ಪುತ್ತೂರು: ಪುತ್ತೂರಿನಲ್ಲಿ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘವು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಪಿ.ಆರ್. ಪಳಂಗಪ್ಪ ಅವರು ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿರುವ ಉದ್ದೇಶಿತ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘವನ್ನು ನೋಂದಾಯಿ ಸುವ ನಿಟ್ಟಿನಲ್ಲಿ ಪೂರಕವಾಗಿ ಪ್ರಾರಂಭಿಕ ಪಾಲು ಹಣ ಸಂಗ್ರಹಣೆ ಮಾಡಲು ಮುಖ್ಯ ಪ್ರವರ್ತಕರಾಗಿರುವ ಪಿ.ಬಿ. ಉಮಾನಾಥ ಬಪ್ಪಳಿಗೆ ಅವರಿಗೆ ಅನುಮತಿ ನೀಡಿದ್ದಾರೆ. ಇತ್ತೀಚೆಗೆ ಮಡಿವಾಳರ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪನೆಯ ನಿಟ್ಟಿನಲ್ಲಿ ಪ್ರವರ್ತಕರ ಸಭೆಯು ಪುತ್ತೂರು ತಾಲೂಕು ಮಡಿವಾಳರ ಸಂಘದಲ್ಲಿ ನಡೆದಿತ್ತು ಅಂದು ಸಂಘದ ಅಧ್ಯಕ್ಷ ಪಿ.ಎನ್.ಸುಭಾಸಚಂದ್ರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tagged with
briefs
ಮಂಗಳೂರು: ‘ರಂಗಭೂಮಿ ಚಟುವಟಿಕೆಯಲ್ಲಿ ಸಾಮಾಜಿಕ ಅನುಭವಗಳ ಜೊತೆ ಮಾನವೀಯತೆ ಉಳಿಯುವಂತಾಗಬೇಕು’ ಎಂದು ಪ್ರೊ. ಕೃಷ್ಣಮೂರ್ತಿಯವರು ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ನಗರದ ಸಂಕೇತ್ ಕಲಾವಿದರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನುಡಿದರು.
ನಗರದ ಸರ್ವೀಸ್ ಬಸ್ ಸ್ಟ್ಯಾಂಡ್‌ನಲ್ಲಿ ನಡೆದ ರಂಗ ಸಂದೇಶ ವಾಚನ ರಂಗಸಂಗೀತದ ಬಳಿಕ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದ ವಿಶಿಷ್ಟತೆಯಾಗಿ ಮೈದಾನ ಪ್ರದೇಶದಲ್ಲಿ ನಿರ್ಗತಿಕರಿಗೆ ಬಟ್ಟೆ ವಿತರಣೆ, ಲೇಡಿಗೋಷನ್ ಬಸ್‌ಸ್ಟ್ಯಾಂಡ್ ಬಳಿ ಕಸ ಹೆಕ್ಕುವ ಕಾರ್ಯ ನಡೆಯಿತು ರಂಗ ಮೆರವಣಿಗೆ ಮಾಡಿ ಸಂಸ್ಥೆಯ ಸಂಚಾಲಕ, ಸಂಸ್ಥಾಪಕ ಜಗನ್‌ಪವಾರ್ ಕಾರ್ಯಕ್ರಮ ನಿರ್ವಹಿಸಿದರು.
Tagged with
briefs
ಮಂಗಳೂರು: ಎಪ್ರಿಲ್ ೭ ಮತ್ತು ೮ರಂದು ಮಂಗಳೂರಿನ ಕದ್ರಿ ಉದ್ಯಾನದಲ್ಲಿ ‘ವಿಷನ್-೨೦೧೨’ ಹಾಗೂ ‘ಸಾನಿಧ್ಯ ಉತ್ಸವ’ವನ್ನು ಹಮ್ಮಿ ಕೊಳ್ಳಲಾಗಿದೆ. ಕರಕುಶಲ ವಸ್ತುಗಳ ಪ್ರದರ್ಶನವನ್ನು ಎ.೭ರಂದು ಸಂಜೆ ಘಂಟೆ ೫.೩೦ಕ್ಕೆ ಅತಿಥಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗುವುದು. ಎ. ೮ರಂದು ಸಂಜೆ ನಡೆಯಲಿರುವ ಸಾನಿಧ್ಯ ಉತ್ಸವ ಕಾರ್ಯಕ್ರಮದಲ್ಲಿ ದ. ಕ.ಜಿಲ್ಲಾ ಅಂಧರ ಸೇವಾ ಸಂಘ, ಇದರ ಸ್ಥಾಪಕ ಅಧ್ಯಕ್ಷ ಪ್ರೊ.ಪಾಂಗಾಳ ಸೇತು ಮಾಧವ ರಾವ್‌ರವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾನಿಧ್ಯ ದ ವಿಶೇಷ ಮಕ್ಕಳಿಂದ ‘ಶಮಂತಕ ಮಣಿ’ ಗೀತಾ ನಾಟಕ, ಸಾಂಪ್ರದಾಯಿಕ ಫ್ಯಾಶನ್ ಶೋ ಹಾಗೂ ‘ಕನಸು’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಸಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
Tagged with
briefs
ಸುರತ್ಕಲ್: ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಕುತ್ತೆತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ, ನಿಯಮಿತ ಇದರ ನೂತನ ಅಧ್ಯಕ್ಷರಾಗಿ ಕೆ.ಕುಸುಮಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಹಯವದನ ರಾವ್, ಸ್ಟೇನಿ ಫೆರ್ನಾಂಡೀಸ್, ಸಾವಿತ್ರಿ ಬಿ.ಶೆಟ್ಟಿ, ಕೆ.ಚಂದ್ರಹಾಸ್ ರಾವ್, ತಾರನಾಥ ಶೆಟ್ಟಿ, ವಾರಿಜ, ಬೇಬಿ ಆಯ್ಕೆಯಾಗಿದ್ದಾರೆ.
Tagged with
briefs
ಮಂಗಳೂರು: ಎಪ್ರಿಲ್ ಆರರಂದು ಶುಕ್ರವಾರ ಸಂಜೆ ಕೊಟ್ಟಾರ ಚೌಕಿ ಬಳಿಯ ಮೇಗಿನ ಕುದ್ರಾಡಿಗುತ್ತು ಬಳಿ ಸೇವಾ ಸಮಿತಿಯ ಉದ್ಘಾಟನೆಯನ್ನು ಮಾಲಾಡಿ ಅಜಿತ್‌ಕುಮಾರ್ ರೈ ನೆರವೇರಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ದೀಪಕ್ ಶೆಟ್ಟಿ ತಿಳಿಸಿದ್ದಾರೆ. ಅಂದು ಸಂಜೆ ೬.೩೦ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದೆ. ಅತಿಥಿಗಳಾಗಿ ಶಶಿಧರ ಹೆಗ್ಡೆ, ಗುಲ್ಜಾರ್‌ಬಾನು, ಜಗದೀಶ್, ಮಂಜುನಾಥ ಭಂಡಾರಿ ಶೆಡ್ಡೆ, ಮಾಧವ ನಾಯ್ಕ್ ಅಡ್ಯಾರ್, ಹರೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
Tagged with
briefs
ಮಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ(ರಿ) ಇದರ ವಿಶೇಷ ಮಹಾಸಭೆಯು ಅಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ ಇವರ ಅಧ್ಯಕ್ಷv ಯಲ್ಲಿ ವುಡ್‌ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಸಾರ್ವಜನಿಕರ ಎಲ್ಲಾ ಮೂಲಭೂತ ಸೌಲಭ್ಯಗಳು ಅಂದರೆ ಪಡಿತರ ಚೀಟಿ, ಹಕ್ಕು ಪತ್ರ, ಅಕ್ರಮ ಸಕ್ರಮಗಳ ಬಗ್ಗೆ ಹಾಗೂ ಸರಕಾರಿ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ನೀತಿ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಕೊಡಲು ತೀರ್ಮಾನಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿಗೆ ಅಶೋಕ್ ರತನ್ ರಾಜ್, ರಾಜೇಶ್, ಸುಂದರೇಶ್, ಪದ್ಮನಾಭ ಹಾಗೂ ಶ್ರೀಮತಿ ಶಶಿ ಕಲಾ, ಶ್ರೀಮತಿ ನೂತನ್ ಇವರನ್ನು ಸಮಿತಿಗೆ ಸ್ವಾಗತಿಸಿ ಸದಸ್ಯ ರನ್ನಾಗಿ ನೇಮಕ ಮಾಡಲಾಯಿತು.
Tagged with
briefs
ವಿಟ್ಲ: ಬೈಕ್ ಖಾಸಗಿ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಾಲೆತ್ತೂರು ಸಮೀಪದ ಕೊಡಂಗೆ ಎಂಬಲ್ಲಿ ಗುರುವಾರ ನಡೆದಿದೆ.
ಇಲ್ಲಿಗೆ ಸಮೀಪದ ಮೆಧು ನಿವಾಸಿ ಹೈದರ್(೨೪) ಎಂಬಾತನೇ ಗಾಯಗೊಂಡ ಬೈಕ್ ಸವಾರ. ಮಂಗಳೂರಿನಿಂದ ವಿಟ್ಲ ಕಡೆ ಬರುತ್ತಿದ್ದ ಖಾಸಗಿ ಬಸ್ ಸಾಲೆತ್ತೂರು ಸಮೀಪದ ಕೊಡಂಗೆ ಎಂಬಲ್ಲಿ ಚಾಲಕ ಹಠಾತ್ತನೇ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬರುತ್ತಿದ್ದ ಹೈದರ್ ಅವರ ಬೈಕ್ ಬಸ್‌ನ ಹಿಂಬದಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ರಸ್ತೆ ಮಧ್ಯೆ ಬಿದ್ದಿದ್ದ ಎನ್ನಲಾಗಿದೆ. ತಕ್ಷಣವೇ ಆತನ್ನು ಸ್ಥಳೀಯರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.
Tagged with
cnews
ಪಡುಬಿದ್ರಿ: ಇಲ್ಲಿಯ ಠಾಣಾ ವ್ಯಾಪ್ತಿಯ ಉಚ್ಚಿಲ ಎಂಬಲ್ಲಿ ಬುಧವಾರ ರಾತ್ರಿ ಎರಡು ಕಾರುಗಳಲ್ಲಿ ಬಂದ ತಂಡ, ಓರ್ವನನ್ನು ಅಪಹರಿಸಿ ಹಲ್ಲೆಗೈದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಚ್ಚಿಲ ಪೊಲ್ಯ ರಸ್ತೆ ಜನಪ್ರಿಯ ಮರದ ಮಿಲ್ ಬಳಿಯ ನಿವಾಸಿ, ಅಬ್ದುಲ್ ಖಾದರ್ ಅವರ ಮಗ ಅಜರುದ್ದೀನ್(೨೦) ಎಂಬವರು ತನ್ನ ಕಾರು(ಕೆಎ-೧೯ ಎನ್ ೨೧೭೬)ರಲ್ಲಿ ತನ್ನ ಮನೆಗೆ ಹಾಲು ತರಲೆಂದು ಭಾಸ್ಕರ ನಗರ ಸಮೀಪದ ಬಿಸ್ಮಿಲ್ಲಾ ಸ್ಟೋರಿಗೆ ಬುಧವಾರ ರಾತ್ರಿ ೯-೩೦ರ ಸುಮಾರಿಗೆ ಬಂದಿದ್ದರು. ಇದೇ ಸಮಯ ಅಜರುದ್ದೀನರ ಗುರುತು ಪರಿಚಯದ ಜಬ್ಬಾರ್, ಕೆಬ್ಬಿ ಮತ್ತು ಬಶೀರ್ ಎಂಬವರು ಉಚ್ಚಿಲ ಕಡೆಯಿಂದ ಇನೋವಾ ಮತ್ತು ಇಂಡಿಗೋ ಕಾರಿನಲ್ಲಿ ಆಗಮಿಸಿ, ನಮ್ಮೊಂದಿಗೆ ಯಾಕೆ ದನ ಕದಿಯಲು ಬರುತ್ತಿಲ್ಲ ಎಂದು ಒತ್ತಾಯ ಪೂರ್ವಕವಾಗಿ ಇಂಡಿಗೋ ಕಾರಿನಲ್ಲಿ ಕರೆದೊಯ್ದಿದ್ದಾರೆ. ಈ ಸಂದರ್ಭ ಅವರೊಂದಿಗೆ ಜಲೀಲ್, ಜಾಫರ್, ಅಫ್ಸರ್ ಮತ್ತು ರಝಾಕ್ ಇನೋವಾ ಕಾರಿನೊಂದಿಗೆ ಹಿಂಬಾಲಿಸಿದ್ದರು.
ಕರೆದೊಯ್ದವರು ಹೆಜಮಾಡಿಯ ಅರಫಾ ಹೋಟೆಲಿಗೆ ಕರೆದೊಯ್ದು, ಅಲ್ಲಿ ಹಲ್ಲೆ ಮಾಡಿದ್ದಾರೆ. ಅಜರುದ್ದೀನ್ ಅಪಹರಣಕಾರರ ಎಲ್ಲಾ ಶರತ್ತಿಗೆ ಒಪ್ಪಿದ ನಂತರ ಬೆಳಿಗ್ಗಿನ ಜಾವ ೪.೪೫ಕ್ಕೆ ಉಚ್ಚಿಲದಲ್ಲಿ ಬಿಟ್ಟು ಹೋಗಿದ್ದಾರೆ. ಅಂತೆಯೇ ಕಾರನ್ನು ಕರೆದ್ದೊಯಿದ್ದಾರೆ ಎಂದು ಅಜರುದ್ದೀನ್ ಪಡುಬಿದ್ರಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Tagged with
cnews
ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರನ್ನು ಅಪಹರಿಸಿದ್ದ ಆರೋಪಿ ಯನ್ನು ಸುರತ್ಕಲ್ ಪೊಲೀಸರು ನಿನ್ನೆ ಬಜ್ಪೆ ಬಳಿ ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಜಿರೆ ನಿವಾಸಿ ಇಸ್ಮಾಯಿಲ್ ಎಂಬಾತನೇ ಬಂಧಿತ ಆರೋಪಿ ಯಾಗಿದ್ದಾನೆ. ಎರ್ಮಾಳು ನಿವಾಸಿ ಹನೀಫ್ ಎಂಬವರಿಗೆ ಸೇರಿದ ಟ್ಯಾಂಕರನ್ನು ಚಾಲಕ ಬುಧವಾರ ರಾತ್ರಿ ಕಾನ ಬಳಿ ರಸ್ತೆ ಪಕ್ಕ ನಿಲ್ಲಿಸಿ ಸಮೀಪದ ಹೊಟೇಲಿಗೆ ಊಟಕ್ಕೆಂದು ತೆರಳಿದ್ದ. ಊಟ ಮಾಡಿ ಮರಳುವಷ್ಟರಲ್ಲಿ ಟ್ಯಾಂಕರನ್ನು ಅಪಹರಿಸಲಾಗಿತ್ತು. ಈ ವಿಷಯವನ್ನು ಕೂಡಲೇ ಚಾಲಕ ಟ್ಯಾಂಕರ್ ಮಾಲಕರಿಗೆ ತಿಳಿಸಿದ್ದು, ಅವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳವಾದ ಟ್ಯಾಂಕರ್ ನಿನ್ನೆ ಮುಂಜಾನೆ ಬಜ್ಪೆ ಬಳಿ ಇರುವ ಬಗ್ಗೆ ಬಜ್ಪೆ ಪೊಲೀಸರಿಂದ ಸುರತ್ಕಲ್ ಪೊಲೀಸರಿಗೆ ವಿಷಯ ತಿಳಿದು ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಟ್ಯಾಂಕರ್ ಅಪಹರಿಸಿದ್ದ ಉಜಿರೆ ನಿವಾಸಿ ಇಸ್ಮಾಯಿಲ್ ಎಂಬಾತ ಟ್ಯಾಂಕರಿನಲ್ಲೇ ಇದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಟ್ಯಾಂಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Tagged with
cnews
ಸುಳ್ಯ: ಅಪಸ್ಮಾರದಿಂದ ಬಳಲುತ್ತಿದ್ದ ವ್ಯಕ್ತಿಯೊ ಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಸುಳ್ಯ ಹಳೆಗೇಟಿನಲ್ಲಿ ಗುರುವಾರ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕು ಚಿಕ್ಕ ಮುಡ್ನೂರು ಗ್ರಾಮದ ರೋಟರಿಪುರ ನಿವಾಸಿ ಚಂದ್ರಶೇಖರ(೪೫) ಎಂದು ಗುರುತಿಸಲಾಗಿದೆ. ಪುತ್ತೂರಿನ ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿದ್ದ ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿ ದ್ದರು. ಅಪಸ್ಮಾರ ಕಾಯಿಲೆಗೆ ಸಾಕಷ್ಟು ಚಿಕಿತ್ಸೆಯನ್ನು ಮಾಡಲಾಗಿತ್ತು. ಅದು ಹತೋಟಿಯಲ್ಲಿ ಇತ್ತು. ಆ ಬಳಿಕ ಇವರು ವಿಪರೀತ ಮದ್ಯಪಾನ ಮಾಡಲು ಆರಂಭಿಸಿದ್ದರು ಎನ್ನಲಾಗಿದೆ. ಹಾಗಾಗಿ ಈ ಕಾಯಿಲೆ ಮತ್ತೆ ಮತ್ತೆ ಅವರನ್ನು ಕಾಡುತ್ತಿತ್ತು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಸುಮಿತ್ರಾ ಹಾಗೂ ೨ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Tagged with
cnews
ಮಂಗಳೂರು: ಆಟವಾಡು ತ್ತಿದ್ದ ವೇಳೆ ಆಕಸ್ಮಿಕವಾಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಒಂದೂವರೆ ವರ್ಷದ ಬಾಲಕಿ ಮೃತಪಟ್ಟ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ ಎಂಬಲ್ಲಿ ನಡೆದಿದೆ.
ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತೆ ವಿಜಯಾ ಅವರ ಪುತ್ರಿ ಶ್ರೇಯಾ ಮೃತಪಟ್ಟ ಬಾಲಕಿ. ವಿಜಯಾ ಅವರು ಕಾರ್ಯಕ್ರಮವೊಂದಕ್ಕೆ ತೆರಳಲೆಂದು ಸಿದ್ಧತೆ ನಡೆಸುತ್ತಿದ್ದ ವೇಳೆ ಕಣ್ತಪ್ಪಿಸಿ ಮನೆಯಿಂದ ಹೊರಕ್ಕೆ ಬಂದ ಶ್ರೇಯಾ ಬಕೆಟ್‌ನೊಳಕ್ಕೆ ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.
Tagged with
cnews
ಮಂಜೇಶ್ವರ: ವರದಕ್ಷಿಣೆ ಕಿರುಕುಳ
ಮಂಗಳೂರು: ಗೃಹಿಣಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿದ ಆರೋಪದ ಮೇಲೆ ಪತಿ ಹಾಗೂ ಆತನ ಮನೆಮಂದಿಯ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿರುವಂತೆಯೇ ಆರೋಪಿ ಪತಿರಾಯ ತನ್ನ ಮನೆ ಮಂದಿಯ ಜೊತೆ ತಲೆಮರೆಸಿಕೊಂ ಡಿದ್ದು, ನಿರೀಕ್ಷಣಾ ಜಾಮೀನು ಪಡೆ ಯಲು ಯತ್ನಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಮಂಜೇಶ್ವರ ನಿವಾಸಿ ವಿಠಲ ಭಂಡಾರಿ ಎಂಬವರ ಪುತ್ರಿ ಗುಣಮಣಿ (೨೪) ಎಂಬಾಕೆಯನ್ನು ಕಳೆದ ೨೦೧೧ರ ಮಾರ್ಚ್ ೧೮ರಂದು ಗುರುಪುರ ಮಠದ ರಸ್ತೆಯ ಶಿವದುರ್ಗಾ ಮನೆಯ ನಿವಾಸಿ ಗಿರೀಶ್ ಭಂಡಾರಿ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಮೂರು ತಿಂಗಳು ಮಾತ್ರ ಅನ್ಯೋನ್ಯವಾಗಿದ್ದ ಪತಿರಾಯ ಆಬಳಿಕ ವಿನಾಕಾರಣ ತಗಾದೆ ತೆಗೆದು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಶುರುಮಾಡಿದ್ದ ಎನ್ನಲಾಗಿದೆ. ಇಷ್ಟೇ ಅಲ್ಲದೆ ರಾತ್ರಿಯ ವೇಳೆ ರೂಮಿನಿಂದ ಹೊರಕ್ಕೆ ಬಂದು ಮಲಗುತ್ತಿದ್ದ. ದಿನಕಳೆದಂತೆ ಗಿರೀಶನು ತನ್ನ ಅಣ್ಣನ ಪತ್ನಿ ಅರ್ಥಾತ್ ಅತ್ತಿಗೆಯ ಜೊತೆ ಅನೈತಿಕ ಸಂಬಂಧ ಹೊಂದಿರುವುದು ಗುಣಮಣಿಯವರ ಗಮನಕ್ಕೆ ಬಂದಿತ್ತು. ಇದನ್ನು ಪ್ರಶ್ನಿಸಿದ ವೇಳೆ ಹಲ್ಲೆ ನಡೆಸಿ, ಕೊಲೆಬೆದರಿಕೆಯನ್ನೂ ಒಡ್ಡಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಆರೋಪಿ ಗಿರೀಶ್ ಭಂಡಾರಿಯ ಅಣ್ಣ ಹರೀಶ್ ಭಂಡಾರಿ ವಿದೇಶದಲ್ಲಿದ್ದು, ಆತನ ಪತ್ನಿ ಸತ್ಯಶೀಲಾ ಎಂಬಾಕೆ ತನ್ನ ಗಂಡನನ್ನು ಬಳಸಿಕೊಂಡು ಮೂರು ಲಕ್ಷ ರೂ. ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಾ ದೌರ್ಜನ್ಯ ನಡೆಸುತ್ತಿದ್ದರು ಎಂದು ಗುಣಮಣಿ ಆರೋಪಿಸಿದ್ದಾರೆ. ಮನೆಯಲ್ಲಿ ತನ್ನೆದುರೇ ಸತ್ಯಶೀಲಾ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಗಿರೀಶ್ ಭಂಡಾರಿಗೆ ತಾಯಿ ಸುಶೀಲಾ ಭಂಡಾರಿ ಕೂಡಾ ಸಾಥ್ ನೀಡುತ್ತಿದ್ದರು ಎಂದು ದೂರಲಾಗಿದೆ. ಈ ಬಗ್ಗೆ ಕಳೆದ ಜನವರಿ ೨೯ರಂದು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತಾದರೂ ಪೊಲೀಸರು ರಾಜಿ ಪಂಚಾತಿಕೆ ನಡೆಸಿದ್ದರು.
ಇದೀಗ ಮತ್ತೆ ನ್ಯಾಯಕ್ಕಾಗಿ ಗುಣಮಣಿ ಅವರು ಮಂಜೇಶ್ವರ ಪೊಲೀಸರ ಮೊರೆಹೋಗಿದ್ದಾರೆ. ಅದರಂತೆ ಪತಿ ಗಿರೀಶ ಭಂಡಾರಿ, ಅತ್ತೆ ಸುಶೀಲ ಭಂಡಾರಿ, ಮೈದುನ ಹರೀಶ ಭಂಡಾರಿ ಹಾಗೂ ಆತನ ಪತ್ನಿ ಸತ್ಯಶೀಲಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಂಜೇಶ್ವರ ಪೊಲೀಸರು ನಿನ್ನೆ ಗುರುಪುರದ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ತಲೆಮರೆಸಿಕೊಂಡಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
Tagged with
cnews
ಕಾಸರಗೋಡು: ಗಂಭೀರ ಇರಿತಕ್ಕೊಳಗಾಗಿ ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಯುವಕ ಕೊನೆಯುಸಿರೆಳೆದಿದ್ದಾನೆ.
ಇಲ್ಲಿನ ತಳಂಗೆರೆ ಖಾಸಿಲೇನಿನ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಬಶೀರ್ (೨೧) ಎಂಬಾತನೇ ದುಷ್ಕರ್ಮಿ ಗಳ ಹಲ್ಲೆಗೆ ಬಲಿಯಾದ ನತದೃಷ್ಟ. ಕಳೆದ ಫೆಬ್ರವರಿ ೨೩ರಂದು ತಳಂಗೆರೆ ದೀನಾರ್ ನಗರದಲ್ಲಿ ಬಶೀರ್ ಹಲ್ಲೆಗೊ ಳಗಾಗಿದ್ದರು. ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಇರಿತದ ಗಾಯಗಳುಂಟಾಗಿ ದ್ದುವು. ಆ ಬಳಿಕ ಮಂಗಳೂರಿನ ಆಸ್ಪ ತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಯಲ್ಲಿದ್ದರು. ಕೆಲವು ದಿನಗಳ ಹಿಂದೆ ಅಲ್ಪ ಚೇತರಿಕೆ ಕಂಡು ಬಂದಿತ್ತಾದರೂ, ನಿನ್ನೆ ಮತ್ತೆ ಸ್ಥಿತಿ ಚಿಂತಾಜನಕವಾಗಿ ಅಲ್ಪ ಹೊತ್ತಿನಲ್ಲಿ ಮರಣವೂ ಸಂಭವಿಸಿತ್ತು. ಕಾರಿನಲ್ಲಿ ಬಂದ ತಂಡ ಬಶೀರ್‌ನನ್ನು ಆಕ್ರಮಿಸಿತ್ತು. ಪ್ರಜ್ಞೆ ಬಂದಿದ್ದ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ ಬಶೀರ್, ರಿಯಾಜ್, ಬಾದುಶಾ, ಜಂಶೀರ್ ಸಹಿತ ಹಲವು ಮಂದಿ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಅಜೆಕಾರು ಪಡುಕುಡೂರು ಎಂಬಲ್ಲಿ ನೀರು ತರಲೆಂದು ಹೋದ ಮಹಿಳೆಗೆ ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೈದ ಘಟನೆ ಸಂಭವಿಸಿದೆ.
ಪಡುಕುಡೂರಿನ ಐದು ಸೆಂಟ್ಸ್ ಕಾಲನಿಯ ನಿವಾಸಿ ಜಲಜಾ(೩೩) ಎಂಬವರು ಈ ಬಗ್ಗೆ ಅಜೆಕಾರು ಠಾಣೆಗೆ ದೂರು ಸಲ್ಲಿಸಿದವರು. ಮನೆ ಸಮೀಪದಿಂದ ನೀರು ತರಲೆಂದು ಹೋದಾಗ ಸಾರ್ವಜನಿಕ ಸ್ಥಳದಲ್ಲಿ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆನ್ನೆಗೆ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದಾನೆಂದು ತಿಳಿದುಬಂದಿದೆ.
Tagged with
cnews
ಉಡುಪಿ: ಹಿರಿಯಡ್ಕದ ರೈತರ ಸೇವಾ ಸಹಕಾರಿ ಸಂಘದ ಬಳಿಯ ಜ್ಯುವೆಲ್ಲರಿ ಪಕ್ಕ ಸಂಶಯಾಸ್ಪದವಾಗಿ ಅವಿತು ನಿಂತುಕೊಂಡಿದ್ದ ವ್ಯಕ್ತಿಯೋರ್ವನನ್ನು ಹಿರಿಯಡ್ಕ ಠಾಣೆಯ ಪೊಲೀಸರು ಬುಧವಾರ ನಸುಕಿನ ಸಮಯ ಗಂಟೆ ೩.೩೦ಕ್ಕೆ ಬಂಧಿಸಿದ್ದಾರೆ.
ಮೊದಲಿಗೆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಹಿರಿಯಡ್ಕ ನಿವಾಸಿ ರಾಜನ್ ಎಂದು ಪರಿಚಯಿಸಿಕೊಂಡಾತ ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ತಾಲೂಕಿನ ನಿವಾಸಿ ಮನೋಜ್ ಎಂ.(೩೦) ಎಂದು ತಿಳಿಸಿದ ಎನ್ನಲಾಗಿದೆ.
Tagged with
cnews
ಬೆಳ್ತಂಗಡಿ: ಚಿರತೆಯನ್ನು ಕೊಂದು ಅದರ ಚರ್ಮ ಮಾರಾಟ ಮಾಡಲು ಪ್ರಯತ್ನದಲ್ಲಿದ್ದಾಗ ಬಂಧನಕ್ಕೆ ಒಳಗಾಗಿದ್ದ ಮೂವರಿಗೆ ಬೆಳ್ತಂಗಡಿ ನ್ಯಾಯಾ ಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತೋಟತ್ತಾಡಿ ಗ್ರಾಮದ ಉಣ್ಣಿ (೩೯) , ಕಕ್ಕಿಂಜೆ ನಿವಾಸಿ ಕುಂಞಿಮೋನು (೪೭) ಹಾಗೂ ತೋಟತ್ತಡಿಯ ಸಿಜೋ(೪೦) ಎಂಬವರು ಶಿಕ್ಷೆಗೊಳಗಾದವರು.
೨೦೦೫ರಲ್ಲಿ ಚಿರತೆ ಚರ್ಮ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಸಂದರ್ಭ ಉಪ್ಪಿನಂಗಡಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೂರು ವರ್ಷ ಶಿಕ್ಷೆ ಹಾಗೂ ತಲಾ ೧೦ ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
Tagged with
cnews
ಮಂಗಳೂರು: ಹೊಟೇಲಿಗೆ ಊಟಕ್ಕೆಂದು ಬಂದಿದ್ದ ಉದ್ಯಮಿಯ ಕಾರಿನ ಗಾಜನ್ನು ಕಿಡಿಗೇಡಿಯೊಬ್ಬ ಪುಡಿ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರದ ಉದ್ಯಮಿಯೊಬ್ಬರು ಬಳ್ಳಾಲ್‌ಬಾಗ್‌ನಲ್ಲಿರುವ ಹೊಟೇಲ್ ಫುಡ್‌ಲ್ಯಾಂಡಿಗೆ ಊಟಕ್ಕೆಂದು ಬಂದವರು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದರು. ಇದನ್ನು ದೂರದಲ್ಲಿ ನಿಂತು ಗಮನಿಸುತ್ತಿದ್ದ ಕಿಡಿಗೇಡಿಯೊಬ್ಬ ಕಾರಿಗೆ ಕಲ್ಲು ತೂರಿ ಗಾಜನ್ನು ಪುಡಿಗೈದು ಪರಾರಿಯಾಗಿದ್ದಾನೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.
Tagged with
cnews
ಮಂಗಳೂರು: ದೇವಸ್ಥಾನದೊ ಳಗೆ ಮದ್ಯವನ್ನು ಚೆಲ್ಲಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಿದ ಓರ್ವ ಆರೋಪಿಗೆ ನ್ಯಾಯಾಲಯ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಮುಂಚೂರು ನಿವಾಸಿ ಹೇಮಂತ, ಪಕ್ಷಿಕೆರೆ ನಿವಾಸಿಗಳಾದ ರೋನಿ ಮತ್ತು ವಿಶ್ವಾಸ ಎಂಬವರು ಕಳೆದ ಮಂಗಳವಾರ ರಾತ್ರಿ ಕುಡಿದು ಸುರತ್ಕಲ್ ಸದಾಶಿವ ಮಹಾಗಣಪತಿ ದೇವಸ್ಥಾನವನ್ನು ಅಕ್ರಮ ಪ್ರವೇಶ ಮಾಡಿದ್ದರು. ಅಲ್ಲದೆ ದೇವಸ್ಥಾನದ ಒಳಗೇ ಮದ್ಯ ಪಾರ್ಟಿ ನಡೆಸಿದ್ದರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು ಅಪವಿತ್ರ ಮಾಡಿದ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿತ್ತು.
ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಮೂವರು ಆರೋಪಿಗಳ ಪೈಕಿ ರೋನಿ ಹಾಗೂ ವಿಶ್ವಾಸ್ ಅಪ್ರಾಪ್ತರಾದ ಕಾರಣ ನ್ಯಾಯಾಲಯ ಅವರಿಗೆ ಎಚ್ಚರಿಕೆಯನ್ನು ನೀಡಿ ಬಿಡುಗಡೆಗೊಳಿಸಿದ್ದರೆ ಹೇಮಂತ್ ಎಂಬಾತನಿಗೆ ೧೫ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
Tagged with
cnews
ಮಂಗಳೂರು: ಹದಿನೈದರ ಹರೆಯದ ಬಾಲಕಿಯನ್ನು ಬಲಾತ್ಕಾರವಾಗಿ ಅಪಹರಿಸಿರುವ ಬಗ್ಗೆ ಕುಂದಾಪುರದ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರದ ಬೇಳೂರು ಗ್ರಾಮದ ಮೊಗೆಬೆಟ್ಟು ಕಲ್ಲುಕೋರೆ-ಯಲ್ಲಿ ಕೆಲಸ ಮಾಡುತ್ತಿದ್ದ ಮಾರಿ ಎಂಬಾತ ಮೊಗೆಬಿಟ್ಟುವಿನಲ್ಲಿರುವ ಬಿಡಾರದ ಸಮೀಪ ಕುಷ್ಟಗಿಯಲ್ಲಿ ಸಹೋದರನೊಂದಿಗೆ ವಾಸವಾಗಿದ್ದ. ಆಗಾಗ ಮನೆಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾರಿ ಬಂದು ಹೋಗುವ ವಿಚಾರ ತಿಳಿದು ಮನೆಗೆ ಬಾರದಂತೆ ತಾಕೀತು ಮಾಡಲಾಗಿತ್ತು. ಈಗನಿಗೆ ಈಗಗಲೇ ಮದುವೆಯಾಗಿದ್ದು, ಪತ್ನಿಯನ್ನು ತೊರೆದಿದ್ದಾನೆ ಎನ್ನಲಾಗಿದೆ. ಏ. ಮೂರರಿಂದ ನನ್ನ ಮಗಳು ದೇವಿ (೧೫) ನಾಪತ್ತೆಯಾಗಿದ್ದು, ಇತ್ತ ಮಾರಿ ಕೂಡಾ ನಾಪತ್ತೆಯಾಗಿದ್ದ. ಆತ ದೇವಿಯನ್ನು ಬಲಾತ್ಕಾರವಾಗಿ ಪುಸಲಾಯಿಸಿ ಅಪಹರಿಸಿರುವುದಾಗಿ ಮೊಗೆಬೆಟ್ಟು ಜಯಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದಾರೆ.
Tagged with
cnews
ಮಂಗಳೂರು: ಕಳೆದ ಮಾರ್ಚ್ ೨೩ರಂದು ವ್ಯವಹಾರ ನಿಮಿತ್ತ ಬಳ್ಳಾರಿಗೆ ಹೋಗಿದ್ದ ತುಂಬೆ ಸಮೀಪದ ಮದಕ ನಿವಾಸಿ ಆಸಿಫ್ ಇಕ್ಬಾಲ್(೩೭) ನಿಗೂಢ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ. ವಾಹನ ಬ್ರೋಕರ್ ಕೆಲಸ ಮಾಡುತ್ತಿದ್ದ ಇವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Tagged with
cnews,
missing
ಮಂಗಳೂರು: ಪುತ್ತೂರಿನ ಗೋಳಿತೊಟ್ಟು ಎಂಬಲ್ಲಿಂದ ಕಳೆದ ವಾರ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ನಿನ್ನೆ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಝೀನತ್ ಎಂಬವರು ತನ್ನ ಮಕ್ಕಳಾದ ಅನ್ಸೀನಾ ಹಾಗೂ ಅಜ್ಮೀಲಾ ಜೊತೆ ನಾಪತ್ತೆಯಾಗಿದ್ದರು. ನಾಪತ್ತೆಗೆ ಕಾರಣ ತಿಳಿದುಬಂದಿಲ್ಲ.
Tagged with
cnews
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಥಬೀದಿ ದೇವಸ್ಥಾನದ ಬಳಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದ ವೃದ್ಧ ಸೈಮಂಡ್ ಮಚಾಡೊ(೬೦) ಅವರನ್ನು ಕೊಲೆಗೈಯಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮುಕ್ಕೋಡಿ ನಿವಾಸಿ ಸುಧಾಕರ(೨೨) ಎಂಬಾತ ಕೊಲೆ ಆರೋಪಿ. ಈತ ಹಣ ದ್ವಿಗುಣಗೊಳಿಸುವ ವ್ಯವಹಾರ ಮಾಡುತ್ತಿದ್ದು, ತನ್ನ ಸ್ನೇಹಿತರ ಜೊತೆ ಸೇರಿ ಸೈಮಂಡ್‌ರನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಅವಿವಾಹಿತರಾಗಿದ್ದು, ಕಳೆದ ೨೦ ವರ್ಷಗಳಿಂದ ಮನೆ ಬಿಟ್ಟು ಕದ್ರಿ ಶಿವಬಾಗ್‌ನಲ್ಲಿ ನೆಲೆಸಿದ್ದ ಇವರು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿ ಸುಧಾಕರ ಬೆಳ್ತಂಗಡಿ ಸಮೀಪದ ಮರೋಡಿ ನಿವಾಸಿಯಾಗಿದ್ದು, ಸುರತ್ಕಲ್‌ನಲ್ಲಿ ಕಾರು ಚಾಲಕನಾಗಿ ದುಡಿಯುತ್ತಿದ್ದಾನೆ. ಕೊಲೆಯಾದ ಸೈಮಂಡ್ ಅವರು ತನ್ನಲ್ಲಿ ಎರಡು ಕೋಟಿ ರೂ.ನಷ್ಟು ಅಮೇರಿಕನ್ ಡಾಲರ್ ಇದ್ದು, ಹಣ ಕೊಟ್ಟವರಿಗೆ ದ್ವಿಗುಣ ಮಾಡಿಕೊಡುವುದಾಗಿ ಈ ಹಿಂದೆಯೂ ಅನೇಕ ಮಂದಿಗೆ ವಂಚಿಸಿದ್ದ ಆರೋಪ ಹೊತ್ತಿದ್ದರು. ಸುಧಾಕರ ಸೇರಿದಂತೆ ಇತರರಿಂದ ಮೂರು ಲಕ್ಷ ರೂ. ಹೆಚ್ಚು ಹಣ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.
ಇದೇ ಹಿನ್ನೆಲೆಯಲ್ಲಿ ಸೈಮಂಡ್‌ರನ್ನು ಕೆಲಸ ಮಾಡುತ್ತಿದ್ದ ಸೈಂಟ್ ಅಲೋಶಿಯಸ್ ಕಾಲೇಜ್ ಸಮೀಪದ ಇಂಡಿಯನ್ ಬ್ಯಾಂಕ್ ಎಟಿಎಂನಿಂದ ಘಟನೆ ನಡೆದ ದಿನ ಬೆಳಗ್ಗೆ ಸುರತ್ಕಲ್‌ಗೆ ಕರೆದುಕೊಂಡು ಬಂದು ಸಮುದ್ರ ಕಿನಾರೆಯಲ್ಲಿ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ಸೈಮಂಡ್ ಮೃತಪಟ್ಟಿದ್ದು, ಆರೋಪಿಗಳು ರಾತ್ರಿಯ ವೇಳೆ ಶವವನ್ನು ಸುರತ್ಕಲ್ ಕಾಶಿಮಠ ಸಮೀಪದ ಮನೆಯೊಂದರ ಅಂಗಳಕ್ಕೆ ಎಸೆದು ಪರಾರಿಯಾಗಿದ್ದರು. ಸುಧಾಕರ ಮಾತ್ರ ಪೊಲೀಸರ ವಶವಾಗಿದ್ದು, ಇನ್ನೂ ಹಲವರ ಬಂಧನ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tagged with
cnews
ಮಂಗಳೂರು: ಕುಂದಾಪುರದ ಬೈಂದೂರು ವ್ಯಾಪ್ತಿಯ ಪಡುವರಿ ಗ್ರಾಮದ ದುರ್ಮಿ ಎಂಬಲ್ಲಿ ಮನೆಯೊಂದರಿಂದ ೩.೩೪ ಲಕ್ಷ ರೂ. ಮೌಲ್ಯದ ನಗ-ನಗದು ಕಳವಾಗಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ದುರ್ಮಿ ಪೇಟರ್ ಡಯಾಸ್ ಎಂಬವರ ಮನೆಯೊಳಗಡೆ ದೇವರ ಕೋಣೆಯಲ್ಲಿರಿಸಿದ್ದ ೪೫೦೦ ರೂ., ಕಪಾಟಿನಲ್ಲಿರಿಸಿದ್ದ ೩೦ ಗ್ರಾಂ. ಚಿನ್ನದ ನೆಕ್ಲೆಸ್, ೨೦ ಗ್ರಾಂ. ಚಿನ್ನದ ಸರ, ಬಳೆ, ಉಂಗುರ, ಪೆಂಡೆಂಟ್, ೨೦ ಗ್ರಾಂ ತೂಕದ ಚಿನ್ನದ ರಾಕಿ ಸೇರಿಒಟ್ಟು ೩.೩೪ ಲಕ್ಷ್ ಮೌಲ್ಯದ ನಗ-ನಗದು ಕಳವು ಮಾಡಿರುವುದಾಗಿ ಪೀಟರ್ ದೂರು ನೀಡಿದ್ದು, ಬೈಂದೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.
Tagged with
cnews
ಮಂಗಳೂರು: ಅಮಾಸೆಬೈಲ್‌ನಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವುದಾಗಿ ಹೇಳಿ
ವ್ಯಕ್ತಿಯೊಬ್ಬರಿಂದ ಚಿನ್ನಾಭರಣ ಪಡೆದು ವಂಚಿಸಿದ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ
ಖಾಸಗಿ ದೂರು ದಾಖಲಾಗಿದೆ.
ರಮೇಶ್ ಪೂಜಾರಿ ಎಂಬಾತ ತನ್ನನ್ನು ತಾನು ಖಾಸಗಿ ಮೊಬೈಲ್
ಕಂಪೆನಿಯ ಮೇಲ್ವಿಚಾರಕ ಎಂದು ಹೇಳಿಕೊಂಡು ಅಮಾಸೆಬೈಲಿನ ೯ ಸೆಂಟ್ಸ್ ಸ್ಥಳದಲ್ಲಿ ಟವರ್
ನಿರ್ಮಿಸುವುದಾಗಿ ನಂಬಿಸಿದ್ದ. ಜಾಗದ ಮಾಲಕ ರಾಘವೇಂದ್ರ ಅವರಲ್ಲಿ ಒಂದು ಲಕ್ಷ ರೂ.
ಮುಂಗಡ ಹೇಳಿದ್ದ ರಮೇಶ್ ಅವರಿಗೆ ರಾಘವೇಂದ್ರರು ತನ್ನಲ್ಲಿದ್ದ ಆರು ಗ್ರಾಂ ತೂಕದ
ಬ್ರೇಸ್‌ಲೆಟ್ ಹಾಗೂ ತಲಾ ಮೂರು ಗ್ರಾಂ ತೂಕದ ಮೂರು ಉಂಗುರಗಳನ್ನು ನೀಡಿದ್ದರು. ಇದೀಗ
ಆರೋಪಿ ಟವರ್ ನಿರ್ಮಾಣದ ಪ್ರಸ್ತಾಪ ಮಾಡದೆ ವಂಚನೆ ಮಾಡಿರುವುದಾಗಿ ದೂರಲಾಗಿದೆ.
Tagged with
cnews
ಮಂಗಳೂರು: ಗುರುಪುರ ಸಮೀಪದ ಕಿನ್ನಿಕಂಬಳ ನಿವಾಸಿ ವ್ಯಕ್ತಿಯೊಬ್ಬರು ನಿನ್ನೆ ಮನೆಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ಮೃತರನ್ನು ಅಣ್ಣು ದಾಸ್(೪೩) ಎಂದು ಹೆಸರಿಸಲಾಗಿದೆ. ವಿಪರೀತ ಕುಡಿತದ ಚಟದಿಂದ ಕೃತ್ಯವೆಸಗಿರಬೇಕೆಂದು ಶಂಕಿಸಲಾಗಿದೆ.
Tagged with
cnews
ಕಾರ್ಕಳ: ಇಲ್ಲಿಗೆ ಸಮೀಪದ ಮಾಳ ಗುರ್ಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರು ಹೊಳೆಗೆ ಬಿದ್ದು ಸಾವಿಗೀಡಾದ ಘಟನೆ ಸಂಭವಿಸಿದೆ.
ವನಜಾ ಹೆಗ್ಗಡ್ತಿ ಎಂಬವರು ಘಟನೆಯಲ್ಲಿ ಸಾವಿಗೀಡಾದವರು. ನಿನ್ನೆ ಮಧ್ಯಾಹ್ನದ ಸುಮಾರು ೧೨.೩೦ರ ವೇಳೆಗೆ ಇವರು ಸ್ನಾನಕ್ಕೆ ತೆರಳಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪಂಜುರ್ಲಿ ಗುಂಡಿ ಯಲ್ಲಿ ಸ್ನಾನ ಮುಗಿಸಿ ಸಿಮೆಂಟ್ ದಂಡೆಯ ಮೇಲೆ ನಡೆದು ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ.
Tagged with
cnews
ಮಂಗಳೂರು: ದೇರಳಕಟ್ಟೆ ನಿಲ್ದಾಣದಲ್ಲಿ ನಿಲ್ಲುವ ಹಂತದಲ್ಲಿದ್ದ ಬಸ್ಸಿನಿಂದ ಬಿದ್ದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗುರುವಾರ ಮಧ್ಯಾಹ್ನ ಬಿ.ಸಿ. ರೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ಬಳಿ ನಿಲ್ಲುವ ವೇಳೆ ಬಸ್ಸಿನೊಳಗಿದ್ದ ಕಿನ್ಯ ನಿವಾಸಿ ಮಹಮ್ಮದ್ ಎಂಬವರ ಪುತ್ರ ಸೌಹಾನ್(೭) ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Tagged with
cnews

ಬೆಂಗಳೂರು: ರಾಜ್ಯದೊಂದಿಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬರ ಪರಿಹಾರಕ್ಕಾಗಿ ತಕ್ಷಣವೇ ೫೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬರಪೀಡಿತ ಪ್ರದೇಶ ಗಳ ಪರೀಶೀಲನೆಗೆ ಪ್ರವಾಸ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಮಾಜಿ ಸಿಎಂ, ಬರಗಾಲ ಪರಿಸ್ಥಿತಿ ಕೇಂದ್ರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಅಲ್ಲದೆ ಬರ ಪರಿಹಾ ರದ ಮೊದಲ ಹಂತವಾಗಿ ೫೦೦ ಕೋಟಿ ರೂಪಾಯಿ ಬಿಡುಗಡೆ ಮಾq ಬೇಕು ಎಂದು ಮನವಿ ಮಾಡಿದರು.
ಮಾತು ಮುಂದುವರಿಸಿದ ಬಿಎಸ್‌ವೈ, ರಾಜ್ಯವನ್ನು ಪ್ರತಿನಿಧಿಸು ತ್ತಿರುವ ಕೇಂದ್ರ ಸಚಿವರು ಈ ಸಂಬಂಧ ಪ್ರಧಾನ ಮಂತಿಯ ಮನವೊಳಿಸಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲೇ ತಮ್ಮ ಮೇಲೆ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷದ ವವರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ಯಡಿಯೂರಪ್ಪ, ಅಧಿವೇಶ ದಲ್ಲಿ ವೀರಾವೇಶವಾಗಿ ಮಾತನಾಡಿದರೆ ಪರಿಹಾರ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬರಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ರಾಜ್ಯ ಸರ್ಕಾರದ ಬರ ಪರಿಹಾರ ಕಾರ್ಯಗಳ ಬಗ್ಗೆ ಸಂತ್ರಸ್ತರಿಗೆ ತೃಪ್ತಿ ಯಿದ್ದು, ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ಮುಖ್ಯಮಂತ್ರಿ ಸದಾನಂದ ಗೌಡರಿರಿಗೆ ವರದಿಯನ್ನು ಸಲ್ಲಿಸಲಿದ್ದೇನೆ ಎಂದವರು ತಿಳಿಸಿದರು.
ಇದಕ್ಕೂ ಮೊದಲು ಯಡ್ಡಿಯೂ ರಪ್ಪ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದ ಕಾಂಗ್ರೆಸ್, ರೆಸಾರ್ಟ್ ಆಯ್ತು ಇದೀಗ ಪ್ರವಾಸ ಪಾಲಿಟಿಕ್ಸ್‌ನಲ್ಲಿ ತೊಡಗಿದ್ದಾರೆ ಎಂದು ಆರೋಪ ನಡೆಸಿದತ್ತು. ಇದಕ್ಕೆ ಪ್ರತಿಯಾಗಿ ಯಡ್ಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
Tagged with
snews

ಬೆಂಗಳೂರು: ಅಧಿಕಾರಕ್ಕಾಗಿ ರೆಸಾರ್ಟ್, ದೆಹಲಿಯಾತ್ರೆ, ಅಭಿನಂದನೆ ರಾಜಕೀಯ ಮಾಡಿಕೊಂಡಿದ್ದ ಯಡಿ ಯೂರಪ್ಪ ಅವರಿಗೆ ರಾಜ್ಯದಲ್ಲಿರುವ ಬರ ಪರಿಸ್ಥಿತಿ ಈಗ ಗೋಚರವಾಗಿದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವ್ಯಂಗ್ಯವಾ ಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಜನರ ಕಷ್ಟ-ಸುಖಗಳನ್ನು ಅರಿಯಲು ಬರಪೀಡಿತ ಪ್ರದೇಶಕ್ಕೆ ಹೋಗಿಲ್ಲ. ಈ ನಿಟ್ಟಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ನವೆಂಬರ್‌ನಲ್ಲೇ ಬರ ಘೋಷಣೆಯಾಗಿದ್ದರೂ ನಿನ್ನೆಯವ ರೆಗೂ ಯಡಿಯೂರಪ್ಪ ಕಣ್ಣಿಗೆ ಕಂಡಿ ರಲಿಲ್ಲ. ಈಗ ಬರದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈಗ ಜನರ ನೋವನ್ನು ಆಲಿಸಲು ಪ್ರವಾಸ ಕೈಗೊಂಡಿರುವುದರ ಮರ್ಮ ಜನರಿಗೆ ಅರ್ಥವಾಗುವುದಿಲ್ಲವೆ ಎಂದು ಪ್ರಶ್ನಿಸಿದರು.
Tagged with
snews
ಬೆಂಗಳೂರು: ಮುಖ್ಯಮಂತ್ರಿ ಸದಾನಂದ ಗೌಡರ ಬದಲಾವಣೆಗಾಗಿ ವರದಿ ಕೇಳಲಾಗಿದೆ ಎಂಬ ಮಾಹಿತಿಯನ್ನು ಬಿಜೆಪಿ ವರಿಷ್ಠರು ತಳ್ಳಿ ಹಾಕಿದ್ದಾರೆ. ಕೇಂದ್ರೀಯ ನಾಯಕ ಜೋಶಿ ಅವರಿಂದ ರಾಜ್ಯ ರಾಜಕೀಯದ ಬಗ್ಗೆ ವರದಿ ಕೇಳಲಾಗಿದೆ ಎಂಬುದು ಅಪ್ಪಟ ಸುಳ್ಳು. ಮುಖ್ಯಮಂತ್ರಿ ಬದಲಾವಣೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಜೋಶಿಯವರನ್ನು ರಾಜ್ಯಕ್ಕೆ ಕಳುಹಿಸಿ ಅವರು ಪರಿಸ್ಥಿತಿ ಅಧ್ಯನ ಮಾಡಿ ೧೫ ದಿನಗಳಲ್ಲಿ ವರದಿ ನೀಡಲಿದ್ದಾರೆ ಎಂಬುದು ಮಾದ್ಯಮಗಳ ಸೃಷ್ಟಿ. ಸದಾನಂದ ಗೌಡರ ಬದಲಾವಣೆ ಇಲ್ಲ ಎಂಬ ನಿಲುವಿನಲ್ಲಿ ನಾವು ಬದ್ದರಾಗಿದ್ದೇವೆ. ಕರ್ನಾಟಕ ಬಿಜೆಪಿಯ ಆಂತರಿಕ ಮುಸುಕಿನ ಗುದ್ದಾಟ ಹಾಗೂ ಸರಕಾರದ ನಡವಳಿಕೆಯ ಬಗ್ಗೆ ನಮಗೆ ಪ್ರತಿ ಕ್ಷಣಕ್ಕೂ ಮಾಹಿತಿ ಇದೆ. ಇಂತಹ ಸನ್ನಿವೇಶದಲ್ಲಿ ಈ ಕ್ಷೇತ್ರದ ಒಬ್ಬರನ್ನು ಕಳುಹಿಸಿ ವರದಿ ಕೇಳಿದ್ದೇವೆ ಎಂಬುದು ಸರಿಯಲ್ಲ. ನಾಯಕತ್ವ ಬದಲಾವಣೆ ಹಾಗೂ ಭಿನ್ನಾಭಿಪ್ರಾಯ ಬಗೆಹರಿಸುವ ಸಂಬಂಧ ರಾಜ್ಯಕ್ಕೆ ಯಾವುದೇ ನಾಯಕರು ಭೇಟಿ ನೀಡುವುದಿಲ್ಲ. ಯಡಿಯೂರಪ್ಪನವರಿಗೆ ಅಧಿಕಾರ ನೀಡುವ ವಿಚಾರ ನಮಗೆ ಬಿಟ್ಟದ್ದು. ಈ ಬಗ್ಗೆ ಎ. ಎರಡನೇ ವಾರದ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಅವರು ತಾಳ್ಮೆಯಿಂದ ಇರಬೇಕು.
Tagged with
snews
ಮಂಗಳೂರು: ರಾಷ್ಟ್ರಪತಿಗಳಿಗೆ ದಂತ ವೈದ್ಯರಾಗಿ ನೇಮಕ ಗೊಂಡಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿ ದಂತ ವೈದ್ಯಪರಿಷತ್ತಿನ ನಿಯಮಾವಳಿಗಳಿಗೆ ವಿರುದ್ಧ ಪ್ರಚಾರ ನಡೆಸಿ, ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ.ಮಿತ್ರಾ ಹೆಗ್ಡೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಾಗರಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.
ನಿನ್ನೆ ಪ್ರ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್, ಮಂಗಳೂರಿನಲ್ಲಿರುವ ದಂತ ವೈದ್ಯರ ಬಳಿ ಚಿಕಿತ್ಸೆಗಾಗಿ ಹೋದರೆ ಕೇವಲ ೧೦೦ರೂ. ತೆಗೆಯುತ್ತಾರೆ. ಆದರೆ ಮಿತ್ರಾ ಹೆಗ್ಡೆಯವರು ಸ್ವಲಾಭಕ್ಕಾಗಿ ರಾಷ್ಟ್ರಪತಿ ಯವರ ಹೆಸರು ಬಳಸಿದ್ದು, ಇದರ ಪರಿಣಾಮವಾಗಿ ಈಗ ಅವರ ಕ್ಲಿನಿಕ್‌ನಲ್ಲಿ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು ೫೦೦ರಿಂದ೬೦೦ರೂ. ಶುಲ್ಕ ಪಡೆಯುತ್ತಾರೆ ಎಂದು ಕಿಡಿಕಾರಿದರು. ಮಾಹಿತಿ ಹಕ್ಕಿನಲ್ಲಿ ಸತ್ಯ ಹೊರಬಂದ ಬಳಿಕ ಮಿತ್ರಾ ಅವರ ವಿಸಿಟಿಂಗ್ ಕಾರ್ಡ್ ಬದಲಾಗಿದ್ದು, ಕ್ಲಿನಿಕ್‌ನಲ್ಲಿ ರಾಷ್ಟ್ರಪತಿಯವರ ಜೊತೆ ಇದ್ದ ಫೋಟೋಗಳನ್ನು ತೆಗೆಯಲಾಗಿದೆ. ಮೊನ್ನೆ ರಾತ್ರಿ ಏಳು ಗಂಟೆಗೆ ಅವರು ತನ್ನ ಮೊಬೈಲ್‌ಗೆ ಕರೆ ಮಾಡಿ ಮಾತುಕತೆಗೂ ಆಹ್ವಾನಿಸಿದ್ದಾರೆ ಎಂದು ಕಾಮತ್ ಅರೋಪಿಸಿದರು. ವೈದ್ಯೆಯ ವಂಚನೆ ಪ್ರಕರಣದ ಬಗ್ಗೆ ಈಗಾಗಲೇ ರಾಜ್ಯ ವೈದ್ಯ ಪರಿಷತ್, ರಾಜ್ಯಪಾಲರು, ರಾಷ್ಟ್ರಪತಿಯವರ ಕಾರ್ಯ ದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಗೆ ದೂರು ನೀಡಲಾಗಿದ್ದು, ವೈದ್ಯ ಪರಿಷತ್‌ನಿಂದ ಶೋಕಾಸ್ ನೋಟಿಸ್ ಬಂದಿದೆ. ಅವರಿಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವ ಕಾಮತ್, ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರಶಸ್ತಿ ಮಾರಲಾಗುತ್ತಿದೆ
ಇದೇ ವೇಳೆ ಮಾತನಾಡಿದ ಅವರು ರಾಜ್ಯೋ ತ್ಸವ ಪ್ರಶಸ್ತಿ ಎಂಬುದು ಅಂಗಡಿಯಲ್ಲಿ ಕಡ್ಲೆ ಕಾಯಿ ಮಾರಿದಂತಾಗಿದೆ. ಈ ಪ್ರಶಸ್ತಿ ಬೇಕಾದಲ್ಲಿ ಸಮ್ ಥಿಂಗ್ ಕೊಟ್ಟರೆ ಸಾಕು. ಇತ್ತೀಚೆಗೆ ಬಿಲ್ಡರ್‌ಗಳಿಗೂ ಸಮಾಜ ಸೇವಕನ ಸ್ಥಾನ ನೀಡಿ ಪ್ರಶಸ್ತಿ ನೀಡಲಾ ಗುತ್ತಿದ್ದು, ತಾನು ಚಾಲೆಂಜ್ ಮಾಡಿದರೆ ಮುಂದಿನ ವರ್ಷ ತನಗೂ ಪ್ರಶಸ್ತಿ ಗ್ಯಾರಂಟಿ ಎಂದು ಕಾಮತ್ ವ್ಯಂಗ್ಯವಾಡಿದರು.
Tagged with
lnews
ಬೆಳ್ತಂಗಡಿ: ಬಾರ್ಯ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ಗುರುವಾರದಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಕೋರಂ ಕೊರ ತೆಯ ಕಾರಣದಿಂದಾಗಿ ಚುನಾವಣಾ ಅಧಿಕಾರಿಯಾದ ಬೆಳ್ತಂಗಡಿ ತಹಶೀಲ್ದಾರ್ ಕುಸುಮಾ ಕುಮಾರಿ ಅವರು ಎ.೧೨ಕ್ಕೆ ಮುಂದೂಡಿ ರುವುದಾಗಿ ತಿಳಿದುಬಂದಿದೆ.
ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಸದಸ್ಯೆ ರುಕ್ಮಿಣಿ ಅವರು ಮಾತ್ರ ಅರ್ಹ ಅಭ್ಯರ್ಥಿ ಯಾಗಿದ್ದು, ನಾಮಪತ್ರ ಸಲ್ಲಿಸಿದ್ದರು. ಬಾರ್ಯ ಗ್ರಾ.ಪಂ. ಒಟ್ಟು ೨೨ ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಒಂದು ಬಿಜೆಪಿ ಬೆಂಬಲಿತ ಸದಸ್ಯೆ, ಇನ್ನೋರ್ವ ಪಕ್ಷೇತರ ಸದಸ್ಯ. ಸಭೆ ಆರಂಭಗೊಂಡಾಗ ೨೨ ಸದಸ್ಯರಿರುವ ಪಂಚಾಯತ್‌ನಲ್ಲಿ ಕೇವಲ ನಾಲ್ಕು ಮಂದಿ ಸದಸ್ಯರು ಮಾತ್ರ ಹಾಜರಿದ್ದರು. ಅಧ್ಯಕ್ಷೆ ಆಕಾಂಕ್ಷಿ ಅಭ್ಯರ್ಥಿ ರುಕ್ಮಿಣಿ ಅವರಲ್ಲದೆ ರೇಖಾ ಅಡಪ, ಇಸುಬು ಹಾಗೂ ಬಿ.ಕೆ. ಮಹಮ್ಮದ್ ಹಾಜರಿದ್ದರು. ಉಳಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೈರು ಹಾಜರಾಗಿದ್ದರು. ಕೋರಂ ಇಲ್ಲದ ಕಾರಣಕ್ಕೆ ಚುನಾವಣಾಧಿಕಾರಿಯವರು ಸಭೆ ಮುಂದೂಡಿದರು. ಗ್ರಾ.ಪಂ ಅಧ್ಯಕ್ಷೆಯಾಗಿದ್ದ ರುಕ್ಮಿಣಿ ಅವರನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಇಳಿಸಿದ್ದರು. ಇದೀಗ ಮತ್ತೊಮ್ಮೆ ಅಧ್ಯಕ್ಷೆ ಸ್ಥಾನಕ್ಕೆ ರುಕ್ಮಿಣಿಯವರು ನಾಮಪತ್ರ ಸಲ್ಲಿಸಿದಾಗ ಬಿ.ಕೆ ಮಹಮ್ಮದ್ ಸೂಚಕರಾಗಿಯೂ ರೇಖಾ ಅಡಪರವರು ಅನುಮೋದಕರಾಗಿದ್ದರು. ಬಿಜೆ ಪಿಯ ಏಕಮಾತ್ರ ಸದಸ್ಯರಾಗಿರುವ ರುಕ್ಮಿಣಿಯವರು ಮೀಸಲಾತಿಯ ಕಾರಣ ದಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಈ ರಾಜಕೀಯ ತಂತ್ರವನ್ನು ರೂಪಿಸಿ ರುಕ್ಮಿಣಿಯವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದಾರೆ.
Tagged with

ವಧು ನೋಡಲು ಬಂದವರೇ ಮದುವೆ ಮುಗಿಸಿದರು!
ಉಪ್ಪಿನಂಗಡಿ: ಇಂದಿನ ಸಮಾಜದಲ್ಲಿ ಮುಸ್ಲಿಮರಲ್ಲಿ ವರದಕ್ಷಿಣೆ ಪಡೆಯು ವಂತ ಅನಾಗರಿಕ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ ಎಂದರೆ ತಪ್ಪಿಲ್ಲ. ಇದರ ವಿರುದ್ದ ಹೋರಾಟ ನಡೆಯುತ್ತಲೇ ಇದೆ. ಮುಸ್ಲಿಂ ಸಮುದಾಯದ ಹಿತಚಿಂತಕರೂ ನಾಯಕರೂ ವಿದ್ವಾಂಸರೂ ವೇದಿಕೆ ಸಿಕ್ಕಿದಾಗ ಗಂಟೆಗಟ್ಟಲೆ ವರದಕ್ಷಿಣೆ ವಿರುದ್ದ ಮಾತನಾಡುತ್ತಾರೆ. ಆದರೆ ಇದರ ವಿರುದ್ದ ಫತ್ವಾ ಜಾರಿಗೆ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು
ಅಕ್ಷರಶಃ ಸತ್ಯದ ವಿಚಾರ. ಆದರೆ ಇದೀಗ ಈ ಎಲ್ಲಾ ವಿಚಾರಕ್ಕೆ ವಿರುದ್ದವಾಗಿ ಇಲ್ಲೊಂದು ಮಾದರಿ ಮದುವೆ ನಡೆದು ಹೋಗಿದೆ. ಹಾಸನದಲ್ಲಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಉಪ್ಪಿನಂಗಡಿ ಸಮೀಪದ ಪೆರ್ಜಿ ನಿವಾಸಿ ಜೆ.ಎಸ್.ಖಲಂದರ್ ಎಂಬಾತ ಹಾಸನದಲ್ಲಿದ್ದ ತನ್ನ ಗೆಳೆಯನಿಗೆ ಹುಟ್ಟೂರಿನಲ್ಲಿರುವ ಬಡ ಕುಟುಂಬವೊಂದರ ಹುಡುಗಿಯೋರ್ವಳನ್ನು ಮದುವೆ ಮಾಡಿಸುವುದರ ಮುಖಾಂತರ ಮಾದರಿಯಾಗಿದ್ದಾರೆ.
ಹಾಸನದ ಪೆನ್ಸನ್ ಮೊಹಲ್ಲಾದ ನೂರಾನಿ ಮಸೀದಿ ಜಮಾಅತಿನ ಪ್ಯಾರಜಾನ್ ಆತಿಮಾ ಬೇಗಂ ಎಂಬವರ ಪುತ್ರ ಟಿ.ಎಚ್.ಇಮ್ರಾನ್ ಎಂಬಾತ ವಾಹನಕ್ಕೆ ಪೈಂಟ್ ಮಾಡುವ ಕೆಲಸ ಮಾಡುತ್ತಿದ್ದು, ಈತ ಉಪ್ಪಿನಂಗಡಿ ಸಮೀಪದ ರಾಮಕುಂಜ ಗ್ರಾಮದ ಕೆಮ್ಮಾರ ಜಮಾಅತಿನ ಪೆರ್ಜಿ ನಿವಾಸಿ ಉಸ್ಮಾನ್ ಮೈಮೂನ ದಂಪತಿಗಳ ಪುತ್ರಿ ಸಮೀನಾ ಎಂಬವಳನ್ನು ಮೊನ್ನೆ ವಧು ನೋಡಲು ಬಂದಿದ್ದು. ವಧೂ ನೋಡಿ ಒಪ್ಪಿಕೊಂಡು ಈ ಕುಟುಂಬ ಯಾವುದೇ ವರದಕ್ಷಿಣೆ ವಿಚಾರವನ್ನು ಕೇಳದೇ ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಕೇಳಿ ಕೊಂಡು ಕೇವಲ ೨೨ಗಂಟೆ ಸಮಯಾವಕಾಶ ಪಡೆದುಕೊಂಡು ಕುಟುಂಬ ದವರ ಸಮ್ಮತಿಯಂತೆ ಎರಡೂ ಕಡೆಯವರು ಸೇರಿ ಕೆಮ್ಮಾರ ಜಮಾಅತಿನ ಖತೀಬರಾದ ಅಬ್ದುರ್ರಹ್ಮಾನ್ ಸಖಾಫಿ ನಿಖಾಹ್ ನೆರವೇರಿಸಿದರು.
ಜಮಾಅತ್ ಕಾರ್ಯದರ್ಶಿ ನಝೀರ್ ಪೂರಿಂಗ, ಅಬ್ದುರ್ರಹ್ಮಾನ್ ಮುಸ್ಲಿ ಯಾರ್, ಮಾದರಿ ವಿಕಾಸ ಕೇಂದ್ರದ ಬಡಿಲ ಹುಸೈನ್, ಹಾಜಿ ರಶೀದ್ ಬಡ್ಡಮೆ ಮಾದರಿ ಮದುವೆಗೆ ಸಾಕ್ಷಿಯಾದರು.
Tagged with
lnews

ಕಾರ್ಕಳ: ಹಠಾತ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಪುರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಾ ಜಿರಾವ್ ಅವರು ತನ್ನ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಹೆಚ್. ಗೋಪಾಲ ಭಂಡಾರಿ ಅವರು ಪುರಸಭೆಗೆ ಭೇಟಿ ನೀಡಿ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಯೊಂದಿಗೆ ಸುಧೀರ್ಘ ಕಾಲ ಮಾತುಕತೆ ನಡೆಸಿ ರುವುದು ಹಲವು ಕುತೂಹಲಕ್ಕೆ ಕಾರಣ ವಾಗಿದೆ. ಪುರಸಭಾ ಅಧ್ಯಕ್ಷೆ ಪ್ರತಿಮಾ ಮೋಹನ್ ರಾಣೆ ಅವರ ಏಕಪಕ್ಷೀಯ ನಿರ್ಧಾರ ಹಾಗೂ ಗೌರವಸ್ಥಾನದಲ್ಲಿರುವ ಇತರ ಜನಪ್ರತಿನಿಧಿಗಳನ್ನು ಗೌರವದಿಂದ ಕಾಣದಿರುವುದು. ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾಜಿರಾವ್ ಅವರು ಅಧಿಕಾರವಧಿಯ ಮೊದಲೇ ತನ್ನ ರಾಜೀನಾಮೆ ನೀಡಲು ಕಾರಣವೆಂಬುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ನಡುವೆ ಶಿವಾಜಿರಾವ್ ಅವರು ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.
ಮಾ.೩೧ರಂದು ನಡೆಯಬೇಕಾಗಿದ್ದ ಪುರಸಭಾ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಪ್ರತಿಮಾ ಏಕಾಪಕ್ಷೀಯವಾಗಿ ರದ್ದುಗೊಳಿಸಿರುವುದು ಹಾಗೂ ಪುರಸಭಾ ಉಪಾಧ್ಯಕ್ಷರಿಗೆ ಸಾಮಾನ್ಯ ಸಭೆಯನ್ನು ಮುಂದುವರಿಸಲು ಅನುವು ಮಾಡಿಕೊಡ ದಿರುವ ಕ್ರಮದ ಬಗ್ಗೆ ಶಿವಾಜಿರಾವ್ ಅಸಮಾಧಾನಗೊಂಡಿದರೆಂದು ತಿಳಿದು ಬಂದಿದೆ. ತೆರವುಗೊಂಡ ಸ್ಥಾನಕ್ಕೆ ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಉಪಾ ಧ್ಯಕ್ಷರಾಗಿರುವ(ಕೌನ್ಸಿಲರು) ಮಹಮ್ಮದ್ ಶರೀಫ್ ಆಕಾಂಕ್ಷಿ ಕಣದಲ್ಲಿದ್ದಾರೆಂದು ತಿಳಿದು ಬಂದಿದೆ. ಇದೇ ಕಾರಣದಿಂದ ಮಾರ್ಚ್ ಮೂರರಂದು ಮುಂದುವರಿದ ಸಾಮಾನ್ಯಸಭೆಯಲ್ಲಿ ಪತ್ರಕರ್ತರಿಗೆ ಆಹ್ವಾನವಿಲ್ಲದ ವಿಚಾರವನ್ನು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರಿಬ್ಬರು ಕಲಾಪದಲ್ಲಿ ಪ್ರಸ್ತಾಪಿಸಿದಾಗ ಮಹಮ್ಮದ್ ಶರೀಫ್ ಮೌನಕ್ಕೆ ಶರಣಾಗಿರುವುದು ಕಂಡುಬಂತು.
ಉಪಭಿಯಂತರ ವಿರುದ್ಧ ಶಾಸಕರಿಗೆ ದೂರು
ಪುರಸಭೆಯ ಉಪಅಭಿಯಂತರ ದುರ್ಗಾಪ್ರಸಾದ್‌ನ ಒರಟುತನ ಹಾಗೂ ಪಕ್ಷಪಾತ ನಿಲುವಿನ ಬಗ್ಗೆ ನಾಗರಿಕರು ಶಾಸಕ ಹೆಚ್.ಗೋಪಾಲ ಭಂಡಾರಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಉಡುಪಿ ಕಡೆಗೆ ಹೋಗುವ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಭಾರೀ ಗಾತ್ರದ ಕಂದಕವೊಂದು ತೆರೆದುಕೊಂಡಿದ್ದು, ವಾಹನಗಳ ಅಪಘಾತಕ್ಕೆ ಇದು ಕಾರಣವಾಗಿದೆ. ಇದರ ಬಗ್ಗೆ ಮುಖ್ಯಾಧಿಕಾರಿ, ಅಧ್ಯಕ್ಷರಿಗೆ ಸ್ಥಳೀಯ ನಾಗರಿಕರು ದೂರು ನೀಡಿದಲ್ಲದೇ ವಿಶಿಷ್ಠ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇಷ್ಟಾದರೂ ಪುರಸಭಾ ಆಡಳಿತ ವರ್ಗವು ಇದರ ಬಗ್ಗೆ ಗಮನಹರಿಸದೇ ಇದರ ಪಕ್ಕದಲ್ಲಿರುವ ಇತರ ಕಂದಕಗಳನ್ನು ಪ್ಯಾಚ್‌ವರ್ಕ್ ಕಾಮಗಾರಿ ನಡೆಸಿ ಮುಚ್ಚಲಾಗಿದೆಯಾದರೂ ದೊಡ್ಡ ಕಂದಕವನ್ನು ಯಥಾಸ್ಥಿತಿಯಲ್ಲಿ ಬಿಡಲಾಗಿದೆ.
ಪ್ಯಾಚ್‌ವರ್ಕ್ ಕಾಮಗಾರಿಯ ವೀಕ್ಷಣೆಗೆ ಬಂದಿದ್ದ ಉಪಅಭಿಯಂತರ ದುರ್ಗಾಪ್ರಸಾದ್‌ನಲ್ಲಿ ಕಂದಕವನ್ನು ಹಾಗೆಯೇ ಬಿಟ್ಟುಬಿಡಲು ಕಾರಣವೇನೆಂದು ತಿಳಿಯಬಯಸಿದಾಗ ನಾಗರಿಕರಲ್ಲಿ ಉಡಾಫೆಯಾಗಿ ಮಾತನಾಡಿದ ಅವರು ಬೇಕಾದರೆ ನಿಮ್ಮ ಖರ್ಚಿನಲ್ಲಿ ಹೊಂಡಮುಚ್ಚಿ ಎಂದು ಉತ್ತರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು ಈ ಬಗ್ಗೆ ಶಾಸಕರಿಗೆ ದೂರು ನೀಡಿದ್ದಾರೆ. ಅಭಿಯಂತರ ರವೀಂದ್ರ ಮೊಯಿಲಿ ಅವರು ಕಳೆದ ವರ್ಷ ನಿವೃತ್ತಿಯಾದರೂ ಮತ್ತೇ ದಿನಗೂಲಿ ಹೆಸರಿನಲ್ಲಿ ಅಭಿಯಂತರರಾಗಿ ಇದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಆರಂಭ ವೇಳೆಗೆ ಬಾರದೆ ಇರುವ ಇವರು ಮಧ್ಯಾಹ್ನ ೧೧ರ ವೇಳೆಗೆ ಕಚೇರಿಗೆ ಬಂದು ಬೇಕಾಬಿಟ್ಟಿಯಾಗಿ ಹೋಗುತ್ತಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಇದುವರೆಗೆ ನಡೆದಿರುವ ಕಾಮಗಾರಿಗಳೆಲ್ಲವೂ ಕಳಪೆ ಗುಣಮಟ್ಟದಾಗಿದ್ದು, ಇದರ ಬಗ್ಗೆ ಲೋಕಾಯುಕ್ತರಿಗೂ ದೂರು ತಲುಪಿದೆ. ಇಂತಹ ಸಂದರ್ಭದಲ್ಲಿ ರವೀಂದ್ರ ಭಂಡಾರಿ ಮತ್ತು ದುರ್ಗಾಪ್ರಸಾದ್ ಅವರಂತವರು ಪುರಸಭೆಗೆ ಅತ್ಯಗತ್ಯವೇನೆಂಬುವುದು ನಾಗರಿಕರ ಪ್ರಶ್ನೆಯಾಗಿದೆ.
Tagged with
lnews

ಮಂಗಳೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದ ದ.ಕ.ಜಿಲ್ಲಾ ಜನತಾದಳದ ಪದಾಧಿಕಾರಿಯಾಗಿದ್ದ ಧನ್‌ರಾಜ್‌ರನ್ನು ಪ್ರಾಥಮಿಕ ಸದಸ್ಯತನದಿಂದ ಉಚ್ಛಾಟಿ ಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ ಪತ್ರಿಕಾ ಪ್ರಕಟನೆಯ ಮೂಲಕ ಘೋಷಿಸಿದ್ದಾರೆ.
ಎಂ.ಜಿ.ಹೆಗ್ಡೆ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹಾರಿ ಜಿಲ್ಲಾಧ್ಯಕ್ಷರನ್ನೇ ಓವರ್‌ಟೇಕ್ ಮಾಡತೊಡಗಿದ್ದರು. ಇದು ಕಳೆದ ತಿಂಗಳು ನಡೆದ ಕಾರ್ಯ ಕರ್ತರ ಸಭೆಯಲ್ಲಿ ಪ್ರತಿಧ್ವನಿಸಿದ್ದು ಬಳಿಕ ಎಂ.ಜಿ.ಮೂಲೆ ಗುಂಪಾಗಿದ್ದರು. ಕಳೆದ ತಿಂಗಳು ನಗರದಲ್ಲಿ ನಡೆದಿದ್ದ ಕಾರ್ಮಿಕ ಘಟಕದ ಸಭೆಗೂ ಎಂ.ಜಿ.ಗೆ ಆಹ್ವಾನವಿರಲಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಉಸಿರಾಡುತ್ತಿದ್ದ ಪಕ್ಷದಲ್ಲಿ ಹೆಗ್ಡೆ ಮತ್ತು ಎಂ.ಬಿ.ಸದಾಶಿವ ಬಣ ಎನ್ನುವ ಎರಡು ಬಣಗಳೂ ಹುಟ್ಟಿಕೊಂಡಿದ್ದವು.
ಇವೆಲ್ಲದರ ಮಧ್ಯೆ ಬುಧವಾರದಂದು ಧನ್‌ರಾಜ್ ನೇತೃತ್ವದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ವಿರುದ್ಧ ಪತ್ರಿಕಾಗೋಷ್ಟಿಯನ್ನು ಆಯೋಜಿಸಿ ಬಳಿಕ ರದ್ದುಪಡಿಸಲಾಗಿತ್ತು. ಈ ಪತ್ರಿಕಾಗೋಷ್ಟಿಯ ನಾಟಕವು ಎಂ.ಬಿ. ಸದಾಶಿವ ಅವರಿಗೆ ಎಚ್ಚರಿಸುವ ಸಲುವಾಗಿ ಆಯೋಜಿಸಲಾಗಿತ್ತು ಎನ್ನಲಾಗಿದೆ. ಈ ವಿದ್ಯಮಾನದ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಲಾಗಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಧನ್‌ರಾಜ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತನದಿಂದಲೇ ಉಚ್ಛಾಟಿಸಿ ಎಂ.ಬಿ.ಸದಾಶಿವ ಆದೇಶ ಹೊರಡಿಸಿದ್ದಾರೆ.
Tagged with
lnews

ಕಾಸರಗೋಡು: ವಾಣಿಯ-ಗಾಣಿಗ ಸಮುದಾಯದವರ ಪ್ರಮುಖ ಕ್ಷೇತ್ರವಾದ ಇಲ್ಲಿನ ಸೂರಂಬೈಲು ಸಮೀಪ ಪೆರ್ಣೆ ಶ್ರೀಮುಚ್ಚಿಲೋಟ್ಟು ಭಗವತೀ ಕ್ಷೇತ್ರದಲ್ಲಿ ನಿನ್ನೆ ಸ್ವಸಮಾಜದವರ ಸಾಮೂಹಿಕ ವಿವಾಹ ನೆರವೇರಿತು. ವಾರ್ಷಿಕ ಪೂರಂ ಮಹೋತ್ಸವ ದ ಅಂಗ ವಾಗಿ ನಡೆದ ವಿವಾಹದಲ್ಲಿ ಸಮಾಜದ ೬೪ ಜೋಡಿ ಕಂಕಣಬದ್ದರಾದರು. ಶ್ರೀಕ್ಷೇತ್ರದ ಆಚಾರ ವರ್ಗದವರಾದ ಅಚ್ಚಮ್ಮಾರರು ಈ ವಿಶೇಷ ಸಾಮೂಹಿಕ ವಿವಾಹದ ಕಾರ್ಮಿಕತ್ವ ವಹಿಸಿದರು.
ಶ್ರೀಕ್ಷೇತ್ರದಲ್ಲಿ ವರ್ಷಂಪ್ರತಿ ನವಂಬರ್ ಹಾಗೂ ಎಪ್ರಿಲ್ ತಿಂಗಳಿ ನಲ್ಲಿ ಎರಡು ಬಾರಿ ಸಾಮೂಹಿಕ ವಿವಾಹ ನಡೆಯುವುದು ವಾಡಿಕೆ. ಎಪ್ರಿಲ್‌ನ ಸಾಮೂಹಿಕ ವಿವಾಹ ಪೂರಂ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದು ಅತ್ಯಂತ ವಿಶೇಷವೆನಿಸಿದೆ.
ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಪ್ರದೇಶಗಳ ವಾಣಿಯ-ಗಾಣಿಗರು ಪೆರ್ಣೆ ಶ್ರೀ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಾರೆ. ವಿಶೇಷವೆಂದರೆ ಸಾಮೂಹಿಕ ವಿವಾಹಕ್ಕೆ ಯಾವುದೇ ಆಮಂತ್ರಣವಿಲ್ಲದೆ ಸ್ವಸಮುದಾಯದ ಸರ್ವರೂ ಈ ದಿನ ಕ್ಷೇತ್ರಕ್ಕೆ ಹರಿದು ಬರುತ್ತಾರೆ.
Tagged with
lnews

ಬಾಬು ಜಗಜೀವನರಾಮ್ ಜನ್ಮದಿನಾಚರಣೆ:
ಉಡುಪಿ: ಇಲ್ಲಿನ ಆದಿ ಉಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಬಾಬು ಜಗಜೀವನ ರಾಮ್ ಅವರ ೧೦೫ನೇ ಜನ್ಮ ದಿನಾ ಚರಣೆಯನ್ನು ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದು, ದಲಿತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕೆ.ಲಕ್ಷ್ಮೀನಾರಾ ಯಣ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋಪಾಲ ಭಂಡಾರಿ, ಲಾಲಾಜಿ ಆರ್. ಮೆಂಡನ್, ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಗಣೇಶ್ ಕಾರ್ಣಿಕ್ ಸಹಿತ ಬಹುತೇಕ ಮಂದಿ ಸಮಾರಂಭಕ್ಕೆ ಆಗಮಿಸಿರಲಿಲ್ಲ.
ಇವರೆಲ್ಲರ ಹೆಸರುಗಳೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣ ವಾಗಿತ್ತು. ಹೆಸರು ಇದ್ದರೂ ಸಮಾ ರಂಭಕ್ಕೆ ಆಗಮಿಸದ ಬಗ್ಗೆ ದಲಿತ ಸಮುದಾಯದ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತಿ, ಮತೀಯ ಕಾರ್ಯಕ್ರಮಗಳಿಗೆ, ಮನೋರಂಜನಾ, ವ್ಯವಹಾರಿಕ ಕಾರ್ಯಕ್ರಮಗಳಿಗೆ ಆಗಮಿಸುವ ಇವರು ಬಾಬುಜಗಜೀವನ ರಾಮ್ ಇವರ ಜನ್ಮ ದಿನಾಚರಣಾ ಕಾರ್ಯಕ್ರಮಕ್ಕೆ ಆಗಮಿಸದೆ ತಮಗೆ ದಲಿತರ ಮೇಲೆ, ದಲಿತರಿಗಾಗಿ ಶ್ರಮಿಸಿದ ಬಾಬು ಜಗಜೀವನ ರಾಮ್ ಅವರ ಮೇಲೆ ಅಭಿಮಾನವಿಲ್ಲ, ಕಾಳಜಿ ಇಲ್ಲ ಎಂಬುದನ್ನು ಇವರೆಲ್ಲ ತೋರಿಸಿ ಕೊಟ್ಟಿದ್ದಾರೆ ಎಂದು ದಲಿತ ಸಮು ದಾಯದ ಮಂದಿ ಮಾತನಾಡಿ ಕೊಳ್ಳುತ್ತಿದ್ದಾರೆ.
ಶಾಸಕ ರಘುಪತಿ ಭಟ್, ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಾ.ಪಂ. ಅಧ್ಯಕ್ಷ ದೇವದಾಸ ಹೆಬ್ಬಾರ್ ಇವರು ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾದರು.
Tagged with
lnews
ಪುತ್ತೂರು: ಪುತ್ತೂರಿನ ಸರಕಾರಿ ಆಸ್ಪತ್ರೆಯ ಆವರಣ ಗೋಡೆ ಕುಸಿದು ಬಿದ್ದು ವರ್ಷವೊಂದು ಕಳೆದರೂ ಇದುವರೆಗೆ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿರುವುದು ಕಂಡು ಬರುತ್ತಿಲ್ಲ. ಇದು ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿಗೆ ಜ್ವಲಂತ ಸಾಕ್ಷಿಯಾಗಿದೆ.
ಆಸ್ಪತ್ರೆ ಒಂದು ಭಾಗದಲ್ಲಿರುವ ಈ ಆವರಣ ಗೋಡೆ ಕಳೆದ ವರ್ಷ ಮಳೆ ಗಾಲದಲ್ಲಿ ಕುಸಿದು ಬಿದ್ದಿದೆ. ಇದರಿಂ ದಾಗಿ ಆಸ್ಪತ್ರೆಯ ಒಳಗೆ ಯಾರೂ ಬೇಕಾದರೂ ಈ ಭಾಗದಿಂದ ಪ್ರವೇಶಿಸ ಬಹುದಾಗಿದೆ. ಆಸ್ಪತ್ರೆಯ ಮುಂಭಾಗ ದಲ್ಲಿ ರಾತ್ರಿ ಹಗಲು ಕಾವಲಿದೆ. ಪ್ರಸ್ತುತ ಅತ್ಯಂತ ಆಧುನಿಕ ವ್ಯವಸ್ಥೆ ಹೊಂದಿರುವ ಈ ಸರಕಾರಿ ಆಸ್ಪತ್ರೆಗೆ ಆವರಣ ಗೋಡೆ ಕುಸಿದು ಬಿದ್ದಿರುವ ಸ್ಥಳದಿಂದ ಮುಕ್ತ ಪ್ರವೇಶ ಇರುವ ಕಾರಣ ರಕ್ಷಣೆ ಎನ್ನುವುದು ಇಲ್ಲದಾಗಿದೆ.
ಹೀಗಿದ್ದರೂ ಕಳೆದ ಒಂದು ವರ್ಷದಿಂದ ಈ ಗೋಡೆಯನ್ನು ಪುನರ್ ನಿರ್ಮಿಸುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ ಎಂಬುವುದು ನಿರ್ಲ ಕ್ಷ್ಯತೆಗೆ ಉತ್ತಮ ಉದಾಹರಣೆಯಾಗಿದೆ. ಆಸ್ಪತ್ರೆಯ ಶವಾಗಾರದ ಪಕ್ಕದಲ್ಲಿರುವ ಹಳೆಯ ಜೈಲಿನ ಗೋಡೆ ಬಿರುಕು ಬಿಟ್ಟಿದ್ದು, ಇದೇನಾದರೂ ಕುಸಿದು ಬಿದ್ದರೆ ಶವಾಗಾರ ಕಟ್ಟಡ ನೆಲಸಮ ವಾಗುವ ಅಪಾಯವಿದೆ. ಸಾಮಾನ್ಯವಾಗಿ ಇಲ್ಲಿ ಇದು ಹೆಚ್ಚು ಜನರು ಓಡಾಡುವ ಸ್ಥಳವಾದ್ದರಿಂದ ಜನತೆಗೂ ಸಮಸ್ಯೆ ಯಾಗುವ ಸಂಭವವಿದೆ. ಆದ್ದರಿಂದ ಈ ಅಪಾಯವನ್ನು ಮೊದಲೇ ಅರಿತುಕೊಂಡು ವ್ಯವಸ್ಥೆ ಸರಿಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಅಪಾಯ ವಂತೂ ಕಟ್ಟಿಟ್ಟ ಬುತ್ತಿಯೇ ಸರಿ.
Tagged with
lnews
ಬಂಟ್ವಾಳ: ವಿದ್ಯುತ್ ಕಡಿತ ಸಮಸ್ಯೆಯನ್ನು ಪರಿಶೀಲಿಸಲು ಸ್ಥಳಕ್ಕಾಗಮಿಸಿದ್ದ ಮೆಸ್ಕಾಂ ಬಿ.ಸಿ. ರೋಡು ಶಾಖೆಯ ಸಹಾಯಕ ಇಂಜಿನಿಯರ್ ಮೇಲೆ ಕಿಡಿಗೇಡಿ ಗಳ ಗುಂಪೊಂದು ಮಾರಣಾಂ ತಿಕ ಹಲ್ಲೆಗೈದ ಘಟನೆ ಬಿ.ಮೂಡ ಗ್ರಾಮದ ಶಾಂತಿಯಂಗಡಿ ಸಮೀಪ ತಾಳಿಪಡ್ಪು ಎಂಬಲ್ಲಿ ಕಳೆದ ರಾತ್ರಿ ಸಂಭವಿಸಿದ್ದು, ಘಟನೆಗೆ ಮೆಸ್ಕಾಂ ಉದ್ಯೋಗಸ್ಥರು ಮತ್ತು ವಿದ್ಯುತ್ ಗುತ್ತಿಗೆದಾರರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಭಟನೆಗೆ ಮಣಿದ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಮೂರು ದಿನಗಳೊಳಗಾಗಿ ಬಂಧಿಸು ವುದಾಗಿ ಗಡುವು ನೀಡಿದ್ದಾರೆ. ಎ.೪ ತಡರಾತ್ರಿ ೧೧.೩೫ರ ಸುಮಾರಿಗೆ ತಾಳಿಪಡ್ಪು ಎಂಬಲ್ಲಿಂದ ನಾಗರಿಕರು ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡು, ಸೇವಾಕೇಂದ್ರಕ್ಕೆ ದೂರು ನೀಡಿದ್ದರು. ಸಮಸ್ಯೆಗೆ ಸಂಬಂಧಿಸಿ ಪರಿಶೀಲಿಸಲು ಸ್ಥಳಕ್ಕೆ ಸಹಾಯಕ ಇಂಜಿನಿಯರ್ ನಾರಾಯಣ ಪ್ರಕಾಶ್ ಅವರು ಲೈನ್‌ಮ್ಯಾನ್ ಸೋಮಣ್ಣ ಮತ್ತು ಚಾಲಕ ಅಶ್ವಿನ್‌ರೊಂದಿಗೆ ಸ್ಥಳಕ್ಕೆ ತೆರಳಿದ್ದರು. ತಾಳಿಪಡ್ಪು ಪರಿವರ್ತಕ ಕೇಂದ್ರದಲ್ಲಿ ಪರಿವರ್ತಕದ ಎಲ್.ಟಿ. ಲೈನ್ ಬುಶ್ಶಿಂಗ್ ಜಂಪರ್ ತುಂಡಾ ಗಿರುವುದು ಗಮನಕ್ಕೆ ಬಂದಿತ್ತು. ಇದನ್ನು ದುರಸ್ಥಿಗೊಳಿಸಲು ಬಂಟ್ವಾಳ ವಿತರಣಾ ಕೇಂದ್ರದಿಂದ ಸಂಬಂಧಿತ ಫೀಡರನ್ನು ನಿಷ್ಕ್ರಿಯೆಗೊಳಿಸ ಲಾಗಿತ್ತು. ಜಿ.ಒ.ಎಸ್.ಅನ್ನು ಓಪನ್ ಮಾಡಿ, ಬುಶ್ಶಿಂಗ್‌ನ ಜಂಪರ್ ಸರಿಮಾಡಲು ಲೈನ್‌ಮ್ಯಾನ್ ಕಂಬ ಏರುವಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಗುಂಪೊಂದು ನಾರಾಯಣ ಪ್ರಕಾಶ್ ಮೇಲೆ ದಾಳಿ ನಡೆಸಿತ್ತು. ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೇ, ಅವರ ಬಳಿಯಿದ್ದ ಕಂಪೆನಿ ಮೊಬೈಲ್ ಫೋನ್ ಹಾಗೂ ಚಿನ್ನದ ಸರವೊಂದನ್ನು ಅಪಹರಿಸಿದೆ. ಘಟನೆಯನ್ನು ತಡೆಯಲು ಬಂದಿದ್ದ ಲೈನ್‌ಮ್ಯಾನ್ ಹಾಗೂ ಚಾಲಕರ ಮೇಲೂ ಗುಂಪು ಹಲ್ಲೆಗೈದಿದ್ದು, ಇಲಾಖಾ ವಾಹನವನ್ನು ಹಾನಿಗೊಳಿ ಸಲಾಗಿದೆ. ಆರೋಪಿಗಳನ್ನು ಶಾಂತಿಯಂಗಡಿ ತಾಳಿಪಡ್ಪು ನಿವಾಸಿಗಾಳಾದ ಹಸೈನಾರ್, ಶಮೀರ್, ನಾಸೀರ್, ಪಕ್ಷ ಶರೀಫ್ ಹಾಗೂ ಇತರ ಕೆಲವರು ಹಲ್ಲೆಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಗೊಳಗಾದ ನಾರಾಯಣ ಪ್ರಕಾಶ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯ ಸುದ್ದಿ ತಿಳಿದ ಮೆಸ್ಕಾಂ ಉದ್ಯೋಗಸ್ಥರು ಹಾಗೂ ವಿದ್ಯುತ್‌ಗುತ್ತಿಗೆದಾರರು ಬಂಟ್ವಾಳ ಮೆಸ್ಕಾಂಗೆ ಜಮಾಯಿಸಿದ್ದು, ಘಟನೆಯನ್ನು ಖಂಡಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿ ದ್ದಾರೆ. ಮೆಸ್ಕಾಂ ಎಸ್.ಇ. ಜಯಸೂರ್ಯ, ಮಂಗಳೂರು ಇ.ಇ. ಮಂಜಪ್ಪ, ಬಂಟ್ವಾಳ ಇ.ಇ. ಉಮೇಶ್ಚಂದ್ರ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಎ.ಇ.ಇ.ಗಳು ಠಾಣೆಗೆ ಭೇಟಿ ನೀಡಿದ್ದು, ಪೊಲೀಸ್ ಉನ್ನತಾಧಿಕಾರಿಗಳ ಸಮಾಲೋಚನೆ ನಡೆಸಿದ್ದಾರೆ. ಕೆ.ಪಿ.ಸಿ.ಎಲ್ (ಮೆಸ್ಕಾಂ) ಉಪಾಧ್ಯಕ್ಷ ಶಶೀಂದ್ರ, ಸಂಘಟನಾ ಕಾರ್ಯದರ್ಶಿ ಗಳಾದ ಉಮೇಶ್ ಗಟ್ಟಿ, ಉಮೇಶ್ ಕೆ. ಪುತ್ತೂರು ಮತ್ತಿತರು ಮೆಸ್ಕಾಂಗೆ ಭೇಟಿ ನೀಡಿದ್ದಾರೆ.
ವಿದ್ಯುತ್ ಸ್ಥಗಿತ: ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮೆಸ್ಕಾಂ ಉದ್ಯೋಗಸ್ಥರು ಶಾಂತಿಯಂಗಡಿ ವಿದ್ಯುತ್ ಪರಿವರ್ತಕಕ್ಕೆ ಸಂಬಂಧಿಸಿದ ಪ್ರದೇಶದ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದರು. ಗುರುವಾರ ನಡುರಾತ್ರಿಯಿಂದ ಮಧ್ಯಾಹ್ನದ ತನಕವೂ ವಿದ್ಯುತ್ ನಿಲುಗಡೆಯಾದ್ದರಿಂದ ಜನರು ಕರೆಂಟಿಲ್ಲದೇ ಕಂಗಾಲಾದರು. ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾದ ನೌಕರರ ಕ್ರಮಕ್ಕೆ ಸ್ಥಳೀಯರಿಂದ ಅಸಮಾಧಾನ ಕೇಳಿಬಂದವು. ಪಿಎಫ್‌ಐ ಮುಖಂಡರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ವಿದ್ಯುತ್ ಸಂಪರ್ಕವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆಯೂ ನಡೆಯಿತು. ಈ ನಡುವೆ ಮೆಸ್ಕಾಂ ಕಚೇರಿಗೆ ಭೇಟಿ ನೀಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಶೆಟ್ಟಿ ಅವರು ವಿದ್ಯುತ್ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಬಳಿಕ ಸಂಪರ್ಕ ಕಲ್ಪಿಸಲಾಗಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಉನ್ನತಾಧಿಕಾರಿಗಳಿಗೆ ದೂರವಾಣಿಯ ಮುಖೇನ ಸೂಚಿಸಿದರು. ಈ ನಡುವೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಅಧಿಕಾರಿಗಳಿಗೆ ರಕ್ಷಣೆ ಇಲ್ಲ!
ದುಷ್ಕರ್ಮಿಗಳ ಘಾತುಕ ಕೃತ್ಯ ಸಮಾಜದಲ್ಲಿ ಮೆಸ್ಕಾಂ ಉದ್ಯೋಗಸ್ಥರ ಹಾಗೂ ಸಾರ್ವಜನಿಕರ ನಡುವಿನ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಜೀವದಂಗು ತೊರೆದು ಫೀಲ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೆಸ್ಕಾಂ ಅಧಿಕಾರಿ ಹಾಗೂ ಲೈನ್‌ಮ್ಯಾನ್‌ಗಳಿಗೆ ಜೀವ ರಕ್ಷಣೆ ಇಲ್ಲದಂತಾಗಿದೆ. ಇಂತಹ ಘಟನೆಗಳು ರಾತ್ರಿ ವೇಳೆ ಸಾರ್ವಜನಿಕರ ದೂರಿಗೆ ಸ್ಪಂದಿಸುವ ಅಧಿಕಾರಿಗಳನ್ನು ಘಾಸಿಗೊಳಿಸಿದೆ. ದುಷ್ಕರ್ಮಿಗಳನ್ನು ದಂಡಿಸಬೇಕೆಂದು ಜನ ಜಾಗೃತಿ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಪದ್ಮನಾಭ ಮಯ್ಯ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ಮೆಸ್ಕಾಂ ಶಾಖಾಧಿಕಾರಿ ನಾರಾಯಣ ಪ್ರಕಾಶ್ ಸಾರ್ವಜನಿಕ ರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ಅಧಿಕಾರಿಯಾಗಿದ್ದು, ಅವರ ಮೇಲಾದ ಹಲ್ಲೆ ಖಂಡನೀಯವಾಗಿದೆ. ಹಲ್ಲೆಗೊಳಗಾದ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ವಿದ್ಯುತ್ ಗುತ್ತಿಗೆದಾರರ ಸಂಘದ ಬಂಟ್ವಾಳ ಉಪ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಆಗ್ರಹಿಸಿದ್ದಾರೆ.
Tagged with
cnews,
feature
ಮಂಗಳೂರು: ಇಂದು ನಡೆಯಲಿರುವ ಗುಡ್‌ಫ್ರೈಡೇ ಮುನ್ನಾ ದಿನದ ಪ್ರಾರ್ಥನೆ ನಡೆಯುತ್ತಿದ್ದ ಬೆಂದೂರ್‌ವೆಲ್ ಸಂತ ಅಗ್ನೇಸ್ ಚರ್ಚ್‌ನ ಆವರಣ ದೊಳಗೆ ಬೈಕಿನಲ್ಲಿ ನುಗ್ಗಿದ ದುಷ್ಕರ್ಮಿಗಳಿಬ್ಬರು ಕಲ್ಲೆಸೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ರಾತ್ರಿ ಏಳು ಗಂಟೆ ಸುಮಾರಿಗೆ ಸಂಭವಿಸಿದೆ.
ಲೋವರ್ ಬೆಂದೂರು ಇಎಸ್‌ಐ ಮೂರನೇ ಅಡ್ಡರಸ್ತೆಯ ನಿವಾಸಿ ಕ್ಲೇರೆಟ್ ಪಿಂಟೋ(೪೨) ಗಾಯ ಗೊಂಡವರು. ಪ್ರಾರ್ಥನೆ ನಿಮಿತ್ತ ಬೆಂದೂರ್‌ವೆಲ್ ಸಂತ ಆಗ್ನೇಸ್ ಚರ್ಚಿಗೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಪ್ರಾರ್ಥನಾ ಸ್ಥಳವನ್ನು ಗುರಿಯಾಗಿಸಿ ಬಿಸಾಡಿದ ಕಲ್ಲು ಗುರಿತಪ್ಪಿ ಪಿಂಟೋ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ. ಕಳೆದ ಬಾರಿ ಇಲ್ಲೇ ಪಕ್ಕದಲ್ಲಿರುವ ಸಂತ ಥೆರೇಸಾರ ಶಿಕ್ಷಣ ಸಂಸ್ಥೆಯ ಮೂರ್ತಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಈಗ ಹತ್ತಿರದಲ್ಲಿರುವ ಚರ್ಚ್‌ನ್ನೇ ದುಷ್ಕರ್ಮಿಗಳು ಗುರಿಯಾಗಿರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಹೆಚ್ಚಾಗಿ ಚರ್ಚಿನ ಒಳಗೆಯೇ ಪ್ರಾರ್ಥನೆ ನಡೆಸಲಾಗುತ್ತದೆ. ಆದರೆ ಇಂದು ಕ್ರೈಸ್ತರ ಶುಭ ಶುಕ್ರವಾರವಾದ ಪ್ರಯುಕ್ತ ಮುನ್ನಾ ದಿನವಾದ ನಿನ್ನೆ ಭಕ್ತಾದಿಗಳ ಸಂಖ್ಯೆ ಹೆಚ್ಚಿತ್ತು. ಹಾಗಾಗಿ ಚರ್ಚಿನ ಆವರಣದ ಹೊರಗಡೆ ಪ್ರಾರ್ಥನೆ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಘಟನೆಯ ನಂತರ ಕ್ರೈಸ್ತ ಬಾಂಧವರು ಶಾಂತಿಯುತವಾಗಿ ಪ್ರಾರ್ಥನೆ ಮುಗಿಸಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಈ ರೀತಿಯ ದಾಳಿಗಳು ನಡೆದಿದ್ದರೂ ಪೊಲೀಸರು ಮಾತ್ರ ನಿನ್ನೆಯ ಪ್ರಾರ್ಥನೆಗೆ ಯಾವುದೇ ರೀತಿಯ ಭದ್ರತೆ ಒದಗಿಸಿರಲಿಲ್ಲ ಎನ್ನಲಾಗಿದೆ. ಸುಖಾಸುಮ್ಮನೆ ನಗರವನ್ನು ಸುತ್ತು ಹೊಡೆಯುವ ಪಿಸಿಆರ್ ವಾಹನವೂ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಮಾತು ಕೆಲವರಿಂದ ಕೇಳಿ ಬಂದಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews,
feature
ದೇವರ ಅಪಹಾಸ್ಯ
ಉಡುಪಿ: ಧಾರಾವಾಹಿ, ಚಲನ ಚಿತ್ರ, ನಾಟಕ, ಜಾಹೀರಾತು ಇತ್ಯಾದಿ ಗಳಲ್ಲಿ ಹಿಂದೂ ದೇವ-ದೇವತೆಗಳನ್ನು ಅವಹೇಳನ ಮಾಡುವುದು ಮತ್ತು ವ್ಯಾವಹಾರಿಕ ಉದ್ದೇಶಗಳಿಗಾಗಿ ರಾಷ್ಟ್ರ ಪುರುಷರ, ರಾಷ್ಟ್ರಧ್ವಜ, ಚಿಹ್ನೆ, ದೇವತೆ ಗಳ ಚಿತ್ರಗಳನ್ನು ಬಳಸಿ ಧಾರ್ಮಿಕ ಭಾವನೆಗಳಿಗೆ ನೋವು ಕೊಡುವ ಕೃತ್ಯಗಳು ಹೆಚ್ಚುತ್ತಿದ್ದು, ಇವುಗಳ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಗುರು ವಾರ ನಡೆಸಿದ ಪತ್ರಿಕಾಗೋಷ್ಟಿ ಯಲ್ಲಿ ಸಮಿತಿ ಪರವಾಗಿ ಮಾತನಾಡಿದ ರಾಜ್ಯ ಸಮನ್ವಯಕಾರ ಮೋಹನ ಗೌಡ ಅವರು, ಇವುಗಳೆಲ್ಲದರ ವಿರುದ್ದ ರಾಜ್ಯ ದಾದ್ಯಂತ ಚಳುವಳಿ ಹಮ್ಮಿಕೊಳ್ಳಲಾ ಗಿದ್ದು, ಎ.೧೬ರ ಸಂಜೆ ೪ ಗಂಟೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗುವ ನಾನಾ-ನೀನಾ ಎಂಬ ಕಾರ್ಯಕ್ರಮದಲ್ಲಿ ಶ್ರೀರಾಮ ಹಾಗೂ ಶ್ರೀಕೃಷ್ಣನನ್ನು ತೀರಾ ಕೀಳು ಮಟ್ಟದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ, ಝೀ ಟಿವಿಯಲ್ಲಿ ಪ್ರಸಾರವಾಗುವ ಯಮ ಲೋಕದಲ್ಲಿನ ಪ್ರಾಯಶ್ಚಿತ್ತ ಎಂಬ ಕಾರ್ಯಕ್ರಮದಲ್ಲಿ ಯಮಧರ್ಮರಾಜ ಮತ್ತು ಚಿತ್ರಗುಪ್ತರನ್ನು ಹೀನ ಮಟ್ಟದಲ್ಲಿ ವಿಢಂಬನೆ ಮಾಡಲಾಗುತ್ತಿದೆ. ದೂರದರ್ಶನ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಊದುಬತ್ತಿ ಉತ್ಪಾದನಾ ಜಾಹೀರಾತಿನಲ್ಲಿ ವಿಷ್ಣು, ವಿದ್ಯುತ್ ಜಾಹೀರಾತಿನಲ್ಲಿ ಋಷಿಮುನಿಗಳನ್ನು ದುರುಪಯೋಗಪಡಿಸಲಾಗಿದೆ ಎಂದು ಮೋಹನಗೌಡ ಆರೋಪಿಸಿದರು.
ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರಗಳಾದ ಗೋವಿಂದಾಯ ನಮಃ, ಸಾರಥಿ, ನರಸಿಂಹ, ಕೃಷ್ಣನ್ ಲವ್ ಸ್ಟೋರಿ ಮುಂತಾದ ಚಲನಚಿತ್ರಗಳಲ್ಲಿಯೂ ಹಿಂದೂಗಳ ಶ್ರದ್ದಾಸ್ಥಾನಗಳನ್ನು ಅಪಮಾನ ಮಾಡಲಾಗಿದೆ. ಅನೇಕ ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ ದೇವರ ಚಿತ್ರಗಳನ್ನು ಮುದ್ರಣ ಮಾಡಲಾಗುತ್ತದೆ. ಗ್ರಾಹಕರು ಇದನ್ನು ಉಪಯೋಗಿಸಿ ಚರಂಡಿ, ರಸ್ತೆ, ಕಸದ ಡಬ್ಬ, ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಎಸೆದುಬಿಡುತ್ತಾರೆ. ಹಲವರು ಇವುಗಳನ್ನು ಮೆಟ್ಟಿಕೊಂಡೇ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ. ಭಾರತದ ದಂಡಸಂಹಿತೆ ೨೯೫, ೨೯೫ ಎ, ೨೯೮ರ ಪ್ರಕಾರ ಇದು ಅಪರಾಧವಾಗಿದೆ ಎಂದು ಮೋಹನ ಗೌಡ ಸ್ಪಷ್ಟಪಡಿಸಿದರು.
ಈ ಎಲ್ಲಾ ವಿಚಾರಗಳ ವಿರುದ್ದ ಚಲನಚಿತ್ರ ಸೆನ್ಸಾರ್ ಮಂಡಳಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ, ಚಲನಚಿತ್ರ ನಿರ್ಮಾಪಕರು, ಥಿಯೇಟರ್ ಮಾಲಕರಿಗೆ, ಸರಕಾರದ ಉನ್ನತ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ನ್ಯಾಯಾ ಲಯಗಳ ಮೂಲಕ ಮೊಕದ್ದಮೆ ದಾಖಲಿಸಲು ಸಿದ್ದತೆ ನಡೆಸಲಾಗಿದೆ ಎಂದು ಗೌಡ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಭಾರತ ಸ್ವಾಭಿಮಾನ ಟ್ರಸ್ಟ್‌ನ ಸಂಯೋಜಕ ರಾಘವೇಂದ್ರ ಆಚಾರ್ಯ, ವಿಶ್ವ ಹಿಂದೂ ಪರಿಷತ್ತಿನ ಚಿತ್ತರಂಜನ ಹೆಗಡೆ, ಇಸ್ಕಾನ್‌ನ ಗೋವಿಂದದಾಸ ಹಾಗೂ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.
Tagged with
feature,
lnews
ಅಮೆರಿಕಾಕ್ಕೆ ಸವಾಲೆಸೆದ ಉಗ್ರ ಹಫೀಜ್
ಇಸ್ಲಾಮಾಬಾದ್: ಮುಂಬೈ ದಾಳಿ ರುವಾರಿ, ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್ ಬಗ್ಗೆ ಸುಳಿವು ಕೊಟ್ಟವರಿಗೆ ೫೧ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಸೆಡ್ಡು ಹೊಡೆದಿರುವ ಪಾಕಿಸ್ತಾನದ ನಟೋರಿಯಸ್ ಉಗ್ರ ಹಫೀಜ್ ಬುಧವಾರ ಪಾಕ್ ಮಿಲಿಟರಿ ಹೆಡ್‌ಕ್ವಾಟ್ರರ್ಸ್ ಸಮೀಪವೇ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಅಮೆರಿಕಕ್ಕೆ ಸವಾಲು ಹಾಕಿದ್ದಾನೆ.
ನಾನು ರಾವಲ್ಪಿಂಡಿಯಲ್ಲೇ ಇದ್ದೇನೆ. ಎಲ್ಲೂ ಅಡಗಿ ಕುಳಿತಿಲ್ಲ. ಹಾಗಾಗಿ ಅಮೆರಿಕ ನನ್ನ ತಲೆಗೆ ಘೋಷಿಸಿರುವ ಹಣ ನನಗೆ ಕೊಡಲಿ. ನಾನು ಗುರುವಾರ ಲಾಹೋರ್‌ಗೆ ತೆರಳುತ್ತೇನೆ. ಅಮೆರಿಕ ಯಾವಾಗ ಬೇಕಾದರೂ ನನ್ನ ಸಂಪರ್ಕಿಸಬಹುದು ಎಂದು ಸಯೀದ್ ಸುದ್ದಿಗೋಷ್ಠಿ ನಡೆಸಿ ತೀಕ್ಷ್ಣವಾಗಿ ಪ್ರತಿಕ್ರಿಯಿ ಸಿದ್ದಾನೆ. ಅಮೆರಿಕಕ್ಕೆ ತಾಕತ್ತಿದ್ರೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಡಗು ತಾಣದ ಮೇಲೆ ದಾಳಿ ನಡೆಸಿದಂತೆ ನನ್ನ ವಿರು ದ್ಧವೂ ನಡೆಸಲಿ ಎಂದು ಸವಾಲು ಹಾಕಿದ್ದಾನೆ. ಹಫೀಜ್ ಸಯೀದ್ ಬುಧವಾರ ಜಮಾತ್ ಉದ ದವಾದ್ ಇತರ ಸದಸ್ಯರೊಡಗೂಡಿ ರಾವಲ್ಪಿಂಡಿಯ ಫ್ಲ್ಯಾಶ್ ಮ್ಯಾನ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಮೆರಿಕಾಕ್ಕೆ ನೇರ ಸವಾಲು ಹಾಕಿದ್ದಾನೆ. ಅಮೆರಿಕ ಹಫೀಜ್ ಸಯೀದ್ ತಲೆಗೆ ಬಹುಮಾನ ಘೋಷಿಸಿದ ನಂತರ ಉಗ್ರ ಹಫೀಜ್ ಬಹಿರಂಗವಾಗಿ ನಡೆಸಿದ ಮೊದಲ ಸುದ್ದಿಗೋಷ್ಠಿ ಇದಾಗಿದೆ.
ಉಗ್ರನ ಬೆಂಬಲಕ್ಕೆ ನಿಂತ ಪಾಕ್: ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾದ ಸ್ಥಾಪಕ ಹಫೀಜ್ ಸಯೀದ್ ವಿರುದ್ಧ ಬಲವಾದ ಸಾಕ್ಷ್ಯಗಳಿಲ್ಲದೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಅಧಿಕೃತವಾಗಿ ಹೇಳಿಕೆ ನೀಡುವ ಮೂಲಕ ಉಗ್ರ ಹಫೀಜ್ ಬೆಂಬಲಕ್ಕೆ ನಿಂತಿದೆ.
ಸಯೀದ್ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾನೆಂಬ ಬಗ್ಗೆ ಅಮೆರಿಕದ ಬಳಿ ಯಾವುದೇ ಪುರಾವೆ ಇಲ್ಲ ಎಂಬುದಾಗಿ ಪಾಕ್ ಹೇಳಿದೆ.
ಸಯೀದ್ ಮತ್ತು ಅಬ್ದುಲ್ ರಹಮಾನ್ ಲಕ್ವಿ ಸುಳಿವಿನ ಹಾಗೂ ಮಾಹಿತಿ ನೀಡುವ ಬಗ್ಗೆ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಲಕ್ಷಾಂತರ ಡಾಲರ್ಸ್ ಬಹುಮಾನ ಘೋಷಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ಅಬ್ದುಲ್ ಬಾಸಿಟ್ ಹೇಳಿದ್ದಾರೆ.
ಹಾಗಾಗಿ ಇಬ್ಬರ ವಿರುದ್ಧ ಬಹುಮಾನ ಘೋಷಿಸಿರುವ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಕೂಡ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು, ಸಯೀದ್ ಮತ್ತು ಮಾಕ್ಕಿ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಇದೆಯೋ ಇಲ್ಲವೋ ಎಂಬುದನ್ನು ತಿಳಿಸಬೇಕು. ಪಾಕಿಸ್ತಾನದ ಬಳಿಯಂತೂ ಸಯೀದ್ ಉಗ್ರಗಾಮಿ ಎನ್ನುವುದಕ್ಕೆ ಯಾವುದೇ ನಿಖರವಾದ ಸಾಕ್ಷ್ಯಾಧಾರ ಇಲ್ಲ ಎಂದು ಹೇಳಿದರು.
ನಮಗೆ ಬಲವಾದ ಸಾಕ್ಷ್ಯಿ ಸಿಕ್ಕಲ್ಲಿ ನಾವು ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆದರೆ ಪುರಾವೆಗಳಿಲ್ಲದೆ ನಾವೇನೂ ಮಾಡುವಂತಿಲ್ಲ ಎಂದು ಬಾಸಿಟ್ ಕೈಚೆಲ್ಲುವ ಹೇಳಿಕೆ ನೀಡಿ ಹಫೀಜ್‌ಗೆ ಬಹಿರಂಗವಾಗಿಯೇ ಬೆಂಬಲ ನೀಡಿದಂತಾಗಿದೆ.
Tagged with
inews
ಕೊಲ್ಕತ್ತಾ: ಬೌಲಿಂಗ್‌ನಲ್ಲಿ ಮೊರ್ನೆ ಮೊರ್ಕೆಲ್ ನೀಡಿದ ಗಮನಾರ್ಹ ಬೌಲಿಂಗ್ ಪ್ರದರ್ಶನ ಒಂದೆಡೆಯಾದರೆ ನಂತರ ಬ್ಯಾಟಿಂಗ್‌ನಲ್ಲಿ ಇರ್ಫಾನ್ ಪಠಾಣ್ ಪ್ರದರ್ಶಿಸಿದ ಸಿಡಿಲಬ್ಬರದ ಪ್ರದರ್ಶನವು ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಕೊಲ್ಕತ್ತಾ ನೈಟ್‌ರೈಡರ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಲು ಸಾಧ್ಯವಾಯಿತು. ಈ ಮೂಲಕ ಡೆಲ್ಲಿ ಕೂಟಕ್ಕೆ ಶುಭಾರಂಭ ಮಾಡಿದೆ.
ಪಂದ್ಯವು ಆರಂಭದಲ್ಲಿ ಮಳೆಕಾರಣ ತಡವಾಗಿ ಆರಂಭವಾಗಿದ್ದು, ಆ ಕಾರಣ ೧೨ ಓವರ್‌ಗಳನ್ನು ಪ್ರತೀ ತಂಡಕ್ಕೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಡೆಲ್ಲಿ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರಕ್ಕೆ ಬಂದಿದ್ದು, ಆ ಕಾರಣ ಕೊಲ್ಕತ್ತಾ ಮೊದಲು ಬ್ಯಾಟಿಂಗ್ ನಡೆಸಿತು ಆದರೆ ಮೊರ್ನೆ ಮೊರ್ಕೆಲ್ ಹಾಗೂ ಉಮೇಶ್ ಯಾದವ್ ಬೌಲಿಂಗ್ ಅಬ್ಬರಕ್ಕೆ ಸಿಲುಕಿದರೂ ಕೆಲಕ್ರಮಾಂಕದಲ್ಲಿ ಲಕ್ಷ್ಮಿ ಶುಕ್ಲಾ (೨೬) ಪ್ರದರ್ಶಿಸಿದ ಉತ್ತಮ ಅಟದ ನೆರವಿನಿಂದ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೯೭ ರನ್ ಗಳಿಸಿತು. ಬ್ಯಾಟಿಂಗ್ ನಡೆಸಿದ ಡೆಲ್ಲಿ ಇನ್ನೂ ಐದು ಎಸೆತ ಉಳಿದಿರುವಂತೆ ೧೦೦ ರನ್ ಗಳಿಸಿ ಪಂದ್ಯವನ್ನು ಎಂಟು ವಿಕೆಟ್‌ಗಳ ಅಂತರದಿಂದ ಕೈವಶ ಮಾಡಿಕೊಂಡಿತು. ಮೊರ್ಕೆಲ್ ಮೂರು ಹಾಗೂ ಯಾದವ್ ಎರಡು ವಿಕೆಟ್ ಪಡೆದರು.
ಡೆಲ್ಲಿ ಆರಂಭಿಕರಾದ ಸೆಹ್ವಾಗ್ ಹಾಗೂ ಫಿಂಚ್ ಜೋಡಿ ಮೊದಲ ವಿಕೆಟ್‌ಗೆ ೬.೨ ಓವರ್‌ಗಳಲ್ಲಿ ೪೯ ರನ್ ಗಳಿಸಿದ್ದು, ತಂಡಕ್ಕೆ ಆಧಾರವಾಯಿತು. ನಂತರ ಫಿಂಚ್‌ಗೆ (೩೦) ಕ್ಯಾಲಿಸ್ ಪೆವಿಲಿಯನ್ ದಾರಿ ತೋರಿಸಿದರು. ಆದರೆ ತಲಾ ಒಂದೊಂದು ಬೌಂಡರಿ ಸಿಕ್ಸ್ ಸಿಡಿಸಿದ್ದ ಸೆಹ್ವಾಗ್ (೨೦) ನಿರ್ಗಮಿಸಿದಾಗ ತಂಡ ಕೊಂಚ ಒತ್ತಡಕ್ಕೆ ಸಿಲುಕಿತು. ಯಾಕೆಂದರೆ ಆ ವೇಳೆಗೆ ಗೆಲ್ಲಲು ಅಬ್ಬರದ ಅಟವಾಡಬೇಕಾದ ಪರಿಸ್ತಿತಿಯಿತು. ಆದರೆ ಇದೇ ವೇಳೆ ಭಡ್ತಿ ಪಡೆದ ಇರ್ಫಾನ್ ಪಠಾಣ್ ಅಬ್ಬರದ ಆಟ ಪ್ರದರ್ಶಿಸಿದಲ್ಲದೆ ಕೊಲ್ಕತ್ತಾದ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದರು. ಪಠಾಣ್ ಕೇವಲ ೨೦ ಎಸೆತಗಳ ನೆರವಿನಿಂದ ಎರಡು ಬೌಂಡರಿ ಹಾಗೂ ಮೂರು ಸಿಕ್ಸ್ ನೆರವಿನಿಂದ ಅಜೇಯ ೪೨ ರನ್ ಸಿಡಿಸಿ ಕೊಲ್ಕತ್ತಾ ಜಯದಾಖಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಡೆಲ್ಲಿ ಪರ ಭಾಟಿಯಾ ಒಂದು ವಿಕೆಟ್ ಪಡೆದರು.
ಈ ಮೊದಲು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾಗೆ ಆರಂಭಿಕ ನಾಥನ್ ಮೆಕ್‌ಕಲಂ ಸ್ಫೋಟಕ ಅಬ್ಬರದ ಆರಂಭ ನೀಡುವ ಲಕ್ಷಣ ತೋರಿಸಿದರು. ಆದರೆ ಒಂಬತ್ತು ರನ್ ಗಳಿಸಿದ್ದ ವೇಳೆ ವಾನ್‌ಡರ್ ಮರ್ವ್‌ಗೆ ವಿಕೆಟ್ ನೀಡಿ ಹೊರನಡೆದರು. ನಂತರ ಆರಂಭವಾದದ್ದೇ ಮೊರ್ಕೆಲ್ ಅಬ್ಬರ. ಎರಡು ವಿಕೆಟ್‌ಗಳನ್ನು ಸತತವಾಗಿ ಪಡೆದಾಗ ಡೆಲ್ಲಿ ಮೇಲುಗೈ ಸಾಧಿಸಿತ್ತು. ಗಂಭೀರ್ (೧೬) ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ಎಲ್ಲರೂ ವಿಫಲಗೊಂಡಿದ್ದು, ತಂಡಕ್ಕೆ ದುಬಾರಿಯಾಯಿತು.
Tagged with
tnews
ಬೆಂಗಳೂರು: ಐದು ದಶಕಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯವು ಗರಿಷ್ಠ ಉಷ್ಣಾಂಶ ಕಂಡು ದಾಖಲೆ ನಿರ್ಮಿಸಿದೆ.
ಕಳೆದ ೧೯೫೯ರಲ್ಲಿ ದಾಖಲಾಗಿದ್ದ ಬಿಸಿಲಿನ ತಾಪವನ್ನು ಕಳೆದ ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಸರಿಗಟ್ಟಿದೆ. ರಾಜಧಾನಿ ಬೆಂಗಳೂರಲ್ಲಿ ೩೬.೬ಡಿ.ಸೆ.ಗರಿಷ್ಠ ಉಷ್ಣಾಂಶ ದಾಖ ಲಾಗಿದೆ. ಹೈದರಾಬಾದ್ ಕರ್ನಾಟಕದ ಬಳ್ಳಾರಿ, ರಾಯಚೂರು, ಗುಲ್ಬರ್ಗಾ ಗಳಲ್ಲಿ ಗರಿಷ್ಠ ೪೦-೪೪ ಡಿ.ಸೆ. ತಲುಪಿದ್ದು, ಮನೆ ಕಚೇರಿಗಳಿಂದ ಹೊರಬರಲಾ ಗದಂತಹ ಪರಿಸ್ಥಿತಿ ಇದೆ.
ಈ ಉಷ್ಣಾಂಶ ರಾಜ್ಯವನ್ನು ಮತ್ತಷ್ಟು ಬರಗಾಲಕ್ಕೆ ಈಡು ಮಾಡಿ ಕುಡಿಯುವ ನೀರಿಗೆ ಹಾಹಾಕಾರ ತಂದಿದ್ದರೆ ಮತ್ತೊಂದೆಡೆ ಸಾಂಕ್ರಾಮಿಕ ರೋಗಗಳಿಗೆ ನಾಂದೀ ಹಾಡಲಿದೆ. ಇದರಿಂದ ಮತ್ತೆ ರಾಜ್ಯದಲ್ಲಿ ಕಾಲರಾ, ಡೆಂಗ್ಯು, ಎಚ್೧.ಎನ್೧ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡತೊಡ ಗಿವೆ. ಶೀತ ಸಂದರ್ಭದಲ್ಲಿ ಕಾಣಿಸಿ ಕೊಳ್ಳುವ ಎಚ್೧ಎನ್೧ ಕಡು ಬೇಸಿಗೆ ಯಲ್ಲೇ ಕಾಣಿಸಿಕೊಂಡಿರುವುದು ಸರ್ಕಾ ರಕ್ಕೆ ತಲೆನೋವಾಗಿದೆ. ಈಗಾ ಗಲೇ ಐದು ಮಂದಿ ತುತ್ತಾಗಿದ್ದಾರೆ.
ಅದೇ ರೀತಿ ಡೆಂಗ್ಯು ಆವರಿಸಿ ಕೊಂಡಿದೆ, ಬೇಸಿಗೆಯಲ್ಲಿ ಸಾಲು ಸಾಲಾಗಿ ನಡೆಯುವ ಊರಹಬ್ಬ, ಜಾತ್ರೆ ಸಂದರ್ಭದಲ್ಲಿ ಶುದ್ಧ ನೀರಿನ ಅಭಾವ ದಿಂದ ವಾಂತಿ-ಬೇಧಿ ಕಂಡುಬರುತ್ತಿದೆ.
ಈ ನಡುವೆ ರಾಜ್ಯ ಜೀವನಾಡಿ ಆಗಿರುವ ಕಾವೇರಿ, ಕೃಷ್ಣಾ, ತುಂಗಭದ್ರಾ, ಘಟಪ್ರಭ, ಮಲಪ್ರಭ ಸೇರಿದಂತೆ ಎಲ್ಲ ನದಿಗಳ ಜಲಾಶಯಗಳ ನೀರಿನ ಸಂಗ್ರಹ ಗಣನೀಯವಾಗಿ ಇಳಿಕೆಯಾ ಗಿದೆ. ಇದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಕೆಆರ್‌ಎಸ್‌ನಲ್ಲಿ ಕಳೆದ ಶೇ.೫೫ರಷ್ಟಿದ್ದ ನೀರಿನ ಸಂಗ್ರಹ ಈಗ ಶೇ.೪೨ಕ್ಕೆ ಕುಸಿದೆ. ಕಬಿನಿಯಲ್ಲಿ ಶೇ.೫೮-೫೧, ಭದ್ರಾದಲ್ಲಿ ಶೇ.೬೭-೫೫, ಘಟ ಪ್ರಭದಲ್ಲಿ ಶೇ.೨೩-೧೧, ಮಲಪ್ರಭದಲ್ಲಿ ಶೇ.೧೯-೧೫, ಆಲಮಟ್ಟಿಯಲ್ಲಿ ಶೇ.೩೧-೧೮, ನಾರಾಯಣಪುರದಲ್ಲಿ ಶೇ.೫೩-೪೨, ತುಂಗಭದ್ರಾದಲ್ಲಿ ಶೇ.೧೭-೪ಕ್ಕೆ ಕುಸಿದೆ.
ಬೇಸಿಗೆ ಮಳೆಯಾಗದಿದ್ದರೆ ನೀರಿನ ಸಂಗ್ರಹ ಇಳಿಕೆಯಾಗಿದೆ ಜಲಾ ಶಯಗಳಲ್ಲಿ ನೀರಿನ ಕೊರತೆ ಉಂಟಾ ಗಲಿದೆ. ಇದರಿಂದ ಜಲ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಲಿದೆ. ಅಲ್ಲದೆ, ಕಾಫಿ, ಮಾವು ಬೆಳೆಗಳು ಹಾನಿಗೀಡಾಗಿ ರೈತರು ನಷ್ಟ ಉಂಟಾ ಗುತ್ತದೆ. ಬಿಸಿಲಿನ ತಾಪ ತೀವ್ರ ಗೊಂಡಂತೆಯೇ ಮಳೆಗಾ ಲದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
Tagged with
snews
ಬೆಂಗಳೂರು: ರಾಜ್ಯದೊಂದಿಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬರ ಪರಿಹಾರಕ್ಕಾಗಿ ತಕ್ಷಣವೇ ೫೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬರಪೀಡಿತ ಪ್ರದೇಶ ಗಳ ಪರೀಶೀಲನೆಗೆ ಪ್ರವಾಸ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಮಾಜಿ ಸಿಎಂ, ಬರಗಾಲ ಪರಿಸ್ಥಿತಿ ಕೇಂದ್ರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಅಲ್ಲದೆ ಬರ ಪರಿಹಾ ರದ ಮೊದಲ ಹಂತವಾಗಿ ೫೦೦ ಕೋಟಿ ರೂಪಾಯಿ ಬಿಡುಗಡೆ ಮಾq ಬೇಕು ಎಂದು ಮನವಿ ಮಾಡಿದರು.
ಮಾತು ಮುಂದುವರಿಸಿದ ಬಿಎಸ್‌ವೈ, ರಾಜ್ಯವನ್ನು ಪ್ರತಿನಿಧಿಸು ತ್ತಿರುವ ಕೇಂದ್ರ ಸಚಿವರು ಈ ಸಂಬಂಧ ಪ್ರಧಾನ ಮಂತಿಯ ಮನವೊಳಿಸಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲೇ ತಮ್ಮ ಮೇಲೆ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷದ ವವರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ಯಡಿಯೂರಪ್ಪ, ಅಧಿವೇಶ ದಲ್ಲಿ ವೀರಾವೇಶವಾಗಿ ಮಾತನಾಡಿದರೆ ಪರಿಹಾರ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬರಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ರಾಜ್ಯ ಸರ್ಕಾರದ ಬರ ಪರಿಹಾರ ಕಾರ್ಯಗಳ ಬಗ್ಗೆ ಸಂತ್ರಸ್ತರಿಗೆ ತೃಪ್ತಿ ಯಿದ್ದು, ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ಮುಖ್ಯಮಂತ್ರಿ ಸದಾನಂದ ಗೌಡರಿರಿಗೆ ವರದಿಯನ್ನು ಸಲ್ಲಿಸಲಿದ್ದೇನೆ ಎಂದವರು ತಿಳಿಸಿದರು.
ಇದಕ್ಕೂ ಮೊದಲು ಯಡ್ಡಿಯೂ ರಪ್ಪ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದ ಕಾಂಗ್ರೆಸ್, ರೆಸಾರ್ಟ್ ಆಯ್ತು ಇದೀಗ ಪ್ರವಾಸ ಪಾಲಿಟಿಕ್ಸ್‌ನಲ್ಲಿ ತೊಡಗಿದ್ದಾರೆ ಎಂದು ಆರೋಪ ನಡೆಸಿದತ್ತು. ಇದಕ್ಕೆ ಪ್ರತಿಯಾಗಿ ಯಡ್ಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
Tagged with
snews
ಬೆಂಗಳೂರು: ಟೀಮ್ ಇಂಡಿಯಾ ಖ್ಯಾತ ಯುವ ಆಟಗಾರ ಹಾಗೂ ಉಪನಾಯಕ ವಿರಾಟ್ ಕೊಹ್ಲಿ ಈಗ ಜಾಗತಿಕ ಕಾರು ಮಾರುಕಟ್ಟೆಯ ಪ್ರಖ್ಯಾತ ಹೆಸರಾದ ಟೊಯೊಟೊ ಕಿರ್ಲೊಸ್ಕರ್ ಮೊಟಾರ್ ಕಂಪೆನಿಯ ನೂತನ ರಾಯಭಾರಿಂiiಗಿ ಆಯ್ಕೆಯಾಗಿದ್ದಾರೆ.
ಕಂಪೆನಿಯ ರಾಯಭಾರಿಯಾದ ಬಗ್ಗೆ ಕೊಹ್ಲಿ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ. ಕಂಪೆನಿಯ ಭಾಗವಾಗಿ ನೇಮಕಗೊಂಡಿದ್ದಕ್ಕೆ ನನಗೆ ಸಂತಸ ವಾಗುತ್ತಿದ್ದು, ಯಶಸ್ಸಿನ ಮಂತ್ರವನ್ನು ಜಪಿಸುವ ಟೊಯೊಟಾವು ಯುವ ಚಾಲಕರಿಗೆ ಉತ್ತಮವಾಗಿದೆ ಎಂದು ಕೊಹ್ಲಿ ಇದೇ ವೇಳೆ ತಿಳಿಸಿದರು. ಕೊಹ್ಲಿ ಯುವಕರಿಗೆ ಮಾದರಿಯಾಗಿದ್ದು, ಆತ ಪ್ರತಿನಿಧಿಸುವ ಸಾಹಸ-ಛಲ ಹಾಗೂ ಹೋರಾಟದ ಕಿಚ್ಚು ಹಾಗೂ ಆತ್ಮವಿಶ್ವಾಸಕ್ಕೆ ಕಂಪೆನಿ ಕೂಡ ಪರವಾಗಿದೆ ಎಂದು ಟೊಯೊಟಾದ ಉಪ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ತಿಳಿಸಿದ್ದಾರೆ.
Tagged with
tnews
ಲಂಡನ್: ಯಾ ವುದೇ ಶುಭ ಸಮಾ ರಂಭಗಳಿಗೆ ಹೋಗುವ ಮುನ್ನ ಮಹಿಳೆ ಯರು ಅದರಲ್ಲೂ ಹುಡುಗಿ ಯರು ಮೇಕ್ ಅಪ್ ಇಲ್ಲದೆ ಕಾಣಿಸಿ ಕೊಳ್ಳು ವುದೇ ವಿರಳ. ಆದರೆ ಇಂಗ್ಲೆಂಡ್‌ನ ಅಥ್ಲೀಟ್ ಒಬ್ಬಳು ಪ್ರತೀ ಟ್ರ್ಯಾಕ್ ಕೂಟದ ಮುನ್ನ ಮೇಕ್ ಅಪ್ ಮಾಡಿ ಯೇ ಫೀಲ್ಡ್ ಗಿಳಿಯುತ್ತೇನೆ ಎಂದು ಬಹಿರಂಗಪಡಿಸಿದ್ದಾಳೆ.
೨೬ರ ಹರೆಯದ ಹಾಗೂ ಈಗ ಲಾಗಲೇ ಎಮ್‌ಬಿಇ (ಮೆಂಬರ್ ಆಫ್ ಬ್ರಿಟಿಷ್ ಎಂಪಾಯರ್) ಪದಕಕ್ಕೆ ಭಾಜನ ರಾಗಿರುವ ಖ್ಯಾತ ಅಥ್ಲೀಟ್‌ಗೆ ಜೆಸ್ಸಿಕಾ ಎನೀಸ್ ಪ್ರತಿಯೊಂದು ಟ್ರ್ಯಾಕ್ ಕೂಟದ ಮುನ್ನ ಐಲೈನರ್ ಹಾಗೂ ಮಸ್ಕರಾ ಮಾಡಿಯೇ ಸ್ಪರ್ಧೆ ಮಾಡು ತ್ತೇನೆ. ಈ ರೀತಿ ಮಾಡುವುದು ತೃಪ್ತಿ ನೀಡುತ್ತದೆ ಎಂದು ತಿಳಿಸು ವ ಈಕೆಗೆ ಖ್ಯಾತ ನಟಿ ಜೆನಿಫರ್ ಅನಿಸ್ಟನ್ ರೋಲ್ ಮಾಡೆಲ್ ಅಂತೆ. ಮೇಕ್‌ಅಪ್ ಮಾಡು ವುದರಿಂದ ನನಗೆ ಹೆಚ್ಚಿನ ಆತ್ಮವಿಶ್ವಾಸ ಬರುತ್ತದೆ. ಅಲ್ಲದೆ ಇದು ನನ್ನ ತ್ವಚೆ ಯನ್ನು ತೇವಾಂಶ ಹಾಗೂ ಶುಭ್ರ ವಾಗಿರಿಸುತ್ತದೆ. ಪ್ರತಿಯೊಂದು ಟ್ರ್ಯಾಕ್ ಕೂಟಗೂ ಮುನ್ನ ಇದು ನನಗೆ ಅತ್ಯ ಮೂಲ್ಯವಾಗಿದೆ ಎಂದು ಜೆಸ್ಸಿಕಾ ತಿಳಿಸುತ್ತಾಳೆ.
Tagged with
tnews
ಕೊಲಂಬೊ: ಕೆವಿನ್ ಪೀಟರ್ಸನ್ ಹಾಗೂ ಅಲೆಸ್ಟರ್ ಕುಕ್ ಪ್ರದರ್ಶಿಸಿದ ಅತ್ಯದ್ಭುತ ಆಟದ ನೆರವಿನಿಂದ ಇಂಗ್ಲೆಂಡ್ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ೧೫೨.೩ ಓವರ್‌ಗಳಲ್ಲಿ ೪೬೦ ರನ್‌ಗೆ ಗಳಿಸಿ ಸರ್ವಪತನ ಗೊಳ್ಳುವ ಮೂಲಕ ಒಟ್ಟಾರೆಯಾಗಿ ೧೮೫ ರನ್‌ಗಳ ಮುನ್ನಡೆ ಸಾಧಿಸಿದೆ. ಅತ್ತ ಲಂಕಾ ಪರ ರಂಗನಾ ಹೆರಾತ್ ಆರು ವಿಕೆಟ್ ಪಡೆದು ಮಿಂಚಿದರು.
ನಿನ್ನೆ ದ್ವಿತೀಯ ದಿನದಂತ್ಯದ ವೇಳೆಗೆ ೧೫೪ ರನ್‌ಗೆ ಒಂದು ವಿಕೆಟ್ ಕಳಕೊಂಡಿದ್ದ ಆಂಗ್ಲ ಅಂತಿಮವಾಗಿ ೪೬೦ ರನ್‌ಗೆ ಆಲೌಟಾಯಿತು. ಬ್ಯಾಟ್ ಮುಂದುವರೆಸಿದ್ದ ಟ್ರಾಟ್ ಹಾಗೂ ಕುಕ್ ಉತ್ತಮ ಆಟ ನೀಡಿದರು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಲಂಕಾ ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್ ಗಳಿಸಿದ್ದು, ಆರಂಭಿಕರಾದ ಪ್ರಸನ್ನ ಹಾಗೂ ತಿರುಮಣ್ಣೆ ರನ್ ಗಳಿಸದೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ದಿನದಾಟ ಆರಂಭಿಸಿದ ಆರಂಭದಲ್ಲಿ ಎಚ್ಚರಿ ಕೆಯ ಆಟ ಪ್ರದರ್ಶಿಸಿತು. ಟ್ರಾಟ್ ಹಾಗೂ ಕುಕ್ ಜೋಡಿ ಎರಡನೇ ವಿಕೆಟ್‌ಗೆ ಆಕರ್ಷಕ ೯೧ ರನ್‌ಗ ಜೊತೆಯಾಟ ನಡೆಸಿದರು. ಈ ವೇಳೆ ಶತಕದತ್ತ ಮುನ್ನುಗುತ್ತಿದ್ದ ಕುಕ್ ದಿಲ್ಶಾನ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಈ ವೇಳೆ ಜೊತೆಗೂಡಿದ ಬೆಲ್ ಹಾಗೂ ಪೀಟರ್ಸನ್ ಜೋಡಿ ನಾಲ್ಕನೇ ವಿಕೆಟ್ ಗೆ ೪.೭೭ ಸರಾಸರಿಯಲ್ಲಿ ೯೪ ರನ್‌ಗಳ ಜೊತೆಯಾಟ ನಡೆಸಿದ್ದು, ತಂಡ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿತು. ಈ ವೇಳೆ ಪೀಟರ್ಸನ್ ತನ್ನ ೨೦ನೇ ಆಕರ್ಷಕ ಆಟವನ್ನು ಶತಕವಾಗಿ ಪರಿವರ್ತಿಸಿದರು. ಪೀಟರ್ಸನ್ ಅಬ್ಬರದ ನಡುವೆಯೂ ಹೆರಾತ ತನ್ನ ಉತ್ತಮ ಫಾರ್ಮ್‌ನ್ನು ಮುಂದುವರೆಸಿದ್ದರು. ಪ್ರಮುಖ ವಿಕೆಟ್ ಪಡೆಯಲು ಆರಂಭಿಸಿದರು. ಬೆಲ್ ಈ ವೇಳೆ ವಿಕೆಟ್ ಕಳಕೊಂಡರೂ ನಂತರ ಬಂದ ಸಮಿತ್ ಪಟೇಲ್ ಜೊತೆ ಪೀಟರ್ಸನ್ ೩೧ ರನ್‌ಗ ಜೊತೆಯಾಟ ನಡೆಸಿದರು. ಈ ವೇಳೆ ೧೬೫ ಎಸೆತಗಳಲ್ಲಿ ಆರು ಸಿಕ್ಸ್ ಹಾಗೂ ೧೬ ಬೌಂಡರಿಗಳ ನೆರವಿನಿಂದ ೧೫೧ ರನ್ ಸಿಡಿಸಿದ್ದ ಪೀಟರ್ಸನ್ ಹೆರಾತ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಕೆಳಕ್ರಮಾಂಕದಲ್ಲಿ ಗ್ರೇಮ್ ಸ್ವಾನ್ ಉಪಯುಕ್ತ ೧೭ ರನ್ ಗಳಿಸಿದರು. ಲಂಕಾ ಪರ ಹೆರಾತ್ ಆರು ವಿಕೆಟ್ ಪಡೆದು ಮಿಂಚಿದರು.
ಸ್ಪಿಚ್‌ಹಿಟ್:ಪೀಟರ್ಸನ್‌ಗೆ ಎಚ್ಚರಿಕೆ
ಕ್ರಿಕೆಟ್‌ನಲ್ಲಿ ಸ್ವಿಚ್‌ಹಿಟ್ ಎಂಬ ಪರಿಕಲ್ಪನೆಗೆ ಹೆಚ್ಚಿನ ಪ್ರಚಾರ ತಂದಿದ್ದ ಕೆವಿನ್ ಪೀಟರ್ಸನ್ ಈಗ ಅದೇ ಆಟಕ್ಕಾಗಿ ಎಚ್ಚರಿಕೆಯನ್ನು ಪಡೆದಿದ್ದಾರೆ. ಇಲ್ಲಿನ ಪಿಸಾರ ಓವಲ್‌ನಲ್ಲಿ ನಡೆಯುವ ಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮಧ್ಯಾಹ್ನದ ಆಟದ ವೇಳೆ ದಿಲ್ಶಾನ್ ಚೆಂಡಿನಲ್ಲಿ ಸ್ವಿಚ್‌ಹಿಟ್ ಮಾಡಿದ ಪೀಟರ್ಸನ್‌ಗೆ ಅಂಪಾಯರ್ ಅಸದ್ ರೌಫ್ ಅಧಿಕೃತ ಎಚ್ಚರಿಕೆ ನೀಡಿದರು. ನಂತರ ದಿನದ ವೇಳೆ ದಿಲ್ಶಾನ್ ಹಾಗೂ ಪೀಟರ್ಸನ್ ಮಧ್ಯೆ ಇದೇ ವಿಷಯಕ್ಕೆ ಸ್ವಲ್ಪ ಶೀತಲ ಸಮರ ನಡೆಯಿತು.
Tagged with
tnews
ಲೈಂಗಿಕತೆ ಎನ್ನುವುದು ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಅವ ಶ್ಯಕತೆಯಾಗಿದೆ. ಜೋಡಿಯ ನಡುವೆ ಹೊಂದಾಣಿಕೆ, ಪರಸ್ಪರ ಮುಕ್ತ ಅಭಿಪ್ರಾಯಗಳು ಇದ್ದಾಗ ಮಾತ್ರ ಲೈಂಗಿಕ ಕ್ರಿಯೆ ಸುಗಮವಾಗಿ ನಡೆ ಯಬಲ್ಲುದು. ಆದರೆ ನಾವು ಸೇವಿಸುವ ಆಹಾರದಲ್ಲಿಯೂ ಲೈಂಗಿಕ ಬಯಕೆಯನ್ನು ಜಾಗೃತಗೊಳಿಸುವ, ಸಾಮರ್ಥ್ಯವನ್ನು ಹೆಚ್ಚಿಸುವ ಅಂಶಗಳಿರುತ್ತವೆ ಎನ್ನುವುದು ಹೆಚ್ಚಿನ ದಂಪತಿಗಳಿಗೆ ತಿಳಿದಿರುವು ದಿಲ್ಲ. ಪರಿಪೂರ್ಣ ಸೆಕ್ಸ್‌ನ ಮಧುರಾನುಭೂತಿ ಅನುಭವಿಸದ ದಂಪ ತಿಗಳು ತಮ್ಮ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿದರೂ ಗಣ ನೀಯ ಪರಿಣಾಮ ಸಾಧ್ಯ ಎಂದು ಆಯುರ್ವೇದದಲ್ಲಿಯೂ ತಿಳಿ ಸಲಾಗಿದೆ.
ಸಾಂಬಾರ ಪದಾರ್ಥ ಬಳಕೆ: ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲ್ಪಡುವ ಓಮದಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಥೈಮಾಲ್ ಎಂಬ ರಾಸಾಯನಿಕ ಹೆಚ್ಚಿರುತ್ತದೆ. ಇದನ್ನು ಪುಡಿಮಾಡಿ, ತುಪ್ಪದಲ್ಲಿ ಹುರಿದು ಬೆಣ್ಣೆಯನ್ನು ತೆಗೆದುಕೊಂಡು ಹುಣಸೇ ಹಣ್ಣು ಸೇರಿಸಿ ಅರೆದು ತಯಾರಿಸಿದ ಚೂರ್ಣವನ್ನು ಹಾಲು ಅಥವಾ ಜೇನಿನಲ್ಲಿ ಬೆರೆಸಿ ಲೈಂಗಿಕ ಕ್ರಿಯೆಯ ಗಂಟೆಗೂ ಮುನ್ನ ತೆಗೆದುಕೊಂಡರೆ ಹೆಚ್ಚುವರಿ ಪರಿಣಾಮ ಸಾಧ್ಯ ಎನ್ನುತ್ತದೆ ಆಯುರ್ವೇದ. ಅದೇ ರೀತಿ ಇಂಗು, ಏಲಕ್ಕಿಯನ್ನೂ ಲೈಂಗಿಕ ಕ್ರಿಯೆಗೂ ಮುನ್ನ ಬಳಸಿದರೆ ಪರಿ ಣಾಮ ಸಾಧ್ಯವಿದೆ. ಎಲಕ್ಕಿ ಕಾಳುಗಳ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುದಿಸಿ ಜೇನುತುಪ್ಪದೊಂದಿಗೆ ಸವಿಯುವುದೂ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ ಎಂದು ಹೇಳಲಾಗಿದೆ.
ಇನ್ನು ಕೆಲವು ಮಂದಿ ಪುರುಷರು ಲೈಂಗಿಕ ಕ್ರಿಯೆ ಅರ್ಥಾತ್ ಸಂಭೋಗದ ವೇಳೆ ಬೇಗನೆ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಜನನಾಂಗದಲ್ಲಿ ಗಡಸುತನ ಇಲ್ಲವಾ ಗುತ್ತದೆ. ಇದನ್ನು ಸುಲಭವಾಗಿ ಪರಿಹರಿಸಲು ಸಾಧ್ಯ ಎನ್ನುತ್ತದೆ ಆಯುರ್ವೇದ ಆಹಾರ ಪದ್ಧತಿ. ಶುಂಠಿರಸ, ಜೇನು, ಅರ್ಧ ಬೇಯಿಸಿದ ಕೋಳಿಮೊಟ್ಟೆಯನ್ನು ಪ್ರತಿದಿನ ರಾತ್ರಿ ಆಹಾರವಾಗಿ ಸೇವಿಸಿದರೆ ಬೇಗನೆ ಪರಿಣಾಮ ಬೀರುತ್ತದೆ. ಹಾಗೆ ಲವಂಗ, ಬೆಳ್ಳುಳ್ಳಿ ಸೇವನೆಯೂ ಲೈಂಗಿಕ ಶಕ್ತಿಯನ್ನು ಉದ್ದೀಪನಗೊಳಿ ಸಲು ಸಹಕಾರಿಯಾಗು ತ್ತದೆ. ಲವಂಗದ ಪುಡಿ ಬೆರೆಸಿದ ಹಾಲನ್ನು ಕುಡಿಯುತ್ತಿದ್ದರೆ ಸೆಕ್ಸ್‌ನಲ್ಲಿ ಪರಿಪೂರ್ಣ ಸಂತೃಪ್ತಿ ಪಡೆಯ ಬಹುದು.
ಬೆಳ್ಳುಳ್ಳಿ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗಿರು ತ್ತದೆ ಮಾತ್ರವಲ್ಲದೆ, ಶರೀರ ಮತ್ತು ಮನಸ್ಸಿನ ಆರೋಗ್ಯಕ್ಕೂ ಇದು ಸಹಕಾರಿಯಾಗುತ್ತದೆ. ಇವಿಷ್ಟು ಸಾಂಬಾರ ಪದಾರ್ಥ ಗಳ ಬಗ್ಗೆ ತಿಳಿದುಕೊಂಡರೆ ಹಣ್ಣು-ಹಂಪಲುಗಳ ಸೇವನೆಯೂ ಲೈಂಗಿಕ ಕ್ರಿಯೆಯ ವೇಳೆ ಮಹತ್ವದ ಪಾತ್ರ ವಹಿಸುತ್ತದೆ. ಬಾಳೆ ಹಣ್ಣಿನಲ್ಲಿ ಲವಣಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಲೈಂಗಿಕಾಸಕ್ತಿ ಹೆಚ್ಚಿಸಲು ನೆರವಾಗುತ್ತದೆ. ದಂಪತಿ ಇದನ್ನು ಪ್ರತೀ ರಾತ್ರಿ ಊಟದ ಬಳಿಕ ಸೇವಿಸುತ್ತಿದ್ದರೆ ಲೈಂಗಿಕ ಕ್ರಿಯೆಯ ವೇಳೆ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳು ತನ್ನಿಂತಾನೇ ನಿವಾರಣೆಯಾಗುತ್ತದೆ. ಅದೇ ರೀತಿ ಸೇಬು ಹಣ್ಣಿನಲ್ಲೂ ಲೈಂಗಿಕ ಚೋದಕಗಳನ್ನು ಬಿಡುಗಡೆ ಮಾಡಿ ಸೆಕ್ಸ್ ಅನ್ನು ಪರಿಪೂರ್ಣ ಮಾಡುವ ಶಕ್ತಿ ಇದೆ ಎಂದು ನಂಬಲಾಗಿದೆ. ಪುರುಷರು ಸೇಬು ಹಣ್ಣಿನ ರಸ ಸೇವನೆಯಿಂದ ಶಕ್ತಿಯನ್ನು ಮರಳಿ ಪಡೆಯಬ ಹುದಾಗಿದೆ. ಅನಾನಸು ಅಥವಾ ಪೈನಾಪಲ್ ಕೂಡಾ ಲೈಂಗಿಕ ಬಯಕೆಗಳನ್ನು ಜಾಗೃತಗೊಳಿಸುವ ಹಣ್ಣಾಗಿದೆ. ಪೈನಾಪಲ್ ಅನ್ನು ಜೇನು ಬೆರೆಸಿ ಚೆನ್ನಾಗಿ ಕಲಸಿ ತಿಂದರೆ ಲೈಂಗಿಕ ಬಯ ಕೆಗಳು ಸಹಜವಾಗೇ ಜಾಗೃತಗೊಳ್ಳುತ್ತದೆ. ದಿನಕ್ಕೊಂದು ಲೋಟ ಪೈನಾಪಲ್ ಜ್ಯೂಸ್ ಸೇವಿಸಿದರೆ ಹೆಚ್ಚಿನ ಪರಿಣಾಮವೂ ಸಾಧ್ಯ ವಿದೆ. ನಾಳಿನ ಸಂಚಿಕೆಗೆ...
Tagged with
gupta
ಸಂತೋಷ್ ಶೆಟ್ಟಿ, ಬಿಜೈ
ಇತ್ತೀಚೆಗೆ ಕನ್ನಡ ಟಿ.ವಿ. ವಾಹಿನಿಯೊಂದರಲ್ಲಿ ತುಳುನಾಡಿನ ನಾಗಾ ರಾಧನೆ, ಭೂತಾರಾಧನೆ ಬಗ್ಗೆ ಒಂದು ಚರ್ಚೆಯ ಕಾರ್ಯಕ್ರಮವಿತ್ತು. ಅದ ರಲ್ಲಿ ಪ್ರಸಿದ್ಧ ತುಳುವರಾದ ಡಿ.ಕೆ. ಚೌಟ ಹಾಗೂ ಉದಯ್ ಧರ್ಮಸ್ಥಳ ಪಾಲ್ಗೊಂಡಿದ್ದರು. ಚೌಟರ ಅಂದಾಜಿನ ಪ್ರಕಾರ ಕೇವಲ ತುಳುನಾಡಿನಲ್ಲಿ ಪ್ರತಿ ವರ್ಷ ಸುಮಾರು ೧೦೦ ಕೋಟಿ ರೂಪಾಯಿ ನಾಗಾರಾಧನೆಗೆ (ಆಶ್ಲೇಷ ಬಲಿ, ಮತ್ತು ನಾಗಮಂಡಲಕ್ಕೆ) ಹಾಗೂ ಸಂಬಂಧಪಟ್ಟ ಗುಡಿಗಳ ಅಷ್ಟಬಂಧ, ಬ್ರಹ್ಮ ಕಲಶಗಳಿಗೆ ವೆಚ್ಚವಾಗುತ್ತದೆ. ಹಾಗೂ ಇಂತಹಾ ಬೃಹತ್ ಮೊತ್ತ ದೇವರ ಹೆಸರಿನಲ್ಲಿ ಜಗತ್ತಿನ ಯಾವುದೇ ಪ್ರದೇಶದಲ್ಲಿ ವೆಚ್ಚವಾಗುವುದಿಲ್ಲವಂತೆ! ಈ ನೂರು ಕೋಟಿಯಿಂದ ಬರ ಪೀಡಿತ ಪ್ರದೇಶದಲ್ಲಿ ಎಷ್ಟೋ ಬೋರ್‌ವೆಲ್‌ಗ ಳನ್ನು ಕೊರೆಸಬಹುದು ಹಾಗೂ ಎಷ್ಟೋ ಜಾನುವಾರುಗಳಿಗೆ ಮೇವು ಒದ ಗಿಸಿ ಜೀವ ಉಳಿಸಿ ನಾಗಾರಾಧನೆಗಿಂತ ಎಷ್ಟೋ ಪಟ್ಟು ಹೆಚ್ಚು ಪುಣ್ಯ ಗಳಿಸ ಬಹುದು ಎಂದು ಊಹಿಸಿ.
ತುಳುನಾಡಿನಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೋಗುವ ಹಣವೆಲ್ಲಾ ಕಪ್ಪು ಹಣವಾಗಿದ್ದರೂ ಇನ್‌ಕಮ್‌ಟ್ಯಾಕ್ಸ್ ಅಧಿಕಾರಿಗಳೂ ಕಂದಾಚಾರಿಗಳಾಗಿರು ವುದರಿಂದ ಇಂತಹಾ ವೆಚ್ಚದ ತನಿಖೆ ನಡೆಸಲು ಭಯಪಡುತ್ತಾರಂತೆ. ನಾಗಮಂ ಡಲವೊಂದಕ್ಕೆ ಒಂದೇ ಸಾರಿ ೫೦ ಲಕ್ಷ ಖರ್ಚು ಮಾಡಿದರೂ ಆದಾಯಕರ ಇಲಾಖೆಯವರು ಆ ಕಡೆ ಕಣ್ಣೆತ್ತಿಯೂ ನೋಡದಿರಲು ಕಾರಣ ವೇನು ಎಂ ಬುದು ಚೌಟರ ಜಿಜ್ಞಾಸೆಯ ವಿಷಯವಾಗಿತ್ತು. ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಮಾಡಿದ ನಾಗಮಂಡಲಕ್ಕೆ ೬೦ ಲಕ್ಷ ರೂಪಾಯಿ ಖರ್ಚಾಗಿದೆಯಂತೆ.
ಒಂದು ನಾಗಮಂಡಲ - ಬ್ರಹ್ಮಕಲಶಕ್ಕೆ ನೂರಕ್ಕೂ ಹೆಚ್ಚು ಬೃಹತ್ ಫ್ಲೆಕ್ಸ್ ಬೋರ್ಡ್‌ಗಳನ್ನು ನಗರದೆಲ್ಲೆಡೆ ರಸ್ತೆ ಬದಿಗೆ ಸ್ಥಾಪಿಸಲಾಗುತ್ತದೆ. ಇದಕ್ಕೆ ಮಹಾ ನಗರ ಪಾಲಿಕೆಯು ಯಾವ ಆಧಾರದ ಮೇಲೆ ಟ್ರಾಫಿಕ್ ನಿಯಮ ಉಲ್ಲಂ ಘಿಸಿ ಅನುಮತಿ ಕೊಡುತ್ತಿದೆ? ಈ ನೂರಾರು ಫ್ಲೆಕ್ಸ್‌ಗಳ ತಯಾರಕರಿಗೆ ಒಂದೇ ಸಾರಿಗೆ ಸಂದಾಯವಾಗುವ ೪-೫ ಲಕ್ಷ ರೂಪಾಯಿಗೆ ಸರ್ವಿಸ್ ಟ್ಯಾಕ್ಸ್, ಟಿಡಿಎಸ್ ಬಗ್ಗೆ ಲೆಕ್ಕವಿಟ್ಟವರು ಯಾರು? ಇಂತಹಾ ನಾಗಮಂಡಲ -ಬ್ರಹ್ಮಕಲಶಗಳಿಗೆ ಖರ್ಚಾಗುವ ಹಣದಲ್ಲಿ ಹೆಚ್ಚಿನ ಭಾಗ ಮುಂಬೈಯ ಬಂಟ ಉದ್ಯಮಿಗಳ ಕಪ್ಪು ಹಣವಾಗಿದ್ದು, ವಿದ್ಯಾವಂತ ಬಂಟರೇ ಅತಿ ಹೆಚ್ಚು ಮೌಢ್ಯ ಭರಿತರಾಗಿದ್ದಾರೆ ಎಂಬುದು ಚೌಟರ ಅಭಿಪ್ರಾಯವಾಗಿತ್ತು.
ಬಂಟರ ಸಂಘಗಳು ಕಂದಾಚಾರಕ್ಕೆ ಪ್ರೋತ್ಸಾಹ ಕೊಡುತ್ತಿದ್ದು, ಜಾತಿಯ ಸಂಘಗಳು ಪ್ರಕಟಿಸುವ ಮಾಸಿಕ ಪತ್ರಿಕೆಗಳಲ್ಲೂ ಮೌಢ್ಯ ಹರಡುವ ಲೇಖನ ಗಳೇ ಹೆಚ್ಚಿದ್ದು, ವಿಚಾರವಾದಿ ಲೇಖಕರು ಬರೆದ ಲೇಖನಗಳು ಸಂಪಾದಕರ ಕಸದ ಬುಟ್ಟಿ ಸೇರುತ್ತಿವೆ. ಹಾಗೆ ನೋಡಿದರೆ ಬಂಟರ ಜಾತಿಯಲ್ಲಿ ನನಗೆ ಗೊತ್ತಿರುವಂತೆ ನಾಲ್ಕೇ ನಾಲ್ಕು ಜನ ವಿಚಾರವಾದಿ ಲೇಖಕರಿರುವುದು. ೬೫ ವರ್ಷದ ಬೆಂಗಳೂರು ಉದ್ಯಮಿ ಡಿ.ಕೆ. ಚೌಟ. ೭೮ ವರ್ಷದ ಬೈಕಂಪಾಡಿ ಉದ್ಯಮಿ, ಸಿ.ಎನ್.ಶೆಟ್ಟಿ ೭೦ ವರ್ಷದ ಮುಂಬೈನ ನಿವೃತ್ತ ಪ್ರಾಚಾರ್ಯ ಗೋಪಾಲ ಬಿ. ಶೆಟ್ಟಿ ಹಾಗೂ ೬೦ ವರ್ಷ ದಾಟಿದ ನಿವೃತ್ತ ಬ್ಯಾಂಕ್ ಮ್ಯಾನೇ ಜರ್ - ಪ್ರವೀಣ್ ಎಸ್. ಶೆಟ್ಟಿ.
ತರುಣ ಬರಹಗಾರರಲ್ಲಿ ಹಾಗೂ ಪತ್ರಕರ್ತರಲ್ಲಿ ವಿಚಾರವಾದಿಗಳು ಇಲ್ಲದೇ ಇರುವುದು ವಿಪರ್ಯಾಸ. ಯಾವುದೇ ಸಮಾರಂಭದ ನಂತರ ನಡೆಯುವ ಧಾರ್ಮಿಕ ಸಭೆಗಳಂತೂ ಮಹಿಳೆಯರ ಮನದಲ್ಲಿ ಶುದ್ಧ ಮೌಢ್ಯ ಬಿತ್ತುವ ಕಾರ್ಯಕ್ರಮಗಳಾಗಿವೆ. ಕಂದಾಚಾರ ಹರಡಲು ಶೂದ್ರ ಮಹಿಳೆಯರೇ ಅತೀ ಸಾಫ್ಟ್ ಟಾರ್ಗೆಟ್ ಎಂಬುದನ್ನು ಪುರೋಹಿತರು - ಸ್ವಾಮೀಜಿಗಳೆಲ್ಲರೂ ಬಲ್ಲರು.
ಚೌಟರ ಸಂಶೋಧನೆಯಂತೆ ಮೂಲದಲ್ಲಿ ತುಳುನಾಡಿನಲ್ಲಿ ನಾಗಮಂ ಡಲದಂತಹಾ ಲಕ್ಷಗಟ್ಟಲೆ ‘ಸ್ವಾಹಾ ಮಾಡುವ ಪೂಜೆ ಇರಲೇ ಇಲ್ಲವಂತೆ. ನಾಗನಿಗೆ ಕೇವಲ ‘ತಂಬಿಲ. ಮಾತ್ರ ಮಾಡಲಾಗುತ್ತಿತ್ತಂತೆ. ನಾಗಮಂಡಲ, ಆಶ್ಲೇಷ ಬಲಿ, ಮತ್ತು ಸರ್ಪ ಸಂಸ್ಕಾರ, ಇವೆಲ್ಲಾ ವೈದಿಕರು ದ್ರಾವಿಡ - ತುಳುವ ಸಂಸ್ಕೃತಿಯ ಮೇಲೆ ಕಳೆದ ಶತಮಾನದಲ್ಲಿ ತಮ್ಮ ಲಾಭಕ್ಕೋಸ್ಕರ ಹೇರಿದ ಕೃತ್ರಿಮ ಪೂಜಾ ವಿಧಿ ಗಳಂತೆ. ಅದಕ್ಕಾಗೇ ವೈದಿಕರು ನಾಗನೊಟ್ಟಿಗೆ ನಾಗ - ಕನ್ನಿಕೆಯ ಮಿಲನವನ್ನು ಪೂಜಾ ವಿಧಿಯಲ್ಲಿ ಸೇರಿಸಿ ಎಲ್ಲಾ ವೈದಿಕ ದೇವರುಗಳಂತೆ ನಾಗನಲ್ಲೂ ರಸಿಕತೆ ತುಂಬಿ, ತಮ್ಮ ಮೂಲ ‘ಆರ‍್ಯನ್ - ಲೈಂಗಿಕತೆ ತೋರಿಸಿದ್ದಾರಂತೆ.
Tagged with
chavadi
ಗೆಳೆಯರೇ, ಕಳೆದ ವಾರ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಘಟನೆಯೊಂದನ್ನಾಧರಿಸಿ ಅಂಕಣ ಬರೆದಿದ್ದೆ. ಈ ವಾರವು ವಿದ್ಯಾ ರ್ಥಿಗಳಿಗೆ ಸಂಬಂಧಿಸಿಯೇ ಬರೆಯುತ್ತಿದ್ದೇನೆ. ಕಳೆದ ಬಾರಿ ಆ ಅಂಕಣದಲ್ಲಿ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮಾತ್ರ ಪಡೆದು ಮಹಾ ಸಾಧನೆ ಮಾಡಿದ ‘ಸಾಧಕ’ರ ಬಗ್ಗೆಯ ಬರೆ ದಿದ್ದೆ. ಆದರೆ ಈ ವಿಚಾರ ನನಗಿಂತಲೂ ಮೊದಲು ಎಸ್‌ಎಸ್‌ಎ ಲ್‌ಸಿ ಕಲಿಯುತ್ತಿರುವ ಕೆಲ ವಿದ್ಯಾರ್ಥಿಗಳಿಗೂ ಗೊತ್ತಿರಬಹುದೆಂದ ನಿಸುತ್ತೆ. ಯಾಕೆ ಹೀಗೆ ಹೇಳಬೇಕಾಯಿತೆಂದರೆ ಈ ಸಲ ಎಸ್‌ಎಸ್ ಎಲ್‌ಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲೇ ಸುಮಾರು ೬೩೫ ವಿದ್ಯಾರ್ಥಿ ಗಳು ಗೈರಾಗಿದ್ದರಂತೆ! ನನ್ನ ಪ್ರಕಾರ ಈ ವಿದ್ಯಾರ್ಥಿಗಳು ಎಸ್‌ಎಸ್‌ಎ ಲ್‌ಸಿ ಪಾಸಾದರೇನು, ಫೈಲಾದರೇನು? ನಾವು ಧೀರುಭಾಯ್ ಅಂಬಾನಿ ಅಥವಾ ರಾವ್‌ಬಹಾದ್ದೂರು ಒಬೆರಾಯ್ ಅಥವಾ ಇನ್ನಿತರ ಕ್ಷೇತ್ರಗ ಳಲ್ಲಿ ಮಹಾನ್ ಸಾಧನೆ ಮಾಡಿದ ಸಾಧಕರಂತೆ ಆಗುವುದಂತೂ ಖಚಿತ’ ಎಂದು ಖಚಿತವಾಗಿ ಭಾವಿಸಿರುವ ಆತ್ಮವಿಶ್ವಾಸಿಗಳಾಗಿರಬೇಕು! ಆದರೆ ಏನು ಮಾಡಲಿ ಗೆಳೆಯರೇ ಈ ವಿದ್ಯಾರ್ಥಿಗಳಿಗಿರುವ ಆತ್ಮ ವಿಶ್ವಾಸ ನಮ್ಮ ಶಿಕ್ಷಣ ವಲಯಕ್ಕೆ ಇಲ್ಲವಾಯಿತಲ್ಲಾ. ಪರೀಕ್ಷೆಗೆ ಈ ಪರಿ ವಿದ್ಯಾರ್ಥಿಗಳು ಗೈರಾಗಿರುವುದು ಶಿಕ್ಷಣ ವಲಯದಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದಂತಾಯಿತಲ್ಲಾ, ಅಯ್ಯೋ!
ಆದರೆ ನಿಜವಾಗಿಯೂ ಹೇಳುತ್ತೇನೆ. ಈ ರೀತಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಎಂಬ ಅತೀ ಮುಖ್ಯ ಪರೀಕ್ಷೆಯೊಂದಕ್ಕೆ ಗೈರಾಗು ವುದು ಸಮಾಜಕ್ಕೆ ಒಳ್ಳೆಯ ಸಂದೇಶ ಖಂಡಿತಾ ಸಾರುವುದಿಲ್ಲ. ಇದು ಆತಂಕಕಾರೀ ವಿಚಾರವೇ ಸರಿ. ಈ ರೀತಿ ‘ಗೈರು’ ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಮಾಡಲಿ ಅಥವಾ ಇನ್ನೊಬ್ಬರ ಪ್ರಲೋಭನೆಯಿಂದ ಮಾಡಲಿ. ನಷ್ಟ ಮಾತ್ರ ವಿದ್ಯಾರ್ಥಿಗಳಿಗೆ ಎನ್ನುವುದು ಖಚಿತ. ಇದು ಸಾಮಾಜಿಕ ಬದ್ಧತೆಯ ವಿಚಾರ. ಆದ್ದರಿಂದ ಸಮಾಜ ಬಾಂಧವರು ಈ ವಿಚಾರದಲ್ಲಿ ಸ್ವಲ್ಪ ಗಂಭೀರವಾಗಿ ವರ್ತಿಸುವುದು ಅತ್ಯಗತ್ಯವಾ ಗಿದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣನಾದ ಮಾತ್ರಕ್ಕೆ ಓರ್ವ ವಿದ್ಯಾರ್ಥಿ ಮಹಾಸಾಧನೆ ಮಾಡಿದ್ದಾನೆ ಎನ್ನುವಂತಿಲ್ಲವಾದರೂ ಈ ರೀತಿ ಶಿಕ್ಷಣ ವನ್ನು ತಿರಸ್ಕರಿಸುವುದು ಖಂಡಿತಾ ಆತ್ಮಘಾತುಕತನದ ಕೃತ್ಯವೇ ಸರಿ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಪಡೆದರೂ ಪಡೆಯದಿದ್ದರು ಒಟ್ಟು ಸಾಧಕನಿಗೆ ಅದು ಸಮಸ್ಯೆಯೇ ಆಗದು ಎಂಬುವುದು ನಿಜವಾದರೂ ನಾವು ಕಂಡಿರುವ ಅನೇಕ (ಕೆಳ ದರ್ಜೆಯ ವಿದ್ಯಾಭ್ಯಾಸ ಪಡೆದು) ಸಾಧಕರು ಅವರ ಪಾಲಿಗೆ ಶಿಕ್ಷಣವೆಂಬು ವುದು ಗಗನಕುಸುಮವಾಗಿದ್ದ ಕಾರಣದಿಂದಲೇ ಶಿಕ್ಷಣದಿಂದ ವಿಮು ಖರಾಗಿದ್ದರೆ! ಹೊರತು ತಮ್ಮ ಬಳಿಗೆ ಪ್ರೀತ್ಯಾದರದಿಂದ ಬಂದ ವಿದ್ಯಾದೇವತೆಯನ್ನು ಕಾಲಿನಿಂದ ಒದ್ದು ಓಡಿಸಿದ ಕಾರಣದಿಂದಲ್ಲ. ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದ.ಕ.ದ ೬೩೫ ಮಂದಿ ವಿದ್ಯಾರ್ಥಿಗಳು ಸೇರಿದಂತೆ ನಾಡಿನ ಅನೇಕ ವಿದ್ಯಾರ್ಥಿಗಳು ಪರೀ ಕ್ಷೆಗೆ ಗೈರಾಗಿದ್ದಾರೆ. ಇವರಲ್ಲಿ ಹಲವಾರು ಮಂದಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣದಿಂದಲೇ ಪರೀಕ್ಷೆಗೆ ಕುಳಿತಿ ಲ್ಲವಾಗಿರಬಹುದು. ಇಂಥವರು ತಮ್ಮ ಅಹಂಕಾರಕ್ಕೆ ಮುಂದೆ ಜೀವ ನದ ಯಾವುದೊ ಸಂಧಿಯಲ್ಲಿ ತಕ್ಕ ಬೆಲೆ ಖಂಡಿತಾ ತೆರುತ್ತಾರೆ.
ಉನ್ನತ ಶಿಕ್ಷಣ ಪಡೆಯದೆಯೇ ಮಹಾನ್ ಸಾಧನೆ ಮಾಡಿರುವ ಸಾಧಕರೆಲ್ಲರೂ ತಮ್ಮ ವಿದ್ಯಾರ್ಥಿ ಜೀವನದ ಸಂಧಿಯೊಂದರಲ್ಲಿ ‘ಅಮೂಲ್ಯ, ಉನ್ನತ ಶಿಕ್ಷಣ ಪಡೆಯುವಂಥಾ ಭಾಗ್ಯ ನಮಗಿಲ್ಲವಾಯಿತಲ್ಲಾ’ ಎಂದು ತೀವ್ರವಾಗಿ ನೊಂದುಕೊಂಡವರಾಗಿದ್ದರು. ಸಿಟ್ಟು - ಆಕ್ರೋಶ - ಹತಾಶೆ ಗೊಳಗಾದವರಾಗಿದ್ದರು. ಆ ಸಿಟ್ಟು, ಆಕ್ರೋಶ, ಹತಾಶೆಗಳೇ ದಿನಗಳೆ ದಂತೆ ‘ಛಲ’ದ ರೂಪ ಪಡೆದು ಆ ಛಲವೇ ಅವರ ಕೈಯಲ್ಲಿ ಅದ್ಭುತಗ ಳನ್ನು ಸೃಷ್ಟಿ ಮಾಡಿತು! ಅದರ ಹೊರತು ಅವರೆಂದು ತಮ್ಮ ಬಳಿ ಪ್ರೀತಿ ಪೂರ್ವಕವಾಗಿ ಸಾಗಿ ಬಂದ ಸರಸ್ವತಿಯನ್ನು ಅಹಂಕಾರದಿಂದ ಒದ್ದು ಹೊರಗೋಡಿಸಿದವರೇ ಅಲ್ಲ. ಅಹಂಕಾರಿ ಎಂದೂ ಎಲ್ಲೂ ಅಭಿವೃದ್ಧಿ ಯಾದದ್ದೇ ಇಲ್ಲ.
ಇದೆಲ್ಲದರ ಒಟ್ಟು ತಾತ್ಪರ್ಯ ಇಷ್ಟೆ. ಒಬ್ಬ ವ್ಯಕ್ತಿಗೆ ಅದ್ಭುತಗಳನ್ನು ಸೃಷ್ಟಿ ಮಾಡಲು ಅವನು ವಿದ್ಯಾಭ್ಯಾಸ ಪಡೆದಿರುವುದು ಅಥವಾ ಪಡೆಯ ದಿರುವುದು ಬಹುತೇಕ ಕಾರಣವಾಗುವುದೇ ಇಲ್ಲ. ವಿದ್ಯಾಭ್ಯಾಸ ಅಂದರೆ, ಅಕ್ಷರಜ್ಞಾನಕ್ಕಿಂತಲು ಬೇರೆ ಇತರ ‘ಅಂಶ’ಗಳು ಓರ್ವ ಮಾಡುವ ಸಾಧ ನೆಯ ಹಿಂದೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುವುದು ಈ ಮೇಲಿನ ವಾದದ ಒಟ್ಟು ಸಾರಾಂಶ. ಅಕ್ಷರಜ್ಞಾನ ಪಡೆದವನಿಗೂ, ಪಡೆಯದವ ನಿಗೂ ವ್ಯತ್ಯಾಸವೇ ಇಲ್ಲ ಎನ್ನುವುದು ಇದರರ್ಥವಲ್ಲ. ಪ್ರಪಂಚದ ಯಶಸ್ವಿ ಉದ್ಯಮಪತಿಗಳ ಪಟ್ಟಿಯಲ್ಲಿ ಅವಲೋಕಿಸಿದರೆ ಅದನ್ನು ಸ್ಪಷ್ಟವಾಗಿ ಗುರು ತಿಸಬಹುದು. ಅದರಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆಯದೆ ಉದ್ಯಮ ಪತಿಗಳೆನಿಸಿಕೊಂಡವರು ಅಂಬಾನಿ, ಓಬೆರಾಯ್, ಬಫೆಟ್ ಮೊದಲಾದ ಬೆರಳೆಣಿಕೆ ಮಂದಿ ಮಾತ್ರ. ಆದರೆ ಅದೇ ಹೊತ್ತು ಉಳಿದ ಎಲ್ಲರೂ ಉನ್ನತ ಶಿಕ್ಷಣ ಪಡೆದವರೇ. ಅಂಬಾನಿ, ಓಬೆರಾಯ್, ಬಫೆಟ್ ತರದವರು ಯಶಸ್ಸಿನ ಶಿಖರಕ್ಕೇರಲು ಅವರ ಸುತ್ತ ವಿದ್ಯಾವಂತರನ್ನು ಇಟ್ಟುಕೊಂಡಿ ರುವುದೇ ಕಾರಣ ಎಂಬ ಅಂಶ ನಾವಿಲ್ಲಿ ಸಾಂದರ್ಭಿಕವಾಗಿ ಗಮನಿಸ ಬೇಕು. ತಾವು ಅಕ್ಷರಜ್ಞಾನ ಪಡೆಯದಿದ್ದರೂ ಈ ಉದ್ಯಮಪತಿಗಳು ತಮ್ಮ ಹತ್ತಿರ ಅನಕ್ಷರಸ್ಥರನ್ನು ಮಾತ್ರ ಬರಗೊಡಲಿಲ್ಲ. ತಮಗೆ ವಿಶೇಷ ವಿದ್ಯೆ ಇಲ್ಲ. ತಮ್ಮ ಮಕ್ಕಳಿಗೂ ವಿಶೇಷ ವಿದ್ಯೆ ಬೇಕಾಗಿಲ್ಲವೆಂದು ಈ ಉದ್ಯಮಿ ಗಳು ಯಾರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡದೆ ಸುಮ್ಮನೆ ಕೂರಿಲ್ಲ. ಇವರೆಲ್ಲ ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಉನ್ನತ ಮಟ್ಟದ ಶಿಕ್ಷಣವನ್ನೇ ಕೊಟ್ಟಿ ದ್ದಾರೆ. ಯಶಸ್ಸನ್ನೇ ಬಯಸುವ ಇಂದಿನ ಜಗತ್ತಿನಲ್ಲಿ ಯಶಸ್ಸು ತಮ್ಮದಾಗಿಸಿ ಕೊಳ್ಳಲು ಯಶಸ್ಸಿನ ಪಾಲುದಾರರಾಗಲು ವಿದ್ಯಾವಂತರಿಗೆ ಅತೀ ಹೆಚ್ಚಿನ ಅವ ಕಾಶವಿದೆ.
ಆದರೆ ಯಾವ ಹಂತದಲ್ಲೂ ಓರ್ವ ವ್ಯಕ್ತಿ ಸಾಧಕನಾಗಲು ಅವನನ್ನು ಕೈ ಹಿಡಿದು ಮುಂದೆ ಮುಂದಕ್ಕೆ ಕೊಂಡೊಯ್ಯಲು ಸಹಾಯಕವಾಗಿ ಬರುವ ವನು ಅವನದ್ದೇ ಎದೆಗೂಡಿನೊಳಗೆ ವಾಸ ಮಾಡುವ ಛಲಗಾರ ಮಾತ್ರ! ತಾವು ಪಡೆದ ವಿದ್ಯೆಯ ದೆಸೆಯಿಂದ ತಮ್ಮ ಹೃದಯ ಗೂಡಿನೊಳಗಡೆ ಓರ್ವ ಛಲ ಗಾರ ಸೃಷ್ಟಿಯಾಗಿದ್ದಾನೆ ಎಂದಾದರೆ ವಿದ್ಯಾರ್ಥಿಗಳು ವಿದ್ಯಾವಂತರಾಗಲು ಕಷ್ಟ ಪಟ್ಟದ್ದಕ್ಕೆ ಸಾರ್ಥಕವಾಯಿತೆನ್ನಬಹುದು. ಇಲ್ಲದಿದ್ದರೆ ಅವರು ವಿದ್ಯೆ ಪಡೆದು ಸಮಯ ಕಳೆಯುವ ಬದಲು ಯಾವುದಾದರೂ ಕೂಲಿ ಕೆಲಸ ಮಾಡುವುದು ಒಳಿತು. ಉನ್ನತ ಶಿಕ್ಷಣ ಪಡೆದ ಮೇಲೂ ಓರ್ವ ವ್ಯಕ್ತಿ ಕೊಲೆಗಾರನಾಗುತ್ತಾನೆ -ದರೋಡೆಕೋರನಾಗುತ್ತಾನೆ-ಭ್ರಷ್ಟಾಚಾರಿಯಾಗುತ್ತಾನೆ-ಅತ್ಯಾಚಾರಿಯಾಗು ತ್ತಾನೆ-ವ್ಯಭಿಚಾರಿಯಾಗುತ್ತಾನೆ-ಕೋಮುವಾದಿಯಾಗುತ್ತಾನೆ-ಭಯೋತ್ಪಾ ದಕನಾಗುತ್ತಾನೆ ಎಂದಾದರೆ ಅವನು ಉನ್ನತ ಶಿಕ್ಷಣ (?) ಪಡೆದರೆಷ್ಟು ಬಿಟ್ಟ ರೆಷ್ಟು. ಅಲ್ಲವೇ? ತಾನಾಯಿತು ತನ್ನ ಕೆಲಸವಾಯಿತು ಎಂದು ತನಗೆ ಗೊತ್ತಿ ರುವ ಕೆಲಸ ಕಾರ್ಯಗಳನ್ನು ಮಾಡಿ ತನ್ನ ಮತ್ತು ತನ್ನ ಕುಟುಂಬದ ಹೊಟ್ಟೆ ತುಂಬಿಸಲು ಕಠಿಣವಾಗಿ ದುಡಿಯುವ ಓರ್ವ ಅನಕ್ಷರಸ್ಥ ಇವರಿಗಿಂತ ಲೇಸ ಲ್ಲವೇ!?
ಮೊನ್ನೆ ಮುಂಬೈಯಲ್ಲಿ ೯ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನ ಶಾಲೆಯ ಪ್ರಾಂಶುಪಾಲೆಯ ಕೆನ್ನೆಗೆ ಬಾರಿಸಿದ ಘಟನೆ ಬಗ್ಗೆ ವರದಿಯಾಗಿತ್ತು. ಅದೇ ರೀತಿ ಚೆನ್ನೈನಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ೯ನೇ ತರಗತಿಯ ವಿದ್ಯಾ ರ್ಥಿಯೋರ್ವ ತನ್ನ ತರಗತಿಯ ಉಪಾಧ್ಯಾಯಿನಿಯನ್ನೇ ಚೂರಿಯಿಂದ ಇರಿದು ಕೊಲೆ ಮಾಡಿದ್ದನು. ಧಾರವಾಡದ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯೋರ್ವಳ ಜತೆ ಕಾಮಕೇಳಿ ನಡೆಸು ತ್ತಿದ್ದ ದೃಶ್ಯಗಳು ಮೊಬೈಲ್‌ಗಳಲ್ಲಿ ಹರಿದಾಡಿ ಸುದ್ದಿಯಾಗಿತ್ತು. ಅಮೇರಿಕಾ ದಂಥಾ ಮುಂದುವರೆದ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಮೇಲೆ, ಅಧ್ಯಾಪಕರ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಿ ಅನೇಕರನ್ನು ಕೊಂದು ಹಾಕಿರುವ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ.
ಓರ್ವ ವ್ಯಕ್ತಿ ಸಜ್ಜನನಾಗಲು ಪ್ರಾಮಾಣಿಕನಾಗಲು ಪರಿಶ್ರಮದಿಂದ ದುಡಿ ಯಲು ದೇಶಪ್ರೇಮಿಯಾಗಲು, ತ್ಯಾಗಮಯಿಯಾಗಲು ಶಾಲಾ-ಕಾಲೇಜುಗ ಳಲ್ಲಿ ಶಿಕ್ಷಣ ಪಡೆದ ಮಾತ್ರಕ್ಕೆ ಸಾಧ್ಯವಿಲ್ಲ, ಶಾಲಾ ಕಾಲೇಜುಗಳ ಹೊರಗ ಡೆಯೂ ತರಬೇತಿ ಪಡೆಯುವ ಅವಶ್ಯಕತೆ ಇದೆ ಎಂಬುವುದನ್ನು ಇದು ತೋರಿಸುತ್ತಿದೆಯಲ್ಲವೇ?
ಫರಿಯಾದ್, ಇಖ
Tagged with
lekhana
ರಾಜ್ಯದ ಅನೇಕ ಕಡೆಗಳಲ್ಲಿ ಬರ ಪರಿಸ್ಥಿತಿ ತಾಂಡವ ವಾಡುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಕುಡಿಯುವ ಹನಿ ನೀರಿಗೂ ತಾತ್ವಾರವಿದೆ. ಇದನ್ನು ಗಮನಿಸಿ ಸಕಾಲದಲ್ಲಿ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರ ಮುಂದಾಗದೇ ಇರು ವುದು ಸರಿಯಲ್ಲ. ಬರಪೀಡಿತ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ರಾಜ್ಯದ ನಾನಾ ಭಾಗಗಳ ಕೆರೆ, ನದಿಗಳು ಬತ್ತಿದ್ದು, ನೀರಿನ ಹಾಹಾ ಕಾರ ಎಲ್ಲೆಡೆ ಕೇಳಿಬರುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸಲು ಸರಕಾರ ಮುಂದಾಗದೇ ಇದ್ದರೆ ಜನರು ಆಡಳಿತವನ್ನು ತಿರಸ್ಕರಿಸುವ ಸಾಧ್ಯತೆಯಿದೆ. ಬರಪೀಡಿತ ಜಿಲ್ಲೆಗಳ ಸಮೀಕ್ಷೆಯನ್ನು ಸ್ಥಳೀಯ ಇಲಾಖೆಗಳ ಮೂಲಕ ನಡೆಸಿ ರೈತ ಬಾಂಧವರಿಗೆ ಪರಿಹಾರ ಧನ ವಿತರಿಸ ಬೇಕು. ಕೃಷಿ ಬೆಳೆಗಳಿಗೆ ಉಂಟಾಗಿರುವ ಹಾನಿಯನ್ನು ತುಂಬಲು ಸರಕಾರ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇ ಕಾದ ಅಗತ್ಯವಿದೆ. ಹೆಚ್.ರಾಘವೇಂದ್ರ, ಬೈಂದೂರು
Tagged with
nimminda
ಎಸ್.ಕೋಡಿಯಿಂದ ತೋಕೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸೊಂದು ಕೆಲವು ಸಮಯಗಳಿಂದ ಮಾಯವಾಗಿತ್ತು. ಇದರಿಂದ ಸ್ಥಳೀಯ ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಜಯಕಿರಣ ನಿಮ್ಮಿಂದ ವಿಭಾಗಕ್ಕೆ ದೂರಿರುವ ಹಿನ್ನೆಲೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿರುವ ಬಸ್ ಮಾಲಕರು ಬಸ್ ಸೇವೆಯನ್ನು ಒದಗಿಸಿದ್ದಾರೆ. ಈ ಮೂಲಕ ಜನರ ಬಹುದಿನಗಳ ಸಮಸ್ಯೆ ನಿವಾರಣೆಯಾ ಗಿದೆ. ಗ್ರಾಮಸ್ಥರು, ತೋಕೂರು
Tagged with
nimminda
ಇತ್ತೀಚೆಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಕೆಲವೇ ದಿನಗಳಲ್ಲಿ ಬಯಲಿಗೆಳೆದು ಬಜ್ಪೆ ಪೊಲೀಸರು ಶ್ಲಾಘನೀಯ ಕೆಲಸ ಮಾಡಿದ್ದಾರೆ. ರಾತ್ರಿಯ ವೇಳೆ ಮಾತ್ರ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು, ದರೋಡೆಕೋರರು ಹಾಡಹಗಲೇ ಕುಕೃತ್ಯಕ್ಕೆ ಇಳಿಯುತ್ತಿರುವುದು ಆಘಾತಕಾರಿ ಸಂಗತಿ. ಪೊಲೀಸ್ ಇಲಾಖೆ ತನಿಖೆಯನ್ನು ಶೀಘ್ರವಾಗಿ ನಡೆಸಿ ಆರೋಪಿಗಳ ಪತ್ತೆ ಮಾಡದಿದ್ದಲ್ಲಿ ಸಮಾಜ ದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಕರ್ತವ್ಯನಿಷ್ಠೆ ಯಲ್ಲಿ ಪ್ರಾಮಾಣಿಕರೆಂದೇ ಕರೆಸಿಕೊಂಡಿರುವ ಎಸ್.ಐ. ದಿನಕರ ಶೆಟ್ಟಿಯ ವರು ದರೋಡೆ ನಡೆದ ಐದೇ ದಿನಗಳಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಾನೂನಿನ ಸುಪರ್ದಿಗೆ ಒಪ್ಪಿಸಿದ್ದಾರೆ. ಈ ಮೂಲಕ ಬಜ್ಪೆ ಪರಿಸರದ ನಾಗ ರಿಕರು ನೆಮ್ಮದಿಯಿಂದ ಇರುವಂತಾಗಿದೆ. ಪೊಲೀಸ್ ಇಲಾಖೆ ಇದೇ ರೀತಿ ಇನ್ನು ಮುಂದೆಯೂ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿ. ಒಂದು ಕಾಲ ದಲ್ಲಿ ಕೋಮುಸೂಕ್ಷ್ಮ ಪ್ರದೇಶವೆನಿಸಿಕೊಂಡಿದ್ದ ಬಜ್ಪೆ ಪರಿಸರದಲ್ಲಿ ಸೌಹಾ ರ್ದತೆಯ ವಾತಾವರಣವಿದ್ದು, ಮುಂದೆಯೂ ಇದನ್ನು ಉಳಿಸಲು ಪೊಲೀ ಸರು ಮುಂದಾಗಲಿ. ಸತೀಶ್ ಕೆ, ಬಜ್ಪೆ
Tagged with
nimminda
ರಾ.ಹೆ. ೬೬ರ ಹಳೆಯಂಗಡಿ ಜಂಕ್ಷನ್ ಸದಾ ವಾಹನಗಳು ಮತ್ತು ಜನರಿಂದ ಗಿಜಿಗುಟ್ಟುತ್ತಿರುತ್ತದೆ. ಇಲ್ಲಿ ಹೆದ್ದಾರಿಯಲ್ಲಿ ಕಿನ್ನಿಗೋಳಿ-ಕಟೀಲು ಕಡೆ ರಸ್ತೆ ತಿರುವು ಪಡೆಯುವುದರಿಂದ ಅಪಘಾತ ಭಯ ಸಾಮಾನ್ಯ. ಈಗಾ ಗಲೇ ಇಲ್ಲಿ ಅನೇಕ ಅಪಘಾ ತಗಳು ನಡೆದಿವೆ. ಸದ್ಯ ರಾಷ್ಟ್ರೀಯ ಹೆದ್ದಾರಿಯ ಚತು ಷ್ಪಥ ಕಾಮಗಾರಿ ನಡೆಯು ತ್ತಿರುವ ಕಾರಣ ಇಲ್ಲಿ ರಸ್ತೆ ದಾಟುವುದೇ ಅಸಾಧ್ಯವಾಗಿದೆ. ಹೀಗಿರುವಾಗ ಈಗಲೇ ಸ್ಥಳೀಯ ಸಮಾಜಪರ ಸಂಘ ಟನೆಗಳು ಎಚ್ಚೆತ್ತುಕೊಂಡು ಇಲ್ಲಿ ಸರ್ಕಲ್ ಅನ್ನು ಅವ ಶ್ಯವಾಗಿ ನಿರ್ಮಾಣ ಮಾಡುವಂತೆ ಒತ್ತಾಯಿಸಬೇಕು. ಸರ್ಕಲ್ ನಿರ್ಮಾಣ ದಿಂದ ಪಾದಚಾರಿಗಳ ಸಂಚಾರ ಮತ್ತು ವಾಹನ ಸಂಚಾರ ಎರಡಕ್ಕೂ ಕಿರಿಕಿರಿ ತಪ್ಪಲಿದೆ. ಗಣೇಶ್, ಹಳೆಯಂಗಡಿ
Tagged with
nimminda
ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಯಲಾದ ಪರಿ ಣಾಮ ಕೆಲವು ಪರೀಕ್ಷೆಗಳ ದಿನಾಂಕದಂದು ಏರು ಪೇರು ಮಾಡಿರುವುದು ಖಂಡನೀಯ. ಕನ್ನಡ ವಿಷ ಯದ ಪರೀಕ್ಷೆಯನ್ನು ಮೊದಲು ನೀಡಿದ್ದ ವೇಳಾಪಟ್ಟಿ ಯಂತೆ ಮಾ.೩೦ರ ಪರೀಕ್ಷೆಯನ್ನು ಮಾರ್ಚ್೨೮ರಂದು ನಡೆಸಿರುವುದು ವಿಪರ್ಯಾಸ. ಇದರಿಂದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಪರೀಕ್ಷೆಯ ದಿನವನ್ನು ೩-೪ ದಿನಗಳ ಬಳಿಕ ನಿಗದಿ ಗೊಳಿಸುವ ಬದಲು ಎರಡು ದಿನ ಮುಂಚೆಯೇ ನಡೆಸಿ ರುವ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳ ಒತ್ತಡ ಏಕೆ ಅರ್ಥವಾಗುತ್ತಿಲ್ಲ? ಇಂತಹ ಗಂಭೀರ ಸಂಗತಿಯನ್ನು ಕೇವಲವಾಗಿ ಪರಿಗಣಿಸುತ್ತಿರುವ ಅಧಿಕಾರಿಗಳು ವಿದ್ಯಾ ರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನ್ನಡ ಪರೀಕ್ಷೆ ಬರೆ ಯಲು ಬಾಕಿಯಿರುವ ವಿದ್ಯಾರ್ಥಿಗಳಿಗೆ ಸೂಕ್ತ ದಿನ ವನ್ನು ಆದಷ್ಟು ಬೇಗನೆ ನಿಗದಿಗೊಳಿಸಬೇಕು. ಅವರ ಭವಿಷ್ಯದ ಜತೆ ಚೆಲ್ಲಾಟವಾಡಬಾರದಾಗಿ ವಿನಂತಿ.
ಗಣೇಶ್, ಉಕ್ಕಿನಡ್ಕ
Tagged with
nimminda
ಕರ್ನಾಟಕ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ರಾಜ್ಯದ ಜನತೆಯ ಮೇಲೆ ಉಪಚುನಾವಣೆಗಳ ಹೊರೆಯನ್ನು ಹೇರಿದ್ದು, ಇದಕ್ಕೆ ಕಾರಣ ಬಿಜೆಪಿ ಶಾಸಕರು ಹಾಗೂ ಸಚಿವರ ತಾಳ ತಪ್ಪಿದ ಕುಣಿದಾಟವೇ ಆಗಿರುತ್ತದೆ. ಜಯವಿದ್ದ ಕಡೆಯಲ್ಲಿ ಸೋಲು ಇರಲೇಬೇಕು. ಇತ್ತೀಚೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾ ವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆದುರು ಭಾರೀ ಅಂತರದ ಮುಖ ಭಂಗ ವಾಗಿದೆ. ಇಂತಹ ಬೆಳವಣಿಗೆಗಳಿಂದ ಸೋಲನ್ನು ಗೆಲುವಾಗಿ ಪರಿವರ್ತಿಸುವ ಕೆಲಸವಾಗಬೇಕಿದೆ. ಬಿಜೆಪಿ ಪಕ್ಷ ತನ್ನ ಆಂತರಿಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ.
ಎಂ.ಎ.ಮುಸ್ತಫಾ, ಬೆಳ್ಳಾರೆ
Tagged with
nimminda
ಮಂಗಳೂರು ನಗರದ ಅತೀ ಸಮೀಪದ ನಗರ ಸುರತ್ಕಲ್. ಆದರೆ ಸದ್ರಿ ಸುರತ್ಕಲ್ ನಗರ ಮಾತ್ರ ಮೂಲಭೂತ ಸೌಕರ್ಯಗಳಿಲ್ಲದೆ ಬಹಳ ಶೋಚನೀಯ ಸ್ಥಿತಿ ಎದುರಿಸುತ್ತಿದೆ. ಸುರತ್ಕಲ್ ಹೋಬಳಿಯು ಬಹಳ ವಿಶಾಲವಾಗಿದ್ದು, ಗುರುಪುರ-ಬಜಪೆಯವರೆಗೂ ಆವರಿಸಿರುವ ಈ ಹೋಬ ಳಿಯ ಜನರು ಸ್ಥಿರಾಸ್ತಿಗಳ ನೊಂದವಣೆಗಾಗಿ ಮಂಗಳೂರು ಮತ್ತು ಮೂಲ್ಕಿಯ ಕಡೆಗೆ ಅಲೆದಾಡಬೇಕಾಗಿದೆ. ಸದ್ಯ ಸುರತ್ಕಲ್‌ನಲ್ಲಿ ಮಂಗಳೂರು ನಗರಪಾಲಿಕೆ ಉಪಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಪೊಲೀಸ್ ಸ್ಟೇಶನ್ ಗಳನ್ನು ಹೊಂದಿದೆ. ಹೀಗಿರುವಲ್ಲಿ ಸುರತ್ಕಲ್ ಗ್ರಾಮದ ಸ್ಥಿರಾಸ್ತಿಗಳ ನೊಂದ ವಣೆಗಾಗಿ ಮೂಲ್ಕಿಗೆ ಹೋಗಬೇಕಾದ ಪರಿಸ್ಥಿತಿ. ಆದರೆ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ನಿದ್ದೆಗೆಟ್ಟು ದಾಖಲೆಗಳನ್ನು ಕೈಯಲ್ಲಿ ಹಿಡಿದು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ. ಒಂದು ಕಂಪ್ಯೂಟರ್ ಹೊಂದಿರುವ ಮೂಲ್ಕಿ ಉಪ ನೋಂದಣಾಧಿಕಾರಿಯವರ ಕಚೇರಿಯಲ್ಲಿ ಮೂಲ್ಕಿ ಹೋಬಳಿಯ ಸಾಕಷ್ಟು ದಾಖಲೆಗಳು ಇರುವಾಗ ಸದ್ರಿ ಸುರತ್ಕಲ್ ಹೋಬಳಿಯ ದಾಖಲೆಗಳನ್ನು ನೋಂದಾವಣೆ ಮಾಡುವುದು ತುಸು ತ್ರಾಸದಾಯಕವೇ ಸರಿ. ಇನ್ನು ಮಂಗ ಳೂರು ತಾಲೂಕು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಮಂಗ ಳೂರು ಹೋಬಳಿಯ ದಾಖಲೆಗಳು ಸಾಕಷ್ಟು ಇರುವಾಗ ಅಲ್ಲಿ ಕೂಡಾ ಸುರತ್ಕಲ್ ನಾಗರಿಕರು ಪರದಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಆದುದರಿಂದ ಸದ್ರಿ ಸಮಸ್ಯೆಯನ್ನು ನಿವಾರಿಸುವಲ್ಲಿ ನಮ್ಮ ಜಿಲ್ಲೆಯವ ರಾದ ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಈ ಕಡೆ ಗಮನಹರಿಸಿ ಸುರತ್ಕಲ್‌ನಲ್ಲಿ ಸಬ್‌ರಿಜಿಸ್ಟ್ರಾರ್ ಕಚೇರಿಯನ್ನು ನಿರ್ಮಿಸಿ, ಸುರ ತ್ಕಲ್ ಹೋಬಳಿಯ ನಾಗರಿಕರಿಗೆ ದೊಡ್ಡ ಒಂದು ಉಡುಗೊರೆಯನ್ನು ಕೊಟ್ಟಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ರಿ ಕಂದಾಯ ನಿರೀ ಕ್ಷಕರ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಸದ್ರಿ ಕಟ್ಟಡವನ್ನು ಪುನರ್‌ನಿರ್ಮಾಣ ಮಾಡಿದರೆ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಬೇಕಾದಷ್ಟು ಸ್ಥಳಾವಕಾಶ ಕೂಡಾ ದೊರೆಯುತ್ತದೆ. ಆದುದರಿಂದ ಸದ್ರಿ ನಮ್ಮ ಸುರತ್ಕಲ್ ನಾಗರಿಕರ ಮನವಿ ಯನ್ನು ಪುರಸ್ಕರಿಸಿ ಈ ಕಡೆ ಗಮನಹರಿಸುವರೇ? ನಮ್ಮ ವಿನಂತಿ ಕೂಡ ಆಗಿ ರುತ್ತದೆ. ನೊಂದ ನಾಗರಿಕರು, ಸುರತ್ಕಲ್
Tagged with
nimminda
ಮಂಗಳೂರಿನ ಹೆಸರಾಂತ(?) ಬಿಗ್ ಬಜಾರ್‌ನಲ್ಲಿ ಇತ್ತೀಚೆಗೆ ಯಾವುದೇ ಹಳೇ ಸಾಮಾನುಗಳನ್ನು ನೀಡಿ ಬಿಗ್ ಬಜಾರ್ ಅಥವಾ ಫುಡ್ ಬಜಾರ್‌ನಲ್ಲಿ ಸಾಮಾನು ಪಡೆ ಯಬಹುದು ಎಂಬ ಜಾಹೀರಾತು ನೋಡಿ ನಾವು ಈ ಬಗ್ಗೆ ವಿಚಾರಿಸಿದಾಗ ಹಳೇ ಸಾಮಾ ನುಗಳನ್ನು ನಾವು ಪಡೆಯುತ್ತೇವೆ ಬದಲಾಗಿ ಹಣ ಕೊಡುವುದಿಲ್ಲ, ನೀವು ಅಷ್ಟೇ ಮೌಲ್ಯದ ಸಾಮಾನು ಖರೀದಿಸಬೇಕು ಎಂದು ಹೇಳಿ ದರು. ಅದರಂತೆ ಮಾ ೩೧ರಂದು ನಮ್ಮ ಲ್ಲಿದ್ದ ಹಳೇ ಸಾಮಾನುಗಳನ್ನು ಬಿಗ್‌ಬಜಾ ರ್‌ನಲ್ಲಿ ಕೊಟ್ಟೆವು. ಅವರು ಅದರ ಬದಲಿಗೆ ರೂ ೬೦೦೦ ಮೌಲ್ಯದ ಕೂಪನ್ ನೀಡಿದರು.
ಎ ೪ ರಂದು ಈ ಕೂಪನ್‌ಗಳನ್ನು ಹಿಡಿದುಕೊಂಡು ಫುಡ್ ಬಜಾರ್‌ನಲ್ಲಿ ಸಾಮಾನು ಖರೀದಿಸಲು ಹೋದಾಗ ಅವರು ನಮಗೆ ಅಷ್ಟು ಮೌಲ್ಯದ ಸಾಮಾನು ಕೊಡುವು ದಿಲ್ಲ. ಇಲ್ಲಿಂದ ಪಡೆದ ಸಾಮಾನುಗಳ ಮೇಲೆ ಶೇಕಡಾ ೧೦ ರಿಯಾಯತಿ ಇದೆ ಎಂದರು. ಆಗಲೇ ನಾವು ಬಿಗ್ ಬಜಾ ರ್‌ನವರ ಮೋಸದ ಜಾಹೀರಾತಿನಿಂದ ವಂಚನೆಗೊಳಗಾ ಗಿದ್ದು ತಿಳಿದು ಬಂತು. ಅದರಂತೆ ನಾವು ಮಾಮೂಲಾಗಿ ಉಪಯೋಗಿಸುವ ಕೆಲವು ಸಾಮಾನುಗಳ ಬೆಲೆ ಕೇಳಿದಾಗ ಅವರು ರಿಯಾಯತಿ ನೀಡಿದಕ್ಕಿಂತಲೂ ಕಡಿಮೆ ಕ್ರಯಕ್ಕೆ ನಮ್ಮ ಊರಲ್ಲೇ ಅದು ದೊರೆಯುತ್ತಿದೆ. ಉದಾಹರಣೆಗೆ : ಒಂದು ಲೀಟರ್ ರುಚಿಗೋಲ್ಡ್ ಪಾಮ್ ಆಯಿಲ್ ಫುಡ್ ಬಜಾರ್‌ನಲ್ಲಿ ರಿಯಾಯಿತಿ ಮಾಡಿ ರೂ. ೬೭. ಆದರೆ ಅದೇ ಪಾಮ್ ಆಯಿಲ್ ನಮ್ಮೂರಲ್ಲಿ ರೂ. ೬೪ಕ್ಕೆ ಸಾಮಾನ್ಯ ಅಂಗಡಿಯಲ್ಲಿ ದೊರೆಯುತ್ತದೆ. ಮೆಣಸು ರಿಯಾಯಿತಿ ದರದಲ್ಲಿ ಇಲ್ಲಿ ರೂ ೧೫೫, ಆದರೆ ಅದೇ ಮೆಣಸು ನಮ್ಮೂರಿ ನಲ್ಲಿ ಕ್ಲೀನ್ ಮಾಡಿ ೧೫೦ಕ್ಕೆ ಸಿಗುತ್ತದೆ. ಫುಡ್ ಬಜಾರ್‌ನ ಎದುರು ಬೋರ್ಡ್‌ಲ್ಲಿ ರಖಂ ಬೆಲೆಯಲ್ಲಿ ಲಭ್ಯ ಎಂದು ಬರೆದಿರುತ್ತಾರೆ. ಆದರೆ ನಮ್ಮಲ್ಲಿ ಚಿಲ್ಲರೆಯಾಗಿ ಸಿಗುವು ದಕ್ಕಿಂತಲೂ ಹೆಚ್ಚಿನ ಬೆಲೆಗೆ ಇಲ್ಲಿ ಮಾರಾಟ ಮಾಡುತ್ತಿ ದ್ದಾರೆ. ಗ್ರಾಹಕರು ಬಣ್ಣ ಬಣ್ಣದ ಮಾತು, ಮೋಸ ಮಾಡುವ ಜಾಹೀರಾತುಗಳಿಗೆ ಮಾರು ಹೋಗಿ ಮೋಸ ಹೋಗುತ್ತಿದ್ದಾರೆ. ಇಲ್ಲಿರುವ ದರ ಮತ್ತು ಇತರ ಸಾಮಾನ್ಯ ಅಂಗಡಿಗಳಲ್ಲಿರುವ ದರವನ್ನು ವಿಮರ್ಶಿಸಿದರೆ ಬಿಗ್ ಬಜಾರ್‌ನ ಮಹಾ ಮೋಸ ಅರಿವಾಗುತ್ತದೆ. ಇದು ನಮ್ಮಂತಹಾ ಮಧ್ಯಮ ಮತ್ತು ಬಡವರ್ಗದವರಿಗೆ ಹೇಳಿ ಮಾಡಿಸಿದ್ದಲ್ಲ. ಇದೇನಿದ್ದರೂ ಬೇಕಾಬಿಟ್ಟಿ ಹಣ ಇರುವ ಶ್ರೀಮಂತರಿಗೆ ಮಾತ್ರ. ಈ ಬಗ್ಗೆ ಸಂಬಂಧಿಸಿದ ಇಲಾಖೆ, ಗ್ರಾಹಕ ವೇದಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಇಲಾಖೆ, ಗ್ರಾಹಕ ವೇದಿಕೆ ಈ ಬಗ್ಗೆ ವಿಫಲವಾದರೆ ಇಂತಹಾ ಮಹಾಮೋಸದ ಕೇಂದ್ರವಾದ ಬಜಾರ್‌ನ ಒಳಗೆ ತಪ್ಪಿಯೂ ಕಾಲಿಡಬಾರದು ಎಂದು ಸಾರ್ವ ಜನಿಕರಲ್ಲಿ ವಿನಂತಿಸುತ್ತಿದ್ದೇನೆ.
ಶೇಖ್ ಅಬ್ದುಲ್ಲಾ, ಕುಪ್ಪೆಪದವು
Tagged with
nimminda
ನೀರು ಅತ್ಯಮೂಲ್ಯವಾದುದು. ನಮ್ಮ ಸಂಸ್ಕೃತಿಯಲ್ಲಿ ಗಂಗೆಗೆ ಪ್ರಧಾನ ಸ್ಥಾನವಿದೆ. ಆಕೆ ಮಹಾತಾಯಿ, ಎಲ್ಲೆಡೆ ನದಿಯಾಗಿ ಹರಿದು ಹಳ್ಳಿಗಾಡು ಹಸಿರುಗೊಳಿಸಿದ್ದಾಳೆ. ಜೀವರಾಶಿಗಳ ಬದುಕಿಗೆ ದೇವತೆಯಾಗಿದ್ದಾಳೆ. ಭೂಮಿಯ ಶೇ.೭೬ರಷ್ಟು ಭಾಗವನ್ನು ನೀರು ಆವರಿಸಿಕೊಂಡರೆ ಶೇ.೨೪ ರಷ್ಟು ಭಾಗ ಮಾತ್ರ ನೆಲವಿದೆ. ಆದಿಯಲ್ಲಿ ಸಮುದ್ರ ಮಥನ ನಡೆದು ಭೂಖಂಡಗಳು, ಜಲಖಂಡಗಳು ನಿರ್ಮಾಣವಾದವು ಎಂದು ಹೇಳಲಾಗುತ್ತದೆ. ಪ್ರಾಯಶಃ ಸೃಷ್ಟಿಯ ಅನಾವರಣ ಇಲ್ಲಿಂದಲೇ ಆರಂಭ ಎನ್ನಲೂಬಹುದು.
ನೀರು ಸ್ತ್ರೀಲಿಂಗ, ಅಗ್ನಿ ಪುಲ್ಲಿಂಗ ಹೀಗಾಗಿ ಪೂರ್ವ ಜರು ಭೂಮಿಯನ್ನು ತಾಯಿಗೆ ಸಮಾನವೆಂದೂ, ಸೂರ್ಯ ತಂದೆಗೆ ಸಮಾನ ಎಂಬುದಾಗಿಯೂ ಕರೆಯುತ್ತಿದ್ದರು. ಮಹಾ ತಪಸ್ವಿ ಪರಶುರಾಮನ ಸೃಷ್ಟಿ ತುಳುನಾಡು ಅಪಾರ ಜಲಸಂ ಪತ್ತು ಹೊಂದಿದ್ದು, ಜಲಕ್ಷಾಮ, ಬರಗಾಲ ಗತಿ ಎದುರಾಗಲು ಹೇಗೆ ತಾನೇ ಸಾಧ್ಯ? ಎಂಥಾ ವಿಚಿತ್ರ ನೋಡಿ ಪ್ರಕೃತಿಯ ಅದ್ಭುತ ಮಹಿಮೆ? ಪ್ರತೀ ವರ್ಷ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಮೋಡವಾಗಿ ನಿರ್ಮಿಸಿ ಬೀಳಿಸಿದ ಮಳೆ ನೀರನ್ನು ಉಳಿಸಿಕೊಳ್ಳುವ ಯೋಗ್ಯತೆ ಆಧುನಿಕ ಮಾನವನಿಗೆ ಇದೆಯೇ? ನೀರು ಪ್ರತಿಯೊಂದು ಜೀವಿಯ ಅವಿಭಾಜ್ಯ ಅಂಗ. ಅದನ್ನು ಕಳೆದುಕೊಂಡರೆ ಮುಂದಿನ ಪೀಳಿಗೆಗೆ ಬದುಕು ಹೇಗೆ ಸಾಧ್ಯ? ಒಂದೆಡೆ ಎಗ್ಗಿಲ್ಲದೆ ನಡೆಯುತ್ತಿರುವ ನದಿಗಳ ಮರ ಳುಗಾರಿಕೆ, ಮತ್ತೊಂದೆಡೆ ನೀರಿನ ದುರ್ಬಳಕೆಯಾಗುತ್ತಿರು ವುದೇ ಜಲಕ್ಷಾಮಕ್ಕೆ ಕಾರಣ ಸ್ಪಷ್ಟವಾಗಿದೆ. ಆಧುನಿಕತೆಯ ಗುಂಗಿನಲ್ಲಿ ಪರಿಸರದ ಮೇಲೆ ಅತಿಕ್ರಮಣ, ಅತ್ಯಾಚಾರ ಎಸ ಗುತ್ತಿರುವುದು ಪಾಪದ ಕೊಡ ತುಂಬಿರುವ ಉದಾಹರಣೆಯೇ? ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ನಮ್ಮ ಕರಾವಳಿ ಜಿಲ್ಲೆಗಳು ಕೃಷಿಗೆ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತಿದೆ. ನಾಲ್ಕು ದಶಕಗಳ ಹಿಂದಿನ ಸ್ಥಿತಿಯತ್ತ ಒಮ್ಮೆ ಕಣ್ಣಾಯಿಸಿದರೆ ಕೆರೆ-ತೊರೆ, ಬಾವಿ, ಹಳ್ಳ-ಕೊಳ್ಳದಲ್ಲಿ ಇಡೀ ರಾಜ್ಯಕ್ಕೆ ಬೇಕಾ ದಷ್ಟು ಮಳೆ ನೀರು ಸಂಗ್ರಹವಾಗುತ್ತಿತ್ತು.
ಕಾಲ ಮುಂದುವರಿಯುತ್ತಾ ಹೋದಂತೆ ಬೃಹತ್ ಕೈಗಾ ರಿಕೆಗಳು ಕೃಷಿಭೂಮಿಗೆ ಲಗ್ಗೆ ಇಟ್ಟವು. ಜನ ಸ್ವಾವಲಂಬಿಯಾ ಗುತ್ತಾ ಮುಂದೆ ಹೋದಂತೆಯೇ ಹಸಿರು ಹಾಗೂ ನೀರಿನ ಬುಗ್ಗೆಗಳಿಗೆ ಗ್ರಹಚಾರ ಹಿಡಿದಂತಾದವು. ಬಹುಶಃ ಮೂರು ದಶಕಗಳ ಹಿಂದೆ ಮಂಗಳೂರು ನಗರದ ಅಧಿಕೃತ ಜನಸಂಖ್ಯೆ ೮೦-೮೫ ಸಾವಿರದಷ್ಟು ಇದ್ದಿರಬಹುದು. ಅಂದು ಕೊಂಚ ನೀರಿನ ಕ್ಷಾಮ ಹುಟ್ಟಿರಬೇಕು. ನಾಗರಿಕರ ಕುಡಿಯುವ ನೀರಿನ ಹಕ್ಕು ಉಳಿಸಲು ನೇತ್ರಾವತಿ ನದಿ ತೀರದ ತುಂಬೆ ಎಂಬಲ್ಲಿ ಅಂದಿನ ಜನಸಂಖ್ಯೆಗೆ ತಕ್ಕಷ್ಟು ಸಾಮಾನ್ಯ ಗಾತ್ರದ ಜಲಾಶಯ (ವೆಂಟೆಡ್ ಡ್ಯಾಂ) ನಿರ್ಮಾಣವಾಗಿದ್ದು ಹಳೆಯ ಇತಿಹಾಸ. ಹಿಂದೆ ಮಳೆ ಚೆನ್ನಾಗಿದ್ದಿದ್ದರಿಂದ ಡ್ಯಾಮ್ ನೀರು ಅಷ್ಟೊಂದು ಅಗತ್ಯವಿರಲಿಲ್ಲ ಎಂಬುದು ಹಿರಿಯ ನಾಗರಿಕರ ಅಂಬೋಣ. ಮಳೆಗಾಗಿ ಈ ಸಲವೂ ಆಮೆ, ಕೋತಿ, ಕಪ್ಪೆ ಜೋಡಿಗಳಿಗೆ ಮದುವೆ ಮಾಡ ಬಹುದು. ಮಂಗಳೂರು ಈಗ ಮಹಾನಗರವಾಗಿ ಬೆಳೆದಿದೆ. ಜನಸಂಖ್ಯೆ ಏಳು ಲಕ್ಷ ದಾಟುತ್ತಿದೆ ಎಂಬುದನ್ನು ಮೂಲವೊಂದು ಹೇಳಿದೆ. ನಮ್ಮೆಲ್ಲರ ಬೇಜವಾಬ್ದಾರಿ ಅಳಿದುಳಿದು ಒಂದಿಷ್ಟು ಬಾವಿಗಳಿದ್ದರೂ ಅದರ ಸುತ್ತಮುತ್ತ ಮರಗಿಡಗಳು ಇಲ್ಲದೆ ಸಕಾಲ ಮಳೆ ಇಲ್ಲದೆ ತಾಪಮಾನ ಏರುತ್ತಾ ಬಾವಿಗಳ ಅಂತರ್ಜಾಲ ತೀವ್ರ ಕುಸಿತಕ್ಕೆ ಕಾರಣವಾಗಿ ಎಚ್ಚರಿಕೆ ನೀಡಿದರೂ ನಾಗರಿಕ ರಲ್ಲಿ ಜಾಗೃತಿ ಉಂಟಾಗಿಲ್ಲ. ವರುಣನನ್ನೇ ನಂಬಿ ಕೈಕಟ್ಟಿ ಕೂರು ವುದು ವೈeನಿಕ ಕಾರಣವಲ್ಲ. ಅನಿವಾರ್ಯವಾಗಿ ಸಮುದ್ರದ ನೀರನ್ನು ಶುದ್ಧೀಕರಿಸಿ ಸಿಹಿ ನೀರಾಗಿ ಪರಿವರ್ತಿಸುವ ತಂತ್ರ eನ ಯಾಕೆ ಸಾಧ್ಯವಿಲ್ಲ?
ಸಸ್ಯರಾಶಿ, ಜೀವಿ ಮತ್ತು ನದಿಗಳ ಮೇಲೆ ಅನ್ಯಾಯ ಅತಿ ಯಾದವು. ಯಾವನೋ ನರಪಿಳ್ಳೇ ಎಸಗಿದ ತಪ್ಪಿಗೆ ಜನಸಾ ಮಾನ್ಯನಿಗೆ ಯಾಕೆ ಯಾತನೆ? ಇದ್ಯಾವ ನ್ಯಾಯ? ನೀರು ದುರ್ಬ ಲಕೆ ಅಪರಾಧಕ್ಕೆ ಸರಿಸಮ. ಹಲವು ಕಡೆ ಶೇ.೬೦ರಷ್ಟು ನೀರು ಪೋಲಾಗುತ್ತಿರುವ ಸುದ್ದಿಯಾಗಿದ್ದು, ಕ್ಷಿಪ್ರ ಕಾರ್ಯಾಚರಣೆ ಇನ್ನೆ ರಡು ತಿಂಗಳು ಮಿತಿಯಲ್ಲಿ ಸರಬರಾಜು ನಿಯಂತ್ರಣದ ಅಗ ತ್ಯವಿದೆ. ರಾಷ್ಟ್ರದ ಬಗ್ಗೆ ಹೇಳುವುದಾದರೆ ನಮ್ಮಲ್ಲಿರುವಷ್ಟು ನದಿ ಗಳು ಬೇರೆಲ್ಲೂ ಇಲ್ಲ. ಎಂದೋ ನಮ್ಮ ಪುರಸಭೆ, ನಗರ ಪಾಲಿ ಕೆಗಳು ನದಿಗಳ ಸನಿಹ ಬೃಹತ್ ಜಲಾಶಯಗಳ ನಿರ್ಮಾಣವಾ ಗುತ್ತಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲವೋ ಏನೋ? ಪ್ರತೀ ವರ್ಷ ಶೇ. ೮೦ರಷ್ಟು ಮಳೆ ನೀರು ಸಮುದ್ರ ಪಾಲಾಗುತ್ತಿದೆ.
ಬೃಹತ್ ನೀರಾವರಿ ಯೋಜನೆ ಮಾಡದೆ ಜಲಕ್ಷಾಮ ಆಹಾ ರದ ಬರಗಾಲವನ್ನು ನಾವೇ ಬರಮಾಡಿಕೊಂಡಂತಾಗಿದೆ ಅನ್ನು ವುದಕ್ಕೆ ಅಡ್ಡಿಯಿಲ್ಲ. ನೀರು ಸಂಗ್ರಹಿಸಲು ಸಾಕಷ್ಟು ಅವಕಾಶವಿ ದ್ದರೂ ಅತ್ತ ತಲೆಕೆಡಿಸಿಕೊಳ್ಳದೆ ಪ್ರಸಕ್ತ ವಿದೇಶಿ ನೀತಿ ಎಂಬಂತೆ ಬೇಸಿಗೆ ದಿನಗಳಲ್ಲಿ ಕರ್ನಾಟಕ ವರ್ಸಸ್ ತಮಿಳುನಾಡು ಕೇರಳ ವರ್ಸಸ್ ತಮಿಳುನಾಡು, ಕಾವೇರಿ ನೀರಿನ ಪಾಲಿಗೆ ಯುದ್ಧ ಗಳು ಮಾಮೂಲಿ ಆಗಿಬಿಟ್ಟಿದೆ. ಕೇಂದ್ರಕ್ಕೂ-ಸುಪ್ರೀಂಗೂ ಬಿಸಿತು ಪ್ಪದಂತೆ ಪರಿಣಮಿಸಿದ್ದು, ರಾಷ್ಟ್ರಕ್ಕೊಂದು ಜಲನೀತಿ ಇದ್ದಂತಿ ದೆಯೇ? ಮಂಗಳೂರು ನಗರ ಬೆಳೆದರೂ ಸಮಸ್ಯೆಯೂ ಗುಡ್ಡೆ ಯಷ್ಟಿದೆ. ಎಂದೂ ಕಾಣದ ಜಲಕ್ಷಾಮ ಉಂಟಾಗಿದೆ. ತುಂಬೆ ಯಿಂದ ನಗರಕ್ಕೆ ನೀರು ಸರಬರಾಜು ಬೃಹತ್ ಪೈಪ್‌ಸ್ಫೋಟ ದಿಂದ ಹಲವೆಡೆ ನೀರಿಗೆ ಪರದಾಡುವಂತಾಗಿತ್ತು. ಕ್ಷಣದಲ್ಲೇ ಮನಪಾ ಮುತುವರ್ಜಿ, ಶ್ರಮದಿಂದ ಮತ್ತೆ ನೀರು ಹರಿಸುವಂತೆ ಮಾಡಿದ್ದು, ಪ್ರಶಂಸನೀಯ. ಆದರೆ ಸಮಸ್ಯೆ ಅದಲ್ಲ. ಜಲಾಶಯಕ್ಕೆ ಒಳ ಹರಿವು ಇಲ್ಲದಿರುವುದು. ಅದನ್ನು ಇಪ್ಪತ್ತು ಮೀಟರ್ ಆಳ ಗೊಳಿಸಿರುವುದು, ಗಿಡಮರ ಇಲ್ಲದಿರುವುದು ಕಾರಣ ಎನ್ನಲಾ ಗಿದೆ. ಅತ್ತಕಡೆ ಕೈಗಾರಿಕೆಯು ಸಾರ್ವಜನಿಕ ನದಿ ನೀರು ಬಳಕೆಗೆ ಸ್ವಂತ ಅಣೆಕಟ್ಟು ನಿರ್ಮಿಸಿದ್ದೇ ದೊಡ್ಡ ಪ್ರಮಾದ.
ಇತ್ತ ಕಡೆ ಜಲವಿದ್ಯುತ್ ಉತ್ಪಾದನೆಗೆ ನದಿ ನೀರು ಉಪ ಯೋಗ ಕಾರಣವೂ ಆಗಿದೆ. ನಮ್ಮೆಲ್ಲರ ಬೇಜವಾಬ್ದಾರಿ ಅನ್ನು ವಂತೆ ಅಂತರ್ಜಲ ಭದ್ರತೆಗೆ ನದಿಯಲ್ಲಿ ಕನಿಷ್ಟ ಪಕ್ಷ ಆಳದಲ್ಲಿ ೨೪ ಇಂಚು ಮರಳು ಇರಬೇಕು. ನಮ್ಮ ಜೀವ ನದಿ ಗುರುಪುರ ಮತ್ತು ನೇತ್ರಾವತಿ ನದಿಗಳಿಗೆ ಕೂಡಾ ಇದೇ ಗತಿ ಎದುರಾಗಿದೆ. ಅದೆಷ್ಟೋ ಟನ್‌ಗಟ್ಟಲೆ ಮರಳು ಚಿನ್ನದ ಬೆಲೆಗೆ ದೂರದ ಊರು ಗಳಿಗೆ ಸಾಗಾಟವಾಗುತ್ತಿದೆ. ದಂಧೆಕೋರರು ಇನ್ನಷ್ಟು ಗುಡ್ಡೆ ಹಾಕಿ ಕೊಂಡು ಗರಿಷ್ಟ ಬೆಲೆಗೆ ಡಿಮ್ಯಾಂಡ್ ಮಾಡುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಜನಪ್ರತಿನಿಧಿಗಳು ಕಣ್ಣಿದ್ದು ಕುರುಡ ರಾಗಿದ್ದಾರೆಯೇ? ಮರಳು ದಂಧೆಗೆ ಮೂಗುದಾರ ಹಾಕದಿದ್ದರೆ ಜಲಕ್ಷಾಮ ಸಮಸ್ಯೆ ನಿಶ್ಚಿತ.
ಉಮಾನಾಥ ಕುಮಾರ್, ಕೋಡಿಕಲ್
Tagged with
bahiranga
ಮುಲ್ಕಿ: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡುವಿನಲ್ಲಿ ಇಂದು (ಎ.೫) ಶ್ರೀದೇವಿ ಮತ್ತು ಭಗವತಿ ದೇವಿಯ ಭೇಟಿಯೊಂದಿಗೆ ಧ್ವಜಾರೋಹಣ ನಡೆಯಿತು.
ಚಿತ್ರಗಳು: ಸುನೀಲ್ ಬಂಗೇರ
Tagged with
briefs
ಮುಲ್ಕಿ: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡುವಿನಲ್ಲಿ ಇಂದು (ಎ.೫) ಶ್ರೀದೇವಿ ಮತ್ತು ಭಗವತಿ ದೇವಿಯ ಭೇಟಿಯೊಂದಿಗೆ ಧ್ವಜಾರೋಹಣ ನಡೆಯಿತು.
ಚಿತ್ರಗಳು: ಸುನೀಲ್ ಬಂಗೇರ
Tagged with
ಮುಲ್ಕಿ: ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಬಪ್ಪನಾಡುವಿನಲ್ಲಿ ಇಂದು (ಎ.೫) ಶ್ರೀದೇವಿ ಮತ್ತು ಭಗವತಿ ದೇವಿಯ ಭೇಟಿಯೊಂದಿಗೆ ಧ್ವಜಾರೋಹಣ ನಡೆಯಿತು.
ಚಿತ್ರಗಳು: ಸುನೀಲ್ ಬಂಗೇರ
Tagged with