾಂಗ ಬಂಧನ ವಿಧಿಸಿದೆ.

ಮಹಿಳೆಗೆ ಮೊಬೈಲ್ ಕರೆ: ಉಗಿಸಿಕೊಂಡ ಉದ್ಯಮಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಿಳೆಯೋರ್ವರು ಮೊಬೈಲ್ ರೀಚಾರ್ಜ್‌ಗಾಗಿ ನೀಡಿದ ನಂಬರನ್ನು ನಕಲು  ಮಾಡಿಕೊಂಡ ಉದ್ಯಮಿಯೋರ್ವ ಆ ನಂಬರಿಗೆ ಕರೆ ಮಾಡಿ ಮಹಿಳೆ ಜೊತೆ ಸ್ನೇಹ  ಸಂಪಾದಿಸಲು ಹೋಗಿ ಪೊಲೀಸರಿಂದ ಹಾಗೂ ಮಹಿಳೆಯ ಕುಟುಂಬಸ್ಥರಿಂದ ಉಗಿಸಿಕೊಂಡ  ಪ್ರಕರಣ ನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮಂಗಳವಾರ ಸಂಜೆ ಸ್ಟೇಟ್‌ಬ್ಯಾಂಕ್ ಬಳಿಯ ಮಸೀದಿ ಎದುರಿನ ಕಟ್ಟಡದಲ್ಲಿರುವ  ಮೊಬೈಲ್ ಅಂಗಡಿಗೆ ಬಂದ ಮುಸ್ಲಿಂ ಮಹಿಳೆಯೋರ್ವರು ತನ್ನ ಹಾಗೂ ಇನ್ನೊಬ್ಬರ  ನಂಬರನ್ನು ಕೊಟ್ಟು ರೀಚಾರ್ಜ್‌ಗೆ ಹಣ ನೀಡಿ ಹೋಗಿದ್ದರು. ಅವರು ಹೋದ ಕೆಲವೇ  ಕ್ಷಣಗಳಲ್ಲಿ ಮಹಿಳೆ ಕೊಟ್ಟ ನಂಬರಿಗೆ ಅಪರಿಚಿತ ಗಂಡಸಿನ ಕರೆಯೊಂದು ಬಂ ದಿತ್ತು.  ಮಹಿಳೆ ರಾಂಗ್ ನಂಬರೆಂದು ಕರೆಯನ್ನು ಕಟ್ ಮಾಡಿದ್ದರು. ಆದರೆ ಕರೆ ಮಾಡಿದ್ದ ಅಸಾಮಿ  ಮತ್ತೆ ಮತ್ತೆ ಅದೇ ನಂಬ ರಿಗೆ ಕರೆ ಮಾಡಿ ಮಹಿಳೆ ಜೊತೆ ಅನು ಚಿತವಾಗಿ ಮಾತನಾಡಿ  ಸ್ನೇಹ ಸಂಪಾದಿಸುವ ಪ್ರಯತ್ನ ನಡೆಸಿದ್ದ.
ಇದರಿಂದ ಕಂಗೆಟ್ಟ ಮಹಿಳೆ ತನ್ನ ಗಂಡನಿಗೆ ಮಾಹಿತಿ ನೀಡಿದ್ದರು. ಮತ್ತೆ ಅಸಾಮಿಯ ಕರೆ  ಬಂದಾಗ ಆತನ ಜೊತೆ ಪ್ರೀತಿಯಿಂದ ಮಾತನಾಡಿದಂತೆ ನಟಿಸಿದ ಮಹಿಳೆ ಮೊಬೈಲನ್ನು  ಗಂಡನಿಗೆ ನೀಡಿದ್ದರು. ಅಸಾಮಿಗೆ ಮನಬಂದಂತೆ ಉಗಿದ ಮಹಿಳೆಯ ಗಂಡ ಅಷ್ಟಕ್ಕೇ ಬಿಡದೆ  ಪಾಂಡೇಶ್ವರ ಠಾಣೆಗೆ ದೂರು ನೀಡಿದರು. ನಿನ್ನೆ ಬೆಳಗ್ಗೆ ಅಸಾಮಿಯ ವಿಳಾಸ ಪತ್ತೆ  ಹಚ್ಚಿದ ಪೊಲೀಸರು ಆತನನ್ನು ಠಾಣೆಗೆ ಬರಮಾಡಿಕೊಂಡರು.
ಮಹಿಳೆಗೆ ಕರೆ ಮಾಡಿದ್ದ ಅಸಾಮಿ ನಗರದ ಮುಸ್ಲಿಂ ಉದ್ಯಮಿ ಎನ್ನುವ ಸತ್ಯ ತಿಳಿದ ಆತನ  ಸ್ನೇಹಿತರು ಠಾಣೆಗೆ ದೌಡಾಯಿಸಿ ದೂರು ನೀಡಿದವರಲ್ಲಿ ಕಾಡಿ ಬೇಡಿ ಹೇಗಾದರೂ ಮಾಡಿ  ದೂರನ್ನು ವಾಪಾಸು ತೆಗೆದುಕೊಳ್ಳುವಂತೆ ಗೋಗರೆದರು. ಅವರ ಅಂಗಲಾಚುವಿಕೆಗೆ ಕನಿಕರಪಟ್ಟ  ಮಹಿಳೆಯ ಕಡೆಯವರು ಎಫ್‌ಐಆರ್ ಬೇಡ ಎಂದ ಕಾರಣ ಕರೆ ಮಾಡಿದ ಉದ್ಯಮಿಗೆ ಪೊಲೀಸರು  ಉಗಿದು ಬಿಟ್ಟಿದ್ದಾರೆ. ಅಂದಹಾಗೆ ಆತ ಮೊಬೈಲ್ ಅಂಗಡಿ ಬಳಿ ನಿಂತು ಮಹಿಳೆ ರೀಚಾರ್ಜ್‌ಗೆ  ನಂಬರ್ ಹೇಳಿದಾಗ ಅದನ್ನು ನೋಟ್ ಮಾಡಿದನೇ ಅಥವಾ ಮೊಬೈಲ್ ಅಂಗಡಿಯವನೇ  ಮಹಿಳೆಯ ನಂಬರ್ ನೀಡಿದನೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ನಂಬರ್ ನೀಡುವಾಗಲೂ ಎಚ್ಚರ ಅಗತ್ಯ!
ಮಹಿಳೆಯರು ಹಾಗೂ ಯುವತಿಯರು ಮೊಬೈಲ್ ಅಂಗಡಿಯಲ್ಲಿ ರೀಚಾರ್ಜ್‌ಗಾಗಿ ನಂಬರ್  ನೀಡಿದರೆ ಅದನ್ನೇ ಬಳಸಿ ಅವರಿಗೆ ಕರೆ ಮಾಡಿ ಅನಾಹುತಕ್ಕೆ ಕಾರಣವಾಗಿರುವ ಅದೆಷ್ಟೋ  ಘಟನೆಗಳು ಹಿಂದೆಯೂ ನಡೆದಿದ್ದು ಈಗಲೂ ಮುಂದುವರಿದಿದೆ. ಕೆಲವೊಮ್ಮೆ ಮೊಬೈಲ್  ಅಂಗಡಿ ಮಾಲೀಕ ಹೊರಗೆ ಹೋದಾಗ ತಾತ್ಕಾಲಿಕವಾಗಿ ರೀಚಾರ್ಜ್ ಮಾಡಲು ನಿಲ್ಲುವವರು  ಮಹಿಳೆಯರು ನೀಡುವ ನಂಬರನ್ನು ದುರುಪಯೋಗಪಡಿಸುತ್ತಿದ್ದರೆ, ಇನ್ನು ಕೆಲವೊಮ್ಮೆ  ಮೊಬೈಲ್ ಅಂಗಡಿಯ ಸುತ್ತ ಕೆಲಸವಿಲ್ಲದೆ ಗಿರಕಿ ಹೊಡೆಯುವವರೂ ಯಾರ‍್ಯಾರದ್ದೋ  ನಂಬರನ್ನು ನೋಟ್ ಮಾಡಿಟ್ಟು ತೊಂದರೆ ಕೊಡುವುದು ಮಾಮೂಲಿಯಾಗಿದೆ. ಇದು  ಮುಂದುವರಿದಲ್ಲಿ ಮುಂದೆ ಹೆಚ್ಚಿನ ಅನಾಹುತಗಳು ನಡೆಯುವುದು ಗ್ಯಾರಂಟಿಯಾಗಿದ್ದು,  ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮೊಬೈಲ್ ಅಂಗಡಿಗಳ ಬಗ್ಗೆ ನಿಗಾ ಇಡುವ ಅಥವಾ  ಮಾಲೀಕರಿಗೆ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎನ್ನುವುದು ಸಾರ್ವಜನಿಕರ  ಆಗ್ರಹವಾಗಿದೆ.

ಯುವಕನ ಕೊಲೆ?

Posted by JAYAKIRANA Kirana on | 0 comments | Leave a comment...

ಕುಂದಾಪುರ: ನಿನ್ನೆ ಬೆಳಿಗ್ಗೆ ಕುಂದಾ ಪುರದ ಕಟ್ಟಬೆಲ್ತೂರು ರೈಲ್ವೇ ಸೇತುವೆ ಅನತಿ ದೂರದಲ್ಲಿ ಅಪರಿಚಿತ ಯುವಕನ ಶವವೊಂದು ಗೋಚರಿಸಿದ್ದು, ಇದು ಅನೇಕ ಶಂಕೆಗಳಿಗೆ ಕಾರಣವಾಗಿದೆ.
ಸುಮಾರು ೩೨ ವರ್ಷ ಪ್ರಾಯದ ಯುವಕನನ್ನು ಕೊಲೆಗೈದು ಯಾರೋ ಈ ಭಾಗದಲ್ಲಿ ಬಿಸಾಡಿದ್ದಾರೆ ಎಂಬ ಶಂಕೆ ಮೂಡಿದೆ. ಇನ್ನು ಕೆಲವರ ಪ್ರಕಾರ ರೈಲು ಸಾಗುತ್ತಿರುವಾಗ ಯುವಕ ಹಾಗೂ ಸ್ನೇಹಿತರೊಂದಿಗೆ ಕಲಹವೇರ್ಪಟ್ಟು ಈತ ನನ್ನು ಅನಾಮತ್ತಾಗಿ ಚಲಿಸುವ ರೈಲಿನಿಂದ ತಳ್ಳಿರುವ ಸಂಭವವೂ ಇದೆ ಎನ್ನಲಾಗಿದೆ. ಈತನು ಧರಿಸಿದ ಅಂಗಿಯಲ್ಲಿ ಪಣಜಿ ಗೋವಾದ ಟೈಲರ್ ಅಂಗಡಿಯ ಲೇಬಲ್‌ವೊಂದು ದೊರಕಿದ್ದು, ಗೋವಾದವನೆಂದು ನಂಬಲಾಗಿದೆ. ಆದರೆ ಸ್ಥಳೀಯರ ಪ್ರಕಾರ ಈತನನ್ನು ಹೊಡೆದೇ ಕೊಲೆ ಮಾಡಲಾಗಿದೆ ಎಂಬ ಅನುಮಾನವೇ ದೃಢವಾಗಿದ್ದು, ಕೇವಲ ಮೂರು ದಿನಗಳ ಹಿಂದಷ್ಟೇ ಕುಂದಾಪುರ ಸಂಗಂ ಬಳಿ ಶರಣ್ ಶೆಟ್ಟಿ ಎಂಬಾತನ ಹತ್ಯೆ ಪ್ರಕರಣ ಜೀವಂತ ಇರುವಾಗಲೇ ಇದೀಗ ಮತ್ತೊಂದು ಕೊಲೆಯ ಸುದ್ದಿ ಕುಂದಾಪುರದ ನೆಲವನ್ನು ತಲ್ಲಣಗೊಳಿಸಿದೆ.

ಮಂಡೆಕೋಲು ಜಾತ್ರೆಯಲ್ಲಿ ಯೋಧರ ಹೊಡೆದಾಟ-ಅಡ್ಡನ ಪೆಟ್ಟು

Posted by JAYAKIRANA Kirana on | 0 comments | Leave a comment...




ಸುಳ್ಯ: ಸುಮಾರು ಐದು ನಿಮಿಷಗಳ ಕಾಲ ಈ ಹೊಡೆತ ಬಹಳ ಬಿರುಸಿನಿಂದ ಸಾಗಿ, ನೋಡಲು ನೆರೆದಿದ್ದ ಜನರ ಕುತೂಹಲ ಕೆರಳಿಸಿ ಉಸಿರು ಬಿಗಿ ಹಿಡಿಯುವಂತೆ ಮಾಡುತ್ತದೆ. ಇದೇ ಅಡ್ಡನಪೆಟ್ಟು. ಕೆಲವು ನಿಮಿಷ ನಡೆಯುವ ಈ ಅಡ್ಡನ ಹೊಡೆತ ರೋಮಾಂಚಕ. ಬುಧವಾರ ನಡೆದ ಮಂಡೆಕೋಲು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ಉಳ್ಳಾಕ್ಲು ದೈವದ ನೇಮ ಸಂದರ್ಭ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಹೊಡೆದಾಡಿಕೊಳ್ಳುವ ಎರಡೂ ಕಡೆಯ ಯೋಧರನ್ನು ಹಿಡಿದು ಎಳೆಯಲಾಗುತ್ತದೆ. ಅದೇ ಹೊತ್ತಿನಲ್ಲಿ ಬೆನ್ನು ಹಾಕಿ ನಿಂತ ಉಳ್ಳಾಕ್ಲು ದೈವ ತಿರುಗಿ ಬಂದು ಹೊಡೆದಾಟದ ಮಧ್ಯೆ ಮುನ್ನುಗ್ಗಿ ಬಿಡಿಸುತ್ತದೆ. ಬಳಿಕ ದೇವಸ್ಥಾನದ ಕೊಡಿಯಡಿಗೆ ತೆರಳುವ ದೈವವನ್ನು ಯೋಧರು ಹಿಂಬಾಲಿಸುತ್ತಾರೆ.
ಇಲ್ಲಿ ಅಡ್ಡನ ಹೊಡೆತದ ಯೋಧರು ಅನೇಕ ಕ್ರಿಯೆಗಳನ್ನು ಏಕಕಾಲದಲ್ಲಿ ಎದುರಿಸಬೇಕಾಗುತ್ತದೆ. ತಮ್ಮ ಅಡ್ಡನವನ್ನು ಎದೆಯ ಮಟ್ಟಕ್ಕೆ ಎತ್ತಿ ಹಿಡಿದು ಕೆಳಕ್ಕೆ ಬೀಳದಂತೆ ನೋಡಿಕೊಂಡು ಎದುರಿನ ವ್ಯಕ್ತಿಯ ಅಡ್ಡನಕ್ಕೆ ಶಕ್ತಿಮೀರಿ ಹೊಡೆಯಬೇಕು. ಜೊತೆಗೆ ಆತನ ಹೊಡೆತದಿಂದ ತನ್ನ ದೇಹವನ್ನು ತಪ್ಪಿಸಿಕೊಳ್ಳಬೇಕು. ಅದಕ್ಕು ಹೆಚ್ಚಾಗಿ ಸಾವಿರಾರು ವಿಮರ್ಶಕರ ಕಣ್ಣನ್ನೂ ಎದುರಿಸಿ ತಮ್ಮ ಮನೆತನದ ಗೌರವವನ್ನು ಉಳಿಸಿಕೊಳ್ಳಬೇಕು. ಈ ಅಡ್ಡನ ಹೊಡೆತಕ್ಕೆ ನಾಲ್ಕು ಊರಿನ (ಮಾವಜಿ, ಕೇನಾಜೆ, ಮುರೂರು, ಬೊಳುಗಲ್ಲು ಬೈಲುಗಳ ಗೌಡ ಜನಾಂಗದ) ಯುವಕರು ನಿಲ್ಲುತ್ತಾರೆ. ಸಂಪ್ರದಾಯದ ಪ್ರಕಾರ ಈ ನಾಲ್ಕೂ ಊರುಗಳು ಎರಡೆರಡು ಪಕ್ಷಗಳಾಗಿ ರೂಪಿಸಲ್ಪಟ್ಟಿವೆ. ದೈವಕ್ಕೆ ಸಂಬಂಧಪಟ್ಟ ಹೆಚ್ಚಿನ ಹಕ್ಕು ಬಾಧ್ಯತೆ ಈ ನಾಲ್ಕೂರಿಗೆ ಸಲ್ಲುತ್ತದೆ. ದೈವದ ನೇಮ ನಡೆಯುವ ಮೂರು ದಿನಕ್ಕೆ ಮೊದಲೇ ಈ ಊರುಗಳ ಒಬ್ಬೊಬ್ಬ ಪ್ರತಿನಿಧಿ ಪರಿಶುದ್ಧರಾಗಿ ಅಡ್ಡನ ಹೊಡೆ ತಕ್ಕೆ ಸಿದ್ಧರಾಗಬೇಕು. ನೇಮದಂದು ಇವರು ಖಾಕಿ ಚಡ್ಡಿ ಧರಿಸಿ ಅದಕ್ಕೆ ಕೆಂಪು ಪಟ್ಟಿ ಕಟ್ಟಿ, ತಲೆಗೆ ಬಿಳಿ ಮುಂಡಾಸು ಸುತ್ತಿ, ಹಣೆಗೆ ಉದ್ದ ನಾಮ ತೊಟ್ಟು ಭೂಷಿತರಾಗಿರುತ್ತಾರೆ. ಇದರೊಂದಿಗೆ ಅಡ್ಡಣಕ್ಕೆ ಎಣ್ಣೆ ಹೊಯ್ದು ಹದವಾಗಿರಿಸಿರುತ್ತಾರೆ.
ಹಿನ್ನೆಲೆ: ಒಂದು ವರ್ಷ ನೇಮ ನಡೆಯುವ ಸಂದರ್ಭ ಯಾವುದೋ ಒಂದು ಕಾರಣಕ್ಕೆ ನಾಲ್ಕು ಊರುಗಳ ಮಧ್ಯೆ ಪರಸ್ಪರ ವ್ಯಾಜ್ಯ ಉಂಟಾಗಿ ಹೊಡೆದಾಟ ನಡೆದಿರಬೇಕು. ಅದನ್ನು ಉಳ್ಳಾಕುಲು ಭೂತಧಾರಿ ತಡೆದಿರ ಬೇಕು. ಯಾವುದೇ ಒಂದು ಘಟನೆ ನಡೆದಾಗ ಈ ಘಟನೆಯನ್ನು ಮತ್ತೆ ಮತ್ತೆ ಸಾಂಕೇತಿಕವಾಗಿ ಪುನರಾವೃತ್ತಿ ಗೊಳಿಸುವುದು ನಮ್ಮ ಜನಪದ ಸಂಪ್ರದಾಯ. ಮತ್ತೆ ಅದೇ ಘಟನೆ ಮುಂದುಯುವರಿಯದಂತೆ ಜನರಿಗೆ ನೀತಿ ಭೋದೆ ಮಾಡುವುದೇ ಇದರ ಉದ್ದೇಶವಾಗಿರುತ್ತದೆ. ಅದರ ಪ್ರಕಾರ ಈ ಘಟನೆಯು ಸಾಂಕೇತಿಕವಾಗಿ ಪ್ರತಿ ವರ್ಷ ಅವೃತ್ತಿಗೊಂಡು ಮತ್ತೆ ಇಂತಹ ದುರ್ಘಟನೆ ನಡೆಯಬಾರದೆಂಬ ಉದ್ದೇಶದಿಂದ ಜನಪದವಾಗಿ ಅಡ್ಡನ ಹೊಡೆತ ಮುಂದುವರೆದಿರಬೇಕು ಎನ್ನುತ್ತಾರೆ ಜಾನಪದ ಸಂಶೋಧಕ ಡಾ.ಸುಂದರ್ ಕೇನಾಜೆ. ಉಳ್ಳಾಕುಲು ಭೂತದ ಕಥೆಯು ಈ ಹೇಳಿಕೆಯನ್ನೇ ಸಮರ್ಥಸಿದರೂ ಇಲ್ಲಿ ಉಳ್ಳಾಕುಲು ಭೂತಧಾರಿ ಎಂಬ ಬದಲು ಇರ್ವೆರ್ ಉಳ್ಳಾಕುಲು ಎಂದು ಹೇಳಿ ಲೌಕಿದ ಬದಲು ಅಲೌಕಿಕವನ್ನು ಹೇಳುತ್ತದೆ.
ಒಟ್ಟಿನಲ್ಲಿ ಯಾವುದೋ ಒಂದು ಕಾಲದ ಸಾಂಸ್ಕೃತಿಕ ಚರಿತ್ರೆಯನ್ನು ಪ್ರತಿಬಿಂಬಿಸುವ ಸಾಂಕೇತಿಕ ನಡವಳಿಕೆಯಾದ ಅಡ್ಡನ ಹೊಡೆತ ರೋಮಾಂಚಕ, ಉತ್ಸಾಹಭರಿತ ಹಾಗೂ ಅದ್ಭುತ ಅನುಭವ. ಇದನ್ನು ವೀಕ್ಷಿಸಲು ರಾಜ್ಯದ ಹಾಗೂ ಕೇರಳದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ದೇವಲೋಕ ಜೋಡಿ ಕೊಲೆ: ಗುರುತು ಪೆರೇಡ್

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಪೆರ್ಲ ದೇವಲೋಕ ಜೋಡಿ ಕೊಲೆ ಪ್ರಕರಣದಲ್ಲಿ ಬಂಧಿತನಾದ ಕರ್ನಾಟಕ ಸಾಗರ ನಿವಾಸಿ , ದುರ್ಮಂತ್ರ ವಾದಿ ಇಮಾಂ ಹುಸೇನ್‌ನನ್ನು ನಾಳೆ (೨೭) ಗುರುತು ಹಚ್ಚುವ ಪರೇಡ್‌ಗೆ ಒಳಪಡಿಸ ಲಾಗುವುದು. ಕಾಸರಗೋಡು ಉಪ ಬಂಧೀಖಾನೆಯಲ್ಲಿ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಮೂರ್ತಿ ಕೆ. ಸೋಮನ್ ಅವರ ಉಪಸ್ಥಿತಿಯಲ್ಲಿ ಗುರುತು ಪೆರೇಡ್ ನಡೆಯಲಿದೆ.
ಜೋಡಿ ಕೊಲೆ ನಡೆದು ೧೯ ವರ್ಷಗಳ ಬಳಿಕ ಬಂಧಿತನಾದ ಇಮಾಂ ಹುಸೇನ್‌ನನ್ನು ಈತನನ್ನೇ ಹೋಲುವ ಇತರ ಒಂಭತ್ತು ಮಂದಿಯ ಜತೆಗೆ ಪೆರೇಡ್‌ಗಾಗಿ ನಿಲ್ಲಿಸಲಾಗುವುದು. ಇದಕ್ಕಾಗಿ ಇಮಾಂನನ್ನು ಹೋಲುವ ಒಂಭತ್ತು ಮಂದಿಯನ್ನು ಸಿಧ್ಧಪಡಿಸಲಾಗಿದೆ.
ಹತ್ಯೆಯಾದ ದೇವಲೋಕ ದಂಪತಿ ಪುತ್ರ, ಇಮಾಂ ಹುಸೇನ್‌ನನ್ನು ವಿಟ್ಲದಿಂದ ಕೊಲೆ ನಡೆದ ದಿನದಂದು ಕಾರಿನಲ್ಲಿ ತಂದಿಳಿಸಿದ್ದ ಅಂಬಾಸಿಡರ್ ಕಾರಿನ ಚಾಲಕ ಸಹಿತ ನಾಲ್ಕರಷ್ಟು ಮಂದಿಯು ಆರೋಪಿಯನ್ನು ಗುರುತಿಸಬೇಕಾಗಿದೆ. ಎಲ್ಲ ಸಾಕ್ಷಿಗಳೂ ಈತನನ್ನು ಗುರುತಿಸಿದಲ್ಲಿ ಇದು ಪ್ರಕರಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಹತ್ಯೆಗೆ ಸಾಕ್ಷಿಗಳಿಲ್ಲದ ಪ್ರಕರಣದಲ್ಲಿ ಆರೋಪಿ ವಿರುಧ್ಧ ಸುಳಿವುಗಳ ಆಧಾರದಲ್ಲಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಸರಕಾರಿ ಕೆರೆ ಅತಿಕ್ರಮಣಕ್ಕೆ ತಡೆ

Posted by JAYAKIRANA Kirana on | 0 comments | Leave a comment...


ಇನ್ನಷ್ಟು ಅತಿಕ್ರಮಣ ತಡೆಗೆ ಸಿದ್ಧವಾದ ಮನಪಾ
ಮಂಗಳೂರು: ನಿನ್ನೆ ನಡೆದ ಕಾರ್ಯಾಚರಣೆಯ ಮೂಲಕ ಹಲವು ವರ್ಷಗಳಿಂದ ಖಾಸಗಿಯ ವರ ಕೈಯಲ್ಲಿದ್ದ ಕೆರೆಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಮನಪಾ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳ ಹಿಂದೆ ಮಂಗಳಾದೇವಿ ಸಮೀಪ ಸರ್ವೇ ನಂಬ್ರ ೮೯-೫ಎ. ನಂಬರಿನಲ್ಲಿದ್ದ ೧.೩೩ ಎಕ್ರೆ ಜಾಗದಲ್ಲಿ ಹೆಸರಾಂತ ಜಪ್ಪು ಪಟ್ನ ಎನ್ನುವ ಕೆರೆಯೊಂದಿತ್ತು. ಆದರೆ ಕಾಲಾನಂತರ ನೂರ್‌ಮಹಲ್ ಎನ್ನುವ ಕಟ್ಟಡವೊಂದು ಇಲ್ಲಿ ತಲೆ ಎತ್ತಿದ್ದು ಈ ಸಂದರ್ಭ ಕೆರೆಗೆ ಮಣ್ಣು ಹಾಕಿಸಿದ್ದ ಕಟ್ಟಡ ಮಾಲೀಕರು ಅದಕ್ಕೆ ಸುತ್ತಲೂ ಆವರಣ ಗೋಡೆ ಕಟ್ಟಿ ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿ ಕೊಂಡಿದ್ದರು.
ಇತ್ತೀಚೆಗೆ ಈ ಕೆರೆಯ ಬಗ್ಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಉಲ್ಲೇಖಗೊಂಡಿದ್ದು, ಈ ಹಿನ್ನೆಲೆ ಯಲ್ಲಿ ಕೆರೆಯಿದ್ದ ಜಾಗವನ್ನು ಹುಡು ಕುವಂತೆ ಜಿಲ್ಲಾಧಿಕಾರಿಯವರು ಮನ ಪಾಕ್ಕೆ ಆದೇಶ ನೀಡಿದ್ದರು. ಅವರ ಆದೇಶದಂತೆ ನಿನ್ನೆ ಬೆಳಗ್ಗೆ ಪಾಲಿಕೆಯ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ್, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ನರೇಶ್ ಶೆಣೈ ಮತ್ತು ಕಿರಿಯ ಅಭಿಯಂತರ ರಾದ ಲಕ್ಷ್ಮಣ ಪೂಜಾರಿ ಎಂಬವರು ಜಾಗವನ್ನು ಹುಡುಕುವಲ್ಲಿ ಯಶಸ್ವಿ ಯಾಗಿದ್ದರು. ಆ ವೇಳೆ ಪ್ರಸ್ತುತ ಜಾಗ ದಲ್ಲಿ ನೂರ್‌ಮಹಲ್‌ನವರ ಕಟ್ಟಡಕ್ಕೆ ಬೇಕಾಗಿ ಆವರಣ ಗೋಡೆ ಕಟ್ಟಲಾ ಗಿದ್ದು ಕಂಡು ಬಂದಿತ್ತು. ಜೆಸಿಬಿ ತರಿಸಿ ಕಾರ್ಯಾಚರಣೆ ನಡೆಸುವ ಮೂಲಕ ಅತಿಕ್ರಮಣಗೊಂಡಿದ್ದ ಕೆರೆಯನ್ನು ಮುಕ್ತಗೊಳಿಸಲಾಯಿತು. ಕೆರೆಯನ್ನು ಸುಂದರವಾಗಿ ನಿರ್ಮಿಸಲು ಪಾಲಿಕೆ ಯೋಜನೆ ರೂಪಿಸಿದ್ದು ಅದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಮುಂದಿನ ವಾರ ಪೂರ್ಣ ಪ್ರಮಾಣದ ಕಾಮ ಗಾರಿ ಆರಂಭಿಸಲಾಗುವುದು ಎಂದು ಕಿರಿಯ ಅಭಿಯಂತರರಾಗಿರುವ ಲಕ್ಷ್ಮಣ ಪೂಜಾರಿ ಪತ್ರಿಕೆಗೆ ತಿಳಿಸಿದ್ದಾರೆ. ನಿನ್ನೆಯ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು ಇದೇ ರೀತಿ ನಗರದಲ್ಲಿ ಅತಿಕ್ರಮಣಗೊಂಡಿರುವ ಎಲ್ಲಾ ಕಟ್ಟಡಗಳ ವಿರುದ್ಧವೂ ಕಾರ್ಯಾ ಚರಣೆ ನಡೆಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4075) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2522) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (93) kyandi (1) lekhana (262) ln (1) lnews (3693) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (808) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (954) tpchandrashekaran (1) traffic (1) train (1) udu (1) udupi (487) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)