ಬಜರಂಗಿಗಳು ಬೆನ್ನಟ್ಟಿದ ಹಿನ್ನೆಲೆ | ಇಬ್ಬರು ಗಂಭೀರ
ಮಂಗಳೂರು: ಗೋಸಾಗಾಟ ನಡೆಯುತ್ತಿದ್ದ ಟೆಂಪೋವನ್ನು ಬಜರಂಗಿಗಳು ಬೆನ್ನಟ್ಟಿದ ಪರಿಣಾಮ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಟೆಂಪೋ ಚಲಾಯಿಸಿ ರಸ್ತೆಯಲ್ಲೇ ಪಲ್ಟಿ ಹೊಡೆದ ಘಟನೆ ಇಂದು ನಸುಕಿನ ಜಾವ ಕೊಟ್ಟಾರ-ಇನ್‌ಫೊಸಿಸ್ ಬಳಿ ನಡೆದಿದೆ. ನಸುಕಿನ ಐದು ಗಂಟೆಯ ಸುಮಾರಿಗೆ ನೇತ್ರಾವತಿ ಹೆಸರಿನ ಟೆಂಪೋದಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಗೋಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯನ್ವಯ ಬಜರಂಗಿಗಳು ಟೆಂಪೋವನ್ನು ಬೆನ್ನಟ್ಟಿದ್ದರು. ಬಜರಂಗಿಗಳು ಹಿಂಬಾಲಿಸುತ್ತಿದ್ದಾರೆ ಎಂಬ ಸುಳಿವು ಪಡೆದಿದ್ದ ಟೆಂಪೋ ಚಾಲಕ ಕೊಟ್ಟಾರದಿಂದ ಮುಂದಕ್ಕೆ ಅತೀವೇಗವಾಗಿ ಚಲಿಸಿದ್ದು, ಇನ್‌ಫೊಸಿಸ್ ಬಳಿ ನಿಯಂತ್ರಣ ಕಳೆದು ಕೊಂಡು ರಸ್ತೆಯಲ್ಲೇ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಉರ್ವಾ ಪೊಲೀಸರು ಸ್ಥಳಕ್ಕಾಗ ಮಿಸಿದ್ದು, ಟೆಂಪೋದ ಒಳಗೆ ಸಿಲುಕಿದ್ದವರು ಹಾಗೂ ಗೋವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಟೆಂಪೋ ಪಲ್ಟಿ ಹೊಡೆದ ವೇಳೆ ಚಾಲಕ ಹೊರಕ್ಕೆ ಜಿಗಿದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಟೆಂಪೋದಲ್ಲಿ ಒಟ್ಟು ೨೮ಕ್ಕೂ ಹೆಚ್ಚು ಗೋವುಗಳಿದ್ದು, ಟೆಂಪೋ ಪಲ್ಟಿ ಹೊಡೆದ ಪರಿಣಾಮ ಬಹುತೇಕ ಗೋವುಗಳು ಮೃತಪಟ್ಟಿದ್ದು, ಕೆಲವನ್ನು ಮಾತ್ರ ಪೊಲೀಸರು ರಕ್ಷಿಸಿದ್ದಾರೆ. ಟೆಂಪೋದಲ್ಲಿ ಚಾಲಕನ ಹೊರತುಪಡಿಸಿ ಇನ್ನಿಬ್ಬರು ಇದ್ದು, ಅವರಲ್ಲಿ ಗಂಭೀರ ಗಾಯಗೊಂಡ ಒಬ್ಬನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನೊಬ್ಬ ಟೆಂಪೋದೊಳಗೆ ಸಿಲುಕಿದ್ದು, ಆತನನ್ನು ಸ್ಥಳೀಯರು ಹಾಗೂ ಪೊಲೀಸರು ಹರಸಾಹಸಪಟ್ಟು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಸುಕಿನ ವೇಳೆ ಹೆದ್ದಾರಿಯನ್ನು ಬಳಸಿಕೊಂಡು ಗೋಸಾಗಾಟ ಹೆಚ್ಚಾಗಿ ನಡೆಯುತ್ತಿದ್ದು, ಪೊಲೀಸರು ತಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳೇ ಕಾರ್ಯಾಚರಣೆಗೆ ಇಳಿಯುವಂತಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಸೇರಿದ್ದ ನೂರಾರು ಸ್ಥಳೀಯರು ‘ಗೋವುಗಳನ್ನು ಮೊದಲು ತೆಗೆಯಿರಿ, ಚಾಲಕ ಅಲ್ಲೇ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದೂ ಕಂಡುಬಂತು.
Tagged with
cnews,
feature
ಖಾಸಗಿ ಸುದ್ದಿವಾಹಿನಿಯಲ್ಲಿ ಶಂಕರ್‌ಬಿದರಿ ಗುಡುಗು
ಮಂಗಳೂರು: ಕರ್ನಾಟಕ ಹೈ ಕೋರ್ಟ್‌ನಿಂದ ತನ್ನ ವಿರುದ್ದ ತೀರ್ಪು ಪ್ರಕಟಗೊಂಡ ಹಲವು ದಿನಗಳ ನಂತರ ಮಾಜಿ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಪ್ರತಿಕ್ರಿಯೆ ನೀಡಿದ್ದು, ಕರ್ನಾ ಟಕಕ್ಕಾಗಿ ನಾನು ಪಟ್ಟ ಕಷ್ಟಕ್ಕೆ ಇಡೀ ರಾಜ್ಯ ಏನೇ ಮಾಡಿದರೂ ನನ್ನ ಋಣ ತೀರಿಸಲು ಸಾಧ್ಯವಿಲ್ಲ ಎಂದು ಖಾಸಗಿ ಸುದ್ದಿ ವಾಹಿ ನಿಯ ಸಂದರ್ಶನವೊಂದರಲ್ಲಿ ಗುಡುಗಿದ್ದಾರೆ.
ಕೋರ್ಟ್ ತೀರ್ಪಿನ ನಂತರ ಇನ್ ಫ್ಯಾಂಟ್‌ರಿಗೆ ಅಧಿಕಾರ ಹಸ್ತಾಂತರಿಸಿ ರಜೆಯ ಮೇಲೆ ತೆರಳಿದ್ದ ಬಿದರಿ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ನಿನ್ನೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ‘ಬಿದರಿ ನನ್ನ ತಾಳಿ ತೆಗೆಯಲು ಹೇಳಿದ್ದರು, ಬಂಧಿಸಿ ವಿವಸ್ತ್ರಗೊಳಿಸಿ ನನ್ನನ್ನೂ ಸೇರಿದಂತೆ ಇತರೆ ಹೆಣ್ಣು ಮಕ್ಕಳಿಗೂ ಕರೆಂಟ್ ಶಾಕ್ ಕೊಟ್ಟಿದ್ದರು ಎಂದು ಬೆಂಗಳೂರಿನಲ್ಲಿ ಹೊಸ ಬಾಂಬ್ ಸಿಡಿಸಿದ್ದಳು. ಇದರಿಂದ ಆಕ್ರೋ ಶಿತಗೊಂಡ ಬಿದರಿ ನಿನ್ನೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗವಹಿಸಿ ತನ್ನ ವಿರುದ್ದ ನಡೆಯುತ್ತಿರುವ ಷಡ್ಯಂತ್ರಗಳಿಗೆ ತಿರು ಗೇಟು ನೀಡಿದ್ದಾರೆ. ಇಷ್ಟು ವರ್ಷ ಮುತ್ತುಲಕ್ಷ್ಮಿ ಸಾವಿರಾರು ಪತ್ರಿಕಾಗೋಷ್ಟಿ ನಡೆಸಿದ್ದಾಳೆ. ಆದರೆ ಎಲ್ಲಿಯೂ ಈ ರೀತಿಯ ಹೇಳಿಕೆ ನೀಡಿಲ್ಲ. ಆದರೆ ಈಗ ಈ ರೀತಿ ಹೇಳಿಕೆ ನೀಡಿರುವುದು ಕೆಲವರ ಷಡ್ಯಂತ್ರ. ಅಲ್ಲದೇ ಆಕೆಯನ್ನು ಬೆಂಕೆಂದೇ ಬೆಂಗಳೂರಿಗೆ ಕರೆಸಿ ಕೊಂಡು ಈ ರೀತಿ ಹೇಳಿಕೆ ನೀಡುವಂತೆ ಮಾಡಲಾಗಿದೆ ಎಂದಿದ್ದಾರೆ. ವಿಪರ್ಯಾ ವೆಂದರೆ ಕರ್ನಾಟಕ ಪೊಲೀಸರು ಈಕೆಗೆ ಚಿತ್ರಹಿಂಸೆ ನೀಡುವುದು ಬಿಡಿ, ಈ ತನಕ ಬಂಧಿಸಿಯೇ ಇಲ್ಲ ಎಂದಿದ್ದಾರೆ.
ಇನ್ನು ತನ್ನ ಮೇಲಿನ ಆರೋಪಗಳು ನಿರಾಧಾರ. ರಾಷ್ಟ್ರೀಯ ಮಾನವ ಹಕ್ಕು ಆಯೋಗವೇ ಈ ಆರೋಪವನ್ನು ತಳ್ಳಿಹಾಕಿದೆ. ಅಲ್ಲದೇ ನಾನು ವೀರಪ್ಪನ್ ಕಾರ್ಯಾಚರಣೆಯ ವೇಳೆ ಸಾಮಾನ್ಯ ಅಧಿಕಾರಿಯಷ್ಟೇ. ನನ್ನ ಪ್ರತೀ ದಿನದ ಕಾರ್ಯಚಟುವಟಿಕೆಗಳನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದೆ. ಇಡೀ ಸರ್ಕಾರವೇ ನನ್ನ ಮೇಲೆ ಹಿಡಿತ ಹೊಂದಿದ್ದಾಗ ಅತ್ಯಾಚಾರ, ಹಿಂಸೆ ಎನ್ನುವ ಆರೋಪ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ನನಗೆ ಬಂದ ಪ್ರಶಸ್ತಿಗಳಲ್ಲಿ ವೀರಪ್ಪನ್ ಕಾರ್ಯಾಚರಣೆಗೆ ಸಿಕ್ಕಿದ್ದು ಕೇವಲ ಒಂದೇ ಒಂದು ಪದಕವಷ್ಟೇ. ಉಳಿದ ಎಲ್ಲಾ ಪ್ರಶಸ್ತಿಗಳು ಈ ಮಣ್ಣಿಗಾಗಿ ನಾನು ಮಾಡಿದ ೪೧ವರ್ಷಗಳ ಸಾಧನೆಗೆ ಸಿಕ್ಕಿದ್ದು. ಈ ಬಗ್ಗೆ ಯಾರೂ ನನ್ನನ್ನು ದೂಷಿಸುವ ಅಗತ್ಯವಿಲ್ಲ ಎಂದಿದ್ದಾರೆ. ಈ ಎಲ್ಲಾ ಆರೋಪಗಳಿಗೆ ನನ್ನ ವಿರುದ್ದ ನಡೆಯುತ್ತಿರುವ ಕಾಣದ ಕೈಗಳ ಷಡ್ಯಂತ್ರವೇ ಕಾರಣ ಎಂದ ಅವರು ಇವೆಲ್ಲಕ್ಕೂ ಕಾನೂನು ರೀತಿಯಲ್ಲೇ ಉತ್ತರಿಸುವೆ ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಈ ರಾಜ್ಯಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಪಟ್ಟ ಕಷ್ಟದ ಋಣವನ್ನು ಇಡೀ ರಾಜ್ಯ ಏನೇ ಮಾಡಿದರೂ ತೀರಿಸಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು. ನಾನು ಕಾನೂನನ್ನು ಗೌರವಿಸುವ ಕಾರಣ ಇಷ್ಟು ದಿನ ಹೈಕೋರ್ಟ್ ತೀರ್ಪಿಗೆ ಸುಮ್ಮನಿದ್ದೆ. ಆದರೆ ಮುತ್ತುಲಕ್ಷ್ಮೀ ಆರೋಪಗಳಿಂದಾಗಿ ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಅವರು ತಿಳಿಸಿದರು.
Tagged with
bidari,
feature,
lnews
ಬೆಂಗಳೂರು: ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಒಬ್ಬ ದೊಡ್ಡ ರೇಪಿಸ್ಟ್. ಆ ಮನುಷ್ಯನಿಗೆ ಮನುಷ್ಯತ್ವವೇ ಇಲ್ಲ. ವೀರಪ್ಪನ್ ವಿರುದ್ಧ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ನನ್ನನ್ನು ಸೇರಿದಂತೆ ಸುಮಾರು ೧೫ ಮಂದಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಕರೆಂಟ್ ಶಾಕ್ ಕೊಟ್ಟಿದ್ದರು ಎಂದು ನರಹಂತಕ ವೀರಪ್ಪನ ಪತ್ನಿ ಮುತ್ತುಲಕ್ಷ್ಮಿ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ನಿರ್ದೇಶಕ ಎ.ಎಂ.ಆರ್ ರಮೇಶ್ ನೈಜ ಘಟನೆಯನ್ನು ಆಧರಿಸಿ ನಿರ್ಮಿ ಸುತ್ತಿರುವ ವೀರಪ್ಪನ್ ಅಟ್ಟಹಾಸ ಎಂಬ ಸಿನಿಮಾ ನಿರ್ಮಿಸುತ್ತಿದ್ದು, ರಮೇಶ್ ತನ್ನ ಪೂರ್ವಾನುಮತಿ ಪಡೆಯದೆ ಸಿನಿಮಾ ತೆಗೆಯುತ್ತಿರುವ ಬಗ್ಗೆ ಶುಕ್ರವಾರ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭ ದಲ್ಲಿ ಬಿದರಿ ಕುರಿತು ಕೇಳಿದ ಪ್ರಶ್ನೆಗೆ ಹಲವು ಮಾಹಿತಿ ಬಯಲುಗೊಳಿಸಿದ್ದರು.
ಸಿನಿಮಾ ತೆಗೆಯುವ ಬಗ್ಗೆ ರಮೇಶ್ ನನ್ನ ಅನುಮತಿ ಪಡೆದಿಲ್ಲ. ಅಲ್ಲದೇ ಅವರು ನೈಜ ಘಟನೆ ಅಂತ ಹೇಳಿ ವೀರಪ್ಪನ್ ಠಿಕಾಣಿ ಹೂಡಿದ್ದ ಕಾಡಿನಲ್ಲಾಗಲಿ, ಸ್ಥಳದಲ್ಲಿ ಚಿತ್ರೀಕರಣ ನಡೆಸಿಲ್ಲ. ಮಲೆಮಹದೇಶ್ವರ ಬೆಟ್ಟ, ಗೋಪಿನಾಥಪುರಂ ಸುತ್ತವೇ ಸಿನಿಮಾ ಚಿತ್ರೀಕರಣ ಮಾಡಿದ್ದಾರೆ. ಈ ಬಗ್ಗೆ ನಾನು ಕೋರ್ಟ್ ಮೆಟ್ಟಿಲೇರಿರು ವುದಾಗಿ ಮುತ್ತುಲಕ್ಷ್ಮಿ ಈ ಸಂದರ್ಭದಲ್ಲಿ ವಿವರಿಸಿದ್ದಳು.
ಆಗ ಶಂಕರ್ ಬಿದರಿ ಕುರಿತು ಕೇಳಿದ ಪ್ರಶ್ನೆಗೆ, ನಿಮಗೆಲ್ಲ ಈಗ ಗೊತ್ತಾಗುತ್ತಿದೆ. ಆದರೆ ಬಿದರಿ ಯಾವ ರೀತಿ ಮನುಷ್ಯ ಎಂಬುದು ಅವರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲೇ ತಿಳಿದು ಹೋಗಿತ್ತು. ವೀರಪ್ಪನ್‌ಗೆ ನೀವು ಊಟ ಕೊಡುತ್ತೀರಿ, ಸಹಾಯ ಮಾಡುತ್ತೀರಿ ಅಂತ ಆರೋಪಿಸಿ ಮುಗ್ದ ಜನರನ್ನು ಎನ್‌ಕೌಂಟರ್ ಮಾಡಿ ಸಾಯಿಸಿದ್ದರು.
ಅನಾವಶ್ಯಕವಾಗಿ ಸ್ಥಳೀಯರನ್ನು ಕರೆದುಕೊಂಡು ಬಂದು ಕರೆಂಟ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದರು. ಹಲವರ ಮೇಲೆ ಅತ್ಯಾಚಾರ ನಡೆಸಿ ಬಿದರಿ ಕೊಂದು ಹಾಕಿರುವುದಾಗಿ ಮುತ್ತುಲಕ್ಷ್ಮಿ ಗಂಭೀರವಾಗಿ ಆರೋಪಿಸಿದ್ದು, ಈ ಬಗ್ಗೆ ಹೆಚ್ಚಿನ ಸತ್ಯ ಹೊರಬೀಳಬಹುದು ಎಂದರು.
ವೀರಪ್ಪನ್ ಹತ್ಯೆಯಾಗುವ ಮೂರು ತಿಂಗಳು ಮೊದಲು ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಕೂಡ ನನ್ನ ಬಳಿ ಮಾತನಾಡಿದ್ದರು. ನಿಮ್ಮ ಗಂಡನಿಗೆ ಶರಣಾಗಲು ಹೇಳಿ, ನೀವು ಹೇಳಿದ್ರೆ ವೀರಪ್ಪನ್ ನಿಮ್ಮ ಮಾತನ್ನು ಕೇಳುತ್ತಾರೆ ಅಂತ ವಿನಂತಿ ಮಾಡಿಕೊಂಡಿದ್ದರು. ಆದ್ರೆ ವೀರಪ್ಪನ್ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದೆ. ಹಾಗಂತ ಮಿರ್ಜಿಯವರು ನನಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
Tagged with
bidari,
muttulaxmi,
snews
ಮಂಗಳೂರು: ಸಂಘಟನಾತ್ಮಕ ವಿಚಾರದಲ್ಲಿ ಹಾವು-ಮುಂಗುಸಿಯಂತೆ ಕಾದಾಡುತ್ತಿದ್ದ ಬಿಲ್ಲವ ಯೂನಿಯನ್‌ಗಳ ಮುಖಂಡರು ನಿನ್ನೆ ಗ್ರಾಮಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಯಲ್ಲಿ ಜೊತೆಯಲ್ಲೇ ಕೂತು ಅಚ್ಚರಿ ಮೂಡಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಜಯ ಸುವರ್ಣ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಹಾಗೂ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆಯ ಅಖಿಲ ಭಾರತ ಬಿಲ್ಲವರ ಯೂನಿಯನ್ ಇದ್ದು ಜಯ ಸುವರ್ಣರಿಗೆ ಜನಾರ್ದನ ಪೂಜಾರಿ ಬೆಂಬಲವಿದೆ. ಇವುಗಳಲ್ಲಿ ಯಾವ ಸಂಘಟನೆ ಮೊದಲು ಹುಟ್ಟಿಕೊಂಡಿದ್ದು ಎನ್ನುವ ವಿಚಾರದಲ್ಲಿ ಇವರ ಮಧ್ಯೆ ಈಗಲೂ ಹಗ್ಗ-ಜಗ್ಗಾಟ ನಡೆಯುತ್ತಲೇ ಇದೆ. ಅಲ್ಲದೆ ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನವೀನ್ ಸುವರ್ಣ ಈಗಾಗಲೇ ದಾಖಲಿಸಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ಪೂಜಾರಿಗೂ ನವೀನ್ ಸುವರ್ಣ ಎಂದರೆ ಅಷ್ಟಕಷ್ಟೇ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇವರ ಮಧ್ಯೆ ಇದ್ದ ವೈಮನಸ್ಸು ಬಹಿರಂಗಗೊಂಡಿತ್ತು. ಓಂದೂವರೆ ತಿಂಗಳ ಹಿಂದೆ ಬಿಲ್ಲವರ ಯೂನಿಯನ್‌ನ ಶತಮಾನೋತ್ಸವ ಕಾರ್ಯಕ್ರಮ ಪುರಭವನದಲ್ಲಿ ಭರ್ಜರಿಯಾಗಿ ನಡೆದಿದ್ದು ಇದರ ಅಯೋಜಕರಾಗಿದ್ದ ನವೀನ್‌ಚಂದ್ರ ಸುವರ್ಣರು ವಿದೇಶಗಳಲ್ಲಿರುವ ಬಿಲ್ಲವ ಸಂಘಟನೆಗಳ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಜನಾರ್ದನ ಪೂಜಾರಿ ಹಾಗೂ ಜಯ ಸುವರ್ಣರನ್ನು ಆಹ್ವಾನಿಸದೆ ವೈಮನಸ್ಸಿಗೆ ತುಪ್ಪ ಸುರಿದಿದ್ದರು.
ನಿನ್ನೆ ಗ್ರಾಮಚಾವಡಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮತ್ತು ಅನ್ನಛತ್ರ ಉದ್ಘಾಟನಾ ಸಮಾರಂಭದಲ್ಲಿ ಈ ಮೂವರು ನಾಯಕರನ್ನೂ ಆಹ್ವಾನಿಸಲಾಗಿತ್ತು. ಇದಕ್ಕೆ ಯಾರಾದರೂ ಚಕ್ಕರ್ ಹೊಡೆಯಬಹುದೆನ್ನುವ ಕುತೂಹಲವೂ ಕೆಲವರಲ್ಲಿತ್ತು. ಆದರೆ ಅದ್ಯಾವುದೂ ನಡೆಯಲಿಲ್ಲ. ಕಾರ್ಯಕ್ರಮದಲ್ಲಿ ಎಲ್ಲಾ ಮುಖಂಡರೂ ಭಾಗವಹಿಸಿ ವೇದಿಕೆ ಹಂಚಿಕೊಂಡರಲ್ಲದೆ ಅಕ್ಕಪಕ್ಕವೇ ಕುಳಿತುಕೊಂಡಿದ್ದೂ ವಿಶೇಷವಾಗಿತ್ತು. ಅಷ್ಟು ಸಾಲದೆಂಬಂತೆ ಜನಾರ್ದನ ಪೂಜಾರಿ ತಮ್ಮ ಭಾಷಣ ಆರಂಭಿಸುವಾಗ ನವೀನ್ ಸುವರ್ಣರ ಹೆಸರು ಹೇಳಿದ್ದೂ ಇನ್ನೊಂದು ವಿಶೇಷವಾಗಿತ್ತು. ಇದೆಲ್ಲವನ್ನೂ ಗಮನಿಸುವಾಗ ಕಳೆದ ತಿಂಗಳು ಕುದ್ರೋಳಿಯಲ್ಲಿ ಬಿಲ್ಲವ ಯೂನಿಯನ್ ಸಭೆಯಲ್ಲಿ ನಡೆದ ಅಹಿತಕರ ಘಟನೆಯಿಂದ ಬಿಲ್ಲವ ಮುಖಂಡರು ಪಾಠ ಕಲಿತಿದ್ದಾರೆ ಎಂಬುವುದು ಸಾಬೀತಾಗಿದೆ.
ಪೂಜಾರಿ ಆಶೀರ್ವಾದದಿಂದ ಗೆದ್ದೆ: ನಳಿನ್
ನಿನ್ನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ತಮ್ಮ ಗೆಲುವಿನ ಹಿಂದಿನ ರಹಸ್ಯವನ್ನು ಹೇಳಿದರು. ಭಾಷಣ ಆರಂಭಿಸಿದ ಅವರು ಆರಂಭದಲ್ಲೇ ಬಿಲ್ಲವರನ್ನು ಹಾಡಿ ಹೊಗಳಿದ್ದಲ್ಲದೆ ತನ್ನ ಗೆಲುವಿಗೆ ಬಿಲ್ಲವರ ಮತ, ನಾರಾಯಣ ಗುರುಗಳು ಮತ್ತು ಜನಾರ್ದನ ಪೂಜಾರಿಯವರ ಆಶೀರ್ವಾದವೇ ಕಾರಣ ಎಂದರು. ತಾವು ಕುದ್ರೋಳಿ ದೇವಸ್ಥಾನದಿಂದ ಪ್ರಚಾರ ಆರಂಭಿಸಿದ್ದೆ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಸಮರ್ಥಿಸಿದ್ದಾರೆ.
ಅವರು ಬಿಲ್ಲವರನ್ನು ಮೆಚ್ಚಿಸಲು ಆ ರೀತಿ ಹೇಳಿದರೋ ಗೊತ್ತಿಲ್ಲ. ಆದರೆ ನಳಿನ್‌ಗೆ ಭಾಷಣಕ್ಕೆ ಅವಕಾಶ ಸಿಕ್ಕಾಗ ಜನಾರ್ದನ ಪೂಜಾರಿ ವೇದಿಕೆಯಿಂದ ನಿರ್ಗಮಿಸಿಯಾಗಿತ್ತು. ಇಲ್ಲದಿದ್ದರೆ ಅವರೂ ಶಹಬ್ಬಾಸ್ ಹೇಳುತ್ತಿದ್ದರೋ ಏನೋ ಎಂದು ಜನ ಆಡಿಕೊಳ್ಳುತ್ತಿದ್ದರು.
Tagged with
feature,
lnews
ಬೇಸಿಗೆಕಾಲ ಪ್ರಾರಂಭದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ನೀರಿನ ಸಮಸ್ಯೆ ಎದು ರಿಸುತ್ತಿದೆ. ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಬಾವಿ, ಕೆರೆ, ಬೋರ್‌ವೆಲ್‌ಗಳು ಬತ್ತಿಹೋಗಿವೆ. ಆದ್ದರಿಂದ ಜನರ ಪಾಡು ಹೇಳತೀರದು. ರಾಜ್ಯದ ಕೆಲವೊಂದು ಜಿಲ್ಲೆ ಗಳಲ್ಲಿ ದನಕರುಗಳಿಗೆ ಕುಡಿಯಲು ಸಾಕಷ್ಟು ಪ್ರಮಾಣದ ನೀರು ಸಿಗುತ್ತಿಲ್ಲ. ಶಾಸಕರು, ಸಂಸ ದರುಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಅವ ರಿಗೆ ಅವರ ಪಕ್ಷದ ರಾಜಕಾರಣವೇ ಮುಖ್ಯ ವಾಗಿದೆ.
ಸಮಸ್ಯೆ ಎದುರಿಸಲು ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದರೂ ಅಗತ್ಯವಿರುವಷ್ಟು ನೀರಿನ ಲಭ್ಯತೆಯೇ ಇಲ್ಲವಾಗಿದೆ. ಆದ್ದರಿಂದ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾ ಗದ ಆಡಳಿತ ವ್ಯವಸ್ಥೆ ಜನರ ಇತರ ಸಮ ಸ್ಯೆಗಳನ್ನು ನಿವಾರಿಸುತ್ತದೆ ಎಂದು ನಿರೀಕ್ಷಿಸು ವುದಾದರೂ ಹೇಗೆ? ರಾಜ್ಯದಲ್ಲಿ ನೀರಿನ ಸಮ ಸ್ಯೆಯಿರುವ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬರಿದಾಗಿವೆ.
ಅದೇ ರೀತಿ ಮಂಗಳೂರು ಇನ್ನೂ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಮಂಗಳೂರಿಗೆ ನೀರು ಸರಬ ರಾಜು ಆಗುತ್ತಿರುವ ತುಂಬೆ ವೆಂಟೆಡ್ ಡ್ಯಾಂ ಬತ್ತಿಹೋಗಿವೆ. ತುಂಬೆ ವೆಂಟೆಡ್ ಡ್ಯಾಂ ಬತ್ತಿ ಹೋದರೆ ಮಂಗಳೂರಿನೆಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ.
ಈಗ ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ಕಡೆ ಸುತ್ತಮುತ್ತಲಿನ ಬಾವಿಯಿಂದ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗು ತ್ತದೆ. ದಿನಕ್ಕೆ ಮೂರು ಬಾರಿಯೂ ಸರಿಯಾಗಿ ನೀರು ಬರುತ್ತಿಲ್ಲ. ಈ ವೇಳೆ ಹೆಚ್ಚಿನವರು ಹಣ ಕೊಟ್ಟು ಖರೀದಿಸುವ ಟ್ಯಾಂಕರ್ ನೀರಿನ ಮೊರೆ ಹೋಗುತ್ತಾರೆ. ಈ ಪರಿಸ್ಥಿತಿಯಲ್ಲಿ ಟ್ಯಾಂಕರ್ ನೀರಿನ ಅಗತ್ಯತೆ ಇದೆ ಎನ್ನುವುದು ಸತ್ಯ. ಆದರೆ ಕುಡಿಯಲು ಈ ನೀರು ಯೋಗ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಟ್ಯಾಂಕರ್‌ಗ ಳಲ್ಲಿ ‘ಕುಡಿಯುವ ನೀರು ಎಂದು ಬರೆಸಿ ಕೊಂಡು ನೀರು ಸರಬರಾಜು ಮಾಡುವ ಟ್ಯಾಂಕ ರ್‌ಗಳಲ್ಲಿ ಸ್ವಚ್ಚತೆಯನ್ನು ಕಾಪಾಡು ತ್ತಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಕೆಲವು ದಿನಗಳ ಹಿಂದೆ ಹೋಟೆಲ್‌ಗಳು, ಲಾಡ್ಜ್ ಗಳು ಮತ್ತು ಇನ್ನಿತರ ಕಾಮಗಾರಿಗಳಿಗೆ ಮಾತ್ರ ಈ ಟ್ಯಾಂಕರ್ ನೀರನ್ನು ಹೆಚ್ಚಾಗಿ ಬಳಸಲಾ ಗುತ್ತಿತ್ತು. ಆದರೆ ಈಗ ಜನಸಾಮಾನ್ಯರು ಅನಿವಾ ರ್ಯವಾಗಿ ಕುಡಿಯಲೂ ಇದೇ ಟ್ಯಾಂಕರ್ ನೀರನ್ನು ಕೆಲವೊಂದು ಕಡೆಗಳಲ್ಲಿ ಬಳಸುತ್ತಿ ದ್ದಾರೆ.
ಆದರೆ ಈ ನೀರು ಎಲ್ಲಿಂದ ಬರುತ್ತದೆ? ಎಷ್ಟು ಪರಿಶುದ್ಧ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಅನಿವಾರ್ಯವಾದಾಗ ನಮಗೆ ತಿಳಿದುಕೊಳ್ಳುವ ಅನಿವಾರ್ಯತೆಯೂ ಇಲ್ಲ! ಆದರೆ ಅನಾರೋಗ್ಯಕ್ಕೆ ತುತ್ತಾದಾಗ ಇದರ ಜಾಡು ಹಿಡಿಯುವುದು ನಮ್ಮ ಜಾಯಮಾನ. ಅದರ ಬದಲು ಮೊದಲೇ ಈ ನೀರಿನ ಮೂಲ ಹಾಗೂ ಟ್ಯಾಂಕರ್ ಎಷ್ಟು ಸ್ವಚ್ಛವಾಗಿದೆ ಎಂಬ ಸತ್ಯವನ್ನು ತಿಳಿದುಕೊಳ್ಳುವುದು ನಮ್ಮ ಹಕ್ಕ ಲ್ಲವೇ? ಹಣ ಕೊಟ್ಟು ಖರೀದಿಸುವಾಗ ಪರಿ ಶುದ್ಧತೆಯ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಇನ್ನಾದರೂ ಟ್ಯಾಂಕರ್ ನೀರಿನ ಶುದ್ಧತೆಯ ಬಗ್ಗೆ ತಿಳಿದುಕೊಳ್ಳಿ. ಅವಕಾಶಗಳ ಲಾಭ ಪಡೆ ದುಕೊಳ್ಳುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ಆದರೆ ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಆದರೂ ಮುಂಜಾಗ್ರತೆ ವಹಿಸುವುದು ಒಳಿ ತಲ್ಲವೇ? ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗ ಳಿಗೆ ತುತ್ತಾಗಬೇಕಾಗಬಹುದು.
ಇಸ್ಮಾಯಿಲ್, ತೊಕ್ಕೊಟ್ಟು
Tagged with
bahiranga
ಇತ್ತೀಚೆಗೆ ನಡೆದ ಉಡುಪಿ-ಚಿಕ್ಕ ಮಗಳೂರು ಲೋಕಸಭೆ ಉಪಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯ ಹೀನಾಯ ಸೋಲಿಗೆ ಪಕ್ಷದ ನಾಯಕರ ಗುಂಪು ಗಾರಿಕೆಯೇ ಕಾರಣ. ಸದಾ ಅಧಿಕಾರದ ಹಪಾಹಪಿಯಲ್ಲಿರುವ ಯಡಿಯೂರಪ್ಪರು ಪ್ರಚಾರಕ್ಕೂ ಬರಲಿಲ್ಲ, ಇಷ್ಟು ಮಾತ್ರವ ಲ್ಲದೆ ಪಕ್ಷದೊಳಗಿದ್ದುಕೊಂಡೇ ಕಾಲೆಳೆ ಯುವ ಕುತಂತ್ರವನ್ನು ಮಾಡಿದರು. ಇದನ್ನು ನೋಡಿದ ಮತದಾರರು ಅಂತಿಮವಾಗಿ ಪಕ್ಷವನ್ನೇ ತಿರಸ್ಕರಿಸಿ ಕಾಂಗ್ರೆಸ್ ಅನ್ನು ಗೆಲ್ಲಿಸಿದರು. ಬಿಜೆಪಿ ಶಾಸಕ, ಸಂಸದರು ಇದ್ದ ಕ್ಷೇತ್ರದಲ್ಲೇ ಬಿಜೆಪಿ ಸೋಲು ಕಂಡಿ ರುವುದು ಇನ್ನಾದರೂ ಬಿಜೆಪಿಗೆ ಪಾಠ ವಾಗಬೇಕು. ಜನರನ್ನು ಮೂರ್ಖರೆಂದು ಭಾವಿಸುತ್ತಾ ಕೆಟ್ಟ ರಾಜಕಾರಣ ಮಾಡುತ್ತಾ ಹೋದರೆ ಉಳಿಗಾಲವಿಲ್ಲ ಎನ್ನುವು ದನ್ನು ಬಿಜೆಪಿ ನಾಯಕರು ಮನಗಾಣ ಬೇಕು.
ಸುಮಿತ್ರಾ, ಪಡುಬಿದ್ರಿ
Tagged with
nimminda
ಎಂಆರ್‌ಪಿಎಲ್‌ನಿಂದ ಗ್ಯಾಸ್ ತುಂಬಿಸಿ ಸಾಗುವ ಬೃಹತ್ ಗಾತ್ರದ ತೈಲ ಟ್ಯಾಂಕರ್‌ಗಳು ಸುರತ್ಕಲ್ ಜಂಕ್ಷನ್‌ನಲ್ಲಿ ಅಪಘಾತ ಭಯ ವನ್ನು ಉಂಟುಮಾಡುತ್ತಿವೆ. ನಸುಕಿನ ವೇಳೆ ಬೇಕಾಬಿಟ್ಟಿ ಸಂಚರಿಸುವ ಬುಲೆಟ್ ಟ್ಯಾಂಕರ್‌ಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಕಾನ ಕಡೆಯಿಂದ ಸಾಗಿಬರುವ ಟ್ಯಾಂಕರ್‌ಗಳು ಇಲ್ಲಿ ದೀರ್ಘವಾಗಿ ತಿರುವು ಪಡೆದು ಮುಂದುವರಿಯುತ್ತದೆ. ಈ ವೇಳೆ ಹೆದ್ದಾರಿಯಲ್ಲಿ ಯಾರು ಸಾಗುತ್ತಿ ದ್ದಾರೆ ಎಂಬ ಬಗ್ಗೆ ಚಾಲಕ ಕನಿಷ್ಠ ಗಮನವನ್ನೂ ಕೊಡುವುದಿಲ್ಲ. ಹೀಗಾದರೆ ಮುಂದೆ ಇನ್ನಷ್ಟು ಅಪ ಘಾತಗಳು ಸಂಭವಿಸುವ ಸಾಧ್ಯತೆಯಿದೆ. ಸುರತ್ಕಲ್ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣವಾಗಿದ್ದರೂ ಪಾದಚಾರಿಗಳ, ವಾಹನ ಸವಾರರ ಭಯವಿನ್ನೂ ಹೋಗಿಲ್ಲ. ಇಲ್ಲಿ ರಸ್ತೆ ದಾಟುವವರ ಸಮಸ್ಯೆಯಂತೂ ಹೇಳುವುದೇ ಬೇಡ. ಉಡುಪಿ ಕಡೆಯಿಂದ ಬರುವ ವಾಹನಗಳು ಫ್ಲೈ ಓವರ್‌ನಲ್ಲಿ ಸಾಗಬೇಕಿದ್ದರೂ ಎಕ್ಸ್ ಪ್ರೆಸ್, ಸರ್ವಿಸ್ ಬಸ್‌ಗಳು, ದ್ವಿಚಕ್ರ, ಕಾರು ಚಾಲಕರು ಫ್ಲೈ ಓವರ್ ಹೋಗದೆ ಕೆಳಗಡೆಯೇ ಸಂಚರಿಸುತ್ತಾರೆ. ಇದರಿಂದ ಜಂಕ್ಷನ್‌ನಲ್ಲಿ ವಾಹನಗಳ ಒತ್ತಡವೂ ಜಾಸ್ತಿ ಯಿರುತ್ತದೆ. ಸಂಬಂಧಪಟ್ಟ ಸ್ಥಳೀಯ ಠಾಣಾ ಪೊಲೀ ಸರು ಈ ಬಗ್ಗೆ ತಕ್ಷಣ ಗಮನಿಸಬೇಕು. ಇಲ್ಲಿ ಆದಷ್ಟು ಶೀಘ್ರವಾಗಿ ಬುಲೆಟ್ ಗ್ಯಾಸ್ ಟ್ಯಾಂಕರ್‌ಗಳ ಓಡಾ ಟಕ್ಕೆ ನಿಯಮಾವಳಿ ರೂಪಿಸಬೇಕಾದ ಅಗತ್ಯವಿದೆ.
ಶಿವ, ಸುರತ್ಕಲ್
Tagged with
nimminda
ಇಂದಿನ ದಿನಗಳಲ್ಲಿ ಬಸ್ ಸಿಬ್ಬಂದಿಯಿಂದ ಹೆಣ್ಮಕ್ಕಳ ಮೇಲೆ ನಿರಂತರ ಕಿರುಕುಳ, ದೌರ್ಜನ್ಯ ಪ್ರಕರ ಣಗಳು ವರದಿಯಾಗುತ್ತಲೇ ಇವೆ. ಇದನ್ನು ತಪ್ಪಿಸಲು ಸರಕಾರ ಹೆಣ್ಮ ಕ್ಕಳಿಗೆ ಪ್ರತ್ಯೇಕ ಬಸ್‌ಗಳನ್ನು ಒದಗಿಸ ಬೇಕಾಗಿದೆ. ಮಹಿಳಾ ಸಿಬ್ಬಂದಿಯನ್ನೇ ಈ ಬಸ್‌ನಲ್ಲಿ ನೇಮಕ ಮಾಡಿದಲ್ಲಿ ಕಿರುಕುಳ ಪ್ರಕರಣಗಳು ನಿಯಂತ್ರ ಣಕ್ಕೆ ಬರುತ್ತವೆ. ಈ ಹಿಂದೆ ಸರಕಾರಿ ಮಿನಿ ಬಸ್‌ಗಳಲ್ಲಿ ಮಹಿಳಾ ನಿರ್ವಾ ಹಕರನ್ನು ರಾಜ್ಯ ಸಾರಿಗೆ ಇಲಾಖೆ ನೇಮಕ ಮಾಡಿತ್ತು. ಆದರೆ ಇದನ್ನು ಖಾಸಗಿ ರಂಗದಲ್ಲಿ ಅಳವಡಿಸುವ ಬಗ್ಗೆ ಯಾರೂ ಮುತುವರ್ಜಿ ವಹಿ ಸಲಿಲ್ಲ. ಮುಂಜಾನೆ ಮತ್ತು ಸಂಜೆಯ ವೇಳೆ ಖಾಸಗಿ ಸಿಟಿ, ಸರ್ವಿಸ್ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಇಂತಹ ಕುಕೃ ತ್ಯಗಳು ಪದೇ ಪದೇ ನಡೆಯುತ್ತವೆ. ಪೊಲೀಸ್ ಇಲಾಖೆ ನಂತರ ಇತ್ತ ಗಮನ ಹರಿಸುವ ಬದಲು ಮೊದಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಶಾಲೆ, ಕಾಲೇಜ್, ಉದ್ಯೋಗಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮಹಿಳೆಯರಿಗೆಂದೇ ಪ್ರತ್ಯೇಕ ಸರ ಕಾರಿ ಮಿನಿ ಬಸ್‌ಗಳನ್ನು ಓಡಾಟಕ್ಕೆ ಸಕಾಲದಲ್ಲಿ ಒದಗಿಸಿಬೇಕಾದ ಅನಿ ವಾರ್ಯತೆಯಿದೆ.
ವಿನಯ ಭಟ್, ಪುತ್ತೂರು
Tagged with
nimminda
ಕೊಡಿಯಾಲ್‌ಬೈಲ್‌ನಲ್ಲಿರುವ ಎಂಪೈರ್ ಮಾಲ್‌ನಲ್ಲಿ ಶಾಪಿಂಗ್‌ಗೆ ಹೋದಾಗ ಇತ್ತೀಚೆಗೆ ಕಹಿಘಟನೆಯೊಂದು ನಡೆಯಿತು. ನನ್ನ ವಾಹನ ವನ್ನು ಪಾರ್ಕಿಂಗ್ ಮಾಡಲು ಇಲ್ಲಿ ದಾರಿ ತೋರಿ ಸುವವರೇ ಇರಲಿಲ್ಲ. ನೋಡಿದರೆ ನನ್ನ ವಾಹನ ಮಾತ್ರವಲ್ಲ, ಇಲ್ಲಿಗೆ ಬರುವ ಎಲ್ಲ ಗ್ರಾಹಕರ ಪಾಡು ಇದೇ ಆಗಿದೆ ಎನ್ನುವುದು ತಿಳಿದುಬಂತು. ಇಲ್ಲಿ ಪಾರ್ಕಿಂಗ್ ಏರಿಯಾದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು ನಿಂತಿರುತ್ತಾರಾದರೂ ಅವರು ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಹೋಗುವುದಿಲ್ಲ. ಈ ಬಗ್ಗೆ ಅವ ರನ್ನು ಕೇಳಿದರೆ ಇಲ್ಲಿಯ ಪಾರ್ಕಿಂಗ್ ಸಿಸ್ಟಮ್ಮೇ ಸರಿಯಿಲ್ಲ, ಮಾಲಿಕರನ್ನೇ ಕೇಳಿ ಸಾರ್ ಎನ್ನುತ್ತಾರೆ. ಮೊದಲೇ ಕಿಷ್ಕಿಂದೆಯಂತಿರುವ ಎಸ್‌ಡಿಎಂ, ಬೆಸೆಂಟ್ ಪ್ರದೇಶದ ಪಕ್ಕದಲ್ಲಿರುವ ಈ ಮಾಲ್ ನಲ್ಲಿ ಮುಕ್ಕಾಲುಪಾಲು ಅಂಗಡಿ ಮಳಿಗೆಗಳು ಬಂದ್ ಆಗಿರಲು ಇಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿರು ವುದೇ ಕಾರಣ ಎಂದು ಅಂಗಡಿ ಮಾಲಿಕರು ದೂರು ತ್ತಾರೆ. ಆದರೆ ಗ್ರಾಹಕರು ಯಾಕೆ ಬರುವುದಿಲ್ಲ ಎನ್ನುವುದಕ್ಕೆ ಇವರಲ್ಲಿ ಉತ್ತರವಿಲ್ಲ. ಪಾರ್ಕಿಂಗ್ ವ್ಯವಸ್ಥೇ ಇಲ್ಲಿ ಸರಿಯಾಗಿ ಇಲ್ಲದಿರುವಾಗ ಇಲ್ಲಿಗೆ ಗ್ರಾಹಕರಾದರೂ ಹೇಗೆ ಬರುತ್ತಾರೆ? ಮಾಲ್ ನಿರ್ಮಿಸಿದರೆ ಸಾಲದು, ಸೂಕ್ತ ಪಾರ್ಕಿಂಗ್ ವ್ಯವ ಸ್ಥೆಯೂ ಇರಬೇಕು ಎನ್ನುವುದು ಗೊತ್ತಾಗುವುದು ಯಾವಾಗ? ಅಜೀಜ್ ಅಹಮ್ಮದ್, ಅತ್ತಾವರ
Tagged with
nimminda
ಹಳೆಯಂಗಡಿಯಲ್ಲಿ ಪದವಿ ಕಾಲೇಜ್ ಒಂದಿದೆ. ಹಿಂದೆ ಶಿಕ್ಷಣ, ವಿದ್ಯಾರ್ಥಿಗಳ ಉತ್ತಮ ಗುಣನಡತೆಯಿಂದ ಪ್ರಸಿದ್ದಿ ಪಡೆದಿದ್ದ ಶಿಕ್ಷಣ ಸಂಸ್ಥೆಯು ಈಗ ವಿವಾದಗಳಿಂದ ಸುದ್ದಿಯಲ್ಲಿವೆ. ಸರಕಾರಿ ಶಿಕ್ಷಣ ಸಂಸ್ಥೆಯಾದರೂ ಇಲ್ಲಿ ಶಿಕ್ಷಣಕ್ಕೆ, ವಿದ್ಯಾರ್ಥಿಗಳಿಗೆ ಪೂರಕವಾದ ಎಲ್ಲಾ ಅವಶ್ಯಕತೆ ಗಳನ್ನೂ ಒದಗಿಸಲಾಗುತ್ತಿದೆ. ಆದರೆ ಇಲ್ಲಿನ ಬಹು ತೇಕ ವಿದ್ಯಾಥಿ-ವಿದ್ಯಾರ್ಥಿನಿಯರು ಹಾದಿ ಬೀದಿ ಯಲ್ಲಿ ಪ್ರೀತಿ-ಪ್ರೇಮ ಎಂದು ಸುತ್ತಾಡುತ್ತಾ ಕಾಲ ಕಳೆಯುತ್ತಾರೆ.
ಕೆಲವರಂತೂ ಕಾಲೇಜಿಗೆ ಹೋಗುವ ದಾರಿ ಯಲ್ಲಿ ಕೈ-ಕೈ ಹಿಡಿದು ಮಾತಾಡಲು ಶುರುವಿಟ್ಟು ಕೊಂಡರೆ ಸಮಯ ಉರುಳುವುದೇ ತಿಳಿಯು ವುದಿಲ್ಲ. ಸಂಜೆ ಕಾಲೇಜ್ ಬಿಡುವ ಸಮಯದಲ್ಲಿ ಕಿನ್ನಿಗೋಳಿ ಕಡೆ ಸಂಚರಿಸುವ ಬಸ್‌ಗಳ ಪ್ರಯಾ ಣಿಕರಿಗೆ ಇದು ನಿತ್ಯನೋಟ. ರಸ್ತೆಯಲ್ಲಿ ಸಾಗುವ ಹೆಣ್ಮಕ್ಕಳು, ಹೆಂಗಸರು ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಾರೆ. ಇವರಿಗೆ ಪ್ರೀತಿಸಲು, ಚಕ್ಕಂದ ಹೊಡೆಯಲು ಮಂಗಳೂರಿನಲ್ಲಿ ಬೇಕಾದಷ್ಟು ಪಾರ್ಕ್, ಸಿನಿಮಾ ಥಿಯೇಟರ್‌ಗಳು ಇಲ್ಲವೇ? ಇವರ ಹೆತ್ತವರು ಯಾರೋ, ಇವರು ಎಲ್ಲಿಂದ ಬಂದವರೋ ದೇವರಿಗೇ ಗೊತ್ತು. ತಮ್ಮನ್ನು ಯಾರಾದರೂ ಗಮನಿಸುತ್ತಾರೋ, ಏನಾದರೂ ಅಂದುಕೊಳ್ಳುತ್ತಾರೋ ಎಂಬ ಪರಿವೆಯೂ ಇವ ರಿಗೆ ಇದ್ದಂತಿಲ್ಲ. ಇಂದಿರಾನಗರ ಹಾಗೂ ಹಳೆ ಯಂಗಡಿ ನಡುವಿನ ಒಂದು ಸ್ಥಳವನ್ನು ಖಾಯಂ ಆಗಿ ತಮ್ಮ ‘ಲವ್ ಸ್ಪಾಟ್’ ಮಾಡಿ ಕೊಂಡಿರುವ ಯುವ ಜೋಡಿ ಇನ್ನೂ ಲೋಕ ತಿಳಿಯುವ ಮುನ್ನವೇ ಪ್ರೇಮಗೀತೆ ಹಾಡುತ್ತಿದೆ. ಕಾಲೇಜ್ ಬಿಟ್ಟ ಬಳಿಕ ಕಮ್ಮಿಯೆಂದರೆ ಅರ್ಧ ಗಂಟೆಯಾ ದರೂ ಜೋಡಿ ಇಲ್ಲಿ ನಿಂತು ಗುಸುಗುಸು ಮಾತಾ ಡುತ್ತಿರುತ್ತದೆ. ಇದಿಷ್ಟೇ ಅಲ್ಲ, ಕಾಲೇಜ್‌ನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದಿ ದ್ದರೂ ಲವ್ ಮಾಡುವುದರಲ್ಲಿ, ಪಾರ್ಕ್-ಬೀಚ್ ಸುತ್ತುವುದರಲ್ಲಿ ಎತ್ತಿದ ಕೈ ಆಗಿರುತ್ತಾರೆ. ಇಂಥವರು ಕಾಲೇಜ್ ಪ್ರಾರಂಭದ ವೇಳೆ ಬೆರಳೆಣಿಕೆಯ ಸಂಖ್ಯೆಯ ಲ್ಲಿದ್ದರೂ ಕೆಲವೇ ತಿಂಗಳು ಕಳೆಯುವಷ್ಟರಲ್ಲಿ ಇಡೀ ಕಾಲೇಜಿನಲ್ಲಿ ಇದೊಂದು ಸಾಮೂಹಿಕ ಸನ್ನಿಯಾಗಿ ಬೆಳೆಯುತ್ತದೆ. ಇನ್ನು ಹಳೆಯಂಗಡಿ ಸುತ್ತಲಿನ ಬಾರ್ ಗಳಲ್ಲಿ ಮಧ್ಯಾಹ್ನದ ವೇಳೆ ನೋಡಿದರೆ ಇಲ್ಲಿಯ ವಿದ್ಯಾರ್ಥಿಗಳೇ ಪ್ರಮುಖ ಗಿರಾಕಿಗಳು. ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮವಿರಲಿ, ವಿದ್ಯಾರ್ಥಿಗಳು ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಬಾರ್‌ಗೆ ಹೋಗಿ ಕಂಠಪೂರ್ತಿ ಕುಡಿದು ಕಾಲೇಜಿನಲ್ಲಿ ತೂರಾಡುವುದು ಮಾಮೂಲಿ ಸಂಗತಿ. ಕುಡಿದು ಬಂದು ವಿದ್ಯಾರ್ಥಿ ನಿಯರ ಜೊತೆ ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿ ಗಳೂ ಇಲ್ಲಿದ್ದಾರೆ. ಇದಕ್ಕೆ ಕಾರಣರಾರು? ಕಾಲೇಜಿನ ಆಡಳಿತ ಮಂಡಳಿಯೇ? ಪದವಿ ಓದಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹೆತ್ತವರೇ? ಅಥವಾ ಎಲ್ಲವನ್ನೂ ನೋಡಿ ಕೊಂಡು ಸುಮ್ಮನಿರುವ ಸ್ಥಳೀಯ ನಾಗರಿಕರೇ? ಹಳೆಯಂಗಡಿ ಕಾಲೇಜ್‌ನಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗುವ ಮುನ್ನ ಬೀದಿ ಯಲ್ಲಿ ಪ್ರೇಮಿಸಲೆಂದೇ ಕಾಲೇಜಿಗೆ ಬರುವವರು, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವ ವರು, ಕಂಠ ಪೂರ್ತಿ ಕುಡಿದು ತೂರಾಡುವ ಇನ್ನೂ ಮೀಸೆ ಮೂಡದ ಹುಡುಗರು ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ?
ನೊಂದ ಹಳೆ ವಿದ್ಯಾರ್ಥಿ, ಇಂದಿರಾನಗರ
Tagged with
nimminda
ಉಪ್ಪಿನಂಗಡಿಯಿಂದ ಇಳಂ ತಿಲ ಮಾರ್ಗವಾಗಿ ಬುಳೇರಿಗೆ ಸಂಚಾರ ನಡೆಸಲು ಸರಕಾರಿ ಬಸ್ ಅನ್ನು ಒದಗಿಸಬೇಕಾದ ಅಗತ್ಯವಿದೆ. ಇಲ್ಲಿ ಬೆರಳೆಣಿಕೆ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತಿದ್ದು, ಸಕಾಲದಲ್ಲಿ ಬಸ್ ದೊರೆಯದೆ ಶಾಲಾ ವಿದ್ಯಾರ್ಥಿ ಗಳಿಗೆ ಅನನುಕೂಲವಾಗುತ್ತಿದೆ. ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗುವಂತಾಗಿದೆ. ಆದ್ದರಿಂದ ಈ ರೂಟ್‌ನಲ್ಲಿ ಆದಷ್ಟು ಶೀಘ್ರವಾಗಿ ಸರಕಾರಿ ಬಸ್‌ಗಳನ್ನು ಓಡಾಟಕ್ಕೆ ವ್ಯವ ಸ್ಥೆಗೊಳಿಸಬೇಕಾಗಿ ವಿನಂತಿ.
ನೊಂದವರು, ಇಳಂತಿಲ
Tagged with
nimminda
ಫೇಸ್‌ಬುಕ್ ಎನ್ನುವ ಮಾಯೆಗೆ ಬಲಿಬೀಳುವ ವಿದ್ಯಾರ್ಥಿ ಗಳು ಮಂಗನ ಕೈಗೆ ಮಾಣಿಕ್ಯ ಸಿಕ್ಕಂ ತಾಡುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿ ಭವಿಷ್ಯವನ್ನು ದುರ್ನಡತೆ, ದುರಾಭ್ಯಾ ಸಕ್ಕೆ ಈಡು ಮಾಡಿಕೊಂಡು ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ವ್ಯವಹಾರವು ಇಡೀ ಶಿಕ್ಷಣ ಸಂಸ್ಥೆಯ ಗೌರವಕ್ಕೆ ಕುಂದು ತರುತ್ತ ದೆಯೆಂಬ ಯೋಚನೆ ಈ ವಿದ್ಯಾ ರ್ಥಿಗಳಿಗಿಲ್ಲ. ಈ ಬಗ್ಗೆ ಆಡಳಿತ ಮಂಡಳಿ, ಪೊಲೀಸ್ ಇಲಾಖೆಯೂ ಗಂಭೀರವಾಗಿ ಚಿಂತಿಸಿಲ್ಲ. ಇತ್ತೀ ಚೆಗೆ ಫೇಸ್‌ಬುಕ್ ವಿಚಾರದಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿ ವಿದ್ಯಾ ರ್ಥಿಗಳನ್ನು ಠಾಣೆಯಲ್ಲಿ ಸ್ವಲ್ಪ ಹೊತ್ತು ಇರಿಸಿ ನಂತರ ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ. ಇದು ನ್ಯಾಯವೇ? ಇಲಾಖೆ ಇನ್ನೂ ಗಂಭೀರವಾಗಿ ಪರಿ ಗಣಿಸದಿದ್ದರೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇದನ್ನೇ ಅಳವಡಿಸಿ ಕೊಳ್ಳುತ್ತಾರೆ.
ನೊಂದವರು, ವಿಟ
Tagged with
nimminda
ಇನ್ನೇನು ಮಕ್ಕಳ ಶಾಲಾದಿನಗಳು ಕಳೆದು ಬೇಸಿಗೆ ಶಿಬಿರ ಆರಂಭಗೊಳ್ಳುತ್ತದೆ. ಹಿಂದೆಲ್ಲಾ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜಿಮನೆ, ನೆಂಟರ ಮನೆ ಎಂದು ತಿರುಗಾಡುತ್ತಿದ್ದರೆ ಇತ್ತೀಚೆಗೆ ಮಕ್ಕ ಳನ್ನು ಪೋಷಕರು ಬೇಸಿಗೆ ಶಿಬಿರಗಳಿಗೆ ಸೇರಿ ಸುತ್ತಿದ್ದಾರೆ.
ಈ ಬೇಸಿಗೆ ಶಿಬಿರಗಳ ಸಾಲಿಗೆ ಸೇರಿಕೊ ಳ್ಳುವುದರಲ್ಲಿ ಕ್ರಿಕೆಟ್ ಕಲಿಕಾ ಶಿಬಿರವೂ ಒಂದು. ಆದರೆ ಇತ್ತೀಚೆಗೆ ಈ ಶಿಬಿರಗಳು ಕೇವಲ ಹಣ ಮಾಡುವ ದಂಧೆಗಳಂತೆ ಭಾಸವಾಗುತ್ತಿದೆ. ನಗ ರದ ಅನೇಕ ಕಡೆಗಳಲ್ಲಿ ಈ ರೀತಿಯ ಕ್ರಿಕೆಟ್ ಶಿಬಿರಗಳು ಈಗಾಗಲೇ ತಲೆಯೆತ್ತಿವೆ. ಆದರೆ ಈ ಹಿಂದೆ ಇಂತಹ ಅನೇಕ ಶಿಬಿರಗಳು ನಡೆದಿ ದ್ದರೂ ಎಷ್ಟು ಮಂದಿ ಕ್ರಿಕೆಟಿಗರನ್ನು ಈ ಶಿಬಿರ ಗಳು ಹುಟ್ಟುಹಾಕಿವೆ? ಮಂಗಳೂರಿನ ಶಿಬಿರಗ ಳಲ್ಲಿ ಆಡಿದ ಎಷ್ಟು ಮಂದಿ ರಾಷ್ಟ್ರಮಟ್ಟದಲ್ಲಿ ಮಿಂಚು ತ್ತಿದ್ದಾರೆ? ಉತ್ತರ ಮಾತ್ರ ಶೂನ್ಯ. ಇಷ್ಟೆಲ್ಲಾ ಗೊತ್ತಿ ದ್ದರೂ ಕೆಲ ಶ್ರೀಮಂತ ಪೋಷಕರು ಹಲವಾರು ಕನಸು ಕಟ್ಟಿಕೊಂಡು ತಮ್ಮ ಮಕ್ಕಳನ್ನು ಈ ಶಿಬಿ ರಗಳಿಗೆ ಸೇರಿಸುತ್ತಾರೆ. ಸಾವಿರಾರು ರುಪಾಯಿ ಪಡೆಯುವ ಶಿಬಿರದ ಆಯೋಜಕರು ಮಕ್ಕ ಳಿಗೆ ಕಲಿಸುವುದು ಏನೂ ಇಲ್ಲ. ಬೇಸಿಗೆ ರಜೆಯ ಎರಡು ದಿನ ಬ್ಯಾಟ್, ಬಾಲ್ ಹಿಡಿದು ಅತ್ತಿಂದಿತ್ತ ಓಡುವುದನ್ನು ಬಿಟ್ಟರೆ ಮಕ್ಕಳು ಕಲಿಯುವುದು ಅಷ್ಟರಲ್ಲೇ ಇದೆ. ಹಾಗೆ ನೋಡಿದರೆ ಬೇಸಿಗೆ ರಜೆಯಲ್ಲಿ ಗುಡ್ಡ ದಲ್ಲೋ, ಮಾರ್ಗದ ಮಧ್ಯೆಯೋ ಕ್ರಿಕೆಟ್ ಆಡುವ ಮಕ್ಕಳು ಇವರಿಗಿಂತ ಸ್ವಲ್ಪ ಹೆಚ್ಚೇ ಕಲಿಯುತ್ತಾರೆ. ಅವರು ಏನಿಲ್ಲವಾದರೂ ರಬ್ಬರ್ ಬಾಲ್ ಆಟದ ಲೋಕಲ್ ಸ್ಟಾರ್‌ಗ ಳಾದರೂ ಆಗುತ್ತಾರೆ! ಇನ್ನಾದರೂ ಪೋಷ ಕರು ಇತ್ತ ಗಮನಹರಿಸಲಿ. ಇಂತಹ ಅನ ಗತ್ಯ ಶಿಬಿರಕ್ಕೆ ಕಲಿಸುವ ಬದಲು ಚಿತ್ರಕಲೆ, ಸಂಗೀತ, ಇಲ್ಲವೇ ಇನ್ಯಾವುದಾದರೂ ಶಿಬಿರಗಳಿಗೆ ಮಕ್ಕಳನ್ನು ಸೇರಿಸಿ. ಮಕ್ಕಳ ಬುದ್ಧಿಯಾದರೂ ಚುರುಕಾಗ ಬಹುದು. ಧ್ವನಿ, ಮಂಗಳೂರು
Tagged with
nimminda