ತುಳು ಕಲಾವಿದರು ಯಾರಿಗೇನೂ ಕಮ್ಮಿಯಿಲ್ಲ

Posted by JAYAKIRANA Kirana on Wednesday, 11 April 2012 | 0 comments | Leave a comment...

ಪಿ.ಹೆಚ್.ವಿಶ್ವನಾಥ್
 ದೇವದಾಸ್ ಕಾಪಿಕಾಡ್ ಅವರ 'ಗಂಟೇತಾಂಡ್ ತುಳು ನಾಟಕ ತೆಲಿಕೆದ ಬೊಳ್ಳಿಯ ರೂಪದಲ್ಲಿ ತುಳು ಚಿತ್ರವಾಗುತ್ತಿದೆ. ರಮೇಶ್ ಅಭಿನಯದ 'ಪಂಚಮವೇದ ಚಿತ್ರವೂ ಸೇರಿದಂತೆ ಸುಮಾರು ೩೫ ಚಿತ್ರಗಳಿಗೆ ಆಕ್ಷನ್... ಕಟ್... ಹೇಳಿರುವ ಖ್ಯಾತ ನಿರ್ದೇಶಕ ಪಿ.ಹೆಚ್.ವಿಶ್ವನಾಥ್ ಅವರು ಮೊದಲ ಬಾರಿ ತುಳು ಚಿತ್ರದ ನಿರ್ದೇಶನಕ್ಕೆ ಇಳಿದಿದ್ದಾರೆ.
ಈ ಬಗ್ಗೆ ಪತ್ರಿಕೆಯ ಜೊತೆ ಮಾತಾಡಿರುವ ವಿಶ್ವನಾಥ್ ಅವರು, 'ನನಗೆ ತೆಲಿಕೆದ ಬೊಳ್ಳಿ ಪ್ರಥಮ ತುಳು ಚಿತ್ರ. ಆದರೆ ಚಿತ್ರೀಕರಣ ಪ್ರಾರಂಭವಾದ ದಿನದಿಂದ ನನಗೆ ಹಾಗೆಂದೂ ಅನಿಸಲಿಲ್ಲ. ಕಾರಣ ಇಲ್ಲಿ ಕನ್ನಡ ಚಿತ್ರರಂಗಕ್ಕಿಂತ ಉತ್ತಮ ಕಲಾವಿದರಿದ್ದಾರೆ. ಇಲ್ಲಿನ ಕಲಾವಿದರು ಪ್ರತಿಭೆಗೆ ಸೂಕ್ತ ವೇದಿಕೆ ಹುಡುಕಾಟಕ್ಕಾಗಿ ಬೆಂಗಳೂರಿಗೆ ಹೋಗಿರುತ್ತಿದ್ದರೆ ಅಲ್ಲಿಯೂ ಮಿಂಚುತ್ತಿದ್ದರು. ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗವೂ ಇಂದು ಬೆಳಗುತ್ತಿದೆ. ಇಲ್ಲಿನ ಅನೇಕ ಕಲಾವಿದರು ನಟನೆಯಲ್ಲಿ ಪಳಗಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ತಾರಾಗಣ ಚಿತ್ರದಲ್ಲಿರುವ ಕಾರಣ ನಿರ್ದೇಶನವೇನೂ ಕಷ್ಟವೆನಿಸುತ್ತಿಲ್ಲ ಎನ್ನುತ್ತಾರೆ.
ಪಂಚಮವೇದ ಸಿನಿಮಾ ಮೂಲಕ ನಟ ರಮೇಶ್ ವೃತ್ತಿ ಬದುಕಿಗೆ ಭದ್ರ ತಳಪಾಯ ಹಾಕಿಕೊಟ್ಟ ಪಿ.ಹೆಚ್.ವಿಶ್ವನಾಥ್ ತೆಲಿಕೆದ ಬೊಳ್ಳಿ ಚಿತ್ರದ ನಿರ್ದೇಶನ ಮಾಡುತ್ತಿರುವುದು ಉತ್ತಮ ಗುಣಮಟ್ಟದ ತುಳುಚಿತ್ರವೊಂದು ಹೊರ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನಬಹುದು. ನವೀನ್ ಡಿ ಪಡೀಲ್, ದೇವದಾಸ್ ಕಾಪಿಕಾಡ್, 'ವೀರ ಮದಕರಿ ಸಿನಿಮಾದ ಖಳನಟ ಗೋಪಿನಾಥ್ ಭಟ್‌ರಂಥ ಉತ್ತಮ ಕಲಾವಿದರು ಚಿತ್ರದಲ್ಲಿರುವುದು ಚಿತ್ರದ ಬಗೆಗಿನ ಜನರ ನಿರೀಕ್ಷೆಯನ್ನು ನೂರ್ಮಡಿಗೊಳಿಸಿದೆ.
ನಾಟಕರಂಗದ ಹಿರಿಯ ಕಲಾವಿದ ಲಕ್ಷ್ಮಣ ಕುಮಾರ್ ಮಲ್ಲೂರು, ಸದಾಶಿವ ಅಮೀನ್, ರಮಾ ಬಿ.ಸಿ.ರೋಡ್, ಡಿ.ಎಸ್.ಬೋಳೂರು, ಅರವಿಂದ ಬೋಳಾರ್, ಪಾಂಡುರಂಗ, ಸತೀಶ್ ಬಂದಲೆ, ದಿನೇಶ್ ಅತ್ತಾವರ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುಜಾತ ಶಕ್ತಿನಗರ, 'ಆಯೆ ಸುಬಗೆ ಖ್ಯಾತಿಯ ಸಂದೀಪ್ ಶೆಟ್ಟಿ, ಪ್ರದೀಪ್ ಆಳ್ವ, ಪತ್ರಕರ್ತ ನರೇಂದ್ರ ಕೆರೆಕಾಡು, ಹರೀಶ್ ವಾಸು ಶೆಟ್ಟಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಚಿತ್ರದ ಭಾಗಶ: ಚಿತ್ರೀಕರಣ ವಾಮಂಜೂರು, ಮೂಲ್ಕಿ, ಖಂಡಿಗೆ ಪರಿಸರದಲ್ಲಿ ಚಿತ್ರೀಕರಣಗೊಂಡಿದ್ದು, ಕೆಲವು ಹಾಡಿನ ಚಿತ್ರೀಕರಣ ಇನ್ನು ನಡೆಯಬೇಕಿದೆ. ಆಗಸ್ಟ್ ತಿಂಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ತೆರೆಯ ಮೇಲೆ ಬರಲಿದೆ.

‘ಬೊಳ್ಳಿ’ಯ ಮಲ್ಲಿ ಆಶ್ರಿತಾ

Posted by JAYAKIRANA Kirana on | 1 comments | Leave a comment...

'ನಾನು ನಿಜಜೀವನದಲ್ಲೂ ಚೆಲ್ಲಾಟ ವಾಡೋ ಹುಡುಗಿ. ಚಿತ್ರದಲ್ಲೂ ನನಗೆ ಇಂಥದ್ದೇ ರೋಲ್ ಸಿಕ್ಕಿದೆ. ಆದರೆ ಮೊದಲ ಬಾರಿಗೆ ಗ್ಲಾಮರ್ ಬಿಟ್ಟು ಚಿತ್ರಕ್ಕಾಗಿ ಲಂಗ, ದಾವಣೀಲಿ ಕಾಣಿಸಿಕೊಂಡಿದ್ದೀನಿ. ಹೀಗೆಂದು ಅಚ್ಚ ತುಳುಭಾಷೆಯಲ್ಲಿ ಮಾತಾಡಿದ್ದು ಚಿತ್ರದ ನಟಿ ಆಶ್ರಿತಾ ಶೆಟ್ಟಿ.
ಆಶ್ರಿತಾಗೆ ನಟನೆ ಅನ್ನೋದು ಹೊಸದೇನೂ ಅಲ್ಲ. ಮೂಲತ: ಶಿರ್ವದವರಾದ ಆಶ್ರಿತಾ ಹುಟ್ಟಿದ್ದು, ಬೆಳೆದಿದ್ದು ಮುಂಬೈನಲ್ಲೇ. ಅಲ್ಲಿನ ಪಾರ್ಕರ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆ ರಜಾಸಮಯದಲ್ಲಿ ನಟನೆಗೆ ಇಳಿದವರು. ಮುಂಬೈನಲ್ಲಿ ನಡೆದ 'ಫ್ರೆಶ್ ಫೇಸ್ ಕಾಂಪಿಟೇಶನ್‌ನಲ್ಲಿ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದಿರುವ ಆಶ್ರಿತಾ, ಕ್ಲೀನ್ ಆಂಡ್ ಕ್ಲಿಯರ್ ಸೌಂದರ್ಯವರ್ಧಕದ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ.
'ತೆಲಿಕೆದ ಬೊಳ್ಳಿಯಲ್ಲಿ ಮುಖ್ಯ ನಟಿ ಮಲ್ಲಿ ಪಾತ್ರವನ್ನು ಮಾಡುತ್ತಿರುವ ಆಶ್ರಿತಾಗೆ ಸಿನಿಮಾ ತನ್ನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಎನ್ನುವ ನಂಬಿಕೆಯೂ ಇದೆ. ಧನುಷ್ ಜೊತೆ ತಮಿಳು ಚಿತ್ರದಲ್ಲಿ ನಟನೆಗೆ ಆಹ್ವಾನ ಬಂದಿದ್ದು, ಈಗಾಗಲೇ ಅಡ್ವಾನ್ಸ್ ಪಡೆದಿದ್ದೂ ಆಗಿದೆ. ಪರಭಾಷೆಯತ್ತ ಹೋಗುವ ಒಲವಿದ್ದರೂ, ಅದೆಲ್ಲ 'ಬೊಳ್ಳಿ ಮುಗಿಸಿದ ಬಳಿಕ ಎನ್ನುತ್ತಾರೆ ಆಶ್ರಿತಾ. ಆಶ್ರಿತಾಗೆ ಚಿತ್ರದಲ್ಲಿ ಸಿಕ್ಕಿರುವ ಮಲ್ಲಿ ಪಾತ್ರ ಇಡೀ ಚಿತ್ರದ ಹೈಲೈಟ್. ಚಿತ್ರದುದ್ದಕ್ಕೂ ತನ್ನ ಇರುವಿಕೆಯನ್ನು ತೋರ್ಪಡಿ ಸುವ ಮಲ್ಲಿ ಅಲಿಯಾಸ್ ಆಶ್ರಿತಾ ಚಿತ್ರೀಕರಣದಲ್ಲಿ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ.

ಚಿತ್ರೀಕರಣ ಮುಗಿಸಿದ ಸೀ...ಯೂ...

Posted by JAYAKIRANA Kirana on | 1 comments | Leave a comment...

ಮಂಗಳೂರು ಸುಲ್ತಾನ್ ಬತ್ತೇರಿ ಬಳಿಯ ತಣ್ಣೀರು ಬಾವಿ ಬೀಚ್‌ನಲ್ಲಿ ಹಾಡಿನ ದೃಶ್ಯ ದೊಂದಿಗೆ ಕನ್ನಡದ ಸೀ ಯೂ ಚಿತ್ರ ಚಿತ್ರೀಕರಣ ಪೂರೈಸಿದೆ. ಬಜ್ಪೆ ಸಮೀಪದ ಕರಂಬಾರಿನ ಯುವ ನಿರ್ದೇಶಕ ದುರ್ಗ ಪಿ.ಎಸ್. ನಿರ್ದೇ ಶನದ ಚೊಚ್ಚಲ ಚಿತ್ರ ಇದಾಗಿದ್ದು, ಬೆಂಗಳೂರು, ತೀರ್ಥಹಳ್ಳಿ, ಕಿಗ್ಗ, ಆಗುಂಬೆ, ಶೃಂಗೇರಿ ಪರಿಸರದಲ್ಲಿ ಚಿತ್ರೀಕರಣಗೊಂಡಿದೆ.
ಚಿತ್ರದಲ್ಲಿ ನವನಟಿ ಅರ್ಪಣಾ ಪ್ರಭು ನಾಯಕಿಯಾಗಿದ್ದರೆ, ವೈಭವ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ದುರ್ಗ ಪಿ.ಎಸ್. ಅವರದ್ದು ಚೊಚ್ಚಲ ಚಿತ್ರವಾಗಿದ್ದರೂ ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳಿಗೆ ಸಹನಿರ್ದೇಶನ ಮಾಡಿರುವ ಅನುಭವ ಹೊಂದಿದ್ದಾರೆ. ಅನಕ್ಷರಸ್ಥೆ, ಪ್ರೀತಿ ನೀ ಹೀಗೇನಾ? ಚಿತ್ರಗಳಿಗೆ ದುಡಿದಿರುವ ಇವರು ಗಿನ್ನೆಸ್ ದಾಖಲೆಗಾಗಿ ಟೀ ಎನ್ನುವ ಚಿತ್ರವನ್ನು ತಯಾರಿಸಿದ್ದು, ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಎರಡು ಗಂಟೆ ಸಾಗುವ ಇಡೀ ಸಿನಿಮಾದಲ್ಲಿ ಒಬ್ಬನೇ ನಟ ಇರಲಿದ್ದು, ಇಡೀ ಚಿತ್ರವನ್ನು ಆಗುಂಬೆ, ಕಿಗ್ಗ ಬಳಿಯ ದಟ್ಟಾರಣ್ಯದಲ್ಲಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ. ದುರ್ಗ ಅವರು. ಇದರ ಮತ್ತೊಂದು ವಿಶೇಷವೆಂದರೆ ಇದರಲ್ಲಿ ಒಂದೇ ಡೈಲಾಗ್ ಇರಲಿದೆ. ಅದು 'ಟೀ' ಮಾತ್ರ. ತುಳುವಿನ ಕಡಲಮಗೆ ಸಿನಿಮಾದಲ್ಲೂ ಸಹನಿರ್ದೇಶಕನಾಗಿ ಕೈಯಾಡಿಸಿರುವ ದುರ್ಗ ಪಿ.ಎಸ್. ಅವರು ಈ ಚಿತ್ರ ತಮಗೆ ಬ್ರೇಕ್ ನೀಡುತ್ತದೆ ಎಂದು ನಂಬಿದ್ದಾರೆ.
ಇಬ್ಬರು ಅಂಧ ಪ್ರೇಮಿಗಳ ನಡುವೆ ಸಾಗುವ ಕಥಾವಸ್ತುವಿನಲ್ಲಿ ಇಬ್ಬರು ನತದೃಷ್ಟ ಪ್ರೇಮಿಗಳೂ ಬರುತ್ತಾರೆ. ಅಂತಿಮವಾಗಿ ಆ ಇಬ್ಬರು ಪ್ರೇಮಿ ಗಳೂ ಸಾಯುತ್ತಾರೆ. ಅವರ ಕಣ್ಣು ಗಳನ್ನು ತೆಗೆದು ಆ ಅಂಧಪ್ರೇಮಿಗಳಿಗೆ ಇಡುವುದೇ ಕಥಾಹಂದರ ಎನ್ನುತ್ತಾರೆ ದುರ್ಗ ಪಿ.ಎಸ್. ಅವರು. ಸೀಯೂ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಮಧುರ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜು ಅವರು ಕ್ಯಾಮೆರಾ ಹಿಡಿದಿದ್ದು, ೩೪ ದಿನಗಳ ಕಾಲ ಚಿತ್ರೀಕರಣವನ್ನು ನಡೆಸಲಾಗಿದೆ. ಮುಂದಿನ ಮೇ ಎರಡನೇ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ. ಚಿತ್ರದ ಧ್ವನಿಸುರುಳಿ ಈಗಾಗಲೇ ಬಿಡುಗಡೆ ಕಂಡಿದ್ದು, ಕೇಳುಗರಿಂದ ಮುಕ್ತಕಂಠದ ಮೆಚ್ಚುಗೆ ಯನ್ನೂ ಪಡೆದಿದೆ.

ಪೊಲಾರ್ಡ್ ಆರ್ಭಟಕ್ಕೆ ರಾಜಸ್ತಾನ್ ಉಡೀಸ್

Posted by JAYAKIRANA Kirana on | 0 comments | Leave a comment...

ಜಯದೊಂದಿಗೆ ಮುಂಬೈ ಅಗ್ರಸ್ಥಾನಕ್ಕೆ
ವಾಂಖೆಡೆ: ದೈತ್ಯ ಪ್ರತಿಭೆ ಕೀರೊನ್ ಪೊಲಾರ್ಡ್ ಪ್ರದರ್ಶಿಸಿದ ಸವ್ಯಸಾಚಿ ಆಟದ ನೆರವಿನಿಂದ ಇಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಮುಂಬೈ ಇಂಡಿಯನ್ಸ್ ೨೭ ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ರಾಜಸ್ತಾನ್ ಕೂಟದಲ್ಲಿ ಮೊದಲ ಸೋಲನ್ನು ಕಂಡರೆ ಗೆಲುವಿನೊಂದಿಗೆ ಮುಂಬೈ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಭಡ್ತಿ ಪಡೆದಿದೆ. ಅತ್ತ ಒವೈಸ್ ಶಾ ಪ್ರದರ್ಶಿಸಿದ ಅಬ್ಬರದ ಆಟವು ವ್ಯರ್ಥಗೊಂಡಿತು.
ನಿನ್ನೆ ಟಾಸ್ ಗೆದ್ದರೂ ಮೊದಲು ಬೌಲಿಂಗ್ ನಡೆಸುವ ನಿರ್ಧಾರ ದ್ರಾವಿಡ್ ತೆಗೆದರು. ಆದರೆ ದ್ರಾವಿಡ್ ನಿರ್ಧಾರವನ್ನು ಬೌಲರ್‌ಗಳು ಮಾತ್ರ ಸಮರ್ಥಿಸಲಿಲ್ಲ. ಕೀರೊನ್ ಪೊಲಾರ್ಡ್ ಕೇವಲ ೩೩ ಎಸೆತಗಳಲ್ಲಿ ನಾಲ್ಕು ಸಿಕ್ಸ್ ಹಾಗೂ ಆರು ಬೌಂಡರಿಗಳ ನೆರವಿನಿಂದ ೬೪ ರನ್ ಸಿಡಿಸಿದ್ದು, ಮುಂಬೈ ಇಂಡಿಯನ್ಸ್ ನಿಗದಿತ ೨೦ ಓವರ್‌ಗಳಲ್ಲಿ ೧೯೭ ರನ್‌ಗಳ ಭರ್ಜರಿ ಮೊತ್ತವನ್ನು ಪೇರಿಸುವಂತಾಯಿತು. ಗುರಿ ಬೆನ್ನತ್ತಿದ್ದ ರಾಜಸ್ತಾನ್ ಒಂದು ಹಂತದಲ್ಲಿ ಗೆಲುವಿನ ಸ್ಥಿತಿಯಲ್ಲಿದ್ದರೂ ಅಂತಿಮವಾಗಿ ೧೯.೪ ಓವರ್‌ಗಳಲ್ಲಿ ೧೭೦ ರನ್ ಗಳಿಸಲಷ್ಟೇ ಶಕ್ತವಾಯಿತು. ಮುನಾಫ್ ಹಾಗೂ ಪೊಲಾರ್ಡ್ ತಲಾ ನಾಲ್ಕು ವಿಕೆಟ್ ಪಡೆದರು.
ರಾಜಸ್ತಾನ್ ಆರಂಭದಲ್ಲಿ ಹಿನ್ನೆಡೆ ಕಂಡಿತು. ತಂಡದ ಮೊತ್ತ ಏಳು ಆಗುವಷ್ಟರಲ್ಲಿ ದ್ರಾವಿಡ್ (೩) ಹಾಗೂ ಗೊಸ್ವಾಮಿ (೦) ವಿಕೆಟ್ ಕಳಕೊಂಡರು. ಈ ವೇಳೆ ತಂಡ ಅಲ್ಪ ಮೊತ್ತಕ್ಕೆ ಸರ್ವಪತನದ ಭೀತಿಯಲ್ಲಿತ್ತು. ಆದರೆ ಮೂರನೇ ವಿಕೆಟ್‌ಗೆ ರಹಾನೆ (೪೦) ಹಾಗೂ ಒವೈಸ್ ಕೇವಲ ೯.೩ ಓವರ್‌ಗಳಲ್ಲಿ ೮೨ ರನ್ ದೋಚಿ ಆರ್‌ಆರ್‌ಗೆ ಚೇತರಿಕೆಯೊಂದಿಗೆ ಮುನ್ನಡೆ ಒದಗಿಸಿದರು. ಅದರಲ್ಲೂ ಒವೈಸ್ ಅಬ್ಬರಕ್ಕೆ ಮುಂಬೈ ಬೌಲರ್‌ಗಳ ಕಂಗಾಲಾದರು. ಆದರೆ ರಹಾನೆ ಈ ವೇಳೆ ನಿರ್ಗಮಿಸಿದರೂ ನಂತರ ಬಂದ ಮೆನೆರಿಯಾ (೨೦) ಜೊತೆ ಒವೈಸ್ ಅಬ್ಬರದ ಆಟ ಮುಂದುವರೆಸಿದರು. ಈ ಜೋಡಿ ಕೇವಲ ೧೮ ಎಸೆತಗಳಲ್ಲಿ ೪೫ ರನ್ ಪೇರಿಸಿದಾಗ ಮುಂಬೈ ಸೋಲು ನಿಶ್ಚಿತ ಎಂದೇ ಹೇಳಲಾಗಿತ್ತು. ಈ ವೇಳೆ ಒವೈಸ್ ತನ್ನ ಅರ್ಧಶತಕ ಪೂರೈಸಿದರು. ಈ ಜೋಡಿ ರಾಜಸ್ತಾನ್‌ಗೆ ಸುಲಭ ಜಯ ತರುವ ಎಲ್ಲಾ ನಿರೀಕ್ಷೆಯಿತ್ತು. ಆದರೆ ಈ ವೇಳೆ ದಾಳಿಗಿಳಿದ ಮಲಿಂಗಾ ಎಲ್ಲವನ್ನೂ ಬದಲಾಯಿಸಿದರು. ವೇಗವಾಗಿ ಮುನ್ನುಗುತ್ತಿದ್ದ ಒವೈಸ್ ಹಾಗೂ ಮೆನೆರಿಯಾ ವಿಕೆಟ್ ಪಡೆದು ಮುಂಬೈಗೆ ಮೇಲುಗೈ ಒದಗಿಸಿದರು. ಆ ವೇಳೆಗೆ ಒವೈಸ್‌ರ ೪೨ ಎಸೆತಗಳಲ್ಲಿ ತಲಾ ಐದು ಸಿಕ್ಸ್ ಹಾಗೂ ಬೌಂಡರಿ ನೆರನಿಂದ ೭೬ ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ಗೆ ಕೊನೆಬಿದ್ದಿತ್ತು. ಆ ನಂತರ ತಂಡ ಹೋರಾಟದ ಆಟ ನೀಡಲು ವಿಫಲವಾಯಿತು. ಕೂಪರ್ (೧೪) ಕೆಲಹೊತ್ತು ಅಬ್ಬರಿಸಿದರೂ ನಂತರ ಮುನಾಫ್ ಮೋಡಿಗೆ ಬಲಿಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ಪರ ಪೊಲಾರ್ಡ್ ಹಾಗೂ ರಾಯುಡು ಜೋಡಿ ನಾಲ್ಕನೇ ವಿಕೆಟ್‌ಗೆ ೮.೪ ಓವರ್‌ಗಳಲ್ಲಿ ೯೬ ರನ್ ಪೇರಿಸಿದ್ದು, ಗೆಲುವಿಗೆ ಪ್ರಮುಖ ಕಾರಣವಾಯಿತು. ವೇಗವಾಗಿ ಮುನ್ನುಗುತ್ತಿದ್ದ ಪೊಲಾರ್ಡ್‌ಗೆ ಚೌವಾನ್ ಪೆವಿಲಿಯನ್ ದಾರಿ ತೋರಿಸಿದರು. ಅಂತಿಮ ಹಂತದಲ್ಲಿ ಹರ್ಭಜನ್ ಆರು ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ಸೇರಿದ ೧೮ ರನ್ ಸಿಡಿಸಿ ಮೊತ್ತವನ್ನು ೨೦೦ರ ಸನಿಹಕ್ಕೆ ಕೊಂಡೊಯ್ದರು. ಅಮಿತ್ ಎರಡು ವಿಕೆಟ್ ಪಡೆದರು. ರಾಯುಡು (೪೭) ಅಜೇಯರಾಗುಳಿದರು.

ಇಂಡಿಯನ್ ಜಿಪಿ ಟಿಕೆಟ್ ಮಾರಾಟಕ್ಕೆ ಚಾಲನೆ

Posted by JAYAKIRANA Kirana on | 0 comments | Leave a comment...

ನೊಯ್ಡಾ: ಕಳೆದ ವರ್ಷ ಭಾರತ ಭಾರತ ಆಯೋಜಿಸಿದ್ದ ಉದ್ಘಾಟನಾ ಇಂಡಿಯನ್ ಜಿಪಿ ಭಾರೀ ಯಶಸ್ಸಿಗೆ ಕಾರಣವಾಗಿತ್ತು. ಈ ಬಾರಿಯ ಕೂಟ ಅಕ್ಟೋಬರ್ ೨೮ರಂದು ನಡೆಯಲಿದೆ. ನಿನ್ನೆ ಡೆಕ್ಕನ್ ಚಾರ್ಜರ‍್ಸ್ ನಾಯಕ ಕುಮಾರ ಸಂಗಾಕ್ಕರ ಹಾಗೂ ತಂಡದ ಇತರೆ ಸದಸ್ಯರಿಗೆ ಪೂರಕ ಪಾಸ್ ನೀಡುವ ಮೂಲಕ ಟಿಕೆಟ್ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಸಂಗಾಕ್ಕರಾಗೆ ಜೆಪಿ ಸ್ಪೋಟ್ಸ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸಮೀರ್ ಗೌರ್ ಕೂಟದ ಪಾಸ್ ನೀಡುವ ಮುಖಾಂತರ ಮಾರಾಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡೇಲ್ ಸ್ಟೇಯ್ನ್, ಜಿಪಿ ಡ್ಯುಮಿನಿ, ಪಾರ್ಥಿವ್ ಪಟೇಲ್, ಶಿಕಾರ್ ಧವಾನ್ ಹಾಗೂ ತಂಡದ ಇತರೆ ಸದಸ್ಯರು ಉಪಸ್ಥಿತರಿದ್ದರು.
ಕಳೆದ ಬಾರಿ ಟಿಕೆಟ್ ಮಾರಾಟ ತಡವಾಗಿ ಆರಂಭವಾಗಿದ್ದ ಕಾರಣ ಹೆಚ್ಚಿನವರಿಗೆ ರೇಸ್ ನೋಡುವ ಅವಕಾಶ ಲಭಿಸಿರಲಿಲ್ಲ. ಹಾಗಾಗಿ ಈ ಬಾರಿ ನಾವು ಇದಕ್ಕೆ ಬೇಗನೇ ಚಾಲನೆ ನೀಡಿದ್ದು, ಭಾರತದಲ್ಲಿ ನೆಲೆಸಿರುವ ರೇಸ್ ಅಭಿಮಾನಿಗಳಿಗೆ ಹೆಚ್ಚಿನ ಮನೋರಂಜನೆ ನೀಡಲಿದೆ ಎಂದು ಗೌರ್ ತಿಳಿಸಿದರು.

ಲಾ ಲೀಗಾದಲ್ಲಿ ನೂತನ ಇತಿಹಾಸ ಬರೆದ ಮೆಸ್ಸಿ

Posted by JAYAKIRANA Kirana on | 0 comments | Leave a comment...

ಮ್ಯಾಡ್ರಿಡ್: ವಿಶ್ವದ ಅತೀ ವೇಗದ ಕಾಲ್ಚೆಂಡು ಆಟಗಾರರಲ್ಲಿ ಒಬ್ಬನಾಗಿರುವ ಲಿಯೊನೆಲ್ ಮೆಸ್ಸಿ ಲಾ ಲೀಗಾದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ನಿನ್ನೆ ಗೆಟಾಫೆ ವಿರುದ್ಧದ ಪಂದ್ಯದಲ್ಲಿ ಬಾರ್ಸೆ ಲೊನಾ ೪-೦ ಅಂತರದ ಗೆಲುವು ಸಾಧಿ ಸಿತ್ತು. ಪಂದ್ಯದಲ್ಲಿ ಗೋಲ್ ದಾಖ ಲಿಸಿದ್ದ ಮೆಸ್ಸಿ ಈ ಮೂಲಕ ತವರಿನ ಲಾ ಲೀಗಾ ಕೂಟದ ಪ್ರಸಕ್ತ ಋತುವಿ ನಲ್ಲಿ ಒಟ್ಟು ೨೮ ಗೋಲ್ ಬಾರಿಸಿದ ಮೊದಲ ಆಟಗಾರರಾಗಿ ಹೊರಹೊಮಿ ದ್ದಾರೆ.
ಈ ಹಿಂದೆ ೧೯೫೦-೫೧ ಹಾಗೂ ೧೯೮೮-೮೯ರ ಕ್ರಮವಾದ ಅವಧಿಯಲ್ಲಿ ಅಥ್ಲಿಕ್ ಬಿಲ್ಬಾವ್‌ನ ಸ್ಟ್ರೈಕರ್ ಟೆಲ್ಮೊ ಜಾರಾ ಹಾಗೂ ಮಾಜಿ ಅಥೆಟಿಕ್ ಮ್ಯಾಡ್ರಿಡ್ ಆಟಗಾರ ಬಲ್ಟಾಜರ್ ಒಂದೇ ಋತುವಿನ ತವರಿನ ಪಂದ್ಯದಲ್ಲಿ ತಲಾ ೨೭ ಗೋಲು ಹೊಡೆದಿದ್ದು, ಈವರೆಗಿನ ಸಾಧನೆಯಾಗಿತ್ತು. ಆದರೆ ಈಗ ಸಾಧನೆಯನ್ನು ಬಾರ್ಸಿಲೊನಾದ ಮೆಸ್ಸಿ ಮುರಿದು ಹಾಕುವ ಮೂಲಕ ತಾನೇಕ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ತೋರಿಸಿಕೊಟ್ಟಿದ್ದಾರೆ. ಪ್ರಸಕ್ತ ಲಾ ಲೀಗಾ ಋತುವಿನ ಒಟ್ಟು ೩೧ ಪಂದ್ಯಗಳಲ್ಲಿ ಒಟ್ಟಾರೆಯಾಗಿ ೩೯ ಗೋಲುಗಳನ್ನು ಮೆಸ್ಸಿ ದಾಖಲಿಸಿದ್ದಾರೆ.

ಏಶ್ಯನ್ ಅರ್ಹತಾ ಬಾಕ್ಸಿಂಗ್: ಥಾಪಾ ಫೈನಲ್‌ಗೆ

Posted by JAYAKIRANA Kirana on | 0 comments | Leave a comment...

ಒಲಿಂಪಿಕ್ಸ್ ಪ್ರವೇಶಿಸಿದ ಕಿರಿಯ ಭಾರತೀಯನೆಂಬ ಖ್ಯಾತಿ
ಅಸ್ತಾನಾ (ಕಜಕಿಸ್ತಾನ್): ಹದಿ ನೆಂಟರ ಹರೆಯದ ಭಾರತದ ಖ್ಯಾತ ಬಾಕ್ಸರ್ ಶಿವ್ ಥಾಪಾ ನೂತನ ದಾಖ ಲೆಯನ್ನು ಸೃಷ್ಟಿಸಿದ್ದಾರೆ. ಇಲ್ಲಿ ನಡೆಯು ತ್ತಿರುವ ಏಶ್ಯನ್ ಅರ್ಹತಾ ಬಾಕ್ಸಿಂಗ್ ಕೂಟದಲ್ಲಿ ಥಾಪಾ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಈ ಮೂಲಕ ಕೂಟದ ಮುಂಬರುವ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಅತೀ ಕಿರಿಯ ಬಾಕ್ಸರ್ ಎಂಬ ಹಿರಿಮೆಗೆ ಥಾಮಾ ಪಾತ್ರರಾಗಿದ್ದಾರೆ.
೫೬ ಕೆ.ಜಿ ವಿಭಾಗದ ಸೆಮಿಫೈ ನಲ್‌ನಲ್ಲಿ ಜಪಾನ್‌ನ ಸತೋಷಿ ಸಿಮಿಜು ವಿರುದ್ಧ ೩೧-೧೭ರ ಅಂತರ ದಲ್ಲಿ ಜಯಸಾಧಿಸುವ ಮೂಲಕ ಥಾಪಾ ಫೈನಲ್‌ಗೆ ಪ್ರವೇಶಿಸಿದರು. ಈ ಹಿಂದೆ ೧೯ರ ಹರೆಯದ ದೇವೇಂದ್ರ ಸಿಂಗ್ ಕಳೆದ ಬಾರಿಯ ಏಶ್ಯನ್ ಚಾಂಪಿಯನ್ ಶಿಪ್‌ನಲ್ಲಿ ಲಂಡನ್ ಒಲಿಂಪಿಕ್ಸ್ ಅರ್ಹತೆ ಪಡೆದುಕೊಂಡಿದ್ದರು. ಆದರೆ ದೇವೇಂದ್ರ ಗಿಂತ ಒಂದು ವರ್ಷ ಕಿರಿಯರಾದ ಥಾಪಾ ಈ ಮೂಲಕ ಉತ್ತಮ ನಿರ್ವ ಹಣೆ ನೀಡಿ ಲಂಡನ್ ಕೂಟಕ್ಕೆ ತೇರ್ಗಡೆ ಹೊಂದಿದರು.
ಕೇವಲ ಎರಡನೇ ಬಾರಿಗೆ ಹಿರಿ ಯರ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗವಹಿಸುತ್ತಿರುವ ಅಸ್ಸಾಮ್‌ನ ಥಾಪಾ ಶ್ರೇಷ್ಠ ಸಾಧನೆ ಮಾಡಿದರು. ತನ್ನ ಮೊದಲನೇ ಕೂಟ ದಲ್ಲಿ ಚಿನ್ನದ ಪದಕ ಗೆದ್ದು ಕೊಂಡಿ ದ್ದರು. ಪ್ರಥಮ ಸುತ್ತಿನಲ್ಲಿ ೬-೭ರ ಹಿನ್ನೆಡೆ ಯಲ್ಲಿದ್ದರೂ ದ್ವಿತೀಯ ಸುತ್ತಿನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡ ಥಾಪಾ ೧೫-೬ರ ಉತ್ತಮ ಮುನ್ನಡೆ ಸಾಧಿಸಿದರು.
ಥಾಪಾ ಆಟದ ಬಗ್ಗೆ ರಾಷ್ಟ್ರೀಯ ಕೋಚ್ ಗುರ್ಬಕ್ಷ್ ಸಿಂಗ್ ಸಂದು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಥಾಪಾ ಆಡವಂತೂ ಅದ್ಭುತವಾ ಗಿತ್ತು. ಆದರೆ ಆಕ್ರಮಣದ ಪ್ರದರ್ಶನ ತೋರಿ ದ್ದರಿಂದ ಸ್ವಲ್ಪ ಅಳುಕನ್ನು ಹೊಂದಿ ದರೂ ಭೀತಿಗೊಳ ಗಾಗಿರ ಲಿಲ್ಲ ಎಂದು ಸಿಂಗ್ ತಿಳಿಸಿದರು.

ಬುದ್ಧಿಮಾಂದ್ಯ ಬಾಲಕಿಯ ನಿರಂತರ ಅತ್ಯಾಚಾರ

Posted by JAYAKIRANA Kirana on | 0 comments | Leave a comment...

ಸುಳ್ಯ: ಇಲ್ಲಿನ ಶಾಂತಿನಗರ ನಿವಾಸಿ ಯೊಬ್ಬರ ಮನೆಯಲ್ಲಿದ್ದು ಶಾಲೆಗೆ ಹೋಗು ತ್ತಿರುವ ಅವರ ಸಹೋದರಿ ಪುತ್ರಿ, ಬುದ್ಧಿ ಮಾಂದ್ಯ ಬಾಲಕಿ ಮೇಲೆ ನೆರೆಮನೆಯ ಯುವಕನೊಬ್ಬ ನಿರಂತರ ಅತ್ಯಾಚಾರ ನಡೆಸಿದ ಬಗ್ಗೆ ಬಾಲಕಿಯ ಸಹೋದರ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾನೆ.
ಕಾಸರಗೋಡು ತಾಲೂಕು ಗಾಳಿ ಮುಖದ ಈ ಬಾಲಕಿ ಶಾಲೆಗೆ ಹೋಗುವ ಉದ್ದೇಶದಿಂದ ಕೆಲವು ತಿಂಗಳಿಂದ ಶಾಂತಿನ ಗರದ ತನ್ನ ದೊಡ್ಡಮ್ಮನ ಮನೆಯಲ್ಲಿದ್ದಳು ಹಾಗೂ ಸುಳ್ಯದ ಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದಳು. ನೆರೆಮನೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ತೇಜಕುಮಾರ್(೨೨) ಎಂಬ ಯುವಕ ಈಕೆಯ ಮೇಲೆ ನಿರಂತರ ಅತ್ಯಾ ಚಾರ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಷಯ ಮನೆಯವರಿಗೆ ತಿಳಿದು ಬಾಲಕಿ ಸಹೋದರ ಪೊಲೀಸರಿಗೆ ಬುಧವಾರ ದೂರು ನೀಡಿ ದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಯುವಕ ತನ್ನ ತಪ್ಪನ್ನು ಒಪ್ಪಿ ಕೊಂಡಿದ್ದು, ಬಾಲಕಿ ಪ್ರಾಪ್ತ ವಯಸ್ಕಳಾದ ಮೇಲೆ ಅಂದರೆ ೨ ವರ್ಷ ಬಿಟ್ಟು ತಾನು ಆಕೆಯನ್ನು ವಿವಾಹವಾಗುವುದಾಗಿ ತಿಳಿಸಿ ದ್ದಾನೆ ಎನ್ನಲಾಗಿದೆ.

ರಾಂಗ್ ನಂಬರ್‌ಗೆ ಕಾಲ್ ಮಾಡಿದವನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕುತ್ಪಾಡಿಯ ನಿತ್ಯಾನಂದ ಐಸ್ ಪ್ಲಾಂಟ್ ಪಕ್ಕದ ನಿವಾಸಿ ಸ್ಟ್ಯಾನ್ಲಿ ಫ್ರಾನ್ಸಿಸ್ ಡಿ'ಮೆಲ್ಲೋ(೬೦) ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿದ ನೆರೆಮನೆಯ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ೯ ಗಂಟೆಗೆ ನಡೆದಿದೆ.
ಫ್ರಾನ್ಸಿಸ್ ಮಗನಿಗೆಂದು ಮಾಡಿದ ಮೊಬೈಲ್ ಕರೆ ಅಕಸ್ಮಾತ್ ತಪ್ಪಿ ಪಕ್ಕದ ಮನೆಯ ರಘುನಾಥ ಎಂಬವರಿಗೆ ಹೋಯಿತೆನ್ನಲಾಗಿದೆ. ಕರೆ ಬಂದ ಕೂಡಲೇ ರಘುನಾಥ್ ಯಾರು ಎಂದು ಕೇಳಿದಾಗ, ಮಗನೆಂದು ತಿಳಿದುಕೊಂಡ ಫ್ರಾನ್ಸಿಸ್ ಅವರು ನಿನ್ನ ಅಪ್ಪ ಮಾತನಾಡುವುದು ಎಂದು ಉತ್ತರಿಸಿದರೆನ್ನಲಾಗಿದೆ.
ಇದರಿಂದ ಸಿಟ್ಟುಗೊಂಡ ರಘುನಾಥ ಇನ್ನೊಬ್ಬನನ್ನು ಜೊತೆಗೆ ಸೇರಿಸಿಕೊಂಡು ಫ್ರಾನ್ಸಿಸ್ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಹಲ್ಲೆ ನಡೆಸಿದರೆನ್ನಲಾಗಿದೆ. ಈ ಸಂದ ರ್ಭದಲ್ಲಿ ಫ್ರಾನ್ಸಿಸ್ ಅವರ ೩೦ ಗ್ರಾಂ ತೂಕದ ಚಿನ್ನದ ಸರ ಮತ್ತು ಮೊಬೈಲ್ ಹ್ಯಾಂಡ್ ಸೆಟ್ ಕಾಣೆಯಾಗಿದ್ದು, ಇವುಗಳನ್ನು ರಘುನಾಥ ಕೊಂಡೊಯ್ದಿರಬೇಕು ಎಂದು ಫ್ರಾನ್ಸಿಸ್ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫ್ರಾನ್ಸಿಸ್ ನೀಡಿದ ದೂರಿನ ಪ್ರಕಾರ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಕಾರ್ಮಿಕನ ಕೊಲೆ: ಆರೋಪಿಗಳ ಬಂಧನ

Posted by JAYAKIRANA Kirana on | 0 comments | Leave a comment...

ಉಡುಪಿ: ನಗರದ ಕಟ್ಟೆ ಆಚಾರ್ಯ ಮಾರ್ಗದ ನಿವಾಸಿ ಶೌಕತ್ ಅಲಿ ಎಂಬವರ ಹಳೆ ಮನೆಯಲ್ಲಿ ವಾಸವಾಗಿದ್ದ ಮೂಲತಃ ಬಾಗಲಕೋಟೆ ನಿವಾಸಿ ಬಸವಂತಪ್ಪ ಯಾನೆ ಮಾನವ ಎಂಬವರ ಕೊಲೆಗೈದ ಪ್ರಕರಣದ ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಾವೇರಿ ನಿವಾಸಿ ಪ್ರಭು ಶಂಕರಪ್ಪ ಭಂಗಿ ಗೌಡ(೪೦) ಹಾಗೂ ಜಾರ್ಖಂಡ್ ನಿವಾಸಿ ಪರ್ವಿನ್ ಟೊಪ್ಪೊ ಯಾನೆ ಬಯ್ಯಾ(೨೩) ಎಂದು ಗುರುತಿಸಲಾಗಿದೆ. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು ಎ.೨೫ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.
ಕೊಲೆಗೀಡಾದ ವ್ಯಕ್ತಿ ಹಾಗೂ ಆರೋಪಿಗಳು ಮೊದಲೇ ಪರಿಚಿತರಾಗಿದ್ದರು ಎನ್ನಲಾಗಿದೆ. ಇವರು ಎ.೮ರಂದು ರಾತ್ರಿ ಮನೆಯಲ್ಲಿ ಜೊತೆಗೆ ಇದ್ದರೆನ್ನಲಾಗಿದೆ. ವಿಪರೀತ ಮದ್ಯದ ಅಮಲಿನಲ್ಲಿ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಬಸವಂತಪ್ಪ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದರೆನ್ನಲಾಗಿದೆ. ಆರೋಪಿಗಳು ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟೂರಿಗೆ ಹೋಗದೆ ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿಯೇ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

ಪಂಪ್ ಕದ್ದು ಜೈಲು ಸೇರಿದರು!

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳದ ಮನೆಯಂ ಗಳದಲ್ಲಿದ್ದ ಬಾವಿಗೆ ಅಳವಡಿಸಲಾಗಿದ್ದ ಸಬ್ ಮರಿರ್ಸಿಬಲ್ ಪಂಪ್ ಕಳವುಗೈದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿ ಗಳನ್ನು ಜೈಲಿಗೆ ಕಳಿಸಿದ್ದಾರೆ.
ನರಿಂಗಾನದ ಹರೀಶ(೨೭) ಮತ್ತು ವಿದ್ಯಾನಗರದ ಸಂದೀಪ್(೨೧) ಎಂಬ ವರೇ ಆರೋಪಿಗಳು. ನರಿಂಗಾನ ಗ್ರಾಮದ ವಿದ್ಯಾನಗರ ಜಂಕ್ಷನ್‌ನಲ್ಲಿ ಕೈರಂಗಳ ಗ್ರಾಮದ ಆನೆಗುಂಡಿ ನಿವಾಸಿ ಪುಂಡಲಿಕಾಕ್ಷ ಎಂಬವರ ನೂತನ ಮನೆಯ ಕಾಮಗಾರಿ ನಡೆಯುತ್ತಿತ್ತು. ಅದಕ್ಕಾಗಿ ಮನೆಯ ಪಕ್ಕದಲ್ಲಿದ್ದ ಬಾವಿಗೆ ಅಳವಡಿಸಲಾಗಿದ್ದ ಸಬ್‌ಮರ್ಸಿಬಲ್ ಪಂಪ್ ಕಳವಾಗಿರುವ ಬಗ್ಗೆ ಕಳೆದ ಶನಿವಾರ ಕೊಣಾಜೆ ಠಾಣೆಗೆ ದೂರು ನೀಡಲಾಗಿತ್ತು.
ಕೇಸು ದಾಖಲಿಸಿದ್ದ ಪೊಲೀಸರು ಆರೋಪಿಗಳು ಬಂಧನಕ್ಕಾಗಿ ಪ್ರಯತ್ನಿ ಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳಲ್ಲಿ ಒಬ್ಬಾತನ ಮಾಹಿತಿ ಲಭಿಸಿತ್ತು. ಆರೋಪಿಗಳ ಲ್ಲೋರ್ವ ಕದ್ದ ಪಂಪ್‌ನ್ನು ಮಾರಾಟ ಮಾಡಲೆಂದು ಹಲವರಲ್ಲಿ ಕೊಂಡೊ ಯ್ದರಾದರೂ ಯಾರೂ ಖರೀದಿಸದ ಕಾರಣ ಅದನ್ನು ಮನೆಯಲ್ಲಿ ತಂದು ಇಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿ ದ್ದರು. ಇವರು ಪ್ರಥಮ ಬಾರಿಗೆ ಕಳ್ಳತನ ನಡೆಸಿ ಸಿಕ್ಕಿಬಿದ್ದಿದ್ದು ಅವರಿಂದ ಒಂಬತ್ತು ಸಾವಿರ ಮೌಲ್ಯದ ಸಬ್‌ಮ ರ್ಸಿಬಲ್ ಪಂಪ್ ವಶಪಡಿಸಿಕೊಳ್ಳಲಾಗಿದೆ.

ಕೃಷಿಕನ ಮೇಲೆ ಗುಂಡಿನ ದಾಳಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಗೋಳಿಹೊಳೆ ಗ್ರಾಮದ ಹಾಲ್ಕಲ್ ಎಂಬಲ್ಲಿ ಸ್ಥಳೀಯ ಕೃಷಿಕ ಕೆ.ಕೆ. ನಾಯರ್ ಎಂಬವರ ಮೇಲೆ ನಿನ್ನೆ ಸಂಜೆ ಗುಂಡಿನ ದಾಳಿ ನಡೆದಿದೆ.
ಹೊರಗೆ ಹೋಗಿದ್ದ ಅವರು ಜೀಪ್‌ನಲ್ಲಿ ಬರುತ್ತಿದ್ದಾಗ ಮನೆಯ ಸಮೀಪ ಮರದ ಮರೆಯಲ್ಲಿ ನಿಂತಿದ್ದ ವ್ಯಕ್ತಿ ಕೋವಿಯಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೆ.ಕೆ.ನಾಯರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀಪ್‌ಗೆ ಹಾನಿಯಾಗಿದೆ. ಶ್ರೀಜಿತ್ ಎಂಬ ವ್ಯಕ್ತಿ ಈ ಕೃತ್ಯ ನಡೆಸಿರುವುದಾಗಿ ಕೆ.ಕೆ.ನಾಯಕರ್ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೈಂದೂರು ಮತ್ತು ಕೊಲ್ಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂರ್ವದ್ವೇಷದಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಮೂಲತಃ ಕೇರಳದವರಾದ ಕೆ.ಕೆ.ನಾಯರ್, ಕಳೆದ ಕೆಲವು ವರ್ಷಗಳಿಂದ ಹಾಲ್ಕಲ್‌ನಲ್ಲಿ ರಬ್ಬರ್ ಹಾಗೂ ತೆಂಗಿನ ತೋಟ ಮಾಡಿಕೊಂಡಿದ್ದಾರೆ. ಬುಧವಾರ ಸಂಜೆ ತೋಟದ ಕಾರ್ಮಿಕರನ್ನು ಬಿಟ್ಟು ಬರುಲು ಅರೆಶಿರೂರಿಗೆ ಹೋಗಿದ್ದ ಅವರು ಹಿಂದಿರಗುತ್ತಿದ್ದಾಗ ಶ್ರೀಜಿತ್ ಗುಂಡು ಹಾರಿಸಿದ್ದಾನೆ ಆದರೆ ಗುಂಡು ಜೀಪಿನ ಮೇಲೆ ತಾಗಿದೆ ಎಂದು ಹೇಳಲಾಗಿದೆ. ಶ್ರೀಜಿತ್ ಎಂಬಾತನ ತಂದೆ ಕೆಲವು ವರ್ಷಗಳ ಹಿಂದೆ ಕೊಲೆಗೀಡಾಗಿದ್ದರು. ಇದಕ್ಕೆ ಕೆ.ಕೆ. ನಾಯರ್ ಕಾರಣ ಎಂದು ನಂಬಿರುವ ಶ್ರೀಜಿತ್ ಅದೇ ದ್ವೇಷದಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಶ್ರೀಜಿತ್‌ನ ತಂದೆ ಜೋನ್‌ರವರ ಕೊಲೆಯಲ್ಲಿ ತನ್ನ ಕೈವಾಡ ಇಲ್ಲ. ಅವರ ಹತ್ಯೆ ನಡೆಯುವ ಸಂದರ್ಭದಲ್ಲಿ ಶ್ರೀಜಿತ್ ಇನ್ನೂ ಬಾಲಕನಾಗಿದ್ದ. ಅವನ ಮನದಲ್ಲಿ ನನ್ನ ಬಗ್ಗೆ ತಪ್ಪು ಕಲ್ಪನೆ ಮೂಡಿದೆ ಎಂದು ಕೆ.ಕೆ. ನಾಯರ್ ಪ್ರತಿಕ್ರಿಯಿಸಿದ್ದಾರೆ.

ಮಹಿಳೆಯಿಂದ ಹೆಣ್ಣು ಮಗುವಿನ ಮಾರಾಟ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಇಲ್ಲಿಗೆ ಸಮಿಪದ ಹೊಸಂಗಡಿ ಪೇರಿ ಜನತಾ ಕಾಲನಿಯ ಮಹಿಳೆಯೊಬ್ಬರು ನವಜಾತ ಶಿಶುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದು ಹೊಸಂಗಡಿ ಗ್ರಾ. ಪಂ.ಗೆ ದೂರು ನೀಡಿದ್ದಾರೆ. ಇಲ್ಲಿನ ವಿವಾಹಿತ ಮಹಿಳೆಯೊ ಬ್ಬರು ಇತ್ತೀಚೆಗೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಆಕೆಯ ಗಂಡ ಕಳೆದ ಐದು ವರ್ಷಗಳಿಂದ ಊರಲ್ಲಿರಲಿಲ್ಲ ವೆಂದೂ ಆಕೆಯ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಎಂದೂ ನಂಬಿಸಲಾಗಿತ್ತು.
ಈ ನಡುವೆ ಆಕೆಯ ಅಕ್ಕ ಚಂಪಾ ಎಂಬವರು ತನ್ನ ತಂಗಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಹೆರಿಗೆ ಮಾಡಿಸಿ ಬಳಿಕ ಆ ಹೆಣ್ಣು ಮಗುವನ್ನು ಬೇರೆಯ ವರಿಗೆ ಮಾರಾಟ ಮಾಡಿದ್ದಾರೆ ಎಂಬುದಾಗಿ ಗ್ರಾಮಸ್ಥರು ಸಹಿ ಹಾಕಿ ನೀಡಿದ ದೂರಿನಲ್ಲಿ ಹೇಳಲಾಗಿದೆ.
ಚಂಪಾ ಅವರನ್ನು ಕೂಲಂಕಷ ವಾಗಿ ವಿಚಾರಿಸಿದರೆ ಎಲ್ಲಾ ಸಂಗತಿಗಳು ಹೊರಬರ ಬಹುದೆಂದು ತಿಳಿಸಿರುವ ಗ್ರಾಮಸ್ಥರು ಈ ಬಗ್ಗೆ ವೇಣೂರು ಪೊಲೀಸರಿಗೂ ಮೌಖಿಕ ದೂರು ನೀಡಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಈ ಶಿಶು ಮಾರಾಟದ ಬಗ್ಗೆ ಆಸಕ್ತಿ ವಹಿಸಿ ತನಿಖೆ ನಡೆಸಿದರೆ ಎಲ್ಲಾ ಸತ್ಯಗಳು ಹೊರಬರಬಹುದು. ಈ ನಡುವೆ ಚಂಪಾ ಅವರು ಹೊಸಂಗಡಿಯ ಇಬ್ಬರು ಯುವಕರ ಮೇಲೆ ವೇಣೂರು ಪೊಲೀಸರಿಗೆ ಬೇರೆಯೇ ರೀತಿಯ ದೂರು ನೀಡಿದ್ದು, ಮಗು ಮಾರಾಟದ ಬಗ್ಗೆ ಈ ಯುವಕರು ಚಂಪಾರಲ್ಲಿ ವಿಚಾರಿಸಿದ್ದೇ ಈ ದೂರು ನೀಡಲು ಕಾರಣ ವೆನ್ನಲಾಗಿದೆ.

ವ್ಯಕ್ತಿಯನ್ನು ತಡೆದು ಹಣ ಸುಲಿಗೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಾಡೂರು ಗ್ರಾಮದ ಗುಡ್ಡೆಮನೆಯ ಬಸಪ್ಪ ಎಂಬವರ ಮನೆ ಪಕ್ಕದ ಹಾಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಡು ಕಾಡೂರಿನ ಹೊರಳಿಮಕ್ಕಿ ನಿವಾಸಿ ಭರತ್ ಶೆಟ್ಟಿ(೨೧) ಎಂಬವರನ್ನು ತಡೆದು ನಿಲ್ಲಿಸಿದ ನಾಲ್ವರ ತಂಡವೊಂದು ಭರತ್‌ರಲ್ಲಿದ್ದ ೯೨,೫೦೦ ರೂ.ಗಳನ್ನು ಸುಲಿಗೆ ಮಾಡಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಗಂಟೆ ೮.೪೫ಕ್ಕೆ ನಡೆದಿದೆ.
ಭರತ್ ಅವರು ಪೇಟೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿ ದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮೊದಲಿಗೆ ಕಾಣಿಸಿಕೊಂಡ ವ್ಯಕ್ತಿಯೋರ್ವ ಭರತ್‌ನ ಕುತ್ತಿಗೆ ಒತ್ತಿ ಹಿಡಿದನೆಂದೂ, ಈ ಸಮಯದಲ್ಲಿ ಭರತ್ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಪ್ರತ್ಯಕ್ಷರಾದ ಮೂರು ಮಂದಿ ಮತ್ತೆ ಭರತ್‌ನನ್ನು ಹಿಡಿದಿಟ್ಟು ನಗದು ಹಣವನ್ನು ಸುಲಿಗೆ ಮಾಡಿ ಪರಾರಿಯಾದರೆನ್ನಲಾಗಿದೆ.

ಕಾಲಿನ ಮೇಲೆ ಬಸ್ ಹರಿದು ವ್ಯಕ್ತಿ ಗಂಭೀರ

Posted by JAYAKIRANA Kirana on | 0 comments | Leave a comment...

ವಿಟ್ಲ: ಚಲಿಸುತ್ತಿದ್ದ ಬಸ್ಸನ್ನು ಹತ್ತುವ ಭರದಲ್ಲಿ ವ್ಯಕ್ತಿಯೊಬ್ಬರ ಕಾಲಿನ ಮೇಲೆ ಅದರ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧ ವಾರ ಸಂಜೆ ನಡೆದಿದೆ.
ಬೈರಿಕಟ್ಟೆ ಸಮೀಪದ ಆನೆಪದವು ನಿವಾಸಿ ಅಣ್ಣು ನಾಯ್ಕ(೭೩) ಎಂಬ ವರೇ ಗಾಯಗೊಂಡವರು. ವಿಟ್ಲದಿಂದ ಅವರು ತನ್ನ ಮನೆ ಬೈರಿಕಟ್ಟೆಗೆ ತೆರಳಲು ವಿಟ್ಲ ಖಾಸಗಿ ಬಸ್ ಹತ್ತಲು ಮುಂದಾ ದರು. ಈ ಸಂದರ್ಭ ಬಸ್‌ನ ಮುಂದಿನ ಬಾಗಿಲಲ್ಲಿ ಹತ್ತಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಸಮಯದಲ್ಲಿ ಬಸ್ಸಿನ ಎಡ ಭಾಗದ ಚಕ್ರ ಅವರ ಕಾಲ ಮೇಲೆ ಹರಿಯಿತು. ಪರಿಣಾಮ ವ್ಯಕ್ತಿ ಎಡಗಾಲಿಗೆ ಗಂಭೀರವಾಗಿ ಗಾಯವಾ ಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳು ಮಹಿಳೆ ಮೃತ್ಯು

Posted by JAYAKIRANA Kirana on | 0 comments | Leave a comment...

ಪುತ್ತೂರು: ಬೈಕ್ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿ ಗಾಯ ಗೊಂಡು ಆಸ್ಪತ್ರೆ ಸೇರಿದ್ದ ಮೂವರ ಪೈಕಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಪರಕ್ಕಳ ಎಂಬಲ್ಲಿ ಸೋಮವಾರ ನಡೆದ ರಸ್ತೆ ದುರಂತದಲ್ಲಿ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದ ರೆಖ್ಯ ಗ್ರಾಮದ ಕರಕಂಡ ನಿವಾಸಿ ಗಿರಿಜಾ(೩೦) ಮೃತ ಪಟ್ಟಿದ್ದಾರೆ. ಅವರ ಪತಿ ಆನಂದ ಗೌಡ(೩೩) ಮತ್ತು ಮಗು ಪ್ರಣೀತ್(೫) ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.

ಚಿನ್ನಾಭರಣ ದರೋಡೆ

Posted by JAYAKIRANA Kirana on | 0 comments | Leave a comment...

ಕುಂದಾಪುರ: ನಿನ್ನೆ ಮುಂಜಾನೆ ೪ ಗಂಟೆಯ ಸಮಯದಲ್ಲಿ ಮನೆಯ ಹಿಂಬದಿಯ ಬಾಗಿಲು ಮುರಿದು ನಗ ನಗದು ದೋಚಿದ ಘಟನೆ ತಲ್ಲೂರಿ ನಿಂದ ವರದಿಯಾಗಿದೆ.
ಕುಂದಾಪುರದ ತಲ್ಲೂರಿನಲ್ಲಿರುವ ಅರುಣ್ ಜೆ. ಮೆಂಡೋನ್ಸಾ (೪೨) ಎನ್ನುವವರ ಫ್ರೇಡ್ ಐರಿನ್ ವಿಲ್ಲಾ ಮನೆಯ ಹಿಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆ ಯೊಳಗಿದ್ದ ಸುಮಾರು ೨ ಲಕ್ಷ ರೂ. ಮೌಲ್ಯದ ೧೦೦ ಗ್ರಾಂ ಚಿನ್ನಾಭರಣ ಗಳನ್ನು ಹಾಗೂ ಮನೆಯಲ್ಲಿದ್ದ ೩೦೦೦ರೂ. ದೋಚಿ ಪರಾರಿಯಾಗಿ ದ್ದಾರೆ. ಅರುಣ್ ಅವರು ಶನಿವಾರ ತಮ್ಮ ಕುಟುಂಬ ಸಮೇತ ಮುಂಬೈಯ ಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ನಿನ್ನೆ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರು ವುದು ಕಂಡು ಬಂದಿದ್ದು, ಮನೆ ದರೋ ಡೆಯಾದ ವಿಚಾರ ತಿಳಿದುಬಂದಿದೆ. ಸ್ಥಳಕ್ಕೆ ಎಡಿಷನಲ್ ಎಸ್.ಪಿ. ಕುಂದಾ ಪುರದ ಡಿವೈಎಸ್‌ಪಿ, ಸರ್ಕಲ್ ಇನ್ಸ್ ಪೆಕ್ಟರ್ ಭೇಟಿ ಕೊಟ್ಟಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಕುಬೆವೂರು ನಿವಾಸಿ ಆಕಾಶ್ ಶೆಟ್ಟಿ(೨೫)ಎಂಬವರು ನಿನ್ನೆ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಉಡುಪಿ: ಕೊಲೆ ಬೆದರಿಕೆ

Posted by JAYAKIRANA Kirana on | 0 comments | Leave a comment...

ಉಡುಪಿ: ಪೆರ್ಡೂರು ಸಮೀಪದ ಅಲಂಗಾರು ನಿವಾಸಿ ದಿನೇಶ್ ಪೂಜಾರಿ(೪೭) ಎಂಬವರಿಗೆ ವ್ಯಕ್ತಿಯೊ ಬ್ಬರು ಮೊಬೈಲ್‌ಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ.
ಬೆದರಿಕೆ ಒಡ್ಡಿದ ಆರೋಪಿಯನ್ನು ಜಗದೀಶ್ ಎಂದು ಗುರುತಿಸಲಾಗಿದೆ. ಆರೋಪಿ ಆದಿತ್ಯವಾರ ರಾತ್ರಿ ಏಳು ಗಂಟೆಗೆ ಮತ್ತು ಸೋಮವಾರ ರಾತ್ರಿ ೮ ಗಂಟೆಗೆ ದಿನೇಶ್ ಅವರ ಮೊಬೈಲ್‌ಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ ರೆಂದು ದೂರಲಾಗಿದೆ. ಆರೋಪಿ ಜಗದೀಶ್ ಜತೆಗೆ ಸುನಿಲ್ ಸೇರಿಗಾರ್ ಎಂಬಾತನೂ ಶಾಮೀಲಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಗಳಾದ ಜಗದೀಶ್ ಹಾಗೂ ಸುನಿಲ್ ಕೊಲೆ ಬೆದರಿಕೆ ಹಾಕಲು ಸುಧೀರ್ ಪೂಜಾರಿ ಎಂಬಾತನ ಕುಮ್ಮಕ್ಕೇ ಕಾರಣವೆಂದು ದಿನೇಶ್ ನೀಡಿದ ದೂರಿನ ಆಧಾರದಲ್ಲಿ ಮೂರು ಮಂದಿ ಆರೋಪಿಗಳ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಬೈಕ್ ಕಳ್ಳರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಾಲ್ಕು ಬೈಕ್‌ಗಳ ಸಹಿತ ಬೈಕ್ ಕಳವು ಮಾಡುತ್ತಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಚೆಂಬುಗುಡ್ಡೆ ಅಬೀಬ್ ಯಾನೆ ಅಭಿ(೩೦), ಮಂಜನಾಡಿ ಕಲ್ಕಟ್ಟ ಮಸೀದಿ ಬಳಿ ನಿವಾಸಿ ಮಹಮ್ಮದ್ ನಿಜಾi(೨೨), ಪಿಲಾರ್ ಪಲ್ಲಮನೆ ನಿವಾಸಿ ಅಬ್ದುಲ್ ರಹಿಮಾನ್(೨೪), ತೌಡುಗೋಳಿ ಸಾರತ್ತಬೈಲ್ ನಿವಾಸಿ ತಜ್ಮಾನಿ(೨೧) ಬಂಧಿತರಾಗಿದ್ದು ಇವರು ಉಳ್ಳಾಲ ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಿಂದ ಈ ಬೈಕ್‌ಗಳನ್ನು ಕಳವು ಮಾಡಿದ್ದು, ತೊಕ್ಕೊಟ್ಟು ಒಳಪೇಟೆಯ ಮಾರಿಯಮ್ಮ ದೇವಸ್ಥಾನ ಬಳಿ ತಪಾಸಣೆ ಮಾಡು ತ್ತಿರುವಾಗ ಸಿಕ್ಕಿಬಿದ್ದಿದ್ದರು.

ಸಾಕ್ಷಿಯನ್ನೇ ಗದರಿಸಿದ ಸೈನೈಡ್ ಮೋಹನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಾಕ್ಷಿ ನುಡಿಯು ತ್ತಿದ್ದ ವ್ಯಕ್ತಿಯೊಬ್ಬನಿಗೆ ಸೈನೈಡ್ ಹಂತಕ ಮೋಹನ್ ಕುಮಾರ್ ಪಾಟಿ ಸವಾಲಿನ ನೆಪದಲ್ಲಿ ಕಣ್ಣಲ್ಲೇ ಗದರಿಸಿದ ಘಟನೆ ಮಂಗಳೂರಿನ ತ್ವರಿತಗತಿ ನ್ಯಾಯಾ ಲಯದಲ್ಲಿ ನಡೆದಿದೆ.
ಮೋಹನ್ ಕುಮಾರ್ ತನ್ನನ್ನು ಕಣ್ಣಿನಲ್ಲೇ ಗದರಿಸುತ್ತಿದ್ದ. ಆದರೆ ನಾನು ಇದ್ಯಾವುದಕ್ಕೆ ಸೊಪ್ಪು ಹಾಕಲಿಲ್ಲ. ಹೀಗೆಂದವರು ಮೈಸೂರು ಬಾಲಾಜಿ ವಸತಿಗೃಹದಲ್ಲಿ ಸ್ವಾಗತಕಾರರಾಗಿರುವ ಶಂಕರ್.
ಬಂಟ್ವಾಳ ತಾಲೂಕಿನ ಕರಿಯಂಗ ಳದ ಶಶಿಕಲಾ ಹತ್ಯೆ ಪ್ರಕರಣದ ಕುರಿತ ವಿಚಾರಣೆ ಯಲ್ಲಿ ತ್ವರಿತಗತಿ ನ್ಯಾಯಾ ಲಯದಲ್ಲಿ ಬುಧವಾರ ಈ ಘಟನೆ ನಡೆದಿರುವ ಬಗ್ಗೆ ಶಂಕರ್ ಮಾಧ್ಯ ಮದವರಿಗೆ ತಿಳಿಸಿದ್ದಾರೆ.
ಸಾಕ್ಷಿ ದಾಖಲಿಸುವ ವೇಳೆ ಶಶಿಕ ಲಾರ ಭಾವಚಿತ್ರವನ್ನು ನ್ಯಾಯಾಧೀಶರು ತೋರಿಸಿದಾಗ ಶಂಕರ್ ಆಕೆಯನ್ನು ಗುರುತಿಸಿದರಲ್ಲದೆ ಮೋಹನ್ ಕುಮಾ ರ್‌ನೊಂದಿಗೆ ಲಾಡ್ಜ್‌ಗೆ ಬಂದಿರುವುದನ್ನು ದೃಢಪಡಿಸಿದರು.
ಎರಡೂವರೆ ವರ್ಷದ ಬಳಿಕ ಬಂಟ್ವಾಳ ಪೊಲೀಸರು ಮೋಹನ್ ಕುಮಾರ್ ನೊಂದಿಗೆ ಲಾಡ್ಜ್‌ಗೆ ಬಂದಾಗ ಆತನನ್ನು ಗುರುತಿಸಿರುವುದಾಗಿ ಶಂಕರ್ ನ್ಯಾಯಾ ಧೀಶರ ಮುಂದೆ ಸಾಕ್ಷಿ ನುಡಿದರು.

ಗೋ ಮಾಂಸ ಮಾರಾಟ ಆರೋಪಿಯ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು:ಅಕ್ರಮವಾಗಿ ಗೋಮಾಂಸ, ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬೆಳಪು ಗ್ರಾಮದ ಶಾಂತಿಮಜಲು ನಿವಾಸಿ ಇಕ್ಬಾಲ್ ಎಂಬಾತನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಶಾಂತಿ ಮಜಲು ರಫೀಕ್ ಎಂಬವರ ಮನೆಯಲ್ಲಿ ಅಕ್ರಮವಾಗಿ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಫಿಕ್ ತಪ್ಪಿಸಿಕೊಂಡಿದ್ದಾನೆ.

ದೋಣಿ ಮಗುಚಿ ನೀರು ಪಾಲು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಜಿಲ್ಲೆಯ ಪಯ್ಯನ್ನೂರು ರಾಮಂತಳಿ ಯಿಂದ ಮೀನುಗಾರಿಕೆಗೆಂದು ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಒಬ್ಬರು ನೀರುಪಾಲಾದ ಘಟನೆ ವರದಿ ಯಾಗಿದೆ. ನೀರುಪಾಲಾದ ವರನ್ನು ಮುಟ್ಟಂ ನಿವಾಸಿ ಮಹಮ್ಮದ್ ಹಾಜಿ (೫೩) ಎಂದು ಹೆಸರಿಸಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡಿನ ಮನ್ನಿಪ್ಪಾಡಿ ನಿವಾಸಿ ಕೆ.ದಾಮೋದರನ್ (೪೭)ಎಂಬವರು ಮನೆಯ ಕೋಣೆ ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ನಡೆದಿದೆ. ದಾಮೋದರನ್ ಬಹಳ ಹೊತ್ತಾ ದರೂ ಕೋಣೆಯಿಂದ ಹೊರ ಬಾರದೆ ಇದ್ದಾಗ ಪತ್ನಿ ಕೊಠಡಿಯತ್ತ ಹೋಗಿದ್ದರು. ಕೋಣೆಯಲ್ಲಿ ದಾಮೋದರನ್‌ರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಲೀಗ್ ನಾಯಕನ ಮನೆಗೆ ದಾಳಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕಾಸರ ಗೋಡು ನಗರಸಭೆ ಸದಸ್ಯ ರೂ, ಮುಸ್ಲಿಂ ಲೀಗ್ ಪಕ್ಷದ ನಗರ ಸಭಾ ಸಮಿತಿ ಪ್ರಧಾನ ಕಾರ್ಯ ದರ್ಶಿಯೂ, ಜಿಲ್ಲಾ ಯೋ ಜನಾ ಮಂಡಳಿ ಸದಸ್ಯರೂ ಆದ ಎ.ಅಬ್ದುಲ್ ರಹಿಮಾನ್ ಅವರ ಮನೆಗೆ ದಾಳಿ ನಡೆಸಿದ ಘಟನೆಯ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿ ಲಾಗಿದೆ.
ಅಬ್ದುಲ್ ರಹಿಮಾನ್ ಅವರ ವಿದ್ಯಾನಗರದಲ್ಲಿರುವ ಮನೆಯ ಮೇಲೆ ಮೊನ್ನೆ ರಾತ್ರಿ ಆಕ್ರಮಣ ನಡೆದಿತ್ತು. ಮನೆಯ ಮುಂಭಾಗದ ಕಿಟಿಕಿ ಗಾಜುಗ ಳನ್ನು ಒಡೆದು ಹಾನಿಗೊಳಿಸ ಲಾಗಿದೆ. ಕೃತ್ಯ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲವೆನ್ನಲಾಗಿದೆ. ಮನೆಯ ಮುಂಭಾಗದ ವರಾಂq ದಲ್ಲಿ ರಕ್ತ ಹರಿದ ಕುರುಹುಗಳಿವೆ. ಕಿಟಿಕಿ ಗಾಜು ತಾಗಿ ಗಾಯವಾಗಿರಬೇಕೆಂದು ಶಂಕಿಸಲಾಗಿದೆ. ಆರೋಪಿಗಳ ಬಗ್ಗೆ, ಕೃತ್ಯ ಕಾರಣದ ಬಗ್ಗೆ ಮಾಹಿತಿ ಲಭಿಸಿಲ್ಲ. ಆದರೆ, ಮೊನ್ನೆ ಮಧ್ಯಾಹ್ನ ಇವರ ಮನೆಯ ಮುಂದೆ ರಸ್ತೆ ಬದಿಯಲ್ಲಿ ಶಂಕಾಸ್ಪದ ಸ್ಥಿತಿಯಲ್ಲಿ ಕಾರೊಂದು ನಿಂತಿದ್ದನ್ನು ಕಂಡವರಿ ದ್ದಾರೆ. ನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ, ಶಾಸಕರಾದ ಎನ್. ಎ ನೆಲ್ಲಿಕುನ್ನು, ಪಿ.ಬಿ. ಅಬ್ದುಲ್ ರಜಾಕ್ ಸಹಿತ ಅನೇಕರು ಇವರ ಮನೆಗೆ ಭೇಟಿ ನೀಡಿದರು.

ಬೈಕ್ ಡಿಕ್ಕಿ: ಪಾದಚಾರಿ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬೈಕೊಂದು ಡಿಕ್ಕಿ ಹೊಡೆದು ಪಾದಚಾರಿಯೋರ್ವರು ಗಾಯಗೊಂಡ ಘಟನೆ ಮಂಗಳವಾರ ನೆಲ್ಯಾಡಿಯ ಕೋಣಾಲು ಕೋಲ್ಪೆ ಯಿಂದ ವರದಿಯಾಗಿದೆ. ಕೋಣಾಜೆ ನೆಲ್ಲಿಗುಡ್ಡೆಯ ಶಿವಪ್ಪ ಪೂಜಾರಿ ಗಾಯಗೊಂಡವರು. ಅವರಿಗೆ ಸತೀಶ್ ಕುಮಾರ್ ಚಲಾಯಿ ಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಜರಂಗದಳ ಕಾರ್ಯಾಚರಣೆ: ಕಟುಕರಿಂದ ಕರುಗಳ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಾಂಸ ವ್ಯಾಪಾರಸ್ಥರ ಅಮಾನವೀಯತೆ ಎಲ್ಲೆ ಮೀರುತ್ತಿದ್ದು ಇದೆಲ್ಲಕ್ಕಿಂತ ಕ್ರೂರವಾದ ಘಟನೆಯೊಂದು ನಿನ್ನೆ ಕದ್ರಿ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದ್ದು ಪ್ರಾಮಾಣಿಕ ವ್ಯಾಪಾ ರಸ್ಥರನ್ನು ತಲೆ ತಗ್ಗಿಸುವಂತೆ ಮಾಡಿದೆ.
ಇದುವರೆಗೆ ಬೆಳಕಿಗೆ ಬಂದ ಎಲ್ಲಾ ಪ್ರಕರ ಣಗಳು ದನ ಕಳ್ಳತನ ಮತ್ತು ಅಮಾನವೀ ಯವಾಗಿ ದನಗಳನ್ನು ಸಾಗಿಸುತ್ತಿರುವುದಾಗಿದೆ. ಆದರೆ ನಿನ್ನೆಯ ಪ್ರಕರಣ ಮಾತ್ರ ಇದಕ್ಕಿಂ ತಲೂ ಭಿನ್ನ, ಇದುವರೆಗೆ ನಡೆದಿರದ ಹಾಗೂ ಮನ ಕಲುಕುವಂತದ್ದಾಗಿದೆ.
ಇದು ಬಿಕರ್ನಕಟ್ಟೆಯಲ್ಲಿ ನಡೆದ ಘಟನೆ ಯಾಗಿದೆ. ನಾಲ್ಕು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದ ವಿಮಲಾ ಎಂಬವರು ಹೂವಿನ ಮಾರಾಟ ಆರಂಭಿಸಿದ್ದರು. ಆದರೆ ಹೂವು ಗಳನ್ನು ಇಡಲು ಸೂಕ್ತ ಸ್ಥಳ ಇಲ್ಲದ ಕಾರಣ ಸ್ಥಳೀಯರೊಬ್ಬರು ಅವರ ಮನೆಗೆ ತಾಗಿಕೊಂಡು ಖಾಲಿಯಿದ್ದ ಒಂದಷ್ಟು ಸ್ಥಳವನ್ನು ಬಿಟ್ಟುಕೊಟ್ಟಿದ್ದು ಮಹಿಳೆ ಅದರಲ್ಲಿ ಟಾರ್ಪಾಲಿನ ಟೆಂಟ್ ಹಾಕಿ ಠಿಕಾಣಿ ಹೂಡಿದ್ದರು. ಅವರ ಜೊತೆ ಇನ್ನೊಬ್ಬ ಹೂವಿನ ಮಾರಾಟಗಾರ ಅಬೂಬಕ್ಕರ್ ಎಂಬಾತನೂ ಇರತೊಡಗಿದ. ಮಹಿಳೆಗೆ ೪೫ ವರ್ಷ ದಾಟಿದ್ದ ಕಾರಣ ಯಾರೂ ಕೂಡ ಈ ಜೋಡಿಯ ಬಗ್ಗೆ ತಕರಾರು ಎತ್ತಿರಲಿಲ್ಲ. ಆದರೆ ಇದನ್ನೇ ಅವರು ದುರುಪಯೋಗಪಡಿಸಿ ಈಗ ಸ್ಥಳೀಯರು ಹಾಗೂ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಸಂಜೆಯ ವೇಳೆಯವರೆಗೆ ಮಾಂಸ ವ್ಯಾಪಾರಿ ನಝೀರ್ ಎಂಬಾತ ಮೂರು ಬಾರಿ ಈ ಟೆಂಟ್‌ಗೆ ವಕ್ಕರಿಸಿದ್ದನು. ಆತನ ಹಣೆಬರಹ ಗೊತ್ತಿದ್ದ ಬಜರಂಗದಳದ ಕಾರ್ಯಕರ್ತರು ಸಂಶಯಗೊಂಡು ರಾತ್ರಿ ಟೆಂಟ್‌ಗೆ ನುಗ್ಗಿದ್ದರು. ಅದಾಗಲೇ ಆರೋಪಿಗಳು ಜಾಗ ಖಾಲಿ ಮಾಡಿದ್ದು ಮಹಿಳೆ ಮಾತ್ರವೇ ಇದ್ದರು. ಆ ವೇಳೆ ಟೆಂಟಿನೊಳಗೆ ಎರಡು ದಿನಗಳ ಹಿಂದಷ್ಟೇ ಜನಿಸಿದಂತಹ ಎರಡು ಕರುಗಳು ಇದ್ದವು. ಅವುಗಳು ಎಲ್ಲಿಂದ ಬಂತು ಎನ್ನುವುದಕ್ಕೆ ಮಹಿಳೆ ಬಳಿ ಉತ್ತರ ಇರಲಿಲ್ಲ. ಕೊನೆಗೆ ಕದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅವರು ಸ್ಥಳಕ್ಕೆ ಧಾವಿಸಿ ಕರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಕೆರಳಿದ ಮನೆ ಮಾಲಿಕ ನಾಳೆ ಸಂಜೆಗೂ ಮುನ್ನ ಜಾಗ ಖಾಲಿ ಮಾಡುವಂತೆ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ. ನವಜಾತ ಕರುಗಳನ್ನು ಯಾರೂ ಕೂಡ ಮಾರಾಟ ಮಾಡಲು ಮುಂದೆ ಬರುವುದಿಲ್ಲ. ಈ ಕಾರಣದಿಂದ ಕರುಗಳನ್ನು ಕದ್ದು ತಂದಿರಬೇಕೆಂದು ಶಂಕಿಸಲಾಗಿದ್ದು ಅದನ್ನು ಮಾಂಸ ಮಾಡಿ ಆಡಿನ ಮಾಂಸಕ್ಕೆ ಮಿಶ್ರಣ ಮಾಡುವ ಹುನ್ನಾರ ನಝೀರ್ ಹಾಗೂ ಅಬೂಬಕ್ಕರ್ ರದ್ದಾಗಿತ್ತು ಎಂದು ಶಂಕಿಸಲಾಗಿದೆ. ಕದ್ರಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಚರಂಡಿಗೆ ಕಾರು ಬಿದ್ದು ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಮದೂರು ಗ್ರಾಮದ ಮನೋಜ್ ಕೆ.ವಿ. ಅವರು ಉಡುಪಿ-ಹಿರಿಯಡ್ಕ ಸಂಪರ್ಕಿತ ಅತ್ರಾಡಿಯ ರಸ್ತೆಯಲ್ಲಿ ಚಲಾಯಿಸುತ್ತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದ ಪರಿ ಣಾಮ ಅವರ ಕಾರು ಚರಂಡಿಗೆ ಬಿದ್ದು ಹಲವು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ಚಾಲಕ ಮನೋಜ್ ಸೇರಿದಂತೆ ಹಲವು ಮಂದಿ ಗಾಯಗೊಂ ಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

‘ಗಂಡನ ಜೊತೆ ಜೈಲುವಾಸ ಮಾಡಿದರೂ ಅವಮಾನ ಆಗಿಲ್ಲ

Posted by JAYAKIRANA Kirana on | 0 comments | Leave a comment...

ಕರಾವಳಿ ಅಲೆ ರೋಹಿಣಿ ನ್ಯಾಯಾಲಯದಲ್ಲಿ
ಮಂಗಳೂರು: ಧಾರ್ಮಿಕ ಪ್ರಮುಖ ವ್ಯಕ್ತಿಯೊಬ್ಬರ ಅವಮಾನ ಮಾಡಿದ ಕ್ರಿಮಿನಲ್ ಪ್ರಕರಣದಲ್ಲಿ ಪತಿ ಬಿ.ವಿ. ಸೀತಾರಾಮ್ ಜೊತೆಯಲ್ಲಿ ಜೈಲುವಾಸ ಮಾಡಿ ಬಂದಿದ್ದರೂ ತನಗೆ ಯಾವುದೇ ಮಾನನಷ್ಟ ಆಗಿಲ್ಲ ಎಂದು ಕರಾವಳಿ ಅಲೆ ಪತ್ರಿಕೆಯ ನಿರ್ದೇಶಕಿ ಶ್ರೀಮತಿ ರೋಹಿಣಿಯವರು ಮಾನ್ಯ ನ್ಯಾಯಾಲಯದಲ್ಲಿ (ಮಾ. ೨೭ರಂದು) ಸಾಕ್ಷ್ಯ ನುಡಿದಿದ್ದಾರೆ.
ತನ್ನ ಹಾಗೂ ಮಗಳು ರಾಧಿಕಾ ವಿರುದ್ಧ ಜಯ ಕಿರಣ ಪತ್ರಿಕೆಯವರು ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಶಾಶ್ವತ ಪ್ರತಿ ಬಂಧಕಾಜ್ಞೆಯನ್ನು ಕೋರಿ, ಸಿವಿಲ್ ನ್ಯಾಯಾ ಲಯದಲ್ಲಿ ಹೂಡಲಾಗಿರುವ ವ್ಯಾಜ್ಯದಲ್ಲಿ ಶ್ರೀಮತಿ ರೋಹಿಣಿಯವರ ಪಾಟಿ ಸವಾಲಿನ ವೇಳೆ ಅವರು ಈ ಮೇಲಿನಂತೆ ನುಡಿದಿದ್ದಾರೆ. ತನಗೆ ಮತ್ತು ತನ್ನ ಪರಿವಾರದವರಿಗೆ ಸಮಾಜದಲ್ಲಿ ಬಹಳ ಗೌರವವಿದೆ. ತನ್ನ ಸಹೋದರರು ಬ್ಯಾಂಕ್‌ನಲ್ಲಿ, ಬಿಎಸ್‌ಎನ್‌ಎಲ್‌ನಲ್ಲಿ, ಡಾಕ್ಟರ್ ಆಗಿ ಉನ್ನತ ಸ್ಥಾನದಲ್ಲಿದ್ದಾರೆ. ಜೈನಧರ್ಮದ ಮುನಿಯೊಬ್ಬರ ಭಾವನೆಗಳಿಗೆ ಘಾಸಿಯುಂಟು ಮಾಡಿದ ಪ್ರಕರಣದಲ್ಲಿ ತಾನು ಹಾಗೂ ತನ್ನ ಪತಿ ಸೀತಾರಾಮ್ ಮತ್ತು ಕರಾವಳಿ ಅಲೆ ಸಂಪಾದಕರ ಜೊತೆಯಲ್ಲಿ ೧೦ ದಿನ ಜೈಲುವಾಸ ಮಾಡಿರುವುದು ನಿಜ. ಆದರೆ ಆಮೇಲೆ ಸದ್ರಿ ಪ್ರಕರಣದಿಂದ ಮಾನ್ಯ ನ್ಯಾಯಾಲಯವು ತನ್ನ ಹೆಸರನ್ನು 'ಡಿಲಿಟ್ ಮಾಡಿದೆ.
ಪತಿ ಸೀತಾರಾಮ್ ಮತ್ತೊಮ್ಮೆ ಜೈಲುವಾಸ ಮಾಡಿರುತ್ತಾರೆ. ಆದರೆ ಆ ಬಳಿಕ ಸದ್ರಿ ಪ್ರಕರಣವೂ 'ಸ್ಟೇ ಆಗಿದೆ. ಬಿ.ವಿ. ಸೀತಾರಾಮ್ ಮತ್ತು ತಾನು ಜೈಲುವಾಸ ಮಾಡಿದ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿರುತ್ತದೆ. ಆದರೆ ಅದರಿಂದಾಗಿ ತಮಗೆ ಯಾವುದೇ ಮಾನನಷ್ಟ ಆಗಿಲ್ಲ ಎಂಬುದು ಶ್ರೀಮತಿ ರೋಹಿಣಿ ಸಾಕ್ಷ್ಯ ನುಡಿದಿದ್ದಾರೆ. ಎ. ೧೩ರಂದು ಶ್ರೀಮತಿ ರೋಹಿಣಿ ಯವರ ಮುಂದುವರಿದ ಅಡ್ಡ ವಿಚಾರಣೆ ಮಾನ್ಯ ನ್ಯಾಯಾಲಯದಲ್ಲಿ ನಡೆಯ ಲಿದ್ದು, ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಅಡ್ಡ ವಿಚಾರಣೆಯ ವಿವರವನ್ನು ಪತ್ರಿಕೆ ಪ್ರಕಟಿಸಲಿರುವುದು. ಪ್ರಮುಖ ವ್ಯಕ್ತಿಯಾದ ಶ್ರೀಮತಿ ರೋಹಿಣಿಯವರ ಸಾಕ್ಷ್ಯ ವಿಚಾರಣೆ ವೀಕ್ಷಿಸಲು ಮಾಧ್ಯಮದವರು ಮತ್ತು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಧರ್ಮಸ್ಥಳಕ್ಕೆಂದು ಕರೆತಂದು ಬೆಳ್ತಂಗಡಿಯಲ್ಲೇ ಬಿಟ್ಟೋಡಿದ ಬಸ್!

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಖಾಸಗಿ ಬಸ್‌ನ ನಿರ್ವಾ ಹಕ ಧರ್ಮಸ್ಥಳ ಯಾತ್ರಿಕರನ್ನು ಮಾರ್ಗ ಮಧ್ಯದಲ್ಲೇ ಕೈಬಿಟ್ಟು ಪರಾರಿಯಾದ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ.
ಉಡುಪಿಯಿಂದ ಧರ್ಮಸ್ಥಳಕ್ಕೆ ಟಿಕೆಟ್ ನೀಡಿ ಪ್ರಯಾಣಿಕರನ್ನು ಬೆಳ್ತಂ ಗಡಿಯಲ್ಲೇ ಇಳಿಸಿ ಬೇರೆ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ಎಂದು ಪ್ರಯಾಣಿಕರನ್ನು ನಡುದಾರಿಯಲ್ಲಿ ಕೈಬಿಟ್ಟ ಖಾಸಗಿ ಬಸ್‌ನವರ ವರ್ತನೆ ಸಾರ್ವಜನಿಕರಿಂದ ಟೀಕೆಗೊಳಗಾಗಿದೆ.
ಎ.೮ರಂದು ರಾತ್ರಿ ೭-೩೦ಕ್ಕೆ ಉಡುಪಿಯಿಂದ ಹೊರಡುವ ದುರ್ಗಾ ಪರಮೇಶ್ವರಿ ಬಸ್(ಬಸ್ ಸಂ.೩೯೩೧) ನಲ್ಲಿ ಕೊಲ್ಲೂರು, ಕುಂದಾಪುರ, ಉಡುಪಿ ಕಡೆಯಿಂದ ಬಂದ ಸುಮಾರು ೩೦-೩೫ ಪ್ರಯಾಣಿಕರು ಧರ್ಮಸ್ಥಳಕ್ಕೆ ಟಿಕೆಟ್ ಪಡೆದಿದ್ದರು. ಬಸ್ ಏಜೆಂಟ್ ಹಲವು ಪ್ರಯಾಣಿಕರನ್ನು ಒತ್ತಾಯಿಸಿ ಧರ್ಮಸ್ಥಳಕ್ಕೆ ಆ ಬಸ್‌ನಲ್ಲಿ ಕುಳ್ಳಿರಿಸಿದ್ದ. ಆದರೆ ಬಸ್ ಕಾರ್ಕಳಕ್ಕೆ ಬರುತ್ತಿದಂತೆ ಅದೇ ಕಂಪೆನಿಯ ಇನ್ನೊಂದು ಬಸ್ಸಿಗೆ ಪ್ರಯಾಣಿಕರನ್ನು ವರ್ಗಾಯಿಸಿದ. ದೂರ ಪ್ರಯಾಣದ ಮಹಿಳೆಯರು, ಮಕ್ಕಳು, ವೃದ್ಧರು ಲಗೇಜು ಹೊತ್ತು ಕುಳಿತುಕೊಳ್ಳಲು ಸೀಟಿಲ್ಲದೆ ಗೊಣಗಿ ಕೊಂಡು ನಿಂತೇ ಪ್ರಯಾಣಿಸಿಬೇ ಕಾಯಿತು.
ಬಸ್ ರಾತ್ರಿ ೧೦ಕ್ಕೆ ಬೆಳ್ತಂಗಡಿ ತಲುಪುತ್ತಿದ್ದಂತೆ ನಿರ್ವಾಹಕ ಲಾಸ್ಟ್ ಸ್ಟಾಪ್ ಎಲ್ಲರೂ ಇಳಿಯಿರಿ ಎಂದು ಕೂಗಿ ಹೇಳಿದೆ. ಧರ್ಮಸ್ಥಳಕ್ಕೆ ಬೆಳ್ತಂಗಡಿಯಿಂದ ೧೫ ಕಿ.ಮೀ. ಇದೆ. ಧರ್ಮಸ್ಥಳದ ಪ್ರಯಾಣಿಕರು ಇದರಿಂದ ಕಂಗಾಲಾಗಿ ಬಸ್ ಕಂಡಕ್ಟರ್‌ನೊಂದಿಗೆ ಜಗಳಕ್ಕಿಳಿದರು. ಧರ್ಮಸ್ಥಳಕ್ಕೆ ನೇರ ಟಿಕೆಟ್ ನೀಡಿ ಬೆಳ್ತಂಗಡಿಯಲ್ಲಿ ಇಳಿಸುವುದೆಂದರೆ ಏನರ್ಥ. ನಮಗೆ ಧರ್ಮಸ್ಥಳಕ್ಕೆ ಟಿಕೆಟ್ ನೀಡಿದ್ದೀರಿ. ನಮ್ಮನ್ನು ಧರ್ಮಸ್ಥಳಕ್ಕೆ ತಲುಪಿಸಿ ಎಂದು ಪ್ರಯಾಣಿಕರು ಪಟ್ಟು ಹಿಡಿದರು. ಅದಕ್ಕೆ ನಿರ್ವಾಹಕ ಉಡುಪಿ ಯಿಂದ ಬರುವ ಬಸ್‌ಗೆ ಏನೋ ಸಮಸ್ಯೆ ಇದೆ. ಅದಕ್ಕೆ ಬೇರೆ ಬಸ್‌ನಲ್ಲಿ ಕಳಿಸಿಕೊಟ್ಟಿದ್ದಾರೆ. ಈ ಬಸ್‌ಗೆ ಧರ್ಮಸ್ಥಳಕ್ಕೆ ಹೋಗಲು ಅನುಮತಿ ಇಲ್ಲ. ನಾವು ಧರ್ಮಸ್ಥಳ ಪ್ರಯಾಣಿ ಕರಿಗೆ ದುಡ್ಡು ವಾಪಸು ಕೊಡುತ್ತೇವೆ. ಬೇರೆ ಬಸ್‌ನಲ್ಲಿ ಹೋಗಿ ಎಂದು ತಾಕೀತು ಮಾಡಿದ. ನಿರ್ವಾಹಕ ಹಣ ಮರಳಿಸಿ ತಕ್ಷಣವೇ ಕಾಲ್ಕಿತ್ತಿದ್ದ. ಬಳಿಕ ರಾತ್ರಿ ಅರ್ಧಗಂಟೆ ಕಾದರೂ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಹೋಗುವ ಬಸ್ ಬಾರದೆ ಸುಮಾರು ೩೫ ಪ್ರಯಾಣಿಕರು ಬೆಳ್ತಂಗಡಿ ಬಸ್ ನಿಲ್ದಾಣದ ಸನಿಹದ ಮುಖ್ಯ ರಸ್ತೆಯಲ್ಲಿ ಲಗೇಜು ಹೊತ್ತು ಕುಳಿತುಕೊಳ್ಳುವಂತಾ ಯಿತು. ಇತ್ತ ಬಸ್ ಇಲ್ಲದೆ, ಊಟ ತಿಂಡಿಗೆ ಹೋಟೆಲುಗಳೂ ತೆರೆದಿರದೆ ಭಾರೀ ಪರದಾಡುವಂತಾಯಿತು. ಪ್ರಯಾಣಿಕರು ತಮಗಾದ ಅನ್ಯಾಯದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಹಾಗೂ ಸಾರಿಗೆ ಕಚೇರಿಗೆ ದೂರು ನೀಡಿದ್ದಾರೆ. ಖಾಸಗಿ ಬಸ್‌ನವರ ಈ ತರಹದ ಉದ್ದತಟನಕ್ಕೆ, ವಂಚನೆಗೆ ಸಾರಿಗೆ ಇಲಾಖೆ ಯಾವರ ರೀತಿ ಸ್ಪಂದಿಸು ತ್ತದೆಯೋ ಕಾದು ನೋಡಬೇಕಾಗಿದೆ. ಮುಂದೆ ಖಾಸಗಿ ಬಸ್‌ನಲ್ಲಿ ಧರ್ಮಸ್ಥಳಕ್ಕೆ ಹೋಗುವವರು ಚಿಂತನೆ ಮಾಡಿ ಬಸ್ ಹತ್ತಬೇಕಾದ ಅನಿವಾರ್ಯತೆ ಇದೆ.

ರಸ್ತೆ ಅವ್ಯವಸ್ಥೆ: ಗ್ರಾಮಸ್ಥರಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕೊಡಂಗಳದಿಂದ ಮರ್ಣೆಗೆ ಹಾದುಹೋಗುವ ರಸ್ತೆ ಸಂಪೂರ್ಣವಾಗಿ ಹೊಂಡ-ಗುಂಡಿ ಗಳಿಂದ ತುಂಬಿಹೋಗಿದ್ದು, ವಾಹನ ಮತ್ತು ಜನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷಗ ಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆರೋಪಿಸಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
 ಮೊದಲಿಗೆ ಮೆರವಣಿಗೆ ನಡೆಸಿದ ಊರವರು ಬಳಿಕ ರಸ್ತೆಯಲ್ಲಿಯೇ ಬಾಳೆಗಿಡ ನೆಟ್ಟರಲ್ಲದೆ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಮುಂದಿನ ೧೫ ದಿನಗಳ ಒಳಗೆ ರಸ್ತೆ ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳದೇ ಹೋದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಮುನ್ನೆಚ್ಚರಿಕೆ ನೀಡಿದರು.
ಕಳೆದ ಎರಡು ವರ್ಷಗಳಲ್ಲಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾಧಿಕಾರಿ ಹಾಗೂ ಮಣಿಪುರ ಗ್ರಾಮ ಪಂಚಾ ಯತ್ ಆಡಳಿತಕ್ಕೆ ಹಲವಾರು ಮನವಿ ಸಲ್ಲಿಸಿದೆವು. ಆದರೆ, ಯಾರೊಬ್ಬರೂ ರಸ್ತೆ ದುರಸ್ತಿಗೆ ಬೇಕಾದ ಕ್ರಮಕೈಗೊಂ ಡಿಲ್ಲ. ಕಳೆದ ಲೋಕಸಭಾ ಚುನಾವ ಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾದಾಗ ಚುನಾವಣೆ ಮುಕ್ತಾಯಗೊಂಡ ಕೂಡಲೇ ರಸ್ತೆ ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಕಾರಣ ಚುನಾವಣಾ ಬಹಿಷ್ಕಾರ ನಿರ್ಧಾರವನ್ನು ಹಿಂತೆಗೆದುಕೊಂಡೆವು. ರಾಜಕಾರಣಿಗಳ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯ ವಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.
ವಸಂತ ಪ್ರಭು, ಪ್ರಶಾಂತ್ ಕಾಮತ್, ನಾಗರಾಜ ಕಾಮತ್, ಗಣೇಶ್ ಶೆಟ್ಟಿ, ಸುರೇಂದ್ರ ಶೆಟ್ಟಿ, ಭಾಸ್ಕರ ಆಚಾರ್ಯ, ಶಿವರಾಯ ಪ್ರಭು, ಸಂಕಿ ಮೂಲ್ಯ, ಸುಮತಿ, ಸುಶೀಲಾ ಪ್ರಭು ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಲುಷಿತ ನೀರು: ಪಂಚಾಯತ್ ವಿರುದ್ದ ಅಪಪ್ರಚಾರ

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲ ಪಡ್ನೂರು ಗ್ರಾ. ಪಂ. ಬೇಜವಾಬ್ದಾರಿತನದಿಂದ ಕಡಂಬು ಪರಿಸರಕ್ಕೆ ಕಲುಷಿತ ನೀರು ಸರಬರಾಜಾಗುತ್ತಿರುವುದರಿಂದ ಇಲ್ಲಿಯ ನಿವಾಸಿಗಳು ರೋಗ ಪೀಡಿತರಾಗಿದ್ದಾರೆ ಎಂದು ಕೆಲ ಸಂಘಟನೆಗಳು ಪಂಚಾಯತ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಪಡ್ನೂರು ಗ್ರಾ. ಪಂ. ಅಭಿವೃದ್ಧಿ ಕಾರ್ಯವನ್ನು ಸಹಿಸಲಾ ಗದವರು ಈ ರೀತಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ಎಂ.ಎಸ್ ಮಹಮ್ಮದ್ ಹೇಳಿದರು.
ವಿಟ್ಲದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ಸಮಯಗಳಿಂದ ಪತ್ರಿಕೆ ಮೂಲಕ ಸಂಘಟನೆಯೊಂದರ ಸದಸ್ಯರು ಕಡಂಬು ಜನತಾ ಕಾಲನಿ ನಿವಾಸಿಗಳು ಕಲುಷಿತ ನೀರನ್ನು ಸೇವಿಸುತ್ತಿದ್ದಾರೆ. ಇದರಿಂದ ಇಲ್ಲಿಯ ನಿವಾಸಿಗಳು ರೋಗಕ್ಕೆ ತುತ್ತಾಗಿದ್ದಾರೆ ಎಂಬುದಾಗಿ ಪತ್ರಿಕೆ ಹೇಳಿಕೆ ನೀಡಿದ್ದು, ಸುಳ್ಳಾಗಿದ್ದು, ಇದರ ಹಿಂದೆಯೇ ವ್ಯವಸ್ಥಿತ ಸಂಚು ಅಡಗಿದೆ ಎಂದು ಅವರು ಆರೋಪಿಸಿದರು.
ಬೆದ್ರಕಾಡು ಹೊಳೆಯಲ್ಲಿರುವ ತೆರದ ಬಾವಿಯ ನೀರನ್ನು ಜಿ. ಪಂ. ಎಂಜಿನಿಯರ್ ಬಳಿ ಅದನ್ನು ಪರೀಕ್ಷೆಗೊಳಪಡಿಸಿದಾಗ ಆ ನೀರು ಶುದ್ಧವಾಗಿದ್ದು, ಇದರಿಂದ ಜನರಿಗೆ ಯಾವುದೇ ಅಪಾಯವಿಲ್ಲ ಎಂಬ ವರದಿ ಬಂದಿದೆ.
ಕಡಂಬು ಪರಿಸರ ಮನೆಗಳಿಗೆ ಆರೋಗ್ಯ ಇಲಾಖೆಯ ಪೊನ್ನಮ್ಮ ಅವರು ಭೇಟಿ ನೀಡಿ ಅಲ್ಲಿ ಜನರನ್ನು ಪರೀಕ್ಷಿಸಿದಾಗ ನೀರಿನಿಂದ ಜನತೆ ಯಾವುದೇ ರೀತಿಯಲ್ಲಿ ರೋಗಕ್ಕೆ ತುತ್ತಾಗಿಲ್ಲ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ ಅವರು ವಿಟ್ಲ ಪಡ್ನೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಆಗುವುದನ್ನು ಸಹಿಸದ ಕೆಲ ಸಂಘಟನೆಗಳು ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ವಿಟ್ಲ ಪಡ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆಯಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಧವ ಮಾವೆ, ವಿಟ್ಲ ಪಡ್ನೂರು ಗ್ರಾ. ಪಂ. ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ, ಉಪಾಧ್ಯಕ್ಷ ಪಡಾರು ಬಾಲಕೃಷ್ಣ, ಸದಸ್ಯರಾದ ಸಿದ್ದಿಕ್ ಸರಾವು, ಅಬ್ದುಲ್ ರಹಿಮಾನ್ ಕಡಂಬು, ಇಸ್ಮಾಯಿಲ್, ಕೊಳ್ನಾಡು ಗ್ರಾ.ಪಂ. ಸದಸ್ಯ ಯೂಸುಫ್ ಮೊದಲಾದವರು ಇದ್ದರು.

ಬಡವರಿಗೆ ಮನೆ ಕೊಡಿ: ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಸಿಪಿಐಎಂ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಬುಧವಾರ ರ‍್ಯಾಲಿ ಹಾಗೂ ಪ್ರತಿಭಟನೆ ನಡೆಯಿತು.
ಪುತ್ತೂರಿನ ರೈಲ್ವೇ ನಿಲ್ದಾಣದ ಬಳಿಯಿರುವ ಸಿಪಿಐಎಂ ಕಚೇರಿಯಿಂದ ತಾಲೂಕು ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ತಾಲೂಕು ಕಚೇರಿ ಮುಂಭಾಗ ದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಸಭೆಯಲ್ಲಿ ಸಿಪಿಐಎಂ ಮುಖಂಡ ಬಿ.ಎಂ. ಭಟ್ ಅವರು ಮಾತನಾಡಿ, ತಾಲೂಕಿನಾದ್ಯಂತ ಸಾವಿರಾರು ಬಡ ಕುಟುಂಬಗಳು ಸ್ವಂತ ನಿವೇಶನ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ ಇವರ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ. ಕಳೆದ ಹಲವು ವರ್ಷಗ ಳಿಂದ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಈ ತನಕ ಸರ್ಕಾರ ಹಕ್ಕು ಪತ್ರ ನೀಡಿಲ್ಲ ಎಂದು ಆರೋಪಿ ಸಿದರು. ಸಿಪಿಐಎಂ ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಪಿ.ಕೆ. ಸತೀಶನ್ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ಮತ್ತು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದ ಬಡ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಹಕ್ಕು ಪತ್ರ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಮನೆ ಇಲ್ಲದ ವರಿಗೆ ಮನೆ ನಿರ್ಮಾಣಕ್ಕೆ ರೂ. ೨ಲಕ್ಷ ಸಹಾಯಧನ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ಬಳಿಕ ಪ್ರತಿಭಟ ನಾಕಾ ರರು ತಮ್ಮ ಬೇಡಿಕೆಗಳನ್ನು ಒಳ ಗೊಂಡ ಮನವಿಯನ್ನು ತಹಶೀ ಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಿ ದರು. ಸಿಪಿಐಎಂ ಮುಖಂಡ ರಾದ ಜಯ ರಾಮ ಮಯ್ಯ, ಮೇದಪ್ಪ, ಕೇಶವ, ಕೃಷ್ಣ ನಿಡ್ಪಳ್ಳಿ ಮತ್ತಿತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಎ.೧೪ರಂದು ಪುತ್ತೂರಿನಲ್ಲಿ ದಲಿತ ಸಂಘಟನೆಯಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ದಲಿತರ ಪ್ರಮುಖ ಬೇಡಿಕೆಯಾಗಿರುವ ಸವಣೂರಿನ ಅಂಬೇಡ್ಕರ್ ಭವನ ಸಮಸ್ಯೆಯನ್ನು ಅಧಿಕಾರಿಗಳು ಇನ್ನೂ ಪರಿಹರಿಸದೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಕಾರಣ ಎ.೧೪ರಂದು ಅಂಬೇಡ್ಕರ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಕೂಸಪ್ಪ ತಿಳಿಸಿ ದ್ದಾರೆ. ಅವರು ಬುಧವಾರ ಪುತ್ತೂರಿ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡುತ್ತಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸರ್ಕಾರಿ ಕಾರ್ಯಕ್ರಮ ವಾದ ಅಂಬೇ ಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಅವರಿಗೆ ನಕಲಿ ಗೌರವ ತೋರಿಸುತ್ತಾರೆ ಎಂದು ದೂರಿದ ಅವರು ದಲಿತರ ಸಮಸ್ಯೆಗಳನ್ನು ಕೇಳುತ್ತಿಲ್ಲ, ಸವಣೂರು ಅಂಬೇಡ್ಕರ್ ಭವನದ ಹೆಸರಿನ ಗೊಂದಲವನ್ನು ಸರಿಪಡಿಸದೆ ಅಂಬೇ ಡ್ಕರ್ ಅವರಿಗೆ ಅವಮಾನ ಎಸಗಿರುವ ಪುತ್ತೂರು ತಾ. ಪಂ. ಮತ್ತು ಸವಣೂ ರಿನ ಗ್ರಾಮ ಪಂಚಾಯತ್ ಅಧಿಕಾರಿ ಗಳು ಭಾಗವಹಿಸುವುದನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘ ಟನೆಯ ಮುಖಂಡರಾದ ಬಾಬು ಸವ ಣೂರು. ಸೇಸಪ್ಪ ನೆಕ್ಕಿಲು, ಗಣೇಶ್ ಗುರಿ ಯಾನ, ಮೋನಪ್ಪ ದ್ರಾವಿಡ ಉಪಸ್ಥಿತರಿದ್ದರು.

ನಾಳೆ ಯಡ್ಡಿ ಭವಿಷ್ಯ ನಿರ್ಧಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಡಿಯೂರಪ್ಪ ನವರ ರಾಜಕೀಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಸಿಇಸಿ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನ ಹಸಿರುಪೀಠ ಪ್ರಕರಣದ ವಿಚಾರಣೆ ಕೈಗೊಳ್ಳಲಿದೆ.
ಗಣಿ ಹಗರಣದಲ್ಲಿ ಯಡಿಯೂರಪ್ಪ ನವರ ಮೇಲೆ ಪೀಠ ಗುರುತರ ಆಪಾದನೆ ಮಾಡಿದರೆ ಅವರಿಗೆ ಗುರುತರ ಸರ್ಕಾರದಲ್ಲಾಗಲಿ ಅಥವಾ ಪಕ್ಷದಲ್ಲಾಗಲಿ ಯಾವುದೇ ಅಧಿಕಾರ ಇಲ್ಲ. ಒಂದು ವೇಳೆ ಹಗರಣದಲ್ಲಿ ಯಡಿಯೂರಪ್ಪರ ಹೆಸರನ್ನು ಪ್ರಸ್ತಾಪಿಸಿ ಅವರಿಂದ ಯಾವುದೇ ಗುರುತರ ಆಪಾದನೆಗಳನ್ನು ಮಾಡದಿದ್ದರೆ ಅವರಿಗೆ ಮತ್ತೆ ಮುಖ್ಯಮಂತ್ರಿ ಅಧಿಕಾರ ಖಂಡಿತ. ಯಡಿಯೂರಪ್ಪರ ಪರ ತೀರ್ಪು ಬಂದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿಯಲ್ಲಿ ರಾಜಕೀಯ ತಲ್ಲಣ ಮೂಡಲಿದೆ.
ತಕ್ಷಣವೇ ಕೋರ್ ಕಮಿಟಿ ಹಾಗೂ ಸಂಸದೀಯ ಮಂಡಳಿಯ ಸಭೆ ಸೇರಿ ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಿ ಯಡಿಯೂರಪ್ಪ ರಿಗೆ ಅಧಿಕಾರ ನೀಡುವ ತೀರ್ಮಾನ ಕೈಗೊಳ್ಳಲಿದೆ. ಇವೆಲ್ಲವೂ ಎ. ೧೬ರ ವೇಳೆಗೆ ಅಂತ್ಯಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯೂ ಇದೆ. ಒಂದು ವೇಳೆ ಹಗರಣ ನಡೆದಿದೆ ಎಂಬುವುದಾದರೆ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸದಾನಂದ ಗೌಡ ಅಧಿಕಾರದಲ್ಲಿ ಮುಂದುವರಿಯು ವುದಾದರೆ ಜತೆಗೆ ಯಡಿಯೂರಪ್ಪರಿಗೆ ಯಾವುದೇ ಹುದ್ದೆಗಳು ಇಲ್ಲ, ಜತೆಗೆ ಅವರನ್ನು ಪಕ್ಷದಲ್ಲಿ ಮುಂದುವರಿಸಬೇಕೇ ಬೇಡವೇ ಎಂಬ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಒಟ್ಟಾರೆ ಎಪ್ರಿಲ್ ೧೩ ಯಡಿಯೂರಪ್ಪ ಮತ್ತು ಸದಾನಂದ ಗೌಡರ ರಾಜಕೀಯ ಭವಿಷ್ಯದ ಮಹತ್ವದ ದಿನವಾಗಿದೆ.

ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್

Posted by JAYAKIRANA Kirana on | 0 comments | Leave a comment...

ಡಾ. ವೆಂಕಟಸುಬ್ಬರಾವ್
ಈಗ್ಲೆ ಒಂದು ನೂರಾ ಇಪ್ಪತ್ತೊಂದು ವರ್ಷಗಳ ಹಿಂದೆ ಕಬೀರ್ ಪಂಥದ ತೇಜಃಸ್ವರೂಪಿಯಾದ ಸಾಧುವರೇಣ್ಯರು ಮೋಹಿಗೆ ಭೇಟಿ ನೀಡಿ ಇತ್ತ ಸಂದರ್ಭದಲ್ಲಿ ಅಲ್ಲಿಯೇ ಸೈನಿಕ ಶಾಲೆಯ ಮುಖ್ಯೋಪಾ ಧ್ಯಾಯ ವೃತ್ತಿಯಲ್ಲಿದ್ದ ರಾಮಜೀ ಸಕ್ಬಾಲ ಮತ್ತು ಕಬೀರ್ ಪಂಥನು ಯಾಯಿ ದೈವ ಭಕ್ತೆ ಭೀಮಾಬಾಯಿ ದಂಪತಿಗೆ ದರ್ಶನ ಭಾಗ್ಯ ನೀಡಿ ಅವರ ಮೇಲೆ ಕೃಪಾವಲೋಕನ ಬೀರಿ ಹೃದಯ ತುಂಬಿ ಹರಿಸುತ್ತಾರೆ. ಹದಿಮೂರು ಮಕ್ಕಳನ್ನು ಪಡೆದಿದ್ದ ರಾಮಜೀ ಸಂಸಾರದ ತಾಪತ್ರಯ ಗಳನ್ನು ಆ ಸಾಧುಗಳ ಬಳಿ ಹೇಳಿಕೊಳ್ಳುತ್ತಾ ಬರುವ ಅಲ್ಪ ಸಂಬಳದಿಂದ ಮಕ್ಕಳನ್ನು ಸಾಕುವುದು ಕಷ್ಟವಾಗುವುದು ಎಂಬ ವಾಸ್ತವವನ್ನು ಭಕ್ತಿ ಬಾವದಿಂದ ಅಂತರಂಗವನ್ನು ಬಚ್ಚಿಡುತ್ತಾರೆ. ಸಾಧುಗಳು ಅವರನ್ನು ಪ್ರೀತಿಯಿಂದ ಸಂತೈಸುತ್ತಾ ಈ ಬಗ್ಗೆ ಚಿಂತಿಸಬೇಡ. ‘ನೀನು ಮತ್ತು ನಿನ್ನ ಹೆಂಡತಿಯೂ ಪುಣ್ಯ ಶಾಲಿಗಳು. ಮಹಾ ಪುರುಷನೊಬ್ಬ ನಿಮಗೆ ಮಗನಾಗಿ ಜನಿಸುತ್ತಾನೆ. ನಿನ್ನ ವಂಶಕ್ಕವನು ಬೆಳಕಾಗುತ್ತಾನೆ. ಜಗತ್ತಿನಲ್ಲೆಲ್ಲ ಅವನ ಕೀರ್ತಿ ಪಸರಿಸಿ ಜಗದ್ವಿಖ್ಯಾತವಾಗುವುದು ಎಂಬ ದಿವ್ಯವಾಣಿ ಯೊಂದಿಗೆ ಆಶೀರ್ವದಿಸಿ ಮರಳುತ್ತಾರೆ.
ಆಗ ಭಾರತ ದೇಶದ ಅಸಂಖ್ಯಾತ ಶೋಷಿತರು, ತುಳಿತಕ್ಕೊಳ ಗಾದವರ ಬದುಕಿನ ತುಂಬೆಲ್ಲ ಬರೀ ಕಗ್ಗತ್ತಲು ಆವರಿಸಿಕೊಂಡಿತ್ತು. ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ಹಸಿ ಹಸಿಯಾಗಿ ತಾಂಡವಾ ಡುತ್ತಿತ್ತು. ಮಡಿ ಮೈಲಿಗೆಯ ಭಾವನೆಯು ವಿಸ್ತಾರವಾಗಿ ಚಾಚಿಕೊಂಡು ಪೆಡಂಭೂತವಾಗಿ ಕಾಡುತ್ತಿತ್ತು. ಬ್ರಾಹ್ಮಣ ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಚಾತುವರ್ಣ ಪದ್ದತಿಯು ಎಲ್ಲೆಡೆ ತನ್ನ ಛಾಪನ್ನು ಗಟ್ಟಿಯಾಗಿ ಭದ್ರಗೊಳಿಸಿಕೊಂಡಿತ್ತು. ಹೊಲೆಯ, ಮಹರ್, ಮಾದಿಗ, ಸಮಗಾರ, ಚಮಗಾರ, ಚಲವಾದಿ, ಚನ್ನಯ್ಯ, ಡೋಹರ, ಮೋಚಿ, ಮಚ್ಚೆಗಾರ, ಭಂಗಿ, ಮಾಂಗ್, ಮಾಲಾ, ಮುಲ್ಲರ್, ಪರಯಾ, ಪುಲಯ, ಜಾತವ, ವಾಲ್ಮೀಕಿ, ದೋಮ್, ಮೌರ್ಯ ಇತ್ಯಾದಿ ಇತ್ಯಾದಿ..... ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ನೂರಾರು ಹೆಸರುಗಳಿಂದ ಕರೆಯಲ್ಪಡುತ್ತಿರುವ ‘ಅಸ್ಪೃಶ್ಯರು (ಸವರ್ಣಿಯರು ಇಟ್ಟ ಹೆಸರು) ಎಂಬ ನಾಗಾ ಜನಾಂಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಇತ್ಯಾದಿ ಎಲ್ಲಾ ರಂಗದಲ್ಲೂ ಶೋಷಣೆ ಅಸಮಾನತೆಗೆ ತುತ್ತಾಗಿ ಶೋಚನೀಯ ಸ್ಥಿತಿಯನ್ನು ಅನುಭವಿಸುತ್ತಿತ್ತು. ಇಂಥ ಅನೀತಿ, ಅಜ್ಞಾನ, ಅನ್ಯಾಯ, ಮೌಢ್ಯಾಂಧಕಾರ ಕವಿದುಕೊಂಡ ಕಗ್ಗತ್ತಲ ಬಾನಿನಲ್ಲಿ ಬಂಡಾಯದ ಮತ್ತು ಕ್ರಾಂತಿಯ ಕೆಂಪು ದೈವತಾರೆಯಾಗಿ ದಲಿತರು-ದಮನಕ್ಕೊಳಗಾದವರ ಬದುಕಿನ ಹೊಸ ಆಶಾಕಿರಣವಾಗಿ ಭೀಮಾ ಬಾಯಿ ರಾಮಜೀ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ ೧೮೯೧ರ ಎಪ್ರಿಲ್ ೧೪ರಂದು ಡಾ. ಭೀಮರಾವ್ ರಾಮಜೀ ಅಂಬೇಡ್ಕರ್ ಜನ್ಮ ತಾಳುವ ಮೂಲಕ ಸಾಧುವರೇಣ್ಯರು ಹೇಳಿದ ಭವಿಷ್ಯವಾಣಿ ಅಕ್ಷರಶಃ ದಿಟ್ಟವಾಯಿತು. ಈ ಅರ್ಥದಲ್ಲಿ ನಾನು ಲೇಖನದ ಪ್ರಾರಂಭದಲ್ಲಿ ಉಪಯೋಗಿಸಿಕೊಂಡಿರುವ ಕವಿಸಾಲುಗಳು ಅರ್ಥಪೂರ್ಣವಾಗಿದೆ.
ಚಿಕ್ಕಂದಿನಲ್ಲಿಯೇ ಅತ್ಯುತ್ತಮ ಸಂಸ್ಕಾರದ ಸುಸಂಸ್ಕೃತ ಮನೆತನದ ವಾತಾವರಣದಲ್ಲಿ ಬೆಳೆದ ಅಂಬೇಡ್ಕರ್ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದಪೋಲಿ, ಸತಾರ, ಮುಂಬೈಗಳಲ್ಲಿ ಮುಗಿಸಿಕೊಂಡ ನಂತರ ಮುಂಬೈ, ಕೋಲಂಬಿಯಾ, ಲಂಡನ್ ಮತ್ತು ಬಾನ್ ವಿಶ್ವವಿದ್ಯಾಲ ಯದಲ್ಲಿ ಉನ್ನತ ವ್ಯಾಸಾಂಗ ವನ್ನು ಪೂರೈಸಿ ಕೊಂಡು ಅದ್ವಿತೀಯ ಆದರ್ಶ ಮತ್ತು ಮಹಾನ್ ಮುತ್ಸಧಿ, ಚಿಂತಕ, ವಿದ್ವಾಂಸರಾಗಿ ಹೊರಹೊಮ್ಮಿ ದ್ದೊಂದು ಯಶೋಗಾಧೆ ಎನ್ನುವುದಕ್ಕಿಂತ ಸ್ವಾಭಿಮಾನ, ಸತತಾಭ್ಯಾಸದ ಮನೋವೃತ್ತಿಯೇ ಕಾರಣವೆನ್ನಬೇಕು. ನಂತರ ಬ್ಯಾರಿಷ್ಟರ್ ಪದವಿ ಪಡೆದು ಅವರು ಮುಂಬೈ ಉಚ್ಛ ನ್ಯಾಯಾ ಲಯದಲ್ಲಿ ನ್ಯಾಯವಾದಿಯಾಗಿ ಅಲ್ಲಿನ ಸರ್ಕಾರಿ ಕಾನೂನು ವಿಶ್ವ ವಿದ್ಯಾಲಯದ ಪ್ರಾಚಾರ್ಯರಾಗಿ ಹೆಗ್ಗ ಳಿಕೆಯ ಸೇವೆಗೈದರು.
ಹಿಂದು ಸಮಾಜದ ದುರ್ಬಲ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಶೋಷಿತ-ನಿರ್ಲಕ್ಷಿತ ಅಸ್ಪೃಶ್ಯರ ಸಂಕಷ್ಟಕ್ಕೆ ನೋವಿಗೆ ಮುಖವಾಣಿಯಾಗಿ ನಿಂತವರು ಅಂಬೇಡ್ಕರ್. ತುಳಿತಕ್ಕೊಳಗಾದ ನೊಂದ ಜನಾಂಗಗಳ ಏಳಿಗೆಗಾಗಿ ಪರಿಶ್ರಮ ಪಟ್ಟು ಪರಮಸಾಧನೆಗೈದರು. ತಮ್ಮ ಇಡೀ ಜೀವಿ ತವನ್ನೇ ಅವರಿಗೆ ಅರಿವು, ತಿಳುವಳಿಕೆ ನೀಡುವುದಕ್ಕಾಗಿ ಮುಡಿಪಾಗಿಸಿ ಕೊಂಡರು. ವೇದ, ಶಾಸ್ತೃ, ಆಗಮ ಗ್ರಂಥಗಳನ್ನು, ಪೌರಾತ್ಯ-ಪಾಶ್ವಾತ್ಯ ವಿದ್ವತ್ಪೂರ್ಣ ಅಧ್ಯಯನ-ಅಧ್ಯಾಪನ ನಡೆಸಿ ಕರಗತಮಾಡಿಕೊಂಡ ಮಹಾ ಮೇಧಾವಿ ಅವರು. ದಲಿತ ಜನಾಂಗಕ್ಕೆ ನಾಗರಿಕ ಹಾಗೂ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಡಲು ಜೀವನಪೂರ್ತಿ ಹೋರಾಟ ನಡೆಸಿದರು. ದುಂಡುಮೇಜಿನ ಪರಿಷತ್ತಿಗೆ ಹೋಗಿ ಬಂದರು. ಹೋಂ ರೂಲ್ ಬೇಡಿಕೆಗೆ ಒಪ್ಪದೇ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕೆಂದೂ ಅದರಲ್ಲಿ ದಲಿತ ವರ್ಗಕ್ಕೆ ಪೂರ್ಣ ರಕ್ಷಣೆ ಬೇಕೆಂದೂ ಹಠಕ್ಕೆ ಬಿದ್ದು ವಾದಿಸಿದರು. ಜಾತಿವಾರು ತೀರ್ಪು ಹೊರ ಬಂದಾಗ ಅದನ್ನು ಬದ್ದವಾಗಿ ವಿರೋಧಿಸಿ ಮಹಾತ್ಮ ಗಾಂಧೀಜಿಯವರು ಅಮರಣಾಂತ ಉಪವಾಸ ಸತ್ಯಾಗ್ರಹದ ನಾಟಕ ಹೂಡಿ ಬಿಟ್ಟರು! ನಿಮ್ಮ ಜನಾಂಗಕ್ಕೆ ಅಂಬೇಡ್ಕರ್ ಗೆದ್ದುಕೊಟ್ಟಿದ್ದ ರಾಜಕೀಯ ಹಕ್ಕುಗಳ ಪ್ರಭಾವವನ್ನು ಸಂಪೂರ್ಣವಾಗಿ ಕುಗ್ಗಿಸುವುದೇ ಗಾಂಧೀಜಿಯವರ ಉದ್ದೇಶವಾಗಿತ್ತು. ಎಂಬುವುದರಲ್ಲಿ ಅಕ್ಷರಶಃ ಹುರುಳಿದೆ ಎನಿಸುವುದು. ಇಡೀ ದೇಶದ ಮಹಾತ್ಮನ ಜೀವಕ್ಕೆ ಅಂಬೇಡ್ಕರ್‌ನಿಂದ ಕುತ್ತು ಬಂದೀತೆಂಬ ಅಪವಾದ ಬರಬಾರದೆಂದೂ ಮತ್ತು ಗಾಂಧೀಜಿಯವರ ಸೇವೆಯೂ ದೇಶಕ್ಕೆ ಅಗತ್ಯವಾಗಿರುವುದರಿಂದಲೂ ಅವರ ಅಭಿಮಾನಿಯಾಗಿದ್ದ ಕಾರಣವಾಗಿ ೧೯೩೨ರ ಪೂನಾ ಒಪ್ಪಂದವೆಂಬ ಪ್ರಸಿದ್ದ ಒಡಂಬಡಿಕೆಗೆ ಬಾಬಾ ಸಾಹೇಬ್ ಅಂಬೇಡ್ಕರ್‌ರು ಒಲ್ಲದ ಮನಸ್ಸಿನ ಅಂಕಿತ ಹಾಕಿ ತಾನೂ ಪರಮನಿಷ್ಠ ದೇಶಭಕ್ತನಾಗಿರುವುದನ್ನು ತೋರಿಸಿಕೊಟ್ಟರು.
ರಾಜ್ಯಾಂಗ ರಚನಾ ಸಭೆಗೆ ಮುಂಬೈ ವಿಧಾನ ಸಭೆಗೆ ಸ್ಪರ್ಧಿಸಿ ಸೋತ ಅಂಬೇಡ್ಕರ್ ೧೯೪೬ರಲ್ಲಿ ಬಂಗಾಳ ವಿಧಾನ ಸಭೆಯಿಂದ ಆಯ್ಕೆಯಾದರು. ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾಗಿಯೂ ರಾಜ್ಯಾಂಗ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿಯೂ ೧೯೪೭ರಲ್ಲಿ ಆಯ್ಕೆಯಾದರು. ಹಿಂದುಗಳಿ ಗೆಲ್ಲ ಸಮಾನ ಕಾನೂನುಕ್ರಮಗಳನ್ನು ಒದಗಿಸುವುದಕ್ಕಾಗಿ ಅವರು ಹಿಂದು ಕೋಡ್ ಬಿಲ್ಲನ್ನು ತಯಾರಿಸಿದರು. ಆದರೆ ದುರ್ದೈವದಿಂದ ಭಾರತ ಪ್ರಧಾನಿ ನೆಹರುರವರ ಬೆಂಬಲ ದೊಕದ್ದರಿಂದ ಆ ಮಸೂದೆ ಪಾಸಾಗಲೇ ಇಲ್ಲ. ಈ ಕಾರಣದಿಂದಲೇ ಅವರು ದಲಿತ ವರ್ಗದವರ ಬಗ್ಗೆ ಸರ್ಕಾರವು ಹೊಂದಿದ್ದ ನಿಷ್ಠಾಳಜಿ, ನಿರಾಶಕ್ತಿಯನ್ನು ಅತ್ಯುಘ್ರವಾಗಿ ಖಂಡಿಸಿ ತಮ್ಮ ಸಚಿವ ಪದವಿಗೆ ರಾಜೀನಾಮೆ ಇತ್ತು ಹೊರಬಂದು ಸ್ವಾಭಿಮಾನವನ್ನು ಮೆರೆಯುತ್ತಾರೆ.
ಅವರ ಬದುಕು-ಭಾಷಣ, ಬರಹ-ಹೋರಾಟ, ಪ್ರಕಾಂಡ ಪಾಂಡಿತ್ಯ, ವ್ಯಕ್ತಿತ್ವದ ಕುರಿತು ಹೇಳಿದಷ್ಟೂ ಕಡಿಮೆ. ಇಂಥ ಒಬ್ಬ ಅಸಾಧರಣ, ನಿರ್ಭೀತ, ನಿರ್ಭಿಡೆಯ ಮಹಾನ್ ವ್ಯಕ್ತಿಯು ಧೀಶಕ್ತಿಯಾಗಿ ಮನುಕುಲದ ಇತಿಹಾಸದಲ್ಲಿ ಹುಟ್ಟಿ ಬಂದದ್ದೇ ಸರ್ವ ಶೋಷಣೆಯಿಂದಲೂ ಮುಕ್ತವಾದ ನವ ಸಮಾಜ ನಿರ್ಮಾಣ ಮಾಡಲು ಎನ್ನಲೇಬೇಕು. ೧೯೩೫ರಲ್ಲಿ ನಾಸಿಕ್ ಜಿಲ್ಲೆಯ ಯಾವೋ ಲಾದಲ್ಲಿ ನಡೆದ ದಲಿತ ವರ್ಗಗಳ ಮಹಾ ಸಮ್ಮೇಳನದಲ್ಲಿ ಅವರು ಎಲ್ಲಾ ದಲಿತರೂ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸುವಂತೆ ಬಹಿರಂಗ ಕರೆ ನೀಡಿದರು. ನಾನು ಹಿಂದುವಾಗಿ ಹುಟ್ಟಿರುವೇ ದರೂ ಹಿಂದುವಾಗಿ ಸಾಯಲಾರೆ ಎಂಬ ಕ್ರಾಂತಿ ಕಾರಕ ಘೋಷಣೆ ಹೊರಹೊ ಮ್ಮಿದಾಗ ಎಲ್ಲ ಭಾರತೀಯ ಹೃದಯ ಒಮ್ಮೆ ತಲ್ಲಣಗೊಂಡಿರಲೇ ಬೇಕು. ತಮ್ಮ ಅಂತರಾಳದ ಕೂಗಿಗೆ ಕಟಿಬದ್ಧರಾಗಿದ್ದ ಅವರು ೧೯೫೬ರಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು. ಈ ಮೂಲಕ ಮಹಾ ಧಾರ್ಮಿಕ ಧುರೀಣರೂ ದೇವನಾಂಪ್ರಿಯ ಚಕ್ರವರ್ತಿ ಅಶೋಕ ಮಹಾಶಯನ ತರುವಾಯ ಭಾರತದಲ್ಲಿ ಬೌದ್ಧ ಪುನರು ದ್ದಾರಕರೂ ಆಗಿ ಬೋಧೀಸತ್ವ ಅಂಬೇಡ್ಕರಾದರು.
ದೀನದಲಿತರು, ವಂಚಿತರು, ದಬ್ಬಾಳಿಕೆಗೊಳಗಾದ ಸ್ತ್ರೀಯರು... ಇವರೆಲ್ಲರ ವಿಮೋಚನೆಗಾಗಿಯೇ ಅಂಬೇಡ್ಕರ ಬದುಕಿದರು, ದುಡಿದರು. ಭಾರತದ ಐಕ್ಯ ಹಾಗೂ ಪುನರ್ ಘಟನೆಗಾಗಿ ಹೋರಾಡಿದ ಈ ವಿಶ್ವಮಾನವ, ಸಾಮಾಜಿಕ ನ್ಯಾಯದ ಹರಿಕಾರ ಹೊಸ ದಿಲ್ಲಿಯ ಅಲಿಪೋರ್ ರಸ್ತೆಯಲ್ಲಿಯ ತಮ್ಮ ೨೬ನೇ ಕ್ರಮ ಸಂಖ್ಯೆಯ ನಿವಾಸದಲ್ಲಿ ೧೯೫೬ನೇ ಡಿಸೆಂಬರ್ ಆರರಂದು ನಿರ್ವಾಣ ಹೊಂದಿದರು.

ನಾಗನ ಮೂಲಕ ಮಾನಸಿಕ ಒತ್ತಡ, ಲಕ್ಷಗಟ್ಟಲೆ ವ್ಯವಹಾರ!

Posted by JAYAKIRANA Kirana on | 0 comments | Leave a comment...

ಅಶೋಕ್ ಹಲಾಯಿ ಬಂಟ್ವಾಳ
ಪ್ರಕೃತಿ ಇದ್ದರೆ ಸಕಲ ಜೀವರಾಶಿ ಬದುಕುವುದಕ್ಕೆ ಸಾಧ್ಯ. ಪ್ರಕೃತಿ ಉಳಿಸಿ ಬೆಳೆಸುವ ಸಲುವಾಗಿ ನಮ್ಮ ಪ್ರಾಚೀನ ಕಾಲದ ಹಿರಿಯರು ಬನಗಳನ್ನು ನಿರ್ಮಿಸಿ ಅದರಲ್ಲಿ ಸಸ್ಯ ಸಂಪತ್ತು ಜೀವರಾಶಿ ರಕ್ಷಿಸುವ ಸಲುವಾಗಿ ಅದರಲ್ಲಿನ ಮರಗಳನ್ನು ಕಡಿಯದೇ ಕಾಯ್ದುಕೊಂಡು ಬಂದರು. ಮನುಜ ಕುಲಕ್ಕೆ ಉಸಿರನ್ನು ನೀಡಬಹು ದಾದ ಮರಗಿಡಗಳನ್ನು ಸಂರಕ್ಷಿಸುವ ದೊಡ್ಡ ಉದ್ದೇಶ ಅಡಕವಾಗಿದ್ದನ್ನು ಗಮನಿಸಬೇಕು. ಬನಗಳಲ್ಲಿ ಹಾವುಗಳಲ್ಲಿ ವಿಶೇಷ ದೇಹ ರಚನೆ ಹೊಂದಿರುವ ನಾಗರ ಹಾವು ವಿಷಪೂರಿತ ಗುಣ ಹೊಂದಿರುವ ಕಾರಣ ಅದು ಭಯವಾದಾಗ ಹೆಡೆ ಬಿಚ್ಚಿಕೊಳ್ಳುವುದು ಅದರ ವಿಶೇಷತೆ ಇರುವ ಕಾರಣದಿಂದ ಅದನ್ನು ಕೊಲ್ಲದೆ ಅದರ ಚಿತ್ರಣವನ್ನು ಕಲ್ಲಿನಲ್ಲಿ ಕೆತ್ತಿ ಅದಕ್ಕೆ ಪೂಜೆ ಮಾಡುವ ಪ್ರಕ್ರಿಯೆ ಆರಂಭವಾದವು. ಅದಕ್ಕಾಗಿಯೇ ನಾಗರ ಪಂಚಮಿ ಎಂಬ ವಿಶೇಷ ದಿನವನ್ನಾಗಿ ಕಲ್ಪಿಸಿ ದೇವಾನುದೇವತೆಗಳ ಚಿತ್ರಗಳಲ್ಲಿ ನಾಗನ ಇರುವಿಕೆಯನ್ನು ತೋರ್ಪಡಿಸಿ ಸರಳವಾಗಿ ಆರಾಧನಾ ಕ್ರಮ ಜಾರಿಗೆ ಬಂದವು. ಹಿರಿಯರ ಉದ್ದೇಶ ಪ್ರಕೃತಿ ರಕ್ಷಿಸುವುದೇ ಆಗಿತ್ತೇ ಹೊರತು. ಮೂಲ ಚಿಂತನೆ ಹೊಳಹು ಮನುಜ ಕುಲಕ್ಕೆ ಒಳ್ಳೆಯ ಉಸಿರು ಸಿಗುವ ವಿಚಾರ ಆಗಿತ್ತು. ಬನವು ನಾಗಬನವಾಗಿ ಕುಲಕ್ಕೆ ಒಳ್ಳೆಯ ಉಸಿಸರು ಸಿಗುವ ವಿಚಾರ ಆಗಿತ್ತು. ಬನವು ನಾಗಬನವಾಗಿ ರೂಪಾಂತರ ಹೊಂದಿದವು. ಅದರಲ್ಲಿರುವ ಗೆದ್ದಲಿನ ಹುತ್ತ ಅದರೊಳಗಿರುವ ಜೀವರಾಶಿಗಳ ಸಂಕುಲ ಇವೆಲ್ಲದರ ಪೋಷಣೆ ಜೊತೆಗೆ ಕುಟುಂಬಿಕರೆಲ್ಲರೂ ಸೇರಿ ಆ ಬನದೊಳಗೆ ವರ್ಷಕ್ಕೊಮ್ಮೆ ಸೇರಿ ಪೂಜೆ ಸಲ್ಲಿಸಿದರು. ಅದು ನಾಗ ಪೂಜೆ ಅಲ್ಲ. ಪ್ರಕೃತಿ ಪೂಜೆ ಆಗಿತ್ತು ಎಂಬುದನ್ನು ಗಮನಿಸಬೇಕು. ಕೂಡಿ ಬಾಳುವ ಒಂದು ಸುಂದರ ವ್ಯವಸ್ಥೆ.
ಇದು ಪ್ರಾಚೀನ ಕಾಲದಲ್ಲಿ ಆದ ನೈಜ ವಿಚಾರವಾಗಿತ್ತೇ ಹೊರತು ಯಾವುದೇ ಆಡಂಬರವಿರಲಿಲ್ಲ. ನಾಗಪೂಜೆ ವೈದಿಕರೇ ಮಾಡಬೇಕೆಂದು ನಿಯಮವಿಲ್ಲ. ಯಾರೂ ಬೇಕಾದರೂ ನಡೆಸಬಹುದು. ಹಾಲು ನಾಗ ಕುಡಿಯುವುದೇ ಇಲ್ಲ. ಕಲ್ಲಿಗೆ ಹಾಲು, ಸಿಯಾಳ ಇತ್ಯಾದಿ ಎರೆಯುವುದರ ತಾತ್ವಿಕ ಅರ್ಥ ಇಷ್ಟೆ. ಪ್ರಕೃ ತಿಯ ಆರಾಧನೆ ಹಾಲು ಇರಬೇಕಾದ ಹಸು, ಗೋ ಸಂಪತ್ತು, ಸಿಯಾಳ ಕಲ್ಪ ವೃಕ್ಷದಂತಿರುವ ತೆಂಗು ಇವೆಲ್ಲವೂ ಇರಬೇಕು. ಜೊತೆಗೆ ಹಿಂಗಾರ ಇತ್ಯಾದಿ ಇವೆಲ್ಲವೂ ಸಂಪತ್ತಿನ ದ್ಯೋತಕವಾಗಿದ್ದವು ಆ ಕಾಲದಲ್ಲಿ. ಈಗ ಇವು ಇಲ್ಲದಿದ್ದರೂ ಮನೆ ಬಂಗಲೆ, ಅದರಲ್ಲಿ ಮೂರು ನಾಲ್ಕು ಕಾರುಗಳು, ಎರಡು ಮೂರು ವಿಶೇಷ ತಳಿಯ ನಾಯಿಗಳು, ಅವುಗಳನ್ನು ನೋಡಿಕೊಳ್ಳುವುದಕ್ಕೆ ಜನ. ಇತ್ಯಾದಿ ಚಿತ್ರಣಗಳು ಸಂಪತ್ತು ಎನಿಸಿಬಿಟ್ಟಿವೆ.
ಎ. ೬ರ ಚಾವಡಿಯಲ್ಲಿ ಸಂತೋಷ್ ಶೆಟ್ಟಿ ಬಿಜೈಯವರ ಪತ್ರದಲ್ಲಿ ಹಲವು ಚಿಂತನಾರ್ಹ ವಿಚಾರ ಉಲ್ಲೇಖಿಸಿದ್ದು ಗಮನಾರ್ಹ. ಅದಕ್ಕೆ ಪೂರಕವಾಗಿಯೇ ಕೆಲವು ವಿಚಾರಗಳನ್ನು ಮೆಲುಕು ಹಾಕಬೇಕಾಗಿದೆ.
ಈಗ ನಾಗಬನ ಯಾವ ರೀತಿ ನಿರ್ಮಾಣವಾಗಿದೆ. ಅತ್ಯಾಧುನಿಕ ಶೈಲಿಯ ನಾಗ ಬನಗಳ ಚಿತ್ರಣ ಒಮ್ಮೆ ನೋಡಿ. ಪ್ರಾಚೀನ ಕಾಲದಲಿನ ನಾಗಬನದ ಮರ, ಹುತ್ತ, ಬಳ್ಳಿ, ಗಿಡ ಇತ್ಯಾದಿ ಯಂತ್ರದಲ್ಲಿ ತೆಗೆಸಿ ಕಾಂಕ್ರೀಟೀಕರಣ ಆರಂಭವಾದ ಕಾಲವಿದು. ನಾಗಬನ ನಿರ್ಮಾಣ, ನಾಗಪೂಜೆ ಇತ್ಯಾದಿ ಪ್ರತಿಷ್ಠೆ ಎಂಬಂಥ ಸ್ಥಿತಿಗೆ ಮುಟ್ಟಿದ್ದು ದುಡ್ಡಿನ ಮದದಿಂದ ಎಂಬುದು ಸತ್ಯ.
ನಮ್ಮ ಹಿರಿಯರ ಮೂಲ ಉದ್ದೇಶ ಏನಿತ್ತೋ ಅದು ಇವತ್ತಿಗಾಗುವಾಗ ಯಾರಿಗೂ ಬೇಡ. ಪ್ರತಿಷ್ಠೆಯನ್ನೇ ಪಣವಾಗಿಟ್ಟು ಪರೋಕ್ಷವಾಗಿ ಹೋರಾಡುವ, ಒಬ್ಬರಿಗಿಂತ ಒಬ್ಬರು ಮೇಲಾಗುವ ಹುಚ್ಚಿನಿಂದಾಗಿ ಸಸ್ಯರಾಶಿ ನಾಶದ ಅಂಚಿಗೆ ಬಂದಿದೆ. ಇದ್ದ ಸ್ಥಿತಿಯಲ್ಲಿಯೇ ನಾಗಬನವಿದ್ದರೆ ಮರ್ಯಾದೆಗೆ ಪ್ರತಿಷ್ಠೆಗೆ ಕಡಿಮೆ ಅಂತ ಭಾವಿಸಿ ಲಕ್ಷಗಟ್ಟಲೆ ಸುರಿದು ಶಿಲಾಮಯ ನಾಗಬನ ಸೃಷ್ಟಿ ಮಾಡಿದರೆ ಅದು ನಾಗಬನ ಖಂಡಿತಾ ಅಲ್ಲ. ಸಸ್ಯವನ್ನು ನಾಶ ಮಾಡಿದ ಸ್ಥಳ. ಅದರಲ್ಲಿ ಕುಳಿತ ಪಕ್ಷಿ ಸಂಕುಲ, ನಾನಾ ರೀತಿಯ ಪ್ರಾಣಿಗಳಿಗೆ ದಿಕ್ಕೇ ಇಲ್ಲದ ಸ್ಥಿತಿ ಏರ್ಪಟ್ಟ ಕಾರಣ ಮರಗಿಡಗಳ ನಾಶದಿಂದಾಗಿಯೇ ಈಗ ವಿಪರೀತ ಬಿಸಿಲು, ವಿಪರೀತ ಸೆಖೆ. ವಿಪರೀತವಾದ ಚಳಿ ಇತ್ಯಾದಿ ಪ್ರಕೃತಿ ಸಮತೋಲನ ಕಳೆದುಕೊಂಡ ಕಾರಣ ವೈಪರೀತ್ಯಗಳು ಆಗುತ್ತಿವೆ. ಮುಂದೊಂದು ದಿನ ಬಿಸಿಲಿಗೆ ಮನುಷ್ಯ ಸುಟ್ಟು ಹೋಗುವ ಪ್ರಮೇಯ ಬಂದೊದಗಿದರೆ ಆಶ್ಚರ್ಯವಿಲ್ಲ.
ನಾಗಾರಾಧನೆ ಮನುಷ್ಯ ನಿರ್ಮಿತ ವಿಚಾರ. ನಾಗಾರಾಧನೆ ಬಗ್ಗೆ ಹುಟ್ಟಿಕೊಂಡ ಕಥೆ, ಕಟ್ಟುಪಾಡುಗಳು ಕೂಡಾ ಮನುಷ್ಯ ನಿರ್ಮಿತ ಇದರಲ್ಲಿ ಹೆಚ್ಚಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದ್ದು, ವೈದಿಕ ಜ್ಯೋತಿಷ್ಯ. ಮಹಿಳೆಯರಿಗೆ ಅದು ಕೂಡಾ ಶೂದ್ರ ಮಹಿಳೆಗೆ ರೋಗವೇನಾದರೂ ಬಂದರೆ ನಾಗ ಶಾಪ ಉಂಟು, ನಾಗ ಹತ್ಯಾ ದೋಷ ಪೂರ್ವಿಕರಲ್ಲಿ ಆಗಿದೆ. ಅದಕ್ಕೆ ಪ್ರಾಯಶ್ಚಿತ್ತ ಮಾಡಿಸಬೇಕು. ಸರ್ಪ ಸಂಸ್ಕಾರ, ಸರ್ಪ ಶಾಂತಿ, ಅಶ್ಲೇಷ ಪೂಜೆ, ಸ್ವಲ್ಪ ಅನುಕೂಲಸ್ಥರಾದರೆ ನಾಗದರ್ಶನ, ನಾಗ ಪ್ರತಿಷ್ಠೆ ಇತ್ಯಾದಿ ಮಾಡಿಸಬೇಕೆಂದು ಇವೆಲ್ಲ ಮಾಡದಿದ್ದರೆ ನಿಮ್ಮ ಸಂತಾನಕ್ಕೆ ದೋಷ ಬರುತ್ತದೆಂದು ಹೆದರಿಸಲಾಯಿತು. ಪಾಪ ವಿದ್ಯೆ ಇಲ್ಲದ ಇವರು ಹೇಳಿದ್ದನ್ನೆಲ್ಲಾ ಮಾಡಿಸಿ ಇಂಥದ್ದು ಅಂಥವರಿಂದಲೇ ಪ್ರಚಾರಕ್ಕೆ ಬಂದವು. ಈ ಕಾರಣದಿಂದಲೇ ನಾಗಾರಾಧನೆ ಪ್ರತಿಷ್ಠೆಯ ಹಂತಕ್ಕೂ ಮುಟ್ಟಿದ್ದು ಕಾಣುತ್ತದೆ ಇದರಲ್ಲಿ ವಿಶೇಷ ನಾಗಮಂಡಲ. ಸಂತೋಷ್ ಶೆಟ್ಟಿಯವರು ಈ ಬಗ್ಗೆ ತನ್ನ ಪತ್ರದಲ್ಲಿ ನೈಜ ವಿಚಾರವನ್ನು ಟಿವಿ ಕಾರ್ಯಕ್ರಮವನ್ನು ಉದಾಹರಿಸಿ ಹೇಳಿದ್ದು ಗಮನಾರ್ಹ.
ನನಗೆ ಪರಿಚಯವಾದ ಅಷ್ಟಮಂಗಳ ಇಡುವ ಕೇರಳದ ಬ್ರಾಹ್ಮಣ ಮಿತ್ರರೊಬ್ಬರು ನಾಗದರ್ಶನ, ನಾಗಮಂಡಲ ಇವು ಸುಳ್ಳು, ನಾಗಮಂಡಲ ಮಾಡುವುದು ಪಾಪ ಕರವಾದುದು ಇವುಗಳನ್ನು ಎಳೆಎಳೆಯಾಗಿ ಉದಾಹರಣೆ ಸಹಿತ ವಿವರಿಸುತ್ತಾ ನಾಗಾರಾಧನೆ ಸುಳ್ಳಲ್ಲ. ಅದು ಪ್ರಕೃತಿಯ ಆರಾಧನೆ ಅದನ್ನು ಪ್ರತಿಯೊಬ್ಬರೂ ಮಾಡಲಿ ಆದರೆ ಮಂಡಲ ಬರೆಯುವುದು ಮಾಡಲೇ ಬಾರದ ಕ್ರಿಯೆ. ಅಷ್ಟಪವಿತ್ರ ಉಂಗುರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೆಲಕ್ಕೆ ತಾಗಿಸಬಾರದು. ಅದನ್ನು ನೆಲದಲ್ಲಿ ಬಿಡಿಸುವುದು ಪಾಪಕರ ಎಂದರು. ನಾಗ ಮತ್ತು ಕನ್ನಿಕೆ ಸಮ್ಮಿಲನ ಕಲ್ಪಿತ ಕತೆ ಪ್ರಕೃ ತಿಕವಾಗಿ ಪ್ರತಿಜೀವಿಗಳಲ್ಲಿ ಸಂಯೋಗವಾಗುವ ಪ್ರಕ್ರಿಯೆ ಆ ಕಾರಣದಿಂದ ನಾಗದರ್ಶನ ಬರೀ ನಾಟಕ. ಸಂತೋಷ್‌ರವರು ಹೇಳಿದಂತೆ ಬ್ಲಾಕ್‌ಮನಿ ಇವೆಲ್ಲದರ ತೋರ್ಪ ಡಿಕೆಯಿಂದು ಫಲ ಶೂನ್ಯ. ಪ್ರಾಕೃತಿಕ ನಾಗಾರಾಧನೆ ನೆಮ್ಮದಿ ಕೊಡುತ್ತದೆ ಎಂಬುದು ಸತ್ಯ.
ಸರಳವಾದ ನಾಗತಂಬಿಲದಿಂದ ಹೆಚ್ಚು ಲಾಭ ಇಲ್ಲ ಎಂದು ಧಾರ್ಮಿಕ ಒತ್ತಡ ಹೇರಿ ದೊಡ್ಡ ಪೂಜೆ ಮಾಡಿಸಿ ಲಕ್ಷಗಟ್ಟಲೆ ಹಣದೋಚುವ ಲೆಕ್ಕಾಚಾರ ನಿರಂತರ ನಡೆಯುತ್ತಿದೆ. ಉದ್ಯಮಶೀಲ ಬಿಲ್ಲವ, ಬಂಟ ಇನ್ನಿತರರು ಇವರ ಬಲಿಪಶುಗಳು ಇವರಲ್ಲಿ ಪ್ರತಿಷ್ಠೆಯೇ ಮೇಳೈಸುತ್ತಿರುವುದು ಸತ್ಯ. ಪ್ಲೆಕ್ಸ್, ಬ್ಯಾನರ್‌ಗಳಲ್ಲಿ ತಮ್ಮನ್ನು ತೋರಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ದೈವಿಕ ಕಾರ್ಯಕ್ಕೆ ಶುಭ ಕೋರುವುದು ಆಭಾಸವಾಗಿ ಕಾಣುತ್ತದೆ. ಎಲ್ಲವೂ ದೈವಶಕ್ತಿಯಿಂದಲೇ ನಡೆಯುವುದಾದರೆ ನಾವು ಯಾರು? ಭಕ್ತಿ ಆಡಂಬರಕ್ಕೆ ಹೋದಾ ಗಲೇ ವೈಪರೀತ್ಯಗಳು ನಡೆಯುತ್ತವೆ.
ನಾಗಮಂಡಲಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುವುದರ ಬದಲಿಗೆ ರೋಗದಿಂದ ಆಸ್ಪತ್ರೆಯಲ್ಲಿ ನರಳುತ್ತಿರುವವರಿಗೆ ಚಿಕಿತ್ಸೆಗೆ ನೆರವಾಗಬಹುದು. ಮದುವೆಯಾಗದೇ ಕಷ್ಟದಿಂದಿರುವ ಹೆಣ್ಣುಗಳಿಗೆ ಮದುವೆಗೆ ಆರ್ಥಿಕ ಸಹಾಯ ಮಾಡಬಹುದು. ವಿದ್ಯೆ ಕಲಿಯಲು ಮನಸ್ಸಿದ್ದು ಆರ್ಥಿಕ ಶಕ್ತಿ ಇಲ್ಲದ ಮಕ್ಕಳಿಗೆ ವಿದ್ಯೆಗೆ ನೆರವಾಗಬಹುದು. ಇದನ್ನೆಲ್ಲಾ ಮಾಡಿದರೆ ಪ್ರಚಾರ ಆಗುವುದಿಲ್ಲ. ಪ್ರತಿಷ್ಠೆ ಕಾಣುವುದಿಲ್ಲ. ಆ ಕಾರಣದಿಂದ ಇಂಥದ್ದನ್ನು ಮಾಡುವುದಕ್ಕೆ ಮನಸ್ಸಾಗುವುದಿಲ್ಲ. ನಿಜವಾದ ಪುಣ್ಯ ಇಂಥದ್ದರಲ್ಲೇ ಹೊರತು ನಾಗಮಂಡಲ, ನಾಗದರ್ಶನದಿಂದ ಅಲ್ಲ. ಅಲ್ಲವೇ?

ಗಂಡನನ್ನು ಸರಿದಾರಿಗೆ ತರುವಲ್ಲಿ ಎಡವದಿರಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೬ ವರ್ಷ. ಮದುವೆಯಾಗಿ ಎರಡು ವರ್ಷ ಕಳೆಯಿತು. ನನ್ನ ಹಾಗೂ ಗಂಡನ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ನಾವು ಪ್ರತಿನಿತ್ಯ ಅಲ್ಲದಿದ್ದರೂ ವಾರಕ್ಕೆ ಒಂದೆರಡು ಬಾರಿ ಸೇರುತ್ತೇವೆ. ಈ ವೇಳೆ ನನಗೆ ಆನಂದ ಸಿಗುತ್ತದೆ. ಆದರೆ ನನ್ನ ಪತಿ ಮಗು ಪಡೆಯಲು ಇಚ್ಛಿಸುತ್ತಿಲ್ಲ. ಕೇಳಿದರೆ ಈಗ ಬೇಡ ಎನ್ನುತ್ತಾರೆ. ಕಾರಣ ಕೇಳಿದರೆ ಸಾಲ ತುಂಬಾ ಇದೆ. ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ನನಗೆ ತಿಳಿದಂತೆ ಅವರಿಗೆ ಅಂತಹ ಸಾಲ ಯಾವುದೂ ಇಲ್ಲ. ಅವರು ಬೇಕೆಂದೇ ಹೀಗೆ ಹೇಳುತ್ತಿದ್ದಾರೆ ಎಂದು ನನಗ ನಿಸುತ್ತಿದೆ. ಸೆಕ್ಸ್‌ನಲ್ಲೂ ಅಷ್ಟೇ, ಪ್ರಾರಂಭದಲ್ಲಿ ಆಸಕ್ತಿ ತೋರಿಸು ತ್ತಿದ್ದವರು ಈಗ ನನ್ನ ಒತ್ತಾಯಕ್ಕೇನೋ ಎಂಬಂತೆ ಸೇರು ತ್ತಾರೆ. ನನಗೆ ಇದರಿಂದ ಪರಿಪೂರ್ಣ ತೃಪ್ತಿ ಸಿಗುತ್ತಿಲ್ಲ. ಆದರೂ ನಾನು ಅವರ ಮನಸ್ಸಿಗೆ ಬೇಸರವಾಗದಂತೆ ಸುಮ್ಮನಿದ್ದೇನೆ. ನನ್ನ ಗಂಡನಿಗೆ ಸಮಾಜದಲ್ಲಿ ಒಳ್ಳೆಯ ಮರ್ಯಾದೆ ಇದೆ. ಕೆಲವು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು, ಫ್ರೆಂಡ್ಸ್, ಪಾರ್ಟಿ ಎಂದು ಸಮಯವನ್ನು ಕಳೆಯುತ್ತಾರೆ. ಅವರಿಗೆ ಫ್ರೆಂಡ್ಸ್ ಇದ್ದರೆ ಸಮಯ ಹೋದುದೇ ಗೊತ್ತಾಗದು. ನನ್ನ ನೆನಪೇ ಇರುವುದಿಲ್ಲ. ಕುಡಿತದ ಅಭ್ಯಾಸವೂ ಇದೆ. ಹಿಂದೆ ಜಾಸ್ತಿ ಕುಡಿಯುತ್ತಿದ್ದರೆ ಮದುವೆಯಾದ ಬಳಿಕ ಕಡಿಮೆ ಮಾಡಿದ್ದಾರೆ. ನನ್ನೊಂದಿಗೆ ಸೇರುವಾಗ ಸಾಮಾನ್ಯವಾಗಿ ಕಾಂಡೋಂ ಬಳಸುತ್ತಾರೆ. ಬೇಡ ಎಂದು ಹೇಳಿದರೆ ನನ್ನನ್ನೇ ಶಂಕೆಯಿಂದ ನೋಡುತ್ತಾರೆ. ಅವರಿಗೆ ಬೇರೆ ಸಂಬಂಧ ಇದೆಯೇ ಎಂದು ನನಗನಿಸುತ್ತದೆ. ನಾನು ಈ ಬಗ್ಗೆ ಅವರಲ್ಲಿ ಕೇಳಿಲ್ಲ. ನಾನೇನು ಮಾಡಲಿ? ಅವರನ್ನು ವೈದ್ಯರಲ್ಲಿಗೆ ಕರೆ ದೊಯ್ದು ಸಮಾಲೋಚನೆ ನಡೆಸಿ ಎಂದು ನನ್ನ ಸ್ನೇಹಿತೆ ಹೇಳುತ್ತಾರೆ. ಅಲ್ಲಿ ಹೇಳುವ ಮಾತನ್ನು ಇವರು ಕೇಳಬಹುದೇ?
ಸಲಹೆ: ನಿಮ್ಮವರು ಸೆಕ್ಸ್ ವಿಚಾರದಲ್ಲಿ ನಿಮ್ಮ ಜತೆ ವಿಮುಖರಾಗಲು ಏನಾ ದರೂ ಬಲವಾದ ಕಾರಣವಿರಲೇಬೇಕು. ನಿಮ್ಮ ಗಂಡ ಪರ ಸಂಬಂ ಧದ ಬೆನ್ನು ಬಿದ್ದಿರಬಹುದು. ಅಥವಾ ಬೇರೇನಾದರೂ ಕಾರಣ ವಿರಬೇಕು. ಸುಮ್ಮನೆ ಚಿಂತೆ ಮಾಡದಿರಿ.
ಬದಲಾಗುತ್ತಿರುವ ವರ್ತನೆಯ ಬಗ್ಗೆ ಅವರಲ್ಲೇ ಕೇಳಿ ತಿಳಿ ಯಿರಿ. ಇಲ್ಲವೇ ಮನೆಯ ಹಿರಿಯರ ಜತೆ ಈ ಬಗ್ಗೆ ಸಮಾಲೋಚನೆ ನಡೆಸಿ. ಅವರ ಸಮಸ್ಯೆಗೆ ಮಗು ಬೇಡ ಎನ್ನುವುದೇ ಕಾರ ಣವೇ ಅಥವಾ ಬೇರೆ ಕಾರಣವಿದೆಯೇ ಎಂದು ತಿಳಿದುಕೊಳ್ಳಿ. ಗಂಡನ ಪ್ರೀತಿಯಿಲ್ಲದೆ ಮಗು ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದರೆ ನಾಳೆ ಆ ಮಗುವನ್ನು ಸಾಕುವ ಜವಾಬ್ದಾರಿ ನಿಮ್ಮೊಬ್ಬರ ತಲೆ ಮೇಲೆ ಬೀಳುತ್ತದೆ. ದಂಪತಿ ಜತೆ ಸೇರಿ ಮಕ್ಕಳು ಬೇಕೇ, ಬೇಡವೇ ಎಂದು ತೀರ್ಮಾನಿಸುವುದು ಉತ್ತಮ. ಯಾವುದಕ್ಕೂ ತಾಳ್ಮೆ ಕಳೆ ದುಕೊಳ್ಳದಿರಿ. ಗಂಡನ ಪರ ಸಂಬಂಧದ ಬಗ್ಗೆ ಯಾರೋ ಹೇಳಿ ದರೆ ನಂಬದಿರಿ. ಸಾಧ್ಯವಾದರೆ ಕಣ್ಣಾರೆ ನೋಡಿ ನಂತರ ತೀರ್ಮಾನಿಸಿ. ಪರ ಸಂಬಂಧ ಹೊಂದಿದ್ದರೂ ವಿಚಲಿ ತಗೊಳ್ಳದಿರಿ. ನಿಮ್ಮ ಗಂಡನನ್ನು ನಿಮ್ಮ ಕಡೆ ಹೇಗೆ ಒಲಿಸಿಕೊಳ್ಳಲು ಸಾಧ್ಯ ಎಂಬುದನ್ನು ತಿಳಿಯಿರಿ. ವೈದ್ಯರ ಬಳಿ ಕರೆದುಕೊಂಡು ಹೋಗಿ. ಕೆಲವೊಮ್ಮೆ ಮಾನಸಿಕ ಚಿಂತೆಯಿಂದಲೂ ಹೀಗಾಗುವ ಸಾಧ್ಯತೆಗಳಿವೆ. ಸಮಾ ಜದಲ್ಲಿ ಹೆಚ್ಚಿನ ಒಡನಾಟ ಇಟ್ಟುಕೊಂಡಿರುವ ಗಂಡಸರು ಮನೆ, ಪತ್ನಿ, ಮಕ್ಕಳ ಮೇಲೆ ನಿರಾಸಕ್ತಿ ತಾಳುವುದು ಸಾಮಾನ್ಯ. ಇದಕ್ಕೆ ಚಿಂತೆ ಮಾಡದಿರಿ. ಗಂಡ ಕೆಲಸ ಮುಗಿಸಿ ನೇರ ಮನೆ ಸೇರುವಂತೆ ಮಾಡಬಹುದಾದ ಕಲೆ ಹೆಣ್ಣಿಗೆ ತಿಳಿದಿರಬೇಕು.

12-4-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳಲ್ಲಿ ಜಯ ಇರುತ್ತದೆ.
ವೃಷಭ : ಸಾಲ ಮರು ಪಾವತಿಯಾಗುತ್ತದೆ.
ಮಿಥುನ : ಸ್ತ್ರೀಯರಿಂದ ಕಿರಿಕಿರಿ ಇರುತ್ತದೆ.
ಕರ್ಕಾಟಕ : ಮನೆಯಲ್ಲಿರುವ ವಾದ ವಿವಗಳು ಸರಿಯಾಗುತ್ತದೆ.
ಸಿಂಹ : ಸಂಸಾರದಲ್ಲಿ ಸುಖ, ನೆಮ್ಮದಿ ಇರುತ್ತದೆ.
ಕನ್ಯಾ : ಉದ್ಯೋಗದಲ್ಲಿ ಬದಲಾವಣೆ ಇರುತ್ತದೆ.
ತುಲಾ : ಜಂಟಿ ವ್ಯಾಪಋದಲ್ಲಿ ನಷ್ಟ ಉಂಟಾಗಲಿದೆ.
ವೃಶ್ಚಿಕ : ಮಿತ್ರರಿಂದ ತೊಂದರೆ ಇರುತ್ತದೆ.
ಧನು : ದೇವತಾ ಕೆಲಸಗಳನ್ನು ನಡೆಸುತ್ತೀರಿ.
ಮಕರ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಕುಂಭ : ವೃತ್ತಿರಂಗದಲ್ಲಿ ಮುನ್ನಡೆ ಇದೆ.
ಮೀನ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.

12-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ದ್ವಿಚಕ್ರ ವಾಹನ ಗೊತ್ತಿರುವ ಯುವಕರು ಬೇಕಾಗಿದ್ದಾರೆ. ಭೇಟಿ ಸಮಯ: ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ. ಜಯಕಿರಣ ದೈನಿಕ, ಸರ್ಕ್ಯೂಟ್ ಹೌಸ್ ಕೆಳಗಿನ ರಸ್ತೆ,ಬಟ್ಟಗುಡ್ಡ, ಬಿಜೈ. ಮಂಗಳೂರು
ಮಂಗಳೂರು : ಮಂಗಳೂರು ಲೇಡಿ ಸ್ಟಾಪ್ ಬೇಕು ೯೮೪೫೬೦೭೫೫೯೧.
ಮಂಗಳೂರು : ಡೆಲಿವರಿ ಬಾಯ್ ಬೇಕು ೯೮೪೫೦೦೮೫೨೬.
ಮಂಗಳೂರು : ಹುಡುಗರ ಹಾಸ್ಟೆಲ್‌ಗೆ ವಾರ್ಡನ್ ಬೇಕು ೯೪೪೯೭೨೩೧೩೩.
ಬೆಂದೂರ್‌ವೆಲ್ : ಶೋರೂಂಗೆ ಜನ ಬೇಕು ೯೬೨೦೧೪೮೮೪೦.
ಮಂಗಳೂರು : ಬೇಕರಿಗೆ ಸೇಲ್ಸ್ ಗರ್ಲ್ಸ್ ಬೇಕು ೯೧೬೪೧೭೩೮೮.
ಮಂಗಳೂರು : ಮಂಗಳಾದೇವಿ ಹೊಟೇಲ್‌ಗೆ ರುಬ್ಬುವವರು, ಅಡುಗೆ, ತಿಂಡಿಯವರು, ಚಹಾ ಕೌಂಟರಿಗೆ ಬೇಕು ೯೪೪೯೨೬೮೯೯೭.
ಜಪ್ಪಿನ ಮೊಗರು : ಡ್ರೈವರ್ ಬೇಕು ೯೪೮೧೭೫೯೬೧೪.
ಮಂಗಳೂರು : ಕಲರ್ ಲ್ಯಾಬ್‌ಗೆ ಸೇಲ್ಸ್ ಬಾಯ್ಸ್ ಬೇಕು ೨೪೪೦೮೦೩.
ಮಂಗಳೂರು : ಮನೆ ಕೆಲಸಕ್ಕೆ ಜನಬೇಕು ೯೪೪೮೬೨೫೭೪೫.
ಮಂಗಳೂರು : ಬಾರಿಗೆ ವೇಟರ್ ಬೇಕು ೯೫೩೮೫೦೨೨೩೨.
ಮಂಗಳೂರು : ಇನೋವಾ ಕಾರಿಗೆ ಡ್ರೈವರ್ ಬೇಕು ೯೮೪೫೧೪೩೯೯೫.
ಮಂಗಳೂರು : ಕಂಪ್ಯೂಟರ್ ಟೈಪಿಂಗ್ ಗೊತ್ತಿದ್ದ ಯುವತಿ ಬೇಕು ೯೮೪೫೧೪೩೯೯೫.
ಮಂಗಳೂರು : ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೯೧೪೧೦೨೯೬೮೮.
ಕೈಕಂಬ : ಬ್ಯೂಟಿಪಾರ್ಲರಿಗೆ ಜನ ಬೇಕು ೯೯೮೦೪೧೪೩೮೨.
ಉರ್ವಸ್ಟೋರಿನ ಗ್ಯಾರೇಜಿಗೆ ಫೋರ್‌ವ್ಹೀಲರ್ ಮೆಕ್ಯಾನಿಕ್ ಬೇಕಾಗಿದ್ದಾರೆ. ೯೮೪೫೧೨೩೮೫೭
ಲೇಡಿಸ್ ಟೈಲರ್‌ಬೇಕು. ೯೪೪೮೩೨೮೮೩೩.
ಮಲ್ಲಿಕಟ್ಟೆ : ಪಿಯುಸಿ ಕಲಿತ ಕಂಪ್ಯೂಟರ್ ಅನುಭವಿರುವವರು ಬೇಕು ೯೮೮೦೯೯೬೩೧೨.
ತೊಕ್ಕೊಟ್ಟು : ಬಾರ್‌ಗೆ ವೇಟರ‍್ಸ್ ಬೇಕು ೯೭೪೨೨೮೫೪೮೫.
ಕಾವೂರು : ಟಿವಿ ರಿಪೇರಿ ಮಾಡಲು ತಿಳಿದವರು ಬೇಕು ೭೨೦೪೩೭೭೯೮೧.
ಯೆಯ್ಯಾಡಿ : ಇಂಡಸ್ಟ್ರಿಯಲ್ ಏರಿಯಾಗೆ ರಾತ್ರಿ ಪಾಳಿಗೆ ಪ್ಯಾಕಿಂಗ್ ಕೆಲಸಕ್ಕೆ ಜನ ಬೇಕು ೯೭೩೮೯೯೧೨೫೫.
ಮಂಗಳೂರು : ಕ್ಲೀನರ‍್ಸ್ ಮತ್ತು ವೇಟರ‍್ಸ್ ಬೇಕು ೯೪೪೮೬೨೫೩೭೭.
ಮಂಗಳೂರು : ಕ್ಲಿನಿಕ್‌ಗೆ ಹೆಂಗಸರು ಬೇಕು ೯೮೮೦೮೦೯೮೦೩
ಮಂಗಳೂರು : ಪೆಟ್ರೋಲ್ ಹಾಕುವವರು, ಎಕೌಂಟೆಂಟ್, ಗನ್‌ಮ್ಯಾನ್ ಬೇಕು ೯೯೪೫೦೯೫೧೨೩.
ನುರಿತ ಚೈನೀಸ್ ಮತ್ತು ಎಲ್ಲಾ ತರದ ಅಡುಗೆ ಗೊತ್ತಿದ್ದವರು ಬೇಕಾಗಿದ್ದಾರೆ. ೯೮೮೦೩೭೮೮೦೬

ಡಾ.ಮಿತ್ರಾ ಹೆಗ್ಡೆ ಚೇಲಾನಿಂದ ವರದಿಗಾರನ ಮೇಲೆ ಹಲ್ಲೆ

Posted by JAYAKIRANA Kirana on | 0 comments | Leave a comment...











ಪತ್ರಿಕಾಗೋಷ್ಠಿ ಬಗ್ಗೆ ಪ್ರಶ್ನೆ ಕೇಳಿದ್ದು ತಪ್ಪಂತೆ!
ಮಂಗಳೂರು: ರಾಷ್ಷ್ರಪತಿಗಳ ದಂತ ವೈದ್ಯೆ ಎಂದು ಪ್ರಚಾರ ಗಿಟ್ಟಿಸಿಕೊಂಡು ಪ್ರಶಸ್ತಿ ಪಡೆದು ಆರೋಪಕ್ಕೆ ಗುರಿಯಾಗಿದ್ದ ವೈದ್ಯೆ ಮಿತ್ರಾ ಹೆಗ್ಡೆಯವರ ಸಂಬಂಧಿ, ಪತ್ರಿಕಾ ವರದಿಗಾರನ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ಪತ್ರಿಕಾ ಭವನದಲ್ಲಿ ನಡೆದಿದೆ.
ಘಟನೆಯನ್ನು ಖಂಡಿಸಿ ಪತ್ರಕರ್ತರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದರು. ಕೂಡಲೇ ಪೊಲೀಸರು ಆರೋಪಿ ಗೌತಮ್ ಹೆಗ್ಡೆ ಎಂಬವರನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಗೌರಮ್ ಹೆಗ್ಡೆ ಮತ್ತು ವೈದ್ಯೆ ಮಿತ್ರಾ ಹೆಗ್ಡೆ ಪತ್ರಕರ್ತರ ಬಳಿ ಕ್ಷಮೆ ಕೇಳಿದ್ದು ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸ ಲಾಯಿತಾದರೂ ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.
ವೈದ್ಯೆ ಮಿತ್ರಾ ಹೆಗ್ಡೆ ರಾಷ್ಟ್ರಪತಿಗಳ ದಂತ ವೈದ್ಯೆ ಎಂದು ಪ್ರಚಾರ ನಡೆಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ ಇವರು ರಾಷ್ಟ್ರಪತಿಗಳ ದಂತ ವೈದ್ಯರೇ ಅಲ್ಲ ಎಂದು ಶಿವಶರಣ್ ಮತ್ತು ಹನುಮಂತ್ ಕಾಮತ್ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಸಹಿತ ಬಹಿರಂಗಗೊಳಿಸಿದ್ದರು. ಅಲ್ಲದೆ ಎಪ್ರಿಲ್ ೧೦ರ ಒಳಗೆ ವೈದ್ಯೆ ಮಿತ್ರಾ ಹೆಗ್ಡೆ ಮಾಧ್ಯಮದ ಮೂಲಕ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದರು. ಹೀಗಾಗಿ ಮಿತ್ರಾ ಹೆಗ್ಡೆ ತಮ್ಮ ಮೇಲಿನ ಆರೋಪ ನಿರಾಧಾರ ಎನ್ನುವುದನ್ನು ಸಾಬೀತುಪಡಿಸಲಾಗದೆ ಕ್ಷಮೆ ಕೇಳಲೆಂದು ನಿನ್ನೆ ಪತ್ರಿಕಾ ಗೋಷ್ಠಿ ಯನ್ನು ಕರೆದಿದ್ದರು. ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಿದ್ದ ಕಾರಣ ಹೆಚ್ಚಿನ ಪತ್ರಕರ್ತರು ನಿನ್ನೆಯ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಆದರೆ ಪತ್ರಕರ್ತರನ್ನು ಕಂಡ ಮಿತ್ರಾ ಹೆಗ್ಡೆ ತಾನು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಕೇವಲ ಪತ್ರಿಕಾ ಪ್ರಕಟಣೆ ನೀಡಿ ಮುಗಿಸುವ ಪ್ರಯತ್ನ ನಡೆಸಿದರು. ‘ಕಳೆದ ಮೂರು ನಾಲ್ಕು ದಿನದ ಬೆಳವಣಿಗೆಯಲ್ಲಿ ಶಿವಶರಣ್ ಮತ್ತು ಹನುಮಂತ್ ಕಾಮತ್ ಇವರಿಗೆ ನೋವಾಗಿದ್ದರೆ ನಾನು ಅವರ ಬಳಿ ಕ್ಷಮೆ ಕೇಳುವುದಾಗಿ’ ಬರೆದಿರುವ ಪ್ರೆಸ್ ನೋಟ್ ನೀಡಿ ಕಾಲ್ಕಿತ್ತಿದ್ದರು. ಇದರಿಂದ ಹತಾಶೆಗೊಂಡ ಪತ್ರಕರ್ತರು, ನಮಗೆ ಪ್ರಶ್ನೆಗಳಿವೆ ಅದಕ್ಕೆ ಉತ್ತರಿಸಬೇಕು ಎಂದು ಕೇಳಿಕೊಂಡಿದ್ದರು. ಆದರೆ ಇದನ್ನು ನಿರಾಕರಿಸಿದ ವೈದ್ಯೆ ಮಿತ್ರಾ ಹೆಗ್ಡೆ, ನೇರವಾಗಿ ಹೊರ ನಡೆದಾಗ ಪತ್ರಕರ್ತರು ಅವರನ್ನು ಹಿಂಬಾಲಿಸಿದ್ದರು. ಈ ವೇಳೆ ಇವರ ಜೊತೆಗಿದ್ದ ಇವರ ಸಂಬಂಧಿ ಗೌರವ್ ಪತ್ರಕರ್ತರನ್ನು ತಳ್ಳಿ ವೈದ್ಯೆ ಮಿತ್ರಾ ಹೆಗ್ಡೆ ಅವರನ್ನು ಕರೆದೊಯ್ದಿದ್ದರು. ಆದರೆ ಪತ್ರಿಕಾಗೋಷ್ಠಿಯ ಹಣ ಪಾವತಿಸಿಲ್ಲ ಎಂದು ಮರಳಿ ಬಂದ ಗೌರಮ್ ಹೆಗ್ಡೆ ಅವರನ್ನು ಪತ್ರಕರ್ತರು ಸುತ್ತುವರಿದು ಪತ್ರಿಕಾಗೋಷ್ಟಿ ಕರೆದು ಅರ್ಧದಲ್ಲೇ ಹೋಗುವುದಾದರೆ ನಮ್ಮನ್ನು ಕರೆದದ್ದು ಯಾಕೆ? ಎಂದು ಪ್ರಶ್ನಿಸಿದ್ದರು. ಇದು ನನಗೆ ಸಂಬಂಧಿಸಿದ್ದಲ್ಲ ಎಂದು ಗೌರವ್ ನುಣುಚಿಕೊಳ್ಳಲು ಯತ್ನಿಸಿದಾಗ, ಅವರ ಜೊತೆಗೆ ನೀವು ಇದ್ದಿರಲ್ಲ ನಿಮ್ಮ ಹೆಸರೇನು? ಎಂದು ಜಯಕಿರಣ ಪತ್ರಿಕಾ ವರದಿಗಾರರಾದ ಅನ್ಸಾರ್ ಇನೋಳಿ ಪ್ರಶ್ನಿಸಿದ್ದರು. ಇದರಿಂದ ಕೆಂಡಾಮಂಡಲನಾದಂತಾದ ಗೌರವ್, ಅನ್ಸಾರ್ ಇನೋಳಿ ಅವರನ್ನು ಗೋಡೆಗೆ ಒತ್ತಿ ಹಿಡಿದು ಹಲ್ಲೆ ನಡೆಸಿದ್ದರು. ಬಳಿಕ ಇತರ ಮಾಧ್ಯಮದವರು ತಡೆಹಿಡಿದರಾದರೂ ಜಗ್ಗದ ಗೌರವ್, ಅನ್ಸಾರ್ ಮೇಲೆ ಮತ್ತೂ ಹಲ್ಲೆ ನಡೆಸಿದ್ದರು. ಇದು ಮಾಧ್ಯಮದವರನ್ನು ಕೆರಳುವಂತೆ ಮಾಡಿದ್ದು ಅವರು ಬರ್ಕೆ ಠಾಣೆಗೆ ದೂರು ನೀಡಿದರು. ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಆದರೆ ಈ ಎಲ್ಲಾ ವಿಷಯ ವೈದ್ಯೆ ಮಿತ್ರಾ ಹೆಗ್ಡೆ ಅವರ ಗಮನಕ್ಕೆ ಬಂದಿರಲಿಲ್ಲ, ಹೀಗಾಗಿ ಪೊಲೀಸರು ಅವರನ್ನು ಠಾಣೆಗೆ ಕರೆಸಿಕೊಂಡರು. ಠಾಣೆಗೆ ಬಂದ ಮಿತ್ರಾ ಹೆಗ್ಡೆ ಮಾಧ್ಯಮದವರಲ್ಲಿ ಕ್ಷಮೆ ಕೇಳಿದರು. ಆದರೆ ಆರೋಪಿ ಕ್ಷಮೆ ಕೇಳುವಂತೆ ಮಾಧ್ಯಮದವರು ಒತ್ತಾಯಿಸಿದ್ದು ತನ್ನ ತಪ್ಪನ್ನು ಅರಿತುಕೊಂಡಿದ್ದ ಗೌರವ್ ಮಾಧ್ಯಮದವರಲ್ಲಿ ಕ್ಷಮೆ ಯಾಚಿಸಿದ. ಬಳಿಕ ಪೊಲೀಸರು ಆರೋಪಿಯಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿ ಕೊಟ್ಟಿದ್ದಾರೆ.
ವಿವಿಧ ಮಾಧ್ಯಮಗಳ ನೂರರಷ್ಟು ಪ್ರತಿನಿಧಿಗಳು ಠಾಣೆ ಮುಂದೆ ಜಮಾಯಿಸಿದ್ದರು. ಇತ್ತೀಚಿನ ದಿನದಲ್ಲಿ ಮಾಧ್ಯಮದ ಮಂದಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಲೇ ಇದ್ದು ಅದು ಮುಂದುವರಿಯದೇ ನಿರ್ಭಿತವಾದ ವರದಿಗಾರಿಕೆ ನಡೆಸಲು ಸೂಕ್ತ ಪರಿಸ್ಥಿತಿ ನಿರ್ಮಾಣವಾಗ ಬೇಕಾದರೆ ಪತ್ರಕರ್ತರೂ ಬೀದಿಗಿಳಿಯ ಬೇಕಾಗಿದೆ ಹೀಗಿದ್ದರೂ ನಮ್ಮದು ಯಾವತ್ತಿಗೂ ಶಾಂತಿಯ ಹೋರಾಟ ಎಂದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ ಹರೀಶ್ ರೈ ತಿಳಿಸಿದರು.

ಅಯೋಧ್ಯೆ ವಿವಾದ ಮುಂದುವರಿಯಲು ರಾಜಕಾರಣಿಗಳೇ ಕಾರಣ

Posted by JAYAKIRANA Kirana on | 0 comments | Leave a comment...

 

ಪೇಜಾವರ ಸ್ವಾಮೀಜಿ ಆರೋಪ
ಮಂಗಳೂರು: ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಇಂದಿಗೂ ಬಗೆಹರಿಯದೆ ಮುಂದು ವರಿಯಲು ರಾಜಕಾರಣಿಗಳ ಮಧ್ಯ ಪ್ರವೇಶವೇ ಕಾರಣ ಎಂದು ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆರೋಪಿಸಿ ದ್ದಾರೆ.
ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ನಿನ್ನೆ ಮಂಗಳೂರಿನ ಪುರಭವ ನದಲ್ಲಿ ನಡೆದ ಮಾನವತಾ ಸಂಗಮ ಸಮಾವೇಶವನ್ನುದ್ದೇಶಿಸಿ ಅವರು ಮಾತ ನಾಡಿದರು.
ಅಯೋಧ್ಯೆ ವಿವಾದದ ಸಂದರ್ಭ ೧೮ ಹಿಂದೂ ಮತ್ತು ೧೮ ಮುಸ್ಲಿಂ ಸಂತರನ್ನೊ ಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಅದಕ್ಕೆ ನಾನೇ ಮುಂಚೂಣಿಯಲ್ಲಿ ನಿಂತು ಅಂದಿನ ಬಿಹಾರ ಮತ್ತು ಆಂಧ್ರಪ್ರದೇಶದ ರಾಜ್ಯಪಾಲರ ಜೊತೆ ಕುಳಿತು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸಂಧಾನ ಸೂತ್ರ ರೂಪಿಸಿದ್ದೆವು. ಒಂದು ಹಂತದಲ್ಲಿ ಈ ಸೂತ್ರ ಎರಡು ಸಮುದಾಯದ ಸಂತರ ಒಪ್ಪಿಗೆಗೆ ಕಾರಣವಾಗಿತ್ತು. ಇನ್ನೇನು ವಿವಾದ ಬಗೆಹರಿ ಯಿತು ಎನ್ನುವಷ್ಟರಲ್ಲಿ ರಾಜಕಾರಣಿಗಳು ಮಧ್ಯೆ ಪ್ರವೇಶಿಸಿದ ಕಾರಣ ಗೊಂದಲಮಯ ವಾತಾವರಣ ಸೃಷ್ಟಿಗೊಂಡು ರಾಜಿ ಸೂತ್ರ ಮುರಿದು ಬಿತ್ತಲ್ಲದೆ ವಿವಾದ ಇಂದಿನವರೆಗೂ ಮುಂದುವರಿಯಲು ಕಾರಣವಾಯಿತು ಎಂದು ಅವರು ಅಯೋಧ್ಯೆ ವಿವಾದದ ರಹಸ್ಯವನ್ನು ಬಹಿರಂಗಪಡಿಸಿದರು.
ಮಧ್ವಾಚಾರ‍್ಯರು ಪ್ರತಿಪಾದಿಸಿದ ಒಂದೇ ದೇವರು ಎನ್ನುವ ಸಿದ್ಧಾಂತಕ್ಕೆ ಸಂತಸಪಟ್ಟ ಅಂದಿನ ಮುಸ್ಲಿಂ ಸುಲ್ತಾನ ತಮ್ಮ ರಾಜ್ಯದ ಅರ್ಧ ಭಾಗವನ್ನೇ ನೀಡಲು ಮುಂದಾಗಿದ್ದರು. ಮಂತ್ರಾಲಯದಲ್ಲಿ ಮುಸ್ಲಿಂ ರಾಜನೊಬ್ಬ ನೀಡಿದ ಜಾಗದಲ್ಲಿ ಇಂದು ಭವ್ಯ ಕ್ಷೇತ್ರ ನಿರ್ಮಾಣವಾಗಿದೆ ಎಂದು ಹಿಂದೆ ಇದ್ದ ಹಿಂದೂ-ಮುಸ್ಲಿಮರ ನಡುವಿನ ಸೌಹಾರ್ದತೆಯನ್ನು ನೆನಪಿಸಿದ ಪೇಜಾವರ ಶ್ರೀ, ಜಾತಿ, ಭೇದ ಮರೆತು ಎಲ್ಲಾ ಧರ್ಮದ ಜನರೂ ಸೌಹಾರ್ದತೆಯಿಂದ ಬದುಕಿದರೆ ಭವ್ಯ ಭಾರತವನ್ನು ಕಟ್ಟಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮಗಳ ಮಧ್ಯೆ ಕಂದರ ಸೃಷ್ಟಿಯಾಗುತ್ತಿದ್ದು ಇದಕ್ಕೆಲ್ಲಾ ರಾಜಕಾರಣಿಗಳೇ ನೇರ ಕಾರಣವಾಗಿದ್ದು ಅವರನ್ನು ದೂರ ಇಟ್ಟರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ನಾವೆಲ್ಲರೂ ಒಂದೇ ದೇವರ ಮಕ್ಕಳಾಗಿದ್ದು ಇದನ್ನು ಅರಿತು ದೈನಂದಿನ ಜೀವನದಲ್ಲೂ ಪಾಲಿಸಬೇಕು. ಕಣ್ಣಿಗೆ ಕಾಣುವ ಸಹೋದರ-ಸಹೋದರಿಯನ್ನು ಪ್ರೀತಿಸದವನು ಕಣ್ಣಿಗೆ ಕಾಣದ ದೇವರನ್ನೂ ಪ್ರೀತಿಸಲು ಸಾಧ್ಯವಿಲ್ಲ ಎಂದು ಮಂಗಳೂರು ಪ್ರಾಂತ್ಯ ವಿಕಾರ್ ಜನರಲ್ ಫಾ.ಡೆನ್ನಿಸ್ ಪ್ರಭು ಅಭಿಪ್ರಾಯಪಟ್ಟರು.
ಇಸ್ಲಾಮಿನಲ್ಲಿ ಶಾಂತಿ, ಸಮಾಧಾನ, ಅಹಿಂಸೆಯನ್ನು ಭೋದಿಸಲಾಗಿದ್ದು, ಅರಾಜಕತೆ ಸೃಷ್ಟಿಸುವುದನ್ನು ಬಲವಾಗಿ ವಿರೋಧಿಸಲಾಗಿದೆ. ಎಲ್ಲಾ ಧರ್ಮವನ್ನೂ ಗೌರವಿಸಬೇಕು ಎನ್ನುವ ಸೌಹಾರ್ದ ಸಿದ್ಧಾಂತ ಇಸ್ಲಾಮಿನದ್ದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಧರ್ಮದವರಿಗೆ ಸಹಾಯ ಮಾಡುವುದು, ಅನ್ಯ ಧರ್ಮದವರ ಜೊತೆ ಕಲಹ ಮಾಡುವುದು ನಡೆಯುತ್ತಿದೆ. ಇವೆಲ್ಲದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾನವತಾ ಸಂಗಮ ಸಮಾವೇಶ ಮತ್ತು ಕೇರಳ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ವಿವರಿಸಿದರು.

ಕರಾವಳಿಯಲ್ಲೂ ಅಲುಗಾಡಿದ ಕಟ್ಟಡಗಳು

Posted by JAYAKIRANA Kirana on | 0 comments | Leave a comment...


ಮೂಡಬಿದ್ರೆ-ಸುಳ್ಯ-ಕುಂದಾಪುರದಲ್ಲೂ ಅದುರಿದ ಅನುಭವ; ಸುಮತ್ರಾದಲ್ಲಿ ಭೂಕಂಪ
ಮಂಗಳೂರು: ಬುಧವಾರ ಮಧ್ಯಾಹ್ನದ ವೇಳೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಭೂಕಂಪನದಿಂದ ಕಟ್ಟಡಗಳು ಕಂಪಿಸಿದ ಅನುಭವವಾಗಿದೆ.
ನಿನ್ನೆ ಮಧ್ಯಾಹ್ನ ೨.೧೫ರ ವೇಳೆಗೆ ಬಾವುಟಗುಡ್ಡೆಯಲ್ಲಿರುವ ಮ್ಯಾಕ್ಸಿಮಾಸ್ ಕಟ್ಟಡ ಏಕಾಏಕಿ ಕಂಪಿಸಿದ್ದು ಇದರಿಂದ ಹೆದರಿದ ಗ್ರಾಹಕರು ಕಟ್ಟಡದಿಂದ ಹೊರ ಗೋಡಿ ಬಂದಿದ್ದರು. ಇದೇ ಸಂದರ್ಭದಲ್ಲಿ ವಳಚ್ಚಿಲ್ ಮತ್ತು ಮುಡಿಪುವಿನಲ್ಲೂ ಕಟ್ಟಡಗಳು ಕಂಪಿಸಿದ ಅನುಭವವಾಗಿದೆ.
ಮುಡಿಪು ಸಮೀಪವಿರುವ ಇನ್ಫೋ ಸಿಸ್ ಆವರಣದೊಳಗಿರುವ ಕಟ್ಟಡಗಳು ೨.೧೫ರ ವೇಳೆಗೆ ಕಂಪಿಸಿದ ಅನುಭವವಾಗಿದ್ದು ಕಾರ್ಮಿಕರು ಭಯದಿಂದ ಹೊರಗೋಡಿ ಬಂದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದರೆ ಯಾವುದೇ ಅನಾಹುತಗಳು ನಡೆದಿಲ್ಲ.
ಆದರೆ ಉಳ್ಳಾಲದಲ್ಲಿ ಭೂಕಂಪನ ದಂತಹ ಅನುಭವ ಉಂಟಾಗಿಲ್ಲ. ಅರಬ್ಬೀ ಸಮುದ್ರ ಬುಧವಾರ ಸಂಜೆಯವರೆಗೂ ಶಾಂತವಾಗಿತ್ತು. ಇದರಿಂದಾಗಿ ಅಲ್ಲಿನ ಜನರಿಗೆ ಭೂಕಂಪ ಹಾಗೂ ಸುನಾಮಿಯ ಭೀತಿ ಉಂಟಾಗಿರಲಿಲ್ಲ. ಆದರೆ ಮೀನು ಗಾರಿಕಾ ಬೋಟುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಭೂಕಂಪನ
ಇಲ್ಲಿನ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿರುವ ಆಳ್ವಾಸ್ ಕಾಲೇಜಿನಲ್ಲಿ ಬುಧವಾರ ಮಧ್ಯಾಹ್ನ ಸುಮಾರು ೨.೨೦ರ ವೇಳೆಗೆ ಭೂಕಂಪಿಸಿದ ಹಾಗೆ ವಿದ್ಯಾರ್ಥಿ ಮತ್ತು ಉಪನ್ಯಾಸಕರು ಗಳಿಗೆ ಅನುಭವವಾಗಿದೆ.
ರಾಜ್ಯ ಮತ್ತು ರಾಷ್ಟ್ರದ ಇತರ ಕಡೆಗಳಲ್ಲಿ ಏಕಕಾಲದಲ್ಲಿ ಭೂಕಂಪನವಾಗಿದ್ದು ಅದ ರಂತೆ ಮೂಡಬಿದ್ರೆಯ ಆಳ್ವಾಸ್ ಕಾಲೇಜ್‌ನ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಸ್ನಾತಕೋತ್ತರ ವಿಭಾಗದ ಮೂರು ಮತ್ತು ನಾಲ್ಕನೇ ಅಂತಸ್ತಿನಲ್ಲಿ ತರಗತಿಗಳು ನಡೆ ಯುತ್ತಿರುವ ಸಮಯದಲ್ಲಿ ೨-೩ ಸೆಕೆಂಡ್‌ಗಳ ಕಾಲ ಭೂಮಿ ಮತ್ತು ಮೇಜು-ಬೆಂಚುಗಳು ಅಲ್ಲಾಡಿದ ಹಾಗೆ ವಿದ್ಯಾರ್ಥಿಗಳಿಗೆ ಅನುಭವ ವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರ ಗಮನಕ್ಕೆ ತಂದು ತರಗತಿಯಿಂದ ಹೊರಬಂದರೆನ್ನಲಾಗಿದೆ.
ಇದಲ್ಲದೆ ಮೂಡುಬಿದ್ರೆ ಆಸುಪಾಸಿನಲ್ಲಿ, ಪುಚ್ಚಮೊಗರುವಿನಲ್ಲಿಯೂ ಸ್ವಲ್ಪ ಮಟ್ಟಿನಲ್ಲಿ ಭೂ ಕಂಪನವಾಗಿದ್ದು ಉಳಿದಂತೆ ಯಾವುದೆ ಅಹಿತಕರ ಘಟನೆ ನಡೆದಿಲ್ಲ.
ಈ ಬಗ್ಗೆ ಆಳ್ವಾಸ್ ಕಾಲೇಜಿನ ಸಿಬ್ಬಂದಿ ಮಹಾಬಲೇಶ್, ಉಪನ್ಯಾಸಕ ಗಿರೀಶ್, ವಿದ್ಯಾ ರ್ಥಿನಿ ಸುಷ್ಮಾ ತಮ್ಮ ಅನುಭವನ್ನು ಹಂಚಿ ಕೊಂಡರು. ಸ್ಥಳಕ್ಕೆ ಮೂಡಬಿದ್ರೆ ತಹಶೀಲ್ದಾರ್ ಕೆ.ಮುರಳೀಧರ್ ಭೇಟಿ ನೀಡಿ ದ್ದಾರೆ. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಸ್ಮಿತಾ ಐತಾಳ್ ಆಗಮಿಸಿ ಪರಿಶೀಲನೆ ನಡೆಸಿ ದರು.
ಬೆಂಗಳೂರು: ಇಂಡೋನೇಷ್ಯಾದ ಸುಮಾತ್ರಾದಲ್ಲಿ ಇಂದು ಸಂಭವಿಸಿದ ಭೂಕಂಪ ಕ್ಷಣ ಮಾತ್ರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಮಾತ್ರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರೀ ಕಂಪನವುಂಟು ಮಾಡಿ ಜನ ಭೀತಿಗೊಳ್ಳುವಂತೆ ಮಾಡಿದ ಬೆಳವಣಿಗೆ ನಡೆದಿದೆ.
ಸುಮಾತ್ರದ ಸಮುದ್ರದ ಹತ್ತು ಕಿ. ಮೀ. ಆಳದಲ್ಲಿ ಸಂಭವಿಸಿದ ಭೂಕಂಪ ರಾಷ್ಟ್ರದ ವಿವಿಧ ಭಾಗಗಳಲ್ಲಿ ಕಂಪನದ ಅಲೆಗೆ ಸಿಲುಕಿ, ಕರಾವಳಿ ಪ್ರದೇಶದಲ್ಲಿ ಸುನಾಮಿ ಸಂಭವಿಸುವ ಎಚ್ಚರಿಕೆ ರವಾನೆಯಾಗುವಂತೆ ಮಾಡಿತು. ಸುಮಾತ್ರದಲ್ಲಿ ಸಂಭವಿಸಿದ ಭೂಕಂಪ ಮೂರು ಸಾವಿರ ಕಿ. ಮೀ. ಆಚೆಯಲ್ಲಿರುವ ಬೆಂಗಳೂರಿನಲ್ಲಿ ಮಧ್ಯಾಹ್ನ ೨ ಗಂಟೆ ೮ ನಿಮಿಷ ೩೫ ಸೆಕೆಂಡಿಗೆ ಭೂಕಂಪನ ಆದ ಅನುಭವ ಆಗಿದೆ. ಇದು ಅನುಭವವಷ್ಟೆ, ಕರ್ನಾಟಕ ಅಷ್ಟೇ ಅಲ್ಲ ರಾಷ್ಟ್ರದ ಯಾವುದೇ ಭಾಗದಲ್ಲಿ ಭೂಕಂಪ ಆಗಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಧಿಯ ನಿರ್ದೇಶಕ ಡಾ. ಪ್ರಕಾಶ್ ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಂಪನಕ್ಕೆ ಜನ ಭಯ ಭೀತಿಪಡುವ ಅಗತ್ಯವಿಲ್ಲ. ಇದರಿಂದ ಯಾವುದೆ ತೊಂದರೆ ಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾತ್ರದಲ್ಲಿ ೮.೫ ರಿಕ್ಟರ್‌ನಿಂದ ೮.೯ ರಿಕ್ಟರ್‌ರವರೆಗೂ ಭೂಕಂಪನ ಆಗಿದೆ. ಇದು ಕಳೆದ ೧೦೦ ವರ್ಷಗಳಲ್ಲಿ ಎಂಟನೇ ದೊಡ್ಡ ಭೂಕಂಪ ಇದಾಗಿದೆ.
ಕರ್ನಾಟಕ ಅದರಲ್ಲೂ ಬೆಂಗಳೂರು ಅತ್ಯಂತ ಸುರಕ್ಷಿತ ಪ್ರದೇಶ. ಇಲ್ಲಿ ಭೂಕಂಪ ಆಗುವ ಸಾಧ್ಯತೆಗಳೇ ಇಲ್ಲ ಎಂದು ವಿಜ್ಞಾನಿಯು ಆಗಿರುವ ಪ್ರಕಾಶ್ ತಿಳಿಸಿದರು.
೫ ರಿಕ್ಟರ್‌ಗಿಂದ ಹೆಚ್ಚು ತೀವ್ರತೆಯ ಭೂಕಂಪವಾದಲ್ಲಿ ಮಾತ್ರ ಪ್ರಾಣ ಹಾನಿ ಯಾಗುವುದಲ್ಲದೆ ಕಟ್ಟಡಗಳು ಕುಸಿದು, ಭಾರಿ ನಷ್ಟವುಂಟಾಗುತ್ತದೆ. ಸುಮಾತ್ರದಲ್ಲಿ ಭೂಕಂಪ ರಿಕ್ಟರ್ ಮಾಪಕದಲ್ಲಿ ೮.೯ ರಷ್ಟು ತೀವ್ರತೆಯನ್ನು ಹೊಂದಿದ್ದ ಪರಿಣಾಮವಾಗಿ ಭಾರತದ ಬಹುತೇಕ ರಾಜ್ಯಗಳು ತಲ್ಲಣಗೊಳ್ಳುವಂತೆ ಮಾಡಿತು. ಕೋಲ್ಕೋತಾ, ತಿರುಪತಿ, ಚೆನ್ನೈ, ಕಾಕಿನಾಡ ಸೇರಿದಂತೆ ದೇಶದ ಹಲವು ಭಾಗಗ ಳಲ್ಲಿ ಭೂಕಂಪದ ಬಿಸಿ ತಟ್ಟಿದ್ದಲ್ಲದೇ ರಾಜ್ಯದ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ತುಮ ಕೂರು, ದಾವಣಗೆರೆ ಸೇರಿದಂತೆ ಬಹುತೇಕ ಭಾಗಗಳ ಜನ ಮಧ್ಯಾಹ್ನ ಗಡ ಗಡ ನಡುಗುವಂತೆ ಮಾಡಿತು.
ಬೆಂಗಳೂರಿನ ಎಂ.ಜಿ.ರಸ್ತೆ, ಯಲಹಂಕ, ಬಸವನಗುಡಿ, ವಿಧಾನಸೌಧ ಸುತ್ತಮುತ್ತ, ಎಂ.ಜಿ.ರಸ್ತೆ, ಆರ್.ಟಿ.ನಗರ, ಜಯನಗರ, ಮಲ್ಯ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಎರಡೆರಡು ಬಾರಿ ಪುನರಾವರ್ತನೆಯಾದಾಗ ಆತಂಕ ಗೊಂಡ ಜನ ಮನೆ, ಕಚೇರಿ, ಪ್ಲಾಟುಗಳನ್ನು ಬಿಟ್ಟು ಹೊರಗೋಡಿ ಬಂದರು.
ಅದರಲ್ಲೂ ಪ್ಲಾಟ್‌ಗಳು ಮತ್ತು ಐಟಿ ಕಂಪೆನಿಗಳ ಉದ್ಯೋಗಿಗಳು ಕಟ್ಟಡಗಳಿಂದ ಹೊರ ಬಂದು ರಸ್ತೆ ಬದಿಯಲ್ಲಿ ಕೆಲವು ಗಂಟೆಗಳ ಕಾಲ ಮತ್ತೆ ಭೂಕಂಪ ಸಂಭವಿಸಬಹುದೆಂಬ ಭಯಭೀತಿರಾಗಿದ್ದುರು.
ಇದರಿಂದ ಆತಂಕಗೊಂಡು ಕೆಲವು ಕಂಪೆನಿಗಳಿಗೆ ಮಧ್ಯಾಹ್ನದ ನಂತರ ರಜೆ ಘೋಷಿಸಲಾಯಿತು. ಭೂಕಂಪ ಆಗದಿದ್ದರೂ, ಅದರ ಅನುಭವದಿಂದಲೇ ನಗರದ ಜನತೆ ತಲ್ಲಣಗೊಂಡಿದ್ದರು. ಆದರೆ ಎಲ್ಲಿಯೂ ಪ್ರಾಣ ಹಾನಿಯಾಗಿಲ್ಲ. ಕಟ್ಟಡಗಳು ಬಿರುಕುಗೊಂಡ ಘಟನೆ ನಡೆದಿಲ್ಲ.
ಇಂಡೋನೇಷ್ಯಾದ ಸುಮಾತ್ರದ ಸಮುದ್ರದಲ್ಲಿ ಸಂಭವಿಸಿದ ಭೂಕಂಪ ಸುತ್ತ ಮುತ್ತಲ ಸ್ಥಳಗಳಲ್ಲಿ ಭಾರೀ ಪ್ರಮಾಣದ ಅಲೆಗಳನ್ನು ಎಬ್ಬಿಸಿದರೂ ಮಂಗಳೂರು, ಚೆನ್ನೈ, ಕಾರವಾರ, ಮುಂಬಯಿ ಸೇರಿದಂತೆ ದೇಶದ ಹಲವು ಕರಾವಳಿ ತೀರಗಳನ್ನು ಅಪ್ಪಳಿಸುವ ವೇಳೆಗೆ ಅವುಗಳ ಎತ್ತರ ಎರಡರಿಂದ ಐದಾರು ಅಡಿಗಳಿಗೆ ಸೀಮಿತವಾಗಿರುತ್ತದೆ.
ಭಾರತದ ಕೆಲ ಪ್ರದೇಶಗಳು ಸೇರಿದಂತೆ ಇಂಡೋನೇಷ್ಯಾವನ್ನು ಕೇಂದ್ರವಾಗಿರಿಸಿಕೊಂಡ ಇಪ್ಪತ್ತೆಂಟು ದೇಶಗಳಲ್ಲಿ ಸುನಾಮಿಯ ಆತಂಕ ಇದೆಯಾದರೂ ಭಾರತದಲ್ಲಿ ಅದರ ತೀವ್ರತೆ ಕಡಿಮೆ ಎಂದು ಅವರು ತಿಳಿಸಿದರು.
ರಾಜ್ಯದ ಮಟ್ಟಿಗೆ ಹೇಳುವುದಾದರೆ ಈ ಭೂಕಂಪದಿಂದ ಆತಂಕಪಡುವ ಅಗತ್ಯವೇನಿಲ್ಲ.ಭೂಕಂಪದ ಕೇಂದ್ರಗಳನ್ನು ಆಧರಿಸಿ ಹೇಳುವುದಾದರೆ ನಮ್ಮಲ್ಲಿ ಎಂದೂ ಕಂಪನದ ತೀವ್ರತೆ ಪ್ರಮಾಣ ೫ ನ್ನು ಮೀರುವುದಿಲ್ಲ ಎಂದರು.
ಸುಳ್ಯದಲ್ಲೂ ಅದುರಿದ ಅನುಭವ
ಬುಧವಾರ ಮಧ್ಯಾಹ್ನ ೨.೨೫ರ ವೇಳೆಗೆ ನಡೆದ ಭೂಕಂಪದ ಅನುಭವ ಸುಳ್ಯದಲ್ಲೂ ಆಗಿದೆ. ಬಹುಮಹಡಿ ಕಟ್ಟಡಗಳಲ್ಲಿ ಇದ್ದವರು ಭೀತಿಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.
ಕೆವಿಜಿ ಕ್ಯಾಂಪಸ್‌ನ ದಂತ ವೈದ್ಯ ಕಾಲೇಜಿನ ೫ ಮಹಡಿಯಲ್ಲಿದ್ದ ಗ್ರಂಥಾಲಯ ಹಾಗೂ ಲ್ಯಾಬ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಕುರ್ಚಿಯಲ್ಲಿ ಕುಳಿತಿರುವವರಿಗೆ ಒಮ್ಮೆಲೇ ಅಲುಗಾಡಿಸಿದ, ತಲೆ ತಿರುಗಿದ ಅನುಭವ ಆಗಿದೆ. ಹೆದರಿದ ವಿದ್ಯಾರ್ಥಿಗಳು ಕೂಡಲೇ ಹೊರಗೊಡಿ ಬಂದಿದ್ದಾರೆ. ಇವರು ಓಡುವುದನ್ನು ತಿಳಿದ ಕೆಳಗಿನ ಮಹಡಿಯಲ್ಲಿದ್ದವರೂ ಹೊರಗೊಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಇಡೀ ಕಟ್ಟಡದಲ್ಲಿದ್ದವರೆಲ್ಲಾ ಎದುರಿನ ಬಯಲಿನಲ್ಲಿ ಜಮಾಯಿಸಿದ್ದಾರೆ.
ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲೂ ಭೂಕಂಪದ ಅನುಭವ ಆಗಿದೆ. ಅಲ್ಲಿ ಮೆಕ್ಯಾನಿಕಲ್ ಲ್ಯಾಬ್‌ನಲ್ಲಿದ್ದ ಕುಡಿಯುವ ನೀರಿನ ಪಾತ್ರೆ ಕೆಳಕ್ಕೆ ಬಿದ್ದಿದೆ. ವಿಷಯ ತಿಳಿದ ವಿದ್ಯಾರ್ಥಿಗಳು ಹೊರಗೋಡಿ ಬಂದಿದ್ದಾರೆ.

ಸುನಾಮಿ ತಂದ ಅಘಾತ
ಮಂಗಳೂರು: ಸುನಾಮಿ ಬರುವ ಸೂಚನೆ ಹಿನ್ನೆಲೆಯಲ್ಲಿ ಹೆಚ್ಚುವರಿ ಕೆಲಸ ಮಾಡುವಂತೆ ಅಧಿಕಾರಗಳ ಸೂಚನೆ ಯಿಂದ ಅಘಾತಗೊಂಡ ಅಗ್ನಿಶಾಮಕ ದಳದ ಸಿಬ್ಬಂದಿಯೋರ್ವರು ಆಸ್ಪತ್ರೆ ಸೇರಿ ರುವ ಘಟನೆ ಕದ್ರಿಯಲ್ಲಿ ನಡೆದಿದೆ.
ನಿನ್ನೆ ನಗರದಲ್ಲಿ ಕೆಲವೆಡೆ ಭೂಕಂಪದ ಅನಭವವಾಗಿದ್ದು, ರಾತ್ರಿ ಸುನಾಮಿ ಬರುವ ಸೂಚನೆಯನ್ನೂ ನೀಡಲಾಗಿತ್ತು. ಈ ಹಿನ್ನೆ ಲೆಯಲ್ಲಿ ಹೆಚ್ಚುವರಿ ಕೆಲಸ ಮಾಡುವಂತೆ ಕದ್ರಿ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿ ಹರೀಶ್ ಎಂಬವರಿಗೆ ಸೂಚಿಸಿದ್ದರು ಎನ್ನ ಲಾಗಿದೆ.
ಆದರೆ ಆದೇಶಕ್ಕೆ ಹರೀಶ್ ನಿರಾಕರಿಸಿ ದ್ದಾರೆನ್ನಲಾಗಿದ್ದು, ಇದರಿಂದ ಅಸಮಾ ಧಾನಗೊಂಡ ಅಧಿಕಾರಿ ರಾಜ್ಯದ ಮೇಲ ಧಿಕಾರಿಗೆ ದೂರು ನೀಡಿದ್ದರು. ಮೇಲ ಧಿಕಾರಿ ಕರೆ ಮಾಡಿ ತಕರಾರು ತೆಗೆದ ಕಾರಣ ಹರೀಶ್ ಆಘಾತಗೊಂಡು ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾ ರೆನ್ನಲಾಗಿದೆ.

ಕಂಪಿಸಿದ ದತ್ತಾತ್ರೇಯ ನಗರ ಜೀವ ಭಯದಿಂದ ಓಡಿದ ನಿವಾಸಿಗಳು


ಕುಂದಾಪುರ: ನಿನ್ನೆ ಮಧ್ಯಾಹ್ನ ೨.೨೦ರ ಸುಮಾರಿಗೆ ಕುಂದಾಪುರ ವೆಸ್ಟ್ ಬ್ಲಾಕ್ ನಗರದಲ್ಲಿರುವ ದತ್ತಾತ್ರೇಯ ನಗರದಲ್ಲಿನ ವಸತಿ ಸಮುಚ್ಛಯದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಏಕಾಏಕಿ ಕಂಪನದ ಅನುಭವ ಉಂಟಾಗಿದ್ದು ಎಲ್ಲರೂ ಜೀವ ಭಯ ದಿಂದ ನೆಲ ಅಂತಸ್ತಿಗೆ ಓಡಿ ಬಂದ ಘಟನೆ ಜರುಗಿದೆ. ಈ ಸಂದರ್ಭದಲ್ಲಿ ಕೆಲವರು ಊಟಕ್ಕೆ ಕುಳಿತುಕೊಂಡಿದ್ದರೆ ಕೆಲವರು ಟಿ.ವಿ. ಹಾಗೂ ಇನ್ನಿತರ ಕೆಲಸಗಳಲ್ಲಿ ನಿರತರಾಗಿದ್ದರು. ನಿವಾಸಿಗಳು ಹೇಳುವ ಪ್ರಕಾರ ೨ರಿಂದ ೧೦ ಸೆಕೆಂಡುಗಳ ಕಾಲವಕಾಶದಲ್ಲಿ ಉಯ್ಯಾಲೆಯಲ್ಲಿ ತೂಗಿದ ಅನುಭವ ಉಂಟಾಗಿದ್ದರೆ ಇನ್ನು ಕೆಲವರು ಕುಳಿತ ಜಾಗವು ಸಣ್ಣಗೆ ಕಂಪಿಸಿದ ಹಾಗೆ ಅನುಭವಕ್ಕೆ ಬಂತೆಂದು ಭಯ ಮಿಶ್ರಿತರಾಗಿ ಹೇಳುತ್ತಿದ್ದಾರೆ. ಕೇಳಿ ಬಂದ ಪ್ರಕಾರ ಬೆಂಗಳೂರು ಹಾಗೂ ಮಂಗಳೂರಿನ ಕೆಲವೆಡೆ ಇದೇ ಸಮಯದಲ್ಲಿ ಕೆಲವೇ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ವರ್ತಮಾನಗಳು ಕೇಳಿಬಂದಿದ್ದು ಆ ಕಂಪನಕ್ಕೂ ಹಾಗೂ ಕುಂದಾಪುರದಲ್ಲಿ ಜರುಗಿದ ಕಂಪನಕ್ಕೂ ತಾಳೆ ಹಾಕಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಉತ್ತರ ಭಾರತದ ಲಾಥೂgನಲ್ಲಿ ಭೂಕಂಪನ ಉಂಟಾದಾಗ ಅದರ ತೀವ್ರತೆಯು ಕುಂದಾಪುರದ ಕೆಲವೆಡೆ ಅನುಭವಕ್ಕೆ ಬಂದಿದ್ದು ತದನಂತರ ಇಂದಿನ ಈ ಕಂಪನವು ಅನುವಕ್ಕೆ ಬಂದಿದೆ ಎಂದು ಕಳವಳಗೊಂಡಿರುವ ವಸತಿ ನಿವಾಸಿಗಳು ಹೇಳುತ್ತಿದ್ದಾರೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4075) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2522) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (93) kyandi (1) lekhana (262) ln (1) lnews (3693) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (808) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (954) tpchandrashekaran (1) traffic (1) train (1) udu (1) udupi (487) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)