ಭಾರತದಲ್ಲಿ ಹೆಚ್ಚಿನ ಮಂದಿಗೆ ಕ್ರಿಕೆಟಿನ ಹುಚ್ಚು ಇದ್ದೇ ಇರುತ್ತದೆ. ಇದಕ್ಕೆ ಪೂರಕ ವಾಗಿ ಒಂದಲ್ಲ ಒಂದು ಪಂದ್ಯಗಳು ನಡೆಯು ತ್ತಲೇ ಇರುತ್ತದೆ. ಇದಕ್ಕೆ ಕೋಟ್ಯಂತರ ರೂ. ಬೆಟ್ಟಿಂಗ್ ಕೂಡಾ ನಡೆಯುತ್ತದೆ. ಈಗ ಐಪಿ ಎಲ್ ಕ್ರಿಕೆಟ್ ಆರಂಭಗೊಂಡಿದ್ದು, ಜನರು ಬೆಟ್ಟಿಂಗ್ ಜಾಲದಲ್ಲಿ ಮುಳುಗೇಳುತ್ತಿದ್ದಾರೆ.
ಈಗ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಾ ಗಿದ್ದರೂ ಮೊದಲಿನಷ್ಟು ಕ್ರೀಡಾಭಿಮಾನಿಗಳ ಸಂಖ್ಯೆ ಈಗಿಲ್ಲ ಎಂದರೆ ತಪ್ಪಾಗಲಾರದು. ಮಂಗಳೂರಿನ ಹೆಚ್ಚಿನ ಕಡೆ ೩೦ ಗಜಗಳ ಕ್ರಿಕೆಟ್ ಪಂದ್ಯಗಳು ಹೆಚ್ಚು ನಡೆಯುವುದರಿಂದ ನಿಜವಾದ ಕ್ರಿಕೆಟ್ ಕ್ರೀಡೆ ಮಹತ್ವ ಕಳೆದು ಕೊಳ್ಳುತ್ತಿದೆ. ಮೊದಲೆಲ್ಲಾ ಸಂಘ-ಸಂಸ್ಥೆಗಳು ಒಟ್ಟು ಸೇರಿ ಟೂರ್ನಮೆಂಟ್ ನಡೆಸುತ್ತಿದ್ದವು. ಆದರೆ ಈಗ ಕೇವಲ ಹಣ ಗಳಿಸುವ ಕಾರಣ ಕ್ಕಾಗಿ ೩೦, ೪೦ ಗಜ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಾರೆ. ನಮ್ಮ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಲವಾರು ಕಡೆಗಳಲ್ಲಿ ೩೦, ೪೦ ಗಜ ಪಂದ್ಯಾಟಗಳು ಹೊನಲು ಬೆಳಕಿನ ವ್ಯವ ಸ್ಥೆಯಡಿ ಬಹಳ ಭರ್ಜರಿಯಾಗಿ ನಡೆಯು ತ್ತಿವೆ. ಈ ಮೂಲಕ ಹಣ ದೋಚುವ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.
೩೦, ೪೦ ಗಜಗಳ ಕ್ರಿಕೆಟ್‌ನಿಂದ ಯಾವುದೇ ವ್ಯಕ್ತಿ ಉತ್ತಮ ಬ್ಯಾಟ್ಸ್‌ಮನ್ ಆಗಲೀ, ಉತ್ತಮ ಬೌಲರ್ ಆಗಲೀ ಉತ್ತಮ ಕ್ರಿಕೆಟ್ ಆಟಗಾರ ಯಾವತ್ತೂ ಆಗಲಾರ. ಇಂತಹ ಕ್ರಿಕೆಟ್ ಪಂದ್ಯ ಗಳಿಂದ ಒಬ್ಬ ಉತ್ತಮ ಪ್ರತಿಭಾನ್ವಿತ ಆಟಗಾರನ ಕ್ರಿಕೆಟ್ ಜೀವನಕ್ಕೆ ಪೆಟ್ಟು ಬೀಳುತ್ತದೆ. ಕೆಟ್ಟ ನಡತೆಯ ಕಡೆಗೆ ಮನುಷ್ಯನನ್ನು ಬೇಗನೆ ಸೆಳೆಯುತ್ತದೆ. ಹಾಗೆಯೇ ೩೦, ೪೦ ಗಜಗಳ ಪಂದ್ಯಾಟಗಳು ಬಹಳ ಭರ್ಜರಿಯಾಗಿ ನಡೆಯುತ್ತವೆ. ಇಂತಹ ಪಂದ್ಯಾಟಗಳಲ್ಲಿ ಚಿಕ್ಕಮಕ್ಕಳು ಹಾಗೂ ಇನ್ನೂ ಮೀಸೆ ಮೂಡಿರದ ಯುವಕರೇ ಹೆಚ್ಚೆಚ್ಚು ಭಾಗ ವಹಿಸುತ್ತಾರೆ. ೩೦-೪೦ ಗಜಗಳ ಕ್ರಿಕೆಟ್ ಪಂದ್ಯಾ ಟಗಳನ್ನು ಕೇವಲ ಹಣ ದೋಚುವ ಉದ್ದೇ ಶದಿಂದ ಮಾಡುತ್ತಾರೆಯೇ ವಿನಃ ಯಾವುದೇ ಸಾಮಾಜಿಕ ಕಳಕಳಿಯಿಂದಲ್ಲ. ಪ್ರತೀ ವರ್ಷ ಪ್ರತಿಯೊಂದು ಊರುಗಳಲ್ಲಿ ಕನಿಷ್ಠ ಪಕ್ಷ ಏಳೆಂಟು ಸಲವಾದರೂ ಇಂಥ ಕ್ರೀಡಾಕೂಟವನ್ನು ನಡೆ ಸುತ್ತಾರೆ. ಇದಕ್ಕಾಗಿ ಈ ಊರುಗಳಲ್ಲಿನ ಅಂಗ ಡಿದಾರರನ್ನು ಹಣ ಹಾಗೂ ಜಾಹೀರಾತಿಗಾಗಿ ಸತಾಯಿಸುತ್ತಿರುವುದೂ ಎಗ್ಗಿಲ್ಲದೆ ನಡೆಯುತ್ತಿದೆ.
ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾತ್ರ ಇಂತಹ ಪಂದ್ಯಾಟಗಳ ಆಯೋಜಕ ರಿಂದ ತಮ್ಮ ಕಿಸೆಯನ್ನು ದಪ್ಪವಾಗಿಸಿ ೩೦-೪೦ ಗಜಗಳ ಪಂದ್ಯಾಟಗಳಿಗೆ ಪರವಾನಿಗೆ ಕೊಟ್ಟು ಹಗಲು-ರಾತ್ರಿ ದರೋಡೆ ಮಾಡಲು ಸಹಕಾರ ನೀಡುತ್ತಿದ್ದಾರೆ.
ಆದ್ದರಿಂದ ಜಾಹೀರಾತುದಾರರು ಹಾಗೂ ಅತಿಥಿಗಳಲ್ಲಿ ನನ್ನದೊಂದು ವಿನಂತಿಯೇನೆಂ ದರೆ, ತಾವು ದಯವಿಟ್ಟು ಕ್ರಿಕೆಟ್ ಪ್ರತಿಭೆಗಳನ್ನು ನಾಶ ಮಾಡುವ ಇಂತಹ ೩೦-೪೦ ಗಜಗಳ ಪಂದ್ಯಾಟಗಳಿಗೆ ಜಾಹೀರಾತು ನೀಡಬೇಡಿ ಹಾಗೂ ಅದರಲ್ಲಿ ಅತಿಥಿಗಳಾಗಿ ಭಾಗವಹಿಸ ದಿರಿ. ಈ ಮೂಲಕ ನೈಜ ಕ್ರಿಕೆಟ್ ಅನ್ನು ಉಳಿಸಿ, ಸಾಮಾಜಿಕ ಕಳಕಳಿಯನ್ನು ಮೆರೆಸಿ. ನೀವು ಇಂತಹ ಪಂದ್ಯಾಟಗಳ ಜಾಹೀರಾತಿಗೆ ನೀಡುವ ಹಣವನ್ನು ಸಮಾಜದಲ್ಲಿರುವ ಬಡಜನರ ಏಳಿ ಗೆಗಾಗಿ ವ್ಯಯಿಸಿ. ಆಗ ನಿಮ್ಮನ್ನು ದೇವರು ಮೆಚ್ಚಬಹುದು. ಅವಿಭಜಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಎಲ್ಲಾ ಠಾಣಾಧಿ ಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಅವಿಭ ಜಿತ ದ.ಕ.ಜಿಲ್ಲೆಯ ಎಲ್ಲಿಯೂ ಕೂಡಾ ೩೦,೪೦ ಗಜಗಳ ಕ್ರಿಕೆಟ್ ಪಂದ್ಯಾಟಗಳು ನಡೆಯದಂತೆ ನೋಡಿಕೊಳ್ಳಬೇಕಾಗಿ ಸಭ್ಯ ನಾಗರಿಕರ ಹಾಗೂ ನೈಜ ಕ್ರಿಕೆಟ್ ಅಭಿಮಾನಿಗಳಾದ ನಮ್ಮೆಲ್ಲರ ವಿನಂತಿಯಾಗಿದೆ.
ಪ್ರಶಾಂತ, ಮೂಡಬಿದ್ರೆ
Tagged with
bahiranga
ರಾಜ್ಯದ ಅನೇಕ ತಾಲೂಕುಗಳಲ್ಲಿ ಬರಪರಿಸ್ಥಿತಿ ತೀವ್ರವಾಗಿದೆ. ಜನರು ಬೆಳೆ ಬೆಳೆಯ ಲಾರದೆ ದಿಕ್ಕೆಟ್ಟು ಕೂತಿದ್ದಾರೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸಾಲ ಮನ್ನಾದಂಥ ಅನೇಕ ಬೇಡಿಕೆಗಳು ಈ ಬಾರಿಯ ಬಜೆಟ್‌ನಲ್ಲೂ ಈಡೇರಿಲ್ಲ. ಇದರಿಂದ ರೈತರು ಹೊಲ-ಗದ್ದೆ ಮಾರಿ ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೆ ಈ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸದಾನಂದ ಗೌಡರು ಮಾತ್ರ ಅಧಿಕಾರದ ಕುರ್ಚಿ ಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ಹಿಂದಿರುವ ಶಾಸಕರಿಗೆ ಪದೇ ಪದೇ ಪಾರ್ಟಿ ಏರ್ಪಡಿಸಿ ಅವರನ್ನು ಸಂತುಷ್ಠರನ್ನಾಗಿಸಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ರಾಜ್ಯದಲ್ಲಿನ ಬರಪೀಡಿತ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಜನರಿಗೆ ಹೊಟ್ಟೆಗೆ ಇಲ್ಲದಿದ್ದರೂ ಇವರು ಗಡದ್ದಾಗಿ ತಿಂದುಂಡು ತೇಗುತ್ತಿದ್ದಾರೆ. ಪರ್ಯಾಯ ಸರಕಾರ ಬಂದರೆ ಮಾತ್ರ ರಾಷ್ಟ್ರೀಯ ಪಕ್ಷಗಳ ನೀಚತನ ಬಯಲಾದೀತು. ರಾಮಕೃಷ್ಣ ಎಂ, ಮಿತ್ತಬಾಗಿಲು
Tagged with
nimminda
ಇತ್ತೀಚೆಗಷ್ಟೇ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಈ ರೀತಿಯ ಹೇಳಿಕೆಯ ಮೂಲಕ ಹುಡುಗಿಯನ್ನು ಎಚ್ಚರಿಸಿ ತೀರ್ಪು ನೀಡಿತ್ತು. ಪೋಷಕರನ್ನು ಧಿಕ್ಕರಿಸಿ ನಿನ್ನೆ ಮೊನ್ನೆ ಪರಿಚಯವಾದ ಹುಡುಗನೊಂದಿಗೆ ಓಡಿ ಹೋಗುವ ಪ್ರೇಮಿಗಳಿಗೆ ಈ ತೀರ್ಪು ಒಂದು ಪಾಠ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀತಿ ಪವಿತ್ರ ನಿಜ. ಆದರೆ ನಮ್ಮನ್ನು ಹೆತ್ತ ವರಿಗಿಂತಲೂ ಅದು ಮೇಲಲ್ಲ ಎನ್ನುವುದು ನೆನಪಿರಲಿ. ಆದರೂ ಕೆಲ ಹುಡುಗಿಯರು ಪ್ರೀತಿ ಗಾಗಿ ನೈಜ ಸಂಬಂಧಗಳಿಗೆ ಕೊಲ್ಲಿ ಇಡುತ್ತಾರೆ. ಈ ನಿಟ್ಟಿನಲ್ಲಿ ಕೋರ್ಟ್ ತನ್ನ ತೀರ್ಪಿನ ವೇಳೆ ಉಲ್ಲೇಖಿಸಿದ ಮಾತು ಎಚ್ಚರಿಕೆಯ ಜೊತೆಗೆ ಪಾಠವೂ ಹೌದು. ಹೆತ್ತವರ ನೋವಿನ ಮುಂದೆ ಪ್ರೀತಿ ದೊಡ್ಡದಲ್ಲ ಎನ್ನುವುದು ಮೊನ್ನೆಯ ಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ. ಇನ್ನಾ ದರೂ ಹೆತ್ತವರನ್ನು ಧಿಕ್ಕರಿಸಬೇಡಿ. ಸಂಕೇತ್ ನಾಯಕ್, ಕಂಕನಾಡಿ
Tagged with
nimminda
ಬಿಜೆಪಿಯ ರಾಜ್ಯ ಸರಕಾರದಲ್ಲಿ ಜೋಕರ್‌ನಂತೆ ಭಾಸವಾಗುತ್ತಿರುವ ಅಬಕಾರಿ ಸಚಿವ ರೇಣುಕಾಚಾರ್ಯ ಏನು ಹೇಳುತ್ತಾರೋ, ಏನು ಮಾಡು ತ್ತಾರೋ ದೇವರೇ ಬಲ್ಲರು. ರಾಜ್ಯಕ್ಕೆ ಸದಾನಂದ ಗೌಡ ಅವರು ಮುಖ್ಯಮಂ ತ್ರಿಯಾಗಿದ್ದರೂ ನಮ್ಮ ನಾಯಕ ಎಂದು ಯಡಿಯೂ ರಪ್ಪರನ್ನು ಹೊಗಳಿ ಅಟ್ಟಕ್ಕೇರಿಸುತ್ತಿರುವ ರೇಣುಕಾ ಚಾರ್ಯ ತನ್ನ ನಾಲಿಗೆಯನ್ನು ಲಂಗು ಲಗಾಮಿಲ್ಲದೆ ಹರಿಯಬಿಟ್ಟಿ ರುವುದರ ಪರಿಣಾಮವೇ ಬಿಜೆಪಿ ಜನ ರಿಂದ ತಿರಸ್ಕೃತವಾಗುತ್ತಿದೆ. ಬಿಜೆಪಿ ಪಕ್ಷದ ಪ್ರಮುಖರು ಇಂಥ ನಾಯ ಕರಿಗೆ ಮಣೆ ಹಾಕುವುದು ಖಂಡ ನೀಯ. ಈ ಕೂಡಲೇ ಪಕ್ಷದ ಶಾಸಕ, ಸಚಿವ ಸ್ಥಾನದಿಂದ ರೇಣುಕಾ ಚಾರ್ಯ ವಜಾ ಮಾಡಿದರೆ ಮಾತ್ರ ಪಕ್ಷದ ಮಾನ, ಮರ್ಯಾದೆಯನ್ನು ಉಳಿಸಬಹುದಾಗಿದೆ.
ಶ್ರೀಧರ ಆಚಾರ್ಯ, ಪುತ್ತೂರು
Tagged with
nimminda
ರಾಜ್ಯದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಸರಕಾರಿ ದಾಖಲೆಯಲ್ಲಿ ಜಾರಿಯಾಗಿದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಆಗುತ್ತಲೇ ಇದೆ. ಪ್ಲಾಸ್ಟಿಕ್ ಚೀಲ ಬಳಸದಂತೆ ತಡೆಯುವ ಮತ್ತು ಅರಿವು ಮೂಡಿ ಸುವ ಕೆಲಸ ಆಗಿಲ್ಲ. ಕೆಲವೊಂದು ಅಂಗಡಿಗಳಲ್ಲಿ ಪೇಪರ್ ಚೀಲಗಳ ಬಳಕೆ ಜಾರಿಗೆ ಬಂದಿದೆಯಾದರೂ ಎಲ್ಲಾ ಅಂಗಡಿಗಳಲ್ಲೂ ಪೇಪರ್ ಚೀಲಗಳ ಬಳಕೆ ಸಾಧ್ಯ ಯಾಕಿಲ್ಲ? ಆದ್ದರಿಂದ ಈ ಬಗ್ಗೆ ಜಿಲ್ಲೆಯ ಸ್ಥಳೀಯ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂ ಡಲ್ಲಿ ಸ್ವಲ್ಪಮಟ್ಟಿಗಾದರೂ ನಿಯಂ ತ್ರಿಸಲು ಸಾಧ್ಯವಿದೆ.
ಅರುಣ್ ಕುಮಾರ್, ತೊಕ್ಕೊಟ್ಟು
Tagged with
nimminda
ರಾಜ್ಯದ ಪ್ರವಾಸಿ ಕೇಂದ್ರಗಳಿಗೆ ಬರುವ ಪ್ರವಾಸಿಗರಿಗೆ ಸ್ಥಳದ ಮಾಹಿತಿ ನೀಡಲು ಪ್ರವಾಸಿ ಗೈಡ್‌ಗಳಿದ್ದಾರೆ. ಇವರು ಪ್ರವಾಸೋದ್ಯಮ ಇಲಾಖೆ ಯಿಂದ ಮಾನ್ಯತೆ ಪಡೆದ ಗೈಡ್‌ಗಳು. ಅವರಿಗೆ ಇಲಾಖೆ ಗುರುತಿನ ಚೀಟಿ ಕೂಡಾ ನೀಡಿದೆ. ಆದರೆ ಪ್ರವಾಸಿಗರು ನೀಡುವ ಅಲ್ಪಮೊತ್ತದ ಹಣವೇ ಅವ ರಿಗೆ ಜೀವನಾಧಾರವಾಗಿದೆ.
ಹಿಂದೆ ಪ್ರವಾಸೋದ್ಯಮ ಮಂತ್ರಿ ಯಾಗಿದ್ದ ಜನಾರ್ದನ ರೆಡ್ಡಿಯವರಿಗೆ ‘ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗ ದರ್ಶಿ (ಗೈಡ್)ಗಳ ಸಂಘ’ ಮನವಿ ಸಲ್ಲಿಸಿ ಸೂಕ್ತ ಗೌರವ ಧನ ನೀಡು ವಂತೆ ಒತ್ತಾಯಿಸಿತ್ತು. ಮನವಿಗೆ ಸ್ಪಂದಿ ಸಿದ ಸಚಿವರು ತಿಂಗಳಿಗೆ ೧,೦೦೦ ರೂ. ಗೌರವ ಧನ ಮತ್ತು ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಯವರ ಜತೆ ಸಮಾಲೋಚಿಸಿ ಸರಕಾರಿ ಆದೇಶ ವನ್ನು ಅತೀ ಶೀಘ್ರದಲ್ಲಿ ಹೊರಡಿಸುವುದಾಗಿ ತಿಳಿಸಿದ್ದರು. ರಾಜ್ಯದಲ್ಲಿ ೪೬೪ ಗೈಡ್‌ಗಳಿದ್ದಾರೆ. ಅವರ ಜೀವನಮಟ್ಟ ಹೇಳಿಕೊಳ್ಳುವಂತಿಲ್ಲ. ಹಿಂದಿನ ಸಚಿವರ ಭರವಸೆ ಕಾರ್ಯರೂಪಕ್ಕೆ ಬಂದರೆ ಅವರ ಬದುಕಿಗೆ ನೆಮ್ಮದಿ ಸಿಗುತ್ತದೆ. ಪ್ರವಾಸೋದ್ಯಮ ಖಾತೆಯನ್ನು ಈಗ ಮುಖ್ಯ ಮಂತ್ರಿಯವರೇ ನೋಡಿಕೊಳ್ಳುತ್ತಾರೆ. ೩೪ ವರ್ಷ ಗಳ ಈ ಹಳೆಯ ಬೇಡಿಕೆಯನ್ನು ಅವರು ಪರಿಗ ಣಿಸಿ ಪ್ರವಾಸಿ ಗೈಡ್‌ಗಳ ಜೀವನಕ್ಕೆ ದಾರಿ ಮಾಡಿ ಕೊಡುವರೇ? ಕಿರಣ್ ಕುಮಾರ್, ಉಡುಪಿ
Tagged with
nimminda
ಗೋವಾ ಸರಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಇಳಿಸಿದ್ದರ ಪರಿಣಾಮ ಅಲ್ಲಿ ಲೀಟರ್‌ಗೆ ೧೧ ರೂ. ಕಡಿಮೆ ಯಾಗಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ತೆರಿಗೆ ಇಳಿಸು ವುದಾಗಿ ಹೇಳಿಕೊಂಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಇದರಿಂದ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ರಾಜ್ಯ ಸರ ಕಾರ ಈ ಕೂಡಲೇ ಪೆಟ್ರೋಲ್ ಮೇಲಿನ ತೆರಿಗೆಯನ್ನು ಕೈಬಿಡಲು ಕ್ರಮ ಕೈಗೊಳ್ಳಬೇಕು. ಗೋವಾದಲ್ಲಿ ಬೆಲೆ ಇಳಿಕೆ ಮಾಡಿದಂತೆ ಇಲ್ಲೂ ೧೦-೧೫ ರೂ.ನಷ್ಟು ಇಳಿಕೆ ಮಾಡಿದಲ್ಲಿ ಜನರು ರಾಜ್ಯ ಸರಕಾರದ ಆಡಳಿತವನ್ನು ಮೆಚ್ಚಿಕೊಳ್ಳುವ ಸಾಧ್ಯತೆಯಿದೆ. ನಿರೀಕ್ಷಾ, ಪದವಿನಂಗಡಿ
Tagged with
nimminda
ಮೊನ್ನೆಯಷ್ಟೇ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊಸ ವಿವಾದ ವೊಂದು ಸೃಷ್ಟಿಯಾಗಿತ್ತು. ದೇವಾಲಯದ ಆಡಳಿತ ಮಂಡಳಿ ಹಿಂದುಗಳಿಗೆ ಮಾತ್ರ ಜಾತ್ರೆ ಯಲ್ಲಿ ಭಾಗವಹಿಸಲು ಅವಕಾಶ, ಅನ್ಯಧರ್ಮೀಯರಿಗೆ ಇಲ್ಲಿ ಅಂಗಡಿ ಹಾಕಲು ಅವಕಾಶ ಇಲ್ಲ ಎಂಬ ನೋಟಿಸ್ ಹಾಕಿತ್ತು. ಆದರೆ ಇದು ಎಷ್ಟು ಸರಿ ಎನ್ನುವುದು ಓರ್ವ ಹಿಂದೂ ಧರ್ಮೀಯನಾಗಿ ನನ್ನ ಪ್ರಶ್ನೆ. ದೇವಸ್ಥಾನಗಳ ಯಾವುದೇ ಜಾತ್ರೆ, ಬ್ರಹ್ಮಕಲಶಗಳಿರಲಿ ಅಂತಹ ಕಾರ್ಯಕ್ರಮಗಳಿಗೆ ಅನ್ಯಧರ್ಮೀಯರು ತಮ್ಮ ಕೈಯಲ್ಲಾದ ಧನ ಸಹಾಯ ಮಾಡುತ್ತಾರೆ. ಇದಕ್ಕೆ ಉದಾಹರಣೆ ನನ್ನದೇ ಮನೆಯ ಹತ್ತಿರವಿರುವ ಒಂದು ದೇವಸ್ಥಾನ. ಇಲ್ಲಿನ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅದೆಷ್ಟೋ ಮುಸ್ಲಿಂ, ಕ್ರೈಸ್ತ ಬಂಧುಗಳು ಧನ ಸಹಾಯ ಮಾಡಿದ ವಿವರಗಳಿವೆ. ಹೀಗಿರುವಾಗ ಸರ್ವಧರ್ಮೀಯರು ಒಂದಾಗಿರಬೇಕು ಎನ್ನುವ ಹಿಂದೂ ಸಮಾಜವೇ ಒಡೆದು ಆಳಿದರೆ ಹೇಗೆ? ನನ್ನ ಮನೆಯ ಹತ್ತಿರದ ಈ ದೇವಸ್ಥಾನದಲ್ಲಿ ಗಣೇಶೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆಗಳನ್ನು ಏರ್ಪ ಡಿಸುತ್ತಿದ್ದರು. ಈ ಹಿಂದೆ ಎಲ್ಲಾ ಧರ್ಮದವರಿಗೂ ಇಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಅನ್ಯಧರ್ಮೀಯರ ಮಕ್ಕಳು ಭಾಗವಹಿಸುವಂತಿಲ್ಲ.
ಪುತ್ತೂರಿನ ದೇವಸ್ಥಾನದ ವಿಚಾರ ಬಂದಾಗ ನಮ್ಮೂರಿನ ದೇವಸ್ಥಾನದಲ್ಲಿ ಈ ಹಿಂದೆಯೇ ಈ ವಿವಾದ ಸೃಷ್ಟಿಯಾಗಿತ್ತು ಎನ್ನುವುದನ್ನು ನೆನಪಿಸಬೇಕಾಯಿತಷ್ಟೇ. ಯಾವುದೋ ಕೆಲ ಕಾರಣಗಳಿಂದ ಅನ್ಯಧರ್ಮೀಯರು ಭಾಗವಹಿಸಬಾರದು ಎಂದಿದ್ದರೂ ಅವರು ಕೊಡುವ ಧನ ಸಹಾಯ ನಮಗೇಕೆ? ನಮ್ಮ ಹಿಂದೂಗಳು ಕ್ರೈಸ್ತರ ಧಾರ್ಮಿಕ ಕ್ಷೇತ್ರವಾದ ಕಾರ್ಕಳಕ್ಕೆ, ಮುಸ್ಲಿಮರ ಕೆಲವೊಂದು ಮಸೀದಿಗಳಿಗೆ ಹೋಗುತ್ತಾರೆ. ಇಲ್ಲಿ ಧರ್ಮವನ್ನು ಮೀರಿ ನಂಬಿಕೆ ಕೆಲಸ ಮಾಡುತ್ತಿದೆ. ಮುಂದೆ ಇಲ್ಲೆಲ್ಲಾ ಹಿಂದುಗಳಿಗೆ ಪ್ರವೇಶವಿಲ್ಲ ಎಂದರೆ ಈಗಿರುವ ಧಾರ್ಮಿಕ ಸಾಮರಸ್ಯಕ್ಕೆ ಮತ್ತಷ್ಟು ಏಟು ಬೀಳುವುದು ಗ್ಯಾರಂಟಿ. ಅಲ್ಲದೇ ವ್ಯಾಪಾರಕ್ಕೂ ಧಾರ್ಮಿಕ ಕೇಂದ್ರಗಳಲ್ಲಿ ಯಾವುದೇ ಧರ್ಮದ ಹಂಗಿರಲಿಲ್ಲ. ಆದರೆ ಪುತ್ತೂರು ದೇವಾ ಲಯ ಇದಕ್ಕೂ ಜಾತಿಯ ಬರೆ ಎಳೆದಿದೆ. ಪ್ರತೀ ವರ್ಷ ಇದರಿಂದಲೇ ಜೀವನ ನಡೆಸು ವವರ ಹೊಟ್ಟೆಗೆ ತಣ್ಣೀರೆರೆಚಿದೆ. ಬಹುಶಃ ಇಲ್ಲಿಯ ತನಕ ಎಲ್ಲರಿಗೂ ಮುಕ್ತ ಪ್ರವೇಶವಿ ದ್ದದ್ದು ಧಾರ್ಮಿಕ ಕೇಂದ್ರಗಳಿಗೆ ಮಾತ್ರ ಎನ್ನಬಹುದು. ಆದರೆ ಮುಂದೆ ಇದೂ ಮರೀಚಿ ಕೆಯಾಗಬಹುದೋ ಏನೋ? ಓರ್ವ ಹಿಂದು, ಮಂಗಳೂರು
Tagged with
nimminda
ಕುಂದಾಪುರದ ರಾ.ಹೆ.೬೬ರ ಗಾಂಧಿ ಮೈದಾನದ ಪಕ್ಕ ಶ್ರೀದೇವಿ ಆಸ್ಪತ್ರೆಗೆ ಹೋಗುವ ರಸ್ತೆಯು ತೀರಾ ಶಿಥಿಲಗೊಂಡಿದ್ದು, ನಿತ್ಯ ಸಂಚರಿಸುವ ಪಾದಚಾರಿಗಳ ಜತೆ ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿಯರು ಬವಣೆ ಪಡುವಂತಾಗಿದೆ.
ಆಸ್ಪತ್ರೆ ವಾಣಿಜ್ಯ ಕೇಂದ್ರಗಳ ಜತೆಗೆ ಸಾಕಷ್ಟು ವಸತಿಗೃಹಗಳು ಈ ಪರಿಸರದಲ್ಲಿದ್ದು, ದಿನಾಲೂ ವಿದ್ಯಾ ರ್ಥಿಗಳು ಸೇರಿದಂತೆ ಅಸಂಖ್ಯಾತ ಜನರ ಓಡಾಟವಿದೆ. ಹಲವಾರು ವಾಹನಗಳು ಸೇರಿದಂತೆ ಆಸ್ಪತ್ರೆಗೆ ಸಂಬಂಧಪಟ್ಟ ತುರ್ತು ಆಂಬ್ಯುಲೆನ್ಸ್ ಗಳು ಪ್ರತಿನಿತ್ಯ ಸರ್ಕಸ್ ಮಾಡಿಕೊಂಡೇ ಇಲ್ಲಿ ಓಡಾಡಬೇಕಿದೆ. ಪರಿಸ ರದವರು ಹಲವಾರು ಬಾರಿ ಈ ಬಗ್ಗೆ ಸಂಬಂಧ ಪಟ್ಟ ಪುರಸಭೆಗೆ ಮನವಿ ಸಲ್ಲಿಸಿದರೂ ಪುರಸಭೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ಹಲವು ಆಗ್ರಹಗಳ ನಡುವೆಯೂ ರಸ್ತೆ ಮಾತ್ರ ದುರಸ್ತಿ ಕಾಣದೇ ಯಥಾಸ್ಥಿತಿಯಲ್ಲಿ ರುವುದನ್ನು ನೋಡಿದರೆ ಇಲ್ಲೂ ಒಳ ರಾಜಕೀಯ ನುಸುಳಿದೆಯೋ ಎಂಬ ಶಂಕೆಯುಂ ಟಾಗುತ್ತಿದೆ.
ಸಾರ್ವಜನಿಕರು, ಕುಂದಾಪುರ
Tagged with
nimminda
ಭಾರತೀಯ ರಿಸರ್ವ್ ಬ್ಯಾಂಕ್ ಮೊದಲು ಮುದ್ರಿಸುತ್ತಿದ್ದ ನಾಣ್ಯಗಳನ್ನು ಅನಕ್ಷರಸ್ಥರು ಮತ್ತು ದೃಷ್ಟಿಹೀನರು ಅವುಗಳ ಆಕಾರ ಮತ್ತು ಗಾತ್ರದ ಆಧಾರದಲ್ಲಿ ಕೈಯಲ್ಲಿ ಹಿಡಿದು ಸುಲಭವಾಗಿ ಗುರು ತಿಸುತ್ತಿದ್ದರು. ಆದರೆ ಈಗ ಬರುತ್ತಿರುವ ೫೦ ಪೈಸೆ, ೧, ೨ ಮತ್ತು ೫ ರೂಪಾಯಿ ನಾಣ್ಯಗಳನ್ನು ಓದು, ಬರಹ ಬಲ್ಲವರೂ ಮೊದಲ ನೋಟಕ್ಕೆ ಗುರುತಿ ಸಲು ಆಗದಷ್ಟು ಏಕರೂಪ ವಿನ್ಯಾಸ ಪಡೆದಿದೆ. ಈ ನಾಣ್ಯಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಇಲ್ಲ ವಾದರೆ ಒಂದು ರೂಪಾಯಿ ಕೊಡಬೇಕಾದ ಕಡೆ ಎರಡು ಅಥವಾ ಐದು ರೂಪಾಯಿ ನಾಣ್ಯ ಕೊಡುವ ಪರಿಸ್ಥಿತಿ ಬರುತ್ತದೆ. ೫೦ ಪೈಸೆ, ಒಂದು ರೂ. ಐದು ರೂಪಾಯಿ ಮತ್ತು ಹಳೆಯ ಒಂದು ರೂ. ಮತ್ತು ಹೊಸ ೨ ರೂ. ನಾಣ್ಯಗಳು ಹೆಚ್ಚು ಕಡಿಮೆ ಒಂದೇ ಗಾತ್ರದಲ್ಲಿವೆ. ಇವುಗಳ ಮೌಲ್ಯದ ಮೇಲೆ ಗಾತ್ರದಲ್ಲಿ ಸುಲಭವಾಗಿ ಗುರುತಿಸಲು ಆಗುವಂತೆ ಮಾಡ ಬೇಕಾಗಿತ್ತು. ರಿಸರ್ವ್ ಬ್ಯಾಂಕ್‌ನ ಅಧಿ ಕಾರಿಗಳು ನಾಣ್ಯಗಳ ಸಾಮ್ಯತೆಯಿಂದ ಆಗಿರುವ ಗೊಂದಲಗಳನ್ನು ನಿವಾರಿಸಲು ಕ್ರಮ ತೆಗೆದು ಕೊಳ್ಳ ಬೇಕಾಗಿದೆ. ಕರುಣಾಕರ, ಬಂಟ್ವಾಳ
Tagged with
nimminda
ನಮ್ಮ ಸೇನೆ ಇಷ್ಟು ಸಂಕಷ್ಟದಲ್ಲಿ ಇಲ್ಲ ಎಂದು ನಾವು ಸಮಾಧಾನ ಪಟ್ಟುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆಂಟನಿಯವರು ನಮ್ಮ ಸೇನಾ ಪಡೆಯ ಸುಧಾರಣೆಯ ಬಗ್ಗೆ ಮಾತುಗಳನ್ನು ಇತ್ತೀಚೆಗೆ ಆಡಿರುತ್ತಾರೆ. ಹಾಗಿರುವಾಗ ಜ|. ವಿ.ಕೆ. ಸಿಂಗ್‌ರವರು ಬರೆದ ಪತ್ರ ಕೇವಲ ಜಳ್ಳಾಗಿರಲು ಸಾಧ್ಯವಿಲ, ಇದರಲ್ಲಿ ಕಾಳು ಇದ್ದೇ ಇದೆ. ಹಾಗಿರುವಾಗ ನಮ್ಮ ಸರಕಾರ ಸೇನಾ ಯೋಧರನ್ನು ಎಲ್ಲಿವರೆಗೆ ಕಂಗೆಡಿಸಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ.
ನಾವು ವೈರಿಗಳ ದಾಳಿಯ ಭೀತಿಯನ್ನು ಮರೆತು ನೆಮ್ಮದಿಯ ನಿದ್ದೆ ಮಾಡಲು ಕಾರಣ ಯಾರು? ಎಂಬ ಪ್ರಶ್ನೆಗೆ ದೇಶ ಕಾಯುವ ಯೋಧರು ಎಂಬ ಉತ್ತರವನ್ನು ಸಾಮಾನ್ಯ ಜ್ಞಾನ ಇರುವವರು ಖಂಡಿತವಾಗಿಯೂ ಹೇಳುತ್ತಾರೆ. ತಾವು ನಿದ್ದೆಗೆಟ್ಟು ನಮ್ಮನ್ನು ನಿದ್ದೆ ಮಾಡಲು ಅನುಕೂಲ ಮಾಡಿಕೊಡುವವರ ಬಗ್ಗೆ ನಮಗೆಲ್ಲಾ ಅಪಾ ರವಾದ ಗೌರವ ಭಾವನೆ ಇದೆ. ಇವರು ನಿಷ್ಠಾವಂತರು, ದೇಶಪ್ರೇ ಮಿಗಳು ಎಂದಿಗೂ ದೇಶದ ಹಿತವನ್ನು ಬಲಿಕೊಡಲಾರರು ಎಂದು ನಾವು ಭಾವಿಸಿದ್ದೇವೆ. ನಮ್ಮ ಈ ನಿರೀಕ್ಷೆ ಕೂಡಾ ಇಂದಿನವರೆಗೆ ಸುಳ್ಳಾಗಿಲ್ಲ ಎಂದೆಂದಿಗೂ ಸುಳ್ಳಾಗುವುದಿಲ್ಲ ಎಂಬ ಭರವಸೆಯೂ ನಮಗಿದೆ.
ದೇಶ ಕಾಯುವ ಸೈನಿಕರು ದೇಶ ಪ್ರೇಮ, ಪ್ರಾಮಾಣಿಕತೆ, ನಿಷ್ಠೆ ಮತ್ತು ಗೌಪ್ಯವನ್ನು ಪಾಲನೆ ಮಾಡುವ ಬಗ್ಗೆ ಪ್ರತಿಜ್ಞೆಯನ್ನು ಕೈಗೊಂ ಡಿರುತ್ತಾರೆ. ಹಾಗೆಂದು ಅವರು ದೇಶಕ್ಕೆ ಹಾನಿಯಾಗುವಂತಹಾ ವ್ಯವಸ್ಥೆ, ಯೋಜನೆ, ಪ್ರಕರಣಗಳು ನಡೆಯುತ್ತಿದ್ದರೂ ದೇಶ ಪ್ರೇಮ, ಗೌಪ್ಯ ಪಾಲನೆ ಎಂದು ಸುಮ್ಮನಿರಬೇಕೇ? ಸೈನಿಕನೊಬ್ಬ ತನ್ನ ಕಮಾಂ ಡರನ ಆಜ್ಞೆಗನುಗುಣವಾಗಿ ತನ್ನ ಬಂದೂಕಿನ ಗುಂಡಿಯ ಮೇಲೆ ಬೆರಳನ್ನಿಟ್ಟಿರುತ್ತಾನೆ. ಅತ ಆಜ್ಞೆ ಬಂದರೆ ಗುಂಡಿ ಅದುಮುತ್ತಾನೆ. ಶತ್ರುವನ್ನು ಕೊಂದು ಕೆಡಹುತ್ತಾನೆ. ಆದರೆ ಕಮಾಂಡರನೊಬ್ಬ ವಿರೋಧಿ ಸೈನಿಕರು ಗುಂಡು ಹಾರಿಸುತ್ತಾ ಮುಂದೊತ್ತಿರುವಾಗ ತನ್ನ ಸೈನಿಕ ನಿಗೆ ಸುಮ್ಮನಿದ್ದು ವಿರೋಧಿ ಸೈನಿಕ ಹಾರಿಸುವ ಗುಂಡಿಗೆ ಎದೆ ಯೊಡ್ಡು ಎಂದು ಹೇಳಿದರೆ ನಮ್ಮ ದೇಶ ಕಾಯುವ ಸೈನಿಕ ಹಾಗೇ ಮಾಡಬೇಕೇ?
ನಮ್ಮ ಮಿಲಿಟರಿಯ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸ ಬಾರದು. ಅದು ದೇಶದ ಗೌಪ್ಯತೆಗಳನ್ನು ಬಹಿರಂಗಪಡಿಸಿದಂತಾ ಗುತ್ತದೆ ಎಂಬುದೇನೋ ಸರಿ. ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ನಡೆದ ಪ್ರಕರಣ ಏನನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶ ಕಾಯುವ ಸೈನಿಕ ಪಡೆಯನ್ನೇ ಸಂಶಯ ದೃಷ್ಟಿಯಿಂದ ನೋಡು ವಂತಾಗಿದೆ. ಹಿಂದಿನ ದಿನಗಳಲ್ಲಿ ನಮ್ಮ ಸೈನಿಕರ ಸಂಚಲನದಿಂದ ಪಾಕಿಸ್ತಾನ, ಬಾಂಗ್ಲಾದಂತಹ ದೇಶಗಳು ಬೆಚ್ಚಿ ಬಿದ್ದು ಪ್ರತಿಕ್ರಿಯೆ ನೀಡುತ್ತಿದ್ದವು. ಈಗ ನಮ್ಮದೇ ಸೇನೆಯ ಚಲನವಲನಗಳ ಬಗ್ಗೆ ನಮ್ಮ ದೇಶದಲ್ಲೇ ಭೀತಿ, ಸಂಶಯ, ಕುತೂಹಲ ಉಂಟಾಗುತ್ತಿರು ವುದು ವಿಪರ‍್ಯಾಸ. ಇಂತಹಾ ಒಂದು ಪರಿಸ್ಥಿತಿಗೆ ನಮ್ಮ ದೇಶ ಬಂದು ಬಿಟ್ಟಿತಲ್ಲಾ ಎಂಬ ಬೇಸರ ಪ್ರಜ್ಞಾವಂತರನ್ನು ಕಾಡದೇ ಇರದು.
ಸೇನಾ ಪಡೆಗೆ ತೊಡಗಿಸುವ ಹಣಕಾಸಿನ ಅವ್ಯವಹಾರಗಳ ಬಗ್ಗೆ ಸಾಕಷ್ಟು ಗುಸು ಗುಸು ಈ ಹಿಂದೆಯೂ ಇತ್ತು. ಕೆಲವು ಪತ್ರಿಕೆಗಳ ಧೈರ್ಯವಂತ ಪ್ರತಿನಿಧಿಗಳು ಯೋಧರು ಕಾರ್ಯಾಚರಿಸುವಂತಹಾ ಕಠಿಣ, ದುರ್ಗಮ ಪ್ರದೇಶಗಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ಮತ್ತು ನಮ್ಮ ಯೋಧರ ಸ್ಥಿತಿಗತಿಗಳನ್ನು ವರದಿ ಮಾಡುವಾಗ ಕೆಲವೊಂದು ವಿಚಾರಗಳು ದೇಶದ ಗಮನಕ್ಕೆ ಬರುತ್ತಿದ್ದವು. ಪಾಕಿಸ್ತಾನದ ಗಡಿ ಪ್ರದೇಶ ಮತ್ತು ಚೀನಾದ ಗಡಿಗಳಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಸೇನಾ ಯೋಧರು ಯಾವ ರೀತಿಯ ಸಂಕಷ್ಟ, ಮುಜುಗರಗಳನ್ನು ಎದುರಿಸುತ್ತಿದ್ದಾರೆ ಎಂಬುದೂ ತಿಳಿದು ಬರುತ್ತಿತ್ತು. ಇಂತಹಾ ಸಂಗ ತಿಗಳನ್ನು ಓದಿ ನಾವೆಲ್ಲಾ ಮಮ್ಮುಲ ಮರುಗಿದ್ದೂ ಇದೆ. ಕೆಲವು ಪ್ರದೇಶಗ ಳಲ್ಲಿ ನಮ್ಮ ಯೋಧರ ಕೈಗಳನ್ನು ಕಟ್ಟಿ ಪಾಖಂಡಿ ವಿರೋಧಿಗಳ ಮುಂದೆ ಹೇಗೆ ದೂಡಲಾಗುತ್ತದೆ ಎಂಬುದೂ ವರದಿಯಾಗುತ್ತಿತ್ತು. ಭಾರತದಂ ತಹ ಆನೆಯ ಮುಂದೆ ಕುನ್ನಿಯಂತೆ ಊಳಿಡುವ ಬಾಂಗ್ಲಾದ ಸೈನಿಕರು ನಮ್ಮ ದೇಶದ ಯೋಧರನ್ನು ಪ್ರಾಣಿಗಳಂತೆ ಕೈಕಾಲು ಕಟ್ಟಿ ಕಟ್ಟಿಗೆಗೆ ಬಿಗಿದು ಸಾಗಾಟ ಮಾಡುತ್ತಿರುವ ಬಗ್ಗೆಯೂ ಸಚಿತ್ರ ವರದಿಗಳು ಬರುತ್ತಿದ್ದವು. ಕೆಲವು ಸಣ್ಣ ಪುಟ್ಟ ಚಕಮಕಿ, ಘರ್ಷಣೆ, ಯುದ್ಧಗಳಲ್ಲಿ ನಮ್ಮ ಸೈನಿಕರು ಮೂಲಭೂತ ಸಮಸ್ಯೆಯ ಕೊರತೆಯಿಂ ದಾಗಿ ಜೀವವನ್ನು ಅರ್ಪಿಸುವ ಬಗ್ಗೆಯೂ ಸುದ್ದಿಗಳು ಬರು ತ್ತಿದ್ದವು. ಆದರೆ ಇದೆಲ್ಲಾ ಅಧಿಕೃತವಾಗಿ ಇರುತ್ತಿರಲಿಲ್ಲ. ಎಲ್ಲವೂ ಅಂತೆ ಕಂತೆ ಸುದ್ದಿಗಳಂತಿತ್ತು.
ಆದರೆ ಮೊನ್ನೆ ನಮ್ಮ ಸೇನಾ ದಂಡನಾಯಕ ಜ| ವಿ.ಕೆ. ಸಿಂಗ್‌ರವರು ಪ್ರಧಾನಿ ವಿ.ಪಿ. ಸಿಂಗ್‌ರವರಿಗೆ ಬರೆದ ಪತ್ರ, ಪತ್ರಿಕೆಗಳಿಗೆ ಸೋರಿಕೆಯಾದ ನಂತರ ಹಿಂದಿನೆಲ್ಲಾ ಅಂತೆ ಕಂತೆ ಸುದ್ದಿಗಳಿಗೆ ಒಂದು ಪ್ರಮುಖವಾದ ಪುರಾವೆ ಸಿಕ್ಕಿಬಿಟ್ಟಿತು. ನಮ್ಮ ಸೇನಾ ಪಡೆ ಮೂಲಭೂತ ಸೌಕರ್ಯ, ಶಸ್ತ್ರಾಸ್ತಗಳ ಕೊರತೆಯಿಂದ ಹೇಗೆ ಬಳಲುತ್ತಿದೆ. ಶತ್ರು ರಾಷ್ಟ್ರ ನಮ್ಮ ಮೇಲೆ ಯುದ್ಧ ಸಾರಿದರೆ ನಾವು ಹೇಗೆ ಸುಲಭ ವಾಗಿ ಬೆಂದು ಹೋಗಬಹುದು ಎಂಬುದನ್ನು ಈ ಪತ್ರ ಎತ್ತಿ ತೋರಿಸಿತ್ತು. ಈ ಪತ್ರ ಬರೆದಿದ್ದಾರೆ ಎಂದು ಹೇಳು ವುದರಲ್ಲಿ ಮತ್ತು ಇದನ್ನು ಮುಖ್ಯ ಸುದ್ದಿಯಾಗಿ ಪ್ರಚಾರ ಮಾಡಿದುದರಲ್ಲಿ ಏನೋ ಒಂದು ಸಂಚಿದೆ. ವಾಸ್ತವವಾಗಿ ನಮ್ಮ ಸೇನೆ ಇಷ್ಟು ಸಂಕಷ್ಟದಲ್ಲಿ ಇಲ್ಲ ಎಂದು ನಾವು ಸಮಾಧಾನ ಪಟ್ಟುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆಂಟನಿಯವರು ನಮ್ಮ ಸೇನಾ ಪಡೆಯ ಸುಧಾ ರಣೆಯ ಬಗ್ಗೆ ಮಾತುಗಳನ್ನು ಇತ್ತೀಚೆಗೆ ಆಡಿರುತ್ತಾರೆ. ಹಾಗಿರುವಾಗ ಜ|. ವಿ.ಕೆ. ಸಿಂಗ್‌ರವರು ಬರೆದ ಪತ್ರ ಕೇವಲ ಜಳ್ಳಾಗಿರಲು ಸಾಧ್ಯವಿಲ್ಲ. ಇದರಲ್ಲಿ ಕಾಳು ಇದ್ದೇ ಇದೆ. ಹಾಗಿರುವಾಗ ನಮ್ಮ ಸರಕಾರ ಸೇನಾ ಯೋಧರನ್ನು ಎಲ್ಲಿವರೆಗೆ ಕಂಗೆಡಿಸಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ.
ದೇಶದ ಪ್ರತಿಯೊಂದು ವಿಭಾಗ, ಇಲಾಖೆಗಳ ವ್ಯವಹಾರಗಳು ಅಧಿಕಾ ರಕ್ಕೇರಿದವರು ಹಣ ಗಳಿಸುವ ಒಂದೊಂದು ಕೇಂದ್ರಗಳಾಗಿ ಬಿಡುತ್ತಿವೆ. ಇಲ್ಲಿ ಯಾವ ಪಕ್ಷವೇ ಅಧಿಕಾರಕ್ಕೇರಲಿ ಪರಿಸ್ಥಿತಿ ಬದಲಾಗುವುದಿಲ್ಲ. ಪ್ರತಿಯೊಂದು ಕಡೆಯಲ್ಲೂ ಕಮೀಷನ್, ಸ್ವಜನ ಪಕ್ಷಪಾತ, ವಿಳಂಬ, ಸ್ವಹಿತಾಸಕ್ತಿ ಇತ್ಯಾದಿ ಇತ್ಯಾದಿಗಳು ವಿಜೃಂಭಿಸುತ್ತಿದೆ. ಇವೆಲ್ಲವುಗಳ ಒಟ್ಟೂ ಪರಿಣಾಮ ಮಿಲಿಟರಿ ಯಂತಹಾ ಕ್ಷೇತ್ರಗಳಿಗೆ ಆಗುತ್ತವೆ. ಅಸಮಧಾನ ಮಡುಗಟ್ಟಿ, ಆಗಾಗ ಜ್ವಾಲಾ ಮುಖಿಯಂತೆ ಸ್ಪೋಟಗೊಳ್ಳುತ್ತವೆ. ಜ|. ವಿ.ಕೆ. ಸಿಂಗ್‌ರವರ ಪತ್ರವೂ ಇಂತಹಾ ಒಂದು ಸ್ಪೋಟವಾಗಿದೆ. ಭಾರತದ ಸುತ್ತಲೂ ಚೀನಾ ತನ್ನ ನೆಲೆಗ ಳನ್ನು ಸ್ಥಾಪಿಸುತ್ತಿದೆ. ಬಾಂಗ್ಲಾ, ಶ್ರೀಲಂಕಾ, ಪಾಕಿಸ್ಥಾನಗಳು ಈ ನಿಟ್ಟಿನಲ್ಲಿ ಚೀನಾದೊಂದಿಗೆ ಸಹಕರಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಚೀನಾವು ಇಂಚು ಇಂಚಾಗಿ ಭಾರತದ ಭೂಭಾಗವನ್ನು ಕಬಳಿಸುತ್ತಲೇ ಇದೆ. ಪಾಕಿಸ್ತಾನವಂತೂ ಭಾರತವನ್ನು ಮಟ್ಟ ಹಾಕಲು ಹಣಿಸುತ್ತಿದೆ. ಇವೆಲ್ಲದರ ಮಧ್ಯೆ ಭಾರತದಾ ದ್ಯಂತ ವಿವಿಧ ಕ್ಷೇತ್ರಗಳಲ್ಲಿ ಗೆದ್ದಲುಗಳು ಹುತ್ತವನ್ನು ಕಟ್ಟುತ್ತಿವೆ. ಇವೆಲ್ಲದರ ಮೊತ್ತವನ್ನು ಭಾರತಕ್ಕೆ ಭರಿಸಲು ಸಾಧ್ಯವಿದೆಯೇ?
Tagged with
lekhana,
rkdinachari
ಜಯರಾಮ, ಮುಲ್ಕಿ
ಬ್ರಾಹ್ಮಣೇತರರ ಜಾತಿ ಸಂಘಟನೆಗಳ ಹಿರಿಯ ಮುಖಂಡರನ್ನು ನಾವು ಈ ಕಾಲದಲ್ಲಿ ಗುರ್ಕಾರರೆಂದು ಸ್ವೀಕರಿಸಲು ಯಾಕೆ ಸಾಧ್ಯವಿಲ್ಲ?
ಏ.೪ರ ಅಶೋಕ್ ಹಲಾಯಿಯವರ ಪತ್ರಗಳಿಗೆ ನನ್ನ ಪ್ರತಿಕ್ರಿಯೆ. ನೀವು ಬರೆದಂತೆ ನಿಮ್ಮ ಪತ್ರಗಳ ಬಗ್ಗೆ ನಾನು ಯಾಕೆ ಆರೋಪ ಮಾಡಿದೆ ಎಂಬು ದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.
ನೀವು ನಿಮ್ಮ ಪತ್ರದಲ್ಲಿ ‘ಮದುವೆಗೆ ಬ್ರಾಹ್ಮಣ ಪುರೋಹಿತರನ್ನು ಕರೆಯ ಬಾರದೆಂದು ಪೂಜಾರಿಯವರಿಗೆ ನೀವೇ ಹೇಳಿ ಎಂದು ನನಗೆ ಬರೆದಿದ್ದೀರಿ. ಜತೆಗೆ ‘ಮಾ ೨೭ರ ಪತ್ರದಲ್ಲಿ ನಾನು ಹಾಗೆ ಹೇಳಿಲ್ಲ ಎಂದು ನಾನು ಹೇಳಿದ್ದೇ ನೆಂದು ಹೇಳಿದ್ದೀರಿ. ಯಾಕೆ ಅವಸರ, ಗಡಿಬಿಡಿ ಹಲಾಯಿಯವರೇ?
ಮಾರ್ಚ್ ೭ರ ನನ್ನ ಪತ್ರದ ಪ್ಯಾರಾವನ್ನು ಮತ್ತೊಮ್ಮೆ ಬರೆಯುತ್ತೇನೆ. ಪ್ರತಿ ನಿಮ್ಮಲ್ಲಿ ಇರಬಹುದು ಬೇಕಾದರೆ ತಾಳೆ ಮಾಡಿ ನೋಡಿ. ನಾರಾಯಣಗು ರುಗಳು ಸ್ಥಾಪಿಸಿದ ಕುದ್ರೋಳಿಯಂತ ಕ್ಷೇತ್ರ ಇಂತಹಾ ‘ಬ್ರಾಹ್ಮಣೇತರ ತುಳುವ ಪದ್ಧತಿಯ ಮದುವೆ’ ಮಾಡಿಸುವ ಕೇಂದ್ರವಾಗುವಂತೆ ವಿಶ್ವನಾಥ್, ಮತ್ತು ಈ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡ ಅಶೋಕ ಹಲಾಯಿ ಮತ್ತು ಇತರರು ಜನಾ ರ್ದನ ಪೂಜಾರಿಯವರ ಮನವೊಲಿಸುವ ಕೆಲಸವನ್ನು ಮಾಡಬೇಕು. ಆಗ ಮದುವೆಯಲ್ಲಿ ತಾಳಿ ಧರಿಸುವ ಮತ್ತು ಗಂಡ ತೀರಿ ಹೋದಾಗ ತಾಳಿ ತೆಗೆ ಯುವ ಅಗತ್ಯವೇ ಬಾರದು. ಈ ರೀತಿ ಆದರೆ ತಾಳಿ ಅಥವಾ ಕರಿಮಣಿಯನ್ನು ಅವರವರ ಇಚ್ಛೆಗೆ ಅನುಗುಣವಾಗಿ ಇತರ ಆಭರಣಗಳಂತೆ ಯಾರೂ ಯಾವ ಸಂದರ್ಭದಲ್ಲೂ ಧರಿಸಬಹುದಾಗಿದೆ. ಈ ಮೂಲಕ ತುಳುನಾಡಿನ ಸ್ವಾಭಿಮಾ ನವನ್ನು ಎತ್ತಿ ಹಿಡಿಯುವ ಕಾರ್ಯವೂ ಕುದ್ರೋಳಿ ಕ್ಷೇತ್ರದಿಂದ ಆಗಲಿ ಇದ ರಲ್ಲಿ ಯಾವುದೇ ನಕಾರಾತ್ಮಕ ಭಾವನೆ ಇರಲಿಲ್ಲ. ಸಕಾರಾತ್ಮಕವಾಗಿತ್ತು.
ಅಶೋಕ್‌ರವರೇ ಇಲ್ಲಿ ಮದುವೆಗೆ ಬ್ರಾಹ್ಮಣ ಪುರೋಹಿತರನ್ನು ಕರೆಯ ಬಾರದೆಂದು ನಾನೆಲ್ಲಿ ಹೇಳಿದ್ದೇನೆ? ‘ಬ್ರಾಹ್ಮಣೇತರ ತುಳುವ ಪದ್ಧತಿಯ ಮದುವೆ ಮಾಡಿಸಿ ಎಂದು ನಾನು ಹೇಳಿದ್ದು. ಈ ಬಗ್ಗೆ ಪೂಜಾರಿಯವರ ಮನವೊಲಿಸಿ ಎಂದಿದ್ದೇನೆ. ನಾನು ವೈಯಕ್ತಿಕವಾಗಿ ಈ ಮೊದಲೇ ಇದನ್ನು ಹೇಳಿದ್ದೇನೆ. ಮತ್ತೆ ಪುನಃ ಹೇಳುವ ಅಗತ್ಯ ಉದ್ಭವಿಸುವುದಿಲ್ಲ.
ಓರ್ವ ನೈಜ ಅಧ್ಯಯನಗಾರ ತನ್ನ ಬಗ್ಗೆ ಹೇಳಿಕೊಳ್ಳಲಾರ ನಿಜ. ನಾನು ಅಧ್ಯಯನಗಾರ ಎಂದು ಎಲ್ಲಿ ಜಂಬಕೊಚ್ಚಿಕೊಂಡಿದ್ದೇನೆ ಹಲಾಯಿಯವರೇ ಸರಿಯಾಗಿ ಯೋಚಿಸಿ. ನಾನು ಕೆಲವು ಲಭ್ಯ ಆಧಾರಗಳನ್ನು ಕೊಟ್ಟು ಪತ್ರ ಬರೆ ದಾಗ ನೀವು ‘ಆಧಾರಗಳನ್ನು ಕೊಡಿ ಎಂದು ಮತ್ತೆ ಮತ್ತೆ ಹೇಳಿದ್ದಿರಿ. ನಾನು ಕೆಲವು ಪುಸ್ತಕವನ್ನು ಉಲ್ಲೇಖಿಸಿ ದಯವಿಟ್ಟು ಅದನ್ನು ಓದಿ ಪ್ರತಿಕ್ರಿಯೆ ನೀಡಿ ಎಂದು ಹೇಳಿದ್ದೆ. ಆದರೆ ನೀವು ಅದರ ಬಗ್ಗೆ ಗಮನ ಕೊಡದೆ ‘ನಾನು ಬನ್ನಂಜೆ ಬಾಬು ಅಮೀನ್, ಇಂದಿರಾ ಹೆಗ್ಡೆ, ವಿದೇಶಿ ಪ್ರವಾಸಿ ಬರಹಗಾರರಿಗೆ ನನ್ನ ಬುದ್ದಿಯನ್ನು ಒತ್ತೆ ಇಟ್ಟಿದ್ದೇನೆ ಎನ್ನುತ್ತಾ ನಿಮ್ಮದನ್ನೇ ಸಾಧಿಸುತ್ತಾ ಹೋದಿರಿ. ಅದಕ್ಕೆ ನಾನು ಜ್ಞಾನ ಸಂಪಾದಿಸಿದ್ದು ಯಾವುದರಿಂದ ಎಂದು ಹೇಳಿ. ನಿಮ್ಮ ಜ್ಞಾನ ಏನು ಎಂದು ಪ್ರಶ್ನಿಸಿದೆನೇ ಹೊರತು ನಾನು ಅಧ್ಯಯನಗಾರ ಎಂದು ಎಲ್ಲೂ ಹೇಳಿಲ್ಲ. ಈ ಬಗೆಗಿನ ನಿಮ್ಮ ಟೀಕೆಗಳನ್ನು ದಯವಿಟ್ಟು ಹಿಂದೆಗೆದುಕೊಳ್ಳಿ.
ಜಯಕಿರಣದಲ್ಲಿ ಪ್ರಕಟವಾಗುತ್ತಿರುವ ಬನ್ನಂಜೆ ಬಾಬು ಅಮೀನರ ಪುಸ್ತ ಕದ ಮದಿಮೆ ಭಾಗದಲ್ಲಿ ಹೀಗಿದೆ : ಕರಿಮಣಿ ತೊಡುವ ಪರಿಕ್ರಮ ಈ ಸಮು ದಾಯದಲ್ಲಿ ಪ್ರಾರಂಭಗೊಂಡ ಬಳಿಕವೂ ಮಾಂಗಲ್ಯದ ಸಂಕೇತವಾಗಿ ‘ಒಂಟಿ ಕರಿಯಮಣಿ, ‘ಕಕ್ಕೆ ಕಾಯಿದ ಕರಿಮಣಿ, ‘ಬೊಲ್ಲಿದ ಕಂಠಿಯನ್ನು ಉಪಯೋ ಗಿಸಲು ಪ್ರಾರಂಭಿಸಿದಂತೆ ತಿಳಿದುಬರುತ್ತದೆ. ಈ ಪ್ರಕಾರ ಕರಿಮಣಿ ತೊಡುವ ಪರಿಕ್ರಮ ಆಮೇಲೆ ಆರಂಭವಾಯಿತು. ನೀವು ನಿಮ್ಮ ಹಿರಿಯರು ನಿಮ್ಮ ಮನೆ ದೈವಕ್ಕೆ ಬೆಳ್ಳಿಯ ಕರಿಮಣಿ ಕೊಟ್ಟ ವಿಚಾರ ಒಂದು ಪತ್ರದಲ್ಲಿ ಬರೆದಿದ್ದೀರಿ. ಇದು ಬ್ರಾಹ್ಮಣೇತರ ಸಮುದಾಯದಲ್ಲಿ ಕರಿಮಣಿ ತೊಡುವ ಪರಿಕ್ರಮ ಆರಂಭವಾದ ಮೇಲೆ ಆಗಿರಬೇಕು. ಈಗಿನ ಕಾಲಕ್ಕೆ ಸ್ಥಿತಿವಂತರು ವಜ್ರ, ವೈಢೂರ್ಯ ಅಥವಾ ಮುತ್ತು ಅಳವಡಿಸಿದ ಕರಿಮಣಿಯನ್ನೂ ನೀಡಬಹುದು. ಮೊಗವೀರರು ದೇವಿಗೆ ಭೂತಾಯಿ, ಬಂಗುಡೆ ಸರವನ್ನೂ ನೀಡಿದ ವಿವರಗಳಿವೆ. ಇದನ್ನು ಯಾಕೆ ಹೇಳುತ್ತಿದ್ದೇನೆ ಅಂದರೆ ನಾವು ಉಪಯೋಗಿಸುವ ಅಥವಾ ನಮಗೆ ಮೆಚ್ಚುಗೆಯಾದ, ಕಾಲಕಾಲಕ್ಕೆ ಚಾಲ್ತಿಯಲ್ಲಿರುವ ವಸ್ತುಗಳನ್ನು ದೇವರಿಗೆ ನೀಡಿ ತೃಪ್ತಿಪಟ್ಟುಕೊಳ್ಳುವುದು ಕಂಡುಬರುತ್ತದೆ. ನೀವು ಹೇಳಿದಂತೆ ಪಾರ್ವತಿ ಪರಮೇಶ್ವರ ದೇವಸ್ಥಾನದಲ್ಲಿ ವೈದಿಕ ಪದ್ಧತಿಯಂತೆ ಪೂಜೆ ನಡೆಯುತ್ತಿರುವುದರಿಂದ ಅಲ್ಲಿ ತಾಳಿಯ ಕುರುಹು ಇರಬಹುದು. ‘ತಾಳಿ ಇದ್ದು ಕೆಲವು ಕಡೆ ತಾಳಿ ಇಲ್ಲದೆಯೂ ಮದುವೆ ನಡೆದದ್ದಂತು ಸತ್ಯ ಎಂದು ನಿಮ್ಮ ಪತ್ರದ ಕೊನೆಯ ಭಾಗದಲ್ಲಿ ಹೇಳಿದ್ದೀರಿ. ಇದರ ಅರ್ಥ ಏನು ಹಲಾಯಿಯವರೇ ಬ್ರಾಹ್ಮಣೇತರರಲ್ಲಿ ತಾಳಿಗೆ ಮಹತ್ವ ಇಲ್ಲ ಎಂದೇ ಅಲ್ಲವೇ? ನಾನು ನನ್ನ ಪತ್ರಗಳಲ್ಲಿ ಹೇಳುತ್ತಿರುವುದೂ ಇದೇ ತಾನೇ? ತಾಳಿ ಇಲ್ಲದೆ ವೈದಿಕರ ಮದುವೆಗಳು ಎಲ್ಲಿಯಾದರೂ ನಡೆದದ್ದು ಇದೆಯೇ?
ಕೆಲವು ಗುರ್ಕಾರರ ನೈತಿಕತೆಯ ಬಗ್ಗೆ ನೀವು ಹೇಳಿದ್ದೀರಿ ಅದನ್ನು ಇಲ್ಲ ವೆಂದು ನಾನು ಹೇಳುವುದಿಲ್ಲ. ಆದರೆ ಪುರೋಹಿತರು ನೈತಿಕತೆಯನ್ನು ಹೊಂದಿ ರುತ್ತಾರೆಯೇ? ಮಾನವನಾಗಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೋಷ ಗಳು ಇರುತ್ತವೆ. ದೇವರಲ್ಲೂ ದೋಷಗಳನ್ನು ಹುಡುಕಿದವರು ನಾವು. ಆ ‘ಕೆಲವು ಗುರ್ಕಾರರ ದೆಸೆಯಿಂದ ಹಲವು ಗುರ್ಕಾರರು ಮಾಯವಾದರಲ್ಲ ಯಾಕೆ? ಇನ್ನೊಂದು ವಿಚಾರ ಏನೆಂದರೆ ಹಿಂದಿನ ಗುರ್ಕಾರ ಪದ್ದತಿಯನ್ನು ಈ ಕಾಲದಲ್ಲಿ ಅನುಸರಿಸಲೂ ಸಾಧ್ಯವಿಲ್ಲ. ಆದರೆ ಪ್ರತಿಯೊಂದು ಸಮಾಜದಲ್ಲಿ ಹಿರಿಯರು ಇದ್ದೇ ಇರುತ್ತಾರೆ ತಾನೆ? ಬ್ರಾಹ್ಮಣೇತರರ ಜಾತಿ ಸಂಘಟನೆಗಳ ಹಿರಿಯ ಮುಖಂಡ ರನ್ನು ನಾವು ಈ ಕಾಲದಲ್ಲಿ ಗುರ್ಕಾರರೆಂದು ಸ್ವೀಕರಿಸಲು ಯಾಕೆ ಸಾಧ್ಯವಿಲ್ಲ. ರಾಜ ಕೀಯದ ಅನಿವಾರ‍್ಯತೆ, ಮಾನವನಿಗಿರುವಂತೆ ಸಹಜ ಕೆಲವು ದೌರ್ಬಲ್ಯಗಳನ್ನು ಹೊರತು ಪಡಿಸಿ ಸ್ವಚ್ಛ ವ್ಯಕ್ತಿತ್ವವನ್ನು ಹೊಂದಿದ ಜನಾದನ ಪೂಜಾರಿಯವರು ಬಿಲ್ಲವ ಸಮಾಜದ ಗುರ್ಕಾರ ಸ್ಥಾನವನ್ನು ಪಡೆಯುವಲ್ಲಿ ಎಲ್ಲಾ ಯೋಗ್ಯತೆಯನ್ನು ಹೊಂದಿದ್ದಾರೆ. ಈ ಪತ್ರದ ಮೂಲಕ ನಾನೇ ಜನಾದನ ಪೂಜಾರಿಯವರನ್ನು ಆಗ್ರಹಪಡಿಸುವುದೇನೆಂದರೆ ಸುಮ್ಮನೆ ತಾಳಿ, ಪೂಜೆ, ಹೋಮ, ಹವನ ಎಂದು ವೈದಿಕತೆಯನ್ನು ವಿಜೃಂಭಿಸುವ ಬದಲು ನಿಮ್ಮ ಗುರ್ಕಾರ‍್ಮೆಯ ಅಡಿಯಲ್ಲಿಯೇ ಸಾವಿರಾರು ಯುವಕ ಯುವತಿಯರು ತುಳುನಾಡಿನ ಪದ್ಧತಿಯಲ್ಲಿ ವೈವಾಹಿಕ ಜೀವನ ಪ್ರವೇಶಿಸಲಿ. ಈ ಸಂದರ್ಭದಲ್ಲಿ ಅಮಂಗಲೆ, ಸುಮಂಗಲೆ, ಶೋಷಣೆ, ದೂಷಣೆಗಳಿಗೆ ನಾವು ಪಾತ್ರರಾಗುವುದಿಲ್ಲ ಎಂಬ ಪ್ರತಿಜ್ಞೆ ಕೈಗೂಡಲಿ. ಇದು ನಿಧಾ ನಗತಿಯ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರುವಂತಾಗಲಿ.
Tagged with
chavadi
ಸ್ತ್ರೀ ಮತ್ತು ಪುರುಷರಲ್ಲಿ ಲೈಂಗಿಕ ಬಯಕೆ ಜಾಗೃತಗೊಳಿಸಿ ಹುರುಪು ತುಂಬಬಲ್ಲ ಹಣ್ಣುಗಳಲ್ಲಿ ದ್ರಾಕ್ಷಿಯೂ ಒಂದು. ದಂಪತಿ ಬೆಡ್‌ರೂಂನಲ್ಲಿ ದ್ರಾಕ್ಷಿಹಣ್ಣುಗಳನ್ನು ಸೇವಿಸಬೇಕು ಮತ್ತು ಇರಿಸಿ ಕೊಳ್ಳಬೇಕು. ಪ್ರತಿನಿತ್ಯ ಒಂದು ಲೋಟ ದ್ರಾಕ್ಷಿ ಹಣ್ಣಿನ ಜ್ಯೂಸ್ ಸೇವಿ ಸುವುದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಆಯುರ್ವೇ ದವೇ ಹೇಳಿದೆ. ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಸದಾ ದಂಪತಿಯನ್ನು ಫ್ರೆಶ್ ಆಗಿಡುತ್ತದೆ ಎನ್ನಲಾಗಿದೆ. ಅದೇ ರೀತಿ ಕಲ್ಲಂಗಡಿ ಹಣ್ಣು ಕೂಡಾ ಲೈಂಗಿಕ ಚಟುವಟಿಕೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಪ್ರತಿನಿತ್ಯ ಸೆಕ್ಸ್‌ನಲ್ಲಿ ತೊಡಗಿಕೊಳ್ಳುವ ಗಂಟೆಗೂ ಮುಂಚೆ ದಂಪತಿ ಕಲ್ಲಂಗಡಿ ಹಣ್ಣಿನ ಬೀಜವನ್ನು ಸೇವಿಸಿದರೆ ಮೂಡ್ ಚೆನ್ನಾಗಿರುತ್ತದೆ. ಈ ಬೀಜಗಳಲ್ಲಿರುವ ಅಮಿನೋ ಆಮ್ಲ ಮತ್ತು ಟ್ರಿರೋಸಿನ್ ಪ್ರಭಾವದಿಂದ ಲೈಂಗಿಕಾಸಕ್ತಿ ಕೆರಳುತ್ತದೆ. ಈ ಬೀಜ ಗಳನ್ನು ಹಸಿಯಾಗಿಯೂ ತಿನ್ನಬಹುದು ಅಥವಾ ಎಣ್ಣೆಯಲ್ಲಿ ಹುರಿದು ಉಪ್ಪು ಬೆರೆಸಿ ತಿನ್ನಬಹುದು.
ಇನ್ನು ಲೈಂಗಿಕ ಕ್ರಿಯೆಯಲ್ಲಿ ಎಲೆ, ಅಡಕೆಯನ್ನು ಪ್ರಧಾನವಾಗಿ ವರ್ಣಿಸಲಾಗಿದೆ. ಇದೇ ಕಾರಣಕ್ಕೆ ದಂಪತಿ ಬೆಡ್‌ರೂಂಗೆ ತೆರಳುವ ಮುನ್ನ ಎಲೆ, ಅಡಕೆ ತಿನ್ನುವುದು ಇಂದಿಗೂ ಸಂಪ್ರದಾಯವಾಗಿ ಬೆಳೆ ದಿದೆ. ಅಡಕೆಯಲ್ಲಿ ಲೈಂಗಿಕಾಸಕ್ತಿ ಕೆರಳಿಸುವ ಅಂಶವಿದ್ದು, ದಂಪತಿ ಸೆಕ್ಸ್‌ನಲ್ಲಿ ಗರಿಷ್ಠ ಆನಂದವನ್ನು ಪಡೆಯಲು ಇದು ಸಹಕಾರಿ ಎಂದೂ ಹೇಳಲಾಗುತ್ತದೆ. ಇನ್ನು ಪ್ರಕೃತಿದತ್ತವಾಗಿ ಸಿಗುವಂತಹ ಜೇನುತುಪ್ಪ ಲೈಂಗಿಕ ಶಕ್ತಿಯನ್ನು ಉತ್ತೇಜನಗೊಳಿಸುವಲ್ಲಿ ಬಹಳಷ್ಟು ಪ್ರಭಾವ ಬೀಳುತ್ತದೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿನಿತ್ಯ ಕ್ರಮವಾಗಿ ದಂಪತಿ ಚಮಚ ದಷ್ಟು ಜೇನು ಸೇವಿಸುತ್ತಾ ಬಂದರೆ ಲೈಂಗಿಕ ಶಕ್ತಿ ವರ್ಧಿಸಿ ಹೆಚ್ಚಿನ ಸುಖ ಪಡೆಯ ಬಹುದು. ಜೇನಿನಲ್ಲಿ ವಿಟಮಿನ್ ಬಿ ಮತ್ತು ಅಮಿನೋ ಆಮ್ಲಗಳಿರುವುದು ಲೈಂಗಿಕ ಶಕ್ತಿ ಉತ್ತೇಜನಕಾರಿಯಾಗಿ ಕೆಲಸ ಮಾಡಬಲ್ಲುದು. ಜೇನಿಗೆ ಸ್ವಲ್ಪ ಶುಂಠಿರಸ ಸೇವಿಸಿ ಕುಡಿದರೆ ಬೆಡ್‌ರೂಂನಲ್ಲಿ ದಂಪತಿ ಹೆಚ್ಚು ಆನಂದದಿಂದ ಲೈಂಗಿಕ ಕ್ರಿಯೆ ಯಲ್ಲಿ ಪಾಲ್ಗೊಳ್ಳಬಹುದು ಎನ್ನುತ್ತದೆ ಈ ಬಗ್ಗೆ ನಡೆಸಿರುವ ಸಂಶೋಧನೆ.
ಅದೇ ರೀತಿ ಹಾಲನ್ನು ಕೂಡಾ ಲೈಂಗಿಕಾಸಕ್ತಿ ಹೆಚ್ಚಿಸುವ ಆಹಾರ ಎಂದೇ ಪರಿಗಣಿಸಲಾಗುತ್ತದೆ. ಹಾಲಿಗೆ ಬಾದಾಮಿ ಬೀಜ ಸೇವಿಸಿ ಕುಡಿದರೆ ಲೈಂಗಿಕ ಆಸಕ್ತಿ, ಶಕ್ತಿ ಹೆಚ್ಚುತ್ತದೆ. ಇದೇ ಕಾರಣಕ್ಕೆ ಮೊದಲನೇ ರಾತ್ರಿ ಹೆಣ್ಣಿನ ಕೈಯಲ್ಲಿ ಬಾದಾಮಿ ಹಾಕಿದ ಹಾಲಿನ ಲೋಟ ಕೊಟ್ಟು ಹಿರಿ ಯರು ಕಳುಹಿಸುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಹಾಲಿಗೆ ಸಕ್ಕರೆ, ತುಪ್ಪ ಬೆರೆಸಿ ಕುಡಿದರೂ ದಂಪತಿಯಲ್ಲಿ ಕಾಮೋತ್ಸಾಹ ಸಾಧ್ಯವಿದೆ.
ಇನ್ನು ಮೊಟ್ಟೆಯನ್ನು ಆಹಾರದಲ್ಲಿ ಬಳಸುತ್ತಿದ್ದರೂ ಲೈಂಗಿಕ ಶಕ್ತಿ ಜಾಗೃತವಾಗಿ ಪರಿಣಾಮ ಪಡೆಯಲು ಸಾಧ್ಯವಿದೆ, ಹಸಿ ಕೋಳಿ ಮೊಟ್ಟೆ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಮಾತ್ರವ ಲ್ಲದೆ ದಂಪತಿ ಹೆಚ್ಚು ಆನಂದದಿಂದ ಇರಬಲ್ಲರು ಎನ್ನುವು ದನ್ನೂ ಆಯುರ್ವೇದ ತಿಳಿಸಿದೆ. ಮಾಂಸಾಹಾರದಲ್ಲೂ ಪುರು ಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವ ಶಕ್ತಿ ಇದೆ ಎಂದು ನಂಬಲಾಗಿದೆ. ಪ್ರಕೃತಿದತ್ತವಾಗಿ ದೊರೆಯುವ ಬಹುತೇಕ ಆಹಾರ ಪದಾರ್ಥಗಳು ಗಂಡು-ಹೆಣ್ಣಿನ ಲೈಂಗಿಕ ಬಯಕೆಯನ್ನು ಹೆಚ್ಚಿ ಸುವ ಹಾಗೂ ಅವರನ್ನು ಪರಸ್ಪರ ಲೈಂಗಿಕ ಸುಖ, ಸಂತೋ ಷದಲ್ಲಿ ಕಾಲ ಕಳೆಯುವಂತೆ ಮಾಡುವ ಗುಣವನ್ನು ಹೊಂದಿ ರುತ್ತದೆ. ಇದೇ ರೀತಿ ನುಗ್ಗೆಸೊಪ್ಪು, ನುಗ್ಗೆಕಾಯಿ, ಈರುಳ್ಳಿಯಂ ತಹ ತರಕಾರಿಯೂ ಕೂಡಾ ಲೈಂಗಿಕ ಶಕ್ತಿ ಹೆಚ್ಚಿಸಲು ಸಹ ಕಾರಿ. ಇದನ್ನು ದಂಪತಿ ಅರಿತಿರಬೇಕಾದ್ದು ಅತ್ಯವಶ್ಯಕ. ಸೆಕ್ಸ್ ಅಥವಾ ಲೈಂಗಿಕ ಕ್ರಿಯೆ ಪರಿಪೂರ್ಣವಾಗಬೇಕಾದರೆ ದಂಪತಿ ಹೆಚ್ಚಿನ ಸಮಯವನ್ನು ಅದರಲ್ಲಿ ಕಳೆದು ಪೂರ್ಣ ಪ್ರಮಾಣದ ಆನಂದ ಪಡೆಯಬೇಕು.
Tagged with
gupta
ಮೇಷ : ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ.
ವೃಷಭ : ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಇರುತ್ತದೆ.
ಮಿಥುನ : ಮಾನಸಿಕವಾಗಿ ಶಾಂತಿ, ನೆಮ್ಮದಿ ಇರುತ್ತದೆ.
ಕರ್ಕಾಟಕ : ಮಿತ್ರರೊಂದಿಗೆ ಮನಸ್ತಾಪ ಇರುತ್ತದೆ.
ಸಿಂಹ : ಮನೆಯಲ್ಲಿ ಸುಖ, ಶಾಂತಿ ಇರುತ್ತದೆ.
ಕನ್ಯಾ : ಸಂಘ ಸಂಸ್ಥೆಯಿಂದ ಸಹಕಾರ ಇದೆ.
ತುಲಾ : ವಿರೋಧಿಗಳಿಂದ ತೊಂದರೆ ಇರುತ್ತದೆ.
ವೃಶ್ಚಿಕ : ದೂರ ಸಂಚಾರ ಮಾಡುತ್ತೀರಿ.
ಧನು : ದೇವತಾ ಕೆಲಸವನ್ನು ಮಾಡುತ್ತೀರಿ.
ಮಕರ : ಮನೆಯ ಕೆಲಸಗಳು ಪ್ರಗತಿಯಲ್ಲಿರುತ್ತದೆ.
ಕುಂಭ : ಮನಸ್ಸಿಗೆ ಸಮಾಧಾನ ಇರುತ್ತದೆ.
ಮೀನ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
Tagged with
bhavishya
ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಮೆಡಿಕಲ್‌ಗೆ ಜನ ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ. ೯೯೦೧೩೩೧೩೧೪
ಮಂಗಳೂರು: ಮಾರ್ಕೆಟ್ ರೋಡ್‌ನ ಫ್ಯಾನ್ಸಿ ಸೆಂಟರ್‌ಗೆ ಕೆಲಸಕ್ಕೆ ಜನ ಬೇಕು. ೯೮೮೦೭೨೪೫೯೨
ಮಂಗಳೂರಿನ ವಸತಿ ನಿಲಯಕ್ಕೆ ಅಡುಗೆಯವರು, ಹೆಲ್ಪರ‍್ಸ್, ಸರ್ವಿಸ್ ಹುಡುಗರು ಬೇಕಾಗಿದ್ದಾರೆ. ೯೪೪೮೫೦೬೩೫೦
ಕಾವೂರ್: ಗಾಂಧಿ ನಗರದಲ್ಲಿರುವ ಸಂಸ್ಥೆಗೆ ಯುವತಿ ಬೇಕು ೯೪೪೮೧೬೪೭೩೯.
ಕೊಡಿಯಾಲ್‌ಬೈಲ್: ಕಾಲ್ ಸೆಂಟರ್‌ಗೆ ಸೆಕ್ಯೂರಿಟಿ ಆಫೀಸರ್ ಬೇಕು ೯೫೩೮೮೮೯೫೧೪.
ಕದ್ರಿ: ಮಲ್ಲಿಕಟ್ಟೆಗೆ ಟೈಪಿಂಗ್, ಕಂಪ್ಯೂಟರ್ ತಿಳಿದವರು ಬೇಕು ೯೮೮೦೮೧೪೧೪೦.
ಯೆಯ್ಯಾಡಿ: ಟೈಲರಿಂಗ್ ಶಾಪ್‌ಗೆ ಟೈಲರ್ ಬೇಕು ೮೭೧೦೯೪೩೮೩೮.
ಮಂಗಳೂರು: ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸಕ್ಕೆ ಜನ ಬೇಕು ೮೦೮೮೧೬೦೭೭೭
ಬಜ್ಪೆ: ಪೆರಾರ್ ವರ್ಕ್‌ಶಾಪ್‌ಗೆ ಗ್ರಿಲ್ ಮತ್ತು ವೆಲ್ಡಿಂಗ್ ತಿಳಿದವರು ಬೇಕು. ೮೯೭೦೪೪೦೭೬೧
ಮಂಗಳೂರು: ಹೌಸ್‌ಕೀಪಿಂಗ್‌ಗೆ ಬಾಯ್ಸ್ ಬೇಕು ೮೯೦೯೨೧೧೯೯೮.
ಕೊಡಿಯಾಲ್‌ಬೈಲ್: ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್, ಬ್ಲೌಸ್‌ಪೀಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೯೯೭೨೭೨೫೪೪೪.
ಕುಳಾಯಿ: ತರಕಾರಿ ಅಂಗಡಿಗೆ ಕೆಲಸಕ್ಕೆ ಜನ ಬೇಕು ೯೮೮೦೬೧೩೭೪೮.
ಪಡುಬಿದ್ರೆಯ: ಅಂಗಡಿಗೆ ಯುವಕ ಯುವತಿಯರು ಬೇಕು ೯೩೪೨೯೪೧೨೮೬.
ಕದ್ರಿ: ಇಲೆಕ್ಟ್ರಿಕಲ್ಸ್ ಸಂಸ್ಥೆಗೆ ಲೈಟಿಂಗ್‌ಗೆ ಜನ ಬೇಕು ೯೮೪೫೦೯೮೨೫೪.
ಮಂಗಳೂರು: ಹೋಂ ಪ್ರಾಡಕ್ಟ್‌ಗೆ ಜನ ಬೇಕು ೯೪೮೦೧೧೭೮೫೪.
ಉಡುಪಿ: ಬೇಕರಿ ಕೆಲಸಕ್ಕೆ ಜನ ಬೇಕು ೯೩೪೧೩೮೭೯೯೧.
ಪಂಪ್‌ವೆಲ್: ಸಂಸ್ಥೆ ಎಕೌಂಟ್ಸ್‌ಗೆ ಜನ ಬೇಕು ೯೮೪೫೦೮೦೯೦೦
ಸುರತ್ಕಲ್: ಬಾರ್‌ಗೆ ವೇಟರ‍್ಸ್ ಬೇಕು ೯೯೧೬೭೩೪೯೩೩.
ಸುರತ್ಕಲ್: ಲೇಡಿಸ್ ಟೈಲರ್, ಸೇಲ್ಸ್‌ಗೆ ಜನ ಬೇಕು ೯೮೪೪೫೪೩೧೫೧.
ಬಿಜೈ: ಆಫೀಸ್‌ಗೆ ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೪೪೮೪೦೯೨೦೪.
ಹಂಪನಕಟ್ಟೆ: ಬಟ್ಟೆ ಶಾಪಿಗೆ ಸೇಲ್ಸ್‌ಗರ್ಲ್, ಎಟೆಂಡರ್ ಬೇಕು ೨೪೨೧೧೭೭.
ಮಂಗಳೂರು: ವಾಟರ್ ಕ್ಯೂರಿಫೈ ಎಕ್ಸಿಕ್ಯೂಟಿವ್ ಬೇಕು ೯೦೬೦೯೭೯೬೨೭.
ಮಂಗಳೂರು: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಫೈಲ್ ಆದವರು ಆಫೀಸ್ ಕೆಲಸಕ್ಕೆ ಬೇಕು ೯೦೧೯೭೦೯೯೯೩.
ಕಿನ್ನಿಗೋಳಿ: ಡಿಟಿಪಿ ಅಪರೇಟರ್ ಬೇಕು ೯೬೬೩೩೯೩೩೭೪.
ಕದ್ರಿ: ಕಂಪ್ಯೂಟರ್ ಜ್ಞಾನವಿರುವ ಯುವ ತಿಯರು ಬೇಕು ೯೮೮೬೪೧೪೮೯೮.
ಕಾರ್ಕಳ: ಹೊಟೇಲಿಗೆ ಸಪ್ಲಾಯರ್ ಮತ್ತು ಚಾ ಕೌಂಟರಿಗೆ ಜನ ಬೇಕು ೦೮೨೫೮೨೩೪೧೪೭.
ಮಂಗಳೂರು: ಡ್ರೈವಿಂಗ್ ಸ್ಕೂಲ್‌ಗೆ ಮ್ಯಾನೇಜರ್ ಬೇಕು ೯೭೪೩೩೯೧೨೪೧.
Tagged with
udyoga

ಉಡುಪಿ: ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಬಂದ ಯುವಕರಿಬ್ಬರನ್ನು ರಿಕ್ಷಾ ಚಾಲಕನ ಸಹಿತ ಆರು ಜನರ ತಂಡ ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಗುರುವಾರ ರಾತ್ರಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತ: ಜೆಮ್‌ಶೆಡ್‌ಪುರದವರಾಗಿದ್ದು, ಪ್ರಸ್ತುತ ಮಣಿಪಾಲದ ಎಂಐಟಿ ಹಾಸ್ಟೆಲ್‌ನಲ್ಲಿ ವಾಸವಾಗಿರುವ ಶಮಿಕ್,ಪುಷ್ಕರ್ ಹಾಗೂ ಈತನ ಮಿತ್ರ ಅಂಕಿತ್ ಚೌಧರಿ ಎಂಬವರೇ ದರೋಡೆಗೆ ಒಳಗಾದವರಾಗಿದ್ದಾರೆ.
ಶಮಿಕ್ ಹಾಗೂ ಅಂಕಿತ್ ಅವರು ಗುರುವಾರ ರಾತ್ರಿ ಮಣಿಪಾಲದ ಮೈಟಿ ರೆಸ್ಟೋರೆಂಟ್‌ನಿಂದ ಕಾಮತ್ ಸರ್ಕಲ್‌ಗೆ ಹೋಗಲು ರಿಕ್ಷಾ ಏರಿದ್ದರು. ಹೀಗೆ ಇವರು ರಿಕ್ಷಾ ಏರುವ ಸಂದರ್ಭದಲ್ಲಿ ರಿಕ್ಷಾದಲ್ಲಿ ಇತರ ಮೂವರು ಯುವಕರು ಕುಳಿತಿದ್ದರು ಎಂದು ದೂರಲಾಗಿದೆ.
ಕಾಮತ್ ಸರ್ಕಲ್‌ಗೆ ಸಂಚರಿಸಬೇಕಾದ ರಿಕ್ಷಾವನ್ನು ಅದರ ಚಾಲಕ ಮಣ್ಣಪಳ್ಳಕ್ಕೆ ಕೊಂಡೊಯ್ದನೆಂದೂ, ಅಲ್ಲಿ ಮೊದಲೇ ಕಾದುನಿಂತಿದ್ದ ಇನ್ನಿಬ್ಬರು ಇವರ ಜೊತೆ ಸೇರಿಕೊಂಡರು ಎನ್ನಲಾಗಿದೆ. ಬಳಿಕ ರಿಕ್ಷಾ ಚಾಲಕನ ಸಹಿತ ಆರು ಜನರ ತಂಡ ಶಮಿಕ್ ಹಾಗೂ ಅಂಕಿತ್ ಮೇಲೆ ಕೈ ಮತ್ತು ಬೆಲ್ಟ್ ನಿಂದ ಹಲ್ಲೆ ನಡೆಸಿದರೆನ್ನಲಾಗಿದೆ.
ಬಳಿಕ ಕಾಲೇಜು ಐಡಿ, ಎಟಿಎಂ ಕಾರ್ಡ್, ಹತ್ತು ಸಾವಿರ ರು. ಮೌಲ್ಯದ ಎರಡು ಮೊಬೈಲ್ ಹ್ಯಾಂಡ್‌ಸೆಟ್ ಬಲವಂತವಾಗಿ ಕಸಿದುಕೊಂಡ ಆರೋಪಿಗಳು, ಎಟಿಎಂನ ಪಿನ್ ನಂಬರ್‌ನ್ನು ಬೆದರಿಸಿ ಪಡೆದುಕೊಂಡರಲ್ಲದೆ, ಅದನ್ನು ಉಪಯೋಗಿಸಿ ಹಣವನ್ನೂ ನಗದೀಕರಿಸಿದರು ಎಂದು ದೂರಲಾಗಿದೆ.
ಈ ಬಗ್ಗೆ ಶಮಿಕ್ ನೀಡಿದ ದೂರಿನ ಪ್ರಕಾರ ಮಣಿಪಾಲ ಠಾಣೆಯ ಪೊಲೀಸರು ಆರು ಜನರ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ವಿಶೇಷವೆಂದರೆ ದೂರು ನೀಡಿದವರೇ ಶುಕ್ರವಾರ ಪೊಲೀಸ್ ಠಾಣೆಗೆ ಬಂದು ತಾವು ನೀಡಿದ ದೂರನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದರೆನ್ನಲಾಗಿದೆ. ಇದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
Tagged with
cnews
ಮಂಗಳೂರು: ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡ ಮಹಿಳೆಗೆ ವಂಚಿಸಿ ೮೪ ಪವನ್ ಚಿನ್ನಾಭರಣ ಮತ್ತು ೨೦ ಸಾವಿರ ರೂ. ಸಹಿತ ಪರಾರಿಯಾದ ಆರೋಪಿ ಯನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ನೀಲೇಶ್ವರದ ಆಸ್ಮಾಬಾನು(೩೩) ಎಂಬಾಕೆ ವಂಚನೆಗೆ ಒಳಗಾಗಿದ್ದು, ಕೊಲ್ಲಂ ಜಿಲ್ಲೆಯ ಈಸ್ಟ್ ನಿವಾಸಿ ಸೋನುಕುಟ್ಟನ್ ಅಲಿಯಾಸ್ ಸುರೇಶ್ ಕುಮಾರ್(೪೦) ಎಂಬಾತ ವಂಚಿಸಿದವನಾಗಿದ್ದಾನೆ. ಕಳೆದ ವರ್ಷ ಇವರಿಬ್ಬರೂ ಮೊಬೈಲ್ ಮಿಸ್‌ಕಾಲ್ ಮೂಲಕ ಪರಸ್ಪರ ಪರಿಚಯವಾಗಿದ್ದರು. ಆ ಬಳಿಕ ಚೆರ್ವತ್ತೂರಿಗೆ ಬಂದು ವಸತಿಗೃಹದಲ್ಲಿ ತಂಗಿದ್ದು, ಎಲ್ಲ ಮುಗಿದ ಬಳಿಕ ಸುರೇಶ್ ಕುಮಾರ್ ನಗ-ನಗದಿನೊಂದಿಗೆ ಪರಾರಿಯಾ ಗಿದ್ದಾನೆ ಎಂದು ದೂರು ನೀಡಲಾಗಿತ್ತು.
Tagged with
ಕೊಲಂಬೊ: ಮಹಾತ್ಮಗಾಂಧಿ ಸೇರಿ ದಂತೆ ಹಲವು ಪ್ರಮುಖ ಗಣ್ಯರ ಮೂರ್ತಿ ಗಳನ್ನು ಒಡೆದು ಹಾಕಿರುವ ಘಟನೆ ಶ್ರೀಲಂಕಾ ದಕ್ಷಿಣ ನಗರವಾದ ಬಾಟ್ಟಿಕಾ ಲೋವಾದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾತ್ಮ ಗಾಂಧಿ, ಲಾರ್ಡ್ ಬಾಡೆನ್ ಪೋವೆಲ್ ಹಾಗೂ ತಮಿಳು ಸ್ಕಾಲರ್ಸ್ ಮೂರ್ತಿಗಳನ್ನು ಒಡೆದು ಹಾಕಿರುವುದಾಗಿ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿ ದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂಬುದಾಗಿ ಲಂಕಾ ಸರ್ಕಾರ ಹೇಳಿದೆ.
ಗುರುವಾರವಷ್ಟೇ ಯುಎನ್‌ಎಚ್‌ಆರ್‌ಸಿ ಯಲ್ಲಿ ಅಮೆರಿಕ ಮಂಡಿಸಲಿರುವ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದರೂ ಇದರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗದು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಿ.ಎಲ್.ಪೆರಿಸ್ ವಿಶ್ವಾಸ ವ್ಯಕ್ತಪಡಿಸಿದ್ದರು. ಆ ಬಗ್ಗೆ ನಮಗೆ ಭಾರತದ ಮೇಲೆ ಸಿಟ್ಟಾಗಲಿ, ಸಿಡುಕಾಗಲಿ ಇಲ್ಲ. ಉಭಯ ರಾಷ್ಟ್ರಗಳ ಸಂಬಂಧವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಾರದು ಎಂದೂ ಅವರು ಸ್ಪಷ್ಟಪಡಿಸಿದ್ದರು.
Tagged with
inews


ಉಡುಪಿ: ಬೆಳ್ಳೆ ಗ್ರಾಮದ ನೆಲ್ಲಿಕಟ್ಟೆ ತಬೈಲ್‌ನಲ್ಲಿನ ಪಾಪನಾಶಿನಿ ನದಿಯಲ್ಲಿ ಶುಕ್ರವಾರ ಬೆಳಗ್ಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಬೆಳ್ಳೆ ಗ್ರಾಮದ ಕಡಂಬಿಲ ನಿವಾಸಿ ಶ್ರೀನಿವಾಸ ನಾಯಕ್ (೩೫) ಎಂದು ಗುರುತಿಸಲಾಗಿದೆ.
ಶ್ರೀನಿವಾಸ ನಾಯಕ್ ಬುಧವಾರ ಸಂಜೆ ಗಂಟೆ ೭.೩೦ ಕ್ಕೆ ಮನೆಯಿಂದ ನಾಪತ್ತೆಯಾ ಗಿದ್ದರು ಎನ್ನಲಾಗಿದೆ. ತಾಯಿ, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ ಇವರು, ಬೆಳ್ಳೆ ಪೇಟೆಯಲ್ಲಿ ತಲೆ ಹೊರೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕುಡಿತದ ಚಟ ಇತ್ತು ಎಂದು ಹೇಳಲಾಗಿದೆ. ಶವ ಪತ್ತೆಯಾದ ಸ್ಥಳದ ನದಿ ಕಿನಾರೆಯಲ್ಲಿ ಶ್ರೀನಿವಾಸ ನಾಯಕ್ ಅವರ ಪ್ಯಾಂಟ್, ಶರ್ಟ್ ಮತ್ತು ಚಪ್ಪಲಿ ಕಂಡುಬಂದಿದೆ.
ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಹ್ಯಾಂಡ್‌ಸೆಟ್, ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿನ ಸೇವಾ ರಶೀದಿ, ಮೂರು ಮೊಬೈಲ್ ನಂಬರ್‌ಗಳಿರುವ ಸಣ್ಣ ಚೀಟಿ, ಸ್ವಲ್ಪ ಹಣ ಇತ್ತು. ಇದೊಂದು ಆತ್ಮಹತ್ಯೆ ಎನ್ನಲಾಗಿದೆ. ಆದರೆ, ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರೆಂಬುದು ಸ್ಪಷ್ಟವಾಗಿಲ್ಲ. ಶಿರ್ವ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೆ.ಆರ್.ನಾಯ್ಕ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tagged with
cnews

ಮಂಗಳೂರು: ಪ್ರೀತಿಸಿ ಮದುವೆ ಯಾದ ಯುವಕನೀಗ ಆಕೆಗೆ ಕೈಕೊಟ್ಟು ಮತ್ತೊಂದು ಮದುವೆಯಾಗಿ ಜೈಲು ಕಂಬಿ ಎಣಿಸುತ್ತಿರುವ ಪ್ರಕರಣವೊಂದು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಹಿಂದೆ ತಿರು ವೈಲ್ ನಿವಾಸಿ ವಿದ್ಯಾ ಯಾನೆ ಗ್ಲೆನಿಟಾ ಪ್ಲೇವಿಯಾ ಸಿಕ್ವೇರಾ ಎಂಬಾಕೆ ಅದೇ ಊರಿನ ವಿನೀತ್ ಎಂಬಾತನನ್ನು ಪ್ರೀತಿಸುತ್ತಿದ್ದು ೨೦೦೮, ಡಿ.೩೦ರಂದು ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರೂ ಮೂಡುಶೆಡ್ಡೆಯಲ್ಲಿ ಸತ್ಯವತಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಕಂಕನಾಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
ಕೆಲವು ದಿನಗಳ ಬಳಿಕ ವಿನೀತ್‌ನ ತಂದೆ ದೇಜಪ್ಪ ಎಂಬವರು ಸತ್ಯವತಿಯ ಮನೆಗೆ ಬಂದು ವಿದ್ಯಾಳನ್ನು ನಂಬಿಸಿ ತಮ್ಮ ಮನೆಗೆ ಕರೆದೊಯ್ದು ಆರಂಭದಲ್ಲಿ ಚೆನ್ನಾಗಿ ನೋಡಿಕೊಂಡಿದ್ದರು ಎನ್ನಲಾಗಿದೆ. ದಿನಗಳೆದಂತೆ ಅವರ ವರ್ತನೆ ಬದಲಾಗಿದ್ದು ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಪೀಡಿಸುತ್ತಿದ್ದು ನಿರಾಕರಿಸಿದಾಗ ಸಾಲ ತೀರಿಸುವ ಸಲುವಾಗಿ ತಾಯಿಯಿಂದ ೫೦ಸಾವಿರ ತರುವಂತೆ ಪೀಡಿಸುತ್ತಿದ್ದರಲ್ಲದೆ ಜಾತಿ ನಿಂದನೆ ಮಾಡುತ್ತಿದ್ದರು ಎಂದು ವಿದ್ಯಾ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಇದೆಲ್ಲಾ ನಡೆದ ಬಳಿಕ ಅದೊಂದು ದಿನ ವಿನೀತ್ ಬಾಡಿಗೆ ಮನೆ ಮಾಡುವುದಾಗಿ ಹೇಳಿ ಒಂದು ಜೊತೆ ಬಳೆ, ಕಿವಿಯ ಓಲೆ ಮತ್ತು ಚೈನ್ ತೆಗೆದುಕೊಂಡು ಹೋಗಿದ್ದನೆನ್ನಲಾಗಿದೆ. ಆದರೆ ಆತ ಅಶ್ವಿನಿ ಎನ್ನುವ ಯುವತಿಯನ್ನು ಗುಟ್ಟಾಗಿ ಮದುವೆಯಾಗಿದ್ದಾನೆ. ಆತನಿಗೆ ರೌಡಿಗಳ ಸಂಪರ್ಕವಿರುವುದಲ್ಲದೆ ಈ ವಿಷಯದಲ್ಲಿ ಕೇಸು ನೀಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ತನಗೆ ಹಾಗೂ ಸಹಾಯ ಮಾಡುತ್ತಿರುವ ಗೆಳತಿಗೂ ಜೀವಭಯ ಇರುವುದಾಗಿ ವಿದ್ಯಾ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಅವರ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ವಿನೀತ್‌ನನ್ನು ಎರಡು ದಿನಗಳ ಹಿಂದೆಯೇ ಬಂಧಿಸಿದ್ದು, ಆತನೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews
ಬಂಟ್ವಾಳ: ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಮಾರ ಣಾಂತಿಕ ಹಲ್ಲೆಗೈದು ತಲೆ ಮರೆಸಿ ಕೊಂಡಿದ್ದ ನಾಲ್ವರು ಪ್ರಮುಖ ಆರೋ ಪಿಗಳಿಗಾಗಿ ತೀವ್ರ ಕಾರ್ಯಾ ಚರಣೆ ಗಿಳಿದ ಪೊಲೀಸ್ ಉನ್ನತಾಧಿ ಕಾರಿ ಗಳು ಅವರ ಸಹಚರ ಎನ್ನಲಾದ ಕೆಲವ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸ್ ಇಲಾಖೆಯ ವಿಶ್ವಾಸಾರ್ಹ ಮೂಲದ ಪ್ರಕಾರ ಆರೋಪಿತರಲ್ಲಿ ಓರ್ವ ಬೆಂಗಳೂರಿಗೆ ಪರಾರಿಯಾ ಗಿರುವುದಾಗಿ ತಿಳಿದುಬಂದಿದೆ. ಮತ್ತೆ ಮೂವರು ಬೇರೆ ಕಡೆಗಳಿಗೆ ಓಡಿ ಹೋಗಿರಬಹುದೆಂದು ಊಹಿ ಸಲಾಗಿದೆ.
ಆರೋಪಿಗಳನ್ನು ಬಂಧಿಸಿಯೇ ಸಿದ್ಧ ಎಂದು ಪಟ್ಟು ಹಿಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪುತ್ತೂರು ಎಎಸ್ಪಿ ಎಂ.ಎನ್ ಅನುಚೇತ್ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ದಳಗಳನ್ನು ರಚಿಸಲಾಗಿದೆ. ಓರ್ವ ಆರೋಪಿಗೆ ತಲಾ ಒಂದು ದಳದಂತೆ ಕಳೆದ ಎರಡು ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ, ಗ್ರಾಮಾಂತರ ಎಸ್‌ಐ ಮಹೇಶ್ ಪ್ರಸಾದ್, ನಗರ ಎಸ್.ಐ. ಶೇಖರ್, ವಿಟ್ಲ ಎಸ್.ಐ. ರಕ್ಷಿತ್ ವಿಶೇಷ ದಳಗಳ ನೇತೃತ್ವ ವಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕಾರ್ಯಾ ಚರಣೆಗೆ ಇಳಿಯುವಷ್ಟರಲ್ಲಿ ಆರೋಪಿ ಗಳಾದ ಹಸೈನಾರ್, ಶಮೀರ್, ನಾಸೀರ್, ಪಕ್ಷ ಶರೀಫ್ ಹಾಗೂ ಇತರರು ತಲೆಮರೆಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು.
ಶಾಂತಿಯಂಗಡಿ, ತಾಳಿಪಡ್ಪು ವಿದ್ಯುತ್ ಸಂಬಂಧ ಸಮಸ್ಯೆಯನ್ನು ಸರಿಪಡಿಸಲು ತೆರಳಿದ್ದ ಬಿ.ಸಿ.ರೋಡು ಮೆಸ್ಕಾಂನ ಸಹಾಯಕ ಇಂಜಿನಿಯರ್ ನಾರಾಯಣ ಪ್ರಕಾಶ್, ಲೈನ್‌ಮ್ಯಾನ್ ಸೋಮಣ್ಣ ಮತ್ತು ಚಾಲಕ ಅಶ್ವನಿ ಮೇಲೆ ಗುಂಪು ಗಂಭೀರ ಹಲ್ಲೆ ನಡೆಸಿತ್ತು. ಅಲ್ಲದೇ ಜೀವಬೆದರಿಕೆಯನ್ನು ಒಡ್ಡಿ ದ್ದರು. ಅಧಿಕಾರಿ ಬಳಿ ಇದ್ದ ಮೊಬೈಲ್ ಸೆಟ್, ಚಿನ್ನದ ಸರ ಅಪಹರಿಸಿದ್ದಲ್ಲದೇ, ಕಂಪೆನಿ ವಾಹನವನ್ನು ಹಾನಿಗೊಳಿಸಿದ್ದರು.
ಆರೋಪಿಗಳಿಗೆ ಛೀಮಾರಿ!
ಮೆಸ್ಕಾಂ ಅಧಿಕಾರಿಗಳ ಜೊತೆ ಅಮಾನುಷ ಹಾಗೂ ಮೃಗೀಯವಾಗಿ ವರ್ತಿಸಿ ಹಲ್ಲೆಗೈದ ಹಸೈನಾರ್, ಶಮೀರ್, ನಾಸೀರ್, ಪಕ್ಷ ಶರೀಫ್ ಹಾಗೂ ಇತರರ ಮೇಲೆ ಈಗಾಗಲೇ ಕ್ರಿಮಿನಲ್ ಕೇಸುಗಳಿವೆ. ಈ ಪೈಕಿ ಹಸೈನಾರ್, ಶಮೀರ್ ಹಾಗೂ ಪಕ್ಷ ಶರೀಫ್ ಪೊಲೀಸರ ರೌಡಿ ಶೀಟರ್ ನಲ್ಲಿದ್ದಾರೆ. ನಾಸೀರ್ ಮೇಲೆ ಈಗ ರೌಡಿ ಶೀಟರ್ ಬೀಳುವ ಸಾಧ್ಯತೆ ಇದೆ. ಶಾಂತಿಯಂಗಡಿ ಪರಿಸರದಲ್ಲಿ ಶಾಂತಿ ಭಂಗ, ಸಾರ್ವಜನಿಕ ಕಾನೂನು ಸುವ್ಯ ವಸ್ಥೆಗೆ ಅಡ್ಡಿ ಹಾಗೂ ಗುಂಪು ಸಂಘರ್ಷಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಇಡೀ ಊರು ಛೀಮಾರಿ ಹಾಕಿತ್ತು. ಆದರೂ ಕಾಂಗ್ರೆಸ್ ಮುಖಂ ಡರ ಪ್ರಭಾವದಿಂದಾಗಿ ಅವರು ರಕ್ಷೆ ಪಡೆದಿದ್ದರು. ಅವರ ಹಿನ್ನೆಲೆ ಅರಿತ ಮುಖಂಡರು ಈಗ ದೂರ ಮಾಡಿ ದ್ದರು. ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗುವ ಇವರಿಗೆ ಊರೇ ಬಹಿಷ್ಕಾರ ಹಾಕಬೇಕೆಂದು ಮೆಸ್ಕಾಂ ಉದ್ಯೋ ಗಸ್ಥರ ಸಂಘಟಕರು ಶಾಂತಿಯಂಗಡಿ ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಇಡೀ ಊರೇ ತಲೆ ತಗ್ಗಿಸಬೇಕಾಗಿದೆ.
Tagged with
cnews
ಕಾಸರಗೋಡು: ಕರ್ನಾಟಕದ ಬಾಗಲ ಕೋಟೆ ಮೂಲದ ಬಾಲಕಿಯೋರ್ವಳು ಅಂಗಡಿಗೆ ತೆರಳಿದಾಕೆ ನಾಪತ್ತೆಯಾಗಿದ್ದು, ಈಕೆ ನಾಪತ್ತೆಯಾದ ಬಳಿಕ ಪ್ರದೇಶದ ಇಬ್ಬರು ಯುವಕರು ನಾಪತ್ತೆಯಾಗಿರುವುದು ಪ್ರಕರಣವನ್ನು ನಿಗೂಢವಾಗಿಸಿದೆ.
ಬಾಗಲಕೋಟೆ ನಿವಾಸಿ ಕಂಡಪ್ಪ ಎಂಬವರ ಪುತ್ರಿ ದೀಪಾ(೧೬) ನಾಪತ್ತೆಯಾದ ಬಾಲಕಿ. ಕೂಲಿ ಕೆಲಸದ ನಿಮಿತ್ತ ಬಂದಿದ್ದ ಕುಟುಂಬ ಕಾಸರಗೋಡು ಕೋಟೆಕ್ಕಣಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಲ್ಲಿಂದ ದೀಪಾ ಮಾ.೩೧ ರಂದು ಚಪ್ಪಲಿ ತರಲು ಹೋಗುವುದಾಗಿ ಮನೆ ಸಮೀಪದ ಮಹಿಳೆಯೊಂದಿಗೆ ತೆರಳಿದಾಕೆ ನಾಪತ್ತೆ ಯಾಗಿದ್ದಾಳೆ. ಆದರೆ ಜತೆಗೆ ತೆರಳಿರುವ ಮಹಿಳೆ ವಾಪಸಾಗಿದ್ದರೂ ಆಕೆಗೆ ದೀಪಾ ಹೇಗೆ ತಪ್ಪಿಸಿ ದ್ದಾಳೆಂದು ತಿಳಿದೇ ಇಲ್ಲ ಎಂಬ ಹೇಳಿಕೆಯನ್ನು ಪೊಲೀಸರಲ್ಲಿ ನೀಡಿ ದ್ದಾಳೆನ್ನುವ ಕುರಿತು ತಿಳಿದುಬಂದಿದೆ. ಪೊಲೀಸ್ ತನಿಖೆ ವೇಳೆ ಸ್ಥಳೀಯ ಇಬ್ಬರು ಯುವಕರು ನಾಪತ್ತೆಯಾಗಿರುವುದು ಪ್ರಕರಣವನ್ನು ನಿಗೂಢವಾಗಿಸಿದೆ.
Tagged with
cnews,
missing
ಮಂಗಳೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ನಾಯಿಯನ್ನು ಗುಂಡಿಕ್ಕಿ ಕೊಂದ ಪ್ರಕರಣ ಮಡಾಮಕ್ಕಿ ಗ್ರಾಮದ ಕಬ್ಬಿನಾಲೆ ಎಂಬಲ್ಲಿ ನಿನ್ನೆ ನಡೆದಿದೆ. ಶೀನ ನಾಯ್ಕ ಹಾಗೂ ಜಯರಾಮ ನಾಯ್ಕ ಎಂಬವರ ನಡುವೆ ಜಾಗದ ತಕರಾರು ಇದ್ದು, ಶೀನ ನಾಯ್ಕರಿಗೆ ಸೇರಿದ ನಾಯಿ ತನ್ನ ಮನೆಗೆ ಬಂತೆಂಬ ಕ್ಷುಲ್ಲಕ ಕಾರಣಕ್ಕೆ ಜಯರಾಮ ನಾಯ್ಕ ಗುಂಡು ಹೊಡೆದು ಸಾಯಿಸಿರುವುದಾಗಿ ಅಮಾಸೆಬೈಲು ಪೊಲೀಸರಿಗೆ ದೂರಲಾಗಿದೆ.
ಮಟ್ಕಾಕೋರನ ಸೆರೆ : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಬೊಳ್ವೆ ಕ್ರಾಸ್ ಸಮೀಪ ಮಟ್ಕಾ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಆರೋಪಿ ಕೊರಂಗ್ರ ಪಾಡಿಯ ಡೇವಿಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಪು ಎಸ್.ಐ. ಅರ್ಚನಾ ಅವರು ದಾಳಿ ನಡೆಸಿದ್ದು, ಆಟಕ್ಕೆ ಇಟ್ಟಿದ್ದ ಹಣ ಹಾಗೂ ಪರಿಕರ ವಶಪಡಿಸಿಕೊಂಡಿದ್ದಾರೆ.
Tagged with
cnews
ಮಂಗಳೂರು: ಗುರುವಾರ ರಾತ್ರಿ ಕಾಸರಗೋಡಿನ ವಿದ್ಯಾನಗರ ಠಾಣೆಗೆ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮನ್ಸೂರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಬೈಕ್ ಏರಿ ಪರಾರಿಯಾಗಿದ್ದ. ಇತ್ತಿಚೆಗೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ವಾಹನವೊಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅದನ್ನು ಬಿಟ್ಟುಕೊಡಬೇಕೆಂದು ಠಾಣೆಯಲ್ಲಿ ದಾಂಧಲೆ ನಡೆಸಿದ್ದ. ಅಲ್ಲದೆ ಕಟ್ಟಡದ ಮೇಲಿನ ಹಂತಸ್ತಿನಿಂದ ಧುಮುಕಲು ಯತ್ನಿಸಿದ್ದ ಎಂದು ಕೇಸಿನಲ್ಲಿ ವಿವರಿಸಲಾಗಿದೆ.
Tagged with
cnews
ಉಡುಪಿ: ಅಂಬಲಪಾಡಿಯ ಶೆಟ್ಟಿ ಲಂಚ್ ಹೋಮ್‌ನ ನೌಕರ, ಮಿಯಾರು ನಿವಾಸಿ ಅಲ್ಫೋನ್ಸ್ ಡಿಮೆಲ್ಲೊ (೬೦) ಎಂಬವರು ಬ್ರಹ್ಮಗಿರಿ ಬಳಿಯ ನಾಯರ್‌ಕೆರೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
Tagged with
cnews
ಕಾಸರಗೋಡು: ತನ್ನ ದೇಹವನ್ನು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ದಾನ ನೀಡಿದ್ದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಹಾಗೂ ಮಂಡಲ ಸಮಿತಿ ಸದಸ್ಯರಾದ ಎಂ.ಎಸ್. ಶ್ರೀಕಾಂತ್ ರಾವ್ (೫೫)ಅಲ್ಪಕಾಲದ ಅಸೌಖ್ಯದಿಂದ ನಿಧ ಹೊಂದಿದ್ದಾರೆ. ಕುಂಬಳೆ ಗೋಪಾಲಕೃಷ್ಣ ಕ್ಷೇತ್ರ ಬಳಿಯ ನಿವಾಸಿಯಾಗಿರುವ ಎಂ.ಎಸ್. ಶ್ರೀಕಾಂತ್ ರಾವ್ (೫೫) ಸಾವಿನ ಬಳಿಕ ತನ್ನ ದೇಹವನ್ನು ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾನ ನೀಡಬೇಕೆಂದು ಉಯಿಲು ಬರೆದಿದ್ದರು. ಇದರಂತೆ ನಿನ್ನೆ ಸಂಜೆ ಅಂತಿಮ ವಿಧಿ ಮುಗಿಸಿ ಮೃತದೇಹವನ್ನು ಪರಿಯಾರಂಗೆ ಒಯ್ಯಲಾಯಿತು.
Tagged with
death
ಮಂಗಳೂರು: ಚರ್ಚ್ ಆವರಣಕ್ಕೆ ನುಗ್ಗಿ ಕಲ್ಲೆಸೆದು ಮಹಿಳೆಗೆ ಗಾಯ ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪತ್ತೆಹಚ್ಚಲು ವಿಫಲರಾಗಿರುವ ಕದ್ರಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಗುಡ್‌ಫ್ರೈಡೆ ಮುನ್ನಾ ದಿನವಾದ ಗುರುವಾರ ರಾತ್ರಿ ಬೆಂದೂರ್‌ವೆಲ್ ಆಗ್ನೆಸ್ ಚರ್ಚ್‌ನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಆ ಸಂದರ್ಭ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಚರ್ಚ್‌ನ ಆವರಣ ಗೋಡೆಯೊಳಗೆ ನುಗ್ಗಿ ಕಲ್ಲೆಸೆದು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಲೋವರ್ ಬೆಂದೂರ್ ನಿವಾಸಿ ಕ್ಲೇರಾ ಪಿಂಟೋ ಎಂಬವರು ಗಾಯಗೊಂಡಿದ್ದರು.
Tagged with
cnews
ಮಂಗಳೂರು: ಹೃದಯ ಸಂಬಂಧ ಕಾಯಿಲೆಯಿಂದ ಬಳಲು ತ್ತಿದ್ದ ಅರ್ಕುಳ ಗ್ರಾಮದ ಮೇರ್ಲ ಮಜಲು ನಿವಾಸಿ ಥಾಮಸ್ ರೆಬೆಲ್ಲೋ (೬೫) ಎಂಬವರು ಚಿಕಿತ್ಸೆ ಫಲಕಾರಿ ಯಾಗದ ಹಿನ್ನೆಲೆಯಲ್ಲಿ ಬೇಸತ್ತು ನಿನ್ನೆ ಬೆಳಗ್ಗೆ ಮನೆಯ ಕೊಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Tagged with
cnews

ವಕ್ಫ್ ಅಧ್ಯಕ್ಷ ಆರೋಪ
ಬಂಟ್ವಾಳ: ಇತ್ತೀಚಿಗೆ ಬೆಳಕಿಗೆ ಬಂದಿದ್ದ ರಾಜ್ಯ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಆಸ್ತಿಗಳ ಹಗರಣ ಅವ್ಯವ ಹಾರ ಪ್ರಕರಣಗಳ ಕರಿನೆರಳು ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿ ಹಾಗೂ ದರ್ಗಾಗಳ ಮೇಲೂ ಬಿದ್ದಿದೆ. ಈ ಕುರಿತು ಪತ್ರಕರ್ತರ ಮುಂದೆ ಮಾಹಿತಿಗಳನ್ನು ಹೊರಹಾಕಿದ ಜಿಲ್ಲಾ ವಕ್ಫ್ ಬೋರ್ಡು ಅಧ್ಯಕ್ಷ ಹಾಜಿ ಉಸ್ಮಾನ್ ಪಾಣೆಮಂಗಳೂರು ಅವರು ಕುತೂಹಲ ಕೆರಳಿಸಿದ್ದಾರೆ.
ಬಿ.ಸಿ.ರೋಡಿನ ಖಾಸಗಿ ಹೊಟೇಲ್ ನಲ್ಲಿ ನಿನ್ನೆ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಸ್ಮಾನ್ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು, ಕುದ್ರೋಳಿ, ಕಂಡತ್‌ಪಳ್ಳಿ ಜುಮ್ಮಾ ಮಸೀದಿಗೆ ಸಂಬಂಧಿಸಿ ಜಮೀನು ಕಬಳಿಕೆಯಾಗಿದೆ. ಸರ್ಕಾರ ವಕ್ಫ್ ಬೋರ್ಡು ಹೆಸರಿನಲ್ಲಿ ಮೀಸ ಲಿರಿಸಿದ ಭೂಮಿಗಳನ್ನು ಬೋರ್ಡ್‌ಗೆ ಸಂಬಂಧಿಸಿದ ಕೆಲವು ಜವಾಬ್ದಾರಿಯುತ ವ್ಯಕ್ತಿಗಳು ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ನಮಗೆ ಲಭ್ಯವಾಗಿದ್ದು, ಸಾರ್ವಜನಿಕರು ಸಂಬಂಧಿತ ಇಲಾಖೆಗಳಿಗೆ ದೂರು ನೀಡಿದ್ದರು ಎಂದರು. ಅವ್ಯವಹಾರಗಳಿಗೆ ಸಂಬಂಧಿಸಿ ಕಡತ, ದಾಖಲೆ ಪತ್ರ ಹಾಗೂ ಮಾಹಿತಿ ಪತ್ರಗಳನ್ನು ಪಡೆಯಲು ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕೃತ ದಾಖಲೆ ಪತ್ರಗಳು ಲಭ್ಯವಾದ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ನಿರ್ದೇಶನದಂತೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇವೆ ಎಂದವರು ತಿಳಿಸಿದರು. ಅವ್ಯವಹಾರಗಳಲ್ಲಿ ಭಾಗಿಯಾದವರ ಬಗ್ಗೆ ಅವರು ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಎಲ್ಲಾ ಆಮೇಲೆ ನಿಮಗೆ ಗೊತ್ತಾಗುತ್ತದೆ ಎಂದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಜೂರು ಜುಮ್ಮಾ ಮಸೀದಿಯಲ್ಲಿ ಸಾಬೀತಾದ ಅವ್ಯವಹಾರ ಹಾಗೂ ಅಧಿಕಾರ ದುರುಪಯೋಗವನ್ನು ವಕ್ಫ್ ಗಮನಿಸಿತ್ತು. ಮಸೀದಿಗೆ ಆಡಳಿತಾಧಿಕಾರಿ ನೇಮಕಗೊಂಡ ಬಳಿಕ ಆರ್ಥಿಕ ನಿರ್ವಹಣೆ ಸುವ್ಯವಸ್ಥಿತವಾಗಿದೆ ಎಂದವರು, ಈ ಹಿಂದೆ ಧರ್ಮ, ಮಸೀದಿ ಹಾಗೂ ದರ್ಗಾ ಹೆಸರಿನಲ್ಲಿ ಸಂಗ್ರಹವಾಗುತ್ತಿದ್ದ ಹಣ ಯಾರ ಪಾಲು ಸೇರಿದೆಯೋ ಗೊತ್ತಿಲ್ಲ ಎಂದು ಆರೋಪಿಸಿದರು. ದೇವಸ್ಥಾನಗಳಿಗೆ ಮುಜರಾಯಿ ಇಲಾಖೆ ಇದ್ದ ಹಾಗೆಯೇ, ಮಸೀದಿಗಳ ಪಾರದರ್ಶಕತೆ ಆಡಳಿತಕ್ಕಾಗಿ ವಕ್ಫ್ ಬೋರ್ಡು ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರ ಅನುದಾನ ದುರುಪಯೋಗವನ್ನು ತಡೆಯುವಲ್ಲಿ ಇಲಾಖೆ ಶ್ರಮಿಸುತ್ತಿದೆ ಎಂದು ಅಭಿನಂದಿಸಿದರು.
ಕಾವಳಕಟ್ಟೆಯಲ್ಲಿ ಝಿಕ್ರ್ ಮಜ್ಲಿಸ್: ಎ.೯ರಂದು ಕಾವಳಕಟ್ಟೆ ರಝಾಘರ್ ಮೈದಾನದಲ್ಲಿ ವಾರ್ಷಿಕ ಜಲಾಲಿಯ್ಯ ಝಿಕ್ರ್ ಮಜ್ಲಿಸ್ ನಡೆಯಲಿದ್ದು, ಉಳ್ಳಾಲ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ, ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ತ್ವಾಕ್ ಅಹ್ಮದ್ ಮುಸ್ಲಿಯಾರ್ ಶೈಖುನಾ ಪಿ.ಎಂ. ಇಬ್ರಾಹಿಂ ಮುಸ್ಲಿಯಾನ್ ಬೇಕಲ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮೌಲಾನಾ ಮುಫ್ತಿ ಅನ್ವರ್ ಅಲಿ ಬೆಂಗಳೂರು ಮತ್ತಿತರು ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಮಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ತಿಳಿಸಿದ್ದಾರೆ. ಕೆ.ಎ. ಅಬ್ದರ್ರಹ್ಮಾನ್ ರಝ್ವಿ ಕಲ್ಕಟ್ಟ, ಶೇಖ್ ರಹ್ಮತ್ತುಲ್ಲ ಕಾವಳಕಟ್ಟೆ, ಯೂಸುಫ್ ಬಾಂಬಿಲ ಸುದ್ದಿಗೋಷ್ಠಿಯಲ್ಲಿದ್ದರು.
Tagged with
lnews
ಪುತ್ತೂರು: ಉತ್ತರ ಕರ್ನಾ ಟಕದ ಮಂದಿ ಕುಡಿಯಲು ನೀರಿಲ್ಲದೆ ಸಂಕಷ್ಟಕ್ಕೆ ಈಡಾಗಿದ್ದರೆ, ಕರಾವಳಿ ಜಿಲ್ಲೆಯ ಮಂದಿ ಕುಡಿಯಲು ಬಿಯರ್ ಇಲ್ಲದೆ ಪರಿತಾಪ ಪಡು ತ್ತಿದ್ದಾರೆ. ಕಳೆದ ಐದು ದಿನಗಳಿಂದ ಜಿಲ್ಲೆಯ ಮಂದಿಗೆ ಅಮಲು ಪದಾರ್ಥಗಳು ಸಿಗುತ್ತಿಲ್ಲ. ಬಾರ್ ಹಾಗೂ ವೈನ್ ಶಾಪ್‌ಗಳು ಬಾಗಿಲು ಮುಚ್ಚಿವೆ. ಇದರಿಂದ ಸರಕಾರಕ್ಕೆ ಸಿಗಬೇಕಾದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಈ ಪರಿಸ್ಥಿತಿಗೆ ಸರಕಾರ ನೇರ ಕಾರಣವಾಗಿದೆ. ಬಜೆಟ್‌ನಲ್ಲಿ ಬಿಯರ್ ಸೇರಿ ದಂತೆ ಅಮಲು ಪದಾರ್ಥಗಳ ಮೌಲ್ಯವನ್ನು ಹೆಚ್ಚು ಮಾಡಲಾಗಿದ್ದು, ಇದಕ್ಕೆ ರೇಟ್ ಲಿಸ್ಟ್ ನೀಡುವಲ್ಲಿ ಉಂಟಾದ ವಿಳಂಬವೇ ಈ ಕುಡಿತದ ಬರಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಮಾ.೩೧ರಿಂದ ಅಮಲು ಪದಾರ್ಥಗಳು ವೈನ್ ಶಾಪ್‌ಗಳಿಗೆ ವಿತರಣೆಯಾಗಿಲ್ಲ. ಬಾರ್ ಹಾಗೂ ವೈನ್ ಶಾಪ್‌ಗಳಲ್ಲಿದ್ದ ಮಾಲು ಎರಡು ದಿನಗಳಲ್ಲಿ ಖಾಲಿಯಾಗಿದ್ದು, ಪುತ್ತೂರು ಸಹಿತ ಜಿಲ್ಲೆಯ ಬಹುತೇಕ ವೈನ್ ಶಾಪ್‌ಗಳು ಬಾಟಲಿ ರಹಿತವಾಗಿ ಬಾಗಿಲು ಮುಚ್ಚಿಕೊಂಡಿವೆ. ಜಿಲ್ಲೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಬಾರ್ ಹಾಗೂ ವೈನ್ ಶಾಪ್ ಗಳಿದ್ದು,ಇವುಗಳು ವ್ಯಾಪಾರದಿಂದ ವಂಚಿತಗೊಂಡಿವೆ. ಪುತ್ತೂರಿನಲ್ಲಿ ೪೬ ಹಾಗೂ ಸುಳ್ಯದಲ್ಲಿ ೨೯ ಬಾರ್ ಹಾಗೂ ವೈನ್ ಶಾಪ್‌ಗಳಿವೆ. ಪುತ್ತೂ ರಿನ ಬಹುತೇಕ ಈ ಶಾಪ್‌ಗಳಿಗೆ ಪ್ರತಿ ದಿನಕ್ಕೆ ೧.೫ಲಕ್ಷ ರೂ ವ್ಯಾಪಾರವಿದೆ. ಇದರಲ್ಲಿ ಶೇ.೭೦% ರಷ್ಟು ಹಣ ನೇರವಾಗಿ ಸರಕಾರಕ್ಕೆ ಸೇರುತ್ತದೆ. ಜಿಲ್ಲೆಯ ಒಟ್ಟು ಬಾರ್ ಹಾಗೂ ವೈನ್‌ಶಾಪ್‌ಗಳ ಸರಾಸರಿ ಲೆಕ್ಕ ತೆಗೆದುಕೊಂಡರೆ, ಜಿಲ್ಲೆ ಯಿಂದ ಸುಮಾರು ೧ಕೋಟಿ ರೂ ಸರಕಾರದ ಬೊಕ್ಕಸಕ್ಕೆ ಈ ಒಂದು ವಾರದಲ್ಲಿ ನಷ್ಟವಾಗಿದೆ. ರಾಜ್ಯದಲ್ಲಿ ಸುಮಾರು ೪೦ ಅಮಲು ಪಾನೀಯ ತಯಾರಿಕಾ ಡಿಪೊಗಳಿದ್ದು, ಇವುಗಳ ವಿತರಣೆಯನ್ನು ಕರ್ನಾಟಕ ರಾಜ್ಯ ಬಿವರೀಸ್ ಲಿಮಿಟೆಡ್ ಕಂಪೆನಿ ಮಾಡುತ್ತಿದೆ. ಹೊಸ ರೇಟ್ ಲಿಸ್ಟ್‌ನ್ನು ಅಧಿಕಾರಿಗಳು ತಯಾರಿಸಬೇಕಾಗಿದ್ದು, ಇದನ್ನು ಗಣಕೀಕರಣದ ಮೂಲಕ ಫೀಡ್ ಮಾಡಬೇಕಾಗಿತ್ತು. ಆದರೆ ಇದನ್ನು ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ.ಇದಕ್ಕೆ ರಾಜ್ಯದ ಆಡಳಿತದಲ್ಲಿ ಇರುವ ಸಮಸ್ಯೆಗಳು ಕಾರಣವೆನ್ನಲಾಗಿದೆ.
Tagged with
lnews

ಬಂಟ್ವಾಳ: ಜೆಡಿಎಸ್‌ಗೆ ವಲಸೆ ಹೋಗಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮತ್ತೆ ಕಾಂಗ್ರೆಸ್‌ಗೆ ಬರಲಿ ರುವ ಸುದ್ದಿ ಬಹುತೇಕ ಖಚಿತಗೊಂಡಿದೆ. ವಿಧಾನ ಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ವರಿಷ್ಠರ ಜೊತೆ ಮುನಿಸಿಕೊಂಡ ಕೆ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಕುಮಾರ ಸ್ವಾಮಿ ಆಹ್ವಾನ ನೀಡಿ, ಬಂಟ್ವಾಳ ಕ್ಷೇತ್ರದಲ್ಲಿ ಟಿಕೇಟ್ ನೀಡಿದ್ದರು. ಅಜಾತಶತ್ರು ರಾಜಕಾರಣಿ ಎಂದೇ ಬಿಂಬಿತವಾದ ಬಂಟ್ವಾಳದ ರಮಾನಾಥ ರೈ ಅವರ ಎದುರು ಸ್ಪರ್ಧಿಸಿದ್ದ ಬಿಜೆಪಿಯ ಅಂದಿನ ಸಿಟ್ಟಿಂಗ್ ಶಾಸಕ ನಾಗರಾಜ ಶೆಟ್ಟರಿಗೆ ಕೆ.ಎಂ. ಸ್ಪರ್ಧೆ ಸಾಥ್ ನೀಡಿತ್ತು. ಕೆ.ಎಂ. ಸ್ಪರ್ಧೆ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ್ದರೂ, ನಿರೀಕ್ಷಿತ ಮತಗಳನ್ನು ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ನಾಗರಾಜ ಶೆಟ್ಟರನ್ನು ಅಲ್ಪ ಮತಗಳ ಅಂತರದಲ್ಲಿ ರೈ ಸೋಲಿಸಿದ್ದರು. ಚುನಾವಣೆ ಬಳಿಕ ಕೆ.ಎಂ. ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿ ಕೊಂಡಿರಲಿಲ್ಲ. ಅಂದಿನ ವಿಟ್ಲ ಕ್ಷೇತ್ರದಲ್ಲಿ ಅವರ ಜೊತೆ ಸಕ್ರೀಯವಾಗಿದ್ದ ಹಿರಿಯ ರಾಜಕಾರ ಣಿಗಳಾದ ಬಿ. ಸದಾನಂದ ಪೂಂಜಾ, ಸದಾನಂದ ಮಲ್ಲಿ, ಎ.ಸಿ.ಭಂಡಾರಿ, ಬೊಂಡಾಲ ಜಗನ್ನಾಥ ಶೆಟ್ಟಿ, ಪದ್ಮನಾಭ ರೈ, ಬಾಪು ಕುಂಞ, ಉಸ್ಮಾನ್ ಕರೋಪಾಡಿ ಈಗ ಬಂಟ್ವಾಳ ರಾಜಕಾರಣದಿಂದ ದೂರ ಸರಿದ್ದಾರೆ. ಕೆ.ಎಂ. ವಿಟ್ಲ ಶಾಸಕರಾಗಿದ್ದ ಅವಧಿಯಲ್ಲಿ ಅವರನ್ನು ಹತ್ತಿರ ಬರಮಾಡಿಸಿದವರಲ್ಲಿ ಕೆ.ಎಚ್.ಅಬೂಬಕ್ಕರ್, ಅಶೋಕ್ ಬರಿಮಾರ್, ಖಲೀಲ್ ಅಹಮ್ಮದ್ ಪ್ರಮುಖರು. ಆದರೆ ಇವರೆಲ್ಲರ ಸಖ್ಯ ತೊರೆದ ಇಬ್ರಾಹಿಂ ಇಲ್ಲಿಂದ ಒಂಟಿಯಾಗಿಯೇ ವಲಸೆ ಹೋಗಿದ್ದರು. ಕೇವಲ ಒಂದೇ ಅವಧಿಯಲ್ಲಿ ಶಾಸಕರಾಗಿದ್ದ ಕೆ.ಎಂ. ಇಲ್ಲಿ ಸಂಪಾದಿಸಿದ ಜನಪ್ರಿಯತೆ ಅಪಾರ. ಎಂ.ಎಲ್.ಎ ಉಮ್ಮರಬ್ಬರಂತೆ ಸರ್ವೋಚ್ಛ ಅಲ್ಪಸಂಖ್ಯಾತ ಸಮುದಾಯ ಮುಖಂಡರಾಗಿದ್ದ ಇಬ್ರಾಹಿಂ ಜನ ಸಾಗರದಲ್ಲಿ ಜಾತ್ಯಾತೀತ ರಾಜಕಾರಣಿಯಾಗಿ ಮಿಂಚಿದ್ದರು. ಬಂಟ ಹಾಗೂ ಬ್ರಾಹ್ಮಣ ಸಮಾಜದವರಲ್ಲಿ ಅತ್ಯಂತ ಒಡನಾಟ ಬೆಳೆಸಿಕೊಂಡಿದ್ದರು. ದೇವಳಗಳ ಅಭಿವೃದ್ಧಿಯಲ್ಲಿ ಕಾಳಜಿ ವಹಿಸಿದ್ದ ಅಪರೂಪದ ರಾಜಕಾರಣಿ. ವಿಟ್ಲ ಐಟಿಐ, ನಂದಾವರ ಹೈಸ್ಕೂಲ್, ಸುಜೀರು ಹೈಸ್ಕೂಲ್ ಮಂಜೂರಾತಿ ಸೇರಿದಂತೆ ಸೇತುವೆ, ರಸ್ತೆಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರು. ರಾಜ್ಯ ರಾಜಕಾರಣದಲ್ಲಿ ತನ್ನದೇಯಾದ ಪ್ರಭಾವ ಬೆಳೆಸಿದ್ದ ಕೆ.ಎಂ. ಚತುರ ರಾಜಕಾರಣಿ. ಈ ಮುಖೇನ ರೈಯವರನ್ನು ಎದುರಾಗಿ ಸರಿಸಾಟಿಯಾಗಿ ನಿಂತಿದ್ದರು. ಆದರೆ ಮಾತು ಮನೆ ಕೆಡಿಸೀತೆಂಬ ಗಾದೆಯಂತೆ ಇಬ್ರಾಹಿಂರಿಗೆ ಅವರ ಮಾತೇ ಮೈನಸ್. ತಮ್ಮ ಬಾಲಿಶ ಮಾತು, ವ್ಯಂಗ್ಯ ನುಡಿ, ಡಬಲ್ ಮೀನಿಂಗ್ ಹಾಸ್ಯ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದವು.
ಹಳೆಯ ಸ್ನೇಹಿತರು ಕರೆದಿದ್ದಾರೆ!
ಗೂಂಡೂರಾವ್ ಒಡನಾಟದಿಂದಾಗಿ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ್ದ ಕೆ.ಎಂ. ಇಬ್ರಾಹಿಂ ಮಾಸ್ತರ್ ಕೆ.ಪಿ.ಸಿ.ಸಿ.ಯ ಪ್ರಭಾವಿ ಕಾರ್ಯದರ್ಶಿ ಯಾಗಿದ್ದವರು. ೧೯೯೯ರಲ್ಲಿ ಮೊಟ್ಟ ಮೊದಲು ವಿಧಾನ ಸಭೆಗೆ ಪ್ರವೇಶಿಸಿದ್ದರು. ೨೦೦೪ರಂದು ಮತ್ತೆ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಅವರ ಎದುರು ಸೋಲು ಅನುಭವಿಸಬೇಕಾಯಿತು. ೨೦೦೯ರ ಚುನಾವಣೆ ಸಂದರ್ಭ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋತು ಹೋದವರು ಮತ್ತೆ ರಾಜಕಾರಣದಿಂದ ದೂರವಾಗಿಯೇ ಉಳಿದಿದ್ದರು. ಖಾಸಗಿ ಕಾರ್ಯಕ್ರಮ ಗಳಲ್ಲಿ ಮಾತ್ರ ಆಗೊಮ್ಮೆ-ಹೀಗೊಮ್ಮೆ ಭಾಗವಹಿಸುತ್ತಿದ್ದ ಕೆ.ಎಂ. ಈಗ ಕಾಂಗ್ರೆಸ್ ಸೇರಲು ಮತ್ತೆ ಒಲವು ತೋರಿಸಿದ್ದಾರೆ ಎಂದವರ ಆಪ್ತರು ಹೇಳುತ್ತಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್‌ನ ಹಳೆಯ ಸ್ನೇಹಿತರು ಪಕ್ಷಕ್ಕೆ ಬರುವಂತೆ ಒತ್ತಾಯಿ ಸುತ್ತಿದ್ದಾರೆ. ಕಾರ್ಯಕ್ರಮಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿರ್ಧಾರ ನನಗೂ ಸರಿ ಅಂತ ಕಂಡಿದೆ ಎನ್ನುತ್ತಾರೆ. ಕಾಂಗ್ರೆಸ್ ವರಿಷ್ಠರಾದ ಆಸ್ಕರ್‌ಫೆರ್ನಾಂಡಿಸ್, ಪರಮೇಶ್ವರ್, ಸಿದ್ಧರಾಮಯ್ಯ, ಎಚ್.ವಿಶ್ವನಾಥ್, ಸಿ.ಎಂ.ಇಬ್ರಾಹಿಂ, ಮೈಲಾರ ರವಿ ಮೊದಲಾದವರು ಕೆ.ಎಂ.ಇಬ್ರಾಹಿಂರ ಆಗಮನದ ನಿರೀಕ್ಷೆಯಲ್ಲಿದ್ದಾರೆ.
Tagged with
lnews
ವಿಟ್ಲ: ಹೊಳೆಯಿಂದ ನೇರ ವಾಗಿ ಕಲುಷಿತ ನೀರು ಸರಬ ರಾಜು ಮಾಡಲಾಗುತ್ತಿರುವ ಬಗ್ಗೆ ಇಲ್ಲಿಯ ಪಡ್ನೂರು ಗ್ರಾಮದ ಕಡಂಬು ಜನತಾ ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡಂಬು ಸಮೀಪದ ಬೆದ್ರ ಕಾಡು ಪೆದಮೂಲೆ ಎಂಬಲ್ಲಿಯ ಹೊಳೆಯಲ್ಲಿ ತೆರೆದ ಬಾವಿಯಿಂದ ನೇರ ಶುದ್ಧೀಕರಣ ಮಾಡದೆ ಕಡಂಬು ಪರಿಸರದ ೨೦೦ಕ್ಕಿಂತ ಅಧಿಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ದೂರಿದ್ದಾರೆ. ಪೆದಮೂಲೆ ಹೊಳೆಯಲ್ಲಿ ಸತ್ತ ಪ್ರಾಣಿಗಳು ಬಿದ್ದಂತಹ, ಮನೆಗಳಿಂದ ಬರುವಂತಹ ಶೌಚಾಲಯ ನೀರು, ಕೊಳೆತ ಆಹಾರ ಪದಾರ್ಥಗಳ ಮಿಶ್ರಿತ ನೀರು ಈ ಹೊಳೆಯನ್ನು ಸೇರುತ್ತದೆ. ಇದರಿಂದ ಹೊಳೆ ಕಲುಷಿತಗೊಳ್ಳುತ್ತದೆ. ಇದೇ ನೀರು ತೆರೆದ ಬಾವಿಯ ಮೂಲಕ ಕಡಂಬು ಪರಿಸರದ ಜನರ ಉಪಯೋಗಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೆ ಸಜ್ಜು: ಕಲುಷಿತ ನೀರು ಸರಬರಾಜು ಆಗುವುದರ ವಿರುದ್ಧ ಸಂಬಂಧಪಟ್ಟವರು ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ‍್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.
Tagged with
lnews
ಮಂಗಳೂರು: ೨೦೧೧-೧೨ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಶ್ರೇಷ್ಠ ಪ್ರಾದೇಶಿಕ ಚಿತ್ರವಾಗಿ ಕಂಚಿಲ್ದ ಬಾಲೆಗೆ ಪ್ರಶಸ್ತಿ ಲಭಿಸಿದೆ. ಈ ನಡುವೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದ 'ದೇವೆರ್ ಚಿತ್ರವನ್ನು ಕಡೆಗಣಿಸಿರುವುದು ತುಳುವರಲ್ಲಿ ನಿರಾಸೆ ಮೂಡಿಸಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿಗಾಗಿ ಪ್ರಾದೇಶಿಕ ಚಿತ್ರಗಳ ಸಾಲಿನಲ್ಲಿ 'ಸ್ವರ್ಣಕಮಲ ಪ್ರಶಸ್ತಿ ಪಡೆದಿರುವ 'ಬ್ಯಾರಿ, ಕೊಡವ ಚಿತ್ರ 'ನಾ ಪುಟ್ಟಿ ಮಣ್ಣ್, 'ದೇವೆರ್, 'ಕಂಚಿಲ್ದ ಬಾಲೆ ಚಿತ್ರಗಳು ಅಂತಿಮ ಹಂತದವರೆಗೆ ಸ್ಪರ್ಧೆಯಲ್ಲಿದ್ದು, ಕೊನೆಯದಾಗಿ ದೇವೆರ್ ಹಾಗೂ ನಾ ಪುಟ್ಟಿ ಮಣ್ಣ್ ಚಿತ್ರಕ್ಕೆ ಪ್ರಾದೇಶಿಕ ಭಾಷಾ ಚಿತ್ರ ನೆಲೆಯಲ್ಲಿ ಪ್ರಶಸ್ತಿ ನೀಡುವ ತೀರ್ಮಾನಕ್ಕೆ ಆಯ್ಕೆ ಸಮಿತಿ ಬಂದಿ ತ್ತಾದರೂ ಕೊನೆಘಳಿಗೆಯಲ್ಲಿ ನಡೆದ ರಾಜಕೀಯದ ಬೆಳವಣಿಗೆಯಲ್ಲಿ ಕಂಚಿಲ್ದ ಬಾಲೆ ಚಿತ್ರವನ್ನು ತೀರ್ಪುಗಾರರು ಉತ್ತಮ ಪ್ರಾದೇಶಿಕ ಭಾಷಾ ಚಿತ್ರವೆಂದು ಆಯ್ಕೆ ಮಾಡಿದ್ದರು. ಪತ್ರಕರ್ತ ಈಶ್ವರ ದೈತೋಟ ಅವರು, ಯಾರಿಗೆ ಬೇಕಾ ದರೂ ಪ್ರಶಸ್ತಿ ನೀಡಿ, ಆದರೆ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ಮಾತ್ರ ಕಂಚಿಲ್ದ ಬಾಲೆಗೆ ನೀಡಿ ಎಂದಿರುವುದು ಆಯ್ಕೆ ಸಮಿತಿಯಲ್ಲಿ ಗೊಂದಲಕ್ಕೆ ಕಾರಣ ವಾಗಿದೆ.
ಇದು ಪ್ರಾದೇಶಿಕ ಭಾಷಾ ಚಿತ್ರದ ವಿಷಯದಲ್ಲಾದರೆ ಇನ್ನು ರಾಜ್ಯ ಚಲನ ಚಿತ್ರ ಪ್ರಶಸ್ತಿಯಲ್ಲೂ ಭಾರೀ ಲಾಬಿ ನಡೆದಿದೆ ಎಂದು ಹೇಳಲಾಗಿದೆ. ಆಯ್ಕೆ ಸಮಿತಿಯಲ್ಲಿದ್ದ ಭಾರತಿ ವಿಷ್ಣುವರ್ಧನ್ ಅವರು, ತನ್ನ ಆಪ್ತರನ್ನೇ ಪ್ರಶಸ್ತಿಗಾಗಿ ಗುರುತಿಸಿರುವುದು ಭಾರೀ ಟೀಕೆಗೆ ಗುರಿ ಯಾಗಿದೆ. ದಿವಂಗತ ವಿಷ್ಣುವರ್ಧನ್ ಅವರ ಸಹಚರರೆಂದೇ ಗುರುತಿಸಿಕೊಂಡಿದ್ದ ಅಂಬರೀಶ್‌ಗೆ ವಿಷ್ಣು-ವರ್ಧನ್ ಪ್ರಶಸ್ತಿ, ಶಿವರಾಂ ಅವರಿಗೆ ಡಾ.ರಾಜ್ ಪ್ರಶಸ್ತಿ, ರಮೇಶ್ ಭಟ್‌ಗೆ ಉತ್ತಮ ಪೋಷಕ ಪ್ರಶಸ್ತಿ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 'ಪೃಥ್ವಿ ಸಿನಿಮಾ ಗಣಿ ಹಗರಣದ ಕುರಿತ ಸಿನಿಮಾ ಆಗಿದ್ದರೂ, ನಟ ಪುನೀತ್‌ಗೆ ಉತ್ತಮ ನಟ ಪ್ರಶಸ್ತಿ ಕೊಟ್ಟು, 'ಸೂಪರ್ಗೆ ಉತ್ತಮ ಸಿನಿಮಾ ಪ್ರಶಸ್ತಿ ನೀಡಿರು ವುದರ ಹಿಂದೆಯೂ ಇಂಥದ್ದೇ ರಾಜಕೀಯ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ತುಳುವಿನ ಬಹುನಿರೀಕ್ಷೆಯ ಚಿತ್ರ ಕಂಚಿಲ್ದಬಾಲೆಯಲ್ಲಿ ಪೌರ ಕಾರ್ಮಿಕರ ಬದುಕಿನ ಸ್ಪಷ್ಟ ಚಿತ್ರಣವಿದ್ದು, ಪತ್ರಕರ್ತ ಸುಧಾಕರ ಬನ್ನಂಜೆಯವರು ಪ್ರತೀ ದೃಶ್ಯವನ್ನು ನಿರ್ದೇಶಿಸು-ಗಲೂ ಕಲಾ ತ್ಮಕತೆಗೆ ಒತ್ತು ನೀಡಿದ್ದರು. ಸಾಮಾಜಿಕ ಸಂದೇಶವನ್ನು ಬೀರುವಲ್ಲಿ ಕಂಚಿಲ್ದ ಬಾಲೆಗಿಂತ ಒಂದು ಪಟ್ಟು ಮುಂದೆ ಇದ್ದರೂ ಕಾಣದ ಕೈಗಳು ಪ್ರಭಾವ ಬಳಸಿಕೊಂಡು ದೇವೆರ್‌ಗೆ ಅನ್ಯಾಯ ಆಗುವಲ್ಲಿ ನೋಡಿಕೊಂಡರು ಎಂಬ ಆರೋಪ ಕೇಳಿಬಂದಿದೆ.
ರಘುನಾಥ್ ರೈ ಕುಂಬ್ರರವರ ಕಂಚಿಲ್ದ ಬಾಲೆಯಲ್ಲಿ ಮುತ್ತಪ್ಪ ರೈ ಅಭಿನಯಿಸಿರುವುದು ಮತ್ತು ಮುಖ್ಯ ಮಂತ್ರಿ ಸದಾನಂದ-ಗೌಡರ ಕ್ಲಾಸ್ ಮೇಟ್ ಆಗಿರುವುದು ಮಾತ್ರವಲ್ಲದೆ ರಘುನಾಥ್ ರೈ ಅವರು ಮುತ್ತಪ್ಪ ರೈ ಅವರಿಗೆ ಸಂಬಂಧಿ ಹಾಗೂ ಮುಖ್ಯ ಮಂತ್ರಿ ಯವರ ಹುಟ್ಟೂರಿನವರಾಗಿರು ವುದು ಪ್ರಶಸ್ತಿ ಪಡೆಯುವಲ್ಲಿ ಲಾಬಿ ನಡೆಯಲು ಕಾರಣಗಳಾಗಿರಬಹುದೇ ಎಂದು ತುಳು ಸಿನಿಪ್ರಿಯರು ಲೆಕ್ಕ ಹಾಕುತ್ತಿದ್ದಾರೆ. ಪ್ರಶಸ್ತಿ ವಂಚಿತ ಸಿನಿಮಾ ದೇವೆರ್ ನಿರ್ದೇಶಕ ಸುಧಾಕರ ಬನ್ನಂಜೆ ಅವರಲ್ಲಿ ಅಭಿಪ್ರಾಯ ಕೇಳಲು ಪತ್ರಿಕೆ ಸಂಪರ್ಕಿಸಿದಾಗ, 'ನಾವು ಈ ಬಗ್ಗೆ ಚರ್ಚೆ ಮಾಡದಿರುವುದೇ ಒಳ್ಳೆ ಯದು, ನಮ್ಮ ನಿರ್ಮಾಪಕರು ಪ್ರಶಸ್ತಿ ಗಾಗಿ ಲಾಬಿ ನಡೆಸುವಷ್ಟು ಸಿನಿಮಾ ಉದ್ಯಮದಲ್ಲಿ ಬೆಳೆದಿಲ್ಲ. ತುಳುವಿನಲ್ಲಿ ಒಳ್ಳೆಯ ಸಿನಿಮಾ ಮಾಡಿರುವ ಆತ್ಮತೃಪ್ತಿ ನನಗಿದೆ. ಪತ್ರಿಕೆಗಳು ಮತ್ತು ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿ ಪ್ರೋತ್ಸಾಹಿಸಿರುವುದೇ ನನಗೆ ಪ್ರಶಸ್ತಿಯಿದ್ದಂತೆ' ಎಂದಿದ್ದಾರೆ.
ಉತ್ತಮ ಚಿತ್ರಕ್ಕೆ ಮನ್ನಣೆಯಿಲ್ಲ: ಶಿವಧ್ವಜ್
ಪ್ರಾದೇಶಿಕ ಭಾಷಾ ಚಿತ್ರ ನಿರ್ಮಿಸಿ ಪ್ರಶಸ್ತಿ ಬರುತ್ತದೆ ಎಂದು ಕಾಯುವುದು ತಪ್ಪು. ನೀವು ಒಳ್ಳೆಯ ಸಿನಿಮಾ ಮಾಡಿ, ಆದರೆ ಇಲ್ಲಿ ಎಲ್ಲದಕ್ಕೂ ಇನ್‌ಫ್ಲುಯೆನ್ಸ್ ಬೇಕು. ಗಗ್ಗರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂತು. ಆದರೆ ರಾಜ್ಯಪ್ರಶಸ್ತಿ ಬರಲಿಲ್ಲ. ಕೊಡವ ಭಾಷೆಯಲ್ಲಿ ತಯಾರಾದ ನಾ ಪುಟ್ಟಿ ಮಣ್ಣ್ ಉತ್ತಮ ಕಥೆ, ತಂತ್ರeನ, ಸಾಮಾಜಿಕ ಸಂದೇಶ ಎಲ್ಲವನ್ನೂ ಹೊಂದಿದ್ದರೂ ಪ್ರಶಸ್ತಿ ಯಿಂದ ವಂಚಿಸಲ್ಪಟ್ಟಿತು. ಒಳ್ಳೆಯ ಸಿನಿಮಾ ಮಾಡಿದಾಗ ಪ್ರಶಸ್ತಿ ಬಾರದೇ ಇದ್ದಾಗ ನಿರಾಶೆಯಾಗು ವುದು ಸಹಜ. ಪ್ರಶಸ್ತಿ ಬರುತ್ತದೆಂದು ನಿರೀಕ್ಷೆ ಇರಿಸದೆ ಸಿನಿಮಾ ಮಾಡಬೇ ಕಾಗಿದೆ ಎಂದು 'ಗಗ್ಗರ ಖ್ಯಾತಿಯ ನಟ-ನಿರ್ದೇಶಕ ಶಿವಧ್ವಜ್ ಅಭಿಪ್ರಾಯಪಡುತ್ತಾರೆ.
Tagged with
cnnews,
dever,
lnews

ಮಣಿಪಾಲ: ಉಡುಪಿ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕಲ್ಯಾಣಪುರ ನೇಜಾರು ಮೈದಾನದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರ ಅನುಪಸ್ಥಿತಿ ಸಂಘಟಕರ ಬೇಜವಾಬ್ದಾರಿಯನ್ನು ಎದ್ದು ತೋರಿಸಿತು.
ಉಡುಪಿ, ಕಾರ್ಕಳ ಹಾಗೂ ಕುಂದಾಪುರ ಮೂರು ತಾಲೂಕು ಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕಲಾವಿದರಿಗೆ ಈ ಜಿಲ್ಲಾ ಯುವಜನ ಮೇಳದಲ್ಲಿ ಭಾಗವಹಿಸುವ ಅವಕಾಶ ವಿತ್ತು. ಆದರೆ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸರಿಯಾದ ಪ್ರಚಾರವನ್ನು ಮಾಡದೇ ಇರುವುದರಿಂದ ಕಾರ್ಯಕ್ರಮ ನೀರಸವಾಗಿ ನಡೆದಿರುವ ಆರೋಪ ಕೇಳಿಬಂದಿದೆ. ಅಲ್ಲದೆ ಸರಕಾರದಿಂದ ಮೇಳಕ್ಕಾಗಿ ಬಂದಿರುವ ಹಣವನ್ನು ಪೋಲು ಮಾಡಿರುವುದು ಇದು ಸಾಕ್ಷಿ ಯಾಗಿದೆ. ಪ್ರಚಾರದ ಕೊರತೆಯಿಂದಾಗಿ ಹಲವು ಕಲಾವಿದರಿಗೆ ಬರಲು ಸಾಧ್ಯವಾಗಲಿಲ್ಲವೆಂದು ನೆರೆದ ಕಲಾವಿದರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಸರಕಾರದಿಂದ ಯುವಕ-ಯುವತಿ ಸಂಘಗಳಿಗೆ ಬರುವ ಅನುದಾನವನ್ನು ಸರಿಯಾಗಿ ನೀಡುವ ಅಧಿಕಾರಿಗಳು ಕಮೀಷನ್ ಆಸೆಗಾಗಿ ಈ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತಾರೆ. ಆದರೆ ಮೇಳದಂತಹ ಕಾರ್ಯಕ್ರಮದಲ್ಲಿ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇಜವಾ ಬ್ದಾರಿಯಿಂದ ವರ್ತಿಸುತ್ತಿದ್ದಾರೆಂಬುದು ಕಲಾವಿದರ ಆರೋಪವಾಗಿದೆ.
Tagged with
lnews
ಸುಳ್ಯ: ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ರಕ್ಷಿತಾರಣ್ಯಕ್ಕೆ ಶುಕ್ರವಾರ ಸಂಜೆ ಬೆಂಕಿ ಬಿದ್ದು ಸುಮಾರು ೫೦ ಎಕರೆ ಪ್ರದೇಶದಲ್ಲಿದ್ದ ಬೆಲೆ ಬಾಳುವ ಮರಗಳು ಸುಟ್ಟು ಹೋಗಿವೆ.
ಬೆಂಕಿ ಹರಡುತ್ತಿದ್ದಂತೆ ಮಳೆ ಕೂಡಾ ಸುರಿಯಲಾರಂ ಬಿಸಿದ್ದು, ಬಳಿಕ ಸುಮಾರು ಒಂದು ಗಂಟೆ ಕಾಲ ಬಿರುಸಿನ ಮಳೆಯಾಗಿದೆ. ಹಾಗಾಗಿ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ. ಸುಳ್ಯದಿಂದ ಅಗ್ನಿಶಾಮಕ ವಾಹನ ಅಲ್ಲಿ ತಲುಪಿ ದಾಗ ಬೆಂಕಿ ಸಂಪೂರ್ಣ ಆರಿಹೋಗಿತ್ತು. ತಾಲೂಕಿ ನಾದ್ಯಂತ ಗುಡುಗು ಸಹಿತ ಮಳೆ ಬಂದಿದ್ದು, ತಂಪೆರೆದಿದೆ.
Tagged with
lnews
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕೆ ಒಂದು ಸವಾಲಿನ ಕೆಲಸ. ಅದೂ ಕೂಡ ಪಕ್ಷದಲ್ಲಿಯೇ ಒಡಕು ಮೂಡಿರುವ ಹೊತ್ತಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದು ಸುಲಭದ ಮಾತಾಗುವುದಿಲ್ಲ. ಜತೆಗೆ ನಾಯಕತ್ವವೂ ದುರ್ಬಲವಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಸರಕಾರಕ್ಕೆ ಈಗ ವಿಪಕ್ಷಕ್ಕಿಂತ ಪಕ್ಷದಲ್ಲಿಯೇ ಇರುವ ವಿಪಕ್ಷೀಯರ ಸಮಸ್ಯೆ ಅಪಾಯಕಾರಿ ಯಾಗಿದೆ.
ರಾಜ್ಯ ಬಿಜೆಪಿಯಲ್ಲಿ ಎಂಥ ಬೆಳವಣಿಗೆಗಳಾಗುತ್ತಿವೆ, ಪರಿಣಾಮ ಹೇಗಿರಬಹುದು ಇತ್ಯಾದಿಗಳನ್ನು ಊಹಿ ಸಿಕೊಳ್ಳುವುದು ಯಾವ ರಾಜಕೀಯ ಪಂಡಿತರಿಗೂ ಸುಲಭದ ಮಾತಲ್ಲ. ರಾಜ್ಯದಲ್ಲಿ ಈಗ ಸರಕಾರ ಯಾವುದು, ವಿಪಕ್ಷ ಯಾವುದು, ಭಿನ್ನರು ಯಾರು, ನಿಷ್ಠರು ಯಾರು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಪ್ರಕೃತಿಯೂ ಮುನಿದಿದೆ. ಬರಗಾಲ ತಾಂಡವವಾಡು ತ್ತಿದೆ. ಉತ್ತರ ಕರ್ನಾಟಕದ ಸಾಮಾನ್ಯ ಜನರು ಕುಡಿಯಲು ನೀರಿಲ್ಲದೆ ಗಂಟಲು ಒಣಗಿಸುತ್ತಿದ್ದಾರೆ. ಇದರ ಬಗ್ಗೆ ಸರಕಾರಕ್ಕೆ ಗಂಭೀರವಾದ ಕಾಳಜಿಯೇನೂ ಇದ್ದಂತೆ ತೋರುತ್ತಿಲ್ಲ. ಸರಕಾರ ಏನಾದರೂ ಮಾಡಲು ಹೊರಟಿದ್ದರೆ ಅದು ಮಾಧ್ಯಮದ ಶ್ರಮದಿಂದಾಗಿ.
ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತಿರುವುದು ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಎರಡು ಗುಂಪು. ಒಬ್ಬರ ಕೈಯಲ್ಲಿ ಅಧಿಕಾರವಿದೆ, ಮತ್ತೊಬ್ಬರಲ್ಲಿ ಅಧಿಕಾರವಿಲ್ಲ. ವಿಪಕ್ಷ ಕಾಂಗ್ರೆಸ್ ಕೂಡ ಬರದ ವಿಷಯದಲ್ಲಿ ಪ್ರವಾಸ ಕೈಗೊಂಡಿದೆ, ತಮ್ಮ ಅಧಿನಾಯಕಿ ಸೋನಿಯಾ ಗಾಂಧಿಯನ್ನೂ ಭೇಟಿಯಾಗಿ ಕಾಳಜಿ ತೋರಿಸುವ ಪ್ರಯತ್ನ ಮಾಡಿದೆ. ಆದರೆ ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಈ ಬರ ಸಮಸ್ಯೆಯನ್ನು ತಾನು ರಾಜಕೀಯವಾಗಿ ಬಳಸಿಕೊಂಡು ಎಷ್ಟು ಲಾಭ ಮಾಡಿಕೊಳ್ಳಲಿದೆ ಎಂಬುದು ಸುಲಭದಲ್ಲಿ ಉತ್ತರಿಸಲಾಗದ ಪ್ರಶ್ನೆ. ಯಾಕೆಂದರೆ ಬಿಜೆಪಿ ಸರಕಾರದ ಹೆಚ್ಚಿನ ದೌರ್ಬಲ್ಯವನ್ನೂ ಎನ್‌ಕ್ಯಾಶ್ ಮಾಡಲು ಕಾಂಗ್ರೆಸ್ ಇದುವರೆಗೆ ವಿಫಲವಾದದ್ದೇ ಹೆಚ್ಚು. ಹಾಗಿರುವಾಗ ಬರ ವಿಷಯದಲ್ಲಿ ಅದು ಏನು ಮಾಡುತ್ತದೋ ಹೇಳ ತೀರದು. ಹವಾನಿಯಂತ್ರಿತ ಕೊಠಡಿ ಯೊಳಗೆ ಕುಳಿತು ಮಾತಾಡಿದ ಮಾತ್ರಕ್ಕೆ ಬರ ಸಮಸ್ಯೆ ಪರಿಹಾರವಾಗದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರು ಹೇಳಿದ್ದಾರೆ. ಬಹುಶಃ ಇವರಿಗೆ ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಅವರ ಒಂದು ಹೇಳಿಕೆ ಪ್ರೇರಣೆ ನೀಡಿರಬೇಕು. ಪವಾರ್ ಅವರು ಮಹಾರಾಷ್ಟ್ರದಲ್ಲಿ ಕಂಡು ಬಂದಿರುವ ಬರ ಸಮಸ್ಯೆ ಬಗ್ಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧವೇ ದನಿ ಎತ್ತಿದ್ದಾರೆ. ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಮರದ ಕೆಳಗೆ ಕುಳಿತು ಕೃಷಿಕರೊಂದಿಗೆ ಊಟ ಮಾಡಿದ ಮಾತ್ರಕ್ಕೆ ಬರ ಸಮಸ್ಯೆ ನೀಗದು ಎಂದು ಪವಾರ್ ಒಂದು ಘಟನೆಯನ್ನು ಆಧರಿಸಿ ಹೇಳಿದ್ದಾರೆ. ಅದೇ ರೀತಿಯ ಹೇಳಿಕೆಯನ್ನು ಕರ್ನಾಟಕದಲ್ಲಿ ಪರಮೇಶ್ವರ್ ಅವರು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ದುರ್ಬಲ ನಾಯಕರೆಂದೇ ಜನಜನಿತರಾಗಿದ್ದಾರೆ. ಬರ ಸಮಸ್ಯೆ ಯಿಂದ ಕಾಂಗ್ರೆಸ್ ಲಾಭ ಮಾಡಿ ಕೊಳ್ಳುತ್ತದೋ, ನಷ್ಟ ಅನುಭವಿಸು ತ್ತದೋ ಎಂಬುದಕ್ಕಿಂತಲೂ, ಆ ಸಮಸ್ಯೆಯಿಂದಾಗಿ ಕರ್ನಾಟಕದ ಬಿಜೆಪಿಯಲ್ಲಿ ಮಾತ್ರ ಬದಲಾವಣೆ ಆಗುತ್ತದೆ ಎಂಬುದು ನಿಸ್ಸಂಶಯ. ಇತ್ತ ಒಂದೇ ಪಕ್ಷದ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿಗಳೂ ಬರ ಸಮೀಕ್ಷೆಗೆ ಪ್ರತ್ಯೇಕವಾಗಿ ತೆರಳಿದ್ದಾರೆ. ಯಡಿಯೂರಪ್ಪ ಅವರು ತನ್ನದೇ ಪಕ್ಷದ ಮುಖ್ಯಮಂತ್ರಿ, ತನ್ನ ಕಡುವೈರಿ ಎಂದು ಭಾವಿಸಿಕೊಂಡಿರುವ ಸದಾನಂದ ಗೌಡರ ವಿರುದ್ಧ ಟೀಕೆ ಆರಂಭಿಸಿದ್ದಾರೆ. ಸರಕಾರ ಬರ ಸಮಸ್ಯೆಯನ್ನು ಸರಿ ಯಾಗಿ ನಿಭಾಯಿಸುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಬರ ಸಮೀಕ್ಷೆಗೆ ಹೊರಡುವ ಮೂಲಕ ಅವರು ಅಧಿಕಾರ ಪಡೆಯುವ ನೇರ ಪ್ರಯತ್ನಕ್ಕೆ ಸಣ್ಣ ಬ್ರೇಕ್ ಹಾಕಿದಂತಿದೆ. ಆದರೆ ನಿಜಾರ್ಥದಲ್ಲಿ ಅವರ ಬರ ಸಮೀಕ್ಷೆಯು ಮತ್ತೊಂದು ರೀತಿಯಲ್ಲಿ ನಡೆಸುವ ಅಧಿಕಾರ ಪಡೆಯುವ ಯತ್ನ ಎಂದು ವಿಶ್ಲೇಷಿಸಬೇಕಾಗುತ್ತದೆ.
ಯಡಿಯೂರಪ್ಪ ಬರ ಸಮೀಕ್ಷೆಗೆ ತೆರಳಿ ಬರಪೀಡಿತರಿಗೆ ಏನು ಸಹಾಯ ಮಾಡುತ್ತಾರೋ ಅವರಿಗೇ ಗೊತ್ತು. ಯಾಕೆಂದರೆ ಅವರಲ್ಲಿ ಯಾವುದೇ ಅಧಿಕಾರ ಇಲ್ಲ. ಕಾಂಗ್ರೆಸ್‌ನವರಿಗಾದರೆ ಹೇಳಲಿಕ್ಕೆ ಕೇಂದ್ರದಲ್ಲೊಂದು ಅಧಿಕಾರ ಇದೆ. ಅಲ್ಲಿಂದಾದರೂ ಏನಾದರೂ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಲು ಅವಕಾಶ ಇದೆ. ಆದರೆ ಹಾಗೆ ಮಾಡುವ ಸಾಧ್ಯತೆ ಕಡಿಮೆ. ಕೇಂದ್ರದ ಸಹಾಯ ಸಿಕ್ಕಿದರೂ ಅದು ರಾಜ್ಯ ಸರಕಾರದ ಮೂಲಕವೇ ಜನರಿಗೆ ತಲುಪಬೇಕು. ಹಾಗೆ ಮಾಡಲು ಕಾಂಗ್ರೆಸ್ ಒಪ್ಪಲಿಕ್ಕಿಲ್ಲ. ಇದರಿಂದ ತಮಗೆ ಲಾಭವಾಗುವುದಕ್ಕಿಂತ ಬಿಜೆಪಿಗೆ ಲಾಭವಾದೀತು ಎಂಬ ಭಯ ಅವರಲ್ಲಿರಬಹುದು. ಆದರೂ ತಾವು ಅವರನ್ನು ಭೇಟಿಯಾಗಿದ್ದೇವೆ, ಕೇಂದ್ರ ದಿಂದ ಇಷ್ಟು ಬಿಡುಗಡೆ ಮಾಡಿಸಿದ್ದೇವೆ, ರಾಜ್ಯ ಸರಕಾರ ನುಂಗಿದೆ....ಹೀಗೆಲ್ಲ ಹೇಳಬಹುದು. ಆದರೆ ಯಡಿ ಯೂರಪ್ಪ ಏನು ಮಾಡಲು ಸಾಧ್ಯ? ಅವರು ತನ್ನದೇ ಸರಕಾರವನ್ನು ದೂಷಿಸಬಹುದು. ಸಮಸ್ಯೆಯನ್ನು ಮತ್ತಷ್ಟು ವೈಭವೀಕರಿಸಬಹುದು. ತಾನು ಅಧಿಕಾರದಲ್ಲಿಲ್ಲದ ಕಾರಣ ಬರ ಸಮಸ್ಯೆ ಭೀಕರ ರೂಪ ತಾಳಿದೆ, ಸರಕಾರ ನಿಷ್ಕ್ರಿಯವಾಗಿದೆ, ಸಮಸ್ಯೆ ನಿಭಾಯಿಸು ವಲ್ಲಿ ಸಂಪೂರ್ಣ ಸೋತಿದೆ ಎಂಬಂಥ ಚಿತ್ರಣ ಮೂಡಿಸಲು ಶ್ರಮಿಸ ಬಹುದು. ಇದರ ಮೂಲಕವಾದರೂ ಕೇಂದ್ರದ ಬಿಜೆಪಿ ನಾಯಕರ ಅನುಗ್ರಹ ಪ್ರಾಪ್ತಿಯಾಗುತ್ತದೋ ಎಂದು ಪರೀಕ್ಷಿಸಿ ನೋಡಬಹುದಷ್ಟೆ.
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸುವುದು ಸರಕಾರಕ್ಕೆ ಒಂದು ಸವಾಲಿನ ಕೆಲಸ. ಅದೂ ಕೂಡ ಪಕ್ಷದಲ್ಲಿಯೇ ಒಡಕು ಮೂಡಿರುವ ಹೊತ್ತಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವುದು ಸುಲಭದ ಮಾತಾಗುವುದಿಲ್ಲ. ಜತೆಗೆ ನಾಯ ಕತ್ವವೂ ದುರ್ಬಲವಾದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಸರಕಾರಕ್ಕೆ ಈಗ ವಿಪಕ್ಷಕ್ಕಿಂತ ಪಕ್ಷದಲ್ಲಿಯೇ ಇರುವ ವಿಪಕ್ಷೀಯರ ಸಮಸ್ಯೆ ಅಪಾಯಕಾರಿ ಯಾಗಿದೆ. ವಿಪಕ್ಷದ ಟೀಕೆಗಾದರೂ ಜನ ಸುಮ್ಮನಿದ್ದಾರು, ಆದರೆ ಸರಕಾರದ ಪಕ್ಷದವರೇ ನಡೆಸುವ ಟೀಕೆ ಜನರ ಮೇಲೆ ಬೀರುವ ಪರಿಣಾಮದ ಪ್ರಭಾವ ಸರಕಾರದ ಮೇಲೂ ಆಗದು ಎಂದು ಹೇಳುವುದು ಅಸಾಧ್ಯ. ಹಾಗಿರುವಾಗ ಸರಕಾರ ಯಾವ ಕ್ರಮ ಕೈಗೊಂಡರೂ ಅದು ಪರಿಪೂರ್ಣವಾಗದು. ಏನಿದ್ದರೂ ಜನರಿಗೆ ನೀರು ಒದಗಿಸಿದಾಗ, ಅಥವಾ ಪರ್ಯಾಯ ಮಾರ್ಗದ ಮೂಲಕ ಅವರ ಸಮಸ್ಯೆಯನ್ನು ದುರ್ಬಲ ಗೊಳಿಸಿದಾಗ ಮಾತ್ರ ಸರಕಾರದ ಮೇಲೆ ಜನರಿಗೆ ವಿಶ್ವಾಸ ಮೂಡೀತು. ಒಟ್ಟಿನಲ್ಲಿ ಈಗ ಎದುರಾಗಿರುವ ಬರ ಪರಿಸ್ಥಿ ತಿಯು ಕರ್ನಾಟಕದ ಬಿಜೆಪಿಗೆ ನುಂಗ ಲಾರದ ತುಪ್ಪದಂತಾಗಿದೆ ಎಂಬು ದಂತೂ ನಿರ್ವಿವಾದ ಸಂಗತಿ.
Tagged with
vishleshane
ಪುತ್ತೂರು: ಪುತ್ತೂರು ರೈಲ್ವೇ ಸ್ಟೇಷನ್‌ನಲ್ಲಿನ ಕಮರ್ಷಿಯಲ್ ಕ್ಲರ್ಕ್ ಸೇವೆಗೆ ಲಭ್ಯರಿಲ್ಲದ ಕಾರಣ ಟಿಕೇಟ್ ಕಾದಿರಿಸಲು ಮತ್ತು ರದ್ದು ಪಡಿಸಲು ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ರೈಲ್ವೇ ಸ್ಟೇಷನ್‌ನ ಟಿಕೇಟ್ ಬುಕ್ಕಿಂಗ್ ಕಚೇರಿಯಲ್ಲಿ ಕಮರ್ಷಿ ಯಲ್ ಕ್ಲರ್ಕ್ ನಾಟ್ ಅವೈಲೇಬಲ್. ನೋ ರಿಸರ್ವೇಶನ್ ನೋ ಕ್ಯಾನ್ಸ್ ಲೇಶನ್ ಎಂದು ಬೋರ್ಡು ಹಾಕಲಾ ಗಿದ್ದು, ಇದರಿಂದಾಗಿ ಟಿಕೇಟ್ ಖರೀದಿ ಮತ್ತು ರದ್ದು ಪಡಿಸುವಿಕೆಗಾಗಿ ಬಂದ ಪ್ರಯಾಣಿಕರು ಬರಿಗೈಲಿ ಹಿಂದಿರುಗ ಬೇಕಾದ ಪರಿಸ್ಥಿತಿ ಬಂದಿದೆ.
ಇಲ್ಲಿ ಚರಣ್ ಎಂಬವರು ಕಮರ್ಷಿ ಯಲ್ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿ ಸುತ್ತಿದ್ದು ಕಳೆದ ಎರಡು ದಿನಗಳಿಂದ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಗುರು ವಾರ ಟಿಕೇಟ್ ಕಾದಿರಿಸಲು ಬಂದಿದ್ದ ಪ್ರಯಾಣಿಕರಲ್ಲಿ ಸ್ಟೇಷನ್ ಅಧಿಕಾರಿಗಳು ಕಮರ್ಷಿಯಲ್ ಕ್ಲರ್ಕ್ ಇಂದು ರಜೆ ನಾಳೆ ಬರುತ್ತಾರೆ ಎಂದು ಹೇಳಿದ್ದರು. ಆದರೆ ಶುಕ್ರವಾರವೂ ಅವರು ಕರ್ತವ್ಯಕ್ಕೆ ಆಗಮಿಸಿರಲಿಲ್ಲ. ಅವರು ಅಧಿಕೃತ ರಜೆಯಲ್ಲಿದ್ದಾರೋ ಅಥವಾ ಅನಧಿ ಕೃತವಾಗಿ ಗೈರು ಹಾಜರಾಗಿದ್ದಾರೆಯೋ ಎಂಬ ಬಗ್ಗೆಯೂ ಪ್ರಯಾಣಿಕರಿಗೆ ಸ್ಪಷ್ಟ ವಾಗಿರಲಿಲ್ಲ. ಈ ಬಗ್ಗೆ ಅಧಿಕಾರಿ ಗಳಲ್ಲಿ ಪ್ರಶ್ನಿಸಿದಾಗ ಈ ಬಗ್ಗೆ ನಮಗೆ ಯಾವು ದೇ ಮಾಹಿತಿ ಇಲ್ಲ. ನೀವು ಹತ್ತಿರದ ರೈಲ್ವೇ ಸ್ಟೇಷನ್‌ಗೆ ಹೋಗಿ ಟಿಕೇಟ್ ಬುಕ್ಕಿಂಗ್ ಮಾಡಿಸಿಕೊಳ್ಳಿ ಎಂದು ನಮಗೆ ಪುಕ್ಕಟೆ ಸಲಹೆ ನೀಡು ತ್ತಿದ್ದಾರೆ ಎಂದು ಟಿಕೆಟ್ ಬುಕ್ಕಿಂಗ್ ಮತ್ತು ರದ್ದು ಪಡಿಸಲು ಆಗಮಿಸಿದ ರೈಲ್ವೇ ಪ್ರಯಾ ಣಿಕರು ಆರೋಪಿ ಸಿದ್ದಾರೆ. ರೈಲ್ವೇ ಇಲಾ ಖೆಯ ಈ ಅವ್ಯವಸ್ಥೆಯಿಂದಾಗಿ ರೈಲ್ವೇ ಪ್ರಯಾ ಣಿಕರು ಅಲೆ ದಾಡುವಂತಾಗಿದೆ.
Tagged with
lnews
ಮಂಗಳೂರು: ನಗರದ ಕೆಪಿಟಿ ಸಮೀಪದ ವ್ಯಾಸನಗರದ ಬಳಿ ಡ್ರೈನೇಜ್ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ವ್ಯಾಸನಗರದ ಎತ್ತರ ಪ್ರದೇಶದಲ್ಲಿ ೩೦ ಹಂತಸ್ತಿನ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು ಇಲ್ಲಿ ಡ್ರೈನೇಜ್ ನೀರು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಡ್ರೈನೇಜ್ ನೀರಿನ ಸಮಸ್ಯೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Tagged with
lnews
ಭಾರೀ ಡಿಸ್ಕೌಂಟ್‌ನಲ್ಲಿ ಟಿ.ವಿ. ಫ್ರಿಡ್ಜ್ ಮಾರಾಟ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಎಂಬಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಕಂಪೆನಿಯೊಂದು ಶೇ.೫೦ರಷ್ಟು ಡಿಸ್ಕೌಂಟ್‌ನಲ್ಲಿ ಗೃಹಬಳಕೆ ವಸ್ತುಗಳಾದ ಟಿ.ವಿ., ಫ್ರಿಡ್ಜ್ ಮಾರಾಟ ಮಾಡುತ್ತಿರುವುದು ಸ್ಥಳೀಯರು ಶಂಕೆ ಪಡುವಂತಾಗಿದೆ. ಕೆಲವರು ಇದೊಂದು ಬ್ಲೇಡ್ ಕಂಪೆನಿ ಎಂಬ ತೀರ್ಮಾನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ಕೊಡಲು ಸಿದ್ಧತೆ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ತಮಿಳ್ನಾಡು ಮೂಲದ ವ್ಯಕ್ತಿಗಳು ಮನಪಾಕ್ಕೆ ಸೇರಿದ ಕಟ್ಟಡದಲ್ಲಿ ಮೂರು ಅಂಗಡಿಗಳನ್ನು ಬಾಡಿಗೆಗೆ ಪಡೆದುಕೊಂಡು ವ್ಯವಹಾರ ನಡೆಸುತ್ತಿದ್ದಾರೆ. ಇಲ್ಲಿ ಗೃಹಬಳಕೆಯ ಸೊತ್ತುಗಳನ್ನು ಡಿಸ್ಕೌಂಟ್ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದು ಮಾತ್ರವಲ್ಲದೆ, ಜನರು ಹಣ ನೀಡಿದ ೧೦ ದಿನಗಳ ಬಳಿಕ ವಸ್ತುಗಳನ್ನು ನೀಡಲಾಗುವುದು ಎಂಬ ಶರತ್ತು ವಿಧಿಸುತ್ತಿದ್ದಾರೆ ಎನ್ನಲಾಗಿದೆ. ೧೦ ದಿನಗಳ ಹಿಂದೆ ಹಣ ನೀಡಿದ್ದವರಿಗೆ ವಸ್ತುಗಳನ್ನೂ ನೀಡಿದ್ದಾರೆ. ಆದರೆ ಅಂದಂದೇ ಹಣ ನೀಡಿದರೆ ವಸ್ತು ಕೊಡುವುದಿಲ್ಲ ಎನ್ನುವುದು ಜನರ ಶಂಕೆಗೆ ಕಾರಣವಾಗಿದ್ದು, ಪೊಲೀಸರಿಗೆ ದೂರಲು ಸಿದ್ಧತೆ ನಡೆಸುತ್ತಿದ್ದಾರೆ.
Tagged with
lnews