ಇಎಸ್‌ಐ ಅವ್ಯವಸ್ಥೆ ವಿರುದ್ಧ ಹೋರಾಟ ಮುಂದುವರಿಕೆ

Posted by JAYAKIRANA Kirana on Thursday, 19 April 2012 | 0 comments | Leave a comment...

ಮಂಗಳೂರು: ಕಾರ್ಮಿಕರಿಗಾಗಿಯೇ ಕದ್ರಿ ಶಿವಭಾಗ್‌ನಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಇನ್ನೂ ಹಲವಾರು ಸಮಸ್ಯೆ ಗಳು ಇದ್ದು ಅದನ್ನು ಬಗೆಹರಿಸುವಂತೆ ಒತ್ತಾಯಿಸಿ ಮುಂದಿನ ತಿಂಗಳು ೨ರಿಂದ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷರಾದ ಲೋಕೇಶ್ ಹೆಗ್ಡೆ ತಿಳಿಸಿದ್ದಾರೆ.
ನಿನ್ನೆ ನಗರದಲ್ಲಿ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ರಾಜ್ಯ ದಲ್ಲಿರುವ ಕಾರ್ಮಿಕ ಸಂಘಟನೆಗಳು ನಿರ್ಲಕ್ಷಿಸುವ ವಿಷಯಗಳನ್ನು ಕಾರ್ಮಿಕ ಸಂಘ ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸುತ್ತಾ ಬಂದಿದೆ. ಇದರ ಭಾಗವಾಗಿ ಮಂಗಳೂರಿನಲ್ಲಿರುವ ಇಎಸ್‌ಐ ಆಸ್ಪತ್ರೆಯ ದುರವಸ್ಥೆಯ ವಿರುದ್ಧ ಹಲವು ಬಾರಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಲಾಗಿದೆ.
ಇದರ ಪರಿಣಾಮವಾಗಿ ಕೆಲವೊಂದು ಬೇಡಿಕೆಗಳು ಈಡೇರಿದ್ದು ಎಲ್ಲಾ ಸಮಸ್ಯೆ ಗಳನ್ನು ಆರು ತಿಂಗಳಲ್ಲಿ ಪರಿಹರಿಸುವುದಾಗಿ ರಾಜ್ಯ ಸಭೆಯ ಉಪಸಭಾಪತಿ ಯೋಗೀಶ್ ಭಟ್ ನೀಡಿದ ಭರವಸೆ ಸಂಪೂರ್ಣ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಮೇ ಎರ ಡರಿಂದ ಸಂಘಟನೆಯ ವತಿಯಿಂದ ಜಿಲ್ಲಾ ಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ಆರಂಭಿ ಸಲಾಗುವುದು. ಅಗತ್ಯಬಿದ್ದರೆ ಉಪವಾಸ ಸತ್ಯಾಗ್ರಹಕ್ಕೂ ಹಿಂಜರಿಯುವುದಿಲ್ಲ ಎಂದು ತಿಳಿಸಿದ ಅವರು, ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸಿರುವ ಕೆಲವು ಜಿಲ್ಲೆಯ ಜನರು ಮಾಡಿದ ಮನವಿಯಂತೆ ರಾಜ್ಯದ ಇತರ ಭಾಗಗಳಲ್ಲೂ ಸಂಘಟನೆ ಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಂಘಟ ನೆಯ ಪದಾಧಿಕಾರಿಗಳಾದ ಕೆಯ್ಯೂರು ನಾರಾಯಣ ಭಟ್, ಜಿ.ಎಂ.ಗಾಡ್ಕರ್ ಮೈಸೂರು, ಸುದತ್ ಜೈನ್, ರಾಜು ಕುಲಾಲ್, ರಿತೇಶ್ ಕಾರ್ಕಳ ಉಪಸ್ಥಿತರಿದ್ದರು.
ಕಾರ್ಮಿಕ ದಿನಾಚರಣೆ, ಕ್ರೀಡಾಕೂಟ
ಅಖಿಲ ಭಾರತ ಕಾರ್ಮಿಕ ಸಂಘದ ವತಿಯಿಂದ ಕಳೆದ ವರ್ಷ ಪ್ರಥಮ ಬಾರಿಗೆ ಮೇ ಒಂದರಂದು ಕಾರ್ಮಿಕರು ಮತ್ತು ಮಾಲೀಕರ ಸಮಾವೇಶವನ್ನು ನೆಹರೂ ಮೈದಾನದಲ್ಲಿ ಭರ್ಜರಿಯಾಗಿ ಆಚರಿಸಲಾಗಿತ್ತು. ಈ ವರ್ಷವೂ ಕಾರ್ಮಿಕ ದಿನಾಚರಣೆಗೆ ಸಂಘಟನೆ ಮುಂದಾಗಿದೆ.
ಮೇ ಒಂದರಂದು ಸಂಜೆ ನಾಲ್ಕು ಗಂಟೆಗೆ ಲಾಲ್‌ಬಾಗ್‌ನಲ್ಲಿರುವ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ಕಾರ್ಮಿಕರು ಮತ್ತು ಮಾಲೀಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ೨೨ರಂದು ನೆಹರೂ ಮೈದಾನದಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗಾಗಿಯೇ ಕ್ರೀಡಾ ಕೂಟ ಅಯೋಜಿಸಲಾಗಿದೆ ಎಂದು ಲೋಕೇಶ್ ಹೆಗ್ಡೆ ವಿವರಿಸಿದರು. 

ಸಣ್ಣಪುತ್ತ ಕೊಲೆ: ಮತ್ತೆ ನಾಲ್ವರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಣ್ಣೂರಿನ ರೌಡಿ ಪುತ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪುತ್ತ ಕೊಲೆಯ ಸೂತ್ರಧಾರಿಗಳೆಂದು ತಿಳಿದು ಬಂದಿದೆ.
ಬಂಧಿತರನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಕೊಲೆ ಪ್ರಕರಣದಲ್ಲಿ ಇನ್ನು ಆರು ಮಂದಿ ಆರೋಪಿಗಳು ಭಾಗಿಯಾ ಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ .ಫೈಸಲ್‌ನಗರದ ಸಲಾತ್(೨೩), ಬೆಂಗ್ರೆಯ ಜುಬೈದ್ ಅಲಿಯಾಸ್ ಜುಬ್ಬ(೨೧), ಕಣ್ಣೂರಿನ ಸದ್ದು ಆಲಿಯಾಸ್ ಸದ್ದಾಂ(೨೧), ಮತ್ತು ಪರಂಗಿಪೇಟೆಯ ಇರ್ಫಾನ್ ಬಂಧಿತ ಆರೋಪಿಗಳು.
ಕಳೆದ ತಿಂಗಳು ನಡೆದ ರೌಡಿ ಪುತ್ತ  ಕೊಲೆ ಪ್ರಕರಣವು ಸಾಕಷ್ಟು ಶಂಕೆ ಗಳನ್ನು ಮೂಡಿಸಿದ್ದು ಹಲವಾರು ಊಹಾ ಪೋಹಗಳಿಗೂ ಕಾರಣವಾಗಿತ್ತು. ಪ್ರಕರಣದ ಎಳೆಯೊಂದನ್ನು ಹಿಡಿದಿದ್ದ ಪೊಲೀಸರು ಕೊಲೆ ನಡೆದ ವಾರದೊಳಗೆ  ಇಸ್ಮಾಯಿಲ್, ಇಮ್ರಾನ್, ಜಾಕಿ ಎಂಬವರನ್ನು ಬಂಧಿಸಿದ್ದರು. ಆದರೆ ಇದು ವ್ಯವಸ್ಥಿತ ಸಂಚು ರೂಪಿಸಿ ನಡೆಸಲಾದ ಕೊಲೆ ಮತ್ತು ಇದರ ಹಿಂದೆ ಭಾರಿ ಕುಳಗಳೆ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಮ್ಮ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದರು. ಈ ಕೊಲೆ ಪ್ರಕರಣದ ಆರೋಪಿಗಳಲ್ಲಿ ಸಿದ್ದೀಕ್ ಎಂಬಾತ ಈಗಾಗಲೇ ಚಿಕ್ಕಮಗಳೂರಿನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟು ಜೈಲು ಕಂಬಿ ಎಣಿಸುತ್ತಿದ್ದಾನೆ . ಈ ಪ್ರಕರಣದಲ್ಲಿ ಒಟ್ಟು ೧೭ ಮಂದಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಪುತ್ತ ಕೊಲೆ ಬಗ್ಗೆ ಪೊಲೀಸರಿಗೆ ಈ ಮೊದಲೇ ಮಾಹಿತಿ ಇದ್ದ ಕಾರಣ ಆತನನ್ನು ತಂದು ಠಾಣೆಯಲ್ಲಿ ಇರಿಸಿದ್ದರು. ಆದರೆ ಪುತ್ತನ ಸಂಬಂಧಿಕರು ವಕೀಲರ ಜೊತೆ ಠಾಣೆಗೆ ಬಂದು ಆತನನ್ನು  ಠಾಣೆಯಿಂದ ಬಿಡಿಸಿ ಮನೆಗೆ ಕರೆದು ಕೊಂಡು ಹೋಗಿದ್ದರು. ಆಗಲೇ ಪೊಲೀಸರು ಈತನಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಪುತ್ತನ ಕೊಲೆಗೆ ಸ್ಕೆಚ್ ರೂಪಿತವಾಗಿದೆ ಎಂಬ ಬಗ್ಗೆ ಪಕ್ಕಾ ಮಾಹಿತಿಯಿದ್ದ ಪೊಲೀಸರು ಆತನ ಮೇಲೆ ಒಂದು ಕಣ್ಣಿಟ್ಟಿದ್ದರು. ಆತನ ಚಲನವಲನಗಳ ಮೇಲೆ ಎಷ್ಟೇ ನಿಗಾ ಇಟ್ಟಿದ್ದರೂ ಠಾಣೆಯಿಂದ ಬಿಡುಗಡೆಯಾದ ಮರುದಿನವೇ ರೌಡಿ ಪುತ್ತ ಹಂತಕರ ಸ್ಕೆಚ್‌ಗೆ ಬಲಿಯಾಗಿದ್ದಾನೆ. ಈ ಕೊಲೆಗೆ ಪುತ್ತ ಪರಂಗಿಪೇಟೆ ಪರಿಸರದಲ್ಲಿ ನಡೆಸುತ್ತಿದ್ದ ಅತಿಯಾದ ರೌಡಿಸಂ ಕಾರಣ ಎನ್ನಲಾಗಿದ್ದು, ಈತನ ಬೆದರಿಕೆ, ಧಮಕಿಗಳಿಂದ ಬೇಸತ್ತವರು ಈತನ ಕೊಲೆಗೆ ಸಂಚು ರೂಪಿಸಿದ್ದರು.  ಈ ಕೊಲೆಗೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಆರೋಪಿಗಳ ಬಂಧನವಾಗಬೇಕಿದ್ದು, ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಕಾರಿ ಶಾಲೆಯ ಅಧ್ಯಾಪಕ/ಕಿ ಯಾರು?

Posted by JAYAKIRANA Kirana on | 0 comments | Leave a comment...

 ಎಂ.ಕರುಣಾಕರ, ಮಾರಿಪಳ್ಳ
ದಕ್ಷಿಣ ಕನ್ನಡ ಜಿಲ್ಲೆಯ ಪ್ರeವಂತ ಹಾಗೂ ಬುದ್ಧಿ ವಂತ ನಾಗರಿಕರೇ ತಾವೆಲ್ಲರೂ ಸರಕಾರಿ ಶಾಲೆಗಳಲ್ಲಿ ವಿದ್ಯಾ ಭ್ಯಾಸ ಮಾಡಿದವರೇ? ಹೌದಾದರೆ ನಾವೆಲ್ಲರೂ ನಕ್ಸಲರೇ? ಹೌದು ಎನ್ನುತ್ತಾರೆ ಧಾರ್ಮಿಕ ಗುರು ಶ್ರೀಶ್ರೀಶ್ರೀರವಿಶಂಕರ್ ಅವರು!
ಇವರನ್ನು ‘ಧಾರ್ಮಿಕ’ ಗುರು ಅನ್ನುವ ಬದಲು ಕಾರ್ಪೊ ರೇಟ್ ಬಂಡವಾಳಶಾಹಿಗಳ ಗುತ್ತಿಗೆದಾರ/ಏಜೆಂಟ್ ಎಂದರೆ ತಪ್ಪಿಲ್ಲ! ಇವರು ಇತ್ತೀಚೆಗೆ ಸರಕಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿವೆ. ಸರಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿ ಸಬೇಕು’ ಎಂದು ಸಲಹೆ ನೀಡಿದ್ದಾರೆ. ಆದ್ದರಿಂದ ನನ್ನ ಹೇಳಿಕೆ ಇವರಿಗೆ ಸರಿ ಆಗಬಹುದು.
ನಕ್ಸಲ್ ಚಟುವಟಿಕೆಗಳಲ್ಲಿ ಹಾಗೂ ಹಿಂಸಾಚಾರಗಳಲ್ಲಿ ಭಾಗ ವಹಿಸುವ ಜನರು ಕೇವಲ ಸರಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾ ರ್ಥಿಗಳೇ ಆಗಬೇಕೇನಿಲ್ಲ! ಇಂತಹ ಗುರೂಜಿ, ರಾಜಕಾರಣಿ ಗಳ ಹೇಳಿಕೆಗಳೇ ಸಾಕು ನಕ್ಸಲ್ ಆಗಲು. ಇವರುಗಳೇ ಪರೋ ಕ್ಷವಾಗಿ ನಕ್ಸಲರನ್ನು ತಯಾರಿಸುತ್ತಾರೆ. ನಕ್ಸಲರನ್ನು ಕೆಲವೊಂದು ಸ್ವಾಮೀಜಿಗಳು, ರಾಜಕಾರಣಿಗಳು ಸೃಷ್ಟಿಸುತ್ತಾರೆ.
ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ನಕ್ಸಲ್ ಗಳಾದರೆ, ಅಲ್ಲಿ ಪಾಠವನ್ನು ಮಾಡುವ ಅಧ್ಯಾಪಕ/ಕಿಯ ವೃಂದ ವನ್ನು ಏನೆಂದು ಕರೆಯುತ್ತೀರಿ...? ನೀವು ಅಥವಾ ಸರಕಾರಿ ಶಾಲೆಗಳಲ್ಲಿ ಕಲಿಸುತ್ತಿರುವ ಅಧ್ಯಾಪಕರೇ ತಿಳಿಸಬೇಕು. ನಮ್ಮ ದೇಶದಲ್ಲಿ ಬಂಡವಾಳಶಾಹಿ ವರ್ಗವು ಸರಕಾರದ ಅಧೀನದ ಲ್ಲಿರುವ ಸಂಸ್ಥೆಗಳನ್ನು ಯಾವಾಗ ಖಾಸಗಿಯವರಿಗೆ ನೀಡು ತ್ತಾರೋ ಎಂದು ಜೊಲ್ಲು ಸುರಿಸುವವರಿಗೆ ಗುರೂಜಿಯ     ಹೇಳಿಕೆ ಖುಷಿ ನೀಡಬಹುದು. ಇವರು ಇರುವುದೇ ಬಂಡ ವಾಳಶಾಹಿ ಪರವಾಗಿ ಅಲ್ಲವೇ?
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಸರಕಾರಿ ಶಾಲೆಗೂ ಕಳುಹಿಸಲು ಸಾಧ್ಯವಿಲ್ಲದ ಕುಟುಂಬಗಳು ಇರುವಾಗ ಖಾಸಗಿ ಶಾಲೆಗೆ ಸೇರಿಸುವುದಾದರೂ ಹೇಗೆ? ಖಾಸಗಿ ಶಾಲೆಗಳ ಹಾವ ಳಿಯಿಂದಲೇ ಈಗ ಶಿಕ್ಷಣದ ಮೌಲ್ಯವೇ ಕುಂಠಿತವಾಗುತ್ತಿದೆ. ಈಗೀಗ ಶಿಕ್ಷಣವೆಂಬುದು ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಣವು ಸ್ಪರ್ಧೆಯಂತೆ ರೂಪುಗೊಳ್ಳುತ್ತಿದೆ. ಸರಕಾರದ ಬಂಡವಾಳಶಾಹಿ ಪರ ನೀತಿಯಿಂದ ಶಿಕ್ಷಣದ ಉದ್ದೇಶವೇ ಬದಲಾಗುತ್ತಿದೆ. ಪ್ರಾಥ ಮಿಕ ಶಿಕ್ಷಣ ಉಚಿತ ಶಿಕ್ಷಣವೆಂದು ಹೇಳಿ ಬೇರೆ-ಬೇರೆ ರೀತಿ ಯಲ್ಲಿ ಶುಲ್ಕವನ್ನು ಪಡೆಯುವ ನೀತಿಯನ್ನು ಏನೆನ್ನಬೇಕು?
ಇಂದಿನ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ಇಲ್ಲ ಎಂಬ ನೀತಿಯಿಂದ ವಿದ್ಯಾರ್ಥಿಗಳಿಂದ ಸಮಾಜಕ್ಕೆ ಒಳಿತನ್ನು ಬಯ ಸಲು ಸಾಧ್ಯನಾ? ವಿದ್ಯಾರ್ಥಿಗಳಿಗೆ ಶಿಕ್ಷೆ ಇಲ್ಲ ಎಂಬ ನೀತಿ ಯಿಂದಲೇ ಹೀಗೀಗ ವಿದ್ಯಾರ್ಥಿಗಳು ಚಾಕು/ಚೂರಿಯನ್ನು ತರಗತಿಗೆ ತಂದು ಅಧ್ಯಾಪಕರಿಗೋ ಅಥವಾ ಸಹಪಾಠಿಗೋ ಇರಿದು ಕೊಲೆ ಮಾಡುವ ಸ್ಥಿತಿ ಬಂದಿದೆ. ತಪ್ಪು ಮಾಡಿದವ ನಿಗೆ ಶಿಕ್ಷೆ ಆಗಲೇಬೇಕು. ಅದರಲ್ಲಿ ವಿದ್ಯಾರ್ಥಿಗೆ ರಿಯಾಯಿತಿ ಬೇಡ. ಶಿಕ್ಷೆ ನೀಡುವಾಗ ಅಧ್ಯಾಪಕರು ಮಾನವೀಯತೆ, ಕರುಣೆ ಇರಲೇಬೇಕು. ರಾಕ್ಷಸೀ ವರ್ತನೆಯಿಂದ ನೀಡುವ ಶಿಕ್ಷೆಯಿಂದ ವಿದ್ಯಾರ್ಥಿಯು ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯವಿಲ್ಲ.
ಶಿಕ್ಷೆ ಇಲ್ಲದ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಒಳ್ಳೆತನ, ಮಾನವೀಯತೆ, ಕರುಣೆಯನ್ನು ಕಾಣಲು ಸಾಧ್ಯವಿಲ್ಲ! ಶಿಕ್ಷೆ ಯೊಂದಿಗೆ ಶಿಸ್ತಿನ ಶಿಕ್ಷಣ ಪಡೆದ ಎಷ್ಟೋ ಮಂದಿ ಇಂದು ಒಳ್ಳೆಯ ಉದ್ಯೋಗದಲ್ಲಿದ್ದು, ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಜನಾಂಗ, ಸಮಾಜವನ್ನು ಬದಲಾ ವಣೆ ಮಾಡುವವರು ಆಗಬೇಕಾದರೆ, ಶಿಕ್ಷಣದ ವ್ಯಾಪಾರವು ನಿಲ್ಲಬೇಕು. ಅಲ್ಲದೆ ಅಸಂಬದ್ಧ ಹೇಳಿಕೆಗಳನ್ನು ನೀಡುವ   ಗುರೂಜಿ, ರಾಜಕಾರಣಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ನಕ್ಸಲ್, ಭಯೋತ್ಪಾದನೆ, ಸಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸುವವರನ್ನು ಸರಿದಾರಿಗೆ ತರಬಹುದು ಎಂಬುದು ನನ್ನ ನಂಬಿಕೆ.

ಎಲ್ಲೆಲ್ಲೂ ಅಪ್ರಾಪ್ತ ಪ್ರೇಮಿಗಳು

Posted by JAYAKIRANA Kirana on | 0 comments | Leave a comment...

ಈಗಿನ ಕಾಲ ಎಷ್ಟೊಂದು ಬದಲಾಗಿದೆ ಎಂದರೆ ಹದಿಮೂರು, ಹದಿನಾಲ್ಕು ವಯಸ್ಸು ದಾಟುವಷ್ಟರಲ್ಲಿ ಹುಡುಗಿಯರು ಪ್ರೀತಿ-ಪ್ರೇಮದ ಸೆಳೆತಕ್ಕೆ ಒಳಗಾಗಿರುತ್ತಾರೆ. ಇತ್ತೀಚಿಗೆ ವಿದೇಶ ದಲ್ಲಿ ನಡೆದ ಸಂಶೋಧನೆಯೊಂದು ೧೯ ವಯ ಸ್ಸಿಗೂ ಮುನ್ನ ಶೇ. ೫೦ಕ್ಕೂ ಹೆಚ್ಚು ಹೆಣ್ಣುಮ ಕ್ಕಳು ಶೀಲ ಕಳೆದುಕೊಂಡಿರುತ್ತಾರೆ ಎಂದು ಹೇಳಿದೆ. ಇದು ನಿಜಕ್ಕೂ ಆತಂಕಕಾರಿಯಲ್ಲವೇ? ಈ ಬಗ್ಗೆ ಸಮಾಜ ಯಾಕೆ ಚಿಂತಿಸುತ್ತಿಲ್ಲ? ಅಪ್ರಾಪ್ತ ವಯಸ್ಕರ ನಡುವಿನ ಸ್ನೇಹ, ಆಕರ್ಷಣೆ, ಸೆಕ್ಸ್ ಇವೆಲ್ಲ ಅವರನ್ನು ಜೀವನದಲ್ಲಿ ಸಾಧಿಸಲು ಅವ ಕಾಶ ನೀಡುವುದಿಲ್ಲ. ಎಲ್ಲಿಯೋ ನಡೆದ ಸಂಶೋ ಧನೆಯ ಬಗ್ಗೆ ಇಲ್ಲೇಕೆ ಚಿಂತನೆ ನಡೆಸಬೇಕು?
ನೆರೆಹೊರೆಯ ಹದಿಹರೆಯದ ಹೆಣ್ಮಕ್ಕಳೂ ಶಾಲೆಗೆಂದು ಹೊರಟು ಎಲ್ಲೋ ಬೀಚ್, ಪಾರ್ಕ್ ಗಳಲ್ಲಿ ಸುತ್ತುತ್ತಿರುತ್ತಾರೆ. ಇಲ್ಲಿ ಹೆತ್ತವರ ಬೇಜವಾ ಬ್ದಾರಿಯೇ ಕಾರಣ ಹೊರತು ಬೇರೇನೂ ಅಲ್ಲ. ಶಾಲೆ, ಕಾಲೇಜ್‌ಗೆ ಹೋಗುವ ಹೆಣ್ಮಕ್ಕಳನ್ನು ಅತಿ ಯಾದ ಮುದ್ದಿನಿಂದ ಬೆಳೆಸುವುದೇ ಅವರಿಗೆ ಅಡ್ಡ ದಾರಿ ಹಿಡಿಯಲು ಅವಕಾಶ ಎನ್ನುವುದನ್ನು ಇನ್ನಾ ದರೂ ಹೆತ್ತವರು ಅರಿಯಲಿ.
ಹೆಣ್ಮಕ್ಕಳನ್ನು ಶಾಲೆ, ಕಾಲೇಜ್ ಎಂದು ಕಳು ಹಿಸಿ ನೆಮ್ಮದಿಯಿಂದ ಮನೆಯಲ್ಲಿ ಇರುವ ಹೆತ್ತ ವರು, ಪೋಷಕರು ಎಚ್ಚರಗೊಳ್ಳಬೇಕು. ಯಾಕೆಂ ದರೆ ಹದಿನಾಲ್ಕು ವಯಸ್ಸಿನಲ್ಲೇ ಹೆಣ್ಮಕ್ಕಳು ಹುಡು ಗರ ಸಂಗದಲ್ಲಿ ಬಿದ್ದು ಎಲ್ಲವನ್ನೂ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಮಂಗಳೂರಿನ ತಣ್ಣೀ ರುಬಾವಿ ಬೀಚ್, ಸುಲ್ತಾನ್ ಬತ್ತೇರಿ, ಪಣಂಬೂರು ಬೀಚ್‌ಗಳಿಗೊಂದು ಸುತ್ತು ಹಾಕಿದರೆ ಅಪ್ರಾಪ್ತ ಪ್ರೇಮಿಗಳ ಹಿಂಡೇ ಕಾಣಸಿಗುತ್ತದೆ. ಇವರಲ್ಲಿ ಅದೆಷ್ಟು ಮಂದಿ ಹುಡುಗ-ಹುಡುಗಿಯರು ಮನೆಯಲ್ಲಿ ಏನು ಹೇಳಿ ಬಂದಿರುತ್ತಾರೋ? ಸಾರ್ವಜನಿಕ ಸ್ಥಳದಲ್ಲಿ ಮೈಮರೆಯುವ ಇವ ರನ್ನು ವಿಚಾರಿಸುವವರಾರೂ ಇಲ್ಲವೇ?
 ನಾಗ್‌ಶೇಖರ್, ಮಂಗಳೂರು 

ವರದಕ್ಷಿಣೆ ಮದುವೆಗೆ ಹೋಗಬೇಡಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗಷ್ಟೇ ಸಂಘಟನೆ ಯೊಂದು ವರದಕ್ಷಿಣೆಯ ವಿರುದ್ದ ಸಹಿ ಸಂಗ್ರಹ ಎಂಬ ಕಾರ್ಯಕ್ರಮ ವನ್ನು ಹಮ್ಮಿಕೊಂಡಿತ್ತು. ಇದು ಸಂಘ ಟನೆಯ ಉತ್ತಮ ಸಮಾಜ ಸೇವೆ ಎನ್ನಬಹುದು. ಸಾವಿರಾರು ಜನ ಇದ ರಲ್ಲಿ ಭಾಗವಹಿಸಿದ್ದರು. ಆದರೆ ಈ ರೀತಿಯ ಕಾರ್ಯಕ್ರಮವನ್ನು ನಡೆ ಸುವ ಬದಲು ಇಲ್ಲಿ ಸಹಿ ಹಾಕಿ ವರದಕ್ಷಿಣೆಯನ್ನು ವಿರೋಧಿಸಿದವರು ವರದಕ್ಷಿಣೆ ಪಡೆದುಕೊಳ್ಳುವ ಮದು ವೆಗೆ ಹೋಗಬೇಡಿ. ಒಂದು ವೇಳೆ ನಿಮ್ಮ ಗೆಳೆಯ, ಸಂಬಂಧಿಕರು ವರ ದಕ್ಷಿಣೆ ಪಡೆದು ಮದುವೆಯಾಗುತ್ತಿ ದ್ದಾರೆ ಎಂದು ತಿಳಿದರೆ ಅವರ ಮುಖಕ್ಕೆ ಹೊಡೆದಂತೆ ಹೇಳಿ ಬಿಡಿ. ವರದಕ್ಷಿಣೆ ಪಡೆದ ಮದುವೆಗೆ ನಾವು ಬರುವುದಿಲ್ಲ, ನಮ್ಮನ್ನು ಕರೆಯಬೇಡಿ ಎಂದು. ಇದು ನಿಷ್ಠುರವಾಗಿ ಕಂಡರೂ ಒಂದು ರೀತಿಯ ಸಮಾಜ ಸೇವೆ ಎನ್ನುವುದು ನೆನಪಿರಲಿ. ಇಂದು ಲವ್ ಮ್ಯಾರೇಜ್‌ಗಳಲ್ಲೂ ವರದಕ್ಷಿಣೆ ಪಡೆಯಲಾಗುತ್ತಿದೆ. ಹುಡುಗಿಯನ್ನು ಪ್ರೀತಿಸಿ, ಸಂಪೂರ್ಣವಾಗಿ ಬಳಸಿ ಕೊಂಡ ನಂತರ ಮದುವೆಗೆ ಒಪ್ಪಿ ದರೂ ಕೆಲ ಹುಡುಗನ ಕಡೆಯವರು ವರದಕ್ಷಿಣೆ ಕೇಳುವ ಉದಾಹರಣೆಗ ಳುಂಟು. ಹೆಣ್ಣು ಹೆತ್ತವರು ಅನಿವಾ ರ್ಯವಾಗಿ ವರದಕ್ಷಿಣೆ ಕೊಡಬೇ ಕಾದ ಪರಿಸ್ಥಿತಿಗೆ ಸಿಲುಕುತ್ತಾರೆ. ಇನ್ನಾ ದರೂ ಇಂತಹ ಪದ್ದತಿ ನಿಲ್ಲಬೇಕು. ಇದು ನಿಲ್ಲಲು ಇದೇ ಪರಿಹಾರ.
ಇಸ್ಮಾಯಿಲ್, ತೊಕ್ಕೊಟ್ಟು

ಬಜಾಲ್-ಪಲ್ಲಕೆರೆಯಲ್ಲಿ ನೀರಿಗೆ ಬರ

Posted by JAYAKIRANA Kirana on | 0 comments | Leave a comment...

ನಗರದಾದ್ಯಂತ ಎಲ್ಲಾ ಕಡೆ ಗಳಲ್ಲಿ ಈ ವರ್ಷ ನೀರಿನ ತತ್ವಾರ ಕಂಡುಬಂದಿದ್ದು, ಸಿಕ್ಕಾಪಟ್ಟೆ ನೀರು ಪೋಲು ಮಾಡುವವರು ಇದರಿಂದ ಬುದ್ಧಿ ಕಲಿಯುವಂ ತಾಗಿದೆ. ನಗರದ ಕೆಲವು ಪ್ರದೇ ಶಗಳಲ್ಲಂತೂ ಸರಿ ಸುಮಾರು ಎರಡು-ಮೂರು ದಿನಗಳಲ್ಲಿ ಒಂದು ಬಾರಿಯಾದರೂ ಒಂದ ರಿಂದ ಎರಡು ತಾಸು ನೀರು ಬರುತ್ತಿದ್ದರೂ, ಬಜಾಲ್-ಪಲ್ಲಕೆರೆ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೀರು ಪೂರೈಕೆಯಾಗದೆ ಜನರು ಕಂಗೆಟ್ಟಿದ್ದಾರೆ.
ಪರಿಸರದ ನಗರಪಾಲಿಕೆ ಸದಸ್ಯರು ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಪಾಲಿಕೆ ನೀರು ಸರಬ ರಾಜು ಮಾಡಲು ಪ್ರತೀ ಪ್ರದೇಶಕ್ಕೂ ಒಬ್ಬ ವ್ಯಕ್ತಿಯನ್ನು ನೇಮಿಸಿದೆ. ಆದರೆ ಈ ವ್ಯಕ್ತಿಯು ಜನಸಾಮಾನ್ಯರ ಪರಿ ಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀರು ಒದಗಿಸಿಕೊಟ್ಟರೆ ಒಳ್ಳೆಯದು. ಜನರು ನೀರಿನ ಬವಣೆಯಿಂದ ಮುಕ್ತಿ ಪಡೆಯುವಂತಾಗುತ್ತದೆ. ಹೆಚ್ಚಾಗಿ ಜನಸಾಮಾನ್ಯರು ಹಗಲಿನ ವೇಳೆ ಉದ್ಯೋಗದ ಅನ್ವೇಷಣೆಯಲ್ಲಿದ್ದು, ರಾತ್ರಿ ವೇಳೆ ಮನೆಯಲ್ಲಿರುತ್ತಾರೆ. ಹಾಗಾಗಿ ಪ್ರತೀ ಗ್ರಾಮದಲ್ಲೂ ನೀರು ಸರಬರಾಜು ಮಾಡಹೊರಟಿ ರುವ ವ್ಯಕ್ತಿಯು ಬೆಳಗ್ಗಿನ ಜಾವ ಅಥವಾ ಸಂಜೆ ವೇಳೆ ನೀರಿನ ಸರಬರಾಜು ಮಾಡಿದಲ್ಲಿ ಜನರಿಗೆ ಸಮಸ್ಯೆಯಾಗುವುದಿಲ್ಲ. ಅಲ್ಲದೆ ಪ್ರತಿಯೊಂದು ಪ್ರದೇಶಕ್ಕೂ ನೀರು ಸರಬರಾಜು ಮಾಡುವಾಗ ಗೇಟ್ ವಾಲ್ವ್ ಅನ್ನು ಪೂರ್ತಿ ತಿರುಗಿಸಿ ಇಟ್ಟಲ್ಲಿ ಪ್ರತಿ ಯೊಂದು ಮನೆಯವರೂ ಸಾಕಷ್ಟು ನೀರನ್ನು ಪಡೆ ಯಲು ಸಾಧ್ಯವಾಗುತ್ತದೆ. ಜನರಿಗೆ ನೀರು ಒದಗಿ ಸುವಲ್ಲಿ ಯಾವುದೇ ಬೇಧ ಭಾವ ಮಾಡದೆ ಎರಡು ದಿನಗಳಿಗೊಮ್ಮೆಯಾದರೂ ಒಂದು ಗಂಟೆ ಪೂರ್ತಿ ಯಾಗಿ ಗೇಟ್‌ವಾಲ್ವ್ ತಿರುಗಿಸಿ ಇಡಬೇಕಾಗಿ ಈ ಮೂಲಕ ವಿನಂತಿ ಮಾಡುತ್ತಿದ್ದೇನೆ. ನೀರಿನ ಸಮಸ್ಯೆ ಇದೇ ರೀತಿ ಮುಂದುವರಿದಲ್ಲಿ ಮುಂದೊದಗಬ ಹುದಾದ ಪರಿಸ್ಥಿತಿಯ ವಿಷಮತೆಯನ್ನು ಅರಿತು ಸ್ಥಳೀಯ ನಗರಪಾಲಿಕೆ ಸದಸ್ಯರು ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ. ಇಲ್ಲದಿದ್ದರೆ       ಜನರು ಒಟ್ಟಾಗಿ ನೀರು ಪೂರೈಸದ ಆಡಳಿತ, ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡು ತ್ತಿದ್ದೇನೆ.    ಆರ್.ಕೆ.ದೇವಾಡಿಗ, ಬಜಾಲ್

ಸರಕಾರಿ ಶಾಲೆಯನ್ನು ಅಭಿವೃದ್ಧಿಗೊಳಿಸಿ

Posted by JAYAKIRANA Kirana on | 0 comments | Leave a comment...

ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಯಾಗಿದೆ ಎಂಬ ನೆಪ ಹೇಳಿ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನಗಳನ್ನು ಸರಕಾರ ಮಾಡುತ್ತಿವೆ. ದಾಖಲಾತಿ ಕಡಿಮೆಯಾಗಲು ಕಾರಣವೇನು ಎಂಬು ವುದನ್ನು ಸರಕಾರ ಗಮನಹರಿಸದೆ ಇರುವುದು ಬಹಳ ಬೇಸರದ ಸಂಗತಿ. ಸರಕಾರಿ ಶಾಲೆಗಳ ಶಿಕ್ಷಕರನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚಾ ಗಿದೆ. ಸರಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷ ಕರು ಕೇವಲ ಬೋಧನೆ ಮಾಡಲು ಮಾತ್ರ ಗೊತ್ತಿ ದ್ದರೆ ಸಾಲದು.
ಯಾವುದೇ ಕೆಲಸವನ್ನು ಮಾಡಲು ತಯಾರಿರ ಬೇಕು ಎಂದರೆ ತಪ್ಪಾಗಲಾರದು. ಅದೇ ರೀತಿ ಉಪ ಯೋಗವಿಲ್ಲದ ತರಬೇತಿ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ. ಬಹುತೇಕ ಶಾಲೆಗಳಲ್ಲಿ ಪಾಠ, ಪ್ರವಚನಗಳೇ ನಡೆಯುವುದಿಲ್ಲ. ಇದೆಲ್ಲದ ರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಸರಕಾರವು ಸರಕಾರಿ ಶಾಲೆ ಗಳ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅದೇ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪಾಠ ಹೇಳುವ ಕೆಲಸ ಬಿಟ್ಟರೆ ಬೇರೆ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳುವಂ ತಿಲ್ಲ. ಈ ರೀತಿ ಪಾಠ ಹೇಳುವುದರಿಂದ ಮೇಲ್ಮಟ್ಟ ದಲ್ಲಿ ಖಾಸಗಿ ಶಾಲೆಗಳು ಅಭಿವೃದ್ಧಿಯಾಗುತ್ತದೆ. ಅದೇ ರೀತಿ ಸರಕಾರಿ ಶಾಲೆಗಳತ್ತ ಸರಕಾರ ಗಮನಹರಿಸಿ ದರೆ ಅವುಗಳು ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಅಭಿ ವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯ ವಿಲ್ಲ.            
  ರಾಜೇಶ್, ಉಡುಪಿ

ರಸ್ತೆಗೆ ಡಾಮರೀಕರಣ ಎಂದು?

Posted by JAYAKIRANA Kirana on | 0 comments | Leave a comment...

ಹಳೆಯಂಗಡಿ-ಎಸ್.ಕೋಡಿ ನಡುವಿನ ರಸ್ತೆ ಡಾಮರು ಕಾಣದೆ ಹಲವು ವರ್ಷ ಗಳೇ ಕಳೆದವು. ಈಗ ರಸ್ತೆಯ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆಯೆಂದರೆ ವಾಹನ ಗಳು ಸಂಚರಿಸಲು ಪರದಾಡುವಂತಾಗಿದೆ. ರಸ್ತೆಯ ಡಾಮರು ಎಂದೋ ಮಾಯ ವಾಗಿದೆ. ರಸ್ತೆಯ ಪೂರ್ತಿ ಗುಂಡಿಗಳು ನಿರ್ಮಾಣವಾಗಿದ್ದು, ದ್ವಿಚಕ್ರ ಸವಾರರು ಪ್ರಾಣ ಭೀತಿಯಿಂದಲೇ ಸಂಚಾರ ನಡೆಸುತ್ತಿದ್ದಾರೆ. ರಸ್ತೆಯನ್ನು ಡಾಮರೀಕರಣ ಮಾಡು ವಂತೆ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮಾಡಿರುವ ಮನವಿಗೆ ಲೆಕ್ಕವಿಲ್ಲ.
ಈ ಭಾಗದ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ಇವರಿಗೆ ಸ್ಥಳೀಯ ಬಿಜೆಪಿ ಪುಡಾರಿಗಳು ಸಹಕಾರ ನೀಡುತ್ತಿದ್ದಾರೆ. ಮಾತೆತ್ತಿದರೆ ಹಿಂದುತ್ವ, ಜನಪರ ಕಾಳಜಿ ಎಂದೆಲ್ಲ ಮಾತಾಡುವ ಸ್ಥಳೀಯ ನಾಯಕರು ಕಾಂಗ್ರೆಸ್ ಜೊತೆ ಕೈಜೋಡಿಸಿ ಸಮ ಸ್ಯೆಯ ವಿರುದ್ಧ ಜನರನ್ನು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಿದ್ದಾರೆ. ರಸ್ತೆ ಅವ್ಯವ ಸ್ಥೆಯ ವಿರುದ್ಧ ಜನರು ಪ್ರತಿಭಟನೆ ನಡೆಸದಿದ್ದಲ್ಲಿ ಸಂಚಾರಕ್ಕೆ ಯೋಗ್ಯವಾಗುವುದು ದೂರದ ಮಾತೇ ಸರಿ. ಆದ್ದರಿಂದ ಜನರೇ ಇನ್ನಾದರೂ ಎಚ್ಚೆತ್ತುಕೊಳ್ಳಿ.
 ಹೆಚ್.ರಾಮಕೃಷ್ಣ, ಕಿನ್ನಿಗೋಳಿ

ಬಸ್ ನಿಲ್ದಾಣ ಸ್ಥಳಾಂತರ ಮೀನಾಮೇಷ ಯಾಕೆ?

Posted by JAYAKIRANA Kirana on | 0 comments | Leave a comment...

ಕಾರ್ಕಳ ಬಸ್ ತಂಗುದಾಣವನ್ನು ಹಿಂದಿದ್ದ ಸ್ಥಳಕ್ಕೆ ಸ್ಥಳಾಂತರ ಮಾಡಲು ಪುರಸಭೆ ಚಿಂತಿಸಿರುವ ಕ್ರಮ ಸರಿಯಾಗಿದೆ. ಯಾಕೆಂದರೆ ಪೇಟೆಯಿಂದ ಹೊರಗಿರುವ ಬಂಡಿಮಠಕ್ಕೆ ಬಸ್ ತಂಗುದಾಣ ಸ್ಥಳಾಂ ತರ ಮಾಡಿರುವುದರಿಂದ ಈಗಾಗಲೇ ಅನೇಕ ಸಮಸ್ಯೆಗಳು ಸೃಷ್ಟಿಯಾ ಗಿವೆ. ವಿದ್ಯಾರ್ಥಿಗಳು ಶಾಲೆ, ಕಾಲೇಜ್‌ಗೆ ತೆರಳಲು ಬಸ್ ಚಾರ್ಜ್ ಗಾಗಿ ಹೆಚ್ಚಿನ ಹಣ ಪಾವತಿಸಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣ ಸ್ಥಳಾಂತರ ಮಾಡಬೇಕೆನ್ನು ವುದು ಜನರ ಬೇಡಿಕೆಯಾಗಿತ್ತು. ಆದರೆ ಪುರಸಭೆ ಆಡಳಿತ ಜನರ ಸಮಸ್ಯೆಯನ್ನು ಕಡೆಗಣಿಸಿತ್ತು. ಇದೀಗ ಪ್ರತಿಭಟನೆ ಗಂಭೀರ ಸ್ವರೂಪ ಪಡೆಯುವುದು ಅರಿವಾಗುತ್ತಲೇ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಪುರಸಭೆ ಮುಂದಾಗಿದೆ. ಆದರೆ ಈ ವ್ಯವಸ್ಥೆ ಯಾವಾಗ ಜಾರಿಯಾಗುತ್ತದೆ ಎನ್ನ ಲಾಗದು. ಅಲ್ಲಿಯವರೆಗೆ ಜನರು ಇದೇ ಪರಿಸ್ಥಿತಿಯಲ್ಲಿ ದಿನದೂಡ ಬೇಕಾಗಿದೆ. ನಮ್ಮ ಸಮಸ್ಯೆಗೆ ಪುರಸಭೆ, ಕ್ಷೇತ್ರ ಶಾಸಕರು ತಕ್ಷಣ ಸ್ಪಂದಿ ಸಬೇಕಾಗಿ ವಿನಂತಿ.      ನೊಂದ ವಿದ್ಯಾರ್ಥಿಗಳು, ಜಾರ್ಕಳ

ಬೈಕಂಪಾಡಿ ರೈಲ್ವೇ ಮೇಲ್ಸೇತುವೆ ದ್ವಿಪಥವಾಗುವುದೆಂದು?

Posted by JAYAKIRANA Kirana on | 0 comments | Leave a comment...

ಬೈಕಂಪಾಡಿ ರೈಲ್ವೇ ಮೇಲ್ಸೇತುವೆ ವಾಹನ ಸವಾರರಿಗೆ ಕಂಟಕವನ್ನು ಸೃಷ್ಟಿ ಸಿದೆ. ಇಲ್ಲಿ ರಸ್ತೆ ಅಪಘಾತ ತೀರಾ ಸಾಮಾ ನ್ಯವಾಗಿಬಿಟ್ಟಿದೆ. ದ್ವಿಚಕ್ರ ಸವಾರರು ರೈಲ್ವೇ ಮೇಲ್ಸೇತುವೆ ಬಂದಾಗ ನಡುಗುತ್ತಲೇ ಸಂಚರಿಸಬೇಕು.
ಇದಕ್ಕೆ ಕಾರಣ ಇಲ್ಲಿ ಸೇತುವೆಯ ಅಗಲ ತೀರಾ ಕಿರಿದಾಗಿರುವುದು ಮತ್ತು ಸೇತುವೆ ಮುಗಿಯುವ ಮುನ್ನವೇ ಮೀನ ಕಳಿಯಕ್ಕೆ ರಸ್ತೆ ತಿರುವು ಪಡೆಯು ವುದು. ಸಂಜೆ ಹಾಗೂ ಬೆಳಗ್ಗಿನ ವೇಳೆ ಇಲ್ಲಿ ಭೀಮಗಾತ್ರದ ಟಿಪ್ಪರ್‌ಗಳು ಧಾವಂತದಲ್ಲಿ ಸಂಚರಿಸುತ್ತವೆ. ಲಾರಿ ಗಳು ಬೇಕಾಬಿಟ್ಟಿ ತಿರುವು ಪಡೆಯು ತ್ತವೆ. ಇದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಗಲಿಬಿ ಲಿಗೊಳ್ಳುವುದು ಸಾಮಾನ್ಯ. ಇಲ್ಲಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಅಡ್ಡಿಯಾಗುತ್ತಿದೆ ಎಂದು ಜನಪ್ರತಿ ನಿಧಿಗಳು ಹೇಳುತ್ತಿದ್ದಾರೆಯೇ ಹೊರತು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ.
ಆದ್ದರಿಂದ ಆದಷ್ಟು ಶೀಘ್ರವಾಗಿ ಇಲ್ಲಿ ದ್ವಿಪಥ ಸಂಚಾರ ರಸ್ತೆಯನ್ನು ನಿರ್ಮಿಸಲು ಜಿಲ್ಲಾಡಳಿತ, ಜನಪ್ರತಿನಿ ಧಿಗಳು ಮುಂದಾಗಬೇಕಾಗಿ ವಿನಂತಿ.
 ಪ್ರಭಾಕರ, ಬಂಗ್ರಕೂಳೂರು

ತ್ಯಾಜ್ಯ ಘಟಕ ಬೇಡ

Posted by JAYAKIRANA Kirana on | 0 comments | Leave a comment...

ಬಂಟ್ವಾಳ ತಾಲೂಕಿನ ಸಜಿಪನಡು ಹಾಗೂ ಇರಾ ಗ್ರಾಮಗಳ ಗಡಿಭಾಗವಾದ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಮುಂದಾಗಿವೆ. ಇದನ್ನು ಗ್ರಾಮಸ್ಥರು ಈಗಲೇ ಮುಂದಾಗಿ ವಿರೋಧಿಸದಿದ್ದಲ್ಲಿ ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಈಗಾಗಲೇ ನ್ಯಾಯಾ ಲಯದಲ್ಲಿ ತಡೆಯಾಜ್ಞೆ ತಂದಿದ್ದರೂ ತೆರೆಮ ರೆಯಲ್ಲಿ ಮತ್ತೆ ತ್ಯಾಜ್ಯ ಘಟಕ ಸ್ಥಾಪನೆಗೆ ಯತ್ನ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಪಂಚಾ ಯತ್ ಸದಸ್ಯರು, ಗ್ರಾಮಸ್ಥರು ಈ ಬಗ್ಗೆ ಪ್ರತಿ ಭಟನೆಯನ್ನೂ ನಡೆಸಿದ್ದರು. ಆದರೆ ಜನಪ್ರತಿ ನಿಧಿಗಳ ನಿರ್ಲಕ್ಷ್ಯ ಮುಂದುವರಿದಿದೆ. ಜನರ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ. ಇನ್ನಾದರೂ ಜನರು ಉಗ್ರ ಹೋರಾಟ ನಡೆಸಬೇಕಾದ ಅಗ ತ್ಯವಿದೆ.         ಗ್ರಾಮಸ್ಥರು, ಕಂಚಿನಡ್ಕ

ವಿದ್ಯಾರ್ಥಿ ವಿಠಲನನ್ನು ಬಂಧಿಸಿದ ಪೊಲೀಸರು ಉತ್ತರಿಸುವರೇ?

Posted by JAYAKIRANA Kirana on | 0 comments | Leave a comment...

ಮನೆಯಲ್ಲಿ ಚಾಹುಡಿ, ಸಕ್ಕರೆ, ಭಗತ್‌ಸಿಂಗ್ ಪುಸ್ತಕ ಸಿಕ್ಕಿತೆಂದು ಠಾಣೆಗೆ ತಳ್ಳುವ ಪೊಲೀಸರು, ಉಪ್ಪಿನಂಗಡಿಯಲ್ಲಿ ಇನ್ನೊಂದು ಧರ್ಮ ವನ್ನು ಅತ್ಯಂತ ಕೀಳಾಗಿ ನಿಂದಿಸಿದ ಬಿಜೆಪಿಯ ಹೈಕಮಾಂಡ್ ಎಂದೇ ಹೇಳಲಾಗುವ ವ್ಯಕ್ತಿಯನ್ನು ಎಫ್‌ಐಆರ್ ದಾಖಲಾದರೂ ಯಾಕೆ ಬಂಧಿಸಿಲ್ಲ?  ಪತ್ರಿಕೋದ್ಯಮ ವಿದ್ಯಾರ್ಥಿಯಾದ ವಿಠಲನಿಗೆ ಕೈಕೋಲ ತೆಗೆಯದೆ ಪರೀಕ್ಷೆ ಬರೆಯುವಂತೆ ಮಾಡಿದ್ದು ಪೊಲೀಸ್ ಇಲಾಖೆಯ ಘೋರ ದುರಂತ ಅಲ್ಲದೇ ಇನ್ನೇನು? ಸೈನೆಡ್ ಕಿಲ್ಲರ್ ಹಣೆ ಪಟ್ಟಿ ಹೊತ್ತಿರುವ ಮೋಹನ್‌ಕುಮಾರನೇ ಕೋರ್ಟ್ ಅಂಗಳದಲ್ಲಿ ರಾಜಾ ರೋಷವಾಗಿ ತಿರುಗಾಡುತ್ತಿದ್ದಾನೆ. ಆದರೆ ಇಲ್ಲಿಯ ತನಕ ಸ್ಪಷ್ಟ ಸಾಕ್ಷಿಯೇ ಸಿಗದೇ ಜೈಲು ಸೇರಿರುವ ವಿಠಲ ಕೈ ಕೋಳದ ಬಂಧನದಲ್ಲೇ ಪರೀಕ್ಷೆ ಬರೆಯುತ್ತಿದ್ದಾನೆ. ನೂರಾರು ಜನರನ್ನು ಹತ್ಯೆ ಮಾಡಿದ ಉಗ್ರ ಕಸಬ್‌ಗೆ ನಮ್ಮಲ್ಲಿ ರಾಜಾಥಿತ್ಯ. ಆದರೆ ಇಲ್ಲಿಯ ತನಕ ಯಾರ ಹತ್ಯೆಯನ್ನೂ ಮಾಡದ ಓರ್ವ ಸಾಮಾನ್ಯ ವಿದ್ಯಾರ್ಥಿಗೆ ಖೈದಿಯಾಗಿ ಪರೀಕ್ಷೆ ಬರೆಯುವ ದುಸ್ಥಿತಿ. ಎಫ್‌ಐಆರ್ ಆಗಿದ್ದರೂ ಗೃಹ ಸಚಿವರೊಂದಿಗೆ ಕುಶಲೋಪರಿ ಹಂಚಿಕೊಳ್ಳುವ ಕೆಲ ವ್ಯಕ್ತಿಗಳು ನಮ್ಮ ಮಧ್ಯೆಯೇ ಇರುವಾಗ ವಿಠಲನಿಗೆ ಸಾಕ್ಷ್ಯವೇ ಇಲ್ಲದೆ ಬಂಧನದ ಶಿಕ್ಷೆ ಎಷ್ಟು ಸರಿ?
ಫೇಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ ಕೆಲವರು ಕೋಮು ವಾದವನ್ನು ಬಿಂಬಿಸುವ ಅದೆಷ್ಟೋ ಫೋಟೋಗಳನ್ನು ಹಾಕುತ್ತಾರೆ. ಗಲಭೆಗೆ ಪ್ರೋತ್ಸಾಹಿಸುವ ಅದೆಷ್ಟೋ ಕಾಮೆಂಟ್ಸ್‌ಗಳು ಇಲ್ಲಿ ರೂಪಿತ ವಾಗುತ್ತದೆ. ಇವುಗಳು ದೇಶ ಒಡೆಯುವ ಕೆಲಸವಲ್ಲವೇ? ಜಾಗೃ ತಿಯ ಹೆಸರಿನಲ್ಲಿ ಅವರ ತಲೆ ಒಡೆಯಿರಿ, ಇವರ ಕೈ ಕಡಿಯಿರಿ, ಆ ಜಿಹಾದ್, ಈ ಜಿಹಾದ್ ಎಂದು ಯುದ್ದ ಮಾಡಿ ಎನ್ನುವುದು ಅಪರಾ ಧವಲ್ಲವೇ? ಭಗತ್‌ಸಿಂಗ್ ಪುಸ್ತಕ ಮನೆಯಲ್ಲಿಟ್ಟದ್ದೇ ತಪ್ಪಾದರೆ ಇದು ಕೂಡ ಅಪರಾಧ. ತಾಕತ್ತಿದ್ದರೆ ಸರ್ಕಾರ ಇಂಥವರ ವಿರುದ್ದ ಕ್ರಮ ಕೈಗೊಳ್ಳಲಿ. ಎಫ್‌ಐಆರ್ ಆದರೂ ಹೊರಗೆ ನಿರ್ಭಯದಿಂದ ತಿರು ಗಾಡುವ ವ್ಯಕ್ತಿಗಳನ್ನು ಬಂಧಿಸಲಿ.  ಓರ್ವ ನಾಗರಿಕ, ಮಂಗಳೂರು 

ಶಿಕ್ಷಣ ಇಲಾಖೆಗೆ ಪುತ್ತಬ್ಬರ ಶಾಪ ತಟ್ಟದೇ ಇದ್ದೀತೇ?

Posted by JAYAKIRANA Kirana on | 0 comments | Leave a comment...

ಅನೇಕ ವರ್ಷಗಳ ಹಿಂದೆ ನಮ್ಮ ಕ್ಲಾಸಿಗೆ ಅಧ್ಯಾಪಕರಾಗಿದ್ದ ಪಿ. ಪುತ್ತಬ್ಬನವರು ನಮಗೆಲ್ಲಾ ಮಾರ್ಗದರ್ಶನ ನೀಡುತ್ತಾ, ನಮಗೆ    ಒಳ್ಳೆಯ ನೀತಿ ಬೋಧನೆಗಳನ್ನು ಮಾಡಿ ನಮ್ಮನ್ನು ಈ ನೆಲೆಗೆ ನಿಲ್ಲಿ ಸಿದ್ದ ವ್ಯಕ್ತಿಯಾಗಿದ್ದರು. ಅವರ ಸಹಕಾರದಿಂದ ಇಂದು ನಾವು ಒಳ್ಳೆಯ ಕೆಲಸದಲ್ಲಿದ್ದೇವೆ. ಅವರು ಪಟ್ಲ ಶಾಲೆಯಲ್ಲಿ ನಮಗೆ ಅಧ್ಯಾಪಕರಾ ಗಿದ್ದರು. ಅವರ ಮರಣದ ಸುದ್ದಿ ಮತ್ತು ಇಲಾಖೆಯೊಂದಿಗೆ ಗುದ್ದಾ ಡಿದ ವಿಷಯ ನಮಗೆ ಜಯಕಿರಣ ಪತ್ರಿಕೆಯಿಂದ ತಿಳಿಯಿತು. ಕತಾರ್ ನಲ್ಲಿ ನಮಗೆ ಪತ್ರಿಕೆ ಸಿಗದಿದ್ದರೂ ನೆಟ್ ಮುಖಾಂತರ ನೋಡಿ ಎಲ್ಲಾ ವಿಷಯವನ್ನು ಓದಿರುತ್ತೇವೆ. ಅವರ ಮರಣದ ವಿಷಯವನ್ನು ಓದಿ ಆಘಾತವಾಯಿತು. ಒಂದೆರೆಡು ಕಣ್ಣೀರಿನ ಹನಿಯೂ ನೆಲಕ್ಕೆ ಬಿತ್ತು. ಅವರು ಸ್ವರ್ಗದಲ್ಲಿ ವಿಶಾಲವಾದ ಮೈದಾನದಲ್ಲಿರಲಿ ಎಂದು ಅಲ್ಲಾ ಹನೊಡನೆ ದುವಾ ಮಾಡಿ ಬೇಡುತ್ತೇವೆ.
ನಮ್ಮ ಭ್ರಷ್ಟ ಇಲಾಖೆಯೊಂದಿಗೆ ಗುದ್ದಾಡಿದ ಮಾಸ್ಟರ್, ಪವಿತ್ರ ವಾದ ಹಜ್ ಯಾತ್ರೆಗೆ ಆಸೆ ಇಟ್ಟಿದ್ದರು. ತನ್ನ ಪಿಂಚಣಿಗಾಗಿ ಕಾದು ಎಷ್ಟೇ ಅಂಗಲಾಚಿದರೂ ಅಧಿಕಾರಿಗಳ ಮನಸ್ಸು ಮಾತ್ರ ಕರಗಲೇ ಇಲ್ಲ. ೨೦ವರ್ಷ ನಿರಂತರವಾಗಿ ಸೆಣೆಸಾಡಿ, ತನ್ನ ಸಂಬಳದಲ್ಲಿ ಕಡಿತ ಗೊಳಿಸಿ ಪಿ.ಎಫ್ ಖಾತೆಗೆ(೩೯೦೮) ಜಮಾಗೊಳಿಸಲಾಯಿತಾದರೂ ತನ್ನ ಹಣವನ್ನು ಮಂಜೂರು ಮಾಡದ ಶಿಕ್ಷಣ ಇಲಾಖೆಯ ಯಾವ ಅಧಿಕಾರಿಗೂ ಯಾವ ದೇವರೂ ಕ್ಷಮಿಸಲಾರ. ಈಡೇರದ ಹಜ್ ಯಾತ್ರೆಯ ಹೊಣೆ ಈ ಶಿಕ್ಷಣ ಇಲಾಖೆಯ ಮೇಲಿರಲಿ. ಖಂಡಿತವಾ ಗಿಯೂ ದಿವಂಗತರ ಶಾಪ ಇವರಿಗೆ ತಟ್ಟದೇ ಇದ್ದೀತೆ?
ಈ ವರದಿಯನ್ನು ಪ್ರಕಟಿಸಿದ ಜಯಕಿರಣ ಪತ್ರಿಕೆ ಇನ್ನೂ ಉತ್ತುಂಗಕ್ಕೇರಲಿ ಎಂದು ಆಶಿಸುತ್ತೇವೆ.
ಎ.ಕೆ. ಮಹಮ್ಮದ್ ಶರೀಫ್, ಆರ್.ಕಲಂದರ್ (ಕಾಸರಗೋಡು), ಪಿ.ಎಮ್. ಅಫ್‌ನಾನ್, ಗುರುಕಂಬಳ
ಪೆಟ್ರೊ ಜೆಟ್, ಕತಾರ್ ಬಳಗ

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)