19-4-2012

Posted by JAYAKIRANA Kirana on Wednesday, 18 April 2012 | 0 comments | Leave a comment...

ಮೇಷ : ಪ್ರಯಾಣದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ವೃಷಭ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಮಿಥುನ : ಹಣಕಾಸಿನ ತೊಂದರೆ ಉಂಟಾಗಲಿದೆ.
ಕರ್ಕಾಟಕ : ಕುಟುಂಬದಲ್ಲಿ ಶಾಂತಿ ಇರುತ್ತದೆ.
ಸಿಂಹ : ವೃತ್ತಿಯಲ್ಲಿ ಆಗಾಗ ವಂಚನೆ ತೋರಿ ಬರುತ್ತದೆ.
ಕನ್ಯಾ : ಉದ್ಯೋಗದಲ್ಲಿ ಸಣ್ಣ ಸಣ್ಣ ಸಮಸ್ಯೆ ಎದುರಾಗುತ್ತದೆ.
ತುಲಾ : ಎಲ್ಲಾ ಸಮಸ್ಯೆ ದೂರವಾಗುತ್ತದೆ.
ವೃಶ್ಚಿಕ :  ಮಕ್ಕಳಿಂದ ಹೆಚ್ಚಿನ ಹಣ ಖರ್ಚಾಗಲಿದೆ.
ಧನು : ಶುಭ ಕೆಲಸಗಳಿಗೆ ವಿಘ್ನಗಳು ಬರುತ್ತದೆ.
ಮಕರ : ಮಕ್ಕಳಿಂದ ಹೆಚ್ಚಿನ ಸಹಕಾರ ಸಿಗುತ್ತದೆ.
ಕುಂಭ : ಹಿರಿಯರಿಂದ ಸಮಸ್ಯೆಗಳು ಎದುರಾಗುತ್ತದೆ.
ಮೀನ : ತಂದೆ ತಾಯಿಯವರಂದ ಅನುಕೂಲ ಇರುತ್ತದೆ.

ಅನಿರೀಕ್ಷಿತ ಭೂಕಂಪನಗಳ ಆಜೂಬಾಜು

Posted by JAYAKIRANA Kirana on | 0 comments | Leave a comment...

ನಾಗೇಶ್ ಹೆಗಡೆ
ಕಂಪನ ಎಂದಾಕ್ಷಣ ಕೊಯ್ನಾ, ಲಾತೂರ್, ಭುಜ್ ಎಲ್ಲ ನೆನಪಿಗೆ ಬರುತ್ತದೆ. ನೀರೊಳಗಿನ ಭೂಕಂಪನವೆಂದರೆ ಸುನಾಮಿ ನೆನಪಾಗುತ್ತದೆ. ಫುಕುಶಿಮಾ ನೆನಪಾಗುತ್ತದೆ. ಇಂಡೋನೇಶ್ಯದ ಏಸೇ. ಇದೀಗ ಮತ್ತೊಮ್ಮೆ ಏಸೇ ನೆನಪಾಗುತ್ತಿದೆ.
ಭೂಮಿಗೆ ಏಕೆ ಆಗಾಗ ಅಲ್ಲಲ್ಲಿ ನಡುಕ ಬರುತ್ತದೆ?
ನಮಗೆಲ್ಲಾ ಗೊತ್ತಿರುವಂತೆ ಭೂಮಿಯ ಹೊರ ಮೈ ಗಟ್ಟಿ ಇದ್ದರೂ ಒಳಗೆ ದ್ರವರೂಪದ ಕಬ್ಬಿಣ ಮತ್ತು ಸಿಲಿಕಾ ಶಿಲಾರಸ ಇದೆ. ಹೊರಗಿನ ಭೂಚಿಪ್ಪು ಏಳು ಹೋಳುಗಳಾಗಿ ಮೆಲ್ಲಗೆ ಪರಸ್ಪರ ತಿಕ್ಕಾಡುತ್ತಾ ಸರಿ ದಾಡುತ್ತಿರುತ್ತದೆ. ಅಂಥ ಚಿಪ್ಪುಗಳ ಗಡಿಯಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತದೆ. ಕಾರಣ ಏನೆಂದರೆ ಭೂಮಿ ಸೆಕೆಂಡ್‌ಗೆ ೯೦೦ ಕಿಲೋ ಮೀಟರ್ ವೇಗದಲ್ಲಿ ತನ್ನ ಸುತ್ತ ತಿರುಗುತ್ತಿರುವಾಗ ಅದರ ಒಳಗಿನ ಬಗ್ಗಡ ಸಹಜವಾಗಿ ಕಲಕುತ್ತಲೇ ಇರುತ್ತದೆ. ಒಳಗಿನ ಕಲಕುವೇಗ ಹಾಗೂ ಹೊರಗಿನ ವಾತಾವರಣದ ಘರ್ಷಣೆ ಎರಡೂ ಸೇರಿ ಭೂಚಿಪ್ಪುಗಳನ್ನು ಅತ್ತ ಇತ್ತ ಸರಿಸುತ್ತಿರುತ್ತದೆ.
ಶಿಲಾಹಾಸುಗಳು ಹಾಗೆಲ್ಲಾ ಸುಲಭಕ್ಕೆ ಸರಿದಾಡುವುದಿಲ್ಲ. ಭಾರೀ ಒತ್ತಡವಿದ್ದರೂ ದಶಕಗಳ ಕಾಲ, ಕೆಲವೊಮ್ಮೆ ಸಾವಿರಾರು ವರ್ಷಗಳ ಕಾಲ ಒತ್ತಡವನ್ನು ಸಹಿಸಿಕೊಂಡಿರುತ್ತವೆ. ಶಿಲೆಗಳು ಬಿಲ್ಲಿನಂತೆ ಬಾಗಿ ಬಾಗಿ ಆಳ ಭೂಗರ್ಭದಲ್ಲೇ ಪರ್ವತಗಳಾಗಿರುತ್ತವೆ. ಕಣಿವೆಗಳಾಗಿರುತ್ತವೆ, ಅಡ್ಡ ಬಾಗಿರುತ್ತವೆ. ಬಾಗಿದಲ್ಲ್ಲಿ ಭಾಗದಲ್ಲಿ ಅಸಂಖ್ಯ ಬಿರುಕುಗಳಾಗಿರುತ್ತವೆ.
ಯಾವಾಗಲೋ ಒಮ್ಮೆ ಒತ್ತಡ ತೀರ ಹೆಚ್ಚಾದಾಗ ಹಠಾತ್ತಾಗಿ ಶಿಲಾಹಾಸು ಮುರಿದು ಬೀಳಬಹುದು. ಒಂದು ಭಾಗ ಒಳಗೆ ಕುಸಿಯ ಬಹುದು. ಇನ್ನೊಂದು ಭಾಗ ಮೇಲಕ್ಕೆ ನೆಗೆಯಬಹುದು. ೧೯೯೧ರಲ್ಲಿ ಉತ್ತರಖಂಡದ ಚಾಮೋಲಿ ಜಿಲ್ಲೆಯಲ್ಲಿ ಹೀಗೆ ಒಳ ಕುಸಿತ ಸಂಭವಿಸಿ ೧೮ ಸಾವಿರ ಮನೆಗಳು ನಿರ್ನಾಮವಾದವು. ೨೦೦೧ರಲ್ಲಿ ಕಚ್ಛ್‌ನ ಭುಜ್ ಪಟ್ಟಣದ ೨೦ ಸಾವಿರ ಜನರು ಅಸುನೀಗಿದರು. ಸಮುದ್ರದ ಆಳದ ಶಿಲಾಪದರ ಹೀಗೆ ಹಠಾತ್ ಮೇಲಕ್ಕೆ ಇಲ್ಲವೆ ಕೆಳಕ್ಕೆ ಚಲಿಸಿದರೆ ಸುನಾಮಿ ತೆರೆ ಏಳುತ್ತದೆ. ೨೦೦೪ ರಂದು ಇಂಡೋನೇಶ್ಯಾದ ಏಸೆಯ ಬಳಿ, ಕಳೆದ ವರ್ಷ ಜಪಾನಿನ ಫುಕುಶಿಮಾ ಬಳಿ ಇಂಥ ಸುನಾಮಿ ಎದ್ದಿತ್ತು.
ಭೂಮಿಯ ಆಳದಲ್ಲಿ ಬಿಲ್ಲಿನಂತೆ ಬಾಗಿರುವ ಶಿಲಾಸ್ತರಗಳು ಮೇಲಕ್ಕೆ ಅಥವಾ ಕೆಳಕ್ಕೆ ಚಿಮ್ಮುವ ಬದಲು ಅಡ್ಡಡ್ಡ ಸಿಡಿಯಲು ಸಾಧ್ಯವಿದೆ. ಬಿಲ್ಲನ್ನು ಅಡ್ಡ ಮಲಗಿಸಿ ಇಟ್ಟು ಎರಡೂ ತುದಿಯಲ್ಲಿ ಒತ್ತಡ ಹಾಕುತ್ತಿದ್ದರೆ ಅದು ತುಂಡಾಗಿ ಅಡ್ಡಡ್ಡ ಚಲಿಸುತ್ತದೆ ತಾನೆ? ನಿನ್ನೆ ಇಂಡೋನೇಶ್ಯದ ಏಸೆಯಲ್ಲಿ ಸಮು ದ್ರದ ಕೆಳಗಿನ ನೆಲ ಅಡ್ಡಡ್ಡ ಚಲಿಸಿದೆ. ಹಾಗಾಗಿ ಅಷ್ಟೇನೂ ಭೀಕರ ಸುನಾಮಿಯಲ್ಲ. ಆದರೆ ಅಂಥ ಅಡ್ಡ ಚಲನೆಯಿಂದಲೂ ನೆಲದ ಮೇಲೆ ಬಹುದೊಡ್ಡ ದುರಂತ ಸಂಭವಿಸಬಹುದು. ಲಾತೂರಿನಲ್ಲಿ ೧೯೯೩ರಲ್ಲಿ ಹೀಗೆ ನೆಲ ಅಡ್ಡ ಚಲಿಸಿದಾಗ ಅಂದಾಜು ೪೦೦೦ ಮನೆಗಳು ಕುಸಿದವು. ಬಹಳಷ್ಟು ಮನೆಗಳಿಗೆ ಚಪ್ಪಡಿ ಕಲ್ಲಿನ ಮೇಲ್ಛಾವಣಿ ಇದ್ದುದರಿಂದ ಹಾಗೂ ಭೂಕಂಪನ ನಸುಕಿನಲ್ಲಿ ಸಂಭವಿಸಿದ್ದರಿಂದ ಸುಮಾರು ೯೭೪೦ ಜನ ನಿದ್ರೆಯಲ್ಲೇ ಅಸುನೀಗಿದರು. ಎತ್ತರದ ಕಟ್ಟಡಗಳು ಅಡ್ಡಡ್ಡ ತೊನೆದು ಕುಸಿಯುವ ಸಂಭವ ಜಾಸ್ತಿ ಇರುತ್ತದೆ.
ಒತ್ತಡದಲ್ಲಿರುವ ಶಿಲಾಪದರ ಭಗ್ನವಾಗಲು ನಾನಾ ಕಾರಣಗಳಿರು ತ್ತವೆ. ಜ್ವಾಲಾಮುಖಿ ಚಿಮ್ಮಲು ಯತ್ನಿಸಬಹುದು. ಹುಣ್ಣಿಮೆ ಅಮಾವಾ ಸ್ಯೆಗಳಂದು ಚಂದ್ರನ ಸೆಳೆತವೂ ಅಪರೂಪಕ್ಕೆ ಶಿಲೆಗಳನ್ನು ಭಗ್ನ ಮಾಡ ಬಹುದು. ಮನುಷ್ಯರು ನೆಲದೊಳಗೆ ಪರೀಕ್ಷಾರ್ಥ ಪರಮಾಣು ಸ್ಫೋಟ ನಡೆಸಬಹುದು. ದೊಡ್ಡ ಅಣೆಕಟ್ಟುಗಳಲ್ಲಿ ಶೇಖರಿಸಿದ ನೀರು ಒತ್ತಡದಲ್ಲಿ ಶಿಲಾಪದರಗಳ ಆಳಕ್ಕಿಳಿದು ಕೆಣಕಬಹುದು. (ಕೊಯ್ನಾ ಮತ್ತು ಇಡುಕ್ಕಿಯಲ್ಲಿ ಹೀಗಾಗಿತ್ತು). ಅಥವಾ ಪೆಟ್ರೋಲು, ಗ್ಯಾಸನ್ನು ಅತಿಯಾಗಿ ಹೊರಕ್ಕೆ ತೆಗೆದಾಗ ಭೂಪದರದಲ್ಲಿ ಅಸಮತೋಲ ಉಂಟಾಗಬಹುದು. ಈಗೀಗ ಭೂಕಂಪನಗಳು ಹೆಚ್ಚಾಗಲು ಮನುಷ್ಯನ ದೈತ್ಯಶಕ್ತಿ ಹೆಚ್ಚುತ್ತಿರುವುದೇ ಕಾರಣವಿದ್ದೀತು. ಹೇಳುವಂತಿಲ್ಲ.
ಭೂಕಂಪನದ ಮುನ್ಸೂಚನೆ ನೀಡಲು ಸಾಧ್ಯವಿಲ್ಲವೆ? ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಅಮೆರಿಕ ಮತ್ತು ಜಪಾನಿನ ವಿಜ್ಞಾನಿಗಳು ಭೂಕಂಪನ ಕುರಿತು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತದ ಬಹುಭಾಗವೆಲ್ಲ ಭಾರೀ ಅಪಾಯದ ಆಳ ಬಿರುಕಿನ ಮೇಲಿದೆ. ದೊಡ್ಡದೊಂದು ಭೂಕಂಪನ ಸಂಭವಿಸಿದರೆ ಇಡೀ ಸಾನ್ ಫ್ರಾನ್ಸಿಸ್ಕೋ ನಗರವೇ ಶಾಂತ ಸಾಗರದ ತಳ ಸೇರುತ್ತದೆ. ಜಪಾನಿನಲ್ಲೂ ಕೋಬೆ, ಫುಕುಶಿಮಾದಂಥ ಮಹಾಕಂಪನ ಮತ್ತೆ ಎಂದಾದರೂ ಸಂಭವಿಸಬಹುದು. ಮುನ್ಸೂಚನೆಯ ಸೂತ್ರ ಗೊತ್ತಾದರೆ ಅದರಲ್ಲಿ ಶತಕೋಟಿ ಗಟ್ಟಲೆ ಡಾಲರ್ ಹಣವಿದೆ. ಆದರೆ ಈ ರಹಸ್ಯವನ್ನು ನಿಸರ್ಗ ತನ್ನಲ್ಲೇ ಬಚ್ಚಿಟ್ಟುಕೊಂಡಿದೆ.
 ಮುನ್ಸೂಚನೆಯ ಸಮಸ್ಯೆ ಏನೆಂದರೆ ಯಾವ ದಿಕ್ಕಿನಲ್ಲಿ. ಎಷ್ಟು ದೂರದಲ್ಲಿ, ಎಷ್ಟು ಆಳದಲ್ಲಿ, ಎಷ್ಟು ತೀವ್ರವಾಗಿ ಎಷ್ಟು ಗಂಟೆಗಳಲ್ಲಿ ಎಂಬುದನ್ನು ನಿಖರವಾಗಿ ಹೇಳಬೇಕಾಗುತ್ತದೆ. ಅದು ಕಷ್ಟ. ಹವಾಮಾನ ಮುನ್ಸೂಚನೆಯ ಹಾಗೇ ತುಸು ಹೆಚ್ಚು ಕಮ್ಮಿ ಏನೋ ಹೇಳಿ ಲಕ್ಷಾಂತರ ಜನರನ್ನು ಗುಳೆ ಎಬ್ಬಿಸುವುದೇ ಮಹಾ ದುರಂತವಾಗ ಬಹುದು. ಮುಂಬೈ, ದಿಲ್ಲಿಯಂಥ ನಗರಗಳಲ್ಲಿ ಇನ್ನು ಎಂಟು ಗಂಟೆಗಳಲ್ಲಿ ಭುಕಂಪನ ಸಂಭವಿಸಲಿದೆ ಎಂಬ ಸೂಚನೆ ಬಂದರೆ ಏನಾದೀತೆಂದು ಊಹಿಸಿ. ಇಡೀ ನಾಗರಿಕ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಇಟಲಿಯ ಲಾ ಕಿಲಾ ಎಂಬಲ್ಲಿ ಹೀಗೆ ಮುನ್ಸೂಚನೆ ಕೊಟ್ಟು ದೊಡ್ಡ ಎಡವಟ್ಟಾಗಿತ್ತು.
ಪ್ರಾಣಿಗಳಿಗೆ ಮುನ್ಸೂಚನೆ ಸಿಗುತ್ತದೆಂದು ಜಪಾನೀ ವಿಜ್ಞಾನಿಗಳು ಪ್ರಯೋಗಗಳ ಮೂಲಕ ತೋರಿಸಿದ್ದಾರೆ. ಏನಾಗುತ್ತದೆ, ಅಂದರೆ ನೆಲದಾಳ ದಲ್ಲಿ ಶಿಲಾಸ್ತರದ ಒತ್ತಡ ತೀರಾ ಹೆಚ್ಚಾದಾಗ ರೇಡಾನ್ ಎಂಬ ಅನಿಲ ಹೊರ ಸೂಸುತ್ತದೆ. ಅದನ್ನು ಪ್ರಾಣಿಗಳು ಗ್ರಹಿಸುತ್ತವೆ, ಬಂಧನದಲ್ಲಿದ್ದರೆ ಚಡಪಡಿಸುತ್ತವೆ. ಸ್ವಾರಸ್ಯದ ಸಂಗತಿ ಏನು ಗೊತ್ತೆ? ಪ್ರಾಣಿಗಳಿಗಿಂತ ಮಿಗಿ ಲಾಗಿ ನಾವು ಆಧುನಿಕ ಮನುಷ್ಯರು ನಾನಾ ಬಂಧನಗಳಲ್ಲಿ ಸಿಲುಕಿದ್ದೇವೆ. ಹಾಗಾಗಿ ಭೂಕಂಪನದ ತೀವ್ರತೆ ನಮಗೆ ಹೆಚ್ಚಾಗಿಯೇ ತಟ್ಟುತ್ತದೆ. ಆದಿ ಮಾನವರಿಗೆ ಭೂಕಂಪನದ ಯಾವ ಭಯವೂ ಇರಲಿಲ್ಲ. ಏಕೆಂದರೆ ರಿಕ್ಟರ್ ಮಾಪಕದ ೯ನೇ ಪರಿಮಾಣದಲ್ಲಿ ನೆಲ ನಡುಗಿದರೂ ಹೆಚ್ಚೆಂದರೆ ಜೋಲಿ ಹೊಡೆಯಬಹುದು ಅಷ್ಟೆ.
ತಲೆಯ ಮೇಲೆ ಏನೂ ಬೀಳುತ್ತಿರಲಿಲ್ಲ. ಈಗಲೂ ಗಿರಿಜನರು, ಆದಿವಾಸಿಗಳು, ತೋಡರು, ಗೊಂಡರು, ಭಿಲ್ಲರಿಗೆ ಭೂಕಂಪನದ ಭಯ ವಿಲ್ಲ. ನಾವು ಎತ್ತರೆತ್ತರ ಗ್ರಾನೈಟ್ ಕಾಂಕ್ರೀಟ್ ಕಟ್ಟಡದಲ್ಲಿ ವಾಸಿಸುವವರು. ಅಣೆಕಟ್ಟು, ಅಣುಸ್ಥಾವರ ಕಟ್ಟಿಕೊಂಡವರು. ಹೈವೇ ರೈಲ್ವೇಗಳನ್ನು ನಿರ್ಮಿಸಿ ಕೊಂಡವರು, ಸುಲಭಕ್ಕೆ ಬಯಲಿಗೆ ಬರಲಾಗದಂತೆ ದಟ್ಟ ನಗರಗಳನ್ನು ನಿರ್ಮಿಸಿಕೊಂಡವರು. ಸುಲಭಕ್ಕೆ ಬಯಲಿಗೆ ಬರಲಾಗದಂತೆ ದಟ್ಟ ನಗರ ಗಳನ್ನು ನಿರ್ಮಿಸಿಕೊಂಡವರು ಹೆದರಬೇಕಾಗಿದೆ. ಭೂಕಂಪನಕ್ಕಲ್ಲ, ನಮ್ಮದೇ ಕಟ್ಟೋಣಗಳ ಕಂಪನಕ್ಕೆ!
ಪ್ರಜಾವಾಣಿ ಕೃಪೆ

ಮುಸ್ಲಿಮರಲ್ಲಿ ವರದಕ್ಷಿಣೆ : ಫತ್ವಾ ಹೊರಡಿಸಲು ಅವಸರವೇಕೆ?

Posted by JAYAKIRANA Kirana on | 0 comments | Leave a comment...


ವರದಕ್ಷಿಣೆ ಅನಿಷ್ಠದ ರೂಪದಲ್ಲಿ ಪ್ರಮುಖವಾಗಿ ಬಾಧಿಸುವುದು ಮಧ್ಯಮ ವರ್ಗವನ್ನಾಗಿದೆ. ಶ್ರೀಮಂತರು ಮತ್ತು ಬಡವರಲ್ಲಿ ಮೊದಲ ವಿಭಾಗವು ಸ್ವಂತ ಸಾಮರ್ಥ್ಯದಿಂದ ಹೆಣ್ಮಕ್ಕಲ ಮದುವೆ ಮಾಡಿ ಕೊಟ್ಟರೆ ಎರಡನೇ ವರ್ಗವು ಮೊದಲನೆಯ ವರ್ಗದ ಸಹಾಯದೊಂದಿಗೆ ಹೆಣ್ಮಕ್ಕಳನ್ನು ಗಂಡನ ಮನೆಗೆ ಸೇರಿಸುತ್ತದೆ. ಮಧ್ಯಮ ವರ್ಗಕ್ಕೆ ಬೆರೆಯವರ ಮುಂದೆ ದೈನೇಸಿ ಸ್ಥಿತಿಯನ್ನು ಪ್ರಕಟಿಸಿ ಸಹಾಯವನ್ನು ಯಾಚಿಸುವಂತ ಆತ್ಮಾಭಿಮಾನ ಅಡ್ಡಿಯಾಗುವುದರಿಂದ ಅನಿವಾರ್ಯವಾಗಿ ಸಾಲದ ಶೂಲಕ್ಕೆ ಕೊರಳನ್ನು ಒಡ್ಡಲೇಬೇಕಾಗುತ್ತದೆ. ಹೆಣ್ಮಕ್ಕಳ ಮದುವೆಗೆಂದು ಮಾಡಿದ ಸಾಲವನ್ನು ತೀರಿಸಲಾಗದೆ ಅದೆಷ್ಟೋ ಮಂದಿ ಅವಮಾನ, ದುಃಖ, ನೋವಿನಲ್ಲೇ ದಿನದೂಡಬೇಕಾದ ಅವಸ್ಥೆ ಇದೆ.

ಅಬ್ದುಲ್ ಜಬ್ಬಾರ್, ಕಾಟಿಪಳ್ಳ
ವರದಕ್ಷಿಣೆ ಪಡೆಯುವುದು ಮತ್ತು ಕೊಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಒಪ್ಪಿಕೊಂಡು ಅಂದರೆ ನಿರೀಕ್ಷಣಾ ಜಾಮೀನನ್ನು ಪಡೆ ದುಕೊಂಡು ಮುಸ್ಲಿಂ ಸಮುದಾಯದ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿ ಣಾಮದ ಜೊತೆಗೆ, ವರದಕ್ಷಿಣೆಯ ಬೇರೊಂದು ಮುಖವನ್ನು ಕೂಡಾ ಅನಾ ವರಣಗೊಳಿಸುವುದು ಇಲ್ಲಿಯ ಉದ್ದೇಶ. ಈ ಅನಾವರಣಗೊಳಿಸು ವಿಕೆ ನನ್ನ ಸಮರ್ಥನೆಯಾಗಿರದೆ, ಕೇವಲ ಸಂದೇಹ, ಆತಂಕ ಮತ್ತು ಜಿಜ್ಞಾಸೆ ಮಾತ್ರ ವಾಗಿರುತ್ತದೆ.
ವರದಕ್ಷಿಣೆಯಿಂದಾಗುವ ದುಷ್ಪರಿಣಾಮದ ಕುರಿತು ಸಮಾಜವನ್ನು ಜಾಗೃ ತಗೊಳಿಸುವ ಕ್ರಿಯೆ ನಿರಂತರ ಚಾಲ್ತಿಯಲ್ಲಿದೆ. ವಿವಿಧ ಸಂಘ - ಸಂಸ್ಥೆಗಳು ಈ ನಿಟ್ಟಿನಲ್ಲಿ ಸಭೆ - ಸಮಾರಂಭ, ವಿಚಾರ ಸಂಕಿರಣ, ಗೋಷ್ಠಿಗಳನ್ನು ಏರ್ಪ ಡಿಸುವ ಮೂಲಕ ವರದಕ್ಷಿಣೆಯನ್ನು ವಿವಿಧ ಕೋನಗಳಿಂದ ಪೋಸ್ಟ್ ಮಾರ್ಟಂ ಮಾಡಿ ಮುಸ್ಲಿಮರಲ್ಲಿ ಈ ಕೆಡುಕಿನ ವಿರುದ್ಧ ಸಿಡಿದೇಳುವ ಕಿಡಿ ಯನ್ನು ಹೊತ್ತಿಸುವ ಕಾರ್ಯವನ್ನು ಮಾಡುತ್ತಿದೆ.
ನಾನು ತಿಳಿದ ಮಟ್ಟಿಗೆ ಈ ವರದಕ್ಷಿಣೆ ಅನಿಷ್ಠದ ರೂಪದಲ್ಲಿ ಪ್ರಮುಖ ವಾಗಿ ಬಾಧಿಸುವುದು ಮಧ್ಯಮವರ್ಗವನ್ನಾಗಿದೆ. ಶ್ರೀಮಂತರು ಮತ್ತು ಬಡವ ರಲ್ಲಿ ಮೊದಲ ವಿಭಾಗವು ಸ್ವಂತ ಸಾಮರ್ಥ್ಯದಿಂದ ಹೆಣ್ಮಕ್ಕಲ ಮದುವೆ ಮಾಡಿ ಕೊಟ್ಟರೆ ಎರಡನೇ ವರ್ಗವು ಮೊದಲನೆಯ ವರ್ಗದ ಸಹಾಯದೊಂದಿಗೆ ಹೆಣ್ಮಕ್ಕಳನ್ನು ಗಂಡನ ಮನೆಗೆ ಸೇರಿಸುತ್ತದೆ. ಮಧ್ಯಮ ವರ್ಗಕ್ಕೆ ಬೇರೆಯವರ ಮುಂದೆ ದೈನೇಸಿ ಸ್ಥಿತಿಯನ್ನು ಪ್ರಕಟಿಸಿ ಸಹಾಯವನ್ನು ಯಾಚಿಸುವಂತ ಆತ್ಮಾಭಿಮಾನ ಅಡ್ಡಿಯಾಗುವುದರಿಂದ ಅನಿವಾರ್ಯವಾಗಿ ಸಾಲದ ಶೂಲಕ್ಕೆ ಕೊರಳನ್ನು ಒಡ್ಡಲೇಬೇಕಾಗುತ್ತದೆ. ಹೆಣ್ಮಕ್ಕಳ ಮದುವೆಗೆಂದು ಮಾಡಿದ ಸಾಲ ವನ್ನು ತೀರಿಸಲಾಗದೆ ಅದೆಷ್ಟೋ ಮಂದಿ ಅವಮಾನ, ದುಃಖ, ನೋವಿನಲ್ಲೇ ದಿನದೂಡಬೇಕಾದ ಅವಸ್ಥೆ ಇದೆ. ಮಾತ್ರವಲ್ಲದೆ, ಹೆಣ್ಮಕ್ಕಳ ಮದುವೆಗಾಗಿ ಇದ್ದ ಬದ್ದ ಸಂಪತ್ತನ್ನು ಕೂಡಾ ವೆಚ್ಚಮಾಡುವುದರಿಂದ ಮುಂದಿನ ವ್ಯಾಪಾರ - ವ್ಯವಹಾರಗಳಿಗೆ ಹೊಡೆತ ಬಿದ್ದು ಆರ್ಥಿಕವಾಗಿ ಕುಸಿದು ಬಡತನದ ಸಾಲಿಗೆ ಸೇರುತ್ತಾರೆ.
ಬಡವರು ಕೈಯೊಡ್ಡಿದ ಮಾತ್ರಕ್ಕೆ ಶ್ರೀಮಂತರು ಧಾರಾಳವಾಗಿ ಕ್ಷಣ ಮಾತ್ರ ದಲ್ಲಿ ಅವರ ಸಮಸ್ಯೆ ಬಗೆಹರಿಯುತ್ತದೆ ಎನ್ನುವಂತಿಲ್ಲ. ಇದಕ್ಕಾಗಿ ಅವರು ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಮಧ್ಯಮ ವರ್ಗದಂತೆ ಬಡವರಿಗೂ ಅತ್ಮಾಭಿಮಾನ ಇರುವುದರಿಂದ ಹೆಚ್ಚಿನ ಅಲೆದಾಡಿಸುವಿಕೆ ಅವರ ಆತ್ಮಾಭಿ ಮಾನವನ್ನು ಕೆಣಕಿದಂತಾಗುತ್ತದೆ. ಮುಸ್ಲಿಂ ಸಮುದಾಯದಲ್ಲಿರುವ ಕೆಲವು ಶ್ರೀಮಂತರು ಕ್ರಿಕೆಟ್ ಪಂದ್ಯಾವಳಿ, ನಾಟಕ, ಆರ್ಕೆಸ್ಟ್ರಾ ಇತ್ಯಾದಿಗಳಿಗೆ ಧಾರಾ ಳಿಯಾದಷ್ಟು ಅವರ ಸಮುದಾಯದವರೇ ಆದ ಬಡವರ ಮಟ್ಟಿಗೆ ಜಿಪುಣ ರಾಗುತ್ತಾರೆ. ಇದೇ ಸಂದರ್ಭದಲ್ಲಿ ಪುಣ್ಯದ ಆಕಾಂಕ್ಷೆಯಿಂದ ಬಾಯ್ಬಿಟ್ಟು ಕೇಳುವುದಕ್ಕಿಂತ ಮೊದಲೇ ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ಶ್ರೀಮಂ ತರು ಸಮುದಾಯದಲ್ಲಿರುವುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಆತ್ಮಾಭಿ ಮಾನವನ್ನು ಅದುಮಿಟ್ಟಾದರು ಶ್ರೀಮಂತರಿಂದ ಸಹಾಯ ಪಡೆದು ಹೆಣ್ಮಕ್ಕ ಳಿಗೆ ಮದುವೆ ಮಾಡಿಸುವ ಕಡುಬಡವರು ಮಧ್ಯಮವರ್ಗದಂತೆ ಆಸ್ತಿಪಾಸ್ತಿ ಗಳನ್ನು ಕಳೆದುಕೊಂಡು ಆರ್ಥಿಕವಾಗಿ ದುಃಸ್ಥಿತಿಗಿಳಿಯುವ ಪ್ರಮೇಯವಿಲ್ಲ. ಶ್ರೀಮಂತರನ್ನು ಸಂಪರ್ಕಿಸುವುದು ಹೇಗೆ ಎಂದು ಕೂಡಾ ತಿಳಿದಿರದ ಹಳ್ಳಿ ಪ್ರದೇಶದ ಮುಗ್ಧ ಕಡುಬಡವರ ಮನೆಗಳಲ್ಲಿ ಮದುವೆಯಾಗದೆ ಬಾಕಿಯಾದ ಹೆಣ್ಮಕ್ಕಳನ್ನು ಗುರುತಿಸಿ ಸಹಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಮದುವೆಯಾಗುವ ಗಂಡು ಹೆಣ್ಣಿಗೆ ಮಹ್ರ್ (ವಧುದಕ್ಷಿಣೆ) ನೀಡುವುದು ಆತನ ಬಾಧ್ಯತೆಯಾಗಿದೆ. ಹಿಂದೊಮ್ಮೆ ಮುಸ್ಲಿಂ ಸಮುದಾಯದಲ್ಲಿ ಇದು ಆಮಾಡೆ - ವರಹಗಳ ಲೆಕ್ಕಾಚಾರದಲ್ಲಿ ಸಂದಾಯವಾಗುತ್ತಿತ್ತು. ಇದು ಹಣದ ಲೆಕ್ಕಾಚಾರದ ಹಿಂದಿನ ಅಳತೆಗೋಲಾಗಿತ್ತು. ಈ ಲೆಕ್ಕಾಚಾರದ ಪ್ರಕಾರ ಅಂದಿನ ದಿನಗಳಲ್ಲಿ ಹೆಣ್ಣಿಗೆ ಮೆಹ್ರ್ ಆಗಿ ಒಂದೆರಡು ಹೆಚ್ಚೆಂದರೆ ಐನೂರು, ಸಾವಿರ ರೂಪಾ ಯಿಗಳಷ್ಟೆ ಮೆಹ್ರ್ ಆಗಿ ಲಭಿಸುತ್ತಿತ್ತು. ಈ ಕುರಿತು ‘ಮುಂಗಾರು’ ದಿನ ಪತ್ರಿಕೆಯಲ್ಲಿ ನಾನು ಆಮಾಡೆ ವರಹಗಳ ನಿಜ ಮೌಲ್ಯವೇನು? ಎಂದು ಪ್ರಶ್ನಿಸಿದಾಗ ಮುಸ್ಲಿಮ್ ಸಮುದಾಯದಲ್ಲಿ ಸುದೀರ್ಘ ಸಂವಾದ ನಡೆದಿತ್ತು. ಈಗ ಬರಹಕ್ಷೇತ್ರ ದಲ್ಲಿ ನನ್ನನ್ನು ಹಿಂದಿಕ್ಕಿ ಅಸೂಯೆಪಡುವಷ್ಟು ಬಹುದೂರ ಮುನ್ನಡೆದಿರುವ ಈಗಿನ ಹೆಸರಾಂತ ಲೇಖಕರು ಕೂಡಾ ಅದಕ್ಕೆ ಪ್ರತಿಕ್ರಿಯಿಸಿದ್ದರು. ಕ್ರಮೇಣ ಆಮಾಡೆ - ವರಹಗಳ ಲೆಕ್ಕಾಚಾರ ವಸ್ತುಶಃ ನೇಪಥ್ಯಕ್ಕೆ ಸರಿದು ಆ ಜಾಗವನ್ನು ರೂಪಾಯಿ ಮತ್ತು ಚಿನ್ನ ಅಲಂಕರಿಸಿದೆ. ಹೀಗೆ ಮೆಹ್ರ್ ಆಗಿ ನೀಡುವ ರೂಪಾಯಿ ಮತ್ತು ಚಿನ್ನದ ಪ್ರಮಾಣದ ಕುರಿತು ಚರ್ಚೆಯಾಗಬೇಕಾಗಿದೆ. ಹೆಣ್ಣಿನ ಕಡೆಯವರಿಂದ ಲಕ್ಷಾಂತರ ರೂಪಾಯಿ ವರದಕ್ಷಿಣೆ ಪಡೆಯುವವರು ಕೆಲವು ಸಾವಿರ ರೂಪಾಯಿ ಗಳನ್ನು ಮೆಹ್ರ್ ಆಗಿ ನೀಡಿದರೆ ಅದು ನಿಜವಾದ ಮೆಹ್ರ್ ಆಗುತ್ತದೆಯೇ? ಅಲ್ಲಿ ಹುಡುಗನ ಅಥವಾ ಆತನ ಸಂಬಂಧಿಕರ ದುಡಿತದ ಹಣವೇ ಆಗಬೇಕೇ ಎಂಬ ಪ್ರಶ್ನೆ ಇದೆ.
ವರದಕ್ಷಿಣೆ ಮತ್ತು ಅದ್ದೂರಿ ಮದುವೆಗೆ ಅವಿನಾಭಾವ ಸಂಬಂಧವಿದೆ. ಕೆಲವರು ಹೆಣ್ಣಿನ ಕಡೆಯವರಿಂದ ಅಪಾರ ವರದಕ್ಷಿಣೆ ಪಡೆದು ತಮ್ಮ ಪ್ರತಿಷ್ಠೆಗಾಗಿ ಅದ್ದೂರಿ ಮದುವೆಯಾಗುತ್ತಾರೆ. ಇಂತಹ ಅದ್ದೂರಿ ಮದುವೆಗಾಗಿಯೇ ವರದಕ್ಷಿಣೆ ಪಡೆ ಯವುದಿದೆ. ಕೆಲವರು ಸಲ ಮಾಡಿ ಭರ್ಜರಿ ಔತಣಕೂಟ ಏರ್ಪಡಿಸುವ ಔಚಿತ್ಯ ವೇನೆಂದು ಗೊತ್ತಾಗುವುದಿಲ್ಲ. ಇನ್ನು ಸಾಮರ್ಥ್ಯವಿದ್ದವರು ಮಿತ್ರರು, ಸಂಬಂಧಿ ಕರು ಮತ್ತು ಊರಿನವರಿಗೆ ಔತಣಕೂಟ ಏರ್ಪಡಿಸುವುದನ್ನು ತಪ್ಪೆನ್ನುವುದು ಅದೆಷ್ಟರ ಮಟ್ಟಿಗೆ ಸರಿ?
ನಾಳಿನ ಸಂಚಿಕೆಗೆ

ಸ್ಕ್ಯಾನಿಂಗ್ ಮಾಡಿಸಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೩೫. ಮದುವೆಯಾಗಿ ಒಂಬತ್ತು ವರ್ಷ ಕಳೆಯಿತು. ನಮಗೆ ಏಳು ವರ್ಷದ ಹೆಣ್ಣು ಮಗಳಿದ್ದಾಳೆ. ನನ್ನ ಸಮಸ್ಯೆಯೆಂದರೆ ನನಗೆ ತಿಂಗಳ ಮುಟ್ಟು ಸರಿಯಾಗಿ ಆಗು ತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಮುಟ್ಟು ಕ್ರಮಬದ್ಧವಾಗಿ ಆಗಿಲ್ಲ. ಇದಕ್ಕೆ ಕಾರಣ ಏನೆನ್ನುವುದು ತಿಳಿದಿಲ್ಲ. ನಾವು ಇನ್ನೊಂದು ಮಗು ಆಗುವುದು ಬೇಡ ಎಂದುಕೊಂಡಿದ್ದೇವೆ. ನಾವು ಸೇರು ವಾಗ ನಿರೋಧ್ ಬಳಸದೆ ಹಾಗೇ ಸೇರುತ್ತೇವೆ. ನಿರೋಧ್ ಬಳಸಿ ದರೆ ನಮಗೆ ಸೆಕ್ಸ್‌ನಲ್ಲಿ ಹೆಚ್ಚಿನ ತೃಪ್ತಿ ಸಿಗುವುದಿಲ್ಲ. ಇದಕ್ಕಾಗಿ ನಮ್ಮ ವರು ಸ್ಖಲಿಸುವ ಮುಂಚೆ ನಿರೋಧ್ ಧರಿಸುತ್ತಾರೆ. ಇದರಿಂದ ಮುಟ್ಟು ನಿಂತಿರುವ ಸಾಧ್ಯತೆಗಳಿವೆಯೇ?
ನನ್ನ ಹೊಟ್ಟೆ ಮೊದಲ ಹೆರಿಗೆಯ ಬಳಿಕ ಸಾಮಾನ್ಯಕ್ಕಿಂತ ಸ್ವಲ್ಪ ದಪ್ಪವಾಗಿ ಕಾಣುತ್ತದೆ. ನಾನು ಗರ್ಭ ಧರಿಸಿದ್ದೇನೆ ಎಂಬ ಅನುಮಾನದಿಂದ ಆರು ಗರ್ಭ ನಿರೋಧಕ ಮಾತ್ರೆಗಳನ್ನು ಬಳಸಿ ದ್ದೇನೆ. ಆದರೂ ಮುಟ್ಟು ಆಗಿಲ್ಲ. ಒಂದು ವೇಳೆ ನಾನು ಗರ್ಭಿಣಿ ಯಾಗಿದ್ದರೆ, ನಾನು ಗರ್ಭಪಾತ ಮಾಡಿಸಿಕೊಳ್ಳುವ ಬದಲು ಬೇರೇನು ಸುಲಭ ಉಪಾಯಗಳನ್ನು ಪಾಲಿಸಬಹುದು? ನನಗೆ ಪೈಲ್ಸ್ ಸಮ ಸ್ಯೆಯಿದೆ. ಇದರಿಂದ ಇನ್ನೊಂದು ಮಗು ಪಡೆಯಲು ಸಮಸ್ಯೆಯಾ ಗುತ್ತಿದೆ. ಮೊದಲನೇ ಹೆರಿಗೆಯ ವೇಳೆ ಎರಡು-ಮೂರು ತಿಂಗಳ ಕಾಲ ಪೈಲ್ಸ್ ನೋವನ್ನು ಅನುಭವಿಸಿದ್ದೇನೆ. ಈಗೀಗ ಅದರ ನೋವು ಹೆಚ್ಚೇ ಇದೆ. ನಿರೋಧ್ ಬಳಸಿಯೂ ಮುಟ್ಟಾಗದೇ ಇರಲು ಕಾರಣವೇನು? ಪೈಲ್ಸ್‌ಗೆ ಆಪರೇಷನ್ ಮಾಡಿಸಿಕೊಳ್ಳದೆ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲವೇ? ನನಗೆ ಸೂಕ್ತ ಮಾಹಿತಿ ಕೊಡಿ.
ಸಲಹೆ: ನೀವು ತಿಂಗಳ ಮುಟ್ಟು ಕ್ರಮಬದ್ಧವಾಗಿ ಆಗದೇ ಇರುವುದಕ್ಕೆ ಗರ್ಭ ನಿಂತಿದೆ ಎಂದು ತೀರ್ಮಾನಿಸಬೇಕಿಲ್ಲ. ಯಾಕೆಂದರೆ ಹಾರ್ಮೋನ್ ತೊಂದ ರೆಯಿಂದಲೂ ಇಂಥ ಸಮಸ್ಯೆ ತಲೆದೋರಬಹುದು. ನೀವು ಈ ಬಗ್ಗೆ ಅನಾವಶ್ಯ ಚಿಂತೆ ಮಾಡಬೇಡಿ. ಮೂತ್ರದಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿ ನಂತರ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ. ಇದರಿಂದ ನಿಮಗೆ ಗರ್ಭ ನಿಂತಿದೆಯೇ, ಇಲ್ಲವೇ ಎಂದು ತಿಳಿಯು ತ್ತದೆ. ನಿರೋಧ್ ಬಳಕೆಯಿಂದ ನೂರಕ್ಕೆ ನೂರರಷ್ಟು ಪರಿಣಾಮ ಸಾಧ್ಯ ಎಂದು ಹೇಳಲು ಸಾಧ್ಯವಿಲ್ಲ. ನೀವು ತಿಳಿಸಿದಂತೆ ನಿಮ್ಮ ಪತಿ ಸ್ಖಲಿಸುವ ವೇಳೆ ನಿರೋಧ್ ಬಳಸಿಕೊಳ್ಳುತ್ತಾರೆ. ಆದರೆ ಗರ್ಭ ತಡೆಗಟ್ಟುವಲ್ಲಿ ಇದು ಸಂಪೂರ್ಣ ಸುರಕ್ಷಾ ವಿಧಾನ ಎನ್ನಲಾಗದು. ನಿಮಗೆ ನಿರೋಧ್ ಬಳಸಿ ತೃಪ್ತಿ ಸಿಗುತ್ತಿಲ್ಲ ಎಂದಾದರೆ ಈಗ ನವೀನ ಮಾದರಿಯ ಕಾಂಡೋಂಗಳು ಔಷಧಿ ಅಂಗಡಿಗಳಲ್ಲಿ ಲಭ್ಯವಿದೆ. ಇವನ್ನು ಪ್ರಯತ್ನಿಸಿ ನೋಡಬಹುದಾಗಿದೆ. ಮಿಲನ ಹೊಂದಿ ಆರು ವಾರಗಳೊಳಗೆ ಆದರೆ ಗುಳಿಗೆಯಿಂದಲೇ ಗರ್ಭಪಾತ ಮಾಡಿಸಿಕೊಳ್ಳಬಹುದು. ನೀವು ಮುಟ್ಟಿನ ತೊಂದರೆ ಸರಿಪಡಿಸಿ ಸೂಕ್ತ ಗರ್ಭ ನಿರೋಧಕ ಬಳಸಲು ಸ್ತ್ರೀರೋಗ ತಜ್ಞರ ಸಲಹೆ ಪಡೆಯಿರಿ. ಪೈಲ್ಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಔಷಧಿ ಬಳಕೆಯಿಂದ ಅಸಾಧ್ಯವಾದರೆ, ಶಸ್ತ್ರ ಚಿಕಿತ್ಸೆ ಮಾಡಿ ಸಬೇಕಾಗುತ್ತದೆ. ವೈದ್ಯರನ್ನು ಕಂಡು ಸಮಸ್ಯೆ ಪರಿಹರಿಸಿಕೊಳ್ಳಿ.

ಮಂಗಳೂರು-ಕಟೀಲು ಸರಕಾರಿ ಬಸ್ ಒದಗಿಸಿ

Posted by JAYAKIRANA Kirana on | 0 comments | Leave a comment...

ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲಿಗೆ ಭೇಟಿ ನೀಡುವ ಭಕ್ತರು ಸರ್ವಿಸ್ ಬಸ್‌ಗಳನ್ನೇ ಸಂಚಾರಕ್ಕೆ ಅವಲಂಬಿಸಬೇಕಾಗಿದೆ. ಈ ರೂಟ್ ನಲ್ಲಿ ಸಂಚರಿಸುವ ಬಹುತೇಕ ಬಸ್ ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತವೆ. ನಿರ್ವಾಹಕ ಬಸ್‌ನೊ ಳಗಡೆ ಕಾಲಿಡಲು ಜಾಗ ಸಿಗದಷ್ಟು ಒತ್ತಾಗಿ ಪ್ರಯಾಣಿಕರನ್ನು ಕುರಿಮಂ ದೆಯಂತೆ ತುಂಬಿಸುತ್ತಾನೆ. ಇದ ರಿಂದ ಸುಗಮ ಸಂಚಾರ ಸಾಧ್ಯವಾ ಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಗಮನಿಸಿ ಮಂಗಳೂರಿ ನಿಂದ ಕಟೀಲಿಗೆ ಸರಕಾರಿ ಬಸ್ ಸೇವೆಯನ್ನು ಒದಗಿಸಲು ಕ್ರಮ ಕೈಗೊ ಳ್ಳಬೇಕು. ದಿನಕ್ಕೆ ಕೆಲವು ಟ್ರಿಪ್‌ಗಳ ನ್ನಾದರೂ ಸರಕಾರಿ ಬಸ್‌ಗಳನ್ನು ಓಡಿಸಿದಲ್ಲಿ ಪ್ರಯಾಣಿಕರ ಒತ್ತಡವೂ ಕಡಿಮೆಯಾಗುತ್ತದೆ. ಭಕ್ತರು ನಿರಾ ತಂಕವಾಗಿ ಸಂಚಾರ ಮಾಡಬಹು ದಾಗಿದೆ.
ಸುಚಿತ್ರಾ, ವಾಮಂಜೂರು

ರಸ್ತೆಯಲ್ಲೇ ಸಂತೆ
ಪ್ರತೀ ಗುರುವಾರ ಕಿನ್ನಿಗೋಳಿ ಯಲ್ಲಿ ವಾರದ ಸಂತೆ ಭಾರೀ ಗೌಜಿ ಯಿಂದ ನಡೆಯುತ್ತದೆ. ಸಂತೆ ಮಾರು ಕಟ್ಟೆ ಪ್ರಾಂಗಣದ ಒಳಗಿನ ಜಾಗ ಇಕ್ಕ ಟ್ಟಾದ ಕಾರಣ ಬಹುತೇಕ ವ್ಯಾಪಾ ರಿಗಳು ರಸ್ತೆಯ ಬದಿ ಪಾದಚಾರಿ ಗಳು ನಡೆದಾಡುವ ಸ್ಥಳವನ್ನೂ ಆಕ್ರ ಮಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಮಾರುಕಟ್ಟೆಯ ಒಳಭಾಗಕ್ಕೆ ಹೋಗು ವಂತೆಯೇ ಇಲ್ಲ. ದಾರಿಯ ಇಕ್ಕೆಲ ಗಳಲ್ಲಿ ವ್ಯಾಪಾರಿಗಳು ಕುಳಿತು ಕೊಳ್ಳುತ್ತಾರೆ. ಇವರಿಗೆ ಸೂಕ್ತ ವ್ಯವಸ್ಥೆ ಯನ್ನೂ ಮಾಡಲಾಗಿಲ್ಲ. ಸಂತೆ ಮಾರುಕಟ್ಟೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಮುಗಿ ದಿಲ್ಲ. ಸಂಬಂಧಪಟ್ಟವರು ಇನ್ನಾ ದರೂ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ವಿನಂತಿ.
ಪಾಯಸ್, ಕಿನ್ನಿಗೋಳಿ

ಮದುವೆ ಬ್ರೋಕರ್‌ಗಳ ಬಗ್ಗೆ ಎಚ್ಚರವಿರಲಿ!
ಜೀವನದಲ್ಲಿ ಮದುವೆ ಎನ್ನುವುದು ಒಂದು ಬಾರಿ ಮಾತ್ರ ನಡೆಯುತ್ತದೆ ಎನ್ನು ವುದು ಹಳೆಯ ಮಾತು. ಯಾಕೆಂದರೆ ಈಗ ಒಂದಲ್ಲ, ಎರಡಲ್ಲ, ಅನೇಕ ಬಾರಿ ಮದುವೆಯಾದವರೂ ನಮ್ಮ ಸಮಾಜದಲ್ಲಿದ್ದಾರೆ. ಎಲ್ಲೋ ಒಂದೆರಡು ಕಡೆ ಗುಟ್ಟು ರಟ್ಟಾಗಿ ಚಾನೆಲ್, ಪತ್ರಿ ಕೆಗಳಲ್ಲಿ ಸುದ್ದಿಯಾದರೂ ವಾಸ್ತವವಾಗಿ ಇದೇನೂ ದೊಡ್ಡ ಸಂಗತಿ ಎಂದೆನಿಸುವುದಿಲ್ಲ. ಹೀಗಾಗಿ ಮದುವೆ ಎನ್ನುವುದು ತನ್ನ ನಿಜಾರ್ಥ ಕಳೆದು ಕೊಳ್ಳುತ್ತಿದೆ. ಹಣದ ಆಸೆಗಾಗಿ ಮದುವೆ ಬ್ರೋಕ ರ್‌ಗಳು ಹಾಗೂ ಕೆಲವು ಮದುವೆ ಮಾಡಿಸುವ ಕೇಂದ್ರಗಳು ಗಂಡು-ಹೆಣ್ಣಿನ ಪೂರ್ವಾಪರ ಅರಿಯದೆ ಮದುವೆ ಮಾಡಿಸು ತ್ತವೆ. ಇದರಿಂದ ಬಡಕುಟುಂಬ ಗಳು ಪಡುವ ಯಾತನೆ ಅಷ್ಟಿ ಷ್ಟಲ್ಲ. ಮದುವೆ ಗಂಡಿನ ಬಗ್ಗೆ ತಿಳಿಯದೆ ಅವಸರಕ್ಕೆ ಕಟ್ಟುಬಿದ್ದು ಹೆಣ್ಣು ಕೊಟ್ಟವರ ಪಾಡು ಕೇಳುವುದೇ ಬೇಡ. ಸಾಲ ಮಾಡಿ ಮದುವೆ ಮಾಡಿರುತ್ತಾರೆ, ಕೊನೆ ಗೊಂದು ದಿನ ಮದುವೆ ಗಂಡಿನ ಅಪರಾವತಾರ ಅರಿವಾದ ಮೇಲೆ ಸಾವೇ ಒಳ್ಳೆಯದು ಅನ್ನಿಸಿ ಬಿಡುತ್ತದೆ. ಇಲ್ಲಿ ಜನರು ಮೂರ್ಖರಂತೆ ವರ್ತಿಸು ವುದೂ ಒಂದು ಕಾರಣ. ಇಂದು ಮಂಗಳೂರು ಮಹಾನಗರದಲ್ಲಿ ಹತ್ತಾರು ಮದುವೆ ಮಾಡಿಸುವ ಕೇಂದ್ರಗಳು, ಸಾವಿರಾರು ಮಂದಿ ಬ್ರೋಕರ್‌ಗಳು ಇದ್ದಾರೆ.
ಆಯಾ ಧರ್ಮಕ್ಕೆ ಪ್ರತ್ಯೇಕ-ಪ್ರತ್ಯೇಕ ಮದುವೆ ಮಾಡಿಸುವವರೂ ಇರುತ್ತಾರೆ. ಇವರೆಲ್ಲ ಒಂದು ಪ್ರೊಫೈಲ್‌ಗೆ ಇಂತಿಷ್ಟು ಶೇ. ದುಡ್ಡು ಕಮಾಯಿಸು ತ್ತಾರೆಯೇ ಹೊರತು ಯೋಗ್ಯ ಬಾಳಸಂಗಾತಿ ಯನ್ನು ಹುಡುಕಿಕೊಡುವುದಿಲ್ಲ. ಇಲ್ಲಿಗೆ ಹೋಗುವ ಮುನ್ನ ಸಾಕಷ್ಟು ಬಾರಿ ಚಿಂತಿಸಬೇಕು. ಯಾಕೆಂ ದರೆ ಜೀವನ ಎನ್ನುವುದು ನಾಲ್ಕು ದಿನದಲ್ಲಿ ಮುಗಿದು ಹೋಗುವಂಥದ್ದಲ್ಲ, ನೆನಪಿರಲಿ.
ಕೆ.ಹರೀಶ್ ಕುಲಾಲ್, ಮುಂಡ್ಕೂರು

ಸುಳ್ಳೇ ಸುಳ್ಳು...ಎಲ್ಲಾ ಸುಳ್ಳು!
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಜನತಾದಳ(ಜಾ) ಪಕ್ಷದ ಅಧ್ಯಕ್ಷನಾಗಿ ನಾನು ಸುಮಾರು ಎರಡು ವರ್ಷದಿಂದ ಈ ತನಕ ಪಕ್ಷ ಸಂಘಟಿಸಿರುತ್ತೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷದ ಧನರಾಜ ಎಂಬವರು ಪಕ್ಷದ ನಾಯಕರ ವಿರುದ್ಧ ವಿನಾ ಕಾರಣ ಪತ್ರಿಕಾ ಹೇಳಿಕೆ ನೀಡಿ ಕಾರ‍್ಯಕರ್ತರನ್ನು ಮುಜುಗರಕ್ಕೊಳಪಡಿಸಿದ್ದು ಈ ವಿಚಾರ ಪಕ್ಷದ ನಾಯಕರ ಗಮನಕ್ಕೆ ಬಂದಿರುವುದರಿಂದ ಜಿಲ್ಲಾಧ್ಯಕ್ಷರು ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಗಮನಕ್ಕೆ ತಂದ ಪರಿಣಾಮ ಧನರಾಜರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದರು.
ಇದರಿಂದ ಸದ್ರಿ ವ್ಯಕ್ತಿ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಪತ್ರಿಕೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಾನೇ ಎಂದು ಸ್ವಯಂ ಆಗಿ ಘೋಷಿಸಿಕೊಂಡಿರುತ್ತಾರೆ. ಸದ್ರಿ ವ್ಯಕ್ತಿ ನೀಡುವ ಹೇಳಿ ಕೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇದರಿಂದ ಪಕ್ಷದ ಸಕ್ರಿಯ ಕಾರ‍್ಯಕರ್ತರು ವಿಚಲಿತರಾಗಬೇಕಿಲ್ಲ. ಕಾರ‍್ಯಕರ್ತರು ಪಕ್ಷದ ವಿಚಾರದಲ್ಲಿ ಧನರಾಜ ಜೊತೆ ವ್ಯವಹರಿಸಲು ಅವಕಾಶವಿಲ್ಲ. ಪಕ್ಷದ ವಿಷಯದಲ್ಲಿ ಯಾರಾದರೂ ಅವರನ್ನು ಸಂಪರ್ಕಿಸಿದರೆ ಅಂಥವರ ವಿರುದ್ದ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು.
ಎಂ.ಸುಧಾಕರ್ ಭಟ್, ಅಧ್ಯಕ್ಷರು, ಜನತಾದಳ(ಜಾತ್ಯತೀತ), ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಮಟ್ಕಾ ದಂಧೆಯನ್ನು ಮಟ್ಟಹಾಕುವಿರಾ?
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ಯಾರ ಭಯವೂ ಇಲ್ಲದೆ ನಡೆಯುತ್ತಿದೆ. ದಂಧೆಕೋರರು ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಈ ದಂಧೆಯನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕಿದೆ. ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು, ಕೆರೆಕಾಡು, ಎಸ್‌ಕೋಡಿ, ಕಿನ್ನಿಗೋಳಿ ಪರಿಸರದಲ್ಲಿ ಈ ದಂಧೆ ಆಳವಾಗಿ ಬೇರೂರಿದ್ದು, ಮುಲ್ಕಿ ಠಾಣಾ ನೂತನ ಎಸ್.ಐ. ಅವರ ಬಗ್ಗೆ ಇಲ್ಲಿನ ನಾಗರಿಕರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ನಿರೀಕ್ಷೆಯನ್ನು ಅವರು ಹುಸಿ ಮಾಡದೆ ಇಲ್ಲಿರುವ ಸಮಾಜಬಾಹಿರ ಶಕ್ತಿಗಳನ್ನು, ಇಲ್ಲಿ ಹಗಲು ಹೊತ್ತಲ್ಲೇ ನಡೆಯುವ ಕಳ್ಳತನಗಳನ್ನು ತಡೆಯಲಿ.
ನಾಗರಿಕರು, ಲಿಂಗಪ್ಪಯ್ಯಕಾಡು

ಪಬ್ಲಿಕ್ ಟಾಯ್ಲ್ಲೆಟ್‌ಗೆ ನೈಜ ದರವೆಷ್ಟು?
ಸರ್ಕಾರ ಸಾರ್ವಜನಿಕರ ಅನು ಕೂಲಕ್ಕಾಗಿ ನಿರ್ಮಿಸಿದ ಸಾರ್ವಜ ನಿಕ ಶೌಚಾಲಯಗಳಲ್ಲಿ ನಿಗದಿಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡು ತ್ತಿದ್ದು, ನೈಜ ದರ ಯಾವುದೆಂಬ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ವುಂಟಾಗಿದೆ. ನಗರದ ಕೆಎಸ್‌ಆರ್ ಟಿಸಿಯಲ್ಲಿರುವ ಸಾರ್ವಜನಿಕ ಶೌಚಾ ಲಯವೊಂದನ್ನು ಬಿಟ್ಟು ನಗರದ ಬಹುತೇಕ ಕಡೆಗಳಲ್ಲಿ ದುಬಾರಿ ಶುಲ್ಕ ಪಡೆಯುತ್ತಿದ್ದಾರೆ. ನಿಜವಾಗಿ ಎರಡು ರೂಪಾಯಿಯಾದರೂ ಕೆಲವೊಂದು ಕಡೆಗಳಲ್ಲಿ ಮೂರು, ನಾಲ್ಕು, ಐದು ರುಪಾಯಿ ಹೀಗೆ ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ. ಇನ್ನಾ ದರೂ ನಗರ ಪಾಲಿಕೆ ಸಾರ್ವಜನಿಕ ಶೌಚಾಲಯವನ್ನು ಬಳಕೆ ಮಾಡಲು ನೈಜ ದರ ಎಷ್ಟೆಂದು ತಿಳಿಸಲಿ.
ವಿನ್ಯಾಸ್ ಶೆಟ್ಟಿ, ಜೆಪ್ಪು

ವೃದ್ದಾಪ್ಯ ವೇತನದಲ್ಲೂ ಸರ್ಕಾರದಿಂದ ವಂಚನೆ
ಕಳೆದ ಭಾನುವಾರದ ಪತ್ರಿಕೆಯ ವಾರಾಂತ್ಯ ವಿಭಾಗದಲ್ಲಿ ಪುತ್ತಬ್ಬ ಮಾಸ್ಟರ್ ಎಂಬ ಶಿಕ್ಷಕರ ಬಗೆಗಿನ ಒಂದು ಲೇಖನ ಪ್ರಕಟವಾ ಗಿತ್ತು. ಈ ಲೇಖನ ಸರ್ಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ ಎನ್ನಬಹುದು. ಇಂದಿಗೂ ಅದೆಷ್ಟೋ ಸರ್ಕಾರಿ ನೌಕರರು ತಾವು ದುಡಿದ ಪಿಂಚಣಿ, ಪಿಎಫ್‌ಗಾಗಿ ಕಚೇ ರಿಗೆ ಅಲೆಯುತ್ತಿದ್ದಾರೆ. ಕೆಲ ಅನಗತ್ಯ ದಾಖಲೆಗಳನ್ನು ಕೇಳಿ, ಅದು ಇಲ್ಲವೆಂದರೆ ಸಿಗಬೇಕಾದ ಹಣವನ್ನೇ ತಮ್ಮ ಜೀಬಿಗೆ ಇಳಿಸಿಕೊ ಳ್ಳುವ ಅದೆಷ್ಟೋ ದೊಡ್ಡ ದೊಡ್ಡ ಭ್ರಷ್ಟ ಕುಳಗಳು ನಮ್ಮ ಇಲಾಖೆಯ ಲ್ಲಿವೆ. ಟೇಬಲ್‌ನಡಿಗೆ ಕೈ ಹಾಕಿ ಲಂಚ ಪಡೆದರೆ ಸಿಕ್ಕಿ ಬೀಳುತ್ತಾರೆ. ಆದರೆ ಈ ರೀತಿ ನೇರವಾಗಿ ತಮ್ಮ ಅಕೌಂಟಿಗೆ ಇಳಿಸಿದರೆ ಸಿಕ್ಕಿ ಬೀಳುವ ಸಾಧ್ಯತೆಗಳು ಕಡಿಮೆ. ಅಷ್ಟೇ ಯಾಕೆ ಪುತ್ತಬ್ಬರಂತೆ ಇಲಾಖೆಯೊಂದಿಗೆ ಗುದ್ದಾಡಿ ತೀರಿಹೋದ ಮೇಲೆ ಈ ಹಣ ಕ್ಕಾಗಿ ಮನೆಯರಿಂದ ಹೋರಾಡಲು ಎಷ್ಟು ಸಾಧ್ಯ? ಇದು ಪಿಂಚಣಿ, ಪಿಎಫ್‌ನಲ್ಲಾದರೆ ಇತ್ತೀಚೆಗೆ ವಿಧವಾ ವೇತನ, ವೃದ್ದಾಪ್ಯ ವೇತನ ದಲ್ಲೂ ಈ ರೀತಿಯ ಅವ್ಯವಹಾರ ನಡೆಯುತ್ತಿದೆ. ತಿಂಗಳೂಗಳೇ ಕಳೆದರೂ ಇದು ಫಲಾನುಭವಿಗಳ ಕೈ ಸೇರುತ್ತಿಲ್ಲ. ಮೂರ‍್ನಾಲ್ಕು ತಿಂಗಳು ಕಳೆದು ಹಣ ಬಂದರೂ ಅದರಲ್ಲಿ ಮೂರು ತಿಂಗಳ ಹಣವೇ ಇರುವುದಿಲ್ಲ. ಯಾವ ‘ಸಕಾಲ ಯೋಜನೆ ಬಂದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಅಷ್ಟರಲ್ಲೇ ಇದೆ. ಒಂದೆ ರೆಡು ಸುದ್ದಿಮಾಧ್ಯಮಗಳು ಭ್ರಷ್ಟಾಚಾರದ ವಿರುದ್ದ ಸಮರ ಸಾರಿ ದ್ದೇವೆ ಎಂದರೂ ಅದು ಒಂದೆರೆಡು ದಿನಗಳಿಗೆ ಮಾತ್ರ ಸೀಮಿತ ವಾಗಿದೆ. ಸರ್ಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕೊನೆಯೆಂದು?
ಇಸ್ಮಾಯಿಲ್, ತೊಕ್ಕೊಟ್ಟು

ಉಳ್ಳಾಲ ಪುರಸಭೆಯಿಂದ ಟ್ಯಾಂಕರ್ ನೀರಿನಲ್ಲೂ ರಾಜಕೀಯ
ಜಿಲ್ಲೆಯಾದ್ಯಂತ ಈ ಬಾರಿ ನೀರಿಗೆ ಬರ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಸ್ಯೆಗೆ ಉಳ್ಳಾಲ ಪುರಸಭಾ ವ್ಯಾಪ್ತಿಯ ಜನರೂ ಹೊರತಾಗಿಲ್ಲ. ಹಿಂದಿನಿಂದಲೂ ಈ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇತ್ತು. ನೀರಿನ ಸಮಸ್ಯೆ ಬಂದಾಗ ಲೆಲ್ಲಾ ಇಲ್ಲಿನ ಜನರಿಗೆ ಅಪಧ್ಬಾಂದವನಾಗುವುದು ಉಳ್ಳಾಲ ದರ್ಗಾದ ಟ್ಯಾಂಕರ್ ನೀರು ಪೂರೈಕೆ ಯೋಜನೆ. ಆದರೆ ಇತ್ತೀಚೆಗೆ ಉಳ್ಳಾಲ ಪುರಸಭೆ ಇಲ್ಲೂ ತನ್ನ ರಾಜಕೀಯ ತೋರಿಸುತ್ತಿದೆ. ಟ್ಯಾಂಕರ್‌ನಲ್ಲಿ ನೀರು ಪೂರೈಸಲು ಈ ಹಿಂದೆ ಓರ್ವ ವ್ಯಕ್ತಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಆತನ ಟೆಂಡರ್ ಅವಧಿ ಮುಗಿದ ಕಾರಣ ಇನ್ನೊಬ್ಬರಿಗೆ ಟೆಂಡರ್ ನೀಡಲಾಗಿದೆ. ಆದರೆ ಈ ವ್ಯಕ್ತಿಗೆ ಟೆಂಡರ್ ನೀಡಿದ ನಂತರ ಈ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ನೀರು ಪೂರೈಕೆ ಆಗಿಲ್ಲ. ಅಲ್ಲದೇ ನೀರು ಪೂರೈಕೆಯಲ್ಲೂ ರಾಜಕೀಯ ನಡೆಸಲಾಗುತ್ತಿದ್ದು, ಊರಿನ ನಾಗರಿ ಕರು ನೀರಿಗಾಗಿ ಪರಿತಪಿಸುವಂತಾಗಿದೆ.
‘ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಉಳ್ಳಾಲ ದರ್ಗಾ ಆಡಳಿತ ಯಾವುದೇ ಬೇಧಬಾವವಿಲ್ಲದೆ ನೀರು ಕೊಟ್ಟರೂ ಉಳ್ಳಾಲ ಪುರಸಭೆ ಇಲ್ಲೂ ತನ್ನ ರಾಜಕೀಯ ಮಾಡುತ್ತಿದೆ. ಪುರಸಭೆಯ ಅಧ್ಯಕ್ಷರು ದೂರು ಕೊಟ್ಟರೆ ಸ್ಥಳಕ್ಕೆ ಭೇಟಿ ಕೊಟ್ಟು ಬೇಕಾದಷ್ಟು ನೀರು ಕೊಡಿ ಎಂದು ತೋರಿಕೆಯ ಸೂಚನೆ ನೀಡಿ ಹೋಗು ತ್ತಾರೆ. ಮತ್ತೆ ಈ ವ್ಯಕ್ತಿಯ ಸುಳಿವೇ ಇರುವುದಿಲ್ಲ. ಕೆಲವೊಮ್ಮೆ ನಾಗರಿಕರು ಲಾರಿ ಚಾಲಕರೊಂದಿಗೆ ಕಾದಾಟಕ್ಕೆ ಇಳಿದ ಘಟನೆಗಳೂ ನಡೆದಿದೆ. ಇನ್ನು ಇದರ ಗುತ್ತಿಗೆ ಪಡೆದವರು ಲಾರಿಗಳಲ್ಲಿ ನೀರು ತುಂಬಿಸಿಕೊಂಡು ಬಂದು ತೊಕ್ಕೊಟ್ಟಿನಲ್ಲಿ ಕೆಲ ಹೊಟೇಲ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ನೀರು ಬಂದಿಲ್ಲವೆಂದು ಸಂಬಂಧಪ ಟ್ಟವರಿಗೆ ಫೋನಾಯಿಸಿದರೆ ಈಗಾಗಲೇ ಎರಡು ಟ್ಯಾಂಕರ್ ಕಳಿಸಿದ್ದೇವೆ ಎನ್ನು ತ್ತಾರೆ. ಆದರೆ ಅದು ಜನರ ಬಳಿ ಬಾರದೆ ಹೋಟೇಲ್‌ನ ಟ್ಯಾಂಕ್ ತುಂಬಿಸುತ್ತಿದೆ. ಇನ್ನಾದರೂ ಉಳ್ಳಾಲದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಪುರಸಭೆಯ ಗೋಲ್‌ಮಾಲ್ ರಾಜಕೀಯಕ್ಕೆ ಬ್ರೇಕ್ ಹಾಕಲಿ.
ನೊಂದ ನಾಗರಿಕ, ಉಳ್ಳಾಲ

ಹಾರ್ನ್ ಹೊಡೆದು ರಸ್ತೆ ಸರಿಯಾಯಿತೇ?
ತಿಂಗಳ ಹಿಂದೆ ಸಂಘಟನೆಯೊಂದು ಹದಗೆಟ್ಟ ಜಿಲ್ಲೆಯ ರಸ್ತೆಗಳ ವಿರುದ್ಧ ಹಾರ್ನ್ ಹೊಡೆದು ವಿನೂತನ ರೀತಿಯ ಪ್ರತಿಭಟನೆ ಹಮ್ಮಿ ಕೊಂಡಿತ್ತು. ಮಂಗಳೂರು ಹಾಗೂ ಸುತ್ತಲಿನ ಕೆಲವು ಸ್ಥಳಗಳಲ್ಲಿ ವಾಹನ ಸವಾರ ರನ್ನು ತಡೆದು ಹಾರ್ನ್ ಹಾಕಿಸಿದ್ದೂ ಆಯಿತು. ಆದರೆ ರಸ್ತೆಗಳ ಪರಿಸ್ಥಿತಿ ಮಾತ್ರ ಹಿಂದಿನದಕ್ಕಿಂತ ತೀರಾ ಕಡೆಯಾ ಗಿದೆ.
ಜನಪ್ರತಿನಿಧಿಗಳು ಇವರ ಹಾರ್ನ್ ಕೇಳಿಸಿ ಕೊಳ್ಳಲು ತಯಾರಿಲ್ಲ. ಪ್ರಚಾರಪ್ರಿಯ ಸಂಘಟನೆ ಗಳು ಇಂಥ ಪ್ರತಿಭಟನೆಯನ್ನು ವೈಯಕ್ತಿಕ ಪ್ರಚಾ ರದ ತೆವಲಿಗಾಗಿ ಮಾಡುತ್ತವೆಯೇ ಹೊರತು ಬೇರೇನೂ ಅಲ್ಲ. ಯಾಕೆಂದರೆ ಹಾರ್ನ್ ಹೊಡೆದ ಮರು ದಿನವೇ ಸಂಘಟನೆಗೆ ಮರೆತುಹೋಗಿರು ತ್ತದೆ. ಇದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿ ಯುತ್ತದೆ. ಆದ್ದರಿಂದ ಜನತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟವರನ್ನು ಎಚ್ಚರಿಸಲು ಹಾರ್ನ್ ಹೊಡೆದರೆ ಮಾತ್ರ ಸಾಲದು, ಅಧಿಕಾರಿ ವರ್ಗವನ್ನು ಎಚ್ಚರಿಸಿ ಕೆಲಸ ಮಾಡಿಸಿಕೊಳ್ಳುವುದು ತಿಳಿದಿರಬೇಕು.
ರಿತೇಶ್, ಕೈಕಂಬ

ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ, ರಾಜಕೀಯ ಬೇಡ

Posted by JAYAKIRANA Kirana on | 0 comments | Leave a comment...

ಸತ್ಯಕೃಪಾ, ಕುಕ್ಕಾಜೆ
ಶೈಕ್ಷಣಿಕ ವರ್ಷದುದ್ದಕ್ಕೂ ಮಾಧ್ಯಮಗಳಲಿ, ತಂಡ ತಂಡ ಗಳಲ್ಲಿ, ಸದನಗಳಲ್ಲಿ ಶಿಕ್ಷಕ ಸಂಘಟನೆಗಳು ಹಾಗೂ ಪ್ರತಿನಿಧಿ ಗಳು ಸಮಸ್ಯೆಗಳನ್ನು ಪ್ರಸ್ತಾಪಿಸಿದರೂ ಪರಿಹಾರ ಆಗಲಿಲ್ಲ. ನನ್ನ ನೆನಪಿನ ಪ್ರಕಾರ ಮಾಜಿ ಮುಖ್ಯಮಂತ್ರಿ ಶ್ರೀ.ಬಿ.ಎಸ್. ಯಡಿ ಯೂರಪ್ಪನವರು ಪದತ್ಯಾಗ ಮಾಡುವ ಸುಮಾರು ಒಂದು ತಿಂಗಳ ಮೊದಲು ಶಾಸಕರ ಸಭಾಭವನದಲ್ಲಿ ಒಂದಿಬ್ಬರು ವಿ.ಪ. ಸದಸ್ಯರನ್ನು ಹೊರತುಪಡಿಸಿ (ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ) ಉಳಿದೆಲ್ಲ ಸದಸ್ಯರೂ, ಶಿಕ್ಷಣ ಸಚಿವ ಕಾಗೇರಿಯವರೂ, ರಾಜ್ಯ ದಲ್ಲಿರುವ ಎಲ್ಲಾ ಶಿಕ್ಷಕ ಸಂಘದ ಪದಾಧಿಕಾರಿಗಳ ಸಭೆ ನಡೆದು (ಎರಡು ಹಂತಗಳಲ್ಲಿ) ಒಂದು ತೀರ್ಮಾನಕ್ಕೆ ಬರಲಾಯಿತು. ಮುಂದಿನ ಒಂದು ತಿಂಗಳಿನೊಳಗೆ ಪೌಢಶಾಲಾ ಹಾಗೂ ಪ.ಪೂ. ಉಪನ್ಯಾಸಕರ ಬಹುಮುಖ್ಯ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಸ್ವತಃ ಕಾಗೇರಿಯವರೇ ಶಿಕ್ಷಕರ ಪರವಾಗಿ ತಂಡದ ನೇತಾರರಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಆಯ್ದ ಶಿಕ್ಷಕ ಸಂಘಟನೆಗಳ ನಾಯಕರೊಂದಿಗೆ ಅಂದಿನ ಮುಖ್ಯಮಂ ತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸಮಿತಿ ರಚನೆ ಮಾಡಿ ಒಂದು ತಿಂಗಳೊಳಗೆ ಸಮಸ್ಯೆ ಪರಿಹಾರದ ವಿಶ್ವಾಸನೀಯ ಭರವಸೆಯೂ ಸಿಕ್ಕಿತು. ಶಿಕ್ಷಕರು ಎಂಟು ದಿನ ಗಳ ಕಾಲದ ತರಗತಿ ಬಹಿಷ್ಕಾರದ ಚಳವಳಿಯನ್ನೂ ನಡೆಸಿ ಸರಕಾರದ ಗಮನವನ್ನು ಸೆಳೆದರು. ಫಲಿತಾಂಶ?
ರಾಜ್ಯದ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಲ್ಪಟ್ಟಾಗ ಅದರಲ್ಲಿ ಶಿಕ್ಷಕರು ಗಳ ವೇತನ ಶ್ರೇಣಿಯ ಕುರಿತಂತೆ ಯಾವುದೇ ಶಿಫಾರಸು ಕೂಡಾ ಇರಲಿಲ್ಲ. ಶಿಕ್ಷಕರ ದೀರ್ಘ ಕಾಲದ ನಿರೀಕ್ಷೆ ಅಲ್ಲೂ ಹುಸಿಯಾಯಿತು. ಅಪವಾದಕ್ಕೆ ಈ ಹಿಂದೆ ವೇತನ ತಾರತಮ್ಯ ನಿವಾರಣೆಗೆ ಇದ್ದಂತಹ ತಾತ್ಕಾಲಿಕ ಪರಿಹಾರ ರೂ. ೨೦೦ ರೂ.೫೦೦ಕ್ಕೆ ಏರಿತು.
ಶಿಕ್ಷಕ ಕ್ಷೇತ್ರದ ಪ್ರತಿನಿಧಿಗಳು ಚುನಾವಣೆಗೆ ನಿಲ್ಲುವ ಹೊತ್ತಿಗೆ ನಿಮ್ಮ ಪ್ರತಿನಿಧಿಗಳು ನಾವು. ನಿಮ್ಮ ನ್ಯಾಯಯುತ ಹೋರಾ ಟಕ್ಕೆ ನಮ್ಮ ನಾಯಕತ್ವವಿದೆ. ನೀವು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಿ. ಯಾವ ಕಾಲಕ್ಕೂ ಬೀದಿಗಿಳಿದು ಹೋರಾಟ ಮಾಡ ಬೇಡಿ ಎಂದು ಹೇಳಿ ಗೆದ್ದು ಹೋದವರಿಗೆ ಅವರವರ ಪಕ್ಷ ನಿಷ್ಠೆಯೇ ಮುಖ್ಯವಾಯಿತು. ಕೆಲವು ಪ್ರತಿನಿಧಿಗಳು ತಾವು ಅಧಿಕಾರದಲ್ಲಿದ್ದಾಗ ಸುಮ್ಮನಿದ್ದು, ಈಗ ಶಿಕ್ಷಕರ ಪರವಾಗಿದ್ದೇವೆ ಎಂದು ಪ್ರದರ್ಶಿಸುತ್ತಾ ಮೊಸಳೆ ಕಣ್ಣೀರು ಸುರಿಸಿದ್ದೂ ಆಯಿತು. ಪರಿಣಾಮ ಶೂನ್ಯ.
ಶಿಕ್ಷಕರ ಸಮಸ್ಯೆಗಳ ಕುರಿತಂತೆ ಮಾತನಾಡಿದ ಮತ್ತು ಪರಿ ಹಾರ ಸೂತ್ರಗಳನ್ನು ಕಂಡುಹಿಡಿದು ನಿವಾರಣಾ ಪ್ರಯತ್ನಗ ಳನ್ನು ಮಾಡಿದ ಚಿಂತಕರು ಎಷ್ಟು ಮಂದಿ ಇದ್ದಾರೆ? ತಮ್ಮ ಮಕ್ಕಳಿಗೆ ಶಿಕ್ಷಣ ಸಿಕ್ಕಿದರಾಯಿತು, ಉಳಿದ ಚಿಂತೆ ಯಾಕೆ? ಎನ್ನುವುದು ಜನಸಾಮಾನ್ಯರ ನಿಲುವಾಯಿತು. ತಮ್ಮ ಪರವಾಗಿ ತನಗಾಗಿರುವ ಅನ್ಯಾಯ ತೊಂದರೆಗಳಿಗೆ ಗಮನ ಕೊಡಬೇ ಕಾದವರು, ಗಮನ ಕೊಡದಿದ್ದಾಗ ಪರಿಹಾರ ನೀಡದಿದ್ದಾಗ ಶಿಕ್ಷಕನೆನ್ನುವ ಉಪನ್ಯಾಸಕ ಏನು ಮಾಡಬೇಕು? ತನಗಾಗುವ ಅನ್ಯಾಯಗಳನ್ನೇ ಪರಿಹರಿಸಲಾಗದ ಶಿಕ್ಷಕ, ತನ್ನ ವಿದ್ಯಾರ್ಥಿಗ ಳನ್ನು ಹೇಗೆ ಮಾರ್ಗದರ್ಶನವೀಯಬಲ್ಲ? ಮಾನ್ಯ ಚಿಂತಕರು ಮೌನ ತಾಳದೆ ಅಸಹಾಯಕ ಶಿಕ್ಷಕ ವೃಂದಕ್ಕೆ ಮಾರ್ಗದರ್ಶನ ನೀಡಿ, ಸಹಕಾರ ನೀಡಿ, ಸಮಸ್ಯೆಗಳನ್ನು ಪರಿಹರಿಸಲು ಸರಕಾ ರಕ್ಕೂ ಶಿಕ್ಷಕರಿಗೂ ತಕ್ಷಣ ನೆರವಾಗಿ ಎನ್ನುವುದು ನನ್ನ ನಮ್ಮ ವಿನಂತಿ. ನಮ್ಮ ರಾಜ್ಯದಲ್ಲಿ ಸರಕಾರೀ, ಅನುದಾನಿತ ಮತ್ತು ಅನುದಾನ ರಹಿತ ಎಂಬ ಮೂರು ಮುಖ್ಯವಾಹಿನಿಗಳಲ್ಲಿ ಶಿಕ್ಷ ಣವು ನೀಡಲ್ಪಡುತ್ತದೆ. ಸರಕಾರಿ ಸಂಸ್ಥೆಗಳಲ್ಲಿ ಸರಕಾರಿ ವೇತನ ಪಡೆಯುವ ಮತ್ತು ಅತಿಥಿ ಉಪನ್ಯಾಸಕ/ಶಿಕ್ಷಕರೆಂಬ ಎರಡು ವರ್ಗಗಳೊಂದಿಗೆ ಸ್ಥಳೀಯವಾಗಿ ಶಾಲಾಭಿವೃದ್ಧಿ ಸಮಿತಿಗಳಿಂದ ನೇಮಿಸಲ್ಪಟ್ಟ ಹಂಗಾಮಿ ಶಿಕ್ಷಕರೂ ಕೆಲಸ ಮಾಡುತ್ತಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರಿ ವೇತನ ಪಡೆಯುವ ನೌಕರರೊಂದಿಗೆ ಆಡಳಿತ ಮಂಡಳಿ ನೀಡುವ ವೇತನ ಪಡೆ ಯುವ ನೌಕರರೂ ಸಾಕಷ್ಟಿದ್ದಾರೆ. ಅನುದಾನರಹಿತ ಸಂಸ್ಥೆಗ ಳಲ್ಲಿ ಆಡಳಿತ ಮಂಡಳಿಗಳ ನಿರ್ಣಯ ಅಂತಿಮ.
ಎಷ್ಟೋ ಕಡೆ ಸರಕಾರಿ ಇಲಾಖೆಗಳ ಕೆಲವು ವಿಚಿತ್ರ ನಿಯ ಮಾವಳಿಗಳಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಹೆಸರಿಗೆ ಮಾತ್ರ ಅನುದಾನಿತಗಳಾಗಿ ಉಳಿದಿವೆ. ಇಂತಹ ಎಲ್ಲಾ ಸನ್ನಿ ವೇಶ ಸಂದರ್ಭಗಳಲ್ಲಿ ಶಿಕ್ಷಕ ಮನಃಪೂರ್ವಕವಾಗಿ ಕೆಲಸ ಮಾಡಬೇಕಾಗಿದೆ. ನಿವೃತ್ತಿಯಾದಾಗ ಅಥವಾ ಶಿಕ್ಷಕನೋರ್ವ ಸೇವಾವಧಿ ಸಂದರ್ಭದಲ್ಲಿ ಮರಣ ಹೊಂದಿದರೆ ನೂತನ ನೇಮಕಾತಿ ಮಾಡುವ ಅವಕಾಶವೇನೋ ನಮ್ಮ ರಾಜ್ಯದಲ್ಲಿದೆ. ಆದರೆ ಅದಕ್ಕೆ ತಗಲುವ ವೆಚ್ಚ-ಸಮಯ-ಪರಿಶ್ರಮ ಅದು ಅನು ಭವಿಸಿದವನಿಗೇ ಗೊತ್ತು. ಹುದ್ದೆ ಮಂಜೂರಾತಿ, ನೇಮಕ ಪ್ರಕ್ರಿಯೆಗಳು ನಿಯಮಗಳಿಗೆ ಅನುಸಾರವಾಗಿಯೇ ಆಗಬೇಕು. ಆದರೆ ಇದಕ್ಕೆಷ್ಟು ಅ.....ಡ......ಚ......ಣೆ......ಗಳು ಗೊತ್ತಾ ?
ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ವಂತಿಗೆ ತೆಗೆದುಕೊಳ್ಳುವಂತಿಲ್ಲ! ಆದರೆ ಶಿಕ್ಷಕರಿಗೆ ಸರಕಾರದಿಂದ ಕನಿಷ್ಠ ವೇತನ ನೀಡಲೇಬೇಕು. ಎಷ್ಟೂ ಸಂಸ್ಥೆಗಳು ಜಾಣ್ಮೆಯಿಂದ ಸರಕಾರ ಹಾಗೂ ನೌಕರರನ್ನು ನಿಭಾಯಿಸಿಕೊಂಡು ಸೇವೆ ಮಾಡುತ್ತಿವೆ!
ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ನಾವಿಂದು ಶಿಕ್ಷಕರನ್ನು ಹಾಗೂ ಅವರ ಸಮಸ್ಯೆಗಳನ್ನು ಗಮನಿಸ ಬೇಕು. ಸರಕಾರವೂ ಸೇರಿದಂತೆ ಸಮಾಜದ ಎಲ್ಲರೂ ಶಿಕ್ಷಕರ ಪಾಲಿಗೆ ತಂದೆಯಂತಹ ಪಾಲಕರಾಗಿ ಮಾರ್ಗದರ್ಶನ ನೀಡು ವಾಗ ಮಾತ್ರ. ಆದರೆ ಇಂದು ಶಿಕ್ಷಣ/ಶಿಕ್ಷಕ ಕ್ಷೇತ್ರದ ಪರಿಸ್ಥಿತಿ ಹೇಗಿದೆ? ಕೆಲವು ಡಿ.ಎಡ್, ಬಿ.ಎಡ್ ಕಾಲೇಜುಗಳು ವಿದ್ಯಾರ್ಥಿ ಗಳ ಕೊರತೆಯಿಂದಾಗಿ ಮುಚ್ಚಲ್ಪಟ್ಟರೆ ಇನ್ನು ಹಲವು ಮುಚ್ಚು ವಂತಹ ಸ್ಥಿತಿಗೆ ಸಾಗುತ್ತಿವೆ. ಬದ್ಧತೆಯಿರುವ ಶಿಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಔದ್ಯೋಗಿಕ ಮಾರ್ಗದರ್ಶನಗಳಿಲ್ಲದೇ ಮಾನವಿಕ ಹಾಗೂ ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಧನೋತ್ಪಾದನೆಯೇ ಮುಖ್ಯ ವಾಗಿ ಸೇವಾ ಮನೋಭಾವ ಕುಂಠಿತವಾಗುತ್ತಿದೆ. ಭಾಷಾ ಸಾಹಿತ್ಯ ಗಳತ್ತ ಇರುವ ಒಲವೂ ಕಡಿಮೆಯಾಗುತ್ತಿದೆ. ಇಲ್ಲೆಲ್ಲಾ ಸಮಾಜ ವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲು ಪ್ರತಿಭಾನ್ವಿತ ಸುಶಿ ಕ್ಷಿತ ಶಿಕ್ಷಕನ ಅವಶ್ಯಕತೆ ಇದೆ. ಇಂತಹ ಗೊಂದಲದ ಸಂದರ್ಭ ದಲ್ಲಿ ಇದು ಸಾಧ್ಯವೇ?
ಇತ್ತೀಚಿಗಿನ ವರ್ಷಗಳಲ್ಲೇ ಶಿಕ್ಷಕರು ಯಾಕೆ ಹೆಚ್ಚು ಮುಷ್ಕರ ಹೂಡುತ್ತಾರೆ? ಉತ್ತರ ಸ್ಪಷ್ಟ. ಈ ಹಿಂದಿನ ಸರಕಾರಗಳ ಕೊಡುಗೆ ಗಳನ್ನು ಗಮನಿಸಿದರೆ ಶಿಕ್ಷಕರೂ ಸೇರಿದಂತೆ ಸರಕಾರಿ ನೌಕರ ರಿಗೆ ಹಾಗೂ ಕೃಷಿಕರಿಗೆ ಈ ಸರಕಾರ ನೀಡಿದಷ್ಟು ಕೊಡುಗೆಗ ಳನ್ನು ಈ ಹಿಂದಿನ ಯಾವ ಸರಕಾರಗಳೂ ಕೊಟ್ಟಿದ್ದಿಲ್ಲ. ಶಿಕ್ಷಕ ರಿಗೆ ಒಂದು ವಿಚಾರ ಚೆನ್ನಾಗಿ ಗೊತ್ತು. ಅವರ ಸಮಸ್ಯೆಗಳು ನಿವಾರಣೆಯಾಗುವುದಿದ್ದರೆ ಈ ಸರಕಾರವಿದ್ದಾಗ. ಈಗಲ್ಲದಿ ದ್ದರೆ ಮುಂದಿಲ್ಲ. ಶಿಕ್ಷಕರು ಬೀದಿಗಿಳಿದು ಹೋರಾಟ ನಡೆಸು ವಂತಹ ಪರಿಸ್ಥಿತಿಯು ನಿರ್ಮಾಣವಾಗದಂತೆ ನೋಡಿಕೊಳ್ಳ ಬೇಕು. ಅದಕ್ಕಾಗಿ ಸರಕಾರ, ಚಿಂತಕರಿಂದ ಕೂಡಿದ ಒಂದು ಶಿಕ್ಷಣ-ಶಿಕ್ಷಕ ಹಿತರಕ್ಷಣಾ ಸಮಿತಿ ಮತ್ತು ಶಿಕ್ಷಕರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಕಾಲಕಾಲಕ್ಕೆ ಮಾರ್ಗದರ್ಶ ನವನ್ನು ನೀಡಿ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಕವಿ ರವೀಂದ್ರರರ ಎಲ್ಲಿ ಮನ ಕಲಕಿರದೊ.... ಕವಿತೆಯ ಆಶಯ ನನಸಾದೀತು.

ಡಿಫಿಯಿಂದ ಹುತಾತ್ಮ ದಿನ

Posted by JAYAKIRANA Kirana on | 0 comments | Leave a comment...

ಭಾಸ್ಕರ ಹತ್ಯೆಗೆ ೧೫ ವರ್ಷ: 
ಕಾಸರಗೋಡು: ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ(ಡಿ.ವೈ.ಎಫ್.ಐ)ಯ ಕೇರಳ ರಾಜ್ಯ ಮಟ್ಟದ ಪ್ರಮುಖ ನಾಯಕರೂ, ಶ್ರೇಷ್ಠ ಸಂಘಟಕನೂ, ಸಮಾಜ ಸೇವಕರೂ ಆಗಿದ್ದ ಭಾಸ್ಕರ ಕುಂಬಳೆ ಅವರ ೧೫ನೇ ಹುತಾತ್ಮ ದಿನಾಚರಣೆ ಈ ತಿಂಗಳ ೨೨ರಂದು ಕುಂಬಳೆಯಲ್ಲಿ ಜರಗಲಿದೆ. ಕಾರ್ಯ ಕ್ರಮದ ಯಶಸ್ವಿಗಾಗಿ ಡಿಫಿ ಜಿಲ್ಲಾ ಸಮಿತಿಯು ವಿಫುಲ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಹುತಾತ್ಮ ದಿನದ ಅಂಗವಾಗಿ ಅಂದು ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಪೂರ್ವಾಹ್ನ ಅಗಲಿದ ನಾಯಕನ ಸ್ಮರಣೆ ಮಾಡ ಲಾಗುವುದು. ಬೆಳಿಗ್ಗೆ ೯.೩೦ಕ್ಕೆ ಕುಂಬಳೆ ಶೇಡಿಕ್ಕಾವಿನಲ್ಲಿರುವ ಭಾಸ್ಕರ ಸ್ಮೃತಿ ಮಂಟಪದಲ್ಲಿ ಸಿ.ಪಿ.ಎಂ, ಡಿ.ವೈ.ಎಫ್.ಐ ನಾಯಕರು ಮತ್ತು ನೂರಾರು ಕಾರ್ಯಕರ್ತರು, ಅಭಿಮಾನಿಗಳು ಪುಷ್ಪಾರ್ಚನೆ ನಡೆ ಸಲಿದ್ದು, ಭಾಸ್ಕರರನ್ನು ಸ್ಮರಿಸಿ ಸಿ.ಪಿ.ಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಸತೀಶ್ಚಂದ್ರನ್, ಮಾಜಿ ಶಾಸಕ, ನ್ಯಾಯವಾದಿ ಸಿ.ಎಚ್. ಕುಞಂಬು, ಡಿ.ಫಿ ಜಿಲಾ ನಾಯಕರು ಮಾತನಾಡಲಿದ್ದಾರೆ.
ಸಾಯಂಕಾಲ ೩ ಗಂಟೆಗೆ ಪೆರುವಾಡಿನಿಂದ ನೂರಾರು ಕೆಂಪು ಸಮವಸ್ತ್ರ ಧಾರಿಗಳು ಹಾಗೂ ಕಾರ್ಯಕರ್ತರನ್ನೊಳಗೊಂಡ ಬೃಹತ್ ಮೆರವಣಿಗೆ ಕುಂಬಳೆ ಪೇಟೆಗೆ ಹೊರಡಲಿದೆ. ೪ ಗಂಟೆಗೆ ಕುಂಬಳೆಯಲ್ಲಿ ನಡೆಯಲಿರುವ ಸಂಸ್ಮರಣ ಸಭೆಯಲ್ಲಿ ಡಿ,ವೈ,ಎಫ್.ಐ ರಾಜ್ಯಾಧ್ಯಕ್ಷ ಎಂ. ಸ್ವರಾಜ್ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸತ್ಸದಸ್ಯ, ಸಿ.ಪಿ.ಎಂ ಕೇಂದ್ರ ಸಮಿತಿ ಸದಸ್ಯ ಪಿ.ಕರುಣಾಕರನ್, ಸಿ.ಪಿಎಂ ಹಾಗೂ ಡಿ.ವೈ.ಎಫ್.ಐಯ ಜಿಲ್ಲೆಯ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಸಹಸ್ರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಡಿಫಿ ನಾಯಕತ್ವ ತಿಳಿಸಿದೆ.
 ಡಿ.ವೈ.ಎಫ್.ಐಯ ಜಿಲ್ಲಾ ಜತೆ ಕಾರ್ಯದರ್ಶಿಯೂ, ಕುಂಬಳೆ ಬ್ಲಾಕ್ ಪ್ರಧಾನ ಕಾರ್ಯದರ್ಶಿಯೂ, ಸಿ.ಪಿಎಂ. ಪಕ್ಷದ ಏರಿಯಾ ಸಮಿತಿ ನಾಯಕರೂ ಆಗಿದ್ದ ಭಾಸ್ಕರ ಕುಂಬಳೆ ಅವರು ಮಂಗಳೂರು ಎಸ್.ಡಿ.ಎಂ ಕಾಲೇಜಿನಲ್ಲಿ ಅಂತಿಮ ವರ್ಷ ಕಾನೂನು ಪದವಿ ವಿದಾರ್ಥಿಯಾಗಿದ್ದರು. ಅಂತಿಮ ಪರೀಕ್ಷೆ ಬರೆಯಲು ೧೯೯೭ರ ಎಪ್ರಿಲ್ ೨೨ರಂದು ಬಸ್ಸಿನಲ್ಲಿ ತೆರಳುತ್ತಿದ್ದಾಗ ಮಂಗಳೂರಿನ ಎಕ್ಕೂರು ಎಂಬಲ್ಲಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಸಹ ಪ್ರಯಾಣಿಕರ ಕಣ್ಮುಂದೆಯೇ ಭಾಸ್ಕರರನ್ನು ಬರ್ಬರವಾಗಿ ಕಡಿದು ಕೊಲೆಗೈಯಲಾಗಿತ್ತು. ರಾಜಕೀಯ ದ್ವೇಷದಿಂದ ಹತ್ಯೆ ನಡೆದಿದ್ದುದಾಗಿ ಆರೋಪ ಉಂಟಾಗಿತ್ತು. ಅತ್ಯುತ್ತಮ ಸಂಘಟಕನೂ, ಶ್ರೇಷ್ಠ ಭಾಷಣಕಾರರೂ ಆಗಿದ್ದ ಅವರು ಹಲವಾರು ಸಾಮಾಜಿಕ ಸಂಘಟನೆಗಳ ಸಾರಥಿಯಾಗಿದ್ದರು. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ಆರಂಭಕ್ಕೆ ಸತತ ದುಡಿದ ಅವರು ಆಸ್ಪತ್ರೆಯ ಪ್ರಥಮ ಕಾರ್ಯದರ್ಶಿಯಾಗಿದ್ದರು. ಜಿಲ್ಲಾ ಕಬಡ್ಡಿ ತಂಡದ ಸವ್ಯಸಾಚಿ ಆಟಗಾರರಾಗಿದ್ದರು.

ಕಳಂಕಿತ, ನಿಷ್ಪ್ರಯೋಜಕ ಸಚಿವರ ಕೈಬಿಡಲು ಮುಖ್ಯಮಂತ್ರಿ ಡಿವಿ ನಿರ್ಧಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಹಗರಣಗಳ ಆರೋಪ ಹಾಗೂ ನಿಷ್ಪ್ರಯೋಜಕ ಸಚಿ ವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಮಾಡಿ ಕೊಡಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನಿರ್ಧರಿಸಿದ್ದಾರೆ.
ಏಪ್ರಿಲ್ ಕೊನೆಯ ವಾರದಲ್ಲಿ ಸಂಪುಟ ಪುನರ್‌ರಚನೆಯಾಗಲಿದ್ದು ೮ರಿಂದ ೧೦ ಸಚಿವರನ್ನು ಕೈಬಿಟ್ಟು ತಮ್ಮ ಮಂತ್ರಿ ಮಂಡಲಕ್ಕೆ ೧೬ರಿಂದ ೧೮ ಸದಸ್ಯರ ಸೇರ್ಪಡೆ ಮಾಡಿಕೊಂಡು ಹೊಸ ಸ್ವರೂಪ ಕೊಡಲು ತೀರ್ಮಾ ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೆ ಅಧಿಕಾರ ನೀಡಲು ಸಾಧ್ಯವಿಲ್ಲ ಎಂದು ವರಿಷ್ಠರು ಸ್ಪಷ್ಟ ಸಂದೇಶವನ್ನು ರವಾನಿಸಿರುವ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆ ಕಾರ್ಯಕ್ಕೆ ಸದಾನಂದಗೌಡರು ಕೈ ಹಾಕಿದ್ದಾರೆ.
ಲೋಕೋಪಯೋಗಿ ಇಲಾಖೆ ಹೊಣೆ ಹೊತ್ತ ಸಿ.ಎಂ.ಉದಾಸಿ, ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಪಶು ಸಂಗೋಪನೆ ಸಚಿವ ರೇವು ನಾಯಕ್ ಬೆಳಮಗಿ, ವಸತಿ ಸಚಿವ ವಿ.ಸೋಮಣ್ಣ, ಸಣ್ಣ ಕೈಗಾರಿಕೆ ಸಚಿವ ರಾಜುಗೌಡ ಸೇರಿದಂತೆ ೮ ರಿಂದ ೧೦ ಮಂದಿಗೆ ಕೊಕ್ ನೀಡುವ ಸಂಭವವಿದೆ. ಸಂಪುಟದಿಂದ ಕೈಬಿಡಲು ಪಟ್ಟಿ ಮಾಡಿರುವವರು ಬಹುತೇಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎಡ-ಬಲ ಆಗಿದ್ದಾರೆ. ಅವರನ್ನು ಕೈ ಬಿಡುವ ಮೂಲಕ ಯಡಿಯೂರಪ್ಪ ಶಕ್ತಿ ಕುಗ್ಗಿಸುವುದು, ಕೈ ಬಿಟ್ಟವರ ಜಾಗಕ್ಕೆ ಹಿರಿಯ ಹಾಗೂ ಪಕ್ಷದ ನಿಷ್ಠಾವಂತ ರನ್ನು ನೇಮಿಸಲು ನಿರ್ಧರಿಸಲಾಗಿದೆ.

ಮಕ್ಕಳಿಲ್ಲದವರಿಗೆ ಮಗು ಮಾಡಿಕೊಡುವುದೇ ಈತನ ಉದ್ಯೋಗ!

Posted by JAYAKIRANA Kirana on | 0 comments | Leave a comment...

೮೨ ಮಕ್ಕಳ ಅಪ್ಪನ ಸ್ವಾರಸ್ಯಕರ ಕಥೆ
ಲಂಡನ್: ಇದು ಡಚ್ ವ್ಯಕ್ತಿಯೋರ್ವನ ಕಥೆ. ಇವನಿಗೆ ಮದುವೆ ಆಗಿಲ್ಲ. ಆದ್ದರಿಂದ ಹೆಂಡತಿಯೂ ಅಲ್ಲ. ಆದರೆ ಈಗ ಈತ ಸುಮಾರು ೮೨ ಮಕ್ಕಳ ತಂದೆ. ಈ ಪೈಕಿ ೪೫ ಹೆಣ್ಮಕ್ಕಳು, ೩೭ ಗಂಡು ಮಕ್ಕಳು. ಹಾಗೆಂದು ಇವರೆಲ್ಲರೂ ಈತನೊಂದಿಗೆ ಇದ್ದಾರೆ ಎನ್ನುವಂತಿಲ್ಲ. ಈ ಮಕ್ಕಳೆಲ್ಲರೂ ಜಗತ್ತಿನ ಬೇರೆ ಬೇರೆ ಮೂಲೆಯಲ್ಲಿ ಬೆಳೆಯುತ್ತಿದ್ದಾರೆ. ಜರ್ಮನಿ, ಹಾಲೆಂಡ್, ಇಟಲಿ, ಸ್ಪೇನ್, ಬೆಲ್ಜಿಯಂ, ಫ್ರಾನ್ಸ್, ನ್ಯೂಜಿಲೆಂಡ್ ಇತ್ಯಾದಿ ದೇಶಗಳಲ್ಲಿ ಇವನ ಮಕ್ಕಳಿದ್ದಾರೆ.
ಇದನ್ನೋದಿ ನಿಮಗೆ ಆಶ್ಚರ್ಯವೂ ಗೊಂದಲವೂ ಒಟ್ಟಿಗೇ ಆಗಿರಬಹುದಲ್ಲವೇ. ವಿಷಯ ಇಷ್ಟೆ. ಇವನು ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನು ದಯಪಾಲಿಸುವ ಮೂಲಕ ಸಮಾಜಸೇವೆ ಮಾಡುತ್ತಿದ್ದಾನಂತೆ. ಸ್ವಲ್ಪ ಕಾಲ ಇವನು ಸಮೀಪದ ಆಸ್ಪತ್ರೆಗಳಿಗೆ ವೀರ್ಯದಾನ ಮಾಡುತ್ತಿದ್ದನು. ಕ್ರಮೇಣ ಅದು ಬೋರ್ ಹೊಡೆಸಿ ನೈಸರ್ಗಿಕ ವಿಧಾನದ ಮೂಲಕ ಸಂತಾನಹೀನ ಮಹಿಳೆಯರಿಗೆ ಮಕ್ಕಳನ್ನು ಕೊಟ್ಟರೆ ಹೇಗೆ ಎಂದು ಆಲೋಚಿಸಿದ. ಜರ್ಮನಿಯ ವೆಬ್‌ಸೈಟ್ ಮೂಲಕ ಒಂದು ಜಾಹೀರಾತು ಕೂಡ ನೀಡಿದ. ಇದಕ್ಕೆ ಸ್ಪಂದಿಸಿದ ಮಹಿಳೆಯರ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿತ್ತು. ಆತನ ಹುರುಪು ಹೆಚ್ಚಿತು. ಇದೀಗ ಅಂಥ ಮಹಿಳೆಯರಿಗೆ ಮಕ್ಕಳನ್ನು ದಯಪಾಲಿಸುವುದನ್ನೇ ಒಂದು ಉದ್ಯೋಗವಾಗಿ ಪರಿವರ್ತಿಸಿಕೊಂಡಿದ್ದಾನೆ. ಈತನ ಸೇವೆ ಸಂಪೂರ್ಣ ಉಚಿತ ಎಂಬುದನ್ನು ಉಲ್ಲೇಖಿಸಲೇಬೇಕಾಗಿದೆ. ಕಳೆದ ಒಂಬತ್ತು ವರ್ಷದಿಂದ ಈತ ಈ ಕೆಲಸ ಮಾಡುತ್ತಿದ್ದಾನೆ. ತಿಂಗಳೊಂದರಲ್ಲಿ ಈತ ೧೫ ಮಹಿಳೆಯರೊಂದಿಗೆ ಮಲಗುತ್ತಾನಂತೆ.
ಅಂದ ಹಾಗೆ ಈತ ಮಹಿಳೆಯರಿಗೆ ಒಂದು ಷರತ್ತು ಹಾಕಿದ್ದಾನೆ. ಇವನಿಂದ ಮಗು ಪಡೆಯಲು ಬರುವ ಮಹಿಳೆಯರು ತಮಗೆ ಯಾವುದೇ ರೋಗಗಳಿಲ್ಲ ಮತ್ತು ತಾವು ಮಾದಕದ್ರವ್ಯಗಳ ವ್ಯಸನಿಗಳಲ್ಲ ಎಂಬುದನ್ನು ವೈದ್ಯಕೀಯ ದಾಖಲೆಗಳ ಮೂಲಕ ಸಾಬೀತು ಮಾಡಬೇಕಂತೆ. ಬಹುಷಃ ಇಂಥವರಿಗೆ ಭಾರತದಲ್ಲೂ ಅವಕಾಶ ಸಿಕ್ಕಿದರೆ ನಿರುದ್ಯೋಗ ಸಮಸ್ಯೆ ದೂರವಾಗಬಹುದೇನೋ?!

ಇಸ್ಲಾಮಿನಲ್ಲಿ ಮದುವೆ ಎಂದರೆ ಸಣ್ಣ ವಿಷಯ

Posted by JAYAKIRANA Kirana on | 0 comments | Leave a comment...



ಖಾಝಿ ತ್ವಾಕ ಮುಸ್ಲಿಯಾರ್
ಮಂಗಳೂರು: ವರ, ವಧುವಿನ ತಂದೆ ಅಥವಾ ಪೋಷಕರು, ನಿಖಾ ಮಾಡುವವರು ಹಾಗೂ ಇಬ್ಬರು ಸಾಕ್ಷಿಗಳಿದ್ದರೆ ಮದುವೆಯಾಗುತ್ತೆ. ಆದರೆ ಇಂತಹ ಸಣ್ಣ ವಿಷಯಕ್ಕೆ ವರದಕ್ಷಿಣೆ, ಅದ್ಧೂರಿಯ ಮೂಲಕ ಮದುವೆಯನ್ನು ದೊಡ್ಡ ವಿಷಯವನ್ನಾಗಿ ಪರಿಗಣಿಸಲಾ ಗುತ್ತಿರುವುದು ದುರಂತ ಎಂದು ಮಂಗ ಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿ ಯಾರ್ ಅಭಿಪ್ರಾಯಪಟ್ಟರು.
ನಿನ್ನೆ ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುರಭವನದಲ್ಲಿ ನಡೆದ ವರದಕ್ಷಿಣೆ ವಿರೋಧಿ ಸಮ್ಮೇ ಳನದಲ್ಲಿ ಅವರು ಮಾತನಾಡಿದರು.
ಪ್ರವಾದಿ (ಸ.ಅ) ಯವರು ವಧು ವಿಗೆ ದಕ್ಷಿಣೆ ನೀಡಿ ಅತ್ಯಂತ ಸರಳವಾಗಿ ಮದುವೆಯಾಗುವಂತೆ ಆದೇಶ ನೀಡಿದ್ದಾರೆ. ಆದರೆ ಇಂದು ಅದ್ಧೂರಿ ಯಾಗಿ ಮದುವೆಯಾಗುವ ಸಲುವಾಗಿ ವರದಕ್ಷಿಣೆ ಪಡೆಯಲಾಗುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ವಧುದಕ್ಷಿಣೆಗೆ ಬೇಡಿಕೆ ಹೆಚ್ಚಾದ ಕಾರಣ ಅಲ್ಲಿನ ಸರಕಾರ ಬ್ಯಾಂಕುಗಳ ಮೂಲಕ ವರನಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತಂದಿತ್ತು. ಆದರೆ ಅದರಿಂ ದಲೂ ವರ ಮದುವೆಯ ವೇಳೆ ಸಾಲ ಮಾಡುವುದು ತಪ್ಪಲಿಲ್ಲ. ಇಂತಹ ಪರಿಸ್ಥಿತಿ ವರದಕ್ಷಿಣೆಯಿಂದಲೂ ನಿರ್ಮಾಣ ವಾಗಿದೆ. ಇದು ಮುಸ್ಲಿಂ ವಲಯದಲ್ಲಿ ಹೆಣ್ಣು ಹೆತ್ತವರಿಗೆ ಶಾಪವಾಗಿ ಪರಿಣಮಿಸಿದೆ. ಕೇವಲ ಖಾಝಿಗಳು ಹಾಗೂ ಜಮಾತ್ ಖತೀಬರು ಮಾಡುವ ಭಾಷಣದಿಂದ ಈ ಪಿಡುಗು ನಿವಾರಿಸಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನ ಅಗತ್ಯವಾಗಿದ್ದು ಯುವಕ-ಯುವತಿಯರು ಇದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಹಾಗೂ ಅವಿವಾಹಿತರು ವರದಕ್ಷಿಣೆ ಪಡೆ ಯುವುದಿಲ್ಲ ಎನ್ನುವ ತೀರ್ಮಾನ ಕೈಗೊಂ ಡಲ್ಲಿ ಮುಂದೊಂದು ದಿನ ವರದಕ್ಷಿಣೆ ಎನ್ನುವ ಪಿಡುಗು ಸಂಪೂರ್ಣವಾಗಿ ನಿರ್ಮೂಲನೆಯಾಗಬಹುದು ಎಂದ ವರು ವಿಶ್ವಾಸ ವ್ಯಕ್ತಪಡಿಸಿದರು.

ಮನಪಾದಲ್ಲಿ ಮೂರು ತಿಂಗಳ ಕಾಂಗ್ರೆಸ್ ಆಡಳಿತಕ್ಕೆ ಅಡೆತಡೆ ಇಲ್ಲ

Posted by JAYAKIRANA Kirana on | 0 comments | Leave a comment...

ಮಂಗಳೂರು: ಈಗಾಗಲೇ ಒಂದು ತಿಂಗಳ ಆಡಳಿತ ಮುಗಿದಿದೆ. ಮುಂದಿನ ಮೂರು ತಿಂಗಳು ಯಾವ ಅಡೆತಡೆಗಳೂ ಇಲ್ಲದಂತೆ ಕಾಂಗ್ರೆಸ್ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಆಡಳಿತ ನಡೆಸಲಿದೆ. ಮಧ್ಯಂತರ ಚುನಾವಣೆ ನಡೆಯದೇ ಹೋದರೆ ಮುಂದಿನ ಫೆಬ್ರವರಿಯವರೆಗೂ ಕಾಂಗ್ರೆಸ್‌ನ ಗುಲ್ಜಾರ್‌ಬಾನುರವರೇ ಮೇಯರ್ ಆಗಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಬಹುಮತ ಇದ್ದರೂ ಕಾಂಗ್ರೆಸ್ ಸದಸ್ಯೆ ಮೇಯರ್ ಆಗಿರುವುದು ಪರಿಸ್ಥಿತಿಯ ವಿಪರ್ಯಾಸ. ಈ ಬೆಳವಣಿಗೆ ಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ ತನ್ನ ಮಾನ ಮುಚ್ಚಿಕೊಳ್ಳಲು ಹೈಕೋರ್ಟ್‌ಗೆ ಹೋಗಿ ಅಲ್ಲಿಂದಲೂ ಉಗಿಸಿಕೊಂಡು ಬಂದಿದೆ. ಬಿಜೆಪಿಯಲ್ಲಿ ಮಹಾ ಮಹಿಮ ಕಾನೂನು ತಜ್ಞರು ಇದ್ದುದರ ಹೊರತಾಗಿಯೂ ಹೈಕೋ ರ್ಟ್‌ನಲ್ಲಿ ಅದರ ವಾದ ನಿಲ್ಲಲಿಲ್ಲ. ಹೈಕೋರ್ಟ್ ನ್ಯಾಯಾಧೀಶರೇ ಜಿಲ್ಲಾ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡುವ ಅವಕಾಶ ನೀಡಿದ್ದು, ಬಿಜೆಪಿಯ ಆಶಾ ಬಾಗಿಲು ತೆರೆದಿಡುವಂತೆ ಮಾಡಿದೆ.
ಚುನಾವಣೆ ಪ್ರಕ್ರಿಯೆಗೆ ಯೋಗ್ಯವಲ್ಲದ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರಿಂದಾಗಿ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿಯ ರೂಪಾ ಡಿ. ಬಂಗೇರರವರು ಅವಕಾಶ ವಂಚಿತರಾಗಬೇಕಾಗಿದ್ದು ಹಳೆಯ ಕತೆ. ತಮ್ಮ ತಪ್ಪನ್ನು ಚುನಾವಣಾಧಿಕಾರಿಯ ತಲೆಯ ಮೇಲೆ ಹಾಕಿದ ಬಿಜೆಪಿಯ ಮಂದಿ ರೂಪಾರ ಮೂಲಕವೇ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಕಳೆದ ಒಂದು ತಿಂಗಳಲ್ಲಿ ಮೂರು ಬಾರಿ ತೀರ್ಪು ಮುಂದೂಡಿದ ಹೈಕೋರ್ಟ್ ಕೊನೆಗೂ ಮಂಗಳವಾರ ತೀರ್ಪು ಪ್ರಕಟಿಸಿದೆ.
ಈ ತೀರ್ಪನ್ನು ಕಾಂಗ್ರೆಸ್ ತಮ್ಮ ಪರ ಎಂದು ಬೀಗುತ್ತಿದ್ದರೆ, ಬಿಜೆಪಿ ಯವರು ನ್ಯಾಯಾಲಯ ನಮಗೆ ಹೋರಾಟದ ಮತ್ತೊಂದು ಅವಕಾಶ ನೀಡಿದೆ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲು ಯೋಗ್ಯವಾದ ಪ್ರಕರಣ ಇದಲ್ಲ ಎಂದು ಹೇಳಿರುವ ಹೈಕೋರ್ಟ್, ಬೇಕಿದ್ದರೆ ಜಿಲ್ಲಾ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಇತ್ಯರ್ಥ ಪಡಿಸಿಕೊಳ್ಳಿ ಎಂದು ಹೇಳಿದೆ. ಚುನಾ ವಣೆ ನಡೆದ ಎರಡು ವಾರಗಳಲ್ಲಿ ತಕರಾರು ಅರ್ಜಿ ಸಲ್ಲಿಸಬೇಕಾಗಿ ರುವುದು ನಿಯಮ. ಆದರೆ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು ದರಿಂದ ಹೈಕೋರ್ಟ್‌ನ ತೀರ್ಪು ಬಂದ ಎರಡು ವಾರಗಳ ಬಳಿಕದ ಅವಕಾಶವನ್ನು ಜಿಲ್ಲಾ ನ್ಯಾಯಾಲ ಯದಲ್ಲಿ ದಾವೆ ಹೂಡಲು ನೀಡ ಲಾಗಿದೆ. ಇದು ಅಲ್ಲದೆ ದಾವೆ ಹೂಡಿದ ಎರಡು ತಿಂಗಳುಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸುವಂತೆ ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆಯನ್ನೂ ನೀಡಿದೆ. ಬಿಜೆಪಿ ಇದನ್ನು ಯಾವರೀತಿ ಬಳಸಿಕೊಳ್ಳುತ್ತದೆ ಎಂಬುದು ಬೇರೆ ಮಾತು.
ಹೈಕೋರ್ಟ್ ಪ್ರಕಟಿಸಿದ ತೀರ್ಪು ಕೈಗೆ ಸಿಗುವ ಹೊತ್ತಿಗೆ ನ್ಯಾಯಾಲಯದ ಬೇಸಿಗೆಯ ರಜಾ ಅವಧಿ ಆರಂಭವಾಗುತ್ತದೆ. ಒಂದು ತಿಂಗಳ ರಜೆಯ ಬಳಿಕ ಮತ್ತೆ ಕಲಾಪಗಳು ನಡೆಯುತ್ತದೆ. ಆದುದರಿಂದ ಮೇಯರ್ ಗುಲ್ಜಾರ್‌ಬಾನುರವರು ಮೇಯರ್ ಪಟ್ಟಕ್ಕೆ ಯಾವ ಅಡೆತಡೆಯೂ ಇರಲಾರದು. ಜಿಲ್ಲಾ ನ್ಯಾಯಾಲ ಯದಲ್ಲಿ ನ್ಯಾಯ ನಮ್ಮ ಪರವಾಗಿಯೇ ಇರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕ, ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ವ್ಯಕ್ತಪಡಿಸಿದ್ದಾರೆ. ಇಂತಹದ್ದೇ ವಿಶ್ವಾಸ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ.
ಬಿಜೆಪಿ ಆಡಳಿತ ಅವಧಿಯ ಐದನೆ ಮೇಯರ್ ಆಯ್ಕೆಯ ವಿಷಯದಲ್ಲಿ ಬಿಜೆಪಿಯ ನಾಯಕರೇ ಸೃಷ್ಟಿಸಿದ ಗೊಂದಲದಿಂದಾಗಿ ಅವಕಾಶ ವಂಚಿತ ರಾಗುವಂತಾಗಿದ್ದು ಒಂದು ಕಡೆಯಾದರೆ, ಕೊನೆಯ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ ಜನರ ಮನಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬ ಬಿಜೆಪಿಯ ಪ್ರಯತ್ನಕ್ಕೆ ಈಗಿನ ಗೊಂದಲಗಳು ಅಲ್ಪ ಮಟ್ಟಿನ ಹಿನ್ನಡೆ ಒದಗಿಸಿದೆ ಎಂದೇ ಹೇಳಬಹುದು.

ಪಕ್ಷ ವಿರೋಧಿಗಳಿಗೆ ಟಿಕೆಟ್ ನೀಡದಿರಲು ನಿರ್ಧಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯಡಿಯೂರಪ್ಪ ಬೆಂಬಲಿತ ಬಹುತೇಕ ಸಚಿವರನ್ನು ಸಂಪುಟದಿಂದ ಕೈ ಬಿಡಲು ಡಿ.ವಿ.ಸದಾನಂದ ಗೌಡ ನಿರ್ಧರಿಸಿದ್ದರೆ, ಮತ್ತೊಂದೆಡೆ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮುಂಬವರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಮತ್ತೆ ಅವಕಾಶ ನಿಡದಿರಲು ಚಿಂತನೆ ನಡೆಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿರುವ ಶಾಸಕರ ಕ್ಷೇತ್ರಗಳಲ್ಲಿ ಸಮರ್ಥ ಪರ್ಯಾಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯನ್ನು ಸಂಘಟನೆಯ ಸದಸ್ಯರು ಮಾಡುತ್ತಿದ್ದಾರೆ. ಅದರಲ್ಲೂ ಯಡಿಯೂರಪ್ಪ ಬೆಂಬಲಿತ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕನನ್ನು ಬೆಳೆಸುವ ಪ್ರಕ್ರಿಯೆ ನಡೆಯುತ್ತಿದೆ. ವಲಸಿಗರನ್ನು ತಡೆಗಟ್ಟಿ ನಿಷ್ಟಾವಂತ ಕಾರ್ಯಕರ್ತರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಆರ್‌ಎಸ್ಸೆಸ್ ಕಾರ್ಯಕರ್ತರ ಪಡೆ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನರ ಬೆಂಬಲ ಪಡೆದಿರುವ ವ್ಯಕ್ತಿಗಳ ಶೋಧನಾ ಕಾರ್ಯದಲ್ಲಿ ತೊಡಗಿದೆ. ಭವಿಷ್ಯದಲ್ಲಿ ಯಡಿಯೂರಪ್ಪರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಪ್ರಯತ್ನಗಳು ಈಗಿನಿಂದಲೇ ನಡೆಯುತ್ತಿವೆ. ಮತ್ತೆ ಅಧಿಕಾರ ಇಲ್ಲ ಎಂಬ ಸಂದೇಶ ಈಗಾಗಲೇ ಯಡಿಯೂರಪ್ಪರಿಗೆ ರವಾನಿಸಿರುವ ಪಕ್ಷದ ವರಿಷ್ಠರು, ಅವರ ಬೆಂಬಲಿಗರನ್ನೂ ಪಕ್ಷದಿಂದ ದೂರ ಇಡುವ ಕಾರ್ಯತಂತ್ರ ರೂಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಳಂಕಿತರು ಭ್ರಷ್ಟರು, ಹಗರಣಗಳಲ್ಲಿ ಸಿಲುಕಿರುವವರಿಗೆ ಟಿಕೆಟ್ ನೀಡದಿರಲು ಆರ್‌ಎಸ್ಸೆಸ್ ನಿರ್ಧರಿಸಿದೆ.

ನಕ್ಸಲರಿಗೆ ಮಣಿದ ಓಡಿಶಾ ಸರಕಾರ

Posted by JAYAKIRANA Kirana on | 0 comments | Leave a comment...

ಭುವನೇಶ್ವರ: ನಕ್ಸರಿಂದ ಅಪಹರಣಕ್ಕೊಳಗಾಗಿರುವ ಬಿಜೆಡಿ ಶಾಸಕನ ಬಿಡುಗಡೆಗಾಗಿ ಅಲ್ಲಿಯ ಸರಕಾರ ನಕ್ಸಲರ ಬೇಡಿಕೆ ಈಡೇರಿಸಲು ಮುಂದಾಗಿದೆ. ಜೈಲಿ ನಲ್ಲಿರುವ ತಮ್ಮ ೧೩ ಅನುಚರನ್ನು ಬಿಡುಗಡೆ ಮಾಡಬೇಕು. ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಬೇಡಿಕೆಯಾಗಿದೆ.
ತಮ್ಮ ಬೇಡಿಕೆ ಈಡೇರಿಸಲು ನಕ್ಸಲರು ವಿಧಿಸಿದ್ದ ಗಡುವು ಬುಧವಾರ ಸಂಜೆ ಐದು ಗಂಟೆಗೆ ಮುಗಿಯುತ್ತಿದ್ದಂತೆಯೇ ಸರಕಾರದ ನಿರ್ಧಾರ ಹೊರಬಿದ್ದಿದೆ. ತಮ್ಮ ಗಡುವು ಮೀರುತ್ತಿದ್ದರೂ ಸರಕಾರ ನಿರ್ಧಾರ ಪ್ರಕಟಿಸದೇ ಇದ್ದಾಗ ಕುಪಿತಗೊಂಡಿದ್ದ ಬಂಡುಕೊರರು ಮತ್ತೆ ಗಡುವು ನೀಡಲು ನಿರಾಕರಿಸಿದ್ದಲ್ಲದೆ ಶಾಸಕನ ಭವಿಷ್ಯವನ್ನು ನಮ್ಮ ಪ್ರಜಾ ನ್ಯಾಯಾಲಯವೇ ನಿರ್ಧರಿಸುತ್ತದೆ ಎಂಬ ಸಂದೇಶ ನೀಡಿದ್ದರು.
ನಕ್ಸಲರ ಒತ್ತೆಯಾಳಾಗಿರುವ ಶಾಸಕ ಹಿಕಾಕರವರು ತಾನು ಸುರಕ್ಷಿತವಾಗಿರುವುದಾಗಿ ದೂರವಾಣಿ ಮೂಲಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಶೇಷ ಎಂದರೆ ಬಂಧಿತ ನಕ್ಸಲರ ಬಿಡುಗಡೆ ಮಾಡದಿರುವಂತೆ ಕೋರಿ ನಿವೃತ್ತ ಸೇನಾಧಿಕಾರಿ ಯೋರ್ವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಕೂಡ ಇಂದೇ ಆರಂಭವಾಗಲಿದೆ. ಭದ್ರತಾ ಪಡೆಯಯ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಕ್ಸಲರನ್ನು ಬಂಧಿಸಿರುವುದರಿಂದ ಅವರನ್ನು ಬಿಡುಗಡೆ ಮಾಡಬಾರದು ಎಂದು ನಿವೃತ್ತಮೇಜರ್ ಜನರಲ್ ಗಗನದೀಪ್ ಸುಪ್ರೀಂ ಕೋರ್ಟ್ ಅನ್ನು ಕೋರಿದ್ದಾರೆ.

ಪಡುಬಿದ್ರಿ: ತ್ಯಾಜ್ಯ ಸಂಸ್ಕರಣಾ ಘಟಕ ಜಿಲ್ಲಾಧಿಕಾರಿ ಪರಿಶೀಲನೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ನಿಟ್ಟಿನಲ್ಲಿ ಬುಧವಾರ ಜಿಲ್ಲಾಧಿ ಕಾರಿ ಡಾ. ಎಂ.ಟಿ. ರೇಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಕ್ತ ಸರಕಾರಿ ಜಾಗ ಸಿಕ್ಕಲ್ಲಿ ತುರ್ತಾಗಿ ಘನ ಮತ್ತು ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಜಾಗ ಸಿಕ್ಕದಿದ್ದರೆ, ಖಾಸಗಿಯವರಿಗೆ ಹಣ ನೀಡಿ ಜಾಗ ಪಡೆದು ಘಟಕ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯಾಡಳಿತವೇ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿ ಸಿಕೊಳ್ಳಬೇಕೆಂದೂ ಜಿಲ್ಲಾಧಿಕಾರಿ ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಿಗೆ ಹೇಳಿದರು.೩೦ ಸೆಂಟ್ಸ್ ಸರಕಾರಿ ಜಾಗದ ಬೆರಂದಿಕೆರೆ ಬಳಿ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಬಳಿ ಸ್ಥಳೀ ಯರು ಮನವಿ ಮಾಡಿದಾಗ, ಕೇವಲ ೩೦ ಸೆಂಟ್ಸ್ ಜಾಗದಲ್ಲಿ ಘಟಕ ಸ್ಥಾಪನೆ ಯಿಂದ ಗ್ರಾಮದ ಶೇ. ೧೦ರಷ್ಟು ಸಮಸ್ಯೆ ಮಾತ್ರ ಪರಿಹಾರವಾಗಲಿದೆ. ಆದ್ದರಿಂದ ಸಮಗ್ರ ಗ್ರಾಮದ ನಿರ್ವಹಣೆಗಾಗಿ ಬೇರೆ ಜಾಗ ತೋರಿಸಿ ಯೋಜನೆ ಕಾರ್ಯ ಗತಗೊಳಿಸುವಂತೆ ಆದೇಶ ನೀಡಿದರು.

ಎಂಎಸ್‌ಇಝಡ್ ಕಾರಿಡಾರ್ ರಸ್ತೆಗೆ ಸ್ಥಳೀಯರ ವಿರೋಧ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗೂಂಡಾಗಳ ಕಾವಲಿನಲ್ಲಿ ಗುರುಪುರ ನದಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಬಹುದು ಎಂಬ ಎಂಎಸ್‌ಇಝಡ್ ಯೋಜನೆ ಬುಧವಾರ ಸ್ಥಳೀಯರ ವಿರೋಧದಿಂದಾಗಿ ವಿಫಲಗೊಂಡಿದೆ.
ನಿನ್ನೆಯೂ ಬಾಡಿಗೆ ಗೂಂಡಾಗಳ ರಕ್ಷಣೆಯಲ್ಲಿ ನದಿಗೆ ಮಣ್ಣು ಹಾಕುವ ಕೆಲಸ ಆರಂಭಗೊಂಡಿತ್ತು. ಆದರೆ ಡಿವೈಎಫ್‌ಐ ನೇತೃತ್ವದಲ್ಲಿ ದೊಣ್ಣೆ ಹಿಡಿದುಕೊಂಡು ನೂರಾರು ಸ್ಥಳೀ ಯರು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡು ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಸ್ಥಳೀಯರು ಸ್ಥಳದಿಂದ ನಿರ್ಗಮಿಸಿದ್ದಾರೆ.

ಪಂಜಾಬ್ ವಿರುದ್ಧ ಸೇಡು ತೀರಿಸಿದ ಕೆಕೆಆರ್

Posted by JAYAKIRANA Kirana on | 0 comments | Leave a comment...

ಗೌತಮ್ ಗಂಭೀರ್ ಕಪ್ತಾನನ ಆಟ
ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಸೋತಿದ್ದ ಸೇಡನ್ನು ಕೆಕೆಆರ್ ನಿನ್ನೆ ಅವರ ನೆಲದಲ್ಲಿಯೇ ತೀರಿಸಿಕೊಂಡಿದೆ. ಬೌಲಿಂಗ್‌ನಲ್ಲಿ ಬ್ರಿಟ್ ಲೀ ಮತ್ತು ಸುನೀಲ್ ನಾರೈನ್ ಹಾಗೂ ನಂತರ ಬ್ಯಾಟಿಂಗ್‌ನಲ್ಲಿ ನಾಯಕ ಗೌತಮ್ ಗಂಭೀರ್ ನೀಡಿದ ಉತ್ತಮ ಪ್ರದರ್ಶನದ ನೆರವಿನಿಂದ ಇಲ್ಲಿ ಪಂಜಾಬ್ ವಿರುದ್ಧದ ಪಂದ್ಯವನ್ನು ಕೆಕೆಆರ್ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಪರ ಈ ಬಾರಿ ಕೂಡ ಪಾಲ್ ವಲ್ತಾಟಿ (೮) ನಿರಾಶೆ ಮೂಡಿಸಿದರು. ಮಧ್ಯಮ ಕ್ರಮಾಂಕ ವಿಫಲವಾದರೂ ಶಾನ್ ಮಾರ್ಶ್ (೩೩) ಹಾಗೂ ಆಡಮ್ ಗಿಲ್‌ಕ್ರಿಸ್ಟ್ (೪೦) ಕೆಲಹೊತ್ತು ಕ್ರೀಸ್‌ನಲ್ಲಿದ್ದ ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೨೪ ರನ್ ಗಳಿಸಿತು. ಗುರಿ ಬೆನ್ನತ್ತಿದ್ದ ಕೆಕೆಆರ್ ಯಾವ ಅಡ್ಡಿ ಆತಂಕವನ್ನು ಎದುರಿಸಲಿಲ್ಲ. ಅದರಲ್ಲೂ ನಾಯಕ ಗಂಭೀರ್ ದಾಖಲಿಸಿದ ಅಜೇಯ ಅರ್ಧಶತಕದ ನೆರವಿನಿಂದ ತಂಡ ಇನ್ನೂ ೨೧ ಎಸೆತಗಳು ಬಾಕಿ ಉಳಿದಿರುವಂತೆ ಎರಡು ವಿಕೆಟ್ ನಷ್ಟಕ್ಕೆ ೧೨೭ ರನ್ ಗಳಸಿ ಜಯಸಾಧಿಸಿತು. ಗಂಭೀರ್ ಕೇವಲ ೪೪ ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಏಳು ಬೌಂಡರಿಗಳ ನೆರವಿನಿಂದ ಅಜೇಯ ೬೬ ರನ್ ಸಿಡಿಸಿರು.
ಗುರಿ ಬೆನ್ನತ್ತುವ ಆರಂಭದಲ್ಲಿ ಕೆಕೆಆರ್ ಉತ್ತಮ ಆರಂಭ ಕಂಡಿತು. ತಂಡಕ್ಕೆ ಈ ಬಾರಿ ಪ್ರವೇಶಿಸಿದ್ದ ಮೆಕ್‌ಕಲಮ್ (೧೫) ಹಾಗೂ ಗಂಭೀರ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ (೫೩)ವನ್ನು ನಡೆಸಿದರು. ಅಂತಿಮವಾಗಿ ಮೆಕ್‌ಕಲಮ್ ಹಾಗೂ ನಂತರ ಬಂದ ಬಿಸ್ಲಾ (೧೧) ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ಆದರೆ ಉತ್ತಮ ಫಾರ್ಮ್‌ನಲ್ಲಿರುವ ಜ್ಯಾಕ್ ಕ್ಯಾಲೀಸ್ (೩೩) ಹಾಗೂ ಗಂಭೀರ್ ಜೋಡಿ ಮೂರನೇ ವಿಕೆಟ್‌ಗೆ ಅಜೇಯ ೫೩ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂಜಾಬ್ ಪರ ಚಾವ್ಲಾ ಎರಡು ವಿಕೆಟ್ ಪಡೆದರು. ಈ ಮುನ್ನ ಬ್ಯಾಟಿಂಗ್ ನಡೆಸಿದ್ದ ಪಂಜಾಬ್ ಪರ ತಂಡಕ್ಕೆ ಉತ್ತಮ ಆರಂಭ ನೀಡಬೇಕಿದ್ದ ವಲ್ತಾಟಿ ಹಾಗೂ ಮಂದೀಪ್ ಸಿಂಗ್ (೬) ವಿಫಲಗೊಂಡಿದ್ದು, ತಂಡಕ್ಕೆ ದುಬಾರಿಯಾಯಿತು. ಆದರೆ ಮಾರ್ಶ್ ಉತ್ತಮವಾಗಿ ಮುನ್ನಡೆಯುತ್ತಿದ್ದರೂ ಕೆಟ್ಟ ತೀರ್ಪಿಗೆ ಬಲಿಯಾದರು. ಲೀ ಎಸೆತದಲ್ಲಿ ಮಾರ್ಶ್ ಬ್ಯಾಟ್‌ನ ಹೊರಅಂಚು ತಾಗಿ ಕೀಪರ್ ಬಿಸ್ಲಾರತ್ತ ಸಾಗಿತು. ಆದರೆ ಕೀಪರ್ ಕ್ಯಾಚ್ ಹಿಡಿಯುವಾಗ ಸ್ಪಷ್ಟವಾಗಿ ಅದು ಬಂಪ್ ಅಗಿದ್ದು, ಕಾಣಿಸಿತು. ಆದರೂ ಪೆವಿಲಿಯನ್‌ಗೆ ತೆರಳುವಂತೆ ಮಾರ್ಶ್‌ಗೆ ಬಿಸ್ಲಾ ಸೂಚಿಸಿದರು.

ಅಂತರ್ಜಾಲದಲ್ಲಿ ಕ್ರೇಜ್ ಹುಟ್ಟಿಸಿದ ಶರಪೋವಾ ಹೊಸ ಹೇರ್‌ಸ್ಟೈಲ್!

Posted by JAYAKIRANA Kirana on | 0 comments | Leave a comment...

ಮಾಸ್ಕೊ: ಒಂದು ಸಮಯದಲ್ಲಿ ಟೆನಿಸ್ ಲೋಕದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದ ವಿಶ್ವದ ಮಾಜಿ ನಂಬರ್ ವನ್ ಟೆನಿಸ್ ಆಟಗಾರ್ತಿ ಹಾಗೂ ಖ್ಯಾತ ಮಾಡೆಲ್ ಎಂದೇ ಕರೆಯಬ ಹುದಾದ ರಶ್ಯಾದ ಮರಿಯಾ ಶರ ಪೋವಾ ಈಗ ಹೊಸ ಹೇರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶರ ಪೋವಾ ತನ್ನ ಹೊಸ ಹೇರ್‌ಸ್ಟೈಲ್‌ನ ಫೊಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಕೊಂಡಿದ್ದು, ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಲುಕ್‌ನಲ್ಲಿ ಶರಪೋವಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅಲ್ಲದೆ ಈಗ ಕೂದಲು ಕಿವಿಯ ಅಂಚಿಗೆ ಕೊನೆಗೊ ಳ್ಳುತ್ತದೆ. ‘ಈ ಬಗ್ಗೆ ನೀವೇನು ಅನ್ನು ತ್ತೀರಿ, ನಾನಿದನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಶರಪೋವಾ ಫೇಸ್‌ಬುಕ್‌ನಲ್ಲಿ ತನ್ನ ಫೊಟೋ ದೊಂದಿಗೆ ಪೋಸ್ಟ್ ಮಾಡಿದ್ದಾಳೆ. ಫೊಟೋಗೆ ಪ್ರತಿಕ್ರಿಯೆ ನೀಡಿರುವ ಅನೇಕ ಅಭಿಮಾನಿಗಳು ಶರಪೋವಾಳ ಈ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಶರಪೋವಾ ಕೇವಲ ವಿಗ್ ಧರಿಸಿ ಜನರನ್ನು ಮೋಸ ಮಾಡಿದ್ದಾರೆ.

ನಿಂದನಕಾರಿ ಭಾಷೆ ಬಳಸಿದ ಮಿಶ್ರಾಗೆ ಎಚ್ಚರಿಕೆ

Posted by JAYAKIRANA Kirana on | 0 comments | Leave a comment...

ಜೈಪುರ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯವ ವೇಳೆ ಆಕ್ರಮಣಕಾರಿ ಭಾಷೆ ಉಪ ಯೋಗಿಸಿದ್ದ ಡೆಕ್ಕನ್ ಚಾರ್ಜರ‍್ಸ್ ತಂಡದ ಸ್ಪಿನ್ನರ್ ಅಮಿತ್ ಮಿಶ್ರಾ ಎಚ್ಚ ರಿಕೆಯನ್ನು ಪಡೆದಿದ್ದಾರೆ. ಪಂದ್ಯದಲ್ಲಿ ರಾಜಸ್ಥಾನ್ ಡೆಕ್ಕನ್ ಒಡ್ಡಿದ್ದ ಕಠಿಣ ೧೯೭ ರನ್‌ಗಳ ಗುರಿಯನ್ನು ಸಾಧಿಸಿ ಭರ್ಜರಿ ಜಯವನ್ನು ಕಂಡಿತ್ತು. ಈ ವೇಳೆ ಮಿಶ್ರಾ ರಾಜಸ್ಥಾನ್ ಬ್ಯಾಟ್ಸ್‌ಮೆನ್ ಗಳಿಗೆ ಕಠಿಣ ಶಬ್ದ ಪ್ರಯೋಗಿಸಿದ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನ ಪಡೆದಿ ದ್ದಾರೆ.
ಮಿಶ್ರಾ ತನ್ನ ತಪ್ಪನ್ನು ಒಪ್ಪಿಕೊಂಡಿ ದ್ದು, ಅಲ್ಲದೆ ಎಚ್ಚರಿಕೆ ನೀಡಿದ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮಿಶ್ರಾ ಈ ಬಗ್ಗೆ ಅಧಿಕೃತ ಎಚ್ಚರಿಕೆ ಪಡೆದಿದ್ದಾರೆ. ಐಪಿಎಲ್ ನಿಯಮಾ ವಳಿಯ ಪ್ರಕಾರ ಒಂದನೇ ಹಂತದ ಅಪರಾಧಕ್ಕಾಗಿ ವಾಗ್ದಾಂಡನೆ ನೀಡಲಾ ಗಿದೆ. ಅಲ್ಲದೆ ಕೂಟದಲ್ಲಿ ಮ್ಯಾಚ್ ರೆಫ್ರಿ ತೀರ್ಪು ಅಂತಿಮವಾಗಿರುತ್ತದೆ.

ಮೀನು ಮಾರಾಟ ವಿವಾದ: ಹಲ್ಲೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಸುಳ್ಯ ನಗರದಲ್ಲಿ ಮೀನು ಮಾರಾಟ ವಿಷಯಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಜಯನಗರದಲ್ಲಿ ಸಂಭವಿಸಿದೆ. ನಗರ ಪಂಚಾಯತ್‌ನ ಮೀನು ಏಲಂ ವಿಷಯಕ್ಕೆ ಸಂಬಂಧಿಸಿ ಜಲೀಲ್ ಎಂಬವರ ಮೇಲೆ ಮುನೀರ್ ಮತ್ತು ಸಾಯಿ ಎಂಬವರು ಹಲ್ಲೆ ನಡೆಸಿದ್ದಾರೆ. ಜಲೀಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೊನ್ನೆ ತಾನೆ ನಡೆದ ಮೀನಿನ ಏಲಂ ವಿಷಯದಲ್ಲಿ ಎರಡು ಗುಂಪುಗಳ ಮಧ್ಯೆ ವೈಷಮ್ಯ ಇತ್ತೆನ್ನಲಾ ಗಿದೆ. ಇದು ತಾರಕಕ್ಕೇರಿ ಹೊಡೆದಾಟ ನಡೆದಿದೆ.

ಪುತ್ತೂರು: ಮನೆಯಲ್ಲಿ ಭಾರೀ ಕಳ್ಳತನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇಂದು ನಸುಕಿನ ಜಾವ ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರ ಎಂಬಲ್ಲಿನ ಮನೆಯೊಂದರಲ್ಲಿ ಭಾರೀ ಕಳ್ಳತನ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿದೆ. ಮುರ ಎಂಬಲ್ಲಿನ ಮನೆಗೆ ನಸುಕಿನ ಜಾವ ನುಗ್ಗಿದ ಕಳ್ಳರ ತಂಡ ಮನೆಯ ಕಪಾಟಿನಲ್ಲಿದ್ದ ೫೦ ಪವನ್ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದೆ. ಈ ವೇಳೆ ಮನೆಯಲ್ಲಿ ಜನರಿದ್ದರು ಎನ್ನಲಾಗಿದೆ. ಕಳ್ಳತನ ಕೃತ್ಯ ಬೆಳಕಿಗೆ ಬಂದ ಕೂಡಲೇ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ೧೧ ಲಕ್ಷ ರೂ. ಎಂದು ಹೇಳಲಾಗಿದೆ. ಈ ಬಗ್ಗೆ ಇನ್ನಷ್ಟೇ ಎಫ್‌ಐಆರ್ ದಾಖಲಾಗಬೇಕಿದೆ. ಸ್ಥಳಕ್ಕೆ ಬೆರಳಚ್ಚು ದಳ, ಶ್ವಾನ ದಳ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ.

ಸುವರ್ಣ ವಾಹಿನಿ ವಿರುದ್ಧ ಪಾಲೆಮಾರ್ ದೂರು: ಎಫ್‌ಐಆರ್ ದಾಖಲು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಸುವರ್ಣ ವಾಹಿನಿ ವಿರುದ್ಧ ನ್ಯಾಯಾಲಯಕ್ಕೆ ದಾವೆ ದಾಖಲಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂದರು ಠಾಣೆಗೆ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಬಂದರು ಠಾಣೆಯಲ್ಲಿ ಸುವರ್ಣ ವಾಹಿನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಸುವರ್ಣ ವಾಹಿನಿಯ ವಿರುದ್ಧ ಅಶ್ಲೀಲ ಚಿತ್ರ ಪ್ರದರ್ಶನ ಹಾಗೂ ದುರುದ್ದೇಶಪೂರ್ವಕ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಆರೋಪ ಹೊರಿಸಲಾಗಿದೆ. ಪಾಲೆಮಾರ್ ಅವರು ಇಂಥ ಸುದ್ದಿ ಪ್ರಸಾರದಿಂದಾಗಿ ಸಚಿವ ಸ್ಥಾನ ಕಳೆದುಕೊಳ್ಳುವಂತಾಯಿತು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ವಕೀಲರಾದ ಪಿ.ಪಿ.ಹೆಗ್ಡೆ ಪಾಲೆಮಾರ್ ಪರ ವಾದ ಮಂಡಿಸಿದ್ದರು.

ಮೋಹನ್ ವಿಚಾರಣೆ: ಇಬ್ಬರಿಂದ ಸಾಕ್ಷ್ಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೈನೆಡ್ ಮೋಹನನ ವಿಚಾರಣೆ ಇಲ್ಲಿನ ತ್ವರಿತಗತಿ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ನಿನ್ನೆ ಸಾಕ್ಷಿಗಳಾದ ಬಂಟ್ವಾಳ ಬಿಇಒ ಕಚೇರಿಯ ಮೆನೇಜರ್ ವೆಂಕಟರಮಣ ಭಟ್ ಮತ್ತು ಪುತ್ತೂರಿನ ಸಲೀಂ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು. ವೆಂಕಟರಮಣ ಭಟ್ ಅವರು ಮೋಹನ್ ಕುಮಾರ್ ಶಿಕ್ಷಕನಾಗಿದ್ದ ವೇಳೆ ೨೦೦೨ರ ಅಕ್ಟೋಬರ್ ೨೪ರಿಂದ ೨೦೦೫ರ ಮೇ ಒಂದರವರೆಗೆ ಸತತವಾಗಿ ಹಾಗೂ ೨೦೦೫ರ ಮೇ ಮೂರನೇ ತಾರೀಖಿನಿಂದ ಅನಧಿಕೃತವಾಗಿ ಗೈರು ಹಾಜರಾಗಿದ್ದ ಬಗ್ಗೆ ಸಾಕ್ಷಿ ನುಡಿದರು. ಸಲೀಂ ಅವರು ತನ್ನ ಮೊಬೈಲ್ ಅನ್ನು ವಿನುತಾಳಿಗೆ ೨೦೦೯ರ ಮೇ ಎರಡರಂದು ಮಾರಾಟ ಮಾಡಿದ್ದಾಗಿಯೂ ಮತ್ತು ಅದನ್ನು ಮೋಹನ್ ಕುಮಾರ್ ಬಳಸುತ್ತಿದ್ದ ಎಂಬುದಾಗಿಯೂ ಸಾಕ್ಷಿ ನುಡಿದಿದ್ದಾರೆ.

ರೈಲು ಪ್ರಯಾಣದ ವೇಳೆ ಹಸುಳೆ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಉತ್ತರ ಪ್ರದೇಶದ ಪತಿಯ ಮನೆಯಿಂದ ಕಾಸರಗೋಡಿನಲ್ಲಿರುವ ತವರುಮನೆಗೆ ರೈಲಿನಲ್ಲಿ ಸಂಚರಿಸುತ್ತಿದ್ದ ಮಹಿಳೆಯ ಒಂದು ವರ್ಷ ಪ್ರಾಯದ ಮಗು ಸಾವನ್ನಪ್ಪಿದ್ದು, ಮಹಿಳೆ ೧೨ ತಾಸುಗಳ ಕಾಲ ಮಗುವಿನ ಕಳೇಬರದೊಂದಿಗೆ ಪ್ರಯಾಣ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೇಕಲಕೋಟೆ ನಿವಾಸಿ ಮಿಸ್ರಿಯಾ(೨೦) ಎಂಬಾಕೆಯ ಮದುವೆಯು ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದ ಸಹರಣ್‌ಪುರದ ದುಷ್ಯಂತ್ ಎಂಬಾತನೊಂದಿಗೆ ನಡೆದಿತ್ತು. ಮದುವೆಯ ಬಳಿಕ ದುಷ್ಯಂತ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಫಕ್ರುದ್ದೀನ್ ಆಗಿದ್ದ. ಬೇಕಲಕೋಟೆಯಲ್ಲೇ ವಾಸವಿದ್ದ ದಂಪತಿ ಆರು ತಿಂಗಳ ಹಿಂದೆ ಉತ್ತರ ಪ್ರದೇಶಕ್ಕೆ ಹೋಗಿದ್ದು, ಅಲ್ಲಿ ವಾಸಿಸುತ್ತಿದ್ದರು.
ಈ ದಂಪತಿಗೆ ನಿಜಾಮ್ ಎಂಬ ಮೂರರ ಹರೆಯದ ಗಂಡು ಮಗು ಹಾಗೂ ಸೈನಾಲಾ ಎಂಬ ಒಂದು ವರ್ಷ ಪ್ರಾಯದ ಹೆಣ್ಣು ಮಗುವೂ ಆಗಿತ್ತು. ಆದರೆ ಇತ್ತೀಚೆಗೆ ದುಷ್ಯಂತನು ಮಿಸ್ರಿಯಾ ಹಾಗೂ ಮಕ್ಕಳನ್ನು ಮತಾಂತರಗೊಳ್ಳುವಂತೆ ಬೆದರಿಸುತ್ತಿದ್ದ ಹಿನ್ನೆಲೆಯಲ್ಲಿ ಮಿಸ್ರಿಯಾ ಆತನನ್ನು ತೊರೆದು ಊರಿಗೆ ಬರುತ್ತಿದ್ದರು. ಈ ವೇಳೆ ಅತಿಯಾದ ವಾಂತಿಬೇಧಿಯಿಂದ ಸೈನಾಲಾ ಸಾವನ್ನಪ್ಪಿದ್ದು, ಮಿಸ್ರಿಯಾ ಅವರು ವಡೋದರಾದವರೆಗೆ ಸುಮಾರು ೧೨ ತಾಸುಗಳ ಕಾಲ ಮಗುವನ್ನು ಕೈಯಲ್ಲಿ ಹಿಡಿದೇ ಪ್ರಯಾಣಿಸಿದ್ದಾರೆ, ಬಳಿಕ ಅಲ್ಲಿ ಇಳಿದು ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂಜಿನಿಯರ್‌ಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು : ಸಾರ್ವಜನಿಕ ಕುಡಿಯುವ ನೀರಿನ ಪೈಪನ್ನು ಒಡೆದು ಹಾಕಿರುವುದಲ್ಲದೆ ಈ ಬಗ್ಗೆ ಪ್ರಶ್ನಿಸಿದಾಗ ಉದ್ದಟತನದಿಂದ ಮಾತನಾಡಿದ ಬಿಲ್ಡರ‍್ಸ್ ಸಂಸ್ಥೆಯ ಇಂಜಿನಿಯರ್ ಹಾಗೂ ಸೂಪರ್‌ವೈಸರ್‌ಗೆ ಸಾರ್ವ ಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಪಾಂಡೇಶ್ವರದಲ್ಲಿ ನಿನ್ನೆ ನಡೆದಿದೆ.
ಪಾಂಡೇಶ್ವರ ದೂಮಪ್ಪ ಕಂಪೌಂಡ್‌ನಲ್ಲಿ ನಗರದ ಬಿಲ್ಡರ್ ಸಂಸ್ಥೆಯೊಂದು ಬಹುಮಹಡಿ ಕಟ್ಟಡ ನಿರ್ಮಿಸಲು ಕಾಮಗಾರಿ ಆರಂಭಿಸಿತ್ತು. ಇದಕ್ಕೆ ಕೆಲಸ ನಿರ್ವಹಿಸುವ ಅವಸರದಲ್ಲಿ ಭೂಮಿಯನ್ನು ಅಗೆಯುವಾಗ ಸಾರ್ವಜನಿಕ ನೀರಿನ ಪೈಪನ್ನು ಒಡೆದು ಹಾಕಿದ್ದರು. ಇದರಿಂದಾಗಿ ಕುಡಿಯುವ ನೀರು ರಸ್ತೆಯಲ್ಲಿ ಹರಿಯ ತೊಡಗಿ ಸ್ಥಳೀಯ ಜನರಿಗೆ ಕುಡಿಯಲು ನೀರಿಲ್ಲ ದಂತಾಗಿತ್ತು. ಮೊದಲೇ ಕುಡಿಯುವ ನೀರಿಲ್ಲದೆ ತತ್ತರಿಸಿದ್ದ ಜನತೆಗೆ ಈ ಬಿಲ್ಡರ‍್ಸ್‌ಗಳಿಂದಾಗಿ ಸಿಗುತ್ತಿರುವ ನೀರು ಇಲ್ಲದಂತಾಗಿತ್ತು.
ಹೀಗಾಗಿ ಭೂಮಿಯನ್ನು ಅಕ್ರಮ ವಾಗಿ ಅಗೆದ ಬಗ್ಗೆ ಸ್ಥಳೀಯರು ಬಿಲ್ಡರ‍್ಸ್ ಸಂಸ್ಥೆಯ ಇಂಜಿನಿಯರ್ ಸಂತೋಷ್ ಬಳಿ ಪ್ರಶ್ನಿಸಿದ್ದರು. ಈ ವೇಳೆ ಸಂತೋಷ್ ಹಾಗೂ ಸೂಪರ್‌ವೈಸರ್ ಸ್ಥಳೀಯರ ಜೊತೆ ಉದ್ದಟತನದಿಂದ ವರ್ತಿಸಿದ್ದರು ಇದು ಜನರನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದು ಅವರು ಇಂಜಿನಿಯರ್ ಹಾಗೂ ಸೂಪರ್‌ವೈಸರನ್ನು ಎಳೆದು ಕೊಂಡು ಬಂದು ಹಿಗ್ಗಾ ಮುಗ್ಗಾ ಥಳಿಸಿ ದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಅದನ್ನು ರಾಜಿಯಲ್ಲಿ ಮುಕ್ತಾಯಗೊಳಿ ಸಲಾಗಿದೆ ಎಂದು ತಿಳಿದು ಬಂದಿದೆ.

ಅಕ್ರಮ ಮದ್ಯ ಸಹಿತ ಇಬ್ಬರ ಸೆರೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಅಕ್ರಮ ಮದ್ಯ ಸಾಗಾಟ ವಿರುದ್ಧ ಯಶಸ್ವಿ ಕಾರ್ಯಾ ಚರಣೆ ನಡೆಸಿದ ಅಬಕಾರಿ ದಳದ ವಿಶೇಷ ತಂಡವು ಮದ್ಯ ಹಾಗೂ ಸಾಗಾಟದ ವಾಹನ ಸಹಿತ ಇಬ್ಬರನ್ನು ಸೆರೆ ಹಿಡಿದಿದ್ದಾರೆ.
ಅಬಕಾರಿ ದಳದ ಕಾಸರಗೋಡಿನ ವಿಶೇಷ ತಂಡವು ನಿನ್ನೆ ಪೂರ್ವಾಹ್ನ ಉಪ್ಪಳ ಕೈಕಂಬ ಸಮೀಪ ಕಾರ್ಯಾ ಚರಣೆ ನಡೆಸಿದೆ. ಮಂಗಳೂರಿನಿಂದ ಕುಂಬಳೆ ಕಡೆಗೆ ಬರುತ್ತಿದ್ದ ಕೆ.ಎಲ್. ೧೪ ಡಿ. ೭೬೬೬ ನಂಬ್ರದ ಅಟೋರಿಕ್ಷಾ ದಲ್ಲಿ ಮದ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಅಬಕಾರಿ ತಂಡವು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗುವ ಯತ್ನ ನಡೆಸಿತ್ತು. ಬೆನ್ನತ್ತಿ ಹಿಡಿದು ತಪಾಸಣೆ ನಡೆಸಿದಾಗ ೨೦೦ ಬಾಟ್ಲಿ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಯಾ ಯಿತು. ರಿಕ್ಷಾದಲ್ಲಿದ್ದ ಆರೋಪಿ ಗಳಾದ ಬಂದ್ಯೋಡು ಮುಟ್ಟಗೇಟ್ ಬಳಿಯ ನಿವಾಸಿ ಎನ್. ಗೋಪಾಲ ಹಾಗೂ ಮಂಗಲ್ಪಾಡಿ ನಿವಾಸಿ ಜೆ. ಸದಾಶಿವ ಎಂಬವರನ್ನು ಬಂಧಿಸಲಾಗಿದೆ. ಅಟೋ ಹಾಗೂ ಮದ್ಯವನ್ನು ವಶಕ್ಕೆ ತೆಗೆಯಲಾ ಯಿತು. ಬಂಧಿತರನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸ ಲಾಗಿದೆ.

ಕುಂದಾಪುರ: ಜಾತಿ ನಿಂದನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಕುಂದಾಪುರ ಠಾಣಾ ವ್ಯಾಪ್ತಿಯ ಹೊಸಂಗಡಿ ಎಂಬಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಹೊಸಂಗಡಿಯ ಮಂಜುನಾಥ ನಾಯ್ಕ ಎಂಬವರು ಕೋಟೆಕೆರೆ ಎಂಬಲ್ಲಿಗೆ ಹೋಗಿದ್ದ ವೇಳೆ ಸ್ಥಳೀಯರಾದ ಅಮಿನಾಬಿ ಮತ್ತು ದಿಲ್‌ದಷ ಅವರು ಜಾತಿನಿಂದನೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಜೀವನದಲ್ಲಿ ಜಿಗುಪ್ಸೆ: ವೃದ್ಧ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಉಳ್ಳಾಲ: ಜೀನವನದಲ್ಲಿ ಜಿಗುಪ್ಸೆ ಗೊಂಡ ವಯೋವೃದ್ಧರೋ ರ್ವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಈಶ್ವರ (೬೦) ಎಂಬವರು ಆತ್ಮಹತ್ಯೆ ಮಾಡಿಕೊಂಡ ವರು. ಅವರ ಹೆಂಡತಿ ಹಿಂದೆಯೇ ತೀರಿಕೊಂಡಿದ್ದಾರೆ. ನಾಲ್ಕು (ಎರಡು ಗಂಡು, ಎರಡು ಹೆಣ್ಣು) ಮಕ್ಕಳಿದ್ದು ಅವರೆಲ್ಲಾ ಮದುವೆಯಾಗಿ ಪ್ರತ್ಯೇಕವಾಗಿ ವಾಸ ವಿದ್ದಾರೆ. ಕೃಷ್ಣನಗರದಲ್ಲಿ ಏಕಾಂಗಿ ಯಾಗಿ ವಾಸವಿದ್ದ ಅವರು ಜೀವನದಲ್ಲಿ ಬೇಸತ್ತು ಕಳೆದ ಶನಿವಾರ ವಿಷ ಪದಾರ್ಥ ಸೇವಿಸಿದ್ದರು. ಕಳೆದ ನಾಲ್ಕು ದಿನಗಳಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಅಪರಿಚಿತ ಶವ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲ ಉಚ್ಚಿಲ ಕೋಟೆ ಬಳಿಯ ಸಮುದ್ರ ತೀರದಲ್ಲಿ ೩೦ ರಿಂದ ೪೫ ವರ್ಷದೊಳಗಿನ ಅಪರಿಚಿತ ಶವ ಬುಧವಾರ ಮಧ್ಯಾಹ್ನ ದಂದು ಪತ್ತೆಯಾಗಿದೆ. ಕುತ್ತಿಗೆಯಲ್ಲಿ ತಾಯಿತವಿರುವ ಚಿನ್ನದ ಸರ ಇದ್ದು, ಕಂದು ಪ್ಯಾಂಟು ಹಾಗು ಬಿಳಿ ಶರ್ಟು ಧರಿಸಿದ್ದಾರೆ. ಸಂಬಂಧಿತರು ಉಳ್ಳಾಲ ಠಾಣೆ ಯನ್ನು ಸಂಪರ್ಕಿಸಲು ಕೋರ ಲಾಗಿದೆ.

ರಿಕ್ಷಾ ಚಾಲಕನಿಗೆ ಹಲ್ಲೆ: ನಾಲ್ವರ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಾಮಂಜೂರು ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಅಬ್ಬಿ ಯಾನೆ ಅಬೀಬಾ, ಪೈಜಾಲ್, ಮಹಮ್ಮಜ್ ಅಜರುದ್ದೀನ್, ಅಸನಬ್ಬ ಸೇರಿ ಕಳೆದ ಮಂಗಳವಾರ ರಾತ್ರಿ ಬಾಡಿಗೆ ವಿಚಾರವಾಗಿ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ದಾಸ್ ಎಂಬವರಿಗೆ ಹಲ್ಲೆ ನಡೆಸಿದ್ದರು. ಆರೋಪಿಗಳೂ ವಾಮಂಜೂರಿನಲ್ಲೇ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದು ಬಾಡಿಗೆ ವಿಚಾರದಲ್ಲಿ ದಾಸ್ ಜೊತೆ ಈ ಹಿಂದೊಮ್ಮೆ ಜಗಳ ಮಾಡಿದ್ದರು. ಆದರೆ ಅದನ್ನು ಇತರ ರಿಕ್ಷಾ ಚಾಲಕರು ರಾಜಿ ಸಂಧಾನದ ಮೂಲಕ ಬಗೆ ಹರಿಸಿದ್ದರಾದರೂ ಆರೋಪಿಗಳು ಮಾತ್ರ ಮಂಗಳವಾರ ರಾತ್ರಿ ದಾಸ್ ಮನೆ ಸಮೀಪವೇ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ದಾಸ್ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಡಿಕ್ಕಿ: ಗಂಭೀರ ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಜೆ ಮುಲ್ಕಿ ಬಪ್ಪನಾಡು ಎಂಬಲ್ಲಿ ಸಂಭವಿಸಿದೆ. ಪೈಂಟಿಂಗ್ ಕೆಲಸ ಮಾಡುವ ಬಪ್ಪನಾಡು ನಿವಾಸಿ ವಾಮನ್ ಎಂಬವರು ತಮ್ಮ ಪುತ್ರ ಹೇಮಂತ್‌ರೊಂದಿಗೆ ಕೆಲಸ ಮುಗಿಸಿ ಮನೆಗೆ ಸಾಗುವ ದಾರಿಯಲ್ಲಿ ಲಲಿತ್ ಬಾರ್ ಬಳಿ ಸಂತೋಷ ಎಂಬವರೊಂದಿಗೆ ಮಾತನಾಡಲು ನಿಂತಿದ್ದಾಗ ಉಡುಪಿಯತ್ತ ಸಾಗುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತೆ ನ್ನಲಾಗಿದೆ. ಬೈಕ್ ಸವಾರ ಜಾವೇದ್ ಎಂಬಾತನ ವಿರುದ್ಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಳ್ಳಾರಿ: ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುತ್ತಿದ್ದಾತನ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಳ್ಳಾರಿ ಸುತ್ತಮುತ್ತ ಕಾಲೇಜ್ ರಸ್ತೆಗಳಲ್ಲಿ ಓಡಾಡುವ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ದಾಳಿ ಮಾಡಿ ಪರಾರಿಯಾಗುತ್ತಿದ್ದ ವಿಕೃತಮನಸ್ಕ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ರಾವ್ ಬಹದ್ದೂರ್, ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜ್, ವೀರಶೈವ ಕಾಲೇಜ್, ವಿಮ್ಸ್ ಕಾಲೇಜ್‌ನ ಆಟದ ಮೈದಾನದ ಪಕ್ಕದ ರಸ್ತೆಗಳಲ್ಲಿ ಕಳೆದ ಕೆಲವು ಸಮಯಗಳಿಂದ ಯುವಕನೊಬ್ಬ ಬೈಕ್‌ನಲ್ಲಿ ಆಗಮಿಸಿ ಏಕಾಏಕಿ ಕಾಲೇಜ್ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡುತ್ತಿದ್ದ. ಈತನನ್ನು ದೋಬಿ ಸ್ಟ್ರೀಟ್ ನಿವಾಸಿ ರಾಜೇಶ್(೨೪) ಎಂದು ಗುರುತಿಸಲಾಗಿತ್ತು. ಈತ ಒಂಟಿಯಾಗಿ ಸಂಚರಿಸುತ್ತಿದ್ದ ಹುಡುಗಿಯರ ಮೇಲೆ ದಾಳಿ ನಡೆಸಿ ಬ್ಲೇಡ್ ಮತ್ತು ಚಾಕುವಿನಿಂದ ತಿವಿದು ಗಾಯಗೊಳಿಸಿ ಪರಾರಿಯಾಗುತ್ತಿದ್ದ ಎಂದು ದೂರಲಾಗಿತ್ತು. ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹತ್ತಾರು ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಿದ್ದ. ಇದರಿಂದ ವಿದ್ಯಾರ್ಥಿನಿಯರು ಕಾಲೇಜ್ ಬಿಟ್ಟು ಹೊರಗೆ ಬರಲು ಭಯಪಡುವಂಥ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈತ ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಗೆ ಇರಿದು ಗಂಭೀರ ಗಾಯಗೊಳಿಸಿದ್ದ. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರಿಗೆ ದೂರಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿ ಮತ್ತೆ ದಾಳಿಗೆ ಹೊಂಚು ಹಾಕುತ್ತಿದ್ದಾಗಲೇ ಪೊಲೀಸರು ರೆಡ್‌ಹ್ಯಾಂಡ್ ಆಗಿ ಹಿಡಿದು ಕಾನೂನು ಕ್ರಮ ಜರುಗಿಸಿದ್ದಾರೆ.

ಆಮೇಟ್ ಅಸಲ್ ಈಮೇಟ್ ‘ಕುರಲ್’!

Posted by JAYAKIRANA Kirana on | 0 comments | Leave a comment...


ಇದೇನು ಮತ್ತೊಂದು ಹೊಸ ತುಳು ಸಿನಿಮಾ ಬಂತಾ ಎಂದು ಆಶ್ಚರ್ಯಪಡಬೇಡಿ. ಹಾಗೇನಿಲ್ಲ. ವಿಷಯ ಇರೋದು ಬಿಡುಗಡೆ ಯಾಗೋ ದಿನದಲ್ಲಿ. ಬೇರೆ ಭಾಷೆಯ ಸಿನಿಮಾಗಳಂತೆ ಇದೀಗ ತುಳು ವಿನಲ್ಲೂ ಒಂದು ರೀತಿಯ ಬಿಡುಗಡೆ ಕಿರಿಕಿರಿ ಶುರುವಾದಂತಿದೆ. ಒಂದು ವಾರ ಅಂತರದಲ್ಲಿ ಎರಡು ತುಳು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿರುವುದು ಆಶ್ಚರ್ಯ ಮೂಡಿಸುತ್ತಿದೆ.
ಎ.೨೭ರಂದು ಬಹುನಿರೀಕ್ಷೆಯ ರಾಮ್ ಶೆಟ್ಟಿ ಅವರ ಬಂಗಾರ‍್ದ ಕುರಲ್ ಸಿನಿಮಾ ಬಿಡುಗಡೆ ಯಾಗಲಿದೆ. ಅದರ ಬೆನ್ನಿಗೆ, ಅಂದರೆ ಮೇ ನಾಲ್ಕರಂದು ರಂಜನ್‌ರಾಘು ಶೆಟ್ಟಿ ಅವರ ಆಮೇಟ್ ಅಸಲ್ ಈಮೇಟ್ ಕುಸಲ್ ಸಿನಿಮಾ ಬಿಡುಗಡೆ ಯಾಗಲಿದೆ. ಸಾಕಷ್ಟು ಹಿಂದೆಯೇ ಬಿಡುಗಡೆಯಾಗಬೇಕಿದ್ದ ಆಮೇಟ್ ಅಸಲ್ ಈಮೇಟ್ ಕುಸಲ್ ಸಿನಿಮಾ ತಾಂತ್ರಿಕ ಕಾರಣಗಳಿಂದಾಗಿ ಬಿಡುಗಡೆ ಯಾಗುವುದು ವಿಳಂಬವಾಗಿದೆ.
ಆದರೂ ಒಂದು ತುಳು ಸಿನಿಮಾ ಬಿಡುಗಡೆಯಾಗಲು ದಿನ ನಿಗದಿಯಾದ ಬೆನ್ನಿಗೆ ಮತ್ತೊಂದು ತುಳು ಸಿನಿಮಾ ವನ್ನು ಬಿಡುಗಡೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸೀಮಿತ ಸಂಖ್ಯೆಯ ವೀಕ್ಷಕರಿರುವ ತುಳು ಚಿತ್ರರಂಗದಲ್ಲಿ ಇಂಥದ್ದೊಂದು ಬೆಳವಣಿಗೆ ಅಪಾಯಕಾರಿ ಮತ್ತು ಕೆಡುಕು ತರುವಂಥದ್ದು ಎಂದು ಹೇಳಬೇಕಾಗುತ್ತದೆ.
ಒಂದು ತುಳು ಸಿನಿಮಾ ಬಿಡುಗಡೆಯಾಗಿ ಮತ್ತೊಂದು ಸಿನಿಮಾ ಬಿಡುಗಡೆಗೆ ಕನಿಷ್ಠ ಒಂದು ತಿಂಗಳು ಅವಧಿಯ ಅಂತರವಾದರೂ ಬೇಕಿದೆ. ಆದರೆ ಈಗ ಎರಡು ತುಳು ಸಿನಿಮಾಗಳು ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಈಗೀಗ ತುಳು ಚಿತ್ರಗಳ ನಿರ್ಮಾಣ ಸಂಖ್ಯೆ ಹೆಚ್ಚುತ್ತಿರಬಹುದು. ಹಲವು ಸಿನಿಮಾಗಳು ಚಿತ್ರೀಕರಣ ಹಂತ ದಲ್ಲಿವೆ, ಮತ್ತೆ ಕೆಲವು ಚಿತ್ರೀಕರಣ ಸ್ಥಗಿತಗೊಳಿಸಿದೆ. ಇದಕ್ಕೆ ಕಾರಣವೇನು ಎಂಬುದು ಚಿತ್ರ ನಿರ್ಮಾಪಕರಿಗೆ ಗೊತ್ತಿಲ್ಲದ ಸಂಗತಿಯಲ್ಲ. ಒರಿಯ ರ್ದೊರಿ ಅಸಲ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ತುಳುವಿನಲ್ಲಿ ಸಾಲು-ಸಾಲು ಚಿತ್ರಗಳು ಬರುತ್ತಿವೆ. ಬಂಗಾರ‍್ದ ಕುರಲ್ ಮತ್ತು ಆಮೇಟ್ ಅಸಲ್ ಈ ಮೇಟ್ ಕುಸಲ್ ತುಳು ಸಿನಿಮಾರಂಗಕ್ಕೆ ಸೀಮಿತ ಸಂಖ್ಯೆಯ ವೀಕ್ಷಕರಿರುವುದರಿಂದ ಚಿತ್ರ ನಿರ್ಮಾ ಪಕರು ಪರಸ್ಪರ ಹೊಂದಾಣಿಕೆ ಯಿಂದ, ಚರ್ಚಿಸಿ ಚಿತ್ರ ಬಿಡುಗಡೆ ಮಾಡಬೇಕಾದುದು ಅಗತ್ಯವಾಗಿದೆ. ಇಲ್ಲಿ ಸ್ಪರ್ಧೆಗೆ ಇಳಿದರೆ ಪರಿಸ್ಥಿತಿ ಎಲ್ಲರಿಗೂ ತಿರುಗಿ ನಿಲ್ಲುವ ಸಾಧ್ಯತೆ ಯೇ ಹೆಚ್ಚು.
ಕನ್ನಡ ಚಿತ್ರರಂಗಕ್ಕಾದರೆ ನಿರ್ಮಾಪಕರ ಸಂಘವಿದೆ, ದೂರು ಗಳನ್ನು ಆಲಿಸುವವರಿದ್ದಾರೆ. ತುಳು ಚಿತ್ರರಂಗಕ್ಕೆ ಸದ್ಯಕ್ಕೆ ಅಂಥ ಯಾವ ವ್ಯವಸ್ಥೆಯೂ ಇಲ್ಲ. ತುಳುಪ್ರೇಮದಿಂದ ಚಿತ್ರ ನಿರ್ಮಿಸ ಲಾಗುತ್ತಿದೆಯಷ್ಟೆ. ಸದ್ಯಕ್ಕೆ ಹೆಚ್ಚಿನವರೂ ತುಳು ಸಿನಿಮಾಗಳನ್ನು ವಾಣಿಜ್ಯ ದೃಷ್ಟಿಯಲ್ಲಿ ನೋಡಿಲ್ಲ. ಆದರೂ ಖರ್ಚಾದ ಹಣವಾದರೂ ಪ್ರದರ್ಶನದಿಂದ ಸಿಗದಿದ್ದರೆ ಮತ್ತೊಂದು ಸಿನಿಮಾ ಮಾಡು ವುದಾ ದರೂ ಹೇಗೆ? ತುಳು ಚಿತ್ರರಂಗ ಬೆಳೆಯುವುದಾದರೂ ಹೇಗೆ? ಹೀಗಿರುವಾಗ ತುಳು ಚಿತ್ರ ಬಿಡುಗಡೆಯ ವಿಷಯದಲ್ಲಿ ಸ್ಪರ್ಧೆ, ಗೊಂದಲ ಉಂಟಾಗುವುದು ಸಲ್ಲದು.
ತುಳುವಿನಲ್ಲಿ ಸದ್ಯೋಭವಿಷ್ಯದಲ್ಲಿ ಕೆಲವು ಸಿನಿಮಾಗಳು ಬರಲಿವೆ. ದೇವ ದಾಸ್ ಕಾಪಿಕಾಡ್ ಅವರ ತೆಲಿಕೆದ ಬೊಳ್ಳಿ, ನಮೃತಾ ಹೆಗ್ಡೆಯವರ ರಾಂಪ, ರಿಚಾರ್ಡ್ ಕ್ಯಾಸ್ತಲಿನೋ ಅವರ ಬಂಗಾರ್ ಬಾಲೆ, ಕೃಷ್ಣ ಪ್ರಸಾದ್‌ರ ದಿಬ್ಬಣ, ಗಂಗಾಧರ ಶೆಟ್ಟಿ ಯವರ ಒರಿಯನ್ ತೂಂಡ ಒರಿಯ ಗಾಪುಜಿ ಮೊದಲಾದ ಚಿತ್ರಗಳು ತೆರೆಗೆ ಬರಲಿದೆ. ಈ ಪೈಕಿ ಕೆಲವು ಚಿತ್ರೀಕರಣ ನಡೆಸುತ್ತಿದ್ದರೆ ಇನ್ನು ಕೆಲವು ಮುಹೂರ್ತ ಪತ್ರಿಕಾ ಜಾಹೀರಾತಿ ಗಷ್ಟೇ ಸೀಮಿತವಾಗಿದೆ. ಇದರ ಜತೆಗೆ ಸದ್ಯಕ್ಕೆ ಅರ್ಧದಲ್ಲಿ ನಿಂತಿರುವ ದೇವು ಪೂಂಜ ಕೂಡ ಮೇ ತಿಂಗಳ ಕೊನೆ ಯಲ್ಲಿ ಚಿತ್ರೀಕರಣ ಆರಂಭಿಸಲಿದೆ. ಇವೆಲ್ಲವೂ ಆದ ಬಳಿಕ ಅಕ್ಟೋಬರ್-ನವೆಂಬರ್ ಹೊತ್ತಿಗೆ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರೂ ತಮ್ಮ ಮದಿಮೆ ನಾಟಕವನ್ನು ಸಿನಿಮಾ ಮಾಡುವ ಆಲೋಚನೆಯಲ್ಲಿ ದ್ದಾರೆ. ಚಂದ್ರಹಾಸ ಆಳ್ವರೂ ಒಂದು ಕಥೆ ಸಿದ್ಧಪಡಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ.
ತುಳು ಚಿತ್ರರಂಗ ಈ ರೀತಿ ಬೆಳೆಯಲು ಸಿದ್ಧತೆ ಮಾಡುತ್ತಿರುವ ಹೊತ್ತಿನಲ್ಲಿ ಬಿಡುಗಡೆ ಸಂದರ್ಭ ನಿರ್ಮಾಪಕರು ಪರಸ್ಪರ ಮಾತುಕತೆ ನಡೆಸಿಕೊಳ್ಳದೆ ಒಂದು ರೀತಿಯ ಪೈಪೋಟಿಗೆ ಇಳಿಯುವುದು ಅನಾರೋಗ್ಯ ಕರ ವಾತಾವರಣ ಸೃಷ್ಟಿಸದಿರದು.
ಉಪೇಂದ್ರ ನಟನೆಯ ಕಠಾರಿ ವೀರ ಸುರಸುಂದರಾಂಗಿ ಮತ್ತು ಗಾಡ್ ಫಾದರ್ ಎಂಬೆರಡು ಕನ್ನಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲು ಸಿದ್ಧವಾಗಿ ರುವುದು ವಿವಾದಕ್ಕೆ ಕಿಡಿ ಹಚ್ಚಿದೆ. ಒಂದೇ ನಾಯಕ ನಟನ ಎರಡು ಸಿನಿಮಾಗಳು ಒಂದೇ ದಿನ ಬಿಡಗಡೆ ಯಾಗಬಾರದು ಎಂದು ನಿರ್ಮಾ ಪಕರು ಹೇಳುತ್ತಿದ್ದಾರೆ. ಅದೇ ದಿನ ಸುದೀಪ್ ಅಭಿನಯದ ತೆಲುಗುಚಿತ್ರ ‘ಈಗ’ ಮತ್ತು ಪುನೀತ್ ರಾಜ್ ಕುಮಾರ್ ಅವರ ಅಣ್ಣಾಬಾಂಡ್ ಕೂಡಾ ಎ.೨೭ಕ್ಕೆ ತೆರೆಕಾಣಲು ಸಿದ್ದತೆ ನಡೆದಿವೆ. ಕೋಟಿಗಟ್ಟಲೆ ವೀಕ್ಷಕ ರಿರುವ ಕನ್ನಡ ಸಿನಿಮಾ ರಂಗದಲ್ಲಿ ಯೇ ಅಂಥದ್ದೊಂದು ಭೀತಿ ಇರುವಾಗ ತುಳು ಚಿತ್ರ ನಿರ್ಮಾ ಪಕರು ಒಂದೇ ವಾರದ ಅಂತರದಲ್ಲಿ ಎರಡು ಸಿನಿಮಾ ಬಿಡುಗಡೆಗೆ ಮುಂದಾದುದಾದರೂ ಯಾಕೆ?
ಜಗನ್ನಾಥ್ ಶೆಟ್ಟಿ, ಬಾಳ

ಒಳ್ಳೆಯ ಬೆಳವಣಿಗೆಯಲ್ಲ: ಟಿ.ಎ.ಶ್ರೀನಿವಾಸ್

ಒಂದೇ ವಾರದಲ್ಲಿ ಎರಡು ತುಳು ಸಿನಿಮಾಗಳು ಬಿಡುಗಡೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ, ಸೀಮಿತ ಮಾರುಕಟ್ಟೆಯಿರುವ ತುಳು ಚಿತ್ರರಂಗದಲ್ಲಿ ವರ್ಷಕ್ಕೆ ಒಂದೋ ಎರಡು ಸಿನಿಮಾಗಳು ತಯಾರಾಗು ವುದೇ ಕಷ್ಟದಲ್ಲಿ. ಕನ್ನಡ ಚಿತ್ರರಂಗದಂತೆ ಇಲ್ಲಿ ವಿಶಾಲ ಮಾರುಕಟ್ಟೆ ಇಲ್ಲ. ಹೀಗಿರುವಾಗ ಒಂದೇ ವಾರದಲ್ಲಿ ‘ಬಂಗಾರ  ಕುರಲ್’ ಮತ್ತು ‘ಅಮೇಟ್ ಅಸಲ್ ಈಮೇಟ್ ಕುಸಲ್’ ಸಿನಿಮಾ ತೆರೆಕಾಣುತ್ತಿರುವುದು ಅಷ್ಟೊಂದು ಸಮಂಜಸವಲ್ಲ. ಕನಿಷ್ಟ ೫೦ ದಿನಗಳ ಅಂತರದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದರೆ ಇಬ್ಬರೂ ನಿರ್ಮಾಪಕರಿಗೆ ಒಳ್ಳೆಯದು ಎಂದು ಸಿನಿಮಾ ನಿರ್ಮಾಪಕ, ವಿತರಕ ಟಿ.ಎ.ಶ್ರೀನಿವಾಸ್ ಹೇಳುತ್ತಾರೆ. ೧೯೭೨ರಲ್ಲಿ ತುಳುವಿನಲ್ಲಿ ತೆರೆಕಂಡ ಪ್ರಥಮ ಚಿತ್ರ ‘ಎನ್ನ ತಂಗಡಿ’ ಮತ್ತು ದಾರೆದ ಬುಡೆದಿ’ ಸಿನಿಮಾ ತಯಾರಾದಾಗ ಇದೇ ರೀತಿಯ ಗೊಂದಲ ಏರ್ಪಟ್ಟಿದ್ದು, ನಿರ್ಮಾಪಕರು ನಷ್ಟಕ್ಕೆ ಸಿಲುಕಬಾರದೆಂಬ ದೃಷ್ಟಿಯಲ್ಲಿ ಮೊದಲು ಸೆನ್ಸಾರ್ ಆದ ‘ಎನ್ನತಂಗಡಿ’ ಸಿನಿಮಾವನ್ನು ತೆರೆಗೆ ತರುವಲ್ಲಿ ವಿತರಕನಾಗಿ ಕೆಲಸ ಮಾಡಿದ್ದೆ ಎಂದು ಟಿ.ಎ. ಶ್ರೀನಿವಾಸ್ ೧೯೭೨ರಲ್ಲಿ ಆದ ಘಟನೆಯನ್ನು ನೆನಪಿಸಿಕೊಂಡರು.

ಡೇಟ್ ಮೊದಲೇ ಅನೌನ್ಸ್ ಮಾಡಿದ್ದೆ

ಬಂಗಾರ‍್ದ ಕುರಲ್ಗೆ ಚಿತ್ರೀಕರಣ ಪ್ರಾರಂಭಿಸುವ ಸಂದರ್ಭದಲ್ಲೇ ಎಪ್ರಿಲ್ ಕೊನೆಯ ವಾರದಲ್ಲಿ ಇಲ್ಲವೇ ಮೇ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದ್ದೆ. ಅದರಂತೆ ಥಿಯೇಟರ್ ಮೀಟ್ ಮಾಡಿ ಡೇಟ್ ಅನೌನ್ಸ್ ಮಾಡಿದ್ದೇನೆ. ನನ್ನ ಡೇಟ್ ಅನೌನ್ಸ್ ಆದ ಬಳಿಕ ಅಮೇಟ್ ಅಸಲ್ ಚಿತ್ರದ ನಿರ್ಮಾಪಕರು ಒಂದೇ ವಾರದ ಅಂತರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಎಷ್ಟು ಸರಿ ನೀವೇ ಹೇಳಿ... ಎನ್ನು ತ್ತಾರೆ ಬಂಗಾರ‍್ದ ಕುರಲ್ ಚಿತ್ರದ ನಿರ್ಮಾಪಕ-ನಿರ್ದೇಶಕ ರಾಮ್ ಶೆಟ್ಟಿ.

ನಾವೇನೂ ಮಾಡಕ್ಕಾಗಲ್ಲ...

ನಾವೇನೂ ಮಾಡಕ್ಕಾಗಲ್ಲ. ಅಮೇಟ್ ಅಸಲ್ ಚಿತ್ರಕ್ಕೆ ಎಂಟು ತಿಂಗಳ ಮೊದಲೆ ಪ್ರಚಾರ ಮಾಡಿದ್ದೇವೆ. ಪ್ರಚಾರಕ್ಕಾಗಿ ಸಾಕಷ್ಟು ಖರ್ಚಾಗಿದೆ. ತಾಂತ್ರಿಕ ಕಾರಣಗಳಿಂದ ಸೆನ್ಸಾರ್ ಆಗುವಾಗ ವಿಳಂಬವಾಯಿತು. ಇನ್ನೂ ನಾವು ತಡಮಾಡಿದರೆ ಹೇಗೆ ಎನ್ನುತ್ತಾರೆ ಅಮೇಟ್ ಅಸಲ್ ನಿರ್ದೇಶಕ ರಂಜನ್ ರಾಘು ಶೆಟ್ಟಿ

ಪಿಕಪ್-ಬೈಕ್ ಡಿಕ್ಕಿ: ದಂಪತಿ ಮೃತ್ಯು

Posted by JAYAKIRANA Kirana on | 0 comments | Leave a comment...

ಮುಲ್ಕಿ: ರಾಷ್ಟೀಯ ಹೆದ್ದಾರಿ ೬೬ರ ಬೈಕಂಪಾಡಿ ಮೇಲ್ಸೇತುವೆಯಲ್ಲಿ ಬುಧವಾರ ಮುಂಜಾನೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಉಡುಪಿ ಕಡೆ ಹೋಗುತ್ತಿದ್ದ ಪಿಕಪ್ ಹಾಗೂ ಮಂಗಳೂರು ಕಡೆಗೆ ಹೋಗುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ಚೊಕ್ಕಬೆಟ್ಟು ನಿವಾಸಿ ಸಿರಾಜು ದ್ದೀನ್(೪೫) ಸ್ಥಳದಲ್ಲೇ ಮೃತಪಟ್ಟರೆ ಪತ್ನಿ ಖತೀಜಮ್ಮ (೩೭)ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು. ಖತೀಜಮ್ಮ ಅವರ ತಂಗಿಯ ಮಗಳಿಗೆ ಆಪರೇಷನ್ ಆಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಕ್ಷೇಮ ವಿಚಾರಿಸಲೆಂದು ಸಿರಾಜುದ್ದೀನ್ ಮತ್ತು ಅವರ ಪತ್ನಿ ಖತೀಜಮ್ಮ ಬುಧವಾರ ಮುಂಜಾನೆ ಬೈಕಿನಲ್ಲಿ ಮಂಗಳೂರು ಕಡೆ ಹೋಗುತ್ತಿದ್ದಾಗ ಬೈಕಂಪಾಡಿ ಮೇಲ್ಸೇತುವೆಯಲ್ಲಿ ಉಡುಪಿ ಕಡೆ ತೆರಳುತ್ತಿದ್ದ ಪಿಕಪ್ ವಾಹನದ ಚಾಲಕ ಯದ್ವಾತದ್ವಾ ಚಲಾಯಿಸಿ ಬಂದ ಪರಿಣಾಮ ಡಿಕ್ಕಿ ಹೊಡೆಯಿತು. ಅಪಘಾತ ನಡೆದ ರಭಸಕ್ಕೆ ಬೈಕ್ ನಜ್ಜುಗುಜ್ಜಾಗಿದೆ.
ಯಮನಂತೆ ಕಾಡುತ್ತಿರುವ ಬೈಕಂಪಾಡಿ ಮೇಲ್ಸೇತುವೆ
ರಾ.ಹೆ.೬೬ರಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದರೂ ಈ ಸೇತುವೆಯ ಕಾಮಗಾರಿ ಮಾತ್ರ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಸ್ಮಾರಕವಾಗಿ ಉಳಿದು ಕೊಂಡಿದೆ. ಸರಕಾರದ ಅಂಗ ಸಂಸ್ಥೆಗಳ ನಡುವೆಯೇ ಇರುವ ಭಿನ್ನಾಭಿ ಪ್ರಾಯಗಳಿಂದಾಗಿ ಸೇತುವೆ ಕಾಮಗಾರಿ ಆಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಘಟನೆಗೆ ಸಂಬಂಧಿಸಿದಂತೆ ಪಿಕಪ್ ವಾಹನದ ಚಾಲಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಅನಾಥವಾಯಿತು ತುಂಬು ಸಂಸಾರ
ಸಿರಾಜುದ್ದೀನ್ ದಂಪತಿಗೆ ಐದು ಗಂಡು ಮಕ್ಕಳನ್ನು ಹೊಂದಿದ ತುಂಬು ಸಂಸಾರ. ಮೊದಲ ಮಗ ಮಿಮಾನ್(೨೧) ಮಂಗಳೂರಿನ ಬಟ್ಟೆ ಮಳಿಗೆಯಲ್ಲಿ ದುಡಿಯುತ್ತಿದ್ದಾರೆ. ಇನ್ನುಳಿದ ನೌಫಾಲ್ (೧೮)ಕೇರಳದಲ್ಲಿ ಕಲಿಯು ತ್ತಿದ್ದಾನೆ. ನಯೀಮ್, ನಬೀ ಸ್ಥಳೀಯ ಶಾಲೆಗೆ ಹೋಗುತ್ತಿದ್ದಾರೆ. ಕೊನೆಯ ಎಂಟು ತಿಂಗಳ ಪುಟ್ಟ ಕಂದ ನಯೀಂ ಇದೀಗ ಬುದ್ದಿ ತಿಳಿಯುವ ಮುನ್ನವೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದಾನೆ. ಎರಡು ವರ್ಷಗಳ ಹಿಂದೆ ಊರಿಗೆ ಬಂದು ನೆಲೆಸಿದ್ದ ಸಿರಾಜುದ್ದೀನ್ ಈ ಹಿಂದೆ ಸೌದಿ ಅರೇಬಿಯಾದಲ್ಲಿ ಹದಿನೈದು ವರ್ಷ ಚಾಲಕನಾಗಿ ದುಡಿದಿದ್ದರು. ಪ್ರಸ್ತುತ ಚೊಕ್ಕಬೆಟ್ಟುವಿನಲ್ಲಿ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದರು.

ಯುವತಿಯ ದೇಹಸಿರಿ ಸೂರೆಗೈದ ಯುವಕನಿಗೆ ಪೊಲೀಸರ ರಕ್ಷಣೆ

Posted by JAYAKIRANA Kirana on | 0 comments | Leave a comment...

ಉಡುಪಿ: ಪ್ರೀತಿ-ಪ್ರೇಮದ ನಾಟಕ ವಾಡಿ, ಮದುವೆಯಾಗುವುದಾಗಿ ಮಾತು ಕೊಟ್ಟು, ದೇಹಸಿರಿಯನ್ನು ಸೂರೆಗೈದು, ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಮೋಸದಿಂದ ಕಬಳಿಸಿದ ಕುಂದಾಪುರದ ಯುವಕನೊಬ್ಬ ಕೇರಳದ ಯುವತಿಗೆ ವಂಚಿಸಿದ ಪ್ರಕರಣ ದುಬೈನಲ್ಲಿ ನಡೆದಿದ್ದು, ಈ ಬಗ್ಗೆ ಯುವತಿ ದೂರು ನೀಡಿದರೆ ಕುಂದಾಪುರ ಪೊಲೀಸ್ ಠಾಣಾ ಧಿಕಾರಿ ಎಫ್‌ಐಆರ್ ದಾಖಲಿಸದೆ ಆರೋ ಪಿಯನ್ನು ರಕ್ಷಿಸಿದ್ದಾರೆಂದು ಯುವತಿ ಆರೋಪಿಸಿದ್ದಾಳೆ.
ಯುವತಿಯ ಹೆಸರು ಸಮೀರಾ ಸೈದು. ಕೇರಳ ರಾಜ್ಯದ ಕೊಚ್ಚಿ ನಿವಾಸಿ. ಯುವತಿಯನ್ನು ವಂಚಿಸಿದ ಯುವಕನ ಹೆಸರು ಅದೀಪ್ ಕುಮಾರ್ ಚಿಕ್ಕಯ್ಯ ಶೆಟ್ಟಿ. ಕುಂದಾಪುರ ತಾಲೂಕಿನ ಅಂಪಾರು ನಿವಾಸಿ.
ಅದೀಪ್ ದುಬೈನ ಸ್ಟಾರ್ ಹೋಟೆಲೊಂದರಲ್ಲಿ ಕ್ಯಾಷಿಯರ್ ಆಗಿದ್ದರೆ, ಸಮೀರಾ ಇದೇ ಹೋಟೆಲ್‌ನಲ್ಲಿ ವೈಟ್ರೆಸ್ ಆಗಿದ್ದಳು. ಒಂದೇ ಹೋಟೆಲ್‌ನಲ್ಲಿ ಜೊತೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿ ಆರಂಭವಾಗಿದೆ. ಪ್ರೇಮವಾಗಿ ಬೆಳೆದಿದೆ. ಅದೀಪ್ ಮದುವೆಯಾಗುವುದಾಗಿ ನಂಬಿಸಿದ ಕಾರಣ ಸಮೀರಾ ಪ್ರಿಯಕರನ ಮೇಲಿನ ಅಪಾರ ವಿಶ್ವಾಸದಿಂದ ದೇಹವನ್ನೂ ಆತನಿಗೆ ಒಪ್ಪಿಸಿ ಬಿಟ್ಟಿದ್ದಾಳೆ.
ಸಮೀರಾಳ ದೇಹಸಿರಿಯನ್ನು ಸೂರೆಗೈದ ಅದೀಪ್, ಇಷ್ಟಕ್ಕೆ ಸುಮ್ಮನಾಗದೇ ೧.೯೦ ಲಕ್ಷ ರೂ. ಹಣವನ್ನೂ ಈಕೆಯಿಂದ ಪೀಕಿಸಲು ಸಫಲನಾಗಿದ್ದಾನೆ. ಇಷ್ಟಕ್ಕೆ ತೃಪ್ತಿಪಡದ ಅದೀಪ್ ಒಂದು ದಿನ ತನ್ನ ಇನ್ನೂ ಇಬ್ಬರು ಸ್ನೇಹಿತರಿಗೂ ದೇಹ ಒಪ್ಪಿಸುವಂತೆ ಬಲವಂತ ಪಡಿಸಿದ್ದಾನೆ. ಮೂವರು ಯುವಕರ ಸಮಕ್ಷಮ ಸಮೀರಾಳಿಗೆ ಬಲವಂತವಾಗಿ ಕಿಸ್ ಕೊಟ್ಟು ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಪ್ರಯತ್ನವನ್ನೂ ಮಾಡಿದ್ದಾನೆ. ಪ್ರಿಯಕರನ ಈ ರೀತಿಯ ಅಸಭ್ಯ ವರ್ತನೆಯಿಂದ ಆಘಾತಕ್ಕೆ ಒಳಗಾದ ಸಮೀರಾ ಆತನ ವರ್ತನೆಗೆ ತೀವ್ರವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಬಳಿಕ ಇವರ ನಡುವೆ ಬಿರುಕು ಮೂಡಲಾರಂಭಿಸಿದೆ. ಅಂತಿಮವಾಗಿ ಸಮೀರಾಳಿಗೆ ಜೀವ ಬೆದರಿಕೆ ಯನ್ನೂ ಹಾಕಿದ್ದಾನೆ. ಅದೀಪ್ ದುಬೈ ಬಿಟ್ಟು ಕುಂದಾಪುರಕ್ಕೆ ಬಂದಿದ್ದಾನೆ.
 ಅದೀಪ್‌ನನ್ನು ಹುಡುಕಿಕೊಂಡು ಕುಂದಾಪುರಕ್ಕೆ ಬಂದ ಸಮೀರಾ, ಇಲ್ಲಿ ಡಿಸಿ, ಎಸ್‌ಪಿ ಹಾಗೂ ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳಿಗೆ ದೂರು ನೀಡಿದ್ದಾಳೆ. ಆದರೆ, ಆರೋಪಿಗೆ ರಾಜಕೀಯ ಪ್ರಭಾವವಿರುವುದರಿಂದ ಪೊಲೀಸ್ ಅಧಿಕಾರಿಗಳು ಆರೋಪಿ ವಿರುದ್ದ ಎಫ್‌ಐಆರ್ ದಾಖಲಿಸದೆ ರಕ್ಷಿಸಿದ್ದಾರೆ ಎಂದು ಸಮೀರಾ ದೂರಿದ್ದಾಳೆ. ಈ ನಡುವೆ ಸಮೀರಾ ಅದೀಪ್ ವಿರುದ್ದ ಭಾರತ ಸರಕಾರದ ವಿದೇಶಾಂಗ ಇಲಾಖೆಗೆ, ದೂತವಾಸಕ್ಕೆ, ಪ್ರವಾಸೋದ್ಯಮ ಸಚಿವರಿಗೆ ಹೀಗೆ ಎಲ್ಲಿಗೆಲ್ಲಾ ದೂರು ನೀಡಬೇಕೋ ಅಲ್ಲಿಗೆಲ್ಲಾ ದೂರು ನೀಡಿದ್ದು, ನ್ಯಾಯಕ್ಕಾಗಿ ಬುಧವಾರ ಉಡುಪಿ ಪ್ರೆಸ್‌ಕ್ಲಬ್‌ಗೆ ಬಂದು ಅಲವತ್ತುಕೊಂಡಿದ್ದಾಳೆ. ಪ್ರೀತಿಸಿ ವಂಚಿಸಿದ ಅದೀಪ್‌ಗೆ ಶಿಕ್ಷೆಯಾಗುವವರೆಗೆ ತಾನು ವಿರಮಿಸಲಾರೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾಳೆ.

ನಕಲಿ ಕೇಶ ವಿಮೋಚನೆಗೊಳಿಸಿಯೇ ಸಿದ್ಧ

Posted by JAYAKIRANA Kirana on | 0 comments | Leave a comment...

ಕೋಟುಮಲ ಬಾಪು ಮುಸ್ಲಿಯಾರ್
ಮಂಗಳೂರು: ಕಾಂತಪುರಂ ವಿಭಾಗ ಕೂದಲಿನ ತುಂಡೊಂದನ್ನು ಹಿಡಿದು ಕೊಂಡು ಅದನ್ನು ಪ್ರವಾದಿ(ಸ.ಅ)ಯ ವರದ್ದೆಂದು ಪ್ರಚಾರ ಮಾಡಿ ಜನರನ್ನು ವಂಚಿಸುತ್ತಿದೆ. ಈ ರೀತಿಯ ವಂಚನೆಯನ್ನು ವಿಮೋಚನೆಗೊಳಿಸಿಯೇ ಸಿದ್ಧ ಎಂದು ಸಮಸ್ತ ಕೇಂದ್ರ ಮುಶಾವರ ಇದರ ಕಾರ್ಯ ದರ್ಶಿ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್ ಗುಡುಗಿದ್ದಾರೆ.
ನಿನ್ನೆ ಎಸ್.ಕೆ.ಎಸ್.ಎಸ್.ಎಫ್. ವತಿ ಯಿಂದ ಮಂಗಳೂರಿನ ನೆಹರೂ ಮೈದಾನ ದಲ್ಲಿ ನಡೆದ ವಿಮೋಚನಾ ಸಂಗಮದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಲ್ಲಿದ್ದ ಸುನ್ನೀ ಸಮುದಾಯ ವನ್ನು ಒಡೆದು ಸಮುದಾಯದಲ್ಲಿ ಗೊಂದಲ ಸೃಷ್ಟಿಸಿದ್ದ ಕಾಂತಪುರಂ ವಿಭಾಗ ಈಗ ಕೇಶದ ತುಂಡೊಂದನ್ನು ಹಿಡಿದು ಪ್ರವಾದಿ ಯವರದ್ದು ಎಂದು ಹೇಳಿ ಮುಸ್ಲಿಮರನ್ನು ವಂಚಿಸಲು ಹೊರಟಿದೆ. ಈ ಬಗ್ಗೆ ಸೂಕ್ತ ಪುರಾವೆಯ ಮೂಲಕ ಅಸಲಿಯತ್ತನ್ನು ಸಾಬೀತು ಪಡಿಸುವಂತೆ ಒತ್ತಾಯಿಸಿದ್ದರೂ ಇದುವರೆಗೂ ಆ ಕೆಲಸ ಮಾಡಿಲ್ಲ. ಇದನ್ನು ಗಮನಿಸಿದಾಗ ಕೇಶ ನಕಲಿ ಎನ್ನುವುದು ಸಾಬೀತಾಗಿದೆ.
ಈ ಸಂದರ್ಭದಲ್ಲೂ ಸತ್ಯವನ್ನು ಬಹಿರಂಗಗೊಳಿಸುವ ಮೂಲಕ ಮುಸ್ಲಿಮರಲ್ಲಿರುವ ಗೊಂದಲವನ್ನು ನೀಗಿಸಬೇಕಾಗಿದ್ದು, ಧಾರ್ಮಿಕ ಗುರುಗಳ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ತದಿಂದ ವಿಮೋಚನಾ ಸಂಗಮ ಎನ್ನುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಮೂಲಕ ಸತ್ಯವನ್ನು ಬಹಿರಂಗಗೊಳಿಸುತ್ತಿದ್ದೇವೆ ಎಂದು ಸಮ್ಮೇಳನದ ಹಿಂದಿನ ಉದ್ದೇಶವನ್ನು ಅವರು ವಿವರಿಸಿದರು. ಮಂಗಳೂರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಅಬ್ಬಾಸ್ ಅಲಿ ಸಿಹಾಬ್ ತಂಙಳ್ ದುವಾ ನೆರವೇರಿಸಿದರು. ವೇದಿಕೆಯಲ್ಲಿ ಅಬ್ಬಾಸ್ ದಾರಿಮಿ ಕೆಲಿಂಜ, ಮಿತ್ತಬೈಲ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಫೈಝಿ, ಅಬುಸ್ಸಮದ್ ಪುಕೊಟೂರು, ಇಸ್ಮಾಯಿಲ್ ಸಖಾಫಿ, ಹಸನ್ ಸಖಾಫಿ ಪುಕೊಟೂರು, ಎಂ.ಎ.ಖಾಸಿಂ ಮುಸ್ಲಿಯಾರ್, ಅಬ್ದುಲ್ ಬಾರಿ ಬಾಖವಿ ಕಾಂತಪುರಂ, ಮಹಮ್ಮದ್ ಸಖಾಫಿ, ನೌಶಾದ್ ಸಖಾಫಿ, ಮಲಯಮ್ಮ ಸಖಾಫಿ, ಕೆ.ಟಿ.ಮಹಮ್ಮದ್ ಸಖಾಫಿ, ವಿ.ಕೆ.ಸದಕತ್ತುಲ್ಲಾ ಫೈಝಿ ಮತ್ತಿತರರು ಉಪಸ್ಥಿತರಿದ್ದರು.
ಮಳೆಗೆ ಜಗ್ಗದ ಮುಖಂಡರು, ಕಾರ್ಯಕರ್ತರು
ವಿಮೋಚನಾ ಸಂಗಮ ಕಾರ್ಯಕ್ರಮವನ್ನು ನಾಲ್ಕು ಗಂಟೆಗೆಂದು ನಿಗದಿಗೊಳಿಸಲಾಗಿತ್ತು. ಆದರೆ ಸಂಜೆಯ ನಮಾಝ್ ಮುಗಿದ ಬಳಿಕ ಅಂದರೆ ೪.೩೦ರ ನಂತರ ಆರಂಭಿಸಲಾಗಿತ್ತು. ಬೃಹತ್ ಸಂಖ್ಯೆಯ ಕಾರ್ಯಕರ್ತರು ಹಾಗೂ ಬಹುತೇಕ ಮುಖಂಡರು ವೇದಿಕೆಯೇರಿಯೂ ಆಗಿತ್ತು. ಅದಾಗಲೇ ಮೋಡ ಕವಿದು ಕತ್ತಲು ಆವರಿಸಿದ್ದು ಭಾರೀ ಮಳೆ ಬರುವ ಮುನ್ಸೂಚನೆಯೂ ಲಭಿಸಿತ್ತು. ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಮಾತನಾಡುತ್ತಿದ್ದಾಗಲೇ ಮಳೆಹನಿ ಜಿಗುಟಲು ಆರಂಭಗೊಂಡಿತ್ತು.
ಅವರ ಭಾಷಣ ಮುಗಿಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭಗೊಂಡಿತು. ತಾವು ಒದ್ದೆಯಾದರೂ ಸತ್ಯ ತಿಳಿಸಿಯೇ ಸಿದ್ಧವೆಂದು ಬಗೆದು ಸ್ಥಳದಿಂದ ಕದಲಿಲ್ಲ. ಸೇರಿದ್ದ ಜನರೂ ಅವರನ್ನೇ ಹಿಂಬಾಲಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಪೆಂಡಾಲ್ ಕುಸಿದು ನಾಲ್ವರು ಗಂಭೀರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಂಜೆ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಹೊರ ಭಾಗದಲ್ಲಿ ಒಂದು ಎಕ್ರೆ ಪ್ರದೇಶದಲ್ಲಿ ಹಾಕಿರುವ ಪೆಂಡಾಲ್ ಕುಸಿದು ಬಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾಳೆಯಿಂದ ಸಹಸ್ರ ಕೋಟಿ ತುಳಸಿ ನಾಮಾರ್ಚನೆ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಸಾವಿರಾರು ಮಂದಿ ಭಕ್ತರು ಭಾಗ ವಹಿಸಲಿರುವ ಕಾರಣ ಭಕ್ತರ ಅನುಕೂಲತೆ ಗಾಗಿ ದೇವಸ್ಥಾನದ ಪ್ರಾಂಗಣದ ಹೊರ ಭಾಗದಲ್ಲಿ ಒಂದು ಎಕ್ರೆ ಪ್ರದೇಶದಲ್ಲಿ ತಗಡಿನ ಚಪ್ಪರ ಮತ್ತು ಪೆಂಡಾಲ್ ಹಾಕಲಾಗಿತು. ಇದಕ್ಕಾಗಿ ಕಳೆದ ನಾಲ್ಕು ದಿನಗಳಿಂದ ಸಿದ್ದತೆ ನಡೆದಿದ್ದವು. ಕಾರ್ಯಕ್ರಮಕ್ಕೆ ಇನ್ನು ಒಂದು ದಿನ ಉಳಿದಿರುವಂತೆ ಪೆಂಡಾಲ್ ಹಾಕು ವವರು ತಮ್ಮ ಕೆಲಸವನ್ನು ಪೂರ್ಣ ಗೊಳಿಸಿದ್ದರು. ಹೀಗಾಗಿ ನಿನ್ನೆ ಸಂಜೆ ಕೆಲ ಭಕ್ತರು ಪೆಂಡಾಲ್ ಒಳಗೆ ಶುಚಿತ್ವ ಮಾಡುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಇದೇ ವೇಳೆ ಬೀಸಿದ ಗಾಳಿಗೆ ಹಾಗೂ ಸುರಿದ ಭಾರಿ ಮಳೆಗೆ ಒಂದು ಎಕ್ರೆ ಪ್ರದೇಶದಲ್ಲಿ ಹಾಕಿರುವ ಪೆಂಡಾಲ್ ಕುಸಿದು ಬಿದ್ದಿದೆ. ಪೆಂಡಾಲ್ ಕುಸಿ ಯುತ್ತಿರುವುದನ್ನು ಗಮನಿಸಿ ಹೆಚ್ಚಿನ ಭಕ್ತರು ಹೊರಗೆ ಓಡಿ ಬಂದಿದ್ದರೆ ನಾಲ್ಕು ಮಂದಿ ಪೆಂಡಾಲ್‌ನಿಂದ ಹೊರ ಬರುವ ಮೊದಲೇ ಪೆಂಡಾಲ್ ಕುಸಿದು ಬಿದ್ದಿದ್ದು, ಭಕ್ತರು ಅದರಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು
ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಂಡಾಲನ್ನು ಕಬ್ಬಿಣದ ರಾಡು ಮತ್ತು ತಗಡು ಶೀಟನ್ನು ಬಳಸಿ ನಿರ್ಮಿಸಲಾಗಿದ್ದರೂ ಗಾಳಿಯ ಮುಂದೆ ಪೆಂಡಾಲ್ ಹೆಡೆ ಮಡಚಿದ ಹಾವಿನಂತಾಗಿದೆ. ಇತ್ತ ದೇವಸ್ಥಾನದಲ್ಲಿ ಸಹಸ್ರ ಕೋಟಿ ತುಳಸಿ ನಾಮಾರ್ಚನೆಗೆ ಇನ್ನು ಕೇವಲ ಒಂದೇ ದಿನ ಉಳಿದಿದ್ದು ಅಷ್ಟರಲ್ಲಿ ಮತ್ತೆ ಎಲ್ಲಾ ಸಿದ್ದತೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಆದರೆ ಈ ಅವಧಿಯಲ್ಲಿ ಮತ್ತೇ ಹಿಂದಿನ ಸಿದ್ದತೆ ಮಾಡುವುದು ಹೇಗೆ? ಎನ್ನುವ ಪ್ರಶ್ನೆಯೂ ಆಡಳಿತ ಮಂಡಳಿಗೆ ಎದುರಾಗಿದೆ.

ಮಲೆಕುಡಿಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ

Posted by JAYAKIRANA Kirana on | 0 comments | Leave a comment...

ಕುತ್ಲೂರಿನಲ್ಲಿ ಡಿವೈಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷರ ಎಚ್ಚರಿಕೆ
ಬೆಳ್ತಂಗಡಿ: ನಕ್ಸಲರಿಗೆ ನೆರವಾಗಿದ್ದಾರೆಂಬ ಆರೋಪದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ವಿಠಲ ಮಲೆಕುಡಿಯರ ಮೇಲೆ ಹಾಗೂ ಕುತ್ಲೂರಿನ ಮೂಲ ನಿವಾಸಿಗಳ ಮೇಲೆ ರಾಜ್ಯ ಸರ್ಕಾರ ಹಾಗೂ ನಕ್ಸಲ್ ನಿಗ್ರಹ ದಳ ದೌರ್ಜನ್ಯ ನಡೆಸುತ್ತಿರುವುದನ್ನು ರಾಜಕೀಯವಾಗಿ ಹಾಗೂ ಕಾನೂನು ರೀತಿಯಲ್ಲೇ ಎದುರಿಸುವುದಾಗಿ ಡಿವೈಎಫ್‌ಐ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದ ಎಂ.ಬಿ. ರಾಜೇಶ್ ಹೇಳಿದರು. ಕುತ್ಲೂರು ಗ್ರಾಮದ ಅಲಂಬ ಪರಿಸರದ ಮೂಲ ನಿವಾಸಿಗಳನ್ನು ನಿನ್ನೆ (ಎ.೧೮)
ಭೇಟಿಯಾಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಸಂಸದ ರಾಜೇಶ್, ಪೊಲೀಸರು ವಿದ್ಯಾರ್ಥಿ ವಿಠಲ ಮಲೆಕುಡಿಯನ ವಿರುದ್ಧ ವಿನಾ ಕಾರಣ ಸೇಡು ತೀರಿಸುವ ಕಾರ‍್ಯ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದ ವಿಠಲನ ಭವಿಷ್ಯಕ್ಕೆ ಕಲ್ಲು ಹಾಕಿ ಅಮಾ ನವೀಯವಾಗಿ ವರ್ತಿಸಿದ್ದಾರೆ ಎಂದ ಅವರು, ಇಲ್ಲಿಯ ಮೂಲ ನಿವಾಸಿ ಗಳಿಗೆ ಏನೂ ಮಾಡಿದರೂ ನಡೆಯುತ್ತದೆ ಎಂಬ ಮನೋಭಾವನೆ ಯಾರಿಗೂ ಬೇಡ. ಇಲ್ಲಿನ ಜನರ ಬದುಕುವ ಹಕ್ಕಿಗಾಗಿ ದೇಶಾದ್ಯಂತ ಚಳುವಳಿ ರೂಪಿಸುವುದಾಗಿ ಈ ಸಂದರ್ಭ ಎಚ್ಚರಿಸಿದರು.
ನಮ್ಮ ದೇಶವು ಮೂಲ ನಿವಾಸಿಗಳಿಗೆ ಅವರ ನೆಲೆಗಳಲ್ಲಿಯೇ ಬದುಕುವ ಹಕ್ಕನ್ನು ನೀಡಿದೆ. ಆದರೆ ಇಲ್ಲಿ ಆ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವುದಕ್ಕಾಗಿಯೇ ನಕ್ಸಲೀಯರ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಪೊಲೀಸ್ ದೌರ್ಜನ್ಯದ ವಿರುದ್ಧ ಸುಪ್ರೀಂ ಕೋರ್ಟ್‌ನವರೆಗೂ ಹೋರಾಟ ಮುಂದುವರಿಸಲಾಗುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ಇಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ನಾಗರಿಕನೂ ಈ ಮಣ್ಣಲ್ಲಿ ಬದುಕಲು ಅವಕಾಶವಿದೆ. ಅದನ್ನು ಕಸಿದುಕೊಳ್ಳಲು ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಯಾಗಿರುವ ವಿಠಲ ಮಲೆಕುಡಿಯನ ಭವಿಷ್ಯ ಬೆಳಗಲು ಅವನ ಬಿಡುಗಡೆಯಾಗಬೇಕು. ದೌರ್ಜನ್ಯವೆಸಗಿದ ಪೊಲೀಸರಿಗೆ ಶಿಕ್ಷೆಯಾಗಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಸಂಸದರೊಂದಿಗೆ ಬಿ. ಮಾಧವ, ಕಾಸರಗೋಡಿನ ಜಿಲ್ಲಾ ಮುಖಂಡ ಶಿಜು ಮಾಥ್ಯೂ, ಮುನೀರ್ ಕಾಟಿಪಳ್ಳ, ಬಿ.ಎಂ. ಭಟ್, ಶಿವ ಕುಮಾರ್, ಶೇಖರಲಾಲ, ಸುಕನ್ಯಾ, ಹರಿದಾಸ್ ಮೊದಲಾದವರು ಜೊತೆಗಿದ್ದರು.
ಬುಡಕಟ್ಟು ಜನರ ಮೇಲೆ ಎಎನ್‌ಎಫ್ ಸವಾರಿ
ಕೇರಳದ ಯುವ ಸಂಸದ ರಾಜೇಶ್ ಆರೋಪ
ಮಂಗಳೂರು: ಬದುಕಿನ ಬವಣೆ ತೀರಿಸಲು ಕಾಡನ್ನೇ ನೆಚ್ಚಿಕೊಂಡು ನೂರಾರು ವರ್ಷಗಳಿಂದ ಕಾನೂನುಬದ್ಧವಾಗಿ ಕುತ್ಲೂರಿನ ಕಾಡಿನಲ್ಲೇ ನೆಲೆಸಿರುವ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ರಾಜ್ಯ ಸರಕಾರದ ತಂತ್ರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಡಿವೈಎಫ್‌ಐ ಸಂಘಟನೆಯ ಅಖಿಲ ಭಾರತ ಜಂಟಿ ಕಾರ್ಯ ದರ್ಶಿ, ಕೇರಳ ಪಾಲ್ಘಾಟ್‌ನ ಯುವ ಸಂಸದ ಎಂ.ಬಿ. ರಾಜೇಶ್ ಆರೋಪಿಸಿದ್ದಾರೆ.
ಕಾಡಿನ ಜೊತೆಯಲ್ಲೇ ಬದುಕು ಕಂಡವರಿಗೆ ನಕ್ಸಲ್ ಎಂಬ ಹಣೆ ಪಟ್ಟಿ ಕಟ್ಟಿ, ಎಎನ್‌ಎಫ್ (ನಕ್ಸಲ್ ವಿರೋಧಿ ಪಡೆ) ತಂಡದ ಮೂಲಕ ಮಲೆಕುಡಿಯರನ್ನು ದಮನಿಸುವ ಯತ್ನ ಖಂಡನಾರ್ಹವಾದುದು ಎಂದು ರಾಜೇಶ್ ತಿಳಿಸಿದ್ದಾರೆ.
 ನಕ್ಸಲ್ ಬೆಂಬಲಿಗ ಎಂಬ ಆರೋಪದಡಿ ಬಂಧಿತನಾಗಿರುವ ವಿಠಲ ಮಲೆಕುಡಿಯರ ಮನೆಗೆ ಭೇಟಿ ಮಾಡಿದ ರಾಜೇಶ್ ಮತ್ತು ಡಿವೈಎಫ್‌ಐ ತಂಡ ವಿಠಲ್ ಅವರ ತಾಯಿ ಹೊನ್ನಮ್ಮ ಹಾಗೂ ಸ್ಥಳೀಯರನ್ನು ಭೇಟಿಯಾದರು. ಅಲ್ಲದೆ ಮಂಗಳೂರು ಸಬ್‌ಜೈಲಿನಲ್ಲಿರುವ ವಿಠಲ ಹಾಗೂ ಆತನ ತಂದೆಯನ್ನು ಭೇಟಿ ಮಾಡಿದರು.
ಎಎನ್‌ಎಫ್ ವಿಠಲ್ ಮೇಲೆ ಹೊರಿಸಿದ ಆರೋಪಗಳೆಲ್ಲವೂ ಆಧಾರ ರಹಿತವಾಗಿದೆ. ಕೇವಲ ಭಗತ್ ಸಿಂಗ್‌ನ ಪುಸ್ತಕ ದೊರೆತ ಹಿನ್ನೆಲೆಯಲ್ಲಿ ಆತ ನಕ್ಸಲ್ ಬೆಂಬಲಿಗ ಎಂದು ಸಾಕ್ಷ ಒದಗಿಸುವುದಾದರೆ ನಾವೆಲ್ಲಾ ಜೈಲಿನಲ್ಲಿರ ಬೇಕಾಗುತ್ತದೆ. ರಾಜ್ಯದ ಬಿಜೆಪಿ ಸರಕಾರ ನರೇಂದ್ರ ಮೋದಿಯ ಹೆಜ್ಜೆಗುರುತು ಗಳನ್ನು ಅನುಸರಿಸುತ್ತಿದೆ ಎಂದು ರಾಜೇಶ್ ಅವರು ಕರ್ನಾಟಕ ಸರಕಾರದ ವಿರುದ್ಧ ಕಿಡಿಕಾರಿದರು.
ವಿಠಲನಿಗೆ ನ್ಯಾಯಾಲಯ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೂ, ಹಾಸ್ಟೆಲ್ ರೂಂಗೆ ಬೀಗ ಜಡಿದ ಪೊಲೀಸರು, ಪರೀಕ್ಷೆ ಬರೆಯಲು ವಿಠಲ್‌ಗೆ ಸ್ನೇಹಿತರಾಗಲಿ ಪೋಷಕರಾಗಲಿ ಸಹಕಾರ ನೀಡದಂತೆ ಮಾಡಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಉಲ್ಲಂಘನೆಯಾಗುತ್ತಿದ್ದು, ೧೦ ಲಕ್ಷ ರೂ.ಗಳ ಅತ್ಯಲ್ಪ ಪರಿಹಾರ ಮೊತ್ತ ನೀಡಿ ಬುಡಕಟ್ಟು ನಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಸಂಸದರ ತಂಡವೊಂದು ಸದ್ಯದಲ್ಲೇ ಕುತ್ಲೂರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ ಎಂದರು. ಕರ್ನಾಟಕದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬುಡಕಟ್ಟು ಜನರ ಹಕ್ಕುಗಳನ್ನು ಕಾಯ್ದು ಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದ ಅವರು, ವಿಠಲನ ಬಂಧನ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಆದಿವಾಸಿ ಬುಡಕಟ್ಟು ಆಯೋಗಕ್ಕೂ ದೂರು ನೀಡಲಾಗುವುದು. ಮಾತ್ರವಲ್ಲದೆ ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್‌ಗೂ ಮೊರೆ ಹೋಗುವುದಾಗಿ ಅವರು ಹೇಳಿದರು. ಡಿವೈಎಫ್‌ಐನ ಸಕ್ರಿಯ ಕಾರ್ಯಕರ್ತನಾಗಿರುವ ವಿಠಲನ ಬಂಧನ, ಅರಣ್ಯ ಕಾಯ್ದೆಯ ಉಲ್ಲಂಘನೆ ಮತ್ತು ಬುಡಕಟ್ಟು ಜನರ ಒಕ್ಕಲೆಬ್ಬಿಸುವ ವಿಷಯವನ್ನು ಡಿವೈಎಫ್‌ಐ ರಾಷ್ಟ್ರೀಯ ವಿಷಯವನ್ನಾಗಿಸಿ ಜನರನ್ನು ಜಾಗೃತಿಗೊಳಿಸಿ ಸಂಘಟನೆ ಹೋರಾಟ ನಡೆಸಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ, ಡಿವೈಎಫ್‌ಐನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಿಜಿ ಮ್ಯಾಥ್ಯೂ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲಿ ಭಾರೀ ಮಳೆ: ಸಂಚಾರ ಅಸ್ತವ್ಯಸ್ತ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ತಾಲೂಕಿನಾದ್ಯಂತ ಬುಧವಾರ ಸಂಜೆ ಗಾಳಿ, ಗುಡುಗಿ ನೊಂದಿಗೆ ಭಾರೀ ಮಳೆ ಸುರಿದಿದ್ದು, ಮಂಗಳವಾರ ತಡರಾತ್ರಿಯೂ ತಾಲೂಕಿನ ಹಲವೆಡೆ ಮಳೆಯಾಗಿದೆ.
ಬೆಳ್ತಂಗಡಿ ನಗರದಲ್ಲಿ ಸುರಿದ ಗಾಳಿ ಮಳೆಗೆ ಕಟ್ಟಡಗಳ ಮೇಲೆ ಹಾಕಲಾಗಿದ್ದ ವಿವಿಧ ಕಂಪೆನಿಗಳ ಜಾಹೀರಾತು ಕಟೌಟುಗಳು ಗಾಳಿಗೆ ಹಾರಿ ಹೋಗಿವೆ. ಗುರುವಾಯನಕೆರೆ ಬಂಟರ ಭವನದ ಸಮೀಪ ವಿದ್ಯುತ್ ಕಂಬದ ಮೇಲೆ ಮರವೊಂದು ಬಿದ್ದ ಪರಿಣಾಮ ವಿದ್ಯುತ್ ಲೇನ್ ಹಾಗೂ ಮರ ರಸ್ತೆಗೆ ಬಿದ್ದು ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ತಾಲೂಕಿನಾ ದ್ಯಂತ ಗುಡುಗು ಗಾಳಿಯಿಂದ ಕೂಡಿದ ಮಳೆಯಿಂದಾಗಿ ತಾಲೂಕು ಕೇಂದ್ರ ವಾದ ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ನಗರದಲ್ಲಿ ಮಳೆ: ಕರ್ತವ್ಯನಿರತ ಟ್ರಾಫಿಕ್ ಪೊಲೀಸ್‌ಗೆ ಗಾಯ
ಮಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸೊಬ್ಬರ ಮೇಲೆ ನಿನ್ನೆ ಸಂಜೆ ವೇಳೆ ಬೀಸಿದ ಗಾಳಿ ಮಳೆಯ ಪರಿಣಾಮ ಎಂಪೈರ್ ಮಾಲ್ ನಲ್ಲಿರುವ ಅಂಗಡಿಯೊಂದರ ನಾಮಫಲಕ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಟ್ರಾಫಿಕ್‌ನ ಮಂಗಳೂರು ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನಿಲ್(೨೧) ಗಾಯಗೊಂಡವರು. ನಿನ್ನೆ ಸಂಜೆ ವೇಳೆ ಎಂಪೈರ್ ಮಹಲಿನ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಮಳೆ ಬಂದ ಕಾರಣ ರಸ್ತೆ ಬದಿಗೆ ಬಂದು ವಾಹನಗಳನ್ನು ನಿಯಂತ್ರಿಸುತ್ತಿದ್ದರು. ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಯದಲ್ಲಿ ಮರ ಬಿದ್ದು ಮನೆಗೆ ಹಾನಿ
ಸುಳ್ಯ: ಬುಧವಾರ ಸಂಜೆ ಸುಳ್ಯದಲ್ಲಿ ಗುಡುಗು ಸಿಡಿಲಿನ ಸಹಿತ ಒಂದು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು. ಸುಳ್ಯ ನಗರದಲ್ಲಿ ಮತ್ತು ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾದರೆ ಬೆಳ್ಳಾರೆ ಪರಿಸರದಲ್ಲಿ ಸಾಧಾ ರಣ ಮಳೆಯಾಯಿತು.
ಸಂಪಾಜೆಯಲ್ಲಿ ಮಳೆಯೊಂದಿಗೆ ಗಾಳಿಯೂ ಬೀಸಿದೆ. ಕಡಪ್ಪಾಲ ಎಂಬಲ್ಲಿ ಗಾಳಿಗೆ ಮರ ಬಿದ್ದು ಮನೆಯೊಂದಕ್ಕೆ ಹಾನಿಯಾಗಿದೆ. ಕಲ್ಲುಗುಂಡಿ ಸಮೀಪ ವಿದ್ಯುತ್ ಕಂಬಕ್ಕೆ ಹಾನಿಯಾದ ಬಗ್ಗೆ ವರದಿಯಾಗಿದೆ.

ವಿಟ್ಲ: ಗುಡುಗು ಸಹಿತ ಭಾರೀ ಮಳೆ
ವಿಟ್ಲ: ವಿಟ್ಲದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾ ಗಿದ್ದು, ಪರಿಣಾಮ ಜನತೆ ತತ್ತರಿಸಿದ್ದಾರೆ. ವಿಟ್ಲದ ಮುಖ್ಯ ರಸ್ತೆಗಳು ಕಿರಿದಾಗಿದ್ದ ರಿಂದ ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಚಾಲಕರು ಪರದಾಡಿದರು. ಚರಂಡಿ ನೀರು ರಸ್ತೆಯಲ್ಲಿ ಹರಿದಿದ್ದರಿಂದ ರಸ್ತೆ ತುಂಬಾ ದುರ್ನಾತ ಬೀರುತ್ತಿತ್ತು.

ಜಿಲ್ಲೆಗೆ ಎರಡು ಬಾರಿ ಬಂದರೂ ಸಭೆ ನಡೆಸದೆ ನಿರ್ಲಕ್ಷ್ಯ

Posted by JAYAKIRANA Kirana on | 0 comments | Leave a comment...

ಸಿ.ಎಂ. ವಿರುದ್ಧ ಖಾದರ್ ಆರೋಪ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ನೀರಿನ ಅಭಾವ ಉಂಟಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಬೇಕಾಗಿದ್ದ ಮುಖ್ಯಮಂತ್ರಿ ಸದಾನಂದ ಗೌಡ ಅವರು ಎರಡು ಬಾರಿ ಜಿಲ್ಲೆಗೆ ಬಂದರೂ ಸಭೆ ನಡೆಸದೆ ನಿರ್ಲಕ್ಷ್ಯ ಧೋರಣೆ ತಾಳಿ ದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿದ್ದು ಹೊಸ ಕೊಳವೆ ಬಾವಿ ತೋಡಿಸಲು ಸರಕಾರದ ಬಳಿ ಹಣ ಇಲ್ಲ. ಅಲ್ಲದೆ ಹಣ ಸಿಗುವುದಿಲ್ಲ ಎನ್ನುವ ಹೆದರಿಕೆ ಯಿಂದ ಕೊಳವೆ ಬಾವಿ ತೋಡಲು ಯಾರೂ ಮುಂದೆ ಬರುತ್ತಿಲ್ಲ. ಸಾಲ ಮಾಡಿ ಕೊಳವೆ ಬಾವಿ ತೋಡಿದರೂ ವಿದ್ಯುತ್ ಸಂಪರ್ಕಕ್ಕೆ ಒಂದು ಲಕ್ಷ ಕಟ್ಟಬೇಕಾಗಿದ್ದು ಅದಕ್ಕಾಗಿ ತಿಂಗಳು ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಆದರೂ ಸರಕಾರ ಕಾರ್ಯ ಪ್ರವೃತ್ತವಾಗಿಲ್ಲ ಎಂದು ಕಿಡಿಕಾರಿದರು.
ಬರ ಪರಿಹಾರಕ್ಕೆ ೧೨೫ ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಯವರು ನೀಡಿರುವ ಹೇಳಿಕೆಗಳು ಪತ್ರಿಕೆಗಳಲ್ಲಿ ಮುಖ ಪುಟಗಳಲ್ಲಿ ಪ್ರಕಟಗೊಂಡಿದೆ. ಪ್ರತೀ ಕ್ಷೇತ್ರಕ್ಕೆ ಮೀಸಲಾಗಿಟ್ಟಿದ್ದ ೩೦ ಲಕ್ಷ ಅನುದಾನ ದ.ಕ.ಜಿಲ್ಲೆಯ ಯಾವುದೇ ಶಾಸಕರಿಗೂ ನೀಡದೆ ಇತರ ಜಿಲ್ಲೆಗಳಿಗೆ ಮಾತ್ರ ನೀಡಲಾಗಿದೆ ಎಂದು ಖಾದರ್ ಕಿಡಿಕಾರಿದರು.
ಚುನಾವಣೆಯ ಸಂದರ್ಭದಲ್ಲಿ ಮತ ಪಡೆಯುವ ಉದ್ದೇಶದಿಂದ ಬಡವರಿಗೆ ತಾತ್ಕಾಲಿಕ ಪಡಿತರ ಚೀಟಿಗಳನ್ನು ನೀಡಲಾಗಿತ್ತು. ಆದರೆ ಈಗ ವಿವಿಧ ಕಾರಣಗಳನ್ನು ನೀಡಿ ರದ್ದುಪಡಿಸಲಾಗುತ್ತಿದ್ದು ಪುದು ಗ್ರಾಮವೊಂದರಲ್ಲೇ ೭೫೦ ಕಡುಬಡವರ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇದು ಸರಕಾರಕ್ಕೆ ಬಡವರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದ ಖಾದರ್, ಪಡಿತರದ ಬಗ್ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ತನಿಖೆಗೊಳಪಡಿಸಿ ಶಿಕ್ಷೆಗೊಳಪಡಿಸ ಬೇಕು ಎಂದು ಆಗ್ರಹಿಸಿದರು.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ಕಾರು ಮತ್ತು ಲಾರಿ ಮಧ್ಯೆ ಅಪಘಾತ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ ಕಲ್ಸಂಕ ಬಳಿ ಇನೋವಾ ಕಾರು ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಇದರಿಂದ ಸುಮಾರು ಅರ್ಧ ತಾಸುಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಾಪು ಬೀಚ್‌ಗೆ ಜಿಲ್ಲಾಧಿಕಾರಿ ಭೇಟಿ

Posted by JAYAKIRANA Kirana on | 0 comments | Leave a comment...

ಪಡುಬಿದ್ರೆ: ಕಾಪು ಬೀಚನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಸೋದ್ಯಮವನ್ನು ಉತ್ತಮಗೊಳಿಸುವ ಪೂರ್ವಭಾವಿಯಾಗಿ ಬುಧವಾರ ಕಾಪು ಬೀಚ್ ಪರಿಸರಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ಎಂಟಿ ರೇಜು ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 ಕಾಪು ಲೈಟ್ ಹೌಸ್, ಪ್ರವಾಸೋದ್ಯಮ ಕಚೇರಿ, ಲೈಟ್ ಹೌಸ್‌ಗೆ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ಹಾಗೂ ರಸ್ತೆಯ ಬಗ್ಗೆ ಸ್ಥಳೀಯರೊಂದಿಗೆ ಹಾಗೂ ಶಾಸಕರೊಂದಿಗೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4075) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2522) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (93) kyandi (1) lekhana (262) ln (1) lnews (3693) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (808) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (954) tpchandrashekaran (1) traffic (1) train (1) udu (1) udupi (487) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)