ಮಾದ್ರೆಂಗಿ ದೀಪಿನಿ

Posted by JAYAKIRANA Kirana on Tuesday, 3 April 2012 | 0 comments | Leave a comment...

ಧಾರೆ ಮದುವೆಗೆ ನೆಂಟರ ದಿಬ್ಬಣ ದೂರದೂರಿನಿಂದ ಬರು ವುದಿದ್ದರೆ ಮೊದಲ ದಿನವೇ ಬರುತ್ತಿದ್ದರು. ನೆಂಟರ ಊರು ಸಮೀಪ ವಾಗಿದ್ದರೆ ಮದುವೆಯ ದಿನ ಮುಂಜಾನೆ ದಿಬ್ಬಣ ಬರುತ್ತಿತ್ತು. ಮೊದಲ ದಿನ ಬಂದ ದಿಬ್ಬಣಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ, ಊಟೋಪಚಾರ ಕ್ರಮವತ್ತಾಗಿ ನಡೆಯುತ್ತಿತ್ತು.
ಗಂಡು ಯಾ ಹೆಣ್ಣನ್ನು ಮದುವೆ ನಿಶ್ಚಯದ ಬಳಿಕ ‘ಮದಿಮಾಯೆ’ (ಮದುಮಗ) ‘ಮದ್ಮಲ್ (ಮದುಮಗಳು) ಎಂದೇ ಕರೆಯುವುದು ವಾಡಿಕೆ. (ಉದಾ. ಮದುಮಗಳನ್ನು ಕರೆತನ್ನಿ, ಮದುಮಗಳನ್ನು ಅಲಂಕರಿಸಿ, ಸೀರೆ ಕೊಡಿ ಇತ್ಯಾದಿ)
ಮದುವೆಗೆ ಕನಿಷ್ಠ ೫ ದಿನಗಳ ಮೊದಲು ವರ ಮತ್ತು ವಧುವಿಗೆ ‘ಸಿಗರ್’ ಹಚ್ಚಿ ಸ್ನಾನ ಮಾಡಿಸುತ್ತಿದ್ದರು. ಈ ಕ್ರಮ ಮದುವೆಯ ದಿನದ ವರೆಗೆ ನಡೆಯುತ್ತದೆ. ಹೀಗೆ ‘ಸಿಗರ್’ ಹಚ್ಚಿ ಸ್ನಾನ ಮಾಡುವುದರಿಂದ ಗಂಡು ಮತ್ತು ಹೆಣ್ಣಿನ ಮೈಬಣ್ಣವು ಕಾಂತಿಯುತವಾಗುವುದು.
ಮಾದ್ರೆಂಗಿ ದೀಪಿನಿ (ಮದರಂಗಿ ಇಡುವುದು)
ಮದುವೆಯ ಮೊದಲ ದಿನ ಗಂಡು ಮತ್ತು ಹೆಣ್ಣಿಗೆ ಮದ್ರೆಂಗಿ ಇಡು ವರು. ಸಂಜೆಗೆ ಮೊದಲೇ ಮನೆಯ ಹೆಂಗಸರು ಮದಿರಂಗಿ ಸೊಪ್ಪನ್ನು ಗಿಡದಿಂದ ಆರಿಸಿ ತಂದು ಅರೆದು, ಸ್ವಲ್ಪ ನೀರು ಬೆರೆಸಿ ಮುದ್ದೆ ಮಾಡಿ ಇಡುವರು. ಮದಿರಂಗಿ ಅರೆಯುವಾಗ ವೀಳ್ಯದೆಲೆ, ಅಡಿಕೆ ಹೋಳು ಮತ್ತು ಸುಣ್ಣವನ್ನು ತಕ್ಕ ಪ್ರಮಾಣದಲ್ಲಿ ಮಿಶ್ರ ಮಾಡುವರು, ‘ತಬುರು’ (ಚೌಳಿ) ಎಂಬ ಒಂದು ಜಾತಿಯ ಇರುವೆಯನ್ನು ಸೇರಿಸಿ ಅರೆಯುವು ದರಿಂದ ಮದಿರಂಗಿಯ ಬಣ್ಣ ಕಡುವಾಗಿರುವುದು. ಆ ದಿನ ರಾತ್ರಿ ಎಲ್ಲರ ಊಟವಾದೊಡನೆ ಪರಿಸರವನ್ನು ಸ್ವಚ್ಛಗೊಳಿಸುವರು. ಅಂಗಳ ದಲ್ಲಿ ಹೊಸ ಚಾಪೆಯನ್ನು ಹಾಸುವರು. ಅದರ ಮೇಲೆ ಮುಕ್ಕಲಿಗೆ ಇರಿಸಿ ಗಂಡು ಯಾ ಹೆಣ್ಣನ್ನು ಕುಳ್ಳಿರಿಸುವರು.
ಅರೆದಿರಿಸಿದ್ದ ಮದಿರಂಗಿಯಲ್ಲಿ ಸ್ವಲ್ಪವನ್ನು ಬೇರ್ಪಡಿಸಿ ಒಂದು ತಟ್ಟೆಯಲ್ಲಿರಿಸಿ, ಮನೆ ಯಜಮಾನನು ದೈವಗಳ ಮಣೆಮಂಚದಲ್ಲಿರಿಸಿ, ದೀಪ ಹಚ್ಚಿ ಮನೆ ದೈವಗಳನ್ನು ಮತ್ತು ಆ ಕುಟುಂಬದಲ್ಲಿ ಬಾಳಿ ಬದು ಕಿದ್ದ ಹಿರಿಯರನ್ನು ನಡೆಯುವ ಮಂಗಳ ಕಾರ್ಯಕ್ಕೆ ಹರಸುವಂತೆ ಪ್ರಾರ್ಥಿಸಿ ಕೊಳ್ಳುವನು. ಈಗ ವಿಡಿಯೋ, ಫೋಟೋಗಳಿಗೆ ಹೊಂದಿಸಿ ಕೊಂಡು ಮನೆಯಂಗಳದಲ್ಲಿ ತುಳಸಿಕಟ್ಟೆಯ ಮುಂಭಾಗದಲ್ಲಿ ಸಾಮೂ ಹಿಕ ನೆಲೆಯಲ್ಲಿ ಪ್ರಾರ್ಥನೆ ಮಾಡುವ ಉತ್ತಮ ಸಂಪ್ರದಾಯಕ್ಕೆ ಪರಿ ವರ್ತನೆಗೊಂಡಿರುವುದು.
ವರನಿಗೆ ಮೊದಲು ಅವನ ಭಾವ ನೆಂಟನು ಬಲಗೈಗೆ ಸಾಂಕೇತಿಕ ವಾಗಿ ಮದಿರಂಗಿ ಇಡುವನು. ರಾತ್ರಿ ಕಾಲದಲ್ಲಿ ‘ಮದಿರಂಗಿ’ ಎಂದು ಹೆಸರು ಕೂಗಿದರೆ ಅದರ ಬಣ್ಣವು ಕಡುವಾಗಿ ಅಂಟಿಕೊಳ್ಳುವುದಿಲ್ಲ ಎಂಬ ನಂಬಿಕೆಯಿಂದಾಗಿ ಅದನ್ನು ಮರ್ದ್ ಎಂದೇ ಕರೆಯುವರು.
ಹೆಣ್ಣಿಗೆ ಅವಳ ಸೋದರತ್ತೆ ಅಥವಾ ಹಿರಿಯಣ್ಣನ ಹೆಂಡತಿ (ನಾದಿನಿ) ಬಲಗೈಗೆ ಮದಿರಂಗಿ ಇಡುವಳು. ನಂತರ ಐವರು ಮುತ್ತೈದೆಯರು ಸಾಂಕೇತಿಕವಾಗಿ ಮರ್ದ್ ಇಡುವ ಕ್ರಮವೂ ಕೆಲವೆಡೆ ಇದೆ. ಆ ಬಳಿಕ ಎರಡು ಕೈಗಳು ಮತ್ತು ಕಾಲುಗಳನ್ನು ಹೆಣ್ಮ್ಮಕ್ಕಳು ಕಲಾತ್ಮಕವಾಗಿ ಚಿತ್ರಿ ಸುವರು. ಮೊದಲ ದಿನಗಳಲ್ಲಿ ವೀಳ್ಯದೆಲೆಯಲ್ಲಿ ವಿಧ ವಿಧದ ಆಕೃತಿಗ ಳನ್ನು ಸಿದ್ದಪಡಿಸಿ ಅದನ್ನು ಅಂಗೈಯ ಮೇಲಿರಿಸಿ ಮದಿರಂಗಿಯನ್ನು ಮೆತ್ತುತ್ತಿದ್ದರು. ಅದೇ ರೀತಿ ಹಲಸಿನ ಕಾಯಿಯ ಮೇಣವನ್ನು ಬಿಸಿ ಮಾಡಿ ಅಂಗೈಯ ಮೇಲೆ ಅಲ್ಲಲ್ಲಿ ಬೊಟ್ಟಿಟ್ಟು ಮದಿರಂಗಿಯನ್ನು ಮೆತ್ತುತ್ತಿ ದ್ದರು. ಬಳಿಕ ಮೇಣವನ್ನು ತೆಗೆದರೆ ಆ ಸ್ಥಳ ಮದಿರಂಗಿ ಅಂಟಿಕೊಳ್ಳದೆ ಒಂದು ತೆರನ ವಿನ್ಯಾಸ ತೋರುವುದು. ಇನ್ನೊಂದು ಕ್ರಮದಲ್ಲಿ ಸುಣ್ಣದ ಹುಂಡನ್ನು ತಮಗೆ ಬೇಕಾದ ವಿನ್ಯಾಸದಿಂದ ಅಂಗೈಗೆ ಅಂಟಿಸಿಕೊಂಡು ನಂತರ ಮದಿರಂಗಿ ಲೇಪಿಸಿಕೊಂಡರೆ ಸುಣ್ಣ ಬಳಿದಲ್ಲಿ ಮದಿರಂಗಿ ಅಂಟಿ ಕೊಳ್ಳುತ್ತಿರಲಿಲ್ಲ.
ಮದಿರಂಗಿ ಇಡುವ ಸಮಯ ಹಿರಿಯ ಗಂಡು ಅಥವಾ ಹೆಂಗಸರು ‘ಬಂಟರ ಸಂಧಿ’, ‘ಸಿರಿ ಪಾರ್ದನ’ವನ್ನು ರಾಗವಾಗಿ ಹಾಡಿ ಮನರಂಜಿ ಸುತ್ತಿದ್ದರು. ಅಂಥವರಿಗೆ ಸಂಭಾವನೆ ನೀಡುತ್ತಿದ್ದರು. ಮದಿರಂಗಿ ಇಡುವ ಸಂಭ್ರಮದಲ್ಲಿ ಹೆಣ್ಮಕ್ಕಳಂತೂ ತಮ್ಮನ್ನೇ ಮರೆತು ಬಿಡುವಷ್ಟು ಸಂತಸ ಪಡುತ್ತಿದ್ದರು. ವರನ ಜತೆಗೆ ಅವನ ಭಾವ ನೆಂಟನಿಗೂ ಮದಿರಂಗಿ ಇಡು ತ್ತಿದ್ದರು. ಮಾತ್ರವಲ್ಲ ಅಲ್ಲಿ ಸೇರಿದವರೆಲ್ಲರೂ ಮದಿರಂಗಿ ಇಡುತ್ತಿದ್ದರು. ಗಂಡು ಹೆಣ್ಣುಗಳನ್ನು ಭಾವೀ ಜೀವನದ ರಸಮಯ ಸನ್ನಿವೇಶಗಳನ್ನು ಉದಾಹರಿಸಿ, ಛೇಡಿಸಿ ಅವರ ಹುಸಿ ಮುನಿಸಿನ ನಗುವಿನೊಡನೆ ಎಲ್ಲ್ಲಾ ಪಾಲ್ಗೊಳ್ಳುವುದಂತೂ ಅತಿ ಮನರಂಜಿತ. ಹೆಣ್ಣಂತೂ ನಾಚಿ ನೀರಾಗಿ ಬಿಡುವಳು. ಮದಿರಂಗಿಯನ್ನು ರಾತ್ರಿಯಿಡೀ ಹಾಗೆ ಬಿಟ್ಟು ಬೆಳಗೆದ್ದು ಕೈ ಕಾಲು ತೊಳೆದು ಶುಭ್ರಗೊಳಿಸುವರು. ಮದಿರಂಗಿಯ ಕಾರ್ಯಕ್ರಮವು ಗಂಡು ಹೆಣ್ಣುಗಳ ಮನೆಯಲ್ಲಿ ಬೇರೆ ಬೇರೆಯಾಗಿ ನಡೆಯುತ್ತಿತ್ತು.
ಟಿಪ್ಪಣಿ :
ಶನಿವಾರ ದಿನ ಮದಿರಂಗಿ ಇಡುವ ಕ್ರಮ ಇಲ್ಲ. ಗ್ರಾಮೀಣ ಜನ ಜೀವನದಲ್ಲಿ ಲಾಗಾಯ್ತಿನಿಂದ ನಡೆದು ಬಂದ ನಂಬುಗೆಯಂತೆ ಶನಿವಾರ ದಿನ ಯಾವ ಶುಭ ಕಾರ್ಯವೂ ನಡೆಯುತ್ತಿರಲಿಲ್ಲ. ಯಾವ ಸಮಾ ರಂಭವಾದರೂ ಶುಕ್ರವಾರ ಪ್ರಾರಂಭಗೊಂಡು ಶನಿವಾರಕ್ಕೆ ಮುಂದು ವರಿಯಬಹುದು. ಆದರೆ ಶನಿವಾರ ಪ್ರಾರಂಭಿಸಲಾಗದು. ಮದುವೆ, ಬಯಕೆ (ಸೀಮಂತ), ನೇಮ, ಕೋಲ, ದೇವರ ಪೂಜೆ ಇತ್ಯಾದಿ ನಡೆಸು ವುದಿಲ್ಲ. ಶನಿವಾರ ದಿನ ಶುಭವಲ್ಲ ಎನ್ನುವ ಬಲವಾದ ನಂಬುಗೆ ಜನಮ ನದಲ್ಲಿ ಬೇರೂರಿರುವುದರಿಂದ, ಜೀವನದ ಮಹತ್ತರ ಘಟ್ಟ ಪ್ರವೇಶಿಸುವ ಮದುವೆ ಶುಭ ಸಂಸ್ಕಾರದ ಮುಹೂರ್ತದ ‘ಮದಿರಂಗಿ’ ಇಡುವುದಕ್ಕೂ ಶನಿವಾರ ಸಲ್ಲದು ಎಂದು ಪರಿಗಣಿಸಿರಬಹುದು. ಇಂತಹ ಸಂದರ್ಭದಲ್ಲಿ ಮೊದಲ ದಿನ ಅಂದರೆ ಶುಕ್ರವಾರ ಮದಿರಂಗಿ ಇಡುವ ಮುಹೂರ್ತ ನಡೆ ಯುವುದು. ಸಮಾಜ ಆಧುನಿಕ ಸಂಪ್ರದಾಯಕ್ಕೆ ಶರಣಾದಂತೆ ವಿನ್ಯಾ ಸಭರಿತ ಮದಿರಂಗಿಯ ಟ್ಯೂಬನ್ನು ಬಳಸುವಲ್ಲಿಗೆ ಕ್ರಮ ಬದಲಾಗಿದೆ. ಜೊತೆಗೆ ಮದರಂಗಿ ಇಡುವ ಕಲಾ ಶಿಕ್ಷಣವೂ ನಡೆದಿದೆ. ತುಳುನಾಡಿಗೆ ‘ಮದಿರಂಗಿ’ ಇಡುವ ಸಂಪ್ರದಾಯ ಇಸ್ಲಾಂ ಸಂಸ್ಕೃತಿಯ ಪ್ರಭಾವದಿಂದ ಮಧ್ಯಕಾಲದಲ್ಲಿ ಬೇರೆಡೆಯಿಂದ ಬಂದಿರುವಂತೆ ಭಾಸವಾಗುತ್ತದೆ.
ಇತ್ತೀಚೆಗೆ ಸಾಂಕೇತಿವಾಗಿ ಗಂಡು ಹೆಣ್ಣಿಗೆ ಮದಿರಂಗಿ ಇಡುವುದಕ್ಕೆ ವಯೋಮಿತಿಯನ್ನು ಪರಿಗಣಿಸುವುದಿಲ್ಲ. ಇದು ಎಲ್ಲಿಯವರೆಗೆ ಮುಟ್ಟಿದೆ ಎಂದರೆ ತೊಟ್ಟಿಲ ಮಕ್ಕಳನ್ನೂ ಎತ್ತಿಕೊಂಡು ಬಂದು ಮದಿರಂಗಿ ಇಡಿಸು ವುದು ಸೇಸೆ ಹಾಕಿಸಿ ಆಶೀರ್ವಾದ ಮಾಡಿಸುವುದು ನಡೆಯುತ್ತಿದೆ. ಜಾನ ಪದ ಆಚರಣೆಯ ಮಹತ್ತಿಕೆ ಮತ್ತು ನೈಜ ಉದ್ದೇಶದ ಅರಿವಿನ ಕೊರತೆ ಯಿಂದಾಗಿ ಹೀಗಾಗುತ್ತಿದೆ. ಆದರೆ ಇದನ್ನು ಇದಿರಿಸಲಾಗದ ಮುಜುಗರ ಮತ್ತೊಂದೆಡೆ.
ಪೊಣ್ಣಗ್ ಮೂರ್ತ (ಹೆಣ್ಣಿಗೆ ಮುಹೂರ್ತ ಸೇಸೆ)
ಹೆಣ್ಣಿನ ಮನೆಯಲ್ಲಿ ಸಾಮಾನ್ಯವಾಗಿ ಮದುವೆ ದಿನ ಮುಂಜಾನೆ ಬೇಗ ಮುಹೂರ್ತ ಸೇಸೆ ಜರಗುತ್ತಿತ್ತು. ಗಂಡಿನ ಮನೆಯಲ್ಲಿ ಮದುವೆ ನಡೆ ಯುವ ಸನ್ನಿವೇಷಗಳೇ ಅಧಿಕವಾಗಿರುವುದು. ಹಾಗಾಗಿ ವರನ ಮನೆ ದೂರದ ಊರಿನಲ್ಲಿದ್ದರೆ ಮೊದಲ ದಿನವೇ ದಿಬ್ಬಣ ಹೊರಡಬೇಕಾಗು ವುದು. ಅದಕ್ಕೆ ಅನುಕೂಲವಾಗುವಂತೆ ಹೆಣ್ಣಿನ ಮುಹೂರ್ತ ಸೇಸೆಯನ್ನು ಕೂಡಾ ಮೊದಲ ದಿನವೇ ಜರಗಿಸುತ್ತಿದ್ದರು. ಮದುವೆಯ ದಿನ ನಡೆ ಯುವ ಮುಹೂರ್ತ ಸೇಸೆಗೆ ಮಹತ್ವದ ಸ್ಥಾನವಿದೆ. ಮದುವೆ ಮನೆಯಲ್ಲಿ ಪ್ರಾತಃಕಾಲ ಎಲ್ಲ ರೀತಿಯ ಸಡಗರ, ಉತ್ಸವದ ವಾತಾವರಣ ಉಂಟು ಮಾಡುವುದು, ಮುಂಜಾನೆ ಮದುಮಗಳನ್ನು ‘ಸಿಗರ್’ ಹಚ್ಚಿಸಿ ಸ್ನಾನ ಮಾಡಿಸಿದ ಬಳಿಕ ‘ಮುಹೂರ್ತ’ದ ಸೀರೆ ಉಡಿಸಿ ಸಿಂಗರಿಸುವರು. ‘ಗರ್ನಾಲ್’ ಸಿಡಿಸಿದ ಶಬ್ದ ಕೇಳಿದೊಡನೆ ಊರವರು ಬಂದು ಸೇರುವರು. ಮಡಿವಾಳನು ಬಂದು ತನ್ನ ಕೆಲಸಕ್ಕೆ ತೊಡಗುವನು. ವಧುವಿನ ಕೈಯಲ್ಲಿ ಎಲೆ ಅಡಿಕೆ ನೀಡಿ ಅವಳ ನಾದಿನಿಯು ಅಂಗಳಕ್ಕೆ ಕರೆ ತರುವಳು. ಅಂಗಳದಲ್ಲಿ ‘ಕೊಡಿಯಡಿ’ಯಲ್ಲಿ ಹೊಸ ಚಾಪೆಯನ್ನು ಹಾಸಿ ಅದರ ಮೇಲೆ ಕುಳಿತುಕೊಳ್ಳಲು ‘ಮುಕ್ಕಲಿಗೆ’ ಇರಿಸಿ ಮೇಲೆ ಬಿಳಿ ಬೈರಾಸು ಹಾಸುವರು.

ವಿಧವೆಯರಿಗೆ ತಾಳಿ ಧರಿಸಬೇಕೆಂದು ಒತ್ತಡ ಹೇರಿಲ್ಲ

Posted by JAYAKIRANA Kirana on | 0 comments | Leave a comment...

ಅಶೋಕ ಹಲಾಯಿ, ಬಂಟ್ವಾಳ
ಮಾ. ೨೭ರ ಚಾವಡಿ ವಿಭಾಗದಲ್ಲಿ ತುಳುನಾಡಿನ ವಿವಾಹ ಪದ್ಧತಿಯ ಬಗ್ಗೆ ಆಸಕ್ತಿ ಹುಟ್ಟಲಿ ಎಂಬ ಜಯರಾಮರ ಪತ್ರ ಪ್ರಕಟವಾಗಿತ್ತು.
ಪತ್ರದ ಆರಂಭದಲ್ಲಿ ನಂತರ ಕೊನೆಯವರೆಗೂ ಹಳೆಯ ವಿಚಾರ ಮರುಕಳಿಸಿದೆಯೇ ಹೊರತು ಹೊಸತೇನು? ಎಂಬ ಪ್ರಶ್ನೆ ಹುಟ್ಟುತ್ತದೆ. ಅಧ್ಯ ಯನವಿಲ್ಲ, ಅವಸರ, ಕೋಪ, ಪೂಜಾರಿ ಪರ ವ್ಯಾಮೋಹ ಇತ್ಯಾದಿ ನನ್ನ ಮೇಲೆ ಆರೋಪ, ಜ್ಞಾನವಿಲ್ಲದ ಬರಹ ನನ್ನದು ಎಂಬ ವ್ಯಕ್ತಿಗತ ಆರೋಪ ವಿತ್ತೇ ಹೊರತು ಬೇರೇನೂ ಹೊಸತನವಿಲ್ಲ. ನನ್ನದು ಮೊಂಡುತನ, ಪಕ್ಷ ಪಾತ ಗ್ರಹಿಕೆ ಇದು ಬಿಟ್ಟರೆ ಬೇರೆ ಏನು? ಬರೀ ಆರೋಪಗಳು.
ಓರ್ವ ಬರಹಗಾರ, ಅಧ್ಯಯನಗಾರ, ವಿಮರ್ಶಕ, ವಿದ್ವಾಂಸನು ತಾನು ಇಂಥವ ಎಂಬುದನ್ನು ಹೇಳಿಕೊಳ್ಳುವುದಿಲ್ಲ. ಅಧ್ಯಯನಗಾರನಾದವ ತಾನು ಬಹಳ ದೊಡ್ಡ ಅಧ್ಯಯನಗಾರ, ಪ್ರಾಚೀನ ಜನಪದ ಅಧ್ಯಯನಗಾರ ಅಂತ ಹೇಳಿಕೊಳ್ಳುವುದಿಲ್ಲ ಹೇಳಿಕೊಂಡರೆ ಆತನಲ್ಲಿ ಏನೋ ಕೊರತೆ ಇದೆ ಅಂತ ಅರ್ಥ. ಜಯರಾಮರು ತಾನು ಪ್ರಾಚೀನ ಜನಪದ ಅಧ್ಯಯನಗಾರನೆಂದು ಹೇಳಿಕೊಂಡು ತನ್ನ ಬೆನ್ನನ್ನು ತಟ್ಟಿಕೊಂಡರು, ಇರಲಿ.
ವಾದದಿಂದ ಫಲವಿಲ್ಲ. ಶೋಧಿಸಿ ತಿಳಿಯಬೇಕು. ಒಬ್ಬರ ವಿಚಾರವನ್ನು ಅಥವಾ ಗ್ರಂಥದ ಅಭಿಪ್ರಾಯಗಳನ್ನು ಹಿಡಿದುಕೊಂಡು ವಾದಿಸಿ ಫಲವಿಲ್ಲ. ಗ್ರಂಥದ ಅಭಿಪ್ರಾಯಗಳು ಜನ ಜೀವನ ಪದ್ದತಿಯಲ್ಲಿ ಇತ್ತಾ ಎಂಬುದನ್ನು ಕಂಡು ಕೊಳ್ಳಬೇಕು. ಅದನ್ನು ಅತ್ಯಾಧುನಿಕ ಕಾಲಕ್ಕೆ ಅಳವಡಿಕೆ ಮಾಡಲು ಸಾಧ್ಯತೆ ಇದೆಯಾ ಎಂಬುದನ್ನು ಶೋಧಿಸಿದಾಗ ಪ್ರಾಚೀನ ಕಾಲದ ದೈವಸ್ಥಾ ನದ ಮೂರ್ತಿಗಳೆಲ್ಲ ಪಾರ್ವತಿ, ಪರಮೇಶ್ವರ ದೇವಸ್ಥಾನಗಳಲ್ಲಿ ಕಾರ್ನಿಕದ ಶಕ್ತಿಗಳಲ್ಲಿ ತಾಳಿಯ ಕುರುಹು ಇದ್ದ ಕಾರಣ, ಶೂದ್ರರು ನಂಬಿದ ದೈವಗಳಲ್ಲಿ ಆಭರಣಗಳಲ್ಲಿ ತಾಳಿ ಇದ್ದ ಕಾರಣ. ಪ್ರಾಚೀನ ಕಾಲದಲ್ಲಿಯೂ ತುಳುನಾಡಿ ನಲ್ಲಿ ತಾಳಿ ಮದುವೆಗೆ ಬಳಸಲ್ಪಡುತ್ತಿತ್ತು ಎಂಬುದನ್ನು ಊಹಿಸಬಹುದು. ಇದಕ್ಕಿಂತ ಪೂರ್ವದಲ್ಲಿ ತಾಳಿ ಇಲ್ಲದೆ ಮದುವೆ ನಡೆಯುತ್ತಿತ್ತು ಎಂಬುದನ್ನು ಗ್ರಂಥದ ಆಧಾರದಲ್ಲಿ ಕಾಣುವಾಗ ಇಲ್ಲದೇ ಇದ್ದರೆ ಆ ಜಾಗಕ್ಕೆ ಯಾವ ಪ್ರಾಮುಖ್ಯತೆ ನೀಡಿದ್ದಾರೆ? ತಾಳಿ ಕಾಲುಂಗುರ ಬಳಕೆ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತ ಪಡಿಸುವುದಕ್ಕೆ ಆಧಾರ ಬೇಕು. ಆಧಾರದ ಅಧ್ಯಯನ ಜಯರಾಮರ ಮಾಡಿ ದ್ದೀರಿ ಎಂದಾದರೆ ನೀವು ಪ್ರಾಚೀನ ಜನಪದ ಅಧ್ಯಯನಗಾರರು ಎಂಬು ದನ್ನು ನೀವೇ ಹೇಳಿಕೊಂಡ ಕಾರಣ ತಾಳಿ ಇಲ್ಲದೆ ಆ ಜಾಗದಲ್ಲಿ ಯಾವ ಪರಿ ಕರಗಳು ಇತ್ತು? ಇಂತಹ ಪ್ರಶ್ನೆಗೆ ನಿಮ್ಮ ಪತ್ರದಲ್ಲಿ ಉತ್ತರ ಇಲ್ಲ. ಓದುಗ ರಿಗೆ ಉತ್ತರ ಸಿಗಬೇಕು. ನಮ್ಮ ಪತ್ರದ ಓದುಗರಿಗೆ ಪ್ರಯೋಜನವಾಗಬೇಕು. ಸುಮ್ಮನೆ ಹೇಳಿದ್ದನ್ನೇ ಹೇಳಿದರೆ ಅದನ್ನು ಹಗ್ಗ ಜಗ್ಗಾಟ ಅಂತ ಕರೆಯುವುದು. ಇದ ರಿಂದ ಓದುಗರ ಸಮಯವೂ ನಷ್ಟ.
ಸಾಮಾಜಿಕ ಪ್ರಾಚೀನ ಜನಪದಶೀಲ ಅಧ್ಯಯನಗಾರರಾದ ನಿಮಗೆ ತಾಳಿ ಬಳಕೆಗೆ ಬಂದ ಕಾಲದಿಂದ ವಿಧವೆ ಇಲ್ಲಿಯವರೆಗೆ ಅನುಭವಿಸಿದ ಶೋಷಣೆ, ಬ್ರಾಹ್ಮಣೇತರರಲ್ಲಿ ಇತ್ತು ಎಂಬುದು ಕಾಣಲಿಲ್ಲ! ಇಂತಹ ಅನಿಷ್ಠ ಪದ್ಧತಿಯ ವಿರುದ್ಧ ಕ್ಷೇತ್ರದಲ್ಲಿ ಆದ ಕಾರ್ಯ ಒಂದು ರೀತಿಯಲ್ಲಿ ಸಾಮಾಜಿಕ ಕ್ರಾಂತಿ ಅಂತ ಹೇಳಿದ್ದು, ಅದು ಕ್ರಾಂತಿ ಅಲ್ಲ ಭ್ರಾಂತಿ ಅಂತ ನೀವು ಹೇಳುವುದಾ ದರೆ ನಿಮ್ಮ ಗ್ರಹಿಕೆ ಅಧ್ಯಯನ ಏನು ಹೇಗೆ ಎತ್ತ ಎಂಬುದು ಸ್ಪಷ್ಟವಾಗುತ್ತದೆ. ಕುದ್ರೋಳಿಯಲ್ಲಿ ವಿಧವೆಯರ ಕಾರ್ಯಕ್ರಮ ಆದ ಕೂಡಲೇ ತಾಳಿ ತುಳು ನಾಡಿನಲ್ಲಿ ಇತ್ತಾ ಎಂಬ ಅಧ್ಯಯನ ಮಾಡಿದ ನಿಮಗೆ, ನಮ್ಮ ತುಳುನಾಡಿನ ಶುಭ ಕಾರ್ಯದಲ್ಲಿ ವಿಧವೆಗೆ ಆಗುತ್ತಿದ್ದ ಶೋಷಣೆ ಕಾಣಲಿಲ್ಲ. ಅದು ಪೂಜಾ ರಿಯವರು ಪ್ರಚಾರಕ್ಕಾಗಿ ಕ್ಷೇತ್ರದ ಮೂಲಕ ಮಾಡಿದ್ದಾರೆ ಎಂಬ ನಿಮ್ಮ ವಿಮರ್ಶೆ ಯಾವ ರೀತಿಯದ್ದು ಎಂಬುದೇ ಅನುಮಾನ ಹುಟ್ಟಿಸುತ್ತದೆ. ನಾನು ಇಂತಹ ಪ್ರಶ್ನೆ ಮಾಡಿದರೆ ಮುಂದಿನ ಪತ್ರದಲ್ಲಿ ಬರುತ್ತದೆ. ಹಠಮಾರಿತನ, ಜ್ಞಾನವಿಲ್ಲದ ಪತ್ರ. ಯಾವ ಜ್ಞಾನ ಎಂದು ಮಂಡಿಸುತ್ತೀರಿ. ವಿವಾಹಕ್ಕೆ ಬ್ರಾಹ್ಮಣ ಪುರೋಹಿತರನ್ನು ಕರೆಯಬಾರದೆಂದು ಪೂಜಾರಿಯವರೇ ಹೇಳಬೇಕೆಂದು ನೀವೇ ಹೇಳಿ. ೨೭ರ ಪತ್ರದಲ್ಲಿ ಹಾಗೆ ಹೇಳಿಲ್ಲ ಅಂತ ಹೇಳುತ್ತೀರಿ. ಹೇಳಿದ್ದನ್ನು ಹೇಳಿಲ್ಲ ಅಂತ ಹೇಳುವವರಲ್ಲಿ ವಿಷಯಾಂತರಗಳು ಎಂಬುದು ಸ್ಪಷ್ಟವಾಗಿ ಕಾಣು ತ್ತದೆ. ವಿಧವೆ ತಾಳಿ ಧರಿಸಬೇಕೆಂಬ ಒತ್ತಡವಿಲ್ಲ. ಆಗ್ರಹವಿಲ್ಲ. ಇಷ್ಟವಿರುವವರು ಧರಿಸಬಹುದು. ಅಥವಾ ಮರು ವಿವಾಹವಾಗಬಹುದು. ಯಾರಿಗೂ ಒತ್ತಡ ಹೇರಿ ದ್ದಲ್ಲ. ಸಾಮಾಜಿಕ ಶೋಷಣೆಯ ವಿರುದ್ಧ ಆದ ಕಾರ್ಯ ಶ್ಲಾಘಿಸಿದ್ದೆ. ನಿಮಗೆ ವಿರೋಧವಾಗಿ ಕಾಣುತ್ತದೆ ಎಂದಾದರೆ ನೀವು ಬಹಳ ದೊಡ್ಡ ಅಧ್ಯಯನಶೀಲ ರೆಂಬುದನ್ನು ನೀವೇ ಹೇಳಿದ್ದೀರಿ. ಹಾಗಾದರೆ ಶೋಷಣೆ ಆದದ್ದು, ಆಗಿದ್ದು ಸುಳ್ಳು ಎಂಬುದು ನಿಮ್ಮ ಅಭಿಪ್ರಾಯವೆಂಬಂತಾಯಿತು.
ನಾನು ಉಲ್ಲೇಖಿಸಿದ ಶ್ಲೋಕವನ್ನು ನೀವು ಸರಿಯಾಗಿ ಓದಿ ಹೆಂಗಸರು ಗಂಡನ ಮಾತನ್ನು ಪಾಲಿಸಬೇಕು. ಇದೇ ಅವರಿಗೆ ಪರಮಧರ್ಮ. ಸದಾಚಾರ ಶೀಲಳಾದ ಹೆಂಡತಿಯನ್ನು ಬಿಟ್ಟರೆ ಗಂಡ ಧರ್ಮದಿಂದ ಪತಿತನಾಗುತ್ತಾನೆ. ಇಲ್ಲಿ ಪತಿತ ಶಬ್ದಾರ್ಥ ಬಿದ್ದ- ಚ್ಯುತಿ ಹೊಂದಿದವ ಎಂಬುದು. ಗಂಡನು ಸದಾಚಾರ ಶೀಲನಾಗಬೇಕು. ಗಂಡ - ಹೆಂಡತಿ ಇಬ್ಬರೂ ಧರ್ಮದಲ್ಲಿ ನಡೆಯಬೇಕೆಂದು ಅರ್ಥ. ಹೆಂಗಸರಿಗೆ ಹೇರಿಕೆ ಅಲ್ಲ. ಇಬ್ಬರಿಗೂ ನೀತಿ ಹೇಳಿದ್ದು ಈ ಶ್ಲೋಕದ ನಿಜ ಅರ್ಥ. ನನ್ನ ಹಿಂದಿನ ಎಲ್ಲಾ ಪತ್ರದಲ್ಲಿ ಇದ್ದ ಅಂಶಗಳನ್ನು, ತಪ್ಪುಗಳನ್ನು ಎತ್ತಿ ತೋರಿಸಿ ಜಯರಾಮರೇ, ಚರ್ಚಿಸಲು ಯಾಕೆ ಬಯಸುವುದಿಲ್ಲ ನೀವು? ನಾನು ೧೫ಕ್ಕಿಂತ ಹೆಚ್ಚು ಪತ್ರ ಬರೆದಿರಬಹುದು. ಅದರಲ್ಲಿನ ತಪ್ಪನ್ನು ಹುಡುಕಿ ಎತ್ತಿ ತೋರಿಸಿ. ಜನಾಂಗದ ಹಿರಿಯರು ಮಾಡುತ್ತಿದ್ದ ಮದುವೆಗೆ ಪುರೋಹಿತರು ನುಸುಳಿದ್ದು, ಈ ಅಭಿಪ್ರಾಯ ಸತ್ಯವೆಂಬುದನ್ನು ನಾನು ಒಪ್ಪುತ್ತೇನೆ. ನಿಮ್ಮ ಈ ಒಂದು ಅಭಿಪ್ರಾಯಕ್ಕೆ ನಿಮ್ಮನ್ನು ಶ್ಲಾಘಿಸುತ್ತೇನೆ. ‘ಗುರ್ಕಾರ ಹೇಗಿರಬೇಕು ಎಂಬು ದನ್ನು ಗ್ರಹಿಸಬೇಕು. ಗುರಿಕಾರ ಅಂದರೆ ಯಜಮಾನ, ಒಡೆಯ, ನಾಯಕ, ಒಂದು ಊರಿನ ಸಮುದಾಯದ ಗುರಿಕಾರನು ಆ ಸಮುದಾಯಕ್ಕೆ ಆದರ್ಶಪ್ರಾ ಯನಾಗಬೇಕು. ನಿಷ್ಪಕ್ಷಪಾತವಾಗಿರಬೇಕು. ನೈತಿಕತೆ, ಶೀಲವಂತನಾಗಿರಬೇಕು. ಈಗ ಗುರಿಕಾರ ಮೂಲೆ ಗುಂಪು ಆಗುವುದಕ್ಕೆ ಅವರೂ ಪರೋಕ್ಷ ಕಾರಣರು.
ಕೆಲವು ಮದುವೆಗಳಲ್ಲಿ ಗುರಿಕಾರ ಬಾರದೇ ಇರುವುದು. ಮದುವೆ ಮಂಟ ಪದಲ್ಲಿಯೇ ಅಸಹ್ಯ ತರ ವರ್ತಿಸುವುದು, ಮಹಿಳೆಯರ ಜೊತೆ ಅಸಭ್ಯ ವರ್ತನೆ ಇದು ಕೂಡಾ ಕಾರಣ. ತಾನೇ ಸರ್ವಾಧಿಕಾರಿ, ಗೌರವಗಳು ಮೊದಲು ನನಗೆ ಸಲ್ಲಬೇಕು ಎಂಬ ಆಗ್ರಹ ಬುದ್ದಿ ಕೆಲವು ಹಿರಿಯ ಗುರಿಕಾರರಲ್ಲಿ ಇವತ್ತಿಗೂ ಇರು ವುದನ್ನು ಕಾಣಬಹುದು. ತನ್ನ ಹೆಂಡತಿ ಬಿಟ್ಟು ಇನ್ನೊಬ್ಬನ ಮನೆಗೆ ದಿನಾ ಬಂದು ಆತನ ಹೆಂಡತಿಯೊಂದಿಗೆ ಸಖ್ಯ ಬೆಳೆಸುವುದು. ಮೂರು ನಾಲ್ಕು ಗುಟ್ಟಿನಲ್ಲಿ ಮದು ವೆಯಾಗುವುದು. ತನ್ನ ಕುಟುಂಬದ ಹೆಣ್ಣುಗಳನ್ನು ಕೆಡಿಸುವುದು. ಇತ್ಯಾದಿ ಕಾರ್ಯ ಮಾಡಿದ ಗುರಿಕಾರರು ಈಗಲೂ ಇದ್ದಾರೆ. ಅವರ ಇಂತಹ ಕಾರ್ಯದಿಂದ ಬೇಸತ್ತ ಜನ ಪುರೋಹಿತರನ್ನು ಕರೆಸಿ ಮದುವೆ ಮಾಡಿಸಿದ್ದು ಇದೆ. ಅದನ್ನು ಗಮ ನಿಸಬೇಕು. ಧರ್ಮದ ತಳಹದಿಯಲ್ಲಿಯೇ ನಡೆದು ತನ್ನ ಪಥದಿಂದ ಜಾರದೇ ಶುಭ್ರ ಚಾರಿತ್ರ್ಯದ ಯಜಮಾನರು, ಗುರಿಕಾರರು ಈಗಲೂ ಇದ್ದಾರೆ. ಅಂಥವರು ಮಾನ್ಯರು. ಇಂಥವರಿಂದ ಮದುವೆ ಮಾಡಿದರೆ ಯಾವ ಹೋಮ, ಹವನ, ಮಂತ್ರ, ತಂತ್ರಗಳು ಪೂಜೆ ಬೇಕಾಗಿಲ್ಲ ಜಯರಾಮರೇ.
ಬನ್ನಂಜೆಯವರ ಪುಸ್ತಕದಲ್ಲಿ ತಾಳಿ ಇಲ್ಲದೆ ನಡೆಸಿದ ಉದಾಹರಣೆಗಳಿದ್ದರೂ ಬಂಗಾರದ ಬದಲಿಗೆ ಬೆಳ್ಳಿಯ ತಾಳಿ, ಅಥವಾ ರೋಲ್ಡ್ ಗೋಲ್ಡ್ ಬಳಕೆ ಇತ್ತು ಎಂಬುದನ್ನು ಅವರೂ ಕಾಣಿಸಿದ್ದಾರೆ. ಅವರು ಸೂಚಿಸಿದ ಉದಾಹರಣೆಗಳಿಗೆ ವಿರುದ್ಧವಾಗಿ ಅಲ್ಲಲ್ಲಿ ಕರಿಮಣಿ ಕಟ್ಟಿ ಮದುವೆಯಾದ ಅದೇ ಇಸವಿಯಲ್ಲಿ ನಿದರ್ಶ ನಗಳಿವೆ. ಆ ಕಾರಣದಿಂದ ತಾಳಿಯೇ ಇಲ್ಲವೆಂಬ ನಿರ್ಧಾರ ಪ್ರಕಟಿಸುವುದು ತಪ್ಪು. ತಾಳಿಯಿದ್ದು ಕೆಲವು ಕಡೆ ತಾಳಿ ಇಲ್ಲದೆಯೂ ಮದುವೆ ನಡೆದದ್ದಂತೂ ಸತ್ಯ.

ಪ್ರೀತಿಯಲ್ಲಿ ಸಂಯಮ ಕಾಪಾಡಿಕೊಳ್ಳಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೬ ವರ್ಷ ವಯಸ್ಸು. ನಾನು ಒಬ್ಬಳನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನಾವು ವಾರಕ್ಕೊಮ್ಮೆ ಆದಿತ್ಯವಾರ ಭೇಟಿ ಯಾಗುತ್ತೇವೆ. ಅವಳನ್ನು ನಾನು ಬಹಳ ಇಷ್ಟಪಡುತ್ತೇನೆ. ಅವಳೂ ನನ್ನನ್ನು ಪ್ರೀತಿಸುತ್ತಾಳೆ. ಅವಳು ಈಗ ಡಿಗ್ರಿ ಕಲಿಯುತ್ತಿದ್ದಾಳೆ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತಿರುವ ಕಾರಣ ತಿಂಗಳ ಹಿಂದೆ ಆಕೆ ಯಲ್ಲಿ ಸೆಕ್ಸ್ ಮಾಡೋಣ ಎಂದು ಕೇಳಿದ್ದಕ್ಕೆ ಆಕೆ ಒಪ್ಪಿಗೆ ಕೊಟ್ಟಿ ದ್ದಳು. ನಾನು ಆಕೆಯನ್ನು ಒಂದು ದಿನ ಲಾಡ್ಜ್‌ಗೆ ಕರೆದುಕೊಂಡು ಹೋದೆ. ಆಕೆ ನನಗೆ ಸಮ್ಮತಿ ನೀಡಿದಳು. ನಾನು ಮೊದಲ ಬಾರಿ ಆಕೆಯ ಜೊತೆ ಸೆಕ್ಸ್ ಮಾಡಿದೆ. ನಾವು ಅಂದು ಕೆಲವು ಬಾರಿ ಸೆಕ್ಸ್ ನಡೆಸಿದ್ದೇವೆ. ನನ್ನ ಸಮಸ್ಯೆಯೇನೆಂದರೆ, ಈ ವೇಳೆ ನಾನು ನಿರೋಧ್ ಬಳಸಿಲ್ಲ. ಈಗ ಅವಳಿಗೆ ಮುಟ್ಟು ನಿಂತಿದೆ ಎನ್ನುತ್ತಿದ್ದಾಳೆ. ನನಗೆ ಇದರಿಂದ ಭಯ ಆರಂಭವಾಗಿದೆ. ಆಕೆಯ ಮನೆಯವರು ತುಂಬಾ ಜೋರಿದ್ದಾರೆ. ಆಕೆಗೆ ತಂದೆ-ತಾಯಿ ಇಲ್ಲ. ಅಣ್ಣಂದಿರು ಅವಳನ್ನು ಓದಿಸುತ್ತಿದ್ದಾರೆ. ಈ ವಿಚಾರ ಅವರಿಗೆ ತಿಳಿದರೆ ನನ್ನನ್ನು ಬಿಡಲಿಕ್ಕಿಲ್ಲ. ನನಗೆ ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಅನಿಸು ತ್ತದೆ. ಆಕೆ ನನ್ನನ್ನು ಬೇಗ ಮದುವೆಯಾಗು, ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ನನ್ನನ್ನು ಇನ್ನಷ್ಟು ಹೆದರಿಸುತ್ತಾಳೆ. ನಾನು ಸೆಕ್ಸ್ ವೇಳೆ ನಿರೋಧ್ ಬಳಸದಿದ್ದರೂ ಜನನಾಂಗ ಸ್ರವಿಸುವುದಕ್ಕೆ ಮುನ್ನ ಆಕೆಯ ಜನನಾಂಗದಿಂದ ಶಿಶ್ನವನ್ನು ಹೊರ ತೆಗೆದಿದ್ದೇನೆ. ಆದರೂ ಆಕೆ ಗರ್ಭ ಧರಿಸಲು ಕಾರಣವೇನು? ಆಕೆಯ ಮನೆಯಲ್ಲಿ ತಿಳಿದರೆ ನಾನು ಅವರ ಮನೆಗೆ ಹೋಗಿ ಧೈರ್ಯವಾಗಿ ಎಲ್ಲಾ ವಿಚಾರ ಹೇಳಿಬಿಡಬೇಕು ಎಂದು ಹೇಳುತ್ತಿದ್ದಾಳೆ. ನಾನೇನು ಮಾಡುವುದೆಂದು ತಿಳಿಸಿ.
ಸಲಹೆ: ನಿಮಗೆ ೨೬ ವರ್ಷ ವಯಸ್ಸು, ನಿಮ್ಮ ಲವರ್ ಇನ್ನೂ ಹದಿವಯಸ್ಸಿನ ವಳು. ಆಕೆಗೆ ಪ್ರೀತಿ, ಪ್ರೇಮ, ಲೈಂಗಿಕ ವಿಚಾರ ಸರಿಯಾಗಿ ತಿಳಿದಿದೆಯೇ? ನೀವು ಕಾಲೇಜ್ ಓದುತ್ತಿರುವ ಹುಡುಗಿ ಜೊತೆ ಸೇರಿ ಆಕೆಗೆ ಗರ್ಭ ಬರಿಸಿ ದೊಡ್ಡ ಸಾಧನೆ ಮಾಡಿದ್ದೀರಿ. ನೀವು ಇನ್ನೂ ಒಂದು ವಿಷಯ ತಿಳಿದುಕೊಳ್ಳಿ. ಸೆಕ್ಸ್ ಅಥವಾ ಸಂಭೋಗ ನಡೆಸಲು ದೇಹ ಬೆಳೆದರಷ್ಟೇ ಸಾಲದು. ಮನಸ್ಸು ಕೂಡಾ ಸಾಕಷ್ಟು ಪ್ರೌಢತೆಯನ್ನು ಪಡೆದಿರಬೇಕಾಗುತ್ತದೆ. ಇಲ್ಲದಿದ್ದರೆ ಇಂತಹ ಸಮಸ್ಯೆಗಳು ಸಾಮಾನ್ಯ. ಗರ್ಭ ನಿರೋಧಕ ಸಾಧನ ಕಾಂಡೋಂ ಅತೀ ಸುಲಭವಾಗಿ ದೊರೆಯುತ್ತದೆ. ಇದನ್ನು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಬಳಸಿ ಎಂದು ಸರಕಾರಿ ಜಾಹೀರಾತು ಬಾರಿ-ಬಾರಿ ಹೇಳುತ್ತದೆ. ಆದರೆ ಇದನ್ನು ನಿಮ್ಮಂಥವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ನೀವು ಸೆಕ್ಸ್ ವೇಳೆ ಕಾಂಡೋಂ ಬಳಸದೇ ಇರುವುದು ತಪ್ಪು. ಇದರಿಂದ ಆಕೆಗೆ ಗರ್ಭ ಧರಿಸಿರುವ ಸಾಧ್ಯತೆಯಿದೆ. ಜನನಾಂಗ ಸ್ರವಿಸುವ ವೇಳೆ ಶಿಶ್ನವನ್ನು ಹೊರಕ್ಕೆ ತೆಗೆದಿದ್ದರೆ ಗರ್ಭ ಧರಿಸುವುದು ಅಸಾಧ್ಯ. ಆದರೆ ಈ ವೇಳೆ ಸ್ವಲ್ಪವೇ ಎಚ್ಚರಿಕೆ ತಪ್ಪಿದರೂ ಗರ್ಭ ಧರಿಸುವ ಸಾಧ್ಯತೆಯಿದೆ. ಆಕೆಗೆ ಈಗ ಮುಟ್ಟಿನ ಅವಧಿ ದಾಟಿಯೂ ಮುಟ್ಟಾ ಗದಿದ್ದರೆ ಏನಾದರೂ ಸಮಸ್ಯೆಯಾಗಿರುವ ಸಾಧ್ಯತೆಯಿದೆ. ಆದ್ದ ರಿಂದ ಆಕೆ ಹೇಳಿದಂತೆ ಧೈರ್ಯವಿದ್ದರೆ ಆಕೆಯ ಮನೆಗೆ ಹೋಗಿ ವಿಚಾರ ತಿಳಿಸಿ. ನೀವು ಆತ್ಮಹತ್ಯೆಗೈಯುವುದು ಷಂಡತನವೇ ಸರಿ. ಬಂದ ಸಮಸ್ಯೆಯನ್ನು ಎದುರಿಸಿ ಬದುಕಲು ಕಲಿಯಿರಿ. ಆಕೆ ಯನ್ನು ತಜ್ಞ ವೈದ್ಯೆಯ ಬಳಿ ತಪಾಸಣೆ ನಡೆಸುವಂತೆ ಹೇಳಿ. ಸಾಧ್ಯವಾದರೆ ವೈದ್ಯೆಯ ಬಳಿ ಎಲ್ಲವನ್ನೂ ವಿವರಿಸಿ ಸಲಹೆ ಪಡೆ ಯಿರಿ. ವೈದ್ಯರ ಸಲಹೆ ಮೇರೆಗೆ ಗರ್ಭ ತಡೆಗಟ್ಟುವ ಮಾತ್ರೆಗ ಳನ್ನು ಸೇವಿಸಬಹುದು. ಅದೂ ಸಾಧ್ಯವಾಗದೇ ಇದ್ದರೆ ಆಕೆಯನ್ನು ಕೂಡಲೇ ವಿವಾಹವಾಗಿ. ವಿವಾಹಪೂರ್ವ ಸೆಕ್ಸ್ ಒಳ್ಳೆಯದಲ್ಲ. ಇದರಿಂದ ಇಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನು ವುದನ್ನು ಇನ್ನಾದರೂ ತಿಳಿಯಿರಿ.

4-4-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗ ರಂಗದಲ್ಲಿ ಸಮಸ್ಯೆಗಳು ಇರುತ್ತದೆ.
ವೃಷಭ : ವ್ಯಾಪರ ವ್ಯವಹಾರದಲ್ಲಿ ಲಾಭ ಕಡಿಮೆ.
ಮಿಥುನ : ಕುಟುಂಬದಲ್ಲಿ ಒಮ್ಮತ ಇರುತ್ತದೆ.
ಕರ್ಕಾಟಕ : ಶುಭ ಕೆಲಸಗಳನ್ನು ನಡೆಸುವ ಯೋಗ ಇದೆ.
ಸಿಂಹ : ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಕನ್ಯಾ : ಮಕ್ಕಳಿಂದ ಸಹಕಾರ ದೊರೆಯುವುದು.
ತುಲಾ : ಭೂಮಿ ವ್ಯವಹಾರದಲ್ಲಿ ಪ್ರಗತಿ ಇರುವುದು.
ವೃಶ್ಚಿಕ : ಹಿರಿಯರ ಆರೋಗ್ಯದ ಸಮಸ್ಯೆ ಇರುತ್ತದೆ.
ಧನು : ಅನಾರೋಗ್ಯದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮಕರ : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ಕುಂಭ : ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.
ಮೀನ : ಹಣಕಾಸಿನ ತೊಂದರೆ ಇದೆ.

4-4-2012

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಬಾರಿಗೆ ವೇಟರ‍್ಸ್ ಬೇಕು ೯೯೧೬೭೩೪೯೩೩.
ಕೊಡಿಯಾಲ್‌ಬೈಲ್: ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್, ಬ್ಲೌಸ್‌ಪೀಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೯೯೭೨೭೨೫೪೪೪.
ಸುರತ್ಕಲ್: ಲೇಡಿಸ್ ಟೈಲರ್, ಸೇಲ್ಸ್‌ಗೆ ಜನ ಬೇಕು ೯೮೪೪೫೪೩೧೫೧.
ಬಿಜೈ: ಆಫೀಸ್‌ಗೆ ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೪೪೮೪೦೯೨೦೪.
ಹಂಪನಕಟ್ಟೆ: ಬಟ್ಟೆ ಶಾಪಿಗೆ ಸೇಲ್ಸ್‌ಗರ್ಲ್, ಎಟೆಂಡರ್ ಬೇಕು ೨೪೨೧೧೭೭.
ಮಂಗಳೂರು: ವಾಟರ್ ಕ್ಯೂರಿಫೈ ಎಕ್ಸಿಕ್ಯೂಟಿವ್ ಬೇಕು ೯೦೬೦೯೭೯೬೨೭.
ಮಂಗಳೂರು: ಎಸ್‌ಎಸ್‌ಎಲ್‌ಸಿ ಪಾಸ್ ಅಥವಾ ಫೈಲ್ ಆದವರು ಆಪೀಸ್ ಕೆಲಸಕ್ಕೆ ಬೇಕು ೯೦೧೯೭೦೯೯೯೩.
ಕಿನ್ನಿಗೋಳಿ: ಡಿಟಿಪಿ ಅಪರೇಟರ್ ಬೇಕು ೯೬೬೩೩೯೩೩೭೪.
ಕದ್ರಿ: ಕಂಪ್ಯೂಟರ್ ಜ್ಞಾನವಿರುವ ಯುವತಿಯರು ಬೆಕು ೯೮೮೬೪೧೪೮೯೮.
ಕಾರ್ಕಳ: ಹೊಟೇಲಿಗೆ ಸಪ್ಲಾಯರ್ ಮತ್ತು ಚಾ ಕೌಂಟರಿಗೆ ಜನ ಬೇಕು ೦೮೨೫೮೨೩೪೧೪೭.
ಮಂಗಳೂರು: ಡ್ರೈವಿಂಗ್ ಸ್ಕೂಲ್‌ಗೆ ಮ್ಯಾನೇಜರ್ ಬೇಕು ೯೭೪೩೩೯೧೨೪೧.
ಸುರತ್ಕಲ್: ರೆಡಿಮೇಡ್ ಬಟ್ಟೆ ಸ್ಟಿಚ್ಚಿಂಗ್ ಮಾಡಲು ಲೇಡಿ ಮತ್ತು ಜಂಟ್ಸ್ ಬೇಕು ೯೪೮೧೯೭೦೫೫೪.
ಮಂಗಳೂರು: ಮಂಗಳಾದೇವಿ ಹೊಟೇಲಿಗೆ ಕ್ಲೀನರ್, ರುಬ್ಬುವವರು, ಅಡುಗೆ ತಿಂಡಿಯವರು, ಮೋರಿಗೆ ಹೆಂಗಸು ಬೇಕು ೨೪೧೮೬೮೨.
ಉರ್ವ: ಹೊಟೇಲಿಗೆ ಅಡುಗೆಯವರು ಬೇಕು ೦೯೮೪೪೫೭೩೬೧೫.
ಮಂಗಳೂರು: ಫ್ಯಾನ್ಸಿ ಅಂಗಡಿಗೆ ನುರಿತ ಯುವಕ - ಯುವತಿಯರು ಬೇಕು. ಉತ್ತಮ ವೇತನವಿದೆ. ೯೪೪೯೧೩೯೪೭೫.
ಬಲ್ಮಠ : ಅಪಾರ್ಟ್‌ಮೆಂಟ್ ಹಾಗೂ ಗೆಸ್ಟ್ ಹೌಸ್ ಕ್ಲೀನಿಂಗ್‌ಗೆ ಜನ ಬೇಕು. ೯೮೮೦೮೦೯೮೦೩.
ಮಂಗಳೂರು : ಲೇಡಿಸ್ ಟೈಲರ್ ಬೇಕು ೯೦೩೫೦೯೦೩೪೫.
ಬೆಳ್ತಂಗಡಿ : ಆಫೀಸ್‌ಗೆ ಲೇಡಿ ಸ್ಟಾಫ್ ಬೇಕು ೯೪೮೩೫೦೦೪೯೫.
ಬಂದರ್ : ಪ್ರಿಂಟಿಂಗ್ ಪ್ರೆಸ್‌ಗೆ ಯುವಕ ಯುವತಿಯರು ಬೇಕು ೯೮೪೪೫೯೨೧೮೨.
ಮೂಡುಬಿದ್ರೆ : ಲೈನ್‌ಸೇಲ್‌ಗೆ ಹುಡುಗರು ಬೇಕು ೮೭೧೦೮೩೮೮೯೨.
ಮಂಗಳೂರು : ಪುಸ್ತಕ ಮಳಿಗೆಗೆ ಹೆಲ್ಪರ್ ಬೇಕು ೨೪೨೪೭೪೪.
ಮಂಗಳೂರು : ಕಚೇರಿ ಕೆಲಸಕ್ಕೆ ದ್ವಿಚಕ್ರ ವಾಹನ ಗೊತ್ತಿರುವ ಹುಡುಗರು ಬೇಕು ೯೮೪೫೩೫೫೮೧೪.
ಹಂಪನಕಟ್ಟೆ : ಸಂಸ್ಥೆಗೆ ಜನ ಬೇಕು ೮೨೭೭೧೬೫೦೬೨.
ಮೂಡಬಿದ್ರೆ: ಪಾನೀಯ ಸಂಸ್ಥೆಗೆ ಜನ ಬೇಕು ೯೯೮೬೦೮೧೨೮೦.
ಸುಳ್ಯ : ಟೈಲರಿಂಗ್ ಅಂಗಡಿಗೆ ಲೇಡಿಸ್ ಟೈಲರ್ ಬೇಕು ೯೯೬೪೮೭೪೨೫೫.
ಬೈಕಂಪಾಡಿ : ಔಷಧಿ ತಯಾರಿಕಾ ಕಂಪೆನಿಯಲ್ಲಿ ಪ್ಯಾಕಿಂಗ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೦೨೨೮೩೭೮.

4-4-2012

Posted by JAYAKIRANA Kirana on | 0 comments | Leave a comment...

ನೋಡೋಣ
ಬೆಕ್ಕು ಹಾಲು ಕುಡಿಯುವಾಗ
ಕಣ್ಣು ಮುಚ್ಚುತ್ತೆ. ಆದರೆ ಹುಡುಗಿ
ಹುಡುಗನಿಗೆ ಕಿಸ್ ಕೊಡುವಾಗ ಯಾಕೆ ಕಣ್ಣು ಮುಚ್ಚುತ್ತಾಳೆ?
ನಿಮ್ಮ ತಲೆಯಲ್ಲ್ಲಿ ಬೊಂಡು
ಇದ್ದರೆ ಆನ್ಸರ್ ಮಾಡಿ ನೊಡೋಣ.

ನೆನಪು
ಸಮುದ್ರ ಹುಟ್ಟೋದು ಮಳೆಯ ಹನಿಗಳಿಂದ, ಅಲೆಗಳು ಹುಟ್ಟೋದು ಗಾಳಿಯ ರಭಸದಿಂದ, ಆದರೆ ಬದುಕು ತುಂಬಾ ಸುಂದರವಾಗಿ ಕಾಣೋದು ನಿಮ್ಮಂಥ ಸ್ನೇಹಿತರ ನೆನಪಿನಿಂದ. ಅದಕ್ಕೋಸ್ಕರವೇ ಜೀವನ ಅಂದ ಮೇಲೆ ಫ್ರೆಂಡ್ಸ್ ಇರಬೇಕು ಅನ್ನೋದು.

ಸಿಗಲ್ಲ
ಜೀವನದ ಅತ್ಯಂತ ನೋವಿನ
ಕ್ಷಣ ಯಾವುದು ಗೊತ್ತಾ ?
ನಾವು ತುಂಬಾ ಪ್ರೀತಿಸುವ
ವ್ಯಕ್ತಿ ಇನ್ಯಾವತ್ತೂ ನಮ್ಗೆ ಸಿಗಲ್ಲ ಅಂತಾ ಗೊತ್ತಿದ್ದರೂ ಅವರ ಜೊತೆ ಮಾತಾಡ್ತೇವೆ ಅಲ್ವಾ ಅದು.

ಕನಸು
ಕನಸು ಯಾವಾಗ್ಲೂ ಕನಸೇ
ಆಗಿರುತ್ತೇ, ನಮ್ಮವರು ಯಾವಾಗ್ಲೂ ನಮ್ಮವರೇ ಆಗಿರ‍್ತಾರೆ, ನೀವು ಕನಸನ್ನು ಬೇಕಾದ್ರೆ ನಿಮ್ಮದಾಗಿಸಿ ಆದರೆ ನಿಮ್ಮವರನ್ನು ಎಂದಿಗೂ ಕನಸು
ಮಾಡಬೇಡಿ.

ಇಂತಿ ನಿಮ್ಮ
ಪ್ರೀತಿಯ ಗೆಳೆಯನಾದ ಸಿಗರೇಟಿಗೆ ನಿನ್ನ ಪ್ರೀತಿಯ ಹೊಗೆಸೊಪ್ಪು ಮಾಡುವ ನಮಸ್ಕಾರಗಳು
ವಿಷಯ: ನನ್ನ ಪೂಜ್ಯ ತಂದೆಯವರಾದ ಪಾನ್‌ಪರಾಗ್ ತೀರಿಕೊಂಡು ೧೧ ದಿವಸವಾಯಿತು. ಆದ್ದರಿಂದ ಅವರ ಪುಣ್ಯತಿಥಿ ಇರುವುದರಿಂದ ತಮ್ಮ ಮಗನಾದ ಬೀಡಿ ಮತ್ತು ಬೆಂಕಿಪೊಟ್ಟಣವನ್ನು ತಪ್ಪದೆ ಕರ‍್ಕೊಂಡು ಬರುವುದು ಮತ್ತು ಅವತ್ತಿನ ಸಂಜೆ ಗುರುಹಿರಿಯರಾದ ವಿಸ್ಕಿ, ಬ್ರಾಂಡಿ, ರಮ್ ಇವರಿಂದ ಹರಿಕಥೆ ಏರ್ಪಡಿಸಲಾಗಿದೆ. ತಾವು ತಪ್ಪದೆ ಬರ‍್ಬೇಕು,
ಇಂತೀ ನಿಮ್ಮ ವಿಧೇಯ ಹೊಗೆಸೊಪ್ಪು!

ಮರೆಯಲ್ಲ
ಹಡಗಿನಲ್ಲಿ ಹೋಗುವಾಗ ನಿನ್ನ
ನೆನಪಾಯಿತು. ಕಣ್ಣ ಹನಿಯೊಂದು ಸಾಗರಕ್ಕೆ ಬಿತ್ತು
ಆಗಲೇ ಡಿಸೈಡ್ ಮಾಡಿದೆ
ಆ ಹನಿಯು ಸಿಗುವವರೆಗೂ ನಾ ನಿನ್ನ ಮರೆಯಲ್ಲ ಅಂತ.

ಮೈಸೂರಿನ ಸೀರಿಯಲ್ ಕಿಲ್ಲರ್

Posted by JAYAKIRANA Kirana on | 0 comments | Leave a comment...

ಒಂದಾದ ಮೇಲೆ ಒಂದರ ಹಾಗೆ ನಿರ್ದಯವಾಗಿ ಆರು ಕೊಲೆಗಳನ್ನು ಮಾಡಿ ಮುಗಿಸಿದೆ. ನನ್ನನ್ನ ನೋಡಿ ದವರ‍್ಯಾರೂ ನನ್ನೊಳಗೊಬ್ಬ ಭಯಾನಕ ಕೊಲೆಗಾರ ಇರಬಹುದು ಅಂತ ಒಂದೇ ಒಂದು ಸಲಕ್ಕೂ ಅನು ಮಾನ ಪಡ್ತಿರಲಿಲ್ಲ. ಕೊಲೆ ಮಾಡೋ ಆ ಕ್ಷಣದಲ್ಲಿ ನನಗಿಂತ ನಿರ್ದಯಿಯಾದ ಪಾತಕಿ ಇನ್ನೊಬ್ಬನಿರೋ ದಕ್ಕೆ ಸಾಧ್ಯವೇ ಇಲ್ಲ ಅನ್ನಿಸೋ ಹಾಗಿರ‍್ತಿದ್ದೆ. ಅದನ್ನೇ ನಾನು ವಿಚಿತ್ರ ಅಂದಿದ್ದು. I ಚಿm ಉemiಟಿi ನನಗೆ ಎರಡು ಅಸ್ತಿತ್ವಗಳಿವೆ. ನೀವು ಎರಡನೇ ಅಸ್ತಿತ್ವದ ಬಗ್ಗೆ ಬರೀತಿ ದೀರಿ. ಂbouಣ ಣhe ಞiಟಟeಡಿ iಟಿ me!
ಆದರೆ ಯಾವತ್ತಾದರೂ ಒಂದಿನ ಡಾಕ್ಟರಾಗ್ತೀನಿ. ಉಸಿರಿಗಾಗಿ ಒದ್ದಾಡ್ತಾ ಇರೋ ಸಾವಿರಾರು ಜನರನ್ನ ಸಾವಿನ ದವಡೆಯಿಂದ ಕಾಪಾಡ್ತೀನಿ. ಈ ದೇಶಕ್ಕೆ ಮನುಷ್ಯ ಸಂಕುಲಕ್ಕೆ ನನ್ನ ಕೈಲಾದ ಸೇವೆ ಮಾಡ್ತೀನಿ ಅಂತ ಕನವರಿಸ್ತಾ ಇದ್ನಲ್ಲ. ಆವಾಗಿನ ನನ್ನ ಕಥೆ ಕೇಳೋದಿಕ್ಕೆ ನೀವೂ ಇರಲಿಲ್ಲ. ಬೆನ್ನು ತಟ್ಟೋಕೆ ಈ ಸಮಾಜವೂ ಇರಲಿಲ್ಲ. ಡಾಕ್ಟರಾಗಿ ಜೀವ ಉಳಿಸಬೇ ಕಾದೋನು ಇವತ್ತು ಆರು ಜೀವ ಅಳಿಸಿ ಹಾಕಿ ನಿಮ್ಮ ಮುಂದೆ ಬಂದು ಕೂತಿದೀನಿ. ನೀವು ಕಥೆ ಹೇಳಿ ಅಂತಿ ದೀರಿ. ನಿಮ್ಮದೂ ಒಂಥರಾ ಜuಚಿಟiಣಥಿ ನೇ!
’Iಣ oಞಚಿಥಿ. ಹೇಳೋ ಕಥೆ ಹೇಳಿ ಬಿಡ್ತೀನಿ, ಅದೇನು ಬರೀತೀರೋ ಬರೀರಿ. ನನ್ನ ಹುಟ್ಟೂರು ಶಿವಮೊಗ್ಗ. ನನ್ನ ತಂದೆ ಶಂಕರ ಪ್ರಸಾದ್, ಶಿಕ್ಷಣ ಇಲಾಖೇಲಿ ಎಇಓ ಆಗಿದ್ರು. ನನ್ನ ಅಣ್ಣ ನರೇಂದ್ರ ಪ್ರಸಾದ್ ಈಗ ಲಾಯರ್ ಆಗಿದಾನೆ. ನಾವಿಬ್ಬರೇ ಮಕ್ಕಳು ನಮ್ಮ ತಂದೆ ತಾಯಿಗೆ. ಹುಟ್ಟಿದ್ದು ಬ್ರಾಹ್ಮಣನಾಗಿ. ಆದರೆ ದೇವರನ್ನ ಯಾವತ್ತಿಗೂ ನಂಬಲಿಲ್ಲ. ನಂಬಿದ್ದಿದ್ರೆ ದೇವರಿಗೆ ಕೈ ಮುಗಿದೇ ಕೊಲೆ ಮಾಡ್ತಿದ್ನೇನೋ? ಬಚಾವಾದಾಗ, ದೇವರೇ ಬಚಾವು ಮಾಡಿದ ಅಂದ್ಕೋತಿದ್ನೇನೋ? ನಾನು ಕೇವಲ ನನ್ನನ್ನ ನಂಬಿಕೊಂಡಿದ್ದೆ. ನನ್ನ ಕೊಲೆ ಗಳಿಗೆ ದೇವರು ಭಾಗಿಯಾಗಲಿಲ್ಲ. ನಾನು ಹುಟ್ಟಿದ್ದು ೧೯೫೯ಜೂನ್ ೭ನೇ ತಾರೀಕು.
ಶಿವಮೊಗ್ಗದಲ್ಲಿದ್ದ ತನ್ನ ತಂದೆಗೆ ವರ್ಗಾ ಆಗ್ತಾ ಇತ್ತು. ಅವರು ಮೈಸೂರಿಗೆ ಬಂದು ಶಿಫ್ಟ್ ಆದರು. ಆಮೇಲೂ ವರ್ಗಾ ಆಯಿತು. ಆದರೆ ಕುಟುಂಬವನ್ನು ಮೈಸೂರಿನಲ್ಲೇ ನೆಲೆಗೊಳಿಸಿದರು. ಲಕ್ಷ್ಮೀಪುರಂನಲ್ಲಿ ನಮ್ಮ ಮನೆ. ಮೊದಲಿಂದ ತುದಿ ತನಕ ಅದೇ ಮೈಸೂರಿ ನಲ್ಲೇ ಬದುಕಿದೆ. ಅಲ್ಲೇ ಎಲಿಮೆಂಟರಿ ಸ್ಕೂಲ್ ಮುಗಿ ಸಿದೆ. ಮೈಸೂರಿನ ಹಾರ್ಡ್‌ವಿಕ್ ಇಂಗ್ಲೀಷ್ ಹೈಸ್ಕೂಲ್ ಸೇರಿಕೊಂಡೆ. ಯಾರಿದ್ರು ನನ್ನ ಕ್ಲಾಸಿನಲ್ಲಿ ನನಗಿಂತ ಬುದ್ಧಿವಂತರು? ರವೀ ಸಾರ್, ಬಿಲೀವ್ ಮಿ ನಾನ್ಯಾ ವತ್ತೂ ಎರಡನೇ ರ‍್ಯಾಂಕಿಗೆ ಇಳೀಲಿಲ್ಲ. ಊಚಿಡಿಜ ತಿiಛಿಞe ಶಾಲೆಯ ಖಿoಠಿ boಥಿ bಚಿಜge ಪ್ರತೀ ವರ್ಷ ನನ್ನ ಹತ್ರಾನೇ ಇರ‍್ತಿತ್ತು. ನನ್ನನ್ನ ಕಂಡ್ರೆ ಎಲ್ಲರಿಗೂ ಪ್ರೀತಿ.
ಮನೇಲಿ ಪ್ರೀತಿಗೆ ಕೊರತೇನೇ ಇರಲಿಲ್ಲ. ಅಮ್ಮ ತುಂಬ ಅಫೆಕ್ಷನೇಟ್ ವುಮನ್. ನನ್ನ ಅಣ್ಣ ಇವತ್ತಿಗೂ ನನ್ನ ಅತ್ಯಾಪ್ತ ಮಿತ್ರ. ನಮಗೆ ಯಾವುದಕ್ಕೂ ಕೊರತೆ ಇರಲಿಲ್ಲ. ಅಂಥಾ ಐಷಾರಾಮಿ ಜೀವನ ಅಲ್ದೆ ಹೋದ್ರೂ, ಒಬ್ಬ ಮೇಲ್ಮಧ್ಯಮ ವರ್ಗದ ಹುಡುಗ ಬಯ ಸುವಂಥಾ ಎಲ್ಲವು ನನ್ನ ಕೈಲಿ ಇತ್ತು.

ಪೋಷಕರೇ, ಮಕ್ಕಳ ಕಂಪ್ಯೂಟರ್ ಗೀಳು ಎಂದಿಗೂ ಪ್ರತಿಷ್ಠೆಯಲ್ಲ

Posted by JAYAKIRANA Kirana on | 0 comments | Leave a comment...

ಆರೇಳು ವರ್ಷದ ಮಕ್ಕಳಿಗೂ ಕೂಡ ಇಂದು ಇಂತಹ ಅಶ್ಲೀಲ ದೃಶ್ಯಗಳ ಬಗ್ಗೆ ಏನೋ ಆಸಕ್ತಿ. ಮುಂದೆ ಇದೇ ಆಸಕ್ತಿ ಚಟವಾಗಿ ಪರಿ ವರ್ತನೆಗೊಳ್ಳುವುದೂ ಇದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಅಶ್ಲೀಲ ತಾಣ ಗಳ ದಾಸರಾಗಲು ಕಾರಣ ಪೋಷಕರುಗಳೇ ಎಂದರೆ ಖಂಡಿತಾ ತಪ್ಪಿಲ್ಲ. ತಮ್ಮ ಮಗ ಎರಡನೇ ತರಗತಿಯಿಂದಲೇ ಕಂಪ್ಯೂಟರ್ ಮುಂದೆ ಕುಳಿತು ಆಪರೇಟ್ ಮಾಡು ತ್ತಾನೆ ಎಂದಾಗ ಪೋಷಕರಿಗೆ ಏನೋ ಒಂದು ಖುಷಿ. ಭಾನುವಾರ ರಜೆ ಯಿದ್ದರೂ ರೂಮಿನೊಳಗೆ ಕುಳಿತು ಕಂಪ್ಯೂಟರ್ ನೋಡುತ್ತಿದ್ದಾನೆ ಎಂದರೆ ಮನೆಯವರಿಗೆ ಆತ್ಮ ಸಂತೃಪ್ತಿ! ಇನ್ನು ಕೆಲವರು ತಮ್ಮ ಮಕ್ಕಳ ಅತಿಯಾದ ಕಂಪ್ಯೂಟರ್ ದಾಹವನ್ನು ವಿರೋಧಿಸುವುದನ್ನು ಬಿಟ್ಟು ಪಕ್ಕದ ಮನೆಯ ವರಲ್ಲಿ ತಮ್ಮ ಮಗನ ಬಗ್ಗೆ ವರ್ಣಿಸಲು ಆರಂಭಿಸುತ್ತಾರೆ. ಆದರೆ ನಿಜಕ್ಕೂ ತಮ್ಮ ಮಗ ಕಂಪ್ಯೂಟರ್‌ನಲ್ಲಿ ಏನು ಮಾಡುತ್ತಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ! ಮಕ್ಕಳು ಬೆಳಿಗ್ಗಿನಿಂದ ಸಂಜೆಯವರಗೆ ಇಂಟರ್‌ನೆಟ್‌ನಲ್ಲಿ ಮಾಡುವ ಘನಂದಾರಿ ಕೆಲಸವಾದರೂ ಏನೂ ಎನ್ನುವ ಬಗ್ಗೆ ಪೋಷಕರು ಯಾಕೆ ತಲೆಕೆಡಿಸಿಕೊಳ್ಳುತ್ತಿಲ್ಲ? ಕೋಣೆಯೊಳಗೆ ಮಕ್ಕಳು ಬಾಗಿಲು ಹಾಕಿ ಕುಳಿತರೆಂ ದರೆ ಅವರತ್ತ ಪೋಷಕರು ಯಾಕೆ ಗಮನಹರಿಸುತ್ತಿಲ್ಲ? ಇದೇ ಮೊದ ಲಾದವುಗಳು ಮಕ್ಕಳನ್ನು ಅತಿಯಾಗಿ ಕಂಪ್ಯೂಟರ್‌ನ ದಾಸರನ್ನಾಗಿ ಮಾಡು ತ್ತಿವೆ. ನಮ್ಮನ್ನು ಯಾರೂ ಗಮನಿಸುತ್ತಿಲ್ಲ ಎನ್ನುವ ಮೊಂಡು ಧೈರ್ಯ ಮಕ್ಕ ಳನ್ನು ಅಶ್ಲೀಲ ವೆಬ್‌ಸೈಟ್‌ಗಳತ್ತ ಆಕರ್ಷಿಸುತ್ತಿವೆ. ಇನ್ನಾದರೂ ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಲಿ.
ಸಂಕೇತ್ ನಾಯಕ್, ಕಂಕನಾಡಿ

ಕುಡಿಯವ ನೀರು ಪೂರೈಕೆ ಮಾಡಿ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕೆಲವು ದಿನಗಳ ಹಿಂದೆ ನಡೆದ ಮನಪಾ ಸಭೆಯಲ್ಲೂ ಇದೇ ವಿಚಾ ರವಾಗಿ ಚರ್ಚೆ ನಡೆದಿದೆ. ಈ ಬಾರಿ ಕಾಂಗ್ರೆಸ್‌ನ ಗುಲ್ಜಾರ್ ಬಾನು ಮೇಯರ್ ಆಗಿರುವ ಕಾರಣ ಬಿಜೆಪಿ ಕಾರ್ಪೊರೇಟರ್‌ಗಳ ಹಾರಾಟ ತುಸು ಜಾಸ್ತಿಯೇ ಆಗಿದೆ. ಆದರೆ ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಯಾವೊಬ್ಬ ಕಾರ್ಪೊ-ರೇಟರ್ ಕೂಡಾ ನೀರಿನ ಸಮಸ್ಯೆಯ ಬಗ್ಗೆ ಸೂಕ್ತ ಪರಿಹಾರ ಹುಡುಕುವ ಯತ್ನಕ್ಕೆ ಕೈಹಾಕಿಲ್ಲ ಎಂದೇ ಹೇಳಬಹುದು. ಜನರು ಹೇಳುತ್ತಲೇ ಇರುತ್ತಾರೆ, ನಾವು ನಮ್ಮಷ್ಟಕ್ಕೆ ಇದ್ದರಾಯಿತು ಎಂದು ಕಾರ್ಪೊರೇಟರ್ ಗಳು ಇರುವಂತಿದೆ. ಕುಡಿಯುವ ನೀರನ್ನು ಪೈಪ್‌ಲೈನ್ ಮೂಲಕ ಪೂರೈಕೆ ಮಾಡುವುದು ಅಸಾಧ್ಯವಾ ದರೆ ಟ್ಯಾಂಕರ್ ಮೂಲಕವಾದರೂ ಪೂರೈಸುವುದು ಉತ್ತಮ. ಯಾಕೆಂ ದರೆ ದಿನನಿತ್ಯದ ಬಳಕೆಯಲ್ಲಿ ನೀರು ಅತ್ಯಾವಶ್ಯಕವಾದುದು.
ಕುಡಿಯಲು ನೀರು ಪೂರೈಕೆ ಮಾಡುವಲ್ಲಿ ಮನಪಾ ಸಂಪೂರ್ಣ ವಿಫಲವಾದರೆ ನಗರ ಪ್ರದೇಶದ ಜನರು ಮನಪಾ ಮುಂದೆ ಪ್ರತಿಭ ಟನೆ ನಡೆಸುವುದು ಅನಿವಾರ್ಯವಾ ದೀತು. ಇನ್ನು ಮೇಯರ್ ಕಾಂಗ್ರೆಸ್‌ನವರು ಎಂದು ಬಿಜೆಪಿಗರು ಪ್ರತಿಭಟನೆಯ ಪ್ರಹಸನ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸಾಧ್ಯವಾದರೆ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಿ.
ಶಾಕೀರ್, ಜೋಕಟ್ಟೆ

ವೇಣೂರಿಗೆ ಎಟಿಎಂ ಯಾಕಿಲ್ಲ?
ವೇಣೂರು ಎಂಬ ಚಿಕ್ಕ ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದು ತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ ಇದ್ದರೂ ಒಂದೇ ಒಂದು ಎಟಿಎಂ ಇಲ್ಲಾ ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಳ್ಳಬೇಕಾ ಗಿದೆ.
ಬ್ಯಾಂಕ್ ರಜಾ ದಿವಸಗಳಲ್ಲಿ ಅವ ಶ್ಯಕವಾಗಿ ಹಣ ಬೇಕಾದಲ್ಲಿ ಮೂಡಬಿ ದ್ರೆಗೋ ಅಥವಾ ಬೆಳ್ತಂಗಡಿಗೆ ಹೋಗಿ ಬರಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಪ್ರಸಿದ್ಧ ಯಾತ್ರಾ ಸ್ಥಳಗಳಿದ್ದು, ದೂರದ ಊರುಗಳಿಂದ ಯಾತ್ರಿಕರು ಬರು ತ್ತಿರುತ್ತಾರೆ. ಅಲ್ಲದೆ ಶಾಲಾ ಕಾಲೇಜುಗಳು, ಮಸೀದಿ, ದೇವಸ್ಥಾನಗಳಿದ್ದು ಇಲ್ಲಿ ಅಗತ್ಯವಾಗಿ ಒಂದು ಎಟಿಎಂ ಸೇವೆ ಅಗತ್ಯ ಬೇಕಾಗಿದೆ. ಈ ಬಗ್ಗೆ ವೇಣೂರಿನಲ್ಲಿ ಕಾರ‍್ಯಾಚರಿಸುತ್ತಿರುವ ಸಿಂಡಿಕೇಟ್ ಬ್ಯಾಂಕ್ ಮೆನೇಜರ್ ತುರ್ತು ಗಮನ ಹರಿಸಿದರೆ ಆಗದ ಕೆಲಸವೇನಲ್ಲ.
ಪಿ.ಬಿ. ಕುಲಾಲ್, ಬಜಿರೆ

ಕಾಪಿಕಾಡ್ ಅಡ್ಡ ರಸ್ತೆ ಸರಿಪಡಿಸಿ
ಕಾಪಿಕಾಡ್ ೩ ನೇ ಅಡ್ಡರಸ್ತೆ ದುರವಸ್ಥೆಯಲ್ಲಿದೆ. ಈ ರಸ್ತೆಯಲ್ಲಿ ವಾಹನ ಹೋಗಲು ಸಾಧ್ಯವಾಗುತ್ತಿಲ್ಲ. ಕೆಟ್ಟು ಹೋದ ರಸ್ತೆಯನ್ನು ಆದಷ್ಟು ಬೇಗ ರಿಪೇರಿ ಮಾಡಿ, ಸಾರ್ವಜನಿಕರೊಂದಿಗೆ ಸಹಕರಿಸಿ.
ಆರ್.ಬಿ.ಲಕ್ಷ್ಮೀನಾರಾಯಣ, ಕಾಪಿಕಾಡ್

ಸುರತ್ಕಲ್‌ನಲ್ಲಿ ಸಬ್ ವೇ ಯಾವಾಗ?
ರಾ.ಹೆ.೬೬ರ ಸುರತ್ಕಲ್ ಜಂಕ್ಷ ನ್‌ನಲ್ಲಿ ಇನ್ನೂ ಬೈ ವೇ ನಿರ್ಮಾಣ ವಾಗಿಲ್ಲ. ರಸ್ತೆಯ ಒಂದು ಬದಿ ಬೈ ವೇ ಮಾಡಲಾಗಿದ್ದರೂ ಅದು ಸಂಪೂರ್ಣವಾಗಿಲ್ಲ. ಇನ್ನೊಂದು ಬದಿ ಮಾತ್ರ ಹೋಟೆಲ್, ಸೂಪರ್ ಮಾರ್ಕೆಟ್ ಹಾಗೂ ಅಂಗಡಿ ಮಳಿ ಗೆಗಳಿದ್ದು, ಅದನ್ನು ತೆಗೆಯುವ ಕೆಲ ಸಕ್ಕೂ ಹೆದ್ದಾರಿ ಪ್ರಾಧಿಕಾರ ಮುಂದಾ ಗಿಲ್ಲ.
ವಾಸ್ತವವಾಗಿ ನೋಡುವುದಾ ದರೆ ಇಲ್ಲಿ ಫ್ಲೈ ಓವರ್ ಅಗತ್ಯವೇ ಇರಲಿಲ್ಲ. ಚತುಷ್ಪಥ ರಸ್ತೆ ನಿರ್ಮಾ ಣಕ್ಕೆ ಸಾಕಷ್ಟು ಜಾಗ ಇಲ್ಲಿತ್ತು. ಆದರೆ ಸ್ಥಳೀಯ ಹೋಟೆಲ್ ಹಾಗೂ ಇತರೇ ಅಂಗಡಿ ಮಾಲಕರ ಲಾಬಿಗೆ ಮಣಿದು ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಯಿತು. ಎಂದೋ ಪ್ರಾರಂ ಭವಾಗಿದ್ದ ಫ್ಲೈ ಓವರ್ ಮೊನ್ನೆಯಷ್ಟೇ ಮುಕ್ತಾಯಗೊಂಡು ಸಂಚಾರಕ್ಕೆ ವ್ಯವಸ್ಥೆಗೊಂಡಿರುತ್ತದೆ. ಬೇರೆ ಕಡೆ ರಸ್ತೆಯ ಇಕ್ಕೆಲವನ್ನು ಸಬ್ ವೇ ನಿರ್ಮಿ ಸಲು ಯಾರ ಅಣತಿಗೂ ಕಾಯದೆ ಬುಲ್ಡೋಜರ್ ತರಿಸಿ ಕಟ್ಟಡ ಗಳನ್ನು ಕೆಡಹುವ ಹೆದ್ದಾರಿ ಗುತ್ತಿಗೆ ದಾರರು ಇಲ್ಲಿ ಮಾತ್ರ ಮೌನಕ್ಕೆ ಶರಣಾಗಿರು ವುದು ಯಾಕೆ? ಸುರತ್ಕಲ್ ಜಂಕ್ಷನ್‌ನ ಎರಡೂ ಬದಿ ಸಬ್‌ವೇ ಅಗತ್ಯವಾಗಿದೆ. ಸಬ್ ವೇ ಇಲ್ಲದಿರುವ ಕಾರಣ ಜಂಕ್ಷ ನ್‌ನಲ್ಲಿ ಅಪಘಾತ ಭಯಕ್ಕೂ ಕಾರಣ ವಾಗುತ್ತಿದೆ.
ಈ ಬಗ್ಗೆ ಹೆದ್ದಾರಿ ಗುತ್ತಿಗೆ ಪಡೆ ದಿರುವ ಇರ್ಕಾನ್ ಅಧಿಕಾರಿಗಳು, ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊ ಳ್ಳಲಿ.
ನಾಗರಿಕರು, ಸುರತ್ಕಲ್

ಬೇಸ್ತು ಬೀಳಿಸುವ ಚಾನೆಲ್‌ಗಳು
ಸದಾ ಸ್ಪರ್ಧೆಯಲ್ಲಿರುವ ಟಿ.ವಿ. ಚಾನೆಲ್‌ಗಳು ತನ್ನ ವೀಕ್ಷಕರನ್ನು ಬೇಸ್ತು ಬೀಳುವಂತೆ ಮಾಡುತ್ತಿವೆ. ಪುನರ್ಜನ್ಮ, ಪ್ರಳಯ, ಭವಿಷ್ಯ ಇತ್ಯಾದಿ ಕಾರ್ಯಕ್ರಮಗಳಲ್ಲಿ ಮೂಢನಂಬಿಕೆಯನ್ನು ವೈಭವೀಕರಿಸಿ ಜನರನ್ನು ಮತ್ತೆ ೧೮-೧೯ನೇ ಶತಮಾನಕ್ಕೆ ಕೊಂಡೊಯ್ಯುವ ಕೆಲಸವನ್ನು ಇವುಗಳು ಮಾಡುತ್ತಿವೆ. ಎಲ್ಲೋ ಕೇಳಿದ್ದನ್ನು ಕಣ್ಣಾರೆ ಕಂಡಂತೆ ಬಿತ್ತರಿಸುವ ಚಾನೆಲ್ ಗಳ ಮೇಲೆ ನಿಯಂತ್ರಣ ಹೇರುವುದಿಲ್ಲವೇಕೆ? ಜನರು ಸಾಕಷ್ಟು ಮುಂದು ವರಿದಿರುವಾಗ ಇಂಥ ಚಾನೆಲ್‌ಗಳು ಅವರನ್ನು ಮತ್ತೆ ಅಜ್ಞಾನಕ್ಕೆ ದೂಡು ತ್ತಿವೆ. ಭವಿಷ್ಯ ಸಂಬಂಧಿ ಕಾರ್ಯಕ್ರಮಗಳಂತೂ ಒಂದೊಂದು ಚಾನೆಲ್ ಗಳಲ್ಲಿ ಒಂದೊಂದು ತೆರನಾಗಿರುತ್ತದೆ. ಒಂದರಲ್ಲಿ ಹೇಳಿದ ಭವಿಷ್ಯ ಮತ್ತೊಂದರಲ್ಲಿ ಇರುವುದಿಲ್ಲ. ಹೀಗಾಗಿ ಜನರಿಗೆ ಯಾವುದನ್ನು ನಂಬು ವುದು, ಯಾವುದನ್ನು ಬಿಡುವುದು ಎನ್ನುವುದೇ ಸಮಸ್ಯೆಯಾಗುತ್ತಿದೆ. ಬೇಸ್ತುಬೀಳಿಸುವ ಇಂಥ ಕಾರ್ಯಕ್ರಮಗಳನ್ನು ಜನರೇ ತಿರಸ್ಕರಿಸಬೇಕು. ಜನರಿಗೆ ಯೋಗ್ಯ ಮಾರ್ಗದರ್ಶನ ನೀಡಬೇಕಾದ ಸುದ್ದಿವಾಹಿನಿಗಳು ಪೈಪೋಟಿಗೆ ಬಿದ್ದು ಬೇಕಾಬಿಟ್ಟಿ ವರ್ತಿಸುವುದು ಖಂಡನೀಯ. ಇನ್ನಾ ದರೂ ಮಾಧ್ಯಮಗಳ ಇಂತಹ ಅತಿರೇಕ ನಿಲ್ಲಲಿ.
ರಶ್ಮಿ, ಮಂಗಲ್ಪಾಡಿ

ಮದನಿ ಇನ್ನೆಷ್ಟು ದಿನ ಜೈಲಲ್ಲಿ
ನಿರಪರಾಧಿ ಎಂದು ನ್ಯಾಯಾ ಲಯ ಸೃಷ್ಟೀಕರಿಸಿದರೂ ರಾಜ ಕೀ ಯದ ಒತ್ತಡದ ಮೇಲೆ ಬೆಂಗಳೂರಿನ ಜೈಲಲ್ಲಿ ಮಹ್‌ದನಿ ಇನ್ನೆಷ್ಟು ದಿನ ಕಳೆಯಬೇಕು? ಇದು ನ್ಯಾಯವೇ? ೯ ವರ್ಷಗಳ ಕಾಲ ಕೊಯಂಬತ್ತೂರು ಸ್ಫೋಟದ ಆರೋಪದಡಿ, ಕೊಯಂ ಬತ್ತೂರು ಜೈಲಲ್ಲಿ ನಿರಪರಾ ಧಿಯಾಗಿ ಕಳೆದು ಕೇರಳ ಕಮ್ಯು ನಿಸ್ಟ್ ಸರ್ಕಾರ ಅಧಿಕಾರ ಬಂದ ತಕ್ಷಣ ಜೈಲಿ ನಿಂದ ಹೊರ ಬಂದರೂ ಕರ್ನಾ ಟಕದ ಬಿಜೆಪಿಗರು ಅಂದಿನ ಗೃಹ ಸಚಿವ ದಿವಂಗತ ಆಚಾರ್ಯರ ಒತ್ತಾಯದ ಮೇರೆಗೆ ಮಹ್‌ದನಿ ಬೆಂಗಳೂರಿನ ಸ್ಫೋಟದ ಆರೋಪ ದಡಿ ಅರೆಸ್ಟ್ ಆದರೂ, ಈಗ ಸುಪ್ರೀಂ ಕೋರ್ಟ್‌ನಲ್ಲಿ ಕೊಳೆಯುವ ಇವರ ಕೇಸನ್ನು ತಕ್ಷಣ ನ್ಯಾಯಾಲಯ ಮಾನವ ಹಕ್ಕು ಆಯೋಗವು ಇತ್ಯ ರ್ಥಸಿ ಮಹ್‌ದನಿ ಬಿಡುಗಡೆಗೊಳಿಸ ಬೇಕೆಂದು ವಿನಂತಿ.
ಅಬ್ದುಲ್ ಲತೀಫ್, ಕುಂಜತ್ತೂರು

ಕೂಳೂರಿನ ರಾಜಕಾಲುವೆಗೆ ಸ್ವಾರ್ಥಕ್ಕಾಗಿ ಮಣ್ಣು ಮುಚ್ಚಬೇಡಿ
ದಿನೇ ದಿನೇ ಬೆಳೆಯುತ್ತಿರುವ ಮಂಗಳೂರು ನಗರದ ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಬೃಹತ್ ಗ್ಯಾರೇಜೊಂದು ಇನ್ನೇನು ಪ್ರಾರಂಭಗೊಳ್ಳುವ ಹಂತದಲ್ಲಿದೆ. ಅರವಿಂದ ಮೋಟಾರ‍್ಸ್‌ಗೆ ಸೇರಿದ ಈ ಬೃಹತ್ ಕಟ್ಟಡವು ಈ ಪ್ರದೇಶದ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಹಲವಾರು ವರ್ಷಗಳಿಂದ ಹರಿಯುತ್ತಿರುವ ರಾಜಕಾಲುವೆಯೊಂದು ಈ ಕಟ್ಟಡದಿಂದಾಗಿ ಮುಚ್ಚಿಹೋಗಿದೆ. ಈ ಪ್ರದೇಶ ದಲ್ಲಿ ಹಲವಾರು ಮನೆಗಳಿದ್ದು, ಈ ಪ್ರದೇಶದ ಹಾಗೂ ಸುತ್ತಮುತ್ತಲಿನ ಮಳೆ ನೀರು ಮತ್ತು ಚರಂಡಿ ನೀರು ಹರಿದು ಈ ರಾಜಕಾಲುವೆಯ ಮೂಲಕ ಹರಿದು ಹೋಗುತ್ತಿತ್ತು. ಅರವಿಂದ ಮೋಟಾರ‍್ಸ್‌ರವರು ಈ ಕಾಲುವೆ ಮತ್ತು ಸುತ್ತಮುತ್ತಲಿನ ಹಲವಾರು ಚರಂಡಿಗಳನ್ನು ತಮ್ಮ ಸ್ವಾರ್ಥಕ್ಕಾಗಿ ಮಣ್ಣು ತುಂಬಿಸಿ ಮುಚ್ಚಿ ಹಾಕಿದ್ದಾರೆ. ಇದರಿಂದ ಈ ಪ್ರದೇಶದ ನೀರು ಸುಗಮ ವಾಗಿ ಹರಿಯಲು ಸಾಧ್ಯವಾಗದೆ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಪ್ರದೇ ಶವು ಸುತ್ತಮುತ್ತಲಿಗಿಂತ ತಗ್ಗಾಗಿದ್ದು, ಹಲವಾರು ವರ್ಷಗಳಿಂದ ಮಳೆಗಾಲ ದಲ್ಲಿ ಎಲ್ಲಾ ನೀರು ಈ ಪ್ರದೇಶದಿಂದಲೇ ಹಾದು ಹೋಗುತ್ತಿತ್ತು. ಆದರೆ ಈ ಬಾರಿ ಅರವಿಂದ ಮೋಟಾರ‍್ಸ್‌ನವರು ನಾಲ್ಕು ದಿಕ್ಕುಗಳಿಂದ ಹರಿಯುತ್ತಿದ್ದ ಚರಂಡಿಗಳನ್ನು ಮುಚ್ಚಿಹಾಕಿದ್ದು, ಕೃತಕ ನೆರೆಗೆ ರಾಯಿಕಟ್ಟೆ ಪ್ರದೇಶವು ಮುಳು ಗುವ ಭೀತಿಯಲ್ಲಿದೆ.
ಈ ಕಂಪೆನಿಯು ಪ್ರಾರಂಭಗೊಂಡರೆ ಪರಿಸರ ಮಾಲಿನ್ಯದ ಭೀತಿ ಇದ್ದು, ಸ್ಥಳೀಯಾಡಳಿತ ಈ ಕಂಪೆನಿಗೆ ಅನುಮತಿ ನೀಡಿರುವುದು ಅನುಮಾನಾ ಸ್ಪದವಾಗಿದೆ. ಇದರ ಬಗ್ಗೆ ಸ್ಥಳೀಯ ನಾಗರಿಕರು ಒಂದಾಗಿ ಕಾರ್ಪೋರೇ ಟರ್‌ರವರಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಸ್ಥಳೀಯ ನಾಗರಿಕರು ಮತ್ತೆ ಒಂದಾಗಿದ್ದು, ಪ್ರತಿಭಟಿಸುವ ಹಂತಕ್ಕೆ ತಲುಪಿದ್ದಾರೆ. ಆದುದರಿಂದ ಸಂಬಂಧಪಟ್ಟವರು ಈ ಸಮಸ್ಯೆಯನ್ನು ನಿವಾರಿಸಿ ಅಥವಾ ಪ್ರತಿಭಟನೆ ಎದುರಿಸಿ ಎಂದು ಈ ಮೂಲಕ ಸಂಬಂಧ ಪಟ್ಟವರನ್ನು ಎಚ್ಚರಿಸುತ್ತಿದ್ದೇವೆ.
ಖಲೀಲ್, ಕೂಳೂರು

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅವ್ಯವಹಾರ

Posted by JAYAKIRANA Kirana on | 0 comments | Leave a comment...

ಭ್ರಷ್ಟಾಚಾರ ಹಾಗೂ ದೌರ್ಜನ್ಯ, ವಿರೋಧಿ ವೇದಿಕೆ, ಪಂಜಿಕಲ್ಲು, ಬಂಟ್ವಾಳ
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯ ತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಾಗಿರುವ ಭಾರೀ ಪ್ರಮಾಣದ ಅವ್ಯವಹಾರ ಹಾಗೂ ಅನುದಾನ ದುರುಪಯೋಗ ಪ್ರಕರಣಗಳನ್ನು ಜಿಲ್ಲಾ ಪಂಚಾಯತ್ ಶಿಸ್ತು ಪ್ರಾಧಿಕಾರ ಪ್ರಾಮಾ ಣಿಕ ತನಿಖೆ ನಡೆಸದಿದ್ದರೆ ಅಧಿಕಾರಿಗಳ ವಿರುದ್ಧ ಜನಾಂದೋ ಲನ ಹಮ್ಮಿಕೊಳ್ಳಲಾಗುವುದು.
ಪಂಜಿಕಲ್ಲು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಾಗಿರುವ ಅವ್ಯವಹಾರ ಹಾಗೂ ಅನು ದಾನ ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿ ವೇದಿಕೆ ಸರಕಾರಕ್ಕೆ ಈಗಾಗಲೇ ಪ್ರಮುಖ ಕೆಲವೊಂದು ಬೇಡಿಕೆಗಳ ನ್ನಿಟ್ಟು ಕ್ರಮಗಳನ್ನು ಜಾರಿಗೊಳಿಸಲು ಒಂದು ವಾರದ ಗಡುವು ನೀಡಲಾಗಿದೆ.
ವೇದಿಕೆ ಸಲ್ಲಿಸಿದ ದಾಖಲೆ ಸಹಿತ ದೂರುಗಳನ್ವಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಒಂಬಡ್ಸ್ ಮನ್ ನ್ಯಾಯಾಲಯ ಪ್ರಕರಣ ಸಂಖ್ಯೆ ೬೩ಃ೨೦೧೧/೨೦೧೨ರಂತೆ ೨೦೧೧ರ ಡಿ.೩೧ರಂದು ಅಂತಿಮ ಆದೇಶವನ್ನು ನೀಡಿತ್ತು. ಉದ್ಯೋಗ ಖಾತರಿ ಕಾಯಿದೆ ೨೦೦೫ ಸೆಕ್ಷನ್ ೪ಎ೩ಏ, ಸೆಕ್ಷನ್ ೨೩ಎ೩೪ಏ ಹಾಗೂ ಶೆಡ್ಯೂಲ್೧ಎ೧೨೩ಏ ಶೆಡ್ಯೂಲ್ ಪ್ಯಾರಾ ೨ ಪ್ಯಾರಾ ೨೨ನ್ನು ಅಧಿಕಾರಿಗಳು ಉಲ್ಲಂಘಿಸಿರುವುದು ಕಂಡು ಬಂದಿದೆ. ನಿಯಮಾವಳಿ ಹಾಗೂ ಮಾರ್ಗಸೂಚಿ ಉಲ್ಲಂ ಘನೆ ಆರೋಪಗಳನ್ನು ಒಪ್ಪಿಕೊಂಡಿರುವ ಪಂಚಾಯತ್ ಅಭಿ ವೃದ್ಧಿ ಅಧಿಕಾರಿಗಳು ದುರುಪಯೋಗವಾದ ಅನುದಾನವನ್ನು ಮರು ಪಾವತಿಸಬೇಕಾಗಿ ನ್ಯಾಯಾಲಯ ನಿರ್ದೇಶಿಸಿತ್ತು. ಕಾಮ ಗಾರಿಗಳ ಪೈಕಿ ಅಂಗನವಾಡಿ ಸಹಾಯಕಿ ಸೇಸಮ್ಮ, ಪುರಸಭಾ ವ್ಯಾಪ್ತಿಯ ಉದಯ ಗೌಡ, ಸರಕಾರಿ ನೌಕರ ಬಾಳಪ್ಪ ನಾಯಕ್ ಎಂಬವರ ಕುಟುಂಬಗಳಿಗೆ ಪಾವತಿಸಿ ೮೫೦೦ರೂ. ಕೂಲಿ ಹಣವನ್ನು ಯೋಜನೆಯ ಬ್ಯಾಂಕ್ ಖಾತೆಗೆ ಮರು ಜಮಾ ಯಿಸಲಾಗಿದ್ದು, ಉಳಿದ ೮೧,೪೧೨ರೂ.ಗಳನ್ನು ಎರಡು ತಿಂಗ ಳಾದರೂ ವಸೂಲಿ ಮಾಡಿಸುವಲ್ಲಿ ತಾ.ಪಂ. ಕಾರ್ಯನಿರ್ವಾ ಹಕ ಅಧಿಕಾರಿ ಸಂಪೂರ್ಣ ವಿಫಲವಾಗಿದ್ದಾರೆ. ತನಿಖೆ ನಡೆಸ ದಂತೆ ಅಧಿಕಾರಿಗಳ ಬಗ್ಗೆಯೂ ರಾಜಕೀಯ ಒತ್ತಡ ಇರು ವುದೆಂಬುದು ನಮ್ಮ ಸಂದೇಹವಾಗಿದ್ದು, ಉದ್ಯೋಗ ಖಾತರಿ ಯೋಜನೆಯ ಪರಿಣಾಮ ಅನುಷ್ಠಾನ ಹಾಗೂ ಅವ್ಯವಹಾ ರಗಳನ್ನು ತಡೆಯಲು ಒಂಬುಡ್ಸ್‌ಮನ್ ನ್ಯಾಯಾಲಯದ ಅವ ಶ್ಯಕತೆ ಇದೆಯೇ? ಎನ್ನುವುದನ್ನು ನಾವಿಂದು ಸಾರ್ವತ್ರಿಕವಾಗಿ ಪ್ರಶ್ನಿಸಬೇಕಾಗಿದೆ.
 ಅವ್ಯವಹಾರ ಹಾಗೂ ಅನುದಾನ ದುರುಪಯೋಗಗಳಿಗೆ ಸಂಬಂಧಿಸಿ ರಾಜ್ಯ ಸರಕಾರದ ಪದ ನಿಮಿತ್ತ ಜಂಟಿ ಕಾರ್ಯ ದರ್ಶಿ ಹಾಗೂ ಉದ್ಯೋಗ ಖಾತರಿ ಯೋಜನೆಯ ನಿರ್ದೇ ಶಕ ಪಿ.ಶಿವಶಂಕರ್ ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯಪ್ರಕಾಶ್ ಅವರಿಗೆ ಕರ್ನಾ ಟಕ ಸರಕಾರ ಸಂಖ್ಯೆ ಗ್ರಾ.ಪಂ. ೧೫೨ ಉಖಾಯೋ ೨೦೧೧ರಂತೆ ಪತ್ರ ಬರೆದು, ಆರೋಪಗಳ ಅಂಶವು ಸ್ವಯಂ ವೇದ್ಯವಾಗಿದ್ದು, ದೂರನ್ನು ಸಂಖ್ಯೆ ೧೫೧೧೪೬೯೩ರಂತೆ ಎಂಐಎಸ್‌ನಲ್ಲಿ ದಾಖಲಿ ಸುವಂತೆ ಸೂಚಿಸಿದ್ದರು. ಯೋಜನೆಯ ಮಾರ್ಗ ಸೂಚಿಯ ನ್ವಯ ನಿಯಮಾನುಸಾರ ಕ್ರಮ ಕೈಗೊಂಡು ಕಾಲಮಿತಿಯೊ ಳಗೆ ಎಂಐಎಸ್‌ನಲ್ಲಿ ನಮೂದಿಸಿ, ಮಾಹಿತಿ ನೀಡುವುದೆಂದು ಭರವಸೆಯನ್ನೂ ನೀಡಿದ್ದರು. ೨೦೧೧ರ ನ.೨೧ ರಂದು ಬರೆಯ ಲಾದ ಈ ಪತ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ನಮಗೆ ಇನ್ನೂ ಮಾಹಿತಿ ಬಂದಿರುವುದಿಲ್ಲ. ನಂತರ ೨೦೧೧ರ ನ.೩೦ ರಂದು ಸಂಖ್ಯೆ ಗ್ರಾ.ಅ.ಪ ೭೬ ಉಖಾಯೋ ೧೧ರಂತೆ ಪತ್ರ ಬರೆ ದಿರುವ ಶಿವಶಂಕರ್, ಗ್ರಾ.ಅಪ ೧೮೩ಉಖಾಯೋ ೨೦೧೧, ದಿನಾಂಕ ೮೯೨೦೧೧ಷರತ್ತಿಗೊಳಪಟ್ಟು ಅರ್ಹ ಬಾಹ್ಯ ಸಂಖ್ಯೆ ಮುಖೇನ ಮೂರನೇ ಪಕ್ಷದ ಪರಿವೀಕ್ಷಣೆಯನ್ನು ತನಿಖೆ ಮಾಡಿಸಿ, ಯೋಜ ನೆಯ ಮಾರ್ಗ ಸೂಚಿಯನ್ವಯ ಪರಿಶೀ ಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ಎಂಐಎಸ್‌ನಲ್ಲಿ ವರದಿ ದಾಖಲಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು.
ಅವ್ಯವಹಾರ ಹಾಗೂ ಅನುದಾನ ದುರುಪಯೋಗ ಪ್ರಕ ರಣಗಳಿಗೆ ಸಂಬಂಧಿಸಿ ೧೬ ಅಂಶಗಳ ಆರೋಪಗಳನ್ನು ದಾಳಕ್ಕೆ ಪತ್ರಗಳ ಸಹಿತ ವೇದಿಕೆ ಸಲ್ಲಿಸಿದ್ದು, ಈ ಆರೋಪಗಳಿಗೆ ಪರವಾ ಗಿಯೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿ ಕಾರಿಗಳು ಜಿಲ್ಲಾ ಪಂಚಾಯತ್ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಇದೇ ಆರೋಪಗಳನ್ನು ಒಂಬುಡ್ಸ್‌ಮನ್ ನ್ಯಾಯಾ ಲಯದ ಎದುರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಒಪ್ಪಿ ಕೊಂಡಿದ್ದರು. ಆರೋಪಗಳನ್ನು ಕಾರ್ಯನಿರ್ವಣಾಧಿಕಾರಿಗಳು ನಿರಾಕರಿಸಲು ಕಾರಣವೇನೆಂಬುದು ನಮ್ಮ ಪ್ರಶ್ನೆಯಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭವಾನಿಶಂಕರ್ ಜೊತೆಗೆ ಪಂಜಿಕಲ್ಲು ಗ್ರಾಮ ಪಂಚಾಯತ್ ಕೆಲವು ಸದಸ್ಯರೂ ಅವ್ಯವ ಹಾರದಲ್ಲಿ ಪಾಲ್ಗೊಂಡಿರುವುದು ಸ್ಪಷ್ಟವಾಗಿದೆ. ಗ್ರಾ.ಪಂ. ಸದಸ್ಯರು ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಸಂಬಂಧಿಕರಿಗೆ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ನಿಯಮಬಾಹಿರವಾಗಿ ಬಿಡುಗಡೆ ಮಾಡಿ ಯೋಜನೆಯನ್ನು ದುರುಪಯೋಗ ಮಾಡ ಲಾಗಿದೆ. ಈ ಕುರಿತು ಪಂಚಾಯತ್ ರಾಜ್ ನಿಯಮಾವಳಿ, ಯೋಜನೆಯ ನಿಯಮಾನುಸಾರ ಹಾಗೂ ಕೆಸಿಎಸ್‌ಆರ್ ನಿಯ ಮಾವಳಿಗಳನ್ವಯ ಕ್ರಮ ಜರುಗಿಸಲು ವಿಳಂಬ ಹಾಗೂ ನಿರ್ಲಕ್ಷ್ಯ ಮಾಡಿರುವ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಜಿಕಲ್ಲು ಭ್ರಷ್ಟಾಚಾರ ಹಾಗೂ ದೌರ್ಜನ್ಯ ವಿರೋಧಿ ವೇದಿಕೆ ಸರಕಾರವನ್ನು ಆಗ್ರಹಿಸಲಾಗಿದೆ. ೧೬ ಅಂಶಗಳ ಅವ್ಯವಹಾರಗಳ ಪ್ರಕರಣಗಳ ಬಗ್ಗೆ ತನಿಖೆ ನಡೆ ಸಲು ನಾವು ಸರಕಾರಕ್ಕೆ ದೂರು ನೀಡಿದ್ದರೂ, ಕೆಲವು ಪ್ರಕರಣ ಗಳಿಗೆ ಸಂಬಂಧಿಸಿ ಮಾತ್ರ ಒಂಬುಡ್ಸ್‌ಮನ್ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿದ್ದು, ಉಳಿದ ಹಲವಾರು ಪ್ರಕರ ಣಗಳ ಕುರಿತು ಸಮರ್ಪಕ ತನಿಖೆ ಆಗಿರುವುದಿಲ್ಲ. ಆದ್ದರಿಂದ ಸಾಬೀ ತಾಗಿರುವ ರೂ. ೮೯,೯೧೨ಗಳಿಗಿಂತಲೂ ನಾಲ್ಕು ಪಟ್ಟುಗಳಷ್ಟು ಮೊತ್ತಗಳ ಅನುದಾನಗಳಲ್ಲಿ ಅವ್ಯವಹಾರ ಹಾಗೂ ದುರುಪ ಯೋಗಗೊಂಡಿರುವುದನ್ನು ನಾವು ಆರೋಪಿಸಿದನ್ವಯ ಸರ ಕಾರ ಗಂಭೀರವಾಗಿ ಗಮನಹರಿಸಿ ಸೂಕ್ತ, ಸಮಗ್ರ ಹಾಗೂ ಪ್ರತ್ಯೇಕ ತನಿಖೆ ನಡೆಸಬೇಕಾಗಿದೆ.
ಮಧ್ಯೆ ತುರ್ತು ಸಭೆ ಕರೆದ ಪಂಜಿಕಲ್ಲು ಗ್ರಾಮ ಪಂಚಾ ಯತ್ ನಮ್ಮಲ್ಲಿ ಯಾವ ಅವ್ಯವಹಾರ ಹಾಗೂ ಅನುದಾನ ದುರುಪಯೋಗ ನಡೆದಿಲ್ಲ ಎಂದು ನಿರ್ಣಯ ಕೈಗೊಂಡಿರುವುದು ಹಾಸ್ಯಾಸ್ಪದವಾಗಿದೆ. ಪಂಚಾಯತ್ ಆಡಳಿತ ಸಂಸ್ಥೆಯ ನಿಲುವು ನ್ಯಾಯಾಲಯ ನಿಂದನೆ, ಭ್ರಷ್ಟಾಚಾರಕ್ಕೆ ಬೆಂಬಲ, ಪ್ರಜಾಪ್ರಭು ತ್ವಕ್ಕೆ ನಂಬಿಕೆಯ ಮೇಲೆ ಅಗೌರವ ಮಾಡುವಂತೆ ಮಾಡಿದೆ. ಅವ್ಯಹಾರ ಆರೋಪಗಳ ಕುರಿತು ಕಾನೂನು ಕ್ರಮ ಜಾರಿಯಾ ಗದ ಕಾರಣ ಯೋಜನೆಯನ್ನು ಅನುಷ್ಟಾನಗೊಳಿಸಬೇಕಾದ ಎಲ್ಲಾ ಅಧಿಕಾರಿಗಳು ಹಾಗೂ ಸಂಬಂಧಿತ ಗ್ರಾ.ಪಂ.ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾ ರಿಗಳಲ್ಲಿ ವಿನಂತಿ.

ಬಾಲಕಿಯ ಅತ್ಯಾಚಾರಿ ಖತೀಬನಿಗೆ ಕಠಿಣ ಶಿಕ್ಷೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಮದರಸಕ್ಕೆ ಹೋಗುತ್ತಿದ್ದ ೧೨ ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭವತಿಯಾ ಗಿಸಿದ್ದಲ್ಲದೆ, ಕೊಲೆ ಬೆದರಿಕೆಯೊಡ್ಡಿದ್ದ ಆರೋಪ ಎದುರಿಸುತ್ತಿದ್ದ ಮಸೀದಿಯ ಖತೀಬ್ ಅಪರಾಧಿ ಎಂದು ತೀರ್ಮಾನಿಸಿ ರುವ ಪುತ್ತೂರು ತ್ವರಿತಗತಿ ನ್ಯಾಯಾಲಯವು ಅಪರಾಧಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು ೫೫ ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
೨೦೦೮ರಲ್ಲಿ ಪುತ್ತಿಲ ಗ್ರಾಮದ ತಾಳಿಪಡ್ಪು ಎಂಬಲ್ಲಿ ಘಟನೆ ನಡೆದಿತ್ತು. ತಾಳಿಪಡ್ಪು ನಿವಾಸಿ ಅಹಮದ್ ಎಂಬವರ ೧೨ರ ಹರೆಯದ ಪುತ್ರಿ ೫-೧೦-೨೦೦೮ರಂದು ಪುತ್ತೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಬಾಲಕಿ ಮದ್ರಸಕ್ಕೆ ಹೋಗುತ್ತಿದ್ದ ಸಂದರ್ಭ ಮಸೀದಿಯ ಖತೀಬ್ ಇಸುಬು ಕೊಳಂತಕೆರೆ ಯಾನೆ ಆಸಿಫ್ ಕೊಳಂತಕೆರೆ ಯಾನೆ ಆಸಿಫ್ ಯಾನೆ ಆಶಿಫ್ ಬಾಖವಿ(೨೯) ಆಕೆಯ ಮೇಲೆ ಸುಮಾರು ೧೫ ಬಾರಿ ಅತ್ಯಾಚಾರ ಎಸಗಿದ್ದರಿಂದಾಗಿ ಆಕೆ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಹೆರಾಜೆ ಸರಕಾರಿ ದ.ಕ.ಜಿ.ಪಂ. ಶಾಲೆಯಲ್ಲಿ ೭ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆಕೆ ಧಾರ್ಮಿಕ ವಿದ್ಯಾಭ್ಯಾಸ ಪಡೆಯಲೆಂದು ಕಳಂಜಿಬೈಲು ಮೊದೀನ್ ಜುಮ್ಮಾ ಮಸೀದಿಯ ಮದರಸಕ್ಕೆ ಹೋಗುತ್ತಿದ್ದರು. ಮದ್ರಸದಲ್ಲಿ ಮುಂಜಾನೆ ಏಳು ಗಂಟೆಗೆ ತರಗತಿ ಆರಂಭ ಆಗುತ್ತಿದ್ದರೆ ಮದ್ರಸ ಗುಡಿಸುವ ಸಲುವಾಗಿ ಈಕೆ ಆರು ಗಂಟೆಗೆ ಹೋಗುತ್ತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ, ಖತೀಬ್ ತನ್ನನ್ನು ಆತನ ಕೋಣೆಗೆ ಕರೆದೊಯ್ದು ಜನವರಿಯಿಂದ ಸುಮಾರು ೧೫ ಬಾರಿ ನಿರಂತರವಾಗಿ ಅತ್ಯಾಚಾರ ಎಸಗಿದ್ದರು. ಇತ್ತೀಚೆಗೆ ತಾನು ಗರ್ಭಿಣಿ ಎಂದು ಗೊತ್ತಾಗುತ್ತಲೇ ಈ ವಿಚಾರವನ್ನು ಯಾರಿಗೂ ತಿಳಿಸಬಾರದು. ತಿಳಿಸಿದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ನೊಂದ ವಿದ್ಯಾರ್ಥಿನಿ ಉಪ್ಪಿನಂಗಡಿ ಪೆಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು. ಖತೀಬ್ ಆಸಿಫ್ ಬಖವಿ ವಿರುದ್ದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯೊಡ್ಡಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದರು. ಉಪ್ಪಿನಂಗಡಿಯ ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಕೆ.ಮಂಜಯ್ಯ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಜಿ.ಶಿವಶಂಕರೇ ಗೌಡ ಅವರು, ಆರೋಪಿ ಖತೀಬ್ ಅಪರಾಧಿ ಎಂದು ಮಾ.೩೧ರಂದು ಘೋಷಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಏ.೩ರಂದು ಪ್ರಕಟಿಸಲಾಗಿದ್ದು, ಬಾಲಕಿಯ ಅತ್ಯಾಚಾರವೆಸಗಿದ ಆರೋಪಕ್ಕಾಗಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ೫೦ ಸಾವಿರ ರೂ.ದಂಡ ಹಾಗೂ ಜತೆಗೆ ಕೊಲೆ ಬೆದರಿಕೆ ಆರೋಪಕ್ಕಾಗಿ ಒಂದು ವರ್ಷ ಕಠಿಣ ಶಿಕ್ಷೆ ಮತ್ತು ಐದು ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣವನ್ನು ಪೂರ್ತಿಯಾಗಿ ನೊಂದ ಬಾಲಕಿಯ ಕುಟುಂಬಕ್ಕೆ ಪಾವತಿಸುವಂತೆಯೂ ಆದೇಶಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ ಒಂದು ವರ್ಷ ಸಾದಾ ಸೆರೆಮನೆ ವಾಸ ಅನುಭವಿಸುವಂತೆ ಆದೇಶಿಸಲಾಗಿದೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಉದಯಶಂಕರ್ ವಾದಿಸಿದ್ದರು.

ಮಾನವ ದ್ರೋಹಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಿ

Posted by JAYAKIRANA Kirana on | 0 comments | Leave a comment...

ಝೈನಿ ಕಾಮಿಲ್ ಸಖಾಫಿ ಕರೆ
ಪುತ್ತೂರು: ಪ್ರಸ್ತುತ ಮಾನವತೆಯ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಈ ಕೆಡುಕಿಗೆ ಕಾರಣರಾಗುತ್ತಿರುವ ಮಾನವ ದ್ರೋಹಿಗಳನ್ನು ಎಲ್ಲಾ ಧರ್ಮದವರೂ ಸೇರಿ ಸಾಮಾಜಿಕವಾಗಿ ಬಹಿಷ್ಕರಿಸುವ ಕೆಲಸವನ್ನು ಮಾಡಬೇಕು ಎಂದು ದಕ್ಷಿಣ ಭಾರತದ ಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕರೆ ನೀಡಿದರು.
ಅವರು ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರು ಮುನ್ನಡೆಸುವ ಮಾನವ ಸಂದೇಶ ಜಾಥಾದ ಪುತ್ತೂರು ಕೇಂದ್ರ ಪ್ರಚಾರ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಎಲ್ಲಾ ಧರ್ಮದ ಪ್ರಾರ್ಥನೆಗಳಲ್ಲಿ ಮನುಷ್ಯರ ಒಳಿತಿದೆ. ಹಿರಿಯರನ್ನು ಗೌರವಿಸುವ ಪರಂಪರೆ ಮತ್ತು ಸಂಸ್ಕೃತಿ ನಾಶವಾಗುತ್ತಿದೆ. ಈ ಸಮಸ್ಯೆಗಳಿಗೆ ರಾಜಕೀಯ ವ್ಯಕ್ತಿಗಳಿಂದ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲ. ಧಾರ್ಮಿಕ ಮುಖಂಡರು ಮತ್ತು ವಿಧ್ವಾಂಸರು ಪ್ರಯತ್ನಿಸಿದರೆ ಸಮಾಜದಲ್ಲಿ ಮಾನವತೆ, ಸಹೋದರತೆ ಮೂಡಿ ಬರಲು ಸಾಧ್ಯ ಎಂದು ಹೇಳಿದರು.
ಧಾರ್ಮಿಕ ವಿದ್ವಾಂಸರ ಮಾತುಗಳಿಗೆ ಬೆಲೆ ಸಿಗದಿದ್ದಲ್ಲಿ ಸಮಾಜದಲ್ಲಿ ದುರಂತಗಳು ಹೆಚ್ಚು ಸಂಭವಿಸುತ್ತದೆ ಎಂದ ಝೈನಿ ಅವರು ೧೯೯೨ರಲ್ಲಿ ಬಾಬರಿ ಮಸೀದಿ ರಾಮಜನ್ಮಭೂಮಿ ಕಟ್ಟಡ ಧ್ವಂಸಗೊಂಡಾಗ ದೇಶದಾದಂತ ಕೋಮು ಗಲಭೆ ನಡೆದಿತ್ತು. ಈ ವೇಳೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಪೇಜಾವರ ಮಠಾಧೀಶರು ತಾನು ಎರಡೂ ಸಮುದಾಯಗಳ ತಲಾ ೩೦ ಮಂದಿಯನ್ನು ಕರೆದು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲು ಪ್ರಯತ್ನಿಸಿದೆ. ಆದರೆ ರಾಜಕೀಯ ವ್ಯಕ್ತಿಗಳು ಇದಕ್ಕೆ ಅವಕಾಶ ನೀಡಿಲ್ಲ. ಇದರಿಂದಾಗಿ ಕೋಮುಗಲಭೆಯಂತಹ ದುರಂತ ಸಂಭವಿಸಿತು ಎಂದು ನೋವಿನಿಂದ ಹೇಳಿದ್ದರು. ಅಂದು ಸ್ವಾಮೀಜಿ ಅವರ ಮಾತಿಗೆ ಬೆಲೆ ನೀಡಿದ್ದರೆ ಕೋಮುಗಲಭೆಯಂತಹ ದೊಡ್ಡ ಅನಾಹುತ ತಪ್ಪುತ್ತಿತ್ತು ಎಂದು ನೆನಪಿಸಿಕೊಂಡರು.

ಬಲಾತ್ಕಾರವಾಗಿ ಹೆಬ್ಬೆಟ್ಟು ಪಡೆದು ಆಸ್ತಿ ಲಪಟಾಯಿಸಿದ ಬಾರ್ ಮಾಲಕ

Posted by JAYAKIRANA Kirana on | 0 comments | Leave a comment...

ಉಡುಪಿ: ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಆಸ್ತಿಯನ್ನು ಮೋಸದಿಂದ ಪಡೆಯುವ ದುರುದ್ದೇಶದಿಂದ ಬಾರ್ ಮಾಲಕನೋರ್ವ ಆಸ್ಪತ್ರೆಯಲ್ಲಿದ್ದ ವ್ಯಕ್ತಿಯ ಹೆಬ್ಬೆಟ್ಟನ್ನು ಬಲಾತ್ಕಾರವಾಗಿ ಪಡೆದು ಕೊಂಡು ಕುಟುಂಬಕ್ಕೆ ವಂಚಿಸಿದ ಪ್ರಕರಣ ವೊಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಾರ್ಚ್ ೮ರಂದು ನಡೆದಿದೆ.
 ಈ ಸಂಬಂಧವಾಗಿ ಸಂತೆಕಟ್ಟೆಯ ಮಲ್ಪೆ ಕ್ರಾಸ್ ರಸ್ತೆಯ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರಿ ಕೆ.ಪೂರ್ಣಿಮಾ ಎಂಬಾಕೆ ನೀಡಿದ ದೂರಿನಂತೆ ಸಂತೆಕಟ್ಟೆ ಆಶೀರ್ವಾದ್ ಬಾರ್ ಎಂಡ್ ರೆಸ್ಟೋರೆಂಟ್ ಮಾಲಕನಾದ ಸುಧಾಕರ ಸುವರ್ಣ (೪೪) ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ನಾರಾಯಣ ಪೂಜಾರಿಯವರಿಗೆ ಆಗಾಗ ಅನಾರೋಗ್ಯ ಬಾಧಿಸುತ್ತಿದ್ದು, ಬಾಳಿಗಾ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಗೆ ಆಗಾಗ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮಾರ್ಚ್‌ನಲ್ಲಿ ಮತ್ತೆ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ನಾರಾಯಣ ಪೂಜಾರಿ ಅವರು ಮಾತನಾಡುವ, ಇತರರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲದೆ ಹಾಸಿಗೆ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
 ಇವರ ಹಿತೈಷಿಯೇ ಆಗಿರುವ ಸುಧಾಕರ ಸುವರ್ಣ ಮಾರ್ಚ್ ೮ರಂದು ಬೆಳಗ್ಗೆ ೯ ಗಂಟೆಗೆ ನಾರಾಯಣ ಪೂಜಾರಿ ಯವರನ್ನು ನೋಡಲೆಂದು ಆಸ್ಪತ್ರೆಗೆ ಬಂದಿ ದ್ದರು. ಈ ಸಮಯದಲ್ಲಿ ವಾರ್ಡ್‌ನಲ್ಲಿದ್ದ ನಾರಾಯಣ ಪೂಜಾರಿಯವರ ಮಗಳು ಪೂರ್ಣಿಮಾ, ಗಂಟೆ ೯.೨೦ಕ್ಕೆ ಕೆಲಸದ ನಿಮಿತ್ತವಾಗಿ ಆಸ್ಪತ್ರೆಯಿಂದ ನಿರ್ಗಮಿಸಿದ್ದರು. ಗಂಟೆ ೯.೪೫ರ ಸುಮಾರಿಗೆ ಸುಧಾಕರ ಪೂಜಾರಿ ಬಲಾತ್ಕಾರವಾಗಿ ನಾರಾಯಣ ಪೂಜಾರಿಯವರ ಹೆಬ್ಬೆಟ್ಟನ್ನು ಬಲವಂತವಾಗಿ ಪಡೆದುಕೊಂಡರು. ಸಂಜೆ ಮಗಳು ಪೂರ್ಣಿಮಾ ವಾಪಸ್ಸಾದಾಗ ಹೆಬ್ಬೆರಳಿನಲ್ಲಿ ಶಾಯಿ ಗುರುತು ಕಂಡಿದ್ದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿತ ಸುಧಾಕರ ಸುವರ್ಣಗೆ ಮಣಿಪಾಲ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿಗೊಳಿಸಲಾಗಿ ಹೇಳಿಕೆ ನೀಡುವಂತೆ ಹೇಳಿದ್ದಾರೆ.
ನಾರಾಯಣ ಪೂಜಾರಿಯವರ ಆಸ್ತಿ ಖರೀದಿಸಲು ಮುಂಗಡ ಹಣವನ್ನು ನೀಡಿರುವುದಾಗಿ ಆ ಕಾರಣದಿಂದ ಸಹಿ ಪಡೆದಿರುವುದಾಗಿ ಆರೋಪಿ ಪರ ಉಡುಪಿ ವಕೀಲರಾದ ಸಂಕಪ್ಪ ವಾದಿಸಲಿರುವುದಾಗಿ ತಿಳಿದುಬಂದಿದೆ.
ಆದರೆ ಆರೋಪಿತ ಸುಧಾಕರ ಸುವರ್ಣನ ಬಗ್ಗೆ ಸ್ಥಳೀಯವಾಗಿ ಒಳ್ಳೆ ಅಭಿಪ್ರಾಯವಿರದ ಬಗ್ಗೆ ತಿಳಿದುಬಂದಿದೆ.

ಅತ್ಯಾಚಾರಿಗೆ ಜೀವಾವಧಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕಎಡಪದವಿನಲ್ಲಿ ಒಂದೂವರೆ ವರ್ಷದ ಹಿಂದೆ ಯುವತಿ ಯೋರ್ವಳ ಅತ್ಯಾಚಾರ ನಡೆಸಿ, ಅಮಾ ನುಷವಾಗಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಆರೋಪಿ ದಿನೇಶ ಯಾನೆ ದಿನೇಶ ಗೌಡನಿಗೆ ಮಂಗಳೂರು ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
೨೦೧೦ರ ಅ.೩ರಂದು ಕೆಲಸ ಮುಗಿಸಿ ನಿರ್ಜನ ಪ್ರದೇಶದಲ್ಲಿ ಮನೆ ಕಡೆ ನಡೆದು ಕೊಂಡು ಹೋಗುತ್ತಿದ್ದ ಸರೋಜಿನಿ(೨೮) ಎಂಬಾಕೆಯನ್ನು ಅಡ್ಡಗಟ್ಟಿದ ದಿನೇಶ ಆಕೆ ಯನ್ನು ಹತ್ತಿರದ ಪಂಪ್‌ಶೆಡ್‌ಗೆ ಎಳೆದೊ ಯ್ದು ಸಿಮೆಂಟ್‌ನ ಇಂಟರ್‌ಲಾಕ್‌ನಿಂದ ಆಕೆಯ ತೆಲೆಗೆ ಹೊಡೆದು, ಎಚ್ಚರ ತಪ್ಪಿದ ಆಕೆಯ ಮೇಲೆ ಅತ್ಯಾಚಾರ ನಡೆಸಿ ಮತ್ತೊಂದು ಕಲ್ಲು ಎತ್ತಿ ಹಾಕಿ ಕೊಲೆ ನಡೆಸಿದ್ದ ಎಂದು ಆರೋಪಿಸಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸಿಪಿ ಪುಟ್ಟ ಮಾದಯ್ಯ ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಡಿ. ನರಸಿಂಹಮೂರ್ತಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸಾರ್ವಜನಿಕ ಅಭಿಯೋಜಕ ಸಿ. ವೆಂಕಟರಮಣ ಸ್ವಾಮಿ ಪೊಲೀಸ್ ಪರವಾಗಿ ವಾದಿಸಿದ್ದರು.

ಗಿರಿಗಿಟ್ಲೆ ಬಾಬಾನ ವಾರ್ಷಿಕ ನೇರ್ಚೆ ರದ್ದು!

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮದ ಬಾಂಬಿಲ ಎಂಬ ಲ್ಲಿರುವ ಸ್ವಯಂ ಘೋಷಿತ ಔಲಿಯಾ ಎಂದೇ ಕರೆಯಲಾಗುವ ಅಬೂಬಕ್ಕರ್ ಮಸ್ತಾನ್ ಯಾನೆ ಗಿರಿಗಿಟ್ಲೆ ಬಾಬಾನ ವಾರ್ಷಿಕ ನೇರ್ಚೆ ಸ್ಥಳೀಯರ ಆಕ್ಷೇಪದ ಹಿನ್ನೆಲೆಯಲ್ಲಿ ಈ ವರ್ಷ ರದ್ದಾಗಿದೆ.
ಕಳೆದ ವರ್ಷ ಭಾರೀ ಅದ್ಧೂರಿಯಲ್ಲಿ ಅಮ್ಮಜಾನ್ ಬಾವಾಜಾನ್ ಹೆಸರಿನಲ್ಲಿ ಆಸ್ತಾನದ ೩೯ನೇ ವಾರ್ಷಿಕ ನೇರ್ಚೆ ನಡೆದಿದ್ದು, ಕಾರ್ಯ ಕ್ರಮವಾಗಿ ಕೇವಲ ದಿನಗಳಲ್ಲಿ ಸ್ಥಳೀಯ ನಿವಾಸಿಗಳು ಬಾಬಾ ನಿವಾಸಕ್ಕೆ ದಾಳಿ ನಡೆಸಿದ್ದರು. ಬಾಬಾನ ಕೆಲವು ಕಾನೂನು ಬಾಹಿರ ಹಾಗೂ ಲೈಂಗಿಕ ಕೃತ್ಯಗಳನ್ನು ಖಾಸಗಿ ಟಿವಿ ಚಾನೆಲ್‌ವೊಂದು ಭಿತ್ತರಿಸಿತ್ತು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬಾಬಾನ ಮನೆಗೆ ನುಗ್ಗಿ ಸಾಮಗ್ರಿಗಳನ್ನು ಹಾನಿಗೊಳಿಸಿದ್ದರು. ಜನರ ದಾಳಿಗೆ ಹೆದರಿದ್ದ ಬಾಬಾ ತಲೆಮರೆಸಿಕೊಂಡಿದ್ದು, ಬಂಟ್ವಾಳ ಪೇಟೆ ಬಳಿ ಲಾಡ್ಜ್‌ವೊಂದರಲ್ಲಿ ಆತನಿಗೆ ರಕ್ಷಣೆ ನೀಡಲಾಗಿದ್ದು, ರಾಜಕೀಯದಲ್ಲಿ ಗುರುತಿಸಿ ಕೊಂಡ ಕೆಲವರು ಬೆಂಗಾವಲಾಗಿ ನಿಂತಿದ್ದರೆನ್ನಲಾಗಿದೆ.
 ಕಾನೂನು ಬಾಹಿರವಾಗಿ ಮಂತ್ರಮಾಟ ಮಾಡುತ್ತಾ ಅಮಾಯಕರನ್ನು ವಂಚಿಸುತ್ತಿದ್ದ ಹಾಗೂ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಅಬೂಬಕ್ಕರ್ ಮಸ್ತಾನ್ ಬಗ್ಗೆ ಇಲ್ಲಿನ ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡಿದ್ದರು. ಅಮಾನುಷ ಹಾಗೂ ಅಮಾನವೀಯ ಕೃತ್ಯಗಳೂ ಆಸ್ಥಾನದಲ್ಲಿ ನಡೆಸಲಾಗುತ್ತಿದ್ದ ಕುರಿತು ಸ್ಥಳೀಯರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಈ ಮಧ್ಯೆ ಬಾಬಾನ ಪರವಾಗಿ ಆತನ ಸಂಬಂಧಿ ಎನ್ನಲಾದ ಹನೀಫ್ ಯಾನೆ ಅಬ್ದುಲ್ ರಹಿಮಾನ್ ಎಂಬಾತ ಕೂಡಾ ಬಾಬಾಗೆ ಜೀವ ಬೆದರಿಕೆ ಇರುವುದಾಗಿ ಠಾಣೆಗೆ ದೂರು ನೀಡಿದ್ದನು. ನಕಲಿ ಬಾಬಾನ ಅವ್ಯವಹಾರ, ವಂಚನೆ ಹಾಗೂ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಕಾನೂನು ಬಾಹಿರ ಕೃತ್ಯಗಳನ್ನು ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ವಿಶೇಷ ತನಿಖೆ ನಡೆಸಬೇಕು. ಆಸ್ಥಾನದಲ್ಲಿ ನಿರ್ಮಿಸಲಾದ ವಿವಾದಿತ ದ್ವಾರ, ಅನಧಿಕೃತ ದರ್ಗಾ ಹಾಗೂ ಮಾಟಮಂತ್ರ ಹೆಸರಿನಲ್ಲಿ ನಡೆಸಲಾಗುತ್ತಿರುವ ಸಂಪ್ರದಾಯಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿರುವ ಸಾರ್ವಜನಿಕರು ಪೊಲೀಸ್ ಮಹಾನಿದೇರ್ಶಕರಿಗೆ ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಯವರಿಗೂ ದೂರು ನೀಡಿದ್ದಾರೆ. ತನಿಖೆ ನಡೆಸುವಂತೆ ಮೇಲಧಿಕಾರಿಗಳು ನಿರ್ದೇಶಿಸಿ ವರ್ಷ ಮೇಲಾದರೂ ಇನ್ನೂ ಬಾಬಾನ ನಕಲಿಗೆ ವಹಿವಾಟಿಗೆ ಕಡಿವಾಣ ಬಿದ್ದಿಲ್ಲ. ಆದರೆ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿದ್ದ ವಾರ್ಷಿಕ ನೇರ್ಚೆ ಕಾರ್ಯಕ್ರಮವನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಕೈವಾಡ?
ಬಾಬಾನ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸಾರ್ವಜನಿಕರು ನೀಡಿದ ದೂರನ್ನು ಗ್ರಾಮಾಂತರ ಠಾಣೆಯಲ್ಲಿ ಸ್ವೀಕರಿಸಿರಲಿಲ್ಲ. ಕೊನೆಗೆ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದ ಅಂದಿನ ಠಾಣಾಧಿಕಾರಿಗಳು ತನಿಖೆ ನಡೆಸುವ ನಾಟಕವಾಡಿದ್ದರು. ಬಾಬಾ ವಿರುದ್ಧ ಯಾವುದೇ ಕ್ರಮ ಜರುಗಿಸಬಾರದೆಂಬ ಕಾಂಗ್ರೆಸ್ ಮುಖಂಡರ ಪಟ್ಟಿಗೆ ಪೊಲೀಸ್ ಅಧಿಕಾರಿಗಳು ಜೋತು ಬೀಳಬೇಕಾಯಿತು. ಬಾಬಾನ ನಿವಾಸದಲ್ಲಾದ ವಿವಾಹಿತ ಯುವಕನ ಅಸಹಜ ಸಾವು, ಬೊಳ್ಳಾಯಿ, ನಗ್ರಿ ಗುಡ್ಡದಲ್ಲಿ ಪತ್ತೆಯಾದ ತರುಣಿಯ ಶವ ಪ್ರಕರಣಗಳಲ್ಲಿ ತನಿಖೆಗೆ ಬೇಕಾಗಿದ್ದ ಬಾಬಾನನ್ನು ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಂತೆಯೇ ತಲೆ ಮರೆಸಿಕೊಳ್ಳಲು ಯಶಸ್ವಿಯಾದ ಬಾಬಾ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡು ಹೊರಬಂದಿದ್ದನು. ಬಾಬಾನ ವಹಿವಾಟಿಗೂ ಅಂದಿನ ಠಾಣಾಧಿಕಾರಿಗಳ ಶ್ರೀರಕ್ಷೆ ಇತ್ತೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಬಾಲಕಿ ಮರಳಿ ಹೆತ್ತ ಮಡಿಲಿಗೆ!

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಬೆಂಗಳೂರಿನ ರೈಲ್ವೆ ಸ್ಟೇಷನ್ ಬಳಿ ಇದ್ದ ೯ರ ಹರೆಯದ ಬಾಲಕಿ ಯನ್ನು ಮೂಡಬಿದ್ರೆ ಸಮೀಪದ ಮಾರ್ಪಾ ಡಿಯ ಮಹಿಳೆಯೊಬ್ಬಳು ಕರೆದುಕೊಂಡು ಬಂದಿದ್ದು, ಇದೀಗ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಸುರಕ್ಷಿತವಾಗಿ ಆಕೆಯ ಹೆತ್ತವರೊಂದಿಗೆ ವಾಪಸ್ ತನ್ನೂರು ಸೇರಿಕೊಂಡಿದ್ದಾಳೆ.
ಮೂಡಬಿದ್ರೆ ಸಮೀಪದ ಮಾರ್ಪಾಡಿ ಗ್ರಾಮದ ಮುರಮೇಲು ಎಂಬಲ್ಲಿನ ಮಹಿಳೆ ಶಕುಂತಳಾ ಇತ್ತೀಚೆಗೆ ತನ್ನ ಮಗಳನ್ನು ನೋಡಲು ಬೆಂಗಳೂರಿಗೆ ತೆರಳಿದ್ದರು. ಈಕೆ ಮೂಲತಃ ತಮಿಳುನಾಡಿನವಳು. ಕಳೆದ ಕೆಲ ವರ್ಷಗಳಿಂದ ಮುರಮೇಲಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರೈಲ್ವೆಸ್ಟೇಷನ್ ಬಳಿ ೯ರ ಹರೆಯದ ಬಾಲಕಿ ಯೊಬ್ಬಳು ಏಕಾಂಗಿಯಾಗಿದ್ದಳು. ಆಕೆಯ ಹೆಸರು ಶಾಂತಕುಮಾರಿ, ಬೆಂಗಳೂರಿನಲ್ಲೇ ಇರುವ ಶೇಖರ-ಕಾಂಚನಾ ದಂಪತಿ ಪುತ್ರಿ.
ಒಬ್ಬಳೇ ಇದ್ದುದನ್ನು ಕಂಡು ಶಕುಂತಳಾ ಅವರು ಹತ್ತಿರ ಹೋಗಿ ವಿಚಾರಿ ಸಿದ್ದರು. ತನಗೆ ತಂದೆ-ತಾಯಿ ಯಾರೂ ಇಲ್ಲ ಅಂತ ಶಾಂತಕುಮಾರಿ ಹೇಳಿದ್ದಳು. ಆ ಸಂದರ್ಭದಲ್ಲಿ ನನ್ನೊಂದಿಗೆ ಬರ‍್ತಿಯಾ? ಅಂತ ಕೇಳಿದ್ದಕ್ಕೆ ಶಾಂತಕುಮಾರಿ ಅದಕ್ಕೊಪ್ಪಿ ಶಕುಂತಳಾ ಅವರೊಂದಿಗೆ ಬಂದಿದ್ದಾಳೆ. ಈ ಘಟನೆ ನಡೆದು ೧೫ ದಿನಗಳು ಕಳೆದಿದೆ. ಅತ್ತ ಶೇಖರ್ ತನ್ನ ಮಗಳು ನಾಪತ್ತೆಯಾದ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಶಕುಂತಳಾರ ಸಂಬಂಧಿಕರ ಮನೆ ಶಿರ್ತಾಡಿಯಲ್ಲಿದ್ದು ಸೋಮವಾರ ಶಕುಂತಳಾ ಶಿರ್ತಾಡಿಗೆ ಹೋಗಿದ್ದ ಸಂದರ್ಭದಲ್ಲಿ ಶಾಂತಕುಮಾರಿ ಕೂಡಾ ಹೋಗಿದ್ದಳು. ಅಲ್ಲಿ ಆಕೆ ಹೊರಗಡೆ ನಿಂತು, ತಂದೆ, ತಾಯಿ ಬೇಕು ಅಂತ ಕೂಗುತ್ತಿದ್ದ ದೃಶ್ಯ ಸ್ಥಳೀಯರ ಗಮನಕ್ಕೆ ಬಂತು. ಸಮಾಜಸೇವಕ ಭಾಸ್ಕರ್ ಅವರ ಗಮನಕ್ಕೆ ಹೋಗಿ ಅವರು ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರ ಹಾಗೂ ಸಮಾಜಕಲ್ಯಾಣ ಇಲಾಖೆಯವರ ನೆರವಿನಿಂದ ಶಾಂತಕುಮಾರಿಯನ್ನು ಹೆತ್ತವರೊಂದಿಗೆ ಕಳುಹಿಸಿ ಕೊಡಲಾಗಿದೆ.

ಪಾದೂರು: ಕ್ರಷರ್ ಹುಡಿ ಘಟಕದ ವಿರುದ್ಧ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಪಾದೂರಿನಲ್ಲಿ ಕಾರ್ಯಾ ಚರಿಸುತ್ತಿರುವ ಕಚ್ಚಾತೈಲ ಸಂಗ್ರಹಣಾಗಾರ ಐಎಸ್‌ಪಿಆರ್‌ಎಲ್ ಘಟಕವು ಪಾದೂರು ಪರಿಸರದಲ್ಲಿ ಕ್ರಷರ್‌ಹುಡಿ ಘಟಕವನ್ನು ಮಾಡಲು ಉದ್ದೇಶಿಸಿದ್ದು, ಇದರಿಂದ ಪರಿಸರ ಸಂಪೂರ್ಣ ನಾಶವಾಗಲಿದೆ ಎಂದು ಆರೋಪಿಸಿ ಮಂಗಳವಾರ ಪಾದೂರಿನ ಜಲಂಜಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಮಜೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಐತಾಳ್ ಮಾತನಾಡಿ, ಇಲ್ಲಿಯ ಎಲ್ಲಾ ಸಮಸ್ಯೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಸಮಗ್ರ ಮಾಹಿತಿ ನೀಡಿದ್ದೇವೆ. ಆದರೂ ಯಾವುದೇ ಪರಿಹಾರವನ್ನು ಉಡುಪಿ ಜಿಲ್ಲಾಧಿಕಾರಿ ಯವರು ಕೇವಲ ಭರವಸೆ ಮಾತ್ರ ನೀಡಿ ದ್ದಾರೆ. ರಾಜಕಾರಣಿಗಳು, ಉಡುಪಿ ಜಿಲ್ಲಾಡ ಳಿತ ಮುಂದಿನ ಒಂದು ವಾರದೊಳಗೆ ಪರಿ ಹಾರ ದೊರಕದಿದ್ದರೆ, ತೀವ್ರ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
 ಸಭೆಯಲ್ಲಿ ಘಟಕದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಭೆಯಲ್ಲಿ ಭಾಗವಹಿಸಿದ ನೂರಾರು ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳು ಘಟಕದ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
 ಸಮಾಲೋಚನಾ ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿ. ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಜಿ. ಪಂ. ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ತಾ. ಪಂ. ಅಧ್ಯಕ್ಷ ದೇವದಾಸ ಹೆಬ್ಬಾರ್, ದೇವಿ ಪ್ರಸಾದ್ ಶೆಟ್ಟಿ, ಡಾ. ಎನ್.ಎಸ್ ಶೆಟ್ಟಿ, ತಹಶಿಲ್ದಾರ್ ಅಭಿಜಿನ್, ತಾ. ಪಂ. ವಿಸ್ತರಣಾಧಿಕಾರಿ ಮಂಜುನಾಥಯ್ಯ ಮತ್ತಿತರರು ಭಾಗವಹಿಸಿದ್ದರು.

ಡಿ.ವಿ. ಸರಕಾರಕ್ಕೆ ಯಡ್ಡಿಯೇ ವಿಪಕ್ಷ!

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬರ ಪರಿಹಾರ ಕಾಮಗಾರಿ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಪಕ್ಷದ ವಿರುದ್ಧ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಹರಿಹಾಯ್ದರು.
ಅಧಿಕಾರ ಕಳೆದುಕೊಂಡ ಏಳು ತಿಂಗಳ ನಂತರ ಮೊದಲ ಬಾರಿಗೆ ಕರೆದಿದ್ದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೌನ ಮುರಿದಿದ್ದೇನೆ. ಬರದಿಂದ ಪರಿತಪಿ ಸುತ್ತಿರುವ ಜನರ ಸಹಕಾರಕ್ಕೆ ಇಂದಿನಿಂದಲೇ ಧುಮುಕುವುದಾಗಿ ಘೋಷಿಸಿದರು.
ರಾಜ್ಯ ಬರಗಾಲದಿಂದ ಕಂಗೆಟ್ಟಿ ರುವಾಗ ನನಗೆ ಸನ್ಮಾನ ಮಾಡಬೇಡಿ. ಅದೇ ದುಡ್ಡನ್ನು ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊಡಿ ಎಂದು ಮುಖ್ಯಮಂತ್ರಿ ಸದಾನಂದಗೌಡ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಬೆನ್ನೆಲೆ ನಿನ್ನೆ ಮಾಜಿ ಮುಖ್ಯಮಂತ್ರಿ ಸರ್ಕಾರ ಮತ್ತು ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ.
ಮುಖ್ಯ ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಕಾರ್ಯದರ್ಶಿಗಳು ಬೆಂಗಳೂರಿನ ತಂಪು ಹವೆ ಪಡೆದು ಆರಾಮಾಗಿದ್ದಾರೆ. ನೆಪಮಾತ್ರಕ್ಕೆ ತಮ್ಮ ಜಿಲ್ಲೆಗಳಿಗೆ ರೈಲಿನಲ್ಲಿ ತೆರಳಿ, ಅದೇ ರೈಲಿನಲ್ಲಿ ಟಿಕೆಟ್ ಪಡೆದು ಹಿಂತಿರು ಗುವ ಅಧಿಕಾರಿಗಳು ಜನರ ಕಷ್ಟಸುಖ ಗಳಿಗೆ ಸ್ಪಂದಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಸದಾನಂದಗೌಡರ ವಿರುದ್ಧ ನೇರವಾಗಿ ತಮ್ಮ ಕೋಪವನ್ನು ತೋರಿಸಿಕೊಳ್ಳುವ ಬದಲು ಮುಖ್ಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿಯುದ್ದಕ್ಕೂ ಟೀಕಾಪ್ರಹಾರ ಮಾಡಿದರು. ಕೇವಲ ಬೆಂಗಳೂರಿನ ತಮ್ಮ ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದರೆ ಪರಿಹಾರ ಸಿಗುವುದಿಲ್ಲ. ಮೊದಲು ಮುಖ್ಯ ಕಾರ್ಯದರ್ಶಿಗಳು ತಮ್ಮ ಕೊಠಡಿ ಬಿಟ್ಟು, ಬಿಸಿಲಿನ ಜಳಕ್ಕೆ ಇಳಿಯಲಿ. ಆಗ ಕೆಳಗಿನ ಹಂತದ ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ರಾಜ್ಯದಲ್ಲಿ ೨೪ ಜಿಲ್ಲೆಗಳ ೧೨೩ ತಾಲ್ಲೂಕುಗಳಲ್ಲಿ ತೀವ್ರ ಬರಗಾಲದಿಂದ ಕುಡಿಯುವ ನೀರಿಗೆ ಜನ ಹಾಹಾಕಾರ ಪಡುತ್ತಿದ್ದರೆ ಮೇವಿಲ್ಲದೆ ದನಕರುಗಳು ಕಸಾಯಿಖಾನೆಗೆ ತಲುಪುತ್ತಿವೆ. ಕೂಲಿ ಇಲ್ಲದೆ ಜನ ಕಂಗ್ಗಾಲಾಗಿ ಗುಳೆ ಏಳುತ್ತಿದ್ದರೂ ಅಧಿಕಾರಿಗಳು ಕಣ್ಣುತೆರೆಯುತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯನ್ನಾಧರಿಸಿ, ತಾವು ಇಂದಿನಿಂದಲೇ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತೇನೆ.
ನನ್ನ ಜೊತೆ ಸ್ಥಳೀಯ ಜಿಲ್ಲಾ ಸಚಿವರು, ಶಾಸಕರು, ಕಾರ್ಯಕರ್ತರು ಇರುತ್ತಾರೆ ಎನ್ನುವುದರ ಮೂಲಕ ಸಮಾನಾಂತರವಾಗಿ ಸರ್ಕಾರ ಆಡಳಿತ ನಡೆಸಲು ಮುಂದಾಗಿದ್ದಾರೆ. ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಅವರು ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ ಎಂದು ಅಭಿಪ್ರಾಯಿಸಿದರು.

ಉಡುಪಿ: ಕೇಂದ್ರದ ವಿರುದ್ಧ ಚಿನ್ನಾಭರಣ ಮಾಲಕರ, ಕೆಲಸಗಾರರ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕೇಂದ್ರದ ಯುಪಿಎ ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲೆ ವಿಧಿಸಿದ ಹೆಚ್ಚು ವರಿ ಸೀಮಾ ಸುಂಕ, ತೆರಿಗೆ, ಗ್ರಾಹಕ ತೆರಿಗೆ ಇತ್ಯಾದಿಗಳನ್ನು ಪ್ರತಿಭಟಿಸಿ ಉಡುಪಿ ಜ್ಯುವೆಲ್ಲರ‍್ಸ್ ಅಸೋಸಿಯೇಶನ್ ವತಿಯಿಂದ ಮಂಗಳವಾರ ಉಡುಪಿ ಚಿತ್ತರಂಜನ್ ಸರ್ಕಲ್‌ನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಯಿತು.
ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ಚಿನ್ನಾ ಭರಣ ಅಂಗಡಿಗಳ ಮಾಲಕರ ಸಹಿತ ನೂರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಧರಣಿಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಶನಿನ ಅಧ್ಯಕ್ಷ ಜಯ ಆಚಾರ್ಯ ಅವರು, ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟ ನೆಯ ಭಾಗವಾಗಿ ಉಡುಪಿಯಲ್ಲೂ ಪ್ರತಿಭಟನೆ ನಡೆಯುತ್ತಿದೆ. ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.
ಅಸೋಸಿಯೇಶನ್ ಪದಾಧಿಕಾರಿ ಗಳಾದ ಅಲೆವೂರು ಯೋಗೀಶ್ ಆಚಾರ್ಯ, ಸುಭಾಶ್ ಕಾಮತ್, ಕಪ್ಪೆಟ್ಟು ಬಾಲಕೃಷ್ಣ ಆಚಾರ್ಯ, ಶ್ರೀಕಾಂತ ಆಚಾರ್ಯ, ಸುಬ್ರಹ್ಮಣ್ಯ ಶೇಟ್, ಅನಂತಪದ್ಮನಾಭ ಶೇಟ್, ಚಂದ್ರಶೇಖರ ರಾವ್, ಮುರಹರಿ ರಾವ್, ರಾಜೇಶ್ ಆಚಾರ್ಯ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.

ಕಿನ್ನಿಗೋಳಿಯಲ್ಲಿ ಯಮದೂತ ವಿದ್ಯುತ್‌ಕಂಬ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಇಲ್ಲಿಯ ಸಮೀಪದ ಕಿನ್ನಿಗೋಳಿಯ ಬಟ್ಟಕೋಡಿಯ ಕಡಿದಾದ ತಿರುವಿನಲ್ಲಿ ಯಮದೂತ ನಂತೆ ಕಾಡುತ್ತಿರುವ ವಿದ್ಯುತ್ ಕಂಬವು ಹಲವು ವರ್ಷಗಳಿಂದ ಅಪಾಯದ ಅಂಚಿನಲ್ಲಿದ್ದು, ಈ ವಿದ್ಯುತ್ ಕಂಬ ವನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳ ದಿರುವುದು ಸಾರ್ವಜನಿಕರ ಚಿಂತೆಗೆ ಕಾರಣವಾಗಿದೆ.
ಈ ವಿದ್ಯುತ್ ಕಂಬಕ್ಕೆ ಹಲವು ವಾಹನಗಳು ಡಿಕ್ಕಿ ಹೊಡೆದ ಪರಿಣಾ ಮವಾಗಿ ಹಲವು ವಾಹನ ಸವಾರರು ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆಗಳು ನಡೆದಿವೆ. ಈ ತಿರುವಿನಲ್ಲಿ ಅಪಘಾತಗಳು ಅತಿಯಾಗಿದ್ದರೂ ಈ ವಿದ್ಯುತ್ ಕಂಬವನ್ನು ಸ್ಥಳಾಂತರಿಸದಿ ದ್ದರೆ ಇನ್ನೆಷ್ಟು ಮಂದಿಯ ಪ್ರಾಣ ಬಲಿ ತೆಗೆದುಕೊಳ್ಳಬೇಕೋ ಗೊತ್ತಿಲ್ಲ. ಈ ವಿದ್ಯುತ್ ಕಂಬದಿಂದ ಸಂಚಾರಕ್ಕೆ ಸಮಸ್ಯೆಯಾಗಿದ್ದು ವಾಹನಗಳು ರಾತ್ರಿಯ ವೇಳೆ ಚಲಿಸುವ ವೇಗದಲ್ಲಿ ವಿದ್ಯುತ್ ಕಂಬ ಗೋಚರಿಸದೆ ಎಷ್ಟೋ ಅಪಘಾತಗಳು ನಡೆದಿವೆ. ಈ ರಸ್ತೆಯಲ್ಲಿ ಹೆಚ್ಚಾಗಿ ಕಟೀಲು ದೇವಸ್ಥಾನಕ್ಕೆ ಬರುವ ಯಾತ್ರಿಕರು ಹೆಚ್ಚು. ಇವರಿಗೆ ಈ ತಿರುವಿನಲ್ಲಿರುವ ಕಂಬ ರಾತ್ರಿಯ ಹೊತ್ತಲ್ಲಿ ಕಾಣದೆ ಎಷ್ಟೋ ಅಪಘಾತ ಗಳು ನಡೆದದ್ದೂ ಇದೆ.
ಆದರೆ ಇದಕ್ಕೆ ಸಂಬಂಧಪಟ್ಟ ಮೆಸ್ಕಾಂ ಮಾತ್ರ ಪರಿಹಾರ ವ್ಯವಸ್ಥೆ ಯನ್ನು ಮಾಡದೆ ಈ ಕಂಬವನ್ನು ಸ್ಥಳಾಂತರಿಸದೆ ಇರುವುದು ವಾಹನ ಗಳು ಅಪಾಯದ ಭೀತಿಯಲ್ಲೇ ಸಂಚರಿಸುವಂತೆ ಮಾಡಿದೆ. ಈ ಸ್ಥಳದಲ್ಲಿ ಯಾವುದೇ ಅಪಘಾತಗಳು ನಡೆದಾಗ ಈ ವಿದ್ಯುತ್ ಕಂಬದ ಬಗ್ಗೆ ಕಾಳಜಿ ತೋರಿಸುವುದು ಮಾತ್ರ ಮರುದಿನ ಯಥಾ ಸ್ಥಿತಿಗೆ ತಿರುಗುತ್ತದೆ. ಇನ್ನಾದರೂ ಮೆಸ್ಕಾಂನವರು ಇತ್ತ ಗಮನ ಹರಿಸಿ ಸರಿಪಡಿಸುವ ಕೆಲಸ ಮಾಡಿದರೆ ಅಮಾಯಕ ಜನರ ಜೀವ ಉಳಿಸಿದಂತಾಗುತ್ತದೆ.

Page1

Posted by JAYAKIRANA Kirana on | 1 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (82) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4036) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2490) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (37) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (110) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (259) ln (1) lnews (3666) lokayukta (3) madikeri (1) maleria (1) mangalore (575) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (410) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (270) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (792) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (947) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (45) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)