page1

Posted by JAYAKIRANA Kirana on Sunday, 15 April 2012 | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...


page5

Posted by JAYAKIRANA Kirana on | 0 comments | Leave a comment...


page6

Posted by JAYAKIRANA Kirana on | 0 comments | Leave a comment...


page1

Posted by JAYAKIRANA Kirana on | 0 comments | Leave a comment...


page2

Posted by JAYAKIRANA Kirana on | 0 comments | Leave a comment...


page3

Posted by JAYAKIRANA Kirana on | 0 comments | Leave a comment...


page4

Posted by JAYAKIRANA Kirana on | 0 comments | Leave a comment...


page1

Posted by JAYAKIRANA Kirana on | 0 comments | Leave a comment...


ಮೆಹನಾಝ್ ಸಾವಿನ ವಿರುದ್ಧ ಕಾನೂನು ಹೋರಾಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಣಾಜೆ ಸಮೀಪದ ನಡುಪದವು ಪಿ.ಎ. ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿ ಯುತ್ತಿದ್ದ ವಿದ್ಯಾರ್ಥಿನಿ ಮೆಹನಾಝ್ ಸಾವಿಗೆ ಕಾಲೇಜಿನ ಆಡಳಿತ ಹಾಗೂ ಕಾರ್ಯನಿರ್ವಹಣಾ ವ್ಯವಸ್ಥೆಯೇ ಕಾರಣ ಎಂದು ಆರೋಪಿಸಿರುವ ಆಕೆಯ ತಂದೆ ಮಹಮ್ಮದ್ ಆಲಿ ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಮೆಹನಾಝ್ ಸೌಮ್ಯ ಸ್ವಭಾವದವಳಾಗಿದ್ದರೂ, ಆತ್ಮಹತ್ಯೆ ಮಾಡುವಷ್ಟು ಪುಕ್ಕಲು ಸ್ವಭಾವ ಹೊಂದಿರಲಿಲ್ಲ. ಎ.೫ರಿಂದ೮ರವರೆಗೆ ಕಾಲೇಜಿಗೆ ರಜೆಯಿದ್ದ ಕಾರಣ ಹಾಸ್ಟೆಲ್‌ನಲ್ಲಿ ಒಬ್ಬಳೇ ಇರಲು ಸಾಧ್ಯ ವಿಲ್ಲ ಎಂದು ತನಗೆ ಕರೆ ಮಾಡಿ ಅನುಮತಿಯ ಮೇರೆಗೆ ಗೆಳತಿಯ ಮನೆಗೆ ಹೋಗಿದ್ದಳು. ಎ.೯ರಂದು ತರಗತಿಗೆ ಹಾಜರಾಗಿದ್ದು ಅದೇ ದಿನ ಸಂಜೆ ಕ್ಯಾಂಪಸ್ ನಿರ್ದೇಶಕ ಉದಯನ್ ೫ರಿಂದ ೯ಗಂಟೆಯವರೆಗೆ ಬೆದರಿಸಿ ಚಿತ್ರಹಿಂಸೆ ನೀಡಿದ್ದಲ್ಲದೆ, ಮರುದಿನ ಫಾರೂಕ್ ಜೊತೆ ಸೇರಿ ಬೆಳಗ್ಗೆ ೧೧ರಿಂದ೧.೦೦ ಗಂಟೆಯವರೆಗೆ ವಿಚಾರಣೆಯ ನೆಪದಲ್ಲಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ತನ್ನ ಮಗಳ ಮೇಲೆ ಕಾಲೇಜಿನ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆಯಾಗಲೀ, ಅಶಿಸ್ತು ಪ್ರದರ್ಶಿಸಿದ ಬಗ್ಗೆಯಾಗಲೀ ದೂರು ಇರಲಿಲ್ಲ. ಈ ಬಗ್ಗೆ ಮನೆಯವರಿಗೂ ಯಾವುದೇ ಮಾಹಿತಿ ನೀಡದೆ ತಡರಾತ್ರಿಯವರೆಗೆ ಒಬ್ಬಳನ್ನೇ ವಿಚಾರಿಸುವ ನೆಪದಲ್ಲಿ ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ ಮಗಳು ಆತ್ಮಹತ್ಯೆ ಮಾಡಿದ ದಿನ ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಆಡಳಿತ ಮಂಡಳಿಯವರು ಆಕೆಯ ಕೋಣೆಯನ್ನು ಪ್ರವೇಶಿಸಿ ಅಲ್ಲಿದ್ದ ಲ್ಯಾಪ್‌ಟಾಪ್, ಡೈರಿ, ಮೊಬೈಲ್ ಹಾಗೂ ಇತರ ಕೆಲವು ವಸ್ತುಗಳನ್ನು ತೆಗೆದಿಟ್ಟಿದ್ದು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿರುವ ಮಹಮ್ಮದ್ ಆಲಿ, ಈ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ, ಮಾನವ ಹಕ್ಕು ಆಯೋಗ, ಮುಖ್ಯಮಂತ್ರಿ, ಗೃಹಮಂತ್ರಿ, ಶಿಕ್ಷಣ ಮಂತ್ರಿ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ದೂರು ನೀಡುವುದಲ್ಲದೆ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಬಸ್-ಜೀಪ್ ಡಿಕ್ಕಿ: ಚಾಲಕ ಮೃತ್ಯು

Posted by JAYAKIRANA Kirana on | 0 comments | Leave a comment...

ಸುಳ್ಯ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಯಿನಾಡು ಫಾರೆಸ್ಟ್ ಡಿಪೋದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಖಾಸಗಿ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಜೀಪು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್‌ಗೆ ಮಡಿಕೇರಿ ಕಡೆಗೆ ಹೋಗುತ್ತಿದ್ದ ಜೀಪ್ ಶನಿವಾರ ಮಧ್ಯಾಹ್ನ ಎರಡು ಗಂಟೆಗೆ ಡಿಕ್ಕಿ ಹೊಡೆದಿದೆ. ಜೀಪ್ ನಜ್ಜುಗುಜ್ಜಾಗಿದ್ದು, ಚಾಲಕ ಕಣ್ಣಾನೂರಿನ ಇರಿಟ್ಟಿ ನಿವಾಸಿ ಕುಂಞಲಿ(೫೦) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅವರ ಎರಡನೇ ಪತ್ನಿ ನೆಸೀಮಾ(೪೫) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿನಿಮಾ ನಟಿಯೊಂದಿಗೆ ರಾಜಕಾರಣಿಗಳ ರಾಸಲೀಲೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಸಿನಿಮಾ ತಾರೆಯೊಂದಿಗೆ ಆಂಧ್ರದ ರಾಜಕಾರಣಿಗಳು ನಡೆಸಿದ ರಾಸಲೀಲೆಯ ಚಿತ್ರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಇಬ್ಬರು ಲೋಕ ಸಭಾ ಸದಸ್ಯರು, ೧೬ ಮಂದಿ ಶಾಸಕರು ಮತ್ತು ಮೂವರು ರಾಜಕಾರಣಿಗಳ ಪುತ್ರರು ಚಿತ್ರನಟಿಯೊಂದಿಗೆ ನಡೆಸಿದ ರಾಸಲೀಲೆಯ ಸಿಡಿಗಳು ಈಗ ಆಂಧ್ರದ ಗುಂಟೂರಿನ ಪೊಲೀಸರ ಕೈಗೆ ಲಭಿಸಿದೆ. ಚಿತ್ರನಟಿ ತಾರಾ ಚೌಧರಿ ಎಂಬಾಕೆ ತನ್ನ ಮನೆಯಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ತೊಡಗಿರುವುದು ಪೊಲೀಸರು ಪತ್ತೆ  ಹಚ್ಚಿದ ಸಿ.ಡಿಯಲ್ಲಿ ಬಹಿರಂಗಗೊಂಡಿದೆ.
ಪ್ರಕರಣದ ಸಾರಾಂಶ
ತಾರಾ ಚೌಧರಿ ಆಂಧ್ರದ ಗುಂಟೂರಿನ ನಿವಾಸಿ. ಈಕೆ ಸಿನಿಮಾ ನಟಿಯಾಗಬೇಕೆಂದು ಸಿನಿಮಾರಂಗ ಪ್ರವೇಶಿಸುತ್ತಾಳೆ. ಅವಕಾಶಕ್ಕಾಗಿ ಈಕೆ ಸಿನಿಮಾ ನಟ, ನಿರ್ದೇಶಕ, ನಿರ್ಮಾ ಪಕರೊಂದಿಗೆ ಸಲುಗೆಯಿಂದ ಬೆರೆ ಯುತ್ತಾಳೆ. ಆಕೆಗೆ ದೊರೆತ ಮೂರ‍್ನಾ ಲ್ಕು ಸಿನಿಮಾದಲ್ಲಿ ಹೇಳಿಕೊಳ್ಳುವಂತಹ ಪಾತ್ರ ದೊರೆಯದೇ ಇದ್ದಾಗ ನಿರಾಶ ಳಾಗುತ್ತಾಳೆ. ಐಷಾರಾಮಿ ಬದುಕಿನ ಕನಸು ಹೊತ್ತ ಆಕೆಗೆ ದಿಡೀರನೆ ಶ್ರೀಮಂತಳಾಗಬೇಕೆಂಬ ಆಸೆ. ಹೀಗಾಗಿ ಆಕೆ ಮೈಮಾರುವ ದಂಧೆ ಯಲ್ಲಿ ತೊಡಗಿಕೊಳ್ಳುತ್ತಾಳೆ. ರಾಜ ಕಾರಣಿಗಳನ್ನು ಮನೆಗೆ ಆಹ್ವಾನಿಸಿ ತನ್ನ ಮೈಮಾಟದಿಂದ ಅವರನ್ನು ಬೆರಗು ಗೊಳಿಸಿ ಹಣವನ್ನು ಸುಲಭವಾಗಿ ದೋಚಲಾರಂಭಿಸುತ್ತಾಳೆ.
ಬಾಡಿಗೆ  ಮನೆಯಲ್ಲಿದ್ದ ಆಕೆ ಸ್ವಂತ ಮನೆಗೆ ಶಿಪ್ಟಾಗುತ್ತಾಳೆ. ಮನೆಗೆ ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಸಿ ರಾಜ ಕಾರಣಿಗಳಿಗೆ , ಅಧಿಕಾರಿಗಳಿಗೆ ಗೊತ್ತಾ ಗದೇ ಅವರ ಬೆತ್ತಲೆ ಚಿತ್ರಗಳನ್ನು ಸೆರೆ ಹಿಡಿಯುತ್ತಾಳೆ. ಸೆರೆ ಹಿಡಿದ ಚಿತ್ರಣ ಗಳಿಂದ ರಾಜಕಾರಣಿಗಳನ್ನು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾಳೆ.
ಗುಂಟೂರು ಸಂಸದ ರಾಯ ಪಾಟೀಲ್ ಶಾಂಬಾ ಶಿವರಾವ್ ಮತ್ತು ಆಂಧ್ರ ಸರಕಾರದ ಕೃಷಿ ಸಚಿವ ಲಕ್ಷ್ಮೀ ನಾರಾಯಣ ಮತ್ತು ಇತರ ಶಾಸಕರು ಈಕೆಯ ರಾಸಲೀಲೆಗೆ ಬಲಿಯಾಗಿ ಪ್ರಕರಣದಿಂದ ಹೊರಬರಲು ಹೆಣ ಗಾಡುತ್ತಿದ್ದಾರೆ. ಇತ್ತೀಚೆಗೆ ಪೊಲೀ ಸರು ತಾರಾ ಚೌಧರಿಯ ಮನೆಗೆ ದಾಳಿ ನಡೆಸಿ ಆಕೆಯನ್ನು ಬಂಧಿಸಿ ರಾಸಲೀಲೆಯ ಸಿಡಿಗಳನ್ನು ವಶಪಡಿ ಸಿದ ಸಂದರ್ಭದಲ್ಲಿ ಈಕೆ ಎಲ್ಲವನ್ನು ಬಹಿರಂಗಪಡಿಸಿದ್ದಾಳೆ. 
ಈಕೆ ರಾಯಪಾಟೀಲ್ ಶಾಂಬಾ ಶಿವರಾವ್‌ಗೆ ೨೫ಲಕ್ಷ ರೂ. ನೀಡು ವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದು, ಆ ಸಂದರ್ಭದಲ್ಲಿ ಪಾಟೀಲ್ ಈಕೆಯಲ್ಲಿ  ಕೃಷಿ ಸಚಿವ ಲಕ್ಷ್ಮೀನಾರಾಯಣರ ರಾಜಕೀಯ ಇಮೇಜ್ ಹಾಳು ಮಾಡಿದರೆ ಒಂದು ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದು, ಈ ಎಲ್ಲಾ ವಿಚಾರಗಳು ಈಗ ಬೆಳಕಿಗೆ ಬಂದಿದೆ.
ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಈಕೆಯ ಮನೆಯೇ ಅಡ್ಡೆಯಾಗಿತ್ತು. ಶಾಂಬಾ ಶಿವರಾವ್, ಲಕ್ಷ್ಮೀನಾರಾಯಣ ಮತ್ತು ಈಕೆ ಗುಂಟೂರು ಜಿಲ್ಲೆಯ ವರಾಗಿದ್ದಾರೆ. ತಾರಾ ಚೌಧರಿಯೊಂದಿಗೆ ರಾಜಕಾರಣಿಗಳು ಮತ್ತು ಅಧಿಕಾರಿ ಗಳು ನಡೆಸಿದ ರಾಸಲೀಲೆ ಈಗ ಆಂಧ್ರದಲ್ಲಿ ಕೋಲಾಹಲ ಎಬ್ಬಿಸಿದೆ. ಗುಂಟೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಚಲನವನ್ನುಂಟು ಮಾಡಿದೆ.
ಈ ಪ್ರಕರಣದಿಂದಾಗಿ ಶಾಂಬಾಶಿವರಾವ್ ಮತ್ತು ಲಕ್ಷ್ಮೀನಾರಾಯಣ ಬೆಂಬಲಿಗರ ಮಧ್ಯೆ ಘರ್ಷಣೆಯೂ ನಡೆದಿದೆ.
ಮಾರ್ಚ್೩೧ ರಂದು ತಾರಾಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಕೆಗೆ ಎ. ೨೮ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆಕೆಯನ್ನು ಅಲ್ಲಿಯ ಪೊಲೀಸರು ಬಂಧಿಸದೇ ಇರುತ್ತಿದ್ದರೆ ಆಕೆ ಬೆಂಗಳೂರಿಗೆ ಪಲಾಯನಗೈಯ್ಯಲು ಸಿದ್ಧತೆ ನಡೆಸಿದ್ದಳು ಎನ್ನಲಾಗಿದೆ.

ಹತ್ತು ದಿನಗಳಿಂದ ಹೊತ್ತಿ ಉರಿಯುತ್ತಿದೆ ಕಸದ ರಾಶಿ

Posted by JAYAKIRANA Kirana on | 0 comments | Leave a comment...

ಇದು ಮನಪಾ ಯೋಗ್ಯತೆಗೊಂದು ಸಾಕ್ಷಿ
ಮಂಗಳೂರು: ಕಳೆದ ಹತ್ತು ದಿನ ಗಳಿಂದ ಮಂಗಳೂರಿನ ಜನನಿಬಿಡ ಪ್ರದೇಶ ಎನಿಸಿರುವ ಸರ್ವೀಸ್ ಬಸ್ ತಂಗುದಾಣದ ಬಳಿ ಕಸದ ತೊಟ್ಟಿ ತುಂಬಿ ತುಳುಕುತ್ತಿದ್ದು ರಸ್ತೆಯಲ್ಲೂ ಕಸ ಹರಿದಾಡುತ್ತಿದೆ. ಆದರೂ ಇದನ್ನು ವಿಲೇವಾರಿ ಮಾಡದೆ ಅಲ್ಲೇ ಬೆಂಕಿ ಹಚ್ಚಲಾಗಿದ್ದು ಸಾರ್ವಜನಿ ಕರಿಗೆ ಕಿರಿಕಿರಿಯನ್ನುಂಟು ಮಾಡು ತ್ತಿದೆ.
ಮುಖ್ಯಮಂತ್ರಿ, ನಗರಾಭಿವೃದ್ಧಿ ಮಂತ್ರಿಯ ಸಹಿತ ಮನಪಾ ಮೇಯರ್, ಅಧಿಕಾರಿಗಳೂ ಸುಂದರ ಮಂಗಳೂ ರಿನ ಸುಂದರ ಕನಸನ್ನು ಜನತೆಯ ಮುಂದಿಡುತ್ತಿದ್ದಾರೆ.
ಆದರೆ ಈ ಮಂದಿ ಇದುವರೆಗೂ ಮಂಗಳೂರಿನ ಶುಚಿತ್ವದ ಬಗ್ಗೆ ಗಮನಿಸಲು ನಗರದಾದ್ಯಂತ ಒಂದು ಸುತ್ತು ಬಂದಲ್ಲಿ ನಗರ ಪಾಲಿಕೆ ಆಡಳಿತಗಾರರ ನಿರ್ಲಕ್ಷ್ಯತನ ಹಾಗೂ ಅಧಿಕಾರಿಗಳ ಯೋಗ್ಯತೆ ಏನೆಂದು ಗೊತ್ತಾಗಬಹುದು ಎನ್ನುತ್ತಿದ್ದಾರೆ ಜನ.
ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಸರ್ವೀಸ್ ನಿಲ್ದಾಣದ ಬಳಿ ರಾಶಿ ಬಿದ್ದಿರುವ ಕೊಳೆತ ಕಸ ಹಾಗೂ ಹತ್ತು ದಿನಗಳಿಂದ ಉರಿಯುತ್ತಿರುವ ಬೆಂಕಿ. ಇಲ್ಲಿ ಕಸ ಹಾಕುವ ಡಬ್ಬವೇನೋ ಇದೆ. ಆದರೆ ಅದನ್ನು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡಬೇಕು ಎನ್ನುವ ಕನಿಷ್ಟ ಸೌಜನ್ಯವೂ ಅಧಿಕಾರಿಗಿಲ್ಲದಂತೆ ತೋರುತ್ತಿದೆ. ಪ್ರಾಣಿಗಳಿಗೂ ಬೇಡದ ವಸ್ತುಗಳು ಇಲ್ಲಿ ಸಂಗ್ರಹವಾಗಿದ್ದು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಅಲ್ಲದೆ ದುರ್ವಾಸನೆಯೂ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ದುಸ್ಥಿತಿ     ಇಲ್ಲಿದೆ. ಆದರೆ ಇದೆಲ್ಲವನ್ನು ಪ್ರತೀದಿನ ವಿಲೇವಾರಿ ಮಾಡಿ ಸ್ವಚ್ಛಗೊಳಿಸುವ ಬದಲು ಪ್ರತಿದಿನ ಬೆಳಗ್ಗೆಯೇ ಯಾರೋ ಪುಣ್ಯಾತ್ಮರು ಬೆಂಕಿ ಕೊಟ್ಟು ಹೋಗುತ್ತಿರುವ ಕಾರಣ ದಿನವಿಡೀ ಕಸದ ರಾಶಿ ಉರಿಯುತ್ತಲೇ ಇರುತ್ತದೆ. ಇದರ ಹೊಗೆಯೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ. ಕಸದ ರಾಶಿಯ ಬಳಿಯೇ ಒಣಮೀನಿನ ಮಾರುಕಟ್ಟೆ, ಗುಜರಿ ಹಾಗೂ ಇತರ ಅಂಗಡಿಗಳಿವೆ. ಅವರೂ ಬೆಂಕಿಯಿಂದಾಗಿ ಹೆದರಿಕೊಂಡೇ ದಿನದೂಡುತ್ತಿದ್ದಾರೆ. ಇನ್ನಾದರೂ ಪಾಲಿಕೆಯ ಅಧಿಕಾರಿಗಳು ಮತ್ತು ಆಡಳಿತಗಾರರು ಶುಚಿತ್ವದ ಗುತ್ತಿಗೆದಾರರ ಕಿವಿಹಿಂಡಿ ನಗರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಲಿ ಎನ್ನುವುದು ಸಾರ್ವಜನಿ ಕರ ಆಶಯವಾಗಿದೆ.

ಎ.೧೭ರ ಬಿಜೆಪಿ ಪ್ರತಿಭಟನೆ: ಶಾಸಕರ ರಾಜಕೀಯ ಪಿತೂರಿ

Posted by JAYAKIRANA Kirana on | 0 comments | Leave a comment...

ತೆಂಕನಿಡಿಯೂರು ಗ್ರಾ.ಪಂ. ಆರೋಪ
ಉಡುಪಿ: ತೆಂಕನಿಡಿಯೂರು ಗ್ರಾ. ಪಂ.ಗೆ ನೀರು ಸರಬರಾಜು ಮಾಡು ವುದನ್ನು ಕಡಿತಗೊಳಿಸಿದ  ಉಡುಪಿ ನಗರಸಭೆ ಕ್ರಮವನ್ನು ಖಂಡಿಸಿ ನಗರಸಭೆ ಮುಂದೆ ಜನರ ಪರವಾಗಿ ತೆಂಕನಿಡಿಯೂರು ಗ್ರಾ.ಪಂ. ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ತೆಂಕನಿಡಿಯೂರು ಗ್ರಾ.ಪಂ. ಮುಂದೆ ಎ.೧೭ರಂದು ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ. ಇದೊಂದು ರಾಜಕೀಯ ಪಿತೂರಿ ಪ್ರತಿಭಟನೆ ಯಾಗಿದ್ದು, ಇದು ಇದೇ ರೀತಿ ಮುಂದುವರಿದರೆ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತೆಂಕನಿಡಿಯೂರು ಗ್ರಾ.ಪಂ. ಆಡಳಿತ ಮುನ್ನೆಚ್ಚರಿಕೆ ನೀಡಿದೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತೆಂಕನಿಡಿಯೂರು ಗ್ರಾ.ಪಂ.ಅಧ್ಯಕ್ಷ ಯತೀಶ್ ಕರ್ಕೇರ, ಸದಸ್ಯರಾದ ಪ್ರಖ್ಯಾತ್ ಶೆಟ್ಟಿ ಹಾಗೂ ಕೃಷ್ಣ ಅಮೀನ್ ಅವರು ನಗರಸಭೆ ಮತ್ತು ಶಾಸಕ ರಘುಪತಿ ಭಟ್ ಅವರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಕ್ಷೇತ್ರದ ಜನರಿಗೆ ನೀರಿನಂತಹ ಮೂಲಭೂತ ಸೌಲಭ್ಯವನ್ನು ಒದಗಿಸಿ ಕೊಡಬೇಕಾದದ್ದು ಶಾಸಕರ ಜವಾಬ್ದಾರಿ ಮತ್ತು ಕರ್ತವ್ಯ. ಇದನ್ನು ಶಾಸಕರು ಇದೀಗ ಮರೆತಿದ್ದಾರೆ. ನಗರಸಭೆ ನೀರು ಸರಬರಾಜು ಸ್ಥಗಿತಗೊಳಿಸಿದ ಲಕ್ಷ್ಮೀ ನಗರಕ್ಕೆ ಇದೀಗ ತೆಂಕನಿಡಿಯೂರು ಗ್ರಾ.ಪಂ. ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆಯಂತೆ ದಿನಕ್ಕೆರಡು ಗಂಟೆ ಕಾಲ ಟ್ಯಾಂಕರ್‌ನಲ್ಲಿ ನೀರು ವಿತರಿಸುತ್ತಿದೆ. ಇದನ್ನು ಶಾಸಕರಿಗೆ ನೋಡಲಾಗುತ್ತಿಲ್ಲ ಎಂದು ಗ್ರಾ.ಪಂ. ಆಡಳಿತಗಾರರು ಟೀಕಿಸಿದ್ದಾರೆ.
ರಾಜ್ಯ ಸರಕಾರದ ಜೊತೆ ಒಡಂ ಬಡಿಕೆ ಮಾಡಿದ ಪ್ರಕಾರ ಗ್ರಾ.ಪಂ.ಗೆ ನಗರಸಭೆ ನೀರು ಸರಬರಾಜು ಮಾಡಿದೆ.

ಪೊಲೀಸ್ ಅಧಿಕಾರಿಗೆ ದಲಿತರ ಧಮ್ಕಿ

Posted by JAYAKIRANA Kirana on | 0 comments | Leave a comment...

ನಮ್ಮನ್ನು ಹೋಗಿ ಎನ್ನಲು ನೀವ್ಯಾರು..? 
ಬಂಟ್ವಾಳ: ಒಂದೆಡೆ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್. ಅಂಬೇಡ್ಕರ್ ೧೨೧ನೇ ಜನ್ಮ ಜಯಂತಿ! ಇನ್ನೊಂದೆಡೆ ಭೂ ವಂಚಿತ ದಲಿತರ ಬಹಿಷ್ಕಾರ! ಇವೆರಡು ನಡೆದದ್ದು ಒಂದೇ ವೇದಿಕೆಯಲ್ಲಿ! ರಾಜ್ಯ ಸರ್ಕಾರದ ಭೂ ಮಂಜೂರಾತಿ ನಿಯಮಗಳ ತಿದ್ದುಪಡಿಗೆ ಆಗ್ರಹಿಸಿದ ದಲಿತ ಸಮುದಾಯದ ಕೆಲವು ಮುಖಂಡರ ಪ್ರತಿಭಟನೆ ನಡುವೆಯೂ ತಾಲೂಕಾಡಳಿತ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ ವಿಲಕ್ಷಣ ಪ್ರಸಂಗ ನಿನ್ನೆ ಬಂಟ್ವಾಳದಲ್ಲಿ ನಡೆಯಿತು.
ಇಲ್ಲಿನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯವರು ಅಂಬೇಡ್ಕರ್ ದಿನಾಚರಣೆಗೆ ನಿನ್ನೆ ಬೆಳಿಗ್ಗೆ ಸಕಲ ಸಿದ್ಧತೆಯನ್ನು ಕೈಗೊಂಡಿದ್ದರು. ಸಭಾಧ್ಯಕ್ಷರಾದ ಶಾಸಕ ಬಿ.ರಮಾನಾಥ ರೈ, ಮುಖ್ಯ ಅತಿಥಿಗಳಾದ ಶೈಲಜಾ ಭಟ್ ಕೆ.ಟಿ., ತಾ.ಪಂ.ಅಧ್ಯಕ್ಷೆ ಶೈಲಜಾ ಪಿ.ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಅಮ್ಟೂರು, ಸ್ಥಾಯಿ ಸಮಿತಿ ಅಧ್ಯಕ್ಷ ಮಾದವ ಮಾವೆ, ಜಿ.ಪಂ.ಸದಸ್ಯರಾದ ಪ್ರಕಾಶ್ ಶೆಟ್ಟಿ, ಚೆನ್ನಪ್ಪ ಕೋಟ್ಯಾನ್, ಎಂ.ಎಸ್.ಮಹಮ್ಮದ್, ತಹಶೀಲ್ದಾರ್ ಆನಂದ ನಾಯಕ್, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ವಿಶ್ವನಾಥ್ ಪೂಜಾರಿ, ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ವೇದಿಕೆಯಲ್ಲಿ ಕುಳಿತಿದ್ದರು. ಸಭಾಂಗಣದಲ್ಲೂ ಜನ ಆಸೀನವಾಗಿದ್ದರು.
ಕಾರ್ಯಕ್ರಮ ಆರಂಭಗೊಳ್ಳಬೇಕೆನ್ನುವಷ್ಟರಲ್ಲಿ ಸಭಾಂಗಣಕ್ಕೆ ನುಗ್ಗಿದ ದಲಿತ ಮುಖಂಡರು ಸರ್ಕಾರ ಪ್ರಾಯೋಜಿತ ಅಂಬೇಡ್ಕರ್ ಜಯಂತಿ ಆಚರಿಸಬಾರದಾಗಿ ತಾಕೀತು ಮಾಡಿದ್ದರು. ಶಾಸಕರು, ಜಿ.ಪಂ. ಅಧ್ಯಕ್ಷರು ದಲಿತ ಮುಖಂಡರನ್ನು ಮನವೊಲಿಸಲು ಯತ್ನಿಸಿದ್ದರೂ, ಅವರು ಸಮಾಧಾನಗೊಂಡಿರಲಿಲ್ಲ. ಈ ಸಂದರ್ಭ ಎರಡೂ ಕಡೆಯವರಲ್ಲಿ ಮಾತಿನ ಸಂಘರ್ಷ ಬೆಳೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಬಂದ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಅವರ ಸೂಚನೆಗೂ ಜಗ್ಗದ ಸಂಘಟಕರು ವೇದಿಕೆಯ ಮುಂಭಾಗ ನಿಂತು ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಸಂಘಟಕರ ವರ್ತನೆಯಿಂದ ಆಕ್ರೋಶಿತರಾದ ಅನಿಲ್ ಕುಲಕರ್ಣಿ ಸಭಾಂಗಣದಿಂದ ಹೊರ ನಡೆಯುವಂತೆ ಸೂಚಿಸಿದಾಗ, ನಾವೇನು ನಿಮ್ಮ ಮನೆಗೆ ಬಂದಿಲ್ಲ. ನಮ್ಮನ್ನು ಹೋಗಿ ಎನ್ನಲು ನೀವು ಯಾರು? ಇದು ನಮ್ಮ ಕಚೇರಿ. ನಾವು ನಮ್ಮ ಹಕ್ಕುಗಳನ್ನು ಪ್ರಶ್ನಿಸುತ್ತಿದ್ದೇವೆ ಎಂದು ಅಕ್ಷರಶಃ ಧಮ್ಕಿ ಹಾಕಿದರು. ಸಂಘಟಕರನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳೂ ವಿಫಲವಾದರು. ಇದೇ ವೇಳೆ ಅಧಿಕ ಪ್ರಸಂಗ ಮಾತನಾಡಿದ ತಾ.ಪಂ. ಉಪಾಧ್ಯಕ್ಷರನ್ನು ಸಂಘಟಕರು ತರಾಟೆಗೆ ತೆಗೆದರು.
ವೇದಿಕೆಯ ಮುಂಭಾಗ ನೆಲದಲ್ಲಿ ಕುಳಿತ ದಲಿತ ಮುಖಂಡರು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಮಾನಕೆಟ್ಟ ಸರ್ಕಾರಕ್ಕೆ ನೀತಿಕೆಟ್ಟ ಮುಖ್ಯಮಂತ್ರಿ, ದಲಿತ ವಿರೋಧ ಸರ್ಕಾರ, ಅಂಬೇಡ್ಕರ್ ಜಯಂತಿ ಆಚರಿಸುವ ನೈತಿಕತೆ ಇಲ್ಲದ ಸರ್ಕಾರ, ದಲಿತ ಜಮೀನನ್ನು ವಂಚಿಸಿದ ಸರ್ಕಾರ...ಎಂದೆಲ್ಲಾ ಘೋಷಣೆಗಳು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳನ್ನು ಕಸಿವಿಸಿಗೊಳಿಸಿತು. ಪ್ರಮುಖರಾದ ಭಾನುಚಂದ್ರ ಕೃಷ್ಣಾಪುರ, ಹೊನ್ನಪ್ಪ ಕುಂದರ್, ಜನಾರ್ದsನ ಚೆಂಡ್ತಿಮಾರ್, ಕೇಶವ ನಾಕ್, ಚಂದ್ರಶೇಖರ್ ವೀರಕಂಭ, ಜನಾರ್ದನ ಬೋಳಂತೂರು, ಬಿ.ಕೆ.ಸೇಸಪ್ಪ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಧಿಕ್ಕಾರ ಘೋಷಣೆಗಳಿಗೂ ಮಣಿಯದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾರೆ. ವೇದಿಕೆಯಲ್ಲಿದ್ದ ಎಲ್ಲರ ಮುಖದಲ್ಲೂ ಆತಂಕದ ಛಾಯೆ ಎದ್ದು ಕಾಣುತ್ತಿದ್ದರೆ. ಶಾಸಕ ರೈ ಮಾತ್ರ ಹಸನ್ಮುಖಿಯಾಗಿ ಕುಳಿತಿದ್ದರು. ಸಂಘಟಕರನ್ನು ಶಾಸಕರನ್ನು ತಗಾದೆ ತೆಗೆದಿರಲಿಲ್ಲ. ಸಂಘಟಕರ ಪ್ರತಿಭಟನೆಗೆ ಸಭಾಂಗಣದಲ್ಲಿದ್ದ ಕೆಲವು ದಲಿತರು ಅಪಸ್ವರ ಎತ್ತಿದರೆ, ಇನ್ನು ಕೆಲವರು ಹಾಸ್ಯಸ್ಪದವಾಗಿ ಕಂಡರು.

ಸೆಝ್ ತ್ಯಾಜ್ಯ ಸಮುದ್ರಕ್ಕೆ: ಮೀನುಗಾರರ ಮಾತುಕತೆ ವಿಫಲ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಎಸ್‌ಝಡ್‌ನ ಸಂಸ್ಕರಿತ ನೀರು ಸಮುದ್ರಕ್ಕೆ ಬಿಡುವ ವಿಚಾರದಲ್ಲಿ ಎದ್ದಿರುವ ವಿವಾದ ಹಾಗೂ ಮೀನುಗಾರರ ವಿರೋಧದ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿನ್ನೆ ನಡೆಸಲಾದ ವಿಶೇಷ ಸಭೆಯಲ್ಲಿ ಸೆಝ್ ಅಧಿಕಾರಿ ಗಳು ಮೀನುಗಾರರ ಬೇಡಿಕೆ ಈಡೇರಿ ಸಲು ನಿರಾಕರಿಸಿದ್ದರಿಂದ ಸಭೆ ವಿಫಲ ವಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಕೃಷ್ಣ ಜೆ. ಪಾಲೇಮಾರರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೀನುಗಾರ ನಾಯ ಕರು ಹಾಗೂ ಸೆಝ್ ಅಧಿಕಾರಿಗಳು ಮಾತುಕತೆ ನಡೆಸಿದರು.
ನಾಡದೋಣಿ ಮೀನುಗಾರರಿಗೆ ಶಾಶ್ವತ ಪರಿಹಾರ ಒದಗಿಸಬೇಕು ಇಲ್ಲವೆ ನಾಡದೋಣಿಗಳನ್ನು ಯಾಂತ್ರಿಕೃತ ದೋಣಿಗಳಾಗಿ ಪರಿವರ್ತಿಸಲು ನೆರವು ನೀಡಬೇಕು ಎಂಬ ಬೇಡಿಕೆಯನ್ನು ಮೀನುಗಾರರ ಒಕ್ಕೂಟ ಮುಂದಿಟ್ಟಿತು. ಮೀನುಗಾರರ ಬೇಡಿಕೆಯನ್ನು ಯಥಾ ಸ್ಥಿತಿಯಲ್ಲಿ ಈಡೇರಿಸುವುದು ಕಷ್ಟಸಾಧ್ಯ ಎಂದು ಸೆಝ್ ಅಧಿಕಾರಿಗಳು ಹೇಳಿದರು.
ಸೆಝ್‌ನವರ ತ್ಯಾಜ್ಯ ನೀರಿನಿಂದ ಸಮುದ್ರ ಕಲುಶಿತವಾಗುತ್ತಿದೆ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊ ಳ್ಳಲು ಸೆಝ್‌ನವರು ಕ್ರಮ ಕೈಗೊಳ್ಳಬೇಕು ಎಂದರು.
ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಬಿ.ಕೆ. ವಾಸುದೇವ್ ಮಾತನಾಡಿ, ಕೈಗಾರಿಕೆಗಳ ಕಲುಶಿತ ನೀರಿನಿಂದ ಈಗಾಗಲೇ ಸಮುದ್ರ ಮಲೀನವಾಗಿದೆ.  ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಅವನತಿಯ ಹಾದಿ ಹಿಡಿದಿದೆ. ಗರಿಷ್ಠ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್, ಪೆಟ್ರೋಲಿಯಂ, ಹೈಡ್ರೋಕಾರ್ಬನ್, ಪಾದರಸ ಅಂಶಗಳು ಇರುವುದಾಗಿ ಅಧ್ಯಯನ ತಿಳಿಸಿದೆ. ಇದರಿಂದಾಗಿ ನಾಡದೋಣಿ ಮೀನುಗಾರರು ಮೀನಿನ ಕ್ಷಾಮ ಎದುರಿಸುವಂತಾಗಿದೆ. ಸುಮಾರು ೫೧ರಷ್ಟಿದ್ದ ಕೈರಂಪಣಿ ಘಟಕಗಳಲ್ಲಿ ಕೇವಲ ಒಂದು ಮಾತ್ರ ಉಳಿದಿದೆ. ಸೆಝ್‌ನವರ ತ್ಯಾಜ್ಯ ಸಮುದ್ರ ಸೇರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು ಎಂದರು.
ಯತೀಶ್ ಬೈಕಂಪಾಡಿ ಮೀನು ಗಾರರ ಸಂಕಷ್ಟ ವಿವರಿಸಿದರು.
ಸೆಝ್‌ನ ಮೂರು ಕಂಪೆನಿಗಳ ನೀರು ಬಿಡಲು ಪೈಪ್ ಲೈನ್ ಅಳವಡಿ ಸಲಾಗಿದೆ. ಇದಕ್ಕೆ ಪರಿಸರ ಇಲಾಖೆಯ ಅನುಮೋದನೆ ಲಭಿಸಿದೆ. ಹೊಸದಾಗಿ ನೀರು ಬಿಡುವವರು ಪ್ರತ್ಯೇಕ ಅನುಮತಿ ಪಡೆಯಬೇಕಾಗುತ್ತದೆ ಎಂದು ಸೆಝ್ ಆಡಳಿತ ನಿರ್ದೇಶಕ ರಾಜೀವ್ ಬಾಂಗಾ ವಿವರಿಸಿದರು.
ಸೆಝ್‌ನವರು ಮೀನುಗಾರರ ಬೇಡಿಕೆ ಈಡೇರಿಸಲು ಒಪ್ಪದಿದ್ದುದರಿಂದ ಸಭೆ ವಿಫಲವಾಯಿತು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)