ಎ.೨೬ರಂದು ಸೌರಭ ಪ್ರಶಸ್ತಿ ಪ್ರದಾನ

Posted by JAYAKIRANA Kirana on Tuesday, 24 April 2012 | 0 comments | Leave a comment...

ಮಂಗಳೂರು: ಸುಮಸೌರಭ ಕನ್ನಡ ಸಾಹಿತ್ಯ ಪಾಕ್ಷಿಕ ಪತ್ರಿಕೆಯ ‘ವಿಂಶತಿ ಸಂಭ್ರಮ’ ಪ್ರಯುಕ್ತ ‘ಸೌರಭ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ‘ಸಾಂಸ್ಕೃತಿಕ ವೈಭವ-೨೦೧೨’ ಕಾರ್ಯ ಕ್ರಮವು ಎ.೨೬ರಂದು ಮಧ್ಯಾಹ್ನ ಮೂರು ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಪತ್ರಿಕೆಯ ಸಂಪಾದಕ ಎಂ.ಜೆ.ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ ೬.೦೦ಕ್ಕೆ ನಡೆಯಲಿರುವ ‘ಸೌರಭ ಪ್ರಶಸ್ತಿ’ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಲಿದ್ದು, ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಉಪಸ್ಥಿತಿಯಲ್ಲಿ ಧಾರವಾಡದ ಶಾಸಕ ಚಂದ್ರಕಾಂತ ಗುರಪ್ಪ ಬೆಲ್ಲದವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ನೆರವೇರಿಸಲಿರುವರು. ಡಾ. ಸಿದ್ಧ ಲಿಂಗ ಶಿವಾಚಾರ್ಯ ಮಹಾಸ್ವಾಮಿ, ಕೆ.ಲಕ್ಷ್ಮಿನಾರಾಯಣ ಅಸ್ರಣ್ಣ ಆಶೀರ್ವ ಚನ ನೀಡಲಿದ್ದಾರೆ. ಸಮಾರಂಭ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ಸನ್ಮಾನಿಸಲಾಗು ವುದು. ಸಾಂಸ್ಕೃತಿಕ ಕಾರ್ಯಕ್ರಮ ದಂಗವಾಗಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಹೇಶ್.ಆರ್.ನಾಯಕ್, ಭಾಸ್ಕರ ಕುಕ್ಕುವಳ್ಳಿ, ಮಂಜುಳ ಶೆಟ್ಟಿ, ಕೇಶವ ಹೆಗ್ಡೆ ಉಪಸ್ಥಿತರಿದ್ದರು.

ಎ.೨೮ರಂದು ಚೊಕ್ಕಬೆಟ್ಟಿನಲ್ಲಿ ನಾಗಮಂಡಲೋತ್ಸವ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುರತ್ಕಲ್‌ನ ಚೊಕ್ಕ ಬೆಟ್ಟು ಬಂಗೇರ ಮೂಲಸ್ಥಾನದ ತರ ವಾಡು ಮನೆಯಲ್ಲಿ ಎ.೨೮ರಂದು ನಾಗ ಮಂಡಲೋತ್ಸವ ನಡೆಯಲಿದೆ ಎಂದು ಸ್ವಾಗತ ಸಮಿತಿ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎ.೨೮ರಂದು ರಾತ್ರಿ ಹತ್ತು ಗಂಟೆಗೆ ಕ್ಷೇತ್ರದ ನಾಗಬನದಲ್ಲಿ ಹಾಲಿಟ್ಟು ಸೇವೆ ನಡೆದ ಬಳಿಕ ೧೧ ಗಂಟೆಗೆ ಕೈಯೂರು ವೇದಮೂರ್ತಿ ಹಯವದನ ಭಟ್ ನೇತೃತ್ವದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಮುದ್ದೂರು ಕೃಷ್ಣ ಪ್ರಸಾದ್ ವೈದ್ಯ ಬಳಗದವರಿಂದ ನಾಗ ಮಂಡಲೋತ್ಸವ ಸೇವೆ ನಡೆಯಲಿದೆ ಎಂದವರು ಹೇಳಿದರು. ಅದೇ ದಿನ ಸಂಜೆ ಆರು ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಎ.೩೦ ರಂದು ದೈವಗಳ ನೇಮೋತ್ಸವ ನಡೆಯ ಲಿದೆ. ಬಂಗೇರ ಮೂಲಸ್ಥಾನದ ಗೌರ ವಾಧ್ಯಕ್ಷ ವಿಶ್ವನಾಥ ಬಂಗೇರ, ಪ್ರಧಾನ ಕಾರ್ಯದರ್ಶಿ ಬಿ.ಪ್ರೇಮಾನಂದ ಕುಲಾಲ್, ಸ್ವಾಗತ ಸಮಿತಿ ಅಧ್ಯಕ್ಷ ಪ್ರದೀಪ್ ಸುರತ್ಕಲ್, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಿತಿ ಗೌರವಾಧ್ಯಕ್ಷ ಬಿ. ಸುರೇಶ್ ಕುಲಾಲ್, ದಿನೇಶ್ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಕ್ರಮ ದನದ ಮಾಂಸ ಮಾರಾಟ: ಮೂವರ ಸೆರೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡದಲ್ಲಿ ಅಕ್ರಮ ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಕೊಕ್ಕಡ ಎಂಬಲ್ಲಿ ದನವನ್ನು ಕೊಂದು ಮಾಂಸ ಮಾಡುತ್ತಿರುವಾಗಲೇ ಉಪ್ಪಿನಂಗಡಿ ಎಸ್.ಐ. ರವಿ ಹಾಗೂ ತಂಡ ದಾಳಿ ನಡೆಸಿ ಮೂರು ಮಂದಿಯನ್ನು ಬಂಧಿಸಿದ್ದಾರೆ. ಇವರನ್ನು ಸ್ಥಳೀಯರಾದ ಶೀನಪ್ಪ, ಸುಂದರ ಹಾಗೂ ಗಿರೀಶ್ ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ವೆಲೇರಿಯನ್ ಎಂಬಾತ ತಪ್ಪಿಸಿಕೊಂಡಿರು ವುದಾಗಿ ತಿಳಿದು ಬಂದಿದೆ.

ಮನೆಗೆ ಬೀಗ: ಪ್ರಕರಣಕ್ಕೆ ಪುಷ್ಠಿ

Posted by JAYAKIRANA Kirana on | 0 comments | Leave a comment...

ಭಿನ್ನಕೋಮಿನ ಮನೆಯಲ್ಲಿ ಹಿಂದೂ ಯುವತಿಯರು
ಕಾರ್ಕಳ: ಭಿನ್ನಕೋಮಿನ ಯುವಕನ ಮನೆಯಲ್ಲಿ ಬೆಳಗಾವಿಯ ಹಿಂದೂ ಯುವತಿ ಯರಿಬ್ಬರ ಸಹಿತ ವೃದ್ಧೆಯೊಬ್ಬಳು ಕಾಣಿಸಿ ಕೊಂಡಿರುವುದು ಪತ್ರಿಕೆಯಲ್ಲಿ ವರದಿಯಾಗು ತ್ತಿದ್ದಂತೆ ನಿನ್ನೆ ಮಧ್ಯಾಹ್ನ ಮನೆಗೆ ಬೀಗ ಜಡಿಯಲಾಗಿದ್ದು, ಇದ್ದ ಹಲವಾರು ಅನು ಮಾನಗಳಿಗೆ ಪುಷ್ಠಿ ನೀಡಿದೆ.
ಆದರೂ ಪೊಲೀಸರು ಇಷ್ಟರವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಕಳ ತೆಳ್ಳಾರು ಎಂಬಲ್ಲಿ ಭಿನ್ನಕೋಮಿನ ಯುವಕನ ಮನೆಯಲ್ಲಿ ಬೆಳಗಾವಿಯ ಹಿಂದೂ ಯುವತಿ ಯರಿಬ್ಬರ ಜೊತೆಗೆ ವೃದ್ಧೆಯೊಬ್ಬಳು ಕಾಣಿಸಿ ಕೊಂಡಿದ್ದಳು.
ಟಿಂಬರ್ ಲಾರಿ ಚಾಲಕನಾಗಿರುವ ಆಸೀಫ್(೨೧) ಎಂಬಾತ ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಯುವತಿಯರು ಹಾಗೂ ವೃದ್ಧೆಯೊಬ್ಬಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅವರಲ್ಲಿದ್ದ ರೂಪ ಎಂಬಾಕೆಯನ್ನು ವಿವಾಹವಾಗುವುದೆಂದು ಆಸೀಫ್ ಹೇಳಿಕೊಂ ಡಿದ್ದನಾದರೂ, ಸ್ಥಳೀಯ ಮಸೀದಿಯಲ್ಲಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಮೊನ್ನೆ ಆಸೀಫ್‌ನ ಮನೆಯಲ್ಲಿ ಯುವತಿಯರಿಬ್ಬರು ಹಾಗೂ ವೃದ್ಧೆ ಕಾಣಿಸಿಕೊಂಡಿದ್ದು, ಮುಗ್ಧ ಯುವತಿಯರನ್ನು ಮುಂಬೈಗೆ ಕರೆದುಕೊಂಡು ಹೋಗಿ ಅನೈತಿಕ ದಂಧೆಯ ಕೂಪಕ್ಕೆ ತಳ್ಳುವ ಉದ್ದೇಶ ಅಡಗಿದೆ ಎಂಬುದು ದಟ್ಟವಾಗುತ್ತಿದ್ದಂತೆ ಆರೋಪಿಗಳು ಮನೆಗೆ ಬೀಗ ಜಡಿದು ಸ್ಥಳೀಯವಾಗಿ ಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಘಟನೆಗಳೂ ಮೌನವಹಿಸಿದ್ದು, ಕೇವಲ ಪ್ರಚಾರಕ್ಕಾಗಿಯೇ ಹೋರಾಟ ಮಾಡುವ ಸಂಘಟನೆಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಕ್ಷಾ ಚಾಲಕನ ಕೊಲೆಯತ್ನ

Posted by JAYAKIRANA Kirana on | 0 comments | Leave a comment...

ಕಾರ್‌ನಲ್ಲಿ ಬಂದ ತಂಡದ ಕೃತ್ಯ
ಮಂಗಳೂರು: ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ರಿಕ್ಷಾ ಚಾಲಕನಿಗೆ ಚೂರಿಯಿಂದ ಇರಿದು ಕೊಲೆಗೈಯಲು ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ಕಾವೂರು ಸಚಿತಾ ಬಾರ್ ಮುಂಭಾಗದಲ್ಲಿ ನಡೆದಿದೆ.
ರಿಕ್ಷಾ ಚಾಲಕ ಮತ್ತು ದುಷ್ಕರ್ಮಿಗಳ ನಡುವಿನ ಹಣದ ವೈಷಮ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಕೊಂಚಾಡಿಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿರುವ ಎಂ. ರವೀಂದ್ರ (೩೯) ಎಂಬವರೇ ಇರಿತಕ್ಕೊಳಗಾದವರು. ಕಾವೂರಿನ ಸಚಿತಾ ಬಾರ್ ಬಳಿಗೆ ಪ್ರಯಾಣಿಕರನ್ನು ಕರೆತಂದು ಹಿಂತಿರುಗುವ ಹೊತ್ತಿಗೆ ಚಾಲಕನ ಸೊಂಟಕ್ಕೆ, ಬೆನ್ನಿಗೆ ಚೂರಿಯಿಂದ ಇರಿದ ತಂಡ ಮಿಂಚಿನ ವೇಗದಲ್ಲಿ ಪರಾರಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರವೀಂದ್ರ ಅವರನ್ನು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿರಬೇಕೆಂದು ಶಂಕಿಸಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವೀಂದ್ರ ಅವರನ್ನು ಕೂಡಲೇ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರವೀಂದ್ರ ಅವರು ಈ ಹಿಂದೆ ಉರ್ವಸ್ಟೋರ್‌ನಲ್ಲಿ ರಿಕ್ಷಾ ಚಾಲಕರಾಗಿ ದುಡಿ ಯುತ್ತಿದ್ದು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈಚೆಗೆ ಒಂದು ತಿಂಗಳ ಹಿಂದೆಯಷ್ಟೆ ಕಾವೂರಿನಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದು ಕೊಂಚಾಡಿಯಲ್ಲಿ ಬಾಡಿಗೆಗೆ ರಿಕ್ಷಾ ಓಡಿಸುತ್ತಿದ್ದರು. ಘಟನೆ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ!

Posted by JAYAKIRANA Kirana on | 0 comments | Leave a comment...

ಸೋದರನಿಂದಲೇ ಅತ್ಯಾಚಾರ
ಉಡುಪಿ: ಯುವಕನೋರ್ವ ಮನೆ ಸಮೀಪದಲ್ಲಿದ್ದ ಸಂಬಂಧದಲ್ಲಿ ಸಹೋ ದರಿಯಾಗುವ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅತ್ಯಾಚಾರಗೈದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿರುವ ಘಟನೆ ಕುಂದಾಪುರ ಸಮೀಪದ ಅಮಾಸೆಬೈಲು ರಟ್ಟಾಡಿ ಗ್ರಾಮ ಬಂಡಾಡಿ ಎಂಬಲ್ಲಿ ಜರುಗಿದ್ದು, ಈ ಸಂಬಂಧ ಯುವಕನ ವಿರುದ್ಧ ಅತ್ಯಾಚಾರ ಗೈದ ಪ್ರಕರಣ ಅಮಾಸೆಬೈಲು ಠಾಣೆಯಲ್ಲಿ ದಾಖಲಾಗಿದೆ.
ಖಾಸಗಿ ಬಸ್ ಕಂಪೆನಿಯ ಕುಂದಾಪುರ ದಲ್ಲಿರುವ ಗ್ಯಾರೇಜಿನ ಮೆಕ್ಯಾನಿಕ್ ಆಗಿರುವ ಸುರೇಶ್ ಪೂಜಾರಿ(೨೪) ಅತ್ಯಾಚಾರಗೈದ ಆರೋಪಿ. ಈತ ಸಂಬಂಧದಲ್ಲಿ ತಂಗಿ ಯಾಗಬೇಕಾದ ಮನೆ ಸಮೀಪದಲ್ಲಿರುವ ಅಪ್ರಾಪ್ತ ಹುಡುಗಿಗೆ ಆರು ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದನು. ಬಳಿಕ ಹುಡುಗಿ ಗರ್ಭಿಣಿಯಾಗಿದ್ದಳು. ಆದರೆ ಏನನ್ನೂ ತಿಳಿಯದ ಅಪ್ರಾಪ್ತೆಗೆ ತಾನು ಗರ್ಭಿಣಿ ಯಾಗಿರುವ ವಿಷಯವೂ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಗರ್ಭಿಣಿಯಾಗಿರುವ ವಿಚಾರ ತಿಳಿದ ಆರೋಪಿ ಸುರೇಶ್‌ಗೆ ಗೊತ್ತಾಗಿ ಮಾತ್ರೆಯನ್ನು ನೀಡಿದ್ದನು. ಅದರ ಪರಿಣಾಮ ಹುಡುಗಿಗೆ  ರಕ್ತಸ್ರಾವ ಉಂಟಾಗಿತ್ತು. ಈ ಬಗ್ಗೆ ಮನೆಯಲ್ಲಿ ವಿಷಯ ತಿಳಿಸಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆ ಗರ್ಭಿಣಿಯಾಗಿರುವ ವಿಷಯ ತಿಳಿದುಬಂತು. ಅದರಂತೆ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗುವಿಗೆ ಜನ್ಮವಿತ್ತಳು.
ಈ ಸಂಬಂಧ ಮನೆಮಂದಿ ಸುರೇಶನ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಆರೋಪಿ ಸುರೇಶನ ಮಾವ ಪೊಲೀಸ್ ಆಗಿದ್ದು ಪ್ರಭಾವಿ ವ್ಯಕ್ತಿಗಳ ಮೂಲಕ ಅಮಾಸೆಬೈಲು ಪೊಲೀಸರಲ್ಲಿ ಪ್ರಕರಣ ದಾಖಲಿಸದೆ ರಾಜಿಯಲ್ಲಿ ಮುಗಿಸುವಂತೆ ಒತ್ತಡ ಹೇರಿದರಾದರೂ, ಅದೂ ಪ್ರಯೋಜನವಾಗದೆ ರಾತ್ರಿ ವೇಳೆಗೆ ಸುರೇಶನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಚಿತ್ರಹಿಂಸೆ ಕೊಟ್ಟು ಯುವಕನ ಹತ್ಯೆ ಪ್ರಕರಣ: ಮತ್ತೆ ನಾಲ್ವರ ಬಂಧನ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ನೈತಿಕ ಪೊಲೀಸರ ಕ್ರೂರ ದೌರ್ಜನ್ಯ ಕ್ಕೊಳಗಾದ ಬಳಿಕ ರೈಲು ಹಳಿಯಲ್ಲಿ ಪತ್ತೆಯಾದ ಇಲ್ಲಿನ ತ್ರಿಕ್ಕರಿಪುರ ಮೊಟ್ಟಮ್ಮಲ್ ನಿವಾಸಿ ರಜಿಲೇಶ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.
ಮೊಟ್ಟಮ್ಮಲ್ ನಿವಾಸಿಗಳಾದ ಎಂ.ಟಿ.ಪಿ. ಸಮೀರ್ ಖಾಸಿಂ, ಸಿ. ಅಬ್ದುಲ್ ಬಾಸಿತ್, ಕೆ.ಪಿ.ಅಶ್ರಫ್, ಎಂ.ಟಿ.ಪಿ. ಸಾಜಿದ್ ಬಂಧನಕ್ಕೊಳಗಾದವರು.
ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ನೀಲೇಶ್ವರ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮೂವರು ಆರೋಪಿಗಳಾದ ಎಂ. ಟಿ.ಪಿ ಮುಹಮ್ಮದ್ ನಿಸಾರ್, ಕೆ. ಜುಲ್ಫಿಕರ್, ಸಫೀರ್ ಎಂಬವರನ್ನು ಈ ಹಿಂದೆಯೇ ಸೆರೆ ಹಿಡಿಯಲಾಗಿತ್ತು. ಇವರೂ ರಿಮಾಂಡ್‌ನಲ್ಲಿದ್ದಾರೆ.
ಪ್ರಕರಣದಲ್ಲಿ ಇನ್ನೂ ಎಂಟು ಮಂದಿ ಬಂಧನವಾಗಲಿದೆ. ಕಳೆದ ೧೬ ರಂದು ಬೆಳಿಗ್ಗೆ ರಜಿಲೇಶ್‌ರ ಶವ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಇದರ ಮುನ್ನಾ ದಿನ ಇವರನ್ನು ಮನೆಯಿಂದ ಪರಿಚಯಸ್ಥರೇ ಕರೆದೊಯ್ದು ಬಳಿಕ ಕ್ರೂರವಾಗಿ ಚಿತ್ರ ಹಿಂಸೆ ನೀಡಿ ರೈಲು ಹಳಿಯಲ್ಲಿ ಎಸೆದಿದ್ದರು. ಮುಸ್ಲಿಂ ಮಹಿಳೆ ಜತೆ ಸಂಪರ್ಕ ಹೊಂದಿದ್ದನೆಂಬ ಕಾರಣಕ್ಕೆ ಮುಸ್ಲಿಂ ಸಂಘಟನೆ ಯೊಂದರ ಸದಸ್ಯರು ಕೊಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಮಗುವಿಗೆ ಜನ್ಮವಿತ್ತ ವಿದ್ಯಾರ್ಥಿನಿ!

Posted by JAYAKIRANA Kirana on | 0 comments | Leave a comment...

ಸೋದರನಿಂದಲೇ ಅತ್ಯಾಚಾರ
ಉಡುಪಿ: ಯುವಕನೋರ್ವ ಮನೆ ಸಮೀಪದಲ್ಲಿದ್ದ ಸಂಬಂಧದಲ್ಲಿ ಸಹೋ ದರಿಯಾಗುವ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅತ್ಯಾಚಾರಗೈದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿರುವ ಘಟನೆ ಕುಂದಾಪುರ ಸಮೀಪದ ಅಮಾಸೆಬೈಲು ರಟ್ಟಾಡಿ ಗ್ರಾಮ ಬಂಡಾಡಿ ಎಂಬಲ್ಲಿ ಜರುಗಿದ್ದು, ಈ ಸಂಬಂಧ ಯುವಕನ ವಿರುದ್ಧ ಅತ್ಯಾಚಾರ ಗೈದ ಪ್ರಕರಣ ಅಮಾಸೆಬೈಲು ಠಾಣೆಯಲ್ಲಿ ದಾಖಲಾಗಿದೆ.
ಖಾಸಗಿ ಬಸ್ ಕಂಪೆನಿಯ ಕುಂದಾಪುರ ದಲ್ಲಿರುವ ಗ್ಯಾರೇಜಿನ ಮೆಕ್ಯಾನಿಕ್ ಆಗಿರುವ ಸುರೇಶ್ ಪೂಜಾರಿ(೨೪) ಅತ್ಯಾಚಾರಗೈದ ಆರೋಪಿ. ಈತ ಸಂಬಂಧದಲ್ಲಿ ತಂಗಿ ಯಾಗಬೇಕಾದ ಮನೆ ಸಮೀಪದಲ್ಲಿರುವ ಅಪ್ರಾಪ್ತ ಹುಡುಗಿಗೆ ಆರು ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದನು. ಬಳಿಕ ಹುಡುಗಿ ಗರ್ಭಿಣಿಯಾಗಿದ್ದಳು. ಆದರೆ ಏನನ್ನೂ ತಿಳಿಯದ ಅಪ್ರಾಪ್ತೆಗೆ ತಾನು ಗರ್ಭಿಣಿ ಯಾಗಿರುವ ವಿಷಯವೂ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಗರ್ಭಿಣಿಯಾಗಿರುವ ವಿಚಾರ ತಿಳಿದ ಆರೋಪಿ ಸುರೇಶ್‌ಗೆ ಗೊತ್ತಾಗಿ ಮಾತ್ರೆಯನ್ನು ನೀಡಿದ್ದನು. ಅದರ ಪರಿಣಾಮ ಹುಡುಗಿಗೆ  ರಕ್ತಸ್ರಾವ ಉಂಟಾಗಿತ್ತು. ಈ ಬಗ್ಗೆ ಮನೆಯಲ್ಲಿ ವಿಷಯ ತಿಳಿಸಿದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆ ಗರ್ಭಿಣಿಯಾಗಿರುವ ವಿಷಯ ತಿಳಿದುಬಂತು. ಅದರಂತೆ ನಿನ್ನೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗುವಿಗೆ ಜನ್ಮವಿತ್ತಳು.
ಈ ಸಂಬಂಧ ಮನೆಮಂದಿ ಸುರೇಶನ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆದರೆ ಆರೋಪಿ ಸುರೇಶನ ಮಾವ ಪೊಲೀಸ್ ಆಗಿದ್ದು ಪ್ರಭಾವಿ ವ್ಯಕ್ತಿಗಳ ಮೂಲಕ ಅಮಾಸೆಬೈಲು ಪೊಲೀಸರಲ್ಲಿ ಪ್ರಕರಣ ದಾಖಲಿಸದೆ ರಾಜಿಯಲ್ಲಿ ಮುಗಿಸುವಂತೆ ಒತ್ತಡ ಹೇರಿದರಾದರೂ, ಅದೂ ಪ್ರಯೋಜನವಾಗದೆ ರಾತ್ರಿ ವೇಳೆಗೆ ಸುರೇಶನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಚಿತ್ರಹಿಂಸೆ ಕೊಟ್ಟು ಯುವಕನ ಹತ್ಯೆ ಪ್ರಕರಣ: ಮತ್ತೆ ನಾಲ್ವರ ಬಂಧನ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ನೈತಿಕ ಪೊಲೀಸರ ಕ್ರೂರ ದೌರ್ಜನ್ಯ ಕ್ಕೊಳಗಾದ ಬಳಿಕ ರೈಲು ಹಳಿಯಲ್ಲಿ ಪತ್ತೆಯಾದ ಇಲ್ಲಿನ ತ್ರಿಕ್ಕರಿಪುರ ಮೊಟ್ಟಮ್ಮಲ್ ನಿವಾಸಿ ರಜಿಲೇಶ್ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.
ಮೊಟ್ಟಮ್ಮಲ್ ನಿವಾಸಿಗಳಾದ ಎಂ.ಟಿ.ಪಿ. ಸಮೀರ್ ಖಾಸಿಂ, ಸಿ. ಅಬ್ದುಲ್ ಬಾಸಿತ್, ಕೆ.ಪಿ.ಅಶ್ರಫ್, ಎಂ.ಟಿ.ಪಿ. ಸಾಜಿದ್ ಬಂಧನಕ್ಕೊಳಗಾದವರು.
ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ನೀಲೇಶ್ವರ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮೂವರು ಆರೋಪಿಗಳಾದ ಎಂ. ಟಿ.ಪಿ ಮುಹಮ್ಮದ್ ನಿಸಾರ್, ಕೆ. ಜುಲ್ಫಿಕರ್, ಸಫೀರ್ ಎಂಬವರನ್ನು ಈ ಹಿಂದೆಯೇ ಸೆರೆ ಹಿಡಿಯಲಾಗಿತ್ತು. ಇವರೂ ರಿಮಾಂಡ್‌ನಲ್ಲಿದ್ದಾರೆ.
ಪ್ರಕರಣದಲ್ಲಿ ಇನ್ನೂ ಎಂಟು ಮಂದಿ ಬಂಧನವಾಗಲಿದೆ. ಕಳೆದ ೧೬ ರಂದು ಬೆಳಿಗ್ಗೆ ರಜಿಲೇಶ್‌ರ ಶವ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಇದರ ಮುನ್ನಾ ದಿನ ಇವರನ್ನು ಮನೆಯಿಂದ ಪರಿಚಯಸ್ಥರೇ ಕರೆದೊಯ್ದು ಬಳಿಕ ಕ್ರೂರವಾಗಿ ಚಿತ್ರ ಹಿಂಸೆ ನೀಡಿ ರೈಲು ಹಳಿಯಲ್ಲಿ ಎಸೆದಿದ್ದರು. ಮುಸ್ಲಿಂ ಮಹಿಳೆ ಜತೆ ಸಂಪರ್ಕ ಹೊಂದಿದ್ದನೆಂಬ ಕಾರಣಕ್ಕೆ ಮುಸ್ಲಿಂ ಸಂಘಟನೆ ಯೊಂದರ ಸದಸ್ಯರು ಕೊಲೆ ನಡೆಸಿರುವುದಾಗಿ ತಿಳಿದುಬಂದಿದೆ.

ಮರ ಸಾಗಾಟ: ಇಬ್ಬರ ಸೆರೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳನ್ನು ಉಪ್ಪಿನಂಗಡಿ ಪೊಲೀಸರು ವಶ ಪಡಿಸಿಕೊಂಡು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಉಪ್ಪಿನಂ ಗಡಿಯಿಂದ ಮಂಗಳೂರು ಕಡೆಗೆ ಸಾಗಿಸಲಾಗುತ್ತಿದ್ದ ಈ ಲಾರಿಯಲ್ಲಿ ಬೆಲೆ ಬಾಳುವ ಮರದ ೩ ದಿಮ್ಮಿಗ ಳಿದ್ದು,ಲಾರಿ ಸಹಿತ ಮರದ ಮೌಲ್ಯ ೪ ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಈ ಘಟನೆ ಯಲ್ಲಿ ಲಾರಿ ಚಾಲಕ ಬಂಟ್ವಾಳದ ಅಮ್ಮಬ್ಬ ಹಾಗೂ ಕೋಲ್ಪೆಯ ಸುಲೈ ಮಾನ್ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಲಾರಿ ಅಪಘಾತ: ಚಾಲಕ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಲಾರಿಯೊಂದು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸಿದ ಪರಿಣಾಮವಾಗಿ ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ಗುಡ್ಡೆಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಮಧ್ಯಾಹ್ನ ಹಿರಿಯಡ್ಕ ಸಮೀಪದ ಅತ್ರಾಡಿಯಲ್ಲಿ ಸಂಭವಿಸಿದೆ.
ಅಪಘಾತದಿಂದಾಗಿ ಲಾರಿ ಚಾಲಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಬಾಟಲಿಯಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಹಣದ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಬಾಟಲಿಯಲ್ಲಿ ಹಲ್ಲೆ ನಡೆಸಿದ ಘಟನೆ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಎಂಬಲ್ಲಿ ಸೋಮ ವಾರ ಬೆಳಿಗ್ಗೆ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಅಹಮ್ಮದ್(೫೭) ಎಂಬವರು ಹಲ್ಲೆಗೊಳಗಾದವರು. ಇವರು ಒಕ್ಕೆತ್ತೂರು ಎಂಬಲ್ಲಿ ನಡೆದು ಕೊಂಡು ಹೋಗು ತ್ತಿದ್ದ ಸಂದರ್ಭ ಆರೋಪಿ ಸೂರಂಬಡ್ಕ ನಿವಾಸಿ ಜಾಹೀದ್ ಎಂಬಾತ ಅವರನ್ನು ಅವಾಚ್ಯವಾಗಿ ನಿಂದಿಸಿ, ಬಳಿಕ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಗಾಯಾಳು ದೂರಿದ್ದಾರೆ. ಈ ಬಗ್ಗೆ ಗಾಯಾಳು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಗುವಿನೊಂದಿಗೆ ಪರಾರಿಯಾದ ವಿವಾಹಿತೆ ವಿವಾಹಿತನೊಂದಿಗೆ ಪತ್ತೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಗುವಿನೊಂ ದಿಗೆ ಪರಾರಿಯಾದ ವಿವಾಹಿತೆಯನ್ನು ಪ್ರಿಯಕರ ವಿವಾಹಿತನೊಂದಿಗೆ ಹೊಸ ದುರ್ಗ ಹಾಗೂ ಅಂಬಲತ್ತರೆ ಪೊಲೀ ಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.
ಮಡಿಕೈ ಕೋಟಕುನ್ನು ನಿವಾಸಿ ಗಂಗಾಧರ ಎಂಬವರ ಪುತ್ರಿ ಇಂದು ಲೇಖಾ (೨೮) ಎಂಬಾಕೆಯೇ ತನ್ನ ಒಂದರ ಹರೆಯದ ಕಂದ ವಿವೇಕಾ ಳನ್ನು ಕೂಡಿಕೊಂಡು ಪ್ರಿಯಕರನಾದ ಬಸ್ಸು ಚಾಲಕ, ತಾಯನ್ನೂರು ಆನೆ ಪೆಟ್ಟಿಯ ಅಶೋಕ (೪೨) ಎಂಬಾ ತನೊಂದಿಗೆ ಪರಾರಿಯಾದವಳು. ಇಂದುಲೇಖಾ ಹಾಗೂ ಅಶೋಕ್ ನಡುವಿನ ಅನೈತಿಕ ಸಂಬಂಧ ಅರಿತ ಆಕೆ ಪತಿ ಕಣ್ಣೂರು ಆಲಕ್ಕೋಡಿನ ಬೈಜು ಎಂಬಾತ ಪತ್ನಿಗೆ ಈ ಹಿಂದೆಯೇ ಡೈವೋರ್ಸ್ ನೀಡಿದ್ದರು. ಇವರ ಹಿರಿಯ ಪುತ್ರ ತಂದೆಯ ಜತೆಗಿ ದ್ದಾನೆ.
ಕಳೆದ ಎ. ೨೦ ರಂದು ಆಸ್ಪತ್ರೆ ಗೆಂದು ಮಗುವಿನೊಂದಿಗೆ ತೆರಳಿದಾಕೆ ಮರಳಿ ಬಂದಿರಲಿಲ್ಲ. ಸಂಜೆ ತಮ್ಮನಿಗೆ ಫೋನ್ ಮಾಡಿ ತಾನು ಅಶೋಕನ ಜತೆಗಿರುವುದಾಗಿ ತಿಳಿಸಿದ್ದಳು. ಸುದ್ದಿಯ ರಿತು ಅಶೋಕನ ಪತ್ನಿ ಶ್ರೀಜಾ ಅವರು ಅಂಬಲತ್ತರ ಪೊಲೀಸರಿಗೆ ಹಾಗೂ ಇಂದುಲೇಖಾರ ಮನೆಯವರು ಹೊಸದುರ್ಗ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಮಧ್ಯೆ ಇವರು ನೀಲೇ ಶ್ವರ ಚಾಯ್ಯೋಂ ಎಂಬಲ್ಲಿ ಬಾಡಿಗೆ ವಸತಿ ಗೃಹದಲ್ಲಿ ವಾಸಿಸುವ ಬಗ್ಗೆ ಮಾಹಿತಿ ದೊರೆಯಿತು.
 ಅದರಂತೆ ಎರಡು ಠಾಣೆಗಳ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನೂ ಸೆರೆ ಹಿಡಿದು ಕೋರ್ಟಿಗೆ ಹಾಜರುಪಡಿಸಲಾಗಿದೆ.

ಬೈಕ್ ಕಳವು: ವಿದ್ಯಾರ್ಥಿಗಳ ಸೆರೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಬೈಕ್ ಕಳವು ಪ್ರಕರಣ ದಲ್ಲಿ ಭಾಗಿಯಾಗಿದ್ದ ಶಿವಮೊಗ್ಗದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಬ್ಬರನ್ನು ಹೆಬ್ರಿ ಪೊಲೀ ಸರು ಬಂಧಿಸಿದ್ದಾರೆ.
ಶಿವಮೊಗ್ಗ ಸಹ್ಯಾದ್ರಿ ಇಂಜಿನಿ ಯರಿಂಗ್ ಕಾಲೇಜಿನ ವಿದ್ಯಾರ್ಥಿ ಗಳಾದ ಶೃಂಗೇರಿಯ ಶ್ರೇಯಸ್, ತೀರ್ಥಹಳ್ಳಿಯ ರಕ್ಷಿತ್ ಆರ್. ಶೆಟ್ಟಿ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಶಿವಮೊಗ್ಗದಿಂದ ಕದ್ದ ಬೈಕ್‌ನಲ್ಲಿ ಇವರಿಬ್ಬರು ಉಡುಪಿಗೆ ಬಂದು ಕಲ್ಸಂಕದಲ್ಲಿ ನಿಲ್ಲಿಸಿದ ಬೈಕೊಂದನ್ನು ಕದ್ದು ಶಿವಮೊಗ್ಗಕ್ಕೆ ಎರಡು ಬೈಕ್‌ಗಳಲ್ಲಿ ಹಿಂತಿರುಗುತ್ತಿದ್ದರು. ಹೆಬ್ರಿ ಠಾಣಾ ಮುಂಭಾಗದಲ್ಲಿ ಎಸ್.ಐ ಸಂತೋಷ್ ಕುಮಾರ್ ಶೆಟ್ಟಿ ವಾಹನಗಳ ತಪಾ ಸಣೆಗೆ ಮುಂದಾಗುತ್ತಿದ್ದಾಗ ವೇಗ ವಾಗಿ ಬೈಕ್‌ಗಳೆರಡು ಬರುತ್ತಿದ್ದುದನ್ನು ಕಂಡು ನಿಲ್ಲಿಸುವಂತೆ ಸೂಚಿಸಿದರು. ಅಪಾಯದ ಸೂಚನೆ ಅರಿತ ಚೋರರು ಬೈಕ್‌ನ್ನು ದೂರದಲ್ಲಿ ನಿಲ್ಲಿಸಿ ಓಡಿ ಹೋಗಲು ಯತ್ನಿಸಿದಾಗ ಬೆನ್ನಟ್ಟಿದ ಪೊಲೀಸರು ಬಂಧಿಸಿದ್ದಾರೆ.

ಇ-ಮೇಲ್ ಹ್ಯಾಕ್: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಣಿಪಾಲ ಮೆಡಿಕಲ್ ಕಾಲೇಜ್‌ನ ಅನಾಟಮಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಬಿಸ್ವಬಿನ ರಾಯ್ ಅವರ ಇ-ಮೇಲ್ ಐಡಿಯನ್ನು ಹ್ಯಾಕ್ ಮಾಡಿ ದುರ್ಬಳಕೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಹ್ಯಾಕ್ ಮಾಡಿರುವ ವ್ಯಕ್ತಿಗಳು ಇ-ಮೇಲ್ ಇನ್‌ಬಾಕ್ಸ್ ಹಾಗೂ ಸೆಂಟ್ ಬಾಕ್ಸ್‌ನಲ್ಲಿದ್ದ ಇ-ಮೇಲ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಬಳಿಕ ಅದೇ ಹೆಸರಿನ ನಕಲಿ ಇ-ಮೇಲ್ ರೂಪಿಸಿ ದುರ್ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಸ್-ಟ್ಯಾಂಕರ್ ಮುಖಾಮುಖಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ರಾಷ್ಟ್ರೀಯ ಹೆದ್ದಾರಿ ೭೫ರ ನೆಲ್ಯಾಡಿ ಸಮೀಪದ ಎಂಜಿರ ಸೇತುವೆಯ ಮೇಲೆ ನಿನ್ನೆ ಮುಂಜಾನೆ ಖಾಸಗಿ ಬಸ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಹಲವರಿಗೆ ಗಾಯವಾಗಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ ಮತ್ತು ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ಯಶೋಧರ, ಪ್ರಯಾಣಿಕರಾದ ಬೆಂಗಳೂರಿನ ಆನಂದ, ಸುಶೀಲ, ಕುಮಾರಿ ಅನುರಾಧ, ಪದ್ಮ, ಸುಶೀಲ, ಜಿ ಆನಂದ, ಹಾಸನದ ಕೃಷ್ಣೇಗೌಡ, ಟ್ಯಾಂಕರ್ ಚಾಲಕ ಆನಂದ ನಾರಾಯಣ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಾಹನ ತೆರವುಗೊಳಿಸುವಲ್ಲಿ ತಡವಾದ ಕಾರಣ ಬೆಳಿಗ್ಗೆ ಒಂಭತ್ತು ಗಂಟೆಯವರೆಗೂ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಕಾರ್‌ನಿಂದ ಚಿನ್ನಾಭರಣ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಲೇಡಿಹಿಲ್ ಸಮೀಪ ನಿಲ್ಲಿಸಿದ್ದ ಕಾರಿ ನಿಂದ ಚಿನ್ನಾಭರಣ ಕಳವಾಗಿರುವ ಬಗ್ಗೆ ಉರ್ವಾ ಪೊಲೀಸರಿಗೆ ದೂರು ನೀಡಲಾಗಿದೆ.
ಲೇಡಿಹಿಲ್ ಸಮೀಪದ ನಿವಾಸಿ ಸಂತೋಷ್ ಶೆಟ್ಟಿ ಎಂಬವರು ಬಳ್ಳಾಲ್‌ಬಾಗ್‌ನ ಜುವೆಲ್ಲರಿಯೊಂದ ರಿಂದ ೧೦ ಗ್ರಾಂ ಚಿನ್ನ ಖರೀದಿಸಿ ಲೇಡಿಹಿಲ್ ಸಮೀಪ ಕಾರು ನಿಲ್ಲಿಸಿ ಚಿಕನ್ ಸೆಂಟರ್‌ಗೆ ತೆರಳಿದ್ದರು ಎನ್ನಲಾಗಿದೆ. ಇದನ್ನು ಗಮನಿಸುತ್ತಿದ್ದ ಕಳ್ಳರು ಕಾರಿನ ಹಿಂಬದಿಯ ಗ್ಲಾಸ್ ಹೊಡೆದು ಚಿನ್ನದ ಪರ್ಸ್‌ನ್ನು ಎಗರಿಸಿದ್ದಾನೆ ಎನ್ನಲಾಗಿದೆ.

ಕುಂದಾಪುರ: ವರದಕ್ಷಿಣೆ ಕಿರುಕುಳ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುದೂರು ಎಂಬಲ್ಲಿ ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಕಲ್ಲಡಮನೆ ನಿವಾಸಿ ಮೂಳಿ ಯಾನೆ ಮೇರಿ ಎಂಬಾಕೆಗೆ ಪತಿ ಸಾಬು ಎಂಬಾತ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮದುವೆಯ ಸಂದರ್ಭದಲ್ಲಿ ೩೦ ಸಾವಿರ ನಗದು ಹಾಗೂ ಐದು ಪವನ್ ಚಿನ್ನಾಭರಣ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಬಂಟ್ವಾಳ: ವ್ಯಕ್ತಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿ ಕೊಂಬು-ವೀರಮಾರುತಿ ನಗರ ಎಂಬಲ್ಲಿಂದ ವ್ಯಕ್ತಿಯೊಬ್ಬರು ನಾಪತ್ತೆ ಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಯಶೋಧರ ಗೌಡ(೩೫) ಎಂಬವರು ಮಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಎ.೧೯ರಂದು ಕೆಲಸಕ್ಕೆ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ವೇದಾವತಿ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಅಪರಿಚಿತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಉರ್ವಾ ಹೊಗೆಬೈಲು ಬ್ಯಾರಿಕಂಡ ಎಂಬಲ್ಲಿನ ಪೊದೆಯಲ್ಲಿ ಅಂದಾಜು ೫೦ರಿಂದ ೫೫ ವರ್ಷದೊಳಗಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ದೇಹ ಕೊಳೆತಸ್ಥಿತಿಯಲ್ಲಿದ್ದು, ೧೦ ದಿನಗಳ ಹಿಂದೆ ಸಾವು ಸಂಭವಿಸಿರಬೇ ಕೆಂದು ಶಂಕಿಸಲಾಗಿದೆ. ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳೆಗಾಹುತಿಯಾದ ಕೆಕೆಆರ್-ಡೆಕ್ಕನ್ ಪಂದ್ಯ

Posted by JAYAKIRANA Kirana on | 0 comments | Leave a comment...

ಉಭಯ ತಂಡಗಳಿಗೂ ಅಂಕ ಹಂಚಿಕೆ
ಕೊಲ್ಕತ್ತಾ: ನಿನ್ನೆ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಬೇಕೀದ್ದ ಕೊಲ್ಕತ್ತಾ ನೈಟ್‌ರೈಡರ್ ಹಾಗೂ ಡೆಕ್ಕನ್ ಚಾರ್ಜರ‍್ಸ್ ನಡುವಿನ ಪಂದ್ಯವು ಸಂಪೂರ್ಣ ಮಳೆಗಾಹುತಿಯಾಗಿದ್ದು, ಉಭಯ ತಂಡಗಳಿಗೂ ಒಂದೊಂದು ಅಂಕಗಳನ್ನು ಹಂಚಲಾಗಿದೆ. ಈ ಮೂಲಕ ಕೊನೆಗೂ ಡೆಕ್ಕನ್ ಜಯಸಾಧಿಸಲು ಸಫಲವಾಗಿಲ್ಲದಿದ್ದರೂ ಅಂಕಗಳಿಗಲು ಮಾತ್ರ ಸಫಲತೆ ಕಂಡಿದೆ. ಆದರೆ ಅತ್ತ ಅಂಕಪಟ್ಟಿಯಲ್ಲಿ ಕೆಕೆಆರ್ ಒಂಬತ್ತು ಅಂಕ ದೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ದೆಹಲಿ ೧೦ ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.
ನಿನ್ನೆ ಎಡೆಬಿಡದೆ ಸುರಿದ ಭಾರೀ ವರ್ಷಧಾರೆಯಿಂದ ಟಾಸ್ ನಡೆಸಲು ಕೂಡ ಸಾಧ್ಯವಾಗಿಲ್ಲ, ಅಲ್ಲದೆ ಮೈದಾನದಲ್ಲಿ ನೀರು ತುಂಬಿಕೊಂಡಿದ್ದರಿಂದ ಪಂದ್ಯಕ್ಕೂ ತೊಡಕಾಯಿತು. ಭಾರೀ ಗಾಳಿಮಳೆಗೆ ಮೈದಾನದ ಪಶ್ಚಿಮ ಭಾಗದಲ್ಲಿ ವಿಶ್ವಕಪ್ ಸಂದರ್ಭ ಹಾಕಲಾಗಿದ್ದ ಬಿದಿರಿನಿಂದ ಮಾಡಿದ್ದ ತಾತ್ಕಾಲಿಕ ಸಣ್ಣ ಗ್ಯಾಲರಿಗೆ ಕೂಡ ಹಾನಿಯಾಗಿದ್ದು, ಇದು ಮೂವರ ಮೈಮೇಲೆ ಬಿದ್ದು ಮೂವರು ಪ್ರೇಕ್ಷಕರಿಗೆ ಗಾಯವಾಗಿದೆ. ಪಂದ್ಯ ಮಳೆಗೆ ಆಹುತಿಯಾಗಿದ್ದರಿಂದ ಮುಖ್ಯವಾಗಿ ಕೆಕೆಆರ್‌ಗೆ ತೀವ್ರ ಹಿನ್ನೆಡೆಯಾಗಿದ್ದು, ಯಾಕೆಂದರೆ ತಂಡಕ್ಕೆ ಗೆಲುವು ಅತ್ಯಂತ ಮುಖ್ಯವಾಗಿತ್ತು. ಅತ್ತ ಮೊದಲ ಜಯದ ನಿರೀಕ್ಷೆಯಲ್ಲಿದ್ದ ಡೆಕ್ಕನ್ ಕೂಡ ನಿರಾಶೆಯಲ್ಲಿದೆ. ಆದರೂ ಕೊನೆಗೂ ಅಂಕಗಳಿಸಲು ಸಂಗಾಕ್ಕರ ಪಡೆ ಸಫಲವಾಗಿದೆ.

ಕ್ಲೇ ಕೋರ್ಟ್‌ನಲ್ಲಿ ನಡಾಲ್ ವಿಶ್ವಶ್ರೇಷ್ಠ ಆಟಗಾರ: ಮರ್ರೆ

Posted by JAYAKIRANA Kirana on | 0 comments | Leave a comment...

ಬಾರ್ಸೆಲೊನಾ: ಕ್ಲೇ ಕೋರ್ಟ್ ನಲ್ಲಿ ಸ್ಪೇಯ್ನ್‌ನ ರಫೆಲ್ ನಡಾಲ್ ವಿಶ್ವದಲ್ಲೇ ಅತ್ಯದ್ಭುತ ಆಟಗಾರ ಎಂದು ವಿಶ್ವದ ಮೂರನೇ ಶ್ರೇಯಾಂಕದ ಬ್ರಿಟನ್‌ನ ಆಂಡಿ ಮರ್ರೆ ತಿಳಿಸಿದ್ದಾರೆ. ವಿಶ್ವದ ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ೬-೩ ಹಾಗೂ ೬-೧ರ ಅಂತರದಲ್ಲಿ ಗೆಲ್ಲುವ ಮೂಲಕ ನಡಾಲ್ ಪ್ರತಿಷ್ಠಿತ ಆವೆ ಮಣ್ಣಿನ ಮಾಂಟೆ ಕಾರ‍್ಲೊ ಕೂಟ ವನ್ನು ಸತತ ಎಂಟನೇ ಬಾರಿಗೆ ಗೆದ್ದುಕೊಂಡಿದ್ದರು. ಮುಂದೆ ಬಾರ್ಸೆ ಲೊನಾದಲ್ಲಿ ಮತ್ತೊಂದು ಪ್ರತಿಷ್ಟಿತ ಕೂಟ ನಡೆಯಲಿದೆ.
ಆವೆ ಮಣ್ಣಿನಲ್ಲಿ ನಡಾಲ್ ಒಬ್ಬ ವಿಶ್ವದ ಅತ್ಯುತ್ತಮ ಆಟಗಾರ. ಈ ಬಗ್ಗೆ ಯಾರೂ ಕೂಡ ಪ್ರಶ್ನೆ ಮಾಡುವಂತಿಲ್ಲ. ಅದೂ ಕೂಡ ಸತತ ಎಂಟನೇ ಬಾರಿಗೆ ಆವೆ ಮಣ್ಣಿನಲ್ಲಿ ಅವರು ಜೈತ್ರಯಾತ್ರೆ ಮಾಡಿದ್ದು, ಬಹುಷ ಈ ದಾಖಲೆಯನ್ನು ಯಾರಿಂದಲೂ ಮುರಿಯುವುದು ಬಹಳ ಕಷ್ಟ. ಬಾರ್ಸೆಲೋನಾ ಓಪನ್ ನನಗೆ ಹಿಂದಿನಿಂದಲೂ ಅತ್ಯದ್ಭುತ ಕೂಟವಾಗಿದ್ದು, ಇಲ್ಲಿ ನಾನು ಅಗ್ರ ಶ್ರೇಯಾಂಕಕ್ಕೆ ಮರಳುವ ಬಗ್ಗೆ ಅಲ್ಲ ದಿದ್ದರೂ ಉತ್ತಮ ಪ್ರದರ್ಶನ ನೀಡುವ ಯೋಚನೆಯಲ್ಲಿದ್ದೇನೆ. ಇಲ್ಲಿನ ಅಂಗಣಕ್ಕೆ ಹೊಂದಿಕೊಳ್ಳಲು ನನಗೆ ಕೆಲವು ಪಂದ್ಯಗಳು ಬೇಕಾಗಬಹುದು ಎಂದು ಮರ್ರೆ ತಿಳಿಸಿದರು.

ಅಥ್ಲೆಟ್ಸ್‌ಗಳಿಗೆ ಭಾರೀ ಮೊತ್ತ ವ್ಯಯಿಸಿದ ಎನ್‌ಎಸ್‌ಡಿಎಫ್

Posted by JAYAKIRANA Kirana on | 0 comments | Leave a comment...

ದೆಹಲಿ: ಮುಂಬರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಭಾರ ತೀಯ ಕ್ರೀಡಾ ಸಚಿವಾಲಯ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇಲ್ಲಿಯ ವರೆಗೆ ಸುಮಾರು ೫೫.೨೨ ಕೋಟಿ. ರೂಗಳ ಷ್ಟು ಹಣವನ್ನು ಕ್ರೀಡಾಳುಗಳ ತಯಾ ರಿಗೆ ವ್ಯಯಿಸಿದ ಎಂದು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಫಂಡ್ ನಿನ್ನೆ ತಿಳಿಸಿದೆ.
ಈ ಪೈಕಿ ಜಿಮ್ನಾಸ್ಟೆಕ್‌ಗಳು ಅತ್ಯ ಧಿಕ ಅಂದರೆ ಸುಮಾರು ೮೯.೯೧ ಲಕ್ಷ ರೂ.ಗಳನ್ನು ಪೂರ್ವ ತಯಾರಿಗಾಗಿ ವ್ಯಯಿಸಲಾಗಿದೆ.
ಅಲ್ಲದೆ ಪದಕ ಗೆಲ್ಲುವ ಫೆವರೇಟ್ ಎಂದು ಹೇಳಲಾಗುವ ಗಣ್ಯ ಅಥ್ಲೆಟ್ಸ್ ಗಳಿಗೆ ಅತ್ಯುತ್ತಮ ತರಬೇತಿಗಾಗಿ ಅಧಿಕ ಮೊತ್ತವನ್ನು ತರಬೇತಿಗೆ ನೀಡಲಾಗಿದೆ. ಇದು ೪೬ ಕ್ರೀಡಾಳುಗಳು, ಕೋಚ್ ಹಾಗೂ ಪೋಷಕ ಸಿಬ್ಬಂದಿಗೆ ಇದು ವ್ಯಯವಾಗಿದೆ.

ಸೇಡು ತೀರಿಸಿಕೊಂಡೆವು: ದಿಲ್ಶಾನ್

Posted by JAYAKIRANA Kirana on | 0 comments | Leave a comment...

ಜೈಪುರ್: ಬೆಂಗಳೂರಿನಲ್ಲಿ ರಾಜ ಸ್ಥಾನ್ ರಾಯಲ್ಸ್ ನಮ್ಮನ್ನು ಸೋಲಿ ಸಿದ್ದರು, ಹಾಗಾಗಿ ಅವರ ವಿರುದ್ಧ ಜಯ ಸಾಧಿಸಲು ನಾವು ಹಾತೊರೆ ಯುತ್ತಿದ್ದು, ಅದರಲ್ಲಿ ನಾವು ಸಫಲರಾ ಗಿದ್ದೇವೆ ಎಂದು ಬೆಂಗಳೂರು ರಾಯ ಲ್ ಚಾಲೆಂಜರ‍್ಸ್ ಆಟಗಾರ ತಿಲಕರತ್ನೆ ದಿಲ್ಶಾನ್ ತಿಳಿಸಿದ್ದಾರೆ. ಮಂಗಳವಾರ ಆರ್‌ಆರ್ ವಿರುದ್ಧ ನಡೆದ ಪಂದ್ಯವನ್ನು ಆರ್‌ಸಿಬಿ ೪೬ ರನ್‌ಗಳಿಂದ ಗೆದ್ದು ಕೊಂಡು ತವರಿನ ಸೋಲಿಗೆ ಸೇಡು ತೀರಿಸಿಕೊಂಡಿತ್ತು.
ಒಟ್ಟಿನಲ್ಲಿ ಇದೊಂದು ಉತ್ತಮ ಸಾಂಘಿಕ ನಿರ್ವಹಣೆಯಾಗಿದ್ದು, ಎಲ್ಲರೂ ಉತ್ತಮವಾಗಿ ಆಡಿದರು. ಅಂತಿಮ ಹಂತದಲ್ಲಿ ಕ್ರಿಸ್ ಗೇಲ್ ಅನಾ ರೋಗ್ಯಕ್ಕೆ ತುತ್ತಾದ ಪರಿಣಾಮ ಮಯಾಂಕ್ ಅಗರ್‌ವಾಲ್ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡರು ಎಂದು ದಿಲ್ಶಾನ್ ಐಪಿಎಲ್‌ನ ಅಧಿಕೃತ ಸೈಟ್‌ನಲ್ಲಿ ತಿಳಿಸಿದ್ದಾರೆ.

ಪುಣೆ ವಿರುದ್ಧ ಸೇಡು ತೀರಿಸಿದ ‘ಡೆವಿಲ್ಸ್

Posted by JAYAKIRANA Kirana on | 0 comments | Leave a comment...

ವೀರೂ ಆಕರ್ಷಕ ಅರ್ಧಶತಕ
ಪುಣೆ: ಸಹಾರ ಪುಣೆ ವಾರಿಯರ‍್ಸ್ ತವರಲ್ಲೇ ಮುಗ್ಗರಿಸಿಬಿಟ್ಟಿದೆ. ವೀರೇಂದ್ರ ಸೆಹ್ವಾಗ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ನಿನ್ನೆ ಪುಣೆ ವಿರುದ್ಧದ ಪಂದ್ಯವನ್ನು ಡೆಲ್ಲಿ ಡೇರ್‌ಡೆವಿಲ್ಸ್ ಎಂಟು ವಿಕೆಟ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಹಿಂದೆ ತವರಿನಲ್ಲಿ ಪುಣೆ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿತು. ಸೆಹ್ವಾಗ್ ೪೮ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ೧೦ ಬೌಂಡರಿಗಳ ನೆರವಿನಿಂದ ಅಜೇಯ ೮೭ ರನ್ ಸ್ಫೋಟಿಸಿ ಡೆಲ್ಲಿ ಜಯದಲ್ಲಿ ಪ್ರಧಾನಪಾತ್ರ ವಹಿಸಿದ್ದು, ಅಂತಿಮವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಪುಣೆ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ಒಂದು ಆಗಿದ್ದಾಗ ಇಬ್ಬರೂ ಆರಂಭಿಕರಾದ ಜೆಸ್ಸಿ ರೈಡರ್ (೦) ಹಾಗೂ ನಾಯಕ ಸೌರವ್ ಗಂಗೂಲಿ (೧) ಪೆವಿಲಿಯನತ್ತ ಹೆಜ್ಜೆ ಹಾಕಿದ್ದರು. ಆದರೆ ಮಾಜಿ ಆರ್‌ಸಿಬಿ ಆಟಗಾರರಾದ ರಾಬಿನ್ ಉತ್ತಪ್ಪ (೬೦) ಹಾಗೂ ಮನೀಶ್ ಪಾಂಡೆ ಮೂರನೇ ವಿಕೆಟ್‌ಗೆ ನಡೆಸಿದ ಅಜೇಯ ಬೃಹತ್ ೧೪೫ ರನ್‌ಗಳ ಜೊತೆ ಯಾಟ ನಡೆಸಿದ ಪರಿಣಾಮ ತಂಡ ಎರಡು ವಿಕೆಟ್ ನಷ್ಟಕ್ಕೆ ೧೪೬ ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಅದರಲ್ಲೂ ಮನೀಶ್ ಕೇವಲ ೫೬ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಏಳು ಬೌಂಡರಿ ನೆರವಿನಿಂದ ೮೦ ರನ್ ಸಿಡಿಸಿದ್ದರು. ಡಿಡಿ ಪರ ಇರ್ಫಾನ್ ಪಠಾಣ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಡೆಲ್ಲಿ ಯಾವುದೇ ಅಡ್ಡಿಆತಂಕ ವನ್ನು ಎದುರಿಸಲಿಲ್ಲ. ಹಾಗಾಗಿ ತಂಡ ೧೬ ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ೧೪೮ ರನ್ ಗಳಿಸಿ ಜಯದಾಖಲಿಸಿತು. ತಂಡ ಮಹೇಲಾ ಜಯವರ್ಧನೆ (೧೮) ವಿಕೆಟ್ ಬೇಗನೇ ಕಳಕೊಂಡರೂ ದ್ವಿತೀಯ ವಿಕೆಟ್‌ಗೆ ಸೆಹ್ವಾಗ್ ಹಾಗೂ ಕೆವಿನ್ ಪೀಟರ್ಸನ್ (೨೭) ೮.೨ ಓವರ್‌ಗಳಲ್ಲಿ ಬರೊಬ್ಬರಿ ೮೯ ರನ್ ಪೇರಿಸಿ ಉತ್ತಮ ದಾರಿಗೆ ತಂದರು. ಸೆಹ್ವಾಗ್ ಈ ಜೊತೆಯಾಟದಲ್ಲಿ ೫೮ ರನ್‌ಗಳ ಕಾಣಿಕೆ ನೀಡಿದ್ದರು. ಅಂತಿಮವಾಗಿ ರಾಸ್ ಟೇಲರ್ (೯) ಜೊತೆ ಸೇರಿಕೊಂಡ ಸೆಹ್ವಾಗ್ ಅಜೇಯ ೩೭ ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಜಿಲ್ಲಾಡಳಿತ, ಮನಪಾ ನಿರ್ಲಕ್ಷ್ಯದಿಂದ ನೀರಿಗೆ ಬರ

Posted by JAYAKIRANA Kirana on | 0 comments | Leave a comment...

ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಆರೋಪ
ಮಂಗಳೂರು: ಪ್ರತೀವರ್ಷ ಎಪ್ರಿಲ್, ಮೇ ತಿಂಗಳಲ್ಲಿ ನೀರಿಗೆ ಸಮಸ್ಯೆ ಬರುವುದು ಮಾಮೂಲಿ ಯಾಗಿದ್ದು ಕಾಂಗ್ರೆಸ್ ಆಡಳಿತದ ಲ್ಲಿದ್ದಾಗ ಜನವರಿಯಲ್ಲೇ ಕೈಗಾರಿಕೆಗಳಿಗೆ ನೀರು ಪೂರೈಕೆ ನಿಲ್ಲಿಸಲಾಗುತ್ತಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಈ ಕೆಲಸ ಮಾಡದ ಕಾರಣ ನೀರಿಗೆ ಬರ ಬಂ ದಿದೆ ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರಧಾರ ಮತ್ತು ನೇತ್ರಾವತಿಯಲ್ಲಿ ಹತ್ತಕ್ಕೂ ಹೆಚ್ಚು ಪವರ್ ಪ್ರೊಜೆಕ್ಟ್‌ಗಳು ಅಣೆಕಟ್ಟುಗಳನ್ನು ಕಟ್ಟಿ ನೀರು ಶೇಖರಿಸಿ ವಿದ್ಯುತ್ ಉತ್ಪಾ ದನೆ ಮಾಡುವ ಮೂಲಕ ಕೋಟ್ಯಂತರ ಹಣ ಬಾಚುತ್ತಿದೆ. ಈ ವರ್ಷ ಈ ನದಿಗಳಲ್ಲಿ ಒಳ ಹರಿವು ಕಡಿಮೆಯಾಗಿದ್ದ ಕಾರಣ ಜನವರಿಯಲ್ಲೇ ನೀರು ಬಳಕೆ ಮಾಡದಂತೆ ಜಿಲ್ಲಾಧಿಕಾರಿಯವರು ಕಂಪೆನಿಗಳಿಗೆ ಆದೇಶಿಸ ಬೇಕಿತ್ತು. ಆದರೆ ಹಾಗೆ ಮಾಡದ ಕಾರಣ ಇಂದು ನೀರಿನ ಸಮಸ್ಯೆ ತಲೆದೋರಿದೆ ಎಂದು ಅವರು ಕಿಡಿಕಾರಿದ್ದಾರೆ.
ತುಂಬೆ ವೆಂಟೆಡ್ ಡ್ಯಾಮ್‌ನಿಂದ ಏಳು ಕಿ.ಮೀ. ಅಂತರದಲ್ಲೇ ಶಂಭೂರು ಎ.ಎಂ. ಆರ್. ಪವರ್ ಪ್ರಾಜೆಕ್ಟ್‌ಗೆ ಸಂಬಂಧಟ್ಟ ೨೦ ಅಡಿ ಎತ್ತರದ ವೆಂಟೆಡ್ ಡಾಂ ಇದೆ. ಇವರಿಗೆ ಫೆ.೧೬ರವರೆಗೆ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿದ್ದು ಆ ವೇಳೆ ಡ್ಯಾಂನ ಕೆಳಪ್ರದೇಶದಲ್ಲಿದ್ದ ಬಂಡೆ ಗಳನ್ನು ಒಡೆದು ಕಾಂಕ್ರಿಟೀಕರಣ ಮಾಡುವ ಸಲುವಾಗಿ ನೀರನ್ನು ಪೋಲು ಮಾಡಲಾಯಿತು.
ಮಾರ್ಚ್ ೧೦ರಂದು ಎಂ.ಆರ್. ಪಿ.ಎಲ್. ನವರು ಸರಪಾಡಿಯಲ್ಲಿ ಡ್ಯಾಂನ ಗೇಟು ಹಾಕಿ ಒಳಹರಿವನ್ನು ಸಂಪೂರ್ಣ ವಾಗಿ ಬಂದ್ ಮಾಡಿದ ಕಾರಣ ತುಂಬೆಯಲ್ಲಿ ನೀರಿನ ಮಟ್ಟ ಕುಸಿಯಿತು. ಸರಕಾರ, ಜಿಲ್ಲಾಡಳಿತ ಮತ್ತು ಪಾಲಿಕೆ ಆಡಳಿತಗಾರರ ನಿರ್ಲಕ್ಷ್ಯತನದಿಂದಾಗಿ ಮಂಗಳೂರಿನ ಜನ ನೀರಿಗಾಗಿ ಪರದಾಡಬೇಕಾಗಿದೆ. ಇದರ ಹಿಂದೆ ಶೋಭಾ ಕೆರಂದ್ಲಾಜೆ ಮತ್ತು ಮುರುಗೇಶ್ ನಿರಾಣಿ ಅವರ ಕೈವಾಡ ಇದೆಯೆಂದು ಶೆಟ್ಟರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೇಯರ್ ಪ್ರವಾಸ ಹಿಂದೆಯೇ ನಿಗದಿಯಾಗಿತ್ತು
ಮಂಗಳೂರಿನಲ್ಲಿ ನೀರಿನ ಸಮಸ್ಯೆ ಇರುವಾಗಲೇ ಮೇಯರ್ ಸನ್ಮಾನಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯಕುಮಾರ್ ಶೆಟ್ಟಿ, ಮೇಯರ್‌ಗೆ ಸನ್ಮಾನದ ಬಗ್ಗೆ ಮೊದಲೇ ನಿರ್ಣಯವಾಗಿದ್ದ ಕಾರಣ ಅವರು ಒಪ್ಪಿಕೊಂಡಿದ್ದರು. ವಿದೇಶಕ್ಕೆ ಹೋಗುವ ದಿನ ರಾತ್ರಿ ಹತ್ತು ಗಂಟೆಯವರೆಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಇಷ್ಟಕ್ಕೂ ಅವರು ವಿದೇಶ ಯಾತ್ರೆ ಕೈಗೊಂಡಿರುವುದಕ್ಕೆ ತಮ್ಮ ಸಮರ್ಥನೆಯಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿದರು.

ಕಜಾಪ ಗಡಿನಾಡ ಘಟಕ ಅಸ್ತಿತ್ವಕ್ಕೆ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಕರ್ಣಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕ ಅಸ್ತಿತ್ವಗೊಂಡಿದೆ. ಈ ಬಗ್ಗೆ ಜಾನಪದ ಪರಿಷತ್ತಿನ ಕೇಂದ್ರ ಸಮಿತಿಯಿಂದ ಅಂಗೀಕಾರ ಹಾಗೂ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಅನುಮತಿ ದೊರೆತಿದೆ. ಕೇಂದ್ರ ಸಮಿತಿಯ ಮಾರ್ಗ ಸೂಚಿಯಂತೆ ಕೇರಳ ಗಡಿನಾಡ ಘಟಕವನ್ನು ರೂಪುಗೊಳಿಸಲಾಯಿತು.
ಗಡಿನಾಡ ಘಟಕದ ಅಧ್ಯಕ್ಷರಾಗಿ ಎಸ್. ಜಗನ್ನಾಥ ಶೆಟ್ಟಿ ಕುಂಬ್ಳೆ, ಗೌರವ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ, ಕೋಶಾಧ್ಯಕ್ಷರಾಗಿ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಯಿತು.
ಪ್ರೊ. ಎ. ಶ್ರೀನಾಥ್, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಕೇಶವ ಪ್ರಸಾದ್ ನಾಣಿತ್ತಿಲು, ಎಂ ಉಮೇಶ ಸಾಲಿಯಾನ್ ಗೌರವ ಸಲಹೆಗಾರರಾಗಿ, ನ್ಯಾಯವಾದಿ ಥೋಮಸ್ ಡಿ. ಸೋಜಾ ಗೌರವಾಧ್ಯಕ್ಷರಾಗಿ, ರಾಧಾಕೃಷ್ಣ. ಕೆ. ಉಳಿಯತ್ತಡ್ಕ, ಎ.ಎ. ಆಯಿಷಾ ಪೆರ್ಲ ಉಪಾಧ್ಯಕ್ಷರಾಗಿ, ರವಿಶಂಕರ . ಕೆ. ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ರತ್ನಾಕರ ಮಲ್ಲಮೂಲೆ, ಮುಹಮ್ಮದಾಲಿ ಪೆರ್ಲ, ಕೇಶವ ಶೆಟ್ಟಿ. ಕೆ. ಆದೂರು, ಲೋಕನಾಥ ಶೆಟ್ಟಿ, ಕೃಷ್ಣ. ಜಿ. ಮಂಜೇಶ್ವರ, ಅಶ್ರಫ್ ಮರ್ತ್ಯ, ವನಿತ್ ಕುಮಾರ್, ಕೆ.ಎಂ. ಪಾಟಾಳಿ ಎಂಬವರನ್ನು ಚುನಾಯಿಸಲಾಯಿತು. ಗಡಿನಾಡ ಘಟಕದ ಅಧಿಕೃತ ಉಧ್ಘಾಟನೆಯು ಶ್ರೀಘ್ರದಲ್ಲೇ ಕಾಸರಗೋಡಿನಲ್ಲಿ ನಡೆಯಲಿದೆಯೆಂದು ಎಸ್. ಜಗನ್ನಾಥ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಳಿಸಿದ್ದಾರೆ.

ಎ.೨೭: ಕೇರಳ ಯಾತ್ರೆಗೆ ಮಂಗಳೂರಿನಿಂದ ವಿಶೇಷ ರೈಲು

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಾನವತೆಯ ಜಾಗೃತಿಗಾಗಿ ಎಂಬ ಘೋಷಣೆ ಯೊಂದಿಗೆ ನಡೆಯುತ್ತಿರುವ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಕೇರಳ ಯಾತ್ರೆ ಮೇ ೨೮ರಂದು ತಿರುವನಂತಪುರದಲ್ಲಿ ಸಮಾ ರೋಪಗೊಳ್ಳಲಿದ್ದು, ಆ ಪ್ರಯುಕ್ತ ರೈಲ್ವೆ ಇಲಾಖೆ ಮಂಗಳೂರಿನಿಂದ ತಿರುವ ನಂತಪುರಕ್ಕೆ ಹೆಚ್ಚುವರಿ ರೈಲು ವ್ಯವಸ್ಥೆಗೊಳಿಸಿದೆ.
ಮೇ ೨೭ರಂದು ರಾತ್ರಿ ಮಂಗಳೂ ರಿನಿಂದ ಹೊರಡುವ ರೈಲು, ಕಾಸg ಗೋಡು, ಕಾಞಂಗಾಡ್, ಕಣ್ಣೂರು, ತಲಶ್ಶೇರಿ, ವಡಗರ, ಕಲ್ಲಿಕೋಟೆ, ಫರೋಕ್, ಪರಪ್ಪನಂಗಾಡಿ, ತಿರೂರು, ಕುಟ್ಟಿಪುರಂ ಸ್ಟೇಶನ್‌ಗಳಾಗಿ ಪ್ರಯಾಣಿಸ ಲಿದ್ದು, ೨೮ರಂದು ಮಧ್ಯಾಹ್ನ ತಿರುವ ನಂತಪು ರಕ್ಕೆ ತಲುಪಲಿದೆ. ಅದೇ ದಿನ ರಾತ್ರಿ ೧೧.೩೦ಕ್ಕೆ ರೈಲು ತಿರುನಂತಪುರ ದಿಂದ ಮಂಗಳೂರಿಗೆ ಮರಳಿ ಹೊರಡಲಿದೆ.
 ಕೇರಳ ಯಾತ್ರೆ ಸಮಾರೋಪ ಕಾರಣದಿಂದ ಸಾಮಾನ್ಯ ತಿರುವನಂತ ಪುರಂ ರೈಲಿನ ಸೀಟುಗಳು ಕಳೆದ ತಿಂಗಳಲ್ಲೇ ಭರ್ತಿಯಾಗಿದ್ದು, ಇದನ್ನು ಕೇರಳ ಯಾತ್ರೆಯ ವ್ಯವಸ್ಥಾಪಕ ಸಮಿತಿಯು ರೈಲ್ವೇಯ ಗಮನಕ್ಕೆ ತಂದಿ ತ್ತು. ಹಲವು ಸುತ್ತಿನ ಪರಿಶೀಲನೆಯ ಬಳಿಕ ರೈಲ್ವೆಯು ಹೆಚ್ಚುವರಿ ರೈಲು ವ್ಯವಸ್ಥೆಗೊಳಿಸಿದೆ. ಮುಂಗಡ ಸೀಟ್ ಬುಕ್ಕಿಂಗ್ ಮಾಡುವವರು ಈ ದೂರ ವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ. ೯೮೯೫೪೮೩೮೯೯, ೯೦೩೭೦೨೯೨೬೯. ಕೇರಳ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕರ್ನಾಟಕ ದಿಂದ ನೂರಾರು ಖಾಸಗಿ ಬಸ್‌ಗಳು ಕೂಡ ಹೊರಡಲಿವೆ.

ಪುಂಜಾಲಕಟ್ಟೆ ಠಾಣಾ ಪೊಲೀಸ್ ಅಮಾನತು

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಕ್ರಮ ಮದ್ಯ ಸಾಗಾಟ ಪ್ರಕರಣದ ಆರೋಪಿಯೋ ರ್ವನ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿಯಲ್ಲಿ ಪುಂಜಾಲಕಟ್ಟೆ ಠಾಣಾ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಿವಾನಂದ ಅಮಾನತಾದವರು. ಕಳೆದ ತಿಂಗಳು ಒಳಬೈಲು ಎಂಬಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯ ದಾಸ್ತಾನನ್ನು ಪತ್ತೆಹಚ್ಚಲಾಗಿತ್ತು. ಈ ಪ್ರಕರಣದ ಆರೋಪಿಯ ಜೊತೆ ಶಿವಾ ನಂದ ಸಖ್ಯ ಬೆಳೆಸಿದ್ದರು ಎನ್ನಲಾಗಿದೆ.

ಗುತ್ತಿಗೆ ಪದ್ಧತಿ ಜಾರಿಗೊಳಿಸಿದ್ದು ಸರಕಾರದ ಅಪರಾಧ: ಬಿ.ಎಂ.ಭಟ್

Posted by JAYAKIRANA Kirana on | 0 comments | Leave a comment...

ಉಡುಪಿ: ರಾಜ್ಯದ ಶಾಲಾ- ಕಾಲೇಜುಗಳ ಕಂಪ್ಯೂಟರ್ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಬಾಳೆಹಣ್ಣು ತಿಂದು ಸಿಪ್ಪೆ ಎಸೆದಂತೆ ಸರಕಾರ ಜ್ಯಾರಿಗೊಳಿಸುತ್ತಿರುವ ಖಾಸಗೀಕರಣ ನೀತಿ, ಬಂಡವಾಳಶಾಹಿ ಪರವಾದ ಧೋರಣೆಗಳು ಮತ್ತು ಗುತ್ತಿಗೆ ಪದ್ದತಿ ಗಳೇ ಕಾರಣವಾಗಿದ್ದು, ಇವುಗಳೆಲ್ಲವೂ ಸರಕಾರವೆಸಗಿದ ಅಕ್ಷಮ್ಯ ಅಪರಾಧ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ಹೇಳಿದ್ದಾರೆ.
ಸಿಐಟಿಯು ಪ್ರಾಯೋಜಿತ ಕರ್ನಾಟಕ ರಾಜ್ಯ ಶಾಲಾ- ಕಾಲೇಜು ಗಳ ಕಂಪ್ಯೂಟರ್ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಉಡು ಪಿಯ ಹೊಟೇಲ್ ದುರ್ಗಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರಕಾರ ಗುತ್ತಿಗೆ ಪದ್ದತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಯನ್ನು ಪಾಲನೆ ಮಾಡುತ್ತಿಲ್ಲ. ೧೫೦೦ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ತೆಗೆದಿರಿಸಲಾಗಿದೆ. ಆದರೆ, ಇದರಲ್ಲಿ ಒಂದು ಪೈಸೆಯನ್ನೂ ಕಂಪ್ಯೂ ಟರ್ ಶಿಕ್ಷಣಕ್ಕೆ ನೀಡಲಾಗಿ ಲ್ಲವೆಂದು ಭಟ್ ಆರೋಪಿಸಿದರು.
ಸರಕಾರ ಗುತ್ತಿಗೆ ಪದ್ದತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ ಬಿ.ಎಂ.ಭಟ್, ರಾಜ್ಯದ ಶಾಲಾ- ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು. ಭಗವದ್ಗೀ ತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡಿದಂತೆ ಅನ್ಯಾಯ ಮಾಡಿದ್ದು ಯಾರೇ ಆಗಿರಲಿ, ಜಾತಿ, ಮತ, ಪಕ್ಷ, ಸರಕಾರ ಎಂದು ನೋಡದೆ ಅನ್ಯಾಯ ಮಾಡಿದವರ ವಿರುದ್ದ ನಿರಂತರವಾಗಿ ಐಕ್ಯ ಹೋರಾಟ ಮಾಡುವಂತೆ ಕಂಪ್ಯೂಟರ್ ಶಿಕ್ಷಕಿಯ ರಿಗೆ ಕರೆ ನೀಡಿದರು. ಸಂಘಟನೆಯ ಪ್ರಮುಖರಾದ ಸುನಿಲ್‌ಕುಮಾರ್ ಬಜಾಲ್, ಶಂಕರ ಹೈಕಾಡಿ, ಕುಸುಮ ಕಾರ್ಕಳ, ವಿನಯಾ ಉಡುಪಿ, ಜಗದೀಶ್ ವೈದ್ಯ ಕುಂದಾಪುರ, ಆಶಾ ಬ್ರಹ್ಮಾವರ, ರಸಿಕಾ ಕಾರ್ಕಳ, ಶಶಿರೇಖಾ ಉಡುಪಿ, ಕೃಷ್ಣ ಹೊಸಂಗಡಿ, ಶಾರದಾ ಬ್ರಹ್ಮಾವರ ಉಪಸ್ಥಿತರಿದ್ದರು.

ಸೈನೆಡ್ ಕಿಲ್ಲರ್ ಸಿನಿಮಾದ ಹಿಂದೆ ವಿಜಯನಾಥ ಶೆಟ್ಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಿನ್ಯಾದ ಶಿಕ್ಷಕ ಮೋಹನ್‌ಕುಮಾರ್ ನಡೆಸಿರುವನೆನ್ನ ಲಾದ ಸರಣಿ ಹತ್ಯಾ ಪ್ರಕರಣದ ಆಧಾರದಲ್ಲಿ ನಿರ್ಮಿಸಲಾಗುತ್ತಿರುವ ಸೈನೆಡ್ ಕಿಲ್ಲರ್ ಸಿನಿಮಾ ನಿರ್ಮಾಣದಲ್ಲಿ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ವಿಜಯನಾಥ್ ವಿಠ್ಠಲ ಶೆಟ್ಟಿ ಆಸಕ್ತಿ ತಾಳಿರುವ ವಿಷಯವೀಗ ಬೆಳಕಿಗೆ ಬಂದಿದೆ.
ಪುಟ್ಟಣ್ಣ ಕಣಗಾಲರ ಶಿಷ್ಯ ಚಂದ್ರಹಾಸ ಆಳ್ವಾರ ನಿರ್ದೇಶನದಲ್ಲಿ ಮೂಡಿ ಬರಲಿರುವ ಸೈನೆಡ್ ಕಿಲ್ಲರ್ ಸಿನಿಮಾ ನಿರ್ಮಾಣದಲ್ಲಿ ಪುತ್ತೂರಿನ ಕೆಬಲ್ ಟಿ.ವಿ. ನೆಟ್‌ವರ್ಕ್‌ನವರು ಆಸಕ್ತರಾಗಿದ್ದರೆ, ಅವರಿಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿರುವವರು ವಿಜಯನಾಥ ಶೆಟ್ಟರು. ಉದ್ಯಮಿಯಾಗಿ ಯಶಸ್ಸು ಸಾಧಿಸಿ, ಧಾರ್ಮಿಕ ಕ್ಷೇತ್ರದ ಲ್ಲಿಯೂ ತನ್ನನ್ನು ತೊಡಗಿಸಿಕೊಂಡಿ ರುವ ವಿಜಯನಾಥ ಶೆಟ್ಟರು ಈಗ ಸಿನಿಮಾ ಕ್ಷೇತ್ರದತ್ತಲೂ ಹೆಜ್ಜೆ ಇಟ್ಟಿರು ವುದು ಕೂತೂಹಲ ಕೆರಳಿಸಿದೆ.
ವಿಜಯನಾಥ ಶೆಟ್ಟರಂತಹ ಉದ್ಯಮಿ ಸಿನಿಮಾ ನಿರ್ಮಾಣ ಮಾಡು ತ್ತಿರುವುದರಿಂದ ಸಿನಿಮಾದ ಅದ್ಧೂರಿ ತನಕ್ಕೆ ಚ್ಯುತಿಯಾಗದು ಎಂದು ಹೇಳ ಲಾಗಿದೆ. ಸೈನೆಡ್ ಕಿಲ್ಲರ್ ಮೋಹನ್ ಕುರಿತಾದ ಸಿನಿಮಾಕ್ಕೆ ವಿಜಯನಾಥ್ ಮುಖ್ಯ ಪಾಲುದಾರರಾದರೆ, ಪುತ್ತೂರು ಕೇಬಲ್ ಟಿ.ವಿ. ನೆಟ್‌ವರ್ಕ್ ಸಹ ಪಾಲುದಾರರಾಗಿರುತ್ತಾರೆ.

ಪುತ್ತೂರು ಬಸ್ ನಿಲ್ದಾಣ ತಾತ್ಕಾಲಿಕ ಸ್ಥಳಾಂತರ

Posted by JAYAKIRANA Kirana on | 0 comments | Leave a comment...

ಪರದಾಡುತ್ತಿರುವ ಪ್ರಯಾಣಿಕರು
ಪುತ್ತೂರು: ಪುತ್ತೂರಿಗೆ ಸುಸಜ್ಜಿತ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕಾಗಿ ಕಾಮ ಗಾರಿ ಆರಂಭಗೊಂಡಿದೆ. ಈ ಹಿನ್ನೆಲೆ ಯಲ್ಲಿ ಕೆಸ್ಸಾರ್ಟಿಸಿಯ ಕೆಲವು ಬಸ್ಸು ನಿಲುಗಡೆಯನ್ನು ತಾತ್ಕಾಲಿಕವಾಗಿ ಮಂಗಳವಾರದಿಂದ ನೆಲ್ಲಿಕಟ್ಟೆಯಲ್ಲಿರುವ ಖಾಸಗಿ ಬಸ್ಸು ನಿಲ್ದಾಣಕ್ಕೆ ಸ್ಥಳಾಂತರಿ ಸಲಾಗಿದೆ. ಆದರೆ ಈ ತನಕ ಖಾಸಗಿ ಬಸ್ಸು ನಿಲ್ದಾಣದಲ್ಲಿರುತ್ತಿದ್ದ ಖಾಸಗಿ ಬಸ್ಸು ಗಳಿಗೆ ಸಮರ್ಪಕವಾದ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ಪುತ್ತೂರಿನಿಂದ ಗ್ರಾಮೀಣ ಪ್ರದೇಶ ಗಳಾದ ಕುಂಬ್ರ ,ಬೆಳ್ಳಾರೆ, ಕಾವು, ಪೆರ್ಲಂಪಾಡಿ, ಸುಳ್ಯಪದವು, ಪಳ್ಳತ್ತೂರು, ಗಾಳಿಮುಖ, ಸವಣೂರು, ಶಾಂತಿ ಗೋಡು, ವೀರಮಂಗಲ, ಕಾಣಿ ಯೂರು, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ, ಕಡಬ, ಕಬಕ, ವಿಟ್ಲ ಮತ್ತು ಕಾಸರಗೋಡು ಭಾಗಕ್ಕೆ ಸಾಗುವ ಬಸ್ಸುಗಳು ಖಾಸಗಿ ಬಸ್ಸು ನಿಲ್ದಾಣಕ್ಕೆ ಸ್ಥಳಾಂತರಗೊಂಡಿದೆ. ಮೈಸೂರು, ಮಂಗಳೂರು, ಸುಳ್ಯ ಮತ್ತು ಉಪ್ಪಿ ನಂಗಡಿಗೆ ಸಾಗುವ ಬಸ್ಸುಗಳು ಮಾತ್ರ ಈಗಿರುವ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣ ದಿಂದಲೇ ಸಾಗಲಿದೆ. ಖಾಸಗಿ ಬಸ್ಸು ಗಳನ್ನು ನಿಲುಗಡೆ ಗೊಳಿಸಲು ಸರಿ ಯಾದ ಸ್ಥಳಾವ ಕಾಶವಿಲ್ಲದೆ ಎಲ್ಲೆಂ ದರಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ಪ್ರವೇ ದ್ವಾರದ ಎದುರಿನ ರಸ್ತೆಯಲ್ಲಿ ಬಸ್ಸುಗಳೇ ತುಂಬಿ ಇತರ ವಾಹನ ಸಂಚಾರಕ್ಕೆ ತೊಡಕಾಗಿದೆ. ಬಸ್ಸುಗಳ ನಿಲುಗಡೆಯ ಮತ್ತು ಸಂಚಾರ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ಇಲ್ಲದೆ ಕಾರಣ ಯಾವ ಬಸ್ಸುಗಳು ಎಲ್ಲಿ ನಿಲು ಗಡೆಯಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲದೆ ಪ್ರಯಾ ಣಿಕರು ಪರದಾ ಡುವಂತಾಗಿದೆ. ಕೆಎಸ್ಸಾ ರ್ಟಿಸಿ ಬಸ್ಸು ನಿಲ್ದಾಣದಲ್ಲಿ ಧ್ವನಿವರ್ಧಕದ ಮೂಲಕ ಗ್ರಾಮೀಣ ಪ್ರದೇಶಗಳ ಬಸ್ಸು ನಿಲ್ದಾಣ ಬದಲಾವಣೆ ಆಗಿರುವ ಬಗ್ಗೆ ಮಾಹಿತಿ ನೀಡಲಾ ಗುತ್ತಿದೆ. ಆದರೆ ಖಾಸಗಿ ಬಸ್ಸಿ ನಲ್ಲಿ ಹೋಗ ಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಜೆಡಿಎಸ್ ಸಮಾವೇಶ ರದ್ದು

Posted by JAYAKIRANA Kirana on | 0 comments | Leave a comment...

ಮಂಗಳೂರು: ಜೆಡಿಎಸ್ ಪಕ್ಷದ ಮಂಗಳೂರು ಉತ್ತರವಲಯದ ಕಾರ‍್ಯಕರ್ತರು ಮತ್ತು ಪದಾಧಿಕಾರಿಗಳು ಏಪ್ರಿ ೨೮ ರಂದು ನಡೆಸಲು ಉದ್ದೇ ಶಿಸಿರುವ ಪಕ್ಷದ ಕಾರ‍್ಯಕರ್ತರ ಸಮಾವೇಶವನ್ನು ರದ್ದುಗೊಳಿಸಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಸಂಸತ್ತಿನ ಅಧಿವೇಶನದಲ್ಲಿ ನಿರತರಾಗಿರುವುದು ಹಾಗೂ ರಾಜ್ಯದ ೨೭ ಜಿಲ್ಲೆಗಳಲ್ಲಿ ಬರ ಕಾಡುತ್ತಿರುವುದರಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ಪಕ್ಷದ ವಕ್ತಾರ ವೈ.ಎಸ್.ವಿ.ದತ್ತಾ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಲ್ಲೂ ಸಚಿವರ ವಿದೇಶ ಪ್ರವಾಸ: ಸಿಎಂ ಗರಂ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಜನ ತತ್ತರಿಸುವ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಅವರು ಹಿಂತಿರುಗುತ್ತಿದ್ದಂತೆ ವಿವರಣೆ ಪಡೆಯು ವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬರಗಾಲದ ಸಂದರ್ಭದಲ್ಲಿ ವಿದೇಶ ಪ್ರವಾಸ ಕೈಗೊಳ್ಳಬಾರದು ಎಂಬ ತಮ್ಮ ಆದೇಶವನ್ನು ನಾರಾ ಯಣಸ್ವಾಮಿ ಯಾಕೆ ಉಲ್ಲಂಘಿಸಿದರು ಎಂಬುದು ತಿಳಿದಿಲ್ಲ. ರಾಜ್ಯದ ಇಪ್ಪ ತ್ನಾಲ್ಕು ಜಿಲ್ಲೆಗಳ ನೂರಾ ಇಪ್ಪತ್ಮೂರು ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿ ರುವುದರಿಂದ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಯಬೇಕು ಎಂದು ನಾನು ಹೇಳಿದ್ದೆ. ಇದೇ ಕಾರಣ ಕ್ಕಾಗಿ ನನ್ನ ವಿದೇಶ ಪ್ರವಾಸವನ್ನು ರದ್ದುಪಡಿಸಿದ್ದಲ್ಲದೇ ಸಚಿವರು, ಶಾಸ ಕರು, ಅಧಿಕಾರಿಗಳು ವಿದೇಶ ಪ್ರವಾಸ ಮಾಡಬಾರದು ಎಂದು ಹೇಳಿದ್ದೆ. ಇದರ ನಡುವೆಯು ನಾರಾಯಣಸ್ವಾಮಿ ವಿದೇಶ ಪ್ರವಾಸಕ್ಕೆ ಹೋಗುವಾಗ ನನ್ನ ಅನುಮತಿ ಕೇಳಲು ಬಂದಿದ್ದರು. ಆಗಲೂ ನಾನು ವಿದೇಶ ಪ್ರವಾಸ ಕೈಗೊಳ್ಳಬೇಡಿ ಎಂದು ಹೇಳಿದ್ದೆ.
ಇಷ್ಟಾದರೂ ಅವರು ಹೋಗಿದ್ದಾರೆ ಎಂದರೆ ಇದಕ್ಕೆ ಸಂಬಂಧಿಸಿದಂತೆ ಅವರಿಂದ ಸೂಕ್ತ ವಿವರಣೆ ಪಡೆಯು ತ್ತೇನೆ ಎಂದ ಅವರು, ಇನ್ನು ಮುಂದೆ ರಾಜ್ಯದಲ್ಲಿರುವ ಬರಗಾಲ ನಿವಾರಣೆ ಯಾಗುವವರೆಗೆ ಇಂತಹ ಪ್ರವಾಸಗಳ ಅಗತ್ಯವಿಲ್ಲ ಎಂದು ಪುನರುಚ್ಛರಿಸಿದರು.
ಬಿಎಸ್‌ಆರ್ ಪಕ್ಷದ ನಾಯಕ ಬಿ.ಶ್ರೀರಾಮುಲು ಅವರು ಕೈಗೊಳ್ಳುತ್ತಿ ರುವ ಪಾದಯಾತ್ರೆಯ ಪಾದಯಾತ್ರೆಯ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಣೆ ಮಾಡಿದ ಇಂತಹ ಪಾದಯಾತ್ರೆಗಳ ಮೂಲಕ ಬರಗೆ ಮುಕ್ತಿ ಬರುತ್ತದೆ ಎನ್ನುವುದಾದರೆ ಅದನ್ನು ಸ್ವಾಗತಿಸು ವುದಾಗಿ ತಿಳಿಸಿದರು.
ರಾಜ್ಯದ ಜನರ ಸಂಕಷ್ಟ ಅರಿ ಯಲು ಇಂತಹ ಪಾದಯಾತ್ರೆಗಳು, ಪ್ರವಾಸಗಳು ಮುಖ್ಯ ಎಂದು ನಾನು ಭಾವಿಸುತ್ತೇನೆ. ಈಗ ರಾಜ್ಯದಲ್ಲಿ ಆವರಿಸಿರುವ ಬರಗಾಲದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರು ಜನರ ಸಂಕಷ್ಟ ಗಮನಿಸಲು ಪ್ರವಾಸ ಮಾಡಿದರು.

ಈಶ್ವರಪ್ಪ-ಅಶೋಕ್ ಮಧ್ಯೆ ಬಿರುಕು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಗೃಹ ಸಚಿವ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವಪ್ಪರ ಮಧ್ಯ ಬಿರುಕು ಉಂಟಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಯ್ಕೆಯ ವಿಷಯದಲ್ಲಿ ಇವರಿಬ್ಬರಲ್ಲಿ ಮಾತಿನ ಚಕಮಕಿ ನಡೆದಿದೆ.
ಈಶ್ವರಪ್ಪ ಮೇಯರ್ ಆಗಿ ವೆಂಕ ಟೇಶ ಮೂರ್ತಿಯವರನ್ನು ಬೆಂಬಲಿಸು ತ್ತಿದ್ದರೆ, ಆರ್.ಅಶೋಕ್ ಮತ್ತು ನಗ ರದ ಎಲ್ಲ ಶಾಸಕರು ಸೋಮಶೇಖ ರರ ಆಯ್ಕೆಗೆ ಪಟ್ಟು ಹಿಡಿದಿದ್ದಾರೆ. ಇವರಿಬ್ಬರೂ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಈಶ್ವರಪ್ಪ ಎಲ್ಲ ಶಾಸಕರ ವಿರೋಧ ಕಟ್ಟಿಕೊಂಡಿದ್ದು ತಾನು ಸೂಚಿಸಿದವನೇ ಮೇಯರ್ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ವಿಷಯವಾಗಿ ಎರಡು ಸಭೆಗಳು ನಡೆದರು ಅಂತಿಮ ರ್ಧಾರಕ್ಕೆ ಬರಲಾಗಲಿಲ್ಲ, ನ್ನೆ ರಾತ್ರಿ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಈಶ್ವರಪ್ಪ ಭಾಗವಹಿಸಿರಲಿಲ್ಲ ಸಭೆ ತೆಗೆದುಕೊಂಡ ರ್ಣಯವನ್ನು ತಿಳಿಸುವ ಹಂತದಲ್ಲಿ ಅಶೋಕ್ ವಿರುದ್ಧ ಈಶ್ವರಪಪ ಹರಿಹಾಯ್ದಿದ್ದಾರೆ. ಆಗ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ. ಇಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರೇ ಮಧ್ಯ ಪ್ರವೇಶಿಸಿ ಗೊಂದಲ ಪರಿಹರಿಸುವ ಸಾಧ್ಯತೆ ಇದೆ.
ಬೆಂಗಳೂರು ಮಹಾನಗರ ಪಾಲಿ ಕೆಯ ಮೇಯರ್ ಆಯ್ಕೆಗೆ ಈ ಬಾರಿ ಹಿಂದುಳಿದ ವರ್ಗದ ಮೀಸಲಾತಿ ಲಭ್ಯವಾಗಿದ್ದು, ಕುರುಬ ಅಭ್ಯರ್ಥಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕುರುಬರ ಮಧ್ಯಯೇ ಈಗ ಪೈಪೋಟಿ ಆರಂಭ ವಾಗಿದೆ.

ಗಾಣಿಗ, ಶೆಟ್ಟಿ, ಬಿಲ್ಲವ, ಗಟ್ಟಿ ವಧು-ವರರು

Posted by JAYAKIRANA Kirana on | 0 comments | Leave a comment...

ಗಾಣಿಗ
ನಾನು ೨೮ರ ಹರೆಯದ ಪದವೀಧರೆ ಗಾಣಿಗ ಯುವತಿ. ಮದುವೆಯಾಗಿ ಡೈವೋರ್ಸ್ ಆಗಿದೆ. ಮಗು ಇದೆ. ೪೦ರ ಒಳಗಿನ ಗಾಣಿಗ ಅಥವಾ ಬೇರೆ ಜಾತಿಯ ವಿಧುರ, ವಿಚ್ಛೇದಿತ ವರ ಇದ್ದರೆ ತಿಳಿಸಿ.

ವಿಶ್ವಕರ್ಮ
ನಾನು ೨೯ರ ಹರೆಯದ ವಿಶ್ವಕರ್ಮ ಯುವಕ ಸಿವಿಲ್ ಇಂಜಿನಿಯರ್ ಪದವೀಧರ . ಉದ್ಯೋಗ ಇದೆ. ೨೫ರ ಒಳಗಿನ ಯುವತಿಇದ್ದರೆ ತಿಳಿಸಿ.

ಮಲಯಾಳಿ
ನಾನು ೩೩ರ ಹರೆಯದ ಮಲಯಾಳಿ ಬಿಲ್ಲವ ಯುವಕ-ಉದ್ಯೋಗ ಇದೆ. ಪದವೀಧರೆ ಯುವತಿ ಇದ್ದರೆ ತಿಳಿಸಿ.

ಬಿಲ್ಲವ
ನಾನು ೩೦ರ ಹರೆಯದ ಬಿಲ್ಲವ ಯುವಕ. ೨೫ರ ಒಳಗಿನ ಯುವತಿ ಇದ್ದರೆ ತಿಳಿಸಿ.

ಗೌಡ
ನಾನು ೨೪ರ ಹರೆಯದ ಗೌಡ ಯುವತಿ. ೩೦ರ ಒಳಗಿನ ವರ ಇದ್ದರೆ ತಿಳಿಸಿ

ಗಟ್ಟಿ
ನಾನು ೩೫ರ ಒಳಗಿನ ಗಟ್ಟಿ ವರ. ೩೦ರ ಒಳಗಿನ ವಧು ಇದ್ದರೆ ತಿಳಿಸಿ
ಟಿ೩೦ರ ಹರೆಯದ ಗಟ್ಟಿ ಯುವತಿ. ಪದವೀಧರೆ ವಿಚ್ಛೇದನ ಹೊಂದಿದ್ದೇನೆ. ನನಗೆ ೩೫ರ ಒಳಗಿನ ವಿಧುರ ವರನಿದ್ದರೆ ತಿಳಿಸಿ.

ಬಂಟ
ನಾನು ೩೧ರ ಹರೆಯದ ಬಂಟ ಯುವಕ ಉದ್ಯೋಗ ಇದೆ. ೨೮ರ ಒಳಗಿನ ವಧು ಇದ್ದರೆ ತಿಳಿಸಿ.
ನಾನು ೨೬ರ ಹರೆಯದ ಬಂಟ ಯುವಕ. ಉದ್ಯೋಗ ಇದೆ. ೨೪ರ ಒಳಗಿನ ಯುವತಿ ಇದ್ದರೆ ತಿಳಿಸಿ
ನಾನು ೩೦ರ ಹರೆಯದ ಬಂಟ ಯುವತಿ ಉದ್ಯೋಗ ಇದೆ. ೪೦ರೊಳಗಿನ ಯುವಕ ಇದ್ದರೆ ತಿಳಿಸಿ.

ಮಲಯಾಳಿ ಬಿಲ್ಲವ
ನಾನು ೨೦ರ ಹರೆಯದ ಮಲಯಾಳಿ ಬಿಲ್ಲವ ಯುವಕ. ಮದುವೆಯಾಗಿ ವಿಚ್ಚೇದನ ಹೊಂದಿದ್ದೇನೆ. ೩೫ರ ಒಳಗಿನ ವಿಚ್ಛೇದಿತ ಇದ್ದರೆ ತಿಳಿಸಿ.
ನಾನು ೩೫ರ ಹರೆಯದ ಮಲಯಾಳಿ ಬಿಲ್ಲವ ಯುವತಿ. ಮದುವೆಯಾಗಿ ಡೈವೋರ್ಸ್ ಆಗಿದೆ. ಎಲ್‌ಎಲ್‌ಬಿ ಓದಿದ್ದೇನೆ. ಉದ್ಯೋಗ ಇದೆ. ೪೦ರ ಒಳಗಿನ ಮಲಯಾಳಿ ಬಿಲ್ಲವ ಅಥವಾ ಬಿಲ್ಲವ ಯುವಕ ಇದ್ದರೆ ತಿಳಿಸಿ.

ಕುಲಾಲ
ನಾನು ೨೨ರ ಹರೆಯದ ಕುಲಾಲ ಯುವತಿ. ಉದ್ಯೋಗ ಇದೆ. ೩೦ರ ಒಳಗಿನ ಯುವಕ ಇದ್ದರೆ ತಿಳಿಸಿ.

ಕ್ರಿಶ್ಚಿಯನ್
ನಾನು ೩೨ರ ಹರೆಯದ ಕ್ರಿಶ್ಚಿಯನ್ ಯುವಕ ನನಗೆ ೨೮ರ ಒಳಗಿನ ಯುವತಿ ಇದ್ದರೆ ತಿಳಿಸಿ.

ಗೊಲ್ಲ
ನಾನು ೨೦ರ ಹರೆಯದ ಗೊಲ್ಲ ಯುವತಿ. ೨೫ರ ಒಳಗಿನ ಹುಡುಗ ಇದ್ದರೆ ತಿಳಿಸಿ.
ನಾನು ೨೬ರ ಹರೆಯದ ಗೊಲ್ಲ ಯುವಕ. ೨೧ರ ಹರೆಯದ ಯುವತಿ ಇದ್ದರೆ ತಿಳಿಸಿ.

ಮಡಿವಾಳ
ನಾನು ೩೨ರ ಹರೆಯದ ವಿಚ್ಛೇದಿತ ಮಡಿವಾಳ ಯುವತಿ. ನನಗೆ ೪೦ರ ಒಳಗಿನ ವಿಚ್ಛೇದಿತ ವರ ಇದ್ದರೆ ತಿಳಿಸಿ.

ಬಿಲ್ಲವ
ನಾನು ೩೦ರ ಹರೆಯದ ಬಿಲ್ಲವ ಯುವತಿ. ಪಿಯುಸಿ ಓದಿದ್ದೇನೆ. ಉದ್ಯೋಗ ಇದೆ. ಮದುವೆ ಆಗಿ ಡ್ರೈವೋರ್ಸ್ ಆಗಿದೆ. ೪೦ರ ಒಳಗಿನ ಯುವಕ ಇದ್ದರೆ ತಿಳಿಸಿ.
೩೨ರ ಹರೆಯದ ಬಿಲ್ಲವ ಯುವತಿ. ಮದುವೆ ಆಗಿ ಡೈವೋರ್ಸ್ ಆಗಿದೆ. ೪೦ರ ಒಳಗಿನ ವರ ಇದ್ದರೆ ತಿಳಿಸಿ.

ಆಚಾರ್ಯ
ನಾನು ೩೫ರ ಹರೆಯದ ಆಚಾರ್ಯ ಯುವತಿ. ಉದ್ಯೋಗ ಇದೆ. ೪೦ರ ಒಳಗಿನ ಯುವಕ ಇದ್ದರೆ ತಿಳಿಸಿ

ಬ್ರಾಹ್ಮಣ
ಬ್ರಾಹ್ಮಣ ವರ. ಎಸ್ ಎಸ್‌ಎಲ್‌ಸಿ ಓದಿದ್ದೇನೆ. ಖಾಸಗಿ ಬ್ಯಾಂಕ್‌ನಲ್ಲಿ ಉದ್ಯೋಗ. ೩೫ ರ ಒಳಗಿನ ಯುವತಿ ಇದ್ದರೆ ತಿಳಿಸಿ. ಅನಾಥೆ ಯಾದರೂ ಆಗಬಹುದು. ಬೇರೆ ಜಾತಿಯವರೂ ಆಗಬಹುದು. ವಿಧವೆ, ವಿಚ್ಛೆದಿತೆ ಆಗಬಹುದು.

ದಾರೆ ಮಯ್ಪುನಿ (ಧಾರೆ ಎರೆಯುವುದು)

Posted by JAYAKIRANA Kirana on | 0 comments | Leave a comment...

ನೆಂಟರ ಕಡೆಯ ಗುರಿಕಾರರು, ತಾವು ತಂದಿರುವ ವೀಳ್ಯದ ರಾಶಿಯಿಂದ ‘ಕವುಲೆ - ಕವುಲೆ ವೀಳ್ಯ, ಅಡಿಕೆ ಹೊಗೆಸೊಪ್ಪುಗಳನ್ನು ತೆಗೆದು ವೀಳ್ಯ ಗೌರವ ನೀಡಿದರೆ, ಗಂಡಿನ ಕಡೆ ಯುವರು ಅದೇ ರೀತಿ ಎಲ್ಲರಿಗೂ ಮರುಗೌರವ ಸಲ್ಲಿಸುವರು. ಅತ್ತ ಕಡೆ ಬೆಲ್ಲ ನೀರು, ಎಲೆ ಅಡಿಕೆ ಸತ್ಕಾರ ನಡೆಯುವುದು, ನಿಶ್ಚಯ ತಾಂಬೂಲದ ದಿನ ನಡೆದಂತೆ ಚೌಕದಲ್ಲಿ ಕುಳಿತು ಅಂದು ನಡೆದ ಸಂವಾದವನ್ನು ಪುನರುಚ್ಚರಿಸುವರು. ಪುನಹ ವೀಳ್ಯ ಗೌರವದ ವಿನಿಮಯ ನಡೆಯುವುದು.
ಮದುಮಯೆ ಐತಾವುನಿ
(ಮದುಮಗನ ಶೃಂಗಾರ)
ಈಗ ಮದುಮಗನಿಗೆ ಅಲಂಕಾರ ಪ್ರಾರಂ ಭಿಸುವರು, ಶುಭ್ರ ಬಿಳಿ ಹತ್ತು ಮೊಳದ ಧೋತಿಯ ಅಂದವಾದ ಕಚ್ಚೆ. ಮೇಲೆ ಬಿಳಿಯ ನಿಲುವಂಗಿ. ತಲೆಗೆ ಜರಿ ಬಟ್ಟೆಯ ಸೊಗಸಾದ ಮುಂಡಾಸು, ಬಂಟ ಮೊದಲಾದ ಸಮಾಜದವರು ಮುಂಡಾಸು ಕಟ್ಟಿದರೆ ಮೊಗವೀರರಲ್ಲಿ ಮದುಮಗನಿಗೆ ‘ಬಿಳಿ ಟೊಪ್ಪಿಯನ್ನು ತೊಡಿಸುತ್ತಿದ್ದರು. ಬಿಲ್ಲವರು ಮದು ಮಕ್ಕಳಿಗೆ ‘ಗರೋಡಿಯಲ್ಲಿ ದರ್ಶನ ಪಾತ್ರಿಗಳಿಗೆ ಕಟ್ಟುವ ವಿಶಿಷ್ಟ ಮುಂಡಾಸು (ತರೆತ್ರ) ಕಟ್ಟುವರು ಮತ್ತು ಚಿನ್ನದ ಗುಂಡುಸರ ಧರಿಸುತ್ತಿದ್ದರು. ಹೆಗಲಿಗೆ ಅಂದವಾದ ಜರಿಶಾಲು, ಶ್ರೀಗಂಧವನ್ನು ನವಿರಾಗಿ ಅರೆದು ಎಳೆ ತಾದ ಹಸಿ ‘ತಾರೆದೊಲಿಯ ಕಡ್ಡಿಯನ್ನು ಅರ್ಧಚಂದ್ರಕ್ಕೆ ಬಾಗಿಸಿ ಮದುಮಗನ ನೊಸಲು ಮತ್ತು ಕಪೋಲಕ್ಕೆ ‘ಚಂದ್ರಿಕೆ ನಾಮ ಬಿಡಿ ಸುವರು. ಈ ರೀತಿ ಅರ್ಧಚಂದ್ರನ ತೆರನ ನಾಮಧಾರಣೆ ನಮ್ಮ ನಾಡಿಗೆ ಭಕ್ತಿ ಸಂಪ್ರದಾಯದ ಪ್ರಭಾವದಿಂದ ಬಂದಿರಬಹುದು.
ದಾರೆ ಮಯ್ಪುನಿ (ಧಾರೆ ಎರೆಯುವುದು)
ಮಡಿವಾಳನು ತುಳಸಿಕಟ್ಟೆಯ ಮುಂಭಾಗದಲ್ಲಿ ಧಾರೆ ಎರೆ ಯಲು ಸಿದ್ಧತೆ ಮಾಡುವನು. ಕಾಲ್ದೀಪ ಇರಿಸಿ ದೀಪ ಹಚ್ಚಿಸುವನು. ಕೊಡಿ ಬಾಳೆಯ ಎಲೆಯ ಮೇಲೆ ಒಂದು ಸೇರು ಬೆಳ್ತಿಗೆ ಅಕ್ಕಿ ಹಾಕಿ, ಅದರ ಮೇಲೆ ಕೊಂಬಿನ ಗಿಂಡಿ ಇರಿಸಿ ದೇವರ ಕಲಶ ಇಡು ವನು. ಕೊಂಬಿನ ಗಿಂಡಿಯಲ್ಲಿ ಶುದ್ದ ನೀರು ಇರುವುದು. ಬಾಳೆ ಎಲೆಯ ಸುತ್ತ ಒಂದೊಂದು ಕೌಲೆ ವೀಳ್ಯ, ಒಂದೊಂದು ಹಣ್ಣಡಿ ಕೆಯನ್ನು ಪೋಣಿಸಿ ಇಸುವನು. ಒಂದು ಧಾರೆಗೆ ಒಂದು ಕಲಶ. ಧಾರೆ ಹೆಚ್ಚಿದಂತೆ ಕಲಶದ ಸಂಖ್ಯೆಯೂ ಹೆಚ್ಚುವುದು.
ಧಾರೆ ಎರೆಯುವ ಸಮಯ ವಧೂವರರನ್ನು ನಿಲ್ಲಿಸುವ ಎರಡು ಹೊಂಗಾರಕನ ‘ಧಾರೆ ಮಣೆಗಳನ್ನು ತಯಾರಿಸುವರು. ಬಡಗಿಯು ಹಸಿ ಹೊಂಗಾರಕನ ಮರದ ತುಂಡಿನಿಂದ ಸುಮಾರು ಎರಡಡಿ ಉದ್ದ, ಒಂದಡಿ ಅಗಲದ ದಪ್ಪನೆಯ ಹಲಗೆಯನ್ನು ತೆಗೆದು ಒಂದೊಂದು ಹಲಗೆಯಲ್ಲಿ ವಧು ಮತ್ತು ವರನ ಪಾದದಾಕೃತಿ ಯನ್ನು ಕೆತ್ತುವನು. ಈ ಹಲಗೆಯ ಒಂದು ತುದಿಗೆ ಕತ್ತರಿಯಾಕಾರದ ಮೂರು ಬಾಣ ಗಳ ತೆರೆದ ಆಕೃತಿ ನಿರ್ಮಿಸುವರು. ಅಂತಹ ಮಣೆಗಳ ಮೇಲೆ ನಿಂತು ಧಾರೆ ಎರೆಸಿ ಕೊಳ್ಳುವರು.
ವರ ಮತ್ತು ವಧುವನ್ನು ಕರೆತಂದು ‘ಕೊಡಿಯಡಿಯಲ್ಲಿ ನಿಲ್ಲಿಸುವರು. ಮಾತೃ ಪ್ರಧಾನ ಪದ್ಧತಿಯಲ್ಲಿ ಹೆಣ್ಣಿಗೆ ಧಾರೆ ಎರೆದು ಕೊಡುವ ಗೌರವ ಅವಳ ಸೋದರ ಮಾವ ನಿಗೆ ಸೇರಿದ್ದು, ಅಲ್ಲಿ ಹೆಣ್ಣಿನ ತಾಯಿಯನ್ನು ಸೇರಿಸಿ ಕೊಳ್ಳುತ್ತಿದ್ದರು. ಹುಡುಗಿಯ ತಂದೆಯ ಪ್ರಾಧಾನ್ಯತೆ ಗೌಣ. ಅನೇಕ ಸಂದ ರ್ಭಗಳಲ್ಲಿ ಊರ ಗುರಿಕಾರನೇ ಧಾರೆ ಎರೆದು ಕೊಡುತ್ತಿದ್ದನು. ಆದರೆ ಇತ್ತೀಚೆಗೆ ಧಾರೆ ಎರೆದು ಕೊಡುವ ಮತ್ತು ಸ್ವೀಕರಿ ಸುವ ಕೆಲವು ಕ್ರಮವಾಗಿ ಹೆಣ್ಣು ಗಂಡುಗಳ ತಂದೆ ತಾಯಂದಿರನ್ನು ಗಂಡಸರು ಅಂದ ವಾದ ಉಡುಗೆ, ತೊಡುಗೆ, ತಲೆಗೆ ಮುಂಡಾಸು ಬಿಗಿದು ಶಾಲು ಧರಿಸಿದರೆ, ಹೆಂಗಸರು ಸೀರೆಯುಟ್ಟು ಮುಡಿ ತುಂಬ ಹೂ ಮುಡಿದು ಬರುವರು.
ಎರಡು ಪಕ್ಷದ ಗುರಿಕಾರರು, ಗಂಡು ಹೆಣ್ಣಿನ ಸೋದರ ಮಾವಂದಿರು, ಊರವರನ್ನು ಸೇರಿಸಿಕೊಂಡು ತುಳ ಸಿಯ ಎದುರು ನಿಂತು ತಿರುಪತಿಯ ತಿಮ್ಮಪ್ಪ ದೇವರಿಗೆ, ಮನೆಯ ದೈವ ಗಳಿಗೆ, ಕುಲದ ದೇವರಿಗೆ ಕೈ ಮುಗಿದು ಪ್ರಾರ್ಥಿಸುವರು, ವಧು ಮತ್ತು ವರ ಕೂಡಾ ದೇವರಿಗೆ ಸಾಷ್ಟಾಂಗ ಎರಗುವರು.
ಮಡಿವಾಳನು ಹರಿವಾಣವನ್ನು ತಂದು ವರನ ತಂದೆ ತಾಯಿಯರ ಎಡಗೈಯಲ್ಲಿ ಹಿಡಿಸುವನು. ವರನ ತಂದೆಯು ಮದುಮಗನ ಬಲಗೈ ಯನ್ನು ಎತ್ತಿ ಹರಿವಾಣದ ಮೇಲಿಡುವನು. ಅದೇ ರೀತಿ ಹೆಣ್ಣಿನ ತಂದೆ ಅವಳ ಬಲಗೈಯನ್ನು ವರನ ಬಲಗೈಯ ಮೇಲೆ ಇಡುವನು. ಇಬ್ಬರ ಬಲಗೈಯಲ್ಲಿದ್ದ ವೀಳ್ಯ ಅಡಿಕೆಗಳನ್ನು ತೆಗೆದಿರಿಸುವರು. ಕಲಶದ ಕೊಂಬಿನ ಗಿಂಡಿಯನ್ನು ವಧುವಿನ ತಂದೆ ತಾಯಿ ಸೋದರ ಮಾವ ಮತ್ತು ಗುರಿ ಕಾರರು ಹಿಡಿಯುವರು.
ಊರ ಗುರಿಕಾರು ‘ಬಾರ್ಕೂರು, ಮಂಗಳೂರು ಈ ಎರಡು ಹೋಬಳಿ ಗಳಲ್ಲಿರುವ ಸಾವಿರಾಳು, ಸಾವಿರ ಬರಿ, ನೆಂಟರಿಷ್ಟರು ಎಲ್ಲರೂ ಕೇಳಬೇಕು - ಅಕ್ಕಣಿ ಎಂಬ ಹೆಣ್ಣನ್ನು ನಾರಾಯಣ ಎಂಬ ಗಂಡಿಗೆ ಧಾರೆ ಎರೆದು ಕೊಡುತ್ತೇವೆ’ ಎಂದು ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಹೇಳುವರು. ಅದಕ್ಕುತ್ತರವಾಗಿ ಸೇರಿದವರು ಒಕ್ಕೊರಲಿನಿಂದ ‘ಆಗಬಹುದೆನ್ನುತ್ತೇವೆ’ ಎಂದು ಸಮ್ಮತಿ ಸೂಚಿಸುವರು (ಗಂಡು ಮತ್ತು ಹೆಣ್ಣಿನ ಹೆಸರನ್ನು ಉದಾಹರಣೆಗಾಗಿ ನೀಡಲಾಗಿದೆ)
ಒಂದೆಡೆ ಕೊಂಬು ವಾದ್ಯಘೋಷ, ಇನ್ನೊಂದೆಡೆ ಗರ್ನಾಲು ಸಿಡಿ ದಾಟ. ಮದುಮಗಳ ಮಾತಾಪಿತರು ಕೊಂಬಿನ ಗಿಂಡಿಯ ಕಲಶದಿಂದ ಧಾರೆ ನೀರು ಮದುಮಕ್ಕಳ ಕೈಗಳಿಗೆ ಬೀಳುವಂತೆ ನಿಧಾನವಾಗಿ ಬಗ್ಗಿಸುವರು. ಹೀಗೆ ಮೂರು ಬಾರಿ ನಡೆದಾಗ ಧಾರೆ ಎರೆಯುವ ಕೆಲಸ ಮುಗಿಯುವುದು. ಆ ಬಳಿಕ ಧಾರೆ ನೀರನ್ನು ತೆಂಗಿನ ಮರದ ಬುಡಕ್ಕೆ ಸುರಿದು, ಎಳೆ ಪಿಂಗಾರದ ಎಸಳನ್ನು ಅವರೆಲ್ಲ ಭಕ್ತಿಯಿಂದ ಮುಡಿಗೆ, ಕಿವಿಗಳಿಗೆ ಸಿಕ್ಕಿಸಿಕೊಳ್ಳುವರು. ಧಾರೆ ಎರೆಯಲು ಉಪಯೋಗಿಸಿದ ಹೊಂಗಾರಕನ ಮಣೆಯನ್ನು ತೆಂಗಿನ ಮರಕ್ಕೆ ಕಟ್ಟಿಡುವರು.
ಟಿಪ್ಪಣಿ :
೧) ತುಳುನಾಡಿನ ದ್ರಾವಿಡ ಪಂಥದ ಜನರಿಗೆ ಮಡಿವಾಳನೇ ಕುಲ ಪುರೋಹಿತ. ಮನೆಗಳಲ್ಲಿ ನಡೆಯುವ ಶುಭ ಶೋಭನೆಗಳಿಗೆ, ಮದುವೆ ಮರ ಣಗಳಿಗೆ, ಕೋಲ, ನೇಮಗಳಿಗೆ ಬಂದು ಪೌರೋಹಿತ್ಯ ನಡೆಸುವ ಕಾರ್ಯವನ್ನು ಮಡಿವಾಳನು ನಿರ್ವಹಿಸುವನು. ಇಂದು ಪುರೋಹಿತಶಾಹಿಯ ಹಿಡಿತದಿಂದಾಗಿ ಮಡಿವಾಳರು ಸಂಪೂರ್ಣರಾಗಿ ವಂಚಿರಾಗುತ್ತಿದ್ದಾರೆ. ಕೆಲವೆಡೆ ಮಡಿವಾಳನ ಅವಶ್ಯಕತೆ ಇಂದಿನ ತುಳುನಾಡ ಜನಜೀವನದಲ್ಲಿದ್ದರೆ ಯಾವ ಕೆಲಸವನ್ನು ಮಡಿವಂತ ಪುರೋಹಿತನು ಮಾಡಲಾಗುವುದಿಲ್ಲವೋ ಅಂತಹ ಬಿಟ್ಟಿ ಚಾಕ ರಿಯನ್ನು ಮಡಿವಾಳರಿಂದ ಮಾಡಿಸುವರು.
೨) ಬಂಟರು ಯಾ ನಾಡವರಲ್ಲಿ ಎಲ್ಲಾ ಜಾನಪದ ಆಚರಣೆಗಳನ್ನು ನಿರ್ವಹಿಸುವವರು ಮಡಿವಾಳ ಮತ್ತು ಭಂಡಾರಿಗಳೆಂಬ ಪಂಗಡದವರು. ಇವರನ್ನು ವಾಡಿಕೆಯಲ್ಲಿ ಮಡ್ಡೆಲೆ (ಮಡಿವಾಳ) ಎಂದೇ ಸಂಬೋಧಿಸುವರು. ಈ ಭಂಡಾರಿಗಳು ಸಾಮಾನ್ಯವಾಗಿ ಕ್ಷೌರಿಕ ವೃತ್ತಿಯವರು. ಮಡಿವಾಳರು ಬಟ್ಟೆ ಮಡಿ ಮಾಡುವವರಾದರೂ ‘ಮೋನೆದ ಬೇಲೆ’ ಮೊದಲಾದವುಗಳನ್ನು ಮಾಡು ವುದರಿಂದ ಎರಡು ಪಂಗಡದವರೂ ಒಂದೇ ಗುಂಪಿಗೆ ಸೇರಿರುವರು. ಪೂರ್ವದಲ್ಲಿ ಬಂಟರು ತಮ್ಮ ವ್ಯಕ್ತಿ ಪ್ರತಿಷ್ಠೆಗಾಗಿ ಈ ಗುಂಪನ್ನು ಈ ಕೈಂಕರ್ಯಕ್ಕೆ ನಿಯೋಜಿ ಸಿದಂತೆ ತೋರುವುದು. ಇತ್ತೀಚಿನ ಅಧ್ಯಯನದಲ್ಲಿ ತಿಳಿಯುವಂತೆ ಭಂಡಾರಿಗಳು, ಮೊಗವೀರರು, ವಿಶ್ವಕರ್ಮರು ಮೊದಲಾದವರ ಜಾನಪದ ಆಚರಣೆಯಲ್ಲೂ ಕೈಂಕರ್ಯ ನಿರ್ವಹಿಸುವರು. ಮೊಗವೀರರಲ್ಲಿ ಅವರ ಒಕ್ಕೂಟಕ್ಕೆ ‘ಮೇಲಂಟ’ ಎಂಬ ನಾಮಾಂಕಿತ ವ್ಯಕ್ತಿಯನ್ನು ಈ ಎಲ್ಲಾ ಕೆಲಸಗಳಿಗೆ ಉಪಯೋಗಿಸಿದರೂ ಒಳನಾಡಿನ ಮೊಗವೀರರು ಇತರರ ಸೇವೆಯನ್ನು ಪಡೆಯುವರು.

25-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಇಲೆಕ್ಟ್ರಿಕಲ್ಸ್‌ಗೆ ಲೈಟಿಂಗ್‌ಗೆ ಜನ ಮತ್ತು ಹೆಲ್ಪರ್ ಬೇಕು ೯೮೪೫೦೯೮೨೫೪.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೮೪೪೫೭೩೬೧೫.
ಮಂಗಳೂರು : ಮರೋಳಿಯಲ್ಲಿ ಲೈನ್ ಸೇಲ್‌ಗೆ ಚಾಲಕ ಬೇಕು ೯೩೪೧೭೫೮೫೦೦.
ಕುಲಶೇಖರ: ಕ್ರೈಸ್ತರ ಮನೆಗೆ ಕೆಲಸಕ್ಕೆ ಜನ ಯುವತಿ ಬೇಕು ೯೪೫೩೯೭೨೯೯೪.
ಮಂಗಳೂರು : ಮನೆಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಕಾವೂರು : ಸಿವಿಲ್ ಕಂಟ್ರಾಕ್ಟರ್‌ಗೆ ಸೈಟ್ ಸೂಪರ್‌ವೈಸರ್ ಬೇಕು ೯೪೮೦೭೬೧೬೮೬.
ಹೊಟೇಲ್‌ಗೆ ಅಡುಗೆ ಮಾಡುವವರು ಬೇಕಾಗಿದ್ದಾರೆ: ೯೮೮೦೩೭೮೮೦೬
ಮಂಗಳೂರು: ಲೇಡಿಸ್ ಟೈಲರ್ ಶಾಪ್‌ಗೆ ಲೇಡಿಸ್ ಟೈಲರ್ ಬೇಕು. ೯೫೯೧೦೪೫೮೮೧
ಮೂಡುಬಿದ್ರೆ: ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೮೬೪೨೯೩೪೭.
ಮಾಲೆಮಾರ್: ಹೋಂ ಪ್ರೊಡಕ್ಟ್‌ಗೆ ಲೇಡೀಸ್ ಬೇಕು ೯೪೮೦೧೧೭೮೫೪.
ಮಂಗಳೂರು: ಉರ್ವಾಸ್ಟೋರ್ ವರ್ಕ್ ಶಾಪ್‌ಗೆ ವೆಲ್ಟರ್ ಬೇಕು ೯೨೪೨೪೭೪೧೦೦.
ಮಂಗಳೂರು: ಬ್ಯೂಟೀಷಿಯನ್ ಕೆಲಸಕ್ಕೆ ಜನ ಬೇಕು ೯೪೪೯೫೯೦೯೦೦.
ಮಂಗಳೂರು: ಟೈಲರ್ ಕೆಲಸಕ್ಕೆ ಜನ ಬೇಕು ೯೮೮೦೩೧೪೧೦೫.
ಮಂಗಳೂರು: ಸ್ಕ್ರೀನ್‌ಪ್ರಿಂಟರ್ ಬೇಕು ೯೦೧೯೭೦೯೯೯೩.
ತೊಕ್ಕೊಟ್ಟು: ಕಚೇರಿಗೆ ಕಂಪ್ಯೂಟ್ ಗೊತ್ತಿರುವ ಯುವತಿ ಬೇಕು ೭೨೫೯೩೯೪೭೮೧.
ಕಾರ್ಕಳ: ರೆಸ್ಟೋರೆಂಟ್‌ಗೆ ಸಪ್ಲಾಯರ್, ಕಿಚನ್‌ಗೆ, ಆಲ್‌ರೌಂಡರ್ ಬೇಕು. ೯೯೦೧೮೨೮೩೯೩.
ಮಂಗಳೂರು: ಟೈಲರ್ ಶಾಪ್‌ಗೆ ಅಲ್ಟ್ರೇಶನ್ ತಿಳಿದವರು ಬೇಕು. ೯೮೪೫೭೧೪೦೬೪
ಮಂಗಳೂರು : ಆಫೀಸ್‌ಗೆ ಕಂಪ್ಯೂಟರ್ ಎಕೌಂಟ್, ಟ್ಯಾಲಿ, ಬಿ.ಕಾಂ ತಿಳಿದ ಮ್ಯಾನೇ ಜರ್ ಬೇಕು. ೯೮೪೫೦೮೦೬೬೯.
ಮಂಗಳೂರು: ಟೈಲರ್ ಶಾಪ್‌ಗೆ ಚೂಡಿದಾರ್ ಸ್ಟಿಚ್ ಮಾಡುವ, ಅಳತೆ ತೆಗೆ ಯುವ ಮಹಿಳೆಯರು ಬೆಕು. ೯೯೪೫೯೨೩೦೨೬.
ಮಂಗಳೂರು : ಹಾಸ್ಟೆಲ್‌ಗೆ ಕುಕ್ ಬೇಕು ೯೪೪೯೭೨೩೧೩೩.
ಕಿಚನ್ ಹೆಲ್ಪರ‍್ಸ್ ಬೇಕಾಗಿದ್ದಾರೆ. ೯೯೦೨೭೬೮೪೩೫
ಮೂಡುಬಿದ್ರೆ : ಫ್ಯಾನ್ಸಿ ಮತ್ತು ಜನರಲ್ ಗೂಡ್ಸ್ ಪ್ಯಾಕಿಂಗ್ ಪಾರ್ಸೆಲ್‌ಗೆ ಯುವಕರು ಬೆಕು ೯೬೬೩೯೫೦೪೦೪.
ಮಂಗಳೂರು : ಸ್ಕ್ರೀನ್‌ಪ್ರಿಂಟಿಂಗ್ ಹೆಲ್ಪರ್ ಯುವತಿಯರು ಬೇಕು ೯೮೪೪೫೯೨೧೮೨
ಮಂಗಳೂರು : ಆಫೀಸ್ ಬಾಯ್ ಬೇಕು ೪೨೭೪೦೧೦.
ಮಂಗಳೂರು: ಬ್ಯಾಟರಿ ಕೆಲಸಕ್ಕೆ ಜನ ಬೇಕು ೯೮೪೫೧೪೨೪೨೨.
ಮಂಗಳೂರು : ಜೂಸ್‌ಮೇಕರ್ ಬೇಕು ೯೮೪೫೦೦೮೫೨೬.

25-4-2012

Posted by JAYAKIRANA Kirana on | 0 comments | Leave a comment...

ಮೇಷ : ಮನೆಯಲ್ಲಿ ಮಂಗಳ ಕೆಲಸಗಳನ್ನು ನಡೆಸುತ್ತೀರಿ.
ವೃಷಭ : ಸರಕಾರಿ ನೌಕರರಿಗೆ ಸಮಸ್ಯೆಗಳು ಇರುತ್ತದೆ.
ಮಿಥುನ : ವ್ಯಾಪಾರಸ್ಥರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಕರ್ಕಾಟಕ : ಹಣಕಾಸಿನ ಸಮಸ್ಯೆ ಎದುರಾಗತ್ತದೆ.
ಸಿಂಹ : ಮಿತ್ರರಿಂದ ಸಹಾಯ ಸಿಗಲಿದೆ.
ಕನ್ಯಾ : ಮನೆ ರ್ಮಾಣದ ಕೆಲಸವು ಪ್ರಗತಿಯಲಿರುತ್ತದೆ.
ತುಲಾ : ವ್ಯಾಪಾರ ವ್ಯವಹಾರದಲ್ಲಿ ಪೈಪೋಟಿ ಇರುತ್ತದೆ.
ವೃಶ್ಚಿಕ : ದೂರ ಪ್ರಯಾಣ ಮಾಡುತ್ತೀರಿ.
ಧನು : ವ್ಯಾಪಾರದಲ್ಲಿ ಹಣಕಾಸಿನ ಲಾಭ ಇರುತ್ತದೆ.
ಮಕರ : ಸಂಸಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ.
ಕುಂಭ : ಮನೆ ಖರೀದಿಗೆ ಪ್ರಯತ್ನ ಮಾಡುತ್ತೀರಿ.
ಮೀನ : ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.

ಬಲವಂತದ ಲೈಂಗಿಕ ಸಂಪರ್ಕ ಅತ್ಯಾಚಾರಕ್ಕೆ ಸಮ!

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೩೬ ವರ್ಷ. ನನ್ನ ಪತ್ನಿಗೆ ೨೮ ವರ್ಷ ವಯಸ್ಸು. ನಮಗೆ ಎರಡು ವರ್ಷ ಪ್ರಾಯದ ಮಗಳಿದ್ದಾಳೆ. ಮದುವೆಯಾದ ಹೊಸತರಲ್ಲಿ ನನ್ನ ಪತ್ನಿ ನನ್ನನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದಳು. ಆದರೆ ಇತ್ತೀಚೆಗೆ ಆಕೆಯ ವರ್ತನೆ ಬದ ಲಾಗಿದೆ. ಇದರಿಂದ ನಾನು ಕುಡಿತಕ್ಕೆ ಶರಣಾಗಿದ್ದೇನೆ. ನನಗೆ ಸೆಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿ. ಆದರೆ ಆಕೆ ನನ್ನ ಆಸಕ್ತಿಗೆ ಸ್ಪಂದಿಸುತ್ತಿಲ್ಲ. ನಾನು ಕೆಲವೊಮ್ಮೆ ಆಕೆಯೊಂದಿಗೆ ಬಲವಂತದಿಂದ ಸೇರು ತ್ತೇನೆ. ಆದರೆ ಈ ವೇಳೆ ನನಗೆ ಸುಖ ಎನ್ನುವುದೇ ಸಿಗುತ್ತಿಲ್ಲ. ಸೆಕ್ಸ್ ಮಾಡುವಾಗ ಆಕೆ ಯಾರೋ, ಏನೋ ಎಂಬಂತೆ ನಡೆದು ಕೊಳ್ಳುತ್ತಾಳೆ. ಪ್ರತಿಕ್ರಿಯೆ ತೋರಿಸುವುದಿಲ್ಲ. ನೀವು ಮದುವೆಯಾ ಗಿದ್ದು ಪ್ರೀತಿಸಿದ್ದು ಸೆಕ್ಸ್ ಸುಖಕ್ಕಾಗಿ ಮಾತ್ರ, ನೀವು ಬದಲಾಗಿ ದ್ದೀರಿ, ನನ್ನನ್ನು ಯಾಕೆ ಮದುವೆ ಮಾಡಿಕೊಂಡಿರಿ ಎಂದೆಲ್ಲಾ ಪ್ರಶ್ನಿಸುತ್ತಾಳೆ. ಕೆಲವೊಮ್ಮೆ ನಡುರಾತ್ರಿಯೂ ನಮ್ಮ ನಡುವೆ ಜಗಳ ನಡೆಯುತ್ತದೆ. ಆಕೆಯ ಮಾತನ್ನು ಕೇಳಿ ನನಗೆ ಸುಮ್ಮನೆ ಇರ ಲಾಗುವುದಿಲ್ಲ. ನಾನು ಆಕೆಯ ಮಾತಿಗೆ ಎದುರು ಮಾತಾಡಿದರೆ ಜಗಳ ಜಾಸ್ತಿಯಾಗುತ್ತದೆ. ಇದರಿಂದ ಸಂಸಾರದಲ್ಲಿ ನೆಮ್ಮದಿ ಎನ್ನು ವುದೇ ಇಲ್ಲ. ಆಕೆ ನನ್ನ ಜತೆ ಮಾತಾಡದೆಯೂ ಇರುತ್ತಾಳೆ. ನಾನು ಕುಡಿಯುವುದನ್ನು ಬಿಟ್ಟು ನೋಡಿದೆ. ಆದರೆ ಆಕೆ ಮಾತ್ರ ಬದಲಾಗಿಲ್ಲ. ಆಕೆ ಮನೆಯವರ ಮಾತನ್ನು ಹೆಚ್ಚಾಗಿ ಕೇಳು ತ್ತಾಳೆ. ನಾನು ಆಕೆಯನ್ನು ಹೇಗೆ ಸರಿಪಡಿಸುವುದೆಂದೇ ತಿಳಿಯದೆ ನೊಂದಿದ್ದೇನೆ. ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನಿಮ್ಮ ದಾಂಪತ್ಯ ಜೀವನದಲ್ಲಿ ಏನು ಸಮಸ್ಯೆ ಎಂದು ಸರಿಯಾಗಿ ಉತ್ತರಿಸಿಲ್ಲ. ನಿಮ್ಮ ನಡುವಿನ ನೈಜ ಸಮಸ್ಯೆಯನ್ನು ಮುಚ್ಚಿಟ್ಟಿದ್ದೀರಿ ಎಂದೇ ಅನಿಸುತ್ತಿದೆ. ಪತಿ-ಪತ್ನಿ ನಡುವೆ ಜಗಳ ಸಾಮಾನ್ಯ. ಆದರೆ ಅದನ್ನೇ ನೆಪವ ನ್ನಾಗಿರಿಸಿಕೊಂಡು ಸಂಶಯ ಪಡುವುದು ಸರಿಯೇ? ನೀವಿಬ್ಬರೂ ಪ್ರೀತಿಸಿ ಮದು ವೆಯಾದವರು, ಅದರಲ್ಲೂ ಗಂಡ-ಹೆಂಡತಿಯೆಂದ ಮೇಲೆ ನಿಮಗೆ ಆಕೆಯ ಜತೆ ಎಲ್ಲಾ ವಿಚಾರದಲ್ಲೂ ಸಮಾಲೋಚನೆ ನಡೆಸಲು ಹಕ್ಕು ಇದೆಯಲ್ಲವೇ? ಸಮಸ್ಯೆ ಯನ್ನು ನೀವೇ ಬಗೆಹರಿಸಿ. ಸೆಕ್ಸ್‌ನಲ್ಲೂ ಅಷ್ಟೇ ಆಕೆಯ ಜತೆ ಒತ್ತಾಯದಿಂದ ಸೇರು ವುದು ಬೇಡ. ಇದರಿಂದ ನಿಮ್ಮ ಮೇಲೆ ಆಕೆಗಿರುವ ಒಳ್ಳೆಯ ಭಾವನೆ ದೂರವಾಗುವ ಸಾಧ್ಯತೆ ಯಿದೆ. ಆಕೆ ನಿಮ್ಮ ಸ್ವಭಾವವನ್ನು ಇಷ್ಟಪಡದಿದ್ದರೆ ನೇರವಾಗಿ ತಿಳಿಸುವಂತೆ ಹೇಳಿ. ಆಕೆಗೆ ಒಪ್ಪಿಗೆ ಇಲ್ಲ ಎಂದಾದರೆ ಆ ದಿನ ನೀವು ಸುಮ್ಮನಿದ್ದು ಬಿಡಿ. ಅದು ಬಿಟ್ಟು ನಿಮಗೆ ಸೆಕ್ಸ್‌ನಲ್ಲಿ ಆಸಕ್ತಿ ಇದೆ ಎಂದು ಆಕೆಯ ಒಪ್ಪಿಗೆ ಇಲ್ಲದೆ ಬಲವಂತ ದಿಂದ ಸೇರಿದರೆ ಯಾವ ಹೆಣ್ಣೂ ಇಷ್ಟ ಪಡಲಾರಳು. ಪರಸ್ಪರ ಒಪ್ಪಿಗೆ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮವಾಗಿರುತ್ತದೆ. ಇದರಿಂದ ನೀವು ಇನ್ನಷ್ಟು ಕೆಳಮಟ್ಟಕ್ಕಿಳಿಯಲಿದ್ದೀರಿ. ಆಕೆ ಸೆಕ್ಸ್‌ನಲ್ಲಿ ಆಸಕ್ತಿ ಕಳೆದು ಕೊಳ್ಳಲು ಮಾನಸಿಕ ಸಮಸ್ಯೆ ಇರಬಹುದು. ಈ ಬಗ್ಗೆ ಆತುರ ಪಡ ದಿರಿ. ಆಕೆಯ ಮಾನಸಿಕ ಸ್ಥಿತಿ ಉತ್ತಮ ಪಡಿಸಲು ಪ್ರಯತ್ನಿಸಿ. ಆಕೆಯ ಜತೆ ಪ್ರೀತಿ-ವಿಶ್ವಾಸದಿಂದ ನಡೆ ಯುವ ಮೂಲಕ ಆಕೆಯ ಮನಸ್ಸನ್ನು ಗೆಲ್ಲಿರಿ. ಆಕೆಯನ್ನು ತಜ್ಞ ವೈದ್ಯರ ಬಳಿ ತಪಾಸಣೆ ನಡೆಸಿ ಆಕೆಯ ಮನೋಸ್ಥಿತಿಯನ್ನು ಗಮನಿಸಿ.

ಬೀಫ್ ಬಿರಿಯಾನಿ, ಚಿಲ್ಲಿ ತಿನ್ನುವವರೇ...

Posted by JAYAKIRANA Kirana on | 1 comments | Leave a comment...

ವಿಜಯಕುಮಾರ್, ಬೈಂದೂರು
ಎ. ೨೦ರ ಫರಿಯಾದ್ ಅಂಕಣದಲ್ಲಿ ಇಖರವರು 'ಸಾಯಂಕಾಲ ಬಾರ್‌ಗಳಲ್ಲಿ ಠಿಕಾಣಿ ಹೂಡುವವರೇ...' ಎಂಬ ಲೇಖನವನ್ನು ಬರೆದಿದ್ದಾರೆ. ಈ ಲೇಖನವನ್ನು ಓದಿದ ನಂತರ ಈ ಬಗ್ಗೆ ಕೆಲವು ಅಭಿಪ್ರಾಯಗಳನ್ನು ಹೇಳಬೇಕೆನಿಸಿ ಪತ್ರವನ್ನು ಬರೆಯುತ್ತಿದ್ದೇನೆ. ಅಕ್ರಮ ಗೋ ಸಾಗಾಟಗಳು (ಸಕ್ರಮ ಅಲ್ಲ) ನಿಂತಿಲ್ಲ ಎಂಬುದಕ್ಕೆ ಕಾರಣ ಯಾರು? ಎಂಬುದಕ್ಕೆ ನೇರ ವಾಗಿ ಉತ್ತರಿಸುವುದಾದರೆ ಸರಕಾರ ಎಂದು ಹೇಳದೆ ಬೇರೆ ವಿಧಿ ಇಲ್ಲ. ಅದು ಮುಸ್ಲಿಮರನ್ನು ಮುದ್ದು ಮಾಡುವ ಕಾಂಗ್ರೆಸ್ ಇರಲಿ ಅಥವಾ ಹಿಂದುಗಳನ್ನು ತಲೆಯ ಮೇಲೆ ಹೊತ್ತು ತಿರುಗುತ್ತೇನೆಂದು ಹೇಳುವ ಬಿಜೆಪಿಯೇ ಇರಲಿ ಈ ಎರಡೂ ಪಕ್ಷದ ಸರಕಾರಗಳು ಇದಕ್ಕೆ ನೇರವಾಗಿ ಹೊಣೆಯಾಗಿದೆ. ಕಾಂಗ್ರೆಸ್ ಎಂಬ ಪಕ್ಷ ಮುಸ್ಲಿಮರ ಪರವಾಗಿ ಗೋ ವಧೆಗೆ ಪ್ರೋತ್ಸಾಹ ಕೊಡುತ್ತಿದ್ದರೆ. ಬಿಜೆಪಿ ಸರಕಾರ ಗೋವಧೆಗೆ ಹಿಂಬಾಗಿಲಿನಿಂದ ಪ್ರೋತ್ಸಾಹ ನೀಡಿ ಮುಸ್ಲಿ ಮರ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟಿ ಗೋಸಾಗಾಟ ಎಂಬ ನಾಟಕವಾಡಿ ಹಿಂದುಗಳ ಮತವನ್ನು ಬಾಚಲು ಯತ್ನಿಸುತ್ತಿದೆ ಎಂದು ಹೇಳಬಹುದಾಗಿದೆ. ಇಲ್ಲವಾದಲ್ಲಿ ಗೋವನ್ನು ಮಾತೆ ಎಂದು ಪೂಜಿಸಬೇಕು ಎಂದು ವೇದಿಕೆ ಸಿಕ್ಕಿದಾಗಲೆಲ್ಲಾ ಬೊಗಳೆ ಬಿಡುವ ಸಂಘಪರಿವಾರದ ನಾಯಕರಿಗೆ ಅವರದೇ ಸರಕಾರ ಇರುವಾಗ ಅಕ್ರಮ ಗೋ ಸಾಗಾಟ ನಿಲ್ಲಿಸುವುದಕ್ಕೇನು ದಾಡಿ?
ಪ್ರಾಣಿ ವಧೆಯಲ್ಲಿ ಇಖರವರು ಬರೆದ ಧರ್ಮ 'ಮರ್ಯಾದೆ'ಯನ್ನು ಪಾಲಿಸಬೇಕು ಎಂದು ಹೇಳುತ್ತಿರುವುದನ್ನು ಓದಿದರೆ ನಗು ಬರುತ್ತದೆ. ಹತ್ಯೆ ಎಂಬುದು ಹತ್ಯೆಯೇ. ಸಾರ್ವಜನಿಕವಾಗಿ ಬಡಿದು ಕೊಲ್ಲುವುದಾಗಲೀ, ಗೊತ್ತಾ ಗದಂತೆ ಒಂದೇ ಏಟಿಗೆ ಕೊಲ್ಲುವುದಾಗಲೀ ಅದು ಹತ್ಯೆಯೇ ಆಗುತ್ತದೆ. ಇರಲಿ ಅವರವರ ಧರ್ಮದ ಸಿದ್ದಾಂತಗಳೇ ಅವರವರಿಗೆ ಶ್ರೇಷ್ಠವಾಗಿ ಕಂಡು ಬರುತ್ತದೆ. ಈ ಬಗ್ಗೆ ಮಾತು ಬೇಡ. ಖುರಾನ್ ಎಂಬ ಗ್ರಂಥ ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಆಯಾ ದೇಶದ ಕಾನೂನುಗಳನ್ನು ಒಪ್ಪಿಕೊಂಡು ಅದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಹೇಳುತ್ತದೆ ಎಂದು ಮುಸ್ಲಿಂ ವಿದ್ವಾಂಸರೊಬ್ಬರು ದೃಶ್ಯ ಮಾಧ್ಯಮದಲ್ಲಿ ಹೇಳಿದ್ದನ್ನು ಕೇಳಿದ್ದೇನೆ. ಮಾಂಸ ಕ್ಕಾಗಿ ಸಕ್ರಮವಾಗಿ ಗೋವನ್ನು ಸಾಗಾಟ ಮಾಡಿ ವಧೆ ಮಾಡುವುದು ಭಾರ ತದ ಕಾನೂನಿನಂತೆ ತಪ್ಪೇನೂ ಅಲ್ಲ. ಅದಕ್ಕಾಗಿ ಕೆಲವು ನೀತಿ ನಿಯಮಗಳೂ ಇವೆ. ಇದನ್ನೆಲ್ಲಾ ಗಾಳಿಗೆ ತೂರಿ ಸಾಗಾಟ ಮಾಡುವುದನ್ನು ಅಕ್ರಮ ಗೋಸಾ ಗಾಟ ಎಂದು ಹೇಳಲಾಗುತ್ತದೆ. ಟೆಂಪೋಗಳಲ್ಲಿ ಮೂಟೆಗಳಂತೆ ಗೋವನ್ನು ತುಂಬಿ ಸಾಗಿಸುವುದು, ರೋಗಿಷ್ಠ ದನಗಳನ್ನು ಮಾಂಸ ಮಾಡುವುದು. ಕರು ಗಳನ್ನು, ಹಾಲುಕೊಡುವ ದನಗಳನ್ನು ಕಡಿಯುವುದು, ಇವೆಲ್ಲಾ ಕಾನೂನು ಬಾಹಿರ. ಹೀಗಿದ್ದರೂ ಶ್ರದ್ದಾವಂತ ಮುಸ್ಲಿಮರಿಗೆ ಅಕ್ರಮ ಗೋಸಾಗಾಟ ಮಾಡು ವವರಿಗಿಂತ ಅಕ್ರಮ ಗೋಸಾಗಾಟವನ್ನು ತಡೆಯುವವರ ಮೇಲೆಯೇ ಕೋಪ ಉಂಟಾಗುತ್ತಿದೆ ಎಂದಾದರೆ ಅದಕ್ಕೆ ಕೆಲವು ಹಿಂದೂ ಸಂಘಟನೆಗಳೇ ಕಾರಣ ಎಂಬುದು ಇಖರವರ ಆರೋಪ. ಇದರಲ್ಲಿ ವಾಸ್ತವ ಅಡಗಿಲ್ಲ.
ಇತ್ತೀಚಿನ ದಿನಗಳಲ್ಲಿ ಅಕ್ರಮ ಗೋಸಾಗಾಟವನ್ನು ತಡೆಯುವುದು, ವಾಹನ ವನ್ನು ಬೆನ್ನಟ್ಟಿ ಸಾಗಾಟಗಾರರನ್ನು ಬಡಿಯುವುದು, ಬೆತ್ತಲೆಗೊಳಿಸುವುದು ಇವೆಲ್ಲಾ ಯಾಕೆ ನಡೆಯುತ್ತಿದೆ ಎಂಬುದರ ಕಡೆಗೆ ನಿಷ್ಪಕ್ಷಪಾತವಾದ ದೃಷ್ಟಿಯನ್ನು ಬೀರಿದರೆ ಇದು ಸಾರ್ವಜನಿಕರ ಪ್ರಬಲವಾದ ಆಕ್ರೋಶ ಎಂದು ಹೇಳ ಬಹುದಾಗಿದೆ. ಕಾಂಗ್ರೆಸ್ಸೇ ಇರಲಿ ಬಿಜೆಪಿಯೇ ಇರಲಿ ಆಳುವ ಸರಕಾರಗಳು ಘೋರ ನಿರ್ಲಕ್ಷ್ಯವನ್ನು ತೋರಿದ ಸಂದರ್ಭದಲ್ಲಿ ಕಾನೂನಿನ ದುರ್ಬಳಕೆಯಾದಾಗ ಜನರೇ ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಓರ್ವ ಕಳ್ಳ ಮನೆಗೆ ನುಗ್ಗಿ ಕಳ್ಳತನ ಮಾಡುವಾಗ ಯಾರೂ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಕಳ್ಳತನಕ್ಕೆ ಶಿಕ್ಷೆ ಏನು ಎಂದು ಕಾನೂನು ಪುಸ್ತಕ ತೆರೆದು ಓದುತ್ತಾ ಕುಳಿತು ಕೊಳ್ಳುವುದಿಲ್ಲ. ಮೊದಲು ಮನೆಯವರೆಲ್ಲಾ ಸೇರಿ, ಅಕ್ಕ ಪಕ್ಕದ ಮನೆಯವರನ್ನೂ ಸೇರಿಸಿ ಕಳ್ಳನಿಗೆ ಸೊಂಟ ಮುರಿಯುವಂತೆ ಬಡಿದು ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸುವುದೇ ತಕ್ಷಣದ ಕೆಲಸವಾಗುತ್ತದೆ. ಅಥವಾ ಕಳ್ಳತನ ಮಾಡಿದ ಸಾಮಾನು ಹಿಡಿದುಕೊಂಡು ಓಡಿ ಹೋಗುವಾಗ ಆತನನ್ನು ಬೆನ್ನಟ್ಟಿ ಅಡ್ಡ ಹಾಕಿ ಬಡಿಯುವುದು ಸರಿಯಾದ ಕ್ರಮವಾಗುತ್ತದೆ. ಅಕ್ರಮ ಗೋಸಾಗಾಟಗಾರರ ಮೇಲೂ ಇದೇ ಕ್ರಮ ಸಾರ್ವಜನಿಕವಾಗಿ ಅನ್ವಯವಾಗಿದೆ. ಯಾಕೆಂದರೆ ಅವರೂ ಕಳ್ಳರೇ. ಮೇಯಲು ಬಿಟ್ಟ ದನವನ್ನು ಗೋಸಾಗಾಟಗಾರರು ಕದ್ದು ಸಾಗಾಟ ಮಾಡಿದಾಗ ಕಳ್ಳರನ್ನು ತಡೆಯದೆ 'ಮೇಯಲು ಬಿಟ್ಟದ್ದು ತಪ್ಪು' ಎಂದು ಕಾನೂನು ಹೇಳುತ್ತದೆ ಎನ್ನಲಾಯಿತು. ಇದು ಕಳ್ಳಸಾಗಾಟಗಾರರಿಗೆ ವರದಾನವಾಯಿತು. ಕಟ್ಟಿ ಹಾಕಿದ ದನವನ್ನೂ ಕದ್ದು ಮಾರಾಟ ಮಾಡಿದಾಗಲೂ ಗೋ ಸಾಕುವವರು ಅಸಹಾಯಕರಾದರು. ತಲವಾರು ಝಳಪಿಸಿ ಮನೆಯ ಅಂಗಳದಲ್ಲಿ ಕಟ್ಟಿದ ದನವನ್ನು ಕದ್ದೊಯ್ದಾಗ ನಮ್ಮ ರಕ್ಷಣೆಗೆ ಯಾರೂ ಇಲ್ಲ ಎಂಬ ಕೊರಗು ಗೋಸಾಕುವವ ರದ್ದಾಗಿತ್ತು. ಹಟ್ಟಿಗೆ ನುಗ್ಗುವ ಧೈರ್ಯವೂ ಗೋಸಾಗಾಟಗಾರರಿಗೆ ಬಂತು. ಕೆಲವು ವಾಹನಗಳನ್ನೇ ಕಸಾಯಿಖಾನೆ ಮಾಡಿ ಸ್ಥಳದಲ್ಲೇ ಮಾಂಸ ಮಾಡಿ ಸಾಗಾಟ ಮಾಡುವುದೂ ಕಂಡು ಬಂತು. ಇದೆಲ್ಲಾ ಇಖರವರ ಗಮನದಲ್ಲಿ ಇಲ್ಲವೇ? ಇದರ ಬಗ್ಗೆ ಯಾಕೆ ಪ್ರಸ್ತಾಪವಿಲ್ಲ? ಅಕ್ರಮ ಗೋಸಾಗಾಟಗಾರರು ಹಿಂದುಗಳ ಮನೆಯ ಗೋವನ್ನು ಮಾತ್ರ ಕದ್ದದ್ದಲ್ಲ ಮುಸ್ಲಿಮರ, ಕ್ರೈಸ್ತರ ಮನೆಯ ಗೋವುಗಳನ್ನೂ ಕದ್ದು ಸಾಗಾಟ ಮಾಡಿದ್ದಾರೆ. ಕೆಲವು ಕಡೆ ಸ್ಥಳೀಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತರೂ ಸೇರಿ ಕೆಲವು ಯುವಕರು ಒಟ್ಟುಗೂಡಿ ದನ ಕಳ್ಳರಿಗೆ ತಕ್ಕ ಶಾಸ್ತಿ ಮಾಡಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಬಹು ಸಂಖ್ಯೆಯಲ್ಲಿ ಹಿಂದುಗಳು ಗೋವನ್ನು ಹೆಚ್ಚಾಗಿ ಸಾಕುವುದರಿಂದ ದನಕಳ್ಳರಿಗೆ ತಕ್ಕ ಶಾಸ್ತಿ ಮಾಡುವುದಕ್ಕೆ ವೈಯಕ್ತಿಕವಾಗಿ ಸಾಮರ್ಥ್ಯ ಸಾಲದೆ, ವ್ಯವಸ್ಥಿತವಾದ ಸಂಘಟನೆಗಳ ಮೊರೆಹೋದುದರಲ್ಲಿ ತಪ್ಪೇನಿದೆ? ಅದು ಬಜರಂಗದಳವಾಗಲೀ, ರಾಮಸೇನೆಯಾಗಲಿ, ಬದ್ರ್‌ದಳವೂ ಬೇಕಾದರೆ ಇದನ್ನು ಮಾಡಲಿ. ಯಾವುದೇ ಸಂಘಟನೆಯಾಗಲಿ ದಾಳಿ ಮಾಡಿ ಹಿಡಿದದ್ದು ಅಕ್ರಮ ಗೋಸಾಟವನ್ನು ಎಂಬುದನ್ನು ಶ್ರದ್ಧಾವಂತ ಮುಸ್ಲಿಮರು ಮನಗಾಣಬೇಕಾಗಿದೆ.
ಹಾಗಿರುವಾಗ ಅಕ್ರಮ ಗೋವಿನ ಸಾಗಾಟ ವಿರುದ್ಧದ ಯಾವುದೇ ಸಂಘಟನೆ ಗಳ ಕ್ರಮ ಗೋಮಾಂಸ ತಿನ್ನುವ ಮುಸ್ಲಿಮರ ವಿರುದ್ಧ ಎಂದು ಭಾವಿಸುವುದು ಸರಿಯಲ್ಲ. ಹಾಗೆ ಯಾರಾದರೂ ಹೇಳಿದರೆ ಅವರು ಹಿಂದೂ-ಮುಸ್ಲಿಂ ಬಾಂಧ ವ್ಯಕ್ಕೆ ಕೊಳ್ಳಿ ಇಡುತ್ತಿದ್ದಾನೆ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಅಕ್ರಮ ಗೋಸಾ ಗಾಟವನ್ನು ತಡೆಯುವುದರಿಂದ ಶ್ರದ್ದಾವಂತ ಮುಸ್ಲಿಮರಿಗೆ ತಮ್ಮ ಧರ್ಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಹೋಗಲು ಸಹಾಯಕವಾ ಗುತ್ತದೆ. ಯಾಕೆಂದರೆ ಕುರಾನ್ ಗ್ರಂಥವು ಅಕ್ರಮವಾಗಿ ಸಾಗಾಟ ಮಾಡಿದ ಅಥವಾ ಮಾಂಸ ಮಾಡಿದ ಮಾಂಸವನ್ನು ತಿನ್ನಬಾರದು ಎಂಬ ಕಟ್ಟಪ್ಪಣೆ ಮಾಡಿದೆ.
ಪ್ರವಾದಿಯೋರ್ವರು ತನ್ನ ನಗರದಲ್ಲಿ ಮೇಕೆಯೊಂದು ಕದ್ದು ಹೋಯಿತು ಎಂಬ ಕಾರಣಕ್ಕಾಗಿ ಮೇಕೆಯೊಂದರ ಜೀವಿತಾವಧಿಯ ತನಕ ಮಾಂಸಾಹಾರ ವನ್ನೇ ತ್ಯಜಿಸಿದರು. ಯಾಕೆಂದರೆ ಕದ್ದು ಹೋದ ಮೇಕೆಯ ಮಾಂಸ ಎಲ್ಲಿ ತನ್ನ ತಟ್ಟೆಗೆ ಬಂದು ಬೀಳುತ್ತದೋ ಎಂಬ ಭಯ ಅವರಿಗಿತ್ತು. ಹಾಗಿರುವಾಗ ಎಲ್ಲೆಂದ ರಲ್ಲಿ ಬೀಫ್ ಬಿರಿಯಾನಿ ಸೇವಿಸುವ ಮುಸ್ಲಿಮರು ಈ ಬಗ್ಗೆ ಬಹಳ ಎಚ್ಚರದಿಂದಿ ರಬೇಕು. ಕದ್ದು, ಅಕ್ರಮವಾಗಿ ಸಾಗಾಟ ಮಾಡಿದ ದನದ ಬಿರಿಯಾನಿ, ಚಿಲ್ಲಿ, ಕಬಾಬ್ ತಿಂದು ಜಾತಿ ಕೆಡುವ ಬದಲು ಒಂದೇ ಒಂದು ದನ ಕಳ್ಳತನ, ಅಕ್ರಮ ಗೋಸಾಗಾಟ ಆಗದಂತೆ ಶ್ರದ್ದಾವಂತ ಮುಸ್ಲಿಮರು ಹಿಂದೂ ಸಂಘಟನೆಗಳೊಂ ದಿಗೆ ಸಹಕರಿಸಿ, ಕಾನೂನು ಬದ್ದವಾಗಿ, ಸಕ್ರಮವಾಗಿ ಸಾಗಾಟಮಾಡಿ ಮಾಂಸ ಮಾಡಿದ ಗೋಮಾಂಸ ಸೇವಿಸಿ ತನ್ನ ಧರ್ಮಶ್ರದ್ಧೆಯನ್ನು ಸಾಬೀತು ಪಡಿಸಬೇಕು. ಇದರಿಂದ ಶಾಂತಿ ನೆಲೆಸುತ್ತದೆ. ಇದು ಎಲ್ಲರಿಗೂ ಕ್ಷೇಮ.

ಗೋಹತ್ಯೆ ನಿಷೇಧ ಶೀಘ್ರ ಜಾರಿಯಾಗಲಿ

Posted by JAYAKIRANA Kirana on | 0 comments | Leave a comment...

ಬಹುಸಂಖ್ಯಾತ ಹಿಂದೂಗಳ ಆರಾಧ್ಯ ದೈವವಾ ಗಿರುವ ಗೋವುಗಳನ್ನು ಮಾಂಸದ ಉದ್ದೇಶಕ್ಕಾಗಿ ಹತ್ಯೆ ಮಾಡುವುದು ಖಂಡನೀಯ ವಿಚಾರ. ಇದು ಧರ್ಮ-ಧರ್ಮಗಳ ನಡುವೆ ಕತ್ತಿ ಮಸೆಯಲು ಕಾರಣ ವಾಗುತ್ತದೆ. ಸಮಾಜದಲ್ಲಿ ಏಕತೆಯಲ್ಲಿ ಜೀವಿಸುವ ವಿವಿಧ ಧರ್ಮೀಯ ರನ್ನು ವಿಂಗಡಿಸುವಲ್ಲಿ ಗೋಹತ್ಯೆ ಕಾರಣವಾಗುತ್ತದೆ. ಕರ್ನಾಟಕ ಸರಕಾರ ಇನ್ನೂ ಗೋ ಹತ್ಯೆ ತಡೆಗೆ ಅಂಕಿತ ಹಾಕಲು ಮುಂದಾಗಿಲ್ಲ. ಇದರಿಂದ ಪ್ರತಿನಿತ್ಯ ಗೋವುಗಳ ಮಾರಣಹೋಮ ನಡೆಯುತ್ತಿದೆ. ಬಿಜೆಪಿಗರು ಚುನಾ ವಣೆಗೂ ಮುನ್ನ ಹೇಳಿರುವ ಗೋಹತ್ಯೆ ನಿಷೇಧವನ್ನು ಇಲ್ಲಿಯವರೆಗೆ ಜಾರಿಗೆ ತರಲು ಮುಂದಾಗಿಲ್ಲ. ಮತ್ತೆ ಚುನಾವಣೆ ಬಂದಾಗ ಹಿಂದೂ ಸಮಾಜೋತ್ಸವ ನಡೆಸಿ ಹಿಂದೂಗಳ ಮತ ಕೇಳಲು ಮನೆ-ಮನೆಗೆ ತೆರಳುವ ಇವರು ಗೆದ್ದ ಬಳಿಕ ಹೇಳಿದ್ದನ್ನು ಮರೆಯುತ್ತಾರೆ. ಇದೇ ರೀತಿ ಇಷ್ಟು ವರ್ಷ ಕಳೆದಾಗಿದೆ. ಗೋಹತ್ಯೆ ದೊಡ್ಡದೇನೂ ಸಂಗತಿಯಲ್ಲ ಎಂಬಷ್ಟರ ಮಟ್ಟಿಗೆ ಹಿಂದೂಗಳೇ ಬಂದಿದ್ದಾರೆ. ಆದ್ದರಿಂದ ಇನ್ನಾದರೂ ಸರ ಕಾರ ಎಚ್ಚೆತ್ತುಕೊಳ್ಳಲಿ.
ರಾಘವೇಂದ್ರ, ಬೈಂದೂರು

'೧೦೮' ಸೇವೆ ಯಶಸ್ವಿಯಾಗಲಿ
ಕರ್ನಾಟಕ ಸರಕಾರ ಜಾರಿಗೆ ತಂದ ೧೦೮ ಆಂಬ್ಯುಲೆನ್ಸ್ ಸೇವೆ ಯಿಂದ ಎಷ್ಟೋ ಮಂದಿ ಅಮಾ ಯಕರ ಪ್ರಾಣ ಉಳಿದಿದೆ. ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಸೇವೆಗೆ ಸಿದ್ಧವಾಗಿರುವ ೧೦೮ ಸೇವೆಯು ರಾಜ್ಯದ ಜನರ ಮನಸ್ಸನ್ನು ಗೆದ್ದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರು ಪ್ರಾರಂಭಿಸಿದ ಈ ಸೇವೆಯು ಈಗಾಗಲೇ ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಆದರೆ ಕೆಲವೊಮ್ಮೆ ಮಾತ್ರ ಈ ಸೇವೆಯು ಜನರಿಗೆ ಸಕಾಲದಲ್ಲಿ ಲಭಿಸದಿರು ವುದು ಬೇಸರದ ಸಂಗತಿ. ಆದ್ದರಿಂದ ಈ ಸೇವೆಯಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಿ ಆದಷ್ಟು ಬೇಗನೆ ಸೇವೆಯನ್ನು ಇನ್ನಷ್ಟು ಸುಧಾರಿಸಿ ರಾಜ್ಯದ ಜನ ತೆಗೆ ಒದಗಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಕಿಶೋರ್, ಬೆಳ್ತಂಗಡಿ

ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆಯ ನೈಜಾಂಶವೇನು?
ಇತ್ತೀಚೆಗೆ ಕೊಣಾಜೆಯ ಪಿ.ಎ. ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಇಬ್ಬರು ಅಧ್ಯಾಪಕರ ಮೇಲೆ ಕೇಸ್ ದಾಖಲಾಗಿದೆ. ಹಾಸ್ಟೆಲ್ ವಾಸಿಯಾ ಗಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ಮೇಲ್ವಿ ಚಾರಕರಿಗೆ ತಿಳಿಸದೆ ಗೋವಾಕ್ಕೆ ಪ್ರವಾಸ ಹೋಗಿದ್ದು, ಇದನ್ನು ಪ್ರಶ್ನಿಸಿ ದ್ದರಿಂದ ಆಕೆ ಆತ್ಮಹತ್ಯೆ ಮಾಡಿ ಕೊಂಡಳು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ರಾತ್ರೋ ರಾತ್ರಿ ಹಾಸ್ಟೆಲ್‌ಗೆ ಕಲ್ಲೆಸೆದು ಹಾನಿ ಯನ್ನೂ ಮಾಡಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿದ್ಯಾ ರ್ಥಿನಿ ಹಾಸ್ಟೆಲ್‌ನಲ್ಲಿ ಉಳಿಯುವುದ ರಿಂದ ಆಕೆಯ ಸರ್ವ ಜವಾಬ್ದಾರಿ ಅಲ್ಲಿನ ಮೇಲ್ವಿಚಾರಕರದ್ದು. ಅವರಿಗೆ ತಿಳಿಸದೆ ಎಲ್ಲಿಗೋ ಹೋಗಿ ಏನಾ ದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಹಾಸ್ಟೆಲ್ ಜವಾಬ್ದಾರಿಯಾಗಿ ರುತ್ತದೆ ಅಲ್ಲವೇ? ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸಿದ್ದೇ ತಪ್ಪು ಎಂದಾ ದರೆ ನಾಳೆಯ ದಿನ ಹಾಸ್ಟೆಲ್‌ನ ವಿದ್ಯಾ ರ್ಥಿಗಳು ಕಲಿಕೆಗಿಂತ ಜಾಸ್ತಿ, ತಿರುಗಾ ಟದಲ್ಲೇ ತೊಡಗಿಕೊಳ್ಳ ಬಹುದು. ಇಲ್ಲಿ ವಿದ್ಯಾರ್ಥಿನಿಯ ಜತೆ ಹಾಸ್ಟೆಲ್ ಆಡ ಳಿತ ಮಂಡಳಿ ಕೆಟ್ಟದಾಗಿ ನಡೆದುಕೊಂ ಡಿದ್ದರೆ ಶಿಕ್ಷೆಯಾಗಲೇ ಬೇಕು. ಆದರೆ ಸಿಕ್ಕ ಸ್ವಾತಂತ್ರ್ಯವನ್ನೇ ಸ್ವೇಚ್ಛೆಯೆಂದು ಕೊಂಡು ಊರೂರು ಸುತ್ತುವ ಹಾಸ್ಟೆ ಲ್‌ನ ಹೆಣ್ಮಕ್ಕಳಿಗೆ ಈ ಪ್ರಕರಣ ಪಾಠ ವಾಗಬೇಕು. ವಿದ್ಯಾರ್ಥಿನಿ ತಪ್ಪು ಮಾಡಿ ರದೇ ಇದ್ದಲ್ಲಿ ಸಾಯುವ ಅವಶ್ಯಕತೆ ಏನೂ ಇರಲಿಲ್ಲ ಎನ್ನುವುದು ನಿಸ್ಸಂ ದೇಹ. ಗಟ್ಟಿ ಮನಸ್ಸಿನಲ್ಲಿ ಎಲ್ಲವನ್ನೂ ಎದುರಿಸಿ ಸಂಬಂಧ ಪಟ್ಟವರಿಗೆ ದೂರು ನೀಡಬಹುದಿತ್ತು. ಮನೆಮಂ ದಿಗೆ ತಿಳಿಸಬಹುದಿತ್ತು. ಅದನ್ನು ಬಿಟ್ಟು ಆಕೆ ಏಕಾಏಕಿ ನೇಣಿಗೆ ಶರಣಾಗಿದ್ದು ಹುಚ್ಚುತನ ಎನ್ನಲಡ್ಡಿಯಿಲ್ಲ.
ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಗಿಂತ ಜಾಸ್ತಿ ಬಾಹ್ಯ ವಿಚಾರಗಳು ಆಕ ರ್ಷಿಸುವುದು ಸಹಜ. ಆದರೆ ಅದರಲ್ಲಿ ಸಮಸ್ಯೆಗಳು ಎದುರಾದಾಗ ಅದರಿಂದ ಹೊರಬರುವುದು ತಿಳಿದಿರುವುದಿಲ್ಲ. ಹೀಗಾಗಿ ಪಿ.ಎ. ಕಾಲೇಜ್ ವಿದ್ಯಾ ರ್ಥಿನಿ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಯ ಬೇಕು. ವಿದ್ಯಾರ್ಥಿನಿ ಯಾರೊಂದಿಗೆ, ಎಲ್ಲಿಗೆ ಹೋಗಿ ದ್ದಳು? ಆಕೆ ಹೋಗಿದ್ದ ಕಾರ್ಯಕ್ರಮ ವೇನು? ಹಾಸ್ಟೆಲ್‌ನಲ್ಲಿ ನಡೆದಿರಬಹು ದಾದ ಕಿರುಕುಳ ಎಲ್ಲದರ ವಿಚಾರಣೆ ನಡೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾ ಗಲಿ. ಪಿ.ಎ.ಕಾಲೇಜ್ ಹಾಸ್ಟೆಲ್ ವಿದ್ಯಾ ರ್ಥಿನಿಯರ ಪ್ರೀತಿ, ಪ್ರೇಮ, ರಾತ್ರಿಯ ತಿರುಗಾಟಕ್ಕೆ ಮೊದಲೇ ಪ್ರಸಿದ್ಧಿ ಪಡೆ ದಿದ್ದು ಇನ್ನಾದರೂ ಕಾಲೇಜ್ ಆಡಳಿತ ಎಚ್ಚೆತ್ತುಕೊಳ್ಳುವುದೇ?
ಎಸ್.ಆರ್., ಉಳ್ಳಾಲ

ದೇವಸ್ಥಾನದಲ್ಲಿ ಕೆರಳಿಸುವ ಬಟ್ಟೆ ಧರಿಸದಿರಿ
ಹಿಂದೂ ಹೆಣ್ಮಕ್ಕಳು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರಿಗೆ ಹೂವು, ಸೇವೆ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸುವಲ್ಲಿ ಹೆಣ್ಮಕ್ಕಳೇ ಮೊದಲಿಗರು. ಆದರೆ ಇದರಲ್ಲಿ ಕೆಲವು ಮಂದಿ ಮಾತ್ರ ಅಶ್ಲೀಲ, ಗಂಡಸರನ್ನು ಸೆಳೆಯುವಂಥ ಬಟ್ಟೆ ಧರಿಸಿ ಅಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಲು ಮುಂದಾಗುತ್ತಾರೆ. ಇಂಥ ಒಂದಿಬ್ಬರು ದೇವಸ್ಥಾನಕ್ಕೆ ಹೋದರೆ ಸಾಕು, ಅಲ್ಲಿದ್ದ ಭಕ್ತರೆಲ್ಲರ ಚಿತ್ತ ಚಂಚಲ ವಾಗುತ್ತದೆ. ದೇವರ ಮೇಲಿನ ಭಯ-ಭಕ್ತಿ ಇಲ್ಲವಾಗುತ್ತದೆ. ಕೆಲವು ಯುವಕ ರಂತೂ ಇಂಥ ಹೆಣ್ಮಕ್ಕಳನ್ನು ಎವೆಯಿಕ್ಕದೆ ನೋಡುತ್ತಾರೆ. ಇದೆಲ್ಲ ದೇವಸ್ಥಾನ ದೊಳಗೆ ಅಶ್ಲೀಲ, ಅತಿರೇಕ ಎನಿಸುವಂಥ ಬಟ್ಟೆ ತೊಟ್ಟಿದ್ದರ ಪರಿಣಾಮ. ಆದ್ದ ರಿಂದ ಹಿಂದೂ ಸಮಾಜ ದೇವಾಲಯಕ್ಕೆ ತೆರಳುವ ಹೆಣ್ಮಕ್ಕಳ ಬಟ್ಟೆಗೊಂದು ಕೋಡ್ ಮಾಡಲೇಬೇಕು. ಇಲ್ಲವಾದಲ್ಲಿ ನಮ್ಮ ಸಂಸ್ಕೃತಿಯ ಅಧ:ಪತನ ಖಂಡಿತ.
ಕಿರಣ್ ರಾವ್, ಮಂಜೇಶ್ವರ

ತುಳುನಾಡ ದೈವಗಳನ್ನು ನಿಂದಿಸದಿರಿ
ತುಳುನಾಡ ದೈವಗಳನ್ನು ನಿಂದಿಸುವುದು ಕೆಲವರಿಗೆ ಅದೊಂದು ಮನೋರಂಜನೆ ಯಿದ್ದಂತೆ. ಮೊನ್ನೆಯೂ ಸುದ್ದಿ ಮಾಧ್ಯಮವೊಂದನ್ನು ವೀಕ್ಷಿಸುತ್ತಿದ್ದ ವೇಳೆ ಇದೇ ರೀತಿಯ ನಿಂದನೆಯ ಕಾರ್ಯಕ್ರಮವೊಂದು ಪ್ರಸಾ ರವಾಗುತ್ತಿತ್ತು. ಮುಖ್ಯಮಂತ್ರಿ ಸದಾನಂದ ಗೌಡರು ತನ್ನ ಮನೆಯ ದೈವ ದೇವರಲ್ಲಿ ಅಭಯ ಪಡೆಯುತ್ತಿರುವು ದನ್ನು ಈ ವಾಹಿನಿ ಅಸಭ್ಯವಾಗಿ ಚಿತ್ರಿಸಿ ನಿಂದನೆಗೆ ಇಳಿದಿತ್ತು. ವಾಹಿಯ ನಿರೂಪಕ ತಾನೇ ದೈವದ ವೇಷ ತೊಟ್ಟು ಅಣಕು ನೃತ್ಯ ಮಾಡಿನಿಂದ ನೆಗೆ ಇಳಿದಿದ್ದ. ಇನ್ನೊಬ್ಬರ ಧಾರ್ಮಿಕ ನಂಬಿಕೆಯನ್ನು ಈ ರೀತಿ ಬಹಿ ರಂಗವಾಗಿ ನಿಂದಿಸುವುದು ಎಷ್ಟು ಸರಿ? ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲಿ ಇದರ ಬಗ್ಗೆ ನಂಬಿಕೆ ಇರದೇ ಇರಬಹುದು. ಆದರೆ ಕರಾವಳಿಗರಿಗೆ ದೇವ ರಿಗಿಂತಲೂ ದೈವಗಳೇ ಪ್ರಮುಖವಾದದ್ದು.
ಇಲ್ಲಿನ ಮಣ್ಣಿಗೂ ದೈವಗಳಿಗೂ ಅದರದ್ದೇ ಆದ ಸಂಬಂಧವಿದೆ. ದೈವಗಳು ನಿಂಬಿದವರನ್ನು ಕೈಬಿಟ್ಟ ಉದಾಹರಣೆಗಳೇ ಇಲ್ಲ. ಅಷ್ಟೇ ಯಾಕೆ? ತಾನೊಬ್ಬ ಹಣವಂತ, ಶ್ರೀಮಂತ ಎಂದು ಮೆರೆಯುತ್ತಿದ್ದ ವಿಜಯ್‌ಮಲ್ಯ ಕೂಡ ಕಷ್ಟ ಬಂದಾಗ ಬಂದದ್ದು ಇದೇ ತುಳುನಾಡಿಗೆ. ಖ್ಯಾತ ಸಿನಿಮಾ ನಟರಿಂದ ಹಿಡಿದು, ಉದ್ಯಮಿಗಳು, ಕ್ರಿಕೆಟಿಗರು ಇಂದಿಗೂ ದೈವಗಳ ಮೇಲೆ, ತುಳುನಾಡಿನ ಕೆಲ ದೇವರ ಮೇಲೆ ಇನ್ನೂ ಅಚಲ ನಂಬಿಕೆಯಿ ಟ್ಟಿರುವುದೇ ಇದಕ್ಕೆ ಸಾಕ್ಷಿ. ಹೀಗಿದ್ದರೂ ದೈವಗಳನ್ನು ನಿಮ್ಮ ಮನಸ್ಸಿಗೆ ಬಂದಂತೆ ನಿಂದಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನಿಮ್ಮ ನಿಂದನಾತ್ಮಕ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗಿ ರುವ ಟೀಕೆಗಳನ್ನು ಒಮ್ಮೆ ನೋಡಿ. ಎಲ್ಲೂ ನಿಮ್ಮ ಕೆಲಸವನ್ನು ಶ್ಲಾಘಿ ಸಿಲ್ಲ. ಇನ್ನಾದರೂ ಸುದ್ದಿ ಮಾಧ್ಯಮಗಳು ಈ ರೀತಿಯ ಹೆಚ್ಚು ಕೆಲಸಕ್ಕೆ ಕೈ ಹಾಕುವ ಮುನ್ನ ಯೋಚಿಸಲಿ. ಧಾರ್ಮಿಕ ಭಾವನೆಗಳನ್ನು ನಿಂದಿಸುವ ಕೆಲಸವನ್ನು ಇಲ್ಲವೇ ಮನೋರಂಜನೆಗಾಗಿ ಈ ರೀತಿಯ ಕಾರ್ಯಕ್ರಮ ಮಾಡುವುದು ಬೇಡ.
ಶಿವರಾಜ್ ಬಂಗೇರಾ, ಸುಳ್ಯ

ಹೆಲ್ತ್ ಇನ್ಶೂರೆನ್ಸ್‌ನ ಮಾನದಂಡ ಬದಲಾಗಲಿ
ರೋಗ ಹೇಳಿ ಕೇಳಿ ಬರು ವುದಿಲ್ಲ. ಹಾಗಂತ ಹಣವಿದ್ದಾಗಲೇ ರೋಗ ಬರಬೇಕು ಅನ್ನುವ ನಿಯ ಮವೂ ಇಲ್ಲ. ಕೈಯಲ್ಲಿ ಹಣವಿಲ್ಲ ದಾಗ ರೋಗ ಬಂದರೆ ಏನಪ್ಪ ಗತಿ ಅಂದುಕೊಳ್ಳುವರಿಗಾಗಿಯೇ ಹೆಲ್ತ್ ಇನ್ಶೂರೆನ್ಸ್‌ಗಳು ಒಂದು ಉತ್ತಮ ಯೋಜನೆ ಎನ್ನಬಹುದು.
ಆದರೆ ಈ ಆರೋಗ್ಯ ವಿಮೆಗಳ ಲ್ಲಿನ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗಬೇಕಾದ ಅವಶ್ಯಕ ತೆಯಿದೆ. ತುರ್ತು ಸಂದರ್ಭ ಗಳಿಗೆ ಉಪಯೋಗಕ್ಕೆ ಬರಲೆಂದು ಆರೋಗ್ಯ ವಿಮೆಗಳನ್ನು ಮಾಡಿಸು ತ್ತೇವೆ. ಆದರೆ ಈ ವಿಮೆಗಳು ಈ ವೇಳೆ ಉಪಯೋಗಕ್ಕೆ ಬಾರದೆ ನಾವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಪ್ರಯೋಜನಕ್ಕೆ ಬಂದರೆ ಏನು ಉಪ ಯೋಗ? ಮೊನ್ನೆಯಷ್ಟೇ ನನ್ನ ಸ್ನೇಹಿತ ನೊಬ್ಬ ನಗರದ ಆಸ್ಪತ್ರೆಯೊಂದರಲ್ಲಿ ಮೂತ್ರಕೋಶದ ಸಮಸ್ಯೆಯಿಂದ ಬಳ ಲುತ್ತಿದ್ದ ಕಾರಣ ಚಿಕಿತ್ಸೆಗೆ ದಾಖಲಾದ.
ಅವನಿಗೆ ಆತ ಕಾರ್ಯ ನಿರ್ವ ಹಿಸುತ್ತಿರುವ ಸಂಸ್ಥೆಯ ಜೀವ ವಿಮೆ ಕಾರ್ಡ್ ಇದೆ. ಈ ಆಸ್ಪತ್ರೆಯೂ ಈ ಯೋಜನೆಗೆ ಒಳಪಟ್ಟಿದೆ. ಆದರೆ ಈತನ ಸಂಪೂರ್ಣ ಚಿಕಿತ್ಸೆ ಮುಗಿದ ನಂತರ ವೈದ್ಯರು ಚಿಕಿತ್ಸಾ ವೆಚ್ಚವನ್ನು ಭರಿಸಲು ಹೇಳಿದರು. ಕಾರ್ಡ್ ಇದೆ, ಕೊಟ್ಟಿದ್ದೇವೆ ಎಂದರೂ ನಿಮ್ಮ ಕಾರ್ಡ್‌ಗೆಲ್ಲಾ ಕಾಯೋದಕ್ಕೆ ಆಗೋದಿಲ್ಲ, ನಿಮ್ಮ ಕೈಯಿಂದ ಹಣ ಕೊಡಿ. ಮತ್ತೆ ಬೇಕಾದ್ರೆ ನಿಮ್ಮ ಕಾರ್ಡ್-ಗೀರ್ಡ್ ನೋಡಿಕೊಳ್ಳಿ ಎಂದು ಉಡಾಫೆಯಿಂದ ಮಾತನಾಡಿ ದರು. ತೀರಾ ಬಡವನಾದ ಈತನಲ್ಲಿ ಹಣವಿರಲಿಲ್ಲ. ಈ ಕಾರ್ಡನ್ನೇ ನಂಬಿ ಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಡಿಸ್ಚ್ಚಾರ್ಜ್ ಆಗುವ ಮುನ್ನ ಹಣ ನೀಡಲೇ ಬೇಕು ಎಂದ ಕಾರಣ ಹೇಗೋ ಹಣ ಹೊಂದಿಸಿ ಆಸ್ಪತ್ರೆಯ ವೆಚ್ಚವನ್ನು ಭರಿಸಿದ.
ಇದನ್ನು ನೋಡುವಾಗ ಸಂದ ರ್ಭಕ್ಕಾಗದ ಆರೋಗ್ಯ ವಿಮೆ ಇದ್ದೇನು ಪ್ರಯೋಜನ ಅನಿಸಿತು. ಈ ಯೋಜನೆ ಉತ್ತಮವೇ ಆದರೂ ಇಲ್ಲಿನ ಕೆಲ ಲೋಪದೋಷಗಳಿಗೆ ಇತೀಶ್ರೀ ಹಾಡಬೇಕು.
ಇಸ್ಮಾಯಿಲ್, ತೊಕ್ಕೊಟ್ಟು

ಕಾನತಡ್ಕ ಕುಡಿಯುವ ನೀರಿನ ಜ್ವಲಂತ ಸಮಸ್ಯೆ
ಅಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಜ್ವಲಂ ತವಾಗಿದೆ. ಒಂದನೇ ವಾರ್ಡ್‌ನ ಕಾನತಡ್ಕ ದಿಂದ ಸರಬರಾಜು ಆಗುವ ನಲ್ಲಿ ನೀರು ಕಳೆದ ಒಂದೂವರೆ ತಿಂಗಳಿನಿಂದ ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಎರಡು ದಿನಕ್ಕೊಮ್ಮೆ ಕೇವಲ ೨೦೦ ಲೀಟ ರ್‌ನಷ್ಟು ನೀರು ಪೂರೈಕೆಯಾಗುತ್ತಿದೆ. ಈ ವಠಾ ರದಲ್ಲಿ ಒಂದು ಕೊಳವೆಬಾವಿ ಇದ್ದು, ನೂರಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಂಪರ್ಕ ಇದೆ. ಈ ನೀರು ನಿತ್ಯದ ಬಳಕೆಗೆ ಸಾಕಾಗು ತ್ತಿಲ್ಲ. ಇದರಿಂದ ಈ ವಠಾರದ ನಿವಾಸಿಗಳು ಒಂದು ಕಿ.ಮೀ. ದೂರದಿಂದ ನೀರು ತರುತ್ತಿ ದ್ದಾರೆ. ಸಮಸ್ಯೆ ಇಷ್ಟು ಗಂಭೀರವಾಗಿದ್ದರೂ, ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದರೂ ನಮ್ಮ ಸಮಸ್ಯೆ ಸಮಸ್ಯೆ ಯಾಗಿಯೇ ಉಳಿದಿದೆಯಲ್ಲದೆ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾವು ಈಗಾಗಲೇ ಪಂ. ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ತಾಲೂಕು ಪಂಚಾಯತ್ ಅಧಿಕಾ ರಿಗಳಿಗೆ ದೂರವಾಣಿ ಮುಖಾಂತರ ನಾಲ್ಕೈದು ಬಾರಿ ದೂರು ನೀಡಿದ್ದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಆದ್ದರಿಂದ ಇಲ್ಲಿ ಕೊಳವೆಬಾವಿ ಕೊರೆದು ಇಲ್ಲವೇ ಬೇರಾವುದಾದರೂ ವಿಧ ದಲ್ಲಿ ಸಮರ್ಪಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲು ಅಳಿಕೆ ಗ್ರಾಮ ಪಂಚಾಯತ್ ಪ್ರಯ ತ್ನಿಸಬೇಕಿದೆ. ಇದರಿಂದ ಈ ಭಾಗದ ಜನಪ್ರತಿ ನಿಧಿಗಳು ಮುತುವರ್ಜಿ ವಹಿಸಬೇಕಾಗಿದೆ. ನಮ್ಮ ಸಮಸ್ಯೆಯನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿ ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮರ್ಪಕವಾಗಿ ನೀರು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡದಿದ್ದಲ್ಲಿ ಜನ ಖಾಲಿ ಕೊಡ ಹಿಡಿದು ಬೀದಿಗಿಳಿಯುವ ದಿನಗಳು ದೂರ ವಿಲ್ಲ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
ನೊಂದ ನಾಗರಿಕರು, ಒಂದನೇ ವಾರ್ಡ್-ಅಳಿಕೆ

ಪುತ್ತೂರಿನಲ್ಲಿ ಹೂಳೆತ್ತದೆ ನಿದ್ರಾವಸ್ಥೆಯಲ್ಲಿರುವ ಸ್ಥಳೀಯಾಡಳಿತ

Posted by JAYAKIRANA Kirana on | 0 comments | Leave a comment...


ಇತ್ತೀಚಿನ ದಿನಗಳಲ್ಲಿ ನಿರ್ವಹಣಾ ಘಟಕ ಸಮರ್ಪಕವಾಗಿ ಮನೆಯಿಂದ ತ್ಯಾಜ್ಯ ಸಂಗ್ರಹಣೆ ನಡೆಸದಿರುವ ಕಾರಣ ಸಾರ್ವಜನಿಕರು ಮನೆಯ ತ್ಯಾಜ್ಯವನ್ನು ರಸ್ತೆಬದಿಯಲ್ಲಿ ತಂದು ರಾಶಿ ಹಾಕು ತ್ತಿದ್ದಾರೆ. ಇದರಿಂದಾಗಿ ದಿನೇ ದಿನೇ ತುಂಬುವ ತ್ಯಾಜ್ಯ ಗಳು ರಸ್ತೆ ಬದಿಯಲ್ಲಿನ ಚರಂಡಿಯನ್ನು ಆಕ್ರಮಿಸು ತ್ತಿದೆ. ಅಲ್ಲದೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಕಂಡುಬರುತ್ತಿದೆ.

ನಾಗರಿಕರು, ಪುತ್ತೂರು
ಮುಂಗಾರುಮಳೆ ಬಿರುಸುಗೊಳ್ಳುವ ಸೂಚನೆ ಆರಂಭs ಗೊಂಡಿದೆ. ಆದರೆ ಮಳೆಯ ಸಂಭಾವ್ಯ ಅನಾಹುತವನ್ನು ಎದು ರಿಸಲು ಸಂಬಂಧಪಟ್ಟ ಇಲಾಖೆಗಳಾಗಲೀ, ಗ್ರಾಮ ಪಂಚಾ ಯತ್, ಪುರಸಭೆ ಸೇರಿ ಇನ್ನಿತರ ಸ್ಥಳೀಯಾಡಳಿತ ಸಂಸ್ಥೆಗ ಳಾಗಲೀ ಯಾವುದೇ ಪೂರ್ವಸಿದ್ದತೆ ನಡೆಸಿದಂತೆ ಕಂಡು ಬರು ತ್ತಿಲ್ಲ. ಆಡಳಿತ ವ್ಯವಸ್ಥೆ ಮಳೆ ಸಮಸ್ಯೆಯನ್ನು ಎದುರಿಸಲು ಪ್ರಾಥಮಿಕ ಸಿದ್ಧತೆಯನ್ನೂ ನಡೆಸದೆ ಇನ್ನೂ ನಿದ್ರಾವಸ್ಥೆಯಲ್ಲಿದೆ.
ಪುತ್ತೂರು ನಗರದಲ್ಲಿ ಸ್ವಲ್ಪ ಜೋರಾಗಿ ಮಳೆ ಸುರಿದರೂ ರಸ್ತೆಯಲ್ಲಿಯೇ ನೀರು ಹರಿಯುವುದು, ಕೃತಕ ನೆರೆ ಬಂದು ಮನೆಗಳಿಗೆ ಹಾನಿಯಾಗುವುದು ಸಾಮಾನ್ಯವಾಗಿದೆ. ನಗರದ ಹೃದಯಭಾಗದಲ್ಲಿ ಹರಿಯುತ್ತಿರುವ ತೊರೆಯಲ್ಲಿ ನೆರೆ ತುಂಬಿ ನಗರಕ್ಕೆ ತೊಂದರೆಯಾಗುವುದು ಪ್ರತಿವರ್ಷವೂ ನಡೆದು ಬಂದ ವಾಡಿಕೆ. ತೊರೆಯ ಹೂಳೆತ್ತದಿರುವುದರಿಂದ ಈ ತೊಂದರೆ ಆಗುತ್ತಿದೆ. ಅಲ್ಲದೆ ರಸ್ತೆಬದಿಗಳಲ್ಲಿರುವ ಮಳೆಗೆ ಮೊದಲೇ ಚರಂ ಡಿಯ ಹೂಳೆತ್ತಿ ಸ್ವಚ್ಛಗೊಳಿಸಿ ನೀರಿನ ಹರಿವಿಗೆ ಕ್ರಮ ಕೈಗೊಳ್ಳದ ಕಾರಣ ಚರಂಡಿಗಳಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ಹರಿದು ಜನಸಾಮಾನ್ಯರು ಮತ್ತು ವಾಹನ ಚಾಲಕರಿಗೆ ಸಮಸ್ಯೆ ಗಳನ್ನು ತಂದೊಡ್ಡುತ್ತಿದೆ.
ಪುತ್ತೂರು ಪುರಸಭೆಯು ಮನೆ-ಮನೆಯಿಂದ ತ್ಯಾಜ್ಯ ವಿಲೇವಾರಿ ಸಂಗ್ರಹ ವ್ಯವಸ್ಥೆಯನ್ನು ಮಾಡಿದೆ. ಆದರೆ ಇತ್ತೀ ಚಿನ ದಿನಗಳಲ್ಲಿ ಇದರ ನಿರ್ವಹಣಾ ಘಟಕ ಸಮರ್ಪಕವಾಗಿ ಮನೆಯಿಂದ ತ್ಯಾಜ್ಯ ಸಂಗ್ರಹಣೆ ನಡೆಸದಿರುವ ಕಾರಣ ಸಾರ್ವ ಜನಿಕರು ಮನೆಯ ತ್ಯಾಜ್ಯವನ್ನು ರಸ್ತೆಬದಿಯಲ್ಲಿ ತಂದು ರಾಶಿ ಹಾಕುತ್ತಿದ್ದಾರೆ. ಇದರಿಂದಾಗಿ ದಿನೇ ದಿನೇ ತುಂಬುವ ತ್ಯಾಜ್ಯ ಗಳು ರಸ್ತೆಬದಿಯಲ್ಲಿನ ಚರಂಡಿಯನ್ನು ಆಕ್ರಮಿಸುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯ ತೆಯೂ ಕಂಡುಬರುತ್ತಿದೆ. ಪುತ್ತೂರಿನ ಗ್ರಾಮಾಂತರ ಪ್ರದೇ ಶದ ಬಹುತೇಕ ರಸ್ತೆಗಳು ಸಮರ್ಪಕವಾಗಿಲ್ಲ. ಇರುವ ಚರಂಡಿ ಗಳು ಮಣ್ಣು ಜರಿದು ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿ ಮುಚ್ಚಿಹೋಗಿದೆ. ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿದ್ದ ಜಿಲ್ಲಾಡ ಳಿತ, ಲೋಕೋಪಯೋಗಿ ಇಲಾಖೆಗಳು ಇನ್ನೂ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ. ಪುತ್ತೂರು ತಾಲೂಕಿನಲ್ಲಿ ಹಾದು ಹೋಗು ತ್ತಿರುವ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಕಾಮಗಾರಿ ಬಹು ತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಪುತ್ತೂರು ನಗರದಿಂದ ಕುಂಬ್ರದ ತನಕ ಸುಮಾರು ಶೇ.೯೦ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ಚರಂಡಿ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ. ಇದರಿಂದಾಗಿ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಬದಿ ಕುಸಿಯುವ ಅಪಾಯವಿದೆ. ರಸ್ತೆ ಬದಿಗಳಲ್ಲಿನ ಚರಂಡಿ ಕಾಮ ಗಾರಿಗಳನ್ನು ಮಳೆಗಾಲ ಆರಂಭಗೊಂಡು ಜನರು ಸಾಕಷ್ಟು ಸಮಸ್ಯೆಗಳು ಅನುಭವಿಸಿದ ಮೇಲೆ ಆರಂಭಿಸುವ ಪರಿಪಾಠ ಈ ತನಕ ಬೆಳೆದು ಬಂದಿದೆ. ಸಂಬಂಧಿಸಿದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಂತಹ ಬೇಜವಾಬ್ದಾರಿಯಿಂದಾಗಿ ಮಳೆಗಾಲದಲ್ಲಿ ರಸ್ತೆಗಳಿಗೆ ಹಾನಿಯಾಗುತ್ತಿದೆ. ಇನ್ನಾದರೂ ಸಂಬಂ ಧಪಟ್ಟವರು ಎಚ್ಚರಗೊಂಡು ಮಳೆಗಾಲವನ್ನು ಎದುರಿಸಲು ಸಾಕಷ್ಟು ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಸಮಸ್ಯೆ ಸೃಷ್ಟಿಯಾದ ಬಳಿಕ ಪರಿಹಾರದ ಮಾತುಗಳನ್ನಾಡುವ ಬದಲು ಸಮಸ್ಯೆ ಬಾರದಂತೆ ತಡೆಯುವುದೇ ಜಾಣತನವಲ್ಲವೇ?

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ನಿಟ್ಟೆ ಕೊಲೆ ಪ್ರಕರಣ: ಬಿಜೆಪಿ ಮುಖಂಡನ ಸಹೋದರರು ವಶಕ್ಕೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ನಿಟ್ಟೆ ಪದವು ಕಲಂಬಾಡಿ ಎಂಬಲ್ಲಿ ಯುವಕನೊಬ್ಬನನ್ನು ಬರ್ಬರ ರೀತಿಯಲ್ಲಿ ಕೊಲೆಗೈದಿರುವ ಪ್ರಕರಣದಲ್ಲಿ ಕಾರು ಚಾಲಕ ವಿರೇಂದ್ರ ಪೂಜಾರಿ ಎಂಬಾತ ಪ್ರಕರಣದ ಪ್ರಮುಖ ಆರೋಪಿ ಎಂಬ ಮಹತ್ವದ ಅಂಶವನ್ನು ಪೊಲೀ ಸರು ಬಯಲಿಗೆಳೆದಿದ್ದು, ಇದರೊಂದಿಗೆ ಸ್ಥಳೀಯ ಬಿಜೆಪಿ ಮುಖಂಡನೊಬ್ಬನ ಸಹೋದರರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸೋಮವಾರ ರಾತ್ರಿ ಸ್ಥಳೀಯ ಲಲಿತಾ ಶೆಡ್ತಿ ಎಂಬವರ ಮನೆಯಲ್ಲಿ ಜರಗಿದ್ದ ಮದುವೆ ಪೂರ್ವದ ಮದರಂಗಿ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಮನೆಯಿಂದ ಹೊರಟು ಹೋಗಿದ್ದ ತಿಮ್ಮಪ್ಪ ಮೂಲ್ಯ ಎಂಬವರ ಪುತ್ರ ಸಂದೀಪ್ ಕುಲಾಲ್(೨೪) ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ರಸ್ತೆ ಬದಿಯಲ್ಲಿ ಹೆಣವಾಗಿ ಬಿದ್ದಿದ್ದ. ನಿನ್ನೆ ಬೆಳಿಗ್ಗೆ ಆತನ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಯದ್ವಾತದ್ವ ಕಡಿದ ಗುರುತುಗಳು ಇತ್ತು. ಮೇಲ್ನೋಟಕ್ಕೆ ಇದು ತಲವಾರಿನಿಂದ ಕಡಿದಿರಬಹುದೆಂಬ ಅಂಶ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯಾಗಿರುವ ಕಾರು ಚಾಲಕ ವಿರೇಂದ್ರ ಪೂಜಾರಿ ಕೃತ್ಯದಲ್ಲಿ ನೇರ ಭಾಗಿ ಯಾಗಿರುವುದು ಕಂಡುಬಂದಿದೆ. ಆರೋಪಿತ ಸೋಮವಾರ ತಡರಾತ್ರಿ ಮಾರಾಕಾಯುಧದೊಂದಿಗೆ ಪಕ್ಕದ ಮನೆಗೆ ಹೋಗಿದ್ದನಲ್ಲದೇ ವಿಜಯ ಎಂಬವರಲ್ಲಿ ನೀರು ಕೇಳಿದ್ದನು. ಮನೆ ಮಂದಿ ನೀಡಿದ ನೀರಿನಿಂದ ಮಾರಾಕಾಯಧವನ್ನು ತೊಳೆದು ಇಲ್ಲಿಗೆ ಬಂದಿರುವ ವಿಷಯವನ್ನು ಯಾರಲ್ಲೂ ತಿಳಿಸಬಾರದು ಎಂದು ತಾಕೀತು ಮಾಡಿದ್ದಾನೆ. ಆತ ಧರಿಸಿದ ಬಟ್ಟೆಯ ಮೇಲೆ ರಕ್ತದ ಕಲೆ ಇರುವುದನ್ನು ಮನೆ ಮಂದಿ ಗಮನಿಸಿದ್ದರು. ಬಂದ ದಾರಿಯುದ್ದಕ್ಕೂ ರಕ್ತ ಚೆಲ್ಲಿಕೊಂಡಿರುವುದರಿಂದ ಅದರ ಮೇಲೆ ನೀರು ಹಾಕಿದರೆಂದು ತಿಳಿದುಬಂದಿದೆ.
 ಶಂಕಿತ ಆರೋಪಿ ವಿರೇಂದ್ರ ಪೂಜಾರಿ ತಡರಾತ್ರಿ ವೇಳೆಗೆ ತಲೆ ಮರೆ ಸಿಕೊಂಡಿದ್ದಾನೆ. ನಿನ್ನೆ ಬೆಳಿಗ್ಗೆ ಸಂದೀಪ್‌ನ ಶವ ಪತ್ತೆಯಾಗಿರುವುದರಿಂದ ಪೊಲೀಸ್ ಶ್ವಾನದಳ ಘಟನಾ ಸ್ಥಳಕ್ಕೆ ಬಂದಿದೆ. ಆರೋಪಿಯ ಜಾಡು ಹಿಡಿದ ಶ್ವಾನ ವಿಜಯ ಎಂಬವರ ಮನೆಯ ಕಡೆಗೆ ಓಡಿದೆ. ಇದನ್ನೇ ಗುರಿಯಾಗಿರಿಸಿ ಪೊಲೀಸರು ವಿಜಯನನ್ನು ವಶಕ್ಕೆ ತೆಗೆದಾಗ ನಡೆದಿರುವ ಘಟನಾವಳಿ ಬೆಳಕಿಗೆ ಬಂತೆನ್ನಲಾಗಿದೆ. ಲಲಿತಾ ಶೆಡ್ತಿ ಎಂಬವರ ಮನೆಯಲ್ಲಿ ಜರಗಿದ್ದ ಮದರಂಗಿ ಸಮಾರಂಭದಲ್ಲಿ ಕುಡಿದ ಅಮಲಿನಲ್ಲಿ ಅವರಿಬ್ಬರೊಳಗೆ ಜಗಳ ಉಂಟಾಗಿ ಕೊಲೆಯೊಂದಿಗೆ ಪರ‍್ಯಾಯಾವಸನಗೊಂಡಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಆಕಸ್ಮಿಕವಾಗಿ ಅವರಿಬ್ಬರ ನಡುವೆ ಜಗಳವೇರ್ಪಟ್ಟಿದ್ದು ಹೌದಾದಲ್ಲಿ ಆರೋಪಿಗೆ ಮಾರಾಕಾಯುಧ(ತಲವಾರು,ಕತ್ತಿ) ಎಲ್ಲಿಂದ ಸಿಗುತ್ತಿತ್ತು ಎಂಬ ಯಕ್ಷ ಪ್ರಶ್ನೆ ಇಲ್ಲಿ ಕಾಡತೊಡಗಿದೆ. ಕಳೆದ ಮೂರು ತಿಂಗಳ ಹಿಂದೆ ಸಂದೀಪ್ ಕುಲಾಲ್‌ನ ಸಹೋದರ ಸಂತೋಷ ಕುಲಾಲ್ ಹಾಗೂ ವೀರೇಂದ್ರ ಪೂಜಾರಿ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಹೊಡೆದಾಟ ನಡೆದಿತ್ತೆಂದು ತಿಳಿದುಬಂದಿದೆ. ಇದರಿಂದ ಆಕ್ರೋಶಿತ ವೀರೇಂದ್ರ, ಸೇಡು ತೀರಿಸುವ ಶಪಥಗೈದಿದ್ದನು. ಸೋಮವಾರ ರಾತ್ರಿ ಪೂರ್ವ ನಿರ್ಧರಿತನಾಗಿ ಮಾರಾಕಾಯುಧವನ್ನು ಹಾಡಿಯೊಂದರಲ್ಲಿ ಬಚ್ಚಿಟ್ಟು ಅದೇ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದ ಸಂದೀಪ್‌ನನ್ನು ಅಡ್ಡಗಟ್ಟಿ ಕಡಿದು ಕೊಲೆಗೈದಿದ್ದಾನೆ.
ಬೈಕ್ ಯಾರದು?
ಮನೆಗೆ ಸಂದೀಪ್ ಹೊರಟದ್ದು ದೋಸ್ತಿ ಕೃಷ್ಣನ ಬೈಕ್‌ನಲ್ಲಿ ಎಂದು ತಿಳಿದುಬಂದಿದೆ. ಮದರಂಗಿ ಸಮಾರಂಭದಲ್ಲಿ ಪಾಲ್ಗೊಂಡು ತಡರಾತ್ರಿಯಾಗು ತ್ತಿದ್ದಂತೆ ಹೊರಡುವ ಅಂತ ಕೃಷ್ಣ ಹೇಳಿದನಾದರೂ ಅದಕ್ಕೆ ಒಪ್ಪದೇ ಇದ್ದ ಸಂದೀಪ್ ಕುಲಾಲ್ ನಿನಗೆ ಮನೆಗೆ ಬಿಟ್ಟು ಬರುತ್ತೇನೆ. ತಾನು ತಡವಾಗಿ ಮನೆಗೆ ಹೋಗುತ್ತೇನೆ. ಒಂದಿಷ್ಟು ಡ್ಯಾನ್ಸ್ ಮಾಡಬೇಕು. ನಾಳೆ ಬೆಳಿಗ್ಗೆ ನಿನ್ನ ಬೈಕ್ ಮರಳಿಸುತ್ತೇನೆ. ಎಂದು ತಿಳಿಸಿ ಕೃಷ್ಣನನ್ನು ಆತನ ಮನೆಗೆ ಬಿಟ್ಟು ಮತ್ತೆ ಮದರಂಗಿ ಮನೆಗೆ ಹಿಂತಿರುಗಿದ್ದನು. ತನ್ನ ಇಚ್ಚೆಯಂತೆ ಡ್ಯಾನ್ಸ್ ಮಾಡಿ ಅಲ್ಲಿಂದ ಬೈಕ್‌ನಲ್ಲಿ ಹೊರಟು ಹೋಗಿದ್ದ ಸಂದೀಪ್ ಮನೆಗೂ ಸೇರದೇ ಬೀದಿಯಲ್ಲಿ ಹೆಣವಾಗಿ ಬಿದ್ದಿದ್ದಾನೆ. ಚಲಾಯಿಸಿದ ಬೈಕ್ ಮನೆಯ ಮುಂದೆ ನಿಂತುಕೊಂಡಿರುವುದು ಹೇಗೆ ಎಂಬುವುದು ಆರೋಪಿಯಿಂದ ಬಯಲಾಗ ಬೇಕಾಗಿದೆ. ನಗರದ ಕಂಟ್ರಾಕ್ಟರ್‌ದಾರರೊಂದಿಗೆ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಸಂದೀಪ್ ಕಳೆದ ಕೆಲ ದಿನಗಳಿಂದ ಕೆಲಸಕ್ಕೂ ಹೋಗದೇ ಮನೆಯಲ್ಲಿಯೇ ಇರುತ್ತಿದ್ದನಂತೆ. ತನ್ನ ಜೀವಕ್ಕೆ ಕುತ್ತು ಬರುವುದು ಆತನ ಗಮನಕ್ಕೆ ಬಂದಿ ರಬಹುದೇ ಎಂಬುವುದಕ್ಕೆ ಉತ್ತರ ನಿಗೂಢವಾಗಿದೆ.
ಬಿಜೆಪಿ ಮುಖಂಡರ ಸಹೋದರರ ವಿಚಾರಣೆ
ಸಂದೀಪ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಸಹೋದರರಿಬ್ಬರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕೃತ್ಯಕ್ಕೆ ಇವರು ಸಹಕರಿಸಿದರೇ ಅಥವಾ ಕೃತ್ಯವನ್ನು ಕಣ್ಣಾರೆ ಕಂಡಿದ್ದಾರೆಯೇ ಎಂಬುವುದು ಇನ್ನಷ್ಟೇ ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.
ಡಿವೈಎಸ್ಪಿ ಜಯಂತ್ ಶೆಟ್ಟಿ ನಿರ್ದೇಶನದಂತೆ ಇನ್ಸ್‌ಪೆಕ್ಟರ್ ವೆಲೇರಿಯನ್ ಡಿಸೋಜಾ ತನಿಖೆ ನಡೆಸುತ್ತಿದ್ದಾರೆ. ಗ್ರಾಮಾಂತರ ಠಾಣಾಧಿಕಾರಿ ಹಝಮತ್ ಆಲಿ ಅವರು ಕೇಸು ದಾಖಲಿಸಿದ್ದಾರೆ.

ನೀರಲ್ಲಿ ಮುಳುಗಿ ಮೃತ್ಯು

Posted by JAYAKIRANA Kirana on | 0 comments | Leave a comment...

ಉಡುಪಿ: ಇಲ್ಲಿಯ ಉದ್ಯಾವರ ಹೊಳೆಗೆ ಏಡಿ ಹಿಡಿಯಲು ಹೋಗಿದ್ದ ವೇಳೆ ವ್ಯಕ್ತಿಯೊ ಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನದ ಸುಮಾರಿಗೆ ನಡೆದಿದೆ.
ಇಲ್ಲಿಯ ಚಿಟ್ಪಾಡಿಯ ನಿವಾಸಿ ತಾರನಾಥ ಶೇರಿಗಾರ (೩೪) ಎಂಬವರೇ ಮೃತಪಟ್ಟವ ರಾಗಿದ್ದು, ಸ್ಥಳೀಯ ಗೆಳೆಯರ ಜೊತೆ ಉದ್ಯಾವರ ಪಿತ್ರೋಡಿಯ ಹೊಳೆಗೆ ಏಡಿ ಹಿಡಿಯಲು ಹೋಗಿದ್ದರು. ಅಲ್ಲಿ ಏಡಿ ಸಿಗದ ಕಾರಣ ಬೇರೊಂದು ಸ್ಥಳಕ್ಕೆ ಕೃಷ್ಣರಾಜ ಪಿತ್ರೋಡಿ, ಕುಮಾರ್ ಸಂಪಿಗೆ ನಗರ, ಲಕ್ಷ್ಮಣ ಪೂಜಾರಿ, ಬಿಜೇಂದ್ರ ಹಾಗೂ ಜೇಮ್ಸ್ ಅವರೊಂದಿಗೆ ನೀರಿಗೆ ಇಳಿದಿದ್ದರು. ಈ ವೇಳೆ ನೀರಿನ ಹೂಳಿನಲ್ಲಿ ಸಿಲುಕಿ ಒದ್ದಾಡಲಾರಂಭಿಸಿದ್ದು, ಕೂಡಲೇ ಅಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಕ್ಷಿಸಿದರೂ ತಾರನಾಥ ಅವರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತ ತಾರನಾಥರು ವುಡ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲದೆ ಚಿಟ್ಪಾಡಿ ವಿಜಯವೀರ ಸಂಘದ ಅಧ್ಯಕ್ಷರಾಗಿ ಕಾರ‍್ಯನಿರ್ವಹಿಸುತ್ತಿದ್ದರು.

ರೌಡಿ ಗುರುಪ್ರಸಾದ್ ಕೊಲೆ: ಐವರು ಪೊಲೀಸರಿಗೆ ಶರಣು?

Posted by JAYAKIRANA Kirana on | 0 comments | Leave a comment...

ಮಂಗಳೂರು: ರೌಡಿ ಗುರುಪ್ರಸಾದ್ ಹತ್ಯೆಗೆ ಸಂಬಂಧಪಟ್ಟಂತೆ ಐವರು ಆರೋ ಪಿಗಳು ನಿನ್ನೆ ಸಂಜೆ ಬಂದರ್ ಠಾಣೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್, ಶೈಲು, ಪ್ರಸಾದ್, ಚರಣ್‌ರಾಜ್ ಮತ್ತು ರಾಜೇಶ್ ಎಂಬವರು ಶರಣಾಗಿದ್ದು ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ನಿರೀಕ್ಷೆ ಇದೆ.
ತನ್ನ ಸ್ನೇಹಿತ ಮಂಜುನಾಥ್ ಕೊಲೆ ಆರೋಪಿಯಾಗಿದ್ದ ರೌಡಿ ಗುರುಪ್ರಸಾದ್ ಸೋಮವಾರ ಮಧ್ಯಾಹ್ನ ಮೈದಾನ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಸತ್ಕಾರ್ ಬಾರ್‌ನಲ್ಲಿ ಸ್ನೇಹಿತನ ಜೊತೆ ಬಂದಿದ್ದ ವೇಳೆ ಐವರ ತಂಡ ಅಟ್ಟಿಸಿಕೊಂಡು ಹೋಗಿತ್ತು. ಜೀವಭಯದಿಂದ ಓಡಿದ್ದ ಗುರುಪ್ರಸಾದ್ ಬೀಬಿ ಅಲಾಬಿ ರಸ್ತೆಯಲ್ಲಿರುವ ಪಂಚಮಹಲ್ ಕಟ್ಟಡದಲ್ಲಿದ್ದ ಜ್ಯೂಸ್ ಅಂಗ ಡಿಗೆ ನುಗ್ಗಿದ್ದ. ಆ ಸಂದರ್ಭ ಆರೋಪಿ ಗಳು ತಲೆ, ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ಕಡಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರುಪ್ರಸಾದ್ ಜ್ಯೂಸ್ ಅಂಗಡಿಯೊಳಗೆ ಮಾಲೀಕ ನವೀನ್‌ಚಂದ್ರ ಅವರ ಎದುರೇ ಪ್ರಾಣ ಬಿಟ್ಟಿದ್ದ. ಕೊಲೆಗೀಡಾದ ಗುರುಪ್ರಸಾದ್ ಹಿಂದೂ ಸಂಘಟನೆಯಲ್ಲಿ ಸಕ್ರಿಯನಾಗಿದ್ದು, ಆತನನ್ನು ಕೊಲೆಗೈದ ಪ್ರದೀಪ್ ಕೂಡ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಹಿಂದೆಯೂ ಗುರುಪ್ರಸಾದ್ ಹತ್ಯೆಗೆ ಯತ್ನ ನಡೆದಿತ್ತು. ಕೃತ್ಯ ನಡೆಸಿದ ಬಳಿಕ ಹಿಂದೂ ಸಂಘಟನೆಯ ಪ್ರಮುಖ ಮುಖಂಡರ ಮಧ್ಯಸ್ಥಿಕೆಯಲ್ಲಿ ಆರೋಪಿಗಳನ್ನು ಪೊಲೀಸರಿಗೆ ಶರಣಾಗಿಸುವ ಪ್ರಯತ್ನ ನಡೆದಿದ್ದು. ಅದು ನಿನ್ನೆಯೇ ನಡೆದಿದೆಯೆನ್ನಲಾಗಿದ್ದರೂ ಈ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಗುರುಪ್ರಸಾದ್‌ನ ಕೊಲೆಯು ಜ್ಯೂಸ್ ಅಂಗಡಿಯೊಳಗಡೆಯೇ ನಡೆದ ಕಾರಣ ಅಂಗಡಿ ಮಾಲೀಕ ನವೀನ್‌ಚಂದ್ರ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಅವರೇ ಪೊಲೀಸರಿಗೆ ಹೇಳಿಕೆಯನ್ನೂ ನೀಡಿದ್ದಾರೆ. ಅದೇ ಆಧಾರದಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಗಳು ಶರಣಾಗತಿಯಾಗಿರುವ ಕಾರಣ ಪೊಲೀಸರ ಕೆಲಸ ಸುಲಭದಲ್ಲಿ ಮುಗಿದಂತಾಗಿದೆ.
ತಲವಾರು ಗುರುಪ್ರಸಾದ್‌ನದ್ದೇ?
ಗುರುಪ್ರಸಾದ್‌ನನ್ನು ಕೊಲೆಗೈದ ಬಳಿಕ ಜ್ಯೂಸ್ ಅಂಗಡಿಯ ಎದುರಿನ ರಸ್ತೆಯಲ್ಲಿ ಒಂದು ತಲವಾರು ಬಿದ್ದಿತ್ತು. ಆದರೆ ಈ ತಲವಾರಿನಲ್ಲಿ ರಕ್ತದ ಕಲೆಯಾಗಲೀ ಅಥವಾ ಕೊಲೈಗೈದ ಬಗ್ಗೆ ಇನ್ಯಾವುದೇ ಪುರಾ ವೆಯೂ ಇರಲಿಲ್ಲ. ಇದನ್ನು ಗಮನಿಸಿದಾಗ ತಲವಾರು ಆರೋಪಿಗಳದ್ದಾಗಿರದೆ ಅದು ಗುರುಪ್ರಸಾದ್ ಬಳಿ ಇದ್ದಿರಬಹುದೆನ್ನುವ ಅನುಮಾನವೂ ವ್ಯಕ್ತವಾಗಿದೆ.

ನಿರೀಕ್ಷಣಾ ಜಾಮೀನಿನೊಂದಿಗೆ ಆರೋಪಿಗಳು ಠಾಣೆಗೆ ಹಾಜರು

Posted by JAYAKIRANA Kirana on | 0 comments | Leave a comment...

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ
ಮಂಗಳೂರು: ಕೊಣಾಜೆ ನಡುಪದವು ಪಿ.ಎ.ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಯಲ್ಲಿ ವಿಲನ್ ಪಾತ್ರ ವಹಿಸಿ ಕೇಸು ಜಡಿಸಿಕೊಂಡು ತಲೆಮರೆಸಿಕೊಂಡಿದ್ದ ಕಾಲೇಜಿನ ಇಬ್ಬರು ಸಿಬ್ಬಂದಿ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದು ನಿನ್ನೆ ಕೊಣಾಜೆ ಠಾಣೆಗೆ ಹಾಜರಾಗಿದ್ದಾರೆ.
ಈ ಕಾಲೇಜಿನ ದ್ವಿತೀಯ ಎಂಜಿನಿ ಯರಿಂಗ್ ವಿದ್ಯಾರ್ಥಿನಿ ಮೆಹನಾಝ್ ಇದೇ ತಿಂಗಳ ೧೦ರಂದು ತಾನು ವಾಸವಿದ್ದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದಕ್ಕೂ ಮುನ್ನ ಕಾಲೇಜಿಗೆ ರಜೆಯಿದ್ದ ಕಾರಣ ಆಕೆ ಗೆಳತಿಯರ ಜೊತೆ ತಿರುಗಾಡಲು ಗೋವಾಕ್ಕೆ ಹೋಗಿದ್ದಳು ಎನ್ನುವ ಕುಂಟು ನೆಪದಲ್ಲಿ ಕ್ಯಾಂಪಸ್ ಡೈರೆಕ್ಟರ್ ಉದಯನ್ ಮತ್ತು ಸ್ಟೂಡೆಂಟ್ ವೆಲ್‌ಫೇರ್‌ನ ಫಾರೂಕ್ ದಿನವಿಡೀ ವಿಚಾರಣೆ ನಡೆಸಿ ಕಿರುಕುಳ ನೀಡಿ ದ್ದಲ್ಲದೆ ಡಿಬಾರ್ ಮಾಡುವ ಬೆದರಿಕೆಯನ್ನೂ ಹಾಕಿದ್ದರು ಎಂದು ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಳು.
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಇತರ ವಿದ್ಯಾರ್ಥಿಗಳು ಅಂದು ರಾತ್ರಿ ಕಾಲೇಜು ಮತ್ತು ಹಾಸ್ಟೆಲ್ ಗಾಜುಗಳನ್ನು ಪುಡಿಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಒತ್ತಾಯಿಸಿದ್ದರು. ಇದೇ ವೇಳೆ ವಿದೇಶದಿಂದ ಬಂದ ವಿದ್ಯಾರ್ಥಿನಿಯ ತಂದೆ ಮಹಮ್ಮದ್ ಆಲಿ ನೀಡಿದ ದೂರಿ ನಂತೆ ಇಬ್ಬರ ಮೇಲೆ ಕೊಣಾಜೆ ಠಾಣೆ ಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿತ್ತು. ಬಂಧನದ ಭೀತಿ ಎದುರಿಸುತ್ತಿದ್ದ ಆರೋ ಪಿಗಳು ತಲೆಮರೆಸಿಕೊಂಡಿದ್ದರಲ್ಲದೆ ನ್ಯಾಯ ವಾದಿಯ ಮೂಲಕ ಹೈಕೋರ್ಟಿನಲ್ಲಿ ನಿರೀ ಕ್ಷಣಾ ಜಾಮೀನು ಪಡೆದು ನಿನ್ನೆ ಠಾಣೆಗೆ ಹಾಜರಾಗಿದ್ದು, ಪೊಲೀಸರು ವಿಚಾರಣೆ ನಡೆಸಿದರು.
ತಪ್ಪೊಪ್ಪಿಕೊಂಡಿದ್ದ ಆಡಳಿತ ಮಂಡಳಿ
ಮೆಹನಾಝ್ ಆತ್ಮಹತ್ಯೆಯ ಬಳಿಕ ವಿದ್ಯಾರ್ಥಿಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಇದರ ಪರಿಣಾಮವಾಗಿ ಘಟನೆ ನಡೆದ ದಿನವೇ ರಾತ್ರಿ ಹಾಸ್ಟೆಲ್ ಮತ್ತು ಕಾಲೇಜಿನ ಗಾಜುಗಳು ಪುಡಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೆಲಸದಿಂದ ವಜಾ ಮಾಡಿದ್ದ ಆಡಳಿತ ಮಂಡಳಿ ನಾಲ್ಕು ದಿನ ಕಾಲೇಜಿಗೆ ರಜೆ ಸಾರಿ ವಿದ್ಯಾರ್ಥಿಗಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿತ್ತು.
ದಿ.೧೬ ಸೋಮವಾರದಂದು ತರಗತಿ ಆರಂಭವಾಗಬೇಕಿತ್ತಾದರೂ ವಿದ್ಯಾರ್ಥಿಗಳು ಪ್ರತಿಭಟನೆಗೆ ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಆಡಳಿತ ಮಂಡಳಿಯ ಕಿವಿಗೆ ಬಿದ್ದು ಮತ್ತೆ ನಾಲ್ಕು ದಿನ ರಜೆಯನ್ನು ಮುಂದೂಡಲಾಗಿತ್ತು. ಕಳೆದ ಬುಧವಾರ ಮಾಜಿ ಮಂತ್ರಿ ಬಿ.ಎ.ಮೊಯಿದ್ದೀನ್, ವೈ.ಅಬ್ದುಲ್ಲಾ ಕುಂಞಿ, ನೇತೃತ್ವದಲ್ಲಿ ಸಭೆ ನಡೆಸಿದ ಆಡಳಿತ ಮಂಡಳಿ ವಿದ್ಯಾರ್ಥಿನಿ ಉತ್ತಮ ನಡವಳಿಕೆ ಹೊಂದಿದ್ದು ಉಪನ್ಯಾಸಕರು ಹಾಗೂ ಸಹಪಾಠಿಗಳೊಂದಿಗೂ ಸ್ನೇಹ ಭಾವನೆ ಹೊಂದಿದ್ದಳು. ಅಕೆ ಯಾವುದೇ ರೀತಿಯ ತಪ್ಪನ್ನೂ ಮಾಡಿರಲಿಲ್ಲ.
ಆದರೆ ಉದಯನ್ ಮತ್ತು ಫಾರೂಕ್ ನೀಡಿದ್ದ ಕಿರುಕುಳ ಆಕೆಯ ಜೀವಕ್ಕೆ ಮುಳುವಾಗಿದ್ದು, ಮುಂದೆ ವಿದ್ಯಾರ್ಥಿಗಳ ಕುಂದು-ಕೊರತೆಗಳಿಗೆ ಸ್ಪಂದಿಸಲು ವಿದ್ಯಾರ್ಥಿ ಪರಿಷತ್ ರಚಿಸುವ ತೀರ್ಮಾನ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಂದು ಕಾಲೇಜು ಮತ್ತೆ ಆರಂಭಗೊಂಡಿತ್ತು. ಕಾಲೇಜು ಸಿಬ್ಬಂದಿಯಿಂದ ಆದ ಪ್ರಮಾದದಿಂದ ಅಮಾಯಕ ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದು, ಈ ಘಟನೆಯನ್ನು ಅರಗಿಸಿಕೊಳ್ಳಲು ಆಕೆಯ ಹೆತ್ತ ವರಿಂದ ಇನ್ನೂ ಸಾಧ್ಯವಾಗಿಲ್ಲ. ಮುಂದೆಂದೂ ಇಂತಹ ಘಟನೆ ಮರುಕಳಿ ಸದಿರಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೈಕೋರ್ಟ್ ಆದೇಶ ತಿರಸ್ಕರಿಸಿದ ಸು.ಕೋರ್ಟ್

Posted by JAYAKIRANA Kirana on | 0 comments | Leave a comment...

ಮತ್ತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಬಿದರಿ?
ಬೆಂಗಳೂರು: ಕಾನೂನು ಹೋರಾಟದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಯಶಸ್ವಿ ಯಾಗಿದ್ದಾರೆ. ಬಿದರಿಯವರ ನೇಮಕ ವನ್ನು ರದ್ದುಪಡಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದ್ದು ಇದರಿಂದ ಮತ್ತೆ ಅವರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗುವ ಸಾಧ್ಯತೆಯಿದೆ.
ರಾಜ್ಯ ಹೈಕೋರ್ಟ್ ಆದೇಶ ವನ್ನು ರದ್ದುಗೊಳಿಸಿ, ತೀರ್ಪು ನೀಡಿ ರುವ ಸುಪ್ರಿಂಕೋರ್ಟ್ ಡಿಜಿಪಿ ಹುದ್ದೆಯ ನೇಮಕಾತಿ ವಿವಾದ ವಿಚಾ ರಣೆಯನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಬಿದರಿಯವರ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೀಡಿರುವ ವರದಿಯ ಸತ್ಯ ಸತ್ಯತೆಯನ್ನು ಪರಿ ಶೀಲಿಸುವಂತೆ ಹೈಕೋರ್ಟ್‌ಗೆ ಸೂಚಿ ಸಿದೆ.
ಡಿಜಿಪಿ ನೇಮಕಾತಿ ವಿವಾದದ ವಿಚಾರಣೆಯನ್ನು ಬರುವ ಮೇ ೩೦ ರ ಒಳಗೆ ಪೂರ್ಣಗೊಳಿಸುವಂತೆ ಸಹ ಸುಪ್ರೀಂಕೋರ್ಟ್ ಆದೇಶಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಯಾರನ್ನಾದರೂ ನೇಮಕ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ್ರಿಂ ಕೋರ್ಟ್ ಮಹತ್ತರ ತೀರ್ಪು ನೀಡಿ, ಬಿದರಿಯವರನ್ನು ಡಿಜಿಪಿಯ ನ್ನಾಗಿ ನೇಮಿಸಿದ್ದ ಸರ್ಕಾರದ ಕ್ರಮ ವನ್ನು ಎತ್ತಿ ಹಿಡಿದಿದೆ.
ರಾಜ್ಯ ಪೊಲೀಸ್ ಮಹಾನಿರ್ದೇ ಶಕರಾಗಿ ಸೇವಾ ಹಿರಿತನ ಹೊಂದಿದ ತಮ್ಮನ್ನು ಕಡೆಗಣಿಸಿ ಶಂಕರ್ ಬಿದರಿ ಅವರನ್ನು ನೇಮಕ ಮಾಡಿರುವುದು ಸರಿ ಅಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿ ಎ.ಆರ್. ಇನ್‌ಫೆಂಟ್ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗಿದ್ದರು.
ಸಿಎಟಿಯು ಎ.ಆರ್.ಇನ್‌ಫೆಂಟ್ ರವರ ಅರ್ಜಿ ಪುರಸ್ಕರಿಸಿ, ಬಿದರಿ ನೇಮಕ ರದ್ದು ಮಾಡಿ ಎ.ಆರ್. ಇನ್‌ಫೆಂಟ್‌ರವರನ್ನು ಡಿಜಿಪಿಯನ್ನಾಗಿ ನೇಮಕ ಮಾಡುವಂತೆ ಆದೇಶಿಸಿತ್ತು. ಸಿಎಟಿ ಆದೇಶ ಪ್ರಶ್ನಿಸಿ, ರಾಜ್ಯ ಸರ್ಕಾರ ಹೈಕೋರ್ಟ್ ಮೊರೆ ಹೋಗಿತ್ತಾದರೂ ಹೈಕೋರ್ಟ್ ಕಳೆದ ಮಾರ್ಚ್ ೨೯ ರಂದು ಸಿಎಟಿ ಆದೇಶವನ್ನು ಎತ್ತಿಹಿಡಿದು ಇನ್‌ಫೆಂಟ್‌ರವರನ್ನು ಡಿಜಿಪಿಯ ನ್ನಾಗಿಸುವಂತೆ ತೀರ್ಪು ನೀಡಿತ್ತು. ಅದರಂತೆ ಎ.ಆರ್. ಇನ್‌ಫೆಂಟ್ ರಾಜ್ಯದ ಡಿಜಿಪಿಯಾದರು.
ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮ ನವಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿ ಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ ರದ್ದುಗೊಳಿಸಿ ತೀರ್ಪು ನೀಡಿದೆ.

ಕೇಶವಿನ್ಯಾಸ ಕೋರ್ಸ್ ಆರಂಭಕ್ಕೆ ಚಿಂತನೆ ಅಗತ್ಯ: ಡಾ|ಮೋಹನ್ ಆಳ್ವ

Posted by JAYAKIRANA Kirana on | 0 comments | Leave a comment...


ವೃತ್ತಿಯಲ್ಲಿ ಆವಿಷ್ಕಾರ, ಬದಲಾವಣೆಗಳು ಅತಿಅಗತ್ಯ. ಅದರ ಪ್ರಯೋಜನವನ್ನು ಇತರ ಜಾತಿಯವರಿಗಿಂತ ಮೂಲ ಜಾತಿಯವರೇ ಮುಖ್ಯವಾಗಿ ಪಡೆದು ಕೊಳ್ಳಬೇಕು. ಇದರಿಂದ ಆ ಸಮುದಾಯದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗ ಳಲ್ಲಿ ಕೇಶವಿನ್ಯಾಸ ಕೋರ್ಸ್ ಆರಂಭಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯದ ಹಿರಿಯರು ಈ ಬಗ್ಗೆ ಚಿಂತನೆ ಮಾಡಬೇಕೆಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದ್ದಾರೆ.
ವಿಶ್ವ ಭಂಡಾರಿ ಸಮಾಜ ಸಂಘಟನೆಗಳ ಒಕ್ಕೂಟವಾಗಿರುವ ಭಂಡಾರಿ ಮಹಾ ಮಂಡಲದ ವತಿಯಿಂದ ಅಂಬಲಪಾಡಿಯಲ್ಲಿ ಮಂಗಳವಾರ ಆಯೋ ಜಿಸಲಾದ ಕೇಶವಿನ್ಯಾಸ- ಸೌಂದರ್ಯ ವಿಶೇಷ ತರಬೇತಿ ಕಾರ್ಯಾಗಾರ ಮತ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ವೃತ್ತಿಯಲ್ಲಿ ಆವಿಷ್ಕಾರ, ಬದಲಾವಣೆಗಳು ಅತಿ ಅಗತ್ಯ. ಅದರ ಪ್ರಯೋಜನ ವನ್ನು ಇತರ ಜಾತಿಯವರಿಗಿಂತ ಮೂಲಜಾತಿಯವರೇ ಮುಖ್ಯವಾಗಿ ಪಡೆದು ಕೊಳ್ಳಬೇಕು. ಇದರಿಂದ ಆ ಸಮುದಾಯದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮಹಾಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ವಹಿಸಿದ್ದರು. ಮುಂಬಯಿ ಬಾಗ್ವಾಡಿ ಮೊಗವೀರ ಮಹಾಜನಸಂಘದ ಅಧ್ಯಕ್ಷ ಸುರೇಶ್ ಕಾಂಚನ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಪುರು ಷೋತ್ತಮ ಶೆಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯ ಕೇಶವಿನ್ಯಾಸಕಾರ ಕೆ. ಶಿವರಾಮ ಭಂಡಾರಿ, ಬನ್ನಂಜೆ ಗೋವಿಂದ ಭಂಡಾರಿ, ದಿನೇಶ್ ಕುಮಾರ್, ವಿಜಯ ಭಂಡಾರಿ ಉಪಸ್ಥಿತರಿದ್ದರು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹಠಾತ್ ಭೇಟಿ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿ.ಪಂ.
ಮುಲ್ಕಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರಿಲ್ಲ, ಕುಡಿಯುವ ನೀರಿಲ್ಲ ಶುಚಿತ್ವದ ಸಮಸ್ಯೆ ಮುಂತಾದ ದೂರಿಗೆ ತಕ್ಷಣ ಸ್ಪಂದಿಸಿ ಜಿಲ್ಲಾಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್ ಮಂಗಳವಾರ ಮುಂಜಾನೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ರಾತ್ರಿ ಪಾಳ್ಯದಲ್ಲಿ ವೈದ್ಯರಿಲ್ಲದೆ ಸಮಸ್ಯೆಗಳಾಗುತ್ತಿ. ಒಂದು ವಾರದಿಂದ ಬೆಡ್ ಶೀಟ್ ಬದಲಾಯಿ ಸಿಲ್ಲ. ಶೌಚಾಲಯಗಳು ದುರ್ನಾತ ಬೀರುತ್ತಿದೆ, ಇಲ್ಲಿ ಕುಡಿಯಲು ನೀರಿಲ್ಲದೆ ಹೊರಗಿನಿಂದ ಬಾಟ್ಲಿ ನೀರು ತರುತಿ ದ್ದೇವೆ ಎಂದು ರೋಗಿಗಿಳು ಈಶ್ವರ್ ರವರಲ್ಲಿ ದೂರಿದರು. ಈ ಬಗ್ಗೆ ವಿಚಾರಿ ಸಿದಾಗ ರಾತ್ರಿ ಪಾಳಿಯಲ್ಲಿ ಕೇವಲ ಎರಡು ನರ್ಸ್‌ಗಳು ಕಾಲ್ ಮಾಡಿ ವೈದ್ಯರನ್ನು ಕರೆಸುತ್ತಾರೆ ಎಂಬ ಉತ್ತರ ಬಂದಿತು.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಲೇರಿಯ ಹಾವಳಿ ಹೆಚ್ಚಿದ್ದು ಕಳೆದ ತಿಂಗಳು ಏಳು ಜನ ಹಾಗು ಈ ತಿಂಗಳಲ್ಲಿ ಇಷ್ಟರವರೆಗೆ ೨೦ ಜನ ಅಡ್ಮಿಟ್ ಆಗಿದ್ದು ಹೆಚ್ಚಿನವರು ಹೊರ ಜಿಲ್ಲೆಯ ಕಾರ್ಮಿಕರಾಗಿದ್ದು ಇವರೆಲ್ಲ ಮುಲ್ಕಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣದ ಕಾರ್ಮಿಕರು ಎಂದು ಡ್ಯೂಟಿ ನರ್ಸ್ ತಿಳಿಸಿದರು.
ಸ್ಥಳೀಯ ಆರೋಗ್ಯ ಸಮಿತಿ ನಿಷ್ಕ್ರೀಯವಾಗಿದ್ದು ನೂತನ ಸಮಿತಿ ನಿರ್ಮಾಣಕ್ಕೆ ಸ್ಥಳೀಯರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಔಷಧ ಕಳ್ಳ ಸಾಗಣೆ

Posted by JAYAKIRANA Kirana on | 1 comments | Leave a comment...






ಸಿಬ್ಬಂದಿ ತೆರದಿಟ್ಟ ರಹಸ್ಯ
ಮಂಗಳೂರು: ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್‌ನಲ್ಲಿ ಔಷಧ ಅವ್ಯವಹಾರವೊಂದು ವ್ಯವಸ್ಥಿತವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬಡವರಿಗೆ ವಿತರಿಸಲೆಂದು ಬರುವ ಔಷಧಗಳು ಗೋಡಾನ್‌ನಿಂದ ವಿತರಣಾ ವಿಭಾಗಕ್ಕೆ ಬಂದು ಬಳಿಕ ಅಲ್ಲಿಂದ ನೇರವಾಗಿ ಸಿಬ್ಬಂದಿ ಕವಾಟು ಸೇರುತ್ತಿದೆ. ಇದನ್ನು ಸಿಬ್ಬಂದಿ ಅರ್ಧ ಬೆಲೆಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
ಕಳೆದ ಕೆಲ ಸಮಯದಿಂದ ಈ ಕಳ್ಳ ವ್ಯವಹಾರ ನಡೆಯುತ್ತಿದ್ದು ಇತ್ತಿಚೆಗೆ ಸಿಬ್ಬಂದಿ ನಡುವೆ ಹುಟ್ಟಿಕೊಂಡ ಆಂತರಿಕ ಕಚ್ಚಾಟದಿಂದಾಗಿ ಈ ವಿಚಾರ ಬಹಿರಂಗಗೊಂಡಿದೆ.
ರೋಗಿಗಳ ಹೆಸರಿನಲ್ಲಿ, ರೋಗಿಗಳ ನಕಲಿ ಹೆಸರಿನಲ್ಲಿ, ಒಪಿಗೆ ವಿತರಣೆ ಎಂದೆಲ್ಲ ದಾಖಲೆಗಳನ್ನು ಬರೆದು ಔಷಧ ಪಡೆಯುತ್ತಿರುವ ಸಿಬ್ಬಂದಿ ಅದನ್ನು ಆಸ್ಪತ್ರೆ ಹೊರಗೆ ಅರ್ಧ ರೇಟಿಗೆ ಮಾರಾಟ ಮಾಡುತ್ತಿದ್ದಾರೆ. ಈ ದಂಧೆಯಲ್ಲಿ ಆಸ್ಪತ್ರೆಯ ಕೆಲ ನರ್ಸ್‌ಗಳೂ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಅವಧಿ ಮುಕ್ತಾಯವಾದ ಔಷಧವನ್ನು ಆಸ್ಪತ್ರೆ ಆವರಣದ ಹೊರ ಭಾಗದಲ್ಲಿ ಸುಡುವ ಪ್ರಯತ್ನ ನಡೆಸಿದಾಗ ಸಿಕ್ಕಿ ಬಿದ್ದ ಔಷಧ ಉಗ್ರಾಣದ ಸಿಬ್ಬಂದಿಯೊಬ್ಬರು ಬಳಿಕ ಅದನ್ನು ತನ್ನ ಮನೆಗೆ ಸಾಗಿಸಿ ಅಲ್ಲಿ ಈ ಔಷಧಗಳಿಗೆ ಇತಿಶ್ರೀ ಹಾಡುತ್ತಿದ್ದಾರೆಂದು ತಿಳಿದು ಬಂದಿದೆ.
ಸರಕಾರಿ ಆಸ್ಪತ್ರೆಗೆ ಅಗತ್ಯವಿರುವ ಔಷಧಗಳು ಆಸ್ಪತ್ರೆಯ ಬೇಡಿಕೆಯನ್ನು ಆಧರಿಸಿ ಸರಕಾರದಿಂದ ಪೂರೈಕೆಯಾಗುತ್ತಿದೆ. ಆದರೆ ಇಲ್ಲಿನ ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿನ ಔಷಧಗಳನ್ನು ತರಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಸರಕಾರದಿಂದ ಆಸ್ಪತ್ರೆಯ ಔಷಧ ಉಗ್ರಾಣಕ್ಕೆ ಸ್ಟಾಕ್ ಬರುತ್ತಿದ್ದು ಅಲ್ಲಿ ಔಷಧ ಇಂಡೆಕ್ಸ್‌ನಲ್ಲಿ ನಮೂದುಗೊಂಡ ಬಳಿಕ ವಿತರಣಾ ವಿಭಾಗಕ್ಕೆ ದಾಸ್ತಾನುಗೊಳ್ಳುತ್ತದೆ. ಇಲ್ಲಿಂದ ಔಷಧ ವಿತರಣಾ ಕೊಠಡಿ (ಒಪಿ)ಗೆ ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ವೈದ್ಯರು ಸೂಚಿಸಿದ ಔಷಧವನ್ನು ನೀಡಲಾಗುತ್ತದೆ. ಆದರೆ ಅವ್ಯವಹಾರದ ಕೊಂಡಿ ಆರಂಭವಾಗುವುದು ಇಲ್ಲಿಂದಲೇ. ಒಂದು ಕಡೆ ದಾಖಲಾಗದ ರೋಗಿಗಳ ಹೆಸರಿನಲ್ಲಿ ಔಷಧಗಳು ಡೆಲಿವರಿ ಆಗುತ್ತದೆ. ಇನ್ನೊಂದು ಕಡೆ ರೋಗಿಗೆ ಅಗತ್ಯ ಇಲ್ಲದೆ ಇರುವ ಔಷಧವನ್ನು ಅಗತ್ಯ ಇದೆ ಎಂದು ನಿರೂಪಿಸಿ ಸಿಬ್ಬಂದಿಯೇ ಔಷಧವನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಪಡೆದ ಔಷಧಗಳು ಹೊರಗಡೆ ಅರ್ಧ ಬೆಲೆಗೆ ಮಾರಾಟವಾಗುತ್ತಿದೆ. ಸರಕಾರದಿಂದ ವಿತರಣೆಯಾಗುವ ಔಷಧದ ಪ್ಯಾಕ್ ಮೇಲೆ ‘ಮಾರಾಟಕ್ಕಲ್ಲ ಎಂಬ ಸೀಲ್ ಇರಬೇಕಾಗುತ್ತದೆ ಆದರೆ ದುಬಾರಿ ಔಷಧಗಳ ಮೇಲೆ ಈ ಸೀಲ್ ಇರುವುದಿಲ್ಲ ಇದು ಸಿಬ್ಬಂದಿಗೆ ವರದಾನವಾಗಿ ಪರಿಣಮಿಸಿದೆ. ಹೀಗಾಗಿ ಔಷಧ ಕಳ್ಳ ಸಾಗಾಣಿಕೆಯಾಗುತ್ತಿದೆ ಬೆಲೆ ಬಾಳುವ ಔಷಧಗಳನ್ನು ಮುಂಚಿತವಾಗಿಯೇ ತೆಗೆದಿಡುವ ಸಿಬ್ಬಂದಿ ಅಗತ್ಯ ಇರುವವರನ್ನು ಸೆಟಿಂಗ್ ಮಾಡಿಕೊಂಡು ಅವರಿಗೆ ಅರ್ಧ ಬೆಲೆಗೆ ಈ ಔಷಧವನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಔಷಧಗಳು ಮಾರಾಟವಾಗದೇ ಉಳಿಯುತ್ತಿದ್ದು ಅಂತಹ ಸಂದರ್ಭ ಬಂದರೆ ಅದನ್ನು ಮತ್ತೆ ಔಷಧ ಕೊಠಡಿಯಲ್ಲಿ ಇಡಲು ಸಾಧ್ಯಗುವುದಿಲ್ಲ ಯಾಕೆಂದರೆ ಇಂಡೆಕ್ಸ್‌ನಲ್ಲಿ ಈ ಔಷಧ ಡೆಲಿವರಿಡ್ ಎಂದು ದಾಖಲಾಗಿರುತ್ತದೆ. ಈ ಕಾರಣ ಇವುಗಳಿಗೆ ಬೆಂಕಿ ಹಚ್ಚುತ್ತಾರೆ ಎನ್ನುವುದನ್ನು ಸಿಬ್ಬಂದಿಯೇ ಬಹಿರಂಗ ಪಡಿಸಿದ್ದಾರೆ. ಇಲ್ಲಿನ ಕೆಲ ಸಿಬ್ಬಂದಿ ಜೊತೆ ಅವರ ಸ್ನೇಹಿತರೇ ಭಾಗಿಗಳಾಗಿದ್ದಾರೆ. ಈ ಕಳ್ಳ ವ್ಯವಹಾರ ಔಷಧ ಉಗ್ರಾಣದ ಸಮೀಪವೇ ನಡೆಯುತ್ತಿದ್ದರೂ ಯಾರ ಗಮನಕ್ಕೂ ಬರುತ್ತಿಲ್ಲ. ಒಪಿಯಲ್ಲಿ ಸ್ಟಾಕ್ ಇಲ್ಲ ಎನ್ನುವ ಔಷಧಗಳು ಅರ್ಧ ಬೆಲೆಗೆ ಉಗ್ರಾಣದ ಹೊರಗೆ ಸಿಗುತ್ತದೆ.
ಇಷ್ಟೆಲ್ಲ ಅಲ್ಲದೆ ವೆನ್ಲಾಕ್ ಆಸ್ಪತ್ರೆಯ ಔಷಧ ಉಗ್ರಾಣ, ಒಪಿ ಇವೆಲ್ಲ ತೆರೆಯುವುದು ಪ್ರತಿದಿನಾ ಅರ್ಧ ತಾಸು ವಿಳಂಬವಾಗಿಯೇ ರೋಗಿಗಳು ಅಗತ್ಯದ ಔಷಧಿಗಾಗಿ ಸಿಬ್ಬಂದಿಯನ್ನು ತಾಸುಗಟ್ಟಲೇ ಕಾಯುವ ಅನಿವಾರ್ಯತೆಯೀ ಇಲ್ಲಿದೆ. ಊಟಕ್ಕೆಂದು ಹೋಗುವ ಸಿಬ್ಬಂದಿ ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿರುವುದು ಕಂಡು ಬಂದಿದೆ.
ವೆನ್ಲಾಕ್‌ನಲ್ಲಿ ಇಷ್ಟೆಲ್ಲ ಅವ್ಯವಹಾರ ನಡೆಯುತ್ತಿದ್ದರೂ ಇಲ್ಲಿನ ಆರ್‌ಎಂಒ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಶಂಕೆಗೆ ಕಾರಣವಾಗಿದೆ.

Posted by JAYAKIRANA Kirana on | 0 comments | Leave a comment...

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ೮ನೇ ಧ್ವೈವಾರ್ಷಿಕ ಸಮ್ಮೇಳನವು ಮಂಗಳೂರಿನ ಕೋಡಿಯಾಲ್ ಬೈಲಿನಲ್ಲಿರುವ ಸಿಬಿಓಓ ಕೇಂದ್ರದಲ್ಲಿ ಜರಗಿತು. ೪೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವೀಕ್ಷಕರು ದೇಶದ ಮೂಲೆ ಮೂಲೆಗಳಿಂದ ಆಗಮಿಸಿ, ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Posted by JAYAKIRANA Kirana on | 0 comments | Leave a comment...

ಲಯನ್ ಮತ್ತು ಲಯನೆಸ್ ಕ್ಲಬ್, ಮಂಗಳೂರು ಹೈಲ್ಯಾಂಡ್ ಇವರ ವತಿಯಿಂದ ಹಮ್ಮಿಕೊಂಡ ಜಿಲ್ಲಾ ರಾಜ್ಯಪಾಲ ಲಯನ್ ಪಿ.ಕಿಶೋರ್ ರಾವ್‌ರವರ ಕ್ಲಬ್ ಸಂದರ್ಶನ ಕಾರ್ಯಕ್ರಮದಲ್ಲಿ ‘ಸಿಂಹ ಸಿಂಚನ’ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ರಾಜ್ಯಪಾಲ ಲಯನ್ ಪಿ.ಕಿಶೋರ್‌ರಾವ್, ಝೋನ್ ಚೇರ್‌ಮೆನ್ ಲಯನ್ ಜೀವನ್‌ದಾಸ್ ಶೆಟ್ಟಿ, ಯಂ.ಜೆ.ಎಫ್ ಲಯನ್ ಕೆ.ಹರ್ಷಕುಮಾರ್ ಕೇದಿಗೆ, ಕ್ಲಬ್ ಅಧ್ಯಕ್ಷ ಲಯನ್ ಯತೀಂದ್ರ ಶೆಟ್ಟಿ, ಲಯನೆಸ್ ಮಲ್ಲಿಕಾ ರಾವ್, ಬುಲೆಟೆನಿನ ಮುಖ್ಯ ಸಂಪಾದಕ ಲಯನ್ ಎಂ.ಎಸ್.ರಾವ್, ಕಾರ್ಯದರ್ಶಿ ಲಯನ್ ಪಿ.ಜೆ.ರಮೇಶ್ ಉಪಸ್ಥಿತರಿದ್ದರು.

Posted by JAYAKIRANA Kirana on | 0 comments | Leave a comment...










ತುಂಬೆಯಿಂದ ಮಂಗಳೂರಿಗೆ ನೀರು ಸರಬರಾಜು ಮಾಡುತ್ತಿದ್ದ ಮುಖ್ಯ ಪೈಪ್‌ಲೈನ್ ಪಂಪ್‌ವೆಲ್ ಬಳಿ ಬಿರುಕು ಬಿಟ್ಟ ಪರಿಣಾಮ ಕಾರಂಜಿಯಂತೆ ಚಿಮ್ಮಿದ ನೀರು ವಾಹನ ಸವಾರರಿಗೆ ಸಂಕಷ್ಟವನ್ನು ಉಂಟು ಮಾಡಿತು, ತಾಸು ಗಟ್ಟಲೇ ರಸ್ತೆ ತಡೆ ಉಂಟಾಗಿದ್ದು, ತುಂಬೆಯಲ್ಲೇ ನೀರು ಸರಬರಾಜು ಸ್ಥಗಿತಗೊಳಿಸಿ ಪೈಪ್ ದುರಸ್ಥ್ಥಿ ಮಾಡಲಾಯಿತು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)