ವಿವಿ ಪರೀಕ್ಷೆ ಬರೆದ ವಿಠಲ

Posted by JAYAKIRANA Kirana on Monday, 16 April 2012 | 0 comments | Leave a comment...

ಮಂಗಳೂರು: ನಕ್ಸಲ್ ಹಣೆಪಟ್ಟಿ ಪಡೆದಿರುವ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕುತ್ಲೂರು ಮಣಿಲ ಹೊಸಮನೆಯ ವಿಠಲನಿಗೆ ಮಂಗಳೂರು ನ್ಯಾಯಾಲಯ ನಿನ್ನೆ (ಸೋಮವಾರ) ಪ್ರಥಮ ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪರೀಕ್ಷೆ ಬರೆಯಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಇಂದು ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆದಿದ್ದಾನೆ.
ವಿಠಲನ ಪರವಾಗಿ ಅರ್ಜಿ ಸಲ್ಲಿಸಿದ್ದ ನ್ಯಾಯವಾದಿ ಶಿವಕುಮಾರ್ ನಡೆಸಿದ ವಾದದಲ್ಲಿ ನ್ಯಾಯಾಲಯ ಪರೀಕ್ಷೆ ಬರೆಯಲು ಅನುಮತಿಗೆ ನೀಡಿತ್ತು. ನಿನ್ನೆ ನಡೆದ ವಿವಿ ಆಂತರಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲವಾದರೂ, ಅಂತಿಮವಾಗಿ ಉಳಿದ ಪರೀಕ್ಷೆ ಬರೆಯಲು ಅನುಮತಿ ನೀಡಿದ ನ್ಯಾಯಾಲಯ ತೀರ್ಪಿನ ಬಗ್ಗೆ ವಿಠಲ ಸಂತಸ ವ್ಯಕ್ತ ಪಡಿಸಿದ್ದಾನೆ.

landlinks

Posted by JAYAKIRANA Kirana on | 0 comments | Leave a comment...


ನಾಗರನನ್ನು ನುಂಗಿದ ನಾಗರ!

Posted by JAYAKIRANA Kirana on | 0 comments | Leave a comment...

ಸುಳ್ಯ: ನಾಗರ ಹಾವನ್ನು ಇನ್ನೊಂದು ನಾಗರ ಹಾವು ನುಂಗಿದ ಅಪರೂಪದ ದೃಶ್ಯ ಇಲ್ಲಿಗೆ ಸಮೀಪದ ಕಲ್ಲುಮುಟ್ಲು ಪ್ರದೇಶದಲ್ಲಿ ಭಾನುವಾರ ಕಂಡು ಬಂದಿದೆ.
ನಾಗರ ಹಾವನ್ನು ಇನ್ನೊಂದು ನಾಗರ ಹಾವು ನುಂಗುವುದು ವಿಶೇಷ ಸಂಗತಿ ಅಲ್ಲ. ಆದರೆ ಇದು ನೋಡಲು ಸಿಗುವುದು ಮಾತ್ರ ತೀರಾ ಅಪರೂಪ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾವಿಗೆ ಆಹಾರ ಸಿಗುವುದು ಸ್ವಲ್ಪ ಕಷ್ಟ. ಇಂತಹ ಸಂದರ್ಭ ಹಾವನ್ನು ಹಾವು ತಿನ್ನುತ್ತದೆ. ತನ್ನ ಆಹಾರ (ಮಿಕ)ವನ್ನು ಇನ್ನೊಂದು ಹಾವು ತಿನ್ನಲು ಯತ್ನಿಸಿದಾಗ ಕೋಪಗೊಂಡ ನಾಗರ ಮಿಕ ನುಂಗಿದ ಹಾವನ್ನೂ ನುಂಗುವುದೂ ಇದೆ ಎನ್ನುತ್ತಾರೆ ಪುತ್ತೂರಿನ ಉರಗ ತಜ್ಞ ಡಾ.ರವೀಂದ್ರನಾಥ ಐತಾಳ್.
ನಾಗರ ಹಾವು ಇತರ ಹಾವನ್ನು ನುಂಗುವುದು ನೋಡಿದ್ದೇವೆ. ಆದರೆ ಒಂದು ನಾಗರವನ್ನು ಇನ್ನೊಂದು ನಾಗರ ತಿನ್ನುವುದು ನೋಡಿದ್ದು ಇದೇ ಮೊದಲು ಎನ್ನುತ್ತಾರೆ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ. ಭಾನುವಾರ ಇಂತಹ ಅಪರೂಪದ ಘಟನೆ ಕಲ್ಲುಮುಟ್ಲುವಿನಲ್ಲಿ ನಡೆಯುತ್ತಿರುವ ವಿಷಯ ತಿಳಿದ ಅವರು ಸ್ಥಳಕ್ಕೆ ತೆರಳಿ ಅದರ ಸಂಪೂರ್ಣ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎರಡು ನಾಗರ ಹಾವುಗಳು ಪರಸ್ಪರ ಕಾದಾಡಿ ಬಳಿಕ ಒಂದು ನಾಗರ ಇನ್ನೊಂದನ್ನು ನುಂಗಿದೆ. ಬಳಿಕ ಆಯಾಸದಿಂದ ಅದು ಪೊದೆಗಳ ಎಡೆಯಲ್ಲಿ ಮಾಯವಾಯಿತು ಎನ್ನುತ್ತಾರೆ ಅವರು.

‘ಇನ್ನು ಮುಂದೆ ಕೊಂಡಾಣ ದೈವಸ್ಥಾನದಲ್ಲಿಲ್ಲ ಸಮಸ್ಯೆ’

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ೬೦ ವರ್ಷ ಗಳಿಂದ ಆಡಳಿತ ನಡೆಸಿದವರಿಂದಾಗಿ ಸಮಸ್ಯೆಗಳಿಂದ ಕೂಡಿದ್ದ ಇತಿಹಾಸ ಪ್ರಸಿದ್ಧವಾದ ಕೊಂಡಾಣ ಪಿಲಿಚಾ ಮುಂಡಿ ಬಂಟ ಮುಂಡತ್ತಾಯ ದೈವ ಸ್ಥಾನದ ಎಲ್ಲಾ ಸಮಸ್ಯೆಗಳು ತಿಂಗಳಲ್ಲೇ ಪರಿಹಾರಗೊಳ್ಳಲಿದೆ ಎಂದು ನೂತನ ಅಧ್ಯಕ್ಷರಾಗಿರುವ ಜೀವಾನಂದ ಶೆಟ್ಟಿ ಕೆಳಗಿನ ಕೋಟೆಕಾರ್ ಅವರು ತಿಳಿಸಿದ್ದಾರೆ.
ನಿನ್ನೆ ನಗರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ೧೯೫೧ರಲ್ಲಿ ದೈವಸ್ಥಾನವು ನ್ಯಾಯಾ ಲಯದ ಮೂಲಕ ದತ್ತಿ ಇಲಾಖೆಯ ವಶಕ್ಕೆ ಬಂದಿದ್ದು, ಇಲಾಖೆ ವೆಂಕಟ ರಾವ್ ಎಂಬವರಿಗೆ ಆಡಳಿತ ನಡೆಸಲು ಅನುವು ಮಾಡಿ ಕೊಟ್ಟಿತ್ತು. ನಂತರ ೬೦ ವರ್ಷಗಳವರೆಗೆ ಒಂದೇ ಮನೆಯವರು ಆಡಳಿತ ನಡೆಸುತ್ತಾ ಬಂದಿದ್ದು ಈ ಸಂದರ್ಭದಲ್ಲಿ ದೈವ ಸ್ಥಾನಕ್ಕೆ ಬರುವ ಭಕ್ತಾದಿಗಳ ಅನು ಕೂಲಕ್ಕಾಗಿ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ವ್ಯವಸ್ಥೆ ಯನ್ನೇ ಮಾಡದಿದ್ದು ಈ ಬಗ್ಗೆ ಮನವಿ ಮಾಡಿದರೂ ಕಡೆಗಣಿಸ ಲಾಗಿತ್ತು.
ಅಲ್ಲದೆ ದೈವಸ್ಥಾನಕ್ಕೆ ಹರಕೆಯ ರೂಪದಲ್ಲಿ ಬರುತ್ತಿದ್ದ ಕೋಟ್ಯಂತರ ಹಣ, ಬಂಗಾರ, ಬೆಳ್ಳಿ, ಕೋಳಿಗಳು ಹಾಗೂ ಇತರ ಸೊತ್ತುಗಳ ಬಗ್ಗೆ ಯೂ ಲೆಕ್ಕಪತ್ರ ನೀಡಿರಲಿಲ್ಲ. ವರ್ಷಂ ಪ್ರತೀ ದತ್ತಿ ಇಲಾಖೆಗೆ ಲೆಕ್ಕಪತ್ರ ನೀಡು ವಾಗ ಯಾವುದೇ ಉಳಿತಾಯ ಆಗಿಲ್ಲ ಎಂದು ಸುಳ್ಳು ಮಾಹಿತಿ ನೀಡಲಾ ಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ಒಂದೂವರೆ ವರ್ಷ ನಿರಂತರವಾಗಿ ಹೋರಾಟ ನಡೆಸಿದ್ದರ ಫಲವಾಗಿ ತನಿಖೆ ನಡೆಸಿದ್ದ ನ್ಯಾಯಾಲಯ, ಆಡಳಿತ ಸಮಿತಿಯನ್ನು ವಜಾಗೊಳಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿತ್ತು. ಇದರಿಂದಾಗಿ ಕಳೆದ ತಿಂಗಳು ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ತಾಮಾರ್ ಕೃಷ್ಣ ಶೆಟ್ಟಿ, ರಾಮ ಬಲ್ಯ, ಪ್ರಸಾದ್ ಮಾಡೂರು, ಶಿವಪ್ರಸಾದ್ ಆಚಾರ್ಯ, ಯಶೋಧರ ಶೇಣವ್, ಬಾಲಕೃಷ್ಣ ಅಮೀನ್, ವಸಂತಿ ಐತಪ್ಪ ಪೂಜಾರಿ ಉಪಸ್ಥಿತರಿದ್ದರು.
ದೀವಟಿಗೆ ಪ್ರಕರಣ ಕೋರ್ಟ್‌ನಲ್ಲಿದೆ
ಇದೇ ಸಂದರ್ಭದಲ್ಲಿ ಮಾತ ನಾಡಿದ ಜೀವಾನಂದ ಶೆಟ್ಟಿ, ಎರಡು ವರ್ಷಗಳ ಹಿಂದೆ ತಾಮಾರು ಕೃಷ್ಣ ಶೆಟ್ಟಿ ಮಾಹಿತಿ ಹಕ್ಕಿನಲ್ಲಿ ದೈವಸ್ಥಾನದ ಲೆಕ್ಕಾಚಾರ ಕೇಳಿದ್ದರಲ್ಲದೆ ಆಡಳಿತ ಮಂಡಳಿಯ ಅವ್ಯವಹಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರು. ಇದರಿಂದ ಕೆರಳಿದ ಆಡಳಿತ ಮಂಡಳಿ ದೈವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೈವದ ಪಾತ್ರಿಯ ಬಳಿ ಹೇಳಿಸಿ ತಾಮಾರ್ ಅವರ ಮುಖಕ್ಕೆ ದೀವಟಿಗೆ  ಇಡುವಂತೆ ಮಾಡಿದ್ದು ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂದರು. ಅಲ್ಲದೆ ದೈವದ ಪಾತ್ರಿಯನ್ನು ಬದಲಾಯಿಸುವ ನಿಯಮ ಇದ್ದಲ್ಲಿ ಮುಂದೆ ನಡೆಯುವ ಜಾತ್ರ್ರೆಗೆ ಪಾತ್ರಿಯ ಬದಲಾವಣೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಗೋಹತ್ಯೆ ನಿಷೇಧ ದರಿದ್ರ ಸರಕಾರದಿಂದ ಅಸಾಧ್ಯ: ವಜ್ರದೇಹಿ ಸ್ವಾಮೀಜಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಹಿಂದೂಗಳು ಪೂಜೆ ಮಾಡುವ ಗೋವುಗಳ ರಕ್ಷಣೆ ಗಾಗಿ ಕಾನೂನು ಜಾರಿಗೆ ತರಲು ದರಿದ್ರ ಹಾಗೂ ಲಜ್ಜೆಗೆಟ್ಟ ಸರಕಾರಗಳಿಂದ ಸಾಧ್ಯವಿಲ್ಲ ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಕಿಡಿ ಕಾರಿದ್ದಾರೆ.
ನಿನ್ನೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಡೆದ ಅಕ್ರಮವಾಗಿ ಸಾಗಿಸಲ್ಪಟ್ಟು ಹಾಗೂ ಕಸಾಯಿಖಾನೆಗಳಲ್ಲಿ ವಧಿಸ ಲ್ಪಟ್ಟ ಗೋವುಗಳಿಗೆ ಶ್ರದ್ಧಾಂಜಲಿ ಹಾಗೂ ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೋವು ನೀಡುವ ಸೆಗಣಿ, ಮೂತ್ರ, ಎಲ್ಲವೂ ಅತ್ಯಂತ ಉಪಕಾರಿ ಯಾಗಿದೆ. ಅದರ ಹಾಲು ಎಲ್ಲಾ ಧರ್ಮದವರಿಗೂ ಅಗತ್ಯವಿದೆ. ಅಲ್ಲದೆ ಕೃಷಿಯಲ್ಲೂ ಪ್ರಧಾನವಾಗಿರುವ ಗೋವುಗಳ ರಕ್ಷಣೆಗಾಗಿ ಕಾನೂನನ್ನು ಜಾರಿಗೆ ತರಲು ಸರಕಾರ ಹಿಂದೇಟು ಹಾಕುತ್ತಿದ್ದು ಇದರ ಹಿಂದೆ ಓಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂದು ಸ್ವಾಮೀಜಿಯವರು ಆರೋಪಿಸಿದರು.
ಗೋಹತ್ಯೆ ಕಾನೂನು ಜಾರಿಗೆ ತಂದರೆ ಒಂದು ವರ್ಗದ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದು ಬುದ್ಧಿ ಜೀವಿಗಳು ಹೇಳುತ್ತಿ ದ್ದಾರೆ. ಆದರೆ ನಮ್ಮ ದೇಶದಲ್ಲಿ ಯಾವುದೇ ಆಹಾರಕ್ಕೂ ಕೊರತೆ ಬಂದಿಲ್ಲ ಎಂದ ಸ್ವಾಮೀಜಿ, ಎಲ್ಲರಿಗೂ ಗೋವಿನ ಹಾಲು ಅಗತ್ಯವಿದ್ದು ಗೋವುಗಳ ನಾಶವಾದರೆ ಹಾಲು ಉತ್ಪಾದನೆಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಲು ರಾಜ್ಯ ಪಾಲರು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯ ಕ್ರಮದಲ್ಲಿ ಎಂ.ಬಿ.ಪುರಾಣಿಕ್, ಮನೋಹರ ತುಳಜಾರಾಂ, ಶರಣ್ ಪಂಪ್‌ವೆಲ್, ಪ್ರದೀಪ್ ಪಂಪ್‌ವೆಲ್, ಹರೀಶ್ ಅಮ್ಟಾಡಿ, ಪುನೀತ್ ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.

ಕಂದಮ್ಮಗಳಿಗೆ ವಿಷ ಕುಡಿಸಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಜನುಮದಾತನೇ ಜವರಾಯನಾದಾಗ...
ಕುಂದಾಪುರ: ಆ ಪುಟ್ಟ ಮನೆ ಯಲ್ಲಿ ಇನ್ನೆಂದೂ ಮಕ್ಕಳ ಕಲರವ ಕೇಳಿಸದು. ಕಂದಮ್ಮಗಳ ಜಗಳ, ಸಿಟ್ಟು, ಸೆಡವು ನಗು ಮತ್ತೆಂದಿಗೂ ಅ ಮನೆಯ ಹೊಸ್ತಿಲಿನಿಂದಲೂ ಹೊರಕ್ಕೆ ಬರಲಾರದು. ಅಲ್ಲೇನಿ ದ್ದರೂ ಈಗ ನೆಲೆಸಿರುವುದು ಕ್ರೂರ ವರ್ತೀಯ ಒಂದಷ್ಟು ವಿಷಾದದ ಬಿಕ್ಕಳಿಕೆಗಳು ಮಾತ್ರ.
ಯಾಕೆಂದರೆ ಹುಟ್ಟಿಸಿ ಕೈಬೆರಳು ಹಿಡಿದು ಕಂದಮ್ಮಗಳಿಗೆ ಬದುಕನ್ನು ಕಲಿಸಬೇಕಾದ ಜನುಮದಾತನೇ ಪುಟಾಣಿಗಳ ಪಾಲಿಗೆ ಜವರಾಯ ನಾಗಿ ಹೋಗಿದ್ದಾನೆ. ಇನ್ನೂ ಕುಡಿ ಯಿರಿ ಮಕ್ಕಳೇ ಎಂದು ಅಪ್ಪ ಕೊಟ್ಟ ಹಾಲನ್ನು ತಕರಾರಿಲ್ಲದೆ ಪ್ರೀತಿ ಯಿಂದ ಕುಡಿದ ಕಂದಮ್ಮಗಳು ಇನ್ನು ಬರಲಾಗದ ಲೋಕಕ್ಕೆ ನಡೆದುಬಿಟ್ಟಿ ದ್ದಾರೆ. ಹಾಗೆ ಮಕ್ಕಳನ್ನು ನಿಷ್ಕರುಣಿ ಯಿಂದ ಹತ್ಯೆಗೈದ ಅಪ್ಪ ತಾನೂ ಸಹ ಅವರ ಜೊತೆ ನಡೆದು ಬಿಟ್ಟಿ ದ್ದಾನೆ. ಆದರೆ ಇಲ್ಲಿ ಮನಸ್ಸನ್ನು ಇನ್ನಿಲ್ಲದಂತೆ ಕಲಕಿದ್ದು ಮಾತ್ರ ಮುಗ್ಧ ಮಕ್ಕಳ ಸಾವು!
ಕಳೆದ ಶನಿವಾರ ಶಿರೂರಿನ ರಿಕ್ಷಾ ಚಾಲಕ ರಾಜು ಎಂಬಾತನ ಕುಟುಂ ಬದ ವಿದ್ರಾವಕ ದುರಂತವಿದು. ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ರಾಜುವಿನದ್ದು, ಪ್ರದೀಪ್ (೯) ಹಾಗೂ ಪ್ರಿಯಾ (೭) ಸೇರಿದಂತೆ ಪತ್ನಿಯಿರುವ ಪುಟ್ಟ ಸಂಸಾರ. ಮೂಲತಃ ಕೇರಳದವನಾಗಿದ್ದ ರಾಜು ಮದುವೆಯಾಗಿ ಅದಾಗಲೇ ೧೦ ವರ್ಷಗಳು ಕಳೆದಿವೆ. ಇತ್ತೀಚೆಗಿನ ದಿನಗಳಲ್ಲಿ ಯಾಕೋ ದಂಪತಿಗಳಲ್ಲಿ ಮೂಡಿದ ವಿರಸದ ಕಿಡಿಯೊಂದು ನೋಡುನೋಡುತ್ತಿದ್ದಂತೆ ಜ್ವಾಲಾಮುಖಿಯಾಗತೊಡಗಿತ್ತು. ಮೊನ್ನೆ ಶನಿವಾರದ ಹಿಂದಿನ ರಾತ್ರಿಯೂ ದಂಪತಿಯ ನಡುವೆ ಜಗಳ ನಡೆದಿದೆ. ಈ ಮಧ್ಯೆ ಮುನಿಸಿಕೊಂಡ ಪತ್ನಿ ನೇರವಾಗಿ ತವರಿಗೆ ಸಾಗಿದ್ದಾಳೆ. ಅಲ್ಲದೆ ಕಾನೂನುಕ್ರಮದ ಬೆದರಿಕೆ ಹಾಕಿದ್ದಾಳೆ. ಹೋದವಳು ಕಡೇ ಪಕ್ಷ ಮಕ್ಕಳನ್ನಾದರೂ ಕರೆದೊಯ್ಯಬಹುದಿತ್ತು. ಆದರೆ ಗಂಡನಲ್ಲಿ ಅದಾಗಲೇ ಕ್ರೂರ ಹಂತಕನೊಬ್ಬ ಆಕಳಿಸುತ್ತಿರುವ ಸಂಗತಿ ಅವಳಿಗಾದರೂ ಎಲ್ಲಿ ಗೊತ್ತು? ಹೆಂಡತಿ ತವರಿಗೆ ಹೋದ ಕೂಡಲೇ ಅವಳಿಗೆ ಬುದ್ದಿ ಕಲಿಸುವ ಹಠಕ್ಕೆ ಬಿದ್ದ ರಾಜುವಿನ ಕಣ್ಣುಗಳಿಗೆ ಗೋಚರಿಸಿದ್ದು ಕಣ್ಣ ಮುಂದೆ ಆಡುತ್ತಿರುವ ಅಮಾಯಕ ಹಸುಳೆಗಳು. ತಡ ಮಾಡಲಿಲ್ಲ ಅವನೊಳಗಿನ ಹಂತಕ ಹಾಲಿಗೆ ವಿಷ ಸೇರಿಸಿದವನೇ ಮಕ್ಕಳಿಗೆ ಕುಡಿಸಿ ತಾನೂ ಕುಡಿದಿದ್ದಾನೆ. ಸದ್ದಿಲ್ಲದೆ ಪಹರೆ ಕುಂತಿದ್ದ ಸಾವು ವಿಕಟ ನಗೆ ಬೀರಿದೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಇಷ್ಟಕ್ಕೂ ಆ ಮುಗ್ಧ ಮಕ್ಕಳು ಮಾಡಿದ ತಪ್ಪಾದರೂ ಏನು?

ನದಿ ತೀರದಲ್ಲಿ ಎಂಎಸ್‌ಇಝಡ್ ರಸ್ತೆ: ಪೇಜಾವರಶ್ರೀ ಭೇಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು : ಫಲ್ಗುಣಿ ನದಿಗೆ ಮಣ್ಣು ತುಂಬಿಸಿ ಎಂಸ್‌ಇಝಡ್ ರಸ್ತೆ ನಿರ್ಮಿಸಲು ಮುಂದಾಗಿರುವುದರ ಬಗ್ಗೆ ಪೇಜಾವರ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದು ಈ ಬಗ್ಗೆ ಸರಕಾರದ ಜೊತೆ ಮಾತನಾಡು ವುದಾಗಿ ತಿಳಿಸಿದ್ದಾರೆ. ಎಂಸ್‌ಇಝಡ್ ರಸ್ತೆ ಕಾಮಗಾರಿ ಆರಂಭಿ ಸಿರುವ ಕೂಳೂರು ನದಿ ತೀರಕ್ಕೆ ಭೇಟಿ ನೀಡಿದ ಸ್ವಾಮೀಜಿ ಮೆಲು ಕೋಟೆ ನಿವಾಸಿಗಳ ಅಹವಾಲಿಗೆ ಸ್ಪಂದಿಸಿದರು. ನದಿ ನೀರಿನ ಸಹಜವಾದ ಹರಿವಿಗೆ ತಡೆಯೊಡ್ಡುವುದು ಸರಿಯಲ್ಲ ನದಿಯನ್ನು ಅದರ ಇಚ್ಛೆಯಂತೆ ಹರಿಯಲು ಬಿಡ ಬೇಕು, ಪ್ರಕೃತಿಯಲ್ಲಿ ನದಿಯ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಹೀಗಾಗಿ ನದಿಯ ಸಹಜತೆಗೆ ಒತ್ತು ನೀಡುವುದು ಅಗತ್ಯವಿದೆ. ಎಂಎಸ್‌ಇಝಡ್ ಈಗ ಕೈಗೊಂಡಿರುವ ಕ್ರಮದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಶೀಘ್ರವೇ ಚರ್ಚಿಸುವುದಾಗಿ ತಿಳಿಸಿದರು. ಅದೇ ರೀತಿ ನಾಗಾರ್ಜುನದ ಸಾಧಕ-ಬಾಧಕ ಕುರಿತ ವರದಿ ಕೈ ಸೇರಿಲ್ಲ ಅದು ಕೈ ಸೇರಿದ ಕೂಡಲೇ ನಾಗಾರ್ಜುನದ ಬಗ್ಗೆ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ತಿಳಿಸಿದರು.

ಗ್ಯಾಸ್ ಸಿಲಿಂಡರಿಗೆ ಬೆಂಕಿ: ತಪ್ಪಿದ ಭಾರೀ ದುರಂತ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕಾಸರಗೋಡು ನಗರದ ಹೃದಯ ಭಾಗದಲ್ಲಿನ ಐಸ್‌ಕ್ರೀಂ ಅಂಗಡಿಯಲ್ಲಿ ಅಡುಗೆ ಅನಿಲ ಸಿಲಿಂಡರಿಗೆ ಬೆಂಕಿ ತಗಲಿ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿ ಹೋಗಿದೆ.
ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿರುವ ಕೆನರಾ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಭಾರೀ ಅಗ್ನಿ ದುರಂತಕ್ಕೆ ಕಾರಣವಾಗಬಹುದಾಗಿದ್ದ ಘಟನೆ ಸಂಭವಿಸಿದೆ. ನಿನ್ನೆ ಬೆಳಿಗ್ಗೆ ೧೧ ಗಂಟೆಯ ವೇಳೆಗೆ ಐಸ್‌ಕ್ರೀಂ ಪಾರ್ಲರ್‌ನ ಅಡುಗೆ ಅನಿಲ ಸಿಲಿಂಡರಿನಲ್ಲಿ ದಿಢೀರ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಗ್ಯಾಸ್ ಪೈಪ್‌ನ ಮೂಲಕ ಅನಿಲ ಸೋರಿಕೆಯೇ ಇದಕ್ಕೆ ಕಾರಣವಾಗಿತ್ತು. ಸುದ್ದಿಯರಿತು ತಕ್ಷಣ ತಲುಪಿದ ಅಗ್ನಿ ಶಾಮಕ ದಳ ಹಾಗೂ ಸೇರಿದ ನಾಗರಿಕರು ಬೆಂಕಿಯನ್ನಾರಿಸಿದ್ದರು. ಇದರಿಂದಾಗಿ ನಗರ ಮಧ್ಯದಲ್ಲಿ ಸಂಭವಿಸಬಹುದಾಗಿದ್ದ ಭಾರೀ ದುರಂತ ಸ್ವಲ್ಪದರಲ್ಲೇ ತಪ್ಪಿ ಹೋಯಿತು.

ಬಾರಾಡಿಯಲ್ಲೊಬ್ಬ ಶ್ರಮಜೀವಿ ಕುರುಡ!

Posted by JAYAKIRANA Kirana on | 0 comments | Leave a comment...


ಹಲವು ನುರಿತ ವೈದ್ಯರಲ್ಲಿ ಕಣ್ಣಿನ ಪರೀಕ್ಷೆ ಮಾಡಿಸಿದನಾದರೂ, ಅವರೆಲ್ಲರೂ ಯಾವುದೇ ಪ್ರಯೋಜನ ಇಲ್ಲವೆಂಬ ವರದಿ ನೀಡಿದರಂತೆ. ಆ ದೇವರು ನನಗೆ ದೃಷ್ಠಿ ಕರುಣಿಸುತ್ತಿದ್ದರೆ ಇನ್ನಷ್ಟು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತಿದೆ ಎಂಬ ಆಶಾಭಾವನೆ ಶ್ರೀಧರ್ ಅವರ ಮಾತಿನಿಂದ ಅರ್ಥವಾಗುತ್ತಿತ್ತು.

ಆರ್.ಬಿ ಜಗದೀಶ್
ಕಾರ್ಕಳ: ಛಲವಿದ್ದರೆ ಯಶಸ್ಸು ನಮ್ಮ ಕಾಲ ಬುಡಕ್ಕೆ ಬರುತ್ತದೆ. ಎಲ್ಲಾ ಅಂಗಗಳು ಸರಿಯಿದ್ದರೂ ಮೈಕಳ್ಳತನ ದಿಂದಾಗಿ ಉಂಡಾಡಿ ಗುಂಡರಂತೆ ಬದುಕುವವರೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಕಣ್ಣಿಲ್ಲದ ವ್ಯಕ್ತಿಯೊಬ್ಬರ ಬದುಕು ಪ್ರತಿ ಯೊಬ್ಬರಿಗೂ ಮಾದರಿಯಾಗಬೇಕು.
ಕಾರ್ಕಳದಿಂದ ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ೧೩ ಮಾರ್ಗವಾಗಿ ಪ್ರಯಾಣಿಸಿದಾಗ ನಾಲ್ಕು ಕಿ.ಮೀ. ದೂರದಲ್ಲಿ ಚಿಲಿಂಬಿ ಎಂಬ ದುರ್ಗಮ ಪ್ರದೇಶ ಸಿಗುತ್ತದೆ. ಇಲ್ಲಿಂದ ಎಡಭಾಗವಾಗಿ ಮುಂದೆ ಹೋದಾಗ ಬಾರಾಡಿ-ಗೋಳಿದಡಿ ಎಂಬ ಊರೊಂದನ್ನು ಕಾಣಬಹುದು. ಕಮಲ ನಿವಾಸ ಈ ಸುದ್ದಿಯ ಕೇಂದ್ರಬಿಂದುವಾಗಿದೆ.
ಭೋಜ ಹಾಗೂ ಕಮಲ ದಂಪತಿಗಳ ಏಳು ಮಂದಿ ಮಕ್ಕಳಲ್ಲಿ ಶ್ರೀಧರ್ ಮೊದಲಿಗ. ಯಶೋಧಾ, ಸುನಂದಾ, ಚಂದ್ರಶೇಖರ್, ರಮೇಶ್, ಶಶಿಕಲಾ, ಶಕುಂತಳಾ ಎಂಬವರು ಇತರ ಮಕ್ಕಳು ಆಗಿದ್ದಾರೆ. ಶ್ರೀಧರ್, ಯಶೋಧಾ, ಶಶಿಕಲಾ ಅವರು ಇಂದಿಗೂ ಕರುಡುತನದಿಂದ ಬಳಲುತ್ತಿದ್ದರೆ, ಇತರರು ಯಾವುದೇ ತರದಲ್ಲಿ ದೃಷ್ಟಿದೋಷವಿಲ್ಲದೇ ಸಹಜ ಸ್ಥಿತಿಯಲ್ಲಿದ್ದಾರೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ಇಂಟರ್‌ವ್ಯೂನಲ್ಲಿ ಪಾಲ್ಗೊಳ್ಳುವ ಮುನ್ನ ಪೂರ್ವಸಿದ್ಧತೆ ಇರಲಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೫. ಡಿಗ್ರಿ ಕಲಿತಿದ್ದೇನೆ. ಕೆಲಸ ಹುಡುಕುತ್ತಿದ್ದೇನೆ. ನನಗೆ ಪಿಯುಸಿ, ಡಿಗ್ರಿಯಲ್ಲಿ ಫಸ್ಟ್‌ಕ್ಲಾಸ್ ಮಾರ್ಕ್ಸ್ ಬಂದಿದೆ. ಆದರೆ ನನ್ನ ಸಣ್ಣ ಸಮಸ್ಯೆಯಿಂದ ಜೀವನದಲ್ಲಿ ಮುಂದೆ ಬರಲು ಆಗುತ್ತಿಲ್ಲ. ಕೆಲಸಕ್ಕಾಗಿ ಅನೇಕ ಕಂಪೆನಿ, ಸಂಸ್ಥೆಗಳಿಗೆ ಭೇಟಿ ನೀಡಿದರೂ ನನ್ನ ಸಮಸ್ಯೆಯಿಂದ ನಿರೀಕ್ಷಿಸಿದ ಕೆಲಸ ಸಿಗುತ್ತಿಲ್ಲ. ನಾನು ನನ್ನ ಹೆತ್ತವರಿಗೆ ಒಬ್ಬನೇ ಮಗ ಆಗಿರುವ ಕಾರಣ ನನ್ನನ್ನು ಯಾವುದೇ ತೊಂದರೆ ಆಗದ ರೀತಿ ನೋಡಿಕೊಂಡಿದ್ದಾರೆ. ನನಗೆ ಹುಟ್ಟಿದಾಗಲೇ ಮಾತಾಡುವಾಗ ತೊದಲುವ ಅಭ್ಯಾಸವಿತ್ತು. ಇದ ರಿಂದ ನಾನು ಅನೇಕ ಸಮಸ್ಯೆಯನ್ನು ಎದುರಿಸಿದ್ದೇನೆ. ನಾನು ಬೇರೆ ಯವರೊಂದಿಗೆ ಮಾತನಾಡುವಾಗ ತೊದಲುತ್ತೇನೆ. ಕೆಲವೊಮ್ಮೆ    ನಾನು ಮಾತಾಡಿದ್ದು ನನಗೇ ಅರ್ಥವಾಗುವುದಿಲ್ಲ. ಒಂದೇ ಮಾತನ್ನು ಹಲವು ಬಾರಿ ಉಚ್ಛರಿಸಬೇಕಾಗುತ್ತದೆ. ನನ್ನ ಸಮಸ್ಯೆ ಮನೆಯಲ್ಲಿ ಮಾತಾಡುವಾಗ ಇರುವುದಿಲ್ಲ. ಎಲ್ಲರ ಜೊತೆ ಚೆನ್ನಾಗಿಯೇ ಮಾತಾ ಡುತ್ತೇನೆ. ಆದರೆ ಬೇರೆಯವರ ಎದುರು ನಿಂತು ಮಾತಾಡುವಾಗ ತೊದಲುವಿಕೆ ಆರಂಭವಾಗುತ್ತದೆ. ಎಷ್ಟು ಪ್ರಯತ್ನಪಟ್ಟರೂ ಇದನ್ನು ಕಂಟ್ರೋಲ್ ಮಾಡಲಾಗುತ್ತಿಲ್ಲ. ಇದರಿಂದ ನನ್ನನ್ನು ಎಲ್ಲರೂ ಕೀಳಾಗಿ ಕಾಣುತ್ತಾರೆ. ನನ್ನ ಸಮಸ್ಯೆಗೆ ಕಾರಣವೇನು? ನಾನು ಕೆಲಸಕ್ಕಾಗಿ ಇಂಟರ್‌ವ್ಯೂಗೆ ಹೋದರೂ ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ಹೇಳಲು ಸಾಧ್ಯವಾಗುವುದಿಲ್ಲ. ನನಗೆ ಕೆಲಸ ಸಿಗುವುದೇ ಇಲ್ಲವೇ ಎಂದೆನಿಸುತ್ತದೆ. ನನಗೆ ಯಾರೊಂದಿಗೂ ಮಾತಾಡಲು ಮನಸ್ಸಾಗುತ್ತಿಲ್ಲ. ನನ್ನ ಸಮಸ್ಯೆಗೆ ಮದ್ದಿಲ್ಲವೇ? ಸರ್, ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ತೊದಲುವ ಸಮಸ್ಯೆಯನ್ನೇ ದೊಡ್ಡ ರೋಗ ಎಂದು    ಭ್ರಮಿಸದಿರಿ. ಯಾಕೆಂದರೆ ಇದೊಂದು ಸಾಮಾನ್ಯ ಸಮಸ್ಯೆ. ಇದರಿಂದ ಬಿಡು ಗಡೆ ಸಾಧ್ಯವಿದೆ. ನೀವು ಸಮಸ್ಯೆ ಏನೇ ಇರಲಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಣ್ಣಪುಟ್ಟ ಸಮಸ್ಯೆಗಳೂ ಬೃಹದಾಕಾರವಾಗಿ ನಿಮ್ಮನ್ನು ಕಾಡಬಹುದು. ಅವಸರ ಪಟ್ಟು ಮಾತಾಡಿದರೆ ಅಥವಾ ಏಕಾಗ್ರತೆಯ ಸಮಸ್ಯೆ ಹೊಂದಿರುವ ವರಲ್ಲಿ ಇಂತಹ ಲಕ್ಷಣ ಕಾಣಸಿಗುತ್ತದೆ. ನಿಮಗೆ ಮನೆಯಲ್ಲಿ ಮಾತಾಡುವಾಗ ಇಂತಹ ಸಮಸ್ಯೆ ಇರುವುದಿಲ್ಲ, ಬದಲು ಹೊರಗಿನವರ ಜತೆ ಮಾತಾಡುವಾಗ ತೊದಲುತ್ತದೆ ಎಂದರೆ ನೀವು ಚಿಂತಿಸಬೇಕಿಲ್ಲ. ಮೊದಲು ನೀವು ಆಡಲಿರುವ ಮಾತು ಮತ್ತು ಎದುರಿಗಿರುವ ವ್ಯಕ್ತಿ ಆಡುವ ಮಾತಿನಲ್ಲಿ ಏಕಾಗ್ರತೆ ಇರಲಿ. ಯಾರೊಂದಿಗಾದರೂ ಮಾತಾಡುವಾಗ ತೊದಲುವಿಕೆ ಆರಂಭ      ವಾದರೆ ಅಲ್ಲಿಂದ ಓಡಿಹೋಗಬೇಡಿ. ಬದಲು ಸಾವಕಾಶವಾಗಿ ಮಾತಾ ಡುವುದನ್ನು ಕಲಿಯಿರಿ. ಯಾವುದೇ ಸಮಸ್ಯೆಯಿಂದ ಪಲಾಯನ ಮಾಡುವುದು ಜಾಣರ ಲಕ್ಷಣವಲ್ಲ. ನನಗೆ ಮಾತಾಡುವಾಗ ತೊದ ಲುತ್ತದೆ ಯಾವುದಕ್ಕೂ ಅನ್‌ಫಿಟ್ ಎಂದುಕೊಂಡರೆ ಅದೇ ಅಭ್ಯಾಸ ವಾಗುತ್ತದೆ. ಅದರ ಬದಲು ಹೀಗಾಗಲು ಏನು ಕಾರಣ? ಎಂದು ಚಿಂತಿಸಿ. ಪ್ರತಿನಿತ್ಯ ಕನ್ನಡಿ ಎದುರು ನಿಂತು ಒಬ್ಬರೇ ಗಂಭೀರವಾಗಿ, ಸ್ಪಷ್ಟವಾಗಿ ಮಾತಾಡಲು ಕಲಿಯಿರಿ. ನೀವು ಸಂಪೂರ್ಣ ಆತ್ಮವಿಶ್ವಾ ಸವನ್ನು ಬೆಳೆಸಿಕೊಂಡರೆ ಸಮಸ್ಯೆ ತನ್ನಿಂತಾನೇ ಬಗೆಹರಿಯುತ್ತದೆ. ಮಾತಾಡುವಾಗ ಅವಸರ ಮಾಡದೆ ಸ್ಫುಟವಾಗಿ ಮಾತಾಡುವ ಕಲೆ ಯನ್ನು ಕರಗತ ಮಾಡಿಕೊಳ್ಳಿ. ಉತ್ತಮ ಗ್ರಂಥಗಳನ್ನು ಓದಿ ಅಭ್ಯಾಸ ಮಾಡಿ. ತೊದಲುತ್ತೇನೆ ಎಂದು ಅನಿಸಿದಾಗ ಮಾತಾಡುವ ವೇಗ ವನ್ನು ತಗ್ಗಿಸಿ ಅಥವಾ ಮಾತು ಮುಂದುವರಿಸಿ. ಮಾತು ಸಾಧ್ಯವೇ ಇಲ್ಲವೆಂದಾದರೆ ನಿಲ್ಲಿಸಿ ನೀರು ಕುಡಿದು ಸುಧಾರಿಸಿಕೊಳ್ಳಿ. ಏಕಾಗ್ರತೆ ಬೆಳೆಸಿಕೊಂಡಷ್ಟು ಸಮಸ್ಯೆ ಪರಿಹಾರ ಕಾಣುತ್ತದೆ. ಇತರರ ಜತೆ ಮಾತಾಡುವಾಗ ತೊದಲಿದರೆ ಏನು ಮಾಡುವುದು ಎಂಬ ಭಯ ಬಿಟ್ಟು ಬಿಡಿ. ನೀವು ಎಲ್ಲರಂತೆ ಸಾಮಾನ್ಯವಾಗಿ ಇದ್ದೀರಿ. ಭಯ ಪಡುವ ಅಗತ್ಯವಿಲ್ಲ. ಇನ್ನು ಇಂಟರ್‌ವ್ಯೂನಲ್ಲಿ ಭಾಗವಹಿಸುವಾಗಲೂ ಅಷ್ಟೇ. ನಿಧಾನವಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಸಿಕ್ಕೇ ಸಿಗುತ್ತದೆ. ಈ ಸಮಸ್ಯೆ ಕೆಲವರಲ್ಲಿ ಕಂಡುಬರುತ್ತದೆ. ಇದಕ್ಕೆ ಭಯಪಡದೆ ಜೀವನ ರೂಪಿಸಿಕೊಳ್ಳಿ.

ಸಮುದಾಯ ಶಕ್ತಿಯನ್ನು ಶಿಥಿಲಗೊಳಿಸಿದವರಿಗೆ ಮಾನವೀಯತೆಯ ನೆನಪಾದುದೇಕೆ?

Posted by JAYAKIRANA Kirana on | 0 comments | Leave a comment...

ಸಮಸ್ತ ಅಂದರೆ ಸಮುದಾಯ, ಅದೊಂದು ಸಂಘಟನೆ ಅಥವಾ ಪಂಗಡ ವಲ್ಲ. ಯಾಕೆಂದರೆ ಪ್ರವಾದಿವರ‍್ಯರಿಂದ ಸ್ವಹಾಬಿಗಳು, ತಾಬಿಹುಗಳು, ಇಜ್‌ತಿ ಹಾದಿನ ಇಮಾಮುಗಳು, ಅವುಲಿಯಾಗಳು, ಉಲಮಾಗಳ ಮೂಲಕ ಪರಂ ಪರಾಗತವಾಗಿ ನಡೆದು ಬಂದ ಪ್ರವಾದಿವರ‍್ಯರ ಚರ‍್ಯೆಯಾದ ಸುನ್ನತ್ ಮತ್ತು ಅವರ ಅನುಚರರಾದ ಜಮಾಅತನ್ನು ಇಸ್ಲಾಂ ಎಂದು ಕರೆಯವುದು. ಇದ ರಲ್ಲಿ ಯಾರಾದರೂ ನವೀನ ಆಶಯಗಳೊಂದಿಗೆ ಪ್ರತ್ಯಕ್ಷವಾದರೆ ಅವರನ್ನು ನೂತನವಾದಿಗಳೆಂದು ಕರೆಯಬೇಕೇ ಹೊರತು ಇಸ್ಲಾಂ ಮತ್ತು ಸುನ್ನತ್ ಜಮಾಅತನ್ನು ಪ್ರತ್ಯೇಕಿಸುವಂತಿಲ್ಲ. ಇಸ್ಲಾಂ ಅಂದರೆ ಸುನ್ನತ್ ಜಮಾಅತ್, ಸುನ್ನತ್ ಜಮಾಅತ್ ಅಂದರೆ ಇಸ್ಲಾಂ.
ಆದರೆ ಇಂದು ಇಸ್ಲಾಮಿನ ಲೇಬಲಿನಲ್ಲಿ ಹಲವಾರು ನೂತನವಾದೀ ಸಂಘಟನೆಗಳು ಪ್ರತ್ಯಕ್ಷವಾಗುತ್ತಿದೆ. ಮುಜಾಹಿದ್, ಜಮಾಅತೆ ಇಸ್ಲಾಮಿ, ತಬ್ ಲೀಗ್, ಸಲಫಿ, ಎಪಿ ಮೊದಲಾದವು ನಮ್ಮೆಡೆಯಲ್ಲಿ ಪ್ರಚಾರದಲ್ಲಿರುವ ಕೆಲವು ಮಾತ್ರ.
ಕೇರಳಕ್ಕೆ ಧರ್ಮಪ್ರಚಾರಕ್ಕಾಗಿ ಬಂದ ಪ್ರವಾದಿವರ‍್ಯರ ಅನುಚರರಾದ ಮಾಲಿ ಕುಬ್‌ನು ದಿನಾರ್ ತೋರಿಸಿಕೊಟ್ಟ ಹಾದಿಯಿಂದ ಒಂದು ವಿಭಾಗವು ದೂರ ಸರಿದು ನೂತನಾಶಯಗಳನ್ನು ಪ್ರಚುರಪಡಿಸಲು ಪ್ರಾರಂಭಿಸಿದಾಗ ಧರ್ಮದ ಆಶಯಗಳ ಸಂರಕ್ಷಣೆಯ ಹೊಣೆಯೊತ್ತು ಸಂಘಟಿತರಾಗಿ ಕಾರ್ಯೋನ್ಮು ಖರಾದ ವಿದ್ವಾಂಸ ಒಕ್ಕೂಟವೇ ಸಮಸ್ತ. ಈ ಸಂಘ ಶಕ್ತಿಯಲ್ಲಿ ಛಿದ್ರತೆಯ ನ್ನುಂಟುಮಾಡಿ ಸಮುದಾಯದ ಮಾನ ಸಾರ್ವಜನಿಕರೆಡೆಯಲ್ಲಿ ಹರಾಜು ಮಾಡಲು ಸರ್ವ ಪ್ರಯತ್ನಪಟ್ಟ ಕಾಂತಪುರ ಎ.ಪಿ. ಅಬೂಬಕ್ಕರ್ ಮುಸ್ಲಿಯಾ ರೆಂಬವರು ಅಧಿಕಾರ ಮೋಹಿ ಮತ್ತು ಪ್ರಚಾರ ಪ್ರಿಯ ಮನುಷ್ಯ.
೧೯೨೬ರಲ್ಲಿ ಸ್ವಾತಂತ್ರ್ಯ ಪೂರ್ವದ ಎರಡು ದಶಕಗಳ ಮುಂಚೆ ಸಮಸ್ತ ಎಂಬ ಹೆಸರಿನಲ್ಲಿ ಕಾರ್ಯಾಚರಿಸತೊಡಗಿದ ಅಗಾಧ ಮುಸ್ಲಿಂ ಉಲಮಾ ವಿದ್ವಾಂಸರೆಡೆಯಲ್ಲಿ ಭಿನ್ನತೆಯ ವಿಷಬೀಜ ಬಿತ್ತಿ ಸೌಹಾರ್ದತೆಯನ್ನು ಶಿಥಿಲ ಗೊಳಿಸಿ ಸಂಘರ್ಷಕ್ಕೆ ನಾಂದಿ ಹಾಡಿದ ಇವರಿಂದಾಗಿ ಮನುಷ್ಯತ್ವ ಮಾಯ ವಾಗಿ ಕ್ಷುಲ್ಲಕ ವಿಚಾರಗಳಲ್ಲಿ ಜಗಳ ಮೂಡಿ ನಗರ - ಪಟ್ಟಣ, ಊರು - ಕೇರಿ, ಅಪ್ಪ - ಮಕ್ಕಳು, ಅಣ್ಣ - ತಮ್ಮಂದಿರು, ಗುರು - ಶಿಷ್ಯರು, ಬಂಧು - ಬಳಗದವರು, ಗಳೆಯ - ಮಿತ್ರರು, ನೆರೆಕರೆಯವರು ಎಲ್ಲರೂ ಪರಸ್ಪರ ಸಣ್ಣಪುಟ್ಟ ವಿಷಯಗಳಿಗಾಗಿ ಕಚ್ಚಾಡುವಂತಾಗಿ ಮನುಷ್ಯ ಮನುಷ್ಯನನ್ನು    ಕೊಲ್ಲುವ, ಕತ್ತಿ - ಕಾಳಗ ಮಾಡುವ ಮೃಗೀಯ ವರ್ತನೆಗಿಂತಲೂ ಕ್ರೂರವಾದ ಅಮಾನುಷ ವರ್ತನೆಗೆ ಪ್ರೇರಕವಾಯಿತು..
ಮುಸ್ಲಿಮರೆಲ್ಲರೂ ಮುಸ್ಲಿಂ ಎಂದು ತಮ್ಮನ್ನು ಕರೆಯಿಸಿಕೊಂಡಿದ್ದು ಅದಕ್ಕೆ ಪರ್ಯಾಯವಾಗಿ ಸುನ್ನೀ ಎಂಬುದನ್ನು ಪ್ರತಿಷ್ಠಾಪಿಸಿ ಸಮುದಾಯದೆಡೆಯಲ್ಲಿ ಬೇರೂರಲು ಹರಸಾಹಸ ಪಟ್ಟ ಇವರು ಮತ್ತು ಇವರ ಬಳಗವು ಅದಕ್ಕಾಗಿ ಯಾವುದೇ ಕೆಳ ಮಟ್ಟಕ್ಕೂ ಹೋಗಲೂ ಹೇಸಿದವರಲ್ಲ. ಮುಸ್ಲಿಮರ ಐಕ್ಯದ ಸುಂದರ ಸಂದೇಶಗಳನ್ನು ಕಲಿಯಬೇಕಾದ ಮದರಸಗಳಲ್ಲಿ ಗೋಡೆ ಕಟ್ಟೆ ಇಬ್ಭಾಗ ಮಾಡಿದವರು. ಸಮುದಾಯದಲ್ಲಿ ನಡೆಯದ ನಾಣ್ಯಗಳಾಗಿ ಕಸದ ಬುಟ್ಟಿಗೆ ಎಸೆಯಲ್ಪಟ್ಟಾಗ ಅದರಿಂದ ಮೇಲೇರಲು ರೂಪಿಸಿದ ಒಳಸಂಚಾ ಗಿತ್ತು ಆಧ್ಯಾತ್ಮಿಕತೆಯ ಮಂತ್ರ.
ದ್ಸಿಕ್ರ್ ಸ್ವಲತಿನ ವ್ಯಾಪಾರೀಕರಣದಿಂದ ಪ್ರಾರಂಭವಾದ ಈ ಆಧ್ಯಾತ್ಮಿಕ ಶೋಷಣೆ ಪ್ರವಾದಿವರ‍್ಯರ ದೇಹದ ಅವಶೇಷತೆಗಳಲ್ಲಿ ಕೈ ಹಾಕುವ ತನಕ ಮುಂದುವರಿಯಿತು. ಮುಸ್ಲಿಮರು ಪ್ರವಾದಿವರ‍್ಯರನ್ನು ಅವರ ಸ್ವಂತ ಜೀವಕ್ಕಿಂ ತಲೂ ಮಿಗಿಲಾಗಿ ಪ್ರೀತಿಸುತ್ತಿದ್ದಾರೆ. ಅವರ ಅವಶೇಷತೆಗಳಿಗೂ ಅತ್ಯಂತ ಗೌರವ ನೀಡುತ್ತಾರೆ. ಇದನ್ನು ತನ್ನ ಸ್ವಾರ್ಥತೆಗಾಗಿ ಬಳಸಿಕೊಳ್ಳಲು ಸಂಚು ಹಾಕಿದ ಕಾಂತಪುರ ಸ್ವತಹ ಸೃಷ್ಟಿಸಿದ್ದಾಗಿದೆ ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ನಕಲಿ ಕೇಶ. ಕೇಶದ ಹೆಸರಿನಲ್ಲಿ ಮಸೀದಿ ನಿರ್ಮಿಸುವುದಾಗಿ ಕೋಟ್ಯಂತರ ಹಣ ಸಂಗ್ರಹ ಮಾಡಿದ ಇವರು ಪುಣ್ಯ ಪ್ರವಾದಿಯವರಿಗೆ ಬಹುಜನರೆಡೆಯಲ್ಲಿ ಅಪಕೀರ್ತಿ ಯುಂಟು ಮಾಡಿದರು.
ಎ.ಪಿ.ಯ ರಾಜಕೀಯ ನಾಯಕರಾದ ಕಮ್ಯುನಿಸ್ಟ್‌ನ ಪಿಣರಾಯಿ ವಿಜಯನ್, ಎಲ್‌ಡಿಎಫ್‌ನ ಟಿ.ಕೆ. ಹಂಝ ಗೆದ್ದಾಗ ನನ್ನ ಮತದಿಂದ ಗೆದ್ದುದ್ದೆಂದು ಅಭಿಮಾನ ಪಟ್ಟು ಮರ್ಕಜ್‌ಗೆ ಬರಮಾಡಿಕೊಂಡು ಸಮ್ಮಾನ ಮಾಡಿದ ಅದೇ ಟಿ.ಕೆ.ಹಂಜ ಇಂದು ಎ.ಪಿ.ಯನ್ನು ಬಹಿರಂಗವಾಗಿ ಟೀಕೆ ಮಾಡುತ್ತಾ ರಂಗಪ್ರವೇಶಿಸಿರುವುದು ಇವರಿಗೆ ರಾಜಕೀಯವಾಗಿಯೂ ನೆಲೆಯಿಲ್ಲದಂತೆ ಮಾಡಿದೆ. ಆದರೆ ಪಿಣರಾಯಿ ವಿಜಯನ್ ಎ.ಪಿ.ಯನ್ನು ಮಾತ್ರ ವಿಮರ್ಶಿಸುವ ಬದಲು ಪ್ರವಾದಿವರ‍್ಯರನ್ನೇ ವಿಮ ರ್ಶಿಸ ಹೊರಟು ‘ಬೋಡಿ ವೇಸ್ಟ್’ ಎಂಬ ಪ್ರಯೋಗ ಉಪಯೋಗ ಮಾಡಿದ್ದು ಎ.ಪಿ. ವಿಭಾಗದವರೇ ಚಿಂತಿಸುವಂತೆ ಮಾಡಿತು. ಬೆತ್ತ ಕೊಟ್ಟು ಪೆಟ್ಟು ತಿನ್ನುವ ಈ ಪಂಗಡದೊಂದಿಗೆ ನಿಂತರೆ ನಮ್ಮ ಧರ್ಮಕ್ಕೇ ಅಪಾಯವೆಂದು ಮನಗಂಡ ಹಲ ವಾರು ಸಖಾಫಿಗಳು ಆ ಪಂಗಡದಿಂದ ಹೊರಬಂದು ಸಮಸ್ತದೊಂದಿಗೆ ಕೈ ಜೋಡಿಸ ತೊಡಗಿದರು.
ತನ್ನ ಬತ್ತಳಿಕೆಯಲ್ಲಿ ಇನ್ನು ಯಾವುದೇ ಅಸ್ತ್ರ ಉಳಿದಿಲ್ಲವೆಂದು ಖಚಿತಪಡಿಸಿ ಕೊಂಡ ಕಾಂತಪುರಂ ಈಗ ಮಾನವತೆಯ ನೆಪದಲ್ಲಿ ಮೊಸಳೆ ಕಣ್ಣೀರು ಸುರಿಸು ತ್ತಿದ್ದಾರೆ. ಸಮಸ್ತದಿಂದ ಹೊರಹೋಗಿ ಧಾರ್ಮಿಕ ನಾಯಕರಿಂದ ತಿರಸ್ಕರಿಸಲ್ಪಟ್ಟು ತನ್ನ ರಾಜಕೀಯ ಮಿತ್ರರಾದ ಸಮುದಾಯದಲ್ಲಿ ತನ್ನವರಾಗಿ ಯಾರೂ ಇಲ್ಲವೆಂದು ದೃಢಪಡಿಸಿಕೊಂಡಿದ್ದರಿಂದಲೇ ತನ್ನ ಅಸ್ತಿತ್ವಕ್ಕಾಗಿ ಮಾನವೀಯತೆಯ ನೆಪದಲ್ಲಿ ಸಮುದಾಯದ ಶತ್ರುಗಳಾಗಿ ಮುಸ್ಲಿಮೇತರರ ಮೊರೆ ಹೋಗಬೇಕಾಯಿತು. ಮುಸ್ಲಿಮರ ಇಫ್ತಾರ್ ಕೂಟವನ್ನು ಮಡೆಸ್ನಾನಕ್ಕೆ ಹೋಲಿಸಿದ ಪೇಜಾವರ ಸ್ವಾಮಿಯೊಂದಿಗೆ ಕೂತು ಅಯೋಧ್ಯೆಯ ವಿಷಯ ಮಾತನಾಡಲು ಪ್ರಾರಂಭಿಸಿ ದ್ದರ ಹಿಂದಿರುವ ಉದ್ದೇಶವೇನು?
ತಾನು ನಿರ್ಮಿಸುವುದಾಗಿ ವ್ಯಾಪಕ ಪ್ರಚಾರ ಮಾಡಿದ್ದ ಶಅರೇ ಮುಬಾರಕ್ ಇನ್ನೆಂದೂ ನಿರ್ಮಾಣವಾಗುವುದಿಲ್ಲ. ಅದರ ಹೆಸರನ್ನು ಸ್ವತಃ ಎ.ಪಿ.ಯವರೇ ಬದ ಲಾವಣೆ ಮಾಡಿ ಮುಸ್ಲಿದುಲ್ ಅಸಾರ ಎಂದು ಮರುನಾಮಕರಣ ಮಾಡಿದ್ದಾರೆ. ಪ್ರವಾದಿವರ‍್ಯರ ಕೇಶ ಇಲ್ಲವೆಂದಾದ ಮೇಲೆ ಮತ್ತೆ ತನ್ನನ್ನೇ ಅದರಲ್ಲಿಟ್ಟು ತಾಜ್ ಮಹಲ್‌ನಂತೆ ಮ್ಯೂಸಿಯಂ ಮಸೀದಿ ನಿರ್ಮಿಸುವ ಸಿದ್ಧತೆಯಲ್ಲಿರುವ ಎ.ಪಿ.ಗೆ ಯಾವುದಕ್ಕೂ ಜಾಗವೇ ಸಿಗಲಿಲ್ಲ. ಸಾಮಾನ್ಯ ಜನರು ಹಾಗೂ ಹಣಕೊಟ್ಟ ಶ್ರೀಮಂ ತರು ಮಸೀದಿ ಎಲ್ಲಿ? ಯಾವಾಗ ಪ್ರಾರಂಭಿಸುವುದು ಎಂದು ಗುಸುಗುಸು ಪ್ರಾರಂ ಭಿಸಿರುವುದಕ್ಕೆ ತಾತ್ಕಾಲಿಕ ಶಮನವಾಗಿ ಈ ಮಾನವೀಯತೆಯ ಯಾತ್ರೆ ಆಯೋಜಿಸ ಲಾಗಿದೆಯೇ ಹೊರತು ಇದರಲ್ಲಿ ಇನ್ನೊಂದು ಪ್ರಯೋಜನ ನಿರೀಕ್ಷಿಸಬೇಕಾಗಿಲ್ಲ.          
ಮಹಮ್ಮದ್ ಅಶ್ರಫ್, ಈಶ್ವರಮಂಗಲ                    (ನಾಳಿನ ಸಂಚಿಕೆಗೆ)

ದೇವರಿಗೂ, ಭಕ್ತಾದಿಗಳಿಗೂ, ಆಡಳಿತಕ್ಕೂ ಮೋಸ

Posted by JAYAKIRANA Kirana on | 0 comments | Leave a comment...

೧೯೨೨ರಲ್ಲಿ ಪುನಹ ಮಠದ ವಿಶ್ವಜ್ಞ ತೀರ್ಥ ಸ್ವಾಮಿಗಳು ಔ.S. ೩೩೨ oಜಿ ೧೯೨೨ ವ್ಯಾಜ್ಯ ಒಂದನ್ನು ಆಗಿನ ಆಡಳಿತದಾರರಾದ ಬಾಗಲೋಡಿ ಅನಂತರಾಮಯ್ಯನವರ ಮೇಲೆ ಹೂಡಿದರು. ಇದರಲ್ಲಿ ದೇವಸ್ಥಾನದ ಮಹಾದ್ವಾರದಿಂದ ಅವರ ನರಸಿಂಹ ದೇವರ ಉತ್ಸವವನ್ನು ಖಾಯಂ ಆಗಿ ದೇವಳದ ಅಧಿಕಾರಿಗಳಲ್ಲಿ ಕೇಳದೆ ಹೊರ ಮತ್ತು ಒಳಗೆ ಕೊಂಡು ಹೋಗುವ ಹಕ್ಕನ್ನು ಸ್ಥಾಪಿಸಲೂ ಮತ್ತು ಹೊಸತಾಗಿ ಮಠದವರು ಅವರ ನರಸಿಂಹ ದೇವರಿಗೆ ತಯಾರಿಸಿದ ರಥ ಒಂದನ್ನು ಸುಬ್ರಹ್ಮಣ್ಯ ದೇವರ ಆಂಗಣದಲ್ಲಿ ಎಳೆಯುವ ಹಕ್ಕನ್ನು ಸ್ಥಾಪಿಸಲೂ ಪ್ರಯತ್ನಿಸಿದರು. ಇದ ರಲ್ಲಿ ನರಸಿಂಹ ದೇವರು ಸುಬ್ರಹ್ಮಣ್ಯ ದೇವರ ಪರಿವಾರ ದೇವರಲ್ಲ. ಅದು ಅವರ ಸ್ವಂತ ಮಠದ ದೇವರು ಎಂಬುದನ್ನು ಒಪ್ಪಿದ್ದಾರೆ.
ಈ ವ್ಯಾಜ್ಯದಲ್ಲಿ ಗುಡಿಯು ಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ಈಗ ಇರುವುದರಿಂದ ಅವರ ನರಸಿಂಹ ಜಯಂತಿ ಉತ್ಸವದ ಸಮಯ ಅವರು ದೇವಸ್ಥಾನದ ಅಧಿಕಾರಿಗಳಲ್ಲಿ ಕೇಳಿಕೊಂಡು ತಮ್ಮ ಉತ್ಸವವನ್ನು ನಡೆಸ ಬೇಕು. ದೇವಸ್ಥಾನವು ಅವರಿಗೆ ಒಪ್ಪಿಗೆ ಕೊಡಬೇಕು ಎಂದು ಇತ್ಯರ್ಥ ವಾಯಿತು. ಆದರೆ ದೇವಸ್ಥಾನದ ಒಳಗೆ ಇರುವ ನರಸಿಂಹ ಗುಡಿಯನ್ನು ಮತ್ತು ನಡೆಯನ್ನು ಕಟ್ಟಿದ್ದು ಮಠದವರು ಎಂದು ತೀರ್ಪು ಕೊಡಲಿಲ್ಲ.
ಈ ವ್ಯಾಜ್ಯದ ಜಡ್ಜ್‌ಮೆಂಟಿನಿಂದ ಈ ಕೆಳಗಿನ ಇನ್ನೂ ಕೆಲವು ವಿಷ ಯಗಳು ಸ್ಪಷ್ಟವಾಗುತ್ತವೆ. ಅವುಗಳು ಹೀಗಿವೆ.
ಮಠಕ್ಕೆ ಪ್ರತ್ಯೇಕ ಧಾರಾಳ ಆಸ್ತಿ ಉತ್ಪತ್ತಿಗಳು ಇವೆ. ಆಡಳಿತೆಯು ದೇವಸ್ಥಾನದ ಆಡಳಿತೆಯಿಂದ ಬೇರಾಗಿದೆ. ದೇವಸ್ಥಾನದ ಕ್ರಮಗಳಿಗೂ ಮಠದ ಕ್ರಮಗಳಿಗೂ ತುಂಬಾ ವ್ಯತ್ಯಾಸವಿದೆ. ಸುಬ್ರಹ್ಮಣ್ಯ ದೇವಸ್ಥಾನದ ದೇವರು ಶಿವ ಅಂಶ, ಮಠದ ಗುಡಿಯಲ್ಲಿರುವ ನರಸಿಂಹ ದೇವರು ವಿಷ್ಣು ಅಂಶ ಪೂಜಾ ಕ್ರಮಗಳಲ್ಲಿ ಶ್ರೀಸುಬ್ರಹ್ಮಣ್ಯ ದೇವರಿಗೆ ಆಗಮೋಕ್ತ ಪೂಜೆ, ನರಸಿಂಹ ದೇವರಿಗೆ ತಂತ್ರಸಾರ ರೀತ್ಯಾ ಪೂಜೆ, ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಶುದ್ಧ ಆದರೆ ಶುದ್ಧ ಮಾಡಲು ಸಂಪೋಕ್ರಮ. ನರಸಿಂಹ ಗುಡಿಯಲ್ಲಿ ಉದ್ಪಾರ್ಚನೆ ಕ್ರಮ. ಮಠದಲ್ಲಿ ಸ್ವಾಮಿಯೇ ಪೂಜೆ ಮಾಡ ಬೇಕು. ದೇವಸ್ಥಾನದಲ್ಲಿ ಗೃಹಸ್ಥಾಶ್ರಮಿಗಳ ಪೂಜೆ. ಮಠದ ದೇವರನ್ನು ಎಲ್ಲಿಗೂ ಕೊಂಡುಹೋಗಬಹುದು. ಅದು ಚಲನ ಪ್ರತಿಷ್ಠೆ. ಆದುದರಿಂದ ಶುದ್ಧ ಮಾಡುವಾಗ ಉದ್ಪಾರ್ಚನ ಪದ್ಧತಿ ಪ್ರಕಾರ ದೇವರನ್ನು ಹೊಳೆಯ ವರೆಗೆ ಕೊಂಡುಹೋಗಿ ಹೊಳೆಯಲ್ಲಿ ತೊಳೆದುಕೊಂಡು ಬರುವುದು ಕ್ರಮ. ಆದರೆ ಸುಬ್ರಹ್ಮಣ್ಯ ದೇವರನ್ನು ಹೊರಗೆ ಕೊಂಡು ಹೋಗುವ ಪದ್ಧತಿ ಇಲ್ಲ. ಹೀಗಿದ್ದರೂ ಈ ನರಸಿಂಹ ಗುಡಿಗೆ ದೇವಸ್ಥಾನದಿಂದ ಪರಿ ವಾರ ದೇವರಾದ ಉಮಾಮಹೇಶವರ ದೇವರಿಗೆ ಸಲ್ಲುವಂತೆ ಪರ್ವ ಕಾಲಗಳಲ್ಲಿ ಅವಲಕ್ಕಿ ತೆಂಗಿನಕಾಯಿ ಸಲ್ಲುವುದು ವಿಚಿತ್ರವಾಗಿದೆ. ಇದರಿಂ ದಾಗಿ ಈ ಗುಡಿಯು ಒಂದು ಕಾಲದಲ್ಲಿ ದೇವಸ್ಥಾನದ ಪರಿವಾರ ದೇವ ರಾದ ವಿನಾಯಕ ದೇವರ ಗುಡಿಯಾಗಿತ್ತೆಂದೂ, ಈ ದೇವಸ್ಥಾನವು ಈ ಮಾಧ್ವ ಮಠದ ಸ್ವಾಮಿಗಳ ಆಡಳಿತೆಗೆ ಬಂದ ನಂತರವೇ ಈ ಮಠದ ನರಸಿಂಹ ದೇವರ ಸಂಪುಟವು ಈ ಗುಡಿಯ ಒಳಗೆ ಪ್ರವೇಶಿಸಿ ಶ್ರೀವಿನಾ ಯಕ ದೇವರ ವಿಗ್ರಹವನ್ನು ಶ್ರೀ ಸುಬ್ರಹ್ಮಣ್ಯ ದೇವರ ಮೂಲಸ್ಥಾನದಲ್ಲಿ ಸೇರ‍್ಸಿದೆಂದು ಸ್ಪಷ್ಟಪಡಿಸಬಹುದಾಗಿದೆ.
ಈ ಮಠದ ಸ್ವಾಮಿಗಳು ಒಂದು ದೊಡ್ಡ ಸಂಸ್ಥಾನ ವಂದಿಕರೆಂದು ಹೇಳಿಕೊಳ್ಳುತ್ತಾರೆ. ಇವರ ಮಠಕ್ಕೆ ರೂಪಾ ೫೦೦ ತಸದೀಕು ಇದೆ. ಹೀಗಿರುವಾಗ ಇವರ ಮಠದ ನರಸಿಂಹ ದೇವರು ಒಂದು ಸಾರ್ವಜ ನಿಕ ಶಿವಸಂಬಂಧವಾದ ಸುಬ್ರಹ್ಮಣ್ಯ ದೇವಸ್ಥಾನದ ಒಳ ಅಂಗಣದ ಆಗ್ನೇಯ ಮೂಲೆಯ ಅತಿ ಇಕ್ಕಟ್ಟಾದ ಸ್ಥಳದಲ್ಲಿ ಹೇಗೆ ಬಂತು? ಎಂಬುದು ಪ್ರಶ್ನಾರ್ಹವಾಗಿದೆ. ಇವರ ದೇವರಿಗೆ ಸ್ವಂತವಾದ ಅಂಗಣಗಳಿಲ್ಲ. ಸ್ವಂತ ಪೌಳಿಗಳಿರಲಿಲ್ಲ. ತನ್ನದೇ ಆದ ಅರಿಕಿಟ್ಟಿಲು ಇಲ್ಲ. ಇವರ ದೇವರು ಉತ್ಸವ ಕಾಲದಲ್ಲಿ ಶ್ರೀಸುಬ್ರಹ್ಮಣ್ಯ ದೇವರ ಗುಡಿಗೆ ಪ್ರದಕ್ಷಿಣೆ ಬರಬೇಕು. ರಥಾದಿ ಉತ್ಸವಗಳು ಸುಬ್ರಹ್ಮಣ್ಯ ದೇವಸ್ಥಾನದ ಅಂಗಣದಲ್ಲೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಅಂಗಣದಲ್ಲೆ ಶ್ರೀಸುಬ್ರಹ್ಮಣ್ಯ ದೇವರಿಗೆ ಸುತ್ತು ಬಂದು ಶ್ರೀಸುಬ್ರಹ್ಮಣ್ಯ ದೇವರ ಬೀದಿಯಲ್ಲೇ ರಥೋತ್ಸವ ನಡೆಸಬೇಕು. ಪ್ರತಿ ಒಂದು ಕೆಲಸಗಳಿಗೂ ಶ್ರೀಸುಬ್ರಹ್ಮಣ್ಯ ದೇವಸ್ಥಾನವನ್ನೇ ಹೊಂದಿಕೊಂಡು ಇರ ಬೇಕು. ಇವರಿಗೆ ತಂತ್ರಸಾರ ಪ್ರಕಾರ ಉತ್ಸವ ಕಾಲದಲ್ಲಿ ಇವರ ಪರಿ ವಾರ ದೇವರಿಗೆ ತಂತ್ರ ತೂಗಬೇಕಾದರೆ ಇವರಿಗೆ ಸ್ವಂತ ಬಲಿಕಲ್ಲುಗಳಿಲ್ಲ. ಶ್ರೀಸುಬ್ರಹ್ಮಣ್ಯ ದೇವರ ಬಲಿಕಲ್ಲುಗಳಿಗೆ ಬಲಿತೂಗಬೇಕು. ಈ ಎಲ್ಲಾ ಕಾರಣಗಳಿಂದ ಈ ಮಠದ ದೇವರು ಒಂದು ಕಾಲದಲ್ಲೆ ಈ ಸುಬ್ರಹ್ಮಣ್ಯ ದೇವಳದ ಹೊರಗೆ ಸ್ವಲ್ಪ ದೂರದಲ್ಲಿ ಎಲ್ಲಿಯೋ ಸ್ವಂತ ಗುಡಿಯಲ್ಲಿ ಇದ್ದಿರಬೇಕೆಂದು ನಿಶ್ಚಯಿಸಬಹುದಾಗಿದೆ. ಸ್ವತಂತ್ರವಾಗಿದ್ದ ಶ್ರೀನರಸಿಂಹ ದೇವರನ್ನು ಈ ರೀತಿಯ ಇಕ್ಕಟ್ಟಿನ ಸ್ಥಳದಲ್ಲಿ ತಂದಿಟ್ಟು ದೇವಳಕ್ಕೆ ಬಂದ ಭಕ್ತಾದಿಗಳಿಂದ ತಮ್ಮ ಮಠಕ್ಕೂ ಉತ್ಪತ್ತಿ ಬರುವಂತೆ ಮಾಡಿಕೊಂಡಿರುವ ಈ ಸ್ವಾಮಿಗಳು ಶ್ರೀನರಸಿಂಹ ದೇವರ ಭಕ್ತರೆಂದು ಹೇಳಲೂ ಬರುವುದಿಲ್ಲ. ತಮ್ಮ ದೇವರನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿ ಕೊಂಡು ಇರುವುದು ವ್ಯಕ್ತವಾಗುತ್ತದೆ. ಉಡುಪಿಯಲ್ಲಿ ವೇಣುಗೋಪಾಲ ಕೃಷ್ಣ ಮೂರ್ತಿಯನ್ನು ಕಡಗೋಲು ಕೃಷ್ಣನೆಂದು ಮಾಡಿಕೊಂಡು ಶ್ರೀ ಅನಂತೇಶ್ವರ ಚಂದ್ರಮೌಳೀ ಶ್ವರ ದೇವರುಗಳಿಂದ ಮೂಲಗೇಣಿಗೆ ಪಡ ಕೊಂಡ ಈಶಾನ್ಯ ಮೂಲೆಯನ್ನು ತಮ್ಮದನ್ನಾಗಿ ಮಾಡಿಕೊಂಡು ಈ ಇಕ್ಕಟ್ಟಾದ ಸ್ಥಳದಲ್ಲಿ ಇವರ ದೇವರನ್ನು ಇಟ್ಟು ಇತರರಿಗೆ ಸರಿಯಾಗಿ ದರ್ಶನ ಸಿಕ್ಕದಂತೆ ಪೂಜಿಸುತ್ತಾ ತಮ್ಮದೇ ಆದ ಕೃಷ್ಣ ಮಠಕ್ಕೆ ಉತ್ಸವಾದಿಗಳಲ್ಲಿ ಉತ್ಸವ ಬಲಿ ಬರದೆ ಶ್ರೀಅನಂತೇಶ್ವರ ಚಂದ್ರಮೌಳೀಶ್ವರ ದೇವ ರಿಗೆ ಪ್ರದಕ್ಷಿಣೆ ಬರುತ್ತಿರುವ ಸಾಮರಸ್ಯವೇ ಈ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಮಾಧ್ವ ಸ್ವಾಮಿಗಳು ಕೂಡ ಮಾಡುತ್ತಿರುವುದಾಗಿದೆ. ಈ ಸ್ವಾಮಿಗಳವರು ಒಂದು ಕಡೆಯಿಂದ ತನ್ನ ದೇವರನ್ನೆ ಇಕ್ಕಟ್ಟಿನ ವಾದಗ್ರಸ್ತ ಸ್ಥಳದಲ್ಲಿಟ್ಟು ಹಿಂಸಿಸುವುದು ಇನ್ನೊಂದು ಕಡೆಯಿಂದ ಸಾರ್ವಜಕ ದೇವಸ್ಥಾನದ ಪ್ರಧಾನ ದೇವರ ಸೇವೆಗೆ ಬಂದ ಭಕ್ತಾದಿಗಳಿಗೂ ದೇವಳದ ಆಡಳಿತೆದಾರರಿಗೂ ಹಿಂಸಿಸುತ್ತಿರುವುದು ಬಹಳ ವ್ಯಸನಾಸ್ಪದ ವಿಷಯವಾ ಗಿದೆ. 
ಈ ಸುಬ್ರಹ್ಮಣ್ಯ ದೇವಸ್ಥಾನದ ತೆಂಕುಪೌಳಿಯ ಆಗ್ನೇಯ ಪಾರ್ಶ್ವದ ಮೂರನೇ ಒಂದು ಅಂಶವನ್ನು ಈ ಸ್ವಾಮಿಗಳು ಸಾಧಾರಣ ಒಂದು ಶತಮಾನದಿಂದ ಆಕ್ರಮಿಸಿಕೊಂಡುದ್ದರಿಂದ ಆ ಪೌಳಿಯು ಕಳೆದ ೧೯೫೫ರ ವರೆಗೆ ಇಬ್ಬರೊಳಗಿನ ಜಗಳದಿಂದ ರಿಪೇರಿ ಇಲ್ಲದೆ ಅತಿ ಜೀರ್ಣಾವಸ್ಥೆ ಯಲ್ಲಿತ್ತು. ೧೯೫೩ರಿಂದ ನೇಮಕವಾದ ಧರ್ಮದರ್ಶಿಗಳು ಈ ದುರವಸ್ಥೆ ಯನ್ನು ಕಂಡು ಆಗ ಇದ್ದ ವೃದ್ಧ ಸ್ವಾಮಿಗಳಾದ ಶ್ರೀವಿಶ್ವಜ್ಞ ತೀರ್ಥರೊಂ ದಿಗೆ ರಾಜಿ ಮಧ್ಯಸ್ಥಿಕೆ ಮಾಡಿಕೊಂಡು ತೆಂಕು ಪೌಳಿಯನ್ನು ಸಹಸ್ರ ಸಂಖ್ಯೆ ಹಣ ವೆಚ್ಚ ಮಾಡಿ ಕಟ್ಟಿಸಿದರು. ಕಟ್ಟಿಸಿ ಆದೊಡನೆ ಅವರ ಮುಂಚಿನ ಆಕ್ರಮಿತ ದೇವಸ್ಥಾನದ ಅಂಶವನ್ನು ಅವರಿಗೆ ಬಿಟ್ಟುಕೊಟ್ಟರೂ ಪೌಳಿಯ ಮಾಳಿಗೆ ಕೂಡಾ ತನಗೆ ಸಿಕ್ಕಬೇಕೆಂದು ದೇವಳದ ತೆಂಕು ಆಗ್ನೇಯ ಮೂಲೆಯೇ ಅವರ ಹಕ್ಕಿನದೆಂದು ಸ್ವಾಮಿಗಳು ದೇವಳದ ಮೇಲೆ ಔ.S. ೧೯೮/೧೯೫೮ ವ್ಯಾಜ್ಯ ಒಂದನ್ನು ಪುತ್ತೂರು ಮುನ್ಸಿಫಲ್ ಕೋರ್ಟಿನಲ್ಲಿ ದಾಕ್ಲು ಮಾಡಿದರು. ಈ ವ್ಯಾಜ್ಯದಲ್ಲಿ ಮಾಧ್ವರಾದ ವೆಂಕಟ್ರಮಣ ಮಂಡೆಚ್ಚರು ತಾನು ದೇವಸ್ಥಾನದ ಟ್ರಸ್ಟಿಯಾಗಿದ್ದು ಮಠದವರ ಸಹಾಯಕ್ಕೆ ನಿಂತು ದೇವಳಕ್ಕೆ ವಿರೋಧವಾಗಿ ಹೇಳಿಕೆಯನ್ನಿತ್ತದ್ದು ವ್ಯಸನಾಸ್ಪದವಾಗಿದೆ. ಆದರೆ ಔ.S. ೧೯೮/೧೯೫೮ ವ್ಯಾಜ್ಯವು ಠಸೆ ಫೀಸು ಕಮ್ಮಿ ಆದುದರಿಂದ ಮುನ್ಸಿಫಲ್ ಕೋರ್ಟ್‌ನಲ್ಲಿ ತೆಗೆದುಹಾಕಲ್ಪಟ್ಟಿತು. ಆ ಮೇಲೆ ಪುನಃ ಸ್ವಾಮಿಗಳು ಮಂಗ ಳೂರು ಸಬ್‌ಕೋರ್ಟಿನಲ್ಲಿ ವ್ಯಾಜ್ಯ ದಾಖಲು ಮಾಡಿದರು.
ಆ ವ್ಯಾಜ್ಯಕ್ಕೆ ಪ್ರತಿಯಾಗಿ ದೇವಸ್ಥಾನದ ರಕ್ಷಣೆಗೋಸ್ಕರ ಆಗಿನ ದೇವ ಸ್ಥಾನದ ಟ್ರಸ್ಟಿಗಳು ಮಾಧ್ವ ಸ್ವಾಮಿಗಳು ತಂದ ವ್ಯಾಜ್ಯವನ್ನು ಪ್ರತಿಭಟಿಸಿದ್ದ ಲ್ಲದೆ ಮಠದವರಿಂದ ಆಕ್ರಮಿಸಲ್ಪಟ್ಟ ದೇವಳದ ಆಗ್ನೇಯ ಮೂಲೆಯ ಗುಡಿಯು ಕೂಡಾ ದೇವಳದಲ್ಲಿ ಗೋಪ್ಯವಾಗಿರಿಸಲ್ಪಟ್ಟ ಸಿದ್ಧಿ ವಿನಾಯಕ ದೇವರ ಗುಡಿಯೆಂದೂ ಅದಕ್ಕೆ ಬೇಕಾದ ಪುರಾವೆಗಳನ್ನು ಕೊಟ್ಟು ಕಾನೂನು ಪ್ರಕಾರ ಎಂಡೋಮೆಂಟ್ ಕಮೀಶನರ ಒಪ್ಪಿಗೆ ಪಡೆದು ಔ.S. ಓo. ೫ oಜಿ ೧೯೬೧ನೇ ವ್ಯಾಜ್ಯ ಒಂದನ್ನು ಮಂಗಳೂರು ಸಬ್ ಕೋರ್ಟಿನಲ್ಲಿ ಹೂಡಿ ದರು. ಈ ವ್ಯಾಜ್ಯದಲ್ಲಿ ದೇವಸ್ಥಾನದ ಕಡೆಯಿಂದ ಹಳೆ ರಿಕಾರ್ಡುಗಳನ್ನು ಪರಿಶೀಲಿಸಿ ದಾವೆಯನ್ನು ತಯಾರುಪಡಿಸಿದವರು ಪ್ರಸಿದ್ಧ ವಕೀಲರಾದ ಶ್ರೀಕಾರ್ಕಳ ಸದಾಶಿವರಾಯರು. ಈ ವ್ಯಾಜ್ಯವನ್ನು ವ್ಯವಹರಿಸಿದವರು ಅವರ ಅಳಿಯ ಎಡ್ವೊಕೇಟ್ ಶ್ರೀಅಣ್ಣಪ್ಪ ಕಾಮತರು. ಈ ಎರಡು ವ್ಯಾಜ್ಯಗಳು ಜತೆಯಲ್ಲಿ ತನಿಖೆ ಮಾಡಲ್ಪಟ್ಟು ತಾ. ೩೧-೧-೬೬ರಲ್ಲು ತೀರ್ಪು ಕೊಡಲ್ಪಟ್ಟಿತು. ಆದರೆ ಜಡ್ಜರು ಮುಸಲ್ಮಾನರಾದುದರಿಂದ ಅವರಿಗೆ ಹಿಂದೂ ದೇವರು ಗಳ ಅರಿವಿಲ್ಲದೆ ಮಠದ ಮುಖ್ಯವಾದಿ ವ ಪ್ರತಿವಾದಿಗಳಾದ ಸ್ವಾಮಿಗಳನ್ನಾ ಗಲೀ ಮಠದ ಏಜಂಟರನ್ನಾಗಲೀ ತನಿಖೆ ನಡೆಸದೆ ಪೌಳಿಯ ಅಂಶ ಮತ್ತು ಗುಡಿಯು ದೇವಸ್ಥಾನದ್ದಾದರೂ ೧೨ ವರ್ಷ ಮೇಲ್ಪಟ್ಟು ಮಠದವರ ಸ್ವಾಧೀನ ಪಟ್ಟುದ್ದರಿಂದ ಮಠಕ್ಕೆ ಅವರ ಸ್ಥಳಗಳನ್ನು ಬಿಟ್ಟುಕೊಡ ಬೇಕೆಂದೂ ಪೌಳಿಯ ಅಂಶವು ಶ್ರೀಸುಬ್ರಹ್ಮಣ್ಯ ದೇವಸ್ಥಾನದ್ದೆಂದು ತೀರ್ಪನ್ನಿತ್ತರು.
ಲೇಖಕ ಹಾಗೂ ಸಂಗ್ರಾಹಕ: ಡಾ. ಯಂ.ಯೆಸ್. ಅಚ್ಚುತ 
ಮುಂದಿನ ವಾರ :
ಸ್ಥಾನ ಚ್ಯುತಿ ಮಾಡಿ ಗೋಪ್ಯವಾಗಿರಿಸಲ್ಪಟ್ಟ ಸಿದ್ದಿವಿನಾಯಕ ದೇವರು

ಉಪನ್ಯಾಸಕರು ಮಾಡುವುದು ತಪ್ಪು, ಹಾಗಾದರೆ ಸರಕಾರ ಮಾಡುವುದು ಸರಿಯೇ?

Posted by JAYAKIRANA Kirana on | 0 comments | Leave a comment...

ಪಿಯುಸಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿ ರುವುದು ತಪ್ಪು, ಅವರ ವೃತ್ತಿಯ ಘನತೆ ಮಹತ್ವಕ್ಕೆ ಹೇಳಿಸಿದ ಕೃತ್ಯವಲ್ಲ ಇದು. ಆ ವೃತ್ತಿಗೆ ಒಂದು ಪಾವಿತ್ರ್ಯತೆ ಇದೆ ಎಂದು ವೇದವಾಕ್ಯ ಹೇಳುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಸರಕಾರ ಮಾಡುವುದು ಸರಿಯೇ ಎಂಬ ಪ್ರಶ್ನೆ ಇವರ ಮುಂದೆ ಎಸೆಯಬೇಕಾಗುತ್ತದೆ. ಪಿಯು ಉಪನ್ಯಾಸಕರ ಬೇಡಿಕೆ ಬಗ್ಗೆ ಸರಕಾರ ಕೆಲವು ವರ್ಷಗಳಿಂದ ನಿರ್ಲಕ್ಷ್ಯ ತೋರಿಸುತ್ತಲೇ  ಬಂದಿದೆ. ಅವರಿಗೆ ನೀಡಿರುವ ಭರವಸೆಗಳನ್ನು ಕಾರ್ಯರೂ ಪಕ್ಕೆ ತರಲು ಸೋತಿದೆ. ಒಂದು ಪರಿಪೂರ್ಣ ಮಾತುಕತೆ ನಡೆ ಸಲೂ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಒಂದಲ್ಲೊಂದು ಕಾರಣ ಕೊಟ್ಟು, ಸಕ್ಕರೆ ಮಾತು ಆಡಿಕೊಂಡು ಕಳೆದ ಕೆಲವು ವರ್ಷಗ ಳಿಂದ ಉಪನ್ಯಾಸಕರನ್ನು ಸಮಾಧಾನಪಡಿಸುತ್ತಿದ್ದ ಸರಕಾರ   ಅವರ ಮೂಲ ಬೇಡಿಕೆ ಬಗ್ಗೆ ಗಂಭೀರವಾದ ಚಿಂತನೆ ಮಾಡಿದ್ದು ಕಂಡುಬರುವುದಿಲ್ಲ. ಇಲ್ಲಿ ನಿಜವಾದ ತಪ್ಪು ಸರಕಾರದ್ದೇ ಹೊರತು ಉಪನ್ಯಾಸಕರದ್ದಲ್ಲ. ಒಂದೊಮ್ಮೆ ಉಪನ್ಯಾಸಕರ ಬೇಡಿಕೆ ನ್ಯಾಯೋಚಿತವಾಗಿಲ್ಲ ಎಂದಾದರೆ ಅವರಿಗೆ ಸಕ್ಕರೆ ಮಾತಿನಲ್ಲಿ ಭರವಸೆ ನೀಡಿ ಯಾಕೆ ಸಮಾಧಾನಿಸಬೇಕು? ನೀವು ಮಾಡು ತ್ತಿರುವುದು ಕಾನೂನು ಪರಿಧಿಯಲ್ಲಿಲ್ಲ ಎಂದು ಹೇಳಿ ಅವ ರನ್ನು ಮಣಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಹುಟ್ಟದಿರುವುದಿಲ್ಲ.
ಕೆಲವು ದಿನಗಳ ಹಿಂದೆ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡಾಗ ಎ.೧೩ರ ಗಡುವು ಕೊಟ್ಟು ಮೌಲ್ಯಮಾಪನದಲ್ಲಿ ಭಾಗಿಯಾಗುವಂತೆ ಮಾಡಲು ಸರಕಾರ ಯಶಸ್ವಿಯಾಯಿತು. ಉಪನ್ಯಾಸಕರು ಮೌಲ್ಯಮಾಪನ ದಲ್ಲಿ ತೊಡಗಿಸಿಕೊಂಡ ಕೂಡಲೇ ಸರಕಾರ ಮಾತು ಮರೆ ಯಿತು. ಎ.೧೩ಕ್ಕೆ ಏನೂ ಮಾಡಿಲ್ಲ. ಅವರ ಬೇಡಿಕೆಯ ಚರ್ಚೆಗೆ ಆದ್ಯತೆ ನೀಡಲೇ ಇಲ್ಲ. ಸರಕಾರ ಹೆಜ್ಜೆ ತಪ್ಪಿದ್ದರಿಂದಾಗಿ ಇದೀಗ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರಕ್ಕೆ  ಅಂಟಿಕೊಳ್ಳುವಂತಾಗಿದೆ. ಸರಕಾರ ಇದುವರೆಗೆ ಸಮಸ್ಯೆಯನ್ನು ಮುಂದೂಡುತ್ತಲೇ ಬಂದಿತ್ತಲ್ಲದೆ ಪರಿಹಾರ ಮಾರ್ಗದ ಕಡೆಗೆ ಗಮನಹರಿಸಲೇ ಇಲ್ಲ. ಹಾಗಿರುವಾಗ ಈ ವಿಷಯದಲ್ಲಿ ಸರ ಕಾರ ನಿರ್ಲಕ್ಷ್ಯ ತೋರಿಸಿಲ್ಲ, ಮಕ್ಕಳ ಹಿತ ಕಾಪಾಡುವುದು ತನ್ನ ಕರ್ತವ್ಯವಲ್ಲ ಎಂಬಂತೆ ವರ್ತಿಸಿಲ್ಲ ಎಂದು ಹೇಳುವುದಾದರೂ ಹೇಗೆ ಸಾಧ್ಯ?
ಮೌಲ್ಯಮಾಪನ ಬಹಿಷ್ಕಾರ ಎಂಬುದು ಈ ವರ್ಷ ಉದ್ಭ ವವಾದ ಸಮಸ್ಯೆಯೂ ಅಲ್ಲ, ಉಪನ್ಯಾಸಕರ ಬೇಡಿಕೆಯೂ ನಿನ್ನೆ ಮೊನ್ನೆ ಹುಟ್ಟಿಕೊಂಡದಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಸಮಸ್ಯೆ ಜೀವಂತವಾಗಿತ್ತು. ಪ್ರತೀ ವರ್ಷ ಸರಕಾ ರದ ಒಂದೊಂದು ಭರವಸೆ ಮೇಲೆ ವಿಶ್ವಾಸ, ಆಸೆ ಇರಿಸಿ ಉಪ ನ್ಯಾಸಕರು ಪ್ರತಿಭಟನೆಯನ್ನು ಮುಂದೂಡುತ್ತಾ, ಹಿಂಪಡೆಯುತ್ತಾ ಬರುತ್ತಿದ್ದರು. ಆದರೆ ಸರಕಾರ ನೀಡಿದ್ದ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಭವಿಷ್ಯದ ಸಮಾಜ ನಿರ್ಮಾಪಕರಾಗಿರುವ ಉಪನ್ಯಾಸಕರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ, ಉದಾಸೀನ  ಯಾಕೆ ಎಂದು ಕೇಳಲೇ ಬೇಕಾಗುತ್ತದೆ. ಇಲ್ಲಿ ನಿಜವಾದ ವಿಲನ್ ಸರ ಕಾರವಲ್ಲವೇ? ಸರಕಾರ ಸಮಸ್ಯೆಯನ್ನು ಮುಂದೂಡುತ್ತಾ ಬಂದು ಮೌಲ್ಯಮಾಪನದ ಹೊತ್ತಿನವರೆಗೆ ತಂದು ನಿಲ್ಲಿಸಿದ್ದುದು ಅದರ ಅವಿವೇಕಿತನವನ್ನು ತೋರಿಸುತ್ತದೆ. ಸರಕಾರಕ್ಕೆ  ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಸಮಸ್ಯೆಗೆ ಯಾವತ್ತೋ ಪರಿಹಾರ ಮಾರ್ಗ ಹುಡುಕುತ್ತಿತ್ತು. ಉಪನ್ಯಾಸಕರ ಬೇಡಿಕೆ ನ್ಯಾಯೋಚಿತವಾದುದಲ್ಲ ಎಂದು ಖಚಿತವಾಗಿದ್ದರೆ ಅದು ಸಮಸ್ಯೆಯನ್ನು ಯಾಕೆ ಈ ರೀತಿ ಬೆಳೆಸಬೇಕಿತ್ತು?
ತುಂಬಾ ನಿಷ್ಠುರವಾದಿ ಮತ್ತು ಪ್ರಾಮಾಣಿಕ ಸಚಿವ ಎಂದು ಗುರುತಿಸಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧೀನದಲ್ಲಿರುವ ಪಿಯು ಬೋರ್ಡ್‌ನಲ್ಲಿ ಈಗ ಸಾಕಷ್ಚು ಗೊಂದಲಗಳಿವೆ. ಸಾಲು-ಸಾಲು ಪ್ರಶ್ನೆಪತ್ರಿಕೆಗಳು ಬಯಲಾಗಿ ವಿದ್ಯಾರ್ಥಿಗಳನ್ನು ಕಂಗೆಡಿಸಿದ್ದೂ ಸಾಲದ್ದಕ್ಕೆ ಇದೀಗ ಮೌಲ್ಯ ಮಾಪನದ ವಿಷಯದಲ್ಲೂ ಒಂದು ರೀತಿಯ ಅತಂತ್ರತೆ ಎದು ರಾಗಿದೆ. ಮುಷ್ಕರನಿರತ ಉಪನ್ಯಾಸಕರು ಒಂದೊಮ್ಮೆ ಮೌಲ್ಯ ಮಾಪನಕ್ಕೆ ಹಾಜರಾದರೂ ಕೆಲಸದ ಒತ್ತಡದಲ್ಲಿ ಸರಿಯಾಗಿ ಮೌಲ್ಯಮಾಪನ ಮಾಡುವುದು ಸಂಶಯ. ಯಾವ ರೀತಿ ನೋಡಿದರೂ, ಹೇಗೆ ಲೆಕ್ಕಾಚಾರ ಹಾಕಿದರೂ ನಷ್ಟವಾಗೋದು ವಿದ್ಯಾರ್ಥಿಗಳಿಗೆ,  ನಮ್ಮ ಮುಂದಿನ ಸಮಾಜಕ್ಕೆ  ಎಂಬುದು ನಿರ್ವಿವಾದ ಸಂಗತಿ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ರಿಗೆ ಬರ ಪರಿಸ್ಥಿತಿ, ಉಪನ್ಯಾಸಕರ ಬೇಡಿಕೆ, ವಿದ್ಯಾರ್ಥಿಗಳ ಹಿತದೃಷ್ಟಿ... ಇತ್ಯಾದಿ ವಿಷಯಗಳಿಗಿಂತ ಹೂಡಿಕೆದಾರರ ಒಲವು ಗಳಿಸುವುದು ಅಗತ್ಯವಿತ್ತು. ಅದಕ್ಕಾಗಿ ಅವರು ವಿದೇಶ ಪ್ರವಾಸ ಮಾಡಲು ಹೊರಟು ನಿಂತಿದ್ದರು. ಯಡಿಯೂರಪ್ಪ ಟೀಕಿಸಿದ್ದು ಕಾರಣವೋ ಅಥವಾ ಡೀವಿ ಹೇಳಿದಂತೆ ಅವರ ಆತ್ಮಸಾಕ್ಷಿಯ ಪ್ರಭಾವವೋ ಅಂತೂ ವಿದೇಶ ಪ್ರವಾಸ ಸದ್ಯಕ್ಕೆ ಮುಂದೂ ಡಿದೆ. ಆ ಹೊತ್ತಿನಲ್ಲಿ ಅವರಿಗೆ ಉಪನ್ಯಾಸಕರ ಸಮಸ್ಯೆಗೆ ಒಂದು ಪರಿಹಾರ ಹುಡುಕಬಹುದಿತ್ತಲ್ಲವೇ? ಇದೀಗ ಉಪನ್ಯಾಸಕ     ರನ್ನು ಬಲವಂತವಾಗಿ ಮಣಿಸುವ ಪ್ರಯತ್ನಗಳು ನಡೆಯು ತ್ತಿದೆ. ಇದು ಮತ್ತಷ್ಟು ಅವಾಂತರಗಳಿಗೆ ಕಾರಣವಾದೀತು.
 ಕಿರಣ್ ಕುಮಾರ್, ಮಂಗಳೂರು

Posted by JAYAKIRANA Kirana on | 0 comments | Leave a comment...

ಸೌಂದರ್ಯವರ್ಧಕಗಳ ಬಗ್ಗೆ ಎಚ್ಚರ!
ಮುಖಕ್ಕೆ ಬಳಸುವ ತರಹೇವಾರಿ ಸೌಂದರ್ಯವರ್ಧಕಗಳಿಂದ ಚರ್ಮದ ಕ್ಯಾನ್ಸರ್‌ನಂಥ ಗಂಭೀರ ಖಾಯಿಲೆ ತಗ ಲುವ ಸಾಧ್ಯತೆ ಇದೆ ಎಂಬುದಾಗಿ ಇತ್ತೀ ಚೆಗೆ ವಿeನಿಗಳ ತಂಡವೊಂದು ಹೇಳಿದೆ. ಇದು ನಿಜಕ್ಕೂ ಗಂಭೀರ ವಿಷಯ. ಯಾಕೆಂದರೆ ದೇಶಿಯ ಮಾರುಕಟ್ಟೆ  ಯಲ್ಲಿ ದಿನಕ್ಕೊಂದು ಹೊಚ್ಚಹೊಸ ಬ್ರಾಂಡ್‌ನ ಸೌಂದರ್ಯ ವರ್ಧಕಗಳು ಬಿಡುಗಡೆಯಾಗುತ್ತವೆ. ಇದನ್ನು ಬಳಸಿ, ಪರಿಣಾಮ ನೋಡಿ ಎಂದು ಜಾಹೀರಾತಿ ನಲ್ಲೂ ಪ್ರಚಾರ ಮಾಡಲಾಗುತ್ತದೆ.
ಇವುಗಳ ಗ್ರಾಹಕರು ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಇಂಥ ಉತ್ಪ ನ್ನಗಳನ್ನು ಬಳಸಿ ಮೋಸ ಹೋಗುತ್ತಾರೆ. ಚರ್ಮದ ಹೊಳಪಿಗಾಗಿ ವಿವಿಧ   ಬ್ರಾಂಡ್‌ನ ಉತ್ಪನ್ನಗಳನ್ನು ಬಳಸುವ  ಮುನ್ನ ಆರೋಗ್ಯದ ಕಡೆ ಅಗತ್ಯವಾಗಿ ಎಚ್ಚ ರಿಕೆ ವಹಿಸಬೇಕಾಗಿದೆ. ಅದೇ ರೀತಿ ಅಸಲಿ ಕಂಪೆನಿಯ ಹೆಸರಿನಲ್ಲಿ ನಕಲಿ ಉತ್ಪನ್ನ ಗಳೂ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ಇದನ್ನು ತಡೆಯುವ ಪ್ರಯತ್ನವನ್ನು ಸರ ಕಾರವೇ ಮಾಡುವಂತಾಗಲಿ.
 ರಾಕೇಶ್, ಚಿತ್ರಾಪುರ

ವಿದ್ಯಾರ್ಥಿ ಸಂಘಟನೆಗಳು ಗಮನ ಹರಿಸಲಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಕೊಣಾಜೆಯ ಪಿಎ ಎಂಜಿನಿಯರಿಂಗ್ ಕಾಲೇ ಜಿನ ವಿದ್ಯಾರ್ಥಿನಿ ಮೆಹನಾಝ್ ಎಂಬಾಕೆ ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಈ ಪ್ರಕರಣ ಶೈಕ್ಷಣಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿನಿ ಆತ್ಮಹತ್ಯೆಗೆ ಅಲ್ಲಿನ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಇಷ್ಟರ ತನಕ ಯಾವೊಂದು ವಿದ್ಯಾರ್ಥಿ ಸಂಘಟನೆಯೂ ಪ್ರಕರಣದ ಸತ್ಯಾಸತ್ಯತೆ ಅರಿಯಲು ಪ್ರಯ ತ್ನಿಸದಿರುವುದು ವಿಪರ್ಯಾಸವಲ್ಲದೇ ಇನ್ನೇನು? ಈ ಹಿಂದೆಯೂ ಈ ಕಾಲೇಜಿನಲ್ಲಿ ಗಾಂಜಾ ಮುಂತಾದ ಪ್ರಕರ ಣಕ್ಕೆ ಸಂಬಂಧಿಸಿ ಗಲಾಟೆ ನಡೆದಿತ್ತು. ಮೊದಲು ಉತ್ತಮ ಶಿಕ್ಷಣ ಸಂಸ್ಥೆ ಎಂದು ಗುರುತಿಸಿಕೊಂಡಿದ್ದ ಇದು ಇತ್ತೀಚೆಗೆ ತನ್ನ ಹೆಸರು ಕೆಡಿಸಿಕೊಂಡ ಅದೆಷ್ಟೋ ಘಟನೆಗಳು ನಡೆ ದಿತ್ತು. ಈ ಬಗ್ಗೆ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಆದರೆ ಇಲ್ಲಿ ಯತನಕ ಯಾವುದೇ ವಿದ್ಯಾರ್ಥಿ ಸಂಘಟನೆ ಇಲ್ಲಿನ ಯಾವುದೇ ಅಹಿತಕರ ಘಟನೆಗಳನ್ನು ಪ್ರತಿಭಟಿಸಿದ ಉದಾಹರಣೆಗಳೇ ಇಲ್ಲ. ಅಲ್ಲದೇ ಶಿಕ್ಷಣ ಇಲಾಖೆಯು ಈ ಸಂಸ್ಥೆಯ ಕಾರ್ಯಚಟು ವಟಿಕೆಯತ್ತ ಸರಿಯಾಗಿ ಗಮನ ಹರಿಸಿದಂತೆ ತೋರುತ್ತಿಲ್ಲ. ಮೆಹನಾಝ್ ಸಾವಿನ ಬಗ್ಗೆ ಸರಿಯಾದ ರೀತಿಯಲ್ಲಿ ಪೊಲೀ ಸರು ತನಿಖೆ ನಡೆಸಿದರೆ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಬಹುದಾಗಿದೆ. ನೊಂದ ವಿದ್ಯಾರ್ಥಿ, ದೇರಳಕಟ್ಟೆ

ಆರೋಗ್ಯ ಕೇಂದ್ರ ಅಗತ್ಯ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ ಸಮೀಪದ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಶಾಸಕರ ಸಮೇತ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದರೂ ಆರೋಗ್ಯ ಕೇಂದ್ರ ಮಂಜೂರಾಗಿಲ್ಲ. ಸ್ಥಳೀಯ ಗ್ರಾಮಸ್ಥರಿಗೆ ಅನಾರೋಗ್ಯ ಕಾಡಿದರೆ ಮೂಡಬಿದ್ರ್ರೆಯ    ಆರೋಗ್ಯ ಕೇಂದ್ರವನ್ನು ಅಲವಂಬಿಸಬೇಕಾಗುತ್ತದೆ. ಇಲ್ಲಿ ಸುಮಾರು  ೧೨ ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಸರಕಾರಿ ಜಾಗ ಇಲ್ಲಿಯೇ ಸಮೀಪದಲ್ಲಿ ಇದ್ದರೂ ಆರೋಗ್ಯ ಕೇಂದ್ರ ಸ್ಥಾಪಿಸಲು ಸಾಧ್ಯವಿಲ್ಲವೇ? ಇನ್ನಾದರೂ ಈ ಭಾಗದ ಜನತೆಯ ಪ್ರಮುಖ ಬೇಡಿ ಕೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶೀಘ್ರವಾಗಿ ನಿರ್ಮಿ ಸಲು ಜನಪ್ರತಿನಿಧಿಗಳು ಮನಸ್ಸು ಮಾಡಬೇಕಾಗಿ ವಿನಂತಿ.     
                       ರೋಹಿಣಿ, ತೆಂಕಮಿಜಾರು 

ತೀರ್ಪಿಗೆ ಕಾದು ಕುಸಿದುಬಿದ್ದ ಪಾಲಿಕೆ ಆಡಳಿತ

Posted by JAYAKIRANA Kirana on | 0 comments | Leave a comment...

ನೂತನ ಮೇಯರ್ ಆಗಿ ಗುಲ್ಜಾರ್ ಬಾನುರವರ ಆಯ್ಕೆ ಯಾದ ನಂತರ ಮಂಗಳೂರು ಪಾಲಿಕೆಯ ಆಡಳಿತ ಯಂತ್ರವೇ ಸ್ತಬ್ದಗೊಂಡಿದೆ. ಇದು ನೂತನ ಮೇಯರ್‌ರ ಕಾಲ್ಗುಣದಿಂ ದಲೋ ಅಥವಾ ಮೇಯರ್ ಆಯ್ಕೆಯನ್ನು ಧಿಕ್ಕರಿಸಿ ಬಿಜೆಪಿ ಕೋರ್ಟ್ ಮೊರೆ ಹೋದ ಕಾರಣದಿಂದಲೋ ಎನ್ನುವುದು ತಿಳಿಯುತ್ತಿಲ್ಲ. ಮೇಯರ್ ಆದ ನಂತರ ಗುಲ್ಜಾರ್ ಬಾನುರ ವರು ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಇನ್ನು ವಿರೋಧ ಪಕ್ಷ ಬಿಜೆಪಿ ಕೋರ್ಟ್ ತೀರ್ಪಿಗಾಗಿಯೇ ಬಕಪಕ್ಷಿಯಂತೆ ಕಾಯುತ್ತಿದೆ. ಬಹುಶಃ ತೀರ್ಪು ಮುಂದಿನ ಒಂದು ವರ್ಷಗಳ ಕಾಲ ಪ್ರಕಟಗೊಳ್ಳದಿ ದ್ದರೆ ಪಾಲಿಕೆಯಿಂದ ನಗರದ ಜನತೆ ಏನನ್ನೂ ನಿರೀಕ್ಷಿಸುವಂ ತಿಲ್ಲ. ಯಾಕೆಂದರೆ ತೀರ್ಪು ಬಾರದೆ ಬಿಜೆಪಿ ನೂತನ ಮೇಯ ರ್‌ರವರನ್ನು ಬೆಂಬಲಿಸುವುದಿಲ್ಲ. ನೂತನ ಮೇಯರ್ ಬಿಜೆಪಿ ಗರ ಅಹಂಕಾರಕ್ಕೆ ಪಾಠ ಕಲಿಸಲು ಅಭಿವೃದ್ದಿ ಕೆಲಸಗಳಿಗೂ ಚಾಲನೆ ನೀಡುವುದಿಲ್ಲ. ಹೀಗಾದರೆ ಮಧ್ಯೆ ಸಿಕ್ಕಿ ಹಾಕಿಕೊಳ್ಳು ವುದು ಮಾತ್ರ ಇಲ್ಲಿನ ನಾಗರಿಕರು. ಒಟ್ಟಿನಲ್ಲಿ ಕೋರ್ಟ್ ತೀರ್ಪು ಬಾರದೆ ಇಡೀ ಮಂಗಳೂರು ಪಾಲಿಕೆಯ ಆಡಳಿತ ಯಂತ್ರವೇ ಕುಸಿದು ಬಿದ್ದಿದೆ ಎಂದರೆ ತಪ್ಪಾಗಲಾರದು. ಇನ್ನಾದರೂ ಎರಡೂ ಪಕ್ಷದವರು ಒಂದು ವರ್ಷದ ಆಡಳಿತಕ್ಕಾಗಿ ಸುಖಾಸುಮ್ಮನೆ ಜಗಳ ಕಾಯದೆ ಪಾಲಿಕೆಯ ಆಡಳಿತದಲ್ಲಿ ಪಾಲ್ಗೊಳ್ಳಿ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಪರಿಸ್ಥಿತಿ ಎದುರಿಸಲು ಸನ್ನ ದ್ದರಾಗಿ.           ಸಂಕೇತ್ ನಾಯಕ್, ಕಂಕನಾಡಿ

ಸರಕಾರ ತಾನು ಮಾಡಬೇಕಾದ ಕೆಲಸವನ್ನು ಇಷ್ಟರತನಕ ವ್ಯವಸ್ಥಿತವಾಗಿ ಮಾಡಿ ಯಶಸ್ಸು ಕಂಡು ಕೊಂಡದ್ದಿದೆಯೇ?

Posted by JAYAKIRANA Kirana on | 0 comments | Leave a comment...


ತಾನು ಮಾಡಬೇಕಾದ ಕೆಲಸ ವನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ ಆ ಕೆಲಸಕ್ಕೆ ‘ನೆಮ್ಮದಿ’ ಎನ್ನುವ ಹೆಸರು ಬೇರೆ ಇಡಲಾಗಿದೆ. ಆದರೆ ಇದ ರಿಂದ ಎಷ್ಟು ಜನರ ನೆಮ್ಮದಿ ಹಾಳಾಗುತ್ತಿದೆ ಎನ್ನು ವುದು ಸರಕಾರಕ್ಕೇನು ಗೊತ್ತು? ಸರಕಾರ ತನ್ನ ಕೆಲ ಸವನ್ನು ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ ಕೈ ತೊಳೆದು ಕೊಂಡಿದೆ. ಇಲ್ಲಿ ಜನರ ಮನಸ್ಸಿನ ಭಾವನೆಗೆ    ಬೆಲೆಯೇ ಇಲ್ಲ. ನೆಮ್ಮದಿ ಸಂಸ್ಥೆಯು ಹಲವು ದೃಢಪತ್ರ ಗಳನ್ನು ನೀಡುವುದರ ಜೊತೆಗೆ ಇನ್ನಿತರ ಅವಶ್ಯಕ ಕೆಲಸಗಳನ್ನು ಮಾಡುತ್ತದೆ ನಿಜ. ಆದರೆ ಇಲ್ಲಿ ನಮಗೆ ಅಗತ್ಯವಾದ ಕೆಲಸವನ್ನು ಸಕಾಲದಲ್ಲಿ ಮಾತ್ರ ಮಾಡಿ ಕೊಡಲಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿ ರುವುದು ಸಾಮಾನ್ಯ ಜನರಿಗೆ ಹೊರತು ಸರಕಾರಿ ಕೆಲಸವನ್ನು ಮಾಡುತ್ತಾ ಆರಾಮವಾಗಿ ಕುಳಿತು ಕೊಳ್ಳುವವರಿಗಲ್ಲ. ಹಣವುಳ್ಳವರು ತಮಗೆ ಬೇಕಾದ ರೀತಿಯಲ್ಲಿ ಹಣ ಕೊಟ್ಟು ಬೇಕಾದುದನ್ನು ಆದಷ್ಟು ಬೇಗನೆ ಮಾಡಿಕೊಳ್ಳುತ್ತಾರೆ. ಅಗತ್ಯವಿದ್ದರೆ ನಕಲಿ ಪತ್ರ ವನ್ನೂ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರು ಮಾತ್ರ ನೂರು ಸಲ ಅಲೆದಾಡಿದರೂ ಅಗತ್ಯ ದಾಖಲೆ ಸಿಗುವುದು ತುಂಬಾ ಕಷ್ಟ. ಒಂದೊಮ್ಮೆ ಸಿಕ್ಕಿದರೂ ಅದರಲ್ಲಿ ಸರಿಯಾಗಿ ದಾಖಲೆಗಳು ಇರುವುದಿಲ್ಲ. ಇದರಿಂದ ಜನರ ನೆಮ್ಮದಿ ಹಾಳಾಗಿರುವುದು      ಮಾತ್ರ ಸತ್ಯ. ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಸರಿಯಾದ ಕ್ರಮ ಕೈಗೊಂಡು ಜನರ ಸಮಸ್ಯೆ ಬಗೆ ಹರಿಸಬೇಕಾಗಿ ಈ ಮೂಲಕ ವಿನಂತಿ. ಇಲ್ಲದಿದ್ದರೆ ಮುಂದೆ ಪ್ರತಿಭಟನೆ ನಿಶ್ಚಿತ.
  ಶೋಭ.ಎಸ್., ಪುತ್ತೂರು

ಮುದ್ದಾಡಿ-ತುಂಬೆದಲೆಕ್ಕಿ ರಸ್ತೆಗೆ ಕೊನೆಗೂ ಮುಕ್ತಿ

Posted by JAYAKIRANA Kirana on | 0 comments | Leave a comment...

ಕಳಪೆ ರಸ್ತೆಯಿಂದಾಗಿ ಧೂಳಿನ ಹಾಗೂ ಮಳೆಗಾಲದಲ್ಲಿ ಕೆಸರಿನ ಅಭಿಷೇಕವಾಗುತ್ತಿದ್ದ ವೇಣೂರು ಸಮೀಪದ ಮುದ್ದಾಡಿ-ತುಂಬೆದಲೆಕ್ಕಿ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬೆಳ್ತಂಗಡಿ ತಾಲೂಕಿನ ವೇಣೂರಿ ನಿಂದ ಸುಮಾರು ಎರಡು ಕಿ.ಮೀ. ದೂರದ ಮುದ್ದಾಡಿ-ತುಂಬೆದಲೆಕ್ಕಿ ರಸ್ತೆಗೆ ವೇಣೂರು ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಮತಟ್ಟು ಮಾಡಿ ಮುಚ್ಚಲಾಗಿದ್ದ ರಸ್ತೆಯು ಇದೀಗ ಮಳೆ ಬೀಳುವ ಮೊದಲೇ ಡಾಮರೀಕರಣ ನಡೆಸಿದ ಜಿ.ಪಂ. ಗ್ರಾಮಸ್ಥರ ಶ್ಲಾಘನೆಗೆ ಪಾತ್ರವಾ ಗಿದೆ. ಮಳೆಗಾಲ ಬರುವ ಮೊದಲು ಡಾಮರೀಕರಣ ನಡೆಸದಿದ್ದರೆ ಆಗುವ ಸಮಸ್ಯೆಗಳ ಬಗ್ಗೆ ಜಯಕಿರಣ ಪತ್ರಿಕೆ ವರದಿ ಪ್ರಕಟಿಸಿತ್ತು. ವಾಹನಗಳು ಮಳೆಗಾಲದಲ್ಲಿ ಅತಿಯಾಗಿ ಹೂತುಹೋಗುವ ರಸ್ತೆ ಮಧ್ಯೆ ಕಾಂಕ್ರಿಟೀಕರಣ ನಡೆಸಿ, ಗುಣ್ಣಮಟ್ಟದ ಡಾಮರೀಕರಣ ಆಗಲು ಕಾರಣವಾದ ಜಿ.ಪಂ. ಅಧಿಕಾರಿಗಳಿಗೆ, ಬೆಳ್ತಂಗಡಿ ಶಾಸಕರಿಗೆ ಹಾಗೂ ಸಂಬಂಧಿತ ಎಲ್ಲಾ ಜನಪ್ರತಿನಿಧಿಗಳಿಗೂ ನಾಗರಿಕರ ಪರವಾಗಿ ಅಭಿ ನಂದನೆ.                       ಪಿ.ಬಿ. ಕುಲಾಲ್, ಬಜಿರೆ

ಗೋಸಾಗಾಟ ತಡೆಯಲು ಪೊಲೀಸರಿಲ್ಲವೇ?

Posted by JAYAKIRANA Kirana on | 0 comments | Leave a comment...

ಹಿಂದೂ ಸಂಘಟನೆಗಳು ಮತ್ತೆ ಹಠಕ್ಕೆ ಬಿದ್ದು ಗೋಸಾಗಾಟ ತಡೆಯು ತ್ತಿವೆ. ವಾರದ ಹಿಂದೆ ನಗರದಲ್ಲಿ ಎರಡು ಬಾರಿ ಗೋಸಾಗಾಟದ ಟೆಂಪೋ ತಡೆದು ಬಜರಂಗಿಗಳು ಸುದ್ದಿ ಮಾಡಿದ್ದಾರೆ. ಇದ ನ್ನೆಲ್ಲ ನೋಡುತ್ತಿದ್ದರೆ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಜೀವಂತವಾಗಿದೆಯೇ, ಇಲ್ಲವೇ ಎಂಬ ಶಂಕೆ ಮೂಡುತ್ತದೆ. ಯಾಕೆಂ ದರೆ ಪೊಲೀಸರು ಮಾಡಬೇಕಾದ ಕೆಲಸ ವನ್ನು ಕೆಲವು ಹಿಂದೂ ಸಂಘಟನೆಗಳು ಮಾಡುತ್ತಿವೆ. ಗೋಸಾಗಾಟವಿರಲಿ, ವೇಶ್ಯಾ ವಾಟಿಕೆ ದಂಧೆಯೇ ಇರಲಿ, ಅಲ್ಲಿ ಪೊಲೀ ಸರಿಗೂ ಮೊದಲೇ ಬಜರಂಗಿಗಳು ಹಾಜ ರಿರುತ್ತಾರೆ. ಹೊಡೆದಾಟ-ಬಡಿದಾಟ ಎಲ್ಲ ಮುಗಿದ ಬಳಿಕ ಪೊಲೀಸರು ಬರುತ್ತಾರೆ. ಜಿಲ್ಲೆಯನ್ನು ಸುಮಾರು ಹತ್ತು ವರ್ಷಗ ಳಿಂದ ಹಿಂದೂ ಸಂಘಟನೆಗಳೇ ಆಳ್ವಿಕೆ ನಡೆಸುತ್ತಿವೆಯೇನೋ ಎಂಬ ಭ್ರಮೆ ಜನರ ಲ್ಲಿದೆ. ಇಂಥ ಪರಿಸ್ಥಿತಿಯೇ ಮುಂದೊಮ್ಮೆ ಗಲಭೆಗೆ ಎಡೆಮಾಡಿಕೊಟ್ಟರೆ ಸಾಯುವುದು ಮಾತ್ರ ಅಮಾಯಕರು. ಪೊಲೀಸ್ ಇಲಾಖೆ ಈಗ ಬಜರಂಗಿಗಳಿಗೆ ಜಿಲ್ಲೆಯ ಕಾನೂನು, ಸುವ್ಯವಸ್ಥೆ ಕಾಯುವ ಹೊಣೆಯನ್ನು ವಹಿಸಿ ಕೊಟ್ಟು ಆರಾಮದಿಂದ ಇರಬಹುದು. ಆದರೆ ಇದೇ ಪರಿಸ್ಥಿತಿ ಮುಂದಿನ ದಿನಗ ಳಲ್ಲಿ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡ ಬಾರದಲ್ಲವೇ? ಜಿಲ್ಲಾ ಪೊಲೀಸ್ ಇಲಾಖೆ ಇನ್ನಾದರೂ ಈ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಲಿ.
 ಕೆ.ರೆಹಮಾನ್, ವಾಮಂಜೂರು

ರಿಕ್ಷಾ ಚಾಲಕರೇ ಗಮನಿಸುವಿರಾ?

Posted by JAYAKIRANA Kirana on | 0 comments | Leave a comment...

ರಿಕ್ಷಾ ಚಾಲಕರ ಬಗ್ಗೆ ಮಾತೆತ್ತಿದರೆ ಕೆಲ ರಿಕ್ಷಾ ಚಾಲ ಕರು ಉರಿದು ಬೀಳುತ್ತಾರೆ. ಆದರೆ ತಮ್ಮದೇ ಚಾಲಕ ವರ್ಗ ದಲ್ಲಿರುವ ಕೆಲ ವಂಚಕ ರಿಕ್ಷಾ ಚಾಲಕರನ್ನು ಮಾತ್ರ ವಿಚಾರಿ ಸುವ ಅಥವಾ ಸರಿದಾರಿಗೆ ತರುವ ಕೆಲಸವನ್ನು ಯಾರೊ ಬ್ಬರೂ ಮಾಡುವುದಿಲ್ಲ. ಮೊನ್ನೆ ನಾನು ಬಿಜೈಯ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ ಸರ್ಕ್ಯೂಟ್‌ಹೌಸ್‌ಗೆ ರಿಕ್ಷಾದಲ್ಲಿ ಬಂದೆ. ಈ ವೇಳೆ ಹೆಚ್ಚೆಂದರೆ ರಿಕ್ಷಾದ ಬಾಡಿಗೆ ಎಷ್ಟಾಗಿರಬಹುದು ಎಂದು ಯಾರು ಬೇಕಾದರೂ ಊಹಿಸಬಹುದು. ರಿಕ್ಷಾದ ಮೀಟರ್‌ನ ಪ್ರಕಾರ ಬಾಡಿಗೆ ಇಪ್ಪತ್ತು ರುಪಾಯಿ ದಾಟಲು ಸಾಧ್ಯವೇ ಇಲ್ಲ. ಆದರೆ ಈ ರಿಕ್ಷಾದ ಚಾಲಕ ನನ್ನಿಂದ ಪಡೆದ ಹಣ ೪೦ರೂಪಾಯಿ. ಅಂದರೆ ಸರಿಯಾಗಿ ಎರಡು ಪಟ್ಟು. ನಾನು ವಿರೋಧಿಸಿದ್ದಕ್ಕೆ ನನ್ನ ಜೊತೆ ಜಗಳ ಕಾಯಲು ಬಂದ ಈ ಚಾಲಕ. ಸಂಜೆ ಸುಮಾರು ಆರರ ಸಮಯ. ನನಗೆ ಅಗತ್ಯ ಕೆಲಸ ಇದ್ದ ಕಾರಣ ಈತನ ಜೊತೆ ಚರ್ಚೆ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಾಗಾಗಿ ಪತ್ರಿಕೆಯ ಮೂಲಕ ರಿಕ್ಷಾ ಚಾಲಕರ ಗಮನಕ್ಕೆ ತರಬೇಕಾಯಿತಷ್ಟೇ. ಬೆಂಗಳೂರಿನಂತಹ ಮಹಾನಗರದಲ್ಲಿ ವಂಚಕ ರಿಕ್ಷಾ ಚಾಲಕರು ಇದ್ದಾರೆ ಎನ್ನು ವುದನ್ನು ಕೇಳಿದ್ದೆ. ಆದರೆ ನಮ್ಮಲ್ಲೇ ಇಂಥವರು ಇದ್ದಾರೆ ಎನ್ನುವುದು ಮೊನ್ನೆ ಸ್ಪಷ್ಟವಾಗಿದೆ. ಇಂಥವರಿದ್ದರೆ ಉಳಿದ ರಿಕ್ಷಾ ಚಾಲಕರಿಗೂ ಕೆಟ್ಟ ಹೆಸರು ಎನ್ನುವುದು ಪ್ರಮಾಣಿಕ ರಿಕ್ಷಾ ಚಾಲಕರು ಅರಿತುಕೊಳ್ಳಲಿ. ಸಾರ್ವಜನಿಕರಿಂದ ಆರ್‌ಟಿಓ ಅಧಿಕಾರಿಗಳಿಗೆ ಇಂತಹ ಅನೇಕ ದೂರುಗಳು ಈಗಾಗಲೇ ಬಂದಿವೆ. ಆದರೂ ರಿಕ್ಷಾ ಚಾಲಕರು ಎಚ್ಚೆತ್ತುಕೊಂಡಿಲ್ಲ. ಇನ್ನಾ ದರೂ ತಮ್ಮ ಸಂಘಟನೆ ಇಂತಹ ವಂಚಕ ರಿಕ್ಷಾ ಚಾಲಕರಿಗೆ ಪಾಠ ಕಲಿಸಲಿ.
ನೊಂದ ಪ್ರಯಾಣಿಕ, ಬಳ್ಳಾಲ್‌ಬಾಗ್

ದೇಶದ್ರೋಹ ಎಂದರೇನು?

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ನಕ್ಸಲ್ ನಿಗ್ರಹದಳ ಬಂದಿ ಸಿರುವ ವಿಠಲ ಮಲೆಕುಡಿಯ ಎಂಬ ಹುಡುಗನ ವಿರುದ್ಧ ದೇಶದ್ರೋಹದ ಆಪಾ ದನೆಯನ್ನು ಮಾಡಲಾಗಿದೆ. ಖುದ್ದು ಪೊಲೀಸ್ ಮುಖ್ಯಸ್ಥರೇ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ವಿಠಲ ದೇಶ ದ್ರೋಹಕ್ಕೆ ಸಂಚು ಹೂಡಿದ್ದ ಎಂದು ತಿಳಿಸಿದ್ದಾರೆ. 
ನಮ್ಮನ್ನಾಳುವ ಸರಕಾರ, ಪೊಲೀಸ್ ಇಲಾಖೆಯ ತಲೆಬುಡವಿಲ್ಲದ ಇಂಥ ಹೇಳಿಕೆಯನ್ನು ಕೇಳುವಾಗ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ. ಓರ್ವ ಮಲೆ ಕುಡಿಯನಾಗಿದ್ದು, ಜೀವನದಲ್ಲಿ ಕಷ್ಟಗ ಳನ್ನೇ ಕಂಡು ಸಾಧನೆ ಮಾಡ ಬೇಕೆಂ ದುಕೊಂಡ ವಿಠಲ ಎಂಬ ಇನ್ನೂ ೨೦ ವರ್ಷ ತುಂಬದ ಹುಡುಗ ದೇಶ ದ್ರೋಹಕ್ಕೆ ಸಂಚು ಹೂಡಿದ್ದಾನೆ ಎಂದು ಪೊಲೀಸರು ಹೇಳುವುದಾದರೆ ಪ್ರeವಂತರು ಈ ಕುರಿತು ಚಿಂತಿಸಲೇಬೇಕಾದ ಅಗತ್ಯವಿದೆ. ಯಾಕೆಂದರೆ ವಿಠಲ ಎಲ್ಲೂ ಬಾಂಬ್ ಇಟ್ಟಿಲ್ಲ, ದೇಶದಲ್ಲಿ ಮತೀಯ ಸಾಮರಸ್ಯ ಹಾಳು ಮಾಡಿಲ್ಲ, ಅಕ್ರಮ ಶಸ್ತ್ರಾಸ್ತ್ರ ಹೊಂದಿಲ್ಲ. ಆತನ ಮನೆಯಲ್ಲಿ ಸಿಕ್ಕಿದ್ದು ಸಕ್ಕರೆ, ಚಾಹುಡಿ, ಕೆಲವು ಪತ್ರಿಕೆಗಳ ಕಟ್ಟಿಂಗ್ಸ್ ಮತ್ತು ಸ್ವಾತಂತ್ರ್ಯ ಯೋಧ ಭಗತ್ ಸಿಂಗ್‌ರ ಬಗೆಗಿನ ಸಾಹಿತ್ಯ. ಇದೆಲ್ಲವನ್ನೂ ಇಟ್ಟುಕೊಂಡು ದೇಶ ದ್ರೋಹಕ್ಕೆ ಸಂಚು ಹೂಡಲು ಹೇಗೆ ತಾನೇ ಸಾಧ್ಯ? ಪೊಲೀಸ್ ಇಲಾಖೆ ಇಲಿಯನ್ನು ಹಿಡಿದು ಹುಲಿ ಎಂದು ಬೇಸ್ತು ಬೀಳು ವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅಮಾಯಕರನ್ನು ಹಿಡಿದು ನಕ್ಸಲ್ ಬೆಂಬಲ, ದೇಶದ್ರೋಹ ಆರೋಪ ಮಾಡಿದ ಅನೇಕ ಉದಾ ಹರಣೆಗಳಿವೆ. ಎಷ್ಟೋ ಮಂದಿ ದೇಶ ದ್ರೋಹಿಗಳು ಪಾತಕವೆಸ ಗುತ್ತಾ, ದೇಶವನ್ನೇ ಸ್ಫೋಟಿಸಲು ಸಂಚು ಹೂಡುತ್ತಾ ಹೊರಗಡೆ ಆರಾಮಾಗಿ ಇದ್ದಾರೆ. ಇವರ ಬಗ್ಗೆ ಇಲಾಖೆಗೆ ಮೃದುಧೋರಣೆ ಯಿದೆ. ಇವರು ಸೆರೆ ಸಿಕ್ಕಿದರೂ ಕೆಲವೇ ದಿನಗಳಲ್ಲಿ ಸಕಲ ಗೌರವದೊಂ ದಿಗೆ ಹೊರಗೆ ಬರುತ್ತಾರೆ. ಹೀಗಿರುವಾಗ ವಿಠಲ ಎನ್ನುವ ಬಡ ಹುಡುಗನ ಮೇಲೆ ದೇಶ ದ್ರೋಹದ ಆರೋಪ ಯಾಕೆ? ಇಲಾಖೆ ಇದರಿಂದ ಸಾಧಿಸುವುದೇನು? ನಿಜವಾದ ನಕ್ಸಲರನ್ನು ಹಿಡಿಯಲು ತಾಕತ್ತಿ ಲ್ಲದ ಇಲಾಖೆಯಿಂದ ಇನ್ನೇನು ನಿರೀಕ್ಷಿ ಸಲು ಸಾಧ್ಯ?
 ಹೆಚ್.ಎಸ್., ಬೆಳ್ತಂಗಡಿ

page1

Posted by JAYAKIRANA Kirana on | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...

page5

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)