Page 1

Posted by JAYAKIRANA Kirana on Friday, 20 April 2012 | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ಮಸೀದಿಯಲ್ಲಿ ತಲವಾರು ಕಾಳಗ

Posted by JAYAKIRANA Kirana on | 0 comments | Leave a comment...

ಮಸೀದಿ ಅಧ್ಯಕ್ಷ ಸಹಿತ ಏಳು ಮಂದಿ ಆಸ್ಪತ್ರೆಗೆ
ಮೂಡಬಿದ್ರೆ: ಬೂದಿ ಮುಚ್ಚಿದ ಕೆಂಡದಂತಿದ್ದ ಇಲ್ಲಿನ ತೋಡಾರು ಜುಮ್ಮಾ ಮಸೀದಿಯ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ನಿನ್ನೆ ಮಧ್ಯಾಹ್ನ ಮತ್ತೊಮ್ಮೆ ಸ್ಫೋಟಗೊಂಡು ಎರಡೂ ತಂಡಗಳ ನಡುವೆ ತಲವಾರು ಕಾಳಗ ನಡೆದು ಮಸೀದಿಯ ಅಧ್ಯಕ್ಷ ಡಿ.ಎ ಉಸ್ಮಾನ್ ಸಹಿತ ಏಳು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ತೋಡಾರು ಜುಮ್ಮಾ ಮಸೀದಿಯ ಆಡಳಿತ ಕಮಿಟಿ ಮತ್ತು ಶಂಸುಲ್ ಉಲಮಾಟ್ರಸ್ಟ್ ನಡುವೆ ಈ ತಲವಾರು ಕಾಳಗ ನಡೆದಿದೆ. ತೋಡಾರಿನಲ್ಲಿ ಕಳೆದೆರಡು ವರ್ಷಗಳಿಂದ ಶಂಸುಲ್‌ಉಲಾಮಾ ಟ್ರಸ್ಟ್‌ನಿಂದ ಮಹಿಳಾ ಅರೆಬಿಕ್ ಕಾಲೇಜು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದ ರಿಂದಾಗಿ ಮಸೀದಿಯ ಆಡಳಿತ ಇತ್ತೀಚೆಗೆ ಟ್ರಸ್ಟ್‌ನ ಆಶ್ರಯದಲ್ಲಿ ಮಹಿಳಾ ಅರೆಬಿಕ್ ಕಾಲೇಜಿನ ಎರಡನೇ ವಾರ್ಷಿಕೋತ್ಸವ ಮತ್ತು ಕಟ್ಟಡದ ಶಿಲಾನ್ಯಾಸ ಸಮಾರಂಭವು ಜರು ಗಿದ್ದು, ಈ ಕಾರ್ಯಕ್ರಮದಲ್ಲಿ ಖ್ಯಾತ ಧಾರ್ಮಿಕ ಮುಖಂಡರುಗಳು ಭಾಗವಹಿಸಿ ದ್ದರು. ಈ ಕಾರ್ಯಕ್ರಮಕ್ಕೆ ಮುನ್ನವೇ ಮಸೀ ದಿಯ ಆಡಳಿತ ಕಮಿಟಿಯವರು ಪತ್ರಿಕಾ ಗೋಷ್ಠಿ ನಡೆಸಿ ಈ ಕಾರ್ಯಕ್ರಮಕ್ಕೆ ನಮ್ಮ ಅನುಮತಿ ಪಡೆದಿಲ್ಲ, ಶಂಸುಲ್ ಉಲಮಾರ ಹೆಸರು ಬಳಸಿ ಕೊಂಡು ಹಣ ಸಂಗ್ರಹಿಸಿ ದುರ್ಬಳಕೆ ಮಾಡುತ್ತಿದ್ದಾರೆ. ಈ ಕಾರ್ಯ ಕ್ರಮಕ್ಕೆ ಯಾರೂ ಭಾಗವಹಿಸಬಾರದೆಂದೂ, ಯಾರೂ ಧನಸಹಾಯ ಮಾಡಬಾರ ದೆಂದೂ ಆಗ್ರಹಿಸಿದ್ದರು. ಅಲ್ಲದೆ ಅತಿಥಿ, ಗಣ್ಯರಿಗೆ ಕಾಗದ ಬರೆದು ಕಾರ್ಯಕ್ರಮದಲ್ಲಿ ಭಾಗವಹಿಸದಂತೆಯೂ ಬರೆದಿದ್ದರು. ಮರುದಿನ ಟ್ರಸ್ಟ್‌ನವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕಾಲೇಜಿನ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ್ದರಲ್ಲದೆ, ಜಮಾತ್ ಕಮಿಟಿ ಯವರು ಆರೋಪ ಮಾಡಿದ್ದಕ್ಕೆ ಸಾಕ್ಷ್ಯ ಸಮೇತವಾಗಿ ಸ್ಪಷ್ಟೀಕರಣ ನೀಡಿದ್ದರು.
ಈ ನಡುವೆ ಈ ವಿವಾದದ ವಿಷಯ, ಕಾರ್ಯಕ್ರಮಕ್ಕಿಂತ ಒಂದು ದಿನ ಮೊದಲು ಕೇರಳದ ಖ್ಯಾತ ಧಾರ್ಮಿಕ ಗುರುಗಳೂ ಶಂಸುಲ್ ಉಲಾಮಾ ಟ್ರಸ್ಟಿನ ಕಾರ್ಯ ದರ್ಶಿಯೂ ಆಗಿರುವ ಗುರುಗಳಿಗೆ ತಿಳಿದು ಜಮಾತ್ ಕಮಿಟಿಯವರನ್ನು ಕರೆಸಿಕೊಂಡು, ಪರಿಸ್ಥಿತಿ ಸುಧಾರಿಸುವಂತೆ ಸಲಹೆ ನೀಡಿದ್ದಲ್ಲದೆ. ತಮ್ಮ ಸಮಸ್ಯೆಗೆ ತಾನು ಪರಿಹಾರ ನೀಡುವುದಾಗಿ ಸಮಾಧಾನಿಸಿ ಕಳುಹಿಸಿದ್ದರೆನ್ನಲಾಗಿದೆ. ಆಲ್ಲದೆ ತಾವು ಮಾಡಿದ್ದ ಪತ್ರಿಕಾಗೋಷ್ಠಿಯ ವರದಿ ಬಂದಿದ್ದ ಪತ್ರಿಕೆಗಳಿಗೆ ಮರುಹೇಳಿಕೆ ನೀಡುವಂತೆಯೂ ಸೂಚಿಸಿದ್ದರೆನ್ನಲಾಗಿದೆ. ಕೇರಳದಿಂದ ವಾಪಾಸು ಬಂದ ಜಮಾತ್ ಕಮಿಟಿಯವರು ತರಾತುರಿಯಲ್ಲಿ ಪತ್ರಿಕೆಗಳಿಗೆ ನಮಗೂ -ಟ್ರಸ್ಟಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎನ್ನುವಂತೆ ಮತ್ತು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿರುವ ಅರ್ಥದಲ್ಲಿ ಪತ್ರಿಕೆಗಳಿಗೆ ಜಾಹೀರಾತು ಮೂಲಕ ಹೇಳಿಕೆ ನೀಡಿದ್ದರು.
ಈ ಪ್ರಕರಣ ಮುಗಿದ ಅಧ್ಯಾಯ ಅಂತ ತಿಳಿದುಕೊಂಡಿರುವಾಗಲೇ, ಶುಕ್ರವಾರದ ಜುಮಾ ನಮಾಝ್ ಬಳಿಕ ಜಮಾತ್‌ನ ಕೆಲವರು ಆಡಳಿತ ಕಮಿಟಿಯವರ ವಿರುದ್ಧ ತಿರುಗಿ ಬಿದ್ದು ತಮ್ಮ ರಾಜೀನಾಮೆ ನೀಡುವಂತೆ ಆಗ್ರ ಹಿಸಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲೇ ವಿವಾದ ಉಂಟಾಗಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ನಿನ್ನೆ ಜುಮ್ಮಾ ನಮಾಝ್ ಬಳಿಕ ಮತ್ತೊಮ್ಮೆ ಎರಡೂ ಬಣಗಳ ನಡುವೆ ಮಾತಿಗೆ ಮಾತು ಬೆಳೆದು ಹೊಕೈ ಹಂತಕ್ಕೆ ತಲುಪಿತ್ತು.
ಈ ಸಂದರ್ಭದಲ್ಲಿ ಎರಡೂ ಕಡೆಯವರೂ ಪೂರ್ವ ಸಿದ್ಧತೆಯಿಂದಲೇ ಬಂದವರಂತೆ ವಾಹನಗಳಿಂದ ಕೆಲವು ಮಾರಕಾಸ್ತ್ರಗಳನ್ನು ತಂದು ಬಡಿ ದಾಡಿಕೊಂಡಿದ್ದಾರೆ. ಕೆಲವರು ತಲವಾರು ಹಿಡಿದು ಕೊಂಡರೆ ಮತ್ತೆ ಕೆಲವರು ಹಾಕಿ ಸ್ಟಿಕ್ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.
ಪವಿತ್ರ ದರ್ಗಾ ಇರುವ ಮಸೀದಿಯ ಆವರಣದಲ್ಲೇ ಈ ರಕ್ತಕಾಳಗ ನಡೆ ದಿದ್ದು ಜಮಾಅತ್‌ನವರಲ್ಲಿ ಅಸಮಾಧಾನವುಂಟಾಗಿದೆ. ಈ ಮಾರಾಮಾರಿಯಲ್ಲಿ ಮಸೀದಿಯ ಅಧ್ಯಕ್ಷ ಡಿ.ಎ.ಉಸ್ಮಾನ್ ಅವರು ಗಂಭೀರ ಹಲ್ಲೆಗೊಳಗಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಎಂ.ಎಸ್. ಹುಸೈನ್, ಅಶ್ರಫ್, ನಝೀರ್, ಇಮ್ತಿಯಾಜ್, ಎಂ.ಎ.ಅಶ್ರಫ್, ಅಬ್ದುಲ್ ರಹ್ಮಾನ್ ಎಂಬವರು ಗಾಯಗೊಂಡಿದ್ದು ಇವರೆಲ್ಲಾ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡಬಿದ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು ಇದೀಗ ಇತ್ತಂಡಗಳ ಎಂಟೆಂಟು ಮಂದಿಯ ವಿರುದ್ಧ ಮೂಡುಬಿದ್ರೆ ಪೋಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯ ಕೊಲೆ ಮಾಡಲು ಬಂದ ಗೋಲ್ಡನ್ ಸುರೇಶ್ ಸಹಚರರ ಸೆರೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಮಹಿಳೆಯೊಂದಿಗೆ ಇದ್ದ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕುಖ್ಯಾತ ಕ್ರಿಮಿನಲ್ ಗೋಲ್ಡನ್ ಸುರೇಶ್ ಆಕೆಯನ್ನು ಕೊಲೆ ನಡೆಸಲು ಕಳುಹಿಸಿದ್ದ ಸಹಚರರು ಪೊಲೀಸರಿಗೆ ಹಲ್ಲೆ ನಡೆಸಲು ಮುಂದಾಗಿ ಬಳಿಕ ಸಿಕ್ಕಿಬಿದ್ದು ಬಂಧಿತರಾಗಿರುವ ಘಟನೆ ಮಣಿಪಾಲ ದಶರಥನಗರದ ಮಂಗಳಾ ನಗರದಲ್ಲಿ ನಿನ್ನೆ ನಡೆದಿದೆ.
ಎಂಭತ್ತು ಬಡಗುಬೆಟ್ಟು ನಿವಾಸಿ ಅನುಪಮಾ ಎಂಬಾಕೆಗೂ ಕ್ರಿಮಿನಲ್ ಗೋಲ್ಡನ್ ಸುರೇಶನಿಗೂ ಹಲವು ವರ್ಷ ಗಳಿಂದ ವೈಷಮ್ಯವಿತ್ತು. ಈ ಬಗ್ಗೆ ಸುರೇಶನ ವಿರುದ್ಧ ಹಲವು ಠಾಣೆಗಳಲ್ಲಿ ಅನುಪಮಾ ದೂರು ನೀಡಿದ್ದರು. ಇತ್ತೀಚೆಗೆ ಮತ್ತೆ ಕೊಲ್ಲುವ ಬೆದರಿಕೆ ಹಾಕಿದ್ದ ಗೋಲ್ಡನ್ ವಿರುದ್ಧ ಅನುಪಮಾ ನೇರ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ನಿನ್ನೆ ಗೋಲ್ಡನ್ ಸಹಚರರಾದ ಹತ್ತು ಮಂದಿ ಓಮ್ನಿ ಕಾರು ಹಾಗೂ ಬೈಕ್‌ಗಳಲ್ಲಿ ಅನುಪಮಾ ಇರುವ ಮಂಗಳಾನಗರದ ಮನೆಗೆ ಬಂದಿದ್ದರು. ಆದರೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ದೊರೆತ ಮಾಹಿತಿಯನ್ವಯ ಡಿವೈಎಸ್ ಪಿ ಪ್ರಭುದೇವ ಮಾಣೆ ನೇತೃತ್ವದ ಪೊಲೀಸರು ಆರೋಪಿಗಳಿಗೆ ತಿಳಿಯದಂತೆ ಕೆಂಪು ಬಣ್ಣದ ಕ್ವಾಲೀಸ್ ಕಾರಿನಲ್ಲಿ ಬಂದಿದ್ದರು. ಮಹಿಳೆ ಕೊಲೆ ನಡೆಸಲು ಮುಂದಾದ ಹತ್ತು ಮಂದಿ ಆರೋಪಿಗಳು ಮಂಗಳಾನಗರದ ಸಣ್ಣ ಓಣಿಯೊಂದ ರಲ್ಲಿ ಸಾಗುತ್ತಿದ್ದಂತೆ ಪೊಲೀಸರು ಎದುರಾಗಿ ಎಲ್ಲರನ್ನು ತಡೆದರು. ಅಷ್ಟಕ್ಕೇ ಹತ್ತು ಮಂದಿ ರೌಡಿಗಳು ತಮ್ಮ ಕೈಯಲ್ಲಿದ್ದ ದೊಣ್ಣೆಗಳಿಂದ ಪೊಲೀಸರಿಗೆ ಹಲ್ಲೆ ನಡೆಸಲು ಮುಂದಾದರು. ಆರೋಪಿಗಳನ್ನು ನಿಯಂತ್ರಿಸುವ ಸಲುವಾಗಿ ಎರಡು ಸುತ್ತು ಗುಂಡುಗಳನ್ನು ಪೊಲೀಸರು ಗಾಳಿಯಲ್ಲಿ ಹಾರಿಸುವ ಮೂಲಕ ಬೆದರಿದ ಒಂಭತ್ತು ಮಂದಿ ರೌಡಿಗಳನ್ನು ಹಿಡಿದರು. ಆದರೆ ಒಬ್ಬ ಆರೋಪಿ ಅಷ್ಟರಲ್ಲಿ ಪರಾರಿಯಾಗಿದ್ದನು. ಇದೀಗ ಒಂಭತ್ತು ಮಂದಿಯನ್ನು ಬಂಧಿಸಿರುವ ಮಣಿಪಾಲ ಪೊಲೀಸರು ಸುರೇಶನ ಕುರಿತ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ತಿಳಿದುಬಂದಿದೆ. ಆರೋಪಿಗಳಿಂದ ಆರು ಬೈಕ್ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಹಲವು ಪ್ರಕರಣಗಳ ಆರೋಪಿ: ಆರೋಪಿ ಗೋಲ್ಡನ್ ಸುರೇಶನ ಮೇಲೆ ೧೨ ಕ್ರಿಮಿನಲ್ ಕೇಸುಗಳು, ಗಾಂಜಾ ಮಾರಾಟ, ಎಂಟು ಜೀವಬೆದರಿಕೆ, ಎರಡು ಕೊಲೆಯತ್ನ ಹಾಗೂ ಉಡುಪಿ, ಕೋಟ, ಮಣಿಪಾಲ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಕಳೆದ ಮಾಚ್  ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.

ಜೈಲು ಸಿಬ್ಬಂದಿಯ ವಿರುದ್ಧ ವಿಠಲ ಕಿಡಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಕ್ಸಲ್ ಆರೋಪದಲ್ಲಿ ಬಂಧಿತನಾಗಿರುವ ವಿಠಲ ಮಲೆಕುಡಿಯ ಶುಕ್ರವಾರ ಕೊನೆಯ ಪರೀಕ್ಷೆ ಮುಗಿಸಿ ಮತ್ತೆ ಜೈಲು ಸೇರಿದ್ದು ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಆತ ಪೊಲೀಸರ ಎದುರೇ ಜೈಲು ಸಿಬ್ಬಂದಿ ವಿರುದ್ಧ ಕಿಡಿಕಾರಿ ದ್ದಾನೆ.
ನಕ್ಸಲರ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಮಾರ್ಚ್ ಒಂದರಂದು ನಕ್ಸಲ್ ನಿಗ್ರಹದಳ ಬೆಳ್ತಂಗಡಿ ತಾಲೂಕು ಕುತ್ಲೂರಿನ ನಿವಾಸಿ ವಿಠಲನ ತಂದೆ ಲಿಂಗಣ್ಣ ಎಂಬವರ ಮೇಲೆ ಹಲ್ಲೆ ನಡೆಸಿತ್ತು. ಈ ವಿಚಾರ ತಿಳಿದು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದ ದ್ವಿತೀಯ ಸೆಮಿಸ್ಟರ್‌ನಲ್ಲಿ ಕಲಿಯುತ್ತಿದ್ದ ವಿಠಲ ಮಾರ್ಚ್ ಎರಡರಂದು ಹಾಸ್ಟೆಲ್‌ನಿಂದ ಮನೆಗೆ ತೆರಳಿದ್ದು ಆ ವೇಳೆ ಎ.ಎನ್,ಎಫ್. ಆತನನ್ನೂ ಬಂಧಿಸಿತ್ತು. ಕಳೆದ ಒಂದೂವರೆ ತಿಂಗಳಿಂದ ಮಂಗಳೂರಿನ ಸಬ್‌ಜೈಲಲ್ಲಿರುವ ಆತ, ಪತ್ರಿಕೋದ್ಯಮ ವಿಭಾಗದ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ. ಆದರೆ ನ್ಯಾಯಲಯ ಸೋಮವಾರದಂದು ಆತನ ಮನವಿಯನ್ನು ಪುರಸ್ಕರಿಸಿದ್ದ ಕಾರಣ ಸೋಮವಾರದ ಪರೀಕ್ಷೆ ತಪ್ಪಿ ಹೋಗಿತ್ತು.
ಶುಕ್ರವಾರ ಪೊಲೀಸ್ ಬಂದೋಬಸ್ತಿನಲ್ಲಿ ಕೊನೆಯ ಪರೀಕ್ಷೆ ಬರೆದ ಆತ, ಪತ್ರಕರ್ತರ ಜೊತೆ ಮನಬಿಚ್ಚಿ ಮಾತನಾಡಿದ್ದಾನೆ. ನಕ್ಸಲ್ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ತನಗೆ ಜೈಲಿನಲ್ಲಿ ಸರಿಯಾಗಿ ಊಟ, ಚಹಾ, ತಿಂಡಿ ಕೊಡುತ್ತಿಲ್ಲ. ಕೇವಲ ಎರಡು ಜೋಡಿ ವಸ್ತ್ರಗಳನ್ನು ಮಾತ್ರವೇ ನೀಡಲಾಗಿದ್ದು ಅದರಲ್ಲೇ ನಾಲ್ಕು ದಿನ ಮಂಗಳೂರಿನಿಂದ ಕೊಣಾಜೆಗೆ ಬರಬೇಕಾಯಿತು. ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಕೇಳಿದರೂ ಸೋಮವಾರ ನೀಡಿದ್ದರು. ಆದರೆ ಸಹಪಾಠಿಗಳ ಸಹಕಾರದಿಂದ ಪರೀಕ್ಷೆ ಬರೆಯಲು ಅನುಕೂಲವಾಯಿತು. ಈಗಾಗಲೇ ಒಂದು ಪರೀಕ್ಷೆ ತಪ್ಪಿಹೋಗಿದ್ದು ಆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗುವುದಾಗಿ ಇದೇ ವೇಳೆ ಆತ ಹೇಳಿಕೆ ನೀಡಿದನು.

ಸಂಘಟನೆಗಳ ಬೆಂಬಲದಿಂದ ಧೈರ್ಯ ಬಂತೇ?
ಮಂಗಳವಾರದಂದು ಪರೀಕ್ಷೆ ಬರೆಯಲು ಕೊಣಾಜೆ ವಿಶ್ವವಿದ್ಯಾನಿಲಯಕ್ಕೆ ಬಂದಿದ್ದ ವಿಠಲ ಪತ್ರಕರ್ತರ ಜೊತೆ ಮಾತನಾಡಲು ಹಿಂಜರಿದಿದ್ದ. ಆದರೆ ಶುಕ್ರವಾರ ಹಿಂದಿನ ಎಲ್ಲಾ ಅಳುಕಿನಿಂದ ಹೊರಬಂದಂತೆ ಕಂಡು ಬಂದ ಆತ ಧೈರ್ಯದಿಂದಲೇ ಜೈಲಿನಲ್ಲಾಗುತ್ತಿರುವ ತೊಂದರೆಯನ್ನು ಬಹಿರಂಗಪಡಿಸಿದ್ದಾನೆ. ನಕ್ಸಲ್ ಆರೋಪದಲ್ಲಿ ವಿಠಲನನ್ನು ಎ.ಎನ್.ಎಫ್. ಬಂಧಿಸಿರುವ ಕ್ರಮವನ್ನು ದಲಿತ ಸಂಘಟನೆಗಳು, ಎಡಪಕ್ಷ ಬೆಂಬಲಿತ ಸಂಘಟನೆಗಳು ಖಂಡಿಸಿ ಪ್ರತಿಭಟನೆ ನಡೆಸಿದ್ದಲ್ಲದೆ, ಮುಂದೆಯೂ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದವು.
ಬುಧವಾರದಂದು ಕೇರಳದ ಯುವ ಸಂಸದ ರಾಜೇಶ್ ಅವರು ಮಂಗಳೂರು ಜೈಲಿನಲ್ಲಿ ಆತನನ್ನು ಭೇಟಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿ ಧೈರ್ಯ ತುಂಬಿದ್ದರು. ಈ ಭೇಟಿಯ ಬಳಿಕ ವಿಠಲ ಹಿಂದಿಗಿಂತಲೂ ಧೈರ್ಯಶಾಲಿಯಾದವನಂತೆ ಕಂಡು ಬಂದಿದ್ದು ಶುಕ್ರವಾರ ತನ್ನನ್ನು ಕರೆತಂದಿದ್ದ ಪೊಲೀಸರ ಎದುರೇ ಜೈಲು ಸಿಬ್ಬಂದಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು ಸಾಕ್ಷಿಯಾಗಿತ್ತು.

ಪಾಕ್ ವಿಮಾನ ಪತನ: ೧೨೭ ಮಂದಿ ಬಲಿ

Posted by JAYAKIRANA Kirana on | 0 comments | Leave a comment...

ಇಸ್ಲಾಮಾಬಾದ್: ಹವಾಮಾನ ವೈಪರಿತ್ಯದಿಂದಾಗಿ ೧೨೭ ಮಂದಿ ಪ್ರಯಾಣಿಕರಿದ್ದ ಪಾಕಿಸ್ತಾನದ ವಿಮಾನವೊಂದು ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಪತನವಾಗಿದ್ದು, ಭಾರೀ ಸಾವುನೋವು ಸಂಭವಿಸಿದೆ.
ವಿಮಾನ ಪತನದ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವರ ದೃಢಪಡಿಸಿದ್ದು, ಭೋಜ ಏರ್‌ಲೈನ್ಸ್‌ನ ಬಿಎಚ್‌ಒ-೨೧೩ ಕರಾಚಿಯಿಂದ ಇಸ್ಲಾಮಾಬಾದ್‌ಗೆ ಹಾರಾಟ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾವಲ್ಪಿಂಡಿಯಲ್ಲಿರುವ ಏರ್‌ಬೇಸ್ ಬಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಮೊದಲ ಸಲ ಪ್ರಯಾಣ ಬೆಳೆಸಿದ ಈ ವಿಮಾನ ತನ್ನ ಚೊಚ್ಚಲ ಹಾರಾಟದಲ್ಲೇ ದುರಂತಕ್ಕೀಡಾಗಿದೆ. ವಿಮಾನದಲ್ಲಿದ್ದ ೧೧೮ ಮಂದಿ ಪ್ರಯಾಣಿಕರು ಹಾಗೂ ೯ ಮಂದಿ ವಿಮಾನ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ. ವಿಮಾನ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಈ ಅವಘಡದಲ್ಲಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನಲಾಗಿದೆ. ಕೆಟ್ಟ ಹವಾಮಾನ ವಿಮಾನ ದುರಂತಕ್ಕೆ ಕಾರಣವೆನ್ನಲಾಗಿದೆ. ಸಂಜೆ ಸುಮಾರು ಆರು ಗಂಟೆ ವೇಳೆಗೆ ಪೈಲೆಟ್ ಸಂಪರ್ಕ ನಡೆಸಿದ ಬಳಿಕ ಅವರೊಂದಿಗೆ ಯಾವುದೇ ಸಂಪರ್ಕ ಸಾಧಿಸಲಾಗಿಲ್ಲ. ೬.೪೦ರ ವೇಳೆಗೆ ವಿಮಾನ ಪತನಗೊಂಡಿದೆ.

ವಿದ್ಯಾರ್ಥಿನಿ ಅಪಹರಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದ ವಿದ್ಯಾರ್ಥಿನಿಯನ್ನು ತಂಡವೊಂದು ಅಪಹರಿಸಿರುವ ಘಟನೆ ನಿನ್ನೆ ರಾತ್ರಿ ಬೋಳಾರದಲ್ಲಿ ನಡೆದಿದೆ.
ಬೋಳಾರ ಮುಖ್ಯ ಪ್ರಾಣ ದೇವಸ್ಥಾ ನಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಮಹಾಕಾ ಳಿಪಡ್ಪು ನಿವಾಸಿ ನಿಖಿತಾ(೨೧) ಎಂಬಾಕೆ ಯನ್ನು ಬಿಳಿ ಓಮ್ನಿ ಕಾರಿನಲ್ಲಿ ಬಂದಿದ್ದ ತಂಡ ಅಪಹರಿಸಿದೆ. ಈ ವೇಳೆ ನಿಖಿತಾ ತಾಯಿ ಜೊತೆಗಿದ್ದರೂ ಆಕೆಯನ್ನು ದೂಡಿ ಹಾಕಿದ ತಂಡ ಯುವತಿಯನ್ನು ಎಳೆದೊ ಯ್ದಿದಿದೆ ಎಂದು ತಿಳಿದುಬಂದಿದೆ.
ನಿಖಿತಾ ಬಿಎಸ್‌ಡಬ್ಲ್ಯೂ ವಿದ್ಯಾರ್ಥಿನಿ ಯಾಗಿದ್ದು, ನಿನ್ನೆ ಈಕೆಗೆ ಅಂತಿಮ ಪರೀಕ್ಷೆ ಇದ್ದು ಅದನ್ನು ಬರೆದು ಮುಕ್ತಾಯಗೊಳಿಸಿದ ನಿಖಿತಾ ಸಂಜೆ ವೇಳೆ ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದಳು. ದೇವಸ್ಥಾನದಲ್ಲಿ ಪೊಜೆ ಸಲ್ಲಿಸಿ ಹೊರ ಬರುತ್ತಿರುವಂತೆ ಅಪಹರಣ ನಡೆದಿದೆ ಎಂದು ನಿಖಿತಾ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ವಿಶೇಷ ಎಂದರೆ ಮಗಳ ಅಪಹರಣವಾಗುವಾಗ ತಾಯಿ ಆಕೆಯ ಪಕ್ಕವೇ ಇದ್ದರೂ ಓಮ್ನಿಯ ನಂಬರನ್ನು ಗುರುತಿಸಲು ವಿಫಲರಾಗಿದ್ದರಲ್ಲದೆ ಮಗಳ ಅಪಹರಣವಾಗುವಾಗ ಕನಿಷ್ಠ ಒಂದು ಕೂಗನ್ನು ಹಾಕಲಿಲ್ಲ. ಇದು ಶಂಕೆಗೆ ಕಾರಣವಾಗಿದೆ. ಅಲ್ಲದೆ ನಿಖಿತಾಳೂ ಕೂಗು ಹಾಕಿಲ್ಲ. ಹೀಗಾಗಿ ಜನನಿಬಿಡ ಪ್ರದೇಶದಲ್ಲಿಯೇ ಅಪಹರಣ ನಡೆದರೂ ಯಾರಿಗೂ ತಿಳಿದು ಬಂದಿಲ್ಲ.

'ಪ್ರೀತಿ ಅಪಹರಿಸಿತೇ?
ನಿಖಿತಾ ಅಪಹರಣದ ಹಿಂದೆ ಲವ್ ಸ್ಟೋರಿ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಇದು ಅಪಹರಣವೇ ಅಥವಾ ಅಪಹರಣದ ನಾಟಕವೇ ಎನ್ನುವ ಬಗ್ಗೆಯೂ ಪೊಲೀಸರು ಅಂದಾಜು ನಡೆಸುತ್ತಿದ್ದಾರೆ. ಘಟನೆ ನಡೆದ ವೇಳೆ ಹಾಗೂ ಘಟನೆ ನಡೆದ ಬಳಿಕ ಹುಟ್ಟಿಕೊಂಡಿರುವ ಹತ್ತಾರು ಪ್ರಶ್ನೆಗಳು ನಿಖಿತಾಳನ್ನು ಪ್ರೀತಿ ಅಪಹರಿಸಿತೇ? ಎನ್ನುವ ಶಂಕೆಯನ್ನು ಹುಟ್ಟು ಹಾಕಿದೆ.
ಮಹಾಕಾಳಿ ಪಡ್ಪು ನಿವಾಸಿ ಬೋಳಾರದ ದೇವಸ್ಥಾನಕ್ಕೆ ರಾತ್ರಿ ವೇಳೆ ಬಂದಿರುವ ಔಚಿತ್ಯ ಏನು? ಮುಖ್ಯ ಪ್ರಾಣ ದೇವಸ್ಥಾನಕ್ಕೆ ಯುವತಿಯರು ಹೆಚ್ಚಾಗಿ ಬರುವುದಿಲ್ಲ. ಆದರೆ ಇಲ್ಲಿ ನಿಖಿತಾ ಇದೇ ದೇವಸ್ಥಾನಕ್ಕೆ ಬಂದಿರುವುದೂ ಶಂಕೆ ಮೂಡಿಸುತ್ತಿದೆ. ಅದೂ ಅಲ್ಲದೆ ನಿಖಿತಾ ದೇವಸ್ಥಾನಕ್ಕೆ ಬರುವ ಮತ್ತು ಹೋಗುವ ಸಮಯದ ಬಗ್ಗೆ ನಿಖರ ಮಾಹಿತಿ ಇರುವ ಕಾರಣ ಈ ತಂತ್ರ ನಡೆದಿದೆ. ಹೀಗಾಗಿ ಈ ಮಾಹಿತಿ ನಿಖಿತಾ ಕಡೆಯಿಂದಲೂ ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಾ ರೆ ಪೊಲೀಸರು. ಇತ್ತ ನಿಖಿತಾ ತಾಯಿ ಓಮ್ನಿಯ ನಂಬರನ್ನು ಗುರುತಿಸಿಲ್ಲ, ನಿಖಿತಾ ಬೊಬ್ಬೆ ಹೊಡೆದಿಲ್ಲ ಜನನಿಬಿಡ ಪ್ರದೇಶದಲ್ಲಿ ಅಪಹರಣಕಾರರ ಓಮ್ನಿ ನಿರಾಳವಾಗಿ ಸಾಗಿದೆ. ಹೀಗಾಗಿ ನಿಖಿತಾ ಅಪಹರಣದ ಹಿಂದೆ ಲವ್ ಸ್ಟೋರಿ ಇರಬಹುದು ಎನ್ನುತ್ತದೆ ಪೊಲೀಸ್ ಮೂಲಗಳು.

ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆಯ ಭಾಗ್ಯವಿಲ್ಲ

Posted by JAYAKIRANA Kirana on | 0 comments | Leave a comment...

ಜೀವಭಯದಲ್ಲಿ ಪೊಲೀಸ್ ಕುಟುಂಬ
ಉಡುಪಿ: ಇಲ್ಲಿನ ನಗರ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಿದ ವಸತಿಗೃಹ ಕಟ್ಟಡದ ಕಾಮಗಾರಿ ಪೂರ್ಣಗೊಂಡು ತಿಂಗಳೆರಡಾದರೂ, ಇನ್ನೂ ಸಹ ಇದನ್ನು ಸಿಬ್ಬಂದಿಗಳ ವಾಸಕ್ಕಾಗಿ ಬಿಟ್ಟುಕೊಡಲು ಪೊಲೀಸ್ ಇಲಾಖಾಧಿಕಾರಿಗಳಿಗೆ ಸಾಧ್ಯವಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯ ಪಕ್ಕ ಈಗಾಗಲೇ ಪೊಲೀಸ್ ವಸತಿಗೃಹವೊಂದು ಇದ್ದು, ಇದು ಮುರಿದು ಬೀಳುವ ಸ್ಥಿತಿಯಲ್ಲಿದೆ. ನೂರು ವರ್ಷ ಹಳೆಯದಾದ ಈ ವಸತಿಗೃಹದಲ್ಲಿ ಮಳೆಗಾಲದಲ್ಲಿ ವಾಸಿಸುವುದು ಎಂದರೆ ಅದು ಮಳೆಯಲ್ಲಿ ನೆನೆದಂತೆಯೇ. ಯಾವಾಗ ಬೇಕಾದರೂ ಇದು ಮುರಿದುಬೀಳಬಹುದು. ಹಾಗಿದೆ ಈ ಹಳೆಯ ವಸತಿಗೃಹ.
ನೂರು ವರ್ಷ ಹಳೆಯದಾದ ಈ ಕಟ್ಟಡದ ಹೆಂಚು, ಕಿಟಿಕಿ- ಬಾಗಿಲು ಇತ್ಯಾದಿ ಗೆದ್ದಲು ಹಿಡಿದಿದ್ದು, ಗೂಡಿನಲ್ಲಿ ಪೊಲೀಸ್ ಸಿಬ್ಬಂದಿಗಳ ಕುಟುಂಬ ಜೀವ ಕೈಯಲ್ಲಿ ಹಿಡಿದುಕೊಂಡೇ ಜೀವನ ಸಾಗಿಸಬೇಕಾದ ಶೋಚನೀಯ ಪರಿಸ್ಥಿತಿ. ಒಮ್ಮೆ ಈ ಮನೆಯಂತಿರುವ ಕೋಳಿ ಗೂಡುಗಳಿಂದ ಹೊರಗೆ ಬಂದರೆ ಸಾಕು ಎಂಬುದು ಪೊಲೀಸ್ ಪತ್ನಿಯರ, ಮಕ್ಕಳ ಹೆಬ್ಬಯಕೆ.
ಮುರಿದು ಬೀಳುವ ಸ್ಥಿತಿಯಲ್ಲಿರುವ ವಸತಿಗೃಹಗಳ ಬಗ್ಗೆ ಕೆಲವು ವರ್ಷಗಳ ಹಿಂದೇ ಪತ್ರಿಕೆಗಳು ಫೋಟೋ ಸಹಿತ ವರದಿ ಮಾಡಿದ ಬಳಿಕ ಹೊಸ ಕಟ್ಟಡ ಕಟ್ಟಲು ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಿತ್ತು. ನಿಧಾನವಾಗಿ ಪ್ರಸ್ತಾಪ ಅನುಮೋದನೆಗೊಂಡು, ಅಂತಿಮವಾಗಿ ಭಟ್ಕಳದ ಘನಿ ಎಂಬವರಿಗೆ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನೂ ವಹಿಸಿಕೊಡಲಾಯಿತು.
೨.೫೪ ಕೋಟಿ ರೂ. ಅಂದಾಜು ಮೊತ್ತದ ನೂತನ ಕಟ್ಟಡ ಕಾಮಗಾರಿಯು ಭರದಿಂದ ಆರಂಭಗೊಂಡು, ಅಷ್ಟೇ ವೇಗವಾಗಿ ನಡೆದು ಕಳೆದ ಎರಡು ತಿಂಗಳ ಹಿಂದೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಕಟ್ಟಡ ನಿರ್ಮಾಣದ ಪ್ರಕ್ರೀಯೆಯಲ್ಲಿ ಹೆಚ್ಚಾಗಿ ಸಮಸ್ಯೆಯಾಗುವುದು ಗುತ್ತಿಗೆದಾರರಿಂದಲೇ. ಆದರೆ, ಇಲ್ಲಿ ಗುತ್ತಿಗೆದಾರರು ತಾನು ವಹಿಸಿದ ಕೆಲಸವನ್ನು ಕ್ಲಪ್ತ ಕಾಲಕ್ಕೆ ಮಾಡಿ ಮುಗಿಸಿದ್ದಾರೆ.
ಸಮಸ್ಯೆಯಾಗಿರುವುದು ಪೊಲೀಸ್ ಇಲಾಖಾಧಿಕಾರಿಗಳಿಂದ ಹಾಗೂ ಆಡಳಿತಾಧಿಕಾರಿಗಳಿಂದ. ಈ ನೂತನ ಕಟ್ಟಡದ ಡ್ರೈನೇಜ್ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೋರೇಶನ್ ಉಡುಪಿ ನಗರಸಭೆಗೆ ೧.೩೫ ಲಕ್ಷ ರೂ. ಪಾವತಿಸಬೇಕಾಗಿದೆ. ಕಾರ್ಪೋರೇಶನ್ ಈ ಹಣವನ್ನು ನಗರಸಭೆಗೆ ಇನ್ನೂ ಸಹ ಪಾವತಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕುಳಿತಿರುವ ಆಡಳಿತಾಧಿಕಾರಿಗಳು ಸರಿಯಾದ ಮಾಹಿತಿಯನ್ನು ಎಸ್‌ಪಿಯವರಿಗಾಗಲೀ, ಹೌಸಿಂಗ್ ಕಾರ್ಪೋರೇಶನಿಗೆ ಕಳುಹಿಸಿಕೊಡದಿರುವುದೇ ಕಾರಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಗಳಿಂದಾಗಿ ಕಳೆದ ಎರಡು ತಿಂಗಳುಗಳಿಂದ ನೂತನ ಕಟ್ಟಡಕ್ಕೆ ಸಂಬಂಧಿಸಿದ ಇಡೀ ಕಡತ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಆಡಳಿತಾಧಿಕಾರಿಗಳ ಕಪಾಟಿನಲ್ಲಿ ಕೊಳೆಯುತ್ತಿತ್ತು. ಪೊಲೀಸ್ ಅಧಿಕಾರಿಗಳಿಗಾಗಲೀ, ಆಡಳಿತಾಧಿಕಾರಿಗಳಿಗಾಗಲೀ ಮನೆಯ ಸಮಸ್ಯೆ ಇಲ್ಲದಿರುವುದು ಮತ್ತು ಸಾಮಾನ್ಯ ಸಿಬ್ಬಂದಿಗಳ ಬಗ್ಗೆ ಇವರಲ್ಲಿ ನಿಜವಾದ ಕಾಳಜಿ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ.
ನೂತನ ಪೊಲೀಸ್ ವಸತಿಗೃಹದ ಕಾಮಗಾರಿ ಪೂರ್ಣಗೊಂಡು ತಿಂಗಳೆರಡು ಕಳೆದರೂ ಯಾಕಾಗಿ ಹೀಗೆ ಉಳಿದುಕೊಂಡಿದೆ ಎಂದು ವಿಚಾರಿಸಲು ಜಯಕಿರಣ ವರದಿಗಾರ ಎಸ್‌ಪಿ ಡಾ.ಬೋರಲಿಂಗಯ್ಯ ಅವರನ್ನು ಭೇಟಿಯಾಗುವವರೆಗೂ ಈ ಕಟ್ಟಡದ ಹಸ್ತಾಂತರಕ್ಕೆ ಬೇಕಾದ ಕೆಲಸಗಳು ನೆನೆಗುದಿಗೆ ಬಿದ್ದಿದೆ ಎಂಬುದು ಎಸ್‌ಪಿಯವರಿಗೇ ತಿಳಿದಿರಲಿಲ್ಲ.
ಇದೀಗ ಇಲಾಖಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಎಸ್‌ಪಿಯವರು ಕಡತಗಳಿಗೆ ಸಹಿ ಹಾಕಿದ್ದಾರೆ. ಕಡತಗಳು ಪೊಲೀಸ್ ಹೌಸಿಂಗ್ ಕಾಪೋರೇಶನ್‌ಗೆ ಕಳುಹಿಸಲ್ಪಟ್ಟಿದೆ. ಎಲ್ಲವೂ ಸರಾಗವಾಗಿ ನಡೆದರೆ ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾಗುವ ಸಂದರ್ಭ ಪೊಲೀಸ್ ಸಿಬ್ಬಂದಿ ಹಾಗೂ ಇವರ ಕುಟುಂಬಗಳಿಗೆ ನೂತನ ಪೊಲೀಸ್ ವಸತಿಗೃಹ ಹಸ್ತಾಂತರಗೊಳ್ಳಲಿದೆ.
ಹೊಸ ಕಟ್ಟಡ ೨ ಬ್ಲಾಕ್‌ಗಳಲ್ಲಿದೆ. ಒಂದರಲ್ಲಿ ೧೨ ರಂತೆ ಎರಡರಲ್ಲಿ ಒಟ್ಟು ೨೪ ಮನೆಗಳಿವೆ. ಹಳೆಯದರಲ್ಲಿ ೨೭ ಕುಟುಂಬಗಳು ವಾಸವಿದ್ದವು. ಹಗಲಿರುಳು ಜನರ ಆಸ್ತಿ-ಪಾಸ್ತಿ ರಕ್ಷಣೆಗಾಗಿ ನಿದ್ದೆಗೆಟ್ಟು ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಹಾಗೂ ಇವರ ಕುಟುಂಬಗಳು ಮಳೆಗಾಲದ ಮೊದಲು ನೆಮ್ಮದಿಯ ಬದುಕಿನ ಕಡೆಗೆ ಮುಖ ಮಾಡಬೇಕೆಂದಾದರೆ ಪೊಲೀಸ್ ಅಧಿಕಾರಿಗಳು ವಸತಿಗೃಹ ಉದ್ಘಾಟನೆಯ ಕಡೆಗೆ ಆದ್ಯತೆಯಲ್ಲಿ ಗಮನಹರಿಸುವ ಅಗತ್ಯವಿದೆ.

ಯಡಿಯೂರಪ್ಪ ಕೊರಳಿಗೆ ಸಿಬಿಐ ಉರುಳು ಖಚಿತ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಪಾಲುದಾರಿಕೆ ಇರುವ ಸಂಸ್ಥೆಗಳಿಗೆ ಗಣಿ ಕಂಪನಿಗಳಿಂದ ಕೋಟಿಗಟ್ಟಲೆ ದೇಣಿಗೆ ರೂಪದ ಲಂಚ ಬಂದಿರುವುದನ್ನು ಸಿಇಸಿ ವರದಿ ಎತ್ತಿ ಹಿಡಿದಿದ್ದು ಇದರ ಬಗ್ಗೆ ಸಿಬಿಐ ಅಥವಾ ಅಂತಹುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್‌ಗೆ ಶಿಫಾರಸ್ಸು ಮಾಡಿದೆ. ಇಷ್ಟೇ ಅಲ್ಲದೆ, ಜಮೀನು ಡಿ ನೋಟಿಫಿಕೇಷನ್ ಪ್ರಕರಣಗಳ ಬಗ್ಗೆಯೂ ಕೂಲಂಕುಷ ತನಿಖೆ ಅಗತ್ಯವಿದೆ ಎಂದು ಸಿಇಸಿ ಶಿಫಾರಸ್ಸು ಮಾಡಿದೆ. ಇದರಿಂದ ತಾವು ಗಣಿ ಕಂಪೆನಿಗಳಿಂದ ಲಂಚ ಪಡೆದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಹಾಗೂ ಇದನ್ನೇ ಬಿಜೆಪಿ ಹೈಕಮಾಂಡ್‌ಗೂ ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನೆಡೆಯಾಗಿದೆ. ಅವರಷ್ಟೇ ಅಲ್ಲದೆ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ, ಶಾಸಕ ಹೇಮಚಂದ್ರ ಸಾಗರ್ ಸೇರಿದಂತೆ ಬಿಜೆಪಿ ಇತರೆ ನಾಯಕರ ನೆತ್ತಿಯ ಮೇಲೆ ತೂಗುಕತ್ತಿ ನೇತಾಡುವಂತಾಗಿದೆ.
ಡಿನೋಟಿಫಿಕೇಷನ್ ಪ್ರಕರಣಗಳ ಬಗ್ಗೆ ತನಿಖೆ ಆರಂಭಗೊಂಡರೆ ಬೆಂಗಳೂರು ಮತ್ತು ಸುತ್ತಮುತ್ತ ನಡೆದಿರುವ ಡಿನೋಟಿಫಿಕೇಶನ್ ಪ್ರಕರಣಗಳಲ್ಲಿ ಭಾಗಿಯಾದ ಹಾಲಿ ಮತ್ತು ಮಾಜಿ ಸಚಿವರು ಹಾಗೂ ಮಾಜಿ ಸಿಎಂಗಳ ವಿರುದ್ಧವೂ ತನಿಖೆ ನಡೆದು ಸಂಕಷ್ಟ ತಪ್ಪದು.
ಯಡಿಯೂರಪ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಇಸಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಮಕ್ಕಳಾದ ಬಿ.ವೈ.ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್‌ಕುಮಾರ್ ಪಾಲುದಾರರಾಗಿರುವ ಧವಳಗಿರಿ ಪ್ರಾಪರ್ಟೀಸ್ ಮತ್ತು ಆದರ್ಶ ಡೆವಲಪರ‍್ಸ್‌ಗೆ ತಲಾ ೨.೫ಕೋಟಿ ಮತ್ತು ೩.೫ ಕೋಟಿ ವಂತಿಗೆ ಪಡೆದಿರುವುದು ಹಾಗೂ ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಕಂಪೆನಿಯಿಂದ ೨೦ ಕೋಟಿ ಪಡೆದಿರುವ ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ಅಗತ್ಯವಿದೆ ಎಂದಿದೆ. ಸಿಇಸಿ ಸಲ್ಲಿಸಿರುವ ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಕುರಿತಾದ ವರದಿ ಬಗ್ಗೆ ಸುಪ್ರೀಂಕೋರ್ಟ್‌ನ ಹಸಿರು ಪೀಠ ಬಹುತೇಕ ಮುಂದಿನ ಏ.೨೭ರ ಶುಕ್ರವಾರ ವಿಚಾರಣೆ ಕೈಗೊಳ್ಳಲಿದ್ದು, ನಂತರವಷ್ಟೇ ಸಿಇಸಿ ಶಿಫಾರಸ್ಸಿ ನನ್ವಯ ತನಿಖೆಗೆ ಆದೇಶಿಸಬೇಕೇ, ಬೇಡವೇ ಎಂಬುದು ನಿರ್ಧಾರವಾಗಲಿದೆ.

'ಸಿಇಸಿ ವರದಿಯೇ ಅಂತಿಮವಲ್ಲ'
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿ ತನ್ನ ಶಿಫಾರಸ್ಸುಗಳನ್ನು ಮಾಡಿದೆ. ಇದೇ ಅಂತಿಮವಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಸಿಇಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂತಹ ಸಮಯದಲ್ಲಿ ನಾನು ಹೆಚ್ಚಾಗಿ ಏನೂ ಹೇಳಲಾರೆ. ಕಾನೂನು ತಜ್ಞರ ಜತೆ ಸಮಾಲೊಚನೆ ನಡೆಸುತ್ತೇನೆ. ವರದಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನನ್ನ ವಕೀಲರು ವಾದ ಮಂಡಿಸಲಿದ್ದಾರೆ. ನನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ನ್ಯಾಯ ದೊರೆಯುತ್ತದೆ ಎಂಬ ಭರವಸೆಯೂ ಇದೆ ಎಂದು ಹೇಳಿದರು. ಪತ್ರಕರ್ತರ ಇತರೆ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿ ತೋರದ ಯಡಿಯೂರಪ್ಪ, ಚುಟುಕಾಗಿ ಮಾತನಾಡಿ ಹೊರಟರು.

Posted by JAYAKIRANA Kirana on | 0 comments | Leave a comment...


ಗಿಡುಗನ ಬೇಟೆಗೆ ಹೊರಟ ಚಿನ್ನದ ಹಕ್ಕಿ

Posted by JAYAKIRANA Kirana on | 1 comments | Leave a comment...

ಸಮೀರಾ ತೆರೆದಿಟ್ಟ ದುಬಾಯಿಯ ರಂಗೀನ್ ಜವಾನಿ

  • ಮಝರ್
ಕುಂದಾಪುರ: 'ಮೇರಾ ಸಬ್ ಕುಚ್ ಲೂಟ್ ಲಿಯಾ ವೋ... ಮೇರಾ ಪ್ಯಾರ್... ಮೇರಿ ಜಿಂದಗಿ, ಮೇರಾ ಪೈಸಾ... ಮೇರಿ ಇಜ್ಝತ್ ಸಬ್‌ಕುಚ್... ಸಬ್‌ಕುಚ್'. ಹಾಗಂತ ಗುರುತು ಪರಿಚಯವಿಲ್ಲದ ಊರಿನಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಮಾತನಾಡುತ್ತಿದ್ದ ಅವಳ ಕಂಗಳಲ್ಲಿ ಹೆಪ್ಪುಗಟ್ಟಿತು ದಟ್ಟನೆಯ ವಿಷಾದ. ನೋವು, ಅಸಹಾಯಕತೆ, ಸಿಟ್ಟು, ತಣ್ಣಗಿನ ಕ್ರೌರ್ಯ ಎಲ್ಲವೂ ಅಲ್ಲಿ ಎದ್ದೆದ್ದು ಬರತೊಡಗಿತು. ಅತ್ಯಂತ ಸಹನೆಯಿಂದ ಆಕೆಯ ಮಾತುಗಳನ್ನು ಕೇಳುತ್ತಿದ್ದ ಕುಂದಾಪುರ ಮಹಿಳಾ ಠಾಣೆಯ ಪಿಎಸ್‌ಐ ಸುಜಾತಾ ಸಹಿತ ಠಾಣೆಯಲ್ಲಿದ್ದ ಅಷ್ಟೂ ಮಹಿಳಾ ಪಿ.ಸಿ.ಗಳ ಮುಖದಲ್ಲಿ ಸ್ಪಷ್ಟವಾಗಿ ಕದಲುತ್ತಿತ್ತು ಸಂತಾಪದ ಕದಲಿಕೆಗಳು. ಛೇ... ಹೀಗಾಗಬಾರದಿತ್ತು. ಅಂದಹಾಗೆ ಆ ನಿಷ್ಠುರ ಸಂಜೆಯಲ್ಲಿ ಕುಳಿತ್ತಿದ್ದವಳು ಸಮೀರಾ ಸೈದು!

ಕರೆದಿತ್ತು ದುಬಾಯಿ
ಕೊಚ್ಚಿ ಮೂಲದ ಕುಟುಂಬವೊಂದರ ಮೂವರು ಹೆಣ್ಣು ಸಹೋದರಿಯರಲ್ಲಿ ಸಮೀರಾ ಎರಡನೇಯವಳು. ಕುಕ್ಕಿ ತಿನ್ನುವ ಬಡತನದ ನಡುವೆಯೂ ಡಿಪ್ಲೊಮ ಮುಗಿಸಿದ ಸಮೀರಾಳಿಗೆ ದುಬೈಯ ಸೇಲ್ಸ್ ಸಂಸ್ಥೆ ಯೊಂದು ಕೈಬೀಸಿ ಕರೆದಿತ್ತು. ತಕ್ಕಮಟ್ಟಗಿನ ಸಂಬಳ, ಹೆಸರು ಪರವಾಗಿಲ್ಲ ಎಂದು ಅಲ್ಲಿ ದುಡಿಯುತ್ತಿದ್ದಾಗಲೇ ಮನೆಯಲ್ಲಿ ಜರಗಿದ ಅವಘಡ ಅನಾಮತ್ತಾಗಿ ಅವಳನ್ನು ಕೊಚ್ಚಿಗೆ ಕರೆಸಿಕೊಂಡಿತ್ತು. ಹಾಗೆ ಬಂದವಳ ಹೆಗಲಿಗೆ ಏರಿ ಕುಂತಿದ್ದು ಸಹೋದರಿಯರ ಮದುವೆ. ಮನೆಯ ಜವಾಬ್ದಾರಿ. ಕೈಚೆಲ್ಲಿ ಕುಳಿತ ಸಮೀರಾಳಿಗೆ ವೀಸಾ ಕ್ಯಾನ್ಸಲ್ ಆಗಿದ್ದರಿಂದ ಮತ್ತದೇ ಕಂಪೆನಿಗೆ ಮರಳುವ ಹಾಗಿರಲಿಲ್ಲ. ಅಲ್ಲಿ ಅವಳಿಗೆ ಆಪತ್‌ಬಾಂಧವನಾಗಿ ನಡೆದು ಬಂದವನು ಸೋದರ ಸಂಬಂಧಿಯೋರ್ವ ದುಬಾಯಿ ಹೊಟೇಲ್ ಒಂದರ ಹಾದಿ ತೋರಿಸಿ ವೀಸಾ ತೆಗೆಸಿಕೊಟ್ಟವನು ಅವನೇ. ಅದು ದುಬಾಯಿಯ ನೈಟ್‌ಕ್ಲಬ್!

ಕನಸುಗಳಿಗೆ ಮಲ್ಲಿಗೆಯ ಸಿಂಗಾರ
ನಿಜಕ್ಕೂ ಅದು ಭ್ರಮಾಲೋಕದ ತುಂಡು ಧರೆಗೆ ಜಾರಿಬಿದ್ದಂತಹ ವಿಲಾಸದ ಜಗತ್‌ವಿಖ್ಯಾತ ದುಬಾಯಿಯ ಅಲ್ ಬುರ್ಜ್ ಖಲೀಫಾದ ಹಿಂದೆ ಸೂರ್ಯ ಕಳೆದು ಹೋಗುತ್ತಿದ್ದಂತೆ ಇಲ್ಲಿ ತೆರೆದು ಕೊಳ್ಳುತ್ತದೆ ಇಂದ್ರಲೋಕದ ವೈಭವ. ರಂಭೆ, ಅಪ್ಸರೆಯರನ್ನು ನಾಚಿಸುವಂತಹ ಲೈವ್ ಬ್ಯಾಂಡ್ ಹುಡುಗಿಯರ ಮಾದಕ ಹೆಜ್ಜೆಗಳು ಹೃದಯದಲ್ಲಿ ಕೊಳಲನ್ನು ಬಾರಿಸಿದರೆ, ಮುಖಕ್ಕೆ ಮುಖ ತಾಗಿಸಿ 'ಔರ್ ಕ್ಯಾ ಚಾಹಿಯೇ?' ಎಂದು ಕೇಳುವ ರತಿ ಯಂತಹ ವೈಟ್ರಸ್ ಕಣ್ಣುಗಳ ಮುಂದೆ ಕಾಮನಬಿಲ್ಲನ್ನೇ ಎಳೆದು ತರುತ್ತಾಳೆ. ಅಸಲಿಗೆ ಮಾಲೀಕರಿಗೆ ನಿಜವಾದ ಲಾಭವಿ ರುವುದೇ ಅಲ್ಲಿ.
ಗ್ರಾಹಕರ ಕನಸುಗಳಿಗೆ ಮಲ್ಲಿಗೆ ಸಿಂಗಾರವಿಟ್ಟಷ್ಟೂ ಮಾಲೀಕರ ತಿಜೋರಿ ದುಬೈ ದಿರ್ರಹಂಗಳಿಂದ ತುಂಬಿ ತುಳುಕಾಡುತ್ತದೆ. ಗ್ರಾಹಕರೊಂದಿಗೆ ಎಷ್ಟೋ ಕಪಟ ಪ್ರೀತಿ ತೋರಿಸಿ, ಅವರನ್ನು ಒಲಿಸಿಕೊಳ್ಳಿ ಅವನ ಭ್ರಮೆ, ಉನ್ಮಾದದ ಕನಸುಗಳು ಇಲ್ಲೇ ಕಳೆದು ಹೋಗುವಂತೆ ಮಾಡಿ, ಅದನ್ನು ಹುಡುಕಿಕೊಳ್ಳಲೋಸುಗ ಪುನಃ ಪುನಃ ಇಲ್ಲೇ ಬರುವಂತೆ ಮಾಡಿ. ನೀವೂ ಒಂದಷ್ಟು ದಿರ್ರಹಂ ಸೆರಗಿಗೆ ಸಿಕ್ಕಿಸಿಕೊಳ್ಳಿ. ನನ್ನ ತಿಜೋರಿಗೂ ಒಂದಷ್ಟು ಗಳಿಸಿ ಕೊಡಿ. ಆದರೆ ಅಪ್ಪಿತಪ್ಪಿಯೂ ಮನಸ್ಸನ್ನು ಒಪ್ಪಿಸಬೇಡಿ. ಅದರಲ್ಲೂ ನಮ್ಮ ಸಂಸ್ಥೆಯ ಸಿಬ್ಬಂದಿಯನ್ನೂ ನೋ... ನೆವೆರ್. ಪ್ರೀತಿಯೆಂಬ ಪದವೇ ಅಲ್ಲಿ ಕೇಳಿಬರಬಾರದು. ಅದು ಸರ್ವಥಾ ನಿಷಿದ್ಧ, ಹೀಗೊಂದು ಅಲಿಖಿತ ಕಾನೂನು ನೈಟ್‌ಕ್ಲಬ್‌ಗಳನ್ನು ಆಳುತ್ತಾ ಬಂದಿದೆ. ಇನ್ನು ಆಳುತ್ತಲೇ ಇದೆ. ಅಲ್ಲಿ ಪ್ರೀತಿ ಪ್ರೇಮವೆಂದರೆ ಬಂಗಾರದ ಪಂಜರದೊಳಗಿನ ಚಿನ್ನದ ಹಕ್ಕಿಯನ್ನು ಕೈಯಾರೆ ತೆರೆದು ಓಡಿಸಿದ ಹಾಗೆ.

ಪ್ರೀತಿಯಲ್ಲಿ ಬಿದ್ದಳು ಸಮೀರಾ
ಬಹುಷ ಸಮೀರಾ ಎಡವಟ್ಟು ಮಾಡಿಕೊಂಡದ್ದೇ ಅಲ್ಲಿ. ಅಷ್ಟರ ತನಕ ವೈಟ್ರೆಸ್ ಆಗಿ ಗ್ರಾಹಕರ ವಿಶ್ವಾಸಕ್ಕೆ, ಆಕರ್ಷಣೆಗೆ, ಆದರಕ್ಕೆ ಒಳಗಾಗಿದ್ದ ಸಮೀರಾಳ ಕನಸುಗಳ ಹಿತ್ತಲಿಗೆ ರಾಜಕುಮಾರನೋರ್ವನ ಎಂಟ್ರಿ ಸದ್ದಿಲ್ಲದೆ ನಡೆದುಹೋಗಿತ್ತು. ಅವನು ಅದೀಪ್ ಕುಮಾರ್ ಶೆಟ್ಟಿ. ಕುಂದಾಪುರ ಸಮೀಪದ ಅಂಪಾರಿನವನು. ಸಮೀರಾ ಕೆಲಸ ಮಾಡುತ್ತಿದ್ದ ಹೊಟೇಲ್‌ನಲ್ಲಿಯೇ ಕ್ಯಾಶಿಯರ್ ಆಗಿದ್ದ ಅದೀಪ್-ಸಮೀರಾಳ ಪ್ರೀತಿ ಹೊಟೇಲಿನ ಕಾರಿಡಾರ್‌ಗಳಲ್ಲಿ ಮಗ್ಗಲು ಬದಲಿಸಿಕೊಳ್ಳುತ್ತಿದ್ದರೆ, ಹೊಟೇಲಿಗೆ ಹೊಟೇಲೇ ಅದೀಪ್‌ನ ಆಕಾಶಕ್ಕೆ ಏಣಿಯಿಡುವ ಮಹತ್ವಾಕಾಂಕ್ಷೆಯ ಬಗ್ಗೆ ಪಿಸುಗುಡತೊಡಗಿತ್ತು. ಆದರೆ ಸಮೀರಾಳಿಗೆ ಮಾತ್ರ ಆತ ಬದುಕುಕಟ್ಟಿಕೊಡುವ ಸರದಾರನಾಗಿ ಕಂಡುಬಂದಿದ್ದ. ಪುಂಗಿಯ ನಾದಕ್ಕೆ ಹೆಡೆಯಾಡಿಸುವ ನಾಗಿಣಿಯ ಹಾಗೆ ಸದ್ದಿಲ್ಲದೆ ಎಲ್ಲವನ್ನೂ ಕಳೆದುಕೊಳ್ಳುತ್ತಾ ಬಂದ ಸಮೀರಾಳೇ ಹೇಳಿದ ಹಾಗೆ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿ ಹಣವನ್ನು ಆತನ ಖಾತೆಗೆ ನಾನು ಬೇರೆಯಲ್ಲ, ಆತ ಬೇರೆಯಲ್ಲ ಎಂದು ವರ್ಗಾಯಿಸುತ್ತಾ ಬಂದಿದ್ದಳು. ತಡೆಯಿಲ್ಲದೆ ಜರಗಿದ ಇವರಿಬ್ಬರ ಮಿಲನ ಮಹೋತ್ಸವದಲ್ಲಿ ಕುಡಿಯೊಡೆದ ಜೀವವೊಂದು ಸದ್ದಿಲ್ಲದೆ ದುಬೈಯ ಮಣ್ಣಲ್ಲಿ ಬೆರೆತು ಹೋಗಿದ್ದೂ ಇದೆ. ಅಷ್ಟೇ ಸಾಕಿತ್ತು ದುಬಾಯಿಯ ಕಾನೂನು ಕುಣಿಕೆ ಅದೀಪ್‌ನ ಕೊರಳನ್ನೇರಲು. ಆದರೆ ಸಮೀರಾಳದ್ದು ದಿವ್ಯ ಪ್ರೇಮ ನೋಡಿ.

ಕೆಲಸ ಬಿಟ್ಟ ಸಮೀರಾ
ಇವರಿಬ್ಬರ ಪ್ರೀತಿಯ ಆಕಳಿಕೆ ಸದ್ದು ಮಾಡುತ್ತಿದ್ದಂತೆ ದುಬೈಯ ಕೆಲಸದಿಂದ ಸಮೀರಾ ಓಮಾನಿಗೆ ವರ್ಗಾವಣೆಗೊಳ್ಳುತ್ತಾಳೆ. ಅಲ್ಲಿಯೂ ಅದೀಪ್‌ನ ತಂತ್ರವಿದೆ ಎಂದು ಆರೋಪಿಸುತ್ತಿರುವ ಸಮೀರಾ, ಅಲ್ಲೊಂದಿಷ್ಟು ದಿನ ಕೆಲಸ ಮಾಡಿದ ನಂತರ ಆ ಕೆಲಸದಿಂದಲೂ ಬಿಡಿಸಿದ ಅದೀಪ್ ಅವಳಿಗೆ ಅನಿತಾ ಎಂಬವಳ ಫ್ಲಾಟಿನಲ್ಲಿ ನೆಲೆ ಕಲ್ಪಿಸುತ್ತಾನೆ. ಆದರೆ ಅದಾಗಲೇ ಸಮೀರಾಳ ಮೇಲಿನ ವ್ಯಾಮೋಹವನ್ನು ಕಳಚಿಕೊಂಡಿದ್ದ ಅದೀಪ್ ಒಂದು ದಿನ ತನ್ನ ಸ್ನೇಹಿತರು ವಾಸವಿರುವ ಫ್ಲಾಟಿಗೆ ಕರೆಸಿಕೊಂಡಿದ್ದು, ಅಲ್ಲಿ ತನ್ನ ಗೆಳೆಯರನ್ನು ಸಮೀರಾಳ ಮೇಲೆ ಛೂ ಬಿಟ್ಟು ಅದನ್ನು ಕ್ಯಾಮ್ ಮೂಲಕ ಚಿತ್ರೀಕರಿಸಿ ಅವಳನ್ನು ಕಾಲ್‌ಗರ್ಲ್ ಆಗಿ ಬಿಂಬಿಸುವ ವಿಫಲ ಯತ್ನ ಮಾಡಿದನೆನ್ನಲಾಗಿದೆ. ಇದರಿಂದ ಕನಲಿ ಹೋದ ಸಮೀರಾ ಇದರ ವಿರುದ್ಧ ಕಾನೂನು ಮೊರೆ ಹೋಗುವ ಬೆದರಿಕೆ ಹಾಕಿದಾಗ ಮೂವರು ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದರೆಂದು ಹೇಳುವ ಸಮೀರಾ, ಮುಂದೆ ಲಾಡ್ಜಿಂಗ್ ಒಂದರಲ್ಲಿ ತನ್ನನ್ನು ಇರಿಸಿದ ಅದೀಪ್ ಅಲ್ಲಿಂದ ಹೇಳದೇ ಭಾರತಕ್ಕೆ ಪಲಾಯನಗೈದಿದ್ದು ಲಾಡ್ಜಿಂಗ್ ಬಿಲ್ಲನ್ನು ಪಾವತಿಸಲು ತನ್ನ ಪಾಸ್‌ಪೋರ್ಟ್‌ನ್ನೇ ಅಡವಿರಿಸಿ ಕೊನೆಗೂ ಬಿಲ್ಲನ್ನು ಪಾವತಿಸಿದ್ದೇನೆ ಎಂದು ಹೇಳುವಾಗ ಅವಳ ಕಣ್ಣಲ್ಲಿ ತಾನು ಸಂಪೂರ್ಣವಾಗಿ ಬರ್ಬಾದ್ ಆಗಿರುವ ನೋವಿನ ಸೆಳಕೊಂದು ಪಕ್ಕನೆ ಜಾರಿತ್ತು.

ಅಪರಿಚಿತ ಊರಿನಲ್ಲಿ ಪರಿಚಿತನಿಗಾಗಿ ಪರಿತಪನೆ
ಅದೀಪ್ ದುಬೈಯಿಂದ ನಾಪತ್ತೆಯಾದ ನಂತರ ಅವಳನ್ನು ಅರಸಿ ಬಂದ ಸಮೀರಾ ನೇರವಾಗಿ ಕುಂದಾಪುರಕ್ಕೆ ಬಂದು ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಮೇಲಾಗಿ ಪತ್ರಕರ್ತರಲ್ಲೂ ತನಗಾದ ವಂಚನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾಳೆ. ಎಲ್ಲೋ ಕೇಳಿ ಬರುವ ಹಾಗೆ ಅದೀಪ್ ಅವಳೊಬ್ಬಳು ಕಾಲ್‌ಗರ್ಲ್ ಅಂದಿದ್ದಾನೆ. ಅವಳು ನೀಡಿದ ಹಣವನ್ನೆಲ್ಲವನ್ನು ವಾಪಾಸು ಮಾಡಿದೆನೆನ್ನುತ್ತಾನೆ. ಕಾಲ್‌ಗರ್ಲ್ ಎಂದರೆ ಹಣಕೊಟ್ಟು ತಮ್ಮ ವಾಂಛೆಯನ್ನು ತೀರಿಸಿ ಎದ್ದು ಬರುವುದೆಂದು ಅರ್ಥ. ಆದರೆ ಇಲ್ಲಿ ಹಣ ಕಾಲ್‌ಗರ್ಲ್‌ನಿಂದ ದಾಖಲೆಪೂರ್ವಕವಾಗಿ ಸಂದಾಯವಾಗಿದೆ ಎಂದರೆ ಪ್ರೀತಿಯ ಅಲೆಯೊಂದು ಎರಡೂ ತೀರಗಳನ್ನು ಚುಂಬಿಸಿದೆ. ಆದರೆ ಗಿಡುಗ ಮಾತ್ರ ಚಿನ್ನದ ಹಕ್ಕಿಯನ್ನು ಕುಕ್ಕಿ ಕುಕ್ಕಿ ಹಂದರವನ್ನಾಗಿಸಿ ಬಿಟ್ಟಿದೆ. ನೆಲೆ ತಪ್ಪಿದ ಹಕ್ಕಿ ಮಾತ್ರ ಗಿಡುಗನ ವಿರುದ್ಧ ಏಕಾಂಗಿಯಾಗಿ ತಿರುಗಿ ಬಿದ್ದಿದೆ.

ಎಲ್ಲ ಹೆಣ್ಮಕ್ಕಳೂ ಒಂದೇ ರೀತಿ ಎಂದು ಭಾವಿಸದಿರಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೩೬ ವರ್ಷ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮದುವೆಯಾಗಿ ನಾಲ್ಕು ವರ್ಷ ಕಳೆಯಿತು. ಒಂದು ಮಗು ಇದೆ. ನನ್ನ ಪತ್ನಿಗೆ ೨೮ ವರ್ಷ. ನನ್ನ ಸಮಸ್ಯೆ ಏನೆಂ ದರೆ ನನಗೆ ಜನನಾಂಗದ ನಿಮಿರು ಸಮಸ್ಯೆಯಿದೆ. ಕೆಲವೊಮ್ಮೆ ಎಷ್ಟೇ ಬಾರಿ ಪ್ರಯತ್ನ ಪಟ್ಟರೂ ಪ್ರಯೋಜನವಾಗುವುದಿಲ್ಲ. ಆಗ ನನ್ನ ಮೇಲೆಯೇ ನನಗೆ ಜಿಗುಪ್ಸೆ ಬರುತ್ತದೆ. ನನ್ನ ಸಮಸ್ಯೆಯಿಂದ ಪತ್ನಿಗೆ ನಿರಾಸೆಯಾಗುತ್ತಿದೆ. ನಾನು ಮದುವೆಯಾಗುವ ಮುಂಚೆ ವೇಶ್ಯೆ ಯೊಬ್ಬಳ ಜತೆ ಸಂಪರ್ಕ ಮಾಡಿದ್ದೆ. ಆಕೆ ನನಗೆ ಅನೇಕ ಬಾರಿ ಸುಖ ಕೊಟ್ಟಿದ್ದಳು. ಮದುವೆಯಾದ ಬಳಿಕ ಆಕೆಯ ಸಂಪರ್ಕ ಬಿಟ್ಟಿ ದ್ದೇನೆ. ಆಕೆ ಬೇರೆ ಕೆಲವು ಮಂದಿಯ ಜತೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದು ನನಗೆ ತಿಳಿದಿತ್ತು. ನಾನು ಆಕೆಯ ಜತೆ ಸೇರು ವಾಗ ಕಾಂಡೋಂ ಬಳಕೆ ಮಾಡುತ್ತಿದ್ದೆ. ಕಳೆದ ಒಂದು ವರ್ಷ ದಿಂದ ನನಗೆ ನಿಮಿರುವಿಕೆ ಸಮಸ್ಯೆ ಶುರುವಾಗಿದೆ. ನನ್ನ ಮಗುವಿಗೆ ಈಗ ಏಳು ತಿಂಗಳು ದಾಟಿದ್ದು ನಾವು ಈ ಸಮಯದಲ್ಲಿ ಸೇರಿದರೆ ಸಮಸ್ಯೆಯಾಗುವುದೇ? ನಾನು ಪತ್ನಿಯ ಜತೆ ಸೇರುವಾಗ ಜನ ನಾಂಗ ಬಲ ಕಳೆದುಕೊಳ್ಳುತ್ತದೆ. ಇದರಿಂದ ನಮ್ಮಿಬ್ಬರಿಗೂ ತೃಪ್ತಿ ಸಿಗುತ್ತಿಲ್ಲ. ನಾನು ಯಾವುದಾದರೂ ಮಾತ್ರೆಗಳನ್ನು ಸೇವಿಸಿದರೆ ಪರಿ ಣಾಮ ಸಿಗಬಹುದೇ? ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮ ರ್ಥನಾದರೆ ನನ್ನ ಪತ್ನಿ ಬೇರೆ ದಾರಿ ಹಿಡಿಯಬಹುದೇ ಎಂದು ಶಂಕೆಯಾಗುತ್ತಿದೆ. ನಾನೇನು ಮಾಡಲಿ? ನನಗೆ ರಾತ್ರಿಯೆಲ್ಲಾ ಕೆಟ್ಟ ಕನಸುಗಳು ಬೀಳುತ್ತದೆ. ಕುಡಿತದ ಚಟಕ್ಕೆ ಬಿದ್ದಿದ್ದೇನೆ. ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನಿಮ್ಮ ಸಮಸ್ಯೆ ಏನೆಂದು ನೀವೇ ಅರ್ಥೈಸಿಕೊಳ್ಳಿ. ಮೊದಲು ಹೆಂಡ ತಿಯ ಮೇಲಿನ ಶಂಕೆಯನ್ನು ದೂರಮಾಡಿ. ನಿಮ್ಮಿಂದ ಸಿಗದ ಸುಖವನ್ನು ಅಸಾ ಧ್ಯವಾದುದನ್ನು ಆಕೆ ಬೇರೊಬ್ಬರಿಂದ ಪಡೆಯುತ್ತಾರೆ ಎಂದು ಚಿಂತಿಸಿ ಕೊರಗದಿರಿ. ಎಲ್ಲಾ ಹೆಣ್ಣು ಮಕ್ಕಳು ಒಂದೇ ರೀತಿ ಇರುವುದಿಲ್ಲ. ಶಂಕೆಯಿಂದ ಮುಂದೆ ಸಮಸ್ಯೆ ಎದುರಿಸಬೇಕಾದೀತು. ಮದುವೆಗೆ ಮುಂಚೆ ಬೇರೆ ಹೆಂಗಸಿನ ಜತೆ ಸಂಬಂಧ ಹೊಂದಿದ್ದನ್ನು ಎಂದಾದರೂ ಪತ್ನಿ ಶಂಕಿಸಿದ್ದರೇ? ಈ ಬಗ್ಗೆ ನಿಮ್ಮಲ್ಲಿ ಕೇಳಿ, ಜಗಳವಾಡಿದ್ದರೇ? ಇಲ್ಲ ತಾನೇ? ಶಂಕೆ ಪಡುವುದಕ್ಕೆ ನಿಮ್ಮ ಮನದಲ್ಲಿರುವ ಸಂಕುಚಿತ ಭಾವನೆಯೇ ಕಾರಣ. ನಾನು ಹಿಂದೆ ಹೀಗೆ ಮಾಡಿದ್ದರಿಂದ ನನ್ನ ಹೆಂಡತಿಯೂ ಹೀಗೆ ಮಾಡುತ್ತಿರಬ ಹುದು ಎಂಬ ಯೋಚನೆ ಸರಿಯಿಲ್ಲ. ನೀವು ಸಂಬಂಧ ಹೊಂದಿದ್ದ ಹೆಂಗಸು ಎಂಥವಳೆಂದು ಹೇಳಲು ಆಗುವುದಿಲ್ಲ. ಆಕೆ ನಿಮ್ಮಂ ತೆಯೇ ಬೇರೆಯವರ ಜತೆ ಸಂಬಂಧ ಹೊಂದಿದ್ದರೆ ಆಕೆ ವೇಶ್ಯೆಯಾ ಗಿರಬಹುದು. ಆಕೆಯಿಂದ ಗುಪ್ತ ರೋಗ ಹರಡುವ ಸಾಧ್ಯತೆಯಿದೆ. ಆದರೆ ನೀವು ಕಾಂಡೋಂ ತಪ್ಪದೆ ಬಳಸುತ್ತಿದ್ದೆ ಎಂದಿದ್ದೀರಿ. ಆದರೂ ನೀವೊಮ್ಮೆ ಹೆಚ್‌ಐವಿ, ಬ್ಲಡ್ ಟೆಸ್ಟ್ ಅಗತ್ಯವಾಗಿ ಮಾಡಿಸಿಕೊಳ್ಳಿ. ನಿಮಿರುವಿಕೆ ದೌರ್ಬಲ್ಯ ದೊಡ್ಡ ಸಮಸ್ಯೆಯೇನೂ ಅಲ್ಲ. ಈ ಬಗ್ಗೆ ವೈದ್ಯರ ಸಲಹೆ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮಗು ವಿಗೆ ಏಳು ತಿಂಗಳು ತುಂಬಿದಾಗ ಲೈಂಗಿಕ ಕ್ರಿಯೆಗೆ ಸಮಸ್ಯೆಯಿಲ್ಲ. ಆದರೆ ಸದ್ಯಕ್ಕೆ ಇನ್ನೊಂದು ಮಗು ಬೇಡ. ಮಗು ಬೆಳೆದು ದೊಡ್ಡ ದಾಗುವವರೆಗೆ ಸಂಭೋಗದ ವೇಳೆ ನಿರೋಧ್ ಮತ್ತಿತರ ಗರ್ಭ ನಿರೋಧಕ ಬಳಸಿ. ಕುಡಿತದಿಂದಲೇ ಸಮಸ್ಯೆ ಆರಂಭವಾಗಿದೆ.   ಹೀಗಾಗಿ ಮತ್ತೆ ಕುಡಿಯಲು ಹೋಗದಿರಿ. ಪೌಷ್ಠಿ ಕಾಂಶಯುಕ್ತ ಆಹಾರ ಸೇವಿಸಿ, ವ್ಯಾಯಾಮದಲ್ಲಿ ತೊಡಗಿ ಸಮಸ್ಯೆಯನ್ನು ದೂರ ವಿರಿಸಿ. ಸಂಭೋಗದಲ್ಲಿ ತೊಡಗುವ ವೇಳೆ ಲೈಂಗಿಕ ಆಸನವನ್ನು ಬದಲಿಸಿರಿ. ಈ ಬಗ್ಗೆ ಬೇಕಾದರೆ ತಜ್ಞ ವೈದ್ಯರ ಸಲಹೆ ಪಡೆಯಿರಿ.

ತಾಳಿ ಸ್ತ್ರೀಶೋಷಣೆಯ ಪ್ರತೀಕ ಎನ್ನುವವರೂ ಇದ್ದಾರೆ

Posted by JAYAKIRANA Kirana on | 0 comments | Leave a comment...

ಎ. ೧೪ ರಂದು ಅಶೋಕ್ ಹಲಾಯಿಯವರು ನನ್ನ ಪತ್ರಕ್ಕೆ ಪ್ರತಿಕ್ರಿಯೆ ಯನ್ನು ಬರೆದಿದ್ದಾರೆ. ನಾನು ಬರೆದ ಕೆಲವು ಪ್ಯಾರಾಗಳನ್ನು ಉಲ್ಲೇಖ ಮಾಡಿ ದ್ದೀರಿ. ನನ್ನ ಪತ್ರವನ್ನು ಯಾವ ರೀತಿ ಅರ್ಥಮಾಡಿಕೊಂಡಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇರಲಿ ಚಾವಡಿ ಓದುಗರು ಗಮನಿಸುತ್ತಿದ್ದಾರೆ ಎಂದು ಹೇಳಿದ್ದೀರಿ. ಚಾವಡಿ ಓದುಗರಿಗೆ ಅಂತಿಮವಾಗಿ ನಾನು ಕೆಲವು ಮಾತುಗಳನ್ನು ಈ ಪತ್ರದ ಮೂಲಕ ಹೇಳಲು ಇಚ್ಛೆ ಪಡುತ್ತೇನೆ.
‘ವೈದಿಕರ ತಾಳಿ ಶೂದ್ರರ ಕಿತ್ತಾಟ ಎಂದು ನಾನು ಬರೆದ ಪತ್ರದ ವಿಚಾ ರಗಳಿಗೆ ಸಂಬಂಧಿಸಿದಂತೆ ವಿಶ್ವನಾಥ್ ಎಂಬವರು ‘ನಾನು ಬಾವಿಯೊಳಗಿನ ಕಪ್ಪೆ ಎಂದು ಬರೆದಿದ್ದರು. ಅದಕ್ಕಾಗಿ ಕೆಲವೊಂದು ವಿಚಾರಗಳನ್ನು ಸಂಶೋಧ ಕರ, ಜಾನಪದ ವಿದ್ವಾಂಸರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಪತ್ರ ಬರೆಯ ಬೇಕಾಯಿತು.
ಅಶೋಕ್ ಹಲಾಯಿಯವರು ಅಧ್ಯಯನಗಾರ ಎಂಬ ವಿಚಾರದಲ್ಲಿ ಕೆಲವು ಮಾತುಗಳನ್ನು ಬರೆದಿದ್ದಾರೆ. ನಾನು ಸಂಶೋಧಕರ ಪುಸ್ತಕ, ಜಾನಪದ ವಿದ್ವಾಂಸರ ಪುಸ್ತಕಗಳನ್ನು ಅಧ್ಯಯನ ಮಾಡಿ ಪತ್ರ ಬರೆದಿದ್ದೇನೆ ಎಂದು ಬರೆದದ್ದು ನಿಜ. ಆದರೆ ಈ ಅಧ್ಯಯನ ಓದುವಿಕೆಯ ಕಾರಣದಿಂದಲೇ ನನ್ನನ್ನು ‘ಅಧ್ಯಯನಗಾರ ಎಂಬ ಪಟ್ಟವನ್ನು ಕೊಟ್ಟು ಕೆಲವು ಪದಗಳ ಪ್ರಯೋಗ ಮಾಡಿದ್ದು ಎಷ್ಟು ಸರಿ ಎಂಬುದನ್ನು ಓದುಗರಿಗೇ ಬಿಡುತ್ತಿದ್ದೇನೆ. ಯಾಕೆಂ ದರೆ ಓದುವಿಕೆಯ ಇನ್ನೊಂದು ಹೆಸರು ಅಧ್ಯಯನ ಮಾಡುವುದು ಎಂದು ನಾನು ಭಾವಿಸಿದ್ದೇನೆ. ಓದುವವರು ಅಥವಾ ಅಧ್ಯಯನ ಮಾಡುವವರು ‘ಅಧ್ಯಯನಗಾರರಾಗುತ್ತಾರೆ ಎಂದು ಯಾರಾದರೂ ಭಾವಿಸುವುದಾದರೆ ಎಲ್ಲ ರಿಗೂ ಅದೇ ಪಟ್ಟವನ್ನು ನೀಡಬೇಕಾಗುತ್ತದೆ. ನಾನು ಓದಿದ್ದನ್ನು ಅಥವಾ ಅಧ್ಯಯನ ಮಾಡಿದ್ದನ್ನು ಹೇಳಿದ್ದು, ಯಾವ ಪುಸ್ತಕ ಅದರ ಬರಹಗಾರರು ಯಾರು ಎಂದು ಹೇಳಿದ್ದರ ಬಗ್ಗೆಯೇ ತಕರಾರು ಎತ್ತುವುದಾದರೆ ನಾನೇನು ಹೇಳಬೇಕಿತ್ತು ಎಂಬುದೇ ಅರ್ಥವಾಗುತ್ತಿಲ್ಲ.
ಬನ್ನಂಜೆಯವರ ಪುಸ್ತಕದ ಭಾಗ ಜಯಕಿರಣದಲ್ಲಿ ಪ್ರಕಟವಾಗುತ್ತಿರು ವುದರಿಂದ ನಾನು ಇಷ್ಟರವರೆಗೆ ಬರೆದ ವಿಚಾರಗಳು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎಂಬ ತೀರ್ಮಾನವನ್ನು ಓದುಗರಿಗೇ ಬಿಡುತ್ತಿದ್ದೇನೆ.
ತಾಳಿಯ ಬಗ್ಗೆ ನನ್ನ ಸ್ಪಷ್ಟ ಅಭಿಪ್ರಾಯ ನನ್ನ ಮೊದಲಿನ ಪತ್ರದಂತೆ ಇನ್ನೂ ಬದಲಾಗಿಲ್ಲ. ವೈದಿಕ ಮೂಲದ ತಾಳಿಯನ್ನು ಶೋಕಿಗಾಗಿ ಅಥವಾ ಕೀಳರಿಮೆಯನ್ನು ದೂರ ಮಾಡುವುದಕ್ಕಾಗಿ ಅಥವಾ ತಾಳಿ ಧರಿಸಿದ್ದರಿಂದ ನಾವು ಮೇಲ್ವರ್ಗದವರಂತಾಗುತ್ತೇವೆ ಎಂಬ ಭಾವನೆಯಿಂದ, ವೈದಿಕ ಪುರೋ ಹಿತರ ಪ್ರಭಾವದಿಂದ ಬ್ರಾಹ್ಮಣೇತರ ತುಳುವರು ತಾಳಿಯನ್ನು ಅನುಕರಿಸಿದ್ದು ಎಂದು ನನ್ನ ಅಭಿಪ್ರಾಯವಾಗಿದೆ. ಈಗ ಆಧುನಿಕ ತಾಳಿ ಎಂದು ಹೇಳಿಕೊ ಳ್ಳುವ ತಾಳಿ ಎಂದು ಮೇಲ್ನೋಟಕ್ಕೆ ಅನಿಸದ ಒಡವೆಗಳಿಗೆ ಜನರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ. ಕೆಲವರು ತಾಳಿ ಧರಿಸಿದರೆ ಅವ ಮಾನ ಎಂದು ತಾಳಿ ತೆಗೆದಿಟ್ಟು ಹೊರಹೋಗುವುದು, ಮದುವೆ ಮತ್ತು ಇತರ ಕೌಟುಂಬಿಕ, ಧಾರ್ಮಿಕ ಸಂದರ್ಭಗಳಲ್ಲಿ ಎದ್ದು ಕಾಣುವಂತೆ ತಾಳಿ ಧರಿಸುವುದು ಕಂಡು ಬರುತ್ತಿದೆ. ತಾಳಿ ಎಂದರೆ ಅದೊಂದು ಸ್ತ್ರೀಶೋಷ ಣೆಯ ಪ್ರತೀಕ ಎಂದು ಭಾವಿಸುವವರೂ ಇದ್ದಾರೆ.
ತಾಳಿಯೂ ಇದ್ದೂ, ತಾಳಿ ಕಟ್ಟದೆಯೂ ಮದುವೆಯಾಗುತ್ತಿತ್ತು ಎಂಬ ವಿಚಾರಕ್ಕೆ ‘ಹಾಗೆಂದರೇನು ಅರ್ಥ? ಎಂದು ನಾನು ಪ್ರಶ್ನಿಸಿದ್ದು ಯಾಕೆಂ ದರೆ ತಾಳಿ ತುಳುನಾಡಿನ ಬ್ರಾಹ್ಮಣೇತರರ ಮದುವೆಗಳಲ್ಲಿ ಅವಿಭಾಜ್ಯ ಅಂಗ ವಾಗಿರಲಿಲ್ಲ ಎಂಬುದಕ್ಕಾಗಿಯಾಗಿದೆ. ತಾಳಿ ಕಟ್ಟದೆಯೂ ಮದುವೆಯಾಗು ತ್ತಿತ್ತು ಎಂಬುದನ್ನು ಅಶೋಕ್ ಹಲಾಯಿಯವರು ಒಪ್ಪಿದ್ದಾರೆ, ಜನಾದನ ಪೂಜಾರಿಯವರಿಗೂ ಈ ವಿಚಾರ ಗೊತ್ತಿದೆ ಎಂದು ಅಶೋಕ್ ಹಲಾಯಿ ಯವರು ಬರೆದಿದ್ದಾರೆ. ಹಾಗಿರುವಾಗ ವೈದಿಕರಲ್ಲಿ ಇರುವಂತೆ ತಾಳಿ ತುಳು ನಾಡಿನ ಮದುವೆಗಳಲ್ಲಿ ಅವಿಭಾಜ್ಯ ಅಂಗವಾಗಿತ್ತೇ? ಎಂಬುದರ ತೀರ್ಮಾನ ವನ್ನೂ ಓದುಗರಿಗೇ ಬಿಡುತ್ತಿದ್ದೇನೆ. ‘ತುಳುನಾಡಿನ ಎಲ್ಲಾ ಬಿಲ್ಲವರ ಯುವಕ - ಯುವತಿಯರ ಮದುವೆಯಲ್ಲಿ ಪೂಜಾರಿಯವರು ಗುರ್ಕಾರ‍್ಮೆ ಮಾಡಲಾಗುತ್ತ     ದೆಯೇ? ಎಂದು ಹಲಾಯಿಯವರು ಪ್ರಶ್ನಿಸಿದ್ದಾರೆ. ನಾನು ಈ ಅರ್ಥದಲ್ಲಿ ಹೇಳಿದ್ದೂ ಅಲ್ಲ. ‘ನಾನು ಹಾಗೆ ಹೇಳಿಲ್ಲ ಎಂದರೆ ಅದು ಇನ್ನೊಂದು ಚರ್ಚೆಗೆ ಹಲಾಯಿ ವರು ನಾಂದಿ ಹಾಡಬಹುದು. ಪೂಜಾರಿಯವವರಿಗೆ ಎಲ್ಲರ ಮದುವೆಗೆ ಗುರ‍್ಕಾರ್ಮೆ ಮಾಡಲು ಆಗುವುದಿಲ್ಲ ಎಂಬುದು ಸರ್ವವಿಧಿತ. ಅವರಿಂದ ನಿರ್ದೇಶಿಸಲ್ಪಟ್ಟವ ರಿಂದ ಮಾಡಲು ಸಾಧ್ಯವಿದೆ ಎಂದು ಮಾತ್ರ ನಾನು ಹೇಳಬಲ್ಲೆ.
‘ಕಂಡದ್ದು ಸುಳ್ಳೇ? ಎಂಬ ಪ್ರಶ್ನೆ ಇಲ್ಲಿ ಸಮರ್ಪಕವಾಗುವುದಿಲ್ಲ. ಯಾಕೆಂ ದರೆ ಚೌತಿಯ ಸಂದರ್ಭದಲ್ಲಿ ಗಣಪತಿಯ ಕೈಯಲ್ಲಿ ಏನೇನೋ ಕೊಡುತ್ತಾರೆ. ಯಾವ್ಯಾವುದೋ ಅಲಂಕಾರ ಮಾಡುತ್ತಾರೆ. ‘ಇದೆಲ್ಲಾ ಸುಳ್ಳೇ ಎಂದು ಪ್ರಶ್ನಿಸಿದಂ ತಾಗಬಹುದು. ‘ತುಳುನಾಡಿನ ಇತಿಹಾಸದ ಬಗ್ಗೆ ಅಧ್ಯಯನ ಏನು ಹೇಳುತ್ತದೆ? ಎಂದು ಹಲಾಯಿಯವರು ಪ್ರಶ್ನಿಸಿದ್ದಾರೆ. ಲಭ್ಯವಿರುವ ಕನ್ನಡ ಭಾಷೆಯ ಪುಸ್ತಕಗಳನ್ನು ಓದಲು ಎಲ್ಲರೂ ಸಮರ್ಥರಿದ್ದಾರೆ. ಆಸಕ್ತಿ ಇರುವವರಿಗೆ ಅತ್ಯಾಶ್ಚರ್ಯಕರವಾದ, ಕುತೂಹಲಭರಿತವಾದ, ಸಾಕಷ್ಟು ಸಂಗತಿಗಳನ್ನು ತುಳುನಾಡಿನ ಇತಿಹಾಸದ ಅಧ್ಯಯನ ದಿಂದ ಕಂಡುಕೊಳ್ಳಬಹುದಾಗಿದೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ‘ತುಳು ಸ್ಟಡೀಸ್ ಡಾಟ್ ಕಾಮ್ ಎಂಬ ಸೈಟ್‌ನಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಇದನ್ನು ರಚಿಸಿದವರು ತುಳುನಾಡಿನ ವಿದ್ವಾಂಸರು ಮತ್ತು ಜ್ಞಾನದಾಹವುಳ್ಳ ಜನ ಸಾಮಾನ್ಯರು. ಮಾತ್ರವಲ್ಲ ಅದಕ್ಕೆ ಯಾರು ಬೇಕಾದರೂ ತಮ್ಮ ಕೊಡುಗೆಗಳನ್ನೂ ನೀಡಬಹುದಾಗಿದೆ.    
ಪೆರ್ಮುದೆಯವರು ಬರೆದಂತೆ ತಾಳಿಯ ಬಗೆಗಿನ ಚರ್ಚೆಯು ಸಾಕಷ್ಟು ವಿಚಾ ರಗಳ ಬಗ್ಗೆ ಬೆಳಕು ಚೆಲ್ಲಿದೆ. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಇತ್ಯಾದಿಗಳ ಬಗ್ಗೆ ಕೆಲವರಿಗಾದರೂ ಕುತೂಹಲ ಮೂಡಿ ಅದರ ಬಗ್ಗೆ ಆಸಕ್ತಿ ಉಂಟಾಗುವಂ ತಾಗಿದೆ ಎಂಬ ಸಂತಸದ ವಿಚಾರದೊಂದಿಗೆ ನನ್ನ ಚರ್ಚೆಯಿಂದ, ವಿಚಾರ ಮಂಡನೆ ಯಿಂದ ಯಾರಿಗಾದರೂ ಬೇಸರವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತಾ, ಕೆಲವೊಂದು ಕಾರಣಗಳಿಗೆ ಚರ್ಚೆ ಮುಂದುವರಿಸಲು ಅಸಾಧ್ಯವಾಗುತ್ತಿರುವುದರಿಂದ ನನ್ನ         ವಾದವನ್ನು ಕೊನೆಗೊಳಿಸುತ್ತಿದ್ದೇನೆ. 
ಜಯರಾಮ, ಮುಲ್ಕಿ

ಗೊಂದಲದ ಗೂಡಾಗುತ್ತಿರುವ ಹಿಂದೂ-ಮುಸ್ಲಿಂ-ಕ್ರೈಸ್ತ ಕೇಂದ್ರಗಳು

Posted by JAYAKIRANA Kirana on | 0 comments | Leave a comment...

ಜನರು ಜೀವನದ ಜಂಜಾಟಗಳಿಂದ ಅಲ್ಲೋಲ ಕಲ್ಲೋಲವಾದ ಮನಸ್ಸನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ದೇವಸ್ಥಾನ, ಪ್ರಾರ್ಥನಾ ಮಂದಿರ ಗಳನ್ನು ನಿರ್ಮಿಸುತ್ತಾ. ಅಥವಾ ಸುಪ್ರಸಿದ್ಧ ದೇವಸ್ಥಾನ, ಪ್ರಾರ್ಥನಾ ಮಂದಿ ರಗಳಿಗೆ ಮೊರೆ ಹೋಗುತ್ತಾರೆ. ಇಂತಹಾ ಕೇಂದ್ರಗಳಲ್ಲಿ ದೇವನಿದ್ದಾನೆ, ಅಲ್ಲಿ ನಾವು ಪ್ರಾರ್ಥನೆ ಮಾಡಿದರೆ ಅದು ದೇವರಿಗೆ ನೇರವಾಗಿ ಸಲ್ಲುತ್ತದೆ ಎಂದು ನಾವು ಭಾವಿಸಿಕೊಂಡಿರುತ್ತೇವೆ. ಇಲ್ಲಿ ಪ್ರಾರ್ಥನೆ ಮಾಡುವುದರ ಮೂಲಕ, ಹರಕೆ ಸಲ್ಲಿಸುವುದರ ಮೂಲಕ ನಾವು ಮಾಡಿದ ಪಾಪಕಾ ರ್ಯಗಳಿಗೆ ಪರಿಹಾರ ಸಿಗುತ್ತದೆ ಎಂದು ಭಾವಿಸುತ್ತೇವೆ. ಉನ್ನತವಾದ ಉದ್ದೇಶಗಳ ಸಾಧನೆಗಾಗಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಇಂತಹಾ ಕಡೆಗಳಲ್ಲಿ ಸಲ್ಲಿಸಿ ದೇವರಿಗೊಂದು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇವೆ ಎಂದೂ ಅಂದುಕೊಳ್ಳುತ್ತೇವೆ.
ಪಾಪ ಪರಿಹಾರ, ಕೃತಜ್ಞತೆಯ ಸಲ್ಲಿಸುವಿಕೆ ಇತ್ಯಾದಿಗಳಿಂದ ಮಾನ ಸಿಕ ಸಮಾಧಾನ ಸಿಗುತ್ತದೆ ಎಂದು ನಾವು ಜಾತ್ಯತೀತವಾಗಿ ನಂಬಿದ್ದೇವೆ. ಹಿಂದೂ, ಕ್ರೈಸ್ತ, ಮುಸಲ್ಮಾನರು ಸೇರಿದಂತೆ ಎಲ್ಲಾ ಮತ ಧರ್ಮಗಳ ಧಾರ್ಮಿಕ ಕ್ಷೇತ್ರಗಳ ಬಗ್ಗೆಯೂ ಇದೇ ರೀತಿಯ ಭಾವನೆ ಇದೆ. ಎಲ್ಲರೂ ಮಾನಸಿಕವಾಗಿ ಸಮಾಧಾನ ಹೊಂದುವುದು ಇಂತಹಾ ಕಡೆಗಳಲ್ಲೇ.
ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಮಾನಸಿಕವಾಗಿ ಶಾಂತಿಯನ್ನು ಕೊಡುವ ಕೇಂದ್ರಗಳು ಯಾವುದಿದೆಯೋ ಅವೆಲ್ಲಾ ಕಡೆ ಗಳಲ್ಲಿ ದುಡ್ಡೆಂಬ ಭೂತ ಸೇರಿಕೊಂಡು ಮಾನ ಸಿಕ ಹಿಂಸೆ ನೀಡುತ್ತಿರುವುದು ಕಂಡು ಬರು ತ್ತಿದೆ. ನಮ್ಮ ಜಿಲ್ಲೆಯ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ನಡೆಯುತ್ತಿರುವ ಕದನವನ್ನು ನೋಡಿದರೆ ಇದರಲ್ಲಿ ಸತ್ಯಾಂಶವಿರುವುದು ಕಂಡು ಬರುತ್ತದೆ. ದೇವ ಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸರ್ವಾಂತರ‍್ಯಾಮಿಯಾದ ದೇವನಿದ್ದಾನೆ ಎಂದು ಎಷ್ಟು ಹೇಳಿದರೂ ಅಂತಹ ನಂಬಿಕೆಯ ಕೇಂದ್ರಗಳ ಮೇಲೆ ತಮ್ಮ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಕೆಲವು ಜನರು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಹೆಣಗಾಡುತ್ತಿರುವುದು ಅದಕ್ಕಾಗಿ ಸಮರೋ ನ್ಮುಖವಾಗುವ ಸುದ್ದಿಗಳನ್ನು ನಾವು ಪತ್ರಿಕೆಗಳಲ್ಲಿ ಸದಾ ಓದುತ್ತಿರುತ್ತೇವೆ. ಕೆಲವು ಕಡೆ ವಿವಾದ ಬೀದಿಗೆ ಬಿದ್ದು ಕತ್ತಿ ಕಾಳಗಗಳೂ ನಡೆಯುತ್ತಿವೆ.
ಯಾವುದಾದರೂ ಒಂದು ಹಳೆಯದಾದ ಸಾರ್ವಜನಿಕ ದೇವಸ್ಥಾನ, ಮಠ, ಮಂದಿರ, ಚರ್ಚ್, ಮಸೀದಿಗಳನ್ನು ಜೀರ್ಣೋದ್ದಾರ ಮಾಡುವ ಸಂಸ್ಥೆಯೊಂದು ಹುಟ್ಟಿಕೊಂಡಿತು ಎಂದರೆ ಅಲ್ಲೊಂದು ವಿವಾದ ಹುಟ್ಟಿ ಕೊಂಡಿತೆಂದೇ ಅರ್ಥ. ಅನಪೇಕ್ಷಿತವಾಗಿ ಅಲ್ಲಿ ರಾಜಕೀಯದ ಪ್ರವೇಶ ಆಯಿತೆಂದಾದರೆ ಮತ್ತೆ ಕೇಳುವುದೇ ಬೇಡ. ರಣರಂಗವೊಂದು ಸಿದ್ದವಾ ಗಿಬಿಡುತ್ತದೆ. ಜೀರ್ಣೊದ್ದಾರ ಸಮಿತಿಯ ಮಂದಿ ಎಷ್ಟು ಜಾಗರೂಕರಾ ಗಿದ್ದರೂ, ಪೈಸೆ ಪೈಸೆಗಳ ಲೆಕ್ಕ ತೋರಿಸಿದರೂ ಸಮಾಧಾನವಾಗದೆ  ಆರೋಪ ಹೊರಿಸುವ ಸಾಕಷ್ಟು ಮಂದಿಯೂ ಸಿದ್ದವಾಗುತ್ತಾರೆ. ಇವ ರಿಗೆ ಇಲ್ಲಿ ವ್ಯಕ್ತಿ ದ್ವೇಷವೇ ಮುಖ್ಯವಾಗಿಬಿಡುತ್ತದೆ. ಹಾಗೆಂದು ಸಾಕಷ್ಟು ರಶೀದಿ ಪುಸ್ತಕ, ನೋಟೀಸುಗಳನ್ನು ಮುದ್ರಣ ಮಾಡಿಕೊಂಡು    ಊರೂರು ಅಲೆದು, ಮುಂಬಾಯಿ, ಬೆಂಗಳೂರು, ದುಬಾಯಿ, ಅಮೇರಿಕಾ ಇತ್ಯಾದಿ ಕಡೆಗಳಲ್ಲಿ ತಿರುಗಾಡಿ ಕೋಟಿಗಟ್ಟಲೆ ದುಡ್ಡು ಮಾಡಿ ಸ್ವಜೀ ರ್ಣೋದ್ದಾರ ಮಾಡಿದವರು. ಸಮಾಜಕ್ಕೆ ಸ್ವಲ್ಪ, ಸ್ವಂತಕ್ಕೆ ಸರ್ವಸ್ವ ಎಂದು ಭಾವಿಸಿ ಕೊಂಡವರೂ ಇಲ್ಲವೆಂದೇನಿಲ್ಲ. ದುಡ್ಡು ಸೇರಿದಾಗ ಹೆಚ್ಚಿನ ಮನುಷ್ಯರ ನಿಯತ್ತು ಹಾಳಾಗಿ ಬಿಡುತ್ತದೆ ಎಂಬುದೂ ಸುಳ್ಳಲ್ಲ.
ಸಾರ್ವಜನಿಕ ದೇವಸ್ಥಾನಗಳ ವ್ಯವಸ್ಥಾಪನೆಗಾಗಿ ಸರಕಾರಿ ವ್ಯವ ಸ್ಥಾಪನಾ ಸಮಿತಿ ನಿರ್ಮಾಣ ಮಾಡುತ್ತಿರುವುದು ಕಂಡು ಬರುತ್ತದೆ. ಸಮಾಜದ ಗಣ್ಯ ವ್ಯಕ್ತಿಗಳು ಇದರ ಸದಸ್ಯರುಗಳಾಗಿ ನೇಮಕವಾಗು ತ್ತಾರೆ. ತಮ್ಮ ತಮ್ಮ ವ್ಯಕ್ತಿತ್ವದ ಪ್ರದರ್ಶನದ ಜೊತೆಗೆ ಸಾಮಾಜಿಕ         ವಾಗಿ ಗುರುತಿಸಿಕೊಳ್ಳಲೂ ಇದೊಂದು ಉತ್ತಮ ಅವಕಾಶ. ಆದರೆ ಇಂತಹಾ ಕಡೆಗಳಲ್ಲಿ ಸ್ವಾರ್ಥಿಗಳ ಗುಂಪು ಸೇರಿಕೊಂಡು ಬಿಟ್ಟರೆ ದೇವ ಸ್ಥಾನದ, ಸರಕಾರದ, ಸಾರ್ವಜನಿಕರ ದುಡ್ಡು ದುರ್ಬಳಕೆ ಮಾಡುವುದ ಕ್ಕಾಗಿ ಯೋಜನೆಗಳು ರೂಪುಗೊಳ್ಳ ತೊಡಗುತ್ತದೆ. ಅಗತ್ಯವಿಲ್ಲದ ಕಟ್ಟಡ ನಿರ್ಮಾಣ, ಪೂಜೆ ಪುನಸ್ಕಾರ, ಸಾರ್ವಜನಿಕ ಕಾರ್ಯಕ್ರಮ ಇತ್ಯಾದಿ ಗಳು ದೇವಸ್ಥಾನ, ಚರ್ಚ್, ಮಸೀದಿಗಳ ಹೆಸರಿನಲ್ಲಿ ಆರಂಭವಾಗು ತ್ತದೆ. ಜನರು ತಮ್ಮ ತಮ್ಮ ಪ್ರಾರ್ಥನಾ ಮಂದಿರಗಳ ಹೆಸರು ನೋಡಿ ಧಾರಾಳವಾಗಿ ಹಣವನ್ನು ದಾನ ಮಾಡುತ್ತಾರೆ. ಇಂತಹಾ ಜನರೇ ತಮ್ಮ ಹಣದ ದುರ್ಬಳಕೆಯಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟ ವಾದದ್ದನ್ನು ಕಂಡಾಗ ನಿಟ್ಟುಸಿರು ಬಿಡುತ್ತಾರೆ. ದೇವರ ದುಡ್ಡು ತಿಂದವ ನಿಗೆ ಖಂಡಿತವಾಗಿಯೂ ಉಳಿಗಾಲವಿಲ್ಲ ಎಂದು ಮನಸ್ಸಿನಲ್ಲಿಯೇ ಅಂದು ಕೊಳ್ಳುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಾಗುವು ದಿಲ್ಲ.
ನಮ್ಮ ಜಿಲ್ಲೆಯಲ್ಲಿ ಅರ್ಧಂಬರ್ಧ ಕಾಮಗಾರಿಯಾಗಿ ನಿಂತು ಬಿಟ್ಟು ಹಾವಸೆ ಹಿಡಿದಿರುವ ಸಾಕಷ್ಟು ಧಾರ್ಮಿಕ ಕಟ್ಟಡಗಳನ್ನು ನೋಡಬ ಹುದು. ಇದರಲ್ಲಿ ಸರ್ವ ಧರ್ಮ ಸಮಭಾವವನ್ನೂ ನಾವು ಕಾಣಬಹು ದಾಗಿದೆ. ಎಲ್ಲಾ ಧರ್ಮೀಯರ ಆರಾಧ್ಯ ಕೇಂದ್ರಗಳಲ್ಲಿ ಒಡಕು ಎದ್ದು ಕಾಣುತ್ತಿದೆ.
ಧಾರ್ಮಿಕ ಕ್ಷೇತ್ರಗಳಲ್ಲಿ ಅವ್ಯವಹಾರ, ಅನಾಚಾರಗಳು ಯಾಕೆ ನಡೆಯುತ್ತವೆ ಎಂಬ ಪ್ರಶ್ನೆಗೆ ಸಾರ್ವಜನಿಕರ ಬೇಜ ವಾಬ್ದಾರಿಯೂ ಒಂದು ಕಾರಣ ಎಂದರೆ ತಪ್ಪಾ ಗಲಾರದು. ಇಂತಹಾ ಕಡೆಗಳಲ್ಲಿ ದುಡ್ಡು ಹಾಕು ವವರು ಸಾರ್ವಜನಿಕರೇ ಆಗಿರುತ್ತಾರೆ. ತಾವು ಹೇಳಿ ಕೊಂಡ ಹರಕೆ ತೀರಿದರೆ ಸಾಕು. ತಾವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾದರೆ ಸಾಕು ಎಂದು ಸಾವಿ ರಾರು ದುಡ್ಡು ಸುರಿದ ನಂತರ ಆ ದುಡ್ಡು ಯಾವುದಕ್ಕೆ ಉಪಯೋಗವಾಗುತ್ತಿದೆ, ಅದರ ಸದ್ಭಳಕೆ ಆಗುತ್ತಿ ದೆಯೋ, ದುರ್ಬಳಕೆ ಆಗುತ್ತಿದೆಯೋ ಎಂಬ ಗೋಜು ಜನರಿಗೆ ಇಲ್ಲದೇ ಇರುವುದರಿಂದ ಈ ರೀತಿಯ ಗೊಂದಲಗಳು ಎಲ್ಲಾ ಕಡೆಯಲ್ಲೂ ನಡೆ ಯುತ್ತಿವೆ. ತಾವು ದೇವರಿಗೆಂದು ಸಮರ್ಪಿಸಿದ ದುಡ್ಡು ಯಾರ‍್ಯಾರದೋ ಕಿಸೆ ಸೇರುತ್ತದೆ ಎಂಬುದು ಎಲ್ಲರಿಗೂ ಗೊತ್ತು. 
ನಾವು ಒಂದು ಬಾರಿ ದೇವರಿಗೆಂದು ಕೊಟ್ಟ ನಂತರ ಅದು ದೇವರ ದುಡ್ಡು ಅದನ್ನು ಯಾರು ತಿಂದರೇನು? ಆ ದುಡ್ಡಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಭಾವಿಸುವವರೇ     ಒಂದು ರೀತಿಯಲ್ಲಿ ಇಂತಹಾ ಅನಾಚಾರಗಳಿಗೆ ಮೂಲವಾಗುತ್ತಾರೆ. ಇದರಿಂದಾಗಿ ಜನರಲ್ಲಿ ಪಾಪಪ್ರಜ್ಞೆಯನ್ನು ಹುಟ್ಟಿಸಿ ದೇವರ ಹೆಸರಿ ನಲ್ಲಿ ದುಡ್ಡು ದೋಚುವ  ದೇವಾಲಯಗಳು, ಪ್ರಾರ್ಥನಾ ಕೇಂದ್ರ ಗಳು ಅಲ್ಲಲ್ಲಿ ತಲೆ ಎತ್ತತೊಡಗುತ್ತವೆ. ಯಾರಾದರೂ ದೇವರ ಹೆಸರು ಬರೆದು ದೇವರ ಮೂರ್ತಿ, ಶಿಲುಬೆ, ನಕ್ಷತ್ರ ಮತ್ತು ಚಂದ್ರನ ಜೊತೆಗೆ ಹಸಿರು ಅಥವ ಕೇಸರಿ ಧ್ವಜ ನೆಟ್ಟು ಅದರ ಮುಂದೆ ಕಾಣಿಕೆ ಡಬ್ಬಿಯೊಂದನ್ನು ಇಟ್ಟರೆ ಒಂದೆರಡು ದಿನ ಕಳೆದರೆ ಆ ಡಬ್ಬಿಯೊಳಗಿಂದ ಸಾಕಷ್ಟು ಹಣವನ್ನು ಹೆಕ್ಕಿ ತೆಗೆಯಬಹುದು. ಖಂಡಿತವಾಗಿಯೂ ಡಬ್ಬಿ ಇಟ್ಟ ಭಕ್ತನಿಗೆ ಕಾಣದೆ ಇರುವ ಆ ದೇವರೇ ಕರುಣಿಸಿದ ಪ್ರಸಾದ ಅದು! ಶಾಂತಿ ಸಮಾಧಾನ ನೀಡಬೇಕಾದ ದೇವ ಮಂದಿರಗಳ ಒಳಗೆ ಗೊಂದಲಗಳು ಗೂಡು ಕಟ್ಟುತ್ತಿರುವುದು ವಿಪರ‍್ಯಾಸ.
ಆರ್.ಕೆ. ದಿನಚರಿ

ವಿದೇಶಿ ಉದ್ಯೋಗ ಎಷ್ಟು ಸೇಫ್?

Posted by JAYAKIRANA Kirana on | 0 comments | Leave a comment...

 ಧ್ವನಿ, ಮಂಗಳೂರು
ಹೌದು, ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ಪ್ರಶ್ನೆಯನ್ನು ಕೇಳುವ ಸಂದರ್ಭ ಬಂದಿದೆ. ಒಂದು ಕಾಲದಲ್ಲಿ ವಿದೇಶಿ  ಉದ್ಯೋಗವೆಂದರೆ ಅದು ಭಾರತೀಯರ ಪಾಲಿಗೆ ಹೂವಿನ ಹಾಸಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗ ಹಾಗಿಲ್ಲ. ವಿದೇಶಕ್ಕೆ ಹೋದವರೆಲ್ಲರೂ ಅಲ್ಲಿ ಒಂದೊಳ್ಳೆ ಕೆಲಸ ಹಿಡಿದು ಬದುಕುತ್ತಿದ್ದಾರೆ, ನೆಮ್ಮದಿಯ ಜೀವನ ನಡೆಸಿ ಇಲ್ಲಿ ರುವ ಕುಟುಂಬಕ್ಕೆ ಹಣ ಕಳುಹಿಸುತ್ತಿದ್ದಾರೆ ಎಂದು ಅಂದುಕೊ ಳ್ಳುವಂತಿಲ್ಲ. ಯಾಕೆಂದರೆ ಇಂದಿನ ತಾಂತ್ರಿಕಯುಗದಲ್ಲಿ ವಿದೇಶಿ ಉದ್ಯೋಗದ ಚಿತ್ರಣವೇ ಬದಲಾಗಿದೆ. ವಿದೇಶದಲ್ಲಿ ಅನುಭವಿ ಸುವ ತೊಂದರೆಗಳ ಬಗ್ಗೆ, ತಮ್ಮ ಆತಂಕದ ಜೀವನದ ಬಗ್ಗೆ ಈಗಾಗಲೇ ಅನೇಕ ಮಂದಿ ತಮ್ಮ ನೋವನ್ನು ತೋಡಿಕೊಂ ಡಿದ್ದಾರೆ. ಆದರೂ ಭಾರತೀಯರಿಗೆ ಅದರಲ್ಲೂ ಹೆಚ್ಚಾಗಿ ಮಂಗ ಳೂರಿಗರಿಗೆ ವಿದೇಶಿ ಉದ್ಯೋಗದ ಮೋಹ ಬಿಟ್ಟುಹೋಗಿಲ್ಲ. ಬಹಳ ವರ್ಷಗಳ ಹಿಂದೆ ವಿದೇಶಿ ಉದ್ಯೋಗ ಎನ್ನುವ ಕಲ್ಪನೆ ಹಣ ಸಂಪಾದಿಸುವ ದೊಡ್ಡ ಹುದ್ದೆ ಎನ್ನುವಂತಾಗಿತ್ತು. ಆದರೆ ಇತ್ತೀಚೆಗೆ ಈ ಪರಿಕಲ್ಪನೆಯೇ ಬದಲಾಗಿದೆ.
 ಭಾರತದಂತಹ ರಾಷ್ಟ್ರದಲ್ಲೇ ತಾಂತ್ರಿಕತೆ ಸಾಕಷ್ಟು ಮುಂದು ವರೆದಿದೆ. ಮನುಷ್ಯ ಮಾಡುವ ಹೆಚ್ಚಿನ ಕೆಲಸಗಳನ್ನು ಇಂದು ಯಂತ್ರಗಳು ನಿರ್ವಹಿಸುತ್ತಿವೆ. ಹಾಗಾಗಿಯೇ ಇಲ್ಲಿ ಇಂದು ಕೂಲಿಯಾಳುಗಳಿಗೆ ಅಷ್ಟಾಗಿ ಕೆಲಸವಿಲ್ಲ. ಇದು ಮುಂದುವರಿ ಯುತ್ತಿರುವ ರಾಷ್ಟ್ರ ಭಾರತದ ಚಿತ್ರಣ. ಹೀಗಿರುವಾಗ ಈಗಾ ಗಲೇ ಮುಂದುವರೆದ ಸೌದಿ ಅರೇಬಿಯಾ, ಕತಾರ್ ಮುಂತಾದ ರಾಷ್ಟ್ರಗಳಲ್ಲಿ ಮನುಷ್ಯ ತನ್ನ ಕೈಯಿಂದ ಮಾಡಬಹುದಾದ ಕೆಲಸ ಗಳು ಇರಬಹುದೇ? ಇದ್ದರೂ ಅವು ಯಾವ ರೀತಿಯ ಕೆಲಸ ಗಳಾಗಿರಬಹುದು? ಎಲ್ಲವನ್ನೂ ಯಂತ್ರದ ಕೈಗೆ ಕೊಟ್ಟು ಅಂದ ನೋಡುವ ವಿದೇಶಿಗರ ಕಣ್ಣಲ್ಲಿ ಭಾರತೀಯರು ಜೀತದಾಳುಗ ಳಾಗಿ ದುಡಿಯುತ್ತಿದ್ದಾರೆ. ಇನ್ನು ಸೌದಿಯಂತಹ ಐಶಾರಾಮಿ ದೇಶದಲ್ಲಿ ಅಲ್ಲಿನ ಜನತೆಗೆ ಮೈಬಗ್ಗಿಸಿ ಕೆಲಸ ಮಾಡುವುದು ಗೊತ್ತಿಲ್ಲ. ಯಂತ್ರಗಳು ಮಾಡುವುದನ್ನು ಯಂತ್ರಗಳಿಂದ ಮಾಡಿ ಸಿದರೆ, ಅವುಗಳಿಂದ ಆಗದ ಕೆಲಸಗಳನ್ನು ವಿದೇಶಿ ಡಾಲರ್‌ನ ಆಸೆ ಹೊತ್ತು ಹೋಗುವ ನಮ್ಮವರಿಂದ ಮಾಡಿಸುತ್ತಾರೆ.
 ಇನ್ನು ನಮಗೆ ಬೇಕೆಂದಾಗ ಹೋಗಿ, ಬೇಡವೆಂದಾಗ ಹಿಂದೆ ಬರಲು ಅದು ನಮ್ಮ ದೇಶವೂ ಅಲ್ಲ. ಅಲ್ಲಿನ ನಿಯಮ ಗಳಿಗೆ ಕಟ್ಟುಬಿದ್ದು ಅನಿವಾರ್ಯವಾಗಿಯಾದರೂ ಇಂತಿಷ್ಟೇ ವರ್ಷ ಎಂದು ನಾವು ಅಲ್ಲಿ ಸೆಣೆಸಾಡಲೇಬೇಕು. ನಮ್ಮ ವಿದೇಶಿ    ಉದ್ಯೋಗದ ಕಲ್ಪನೆಗೂ ಉತ್ತರ ಕರ್ನಾಟಕದ ಮಂದಿಯ ಮಂಗಳೂರು ನಂಟಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮಂಗಳೂರಿ ಗರು ಮಾಡಲಾಗದ ಕೆಲಸಕ್ಕೆ ಅಂದರೆ ಕಟ್ಟಡ ನಿರ್ಮಾಣ ಕೆಲ ಸಕ್ಕೆ ಇಲ್ಲಿಗೆ ಬರುವವರೇ ಉತ್ತರ ಕರ್ನಾಟಕದ ಮಂದಿ. ಅವರ ಪಾಲಿಗೆ ನಮ್ಮ ಮಂಗಳೂರೇ ವಿದೇಶ ಇದ್ದ ಹಾಗೆ. ಆದರೆ ಮಂಗಳೂರಿನ ಕೆಲವರಿಗೆ ವಿದೇಶಿ ಉದ್ಯೋಗದ ವ್ಯಾಮೋಹ. ಈಗ ಊಹಿಸಿ. ನೈಜ ವಿದೇಶಿ ಉದ್ಯೋಗದ ಕಲ್ಪನೆ ಜೀತ ಪದ್ಧ ತಿಗೆ ಸಮನಾಗಿರಲು ಸಾಧ್ಯವಿಲ್ಲವೇ?
ಹಾಗಂತ ವಿದೇಶದ ವಿಮಾನ ಹತ್ತುವ ಎಲ್ಲರೂ ಅಲ್ಲಿ ಜೀತ ಮಾಡಿಯೇ ಬದುಕುತ್ತಿದ್ದಾರೆ ಎನ್ನುವುದು ನನ್ನ ವಾದ ವಲ್ಲ. ನೂರರಲ್ಲಿ ಹತ್ತು ಶೇಖಡಾ ಮಂದಿ ಉತ್ತಮ ಉದ್ಯೋಗ ದಲ್ಲಿದ್ದಾರೆ. ಬಹುಶಃ ಇವರಿಗೆಲ್ಲಾ ಇವರ ಶಿಕ್ಷಣ ಅಲ್ಲಿ ಉತ್ತಮ ಉದ್ಯೋಗ ದೊರಕಿಸಿಕೊಟ್ಟಿರಬಹುದು. ಆದರೆ ಹೆಚ್ಚಿನವರು ಅಲ್ಲಿ ಬದುಕುತ್ತಿರುವುದು ಜೀತದಾಳುಗಳಾಗಿಯೇ. ನಮ್ಮೂರಿ ನಲ್ಲಾದರೆ ನಾವು ಮಾಡುವ ಕೆಲಸ ಇತರರಿಗೆ ಗೊತ್ತಾಗಬ ಹುದು. ಆದರೆ ವಿದೇಶದಲ್ಲಿ ಮಾಡುವ ಕೆಲಸ ಏನು ಎಂಬುದು ನಮಗೆ ಹೇಗೆ ತಾನೇ ತಿಳಿಯಲು ಸಾಧ್ಯ? ಉದಾಹರಣೆಗೆ ಇನ್ಫೋಸಿಸ್‌ನಂತಹ ಉತ್ತಮ ಸಂಸ್ಥೆಯನ್ನೆ ತೆಗೆದುಕೊಳ್ಳೋಣ. ಇದೊಂದು ಕೋಟೆಯಿದ್ದಂತೆ. ಅಪ್ಪಿತಪ್ಪಿಯೂ ಸಂಬಂಧ ಪಡ ದವರಿಗೆ ಇದರೊಳಗೆ ಪ್ರವೇಶವೇ ಇಲ್ಲ. ಇಲ್ಲಿ ಕೆಲಸ ಮಾಡುವು ದೆಂದರೇನೆ ದೊಡ್ಡ ಪ್ರತಿಷ್ಠೆ ಇದ್ದ ಹಾಗೆ. ಮಂಗಳೂರಿನವನೇ ಇಲ್ಲಿ ಕೆಲಸ ಮಾಡಿದರೂ ಆತನ ಹುದ್ದೆ ಯಾವುದಿರಬಹು ದೆಂದು ತಿಳಿಯಲು ನಮ್ಮಿಂದ ಸಾಧ್ಯವೇ ಇಲ್ಲ. ಅದೇ ರೀತಿ ವಿದೇಶಿ ಉದ್ಯೋಗ. ಅಲ್ಲಿನ ಕೋಟೆಯಲ್ಲಿ ನಾವೇನೆ ಕೆಲಸ ಮಾಡಿದರೂ ಅದು ಹೊರಜಗತ್ತಿಗೆ ಗೊತ್ತೇ ಆಗುವುದಿಲ್ಲ. ನಮ್ಮ ವರು ಅಲ್ಲಿ ಕಸ ಗುಡಿಸಿದರೂ ವಿದೇಶಿ ಉದ್ಯೋಗ ಎಂದು ಹೆಮ್ಮೆ ಪಟ್ಟು ಕೊಳ್ಳುವವರು ನಾವು. ಅನೇಕ ಕಷ್ಟ, ತೊಡರುಗಳಿ ದ್ದರೂ ಇಂದಿಗೂ ವಿದೇಶಿ ಉದ್ಯೋಗದ ಮೇಲೆ ಕೆಲವರಿಗೆ ಎಲ್ಲಿಲ್ಲದ ವ್ಯಾಮೋಹ. ಈ ವ್ಯಾಮೋಹಕ್ಕೆ ಕೊನೆಯೆಂದು?

ಭವಿಷ್ಯದ ಜೊತೆ ಚೆಲ್ಲಾಟವೇ?

Posted by JAYAKIRANA Kirana on | 0 comments | Leave a comment...

ಪಿಯು ಅಧ್ಯಾಪಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮೌಲ್ಯ ಮಾಪನವನ್ನು ಬಹಿಷ್ಕರಿಸಿ ಪ್ರತಿಭ ಟನೆ ನಡೆಸಿದ್ದು ನ್ಯಾಯೋಚಿತವಲ್ಲ. ಯಾಕೆಂದರೆ ಮೌಲ್ಯಮಾಪನ ವಿಳಂ ಬವಾದಲ್ಲಿ ವಿದ್ಯಾರ್ಥಿಗಳು ಇನ್ನಿಲ್ಲದ ಸಮಸ್ಯೆಗೆ ಗುರಿಯಾಗ ಬೇಕಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿ ಯುತ್ತದೆ. ಅಧ್ಯಾಪಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುವುದಾದರೂ ಅದಕ್ಕೆ ಈ ಸಮಯ ಸೂಕ್ತವಲ್ಲ. ಮುಂದಿನ ಶೈಕ್ಷ ಣಿಕ ವರ್ಷ ಪ್ರಾರಂಭದ ವೇಳೆ ಪ್ರತಿ ಭಟನೆ ನಡೆಸಿದರೆ ಆಗುವುದಿಲ್ಲವೇ? ಅಧ್ಯಾಪಕರು ತಮ್ಮ ಬೇಡಿಕೆಯ ಜೊತೆಗೆ ಮಕ್ಕಳ ಭವಿಷ್ಯದ ಕಡೆಗೂ ಚಿಂತಿಸಬೇಕು. ಸರಕಾರ ಬೇಡದ, ಪ್ರಯೋಜನಕ್ಕೆ ಬಾರದ ಯೋಜನೆ ಗಳಿಗೆ ಕೋಟಿಗಟ್ಟಲೆ ಹಣ ಸುರಿ ಯುವ ಬದಲು ಪಿಯು ಅಧ್ಯಾಪ ಕರ ಬೇಡಿಕೆ ಈಡೇರಿಸಲು ಈ ಕೂಡಲೇ ಮುಂದಾಗಬೇಕಾಗಿ ವಿನಂತಿ ಮಾಡುತ್ತಿದ್ದೇನೆ. ಶಿಕ್ಷಣದ ಉನ್ನತ ಘಟ್ಟದಲ್ಲಿ ಈ ರೀತಿಯ ಚೆಲ್ಲಾಟ ಸಲ್ಲದು.
  ರಮ್ಲತ್, ಜೆಪ್ಪು

ತೊಟ್ಟಿಲಗುರಿಯ ದಲಿತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ

Posted by JAYAKIRANA Kirana on | 0 comments | Leave a comment...


ಬಜ್ಪೆ ಸಮೀಪದ ತೊಟ್ಟಿಲಗುರಿ ಎಂಬಲ್ಲಿ ಸುಮಾರು ಹತ್ತರಷ್ಟು ದಲಿತ ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ದಿನದೂಡುತ್ತಿವೆ. ಇವರಿಗೆ ಪ್ರತ್ಯೇಕ ನಿವೇಶನವನ್ನು ಸರಕಾರ ಒದಗಿಸಿ ದ್ದರೂ ಇವರು ಇಲ್ಲಿಯೇ ಉಳಿಯುವಂತೆ ಕೆಲವು ವ್ಯಕ್ತಿಗಳು ಮನವೊಲಿಸುತ್ತಿದ್ದಾರೆ.
ಸಂಘಟನೆಯ ಹೆಸರು ಹೇಳಿಕೊಂಡು ಸಾಮಾ ಜಿಕ ಅಶಾಂತಿ ಸೃಷ್ಟಿಸುವ ಇಂಥವರನ್ನು ಪೊಲೀಸ್ ಇಲಾಖೆ ನೋಡಿಕೊಂಡು ಸುಮ್ಮನಿರುವುದೇಕೆ?  ಇಲ್ಲಿನ ದಲಿತರು ಅಸ್ವಚ್ಛ ಪರಿಸರದಲ್ಲೇ ದಿನದೂಡು ತ್ತಿದ್ದಾರೆ. ಮುಂದಿನ ಮಳೆಗಾಲದಲ್ಲೂ ಇವರು ಇಲ್ಲಿಯೇ ಇದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಇವರನ್ನು ಆದಷ್ಟು ಬೇಗ ಇಲ್ಲಿಂದ ಸ್ಥಳಾಂತರಿಸುವಲ್ಲಿ ಸ್ಥಳೀಯಾಡ      ಳಿತ, ದಲಿತ ಸಂಘಟನೆಗಳು ಕ್ರಮ ಕೈಗೊಳ್ಳಲಿ. ಇವರ ಈಗಿರುವ ಪರಿಸ್ಥಿತಿಯನ್ನೇ ಬಂಡವಾಳ ಮಾಡಿ ಕೊಂಡು ಸ್ಥಳೀಯ ಹೋಟೆಲ್, ಬಾರ್, ಅಂಗಡಿಗಳ ಮಾಲಕರಿಂದ ಹಣ ವಸೂಲಿ ಮಾಡುವವರೂ ಇಲ್ಲಿ ದ್ದಾರೆ. ಇವರ ಮೇಲೆ ಸಂಬಂಧಪಟ್ಟವರು ಇನ್ನೂ ಕ್ರಮ ಕೈಗೊಳ್ಳದೆ ಮೌನವಾಗಿದ್ದರೆ, ಸಾರ್ವಜನಿಕರೇ ಸೂಕ್ತ ಕ್ರಮಕ್ಕೆ ಮುಂದಾಗಬೇಕಾದೀತು. ತೊಟ್ಟಿಲ ಗುರಿಯ ದಲಿತರ ಕೇರಿಗೆ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆ ಸಬೇಕಾಗಿ ವಿನಂತಿ.       ಸ್ಥಳೀಯರು, ಬಜ್ಪೆ

ಕಾಸರಗೋಡಿನಲ್ಲಿ ನಿಷ್ಕ್ರಿಯ ಪೊಲೀಸ್ ಇಲಾಖೆ

Posted by JAYAKIRANA Kirana on | 0 comments | Leave a comment...

ಕಾಸರಗೋಡಿನಲ್ಲಿ ಮತ್ತೆ, ಮತ್ತೆ ಮತೀಯ ಹಿಂಸಾ ಚಾರ ತಾಂಡವವಾಡುತ್ತಿದೆ. ಇತ್ತೀಚೆಗೆ ಎರಡು ಬಾರಿ ಹಿಂದೂಗಳ ಪವಿತ್ರ ಕ್ಷೇತ್ರ ದಲ್ಲಿ ಕೋಣದ ರುಂಡ ಎಸೆದು ಗಲಭೆಗೆ ನಾಂದಿ ಹಾಡಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕಲ್ಲು ತೂರಾಟ, ಘರ್ಷಣೆ ನಡೆದು ಅನೇಕ ಮಂದಿ ಗಾಯ ಗೊಂಡಿದ್ದಾರೆ. ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಗಡಿಭಾಗವಾದ ಇಲ್ಲಿ ಈ ಹಿಂದಿನಿಂದಲೂ ಅನೇಕ ಬಾರಿ ಮತೀಯ ಗಲಭೆಗಳು ನಡೆದಿವೆ. ಪೊಲೀಸ್ ವ್ಯವಸ್ಥೆಯ ನಿಷ್ಕ್ರಿಯತೆಯನ್ನು ದುಷ್ಕರ್ಮಿಗಳು ಪ್ರತೀ ಬಾರಿಯೂ ಚೆನ್ನಾಗಿ ಬಳಸಿ ಕೊಳ್ಳು ತ್ತಿದ್ದಾರೆ. ಕಾಸರ ಗೋಡು ಜಿಲ್ಲೆಯಲ್ಲಿ ಹದ ಗೆಟ್ಟಿರುವ ಕಾನೂನು-ಸುವ್ಯ ವಸ್ಥೆಯನ್ನು ಮರುಸ್ಥಾಪಿಸಲು ಸರಕಾರ, ಪೊಲೀಸ್ ಇಲಾಖೆ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ.                   ಕೆ.ರಾಘವೇಂದ್ರನ್, ಕಾಸರಗೋಡು

ಕೊಳವೆ ಬಾವಿಗೆ ತಡೆಹಾಕಿ

Posted by JAYAKIRANA Kirana on | 0 comments | Leave a comment...

ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಸಿಕ್ಕ ಸಿಕ್ಕಲ್ಲಿ ಕೊಳವೆ ಬಾವಿಯನ್ನು ತೋಡುತ್ತಾರೆ. ಬೇಕಾಬಿಟ್ಟಿ ಕೊಳವೆಬಾವಿಯನ್ನು ತೋಡುವುದರಿಂದ ಅಂತರ್ಜಲ ಬರಿದಾಗುತ್ತದೆ. ಈ ಬಾರಿಯ ಬೇಸಿಗೆ ಕಾಲ ಪ್ರಾರಂಭಕ್ಕೂ ಮುನ್ನವೇ ನೀರಿನ ಮೂಲಗಳು ಬತ್ತಿ ಹೋಗಿದ್ದು, ಮುಂದಿನ ಬಾರಿ ಬರಗಾಲ ಇನ್ನಷ್ಟು ತೀವ್ರವಾಗಿ ಕಾಡಲಿದೆ. ಇದಕ್ಕೆ ಏಕೈಕ ಪರಿ ಹಾರವೆಂದರೆ ಕೊಳವೆಬಾವಿ ನಿರ್ಮಾ ಣವನ್ನು ಗ್ರಾಮ ಸ್ಥರು ಸೇರಿ ತಡೆಗಟ್ಟಬೇಕು. ಕೊಳವೆ ಬಾವಿಯನ್ನು ತೋಡಿಸುವ ಗ್ರಾ.ಪಂ. ಆಡಳಿತ, ಜನ ಪ್ರತಿನಿಧಿಗಳ ಕ್ರಮವನ್ನು ಜನರು ಖಂಡಿಸಬೇಕು.
        ಶರಣ್ಯ ಕಾಮತ್, ಕಾರ್ಕಳ 

ಕಾರ್ಕಳ ಶಾಸಕ ಭಂಡಾರಿಯವರಿಗೇನಾಗಿದೆ?

Posted by JAYAKIRANA Kirana on | 0 comments | Leave a comment...

ರಾಯರ ಕುದುರೆ ಬರಬರುತ್ತಾ ಕತ್ತೆಯಾಗುತ್ತಿದೆ ಎನ್ನುವುದಕ್ಕೆ ಕಾರ್ಕಳ ಶಾಸಕ ಗೋಪಾಲ್ ಭಂಡಾರಿಗಿಂತ ಉತ್ತಮ ಉದಾಹರಣೆ ಬೇರೆಲ್ಲೂ ಸಿಗದು. ಈಗೀಗ ತಮ್ಮನ್ನು ಗೆಲ್ಲಿಸಿದ ಜನ ರನ್ನು ಸಂಪೂರ್ಣ ಮರೆತು ಹೋಗಿದ್ದಾರೆ ಎನ್ನುವುದಕ್ಕೆ  ನೀರಿನ ಬಗ್ಗೆ ಭಂಡಾರಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ.
ಆನೆಕೆರೆಯಂತಹ ಸಮೃದ್ಧ ನೀರಿನ ಕೆರೆಯಿದ್ದರೂ ಇದರ ಸುತ್ತಮುತ್ತಲಿನ ಪರಿಸರದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಬಿಡಿ, ಕೈ ತೊಳೆಯಲೂ ನೀರಿಲ್ಲದಂತಾಗಿದೆ. ಇರುವ ಸರಕಾರಿ ಬಾವಿಯಲ್ಲಿ ನೀರಿಗಾಗಿ ನಿತ್ಯ ಕದನ ನಡೆಯುತ್ತಿದೆ. ಗೋಪಾಲ್ ಭಂಡಾರಿಯವರು ಇತ್ತ ಒಮ್ಮೆ ಬಂದರೆ ಜನರ ಶಾಪ ಕೇಳಿ ಸುಸ್ತಾಗಬಹುದು. ಇಡೀ ಕಾರ್ಕಳಕ್ಕೆ ನೀರು ಒದಗಿಸುತ್ತಿದ್ದ ಮುಂಡ್ಲಿ ಕೆರೆ ಬತ್ತಿ ಹೋಗಿರುವುದಕ್ಕೆ ನಗರಸಭೆಯ ಪರಮ ನಿರ್ಲಕ್ಷ್ಯ ಕಾರಣವಾಗಿದೆ. ತಲೆಯಲ್ಲಿ ಮೆದುಳಿಲ್ಲದ ನಗರ ಸಭೆಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಜನರ ಬಗ್ಗೆ ಕಾಳಜಿ ವಹಿಸಿದ್ದರೆ ಈ ಕೆರೆ ಬತ್ತದೆ ಇದರ ನೀರು ಉಪಯೋಗಕ್ಕೆ ಬರುತಿತ್ತು. ಆನೆಕೆರೆಯ ಆಸುಪಾಸು ಅಪರೂಪಕ್ಕೆ ಬರುತ್ತಿರುವ ನೀರಿನ ಟ್ಯಾಂಕ್ ಯಾವುದಕ್ಕೂ  ಸಾಲುವುದಿಲ್ಲ. ಅದರ ಬದಲು ಆನೆಕೆರೆಯ ನೀರನ್ನು ಶುದ್ಧಗೊಳಿಸಿ ಸಾರ್ವಜನಿಕರಿಗೆ ಒದಗಿಸುವ ಕೆಲಸ ಮಾಡಬಹುದಿತ್ತು. ನಗರಸಭೆ ಆಗಾಗ ನಳ್ಳಿಯಲ್ಲಿ ಕಳಿಸುವ ನೀರಿನಲ್ಲಿ ರಾಮಸಮುದ್ರದಲ್ಲಿ ಪಿಂಡ ಬಿಟ್ಟವರ ವಿಸರ್ಜ ನೆಯೂ ಬರುತ್ತದೆ. ಚುನಾಯಿತ ಜನಪ್ರತಿನಿಧಿಗಳು ಜನರ ಮೂಲಭೂತ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಏನಾಗುತ್ತದೆ ಎನ್ನುವುದನ್ನು ಗೋಪಾಲ್ ಭಂಡಾರಿಯವರು ಖುದ್ದು ಜನರ ಬಳಿಗೆ ಬಂದು ತಿಳಿದುಕೊಳ್ಳಬೇಕು. ಜನರು ಮತ ಕೊಟ್ಟು ಆರಿಸುವುದು ತಮ್ಮ ಸಮಸ್ಯೆಗಳನ್ನು ನಿವಾರಿಸಲಿ ಎನ್ನುವ ಉದ್ದೇಶದಿಂದ. ಆದರೆ ಈಗಿನ ಶಾಸಕರು ಇದನ್ನೆಲ್ಲಾ ಮರೆತು ಬಿಟ್ಟಂತಿದೆ. ಇದಕ್ಕಿಂತ ಮಾಜಿ ಶಾಸಕ ಸುನಿಲ್ ಕುಮಾರ್ ಎಷ್ಟೋ ಮೇಲು. ವಿಧಾನಸಭೆ ಚುನಾವಣೆಯಲ್ಲಿ ಸೋತ ಮೇಲೆಯೂ ಜನರ ಸಂಪರ್ಕ ಇಟ್ಟುಕೊಂಡಿದ್ದ ಈ ಮಾಜಿ ಶಾಸಕ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಖಿನ್ನರಾಗದೆ ಮತ್ತೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಗಳನ್ನು ನಿವಾರಿಸಲಿ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಲೀಡ್ ಪಡೆದಿದ್ದ ಸುನಿಲ್ ಕುಮಾರ್ ಅವರ ಬಗ್ಗೆ ಇಲ್ಲಿಯ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ.
ಬಸ್‌ಸ್ಟ್ಯಾಂಡ್ ವರ್ಗಾಯಿಸಿ ಜನರಿಗೆ ಉಪದ್ರವಕಾರಿ ಯೋಜನೆಗಳನ್ನು ರೂಪಿಸುವುದ ಕ್ಕಿಂತ ಕಾರ್ಕಳದಲ್ಲಿರುವ ಕೆರೆಗಳಿಂದ ನೀರನ್ನು ಶುದ್ಧೀಕರಿಸಿ ಕೂಡಲೇ ಜನರಿಗೆ ವಿತರಿಸುವ ವಿವೇಕಯುತ ನಿರ್ಧಾರವನ್ನು ಕಾರ್ಕಳ ಪುರಸಭೆ ಹಾಗೂ ಗೋಪಾಲ್ ಭಂಡಾರಿಯವರು ಕೈಗೊಳ್ಳಲಿ. ಇಲ್ಲದೆ ಹೋದರೆ ಮುಂದಿನ ಚುನಾವಣೆಯಲ್ಲಿ  ಜನರಿಗೆ ತಮಗೆಂಥ ಜನ ಬೇಕು ಎನ್ನುವ ಆಯ್ಕೆ ಇದ್ದೇ ಇದೆಯಲ್ಲವೇ?                    ನಾಗರಿಕರು, ಆನೆಕೆರೆ

ಸುರತ್ಕಲ್‌ನಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಸಮಸ್ಯೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್‌ನಲ್ಲಿ ನೂತನ ಫ್ಲೈ ಓವರ್ ನಿರ್ಮಾಣ ವಾದ ಬಳಿಕ ಬಸ್ ಪ್ರಯಾಣಿಕರಿಗೆ ಕಿರಿಕಿರಿ ಆರಂಭವಾ ಗಿದೆ. ಉಡುಪಿಯಿಂದ ಮಂಗಳೂರು ಕಡೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು ಹಿಂದೆ ಸುರತ್ಕಲ್ ಪೇಟೆಯನ್ನು ಹಾದು ಹೋಗುತ್ತಿದ್ದರೆ ಈಗ ಫ್ಲೈ ಓವರ್ ಮೇಲ್ಗಡೆಯೇ ಸಾಗುತ್ತವೆ. ಸುರತ್ಕಲ್ ಪೇಟೆಯಲ್ಲಿ ಇಳಿಯಬೇಕಾದ ಪ್ರಯಾಣಿಕರನ್ನು ಗೋವಿಂದದಾಸ್ ಕಾಲೇಜ್ ಬಳಿ ಇಳಿಸಿ ಮುಂದುವರಿಯುತ್ತವೆ. ಇಲ್ಲಿ ಅಧಿಕೃತ ಬಸ್ ತಂಗುದಾ ಣವಿರದಿದ್ದರೂ ಬಸ್‌ಗಳು ಯಾವೊಂದು ಸೂಚನೆಯೂ ಇಲ್ಲದೆ ಇಲ್ಲಿ ತಂಗುತ್ತಿವೆ. ಬಸ್‌ಗಳು ಫ್ಲೈ ಓವರ್ ಮೇಲಿಂದ ಸಾಗುವುದು ಸರಿ, ಆದರೆ ಈ ಬಗ್ಗೆ ಪ್ರಯಾಣಿಕರಿಗೆ    ಪೂರ್ವ ಮಾಹಿತಿಯನ್ನು ನೀಡಬೇಕಲ್ಲವೇ? ಗೋವಿಂ ದದಾಸ್ ಕಾಲೇಜ್ ಬಳಿಯಿಂದ ಸುರತ್ಕಲ್ ಪೇಟೆಗೆ ಹೋಗಲು ಹತ್ತು ನಿಮಿಷ ನಡೆಯಬೇಕು. ಇದೆಂಥ ಗ್ರಹ ಚಾರ ಸ್ವಾಮೀ...? ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಉಡುಪಿ ಕಡೆಯಿಂದ ಸಾಗಿಬರುವ ಎಲ್ಲಾ ವಾಹನಗಳು ಫ್ಲೈ ಓವರ್ ಮೇಲಿಂದಲೇ ಸಾಗುವಂತೆ ವ್ಯವಸ್ಥೆ ರೂಪಿಸಿದಲ್ಲಿ ಒಳ್ಳೆಯದು. ಇದರಿಂದ ಅಪಘಾತ ಭಯವನ್ನೂ ತಪ್ಪಿಸ ಬಹುದಾಗಿದೆ.ಗಿರೀಶ್ ಶೆಟ್ಟಿ, ಕಾನ

ಅಪಾಯಕಾರಿ ತೆರೆದ ಬಾವಿ

Posted by JAYAKIRANA Kirana on | 0 comments | Leave a comment...

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಆಲಡ್ಕ ಮೈದಾನದಲ್ಲಿ ತೆರೆದ ಬಾವಿಯೊಂದು ಇದ್ದು, ಅಪಾಯವನ್ನು ಆಹ್ವಾನಿಸು ತ್ತಿದೆ. ಮಿಲಿಟರಿ ಕ್ಯಾಂಪಿಂಗ್ ಗ್ರೌಂಡ್‌ನ ಆಟದ ಮೈದಾನದ ತುದಿ ಯಲ್ಲಿರುವ ಈ ಬಾವಿಗೆ ಇನ್ನೂ ತಡೆಗೋಡೆ ನಿರ್ಮಾಣ ಮಾಡಲಾ ಗಿಲ್ಲ. ಹಲವು ವರ್ಷಗಳ ಹಿಂದೆ ಸ್ಥಳೀಯ ಎಸ್.ಸಿ.-ಎಸ್.ಟಿ. ಕಾಲ ನಿಗೆ ನೀರು ಪೂರೈಸುವ ಉದ್ದೇಶ ದಿಂದ ಇಲ್ಲಿ ತೆರೆದ ಬಾವಿ ನಿರ್ಮಿಸ ಲಾಗಿತ್ತು. ಆದರೆ ಅಂದಿನಿಂದ ಇಂದಿ ನವರೆಗೂ ಬಾವಿಗೆ ತಡೆಗೋಡೆ  ಮಾತ್ರ ಕಟ್ಟಿಲ್ಲ. ಆಟದ ಮೈದಾನವಾದ್ದ ರಿಂದ ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಟವಾಡುತ್ತಿರು ತ್ತಾರೆ. ಈ ವೇಳೆ ಅಪಾಯವರಿಯದೆ ಮೈದಾನದ ಅಂಚಿಗೆ ಹೋದರೆ ಮಕ್ಕಳು ಬಾವಿ ಪಾಲಾಗುವ ಸಂಭ ವವೂ ಇದೆ. ಈ ಬಾವಿಯಲ್ಲಿ ಸುತ್ತ ಲಿನ ತ್ಯಾಜ್ಯವಸ್ತುಗಳು ಸೇರಿದ್ದು, ಮಲೇರಿಯಾದಂಥ ರೋಗ ಹರ ಡುವ ಭಯವೂ ಇದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಇನ್ನಾದರೂ ಗಮನಿಸಲಿ.
ನಿತಿನ್ ಆಚಾರ್ಯ, ಬಂಟ್ವಾಳ

ಬೇಸಿಗೆ ಕಾಲಕ್ಕೆ ಮಾತ್ರ ನೆಟ್‌ವರ್ಕ್ ಸಿಕ್ಕಿದರೆ ಸಾಕೇ?

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ ಬಳಿಯ ಹೊಸಬೆಟ್ಟು ಎಂಬಲ್ಲಿ ಅಳವಡಿಸಿ ರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ನಿಂದ ಬೇಸಿಗೆಕಾಲದಲ್ಲಿ ಮಾತ್ರ ನೆಟ್‌ವರ್ಕ್ ಸಿಗುತ್ತದೆ. ಉಳಿ ದಂತೆ ಚಳಿಗಾಲ, ಮಳೆಗಾಲದಲ್ಲಿ ಮೊಬೈಲ್ ಸದ್ದು ಮಾಡುವುದಿಲ್ಲ. ಪುಚ್ಚೆಮೊಗರು, ಹೊಸಬೆಟ್ಟು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಅಸಂಖ್ಯ ಬಿಎಸ್‌ಎನ್‌ಎಲ್ ಗ್ರಾಹ ಕರಿದ್ದಾರೆ. ಇವರೆಲ್ಲ ಇದೇ ಟವರ್ ಅನ್ನು ನಂಬಿಕೊಂಡಿದ್ದಾರೆ. ಆದರೆ ನೆಟ್‌ವರ್ಕ್ ಸರಿಯಾಗಿ ಸಿಗದೇ ಇರುವುದು ಜನರಿಗೆ ಸಮಸ್ಯೆಯಾ ಗುತ್ತಿದೆ. ಮೊಬೈಲ್ ಇದ್ದರೂ ಜನರು ತಮ್ಮವರೊಡನೆ ಸಂಪರ್ಕ ಸಾಧಿಸಲು ಬೇರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗು    ತ್ತದೆ. ಸಮಸ್ಯೆ ತಿಳಿದಿದ್ದರೂ ಬಿಎಸ್ ಎನ್‌ಎಲ್ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಸು ಮಾಡುತ್ತಿಲ್ಲ ಯಾಕೆ? ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಕೊಂಡು ಮೊಬೈಲ್ ಗ್ರಾಹಕರ ಬಹುಕಾಲದ ಸಮಸ್ಯೆಗೆ ಮುಕ್ತಿ ಕರುಣಿಸಬೇಕಾಗಿದೆ. ಬಿಎಸ್‌ಎನ್ ಎಲ್ ಇನ್ನಾದರೂ ತನ್ನ ಗುಣಮಟ್ಟ ಕಾಯ್ದುಕೊಳ್ಳಲಿ.
ಗ್ರಾಮಸ್ಥರು, ಪುಚ್ಚೆಮೊಗರು

ಕೆಲವೊಮ್ಮೆ ವರದಕ್ಷಿಣೆ ವರದಾನವಾಗುವುದೂ ಇದೆ!

Posted by JAYAKIRANA Kirana on | 0 comments | Leave a comment...

(ನಿನ್ನೆಯ ಸಂಚಿಕೆಯಿಂದ)
ಇದನ್ನು ತಪ್ಪೆನ್ನುವ ಕೆಲವು ಶ್ರೀಮಂತರು ಮಸೀದಿ ಮತ್ತು ಮನೆಗಳಲ್ಲಿ ಖರ್ಜೂರ, ಸಮೋಸ, ಚಹಾ ನೀಡಿ ಮದುವೆಯಾಗಿ ಸರಳ ಮದುವೆಯೆಂದು ಪ್ರಚಾರ ಗಿಟ್ಟಿಸಿ ತಮಗೆ ಬೇಕಾದ ವಿ.ಐ.ಪಿ.ಗಳಿಗೆ ಮನೆಗಳಲ್ಲಿ ಪ್ರತ್ಯೇಕವಾದ ಭೂರಿ ಭೋಜನ ಏರ್ಪಡಿಸಿ ಇಬ್ಬಗೆಯ ನೀತಿಯನ್ನು ಪ್ರಕಟಿಸುತ್ತಾರೆ. ಆರ್ಥಿಕ ಸಾಮರ್ಥ್ಯವಿರುವವರು ಕೂಡಾ ಅದ್ದೂರಿ ಮದುವೆಯಾಗಬಾರದೆಂದು ನಿಷೇಧ ಹೇರಲು ಬೇರೆಯವರಿಗೆ ಅಧಿಕಾರ ಕೊಟ್ಟವರು ಯಾರು? ಉಳ್ಳವರು ಅದ್ದೂರಿ ಮದುವೆಯಾಗಲು, ಜನರಿಗೆ ಊಟ ಹಾಕಲು ಧರ್ಮದ ವಿರೋಧವಿಲ್ಲ. ವರದಕ್ಷಿಣೆ ವಿರೋಧಿಗಳಲ್ಲಿ ಹಲವಾರು ಶ್ರೀಮಂತರು ಮಾಡುವ ಅದ್ದೂರಿ ಮದುವೆಗಳನ್ನು ವಿರೋಧಿಸುವರೇ ಹೊರತು ಅವರು ಇತರ ಅನಾವಶ್ಯಕ ಬಾಬ್ತುಗಳಿಗೆ ಪೋಲು ಮಾಡುವ ವೆಚ್ಚದ ಕುರಿತು ಚಕಾರವೆತ್ತದಿರುವುದು ಸೋಜಿಗದ ಸಂಗತಿ.
ವರದಕ್ಷಿಣೆಯ ಮತ್ತೊಂದು ಮುಖದ ಕುರಿತು ಚರ್ಚಿಸೋಣ. ವರದ ಕ್ಷಿಣೆ ಇಲ್ಲದೆ ಮದುವೆಯಾಗುವವರಲ್ಲಿ ಹಲವರು ಬಡತನದ ಬೇಗೆಯಲ್ಲಿ ಬೇಯುತ್ತಿರುವ ಹೆಣ್ಮಕ್ಕಳನ್ನು ವರಿಸುವುದಿಲ್ಲ. ಅವರು ತನ್ನ ಅಂತಸ್ತಿನ ಅಥವಾ ತಮಗಿಂತ ಮಿಗಿಲಾದ ಶ್ರೀಮಂತ ಮನೆತನದ ಹೆಣ್ಮಕ್ಕಳನ್ನೇ ಮದುವೆಯಾ ಗುತ್ತಾರೆ. ಪ್ರತ್ಯಕ್ಷದಲ್ಲಿ ಇಲ್ಲಿ ವರದಕ್ಷಿಣೆ ಇಲ್ಲದಿದ್ದರು, ಹೆಣ್ಣಿನ ಮನೆಯಲ್ಲಿರುವ ಸಂಪತ್ತಿನ ಮೇಲೆ ಕಣ್ಣಿಟ್ಟುಕೊಂಡೇ ಮದುವೆಯಾಗುತ್ತಾರೆ. ಇದು ಹಿಂಬಾಗಿ ಲಿನ ಮೂಲಕ ಸಂದಾಯವಾಗುವ ಪರೋಕ್ಷ ವರದಕ್ಷಿಣೆಯಾಗಿದೆ.
ವರದಕ್ಷಿಣೆ ರಹಿತ ಮದುವೆಯಾಗುವ ಇನ್ನೂ ಕೆಲವರು ಹೆಣ್ಣಿನ ಮನೆಯ ಶ್ರೀಮಂತಿಕೆಯನ್ನು ನೋಡದಿದ್ದರೂ, ಹೆಣ್ಣಿನ ಸೌಂದರ್ಯವನ್ನು ಬಯಸು ತ್ತಾರೆ. ಬಡತನದಲ್ಲಿರುವ ಕಪ್ಪಗಿನ ಅಥವಾ ಕುರೂಪಿ ಹೆಣ್ಣನ್ನು ಮದುವೆಯಾ ಗುವವರು ಅದೆಷ್ಟಿದ್ದಾರೆ? ಒಂದರ್ಥದಲ್ಲಿ ಇಂತಹ ಕುರೂಪಿ ಹೆಣ್ಮಕ್ಕಳಿಗೆ ವರ ದಕ್ಷಿಣೆ ಒಂದು ವರದಾನವೆಂದೇ ಹೇಳಬೇಕು. ಆರ್ಥಿಕವಾಗಿ ದುಃಸ್ಥಿತಿಯ ಲ್ಲಿರುವ ಹುಡುಗನೊಬ್ಬ ವರದಕ್ಷಿಣೆ ಪಡೆದಾದರೂ ಇಂಥವರನ್ನು ವಿವಾಹ ವಾಗುತ್ತಾನೆ, ತನ್ಮೂಲಕ ಆಕೆಯ ಜೀವನದ ಪ್ರಮುಖ ಅಭಿಲಾಶೆಯೊಂದು ಈಡೇರಿಸಲ್ಪಡುತ್ತದೆ.
ವರದಕ್ಷಿಣೆಯಿಂದಾಗಿ ಹಲವು ಹೆಣ್ಮಕ್ಕಳು ತಲಾಖ್‌ನಿಂದ ಬಚಾವಾಗಿ ದ್ದಾರೆ. ಮದುವೆಯಾಗುವಾಗ ವರದಕ್ಷಿಣೆ ಪಡೆದವನಿಗೆ ಕ್ರಮೇಣ ಹೆಂಡ ತಿಯ ಮೇಲಿನ ಪ್ರೀತಿ ಕಡಿಮೆಯಾದಾಗ ಆಕೆಯನ್ನು ತೊರೆಯಬೇಕೆಂದರೆ ವರದಕ್ಷಿಣೆಯನ್ನು ಹಿಂತಿರುಗಿಸಬೇಕಾಗುತ್ತದೆ. ಆ ಹಣ ಅವನಲ್ಲಿಲ್ಲದಿರುವುದ ರಿಂದ ತಲಾಖ್ ನೀಡಲು ಹಿಂಜರಿಯುತ್ತಾನೆ. ದಾಂಪತ್ಯ ಜೀವನ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳನ್ನು ಕಾಲವೇ ಮರೆಸುವಂತೆ ಮಾಡುವ ನಿಟ್ಟಿನಲ್ಲಿ ಅವರ ಮಟ್ಟಿಗೆ ಈ ವರದಕ್ಷಿಣೆ ವರದಾನವಾಗಿ ಪರಿಣಮಿಸುತ್ತದೆ.
ಓರ್ವ ಬಡ ಯುವಕ ವ್ಯಾಪಾರಕ್ಕೆಂದು ಸಾಲ ಕೇಳಿದಾಗ ಎಲ್ಲಿಯೂ ಸಿಗದಿರುವುದರಿಂದ ವರದಕ್ಷಿಣೆ ಪಡೆದು ಮದುವೆಯಾಗುತ್ತಾನೆ. ಹೀಗೆ ಪಡೆದ ವರದಕ್ಷಿಣೆಯನ್ನು ಆರ್ಥಿಕ ವ್ಯವಹಾರಗಳಲ್ಲಿ ತೊಡಗಿಸಿ ಕುಟುಂಬವನ್ನು ಚೆನ್ನಾಗಿ ಪೋಷಿಸುವ ಸಾಧ್ಯತೆ ಇದೆ. ಹೆಣ್ಣು ಹೆತ್ತ ಬಡವರು ಶ್ರೀಮಂತರಿಂದ ಪಡೆದ ಸಹಾಯವನ್ನು ವರದಕ್ಷಿಣೆ ಮೂಲಕ ಈ ಯುವಕನಿಗೆ ನೀಡುವುದರಿಂದ ಒಬ್ಬನ ಆರ್ಥಿಕ ಸ್ಥಿತಿ ಉತ್ತಮವಾಗುವುದಿಲ್ಲವೇ? ಆ ಯುವಕನು ವ್ಯಾಪಾರ ಕ್ಕೆಂದು ಶ್ರೀಮಂತರ ಬಳಿ ಸಹಾಯ ಅಪೇಕ್ಷಿಸಿರುತ್ತಿದ್ದರೆ ಅವರು ಕೊಡುತ್ತಿ ದ್ದರೇ?
ವರದಕ್ಷಿಣೆ ಪಡೆದು ಹೆಣ್ಣನ್ನು ವಂಚಿಸುವ, ಮತ್ತಷ್ಟು ವರದಕ್ಷಿಣೆಗಾಗಿ ಆಕೆಗೆ ಚಿತ್ರಹಿಂಸೆ ನೀಡುವ ವರದಕ್ಷಿಣೆಯ ದುರಾಸೆಯಿಂದ ಮದುವೆಯಾ ಗುವ ಚಾಳಿಯನ್ನು ಬೆಳೆಸುವವರು ನನ್ನ ಮೇಲಿನ ವಾದವನ್ನು ದುರ್ಬಳಕೆ ಮಾಡುವ ಅಪಾಯವಿರುವುದು ನಿಜ. ಆದರೆ ಹೀಗಾಗುವುದು ಅಪರೂಪದಲ್ಲಿ ಅಪರೂಪದ ಪ್ರಸಂಗ ಎನ್ನುವುದು ಸಮಾಧಾನಕರ ಸಂಗತಿ. ಅಪರೂಪದ ಘಟನೆ ಯನ್ನು ಸಾರ್ವತ್ರಿಕವಾಗಿ ಆರೋಪಿಸಿ ವಿಷಯದ ಬೇರೊಂದು ಮುಖವನ್ನು ತೇಲಿಸಿ ಬಿಡುವುದು ಸರಿಯಲ್ಲ.
ವರದಕ್ಷಿಣೆಯ ಮದುವೆಗೆ ನಮ್ಮನ್ನು ಕರೆಯದಿರಿ ಎಂಬ ಸ್ಟಿಕ್ಕರ್ ಹಂಚು ವುದು, ವರದಕ್ಷಿಣೆಯ ಮದುವೆಗೆ ಖತೀಬರು ನಿಖಾಹ್ ಮಾಡಿಕೊಡಲು ಹೋಗ ಬಾರದೆಂದು ಉಪದೇಶಿಸುವುದು, ವರದಕ್ಷಿಣೆಯ ವಿರುದ್ಧ ಖಾಝಿಗಳು ಫತ್ವಾ ಹೊರಡಿಸಲಿ ಎಂದು ಅವಸರಪಡಿಸುವುದಕ್ಕಿಂತ ಮುಂಚಿತವಾಗಿ ಈ ಪದ್ಧತಿಯ ಅನಿಷ್ಟಗಳನ್ನು ಆಯಾಮ ಮತ್ತು ವರದಾನದ ವಿವಿಧ ಗೊಂದಲಕಾರಿ ಮಗ್ಗುಲು ಗಳ ಕುರಿತು ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ.
ಅಬ್ದುಲ್ ಜಬ್ಬಾರ್, ಕಾಟಿಪಳ್ಳ

ಬರ: ಸಚಿವ-ಶಾಸಕರ ವಿದೇಶಿ ಪ್ರವಾಸಕ್ಕೆ ಕತ್ತರಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಸಚಿವರು, ಶಾಸಕರು,ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕತ್ತರಿ ಹಾಕಿರುವುದಲ್ಲದೆ ವರ್ಗಾವರ್ಗಿ ಪ್ರಕ್ರಿಯೆಯನ್ನು ಮಿತಿಗೊಳಿಸಿ, ಮೇ ೧೫ ರೊಳಗೆ ಈ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಿ ದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ಬರಗಾಲ ಇರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಮಟ್ಟಿಗೆ ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರಯಾಣ ಮಾಡುವುದನ್ನು ನಿಷೇಧಿಸಿದೆ.
ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಸೀಮಿತ ಪ್ರಮಾಣದಲ್ಲಿ ನಡೆಸಲು ಅವಕಾಶ ನೀಡಿ ಮೇ ಹದಿನೈದರ ಒಳಗಾಗಿ ಅದನ್ನು ಪೂರ್ಣಗೊಳಿಸಲು ಆದೇಶ ನೀಡಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಮೇ ೧ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡು ೧೫ ದಿನ ದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಈಗಾಗಲೇ ಕಟ್ಟಾದೇಶ ಹೊರಡಿ ಸಲಾಗಿದೆ ಎಂದರು.  ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ನಡೆಸಲು ಸಂಬಂಧ ಪಟ್ಟ ಇಲಾಖೆಗಳ ಸಚಿವರಿಗೆ ಪೂರ್ಣ ಅಧಿಕಾರ ನೀಡುವುದಾಗಿ ತಿಳಿಸಿದ ಅವರು,ಆದರೆ ಈಗಾಗಲೇ ಸರ್ಕಾರ ನಿಗದಿ ಮಾಡಿದ ಪ್ರಮಾಣವನ್ನು ಮೀರದಂತೆ ಸರ್ಕಾರಿ ನೌಕರರ ವರ್ಗಾವಣೆ ಮಾಡಬೇಕು. ಮೇ ಹದಿನೈದರ ನಂತರ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವಂತಿಲ್ಲ. ಒಂದು ವೇಳೆ ತೀರಾ ಅನಿವಾರ್ಯವಾದರೆ, ಪರಿಸ್ಥಿತಿಯನ್ನು ಅವಲಂಬಿಸಿ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು.  ರಾಜ್ಯದಲ್ಲಿ ಬರಗಾಲ ಪರಿಹಾರ ಕಾಮ ಗಾರಿ ಸಮರ್ಪಕವಾಗಿ ಸಾಗಿದೆ.ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ತಮಗೆ ಸಮಾ ಧಾನವಿದೆ ಎಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನ ಮೊರ್ಕೆಲ್ ಸ್ವದೇಶಕ್ಕೆ

Posted by JAYAKIRANA Kirana on | 0 comments | Leave a comment...

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಅಲ್ಬಿ ಮೊರ್ಕೆಲ್ ತನ್ನ ಸ್ನೇಹಿತನ ಸಾವಿನಿಂದಾಗಿ ಸ್ವದೇಶಕ್ಕೆ ಹಿಂತಿರುಗಿದ್ದು, ಈಗಾಗಲೇ ಗೆಲುವಿಗಾಗಿ ಹೋರಾಟ ನಡೆಸುತ್ತಿರುವ ಧೋನಿ ಪಡೆಗೆ ದೊಡ್ಡ ನಷ್ಟವಾಗಿದೆ.
ಮಂಗಳವಾರ ದರೋಡೆಕೋರರ ತಂಡ ದಕ್ಷಿಣ ಆಫ್ರಿಕಾದ ಗುಟೆಂಗ್‌ನಲ್ಲಿ ಲೂಯಿಸ್ ವೊಸ್ಟೆರ್ ಗುಂಡಿಕ್ಕಿ ಕೊಂದಿತ್ತು. ವೊಸ್ಟೆರ್, ಮೊರ್ಕೆಲ್‌ರ ಪ್ರಾಣ ಸ್ನೇಹಿತನಾಗಿದ್ದು, ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಲು ಅವರು ಸ್ವದೇಶಕ್ಕೆ ತೆರಳಿದ್ದಾರೆ. ಮೊರ್ಕೆಲ್ ಈ ಟೂರ್ನಿಯ ಅಂತ್ಯದ ವೇಳೆ ಚೆನ್ನೈ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನಿಗದಿತ ದಿನಾಂಕ ಮಾತ್ರ ತಿಳಿದುಬಂದಿಲ್ಲ.
ನಿನ್ನೆ ನಡೆದ ಪುಣೆ ವಾರಿಯರ್ಸ್ ತಂಡದ ವಿರುದ್ಧದ ಪಂದ್ಯಕ್ಕೆ ಮೊದಲು ಮೊರ್ಕೆಲ್ ಸ್ವದೇಶಕ್ಕೆ ತೆರಳಿದರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ೨೮ ರನ್ ಬಾರಿಸಿದ್ದ ಮೊರ್ಕೆಲ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಕಿಂಗ್ಸ್ ವಿರುದ್ಧ ಹೋರಾಡಿ ಸೋತ ವಾರಿಯರ್ಸ್

Posted by JAYAKIRANA Kirana on | 0 comments | Leave a comment...

ಚೆನ್ನೈ: ತವರಿನ ಮೈದಾನದಲ್ಲಿ ಪ್ರಾಬಲ್ಯವನ್ನು ಮೆರೆದಿರುವ ಚೆನ್ನೈ ಸೂಪರ್ ಕಿಂಗ್ಸ್ ನಿನ್ನೆ ನಡೆದ ಪಂದ್ಯದಲ್ಲಿ ಪುಣೆ ವಾರಿಯರ‍್ಸ್ ಇಂಡಿಯಾ ವಿರುದ್ಧ ೧೫ ರನ್‌ಗಳ ಗೆಲುವು ದಾಖಲಿಸಿಕೊಂಡಿದೆ.
೧೬೫ ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಪುಣೆ ಅಂತಿಮ ಎಸೆತದ ತನಕ ಹೋರಾಟ ನಡೆಸಿದರೂ ಗೆಲುವು ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮ ಓವರ್‌ನಲ್ಲಿ ಪುಣೆ ಗೆಲುವಿಗೆ ೨೧ ರನ್ ಅಗತ್ಯವಿತ್ತು. ಆದರೆ ಕೇವಲ ಐದು ರನ್ ಮಾಡಿ ಸೋಲೊಪ್ಪಿಕೊಂಡಿತು.
ಅತ್ಯಂತ ನಿಧಾನಗತಿಯ ಪಿಚ್ ಹಾಗು ಔಟ್‌ಫೀಲ್ಡ್‌ನಿಂದಾಗಿ ಪುಣೆ ಸಂಕಷ್ಟಕ್ಕೆ ಸಿಲುಕಿತು. ಗೆಲುವಿಗಾಗಿ ಕೊನೆಯ ಎರಡು ಓವರ್‌ಗಳಲ್ಲಿ ೨೮ ರನ್ ಅಗತ್ಯವಿದ್ದಾಗ ಸ್ಟೀವ್ ಸ್ಮಿತ್ ಮತ್ತು ಮ್ಯಾಥ್ಯೂಸ್ ಕ್ರೀಸಿನಲ್ಲಿದ್ದರು. ಆದರೆ ಬೊಲಿಂಜರ್ ಎಸೆತದಲ್ಲಿ ಸ್ಮಿತ್ ಕ್ಯಾಚ್ ನೀಡಿ ನಿರ್ಗಮಿಸಿದ ಬಳಿಕ ಪುಣೆಯ ಗೆಲುವಿನಾಸೆ ಕಮರಿ ಹೋಯಿತು. ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಮ್ಯಾಥ್ಯೂಸ್ ಬೌಲ್ಡ್ ಆದಾಗಲೇ ಚೆನ್ನೈ ಗೆಲುವಿನ ಸಂಭ್ರಮವನ್ನಾಚರಿಸಿತು. ಸ್ಮಿತ್ ೨೩ ಮತ್ತು ಮ್ಯಾಥ್ಯೂಸ್ ೨೭ ರನ್ ಬಾರಿಸಿದರು. ಇದಕ್ಕೆ ಮೊದಲು ಸ್ಯಾಮುಯೆಲ್ಸ್  ೨೬ ಮತ್ತು ಗಂಗೂಲಿ ೨೪ ರನ್ ಮಾಡಿದ್ದರು. ಆರಂಭಿಕರಾದ ಉತ್ತಪ್ಪ ಮತ್ತು ರೈಡರ್ ವಿಫಲರಾಗಿದ್ದು ಪುಣೆ ಸೋಲಿಗೆ ಪ್ರಮುಖ ಕಾರಣವಾಯಿತು.
ಪುಣೆಗೆ ಡು ಪ್ಲೆಸಿಸ್ ಮತ್ತು ಬದರೀನಾಥ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಅವರಿಬ್ಬರು ಮೊದಲ ವಿಕೆಟಿಗೆ ೧೧೬ ರನ್‌ಗಳ ಜತೆಯಾಟ ನಡೆಸಿ ತಂಡದ ದೊಡ್ಡ ಮೊತ್ತಕ್ಕೆ ನೆರವಾದರು. ಪ್ಲೆಸಿಸ್ ೫೮ ಮತ್ತು ಬದರೀನಾಥ್ ೫೯ ರನ್ ಬಾರಿಸಿದರು. ಎರಡು ವಿಕೆಟ್‌ಗಳನ್ನು ಕ್ಷಿಪ್ರ ಗತಿಯಲ್ಲಿ ಕಳಕೊಂಡರೂ ಧೋನಿ ೨೮ ಮತ್ತು ಬ್ರಾವೋ ಅಂತ್ಯದಲ್ಲಿ ವೇಗವಾಗಿ ರನ್ ಕಸಿದರು.

ವಿದೇಶಿ ಸಿಗರೇಟ್, ಮೆಮೊರಿ ಕಾರ್ಡ್ ಅಕ್ರಮ ಸಾಗಾಟ: ಮೂವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಟು ಲಕ್ಷ ರೂ. ಮೌಲ್ಯದ ವಿದೇಶಿ ನಿರ್ಮಿತ ಸಿಗರೇಟ್ ಹಾಗೂ ಮೊಬೈಲ್ ಮೆಮೋರಿ ಕಾರ್ಡ್‌ಗಳನ್ನು ಅಕ್ರಮ ಸಾಗಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕಾಸರಗೋಡಿನ ಕಲ್ಲಿಕೋಟೆ ಕರಿಪ್ಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಸರಗೋಡಿನ ಚೆಮ್ಮಾಡಿನ ಅಬ್ಬಾಸ್ ಅಬ್ದುಲ್ ರಶೀದ್ (೪೨), ಮುಟ್ಟತ್ತೋಡಿನ ಕೆ.ಎಂ. ಅಹಮ್ಮದ್ ಮುಸ್ತಫಾ (೪೨) ಮತ್ತು ಕೋಯಿಕೋಡ್ ಜಿಲ್ಲೆಯ ಚಾತ್ತಮಂಗಲ ಪಾಲಟ್ಟುಮೈಲ್‌ನ ನೌಷಾದ್ (೩೨) ಬಂಧಿತರು. ಬ್ಯಾಗೇಜ್‌ಗಳಲ್ಲಿ  ಸಾಗಿಸಲಾಗುತ್ತಿದ್ದ ಮಾಲುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ೨,೬೦,೦೦೦ ರೂ. ಮೌಲ್ಯವಿದೆ ಎಂದು ಏರ್ ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳು ಈ ಮಾಲುಗಳನ್ನು ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಕಾಸರಗೋಡಿಗೆ ತಂದು ಬಳಿಕ ಅವುಗಳನ್ನು ಮುಂಬಯಿ ಮಾರುಕಟ್ಟೆಗಳಿಗೆ ಸಾಗಿಸಲು ಹೊಂಚು ಹಾಕಿದ್ದರು ಎಂದು ಹೇಳಲಾಗಿದೆ. 

ಸೈಕಲ್‌ಗೆ ಬೈಕ್ ಡಿಕ್ಕಿ: ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೈಕಲ್‌ಗೆ ಹಿಂದಿ ನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರು ಗಾಯಗೊಂಡ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಕೊಡವೂರು ಜುಮಾದಿ ನಗರದ ಕೃಷ್ಣ ಗಾಣಿಗ ಮತ್ತು ದಿನೇಶ್ ಗಾಯಗೊಂಡವರಾಗಿದ್ದು,  ಕೃಷ್ಣ ಗಾಣಿಗ ಸೈಕಲ್‌ನಲ್ಲಿ ಉಡುಪಿ ಕಡೆಗೆ ಬರುತ್ತಿದ್ದಾಗ ಪಂದುಬೆಟ್ಟು ಬಳಿ ಸತೀಶ್ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಸೈಕಲ್ ಸಹಿತ ರಸ್ತೆಗೆ ಬಿದ್ದ ಕೃಷ್ಣ ಗಾಣಿಗ ಹಾಗೂ ಬೈಕ್‌ನಿಂದ ಬಿದ್ದ ದಿನೇಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 

ನೀರಿನ ಕೊರತೆ: ಹೈಕೋರ್ಟ್‌ಗೆ ಎಂಆರ್‌ಪಿಎಲ್ ಮೊರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನೀರಿನ ಕೊರತೆಯಿಂದಾಗಿ ಎಂಆರ್ ಪಿಎಲ್‌ನ ಮೊದಲ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಎಲ್ಲಾ ಮೂರು ಘಟಕಗಳಲ್ಲಿನ ಶುದ್ಧೀಕರಣ ಕಾರ್ಯವನ್ನು ಸ್ಥಗಿತಗೊಳಿಸಿದಂತಾಗಿದೆ.
ಪ್ರತಿದಿನ ೨.೫ ಎಂಜಿಡಿ ನೀರನ್ನು ಕಂಪೆನಿಯಲ್ಲಿ ಕನಿಷ್ಟ ಪ್ರಮಾಣದಲ್ಲಿ ಕಚ್ಚಾತೈಲ ಸಂಸ್ಕರಣೆಗಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸ ಬೇಕು ಎಂದು ಕೋರಿ ಕಂಪೆನಿಯು ರಾಜ್ಯ ಹೈಕೋರ್ಟ್‌ನ ಮೊರೆಹೋಗಿದೆ.

ಓಮ್ನಿಯ ಟೈರ್ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಟ್ಟಾರ ಚೌಕಿಯ ಗ್ಯಾರೇಜ್ ಒಂದರ ಬಳಿ ನಿಲ್ಲಿಸಿದ್ದ ಓಮಿನಿಕಾರ್‌ನ ಟೈರ್ ಹಾಗೂ ಸೀಟ್‌ಗಳನ್ನು ಕದ್ದೊಯ್ದ ಪ್ರಕ ರಣದ ದೂರು ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸುಳ್ಯ ಸುಬ್ರಹ್ಮಣ್ಯದ ಸುರೇಶ್ ಕುಮಾರ್ ಎಂಬವರು ಕಾರಿನ ಟಯರ್ ಹಾಗೂ ಸೀಟ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಸೊತ್ತಿನ ಮೌಲ್ಯ ೧೫ ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.
ಬಸ್‌ನಲ್ಲಿ ಕಳವು
ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಸ್‌ನಲ್ಲಿ ಮಹಿಳೆಯ ಬ್ಯಾಗ್‌ನಿಂದ ನಗ-ನಗದು ಅಪಹರಿಸದ ಘಟನೆ ನಿನ್ನೆ ನಡೆದಿದೆ.
ತೆಂಕನಿಡಿಯೂರು ನಿವಾಸಿ ಇಂದಿರಾ ಹರಿರಾಮ್ ಎಂಬವರು ನಿನ್ನೆ ಬೆಳಗ್ಗೆ ಒಂಬತ್ತು ಗಂಟೆಗೆ ಪಿಲಿಕುಳ ದಿಂದ ಕುಡುಪು ದೇವಸ್ಥಾನಕ್ಕೆ ಬಸ್‌ನಲ್ಲಿ ಹೊರಟಿದ್ದರು. ಕುಡುಪುವಿನಲ್ಲಿ ಇಳಿದು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ೧೪ ಪವನ್ ಚಿನ್ನಾಭರಣ, ಎಟಿಎಂ ಕಾರ್ಡ್ ಹಾಗೂ ೧೨೦೦ ರೂ. ನಗದು ಕಳವಾಗಿದ್ದು ಗಮನಕ್ಕೆ ಬಂದಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಟ್ಟದಿಂದ ಬಿದ್ದು ಕೃಷಿಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೃಷಿಕನೋರ್ವ ಮನೆಯ ಅಟ್ಟದಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಪುತ್ತಿಗೆ ಸಮೀಪದ ಕಿನ್ನಿಮಜಲು ಅನಂತರಾಮರೈ ಅವರೇ ಮೃತರಾದ ವ್ಯಕ್ತಿಯಾಗಿದ್ದಾರೆ. ಇದೇ ೧೦ರಂದು ತೆಂಗಿನಕಾಯಿ ತೆಗೆಯಲು ಅಟ್ಟಕ್ಕೇರಿದ್ದರು. ಅವರು ಈ ಸಂದರ್ಭ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಕಾರ್ಮಿಕರಿಗೆ ಮಾಸಿಕ ೧೦,೦೦೦ ರೂ. ಕನಿಷ್ಟ ಕೂಲಿಗೆ ಒತ್ತಾಯ

Posted by JAYAKIRANA Kirana on | 0 comments | Leave a comment...

ಕುಂದಾಪುರ: ವಿವಿಧ ಸ್ತರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ ೧೦,೦೦೦ ರೂ. ಕನಿಷ್ಠ ಕೂಲಿ ನೀಡಬೇಕೆಂದು ಆಗ್ರಹಿಸಿ ರಾಜ್ಯಾ ದ್ಯಾಂತ ೧೭ ರಿಂದ ೧೯ ರವರೆಗೆ ನಡೆ ಯುತ್ತಿರುವ ಕಾರ್ಮಿಕರ ಪ್ರತಿಭಟನಾ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕು ಸಿಐಟಿಯು ಸಂಘಟನೆಯ ಆಶ್ರಯ ದಲ್ಲಿ ಗುರುವಾರ ಸಂಜೆ ನಗರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಿಐಟಿಯು ಅಧ್ಯಕ್ಷ ಕೆ.ಶಂಕರ ಅವರು ರಾಜ್ಯದಲ್ಲಿ ಯಾವುದೇ ವೃತ್ತಿ ಯಲ್ಲಿ ಅಥವಾ ಉದ್ಯೋಗದಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ತಿಂಗಳೊಂದಕ್ಕೆ ಕನಿಷ್ಠ ೧೦ ಸಾವಿರ ಕೂಲಿಯನ್ನು ನೀಡಬೇಕು ಎನ್ನುವ ಕಾರ್ಮಿಕರ ಬೇಡಿಕೆಗಳನ್ನು ತೀರ್ಮಾ ನಿಸಲು ತ್ರಿಪಕ್ಷೀಯ ಪ್ರಾತಿನಿಧ್ಯವುಳ್ಳ  ತಜ್ಞರ ಸಮಿತಿಯನ್ನು ರಚಿಸಿ ವರ್ಷ ಗಟ್ಟಲೆ ಕಳೆದಿದ್ದರೂ, ಈವರೆಗೂ ಸಮಿತಿಯ ಸಭೆಯನ್ನು ವ್ಯವಸ್ಥಿತವಾಗಿ ಕರೆಯದೆ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯ ವಿರುದ್ದ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಹೋರಾಟ ಮಾಡಿದ ಬಳಿಕ ಸಭೆಯನ್ನು ನಡೆಸಲಾಗಿದ್ದರೂ, ಈವ ರೆಗೂ ಯಾವುದೇ ತೀರ್ಮಾನವನ್ನು ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ ಎಂದು ಅವರು ಅರೋಪಿಸಿದರು. 
ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ದಂತೆ ೨ ರೂ. ದರದಲ್ಲಿ ೩೫ ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿರು ವುದನ್ನು ಈವರೆಗೂ ಜಾರಿಗೆ ತಂದಿಲ್ಲ. ವರ್ಷದಿಂದ ವರ್ಷಕ್ಕೆ ಜನರಿಗೆ ತೆರಿಗೆ ಹೇರುವುದನ್ನೆ ತನ್ನ ಆದ್ಯತೆಯನ್ನಾ ಗಿಸಿಕೊಂಡಿದೆ. ಬೆಲೆಯೇರಿಕೆಗೆ ಪುಷ್ಠಿ ನೀಡಿ ಬಂಡವಾಳಶಾಹಿಗಳನ್ನು ಪ್ರೋತ್ಸಾ ಹಿಸುವ ಕೆಲಸಗಳು ನಡೆಯುತ್ತಿದೆ. ನೆರೆಯ ಗೋವಾ ರಾಜ್ಯದಲ್ಲಿ ರಾಜ್ಯ ಸರ್ಕಾರ ತನ್ನ ತೆರಿಗೆಯನ್ನು ಇಳಿಸಿದ ಕಾರಣ ಪೆಟ್ರೋಲ್ ಪ್ರತಿ ಲೀಟರ್‌ಗೆ ೧೧ ರೂ. ಕಡಿಮೆಯಂತೆ ೬೪ ರೂ.ಗಳಿಗೆ ದೊರೆತರೆ ನಮ್ಮ ರಾಜ್ಯದಲ್ಲಿ ಇನ್ನೂ ೭೪ ರೂ. ಗಳಿಗಿಂತ ಹೆಚ್ಚು ತೆರಬೇಕಾದ ಅನೀವಾರ್ಯತೆ ಇದೆ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಎಚ್.ನರಸಿಂಹ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಕಾರ್ಮಿಕ ಮುಖಂಡರುಗಳಾದ ಮಹಾಬಲ ವಡೇರಹೋಬಳಿ, ಸಿಐಟಿಯು ಸದಸ್ಯರಾದ ವೆಂಕಟೇಶ ಕೋಣಿ, ರಾಜೀವ ಶೆಟ್ಟಿ, ಬೀಡಿ ಕಾರ್ಮಿಕರ ಸಂಘಟನೆಯ ಬಲ್ಕೀಸ್, ಗುಲಾಬಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

Posted by JAYAKIRANA Kirana on | 0 comments | Leave a comment...

ಪುತ್ತೂರು: ಮನೆಯೊಳಗೆ ನುಗ್ಗಿದ ಕಳ್ಳರು ಸುಮಾರು ೧೧.೭೭ ಲಕ್ಷ ಮೌಲ್ಯದ ನಗ ನಗದು ಹಾಗೂ ಇತರ ಸೊತ್ತು ಗಳನ್ನು ಕಳವು ನಡೆಸಿದ ಘಟನೆ ಬುಧವಾರ ತಡ ರಾತ್ರಿ ನಗರದ ಹೊರ ವಲಯದ ಪೋಳ್ಯ ಎಂಬಲ್ಲಿ ನಡೆದಿದೆ.
ಕಬಕ ಗ್ರಾಮದ ಪೋಳ್ಯ ನಿವಾಸಿ ಉಮ್ಮರ್ ಫಾರೂಕ್ ಎಂಬವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ೪೮.೫ ಪವನ್ ಚಿನ್ನಾಭರಣ, ರೂ. ೧ ಲಕ್ಷ ನಗದು, ೧ ಲ್ಯಾಪ್‌ಟಾಪ್ ಮತ್ತು ೩ ಕೈಗಡಿಯಾರವನ್ನು ಕಳ್ಳರು ದೋಚಿ ದ್ದಾರೆ. ಗುರುವಾರ ಬೆಳಿಗ್ಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಉಪ ವಿಭಾಗದ ಪೊಲೀಸ್ ವರಿಷ್ಟಾಧಿಕಾರಿ ಅನುಚೇತ್, ನಗರ ಠಾಣಾಧಿಕಾರಿ ಸುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂಜಿನಿಯರ್‌ಗೆ ಹೃದಯಾಘಾತ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಡಗೊಂದರ ಮುಖ್ಯ ಎಂಜಿನಿಯರ್ ಒಬ್ಬರು ಬುಧ ವಾರ ರಾತ್ರಿ ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
ನವಮಂಗಳೂರು ಬಂದರ್‌ಗೆ ಬರುತ್ತಿದ್ದ ಫಿಲಿಪೈನ್ಸ್‌ನ ಸಿಯಾಲೋ ಡಿ.ವೆನಿಜಿಯಾ ಎಂಬ ಹಡಗಿನ ಮುಖ್ಯ ಎಂಜಿನಿಯರ್ ರೆಡಾಲ್ ಎಲ್. ಮರ್ಕಡೋ(೬೩)ಮೃತ ವ್ಯಕ್ತಿ.  ಹಡಗಿನಲ್ಲಿ  ಬರುತ್ತಿದ್ದಾಗ ಎದೆ ನೋವು ಕಾಣಿಸಿ ಕೊಂಡು ಹೃದಯಾಘಾತಕ್ಕೆ ಒಳಗಾದರು ಎನ್ನಲಾಗಿದೆ.ಮೃತ ಶರೀರವನ್ನು  ಮರ ಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸು ದಾರರಿಗೆ ಹಸ್ತಾಂತರಿಸ ಲಾಗಿದೆ ಎಂದು ಪಣಂಬೂರು ಪೊಲೀಸರು ತಿಳಿಸಿದ್ದಾರೆ.

ನೀರಿನಲ್ಲೂ ರಾಜಕೀಯ: ಶಿವಸೇನೆಯ ಅಮಾನವೀಯತೆಯ ಲಕ್ಷಣವಲ್ಲದೆ ಮತ್ತಿನ್ನೇನು?

Posted by JAYAKIRANA Kirana on | 0 comments | Leave a comment...

ಬರ ಪೀಡಿತ ಕರ್ನಾಟಕಕ್ಕೆ ಮಹಾರಾಷ್ಟ್ರದಿಂದ ನೀರು ತರುವ ಪ್ರಯತ್ನ ಮಾಡಿರುವ ರಾಜ್ಯ ಸರಕಾರದ ಶ್ಲಾಘನೀಯ ಕ್ರಮಕ್ಕೆ  ಮಹಾರಾಷ್ಟ್ರದ ಶಿವಸೇನೆಯ ಮುದಿಹುಲಿ ಬಾಳ ಠಾಕ್ರೆ ಅಡ್ಡಗಾಲಿಡಲು ಮುಂದಾಗಿದೆ. ಕರ್ನಾಟಕಕ್ಕೆ ನೀರು ಕೊಡುವುದೂ ಒಂದೇ, ಹಾವಿಗೆ ಹಾಲೆರೆಯುವುದೂ ಒಂದೇ ಎಂದು ಹೇಳುವ ಮೂಲಕ ಕರ್ನಾಟಕವನ್ನು ಹಾವಿಗೆ ಹೋಲಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಮರಾಠಿಗರಿಗೆ ಮೋಸ ಮಾಡಲು ಮುಂದಾಗಿದೆ. ಬೆಳಗಾವಿ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮರಾಠಿ ಜನತೆ ಮೇಲೆ ಅಲ್ಲಿನ ಕನ್ನಡಿಗರು ದ್ವೇಷ ಸಾಧಿಸುವ ಹೊತ್ತಿನಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ರಾಜ್ಯ ಸರಕಾರ ಕನ್ನಡಿಗರಿಗೆ ನೀರು ಕೊಡಲು ಮುಂದಾಗಿರುವುದು ಸರಿಯಲ್ಲ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬಾ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅಲ್ಲಿನ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದೆ. ಸದ್ಯಕ್ಕೆ ಕರ್ನಾಟಕಕ್ಕೆ ಮಹಾರಾಷ್ಟ್ರದ ನೀರು ಸಿಗುವುದು ದುರ್ಲಭ.
 ಕುಡಿಯುವ ನೀರಿನ ವಿಷಯದಲ್ಲಿ ಬಾಳ ಠಾಕ್ರೆ ರಾಜಕೀಯ ಮಾಡಲು ಹೊರಟಿರುವುದು ತನ್ನ ಪಕ್ಷಕ್ಕೆ ಇದಕ್ಕಿಂತ ಒಳ್ಳೆಯ ವಿಷಯ ಬೇರಿಲ್ಲ ಎಂಬುದನ್ನು ತೋರಿಸಿಕೊಟ್ಟಂತಾಗಿದೆ. ಶಿವಸೇನೆಗೆ ಮಹಾರಾಷ್ಟ್ರ ಮಾತ್ರ ಒಂದು ಭದ್ರನೆಲೆ. ಬೇರೆ ರಾಜ್ಯದಲ್ಲಿ ಅದರ ಬೇರು ಇಲ್ಲವೇ ಇಲ್ಲ. ಹಾಗಿರುವಾಗ ಆ ಪಕ್ಷಕ್ಕೆ ಮರಾಠಿ ಜನರೇ ಆಧಾರಸ್ತಂಭ. ಅದು ಉತ್ತರ ಭಾರತೀಯರನ್ನು ದ್ವೇಷಿಸುವುದರಲ್ಲಿ ಹಾಗೂ ದಶಕಗಳ ಹಿಂದೆ ಕನ್ನಡಿಗರ ಮೇಲೆ ದಾಳಿ ನಡೆಸಿದ್ದುದರ ಹಿಂದಿದ್ದ ಉದ್ದೇಶ ಒಂದೇ. ಅದು ತನ್ನ ಪಕ್ಷವನ್ನು ಬೆಳೆಸುವುದು-ಮರಾಠಿ ಭಾವನೆಯನ್ನು ಕೆದಕಿ, ತಾವು ಮಾತ್ರ ಮರಾಠಿಗಳ ಹಿತೈಷಿಗಳು ಎಂಬ ಭಾವನೆ ಮೂಡುವಂತೆ ಮಾಡಿ ಒಂದು ರಾಜಕೀಯ ನೆಲೆ ಪಡೆದುಕೊಳ್ಳುವುದಾಗಿತ್ತು. ಕ್ರಮೇಣ ಕನ್ನಡಿಗರ ಮೇಲೆ ಸ್ವಲ್ಪ ಮೃದು ಧೋರಣೆ ತೋರಿ ಉತ್ತರದವರ ಮೇಲೆ ಹೆಚ್ಚು ಆಕ್ರೋಶ ಬೆಳೆಸಿಕೊಂಡರು. ಇದೀಗ ಮತ್ತೆ ಕನ್ನಡದವರ ವಿರುದ್ಧ ಸಮರ ಸಾರಿದಂತಿದೆ.
ಸಹೋದರನ ಪುತ್ರ ರಾಜ್ ಠಾಕ್ರೆ ಶಿವಸೇನೆ ತೊರೆದು ಪ್ರತ್ಯೇಕ ಪಕ್ಷ ಕಟ್ಟಿ ಮರಾಠಿ ಮತಗಳಿಂದಲೇ ಬೆಳೆಯುತ್ತಿರುವುದು ಬಾಳ ಠಾಕ್ರೆಗೆ ಗಂಟಲ ಮುಳ್ಳಾಗಿದೆ. ಅದರ  ಒಂದು ಪರಿಣಾಮವೇ ಕನ್ನಡಿಗರನ್ನು ಮತ್ತೆ ದ್ವೇಷಿಸಲು ಆರಂಭಿಸಿರುವುದು. ಹಾಗೆ ನೋಡಿದರೆ ರಾಜ್ ಠಾಕ್ರೆ ಕೂಡ ಮರಾಠೇತರರನ್ನು ದ್ವೇಷಿಸಿಕೊಂಡೇ ತನ್ನ ಪಕ್ಷವನ್ನು ಬೆಳೆಸುತ್ತಿರುವುದು. ಮಹಾರಾಷ್ಟ್ರದ ಪ್ರಾದೇಶಿಕ ವಾದವು ಅನ್ಯ ಭಾಷಿಕರ ಮೇಲೆ ದ್ವೇಷ ಕಾರುವುದರಲ್ಲೇ  ಕೇಂದ್ರೀಕೃತವಾಗಿರುವುದು ನಿಜಕ್ಕೂ ಒಂದು ಆತಂಕದ ಸಂಗತಿ.
ಬಿಜೆಪಿಯ ಒಂದು ಮೈತ್ರಿಪಕ್ಷವಾಗಿರುವ ಶಿವಸೇನೆಯು ಎರಡು ತಿಂಗಳ ಹಿಂದೆ ಮುಂಬಯಿಯಲ್ಲಿ ಕರ್ನಾಟಕದ ಬಿಜೆಪಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಘೇರಾವ್ ಹಾಕಿತ್ತು. ಇದೀಗ ಕರ್ನಾಟಕಕ್ಕೆ ನೀರು ಕೊಡುವ ಮಹಾರಾಷ್ಟ್ರ ಸರಕಾರದ ಕ್ರಮಕ್ಕೆ ತಡೆಯೊಡ್ಡಿರುವುದು ಅದರ ಅಮಾನವೀಯತೆಗೆ ಸಾಕ್ಷಿಯಾಗುತ್ತದೆ. ಆ ಪಕ್ಷವು ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುತ್ತಿರುವುದನ್ನು ಅದರ ಕಾರ್ಯಕರ್ತರೇ ಸಮರ್ಥಿಸುವುದು ಸಾಧ್ಯವಿಲ್ಲ. ದಾಹದಿಂದ ದಣಿದ ಜೀವಕ್ಕೆ ಗುಟುಕು ನೀರು ಸಿಗದಂತೆ ಮಾಡುವುದನ್ನು ಯಾರಾದರೂ  ಸಮರ್ಥಿಸಿಕೊಳ್ಳುವುದು ಹೇಗೆ ಸಾಧ್ಯ. ಶಿವಸೇನೆಯ  ಈ ಕ್ರಮ  ಅದರ ಒಂದು ದೌರ್ಬಲ್ಯ ಎಂದು ಹೇಳಿದರೂ ತಪ್ಪಾಗುವುದಿಲ್ಲ.
ಆದರೆ  ಇಂಥ ಅಮಾನವೀಯತೆ ತೋರಿಸುತ್ತಿರುವ ಶಿವಸೇನೆಯ ಕ್ರಮಕ್ಕೆ ಮಹಾರಾಷ್ಟ್ರದ ಕಾಂಗ್ರೆಸ್ ನೇತೃತ್ವದ ಸರಕಾರವೂ ಸ್ಪಂದಿಸಲು ಹೊರಟಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ನೀರು ಕೊಟ್ಟರೆ ತಾನೂ ಮರಾಠಿಗಳ ಮತಗಳನ್ನು ಕಳಕೊಳ್ಳಬೇಕಾದೀತು, ಇದನ್ನೇ ಶಿವಸೇನೆಯು ಒಂದು ರಾಜಕೀಯ ವಿಷಯವಾಗಿ ಮಾಡಿಕೊಂಡೀತು ಎಂಬ ಆತಂಕ ಕಾಂಗ್ರೆಸ್ ಅನ್ನು ಕಾಡಿರಬೇಕು. ಅದು ಆ ಪಕ್ಷದ ದೌರ್ಬಲ್ಯವಾಗಿದೆ. ಶಿವಸೇನೆ ನೀರಿನ ವಿಷಯದಲ್ಲಿ ರಾಜಕೀಯ ಮಾಡಿದರೆ ಅದರ ವಿರುದ್ಧ ಸೆಟೆದು ನಿಂತು ಲಾಭ ಮಾಡಿಕೊಳ್ಳುವ ದಿಟ್ಟತನ ಕಾಂಗ್ರೆಸ್‌ನಲ್ಲಿ  ಇಲ್ಲದಿರುವುದೇ ಅದು ಹಿಂಜರಿಯಲು ಕಾರಣ. ಇದೀಗ ಒಟ್ಟು ವಿಷಯದಲ್ಲಿ ಶಿವಸೇನೆಯ ಕೈ ಮೇಲಾಗಿದೆ. ಅಮಾನವೀಯತೆ ಮೆರೆಯುತ್ತಿದೆ. ಇದಕ್ಕೆ ಕಾಂಗ್ರೆಸ್‌ನವರು ಏನೆನ್ನುತ್ತಾರೋ?

‘ಆಪರೇಷನ್ ಕಾಂಗ್ರೆಸ್’ಗೆ ಚಿಂತನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಈಗ ರಾಜ್ಯದಲ್ಲಿ ಬಿಜೆಪಿಯ ಪ್ರಭಾವ ಕರಗುತ್ತಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಲಿದೆ ಎಂದು ನಂಬಿಕೊಂಡಿರುವ ಕಾಂಗ್ರೆಸ್ ನಾಯಕರು ಆಡಳಿತಕ್ಕೆ ಬೇಕಾದ ಸ್ಪಷ್ಟ ಬಹುಮತ ಸಿದ್ಧತೆಯನ್ನು ಈಗಲೇ ಆರಂಭಿಸಿ ದಂತಿದೆ. ಆಪರೇಷನ್ ಕಮಲದಂತೆಯೇ ಈಗ ಆಪರೇಷನ್ ಹಸ್ತದ ಕಾರ್ಯಾಚರಣೆ ನಡೆದಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಉಳಿದ ಪಕ್ಷಗಳ ಶಾಸಕರನ್ನು ಸೆಳೆದಿದ್ದರೆ, ಕಾಂಗ್ರೆಸ್ ಚುನಾವಣೆಯ ಪೂರ್ವದಲ್ಲಿಯೇ ಬಿಜೆಪಿಯ ಪ್ರಭಾವಿ ನಾಯಕರನ್ನು ಸೆಳೆಯಲು ಚಿಂತನೆ ನಡೆಸಿದೆ.
ರಾಜ್ಯದ ಪ್ರತಿ ಜಿಲ್ಲೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಆಪರೇಶನ್ ನಡೆಸಿ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಏರಲೇ ಬೇಕು ಎಂಬ ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಮುಖ್ಯವಾಗಿ ಉತ್ತರಕರ್ನಾಟಕದಲ್ಲಿ ಪ್ರಭಾವಿತವಾಗಿರುವ ಲಿಂಗಾ ಯತ ನಾಯಕರ ಸೃಷ್ಟಿಗೆ ಯೋಚಿಸಲಾಗಿದೆ. ಇದೇ ಉದ್ದೇಶದಿಂದ ಪ್ರಭಾಕರ ಕೋರೆಯಂತಹ ನಾಯಕರನ್ನು ಮತ್ತೆ ಕಾಂಗ್ರೆಸ್‌ಗೆ ತರಲು ಮಾತುಕತೆ ನಡೆಸಲಾಗುತ್ತಿದೆ. ಒಂದೆಡೆ ಯಡಿಯೂರಪ್ಪರನ್ನು ಮೂಲೆಗುಂಪು ಮಾಡುತ್ತಿರುವ ಬಿಜೆಪಿ ನಾಯಕರು, ಇದೇ ಸಂದರ್ಭದಲ್ಲಿ ಯಡ್ಡಿ ಬೆಂಬಲಿತರನ್ನೂ ಕಡೆಗಣಿಸುತ್ತಿದ್ದಾರೆ. ಹೀಗೆ ಬಿಜೆಪಿಯಲ್ಲಿ ಕಡೆಗಣಿತರಾದ ಪ್ರಭಾವಿತರ ಮೇಲಷ್ಟೇ ಕಾಂಗ್ರೆಸ್ ನಾಯಕರು ಕಣ್ಣು ನೆಟ್ಟಿದ್ದಾರೆ.
ಇನ್ನು ಕರಾವಳಿಗೆ ಬಂದರೆ ಇಂತಹ ಆಪರೇಷನ್ ಕಾಂಗ್ರೆಸ್‌ಗೆ ಸಿಲುಕುವ ಬಿಜೆಪಿ ನಾಯಕರು ಕಾಣುತ್ತಿಲ್ಲ. ಕಾಂಗ್ರೆಸ್‌ಗೆ ಬಂದು ಪಕ್ಷಕ್ಕೆ ಶಕ್ತಿ ಒದಗಿಸುವ ಬಿಜೆಪಿ ನಾಯಕರೂ ಕಣ್ಣಿಗೆ ಕಾಣುತ್ತಿಲ್ಲ. ಪುತ್ತೂರಿನ ಶಕುಂತಳಾ ಶೆಟ್ಟರೊಂದಿಗೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೇ ನೇರ ಸಂಪರ್ಕದಲ್ಲಿ ಇದ್ದಾರೆ. ಮುಂದಿನ ಚುನಾವಣೆಯ ಹೊತ್ತಿಗೆ ಆಪರೇಷನ್ ಕಾಂಗ್ರೆಸ್‌ನ ತೆಕ್ಕೆಯಲ್ಲಿ ಶಕುಂತಳಾ ಶೆಟ್ಟರು ಇದ್ದರೆ ಅದರಲ್ಲಿ ಅಚ್ಚರಿ ಪಡುವಂತಹದ್ದೇನೂ ಇಲ್ಲ.
ಸೋನಿಯಾ ಗಾಂಧಿ ಸದವೇ ತುಮಕೂರಿಗೆ ಬರಲಿದ್ದಾರೆ. ಅವರು ಬಂದು ಹೋದ ಬಳಿಕ ತಾಲೂಕು ಗ್ರಾಮ ಮಟ್ಟದಲ್ಲಿಯೂ ಆಪರೇಶನ್ ಕಾಂಗ್ರೆಸ್ ಪ್ರಕ್ರಿಯೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಪಕ್ಷದ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ ಹೇಳಿಕೆ ನೀಡಿದ್ದು, ಪಕ್ಷದ ತತ್ವ ಸಿದ್ದಾಂತ ನಂಬಿ ಬರುವವರಿಗೆ ಸ್ವಾಗತ, ಇದೇ ಉದ್ದೇಶದಿಂದಲೇ ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಎಂಬ ಕರೆ ನೀಡಲಾಗಿದೆ. ಅಧಿಕಾರದ ಆಸೆಯ ಬದಲು ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಪಕ್ಷಕ್ಕೆ ಬರುವವರನ್ನು ಸ್ವಾಗತಿಸಲಾಗುವುದು ಎಂದಿದ್ದಾರೆ.
ಪಕ್ಷಕ್ಕೆ ಹೊಸಬರನ್ನು ಕರೆ ತರುವ ಬದಲು ಇದ್ದವರನ್ನೇ ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿ, ಒಬ್ಬರ ಕೈಗೆ ಅಧಿಕಾರ ನೀಡಿ, ಇನ್ನೊಬ್ಬರನ್ನು ತುಳಿಯುವ ಪ್ರವೃತ್ತಿಗೆ ಕಡಿವಾಣ ಹಾಕಿ. ಅಧಿಕಾರವನ್ನು ಹಂಚಿಕೆ ಮಾಡುವ ಯೋಜನೆ ರೂಪಿಸಿ, ಪಕ್ಷದಲ್ಲಿ ನಿಷ್ಠಾವಂತರು, ಪಕ್ಷಕ್ಕಾಗಿ ದುಡಿಯುವವರನ್ನು ಗುರುತಿಸಿ ಎಂದು ಸಲಹೆ ನೀಡುವ  ಕಾಂಗ್ರೆಸಿಗರೂ ಇದ್ದಾರೆ. ವಾಸ್ತವದಲ್ಲಿ ಇಂತಹ ಸಲಹೆ ನೀಡುವವರೆಲ್ಲ ಕಾಂಗ್ರೆಸ್‌ನಲ್ಲಿ ಒಂದು ಕಾಲದಲ್ಲಿ ಪ್ರಭಾವಿತರಾಗಿ ಕಾಣಿಸಿಕೊಂಡವರು ಇಲ್ಲವೇ ಪ್ರಭಾವಿತರಾಗಲು ಹವಣಿಸಿ ಸೋತವರಾಗಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ನೈತಿಕ ಪೊಲೀಸರಿಂದ ಯುವಕನ ಹತ್ಯೆ: ವಶಕ್ಕೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ನೈತಿಕ ಪೊಲೀಸರ ಕ್ರೂರ ರೀತಿಯ ವಿಚಾರಣೆ ಹಾಗೂ ದೌರ್ಜನ್ಯಕ್ಕೊಳ ಗಾದ ಯುವಕನ ಮೃತದೇಹ ರೈಲು ಹಳಿಯಲ್ಲಿ ಛಿದ್ರವಾಗಿ ಪತ್ತೆಯಾದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಆದರೆ ಇವರ ವಿಚಾರಣೆ ನಡೆಸುವು ದರಿಂದ ಇವರ ಬಗ್ಗೆ ಯಾವುದೇ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಅಂತೂ, ಆರೋಪಿಗಳು ಎನ್.ಡಿ.ಎಫ್ ಸಂಘಟನೆಗೆ ಸೇರಿದವರೆನ್ನಲಾಗಿದೆ.
ಇಲ್ಲಿನ ತ್ರಿಕ್ಕರಿಪುರ ನಿವಾಸಿ, ಮೊಬೈಲ್ ಅಂಗಡಿ ಮಾಲಕ ರಜಿಲೇಶ್(೨೬) ಎಂಬವರ ಮೃತದೇಹ ಒಂದು ವಾರ ಹಿಂದೆ ರೈಲು ಹಳಿಯಲ್ಲಿ ರೈಲುಗಾಡಿ ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಹಿಂದಿನ ದಿನ ರಜಿಲೇಶ್‌ರನ್ನು ಮನೆಯಿಂದ ಪರಿ ಚಯಸ್ಥರೇ ಕರೆದೊಯ್ದಿದ್ದರೆನ್ನಲಾಗಿದೆ. ನೀಲೇಶ್ವರ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ರಜಿಲೇಶ್‌ರ ಅಂಗಡಿ ಪಾಲುದಾರ ನಿಸಾರ್ ಎಂಬಾತನ ಕೈವಾಡದ ಬಗ್ಗೆ ಶಂಕೆಯುಂ ಟಾಗಿ ಈತನನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿತ್ತು. ರಜಿಲೇಶ್‌ಗೆ ಮುಸ್ಲಿಂ ಮಹಿಳೆಯ ಜತೆ ಸಂಪರ್ಕವಿದ್ದುದೇ ಕೊಲೆಗೆ  ಕಾರಣವಾಗಿತ್ತು. ಇವರನ್ನು ಕಾವಿಲಾದ್ ಹೊಳೆಯ ಬಳಿಗೆ ನಿಸಾರ್ ತಲುಪಿಸಿದ್ದ ಎನ್ನಲಾಗಿದೆ. ಅಲ್ಲಿ ೨೦ರಷ್ಟು ಮಂದಿ ರಜಿಲೇಶ್‌ರನ್ನು ನ್ಯಾಯಾಲಯ ಮಾದರಿಯಲ್ಲಿ ವಿಚಾರಣೆ ನಡೆಸಿದರಲ್ಲದೆ ಆರೋಪ ಸಾಬೀತುಪಡಿಸಿ ಸ್ವತ: ಶಿಕ್ಷೆಯನ್ನೂ ವಿಧಿಸಿ ದ್ದರು. ಇದರಂತೆ ಕ್ರೂರ ರೀತಿಯಲ್ಲಿ ದೌರ್ಜನ್ಯ ವೆಸಗಿದ ಬಳಿಕ ತಂದು ಚಲಿಸುವ ರೈಲಿನಡಿಗೆ ಎಸೆದಿದ್ದಾರೆನ್ನಲಾಗಿದೆ. ಈ ಭೀಕರ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿ ಆರೋಪಿ ಗಳ ಪತ್ತೆಗೆ ಸಿ.ಪಿ.ಎಂ, ಸಿ.ಪಿ.ಐ, ಕಾಂಗ್ರೆಸ್ ಸಹಿತ ಹಲವು ಪಕ್ಷಗಳು ಒತ್ತಡ ಹೇರಿದ್ದವು.

ಆಕ್ಟಿವಾಗೆ ಟ್ರ್ಯಾಕ್ಸ್ ಡಿಕ್ಕಿ: ಸವಾರರು ಗಂಭೀರ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಟೆಂಪೋ ಟ್ರ್ಯಾಕ್ಸ್ ಹಾಗೂ ಹೊಂಡಾ ಆಕ್ಟಿವಾ ಪರಸ್ಪರ ಡಿಕ್ಕಿ ಹೊಡೆದು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಆನೆಕೆರೆ ಶ್ರೀಕೃಷ್ಣ ಮಂದಿರದ ಬಳಿ ಸಂಭವಿಸಿದೆ. ಮಂಗಳೂರು ಸಮೀಪದ ಗುರುಪುರ ಕೈಕಂಬದ ವಸಂತ ಹಾಗೂ ಕುಂಟಲ್ಪಾಡಿಯ ಗುರುರಾಜ್ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತ ಎಂಬ ವರಿಗೆ ಕೈ ಹಾಗೂ ಕಾಲಿನ ಮೂಳೆ ಮುರಿತ ಕ್ಕೊಳಗಾಗಿದ್ದರೆ ಗುರುರಾಜ್‌ರವರ ಪಕ್ಕೆಲುಬಿಗೆ ತೀವ್ರ ತರಹದ
ಗಾಯವಾಗಿದೆ. ಪ್ರಕರಣ ದಾಖಲಿಸಿಕೊಂ ಡಿರುವ ನಗರ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವ್ಯಾನ್‌ನಿಂದ ನಗದು ಕಳವು

Posted by JAYAKIRANA Kirana on | 0 comments | Leave a comment...

ಸುಳ್ಯ: ಮ್ಯಾಕ್ಸಿಕ್ಯಾಬ್‌ನ ಕ್ಯಾಬಿನ್ ಬಾಕ್ಸ್ ನಲ್ಲಿದ್ದ ೧.೨೫ ಲಕ್ಷ ನಗದನ್ನು ಕಳವು ಮಾಡಿದ ಘಟನೆ ಗುರುವಾರ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಕೊಲ್ಲಮೊಗ್ರದಲ್ಲಿ ಅಡಿಕೆ ವ್ಯಾಪಾರಿ ಯಾಗಿರುವ ಮಜೀದ್ ಎಂಬವರು ತಮ್ಮ ಸಹೋದರ  ಸುಳ್ಯದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿರುವ ಯಾಕೂಬ್ ಎಂಬವರಿಗೆ ತಲುಪಿಸುವಂತೆ ಸುಳ್ಯ ಕೊಲ್ಲಮೊಗ್ರ ರಸ್ತೆಯಲ್ಲಿ ಸರ್ವೀಸ್ ಮಾಡುತ್ತಿರುವ ಮೂಕಾಂಬಿಕಾ ಹೆಸರಿನ ಮ್ಯಾಕ್ಸೀಕ್ಯಾಬ್‌ನ ಚಾಲಕರಿಗೆ ೧.೨೫ ಲಕ್ಷ ರೂ. ನೀಡಿದ್ದರು. ಆತ ಅದನ್ನು ಕ್ಯಾಬಿನ್‌ನ ಬಾಕ್ಸ್‌ಗೆ ಹಾಕಿ ಅದಕ್ಕೆ ಬೀಗ ಕೂಡಾ ಹಾಕಿದ್ದರು. ವ್ಯಾನ್ ಸುಳ್ಯಕ್ಕೆ ತಲುಪಿದ್ದು, ಗಾಂಧಿನಗರ ಪೆಟ್ರೋಲ್ ಪಂಪಿನ ಬಳಿ ವ್ಯಾನ್ ನಿಲ್ಲಿಸಿ ಚಾಲಕ ಬೀಗ ಕೀಯನ್ನು ಅಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದ. ಈ ವೇಳೆ ಹಣ ಕಳವಾಗಿದೆ.
ಚಾಲಕ ಊಟ ಮಾಡಿ ಬಂದು ಕ್ಯಾಬಿನ್ ಬಾಕ್ಸ್‌ನ ಬೀಗ ತೆಗೆದಾಗ ಅಲ್ಲಿ ನಗದು ಇರಲಿಲ್ಲ. ಇದೇ ವ್ಯಾನ್‌ನಲ್ಲಿ ಕೆಲವು ದಿನಗಳ ಹಿಂದೆ ಚಾಲಕನಾಗಿ ಕೆಲಸ ಮಾಡಿದ್ದ ಯುವಕ ಈಗ ಬೇರೆ ವ್ಯಾನ್‌ನಲ್ಲಿ ಚಾಲಕನಾಗಿದ್ದು, ಆತನೇ ಈ ಕೃತ್ಯ ನಡೆಸಿರಬಹುದು ಎಂಬ ಸಂಶಯದಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ಳಾರೆ ಘರ್ಷಣೆ: ಐವರ ಬಂಧನ

Posted by JAYAKIRANA Kirana on | 0 comments | Leave a comment...

ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಕಳೆದ ವಾರ ನಡೆದ ಘರ್ಷಣೆ-ಹಿಂಸಾಚಾರಕ್ಕೆ ಸಂಬಂಧಿಸಿ ೫ ಜನರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಫಮೀಜ್, ಜಾಕೀರ್, ಇಬ್ರಾಹಿಂ, ಉಮ್ಮರ್ ಫಾರೂಕ್, ಮಹ್ಮದ್ ಅರಾಫ್ ಬಂಧಿತರು.  ಘಟನೆಯ ಪ್ರಮುಖ ಆರೋಪಿ ಜಮಾಲುದ್ದೀನ್ ಎಂಬಾತನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆ ಬಳಿಕವೂ ಅಂಗಡಿಗೆ ಬೆಂಕಿ ಹಾಕುವ ಮೂಲಕ ಹಿಂಸಾ ಚಾರ ಮುಂದುವರಿದಿತ್ತು.

ಮೂಡಬಿದ್ರೆ: ಪಂಚಾಯತ್ ಸದಸ್ಯನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಪಾಲಡ್ಕ ಗ್ರಾ. ಪಂ. ಸದಸ್ಯ ಕೃಷ್ಣ ಶೆಟ್ಟಿ ಎಂಬವರ ಮೇಲೆ ಅದೇ ಪರಿಸರದ ಪ್ರವೀಣ್ ಸಿಕ್ವೇರಾ ಎಂಬಾತ ಹಲ್ಲೆ ನಡೆಸಿದ್ದಾನೆಂದು ಮೂಡಬಿದ್ರೆ ಪೊಲೀಸರಿಗೆ ದೂರು ನೀಡಲಾಗಿದ್ದು ವಿಚಾರಣೆ ನಡೆಯುತ್ತಿದೆ. ಪಾಲಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಮರಗಿಡಗಳನ್ನು ಕಡಿಯುತ್ತಿದ್ದ ಪ್ರವೀಣ್ ಸಿಕ್ವೇರಾ ಅವರಲ್ಲಿ ಕೃಷ್ಣ ಶೆಟ್ಟಿಯವರು ಆಕ್ಷೇಪಿಸಿದ್ದೇ ಈ ಹಲ್ಲೆಗೆ ಕಾರಣವೆನ್ನಲಾಗಿದೆ. ಇಬ್ಬರ ನಡುವೆ ಮಾತು ಬೆಳೆದು ಪ್ರವೀಣ್ ಅವರು ಕೃಷ್ಣ ಶೆಟ್ಟಿಯವರಿಗೆ ರೀಪಿನಿಂದ  ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಪ್ರವೀಣ್ ಸಿಕ್ವೇರಾ ಹಾಗೂ ಕೃಷ್ಣ ಶೆಟ್ಟಿ ಹಿಂದಿನಿಂದಲೂ ಸ್ನೇಹಿತರಾಗಿದ್ದರು. ಆದರೆ ಇತ್ತೀಚೆಗೆ ಅದ್ಯಾವುದೇ ಕಾರಣದಿಂದ ಅವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಈ ಕುರಿತು ಮೂಡಬಿದ್ರೆ ಠಾಣೆಗೆ ಮಾಹಿತಿ ಹೋಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಾಪತ್ತೆಯಾದ ಪತಿಯ ಹುಡುಕುತ್ತೇನೆಂದು ಸೋದರಿಗೆ ಮೋಸ ಮಾಡಿದ ಅಣ್ಣ!

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕಾಣೆಯಾದ ಪತಿಯನ್ನು ಹುಡುಕಿ ಕೊಡಲು ಮಹಿಳೆಯಿಂದ ೬೦ ಸಾವಿರ ರೂ. ಪ್ರತಿಫಲ ಪಡೆದು ಒಡಹುಟ್ಟಿದ ಸಹೋದರನೇ ವಂಚಿಸಿದ ಹೀನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನ್ಯಾಯಾಲಯದ ನಿರ್ದೇಶಾನುಸಾರ ವಂಚಕನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕುಂಬಳೆ ಬದ್ರಿಯಾ ನಗರದ ಉಸ್ಮಾನ್ ಎಂಬವರ ಪತ್ನಿ ನಫೀಸತ್ ನಸೀರಾ(೨೪) ವಂಚನೆಗೊಳಗಾದ ಮಹಿಳೆ. ಇವರ ಪತಿ ಉಸ್ಮಾನ್ ೨೦೧೦ರ ಸಪ್ಟೆಂಬರ್‌ನಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಪತಿಯ ಕಣ್ಮರೆಯಿಂದ ಕಂಗೆಟ್ಟು ಹೋದ ಮಹಿಳೆಯ ಬಳಿಗೆ ರಕ್ಷಕನ ಸೋಗಿನಲ್ಲಿ ಬಂದ ಒಡಹುಟ್ಟಿದ ಸಹೋದರನೇ ಆದ ತಲಪಾಡಿ ಕೆ.ಸಿ. ರಸ್ತೆ ನಿವಾಸಿ ಇಸ್ಮಾಯಿಲ್ (೪೨) ಎಂಬಾತ, ತಾನು ಹೇಗಾದರೂ ಪತಿಯನ್ನು ಹುಡುಕಿ ಕೊಡುವುದಾಗಿಯೂ ಇದರ ಖರ್ಚಿಗಾಗಿ ತನಗೆ ೬೦ ಸಾವಿರ ರೂ. ನೀಡಬೇಕೆಂದೂ ಕೇಳಿಕೊಂಡಿದ್ದ. ಅಣ್ಣನ ಮಾತನ್ನು ನಂಬಿದ  ತಾನು ಹೇಗೋ ೧೦ ಸಾವಿರ ರೂ. ಹೊಂದಿಸಿ ಕೊಟ್ಟೆನೆಂದೂ ಉಳಿದ ೫೦ ಸಾವಿರ ರೂ. ಗೆ ೩೫ ಗ್ರಾಂ. ಚಿನ್ನಾಭರಣ ನೀಡಿದೆನೆಂದೂ, ನಗ-ನಗದು ಪಡೆದ ಸೋದರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ವಂಚಿಸಿದನೆಂದೂ ಮಹಿಳೆ ಕಾಸರಗೋಡು ಸಿ.ಜೆ.ಎಂ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ. ನ್ಯಾಯಾಲಯ ನಿರ್ದೇಶಾನುಸಾರ ಕೇಸು ದಾಖಲಿಸಿದ ಕುಂಬಳೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಂಚಾಯತ್ ಅಧ್ಯಕ್ಷರಿಗೆ ಜಾತಿ ನಿಂದನೆಗೈದ ಯಕ್ಷಗಾನ ಕಲಾವಿದ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ನೀರಿನ ಸಮಸ್ಯೆಯನ್ನು ಆಲಿಸಲು ಬಂದಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಯಕ್ಷಗಾನ ಕಲಾವಿದ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಇಲ್ಲಿಯ ಬಜತ್ತೂರು ಗ್ರಾ.ಪಂ. ಅಧ್ಯಕ್ಷರಾದ ಕು. ಲಲಿತಾ.ಬಿಯವರು ಪಂಚಾಯತ್ ಸದಸ್ಯರೊಂದಿಗೆ ಕೂಡಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಬಜತ್ತೂರು ಗ್ರಾಮದ ಇಂದಿರಡ್ಕ ಪರಿಸರಕ್ಕೆ ತೆರಳಿದ್ದರು. ಈ ವೇಳೆ ಉದ್ರಿಕ್ತಗೊಂಡ ಸ್ಥಳೀಯ ನಿವಾಸಿ ಯಕ್ಷಗಾನ ಕಲಾವಿದ ಗಣಪತಿ ಭಟ್ ಜಾತಿನಿಂದನೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ಲಲಿತಾರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತಂಡದ ನಡುವೆ ಮಾತಿನ ಚಕಮಕಿ ಓರ್ವ ಪೊಲೀಸ್ ವಶಕ್ಕೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ನಗರದ ಬೊಳುವಾರು ಎಂಬಲ್ಲಿ ವಿಭಿನ್ನ ಕೋಮುಗಳ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಹೊಕೈ ಹಂತಕ್ಕೆ ತಲುಪಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಗುರುವಾರ ಸಂಜೆ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ಕೊಂಡರು.
ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತ ನಿಗೂ ಬಪ್ಪಳಿಗೆಯ ಕೆಲ ಯುವಕರಿಗೂ ಪೂರ್ವ ದ್ವೇಷವಿತ್ತು ಎನ್ನಲಾಗಿದ್ದು, ಅದೇ ವಿಚಾರದಲ್ಲಿ ನಿನ್ನೆ  ಬೊಳುವಾರಿನಲ್ಲಿ ಅವ ರೊಳಗೆ ಮಾತಿನ ಚಕಮಕಿ ನಡೆದು ಹೊಕೈ ಹಂತಕ್ಕೆ ತಲುಪಿತು. ಈ ವೇಳೆ ಇತ್ತಂಡದ ಬೆಂಬಲಿಗರು ಜಮಾಯಿಸಿದ ಪರಿಣಾಮವಾಗಿ ತುಸು ಉದ್ವಿಗ್ನತೆ ನಿರ್ಮಾಣವಾಯಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೇರಿದ ಜನರನ್ನು ಚದುರಿಸುವ ಮೂಲಕ ಪರಿಸ್ಥಿತಿ ಯನ್ನು ತಿಳಿಗೊಳಿಸಿದರು ಎಂದು ತಿಳಿದು ಬಂದಿದೆ.  ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬೊಳುವಾರಿನ ಮೊಬೈಲ್ ಅಂಗಡಿ ಯೊಂದರಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉಪ್ಪಿನಂಗಡಿ: ನಾಪತ್ತೆಯಾದಾಕೆ ಮದುವೆಯಾಗಿ ಪತ್ತೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೆಂಪಿಮಜಲು ಎಂಬಲ್ಲಿಂದ ಕಳೆದ ಮಾ.೧೨ರಿಂದ ನಾಪತ್ತೆಯಾಗಿದ್ದ ಹನ್ನತ್ ಎಂಬಾಕೆ ತನ್ನ ಪ್ರಿಯಕರನನ್ನು ಮದುವೆಯಾಗಿ ಠಾಣೆಗೆ ಹಾಜರಾಗಿದ್ದಾರೆ. ಶಬೀರ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನನ್ನು ಎ.೧೬ರಂದು ನೋಂದಣಿ ವಿವಾಹವಾಗಿರುವುದಾಗಿ ಹನ್ನತ್ ಹೇಳಿಕೆ ನೀಡಿದ್ದಾರೆ.

ಮೂಡುಶೆಡ್ಡೆ: ಬಡ್ಡಿ ವ್ಯಾಪಾರಿಗಳಿಂದ ಉದ್ಯಮಿ ಅಪಹರಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಾಲದ ಹಣವನ್ನು ಹಿಂತಿರುಗಿಸದ ಉದ್ಯಮಿಯನ್ನು ಚಕ್ರ ಬಡ್ಡಿ ವ್ಯಾಪಾರಿಗಳು ಅಪಹರಿಸಿದ ಘಟನೆ ಕಳೆದ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಾಮಂಜೂರು ಸಮೀಪದ ಮೂಡುಶೆಡ್ಡೆ ನಿವಾಸಿ ಹಸನ್ ಬಶೀರ್(೩೭) ಎಂಬವರೇ ಅಪಹರಣಕ್ಕೀಡಾದವರು. ದಿನಸಿ ಅಂಗಡಿ ಹೊಂದಿರುವ ಇವರು ಬಡ್ಡಿ ವ್ಯಾಪಾರಿ ರಾಜೇಶ್ ಮಾರ್ಟಿಸ್‌ರಿಂದ ಹಣ ಸಾಲ ಪಡೆದಿದ್ದರು. ಇಷ್ಟೇ ಅಲ್ಲದೆ ಇನ್ನೂ ಅನೇಕರಿಂದ ಹಣ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಬುಧವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಕೆಂಪು ಕಾರಿನಲ್ಲಿ ಆಗಮಿಸಿದ ಇಬ್ಬರು ‘ಧಣಿ ಕರೆಯುತ್ತಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದು, ಆ ಬಳಿಕ ಬಶೀರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ಪತ್ನಿ ರೇಶ್ಮಾ ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪತಿಯನ್ನು ರಾಜೇಶ್ ಮಾರ್ಟಿಸ್ ಅಪಹರಣ ಮಾಡಿರಬೇಕೆಂದು ಶಂಕಿಸಿ ಆತನ ಜೊತೆಯಿರುವ ಅರುಣ ಎಂಬಾತನ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದ ವೇಳೆ ‘ಬಶೀರ್ ನಮ್ಮ ಬಳಿಯಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಬಶೀರ್ ಎಲ್ಲಿಗೆ ಹೋಗಿದ್ದಾರೆ, ಏನಾಗಿದ್ದಾರೆ ಎನ್ನುವುದು ನಿಗೂಢವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಗೆ ದಿಗ್ಬಂಧನ: ಕುಂದಾಪುರ ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ದಾವೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮದನ್ ಗಾಂವ್ಕರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜಾ ಇವರ ವಿರುದ್ದ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಅಧ್ಯಕ್ಷೆ ಮತ್ತು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ, ಸಾಮಾಜಿಕ ಕಾರ್ಯಕರ್ತೆ, ಕುಂಭಾಶಿ ನಿವಾಸಿ ರಾಧಾದಾಸ್ ಅವರು ಕುಂದಾಪುರದ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದಾವೆ ದಾಖಲಿಸಿದ್ದಾರೆ.
 ೨೦೧೧ರ ಅಕ್ಟೋಬರ್ ೨೪ರಂದು ತನ್ನ ಮೇಲೆ ಹಲ್ಲೆ ನಡೆಸಿದ ರಾಮಕೃಷ್ಣ ಹೇರ್ಳೆ, ಜಯರಾಮ ಶೆಟ್ಟಿ, ಕಮಲಾಕ್ಷ ಪೈ, ಮಹಾಬಲೇಶ್ವರ ಆಚಾರಿ, ಅಣ್ಣಯ್ಯ ಪುತ್ರನ್, ಶಂಕರ್ ಹಾಗೂ ಇತರರು ಹಲ್ಲೆ ನಡೆಸಿದ್ದು, ಈ ಬಗ್ಗೆ ಕುಂದಾಪುರ ಠಾಣೆಗೆ ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡಿಲ್ಲ. ಇದಕ್ಕೆ ಬದಲಾಗಿ ತನ್ನ ಮೇಲೆಯೇ ಪೊಲೀಸ್ ಅಧಿಕಾರಿಗಳು ೫ ದಿನಗಳಲ್ಲಿ ೩ ಸುಳ್ಳು ಕೇಸುಗಳನ್ನು ದಾಖಲಿಸಿದ್ದಾರೆ ಎಂದು ರಾಧಾದಾಸ್ ಆರೋಪಿಸಿದ್ದಾರೆ.
 ಎಸ್‌ಐ ಜಾನ್ಸನ್ ಅವರು ಪದೇ ಪದೇ ತಾನಿರುವಾಗಲೂ, ಇಲ್ಲದಿರುವಾಗಲೂ ಮನೆಗೆ ಬಂದು ತಾಯಿ ಸುಲೋಚನಾ(೭೩) ಅವರನ್ನು ಬೆದರಿಸುತ್ತಿದ್ದರು, ಸುಳ್ಳು ಮೊಕದ್ದಮೆ ಗಳನ್ನು ದಾಖಲಿಸಿದ್ದಾರೆ. ಖಾಲಿ ಹಾಳೆಗಳಿಗೆ ಸಹಿ ಹಾಕಿಸಿದ್ದಾರೆ. ಇದೆಲ್ಲದರಿಂದಾಗಿ ಸುಲೋಚನಾ ಅವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ೧೬ ದಿನ ಚಿಕಿತ್ಸೆ ಪಡೆದು ೨೦೧೨ರ ಫೆಬ್ರವರಿ ೭ರಂದು ಮೃತಪಟ್ಟರು. ಈ ಸಾವಿಗೆ  ಸಬ್ ಇನ್ಸ್‌ಪೆಕ್ಟರ್ ಜಾನ್ಸನ್ ಅವರೇ ಕಾರಣವೆಂದು ರಾಧಾದಾಸ್ ಆಪಾದಿಸಿದ್ದಾರೆ. ಈ ಬಗ್ಗೆ ಈಗಾಗಲೇ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಎಸ್‌ಪಿ, ಐಜಿಪಿ, ಮಾನವಹಕ್ಕುಗಳ ಆಯೋಗ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯರಿಗೆ ದೂರು ನೀಡಿರುವುದಾಗಿಯೂ ರಾಧಾ ಖಚಿತಪಡಿಸಿದ್ದಾರೆ.
 ಮಾರ್ಚ್ ೧೮ರಂದು ಮತ್ತೆ ರಾಮಕೃಷ್ಣ ಹೇರ್ಳೆಯವರ ಚಿತಾವಣೆಯಿಂದಾಗಿ ಕುಂಭಾಶಿ ಗ್ರಾಮದ ಉಗ್ರಾಣಿ   ಮನೆ ಸಂತೋಷ ದೇವಾಡಿಗ, ಜನತಾ ಕಾಲನಿಯ ಸುನಿಲ್, ಓಣಿಮನೆ ಸುಮಂತ್ ಎಂಬವರು ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆದರೆ, ಪೊಲೀಸ್ ಅಧಿಕಾರಿಗಳು ಆರೋಪಿಗಳ ವಿರುದ್ದ ಸೂಕ್ತ ಸೆಕ್ಷನ್‌ಗಳನ್ನು ದಾಖಲಿಸಿಲ್ಲ, ತನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ರಾಧಾ ತಿಳಿಸಿದ್ದಾರೆ.  ಎಪ್ರಿಲ್ ೨ರಂದು ಠಾಣೆಗೆ ಹೋದ ತನಗೆ ಪೊಲೀಸ್ ಅಧಿಕಾರಿಗಳು ದಿಗ್ಬಂಧನ ವಿಧಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ, ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿರುವ ರಾಧಾದಾಸ್, ಈ ಸಂಬಂಧ ನ್ಯಾಯಾಲಯಕ್ಕೆ ನೀಡಿದ ದೂರಿನ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೯ ದಾಖಲಾತಿಗಳನ್ನು ಲಗ್ತೀಕರಿಸಿದ್ದಾರೆ.

ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರ‍್ಯಾಲಿ

Posted by JAYAKIRANA Kirana on | 0 comments | Leave a comment...

ಉಡುಪಿ: ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮತ್ತು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರು ವಾರ ಸಂಜೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿವರೆಗೆ ರ‍್ಯಾಲಿಯಲ್ಲಿ ತೆರಳಿದ ಸಿಐ ಟಿಯು ಕಾರ್ಯಕರ್ತರು, ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಮಿಕ ವರ್ಗದ ಹಿತಾಸಕ್ತಿ ಗಳನ್ನು ಕಡೆಗಣಿಸುತ್ತಿರುವ ರಾಜ್ಯದ ಬಿಜೆಪಿ ಸರಕಾರ, ಶ್ರೀಮಂತ ಮತ್ತು ಬಂಡವಾಳಶಾಹಿ ವರ್ಗದ ಪರವಾಗಿ ರುವ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಸಿಐಟಿಯು ನಾಯಕರು, ಕಾರ್ಮಿಕರ ತುರ್ತು ೧೮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿದರು.
ಕುಶಲ ಕಾರ್ಮಿಕರೂ ಸೇರಿ ದಂತೆ ಎಲ್ಲಾ ಕಾರ್ಮಿಕರಿಗೆ ಜನವರಿ ೨೦೦೮ರ ಬೆಲೆ ಸೂಚ್ಯಂಕದ ಮಟ್ಟದಲ್ಲಿ ಒಂದು ಸಾವಿರ ರು. ಕನಿಷ್ಟ ಕೂಲಿ ಜ್ಯಾರಿಗೊಳಿಸಬೇಕು, ಎಲ್ಲಾ ಸರಕಾರಿ ಇಲಾಖೆ ಮತ್ತು ಅಂಗನವಾಡಿ, ಅಕ್ಷರ ದಾಸೋಹ, ಆಶಾ ಮುಂತಾದ ಸಂಸ್ಥೆ ಗಳಲ್ಲಿ ಗುತ್ತಿಗೆ ಹಾಗೂ ದಿನಗೂಲಿ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು, ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಕಾಯ್ದೆ- ೧೯೭೦ ರಡಿಯಲ್ಲಿ ಗುತ್ತಿಗೆ ಕಾರ್ಮಿಕರ ಪರವಾದ ನಿಯಮ ಗಳನ್ನು ಜ್ಯಾರಿಗೊಳಿಸಬೇಕು, ಎಲ್ಲಾ ಅಸಂಘಟಿತ ರಂಗದ ಕಾರ್ಮಿಕರಿಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಗುರುತು ಚೀಟಿ ನೀಡಬೇಕು ಹಾಗೂ ಅಸಂಘ ಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾನೂನು- ೨೦೦೮ ರಡಿಯ ಲ್ಲಿರುವ ಕಲ್ಯಾಣ ಯೋಜನೆಗಳನ್ನು ವಿಳಂಬ ವಿಲ್ಲದೆ ಜ್ಯಾರಿಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
 ಎಲ್ಲಾ ಕಾರ್ಮಿಕರಿಗೂ ರೇಷನ್ ಕಾರ್ಡ್ ನೀಡಬೇಕು, ೨ ರು. ದರದಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ೩೫ ಕೆ.ಜಿ. ಆಹಾರಧಾನ್ಯ ವಿತರಿಸಬೇಕು, ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ನೀಡಬೇಕು, ಎಲ್ಲಾ    ಕಾರ್ಮಿ ಕರಿಗೂ ಖಚಿತವಾದ ನಿವೃತ್ತಿ ವೇತನ ಜ್ಯಾರಿಗೊಳಿಸಬೇಕು, ಭವಿಷ್ಯ ನಿದಿ ಯೋಜನೆಯಡಿಯಲ್ಲಿ ಜ್ಯಾರಿಯಲ್ಲಿರುವ ಕನಿಷ್ಟ ಪೆನ್ಶನ್‌ನ್ನು ಒಂದು ಸಾವಿರ ರು. ಎಂದು ನಿಗದಿಪಡಿಸಬೇಕು, ಶೇರು ಮಾರುಕಟ್ಟೆ ಆಧಾರಿತ ಪಿ.ಎಫ್. ಆರ್.ಡಿ.ಎ. ಪಿಂಚಣಿ ಯೋಜನೆ ರದ್ದು ಪಡಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ. ಪೆಟ್ರೋಲ್, ಡೀಸೆಲ್, ಆಟೋ ಗ್ಯಾಸ್ ಮೇಲಿನ ತೆರಿಗೆಯನ್ನು ಕಡಿತ ಗೊಳಿಸಬೇಕು, ದುಡಿಯುವ          ಮಹಿಳೆಯರಿಗೆ ೧೮೦ ದಿನಗಳ ಹೆರಿಗೆ ರಜೆ ನೀಡಬೇಕು,  ದುಡಿಯುವ ಸ್ಥಳಗಳ ಲ್ಲಿ ಲೈಂಗಿಕ ಕಿರುಕುಳ ತಡೆಯಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಿತಿಗಳನ್ನು ನೇಮಕ ಮಾಡಬೇಕು ಇತ್ಯಾದಿ ಬೇಡಿಕೆಗಳಿರುವ ಮನವಿ ಪತ್ರ ವನ್ನು ಸಿಐಟಿಯು ಮುಖಂಡರು ತಹಶಿಲ್ದಾರ್ ಮೂಲಕ
ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವಿಶ್ವನಾಥ ರೈ, ಪ್ರಮುಖರಾದ ಅದಮಾರು ಶ್ರೀಪತಿ ಆಚಾರ್ಯ, ದೋಗು ಸುವರ್ಣ, ವಿಠಲ ಪೂಜಾರಿ, ಕೆ.ಲಕ್ಷ್ಮಣ್, ಶೇಖರ ಕುಲಾಲ್, ವಾದಿರಾಜ ಬುದ್ಯ, ವಿದ್ಯಾ ರಾಜ್ ಮುಂತಾದವರು
ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಇಲ್ಲಿ ಮಧ್ಯಾಹ್ನವೂ ದೀಪಗಳು ಉರಿಯುತ್ತೆ!

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿದ್ಯುತ್ ಅಭಾವ ಇದೆಯೆಂದು ದಿನಕ್ಕೆ ಹತ್ತಾರು ಬಾರಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತೆ. ಇಷ್ಟೇ ಸಾಲದೆಂಬಂತೆ ಪವರ್ ಕಟ್ ಹೆಸರಲ್ಲಿ ಮಧ್ಯರಾತ್ರಿಯೂ, ಬೆಳ್ಳಂಬೆಳಗ್ಗೆಯೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಜನರಿಗೆ ತೊಂದರೆ ಕೊಡುವ ಮೆಸ್ಕಾಂ ಅಧಿಕಾರಿಗಳಿಗೆ ನಗರದಲ್ಲಿ ದಿನವಿಡೀ ದಾರಿದೀಪಗಳು ಉರಿದರೂ ಕಣ್ಣಿಗೆ ಕಾಣದಿರುವುದು ಮಾತ್ರ ವಿಚಿತ್ರವಾಗಿದೆ.
ನಿನ್ನೆ ಮಧ್ಯಾಹ್ನ ಒಂದು ಗಂಟೆಯವರೆಗೂ ಪಿವಿಎಸ್‌ನಿಂದ ಬಂಟ್ಸ್ ಹಾಸ್ಟೆಲ್‌ವರೆಗಿನ ಮರ್ಕ್ಯೂರಿ ದೀಪಗಳು ಜಗಮಗಿಸುತ್ತಿದ್ದವು. ಆ ದಾರಿದೀಪದ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ  ನಿದ್ದೆಯಲ್ಲಿದ್ದರೋ ಏನೋ? ಆ ಕಾರಣದಿಂದ  ರಾತ್ರಿಯಿಡೀ ನಗರಕ್ಕೆ ಬೆಳಕು ನೀಡುವ ಮರ್ಕ್ಯೂರಿ ದೀಪಗಳಿಗೆ ವಿಶ್ರಾಂತಿ ನೀಡದೆ ಹಗಲು ವೇಳೆಯೂ ಕೆಲಸ ನೀಡಿದ್ದ.
ಪಾಲಿಕೆ ಸಿಬ್ಬಂದಿ ಹೀಗಾದರೆ ವಿದ್ಯುತ್ ಇಲ್ಲ ಎನ್ನುವ ನೆಪ ಹೇಳಿ ಸೆಕೆಯ ಸಮಯದಲ್ಲೂ ವಿದ್ಯುತ್ ಕಡಿತಗೊಳಿಸಿ ಜನರಿಂದ ಹಿಡಿಶಾಪಕ್ಕೆ ತುತ್ತಾಗುವ ಮೆಸ್ಕಾಂನವರಾದರೂ ಎಚ್ಚೆತ್ತುಕೊಳ್ಳಬೇಕು ತಾನೇ? ಇವರೂ ನಿದ್ದೆಯಲ್ಲಿದ್ದಾರೆಯೇ ಎನ್ನುವುದು ಗೊತ್ತಾಗುವುದಿಲ್ಲ. 

‘ಕಾರ್ಮಿಕರಿಗೆ ಕನಿಷ್ಟ ೧೦ ಸಾವಿರ ವೇತನ ಕೊಡಿ’

Posted by JAYAKIRANA Kirana on | 0 comments | Leave a comment...

ಮಂಗಳೂರು: ಇಂದಿನ ದಿನಗ ಳಲ್ಲಿ ಒಬ್ಬನಿಗೆ ದಿನಬಳಕೆಯ ವಸ್ತುಗ ಳನ್ನು ಖರೀದಿಸಲು ತಿಂಗಳಿಗೆ ಕನಿಷ್ಟ ವೆಂದರೂ ಹತ್ತು ಸಾವಿರ ಬೇಕಾಗಿದ್ದು ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅಷ್ಟೇ ವೇತನವನ್ನು ನಿಗದಿಪಡಿಸುವಂತೆ ಸಿಐಟಿಯು ಜಿಲ್ಲಾಧ್ಯಕ್ಷರಾದ ಬಿ.ಮಾಧವ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
೧೩ ಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾರ್ಮಿಕರಿಗೆ ವೇತನ ನಿಗದಿ, ಭದ್ರತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ೨೦೦೮ರಲ್ಲಿ ಸಿಐಟಿಯು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು. ಬೇಡಿಕೆಗಳನ್ನು ಹತ್ತು ದಿನಗಳಲ್ಲೇ ಈಡೇರಿಸುವುದಾಗಿ ಅಂದಿನ ಕಾರ್ಮಿಕ ಮಂತ್ರಿ ರಾಮ ಚಂದ್ರೇಗೌಡ ಅವರು ನೀಡಿದ ಭರವಸೆ ಈಡೇರದ ಕಾರಣ ೨೦೦೯ರಲ್ಲಿ ಮತ್ತೊಮ್ಮೆ  ಪ್ರತಿಭಟನೆ ನಡೆಸಲಾಗಿತ್ತು.
ಆದರೆ ಅಂದು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಚಳವಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿ ಜೈಲಿಗೆ ಹಾಕಿದರು. ಆದರೆ ಅದಕ್ಕೆ ಹೆದರದೆ ೨೦೧೦ರಲ್ಲಿ ಮತ್ತೆ ಹೋರಾಟ ನಡೆಸ ಲಾಗಿದ್ದು ಆ ವೇಳೆ ರಾಜ್ಯ ಕಾರ್ಮಿಕ ಮಂತ್ರಿ ಬಚ್ಚೇಗೌಡ ಅವರು ವೇತನ ನಿಗದಿಪಡಿಸುವ ನಿಟ್ಟಿನಲ್ಲಿ ನೂತನ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತಂದರು. ಆದರೆ ಸಮಿತಿ ಒಂದು ಬಾರಿ ಸಭೆ ನಡೆಸಿತ್ತಾದರೂ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಿಲ್ಲ ಎಂದು ಕಿಡಿಕಾರಿದ ಮಾಧವ, ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೋರಾಟ ಅನಿವಾರ್ಯವಾಗಿದೆ ಎಂದರು.  

‘ಬಿಜೈ ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ’

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯತನದಿಂದಾಗಿ ಬಿಜೈ ಮಾರುಕಟ್ಟೆ ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಇದರಿಂದಾಗಿ ತಾತ್ಕಾಲಿಕ ವ್ಯವಸ್ಥೆಗೆ ಬದಲುಗೊಂಡಿರುವ ವ್ಯಾಪಾರಸ್ಥರು ಇನ್ನೂ ಬೀದಿ ಬದಿಯಲ್ಲೇ ಇದ್ದಾರೆ. ಇವರಿಗೆ ತಿಂಗಳೊಳಗೆ ಸೂಕ್ತ ವ್ಯವಸ್ಥೆ ಮಾಡದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಕಾಂಗ್ರೆಸ್ ವಕ್ತಾರ ಐವನ್ ಡಿಸೋಜಾ ತಿಳಿಸಿದ್ದಾರೆ.  ೨೦೦೩-೦೪ರಲ್ಲಿ ಬಿಜೈ ಮಾರುಕಟ್ಟೆಗೆ ಟೆಂಡರ್ ಕರೆದು ಕಾಮಗಾರಿ ಪ್ರಕ್ರಿಯೆ ಆರಂಭಿಸಿ ಐದು ವರ್ಷದಲ್ಲಿ ನಾಲ್ಕಂತಸ್ತಿನ ಮಾರುಕಟ್ಟೆ ನಿರ್ಮಾಣವಾಗಬೇಕಿತ್ತು. ಆದರೆ ಎಂಟು ವರ್ಷವಾದರೂ ಇನ್ನೂ ಮಾರುಕಟ್ಟೆ ಆಗಿಲ್ಲ, ಪ್ರಣಾಳಿಕೆಯಲ್ಲಿ ಬಿಜೈ ಮಾರುಕಟ್ಟೆಯ ವ್ಯವಸ್ಥೆಯನ್ನು ಉಲ್ಲೇಖಿಸಿದ ಬಿಜೆಪಿ ತನ್ನ ನಾಲ್ಕು ವರ್ಷದ ಅವಧಿಯಲ್ಲಿ ಅದನ್ನು ಮರೆತೇ ಬಿಟ್ಟಿದೆ ಎಂದು ಐವನ್ ತಿಳಿಸಿದ್ದಾರೆ.
ಆದರೆ ಇದಕ್ಕಿಂತ ಹಿಂದೆ ಕಾಂಗ್ರೆಸ್ ಆಡಳಿತವೇ ಇತ್ತಲ್ಲ ? ಎಂದು ಪ್ರಶ್ನಿಸಿದಾಗ ಉತ್ತರಿಸಿದ ಐವನ್ ಈ ಅವಧಿಯಲ್ಲಿ ನಾವು ಟೆಂಡರ್ ಕರೆದು ಕಾಮಗಾರಿ ಆರಂಭಿಸಿ ಕೊಟ್ಟಿದ್ದೇವೆ. ಅದನ್ನು ಮುಂದುವರಿಸ ಬೇಕಾದ ಬಿಜೆಪಿ ಮಲಗಿದೆ ಎಂದು ವ್ಯಂಗ್ಯವಾಡಿದರು. ಹೀಗಾಗಿ ಇನ್ನು ಒಂದು ತಿಂಗಳೊಳಗೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡದೆ ಹೋದರೆ ಬೀದಿಗಿಳಿಯುವುದಾಗಿ ತಿಳಿಸಿದರು. ಅದೇ ರೀತಿ ಪಾಸ್‌ಪೊರ್ಟ್ ಕಚೇರಿಯಲ್ಲೂ ಜನರಿಗೆ ತೊಂದರೆ ಆಗುತ್ತಿದ್ದು ಇಲ್ಲಿನ ಗುತ್ತಿಗೆ ವಹಿಸಿದವರು ಈ ಹಿಂದೆಯೇ ಇದನ್ನು ಸರಿ ಪಡಿಸುವುದಾಗಿ ಮಾತು ನೀಡಿದ್ದರು. ಈಗ ಅದನ್ನು ಮರೆತ್ತಿದ್ದಾರೆ. ಜನ ಪ್ರತಿದಿನ ಬಿಸಿಲಲ್ಲಿ ನಿಲ್ಲುವಂತಾಗಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡದೇ ಇದ್ದರೆ ಪಾಸ್‌ಪೊರ್ಟ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ನೇತ್ರಾವತಿಯನ್ನು ‘ಮಲಿನ’ಗೊಳಿಸುತ್ತಿರುವ ಹೋಟೆಲ್‌ಗಳು ಗ್ರಾಮ ಪಂಚಾಯತ್‌ನ ಜಾಣಕುರುಡು!

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸುತ್ತಿರುವ ಜೀವನದಿ ನೇತ್ರಾವತಿಯನ್ನು ಕಲ್ಮಶಗೊಳಿಸುವ ವ್ಯವಸ್ಥೆಯೊಂದು ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದರೂ ಈ ಬಗ್ಗೆ ಯಾರೂ ಕೂಡಾ ಚಕಾರ ಎತ್ತದೆ ಮೌನವಾಗಿದ್ದಾರೆ.
ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಇಲ್ಲಿನ ಜನತೆಯ ಪಾಲಿಗೆ ಬೇಸಿಗೆ ಕಾಲದ ಓಯಸಿಸ್‌ಗಳು. ಜನತೆಯ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರಿಗೆ ಈ ನದಿಗಳೇ ಏಕೈಕ ಸಂಪನ್ಮೂಲ. ಇದನ್ನು ಬಿಟ್ಟರೆ ಕೊಳವೆಬಾವಿಗಳು ಮಾತ್ರ ಜನತೆಗೆ ನೀರಿನ ಸಮಸ್ಯೆಗೆ ಪರಿಹಾರ. ಆದರೆ ಇದೀಗ ಬಹುತೇಕ ಕೊಳವೆಬಾವಿಗಳು ನೀರಿಲ್ಲದೆ ಒಣಗುತ್ತಿವೆ. ಶುದ್ಧ ಕುಡಿಯುವ ನೀರಿಗಾಗಿ ಜನತೆ ನದಿ ನೀರನ್ನು ಆಶ್ರಯಿಸಬೇಕಾಗಿದೆ. ಸಾವಿರಾರು ಮಂದಿ ಕುಡಿಯಲು ಉಪಯೋಗಿಸುವ ಈ ನದಿ ನೀರನ್ನು ಇದೀಗ ಕಲ್ಮಶಗೊಳಿಸುವ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಈ ನದಿಗಳಲ್ಲಿ ವಾಹನ ತೊಳೆಯುವುದು. ತ್ಯಾಜ್ಯ ವಸ್ತುಗಳನ್ನು ನದಿಯ ನೀರಿಗೆ ಹಾಕುವ ಕೆಲಸ ನಡೆಯುತ್ತಿದೆ. ಇದಕ್ಕೆ ಉಪ್ಪಿನಂಗಡಿ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಖಾಸಗಿ ಹೋಟೆಲ್ ಒಂದರಿಂದ ಕಳೆದ ೧೫ ವರ್ಷಗಳಿಂದ ಕೊಳಚೆ ನೀರನ್ನು ನೇರವಾಗಿ ನೇತ್ರಾವತಿ ನದಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಹೋಟೆಲಿನಿಂದ ಈ ಕೊಳಚೆಯನ್ನು ತೋಟವೊಂದರ ಮೂಲಕ ನದಿಗೆ ಸೇರಿಸಲಾಗುತ್ತಿದೆ. ಪ್ರವಾಸೋದಮ ಇಲಾಖೆಯ ಅನುಮತಿ ಇರುವ ಈ ಹೋಟೆಲ್‌ನಿಂದ  ಪ್ರತಿದಿನ ಕಿರುಹೊಳೆಯ ರೂಪದಲ್ಲಿ  ಹೋಟೆಲಿನ ಕಲ್ಮಶ ಹಾಗೂ ಕೊಳಚೆ ನೀರು ನೇತ್ರಾವತಿಯ ನೀರಿನೊಂದಿಗೆ ಬೆರೆತು ಮನುಷ್ಯನ ಶರೀರಕ್ಕೆ ಸೇರುತ್ತಿದೆ. ಇದರೊಂದಿಗೆ ನೂರಾರು ಬಗೆಯ ರೋಗಗಳು ಈ ನೀರಿನೊಂದಿಗೆ ಜನತೆಗೆ ಕೊಡುಗೆಯಾಗುತ್ತಿವೆ. ಇದರೊಂದಿಗೆ ಉಪ್ಪಿನಂಗಡಿ ಪೇಟೆಯ ಕೋಳಿ ತ್ಯಾಜ್ಯದಿಂದ ಹಿಡಿದು ಬಹುತೇಕ ಎಲ್ಲಾ ಕಲ್ಮಶಗಳು ಚರಂಡಿಯ ಕೊಳಚೆಯೊಂದಿಗೆ ಇದೇ ನೇತ್ರಾವತಿಯ ಒಡಲಿಗೆ ಸೇರುತ್ತಿದೆ. ಉಪ್ಪಿನಂಗಡಿಯ ಈ ಕೊಡುಗೆಯಿಂದ ಜಿಲ್ಲೆ ಜನತೆ ಕುಡಿಯುವ ನೀರು ರೋಗಗಳ ಗೂಡಾಗಿ ಪರಿವರ್ತಿತವಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಕಾಡುತ್ತಿರುವ ಹಲವು ರೋಗಗಳು ನೀರು ಹಾಗೂ ನೀರು ಪ್ರೇರಿತ ಕ್ರಿಮಿ ಸೊಳ್ಳೆಗಳಿಂದ ಉಂಟಾಗುತ್ತಿದ್ದರೂ ಆರೋಗ್ಯ ಇಲಾಖೆಯಾಗಲಿ ಸ್ಥಳೀಯ ಸರಕಾರವಾಗಿರುವ ಗ್ರಾ. ಪಂ. ಆಗಲಿ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುವ ಪ್ರಯತ್ನ ನಡೆಸಿಲ್ಲ ಎಂಬುವುದು ಇಲ್ಲಿ ಪ್ರಮುಖವಾಗಿ ಕಂಡು ಬರುತ್ತಿದೆ.  ನೇತ್ರಾವತಿ ನದಿ ನೀರು ಹಾಳಾಗುತ್ತಿರುವ ಬಗ್ಗೆ ಇಲ್ಲಿ ವಿದ್ಯಾ ಸಂಸ್ಥೆಯೊಂದರ ವಿದ್ಯಾರ್ಥಿನಿ ಯರು ಸಂಶೋಧನಾ ವರದಿಯೊಂದನ್ನು ತಯಾರಿಸಿ ಸ್ಥಳೀಯ ಆಡಳಿತದಿಂದ ಹಿಡಿದು ಜಿಲ್ಲಾಡಳಿತದವರೆಗೆ ಗಮನ ಸೆಳೆದಿದ್ದರು. ಈ ಮಕ್ಕಳ ಬೆನ್ನು ತಟ್ಟಿರುವುದನ್ನು ಬಿಟ್ಟರೆ ನದಿಯ ಬಗ್ಗೆ ಕಾಳಜಿ ವಹಿಸುವಲ್ಲಿ ಯಾವ ಕ್ರಿಯೆಗಳು ನಡೆಯಲಿಲ್ಲ. ಮಂಗಳೂರು ಹಾಗೂ ಪುತ್ತೂರಿನ ಜನತೆಗೆ ಕುಡಿಯುವ ನೀರು ನೀಡುತ್ತಿರುವ ನೇತ್ರಾವತಿಯನ್ನು ಹೋಟೆಲ್ ಹಾಗೂ ಇತರ ಕೊಳಚೆಗಳಿಂದ ರಕ್ಷಿಸದೇ ಇದ್ದರೆ ಭವಿಷ್ಯವನ್ನು ಊಹಿಸುವುದೂ ಕಷ್ಟವಾಗಬಹುದು. ಅದಕ್ಕಿಂತ ಮುಂಚೆ ಅಧಿಕಾರಿ ವರ್ಗ ಹಾಗೂ ಜನತೆ ಎಚ್ಚರವಾಗಬೇಕಾಗಿದೆ. ನದಿ ತಿರುಗಿಸುವ ಯೋಜನೆ ಬಗ್ಗೆ ಮಾತ್ರ ಹೋರಾಟ ಮಾಡಿದರೆ ಸಾಲದು. ನದಿ ನೀರನ್ನು ರಕ್ಷಿಸುವುದಕ್ಕೂ ಹೋರಾಟ ಅತೀ ಅಗತ್ಯ.

page1

Posted by JAYAKIRANA Kirana on | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...


page5

Posted by JAYAKIRANA Kirana on | 0 comments | Leave a comment...


page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)