ಇಂದು ಮುಂಜಾನೆ ಬೆಳಕಿಗೆ ಬಂದ ಘಟನೆ
ಕಾರ್ಕಳ: ಇಲ್ಲಿಗೆ ಸಮೀಪದ ನಿಟ್ಟೆ-ಕಲಂಪಾಡಿಪದವು ಎಂಬಲ್ಲಿ ಯುವಕನನ್ನು ತಲವಾರಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ನಿನ್ನೆ ರಾತ್ರಿ ಸಂಭವಿಸಿದ್ದು, ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಪದವು ನಿವಾಸಿ ತಿಮ್ಮಪ್ಪ ಮೂಲ್ಯ ಎಂಬವರ ಪುತ್ರ ಸಂದೀಪ್ ಕುಮಾರ್(೨೯) ಎಂದು ಹೆಸರಿಸಲಾಗಿದೆ. ಈತನ ಮೃತದೇಹ ಕಲಂಪಾಡಿಪದವು ಶಾಲೆ ಸಮೀಪದ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ. ಮೃತದೇಹದ ಮುಖ, ಎದೆ, ಕತ್ತಿನ ಭಾಗಕ್ಕೆ ತಲವಾರು ಮತ್ತಿತರ ಆಯುಧದಿಂದ ಬಲವಾಗಿ ಕಡಿದ ಗುರುತುಗಳಿವೆ. ನಿನ್ನೆ ಇಲ್ಲಿಗೆ ಸಮೀಪದ ಲಲಿತಾ ಶೆಡ್ತಿ ಎಂಬವರ ಮನೆಯಲ್ಲಿ ಮದರಂಗಿ ಕಾರ್ಯಕ್ರಮ ನಡೆಯುತ್ತಿತ್ತು. ಕೆಲಸದಿಂದ ಮನೆಗೆ ಬಂದಿದ್ದ ಸಂದೀಪ್ ರಾತ್ರಿ ಎಂಟೂವರೆಯ ಸುಮಾರಿಗೆ ‘ಮದರಂಗಿಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದು, ತಡರಾತ್ರಿಯಾದರೂ ವಾಪಸ್ ಬಂದಿರಲಿಲ್ಲ ಎನ್ನಲಾಗಿದೆ. ಇಂದು ಬೆಳಗ್ಗೆ ಬಸ್ ತಂಗುದಾಣದಲ್ಲಿ ಮೃತದೇಹವಿರುವುದನ್ನು ಕಂಡ ಸ್ಥಳೀಯರು ಸಂದೀಪ್ ತಮ್ಮನಿಗೆ ವಿಚಾರ ತಿಳಿಸಿದ್ದು, ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಮದರಂಗಿ ಕಾರ್ಯಕ್ರಮದಲ್ಲಿ ಪರಿಚಿತರ ನಡುವೆ ನಡೆದಿರಬಹುದಾದ ಜಗಳವೇ ಸಂದೀಪನ ಕೊಲೆಯಲ್ಲಿ ಅಂತ್ಯ ಕಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು, ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಡಿವೈಎಸ್‌ಪಿ ಜಯಂತ ಶೆಟ್ಟಿ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ. ದುಷ್ಕರ್ಮಿಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಂದೀಪ್ ಮನೆಮಂದಿ, ಮದರಂಗಿಗೆ ತೆರಳಿದ್ದ ಸ್ಥಳೀಯ ಯುವಕರ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
Tagged with
cnews
ಮಂಗಳೂರು: ಕೊಪ್ಪದಲ್ಲಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಉಡುಪಿ ಮತ್ತು ಮಂಗಳೂರಿನ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಪಾಂಡೇಶ್ವರ ಠಾಣೆಯ ಸುನೀಲ್ ಮತ್ತು ಉಡುಪಿ ಡಿಸಿಐಬಿಯ ನಾಗ ಭೂಷಣ್ ಎಂಬವರೇ ಬಂಧಿತ ವಂಚಕ ಪೊಲೀಸರಾಗಿದ್ದಾರೆ. ಇವರಿಬ್ಬರು ಹನೀಫ್ ಎಂಬಾತನಿಗೆ ಚಿನ್ನಾಭರಣಗಳನ್ನು ಕೊಟ್ಟು ಅದನ್ನು ಕೊಪ್ಪದ ಶೇಟ್ ಒಬ್ಬನಿಗೆ ೨.೩೦ಲಕ್ಷ ರೂಪಾಯಿಗೆ ಮಾರಾಟ ಮಾಡಲು ಹೇಳಿದ್ದರು. ಈ ಹನೀಫ್ ಕೂಡ ವಂಚಕನಾದ ಕಾರಣ ಅದನ್ನು ಶೇಟ್‌ಗೆ ಮಾರಾಟ ಮಾಡಿ ಹಣ ಪಡೆದಿದ್ದಾನೆ. ಆದರೆ ಈ ಆಭರಣದ ನೈಜ ಬೆಲೆ ಇದಕ್ಕಿಂತಲೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ತದನಂತರ ತಾವು ಪೊಲೀಸರೆಂದು ಹೇಳಿಕೊಂಡು ಹೋದ ಆರೋಪಿ ಗಳಿಬ್ಬರು ‘ಅದು ಕದ್ದ ಆಭರಣ, ಅದನ್ನು ನಿನಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಅದನ್ನು ನಮಗೆ ಒಪ್ಪಿಸು ಎಂದು ಶೇಟ್‌ನನ್ನು ಬೆದರಿಸಿದ್ದಾರೆ ಎನ್ನಲಾಗಿದೆ. ಆದರೆ ಇವರ ವರ್ತನೆಯಿಂದ ಅನುಮಾನಗೊಂಡ ಶೇಟ್ ಕೊಪ್ಪದ ಪೊಲೀಸರಿಗೆ ಮಾಹಿತಿ ನೀಡಿದಾಗ ಇವರ ನಿಜ ಬಣ್ಣ ಬಯಲಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಕೊಪ್ಪ ಪೊಲೀಸರು ಆರೋಪಿ ಗಳಿಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
Tagged with
cnews
ಸುಳ್ಯ: ಅರಂತೋಡು ಗ್ರಾಮದ ಕೊಡಂಕೇರಿ ಕೇಪಣ್ಣ ಗೌಡರ ಪುತ್ರಿ ಮಾಲಾಕ್ಷಿ(೨೦) ಗುರುವಾರದಿಂದ ನಾಪತ್ತೆಯಾಗಿರುವುದಾಗಿ ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಇಲ್ಲಿನ ಕಾಲೇಜೊಂದರಲ್ಲಿ ಮೇಲ್ವಿ ಚಾರಕಿಯಾಗಿ ಕೆಲಸ ಮಾಡುತ್ತಿರುವ ಮಾಲಾಕ್ಷಿ ಜಟ್ಟಿಳ್ಳದಲ್ಲಿರುವ ಅತ್ತೆಯ ಮನೆಗೆ ಹೋಗುವುದಾಗಿ ತಿಳಿಸಿದ್ದು, ಬಳಿಕ ನಾಪತ್ತೆಯಾಗಿದ್ದಾಳೆ. ಆಕೆಯ ನೆರೆಮನೆಯ ಚೇತನ್ ಎಂಬ ಯುವ ಕನ ಜೊತೆ ಈಕೆ ಹೋಗಿರಬೇಕೆಂದು ಶಂಕಿಸಲಾಗಿದೆ.
ನಾಪತ್ತೆಗಳ ಸರಣಿ: ಸುಳ್ಯ ಠಾಣೆ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ೪ ಯುವತಿಯರು ೧ ಮಗು ಸೇರಿದಂತೆ ಒಟ್ಟು ೭ ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ಮೂವರು ಪತ್ತೆಯಾಗಿದ್ದಾರೆ.
Tagged with
cnews,
missing
ಕಾಸರಗೋಡು: ಚಕ್ರ ಹೂತು ಹೋದ ಜೀಪನ್ನು ತಳ್ಳಲು ನೆರವಾಗಲಿ ಲ್ಲವೆಂಬ ಕಾರಣಕ್ಕೆ ಕೂಲಿ ಕಾರ್ಮಿಕ ನಿಗೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ.
ಮಂಜೇಶ್ವರದ ಅಂಗಡಿಪದವು ನಿವಾಸಿ ಪೂವಪ್ಪ ಮೂಲ್ಯರ ಪುತ್ರ ಬಿ.ಎಂ. ವಿಶ್ವನಾಥ(೪೩) ಗಾಯಗೊಂ ಡಿದ್ದು, ಉಪ್ಪಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕರಾದ ತಾವು ಅಂಗಡಿಪದವಿ ನಲ್ಲಿ ಕೆಲಸ ನಿರತರಾಗಿದ್ದಾಗ ಐದು ಮಂದಿಯ ತಂಡ ಜೀಪಿನಲ್ಲಿ ಈ ಪ್ರದೇಶಕ್ಕೆ ಬಂದಿತ್ತು. ಕೆಸರಿನಲ್ಲಿ ಜೀಪಿನ ಚಕ್ರ ಹೂತು ಹೋದ ಪರಿಣಾಮ ಜೀಪು ಸ್ಥಗಿತವಾಯಿತು. ಈ ವೇಳೆ ತನ್ನ ಜತೆಗಿದ್ದ ಕಾರ್ಮಿಕರು ಜೀಪನ್ನು ದೂಡಿ ಮೇಲಕ್ಕೆತ್ತುವಲ್ಲಿ ಸಹಕರಿಸಿ ದರಾದರೂ, ತಾನು ತೆರಳಲಿಲ್ಲವೆಂಬ ದ್ವೇಷದಿಂದ ತನ್ನ ಬಳಿಗೆ ಬಂದ ಜೀಪಿನಲ್ಲಿದ್ದ ತಂಡ ಹಲ್ಲೆಗೈದರೆಂದು ಗಾಯಾಳು ದೂರಿದ್ದಾರೆ.
ಈ ಬಗ್ಗೆ ವಿಶ್ವನಾಥ ಅವರ ದೂರಿನನುಸಾರ ಅನಿಲ್ ಹಾಗೂ ಇತರ ನಾಲ್ವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
Tagged with
cnews
ಪುತ್ತೂರು: ತಾಲೂಕಿನ ಕೊಳ್ತಿಗೆ ಗ್ರಾಮದ ಬಾಯಂಬಾಡಿ ಎಂಬಲ್ಲಿ ಗೇರು ತೋಪಿನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು ೮೫ ಕೆಜಿ ಗೇರು ಬೀಜ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಸೋಮ ವಾರ ಬಂಧಿಸಿದ್ದಾರೆ. ಕೊಳ್ತಿಗೆ ಗ್ರಾಮದ ಕೆಳಗಿನ ಕೊಳ್ತಿಗೆ ನಿವಾಸಿ ಚಿದಾನಂದ ರೈ, ಪೆರ್ಲಂ ಪಾಡಿ ನಿವಾಸಿ ದಿನೇಶ್ ಬಂಧಿತರು. ಇನ್ನೋರ್ವ ಆರೋಪಿ ಪೆರ್ಲಂಪಾಡಿ ನಿವಾಸಿ ಹರೀಶ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಅಪರಿಚಿತ ಮೃತ್ಯು: ಅನಾರೋಗ್ಯದಿಂದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಂತೂರಿನಲ್ಲಿ ನಡೆದಿದೆ. ಅಂದಾಜು ೩೫ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ನಂತೂರಿನ ಕೋಡ್ದಬ್ಬು ದೈವಸ್ಥಾನದ ಬಳಿ ಬಿದ್ದುಕೊಂಡಿರುತ್ತಿದ್ದು, ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Tagged with
cnews
ರಿಯಾದ್: ತನಗೆ ಆಟಿಕೆ ತಂದು ಕೊಡದ ತಂದೆಯನ್ನು ನಾಲ್ಕೂವರೆ ವರ್ಷ ಪ್ರಾಯದ ಮಗುವೊಂದು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂದ ಆಘಾತಕಾರಿ ಘಟನೆಯೊಂದು ರಿಯಾದ್‌ನಲ್ಲಿ ಸಂಭವಿಸಿದೆ ಎಂದು ಸೌದಿಯ ಅರೇಬಿಯಾದ ಆಶಾರ್ಕ್ ಡೈಲಿ ಪತ್ರಿಕೆಯು ವರದಿ ಮಾಡಿದೆ.
ರಿಯಾದ್‌ನ ದಕ್ಷಿಣ ಜಿಝನ್ ಪ್ರದೇಶ ದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂಬು ದಾಗಿ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.
Tagged with
cnews
ಮಂಗಳೂರು: ಅಪಘಾತ ದಿಂದಾಗಿ ಗಾಯಗೊಂಡಿದ್ದ ದೇರಳ ಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಕಳೆದ ೨೧ ವರ್ಷಗಳಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದ್ರನಾಥ ಶೆಟ್ಟಿ ನೆತ್ತಿಲ ಕೋಡಿ(೪೮) ಅವರು ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ನೆತ್ತಿಲಕೋಡಿಯ ರವೀಂದ್ರನಾಥ ಶೆಟ್ಟಿ ಅವರು ಕೆಲವು ದಿನಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದರು. ಈ ಗಾಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದ ಅವರು ನೇರ ನಡೆನುಡಿ, ಸರಳ, ಸಜ್ಜನರಾಗಿದ್ದು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಹೆಸರು ಸಂಪಾದಿಸಿದ್ದರು.
Tagged with
cnews
ಮಂಗಳೂರು: ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ತುತ್ತಾಗಿದ್ದ ಯುವಕ ಮೃತಪಟ್ಟ ಘಟನೆ ಮುಳ್ಳೇರಿಯ ಸಮೀಪದ ಕಾರಡ್ಕ-ಪೆರಿಯಡ್ಕ ಎಂಬಲ್ಲಿ ನಡೆದಿದೆ. ಮೃತನನ್ನು ಎಂ.ಎ.ಮೊಹಮ್ಮದ್ ಕುಂಞ(೨೫) ಎಂದು ಹೆಸರಿಸಲಾಗಿದೆ. ಇವರು ಎಂಡೋ ದುಷ್ಪರಿಣಾಮಕ್ಕೆ ತುತ್ತಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ.
Tagged with
cnews
ಮಂಗಳೂರು: ಆಸಿಡ್ ಎರಚುವ ಬೆದರಿಕೆಯೊಡ್ಡಿದ ಆರೋಪಿಯ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯ ಕುಮಾರ್ ರಾಯ್ಕರ್ ಎಂಬಾತ ಮೂರುಕೈ ನಿವಾಸಿ ಸಂತೋಷ್ ಎಂಬಾತನಿಗೆ ಆಸಿಡ್ ಎರಚುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
Tagged with
cnews
ಮಂಗಳೂರು: ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಬ್ಬಿಣವನ್ನು ನಿಗದಿತ ವ್ಯಕ್ತಿಗೆ ಪೂರೈಕೆ ಮಾಡದೆ ವಂಚನೆಯೆಸಗಿದ ಆರೋಪದ ಮೇಲೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತನನ್ನು ಕಣ್ಣೂರಿನ ನೌಶಾದ್ ಎಂದು ಹೆಸರಿಸಲಾಗಿದೆ. ಈತನ ಬಳಿಯಿಂದ ಐದೂವರೆ ಟನ್ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ನೌಶಾದ್ ಕಬ್ಬಿಣವನ್ನು ಫರಂಗಿಪೇಟೆಯಲ್ಲಿ ಇಳಿಸಬೇಕಿದ್ದು, ಅಲ್ಲಿ ಇಳಿಸದೆ ಕಣ್ಣೂರಿಗೆ ಕೊಂಡೊಯ್ದು ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಸಲಾಗಿದೆ.
Tagged with
cnews
ಮೂಡಬಿದ್ರೆ: ಬೋರುಗುಡ್ಡೆಯ ಮಹಿಳೆ ಪ್ರೇಮಾ ಅವರ ಕೊಲೆ ಪ್ರಕರ ಣದ ಕುರಿತು ಈವರೆಗೆ ಯಾವುದೇ ಮಾಹಿತಿ ಅಲಭ್ಯವಾಗಿದ್ದು, ಹಲವರನ್ನು ಮೂಡಬಿದ್ರೆ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿ ದ್ದಾರೆಂದು ತಿಳಿದುಬಂದಿದೆ.
ಏ.೨೧ರ ಶನಿವಾರ ರಾತ್ರ್ರಿ ಪ್ರೇಮಾ ಅವರ ಕೊಲೆಯಾಗಿತ್ತು. ಸಂಪೂರ್ಣ ನಗ್ನಸ್ಥಿತಿಯಲ್ಲಿ ಶವ ಪತ್ತೆಯಾಗಿರುವು ದರಿಂದ ಮತ್ತು ಆಕೆಯ ಬಟ್ಟೆ ಬರೆ ಇನ್ನೊಂದು ಕಡೆಯಲ್ಲಿದ್ದ ಕಾರಣ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರಬೇಕೆಂದು ಶಂಕಿಸಲಾಗಿದೆ. ಆ ರಾತ್ರ್ರಿ ಬೋರುಗುಡ್ಡೆಯಲ್ಲಿ ವಾರ್ಷಿ ಕೋತ್ಸವಿದ್ದ ಕಾರಣ ಯಾರೋ ಕುಡಿದ ಮತ್ತಿನಲ್ಲಿ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ. ಕುಟುಂಬ ಕಲಹದ ಸಂಶಯದಲ್ಲಿ ಮೊದಲು ಪ್ರೇಮಳ ಗಂಡ ನಾಗಪ್ಪ ಹಾಗೂ ಮಗ ಜಯಕರ ಮತ್ತು ಮಗಳು ಪ್ರಿಯತಮನೆನ್ನಲಾದ ಧರೆಗುಡ್ಡೆಯ ರಮೇಶ ಎನ್ನುವನನ್ನು ವಿಚಾರಣೆಗೊ ಳಪಡಿಸಿದ್ದರು. ಇದೀಗ ಅತ್ಯಾಚಾರ ನಡೆಸಿ ಕೊಲೆಗೈದಿರಬೇ ಕೆಂಬ ಸಂಶಯದಿಂದ ಹಲವರನ್ನು ವಿಚಾರಣೆಗೊಳಪಡಿಸಿ ದ್ದಾರೆಂದು ತಿಳಿದುಬಂದಿದೆ.
Tagged with
cnews
ಮಂಗಳೂರು: ನಗರದ ಎಂಜಿ ರಸ್ತೆಯ ಎಂಪಾಯರ್ ಮಾಲ್ ಎದುರು ಸೋಮವಾರ ಸಂಜೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಉರ್ವ ವೈಷ್ಣವಿ ಕಾಲೇಜಿನ ವಿದ್ಯಾರ್ಥಿ ವೈಶಾಕ್ ಭಂಡಾರಿ ಗಾಯಗೊಂಡವರಾಗಿದ್ದು, ಘಟನೆಗೆ ಮ್ಯಾನ್‌ಹೋಲ್ ಕಿತ್ತುಹೋಗಿದ್ದೇ ಕಾರಣವೆನ್ನಲಾಗಿದೆ. ಪಿವಿಎಸ್‌ನಿಂದ ಬಳ್ಳಾಲ್‌ಭಾಗ್ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್‌ಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಡಿಕ್ಕಿಯಾದ ರಭಸಕ್ಕೆ ಬೈಕ್ ಬಸ್ಸಿನಡಿಯಲ್ಲಿ ಸಿಲುಕಿದ್ದು, ಬೈಕ್‌ನ್ನು ಸುಮಾರು ೧೦ ಮೀಟರ್‌ವರೆಗೆ ಎಳೆದುಕೊಂಡು ಹೋಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆಯಲ್ಪಟ್ಟ ಕಾರಣ ವೈಶಾಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಉರ್ವಾಸ್ಟೋರ್: ನೇಣು ಬಿಗಿದು ಆತ್ಮಹತ್ಯೆ : ನಗರದ ಉರ್ವಾಸ್ಟೋರ್ ರೇಡಿಯೋಗುಡ್ಡೆ ನಿವಾಸಿ ರಾಮಚಂದ್ರ(೫೮) ಎಂಬವರು ಮನೆಯ ಶೆಡ್‌ನಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ.
Tagged with
cnews
ಮಂಗಳೂರು: ಸುರತ್ಕಲ್ ಎನ್‌ಐಟಿಕೆ ಹಾಸ್ಟೆಲ್‌ನ ಹಿಂಭಾಗದಲ್ಲಿರುವ ಎ-೧ ಪ್ರಿಂಟ್ ಎಂಬ
ರೆಡಿಮೇಡ್ ಬಟ್ಟೆ ಅಂಗಡಿಗೆ ದಾಳಿ ನಡೆಸಿದ ಸುರತ್ಕಲ್ ಪೊಲೀಸರು ನಕಲಿ ಸ್ಟಿಕ್ಕರ್
ಪ್ರಿಂಟ್ ಮಾಡಿ ಶರ್ಟ್‌ಗಳಿಗೆ ಅಂಟಿಸಿದ್ದ ಸುಮಾರು ೪೦೦ ಶರ್ಟ್‌ಗಳನ್ನು ವಶಕ್ಕೆ
ತೆಗೆದುಕೊಂಡಿದ್ದಾರೆ. ಅಂಗಡಿ ಮಾಲಿಕ ರಮೇಶ್ ಶೆಟ್ಟಿ ಎಂಬವರ ಮೇಲೆ ಪ್ರಕರಣ
ದಾಖಲಿಸಿಕೊಳ್ಳಲಾಗಿದ್ದು, ಈತ ಪ್ರಖ್ಯಾತ ಕಂಪೆನಿಗಳ ಸ್ಟಿಕ್ಕರ್‌ಗಳನ್ನು ಶರ್ಟ್‌ಗಳಿಗೆ
ಅಂಟಿಸಿ ವಂಚನೆ ಮಾಡುತ್ತಿದ್ದ ಬಗ್ಗೆ ಪೀಟರ್ ಇಂಗ್ಲೆಂಡ್ ಸಂಸ್ಥೆಯ ಕೈಲಾಸ್‌ತಿವಾರಿ
ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
Tagged with
cnews
‘ಕೊಡಗಿನ ವೀರ ಅಪ್ಪಣ್ಣ ಮಾರಕ ಬೌಲಿಂಗ್; ಡಿವಿಲಿಯರ‍್ಸ್ ಅಬ್ಬರ
ಜೈಪುರ್: ಎಬಿ ಡಿವಿಲಿಯರ‍್ಸ್ ಬ್ಯಾಟಿಂಗ್ ಪ್ರದರ್ಶಿಸಿದ ಸ್ಫೋಟಕ ಆಟ ಹಾಗೂ ಬೌಲಿಂಗ್‌ನಲ್ಲಿ ಕೊಡಗಿನ ವೀರಪುತ್ರ ಕೆ.ಪಿ. ಅಪ್ಪಣ್ಣ ನಡೆಸಿದ ಮಾರಕ ದಾಳಿಯ ನೆರವಿನಿಂದ ಇಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಬೆಂಗಳೂರು ೪೬ ರನ್‌ಗಳಿಂದ ತನ್ನದಾಗಿಸಿಕೊಂಡಿದೆ. ಈ ಮೂಲಕ ಆರ್‌ಸಿಬಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಇದೇ ವೇಳೆ ಡಿವಿಲಿಯರ‍್ಸ್ ತನಗೆ ಲಭಿಸಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಪ್ಪಣ್ಣಗೆ ನೀಡಿ ಹೃದಯವೈಶಾಲ್ಯ ಮೆರೆದರು.
ಟಾಸ್ ಗೆದ್ದರೂ ಬೆಂಗಳೂರಿಗೆ ಬ್ಯಾಟ್ ನಡೆಸಲು ಅನುವು ಮಾಡಿಕೊಡುವ ರಾಜಸ್ಥಾನ್ ನಾಯಕ ರಾಹುಲ್ ದ್ರಾವಿಡ್ ನಿರ್ಧಾರ ತಲೆಕೆಳಗಾದವು. ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭಿಕ ಹಂತದಲ್ಲಿ ರನ್ ಬರ ಎದುರಿಸಿದ್ದರೂ ಅಂತಿಮ ಹಂತದಲ್ಲಿ ಡಿವಿಲಿಯರ‍್ಸ್ ಹಾಗೂ ತಿಲಕರತ್ನೆ ದಿಲ್ಶಾನ್ ಪ್ರದರ್ಶಿಸಿದ ಅಬ್ಬರದ ಜೊತೆಯಾಟವು ತಂಡಕ್ಕೆ ಆಧಾರವಾಯಿತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ೫೦ ಎಸೆತಗಳಲ್ಲಿ ಅಜೇಯ ೧೨೨ ರನ್‌ಗಳನ್ನು ಕಲೆಹಾಕಿದ ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೧೮೯ ರನ್‌ಗಳ ಭರ್ಜರಿ ಮೊತ್ತವನ್ನು ಪೇರಿಸಿತು. ಅದರಲ್ಲೂ ಡಿವಿಲಿಯರ‍್ಸ್ ಕೇವಲ ೨೩ ಎಸೆತಗಳಲ್ಲಿ ಅಜೇಯ ೫೯ ರನ್ ಸಿಡಿಸಿದ್ದು, ಇದರಲ್ಲಿ ಐದು ಸಿಕ್ಸ್ ಹಾಗೂ ಮೂರು ಬೌಂಡರಿಗಳು ಒಳಗೊಂಡಿತ್ತು. ದಿಲ್ಶಾನ್ (೭೬) ಕೂಡ ಆಕರ್ಷಕ ಅರ್ಧಶತಕ ಸಿಡಿಸಿದರು.
ಗುರಿ ಬೆನ್ನತ್ತಿದ್ದ ರಾಜಸ್ಥಾನಕ್ಕೆ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೪೩ ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡಕ್ಕೆ ಮೊದಲು ಆರಂಭಿಕರಾದ ರಹಾನೆ ಹಾಗೂ ದ್ರಾವಿಡ್ ಉತ್ತಮ ಆರಂಭ ಒದಗಿಸಿಕೊಟ್ಟರೂ ನಂತರ ಅಪ್ಪಣ್ಣ ದಾಳಿಗೆ ಉತ್ತರ ಕೊಡಲು ತಂಡ ವಿಫಲವಾಯಿತು. ಅಪ್ಪಣ್ಣ (೧೩)ಗೆ ರಹಾಣೆ ಪ್ರಥಮ ಬಲಿಯಾಗಿ ನಿರ್ಗಮಿಸಿದರೆ ದೊಡ್ಡ ಹೊಡೆತಕ್ಕೆ ಕೈಹಾಕಿ ಒವೈಸ್ ಶಾ (೧೦) ಕೂಡ ಔಟಾದರು. ಇದು ಪಂದ್ಯಕ್ಕೆ ತಿರುವು ನೀಡಿತು. ಗೋಸ್ವಾಮಿ (೧) ಕೂಡ ಅದೇ ಓವರ್‌ನಲ್ಲಿ ನಿರ್ಗಮಿಸಿದರು. ಆದರೆ ನಾಯಕ ದ್ರಾವಿಡ್ (೫೮) ಮಾತ್ರ ಇನ್ನೊಂದು ಕಡೆಯಲ್ಲಿ ಕ್ರೀಸ್‌ಗೆ ಅಂಟಿಕೊಂಡು ಅರ್ಧಶತಕ ಸಿಡಿಸಿದಾಗ ಆರ್‌ಸಿಬಿ ಆಘಾತ. ಆದರೂ ಅಪ್ಪಣ್ಣ ಎದುರು ‘ ದಿ ವಾಲ್ ಆಟ ನಡೆಯಲಿಲ್ಲ. ಆದರೆ ಸ್ಫೋಟಕ ಬ್ರಾಡ್ ಹಾಡ್ಜ್ (೧೦) ನಿರ್ಗಮಿಸುವುದರೊಂದಿಗೆ ಆರ್‌ಆರ್ ಗೆಲುವಿನ ಆಸೆ ನುಚ್ಚುನೂರಾಯಿತು. ಬಿನ್ನಿ ಅಜೇಯ ೨೦ ರನ್ ಗಳಿಸಿದರು. ಆರ್‌ಸಿಬಿ ಪರ ಕೆ.ಪಿ ಅಪ್ಪಣ್ಣ ೧೯ ರನ್‌ಗೆ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ಆರಂಭಿಕರಾಗಿ ಕೊಹ್ಲಿ (೧೬) ಹಾಗೂ ಅಗರ್‌ವಾಲ್ (೧೫) ಕಣಕ್ಕಿಳಿದಿದ್ದು, ವಿಫಲವಾಯಿತು. ಆದರೆ ಗೇಲ್ (೪) ಕೂಡ ವಿಫಲವಾಗಿದ್ದು, ತಂಡಕ್ಕೆ ಆತಂಕವಾಗಿತ್ತು. ಒಂದು ಹಂತದಲ್ಲಿ ತಂಡ ೧೪.೧ ಓವರ್‌ಗಳಲ್ಲಿ ಕೇವಲ ೧೦೦ ರನ್ ಗಳಿಸಿದ್ದು, ನಂತರದ ೩೫ ಎಸೆತಗಳಲ್ಲಿ ಬರೊಬ್ಬರಿ ೮೯ ರನ್ ದೋಚಿದ್ದು, ಆರ್‌ಸಿಬಿ ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾಗಿತ್ತು. ಆರ್‌ಆರ್ ಪರ ಹಾಗ್ ಎರಡು ವಿಕೆಟ್ ಪಡೆದರು.
Tagged with
tnews
ಉಡುಪಿ: ಅಲೆವೂರು ನೆಹರೂ ಸ್ಪೋಟ್ಸ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯ ದಿ.ಕೆ. ಪರಮೇಶ್ವರ ಹೆಬ್ಬಾರ್ ಸ್ಮಾರಕ ಎನ್.ಎಸ್.ಸಿ.ಎ. ಟ್ರೋಫಿಯನ್ನು ಫ್ರೆಂಡ್ಸ್ ಸರ್ಕಲ್ ಗುಡ್ಡೆಯಂಗಡಿ ಗೆದ್ದುಕೊಂಡಿತು. ದ್ವಿತೀಯ ಸ್ಥಾನಕ್ಕೆ ಕಾರ್ಕಳದ ಸಾಂಚಿ ತೃಪ್ತಿಪಟ್ಟುಕೊಂಡಿತು.
ವಿಜೇತ ತಂಡಗಳಿಗೆ ಜಿ.ಪಂ. ಸದಸ್ಯ ದಿವಾಕರ್ ಕುಂದರ್ ಪ್ರಶಸ್ತಿ ಯನ್ನು ವಿತರಿಸಿದರು. ಮುಖ್ಯ ಅತಿಥಿ ಗಳಾಗಿ ತಾಲೂಕು ಪಂ. ಸದಸ್ಯರಾದ ಪ್ರವೀಣ್ ಶೆಟ್ಟಿ, ಗಿರೀಶ್ ಕುಮಾರ್, ವಿ೪ ಡೆವಲಪರ‍್ಸ್ ಮಾಲಕ ಕಾರ್ತಿಕ್ ಶೆಟ್ಟಿ, ಲಕ್ಷ್ಮಿನಾರಾಯಣ ಪ್ರಭು ಕೊಡಿ ಬೆಟ್ಟು, ಕಾರ್ಕಳ ಪುರಸಭೆಯ ಸದಸ್ಯ ರಾದ ಶುಭೋದ್ ರಾವ್, ಅಲೆ ವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಯ ಅಧ್ಯಕ್ಷ ಗೋಪಾಲ್, ದೈಹಿಕ ಶಿಕ್ಷಕ ಭಾಸ್ಕರ, ನೆಹರೂ ಸ್ಪೋಟ್ಸ್ ಕಲ್ಚರಲ್ ಸಮಿತಿಯ ಗೌರವಾಧ್ಯಕ್ಷ ಸಂಜೀವ ಸೇರಿಗಾರ, ಅಧ್ಯಕ್ಷ ಜಯ ಸೇರಿಗಾರ, ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಕ್ರೀಡಾ ಕಾರ್ಯದರ್ಶಿಗಳಾದ ಶ್ರೀಧರ ಪೂಜಾರಿ, ರಾಕೇಶ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಪ್ರಶಾಂತ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರೆ ಕೋಶಾಧಿಕಾರಿ ಸತೀಶ್ ಪೂಜಾರಿ ಧನ್ಯವಾದವಿತ್ತರು.
Tagged with
lnews,
tnews,
udupi
ಲಾಹೋರ್: ಮುಂದೆ ನಡೆಯ ಲಿದ್ದ ಪಾಕಿಸ್ತಾನ ಪ್ರವಾಸವನ್ನು ಮುಂದೂಡಿದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ನಿರ್ಧಾರಕ್ಕೆ ಪಾಕ್ ಕೋಚ್ ಡೇವ್ ವಾಟ್ಮೊರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕಳೆದ ಎರಡು ತಿಂಗಳಿನಿಂದ ಪಾಕ್‌ನಲ್ಲಿದ್ದು, ಇಲ್ಲಿ ಯಾವುದೇ ಭದ್ರತಾ ಸಂಬಂಧಿ ಲೋಪವಿಲ್ಲ ಎಂದು ವಾಟ್ಮೊರ್ ತಿಳಿಸಿದ್ದಾರೆ. ಈ ಹಿಂದೆ ಏಕದಿನ ಹಾಗೂ ಟಿ-ಟ್ವೆಂಟಿಯಲ್ಲಿ ಪಾಲ್ಗೊಳ್ಳಲು ಪಾಕ್‌ಗೆ ಆಗಮಿಸಲು ಬಾಂಗ್ಲಾ ಒಪ್ಪಿ ಕೊಂಡಿತ್ತು. ಆದರೆ ನಂತರ ಪಾಕ್‌ನಲ್ಲಿ ಭದ್ರತಾ ಸಮಸ್ಯೆಯನ್ನು ಮನಗಂಡ ಬಾಂಗ್ಲಾ ಹೈಕೋರ್ಟ್ ಪ್ರವಾಸಕ್ಕೆ ತಡೆಯೊಡ್ಡಿತ್ತು.
ಪಾಕ್‌ನಲ್ಲಿರುವ ಪ್ರತೀ ಕ್ರಿಕೆಟ್ ಪ್ರೇಮಿಯಂತೆ ನನಗೆ ಕೂಡ ಬಾಂಗ್ಲಾದ ಈ ನಿರ್ಧಾರವು ನಿರಾಶೆ ತಂದಿದೆ. ಈ ಸಂಬಂಧ ನಾವು ತಂಡವನ್ನು ಆಯ್ಕೆಮಾಡುವ ಅಂತಿಮ ಹಂತದ ಲ್ಲಿದ್ದೆವು. ಆದರೆ ಬಾಂಗ್ಲಾ ಸರಣಿಯನ್ನು ಮುಂದೂಡಿದ್ದು, ಅಚ್ಚರಿ ತಂದಿದೆ. ನಾನು ಶ್ರೀಲಂಕಾದಲ್ಲಿದ್ದ ಜಯಿಸಿದ್ದಾಗ ಅಲ್ಲಿ ನಾಗರಿಕ ಕಲಹಗಳು ನಡೆಯು ತ್ತಲೇ ಇತ್ತು.
Tagged with
tnews
ದೆಹಲಿ: ಮುಂದೆ ನಡೆಯಲಿರುವ ಯೋನೆಕ್ಸ್ ಸನ್‌ರೈಸ್ ಇಂಡಿಯಾ ಓಪನ್‌ನತ್ತ ದೃಷ್ಟಿ ಹರಿಸಿರುವ ವಿಶ್ವದ ಐದನೇ ಶ್ರೇಯಾಂಕದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೆಚ್ಚಿನ ಶ್ರಮ ವಹಿಸಲು ಸಿದ್ದತೆ ನಡೆಸಿದ್ದಾರೆ. ಕೆಲವೊಮ್ಮೆ ನನ್ನ ಸ್ಟ್ರೋಕ್‌ಗಳನ್ನೇ ಮರೆತುಬಿಡುವ ಕಾರಣ ಹೆಚ್ಚಿನ ಪ್ರಾಕ್ಟೀಸ್ ಅತ್ಯಗತ್ಯ ಎಂದು ಸೈನಾ ತಿಳಿಸಿದ್ದಾರೆ.
ಹೆಚ್ಚಿನ ಸಮಯದಲ್ಲಿ ನನ್ನ ಸ್ವಂತ ಆಟವನ್ನೇ ಆಡಲು ನಾನು ವಿಫಲವಾಗುತ್ತೇನೆ. ಹಾಗಾಗಿ ದಿನನಿತ್ಯದ ಪ್ರಾಕ್ಟೀಸ್ ನಡೆಸುವುದು ಅಗತ್ಯವಾಗಿದೆ. ಹೆಚ್ಚಿನ ಆಟಗಾರ್ತಿಯರು ಮಣಿಗಟ್ಟಿನಲ್ಲಿ ಉತ್ತಮ ಆಟವನ್ನು ನೀಡುತ್ತಾರೆ. ಅವರಿಗೆ ಹೋಲಿಸಿದರೆ ನಾನು ಆ ರೀತಿಯ ಗೇಮ್‌ನಲ್ಲಿ ಸಾಕಷ್ಟು ನಿಪುಣಿಯಲ್ಲ. ಮುಂಬರುವ ಇಂಡಿಯನ್ ಓಪನ್ ಜಯಿಸು ವುದು ನನ್ನ ಮಟ್ಟಿಗೆ ಅಗತ್ಯವಾಗಿದೆ. ಯಾಕೆಂದರೆ ಇದು ಮುಂದಿನ ಲಂಡನ್ ಒಲಿಂಪಿಕ್ಸ್‌ನಲ್ಲಿ ನನಗೆ ಹೆಚ್ಚಿನ ಆತ್ಮವಿಶ್ವಾಸ ವನ್ನು ತಂದುಕೊಡಲಿದೆ. ಅದೂ ಅಲ್ಲದೆ ಇಂಡೋನೇಶ್ಯಾ ಹಾಗೂ ಸಿಂಗಾಪೂರ್ ಓಪನ್‌ನಲ್ಲೂ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಸೈನಾ ತಿಳಿಸಿದರು.
Tagged with
tnews
ಫುಟ್ಬಾಲ್: ಪಿಎಫ್‌ಎ ಪ್ರಶಸ್ತಿ ಪ್ರಕಟ
ಆರ್ಸೆನಾಲ್: ಹಾಲೆಂಡ್ ತಂಡದ ಹಾಗೂ ಆರ್ಸೆನಾಲ್ ಕ್ಲಬ್ ಪರ ಆಡುವ ವಿಶ್ವದ ಪ್ರಖ್ಯಾತ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ರಾಬಿನ್ ವೆನ್ ಪರ್ಸಿ ಪ್ರತಿಷ್ಠಿತ ಇಂಗ್ಲಿಷ್ ವೃತ್ತಿಪರ ಫುಟ್ಬಾಲ್ ಸಮಿತಿ (ಪಿಎಫ್‌ಎ) ಕೊಡಮಾಡುವ ‘ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪರ್ಸಿ ಪ್ರಸಕ್ತ ಋತುವಿನಲ್ಲಿ ಸದ್ಯ ೨೭ ಗೋಲುಗಳನ್ನು ದಾಖಲಿಸಿ ದ್ದಾರೆ. ಇನ್ನು ಟೊಟ್ಯಾಮ್ ಹಾಟ್‌ಸ್ಪರ್‌ನ ಕಾಯ್ ವಾಕರ್ ವರ್ಷದ ಯುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.
ಇಂಗ್ಲಿಷ್ ಪ್ರಿಮಿಯರ್ ಲೀಗ್ (ಇಪಿಎಲ್)ನಲ್ಲಿ ಆರ್ಸೆನಾಲ್ ಕಳಪೆ ಆರಂಭ ಪಡೆದಿದ್ದರೂ ಸದ್ಯ ಮೂರನೇ ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರ್ಸಿ ಈ ಪ್ರಶಸ್ತಿಗೆ ಸಹಜವಾಗಿಯೇ ಪಾತ್ರರಾಗಿದ್ದಾರೆ. ತಂಡ ಲೀಗ್‌ನಲ್ಲಿ ಇನ್ನೂ ಮೂರು ಪಂದ್ಯಗಳನ್ನು ಆಡಲಿದೆ. ಬೇರೆಯವರು ನನ್ನ ಆಟವನ್ನು ಹೊಗಲುವುದಕ್ಕಿಂತ ನನಗೆ ವಿರೋಧಿಗಳು ಈ ಮಾತನ್ನು ಆಡಿದಾಗ ಹೆಚ್ಚು ವಿಶೇಷವೆನಿಸುತ್ತದೆ. ಅಲ್ಲದೆ ನಾನೊಬ್ಬ ಉತ್ತಮ ಆಟಗಾರ ಎಂದು ಅವರು ಹೇಳಿದರೆ ಅದಕ್ಕಿಂತ ಅದ್ಭುತವಾದದ್ದು, ಮತ್ತೊಂದಿಲ್ಲ ಎಂದು ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪರ್ಸಿ ತಿಳಿಸಿದರು. ಈ ಸಾಧನೆ ಮಾಡಿದ ಹಾಲೆಂಡ್‌ನ ಮೂರನೇ ಆಟಗಾರನಾಗಿ ಕೂಡ ಪರ್ಸಿ ಭಾಗಿಯಾಗಿದ್ದು, ಈ ಹಿಂದೆ ಡೆನಿಸ್ ಬರ‍್ಗ್‌ಕಾಂಪ್ (೧೯೯೭-೯೮) ಹಾಗೂ ರುಡ್ ವೆನ್ ನಿಷ್ಟೆಲ್‌ರೂಯ್ (೨೦೦೧-೦೨) ಈ ಪ್ರಶಸ್ತಿಯನ್ನು ಪಡೆದಿದ್ದರು.
Tagged with
tnews
ಸ್ಥಳೀಯಾಡಳಿತಗಳ ಮೇಲೆ ಶಾಸಕರ ಸವಾರಿ ಆರೋಪ
ಸುಳ್ಯ: ಸ್ಥಳೀಯಾಡಳಿತ ಸಂಸ್ಥೆಗಳ ಮೇಲೆ ಶಾಸಕರು ಸವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ಸುಳ್ಯ ತಾ. ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಗ್ರಾ. ಪಂ.ಗಳು ಇಂದು ಕೇವಲ ಕಟ್ಟಡ ಮತ್ತು ಸಿಬ್ಬಂದಿಗೆ ಮಾತ್ರ ಮೀಸಲಾಗಿವೆ ಹೊರತು, ಇಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳೂ ನಡೆಯುತ್ತಿಲ್ಲ. ಅವುಗಳಿಗೆ ಅನುದಾನವನ್ನೂ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಸದಸ್ಯರ ಗೌರವಧನ ಹೆಚ್ಚಳ ಮಾಡಿದ್ದರೂ ಅದು ಕೇಂದ್ರ ಸರ್ಕಾರ ನಿಡುವ ೧೩ನೇ ಹಣಕಾಸು ನಿಧಿಯ ಅನುದಾನದಿಂದ ಬಳಸಿಕೊಳ್ಳಲು ಶಿಫಾರಸು ನೀಡಲಾಗಿದೆ. ಆದರೆ ವಾಸ್ತವವಾಗಿ ಅದನ್ನು ಯೋಜನೇತರ ವೆಚ್ಚಗಳಿಗೆ ಬಳಸಿಕೊಳ್ಳುವ ಅವಕಾಶವಿಲ್ಲ. ಇದು ನೀಚತನ, ಕಾನೂನಿಗೆ ವಿರುದ್ಧವಾದುದು ಎಂದು ಕೇಂದ್ರ ಸರಕಾರದ ಪಂಚಾಯತ್ ರಾಜ್ ಯೋಜನೆಗಳ ರಾಜ್ಯ ಉಸ್ತುವಾರಿ ಸಮಿತಿ ಸದಸ್ಯ, ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಆರೋಪಿಸಿದರು.
ರಾಜ್ಯದಲ್ಲಿ ಸ್ಥಿರ ಸರ್ಕಾರ ಇಲ್ಲದೇ ಇರುವುದರಿಂದ ಸರಿಯಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮೇ ೩೧ರ ಮುನ್ನ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನು ಪೂರ್ಣಗೊಳಿಸುವಂತೆ ಸ್ವತಃ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ, ಅಧಿಕಾರಿಗಳೇ ಉಡಾಫೆ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿರುವುದು ಸೋಮಾರಿ ಅಧಿಕಾರಿಗಳಿಗೆ ವರವಾಗಿ ಪರಿಣಮಿಸಿದೆ ಎಂದವರು ಹೇಳಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಒಂದು ರಾಜಕೀಯ ಪಕ್ಷದ ಅಧಿಕಾರಿಯಗಿ ಕೆಲಸ ಮಾಡುತ್ತಿರುವ ಬಗ್ಗೆ ದೂರಿದೆ. ಅವರು ಅದನ್ನು ತಿದ್ದಿಕೊಳ್ಳದಿದ್ದಲ್ಲಿ, ಅವರನ್ನು ಅವರ ಕಚೇರಿ ಕುರ್ಚಿಯಿಂದ ಎಳೆದು ಹಾಕುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಒಕ್ಕೂಟದ ಅಧ್ಯಕ್ಷ ಜಿ.ಕೆ.ಹಮೀದ್, ಶಿವರಾಮ ರೈ, ಗೋಕುಲ್‌ದಾಸ್, ರಾಧಾಕೃಷ್ಣ ಪರಿವರಕಾನ, ಧನಂಜಯ ಅಡ್ಪಂಗಾಯ, ಅನಿಲ್ ರೈ ಮಾತನಾಡಿದರು.
ವರ್ಗಾವಣೆ ಹಣ ಮಾಡುವ ದಂಧೆ: ಸರ್ಕಾರಿ ಅಧಿಕಾರಿಗಳನ್ನು ಆಗಾಗ ವರ್ಗಾವಣೆ ಮಾಡುವುದು. ಚುನಾವಣೆಗೆ ಹಣ ಮಾಡುವ ದಂಧೆ ಎಂದು ಭರತ್ ಮುಂಡೋಡಿ ಆರೋಪಿಸಿದರು. ಮೂರು ತಿಂಗಳಿಗೊಮ್ಮೆ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳ ವರ್ಗಾವಣೆಯಾಗುತ್ತಿದೆ. ವರ್ಗಾವಣೆ ಹೆಸರಲ್ಲಿ ಚುನಾವಣೆಗೆ ಹಣ ಸಂಗ್ರಹಿಸುವ ಕೆಲಸ ನಡೆಯುತ್ತದೆ ಎಂದವರು ಆರೋಪಿಸಿದರು.
Tagged with
dk,
lnews
ಕಾರ್ಕಳ: ಇಲ್ಲಿಗೆ ಸಮೀಪದ ತೆಳ್ಳಾರು ಎಂಬಲ್ಲಿ ಭಿನ್ನಕೋಮಿನ ಯುವಕನ ಮನೆಯಲ್ಲಿ ಬೆಳಗಾವಿಯ ಹಿಂದೂ ಯುವತಿಯರಿಬ್ಬರ ಜೊತೆಗೆ ವೃದ್ಧೆಯೊಬ್ಬಳು ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತೆಳ್ಳಾರು ರೈಸ್ ಮಿಲ್ ಬಳಿಯ ಮನೆಯೊಂದರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಟಿಂಬರ್ ಲಾರಿ ಚಾಲಕನಾಗಿರುವ ಆಸೀಫ್(೨೧) ಎಂಬಾತ ಕಳೆದ ಕೆಲ ದಿನಗಳ ಹಿಂದೆ ಇಬ್ಬರು ಯುವತಿಯರು ಹಾಗೂ ವೃದ್ಧೆಯೊಬ್ಬಳನ್ನು ಮನೆಗೆ ಕರೆದುಕೊಂಡು ಬಂದಿದ್ದನೆಂದು ತಿಳಿದುಬಂದಿದೆ. ಅವರಲ್ಲಿದ್ದ ರೂಪ ಎಂಬಾಕೆಯನ್ನು ವಿವಾಹವಾಗುವುದೆಂದು ಆಸೀಫ್ ಹೇಳಿಕೊಂಡಿದ್ದನಾದರೂ, ಸ್ಥಳೀಯ ಮಸೀದಿಯಲ್ಲಿ ಅದಕ್ಕೆ ಅವಕಾಶ ನೀಡಿರಲಿಲ್ಲವೆಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಕೆಲ ದಿನಗಳ ತನಕ ಆಸೀಫ್ ಹಾಗೂ ಮೂವರು ಸ್ಥಳೀಯವಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ತೆಳ್ಳಾರಿಗೆ ವಕ್ಕರಿಸಿರುವ ಆಸೀಫ್‌ನ ಮನೆಯಲ್ಲಿ ಯುವತಿಯರಿಬ್ಬರು ಹಾಗೂ ವೃದ್ಧೆ ಕಾಣಿಸಿ ಕೊಂಡಿದ್ದಾರೆಂದು ಸ್ಥಳೀಯ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಇವರು ಬೆಳಗಾವಿಯ ರೂಪ, ಆಕೆಯ ತಾಯಿ ಹಾಗೂ ಅಕ್ಕನ ಮಗಳು ಎಂದು ತಿಳಿದು ಬಂದಿದೆ. ಆಸೀಫ್ ಪ್ರೇಮಿಸಿ ರೂಪಾಳನ್ನು ವಿವಾಹವಾಗಿದ್ದಲ್ಲಿ ಆಕೆಯೊಬ್ಬಳು ಮಾತ್ರ ಆತನ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂ ತರವಾಗುತ್ತಿದ್ದಳೆಂಬುವುದು ಸ್ಥಳೀಯರ ವಾದ. ಇತರ ಧರ್ಮದ ಯುವತಿಯರನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಆಗಲಿ, ಅನೈತಿಕ ವ್ಯವಹಾರ ನಡೆಸುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗುತ್ತದೆ ಎಂಬ ಅಭಿಪ್ರಾಯ ಸ್ಥಳೀಯ ಮುಸ್ಲಿಮರದ್ದು.
ಆ ಯುವತಿಯರನ್ನು ಈಗ ಮುಂಬೈಗೆ ಕರೆದುಕೊಂಡು ಹೋಗಿರುವ ಹಿನ್ನೆಲೆಯಾದರೂ ಏನು? ಅನೈತಿಕ ದಂಧೆಯ ಕೂಪಕ್ಕೆ ತಳ್ಳುವ ಉದ್ದೇಶವೇ ಎಂಬುದರ ಬಗ್ಗೆ ಸಮಗ್ರ ರೀತಿಯಲ್ಲಿ ತನಿಖೆ ನಡೆಸಬೇಕಾದ ಜವಾಬ್ದಾರಿ ಗ್ರಾಮಾಂತರ ಪೊಲೀಸರದ್ದು ಎನ್ನುತ್ತಾರೆ ಸ್ಥಳೀಯರು.
Tagged with
lnews,
udupi

ಕಾರ್ಕಳ: ಕಾನೂನು ಪಾಲಿಸ ಬೇಕಾಗಿದ್ದ ವಿಧಾನ ಪರಿಷತ್ ಸಭಾಪತಿ ಶಂಕರ್‌ಮೂರ್ತಿ ಅವರು ಕಾನೂನು ಉಲ್ಲಂಘಿಸಿದ ಅಂಶ ಬೆಳಕಿಗೆ ಬಂ ದಿದೆ.
ಪದವೀಧರರ ಕ್ಷೇತ್ರದ ಚುನಾ ವಣೆ ಸದ್ಯದಲ್ಲಿಯೇ ನಡೆಯಲಿದ್ದು, ಈ ನಡುವೆ ವಿಧಾನ ಪರಿಷತ್ ಸಭಾಪತಿ ಶಂಕರ್‌ಮೂರ್ತಿ ಅವರು ನಿನ್ನೆ ಕಾರ್ಕಳಕ್ಕೆ ಭೇಟಿ ನೀಡಿರುವುದಕ್ಕೆ ಮಹತ್ವ ಬಂದಿದೆ. ರಾಜ್ಯ ಸರಕಾರ ನೋಂದಾಯಿತ ಕೆ.ಎ.೦೧ ಜಿ ೫೩೫೫ ನಂಬ್ರದ ಕಾರಿನ ಮುಂಭಾಗದಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿತ್ತು. ನಂಬ್ರ ಪ್ಲೇಟ್‌ನ ಮೇಲ್ಭಾಗದಲ್ಲಿ ಸಭಾಪತಿ ವಿಧಾನಪರಿಷತ್ ಎಂದು ನಮೂದಿಸ ಲಾಗಿದೆ. ಮೇಲಿನ ಗುರುತು ಛಾಯೆ ಹೊಂದಿರುವ ಕಾರು ನಿನ್ನೆ ಅನಂತ ಶಯನ ದೇವಳ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ಮುಂಭಾಗದ ರಸ್ತೆ ಮಧ್ಯದಲ್ಲಿ ನಿಲ್ಲಿಸಲಾಗಿತ್ತು. ಕಾರಿನ ಮುಂಭಾಗದಲ್ಲಿ ಸಭಾಪತಿ ಶಂಕರ್‌ಮೂರ್ತಿ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಜೀಪು ಕೂಡಾ ರಸ್ತೆಯ ಮಧ್ಯದಲ್ಲಿ ಇರುವುದು ಕಂಡುಬಂತು.
ಬ್ಯಾಂಕ್ ವ್ಯವಹಾರಕ್ಕೋ, ಮತ ಯಾಚನೆಗಾಗಿ ಶಂಕರಮೂರ್ತಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸಿಂಡಿಕೇಟ್ ಬ್ಯಾಂಕ್‌ನೊಳಗೆ ಹೋಗಿರು ವುದರಿಂದ ಅವರ ಭದ್ರತೆಗಾಗಿ ಬಂದಿದ್ದ ಪೊಲೀಸ್ ಜೀಪು ಹಾಗೂ ಅವರು ಪ್ರಯಾಣಿಸುತ್ತಿದ್ದ ಕಾರನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಿರುವುದರಿಂದ ಇತರ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತು. ಈ ಎಲ್ಲಾ ಘಟನಾವಳಿಗಳು ಕಣ್ಣಾರೆ ಕಂಡರೂ ಕ್ಯಾರೇ ಅನ್ನದೇ ಇದ್ದ ಚಾಲಕರು, ಘಟನೆಯನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯುತ್ತಿರುವ ಪತ್ರಕರ್ತರನ್ನು ಕಂಡು ಕೂಡಲೇ ವಾಹನಗಳನ್ನು ಅಲ್ಲಿಂದ ತೆರವುಗೊಳಿಸಿ ಪುರಸಭಾ ಕಚೇರಿಯ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿ ಮತ್ತೆ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದರು. ನಗರಠಾಣಾ ಪೊಲೀಸರು ಇದ್ದ ಜೀಪೊಂದು ಪುರಸಭಾ ಕಚೇರಿ ಮುಂಭಾಗದಲ್ಲಿ ಅದೇ ವೇಳೆಗೆ ಇತ್ತಾದರೂ ಕಾನೂನು ಉಲ್ಲಂಘಿಸಿದ ವಿಧಾನ ಪರಿಷತ್ ಸಭಾಪತಿ ಕಾರು ಚಾಲಕನಿಗೆ ಅಗಲಿ ಅಥವಾ ಅವರ ಬೆಂಗಾವಲಿಗೆ ಬಂದಿದ್ದ ಪೊಲೀಸ್ ಜೀಪು ಚಾಲಕನಿಗೆ ಕಾನೂನು ಪರಿಪಾಲಿಸುವಂತೆ ಸೂಚನೆ ನೀಡದೇ ಇತರ ವಾಹನ ಚಾಲಕರ ವಿರುದ್ಧ ಕೇಸು ದಾಖಲಿಸುತ್ತಿ ದ್ದರು. ಇದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘನ ಹುದ್ದೆ ಯಲ್ಲಿರುವವರಿಗೆ ಕಾನೂನಿನಲ್ಲಿ ರಿಯಾಯಿತಿ ಇದೆಯೇ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.
Tagged with
lnews,
udupi


ತೊಕ್ಕೊಟ್ಟು ದುರಂತ
ಉಳ್ಳಾಲ: ಮೊನ್ನೆ ರಾತ್ರಿ ತೊಕ್ಕೊಟ್ಟಿನಲ್ಲಿ ಸಂಭವಿಸಿದ ದುರಂತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಚಿಕಿತ್ಸೆ ನೀಡುವಲ್ಲಿ ೧೦೮ ಸಿಬ್ಬಂದಿ ಕಾರ್ಯ ನಿರ್ವಹಿಸಿದ ರೀತಿಯು ಸಾರ್ವಜ ನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಕಳೆದ ಐದಾರು ತಿಂಗಳು ಗಳಿಂದ ತೊಕ್ಕೊಟ್ಟಿನಲ್ಲಿ ನಡೆಯು ತ್ತಿರುವ ಕಟ್ಟಡದ ಕೆಲಸದಲ್ಲಿ ನಿರತ ರಾಗಿದ್ದ ಮೂವರು ಕಾರ್ಮಿಕರು ಹಾಗೂ ಓರ್ವ ಬಾಲಕ ಮಣ್ಣು ಕುಸಿದು ಅದರಡಿಯಲ್ಲಿ ಸಿಲುಕಿದ್ದರು. ಮೂವರನ್ನು ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಕಾರ್ಯಾ ಚರಣೆಯ ಮೂಲಕ ಹೊರತೆಗೆ ದಿದ್ದು, ಬಾಲಕನನ್ನು ಬೆಳಗ್ಗೆ ಮೂರು ಗಂಟೆಗೆ ಹೊರತೆಗೆಯಲಾಗಿತ್ತು. ಅದುವರೆಗೆ ಆತನನ್ನು ಬದುಕಿಸುವಲ್ಲಿ ೧೦೮ ಸಿಬ್ಬಂದಿ ಮಹತ್ವದ ಪಾತ್ರ ನಿರ್ವಹಿಸಿದ್ದರು.
ವೈದ್ಯರಿಲ್ಲ ಎಂದಿದ್ದ ನೇತಾಜಿ
ಮಣ್ಣಿನಡಿ ಸಿಲುಕಿದ್ದ ನಾಲ್ವರು ಕಾರ್ಮಿಕರ ಪೈಕಿ ಮೂವರನ್ನು ಹೊರೆತೆಗೆದ ಬಳಿಕ ಚಿಕಿತ್ಸೆಗಾಗಿ ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಸಾಗಿಸ ಲಾಗಿತ್ತು. ಆದರೆ ರವಿವಾರವಾ ಗಿರುವ ಕಾರಣ ವೈದ್ಯರು ಇಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ ಕಾರಣ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ೧೦೮ ದ.ಕ.ಜಿಲ್ಲಾ ಮುಖ್ಯಸ್ಥ ರಾಗಿರುವ ಗುರುರಾಜ್ ನಾಯಕ್ ತಿಳಿಸಿದ್ದಾರೆ.
ನಾಲ್ವರ ಪೈಕಿ ಕೊಲ್ಕತ್ತಾ ಮೂಲದ ಪಿಂಟೋ ಮಾಂಟೆನ್ಸ್ (೧೫)ನ ಮೇಲೆ ಮೂರು ಸಾಲು ಹಲಗೆಗಳು, ಕಲ್ಲು, ಮಣ್ಣು, ಬಿದ್ದಿದ್ದವು. ಆತನನ್ನು ಬದುಕಿಸುವುದು ಅಷ್ಟೊಂದು ಸುಲಭವಿರಲಿಲ್ಲ. ಆತನಿದ್ದ ಸ್ಥಳದಲ್ಲಿ ಆಮ್ಲಜನಕದ ಕೊರತೆ ಇತ್ತು. ಇದನ್ನು ಗಮನಿಸಿದ ನಮ್ಮ ಸಿಬ್ಬಂದಿ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ದಿಂದ ಆಮ್ಲಜನಕದ ಸಿಲಿಂಡರ್ ತಂದಿದ್ದರೂ ಅದು ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಆಂಬುಲೆನ್ಸ್‌ಗಳಿಂದಲೂ ಸಿಲಿಂಡರ್‌ಗಳನ್ನು ಹೊರತೆಗೆದು ಬಾಲಕನಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಯಿತು.
ಬೆಳಗ್ಗೆ ಮೂರು ಗಂಟೆಗೆ ಬಾಲಕನನ್ನು ಹೊರತೆಗೆಯಲಾಗಿದ್ದು ಅದುವರೆಗೂ ನಮ್ಮ ಸಿಬ್ಬಂದಿ ಅಲ್ಲೇ ಇದ್ದರು ಎಂದು ಅವರು ತಿಳಿಸಿದ್ದಾರೆ. ಉಳ್ಳಾಲ ೧೦೮ ಆಂಬುಲೆನ್ಸ್‌ನ ಮೆಡಿಕಲ್ ಟೆಕ್ನೀಶಿಯನ್ ಮಂಜುನಾಥ ಜಾದವ್ ಹಾಗೂ ಚಾಲಕ ವೀರೂಪಾಕ್ಷ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಾಲಕನಿಗೆ ಮರುಜೀವ ನೀಡಿದ್ದಾರೆ.
ಇತರ ಕಟ್ಟಡಗಳೂ ಅಪಾಯದಲ್ಲಿ!
ಕಟ್ಟಡ ನಿರ್ಮಾಣವಾಗುತ್ತಿರುವ ಸ್ಥಳದ ಆಸುಪಾಸಿನಲ್ಲಿ ಮನೆಗಳು ಹಾಗೂ ಇತರ ಕಟ್ಟಡಗಳೂ ಇವೆ. ಆದರೆ ನೂತನ ಕಟ್ಟಡ ಕಾಮಗಾರಿಯ ವೇಳೆ ಭೂಮಿಯ ಮೇಲ್ಮಟ್ಟದಿಂದ ಸುಮಾರು ೨೫-೩೦ ಅಡಿಗಳಷ್ಟು ಮಣ್ಣನ್ನು ಅಗೆಯಲಾಗಿದ್ದು ಮಣ್ಣು ಕುಸಿಯದಂತೆ ತಡೆಗೋಡೆ ಕಟ್ಟುವ ಕಾಮಗಾರಿ ಇನ್ನೂ ಮುಗಿದಿಲ್ಲ. ಆದರೆ ಕಟ್ಟಡದ ಕಾಮಗಾರಿ ಮಾತ್ರ ಭರದಿಂದ ಸಾಗುತ್ತಿದೆ. ರವಿವಾರ ರಾತ್ರಿ ನಡೆದ ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಮೊನ್ನೆ ರಾತ್ರಿ ಇನ್ನಷ್ಟು ಹೊತ್ತು ಮಳೆ ಸುರಿದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಮುಂದೆಯೂ ಭಾರೀ ಮಳೆ ಸುರಿದಲ್ಲಿ ಅಕ್ಕಪಕ್ಕದಲ್ಲಿರುವ ಕಟ್ಟಡಗಳು ಹಾಗೂ ಮನೆಗಳಿಗೂ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Tagged with
dk,
lnews
ಶೌಚಾಲಯದಲ್ಲೇ ಬಾಕಿಯಾದರು!
ಸುಳ್ಯ: ಪತ್ರಿಕಾಗೋಷ್ಠಿಗೆ ಕರೆದು ಕೊಂಡು ಬಂದ ಹಿರಿಯ ಸದಸ್ಯರೊ ಬ್ಬರನ್ನು ಮರೆತು ತೆರಳಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಮತ್ತೆ ಅವರನ್ನು ಹುಡುಕಿ ಕೊಂಡು ಬಂದ ಘಟನೆ ಭಾನುವಾರ ನಡೆದಿದೆ.
ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧೆ ಬಯಸಿ ಕಣದಲ್ಲಿರುವ ಪ್ರದೀಪ್ ಕುಮಾರ್ ಕಲ್ಕೂರ ಭಾನುವಾರ ಸುಳ್ಯದಲ್ಲಿ ಕಸಾಪ ಸದಸ್ಯರ ಮನೆಗೆ ತೆರಳಿ ಮತಯಾಚಿಸಿದರು. ಬಳಿಕ ಮಧ್ಯಾಹ್ನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಕಲ್ಕೂರ ಅವ ರೊಂದಿಗೆ ಬಂದಿದ್ದ ಹಿರಿಯ ಸದಸ್ಯ ರೊಬ್ಬರಿಗೆ ತುರ್ತಾಗಿ ಶೌಚಾಲಯಕ್ಕೆ ಹೋಗಬೇಕಿತ್ತು. ಅವರು ಕಲ್ಕೂರ ಅವ ರಲ್ಲಿ ತಿಳಿಸಿ ಪ್ರೆಸ್ ಕ್ಲಬ್ ಶೌಚಾಲಯಕ್ಕೆ ಹೋಗಿದ್ದರು. ಈ ಮಧ್ಯೆ ಪತ್ರಿಕಾಗೋಷ್ಠಿ ಮುಗಿದು ಎಲ್ಲರೂ ಹೊರಟಾಗ ಕ್ಲಬ್‌ನ ಕಾರ್ಯದರ್ಶಿ ಬಾಗಿಲು ಹಾಕಿ ಹೊರ ನಡೆದರು. ಕಲ್ಕೂರ ಕಾರು ಹತ್ತಿ ಮಂಗಳೂರು ಕಡೆಗೆ ಪ್ರಯಾಣಿಸಿದರು.
ಜಾಲ್ಸೂರು ತಲುಪುತ್ತಿದ್ದಂತೆ ಕಾರಿನಲ್ಲಿ ಕೇವಲ ೮ ಜನ ಇರುವುದು ಅವರ ಗಮನಕ್ಕೆ ಬಂತು. ಬಂದಾಗ ೯ ಜನ ಇದ್ದದ್ದು, ಒಬ್ಬರು ಬಾಕಿಯಾಗಿ ದ್ದಾರೆ ಎಂದು ಮತ್ತೆ ಕಾರನ್ನು ಸುಳ್ಯದತ್ತ ತಿರುಗಿಸಿದರು. ಪ್ರೆಸ್ ಕ್ಲಬ್ ಶೌಚಾಲ ಯಕ್ಕೆ ಹೋಗಿದ್ದ ಸದಸ್ಯರು ಅಲ್ಲೇ ಬಾಕಿಯಾದ ಬಗ್ಗೆ ಅವರಿಗೆ ತಿಳಿದು ಮತ್ತೆ ಪ್ರೆಸ್ ಕ್ಲಬ್‌ಗೆ ಬಂದಾಗ ಅಲ್ಲಿ ಬಾಗಿಲು ಹಾಕಿತ್ತು. ಕಾರ್ಯದರ್ಶಿ ಯನ್ನು ಕರೆದು ಬಾಗಿಲು ತೆರೆದಾಗ ಆ ಹಿರಿಯ ಸದಸ್ಯರು ಅಲ್ಲಿದ್ದರು.
Tagged with
dk,
lnews

ಮಂಜೇಶ್ವರ: ಭಾರತದ ಕಮ್ಯುನಿ ಸ್ಟರು ಇಂಡಿಯನ್ ವಿಪ್ಲವದ ಹಾದಿ ಯಾವುದೆಂಬುವುದನ್ನು ಅರಿಯದೆ ಕಂಗಾಲಾಗಿದ್ದಾರೆ. ಅವರ ಹೋರಾ ಟದ ಹಾದಿಯೇ ಬದಲಾಗಿ ಹೋಗಿದೆ. ರಷ್ಯನ್ ಮಾದರಿ, ಚೈನಾ ಮಾದರಿ ಯನ್ನು ಅವರು ತಿರಸ್ಕರಿಸಿದ್ದಾರೆ ಎಂದು ಕಣ್ಣೂರು ಶಾಸಕ ಎ.ಪಿ. ಅಬ್ದುಲ್ಲಾ ಕುಟ್ಟಿ ವ್ಯಂಗ್ಯವಾಡಿದ್ದಾರೆ.
ಈಗ ಸಿಪಿಎಂನ ಸೆಕ್ರೆಟರಿ ಪ್ರಕಾಶ್ ಕಾರಾಟ್ ಹೇಳುವುದೇನೆಂದರೆ ವೆನಿಜು ವೇಲಾ, ಲ್ಯಾಟಿನ್ ಅಮೆರಿಕಾ, ಇಕ್ವಾ ಡೋರ್ ಮುಂತಾದ ರಾಷ್ಟ್ರಗಳು ಅದ್ಭುತವಾದುದಂತೆ. ಆದರೆ ಅಲ್ಲಿ ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡಿದೆ. ಅಲ್ಲಿ ವಿಮಾ ಕಂಪೆನಿಗಳು ಖಾಸಗೀಕರ ಣಗೊಂಡಿದೆ. ಈ ದೇಶಗಳನ್ನು ಮಾದರಿ ಯನ್ನಾಗಿ ಸಬೇಕೆಂದು ಸಿಪಿಎಂ ಕಾರ್ಯಕರ್ತರಿಗೆ ಕರೆ ನೀಡಲಾಗು ತ್ತಿದ್ದು, ೧೯೬೦ರಲ್ಲಿಯೇ ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಗೊಳಿಸಿದ್ದರೂ ಭಾರತದ ಬಗ್ಗೆ ಒಂದಕ್ಷರ ಮಾತನಾಡದ ಸಿಪಿಎಂ ದೇಶ ಕಂಡ ಅತೀ ದೊಡ್ಡ ದೇಶದ್ರೋಹಿ ಗಳಾಗಿದ್ದಾರೆ ಎಂದು ಅಬ್ದುಲ್ಲಾ ಕುಟ್ಟಿ ಕಿಡಿಕಾರಿದರು.
ಪೈವಳಿಕೆಯ ದಿ. ಅಬ್ದುಲ್ಲಾ ಮಾಸ್ತರ್ ಮದನಕೋಡಿ ನಗರದಲ್ಲಿ ಜರಗಿದ ಪೈವಳಿಕೆ ಮಂಡಲ ಸಮ್ಮೇಳ ನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮವನ್ನು ಧಿಕ್ಕರಿಸಿ ಯುವಕ ರನ್ನು ರಕ್ತಸಾಕ್ಷಿಗಳ ನ್ನಾಗಿಸಿ ರಾಜಕೀಯ ಮಾಡುವ ಸಿಪಿಎಂ ಇನ್ನು ಹೆಚ್ಚು ಕಾಲ ಭಾರತದಲ್ಲಿ ಬದುಕದು. ಸಿಪಿಎಂ ನಾಯಕರು ತಮ್ಮ ದಾರ್ಷ್ಯವನ್ನು ಈಡೇ ರಿಸಲು ಎಂತಹ ಅನ್ಯಾಯ ಮಾಡಲೂ ಹೇಸದು ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ.
Tagged with
dk,
lnews
ಮಂಗಳೂರು: ಉಪನಿರ್ದೇಶಕ ರಿಂದ ತಮ್ಮ ಸಂಘಕ್ಕೆ ಅವಮಾನವಾ ಗಿರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಯವರಿಗೆ ದೂರು ನೀಡಿದ್ದರೂ ಯಾವು ದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪ ವಾಸ ಸತ್ಯಾಗ್ರಹ ನಡೆಸಲು ದ.ಕ. ಜಿಲ್ಲಾ ಅಂಗನವಾಡಿ ಕಾರ‍್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ತೀರ್ಮಾ ನಿಸಿದೆ.
ವಿವಿಧ ಸಮಸ್ಯೆಗಳನ್ನು ಈಡೇರಿ ಸುವಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಶಾಂತಿಯುತ ಮೆರವಣಿಯ ಮೂಲಕ ಮಾನ್ಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲು ಪುರಭವನಕ್ಕೆ ತೆರಳಿದ್ದ ಸಂದರ್ಭದಲ್ಲಿ ಉಪನಿರ್ದೇಶಕರಿಂದ ನಮ್ಮ ಸಂಘಕ್ಕೆ ಅವಮಾನವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಿ ದ್ದರೂ ಯಾವುದೇ ಪ್ರಯೋಜನ ವಾಗಿಲ್ಲ ವೆಂದು ಸಂಘ ಆರೋಪಿಸಿದೆ. ಇದೀಗ ಸೂಕ್ತ ನ್ಯಾಯ ದೊರಕಿ ಸಿಕೊಡಬೇಕೆಂದು ಒತ್ತಾಯಿಸಿ ಮೇ ನಾಲ್ಕರಂದು ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾಧಿ ಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲು ದ.ಕ. ಜಿಲ್ಲಾ ಅಂಗನ ವಾಡಿ ಕಾರ‍್ಯಕರ್ತೆಯರ ಮತ್ತು ಸಹಾಯ ಕಿಯರ ಸಂಘ ತೀರ್ಮಾನಿ ಸಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ ವನ್ನು ಮುಚ್ಚಲು ತೀರ್ಮಾನಿಸಿದೆ.
Tagged with
dk,
lnews
ಮಂಗಳೂರು: ಕಚೇರಿಗೆ ಹಾಜರಾಗದೆ ಕರ್ತವ್ಯಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ತಾಲೂಕು ಕಂದಾವರ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಹಾಗೂ ಮುಚ್ಚೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ನೋಣು ಅವರನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ.
Tagged with
dk,
lnews
ಮಂಗಳೂರು: ಕಮೀಷನ್ ಹೆಚ್ಚಿಸಿ ಎಂದು ಕ್ಯಾತೆ ತೆಗೆದು ಮುಷ್ಕರಕ್ಕೆ ಅಣಿ ಯಾಗಿದ್ದ ಪೆಟ್ರೋಲ್ ಬಂಕ್ ಮಾಲ ಕರು ಕೇಂದ್ರ ಸರಕಾರದ ಭರವಸೆಯ ಮೆರೆಗೆ ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಇದೇ ಸಮಯದಲ್ಲಿ ಬಂಕ್ ಮಾಲಕರ ಉಚಿತ ಸೇವೆ ನಿರಾಕರಿಸುವ ಬೇಡಿಕೆಗೂ ಕೇಂದ್ರ ಸರಕಾರ ಒಪ್ಪಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದುವರೆಗೆ ಪೆಟ್ರೋಲ್ ಬಂಕ್ ಗಳಲ್ಲಿ ಟೈರ್‌ಗಳಿಗೆ ಗಾಳಿ, ಶೌಚಾಲಯ (ಅಪರೂಪಕ್ಕೆ, ಮಂಗಳೂರಿನಲ್ಲಿ ಈ ಸೇವೆಯ ವ್ಯವಸ್ಥೆಯೂ ಇಲ್ಲ) ಕುಡಿ ಯುವ ನೀರಿನ ವ್ಯವಸ್ಥೆ ಉಚಿತವಾಗಿ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಇದಕ್ಕೆ ಗ್ರಾಹಕರು ಶುಲ್ಕ ತೆರುವ ಸಮಯ ಬರಲಿದೆ. ಕೆಲ ದಿನಗಳ ಹಿಂದೆ ಅಖಿಲ ಭಾರತ ಪೆಟ್ರೋಲಿಯಂ ಮಾರಾಟ ಗಾರರ ಒಕ್ಕೂಟದ ಪದಾಧಿಕಾರಿಗಳು ಮತ್ತು ಕೇಂದ್ರ ಸರಕಾರದ ನಡುವೆ ನಡೆದ ಮಾತುಕತೆಯಲ್ಲಿ ಗ್ರಾಹಕರು ಉಚಿತವಾಗಿ ಬಳಸುವ ವ್ಯವಸ್ಥೆಗಳಿಗೂ ಶುಲ್ಕ ವಿಧಿಸುವ ಅವಕಾಶ ನೀಡಬೇಕು ಎಂದು ಮಾರಾಟಗಾರರು ಕೋರಿದ್ದರು. ಈ ಬೇಡಿಕೆ ಪರಿಗಣಿಸುವುದಾಗಿ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿ ವಾಗ್ದಾನ ಮಾಡಿದ್ದರು.
ಜೈಪಾಲ ರೆಡ್ಡಿ ಮಾಡಿರುವ ವಾಗ್ದಾನ ಜಾರಿಯಾದರೆ ಬೈಕ್‌ಗಳಿಗೆ ಎರಡು ರೂ. ಬಸ್‌ಗಳಿಗೆ ೨೦ ರೂ. ಗಾಳಿ ತುಂಬಿಸಿ ಕೊಳ್ಳುವ ಶುಲ್ಕವಾಗಲಿದೆ. ವಾಸ್ತವ ಏನೆಂದರೆ ಶುಲ್ಕ ನೀಡುವುದು ಗ್ರಾಹಕರಿಗೆ ಹೊಸತೇನಲ್ಲ. ಶುಲ್ಕ ತಮ್ಮ ಜೇಬಿಗೆ ತಲಪುವ ವ್ಯವಸ್ಥೆ ಮಾಡಿಕೊಳ್ಳ ವುದಷ್ಟೇ ಬಂಕ್ ಮಾಲಕರ ಉದ್ದೇಶ. ಟೈರ್‌ಗಳಿಗೆ ಗಾಳಿ ತುಂಬಿದ್ದಕ್ಕಾಗಿ ಗ್ರಾಹಕರು ಈಗಲೂ ಹಣ ನೀಡುತ್ತಾರೆ. ಆದರೆ ಈ ಹಣ ಬಂಕ್ ಮಾಲಕರ ಜೇಬಿಗೆ ಸೇರದೆ ಬಂಕ್ ನಲ್ಲಿ ಕೆಲಸ ಮಾಡುವ ಹುಡುಗರ ಜೇಬಿ ನಲ್ಲಿ ಭಕ್ಷಿಸ್ ರೂಪದಲ್ಲಿ ಹೋಗುತ್ತದೆ. ಗಾಳಿಯ ಸೇವೆ ಪಡೆದ ಗ್ರಾಹಕರು ಜೇಬಿಗೆ ಕೈ ಹಾಕಿ ಸಿಕ್ಕಷ್ಟು ಚಿಲ್ಲರೆಯನ್ನು ಗಾಳಿ ಹಾಕಿದವನಿಗೆ ಕೊಟ್ಟು ಹೋಗುವುದು ನಡೆದೇ ಇದೆ. ಇನ್ನು ಮಂದೆ ಈ ಬಕ್ಷಿಸ್ ನೇರವಾಗಿ ಮಾಲಕರ ಕೈಗೆ ಸಿಗಲಿದೆ. ಅವರ ಆದಾಯ ಹೆಚ್ಚಲಿದೆ.
ಬಂಕ್‌ಗಳಲ್ಲಿ ಗಾಳಿಯ ಉಚಿತ ಸೇವೆ ಆರಂಭವಾದ ಬಳಿಕ ಗ್ಯಾರೇಜ್ ಗಳಲ್ಲಿಯ ಏರ್‌ಪ್ರೆಶರ್‌ಗಳಿಗೆ ಕೆಲಸ ಕಡಿಮೆಯಾಗಿತ್ತು. ಪಂಕ್ಚರ್ ಅಂಗಡಿಗಳಲ್ಲಿ ಗಾಳಿಗೆ ಬೆಲೆಯೇ ಇಲ್ಲದಂತಾಗಿತ್ತು. ಬಂಕ್‌ಗಳಲ್ಲಿ ಶುಲ್ಕ ಪಡೆಯಲಾರಂಭಿಸಿ ದರೆ ವಾಹನ ಮಾಲಕರು ಗ್ಯಾರೇಜ್‌ನಲ್ಲಿ ಗಾಳಿ ತುಂಬಿಸಿಕೊಳ್ಳುತ್ತಾರೆ. ಆಗ ಗ್ಯಾರೇಜ್‌ನವರಿಗೂ ಸಣ್ಣ ಮಟ್ಟದ ಆದಾಯ ಆರಂಭವಾಗುತ್ತದೆ.
Tagged with
dk,
lnews

ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿರುವ ಕಂಪೆನಿಗಳಿಂದ ದೇಣಿಗೆ ರೂಪ ದಲ್ಲಿ ಲಂಚ ಪಡೆದ ಆರೋಪ ಎದುರಿ ಸುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ಲೆಕ್ಕಾಚಾರ ಸುಪ್ರೀಂ ಕೋರ್ಟ್‌ನಲ್ಲಿ ತಲೆಕೆಳಗಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾ ಯುಕ್ತ ಸಲ್ಲಿಸಿದ್ದ ಎಫ್‌ಐಆರ್ ರದ್ದುಗೊಳಿಸಿ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ವಿಶ್ವನಾಥ್ ಹಾಗೂ ಸಿರಾಜಿನ್ ಭಾಷ ಹಠಾತ್ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ತಮ್ಮ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ.
ಈ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಹೈಕೋರ್ಟ್ ತೀರ್ಪು ಎತ್ತಿ ಹಿಡಿದರೆ ಸಿಇಸಿ ವರದಿಯ ಕಿಮ್ಮತ್ತು ಕಡಿಮೆ ಯಾಗಬಹುದು. ಪ್ರಕರಣದಲ್ಲಿ ತಮಗೆ ಜಯ ಲಭಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ಮತ್ತೆ ಆತಂಕ ಮನೆಮಾಡಿದೆ. ಶುಕ್ರವಾರ ಸಿಇಸಿ ಸಲ್ಲಿಸಿರುವ ವರದಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆ ನಡೆ ಯಲಿದ್ದು ಅಂದಿನ ತೀರ್ಪು ನಿರ್ಣಾಯಕ ವಾಗುವ ಸಾದ್ಯತೆಯಿದೆ. ಹೀಗೆ ಸಿಇಸಿ(ಕೇಂದ್ರೀಯ ಉನ್ನತಾಧಿ ಕಾರ ಸಮಿತಿ) ನೀಡಿದ ಶಿಫಾರಸು ವರದಿಯ ಹಿನ್ನೆಲೆಯಲ್ಲಿ ಏಪ್ರಿಲ್ ೨೭ರ ಶುಕ್ರವಾರ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ಇದೇ ಕಾರಣಕ್ಕಾಗಿ ವಿಶ್ವನಾಥ್ ಹಾಗೂ ಸಿರಾಜಿನ್ ಭಾಷಾ ತಮ್ಮ ಮೇಲ್ಮನವಿ ಅರ್ಜಿ ಯನ್ನು ಹಿಂಪಡೆದಿದ್ದಾರೆ.
ಮೂಲಗಳ ಪ್ರಕಾರ, ಸಿಇಸಿ ನೀಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ? ಎಂಬುದು ಸದ್ಯಕ್ಕೆ ಮುಖ್ಯ. ಇಂತಹ ಸಂದರ್ಭದಲ್ಲಿ ತಮ್ಮ ವಿಶೇಷ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವ ಸುಪ್ರೀಂಕೋರ್ಟ್ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದರೆ ಅದು ಸಿಇಸಿ ವರದಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದು ಅರ್ಜಿದಾರರ ಧಾವಂತ.
ಆದ್ದರಿಂದಲೇ ಇಂದು ಏಕಾಏಕಿಯಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಈ ಇಬ್ಬರು ಹಿಂದಕ್ಕೆ ಪಡೆದಿದ್ದು ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
ಹೀಗಾಗಿ ಕೇಂದ್ರೀಯ ಉನ್ನತಾಧಿಕಾರ ಸಮಿತಿ ನೀಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ಏಪ್ರಿಲ್ ಇಪ್ಪತ್ತೇಳರಂದು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿದ್ದು, ವಿಶ್ವನಾಥ್ ಹಾಗೂ ಸಿರಾಜಿನ್ ಭಾಷಾ ಅವರು ತಮ್ಮ ಮೇಲ್ಮನವಿ ಅರ್ಜಿಯನ್ನು ಹಿಂಪಡೆದಿರುವ ಬೆಳವಣಿಗೆಯಿಂದ ಈ ಗಮನ ಮತ್ತಷ್ಟು ದಟ್ಟವಾಗಿ ಕೇಂದ್ರೀಕೃತವಾಗು ವಂತಾಗಿದೆ.ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಏನು ತೀರ್ಪು ನೀಡುತ್ತದೆ? ಎಂಬುದು ಸದ್ಯಕ್ಕೆ ಮುಖ್ಯ. ಇಂತಹ ಸಂದರ್ಭದಲ್ಲಿ ತಮ್ಮ ವಿಶೇಷ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವ ಸುಪ್ರೀಂಕೋರ್ಟ್ ಹೈಕೋರ್ಟ್ ನೀಡಿರುವ ಆದೇಶವನ್ನು ಎತ್ತಿ ಹಿಡಿದರೆ ಅದು ಸಿಇಸಿ ವರದಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದು ಅರ್ಜಿದಾರರ ಧಾವಂತ. ಆದ್ದರಿಂದಲೇ ಇಂದು ಏಕಾಏಕಿಯಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಈ ಇಬ್ಬರು ಹಿಂದಕ್ಕೆ ಪಡೆದಿದ್ದು ಈ ಬೆಳವಣಿಗೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.
ಹೀಗಾಗಿ ಕೇಂದ್ರೀಯ ಉನ್ನತಾಧಿಕಾರ ಸಮಿತಿ ನೀಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ಏಪ್ರಿಲ್ ಇಪ್ಪತ್ತೇಳರಂದು ಸುಪ್ರೀಂಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿದ್ದು, ವಿಶ್ವನಾಥ್ ಹಾಗೂ ಸಿರಾಜಿನ್ ಭಾಷಾ ಅವರು ತಮ್ಮ ಮೇಲ್ಮನವಿ ಅರ್ಜಿಯನ್ನು ಹಿಂಪಡೆದಿರುವ ಬೆಳವಣಿಗೆಯಿಂದ ಈ ಗಮನ ಮತ್ತಷ್ಟು ದಟ್ಟವಾಗಿ ಕೇಂದ್ರೀಕೃತವಾಗುವಂತಾಗಿದೆ.
Tagged with
snews
ಬೆಂಗಳೂರು: ಬರ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿದ ಸರ್ಕಾರ ರಾಜಕೀಯ ಕಾರಣಕ್ಕಾಗಿ ಸಚಿವರು-ಶಾಸಕರ ಒತ್ತಡಕ್ಕೆ ಮಣಿದು ಸಾಮೂಹಿಕ ವರ್ಗಾವಣೆಗೆ ಮಾತ್ರ ಹಸಿರು ನಿಶಾನೆ ತೋರಿದೆ.
ಸಾಮೂಹಿಕ ವರ್ಗಾವಣೆ ಮೇ ೧ರಿಂದ ಆರಂಭಗೊಂಡು ೧೫ಕ್ಕೆ ಪೂರ್ಣಗೊಳ್ಳಲಿದೆ. ಆ ನಂತರದ ವರ್ಗಾವಣೆಗೆ ಮುಖ್ಯಮಂತ್ರಿಯವರ ಒಪ್ಪಿಗೆ ಅಗತ್ಯ. ವರ್ಗಾವಣೆ ಪ್ರಕ್ರಿಯೆ ಏ.೧೫ಕ್ಕೆ ಆರಂಭವಾಗಿ ೩೦ಕ್ಕೆ ಅಂತ್ಯಗೊಳ್ಳಬೇಕಿತ್ತಾದರೂ ಬರದ ಕಾರಣ ಎರಡು ವಾರ ಮುಂದೂಡಿ ಹದಿನೈದು ದಿನಗಳ ಮಟ್ಟಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ಮುಂಬರುವ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಕ್ಕೆ ಬೇಕಿರುವ ಅಧಿಕಾರಿಗಳನ್ನು ಬೇಕಾದ ಸ್ಥಳಗಳಲ್ಲಿ ನಿಯೋಜಿಸಿಕೊಳ್ಳಲು ಶಾಸಕರು ಮತ್ತು ಸಚಿವರು ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಬರದ ನಡುವೆಯೂ ವರ್ಗಾವಣೆಗೆ ಆದ್ಯತೆ ನೀಡಲಾಗಿದೆ. ಸಾಮೂಹಿಕ ವರ್ಗಾ ವಣೆ ನಿಯಮಾವಳಿಗೆ ಮುಖ್ಯಮಂತ್ರಿಯವರು ಅಂಕಿತ ಹಾಕಿದ್ದು ಮಂಗಳವಾರ ಬೆಳಗ್ಗೆ ಅಧಿಸೂಚನೆ ಹೊರ ಬೀಳಲಿದೆ. ಶೇಕಡ ೫ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ನೀಡಿದ್ದು ವರ್ಗಾವಣೆಗೆ ತೀವ್ರ ಬೇಡಿಕೆ ಉಂಟಾಗುವ ಸಾಧ್ಯತೆಯಿz. ಪೊಲೀಸ್ ಹಾಗೂ ಶಿಕ್ಷಕರ ವರ್ಗಾವಣೆ ಸಾಮೂಹಿಕ ವರ್ಗಾವಣೆ ಪ್ರಕ್ರಿಯೆಯಿಂದ ಕೈ ಬಿಟ್ಟಿದ್ದು ಆ ಇಲಾಖೆಗಳ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯಲಿದೆ. ಐಎಎಸ್, ಐಪಿಎಸ್, ಐಎಫ್‌ಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಂಬಂಧಪಟ್ಟ ಮುಖ್ಯಮಂತ್ರಿಯ ವರು ಸರ್ಕಾರದ ಆಡಳಿತಕ್ಕೆ ಅನುಗುಣವಾಗಿ ಮಾಡಲಿದ್ದಾರೆ. ಅಧಿಕಾರ ವಹಿಸಿಕೊಂಡ ೯ ತಿಂಗಳ ಅವಧಿಯಲ್ಲಿ ಒತ್ತಡಗಳ ಕಾರಣ ಕೆಲವೊಂದು ಅಧಿಕಾರಿಗಳನ್ನು ಮುಟ್ಟಲು ಸಾಧ್ಯವಾಗಿರಲಿಲ್ಲ. ಮುಂದಿನ ವರ್ಷ ಚುನಾವಣೆ ಹಾಗೂ ಆಡಳಿತ ಯಂತ್ರ ಚುರುಕುಗೊಳಿಸಲು ಸಮಗ್ರ ಬದಲಾವಣೆ ತರುವ ಸಾಧ್ಯತೆಯಿದೆ.
Tagged with
snews
ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಆದೇಶ ವನ್ನು ಉಲ್ಲಂಘಿಸಿ ಸಮಾಜ ಕಲ್ಯಾಣ ಹಾಗೂ ಬಂಧೀಖಾನೆ ಸಚಿವ ಎ.ನಾರಾಯಣಸ್ವಾಮಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಕಳೆದ ಶನಿವಾರ ಸಚಿವರು ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ ೩೦ರಂದು ವಿದೇಶ ಪ್ರವಾಸ ಮುಗಿಸಿ ವಾಪಸ್ಸಾಗಲಿದ್ದಾರೆ. ಖಾಸಗಿ ವೆಚ್ಚ ಹಾಗೂ ಖಾಸಗಿ ಪ್ರವಾಸ ಕೈಗೊಂಡಿ ದ್ದಾರೆ. ಸರ್ಕಾರಿ ವೆಚ್ಚ ಅಥವಾ ಸರ್ಕಾರದ ಅಧಿಕೃತ ಪ್ರವಾಸವಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬರವಿರುವುದರಿಂದ ಅಧಿಕಾರಿಗಳು, ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳಾರು ಇನ್ನೆರಡು ಪ್ರವಾಸ ಕೈಗೊಳ್ಳಬಾರದು ಎಂದು ಕೇವಲ ನಾಲ್ಕು ದಿನಗಳ ಹಿಂದಷ್ಠೇ ಮುಖ್ಯಮಂತ್ರಿ ಆದೇಶಿಸಿದ್ದರು.
Tagged with
snews
ಬೆಂಗಳೂರು: ಅತ್ಯಾಚಾರ, ಲೋಕಾಯುಕ್ತ ಬಲೆಗೆ ಬಿದ್ದ, ಸರ್ಕಾರದ ನಿಯಮ ಉಲ್ಲಂಘಿಸಿದ ಆಧಾರದ ಮೇಲೆ ಜೈಲ್ ಅಧೀಕ್ಷಕ ಲಕ್ಷ್ಮೀನಾರಾಯಣ್ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳನ್ನು ಸರ್ಕಾರ ಅಮಾನತ್ತು ಮಾಡಿ ತನಿಖೆಗೆ ಆದೇಶಿಸಿದೆ. ಅತ್ಯಾಚಾರ ಆರೋಪ ಹೊಂದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಧಾಕೃಷ್ಣ ಅವರನ್ನು ಅಮಾನತ್ತು ಮಾಡಿದೆ. ನೆಲಮಂಗಲದ ಸಮೀಪದ ರೆಸಾರ್ಟ್‌ವೊಂದರಲ್ಲಿ ಗಂಗಾ ಎಂಬಾಕೆಯನ್ನು ಕರೆದೊಯ್ದು, ಹತ್ಯಾಚಾರ ಎಸಗಿದ್ದಾರೆಂದು ದೂರು ದಾಖಲಾಗಿತ್ತು.
Tagged with
snews
ನವದೆಹಲಿ: ೧೩ನೇ ರಾಷ್ಟ್ರಪತಿ ಆಯ್ಕೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿಯಿರುವಂತೆ, ಎಪಿಜೆ ಅಬ್ದುಲ್ ಕಲಾಂ ಮತ್ತೆ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್, ಎಐಎಡಿಎಂಕೆ ಪಕ್ಷದ ಜೆ. ಜಯಲಲಿತಾ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಕಲಾಂ ಅವರನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಯುಪಿಎ ಸರಕಾರದ ಮೈತ್ರಿಕೂಟ ಪಕ್ಷದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎನ್‌ಸಿಪಿ ಪಕ್ಷದ ಮುಖಂಡ ಮತ್ತು ಮಾಜಿ ಲೋಕಸಭಾ ಸಭಾಪತಿ ಪಿ.ಎ.ಸಂಗ್ಮಾ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಲಿದ್ದಾರೆಯೇ ಎನ್ನುವ ಸುದ್ದಿಗಾರರು ಪ್ರಶ್ನೆಗೆ ಉತ್ತರಿಸಿದ ಪವಾರ್, ನಮ್ಮ ಬಳಿ ಕೇವಲ ೧೬ ಸಂಸದರಿದ್ದಾರೆ. ಆದ್ದರಿಂದ ನಮ್ಮ ಇತಿಮಿತಿ ಗೊತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ, ಸ್ಯಾಮ್ ಪಿತ್ರೋಡಾ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
Tagged with
nnews
ಮಂಗಳೂರು: ನಗರದ ಜನನಿಬಿಡ ಪ್ರದೇಶ, ಕಮೀಷನರೇಟ್ ಕಚೇರಿಯ ಅರ್ಧ ಕಿ.ಮೀ. ಅಂತರದಲ್ಲಿ ಹಾಡ ಹಗಲೇ ರೌಡಿಯೋರ್ವನ ರಕ್ತ ಹರಿದಿದೆ. ಅದು ಕೂಡಾ ತಂಡವೊಂದು ಹಾದಿ ಬೀದಿಯಲ್ಲಿ ಅಟ್ಟಾಡಿಸಿ ಕೊಲೆ ಮಾಡಿದೆ.
ಮಂಗಳೂರು ಕಾರ್‌ಸ್ಟ್ರೀಟ್ ಬಳಿಯ ವಿ.ಟಿ.ರಸ್ತೆ ನಿವಾಸಿ ಗುರುಪ್ರಸಾದ್ (೩೨) ಎಂಬಾತನೇ ಕೊಲೆಗೀಡಾದವ. ಈತ ನಿನ್ನೆ ಮಧ್ಯಾಹ್ನ ಯಾರೋ ಸ್ನೇಹಿತ ಕರೆ ಮಾಡಿದ ಎನ್ನುವ ಕಾರಣಕ್ಕೆ ಎರಡು ಗಂಟೆ ಯ ವೇಳೆಗೆ ನಗರದ ಮೈದಾನ್ ನಾಲ್ಕನೇ ಅಡ್ಡ ರಸ್ತೆಯ ಸತ್ಕಾರ್ ಬಾರ್ ಬಳಿ ಬೈಕಿ ನಲ್ಲಿ ಬಂದಿದ್ದ. ಇದೇ ವೇಳೆ ತಂಡ ವೊಂದು ಅತನನ್ನು ಅಟ್ಟಾಡಿಸಿಕೊಂಡು ಹೋಗಿತ್ತು.
ದಾಳಿಯ ಭೀತಿಯಿಂದ ಓಡಿದ ಗುರು ಪ್ರಸಾದ್ ಬೀಬಿ ಅಲಾಬಿ ರಸ್ತೆಗೆ ತಲುಪಿ ದಾಗ ಹಂತಕರು ತಲ್ವಾರು ಬೀಸಿದ್ದಾರೆ. ಈ ಸಂದರ್ಭ ಗಾಯಗೊಂಡ ಗುರು ಪ್ರಸಾದ್ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪಂಚಮಹಲ್ ಕಟ್ಟಡದಲ್ಲಿರುವ ನವೀನ್‌ಚಂದ್ರ ಎಂಬವರಿಗೆ ಸೇರಿದ ಜ್ಯೂಸ್ ಅಂಗಡಿ ಯೊಳಗೆ ನುಗ್ಗಿದ್ದ. ಆದರೂ ತಮ್ಮ ನಿರ್ಧಾರ ದಿಂದ ಹಿಂದಕ್ಕೆ ಸರಿಯದ ಹಂತಕರು ಅಂಗಡಿಯೊಳಗೇ ತಲೆ ಮತ್ತು ಬೆನ್ನಿಗೆ ಕಡಿದಿದ್ದರು.
ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಅಂಗಡಿಯೊಳಗೆ ನವೀನ್‌ಚಂದ್ರ ಅವರ ಎದುರಲ್ಲೇ ಪ್ರಾಣ ಬಿಟ್ಟಿದ್ದಾನೆ. ತಾವು ಬಂದ ಕೆಲಸ ಮುಗಿಸಿದ ಹಂತಕರು ಬಳಿಕ ಬಳಕೆ ಮಾಡದ ಒಂದು ತಲ್ವಾರನ್ನು ಅಂಗಡಿ ಎದುರು ಇರುವ ರಸ್ತೆಯಲ್ಲೇ ಎಸೆದು ನಡೆದುಕೊಂಡೇ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಆತನ ಸ್ನೇಹಿತರು ಕರೆ ಮಾಡಿ ನಿಗದಿತ ಸ್ಥಳಕ್ಕೆ ಕರೆಸಿರಬಹುದೇ ಎನ್ನುವ ಶಂಕೆಯೂ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಮಂಜುನಾಥ್ ಹತ್ಯೆಗೆ ಪ್ರತೀಕಾರ
ಕೊಲೆಗೀಡಾದ ಗುರುಪ್ರಸಾದ್ ಆಂಧ್ರಪ್ರದೇಶದವನಾಗಿದ್ದಾನೆ. ಹಲವಾರು ವರ್ಷಗಳ ಹಿಂದೆ ಇವರ ಕುಟುಂಬ ಮಂಗಳೂರಿಗೆ ಬಂದಿತ್ತು. ಇಲ್ಲೇ ನೆಲೆನಿಂತ ಪ್ರಸಾದ್ ಸ್ನೇಹಿ ತರ ಜೊತೆ ಸೇರಿ ಕ್ರಿಮಿನಲ್ ಕೃತ್ಯಕ್ಕೆ ಇಳಿದಿದ್ದ. ಆ ವೇಳೆ ಆಂಧ್ರ ಮೂಲದ ಮಂಜುನಾಥ ಎಂಬಾತ ಗುರುಪ್ರಸಾದನ ಆಪ್ತ ಸ್ನೇಹಿತನಾಗಿದ್ದ. ೨೦೦೪ರಲ್ಲಿ ತೊಕ್ಕೊಟ್ಟಿನಲ್ಲಿ ಪಂಜಿನ ಮೆರವಣಿಗೆ ನಡೆದ ಬಳಿಕ ಸಂಭವಿಸಿದ ಕೋಮುಗಲಭೆಯಲ್ಲಿ ರಿಕ್ಷಾ ಚಾಲಕ ನರಸಿಂಹ ಶೆಟ್ಟಿಗಾರ್ ಎಂಬವರ ಹತ್ಯೆಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ರಿಕ್ಷಾ ಚಾಲಕ ಹರೇಕಳದ ಫಾರೂಕ್ ಎಂಬಾತನ ಕೊಲೆ ನಡೆದಿದ್ದು, ಈ ಕೃತ್ಯದಲ್ಲಿ ಮಂಜು ಪ್ರಮುಖ ಪಾತ್ರ ವಹಿಸಿದ್ದ. ಈ ಮಂಜುನಾಥ ಹಾಗೂ ಗುರುಪ್ರಸಾದ್ ಆಪ್ತ ಸ್ನೇಹಿತರಾಗಿದ್ದರು.
೨೦೦೯ರಲ್ಲಿ ಮಂಜುನಾಥ ಮತ್ತು ಗುರುಪ್ರಸಾದ್ ಮಧ್ಯೆ ನಡೆದ ಕ್ಷುಲ್ಲಕ ಕಾರಣವೊಂದರಿಂದ ಹಗೆತನ ಉಂಟಾಗಿತ್ತು. ಈ ಪ್ರಕರಣ ಮುಕ್ತಾಯಗೊಳಿಸುವ ಹಿನ್ನೆಲೆಯಲ್ಲಿ ರಾಜಿ ಪಂಚಾಯಿತಿಗೆಯ ಯತ್ನ ನಡೆಯುತ್ತಿದ್ದಂತೆಯೇ ಮಂಜುನಾಥನ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಗುರುಪ್ರಸಾದ್ ಹೆಸರು ಪ್ರಮುಖವಾಗಿ ಕೇಳಿ ಬಂದಿದ್ದು ಆತ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.
ಇದೇ ಹಿನ್ನೆಲೆಯಲ್ಲಿ ವರ್ಷದ ಹಿಂದೆ ಮಂಜುನಾಥನ ಸ್ನೇಹಿತರು ಗುರುಪ್ರಸಾದ್ ಹಾಗೂ ಆತನ ಸ್ನೇಹಿತನನ್ನು ಕಡಿದು ಕೊಲೆ ಮಾಡಲು ಯತ್ನಿಸಿದ್ದರು. ಆದರೆ ಸಾವು ಬದುಕಿನ ಹೋರಾಟದಲ್ಲಿ ಇಬ್ಬರೂ ಪ್ರಾಣಾ ಪಾಯದಿಂದ ಪಾರಾಗಿದ್ದರು.
ಶಪಥದಿಂದ ಮುಕ್ತಗೊಂಡ ಆರೋಪಿ!
ಗುರುಪ್ರಸಾದ್ ಕೊಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರದೀಪ್ ಎಂಬಾತನ ಹೆಸರು ಕೇಳಿ ಬಂದಿದೆ. ಈತ ಗುರುಪ್ರಸಾದ್ ಹಾಗೂ ಮಂಜುನಾಥನ ಆಪ್ತ ಸ್ನೇಹಿತನಾಗಿದ್ದ. ೨೦೦೯ರಲ್ಲಿ ಮಂಜುನಾಥನ ಕೊಲೆ ನಡೆದಿದ್ದು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುರುಪ್ರಸಾದ್ ಜೊತೆ ಹಗೆತನ ಕಟ್ಟಿಕೊಂಡಿದ್ದ ಪ್ರದೀಪ್ ಆತನನ್ನು ಮುಗಿಸದೆ ಚಪ್ಪಲಿ ತೊಡಲಾರೆ ಎಂದು ಅಂದೇ ಶಪಥ ಮಾಡಿದ್ದ. ಈ ಹಿನ್ನೆಲೆಯಲ್ಲಿ ಗುರು ಮೇಲೆ ಹಿಂದೆಯೂ ದಾಳಿ ನಡೆಸಿದ್ದ. ಆತ ಈ ದಾಳಿಯಲ್ಲಿ ಬದುಕಿದನಾದರೂ ಸಾವು ಆತನ ಬೆನ್ನ ಹಿಂದೆಯೇ ಇತ್ತು. ಗುರು ಕೂಡ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕಾರಣ ಸಂಘಟನೆಯ ಮುಖಂಡರ ಮಧ್ಯಸ್ಥಿಕೆಯಲ್ಲಿ ಹಲವು ರಾಜಿ ಪಂಚಾಯಿತಿಗೆಯೂ ನಡೆದಿತ್ತು. ಆದರೆ ಯಾವುದಕ್ಕೂ ಜಗ್ಗದ ಪ್ರದೀಪ, ಆತನನ್ನು ಮುಗಿಸಿಯೇ ಸಿದ್ಧ ಎಂದು ಧೃಢ ನಿರ್ಧಾರ ಮಾಡಿದ್ದ. ಈ ವಿಷಯ ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೆ ಈ ಕೊಲೆಯಲ್ಲಿ ಪ್ರದೀಪನೊಂದಿಗೆ ಬೆಂಗಳೂರಿನ ರೌಡಿಗಳು ಕೂಡಾ ಶಾಮೀಲಾಗಿದ್ದಾರೆ ಎನ್ನುವ ಗುಮಾನಿಯೂ ಇದೆ.
ಶ್ರೀಮತಿಯನ್ನು ಕತ್ತು ಹಿಸುಕಿ ಕೊಂದೆ ಎಂದು ಆರೋಪಿ ವಿವರಿಸಿದ್ದಾನೆ.
ಆರೋಪಿಗಳು ಇಂದು ಶರಣಾಗತಿ?
ಗುರುಪ್ರಸಾದ್‌ನನ್ನು ಕೊಲೆ ಮಾಡಿ ರುವ ಆರೋಪಿಗಳ ಪೈಕಿ ಪ್ರದೀಪ್ ಹಿಂದೂ ಜಾಗರಣಾ ವೇದಿಕೆಯ ಸಕ್ರಿಯ ಕಾರ್ಯಕರ್ತನಾಗಿದ್ದಾನೆ. ಅಲ್ಲದೆ ಆರೋಪಿಗಳ ಬಗ್ಗೆ ಪೊಲೀಸರಿಗೂ ಖಚಿತ ಮಾಹಿತಿ ಇದೆಯೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರನ್ನು ಸುತ್ತು ಬಳಸುವ ಬದಲು ಪ್ರದೀಪ್ ಸಹಿತ ಇತರ ಆರೋಪಿಗಳನ್ನು ಇಂದು ಬಂದರ್ ಠಾಣೆಗೆ ಶರಣಾಗುವಂತೆ ಮಾಡುವ ಪ್ರಯತ್ನವೂ ನಡೆದಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಪ್ರಮುಖ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
Tagged with
cnews,
feature


ಬೆಳ್ತಂಗಡಿ: ರಜೆ ಕಳೆಯಲೆಂದು ನೆಂಟರ ಮನೆಗೆ ಬಂದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯುವಶವಾದ ಹೃದಯ ವಿದ್ರಾವಕ ಘಟನೆ ವೇಣೂರು ಸನಿಹ ನಿಟ್ಟಡೆಯಲ್ಲಿ ಸಂಭವಿಸಿದೆ.
ಗುರುಪುರ ಕೈಕಂಬದ ಅಜೀಜ್ ಕಾಂಪ್ಲೆಕ್ಸ್ ನಿವಾಸಿ ಉಮರ್ ಶರೀಫ್ ಎಂಬವರ ಪುತ್ರ ಮಹಮ್ಮದ್ ರಿಜ್ವಾನ್(೧೩) ಹಾಗೂ ಪುತ್ತೂರಿನ ಕೊಯ್ಯೂರು ಗ್ರಾಮದ ಮಾಡವು ಮನೆಯ ಶರೀಫ್ ದಾರಿಮಿ ಎಂಬುವರ ಪುತ್ರ ಮಹಮ್ಮದ್ ಅನೀಸ್(೭) ಎಂಬ ಬಾಲಕರೇ ಹೊಳೆಯಲ್ಲಿ ಈಜಾಡಲು ಹೋಗಿ ಅಸುನೀಗಿದವರು.
ಇವರು ಸೋಮವಾರ ಬೆಳಿಗ್ಗೆ ಐಸಮ್ಮ ಎಂಬವರ ಮನೆಗೆ ರಜಾದಿನಗಳನ್ನು ಕಳೆಯಲು ಬಂದಿದ್ದರು. ಬಂದವರೇ ಸನಿಹದಲ್ಲೇ ಇರುವ ಫಲ್ಗುಣಿ ನದಿಗೆ ಈಜಾಡಲು ತೆರಳಿದ್ದರು. ನಿಟ್ಟಡ್ಕ ಗ್ರಾಮದಲ್ಲಿ ಹರಿಯುತ್ತಿರುವ ನದಿಯು ಅರ್ಕುಡೇಲು, ಜಂಗೈಗುಂಡಿ ಎಂಬಲ್ಲಿ ವಿಶಾಲವಾದ ಕೆರೆಯ ರೀತಿಯಲ್ಲಿ ನೀರನ್ನು ಹೊಂದಿದೆ. ಆಟವಾಡುತ್ತಿದ್ದ ಬಾಲಕರು ಅಚಾನಕ್ ಆಗಿ ಕಾಣದಾ ದಾಗ ದಡದಲ್ಲಿರುವ ಮನೆಯವರು ಬೊಬ್ಬೆ ಹಾಕಿದ್ದಾರೆ. ಕೂಡಲೇ ಸ್ಥಳೀಯ ಕೃಷಿಕ ಜಾನ್ ಮೋನಿಸ್ ನೀರಿಗೆ ಧುಮುಕಿ ಮಕ್ಕಳನ್ನು ರಕ್ಷಿಸಲು ಪ್ರಯ ತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಘಟನಾ ಸ್ಥಳದಲ್ಲಿ ಹಿಂದೆಯೂ ಈಜಾಡಲು ಹೋಗಿ ಪ್ರಾಣ ಕಳಕೊಂ ಡವರೂ ಇದ್ದಾರೆ ಎಂದು ಅಲ್ಲಿ ಸೇರಿದವರು ಮಾತನಾಡಿಕೊಳ್ಳುತ್ತಿದ್ದರು. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಹೊಳೆಯು ವೇಣೂರು-ಬೆಳ್ತಂಗಡಿ ಮುಖ್ಯರಸ್ತೆಯಲ್ಲಿನ ಜೆಟ್ ಐಸ್ ಕ್ರೀಮ್ ಉದ್ಯಮದಲ್ಲಿಂದ ಸುಮಾರು ೩ ಕಿ.ಮೀ.ಇದೆ. ದುರ್ಘಟನೆಯ ಸ್ಥಳಕ್ಕೆ ತಹಸೀಲ್ದಾರ್ ಕುಸುಮ ಕುಮಾರಿ, ನಿಟ್ಟಡೆ-ಕುಕ್ಕೇಡಿ ಗ್ರಾಮಕರಣಿಕ ಚಂದ್ರು ಭೇಟಿ ನೀಡಿದ್ದಾರೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews,
feature


ಬೆಳ್ತಂಗಡಿ: ಕೆಎಸ್‌ಆರ್‌ಟಿಸಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಒಂಭತ್ತು ಗಂಟೆಯ ವೇಳೆಗೆ ಗುರುವಾಯನಕೆರೆ ಸಮೀಪದ ಹಳೆಕೋಟೆ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ನೆರಿಯ ಗಂಡಿ ಬಾಗಿಲು ದೇವಗಿರಿ ನಿವಾಸಿ ಸೆಬಾಸ್ಟಿನ್ ಎಂಬವರ ಪುತ್ರ ಬಿಜೊಯ್(೨೬), ಲಾಯಿಲ ಕೊಪ್ಪದಬೈಲು ನಿವಾಸಿ ಬಿನೋಯ್ ಎಂಬವರ ಪುತ್ರ ವಿನ್ಸಿ(೨೨) ಹಾಗೂ ಇನ್ನೊಬ್ಬ ಬಿಸಿಎಂ ವಿದ್ಯಾರ್ಥಿ ರಕ್ಷಿತ್ ಮಡಿಕೇರಿ ಎಂದು ಗುರುತಿಸಲಾಗಿದೆ. ಮಂಗಳೂರು-ಧರ್ಮಸ್ಥಳ ಸರ್ಕಾರಿ ಬಸ್ ಉಜಿರೆ ಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಬೈಕ್ ಮತ್ತು ಬಸ್ ಡಿಕ್ಕಿಯಾದ ರಭಸಕ್ಕೆ ಕ್ಷಣಾರ್ಧದಲ್ಲೇ ಬೆಂಕಿ ಹತ್ತಿಕೊಂಡಿತು. ಕೆಂಪು ಬೈಕ್ ಕಪ್ಪಾಗಿ ಕರಕಲಾಯಿತು. ಇದರಿಂದ ಬಸ್ಸಿಗೂ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಹತ್ತಿರದಲ್ಲೇ ಇದ್ದ ಫ್ರಾಂಕಿ ಡಿಸೋಜ ಅವರು ತನ್ನ ಮನೆಯ ನೀರೆತ್ತುವ ಪಂಪ್ ಅನ್ನು ಚಾಲೂ ಮಾಡಿ ಪೈಪ್ ಮೂಲಕ ಸಾಕಷ್ಟು ನೀರನ್ನು ಒದಗಿಸಿದರು. ತಕ್ಷಣವೇ ನಾಗರಿಕರು ನೀರನ್ನು ಬೈಕ್ ಮತ್ತು ಬಸ್ಸಿಗೆ ಹಾಕಿದ ಪರಿಣಾಮ ಸಂಭಾವ್ಯ ಅಗ್ನಿ ಅನಾಹುತ ತಪ್ಪಿತು. ಇದೇ ವೇಳೆ ಅಗ್ನಿ ಶಮನ ವಾಹನವೂ ಬಂದು ಸಹಕರಿಸಿದೆ. ಈ ಭಾಗದಲ್ಲಿ ಸರಕಾರಿ ಬಸ್ಸುಗಳ ಅತೀ ವೇಗದ ಓಡಾಟ, ನಿರ್ಲಕ್ಷ್ಯತನದ ಚಾಲನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಶವಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಒರ್ವನ ಶರೀರ ಸುಟ್ಟು ಕರಕಲಾಗಿದೆ. ಇನ್ನೊರ್ವನ ಮುಖದ ಪಾರ್ಶ್ವಭಾಗ ಚಪ್ಪಟೆಯಾಗಿದೆ. ತಾಲೂಕಿನಲ್ಲಿ ಕರಾಳ ಸೋಮವಾರ ಇಂದಾಗಿದೆ. ಬೆಳಿಗ್ಗೆ ವೇಣೂರು ಸನಿಹ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟರೆ, ರಾತ್ರಿ ಬೆಳ್ತಂಗಡಿಯಲ್ಲಿ ಮೂವರು ಯುವಕರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವುದು ದುರಂತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Tagged with
cnews,
feature

ಪಡುಬಿದ್ರಿ: ವೇಗದೂತ ಬಸ್ ಚಾಲಕ ನೋರ್ವ ಮಾರುತಿ ಓಮ್ನಿ ಕಾರೊಂದಕ್ಕೆ ಮುಂದೆ ಸಾಗಲು ಬಿಟ್ಟಿಲ್ಲ ಎಂದು ಆರೋ ಪಿಸಿದ ಯುವಕರ ತಂಡವೊಂದು ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಉಚ್ಚಿಲ ಪೇಟೆಯಲ್ಲಿ ರವಿವಾರ ಘಟಿಸಿದೆ.
ಉಡುಪಿಯಿಂದ ಮಂಗಳೂರಿಗೆ ತೆರಳು ತ್ತಿದ್ದ ವೇಗದೂತ ಬಸ್ ಚಾಲಕ ಮುಳೂರಿನ ಸುನ್ನಿ ಸೆಂಟರ್ ಎದುರು ಮಾರುತಿ ಓಮ್ನಿ ಕಾರಿಗೆ ತಾನು ಮುಂದೆ ಸಾಗುವ ಭರದಲ್ಲಿ ಅದನ್ನು ಮುಂದೆ ಸಾಗಲು ಬಿಟ್ಟಿಲ್ಲ. ಇದರಿಂದ ಕೆರಳಿದ ಕಾರಿನಲ್ಲಿದ್ದ ಯುವಕರ ತಂಡ ಉಚ್ಚಿಲ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಂಡಾಗ ಅದರ ಚಾಲಕನಿಗೆ ಥಳಿಸಿದ್ದಾರೆ. ಸ್ಥಳೀಯರ ಮಧ್ಯಪ್ರವೇಶದಿಂದ ಪ್ರಕರಣ ಇತ್ಯರ್ಥಗೊಂಡಿದೆ.
Tagged with
cnews,
feature


ಮಂಗಳೂರು: ರಾತ್ರಿ ಕಟ್ಟಿ ಹಾಕಿದ್ದ ಕೋಣ ವನ್ನು ಅಪಹರಿಸಿ ಕೋಣದ ಕುತ್ತಿಗೆಯನ್ನು ಕಡಿಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಝೀರ್ ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ.
ಬಜಾಲ್ ನಿವಾಸಿ ಅಶ್ರಫ್ ಎಂಬವರಿಗೆ ಸೇರಿದ ಕೋಣವನ್ನು ಮೊನ್ನೆ ಮುಂಜಾನೆ ಈತ ಮತ್ತು ಇತರ ಕೆಲವರು ಅಪಹರಿಸಿ ಅಮಾನುಷವಾಗಿ ಹತ್ಯೆಗೈಯಲು ಯತ್ನಿಸಿದ್ದರು. ಚೂರಿ ಇರಿತಕ್ಕೆ ಒಳಗಾಗಿ ಹಂತಕನಿಂದ ತಪ್ಪಿಸಿಕೊಂಡು ಬಂದ ಕೋಣ ನೋವು ತಾಳಲಾರದೇ ಊರಿಡಿ ಅತ್ತಿಂದಿತ್ತ ಓಡಾ ಡುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಣದ ಮಾಲಕ ಕೂಡಲೇ ಅದನ್ನು ಪಶು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಘಟನೆ ಬಗ್ಗೆ ನಝೀರ್ ಸಲೀಂ ಹಾಗೂ ಇತರರ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವ ರಲ್ಲೀಗ ನಝೀರ್ ಬಂಧನವಾಗಿದ್ದು, ಉಳಿದ ಆರೋಪಿಗಳಿಗೆ ಶೋಧ ಮುಂದುವರೆದಿದೆ.
Tagged with
cnews,
feature


ಕಾಸರಗೋಡು: ಮೇ ೫ರವರೆಗೆ ನ್ಯಾಯಾಂಗ ಬಂಧನ ವಿಧಿಸಲ್ಪಟ್ಟು ಉಪ ಬಂದೀಖಾನೆಯಲ್ಲಿ ಕಳೆಯುತ್ತಿರುವ ಪೆರ್ಲ ದೇವಲೋಕ ಕೊಲೆ ಪ್ರಕರಣದ ಆರೋಪಿ ಇಮಾಂ ಹುಸೇನ್ ನನ್ನು ಎರಡು ದಿನಗಳೊಳಗಾಗಿ ನ್ಯಾಯಾ ಲಯದ ಅನುಮತಿ ಕೋರಿ ಮತ್ತೆ ತಮ್ಮ ವಶಕ್ಕೆ ಪಡೆಯುವುದಾಗಿ ಕ್ರೈಂಬ್ರಾಂಚ್ ತನಿಖಾ ಧಿಕಾರಿಗಳು ತಿಳಿಸಿದ್ದಾರೆ.
ಈತನಿಂದ ಹತ್ಯೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭಿಸಬೇಕಿರುವುದರಿಂದ ಶೀಘ್ರದಲ್ಲಿ ಕಸ್ಟಡಿಗೆ ಪಡೆಯುವುದು ಅನಿವಾರ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಕೋರ್ಟಿಗೆ ಹಾಜರುಪಡಿಸುವ ಮುನ್ನ ಇಮಾಂ ಹುಸೇನ್‌ನನ್ನು ತೀವ್ರ ವಿಚಾರಣೆ ಗೊಳಪಡಿಸಲಾಗಿ ಅನೇಕ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಕಳವುಗೈಯುವ ಉದ್ದೇಶ ದಿಂದಲೇ ತಾನು ದಂಪತಿಯನ್ನು ಭೀಕರವಾಗಿ ಹತ್ಯೆಗೈದಿರುವುದಾಗಿ ಆರೋಪಿ ಹೇಳಿದ್ದರೂ, ಪೊಲೀಸರು ಇದನ್ನು ಸಂಪೂರ್ಣ ನಂಬಲು ಇನ್ನೂ ಸಿದ್ಧರಾಗಿಲ್ಲ. ಯಾಕೆಂದರೆ, ಹತ ಭಟ್ಟರ ಪತ್ನಿ ಶ್ರೀಮತಿಯವರ ದೇಹದಲ್ಲಿದ್ದ ಯಾವುದೇ ಒಡವೆಗಳು ಕಳವು ಆಗಿರಲಿಲ್ಲ. ಆದರೆ ಅಂದು ಮನೆಯ ಕಪಾಟಿನಲ್ಲಿರಿಸಿದ್ದ ೧೦ ಪವನಿನಷ್ಟು ಚಿನ್ನ ಹಾಗೂ ನಗದನ್ನು ಈತ ದೋಚಿದ್ದನು. ಅಲ್ಲದೆ, ಹಲವು ಬಾರಿ ಭೇಟಿಯಾದಾಗ ಭಟ್ಟರಿಂದ ತಾನು ೨೨ ಸಾವಿರ ರೂ. ಪಡೆದಿದ್ದೆ ಎಂದೂ ಆರೋಪಿ ತಿಳಿಸಿದ್ದಾನೆ.
ತೋಟದಲ್ಲಿ ನಿಧಿ ಅಗೆದು ನೀಡುವುದಾಗಿ ಹೇಳಿ ಕೊಲೆ ನಡೆಸುವ ಮೊದಲು ಪ್ರಸಾದವೆಂದು ನಂಬಿಸಿ ಶ್ರೀಕೃಷ್ಣ ಭಟ್ ದಂಪತಿಯರಿಗೆ ನಿದ್ರೆ ಮಾತ್ರೆಯ ಹುಡಿಯನ್ನು ನೀರಿನಲ್ಲಿ ಬೆರೆಸಿ ನೀಡಿದ್ದುದಾಗಿ ಆರೋಪಿ ಹೇಳಿದ್ದಾನೆ. ನಿಧಿ ಪೂಜೆಯ ಬಗ್ಗೆ ಯಾರಲ್ಲೂ ಹೇಳಬಾರದೆಂದು ಎಚ್ಚರಿಕೆ ನೀಡಿದ್ದ ತಾನು ಮಕ್ಕಳನ್ನು ಬೇರೆಯೇ ಕೋಣೆಯಲ್ಲಿ ಮಲಗಿಸುವಂತೆಯೂ ತಿಳಿಸಿದ್ದೆ. ಮನೆಯ ಹೊರಗಡೆ ತೆಂಗಿನ ಬುಡದಲ್ಲಿ ಪ್ರಾರ್ಥಿಸಲು ಹೇಳಿ ಶ್ರೀಕೃಷ್ಣ ಭಟ್ಟರ ತಲೆಗೆ ಕಲ್ಲು ಹಾಕಿ ಅಲ್ಲೇ ಮುಗಿಸಿದ್ದೆ.
ಮಗಳ ಕೊಂದ ಪಿಶಾಚಿಯ ನನಗೊಮ್ಮೆ ತೋರಿಸಿ
ಮೃತ ಶ್ರೀಮತಿ ತಾಯಿಯ ಅಳಲು
ಇಮಾಂ ಹುಸೇನ್‌ನ ಕ್ರೂರ ಕೃತ್ಯಕ್ಕೆ ಬಲಿಯಾದ ದೇವಲೋಕದ ಶ್ರೀಕೃಷ್ಣ ಭಟ್ಟರ ಅತ್ತೆ, ಪತ್ನಿ ಶ್ರೀಮತಿಯ ತಾಯಿ ಆದ ವೃದ್ಧ ಮಹಿಳೆ ಆ ಭೀಕರ ಘಟನೆಯಿಂದ ಸುದೀರ್ಘ ಎರಡು ದಶಕದ ಬಳಿಕವೂ, ಮಾನಸಿಕ ಸ್ಥಿಮಿತ ಕಂಡು ಕೊಂಡಿಲ್ಲ. ಆದರೆ ಪುತ್ರಿ ಹಾಗೂ ಅಳಿಯನ ಹಂತಕನನ್ನು ಬಂಧಿಸಿರುವ ವಿಷಯ ಅವ ರಿಗೂ ಅರಿವಾಗಿದೆ. ನನ್ನ ಮಗಳ ಕೊಂದ ಆ ಪಿಶಾಚಿ ಎಲ್ಲಿದ್ದಾನೆ, ನನಗೊಮ್ಮೆ ತೋರಿ ಸಿಕೊಡಿ ಎನ್ನುತ್ತಾರೆ.
ಲಕ್ಷ್ಮಿ ಅಮ್ಮ ಎಂಬ ಮಾನಸಿಕ ಸ್ಥಿಮಿತ ಕಳಕೊಂಡಿರುವ ಈ ವೃದ್ಧೆ ಕಳೆದ ಕೆಲ ವರ್ಷಗಳಿಂದ ಕಾಸರಗೋಡು ಹಾಗೂ ಆಸುಪಾಸಿನಲ್ಲಿ ಅಲೆದಾಡುವುದು ಕಾಣಸಿಗು ತ್ತದೆ. ಆದರೆ ಹೆಚ್ಚಿನವರಿಗೆ ಇವರು ದೇವಲೋಕದ ಶ್ರೀಮತಿಯವರ ತಾಯಿ ಯೆಂದು ಗೊತ್ತಿಲ್ಲ. ದೇವಲೋಕ ದಂಪತಿ ಹತ್ಯೆ ನಡೆದಾಗ ಲಕ್ಷ್ಮಿ ಅಮ್ಮ ಮುಂಬೈ ಚೆಂಬೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದರು. ಸುದ್ದಿಯರಿತ ಬಳಿಕ ಮನಸ್ಸಿನ ಹತೋಟಿ ಕಳಕೊಂಡ ಲಕ್ಷ್ಮಿ ಅಮ್ಮ ಊರಿಗೆ ಬಂದು ಮತ್ತೆ ಮುಂಬೈಗೆ ತೆರಳಿದರೂ ಅಲ್ಲಿ ನಿಲ್ಲಲಾರದೆ ಮರಳಿ ಊರಿಗೆ ಬಂದಿದ್ದರು. ಆದರೆ ಸಂಬಂಧಿಕರ ಸಹಿತ ಯಾರೂ ಇವರಿಗೆ ಪಥ್ಯವಾಗಲಿಲ್ಲ. ಹೀಗೆ ಮನೆ ಬಿಟ್ಟು ತೆರಳಿದ ಇವರು ಅಲ್ಪ ಕಾಲ ಉಪ್ಪಳದ ವೃದ್ಧಾಶ್ರಮದಲ್ಲಿ ವಾಸವಿದ್ದರು. ಅಲ್ಲಿಂದ ಪರವನಡ್ಕದ ಅನಾಥ ಮಂದಿರದಲ್ಲಿ ಕಳೆಯುವಂತಾದರು. ಯಾರಲ್ಲೂ ಹೇಳದೆ ಕೇಳದೆ ತೆರಳುವ ಈ ಅಮ್ಮ ಕಾಸರಗೋಡಿನಾದ್ಯಂತ ನಡೆದಾಡುತ್ತಿರುವುದು ಎಂತಹ ಹೃದಯವನ್ನೂ ಕುಲುಕುವಂಥದ್ದು. ಶ್ರೀಮತಿ ಪುಟ್ಟ ಮಗುವಿದ್ದಾಗಲೇ ಲಕ್ಷ್ಮಿ ಅಮ್ಮರ ಪತಿ ಈಶ್ವರ ಭಟ್ ಇಹಲೋಕ ತ್ಯಜಿಸಿದ್ದರು.
Tagged with
cnews,
feature
ಸುಳ್ಯ: ಮನೆಯಿಲ್ಲದೆ ತುಂಬು ಗರ್ಭಿಣಿ ಮಹಿಳೆಯೂ ಸೇರಿದ ಕೊರಗ ಕುಟುಂಬವೊಂದರ ಸಂಕಷ್ಟದ ಕಥೆ ನೋಡುಗರ ಹೃದಯವನ್ನು ಕರಗಿಸುವಂತಿತ್ತು. ಸುಳ್ಯ ನಗರ ಸಮೀಪದ ಸೋಣಂಗೇರಿಯ ಹೊಸ ಗದ್ದೆಯ ಗೋಪಾಲ ಎಂಬವರ ಕುಟುಂಬದ ಗೋಳಿನ ಕಥೆ ಕೇಳುವವರೇ ಇಲ್ಲದಂತಾಗಿದೆ.
ಅನ್ನ ಬೇಯಿಸಲು ಇವರಿಗೆ ಜಾಗವಿಲ್ಲ, ಗರ್ಭಿಣಿಯಾದ ಪತ್ನಿ ಸುನಂದ, ಚಿಕ್ಕ ಮಗು ಕೀರ್ತಿ ಮತ್ತು ತಾಯಿ ತುಕ್ರುವಿನೊಂದಿಗೆ ಕಳೆದ ಅನೇಕ ವರ್ಷಗಳಿಂದ ಗೋಪಾಲ ಈ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಚಿಕ್ಕ ಮಗುವಿನ ಜೊತೆಗೆ ಇದೀಗ ಸುನಂದ ಗರ್ಭಿಣಿ. ಹಿಂದೆ ಇದ್ದ ಗುಡಿ ಸಲು ಮುರಿದು ಬೀಳಲು ಸಿದ್ಧವಾ ಗಿದ್ದು, ಮಳೆ ಬಂದರೆ ನೀರೆಲ್ಲ ಒಳಗೇ, ಒಂದು ಕಲ್ಲಿನ ಹಳೆಯ ಗೋಡೆಗೆ ಪ್ಲಾಸ್ಟಿಕ್ ಸುತ್ತಿದ ಸ್ಥಿತಿಯಲ್ಲಿ ಗುಡಿಸಲಿದೆ. ಹೊರಗೆ ಆಹಾರ ತಯಾರಿಸುತ್ತಾರೆ, ಮಳೆ ಇಲ್ಲದಿದ್ದರೆ ಇಲ್ಲೇ ಮಲಗುವುದು, ಮಳೆ ಬಂದರೆ ಅನ್ನ ಬೇಯಿಸಲು ಆಗು ವುದಿಲ್ಲ. ಜೊತೆಗೆ ಮಲಗಲು ಸಮೀಪದ ಮನೆಯ ಕೊಟ್ಟಿಗೆಯ ಆಶ್ರಯ ಪಡೆಯಬೇಕಾಗುತ್ತದೆ. ತುಂಬು ಗರ್ಭಿಣಿಯ ಸಮೇತ ಇವರು ನೆರೆಮ ನೆಯ ಕೊಟ್ಟಿಗೆಗೆ ಹೋಗಿ ಮಲಗುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಆರಂಭ ವಾಗುವ ಮಳೆಗಾಲದಲ್ಲಿ ಏನು ಮಾಡು ವುದು ಎಂಬ ಚಿಂತೆಯಲ್ಲಿದ್ದಾರೆ ಈ ಬಡ ಕುಟುಂಬ. ನಗರ ಪಂಚಾಯತ್ ಮತ್ತು ಸಂಬಂಧಪಟ್ಟವರು ಕಳೆದ ಅನೇಕ ವರ್ಷಗಳಿಂದ ಈ ಕುಟುಂಬಕ್ಕೆ ಮನೆ ನೀಡುವುದಾಗಿ ಭರವಸೆ ನೀಡು ವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಪಡಿತರ, ಮತದಾನದ ಗುರುತಿನ ಚೀಟಿ ಇದೆ. ಸರಕಾರದ ಯಾವುದೇ ಸೌಲಭ್ಯ ಗಳೂ ಸಹಾಯಗಳೂ ಇವರಿಗೆ ದೊರೆ ತಿಲ್ಲ. ಸರಕಾರಗಳು ಕೊರಗ ಮತ್ತಿತರ ಹಿಂದುಳಿದ ವರ್ಗಗಳಿಗೆಂದು ಕೋಟ್ಯಂ ತರ ರೂ. ವ್ಯಯಿಸುತ್ತಿದೆ. ಆದರೆ ಇವರ ದುರಂತವನ್ನು ಕೇಳು ವರೂ ನೋಡು ವವವರು ಯಾರೂ ಇಲ್ಲದಂತಾಗಿದೆ. ಸರಕಾರದ ಯಾವುದೇ ಸೌಲಭ್ಯಗಳೂ ಹೊಸ ಗದ್ದೆಯ ಈ ಕುಟುಂಬಕ್ಕೆ ಸಿಕ್ಕಿಲ್ಲ. ಇಲ್ಲೇ ಇರುವ ಮತ್ತೊಂದು ದೇಜು ಎಂಬವರ ಕೊರಗ ಸಮುದಾಯದ ಕುಟುಂಬಕ್ಕೂ ಮನೆಯಿಲ್ಲ.
Tagged with
dk,
feature,
lnews
ಈ ಕ್ಷೇತ್ರದಲ್ಲಿ ಶ್ರೀವಿನಾಯಕ ದೇವರ ವಿಗ್ರಹ ಒಂದು ಶ್ರೀಸುಬ್ರ ಹ್ಮಣ್ಯೇಶ್ವರನ ಗರ್ಭಗುಡಿಯ ಮೂಲಸ್ಥಾನದಲ್ಲಿ ಶ್ರೀಸುಬ್ರಹ್ಮಣ್ಯೇಶ್ವರನ ಎಡಬದಿಯಲ್ಲಿ ದೇವಳದ ಅರ್ಚಕ ಮತ್ತು ತಂತ್ರಿಗಳ ಹೊರತು ಇತರರ ಕಣ್ಣಿಗೆ ಬೀಳದಂತೆ ಗೋಪ್ಯವಾಗಿ ಇರಿಸಲ್ಪಟ್ಟಿದೆ. ಇದಕ್ಕೆ ಸಂಬಂಧಪಟ್ಟ ಆಗ ರೂಪಾ ೫೦೦ ಬೆಲೆಬಾಳುವ ಪುತ್ಥಳಿ ಚಿನ್ನದ ಕವಚ, ಸಾಧಾರಣ ೨೫೦೦ ರೂಪಾ ಬೆಲೆಬಾಳುವ ಬೆಳ್ಳಿ ಪಾಣಿಪಿಠ ಮತ್ತು ಒಂದು ಚಿನ್ನದ ಕಂಟಿ ಸರವು ಕೂಡಾ ದೇವಸ್ಥಾನದ ಟ್ರೆಜರಿ ಯಲ್ಲಿ ಉಪಯೋಗಿಸದೆ ಬಿದ್ದಿವೆ. ೧೮೮೦ನೇ ಇಸವಿವರೆಗೆ ದೇವಸ್ಥಾ ನದ ಊಳಿಗ ಪುಸ್ತಕದಲ್ಲಿ ವಿನಾಯಕ ಅಮಾನತು ಎಂಬ ಖರ್ಚು ಲೆಕ್ಕವು ಕಂಡುಬರುವುದರಿಂದಲೂ ೧೮೮೨ರಲ್ಲಿ ವಿನಾಯಕ ಅಮಾ ನತು ಎಂದು ಮಾತ್ರ ಬರೆದು ಖರ್ಚಿನ ಲೆಕ್ಕ ಕಾಣದೇ ಇರುವುದ ರಿಂದಲೂ ೧೮೮೨ರ ಆದಿಯಲ್ಲಿ ದೇವಳದ ಅರ್ಚಕ ಆಸ್ರಣ್ಣರೊಬ್ಬರೂ ಆಗಿನ ಆಡಳಿತೆದಾರರಾದ ಮಾಧ್ವ ಸ್ವಾಮಿಗಳಾದ ಶ್ರೀವಿದ್ಯಾ ಪೂರ್ಣರೂ ಮೈಲಿಗೆ ರೋಗದಿಂದ ನಿಧನಹೊಂದಿದ ಕಾರಣದಿಂ ದಲೂ ಸಾಧಾರಣ ೧೮೮೦-೮೨ರ ಸಮಯ ಈ ವಿನಾಯಕ ವಿಗ್ರ ಹವು ತನ್ನ ಸ್ಥಾನವನ್ನು ಕಳಕೊಂಡಿರಬಹುದೆಂದು ಊಹಿಸಬೇಕಾ ಗುತ್ತದೆ.
ಅದೃಶ್ಯವಾದ ಶ್ರೀವಿನಾಯಕ ದೇವರ ಉಪದ್ರವ ಬಾರದಂತೆ ಜನತೆಯ ಕಣ್ಣನ್ನು ಕಟ್ಟಲು ಈ ಕೆಲವು ಕೃತ್ರಿಮ ತರದ ಪೂಜಾದಿ ಗಳು ದೇವಸ್ಥಾನದಲ್ಲಿ ನಡೆಯುತ್ತವೆ. ಉಪದ್ರವ ಕಂಡುಬಂದ ಎಡೆಗ ಳಲ್ಲಿ ವಿನಾಯಕ ಚತುರ್ಥಿ ದಿವಸ ಮಣ್ಣಿನ ಗಣಪತಿಯನ್ನು ಇಟ್ಟು ಪೂಜಿಸುವ ವ್ಯವಸ್ಥೆ ಮಾಡಲ್ಪಟ್ಟಿದೆ. ಈ ಗಣಪತಿಗಳಲ್ಲಿ ಮಡಿಗಣಪತಿ ಮತ್ತು ಬಣ್ಣದ ಗಣಪತಿಗಳೆಂದು ಎರಡು ವಿಧ. ಅರ್ಚಕರೆ ಸ್ನಾನ ಮಾಡಿ ಶುದ್ಧ ಮಣ್ಣಿನಿಂದ ಗಣಪತಿ ಮಾಡಿ ಪೂಜೆಗೆ ಇಡುವುದನ್ನು ಮಡಿ ಗಣಪತಿ ಎಂದೂ ಹೊರಗೆ ತಯಾರಾದ ಗಣಪತಿಯನ್ನು ತಂದು ಇಡುವ ಗಣಪತಿಗೆ ಬಣ್ಣದ ಗಣಪತಿ ಎಂದು ಹೆಸರು. ದೇವರ ಮಂಟಪದಲ್ಲಿ ಮಡಿ ಗಣಪತಿ ೧, ಚಾವಡಿಯಲ್ಲಿ ಮಡಿ ಗಣಪತಿ ೨, ಬಣ್ಣದ ಗಣಪತಿ ೧, ವಾಲಗದ ಗೋಪುರದಲ್ಲಿ ಬಣ್ಣದ ಗಣಪತಿ ೧, ಗೌರಿ ಮಂಟಪದಲ್ಲಿ ಬಣ್ಣದ ಗಣಪತಿ ೧, ಶೃಂಗೇರಿ ಮಠದಲ್ಲಿ ಮಡಿ ಗಣಪತಿ ೧, ಇದೇ ರೀತಿ ಮಾಧ್ವ ಮಠದ ಈಗಿನ ಸಂಪುಟ ನರಸಿಂಹ ಗುಡಿಯಲ್ಲಿಯಲ್ಲಿಯೂ ಮಡಿ ಗಣಪತಿ ೧, ಬಣ್ಣದ ಗಣಪತಿ ೧ ಈ ಪ್ರಕಾರ ೯ ಗಣಪತಿ ಇಟ್ಟು ದೇವಸ್ಥಾನದಲ್ಲಿ ೧೦೦೮ ತೆಂಗಿನ ಕಾಯಿಗಳನ್ನು ಮಾಧ್ವ ಮಠದ ಗುಡಿಯಲ್ಲಿ ೧೦೮ ತೆಂಗಿನ ಕಾಯಿಗಳನ್ನು ಒಡೆದು ಪಲ್ಲ ಹಾಕಿ ಪಲ್ಲಪೂಜೆ ಮಾಡುವ ಕ್ರಮವಿದೆ. ಮೊದಲು ದೇವಸ್ಥಾನದಲ್ಲಿ ೧೦೮ ತೆಂಗಿನ ಕಾಯಿಗಳ ಗಣ ಹೋಮವೂ ಮಾಧ್ವ ಮಠದ ಗುಡಿಯಲ್ಲಿ ೧೨ ತೆಂಗಿನ ಕಾಯಿಗಳ ಗಣ ಹೋಮವೂ ನಡೆಯುತ್ತಿತ್ತು. ಈಗ ಅದನ್ನು ನಿಲ್ಲಿಸಿ ದೇವಳದಲ್ಲಿ ೧೨ ತೆಂಗಿನ ಕಾಯಿಗಳಿಗೂ, ಮಠದ ಗುಡಿಯಲ್ಲಿ ೨ ಕಾಯಿಗಳಿಗೂ ಇಳಿಸಿರು ತ್ತಾರೆ. ಅಲ್ಲದೆ ಮಾಧ್ವ ಮಠದ ಸ್ವಾಮಿಗಳು ಪ್ರತಿವರ್ಷ ಗಣೇಶ ಚತುರ್ಥಿ ದಿವಸ ತಮ್ಮ ಮಠದಲ್ಲಿ ಹೋಮ ಪೂಜೆಗಳನ್ನು ನಡೆಸುವುದಕ್ಕೆ ಮುಂಚಿತ ವಾಗಿ ಶ್ರೀಸುಬ್ರಹ್ಮಣ್ಯನ ಗರ್ಭಗುಡಿಯಲ್ಲಿ ಗೋಪ್ಯವಾಗಿ ಇರಿಸಲ್ಪಟ್ಟ ಮಹಾ ಗಣಪತಿಯ ಸನ್ನಿಧಿಗೆ ಬಂದು ಮೊದಲು ೨ ತೆಂಗಿನಕಾಯಿ ಮತ್ತು ಎರಡು ರೂಪಾ ಪ್ರಾಯಶ್ಚಿತ್ತ ಇಡುತ್ತಿದ್ದರು. ಆಮೇಲೆ ಅದನ್ನು ಒಂದು ತೆಂಗಿನ ಕಾಯಿ ಮತ್ತು ನಾಲ್ಕಾಣೆಗೆ ಇಳಿಸಿರುತ್ತಾರೆ. ದೇವಳಕ್ಕೂ ಮಠಕ್ಕೂ ವ್ಯಾಜ್ಯ ಆರಂಭಿಸಿದ ಮೇಲೆ ಅದು ನಿಂತುಹೋಯಿತು. ಈ ಪ್ರಾಯಶ್ಚಿತ್ತದ ತೆಂಗಿನ ಕಾಯಿ ಮತ್ತು ಹಣವು ದೇವಳದ ತಂತ್ರಿಗಳಿಗೆ ಸಿಕ್ಕುತ್ತಿತ್ತು. ಆ ವಿಷಯವು ಅತಿ ಗುಟ್ಟಾದ ವಿಷಯ. ಇದರಿಂದ ದೇವಳದ ಮಾಧ್ವ ತಂತ್ರಿ ಮತ್ತು ಅರ್ಚ ಕರ ಸಹಕಾರದಿಂದಲೇ ಮುಂಚಿನ ಮಾಧ್ವ ಸ್ವಾಮಿಗಳು ವಿನಾಯಕ ವಿಗ್ರಹವನ್ನು ಸುಬ್ರಹ್ಮಣ್ಯನ ಗರ್ಭಗೃಹದಲ್ಲಿ ಗುಪ್ತವಾಗಿರಿಸಲ್ಪಟ್ಟಿರಬಹುದೆಂದು ತಿಳಿಯ ಬಹುದಾಗಿದೆ. ಈ ದೇವಳದಲ್ಲಿ ಮಹಾ ಗಣಪತಿಗೆ ಇಷ್ಟು ಬೆಲೆ ಬರುವ ಆಭರಣಗಳಿದ್ದು ಈ ರೀತಿಯ ಸೇವೆ ಸಲ್ಲುತ್ತಿರುವಾಗ ಆ ಅಡಗಿ ಕುಳಿತ ಗಣಪತಿ ವಿಗ್ರಹಕ್ಕೆ ತನ್ನದೇ ಆದ ಒಂದು ಗುಡಿ ಇದ್ದಿರಲೇಬೇಕು. ಅಲ್ಲದೆ ಶೈವ ಕ್ಷೇತ್ರವಾದ ಈ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯನಿಗೆ ಪರಿವಾರ ದೇವರಾಗಿ ಮಹಾ ಗಣಪತಿಯು ಸುಬ್ರಹ್ಮಣ್ಯನ ಬಲಭಾಗದಲ್ಲಿ ಅಂದರೆ ಆಗ್ನೇಯ ಮೂಲೆಯಲ್ಲಿ ಶಾಸ್ತ್ರೋಕ್ತವಾಗಿಯೂ ಇದ್ದಿರಲೇಬೇಕು. ಮಹಾ ಗಣಪತಿ ಇರಬೇಕಾದ ಗುಡಿಯಲ್ಲಿ ದೇವಳಕ್ಕೆ ಏನೂ ಸಂಬಂಧಪ ಡದ ಒಂದು ಮಾಧ್ವ ವೈಷ್ಣವಮಠದ ವೈಯ್ಯಕ್ತಿಕ ನರಸಿಂಹ ದೇವರು ಬಂದು ಆಕ್ರ ಮಿಸಿರುವುದು ವಿಚಿತ್ರವಾಗಿದೆ. ಶಿವಸಂಬಂಧವಾದ ದೇವಾಲಯಗಳಲ್ಲಿ ಗಣಪತಿ ಗುಡಿ ಇಲ್ಲದೇ ಇರುವುದು ಅಸಂಭವವು. ದೇವಸ್ಥಾನದಲ್ಲಿ ಮಣ್ಣಿನ ಗಣಪತಿ ಇಟ್ಟು ಪೂಜಿಸುವುದು ಕೃತ್ರಿಮ ಪದ್ಧತಿ. ಈ ಸುಬ್ರಹ್ಮಣ್ಯ ದೇವಸ್ಥಾ ನದಲ್ಲಿ ಮಾತ್ರ ಕಂಡುಬರುವುದಾಗಿದೆ.
ಮಾಧ್ವ ಮಠದ ಸ್ವಾಮಿಗಳು ಆಕ್ರಮಿಸಲ್ಪಟ್ಟ ಗುಡಿಯಿಂದ ಹೊರ ಹೋಗಲು ಒಂದು ದ್ವಾರವನ್ನು ಗುಡಿಗೆ ಎದುರಾಗಿ ತೆಗೆದಿದ್ದರೂ, ಅವನ ನರಸಿಂಹ ಜಯಂತೀ ಉತ್ಸವ ಮತ್ತು ಉದ್ಪಾರ್ಚನೆ ಸಮಯ ಅವರ ದೇವರು ಹೊರಹೋಗುವುದೂ ಒಳಕ್ಕೆ ಬರುವುದು ಶ್ರೀಸುಬ್ರಹ್ಮಣ್ಯ ದೇವರ ಮಹಾದ್ವಾರದ ಮೂಲಕವೇ ಆಗಿದೆ. ಅವರ ಗುಡಿಯ ಎದುರಿನ ದ್ವಾರದಿಂ ದಲ್ಲ. ಅವರ ಗುಡಿಯ ಎದುರು ಮೊದಲು ದ್ವಾರವಿದ್ದಿಲ್ಲವೆಂದು ವ್ಯಕ್ತವಾ ಗುತ್ತದೆ. ಅದೂ ಅಲ್ಲದೆ ಇನ್ನೊಂದು ನಿದರ್ಶನವೇನೆಂದರೆ ಮಠದ ವರು ಪೂಜೆ ಮಾಡಿ ಅವರ ಹೊರಬಾಗಿಲಿಗೆ ಬೀಗಹಾಕಿ ಹೋದೊಡನೆ ದೇವಳದ ಕಡೆಯವರು ಅವರ ಬಾಗಿಲಿಗೆ ಒಳಕೀಲು ಹಾಕಿ ಅವರು ಹಾಕಿದ ಬೀಗಕ್ಕೆ ಅರಗಿನ ಮುದ್ರೆ ಹಾಕುವ ಕ್ರಮವಿದೆ. ಹಾಗೆ ಮುದ್ರೆ ಹಾಕಿದ್ದನ್ನು ಮರುದಿವಸ ದೇವಸ್ಥಾನದ ಹೆಬ್ಬಾರನು ತೆಗೆಸಿಕೊಟ್ಟ ನಂತರವೆ ಮಠದವರು ತಮ್ಮ ಬೀಗ ತೆಗೆಯಬೇಕಾಗಿದೆ. ಮಠದವರು ಆಕ್ರಮಿಸಿದ ಗುಡಿಯೇ ದೇವಳದ ವಿನಾಯಕ ಗುಡಿಯಾಗಿತ್ತೆಂದು ದೃಢಪಡಿಸಲು ಇವರ ಆಕ್ರಮಣದ ನಂತರವೂ ಆ ಗುಡಿಗೆ ಚೌತಿ ಸಮಯ ೫ ತೆಂಗಿನಕಾಯಿ ಹಬ್ಬದ ಸಮಯ ೫ ಸೇರು ಅವಲಕ್ಕಿ ದೇವ ಳದಿಂದ ಸಲ್ಲುತ್ತದೆ ಅದನ್ನು ಮಠದವರು ಉಪಯೋಗಿಸುತ್ತಾರೆ. ಅದೂ ಅಲ್ಲದೆ ಮಠದವರು ವಿನಾಯಕ ಚೌತಿ ಸಂದರ್ಭದಲ್ಲಿ ಮೂರು ದಿವಸ ಅವರು ಆಕ್ರಮಿಸಿದ ಮಣ್ಣಿನ ಗುಡಿಯಲ್ಲಿ ಗಣಪತಿಯ ವಿಗ್ರಹವನ್ನು ಇಟ್ಟು ಪೂಜಿಸಿ ಕಡ ದಿನ ಪಾಲಕಿಯಲ್ಲಿ ಆ ಗಣ ಪತಿಯನ್ನು ಬೀದಿಯಲ್ಲಿ ಮೆರವಣಿಗೆ ಮಾಡಿ ಹೊಳೆಯಲ್ಲಿ ವಿಸರ್ಜನೆ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ. ಇದ ರಿಂದ ಗೋಪ್ಯವಾಗಿರುವ ವಿಗ್ರ ಹವು ಆ ಗುಡಿಯಲ್ಲಿರುವಾಗ ವಿನಾಯಕ ಚೌತಿ ದಿವಸ ಆ ವಿನಾಯಕನಿಗೆ ಉತ್ಸವವು ವಿಜೃಂಭಣೆಯಲ್ಲಿ ನಡೆಯುತ್ತಿತ್ತೆಂದೂ ಅದನ್ನು ಮಠದವರೂ ನಡೆಸದಿದ್ದರೆ ಅವರಿಗೆ ಉಪದ್ರವಗಳುಂಟಾಗುತ್ತಿತ್ತೆಂದು ಊಹಿಸಬೇಕು.
ಈ ಆಕ್ರಮಿತ ಗುಡಿಯಲ್ಲಿ ಶ್ರೀಮಹಾಗಣಪತಿ ವಿಗ್ರಹವು ಇರುತ್ತಿದ್ದ ಸಮ ಯದಲ್ಲೇ ಗುಡಿಯ ಹತ್ತಿರದ ಆಗ್ನೇಯ ಮೂಲೆಯ ಪೌಳಿಯಲ್ಲಿ ವಾಸಿಸು ತ್ತಿದ್ದ ಸ್ವಾಮಿಗಳು ದೇವಳವನ್ನೇ ಆಕ್ರಮಿಸುವ ಹಂಚಿಕೆಯನ್ನು ಇಟ್ಟುಕೊಂಡು ಗಣಪತಿಯ ಪೂಜೆಯನ್ನು ತಾನೇ ಮಾಡುವುದಾಗಿ ಆಗಿನ ಆಡಳಿತೆದಾರ ರಾದ ಹೆಬ್ಬಾರರ ಮನ ಒಲಿಸಲು ಪ್ರಯತ್ನಪಟ್ಟರೆಂದು ತಿಳಿದು ಬರುತ್ತದೆ. ಮೊತ್ತಮೊದಲು ಹೆಬ್ಬಾರರು ಇದಕ್ಕೆ ಒಪ್ಪಿಗೆ ಕೊಡದೇ ಇದ್ದುದರಿಂದ ಸ್ವಾಮಿ ಗಳೂ ಅವರಿಗೆ ಅನೇಕ ಮಾನ ಮರ್ಯಾದೆಗಳೊಂದಿಗೆ ಸಾಲಿಗ್ರಾಮಗಳನ್ನು ಕೊಟ್ಟು ಮನ ಒಲಿಸಿ ಗಣಪತಿ ಗುಡಿಯ ಪೂಜೆಯನ್ನು ವಹಿಸಿಕೊಂಡರೆಂದು ತಿಳಿದುಬರುತ್ತದೆ. ಈ ಸಂದರ್ಭದಲ್ಲಿ ದೇವಳದ ಆಗಿನ ಅರ್ಚಕರಾದ ಸ್ಥಳದ ಸ್ಮಾರ್ತ ಶಿವ ಬ್ರಾಹ್ಮಣರಾದ ಮೊರೋಜ ನಾರಾಯಣ ಭಟ್ಟರು ಒಪ್ಪಿಗೆ ಕೊಡ ಲಿಲ್ಲ. ಸ್ವಾಮಿಗಳಿಗೆ ಮೊರೋಜರೊಡನೆ ಕೈ ಸಾಗದಿರಲು ಸ್ವಾಮಿಗಳು ಅರ್ಚ ಕರಾದ ಮೊರೋಜರ ಕುಟುಂಬಕ್ಕೆ ಕೃತ್ರಿಮ ಛಿದ್ರ ಮೊದಲಾದವುಗಳನ್ನು ಮಾಡಿಸಿ ಅನೇಕ ತರದ ಉಪದ್ರವಗಳನ್ನು ಕೊಟ್ಟು ಪೀಡಿಸಿ ಗುಡಿಯ ಅರ್ಚ ಕತನವನ್ನು ಸ್ವಾಧೀನಪಡಿಸಿಕೊಂಡರೆಂದು ತಿಳಿದು ಬರುತ್ತದೆ. ಈ ಕೃತ್ರಿಮ ದೋಷವನ್ನು ಸರಿಪಡಿಸಲು ಸಾಧ್ಯವಾಗದೆ ಮೊರೋಜರು ತಮ್ಮ ದೇವಳದ ಅರ್ಚಕತನವನ್ನು ತನ್ನ ಬಳ್ಪ ಗ್ರಾಮದ ಕೃಷ್ಣ ಎಡಪ್ಪತ್ತಾಯರಿಗೆ ಬಿಟ್ಟುಹೋ ದರು. ಇದರಿಂದ ಅಷ್ಟರವರೆಗೆ ಇದ್ದ ಶ್ರೀಸುಬ್ರಹ್ಮಣ್ಯ ದೇವಳದ ಮತ್ತು ಗಣ ಪತಿ ಗುಡಿಯ ಅರ್ಚಕತನವು ಅಂದಿನಿಂದ ಮೊರೋಜರಿಗೆ ಬಿಟ್ಟುಹೋ ಯಿತು. ಇದು ೧೮೨೦ನೇ ಇಸವಿಯಲ್ಲಿ ನಡೆದಿರಬೇಕು.
Tagged with
dharmabrashta,
lekhana
ಲೋಕನಾಥ್, ಪುತ್ತೂರು
ನಾನು ಬರೆದ ಪತ್ರಕ್ಕೆ ಎ. ೮ ರಂದು ಅಶೋಕ್ ಹಲಾಯಿಯವರು ಉತ್ತರಿಸಿದ್ದಾರೆ. ಸಾಲ ಮೇಳ, ಕೆಲವು ವಿದ್ಯಾಸಂಸ್ಥೆಗಳ ಸ್ಥಾಪನೆಯನ್ನು ಹೊರ ತುಪಡಿಸಿ ಪೂಜಾರಿಯವರು ಅಷ್ಟೂ ಸಮಯ ಜನರ ಪ್ರತಿನಿಧಿಯಾಗಿದ್ದು ಜಿಲ್ಲೆಗೆ ಹೇಳಿಕೊಳ್ಳುವಂತಹಾ ಅಭಿವೃದ್ಧಿ ಏನು ಮಾಡಿದ್ದಾರೆ ಎಂಬುದು ನನ್ನ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರವಾಗಿ ಅಶೋಕ್ ಹಲಾಯಿಯವರು ಪೂಜಾ ರಿಯವರು ಸಂಸದರಾಗಿ, ಮಂತ್ರಿಯಾಗಿ ಏನು ಮಾಡಿದ್ದಾರೆ ಎಂದು ಉತ್ತರ ಬಯಸಿ ಪೂಜಾರಿಯವರನ್ನೇ ಪ್ರಶ್ನಿಸಲಿ. ಇಸವಿ, ಕೆಲಸಗಳ ಸಮೇತ ಪತ್ರ ಬರೆದು ಅವರಿಂದಲೇ ಉತ್ತರ ಪಡೆಯಲಿ ಎಂದು ಹೇಳಿದ್ದಾರೆ. ಇದು ಯಾವ ರೀತಿಯ ಉತ್ತರ ಎಂದು ತಿಳಿಯುತ್ತಿಲ್ಲ. ಈ ರೀತಿ ಪತ್ರ ಬರೆದು ಉತ್ತರ ಬಯಸಿ ಎಂದು ಅಶೋಕ್ ಹಲಾಯಿಯವರು ಹೇಳುವುದೂ ಉಚಿತವಲ್ಲ. ಒಂದು ವೇಳೆ ನಾನು ಪತ್ರ ಬರೆದು ಅದಕ್ಕೆ ಉತ್ತರ ಸಿಕ್ಕಿದರೂ ಏನು ಸಿಗಬ ಹುದು ಎಂದು ಆಲೋಚಿಸಬೇಕಾಗುತ್ತದೆ.
ಯಾಕೆಂದರೆ ಯಾವುದೇ ಎಂಪಿ, ಎಂಎಲ್‌ಎಗಳಿಗೂ ಅವರ ಅವಧಿ ಯನ್ನು ಅವರವರ ಕ್ಷೇತ್ರದ ಅಭಿವೃದ್ಧಿಗೆ ಒಂದಷ್ಟು ಅನುದಾನಗಳು ಬಂದಿರು ತ್ತವೆ. ಒಂದಷ್ಟು ಅಭಿವೃದ್ಧಿಯೂ ಆಗಿರುತ್ತದೆ. ಇದೆಲ್ಲಾ ಮಾಡದೇ ಇದ್ದರೆ ಯಾರಾದರೂ ಜನ ಪ್ರತಿನಿಧಿಗಳಾಗಿ ಆಯ್ಕೆಯಾಗುವುದಾದರೂ ಯಾಕೆ? ಇಂತಹಾ ಅಭಿವೃದ್ಧಿ ಕಾರ್ಯಗಳು ಯಾವುವು? ಎಂದು ಪ್ರಶ್ನಿಸಿ ಪತ್ರ ಬರೆ ಯುವುದರ ಬದಲು ಸಾಮಾನ್ಯವಾಗಿ ಯಾವುದಾದರೂ ಎಂ.ಪಿ. ಎಮ್‌ಎ ಲ್‌ಎ ಕೋಟಾದಿಂದ ಯಾವುದೆಲ್ಲಾ ಅಭಿವೃದ್ಧಿಯಾಗಿದೆ ಎಂದು ಊಹಿಸಬ ಹುದಾಗಿದೆ. ಕೆಲವು ರಸ್ತೆ ಅಭಿವೃದ್ದಿ, ಹೊಸ ರಸ್ತೆ ನಿರ್ಮಾಣ. ಒಂದಷ್ಟು ಅನು ದಾನಗಳು ಇವೆಲ್ಲವನ್ನು ಪಟ್ಟಿ ಮಾಡಿ ಒಂದು ದೊಡ್ಡ ಪುಸ್ತಕವನ್ನೇ ಮಾಡಬಹುದು. ಆದರೆ ಅಭಿವೃದ್ದಿ ಎಂದರೆ ಇದು ಮಾತ್ರವೇ?
ಇದೆಲ್ಲಾ ಸಾಮಾನ್ಯ ಕೆಲಸ ಕಾರ್ಯಗಳು. ಇವೆಲ್ಲವುಗಳ ನಡುವೆ ಎದ್ದು ಕಾಣುವಂತಹಾ, ಅಂದಿನ ಜನರು ಮತ್ತು ಮುಂದಿನ ತಲೆಮಾರು ಸದಾ ನೆನ ಪಿಟ್ಟಿಕೊಳ್ಳುವಂತಹಾ ಕೆಲಸ, ಮೂಲಭೂತ ಸೌಕರ್ಯ ಇತ್ಯಾದಿಗಳು ಏನಾ ದರೂ ಆಗಿದೆಯೇ? ಇದನ್ನು ನೇರವಾಗಿ ಪ್ರಶ್ನೆ ಮಾಡಿ ಕೇಳುವ ಅಗತ್ಯವೂ ಇಲ್ಲ. ಹಾಗೇನಾದರೂ ಆಗಿದ್ದರೆ ಅದು ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಯಾರು ಕೂಡಾ ಅದನ್ನು ಹೇಳಬೇಕಾದ ಅವಶ್ಯಕತೆ ಇರುವುದಿಲ್ಲ. ನಾನು ಕೇಳಿದ್ದು ಇಂತದ್ದು ಏನಾದರೂ ಇದೆಯಾ ಎಂದು. ರಸ್ತೆ ಗುಂಡಿ ಮುಚ್ಚಿದ್ದು, ತೇಪೆ ಹಾಕಿದ್ದು, ಚರಂಡಿ ತೋಡಿದ್ದು ಇದಕ್ಕೆಲ್ಲಾ 'ಕ್ರಾಂತಿಕಾರಿ' ವ್ಯಕ್ತಿಗಳ ಅಗ ತ್ಯವಿಲ್ಲ.
ಮಲ್ಯ, ಮೊಯ್ಲಿಯವರು ಮಾಡಿದ್ದೇನೆಂದು ನಮ್ಮ ಕಣ್ಣ ಮುಂದೆಯೇ ದೃಷ್ಟಾಂತಗಳು ಇವೆ. ಇಂದಿನ ತಲೆಮಾರು ಇದರ ಸಿಹಿಯನ್ನು ಅನುಭವಿಸು ತ್ತಲೂ ಇವೆ. ಮುಂದೆಯೂ ಇದು ಸದಾ ಕಾಲ ಜನರಿಗೆ ಉಪಕಾರವನ್ನು ಮಾಡಲಿದೆ. ಇಂತಹ ಕೆಲಸಗಳ ಕಾರಣದಿಂದ ಮೊಯ್ಲಿ, ಮಲ್ಯ, ಜಾರ್ಜ್ ಫೆರ್ನಾಂಡಿಸ್ ಮುಂತಾದವರು ಎಂದಿಗೂ ಜನಮಾನಸದಿಂದ ಮರೆತು ಹೋಗು ವುದಿಲ್ಲ.
ಅಟಲ್‌ಬಿಹಾರಿಯವರು ಜನಾರ್ದನ ಪೂಜಾರಿಯವರನ್ನು ಹೊಗಳಿದ್ದರೆ ಅದು ಅಟಲ್ ಬಿಹಾರಿಯವರ ದೊಡ್ಡತನ. ತನ್ನನು ಜೈಲಿಗಟ್ಟಿ ಶಿಕ್ಷೆ ನೀಡಿದ ಇಂದಿರಾಗಾಂಧಿಯವರನ್ನೇ ಅಟಲ್‌ಬಿಹಾರಿಯವರು 'ದುರ್ಗಾಮಾತೆ' ಎಂದು ಹೊಗಳಿದ್ದೂ ನಿಮಗೆ ಗೊತ್ತಿರಬಹುದು. ಇಷ್ಟಕ್ಕೂ ನಾನೇನು ಪೂಜಾರಿಯ ವರು ಕಪ್ಪು ಚುಕ್ಕೆ ಇರುವ ಮನುಷ್ಯ ಎಂದು ಎಲ್ಲೂ ಹೇಳಿಲ್ಲವಲ್ಲ!.
ಸಾಲ ಮೇಳದ ಬಗ್ಗೆ ಹಿಂದಿನ ಪತ್ರದಲ್ಲಿ ನನ್ನ ಅಭಿಪ್ರಾಯ ಹೇಳಿದ್ದೇನೆ ಮತ್ತೆ ಅದನ್ನೇ ಹೇಳಲು ಬಯಸುವುದಿಲ್ಲ. ನೀವು ನಿಮ್ಮ ಪತ್ರದಲ್ಲಿ ಹೇಳಿದಂತಹಾ ಕೆಟ್ಟ ಕೆಲಸಗಳನ್ನು ಪೂಜಾರಿಯವರು ಮಾಡಿಲ್ಲ. ಹಾಗಿರುವಾಗ ಅವರ ಬಗ್ಗೆ ಹೇಳುವುದಕ್ಕೆ ನಾಚಿಕೆ ಯಾಕೆ ಪಡಬೇಕು ಎಂದಿದ್ದೀರಿ. ಇದು ನಿಮ್ಮ ಸರಿಯಾದ ಅಭಿಪ್ರಾಯ. ಆದರೆ ಇಲ್ಲಿ ಬೇರೆಯವರು ಮಾಡಿದ್ದನ್ನು ಪೂಜಾರಿಯವರು ಮಾಡಿದ್ದು ಎಂದು ನಿಮ್ಮಂತವರು ಹೇಳುತ್ತಿದ್ದಾರಲ್ಲ ಅದಕ್ಕಾಗಿ ನೀವು ನಾಚಿಕೆ ಪಡಬೇಕು. ಪೂಜಾರಿಯವರನ್ನು ಮುಜುಗರಕ್ಕೆ ಈಡು ಮಾಡುವ ಇಂತಹಾ ಕೆಲಸವನ್ನು ಎಂದಿಗೂ ಮಾಡಬೇಡಿ. ಇಂತಹ ಹಿಂಬಾಲಕರಿಂದಲೇ ಪೂಜಾರಿಯವರು ಚುನಾ ವಣೆಯಲ್ಲಿ ಸೋಲಲು ಪ್ರಮುಖ ಕಾರಣ ಎಂಬುದನ್ನು ಎಂದಿಗೂ ಮರೆಯ ಬೇಡಿ.
ತಲೆ, ಬುದ್ಧಿ, ಶಕ್ತಿ ಇದ್ದವರು ಪೂಜಾರಿಯವರ ಸಾಲದಿಂದ ಉನ್ನತಿಗೇರಿ ದ್ದಾರೆ ಎಂಬುದು ನಿಜ. ಆದರೆ ಬ್ಯಾಂಕುಗಳು ಸಾಲ ಪಡೆದವರು ಸಾಲ ಹಿಂತಿರು ಗಿಸುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ನೋಡುತ್ತದೆ. ಇದೆಲ್ಲಾ ನೀತಿ ನಿಯಮಗಳು, ಇದರ ಪ್ರಕಾರ ಬ್ಯಾಂಕು ಸಾಲ ಕೊಡುತ್ತದೆ ನಿಜ. ಕೆಲವು ಬಡವ ರನ್ನು ಬ್ಯಾಂಕುಗಳು ಕ್ಯಾರ್ ಮಾಡದೆ ಇದ್ದ ಸಂದರ್ಭದಲ್ಲಿ ಪೂಜಾರಿಯವರ ಕ್ರಮ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಆದರೆ ದುರ್ಬುದ್ದಿ ಇದ್ದವರೂ ಸಾಲ ತೀರಿಸಲು ಅಸಮರ್ಥರಾದವರೂ ಬ್ಯಾಂಕ್‌ನವರ ನೀತಿ ನಿಯಮಗಳ ಅಳತೆ ಗೋಲಿಗೆ ಒಳಪಡದವರು ಪೂಜಾರಿಯವರ ಒತ್ತಡದಿಂದ ಸಾಲ ಪಡೆದು ಬ್ಯಾಂಕಿಗೆ ವಂಚಿಸಿದ್ದಾರೆ. ಸಾಲ ಪಡೆದು ಉನ್ನತಿಗೇರಿದವರ ಬಗೆಗಿನ 'ಕ್ರೆಡಿಟ್ಟು' ಪೂಜಾರಿ ಯವರಿಗೆ ಸಿಗುವುದಾದರೆ. ವಂಚಿಸಿದವರ 'ಕ್ರೆಡಿಟ್ಟಿ'ಗೂ ಪೂಜಾರಿಯವರೇ ಕಾರ ಣವಲ್ಲವೇ? ಯಾಕೆ ಇಲ್ಲ ಅನ್ನುತ್ತೀರಾ? ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ.
ಓಟಿಗಾಗಿ, ಕೋಳಿ, ಹೆಂಡ, ಹಣ ಇತ್ಯಾದಿಗಳನ್ನು ಹಂಚಿ ಓಟು ಪಡೆದವ ರಿಗಿಂತ ಪರಿಮಳ ಬರುವ ಮಲ್ಲಿಗೆ ಹಂಚಿದ್ದಾರೆ. ಇದರಿಂದ ಸಮಾಜಕ್ಕೆ ಏನು ನಷ್ಟ ಇಲ್ಲ ಎಂದು ಬರೆದಿದ್ದೀರಿ? ಅಶೋಕ್ ಹಲಾಯಿಯವರೇ ಇದು ಯಾವ ಪ್ರಜಾ ಪ್ರಭುತ್ವ.? ಓಟಿಗಾಗಿ ಏನನ್ನಾದರೂ ಹಂಚುವುದು ತಪ್ಪೆಂದು ನಿಮಗೆ ಗೊತ್ತಿ ಲ್ಲವೇ? ಓಟಿನ ಸಂದರ್ಭದಲ್ಲಿ ಹಂಚುವ ಮಲ್ಲಿಗೆಯು ಕೋಳಿ, ಹೆಂಡ, ಹಣ ಇತ್ಯಾದಿಗಳಿಗಿಂತ ಹೇಗೆ ಭಿನ್ನವಾಗುತ್ತದೆ. ಓಟಿಗಾಗಿ ಮಲ್ಲಿಗೆ ಹಂಚುವುದೂ ಮಾರ ಕವೇ ಆಗಿದೆ. ಈ ಕಾರಣಕ್ಕಾಗಿ ಪೂಜಾರಿಯವರು ಮಹಿಳೆಯರಿಗೆ ಮಲ್ಲಿಗೆ ಹಂಚಿ ದರೆ, ಉಳಿದವರು ಗಂಡಸರಿಗೆ ಬೇಕಾದದ್ದು ಹಂಚಿದ್ದಾರೆ ಎಂದು ನಾನು ಹಿಂದೊಮ್ಮೆ ಬರೆದಿದ್ದೆ. ಓಟಿನ ಸಂದರ್ಭದಲ್ಲಿ ಇವೆಲ್ಲವೂ ಪ್ರಜಾಪ್ರಭುತ್ವಕ್ಕೆ ಮಾರ ಕವೇ ಆಗಿದೆ. ನಿಮ್ಮಲ್ಲಿ ಕೇಳಿ ಪ್ರಯೋಜನ ಇಲ್ಲ. ನೇರವಾಗಿ ಕೇಳಿ ಎಂದಿದ್ದೀರಿ. ಹಾಗಾದರೆ ನೀವು ನನ್ನ ಪತ್ರಗಳಿಗೆ ಪ್ರತಿಕ್ರಿಯಿಸುವುದಾದರೂ ಯಾಕೆ?
Tagged with
chavadi
ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೩ರ ಹರೆಯದ ಯುವತಿ. ಕಳೆದ ವರ್ಷ ಕಾಲೇಜು ಮುಗಿಸಿದ್ದೇನೆ. ಕಳೆದ ಮೇ ತಿಂಗಳಲ್ಲಿ ನನ್ನ ಮದುವೆ ಆಯಿತು. ನನ್ನ ಪತಿಗೆ ಸೆಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿಯಿದೆ. ಈಗ ನನ್ನ ಸೆಕ್ಸ್ ಲೈಫ್ ಚೆನ್ನಾಗಿದೆ. ನಾವು ಇನ್ನೂ ಒಂದು ವರ್ಷ ಮಗು ಬೇಡ ಎಂದು ತೀರ್ಮಾನಿಸಿದ್ದೇವೆ. ನನ್ನ ಪತಿಗೆ ಈಗ ೨೬ರ ಹರೆಯ. ನಾನು ಮುಂದೆ ಕಂಪ್ಯೂಟರ್ ತರಬೇತಿ ಪಡೆಯಲು ಇಚ್ಛಿಸಿದ್ದೇನೆ. ನಾವು ಯಾವ ಗರ್ಭ ನಿರೋಧಕವನ್ನು ಬಳಸು ವುದೆಂದು ತಿಳಿಯುತ್ತಿಲ್ಲ. ಈಗ ಪ್ರತಿನಿತ್ಯ ಸಂಭೋಗದ ವೇಳೆ ನಿರೋಧ್ ಬಳಸುತ್ತೇವೆ. ನಮಗೆ ಇದರಿಂದ ಹೆಚ್ಚು ಖುಷಿ ಸಿಗುವುದಿಲ್ಲ. ನಾವು ಬೇರೆ ಯಾವ ಗರ್ಭನಿರೋಧಕ ಬಳಸಬ ಹುದು? ಹೆಣ್ಣು ಮಕ್ಕಳು ಧರಿಸುವ ಗರ್ಭ ನಿರೋಧಕದ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಆದರೆ ಅದನ್ನು ಬಳಸುವ ಬಗ್ಗೆ ತಿಳಿದಿಲ್ಲ. ಅದು ಎಲ್ಲಿ ಸಿಗುತ್ತದೆ? ಅದನ್ನು ಬಳಸಿದಲ್ಲಿ ಸಮಸ್ಯೆಯಿದೆಯೇ? ನನಗೆ ಈ ಬಗ್ಗೆ ಮಾಹಿತಿ ಕೊಡಿ.
ಸಲಹೆ: ನಿಮಗೆ ಜಾಸ್ತಿ ವಯಸ್ಸಾಗದೇ ಇರುವುದರಿಂದ ಈಗಲೇ ಮಗು ಪಡೆಯುವುದು ಬೇಡ ಎಂದು ನಿರ್ಧರಿಸಿರು ವುದು ಸಮಂಜಸವಾಗಿದೆ. ಗರ್ಭ ನಿರೋಧಕ ಬಳಸಿ ಸೇರಿದರೆ ಯಾವುದೇ ಸಮಸ್ಯೆಯಾಗದು. ಗರ್ಭ ನಿರೋಧಕಗಳ ಬಗ್ಗೆ ಅವರಿವರ ಬಾಯಿಮಾತಿನಿಂದ ತಿಳಿದಿದ್ದರೂ ಅದರ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚಿನವರಿಗೆ ಅರಿವಿರುವುದಿಲ್ಲ. ಹೀಗಾಗಿ ಅದನ್ನು ಬಳಸಿದರೆ ಏನಾದರೂ ಆಗುತ್ತದೆಯೇ ಎಂಬ ಸಂಶಯ ತಾಳುತ್ತಾರೆ. ಈ ಕಾರಣದಿಂದ ಯಾವುದೇ ಗರ್ಭ ನಿರೋಧಕ ಬಳಸುವಾಗಲೂ ಸರಿಯಾದ ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ನಿರೋಧ್ ಅಥವಾ ಕಾಂಡೋಂ ಬಳಕೆ ಗರ್ಭ ತಡೆಯುವ ಸುರಕ್ಷಿತ ಮತ್ತು ಸುಲಭ ವಿಧಾನವಾಗಿರುವ ಕಾರಣ ಹೆಚ್ಚಿನವರು ಇದನ್ನೇ ಬಳಸುತ್ತಾರೆ. ಇದರಿಂದ ಹೇಳಿಕೊಳ್ಳುವಂತಹ ಅಡ್ಡ ಪರಿಣಾಮಗಳೇನೂ ಇಲ್ಲ.
ಆದರೆ ಇದರಿಂದ ಲೈಂಗಿಕ ಭಾವಪ್ರಾಪ್ತಿಗೆ ಕೆಲವೊಂದು ಅಡಚಣೆ ಆಗುವುದು ಸಹಜ. ಇನ್ನುಳಿದಂತೆ ಕಾಪರ್-ಟಿ ಬಳಕೆಯೂ ಮಾಡಬಹುದು. ಇದನ್ನು ಸುಲಭ ಚಿಕಿತ್ಸೆಯಿಂದ ಮಹಿಳಾ ವೈದ್ಯರುಗಳು ಅಳವಡಿಸು ತ್ತಾರೆ. ಇದು ಒಮ್ಮೆ ಅಳವಡಿಸಿದರೆ ಮತ್ತೇನೂ ಮಾಡಬೇಕಿಲ್ಲ. ಆದರೆ ಇದರ ಬಗ್ಗೆ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗು ತ್ತದೆ. ಇನ್ನು ನೀವು ತಿಳಿಸಿರುವ ಮಹಿಳಾ ಕಾಂಡೋಂ(ವಪೆ)ಗಳು ಅಷ್ಟು ಪ್ರಚಾರವಾಗಿಲ್ಲ. ಪ್ರಮುಖ ಮೆಡಿಕಲ್ ಸ್ಟೋರ್‌ಗಳಲ್ಲಿ ಇದು ಸಿಗುತ್ತದೆ.
ಇದನ್ನು ಬಳಸಲು ಮಹಿಳಾ ವೈದ್ಯರ ಬಳಿ ಸಮಾಲೋಚಿಸು ವುದು ಅತ್ಯಗತ್ಯ. ಇದು ಮೇಲ್ಗಡೆ ರಿಂಗ್ ಆಕಾರವನ್ನು ಹೊಂದಿದ್ದು, ಹಿಂದಕ್ಕೆ ಉದ್ದವಾಗಿ ಸಾಮಾನ್ಯ ನಿರೋಧ್‌ನ ಆಕಾರವನ್ನೇ ಹೊಂದಿ ರುತ್ತದೆ. ಆದರೆ ಇದನ್ನು ಲೈಂಗಿಕ ಕ್ರಿಯೆ(ಸಂಭೋಗ)ಯ ಕೆಲವು ನಿಮಿಷದ ಮೊದಲು ಹೆಣ್ಣು ತನ್ನ ಲೈಂಗಿಕಾಂಗದಲ್ಲಿ ಅಳವಡಿಸಬೇಕು. ಲೈಂಗಿಕ ಕ್ರಿಯೆ ಮುಗಿದ ಬಳಿಕ ಕೂಡಲೇ ಇದನ್ನು ಹೊರಗಡೆ ತೆಗೆ ಯದೆ ಕೆಲವು ನಿಮಿಷಗಳ ನಂತರ ತೆಗೆಯಬಹುದಾಗಿದೆ. ಇದರ ಬೆಲೆಯು ಪುರುಷ ಕಾಂಡೋಂಗಿಂತ ಹಲವು ಪಟ್ಟು ಹೆಚ್ಚಿರುತ್ತದೆ. ಉತ್ತಮ ಗುಣಮಟ್ಟದ ಮಹಿಳಾ ಕಾಂಡೋಂ(ವಪೆ)ಗಳನ್ನು ಅನೇಕ ಬಾರಿ ಬಳಸಲೂ ಸಾಧ್ಯವಿದೆ. ಆದರೆ ಇದು ದುಬಾರಿ ಮತ್ತು ಬಳ ಸಲು ತುಸು ಕಷ್ಟ ಎಂಬ ಕಾರಣಕ್ಕೆ ಅಷ್ಟೊಂದು ಸುದ್ದಿಯಲ್ಲಿಲ್ಲ. ಯಾವುದಕ್ಕೂ ಒಮ್ಮೆ ಮಹಿಳಾ ತಜ್ಞ ವೈದ್ಯರ ಬಳಿ ಈ ಬಗ್ಗೆ ಮಾತಾಡಿ. ಅವರು ವಿಧಾನಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಲೈಂಗಿಕ ಕ್ರಿಯೆ ಯಲ್ಲಿ ಭಾವಪ್ರಾಪ್ತಿಯ ಹಂತವನ್ನು ತಲುಪಲು ಅನೇಕ ವಿಧಾನಗ ಳಿವೆ. ಅವುಗಳ ಬಗ್ಗೆ ತಿಳಿದುಕೊಂಡಲ್ಲಿ ಸೆಕ್ಸ್ ಲೈಫ್‌ನ್ನು ಇನ್ನಷ್ಟು ಆನಂ ದಮಯವನ್ನಾಗಿಸಬಹುದು.
Tagged with
gupta
ಮೇಷ : ಮನೆಯಲ್ಲಿ ಮಂಗಳ ಕೆಲಸಗಳನ್ನು ನಡೆಸುತ್ತೀರಿ.
ವೃಷಭ : ಸರಕಾರಿ ನೌಕರರಿಗೆ ಸಮಸ್ಯೆಗಳು ಇರುತ್ತದೆ.
ಮಿಥುನ : ವ್ಯಾಪಾರಸ್ಥರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಕರ್ಕಾಟಕ : ಹಣಕಾಸಿನ ಸಮಸ್ಯೆ ಎದುರಾಗತ್ತದೆ.
ಸಿಂಹ : ಮಿತ್ರರಿಂದ ಸಹಾಯ ಸಿಗಲಿದೆ.
ಕನ್ಯಾ : ಮನೆ ರ್ಮಾಣದ ಕೆಲಸವು ಪ್ರಗತಿಯಲಿರುತ್ತದೆ.
ತುಲಾ : ವ್ಯಾಪಾರ ವ್ಯವಹಾರದಲ್ಲಿ ಪೈಪೋಟಿ ಇರುತ್ತದೆ.
ವೃಶ್ಚಿಕ : ದೂರ ಪ್ರಯಾಣ ಮಾಡುತ್ತೀರಿ.
ಧನು: ವ್ಯಾಪಾರದಲ್ಲಿ ಹಣಕಾಸಿನ ಲಾಭ ಇರುತ್ತದೆ.
ಮಕರ : ಸಂಸಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ.
ಕುಂಭ : ಮನೆ ಖರೀದಿಗೆ ಪ್ರಯತ್ನ ಮಾಡುತ್ತೀರಿ.
ಮೀನ : ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
Tagged with
bhavishya
ಹೊಟೇಲ್‌ಗೆ ಅಡುಗೆ ಮಾಡುವವರು ಬೇಕಾಗಿದ್ದಾರೆ: ೯೮೮೦೩೭೮೮೦೬
ಮಂಗಳೂರು: ಲೇಡಿಸ್ ಟೈಲರ್ ಶಾಪ್‌ಗೆ ಲೇಡಿಸ್ ಟೈಲರ್ ಬೇಕು. ೯೫೯೧೦೪೫೮೮೧
ಮೂಡುಬಿದ್ರೆ: ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೮೬೪೨೯೩೪೭.
ಮಾಲೆಮಾರ್: ಹೋಂ ಪ್ರೊಡಕ್ಟ್‌ಗೆ ಲೇಡೀಸ್ ಬೇಕು ೯೪೮೦೧೧೭೮೫೪.
ಮಂಗಳೂರು: ಉರ್ವಾಸ್ಟೋರ್ ವರ್ಕ್‌ಶಾಪ್‌ಗೆ ವೆಲ್ಟರ್ ಬೇಕು ೯೨೪೨೪೭೪೧೦೦.
ಮಂಗಳೂರು: ಬ್ಯೂಟೀಷಿಯನ್ ಕೆಲಸಕ್ಕೆ ಜನ ಬೇಕು ೯೪೪೯೫೯೦೯೦೦.
ಮಂಗಳೂರು: ಟೈಲರ್ ಕೆಲಸಕ್ಕೆ ಜನ ಬೇಕು ೯೮೮೦೩೧೪೧೦೫.
ಮಂಗಳೂರು: ಸ್ಕ್ರೀನ್‌ಪ್ರಿಂಟರ್ ಬೇಕು ೯೦೧೯೭೦೯೯೯೩.
ತೊಕ್ಕೊಟ್ಟು: ಕಚೇರಿಗೆ ಕಂಪ್ಯೂಟ್ ಗೊತ್ತಿರುವ ಯುವತಿ ಬೇಕು ೭೨೫೯೩೯೪೭೮೧.
ಕಾರ್ಕಳ: ರೆಸ್ಟೋರೆಂಟ್‌ಗೆ ಸಪ್ಲಾಯರ್, ಕಿಚನ್‌ಗೆ, ಆಲ್‌ರೌಂಡರ್ ಬೇಕು. ೯೯೦೧೮೨೮೩೯೩.
ಮಂಗಳೂರು: ಟೈಲರ್ ಶಾಪ್‌ಗೆ ಅಲ್ಟ್ರೇಶನ್ ತಿಳಿದವರು ಬೇಕು. ೯೮೪೫೭೧೪೦೬೪
ಮಂಗಳೂರು : ಆಫೀಸ್‌ಗೆ ಕಂಪ್ಯೂಟರ್ ಎಕೌಂಟ್, ಟ್ಯಾಲಿ, ಬಿ.ಕಾಂ ತಿಳಿದ ಮ್ಯಾನೇಜರ್ ಬೇಕು. ೯೮೪೫೦೮೦೬೬೯.
ಮಂಗಳೂರು: ಟೈಲರ್ ಶಾಪ್‌ಗೆ ಚೂಡಿದಾರ್ ಸ್ಟಿಚ್ ಮಾಡುವ, ಅಳತೆ ತೆಗೆ ಯುವ ಮಹಿಳೆಯರು ಬೇಕು. ೯೯೪೫೯೨೩೦೨೬.
ಮಂಗಳೂರು : ಹಾಸ್ಟೆಲ್‌ಗೆ ಕುಕ್ ಬೇಕು ೯೪೪೯೭೨೩೧೩೩.
ಕಿಚನ್ ಹೆಲ್ಪರ‍್ಸ್ ಬೇಕಾಗಿದ್ದಾರೆ. ೯೯೦೨೭೬೮೪೩೫
ಮೂಡುಬಿದ್ರೆ : ಫ್ಯಾನ್ಸಿ ಮತ್ತು ಜನರಲ್ ಗೂಡ್ಸ್ ಪ್ಯಾಕಿಂಗ್ ಪಾರ್ಸೆಲ್‌ಗೆ ಯುವಕರು ಬೆಕು ೯೬೬೩೯೫೦೪೦೪.
ಮಂಗಳೂರು : ಸ್ಕ್ರೀನ್‌ಪ್ರಿಂಟಿಂಗ್ ಹೆಲ್ಪರ್ ಯುವತಿಯರು ಬೇಕು ೯೮೪೪೫೯೨೧೮೨
ಮಂಗಳೂರು : ಆಫೀಸ್ ಬಾಯ್ ಬೇಕು ೪೨೭೪೦೧೦.
ಮಂಗಳೂರು: ಬ್ಯಾಟರಿ ಕೆಲಸಕ್ಕೆ ಜನ ಬೇಕು ೯೮೪೫೧೪೨೪೨೨.
ಮಂಗಳೂರು : ಜೂಸ್‌ಮೇಕರ್ ಬೇಕು ೯೮೪೫೦೦೮೫೨೬.
ಮಂಗಳೂರು : ಆಫೀಸ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೨೧೭೭೬೫೦.
ಮಂಗಳೂರು : ದ್ವಿಚಕ್ರ ವಾಹನ ಗೊತ್ತಿರುವ ಯುವಕರು ಬೇಕಾಗಿದ್ದಾರೆ. ಭೇಟಿ ಸಮಯ: ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ. ಜಯಕಿರಣ ದೈನಿಕ, ಸರ್ಕ್ಯೂಟ್ ಹೌಸ್ ಕೆಳಗಿನ ರಸ್ತೆ, ಬಟ್ಟಗುಡ್ಡ, ಬಿಜೈ. ಮಂಗಳೂರು
ಮಂಗಳೂರು: ಫ್ಯಾನ್ಸಿ ಮತ್ತು ಜನರಲ್ ಗೂಡ್ಸ್ ಪ್ಯಾಕಿಂಗ್‌ಗೆ, ಪಾರ್ಸೆಲ್ ಹುಡುಗರು ಬೇಕು ೯೬೬೩೯೫೦೪೦೪.
ಮಂಗಳೂರು: ಹೊಟೇಲ್‌ಗೆ ಹೆಲ್ಪರ್, ಕುಕ್, ವೇಟರ್ ಬೇಕು. ೯೯೮೬೬೪೮೧೧೮.
ಮಂಗಳೂರು : ಸ್ಕ್ರೀನ್ ಪ್ರಿಂಟರ್ ಹೆಲ್ಪರ್ ಯುವತಿ ಬೇಕು ೯೮೪೪೫೯೨೧೮೨.
Tagged with
udyoga
ನಾನು ಇತ್ತೀಚೆಗೆ ಯಕ್ಷಗಾನ ಮೇಳವೊಂ ದರ ಹರಕೆ ಬಯಲಾಟ ನೋಡಲು ಹೋಗಿದ್ದೆ. ಯಕ್ಷಗಾನ ಪ್ರಾರಂಭವಾಗುವ ಹೊತ್ತಿಗೆ ನೂರಿ ನ್ನೂರು ಜನರಿದ್ದರು. ಆದರೆ ರಾತ್ರಿ ೧೧ ಗಂಟೆಯ ನಂತರ ಅಲ್ಲಿದ್ದುದು ಕೇವಲ ಬೆರಳೆಣಿಕೆಯ ಜನರು ಮಾತ್ರ.
೧೨ ಗಂಟೆ ದಾಟಿದ ನಂತರ ಯಕ್ಷಗಾನ ವನ್ನು ಹರಕೆಗಾಗಿ ಆಡಿಸುತ್ತಿದ್ದ ಮನೆ ಮಂದಿಯೂ ನಾಪತ್ತೆ. ಕೇವಲ ಹತ್ತಾರು ಮಂದಿ ಬೆಳಗ್ಗಿನವ ರೆಗೆ ಯಕ್ಷಗಾನ ನೋಡಿದರು. ಇಲ್ಲಿ ಜನರನ್ನು ದೂರುವಂತಿಲ್ಲ. ಯಾಕೆಂದರೆ ಎಲ್ಲರೂ ಮನೆ, ಕಚೇರಿ ಕೆಲಸ, ದುಡಿಮೆ ಎಂದು ಜಂಜಾಟದಲ್ಲಿ ತೊಡಗಿರುವಾಗ ರಾತ್ರಿಯಿಂದ ಬೆಳಗ್ಗಿನವರೆಗೆ ಯಕ್ಷ ಗಾನ ನೋಡುವಷ್ಟು ಸಹನೆ ಯಾರಲ್ಲಿಯೂ ಇರು ವುದಿಲ್ಲ. ಕರಾವಳಿಯ ಗಂಡುಮೆಟ್ಟಿನ ಕಲೆ ಎಂದೇ ಕರೆಯಲ್ಪಡುವ ಯಕ್ಷಗಾನಕ್ಕೆ ಇಂದಿಗೂ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಆದರೆ ಅದರ ಸಮಯದ ಅವ ಧಿಯಲ್ಲಿ ಕಡಿತ ಮಾಡಿದರೆ ಒಳ್ಳೆಯದು. ಹಿಂದೆ ಟೆಸ್ಟ್ ಕ್ರಿಕೆಟ್ ಇದ್ದಿದ್ದು ನಂತರ ಒನ್‌ಡೇ ಕ್ರಿಕೆಟ್ ಆಯಿತು, ಈಗ ಅದೇ ಕ್ರಿಕೆಟ್ ಟಿ-ಟ್ವೆಂಟಿ ಆಗಿ ಲ್ಲವೇ? ಇದೇ ರೀತಿ ಯಕ್ಷಗಾನವನ್ನೂ ಮೂರು ಗಂಟೆಯೊಳಗೆ ಮುಗಿಸುವಂತೆ ನೋಡಿದರೆ ಉತ್ತಮ. ಆಗ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಬ ಹುದಾಗಿದೆ.
ಕೀರ್ತನ್, ಗೋಳಿಗುಡ್ಡ
ಸ್ವಾಗತಾರ್ಹ ಕಾರ್ಯವೈಖರಿ
ಬಜಾಲ್ ಪಲ್ಲಕೆರೆ ಪರಿಸರದಲ್ಲಿ ನೀರಿನ ಸಮಸ್ಯೆ ಇದ್ದು, ಅದೀಗ ಸ್ಥಳೀಯ ಮಹಾನಗರ ಪಾಲಿಕೆ ಸದ ಸ್ಯರ ಕಾರ್ಯವೈಖರಿಯಿಂದ ಮುಕ್ತಿ ಗೊಂಡಿದೆ. ಇದೀಗ ವಾರಕ್ಕೆ ಮೂರು ಸಲ ನೀರಿನ ಪೂರೈಕೆ ಆಗುತ್ತಿದ್ದು, ಜನ ಸಾಮಾನ್ಯರು ಕುಡಿಯುವ ನೀರಿ ಗಾಗಿ ಪರದಾಡಬೇಕಾಗಿಲ್ಲ. ಈ ತಿಂಗಳ ೨೦ರಂದು 'ಪಲ್ಲಕೆರೆಯಲ್ಲಿ ನೀರಿಗಾಗಿ ಬರ' ಎಂಬ ಪತ್ರದಲ್ಲಿ ಯಲ್ಲಿ ಬರೆದ ತಪ್ಪು ಲೇಖನಕ್ಕಾಗಿ ವಿಷಾದಿಸುತ್ತಿದ್ದೇನೆ. ಅವರು ಪ್ರಸ್ತುತ ಒಂದೇ ಪಕ್ಷದಲ್ಲಿ ಒಬ್ಬಂಟಿಗರಾಗಿ ಚುನಾಯಿತಗೊಂಡವರಾಗಿದ್ದಾರೆ. ವಾರ್ಡಿಗೆ ಸೇರಿದ ಕುಂದುಕೊರತೆ ಗಳನ್ನು ಹೋಗಲಾಡಿಸಲು ತುಂಬು ಮನಸ್ಸಿನಿಂದ ಹೋರಾಟ ಮಾಡ ಬಲ್ಲ ಒಬ್ಬ ಧೀಮಂತ ಮಹಿಳೆ. ಅವರ ಕಾರ್ಯವೈಖರಿಗೆ ನಾನು ಚಿರಋಣಿ ಯಾಗಿದ್ದೇನೆ.
ಆರ್.ಕೆ.ದೇವಾಡಿಗ,
ಬಜಾಲ್, ಪಲ್ಲಕೆರೆ
ಮೂಡಬಿದ್ರೆ ಮೂಡಾ, ಊಟಕ್ಕಿಲ್ಲದ ಉಪ್ಪಿನಕಾಯಿ
ಮೂಡಬಿದ್ರೆಯಲ್ಲಿ ಹೊಸ ದಾಗಿ ಅಸ್ತಿತ್ವಕ್ಕೆ ಬಂದಿರುವ ಮೂಡಾ ಕಾರ್ಯವೈಖರಿ ಜನರಲ್ಲಿ ಅಚ್ಚರಿ ಯನ್ನು ಮೂಡಿಸಿದೆ. ಇಲ್ಲಿರುವ ಕಚೇರಿ ಸಿಬ್ಬಂದಿ ತಮ್ಮ ಇಚ್ಛಾನು ಸಾರ ಕಾರ್ಯನಿರ್ವಹಿಸುತ್ತಿದ್ದು, ಜನತೆಗೆ ಸಮರ್ಪಕ ಮಾಹಿತಿಯನ್ನು ನೀಡಲು ಹಿಂದೇಟು ಹಾಕುತ್ತಿದ್ದು, ಹಾರಿಕೆಯ ಮತ್ತು ಉಡಾಫೆಯ ಸಮ ಜಾಯಿಸಿಕೆಯನ್ನು ನೀಡುತ್ತಿದ್ದಾರೆ. ಸ್ಥಳೀಯ ಶಾಸಕರು ಕೂಡಲೇ ಎಚ್ಚೆತ್ತು ಈ ಬಗ್ಗೆ ಗಮನಹರಿಸಬೇ ಕಾಗಿ ವಿeಪಣೆ. ಮಾನ್ಯ ಜಿಲ್ಲಾ ಧಿಕಾರಿಯವರು ಕೂಡಲೇ ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡ ಬೇಕಾಗಿಯೂ ವಿನಯಪೂರ್ವಕ ಕೇಳಿಕೊಳ್ಳುವುದರ ಜೊತೆಯಲ್ಲಿ ಇಲ್ಲಿ ವಿಲೇವಾರಿ ಆಗದೆ ಉಳಿದಿ ರುವ ಬಹುತೇಕ ಕಡತಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕಾಗಿಯೂ ವಿನಂತಿಸುತ್ತೇವೆ.
ಜೆರಾಲ್ಡ್ ಕ್ರಾಸ್ತಾ, ಮೂಡಬಿದ್ರೆ
ಚಿತ್ರ ಬಿಡುಗಡೆಗೆ ತುಳುವಿನಲ್ಲಿ ಪೈಪೋಟಿ ಬೇಡ
ಕನ್ನಡದಲ್ಲಿ ಉಪೇಂದ್ರ ಅಭಿನ ಯದ ಎರಡು ಚಿತ್ರಗಳನ್ನು ಒಂದೇ ದಿನ ತೆರೆಗೆ ತರುವ ವಿಚಾರವಾಗಿ ವಿವಾದ ಆರಂಭವಾಗಿದೆ. ಕೆಲ ತಿಂಗ ಳಿಂದ ವಿವಾದಗಳಿಂದಲೇ ತುಂಬಿ ಹೋಗಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತಷ್ಟು ಬಿಸಿಯೇರಿದೆ ಎನ್ನಬಹುದು.
ಆದರೆ ನಮ್ಮ ತುಳು ಚಿತ್ರರಂಗ ದಲ್ಲೂ ಇಂತಹ ಒಂದು ಕೆಟ್ಟ ಪೈಪೋಟಿ ಆರಂಭವಾಗುವ ಸಾಧ್ಯತೆ ಗಳಿದ್ದು, ಇದು ಚಿತ್ರರಂಗದ ಅಭಿವೃ ದ್ದಿಗೆ ಖಂಡಿತಾ ಕೆಟ್ಟ ವಿದ್ಯಮಾನ. ತುಳು ವಿನಲ್ಲಿ ಚಿತ್ರಗಳು ಮೂಡಿಬರುವುದೇ ಸಾಮಾನ್ಯ. ಆದರೆ ಅಸಲ್ ಚಿತ್ರದ ಕ್ರೇಜ್‌ನ ನಂತರ ನಾಲ್ಕೈದು ಚಿತ್ರಗಳು ಚಿತ್ರೀಕರಣ ಆರಂಭಿಸಿ ಅದರಲ್ಲಿ ಎರಡು ಚಿತ್ರಗಳು ಒಂದೇ ವಾರದ ಅಂತರದಲ್ಲಿ ತೆರೆಗೆ ಬರಲು ಸಿದ್ದತೆ ನಡೆಸಿದೆ. ಇದು ಖಂಡಿತವಾಗಿಯೂ ತುಳು ಚಿತ್ರಗಳಿಗೆ ಬಲು ದೊಡ್ಡ ಏಟು ಎನ್ನಬಹುದು. ಬಂಗಾರ‍್ದ ಕುರಲ್ ಮತ್ತು ಈಮೇಟ್ ಅಸಲ್ ಆಮೇಟ್ ಕುಸಲ್ ಎಂಬ ಚಿತ್ರಗಳ ಈ ರೀತಿಯ ಪೈಪೋಟಿ ಜನರಲ್ಲಿ ಚಿತ್ರ ವೀಕ್ಷಿಸುವ ಉತ್ಸಾಹವನ್ನೇ ಕುಗ್ಗಿಸಬಹುದು. ಈಗಾ ಗಲೇ ಸಾಕಷ್ಟು ಪ್ರಚಾರ ಪಡೆದಿರುವ ಈ ಎರಡು ಚಿತ್ರಗಳನ್ನು ವೀಕ್ಷಿಸಲು ತುಳುವರು ಕಾಯುತ್ತಿದ್ದಾರೆ. ಆದರೆ ಇಂತಹ ಕೆಟ್ಟ ಬೆಳವಣಿಗೆ ತುಳುವರ ಚಿತ್ರ ಪ್ರೀತಿಗೆ ತಣ್ಣೀರೆರೆಚಬಹುದು. ಒಂದೇ ವಾರದ ಅಂತರದಲ್ಲಿ ಒಂದೇ ಭಾಷೆಯ ಚಿತ್ರ ಅದರಲ್ಲೂ ತುಳಿವಿ ನಲ್ಲಿ ಬಿಡುಗಡೆಯಾಗುವುದು ತುಳು ಚಿತ್ರರಂಗದ ಅಭಿವೃದ್ದಿಗೆ ಮಾರಕ.
ಇನ್ನಾದರೂ ಎರಡು ಚಿತ್ರದ ನಿರ್ಮಾಪಕರು ಮಾತುಕತೆ ನಡೆಸಿ ಚಿತ್ರ ಬಿಡುಗಡೆಗೆ ಹೆಚ್ಚೆಂದರೂ ಒಂದು ತಿಂಗಳ ಅಂತರ ಕಾಯ್ದುಕೊಳ್ಳಲಿ.
ವಿನ್ಯಾಸ್. ಆರ್.ಶೆಟ್ಟಿ, ಜೆಪ್ಪು
ಸೆಗಣಿ ಬಳಿಯುವುದು ಹಿಂದೂ ಸಂಸ್ಕೃತಿಯೇ?
ಇತ್ತೀಚೆಗೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮ ಯಾಜಿಯವರ ಮುಖಕ್ಕೆ ಸೆಗಣಿ ಹಾಕುವ ಮೂಲಕ ಸಂಘ ಪರಿವಾರದ ಕಾರ್ಯಕರ್ತನೊಬ್ಬ ಜೈಲು ಪಾಲಾಗಿದ್ದಾನೆ. ಈತನ ಪ್ರಕಾರ ಸೋಮಯಾ ಜಿಯ ಹೇಳಿಕೆಗಳೇ ಇದಕ್ಕೆ ಕಾರಣ. ಆದರೆ ಸೆಗಣಿ ಬಳಿಯುವುದು, ಚಪ್ಪಲಿ ಎಸೆಯುವುದು. ನಂತರ ಅಲ್ಲಿಂದ ಓಡಿ ಹೋಗುವುದು ಹಿಂದು ಸಂಸ್ಕೃತಿ ಯಲ್ಲ ಎನ್ನುವುದು ನೆನಪಿರಲಿ. ಸೋಮಯಾಜಿಯವರು ಒಬ್ಬ ಎಡಪಂ ಥೀಯ ಧೋರಣೆಯವರಾಗಿದ್ದು, ಬಹಿರಂಗವಾಗಿ ಹಿಂದುತ್ವ ಮತ್ತು ಹಿಂದು ಸಮಾಜದ ವಿರುದ್ದವಾಗಿ ಮಾತನಾಡಿದ್ದನ್ನು ನಾನೂ ಕಂಡಿದ್ದೇನೆ. ಅಲ್ಲದೇ ಕೆಲ ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಗೋಮಾಂಸ ಭಕ್ಷಣೆಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಒಬ್ಬ ಕಟ್ಟಾರ್ ಹಿಂದೂವಾದಿಗೆ ಕೋಪ ಬರುವುದು ಸಾಮಾನ್ಯವೇ. ಹಾಗಂತ ಇದನ್ನು ಈ ರೀತಿ ವ್ಯಕ್ತಪಡಿ ಸುವುದು ಹಿಂದೂ ಸಮಾಜಕ್ಕೆ ಶೋಭೆಯಲ್ಲ. ಹಿಂದು ಸಮಾಜದ ರಕ್ಷ ಣೆಗೆ ನಿಂತಿರುವ ಹಿಂದು ಸಂಘಟನೆಗಳು ಎಂತಹ ಸಮಸ್ಯೆಯನ್ನೂ ದಿಟ್ಟ ವಾಗಿ ಎದುರಿಸಬೇಕೆ ಹೊರತು ಈ ರೀತಿ ಹೇಡಿಗಳಂತೆ ವರ್ತಿಸುವುದಲ್ಲ. ಇನ್ನಾದರೂ ಹಿಂದು ಸಂಘಟನೆಗಳ ಕಾರ್ಯಕರ್ತರು ಗಮನಿಸಲಿ. ಬಿಸಿ ರಕ್ತದ ಆವೇಶದಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ವಿಕೃತಿ ಬೇಡ.
ಓರ್ವ ಹಿಂದೂ, ಮಂಗಳೂರು
ಸವಲತ್ತುಗಳನ್ನು ಮಂಜೂರು ಮಾಡಿ
ಸರಕಾರಿ ನೌಕರರೋರ್ವರಿಗೆ ಸರಕಾರಿ ಅಧಿಕಾರಿಗಳಿಂದಲೇ ಇಂತಹ ಕಿರುಕುಳ ನೀಡಿದ್ದು ದೊಡ್ಡ ಅಪರಾಧ. ತಾನು ಒಂದಲ್ಲಾ ಒಂದು ದಿವಸ ನಿವೃತ್ತಿ ಹೊಂದಲಿದ್ದೇನೆಂಬ ನೆನಪು ಆ ಅಧಿಕಾರಿಗೂ ಇರಬೇಕು. ಭ್ರಷ್ಟ ಇಲಾಖೆಯೊಂದಿಗೆ ಗುದ್ದಾಡಿದ ಮಾಸ್ಟರ್‌ರವರಿಗೆ ಕೊಡಬಾರದ ನೋವನ್ನು ಕೊಟ್ಟಿರುತ್ತಾರೆ. ಸರಕಾ ರದವರು ಇಂತಹ ಅಧಿಕಾರಿಗಳಿಗೆ ಸಂಬಳವನ್ನು ಕೊಟ್ಟು ನಿವೃತಿ ಹೊಂದ ಲಿರುವವರ ಕೈಯಿಂದ ಗಿಂಬಳವನ್ನು ಪಡೆಯಲು ಇಂತಹ ಷಡ್ಯಂತ್ರವನ್ನು ಮಾಡಿರುವರೆಂದು ಇಲ್ಲಿ ಒತ್ತಿ ಹೇಳ ಬೇಕಾಗಿದೆ. ಇಂತಹ ಅಧಿಕಾರಿಗ ಳಿಂದಲೇ ಇಲಾಖೆಗೆ ಕೆಟ್ಟ ಹೆಸರು ಬರುವುದು, ಕೂಡಲೇ ಸರಕಾರ ಪತ್ರಿ ಕೆಯಲ್ಲಿ ಬಂದಿರುವಂತಹ ವರದಿ ಯನ್ನು ಕೂಲಂಕುಷವಾಗಿ ಪರಿಶೀ ಲಿಸಿ ಶಿಕ್ಷಣ ಇಲಾಖೆಯವರು ಮೃತರ ಪತ್ನಿಗೆ ಸಿಗುವ ಎಲ್ಲಾ ಸವಲತ್ತುಗ ಳನ್ನು ಕೂಡಲೇ ಮಂಜೂರು ಮಾಡ ಬೇಕೆಂದು ಪತ್ರಿಕೆಯ ಮೂಲಕ ವಿನಂ ತಿಸಿಕೊಳ್ಳುತ್ತೇನೆ. ಅಲ್ಲದೇ ಆ ವೇಳೆ ಯಲ್ಲಿ ಅಧಿಕಾರಿಗಳಾಗಿದ್ದವರು ಈಗಲೂ ವೃತ್ತಿಯಲ್ಲಿದ್ದರೆ ತಕ್ಷಣ ಅವ ರನ್ನು ಅಮಾನತ್ತಿನಲ್ಲಿಡಿ.
ಹರೀಶ್.ಕೆ.ಕುಂದರ್
ಕಿನ್ನಿಗೋಳಿಯ ಬಸ್‌ಗಳನ್ನು ಹಳೆಯಂಗಡಿ ಒಳರಸ್ತೆಯಲ್ಲಿ ಬಿಡದಿರಿ
ಮಂಗಳೂರಿನಿಂದ ಕಿನ್ನಿಗೋಳಿ-ಕಟೀಲು ಕಡೆ ಸಂಚರಿಸುವ ಸರ್ವಿಸ್ ಬಸ್‌ಗಳು ಹಳೆಯಂಗಡಿ ಒಳರಸ್ತೆಯಾಗಿ ಸಂಚರಿಸುತ್ತವೆ. ಆದರೆ ಇಲ್ಲಿನ ರಸ್ತೆಯಲ್ಲಿ ವಾಹನಗಳ ಸಾಲು ನಿಂತಿರುತ್ತದೆ. ಅಂಗಡಿಗಳಿಗೆ ಬರುವ ಗ್ರಾಹ ಕರು ತಮ್ಮ ವಾಹನಗಳನ್ನು ರಸ್ತೆಯನ್ನು ಆಕ್ರಮಿಸಿಕೊಂಡೇ ನಿಲ್ಲಿಸುತ್ತಾರೆ. ಇದರಿಂದ ಬಸ್‌ಗಳು ಸಂಚರಿಸುವುದೇ ಕಷ್ಟ. ಕೆಲವೊಮ್ಮೆ ರಸ್ತೆ ಬ್ಲಾಕ್ ಆಗು ತ್ತದೆ. ಇಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯೂ ನಡೆಯುತ್ತಿದ್ದು, ಬಸ್ ಪ್ರಯಾಣಿಕರು ನಿಲ್ದಾಣವೆಲ್ಲಿ ಎಂದು ತಿಳಿಯದೆ ಕಕ್ಕಾಬಿ ಕ್ಕಿಯಾಗುತ್ತಾರೆ. ಆದ್ದರಿಂದ ಮೂಲ್ಕಿ ಠಾಣಾ ಪೊಲೀಸರು ಈ ಸಮಸ್ಯೆಯತ್ತ ಕೂಡಲೇ ಗಮನಹರಿಸಬೇಕು. ಕಿನ್ನಿಗೋಳಿ ಕಡೆಗೆ ಸಂಚರಿಸುವ ಎಲ್ಲಾ ಬಸ್ ಗಳನ್ನು ಹಳೆಯಂಗಡಿ ಮುಖ್ಯರಸ್ತೆಯಲ್ಲೇ ಸಂಚರಿಸಲು ಅವಕಾಶ ಮಾಡಿ ಕೊಡಬೇಕು. ಇದರಿಂದ ಪ್ರಯಾಣಿಕರು ಗಲಿಬಿಲಿಗೊಳ್ಳುವ ಸಾಧ್ಯತೆಯೂ ಕಡಿಮೆ ಮತ್ತು ಒಳರಸ್ತೆಯಲ್ಲಿ ಅನಾವಶ್ಯ ರಸ್ತೆತಡೆಯನ್ನೂ ತಪ್ಪಿಸಬಹುದಾ ಗಿದೆ.
ಬಸ್ ಪ್ರಯಾಣಿಕ, ಹಳೆಯಂಗಡಿ
ಪಂಜಿಮೊಗರು ಕೊಲೆ ಬಿಡಿಸಲಾರದ ಕಗ್ಗಂಟೇ?
ಕೆಲವು ತಿಂಗಳ ಹಿಂದೆ ಮಂಗಳೂರು ಹೊರವಲಯದ ಪಂಜಿಮೊಗ ರಿನಲ್ಲಿ ನಡೆದಿರುವ ಜೋಡಿ ಕೊಲೆ ಪ್ರಕರಣದ ರಹಸ್ಯ ಇನ್ನೂ ಬೆಳಕಿಗೆ ಬಂದಿಲ್ಲ. ಎಂತೆಂಥ ಪ್ರಕರಣಗಳನ್ನು ಭೇದಿಸಿರುವ ದಕ್ಷಿಣ ಕನ್ನಡ ಜಿಲ್ಲಾ ದಕ್ಷ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಮಾತ್ರ ತನ್ನ ನಿಸ್ಸಹಾಯಕತೆಯನ್ನು ಪ್ರದರ್ಶಿಸಿದೆ. ಪ್ರಕರಣವನ್ನು ಉನ್ನತ ತನಿಖೆಗೊಳಪಡಿಸುವಂತೆ ಸ್ಥಳೀಯ ಸಂಘಟನೆಗಳು ಅನೇಕ ಪ್ರತಿಭಟನೆಗಳನ್ನು ನಡೆಸಿವೆ. ಹಾಗಿದ್ದೂ ಕೊಲೆ ಪ್ರಕ ರಣದ ನೈಜಾಂಶ ಬೆಳಕಿಗೆ ಬಂದಿಲ್ಲ. ದಿನೇ ದಿನೇ ಬಿಡಿಸಲಾರದ ಕಗ್ಗಂಟಾಗಿ ಸಾಗುತ್ತಿರುವ ಪಂಜಿಮೊಗರು ಕೊಲೆ ಪ್ರಕರಣ ಇನ್ನು ಮರುತನಿಖೆ ನಡೆದು, ಆರೋಪಿಗಳು ಜೈಲು ಸೇರುವ ಸಾಧ್ಯತೆಯೂ ಅಷ್ಟಕ್ಕಷ್ಟೇ. ಹಣ ಕಂಡೊ ಡನೆ ಹೆಣವೂ ಬಾಯ್ಬಿಡುತ್ತದೆ ಎಂಬ ಗಾದೆ ಮಾತನ್ನು ಪೊಲೀಸ್ ಇಲಾ ಖೆಯೂ ಅನುಸರಿಸೀತೇ?
ಅಬೂಬಕ್ಕರ್ ಎಸ್., ಕಾವೂರು
ಕಾಂಗ್ರೆಸಿಗರೇ ಈಗೇನು ಹೇಳುತ್ತೀರಿ?
ಬಿಜೆಪಿಯ ಆಡಳಿತ ಸರಿಯಿಲ್ಲ, ಕಳಪೆ ಸರ್ಕಾರ, ಕೆಟ್ಟ ಸರ್ಕಾರ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಳ್ಳುವ ಕಾಂಗ್ರೆಸಿಗರು ತಮ್ಮ ಮೇಯ ರ್‌ರ ವರ್ತನೆಗೆ ಏನು ಹೇಳುತ್ತಾರೆ? ಇಡೀ ಪಾಲಿಕೆ ವ್ಯಾಪ್ತಿಯಲ್ಲಿ ನೀರಿಗೆ ಬರ ಪರಿಸ್ಥಿತಿಯಿರುವಾಗ ವಿದೇಶದ ವಿಮಾನ ಹತ್ತುವ ಗುಲ್ಜಾರ್ ಬಾನುರವರು ಮೇಯರ್ ಆಗಿದ್ದಾದರೂ ಯಾಕೆ? ಈಗಾಗಲೇ ಆಡಳಿತ ಹಿಡಿದು ಒಂದು ತಿಂಗಳು ಕಳೆಯಿತು. ಆದರೆ ಇವರಿಂದ ಇಲ್ಲಿಯ ತನಕ ಆದ ಕೆಲಸ ಮಾತ್ರ ಶೂನ್ಯ. ಸದಾನಂದ ಗೌಡರ ವಿದೇಶಿ ಪ್ರವಾಸವನ್ನು ಟೀಕಿಸಿದ ಮಂಗಳೂ ರಿನ ಕಾಂಗ್ರೆಸಿಗರು ಈಗೇನು ಹೇಳುತ್ತಾರೆ? ಮೇಯರ್‌ಗಿರಿಯೆಂದರೆ ಸನ್ಮಾನ, ಗೌರವ ಮತ್ತು ಪ್ರತಿಷ್ಠೆ ಅಂದುಕೊಳ್ಳುವ ಕಾಂಗ್ರೆಸಿಗರು ತಮ್ಮ ನಾಯಕಿಗೆ ತಿಳಿ ಹೇಳುವ ಕೆಲ ಯಾಕೆ ಮಾಡಲಿಲ್ಲ? ಊರಿಗೆ ಬರ ಬಂದರೂ ಪರ‍್ವಾಗಿಲ್ಲ, ತನಗೆ ವಿದೇಶಿ ಪ್ರವಾಸ ಬೇಕೇ ಬೇಕು ಅನ್ನುವ ಇಂತಹ ಮೇಯರ್ ನಮಗೆ ಬೇಕೆ? ನಗರದ ಅಲ್ಲಲ್ಲಿ ನೀರಿನ ಪೈಪ್ ಒಡೆದು ನೀರು ಸೋರಿಕೆಯಾಗು ತ್ತಿದೆ. ಆದರೆ ಕೇಳುವವರು ಯಾರೂ ಇಲ್ಲ. ಹೀಗಿರುವಾಗ ಮೇಯರ್ ಎಂಬ ಜವಾಬ್ದಾರಿಯುತ ಪಟ್ಟ ಇದ್ದೂ ಏನು ಪ್ರಯೋಜನ? ಇನ್ನಾದರೂ ಕಾಂಗ್ರೆಸಿಗರು ಆತ್ಮಾವಲೋಕನ ಮಾಡಿಕೊಳ್ಳಲಿ. ಬಿಜೆಪಿಯನ್ನು ದೂರುವ ಮುನ್ನ ತನ್ನೊಳಗಿನ ಹುಳುಕನ್ನು ತಿದ್ದಲಿ.
ಸಂಕೇತ್ ನಾಯಕ್, ಕಂಕನಾಡಿ
ರಾಜಕೀಯಕ್ಕಾಗಿ ಧಾರ್ಮಿಕ ಮೌಲ್ಯ ಮರೆತಿರುವ ನಾಯಕರು
ಇತ್ತೀಚೆಗೆ ಜಯಕಿರಣ ಪತ್ರಿಕೆಯಲ್ಲಿ ರಿಯಾಝ್ ಎಂಬವರು ಪತ್ರವನ್ನು ಬರೆದು ಕ್ರಿಕೆಟ್ ಪಂದ್ಯಾಟದ ಹೆಸರಿನಲ್ಲಿ ಜೋಕಟ್ಟೆಯಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ ವಿವರಿಸಿ ದ್ದರು. ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ತರಾತುರಿಯಲ್ಲಿ ಇದೀಗ ಕಾರ್ಯಪ್ರವೃತ್ತರಾ ಗಿರುವ ಸಂಘಟಕರು ಮರ್ಯಾದೆ ಉಳಿಸ ಲೆಂದು ಪಂದ್ಯಾಟ ನಡೆಸಲು ತೀರ್ಮಾನಿಸಿದ್ದಾರೆ. ಮಾತ್ರವಲ್ಲದೆ ಇವರಿಗೆ ರಾಜಕೀಯದ ಲಾಭ ಕ್ಕಾಗಿ ಧಾರ್ಮಿಕತೆಯ ಮುಖವಾಡ ಧರಿಸಿರುವ ನಾಯಕರ ಕುಮ್ಮಕ್ಕು ಕೂಡಾ ಕಾಣುತ್ತಿದೆ. ಕಾರಣ ಇಸ್ಲಾಮಿನಲ್ಲಿ ಯಾವುದೇ ಪಂದ್ಯಾಟ ಹಣ ಕಟ್ಟಿ ಆಡುವುದಾದರೆ ಅದನ್ನು ಜೂಜು ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಆಟದಲ್ಲಿ ಭಾಗವಹಿಸುವುದು ಕೂಡ ನಿಷೇಧ (ಹರಾಮ್) ಆಗಿರುತ್ತದೆ. ಆದರೆ ವಿಪರ್ಯಾ ಸವೆಂದರೆ ಇವರ ಇಂತಹ ಜೂಜಿನ ಆಟದ ಆದಾಯದಿಂದಲೇ ಸ್ವಲಾತ್ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಮಾಡುವುದು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಪಾನೀಯ ಕೊಡುವುದಕ್ಕೆ ಈ ಹಣ ನಿಷೇಧವಾದರೂ ಅನು ಮತಿಯನ್ನು ನೀಡಲಾಗಿದೆ.
ಕಾರಣ, ಈ ಯುವಕರಿಂದಲೇ ರಾಜ ಕೀಯವಾಗಿ ಬಳಸಿಕೊಳ್ಳಲು ಬೇಕಾಗಿರುವುದ ರಿಂದ ಇದರ ಬಗ್ಗೆ ಮಸೀದಿಯ ಜವಾಬ್ದಾ ರಿಯನ್ನು ಮರೆತು ನಾಯಕರೆಂದೆನಿಸಿಕೊಂಡ ವರು ಗಪ್‌ಚುಪ್ ಎನ್ನದೆ ಬಾಯಿ ಮುಚ್ಚಿಕೊಂ ಡಿದ್ದಾರೆ. ಆದರೆ ಸ್ವಲಾತ್ ಕಾರ್ಯಕ್ರಮಕ್ಕೆ ಮಂಗ ಳೂರಿನ ಖಾಝಿಯವರನ್ನು ಹರಾಮಿನ ಹಣ ದಿಂದ ಕರೆದು ತರಲು ಅನುಮತಿ ನೀಡಿದವ ರಾದರೂ ಯಾರು? ಇವರ ಕಾಯಕದ ಬಗ್ಗೆ ಹಾಡಿ ಹೊಗಳುವ ಕೆಲವು ಉಸ್ತಾದರುಗಳಿಗೆ ನಾಳೆ ಪರಲೋಕದಲ್ಲಿ ಉತ್ತರಿಸಲಿಕ್ಕಿದೆ ಎಂಬ eನವಿದ್ದರೆ ಎಚ್ಚೆತ್ತುಕೊಳ್ಳಲಿ ಮತ್ತು ಇಂತಹ ಹಣದಿಂದ ತಂಪುಪಾನೀಯ ಕುಡಿದರೆ ಅದು ಹರಾಮ್ ಅಲ್ಲವೇ?
ಅನೀಸ್, ಜೋಕಟ್ಟೆ
Tagged with
nimminda
ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಳ್ಳುವ ಶ್ರೀಮಂತ ಜನರು ಮತ್ತೆ ಶ್ರೀಮಂತರಾಗುತ್ತಲೇ ಹೋಗುತ್ತಾರೆ, ಇಲ್ಲಿ ಬಡವರು ಮಾತ್ರ ದುಡಿದು ಕೂಡಿಟ್ಟಿದ್ದ ಹಣ ಕಳೆದುಕೊಂಡು ಇನ್ನೂ ಕೆಳಮಟ್ಟಕ್ಕೆ ತಳ್ಳಲ್ಪಡುತ್ತಾರೆ. ಹೀಗಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಳ್ಳುವ ಮುನ್ನ ಯುವಜನರು ಎಚ್ಚೆತ್ತುಕೊಳ್ಳಬೇಕಾದ್ದು ಸದ್ಯದ ಅಗತ್ಯವೂ ಆಗಿದೆ.
ಐಪಿಎಲ್ ಕ್ರಿಕೆಟ್ ಜ್ವರ ದಿನೇ ದಿನೇ ಏರಿಕೆಯಾಗುತ್ತಿ ದ್ದಂತೆಯೇ ಬೆಟ್ಟಿಂಗ್ ದಂಧೆಗೂ ದಿನವೊಂದಕ್ಕೆ ಇಂತಿಷ್ಟು ಮಂದಿ ಹೊಸದಾಗಿ ಪ್ರವೇಶ ಪಡೆಯುತ್ತಿದ್ದಾರೆ. ಎಲ್ಲೋ ಆತ್ಮ ಹತ್ಯೆ, ಇನ್ನೆಲ್ಲೋ ಕಳ್ಳತನ ಪ್ರಕರಣಗಳು ಬೆಟ್ಟಿಂಗ್ ದಂಧೆಯ ಹಿನ್ನೆಲೆಯಲ್ಲಿ ನಡೆಯುತ್ತಲೇ ಇದ್ದರೂ ಪೊಲೀಸ್ ಇಲಾಖೆಗೆ ಹಿಡಿದ ನಿದ್ದೆ ಇನ್ನೂ ಬಿಟ್ಟಂತಿಲ್ಲ. ಮಂಗಳೂರನ್ನೇ ಕೇಂದ್ರವಾ ಗಿಟ್ಟುಕೊಂಡು ನಡೆಯುತ್ತಿರುವ ಈ ದಂಧೆಯು ಪ್ರತೀದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದು, ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ ಎನ್ನುವಂತೆ ಕ್ರಿಕೆಟ್ ಟೂರ್ನಿ ಮುಗಿಯುವ ಹೊತ್ತಿಗೆ ನೂರಾರು ಮಂದಿ ಮನೆ-ಮಠ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ ಎನ್ನುತ್ತಿವೆ ಬೆಟ್ಟಿಂಗ್ ದಂಧೆಯ ಕರಾಳ ಇತಿಹಾಸ ಬಲ್ಲ ಮೂಲಗಳು.
ಬಹುತೇಕ ಮಧ್ಯಮ ವರ್ಗ ಮತ್ತು ಬಡಕುಟುಂಬದ ಹಿನ್ನೆಲೆಯ ಕೂಲಿ ಕಾರ್ಮಿಕರು ಮತ್ತು ಕಾಲೇಜ್ ವಿದ್ಯಾರ್ಥಿ ಗಳೇ ಐಪಿಎಲ್ ಬೆಟ್ಟಿಂಗ್ ದಂಧೆಯ ಮುಖ್ಯ ಗಿರಾಕಿಗಳು. ಒಮ್ಮೆಲೇ ಹಣ ಗಳಿಸುವ ಆಸೆಯಿಂದ ಇಂಥ ದಂಧೆಗೆ ಹಣ ತೊಡಗಿಸುವ ಇವರು ೨೦ ಓವರ್‌ಗಳ ಮ್ಯಾಚ್ ಮುಗಿಯು ವಷ್ಟರಲ್ಲಿ ಕಿಸೆಯನ್ನು ಬೋಳಿಸಿಕೊಂಡಿರುತ್ತಾರೆ. ಇಷ್ಟೇ ಅಲ್ಲದೆ ಐಪಿಎಲ್ ಹೆಸರಿನಲ್ಲಿ ಸಾವಿರಾರೂ ರೂ. ಸಾಲ ಮಾಡಿರು ತ್ತಾರೆ. ಇತ್ತ ಬೆಟ್ಟಿಂಗ್‌ನಲ್ಲಿ ಹಣ ಕೊಡಬೇಕಾದವರ ಕಿರಿಕಿರಿ, ಅತ್ತ ಸಾಲಗಾರರ ಕಿರಿಕಿರಿ ತಾಳಲಾರದೆ ಅಂತಿಮವಾಗಿ ಸಾವಿಗೆ ಶರಣಾಗುವ ಘಟನೆಗಳೂ ಹೆಚ್ಚೆಚ್ಚು ನಡೆಯುತ್ತಿವೆ ಎನ್ನಲಾ ಗಿದೆ. ಆದರೆ ಬಹುತೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಬೆಟ್ಟಿಂಗ್ ಪ್ರಮುಖ ಕಾರಣವಾಗಿದ್ದರೂ ನೈಜ ಕಾರಣವನ್ನು ಹೊರಬಾರ ದಂತೆ ನೋಡಿಕೊಳ್ಳುವಲ್ಲಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಬೆಟ್ಟಿಂಗ್ ವೀರರು ಯಶಸ್ವಿಯಾಗುತ್ತಿದ್ದಾರೆ.
ಬೆಟ್ಟಿಂಗ್ ದಂಧೆಯಲ್ಲಿ ಬಡ, ಕೆಳವರ್ಗದ ಜನರ ಹೊರ ತಾಗಿ ಕೆಲವು ಸರಕಾರಿ ಅಧಿಕಾರಿಗಳು, ಮನಪಾ ಕಾರ್ಪೊರೇ ಟರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿಯೂ ಶಾಮೀಲಾಗು ತ್ತಿದ್ದು, ಲಕ್ಷಾಂತರ ರೂಪಾಯಿ ಹಣ ಕೈ ಬದಲಾಗುತ್ತಿದೆ. ನಗರದ ಕದ್ರಿ, ಹಂಪನಕಟ್ಟೆ, ಕೆನರಾ ಕಾಲೇಜ್, ಕೂಳೂರು, ಕಾವೂರು ಮತ್ತು ಸುರತ್ಕಲ್‌ನಲ್ಲಿ ಬೆಟ್ಟಿಂಗ್ ದಂಧೆ ಚಿಗತುಕೊಂಡಿದ್ದು, ಕುಖ್ಯಾತ ಬೆಟ್ಟಿಂಗ್ ಕುಳಗಳು ಲಾಡ್ಜ್ ಇಲ್ಲವೇ ಅಪಾರ್ಟ್ ಮೆಂಟ್‌ನಲ್ಲಿ ರೂಂ ಪಡೆದು ದಂಧೆಯನ್ನು ವ್ಯವಸ್ಥಿತವಾಗಿ ನಡೆ ಸಿಕೊಂಡು ಹೋಗುತ್ತಿವೆ.
ಕೆಲ ಪ್ರದೇಶಗಳಲ್ಲಿ ಕಳೆದ ಹಲವು ಸಮಯಗಳಿಂದ ಮಟ್ಕಾ ದಂಧೆ ಯಾವುದೇ ಅಡ್ಡಿ, ಆತಂಕವಿಲ್ಲದೆ ನಿರಾತಂಕವಾಗಿ ನಡೆ ಯುತ್ತಿದ್ದು, ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದ್ದಂತೆಯೇ ಮಟ್ಕಾ ದಂಧೆಕೋರರು ಹಳೇ ವ್ಯವಹಾರ ಕೈಬಿಟ್ಟು ಬೆಟ್ಟಿಂಗ್ ದಂಧೆ ಆರಂಭಿಸಿರುವ ಸುದ್ದಿಯೂ ಕೇಳಿಬರುತ್ತಿದೆ. ಉಡುಪಿ ಮೂಲದ ದಂಧೆಕೋರನಲ್ಲಿ ಕೇವಲ ಮೊಬೈಲ್ ಮೂಲಕವೇ ಸಂಪರ್ಕ ಇಟ್ಟುಕೊಂಡು ಬೆಟ್ಟಿಂಗ್ ವ್ಯವಹಾರ ನಡೆಸುವ ಇವರು ಸ್ಥಳೀಯ ವಿದ್ಯಾರ್ಥಿಗಳು, ಕೂಲಿ ಕೆಲಸಗಾರರಿಂದ ಹಣ ಪಡೆದು ನಿರ್ದಿಷ್ಟ ತಂಡಗಳ ಮೇಲೆ ಇಂತಿಷ್ಟು ಹಣ ಕಟ್ಟುವುದೂ ನಡೆ ಯುತ್ತಿದೆ. ಇಲ್ಲಿ ಗೆದ್ದ ತಂಡಕ್ಕೆ ಹಣ ಕಟ್ಟಿದವರಲ್ಲಿ ಮೊದಲೇ ಇಂತಿಷ್ಟು ಪರ್ಸೆಂಟ್ ಕಮಿಷನ್ ಆಧಾರದಲ್ಲಿ ವ್ಯವಹಾರ ನಡೆ ಸುತ್ತಿದ್ದು, ಯಾರಿಗೂ ತಿಳಿಯದಂತೆ ದಂಧೆ ಯಶಸ್ವಿಯಾಗಿ ನಡೆಯುತ್ತಿದೆ. ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಳ್ಳುವ ಶ್ರೀಮಂತ ಜನರು ಮತ್ತೆ ಶ್ರೀಮಂತರಾಗುತ್ತಲೇ ಹೋಗುತ್ತಾರೆ, ಇಲ್ಲಿ ಬಡವರು ಮಾತ್ರ ದುಡಿದು ಕೂಡಿಟ್ಟಿದ್ದ ಹಣ ಕಳೆದು ಕೊಂಡು ಇನ್ನೂ ಕೆಳಮಟ್ಟಕ್ಕೆ ತಳ್ಳಲ್ಪಡುತ್ತಾರೆ. ಹೀಗಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಳ್ಳುವ ಮುನ್ನ ಯುವಜನರು ಎಚ್ಚೆತ್ತು ಕೊಳ್ಳಬೇಕಾದ ಅಗತ್ಯವೂ ಆಗಿದೆ.
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಕಳೆದ ಬಾರಿಗಿಂತ ಜೋರಾಗಿ ನಡೆಯುತ್ತಿದೆ. ಕೆಲವು ಕಡೆ ಸಮಾಜದಲ್ಲಿ ಕಾನೂನು, ಸುವ್ಯ ವಸ್ಥೆ ಕಾಪಾಡುವ ಮಂದಿಯೂ ಇದರಲ್ಲಿ ಪಾಲು ಪಡೆಯು ತ್ತಿರುವುದು ಬೆಳಕಿಗೆ ಬಂದಿದೆ. ಐಪಿಎಲ್‌ಗೆ ಹಣ ಕಟ್ಟಿ, ತಂಡ ಸೋತಾಗ ಹಣ ಕೊಡಲು ಸಾಧ್ಯವಾಗದೆ ಆತ್ಮಹತ್ಯೆಗೋ, ಕಳ್ಳತ ನಕ್ಕೋ ಕೈ ಹಾಕುವ ಯುವಜನರು ಮುಂದಿನ ದಿನಗಳಲ್ಲಿ ಕೊಲೆ, ದರೋಡೆ ಇತ್ಯಾದಿ ಕುಕೃತ್ಯಗಳಿಗೆ ಇಳಿಯುವ ದಿನ ದೂರವಿಲ್ಲ. ಯಾಕೆಂದರೆ ಬಹುಬೇಗನೆ ಶ್ರೀಮಂತರಾಗುವ ಬಯಕೆ ಅವರನ್ನು ಎಂಥ ಕೆಲಸಕ್ಕೂ ಕೈ ಹಾಕುವಂತೆ ಪ್ರೇರೇ ಪಣೆ ನೀಡುತ್ತದೆ. ಈಗಾಗಲೇ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೈದಿದ್ದರೆ ಉಳ್ಳಾಲ ದಲ್ಲಿ ಯುವಕರ ತಂಡ ಪಂಪ್ ಕಳ್ಳತನ ಮಾಡಿ ಜೈಲುಗಂಬಿ ಎಣಿಸುತ್ತಿದೆ. ಪೊಲೀಸ್ ಕಮಿಷನರೇಟ್ ವ್ಯವಸ್ಥೆಗೆ ಒಳಪಡುವ ಮಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲೇ ದಂಧೆಯನ್ನು ನಿಯಂ ತ್ರಿಸುವ ಮಂದಿ ಇದ್ದಾರೆ. ಇವರಿಂದ ಇಂತಿಷ್ಟು ಕಪ್ಪವನ್ನು ಪಡೆದು ಆರಾಮಾಗಿರುವ ಕೆಲವು ಪೊಲೀಸ್ ಸಿಬ್ಬಂದಿಯೂ ಜಿಲ್ಲೆಯಲ್ಲಿದ್ದಾರೆ ಎನ್ನುವುದು ನಗ್ನಸತ್ಯ. ಹೀಗಿರುವಾಗ ದಂಧೆ ಯನ್ನು ಇನ್ನಷ್ಟು ಬೆಳೆಯಲು ಬಿಟ್ಟು ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸುವುದು ಸರಿಯೇ ಎನ್ನುವುದು ಪ್ರಜ್ಞಾವಂತ ಜನರ ಪ್ರಶ್ನೆ. ಇನ್ನಾದರೂ ಪೊಲೀಸರು ಗಮನಿಸುವರೇ?
Tagged with
bahiranga
ಬಂಟ, ಬಿಲ್ಲವರಷ್ಟೇ ದೊಡ್ಡ ದೊಡ್ಡ ಕೋಟ್ಯಾಧೀಶರು ತುಳು ಬ್ರಾಹ್ಮಣರಲ್ಲೂ ಇದ್ದಾರೆ. ಆದರೆ ಬ್ರಾಹ್ಮಣರಾರೂ ನಾಗಮಂಡಲದಂತಹಾ ದುಬಾರಿ ಪೂಜೆ ಹಮ್ಮಿಕೊಳ್ಳುವುದಿಲ್ಲ. ಯಾಕೆ? ದೇವರ ಬೀಗರಿಗೆ ದೇವರ ಹಂಗಿಲ್ಲವೆಂದೇ? ಮುಂಬೈಯ ಒಂದು ಪ್ರಸಿದ್ಧ ಆಭರಣ ಮಳಿಗೆಯವರು ದಯಾನಾಯಕ್‌ರನ್ನು ಅಕ್ಷಯ ತೃತೀಯದಂದು ತಮ್ಮ ಅಂಗಡಿಗೆ ಕರೆಸಿ ಭಾರಿ ಕಾಣಿಕೆ ಕೊಟ್ಟು ಸತ್ಕರಿಸ ಬಯಸಿದ್ದರಂತೆ. ಆದರೆ ದಯಾ ನಾಯಕರು ಅದನ್ನು ನಯವಾಗಿ ನಿರಾಕರಿಸಿ ಹೇಳಿದ್ದೇನೆಂದರೆ 'ನಾನು ಪೊಲೀಸ್ ನಿಯಮ ಹಾಗೂ ಕಾನೂನು ಮಾತ್ರ ಓದಿದ್ದಲ್ಲ. ಹಿಂದೂ ಧರ್ಮ ಗ್ರಂಥಗಳನ್ನು ಕೂಲಂಕುಷವಾಗಿ ಓದಿದ್ದೇನೆ. ಅಕ್ಷಯ - ತೃತಿಯಾ ಚಿನ್ನ ಖರೀದಿಗೆ ಶುಭದಿನವೆಂದು ಎಲ್ಲಿಯೂ ಒಂದಕ್ಷರವೂ ಹೇಳಿಲ್ಲ. ನೀವು ವ್ಯಾಪಾರಿಗಳೇ ನಿಮ್ಮ ಲಾಭಕ್ಕಾಗಿ ಹಿಂದೂ ನಂಬಿಕೆಗಳನ್ನು ತಿರುಚಿ ಬಂಡವಾಳ ಮಾಡಿಕೊಂಡಿರುವುದು
ಶಿವರಾಮ ಶೆಟ್ಟಿ, ಮಣ್ಣಗುಡ್ಡ, ಮಂಗಳೂರು
ಫೆ. ೨ರ ಜಯಕಿರಣದಲ್ಲಿ ಪ್ರವೀಣ್ ಎಸ್. ಶೆಟ್ಟಿ ಬರೆದಿರುವ ಹಿಂದೂ ಧರ್ಮದ ವ್ಯಾಪಾರೀಕರಣದ ಬಗೆಗಿನ ಲೇಖನ, ಹಾಗೂ ಎ. ೬ರ ಸಂಚಿಕೆ ಯಲ್ಲಿ ಸಂತೋಷ್ ಶೆಟ್ಟಿಯವರು ಪುರೋಹಿತರು ಮತ್ತು ಸ್ವಾಮೀಜಿಗಳು ಶೂದ್ರ ಮಹಿಳೆಯರಲ್ಲಿ ತುಂಬುತ್ತಿರುವ ಮೌಢ್ಯದ ಬಗ್ಗೆ ಬರೆದಿರುವ ಲೇಖ ನವು ತುಳುವರ ಕಣ್ಣು ತೆರೆಸುವಂತಹದ್ದು. ಇತ್ತೀಚೆಗೆ ನಾನು ಮುಂಬೈಗೆ ಹೋಗಿದ್ದಾಗ ನನ್ನ ಸಂಬಂಧಿಕರೊಬ್ಬರು ಮುಂಬೈ ಪೊಲೀಸ್ ಎನ್‌ಕೌಂಟರ್ ಸ್ಪೆಶಲಿಷ್ಟ್ ದಯಾನಾಯಕ್ ಇವರ ಬಗ್ಗೆ ಹೇಳಿದ ಒಂದು ಸುಂದರ ಸಂಗತಿ ಹೀಗಿದೆ.
ದಯಾ ನಾಯಕರು ೫೦ಕ್ಕೂ ಹೆಚ್ಚು ಖತರ್‌ನಾಕ್ ಅಂಡರ್‌ವರ್ಲ್ಡ್‌ನವ ರನ್ನು ಹೊಡೆದುರುಳಿಸಿ ಜನಾನುರಾಗಿಯಾದ ಮೇಲೆ, ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಅವರಿಗೆ ಕೊಟ್ಟ ಬಹುಮಾನದ ಹಣವನ್ನು ಅವರು ಬ್ಯಾಂಕ್‌ನಲ್ಲಿಟ್ಟಿದ್ದು, ಈ ಹಣವನ್ನು ಸಮಾಜಕ್ಕಾಗಿ ಉಪಯೋಗಿಸುತ್ತಿರುವುದು ಎಂದು ಆಲೋಚಿಸುತ್ತಿರುವಾಗ, ಅವರ ಬಂಟ ಮಿತ್ರನೊಬ್ಬ ತನ್ನ ಜಾತಿ ಬುದ್ದಿಯಂತೆ ಕೊಟ್ಟ ಸಲಹೆಯೆಂದರೆ 'ನಿಮ್ಮ ಊರಿನಲ್ಲಿ ಒಂದು ಭರ್ಜರಿ ನಾಗಮಂಡಲ ನಡೆಸಿಬಿಡಿ ಎಂಬುದಾಗಿ. ಇನ್ನೋರ್ವ ತುಳುವ ಮಿತ್ರ ಕೊಟ್ಟ ಸಲಹೆಯೆಂದರೆ 'ನಿಮ್ಮ ಹಳ್ಳಿಯ ಯಾವುದಾದರೂ ಒಂದು ದೇವಸ್ಥಾನ ಅಥವಾ ದೈವಸ್ಥಾನವನ್ನು ಜೀರ್ಣೋದ್ದಾರ ಮಾಡಿ ಗಡದ್ದಾಗಿ ಒಂದು ಅಷ್ಟ ಬಂಧ - ಬ್ರಹ್ಮಕಲಶ ನಡೆಸಿದರೆ ಉತ್ತಮ ಎಂಬುದಾಗಿ.
ಆದರೆ ಬಡತನದಲ್ಲೇ ಹುಟ್ಟಿ ಬೆಳೆದ ದಯಾನಾಯಕ್‌ಗೆ ಹಣದ ಮಹತ್ವ ಹಾಗೂ ಸಮಾಜದ ನಿಜವಾದ ಅಗತ್ಯತೆಗಳ ಅರ್ಥ ಗೊತ್ತಿದ್ದುದರಿಂದ, ಅವರು ಮಾಡಿದ್ದೇನೆಂದರೆ ತಮ್ಮ ತವರೂರಾದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದಲ್ಲಿ ಬಡ ಮಕ್ಕಳಿಗಾಗಿ ಒಂದು ಒಳ್ಳೆಯ ಶಾಲೆ ಕಟ್ಟಿಸಿ ಧನ್ಯರಾದುದು. ಅಂದರೆ ೫೦ ಲಕ್ಷ ರೂಪಾಯಿ ಖರ್ಚು ಮಾಡಿ ಒಂದೇ ವಾರದಲ್ಲಿ ಮರೆತು ಹೋಗುವ ನಾಗಮಂಡಲಕ್ಕಿಂತ, ಅಥವಾ ಸಮಾಜದ ಬಡಜನರ ಜೀವನ ಉನ್ನತಿಗೆ ಏನೂ ಉಪಯೋಗಕ್ಕೆ ಬಾರದ ದೇವಸ್ಥಾನ ಜೀರ್ಣೋದ್ದಾರ ಕ್ಕಿಂತ, ಮುಂದೆ ನೂರಾರು ವರ್ಷ ಬಡ ಮಕ್ಕಳ ಭವಿಷ್ಯ ರೂಪಿಸುವ ಶಾಲೆ, ಕಾಲೇಜುಗಳನ್ನು ಕಟ್ಟಿಸುವುದೇ ನಿಜವಾದ ದೇವರ ಪೂಜೆ ಹಾಗೂ ನಿಜ ವಾದ ಸಮಾಜ ಸೇವೆ - ದೇಶ ಸೇವೆ ಸಹಾ ಆಗಿದೆ. ಇಂತಹ ನಿಸ್ವಾರ್ಥ ಸರ ಸ್ವತಿ ಪೂಜೆಗೆ ಹೋಲಿಸಿದರೆ ಲಕ್ಷ್ಮೀ ಭಕ್ತರು ಮಾಡುವ ನಾಗಮಂಡಲ, ಬ್ರಹ್ಮ ಕಲಶ, ಸೋಕಾಲ್ಡ್ ಲೋಕ ಕಲ್ಯಾಣಾರ್ಥ ಪೂಜೆಗಳೆಲ್ಲಾ ಅರ್ಥಹೀನ.
ಸೇಡು ಭರಿತ ಅಂಡರ್‌ವರ್ಲ್ಡ್‌ನವರಿಂದ ಅನುದಿನವೂ ಜೀವಭಯವಿ ದ್ದರೂ, ಮತ್ಸರ ಭರಿತ ಮೇಲಧಿಕಾರಿಗಳಿಂದ ಸತತ ಮಾನಸಿಕ ಕಿರುಕುಳವಿ ದ್ದರೂ, ದಯಾನಾಯಕ್‌ರವರು ಸಾಮಾನ್ಯ ಹೊಟೇಲ್ ಉದ್ಯಮಿಯಂತೆ ದೇವರನ್ನು ಸಂಪ್ರೀತಿಗೊಳಿಸುವ ಕಪ್ಪು ಹಣದ ಸರ್ಕಸ್ ಮಾಡದೇ, ಜನ ರಿಂದ ದೊರೆತ ಹಣವನ್ನು ಸಂಪೂರ್ಣ ಮರಳಿ ಜನಸೇವೆಗೇ ಬಳಸಿ, ಪುರಂದರ ದಾಸರು ಹೇಳಿದಂತೆ ಕೆರೆಯ ನೀರನು ಕೆರೆಗೆ ಚೆಲ್ಲಿ ಕೃತಾರ್ಥರಾ ದರು! ಇದು ಅವರಿಗೆ ನೂರು ನಾಗಮಂಡಲ, ಸಾವಿರ ಬ್ರಹ್ಮಕಲಶಗಳಿಗಿಂತ ಹೆಚ್ಚು ಪುಣ್ಯ ತಂದುಕೊಟ್ಟಿರುವುದು ಖಂಡಿತ ನಿಜ. ಮೌಢ್ಯಭರಿತ ತುಳವ ರೆಲ್ಲಾ ಇದನ್ನು ಅರ್ಥಮಾಡಿಕೊಂಡರೆ ತುಳುನಾಡಿನ ಉನ್ನತಿ - ಲೋಕಕಲ್ಯಾಣ ನಿಜ ಅರ್ಥದಲ್ಲಿ ಸಾಧ್ಯ. ಇನ್ನೊಂದು ಗಮನೀಯ ವಿಷಯವೆಂದರೆ, ಬಂಟ, ಬಿಲ್ಲವರಷ್ಟೇ ದೊಡ್ಡ ದೊಡ್ಡ ಕೋಟ್ಯಾಧೀಶರು ತುಳು ಬ್ರಾಹ್ಮಣರಲ್ಲೂ ಇದ್ದಾರೆ. ಆದರೆ ಬ್ರಾಹ್ಮಣರಾರೂ ನಾಗಮಂಡಲದಂತಹಾ ದುಬಾರಿ ಪೂಜೆ ಹಮ್ಮಿ ಕೊಳ್ಳುವುದಿಲ್ಲ. ಯಾಕೆ? ದೇವರ ಬೀಗರಿಗೆ ದೇವರ ಹಂಗಿಲ್ಲವೆಂದೇ? ಮುಂಬೈಯ ಒಂದು ಪ್ರಸಿದ್ಧ ಆಭರಣ ಮಳಿಗೆಯವರು ದಯಾನಾಯಕ್ ರನ್ನು ಅಕ್ಷಯ ತೃತೀಯದಂದು ತಮ್ಮ ಅಂಗಡಿಗೆ ಕರೆಸಿ ಭಾರಿ ಕಾಣಿಕೆ ಕೊಟ್ಟು ಸತ್ಕರಿಸ ಬಯಸಿದ್ದರಂತೆ. ಆದರೆ ದಯಾ ನಾಯಕರು ಅದನ್ನು ನಯವಾಗಿ ನಿರಾ ಕರಿಸಿ ಹೇಳಿದ್ದೇನೆಂದರೆ 'ನಾನು ಪೊಲೀಸ್ ನಿಯಮ ಹಾಗೂ ಕಾನೂನು ಮಾತ್ರ ಓದಿದ್ದಲ್ಲ. ಹಿಂದೂ ಧರ್ಮ ಗ್ರಂಥಗಳನ್ನು ಕೂಲಂಕುಷವಾಗಿ ಓದಿದ್ದೇನೆ. ಅಕ್ಷಯ - ತೃತಿಯಾ ಚಿನ್ನ ಖರೀದಿಗೆ ಶುಭದಿನವೆಂದು ಎಲ್ಲಿಯೂ ಒಂದಕ್ಷರವೂ ಹೇಳಿಲ್ಲ. ನೀವು ವ್ಯಾಪಾರಿಗಳೇ ನಿಮ್ಮ ಲಾಭsಕ್ಕಾಗಿ ಹಿಂದೂ ನಂಬಿಕೆಗಳನ್ನು ತಿರುಚಿ ಬಂಡವಾಳ ಮಾಡಿಕೊಂಡಿರುವುದು
ದಯಾನಾಯಕ್ ಅತ್ಯಂತ ದೈವ ಬೀರುವಾಗಿದ್ದರೂ, ಅವರ ಈ ಸಮಾಜಮುಖಿ ವರ್ತನೆಯನ್ನು ಇತರ ವಿದ್ಯಾವಂತ ಧನಿಕರೂ ಅನುಕರಿಸಿದರೆ ಸಮಾಜದ ತೀವ್ರ ಉನ್ನತಿ ಸಾಧ್ಯ.
Tagged with
chavadi