ಎ.ಜೆ.ಕಾಲೇಜ್ ವಿದ್ಯಾರ್ಥಿಗಳಿಂದ ಹಲ್ಲೆ

Posted by JAYAKIRANA Kirana on Wednesday, 4 April 2012 | 0 comments | Leave a comment...

ಮಂಗಳೂರು: ನಗರದ ಎ.ಜೆ. ವೈದ್ಯಕೀಯ ಕಾಲೇಜ್‌ನ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಕಿರಿಯ ವಿದ್ಯಾರ್ಥಿಗಳಿಬ್ಬರ ಮೇಲೆ ನಡುರಸ್ತೆ ಯಲ್ಲೇ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಿನ್ನೆ ನಗರದ ಕದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಥಮ ವರ್ಷದ ವಿದ್ಯಾರ್ಥಿ ಕೇರಳ ಮೂಲದ ರಾಬಿನ್ ಎಂಬಾತನೇ ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆಗೀಡಾದಾತ. ನಿನ್ನೆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಈತ ತನ್ನ ಸ್ನೇಹಿತ ಮಜೋಜೋನ್ ಎಂಬಾತನ ಜತೆ ನೀರು ಕುಡಿಯಲೆಂದು ಕದ್ರಿ ಬಳಿಯ ಹೋಟೆಲ್ ಮುಂದೆ ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಹರಿಕೃಷ್ಣ, ವಿಪಿನ್, ಶಂಕರ್, ಸುನಿಲ್ ಹಾಗೂ ಇತರ ಮೂರು ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ-ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಜೋಜೋನ್ ತಪ್ಪಿಸಿಕೊಂಡರೆ, ರಾಬಿನ್ ಹಲ್ಲೆಕೋರ ವಿದ್ಯಾರ್ಥಿಗಳ ಕೈಗೆ ಸಿಕ್ಕು ಬೆನ್ನು, ಕೈ, ಮುಖದ ಭಾಗಕ್ಕೆ ಏಟು ತಿಂದಿದ್ದಾನೆ. ಕದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಾರದ ಹಿಂದೆ ಶಿಕ್ಷಣ ಸಂಸ್ಥೆಯ ಕ್ರೀಡಾಕೂಟ ನಡೆದಿದ್ದ ವೇಳೆ ರಾಬಿನ್ ಹಾಗೂ ಆರೋಪಿಗಳ ನಡುವೆ ದ್ವೇಷ ಬೆಳೆದಿದ್ದು, ಇದೇ ಹಲ್ಲೆಗೆ ಕಾರಣವೆನ್ನಲಾಗಿದೆ.

ಸುಳ್ಯ: ಅಸಹಜ ಸಾವು

Posted by JAYAKIRANA Kirana on | 0 comments | Leave a comment...

ಸುಳ್ಯ: ಐವರ್ನಾಡು ಗ್ರಾಮದ ನಿಡುಬೆ ನಿವಾಸಿ ಬಟ್ಯ ಮೂಲ್ಯರ ಪುತ್ರ ಬಾಬು(೨೬) ಮಂಗಳವಾರ ಸುಳ್ಯದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಾರ್ಚ್ ೨೯ರ ರಾತ್ರಿ ಮನೆ ಸಮೀಪದ ರಬ್ಬರ್ ತೋಟದಲ್ಲಿ ಅವರ ಅಸ್ವಸ್ಥರಾಗಿ ಬಿದ್ದುಕೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಪಿಕಪ್ ಪಲ್ಟಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಪಿಕಪ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿ ಹೊಡೆದು ಚಾಲಕ ಹಾಗೂ ಮಹಿಳೆ ಯೊಬ್ಬರು ಅಪಾಯದಿಂದ ಪಾರಾದ ಘಟನೆ ವಿಟ್ಲದ ಒಟ್ಟೆಶಾಂತಿ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಅನಂತಾಡಿ ನಿವಾಸಿ ಪಿಕಪ್ ಚಾಲಕ ಕಿರಣ್ ಎಂದು ಗುರುತಿಸಲಾಗಿದೆ. ಈತ ಅನಂತಾಡಿ ಮನೆಯೊಂದರಿಂದ ಸಾಮಾಗ್ರಿ ಗಳನ್ನು ತುಂಬಿಸಿಕೊಂಡು ಮಂಗಿಲಪದವು ಮಾರ್ಗವಾಗಿ ವಿಟ್ಲ ಕಡೆ ಬರುತ್ತಿದ್ದ ಸಂದರ್ಭ ಒಟ್ಟೆಶಾಂತಿ ಅಪಾಯಕಾರಿ ತಿರುವಿನಲ್ಲಿ ನಿಯಂತ್ರಣ ಕಳೆದು ರಸ್ತೆ ಬದಿಗೆ ಪಲ್ಟಿ ಹೊಡೆಯಿತು. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದ್ದು, ವಿಟ್ಲ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಅಕ್ಕನ ನಕಲಿ ಸಹಿ ಹಾಕಿ ತಮ್ಮ ವಂಚನೆ

Posted by JAYAKIRANA Kirana on | 0 comments | Leave a comment...

ಉಡುಪಿ: ಒಡಹುಟ್ಟಿದ ಅಕ್ಕನ ಸಹಿ ಯನ್ನು ತಾನೇ ಹಾಕಿಕೊಂಡ ತಮ್ಮನೋರ್ವ ಸ್ಥಿರಾಸ್ತಿಯನ್ನು ಒಳಗೆ ಹಾಕುವ ದುರು ದ್ದೇಶದಿಂದ ನಕಲಿ ಜನರಲ್ ಪವರ್ ಆಫ್ ಅಟರ್ನಿ ತಯಾರಿಸಿ ವಂಚಿಸಿದ ಪ್ರಕರಣ ಕಟಪಾಡಿಯಲ್ಲಿ ನಡೆದಿದೆ.
 ಈ ಬಗ್ಗೆ ಕಟಪಾಡಿ ಅಗ್ರಹಾರ ನಿವಾಸಿ ವಿ.ಸಾವಿತ್ರಿ(೬೮) ನೀಡಿದ ದೂರಿನಂತೆ ಸ್ಥಳೀಯ ನಿವಾಸಿಯೇ ಆದ ವೈ.ವಾದಿರಾಜ ಭಟ್ ಹಾಗೂ ಇವರ ಮಗಳು ಅಪರ್ಣಾ ಎಂಬವರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
 ೧೯೯೩ರಲ್ಲಿ ಸಾವಿತ್ರಿಯವರ ತಂದೆ ವೈ. ಮುಖ್ಯಪ್ರಾಣ ಭಟ್ ನಿಧನ ಹೊಂದಿದ್ದರು. ಇವರ ಹೆಸರಿನಲ್ಲಿ ಏಣಗುಡ್ಡೆ ಗ್ರಾಮದಲ್ಲಿ ಸ್ಥಿರಾಸ್ತಿ ಇದ್ದು, ಇದನ್ನು ತನ್ನದನ್ನಾಗಿಸಲು ವಾದಿರಾಜ ಭಟ್ ೨೦೦೭ರ ನವೆಂಬರ್ ೨೬ರಂದು ಉಡುಪಿಯ ನೋಟರಿ ಎಂ.ರತ್ನಾಕರ ಅವರ ಕಚೇರಿಯಲ್ಲಿ ನಕಲಿ ಪವರ್ ಆಫ್ ಅಟರ್ನಿ ತಯಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
 ಈ ಸಂಬಂಧದ ನಕಲಿ ದಾಖಲೆಗಳನ್ನು ಗ್ರಾ. ಪಂ.ಗೆ ಮತ್ತು ಕಂದಾಯ ಕಚೇರಿಗೆ ಸಲ್ಲಿಸಿದ್ದಾರೆ. ತನ್ನ ಇನ್ನೋರ್ವ ಸಹೋದರ ಕೆ.ರವೀಂದ್ರನಾಥ ಭಟ್ ಮೂಲಕ ತನ್ನ ಗಮನಕ್ಕೆ ಈ ವಿಷಯ ಬಂತು. ದಾಖಲಾತಿಗಳನ್ನು ಪಡೆದುಕೊಂಡು ಪರಿಶೀಲಿಸಿದಾಗ ಮೋಸ ಮಾಡಿರುವುದು ಖಚಿತವಾಯಿತು ಎಂದು ಸಾವಿತ್ರಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬೆಳವಣಿಗೆ ತನ್ನ ಗಮನಕ್ಕೆ ಬರುತ್ತಲೇ ಆರೋಪಿ ತನ್ನ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾನೆಂದೂ ಸಾವಿತ್ರಿ ದೂರಿದ್ದಾರೆ.

ಮೇಯರ್ ವಿವಾದ: ತೀರ್ಪು ಮುಂದೂಡಿಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಾಜ್ಯ ಉಚ್ಚ ನ್ಯಾಯಾಲ ಯದ ಅಂಗಣದಲ್ಲಿದ್ದ ಮಂಗಳೂರು ಮೇಯರ್ ಆಯ್ಕೆ ವಿವಾದದ ತೀರ್ಪನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂ ಡಿದೆ.
ತಮ್ಮ ಆಂತರಿಕೆ ಒಳ ಜಗಳದಿಂದಾಗಿ ಕೈಯಲ್ಲಿದ್ದ ಬೆಣ್ಣೆಯನ್ನು ಕರಗಲು ಬಿಟ್ಟು ಬಳಿಕ ಪರಿತಪಿಸಿದ ಬಿಜೆಪಿ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಆಯ್ಕೆ ಕಾನೂನು ರೀತಿ ನಡೆದಿಲ್ಲ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಕೆವಿಯೆಟ್ ತಂದಿರುವ ಕಾಂಗ್ರೆಸ್ ಮೇಯರ್, ಆಯ್ಕೆ ನಿಯಮಾನು ಸಾರ ನಡೆದಿದೆ. ಹೀಗಾಗಿ ಇದಕ್ಕೆ ತಡೆಯಾಜ್ಞೆ ನೀಡದಂತೆ ಕೋರಿದ್ದರು. ಎರಡು ಕಡೆಯ ವಾದವನ್ನು ಆಲಿಸಿದ್ದ ರಾಜ್ಯ ಉಚ್ಚ ನ್ಯಾಯಾ ಲಯ ವಿಚಾರಣೆಯನ್ನು ನಿನ್ನೆಗೆ ಕಾಯ್ದಿರಿ ಸಿತ್ತು. ಪ್ರಸಕ್ತ ಪರಿಸ್ಥಿತಿಯಲ್ಲಿ ನ್ಯಾಯಾಲಯದ ತೀರ್ಪು ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ನಿನ್ನೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ತೀರ್ಪನ್ನು ಮತ್ತೆ ಸೋಮವಾರಕ್ಕೆ ಮುಂದೂಡಿದೆ. ವಿಶೇಷ ಎಂದರೆ ಜಿಲ್ಲಾ ನ್ಯಾಯಾಲಯದಲ್ಲಿ ಈ ವಿವಾದಕ್ಕೆ ಇನ್ನೂ ತೆರೆ ಬಿದ್ದಿಲ್ಲ ಎನ್ನುವುದು ಗಮನಾರ್ಹ. ಹೀಗಿದ್ದರೂ ಮಂಗಳೂರು ಮಹಾನಗರ ಪಾಲಿಕೆಯ ಈವರೆಗಿನ ಎಲ್ಲಾ ಕೆಲಸಗಳು ಯಾವುದೇ ವಿಘ್ನ ಇಲ್ಲದಂತೆ ನಡೆದಿದೆ. ಮಾರ್ಚ್ ೩೦ ರಂದು ಮೇಯರ್ ೨೦೧೨-೧೩ ನೇ ಸಾಲಿನ ಬಜೆಟ್ ಮಂಡಿಸಿದ್ದು ಆರಂಭದಲ್ಲಿ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ ಬಳಿಕ ತಮ್ಮ ಮಾತು ನಡೆಯುತ್ತಿಲ್ಲ ಎನ್ನುವುದು ಅರಿವಿಗೆ ಬರುತ್ತಿರುವಂತೆ ಸಭಾತ್ಯಾಗ ಮಾಡಿತ್ತು. ಆ ಬಳಿಕದ ದಿನದಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಗೆ ಭಾಗವಹಿಸಿ ತಮ್ಮವರು ಅಧ್ಯಕ್ಷರಾಗುವಂತೆ ನೋಡಿಕೊಂಡು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಮೇಯರ್ ಆಯ್ಕೆಯನ್ನು ಬಿಜೆಪಿಗರೂ ಒಪ್ಪಿದ್ದಾರೆಯೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಅಥವಾ ಪ್ರತಿಷ್ಠೆಗಾಗಿ ನ್ಯಾಯಾಲಯದ ಮೊರೆ ಹೋದರೆ ಎನ್ನುವ ಶಂಕೆಯೂ ಮೂಡುತ್ತಿದೆ.

ಮೃತದೇಹದ ಗುರುತು ಪತ್ತೆ: ಕೊಲೆ ಶಂಕೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಕೆಲವು ದಿನಗಳ ಹಿಂದೆ ಇಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು ಸುರತ್ಕಲ್ ಠಾಣೆ ಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮಾ.೧೪ರಂದು ಇಲ್ಲಿನ ಕಾಶೀ ಮಠದ ಬಳಿ ರಸ್ತೆ ಪಕ್ಕದಲ್ಲಿರುವ ಮನೆಯೊಂದರ ಅಂಗಳದಲ್ಲಿ ಸುಮಾರು ೬೦ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹದ ಹಲವಾರು ಕಡೆ ಹಲ್ಲೆ ಮಾಡಿದ ಗುರುತುಗಳಿದ್ದವು. ಈ ವ್ಯಕ್ತಿಯನ್ನು ಮಂಗಳೂರಿನ ಶಿವಭಾಗ್ ನಿವಾಸಿ ಸೈಮನ್ ಮಚಾದೋ(೬೦) ಎಂದು ಗುರುತಿಸಲಾಗಿದೆ. ಅವಿವಾಹಿ ತರಾಗಿರುವ ಅವರು ಸುಮಾರು ೨೦ ವರ್ಷಗಳ ಹಿಂದೆ ಮನೆ ಬಿಟ್ಟಿದು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಕೊಲೆಯಾದ ಹಿಂದಿನ ದಿನ ರಾತ್ರಿ ಕೂಡಾ ಇವರು ಸೆಕ್ಯರಿಟಿ ಗಾರ್ಡ್ ಕೆಲಸ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಸೀದಿ ಅಧ್ಯಕ್ಷನ ಗೂಂಡಾಗಿರಿ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಪ್ರತಿಷ್ಠಿತ ಜುಮಾ ಮಸೀದಿಯೊಂದರ ಆಡಳಿತ ಸಮಿತಿ ಅಧ್ಯಕ್ಷ ಪಾಣೆಮಂಗಳೂರು ಮಸೀದಿಯೊಂದಕ್ಕೆ ಸಂಬಂಧಿಸಿ ಕಾಮಗಾರಿ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕ ಓರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಎರಡೂ ಜಮಾಅತ್‌ನ ಆಡಳಿತ ಸಮಿತಿಯವರು ಪರಸ್ಪರ ಮಾತುಕತೆ ನಡೆಸುತ್ತಿದ್ದು, ಪ್ರಕರಣ ಠಾಣೆಯ ಮೆಟ್ಟಿಲೇರಲಿಲ್ಲ. ಹಲ್ಲೆಗೈದ ಅಧ್ಯಕ್ಷ ಕಾರ್ಮಿಕರಲ್ಲಿ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಬಿ.ಮೂಡ ಗ್ರಾಮದ ಜುಮಾ ಮಸೀದಿಯನ್ನು ಅಕ್ರಮ ಪ್ರವೇಶಿಸಿದ ಅಧ್ಯಕ್ಷ ಹಾಗೂ ಸಮಿತಿಯ ಇತರ ವ್ಯಕ್ತಿಗಳು ರಾತ್ರಿ ವೇಳೆ ಊಟ ಮಾಡಿ ಮಲಗಿದ್ದ ಕಾರ್ಮಿಕರ ಮೇಲೆ ಏಕಾಏಕಿ ಥಳಿಸಿದ್ದರು. ಎದೆಗೆ ಕಾಲಿನಿಂದ ರಕ್ತ ಬರುವಂತೆ ತುಳಿದಿದ್ದರು. ಅಲ್ಲದೇ ಕೈಯಿಂದ ಹಲ್ಲೆ ನಡೆಸಿದ್ದರು. ಘಟನೆಯನ್ನು ತಡೆಯಲು ಹೋದ ಇತರ ಕೆಲಸದವರ ಮೇಲೂ ಹಲ್ಲೆಗೈಯ್ಯಲಾಗಿದೆ ಎನ್ನಲಾಗಿದೆ. ಕೋಣೆಯಲ್ಲಿ ಹೊಡೆದಾಟ, ಬೊಬ್ಬೆ ಕೇಳಿಸಿದಾಗ ಧಾವಿಸಿದ ಮಸೀದಿಯ ಸಮಿತಿಯವರು ಹಲ್ಲೆಗೈದ ಅಧ್ಯಕ್ಷ ಹಾಗೂ ಇತರರನ್ನು ತರಾಟೆಗೆ ತೆಗೆದಿದ್ದರೆನ್ನಲಾಗಿದೆ.
ಹಲ್ಲೆಗೈದಾತನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಲು ಮುಂದಾಗಿದ್ದು, ಅಷ್ಟರಲ್ಲಿ ಯುವಕರನ್ನು ತಡೆದ ವ್ಯಕ್ತಿ ತಾನು ಅಧ್ಯಕ್ಷ ಎಂದು ಹೇಳಿಕೊಂಡು ತಲೆ ತಪ್ಪಿಸಿದ್ದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಜನ ಸೇರಿದ್ದು, ಅಧ್ಯಕ್ಷನ ಗೂಂಡಾಗಿರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಮಸೀದಿಯ ಕೆಲಸ ಕಾರ್ಯಗಳನ್ನು ಪೂರೈಸದ ಬಗ್ಗೆ ಕೆಲಸದಾಳುಗಳಲ್ಲಿ ಕಾರಣ ಕೇಳಲು ಬಂದಿದ್ದೆವು. ಹಲ್ಲೆ ನಡೆಸಿಲ್ಲ ಎನ್ನುವುದು ಅಧ್ಯಕ್ಷ ಸಮರ್ಥಿಸಿದ್ದು, ಅಧ್ಯಕ್ಷನ ಹೇಳಿಕೆಯನ್ನು ಖಂಡಿಸಿದ ಕಾರ್ಮಿಕರು ನಮಗೆ ಇವರು ಸರಿಯಾಗಿ ಸಂಬಳ ಕೊಡುತ್ತಿರಲಿಲ್ಲ ಎಂದಿದ್ದಾರೆ. ಕೊನೆಗೆ ಕಾರ್ಮಿಕರ ಮೇಲಾದ ಹಲ್ಲೆ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿದ ಅಧ್ಯಕ್ಷ ಅವರಲ್ಲಿ ಕ್ಷಮೆ ಕೋರಿದ್ದು, ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ದುಂಬಾಲು ಬಿದ್ದಿದ್ದರೆನ್ನಲಾಗಿದೆ. ಅಧ್ಯಕ್ಷನ ಗೂಂಡಾ ಗಿರಿ ವರ್ತನೆ ಸ್ವತಃ ಅವರ ಮಸೀದಿಯ ಆಡಳಿತ ಸಮಿತಿಯಲ್ಲಿ ಚರ್ಚೆಗೊಳ್ಳುತ್ತಿದ್ದು, ಜಮಾಅತ್‌ನವರು ಸಹಿತ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ. ಕೆಲಸದಾಳುಗಳಿಗೆ ಹಲ್ಲೆಗೈದ ಆರೋಪಕ್ಕೆ ಅಧ್ಯಕ್ಷ ತನ್ನ ಸ್ಥಾನವನ್ನು ತೊರೆಯಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.

ತೆಂಗಿನ ಮರಕ್ಕೆ ಲಾರಿ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಉಡುಪಿಯಿಂದ ಪಣಂಬೂರಿಗೆ ಬರುತ್ತಿದ್ದ ಆಯಿಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಪಡುಬಿದ್ರಿ ಬೀಡಿನಕೆರೆ ಶಾಲಾ ಬಳಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದಲ್ಲಿ ಹಳೆ ರಸ್ತೆಯಿಂದ ಹೊಸ ರಸ್ತೆಗೆ ತಿರುವು ತೆಗೆದುಕೊಳ್ಳುವಾಗ ವಿರುದ್ಧ ದಿಕ್ಕಿನಿಂದ ಅತೀ ವೇಗದಲ್ಲಿ ಬರುತ್ತಿದ್ದ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟ್ಯಾಂಕರ್ ಚಾಲಕ ರಸ್ತೆ ಪಕ್ಕದ ಚರಂಡಿಗಿಳಿದು ತೆಂಗಿನಮರಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಟ್ಯಾಂಕರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಚಾಲಕ ಪ್ರದೀಪ್ ತಲೆಗೆ ಗಾಯಗೊಂಡು ಪಡುಬಿದ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಬಾಡಿಗೆ ವಸೂಲಿ: ರಿಕ್ಷಾ ಚಾಲಕನಿಗೆ ೫೦೦ ರೂ. ದಂಡ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಅಂಗವಿಕಲನಾದ ಪ್ರಯಾಣಿಕನೋರ್ವನಿಂದ ಮಂಗಳೂರಿನ ರಿಕ್ಷಾ ಚಾಲಕನೋರ್ವ ಬಾಡಿಗೆ ಪ್ರಮಾಣದಲ್ಲಿ ಹೆಚ್ಚುವರಿ ಹಣ ಪಡೆದ ಕಾರಣದಿಂದ ಪ್ರಯಾಣಿಕನಾದ ಮಂಜೇಶ್ವರ ಕುಂಜತ್ತೂರು ಬಿ.ಎಸ್ ನಗರದ ಅಬ್ದುಲ್ ನಾಸಿರ್ ಎಂಬವರು ನೀಡಿದ ದೂರಿನಿಂದಾಗಿ ಚಾಲಕನಿಗೆ ಮಂಗಳೂರು ಆರ್.ಟಿ.ಒ ೫೦೦ ರೂ. ದಂಡ ವಿಧಿಸಿದ ಘಟನೆ ಕೆಲ ದಿನಗಳ ಮೊದಲು ನಡೆದಿದೆ.
ಮಂಜೇಶ್ವರ ಕುಂಜತ್ತೂರು ಬಿ.ಎಸ್. ನಗರದ ನಿವಾಸಿ ಅಬ್ದುಲ್ ನಾಸಿರ್ ಫೆಬ್ರವರಿ ೯ರಂದು ಸಾಯಂಕಾಲ ಮಂಗಳೂರು ಕದ್ರಿ ಸಮೀಪದ ತೇಜಸ್ವಿನಿ ಆಸ್ಪತ್ರೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣಕ್ಕೆ ಕೆ.ಎ-೧೯ ಸಿ-೨೦೭೬ ನಂಬ್ರದ ರಿಕ್ಷಾಕ್ಕೆ ಹತ್ತಿದ್ದರು. ರಿಕ್ಷಾದ ಮೀಟರ್‌ನಲ್ಲಿ ೩೩ ರೂ. ಬಾಡಿಗೆ ತೋರಿಸುತ್ತಿದ್ದರೂ ಚಾಲಕ ೪೦ ರೂ. ಕೊಡುವಂತೆ ಒತ್ತಾಯಿಸಿದ್ದಲ್ಲದೇ ಪ್ರಯಾಣಿಕನಲ್ಲಿ ಅಸಭ್ಯವಾಗಿ ವರ್ತಿಸಿದ್ದನು. ಇದರಿಂದ ಕುಪಿತನಾದ ನಾಸಿರ್ ಮಂಗಳೂರು ಆರ್.ಟಿ.ಒಗೆ ದೂರು ನೀಡಿದ್ದರು. ಇದರಂತೆ ವಿಚಾರಣೆ ನಡೆಸಿದ ಆರ್.ಟಿ.ಒ ಅಧಿಕಾರಿಗಳು ಚಾಲಕನಿಗೆ ೫೦೦ ರೂ. ದಂಡ ವಿಧಿಸಿದೆಯೆಂದು ತಿಳಿದುಬಂದಿದೆ.

ಚತುರ್ವಳಿ ಹೆರಿಗೆ: ಒಂದು ಮಗು ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ತಿಂಗಳ ಹಿಂದೆ ಕಾಸರಗೋಡಿನ ಮಹಿಳೆಯೋರ್ವರು ಅಪರೂಪವೆನಿಸಿದ ನಾಲ್ಕು ಮಕ್ಕಳಿಗೆ ಏಕಕಾಲಕ್ಕೆ ಜನ್ಮ ನೀಡಿದ್ದು ಅವುಗಳ ಪೈಕಿ ಒಂದು ಮಗು ನಿನ್ನೆ ಬೆಳಗ್ಗೆ ಸಾವಿಗೀಡಾಗಿದೆ.
ಕಳೆದ ತಿಂಗಳು ೧೧ರಂದು ಮುಳ್ಳೇರಿಯಾ ನಾರಂಪಾಡಿ ನಿವಾಸಿ ಆಯಿಶಾ ತಾಹಿರಾ ಎಂಬವರು ಕಾಸರಗೋಡು ಆಸ್ಪತ್ರೆಯಲ್ಲಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ತಾಹಿರಾರಿಗೆ ಮದುವೆಯಾಗಿ ಹತ್ತು ವರ್ಷಗಳಾದ ಬಳಿಕ ಪ್ರಥಮ ಹೆರಿಗೆಯಾಗಿತ್ತು. ಇವುಗಳ ಪೈಕಿ ಎರಡು ಮಕ್ಕಳು ೫೮೦ಗ್ರಾಂ ಮತ್ತು ಇನ್ನಿಬ್ಬರು ಮಕ್ಕಳು ೯೦೦ಗ್ರಾಂ ಇದ್ದು ಎಲ್ಲಾ ಮಕ್ಕಳು ಬದುಕುವುದು ಅನುಮಾನವಾಗಿದ್ದ ಕಾರಣ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಸೇರಿಸಲಾಗಿತ್ತು. ನಿರಂತರ ಚಿಕಿತ್ಸೆಯ ಹೊರತಾಗಿಯೂ ನಿನ್ನೆ ಬೆಳಗ್ಗೆ ಒಂದು ಮಗು ಸಾವೀಗೀಡಾಗಿದೆ.
ವೈದ್ಯರು ಏನು ಹೇಳುತ್ತಾರೆ ?
ನಾಲ್ವರು ಮಕ್ಕಳನ್ನೂ ಹರಸಾಹಸಪಟ್ಟು ಬದುಕಿಸಲಾಗಿದೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸುವ ಉದ್ದೇಶದಿಂದ ನಿನ್ನೆ ಇಂಡಿಯಾನ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಟಿ ಕರೆಯಲಾಗಿತ್ತಾದರೂ ನಿನ್ನೆ ಬೆಳಗ್ಗೆಯೇ ಒಂದು ಮಗು ಸಾವೀಗೀಡಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಯೂಸುಫ್ ಕುಂಬ್ಳೆ, ವೈದ್ಯಕೀಯ ಶಾಸ್ತ್ರದ ಪ್ರಕಾರ ಚತುರ್ವಳಿ ಜನನವಾದರೆ ಮಕ್ಕಳ ತೂಕ ೧.೩೬೨ ಕೆ.ಜೆ. ಇರಬೇಕಿತ್ತು. ಆದರೆ ಅವಧಿಗೆ ಮುನ್ನವೇ ಹೆರಿಗೆಯಾಗಿರುವ ಕಾರಣ ಮಕ್ಕಳ ತೂಕವೂ ಅತ್ಯಂತ ಕಡಿಮೆಯಾಗಿದ್ದ ಕಾರಣ ಅವುಗಳನ್ನು ಬದುಕಿಸುವುದು ಕಷ್ಟವಾಗಿದ್ದು ಹೆತ್ತವರಿಗೂ ತಿಳಿಸಲಾಗಿತ್ತು.
ಆದರೂ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಮಕ್ಕಳನ್ನು ಇಡಲಾಗಿದ್ದು ಒಂದು ಮಗುವಿಗೆ ಇಬ್ಬರು ನುರಿತ ದಾದಿಯರನ್ನು ನೇಮಿಸಲಾಗಿತ್ತು. ಒಂದು ಮಗು ಅತ್ಯಂತ ಕ್ಷೀಣವಾಗಿದ್ದ ಕಾರಣ ನಿನ್ನೆ ಬೆಳಗ್ಗೆ ಸಾವಿಗೀಡಾಗಿದೆ. ಉಳಿದ ಮೂರು ಮಕ್ಕಳು ಆರೋಗ್ಯವಾಗಿದ್ದು ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಇನ್ನೂ ಎರಡು ತಿಂಗಳು ಬೇಕಾಗಿದೆ. ಚಿಕಿತ್ಸೆಯ ಬಿಲ್ ಈಗಾಗಲೇ ನಾಲ್ಕು ಲಕ್ಷ ಆಗಿದ್ದು ಒಂದು ಲಕ್ಷವನ್ನಷ್ಟೇ ಪಡೆಯಲಾಗಿದ್ದು ಮುಂದಿನ ಚಿಕಿತ್ಸೆಯಲ್ಲೂ ರಿಯಾಯಿತಿ ನೀಡಲಾಗುವುದು ಎಂದು ಚಿಕಿತ್ಸೆಯ ಬಗ್ಗೆ ಯೂಸುಫ್ ಕುಂಬ್ಳೆ ವಿವರಿಸಿದ್ದಾರೆ.

ಉಡುಪಿ: ಬೈಕ್ ಸವಾರರಿಗೆ ಟೆಂಪೋ ಚಾಲಕನಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಯಾವುದೇ ಸೂಚನೆ ನೀಡದೆ ಚಾಲಕ ತಾನು ಚಲಾಯಿ ಸುತ್ತಿದ್ದ ಟೆಂಪೋವನ್ನು ಒಮ್ಮೆಲೇ ರಸ್ತೆಯ ಬಲಭಾಗಕ್ಕೆ ತಿರುಗಿಸಿದ್ದರಿಂದ ಭಯಗೊಂಡ ಬೈಕ್ ಸವಾರರು ಟೆಂಪೋ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ಪ್ರತಿಯಾಗಿ, ಟೆಂಪೋ ಚಾಲಕ ಹಾಗೂ ಇತರ ನಾಲ್ಕು ಮಂದಿ ಅಪರಿಚಿತರು ಬೈಕ್ ಸವಾರನನ್ನು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಪ್ರಕರಣ ಸೋಮವಾರ ಸಂಜೆ ಆದಿ ಉಡುಪಿ ಆರ್‌ಟಿಒ ಕಚೇರಿ ಎದುರು ನಡೆದಿದೆ.
 ಮಲ್ಪೆ ಬಳಿಯ ಕೊಳ ನಿವಾಸಿ ವಿಶ್ವನಾಥ್ ಕಾಂಚನ್(೩೨) ಅವರು ತಮ್ಮ ಮಿತ್ರ ದಿವ್ಯರಾಜ್ ಎಂಬವರ ಜೊತೆಗೆ ತನ್ನ ಹೋಂಡಾ ಶೈನ್ ಬೈಕ್‌ನಲ್ಲಿ ಮಲ್ಪೆಯಿಂದ ಉಡುಪಿಗೆ ಸಂಚರಿಸುತ್ತಿದ್ದಾಗ, ಆರ್‌ಟಿಒ ಕಚೇರಿ ಎದುರು ಬದಿಯಿಂದ ಬರುತ್ತಿದ್ದ ಟೆಂಪೋವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಒಮ್ಮೆಲೆ ರಸ್ತೆಯ ಬಲಭಾಗಕ್ಕೆ ತಿರುಗಿಸಿದ ಎನ್ನಲಾಗಿದೆ.
ಇದರಿಂದಾಗಿ ಭಯಗೊಂಡ ವಿಶ್ವನಾಥ ಹಾಗೂ ದಿವ್ಯರಾಜ್ ಅವರು ಬೈಕ್ ನಿಲ್ಲಿಸಿ ಟೆಂಪೋ ಚಾಲಕನನ್ನು ಪ್ರಶ್ನಿಸಿದಾಗ ಹಲ್ಲೆ ನಡೆಸಿದರು ಎನ್ನಲಾಗಿದೆ.
 ಈ ಬಗ್ಗೆ ವಿಶ್ವನಾಥ್ ನೀಡಿದ ದೂರಿನ ಪ್ರಕಾರ ಟೆಂಪೋ ಚಾಲಕನ ವಿರುದ್ದ ಉಡುಪಿ ನಗರ ಠಾಣೆಯ ಪೊಲೀಸರು ಮೊಕದಮೆ ದಾಖಲಿಸಿಕೊಂಡಿದ್ದಾರೆ.

ಮಹಿಳೆಯರ ಜಗಳ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮನೆ ಮಾಲಿಕರು ಮತ್ತು ಬಾಡಿಗೆದಾರರ ಮಧ್ಯೆ ಹೊಡೆ ದಾಟ ಘಟನೆ ಚೊಕ್ಕಬೆಟ್ಟುವಿನಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಚೊಕ್ಕಬೆಟ್ಟು ನಿವಾಸಿ ನಝೀಮಾ ಮತ್ತಾಕೆಯ ಮನೆಯಲ್ಲಿ ಬಾಡಿಗೆಗೆ ಇರುವ ಫರ್ಜಾನ ಎಂಬವರೇ ಹೊಡೆದಾಡಿಕೊಂಡವರು. ನಝೀಮಾ ತನ್ನ ಮನೆಯ ಒಂದು ಭಾಗವನ್ನು ಫರ್ಜಾನ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ಕಳೆದ ಸೋಮವಾರ ಮನೆ ಮಾಲಕಿ ನಝೀಮಾ ಮತ್ತು ಆಕೆಯ ಪತಿ ಸಿದ್ದಿಕ್ ಪರಸ್ಪರ ಜಗಳವಾಡು ತ್ತಿದ್ದಾಗ ನಝೀಮಾ ತನಗೆ ಅವ್ಯಾಚ ಶಬ್ದಗಳಿಂದ ಬೈದು ಒಬ್ಬನನ್ನು ಇಟ್ಟು ಕೊಂಡಿರುವವಳು ಎಂದು ನಿಂದನೆ ಮಾಡಿದ್ದರು. ತಾನು ಈ ಬಗ್ಗೆ ನಝೀ ಮಾಳ ಬಳಿ ವಿಚಾರಿಸಿದಾಗ, ಆಕೆ ತನಗೆ ಚಪ್ಪಲಿಯನ್ನು ಎಸೆದು ಕೈಯಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಕಸಿದು ಕೊಂಡಿ ರುವುದಾಗಿ ಫರ್ಜಾನ ದೂರಿನಲ್ಲಿ ತಿಳಿಸಿದ್ದಾಳೆ. ಇದೇ ಪ್ರಕರಣಕ್ಕೆ ಸಂಬಂ ಧಿಸಿ ನಝೀಮಾ ಅವರು ಪ್ರತ್ಯೇಕ ದೂರನ್ನು ನೀಡಿದ್ದು, ನನ್ನ ಮನೆಯಲ್ಲಿ ಬಾಡಿಗೆಗೆ ಇರುವ ಫರ್ಜಾನ ಎಂಬಾಕೆ ತನಗೆ ಅವ್ಯಾಚ ಶಬ್ದಗಳಿಂದ ಬೈದಿರುವು ದಲ್ಲದೆ ಒಬ್ಬನನ್ನು ಇಟ್ಟುಕೊಂಡಿದ್ದಿ ಎಂದು ನಿಂದಿಸಿದ್ದಳು. ತಾನು ಇದನ್ನು ಪ್ರಶ್ನಿಸಿದ್ದಕ್ಕೆ ಚಪ್ಪಲಿಯಿಂದ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಂಡಿರುವುದಾಗಿ ದೂರಿದ್ದಾರೆ.

ಟಿಪ್ಪರ್ ಡಿಕ್ಕಿ : ಮಹಿಳೆ ಸಾವು

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಟಿಪ್ಪರ್ ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಿನ್ನೆ ಪಾಲಡ್ಕ ಸಮೀಪದ ಕೇಮಾರು ಎಂಬಲ್ಲಿ ಸಂಭವಿಸಿದೆ.ಗುಲಾಬಿ ಎಂಬವರು ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗು ತ್ತಿದ್ದ ಸಂದರ್ಭ ಅತಿವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪುತ್ರನಿಗೆ ವಿಷ ಉಣಿಸಿ ಕೊಲೆಯತ್ನ: ತಂದೆ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ತಂದೆಯೊಬ್ಬ ತನ್ನ ೧೩ರ ಹರೆಯದ ಪುತ್ರನಿಗೆ ವಿಷ ಉಣಿಸಿ ಕೊಲೆಗೆ ಯತ್ನಿಸಿದ ಘಟನೆ ಹೊಸದುರ್ಗ ಸಮೀಪದ ತೃಕರಿಪುರ ಎಂಬಲ್ಲಿ ನಡೆದಿದೆ. ಮೂಲತ: ತಮಿಳ್ನಾಡಿನ ಸೇಲಂ ನಿವಾಸಿ ತೃಕರಿಪುರ ಅಮಟ್ಟಿಲ್ ಬಾಡಿಗೆ ಕ್ವಾರ್ಟರ‍್ಸ್‌ನಲ್ಲಿ ವಾಸಿಸುತ್ತಿರುವ ವೇಲು(೪೮) ಎಂಬಾತ ಕೃತ್ಯವೆಸಗಿದ್ದು, ಚಂದೇರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುತ್ರ ಅರುಳ್‌ಕುಮಾರ್(೧೩)ನಿಗೆ ಚಹಾದಲ್ಲಿ ವಿಷ ಬೆರೆಸಿ ಆರೋಪಿ ಕುಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಅರುಳ್‌ನನ್ನು ಗಂಭೀರ ಸ್ಥಿತಿಯಲ್ಲಿ ಪೆರಿಯಾರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಳ್ ಕುಮಾರ್ ಮೀನು ಹಿಡಿದು ಮಾರಿ ಹಣ ಗಳಿಸುತ್ತಿದ್ದು, ಅದನ್ನು ತನಗೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಆರೋಪಿ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿವಶಕ್ತಿ ಹೆಜಮಾಡಿ ತಂಡಕ್ಕೆ ರಿಲಯನ್ಸ್-೨೦೧೨ ಟ್ರೋಫಿ

Posted by JAYAKIRANA Kirana on | 0 comments | Leave a comment...

ಮುಲ್ಕಿ: ರಿಲಯನ್ಸ್ ಕ್ರಿಕೆಟರ‍್ಸ್ ಬೊಳ್ಳೂರು ಹಾಗೂ ರಿಲಯನ್ಸ್ ಅಸೋಸಿ ಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ ೧೩ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಶಿವಶಕ್ತಿ ಹೆಜಮಾಡಿ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ. ದ್ವಿತೀಯ ಸ್ಥಾನಕ್ಕೆ ವಿಷ್ಣುಮೂರ್ತಿ ಕರ್ನರೆ ತೃಪ್ತಿಪಟ್ಟುಕೊಂಡಿತು.
ಅತ್ಯಂತ ರೋಚಕತೆಯಿಂದ ಸಾಗಿದ ಫೈನಲ್‌ನಲ್ಲಿ ಶಿವಶಕ್ತಿ ಹೆಜಮಾಡಿ ತಂಡ ರಿಲಾಯನ್ಸ್ ಟ್ರೋಫಿ-೨೦೧೨ ಹಾಗೂ ನಗದನ್ನು ಪಡೆದುಕೊಂಡರೆ ವಿಷ್ಣುಮೂರ್ತಿ ತಂಡ ಕೂಡ ಟ್ರೋಫಿ ಹಾಗೂ ನಗದು ಪಡೆಯಿತು. ಬಹುಮಾನ ವಿತರಣೆಯನ್ನು ಹಳೆಯಂಗಡಿ ಗ್ರಾ.ಪಂ. ಸದಸ್ಯರುಗಳಾದ ಎಚ್. ವಸಂತ್ ಬೆರ್ನಾಡ್, ಎಂ.ಟಿ. ಖಾದರ್, ಖಾಸಿಂ ಸಾಹೇಬ್, ಅಬ್ದುಲ್ ಹಮೀದ್ ಸಾಗ್ ನೆರವೇರಿಸಿದರು. ಈ ವೇಳೆ ರಿಲಯನ್ಸ್ ಅಸೋಸಿ ಯೇಶನ್ ಬೊಳ್ಳೂರು ಇದರ ಮಾಜಿ ಅಧ್ಯಕ್ಷ ಸಲೀಂ ಇಂದಿರಾ ನಗರ ಹಾಗೂ ರಿಲಯನ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಅಕ್ಬರ್ ಅಲಿ ಉಪಸ್ಥಿತರಿದ್ದರು. ಕೂಟದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷ ಶ್ರೀಯಾದವ್ ದೇವಾಡಿಗ ಹಾಗೂ ಟಿಂಬರ್ ಲ್ಯಾಂಡ್ ಮಂಗಳೂರು ಇದರ ನಝೀರ್ ಕಲ್ಲಾಪು ನೆರವೇರಿಸಿದರು. ಸುಮಾರು ೫೨ ತಂಡಗಳು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ಎಂಎಸ್‌ಇಝಡ್ ವಿರುದ್ಧ ಕೊಪ್ಪಳ ನಿವಾಸಿಗಳ ಪ್ರತಿಭಟನೆ: ಅಧಿಕಾರಿಗಳ ಭೇಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಎಸ್‌ಇಝಡ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೂಳೂರು ಸಮೀಪದ ಮೆಲು ಕೊಪ್ಪಳ ನಿವಾಸಿಗಳಿಗೆ ಎಂಎಸ್‌ಇಝಡ್ ಅಧಿ ಕಾರಿಗಳು ಶರಣಾಗಿದ್ದಾರೆ.
ಇನ್ನು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿ ಗಳು ಭರವೆ ನೀಡಿರುವುದಾಗಿ ಎಸ್‌ಡಿ ಪಿಐ ಸಂಘಟನೆ ವಕ್ತಾರರು ತಿಳಿಸಿದ್ದಾರೆ.
ರಸ್ತೆ ನಿರ್ಮಾಣದ ನೆಪದಲ್ಲಿ ಎಂಎಸ್‌ಇಝಡ್ ಮಣ್ಣು ಹಾಕುತ್ತಿರುವ ಕಾರಣ ನೆರೆ ಭೀತಿಯನ್ನು ಎದುರಿಸುವ ಅನಿವಾರ್ಯತೆಗೆ ಒಳಗಾಗಿರುವ ಮೆಲು ಕೊಪ್ಪಳ ನಿವಾಸಿಗಳು ಪ್ರತಿಭಟನೆಗೆ ನಡೆಸಿದ್ದರು, ಸುಸಜ್ಜಿತವಾದ ರಸ್ತೆ ಸಂಪರ್ಕ ಇದ್ದರೂ ಮತ್ತೊಂದು ರಸ್ತೆ ಯನ್ನು ನಿರ್ಮಿಸಲು ಮುಂದಾಗಿರುವ ಎಂಎಸ್ ಇಝಡ್ ರಸ್ತೆ ಅಗಲಿಕರಣ ಕ್ಕಾಗಿ ಮಣ್ಣು ಹಾಕುವ ಕೆಲಸವನ್ನು ಮಾಡುತ್ತಿದೆ. ಇದರಿಂದಾಗಿ ತೋಟಕ್ಕೆ ನೀರು ನುಗ್ಗು ವ ಪರಿಸ್ಥಿತಿ ನಿರ್ಮಾಣವಾಗಿದ್ದು ಮಳೆ ಗಾಲದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ಕೊಪ್ಪಳ ನಿವಾಸಿ ಗಳು ಅಧಿಕಾರಿಗಳ ಬಳಿ ತಿಳಿಸಿದ್ದಾರೆ. ಎಂಎಸ್‌ಝಡ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್.ಟಿ ಕರ್ಕೇರಾ ಇವರು ಪ್ರತಿಭಟನಾ ನಿರತ ಗ್ರಾಮಸ್ಥರ ಜೊತೆ ಸುದೀರ್ಘ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಮಲಗಿದ್ದಲ್ಲೇ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹಾಲಪ್ಪ ಮೃತರು. ಇವರು ಭಿಕ್ಷಾಟನೆ ಮಾಡಿಕೊಂಡಿದ್ದರು. ವಿಪರೀತ ಕುಡಿತದ ಚಟದಿಂದ ಸಾವು ಸಂಭವಿಸಿರಬೇಕೆನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುರಸಭಾ ಸಾಮಾನ್ಯ ಸಭೆಗೆ ಪತ್ರಕರ್ತರಿಗೆ ಆಹ್ವಾನವಿಲ್ಲ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಮಾರ್ಚ್ ೩೧ರಂದು ನಡೆಯಬೇ ಕಾಗಿದ್ದ ಪುರಸಭೆಯ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆಂಬ ಕುಂಟು ನೆಪವೊಡ್ಡಿ ಮುಂದೂಡಿರುವ ಕ್ರಮದ ಬಗ್ಗೆ ಜಿಲ್ಲಾಡಳಿತದಿಂದ ತರಾಟೆಗೊಳಗಾದ ಹಿನ್ನೆಲೆಯಲ್ಲಿ ನಿನ್ನೆ ಪ್ರವಾಸಿ ಬಂಗಲೆಯಲ್ಲಿ ಹಠಾತ್ ಆಗಿ ಸಾಮಾನ್ಯಸಭೆ ನಡೆಯಿತು. ಇದರಲ್ಲಿ ಪಾಲ್ಗೊಳಲು ಪತ್ರಕರ್ತರಿಗೆ ಆಹ್ವಾನವಿರಲ್ಲಿಲ್ಲ!
 ಪುರಸಭೆ ಅಧ್ಯಕ್ಷೆ ಪ್ರತಿಮಾಮೋಹನ್ ರಾಣೆ ಅವರು ತನ್ನ ದ್ವಿಚಕ್ರವಾಹನದಲ್ಲಿ ಕುಕ್ಕುಂದೂರು ದೇವಳಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತವೊಂದರಲ್ಲಿ ಮಾರ್ಚ್ ೩೦ರಂದು ಗಾಯ ಗೊಂಡು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಅದೇ ದಿನ ಸಂಜೆ ಬಿಡುಗಡೆಗೊಂಡಿದರು. ಹೀಗಿ ದ್ದರೂ ಘಟನೆಯ ಬಗ್ಗೆ ಪೊಲೀಸರಿಗೆ ಇದುವರೆಗೆ ದೂರು ನೀಡಿರಲಿಲ್ಲ. ಇದನ್ನೇ ಮುಂದಿಟ್ಟು ಮರುದಿನ ನಡೆಯಬೇಕಾಗಿದ್ದ ಸಾಮಾನ್ಯ ಸಭೆಯನ್ನು ರದ್ದು ಪಡಿಸಲಾಗಿತ್ತು. ಈ ಬಗ್ಗೆ ಜಯಕಿರಣ ಪತ್ರಿಕೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು. ಅಧ್ಯಕ್ಷರ ಅನುಪಸ್ಥಿತಿಯಲ್ಲಿದ್ದಾಗ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಬಹು ದೆಂಬುವುದು ನಿಯಾಮಾವಳಿಯಲ್ಲಿ ತಿಳಿಸಲಾಗಿದೆ. ಇದನ್ನು ಪುರಸಭಾ ಆಡಳಿತ ವರ್ಗ ಮರೆಮಾಡಿ ರುವುದು ಯಾಕೆಂದು ಪ್ರಶ್ನಿಸಿದ ಪತ್ರಿಕೆಯು ಬಸ್ ನಿಲ್ದಾಣ ವಿವಾದ, ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಸಚಿತ್ರ ವರದಿಯನ್ನು ಪ್ರಕಟಿಸಿದೆ. ಜಿಲ್ಲಾಡಳಿತದಿಂದ ತರಾಟೆಗೆ ಬಂದ ನಂತರ ತೀವ್ರಮುಖಭಂಗಕ್ಕೊಳಗಾದ ಪುರಸಭಾ ಆಡಳಿತ ವರ್ಗವು ಮುಂದೂಡಿದ ಸಾಮಾನ್ಯ ಸಭೆಯನ್ನು ನಿನ್ನೆ ಪ್ರವಾಸಿ ಬಂಗಲೆಯಲ್ಲಿ ನಡೆಸಿದೆ. ಆಹ್ವಾನವಿಲ ದಿದ್ದರೂ ತ್ರಿವಿಕ್ರಮರಂತೆ ಬೆನ್ನುಬಿಡದ ಕೆಲ ಪತ್ರಕರ್ತರು ಸಾಮಾನ್ಯ ಸಭೆಯ ಕಲಾಪವನ್ನು ವರದಿ ತಯಾರಿಸಲು ಸಭಾಂಗಣದಲ್ಲಿ ಪಾಲ್ಗೊಂಡರು. ಈ ವಿಚಾರ ತಿಳಿದ ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾವ್ ಅವರು ಸಭೆಯ ಗಮನಕ್ಕೆ ತಂದು ಮಾಧ್ಯಮ ಮಿತ್ರರನ್ನು ಸಾಮಾನ್ಯ ಸಭೆಯಿಂದ ದೂರವಿಡಲು ಕಾರಣವೇನೆಂದು ಪ್ರಶ್ನಿಸಿದರು. ಇದಕ್ಕೆ ಆಡಳಿತ ಪಕ್ಷದ ಹಿರಿಯ ಸದಸ್ಯ, ಪುರಸಭಾ ಮಾಜಿ ಅಧ್ಯಕ್ಷ ಎನ್. ಆರ್ ಸುಭೀತ್ ಕುಮಾರ್ ಅವರು ಧ್ವನಿಗೂಡಿಸಿದರು. ಇಷ್ಟೆಲ್ಲಾ ಘಟ ನಾವಳಿಗಳು ನಡೆದರೂ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಆಡಳಿತ ಪಕ್ಷ ಸದಸ್ಯ ಮಹಮ್ಮದ್ ಶರೀಫ್ ಅವರು ಮೌನಕ್ಕೆ ಶರಣಾಗಿ ರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಸ್ತೃತ ಬಸ್ ನಿಲ್ದಾಣಕ್ಕೆ ಮೊದಲಿನಂತೆ ಬಸ್ ಗಳು ಬಂದು ನಂತರ ಬಂಡೀಮಠ ಬಸ್ ನಿಲ್ದಾಣದ ಮೂಲಕ ಹಾದೂ ಹೋಗಬೇಕು. ಕುಡಿಯುವ ನೀರಿನ ತಾತ್ವಾರ ನೀಗಿಸಲು ಟ್ಯಾಂಕರ್ ಮೂಲಕ ವ್ಯವಸ್ಥೆ ಕಲ್ಪ್ಪಿಸುವುದು ಪ್ರಮುಖ ಚರ್ಚಾ ವಿಷಯ ವಾಯಿತು. ನಾಲ್ಕು ದಿನಗಳ ತಡವಾಗಿ ವರ್ಷಾವಧಿ ಬಜೆಟ್ ಮಂಡಿಸಲಾಯಿತು. ಮಾಜಿ ಸಚಿವ ವಿ.ಎಸ್ ಆಚಾರ‍್ಯ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಸಭೆ, ನೂತನ ಸಂಸದರಾಗಿ ಆಯ್ಕೆಗೊಂಡ ಜಯಪ್ರಕಾಶ್ ಹೆಗ್ಡೆ ಅವರಿಗೆ ಅಭಿನಂದನೆ ಸಲ್ಲಿಸಿದೆ.

ವಿದ್ಯಾರ್ಥಿ ಕಾಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಾಸ್ಟೆಲ್‌ನಲ್ಲಿದ್ದ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಯೊಬ್ಬ ಕಾಣೆಯಾದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರ್ವ ಮಾರಿಗುಡಿ ಬಳಿಯಲ್ಲಿ ಇರುವ ಎಕ್ಸ್‌ಪರ್ಟ್ ಬಾಯ್ಸ್ ಹಾಸ್ಟೇಲ್‌ನಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಗದಗ ಸ್ಟೇಷನ್ ರಸ್ತೆ ನಿವಾಸಿ ಪ್ರದೀಪ್ ಜಯಶಂಕರ್ ಓರಾ ಎಂಬ ವರ ಪುತ್ರ ಬಾವಿಕ್ ಪಿ. ಓರಾ (೧೯) ಕಾಣೆಯಾದ ವಿದ್ಯಾರ್ಥಿ.
ಬಾವಿಕ್ ಮಾ.೨೮ ರಂದು ಸಿಟಿಗೆ ಹೋಗುತ್ತೇನೆ ಎಂದು ಹಾಸ್ಟೇಲ್‌ನಿಂದ ಹೊರಟವನು ಹಿಂದಿರುಗಿರಲಿಲ್ಲ.

ಪ್ರೇಮ ಪ್ರಕರಣ: ಯುವ ಸಮುದಾಯಕ್ಕೆ ದ.ಸಂ.ಸಮಿತಿ ಜಾಗೃತಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಕೊಲ ಗ್ರಾಮದ ಒಳ ಕಡಮ ಎಂಬಲ್ಲಿ ಕೊಲೆಯಾದ ಪುಷ್ಪ ಲತಾ ಅವರ ಕೊಲೆ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಹಚ್ಚುವ ಮೂಲಕ ಪೊಲೀಸರು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಪುನರಾ ವರ್ತನೆಯಾಗದಂತೆ ಜಿಲ್ಲೆಯ ಯುವಕ-ಯುವತಿಯರಿಗೆ ಮತ್ತು ಪೋಷಕರಿಗೆ ದಲಿತ ಸಂಘಟನಾ ಸಮಿತಿ ಭೀಮವಾದದ ವತಿಯಿಂದ ಜಾಗೃತಿ ಮೂಡಿಸಲಾಗುವುದು ಎಂದು ಕೇಶವ ಪಿ. ತಿಳಿಸಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪುಷ್ಪಲತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ಕೈ ಗೊಳ್ಳುವಲ್ಲಿ ಸ್ವಲ್ಪ ತಡವಾಗಿದೆ. ಆದರೂ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಇತ್ತೀಚೆಗೆ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ದುರ್ಬಳಕೆ ಮಾಡು ವುದು, ಅತ್ಯಾಚಾರ ನಡೆಸುವುದು ಮತ್ತು ಕೊಲೆ ಮಾಡು ವುದು ಸಾಮಾನ್ಯವಾಗಿದೆ. ಈ ಬಗ್ಗೆ ಯುವಕ-ಯುವತಿಯರಿಗೆ ಮತ್ತು ಪೋಷಕರಿಗೆ ಕರಪತ್ರ ಹಂಚುವ ಮೂಲಕ ಹಾಗೂ ಇನ್ನಿತರ ಕಾರ್ಯ ಕ್ರಮಗಳ ಮೂಲಕ ಸಂಘ ಟನೆಯ ವತಿಯಿಂದ ಜಾಗೃತಿ ಮೂಡಿಸ ಲಾಗುವುದು ಎಂದರು. ಸುದ್ದಿಗೋಷ್ಟಿ ಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದೇವಪ್ಪ ಬಿ, ಎಡಮಂಗಲ ಗ್ರಾ. ಪಂ. ಸದಸ್ಯ ಕಮ ಲಾಕ್ಷ, ನರಿಮೊಗರು ಗ್ರಾ. ಪಂ. ಸದಸ್ಯ ದೇವಪ್ಪ ಪಜಿರೋಡಿ, ದ.ಸಂ.ಸ ಗ್ರಾಮ ಸಂಚಾಲಕ ಬಾಲಪ್ಪ ಪಿ, ಪುಷ್ಪಾವತಿ ಅವರ ತಂದೆ ಸಂಕು ಉಪಸ್ಥಿತರಿದ್ದರು.

ಮರಾಠಿಗರದು ಸಮುದ್ರದಲ್ಲೂ ಗಡಿ ತಂಟೆ ಕನ್ನಡಿಗ ಮೀನುಗಾರರ ಜೀವನ ದುಸ್ತರ

Posted by JAYAKIRANA Kirana on | 0 comments | Leave a comment...

ಮಂಗಳೂರು:ಮರಾಠಿಗರ ಗಡಿ ತಂಟೆ ಸಮುದ್ರಕ್ಕೂ ವಿಸ್ತರಿಸಿದೆ. ಈ ತಂಟೆಗೆ ಅಲ್ಲಿಯ ಸರಕಾರವೇ ಬೆಂಬಲಿಸುತ್ತಿದೆ ಎಂಬುದು ವಿಷಾಧದ ಸಂಗತಿಯೇ ಆದರೂ ಅದಕ್ಕಿಂತ ಬೇಸರದ ಸಂಗತಿ ಎಂದರೆ ಕನ್ನಡಿಗ ಜನಪ್ರತಿನಿಧಿಗಳು ನಮ್ಮ ಮೀನುಗಾರರ ಸಂಕಷ್ಟಕ್ಕೆ ಕಿವಿಗೊಡದೆ ಇರುವುದು.
ಕನ್ನಡಿಗ ಮೀನುಗಾರರಿಗೆ ಸಮುದ್ರ ಮಧ್ಯದಲ್ಲಿ ಸಂಕಷ್ಟಕ್ಕೀಡು ಮಾಡುವುದು ಕಳೆದ ಮೂರು ನಾಲ್ಕು ವರ್ಷಗ ಳಿಂದಲೇ ನಡೆಯುತ್ತಿರುವ ಪ್ರಕ್ರಿಯೆ. ಕರ್ನಾಟಕದಿಂದ ಬಂದ ಬೋಟ್‌ಗಳನ್ನು ವಶಕ್ಕೆ ತೆಗೆದು ಕೊಂಡು ಗೂಂಡಾಗಿರಿ ಮಾಡುತ್ತಿದ್ದವರು ಈಗ ಬೋಟ್‌ಗಳನ್ನು ಸಮುದ್ರದಲ್ಲಿಯೇ ಕಟ್ಟಿ ಹಾಕಲು ಮುಂದಾಗಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸರಕಾರವೇ ಕುಮ್ಮಕ್ಕು ನೀಡುತ್ತಿರುವ ವಿಷಯ ಕೂಡ ಬೆಳಕಿಗೆ ಬಂದಿದೆ.
ಮಂಗಳೂರು, ಮಲ್ಪೆ, ಗಂಗೊಳ್ಳಿ ಸೇರಿದಂತೆ ರಾಜ್ಯದ ಹಲವು ಮೀನು ಗಾರಿಕೆ ಪ್ರದೇಶಗಳ ಬೋಟ್‌ಗಳು ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತ ಮಹಾರಾಷ್ಟ್ರದ ರತ್ನಗಿರಿಯವರೆಗೂ ತಲಪುತ್ತವೆ. ಕರ್ನಾಟಕ ತೀರ ಪ್ರದೇಶ ದಲ್ಲಿ ಮೀನುಗಳ ಅಲಭ್ಯವಾದಾಗ ಆಳ ಸಮುದ್ರ ಬೋಟ್‌ಗಳು ೩೦ನಾಟಿಕಲ್ ಮೈಲ್‌ವರೆಗೂ ಸಮುದ್ರದಲ್ಲಿ ಸಾಗುತ್ತವೆ. ಹೀಗೆ ಹೋಗುವ ಬೋಟ್‌ಗಳು ಮಹಾರಾಷ್ಟ್ರದ ಗಡಿ ತಲುಪಿದಾಗ ಅಲ್ಲಿಯ ಮೀನುಗಾರರು ಖ್ಯಾತೆ ತೆಗದು ಬೋಟ್‌ಗಳನ್ನು ಹಿಡಿದಿಡುವುದು, ಮೀನುಗಾರರ ಮೇಲೆ ಹಲ್ಲೆ ನಡೆಸು ವುದು, ಮೀನು ದೋಚುವುದು, ಬೋಟ್‌ನ ಬಿಡಿಭಾಗಗಳನ್ನು ಕಳಚು ವುದು ಸೇರಿದಂತೆ ನಾನಾ ರೀತಿಯ ತೊಂದರೆಗಳನ್ನು ಕೊಡುತ್ತಾರೆ. ಇದು ಕಳೆದ ಮೂರು ವರ್ಷಗಳಿಂದ ನಡೆಯುತ್ತಲೇ ಇದೆ. ರತ್ನಾಗಿರಿಯಲ್ಲಿ ತೊಂದರೆಗೆ ಒಳಗಾದ ಇಪ್ಪತೈದಕ್ಕೂ ಹೆಚ್ಚು ಬೋಟ್‌ಗಳು ಮಹಾರಾಷ್ಟ್ರದ ಸುಪರ್ಧಿಯಲ್ಲಿವೆ.
ಇತ್ತೀಚೆಗೆ ಕರ್ನಾಟಕದ ಮೀನು ಗಾರರ ಮೇಲೆ ನಡೆದ ಹಲ್ಲೆ ವಿರೋಧಿಸಿ ಮಲ್ಪೆಯಲ್ಲಿ ನಿಂರತರ ನಾಲ್ಕು ದಿನಗಳ ಪ್ರತಿಭಟನೆಯನ್ನು ಇಲ್ಲಿಯ ಮೀನುಗಾರರು ನಡೆಸಿದ್ದರು. ಪ್ರತಿಭಟನೆ ನಿಲ್ಲಿಸುವಂತೆ ಮನ ಒಲಿಸಲು ಬಂದಿದ್ದ ಅಧಿಕಾರಿಗಳು ಮಹಾರಾಷ್ಟ್ರ ಸರಕಾರ ದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದರಾದರೂ ಈ ಪ್ರಕ್ರಿಯೆ ಅಲ್ಲಿಗೆ ನಿಂತು ಹೋಗಿದೆ. ಅಲ್ಲಿಯ ಸರಕಾರ ಕರ್ನಾಟಕದ ಬೋಟ್‌ಗಳನ್ನು ವಶಕ್ಕೆ ಪಡೆಯುವ ಕಾನೂನು ರಚನೆಗೂ ಮುಂದಾಗಿದೆ. ಸಮುದ್ರದಲ್ಲಿ ಗಡಿತಂಟೆ ನಡೆಸುವುದು ಭವಿಷ್ಯದಲ್ಲಿ ಇನ್ನಷ್ಟು ಸಂಘರ್ಷಕ್ಕೆ ಹಾದಿ ಮಾಡಿಕೊಡಬಹುದು.
ತೀರದಿಂದ ೧೨ನಾಟಿಕಲ್ ಮೈಲಿ ಮಾತ್ರ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಅದರ ಬಳಿಕದ್ದು ರಾಷ್ಟ್ರೀಯ ವ್ಯಾಪ್ತಿಗೆ ಬರುತ್ತದೆ. ಆಳ ಸಮುದ್ರಗಾರಿಕೆ ೧೨ನಾಟಿಕಲ್ ಮೈಲಿ ದೂರದ ಬಳಿಕವೇ ನಡೆಯುತ್ತದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳು ವಿನಃಕಾರಣ ನಮ್ಮ ಮೀನುಗಾರರಿಗೆ ಕಿರುಕುಳ ಕೊಡುತ್ತಿ ದ್ದಾರೆ. ಈ ವಿಷಯ ನಮ್ಮ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ ಅವರ‍್ಯಾರು ನಮ್ಮ ಮೀನು ಗಾರರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ.

ಕರ್ತವ್ಯಲೋಪ: ಮೂವರು ಶಿಕ್ಷಕರ ಅಮಾನತು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ತವ್ಯಲೋಪ ಆರೋಪದಲ್ಲಿ ಜಿಲ್ಲೆಯ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರು ಆದೇಶ ಹೊರಿಡಿಸಿದ್ದಾರೆ.
ಸಜಂಕಾಡಿಯ ಮುಖ್ಯ ಶಿಕ್ಷಕ ಶಾಂತಪ್ಪ ವಾಗ್ಮೋರೆ, ತಿಮ್ಮಣ್ಣಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ ಹಾಗೂ ಉಂಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಿರಿಯ ದೇವಾಡಿಗ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿದೆ.

ಸುಳ್ಯ: ಲಾರಿಯಡಿಗೆ ಬಿದ್ದು ಕಾರ್ಮಿಕ ಗಂಭೀರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುಳ್ಯ ಸಮೀಪದ ತೊಡಿಕ್ಕಾನ-ಅಡ್ಯಡ್ಕ ಎಂಬಲ್ಲಿ ರಬ್ಬರ್ ಮರಗಳನ್ನು ಕಡಿಯಲು ಬಂದ ಕಾರ್ಮಿಕ ಲಾರಿಯಡಿಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದೆ. ಕೇರಳ ಕಣ್ಣೂರಿನ ಅಲೆಕ್ಸ್ ಗಾಯಾಳು. ಲಾರಿಗೆ ಮರ ಲೋಡ್ ಮಾಡಿ ಲಾರಿಯಡಿಯಲ್ಲಿ ಮಲಗಿದ್ದ ವೇಳೆ ಚಾಲಕ ಲಾರಿ ಚಲಾಯಿಸಿದ್ದೇ ಘಟನೆಗೆ ಕಾರಣವೆನ್ನಲಾಗಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ಸಿಗೆ ಕಲ್ಲೆಸೆತ: ಚಾಲಕ ಸಹಿತ ಮೂವರು ಜಖಂ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಸಂಚರಿಸುತ್ತಿದ್ದ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದ ಫಲವಾಗಿ ಬಸ್ ಚಾಲಕ ಸಹಿತ ಮೂವರು ಗಂಭೀರ ಜಖಂಗೊಂಡಿದ್ದಾರೆ.
 ನಿನ್ನೆ ರಾತ್ರಿ ೯ ಗಂಟೆ ವೇಳೆಗೆ ಮಂಜೇಶ್ವರದ ಕುಂಜತ್ತೂರು ಚೆಕ್‌ಪೋಸ್ಟ್ ಬಳಿಯಲ್ಲಿ ಕೃತ್ಯ ನಡೆದಿದೆ. ಕಾಸರಗೋಡಿ ನಿಂದ ಮಂಗಳೂರಿಗೆ ತೆರಳುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಲ್ಲೆಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಮುಂಭಾಗದಲ್ಲಿದ್ದ ಉಪ್ಪಳ ಬಳಿಯ ನಿವಾಸಿ ಮುಸ್ತಾಫ ಸಹಿತ ಇಬ್ಬರು ಪ್ರಯಾಣಿಕರು ಹಾಗೂ ಬಸ್ ಚಾಲಕ ಜಖಂಗೊಂಡಿದ್ದಾರೆ. ಮಂಜೇಶ್ವರ ಪೊಲೀ ಸರು ಕೇಸು ದಾಖಲಿಸಿದ್ದಾರೆ.

ಟೆಂಪೋ ಚಾಲಕನಿಗೆ ಯುವಕರಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಉಡುಪಿ: ಮಲ್ಪೆ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಆದಿ ಉಡುಪಿಯಲ್ಲಿ ತನ್ನನ್ನು
ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಕೊಡವೂರು ನಿವಾಸಿ ಟೆಂಪೋ ಚಾಲಕ ಪ್ರಭಾಕರ್ ಎಂಬವರು ದೂರಿದ್ದಾರೆ. ಈ ಬಗ್ಗೆ ಕೊಳ ನಿವಾಸಿಗಳಾದ ವಿಶ್ವನಾಥ್ ಕಾಂಚನ್ ಹಾಗೂ ದಿವ್ಯರಾಜ್
ಎಂಬವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಯಡ್ಡಿ ಬೆಂಬಲಿಗ ಅಧಿಕಾರಿಗಳ ಎತ್ತಂಗಡಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಳಿತದ ಅವಧಿಯಲ್ಲಿ ನೇಮಕಗೊಂಡಿದ್ದ ತಮ್ಮ ಕಾರ್ಯಾಲಯದ ಪ್ರಮುಖರು ಮತ್ತು ಅಧಿಕಾರಿಗಳನ್ನು ಹೊರ ಹಾಕಲು ಮುಖ್ಯಮಂತ್ರಿ ಸದಾನಂದಗೌಡ ಚಾಲನೆ ನೀಡಿದ್ದಾರೆ. ವರಿಷ್ಠರ ಸಂದೇಶದಂತೆ ಆಡಳಿತವನ್ನು ಚುರುಕುಗೊಳಿಸಲು ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಆಡಳಿತದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಕಾರ್ಯಾಲಯದಲ್ಲೇ ಇದ್ದು, ಯಡಿಯೂರಪ್ಪರ ಸೇವೆ ಮಾಡುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರಗಿಡಲಾಗುತ್ತಿದೆ. ಈಗಾಗಲೇ ಐವರು ಐಪಿಎಸ್ ಅಧಿಕಾರಿಗಳನ್ನು ತಮ್ಮ ಸಚಿವಾಲಯದಿಂದ ಹೊರ ಹಾಕಿದ ಮುಖ್ಯಮಂತ್ರಿ ಯವರು ರಾಜಕೀಯ ಕಾರ್ಯದರ್ಶಿಯಾಗಿದ್ದ ಪುಟ್ಟ ಸ್ವಾಮಿಯವರನ್ನು ಕೂಡಾ ವಜಾಗೊಳಿಸಿದ್ದಾರೆ. ಇದಾದ ನಂತರ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರದ್ದು ಮಾಡಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಇದೇ ರೀತಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಹುದ್ದೆಗಳನ್ನು ರದ್ದು ಮಾಡಲಿದ್ದಾರೆ.
ಜತೆಗೆ ಸಚಿವಾಲಯದ ಕಾರ್ಯದರ್ಶಿಗಳನ್ನು ಭಾರೀ ಪ್ರಮಾಣದಲ್ಲಿ ಬದಲಾವಣೆ ಮಾಡಲು ಪಟ್ಟಿ ಸಿದ್ಧಪಡಿಸಿದ್ದಾರೆ. ಜತೆಗೆ ಜಿಲ್ಲಾಡಳಿತದಲ್ಲೂ ಬದಲಾವಣೆ ಆಗಲಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾವಣೆ ಮಾಡಿ ಹೊಸಬರ ನೇಮಕ ಮಾಡಲಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಕಾಲದಲ್ಲಿ ನೇಮಕಗೊಂಡಿದ್ದ ಅಧಿಕಾರಿಗಳು ಮತ್ತು ಅಧಿಕಾರರೇತರರನ್ನು ಏಳು ತಿಂಗಳ ಆಡಳಿತಾವಧಿಯ ನಂತರ ಸದಾನಂದಗೌಡರು ಬದಲಾವಣೆಯ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅದರಲ್ಲೂ ಪುಟ್ಟಸ್ವಾಮಿ ಮತ್ತು ಜಗದೀಶ್ ಅವರನ್ನು ಹೊರಹಾಕಿರುವುದು ಗೌಡರು ಯಡಿಯೂರಪ್ಪರ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ.
ವರಿಷ್ಠರ ಸಲಹೆ ಮತ್ತು ಸೂಚನೆಯೇ ಇದಕ್ಕೆ ಕಾರಣ ಎನ್ನುವುದಲ್ಲದೇ ಯಡಿಯೂರಪ್ಪರವರಿಗೆ ಮುಂದೆ ಅಧಿಕಾರ ಸಾಧ್ಯವೇ ಇಲ್ಲ ಎಂಬುದು ಈ ಬದಲಾವಣೆಯಿಂದ ಸ್ಪಷ್ಟಗೊಂಡಿದೆ. ಅವರಿಗೆ ಏನಿದ್ದರೂ ಪಕ್ಷದಲ್ಲಿ ಅಧಿಕಾರವೇ ಹೊರತು ಸರಕಾರಿ ಮಟ್ಟದಲ್ಲಿ ಇಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ಕೆಲಸಕ್ಕೆ ತೆರಳಿದ್ದ ಯುವಕ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿಯ ಮಾಡೂರು ಎಂಬಲ್ಲಿ ಯುವಕನೋರ್ವ ನಾಪತ್ತೆಯಾಗಿದ್ದಾನೆ.
ಮಾಡೂರು ನಿವಾಸಿ ಮಹಮ್ಮದ್ ಹುಸೇನ್(೨೫)ಎಂಬಾತ ಮಾ.೩೧ರಂದು ಮನೆಯಿಂದ ಮಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದು, ಮತ್ತೆ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವಾದ ಕಾರು ಪತ್ತೆ : ವಾರದ ಹಿಂದೆ ಪುತ್ತೂರಿನ ವೆಂಕಟರಮಣ ದೇವಳದ ಬಳಿಯಿಂದ ಕಳವಾಗಿದ್ದ ಒಮ್ನಿ ಕಾರು ಪತ್ತೆಯಾಗಿದೆ.
ಶಿವಶಂಕರ್ ಎಂಬವರು ಕಾರನ್ನು ಪಾರ್ಕ್ ಮಾಡಿ ಹೋಗಿದ್ದು, ಹಿಂತಿರುಗಿ ಬರುವಾಗ ಕಳವಾಗಿತ್ತು. ಪೊಲೀಸರಿಗೆ ದೂರು ನೀಡಿದ್ದು. ತನಿಖೆ ನಡೆಯುತ್ತಿರುವಂತೆಯೇ ಕಾರು ಬಸ್ ನಿಲ್ದಾಣ ಬಳಿಯ ಅರಣ್ಯ ಇಲಾಖೆ ಕಚೇರಿ ಬಳಿ ಅನಾಥವಾಗಿ ಕಂಡುಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಸ್ ನಿರ್ವಾಹಕರ ಜಗಳ : ನಗರದ ಕಾವೂರು ಕಟ್ಟೆಯಲ್ಲಿ ಭಾನುವಾರ ಎರಡು ಬಸ್ ನಿರ್ವಾಹಕರ ಮಧ್ಯೆ ಜಗಳ ನಡೆದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ವೀಸ್ ಬಸ್ಸಿನ ನಿರ್ವಾಹಕ ಸುರೇಶ್ ಪೂಜಾರಿ ಮೇಲೆ ಸಿಟಿ ಬಸ್‌ನ ನಿರ್ವಾಹಕ ಕೃಷ್ಣ ಹಲ್ಲೆ ನಡೆಸಿದ್ದಾರೆಂದು ಎಂದು ಆರೋಪಿಸಲಾಗಿದೆ.

ದುರಸ್ತಿಗೆ ಅನಗತ್ಯ ವಿಳಂಬ: ಮೆಸ್ಕಾಂಗೆ ದಂಡ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪದಿಂದ ದುರಸ್ತಿಗೆ ಅನಗತ್ಯ ವಿಳಂಬವಾದ ಕಾರಣ ಗ್ರಾಹಕರಿಗೆ ಪರಿಹಾರ ಪಾವತಿಸಬೇಕೆಂದು ರಾಜ್ಯ ವಿದ್ಯುಚ್ಛಕ್ತಿ ಒಂಬಡ್ಸ್‌ಮನ್ ಮೆಸ್ಕಾಂ ಇಲಾಖೆಗೆ ಆದೇಶಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬೋಳಂಬಿ ಮನೆಯ ಜೆ. ಲಕ್ಷ್ಮಿ ದೇವಿಯವರ ಪರವಾಗಿ ಅವರ ಅಧಿಕಾರ ಪಡೆದ ಬಾಲಸುಬ್ರಹ್ಮಣ್ಯ ಭಟ್ ತಮ್ಮ ಆರ್‌ಆರ್ ನಂ. ಬಿಲ್ ೬೮೬೬ರ ಮೇಲೆ ಮರಬಿದ್ದು, ಸರ್ವಿಸ್ ತಂತಿ ತುಂಡಾದ ಬಗ್ಗೆ ಅ.೧೯, ೨೦೦೯ರಂದು ಉಜಿರೆ ಮೆಸ್ಕಾಂಗೆ ಮೌಖಿಕ ಹಾಗೂ ಲಿಖಿತ ದೂರು ಸಲ್ಲಿಸಿದ್ದರು.
ಅರ್ಜಿದಾರರು ತ್ವರಿತ ದುರಸ್ತಿಗಾಗಿ ಆಗ್ರಹಿಸಿದರೂ ಕ್ರಮ ಕೈಗೊಳ್ಳದೆ ಮೆಸ್ಕಾಂ ಇಲಾಖೆಯ ಬೆಳ್ತಂಗಡಿ ಹಾಗೂ ಮಂಗಳೂರಿನ ಕಚೇರಿಗೂ ಕರ್ತವ್ಯ ಲೋಪವೆಸಗಿ ಮಾನಸಿಕ ಹಿಂಸೆ ನೀಡಿದ್ದರಿಂದ ಪರಿಹಾರ ನೀಡಬೇಕೆಂದೂ ಕೋರಿದ್ದರು. ಆದರೆ ಬೆಳ್ತಂಗಡಿ ಮೆಸ್ಕಾಂ ಇಲಾಖೆಯಲ್ಲಿ ಸರ್ವಿಸ್ ವಯರ್ ದಾಸ್ತಾನಿಲ್ಲದ ಕಾರಣ ಅರ್ಜಿದಾರರ ಸರ್ವಿಸ್ ವಯರ್ ಬದಲಾಯಿಸಲು ವಿಳಂಬವಾದುದಕ್ಕೆ ವಿಷಾದ ವ್ಯಕ್ತಪಡಿಸಿ ಅನ್ಯಮೂಲಗಳಿಂದ ಸರ್ವಿಸ್ ಲೈನನ್ನು ಹೊಸ ವಯರಿಗೆ ಬದಲಾಯಿಸಿ ಮಾ. ೪ ೨೦೧೦ರಂದು ವಿದ್ಯುತ್ ಸಂಪರ್ಕ ನೀಡಿತ್ತೆನ್ನಲಾಗಿದೆ. ಈ ಬಗ್ಗೆ ವಿಳಂಬ ನಡೆಸಿ ಕರ್ತವ್ಯಲೋಪ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ದಿನಕ್ಕೆ ೫೦ ರೂ.ಗಳಂತೆ ಪರಿಹಾರ ಕೊಡಬೇಕೆಂದು ಅರ್ಜಿದಾರರು ಮೆಸ್ಕಾಂ ಗ್ರಾಹಕರ ಕುಂದುಕೊರತೆ ಗಳ ನಿವಾರಣಾ ವೇದಿಕೆಗೆ ಹಾಗೂ ರಾಜ್ಯ ವಿದ್ಯುಚ್ಛಕ್ತಿ ಒಂಬಡ್ಸ್‌ಮನ್‌ಗೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಇಲಾಖೆ ಗ್ರಾಹಕರ ವಿಳಂಬಕ್ಕೆ ೬೮೫೦ ರೂ. ನಷ್ಟ ಪರಿಹಾರ ಪಾವತಿಸುವಂತೆ ಅದನ್ನು ಮುಂದಿನ ವಿದ್ಯುತ್ ಬಿಲ್‌ಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶ ನೀಡಿದೆ.

ಮಂಜೇಶ್ವರ: ನಳ್ಳಿ ನೀರಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ನಳ್ಳಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ತರ್ಕವು ಹಲ್ಲೆಯಲ್ಲಿ ಕೊನೆಗೊಂಡ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಬಳಿಯ ಅಂಬೇಡ್ಕರ ಕಾಲನಿಯ ನಳ್ಳಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಯಾವರ ಗುತ್ತು ನಿವಾಸಿ ನಾರಾಯಣರ ಪುತ್ರ ಸುರೇಶ ಹಲ್ಲೆಗೊಳಗಾಗಿ ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚೇತರಿಸಿಕೊಂ ಡಿದ್ದಾರೆ. ಸ್ಥಳೀಯ ನಿವಾಸಿ ಮನೋಜ್ ಕಲ್ಲಿನಿಂದ ಹಲ್ಲೆ ನಡೆಸಿರುವುದಾಗಿ ಗಾಯಾಳು ದೂರಿದ್ದಾರೆ. ಈ ಬಗ್ಗೆ ಗಾಯಾಳು ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದೋಷಮುಕ್ತಿ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಎರಡು ವರ್ಷಗಳ ಹಿಂದೆ ಬಂಟ್ವಾಳ ಬೈಪಾಸ್ ಸರ್ಕಲ್ ಬಳಿ ನಡೆದ ಬೆಂಗಳೂರು ಮೂಲದ ಮಂಜುನಾಥ ಎಂಬವರ ಕೊಲೆಯತ್ನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಇಬ್ಬರನ್ನು ಮಂಗಳೂರು ೩ನೇ ಹೆಚ್ಚುವರಿ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಕೊಲೆಯತ್ನ ಆರೋಪದಲ್ಲಿ ನಾಗರತ್ನ ಹಾಗೂ ಜಬ್ಬಾರ್ ಎಂಬವರ ಮೇಲೆ ನಗರ ಪೊಲೀಸ್ ಅಧಿಕಾರಿಗಳು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ನ್ಯಾಯಾಲಯ ಸುಮಾರು ೨೦ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, ಆರೋಪ ಸಾಬಿತಾಗದ ಕಾರಣ ಆರೋಪಿಗಳನ್ನು ದೋಷ ಮುಕ್ತಿಗೊಳಿಸಿದೆ. ಆರೋಪಿಗಳ ಪರವಾಗಿ ಮಂಗಳೂರಿನ ನ್ಯಾಯವಾದಿ ಗಳಾದ ಉಮೇಶ್ ಕುಮಾರ್, ಪೃಥ್ವಿರಾಜ್ ಹಾಗೂ ಉಮೇಶ್ ಆರ್ ವಾದಿಸಿದ್ದರು.

ಉಡುಪಿ: ಮನೆಗೆ ನುಗ್ಗಿ ಸೊತ್ತು ಕಳವು

Posted by JAYAKIRANA Kirana on | 0 comments | Leave a comment...

 ಉಡುಪಿ: ಮನೆಯೊಂದರ ಬಾಗಿಲ ಲಾಕ್ ಮುರಿದು ಒಳ ಪ್ರವೇಶಿ ಸಿದ ಕಳ್ಳರು, ನಗದು ಸಹಿತ ೧.೩೭ ಲಕ್ಷ ರು.ಮೌಲ್ಯದ ಚಿನ್ನವೇ ಮೊದಲಾದ ವಸ್ತುಗಳನ್ನು ಕಳವು ಮಾಡಿದ ಪ್ರಕರಣ ಬೊಮ್ಮರಬೆಟ್ಟುವಿನಲ್ಲಿ ನಡೆದಿದೆ.
 ಮನೆ ಮಾಲಕ ನರಸಿಂಹ ಮಲ್ಯ ಅವರು ಮನೆಯವರ ಜೊತೆಗೆ ಆದಿತ್ಯವಾರ ಸಂಜೆ ಮೂಲ್ಕಿಗೆ ಹೋಗಿ ದ್ದರು. ಸೋಮವಾರ ಸಂಜೆ ಮನೆಗೆ ಮರಳಿದಾಗ ಲಾಕ್ ಮುರಿದಿ ರುವುದು ಮತ್ತು ವಸ್ತುಗಳು ಕಳ್ಳತನ ವಾಗಿರುವುದು ಗಮನಕ್ಕೆ ಬಂತು ಎನ್ನಲಾಗಿದೆ. ಒಂದು ಲಕ್ಷ ರು. ಬೆಲೆ ಬಾಳುವ ಕರಿಮಣಿ ಸರ, ೧೨ ಸಾವಿರ ರು. ನಗದು, ೨೫ ಸಾವಿರ ಬೆಲೆಬಾಳುವ ಬೆಳ್ಳಿಯ ತಂಬಿಗೆ, ಹರಿವಾಣ, ಆರತಿ ತಟ್ಟೆ, ಕುಂಕುಮದ ಕರಡಿಗೆ, ಅಗರಬತ್ತಿ ಸ್ಟ್ಯಾಂಡ್ ಇತ್ಯಾದಿ ಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ನರಸಿಂಹ ಮಲ್ಯ ನೀಡಿದ ದೂರಿನ ಆಧಾರದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್: ಟೆಂಪೋ ಪೊಲೀಸ್ ವಶಕ್ಕೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಕಾಟಿಪಳ್ಳ ಎರಡನೆ ವಿಭಾಗ ಕೋಡ್ದಬ್ಬು ದ್ವಾರ ಬಳಿ ಇರುವ ಬಸ್ ನಿಲ್ದಾಣವೊಂದಕ್ಕೆ ಟೆಂಪೋ ಡಿಕ್ಕಿ ಹೊಡೆದಿದ್ದು, ಟೆಂಪೋವನ್ನು ಸುರತ್ಕಲ್ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಸ್ ನಿಲ್ದಾಣವನ್ನು ಕೃಷ್ಣಾಪುರ ಯುವಕ ಮಂಡಲ ಹಾಗೂ ಲಯನ್ಸ್ ಕ್ಲಬ್ ನಿರ್ಮಿಸಿತ್ತು ಎನ್ನಲಾಗಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ಯಾಡಿ ರಾಮಕ್ಷೇತ್ರದಲ್ಲಿ ಮಹಾಬ್ರಹ್ಮರಥೋತ್ಸವ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀ ರಾಮ ಕ್ಷೇತ್ರದಲ್ಲಿನ ಮಹಾಬ್ರಹ್ಮರಥೋತ್ಸವ ರಾಮನವಮಿಯ ದಿನವಾದ ಆದಿತ್ಯವಾರ ವೈಭವ ಯುತವಾಗಿ ಸಂಪನ್ನಗೊಂಡಿತು. ಇದೇ ಸಂದರ್ಭ ಕಳೆದ ಏಳು ದಿನಗಳಿಂದ ನಡೆಯು ತ್ತಿದ್ದ ಶ್ರೀರಾಮ ನಾಮ ತಾರಕ ಮಂತ್ರ ಸಪ್ತಾಹದ ಮಂಗಳವೂ ನಡೆಯಿತು. ಆದಿತ್ಯವಾರ ಬೆಳಿಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು. ದೇವರ ಗುಡ್ಡೆ ಶ್ರೀಗುರು ದೇವ ಮಠದ ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಯವರ ದಿವ್ಯ ಸ್ಮರಣೆಯೊಂದಿಗೆ, ಬ್ರಹ್ಮ ಶ್ರೀ ಹರಿದಾಸ ಜನಾರ್ದನ ತಂತ್ರಿ ಯವರ ವೈದಿಕ ನೇತೃತ್ವದಲ್ಲಿ ಕಾರ್ಯಕ್ರಮಗಳು ಸಮಾಪನಗೊಂ ಡವು. ಮಠದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಟುಂಬ ವೈದ್ಯರ ಸಂಘ(ರಿ.) ಮಂಗಳೂರು ಇದರ ೧೧ನೇ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ತಾ.೧೭ರ ಶನಿವಾರ ದಂದು, ಐಎಂಎ ಇದರ ಸಭಾಂಗಣ ದಲ್ಲಿ, ಸಂಘದ ಅಧ್ಯಕ್ಷ ಜಿ.ಕೆ.ಭಟ್ ಸಂಕಬಿತ್ತಿಲು ಅಧ್ಯಕ್ಷತೆಯಲ್ಲಿ ಜರ ಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಏನೆಪೋಯ ವೈದ್ಯಕೀಯ ಕಾಲೇಜ್ ನ ಮಾನಸಿಕ ರೋಗತಜ್ಞ ಪ್ರಾಧ್ಯಾಪಕ ರಾದ ಡಾ.ಅನಿಲ್ ಕಾಕುಂಜೆ, ವಿಟ್ಲದ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರೂ ಆದ ಡಾ.ಗೀತಾಪ್ರಕಾಶ್ ಆಗಮಿಸಿ ದ್ದರು. ಡಾ.ಶೇಖರ್ ಪೂಜಾರಿ, ಡಾ. ಮನೋಹರ್ ಆಚಾರ್ ಹಾಗೂ ಡಾ.ಸುರೇಶ್‌ಚಂದ್ರ ಶೆಟ್ಟಿ ಮೊದಲಾ ದವರು ಇದ್ದರು.

ಡೈರಿ ಎಂಪ್ಲಾಯಿಸ್ ಯೂನಿಯನ್‌ನ ಸಭೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರು ಡೈರಿ ಎಂಪ್ಲಾಯಿಸ್ ಯೂನಿ ಯನ್ (ರಿ) ಸಾಮಾನ್ಯಸಭೆಯು ಡೈರಿ ಆವರಣ ದಲ್ಲಿರುವ ಉಪಹಾರ ಮಂದಿರದಲ್ಲಿ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರು ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ವರದಿ ಮಂಡಿಸಿದರು. ಖಜಾಂಚಿ ಬಿ.ರಾಜು ಲೆಕ್ಕಪತ್ರ ಮಂಡಿಸಿದರು. ಸಭೆಯು ಕಾರ್ಯ ಕಾರಿ ಮಂಡಳಿ ಯನ್ನು ಸರ್ವಾನು ಮತದಿಂದ ಚುನಾಯಿಸಿತು. ಅಧ್ಯಕ್ಷರಾಗಿ ಬಿ.ಎಸ್. ಚಂದ್ರು ಉಪಾಧ್ಯಕ್ಷರಾಗಿ ಕೆ. ಜಯ ದೇವಪ್ಪ, ಪ್ರಧಾನ ಕಾರ್ಯ ದರ್ಶಿಯಾಗಿ ಎಂ.ಎಚ್. ರಾಮಕೃಷ್ಣ, ಖಜಾಂಚಿ ಯಾಗಿ ಬಿ.ರಾಜು,, ಜಂಟಿ ಕಾರ್ಯ ದರ್ಶಿಯಾಗಿ ಎಂ.ರವಿ, ನರಸಿಂಗ ರಾವ್, ಎಂ.ಟಿ. ಶ್ರೀನಿವಾಸು, ಸಂಘ ಟನಾ ಕಾರ್ಯದರ್ಶಿಯಾಗಿ ಬಿ.ಎಸ್. ಲತೇಶ್, ಎಂ.ರಾಜೇಂದ್ರ, ಕೆ.ಎಸ್. ವಿಶ್ವನಾಥ, ಟಿ.ಎಸ್. ಗೋಪಾಲಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಟಿ.ನಾಗೇಂದ್ರ, ಎಂ. ಎನ್. ಕುಶಾಲಪ್ಪ, ವಿಠಲ್ ಕುಲಾಲ್, ಕೆ.ಟಿ. ನಾಗರಾಜು, ಸಿ. ರಾಮಣ್ಣ, ಪಿ.ಕೆ. ಜಾನ್, ಎಂ. ಎಲ್.ಶ್ರೀನಿವಾಸ ಆಯ್ಕೆಯಾಗಿ ದ್ದಾರೆ. ಸಭೆಗೆ ಎಂ.ರವಿ ಸ್ವಾಗತಿಸಿ, ಲೋಕೇಶ್ ಪ್ರಾರ್ಥಿಸಿ, ಲತೇಶ್ ವಂದಿಸಿದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)