ಬುದ್ಧಿಹೀನ ಮನುಷ್ಯನ ಸೊಕ್ಕಿನ ಫಲವೇ?
Posted by JAYAKIRANA Kirana on Tuesday, 10 April 2012 | 0 comments | Leave a comment...
ಅತಿಯಾದ ಬುದ್ಧಿವಂತ ಎಂದು ಹೇಳಿ ಕೊಳ್ಳುವ ಮನುಷ್ಯನು ತನ್ನ ಸ್ವಾರ್ಥದಿಂದ ಪ್ರಕೃತಿ ಮಾತೆಯನ್ನು ಬಗಿದು ತಿನ್ನುವುದರಿಂದ ಇಂದು ನಾವು ಕುಡಿಯುವ ನೀರಿನ ಸಮಸ್ಯೆಯನ್ನು ಎದು ರಿಸುತ್ತಿದ್ದೇವೆ. ಬಾಯಿಯ ಮಾತಿಗೆ ಮಾತ್ರ ಪ್ರಕೃತಿ ನಮ್ಮ ತಾಯಿ, ಭೂಮಿ ನಮ್ಮ ತಾಯಿ ಎಂದು ತಾಯಿಗೆ ಹೋಲಿಸುತ್ತೇವೆಯೇ ಹೊರತು ತಾಯಿ ಎಂಬ ಭಾವನೆಯಿಂದ ನಾವು ಇಷ್ಟರ ತನಕ ಕಂಡಿಲ್ಲವೆಂದರೆ ತಪ್ಪಾಗಲಾರದು. ಪ್ರಕೃತಿಯು ಹಾಗೆಯೇ, ಅವಳು ಎಂದೂ ಮಾತೆಯಾಗಲಿಲ್ಲ. ನಾವು ಮಾತ್ರ ಕುಪುತ್ರರಾಗಿದ್ದೇವೆ.
ಆಧುನಿಕತೆಯ ದೃಷ್ಟಿಯಿಂದ ದಿನದಿಂದ ದಿನಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಸುರಿವ ನೀರನ್ನು ಕ್ಲೀನ್ ಆಗಿ ಹರಿದು ಹೋಗುವಂತೆ ಚರಂಡಿ ಮಾಡಿ ಬಿಡು ತ್ತೇವೆ. ಬಂಡೆಕಲ್ಲಿನ ಮೇಲೆ ನೀರು ಬಿದ್ದ ಹಾಗೆ ಇಂದು ಭೂಮಿಯ ಮೇಲೆ ನೀರು ಬಿದ್ದು ಹರಿದು ಹೋಗುತ್ತದೆ. ತೋಟ ಇಲ್ಲ, ರಬ್ಬರ್ ತೋಟಕ್ಕೆ ನೀರು ಬಿಡುವ ಪ್ರಶ್ನೆ ಇಲ್ಲ. ಹಿಂದಿನ ಕಾಲದಲ್ಲಿ ಭತ್ತದ ಬೆಳೆಯಲ್ಲಿ ಮೂರು ಬೆಳೆಗಳನ್ನು ಬೆಳೆಸಲಾಗುತ್ತಿತ್ತು. ಗದ್ದೆಯಲ್ಲಿ ದಿನದ ೨೪ ಗಂಟೆ ನೀರು ನಿಲ್ಲುತ್ತಿತ್ತು. ನಿಲ್ಲ ಬೇಕಿತ್ತು. ಈಗ ಗದ್ದೆ, ಪಚ್ಚೆ ಪೈರಿನ ತೋಟ ಎಲ್ಲಾದರೂ ಪ್ರದರ್ಶನ ಇದ್ದರೆ ಭಾಗ್ಯ. ವರ್ಷ ಮೂರು ಬೆಳೆ ಬಿಡಿ ಒಂದು ಬೆಳೆ ಮಾಡುವುದೇ ಕಷ್ಟಕರವಾಗಿದೆ. ಈಗ ಎಲ್ಲಿ ನೋಡಿದರೂ ಬೋರ್‌ವೆಲ್, ವರ್ಷದಿಂದ ವರ್ಷಕ್ಕೆ ಅದರ ಜಲ ಮಟ್ಟವೂ ಕುಸಿಯುತ್ತಿದೆ. ಬಾವಿಯ ಜಲ ಪಾತಾ ಳಕ್ಕೆ ಹೋಗುತ್ತದೆ. ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಾ ದಂತೆ ಮನೆಗಳು ಹೆಚ್ಚುತ್ತಿವೆ. ಅವಿಭಕ್ತ ಕುಟುಂಬ ಇಲ್ಲ. ಕೃಷಿಯ ಭೂಮಿ, ಗುಡ್ಡಗಾಡು ಪ್ರದೇಶದಲ್ಲಿ ದಿನ ಬೆಳಗಾಗುವುದರೊಳಗೆ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ಬಿದ್ದ ಮಳೆ ಭೂಮಿಗೆ ಇಂಗಲು ಅವಕಾಶವಾದರೂ ಇವೆಯೇ ಎಂದು ನೀವೇ ಊಹಿಸಿ ಕೊಳ್ಳಿ. ನೀರು ಪೋಲಾಗುವುದಕ್ಕೆ ಲೆಕ್ಕವೇ ಇಲ್ಲ. ಒಂದು ಚೆಂಬು ನೀರಿನಲ್ಲಿ ಕೈ ತೊಳೆಯುವವ, ನಳ್ಳಿ ತಿರುಗಿಸಿ ನೀರು ಬಿಟ್ಟು ಕೈ ತೊಳೆಯಲು ಒಂದು ಕೊಡ ನೀರು ಚೆಲ್ಲುತ್ತಾನೆ, ಬಿಡುತ್ತಾನೆ. ನಳ್ಳಿ ಯನ್ನು ಎಷ್ಟು ಸಾಧ್ಯವೋ ಅಷ್ಟು ತಿರುಗಿಸುತ್ತಾನೆ. ಪೋಲಾಗುವ ನೀರಿನ ರೀತಿ ತಿಳಿಯುವುದೇ ಇಲ್ಲ. ಎಲ್ಲದಕ್ಕೂ ನಮ್ಮಲ್ಲಿ ಪರಿಹಾರ ವಿದೆ. ಗೊತ್ತಿದೆ. ಅನುಸರಣೆಯಲ್ಲಿ ಮಾತ್ರ ಇಲ್ಲ. ಪ್ರತಿಯೊಬ್ಬರ ಮನೆಯಲ್ಲಿ ಇಂಗುಗುಂಡಿ ಇರಬೇಕು. ಕೃಷಿ ಇರುವ ಜಾಗದಲ್ಲಿ ಬೇಕೇ ಬೇಕು. ಸರಕಾರ ಬಡವರು ಇರುವಲ್ಲಿ ಕೊಳವೆ ಬಾವಿಯನ್ನು ತೋಡಿಸುತ್ತದೆ. ಆದರೆ ಇದೇ ವ್ಯವಸ್ಥೆ ಕೊಳವೆ ಬಾವಿಗೆ ಪೂರಕವಾಗಿ ಇಂಗು ಗುಂಡಿ ತೋಡುವ, ಕೆಲಸಕ್ಕೆ ಕೈ ಹಾಕು ವುದಿಲ್ಲ. ಪಂಚಾಯತ್‌ಗಳು ದೊಡ್ಡ ಖರ್ಚಿಲ್ಲದೆ ಈ ಕೆಲಸವನ್ನು ಮಾಡಬಹುದು. ಇನ್ನು ಕುಡಿ ಯುವ ನೀರಿನ ವಿತರಣೆಯಲ್ಲೂ ತುಂಬಾ ಅನ್ಯಾ ಯಗಳು ನಡೆಯುತ್ತದೆ. ಅದಕ್ಕೆ ಸಂಬಂಧಿಸಿದ ವರ ಕೈ ಬಿಸಿ ಮಾಡಿದರೆ, ರಾತ್ರಿ ತೋಟಕ್ಕೆ ಬೇಕಾದಷ್ಟು ನೀರು(ಕುಡಿಯುವ ನೀರು) ಹರಿ ದಿರುತ್ತದೆ. ಅದೇ ನೀರಿಗಾಗಿ ಇನ್ನೊಂದು ಕಡೆ ಜನ ಗಂಟೆಗಟ್ಟಲೆ ನಿಂತು ನಳ್ಳಿಯ ಹತ್ತಿರ ಜಗಳ ಮಾಡುತ್ತಿರುತ್ತಾರೆ. ಹೂವಿನ ತೋಟಕ್ಕೆ ಕುಡಿ ಯುವ ನೀರಿನದ್ದೇ ಟ್ಯಾಂಕ್. ಇವತ್ತಿನ ಹಾಗೆ ಪರಿಸ್ಥಿತಿ ಸಾಗಿದರೆ ಮುಂದೆ ಕುಡಿಯುವ ನೀರಿ ಗಾಗಿ ಮನುಷ್ಯ ಮನುಷ್ಯನದ್ದೇ ರಕ್ತ ಕುಡಿಯುವ ಕಾಲ ಬಂದೀತು.
ಆದುದರಿಂದ ಈಗಾಗಲೇ ನಶಿಸಿ ಹೋಗುತ್ತಿರುವ ಕೆರೆ, ಕಾಲುವೆ, ಕೊಳ, ಗುಂಡಿಗಳ ಹೂಳೆತ್ತಿಸಿ, ನೀರು ನಿಲ್ಲಿ ಸುವ ಇಂಗುವ, ಎಕರೆಗಟ್ಟಲೆ ಪ್ರದೇಶಗಳು ಇಂದು ಮಣ್ಣು ಮುಚ್ಚಿಸಿ ಕೊಂಡು, ತಮ್ಮ ಮೇಲೆ ಕೈಗಾರಿಕಾ ಪ್ರದೇಶವನ್ನು ವ್ಯಾಪಾರ ಮಳಿಗೆಗಳನ್ನು ಹೇರಿಕೊಂಡು, ನೀರಿಲ್ಲದೆ ಪರಿತಪಿಸುವ ಮನು ಷ್ಯನನ್ನು ಕಂಡು ವ್ಯಂಗ್ಯ ನಗು ನಗುತ್ತಿದೆ. ಒಟ್ಟಿನಲ್ಲಿ ನನ್ನ ಮನೆ, ನನ್ನ ಬಾವಿ ಅಥವಾ ಸರಕಾರ ಕೊಡುತ್ತಿದೆ ಎಂದು ನೀರು ಪೋಲು ಮಾಡದೆ, ಅದು ಜೀವ ಜಲ, ಪ್ರಕೃತಿ ಮಾತೆಯ ರಸಾಮೃತ ಎಂದು ತಿಳಿದು ವ್ಯವಹರಿಸಿದರೆ ಜನರು ಹಸಿರಾಗಿ ಮರೆದಾರು, ಪ್ರಕೃತಿ ನಲಿದಾಳು.







































You can subscribe by e-mail to receive news updates and breaking stories.