ಅಮರನಾಥ ಶೆಟ್ಟಿ ಮತ್ತೊಮ್ಮೆ ಸ್ಪರ್ಧೆ

Posted by JAYAKIRANA Kirana on Monday, 9 April 2012 | 0 comments | Leave a comment...

ಕುಮಾರಸ್ವಾಮಿ ಹೇಳಿಕೆ ಸಾಬೀತು
ಮೂಡಬಿದ್ರೆ : ಜೆಡಿಎಸ್ - ಜಾತ್ಯತೀತ ಪಕ್ಷ , ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ನಾನು ಹೋದ ಲ್ಲೆಲ್ಲಾ ಜನ ನನ್ನನ್ನು ಸುತ್ತುವರಿಯುತ್ತಾರೆ. ನೂರಾರು ಸಮಸ್ಯೆಗಳನ್ನು ಹೇಳುತ್ತಾರೆ. ಜೆಡಿಎಸ್‌ನ್ನು ಪ್ರೀತಿ ಸುತ್ತಾರೆ. ಆದರೆ ಚುನಾವಣೆ ಬಂದಾಗ ಮಾತ್ರ ಇದೇ ಜನರು ಜೆಡಿಎಸ್‌ನಿಂದ ದೂರ ಸರಿಯಲು ಕಾರಣವೇನೆಂದೇ ಅರ್ಥವಾಗುತ್ತಿಲ್ಲ. ನನ್ನಿಂದ -ನಮ್ಮಿಂದ ಏನಾದರೂ ಲೋಪವಾಗಿದ್ದರೆ ನೇರವಾಗಿ ಹೇಳಿ ಸರಿಪಡಿಸಿಕೊಳ್ಳುತ್ತೇನೆ-ಹೀಗೆ ಹೇಳಿದವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.
ಬೋರುಗುಡ್ಡೆಯ ಸತ್ಯನಾರಾಯಣ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ನಡೆದ ಶಿರ್ತಾಡಿ ಜಿ.ಪಂ.ಕ್ಷೇತ್ರದ ಕಾಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.ರಾಷ್ರ್ಟಮಟ್ಟದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಬಯಲಾದರೆ, ರಾಜ್ಯದಲ್ಲಿ ಬಿಜೆಪಿಗರ ನಿಜ ಬಣ್ಣ ಬಯಲಾಗಿದೆ. ಎರಡೂ ಪಕ್ಷವನ್ನು ಜನರು ತಿರಸ್ಕರಿಸುವ ಕಾಲ ಸನ್ನಿಹಿತವಾಗಿದೆ.ಈ ರಾಜ್ಯದಲ್ಲಿ ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದ ಅವರು ಈ ಕ್ಷೇತ್ರದಲ್ಲಿ ಅಮರನಾಥ ಶೆಟ್ಟಿರಿಗೆ ತಾವೆಲ್ಲಾ ಆಶೀರ್ವದಿಸಿ ಅವರನ್ನು ಮತ್ತೊಮ್ಮೆ ಸಚಿವನಾಗುವಂತೆ ಮಾಡಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಯವರ ಈ ಹೇಳಿಕೆಯಿಂದಾಗಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿಯವರು ಮತ್ತೊಮ್ಮೆ ಸ್ಪರ್ಧಿಸುವುದು ಸಾಬೀತಾಗಿದೆ.
ಜೆಡಿಎಸ್ ಒಣಗಿದ ಮರ ಅಂತ ಕೆಲವರು ಅಪಹಾಸ್ಯ ಮಾಡುತ್ತಾರೆ. ಆದರೆ ಜನತೆಯ ಆಶೀರ್ವಾದದಿಂದ ಹುಟ್ಟಿದ ಪಕ್ಷ ಯಾವತ್ತೂ ಒಣಗಲು ಸಾಧ್ಯವಿಲ್ಲ. ಅದು ಆಲದ ಮರ ಇದ್ದಂತೆ, ಬೇರುಗಳು ವಿಸ್ತಾರವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅಮರನಾಥ ಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಮುಹಮ್ಮದ್ ಕುಂಞ ವಸಂತ ಪೂಜಾರಿ, ತೋಡಾರು ದಿವಾಕರ ಶೆಟ್ಟಿ, ಶೀನಪ್ಪ ಎಂ, ಜಯಂತ್ ಹೆಗ್ಡೆ, ಯುವರಾಜ ಹೆಗ್ಡೆ, ರತ್ನಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನೇಮಕ ವಿವಾದ: ಸರಕಾರದ ಅಪ್ರಬುದ್ಧತೆ

Posted by JAYAKIRANA Kirana on | 0 comments | Leave a comment...

ರಾಜ್ಯ ಸರಕಾರ ಮೇಲಿಂದ ಮೇಲೆ ಹಲವು ನೇಮ ಕಾತಿ ವಿಷಯಗಳಲ್ಲಿ ಎಡವಿರುವುದು ಜನತೆ ಸರಕಾರದ ಕಾರ್ಯವೈಖರಿ ಮೇಲೆಯೇ ಸಂಶಯ ಪಡುವಂತೆ ಮಾಡಿದೆ. ಲೋಕಾಯುಕ್ತರಿಂದ ಹಿಡಿದು ಮೊನ್ನೆ ಮೊನ್ನೆಯ ಶಂಕರ ಬಿದರಿ ಪ್ರಕರಣದವರೆಗೂ ಸರಕಾರಕ್ಕೆ ಸೋಲಾಗಿರುವುದೇ ಹೆಚ್ಚು. ಹಿರಿಯ ಮತ್ತು ಜವಾ ಬ್ದಾರಿಯುತ ಸ್ಥಾನದ ಹುದ್ದೆಗೆ ನೇಮಕಾತಿ ನಡೆಸುವಾಗ ಸರಕಾರ ಎಲ್ಲೋ ಒಂದು ಕಡೆ ತಪ್ಪು ಹೆಜ್ಜೆ ಇರಿಸುತ್ತಿದೆ ಎಂಬ ಅನುಮಾನ ಬರಲು ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. ಇಂಥ ವುಗಳಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯು ವಂಥವುಗಳೆಂದರೆ ಲೋಕಾಯುಕ್ತರಾಗಿದ್ದ ನ್ಯಾ.ಮೂ ಶಿವರಾಜ್ ಪಾಟೀಲ್, ಆ ಬಳಿಕ ಆ ಸ್ಥಾನಕ್ಕೆ ಶಿಪಾರಸು ಮಾಡಿದ್ದ ನ್ಯಾ.ಮೂ. ಬನ್ನೂರುಮಠ, ೨ನೇ ಉಪ ಲೋಕಾಯುಕ್ತ ನ್ಯಾ.ಮೂ. ಚಂದ್ರಶೇಖರಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಪ್ರಕರಣಗಳು. ಇದರ ಜತೆಗೆ ಅಟರ್ನಿ ಜನರಲ್ ಬಿ.ವಿ. ಆಚಾರ್ಯ ರಾಜೀನಾಮೆ ಪ್ರಕರಣವೂ ಸರಕಾರದ ಪಾಲಿಗೆ ಒಂದು ರೀತಿಯ ಮುಜುಗರದ ಮತ್ತು ಹಿನ್ನೆಡೆಯ ಹೆಜ್ಜೆ ಎಂದೇ ಹೇಳಬೇಕಾಗುತ್ತದೆ.
ಶಂಕರ ಬಿದರಿ ಪ್ರಕರಣದಲ್ಲಿ ಸರಕಾರಕ್ಕೆ ನ್ಯಾಯಾಲ ಯದಲ್ಲಿ ಸೋಲಾಗಿರುವುದು ಗಂಭೀರ ವಿಷಯ. ಶಂಕರ ಬಿದರಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಿಸಿರುವ ಸರಕಾರ, ಅವರನ್ನು ಆ ಹುದ್ದೆಯಲ್ಲಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಅದರ ದೌರ್ಬಲ್ಯ ಎಂದೇ ಹೇಳಬೇಕಾಗುತ್ತದೆ. ಶಂಕರ ಬಿದರಿ ಅವರು ವೀರಪ್ಪನ್ ಪ್ರಕರಣದಲ್ಲಿ ಸಾಹಸದ ಹೋರಾಟ ನಡೆಸಿ ಗಮನ ಸೆಳೆದವರು. ಅವರೊಬ್ಬ ಖಡಕ್ ಅಧಿಕಾರಿ. ಯಾರಿಗೂ ಜಗ್ಗುವವರಲ್ಲ, ಬಗ್ಗುವವರಲ್ಲ. ಅವರು ಪೊಲೀಸ್ ಆಯುಕ್ತರಾಗಿದ್ದ ಸಂದರ್ಭ ಬೆಂಗಳೂರು ನಗರದಲ್ಲಿ ಅಪರಾಧ ಇಳಿಮುಖವಾಗಿತ್ತು. ಎಂಥ ದುಷ್ಟ ಶಕ್ತಿಯನ್ನೂ ತಡೆಯಬಲ್ಲ ಧೈರ್ಯಶಾಲಿ ಅವರು. ಅವರು ಯಾವುದೇ ಅಕ್ರಮದಲ್ಲಿ ಭಾಗಿಯಾದ ಆರೋಪ ಇರಲಿಲ್ಲ. ಆದರೆ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಸಂದರ್ಭ ಅವರು ಆದಿವಾಸಿಗಳು ಮತ್ತು ಕಾಡಿಗೆ ಒತ್ತುಕೊಂಡಿರುವ ಪ್ರದೇಶದ ಜನರ ಮೇಲೆ ದೌರ್ಜನ್ಯ ನಡೆಸಿದ್ದರು ಎಂಬ ಆರೋಪದ ಮೇಲೆ ಅವರ ಹುದ್ದೆಗೆ ಚ್ಯುತಿ ಬಂದಿದೆ. ಅದೂ ಕೂಡ ಹೈಕೋರ್ಟ್ ತನ್ನ ತೀರ್ಪು ನೀಡುವ ಹೊತ್ತಿಗೆ, ಶಂಕರಿ ಬಿದರಿಯನ್ನು ಸದ್ದಾಂ ಹುಸೇನ್, ಗಡ್ಢಾಫಿಗೆ ಹೋಲಿಸಿದೆ. ಇದು ಸಣ್ಣ ವಿಷಯವಲ್ಲ.
ಶಂಕರ ಬಿದರಿ ಪರವಾಗಿ ಸಮರ್ಥವಾಗಿ ವಾದಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ಬಿದರಿಯವರೇ ಆರೋಪಿಸುವಂತೆ ಅವರ ವಿರುದ್ಧ ಒಳಸಂಚು ನಡೆದಿದ್ದರೆ ಅದರ ವಿರುದ್ಧ ಸೆಟೆದು ನಿಲ್ಲಲು ಸರಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ಹಿರಿತನ ತಪ್ಪಿಸಿ ಬಿದರಿಗೆ ಅಧಿಕಾರ ನೀಡಿದ್ದರೆ ಅದನ್ನು ಯಾಕೆ ಸಮರ್ಥಿಸಲಾಗಿಲ್ಲ ಎಂಬ ಜನರ ಪ್ರಶ್ನೆಗೆ ಸರಕಾರ ಉತ್ತರಿಸದೆ ಮೌನವಾಗಿದೆ. ಶಂಕರ ಬಿದರಿಯಂಥ ಸಮರ್ಥ ಅಧಿಕಾರಿಯನ್ನು ಪೊಲೀಸ್ ಮಹಾ ನಿರ್ದೇಶಕ ಹುದ್ದೆಗೇರಿಸುವಾಗ ಸರಕಾರ ಎಡವಿದ್ದು ಹೌದಾಗಿದ್ದರೆ ಇದೀಗ ಅದರ ಫಲವನ್ನು ಬಿದರಿಯವರು ಹೊರುವಂತಾಗಿದೆಯಲ್ಲಾ? ಒಬ್ಬ ಪೊಲೀಸ್ ಮಹಾ ನಿರ್ದೇಶಕರ ಪರವಾಗಿ ವಾದಿಸಿ ಕೇಸನ್ನು ಗೆಲ್ಲಲಾಗದ ಸರಕಾರ ಕಾವೇರಿ ಜಲ ವಿವಾದ, ಬೆಳಗಾವಿ ಗಡಿ ವಿವಾದದಂಥ ಕೇಸುಗಳನ್ನು ಹೇಗೆ ನಿಭಾಯಿ ಸೀತು ಎಂಬ ಆತಂಕ, ಭೀತಿ ಜನರನ್ನು ಕಾಡುತ್ತಿದೆ.
ಈಗ ನೆನಪಾಗುವವರೇ ಅಟರ್ನಿ ಜನರಲ್ ಬಿ.ವಿ. ಆಚಾರ್ಯರು. ಹಿರಿಯರೂ, ಜ್ಞಾನವೃದ್ಧರೂ ಆಗಿರುವ ಅವರು ಅಟರ್ನಿ ಜನರಲ್ ಹುದ್ದೆಗೆ ರಾಜೀನಾಮೆ ನೀಡಿ ರುವುದರ ಪರಿಣಾಮ ಇದೀಗ ಸರಕಾರದ ಮೇಲಾಗುತ್ತ ದೆಯೇ ಎಂಬ ಅನುಮಾನ ಕಾಡುತ್ತಿದೆ.
ಅವರ ರಾಜೀನಾಮೆ ಹಿಂದಿನ ನಿಜವಾದ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ. ಅವರು ಜಯಲಲಿತಾರೊಂದಿಗೆ ಸಂಬಂಧ ಹೊಂದಿರುವುದು ಮತ್ತು ಅವರ ಕೇಸುಗಳಲ್ಲಿ ವಾದಿಸುತ್ತಿದ್ದಾರೆ ಇತ್ಯಾದಿ ಕಾರಣ ನೀಡಲಾಗಿದ್ದರೂ ಏನೋ ಒಂದು ರಹಸ್ಯ ಇದೆ ಎಂಬ ಅನುಮಾನ ಇನ್ನೂ ಜೀವಂತವಿದೆ. ಲೋಕಾಯುಕ್ತರಾಗಿ ನ್ಯಾ.ಮೂ. ಶಿವರಾಜ್ ಪಾಟೀಲರನ್ನು ನೇಮಿಸಿ ಸರಕಾರ ಮಖಭಂಗಕ್ಕೊಳಗಾಗಿತ್ತು. ಅವರು ಭೂ ವಿವಾದದಲ್ಲಿ ಸಿಲುಕಿ ರಾಜೀನಾಮೆ ನೀಡುವಂತಾಯಿತು. ಆ ಬಳಿಕ ಶಿಫಾರಸು ಮಾಡಿದ್ದು ನ್ಯಾ.ಮೂ. ಬನ್ನೂರುಮಠ ಅವರ ಹೆಸರನ್ನು. ಅವರಿಗೂ ಕಳಂಕ ತಟ್ಟಿತ್ತು. ಅವರ ಮೇಲೆಯೂ ಹಲವು ಆರೋಪ ಗಳು ಕೇಳಿ ಬಂದಾಗ ಬೇರೆ ಹೆಸರು ಸೂಚಿಸಿ ಎಂದು ರಾಜ್ಯಪಾಲರು ಹೇಳಿದರು. ಅದಕ್ಕೆ ಒಪ್ಪಲೇ ಇಲ್ಲ ಸರಕಾರ. ಅವರನ್ನೇ ನೇಮಿಸಿ ಎಂದು ಹಠ ಹಿಡಿಯಿತು. ಇತ್ತಂಡಗಳೂ ಹಿಡಿದ ಹಠವನ್ನು ಸಡಿಲಿಸದ ಪರಿಣಾಮವಾಗಿ ತಿಂಗಳುಗಳ ಕಾಲ ವಿವಾದ ಜೀವಂತವಿತ್ತು. ಯಾವುದೇ ಕಾರಣಕ್ಕೂ ತನ್ನ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕುವುದಿಲ್ಲ ಎಂಬುದನ್ನರಿತ ಬನ್ನೂರುಮಠ ಕೊನೆಗೆ ತಾನೇ ಹಿಂದೆ ಸರಿದರು. ಅಲ್ಲಿಗೆ ಆ ಪ್ರಕರಣ ಮುಕ್ತಾಯವಾಯಿತು. ಪರೋಕ್ಷವಾಗಿ ಸೋಲಾದುದು ಸರಕಾರಕ್ಕೇ. ಒಂದೊಮ್ಮೆ ಸರಕಾರದ ಒತ್ತಡಕ್ಕೆ ಮಣಿದು ನ್ಯಾ.ಮೂ. ಬನ್ನೂರುಮಠ ಅವರನ್ನೇ ಲೋಕಾಯುಕ್ತರಾಗಿ ನೇಮಿಸಲು ರಾಜ್ಯಪಾಲರು ಒಪ್ಪಿದ್ದರೆ ವಿವಾದ ಮತ್ತೂ ಬೆಳೆಯುತ್ತಿತ್ತು. ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುವವರು ಧಾರಾಳ ಸಂಖ್ಯೆಯಲ್ಲಿದ್ದರು. ಅಲ್ಲಿ ಶಂಕರ ಬಿದರಿಗಾದ ಸ್ಥಿತಿಯೇ ಬನ್ನೂರುಮಠರಿಗೆ ಆಗುವ ಸಾಧ್ಯತೆಯೇ ಹೆಚ್ಚಿತ್ತು. ಇದೀಗ ೨ನೇ ಉಪ ಲೋಕಾಯುಕ್ತ ನ್ಯಾ.ಮೂ. ಚಂದ್ರಶೇಖರಯ್ಯ ಅವರ ಸರದಿ. ಅವರ ನೇಮಕವೇ ಅಸಿಂಧು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ. ನೇಮಕ ಸಂದರ್ಭ ಸರಕಾರವು ಮುಖ್ಯ ನ್ಯಾಯಮೂರ್ತಿಯ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ, ವಿಪಕ್ಷದೊಂದಿಗೆ ಚರ್ಚಿಸಿಲ್ಲ ಇತ್ಯಾದಿ ಕಾರಣಗಳನ್ನು ಮುಂದೊಡ್ಡಿ ಅವರ ನೇಮಕಾತಿಯನ್ನು ಅಸಿಂಧು ಎಂದು ಘೋಷಿಸಿದೆ. ಇದು ಸರಕಾರಕ್ಕೆ ಮತ್ತೊಂದು ಮುಖಭಂಗ. ಶಂಕರ ಬಿದರಿ ಮತ್ತು ನ್ಯಾ.ಮೂ ಚಂದ್ರಶೇಖರಯ್ಯ ಅವರಿಗೆ ಸರಕಾರದಿಂದ ಅನ್ಯಾಯವಾದಂತಾಗಿದೆ. ಅವರಿಬ್ಬರ ಘನತೆಗೆ ಸರಕಾರವೇ ಪರೋಕ್ಷವಾಗಿ ಮಸಿ ಬಳಿದಂತಾಗಿದೆ.
ಮೇಲಿಂದ ಮೇಲೆ ಈ ರೀತಿಯ ಎಡವಟ್ಟುಗಳು ಸರಕಾರದ ಕಡೆಯಿಂದ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಯಲ್ಲವೇ ಅಲ್ಲ. ಸಂತೋಷ್ ಹೆಗ್ಡೆ ಬಿಟ್ಟುಹೋಗಿರುವ ಲೋಕಾಯುಕ್ತ ಸ್ಥಾನ ಈಗಲೂ ಖಾಲಿ ಬಿದ್ದಿದೆ. ಇವೆಲ್ಲ ಸರಕಾರದ ಅಪ್ರಬುದ್ಧತೆಯ ದ್ಯೋತಕವೋ ಅಥವಾ ಹಠಮಾರಿತನಕ್ಕೆ ಸಿಗುವ ಫಲವೋ? ಚಿಂತಿಸಬೇಕಾಗಿದೆ.

ಮಾನವತಾ ಮಹಾಸಂಗಮಕ್ಕೆ ನಗರ ಸಜ್ಜು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ಮಾನವತಾ ಮಹಾ ಸಮಾವೇಶ ನಡೆಯಲಿದ್ದು ಇದಕ್ಕಾಗಿ ನಗರ ಸಜ್ಜುಗೊಂಡಿದೆ.
ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಸಂಚಾಲಕ ಎಂ.ಎಸ್. ಎಂ.ಝೈನಿ ಕಾಮಿಲ್ ಸಖಾಫಿ ಮಾತನಾಡಿ, ಇಂದಿನ ದಿನ ಗಳಲ್ಲಿ ಮಾನವತೆಯೆಂಬುವುದು ಮರೀ ಚಿಕೆಯಾಗಿದ್ದು ಇಂತಹ ಕಾಲಘ ಟ್ಟದಲ್ಲಿ ಜನರ ಮನದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶ ದಿಂದ ಮಾನ ವತಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿ ದರು.
ನಾಳೆ ಮಧ್ಯಾಹ್ನ ೨.೦೦ ಗಂಟೆಗೆ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಸಂಚಾಲಕರಾದ ಕೂರತ್ ಫಝಲ್ ಕೋಯಮ್ಮ ತಂಙಳ್ ಪ್ರಾರ್ಥನೆ ನೆರವೇರಿಸಲಿದ್ದು, ಕೇಂದ್ರ ಮಂತ್ರಿ ವೀರಪ್ಪ ಮೊಯಿಲಿ ಉದ್ಘಾಟಿಸುವರು. ರಾಜ್ಯ ಜಂಈಯತ್ತುಲ್ ಉಲಮಾದ ಅಧ್ಯಕ್ಷರಾದ ಬೇಕಲ ಇಬ್ರಾಹಿಂ ಮುಸ್ಲಿ ಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ಸುನ್ನಿ ಜಂಈಯ ತ್ತುಲ್ ಉಲಮಾದ ಅಧ್ಯಕ್ಷರಾದ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಮತ್ತು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಡೆನಿಸ್ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಜೆ ನೆಹರೂ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಉಳ್ಳಾಲ ಖಾಝಿಯವರು ವಹಿಸಲಿದ್ದು, ರಾಜ್ಯ ಸುನ್ನೀ ಉಲಮಾ ಬೋರ್ಡ್‌ನ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಅಶ್ಮತಿ ಖಾದ್ರಿ ಉದ್ಘಾಟಿಸಲಿದ್ದಾರೆ. ಬೇಕಲ ಇಬ್ರಾಹಿಂ ಮುಸ್ಲಿಯಾರ್ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಎ.ಪಿ.ಉಸ್ತಾದ್, ಪೆರೋಡ್ ಉಸ್ತಾದ್ ಮುಖ್ಯ ಬಾಷಣ ಮಾಡಲಿದ್ದು, ಕೇಂದ್ರದ ಮಾಜಿ ಮಂತ್ರಿ ಸಿ.ಎಂ.ಇಬ್ರಾಹಿಂ, ಅನ್ವರ್ ಮಾಣಿಪ್ಪಾಡಿ, ಯೇನಪೋಯ ಅಬ್ದುಲ್ಲಾ ಕುಂಞಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಝೈನಿ ವಿವರಿಸಿದರು. ಪತ್ರಿಕಾಗೋಷ್ಟಿಯಲ್ಲಿ ಎಸ್.ಪಿ.ಹಂಝ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಎಂ.ಪಿ.ಎಂ.ಅಶ್ರಫ್ ಸಅದಿ ಮಲ್ಲೂರು ಮತ್ತು ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯಾ ಉಪಸ್ಥಿತರಿದ್ದರು.
ಪ್ರವಾದಿ (ಸ.ಅ) ಕೇಶ ಅಸಲಿ
ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಝೈನಿ, ಎ.ಪಿ.ಉಸ್ತಾದ್ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೆ ಇಳಿದ ಸಂದರ್ಭದಲ್ಲೇ ವಿರೋಧಿಗಳು ಅವರ ಮೇಲೆ ವಿವಿಧ ರೀತಿಯ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇದರ ಭಾಗವೇ ಪ್ರವಾದಿ(ಸ.ಅ)ಯವರ ಕೇಶ ವಿವಾದವಾಗಿದೆ ಎಂದರು. ಪ್ರವಾದಿ(ಸ.ಅ)ಯವರ ಕೇಶವನ್ನು ಅಬುಧಾಬಿಯ ವಿದ್ವಾಂಸರು ನೀಡಿದ್ದು ಅದು ಅಸಲಿಯಾಗಿದೆ. ಆದರೂ ವಿರೋಧಿಗಳು ನಕಲಿಯೆಂದು ಇಲ್ಲ-ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಇದರ ಬಗ್ಗೆ ಕೇಶ ನೀಡಿದವರೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಆದೇಶವನ್ನು ಧಿಕ್ಕರಿಸಿದ ಮುಖ್ಯಾಧಿಕಾರಿ!

Posted by JAYAKIRANA Kirana on | 0 comments | Leave a comment...

ಅಪಾಯಕಾರಿ ಕಟ್ಟಡ ತೆರವುಗೊಳಿಸದ ಪುರಸಭೆ
ಕಾರ್ಕಳ: ಉಡುಪಿ ಕಡೆಗೆ ಹೋಗುವ ಬಸ್ ನಿಲ್ದಾಣದ ಪಕ್ಕದಲ್ಲಿ ರುವ ಅಪಾಯಕಾರಿ ಶೌಚಾಲಯ ಕಟ್ಟಡವನ್ನು ಕೂಡಲೇ ತೆರವುಗೊಳಿಸ ಬೇಕೆಂಬ ಸ್ಪಷ್ಟ ಅದೇಶವೊಂದನ್ನು ಪುರಸಭಾ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ಅವರು ಉಲ್ಲಂಘಿಸಿರುವ ಅಂಶ ಬೆಳಕಿಗೆ ಬಂದಿದೆ.
ಸಾರ್ವಜನಿಕರ ಉಪಯೋಗ ಕ್ಕೆಂದು ಪುರಸಭಾ ವತಿಯಿಂದ ಹಲವು ವರ್ಷಗಳ ಹಿಂದೆ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಇದರ ಪಕ್ಕದಲ್ಲಿ ಬಸ್ ನಿಲ್ದಾಣಕ್ಕೆ ಹೋಗುವ ಸಲುವಾಗಿ ಮಣ್ಣನ್ನು ತೆಗೆದು ರಸ್ತೆಯನ್ನು ನಿರ್ಮಿಸಲಾಗಿದೆ. ಇದು ಅವೈಜ್ಞಾನಿಕ ವಾಗಿದ್ದುದರಿಂದ ಶೌಚಾಲಯದ ಅಡಿಪಾಯ ರಸ್ತೆಗಿಂತ ಮೇಲ್ಭಾಗದಲ್ಲಿ ಕಾಣತೊಡಗಿದೆ. ಮಾತ್ರವಲ್ಲದೇ ಇದೇ ರಸ್ತೆಯಾಗಿ ಬಸ್‌ಗಳು ಓಡಾಡುತ್ತಿ ರುವುದರಿಂದ ಭೂಕಂಪನ ಉಂಟಾಗಿ ಅಡಿಪಾಯ ಕುಸಿಯುವ ಹಂತಕ್ಕೆ ತಲುಪಿತ್ತು.
ಒಂದೆಡೆ ಶೌಚಾಯದ ಗುಂಡಿ ಯಲ್ಲಿ ತುಂಬಿಕೊಂಡಿದ್ದ ತ್ಯಾಜ್ಯ ನೀರು ಹಾಗೂ ಶೌಚಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾಗಿರುವ ಟ್ಯಾಂಕ್‌ನಲ್ಲಿ ತುಂಬಿಕೊಂಡಿರುವ ನೀರಿನ ಒತ್ತಡದಿಂದಾಗಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿರುವ ಸ್ಥಿತಿಯಲ್ಲಿ ಈ ಕಟ್ಟಡವಿತ್ತು. ಇದರ ಬಗ್ಗೆ ಜಯಕಿರಣ ಪತ್ರಿಕೆ ಸಚಿತ್ರ ವರದಿಗೆ ಸ್ಪಂದಿಸಿದ ಅಂದಿನ ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಪಾರ್ವತಿ ಅವರು ಅಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪಾಯಕಾರಿ ಶೌಚಾಲಯದ ಕಟ್ಟಡವನ್ನು ಕೂಡಲೇ ತೆರವುಗೊಳಿಸು ವಂತೆ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ಅದೇ ಶಿಸಿದ್ದರು. ಮಾಜಿ ಅಧ್ಯಕ್ಷ ಎನ್.ಆರ್ ಸುಬೀತ್ ಕುಮಾರ್, ಮಾಜಿ ಉಪಾಧ್ಯಕ್ಷೆ ನಳಿನಿ ವಿಜೇಂದ್ರ ಆಚಾರ್ಯ, ಹಾಲಿ ಅಧ್ಯಕ್ಷೆ ಪ್ರತಿಮಾ ಮೋಹನ್ ರಾಣೆ, ಸ್ಥಾಯಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಶಿವಾಜಿರಾವ್, ಪುರಸಭಾ ಉಪ ಅಭಿಯಂತರ ದುರ್ಗಪ್ರಸಾದ್ ಮೊದಲಾದವರು ಸ್ಥಳದಲ್ಲಿ ಉಪಸ್ಥಿ ತರಿದ್ದರಲ್ಲದೇ ಸಾಕ್ಷಾಧಾರಿಗಳಾಗಿದ್ದರು.
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅವರ ಅದೇಶದ ಮೇರೆಗೆ ಶೌಚಾಲಯಕ್ಕೆ ಬೀಗ ಜಡಿದ ಪುರಸಭಾ ಆಡಳಿತ ವರ್ಗಕ್ಕೆ ಅದನ್ನು ಕೆಡವಲು ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಕಾಲ ಇನ್ನೂ ಕೂಡಿಬರಲಿಲ್ಲ. ಮಳೆಗಾಲ ಆರಂಭಕ್ಕೆ ತಿಂಗಳು ಬಾಕಿ ಇರುವ ಮೊದಲೇ ಅಪಾಯಕಾರಿ ಶೌಚಾಲಯದ ಕಟ್ಟಡವನ್ನು ಕೆಡವಿ ಮುಂದೆ ಉಂಟಾಗುವ ಅಪಾಯಕಾರಿ ಘಟನೆ ತಪ್ಪಿಸಬೇಕಾಗಿದೆ.

ತೆಂಕನಿಡಿಯೂರು ಗ್ರಾ.ಪಂ.ನ ನೀರಿನ ರಾಜಕಾರಣಕ್ಕೆ ನಗರಸಭೆ ತಿರುಗೇಟು

Posted by JAYAKIRANA Kirana on | 0 comments | Leave a comment...

ನೀರಿನ ವಿವಾದ:
ಉಡುಪಿ: ತೆಂಕನಿಡಿಯೂರು ಗ್ರಾ.ಪಂ.ಗೆ ಉಡುಪಿ ನಗರಸಭೆಯು ನೀರು ಸರಬರಾಜನ್ನು ಸ್ಥಗಿತಗೊಳಿಸಿ ರುವುದಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ಗ್ರಾ.ಪಂ ಅಧ್ಯಕ್ಷರು ಹಾಗೂ ಉಪಾ ಧ್ಯಕ್ಷರು ನಗರಸಭೆ ಮುಂದೆ ನಡೆಸಿದ ಪ್ರತಿಭಟನಾ ಪ್ರದರ್ಶನಕ್ಕೆ ಅರ್ಥವೇ ಇಲ್ಲ. ಇದು ನಗರಸಭೆ ವಿರುದ್ದ ಗೂಬೆ ಕೂರಿಸುವ ಪ್ರಯತ್ನ. ನಗರಸಭಾ ಧ್ಯಕ್ಷರು ಹಾಗೂ ಶಾಸಕನಾದ ತನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ವಲ್ಲದೆ ಮತ್ತೇನೂ ಅಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ಅವರು ತಿರುಗೇಟು ನೀಡಿದ್ದಾರೆ.
ಉಡುಪಿ ನಗರಸಭೆಯ ಸತ್ಯ ಮೂರ್ತಿ ಸಭಾಂಗಣದಲ್ಲಿ ಸೋಮ ವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ನೀರಿನ ಮೂಲವನ್ನು ಹುಡು ಕುವುದು, ಗ್ರಾ.ಪಂ.ವ್ಯಾಪ್ತಿಯ ಕುಟುಂ ಬಗಳಿಗೆ ನೀರು ಸರಬರಾಜು ಮಾಡು ವುದು ಇತ್ಯಾದಿ ಗ್ರಾ.ಪಂ.ನ ಜವಾಬ್ದಾ ರಿಯೇ ಹೊರತು ನಗರಸಭೆಯದ್ದಲ್ಲ ಎಂದು ಸ್ಪಷ್ಟಪಡಿಸಿದ ಶಾಸಕ ರಘುಪತಿ ಭಟ್ ಅವರು, ಗ್ರಾ.ಪಂ.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವುದೇ ಪಕ್ಷದ ಚಿಹ್ನೆಯಡಿಯಲ್ಲಿ ನಿಂತು ಸ್ಪರ್ಧಿಸಿ ಗೆದ್ದವರಲ್ಲ. ಪಕ್ಷಾತೀತ ನೆಲೆ ಯಲ್ಲಿ ಆಯ್ಕೆಯಾದವರು. ಇವರು ಕುಡಿಯುವ ನೀರಿನ ವಿಷಯದಲ್ಲಿ ಪಕ್ಷ ರಾಜಕಾರಣ ನಡೆಸಿ ಸಣ್ಣತನ ಮಾಡು ವುದು ಒಳ್ಳೆಯ ಬೆಳವಣಿಗೆಯಲ್ಲ. ಇವರ ಪಕ್ಷ ರಾಜಕಾರಣದಿಂದಾಗಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೆಂಕನಿಡಿಯೂರು ಗ್ರಾ.ಪಂ.ಗೆ ಮಾತ್ರ ನಗರಸಭೆ ನೀರು ಸರಬರಾಜು ಸ್ಥಗಿತಗೊಳಿಸಿದ್ದಲ್ಲ. ಅಂಬಲಪಾಡಿ, ಕಡೆಕಾರು, ಅಲೆವೂರು ಮತ್ತು ೮೦ ಬಡಗಬೆಟ್ಟು ಗ್ರಾ.ಪಂ.ಗಳಿಗೂ ನೀರು ಸರಬರಾಜು ಸ್ಥಗಿತಗೊಳಿ ಸಲಾಗಿದೆ. ತೆಂಕನಿಡಿಯೂರು ಗ್ರಾ.ಪಂ.ಹೊರತುಪಡಿಸಿ ಉಳಿದ ಮೂರೂ ನಗರಸಭೆಗಳೂ ನಗರಸಭೆ ಅಧ್ಯಕ್ಷರು ಹಾಗೂ ಶಾಸಕರನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿ, ಸ್ವಲ್ಪ ಹಣವನ್ನು ಪಾವತಿಸಿ, ಉಳಿಕೆ ಹಣವನ್ನು ಆದಷ್ಟು ಬೇಗನೇ ಪಾವತಿಸುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಆದರೆ ತೆಂಕನಿಡಿಯೂರು ಗ್ರಾ.ಪಂ. ಮಾತ್ರ ಇದುವರೆಗೆ ಒಂದೇ ಒಂದು ಸಲ ನಗರಸಭೆ ಯನ್ನಾಗಲೀ, ಶಾಸಕರನ್ನಾಗಲೀ ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಂಡು ಪರಿಹರಿಸುವ ಪ್ರಯತ್ನವನ್ನೇ ನಡೆಸಿಲ್ಲ. ಅದರ ಬದಲು ಪ್ರತಿಭಟನೆ ನಡೆಸಿದೆ. ನಗರಸಭೆಯ ನೀರು ಪಡೆದು ಕೊಳ್ಳುತ್ತಿರುವ ಕುಟುಂಬಗಳಿಂದ ನೀರಿನ ಬಿಲ್ ವಸೂಲಿ ಮಾಡಿ ರುವ ಗ್ರಾ.ಪಂ., ಅದೇ ಹಣವನ್ನು ನಗರಸಭೆಗೆ ಪಾವತಿಸಬೇಕು. ಆದರೆ ತೆಂಕನಿಡಿಯೂರು ಗ್ರಾ.ಪಂ. ಇದನ್ನು ಸಹ ಮಾಡಿಲ್ಲ ಎಂದು ರಘುಪತಿ ಭಟ್ ಹೇಳಿದರು.
 ನಗರಸಭಾ ಸದಸ್ಯರ ವಿರೋಧವಿದ್ದಾಗಲೂ ಅವರಿಗೆ ಮನ ವರಿಕೆ ಮಾಡಿ ಗ್ರಾ.ಪಂ.ಗಳಿಗೆ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡವನು ನಾನು. ನೀರಿನ ಬಿಲ್ ೩೨ ಲಕ್ಷ ರೂ. ಬಂದಾಗ, ಗ್ರಾ.ಪಂ.ಗಳ ಸಮಸ್ಯೆಯನ್ನು ಅರಿತುಕೊಂಡು ಅಧಿಕಾರಿಗಳ ಸಭೆ ನಡೆಸಿ ಆ ಸಮಸ್ಯೆ ಪರಿಹರಿಸಿದವನು ತಾನು. ನಗರಸಭೆ ನೀರು ಸರಬರಾಜು ಮಾಡುತ್ತಿದೆ ಎಂದೇ ಹೇಳಿಕೊಂಡು, ಈಗ ನಗರಸಭೆಯ ನೀರು ಬೇಡವೆಂದೂ, ಬಿಲ್ ಪಾವತಿಸು ವುದಿಲ್ಲವೆಂದು ಹೇಳುತ್ತಲೇ ನಗರಸಭೆ ಮುಂದೆ ಪ್ರತಿಭಟನೆ ನಡೆಸುತ್ತಾರೆ. ಚೆಕ್ ಪಾವತಿಸಿದ್ದೇವೆ, ವಾಪಾಸ್ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ನೀರು ಸರಬರಾಜು ಸಂದರ್ಭ ನೀರಿನ ಬಿಲ್‌ನ್ನು ನಗರಸಭೆ ಅಕೌಂಟ್‌ಗೆ ನೇರವಾಗಿ ಪಾವತಿಸಬೇಕು ಎನ್ನುವುದು ಷರತ್ತಾಗಿತ್ತು. ಹೀಗೆ ಮಾಡುತ್ತಿದ್ದರೆ ಅದು ವಾಪಾಸ್ ಆಗುವ ಪ್ರಶ್ನೆಯೇ ಇರಲಿಲ್ಲ. ತೆಂಕ ಗ್ರಾ.ಪಂ.ಶರತ್ತಿನಂತೆ ನಡೆದು ಕೊಳ್ಳದೆ ಚೆಕ್ ಕೊಟ್ಟರೆ ವಾಪಾಸ್ ಮಾಡಿದ್ರು ಎಂದೆಲ್ಲಾ ಹೇಳಿ ಯಾರನ್ನು ಮಂಗ ಮಾಡುವುದು ಎಂದು ಭಟ್ ಖಾರವಾಗಿಯೇ ಪ್ರಶ್ನಿಸಿದರು.
 ನಗರಸಭಾಧ್ಯಕ್ಷರಾದ ಕಿರಣ್ ಕುಮಾರ್ ಅವರು ಮಾತನಾಡಿ, ತೆಂಕನಿಡಿಯೂರು ಗ್ರಾ.ಪಂ.ನ ಪ್ರತಿಭಟನೆ ರಾಜಕೀಯ ಪ್ರೇರಿತ ವಾಗಿದ್ದು, ಖಂಡನಾರ್ಹ ಎಂದರು. ಶಾಸಕ ಭಟ್ಟರ ಒತ್ತಾಯದ ಬಳಿಕ ಗ್ರಾ.ಪಂ.ಗಳಿಗೆ ಮಾನವೀಯ ನೆಲೆಯಲ್ಲಿ ನೀರು ಸರಬ ರಾಜು ಮಾಡಲು ಒಪ್ಪಿಕೊಂಡಿದ್ದೆವು. ನಮಗೂ ಮಾನವೀಯತೆ, ಕಾಳಜಿ ಇದೆ. ಸಮಸ್ಯೆ ಅರ್ಥ ಆಗುತ್ತೆ. ಆದರೆ ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸುವ ಬದಲಾಗಿ ತೆಂಕನಿಡಿಯೂರು ಗ್ರಾ.ಪಂ. ಆಡಳಿತ ನಗರಸಭೆ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದೆ ಎಂದು ಅಪಾದಿಸಿದರು.
 ನೀರಿನ ಬಿಲ್ ಅನ್ನು ಬಿಜೆಪಿ ಆಡಳಿತವಿದ್ದಾಗಿನ ಬಿಲ್ ಎಂದು ಹೇಳಿಕೊಂಡಿದ್ದಾರೆ. ನೀರಿನ ಬಿಲ್‌ನ್ನು ಹೀಗೆ ಹೇಳುವುದು ತಪ್ಪು ಎಂದ ಕಿರಣ್ ಕುಮಾರ್ ಅವರು, ನಗರಸಭೆಗೆ ಬಿಜೆಪಿ ಆಡಳಿತ ಬಂದಾಗ ಹಿಂದಿನ ಆಡಳಿತ ಮಾಡಿದ ೪ ಕೋಟಿ ರು. ಸಾಲ ಉಳಿಕೆಯಾಗಿತ್ತು. ಅದನ್ನು ಬಿಜೆಪಿ ಆಡಳಿತ ಪಾವತಿಸಿ ಬಳಿಕ ಅಭಿವೃದ್ದಿ ಕೆಲಸ ಮುಂದುವರಿಸಿತು ಎಂದು ಸ್ಪಷ್ಟಪಡಿ ಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಚಂದ್ರಶೇಖರ್, ಸದಸ್ಯರಾದ ಮೋಹನ್ ಉಪಾಧ್ಯ, ರವಿ ಅಮೀನ್ ಹಾಗೂ ಪೌರಾಯುಕ್ತರಾದ ಗೋಕುಲದಾಸ್ ನಾಯಕ್ ಉಪಸ್ಥಿತರಿದ್ದರು.

ಮೋಹನಕುಮಾರ ವಿಚಾರಣೆ ಮತ್ತೆ ಆರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರಿನ ತ್ವರಿತಗತಿ ನ್ಯಾಯಾಲಯದಲ್ಲಿ ಸರಣಿ ಕೊಲೆ ಆರೋಪಿ ಮೋನಕುಮಾರ ವಿಚಾರಣೆ ಮುಂದುವರಿದಿದ್ದು ಸೋಮವಾರ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸೀನರಿಬೆಟ್ಟು ವಾಸಿ ದಿ.ಸೀತಾರಮ ಪೂಜಾರಿ ಎಂಬವರ ಪುತ್ರಿ ಶಶಿಕಲಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಯ್ಷಗಳ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ೨೦೦೭ರ ಮೇ ೪ರಂದು ಮೈಸೂರಿನಲ್ಲಿ ನಡೆಯುವ ಸ್ತ್ರೀ ಶಕ್ತಿ ಕೇಂದ್ರಗಳ ಸಮಾವೇಶದಲ್ಲಿ ಭಾಗವಹಿಸಲೆಂದು ಮನೆಯಿಂದ ಹೊರಟ ಶಶಿಕಲಾ ಹಿಂದಿರುಗದೆ ಇದ್ದುದರಿಂದ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಆಕೆಯ ಹಿರಿಯ ಸಹೋದರ ಲಕ್ಷ್ಮಣ್ ನ್ಯಾಯಾಧೀಶರಿಗೆ ತಿಳಿಸಿದರು.
ಶಶಿಕಲಾ ಕಾಣೆಯಾದ ಎರಡೂವರೆ ವರ್ಷಗಳ ಬಳಿಕ ಸರಣಿ ಹತ್ಯಾ ಪ್ರಕರಣದ ವರದಿಗಳು ಪತ್ರಿಕೆಯಲ್ಲಿ ಬಂದುದ್ದು, ಬಳಿಕ ತಖಾ ಪೊಲೀಸರೊಂದಿಗೆ ಮೈಸೂರಿಗೆ ತೆರಳಿ ಆಕೆಯ ಬಟ್ಟೆಗಳನ್ನು ಗುರುತಿಸಿದ್ದಾಗಿ ಲಕ್ಷ್ಮಣ್ ತಿಳಿಸಿದರು. ಮಂಗಳೂರಿನ ಸೋನಾ ಬ್ಯಾಂಕರ‍್ಸ್‌ನಲ್ಲಿ ಆರೋಪಿ ಮೋಹನಕುಮಾರ ಅಡವು ಇಟ್ಟಿದ್ದ ಶಶಿಕಲಾಳ ಚಿನ್ನಾಭರಣಗಳನ್ನು ಪೊಲೀಸರು ಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಹಾಜರಿದ್ದ ಶಶಿಕಲಾಳ ಇನೋರ್ವ ಸಹೋದರ ಲೋಕೇಶ, ಸಹೋದರಿಯ ಚಿನ್ನಾಭರಣ ಗುರುತಿಸಿದ್ದಾಗಿ ಹೇಳಿದರು. ೨೦೦೭ರ ಮೇ ೪ರಂದು ಮೈಸೂರಿಗೆ ಹೋಗಲು ಬಿ.ಸಿ.ರೋಡ್ ಬಸ್ ಲ್ದಾಣದಲ್ಲಿ ಂತಿದ್ದ ಶಶಿಕಲಾಳನ್ನು ನೋಡಿ ಮಾತನಾಡಿಸಿದ್ದಾಗಿ ಹೇಳಿದ ಆಕೆಯ ಸಂಬಂಧಿ ಕೇಶವ, ಶಶಿಕಲಾಳ ಜೊತೆಗೆ ಮೋಹನಕುಮಾರ ಕೂಡ ಇದ್ದ ಈತನನ್ನು ಆಕೆ ಸ್ತ್ರಿಶಕ್ತಿ ಕೇಂದ್ರದ ಸುಪರವೈಜರ್ ಎಂದು ಪರಿಚಯಿಸಿದ್ದಳು ಎಂದು ನುಡಿದರು. ತಾಯಿ ಸುಂದರಿ ಶಶಿಕಲಾಳ ಚಿನ್ನಾಭರಗಳೊಂದಿಗೆ ಹೋಗಿದ್ದಾಗಿ ತಿಳಿಸಿದರು.

ದಿ ಗ್ರೇಟ್ ಎಸ್ಕೇಪ್!

Posted by JAYAKIRANA Kirana on | 0 comments | Leave a comment...

ಕುಂದಾಪುರ: ಸಿಮೆಂಟ್ ಹಾಸುಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದರ ಮೇಲೆ ಜಿಗಿದ ಆಡು ಹಾಗೂ ಅದರ ಮರಿಯೊಂದು ನೇರವಾಗಿ ತಳ ಸೇರಿ ಒಂದು ರಾತ್ರಿಯಿಡೀ ಕಳೆದು ಮರುದಿನ ಜೀವ ಸಹಿತ ಪಾರಾದ ಘಟನೆ ಕುಂದಾಪುರ ಬಾಮಿಯಾ ಮಸೀದಿಯ ಬಳಿ ಜರಗಿದೆ.
ಕುಂದಾಪುರ ಅಬ್ದುಮಹ್ಮದ್ ಅವರಿಗೆ ಸೇರಿದ ಸ್ಥಳದಲ್ಲಿ ಈ ಪಾಳು ಬಾವಿಯಿದ್ದು, ಮುಂಜಾಗರೂಕತೆಯಿಂದ ಬಾವಿಯ ಮೇಲ್ಭಾಗವನ್ನು ಫೈಬರ್ ಶೀಟುಗಳನ್ನು ಹಾಕಿ ಮುಚ್ಚಲಾಗಿತ್ತು. ಮೊನ್ನೆ ಖಾರ್ವಿ ಕೇರಿ ಟೈಲರ್ ಮೀರಾ ಎಂಬವರಿಗೆ ಸೇರಿದ ಆಡುಗಳು ಆಕಸ್ಮತ್ತಾಗಿ ಈ ಬಾವಿಯ ತಳ ಸೇರಿದ್ದವು. ಬಾವಿಯಲ್ಲಿ ನೀರಿರದೆ ಕೆಸರು ಹೆಪ್ಪುಗಟ್ಟಿದ ಕಾರಣ ಆಡುಗಳು ಪವಾಡಸದೃಶ್ಯವಾಗಿ ಬದುಕುಳಿದಿದ್ದು ಪರಿಸರದ ಯುವಕರು ಶ್ರಮಪಟ್ಟು ಆಡುಗಳನ್ನು ಮೇಲೆತ್ತಿದರು.

ಡಿ.ವಿ. ಮನೆಯಲ್ಲಿ ದೈವ ಸೇವೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ತವರು ಮನೆ ಸುಳ್ಯ ತಾಲೂಕಿನ ಬೆಳ್ಳಿಪ್ಪಾಡಿ ದೇವರಗುಂಡ ಮನೆಯ ಆವರಣದಲ್ಲಿ ಕುಟುಂಬ ದೈವಗಳ ನೇಮೋತ್ಸವ ಕಾರ್ಯಕ್ರಮ ನಿನ್ನೆ ರಾತ್ರಿ ಡಿ.ವಿ. ಸದಾನಂದ ಗೌಡರ ಉಪಸ್ಥಿತಿಯಲ್ಲಿ ನಡೆಯಿತು.
ದೇವರಗುಂಡ ಮನೆತನದ ೧೫೦ಕುಟುಂಬಗಳು ಸೇರಿ ನಡೆಸುವ ಈ ಕಾರ್ಯಕ್ರಮ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ.
ರಾತ್ರಿಯಿಂದ ಮುಂಜಾನೆಯವರೆಗೆ ಪಾಣಾರ ಪಂಜುರ್ಲಿ, ಹುಲಿಭೂತ, ಪುರುಷಭೂತ ನೇಮಗಳು ನಡೆದವು. ರಾತ್ರಿ ೯ಗಂಟೆಗೆ ಪಾತ್ರಿಗಳಿಗೆ ಎಣ್ಣೆ ನೀಡಿ ಡಿ.ವಿ. ಪ್ರಾರ್ಥಿಸಿದರು. ತಾನು ಇಲ್ಲಿ ಮುಖ್ಯಮಂತ್ರಿಯಾಗಿ ಭಾಗವಹಿಸಿಲ್ಲ. ಕುಟುಂಬದ ಸದಸ್ಯನಾಗಿ ಭಾಗವಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಡಿ.ವಿ. ಸದಾನಂದ ಗೌಡರ ಪತ್ನಿ ಡಾಟಿ, ಪುತ್ರ ಕಾರ್ತಿಕ್, ಗೌಡರ ಸಹೋದರರಾದ ಶಿವರಾಮ ಗೌಡ, ಸುರೇಶ ಗೌಡ, ಭಾಸ್ಕರ ಗೌಡ ಹಾಗೂ ಸಹೋದರಿ ಜಿ.ಪಂ. ಸದಸ್ಯೆ ಸಾವಿತ್ರಿ ಶಿವರಾಂ ಮತ್ತು ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ಕಂ.ಇ. ಗ್ರಾಮ ಸಹಾಯಕ ಸಂಘದ ಎಚ್ಚರಿಕೆ

Posted by JAYAKIRANA Kirana on | 0 comments | Leave a comment...

ಖಾಯಂ ಮಾಡದಿದ್ದಲ್ಲಿ ಸಾಮೂಹಿಕ ರಾಜೀನಾಮೆ:
ಉಡುಪಿ: ಕಂದಾಯ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಯಾವುದೇ ಭತ್ಯೆಗಳಿಲ್ಲದೆ, ಕೇವಲ ೩,೫೦೦ ರೂ.ವೇತನ ಪಡೆಯುತ್ತಾ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಮುಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಖಾಯಂ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸು ತ್ತಿರುವ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಲಿ ದ್ದಾರೆ ಎಂದು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ (ರಿ) ದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಗಾರ್ ಅವರು ರಾಜ್ಯ ಸರಕಾರಕ್ಕೆ ಮುನ್ನೆ ಚ್ಚರಿಕೆ ನೀಡಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರು ಮಂಡಿಸಿದ ೨೦೧೨ ನೇ ಸಾಲಿನ ಬಜೆಟ್‌ನಲ್ಲಿ ದಿನಗೂಲಿ ನೌಕರರಿಗೆ ಒಂದು ಸಾವಿರ ರು. ಮಾಸಿಕ ವೇತನ, ಅಂಗನವಾಡಿ ಕಾರ್ಯಕರ್ತರಿಗೆ ವಿವಿಧ ಸೌಲಭ್ಯಗಳು ಮತ್ತು ಸರಕಾರಿ ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಿರುವುದಕ್ಕೆ ಸಂಘದ ಪರವಾಗಿ ಅಭಿನಂದನೆ ವ್ಯಕ್ತಪಡಿಸಿದ ಶೆಟ್ಟಿಗಾರ್ ಅವರು, ಗ್ರಾಮ ಸಹಾಯಕರ ಸೇವೆಯನ್ನು ಖಾಯಂ ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಐದು ಸಲ ವಿನಂತಿ ಮಾಡಿದರೂ, ಮುಖ್ಯ ಮಂತ್ರಿಗಳಿಗೆ ಗ್ರಾಮ ಸಹಾಯಕರ ಶೋಚನೀಯ ಸ್ಥಿತಿಯ ಅರಿವಿದ್ದರೂ, ಖಾಯಮಾತಿ ಮಾಡದೇ ಇರುವುದರಿಂದ ಅವರಿಗೆ ಈ ಬಗ್ಗೆ ಕಾಲಜಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 ಗ್ರಾಮ ಸಹಾಯಕರನ್ನು ಪ್ರತೀ ನಾಲ್ಕು ತಿಂಗಳಿಗೊಮ್ಮೆ ಸೇವೆಯಲ್ಲಿ ಮುಂದುವರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ, ವೇತನವನ್ನೂ ೩ - ೪ ತಿಂಗಳಿಗೊಮ್ಮೆ ನೀಡಲಾಗುತ್ತಿದೆ ಮತ್ತು ರಾತ್ರಿಪಾಳಿಯಲ್ಲೂ ಸೇವೆ ಪಡೆಯಲಾಗುತ್ತಿದೆ ಎಂದು ಗ್ರಾಮ ಸಹಾಯಕರ ಶೋಚನೀಯ ಪರಿಸ್ಥಿತಿಯನ್ನು ಬಹಿ ರಂಗಪಡಿಸಿದ ಸಂಘದ ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲೆಯಲ್ಲಿ ಒಟ್ಟು ೨೨೨ ಮಂದಿ ಗ್ರಾಮ ಸಹಾಯಕರು ಸೇವೆ ಸಲ್ಲಿ ಸುತ್ತಿದ್ದಾರೆ ಎಂದು ತಿಳಿಸಿದರು.
 ಪತ್ರಿಕಾಗೋಷ್ಟಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ ನಾಯಕ್, ಉಪಾಧ್ಯಕ್ಷ ದಿನೇಶ್ ಗಾಣಿಗ, ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್, ಕಾರ್ಕಳ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಹಾಗೂ ಜಗದೀಶ್ ಪ್ರಭು ಉಪಸ್ಥಿತರಿದ್ದರು.

ಮಗುವಾದ ಬಳಿಕ ವಿವಾಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಗುವಾದ ಬಳಿಕ ಮದುವೆಯ ಸಿದ್ಧತೆ ನಡೆಸಿದ ಪ್ರಕರಣ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಜಾಲ್ಸೂರು ಗ್ರಾಮದ ಗಾಯತ್ರಿ ಹಾಗೂ ಪೂತ್ತೂರಿನ ಸುರೇಶ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ನೆಪದಲ್ಲಿ ಗಾಯತ್ರಿಯೊಂದಿಗೆ ದೈಹಿಕ ಸಂಬಂಧವನ್ನೂ ಬೆಳೆಸಿದ ಸುರೇಶ ಬಳಿಕ ಮದುವೆಗೆ ನಿರಾಕರಿಸಿದ್ದನೆನ್ನ ಲಾಗಿದ್ದು, ಯುವತಿ ಗರ್ಭವತಿಯಾಗಿ ದ್ದಳು. ಮದುವೆಯ ಮಾತುಕತೆ ವಿಫಲವಾಗುತ್ತಲೇ ಸಾಗಿದ್ದರಿಂದ ಯುವತಿಗೆ ಮಗುವಗೆ ಜನ್ಮ ನೀಡಿದ್ದಳು. ಮಗುವಾದ ಬಳಿಕ ನಡೆದ ಮಾತುಕತೆ ಫಲಪ್ರದವಾಗಿದ್ದು ಇದೀಗ ಮದುವೆಯ ಸಿದ್ಧತೆ ನಡೆಸಲಾಗುತ್ತಿದೆ.

ಮುಖ್ಯಮಂತ್ರಿ ಕಾಟಾಚಾರ ಬಿಟ್ಟು ಗಂಭೀರವಾಗಿ ವರ್ತಿಸಲಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕಾಟಾಚಾರದ ಪ್ರವೃತ್ತಿ ಬಿಟ್ಟು ಗಂಭೀರವಾಗಿ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಸರ್ಕಾರದ ವೆಚ್ಚದಲ್ಲಿ ವಿಶೇಷ ವಿಮಾ ನದಲ್ಲಿ ಹೋಗಿ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಾತುರಿಯಲ್ಲಿ ಬಂದರೆ ಏನೂ ಪ್ರಯೋ ಜನವಾಗದು ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಗೆ ಹೋಗಿದ್ದ ಮುಖ್ಯಮಂತ್ರಿಯವರು ಘಟಿಕೋತ್ಸವದಲ್ಲಿ ಭಾಗವಹಿಸಿ ವಾಪಸ್ಸಾಗಿದ್ದಾರೆ. ಅಧಿಕಾ ರಿಗಳು ಬರದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಕಾಯುತ್ತಿದ್ದರೂ ಚರ್ಚೆ ಮಾಡದೆ ಬಂದಿದ್ದಾರೆ. ಮೈಸೂರಿ ನಲ್ಲಿಯೂ ಅದೇ ರೀತಿ ಸರ್ಕಾರದ ಕಾರ್ಯಕ್ರಮಕ್ಕೆ ಹೋಗಿ ಬರದ ಬಗ್ಗೆ ಚರ್ಚೆ ಮಾಡಿಲ್ಲ. ಮೈಸೂರಿ ನಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ವರದಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು ಎಷ್ಟು ಗ್ರಾಮ ಗಳಿಗೆ ಹೋಗಿ ಬಂದಿದ್ದಾರೆ. ಅವರು ಕೊಟ್ಟಿರುವ ವರದಿ ಯಾರು ತಯಾರಿಸಿದರು ಎಂಬುದು ಗೊತ್ತಿದೆ.ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬರುತ್ತಾರೆ ಎಂದು ಇನ್ನೂ ಎರಡು ದಿನ ಬರಪೀಡಿತ ಪ್ರದೇಶಗಳಿಗ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದರೂ ವಾಪಸ್ ಓಡಿಬಂದಿದ್ದಾರೆ.
ಅಧಿಕಾರ ಕೊಡಲಿಲ್ಲ ಎಂದು ಈ ಹಿಂದೆ ತುಮಕೂರಿಗೆ ಮುನಿಸಿಕೊಂಡು ಹೋಗಿ ಮಾತುಕತೆಗೆ ಬನ್ನಿ ಎಂದರೆ ವಾಪಸ್ ಬಂದಂತೆ ಬಂದರು ಎಂದು ವ್ಯಂಗ್ಯವಾಡಿದರು.

ಕಾಸು ಕೊಡದ ಖದೀಮರು: ಥಳಿಸಿದ ಸ್ಥಳೀಯರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೊಬೈಲ್ ರಿಪೇರಿ ಮಾಡಿದ ಹಣ ನೀಡದ ಯುವಕರಿಬ್ಬರು ಅಂಗಡಿಯಾತನ ಜೊತೆ ಜಗಳ ಕಾಯ್ದು ತಾವೇ ಒದೆ ತಿಂದಿರುವ ಘಟನೆ ನಿನ್ನೆ ರಾತ್ರಿ ನಾಟೇಕಲ್‌ನಲ್ಲಿ ಸಂಭವಿಸಿದೆ. ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಲಾಗಿದೆ ಯಾದರೂ ದೂರು ದಾಖಲುಗೊಂಡಿಲ್ಲ.
ಕೆ.ಸಿ ರೋಡ್ ನಿವಾಸಿಗಳಾದ ಅರಾಫತ್ ಮತ್ತು ಮುನೀರ್ ಎಂಬವರು ನಿನ್ನೆ ರಾತ್ರಿ ನಾಟೇಕಲ್‌ನಲ್ಲಿರುವ ಮೊಬೈಲ್ ಶಾಪ್‌ಗೆ ಬಂದು ರಿಪೇರಿಗೆ ನೀಡಿದ್ದ ಮೊಬೈಲ್‌ನ್ನು ಪಡೆದು ಕೊಂಡಿದ್ದರು. ಮೊಬೈಲ್ ನೀಡಿದ ಅಂಗಡಿಯಾತ ಹಣ ಕೇಳಿದ್ದ. ಇಷ್ಟಕ್ಕೆ ಕೆರಳಿದ ಅರಾಫತ್ ಹಾಗೂ ಮುನೀರ್ ಜಗಳ ಕಾಯ್ದು ಅಂಗಡಿಯಾತನಿಗೆ ಹಲ್ಲೆ ನಡೆಸಿ ದ್ದಲ್ಲದೆ ಅಂಗಡಿ ಗಾಜನ್ನು ಒಡೆದು ಹಾಕಿದ್ದರು.
ಈ ಅಂಗಡಿ ಜೆಡಿಎಸ್ ವಕ್ತಾರ ಅಬೂಬಕ್ಕರ್ ನಾಟೆಕಲ್ ಅವರ ಸಂಬಂಧಿಗೆ ಸೇರಿದ್ದಾಗಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಬೂಬಕ್ಕರ್ ಅವರ ಮಕ್ಕಳು ಅರಾಫತ್ ಮತ್ತು ಮುನೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗಾಯಗೊಂಡಿರುವ ಯುವಕರಿಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಸೀದಿ ಎದುರಲ್ಲೇ ಹೊಕೈ

Posted by JAYAKIRANA Kirana on | 0 comments | Leave a comment...

ಆಡಳಿತ ವಿಚಾರಕ್ಕೆ ಸಂಬಂಧಿಸಿ ಸಂಘರ್ಷ
ಪುತ್ತೂರು: ಪುತ್ತೂರಿನ ಮುಡ್ನೂರು ಗ್ರಾಮದ ಮಸೀದಿಯಲ್ಲಿ ಆಡಳಿತ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಸೋಮವಾರ ರಾತ್ರಿ ಮಸೀದಿ ಎದುರಲ್ಲೇ ವಾಗ್ವಾದ ಹೊ ಕೈ ನಡೆದಿದ್ದು, ಇದರಿಂದಾಗಿ ಕೆಲವೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮುಡ್ನೂರು ಗ್ರಾಮದ ಮಸೀದಿಯಲ್ಲಿ ಈ ಹಿಂದಿನಿಂದಲೂ ವಿವಾದ ನಡೆಯುತ್ತಾ ಬಂದಿತ್ತು. ಇತ್ತೀಚೆಗಿನ ಈ ವಿವಾದಗಳ ನಡುವೆಯೂ ಜಮಾಅತರು ಸೇರಿಕೊಂಡು ಹೊಸ ಕಮಿಟಿಯೊಂದನ್ನು ರಚಿಸಿದ್ದರು. ಇದೀಗ ಮಸೀದಿಯ ಉರೂಸ್ ಸಮಾರಂಭ ಮುಗಿದು ಮೊನ್ನೆಯಷ್ಟೇ ಸಭೆಯೊಂದು ಕೂಡಾ ನಡೆದಿತ್ತು ಎನ್ನಲಾಗಿದೆ.
ಆಡಳಿತ ವಿವಾದಕ್ಕೆ ಸಂಬಂಧಿಸಿ ಸೋಮವಾರ ರಾತ್ರಿ ಜಮಾಅತಿನ ಎರಡು ಗುಂಪುಗಳ ಮಧ್ಯೆ ಮಸೀದಿಯ ಎದುರಿನ ರಸ್ತೆಯಲ್ಲೇ ಮಾತಿನ ವಾಗ್ವಾದ ತಾರಕಕ್ಕೇರಿದ್ದು, ಕೆಲವರು ಸಮಾಧಾನ ಪಡಿಸಲೆತ್ನಿಸಿದರೂ ಒಂದು ಹಂತದಲ್ಲಿ ಹೊ ಕೈ ನಡೆದು ಕಾವು ಈಶ್ವರ ಮಂಗಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಮಾಜ್ ಕೇಂದ್ರದ ಪೀಠವನ್ನು ಕೆಡವಿ ನೂತನ ಪೀಠವನ್ನು ನವೀಕರಿಸಲು ಮುಂದಾಗಿದ್ದೇ ವಿವಾದಕ್ಕೆ ಕಾರಣ ಎನ್ನಲಾಗಿದ್ದು, ನೂತನ ಸಮಿತಿಯ ನೇಮಕದ ಹಿನ್ನೆಲೆಯು ಮಸೀದಿಯ ಸಂಘರ್ಷ ಬೀದಿಗೆ ಬರಲು ಕಾರಣ ಎನ್ನಲಾಗುತ್ತಿದೆ.

ಇನ್ನೂ ಪತ್ತೆಯಾಗದ ನಾದಿನಿ ಪ್ರಿಯ!

Posted by JAYAKIRANA Kirana on | 0 comments | Leave a comment...

ಕುಂದಾಪುರ: ಪತ್ನಿ, ಎರಡು ಮಕ್ಕ ಳಿದ್ದೂ ನಾದಿನಿಯ ಮೋಹಕ್ಕೆ ಬಿದ್ದು ಆಕೆ ಯನ್ನು ಮದುವೆ ಮಾಡಿಕೊಡುವಂತೆ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿ ಯಾಗಿರುವ ಗಣಪತಿ ನಾಯ್ಕ ಪೊಲೀ ಸರೊಂದಿಗೆ ಕಣ್ಣಮುಚ್ಚಾಲೆಯಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ತಾನು ಪ್ರೀತಿಸಿ ಮದುವೆಯಾದ ಭವಾನಿಗೆ ಮೂವರು ತಂಗಿಯರಿದ್ದು ಹಿರಿಯ ತಂಗಿ ಅಂಬಿಕಾಳ ಮೇಲೆ ಗಣಪತಿ ನಾಯ್ಕ ಮೋಹ ಗೊಂ ಡಿದ್ದೇ ರಾದ್ಧಾಂತಕ್ಕೆ ಕಾರಣವಾಗಿತ್ತು. ಜಡ್ಕಲ್ ಸಮೀಪ ಬಸ್ರಿಬೈಲು ಎಂಬಲ್ಲಿ ಗಣಪತಿಯ ಅತ್ತೆ ಗುಲಾಬಿ ನಾಯ್ಕಳ ಮನೆ ಯಿದ್ದು ಆಕೆಯ ಗಂಡ ಮೃತನಾಗಿದ್ದಾನೆ. ಅನತಿ ದೂರದಲ್ಲಿರುವ ಗಣಪತಿ ಸುಮಾರು ಮೂರು ವರ್ಷಗಳ ಹಿಂದೆಯೇ ಭವಾನಿ ಯನ್ನು ಪ್ರೀತಿಸಿ ಮದುವೆಯಾಗಿದ್ದ. ಕೆಲ ಸಮಯದ ನಂತರ ನಾದಿನಿ ಅಂಬಿಕಾಳ ಮೇಲೆ ಆತನ ಕಾಮದೃಷ್ಟಿ ಹರಿದಿತ್ತು. ಹೊತ್ತ ಲ್ಲದ ಹೊತ್ತಿನಲ್ಲಿ ಮನೆಗೆ ಆಗಮಿಸಿ ಆಕೆಯೊಂ ದಿಗೆ ಸರಸಕ್ಕೆ ಯತ್ನಿಸು ತ್ತಿದ್ದ ಅಳಿಯನ ಉಪಟಳಕ್ಕೆ ಬೇಸತ್ತ ಗುಲಾಬಿ ಮಗಳನ್ನು ಕೇರಳಕ್ಕೆ ಕೆಲಸಕ್ಕೆ ಕಳುಹಿಸಿದ್ದಳು. ಇದರಿಂದ ವ್ಯಗ್ರನಾಗಿದ್ದ ಗಣಪತಿ ಮೊನ್ನೆ ಆದಿತ್ಯವಾರ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿಯಾಗಿ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಾಯಿಯ ಜೊತೆಗೆ ಇದ್ದ ಮತ್ತೋರ್ವ ನಾದಿನಿ ಪ್ರೇಮಾಳ ಮೊಬೈಲ್‌ಗೆ ಕರೆ ಮಾಡಿ ಧಮಕಿ ಹಾಕಿದ್ದ. ತಾಯಿ ಮಗಳಿಬ್ಬರೂ ಭಯದಿಂದ ತತ್ತರಿಸಿದ್ದರಾದರೂ ಕೊಲ್ಲೂರು ಠಾಣೆಯಲ್ಲಿ ನಾದಿನಿ ಪ್ರಿಯ ಗಣಪತಿಯ ಮೇಲೆ ಕೇಸು ದಾಖಲಾಗಿದೆ. ಆದರೆ ಇಷ್ಟರತನಕ ಆತನು ಪೊಲೀಸರ ವಶವಾಗಿರುವ ವರ್ತಮಾನವಿಲ್ಲ.

ಫೈನಾನ್ಸ್‌ಗೆ ವಂಚನೆ: ಆರೋಪಿಗೆ ನ್ಯಾ. ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಕಂಪೆನಿಯಿಂದ ವಾಹನ ಸಾಲ ಪಡೆದು ಮರುಪಾವತಿ ಸದೆ ವಂಚಿಸುತ್ತಿದ್ದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುಳ್ಯದ ಜಾಲ್ಸೂರು ಬೈತಡ್ಕದ ನಿವಾಸಿ ಶ್ರೀನಿವಾಸ ಬಂಧಿತ. ಆರೋಪಿಯನ್ನು ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ೨೦೦೯ರಲ್ಲಿ ಫೈನಾನ್ಸ್‌ನಿಂದ ಹಿಟಾಚಿ ವಾಹನವನ್ನು ಖರೀದಿಸಲು ೧೦ ಲಕ್ಷ ರೂ. ಸಾಲ ಪಡೆದಿದ್ದರು. ಕಳೆದ ನಾಲ್ಕು ವರ್ಷದಿಂದ ಸಾಲ ಮರು ಪಾವತಿಸದೆ ತಲೆಮರೆಸಿಕೊಂಡಿ ದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಫೈನಾನ್ಸ್ ಕಂಪೆನಿಯು ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿತ್ತು.

ಎಸ್‌ಐ ಕೈಯಿಂದ ಪೆಟ್ಟು ತಿಂದ ಕಾನ್‌ಸ್ಟೇಬಲ್

Posted by JAYAKIRANA Kirana on | 0 comments | Leave a comment...

ಮಂಗಳೂರು: ರಜೆಯ ಬಳಿಕ ಕರ್ತವ್ಯಕ್ಕೆ ಮರಳಿದ ಕಾನ್‌ಸ್ಟೇಬಲ್ ಮೆಡಿಕ್ಲೈಮ್‌ಗೆ ಮನವಿ ಮಾಡಲು ಹೋಗಿ ಎಸ್.ಐ. ಕೈಯಿಂದ ಪೆಟ್ಟು ತಿಂದ ವಿಲಕ್ಷಣ ಪ್ರಕರಣವೊಂದು ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರ ಮೀಸಲು ಪಡೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ಬಸವರಾಜ ಎಂಬವರು ಅನಾರೋಗ್ಯ ದಿಂದಾಗಿ ಕೆಲವು ದಿನ ರಜೆಯಲ್ಲಿ ಮನೆಗೆ ತೆರಳಿದ್ದರು ಎನ್ನಲಾಗಿದೆ. ನಿನ್ನೆ ಮತ್ತೆ ಕರ್ತವ್ಯಕ್ಕೆ ಹಾಜರಾದ ಅವರು ವೈದ್ಯಕೀಯ ಪ್ರಮಾಣ ಪತ್ರವನ್ನು ಎಸ್.ಐ. ವಿಠೋಭ ಶಿಂಧೆಗೆ ನೀಡಿ ಮೆಡಿಕ್ಲೈಮ್‌ಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಈ ಸಂದರ್ಭ ಕೆರಳಿದ ಎಸ್.ಐ. ಸಾಹೇಬರು ಮೆಡಿಕ್ಲೈಮ್‌ಗೆ ನೋ ಎಂದರಲ್ಲದೆ ವೇತನವನ್ನೂ ಕಡಿತಗೊಳಿಸಿ ಕೊಟ್ಟಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಕಾನ್‌ಸ್ಟೇಬಲ್ ಪ್ರಶ್ನಿಸಿದಾಗ ಕೆರಳಿದ ಎಸ್.ಐ. ಸಾಹೇಬರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪತ್ರಕರ್ತರನ್ನು ನೋಡಿದ ಎಸ್.ಐ. ಪರಾರಿ!
ಘಟನೆಯ ಸಂಬಂಧವಾಗಿ ಕಾನ್‌ಸ್ಟೇಬಲ್ ಪಾಂಡೇಶ್ವರ ಠಾಣೆಗೆ ದೂರು ನೀಡಲು ಹೋಗಿದ್ದ ಮಾಹಿತಿ ಪತ್ರಕರ್ತರಿಗೆ ಲಭಿಸಿತ್ತು. ಕುತೂಹಲಗೊಂಡ ಪತ್ರಕರ್ತರು ಠಾಣೆಗೆ ಹೋದಾಗ ಚೇಂಬರ್‌ನಲ್ಲಿದ್ದ ಮೀಸಲು ಪಡೆಯ ಎಸ್.ಐ. ಸಾಹೇಬರು ಸ್ಥಳದಿಂದ ಕಾಲ್ಕಿತ್ತಿದ್ದು ಪತ್ರಕರ್ತರು ಅಲ್ಲಿರುವವರೆಗೂ ಅತ್ತ ಕಡೆ ತಲೆಯನ್ನೂ ಹಾಕದೆ ನಾಪತ್ತೆ ಯಾದ ಪ್ರಕರಣವೂ ನಡೆಯಿತು.

ಬಿಸಿ ನೀರು ಬಿದ್ದು ಬಾಲಕಿಗೆ ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂದಡ್ಕ ಮಾಣಿ ಮೂಲೆಯ ರಾಧಿಕಾ (೪)ಳ ಮೇಲೆ ಬಿಸಿ ನೀರು ಬಿದ್ದು ಗಾಯಗೊಂಡಿ ದ್ದಾಳೆ. ಗಾಯಗೊಂಡಿರುವ ರಾಧಿಕಾಳನ್ನು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರತ್ಕಲ್: ಬಾಲಕಿ ಹೆತ್ತವರ ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೆತ್ತವರಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದ ಪುಟ್ಟ ಬಾಲಕಿ ಲಕ್ಷ್ಮೀ (೪) ಕೊನೆಗೂ ಹೆತ್ತವರ ಮಡಿಲು ಸೇರಿದ್ದಾಳೆ.
ನಾಗೇಶ್-ಸಂಗೀತಾ ದಂಪತಿ ಕೈಯಿಂದ ಎ. ಮೂರರಂದು ಲಕ್ಷ್ಮೀ ಗುಡ್ಡಕೊಪ್ಪ ಬಳಿ ತಪ್ಪಿಸಿಕೊಂಡಿದ್ದಳು. ಈ ಬಾಲಕಿಯನ್ನು ಗುಡ್ಡಕೊಪ್ಪ ನಿವಾಸಿ ಗಂಗಾಧರ್ ಎಂಬವರು ತನ್ನ ಮನೆಗೆ ಕರೆದೊಯ್ದಿದ್ದು, ನಾಪತ್ತೆಯಾಗಿರುವ ಬಗ್ಗೆ ಪತ್ರಿಕೆಯಲ್ಲಿ ಭಾವಚಿತ್ರ ನೋಡಿ ಮಗುವನ್ನು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಈಕೆಯನ್ನು ಹೆತ್ತವರಿಗೆ ಒಪ್ಪಿಸಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಉಡುಪಿ: ಹಲ್ಲೆ, ಜೀವ ಬೆದರಿಕೆ

Posted by JAYAKIRANA Kirana on | 0 comments | Leave a comment...

ಉಡುಪಿ: ಚೇರ್ಕಾಡಿ ಗ್ರಾಮದ ಕನ್ನಾರ್‌ಕೋಡಿ ನಿವಾಸಿ ಲಚ್ಚು ನಾಯ್ಕ ಎಂಬವರ ಮನೆಗೆ ಟವೆರಾ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ಬೈದು, ಜಲ್ಲಿಕಲ್ಲಿನಿಂದ ಹಣೆ ಮತ್ತು ತಲೆಗೆ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ ಘಟನೆ ಆದಿತ್ಯವಾರ ರಾತ್ರಿ ೯ ಗಂಟೆಗೆ ನಡೆದಿದೆ. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ಆರೋಪಿ ಪ್ರಕಾಶ್ ನಾಯ್ಕ ವಿರುದ್ದ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಹಾವು ಕಚ್ಚಿ ಮಹಿಳೆ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಾವು ಕಚ್ಚಿ ಮಹಿಳೆ ಯೋರ್ವರು ಮೃತಪಟ್ಟ ಘಟನೆ ಬೆಳ್ತಂ ಗಡಿ ತಾಲೂಕಿನ ವೇಣೂರಿನಲ್ಲಿ ಸಂಭ ವಿಸಿದೆ. ವೇಣೂರಿನ ಕರಿಮಣೇಲು ಗ್ರಾಮದ ಗಾಂಧಿನಗರ ಕೋಂಟ್ರಡ್ಕ ಮನೆ ನಿವಾಸಿ ಲತಾ(೩೨)ಮೃತ ಮಹಿಳೆ. ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಹಾವು ಕಚ್ಚಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿ ರೆಳೆ ದರೆನ್ನಲಾಗಿದೆ. ಪತಿ ನಾರಾಯಣ ನಾಯ್ಕ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾಡಹಗಲೇ ಮನೆಗೆ ನುಗ್ಗಿ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ನೇತ್ರಾವತಿ ಅಪಾರ್ಟ್‌ಮೆಂಟ್ ಬಳಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗದು ಮತ್ತು ಸೊತ್ತುಗಳನ್ನು ಕಳವುಗೈದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇಲ್ಲಿಯ ನಿವಾಸಿ ನಾರಾಯಣ ಎಂಬವರು ಎ. ಏಳರಂದು ಮನೆಗೆ ಬೀಗ ಹಾಕಿ ಮದುವೆ ಕಾರ‍್ಯಕ್ರಮಕ್ಕೆ ತೆರಳಿದ್ದರು. ಈ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಅಡುಗೆ ಪಾತ್ರೆಗಳನ್ನು ಹಾಗೂ ೧೨೦೦ ರು. ನಗದು ಕಳವು ಗೈದಿದ್ದಾರೆ. ಮದುವೆ ಕಾರ‍್ಯಕ್ರಮ ಮುಗಿಸಿ ಮನೆಗೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಎಲೆಕ್ಟ್ರಾನಿಕ್ಸ್ ವಸ್ತು ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಸೋಜಾ ಇಲೆಕ್ಟ್ರಾನಿಕ್ಸ್ ಮಳಿಗೆಯಿಂದ ಸುಮಾರು ಒಂದು ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಕಳವಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಮಳಿಗೆಯ ಹಿಂಬದಿಯ ಕಿಟಕಿ ಸರಗಳನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಡಿಜಿಟಲ್ ಕೆಮರಾ, ವಾಚ್ ಸೇರಿ ದಂತೆ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆಂದು ದೂರ ಲಾಗಿದೆ. ಭಾನುವಾರ ಅಂಗಡಿಗೆ ರಜೆ ಇದ್ದು, ಸೋಮವಾರ ಬಾಗಿಲು ತೆರೆದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದೆ.

ಉಡುಪಿ: ಮಾನಸಿಕ ಅಸ್ವಸ್ಥ ಕಾಣೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಾರ್ಕಳ ತಾಲೂಕು ಕಣಜಾರು ಗ್ರಾಮದ ಮರಕಾಡು ನಿವಾಸಿ ರೋಬರ್ಟ್ ರೆಬೆಲ್ಲೋ (೪೨) ಎಂಬವರು ಎ.೬ ರಂದು ಬೆಳಗ್ಗೆ ಗಂಟೆ ೭.೩೦ಕ್ಕೆ ಮನೆಯಿಂದ ಹೊರಗೆ ಹೋದ ವರು ಮನೆಗೆ ಮರಳದೆ ಕಾಣೆಯಾ ಗಿದ್ದಾರೆ. ಕಾಣೆಯಾದವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ಹೇಳಿಕೆ ನೀಡಿರುವ ಅವರ ತಾಯಿ ಸಿಲ್ವೆಸ್ಟರ್ ರೆಬೆಲ್ಲೊ ಅವರು ಕೊಟ್ಟ ದೂರಿನ ಪ್ರಕಾರ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೂದಿಯಲ್ಲಿ ಬಿದ್ದು ಕಾರ್ಮಿಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಕ್ಕಿ ಗಿರಣಿಯ ಬಿಸಿ ಬೂದಿಯಲ್ಲಿ ಬಿದ್ದು ಕಾರ್ಮಿಕ ನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಸಂಭವಿಸಿದೆ. ಗುರುವಾಯನಕೆರೆಯ ಶಕ್ತಿನಗರದ ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಹಾವೇರಿ ಮೂಲದ ಶಶಿಕುಮಾರ್(೨೨) ಮೃತ ವ್ಯಕ್ತಿ. ಗಿರಣಿಯಲ್ಲಿ ಕೆಲಸ ನಿರ್ವಹಿಸುತ್ತಿ ದ್ದಾಗ ತ್ಯಾಜ್ಯ ಬೂದಿಯಲ್ಲಿ ಜಾರಿ ಬಿದ್ದಿದ್ದರು. ಸುಟ್ಟ ಗಾಯಗಳಿಂದ ಅಸ್ವಸ್ಥಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿ ತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನ ಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೆರಿಯ ಬ್ಯಾಂಕ್ ದರೋಡೆ ಪ್ರಕರಣ: ಮತ್ತಿಬ್ಬರಿಗೆ ಜಾಮೀನು

Posted by JAYAKIRANA Kirana on | 0 comments | Leave a comment...

ಮಂಗಳೂರು: ೨೦೦೯ರ ಜೂ. ೧೭ರಂದು ರಾತ್ರಿ ನಾರ್ತ್ ಮಲಬಾರ್ ಗ್ರಾಮೀಣ ಬ್ಯಾಂಕ್ ಪೆರಿಯ ಶಾಖೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ಶಿಕ್ಷೆಗೊಳಗಾದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿ ಕೃಷ್ಣಮೂರ್ತಿ ಸೇರಿದಂತೆ ನಾಲ್ಕನೇ ಆರೋಪಿ ಚೆನ್ನಮುರುಗನ್ ಎಂಬವರಿಗೆ ಜಾಮೀನು ಮಂಜೂರು ಮಾಡಿದೆ. ಮೂರನೇ ಆರೋಪಿ ಅಣ್ಣಾ ದೊರೈಗೆ ಈ ಮೊದಲೇ ಜಾಮೀನು ನೀಡಲಾಗಿತ್ತು. ಪೆರಿಯ ಬ್ಯಾಂಕ್‌ನಿಂದ ೩೩ ಕೆಜಿ ಚಿನ್ನ ಮತ್ತು ೬.೭೫ ಲಕ್ಷ ಹಣ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಅನರ್ಥಗಳನ್ನು ಹುಟ್ಟು ಹಾಕಿದವರಿಗೆ ಚಿತ್ತ ಭ್ರಮೆ!

Posted by JAYAKIRANA Kirana on | 0 comments | Leave a comment...


ಮಠದ ಏಜೆಂಟ್ ಸ್ವಾಮಿಗಳ ತಮ್ಮ ಲಕ್ಷ್ಮೀನಾರಾಯಣ ಆಚಾರ್ಯರು ಸ್ವಾಮಿಗಳು ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡುವುದಿದ್ದರೂ ಅವರು ಸುಬ್ರಹ್ಮಣ್ಯ ದೇವರ ತೀರ್ಥ ಪ್ರಸಾದಗಳನ್ನು ಮಾಧ್ವ ವೈಷ್ಣವರಾದುದರಿಂದ ಸ್ವೀಕರಿಸುವ ಕ್ರಮವಿಲ್ಲವೆಂದು ಹೇಳಿಕೆ ಕೊಟ್ಟಿರುತ್ತಾರೆ

C.C No. 7 of 1898 ಪ್ರಕಾರ ಈ ವ್ಯಾಸ ತೀರ್ಥ ಸ್ವಾಮಿ ಯವರು ತಾನು ದೇವಸ್ಥಾನದ ಚಿನ್ನಾಭರಣಗಳ ಮತ್ತು ಇತರ ಬೆಲೆ ಬಾಳುವ ಎಲ್ಲಾ ಸೊತ್ತುಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡುದ್ದರಿಂದ ಸಾಧಾರಣ ಈಗ ೨೦,೦೦೦ ರೂಪಾ ಬೆಲೆಬಾಳುವ ಚಿನ್ನಾಭರಣಗಳು ೪ ತಿಂಗಳು ಮುಂಚೆಯೇ ದೇವಸ್ಥಾನದಲ್ಲಿ ಕಳವಾಯಿತೆಂದು ಸುಳ್ಳು ಫಿರ್ಯಾದಿ ಕೊಟ್ಟು ತಾನೇ ದೇವಸ್ಥಾನದ ಚಿನ್ನಾಭರಣಗಳನ್ನು ದೇವ ಸ್ಥಾನದ ಪೂಜೆಯವರಾದ ಸುಬ್ರಾಯ ಆಸ್ರಣ್ಣರ ಮುಖಾಂತ್ರ ಮಂಗ ಳೂರು ಬ್ಯಾಂಕಿನಲ್ಲಿ ಅಡವಿಗೆ ಕೊಟ್ಟು ಆ ಹಣವನ್ನು ದುರುಪಯೋಗ ಮಾಡಿದ್ದಕ್ಕೆ ಮೇಲಿನ ಕ್ರಿಮಿನಲ್ ವ್ಯಾಜ್ಯವು ಸ್ವಾಮಿಯ ಮೇಲೆ ಮಾಡಿ ದ್ದಾಗಿರುತ್ತದೆ. ಆದರೆ ಫಿರ್ಯಾದಿ ಕೊಟ್ಟ ದೇವಸ್ಥಾನದ ಆಡಳಿತೆಯ ವರಾದ ರಾಮಕೃಷ್ಣ ಆಸ್ರಣ್ಣರು ಆಗಲೇ ಮರಣಪಟ್ಟದ್ದರಿಂದ ಸ್ವಾಮಿಯು ಆ ಕೇಸಿನಿಂದ ಹೊರಬಂದರು ಎಂದು ತಿಳಿದು ಬರುತ್ತದೆ.
ಫಿರ್ಯಾದು ಮಾಡಿದ ರಾಮಕೃಷ್ಣ ಆಸ್ರಣ್ಣರ ಮರಣದ ನಂತರ ಬಾಗಲೋಡಿ ಭೋಜರಾಯರನ್ನೂ ಸುಬ್ರಾಯ ಆಸ್ರಣ್ಣರನ್ನೂ ಪ್ರತಿ ವಾದಿಗಳನ್ನಾಗಿ ಮಾಡಿ ಅವರ ಮೇಲೆ ೨೧-೧೦-೧೮೯೯ರಲ್ಲಿ ಅದೇ ವ್ಯವಹರಣೆಯನ್ನು C.C No. 126/1899ರ ಪ್ರಕಾರ ಪುನಃ ಮುಂದು ರಿಸಿದರು. ಇದರಲ್ಲಿ ಮೂರು ತಪ್ಪುಗಳು ೧) ಸ್ವಾಮಿಯವರು ಮದ್ರಾಸ್ ಬೇಂಕಿನಲ್ಲಿ ೧೩ ಸೊತ್ತುಗಳನ್ನು ೩-೫-೧೮೯೭ರಲ್ಲಿ ಅಡವಿಗೆ ೨ನೇ ಪ್ರತಿ ವಾದಿ ಸುಬ್ರಾಯ ಆಸ್ರಣ್ಣರ ಮುಖಾಂತ್ರ ಇಡ್ಸಿದ್ದು. ೨) ೨ ಸೊತ್ತುಗ ಳನ್ನು ಅಗ್ರಹಾರ ರಾಮಕೃಷ್ಣಯ್ಯನವರಲ್ಲಿ ೮-೪-೧೮೯೭ರಲ್ಲಿ ಸ್ವಾಮಿ ಬಗ್ಗೆ ಅದೇ ಸುಬ್ರಾಯ ಆಸ್ರಣ್ಣರು ಅಡವಿಗೆ ಇಟ್ಟದ್ದು. ೩) ೧೮೯೭ ಫೆಬ್ರ ವರಿಯಲ್ಲಿ ಒಂದು ಸೊತ್ತನ್ನು ಕುಂಜಂಬು ಸುಬ್ಬ ಗೌಡನಲ್ಲಿ ಸ್ವಾಮಿ ಯರೇ ಅಡವಿಗೆ ಇಟ್ಟದ್ದು. ಮೇಲೆ ಹೇಳಿದ ಸೊತ್ತುಗಳೆಂದರೆ ಶ್ರೀ ಸುಬ್ರಹ್ಮಣ್ಯ ದೇವರ ಮೇಲೆ ಅಲಂಕರಿಸಲ್ಪಡುವ ಚಿನ್ನದ ರತ್ನಗಳಿಂದ ಕೂಡಿದ ಪದಕವುಳ್ಳ ಸರಗಳಾಗಿವೆ. ಈ ಸ್ವಾಮಿಯವರು ಈ ರೀತಿ ದೇವಸ್ಥಾನದ ಸೊತ್ತುಗಳನ್ನು ದುರುಪಯೋಗ ಪಡಿಸಿದ್ದಕ್ಕಾಗಿ ಅವ ರನ್ನು ಕಮಿಟಿಯವರು ಜುಲಾ ೧೮೯೯ರಲ್ಲಿ ದೇವಸ್ಥಾನದ ಆಡಳಿತೆ ಯಿಂದ ವಜಾಪಡಿಸಿದರು. (Dismissed)
ಅ.ಅ ಓo. ೧೨೭ oಜಿ ೧೯೦೦ ಇದರಲ್ಲಿ ಸ್ವಾಮಿಯವರಿಗೆ (Breach of Trust) ದೇವಸ್ಥಾನಕ್ಕೆ ನಂಬಿಕೆ ದ್ರೋಹ ಮಾಡಿದನೆಂದು ೧೭-೫-೧೯೦೧ರಲ್ಲು ಶಿಕ್ಷೆಯಾಯಿತು. (Convicted) ಅದರಲ್ಲಿ ಬೆಳ್ಳಿಯ ತಟ್ಟೆಗಳನ್ನು ತಪ್ಪಿಸಿದ್ದಕ್ಕೆ ರೂಪಾ ೫೦೦ ಚಿನ್ನದ ಚಕ್ರಸರಗಳನ್ನು ವಂಚಿಸಿ ದ್ದಕ್ಕೆ ರೂಪಾ ೫೦೦ ಚಿನ್ನದ ತಗಡು ಮುಚ್ಚಿದ ಕಟ್ಟಿಗೆ ಕೋಲುಗಳನ್ನು ತಪ್ಪಿ ಸಿದಕ್ಕೆ ರೂ. ೧೦೦೦ ಹೀಗೆ ಒಟ್ಟು ರೂ. ೨೦೦೦ ಇವರಿಗೆ ಜುಲ್ಮಾನೆ ಆಯಿತು. ಹೈಕೋರ್ಟು ಅಪೀಲಿನಲ್ಲೂ ತಾ. ೩೦-೯-೧೯೦೧ ರಲ್ಲಿ ಜುಲ್ಮಾನೆಯೂ ಕಾಯಂ ಆಯಿತು.
೧೮೯೭ರಲ್ಲಿ ದೇವಸ್ಥಾನದಲ್ಲಿ ಮೇಲಿನ ವ್ಯಾಸತೀರ್ಥ ಸ್ವಾಮಿ ಕಾಲ ದಲ್ಲೆ ದಕ್ಷಿಣ ಕನ್ನಡ ಜಿಲ್ಲಾ ಸಪ್ಲಿಮೆಂಟ್ ತಾ. ೬-೧೧-೧೮೯೭ ಗಜೆಟಿ ನಲ್ಲಿ ಪ್ರಕಟಿಸಲ್ಪಟ್ಟ ಪ್ರಕಾರ ೬-೯-೧೮೯೭ರಲ್ಲು ಆಗ ರೂಪಾ ೬೦೪೧೨-೧೨ ಆಣೆ ಬೆಲೆಬಾಳುವ ದೇವಸ್ಥಾನದ ಸೊತ್ತುಗಳು ಕಂದಹಾರಿಗ ಳಿಂದ ದರೋಡೆ ಮಾಡಲ್ಪಟ್ಟಿವೆ ಎಂದು ಸುಬ್ರಹ್ಮಣ್ಯ ಸ್ಟೇಷನ್ ಕ್ರಮ ನಂಬ್ರ ೧೧/೧೮೯೭ I.P.C 397ರಲ್ಲಿ ತಿಳಿದು ಬರುತ್ತದೆ. ಆ ಪಟ್ಟಿಯಲ್ಲಿ ನಂಬ್ರ ೧೬ನೇ ಸೊತ್ತು ಈ ದೇವಳದಲ್ಲಿ ಅಡಗಿರುವ ಸಿದ್ಧಿವಿನಾಯಕ ದೇವರ ಕೊಂಡಿ ಸರವಾಗಿದೆ. ಈ ಸರದಲ್ಲಿ ಪದಕದ ಹಾಗೆ ಒಂದು ಖಾಲಿ ಚಿನ್ನದ ರೂಪಾ ಪಟ್ಟಿ ಅಗಲದ ಪದಕಕ್ಕೆ ವಿಳಾಸ ಇರುತ್ತದೆ. ಚಿನ್ನ ಅಂದಾಜು ಸೇರು ಒಂದು. ಅದರ ಆಗಿನ ಮೌಲ್ಯ ರೂಪಾ ೬೦೦ ಆಗಿರುತ್ತದೆ. ಈ ದರೋಡೆ ಕೂಡಾ ಸ್ವಾಮಿಯವರು ಬನಾವಟು ಮಾಡಿದ್ದಾಗಿಯೂ ಆಗಿನ ಅವರ ದುರಾಡಳಿತೆಯಿಂದ ಊಹಿಸಬೇಕಾಗು ತ್ತದೆ. ಅಂತೂ ೧೮೯೯ರಲ್ಲಿ ವ್ಯಾಸತೀರ್ಥ ಸ್ವಾಮಿಗಳ ಅನ್ಯಾಯಗಳನ್ನು ತಡೆ ಯಲಾರದೆ ಆಗಿನ ಆಡಳಿತೆ ಕಮಿಟಿಯವರು ಸ್ವಾಮಿಗಳನ್ನು ಆಡಳಿತೆ ಯಿಂದ ತೆಗೆದು ಅವರ ಸ್ಥಾನಕ್ಕೆ ಈ ಮೊದಲು ೧೮೯೨ರಲ್ಲಿ ನೇಮಿಸಲ್ಪಟ್ಟ ಬಾಗಲೋಡಿ ಭೋಜರಾಯರನ್ನೇ ನೇಮಿಸಿದರು. (Cal C. 27/1900 Deposition of Bhoja Rao Page 2, Exihit 4 appointed Muktesar on 28-2-1892.)
ಹಾಗೆ ದೇವಸ್ಥಾನದ ಆಡಳಿತೆಯಿಂದ ತೆಗೆದುಹಾಕಲ್ಪಟ್ಟ ವ್ಯಾಸತೀರ್ಥ ಸ್ವಾಮಿಗಳು ಈಗ ಆಡಳಿತೆಯನ್ನು ವಹಿಸಿಕೊಂಡ ಭೋಜರಾಯರ ಮತ್ತು ನರಸಿಂಹ ಆಸ್ರಣ್ಣರ ಮೇಲೆ ೧೮೯೯ನೇ ಇಸವಿಯಲ್ಲಿ ದೇವಸ್ಥಾನಕ್ಕೆ ಬರುವ ರೂಪಾ ೪೪೦೦ ತಸದೀಕು ತನಗೆ ಸಿಕ್ಕಬೇಕೆಂದ ಔ.S. ಓo. ೭೪/೧೯೦೩ ವ್ಯಾಜ್ಯ ಒಂದನ್ನು ಹೂಡಿದರು. ಈ ವ್ಯಾಜ್ಯವು ಪ್ರತಿವಾದಿಗಳಿಗೆ ಖರ್ಚು ಸಮೇತ ಕೊಡುವಂತೆ ತಾರೀಕು ೮-೨-೧೯೦೫ರಲ್ಲಿ ತೆಗೆದುಹಾಕಲ್ಪಟ್ಟಿತು.
ವ್ಯಾಸತೀರ್ಥ ಸ್ವಾಮಿಯವರು ಸುಬ್ಬರಾಯ ಆಸ್ರಣ್ಣರ ಮುಖಾಂತ್ರ ಆಗ ಸಾಧಾರಣ ೫೦೦೦ ರೂಪಾ ಬೆಲೆಬಾಳುವ ಚಿನ್ನಾಭರಣಗಳನ್ನು ಮದ್ರಾಸ್ ಬೇಂಕಿನಲ್ಲಿ ಅಡವು ಇಟ್ಟ ಬಾಬ್ತು ಅದರ ವಸೂಲಿಗೆ ಭೋಜ ರಾಯರು ೧) ಸ್ವಾಮಿ ೨)ಸುಬ್ರಾಯ ಆಸ್ರಣ್ಣ ೩) ನರಸಿಂಹ ಆಸ್ರಣ್ಣ ಈ ಮೂರು ಜನರ ಮೇಲೆ O.S. No. 66 of 1903 ವ್ಯಾಜ್ಯವನ್ನು ಹೂಡಿ ದರು. ಈ ವ್ಯಾಜ್ಯದಲ್ಲಿ ಸ್ವಾಮಿಗಳು ಮೇಲಿನ ಹಣವನ್ನು ದೇವಸ್ಥಾನಕ್ಕೆ ತುಂಬಿಸುವಂತೆ ಡಿಕ್ರಿ ಆಯಿತು. ಆದರೆ ೧೯೦೬ರಲ್ಲಿ ವ್ಯಾಸತೀರ್ಥ ಸ್ವಾಮಿಯು ಮರಣಹೊಂದಿದುದರಿಂದ ಈ ಹಣವನ್ನು ವ್ಯಾಸತೀರ್ಥ ಸ್ವಾಮಿಯ ನಂತರ ಅವರ ಮಠಕ್ಕೆ ನೇಮಕಹೊಂದಿದ ವಿಶ್ವಜ್ಞ ತೀರ್ಥಸ್ವಾಮಿಯರು ಕೊಡ ಬೇಕೆಂದು ಮಾಡಿದ R.E.A. 101 of 1907 and C.M.A. 240 of 1908 High Courtನಲ್ಲೂ ವ್ಯಾಸತೀರ್ಥ ಸ್ವಾಮಿಯವರು ದುರುಪಯೋಗ ಮಾಡಿದ ಹಣವನ್ನು ವಿಶ್ವಜ್ಞ ತೀರ್ಥ ಸ್ವಾಮಿಯವರು ಕೊಡಲು ಬಾಧ್ಯರ ಲ್ಲವೆಂದಾಗಿ ಅದು ಬಿಟ್ಟು ಹೋಯಿತು.
ಇಷ್ಟು ಅನರ್ಥ ಪರಂಪರೆಗಳನ್ನು ಈ ದೇವಸ್ಥಾನಕ್ಕೆ ತಂದುಹಾಕಿದ ವ್ಯಾಸತೀರ್ಥ ಸ್ವಾಮಿಗಳು ಕಟ್ಟಕಡೆಗೆ ೧೯೦೬ ದಶಂಬರ ತಿಂಗಳಲ್ಲಿ ಉಡು ಪಿಗೆ ಹತ್ತಿರವಿರುವ ಮಲ್ಪೆ ಎಂಬಲ್ಲಿ ಚಿತ್ತಭ್ರಮೆಯುಂಟಾಗಿ ಕಾಲವಾದ ರೆಂದು ತಿಳಿದು ಬರುತ್ತದೆ. ಶ್ರೀವ್ಯಾಸತೀರ್ಥ ಸ್ವಾಮಿಗಳ ನಂತರ ಬಂದ ಶ್ರೀವಿಶ್ವಜ್ಞ ತೀರ್ಥ ಸ್ವಾಮಿಗಳು ಕ್ರೋಧಿ ಸಂವತ್ಸರದಲ್ಲಿ ಅಂದರೆ ೧೯೦೪-೧೯೦೫ರಲ್ಲಿ ಮಠದ ಆಡಳಿತೆಯನ್ನು ವಹಿಸಿಕೊಂಡರೆಂದು ತಿಳಿದುಬರು ತ್ತದೆ. ಇವರು ೧೮೯೪-೯೫ರಲ್ಲು ಸನ್ಯಾಸ ತೆಗೆದುಕೊಂಡದ್ದಾಗಿ ತಿಳಿದುಬರು ತ್ತದೆ. ಅಂತೂ ಸಾಧಾರಣ ೧೮೪೫ರಿಂದ ೧೮೯೯ರವರೆಗೆ ಈ ದೇವಸ್ಥಾನದ ಆಡಳಿತೆಗೆ ವಿದ್ಯಾರಾಜ, ವಿದ್ಯಾಪೂರ್ಣ ಮತ್ತು ವ್ಯಾಸತೀರ್ಥರೆಂಬ ಮೂರು ಜನ ಮಾಧ್ವ ಸ್ವಾಮಿಗಳವರಿಂದ ಗ್ರಹಣ ಹಿಡಿದಂತೆ ಆಗಿತ್ತು. ವ್ಯಾಸತೀರ್ಥರ ನಂತರ ಅವರ ಸ್ಥಾನಕ್ಕೆ ಬಂದ ವಿಶ್ವಜ್ಞ ತೀರ್ಥ ಸ್ವಾಮಿಗಳು ದೇವಳದ ಆಡಳಿ ತೆಯು ಬಿಟ್ಟುಹೋದ ಮೇಲೆಯು ಕೂಡಾ ದೇವಸ್ಥಾನದ ಮೇಲೆ ತಮ್ಮ ಮಠಕ್ಕೆ ದೇವಳದಲ್ಲಿ ಕೆಲವು ಹಕ್ಕು ಬಾಧ್ಯತೆಗಳಿಗಾಗಿ O.S. 145 of 1913 ವ್ಯಾಜ್ಯ ಒಂದನ್ನು ಆಗಿನ ಆಡಳಿತೆದಾರರಾದ ಭೋಜರಾಯರು ಮತ್ತು ನರ ಸಿಂಹ ಆಸ್ರಣ್ಣರ ಮೇಲೆ ಹೂಡಿದರು. ಈ ವ್ಯಾಜ್ಯದಲ್ಲಿ ೧) ಅವರಿಗೆ ಸಿಕ್ಕುವ ಮರ್ಯಾದೆಗಳು ೨) ಕೆಲವು ಉತ್ತಾರಗಳು ೩) ಉರ್ಲ್ಲಿ ಅಕ್ಕಿ ಮತ್ತು ಬಾಳು ತ್ತಾರ ಅಕ್ಕಿ ೪) ಉಪಾಧಿಗಳು ತಮಗೆ ಸಿಕ್ಕಬೇಕೆಂದು ಅಲ್ಲದೆ ತನಗೆ ದೇವ ಸ್ಥಾನ ದೇವತಾ ವಿನಿಯೋಗಗಳ ಮೇಲ್ತನಿಕೆ ಅಧಿಕಾರ ಉಂಟೆದೂ ಅವರು ವಾದಿಸಿದ್ದಾಗಿರುತ್ತದೆ. ಇದರಲ್ಲಿ ಮಠದ ಏಜಂm ಸ್ವಾಮಿಗಳ ತಮ್ಮ ಲಕ್ಷ್ಮೀನಾ ರಾಯಣ ಆಚಾರ್ಯರು ಸ್ವಾಮಿಗಳು ಸುಬ್ರಹ್ಮಣ್ಯ ದೇವರಿಗೆ ಪೂಜೆ ಮಾಡು ವುದಿದ್ದರೂ ಅವರು ಸುಬ್ರಹ್ಮಣ್ಯ ದೇವರ ತೀರ್ಥ ಪ್ರಸಾದಗಳನ್ನು ಮಾಧ್ವ ವೈಷ್ಣವರಾದುದರಿಂದ ಸ್ವೀಕರಿಸುವ ಕ್ರಮವಿಲ್ಲವೆಂದು ಹೇಳಿಕೆ ಕೊಟ್ಟಿರುತ್ತಾರೆ. ಅಲ್ಲದೆ ಶ್ರೀಸುಬ್ರಹ್ಮಣ್ಯ ದೇವರು ಅವರ ವೈಷ್ಣವ ಸಮ್ಮಂದವಾದ ನರಸಿಂಹ ದೇವರಿಂದ ಕೆಳತರಗತಿಯವರೆಂದು ಮೇಲು ಕೀಳೆಂಬ ಭೇದ ಭಾವನೆಯನ್ನು ಕಲ್ಪಿಸಿದ್ದು ಇವರ ಮಾಧ್ವ ಮತದ ಮತಭೇದವನ್ನು ತೋರಿಸಿಕೊಡುತ್ತದೆ.
O.S. 145/1913 ವ್ಯಾಜ್ಯದ ಜಡ್ಜ್‌ಮೆಂಟನ್ನು ಪರಿಶೀಲಿಸುವಾಗ ಈ ಮಾಧ್ವ ಸ್ವಾಮಿಗಳು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತನಗೆ ದೇವಸ್ಥಾನಕ್ಕೆ ಸಂಬಂ ಧಪಟ್ಟ ಶೈವಾಗಮ ವಿಚಾರ ಏನೂ ತಿಳಿಯದಿದ್ದರೂ, ತಾನು ದೇವಸ್ಥಾನದ ವಿನಿಯೋಗಾದಿಗಳನ್ನು ನಡಿಸುವವನೆಂದು ನಟನೆ ಮಾಡುತ್ತಾ ದೇವಸ್ಥಾನದ ಹೆಚ್ಚಿನ ಕೆಲ್ಸಗಳಲ್ಲಿ ತಾನು ಅವುಗಳ ಮೇಲಾಧಿಕಾರಿಯೆಂದು ವರ್ತಿಸುತ್ತಾ ದೇವಸ್ಥಾನದಿಂದ ಅಕ್ಕಿ ಹಣ ವಗೈರೆ ಪಡೆಯುತ್ತಿದ್ದರೆಂದು ಸ್ಪಷ್ಟವಾಗುತ್ತದೆ.
ಈ ಸ್ವಾಮಿಗಳು ಮೊತ್ತಮೊದಲು ಬರೆ ಮೂರು ಉಪಾಧಿಗಳನ್ನು ಅಂದರೆ, ಅಷ್ಟೋತ್ತರ, ಮೃತ್ಯುಂಜಯ ಮತ್ತು ಮೂಲ ಮಂತ್ರ ಪಾರಾಯಣಗಳನ್ನು ಮಾಡುವವರಾಗಿ ನೇಮಕಪಟ್ಟು ಇವುಗಳಿಗಾಗಿ ಎರಡೂವರೆ ಹಾನೆ ಅಕ್ಕಿ ಸಂಬಳ ತೆಗೆದುಕೊಳ್ಳುತ್ತಿದ್ದರೆಂದು ತಿಳಿದು ಬರುತ್ತದೆ. ಶಿವನನ್ನೇ ದ್ವೇಷಿಸುವ ಈ ಸ್ವಾಮಿಗಳು ಈಶ್ವರನಿಗೆ ಸಂಬಂಧಪಟ್ಟ ಮೃತ್ಯುಂಜಯ ಜಪವ ಸುಬ್ರಹ್ಮಣ್ಯ ಮೂಲ ಮಂತ್ರ ಅಷ್ಟೋತ್ತರಗಳನ್ನು ಈ ದೇವಸ್ಥಾನದಲ್ಲಿ ಪಠಿಸುತ್ತಾರೆ ಎಂಬುದು ವಿಚಿತ್ರವಾಗಿದೆ. ಈ ವ್ಯಾಜ್ಯದಲ್ಲಿ ಇವರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ಮಠದ ಹಕ್ಕು ಬಾಧ್ಯತೆಗಳು ಬಿಟ್ಟುಹೋಗಿ ಮಠಕ್ಕೆ ಬರೆ ಸ್ವಲ್ಪ ಬಾಳುತ್ತಾರದ ಮತ್ತು ಉರ್ಲಿ ಅಕ್ಕಿ ಸಿಕ್ಕುವಂತೆ ಆಯಿತು. ಆಮೇಲೆ ಈ ಮಠದ ಸ್ವಾಮಿಗಳು ದೇವ ಸ್ಥಾನದ ಉಪಾಧಿ ನಡಿಸುವ ಉದ್ಯೋಗಸ್ಥರಾಗಿ ಉಳಿದರು. ಹಾಗಿದ್ದರೂ ೧೯೫೮ರ ವರೆಗೂ ದೇವಸ್ಥಾನದ ಆಸ್ರಣ್ಣರುಗಳನ್ನು ಪೂಜಗೆ ಸ್ನಾನ ಮಾಡಿ ಸಲು ಪ್ರಮಾಣ ಮಾಡಿಸುವ ಕ್ರಮವನ್ನು ಇವರು ಬಂದೇ ಮಾಡಿಸುತ್ತಿದ್ದು ದನ್ನು ಬಿಡಲಿಲ್ಲ.

‘ಗಂಜಿಯೊಳಗಣ ಹಲ್ಲಿ’ ಅವೈಜ್ಞಾನಿಕ ವಿವರಣೆ

Posted by JAYAKIRANA Kirana on | 0 comments | Leave a comment...

ಗಾಂಧಿ ಬಂದ ವಿವಾದ
'ಗಾಂಧಿ ಬಂದ' - ಗಂಜಿಯೊಳಗಣ ಹಲ್ಲಿ ಎಂದು ಟಿಎಎನ್ ಖಂಡಿಗೆ ಎಂಬವರು ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನನ್ನ ಕೆಲವು ಅನಿಸಿ ಕೆಗಳು.
ಟಿಎಎನ್ ಖಂಡಿಗೆಯವರೇ, ಗಾಂಧಿ ಬಂದ ಪಠ್ಯ ಪುಸ್ತಕದ ಒಳಗಣ ವಿಷಯಗಳನ್ನು ಓದಿ ತಮ್ಮ ಅಭಿಮತವನ್ನು ತಿಳಿಸಿದ್ದೀರಾ? ತಮ್ಮ ಅಭಿಪ್ರಾ ಯವನ್ನು ಅರ್ಥೈಸಿದ್ದೇವೆ.
ತಾವು ಹೇಳಿದ ಗಾಂಧಿ ಬಂ'ಧ' ಎಂಬ ಬಗ್ಗೆ ಅರ್ಥವಾಗಿಲ್ಲ. ಒಂದು ಅಕ್ಷರ ಅಲ್ಪಪ್ರಾಣವಾದರೆ ಯಾವ ಅರ್ಥ ಬರುತ್ತದೆ. ಮಹಾಪ್ರಾಣವಾದರೆ ಯಾವ ಅರ್ಥ ಬರುತ್ತದೆ ಎಂಬ ಪರಿಜ್ಞಾನವೇ ಇಲ್ಲದಿದ್ದ ತಮಗೆ, 'ಅಟ್ಟದಲ್ಲಿ ಚಲಿಸುತ್ತಿರುವ ಹಲ್ಲಿಯ ನೆರಳನ್ನು ತಾನು ಕುಡಿಯಲೆತ್ತಿದ ಗಂಜಿಯಲ್ಲಿ ಕಂಡು, ಆ ಹಲ್ಲಿ ತನ್ನ ಹೊಟ್ಟೆಗೆ ಹೋಯಿತೆಂಬ ಭ್ರಮೆಯಿಂದ ಒಬ್ಬ ಕೃಶನಾ ಗತೊಡಗಿದನಂತೆ. 'ಗಾಂಧಿ ಬಂದ ಕೃತಿಯ ಹಿಂದೆ ಇರುವ ಭ್ರಮೆಯೂ ಇದೇ ರೀತಿಯದ್ದು' ಎಂದಿದ್ದೀರಿ. ಈ ಭ್ರಮೆಯಿಂದ ತಾವು ಕೃಶವಾಗುತ್ತಾ ಇದ್ದೀರಾ ಗೊತ್ತಿಲ್ಲ. ಕಾರಣ ಅಟ್ಟದಲ್ಲಿ ಚಲಿಸುತ್ತಿರುವ ಹಲ್ಲಿಯ ನೆರಳು ತಾವು ಹೇಳಿದ ಗಂಜಿಯಲ್ಲಿ ಹೇಗೆ ಬೀಳಬಹುದು? ಇದು ಗ್ರಾಹ್ಯವಲ್ಲ. ಅಟ್ಟದ ಅಡಿಭಾಗದಲ್ಲಿ ಚಲಿಸುತ್ತಿರುವ ಅಥವಾ ನಿಂತ ಹಲ್ಲಿಯ ನೆರಳು ಕುಡಿಯ ಲೆತ್ತಿದ ಗಂಜಿಯಲ್ಲಿ ಕಂಡು ಎಂದು ಬರೆಯುತ್ತಿದ್ದರೆ ತಮ್ಮ ವಿಚಾರ ಸ್ವಲ್ಪ ಮಟ್ಟಿಗೆ ಗ್ರಾಹ್ಯವಾಗಬಹುದಿತ್ತು.
ಇದು ಹಾಗಲ್ಲ! ಅಟ್ಟದಲ್ಲಿ ಚಲಿಸುತ್ತಿದ್ದ ಹಲ್ಲಿಯ ನೆರಳು ತಾನು ಹಿಡಿಯ ಲೆತ್ತಿದ್ದ ಗಂಜಿಯಲ್ಲಿ ಕಾಣುವುದಾದರೂ ಹೇಗೆ? ನೀವು ವಿವರಿಸಿದ ವಿವರಣೆ ಸರಿಯಿಲ್ಲ. ಗಾಂಧಿ ಬಂ'ಧ' ಗಂಜಿಯೊಳಗಣ ಹಲ್ಲಿ ! ಎಂದರೆ ಏನರ್ಥ? ಹಲ್ಲಿಯ ನೆರಳು ತಾನು ಕುಡಿಯಲೆತ್ತಿದ ಗಂಜಿಯಲ್ಲಿ ಕಂಡು ಆ ಹಲ್ಲಿ ತನ್ನ ಹೊಟ್ಟೆಗೆ ಹೋಯಿತೆಂಬ ಭ್ರಮೆಯಿಂದ... ಎಂದು ಹೇಳಿದ್ದೀರಿ. ಇಲ್ಲಿ, ಕನ್ನಡಿ ಯಲ್ಲಿ, ಅಟ್ಟದಲ್ಲಿ ಹಲ್ಲಿ ಇದ್ದರೂ ಕಾಣುವುದಿಲ್ಲ! ಅಟ್ಟದ ಅಡಿಭಾಗದಲ್ಲಿ ಚಲಿ ಸುವ ಹಲ್ಲಿಯ ನೆರಳು ಹಲ್ಲಿಯ ತಳಭಾಗದಲ್ಲಿರುವ ಕನ್ನಡಿಯಲ್ಲಿ ಕಾಣಬ ಹುದು. ಹಾಗೆ ಬರೇ ಬಟ್ಟಲಲ್ಲಿ ತಿಳಿಯಾದ ನೀರಿದ್ದರೆ ಅದರಲ್ಲಾದರೂ ಸ್ವಲ್ಪ ಮಟ್ಟಿಗೆ ಕಾಣಬಹುದು. ಇದು ಹಾಗಲ್ಲ ತಾನು ಕುಡಿಯಲೆತ್ತಿದ ಗಂಜಿಯಲ್ಲಿ ಎಂದು ಬರೆದಿದ್ದೀರಿ. ಹಲ್ಲಿಯ ನೆರಳು ಗಂಜಿಯಲ್ಲಿ ಕಾಣುವುದಕ್ಕೆ ಸಾಧ್ಯ ವಿಲ್ಲ. ಹೀಗಿರುವಾಗ ಉದಾಹರಣೆಯೇ ನಿಮ್ಮ ಭ್ರಮೆ. ಇದರಿಂದ ನೀವೇ ಕೃಶ ವಾಗುವುದಕ್ಕೆ ಸಾಧ್ಯ. ನಿಮ್ಮ ಈ ಉದಾಹರಣೆಯು ಸಾಮಾನ್ಯ ಜ್ಞಾನದವ ರಿಗೂ ತಪ್ಪೆಂದು ಕಾಣಬಹುದು. ವೈಜ್ಞಾನಿಕವಾಗಿಯೂ ಸರಿಯಲ್ಲ. ಹೀಗಾಗಿ ತಾವು ಗಾಂಧಿ ಬಂದ ಕೃತಿಯನ್ನು ಓದಿದ್ದರೆ ಅರ್ಥೈಸಿಕೊಂಡಿರುವ ಭ್ರಮೆಯೂ ಇದೇ ರೀತಿಯದ್ದು.
ಹೀಗಾಗಿ ಗಾಂಧಿ ಬಂದ ಸಾಹಿತ್ಯಕ್ಕೆ ಪೂರಕವಾಗಿ ಬರೆಯುವಾಗ ಸರಿ ಯಾಗಿ ಅರ್ಥೈಸದೆ ಉದಾಹರಣೆಯನ್ನು ಕೊಟ್ಟಿದ್ದೀರಿ! ಇದರಿಂದ ನಿಮ್ಮ ಜ್ಞಾನದ ಮಟ್ಟ ಎಷ್ಟಿರಬಹುದೆಂದು ತೋರಿಸುತ್ತದೆ. ಹೀಗಾಗಿ ಕೃತಿಯ ಬಗ್ಗೆ ನೀವೆಷ್ಟು ಅಧ್ಯಯನ ಮಾಡಿದ್ದೀರಿ? ಹೇಗೆ ಮನನ ಮಾಡಿಕೊಂಡಿದ್ದೀರಿ? ಎಂಬ ಬಗ್ಗೆಯೂ ಯಾರಿಗೂ ಅರ್ಥವಾಗಬಹುದು.
ಗಾಂಧಿ ಬಂದ ಎನ್ನುವ ಶಿರೋನಾಮೆಗೆ ಗಾಂಧಿ 'ಬಂಧ' ಎಂದು ಉಲ್ಲೇಖಿಸಿರುತ್ತೀರಿ. ಇದು, ಗಾಂಧಿ ಬಂದ ಕೃತಿಯ ಒಳಗಿರುವ ಬಂಡು ಶಬ್ದಗಳು ವಾಕ್ಯಪ್ರಯೋಗಗಳು ಸಾಕಷ್ಟು ಇರುವುದು ನಿಮಗೆ ಹೇಗೆ ಅರ್ಥವಾಗಬಹುದು. ಒಂದು ಕೃತಿಯ ಬಗ್ಗೆ ಬರೆಯುವಾಗ ಸರಿಯಾದ ಅಧ್ಯಯನ ಇರ ಬೇಕು. ಆ ಅಧ್ಯಯನದಿಂದ ಹೊರಬರುವ ವಿಚಾರಗಳು ಲೋಕ ಕಲ್ಯಾಣಾರ್ಥ ವಾಗಿ ಸಮಾಜ ನಿರ್ಮಾಣಕ್ಕೆ ಹೇತುವಾಗಬೇಕು. ಮಕ್ಕಳ ಜ್ಞಾನಾರ್ಜನೆಗೂ ಒಂದು ದಾರಿದೀಪವಾಗಬೇಕು.
ಸಾಹಿತ್ಯ ಕೃತಿಯೊಂದನ್ನು ಸಾಹಿತ್ಯ ಕೃತಿಯಾಗಿ ಓದದೇ ಅದನ್ನು ಪೂರ್ವಾ ಗ್ರಹ ಪೀಡಿತ ಮನಸ್ಸಿನಿಂದ ಓದಿದರೆ ವಿವಾದ ಸೃಷ್ಟಿಸಲು ದೈತ್ಯ ಪ್ರತಿಭೆ ಅಗತ್ಯವಿಲ್ಲ. ಅಲ್ಪ ಅಜ್ಞಾನ ಮತ್ತು ಅಹಂಕಾರ ಸಾಕು ಎಂದಿದ್ದೀರಿ! ಈ ಮಾತು ನಿಮ್ಮ ಮನೆ ಮಂದಿಗೆ ಹೇಳಿ. ಸಾಹಿತ್ಯವೆಂದರೇನು? ಹೇಗಿರಬೇಕು ಎಂಬುದನ್ನು ಮೊದಲು ತಿಳಿಯಿರಿ. ಅಮೇಲೆ ನಿಮ್ಮ ವ್ಯಾಖ್ಯಾನವನ್ನು ಒಪ್ಪುತ್ತೇವೆ.
ಸಂಗೀತ ಮಭಿ ಸಾಹಿತ್ಯಂ| ಸರಸ್ವತ್ಯಾಸ್ತನದ್ವಯ|| ಅರ್ಥಾತ್ ಸಂಗೀತ ಮತ್ತು ಸಾಹಿತ್ಯ ಜಗನ್ಮಾತೆಯಾದ ಸೌಂದರ್ಯ ರಾಶಿಯೇ ಆದ ಸರಸ್ವತೀ ದೇವಿಯ ಒಂದೊಂದು ಸ್ತನಗಳು (ಎರಡು ಸ್ತನಗಳು) ಅದರಲ್ಲಿ ಸೂಸುವ ಹಾಲನ್ನು ಕುಡಿದು (ಅರ್ಥಾತ್ ಅಮೃತ ಸಮಾನವಾದ) ಉತ್ತಮವಾದ ಮನೋಭಾವನೆಯಿಂದೊಡ ಗೂಡಿ ಉತ್ಕೃಷ್ಟವಾದ ಸಂತಾನ (ಮಕ್ಕಳಿಗೆ)ಗಳಿಗೆ ಬೇಕಾದಷ್ಟು ಕೊಟ್ಟು ಒಳ್ಳೆಯ ಭಾವನೆಯಿಂದೊಡಗೂಡಿ 'ವಿದ್ಯಾ ವಿವಾದಾಯ| ಧನಂ ಮದಾಯ|| ಹಾಗೆಂದು ಅರ್ಥೈಸುವುದಕ್ಕಲ್ಲ.
ಬದಲಾಗಿ ವಿದ್ಯೆಯು ತರ್ಕಕ್ಕಲ್ಲ (ವಿವಾದಕ್ಕಲ್ಲ) ಧನ (ಹಣ)ವು ಅಹಂಕರಿಸು ವುದಕ್ಕಲ್ಲ. ಇಂತಹ ಭಾವನೆಯು ಬಾರದಂತೆ ಮನಸ್ಸನ್ನು ಸಾತ್ವಿಕವಾಗಿ ಉತ್ಕರ್ಷಿ ಸಲು ಮಾತ್ರವೇ ಆ ಮಹಾತಾಯಿ ಸರಸ್ವತಿ ಮಾತೆಯ ಅಮೃತವಾಗುವ ಸಾಹಿ ತ್ಯವೆನ್ನುವ ಮೊಲೆಹಾಲು ಸೇವಿಸಿದಾಗ ಪ್ರಯೋಜನವಾದೀತು! ಸಾಹಿತ್ಯವನ್ನು ಈ ರೀತಿ ಅರ್ಥೈಸಿಕೊಳ್ಳುವುದು ಸೌಜನ್ಯ.
ಅಲ್ಪ ಜ್ಞಾನ ಮತ್ತು ಅಹಂಕಾರ ಬೇಡ ಎಂದಿದ್ದೀರಿ. ಒಂದು ಕುಲೀನ ಮನೆ ತನದ ದ್ರೌಪದಿ ಎನ್ನುವ ಬ್ರಾಹ್ಮಣ ಯುವತಿ ಅನ್ಯಮತದವನೊಂದಿಗೆ ಓಡಿದ್ದಾಳೆ. ಕಳ್ಳು ಮೂರ್ತೆ ಮಾಡುವ ಬಿಲ್ಲವ ಸಮಾಜಕ್ಕೆ ದೇವಸ್ಥಾನದ ಒಳ ಪ್ರವೇಶವಿಲ್ಲ. 'ಕೊಳಕಲ್ಲೆ ಅಂತಸ್ತಿನಲ್ಲೇ ಕಬ್ಬಿಣ ಚಿನ್ನಗುದ್ದುವ' ನಿಕೃಷ್ಟ ಹೆಸರುಗಳನ್ನು ಅವಹೇಳ ನಕಾರಿಯಾಗಿ ಉಲ್ಲೇಖಿಸಿರುವುದು. ರಾಷ್ಟ್ರಪಿತನನ್ನು ಹೀಯಾಳಿಸಿ ಬರೆದಿರುವುದು ಪೂರ್ವಾಗ್ರಹ ಪೀಡಿತರಾಗಿ ಕೃತಿಕರ್ತರು ಬರೆದಿದ್ದರೆ ಅದು ಪೂರ್ವಾಗ್ರಹ ಪೀಡಿ ತರಾಗಿ ಬರೆದದ್ದೇ ಎನ್ನುವುದಕ್ಕೆ ನೀವೇಕೆ ಅಲ್ಲ ಎನ್ನುತ್ತೀರಿ? ಅಂತಹ ಪ್ರಯೋ ಗಗಳು ಇಡೀ ಕೃತಿಯಲ್ಲಿರುವಾಗ ಉಳಿದವರನ್ನು ಪೂರ್ವಾಗ್ರಹ ಪೀಡಿತ ಮನಸ್ಸಿ ನಿಂದ ಓದಿದರೆ ವಿವಾದ ಸೃಷ್ಟಿಸಲು ದೈತ್ಯ ಪ್ರತಿಭೆಯ ಅಗತ್ಯವಿಲ್ಲ ಎನ್ನುವುದು ತಮ್ಮ ಅಜ್ಞಾನದ ಪರಮಾವಧಿಯಲ್ಲದೆ ಮತ್ತೇನು?
ಮನುಷ್ಯನಿಗೆ ಅಹಂಕಾರ ಇರುವುದು ಸ್ವಾಭಾವಿಕ. ಆದರೆ ದುರಹಂಕಾರವಿರ ಬಾರದು. ಇದು ತಮ್ಮದು ದುರಹಂಕಾರ ಅಲ್ಲದೆ ಮತ್ತೇನು? ಇದು ಸಲ್ಲ. ಸಾಹಿತ್ಯ ಕೃತಿಯ ಬಗ್ಗೆ ಏನೂ ತಿಳಿಯದೆ ಬೇರೆಯವರಿಗೆ ಅಜ್ಞಾನ ಅಹಂಕಾರ ಎಂದು ಹೇಳುವ ನಿಮ್ಮದು ದುರಹಂಕಾರವಲ್ಲದೆ ಮತ್ತೇನು? ಎಷ್ಟೋ ಮಂದಿ ವಿದ್ವಜ್ಜನರು ಈ ಕೃತಿ ಪಠ್ಯಕ್ಕೆ ಯೋಗ್ಯವಲ್ಲ. ಕಾದಂಬರಿಗೂ ಯೋಗ್ಯವಲ್ಲ ಎಂದು ಉದಾಹರಣೆ ಸಹಿತವಾಗಿ ಈ ಹಿಂದೆ ಎಷ್ಟೋ ಲೇಖನಗಳನ್ನು ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ತಾವು ಓದದೇ ಇರುವುದು ಆಶ್ಚರ್ಯ.

ಅಪ್ರಾಪ್ತೆಯ ಜೊತೆ ಲೈಂಗಿಕ ಸಂಪರ್ಕ; ಅಪರಾಧ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಕುಂದಾಪುರ
ಸಮಸ್ಯೆ: ನನಗೆ ೨೬ ವರ್ಷ ವಯಸ್ಸು. ಪಿಯುಸಿ ಕಲಿತಿದ್ದು, ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಹಸ್ತಮೈಥುನ ಮಾಡುತ್ತೇನೆ. ನನಗೆ ಸೆಕ್ಸ್‌ನಲ್ಲಿ ತುಂಬಾ ಆಸಕ್ತಿ. ನನಗೊಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ. ಅವಳ ವಯಸ್ಸು ೧೭. ಪಿಯುಸಿ ಕಲಿಯುತ್ತಿದ್ದಾಳೆ. ಆಕೆಗೆ ನಾನೆಂದರೆ ತುಂಬಾ ಇಷ್ಟ. ಆಕೆಯ ಗೆಳತಿ ನನ್ನ ಗೆಳೆಯ ನನ್ನು ಲವ್ ಮಾಡುತ್ತಿದ್ದಾಳೆ. ಹೀಗಾಗಿ ನನಗೆ ಇವಳ ಪರಿಚಯವಾ ಗಿದೆ. ನಾವಿಬ್ಬರೂ ಈಗಾಗಲೇ ಕೆಲವು ಬಾರಿ ಲೈಂಗಿಕ ಕ್ರಿಯೆ ನಡೆ ಸಿದ್ದೇವೆ. ಮೊದಲ ಬಾರಿ ಅವಳ ಜೊತೆ ಸೆಕ್ಸ್ ಮಾಡುವಾಗ ವಿಪ ರೀತ ನೋವಾಯಿತು ಎಂದಳು. ಆನಂತರ ಸೇರುವಾಗ ಈ ರೀತಿ ಆಗಲಿಲ್ಲ. ನಾನು ಮೊದಲು ಕಾಂಡೋಂ ಹಾಕಿಯೇ ಸೇರಿದ್ದೇನೆ. ಆದರೆ ನಂತರ ಕಾಂಡೋಂ ಧರಿಸದೆ ಸ್ಖಲನ ಆಗುವಾಗ ಜನನಾಂ ಗವನ್ನು ಹೊರಕ್ಕೆ ತೆಗೆಯುತ್ತೇನೆ. ಕೊನೆಯ ಬಾರಿ ಹೀಗೆಯೇ ಮಾಡುವಾಗ ಜನನಾಂಗ ಬೇಗನೆ ಸ್ಖಲಿಸಿದ್ದು, ವೀರ್ಯ ಅವಳ ಜನನಾಂಗಕ್ಕೆ ಬಿದ್ದಿದೆಯೇ ಎಂದು ಸಂಶಯವಿದೆ. ನಾವಿಬ್ಬರೂ ಮದುವೆಯಾಗುವಂತಿಲ್ಲ. ಕಾರಣ ಆಕೆ ತುಂಬಾ ಶ್ರೀಮಂತ ಫ್ಯಾಮಿ ಲಿಗೆ ಸೇರಿದವಳು. ಅವಳ ಮನೆಯವರಿಗೆ ತಿಳಿದರೆ ನನ್ನನ್ನು ಸುಮ್ಮನೆ ಬಿಡಲಿಕ್ಕಿಲ್ಲ. ನನಗೆ ಅವಳು ಪ್ರೆಗ್ನೆಂಟ್ ಆಗಬಹುದೇ ಎಂದು ಭಯ ವಾಗುತ್ತಿದೆ. ತಿಳಿಯದೆ ಇಂತಹ ತಪ್ಪು ನಡೆದಿದೆ. ಮುಂದೆ ಹೀಗೆ ಮಾಡುವುದಿಲ್ಲ. ಗರ್ಭ ಧರಿಸದಂತೆ ಮಾತ್ರೆಗಳಿವೆಯೇ? ನನಗೆ ಸೂಕ್ತ ಸಲಹೆ ಕೊಡಿ. ನಾವಿಬ್ಬರೂ ಇದರಿಂದ ಭಯಪಡುತ್ತಿದ್ದೇವೆ.
ಸಲಹೆ: ಒಮ್ಮೆ ಇಂಥ ತಪ್ಪು ನಡೆದಿದ್ದರೆ ಅದನ್ನು ತಿಳಿಯದೇ ಮಾಡಿದ್ದು ಎಂದು ಮನ್ನಿಸಬಹುದು. ಆದರೆ ನೀವು ತಿಳಿದಿದ್ದೂ ಅಪ್ರಾಪ್ತ ಹುಡುಗಿಯೊಂದಿಗೆ ಅನೇಕ ಬಾರಿ ಸೆಕ್ಸ್ ನಡೆಸಿದ್ದೀರಿ. ಆಕೆಯದ್ದು ಮಾತ್ರವಲ್ಲ, ಇಲ್ಲಿ ನಿಮ್ಮದೂ ತಪ್ಪಿದೆ. ಒಂದು ವೇಳೆ ಇದರಿಂದ ನಾಳೆ ಆಕೆ ಗರ್ಭ ಧರಿಸಿದರೆ ಇಲ್ಲವೇ ಇನ್ನಿತರ ಸಮಸ್ಯೆ ಎದುರಾ ದರೆ ನೀವು ಜೈಲು ಸೇರುವುದು ಗ್ಯಾರಂಟಿ.
ಇನ್ನಾದರೂ ಇಂಥ ಹುಚ್ಚಾಟವನ್ನು ಬಿಟ್ಟುಬಿಡಿ. ಲೈಂಗಿಕ ಕ್ರಿಯೆಯೆಂದರೆ ಮಕ್ಕಳಾಟವಲ್ಲ. ನಿಮ್ಮಂತೆಯೇ ಆಕೆಗೂ ಸೆಕ್ಸ್ ಬಗ್ಗೆ ಆಸಕ್ತಿ ಇರಬಹುದು. ಆದರೆ ಆಕೆ ಗಿನ್ನೂ ೧೭ರ ಹರೆಯ. ಈ ಹರೆಯದಲ್ಲಿ ಸೆಕ್ಸ್ ಬಗ್ಗೆ ಆಕೆ ಸಂಪೂರ್ಣ ಜ್ಞಾನ ಹೊಂದಿ ರುವುದಿಲ್ಲ. ನೀವು ಆಕೆಯನ್ನು ನಿಮ್ಮ ಲೈಂಗಿಕ ಸುಖಕ್ಕಾಗಿ ಬಳಸಿಕೊಂಡಿದ್ದು ತಪ್ಪು. ಸಂಭೋಗದ ವೇಳೆ ವೀರ್ಯವನ್ನು ಆಕೆಯ ಗುಪ್ತಾಂಗಕ್ಕೆ ಸ್ರವಿಸದಿದ್ದರೆ ಗರ್ಭ ಧರಿಸುವ ಸಾಧ್ಯತೆಯಿಲ್ಲ. ಆದರೆ ಆಕೆಗೆ ಮುಟ್ಟು ನಿಂತರೆ ಗರ್ಭ ಧರಿಸಿರುವ ಲಕ್ಷಣ ಕಾಣಿಸಲು ಶುರುವಾಗುತ್ತದೆ. ಗರ್ಭ ಧರಿಸಿದ ಮೇಲೆ, ಅದನ್ನು ತೆಗೆಯಲು ವೈದ್ಯರಿಗೆ ಅನುಮತಿಯಿರುವುದಿಲ್ಲ. ಅತ್ಯಾಚಾರದಂತಹ ಸಂದರ್ಭದಲ್ಲಿ ಮಾತ್ರ ಇದು ಸಾಧ್ಯ. ಸಂಭೋಗ ನಡೆಸಿದ ಒಂದೆರಡು ತಾಸಿನ ಒಳಗಾದರೆ ತುರ್ತು ಗರ್ಭ ನಿರೋಧಕ ಬಳಸಿ, ಗರ್ಭ ತಡೆಗಟ್ಟಲು ಸಾಧ್ಯವಿದೆ. ಆದರೆ ಅದರಲ್ಲೂ ಶೇಕಡಾ ನೂರರಷ್ಟು ಫಲಿತಾಂಶವನ್ನು ನಿರೀಕ್ಷಿಸಲಾ ಗದು. ಈ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದು ಬೇಡ. ಇನ್ನಾ ದರೂ ಇಂತಹ ಬೇಜವಾಬ್ಧಾರಿತನ ತೋರದಿರಿ. ಆಕೆ ಗರ್ಭ ಧರಿ ಸಿದರೆ ಮುಂದಿನ ಸಮಸ್ಯೆಗಳನ್ನು ಎದುರಿಸಲು ಸಿದ್ಧನಾಗಿರಬೇಕು.
ಹೆಣ್ಣನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವಂತೆ ಮಾಡುವುದು, ಪದೇ ಪದೇ ಸಂಭೋಗಕ್ಕೆ ಒಳಪಡಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನೀವು ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ. ಪ್ರೀತಿಸುತ್ತೀರಾದರೆ ಸ್ವಚ್ಛ ಮನಸ್ಸಿನಿಂದ ಪ್ರೀತಿಸಿ. ವಯಸ್ಸಾಯಿತೆಂದು ಪ್ರಾಯಕ್ಕೆ ಬರದ ಹುಡುಗಿಯೊ ಂದಿಗೆ ಸೆಕ್ಸ್ ನಡೆಸದಿರಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು. ಆಕೆಯನ್ನು ಮದುವೆಯಾಗುವುದಿಲ್ಲ ಎಂದು ತಿಳಿದೂ ಆಕೆಯ ಜೊತೆ ಸಂಬಂಧ ಬೆಳೆಸುವುದು ಸರಿಯಲ್ಲ. ಆಕೆಯ ಮನೆಮಂ ದಿಯ ಭಯವಿದ್ದೂ ಇಂಥ ಕೆಲಸಕ್ಕೆ ಇಳಿದಿರುವುದು ಸಮಸ್ಯೆ ಯನ್ನು ಮೈಗೆಳೆದುಕೊಂಡಂತೆಯೇ ಸರಿ. ನಿಮ್ಮ ಎಚ್ಚರದಲ್ಲಿ ನೀವಿ ರುವುದು ಒಳ್ಳೆಯದು.

10-4-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗದಲ್ಲಿ ಯಶಸ್ಸು ಇರುತ್ತದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ಮಿಥುನ : ದೈವಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುತ್ತದೆ.
ಸಿಂಹ : ಕೆಲವು ಸಮಸ್ಯೆಗಳು ದೂರವಾಗುತ್ತದೆ.
ಕನ್ಯಾ : ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ಇರುತ್ತದೆ.
ತುಲಾ : ಅಪ್ತರಿಂದ ಸಹಾಯ ದೊರೆಯುತ್ತದೆ.
ವೃಶ್ಚಿಕ : ಶೃಂಗಾರ ಸಾಧನಗಳ್ನು ಖರೀದಿ ಮಾಡುತ್ತೀರಿ.
ಧನು : ಶತ್ರುಗಳಿಂದ ದೂರ ಇರಬೇಕು.
ಮಕರ : ಮನಸ್ಸಿಗೆ ಶಾಂತಿ, ನೆಮ್ಮದಿ ಇರುತ್ತದೆ.
ಕುಂಭ : ಹಣಕಾಸಿನ ಲಾಭ ದೊರೆಯುತ್ತದೆ.
ಮೀನ : ದೇವತಾ ಕೆಲಸ ಮಾಡುತ್ತೀರಿ.

10-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಲೇಡಿಸ್ ಟೈಲರ್ ಬೇಕು ೯೪೪೮೩೨೮೮೩೩.
ಮಲ್ಲಿಕಟ್ಟೆ : ಪಿಯುಸಿ ಕಲಿತ ಕಂಪ್ಯೂಟರ್ ಅನುಭವಿರುವವರು ಬೇಕು ೯೮೮೦೯೯೬೩೧೨.
ತೊಕ್ಕೊಟ್ಟು : ಬಾರ್‌ಗೆ ವೇಟರ‍್ಸ್ ಬೇಕು ೯೭೪೨೨೮೫೪೮೫.
ಕಾವೂರು : ಟಿವಿ ರಿಪೇರಿ ಮಾಡಲು ತಿಳಿದವರು ಬೇಕು ೭೨೦೪೩೭೭೯೮೧.
ಯೆಯ್ಯಾಡಿ : ಇಂಡಸ್ಟ್ರಿಯಲ್ ಏರಿಯಾಗೆ ರಾತ್ರಿ ಪಾಳಿಗೆ ಪ್ಯಾಕಿಂಗ್ ಕೆಲಸಕ್ಕೆ ಜನ ಬೇಕು ೯೭೩೮೯೯೧೨೫೫.
ಮಂಗಳೂರು : ಕ್ಲೀನರ‍್ಸ್ ಮತ್ತು ವೇಟರ‍್ಸ್ ಬೇಕು ೯೪೪೮೬೨೫೩೭೭.
ಮಂಗಳೂರು : ಕ್ಲಿನಿಕ್‌ಗೆ ಹೆಂಗಸರು ಬೇಕು ೯೮೮೦೮೦೯೮೦೩
ಮಂಗಳೂರು : ಪೆಟ್ರೋಲ್ ಹಾಕುವವರು, ಎಕೌಂಟೆಂಟ್, ಗನ್‌ಮ್ಯಾನ್ ಬೇಕು ೯೯೪೫೦೯೫೧೨೩.
ನುರಿತ ಚೈನೀಸ್ ಮತ್ತು ಎಲ್ಲಾ ತರದ ಅಡುಗೆ ಗೊತ್ತಿದ್ದವರು ಬೇಕಾಗಿದ್ದಾರೆ. ೯೮೮೦೩೭೮೮೦೬
ಮಂಗಳೂರು : ಸ್ಕ್ರೀನ್ ಪ್ರಿಂಟಿಂಗ್ ಕೆಲಸಕ್ಕೆ ಜನ ಬೇಕು ೯೮೪೫೨೯೮೦೪೮.
ಬಂದರ್ : ಕಚೇರಿ ಕೆಲಸಕ್ಕೆ ಯುವಕರು ಬೇಕು ೯೪೪೮೮೪೩೪೯೯.
ಮಂಗಳೂರು : ಬಟ್ಟೆ ಅಂಗಡಿಗೆ ಜನ ಬೇಕು ೯೧೪೧೮೫೦೬೩೨.
ಮಂಗಳೂರು : ಹೌಸ್‌ಕೀಪಿಂಗ್‌ಗೆ ಜನ ಬೇಕು ೮೯೦೯೨೧೧೯೯೮.
ಕಂಕನಾಡಿ : ಲೇಡಿಸ್ ಟೈಲರ್ ಬೇಕು ೯೮೮೦೯೦೫೫೦೩.
ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಮೆಡಿಕಲ್‌ಗೆ ಜನ ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ. ೯೯೦೧೩೩೧೩೧೪
ಮಂಗಳೂರು: ಮಾರ್ಕೆಟ್ ರೋಡ್‌ನ ಫ್ಯಾನ್ಸಿ ಗೆ ಜನ ಬೇಕು. ೯೮೮೦೭೨೪೫೯೨
ಮಂಗಳೂರಿನ ವಸತಿ ನಿಲಯಕ್ಕೆ ಅಡುಗೆಯವರು, ಹೆಲ್ಪರ‍್ಸ್, ಸರ್ವಿಸ್ ಹುಡುಗರು ಬೇಕಾಗಿದ್ದಾರೆ. ೯೪೪೮೫೦೬೩೫೦
ಕಾವೂರ್: ಗಾಂಧಿ ನಗರದಲ್ಲಿರುವ ಸಂಸ್ಥೆಗೆ ಯುವತಿ ಬೇಕು ೯೪೪೮೧೬೪೭೩೯.
ಕೊಡಿಯಾಲ್‌ಬೈಲ್: ಕಾಲ್ ಸೆಂಟರ್‌ಗೆ ಸೆಕ್ಯೂರಿಟಿ ಆಫೀಸರ್ ಬೇಕು ೯೫೩೮೮೮೯೫೧೪.
ಕದ್ರಿ: ಮಲ್ಲಿಕಟ್ಟೆಗೆ ಟೈಪಿಂಗ್, ಕಂಪ್ಯೂಟರ್ ತಿಳಿದವರು ಬೇಕು ೯೮೮೦೮೧೪೧೪೦.
ಯೆಯ್ಯಾಡಿ: ಟೈಲರಿಂಗ್ ಶಾಪ್‌ಗೆ ಟೈಲರ್ ಬೇಕು ೮೭೧೦೯೪೩೮೩೮.
ಮಂಗಳೂರು: ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸಕ್ಕೆ ಜನ ಬೇಕು ೮೦೮೮೧೬೦೭೭೭
ಬಜ್ಪೆ: ಪೆರಾರ್ ವರ್ಕ್‌ಶಾಪ್‌ಗೆ ಗ್ರಿಲ್ ಮತ್ತು ವೆಲ್ಡಿಂಗ್ ತಿಳಿದವರು ಬೇಕು. ೮೯೭೦೪೪೦೭೬೧
ಮಂಗಳೂರು: ಹೌಸ್‌ಕೀಪಿಂಗ್‌ಗೆ ಬಾಯ್ಸ್ ಬೇಕು ೮೯೦೯೨೧೧೯೯೮.
ಕೊಡಿಯಾಲ್‌ಬೈಲ್: ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್, ಬ್ಲೌಸ್‌ಪೀಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೯೯೭೨೭೨೫೪೪೪.
ಕುಳಾಯಿ: ತರಕಾರಿ ಅಂಗಡಿಗೆ ಕೆಲಸಕ್ಕೆ ಜನ ಬೇಕು ೯೮೮೦೬೧೩೭೪೮.

ಯುವಕರ ಹೊಡೆದಾಟಕ್ಕೆ ಅಂಗಡಿಗಳು ಭಸ್ಮ

Posted by JAYAKIRANA Kirana on | 0 comments | Leave a comment...

ಸುಳ್ಯ: ವಿಭಿನ್ನ ಕೋಮುಗಳ ಯುವಕರ ಮಧ್ಯೆ ಹೊಡೆದಾಟ ಪ್ರಕರಣ ಕೋಮು ಉದ್ವಿಘ್ನತೆಗೆ ಕಾರಣವಾದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಬೆಳ್ಳಾರೆಯಲ್ಲಿ ಗೂರ್ಖಾ ಕೆಲಸ ಮಾಡುತ್ತಿರುವ ಸುಭಾಷ್ ಹಾಗೂ ಮಧುಚಂದ್ರ ಎಂಬವರು ಮೇಲಿನ ಪೇಟೆಯಲ್ಲಿ ನಡೆದುಕೊಂಡು ಹೋಗು ತ್ತಿದ್ದಾಗ ಜಮಾಲ್ ಎಂಬಾತನ ಕೈ ಸುಭಾಷ್‌ಗೆ ತಾಗಿದ್ದು, ಈ ಸಂದರ್ಭ ಅವರೊಳಗೆ ಮಾತಿನ ಚಕಮಕಿ ನಡೆಯಿತು. ಬಳಿಕ ಜಮಾಲ್ ತನ್ನ ಮಿತ್ರರಾದ ಫಮೀದ್, ಫಾರೂಕ್, ಆರೀಫ್, ಜಾಫರ್ ಹಾಗೂ ಮತ್ತೆ ಕೆಲವರನ್ನು ಕರೆ ತಂದು ಕತ್ತಿಯಿಂದ ಕೊಲೆ ಮಾಡುವುದಾಗಿ ಬೆದರಿಸಿದ್ದರು ಎನ್ನಲಾಗಿದೆ. ಈ ಸಂದರ್ಭ ಸುಭಾಷ್ ಹಾಗು ಮಧುಚಂದ್ರ ಹೆದರಿ ಓಡಿದ್ದು, ತಂಡ ಅವರನ್ನು ದೂಡಿ ಹಾಕಿದಾಗ ಗಾಯವಾಗಿದೆ. ಗಾಯಾಳುಗಳು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಜಮಾಲ್ ಮತ್ತು ೧೫ ಜನರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಘಟನೆ ಬೆಳ್ಳಾರೆ ಪೇಟೆಯಲ್ಲಿ ಉದ್ವಿಗ್ನತೆಗೆ ಕಾರಣ ವಾಗಿದ್ದು, ಹಮೀದ್ ಎಂಬವರ ಫಾಸ್ಟ್‌ಫುಡ್ ಅಂಗಡಿಯನ್ನು ಕೆಲವರು ದೊಣ್ಣೆ ಕಲ್ಲುಗಳಿಂದ ಹೊಡೆದು ಹಾನಿ ಮಾಡಿದ್ದಾರೆ. ಸುಮಾರು ೩೦ ಸಾವಿರ ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ. ಈ ಸಂಬಂಧ ಸಂತೋಷ್, ಕಿರಣ್, ಮಧುಚಂದ್ರ, ಪುರಂದರ, ಸುಭಾಷ್ ಸೇರಿದಂತೆ ೧೫ ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ದರೋಡೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಘಟನೆ ಬಳಿಕ ರಾತ್ರಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್ ಒಂದನ್ನು ಕಿತ್ತು ಹಾಕಲಾಗಿದೆ. ಟೈಲರ್ ಒಬ್ಬರ ಅಂಗಡಿಗೂ ಕಲ್ಲು ತೂರಾಟ ನಡೆದಿದೆ. ಈ ವೇಳೆಗೆ ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಉಡುಪಿ: ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಕುಡಿತದ ಮತ್ತಿನಲ್ಲಿದ್ದ ಮೂವರು ಕಾರ್ಮಿಕರು ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿ ಇಬ್ಬರು ಸೇರಿ ಓರ್ವ ಕಾರ್ಮಿಕನನ್ನು ಜಜ್ಜಿ ಹತ್ಯೆಗೈದಿರುವ ಘಟನೆ ಉಡುಪಿ ಕಡಿಯಾಳಿ ಕಟ್ಟೆ ಆಚಾರ‍್ಯ ಮಾರ್ಗದ ಬದಿಯ ಬಾಡಿಗೆ ಮನೆಯಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ಸಂಭವಿಸಿದೆ.
ಬಾದಾಮಿ ಮೂಲದ ಬಸವಂತಪ್ಪ (೪೫) ಹತ್ಯೆಯಾದಾತ. ಉಡುಪಿಯ ಲಾರಿ ಯಲ್ಲಿ ಲೋಡರ್ ಆಗಿ ಕೆಲಸ ನಿರ್ವಹಿಸು ತ್ತಿದ್ದ ಈತ ಉತ್ತರಕರ್ನಾಟಕ ಮೂಲದ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಇತರ ಇಬ್ಬರು ಕಾರ್ಮಿಕರೊಂದಿಗೆ ಕಡಿಯಾಳಿ ಕಟ್ಟೆ ಆಚಾರ‍್ಯ ಮಾರ್ಗದಲ್ಲಿರುವ ಶೌಕತ್ ಆಲಿ ಎಂಬವರಿಗೆ ಸೇರಿದ ಬಾಡಿಗೆ ಮನೆ ಯಲ್ಲಿ ವಾಸವಿದ್ದರು. ಭಾನುವಾರ ರಾತ್ರಿ ಕಡಿಯಾಳಿ ಬಳಿಯ ವೈನ್ ಶಾಪ್‌ನಿಂದ ಮೂರು ವಿಸ್ಕಿ ಬಾಟಲಿ ಹಾಗೂ ಹೊಟೇಲೊಂದರಿಂದ ಮೂರು ಊಟವನ್ನು ಬಸವಂತಪ್ಪ ಪಾರ್ಸೆಲ್ ಕೊಂಡೊಯ್ದಿದ್ದ. ಮಧ್ಯರಾತ್ರಿ ವೇಳೆ ಮೂವರ ನಡುವೆ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಇತರೆ ಇಬ್ಬರು ಕಾರ್ಮಿಕರಾದ ಪ್ರಭು ಯಾನೆ ಮಾನವ ಮತ್ತು ಸಾಲಿಮ್ಸ್ ಎಂಬಿಬ್ಬರು ಬಸವಂತಪ್ಪನ ಎದೆಗೆ ಜಜ್ಜಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಸಂತಪ್ಪ ಆಗಲೇ ಮೃತಪಟ್ಟಿದ್ದ. ಮತ್ತೆ ಹರಿತವಾದ ಆಯುಧದಿಂದ ಆತನ ಕಾಲುಗಳನ್ನು ಕಡಿದು ಗಾಯಗೊಳಿಸಲಾಗಿದೆ ಎಂದು ಶವ ಮಹಜರು ಪರೀಕ್ಷೆ ವೇಳೆ ತಿಳಿದುಬಂದಿದೆ. ಮನೆಮಾಲೀಕ ಬೆಳಿಗ್ಗೆ ಬಾಡಿಗೆ ಮನೆಯನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಮೂರು ವಿಸ್ಕಿ ಬಾಟಲಿಗಳು ಹಾಗೂ ಎರಡು ಊಟವೂ ಖಾಲಿಯಾಗಿತ್ತು. ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕವೇ ಆರೋಪಿಗಳು ಕೃತ್ಯವೆಸಗಿದ್ದಾರೆ, ಆದರೆ ಬಸವಂತಪ್ಪನ ಊಟ ಅರ್ಧ ಮಾತ್ರ ಖಾಲಿಯಾಗಿತ್ತು. ಘಟನೆ ಬಳಿಕ ಆರೋಪಿಗಳಿಬ್ಬರು ತಮ್ಮ ಊರು ಉತ್ತರಕರ್ನಾಟಕಕ್ಕೆ ಪಲಾಯನಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೊಪ್ಪ ಮೂಲದ ರೇಣುಕವ್ವ ಎಂಬವರನ್ನು ವಿವಾಹವಾಗಿದ್ದ ಬಸವಂತಪ್ಪನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳಿದ್ದಾಳೆ. ಆದರೆ ೧೫ ವರ್ಷಗಳ ಹಿಂದೆಯೇ ಅವರನ್ನು ತೊರೆದು ಬಂದಿದ್ದ ಈತ ಉಡುಪಿಯಲ್ಲಿಯೇ ನೆಲೆಸಿದ್ದನು. ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು, ಡಿವೈ ಎಸ್ಪಿ ನೇತೃತ್ವದಲ್ಲಿ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.

ಮಿತ್ರನಿಂದಲೇ ಕೊಲೆ?

Posted by JAYAKIRANA Kirana on | 0 comments | Leave a comment...

ಕಾಸರಗೋಡು: ನಿರ್ಮಾಣ ಹಂತದಲ್ಲಿದ್ದ ಮನೆಯ ಆವರಣದಲ್ಲಿ ಮನೆಮಾಲೀಕನ ಮೃತದೇಹ ಕೊಲೆಯಾದ ರೀತಿಯಲ್ಲಿ ಪತ್ತೆಯಾ ಗಿದ್ದು, ಮಿತ್ರನಿಂದಲೇ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನ ಕರಿಚ್ಚೇರಿ ಪೊಯಿನಾಚಿ ಪಕ್ಕೀರನ್ ಎಂಬವರ ಪುತ್ರ ಬಾಲಕೃಷ್ಣ ನಾಯರ್(೪೮) ಕೊಲೆಯಾದವರು. ಮೃತದೇಹ ಕರಿಚ್ಚೇರಿಯ ಶಾಸ್ತಾಮ್ ಕೋಟ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಫೌಂಡೇಶನ್ ಬಳಿ ನಿನ್ನೆ ಬೆಳಿಗ್ಗೆ ಪತ್ತೆಯಾಗಿದೆ. ಕಬ್ಬಿಣದ ಸಲಾಕೆಯಿಂದ ಮುಖವನ್ನು ಜಜ್ಜುವ ಮೂಲಕ ಹತ್ಯೆ ನಡೆಸಲಾಗಿದೆ.
ಕೋರೆ ಕಾರ್ಮಿಕನಾಗಿದ್ದ ಬಾಲಕೃಷ್ಣ ವಾರದ ಹಿಂದೆ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಿತ್ರನೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಮಿತ್ರ ಬಾಲಕೃಷ್ಣ ಅವರಿಗೆ ಜೀವಬೆದರಿಕೆಯೊಡ್ಡಿದ್ದನು ಎಂಬ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದೇ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಶಂಕೆಯನ್ವಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಭಾನುವಾರ ಸಂಜೆ ಕರಿಚ್ಚೇರಿಯ ಮನೆಯಿಂದ ಹೊರಟಿದ್ದ ಬಾಲಕೃಷ್ಣ ನಿನ್ನೆ ಬೆಳಗ್ಗಿನವರೆಗೂ ವಾಪಸ್ಸಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಪುತ್ರ ಹುಡುಕಾಟುತ್ತಾ ತೆರಳಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಲಕ್ಷ್ಮಿ ಹಾಗೂ ಇಬ್ಬರು ಪುತ್ರರಾದ ಹರಿಪ್ರಸಾದ್ ಮತ್ತು ಶಿವಪ್ರಸಾದ್‌ರ ತುಂಬು ಸಂಸಾರ ಅವರದ್ದಾಗಿತ್ತು. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ರಾಜಕೀಯ ಚದುರಂಗದಾಟಕ್ಕೆ ಜಾತಿ-ಮತಭೇದ ಮರೆತು ಉತ್ತರಿಸೋಣವೇ?

Posted by JAYAKIRANA Kirana on | 0 comments | Leave a comment...

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆರೂವರೆ ಕೋಟಿ ಜನತೆಗೋ... ಬರೇ ಹಿಂದೂ ಸಂಘಟನೆಗಳಿಗೋ ಎಂದು ಅರ್ಥವಾಗುತ್ತಿಲ್ಲ. ಸರಕಾರವಂತೂ ಹಗರಣ, ಕಿತ್ತಾಟ,  ಪ್ರಚಂಡ ಜೋಡಾಟ, ಯಾಗ, ಹೋಮಹವನ, ವಾಮಾ ಚಾರ ಮುಂತಾದ ಕೃತ್ಯಗಳಲ್ಲೇ ಕಾಲಕಳೆಯುತ್ತಿದೆ. ಅದು ಒತ್ತಟ್ಟಿಗಿರಲಿ. ಲೋಕಾಯುಕ್ತರಿಂದ ಹಿಡಿದು ಪೊಲೀಸ್ ಅಧಿ ಕಾರಿ, ಜಿಲ್ಲಾಧಿಕಾರಿ, ಸಾಮಾನ್ಯ ಡಿ ದರ್ಜೆಯ ನೌಕರರು ಕೂಡ ಆಯಕಟ್ಟಿನ ಸ್ಥಳಗಳಲ್ಲಿ ಬಿಜೆಪಿ ಪಕ್ಷಕ್ಕೆ ಅಂದರೆ ಸರ ಕಾರಕ್ಕೆ ನಿಷ್ಠರಾಗಿ ನಡೆಯುವ ಭ್ರಷ್ಟರೇ ಬೇಕು ಎಂಬ ಸಂಕಲ್ಪ ವಿದೆಯೇ? ರಾಜ್ಯದ ಜನತೆ ಇದನ್ನೆಲ್ಲಾ ಗಮನಿಸುತ್ತಿಲ್ಲವೆಂದು ಸರಕಾರ ಭಾವಿಸಿರಬೇಕು. ಹೀಗಾದರೆ ಎಲ್ಲಾ ದಕ್ಷ ಅಧಿ ಕಾರಿಗಳನ್ನು ಅಮಾನತುಗೊಳಿಸಿ, ಕೆಲವು ಬೇಕಾದ ಭ್ರಷ್ಟ ರನ್ನು ಉಳಿಸಿ, ಉಳಿದ ಹುದ್ದೆಗಳಿಗೆ ತಮಗೆ ಬೇಕಾದವರನ್ನು ನೇಮಿಸಿ ಕೊಳ್ಳಬಹುದಲ್ಲ? ಹೇಗಿದ್ದರೂ ಸಂಘಪರಿವಾರದ ನಿಯಂತ್ರಣದಲ್ಲಿ ಸರಕಾರವಿದೆ. ಈಗಾಗಲೇ ಕೆಲವು ಬಜ ರಂಗಿಗಳು ಖಾಕಿಮರೆಯಲ್ಲಿ ಇಲಾಖೆಯಲ್ಲಿ ಸೇರಿಕೊಂಡಿ ದ್ದಾರೆ. ಬಹಳಷ್ಟು ಕಡೆ ಮುಸ್ಲಿಮರ, ದಲಿತರ ಮತ್ತು ಕ್ರೈಸ್ತರ ಮೇಲೆ  ದೌರ್ಜನ್ಯಗಳು ನಡೆಯುತ್ತಿದೆ, ತನಿಖೆಯ ನಾಟಕ ವಾಡಿ ಕೊನೆಗೆ ಸಿ ರಿಪೋರ್ಟ್ ಸಲ್ಲಿಸುತ್ತಾರೆ. ಆದರೆ ಒಂ ದಂತೂ ನೆನಪಿರಲಿ. ದಮನಿಸಲ್ಪಟ್ಟ, ತುಳಿತಕ್ಕೊಳಗಾದ ಜನ ಮುಂದೊಂದು ದಿನ ಎಚ್ಚೆತ್ತುಕೊಂಡು ಮೈಕೊಡವಿ ಎದ್ದು ನಿಂತರೆ ಏನಾಗಬಹುದು? ಏಕೆಂದರೆ ಎಲ್ಲ ದಿನವೂ ಭಾನುವಾರ ವಾಗಿರುವುದಿಲ್ಲ.
ಹುಬ್ಬಳ್ಳಿ ಕೋರ್ಟ್‌ನಲ್ಲಿ ಬಾಂಬ್‌ಸ್ಫೋಟ ನಡೆದಾಗ ಅಮಾಯಕ ಮುಸ್ಲಿಮರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾ ಗಿತ್ತು. ಕೊನೆಗೆ ಸಿಕ್ಕಿಬಿದ್ದದ್ದು ಮುತಾಲಿಕ್ ಗ್ಯಾಂಗ್. ೨೦೦೮ರ ಜುಲೈ ೧೧ರ ಬೆಳ್ಳಂಬೆಳಗ್ಗೆಯೇ ಜೆ.ಪಿ.ನಗರದ ವ್ಯಾಪ್ತಿಯ ಮುನಿರೆಡ್ಡಿ ಪಾಳ್ಯದ ಬಳಿಯ ಮಸೀದಿ ಮತ್ತು ಹೆಬ್ಬಾಳದ ಪ್ಲೈಓವರ್ ಬಳಿಯ ಮಸೀದಿಗಳಲ್ಲಿ ಹಂದಿತಲೆ ಹಾಕಿ ಹಿಂದು -ಮುಸ್ಲಿಂ ಮಧ್ಯೆ ಗಲಭೆ ಎಬ್ಬಿಸಲು ಇದೇ ಮುತಾಲಿಕ್ ತನ್ನ ಶಿಷ್ಯ ಉಡುಪಿಯ ವಿಶ್ವಹಿಂದೂ ಪರಿಷತ್ ಕಾರ್ಯಕರ್ತ ಶೈಲೇಶ್ ಹೊಳ್ಳನನ್ನು ನೇಮಿ ಸಲಾಗಿತ್ತು. ಇದೇ ತಾನೇ ರಾಜ್ಯದಲ್ಲಿ ಸಂಘ ಪರಿವಾರ ನಡೆ ಸಿರುವ ಘನಂದಾರಿ ಕೆಲಸಗಳು? ಒಂದು ವೇಳೆ ಇದನ್ನು ನಿಜಕ್ಕೂ ಮುಸ್ಲಿಮರೇ ಮಾಡಿರುತ್ತಿದ್ದರೆ ಕಪಟ ದೇಶಪ್ರೇಮಿ ಗಳ ದೇಶಭಕ್ತಿಯ ಪರಾಕಾಷ್ಠೆ ಯಾವ ಮಟ್ಟಕ್ಕೆ ತಲುಪು ತ್ತಿತ್ತು? ಹಿಂದೆ ಆಂಧ್ರದ ತಿರುಪತಿಯಲ್ಲಿ ಕ್ರೈಸ್ತ ಮಿಷನರಿ ಗಳು ಮತಾಂತರ ಮಾಡುತ್ತಿದ್ದಾರೆಂದು ಹುಯಿಲೆಬ್ಬಿಸಿ ಈ ಕೇಸರಿ ಪಡೆಗಳು ಹಿಂದುಗಳ ಮನೆಬಾಗಿಲುಗಳ ಮೇಲೆ ಶಿಲುಬೆ ಚಿತ್ರ ಬರೆ ಯಲು ಹೋಗಿ ಸಿಕ್ಕಿಬಿದ್ದರು. ಮಹಾರಾಷ್ಟ್ರದ ನಾಂದೇಡ್ ಮತ್ತು ತಮಿಳುನಾಡಿನ ಶಿವಕಾಶಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು (ದೇಶಭಕ್ತರು) ಬಾಂಬ್ ತಯಾರಿಸಲು ಹೋಗಿ ಪ್ರಾಣತೆತ್ತಿದ್ದರು. ಇದೇ ರೀತಿ ಮಾಲೆಗಾಂವ್, ಮೆಕ್ಕಾ ಮಸೀದಿ, ಸಂಜೋತಾ ಎಕ್ಸ್ ಪ್ರೆಸ್, ಗೋವಾದ ದೇವಾಲಯದಲ್ಲಿ ಈ ದೇಶಭಕ್ತರು ಬಾಂಬ್ ಇಟ್ಟು ಯಾವುದಾದರೂ ಮುಸ್ಲಿಂ ಉಗ್ರವಾದ ಸಂಘಟನೆ ಹೆಸ ರಿಟ್ಟು ಅಮಾಯಕ ಮುಸ್ಲಿಂ ಯುವಕರನ್ನು ಜೈಲಿನಲ್ಲಿ ಕೊಳೆಯು ವಂತೆ ಮಾಡುತ್ತಿದ್ದರು.
ಈ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜ ಹಾರಿ ಸಲು ಬಂದ ಉಮಾಭಾರತಿಯ ಹಿಂಬಾಲಕರು ರಾಷ್ಟ್ರಧ್ವಜದ ಮೇಲೆ ಕುಳಿತು ಇಸ್ಪೀಟು ಆಡಿದ್ದೂ ನಡೆದಿತ್ತು. ಸ್ವಾತಂತ್ರ್ಯ ದಿನ ತಮ್ಮ ಕಚೇ ರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸದ ಈ ದೇಶಭಕ್ತರದ್ದು ಎಂತಹ ಮಹಾನ್ ದೇಶಭಕ್ತಿ? ಸಿಂಧಗಿಯಲ್ಲಿ ಪಾಕ್‌ಧ್ವಜ ಹಾರಿಸಿ ಗಲಭೆಗೆ ಪ್ರಚೋದನೆ ನೀಡಿದ್ದು ಯಾವ ಉದ್ದೇಶದಿಂದ ಎಂದು ಯಾವ ಶತಮೂರ್ಖನಿಗೆ ಅರ್ಥವಾಗುತ್ತೆ ಬಿಡಿ. ಆದರೆ ನಿಮ್ಮ ಪಾಪದ ಕೃತ್ಯ ಗಳಿಗೆ ಬಲಿಯಾಗುವುದು ಮಾತ್ರ ಶೂದ್ರರು ಮತ್ತು ದಲಿತರು.
ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ಹಿಂದೂಪರ ಸಾರ್ವಜನಿಕ ಸಭೆಯಲ್ಲಿ ಮುಸ್ಲಿಂ ಸಮುದಾಯದವರ ಬಗ್ಗೆ ಅಸಭ್ಯ ಪದಗಳನ್ನು ಬಳಸಿದಾಗ ಮುಸ್ಲಿಮರು ಇದನ್ನು ಆಕ್ಷೇಪಿಸಿ ಪ್ರತಿಭಟಿಸಿದರು. ಇದ ರಿಂದಾಗಿ ಮತಾಂಧರು ಅಲ್ಲಿಂದ ಕಾಲ್ಕಿತ್ತರು. ಜನರಿಗೆ ತಿಂಗಳ ಕೊನೆಯ ವಾರದಲ್ಲಿ ಮತ್ತೊಂದು ಬೃಹತ್ ಸಭೆ ನಡೆಸಿ, ಗಲಭೆ ಯೆಬ್ಬಿಸುವ ಹುನ್ನಾರ ನಡೆಯುತ್ತಿದೆ ಮತ್ತು ಮುಸ್ಲಿಮರು ಕೂಡಾ ಇದಕ್ಕೆ ಪ್ರತಿಯಾಗಿ ಪೂರ್ವತಯಾರಿ ನಡೆಸುತ್ತಿದ್ದಾರೆ ಎಂಬ ವದಂತಿ ಹರಡಿದೆ.
ಇದೆಲ್ಲ ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸರಕಾರ ತೂಗುಯ್ಯಾಲೆ ಸ್ಥಿತಿಯಲ್ಲಿರು ವಾಗ ಅಥವಾ ಚುನಾವಣೆ ಹತ್ತಿರ ಬಂದಾಗ ಇಂತಹ ಸರಕಾರಿ ಪ್ರಯೋಜಿತ ಗಲಭೆಗಳು ನಡೆಯುವುದು ಮಾಮೂಲಿ ಸಂಗತಿ. ಒಂದಿಬ್ಬರು ಬೀದಿ ಭಾಷಣಕಾರರನ್ನು ಒಂದಷ್ಟು ಹಣ ಬಿಸಾಕಿ ಕರೆಸಿ ಕೋಮು ಪ್ರಚೋದನಕಾರಿ ಭಾಷಣ ಮಾಡಿಸಿ, ಬಡ-ಅಮಾ ಯಕ ಹಿಂದುಗಳನ್ನು ಪ್ರಚೋದಿಸಿ ಗಲಭೆ ಎಬ್ಬಿಸಿ ಒಂದೆರಡು ಹೆಣ ಬೀಳಿಸಿ ಅದರಿಂದ ಓಟು ಗಳಿಸುವ ಹುನ್ನಾರ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ಗೂಂಡಾ ಪಡೆಯಿಂದಲೇ ಬಾಂಬ್ ಸ್ಫೋಟಿಸಿ, ಅದನ್ನು ಮುಸ್ಲಿಮರೇ ಸ್ಫೋಟಿಸಿದ್ದಾರೆ ಎಂದು ಹಿಂದುಗಳ ಮನಸ್ಸಿ ನಲ್ಲಿ ಭಯಹುಟ್ಟಿಸಿ, ಇದಕ್ಕೆ ತನ್ನ ಪಕ್ಷಕ್ಕೆ ಓಟು ನೀಡುವುದೇ ಪರಿ ಹಾರ ಎಂದು ಬಿಂಬಿಸಿ ಹಿಂದು-ಮುಸ್ಲಿಮರ ಮಧ್ಯೆ ಒಡಕು ಹುಟ್ಟಿಸಿ ಅದರಿಂದ ಓಟು ಗಿಟ್ಟಿಸುವ ಲಾಭ ಪಡೆಯುವುದು ಬಿಟ್ಟರೆ ಇವರ‍್ಯಾರು ಜನಪರ ಕಾರ್ಯ ಮಾಡಿದ್ದಾರೆ?
ಅಧಿಕಾರಕ್ಕಾಗಿ ತಮ್ಮ-ತಮ್ಮಲ್ಲಿ ಕಚ್ಚಾಡಿಕೊಳ್ಳುವುದು, ಯಡ್ಡಿ, ಈಶ್ವರಪ್ಪ, ಸದಾನಂದ ಗೌಡ ಪರಸ್ಪರ ಜನ್ಮ ಜಾಲಾಡುವುದು, ಮರುದಿನ ನಾವೆಲ್ಲ ಒಂದಾಗಿದ್ದೇವೆ... ಇನ್ನು ಮುಂದೆ ಹೀಗಾ ಗುವುದಿಲ್ಲ ಎಂದು ಹೇಳಿಕೊಳ್ಳುವುದು ಇವರ ಸರಕಾರದ ಸ್ಟೈಲ್. ಇದರ ಮಧ್ಯೆ ಗಂಗಾವತಿ ಪ್ರಾಣೇಶ್‌ರವರು ಹೇಳಿದ ಹಾಸ್ಯ ನೆನಪಾಗುತ್ತಿದೆ. ಒಮ್ಮೆ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಶಾಸಕರನ್ನು ಬಸ್‌ನಲ್ಲಿ ರೆಸಾರ್ಟ್ ಒಂದಕ್ಕೆ ಕಳುಹಿಸಿ ದರು. ಬಸ್ ಹಳ್ಳಿ ದಾರಿಯಲ್ಲಿ ಸಾಗುತ್ತಾ ಅಪಘಾತಕ್ಕೀಡಾ ಯಿತು. ಮರುದಿನ ಪಕ್ಷದ ವರಿಷ್ಠರು, ಮಾಧ್ಯಮದವರು ಹಳ್ಳಿಗೆ ಹೋಗಿ ವಿಚಾರಿಸಿದಾಗ ಎಲ್ಲರನ್ನೂ ಸಮಾಧಿ ಮಾಡಲಾಗಿತ್ತು. ಯಾರೂ ಬದುಕಿಲ್ಲವಾ? ಒಂದು ಕೇಳಿದಾಗ ಒಂಬತ್ತು ಜನ ಶಾಸಕರು ನಾವು ಬದುಕಿದ್ದೇವೆ, ನಮ್ಮನ್ನು ಕಾಪಾಡಿ ಎಂದು ಬೊಬ್ಬಿಡುತ್ತಿದ್ದರು. ಆದರೆ ರಾಜಕೀಯದವರು ಸುಳ್ಳು ಹೇಳುತ್ತಿ ದ್ದಾರೆ ಎಂದು ಭಾವಿಸಿ ಎಲ್ಲರನ್ನು ಸಮಾಧಿ ಮಾಡಿಬಿಟ್ಟೆವು ಎಂದು ಹಳ್ಳಿಗರು ಉತ್ತರಿಸಿದರು. 
ಇದು ಪ್ರಾಣೇಶ್ ಜೋಕ್. ಆದರೂ ಒಂದರ್ಥದಲ್ಲಿ ವಾಸ್ತವ ಆಗಿದೆ. ಏಕೆಂದರೆ ರಾಜ ಕೀಯ ಮಂದಿಯನ್ನು ಯಾರೂ ನಂಬುವುದಿಲ್ಲ. ನಮ್ಮ ಜಿಲ್ಲೆಗೆ ಇಷ್ಟೊಂದು ಜನವಿರೋಧಿ, ಪರಿಸರವಿರೋಧಿ ಕಂಪೆನಿಗಳು ಬಂದವು. ಜನ ಇಷ್ಟೊಂದು ಪ್ರತಿಭಟನೆ ನಡೆಸಿದರೂ ಸರಕಾರ, ಜನಪ್ರತಿನಿಧಿಗಳು, ಸೊಪ್ಪು ಹಾಕುವುದಿಲ್ಲ. ಏಕೆಂದರೆ ಕಂಪೆನಿಯಿಂದ ಪಡೆದ ಎಂಜಲು ಕಾಸಿಗೆ ದಾಕ್ಷಿಣ್ಯಕ್ಕೆ ಬಿದ್ದಿದ್ದಾರೆ. ಈ ಹಿಂದೆಯೂ ಕೆಲವು ಜನನಾ ಯಕರು ಕಂಪೆನಿಯನ್ನು ವಿರೋಧಿಸಿ ಕೆಲವು ದಿನಗಳ ನಂತರ ಕಂಪೆನಿಯ ಪರವಾಗಿ ನಿಂತದ್ದು ಕೂಡಾ ಇದೆ. ಹಣ ಮಾಡು ವುದಕ್ಕಾಗಿ ಮೊದಲು ಪ್ರತಿಭಟಿಸಿ ಹಣ ಪಡೆದ ನಂತರ ಪರವಾಗಿ ನಿಲ್ಲುವುದು ಎಂಥಾ ನಾಚಿಕೆಗೇಡು? ಹಿಂದೂ ಯುವತಿಯರು ಕಾಣೆಯಾದಾಗ, ಇದು ಮುಸ್ಲಿಮರದ್ದು ಕೃತ್ಯ... ಲವ್‌ಜೆಹಾದ್ ಎಂದೆಲ್ಲಾ ಹೇಳಿ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಪ್ರತಿಭಟನೆ, ಅಲ್ಲಲ್ಲಿ ಗಲಭೆ, ಬೀದಿ ಭಾಷಣಕಾರರ ಆರ್ಭಟ ಎಲ್ಲಾ ನಡೆದವು. ಕೊನೆಗೂ ಸೈನೆಡ್ ಮೋಹನನ್ನು ಪೊಲೀಸರು ಬಂಧಿಸಿದರು. ಆದರೂ ಅದು ಅವನ ಕೃತ್ಯವಲ್ಲವೆಂದು ಲಾಭ ಮಾಡಿಕೊಳ್ಳಲಾಗದ ಮತಾಂಧರು ಹೇಳಿಕೆ ನೀಡಿದ್ದರು. ಇನ್ನಾದರೂ ಇವೆರೆಲ್ಲರ ರಾಜಕೀಯ ಚದುರಂಗದಾಟವನ್ನು ಜನ ಅರ್ಥಮಾಡಿಕೊಂಡು ಹಿಂದು-ಮುಸ್ಲಿಂ-ಕ್ರೈಸ್ತರು ಸಹೋದರರಂತೆ ಬಾಳಬೇಕು ಎಂದು ವಿನಂತಿ.  

ಜೋಡಿ ಕೊಲೆ ತನಿಖೆ ಸಿಬಿಐಗೆ ಒಪ್ಪಿಸಿ

Posted by JAYAKIRANA Kirana on | 0 comments | Leave a comment...

ಜೂನ್ ೨೮ರಂದು ಮಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದ್ದ ಪಂಜಿಮೊಗರುವಿನ ತಾಯಿ-ಮಗುವಿನ ಬರ್ಬರ ಹತ್ಯಾ ಪ್ರಕರ ಣವನ್ನು ಭೇದಿಸಲು ಪೊಲೀಸರು ವಿಫಲ ರಾಗಿರುವುದು ಪರಿಸರದ ಜನರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಈ ಹಿಂದೆ ನಡೆದಿರುವ ಅದೆಷ್ಟೋ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರಿಗೆ ಈ ಪ್ರಕರಣವನ್ನು ಭೇದಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಆರೋಪಿಗಳೊಂ ದಿಗೆ ಪೊಲೀಸರ ಒಳಒಪ್ಪಂದವಾಗಿದೆಯೇ ಎಂಬ ಅನುಮಾನ ಸ್ಥಳೀಯರನ್ನು ಕಾಡುತ್ತಿದೆ.
ಕೊಲೆ ನಡೆದ ದಿನದಂದು ಆರೋಪಿ ಗಳ ಮಾಹಿತಿ, ಸುಳಿವು ದೊರೆತಿದೆ ಎಂದು ಹೇಳಿದಾಗ ಆರೋಪಿಗಳು ಶೀಘ್ರವಾಗಿ ಪೊಲೀ ಸರ ವಶವಾಗುತ್ತಾರೆ ಎಂಬ ಭರವಸೆ ಜನ ರಲ್ಲಿ ಮೂಡಿತ್ತು. ಆದರೆ ನಂತರ ನಡೆದದ್ದೇ ಬೇರೆ. ಪ್ರಕರಣದ ತನಿಖೆಗಾಗಿ ಡಿವೈಎಫ್‌ಐ ಸಂಘಟನೆ ಮತ್ತು ನಾಗರಿಕರು ಅನೇಕ ಪ್ರತಿ ಭಟನೆ ನಡೆಸಿದ್ದಾರೆ. ಇದೂ ಇಲ್ಲದಿರುತ್ತಿದ್ದರೆ ಈ ಪ್ರಕರಣ ಯಾವಾಗಲೋ ಮುಚ್ಚಿಹೋ ಗುತ್ತಿತ್ತು ಎಂಬ ಅಭಿಪ್ರಾಯ ಸ್ಥಳೀಯ ನಾಗ ರಿಕರಲ್ಲಿದೆ. ಆರಂಭದ ದಿನಗಳಲ್ಲಿ ಪ್ರತಿಭಟ ನೆಯಲ್ಲಿ ಮೃತ ರಝಿಯಾ ಪತಿಯ ಕುಟುಂ ಬಸ್ಥರು ಭಾಗವಹಿಸಿದ್ದರು. ಆದರೆ ಇತ್ತೀಚೆಗೆ ನಡೆದ ಅನೇಕ ಪ್ರತಿಭಟನೆಗಳಲ್ಲಿ ಅವರು ಭಾಗ ವಹಿಸುವುದು ಕಂಡುಬರುತ್ತಿಲ್ಲ. ಇದೇಕೆ   ಹೀಗೆ? ಈ ಬಗ್ಗೆ ‘ಜಯಕಿರಣ’ ಪತ್ರಿಕೆ ವರದಿ ಮಾಡಿದ್ದು ಸರಿಯಾಗಿದೆ. ಪತ್ರಿಕೆಯ ವರ ದಿಯನ್ನು ಓದಿದ ಬಳಿಕ ಸ್ಥಳೀಯರಲ್ಲಿ ಅನೇಕ ಅನುಮಾನಗಳು ಶುರುವಾಗಿವೆ. ಪೊಲೀಸರು ರಝಿಯಾ ಮನೆಮಂದಿಯನ್ನು ಕೂಡಾ ತನಿಖೆ ನಡೆಸುವುದು ಅತ್ಯಗತ್ಯ. ಆರೋಪಿಗಳ ಶೀಘ್ರ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ಅಥವಾ ಸಿಒಡಿ, ಸಿಬಿಐ ಇಲಾಖೆಗಳಿಗೆ ಈ ಪ್ರಕರಣವನ್ನು ಹಸ್ತಾಂತರಿಸುವುದು ಸದ್ಯದ ಅಗ ತ್ಯವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಜಿಲ್ಲೆಯ ಜನತೆ ಹಾಗೂ ಸ್ಥಳೀಯರು ನಿರಾ ತಂಕವಾಗಿ ಜೀವನ ಸಾಗಿಸಲು ಪೊಲೀಸ್ ಇಲಾಖೆ ಶ್ರಮಿಸಬೇಕಾಗಿದೆ.
 ಈ ಪ್ರಕರಣ ನಡೆದು ಎಂಟು ತಿಂಗಳು ಕಳೆದರೂ ಜಿಲ್ಲೆಯ ಶಾಸಕ, ಸಂಸದರು ಪ್ರಕ ರಣದ ಗಂಭೀರತೆ ಅರಿತುಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರದಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ.
  ನಾಗರಿಕರು, ಕೂಳೂರು

ಕುಡಿಯಲು ನೀರು ಕೊಡಿ ಸ್ವಾಮೀ!

Posted by JAYAKIRANA Kirana on | 0 comments | Leave a comment...

ಪಾಲಿಕೆ ನಗರವಾಸಿಗಳಿಗೆ ಸಕಾಲ ದಲ್ಲಿ ಕುಡಿಯುವ ನೀರು ಪೂರೈಕೆ ಮಾಡು ತ್ತಿಲ್ಲ. ತುಂಬೆಯ ನದಿ ಪೂರ್ತಿಯಾಗಿ ಬತ್ತಿಹೋಗಿದ್ದು, ಮಳೆ ಇನ್ನಷ್ಟು ದಿನ ಹಿಂದೆ ಹೋದರೆ ಜಿಲ್ಲೆಯ ಜನರು ನೀರಿಲ್ಲದೆ ಸಾಯುವ ಸ್ಥಿತಿ ಬರಲೂಬ ಹುದು. ಬರ ಪರಿಸ್ಥಿತಿಯನ್ನು ಪರಿಣಾ ಮಕಾರಿಯಾಗಿ ಎದುರಿಸುಲ್ಲಿ ಜನಪ್ರತಿ ನಿಧಿಗಳು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಇನ್ನಷ್ಟು ಮುಂದುವರಿದಿದೆ. ನಗರವಾ ಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ನಗರ ಪಾಲಿಕೆ ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೀರು ಪೂರೈಸಲು ‘ತುಂಬೆಯಲ್ಲಿ ನೀರಿಲ್ಲ’ ಎಂಬ ಹಳೇ ಡೈಲಾಗ್ ಅನ್ನು ಹೇಳು ವುದು ಬೇಡ. ಬೇರೆಡೆ ನೀರಿರುವಲ್ಲಿಂದ ಟ್ಯಾಂಕರ್ ಮೂಲಕ ನೀರನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಿ. ನಗರವಾಸಿಗಳಿಂದ ದುಬಾರಿ ತೆರಿಗೆ ಹಣ ಸಂಗ್ರಹಿಸುತ್ತಿರುವ ಮನಪಾ ಹೊಣೆಗೇಡಿ ಯಂತೆ ವರ್ತಿಸುತ್ತಿರುವುದು ನಾಚಿಕೆ ಗೇಡು. ಸುನಂದ ಭಟ್,ಮಂಗಳೂರು

ಅನಧಿಕೃತ ಕಂಡಕ್ಟರ್‌ಗಳು ಬೇಕೇ?

Posted by JAYAKIRANA Kirana on | 0 comments | Leave a comment...

ನಗರದಲ್ಲಿ ಖಾಸಗಿ ಬಸ್‌ಗಳ ದರ್ಬಾರ್ ಸ್ವಲ್ಪ ಹೆಚ್ಚೇ ಎನ್ನುವಂತಿದೆ. ಆದರೆ ಖಾಸಗಿ ಬಸ್ ಸೇವೆಯಲ್ಲಿ ಮಾತ್ರ ಅಷ್ಟಾಗಿ ಬದಲಾವಣೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿರುವ ಬಹುತೇಕ ಖಾಸಗಿ ಬಸ್‌ಗಳಲ್ಲಿ ಅನಧಿಕೃತ ಕಂಡಕ್ಟರ್‌ಗಳ ಅಬ್ಬರ ಹೆಚ್ಚಾಗಿದೆ. ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಬೆಳಿಗ್ಗಿ ನಿಂದ ಸಂಜೆಯವರೆಗೆ ನೇತಾಡುತ್ತಾ ಬೊಬ್ಬಿಡುವ ಇವರು ಗಳು ಅಸಭ್ಯವಾಗಿ ವರ್ತಿಸುತ್ತಾರೆ. ಇವರಲ್ಲಿ ಹೆಚ್ಚಿನವರು ಕ್ಲೀನರ್‌ಗಳಾದರೆ ಉಳಿದವರು ಕಂಡಕ್ಟರ್‌ಗಳ ಸ್ನೇಹಿತರಾ ಗಿರುತ್ತಾರೆ. ಬಸ್ ಯಾವುದೇ ಅಡೆತಡೆಯಿಲ್ಲದೆ ಚಲಿಸುತ್ತಿ ದ್ದರೂ ಸುಖಾಸುಮ್ಮನೆ ಬೊಬ್ಬೆ ಹಾಕುವುದು ಇವರ ಅಭ್ಯಾ ಸವಾಗಿ ಹೋಗಿದೆ. ಇದರಿಂದ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಕಂಡ ಕ್ಟರ್ ಎನಿಸಿಕೊಂಡವರು ಕೂಡ ಇವರ ವರ್ತನೆಯನ್ನು ವಿರೋಧಿಸುವುದಿಲ್ಲ. ನಗರದಲ್ಲಿ ಸಂಚರಿಸುವ ಕೆಲವೊಂದು ಖಾಸಗಿ ಬಸ್‌ಗಳನ್ನು ಬಿಟ್ಟರೆ ಬಹುತೇಕ ಬಸ್‌ಗಳಲ್ಲಿ ಇದು ಸಾಮಾನ್ಯವಾಗಿದೆ. ಅದರಲ್ಲೂ ತೊಕ್ಕೊಟ್ಟಿನಿಂದ ಸಂಚಾರ ನಡೆಸುವ ಬಸ್‌ಗಳಲ್ಲಿ ಇದು ಸಾಮಾನ್ಯವಾಗಿದೆ. ಇವರು ಕೆಲವೊಮ್ಮೆ ಬಳಸುವ ಭಾಷೆಗಳು ಕೂಡ ಅತಿರೇಖ ಎನಿಸು ವಂತಿದೆ. ಮೊನ್ನೆಯಷ್ಟೇ ಆರ್‌ಟಿಓ ಸಭೆಯಲ್ಲೂ ಈ ಬಗ್ಗೆ ದೂರು ಕೇಳಿ ಬಂದಿತ್ತು. ಇನ್ನಾದರೂ ಖಾಸಗಿ ಬಸ್ ಮಾಲಕರು ಇತ್ತ ಗಮನ ಹರಿಸಲಿ. ಇಲ್ಲವಾದಲ್ಲಿ ಆರ್‌ಟಿಒ ಅಧಿಕಾರಿಗಳೇ ಬಸ್‌ನಲ್ಲಿ ಪ್ರಯಾಣಿಸಿ ಇವರಿಗೆ ಬಿಸಿ ಮುಟ್ಟಿ ಸಲಿ.          ನೊಂದ ಪ್ರಯಾಣಿಕ, ತೊಕ್ಕೊಟ್ಟು

ಪಣಂಬೂರು ಬೀಚ್ ಬಳಿ ರಸ್ತೆ ದಾಟುವ ಸಂಕಷ್ಟ

Posted by JAYAKIRANA Kirana on | 0 comments | Leave a comment...

ರಾ.ಹೆ. ೬೬ರ ಪಣಂಬೂರು ಬೀಚ್ ಬಳಿ ರಸ್ತೆಯನ್ನು ದಾಟಲು ಜನರು ಪರದಾಡುವಂತಾ ಗಿದೆ. ಹೆದ್ದಾರಿಯಾದ್ದರಿಂದ ವಾಹನಗಳ ಓಡಾ ಟವೂ ಅತಿಯಾಗಿದ್ದು, ರಸ್ತೆಯನ್ನು ದಾಟುವಾಗ ಅಪಘಾತ ಭಯ ಸಾಮಾನ್ಯವಾಗಿದೆ. ಇಲ್ಲಿ ರಸ್ತೆ ತಿರುವಾಗಿರುವ ಕಾರಣ ವಾಹನಗಳು ಅತೀವೇಗ ದಲ್ಲಿ ಸಾಗುತ್ತದೆ. ಈಗಾಗಲೇ ಇಲ್ಲಿ ಅನೇಕ ಅಪ ಘಾತಗಳೂ ಸಂಭವಿಸಿದ್ದು, ಇಲ್ಲಿ ವೇಗವನ್ನು ನಿಯಂ ತ್ರಿಸಲು ಯಾವುದೇ ಕ್ರಮಗಳನ್ನು ಕೈಗೊ ಳ್ಳಲಾಗಿಲ್ಲ. ಶನಿವಾರ ಮತ್ತು ಆದಿತ್ಯವಾರ ಇಲ್ಲಿ ಬೀಚ್‌ಗೆ ಹೋಗಲೆಂದು ನೂರಾರು ಪ್ರವಾಸಿಗರು ಬಸ್‌ನಿಂದ ಇಳಿಯುತ್ತಾರೆ. ಹೀಗೆ ಬಸ್ ಇಳಿದ ಜನರು ಬೀಚ್‌ಗೆ ಹೋಗಲು ರಸ್ತೆ ಬದಿ ಕಾಯಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.                               ಅನಿತಾ, ಮೂಲ್ಕಿ

ಹೆಜಮಾಡಿ ಡಾಬಾದ ಮುಂದೆ ಅನಧಿಕೃತ ಲಾರಿ ತಂಗುದಾಣ

Posted by JAYAKIRANA Kirana on | 0 comments | Leave a comment...

ಹಿಂದಿನ ಹೆಜಮಾಡಿ ಚೆಕ್‌ಪೋಸ್ಟ್ ಸಮೀಪ ಇರುವ ಡಾಬಾವೊಂದರ ಮುಂದೆ ರಾತ್ರಿ-ಹಗಲೆನ್ನದೆ ಲಾರಿಗಳು ತಂಗಿರುತ್ತವೆ. ಗುಜರಾತ್, ಮಹಾರಾಷ್ಟ್ರದಿಂದ ಆಗಮಿ ಸುವ ಲಾರಿಗಳು ಇಲ್ಲಿ ಬೇಕಾಬಿಟ್ಟಿ ನಿಂತಿರುತ್ತದೆ. ಇದರ ಚಾಲಕ, ಕ್ಲೀನರ್‌ಗಳು ಇಲ್ಲೆಲ್ಲೋ ನಿದ್ದೆಗೆ ಶರಣಾಗುತ್ತಾರೆ. ಡಾಬಾದಲ್ಲಿ ಅವರದ್ದೇ ಕಾರುಬಾರು. ಹೇಳುವವರು, ಕೇಳು ವವರು ಯಾರೂ ಇರುವುದಿಲ್ಲ. ಇಲ್ಲಿ ಹಿಂದೆ ಚೆಕ್‌ಪೋಸ್ಟ್ ಇದ್ದುದರಿಂದ ವಾಹನಗಳು ನಿಧಾನಿಸಿ ಮುಂದಕ್ಕೆ ಸಾಗು ತ್ತಿತ್ತು. ಆದರೆ ಈಗ ಚೆಕ್‌ಪೋಸ್ಟ್ ಇಲ್ಲದೇ ಇರುವುದು ವಾಹನಗಳು ವೇಗವನ್ನು ನಿಯಂತ್ರಿಸದೆ ವೇಗವಾಗಿ ಸಾಗಲು ಕಾರಣವಾಗಿದೆ. ಡಾಬಾದ ಮುಂದೆ ಹೆದ್ದಾರಿಯನ್ನು ಆಕ್ರಮಿಸಿಕೊಂಡು ವಾಹನಗಳು ನಿಲ್ಲುವುದು ಅನೇಕ ಸಂದ ರ್ಭಗಳಲ್ಲಿ ಅಪಘಾತಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಾ ದರೂ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಗಮನಿಸಬೇ ಕಾದ ಅಗತ್ಯವಿದೆ. ಡಾಬಾದ ಮುಂದೆ ಅನಧಿಕೃತ ಲಾರಿ  ಗಳ ತಂಗುದಾಣವನ್ನು ಕೂಡಲೇ ತಪ್ಪಿಸಬೇಕಾಗಿ ವಿನಂತಿ.                                   ನಿತಿನ್, ಪಡುಬಿದ್ರಿ 

ಪ್ರಶಸ್ತಿ ಬಂದದ್ದು ತುಳುವಿಗೆ ತಾನೇ?

Posted by JAYAKIRANA Kirana on | 0 comments | Leave a comment...

ಕಂಚಿಲ್ದ ಬಾಲೆ ತುಳು ಚಿತ್ರಕ್ಕೆ ಇತ್ತೀಚೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಯಾಗಿದೆ. ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ಸಿನಿಮಾಕ್ಕೆ ಈ ಗೌರವ ಸಂದಿದೆ. ಆದರೆ ಇದೇ ವೇಳೆ ದೇವೆರ್ ಚಿತ್ರಕ್ಕೆ ಪ್ರಶಸ್ತಿ ಬರಬೇಕಿತ್ತು ಎಂಬ ಮಾತು ಕೆಲವರಿಂದ ಕೇಳಿ ಬಂದಿದೆ. ಆದರೆ ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ನನ್ನ ವಾದ. ಕನ್ನಡ ಚಿತ್ರ ರಂಗ ಒಂದು ದೊಡ್ಡ ಕುಟುಂಬ. ಆದರೆ ತುಳು ಚಿತ್ರರಂಗ ಹಾಗಲ್ಲ. ಇಲ್ಲಿ ವರ್ಷ ಕ್ಕೊಂದು ಚಿತ್ರಗಳು ಬಿಡುಗಡೆಯಾಗುವುದೇ ದೊಡ್ಡ ಸಾಧನೆ. ಹೀಗಿರುವಾಗ ನಮ್ಮ ಮಣ್ಣಿನ ಒಂದು ಚಿತ್ರಕ್ಕಾದರೂ ಪ್ರಶಸ್ತಿ ಬಂದಾಗ ನಮ್ಮೊಳಗೇ ಅಪಸ್ವರ ಎತ್ತುವುದು ಎಷ್ಟು ಸರಿ? ಕನ್ನಡ ಚಿತ್ರರಂಗ ಇಂತಹ ಅನೇಕ ಅಪಸ್ವರಗಳಿಂದಾಗಿಯೇ ಇಂದು ಹಳ್ಳ ಹಿಡಿಯುವ ಹಂತಕ್ಕೆ ತಲುಪಿದೆ. ಕುಟುಂಬ ಚಿಕ್ಕದಾದರೂ ತುಳು ಚಿತ್ರರಂಗ ವೇಗವಾಗಿ ಬೆಳೆಯುತ್ತಿದೆ. ಉತ್ತಮ ಚಿತ್ರಗಳು ತೆರೆಯ ಮೇಲೆ ಬರುತ್ತಿದೆ. ಈ ಎಲ್ಲಾ ಕಾರಣದಿಂದ ತುಳು ಚಿತ್ರರಂಗವೂ ಪ್ರಶಸ್ತಿ ಪಡೆದ ಸಂಭ್ರಮದಲ್ಲಿದೆ. ಅದಕ್ಕೆ ಸಂಭ್ರ ಮಿಸುವುದನ್ನು ಬಿಟ್ಟು ಅಪಸ್ವರ ಎತ್ತುವುದು ಸರಿಯಲ್ಲ. ಚಿತ್ರಗಳನ್ನು ಪ್ರಶಸ್ತಿಗೆ ಆರಿಸು  ವಾಗ ಕೆಲವೊಂದು ನಿರ್ದಿಷ್ಟ ಮಾನದಂಡಗಳಿರುತ್ತವೆ. ಇಲ್ಲೆಲ್ಲಾ ಆಯ್ಕೆ ಸಮಿತಿಗೆ ಕಂಚಿಲ್ದಬಾಲೆಯೇ ಉತ್ತಮ ಚಿತ್ರವಾಗಿ ಕಂಡಿರಲೂಬಹುದು. ಹಾಗಾಗಿ ಪ್ರಶಸ್ತಿ ಕೂಡ ಕಂಚಿಲ್ದಬಾಲೆ ಪಾಲಾಗಿದೆ. ಇನ್ನು ದೇವೆರ್ ಕೂಡಾ ಉತ್ತಮ ಚಿತ್ರ. ಅದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಚಿತ್ರಗಳನ್ನು ಮೆಚ್ಚಿ ಸರ್ಕಾರ ನೀಡುವ ಪ್ರಶಸ್ತಿಗಿಂತಲೂ ಪ್ರೇಕ್ಷಕ ನೀಡುವ ಅಭಿಮಾನದ ಪ್ರಶಸ್ತಿಯೇ ಮೇಲು ಎನ್ನುವುದು ನೆನಪಿರಲಿ. ಅಷ್ಟಕ್ಕೂ ಕಂಚಿಲ್ದ ಬಾಲೆ ಕೂಡ ತುಳು ಚಿತ್ರವೇ ತಾನೇ?      ತುಳು ಅಭಿಮಾನಿ, ಮಂಗಳೂರು

ಕಮಿಷನರ್ ಅವರೇ, ಸೂಕ್ತ ಕ್ರಮ ಜರುಗಿಸುವಿರಾ?

Posted by JAYAKIRANA Kirana on | 0 comments | Leave a comment...

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿಂಗಪ್ಪ ಯ್ಯಕಾಡು ಎಂಬ ಊರೊಂದಿದೆ. ಇಲ್ಲಿ ಬಿಜಾಪುರ, ಉತ್ತರ ಕನ್ನಡ ಜಿಲ್ಲೆಗಳಿಂದ ಹಲವು ವರ್ಷಗಳ ಹಿಂದೆಯೇ ಬಂದು ನೆಲೆನಿಂತಿರುವ ಕೂಲಿ ಕಾರ್ಮಿ ಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇಲ್ಲಿ ಹಿಂದೂ-ಮುಸ್ಲಿಮರು ಶಾಂತಿ, ಸಾಮ ರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಹಾಗಿದ್ದೂ ಇಲ್ಲಿ ಶಾಂತಿ ಕದಡುವ ಯತ್ನಗಳು ಆಗಾಗ ನಡೆ ಯುತ್ತಲೇ ಇವೆ. ಮಟ್ಕಾ, ಕೋಳಿ ಅಂಕ, ಜೂಜಾಟ, ಅಕ್ರಮ ಸಾರಾಯಿ ದಂಧೆ ಇಲ್ಲಿ ಎಗ್ಗಿ ಲ್ಲದೆ ನಡೆಯುತ್ತಿದೆ. ಇದೆಲ್ಲ ಸ್ಥಳೀಯ ಮೂಲ್ಕಿ ಪೊಲೀಸರಿಗೆ ತಿಳಿದಿಲ್ಲವೆಂದೇನಿಲ್ಲ. ತಿಳಿದಿದ್ದರೂ ತಮಗೇಕೆ ಬೇಡದ ಉಸಾಬರಿ ಎಂದು ಸುಮ್ಮನಿ ದ್ದಾರೆ. ಇಲ್ಲಿ ಅಕ್ರಮ ದಂಧೆಯಲ್ಲಿ ಶಾಮೀಲಾಗಿರು ವವರಲ್ಲಿ ಸಮಾಜದ ಗೌರವಾನ್ವಿತ ವ್ಯಕ್ತಿಗಳೂ  ಇದ್ದಾರೆ. ಇಲ್ಲಿ ಯುವಕರು ಗುಂಪು ಕಟ್ಟಿಕೊಂಡು ಒಬ್ಬರನ್ನು ಇನ್ನೊಬ್ಬರು ಕೆಕ್ಕರಿಸಿ ನೋಡುವುದು, ಜಗಳ-ಹೊಡೆದಾಟ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಮೂಲ್ಕಿ ಪೊಲೀಸ್ ಠಾಣೆಗೆ ಗಸ್ತು ತಿರು ಗಲು ಪಿಸಿಆರ್ ವಾಹನವಿದ್ದರೂ ಪೊಲೀಸರು ಇಲ್ಲಿ ಕಾಣ ಸಿಗುವುದು ಅಪರೂಪವೇ ಆಗಿದೆ. ಇನ್ನೊಂದು ವಿಚಾರವೇನೆಂದರೆ ಇಲ್ಲಿನ ಪುಡಿರೌಡಿಗಳಿಗೆ ಪೊಲೀ ಸರ ಭಯವಿಲ್ಲ. ಇಲ್ಲಿ ತಾವು ಆಡಿದ್ದೇ ಕೊನೇ ಮಾತು ಎಂದುಕೊಂಡಿದ್ದಾರೆ. ಆದ್ದರಿಂದ ಮಾನ್ಯ ಪೊಲೀಸ್ ಕಮಿಷನರ್ ಅವರು, ಇಲ್ಲಿಗೊಮ್ಮೆ  ಖುದ್ದು ಭೇಟಿ ಕೊಟ್ಟು ಸಮಸ್ಯೆಯನ್ನು ಪರಿಶೀಲಿ ಸಬೇಕು. ಎಷ್ಟು ಕಡೆಗಳಲ್ಲಿ ಅಕ್ರಮ ದಂಧೆ ನಡೆ ಯುತ್ತಿದೆ ಮತ್ತು ಅದರಲ್ಲಿ ಯಾರೆಲ್ಲಾ ಶಾಮೀಲಾ ಗಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿನ ಜನರೇ ಉತ್ತರ ನೀಡುತ್ತಾರೆ. ಲಿಂಗಪ್ಪಯ್ಯ ಕಾಡಿನಲ್ಲಿ ಗೂಂಡಾ ಚಟುವಟಿಕೆ ಹೆಚ್ಚುವ ಮುನ್ನ ಪರಿಸ್ಥಿತಿಯನ್ನು ನಿಯಂ ತ್ರಿಸಬೇಕಿದೆ. ನೊಂದವರು, ಲಿಂಗಪ್ಪಯ್ಯಕಾಡು

ಸುದೆಪಿಲಕ್ಕೆ ಬಸ್ ಬೇಕು

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿಯಿಂದ ಇಳಂ ತಿಲ ಮಾರ್ಗವಾಗಿ ಬುಳೇರಿ ಬೈಲು-ಸುದೆಪಿಲಕ್ಕೆ ಸಂಚಾರ ನಡೆಸಲು ಬಸ್ ಸೌಕರ್ಯವಿಲ್ಲದೆ ಜನರು ಕಿ.ಮೀ. ಗಟ್ಟಲೆ ನಡೆದೇ ಹೋಗಬೇಕಿದೆ. ಮಹಿಳೆಯರು, ವೃದ್ಧರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಇದರಿಂದ ಪ್ರತಿನಿತ್ಯ ಸಮಸ್ಯೆಯನ್ನು ಎದುರಿಸು ತ್ತಿದ್ದಾರೆ. ಸುದೆಪಿಲದಲ್ಲಿ ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾ ನವಿದ್ದು, ಇಲ್ಲಿ ಹೋಗಿ-ಬರುವ ಭಕ್ತಾ ದಿಗಳಿಗೂ ಬಸ್ ಇಲ್ಲದಿರುವುದು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟವರು ಕೂಡಲೇ ಕ್ರಮ ಕೈಗೊಳ್ಳ ಬೇಕು. ಈ ಮಾರ್ಗವಾಗಿ ದಿನದಲ್ಲಿ ಒಂದೆರಡು ಟ್ರಿಪ್ ಆದರೂ ಬಸ್ ಓಡಿಸಬೇಕಾಗಿ ವಿನಂತಿ. ಸಂಬ ಂಧಪಟ್ಟವರು ಗಮನಿಸುವರೇ?
ಭುವನ ಗೌಡ, ಉಪ್ಪಿನಂಗಡಿ

ಮಲೆಕುಡಿಯರಿಗೆ ಬದುಕುವ ಅವಕಾಶ ಕಲ್ಪಿಸಿ

Posted by JAYAKIRANA Kirana on | 0 comments | Leave a comment...

ಅರಣ್ಯ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ ಮಲೆಕುಡಿಯರಿಗೂ-ನಕ್ಸಲರಿಗೂ ಸಂಬಂಧ ಕಲ್ಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಪಶ್ಚಿಮ ಘಟ್ಟಗಳ ತಪ್ಪಲಿ ನಲ್ಲಿ ವಾಸವಾಗಿರುವ ಇವರು ಕಾಡಿನಲ್ಲಿ ಅರಣ್ಯ ಉತ್ಪನ್ನಗಳನ್ನು ಕೊಯ್ದು ಪೇಟೆಗೆ ಮಾರಿ ಜೀವನ ನಿರ್ವಹಣೆ ಮಾಡುತ್ತಾರೆ. ಇವರ ಈ ಕಾರ್ಯಕ್ಕೆ ಅಡ್ಡಿಪಡಿಸಬಾರದೆಂಬ ಕೋರ್ಟ್ ಆದೇಶವೂ  ಇದೆ. ಹಾಗಿದ್ದರೂ ಕಾಡಿನ ಮಕ್ಕಳ ಮೇಲೆ ಇಂಥ ಆರೋಪ ಸರಿಯೇ? ಇದರ ಹಿಂದೆ ಏನೋ ಬಲವಾದ ಕಾರಣಗಳಿರಲೇಬೇಕು ಅಲ್ಲವೇ?
ಮಲೆ ಕುಡಿಯರ ಸಮುದಾಯದಲ್ಲೇ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ವಿಠಲನನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ  ದ್ರೋಹ ವಾಗಿದೆ. ಪೊಲೀಸ್ ಇಲಾಖೆ, ಜನಪ್ರತಿ ನಿಧಿಗಳು ಮಲೆಕುಡಿಯರಿಗೂ ಬದುಕುವ ಅವ ಕಾಶ ಕಲ್ಪಿಸಲಿ.
ನಾಗೇಂದ್ರ ಎಸ್, ಮಂಗಳೂರು

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)