ಶಿಲಾಶಿಲಾ ಹಕ್ಕಿಗಾಗಿ ಪೋರ್ಜರಿ ತಾಮ್ರ ಶಾಸನ

Posted by JAYAKIRANA Kirana on Monday, 2 April 2012 | 0 comments | Leave a comment...


ನಮ್ಮ ದೇಶದಲ್ಲಿ ಈಗಿನ ಬ್ರಾಹ್ಮಣರು ಮಧ್ಯಕಾಲದ ಐರೋಪ್ಯ ಯತಿಗಳಂತೆ, ತಾವು ಆಕ್ರಮಿಸಬೇಕೆಂದಿದ್ದ ಸ್ಥಳದಲ್ಲಿ ತಮಗೆ ಅನುಕೂಲವಾಗುವಂತೆ ಬರೆದ ಕೃತ್ರಿಮ ತಾಮ್ರ ಶಾಸನವನ್ನು ತಾವೇ ಹುದಿಗಿಟ್ಟು ಸ್ವಲ್ಪ ಸಮಯದ ನಂತರ ಹತ್ತು ಜನರ ಎದುರಿನಲ್ಲಿ ಅಜ್ಞರಾದ ಇತರರು ಆಶ್ಚರ್ಯಪಡುವಂತೆ ಹೊರತೆಗೆದು ಇದು ಸಾಧಾರಣ ಒಂದೆರಡು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣ ವ, ಯಾರಾದರೂ ಯುಗ ಪುರುಷರು ತಮಗೆ ದಾನತತ್ತ ಮಾಡಿದ್ದೆಂದು ಶುತಪಡಿಸಿ ಅಲ್ಲಿಯ ನ್ಯಾಯವಾದ ಹಕ್ಕುದಾರರನ್ನು ಆಕ್ರಮಣಕಾರರೆಂದು ನಿರ್ದಯೆ ಮತ್ತು ಬಲಾತ್ಕಾರದಿಂದ ಹೊರಹಾಕಿ ಆಕ್ರಮಿಸಿದ ಸ್ಥಳವನ್ನೇ ತಮ್ಮ ಸ್ಥಳವೆಂದು ಅನುಭವಿಸುತ್ತಾರೆ. ಅದರ ನ್ಯಾಯವಾದ ಹಕ್ಕುದಾರರು ಆ ಸ್ಥಳದ ಅಧಿಕಾರಿಗಳೆಂದು ತಿರುಗಿ ಆ ಸ್ಥಳವನ್ನು ಪ್ರವೇಶಿಸಬಹುದೆಂಬ ಭಯದಿಂದಲೂ, ಮತ್ತು ಇತರ ಶಕ್ತಿಯುತ ಜಾತಿಗಳಿಗೆ ಈ ಗುಟ್ಟು ಸಿಕ್ಕದಂತೆಯೂ ಬಹಳ ಜಾಗರೂಕತೆಯನ್ನು ತೆಗೆದುಕೊಳ್ಳುತ್ತಾರೆ.

೧೮೮೩ರಲ್ಲು ಈ ವ್ಯಾಸತೀರ್ಥ ಸ್ವಾಮಿಗಳ ದುರಾಡಳಿತವನ್ನು ಕಂಡು ಆಗಿನ ದೇವಸ್ಥಾನದ ಕಮಿಟಿಯವರಾದ ಶ್ರೀನಿವಾಸ ಭಟ್ಟ, ನಾರಾಯಣ ಶಗ್ರಿತ್ತಾಯ ಮತ್ತು ಕೃಷ್ಣ ಶಿಬರಾಯ ಈ ಮೂರು ಜನರು ಆಗಿನ ಆಡ ಳಿತೆ ಮೆಂಬರರಾದ ರಾಮಕೃಷ್ಣ ಆಸ್ರಣ್ಣರ ಅರ್ಜಿ ಪ್ರಕಾರ ತನಿಖೆ ನಡೆಸಿ ಅನೇಕ ದೇವಳದ ಉದ್ಯೋಗಸ್ಥರುಗಳಿಂದ ಹೇಳಿಕೆಗಳನ್ನು ಪಡಕೊಂಡು ಸ್ವಾಮಿಗಳನ್ನು ತಪ್ಪಿತಸ್ಥರನ್ನಾಗಿ ಮಾಡಿ ಅವರನ್ನು ದೇವಸ್ಥಾನದ ಆಡ ಳಿತೆಯಿಂದ ಅಮಾನತುಗೊಳಿಸಿದರು. ಹೀಗೆ ಅಮಾನತುಗೊಳಿಸಲ್ಪಟ್ಟ ಸ್ವಾಮಿಗಳು ಈ ಸುಬ್ರಹ್ಮಣ್ಯ ದೇವಸ್ಥಾನವು ತನ್ನ ಮಠದ ಶಿಲಾಶಿಲಾ ಹಕ್ಕಿನದೆಂದು ದೇವಳದ ಆಡಳಿತೆಯು ತನಗೆ ಸಿಕ್ಕಬೇಕೆಂದು ವಾದಿಸಿ u.R. 27, 1886 ವ್ಯಾಜ್ಯ ಒಂದನ್ನು ದೇವಳದ ಕಮಿಟಿಯವರ ಮೇಲೆ ಹೂಡಿದರು. ಈ ವ್ಯಾಜ್ಯದಲ್ಲಿ ಸ್ವಾಮಿಗಳು ಒಂದು ಪೋರ್ಜರಿ ತಾಮ್ರ ಶಾಸನವನ್ನು ತಯಾರು ಮಾಡಿಸಿ ತಮ್ಮ ನರಸಿಂಹ ಗುಡಿಯಲ್ಲಿ ಇರಿಸಿ ಅದನ್ನು ಸ್ವಲ್ಪ ಸಮಯದ ನಂತರ ೧೮೮೬ನೇ ಇಸವಿ ಸಪ್ಟೆಂಬರದಲ್ಲಿ ಆ ಗುಡಿಯನ್ನು ರಿಪೇರಿ ಮಾಡಿಸುವ ನೆವನದಿಂದ ಅಗೆಯುವಾಗ ತಾಮ್ರ ಶಾಸನ ಒಂದು ಸಿಕ್ಕಿತೆಂದು ಅದರಲ್ಲಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡ ಳಿತೆಯು ಮಠದ ಸ್ವಾಮಿಯವರಿಗೆ ಬಲ್ಲಾಳರಾಯ ಬಿಟ್ಟಿದ್ದೆಂದು ಮಾಡಿಸಿ ಆ ಶಾಸನವನ್ನು ಮೇಲಿನ ವ್ಯಾಜ್ಯದಲ್ಲಿ ಹಾಜರುಪಡಿಸಿದರು. ಇದಕ್ಕೆ ಆಧಾರವಾಗಿ ಈ ಕೆಳಗಿನ ಪತ್ರದಿಂದ ಈ ಪೋರ್ಜರಿ ಶಾಸನದಲ್ಲಿ ಆಗ ಯಾರ‍್ಯಾರು ಸೇರಿ ೧೩ ತಪ್ಪುಗಳು ಹೊರಿಸಲ್ಪಟ್ಟು ಕಮಿಟಿಯವರು ಅವ ರನ್ನು ಅಮಾನತುಪಡಿಸಿದ್ದು ಸರಿಯೆಂದೂ, ತಾಮ್ರ ಶಾಸನವು ಪೋರ್ಜರಿ ಎಂದೂ ತಾ. ೨೭-೯-೧೮೮೭ರಲ್ಲಿ ಆಗಿನ ಮಂಗಳೂರು ಸಬ್ ಕೋರ್ಟಿನ ಸಬ್ ಜಡ್ಜ್ಜ್ ಶ್ರೀಮಾನ್ ಗೋಪಾಲ್ ನಾಯರ್‌ರವರಲ್ಲಿ ಇತ್ಯರ್ಥವಾಯಿತು.
ಮಠದ ಸ್ವಾಮಿಗಳನ್ನು ಅಮಾನತುಗೊಳಿಸಿದ ಮೇಲೆ ದೇವಸ್ಥಾ ನದ ಆಡಳಿತೆಗೆ ಬೆಳ್ತಂಗಡಿಯಲ್ಲಿ ಮಾಗಣೆ ಶ್ಯಾನುಭಾಗನಾಗಿದ್ದ ಬಾಗ ಲೋಡಿ ರಾಮಕೃಷ್ಣಯ್ಯನನ್ನು ಕಮಿಟಿಯವರು ನೇಮಕ ಮಾಡಿದರು.
ಈ ಸ್ವಾಮಿಗಳು ಹಾಜರುಪಡಿಸಿದ ಪೋರ್ಜರಿ ತಾಮ್ರ ಶಾಸನದ ವಿಷಯದಲ್ಲಿ ಮೇಲಿನ u.R.WÉl. 27/1876ರ ವ್ಯಾಜ್ಯದ ತೀರ್ಪಿನಲ್ಲಿ ಆಗಿನ ಸಬ್ ಜಡ್ಜರಾದ ಶ್ರೀಗೋಪಾಲನ್ನಾಯರ್‌ರವರು ಈ ರೀತಿ ವರ್ಣಿಸಿದ್ದಾರೆ.
“The strange mode of its discovery as told by the plaintiff and his 4th witness Venkatramana Bhata at once reminded me of the following passage in a work on “India and its native princess” by that great French Traveller M. Lovice Rousselt (Page 187) “like the monks” of the middle ages, who took advantage of the general ignorance to forge royal charters, the brahmins of our day employ the same means to increase their possesions. With great solemanity they dig up a plate of Copper previously oxidized and burried by themselves, on wich to the astonishment of all it is recorded that God “Krishna or some mytheological hero, had granted them two or three thousands years before, the very land they Covet. The real owners of the land are then without pity, and if any Venture to doubt the authenticity of the charter, they take good care to Conceal their thoughts for fear of bringing upon themselves the venjence of the all powerful Cast of preiests.”
ಇದರ ತಾತ್ಪರ್ಯವೇನೆಂದರೆ:
ನಮ್ಮ ದೇಶದಲ್ಲಿ ಈಗಿನ ಬ್ರಾಹ್ಮಣರು ಮಧ್ಯಕಾಲದ ಐರೋಪ್ಯ ಯತಿ ಗಳಂತೆ, ತಾವು ಆಕ್ರಮಿಸಬೇಕೆಂದಿದ್ದ ಸ್ಥಳದಲ್ಲಿ ತಮಗೆ ಅನುಕೂಲವಾಗು ವಂತೆ ಬರೆದ ಕೃತ್ರಿಮ ತಾಮ್ರ ಶಾಸನವನ್ನು ತಾವೇ ಹುದಿಗಿಟ್ಟು ಸ್ವಲ್ಪ ಸಮ ಯದ ನಂತರ ಹತ್ತು ಜನರ ಎದುರಿನಲ್ಲಿ ಅಜ್ಞರಾದ ಇತರರು ಆಶ್ಚರ್ಯ ಪಡುವಂತೆ ಹೊರತೆಗೆದು ಇದು ಸಾಧಾರಣ ಒಂದೆರಡು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣ ಅಥವಾ ಯಾರಾದರೂ ಯುಗ ಪುರುಷರು ತಮಗೆ ದಾನ ತತ್ತ ಮಾಡಿದ್ದೆಂದು ಶುತಪಡಿಸಿ ಅಲ್ಲಿಯ ನ್ಯಾಯವಾದ ಹಕ್ಕುದಾರರನ್ನು ಆಕ್ರಮಣಕಾರರೆಂದು ನಿರ್ದಯೆ ಮತ್ತು ಬಲಾತ್ಕಾರದಿಂದ ಹೊರಹಾಕಿ ಆಕ್ರಮಿಸಿದ ಸ್ಥಳವನ್ನೇ ತಮ್ಮ ಸ್ಥಳವೆಂದು ಅನುಭವಿಸುತ್ತಾರೆ. ಅದರ ನ್ಯಾಯವಾದ ಹಕ್ಕುದಾರರು ಆ ಸ್ಥಳದ ಅಧಿಕಾರಿಗಳೆಂದು ತಿರುಗಿ ಆ ಸ್ಥಳವನ್ನು ಪ್ರವೇಶಿಸಬಹುದೆಂಬ ಭಯದಿಂದಲೂ, ಮತ್ತು ಇತರ ಶಕ್ತಿ ಯುತ ಜಾತಿಗಳಿಗೆ ಈ ಗುಟ್ಟು ಸಿಕ್ಕದಂತೆಯೂ ಬಹಳ ಜಾಗರೂಕತೆ ಯನ್ನು ತೆಗೆದುಕೊಳ್ಳುತ್ತಾರೆ.
ಇದೇ ಜಡ್ಜ್‌ಮೆಂಟಿನಲ್ಲಿ ಫಾರಂ ೧೬ರಲ್ಲಿ ಸ್ಮಾರ್ತ ಶಿವ ಬ್ರಾಹ್ಮಣರಾದ ಸ್ಥಾನಿಕ ಹೆಬ್ಬಾರರ ಅಧಿಕಾರ ಸ್ಥಾನಮಾನಗಳನ್ನೂ ತೋರಿಸಿಕೊಟ್ಟು ೧೮ನೇ ಪಾರದಲ್ಲಿ ಜಡ್ಜರು ೧೮೧೭ರ ಮುಂಚೆ ಸ್ಥಾನಿಕರು ಮತ್ತು ಊರಿನ ಮುಖ್ಯ ಸ್ಥರು ಆಡಳಿತೆಯಲ್ಲಿ ಇದ್ದರೆಂದು ತಿಳಿಸಿದ್ದರಿಂದ ಈ ದೇವಸ್ಥಾನದ ನ್ಯಾಯ ವಾದ ಹಕ್ಕುದಾರರು ಸ್ಮಾರ್ತರಾದ ಸ್ಥಾನಿಕರೆಂದೂ ವೈಷ್ಣವ ಮಾಧ್ವರ ಆಡ ಳಿತೆ ಬಂದ ನಂತರ ಅಲ್ಲಿಯ ನ್ಯಾಯವಾದ ಹಕ್ಕುದಾರರನ್ನು ನಿರ್ದಯೆ ಮತ್ತು ಬಲತ್ಕಾರದಿಂದ ಹೊರಹಾಕಿ ಅವರ ಸ್ಥಾನವನ್ನು ಪೋರ್ಜರಿ ಶಾಸನದ ಆಧಾರದಿಂದ ಆಕ್ರಮಿಸಲು ಪ್ರಯತ್ನಿಸಿದ್ದೆಂದು ಸ್ಪಷ್ಟವಾಗುತ್ತದೆ.
ಸ್ವಾಮಿಗಳು ಈ ತೀರ್ಪಿನ ಮೇಲೆ ಮದ್ರಾಸಿನಲ್ಲಿ ಅ.ಖ. ೩೧, ೧೮೮೮ ಎಂಬ ಅಪೀಲನ್ನು ದಾಕ್ಲು ಮಾಡಿದರು. ಇದರಲ್ಲಿ ಸ್ವಾಮಿಗಳ ಹಾಜರುಪ ಡಿಸಿದ ತಾಮ್ರ ಶಾಸನವು ಪೋರ್ಜರಿಯೆಂದು ಮಂಜೂರು ಮಾಡಲ್ಪಟ್ಟು ದೇವಳಕ್ಕೆ ಹೊಸತಾಗಿ ನೇಮಕ ಮಾಡಲ್ಪಟ್ಟ ಬಾಗಲೋಡಿ ರಾಮಕೃಷ್ಣ ಯ್ಯನು ಕೂಡ ಅಷ್ಟು ಯೋಗ್ಯನಲ್ಲವಾದುದರಿಂದ ಸ್ವಾಮಿಯನ್ನು ದೇವ ಳದ ಆಡಳಿತದಲ್ಲಿ ಒಬ್ಬ ಸದಸ್ಯನನ್ನಾಗಿ ಮಾತ್ರ ಉಳಿಸಿ ಅವರನ್ನು ಮುಖ್ಯ ಆಡಳಿತೆಯಿಂದ ವಿರಹಿತಪಡಿಸಿದರು. ಇವರಲ್ಲಿ ಸರ್ವಶ್ರೀಗಳಾದ ಮುತ್ತು ಸ್ವಾಮಿ ಅಯ್ಯರ್ ಮತ್ತು ವಿಲ್ಕಿನ್‌ಸನ್ ಎಂಬವರು ಹೈಕೋರ್ಟು ಜಡ್ಜರಾ ಗಿದ್ದರು. ಈ ತೀರ್ಪು ೨೪-೧೦-೧೮೮೮ರಲ್ಲಿ ಆಯಿತು. ಇದರಿಂದಾಗಿ ಆಮೇಲೆ ಸ್ವಾಮಿಗಳು ಆಡಳಿತೆಯ ಒಬ್ಬ ಸದಸ್ಯನಾಗಿ ಮಾತ್ರ ಉಳಿದರು.
ಮೇಲಿನ ವ್ಯಾಜ್ಯದಲ್ಲಿ ತಾಮ್ರ ಶಾಸನವು ಪೋರ್ಜರಿ ಆದುದರಿಂದ ಸ್ವಾಮಿಗಳು ಪೋರ್ಜರಿ ಮಾಡಿದರೆಂಬ ತಪ್ಪಿನ ಮೇಲೆ ಬಾಗಲೋಡಿ ರಾಮಕೃಷ್ಣಯ್ಯನವರು ಸ್ವಾಮಿಗಳ ಮೇಲೆ ಕೋರ್ಟಿಗೆ ಘೆಟ. ೪೪೦/೧೮೯೦ನ್ನು ದಾಕ್ಲು ಮಾಡಿದ್ದರು.
೧೮೯೨ರಲ್ಲಿ ದೇವಳದ ಆಡಳಿತೆ ನಡೆಸುತ್ತಿದ್ದ ಬಾಗಲೋಡಿ ರಾಮ ಕೃಷ್ಣಯ್ಯನು ಮೃತಪಟ್ಟ ನಂತರ ಅವರ ಮಗ ಬಾಗಲೋಡಿ ಭೋಜರಾ ಯರೆಂಬವರು ಆಡಳಿತೆಗೆ ಕಮಿಟಿಯವರಿಂದ ನೇಮಿಸಲ್ಪಟ್ಟರು. ಇವ ರೆಲ್ಲಾ ಶಿವಳ್ಳಿ ಮಾಧ್ವ ವೈಷ್ಣವರು. ಹಾಗೆ ನೇಮಿಸಲ್ಪಟ್ಟ ಭೋಜರಾಯ ರನ್ನು ಸ್ವಾಮಿಗಳು ಆಡಳಿತೆ ನಡೆಸಲು ಬಿಡದೆ ಅವರ ಅಧಿಕಾರವನ್ನು ಬಲಾತ್ಕಾರದಿಂದ ತಾನು ತೆಗೆದುಕೊಂಡು ೧೮೯೯ರ ವರೆಗೆ ತಾನೇ ದೇವಳದ ಸರ್ವಾಧಿಕಾರಿಗಳಾದರು. ೧೮೯೨ರಿಂದ ೧೮೯೯ರ ವರೆಗಿನ ೭ ವರ್ಷಗಳ ಆಡಳಿತೆ ನಡೆಸಿದ ವ್ಯಾಸ ತೀರ್ಥ ಸ್ವಾಮಿಯಿಂದ ಈ ದೇವಳದ ಸೊತ್ತು ಗಳು ತುಂಬಾ ದುರುಪ ಯೋಗ ಮಾಡಲ್ಪಟ್ಟಿವೆ ಎಂದು ತಿಳಿದು ಬರು ತ್ತದೆ.

ವಕ್ಫ್‌ಬೋರ್ಡನ್ನು ಮೀರಿಸುವ ಹಗರಣ ದೇವಾಲಯಗಳಲ್ಲಿದೆ

Posted by JAYAKIRANA Kirana on | 0 comments | Leave a comment...


ಸರಕಾರಿ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಲು ನೂಕು ನುಗ್ಗಲು ಉಂಟಾಗಿದೆ. ಅದೂ ಕೋಟ್ಯಂತರ ರೂ. ಆದಾಯವಿರುವ ದೇವಾಲಯಗಳಿಗೆ ತಾವೇ ಸದಸ್ಯರಾಗಬೇಕೆಂದು ಹಪಹಪಿಸುತ್ತಿರುವ ಕೆಲವರಿಗೆ ಆ ದೇವಾಲಯಗಳು ಸಾಕಷ್ಟು ಹಣ ಮಾಡಬಹುದಾದ ಕೇಂದ್ರಗಳು ಎಂದು ತಿಳಿದಿವೆ.

ಕೆ.ನರಸಿಂಹ ರಾವ್, ಪಡುಬಿದ್ರೆ
ರಾಜ್ಯದಲ್ಲಿರುವ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಸಂಗ್ರಹ ಮಾಡುವ ದೇವಾಲಯಗಳು ಕೆಲವರ ಮನೆಯ ದೇವಾಲಯವೆಂದು ಇನ್ನೂ ಕಾನೂನಿನ ವ್ಯಾಪ್ತಿಗೆ ಬರದೇ, ಬಂದರೂ ರಾಜಕೀಯ ಪ್ರಭಾವದಿಂದ ಬಿಡಿ ಸಿಕೊಳ್ಳುವ ವ್ಯವಸ್ಥಿತ ಸಂಚಿನ ದೇವಾಲಯಗಳು ಇವೆ. ಸಮಾಜಕ್ಕೆ ಒಂದು ರೂ.ನಲ್ಲಿ ೫ ಪೈಸೆ ಖರ್ಚು ಮಾಡಿ ಕೋಟ್ಯಂತರ ರೂ. ಹಣವನ್ನು ತಮ್ಮ ಖಾತೆಯಲ್ಲೇ ಇರಿಸಿಕೊಂಡು ಸಾರ್ವಜನಿಕರಿಗೂ ಲೆಕ್ಕಪತ್ರ ನೀಡದೇ ತಮ್ಮ ಹೆಸರಿನಲ್ಲಿಯೇ ಆಸ್ತಿ ಸಂಪಾದಿಸುತ್ತಿರುವ ದೇವಾಲಯಗಳೂ ಸಹಾ ನಮ್ಮಲ್ಲಿವೆ.
ಸರಕಾರ ತಮ್ಮದು ಜಾತ್ಯತೀತ ಸರಕಾರ-ಬಹುಸಂಖ್ಯಾತರ ಹಿತರಕ್ಷ ಕರು ತಾವು ಎಂದು ಕೂಗಾಡುತ್ತಿದ್ದರೂ ದೇವಾಲಯಗಳಲ್ಲಿ ಇಂದಿಗೂ ಜಾತಿಯ ಹೆಸರಿನಲ್ಲಿ ತಾರತಮ್ಯ ನಡೆಯುತ್ತಿರುವುದನ್ನು ಸರಕಾರ ಕಣ್ಣುಮುಚ್ಚಿ ನೋಡು ತ್ತಿದೆ. ದೇವಾಲಯಗಳು ಇಂದಿಗೂ ಮೇಲ್ವರ್ಗದವರ ಸೊತ್ತಾಗಿಯೇ ಉಳಿದಿ ರುವುದರಿಂದ ಗಲ್ಲಿಗೊಂದರಂತೆ ಜಾತಿ ದೇವಾಲಯಗಳು ತಲೆ ಎತ್ತಿವೆ. ಆದರೂ ಕೂಡ ಸರಕಾರ ಮೇಲ್ವರ್ಗದವರಿಗೆ ಅನುಕೂಲವಾಗುವಂತಹ ಕಾನೂನನ್ನೆ ರಚಿಸಿ ಜಾತಿ ತಾರತಮ್ಯಕ್ಕೆ ಸಾಂವಿಧಾನಿಕ ಪರವಾನಿಗೆ ನೀಡುತ್ತಿರುವುದು ಹಾಸ್ಯಾ ಸ್ಪದ. ಹಿಂದುಗಳನ್ನೆ ಒಡೆಯುತ್ತಿರುವ ಇಂತಹ ಸರಕಾರ ಇರುವುದು ನಮ್ಮ ದುರದೃಷ್ಟ. ಹಿಂದುಗಳು ಹಿಂದುಗಳ ವಿರೋಧಿಗಳು. ದೇವಾಲಯದ ಕೆಲವು ಸಾಮಂತ ಅರಸರುಗಳನ್ನು ಮಟ್ಟ ಹಾಕಬೇಕು. ಮಠಾಧೀಶರು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಬರುವುದನ್ನು ನಿಷೇಧಿಸಬೇಕು.
ಸರಕಾರಿ ದೇವಾಲಯಗಳಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರಾಗಲು ನೂಕು ನುಗ್ಗಲು ಉಂಟಾಗಿದೆ. ಅದೂ ಕೋಟ್ಯಂತರ ರೂ. ಆದಾಯವಿರುವ ದೇವಾಲಯಗಳಿಗೆ ತಾವೇ ಸದಸ್ಯರಾಗಬೇಕೆಂದು ಹಪಹಪಿಸುತ್ತಿರುವ ಕೆಲವ ರಿಗೆ ಆ ದೇವಾಲಯಗಳಲ್ಲಿ ಸಾಕಷ್ಟು ಹಣ ಮಾಡಬಹುದಾದ ಕೇಂದ್ರಗಳು ಎಂದು ತಿಳಿದಿವೆ. ರಾಜ್ಯ ಧಾರ್ಮಿಕ ಪರಿಷತ್ತು ತಮಗೆ ಬೇಕಾದ ವ್ಯಕ್ತಿಗಳನ್ನು ಅಂತಹ ದೇವಳಗಳಲ್ಲಿ ಆಡಳಿತದಲ್ಲಿರಿಸಿದರೆ ತಮಗೆ ಬೇಕಾದಂತೆ ಹಣ ಸಂಪಾ ದಿಸುವ ಉದ್ಯೋಗವನ್ನು ಇಟ್ಟುಕೊಂಡಿರುವ ಬಗ್ಗೆಯೂ ಸಂಶಯವಿದೆ.
ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮ ಅವ್ಯವಹಾರ, ಶೋಷಣೆ, ಡಿನೋಟಿಫಿಕೇಶನ್, ದೇವಾಲಯದ ಭೂಕಬಳಿಕೆ, ದೇವಾಲಯದ ಭೂಮಿ ಮಾರುತ್ತಿರುವುದು. ಈ ಎಲ್ಲಾ ವಿಷಯಗಳ ಬಗ್ಗೆ ಸಮಗ್ರವಾಗಿ ಸಿಬಿಐನಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು. ಜಾತಿಯ ಹೆಸರಿನಲ್ಲಿ ಬಿಟ್ಟ ಶ್ರೀಮಂತ ದೇವಾಲಯಗಳು, ಮಠಮಂದಿರಗಳು, ಅನುವಂಶಿಕ ದೇವಾಲಯಗಳು, ಸಂಪೂರ್ಣ ಸರಕಾರಿ ಸ್ವಾಮ್ಯದ ದೇವಾಲಯಗಳಿಗೆ ಕೇಂದ್ರದ ಆದಾಯ ತೆರಿಗೆ ಇಲಾಖೆಯ ವತಿಯಿಂದ, ಅಂತಹ ದೇವಳಗಳ ಆಡಳಿತದಾರರ ಆಸ್ತಿ, ಅಂತಸ್ತು, ಇತ್ಯಾದಿಗಳ ಮೇಲೆ ದಾಳಿ ನಡೆಸಬೇಕು. ಇಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಧೋರಣೆ, ಭ್ರಷ್ಟತೆ, ವಂಚನೆ ಮೋಸ ಬೇರಾವ ಕ್ಷೇತ್ರಗಳಲ್ಲಿ ನಡೆಯಲಾರದು. ಈ ಬಗ್ಗೆ ಸಮಾಜದ ಹಿತಚಿಂತಕರು, ಬುದ್ದಿಜೀವಿಗಳು, ರಾಜಕೀಯ ವ್ಯಕ್ತಿಗಳು, ದೇವಾಲಯಕ್ಕೆ ಹಣ ನೀಡುವಂತಹ ಭಕ್ತರು, ಗಣ್ಯರು ಚರ್ಚೆ ನಡೆಸಿ ಜಾಗೃತರಾಗಬೇಕಾದುದು ಆರೋಗ್ಯಯುತ ಸಮಾಜಕ್ಕೆ ಅನಿ ವಾರ್ಯ. ಇದರಿಂದ ಎಷ್ಟೋ ಕೋಟ್ಯಂತರ ರೂ. ಆದಾಯ ತೆರಿಗೆಯನ್ನು ಸರಕಾರ ಪಡೆಯಬಹುದಾಗಿದೆ. ತೆರಿಗೆ ವಂಚನೆಯಿಂದ ದೇಶದ ಬೊಕ್ಕಸಕ್ಕೆ ನಷ್ಟ ವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸುವುದು ಉತ್ತಮ. ಈ ಬಗ್ಗೆ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ನೇರವಾಗಿ ಮಠಾಧೀಶರು, ಧರ್ಮದರ್ಶಿಗಳ ಮೇಲೆ ದಾಳಿ ನಡೆಸಬೇಕು. ಇದರಿಂದ ಸಾರ್ವಜನಿಕರಿಗೆ ಸಹಾಯವಾಗುವುದು ಖಂಡಿತ. ಇದಕ್ಕೆ ನಮ್ಮ ಹಿಂದೂ ಸಂಘಟನೆಗಳು ಕೈಜೋಡಿಸಬೇಕು. ದೇವಾಲಯಗಳ ಹಗರಣಗಳನ್ನು ಲೆಕ್ಕಾಚಾರ ಹಾಕಿ, ಅದು ಇತ್ತೀಚೆಗೆ ನಡೆದ ೨ಜೀ ಹಗರಣ, ವಕ್ಫ್ ಬೋರ್ಡ್ ಹಗರಣವನ್ನು ಮೀರುವುದರಲ್ಲಿ ಸಂಶಯವಿಲ್ಲ.

ತಂದೆಯ ದುರಾಭ್ಯಾಸದಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು:ಬೇಡ
ಸಮಸ್ಯೆ: ನಾನು ೨೩ರ ಹರೆಯದ ಯುವತಿ. ನನಗೆ ಓರ್ವ ತಮ್ಮ ಇದ್ದಾನೆ. ನಾನು ಪಿಯುಸಿ ತನಕ ಓದಿದ್ದು, ಮೊಬೈಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಮನೆಯಲ್ಲಿ ತಂದೆ-ತಾಯಿ ಮತ್ತು ನಾನು, ತಮ್ಮ ಇದ್ದೇವೆ. ನನ್ನ ಸಮಸ್ಯೆಯೇನೆಂದರೆ ನನ್ನ ತಂದೆಗೆ ವಿಪರೀತ ಕುಡಿತದ ಚಟವಿದೆ. ನನ್ನ ತಾಯಿಯ ಮಾತಿಗೆ ಅವರು ಬೆಲೆ ಕೊಡುವುದಿಲ್ಲ. ಪ್ರತಿನಿತ್ಯ ಕುಡಿದು ಬಂದು ಹಿಂಸೆ ಕೊಡುತ್ತಾರೆ. ನಮಗೆ ಅವರನ್ನು ವಿರೋಧಿಸಲು ಧೈರ್ಯವಿಲ್ಲ. ಕುಡಿದು ಬಂದು ನನ್ನನ್ನು ಯಾರ‍್ಯಾರ ಜತೆಯಲ್ಲಿ ಕಲ್ಪಿಸಿ ಮಾತಾ ಡುತ್ತಾರೆ. ಅವರಿಗೆ ಬುದ್ಧಿ ಹೇಳುವಷ್ಟು ನಾನು ಬೆಳೆದಿಲ್ಲ. ತಡರಾತ್ರಿ ಕುಡಿದು ಮನೆಗೆ ಬರುವುದರಿಂದ ಊರಿನ ಕೆಟ್ಟ ಯುವಕರು ತಂದೆಯ ಸ್ನೇಹಿತರಾಗಿದ್ದಾರೆ. ಕೆಲವೊಮ್ಮೆ ಅವರನ್ನು ಮನೆಗೆ ಕರೆದು ಕೊಂಡು ಬಂದು ವಿಕೃತವಾಗಿ ವರ್ತಿಸುತ್ತಾರೆ. ಇದರಿಂದ ಊರಿನ ಕೆಲವು ಯುವಕರು ನನ್ನ ಬಗ್ಗೆ ಕೆಟ್ಟ ಯೋಚನೆ ಮಾಡುತ್ತಾರೆ. ನಾನು ಕೆಲಸ ಮುಗಿಸಿ ಬರುವಾಗ ಅಸಭ್ಯವಾಗಿ ವರ್ತಿಸುತ್ತಾರೆ. ಇದನ್ನೆಲ್ಲಾ ಯಾರಲ್ಲಾದರೂ ಹೇಳೋಣವೆಂದು ಅನಿಸುತ್ತದೆ. ಆದರೆ ಹಾಗೆ ಹೇಳಿದರೆ ನಮ್ಮ ಮನೆಯ ವಿಷಯ ಎಲ್ಲರಿಗೂ ತಿಳಿ ಯುತ್ತದೆ ಎಂದು ಸುಮ್ಮನಿದ್ದೇನೆ. ನನ್ನನ್ನು ಒಬ್ಬರು ದಿನಾ ಬಸ್ ನಲ್ಲಿ ಭೇಟಿಯಾಗುತ್ತಿದ್ದು, ಇಷ್ಟವಾಗಿದ್ದಾರೆ. ಆದರೆ ಅವರು ನನ್ನನ್ನು ಪ್ರೀತಿಸುವುದಾಗಿ ಮೋಸ ಮಾಡಿದರೆ ಎಂದು ಭಯವಾಗುತ್ತದೆ. ಹೀಗಾಗಿ ಏನು ಮಾಡಬೇಕೆಂದೇ ತೋಚುತ್ತಿಲ್ಲ. ತಂದೆಯ ಕುಡಿ ತದ ಚಟ ಬಿಡಿಸಲು ಏನು ಮಾಡಬೇಕು? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ತಂದೆಯ ದುಷ್ಚಟಗಳಿಂದ ನೊಂದಿದ್ದೀರಿ. ನಿಜವಾಗಿಯೂ ನೀವು ಗಟ್ಟಿ ಮನಸ್ಸಿನವರಾದ ಕಾರಣ ಎಲ್ಲವನ್ನೂ ಸಹಿಸಿಕೊಂಡಿದ್ದೀರಿ. ನೀವು ಈಗ ಮೊದಲು ನಿಮ್ಮ ತಂದೆಯನ್ನು ಸರಿದಾರಿಗೆ ತರಲು ಸಾಧ್ಯವಿದೆಯೇ ಚಿಂತಿಸಿರಿ. ಪತ್ರಿಕೆಗಳಲ್ಲಿ ಕೆಲವೊಂದು ಆಪ್ತ ಸಮಾಲೋಚನೆ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಕುಡಿತವನ್ನು ಬಿಡಿಸುವ ಬಗ್ಗೆ ಮಾಹಿತಿ ಕೊಟ್ಟಿರುತ್ತಾರೆ. ನೀವು ಧೈರ್ಯ ಮಾಡಿಕೊಂಡು ಯಾರ ಮೂಲಕವಾದರೂ ಅದನ್ನು ಸಂಪರ್ಕಿಸಿ ತಂದೆಯನ್ನು ಅಲ್ಲಿಗೆ ಸೇರಿಸಿ, ಅವರು ಸರಿ ಹೋಗುತ್ತಾರಾ ಎಂದು ನೋಡಿ. ಇದೆಲ್ಲಾ ವ್ಯರ್ಥವೆಂದಾದರೆ ನೀವು ಕೆಲಸ ಮಾಡಿ ಬೇರೆ ಕಡೆ ವುಮೆನ್ಸ್ ಹಾಸ್ಟೆಲ್‌ನಲ್ಲಿ ಉಳಿದು ಕೊಳ್ಳಿ. ವಾರಕ್ಕೊಮ್ಮೆ ಮನೆಗೆ ಬಂದರೆ ಸಾಕು, ಆಗ ನಿಮಗೆ ಮಾನಸಿಕ ನೆಮ್ಮದಿಯೂ ಇರುತ್ತದೆ. ಅದಕ್ಕೂ ಮುನ್ನ ನಿಮ್ಮ ತಂದೆಗೆ ಕುಟುಂಬದ ಹಿರಿಯರಿಂದ ಬುದ್ಧಿವಾದ ಹೇಳಿಸಿ ನೋಡಿ. ಅವರು ಸರಿಯಾಗುವ ಸಾಧ್ಯತೆಯಿದೆ. ಇನ್ನು ನೀವು ಕೆಲಸ ಮುಗಿಸಿ ಮನೆಗೆ ಬರುವ ವೇಳೆ ಊರಿನ ಯುವಕರು ತೊಂದರೆ ಕೊಟ್ಟರೆ ಈ ಬಗ್ಗೆ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ಹೆಣ್ಣೆಂದು ಯಾರಿಗೂ ಭಯಪಡುವ ಅಗತ್ಯವಿಲ್ಲ. ತಂದೆಯಲ್ಲಿ ಮನೆಗೆ ರಾತ್ರಿ ಹೊತ್ತು ಅಪರಿಚಿತರನ್ನು ಕರೆದುಕೊಂಡು ಬರಬೇಡಿ ಎಂದು ಎಚ್ಚರಿಸಿ. ಕರೆದುಕೊಂಡು ಬಂದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ನೇರವಾಗಿ ಹೇಳಿಬಿಡಿ. ನಿಮ್ಮ ತಂದೆಯ ಸಮಸ್ಯೆ ಪರಿಹಾರವಾದ ಬಳಿಕ ಪ್ರೀತಿಯ ಬಗ್ಗೆ ಯೋಚಿಸಿ. ಆತನನ್ನು ಚೆನ್ನಾಗಿ ಅರಿತುಕೊಳ್ಳಲು ಸಮಯ ಕೇಳಿ ಆ ಬಳಿಕ ಒಪ್ಪಿಗೆ ಕೊಡಿ. ಯಾವುದೇ ಕಾರಣಕ್ಕೂ ಆತನೊಂದಿಗೆ ಸುತ್ತಾಟ, ವಿವಾಹ ಪೂರ್ವ ಲೈಂಗಿಕ ಸಂಪರ್ಕ ಬೇಡ. ನಿಮಗೆ ಸಲಹೆ ಬೇಕಾದಲ್ಲಿ ನಿರ್ಭೀತಿಯಿಂದ ಪತ್ರ ಬರೆಯಿರಿ.

3-4-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗ ಮತ್ತು ಕೆಲಸಗಳಲ್ಲಿ ಪ್ರಗತಿಯಾಗುತ್ತದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.
ಮಿಥುನ : ಮನೆಯಲ್ಲಿ ವಾದ ವಿವಾದಗಳು ನಡೆಯುತ್ತದೆ.
ಕರ್ಕಾಟಕ : ಜಂಟಿ ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
ಸಿಂಹ : ಹಿರಿಯರಿಂದ ಸಮಸ್ಯೆಗಳು ದೂರವಾಗುತ್ತದೆ.
ಕನ್ಯಾ : ವಿರೋಧಿಗಳಿಂದಾಗಿ ಕೆಲಸಗಳಲ್ಲಿ ಹಿನ್ನಡೆಯಾಗುವುದು.
ತುಲಾ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ವೃಶ್ಚಿಕ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.
ಧನು : ದೂರ ಪ್ರಯಾಣ ಮಾಡುವ ಸಂಭವ ಇದೆ.
ಮಕರ : ಹಣಕಾಸಿನ ತೊಂದರೆ ದೂರವಾಗುತ್ತದೆ.
ಕುಂಭ : ದೂರದ ನೆಂಟರು ಮನೆಗೆ ಬರುತ್ತಾರೆ.
ಮೀನ : ಮಕ್ಕಳ ಬಗ್ಗೆ ಜಾಗ್ರತೆ ಮಾಡಿರಿ.

3-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು: ಫ್ಯಾನ್ಸಿ ಅಂಗಡಿಗೆ ನುರಿತ ಯುವಕ - ಯುವತಿಯರು ಬೇಕು. ಉತ್ತಮ ವೇತನವಿದೆ. ೯೪೪೯೧೩೯೪೭೫.
ಬಲ್ಮಠ : ಅಪಾರ್ಟ್‌ಮೆಂಟ್ ಹಾಗೂ ಗೆಸ್ಟ್ ಹೌಸ್ ಕ್ಲೀನಿಂಗ್‌ಗೆ ಜನ ಬೇಕು.
೯೮೮೦೮೦೯೮೦೩.
ಮಂಗಳೂರು : ಲೇಡಿಸ್ ಟೈಲರ್ ಬೇಕು ೯೦೩೫೦೯೦೩೪೫.
ಬೆಳ್ತಂಗಡಿ : ಆಫೀಸ್‌ಗೆ ಲೇಡಿ ಸ್ಟಾಫ್ ಬೇಕು ೯೪೮೩೫೦೦೪೯೫.
ಬಂದರ್ : ಪ್ರಿಂಟಿಂಗ್ ಪ್ರೆಸ್‌ಗೆ ಯುವಕ ಯುವತಿಯರು ಬೇಕು ೯೮೪೪೫೯೨೧೮೨.
ಮೂಡುಬಿದ್ರೆ : ಲೈನ್‌ಸೇಲ್‌ಗೆ ಹುಡುಗರು ಬೇಕು ೮೭೧೦೮೩೮೮೯೨.
ಮಂಗಳೂರು : ಪುಸ್ತಕ ಮಳಿಗೆಗೆ ಹೆಲ್ಪರ್ ಬೇಕು ೨೪೨೪೭೪೪.
ಮಂಗಳೂರು : ಕಚೇರಿ ಕೆಲಸಕ್ಕೆ ದ್ವಿಚಕ್ರ ವಾಹನ ಗೊತ್ತಿರುವ ಹುಡುಗರು ಬೇಕು ೯೮೪೫೩೫೫೮೧೪.
ಹಂಪನಕಟ್ಟೆ : ಸಂಸ್ಥೆಗೆ ಜನ ಬೇಕು ೮೨೭೭೧೬೫೦೬೨.
ಮೂಡಬಿದ್ರೆ: ಪಾನೀಯ ಸಂಸ್ಥೆಗೆ ಜನ ಬೇಕು ೯೯೮೬೦೮೧೨೮೦.
ಸುಳ್ಯ : ಟೈಲರಿಂಗ್ ಅಂಗಡಿಗೆ ಲೇಡಿಸ್ ಟೈಲರ್ ಬೇಕು ೯೯೬೪೮೭೪೨೫೫.
ಬೈಕಂಪಾಡಿ : ಔಷಧಿ ತಯಾರಿಕಾ ಕಂಪೆನಿಯಲ್ಲಿ ಪ್ಯಾಕಿಂಗ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೦೨೨೮೩೭೮.
ಮಂಗಳೂರು : ಬಟ್ಟೆ ಅಂಗಡಿಗೆ ಜನ ಬೇಕು ೯೪೪೮೪೪೬೦೭೩
ಮಂಗಳೂರು: ಸಂಸ್ಥೆಗೆ ಯುವಕ ಯುವತಿಯರು ಬೇಕು ೯೪೪೮೩೨೮೮೩೩.
ಬೆಳ್ತಂಗಡಿ : ಸಂಸ್ಥೆಯೊಂದಕ್ಕೆ ಎಕೌಂಟ್ಸ್‌ಗೆ ಪದವೀಧರೆ ಬೇಕು ೯೪೮೩೫೦೦೪೯೫.
ಕೊಡಿಯಾಲ್‌ಬೈಲ್ : ಹೌಸ್‌ಕೀಪಿಂಗ್ ಕೆಲಸಕ್ಕೆ ಯುವಕರು ಬೇಕು ೯೯೬೪೫೪೦೫೪೪.
ಪಡೀಲ್ : ಹೋಂ ನರ್ಸ್ ಬೇಕು ೯೭೪೩೯೨೧೩೨೬.
ಮಂಗಳೂರು : ಮೆಡಿಕಲ್ ರೆಪ್ರಸೆಂಟೇಟಿವ್ ಬೇಕು ೯೭೪೩೩೯೦೭೯೭.
ಪಾಂಡೇಶ್ವರ : ಬೇಕರಿಗೆ ಯುವಕ, ಯುವತಿಯರು ಬೇಕು ೯೮೪೪೫೨೧೭೪೩.
ಮರೋಳಿ : ಲೈನ್ ಸೇಲ್‌ಗೆ ಓಮ್ನಿ ಡ್ರೈವರ್ ಬೇಕು ೯೩೪೧೭೫೮೫೦೦.
ಮಂಗಳೂರು : ಮೆಡಿಕಲ್ ಶಾಪಿಗೆ ಅನುಭ ವವುಳ್ಳ ಯುವಕ ಯುವತಿಯರು ಬೇಕು ೯೮೮೦೩೭೯೭೩೧.
ಮಂಗಳೂರು :ಮೆಕ್ಯಾನಿಕ್, ಹೆಲ್ಪರ್ ಬೇಕು ೯೮೮೦೮೬೪೦೮೯.
ಮಂಗಳೂರು: ಕಂಪ್ಯೂಟರ್ ಬಲ್ಲ ಹುಡುಗಿಯರು ಬೇಕು ೯೦೩೬೪೮೯೦೪೦.
ಕಾರ್‌ಸ್ಟ್ರೀಟ್: ಹೊಟೇಲ್‌ಗೆ ಜನ ಬೆಕು ೯೪೮೨೯೬೯೫.
ಉರ್ವ ಮಾರ್ಕೆಟ್ :ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು :ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ:ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.

ದೇವರಂಥಾ ತಂದೆ ತಾಯಿಗಳು

Posted by JAYAKIRANA Kirana on | 0 comments | Leave a comment...

ದೇವರಂಥಾ ತಂದೆ ತಾಯಿಗಳು. ನಮ್ಮ ವಂಶದಲ್ಲೇ ಯಾರೂ ರಕ್ತ ನೋಡಿಲ್ಲ. ಕೈಯೆತ್ತಿ ಯಾರ ಕೆನ್ನೆಗೂ ಹೊಡೀಲಿಲ್ಲ. ಆದರೆ ನಾನು ಹುಟ್ಟಿಬಿಟ್ಟೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂಥಾ ಪಾತಕಗಳನ್ನು ಮಾಡಿಬಿಟ್ಟೆ. ಯಾರ ಕೈಗೂ ಸಿಕ್ಕದೆ ವರ್ಷಗಟ್ಟಲೆ ನಿಮ್ಮೆಲ್ಲರ ಮಧ್ಯೆ ನಗ್‌ನಗ್ತಾ ಓಡಾಡಿಕೊಂಡು ಇದ್ದು ಬಿಟ್ಟೆ. ಒಂದಾದ ಮೇಲೆ ಒಂದರ ಹಾಗೆ ಆರು ಕೊಲೆಗಳನ್ನು ಮಾಡಿ ಮುಗಿಸಿದೆ.

ಚಾಮುಂಡಿ ಬೆಟ್ಟದ ತಿರುವೊಂದರಲ್ಲಿ ಆರಂಭ ಗೊಂಡು ಶಿವಮೊಗ್ಗೆಯ ಲಾಡ್ಜಿನ ಕೋಣೆಯ ನೀರವ ತೆಯವರೆಗೆ ಹರಿದು ಬರುವ ಈ ವಿಲಕ್ಷಣ ಕೊಲೆಗಾ ರನ ಕಥೆ- ನನ್ನ ಈ ತನಕದ ಅನುಭವದಲ್ಲಿ ನಾನು ಬರೆ ದಿರುವ ಕ್ರೈಮ್ ಕಥೆಗಳ ಪೈಕಿಯೇ ಅತ್ಯಂತ ವಿಶಿಷ್ಟವಾ ದುದು. ಎದುರಿಗೆ ಕುಳಿತ ರವೀಂದ್ರ ಕಥೆ ಹೇಳುತ್ತ ಹೇಳುತ್ತ ಯಾರೂ ಇಲ್ಲದ ಈ ನೀರವ ಕೋಣೆಯಲ್ಲಿ ಎಲ್ಲಿಂ ದಲೋ ಫಕ್ಕನೆ ಒಂದು ಹನಿ ಸೈನೇಡ್ ಸೃಷ್ಟಿಸಿ ಅದರ ದೊಂದು ಚಿಕ್ಕ ಕಣ ಸಿಡಿಸಿ ಕ್ಷಣಾರ್ಧದಲ್ಲಿ ಒಂದು ½ನಲ್ಲಿ ನನ್ನನ್ನೇ ಇಲ್ಲ ವಾಗಿಸಿ ಬಿಡುತ್ತಾನೇನೋ ಅನ್ನಿಸುವಷ್ಟು ಆಳವಾಗಿ ಅನುಭವಿಸಿದ್ದೇನೆ.
ಅದನ್ನೇ ಬರೆದಿದ್ದೇನೆ. ಇಂತಹ ಪಾತಕದ ಕಥೆಗ ಳನ್ನು ಬರೆದು ಏನುಪಯೋಗ ಎಂಬ ಪ್ರಶ್ನೆಗೆ ಹೇಗೆ ಉತ್ತರವಿಲ್ಲವೋ, ಓದಿ ಏನುಪಯೋಗ ಎಂಬ ಪ್ರಶ್ನೆಗೂ ಉತ್ತರವಿಲ್ಲ. ರವೀಂದ್ರ ಪ್ರಸಾದ್‌ನ impulsive killingಗಳಿಗೆ ಹ್ಯಾಗೆ ಏನೂ ಉಪಯೋಗಗಳಿರಲಿಲ್ಲವೋ, ಆತನ ಈ ಸುಧೀರ್ಘ ಕತೆಯಿಂದಲೂ ಏನೂ ಉಪಯೋ ಗವಿಲ್ಲ. ಆತ ನಿವೃತ್ತ ಪಾತಕಿ. ತನ್ನ ಕತೆ ಹೇಳಿಕೊಂಡಿ ದ್ದಾನೆ. ನಾನೊಬ್ಬ ವೃತ್ತಿಪರ ಪತ್ರಿಕೋದ್ಯಮಿ. ಅದಿಷ್ಟನ್ನೂ ಬರೆದಿದ್ದೇನೆ. ನೀವು ಶುದ್ದ ಕುತೂಹಲಿಗಳಾದ ಓದು ಗರು. ಸುಮ್ಮನೆ ನಿರ್ಭಾವುಕರಾಗಿ ಓದುತ್ತ ಹೋಗಿ. ಬೇಸರವಾದರೆ ಎದ್ದು ಬಿಡಿ. ಕತೆಗಳಿಗೆ ಪ್ರಯೋಜನಗ ಳಿರುವುದಿಲ್ಲ. ಕೊಲೆಗಡುಕರು ಪ್ರಯೋಜನಗಳಿಗಾಗಿ ಕೊಲೆ ಮಾಡುತ್ತಾರೆಂಬುದು ನಿಜ. ಆದರೆ ಎಂದೋ ಒಂದು ದಿನ, ಅವೆಲ್ಲ ಕೊಲೆಗಳೂ ನಿಷ್ಪ್ರಯೋಜಕ ಅನಿಸಿ ಬಿಡುತ್ತದೆ. ಆ ದಿನ ಅಂಥ ಪಾತಕಿಯಲ್ಲೂ ಒಬ್ಬ ಸಭ್ಯ ಮಾನವ ಕಣ್ತೆರೆಯುತ್ತಾನೆ. ಸಂತನಿಗೊಂದು ಇತಿಹಾಸ ವಿದ್ದಂತೆಯೆ, ಎಂಥ ಪಾತಕಿಗೂ ಒಂದು ಭವಿಷ್ಯವಿರುತ್ತದೆ.
ಈ ಸರಣಿ ಹಂತಕ ರವೀಂದ್ರ ಪ್ರಸಾದ್ ಅಂಥ ದ್ದೊಂದು ಭವಿತವ್ಯದ ಹೊಸ್ತಿಲಲ್ಲಿ ನಿಂತಿದ್ದಾನೆ. ಸೂಯೋ ದಯಕ್ಕೆ ಕಾಯುತ್ತಾ. ಆತನಿಗೆ ಒಳ್ಳೆಯದಾಗಲಿ.
ರವೀ ಸಾರ್, ನನ್ನ ಜನ್ಮ ರಾಶಿ ಜೆಮಿನಿ. ಅಂದ್ರೆ ಮಿಥುನ. ಅದರಲ್ಲಿ ಗಂಡು ಹೆಣ್ಣು ಎರಡೂ ಇರ‍್ತವೆ. ನಿಜ ಹೇಳಬೇಕೂಂದ್ರೆ ನನ್ನೊಳಗೆ ಇಬ್ಬರಿದ್ದಾರೆ. ಒಳ್ಳೆ ಯವನು ಮತ್ತು ಕೆಟ್ಟವನು. ಇದು sಠಿಟiಣ ಠಿeಡಿsoಟಿಚಿಟiಣಥಿ ನಾನಾಗಿ ನಿಮ್ಮ ಮುಂದೆ ಬಂದು, ಹೀಗ್ಹೀಗೆ ನಾನು ಆರು ಕೊಲೆ ಮಾಡಿದೀನಿ, hಚಿಟಿg ಆಗಬೇಕಾಗಿತ್ತು. ಬದುಕಿ ಬಂದಿದೀನಿ ಅಂತ ಹೇಳಿಕೊಳ್ಳದೆ ಹೋಗಿ ದ್ದಿದ್ರೆ ನಿಮಗೆ ನನ್ನೊಳ ಗಿರೋ ಕೊಲೆಗಾರ ಕಾಣಿ ಸ್ತಾನೆ ಇರಲಿಲ್ಲ. ನಿಮ್ಮ ಸಭ್ಯ ಓದುಗರ ಪೈಕಿ ನಾನೂ ಒಬ್ಬನಿರಬೇಕು. ಅಂದು ಕೊಂಡು ‘ಹಲೋ ಅಂತಿದ್ರಿ, ‘ಕ್ರೈಮ್ ಅನ್ನೋದು ಮುಖದ ಮೇಲೆ ಬರೆದಿರೋದಿಲ್ಲ, ಅದು ಮನಸ್ಸಲ್ಲಿರುತ್ತೆ.
‘ನಿಜ ಹೇಳಬೇ ಕೂಂದ್ರೆ, ನನ್ನ ಮನಸ್ಸಲ್ಲೂ ಇರಲಿಲ್ಲ. ನಾನು ತುಂಬಾ ಚಿಜಿಜಿeಛಿಣioಟಿಚಿಣe ಆಗಿ ತಂದೆ ತಾಯಿಗಳ ಅಗಾಧವಾದ ಪ್ರೀತಿಯ ಮಧ್ಯೆ ಹಿತವಾಗಿ ಬೆಳೆದೋನು. ನನ್ನ ತಂದೆ ಮೊದಲು ಒಬ್ಬ ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ರು. ಲಂಚ ತಗೋಬಾರದು ಅನ್ನೋ ಕಾರಣಕ್ಕೆ ಆ ಕೆಲಸ ಬಿಟ್ಟು ಮೇಷ್ಟ್ರಾದರು. ಆಮೇಲೆ ವಿದ್ಯಾ ಇಲಾಖೆಯಲ್ಲಿ ಅಧಿ ಕಾರಿಯಾದರು. ನನ್ನ ತಾಯಿ ಕೂಡ ಟೀಚರ್. ದೇವ ರಂಥಾ ತಂದೆ ತಾಯಿಗಳು. ನಮ್ಮ ವಂಶದಲ್ಲೇ ಯಾರೂ ರಕ್ತ ನೋಡಿಲ್ಲ. ಕೈಯೆತ್ತಿ ಯಾರ ಕೆನ್ನೆಗೂ ಹೊಡೀಲಿಲ್ಲ. ಆದರೆ ನಾನು ಹುಟ್ಟಿಬಿಟ್ಟೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುವಂಥಾ ಪಾತಕಗಳನ್ನು ಮಾಡಿಬಿಟ್ಟೆ. ಯಾರ ಕೈಗೂ ಸಿಕ್ಕದೆ ವರ್ಷಗಟ್ಟಲೆ ನಿಮ್ಮೆಲ್ಲರ ಮಧ್ಯೆ ನಗ್‌ನಗ್ತಾ ಓಡಾಡಿ ಕೊಂಡು ಇದ್ದು ಬಿಟ್ಟೆ.

3-4-2012

Posted by JAYAKIRANA Kirana on | 0 comments | Leave a comment...

ವ್ಯಾಕರಣ
ವ್ಯಾಕರಣ ತರಗತಿಯಲ್ಲಿ ಸರ್ದಾರ್‌ನಲ್ಲಿ ಟೀಚರ್ ಒಂದು ಪ್ರಶ್ನೆ ಕೇಳುತ್ತಾರೆ ‘ಗುಂಡ ಹುಡುಗಿಯರನ್ನು ಇಷ್ಟ ಪಡುವುದಿಲ್ಲ, ಇಲ್ಲಿ ಗುಂಡ ಏನು? ಆಗ ಸರ್ದಾರ್ ಇಲ್ಲಿ ಗುಂಡ ‘ಹಿಜಡಾ’ ಆಗಿರಬೇಕು ಟೀಚರ್!!!

ಪ್ರಿಂಟ್
ಗುಂಡ ಮತ್ತು ರಂಗನನ್ನು ಹೆಡ್‌ಮಾಸ್ಟರ್ ಆಫೀಸ್‌ಗೆ ಕರೆದು ಹೇಳಿದರು ‘ನೀವಿಬ್ಬರು ನಮ್ಮ ಶಾಲೆಗೆ ಫಸ್ಟ್ ಬಂದಿದ್ದೀರಾ, ಮುಂದೆ ನೀವು ಹೋಗೋ ಕಾಲೇಜ್‌ನಲ್ಲೂ ಇದೇ ರೀತಿ ಇರಬೇಕು ಆಗ ಗುಂಡ ಅದು ಆಗಲ್ಲ ಸಾರ್ ಅದಕ್ಕೆ ಹೆಡ್ ಮಾಸ್ಟರ್ ಯಾಕೆ ಆಗಲ್ಲ?
ಗುಂಡ ಅವರು ನಿಮ್ಮ ಹಾಗೆ ನಮ್ಮಪ್ಪನ ಪ್ರೆಸ್‌ನಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡಬೇಕಲ್ಲ?!

ಗೊಟಕ್
ಗುಂಡನ ಹೆಂಡತಿಗೆ ಮಗುವಾಯಿತು. ಮಗುವಾದ ತಕ್ಷಣ ಅಮ್ಮ ಅಂದಿತು, ಗುಂಡನ ಹೆಂಡತಿ ಗೊಟಕ್, ಅಜ್ಜಿ ಅಂದಿತು, ಅಜ್ಜಿ ಗೊಟಕ್. ಕೊನೆಯಲ್ಲಿ ಅಪ್ಪ ಅಂದಿತು. ಆದರೆ ಪಕ್ಕದ ಮನೆ ರಂಗ ಗೊಟಕ್!!

ನೋವು
ಜೀವನದಲ್ಲಿ ಪ್ರೀತಿಯ ನೋವು ಏನು ಅಂತ ಗೊತ್ತಾ? ಇಬ್ಬರೂ ಪ್ರೀತಿಸಿದಾಗ ಅಲ್ಲ, ಇಬ್ಬರಲ್ಲಿ ಒಬ್ಬರು ಮಾತು ಬಿಟ್ಟಾಗ.

ಚಿಲ್ಲರೆ
ಗುಂಡ: ನಿಮ್ಮ ಬಸ್‌ನಲ್ಲಿ ಎಫ್‌ಎಮ್ ಬಂದ ಮೇಲೆ ನೀವು ತುಂಬಾ ಖುಷಿಯಾಗಿ ಇದೀರಲ್ಲ ಅದು ಯಾಕೆ? ಕಂಡಕ್ಟರ್: ಏನಿಲ್ಲ ಸಾರ್, ಹಾಡು ಕೇಳ್ತಾ ಜನ ಚಿಲ್ಲರೆ ಪಡೆಯೋದನ್ನೇ ಮರೆತಿದ್ದಾರೆ!

ನೆನಪು
ಸವಿಯಾಗಿ ಬರೆಯಲು ಕವಿ ನಾನಲ್ಲ, ಚಿರವಾಗಿ ಉಳಿಯಲು ಈ ಭೂಮಿ ನನ್ನದಲ್ಲ, ಏನನ್ನು ಬರೆಯಲಿ ಈ ಅಳಿದು ಹೋಗುವ ಹಾಳೆಯಲ್ಲಿ. ಆದರೂ ನಿಮ್ಮ ನೆನಪು ಆಗುತ್ತೆ ಈ ಪುಟ್ಟ ಹೃದಯದಲ್ಲಿ.

ನೀರಿನ ಮೇಲಿಟ್ಟ ಹೋಮದಂತಾಗುತ್ತಿದೆಯೇ ಯೋಜನೆಗಳು?

Posted by JAYAKIRANA Kirana on | 0 comments | Leave a comment...


ಬ್ಯಾಂಕ್ ಸಾಲದಿಂದ ಅದೆಷ್ಟೋ ವಿದ್ಯಾರ್ಥಿಗಳು ವೃತ್ತಿಶಿಕ್ಷಣ ಕಲಿತು ಉದ್ಯೋಗ ಸಿಗದೆ ವಿಧಿಯಿಲ್ಲದೆ ಗೇರುಬೀಜ, ಅಡಕೆ ಕಾರ್ಖಾನೆಯಲ್ಲೋ, ಬೀಡಿ ಕಟ್ಟುವ ಕೆಲಸದಲ್ಲೋ ಕೂಲಿಗೆ ಕಾಳು ಕಷ್ಟಕರದ ಜೀವನ ಸಾಗಿಸುವವರೂ ಇದ್ದಾರೆ. ಹೀಗೇನೇ ಅವರ ವಯಸ್ಸು ಮಿತಿಮೀರಿ ಹೋದರೆ ಅವರ ವೃತ್ತಿಶಿಕ್ಷಣದ ಸರ್ಟಿಫಿಕೇಟಿಗೆ ಏನಿದೆ ಬೆಲೆ?

ಉಮಾನಾಥ ಕುಮಾರ್, ಕೋಡಿಕಲ್
ಸಂಪದ್ಭರಿತ ರಾಷ್ಟ್ರ ಭಾರತವು ಬಹುದೊಡ್ಡ ಪ್ರಜಾಪ್ರ ಭುತ್ವ ಶಕ್ತಿಯನ್ನು ಹೊಂದಿರುವುದು ಹೆಮ್ಮೆಯ ವಿಚಾರ. ಆದರೆ ಇದ್ದಕ್ಕಿದ್ದಂತೆ ನಮ್ಮಲ್ಲಿ ದಕ್ಷತೆ, ಪ್ರಾಮಾಣಿಕತೆ, ವಚಸ್ಸು ದಿನೇ ದಿನೇ ಕುಸಿತದ ಪರಿಣಾಮ ನಿರುದ್ಯೋಗ ಸಮಸ್ಯೆ ದೊಡ್ಡ ದಾಗಿ ಬೆಳೆಯುತ್ತಾ ಇಡೀ ನಾಡಿಗೆ ಕ್ಷಯರೋಗದಂತೆ ಪರಿಣ ಮಿಸಿದ್ದನ್ನು ಇತ್ತೀಚೆಗೆ ಸಮೀಕ್ಷೆಯೊಂದು ಬಹಿರಂಗಗೊಳಿ ಸಿದೆ. ಪ್ರಾಯಶಃ ಅದು ನಮ್ಮ ರಾಷ್ಟ್ರೀಯ ನಾಯಕರಿಗೆ ಮನ ದಟ್ಟಾದಂತಿದೆ. ಭಾರೀ ಮೊತ್ತದ ಅನುದಾನ ಬಿಡುಗಡೆಗೊ ಳಿಸಿ ಅದಕ್ಕೊಂದು ಸೂಕ್ತ ಪರಿಹಾರವಾಗಿ ಕೇಂದ್ರದ ಆಡಳಿ ತವು ರಾಷ್ಟ್ರೀಯ ಗ್ರಾಮೀಣ ಖಾತ್ರಿ ಯೋಜನೆ ಜಾರಿಗೆ ತಂದಿದ್ದು, ಇದನ್ನು ವಿತರಿಸುವ ಕೆಲಸ ಎಲ್ಲಾ ರಾಜ್ಯಗಳಲ್ಲಿ ನಡೆಯುತ್ತಿದೆ. ಆದರೆ ಅದರ ಸಾರಥ್ಯ ವಹಿಸಿದ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಅಡ್ಡದಾರಿಯಲ್ಲಿದ್ದಂತೆ ಫಲಾನುಭವಿ ಅರ್ಹ ಕುಟುಂಬವನ್ನು ಗುರುತಿಸದೆ, ಸರಿಯಾಗಿ ತಲುಪಿಸದೆ ಬಹು ತೇಕ ಕಡೆ ಏನೋ ಗೋಲ್‌ಮಾಲ್ ನಡೆಸುತ್ತಿದ್ದಾರೆ.
ಈ ಮೂಲಕ ಸರಕಾರದ ಹೆಸರು ಹಾಳು ಮಾಡುತ್ತಿ ದ್ದಾರೆ. ರಾಷ್ಟ್ರೋಥ್ಥನ ಗ್ರಾಮ ಸ್ವರಾಜ್ಯದ ಕನಸು ಭಗ್ನಗೊಳಿಸು ತ್ತಿದ್ದಾರೆ. ಸುದ್ದಿ ಸಂಸ್ಥೆಗಳು ಎಷ್ಟೇ ಹೇಳುತ್ತಿದ್ದರೂ ಯೋಜನೆ ಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿ ತನಿಖೆ ಆಗದಿರುವುದು ದುರದೃಷ್ಟಕರವಾಗಿದೆ. ಆದರೆ ಈ ನಡುವೆಯೇ ಆರ್ಥಿಕ ಬಲವರ್ಧನೆ ನಮ್ಮ ರಾಷ್ಟ್ರದ ಸಾಧನೆಗೆ ಜಾಗತಿಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರಲ್ಲೇನೂ ಹುರುಳಿಲ್ಲ ನಿಜ. ಅಚ್ಚರಿಯೆಂ ದರೆ ಆಧುನಿಕ ಮುಂಚೂಣಿಯ ಬಹುಶಃ ಕಾನೂನಿನ ವೈಫ ಲ್ಯತೆಯ ಪರಿಣಾಮ ಪಶ್ಚಿಮದ ಹಲವು ರಾಷ್ಟ್ರಗಳು ಬಂಡ ವಾಳ ವ್ಯವಸ್ಥೆ ಸಮತೋಲನ ಆಯತಪ್ಪಿ ಹಣದುಬ್ಬರವೊಮ್ಮೆ ಗಗನಕ್ಕೇರಿದರೆ ಮತ್ತೊಮ್ಮೆ ಪಾತಾಳಕ್ಕಿಳಿದಿತ್ತು. ಕಠಿಣ ಕಾನೂ ನಿನ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಚೇತರಿಸಿಕೊಳ್ಳುವಂ ತಿದೆ. ಆದರೆ ನಮ್ಮಲ್ಲಿ ಒಂದು ಪವಾಡ ಜೀವಂತವಾಗಿ ಉಳಿ ದಿದೆ ಎಂದರೆ ತಪ್ಪಾಗದು. ನಮ್ಮಲ್ಲೀಗ ಬರೋಬ್ಬರಿ ಒಂದು ಸಾವಿರದ ಇನ್ನೂರೊಂದು ಮಿಲಿಯನ್ ಜನಸಂಖ್ಯೆ ಬಹು ದೊಡ್ಡ ಸಂಪತ್ತಾಗಿದೆ. ಹಣಕಾಸು ವ್ಯವಸ್ಥೆ ಬುಡಮೇಲಾಗದೆ ಆರೋಗ್ಯಕರ ನಿಯಂತ್ರಣದಲ್ಲಿದ್ದು ನಿಟ್ಟುಸಿರು ಬಿಡುವಂತಾ ಗಿದೆ. ಮುತ್ಸದ್ದಿಗಳ ಮಂಕುಬೂದಿ ಎರಚಾಟ, ಜನಸಾಮಾನ್ಯ ನಿಗೆ ಕುರುಡಾಟ ಅಂತ್ಯವಿಲ್ಲದ್ದನ್ನು ಅರ್ಥೈಸುತ್ತಿದೆಯೇ? ಭಾರತ ಬಡರಾಷ್ಟ್ರವಲ್ಲ. ಹಣ ಎಲ್ಲೆಡೆ ಹುಡುಕಿ ಸಂಗ್ರಹಿಸಿದರೆ ಪ್ರತಿ ಯೊಬ್ಬ ಭಾರತೀಯನಿಗೆ ತಲಾ ನೂರೈವತ್ತು ಕೋಟಿ ನೋಟಿನ ಕಟ್ಟು ಹಂಚಿಕೆ ಮಾಡಬಹುದೆಂದು ಅರ್ಥತಜ್ಞರೊಬ್ಬರ ಅಭಿ ಪ್ರಾಯವು ಬೆರಗುಗೊಳಿಸುತ್ತದೆ. ಕಳ್ಳ-ಸುಳ್ಳರ ಈ ಕಾಲಘಟ್ಟ ದಲ್ಲಿ ಸತ್ಯ, ಧರ್ಮ, ನ್ಯಾಯವಂತನು ಈ ಬಣ ಹವೆಯಲ್ಲಿ ಒಣಗಿ ಇಹಲೋಕ ಕಾಣಬೇಕು. ಅಡ್ಡದಾರಿ ಹಿಡಿದರೆ ಸಾಕಷ್ಟು ಕಾಸು ಹೂಡಿಕೆ ಮಾಡಬಹುದು ಅಥವಾ ಅಧಿಕಾರದ ವರ್ಗ ಗಳ ಅಗಾಧ ಗರ್ಭದಲ್ಲಿ ಹುಟ್ಟಿಬರಬೇಕು. ಅದೇ ತಜ್ಞನ ಲೆಕ್ಕ ಚಾರ ಎಷ್ಟು ಸಮಂಜಸ? ಪ್ರಸ್ತುತ ಮುಂದುವರಿಯುತ್ತಿರುವ ವಿಶಾಲ ರಾಷ್ಟ್ರದಲ್ಲಿ ಶೇ.೮೫ರಷ್ಟು ಜನ ಗ್ರಾಮಾಂತರ ಪ್ರದೇಶದ ಲ್ಲಿದ್ದಾರೆ. ಇದು ನೆಮ್ಮದಿ ತಂದಿದ್ದು ಸುಳ್ಳಲ್ಲ, ಆದರೆ ದಶಕಗಳ ಸಂವಿಧಾನಬದ್ಧ ಸವಲತ್ತುಗಳು ಎಷ್ಟು ಹಳ್ಳಿಗೆ ತಲುಪಿದೆ? ನಮ್ಮೆ ಲ್ಲರ ಆಶಯ ಮುಂಬರುವ ಪಂಚವಾರ್ಷಿಕ ಯೋಜನೆ ಶೇ.೮೦ ರಷ್ಟು ಹಣಕಾಸು ಸಮಗ್ರ ಅಭಿವೃದ್ಧಿಯಲ್ಲಿಗೆ ಮುಟ್ಟಿಸುವ ದಿಟ್ಟ ಹೆಜ್ಜೆ ನಮ್ಮ ನಾಯಕರು ಇಟ್ಟರೆ ಕ್ಷಿಪ್ರ ಹಸಿರು ಕ್ರಾಂತಿ ಅಗತ್ಯಕ್ಕೆ ಬರುವುದಿಲ್ಲ.
ರಾಜಪ್ರಭುತ್ವದ ಆಳ್ವಿಕೆ ನಮ್ಮಲಿಲ್ಲ. ಮೊಟ್ಟಮೊದಲು ಪ್ರಜಾ ಸತ್ತೆ ಹುಟ್ಟುಹಾಕಿದ ಬ್ರಿಟಿಷ್ ಆಡಳಿತವು ಸರಕಾರಿ ವಿವಿಧ ಹುದ್ದೆ ಗಳನ್ನು ಅಸ್ತಿತ್ವಕ್ಕೆ ತಂದು ಸಾಮಾನ್ಯ ಜನರಿಗೆ ಬದುಕುವ ಹಕ್ಕಿನ ದಾರಿ ಮಾಡಿಕೊಟ್ಟಿದ್ದು ಅದಕ್ಕೆ ಮತ್ತಷ್ಟು ಜೀವಕಳೆ ತುಂಬಿಸಿ ನಮ್ಮ ನಾಯಕರು ೧೯೫೦ರಲ್ಲಿ ಅದನ್ನು ಸಂವಿಧಾನ ಬದ್ಧಗೊ ಳಿಸಿದ್ದು, ಇತಿಹಾಸವೇ ಸರಿ. ಅದರಡಿ ಕರ್ಮಚಾರಿಗಳು ಇಂದಿಗೂ ಸಣ್ಣಪುಟ್ಟ ಹುದ್ದೆಯಿಂದ ನಿವೃತ್ತಗೊಂಡು ಯಾರ ಹಂಗೂ ಇಲ್ಲದೆ ವಿಶ್ರಾಂತ ಜೀವನ ಸಾಗಿಸುವವರಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶ ಕಳವಳ ಪಡುವಂತದ್ದು. ಸಾಮಾಜಿಕ ಜ್ವಲಂತ ಸಮಸ್ಯೆ ಕಡೆ ತಲೆ ಕೆಡಿಸಿಕೊಳ್ಳದಿರುವುದು ನಮ್ಮ ನೇತಾಗಳು ಜಾಗತೀಕರಣ ಎಂಬ ಬಕಾಸುರನ ಹೊಟ್ಟೆಗೆ ಸೇರ್ಪಡೆಗೆ ಪರಿಣಾಮವೇ ಗೊಂದ ಲಮಯ ಹಾಗೂ ನಿರುದ್ಯೋಗ ಬಡತನದ ತೀವ್ರತೆ ಹೆಚ್ಚಲು ಹೇತುವನ್ನು ಸಮೀಕ್ಷೆಯೊಂದು ತಿಳಿಸಿದೆ. ಸರಕಾರಿ ಸೊತ್ತುಗಳ ಖಾಸಗೀಕರಣದ ಹಾವಳಿಯು ಸಂವಿಧಾನ ಬಾಹಿರವಾದಂತಿದ್ದು ದಶಕಗಳಿಂದ ಸರಕಾರಿ ಕೆಳಸ್ತರದ ಹುದ್ದೆಗಳನ್ನು ತಲೆಎತ್ತದಂತೆ ಮಾಡಿದ್ದೇ ಹಣಕಾಸು ಎಲ್ಲೆಡೆ ರೋಟೇಷನ್ ಆಗದೆ ಕಾಳಧನ ಮಹಿಮೆಗೆ ರಹದಾರಿ ಅನ್ನುವುದನ್ನು ಅದು ಗುಟ್ಟಾಗಿ ಉಳಿಸಿಲ್ಲ. ವ್ಯವಸ್ಥೆ ಹೀಗಿದ್ದರೆ ದುಡಿಯುವ ಜನ ಸಾಮಾನ್ಯರಿಗೆ ಒಂದಿಷ್ಟು ಗಳಿಸಲು ಕೆಲಸ ಇಲ್ಲದಿರುವುದು ಡೆಮಾಕ್ರಸಿಯ ದುರಂತವೇ ಸರಿ.
ಭೂಸುಧಾರಣೆ ವೈಫಲ್ಯತೆ, ಉನ್ನತ ಹುದ್ದೆಗಳು ಮತ್ತು ಬ್ಯಾಕಿಂಗ್ ವ್ಯವಸ್ಥೆ ಬಿಳಿ ಆನೆಗಳ ಹಿಂದೆ ಓಡುವುದು ಮಾಮೂ ಲಾಗಿದೆ. ಒಂದಿಂಚು ಬದಲಾವಣೆಯೂ ಸುಲಭವಲ್ಲ ಎಂಬು ದನ್ನು ಅದು ಮಾರ್ಮಿಕವಾಗಿ ವ್ಯಕ್ತಪಡಿಸಿದೆ. ಅದಕ್ಕೆ ಅನೇಕ ನಿದರ್ಶನವೂ ಇದೆ. ಇತ್ತೀಚೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಭಾರೀ ದೊಡ್ಡ ಜಾಹೀರಾತುಗಳನ್ನು ನೇತಾಡಿಸಿದೆ. ಕೈಗೆಟಕುವಂತೆ ಬಡ್ಡಿ ದರ ಕಡಿತ, ಲೋನ್‌ಮೇಳ ಹುಟ್ಟಿದೆ. ಜಮೀನು ಖರೀದಿಗೆ, ಅಧಿಕೃತ ಬ್ಯುಸಿನೆಸ್‌ಗೆ, ಮದುವೆಗೆ, ವಾಹನ ಖರೀದಿಗೆ ವೃತ್ತಿಶಿಕ್ಷ ಣಕ್ಕೆ ಮತ್ತು ರಿಯಲ್ ಎಸ್ಟೇಟ್ ಬಿಲ್ಡರ್‌ಗಳಿಗೆ ಎಂಬುದಾಗಿದ್ದು, ಯಾರ ಉದ್ಧಾರಕ್ಕೆ? ಆಸ್ತಿಪಾಸ್ತಿ ಹಕ್ಕು ಇಲ್ಲದವರಿಗೆ ಇದು ಸಾಧ್ಯನಾ? ಇದು ಜನಸಾಮಾನ್ಯನ ಕೊರಳಿಗೆ ಉರುಳಾಗಿ ಪರಿ ಣಮಿಸಿದ ಅದೆಷ್ಟೋ ಉದಾಹರಣೆಗಳಿವೆ. ಬ್ಯಾಂಕ್ ಸಾಲದಿಂದ ಅದೆಷ್ಟೋ ವಿದ್ಯಾರ್ಥಿಗಳು ವೃತ್ತಿಶಿಕ್ಷಣ ಕಲಿತು ಉದ್ಯೋಗ ಸಿಗದೆ ವಿಧಿಯಿಲ್ಲದೆ ಗೇರುಬೀಜ, ಅಡಕೆ ಕಾರ್ಖಾನೆಯಲ್ಲೋ, ಬೀಡಿ ಕಟ್ಟುವ ಕೆಲಸದಲ್ಲೋ ಕೂಲಿಗೆ ಕಾಳು ಕಷ್ಟಕರದ ಜೀವನ ಸಾಗಿ ಸುವವರೂ ಇದ್ದಾರೆ. ಹೀಗೇನೇ ಅವರ ವಯಸ್ಸು ಮಿತಿಮೀರಿ ಹೋದರೆ ಅವರ ವೃತ್ತಿಶಿಕ್ಷಣದ ಸರ್ಟಿಫಿಕೇಟಿಗೆ ಏನಿದೆ ಬೆಲೆ? ನಮ್ಮ ಕೇಂದ್ರ ಮತ್ತು ರಾಜ್ಯದ ನಾಯಕರು ಇತ್ತ ಗಮನಿಸಿದರೆ ಖಂಡಿತ ಅವರಿಗೆ ಪುಣ್ಯ ಬರುತ್ತದೆ. ಪ್ರಸ್ತುತ ಸರಕಾರಿ ನೌಕರರ ಸೇವೆ ವಯಸ್ಸು ೬೦ಕ್ಕೇರಿಸಿದ್ದು, ನಿರುದ್ಯೋಗಿಗಳಿಗೆ ಅನ್ಯಾಯ ವಾಗಿದೆ. ಇನ್ನು ಮುಂದೆ ಸರಕಾರಿ ಸೇವೆ ೨೦ ವರ್ಷ ಮಾತ್ರ ನಿಗದಿಗೆ ತಿದ್ದುಪಡಿ ಅನಿವಾರ್ಯತೆ ಇರಬಹುದು. ಒಬ್ಬ ತನ್ನ ಇಪ್ಪತ್ತರ ಹರೆಯದಲ್ಲಿ ಹುದ್ದೆಯಲ್ಲಿದ್ದರೆ ಆತ ೪೦ರ ವಯಸ್ಸಿಗೆ ನಿವೃತ್ತಿ ಹೊಂದಿ ಅರ್ಧ ಪೆನ್ಶನ್ ಗಳಿಸುವಂತಾಗಬೇಕು. ಒಬ್ಬ ತನ್ನ ೪೦ರ ಪ್ರಾಯದಲ್ಲಿ ಕೆಲಸಕ್ಕೆ ಸೇರಿದವ ೬೦ರ ವಯಸ್ಸಿಗೆ ನಿವೃತ್ತಿ ಹೊಂದಿ ನಿವೃತ್ತಿ ವೇತನ ಗಳಿಸುವಂತಾದರೆ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದು ನಮ್ಮ ಅನಿಸಿಕೆ. ಮೂಲಗಳ ಪ್ರಕಾರ ನಮ್ಮ ರಾಜ್ಯದಲ್ಲೀಗ ಕೆಳದರ್ಜೆಗಳ ಹುದ್ದೆ ಎರಡು ಲಕ್ಷಕ್ಕೂ ಮಿಕ್ಕಿ ಖಾಲಿಯಿದೆ. ಗ್ರಾಮಾಂತರ ಬಡ ಕುಟುಂಬದ ಯುವ ಕರನ್ನು ಗುರುತಿಸಿ ಕೆಲಸ ಕೊಡಬೇಕು.

ಉತ್ತಮ ಸಮಾಜ ಸೇವೆ ಮಾಡಿ

Posted by JAYAKIRANA Kirana on | 0 comments | Leave a comment...

ಉಡುಪಿ ಲೋಕಸಭಾ ಚುನಾವಣೆ ಯಲ್ಲಿ ಜನರು ಜಯಪ್ರಕಾಶ ಹೆಗ್ಡೆಯ ಕೈ ಹಿಡಿದು ವಿಜ ಯಿಶಾಲಿಯ ನ್ನಾಗಿಸಿದರು. ಪಕ್ಷಕ್ಕಿಂತ ವ್ಯಕ್ತಿ, ವ್ಯಕ್ತಿತ್ವ ಮುಖ್ಯ ಎಂಬು ದನ್ನು ಜಯಪ್ರಕಾಶ್ ಹೆಗ್ಡೆ ಸಾಬೀ ತುಪಡಿಸಿದ್ದಾರೆ. ಬಿಜೆಪಿ ಸರಕಾರದ ಕುರ್ಚಿ ರಾಜಕೀಯದಿಂದಾಗಿ ಗೆಲುವು ಕಾಂಗ್ರೆಸ್‌ಗೆ ಒಲಿದಿದೆ. ಇದಕ್ಕೆ ಮತ ದಾರರೇ ಸಾಕ್ಷಿಯಾಗಿದ್ದಾರೆ. ಆದ್ದ ರಿಂದ ಜಯಪ್ರಕಾಶ್ ಹೆಗ್ಡೆಯವರು ಗೆಲ್ಲಿಸಿದ ಮತದಾರರಿಗೆ ಮೋಸ ಮಾಡದೆ, ಉತ್ತಮ ಸಮಾಜ ಸೇವಾ ಕಾರ್ಯವನ್ನು ನಡೆಸಲಿ ಎನ್ನುವುದು ನಮ್ಮ ಹಾರೈಕೆ. ಕೇಂದ್ರದ ಅನುದಾನ ಉತ್ತಮವಾಗಿ ನಿಮ್ಮ ಆಡಳಿತದಲ್ಲಾ ದರೂ ಬಳಕೆಯಾಗಲಿ.
ನಲ್ಲ, ಪಮ್ಮ, ಬೈಂದೂರು

ಜಂಕ್‌ಫುಡ್ ನಿಷೇಧ ಯಾಕಿಲ್ಲ?
ಇತ್ತೀಚೆಗಷ್ಟೇ ಕೇಂದ್ರ ವಿಜ್ಞಾನ ಮತ್ತು ಪರಿಸರ ಇಲಾಖೆ ನಡೆಸಿದ ಸಂಶೋಧನೆಯೊಂದು ಜಂಕ್‌ಫು ಡ್‌ಗಳು ಮಕ್ಕಳ ಆರೋಗ್ಯಕ್ಕೆ ಹಾನಿ ಕರ ಎಂಬ ವರದಿ ನೀಡಿತ್ತು. ವರ ದಿಯ ಪ್ರಕಾರ ಈ ಹಿಂದೆಯೇ ಈ ವಿಚಾರ ತಿಳಿದಿದ್ದರೂ ಇತ್ತೀಚಿಗಿನ ಸಂಶೋಧನೆಯ ಪ್ರಕಾರ ಜೀವಕ್ಕೆ ಹೆಚ್ಚಿನ ಹಾನಿಯಿದೆ ಎಂದು ಹೇಳಲಾ ಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಸರ್ಕಾರ ಮಾತ್ರ ಇಂತಹ ಜಂಕ್‌ಫುಡ್‌ಗಳನ್ನು ನಿಷೇಧಿಸಲು ಮೀನಾ ಮೇಷ ಎಣಿಸುತ್ತಿರುವುದು ಯಾಕೆ? ಕೇವಲ ವರ್ಷ ಕ್ಕೊಂದು ವರದಿಗಳನ್ನು ಕೊಟ್ಟು ಜನರನ್ನು ಎಚ್ಚರಿಸುವ ಬದಲು ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಇದನ್ನು ನಿಷೇಧಿಸಬಹುದಲ್ಲವೇ? ಸಣ್ಣ ಪುಟ್ಟ ಗೂಡಂಗಡಿಗಳಿಗೆ, ರಸ್ತೆ ಬದಿ ವ್ಯಾಪಾರಸ್ಥರ ಮೇಲೆ ಕಳಪೆ ಆಹಾರ ಪೂರೈಸುತ್ತಾರೆ ಎಂದು ತನ್ನ ಪೌರುಷ ಮೆರೆಯವ ಸರ್ಕಾರಕ್ಕೆ ಜಂಕ್ ಫುಡ್ ತಯಾರಕ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ವಾಗುತ್ತಿಲ್ಲವೇ? ಇನ್ನು ಮಕ್ಕಳ ಹೆತ್ತವರಿಗೂ ಇದೊಂದು ಎಚ್ಚರಿಕೆಯ ಕರೆ ಘಂಟೆ ಎಂದರೆ ತಪ್ಪಿಲ್ಲ. ತಮ್ಮ ಮಕ್ಕಳು ಜಂಕ್‌ಫುಡ್‌ಗಳಾದ ಲೇಸ್, ಕುರ್ ಕುರೇ ತಿಂದು ಊದಿಕೊಂಡರೂ ಪರವಾಗಿಲ್ಲ. ಆದರೆ ರಸ್ತೆ ಬದಿಯ ಆಹಾರ ವಸ್ತುಗಳು ಮಾತ್ರ ಬೇಡ. ಹೀಗಿರುವಾಗ ಸರ್ಕಾರ ನೀಡಿದ ಎಚ್ಚರಿಕೆ ಘಂಟೆಯ ಬಿಸಿ ಈಗಲಾದರೂ ಹೆತ್ತವರಿಗೆ ತಟ್ಟಬಹುದೇ? ಇನ್ನಾದರೂ ಜಂಕ್‌ಫುಡ್‌ಗಳನ್ನು ನಿಷೇಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಲಿ.
ವಿನ್ಯಾಸ್ ಆರ್.ಶೆಟ್ಟಿ, ಜೆಪ್ಪು

ಪಂಕ್ತಿಬೇಧ ಸಲ್ಲದು
ತುಳುನಾಡಿನ ಕೆಲವು ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಇಂದಿಗೂ ಪಂಕ್ತಿಬೇಧ ಚಾಲ್ತಿಯಲ್ಲಿದೆ. ಬ್ರಾಹ್ಮಣರನ್ನು ಶ್ರೇಷ್ಟ ಜಾತಿಗೆ ಸೇರಿದವರೆಂದು ವಿಂಗಡಣೆ ಮಾಡಿ ಅವರಿಗೆ ಪ್ರತ್ಯೇಕ ಮಣೆ ಹಾಕಿದರೆ, ಉಳಿದ ಕೀಳು ಜಾತಿಗಳ ಜನರನ್ನು ತುಳಿಯಲಾಗುತ್ತಿದೆ. ಪಂಕ್ತಿಬೇಧದ ಹಿನ್ನೆಲೆಯಲ್ಲಿ ಅದೆಷ್ಟೋ ವಿವಾದಗಳು ಉದ್ಭವಿಸಿದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊ ಳ್ಳಲು ಯಾರೂ ಮುಂದೆ ಬಂದಿಲ್ಲ. ಹೀಗಾಗಿ ಇಂಥ ಕೆಟ್ಟ ಪದ್ಧತಿ ಇಂದಿಗೂ ಜೀವಂತವಾಗಿರುವುದು ದುರದೃಷ್ಟಕರ. ಸಮಾಜದ ಜನರನ್ನು ಮೇಲು-ಕೀಳು ಎಂದು ವಿಂಗಡಿಸಿ ಬೇಧಭಾವ ತೋರುವುದು ಸರಿಯಲ್ಲ. ಎಲ್ಲರಿಗೂ ಸಮಾನ ನ್ಯಾಯ, ಸಮಾನ ಜೀವನ ಅವಕಾಶ ಸಿಗುವಂತಾದಾಗ ಮಾತ್ರ ಸಮಾಜ ಪ್ರಗತಿ ಕಾಣಲು ಸಾಧ್ಯ.
ರಮೇಶ್ ನಾಯ್ಕ, ವರಂಗ

ಕಮಿಷನರ್ ಅವರೇ, ಮೋಹಕ್ ಕುಮಾರ್ ಕೊಲೆ ಪ್ರಕರಣದ ಮರುತನಿಖೆ ನಡೆಸುವಿರಾ?
ಪುತ್ತೂರಿನ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಮೋಹಕ್ ಕುಮಾ ರ್‌ನನ್ನು ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಕೊಲೆಗೈದ ಪ್ರಕರಣ ನಡೆದು ಕೆಲವು ವರ್ಷಗಳು ಕಳೆದವು. ಆದರೆ ಇಂದಿಗೂ ಆರೋಪಿಗಳು ಮಾತ್ರ ಪತ್ತೆಯಾಗಿಲ್ಲ. ಯಾವುದೇ ಪ್ರಕರಣವಿರಲಿ, ತನಿಖೆ ನಡೆಸಿ ಆರೋಪಿಯನ್ನು ಕೂಡಲೇ ಬಂಧಿಸಿ ಜೈಲಿಗೆ ತಳ್ಳುವ ಸಾಮರ್ಥ್ಯ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಈ ಪ್ರಕರಣದಲ್ಲಿ ಎಡವಿದ್ದೇಕೆ? ಮೋಹಕ್ ಕುಮಾರ್ ತಾನು ಕಲಿಯುತ್ತಿದ್ದ ಬೆಂಜನ ಪದವು ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಅನ್ಯಮತೀಯ ಹುಡುಗಿಯ ಪ್ರೇಮಪಾ ಶಕ್ಕೆ ಬಿದ್ದಿದ್ದು, ಇದೇ ಆತನ ಪ್ರಾಣಕ್ಕೆ ಮುಳು ವಾಯಿತು ಎಂದು ಆರಂಭದಲ್ಲಿ ಹೇಳ ಲಾಗುತ್ತಿತ್ತಾದರೂ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿಲ್ಲ.
ಮೋಹಕ್ ಕುಮಾರ್ ಪ್ರಕರಣ ಹಳ್ಳ ಹಿಡಿಯಲು ಕೆಲವು ಮಂದಿ ಪೊಲೀಸ್ ಸಿಬ್ಬಂದಿಯೂ ಕಾರಣ ಎಂದು ಹೇಳಲಾ ಗುತ್ತಿದೆ. ಇಲ್ಲವಾದರೆ ಕಾಲೇಜ್ ವಿದ್ಯಾ ರ್ಥಿಯೊಬ್ಬನ ಕೊಲೆ ಪ್ರಕರಣದ ಹಿಂದಿ ರುವ ಶಕ್ತಿಗಳು ಯಾರು ಎನ್ನುವುದು ಇಷ್ಟ ರವರೆಗೆ ಬೆಳಕಿಗೆ ಬರುತ್ತಿತ್ತು. ಪೊಲೀಸರು ತಮಗೇಕೆ ಉಸಾಬರಿ ಎಂದು ಕಡತವನ್ನು ಮುಚ್ಚಿ ಕುಳಿತು ಬಿಟ್ಟಿದ್ದಾರೆ, ಮೋಹಕ್ ಕುಮಾರ್ ಮನೆಯವರು ದು:ಖಿಸುತ್ತಿದ್ದಾರೆ. ಮಾನ್ಯ ಪೊಲೀಸ್ ಕಮಿಷನರ್ ಅವರು ಪ್ರಕರಣದ ಮರು ತನಿಖೆ ನಡೆಸಿ ನೊಂದಿ ರುವ ಮನೆಯವರಿಗೆ ನ್ಯಾಯ ಒದಗಿಸು ವರೇ?
ನೊಂದವರು, ಬೆಟ್ಟಂಪಾಡಿ

ವಕ್ಫ್ ಹಗರಣ ಬಗ್ಗೆ ಲೋಕಾಯುಕ್ತ ತನಿಖೆಯಾಗಲಿ
೨ಜಿ ಸ್ಪೆಕ್ಟ್ರಂ ಹಗರಣವನ್ನೂ ಮೀರಿಸಿದ ವಕ್ಫ್ ಹಗರಣದ ತನಿಖೆಯನ್ನು ಲೋಕಾಯುಕ್ತ ಇಲಾಖೆಗೆ ಒಪ್ಪಿಸಲು ಸರಕಾರ ಮೀನಾಮೇಷ ಎಣಿಸುವುದು ಸರಿಯಲ್ಲ. ಎರಡು ಲಕ್ಷ ಕೋಟಿ ರೂ. ಮೊತ್ತದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರಕಾರ ಉತ್ಸುಕವಾಗಿತ್ತು. ಆದರೆ ಸಿಐಡಿ ಇಲಾಖೆ ರಾಜ್ಯ ಸರಕಾರದ ಅಡಿಯಲ್ಲಿ ಬರುವ ಕಾರಣ ತನಿಖೆ ಸರಿಯಾದ ದಿಶೆಯಲ್ಲಿ ಸಾಗುವ ಯಾವುದೇ ಸಾಧ್ಯತೆಗ ಳಿಲ್ಲ. ಹೀಗಾಗಿ ವಕ್ಫ್ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಸರಕಾರ ನಿರ್ಧಾರ ಕೈಗೊಳ್ಳ ಬೇಕು. ವಕ್ಫ್ ಮಂಡ ಳಿಗೆ ಸೇರಿದ ರಾಜ್ಯದಲ್ಲಿನ ಒಟ್ಟು ೩೩.೭೪೧ ಆಸ್ತಿಯನ್ನು ಕಬಳಿಸಿ ರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಲೋಕಾಯುಕ್ತ ತನಿಖೆ ನಡೆಸಿದರೆ ಮಾತ್ರ ಹಗರಣದ ಹಿಂದಿನ ಸತ್ಯ ಬಯಲಿಗೆ ಬರ ಬಹುದು.
ರೆಹಮಾನ್, ಪುತ್ತೂರು

ತಿರುವೈಲು ಕಾರ್ಪೊರೇಟರ್ ಕಾಣೆಯಾಗಿದ್ದಾರೆ!
ಇಲ್ಲಿನ ಹಿಂದಿನ ಕಾರ್ಪೊರೇಟರ್ ರಾಜೀ ನಾಮೆ ಕೊಟ್ಟ ಕಾರಣ ಮರುಮತದಾನ ನಡೆದು ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಆದರೆ ಗೆದ್ದ ನಂತರ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಇಲ್ಲಿನ ಪರಾರಿ ಎಂಬ ಊರಿನ ನಾಗರಿಕರಿಗೆ ನೀರು ಸರಬರಾಜು ಇಲ್ಲದೆ ಒಂದು ವಾರ ಕಳೆದರೂ ಈಗಿನ ಕಾರ್ಪೋರೇಟರ್ ಇತ್ತ ಗಮನಹರಿಸಿಲ್ಲ. ಹಿಂದೆ ಸಮಯಕ್ಕೆ ಸರಿಯಾಗಿ ದಿನಾ ಎರಡು ಗಂಟೆ ನೀರು ಬರುತ್ತಿತ್ತಾದರೂ ಈಗ ಈ ಸಮಸ್ಯೆ ಆರಂಭವಾಗಿದೆ. ಈಗಿನ ನೀರು ಬಿಡುವಾತನ ಸಹಕಾರದಿಂದ ಕೆಲವರು ಅಕ್ರಮ ಸಂಪರ್ಕ ಪಡೆದು ಕಟ್ಟಡ ಕಾಮಗಾರಿ ಹಾಗೂ ಕೃಷಿಗೆ ನೀರು ಬಳಸುತ್ತಿದ್ದು, ನಾಗರಿಕರಿಗೆ ಎರಡು ದಿವಸಕ್ಕೊಮ್ಮೆ ಯಾವ್ಯಾವುದೋ ಸಮಯಕ್ಕೆ ನೀರು ಬರುತ್ತಿದ್ದು, ಈಗ ಅದೂ ಇಲ್ಲದೆ ಒಂದು ವಾರ ಕಳೆಯಿತು. ನಾಗರಿಕರಿಂದ ಒಂದಕ್ಕೆ ಹತ್ತು ಪಟ್ಟು ತೆರಿಗೆ ವಸೂಲು ಮಾಡಲು ಮಾತ್ರ ಇದು ಮಹಾ ನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ. ಆದರೆ ಇಲ್ಲಿನ ನಾಗರಿಕರಿಗೆ ಕೊಡುವ ಸವಲತ್ತು ಮಾತ್ರ ಶೂನ್ಯ. ಹಿಂದಿನ ಕಾರ್ಪೊರೇಟರ್ ಅವಧಿಯಲ್ಲಿ ನಡೆದಿ ರುವ ಕಟ್ಟಕಡೆಯ ಕೆಲಸವೆಂದರೆ ಪರಾರಿಯಿಂದ ವಾಮಂಜೂರು ಅಮೃತೇಶ್ವರ ದೇವಸ್ಥಾನಕ್ಕೆ ರಸ್ತೆ ಡಾಮರೀಕರಣ ಕಾಮಗಾರಿ. ಆನಂತರ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯದೇ ಇಲ್ಲಿನ ಜನರು ಹಿಂದೆ ಇದ್ದ ಉತ್ತಮ ಸವಲತ್ತನ್ನು ಕಳೆದು ಕೊಂಡಿದ್ದಾರೆ. ಇನ್ನಾದರೂ ಗಮನಿಸುವರೇ?
ಡಿ.ಕೆ.ಕೋಟ್ಯಾನ್., ವಾಮಂಜೂರು

ಬಿಜೆಪಿಗೆ ಭವಿಷ್ಯವಿಲ್ಲ
ಸದ್ಯದ ರಾಜಕೀಯ ಸ್ಥಿತಿಗತಿ ಯನ್ನು ನೋಡಿದರೆ ಬಿಜೆಪಿ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಖಚಿತವಾ ಗುತ್ತಿದೆ. ಕುರ್ಚಿಯ ಆಸೆಗಾಗಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರು ಕಾದಾಟಕ್ಕೆ ಇಳಿದಿದ್ದಾರೆ. ಜನಪ್ರತಿನಿ ಧಿಗಳು ಮದ್ಯಾರಾಧನೆ, ಪಾರ್ಟಿ, ಹಬ್ಬದೂಟ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದು ಸರಿಯೇ?
ರಾಮಕೃಷ್ಣ, ಹೆಬ್ರಿ

ಸಾರ್ವಜನಿಕರ ಬಲಿಗಾಗಿ ಕಾಯುತ್ತಿರುವ ಮೆಸ್ಕಾಂ?
ಮೆಸ್ಕಾಂ ನಗರದಲ್ಲಿ ಬಲಿಪಡೆಯಲು ಕಾಯುತ್ತಿ ದೆಯೇ ಎಂಬ ಅನುಮಾನ ನಗರವನ್ನು ಒಂದು ಸುತ್ತು ಹೊಡೆದರೆ ಉಂಟಾಗುವುದು ಸಹಜ. ನಗರದ ಬಹು ತೇಕ ವಿದ್ಯುತ್ ಕಂಬಗಳ ಬುಡದಲ್ಲಿ ವಿದ್ಯುತ್ ಹರಿಯುವ ತಂತಿಗಳು ಬಲಿಗಾಗಿ ಕಾಯುತ್ತಿದೆ. ವಿದ್ಯುತ್ ಹರಿಯು ತ್ತಿಲ್ಲ ಎಂದು ಅಪ್ಪಿತಪ್ಪಿ ಕೈ ತಾಗಿಸಿದರೂ ಯಮಲೋಕಕ್ಕೆ ಪ್ರಯಾಣಿಸುವುದು ಗ್ಯಾರಂಟಿ.
ಶಾಲಾ ಮಕ್ಕಳು ನಡೆದುಕೊಂಡು ಹೋಗುವಾಗ ಅಪ್ಪಿ ತಪ್ಪಿ ಕೈ ತಾಗಿದರೆ ಯಾರು ಜವಾಬ್ದಾರರು? ವಾರಕ್ಕೊಂದು ಕಡೆ ಹೋಗಿ ರಸ್ತೆ ಬದಿಯ ಮರ ಕಡಿದು ಬರುವ ಮೆಸ್ಕಾಂ ಸಿಬ್ಬಂದಿಗೆ ಅನಾಥವಾಗಿ ಬಿದ್ದುಕೊಂಡಿರುವ ವಿದ್ಯುತ್ ತಂತಿಗಳು ಕಣ್ಣಿಗೆ ಬೀಳದಿರುವುದು ವಿಪರ್ಯಾಸ. ನಗ ರದ ಬಹುತೇಕ ಕಡೆಗಳಲ್ಲಿ ಇನ್ನೂ ಹಳೆಯ ಕಾಲದ ವಿದ್ಯುತ್ ಕಂಬಗಳೇ ಇವೆ. ಅಲ್ಲದೇ ಇಲ್ಲಿ ಬಳಸಿರುವ ವಿದ್ಯುತ್ ತಂತಿಗಳು ಕೂಡ ಓಬೀರಾಯನ ಕಾಲದ್ದಾ ಗಿದೆ. ಈ ಕಂಬಕ್ಕೆ ಹಾಕಲಾದ ದೀಪಕ್ಕೆ ಸ್ವಿಚ್‌ನ ವ್ಯವಸ್ಥೆ ಯನ್ನು ವಿದ್ಯುತ್ ಕಂಬದ ಬುಡದಲ್ಲೇ ಹಾಕಲಾಗು ತ್ತದೆ. ಆದರೆ ಈ ಸ್ವಿಚ್‌ಗಳು ಕಿತ್ತುಹೋಗಿ, ತಂತಿಗಳು ಎಲ್ಲೆಂದರಲ್ಲಿ ಹರಡಿಕೊಂಡಿರುತ್ತವೆ.
ಕೆಲವೊಂದು ಬಸ್‌ನಿಲ್ದಾಣದ ಸಮೀಪವೂ ಇಂತಹ ಪರಿಸ್ಥಿತಿಯಿದೆ. ಇದು ಹೀಗೆಯೇ ಮುಂದುವರೆದರೆ ಸಾರ್ವಜನಿಕರಿಗೆ ಅಪಾಯ ತಪ್ಪಿದಲ್ಲ. ಇನ್ನಾದರೂ ಮೆಸ್ಕಾಂ ಆಡಳಿತ ಇತ್ತ ಗಮನ ಹರಿಸಿ. ನಗರದ ಹಳೇ ಕಾಲದ ಬೀದಿದೀಪಗಳನ್ನು ಬದಲಾಯಿಸಲಿ. ಇಲ್ಲದಿ ದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಇಸ್ಮಾಯಿಲ್, ಮಲ್ಲಿಕಟ್ಟೆ

ನೀರಿನಲ್ಲಿ ರಾಜಕೀಯ ಬೇಡ
ಹಲವು ವರ್ಷಗಳ ನಂತರ ಮತ್ತೆ ನಗರದಲ್ಲಿ ನೀರಿನ ಸಮಸ್ಯೆ ಉದ್ಭ ವಿಸಿದೆ. ಆದರೆ ಪಾಲಿಕೆಯ ಜನಪ್ರತಿನಿಧಿಗಳಿಗೆ ಮಾತ್ರ ಇದು ದೊಡ್ಡ ಸಮ ಸ್ಯೆಯೇ ಅಲ್ಲ ಅನ್ನುವಂತಾಗಿದೆ. ಇವರು ಮೇಯರ್‌ಗಿರಿಯ ವಿವಾದದ ಗುದ್ದಾಟದಲ್ಲೇ ಮುಳುಗಿದ್ದಾರೆ. ನಾಗರಿಕರು ನೀರಿಲ್ಲದೆ ಪರದಾಡುವಾಗ ರಾಜಕೀಯ ಗುದ್ದಾಟದಲ್ಲೆ ಮುಳುಗಿರುವ ಇಂಥ ಜನಪ್ರತಿನಿಧಿಗಳು ನಮಗೆ ಬೇಕೇ? ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಪರ್ಯಾಯ ಮಾರ್ಗಗ ಳನ್ನು ಇಲ್ಲವೇ ಜನರಿಗೆ ನೀರನ್ನು ಹೇಗೆ ಮಿತವ್ಯಯವಾಗಿ ಬಳಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುವ ಬದಲು ಅಧಿಕಾರಕ್ಕಾಗಿ ಕಿತ್ತಾಡುವುದು ಎಷ್ಟು ಸರಿ? ಇತ್ತೀಚೆಗೆ ಮಂಡನೆಯಾದ ಬಜೆಟ್ ಕೂಡ ಕಿತ್ತಾಟದಲ್ಲೇ ಕಳೆದು ಹೋಯಿತು. ಹೀಗೇ ಆದರೆ ಮುಂದೆ ಮಂಗಳೂರು ಪಾಲಿಕೆ ಎನ್ನುವುದು ಇತಿಹಾಸದ ಪುಟ ಸೇರುವುದು ಗ್ಯಾರಂಟಿ. ಇನ್ನಾದರೂ ಆಡ ಳಿತದತ್ತ ಗಮನ ಹರಿಸಿ. ಉಳಿದಂತೆ ನೀರಿನ ಸಮಸ್ಯೆಯ ವಿಚಾರದಲ್ಲಿ ರಾಜಕೀಯ ಬೇಡ.
ನೊಂದ ನಾಗರಿಕ, ಮಂಗಳೂರು

ದೇವಸ್ಥಾನ ಸಮೀಪ ಕೋಣದ ರುಂಡ!

Posted by JAYAKIRANA Kirana on | 0 comments | Leave a comment...




ಕಾಸರಗೋಡು: ಸತತ ನಡೆಯುತ್ತಿರುವ ಗಲಭೆಗಳಿಂದ ಇನ್ನೂ ಮೇಲೇಳದ ಕಾಸರಗೋಡಿ ನಲ್ಲಿ ನಿನ್ನೆ ಮತ್ತೆ ಬೈಕಿನಲ್ಲಿ ಬಂದ ಅಪರಿಚಿತರು ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನ ಸಮೀಪದ ಹಾಕಿದ ಕೋಣದ ರುಂಡದಿಂದಾಗಿ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಸಂಜೆ ಸುಮಾರು ಏಳು ಗಂಟೆ ಹೊತ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿ ಗಳು ಮಲ್ಲಿಕಾರ್ಜುನ ದೇವಸ್ಥಾನದ ಹಿಂಬದಿಗೆ ಕೋಣದ ರುಂಡ ಹಾಕಲು ಯತ್ನಿಸಿದ್ದರು. ಆದರೆ ಅದು ತಪ್ಪಿ ಸಮೀಪದ ರಸ್ತೆಯಲ್ಲಿ ಬಿದ್ದಿತು. ಇದನ್ನು ಕಂಡ ಸ್ಥಳೀಯರು ರೊಚ್ಚಿ ಗೆದ್ದು ಸಮೀಪದಲ್ಲೇ ನಿಲ್ಲಿಸಲಾಗಿದ್ದ ಒಂದು ಕೋಮಿಗೆ ಸೇರಿದವರ ಐದಕ್ಕೂ ಅಧಿಕ ಬೈಕ್‌ಗಳಿಗೆ ಬೆಂಕಿ ಹಚ್ಚಿ ದರು. ಬಳಿಕ ಕಾಸರಗೋಡು ಪಟ್ಟಣದ ಅಲ್ಲಲ್ಲಿ ಬೈಕ್‌ಗಳಿಗೆ ಬೆಂಕಿ ಹಚ್ಚಲಾಯಿತು, ಅಂಗಡಿಗಳನ್ನು ಬಂದ್ ಮಾಡಲಾ ಯಿತು. ಬಸ್ ಸಂಚಾರ ಸ್ಥಗಿತಗೊಂ ಡಿತು. ಬಸ್ ನಿಲ್ದಾಣದ ಸಮೀಪ ನಿಂತಿದ್ದ ಪ್ರಯಾಣಿಕರ ಮೇಲೆಯೂ ಹಲ್ಲೆ ನಡೆ ದಿದ್ದು ಗಾಯಗೊಂಡ ಹಲವರು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದಾರೆ. ಇಂದು ಕಾಸ ರಗೋಡು ಬಂದ್ ಆಚರಿಸಲಾಗುವ ಬಗ್ಗೆಯೂ ತಿಳಿದುಬಂದಿದೆ.
ಓರ್ವ ಮೃತ್ಯು
ಕಾಸರಗೋಡಿನಿಂದ ತಲಪಾಡಿಗೆ ಹೋಗುತ್ತಿದ್ದ ಬಸ್‌ನ್ನು ಉದ್ರಿಕ್ತರು ತಡೆದು ನಿಲ್ಲಿಸಿ, ಗಾಜುಗಳನ್ನು ಪುಡಿ ಮಾಡಿದಾಗ ಬಸ್‌ನ ಒಳಗಿದ್ದ ಕಾಸರಗೋಡು ಅಡ್ಕತ್ತಬೈಲ್ ನಿವಾಸಿ ಇಬ್ರಾಹಿಂ ಎಂಬವರು ಹೆದರಿ ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯಿಂದ ವೃದ್ಧನಿಗೆ ಜೀವ ಬೆದರಿಕೆ

Posted by JAYAKIRANA Kirana on | 0 comments | Leave a comment...

ಪಂಚಾಯತ್ ಪಿಡಿಒ ಸಾಥ್
ಮಂಗಳೂರು: ತನ್ನ ತೋಟದ ಬೋರ್‌ವೆಲ್‌ಗೆ ವಿದ್ಯುತ್‌ಲೈನ್ ಜೋಡಿ ಸಲು ಮುಂದಾಗಿದ್ದ ವೃದ್ದರೊಬ್ಬರಿಗೆ ಸ್ಥಳೀಯ ನಿವಾಸಿ ಜೀವ ಬೆದರಿಕೆ ಒಡ್ಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶೇಷ ಎಂದರೆ ಪೊಲೀ ಸರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವೃದ್ಧರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆನ್ನಲಾಗಿದೆ.
ವೃದ್ದರ ವಿರುದ್ಧವಾಗಿ ನಿಂತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಸದಸ್ಯರೊಬ್ಬರು ವೃದ್ದರಿಗೆ ಮಾನಸಿಕ ಕಿರುಕುಳ ನೀಡು ತ್ತಿದ್ದು ಇದರಿಂದ ನೊಂದು ಹೋಗಿ ರುವ ವೃದ್ದರು ಸಹಾಯಕ್ಕಾಗಿ ಹಿಂದೂ ಸಂಘಟನೆಯ ಮೊರೆ ಹೋಗಿದ್ದಾರೆ.
ಬಜಪೆ ಠಾಣಾ ವ್ಯಾಪ್ತಿಯ ತೆಂಕುಲ್ಪಾಡಿ ಕಾಜುಲ ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರೇ ನೆರೆಮನೆಯ ವರಿಂದ ಮತ್ತು ಪಂಚಾಯತ್ ಅಬಿವೃದ್ಧಿ ಅಧಿಕಾರಿಯಿಂದ ಮಾನಸಿಕ ಕಿರುಕುಳ ಎದುರಿಸುತ್ತಿರುವವರಾಗಿದ್ದಾರೆ.
ಅನಕ್ಷರಸ್ಥರಾಗಿದ್ದು ಕೃಷಿಯನ್ನೇ ನಂಬಿಕೊಂಡಿರುವ ತಿಮ್ಮಪ್ಪ ಪೂಜಾರಿ ಯವರು ತನ್ನ ತೋಟದಲ್ಲಿ ಬೋರ್ ವೆಲ್ ತೋಡಿಸಿದ್ದರು. ಇದಕ್ಕೆ ಪಂಪ್ ಅಳವಡಿಸಲು ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಕೆಇಬಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದಕ್ಕೆ ನೆರೆಮನೆಯ ನಿವಾಸಿ ಪುಷ್ಪ ಎಂಬವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬೆದರಿಕೆ ಒಡ್ಡಿದ್ದಾ ರೆನ್ನಲಾಗಿದೆ.
ವಾಸ್ತವವಾಗಿ ಸಾರ್ವಜನಿಕ ತೋಡಿನ ಪಕ್ಕದಲ್ಲಿ ಹಾದು ಹೋಗುವ ವಿದ್ಯುತ್ ಲೈನ್ ತಿಮ್ಮಪ್ಪ ಪೂಜಾರಿ ಯವರ ತೋಟಕ್ಕೆ ಹೊಂದಿ ಕೊಂಡಂತೆ ಇದ್ದರೂ ವೈಯಕ್ತಿಕ ಲಾಭವನ್ನು ಈಡೇರಿಸುವ ಹುನ್ನಾರ ದಲ್ಲಿರುವ ಪುಷ್ಪ ಅವರು ಆಕ್ಷೇಪದ ತಂತ್ರ ಬಳಸುತ್ತಿದ್ದಾರೆಂದು ತಿಮ್ಮಪ್ಪ ಪೂಜಾರಿಯವರು ಬಜಪೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಿಮ್ಮಪ್ಪ ಪೂಜಾರಿಯವರ ತೋಟ ಕಳೆದ ಬಳಿಕ ಪುಷ್ಪ ಅವರ ಮನೆ ಇದ್ದು ಇವರು ತಮ್ಮ ಮನೆಗೆ ಸಾಗಲು ತಿಮ್ಮಪ್ಪ ಪೂಜಾರಿಯವರ ತೋಟದ ನಡು ವಿನ ದಾರಿಯನ್ನು ಬಳಸಿಕೊಳ್ಳು ತ್ತಿದ್ದಾರೆ.
ಹೀಗಿದ್ದರೂ ಒಂದು ಲಾರಿ ಸಾಗುವಷ್ಟು ಜಾಗವನ್ನು ರಸ್ತೆಗೆ ಬಿಟ್ಟು ಕೊಡುವಂತೆ ಪುಷ್ಪ ಅವರು ತಿಮ್ಮಪ್ಪ ಪೂಜಾರಿಯವನ್ನು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಕಾಲು ದಾರಿಗೆ ಜಾಗವನ್ನು ಬಿಟ್ಟುಕೊಟ್ಟಿರುವ ತಿಮ್ಮಪ್ಪ ಪೂಜಾರಿಯವರು ಹೊಸ ರಸ್ತೆ ನಿರ್ಮಿಸಲು ಅವಕಾಶ ನೀಡುವುದಾದರೆ ೧೫ ಸೆಂಟ್ಸ್ ಸ್ಥಳವನ್ನು ಬಿಟ್ಟು ಕೊಡ ಬೇಕಾಗುತ್ತದೆ. ಅದೂ ಉಚಿತವಾಗಿ. ಇದಲ್ಲದೆ ಈ ರಸ್ತೆ ಉಪಯೋಗವಾಗುವುದು ಕೇವಲ ಒಂದು ಮನೆಗೆ ಮಾತ್ರ. ಈ ಕಾರಣದಿಂದ ತಿಮ್ಮಪ್ಪ ಪೂಜಾರಿಯವರು ರಸ್ತೆಗೆ ಜಾಗ ನೀಡಲು ಒಲ್ಲೆ ಎಂದಿದ್ದರು. ಆದರೆ ರಸ್ತೆಗೆ ಜಾಗ ನೀಡದೆ ವಿದ್ಯುತ್ ಕಂಬ ಹಾಕಲು ಬಿಡಲಾರೆ ಎನ್ನುತ್ತಿರುವ ಪುಷ್ಪ ಅವರು ಕತ್ತಿ ಹಿಡಿದುಕೊಂಡು ತಿಮ್ಮಪ್ಪ ಪೂಜಾರಿಯವರಿಗೆ ಬೆದರಿಕೆ ಒಡ್ಡುತ್ತ್ತಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ತಿಮ್ಮಪ್ಪ ಪೂಜಾರಿವರು ಬಜ್ಪೆ ಠಾಣೆಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಇತ್ತ ವಿದ್ಯುತ್ ಕಂಬ ಅಳವಡಿಸಲು ಪಂಚಾಯತ್ ಅನುಮತಿ ಪಡೆಯಲು ಹೋದಾಗ ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೂ ಪುಷ್ಪ ಅವರ ಪರವಾಗಿಯೇ ವಾದಿಸುತ್ತಿದ್ದಾರೆಂದು ಹಿಂದೂ ಸಂಘಟನೆ ವಕ್ತಾರ ಸಂತೋಷ್ ತುಪ್ಪೆಕಲ್ಲು ತಿಳಿಸಿದ್ದಾರೆ. ದಾರಿಗೆ ಜಾಗ ನೀಡಲಿ ಆ ಬಳಿಕ ಕಂಬ ಹಾಕಲಿ ಎಂದು ಪಂಚಾಯತ್ ಅಧಿಕಾರಿ ಹೇಳುತ್ತಿದ್ದಾರಲ್ಲದೆ ತಿಮ್ಮಪ್ಪ ಪೂಜಾರಿಯವರು ಈ ಹಿಂದೆ ಜಾಗ ನೀಡುವ ಬಗ್ಗೆ ಬರೆದುಕೊಟ್ಟಿದ್ದಾರೆನ್ನುವ ನಕಲಿ ದಾಖಲೆಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆಂದೂ ತಿಳಿದು ಬಂದಿದೆ. ಹೀಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ಧ ಹಿಂದೂ ಸಂಘಟನೆ ತಾಲೂಕು ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಿ ಕ್ರಮಕ್ಕೆ ಅಗ್ರಹಿಸಿದ್ದಾರೆ.

ಹಣ ಪೀಕಿಸಿದ ಆರ್‌ಟಿಓ ಸಿಬ್ಬಂದಿ

Posted by JAYAKIRANA Kirana on | 0 comments | Leave a comment...

ಬ್ರೇಕ್ ಇನ್ಸ್‌ಪೆಕ್ಟರ್ ಹೆಸರಲ್ಲಿ
ಮಂಗಳೂರು: ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಓರ್ವ ಹಣ ನೀಡುತ್ತಿರುವ ಹಾಗೂ ಇನ್ನೋರ್ವ ಕಿಸೆಗೆ ಕೈ ಹಾಕಿರುವುದು ಕಂಡು ಬರುತ್ತಿದೆ. ಇದು ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ತಪಾಸಣೆಗೆ ಬಂದಿದ್ದ ಆರ್‌ಟಿಓ ಸಿಬ್ಬಂದಿ ವಾಪಸ್ ಹೊರಡುವ ವೇಳೆ ಬ್ರೇಕ್ ಇನ್ಸ್‌ಪೆಕ್ಟರ್ ಹೆಸರಲ್ಲಿ ಬೈಕ್ ಮಾಲಕರಿಂದ ಹಣ ಪೀಕಿಸಿದಾಗ ಜಯಕಿರಣ ವರದಿಗಾರನ ಮೊಬೈಲ್‌ನಲ್ಲಿ ಸೆರೆ ಸಿಕ್ಕ ಚಿತ್ರ.
ಕೆಲವು ದಿನಗಳ ಹಿಂದೆ ಮಂಗಳೂರಿ ನಲ್ಲಿರುವ ಸ್ಕೇಲ್ ಕಂಪೆನಿಯೊಂದರ ಬೈಕ್ ಅಪಘಾತಕ್ಕೀಡಾಗಿತ್ತು. ಈ ಕಾರಣದಿಂದ ಕೇಸು ದಾಖಲಿಸಿದ್ದ ಬಂದರ್ ಟ್ರಾಫಿಕ್ ಪೊಲೀಸರು ಬೈಕನ್ನು ವಶಪಡಿಸಿಕೊಂಡು ಠಾಣೆಯ ಆವರಣದಲ್ಲಿಟ್ಟಿದ್ದರು. ನಿನ್ನೆ ಮಧ್ಯಾಹ್ನ ಆರ್‌ಟಿಓ ಅಧಿಕಾರಿ ಠಾಣೆಗೆ ಬಂದು ಬೈಕನ್ನು ಪರಿಶೀಲಿ ಸಿದ ಬಳಿಕ ಕಾರಿನಲ್ಲಿ ಕುಳಿತರು.
ಅದೇ ವೇಳೆ ಕಾರು ಚಾಲಕ, ಸ್ಕೇಲ್ ಕಂಪೆನಿಯ ಪಾಲುದಾರನನ್ನು ಕರೆದು ೪೦೦ ರೂ.ಗೆ ಬೇಡಿಕೆ ಇಟ್ಟಿದ್ದರು. ಹಣ ಯಾಕೆಂದು ಪ್ರಶ್ನಿಸಿದಾಗ ಬ್ರೇಕ್ ಇನ್ಸ್‌ಪೆಕ್ಟರ್‌ಗೆ ಕೊಡಲು ಇದೆ. ಅವರು ಅಲ್ಲಿಂದ ಇಲ್ಲಿ ತನಕ ಬಂದಿದ್ದಕ್ಕೆ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕೊನೆಗೆ ಚೌಕಾಶಿ ನಡೆಸಿದ ಪಾಲುದಾರ, ಚಾಲಕನ ಕೈಗೆ ೫೦೦ರೂ. ನೋಟನ್ನಿಟ್ಟು ೨೫೦ರೂ. ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಲೇನ ದೇನ, ಚೌಕಾಶಿ ಎಲ್ಲವೂ ಪೊಲೀಸ್ ಠಾಣೆಯ ಆವರಣ ಹಾಗೂ ಸಾರ್ವಜನಿಕ ಸ್ಥಳದಲ್ಲಿ ನಡೆದಾಗ ಅಲ್ಲಿಂದ ಹೋಗುತ್ತಿದ್ದ ಜಯಕಿರಣ ವರದಿಗಾರ ಕೊಡುಕೊಳ್ಳುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೆಲ್ಲವನ್ನೂ ಕಾರೊಳಗೆ ಕುಳಿತುಕೊಂಡಿದ್ದ ಅಧಿಕಾರಿ ನೋಡಿದ್ದರೂ ಮೌನವಾಗಿದ್ದು ಲಂಚಾವತಾರಕ್ಕೆ ಸಾಕ್ಷಿಯಾಗಿದೆ. ಆದರೆ ತಪಾಸಣೆಗೆ ಬಂದಿದ್ದ ಅಧಿಕಾರಿ ಯಾರೆನ್ನುವ ಮಾಹಿತಿ ಲಭಿಸಿಲ್ಲ. ಆರ್‌ಟಿಓ ಕಚೇರಿಗಳಿಗೆ ದಾಳಿ ನಡೆಸುವ ಲೋಕಾಯುಕ್ತರು ಇನ್ನು ಅಧಿಕಾರಿಗಳ ಹಿಂದೆಯೂ ಹೋಗಬೇಕಾಗುತ್ತದೆ ಎಂದು ಸಾರ್ವಜನಿಕರು ಕುಹಕವಾಡುತ್ತಿದ್ದಾರೆ.

ರಾಜಕೀಯ ಸಂದಿಗ್ಧದಲ್ಲಿ ಶಕುಂತಳಾ ಶೆಟ್ಟಿ

Posted by JAYAKIRANA Kirana on | 0 comments | Leave a comment...



ಭಟ್ಟರ ಆದೇಶವಿಲ್ಲದೆ ಏನೂ ಆಗದು
ಮಂಗಳೂರು: ಸ್ವಾಭಿಮಾನಿ ವೇದಿಕೆಯ ನಾಯಕಿ ಶಕುಂತಳಾ ಶೆಟ್ಟಿ ತಮ್ಮ ರಾಜಕೀಯ ಬಾವುಟ ಎಲ್ಲಿ ಊರುತ್ತಾರೆ ಎಂಬ ವಿಷಯ ಚರ್ಚೆ, ಜಿeಸೆಗಳು ನಡೆಯುತ್ತಲೇ ಇವೆ. ಆದರೆ ಈ ವಿಷಯದಲ್ಲಿ ಅವರಾಗಲಿ, ಅವರ ರಾಜಕೀಯ ಗುರು ರಾಮ ಭಟ್ಟರಾಗಲಿ ಯಾವುದೇ ಸ್ಪಷ್ಟ ಅಭಿಪ್ರಾಯ ಪ್ರಕಟಿಸುತ್ತಿಲ್ಲ.
ಕಳೆದ ವರ್ಷ ಅವರು ಜೆಡಿಎಸ್‌ಗೆ ಸೇರುತ್ತಾರೆ ಎಂಬ ಚರ್ಚೆ ನಡೆದಿತ್ತು. ಈ ಚರ್ಚೆಗೆ ಕಾರಣವೂ ಇದೆ. ದ.ಕ. ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಬಯಸಿದ್ದ ಎಚ್.ಡಿ. ಕುಮಾರಸ್ವಾಮಿ ಖುದ್ದಾಗಿ ಶಕುಂತಳಾ ಶೆಟ್ಟರನ್ನು ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದರು. ಅವರದಕ್ಕೆ ಕಾದು ನೋಡುವ ಉತ್ತರ ನೀಡಿ ಜಾರಿಕೊಂಡಿದ್ದರೆ, ಇತ್ತೀಚೆಗೆ ಕಾಂಗ್ರೆಸ್ ನಾಯಕರು ಶಕುಂತಳಾ ಶೆಟ್ಟರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವ ಆಕಾಂಕ್ಷೆ ತೋರಿದ್ದೂ ಕೂಡ ಜಗಜ್ಜಾಹಿರ ವಿಷಯ. ಶಕುಂತಳಾ ಶೆಟ್ಟರನ್ನು ಪಕ್ಷಕ್ಕೆ ಆಹ್ವಾನಿಸದೇ ಇರುವವರು ಮಾತ್ರ ಅವರ ತವರು ಪಕ್ಷದವರು.
ಶಕುಂತಳಾ ಶೆಟ್ಟರ ಗುರು ರಾಮ ಭಟ್ಟರು ಇನ್ನೂ ಬಿಜೆಪಿಯಲ್ಲಿಯೇ ಇದ್ದಾರೆ. ಅವರು ಸ್ವಾಭಿಮಾನಿ ವೇದಿಕೆ ಸ್ಥಾಪಿಸಿ ಇದೇ ವೇದಿಕೆಯ ಮೂಲಕ ಚುನಾವಣೆಗಳನ್ನು ಎದುರಿಸಿದರೂ ಕೂಡ ಅವರನ್ನು ಈ ವರೆಗೆ ಪಕ್ಷದಿಂದ ಉಚ್ಚಾಟಿಸಿಲ್ಲ. ರಾಮ ಭಟ್ಟರು ಬಿಜೆಪಿಯಲ್ಲಿಯೇ ಇರುವುದರಿಂದ ಶಕುಂತಳಾ ಶೆಟ್ಟರಿಗೂ ಬಿಜೆಪಿಯ ಹಾದಿ ತೆರೆದಿದೆ, ಇಂದಲ್ಲ ನಾಳೆ ಅವರು ಬಿಜೆಪಿಗೆ ಬರಲಿದ್ದಾರೆ ಎಂಬ ನಿರೀಕ್ಷೆ ಬಿಜೆಪಿಯ ಕಾರ್ಯಕರ್ತ ವಲಯದಲ್ಲಿ ಇದ್ದೇ ಇದೆ. ಇಂತಹ ನಿರೀಕ್ಷೆಗೆ ಪೂರಕ ವದಂತಿ ಹಾಗೂ ಸುದ್ದಿಗಳು ಬರುತ್ತಲೇ ಇರುತ್ತವೆ.
ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ ಉಳಿಸಬೇಕು ಎಂದು ಒತ್ತಾಯಿಸಲು ಬಿಜೆಪಿಯ ಹಿರಿಯರ ವೇದಿಕೆಯ ಸದಸ್ಯರಾಗಿ ರಾಮ್ ಭಟ್ಟರು ದೆಹಲಿಗೆ ಹೋಗಿದ್ದು ಸತ್ಯ. ಆದರೆ ಇದೇ ವಿಷಯವನ್ನು ಕೇಂದ್ರಿಕರಿಸಿ ಅವರು ಬಿಜೆಪಿಯಲ್ಲಿ ಸಕ್ರಿಯರಾಗಲಿದ್ದಾರೆ ಎಂಬುದಾಗಲಿ, ಶಕುಂತಳಾ ಶೆಟ್ಟ್ಟಿ ಸಹಿತ ಸ್ವಾಭಿಮಾನಿ ವೇದಿಕೆಯ ಬಳಗವನ್ನು ಬಿಜೆಪಿಗೆ ಸೇರಿಸಲು ಯೋಚಿಸಿದ್ದಾರೆ ಎಂಬುದಾಗಲಿ ಅಲ್ಲ. ಭಟ್ಟರು ದೆಹಲಿಗೆ ಹೋಗಿದ್ದು ಡಿ.ವಿ. ಸದಾನಂದ ಗೌಡರ ಒತ್ತಾಸೆಗೆ ಮತ್ತು ಯಡಿಯೂರಪ್ಪರಿಗಿಂತ ಒಳ್ಳೆಯ ಆಡಳಿತ ನೀಡುತ್ತಾರೆ ಎಂಬ ಕಾರಣಕ್ಕೆ. ಇದರ ಹೊರತಾದ ಯಾವ ರಾಜಕೀಯ ಚರ್ಚೆಯೂ ದೆಹಲಿಯಲ್ಲಿ ನಡೆದಿಲ್ಲ ಎಂದು ಭಟ್ಟರ ಒಡನಾಡಿಗಳು ಹೇಳುತ್ತಾರೆ.
ರಾಮ ಭಟ್ಟರು ದೆಹಲಿಗೆ ಹೋಗಿ ಬಂದ ವಿಷಯವನ್ನು ಪಕ್ಷದ ದ.ಕ. ಜಿಲ್ಲೆಯ ಬೆಳವಣಿಗೆಯೊಂದಿಗೆ ಥಳಕು ಹಾಕಲು ಸಾಧ್ಯವೇ ಇಲ್ಲ. ದ.ಕ. ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಬೆಳವಣಿಗೆಗಳು ನಡೆಯಬೇಕಿದ್ದರೂ ಅದು ಪ್ರಭಾಕರ ಭಟ್ಟರ ಅಣತಿಯಂತೆ ಮಾತ್ರ. ಶಕುಂತಳಾ ಶೆಟ್ಟರನ್ನು ಪಕ್ಷಕ್ಕೆ ಆಹ್ವಾನಿಸುವ ಕುರಿತಂತೆ ಪ್ರಭಾಕರ ಭಟ್ಟರು ಹಾಗೂ ಅವರ ಆಪ್ತವಲಯದಿಂದ ಈ ವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದೇ ಇಲ್ಲ. ಆದುದರಿಂದ ಶಕುಂತಳಾ ಶೆಟ್ಟಿ ಬಿಜೆಪಿಗೆ ಸೇರುತ್ತಾರೆ ಎಂಬ ಸುದ್ದಿಗೆ ಪುಷ್ಟಿ ದೊರೆಯ ಬೇಕೆಂದರೆ ಇದಕ್ಕೆ ಕಲ್ಲಡ್ಕದಿಂದ ಗ್ರೀನ್ ಸಿಗ್ನಲ್ ಸಿಗಲೇ ಬೇಕು.
ಶಕುಂತಳಾ ಶೆಟ್ಟಿ ಕೂಡ ಅದಿಕೃತ ಕರೆಗಾಗಿ ಕಾದಿರುವುದನ್ನೂ ತಳ್ಳಿಹಾಕಲಾಗದು. ರಾಜಕೀಯ ಬೆಳವಣಿಗೆಗಳು ನಡೆಯುವುದೇ ಚುನಾವಣೆಯ ಸೀಸನ್‌ನಲ್ಲಿ. ಶಕುಂತಳಾ ಶೆಟ್ಟಿ ಎಲ್ಲಿಗೆ ಹಾರಲಿದ್ದಾರೆ ಎಂಬದು ಸ್ಪಷ್ಪವಾ ಗಬೇಕಿದ್ದರೆ ವಿಧಾನಸಭೆಯ ಚುನಾವಣೆ ಘೋಷಣೆಯಗಬೇಕು ಎಂದುಕೊಂಡರೆ ತಪ್ಪಲ್ಲ.

ಎಲ್ಲೆಡೆ ನೀರಿಗಾಗಿ ಹಾಹಾಕಾರ

Posted by JAYAKIRANA Kirana on | 0 comments | Leave a comment...

ಕುಡಿವ ನೀರಿಗೂ ಬಂತು ಬರ
ಮಂಗಳೂರು: ನೀರು ಅತ್ಯ ಮೂಲ್ಯ, ಜೀವನ ಅವಶ್ಯಕತೆಗಾಗಿ ದಿನದ ೨೪ ಗಂಟೆಯೂ ನೀರು ಬೇಕೇ ಬೇಕು. ನೀರಿಲ್ಲದ ಒಂದು ಕ್ಷಣವನ್ನು ಯೋಚಿಸಿ ನೋಡಿ. ಆಗ ನೀರು ಜೀವಜಲವೆನ್ನುವುದು ಮನದಟ್ಟಾಗು ತ್ತದೆ. ಆದರೆ ಇದೆಲ್ಲ ನಮ್ಮ ಅರಿವಿಗೆ ಬರೋದು ಬೇಸಿಗೆ ಕಾಲ ಬಂದಾ ಗಲೇ. ಪ್ರತೀ ವರ್ಷದಂತೆ ಎಪ್ರಿಲ್ ಮೊದಲ ವಾರವೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಂಗ ಳೂರು ಮಹಾನಗರವೂ ಸೇರಿದಂತೆ ಸುತ್ತಮುತ್ತಲಿನ ವಿವಿಧ ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿದ್ದು, ಜನರು ಸ್ಥಳೀಯಾಡಳಿತಕ್ಕೆ ಹಿಡಿಶಾಪ ಹಾಕುತ್ತಾ ದಿನ ದೂಡುತ್ತಿದ್ದಾರೆ.
ಪ್ರತೀವರ್ಷ ಜನವರಿ ತಿಂಗಳ ಬಳಿಕ ಮಂಗಳೂರನ್ನು ಅತಿಯಾಗಿ ಕಾಡುವ ನೀರಿನ ಸಮಸ್ಯೆ ಪರಿಸ್ಥಿತಿ ಈ ಬಾರಿ ಕೊಂಚ ಜಾಸ್ತೀನೇ ಬಿಗಡಾಯಿಸಿದೆ ಎನ್ನಬಹುದು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಕುಡಿ ಯುವ ನೀರನ್ನು ಎರಡು ದಿನಕ್ಕೊಮ್ಮೆ ಪೂರೈಕೆ ಮಾಡುವುದಕ್ಕೂ ನೀರಿಲ್ಲ ಎಂಬ ಉತ್ತರ ಬರುತ್ತಿದೆ. ಇಡೀ ಮಹಾ ನಗರಕ್ಕೆ ನೀರು ಪೂರೈಕೆ ಮಾಡುವ ನೇತ್ರಾವತಿಯಲ್ಲೂ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ತುಂಬೆ ಯಿಂದ ಪೈಪ್‌ಲೈನ್ ಮೂಲಕ ನೀರು ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ. ಕೆಲವೊಮ್ಮೆ ಮಧ್ಯರಾತ್ರಿಯ ವೇಳೆ ನೀರು ಪೂರೈಕೆ ಮಾಡುವುದರಿಂದ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಾ ನಿದ್ದೆಗೆಡುವಂತಾಗಿದೆ. ಮಾರ್ಚ್ ಮೊದಲ ವಾರವೇ ನೀರಿನ ಬರ ಪರಿಸ್ಥಿತಿ ತಲೆದೋರಿದ್ದು, ನಗರಪಾಲಿಕೆಯ ಆಯುಕ್ತರು ನೀರು ಕಡಿಮೆಯಾಗಿದೆ, ಬರ ಪರಿಸ್ಥಿತಿ ತಲೆದೋರಬಹುದು ಎಂದು ಮುನ್ನೆಚ್ಚರಿಕೆ ನೀಡಿದ್ದರು. ಅದರಂತೆ ಮಂಗಳೂರಿನಲ್ಲಿ ಮಾರ್ಚ್ ಎರಡನೇ ವಾರದಿಂದಲೇ ನೀರಿನ ಅಭಾವ ತಲೆದೋರಿದ್ದು, ಜನರು ಒಂದು ಕೊಡಪಾನ ನೀರಿಗಾಗಿ ನಳ್ಳಿ ಮುಂದೆ ಗಂಟೆಗಟ್ಟಲೆ ಸಮಯ ಕಾಯುವಂತಾಗಿದೆ. ಕೆಲವು ದಿನಗಳ ಹಿಂದೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಕೊಡಪಾನಗಳನ್ನಿಟ್ಟು ಜನರು ಪ್ರತಿಭಟನೆ ನಡೆಸಿದ್ದೂ ನಡೆದಿದೆ. ಹೀಗಿದ್ದೂ ಆಡಳಿತಗಾರರು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸುತ್ತಾರೆ ನಾಗರಿಕರು.
ಮಂಗಳೂರು ಮಾತ್ರವಲ್ಲದೆ, ಉಳ್ಳಾಲ, ಪುತ್ತೂರು, ಮುಲ್ಕಿ, ಬಜ್ಪೆ, ಸಸಿಹಿತ್ಲು, ಹಳೆಯಂಗಡಿ, ಪರಿಸರದಲ್ಲಿ ನೀರಿನ ಬರ ಪರಿಸ್ಥಿತಿ ವಿಪರೀತವಾಗಿದೆ. ಎಲ್ಲೋ ಒಂದೆರಡು ಕಡೆ ಗ್ರಾಮ ಪಂಚಾಯತ್‌ಗಳು ಜನಸ್ನೇಹಿಯಾಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡುತ್ತಿದ್ದರೂ ಇನ್ನುಳಿದಂತೆ ನೀರಿನ ಹಾಹಾಕಾರ ಮುಂದುವರಿದಿದೆ. ಮತ್ತೂ ಕೆಲವು ಕಡೆಗಳಲ್ಲಿ ಪೈಪ್‌ಲೈನ್‌ನಲ್ಲಿ ಉಪ್ಪು ನೀರು ಬರುತ್ತಿದ್ದು ಜನರು ಬಳಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳ-ಕೊಳ್ಳ, ಕೆರೆ, ಬಾವಿ ಎಂದೋ ಬತ್ತಿದ್ದು, ಜನರು ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೆ ಸಂಚರಿಸಬೇಕಿದೆ. ಬಜ್ಪೆ, ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿಗಾಗಿ ಅನೇಕ ಬಾರಿ ಖಾಲಿ ಕೊಡಗಳ ಪ್ರದರ್ಶನ, ಪಂಚಾಯತ್ ಕಚೇರಿ ಮುತ್ತಿಗೆಯೂ ನಡೆದಿದೆ. ಪಂಚಾಯತ್‌ನ ಗ್ರಾಮಸಭೆಯಲ್ಲಿ ಆಡಳಿತ ನೋಡಿಕೊಳ್ಳುವವರನ್ನು ಗ್ರಾಮಸ್ಥರೇ ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಆದರೆ ಜನಪ್ರತಿನಿಧಿಗಳು ಮಾತ್ರ ತುಂಬೆಯಲ್ಲೇ ನೀರಿಲ್ಲ, ತರೋದೆಲ್ಲಿಂದ? ಎಂಬ ಮಾಮೂಲಿ ಸ್ಲೋಗನ್ ಪಠಿಸುತ್ತಿದ್ದಾರೆ.
ಮಹಾನಗರ ಪಾಲಿಕೆಗೆ ನೀರಿನ ಅಭಾವ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದೇನಿಲ್ಲ. ಆದರೆ ಆಡಳಿತ ನೋಡಿಕೊಳ್ಳುವವರು ಈ ಬಗ್ಗೆ ಗಮನ ಹರಿಸುವಷ್ಟು ವ್ಯವಧಾನ ತೋರಿಸುತ್ತಿಲ್ಲ. ಮಂಗಳೂರು ಮಹಾನಗರಕ್ಕೆ ಅಗತ್ಯವಿರುವಷ್ಟು ನೀರನ್ನು ಟ್ಯಾಂಕರ್ ಮೂಲಕ ಪ್ರತಿನಿತ್ಯ ಸರಬರಾಜು ಮಾಡಬಹುದು. ಬೇರೆ ನೀರಿನ ಮೂಲಗಳನ್ನು ಆಶ್ರಯಿಸಿಕೊಂಡು ನೀರಿನ ಸಮಸ್ಯೆ ಬಗೆಹರಿಸಬಹುದು. ಆದರೆ ಸಮಸ್ಯೆಯನ್ನು ಜ್ವಲಂತವಾಗಿರಿಸಿ ಲಾಭ ಪಡೆಯಲು ಇಚ್ಛಿಸುವ ಮನಪಾ ಕಾರ್ಯವೈಖರಿಯಿಂದ ನೀರಿನ ಸಮಸ್ಯೆ ಬಗೆಹರಿಯುವುದು ಅಸಾಧ್ಯ ಎನ್ನುತ್ತಾರೆ ಜನರು. ಸದ್ಯ ಮಂಗಳೂರು ಹೊರತುಪಡಿಸಿ ಸುತ್ತಮುತ್ತಲಿನ ಕೆಲವು ಭಾಗಗಳಿಗೆ ಮಳೆರಾಯನ ಆಗಮನವಾಗಿದ್ದು, ಎಪ್ರಿಲ್ ತಿಂಗಳಾಂತ್ಯ ಇಲ್ಲವೇ ಮೇ ಮೊದಲ ವಾರದಲ್ಲಿ ಮಳೆ ಸುರಿಯುವ ಸೂಚನೆ ನೀಡಿದೆ. ಹಾಗೇನಾದರೂ ಮಳೆ ಸುರಿಯದೆ ಮತ್ತೆ ಒಂದೆರಡು ವಾರ ಕಳೆದರೆ ಜನರ ಗದ್ದಲ ಮತ್ತಷ್ಟು ಮುಂದುವರಿದು ಜನರು ಗುಳೇ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ ನಾಗರಿಕರು.
ಸುಡುವ ಬಿಸಿಲು: ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬೇಸಿಗೆಯ ಬೇಗೆಯೂ ಹೆಚ್ಚೇ ಇದೆ. ಭೌಗೋಳಿಕ ತಾಪಮಾನದಲ್ಲಿ ಏರಿಕೆಯಾಗಿರುವುದೇ ಭೂಮಿಯ ಉಷ್ಣಾಂಶ ಹೆಚ್ಚಲು ಕಾರಣವೂ ಆಗಿದೆ. ಎಷ್ಟೆಂದರೂ ಕರಾವಳಿಯಲ್ಲಿ ಕಡಲು ಹತ್ತಿರವಾಗಿರೋ ಕಾರಣದಿಂದ ವಾತಾವರಣ ತಂಪಾಗಿರುತ್ತದೆ. ಆದರೆ ಈ ಬಾರಿಯಂತೂ ಜನರು ಸುಡುವ ಬಿಸಿಲನ್ನು ನೋಡುತ್ತಾ ಎಂಥ ಸೆಖೆ ಮಾರಾಯ್ರೇ ಎಂದು ಮಂಡೆಬಿಸಿ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಆರೋಗ್ಯದಲ್ಲೂ ಏರುಪೇರಾಗುತ್ತಿದ್ದು, ಮೈಮೇಲೆ ಬೊಕ್ಕೆಗಳೂ ಬೀಳುತ್ತಿವೆ. ವಯಸ್ಕರಲ್ಲಿ ಜ್ವರ, ವಾಂತಿಭೇದಿಯಂಥ ಖಾಯಿಲೆಯ ಪ್ರಮಾಣವೂ ಹೆಚ್ಚಿದ್ದು, ಸರಕಾರಿ, ಖಾಸಗಿ ಕಚೇರಿಗಳಲ್ಲಿ ನೌಕರರ ರಜೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಬಲ್ಲವರು. ಒಟ್ಟಾರೆ ಮಂಗಳೂರು, ಉಡುಪಿ ಹಾಗೂ ಸುತ್ತಲಿನ ಜನರು ಬಿಸಿಲಿನ ಬೇಗೆಗೆ ಕಂಗಾಲಾಗಿದ್ದು, ದೇವರೇ ಒಮ್ಮೆ ಮಳೆಯನ್ನು ಕರುಣಿಸಪ್ಪಾ ಎಂದು ದೇವರಿಗೆ ಮೊರೆಯಿಡುತ್ತಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಉಷ್ಣಾಂಶ ಇನ್ನೂ ಹೆಚ್ಚಾಗಲಿದ್ದು, ಇನ್ನೂ ಒಂದೆರಡು ವಾರ ಇದೇ ರೀತಿ ಬಿಸಿಲಿಗೆ ಸುಡುವುದು ಅನಿವಾರ್ಯ ಎನ್ನಲಾಗುತ್ತಿದೆ.

ವಿಶ್ವಕಪ್ ಜೈತ್ರಯಾತ್ರೆಯ ಸವಿನೆನಪು ಶಾಶ್ವತ: ಸಚಿನ್

Posted by JAYAKIRANA Kirana on | 0 comments | Leave a comment...

ದೆಹಲಿ: ನಿನ್ನೆ ಭಾರತ ತನ್ನ ವಿಶ್ವಕಪ್ ಜೈತ್ರಯಾತ್ರೆಯ ಮೊದಲನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು. ಈ ವೇಳೆ ಮಾತನಾಡಿದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್, ವಿಶ್ವಕಪ್ ಗೆದ್ದು ಒಂದು ವರ್ಷವಾದರೂ ಅದರ ಸವನೆನಪು ಮನದಲ್ಲಿ ಶಾಶ್ವತವಾಗು ಉಳಿಯಲಿದೆ ಎಂದು ಭಾವುಕರಾಗಿ ತಿಳಿಸಿದರು.
ಸಮಯವು ವೇಗವಾಗಿ ಮುಂದಕ್ಕೆ ಹೆಜ್ಜೆ ಇಡುತ್ತಿದೆ. ಆದರೆ ೨೮ ವರ್ಷಗಳ ನಂತರ ಗೆದ್ದ ಕೂಟದ ನೆನಪು ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿಯಲಿದ್ದು, ಅದೊಂದು ಅದ್ಭುತ ಕೂಟವಾಗಿತ್ತು ಎಂದು ಸಚಿನ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ತನ್ನ ಶುಭಸಂದೇಶವನ್ನು ಟ್ವಿಟ್ಟರ್ ಮೂಲಕ ರವಾನಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಲಂಕಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸುವ ಮೂಲಕ ಭಾರತ ೨೮ ವರ್ಷಗಳ ನಂತರ ಕೂಟಗೆದ್ದ ಶ್ರೇಷ್ಠ ಸಾಧನೆಯನ್ನು ಮಾಡಿತ್ತು.

ಇಂದು ಪಂಜಾಬ್-ಪುಣೆ ನಡುವೆ ಫೈನಲ್

Posted by JAYAKIRANA Kirana on | 0 comments | Leave a comment...

ವಿಶ್ವ ಹಾಕಿ ಸರಣಿ: ಸೆಮೀಸ್‌ನಲ್ಲಿ ಹೊರಬಿದ್ದ ಕರ್ನಾಟಕ
ಬೆಂಗಳೂರು: ಇಲ್ಲಿನ ಕೆಎಸ್‌ಎಚ್‌ಎ ಮೈದಾನದಲ್ಲಿ ನಡೆದ ವಿಶ್ವ ಹಾಕಿ ಸರಣಿಯ ಶೇರ್-ಎ- ಪಂಜಾಬ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಲಯನ್ಸ್ ೧-೪ರ ಅಂತರದ ಸೋಲನ್ನು ಕಂಡು ತವರಿನ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಹಾಗಾಗಿ ಇಂದು ಮುಂಬೈನ ಮಹಿಂದ್ರ ಮೈದಾನದಲ್ಲಿ ನಡೆಯುವ ಫೈನಲ್ ಹಣಾಹಣಿಯಲ್ಲಿ ಅದು ಪುಣೆ ವಿರುದ್ಧ ಹೊರಾಟ ನಡೆಸಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಚಂಡೀಗಢ ಲಯನ್ಸ್ ವಿರುದ್ಧ ಪುಣೆ ೭-೫ರ ಪೆನಾಲ್ಟಿ ಕಾರ್ನರ್ ಮೂಲಕ ಗೆಲುವು ಸಾದಿಸಿತ್ತು.
ಪಂದ್ಯದ ೧೧ನೇ ನಿಮಿಷದಲ್ಲಿ ಕರ್ನಾಟಕ ಪರ ವಿನಯ್ ಕುಮಾರ್ ಲಯನ್ಸ್ ಪರ ಮೊದಲ ಗೋಲು ಸಿಡಸಿದಾಗ ತಂಡದ ಆತ್ಮವಿಶ್ವಾಸ ಹೆಚ್ಚಿದರೂ ಅದು ಹೆಚ್ಚು ಹೊತ್ತು ನಿಲ್ಲಲಿಲ್ಲ. ಯಾಕೆಂದರೆ ೧೭ ನಿಮಿಷದಲ್ಲಿ ಪಂಜಾಬ್‌ನ ಮ್ಯಾಥ್ಯೂ ಗೋಲು ದಾಖಲಿಸಿ ಸಮಬಲ ಸಾಧಿಸಿದರು. ಕರಮ್‌ಜಿತ್ ಸಿಂಗ್ ೩೯ನೇ ನಿಮಿಷದಲ್ಲಿ ಮತ್ತೊಂದು ಗೋಲಿತ್ತು ತಂಡಕ್ಕೆ ಮುನ್ನಡೆ ತಂದುಕೊಟ್ಟರು ಆ ನಂತರ ಪಂಜಾಬ್ ಅಬ್ಬರದ ಅಟವನ್ನೇ ನೀಡಿತು. ಅಂತಿಮ ಹಂತದ ೬೦ನೇ ಹಾಗೂ ೬೮ನೇ ನಿಮಿಷದಲ್ಲಿ ಕ್ರಮಾವಾಗಿ ಹರ್‌ಪ್ರಿತ್ ಹಾಗೂ ಪ್ರಬ್ಜೊತ್ ಸಿಂಗ್ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಹಾಕಿ ಪಂಜಾಬ್‌ಗೆ ಭರ್ಜರಿ ಗೆಲುವು ತಂದುಕೊಟ್ಟರು. ಇನ್ನು ಪುಣೆ ಹಾಗೂ ಚಂಡಿಗಢ ನಡುವಿನ ಪಂದ್ಯವು ಒಂದು ಹಂತದಲ್ಲಿ ಪೂರ್ಣ ಸಮಯದ ವೇಳೆಗೆ ೪-೪ ಸಮಬಲಗೊಂಡಾಗ ಪೆನಾಲ್ಟಿ
ಶೂಟೌಟ್‌ಗೆ ಮೊರೆಹೋಗಲಾಯಿತು.

ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿದ ರಾಡ್ವಾನ್ಸ್ಕಾ

Posted by JAYAKIRANA Kirana on | 0 comments | Leave a comment...

ಮಿಯಾಮಿ ಓಪನ್: ೫೦ನೇ ಡಬಲ್ಸ್ ಕೂಟ ಗೆದ್ದ ಪೇಸ್
ಫ್ಲೊರಿಡಾ: ಭಾರತದ ದಿಗ್ಗಜ ಟೆನಿಸ್ ತಾರೆ ಲಿಯಾಂಡರ್ ಪೇಸ್ ಶ್ರೇಷ್ಠ ದಾಖಲೆಯನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್‌ನಲ್ಲಿ ರಾಡೆಕ್ ಸ್ಟೆಪ್ನೆಕ್ ಜೊತೆ ಸೇರಿಕೊಂಡ ಪೇಸ್ ಕೂಟದ ಡಬಲ್ಸ್ ಕೂಟವನ್ನು ಗೆಲ್ಲುವ ಮೂಲಕ ಉತ್ತಮ ನಿರ್ವಹಣೆ ನೀಡಿದ್ದಾರೆ. ಈ ಮೂಲಕ ಪೇಸ್ ಎಟಿಪಿ ಟೂರ್ ಇತಿಹಾಸದಲ್ಲಿ ೫೦ನೇ ಡಬಲ್ಸ್ ಪ್ರಶಸ್ತಿ ಗೆದ್ದ ವಿಶ್ವದ ೨೪ನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇನ್ನು ಮಹಿಳಾ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ರಶ್ಯಾದ ಮರಿಯಾ ಶರಪೋವಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಪೊಲಂಡ್‌ನ ಅಗ್ನಿಸ್ಕೆ ರಾಡ್ವಾನ್ಸ್ಕಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಬಲ್ಸ್‌ನಲ್ಲಿ ಮ್ಯಾಕ್ಸ್ ಮಿರ್ನಿ ಹಾಗೂ ಡೆನಿಯಲ್ ನೆಸ್ಟರ್ ವಿರುದ್ಧ ೩-೬, ೬-೧ ಹಾಗೂ ೧೦-೮ರ ಅಂತರದಲ್ಲಿ ಕೈವಶ ಮಾಡಿಕೊಳ್ಳುವ ಮೂಲಕ ಡಬಲ್ಸ್ ಕೂಟಕ್ಕೆ ಅಧಿಪತಿಯಾದರು. ಪೇಸ್ ಶ್ರೇಷ್ಠ ಸಾಧನೆಗೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಇನ್ನು ಕಠಿಣವಾಗಿ ಸಾಗಿದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮೊದಲ ಸುತ್ತಿನಲ್ಲಿ ಶರಪೋವಾ ಉತ್ತಮ ಹೋರಾಟ ನೀಡಿದರೂ ದ್ವಿತೀಯ ಸುತ್ತಿನಲ್ಲಿ ಕೊಂಚ ಕಳಪೆ ಆಟ ನೀಡಿದ ಪರಿಣಾಮ ೭-೫ ಹಾಗೂ ೬-೪ರ ನೇರ ಅಂತರದ ಸೋಲನ್ನು ಕಾಣುವ ಮೂಲಕ ತನ್ನ ಮೊದಲ ಸೋನಿ ಎರಿಕ್‌ಸನ್ ಕೂಟವನ್ನು ಗೆಲ್ಲುವ ಆಸೆಗೆ ತಣ್ಣೀರೆರಚಿದಂತಾಗಿದೆ. ಸೋಲಿನ ಮೂಲಕ ಅವರು ತನ್ನ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ. ಕೂಟದಲ್ಲಿ ಶರಪೋವಾ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದರೂ ಈವರೆಗೆ ಕೂಟವನ್ನು ಗೆಲ್ಲಲು ಸಾಧ್ಯವಾಗದಿರುವ ಕೊರಗು ಶರಪೋವಾರಲ್ಲಿದೆ. ಆದರೆ ಉತ್ತಮ ಹೋರಾಟ ನೀಡಿದ ಕೂಟಕ್ಕೆ ರಾಣಿಯಾಗಿದ್ದಾರೆ.

ವಿವಾಹಿತೆ ಅತ್ಯಾಚಾರ: ಪೊಲೀಸ್ ಬಂಧನ

Posted by JAYAKIRANA Kirana on | 0 comments | Leave a comment...

ಗುಲ್ಪರ್ಗ: ಮೈಸೂರಿನ ನವವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರ ಪೇದೆ, ಚಾಲಕ ಅಬ್ದುಲ್ ಹಫೀಜ್‌ನನ್ನು ಗುಲ್ಬರ್ಗ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್ ಅವರು ಮಾತನಾಡಿ, ಕರ್ತವ್ಯದ ಮೇಲೆ ಬೆಂಗಳೂರಿಗೆ ಹೋಗಿದ್ದ ಈತನನ್ನು ವಿವಿಠಾಣೆ ಪಿಎಸ್‌ಐ ಪಂಡಿತ ಸಾಗರ ಮತ್ತು ಸಿಬ್ಬಂದಿ ಅಲ್ಲಿಗೆ ತೆರಳಿ ಬಂಧಿಸಿ ಕರೆತಂದಿದ್ದಾರೆ. ಪೇದೆಯನ್ನು ಸಂಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಹಫೀಜ್ ಕೆಎಸ್‌ಆರ್‌ಪಿ(ಕರ್ನಾಟಕ ರಾಜ್ಯ ಮೀಸಲು ಪಡೆ) ಸಿಬ್ಬಂದಿಯಾಗಿದ್ದು(ನಾಯಕ್), ಸದ್ಯ ಪಿಟಿಸಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮೈಸೂರು ಮೂಲದ ಮಹಿಳೆಯನ್ನು ಮಾ.೨೭ರಂದು ಗುಲ್ಪರ್ಗ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಪತಿ ಪರಾರಿಯಾಗಿದ್ದ. ಪತಿಯನ್ನು ಹುಡುಕುತ್ತಾ ಆಕೆ ನಾಗನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದ ಬಳಿ ಹೋಗಿದ್ದಳು. ಈ ವೇಳೆ ನೆರವು ನೀಡುವ ನೆಪದಲ್ಲಿ ಜೀಪಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಮಹಿಳೆಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಪತಿ ಈಗ ನಾಪತ್ತೆಯಾಗಿದ್ದಾನೆ.

ಯಡ್ಡಿಗೆ ೧೨೦ ಶಾಸಕರ ಬೆಂಬಲ: ಈಶ್ವರಪ್ಪ ವ್ಯಂಗ್ಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಡಿಯೂರಪ್ಪ ಅವರಿಗೆ ಕೇವಲ ೭೦ ಶಾಸಕರ ಬೆಂಬಲ ವಲ್ಲ, ಒಟ್ಟು ೧೨೦ ಶಾಸಕರ ಬೆಂಬಲವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಉಪಾ ಹಾರ ಕೂಟ ಏರ್ಪಡಿಸಿದ ಬಳಿಕ ಮಾತನಾಡಿದ್ದ ಯಡಿಯೂರಪ್ಪ, ತನಗೆ ೭೦ ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಇದಕ್ಕೆ ಟಾಂಗ್ ನೀಡಿರುವ ಈಶ್ವರಪ್ಪ, ಅವರಿಗೆ ಕೇವಲ ೭೦ ಶಾಸ ಕರ ಬೆಂಬಲವಲ್ಲ, ಒಟ್ಟು ೧೨೦ ಶಾಸ ಕರು ಅವರ ಬೆಂಬಲಕ್ಕಿದ್ದಾರೆ ಎಂದರು.
ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಹೈಕಮಾಂಡ್. ಇದು ನಮಗೆ ಸಂಬಂಧಿಸಿದ ವಿಷಯ ವಲ್ಲ. ಸದಾನಂದ ಗೌಡ ಅವರು ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಅವರು ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿ ದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಸ್ಪಷ್ಟಪಡಿಸಿದೆ. ಇದರಿಂದ ಮತ್ತೆ ಮತ್ತೆ ಅದೇ ವಿಷಯ ಮಾತನಾಡುವುದು ಸರಿಯಲ್ಲ ಎನ್ನುವುದು ಈಶ್ವರಪ್ಪ ಅಭಿಪ್ರಾಯ.

ಅಕ್ರಮ ಮರ ಸಾಗಾಟ ಪತ್ತೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ಮರಗಳನ್ನು ಲಾರಿ ಸಹಿತ ಸುಳ್ಯ ಪೊಲೀಸರು ವಶಪಡಿಸಿಕೊಂ ಡಿದ್ದಾರೆ.
ಭಾನುವಾರ ಸಂಜೆ ವೇಳೆ ರಾಜ್ಯ ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿ ದ್ದಾಗ ಅಕ್ರಮ ಮರ ಸಾಗಾಟ ಪತ್ತೆಯಾ ಗಿದೆ. ವಾಹನದ ಚಾಲಕ ಸಂಪತ್ ಕುಮಾರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರವಿಶಂಕರ್ ಭಟ್ ಎಂಬವರಿಗೆ ಸೇರಿದ ಮರ ಇದಾಗಿದ್ದು, ಇದನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಟ್ಕಾ ದಾಳಿ: ಒಬ್ಬನ ಸೆರೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಇಲ್ಲಿಗೆ ಸಮೀಪದ ಕಿನ್ನಿಗೋಳಿ ಮಾರ್ಕೆಟ್ ಬಳಿ ಮಟ್ಕಾ ಬರೆಯುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಪಂಜ ಕೊಕುಡೆ ನಿವಾಸಿ ಗಣೇಶ್ ಬೆಲ್ಚಡ(೩೬). ಈತನಿಂದ ಮಟ್ಕಾ ಬರೆಯುತ್ತಿದ್ದ ಪುಸ್ತಕ, ಸುಮಾರು ಒಂಭತ್ತು ಸಾವಿರ ನಗದು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆಂದು ತಿಳಿದು ಬಂದಿದೆ.
ಇಂತಹ ಹಲವು ಮಟ್ಕ್ಕಾ ದಂಧೆ ಉಡುಪಿಯ ಗಡಿಭಾಗವಾದ ಮುಲ್ಕಿ, ಕಿನ್ನಿಗೋಳಿ, ಪಂಜಿನಡ್ಕ, ಹಳೆಯಂಗಡಿ ಈ ಭಾಗಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಹಳೆಯಂಗಡಿ, ಕೆರೆಕಾಡು, ಪಕ್ಷಿಕೆರೆ ಮೊದಲಾದ ಭಾಗಗಳಲ್ಲಿ ಮಟ್ಕಾ ದಂಧೆ ಮಿತಿ ಮೀರಿ ಹೋಗಿದ್ದು, ಸಂಜೆಯಾ ಗುತ್ತಿದ್ದಂತೆಯೇ ಇಲ್ಲಿ ಕೂಲಿಗಳಿಂದ ಹಿಡಿದು ಸಣ್ಣಪುಟ್ಟ ರಿಯಲ್ ಎಸ್ಟೇಟ್ ದಂಧೆ ಮಾಡುವವರು ನಿತ್ಯ ಗಿರಾಕಿಗಳಾಗಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ.

ನೀಲಿ ಚಿತ್ರ ವೀಕ್ಷಿಸಿದವರ ರಕ್ಷಣೆ: ಸಿದ್ದರಾಮಯ್ಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ನೀಲಿ ಚಿತ್ರ ವೀಕ್ಷಿ ಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ಮೂವರು ಸಚಿವರಿಗೆ ಕ್ಲೀನ್‌ಚಿಟ್ ನೀಡಿದ ಸದನ ಸಮಿತಿ ವರದಿಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರಕಾರ ಮತ್ತು ಸ್ಪೀಕರ್ ಜತೆಯಾಗಿ ಮೂವರು ಸಚಿವರನ್ನು ರಕ್ಷಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ನೀಲಿ ಚಿತ್ರ ವೀಕ್ಷಿಸಿದವರಿಗೆ ಕ್ಲೀನ್ ಚಿಟ್ ನೀಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ. ಬರಗಾಲ ಎದುರಾ ಗಿದೆ. ಇದನ್ನು ಎದುರಿ ಸಲು ಸರಕಾರ ದಲ್ಲಿ ಸಾಕಷ್ಟು ಹಣವಿದೆ. ಆದರೆ ಸರಿಯಾಗಿ ಉಪ ಯೋಗಿಸುತ್ತಿಲ್ಲ ಎಂದು ಆಪಾದಿಸಿದರು. ರಾಜ್ಯದಲ್ಲಿ ಬರಗಾಲ ಸಂಭವಿ ಸಿದರೂ ಸಹ ಇದರ ಬಗ್ಗೆ ಗಮನಹರಿಸದೆ ಕೇವಲ ತಮ್ಮ ಕುರ್ಚಿ ಉಳಿವಿಗಾಗಿ ರೆಸಾರ್ಟ್ ರಾಜಕೀಯ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು.

ಎಂಎಸ್‌ಇಝಡ್ ವಿರುದ್ಧ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಸ್ತೆ ನಿರ್ಮಾಣದ ನೆಪದಲ್ಲಿ ಎಂಎಸ್‌ಇಝಡ್ ನದಿ ತೀರಕ್ಕೆ ಮಣ್ಣು ಹಾಕುತ್ತಿರುವ ಕಾರಣ ನೆರೆ ಭೀತಿಯನ್ನು ಎದುರಿಸುವ ಅನಿವಾರ್ಯ ತೆಗೆ ಒಳಗಾಗಿರುವ ಮೆಲು ಕೊಪ್ಪಳ ನಿವಾಸಿಗಳು ಎಂಎಸ್‌ಇಝಡ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸುಸಜ್ಜಿತವಾದ ರಸ್ತೆ ಸಂಪರ್ಕ ಇದ್ದರೂ ಮತ್ತೊಂದು ರಸ್ತೆಯನ್ನು ನಿರ್ಮಿಸಲು ಮುಂದಾಗಿರುವ ಎಂಎಸ್ ಇಝಡ್ ರಸ್ತೆ ಅಗಲಿಕರಣಕ್ಕಾಗಿ ಮಣ್ಣು ಹಾಕುವ ಕೆಲಸವನ್ನು ಮಾಡುತ್ತಿದೆ. ಇದರಿಂದಾಗಿ ತೋಟಕ್ಕೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಕೆಐಒಸಿಯಲ್‌ನಿಂದ ಎಂಎಸ್‌ಇಝಡ್ ಪ್ರದೇಶಕ್ಕೆ ಆಗಲು ಫಲ್ಗುಣಿ ನದಿ ಸಮೀಪ ಸುಸಜ್ಜಿತವಾದ ರಸ್ತೆ ಇದ್ದರೂ ಎಂಎಸ್‌ಇಝಡ್ ಮತ್ತೇ ಈ ರಸ್ತೆಯನ್ನು ವಿಸ್ತರಿಸುವ ಸಲುವಾಗಿ ರಸ್ತೆಯ ತೀರಕ್ಕೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ.
ಆದರೆ ರಸ್ತೆಗೆ ಯಾವುದೇ ತಡೆಗೋಡೆಯನ್ನು ನಿರ್ಮಿಸದ ಕಾರಣ ಮಳೆಗಾಲದಲ್ಲಿ ಫಲ್ಗುಣಿ ನದಿ ನೀರು ತೋಟಕ್ಕೆ ನುಗ್ಗುವ ಸಂಭವವಿದೆ. ಈ ಬಗ್ಗೆ ನಾವು ಹಲವಾರು ಬಾರಿ ಎಸ್ ಇ ಝಡ್ ಅಧಿಕಾರಿಗಳಿಗೆ ಮನವಿ ನೀಡಿ ದರೂ ಸ್ಪಂದನೆ ನೀಡದ ಕಾರಣ ಹೋರಾ ಟಕ್ಕೆ ಮುಂದಾಗಿದ್ದೇವೆ ಎಂದು ಮೆಲು ಕೊಪ್ಪಳ ನಿವಾಸಿಗಳು ತಿಳಿಸಿದ್ದು. ಈ ಬಗ್ಗೆ ಎಚ್ಚರಿಕೆ ನೀಡಲು ಕಳೆದ ಶನಿವಾರ ಕೂಳೂರಿನಲ್ಲಿ ಪ್ರತಿಭಟನೆ ನಡೆಸಿದರು.

ಸುಳ್ಯ: ಮಕ್ಕಳ ಹೊಡೆದಾಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎರಡು ಮನೆಗಳ ಹಿರಿಯರ ನಡುವಿನ ಗಲಾಟೆ ಮಕ್ಕಳವರೆಗೂ ಮುಂದುವರಿದು ಒಬ್ಬ ಗಾಯಗೊಂಡ ಘಟನೆ ಸುಳ್ಯ ಸಮೀಪದ ಜಟ್ಟಿಪಳ್ಳದಲ್ಲಿ ನಡೆದಿದೆ. ಪ್ರಸಾದ್ ಮತ್ತು ಆತನ ತಂಗಿಗೆ ನಿತೇಶ್ ಮತ್ತು ಶಿವ ಹೊಡೆದಿದ್ದು, ನಿತೇಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಎರಡು ದಿನಗಳ ಹಿಂದೆ ಬಾಬು ಮತ್ತು ಐತಪ್ಪ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು.
ಹೊಡೆದಾಟ: ಪೊಲೀಸ್ ವಶಕ್ಕೆ: ಕಂಠಪೂರ್ತಿ ಮದ್ಯ ಸೇವಿಸಿದ ವ್ಯಕ್ತಿಗಳಿಬ್ಬರು ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಿನ್ನೆ ನಡೆದಿದೆ.
ರಸ್ತೆಯಲ್ಲಿ ನಡೆಯುತ್ತಿದ್ದವರಿಗೆ ಇದು ಪುಕ್ಕಟೆ ಮನೋರಂಜನೆ ನೀಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡರು. ಬಳಿಕ ಇಬ್ಬರನ್ನೂ ಮುಚ್ಚಳಿಕೆ ಬರೆಯಿಸಿಕೊಂಡು ಬಿಡುಗಡೆ ಮಾಡಿದರು.

ವಿಟ್ಲ: ಮನೆಗೆ ನುಗ್ಗಿ ದಾಂಧಲೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಸಾಲೆತ್ತೂರು ಸಮೀಪದ ಕಟ್ಟತ್ತಿಲ ಎಂಬಲ್ಲಿ ಪೂರ್ವದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಸಹೋದರನ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಇಲ್ಲಿಗೆ ಸಮೀಪ ನಿವಾಸಿ ಹಂಝ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರ ಅಣ್ಣ ಅಬ್ದುಲ್ ರಹಿಮಾನ್ ಎಂಬವರನ್ನು ಆರೋಪಿಯೆಂದು ಹೆಸರಿಸಲಾಗಿದೆ. ನಿನ್ನೆ ಹಂಝರ ಮನೆಗೆ ಬಂದ ರಹಿಮಾನ್ ಯಾವುದೋ ವಿಚಾರದಲ್ಲಿ ತಕರಾರು ಎಬ್ಬಿಸಿ ಮನೆಮಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಲ್ಲದೆ, ಕಿಟಕಿ ಗಾಜುಗಳನ್ನು ಪುಡಿ ಮಾಡಿ ಹಾನಿಗೊಳಿಸಿದ್ದಾರೆಂದು ದೂರಲಾಗಿದೆ.

ಸ್ನೇಹಿತರಿಂದಲೇ ಬಾಲಕನ ಅಪಹರಿಸಿ ಕೊಲೆ

Posted by JAYAKIRANA Kirana on | 0 comments | Leave a comment...

ಪುಣೆ: ಅಪ್ರಾಪ್ತ ಬಾಲಕರಿಬ್ಬರ ಸಹಿತ ಮೂರು ಮಂದಿ ಬಾಲಕರು ೫೦ ಸಾವಿರ ರೂ.ಗಾಗಿ ತಮ್ಮ ಸ್ನೇಹಿ ತನನ್ನೇ ಕೊಂದ ಘಟನೆ ನಡೆದಿದ್ದು, ಟಿವಿಯೊಂದರ ಕ್ರೈಂ ಧಾರಾವಾಹಿ ಇವರಿಗೆ ಪ್ರೇರಣೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಇಲ್ಲಿನ ದಿಘಿ ನಗರದಿಂದ ಶುಭಂ ಶಿರ್ಕೆ(೧೬) ಎಂಬ ಬಾಲಕನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಪಹರಣ ಕಾರರು ಬಾಲಕನ ತಂದೆಗೆ ಕರೆ ಮಾಡಿ ೫೦ ಸಾವಿರ ರೂ. ಬೇಡಿಕೆಯನ್ನಿಟ್ಟಿದ್ದರು. ಅಪಹರಣಕಾರರೊಂದಿಗೆ ಚರ್ಚೆ ನಡೆದ ಬಳಿಕ ಮೊತ್ತವನ್ನು ೧೫ ಸಾವಿರ ರೂ.ಗೆ ಇಳಿಸಲಾಗಿತ್ತು. ಶುಭಂ ತಂದೆ ರಾತ್ರಿ ೧೦.೩೦ರ ವೇಳೆಗೆ ಈ ಹಣವನ್ನು ಅಪಹರಣಕಾರರಿಗೆ ನೀಡಿದ್ದರು. ಆದರೆ ಬಾಲಕನನ್ನು ಮಾತ್ರ ಬಿಡುಗಡೆ ಮಾಡಿ ರಲಿಲ್ಲ. ಇದರಿಂದ ಕಂಗೆಟ್ಟ ಶುಭಂ ತಂದೆ ವಿಶ್ರಾಂತ್‌ವಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಕೊಲೆ ಮಾಡಿರು ವುದನ್ನು ಒಪ್ಪಿಕೊಂಡಿದ್ದಾರೆ. ಬಾಲಕರು ಅಪ್ರಾಪ್ತ ವಯಸ್ಸಿನವರಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಹೆಸರನ್ನು ಬಹಿರಂಗಪಡಿಸಿಲ್ಲ.
ಶುಭಂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಕಲಿಯುತ್ತಿದ್ದು, ಈ ವರ್ಷವಷ್ಟೇ ೧೦ನೇ ತರಗತಿ ಪರೀಕ್ಷೆ ಬರೆದಿದ್ದ. ಕೊಲೆ ಮಾಡಿದ ಮೂವರಲ್ಲಿ ಒಬ್ಬ ಶುಭಂನ ಕ್ಲಾಸಿನಲ್ಲೇ ಕಲಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಂಬೂರು: ಯುವಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಕನೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಕುದ್ರೋಳಿ ಬೆಂಗ್ರೆಯಲ್ಲಿ ನಿನ್ನೆ ನಡೆದಿದೆ. ಮೃತನನ್ನು ಓಡಿಶಾ ಮೂಲದ ಪ್ರಶಾಂತ್(೧೯) ಎಂದು ಹೆಸರಿಸಲಾಗಿದೆ. ನಿನ್ನೆ ಅಪರಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಳು ಸ್ಪೆಷಲ್ ಸ್ಕ್ವಾಡ್ ದಾಳಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಸರಗೋಡು ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ನಾಲ್ಕನೇ ವಾರ್ಡ್‌ನ ಜೋಡುಕಲ್ಲು ಬಳಿಯ ಮಡಂದೂರು ಹೊಳೆಯಲ್ಲಿ ವ್ಯಾಪಕವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಇಲ್ಲಿಗೆ ನಿನ್ನೆ ಮರಳು ಸ್ಪೆಷಲ್ ಸ್ಕ್ವಾಡ್ ಮಂಜೇಶ್ವರ ಪೊಲೀಸರ ನೆರವಿನೊಂದಿಗೆ ದಿಢೀರ್ ದಾಳಿ ನಡೆಸಿದೆ.
ಈ ಸಂದರ್ಭ ಹೊಳೆಯಲ್ಲಿದ್ದವರು ಪರಾರಿಯಾಗಿದ್ದಾರೆ. ಇಲ್ಲಿ ಸುಮಾರು ೩೦ರಷ್ಟು ಯು.ಪಿ. ನಿವಾಸಿಗಳು ಕೆಲಸ ಮಾಡುತ್ತಿದ್ದು, ಇಲ್ಲಿಯೇ ಟೆಂಟ್ ಹಾಕಿ ವಾಸಿಸುತ್ತಿದ್ದಾರೆ. ದಾಳಿ ನಡೆಸಿದ ತಂಡ ಎಂಟು ಹೊಯಿಗೆ ಗಾಳಿಸುವ ಯಂತ್ರ ಹಾಗೂ ಇನ್ನಿತರ ಹಲವು ಉಪಕರಣಗಳನ್ನು ವಶಪಡಿಸಿಕೊಂಡಿದೆ. ಕೆಲಸದವರು ತಂಗುತ್ತಿರುವ ಟೆಂಟಿಗೆ ಬೆಂಕಿ ಹಚ್ಚಿ ನಾಶ ಮಾಡಲಾಗಿದೆ. ತಯಾರಿಸಿದ ಆಹಾರೋತ್ಪನ್ನಗಳು ಚಲ್ಲಾಪಿಲ್ಲಿಯಾಗಿದ್ದು, ಸಾವಿರಾರು ರೂ. ನಷ್ಟ ಸಂಭವಿಸಿದೆ.
ಮಧ್ಯಾಹ್ನದ ವೇಳೆ ದಾಳಿ ಮಾಡಿದ ಸ್ಪೆಷಲ್ ಸ್ಕ್ವಾಡ್ ಸಂಜೆಯ ತನಕ ತಪಾಸಣೆ ನಡೆಸಿತು. ವಶಪಡಿಸಿಕೊಂಡ ಹೊಯಿಗೆ ಹಾಗೂ ಉಪಕರಣಗಳನ್ನು ಅಧಿಕೃತರು ವಶಪಡಿಸಿಕೊಂಡರು. ಈ ತಂಡದಲ್ಲಿ ಸುಮಾರು ಎಂಟು ಮಂದಿ ಇದ್ದರು. ಇವರ ಜೊತೆಯಲ್ಲಿ ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ, ಇಚ್ಲಂಗೋಡು ವಿಲೇಜ್ ಆಫೀಸರ್ ಮತ್ತು ಮಂಜೇಶ್ವರ ಪೊಲೀಸರು ಇದ್ದರು.

ಗಂಗೊಳ್ಳಿ: ನಾಮಫಲಕ ಧ್ವಂಸ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗಂಗೊಳ್ಳಿಯ ಮುಖ್ಯರಸ್ತೆಯಿಂದ ಶಾಹಿ ಮಸೀದಿಗೆ ಹೋಗುವ ರಸ್ತೆಯ ಬದಿಯಲ್ಲಿ ಹಾಕಲಾಗಿದ್ದ ನಾಮಫಲಕವನ್ನು ಕಿಡಿಗೇಡಿಗಳು ಹಾನಿಗೈದ ಘಟನೆ ನಡೆದಿದೆ. ಎರಡು ತಿಂಗಳ ಹಿಂದೆ ಇದೇ ರೀತಿ ನಾಮಫಲಕ ಧ್ವಂಸಗೈದ ಘಟನೆ ನಡೆದಿದ್ದು, ಮತ್ತೆ ಫಲಕವನ್ನು ಹಾಕಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಬಂದರಿನ ಕೈರಾಳಿ ಹೊಟೇಲ್ ಬಳಿ ನಿಲ್ಲಿಸಿದ ಹೀರೊ ಹೊಂಡಾ ಬೈಕ್ ಕಳವಾದ ಘಟನೆ ವರದಿಯಾಗಿದೆ. ಕಳವಾದ ಬೈಕ್‌ನ ಮೌಲ್ಯ ೨೮ ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸವಾರ ಅಬೂಬಕರ್ ಸಿದ್ದೀಕ್ ಪಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ನಾಲಗೆ ಕಿತ್ತು ದೇವರಿಗೆ ಅರ್ಪಿಸಿದ!

Posted by JAYAKIRANA Kirana on | 0 comments | Leave a comment...

ಉ.ಪ್ರ.: ದೇವರಿಗೆ ಹರಕೆ ಹೊತ್ತು ಅದು ಫಲಿಸಿದಾಗ ಪೂಜೆ, ನೈವೇಧ್ಯ ಇಲ್ಲವೇ ಇನ್ನಿತರ ಸೇವೆಯನ್ನು ಸಮರ್ಪಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಮಸೌಲಿ ಪ್ರದೇಶದಲ್ಲಿ ಹದಿಹರೆಯದ ಬಾಲಕನೊಬ್ಬ ದೇವರಿಗೆ ತನ್ನ ನಾಲಗೆಯನ್ನೇ ಕತ್ತರಿಸಿ ಅರ್ಪಿಸಿ ಕೃತಾರ್ಥನಾಗಿದ್ದಾನೆ.
ಮಸೌಲಿಯ ದೇಗುಲಕ್ಕೆ ಆಗಮಿಸಿದ ಪ್ರೌಢಶಾಲೆಯೊಂದರ ವಿದ್ಯಾರ್ಥಿ ಬನ್ವಾರಿ ಲಾಲ್(೧೬) ಎಂಬಾತ ತನ್ನ ನಾಲಗೆಯನ್ನೇ ಕತ್ತರಿಸಿ ದೇವರಿಗೆ ಸಮರ್ಪಿಸಿದ್ದಾನೆ. ತಾನು ದೇವರಿಗೆ ಹರಕೆ ಹೊತ್ತಿದ್ದು, ಅದು ಫಲಿಸಿದಾಗ ನಾಲಗೆಯನ್ನೇ ದೇವರಿಗೆ ಅರ್ಪಿಸಲು ಮುಂದಾಗಿರುವುದಾಗಿ ಆತ ಹೇಳಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಪತ್ನಿ ಕೊಲೆ: ಪತಿಗೆ ಜೀವಾವಧಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪತ್ನಿಯನ್ನು ಕೊಲೆಮಾಡಿದ ಪ್ರಕರಣದ ಆರೋಪಿ ಪತಿ ಕಾಸರಗೋಡು ಗೋಳಿಯಡ್ಕ ನಿವಾಸಿ ಅಬ್ದುಲ್ಲ(೪೦) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿದೆ. ಪ್ರಕರಣ ಸಂಬಂಧ ಆರೋಪಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ೨೦೦೭ರ ಸೆ.೬ರಂದು ಫಾತಿಮಾ ಎಂಬಾಕೆಯನ್ನು ಆಕೆಯ ಪತಿ ಅಬ್ದುಲ್ಲಾ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಇನ್ನು ಚೆಕ್‌ಗೆ ಮೂರೇ ತಿಂಗಳ ಮಿತಿ

Posted by JAYAKIRANA Kirana on | 0 comments | Leave a comment...

ಹೊಸದಿಲ್ಲಿ: ಇಲ್ಲಿಯವರೆಗೆ ಆರು ತಿಂಗಳ ಮಿತಿಯಲ್ಲಿ ಬಳಕೆಯಾಗುತ್ತಿದ್ದ ಚೆಕ್ ಹಾಗೂ ಡ್ರಾಪ್ಟ್‌ಗಳ ಮಿತಿಯನ್ನು ಕಡಿತಗೊಳಿಸಲಾಗಿದ್ದು, ಬ್ಯಾಂಕ್‌ಗಳು ಇನ್ನು ಮುಂದೆ ಮೂರು ತಿಂಗಳವರೆಗೆ ಮಾತ್ರ ಸ್ವೀಕರಿಸಲಿವೆ.
ಚೆಕ್ ಹಾಗೂ ಡ್ರಾಪ್ಟ್‌ಗಳ ಸಿಂಧುತ್ವ ಅವಧಿಯನ್ನು ಆರ್‌ಬಿಐ ಮೂರು ತಿಂಗಳಿಗೆ ಸೀಮಿತಗೊಳಿಸಿದ್ದು ಈ ನಿಯಮ ರವಿವಾರದಿಂದಲೇ ಜಾರಿಗೆ ಬಂದಿದೆ. ಚೆಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಬದಲಾವಣೆ ತರಲಾಗಿದೆ. ಎಪ್ರಿಲ್ ಒಂದರಿಂದಲೇ ಬದಲಾದ ಕಾನೂನ ಜಾರಿಗೆ ಬರಲಿದ್ದು, ಮೂರು ತಿಂಗಳ ಅವಧಿ ಮೀರಿದ ಚೆಕ್‌ಗಳನ್ನು ಚಲಾವಣೆಗೆ ತಂದರೆ ಅಂತಹ ಚೆಕ್‌ಗಳಿಗೆ ಹಣ ಪಾವತಿಸದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.
ಆರ್‌ಬಿಐ ನಿರ್ಧಾರಕ್ಕೆ ಇತರ ಬ್ಯಾಂಕ್‌ಗಳು ಸಹಮತ ವ್ಯಕ್ತಪಡಿಸಿವೆ. ಮೂರು ತಿಂಗಳ ಮಿತಿ ಸರಿಯಾದ ನಿರ್ಧಾರ ಎಂದು ಹಿರಿಯ ಬ್ಯಾಂಕರ್‌ಗಳು ತಿಳಿಸಿದ್ದಾರೆ.

ನಕ್ಸಲರ ಬೇಡಿಕೆ ಈಡೇರಿಕೆಗೆ ಚಿಂತನೆ

Posted by JAYAKIRANA Kirana on | 0 comments | Leave a comment...

ಇಟಲಿ ಪ್ರಜೆ-ಶಾಸಕನ ಅಪಹರಣ
ಮಂಗಳೂರು: ಅಪಹೃತ ಇಟಲಿ ಪ್ರಜೆ ಹಾಗೂ ಶಾಸಕನ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ಕೆಲವು ನಕ್ಸಲರನ್ನು ಬಿಡುಗಡೆ ಮಾಡಬೇಕು ಎಂಬ ನಕ್ಸಲರ ಬೇಡಿಕೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಓಡಿಶಾ ಸರಕಾರದ ಮೂಲಗಳು ತಿಳಿಸಿವೆ.
ಮಾವೋವಾದಿಗಳ ಪರ ಸಂಧಾನಕಾರರು ಅಪಹೃತರ ಬಿಡುಗಡೆ ಮಾಡಲು ಕೆಲವೊಂದು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ ರಾಜ್ಯದ ಬೇರೆ-ಬೇರೆ ಜೈಲುಗಳಲ್ಲಿರುವ ಸುಮಾರು ೪೦ ಮಂದಿ ನಕ್ಸಲರನ್ನು ಬಿಡುಗಡೆ ಮಾಡಬೇಕೆಂದು ಹೇಳಿದ್ದಾರೆ. ಪುರಿಯಲ್ಲಿ ಪ್ರವಾಸಿ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಇಟಲಿ ಮೂಲದ ಪೌಲೋ ಬೊಸು ಕೋ ನನ್ನು ನಕ್ಸಲರು ಬಿಡುಗಡೆ ಮಾಡಬ ಹುದು ಎಂಬ ಆಶಾಭಾವನೆ ಇದೆ. ಆದರೆ ಅಪಹೃತ ಶಾಸಕ ಝಿನಾ ಹಕ್ಕಾ ಯಾವುದೇ ಸುಳಿವು ಇನ್ನೂ ಲಭ್ಯವಾಗಿಲ್ಲ.

ವೃದ್ಧನ ಹೊಟ್ಟೆಯಲ್ಲಿ ೪,೨೯೪ ಕಲ್ಲು

Posted by JAYAKIRANA Kirana on | 0 comments | Leave a comment...

ತಮಿಳ್ನಾಡು: ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯ ಟಿ.ಕೆ.ಸ್ವಾಮಿ ಎಂಬವರು ೬೩ರ ಹರೆಯದ ವೃದ್ಧರೊಬ್ಬರ ಪಿತ್ತಕೋಶದಿಂದ ೪,೨೯೪ ಕಲ್ಲುಗಳನ್ನು ಹೊರತೆಗೆಯುವ ಮೂಲಕ ಸಾಧನೆಯನ್ನೇ ಮಾಡಿದ್ದಾರೆ.
ಈ ಹಿಂದೆ ಜರ್ಮನಿಯಲ್ಲೂ ಇಂಥದ್ದೇ ಘಟನೆ ನಡೆದಿದ್ದು, ೩.೧೧೦ ಕಲ್ಲುಗಳನ್ನು ಹೊರಕ್ಕೆ ತೆಗೆಯಲಾಗಿತ್ತು.
ನಿವೃತ್ತ ಗ್ರಾಮ ಅಧಿಕಾರಿ ದುರೈಸ್ವಾಮಿ ಎಂಬವರಿಗೆ ಇತ್ತೀಚೆಗೆ ಬೆನ್ನುನೋವು ಕಾಣಿಸಿಕೊಂಡಿದ್ದು, ಸಹಿಸಲು ಸಾಧ್ಯವಾಗದೆ ವೈದ್ಯರ ಮೊರೆ ಹೋಗಿದ್ದರು. ಸ್ಕ್ಯಾನ್ ವೇಳೆ ಕಲ್ಲುಗಳು ಪತ್ತೆಯಾಗಿದ್ದು. ೩೦೦ ಗ್ರಾಂ. ತೂಕದ ಕಲ್ಲುಗಳನ್ನು ಹೊರತೆಗೆಯಲಾಗಿದೆ.

ಸರೋಜಿನಿ ರೇಪ್ ಆಂಡ್ ಮರ್ಡರ್ ಪ್ರಕರಣ: ಇಂದು ಶಿಕ್ಷೆ ಪ್ರಕಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ೨೦೧೦ರ ಅ.ಮೂರರಂದು ಬಜ್ಪೆ ಸಮೀಪದ ತೆಂಕ ಎಡಪದವು-ಒಡ್ಡೂರು ಎಂಬಲ್ಲಿ ನಡೆದಿದ್ದ ಸರೋಜಿನಿ ರೇಪ್ ಆಂಡ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಎಡಪದವು-ಕುಂದೋಡಿಯ ದಿನೇಶ್ ಗೌಡನಿಗೆ ಶಿಕ್ಷೆಯ ಪ್ರಮಾಣವನ್ನು ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಸರೋಜಿನಿಯನ್ನು ಆರೋಪಿ ಅತ್ಯಾಚಾರಗೈದು ಬಳಿಕ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದ.

ಹಲ್ಲೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಾನಾಲೆ ಎಂಬಲ್ಲಿ ತಮ್ಮಂದಿರಿಬ್ಬರು ಸೇರಿ ಅಣ್ಣನಿಗೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಅಶೋಕ್ ಶೆಟ್ಟಿಗಾರ್(೩೯)ಎಂದು ಹೆಸರಿಸಲಾಗಿದೆ. ಅಶೋಕ್ ಅವರು ತೊಂಬಟ್ಟು ಕಬ್ಬಿನಾಲೆಯಲ್ಲಿ ಅವರದ್ದೇ ಆದ ತೆಂಗಿನ ಕಾಯಿಗಳನ್ನು ಹೆಕ್ಕುತ್ತಿದ್ದ ಸಂದರ್ಭ ತಮ್ಮಂದಿರಾದ ನಾಗೇಶ್ ಶೆಟ್ಟಿಗಾರ್ ಮತ್ತು ಚಂದ್ರ ಎಂಬವರು ಕಾಯಿ ಕೊಂಡು ಹೋಗಬಾರದೆಂದು ಹೇಳಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಘಟನೆಗೆ ಆಸ್ತಿಯ ತಕರಾರು ಕಾರಣ ಎನ್ನಲಾಗಿದೆ. ಈ ಬಗ್ಗೆ ಅಶೋಕ್ ಅಮಾಸೆಬೈಲು ಠಾಣೆಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಬಿಡಲಾರೆ: ಸಿದ್ಧರಾಮಯ್ಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಜೆಡಿಎಸ್ ನಾಯಕ ಸಿದ್ಧರಾಮಯ್ಯನವರನ್ನು ಮತ್ತೆ ಜೆಡಿಎಸ್‌ಗೆ ಕರೆ ತರುವ ಪ್ರಯತ್ನ ತೆರೆಯ ಮರೆಯಲ್ಲಿ ನಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿದ್ದು, ಇದಕ್ಕೆ ಸಿದ್ದರಾಮಯ್ಯ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕಿದ್ದರೆ ದೇವೇಗೌಡರ ಕುಟುಂಬಕ್ಕೆ ಹೊರತಾದ ಪ್ರಭಾವಿ ನಾಯಕತ್ವದ ಆವಶ್ಯಕತೆ ಇದೆ ಎಂಬುದನ್ನು ಮನಗಂಡಿರುವ ಜೆಡಿಎಸ್ ನಾಯಕರು ಪಕ್ಷ ತೊರೆದಿರುವ ಹಳೆಯ ಒಡನಾಡಿಗಳನ್ನು ಮತ್ತೆ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದು, ಹಳಬರ ಪ್ರತಿಕ್ರಿಯೆ ಪಡೆಯುವ ಉದ್ದೇಶದಿಂದ ಸಿದ್ದರಾಮಯ್ಯರನ್ನು ಹೆಸ ರಿಸಿ ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದರು.
ಹೊರಟ್ಟಿಯ ಹೇಳಿಕೆಗೆ ಉಗ್ರವಾಗಿ ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ ನನ್ನ ಹೆಸರು ಬಳಕೆ ಮಾಡಲು ಹೊರಟ್ಟಿ ಯಾರು?ಎಂದು ಪ್ರಶ್ನಿಸಿದ್ದಾರೆ.

ಕೆಂಡವಾಗಿ ಕಾಡುತ್ತಿದೆ ಬೇಸಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಾರ್ಚ್‌ನಲ್ಲೇ ಹೀಗಾದರೇ ಎಪ್ರಿಲ್, ಮೇ ತಿಂಗಳಲ್ಲಿ ಇಲ್ಲಿ ಬದುಕೋದು ಹೇಗೆ ಎಂದು ಯೋಚಿಸುವಷ್ಟು ಸೆಖೆ ಕರಾವಳಿಯಲ್ಲಿ ಕಾಡುತ್ತಿದೆ. ಇದರ ಮಧ್ಯೆ ನೀರಿನ ಹಾಹಾಕಾರವೂ ಏಳುವ ಲಕ್ಷಣಗಳು ಗೋಚರಿಸುತ್ತಿದೆ.
ಕರಾವಳಿಯಲ್ಲಿ ಸೆಖೆ ಸಾಮಾನ್ಯವಾದರೂ ಈ ಬಾರಿ ಅವಧಿಗಿಂತ ಮೊದಲೇ ಕೆಂಡವಾಗಿ ಕಾಡುತ್ತಿದೆ ಎಂದು ಅನುಭವಿಗಳು ಹೇಳುತ್ತಿದ್ದಾರೆ.
ಮಾರ್ಚ್ ಮಧ್ಯದ ಅವಧಿಯಲ್ಲಿ ಮಳೆ ಬರಬಹುದು ಎಂದು ಹವಾಮಾನ ಇಲಾಖೆ ಫೆಬ್ರುವರಿಯಲ್ಲಿ ವರದಿ ನೀಡಿತ್ತು. ಹವಾಮಾನ ಇಲಾಖೆ ಅವಮಾನ ಇಲಾಖೆ ಎಂಬುದು ಅದರ ವರದಿ ಮತ್ತೊಮ್ಮೆ ಸಾಬೀತು ಪಡಿಸಿದೆ. ಕರಾವಳಿಯ ಅತೀ ಹೆಚ್ಚು ಉಷ್ಣಾಂಶ (೩೪.೪ಡಿಗ್ರಿ ಸೆಲ್ಸಿಯಸ್)ಕಳೆದ ವಾರ ಕಂಡಾಗಿದೆ. ಈ ರೀತಿ ವಿಪರೀತ ಬಿಸಿ ಏರಿದಾಗ ಮಳೆಯಾಗುವುದು ವಾಡಿಕೆ ಆದರೆ ಅಂತಹ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬಿಸಿ ಹೀಗೆಯೇ ಮುಂದುವರಿದರೆ ಬದುಕುವುದು ಕಷ್ಟವಾಗಬಹುದು ಎಂಬ ಆತಂಕ ಜನರಿಂದ ಕೇಳಿ ಬರುತ್ತಿದೆ. ಸೆಖೆಯ ಕಾರಣದಿಂದ ಜೂಸ್, ಐಸ್‌ಕ್ರೀಮ್ ಅಂಗಡಿಗಳ ವ್ಯವಹಾರ ಜೋರಾಗಿದೆ. ನೀರು ಕುಡಿದರೂ ದಾಹ ಇಂಗುತ್ತಿಲ್ಲ ಎಂದೆನ್ನುವ ಕಾರ್ಮಿಕರು, ದಾಹ ನೀಗಿಸಲು ತಂಪು ಪಾನೀಯಗಳ ಆಸರೆಗೆ ಹೋದರೆ ಅಸಲಾಗದು ಎಂದೆನ್ನುವವರೂ ಇದ್ದಾರೆ.
ಸಖೆಯಿಂದಾಗಿ ಶ್ರಮ ವಹಿಸಲಾಗುತ್ತಿಲ್ಲ. ಕೆಲಸ ಕಾರ್ಯಗಳು ನಿಧಾನಗೊಳ್ಳುತ್ತಿವೆ. ಒಮ್ಮೆ ಮಳೆಯಾದರೆ ಎಲ್ಲ ಸರಿಯಾಗುತ್ತದೆ ಎಂದು ಉದ್ಯಮಿಯೋರ್ವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಬಹುಮಹಡಿ ಕಟ್ಟಡಗಳು ಹೆಚ್ಚುತ್ತಿರುವುದು ಬಿಸಿಲಿನ ಬೆಗೆಯ ಪ್ರಮಾಣ ಹೆಚ್ಚಾಗಲು ಕಾರಣ. ಸ್ಥಿತಿವಂತರು ತಮ್ಮ ವಾಸವನ್ನು ವಾರಕ್ಕೊಮ್ಮೆ ಹಳ್ಳಿಗಳಲ್ಲಿ ಇರುವ ತೋಟದ ಮನೆಗೆ ಬದಲಾಯಿಸುತ್ತಾರೆ. ಕೆಲವರು ತೋಟದ ಮನೆಯಿಂದಲೇ ವ್ಯವಹಾರ ನಿಭಾಯಿಸುತ್ತ್ತಿರುವುದು ಕಂಡು ಬರುತ್ತಿದೆ. ಸೆಖೆಯ ಬಿಸಿ ಏಸಿ ವಾಸಿಗಳೂ ಊರು ಬಿಡುವಂತೆ ಮಾಡಿದೆ. ಜನಸಾಮಾನ್ಯರು ಮಾತ್ರ ಎಂದಿನಿಂತೆ ಬಿಸಿ ಧಗೆಯಲ್ಲಿಯೇ ಬಾಳುತ್ತಿದ್ದಾರೆ. ಮಳೆಗಾಗಿ ಕಾದಿದ್ದಾರೆ.

ಭರವಸೆಯ ಯೋಗ ಸಾಧಕಿ, ಬಹುಮುಖ ಪ್ರತಿಭೆ -ಮೈತ್ರಿ ಮಲ್ಲಿ

Posted by JAYAKIRANA Kirana on | 0 comments | Leave a comment...

ಬಾಳ
ಇವರ ಹೆಸರು ಮೈತ್ರಿ ಮಲ್ಲಿ. ಮಂಗಳೂರಿನ ಎಸ್‌ಡಿಎಂ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಅಂತಿಮ ವರ್ಷದ ಎಂ.ಬಿ.ಎ. ವಿದ್ಯಾರ್ಥಿನಿ. ಮಧುಕರ ಮಲ್ಲಿ ಮತ್ತು ವಿಜಯಲಕ್ಷ್ಮಿ ಮಲ್ಲಿ ಹೆತ್ತವರು.
ಮೈತ್ರಿ ಮಲ್ಲಿ ಹಲವು ಪ್ರತಿಭೆಗಳಿಂದ ಗಮನ ಸೆಳೆಯುತ್ತಿರುವ ಸಾಧಕಿ. ಯೋಗಾಸನದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಇವರು ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್ ಅವರ ಶಿಷ್ಯೆ. ಗುರುವಿಗೆ ತಕ್ಕ ಶಿಷ್ಯೆಯಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳನ್ನೂ ತೋರಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಯೋಗಾಸನ ಮತ್ತು ಟೈಟಲ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ಮೂಲಕ ತನ್ನ ಯೋಗಸಾಧನೆಗೆ ಒಂದು ಅಧಿಕೃತ ಗೌರವದ ಮುದ್ರೆಯನ್ನೊತ್ತಿಕೊಂಡರು. ಈ ಸ್ಪರ್ಧೆಯು ರಾಜ್ಯ ಸರಕಾರದ ಆಯುಷ್ ಮತ್ತು ಎಸ್‌ಜಿಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನ ವತಿಯಿಂದ ನಡೆದಿತ್ತು.
 ಕಳೆದ ವರ್ಷ ಇಂಥದ್ದೇ ಒಂದು ಮಹತ್ವದ ಸಾಧನೆಯನ್ನೂ ಮಾಡಿದ್ದ ಮೈತ್ರಿ ಮಲ್ಲಿ, ತಾನು ಭವಿಷ್ಯದ ಯೋಗ ಸಾಧಕಿ ಎಂಬುದರ ಸಂಕೇತ ನೀಡಿದ್ದರು. ದಕ್ಷಿಣ ಭಾರತ ಯೋಗ ಸಂಸ್ಥೆ(ರಿ)ಬೆಂಗಳೂರು ಆಯೋಜಿಸಿದ್ದ ೧೦ನೇ ದಕ್ಷಿಣ ಭಾರತದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಕಾಲೇಜು ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರು. ಈ ಸ್ಪರ್ಧೆಯ ಜನರಲ್ ವಿಭಾಗದಲ್ಲಿ ಬೆಳ್ಳಿ ಪದಕ ದೊಂದಿಗೆ ದ್ವಿತೀಯ ಸ್ಥಾನದಲ್ಲಿ ಮಿಂಚಿದ್ದರು. ಬ್ಯಾಕ್ ಬೆಂಡಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಬಾಚಿ ಕೊಂಡಿದ್ದರು.
ಯೋಗಾಸನದೊಂದಿಗೆ ಇತರ ಕೆಲವು ಕಲೆಗಳಲ್ಲೂ ತನ್ನ ಪ್ರತಿಭೆಯನ್ನು ಮೆರೆಯುತ್ತಿರುವ ಮೈತ್ರಿ, ತಾನೋರ್ವ ಬಹುಮುಖ ಪ್ರತಿಭೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಭರತನಾಟ್ಯ, ಜಾನಪದ, ಪಾಶ್ಚಾತ್ಯ ನೃತ್ಯಗಳಲ್ಲೂ ಮಿಂಚುತ್ತಿದ್ದು, ಹಲವು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಜತೆಗೆ ಕಲಿಕೆಯಲ್ಲೂ ಸದಾ ಮುಂದಿದ್ದು, ಎಂ.ಬಿ.ಎ. ಮೊದಲ ವರ್ಷದ ಪರೀಕ್ಷೆಯನ್ನು ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಗೊಳಿಸಿದ್ದಾರೆ. ಬಿ.ಇ. ಪದವಿ ಮುಗಿಸಿರುವ ಅವರು ಅದನ್ನೂ ಉತ್ಕೃಷ್ಟ ಸ್ಥಾನದೊಂದಿಗೆ ಪಾಸ್ ಮಾಡಿದ್ದಾರೆ. ಇವರ ಸಹೋದರ ರೋಹಿತ್ ಮಲ್ಲಿ ಎಂಜಿನಿ ಯರಿಂಗ್ ವಿದ್ಯಾರ್ಥಿ.ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿ ಯಲ್ಲಿರುವ ಇವರು ಮಾಡುತ್ತಿರುವ ಪರಿಶ್ರಮವೇ ಇವರನ್ನು ಈ ಮಟ್ಟಕ್ಕೇರಿಸಿದೆ. ಸಾಧಿಸಿದರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳುವ ಮೈತ್ರಿ, ಮಲ್ಲಿ ಶಿಸ್ತು, ವಿನಯಶೀಲತೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಭೆ. ಪ್ರತಿಯೊಂದು ವಿಷಯದ ಕಡೆಗೂ ವಿಶೇಷ ಆಸಕ್ತಿ ತೋರಿಸುತ್ತಿರುವ ಮತ್ತು ಸಾಧನೆಗಾಗಿ ಎಷ್ಟು ಶ್ರಮ ವಹಿಸಲೂ ಸಿದ್ಧರಿರುವ ಅಪರೂಪದ ವ್ಯಕ್ತಿತ್ವದವರು.
ಭವಿಷ್ಯದಲ್ಲಿ ಉನ್ನತ ಸ್ಥಾನಮಾನದ ಆಕಾಂಕ್ಷೆ ಹೊಂದಿರುವ ಮೈತ್ರಿ ಮಲ್ಲಿ ಕಲೆ ಮತ್ತು ಸಂಸ್ಕೃತಿ ಬಗ್ಗೆ ಹೊಂದಿರುವ ಆಸಕ್ತಿ, ಕಾಳಜಿ ಮೆಚ್ಚತಕ್ಕದ್ದು. ಯೋಗಾಭ್ಯಾಸಕ್ಕಾಗಿ ದಿನದ ಇಂತಿಷ್ಟು ಹೊತ್ತನ್ನು ಮೀಸಲಿಡುವ ಅವರು, ಅದರಿಂದ ಕಲಿಕೆಯ ಮೇಲೆ ಯಾವುದೇ ಹೊರೆ ಬೀಳದಂತೆ ನೋಡಿಕೊಳ್ಳುತ್ತಾರೆ. ತಂದೆ, ತಾಯಿ , ಸಹೋದರ ಸೇರಿದಂತೆ ಎಲ್ಲರೂ ನನ್ನ ಪರಿಶ್ರಮವನ್ನು ಗೌರವಿಸುತ್ತಾರೆ, ನನಗೆ ಬೇಕಾದ ಬೆಂಬಲ, ಪೋತ್ಸಾಹ ನೀಡುತ್ತಿ ದ್ದಾರೆ. ಕಾಲೇಜಿನಲ್ಲೂ ನನ್ನ ಬಗ್ಗೆ ಗೌರವ, ಪ್ರೀತಿ ಇದೆ. ಇಂಥ ವಾತಾವರಣ ನನ್ನ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತಿದೆ ಎಂದು ಹೇಳುತ್ತಿದ್ದಾರೆ. ಈ ಬಹುಮುಖ ಸಾಧಕಿಗೆ, ಪ್ರತಿಭೆಗೆ ನಾವೂ ಶಹಬ್ಬಾಸ್ ಎನ್ನೋಣ.

ಸೀರಿಯಲ್ ಕಿಲ್ಲರ್: ರವಿ ಬೆಳಗೆರೆ

Posted by JAYAKIRANA Kirana on | 0 comments | Leave a comment...


ಮೈಸೂರಿನ ಲಕ್ಷ್ಮೀಪುರಂನ ಸಭ್ಯ ಬ್ರಾಹ್ಮಣ ಕುಟುಂಬದ ಈ ಹುಡುಗ ರವೀಂದ್ರ ಪ್ರಸಾದ್ ಭಯಾನಕ ಪಾತಕಕ್ಕೆ ಕೈ ಹಾಕಿದ. ಒಂದಲ್ಲ, ಆರು ಬಾರಿ ಅದನ್ನೇ ಮಾಡಿದ. ಆರು ತುಂಬು ಪ್ರಾಣಗಳನ್ನ ಆಪೋಶನ ತೆಗೆದುಕೊಂಡ. ಹೆಣ್ಣು, ಕನಸು, ಕುಡಿತ, ಪ್ರೇಮ, ದುಡ್ಡು, ಕ್ರೈಮು, ಐಶಾರಾಮಿ, ಭಾವುಕತೆ, ಸ್ಪಂದನ, ಕ್ರೌರ್ಯ, ನೆತ್ತರು ಎಲ್ಲವನ್ನೂ ತನ್ನ ಕೇವಲ ಇಪ್ಪತ್ತಾರು ವರ್ಷಗಳ ಕಂತೆಯೊಳಕ್ಕೆ ಎಳೆದುಕೊಂಡು ನಿಂತು ಬಿಟ್ಟ.

ಮನಸ್ಸು!!
ಓದುತ್ತಿದ್ದ ಟೆಕ್ಸ್ಟ್ ಬುಕ್ ಕೆಳಗಿಟ್ಟು ಎದ್ದು ಹೋಗಿ ಭಯಾನಕವಾದ ಕೊಲೆಯೊಂದನ್ನು ಮಾಡಿ, ಕೈ ತೊಳೆದು ಕೊಂಡು ಬಂದು ಕುಳಿತ ಕಾಲೇಜು ವಿದ್ಯಾರ್ಥಿಯ ಸರಣಿ ಹತ್ಯೆಗಳ ಕಥೆ ಕೇಳುತ್ತ ಕುಳಿತರೆ....
ನೀವು ನೀವಾಗಿ ಉಳಿಯಲಾರಿರಿ.
ಹದಿಮೂರು ವರ್ಷಗಳ ಹಿಂದೆ ಇಡೀ ಕರ್ನಾ ಟಕವನ್ನೇ ದಿಗ್ಭ್ರಮೆಗೆ ಈಡು ಮಾಡಿದ ಈ ಹುಡುಗ ಇವತ್ತು ಕುಳಿತುಕೊಂಡು ತನ್ನ ಕಥೆ ಹೇಳುತ್ತಿದ್ದರೂ ಎದುರಿಗೆ ಕುಳಿತವರ ಮನಸ್ಸು ಮುದುಡಿ ಮುದ್ದೆಯಾ ಗುತ್ತದೆ. ನೆತ್ತರು ತಂಪನೆಯ ಗಡ್ಡೆಯಾಗುತ್ತದೆ. ಮೈ ಮೇಲೆ ಮುಳ್ಳೇಳುತ್ತವೆ. ಕಡೆಯಲ್ಲಿ ಮಾತ್ರ ಬೆನ್ನು ಮೂಳೆಯ ಯಾವುದೋ ಆಳದಿಂದ ಎದ್ದು ಬರುವ ವಿಷಾದ ಭಾವವೊಂದು ಮನಸ್ಸನ್ನು ಮಗುಚಿ ಹಾಕುತ್ತದೆ.
ಈತ ರೌಡಿಯಲ್ಲ. ಜನ್ಮತಃ ದುಷ್ಟನಾದ ಸೈಕೋ ಪಾತ್ ಅಲ್ಲ. ಅಕ್ಷರ ಬಾರದ ಒರಟನಲ್ಲ. ಬದುಕಲಾಗದ ನಿಷ್ಪ್ರಯೋಜಕನಲ್ಲ. ವಾತಾವರಣದಿಂದಾಗಿ ಅಡಿimeನೆಡೆಗೆ ತಿರುಗಿದ ಓegಟeಛಿಣeಜ ಛಿhiಟಜ ಖಂಡಿತಾ ಅಲ್ಲ. ಭ್ರಮಿತ ಮನಸ್ಸಿನವನಂತೂ ಖಂಡಿತಾ ಅಲ್ಲ.
ನಮ್ಮ ನಿಮ್ಮಂತಹ ಯಾವುದೇ ಮಧ್ಯಮ ವರ್ಗದ ವರ ಅಣ್ಣ ತಮ್ಮನಾಗಿ ಹುಟ್ಟಿ ಬೆಳೆದಿರಬಹುದಾಗಿದ್ದ ಸರಳ ಹುಡುಗ. ನನಗಿಂತ ನಿಮಗಿಂತ ಂbove ಚಿveಡಿಚಿge ಎಂದು ಹೇಳಿಕೊಳ್ಳುವ ಬುದ್ದಿವಂತರಿಗಿಂತ ಬುದ್ದಿವಂತ. ಬರೆದಿದ್ದರೆ ಐ.ಎ.ಎಸ್ ಈತನಿಗೆ ಕಷ್ಟವಿ ರಲಿಲ್ಲ. ಓದಿದ್ದರೆ ಇಂಜನೀರಿಂಗ್ ಪದವಿ ದೂರವಿರ ಲಿಲ್ಲ. ತಲೆ ಬಗ್ಗಿಸಿ ದುಡಿದಿದ್ದರೆ ಈ ಹೊತ್ತಿಗೆ ಕೇಂದ್ರ ಸರ್ಕಾರದ ದೊಡ್ಡ ಹುದ್ದೆಯೊಂದರಲ್ಲಿರುತ್ತಿದ್ದ.
ಆದರೆ.....
ಮೈಸೂರಿನ ಲಕ್ಷ್ಮೀಪುರಂನ ಸಭ್ಯ ಬ್ರಾಹ್ಮಣ ಕುಟುಂ ಬದ ಈ ಹುಡುಗ ರವೀಂದ್ರ ಪ್ರಸಾದ್ ಭಯಾನಕ ಪಾತಕಕ್ಕೆ ಕೈ ಹಾಕಿದ. ಒಂದಲ್ಲ, ಆರು ಬಾರಿ ಅದನ್ನೇ ಮಾಡಿದ. ಆರು ತುಂಬು ಪ್ರಾಣಗಳನ್ನ ಆಪೋಶನ ತೆಗೆದುಕೊಂಡ. ಹೆಣ್ಣು, ಕನಸು, ಕುಡಿತ, ಪ್ರೇಮ, ದುಡ್ಡು, ಕ್ರೈಮು, ಐಶಾರಾಮಿ, ಭಾವುಕತೆ, ಸ್ಪಂದನ, ಕ್ರೌರ್ಯ, ನೆತ್ತರು ಎಲ್ಲವನ್ನೂ ತನ್ನ ಕೇವಲ ಇಪ್ಪತ್ತಾರು ವರ್ಷಗಳ ಕಂತೆಯೊಳಕ್ಕೆ ಎಳೆದುಕೊಂಡು ನಿಂತು ಬಿಟ್ಟ. ಕಟ್ಟ ಕಡೆಯ ಕೊಲೆ ಮಾಡುವ ತನಕ ಎಲ್ಲೆಂದರೆ ಎಲ್ಲೂ ಹೆಜ್ಜೆ ತಪ್ಪಲಿಲ್ಲ. ಇನ್ನೊಬ್ಬರನ್ನು ನಂಬದೇ ತಾನೇ ಮಾಡಿದ ಯಾವ ಪಾತಕದಲ್ಲೂ ಈತನ ಒಚಿsಣeಡಿ ಠಿಟಚಿಟಿಗಳು ಏರು ಪೇರಾಗಲಿಲ್ಲ. ತೀರ ಅಂತ್ಯದಲ್ಲಿ, ಒಂದೇ ಒಂದು Wಡಿoಟಿg move ಈತನನ್ನು ನೆಟ್ಟಗೆ ಒಯ್ದು ನೇಣುಗಂ ಬದ ನೆರಳಿನಲ್ಲಿ ನಿಲ್ಲಿಸಿತು. ಅದೃಷ್ಟವೋ, ಆಕಸ್ಮಿಕವೋ ...ರವೀಂದ್ರ ಪ್ರಸಾದ್ ಎಂಬ ಆರು ಹತ್ಯೆಗಳ ಮಹಾ ಪಾತಕಿಯನ್ನು ಹನ್ನೆರಡೂವರೆ ವರ್ಷಗಳ ಸುದೀರ್ಘ ಜೈಲು ಯಾತ್ರೆಯಿಂದ ಈಚೆಗೆ ತಂದು ಬಿಟ್ಟಿದೆ.
ನನ್ನೆದುರಿಗೆ ತಿಳಿ ನೀಲಿ ಜೀನ್ಸ್ ಷರಟು, ಅದೇ ಬಣ್ಣದ ಪ್ಯಾಂಟು ಧರಿಸಿ ನೇವಿ ಬ್ಲೂ ಬಣ್ಣದ ಪ್ಯಾಕೆಟ್ ನಲ್ಲಿರುವ ಸಿಗರೇಟುಗಳನ್ನು ಒಂದೊಂದಾಗಿ ಹಿರಿದು ಭಸ್ಮ ಮಾಡುತ್ತಾ ಕೂತಿರುವ ರವೀಂದ್ರ ಪ್ರಸಾದ್...
ಐದು ಜನ ನಿಷ್ಪಾಪಿ ಟ್ಯಾಕ್ಸಿ ಡ್ರೈವರುಗಳನ್ನು ಕೊಂದಿದ್ದಾನೆ. ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಕೊಂದಿದ್ದಾನೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಜೈಲಿ ನಿಂದ ಎಸ್ಕೇಪ್ ಆಗಿದ್ದಾನೆ. ಅಷ್ಟೇ ಅನಾಹುತಕಾರಿ ಯಾಗಿ ಸರ್ಕಾರದ ತಿಜೋರಿ ಒಡೆದಿದ್ದಾನೆ. ಮತ್ತೊಂದು ಬೃಹತ್ ದರೋಡೆಗೆ ಪ್ರಯತ್ನ ಪಟ್ಟಿದ್ದಾನೆ!
ಜೈಲಿಂದ ಬಿಡುಗಡೆಯಾದ ಕೆಲವೇ ದಿನಗಳೊ ಳಗಾಗಿ ಮೈಸೂರಿನಿಂದ ಬಂದು ಹೀಗೆ ನನ್ನೆದುರು ಪ್ರಕಟಗೊಂಡು ತನ್ನ ವಿಲಕ್ಷಣ ಕಥೆಯ ಪದರುಗಳನ್ನು ಒಂದೊಂದಾಗಿ ಬಿಚ್ಚತೊಡಗಿದ್ದಾನೆ. ನಾನು ನೂರೆಂಟು ಜನ ಪಾತಕಿಗಳನ್ನು ನೋಡಿದ್ದೇನೆ. ಬೆರಳಿನ ಉಗುರೆದ್ದು ಹೋಗುವಷ್ಟು ಬರೆದಿದ್ದೇನೆ. ಭೇಟಿಯಾಗುವ ಮುನ್ನ ಈ ರವೀಂದ್ರ ಪ್ರಸಾದ್ ಕುರಿತು ಬರೆದರೆ ಅದು ಇನ್ನೊಂದು ಕಥೆಯಾದೀತು ಅಷ್ಟೆ; ಅಂದುಕೊಂಡಿದ್ದೆ. ಹೀಗೆ ದಿನಗಟ್ಟಲೆ ನನ್ನನ್ನೇ ಆವರಿಸಿಕೊಳ್ಳುವ, ವ್ಯಾಪಿಸಿ ಕೊಳ್ಳುವ, ಬೆನ್ನಟ್ಟಿ ಕಾಡುವ ವ್ಯಥೆಯಾದೀತು ಅಂದು ಕೊಂಡಿರಲಿಲ್ಲ.

ಕಿರುವಿದ್ಯುತ್ ಯೋಜನೆ ವಿರೋಧಿಸೋಣ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ ಸಮೀಪ ಕುಮಾರಧಾರ ನದಿಗೆ ಅಡ್ಡಲಾಗಿ ಕಿರು ವಿದ್ಯುತ್ ಯೋಜ ನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ಸ್ಥಳೀಯ ಕೃಷಿಕರ ತೋಟ ವನ್ನು ಕಬಳಿಸಲಾಗಿದೆ.
ಫಲವತ್ತಾದ ಕೃಷಿಭೂಮಿಯನ್ನು ಕಳೆ ದುಕೊಂಡ ರೈತರು ಕಂಪೆನಿಯ ವಂಚ ನೆಯಿಂದ ಕಂಗಾಲಾಗಿದ್ದಾರೆ. ಕಾಮಗಾರಿ ಸ್ಥಾಪನೆಗೆ ೭೦೦ ಮೀ. ಉದ್ದದ ಆಣೆಕಟ್ಟು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಆದರೆ ಇದರಿಂದ ಪರಿಸರದ ಕೃಷಿಭೂಮಿ ಮುಳುಗಡೆಯಾಗುವ ಭೀತಿಯೂ ಇದೆ. ಇದ ರಿಂದ ಇಲ್ಲಿಯೇ ವಾಸಿಸುತ್ತಿರುವ ಸುಮಾರು ೧೪೦ಕ್ಕೂ ಹೆಚ್ಚು ಕುಟುಂಬಗಳು ಗುಳೇ ಹೋಗುವಂತಾದೀತು. ಸಂತ್ರಸ್ತರಿಗೆ ನೀಡ ಬೇಕಾದ ಪರಿಹಾರದಲ್ಲೂ ತಾರತಮ್ಯ ಎಸ ಗಲಾಗುತ್ತಿದ್ದು, ಸ್ಥಳೀಯರು, ಸಾಮಾಜಿಕ ಸಂಘಟನೆಗಳು ಇಂಥ ಯೋಜನೆಯ ವಿರುದ್ಧ ಈಗಲೇ ಹೋರಾಟಕ್ಕೆ ಇಳಿಯು ವುದು ಉತ್ತಮ. ಕಿರುವಿದ್ಯುತ್ ಯೋಜನೆ ಪೂರ್ತಿಗೊಂಡರೆ ಜನರು ನೆಮ್ಮದಿ ಕಳೆದು ಕೊಳ್ಳುವಂತಾದೀತು.
 ಗ್ರಾಮಸ್ಥರು, ಹಿರೇಬಂಡಾಡಿ

ಮೀನುಗಾರರೇ ಎಚ್ಚೆತ್ತು ಹೋರಾಡಿ
ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜ ನೆಗಾಗಿ ಸಮುದ್ರದ ಅಡಿಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯವನ್ನು ಕೆಲವು ದಿನಗಳ ಹಿಂದೆ ಸಂಪ್ರದಾಯಿಕ ಮೀನು ಗಾರರ ಫೆಡರೇಶನ್ ಸದಸ್ಯರು ತಡೆಹಿಡಿದ ಘಟನೆ ನಡೆ ದಿದೆ. ಒಂದು ವೇಳೆ ಮೀನುಗಾರರು ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ನಾಳೆಯ ದಿನ ಮೀನುಗಾರಿಕೆ ಸಂಕಷ್ಟದಲ್ಲಿ ಸಿಲುಕಬಹುದು. ಕಡಲಿನ ಒಡಲನ್ನೇ ನಂಬಿ ಜೀವನ ಸಾಗಿ ಸುವ ಮೀನುಗಾರರು ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ಬರಬಹುದು. ಈ ರೀತಿಯ ಪರಿಸ್ಥಿತಿ ಬರುವ ಮುನ್ನ ಎಲ್ಲಾ ಮೀನುಗಾರರು ಎಚ್ಚೆತ್ತು ಹೋರಾಟ ನಡೆಸಲಿ.
 ಶರತ್, ಮಂಗಳೂರು

ಅರೆಬರೆ ಬಟ್ಟೆ ತೊಡುವುದು ಅನೈತಿಕತೆಗೆ ದಾರಿಯಾದೀತು
ಇಂದು ಕೆಲ ಹೆಣ್ಣು ಮಕ್ಕಳು ಬಟ್ಟೆ ತೋಡು ವುದಕ್ಕೆ ಸಭ್ಯತೆ ಎನ್ನುವುದೇ ಇಲ್ಲ. ಕೇವಲ ಮಾಲ್, ಕಾಲೇಜ್‌ಗಳಲ್ಲಿ ಈ ರೀತಿ ವರ್ತಿಸುತ್ತಿದ್ದ ಯುವತಿ ಯರು ಇಂದು ದೇವಸ್ಥಾ ನಗಳಲ್ಲೂ ಅಶ್ಲೀಲ ಬಟ್ಟೆ ತೊಡುತ್ತಿದ್ದಾರೆ. ಅಷ್ಟಕ್ಕೂ ಸೌಂದರ್ಯವನ್ನು ಅರ್ಧಂ ಬರ್ಧ ಬಟ್ಟೆ ತೊಟ್ಟೇ ಜಾಹೀರುಗೊಳಿಸಿ ಎಂಬ ನಿಯಮವನ್ನು ಯಾರೂ ರೂಪಿಸಿಲ್ಲ. ಅರ್ಧಂಬರ್ಧ ಬಟ್ಟೆ ತೊಟ್ಟರೆ ಮಾತ್ರ ಹೆಣ್ಣು ಕೊಡುತ್ತೇವೆ ಎಂದು ಯಾವ ಗಂಡಿನ ಕಡೆಯವರೂ ಹೇಳುವುದಿಲ್ಲ. ಅಷ್ಟೇ ಯಾಕೆ? ತನ್ನನ್ನು ಮದುವೆಯಾಗುವ ಹೆಣ್ಣೊಬ್ಬಳು ಚಿತ್ರವಿಚಿತ್ರ ಬಟ್ಟೆ ತೊಡುವುದನ್ನು ಯಾವ ಗಂಡೂ ಇಷ್ಟ ಪಡುವುದಿಲ್ಲ. ತನ್ನ ತಂಗಿ, ತಾಯಿ, ಅಕ್ಕ, ಹೆಂಡತಿ ಯಾರನ್ನೂ ಈ ರೀತಿಯಾಗಿ ನೋಡಲು ಗಂಡು ಎಂದಿಗೂ ಇಷ್ಟ ಪಡುವು ದಿಲ್ಲ ಎನ್ನುವುದು ನೆನಪಿರಲಿ. ಹೀಗಿರುವಾಗ ಹೆಣ್ಣು ತನ್ನ ನೈಜ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯರ ಸಂಸ್ಕೃತಿಗೆ ಮರುಳಾಗುವುದಾದರೂ ಯಾಕೆ? ತನ್ನನ್ನು ಯುವಕರು ನೋಡಬೇಕೆನ್ನುವ ಅತಿಯಾದ ಆಸೆಯಿಂದ ಈ ರೀತಿ ಡ್ರೆಸ್ ಮಾಡಿಕೊಳ್ಳುವುದೇನೋ ಸರಿ. ಆದರೆ ನಿಮ್ಮ ಈ ರೀತಿಯ ವೇಷ ಭೂಷಣ ನೋಡಿ ಒಂದೆರೆಡು ಕಾಮೆಂಟ್ಸ್‌ಗಳು ಬರಬಹುದು, ಇಲ್ಲವೇ ಒಂದೆರೆಡು ಟೈಂಪಾಸ್ ಲವರ್‌ಗಳು ಸಿಗಬಹುದಷ್ಟೇ.
ಸರಿಯಾದ ಬಟ್ಟೆ ತೊಡಿ, ಅಸಭ್ಯವಾಗಿ ವರ್ತಿಸಬೇಡಿ ಎಂದು ನಮ್ಮ ಹೆಣ್ಣು ಮಕ್ಕಳಿಗೆ ಬುದ್ದಿ ಹೇಳುವಂತಿಲ್ಲ. ಮಹಿಳಾ ಸಂಘಟನೆಗಳು ಅದನ್ನೇ ಮಹಿಳಾ ಸ್ವಾತಂತ್ರ್ಯ ಹರಣ ಎಂಬಂತೆ ಬಿಂಬಿಸಿ ಬೀದಿಗಿಳಿಯುತ್ತವೆ. ಪ್ರತಿ ಭಟಿಸುವಾಗ ಮಾತ್ರ ಇವರಿಗೆ ಸುಸಂಸ್ಕೃತ ಭಾರತೀಯ ನಾರಿಯ ಸೀರೆ ಬೇಕು! ವಿಪರ್ಯಾಸ ಅಂದರೆ ಇದೇ ಇರಬೇಕು. ಅತಿಯಾದರೆ ಅಮೃತವೂ ವಿಷ ಎನ್ನುವುದು ನೆನಪಿರಲಿ. ನನ್ನ ಈ ಪತ್ರ ಅರೆಬರೆ ಬಟ್ಟೆ ತೊಡುವ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ. ಭಾರತೀಯ ಸಂಸ್ಕೃತಿಯನ್ನು ಜೀವನ ವಿಧಾನವಾಗಿಸಿ ನಡೆದುಕೊಳ್ಳುತ್ತಿರುವ ಭಾರತದ ಹೆಮ್ಮೆಯ ತಾಯಂದಿರಿ ಗಲ್ಲ. (ಭಾರತೀಯ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರತೀ ಹೆಣ್ಣು ಮಗಳೂ ನನ್ನ ಪ್ರಕಾರ ತಾಯಿಗೆ ಸಮಾನ) ಧ್ವನಿ, ಮಂಗಳೂರು

ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ
ಮಾರ್ಚ್ ೨೮ರ ಬಹಿರಂಗ ಪತ್ರ ವಿಭಾಗದಲ್ಲಿ ಪ್ರಕ ಟಗೊಂಡ ದಲಿತರಿಗೆ ಸಂಬಂಧಿಸಿದ ಬರಹವು ನೂರಕ್ಕೆ ನೂರು ಸತ್ಯ. ನಾನು ಆ ಪತ್ರಕ್ಕೆ ಸಂಬಂಧಪಡದವನು. ಆದರೆ ಕೆಲ ದಲಿತರು ಕಾನೂನನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಒಂದೆರೆಡು ಮಾತು ಹೇಳುತ್ತಿ ದ್ದೇನೆ ಅಷ್ಟೇ. ಇತ್ತೀಚೆಗೆ ನಮ್ಮ ಊರಿನಲ್ಲಿ ದಲಿತ ಕುಟುಂ ಬಕ್ಕೂ ಬಿಲ್ಲವ ಕುಟುಂಬಕ್ಕೂ ವೈಯಕ್ತಿಕ ವಿಚಾರವಾಗಿ ಸಣ್ಣ ಜಗಳ ನಡೆಯುತ್ತಿತ್ತು.
ನೆರೆಮನೆಯೆಂದ ಮೇಲೆ ಇದೆಲ್ಲಾ ಸಾಮಾನ್ಯ. ಆದರೆ ಈ ವೇಳೆ ದಲಿತ ಕುಟುಂಬದ ವ್ಯಕ್ತಿಯೊಬ್ಬರು ಬಿಲ್ಲವ ಸಮುದಾಯದ ವ್ಯಕ್ತಿಯಲ್ಲಿ 'ನಾನು ನಿನ್ನ ಮೇಲೆ ಕೇಸ್ ಹಾಕುತ್ತೇನೆ. ನೀನು ನನಗೆ ಅವ್ಯಾಚವಾಗಿ ಬೈದಿದ್ದೀಯ ಎಂದು ದೂರುತ್ತೇನೆ. ನಮಗೆ ಬೈದರೆ ನಿನಗೆ ಜೈಲು ಗ್ಯಾರಂಟಿ ಎಂದೆಲ್ಲಾ ಹೇಳುತ್ತಿದ್ದರು. ಅಸಲಿಗೆ ಈ ದಲಿತ ವ್ಯಕ್ತಿಯೂ ಈ ಬಿಲ್ಲವ ಸಮುದಾಯದ ವ್ಯಕ್ತಿಗೆ ಇನ್ನಿಲ್ಲದ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಲ್ಲದೇ ಮೊದಲು ಜಗಳಕ್ಕೆ ಬಂದವರು ಕೂಡ ಇವರೇ. ಆದರೂ ಕಾನೂನು ನಮ್ಮದೇ ಎಂದು ವರ್ತಿಸುವ ಇವ ರಿಗೆ ಏನೆನ್ನಬೇಕು? ದಲಿತರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ನೀಡುವ ಸೌಕರ್ಯ, ಕಾನೂನುಗಳನ್ನೇ ತಮಗೆ ಬೇಕಾದಂತೆ ಕೆಲ ವರು ಬದಲಾಯಿಸುತ್ತಾ ಹೋದರೆ ದಲಿತೇತರರು ಏನು ಮಾಡಬೇಕು? ದಲಿತ ವಿರೋಧಿಯಾಗಿ ಮಾತೆತ್ತಿದರೆ ದಲಿತ ಸಂಘಟನೆಗಳು ಬೀದಿಗಿಳಿಯುತ್ತವೆ. ಆದರೆ ಈ ಸಂಘಟನೆಗಳಿಗೆ ತಪ್ಪು ಯಾರದ್ದು ಎಂದು ವಿಚಾರಿಸುವ ಸಮಾಧಾನ ಮಾತ್ರ ಯಾಕಿರುವುದಿಲ್ಲ? ಮೇಲಿನ ಘಟನೆ ಸಣ್ಣ ಉದಾಹರಣೆಯಷ್ಟೇ. ಹೆಚ್ಚಿನ ಕಡೆಗಳಲ್ಲಿ ಇಂದು ದಲಿತರು ದಲಿತರಾಗಿ ಉಳಿದಿಲ್ಲ. ನಾನು ದಲಿತ ವಿರೋ ಧಿಯಾಗಿ ಈ ಬರಹ ಬರೆದಿಲ್ಲ. ಬದಲಾಗಿ ಇತ್ತೀಚೆಗಿನ ಬಹಿರಂಗ ಪತ್ರವನ್ನು ಓದಿ, ನಾನು ಕಂಡ ಸತ್ಯವನ್ನು ತಿಳಿ ಸಬೇಕಾಯಿತಷ್ಟೇ. ನನ್ನ ಬರಹಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ. ನೊಂದವ, ಮಂಗಳೂರು

ಶಿಕ್ಷಕನೇ ಕುಡಿದು ರಸ್ತೆಗೆ ಬಿದ್ದರೆ?

Posted by JAYAKIRANA Kirana on | 0 comments | Leave a comment...

ಕೆಲವು ದಿನಗಳ ಹಿಂದೆ ಪುತ್ತೂರು ಸಮೀಪದ ಪಡುವ ನ್ನೂರು ಗ್ರಾಮದ ಸಜಂಕಾಡಿ ಪ್ರಾಥ ಮಿಕ ಶಾಲಾ ಮುಖ್ಯಶಿಕ್ಷಕರು ಕಂಠ ಪೂರ್ತಿ ಕುಡಿದು ರಸ್ತೆಯಲ್ಲೇ ಬಿದ್ದು ಹೊರಳಾಡಿದ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ನಿಯರ ಲೈಂಗಿಕ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಂದ ಸುದ್ದಿ ಯಲ್ಲಿರುವ ಶಿಕ್ಷಕರು ಕುಡಿದು ರಸ್ತೆಗೆ ಬೀಳುವು ದೊಂದೇ ಬಾಕಿಯಿತ್ತು. ಪುತ್ತೂರಿನ ಶಿಕ್ಷಕರು ತಾವು ಅದರಲ್ಲಿಯೂ ಕಮ್ಮಿಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿ ದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಿ ಅವರನ್ನು ಸರಿದಾರಿಯಲ್ಲಿ ಸಾಗುವಂತೆ ಪ್ರೇರೇಪಿಸಬೇಕಾದ ಶಿಕ್ಷಕರು ತಾವೇ ಸಾಮಾಜಿಕ ಕೆಡು ಕುಗಳಿಗೆ ಬಲಿಯಾಗುವುದೆಂದರೆ ಅರ್ಥವಿ ದೆಯೇ? ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಕೊಡುಗೆ ದೊಡ್ಡದು. ಒಂದೊಮ್ಮೆ ಎಲ್ಲಾ ಶಿಕ್ಷಕರೂ ಈತ ನಂತಾದರೆ ಸಮಾಜದ ಪರಿಸ್ಥಿತಿ ಏನಾಗಬಹುದು? ಶಿಕ್ಷಣ ಇಲಾಖೆ ಕಾಮುಕ, ಕುಡುಕ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಜರುಗಿ ಸದೇ ಇರುವುದೇ ಇಂಥ ಪ್ರಕರಣ ಹೆಚ್ಚಲು ಕಾರಣವಾ ಗಿದೆ.
 ಲಕ್ಷ್ಮೀಶ್ ಕೆ, ಬೆಳ್ತಂಗಡಿ

ದೇಶಪ್ರೇಮ ಮೀರುತ್ತಿದೆಯೇ 'ಜಾಗೋ ಭಾರತ್?
ಚಕ್ರವರ್ತಿ ಸೂಲಿಬೆಲೆ ಎಂಬ ಕಟ್ಟರ್ ಹಿಂದೂವಾದಿಯೊಬ್ಬರು ನಡೆಸಿ ಕೊಡುವ ಜಾಗೋ ಭಾರತ್ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಇನ್ನೊಂದು ಧರ್ಮದ ಅವಹೇಳನ ಎಷ್ಟು ಸರಿ? ನಾನು ಮಂಗಳೂರು ವ್ಯಾಪ್ತಿಯಲ್ಲಿ ನಡೆದ ಚಕ್ರ ವರ್ತಿ ಸೂಲಿಬೆಲೆಯವರ ಹೆಚ್ಚಿನ ಜಾಗೋ ಭಾರತ್ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದೇನೆ. ಇವೆಲ್ಲದಕ್ಕಿಂತ ಹೆಚ್ಚಾಗಿ ನಾನೊಬ್ಬ ಸೂಲಿಬೆಲೆಯವರ ಅಭಿ ಮಾನಿ ಎನ್ನುವುದನ್ನೂ ಯಾವುದೇ ಅಳುಕಿಲ್ಲದೆ ಹೇಳುತ್ತೇನೆ. ಆದರೆ ಇವರ ಕಾರ್ಯಕ್ರಮದಲ್ಲಿ ನನಗೆ ಆಗದ ಒಂದೇ ಒಂದು ವಿಚಾರವೆಂದರೆ ದೇಶಪ್ರೇ ಮದ ಮಾತುಗಳು ಅನ್ಯ ಧರ್ಮವನ್ನು ದೂಷಿಸುವುದರಲ್ಲಿ ಮುಕ್ತಾಯ ವಾಗುವುದು. ಇದು ಕೆಲವೊಮ್ಮೆ ಅತಿರೇಕಕ್ಕೆ ತಲುಪಿದ ಸಂದರ್ಭಗಳೂ ಇವೆ. ಇತ್ತೀಚೆಗೆ ವಾಮಂಜೂರಿನಲ್ಲಿ ಇದೇ ವಿಚಾರಕ್ಕೆ ಸಣ್ಣ ಗಲಾಟೆ ನಡೆದ ಬಗ್ಗೆ ಪತ್ರಿಕೆಯಲ್ಲಿ ಓದಿ ಈ ಪತ್ರ ಬರೆಯುತ್ತಿದ್ದೇನೆ. ಸೂಲಿಬೆಲೆಯವರು ತಮ್ಮ ಭಾಷಣದಲ್ಲಿ ಹಿಂದುತ್ವದ ಬಗ್ಗೆ ಮಾತಿಗಿಳಿಯುವ ಅವಸರದಲ್ಲಿ ಅನ್ಯಧರ್ಮದ ಬಗ್ಗೆಯೂ ಮಾತನಾಡುತ್ತಾರೆ. ದೇಶಪ್ರೇಮದ ಸ್ವಚ್ಚ ಜಾಗೋ ಭಾರತ್‌ನಲ್ಲಿ ಈ ರೀತಿಯ ಮಾತುಗಳ ಅಗತ್ಯವಿದೆಯೇ? ನಮ್ಮ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ, ಸಂಸ್ಕೃತಿ ರಕ್ಷಣೆಯ ಬಗ್ಗೆ ಇವರ ಎಲ್ಲಾ ಮಾತುಗಳು ಒಪ್ಪತಕ್ಕದ್ದೇ. ಆದರೆ ಈ ಸಂದರ್ಭ ಇವರು ನೀಡುವ ಕೆಲವೊಂದು ಮಾರ್ಗೋಪಾಯ ಗಳು ಜನರ ಚಪ್ಪಾಳೆಗೆ ಸೀಮಿತವೇ ಹೊರತು, ಅನುಷ್ಠಾನಗೊಳಿಸಲು ಖಂಡಿತಾ ಸಾಧ್ಯವಿಲ್ಲ. ಮೊನ್ನೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇವರ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿ ತಗಾದೆ ಎತ್ತಿದ್ದೂ ಇದೇ ಕಾರ ಣಕ್ಕಾಗಿ. ಇವರ ಭಾಷಣದಲ್ಲಿ ದೇಶಪ್ರೇಮವೇ ಮೇಳೈಸಿದರೆ ತೊಂದರೆಯಿಲ್ಲ. ಆದರೆ ಒಮ್ಮೊಮ್ಮೆ ಧರ್ಮ ರಕ್ಷಣೆಯ ಹೆಸರಿನಲ್ಲಿ ಭಾಷಣ ಹಾದಿ ತಪ್ಪುತ್ತದೆ. ಇನ್ನಾದರೂ ಜಾಗೋ ಭಾರತ್ ದೇಶಪ್ರೇಮವನ್ನು ಬಿಂಬಿಸಲು ಮತ್ತು ದೇಶ ಪ್ರೇಮಿಗಳನ್ನು ಎಚ್ಚರಿಸಲು ಮಾತ್ರ ಸೀಮಿತವಾಗಿರಲಿ. ಯಾಕೆಂದರೆ ನಮ್ಮದು ಜಾತ್ಯತೀತ ರಾಷ್ಟ್ರ. ಪ್ರಜ್ವಲ್, ಉಪ್ಪಿನಂಗಡಿ

ವಿಠಲನನ್ನು ಜೈಲಿನಲ್ಲಿಟ್ಟು ಸಾಧಿಸುವುದೇನು?
ನಕ್ಸಲರಿಗೆ ಬೆಂಬಲ ನೀಡಿದ ಆರೋಪದ ಮೇಲೆ ಮಂಗಳೂರು ವಿ.ವಿ. ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲನನ್ನು ಬಂಧನದಲ್ಲಿ ಇರಿಸಿರುವುದು ಎಷ್ಟರ ಮಟ್ಟಿಗೆ ಸರಿ? ಪೊಲೀಸರು ನಕ್ಸಲರನ್ನು ಹಿಡಿಯುವ ಭರದಲ್ಲಿ ಅಮಾಯ ಕರನ್ನು ಹಿಡಿದು ಹಿಂಸಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ನಕ್ಸಲ್ ರಾಜ್ಯನಾಯಕರು ಸಮಾವೇಶ ನಡೆಸಿದ್ದಾರೆ, ಅವರಿಗೆ ವಿಠಲ ಸಹಕಾರ ನೀಡಿ ದ್ದಾನೆ ಎನ್ನುವ ಪೊಲೀಸರಿಗೆ ನಕ್ಸಲರ ಕೂದಲು ನೋಡುವುದಕ್ಕೂ ಸಿಕ್ಕಿಲ್ಲ. ವಿಠಲನ ಮನೆಯಲ್ಲಿ ಸಿಕ್ಕಿದ ಭಗತ್ ಸಿಂಗ್ ಪುಸ್ತಕ, ಕರಪತ್ರವನ್ನು ವಶಪ ಡಿಸಿ(?) ನಕ್ಸಲ್ ಸಿಕ್ಕಿದ ಎಂದು ಕುಣಿಯುವುದು ನಾಚಿಕೆಗೇಡು. ಈ ಹಿಂದೆ ಬೆಳ್ತಂಗಡಿ ಸಮೀಪದ ಬೊಳ್ಳೆ ಅರಣ್ಯದಲ್ಲಿ ಇದೇ ಪೊಲೀಸರು ನಕ್ಸಲರ ಭ್ರಮೆ ಯಲ್ಲಿ ಅಮಾಯಕ ಎಎನ್‌ಎಫ್ ಸಿಬ್ಬಂದಿಯ ಪ್ರಾಣ ತೆಗೆದಿದ್ದು ಮರೆತು ಹೋಯಿತೇ? ಇಲ್ಲಿ ಪೊಲೀಸರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮಲವಂತಿಗೆ ಪ್ರದೇಶದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ವೆಂಬಂತೆ ವಿಠಲ ಮತ್ತಾತನ ಮನೆಮಂದಿಯ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ. ಇದರಿಂದ ವಿಠಲನ ಶಿಕ್ಷಣಕ್ಕೂ ಮಂಕು ಕವಿದಂತಾಗಿದೆ. ನಕ್ಸಲ್ ಸಮಾವೇಶ, ನಕ್ಸಲರ ವಾಸ್ತವ್ಯ ಇದೆಲ್ಲ ಪ್ರಹಸನದಂತೆ ಗೋಚರಿಸು ತ್ತಿದೆ. ವಿಠಲ ಒಂದೊಮ್ಮೆ ನಕ್ಸಲರಿಗೆ ತಿಳಿದೋ, ತಿಳಿಯದೆಯೋ ಸಹಕಾರ ನೀಡಿದ್ದರೂ ಅದೇನೂ ದೊಡ್ಡ ಅಪರಾಧವಲ್ಲ. ಯಾಕೆಂದರೆ ನಕ್ಸಲರನ್ನು ಬೆಂಬಲಿಸುವ ಅದೆಷ್ಟೋ ಮಂದಿ ನಾಗರಿಕ ಸಮಾಜದಲ್ಲಿದ್ದಾರೆ. ರಾಜಕೀಯ ಪುಡಾರಿಗಳ ಕುಲಗೆಟ್ಟ ರಾಜಕಾರಣದಿಂದ ರೋಸಿಹೋಗಿ ನಕ್ಸಲರ ಧೋರ ಣೆಗೆ ಮನಸೋತವರಿದ್ದಾರೆ. ಇವರನ್ನೆಲ್ಲ ಹಿಡಿದರೆ ದೇಶದ ಜೈಲು ತುಂಬಬ ಹುದೇ ಹೊರತು ನಕ್ಸಲರನ್ನು ಹಿಮ್ಮೆಟ್ಟಿಸುವುದು ಅಸಾಧ್ಯ. ವಿಠಲನನ್ನು ಬಿಡು ಗಡೆ ಮಾಡಿ ಪರಿವರ್ತನೆ ಮಾಡದೇ ಹೋದಲ್ಲಿ ಮತ್ತಷ್ಟು ವಿದ್ಯಾರ್ಥಿಗಳ ಕೈಯಲ್ಲಿ ಪೆನ್ನಿನ ಬದಲು ಗನ್ನು ಬರಬಹುದು.
 ನೊಂದ ವಿದ್ಯಾರ್ಥಿ, ಮಂಗಳೂರು

ವಿದ್ಯಾರ್ಥಿಗಳ ಆತ್ಮಹತ್ಯೆ ಕಳವಳಕಾರಿ
ಕರ್ನಾಟಕ ರಾಜ್ಯದಲ್ಲಿ ಶಾಲೆ, ಕಾಲೇಜ್ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಸಂಗ ದಿನಗಳೆದಂತೆ ಹೆಚ್ಚುತ್ತಿರು ವುದು ಕಳವಳಕಾರಿ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಪ್ರಕರಣಗಳು ತೀರಾ ಹೆಚ್ಚಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಹಲವಾರು ಬಾಲಕ-ಬಾಲಕಿಯರು ಆತ್ಮಹತ್ಯೆಗೆ ಶರಣಾ ಗಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಒಂದೇ ತೆರನಾದ ಕಾರಣಗಳು ಸಾಮಾನ್ಯವಾಗಿ ಗೋಚರಿಸುತ್ತದೆ. ಪರೀಕ್ಷೆಗೆ ಸಿದ್ಧತೆ ಮಾಡುವಂತೆ ಒತ್ತಡ, ಟಿ.ವಿ. ನೋಡಬೇಡ ಎಂದು ಗದ ರುವುದು, ಪ್ರೇಮ ವೈಫಲ್ಯ, ಅಕ್ರಮ ಗರ್ಭ ಇತ್ಯಾದಿ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ವಿದ್ಯಾರ್ಥಿಗಳ ವಯಸ್ಸು ಹೆಚ್ಚೆಂದರೆ ೨೦. ಸಣ್ಣವ ಯಸ್ಸಿನಲ್ಲೇ ಆತ್ಮಹತ್ಯೆಯ ಕೂಪಕ್ಕೆ ಬಲಿಯಾಗುವ ಇವರು ತಮ್ಮನ್ನು ಸಾಕಿ, ಸಲಹಿದವರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರುವುದಿಲ್ಲ. ಆದ್ದ ರಿಂದ ಮಕ್ಕಳಿಗೆ ಬೆಳೆಯುವಾಗಲೇ ಸದ್ವಿಚಾರ, ಸದ್ಗುಣವನ್ನು ಬೆಳೆಸಿಕೊ ಳ್ಳುವಂತೆ ಪ್ರೇರಣೆ ನೀಡುವಂತಾಗ ಬೇಕು. ಶಶಿಕಲಾ ಭಟ್, ಸುಳ್ಯ

ಬಣ್ಣ ಬಯಲು ಮಾಡಿದ ವಕ್ಫ್ ಆಸ್ತಿ ವರದಿ

Posted by JAYAKIRANA Kirana on | 0 comments | Leave a comment...

ಶೌಕತ್ ಆಲಿ, ಮಂಗಳೂರು
ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿ ಪ್ಪಾಡಿ ಅವರು ಸರಕಾರಕ್ಕೆ ಸಲ್ಲಿಸಿರುವ ವರದಿಯೊಂದು ಈಗ ದೇಶಾದ್ಯಂತ ಸುದ್ದಿಯಾಗಿದೆ. ಬಿಜೆಪಿ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳೆಲ್ಲವೂ ಇದರ ಬಗ್ಗೆ ಖಾರದ ಮಾತಾಡು ತ್ತಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಧುರೀಣರ ಹೆಸರುಗಳು ಈ ವರದಿಯಲ್ಲಿ ಆರೋಪಿ ಜಾಗದಲ್ಲಿ ಕಂಡು ಬಂದಿರುವುದು ಆ ಎರಡು ಪಕ್ಷಗಳಿಗೆ ಆತಂಕ ತಂದಿದೆ. ಆದರೂ ಅನ್ವರ್ ಮಾಣಿ ಪ್ಪಾಡಿ ಅವರ ಮೇಲೆ ಕೀಳುಮಟ್ಟದ ಟೀಕೆ ಮಾಡುತ್ತಾ ತಾವು ಸುಭಗರಂತೆ ವರ್ತಿಸಲು ಶ್ರಮಿಸುವುದನ್ನು ಗಮನಿಸುವಾಗ 'ಕವುಚಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂಬ ಮಾತು ನೆನ ಪಾಗುತ್ತದೆ.
ಅನ್ವರ್ ಮಾಣಿಪ್ಪಾಡಿಗೆ ವಕ್ಫ್ ಮಂಡಳಿ ಬಗ್ಗೆಯೇ ಸರಿ ಯಾದ ಮಾಹಿತಿ-ಜ್ಞಾನವಿಲ್ಲ, ಅವರು ಮುಸ್ಲಿಂ ಕೋಮಿಗೆ ಸೇರಿದವರೇ ಅಲ್ಲ, ಅವರಿಗೆ ಇಂಥದ್ದೊಂದು ತನಿಖೆ ನಡೆಸಿ ವರದಿ ಸಲ್ಲಿಸುವ ಯೋಗ್ಯತೆಯೇ ಇಲ್ಲ ಎಂದು ವರದಿಯಲ್ಲಿ ಆರೋಪಿ ಜಾಗದಲ್ಲಿರುವವರು ಆಕ್ಷೇಪಿಸುತ್ತಿರುವುದು ಖಂಡ ನಾರ್ಹ. ಇಲ್ಲಿ ಮಾಣಿಪ್ಪಾಡಿಯ ಯೋಗ್ಯತೆಯ ಪ್ರಶ್ನೆ ಬರು ವುದೇ ಇಲ್ಲ. ವರದಿಯಲ್ಲಿ ಉಲ್ಲೇಖಿಸಲಾಗಿರುವ ವಿಷಯಗ ಳಷ್ಟೇ ಇಲ್ಲಿ ಮುಖ್ಯವಾದವುಗಳು. ವಕ್ಫ್ ಮಂಡಳಿಯಲ್ಲಿ ಅಕ್ರ ಮಗಳು ನಡೆದೇ ಇಲ್ಲ ಎಂದು ಎದೆತಟ್ಟಿ ಹೇಳುವ ಧೈರ್ಯ ಯಾರಿಗಾದರೂ ಇದೆಯೇ? ಇದ್ದರೆ ಅವರು ಮುಂದೆ ಬರಲಿ, ವರದಿಯಲ್ಲಿರುವ ವಿಷಯ ಶುದ್ಧ ಸುಳ್ಳು ಎಂದು ಹೇಳಲಿ. ಅದು ಬಿಟ್ಟು ಇಂಥದ್ದೊಂದು ಮಹತ್ತರವಾದ ವರದಿ ಸಲ್ಲಿಸಿ ಶ್ಲಾಘನೀಯ ಕಾರ್ಯ ಮಾಡಿರುವ ಮಾಣಿಪ್ಪಾಡಿಯವರ ಸ್ಥೆರ್ಯ ಕುಂದಿಸುವ ಕೆಲಸಕ್ಕೆ ಮುಂದಾಗುವುದು ಅಕ್ಷಮ್ಯ.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜ ನೆಗಳನ್ನು ಜಾರಿಗೊಳಿಸುತ್ತಲೇ ಇರುವ ಹೊತ್ತಿನಲ್ಲಿ ಅವರಿಗೆ ಅವರೇ ಮುಳುವಾಗುವಂಥ ಕೃತ್ಯದಲ್ಲಿ ನಿರತರಾಗಿರುವುದು ಖಂಡನೀಯ. ಶೈಕ್ಷಣಿಕವಾಗಿಯೂ, ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮುಸ್ಲಿಂ ಸಮುದಾಯ ತುಂಬಾ ಹಿಂದಿದೆ ಎಂದು ರಾಜೀಂದರ್ ಸಾಚಾರ್ ವರದಿ ಹೇಳಿದೆ ಮತ್ತು ಅದ ರಲ್ಲಿ ಕೆಲವು ಶಿಫಾರಸುಗಳನ್ನೂ ಮಾಡಲಾಗಿದೆ. ಮುಸ್ಲಿಂ ಸಮು ದಾಯದ ಅಭಿವೃದ್ಧಿಗೆ ಸರಕಾರದಿಂದ ಆಗಬೇಕಾದ ಕ್ರಮಗಳ ಬಗ್ಗೆಯೂ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ಆ ವರದಿ ಯಲ್ಲಿ ತಿಳಿಸಲಾಗಿರುವ ವಿಷಯಗಳ ಕಡೆಗೆ ಕೇಂದ್ರ ಸರಕಾರ ಗಮನ ಹರಿಸುತ್ತಿದೆ. ಅಂತಹ ಹೊತ್ತಿನಲ್ಲಿ ಬಯಲಾಗಿರುವ ವಕ್ಫ್ ಮಂಡಳಿ ಅವ್ಯವಹಾರದ ವರದಿಯು ನಮಗೆ ಮುಸ್ಲಿಂ ಸಮುದಾಯದ ಹಿಂದುಳಿಕೆಯಲ್ಲಿ ಅದೇ ಸಮುದಾಯದ ನಾಯ ಕರ ಪಾತ್ರ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಹಾಗಿರುವಾಗ ಈ ವರದಿಯನ್ನು ಕೇವಲವಾಗಿ ಭಾವಿಸುವುದು ತಪ್ಪಾಗುತ್ತದೆ. ಇದಕ್ಕೆ ವಿಶೇಷ ಆದ್ಯತೆ ನೀಡಿ ಜವಾಬ್ದಾರಿಯುತ ಮತ್ತು ನಿಷ್ಪಕ್ಷ ಪಾತ ತನಿಖೆ ನಡೆಸುವ ಅಗತ್ಯವಿದೆ. ಮುಸ್ಲಿಂ ಸಮುದಾಯ ದಲ್ಲೇ ಇರುವ ಹೆಗ್ಗಣಗಳ ನಿಜರೂಪವನ್ನು ಆ ಸಮುದಾಯದ ಸಾಮಾನ್ಯ ಜನರ ಮುಂದಿಡಬೇಕಾದ ಜವಾಬ್ದಾರಿ ರಾಜ್ಯ ಸರಕಾ ರದ್ದು. ಒಂದೆಡೆ ಸರಕಾರ ಮುಸ್ಲಿಮರ ಪ್ರಗತಿಗಾಗಿ ದುಡಿಯುತ್ತಿ ದ್ದರೆ, ಮತ್ತೊಂದೆಡೆ ಅದೇ ಸಮುದಾಯದ ನಾಯಕರು ಮುಸ್ಲಿ ಮರ ಕೆಡುಕಿನ ಸೌಧಕ್ಕೆ ಬುನಾದಿ ಹಾಕುತ್ತಿದ್ದಾರೆ ಎಂದಾದರೆ ಆ ಸಮುದಾಯದ ಅಭಿವೃದ್ದಿ ಹೇಗೆ ಸಾಧ್ಯವಾದೀತು? ಇದನ್ನು ರಾಜಕೀಯ ದೃಷ್ಟಿಕೋನವಿಲ್ಲದೆ ಪ್ರಾಮಾಣಿಕವಾಗಿ ವಿಮರ್ಶಿಸ ಬೇಕಾಗಿದೆ.
ಬಿಜೆಪಿ ಮುಸ್ಲಿಮರಿಗೆ ಎಷ್ಟು ಸಹಾಯ ಮಾಡಿದರೂ ಅದ ರಲ್ಲಿ ತಪ್ಪು ಹುಡುಕುವ ಜಾತ್ಯತೀತ ಪಕ್ಷಗಳು ಮುಸ್ಲಿಮರ ಲPಂ ತರ ಕೋಟಿ ಮೌಲ್ಯದ ಆಸ್ತಿಗಳಿಗೆ ಕನ್ನ ಕೊರೆದಿರುವುದು ಅವರ ನಿಜಬಣ್ಣವನ್ನು ಬಯಲು ಮಾಡಿದೆ. ಅನ್ವರ್ ಮಾಣಿಪ್ಪಾಡಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಬಿಜೆಪಿಯೊಂದಿಗೆ ಗುರುತಿಸಿದ ಮಾತ್ರಕ್ಕೆ ಅವರನ್ನು ಮುಸ್ಲಿಮರಲ್ಲ ಎಂದು ಹೇಳುವುದು ಬಾಲಿ ಶವಾಗುತ್ತದೆ. ಅದೇ ಕಾರಣದಿಂದ ಅವರು ಸಲ್ಲಿಸಿರುವ ವರ ದಿಯೂ ಪೊಳ್ಳು ಎಂಬ ಮಾತು ಆರೋಪಿಗಳು ತಮ್ಮನ್ನು ತಾವು ರಕ್ಷಿಸಿ ಕೊಳ್ಳಲು, ಮುಖ ಉಳಿಸಿಕೊಳ್ಳಲು ಮಾಡುತ್ತಿರುವ ಒಂದು ತಂತ್ರವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಧಾರ್ಮಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಕೆಯಾಗ ಬೇಕಿರುವ ವಕ್ಫ್ ಸಂಪತ್ತು ಖಾಸಗಿ ವ್ಯಕ್ತಿಗಳ ಪಾಲಾಗಿದೆ ಎಂಬ ತನಿಖಾ ವರದಿ ನಿಜಕ್ಕೂ ಆತಂಕಕಾರಿಯಾದುದು, ಆಘಾತಕಾರಿ ಯಾದುದು. ಇದು ಮುಸ್ಲಿಮರ ಮುಗ್ಧತೆಯನ್ನು ದುರ್ಬಳಕೆ ಮಾಡುತ್ತಿರುವುದಕ್ಕೆ ಒಂದು ಉತ್ತಮ ಉದಾಹರಣೆ. ಮುಸ್ಲಿ ಮರ ರಕ್ಷಕರು ಎಂಬ ಮುಖವಾಡ ಹೊತ್ತುಕೊಂಡು ಅವರನ್ನೇ ಭಕ್ಷಿಸಲು ಮುಂದಾಗಿರುವ ನಾಯಕರ ಕ್ರೂರಕೃತ್ಯ. ಇತರ ಸಮು ದಾಯಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಒಗ್ಗಟ್ಟು, ಸ್ವಧರ್ಮ ಕ್ಕಾಗಿ ನೀಡುವ ಉದಾರ ಕೊಡುಗೆಗಳು ಹೆಚ್ಚು. ತಾವು ಬೆಳೆಯ ಬೇಕು, ತಮ್ಮ ಧರ್ಮ ಬೆಳೆಯಬೇಕು ಎಂಬ ಘನ ಉದ್ದೇಶ ದೊಂದಿಗೆ ವಕ್ಫ್ ಮಂಡಳಿಗೆ ನೀಡಿರುವ ಆಸ್ತಿಯನ್ನು ಖಾಸಗಿ ಉದ್ದೇಶಕ್ಕೆ ಬಳಸಿ ಕೊಂಡಿರುವ ರಾಜಕೀಯ ನಾಯಕರನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಬೇಕಾಗಿದೆ. ಈ ಅವ್ಯವಹಾರದ ತನಿಖೆ ಸಂದರ್ಭ ತಮ್ಮಲ್ಲಿರುವ ಸೂಕ್ತ ಮಾಹಿತಿಗಳನ್ನು ತನಿಖಾ ಧಿಕಾರಿಗಳು ಮತ್ತು ಸರಕಾರದೊಂದಿಗೆ ಹಂಚಿಕೊಂಡು ಸಹಕರಿ ಸಬೇಕಾಗಿದೆ. ಜಾತ್ಯತೀತವಾದಿಗಳ ಢೋಂಗಿ ವಾದಕ್ಕೆ ಸೂಕ್ತ ಮದ್ದರೆಯ ಬೇಕಾಗಿದೆ. ಸ್ವಧರ್ಮ, ಶಿಕ್ಷಣ ಅಭಿವೃದ್ಧಿಗಾಗಿ ನೀಡಿರುವ ದೇಣಿಗೆಯನ್ನು ದುರುಪಯೋಗ ಮಾಡಿರುವ ಆರೋಪ ಹೊತ್ತಿ ರುವವರು ಒಂದು ಕ್ಷಣವೂ ಸಾಮಾಜಿಕ ಸೇವೆಯಲ್ಲಿರಬಾರದು.
ರಾಜ್ಯ ಬಿಜೆಪಿಯಲ್ಲಿ ಇದೀಗ ಕೆಲವು ಗೊಂದಲಗಳಿರಬ ಹುದು. ಆದರೆ ಅದರ ಪರಿಣಾಮ ಆಡಳಿತದ ಮೇಲೆ ಬಿದ್ದಂ ತಿಲ್ಲ. ಪಕ್ಷದ ಗೊಂದಲಗಳನ್ನು ಸರಕಾರದ ಕಾರ್ಯಕ್ಷಮತೆಯೊಂ ದಿಗೆ ಬೆರೆಸುವ ಪ್ರಯತ್ನ ಸಲ್ಲದು. ರಾಜ್ಯ ಸರಕಾರ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಎಂಬ ಅಪಪ್ರಚಾ ರದ ಮೂಲಕ ವರದಿಯ ಮಹತ್ವಕ್ಕೆ ಹಾನಿಯಾಗದಂತೆ ನೋಡಿ ಕೊಳ್ಳುವುದು ಮುಸ್ಲಿಂ ಸಮುದಾಯದ ಪ್ರಾಮಾಣಿಕ ಜನತೆಯ ಕರ್ತವ್ಯವಾಗಿದೆ. ಅವರು ವರದಿಯ ಹಿಂದಿರುವ ಸತ್ಯಾಸತ್ಯತೆ ಯನ್ನು ತಿಳಿದುಕೊಳ್ಳಲು ಸೂಕ್ತ ತನಿಖೆ ನಡೆಸುವಂತೆ ಸರಕಾ ರದ ಮೇಲೆ ಒತ್ತಡ ಹಾಕಬೇಕಾಗಿದೆ. ಇದು ರಾಜಕೀಯಮುಕ್ತ ವಾಗಿ ಆಗಬೇಕಾದ ತುರ್ತು ಕೆಲಸವಾಗಿರುತ್ತದೆ.

2-4-2012

Posted by JAYAKIRANA Kirana on | 0 comments | Leave a comment...

ಜೀವನ
ಒಂದು ಕಣ್ಣೀರಿಗೆ ಬೆಲೆ ಸಿಗೋದು ಯಾವಾಗ ಗೊತ್ತಾ? ಯಾರಿಗೋಸ್ಕರ ಅದು ಜಾರಿ ಹೋಗಿರುತ್ತೋ, ಅವರು ಅರ್ಥ ಮಾಡಿಕೊಂಡಾಗ ಮಾತ್ರ. ಇಲ್ಲಾಂದ್ರೆ ಅದು ಮೋರಿ ನೀರಿಗಿಂತ ಕೀಳು. ಜೀವನ ಅಷ್ಟೆ.

ಕಳೆದುಕೊಳ್ಳಬೇಡಿ
ಗಂಡ ಆವತ್ತು ಬೇಗನೇ ಮನೆಗೆ ಬಂದಿದ್ದ. ನೋಡಿದರೆ ಪತ್ನಿ ಜೊತೆ ಬೆಡ್‌ನಲ್ಲಿ ತನ್ನ ಸ್ನೇಹಿತ. ಸಿಟ್ಟಾದ ಗಂಡ ಗುಂಡು ತೆಗೆದುಕೊಂಡು ನೇರ ಸ್ನೇಹಿತನನ್ನು ಕೊಂದು ಹಾಕಿದ. ಆಗ ಪತ್ನಿ ಹೇಳಿದಳು, ಹೀಗೆಯೇ ಮಾಡಿದರೆ ನಿಮ್ಮ ಎಲ್ಲಾ ಸ್ನೇಹಿತರನ್ನು ನೀವು ಕಳೆದು ಕೊಳ್ಳಬೇಕಾದೀತು!

ಸತ್ತು ಹೋದ್ರಂತೆ!!
ಗುಂಡನ ತಂದೆ ಸತ್ತು ಹೋದರು. ಆಗ ಗುಂಡ ತಂದೆಯ ಹೆಣದ ಮುಂದೆ ಕುಳಿತು ಅಳ್ತಾ ಇದ್ದ. ನಂತರ ಅಳು ನಿಲ್ಲಿಸಿದ. ಎರಡು ನಿಮಿಷ ಬಿಟ್ಟು ಮತ್ತೆ ಜೋರಾಗಿ ಅತ್ತ. ಅದಕ್ಕೆ ಗುಂಡನ ಫ್ರೆಂಡ್ ಕೇಳಿದ 'ಯಾಕೆ ಇಷ್ಟು ಜೋರಾಗಿ ಅಳ್ತಾ ಇದೀಯಾ? ಆಗ ಗುಂಡ 'ನನ್ನ ಸಹೋದರಿಯ ತಂದೆಯೂ ಸತ್ತು ಹೋದ್ರಂತೆ!!

ಮೌನ
ಒಂದು ರುಪಾಯಿ ಕಾಯಿನ್ ಯಾವಾಗಲೂ ಸದ್ದು ಮಾಡು ತ್ತಿರುತ್ತೆ, ಆದರೆ ಒಂದು ಸಾವಿರ ರುಪಾಯಿ ನೋಟು ಯಾವಾ ಗಲೂ ಮೌನವಾಗಿರುತ್ತೆ. ನಿಮ್ಮ ಮೌನ ಯಾವತ್ತೂ ನಿಮ್ಮನ್ನು ಎತ್ತರಕ್ಕೆ ಏರಿಸುತ್ತೇ. ಇದು ಖಂಡಿತಾ ನಿಜ.

ಚಿತ್ರ
ನಾಯಕ ನಾಯಕಿಯನ್ನು ಪ್ರೀತಿಸುತ್ತಾನೆ, ಆದರೆ ನಾಯಕಿ ಖಳನಾಯಕನನ್ನು ಪ್ರೀತಿಸುತ್ತಾಳೆ. ಆದರೆ ನಾಯಕನ ತಮ್ಮ ನಾಯಕಿಯ ಚಿಕ್ಕಮ್ಮನನ್ನು ಪ್ರೀತಿಸುತ್ತಾನೆ. ಆದರೆ ಚಿಕ್ಕಮ್ಮ ನಾಯಕನ ಚಿಕ್ಕಪ್ಪನನ್ನು ಪ್ರೀತಿಸುತ್ತಾಳೆ. ಕಟ್ಟಕಡೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾರು ಗೊತ್ತಾ?
ನಿರ್ಮಾಪಕ ಮತ್ತು ಪ್ರೇಕ್ಷಕ.

2-4-2012

Posted by JAYAKIRANA Kirana on | 0 comments | Leave a comment...

ಹಂಪನಕಟ್ಟೆ : ಸಂಸ್ಥೆಗೆ ಜನ ಬೇಕು ೮೨೭೭೧೬೫೦೬೨.
ಮೂಡಬಿದ್ರೆ: ಪಾನೀಯ ಸಂಸ್ಥೆಗೆ ಜನ ಬೇಕು ೯೯೮೬೦೮೧೨೮೦.
ಸುಳ್ಯ : ಟೈಲರಿಂಗ್ ಅಂಗಡಿಗೆ ಲೇಡಿಸ್ ಟೈಲರ್ ಬೇಕು ೯೯೬೪೮೭೪೨೫೫.
ಬೈಕಂಪಾಡಿ : ಔಷಧಿ ತಯಾರಿಕಾ ಕಂಪೆನಿಯಲ್ಲಿ ಪ್ಯಾಕಿಂಗ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೦೨೨೮೩೭೮.
ಮಂಗಳೂರು : ಬಟ್ಟೆ ಅಂಗಡಿಗೆ ಜನ ಬೇಕು ೯೪೪೮೪೪೬೦೭೩
ಮಂಗಳೂರು : ಸಂಸ್ಥೆಗೆ ಯುವಕ ಯುವತಿಯರು ಬೇಕು ೯೪೪೮೩೨೮೮೩೩.
ಬೆಳ್ತಂಗಡಿ : ಸಂಸ್ಥೆಯೊಂದಕ್ಕೆ ಎಕೌಂಟ್ಸ್‌ಗೆ ಪದವೀಧರೆ ಬೇಕು ೯೪೮೩೫೦೦೪೯೫.
ಕೊಡಿಯಾಲ್‌ಬೈಲ್ : ಹೌಸ್‌ಕೀಪಿಂಗ್ ಕೆಲಸಕ್ಕೆ ಯುವಕರು ಬೇಕು ೯೯೬೪೫೪೦೫೪೪.
ಪಡೀಲ್ : ಹೋಂ ನರ್ಸ್ ಬೇಕು ೯೭೪೩೯೨೧೩೨೬.
ಮಂಗಳೂರು : ಮೆಡಿಕಲ್ ರೆಪ್ರಸೆಂಟೇಟಿವ್ ಬೇಕು ೯೭೪೩೩೯೦೭೯೭.
ಪಾಂಡೇಶ್ವರ : ಬೇಕರಿಗೆ ಯುವಕ, ಯುವತಿ ಯರು ಬೇಕು ೯೮೪೪೫೨೧೭೪೩.
ಮರೋಳಿ : ಲೈನ್ ಸೇಲ್‌ಗೆ ಓಮ್ನಿ ಡ್ರೈವರ್ ಬೇಕು ೯೩೪೧೭೫೮೫೦೦.
ಮಂಗಳೂರು : ಮೆಡಿಕಲ್ ಶಾಪಿಗೆ ಅನುಭ ವವುಳ್ಳ ಯುವಕ ಯುವತಿಯರು ಬೇಕು ೯೮೮೦೩೭೯೭೩೧.
ಮಂಗಳೂರು :ಮೆಕ್ಯಾನಿಕ್, ಹೆಲ್ಪರ್ ಬೇಕು ೯೮೮೦೮೬೪೦೮೯.
ಮಂಗಳೂರು:ಕಂಪ್ಯೂಟರ್ ಬಲ್ಲ ಹುಡುಗಿ ಯರು ಬೇಕು ೯೦೩೬೪೮೯೦೪೦.
ಕಾರ್‌ಸ್ಟ್ರೀಟ್: ಹೊಟೇಲ್‌ಗೆ ಜನ ಬೆಕು ೯೪೮೨೯೬೯೫.
ಉರ್ವ ಮಾರ್ಕೆಟ್ :ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು :ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ:ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.
ಬೈಕಂಪಾಡಿ: ಮಾಂಸಾಹಾರಿ ಅಡುಗೆ ಯವರು ಮತ್ತು ಹೆಲ್ಪರ‍್ಸ್ ಬೇಕು ೯೯೮೦೨೬೭೮೮೪.
ಮಂಗಳೂರು :ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್ & ಬ್ಲೌಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೮೯೭೦೪೨೫೧೮೧.
ಹೂವಿನ ಬೊಕ್ಕೆ ಅಂಗಡಿಗೆ ಹುಡುಗಿ ಯರು ಬೇಕಾಗಿದ್ದಾರೆ. ೯೬೬೩೭೬೦೧೨೫
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೆ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.

2-4-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳ ಒತ್ತಡ ಕಡಿಮೆಯಾಗುತ್ತದೆ.
ವೃಷಭ : ವೃತ್ತಿರಂಗದಲ್ಲಿ ಒಳ್ಳೆಯ ಹೆಸರು ಇರುತ್ತದೆ.
ಮಿಥುನ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯುತ್ತದೆ.
ಕರ್ಕಾಟಕ : ಮಕ್ಕಳ ಸಮಸ್ಯೆ ಎದುರಾಗುತ್ತದೆ.
ಸಿಂಹ : ಮಾನಸಿಕ ನೆಮ್ಮದಿ ಇರುತ್ತದೆ.
ಕನ್ಯಾ : ಧಾರ್ಮಿಕ ಕೆಲಸದಲ್ಲಿ ಭಾಗವಹಿಸುತ್ತೀರಿ.
ತುಲಾ : ಹಣಕಾಸಿನ ಲಾಭ ಇರುತ್ತದೆ.
ವೃಶ್ಚಿಕ : ದೇವತಾ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
ಧನು : ಹಳೆಯ ಸಮಸ್ಯೆಗಳು ಎದುರಾಗುತ್ತದೆ.
ಮಕರ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಕುಂಭ : ದೂರ ಪ್ರಯಾಣ ಮಾಡುತ್ತೀರಿ.
ಮೀನ : ಮನೆ ನಿರ್ಮಾಣದ ಕೆಲಸಗಳು ಪ್ರಗತಿಯಲ್ಲಿರುತ್ತದೆ.

ಮುನ್ನಿ ನನ್ನ ಪ್ರೀತಿ ಸಾಕಾಯಿತಾ?

Posted by JAYAKIRANA Kirana on | 0 comments | Leave a comment...

ಎಲ್‌ಕೆ. ಪೊಳಲಿ
ಹಾಯ್ ಮುನ್ನಿ, ನಾನು ಕಣೇ ನಿನ್ನನ್ನು ನನ್ನ ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸುತ್ತಿದ್ದ ನಿನ್ನ ಪ್ರಿಯತಮ. ನನ್ನ ಜೀವನದಲ್ಲಿ ಜೀವನ ಪೂರ್ತಿ ನಿನ್ನ ಜೊತೆಗೇ ಇರಬೇಕು ಅನ್ನುವ ಹಂತಕ್ಕೆ ಬರುವ ಕ್ಷಣದಲ್ಲಿ ಆ ನಿನ್ನ ಮನೆಯ ವರ ಮಂತ್ರದ ಭಸ್ಮಕ್ಕೆ ಬಲಿಯಾಗಿ ನಿನ್ನಿಂದ ದೂರವಾದೆ ನೀ. ನಿನಗೂ ನಾನು ಅಂದರೆ ತುಂಬಾ ಇಷ್ಟವಾದೆ. ನಮ್ಮಿ ಬ್ಬರ ಮನಸಿನ ಭಾವನೆಯನ್ನು ಅರ್ಥಮಾಡಿಕೊಂಡು ಪಾರ್ಕ್, ದೇವಸ್ಥಾನ ಸುತ್ತಾಡುತ್ತ ಎಷ್ಟು ಖುಷಿಯಾಗಿ ಇದ್ದೆವು ಅಲ್ವಾ ಮುನ್ನಿ? ಪ್ರತಿದಿನ ನೀ ಕೆಲಸಕ್ಕೆ ಹೋಗು ವಾಗ ಬರುವಾಗ ನನಗೆ ಫೋನ್ ಮಾಡುತ್ತಿದ್ದೆ. ಬೆಳಿಗ್ಗೆ ೯.೩೦ ಮತ್ತು ಸಂಜೆ ೬.೧೮ಕ್ಕೆ ದಿನಾ ನಿನ್ನ ನೆನಪಾಗಿ ಕಣ್ಣಲಿ ನೀರು ಬರುತ್ತೆ. ನನ್ನಷ್ಟಕ್ಕೆ ನಾನು ಹುಚ್ಚನಂತಾಗುತ್ತೇನೆ. ನಿನ್ನನ್ನು ಮರೆಯಲು ಎಷ್ಟೇ ಪ್ರಯತ್ನ ಪಟ್ಟೆ. ಖಂಡಿತಾ ಸಾಧ್ಯವಿಲ್ಲ. ಅದು ನಿನಗೆ ಕೂಡಾ ಸಾಧ್ಯವಿಲ್ಲ. ನನಗೆ ಗೊತ್ತು. ನೀನು ಮಾತ್ರ ನಿನ್ನ ಅಣ್ಣ ತಮ್ಮನ ಮಂಕುಬೂದಿಗೆ ಬಲಿ ಯಾಗಿ ನನ್ನಿಂದ ದೂರವಾಗಿರುವೆ.
ನನಗೆ ಎಷ್ಟು ಕಷ್ಟ ಬಂದರೂ ನೀನು ಹೇಳಿದ ಪ್ರತಿ ವಿಷಯಕ್ಕೂ ನಾನು ಎಸ್ ಎಂದು ಹೇಳುತ್ತಿದ್ದೆ. ಯಾಕೆ ಗೊತ್ತಾ ನಿನ್ನ ಪ್ರೀತಿಗೋಸ್ಕರ. ಆದರೆ ನನ್ನನ್ನು ಭೇಟಿ ಮಾಡಿದ ಮೊದಲ ದಿನ ನನಗೆ ಫೋನ್ ಮಾಡಿ ಮನೆಗೆ ಬನ್ನಿ ಎಂದು ಹೇಳಿ. ನಾ ಬಂದ ಕೂಡಲೇ ನನ್ನನ್ನು ತಬ್ಬಿ ಹಿಡಿದು ಐ ಲವ್ ಯೂ ಎಂದು ಹೇಳಿ ನನ್ನನ್ನು ದೂರ ಮಾಡಬೇಡಿ, ನನ್ನ ಕೈ ಬಿಡಬೇಡಿ ಎಂದು ಹೇಳದ ನೀನು ಈಗ ನಡು ನೀರಿನಲ್ಲಿ ಕೈ ಬಿಟ್ಟು ನನ್ನಿಂದ ದೂರವಾಗಲು ಹೇಗೆ ಮನಸ್ಸು ಬಂತು ಚಿನ್ನ?
ನಾವು ಸಂಜೆ ನಿನ್ನ ಮನೆಯ ಹತ್ತಿರ ಭೇಟಿ ಯಾಗಿ ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ನೀನು ನನಗೆ ಹೇಳಿದ ಮಾತು "ನನಗೆ ಫೋನ್ ಮಾಡ ಬೇಡಿ. ನಾನು ನಿಮ್ಮನ್ನು ಮದುವೆಯಾಗಲ್ಲ ಎಂದು ಹೇಳುವಾಗ ನನ್ನ ಜೀವಕ್ಕೆ ಸುನಾಮಿ ಬಂದ ಹಾಗೆ ಆಯಿತು. ಹಾಗೆ ಹೇಳಲು ಕಾರಣ ಯಾರು ಮುನ್ನಿ? ನಿನಗೆ ಹೇಳಿಕೊಟ್ಟೋರು ಯಾರು? ೩ ಜನರ ಪ್ರೀತಿಯ ನಾಟಕದಲ್ಲಿ ನಟಿಸಿದ ನೀನು ನಂತರ ನಿನ್ನ ಪ್ರೀತಿಯ ನಾಟಕಕ್ಕೆ ನನ್ನನ್ನು ಸ್ವಾಗ ತಿಸಿದೆ. ನಾನು ನಿನ್ನ ಆಟಕ್ಕೆ ಬಲಿಯಾಗಿ ಆರು ವರ್ಷದಿಂದ ನನ್ನ ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸಿದೆ. ಆರು ವರ್ಷದ ಪ್ರೀತಿಯನು ಒಂದೇ ದಿನದಲ್ಲಿ ನೀರಿನಲ್ಲಿ ಹೋಮ ಮಾಡಿಬಿಟ್ಟೆ. ಗ್ರೇಟ್ ಕಣೇ ನೀನು. ಒಂದು ಮಾತ್ರ ನೆನಪಿಟ್ಟುಕೋ. ನನಗೆ ಮಾಡಿದ ಹಾಗೆ ದಯವಿಟ್ಟು ನೀನು ಮದುವೆ ಯಾಗುವ ಹುಡುಗನಿಗೆ ಮಾಡಬೇಡ. ಮಾತ್ರ ವಲ್ಲ ಯಾವ ಹುಡುಗನಿಗೂ ಮಾಡಬೇಡ. ನೀನು ಎಲ್ಲೇ ಇದ್ದರೂ ಹೇಗೇ ಇದ್ದರೂ ಚೆನ್ನಾಗಿ ಇರ ಬೇಕು ಎಂದು ಹೃದಯ ತುಂಬಾ ದೇವರಲ್ಲಿ ಬೇಡಿ ಕೊಳ್ಳುವ.
ನಿನ್ನನ್ನು ಪ್ರೀತಿಸಿದ, ಮೊನ್ನೆ ತನಕ ನಿನ್ನವ ನಾಗಿದ್ದ, ಇತೀ ನಿನ್ನ
ಕೈಯಿಂದ, ಕಣ್ಣಿನಿಂದ ದೂರವಾದರೂ ನನ್ನ ಮನಸ್ಸಿನಿಂದ ಖಂಡಿತ ನೀ ದೂರವಾಗಲ್ಲ.

ಕಾಡಬೆಟ್ಟು ನಾರಾಯಣ ರೈ

Posted by JAYAKIRANA Kirana on | 0 comments | Leave a comment...

ಸೀನಿಯರ್ ಹಗ್ಗದ ಕೋಣಗಳ ಕುರಿತು ಮಾತ ನಾಡುವಾಗ ಮೊದಲಿಗೆ ಬರುವುದು ಕಾಡಬೆಟ್ಟು ನಾರಾ ಯಣ ರೈಗಳ ಹೆಸರು.
ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಆಯ್ದು, ಜೊತೆ ಮಾಡಿ ಪಳಗಿಸುವಲ್ಲಿ ಪಳಗಿದ ಕೈ ಇವರದ್ದು. ಓಟದ ಕೋಣಗಳನ್ನು ಕಟ್ಟಲು ಪ್ರಾರಂಭಿಸಿದಂದಿನಿಂದ ಈ ತನಕ ಅವರ ಕೋಣಗಳ ಪೈಕಿ ಯಾವುದಾದರೊಂದು ಜೊತೆ ಪ್ರಥಮ ಬಹುಮಾನ ಪಡೆಯದ ವರ್ಷವಿಲ್ಲ. ಅದರಲ್ಲಿ ಸೀನಿಯರ್ ಹಗ್ಗದ ಜೊತೆಗಳು ಎರಡು ಮತ್ತು ನೇಗಿ ಲಿನ ಜೊತೆ ಒಂದು ಹೀಗೆ ಮೂರು ಜೊತೆ ಓಟದ ಕೋಣಗಳಿವೆ.
ಕೋಣಗಳ ಪಾಲನೆಯಲ್ಲಿ ಬಹಳ ಅನುಭವಿಯಾ ಗಿದ್ದರು. ಕಾಡಬೆಟ್ಟು ನಾರಾಯಣ ರೈಗಳು ಶಾಂತ ಮೂರ್ತಿ, ಗುಣಾಢ್ಯ ವ್ಯಕ್ತಿ, ಯುವಕರಿಗೆ ಹಿರಿಯಣ್ಣ. ರಾಜಕೀಯದಲ್ಲೂ ಸಹಭಾಗಿತ್ವ ವಹಿಸುವವರು. ಸುಧಾ ರಣೆಯ ಕೃಷಿಕರಾದ ಇವರು ಪರಿಸರದಲ್ಲಿ ಆಗುವ ಜಟಿಲ ಸಮಸ್ಯೆಗಳನ್ನು ತನ್ನ ಕುಶಲತೆಯಿಂದ ಲೀಲಾಜಾಲವಾಗಿ ಪರಿಹರಿಸಬಲ್ಲ ಜನಾದರಣೀಯರು, ಕೋಣಗಳಿಗಂತೂ ಇವರನ್ನು ಕಂಡರೆ ಭಯಗೌರವ ಉಂಟಾಗುವುದನ್ನು ಕಣ್ಣಾರೆ ಕಂಡವರಿಗೆ ಅದೆಂತಹ ಪಶುಸಂಗೋಪನಾ ರೀತಿಯೆಂದು ಅಚ್ಚರಿಯಾಗುತ್ತಿತ್ತು.
ಕಂಬಳಗಳಲ್ಲಿ ತಮ್ಮ ಕೋಣಗಳು ಹಿಂದೇಟು ಹಾಕಿ ದರೂ ಗೆದ್ದ ಕೋಣಗಳನ್ನು ಮನತುಂಬಿ ಹೊಗಳುವ ನಿಷ್ಕಲ್ಮಶ ಹೃದಯಿ ಇವರು.
೧೯೮೧ರಲ್ಲಿ ಕಾಡಬೆಟ್ಟು ನಾರಾಯಣ ರೈಗಳಿಗೆ ಕೋಣಗಳ ಜೊತೆಗೆ ಪಾಕಬೆಟ್ಟು ಲಕ್ಷ್ಮಣ ಶೆಟ್ರ ಕೋಣ ಗಳು ದ್ವಂದ್ವವಾಗಿದ್ದುವು. ಜನರ ಬಾಯಲ್ಲಿ ಕಾಡಬೆಟ್ಟು, ಪಾಕಬೆಟ್ಟು ಎಂದು ಕೇಳಿಬರುತ್ತಿತ್ತು.
ಕಂಬಳ ಪ್ರೇಮಿಗಳ ಉತ್ಸಾಹದ ಸೀನಿಯರ್ ಹಗ್ಗದ ಓಟದಲ್ಲಿ ಆಯ್ದು ಜೊತೆಗಳು ಕಾಡಬೆಟ್ಟು ಎ ಮತ್ತು ಬಿ. ಪಾಕಬೆಟ್ಟು ಎ ಮತ್ತು ಬಿ ಎಂದೇ ಜನಜನಿತವಾ ಗಿತ್ತು. ನಾರಾಯಣ ರೈಗಳ ಕೋಣಗಳು ಬೊಳಂತೂರು ಕಂಬಳದಿಂದ ಹಿಡಿದು ಪಾಣೆಮಂಗಳೂರಿನ ತನಕದ ಕಂಬಳಗಳಲ್ಲಿ ಪ್ರಥಮ ಬಹುಮಾನಕ್ಕೆ ಅರ್ಹತೆ ಪಡೆ ದರೆ, ಪಾಕಬೆಟ್ಟಿನ ಕೋಣಗಳು ಮಿಜಾರು ಮತ್ತು ಬಜ ಗೋಳಿ ಕಂಬಳಗಳಲ್ಲಿ ಪ್ರಥಮ ಸ್ಥಾನ ಪಡೆದು ಬಹು ಮಾನ ಗಿಟ್ಟಿಸಿಕೊಂಡವು.
ಇತರೆ ಹೆಸರಾಂತ ಕೋಣಗಳು ಕಾಡಬೆಟ್ಟು - ಪಾಕಬೆಟ್ಟು ಕೋಣಗಳಿಗಿಂತ ಓಟದಲ್ಲಿ ೧೫ ಮೀಟರ್ ಹಿಂದೆ ಬೀಳುವುದು ಸಾಮಾನ್ಯವಾಗಿತ್ತು. ಕಾಡಬೆಟ್ಟು ಮತ್ತು ಪಾಕಬೆಟ್ಟಿನ ಕೋಣಗಳು ನಿರ್ಣಾಯಕ ಓಟ ದಲ್ಲಿ ಒಂದೇ ಹೆಜ್ಜೆಗಳ ಅಂತರದಲ್ಲಿ ಜಯಾಪಜಯ ಪಡೆದವುಗಳಾಗಿವೆ. ಇಂತಹ ಜೋಡಿಗಳ ಓಟವನ್ನು ಆಸಕ್ತ ಪ್ರೇಕ್ಷಕರು ಗಂಟೆಗಟ್ಟಲೆ ಕಾದು ನೋಡುತ್ತಿದ್ದರು.
ನಾರಾಯಣ ರೈಗಳು ತಮ್ಮ ಕೋಣಗಳು ಓಟ ದಲ್ಲಿ ಸ್ಪೂರ್ತಿ ಪಡೆಯಲೆಂದು ಎಂದು ಹೊಡೆದು ಹಿಂಸಿಸಲಾರರು. ಜಾಕಿ ಜಯಣ್ಣನು ಭಯ ಹುಟ್ಟಿಸುವು ದಕ್ಕಾಗಿ ಒಂದೆರಡು ಏಟುಗಳನ್ನು ಕೊಡುತ್ತಾನೆ. ಇದ ರಿಂದ ಕೋಣಗಳ ಜಾತಿಗೆ ಎಚ್ಚರವಾಗುವುದೋ ಇಲ್ಲವೋ ತಿಳಿಯೆವು. ಆದರೆ ಈ ರೀತಿ ಉತ್ತಮ ಜಾತಿಯ ಕೋಣಗಳಾದರೆ ಹಲ್ಲುದುರಿದ ಮೇಲು ಯೌವ್ವನಭರಿತವಾದ ಕೋಣಗಳಂತೆ ಓಡಬಲ್ಲವು. ರಭ ಸವೂ ಕುಗ್ಗುವುದಿಲ್ಲ ತುಂಬ ಹದಗೆಡಿಸಿದರೆ ಹೊಡೆದು ಬಡಿದು ಪೀಡಿಸಿದರೆ ಅದು ಕ್ಷಣಿಕ ಉತ್ಸಾಹ ತೋರಿಸಿದಂ ತಾದರೂ ವರುಷ ಕಳೆಯುವಾಗ ಬೇರೆ ಕೋಣ ಬೇಕಾ ಗಬಹುದು. ಇದನ್ನು ಸಂಪೂರ್ಣ ತಿಳಿದವರು ನಾರಾ ಯಣ ರೈಗಳು.

ವಕ್ಫ್‌ಬೋರ್ಡ್‌ನ್ನು ಮೀರಿಸುವ ಹಣ ದೇವಾಲಯಗಳಲ್ಲಿದೆ

Posted by JAYAKIRANA Kirana on | 0 comments | Leave a comment...


ಕೋಟ್ಯಂತರ ರೂಪಾಯಿ ಆದಾಯವಿರುವ ದೇವಾಲಯಗಳನ್ನು ತಮ್ಮ ತಾತ ಮುತ್ತಾತ ಕಟ್ಟಿಸಿದ್ದು. ಅವರೇ ನಡೆಸಿದ್ದು ಎಂದು ಬೊಗಳೆ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರು ಬಂದು ಪೂಜೆ, ಕಾಣಿಕೆ, ಸೇವೆಗಳನ್ನು ಮಾಡಿಸುತ್ತಿರುವ ಬಹಿರಂಗ ಸತ್ಯವನ್ನು ಕಾಣುತ್ತಿದ್ದರೂ ನಮ್ಮ ಸ್ವಂತದ್ದು ಎನ್ನುವ ಲಂಪಟ ಧರ್ಮದರ್ಶಿಗಳು ಹೆಚ್ಚಾಗಿದ್ದಾರೆ.

ಕೆ.ನರಸಿಂಹ ರಾವ್, ಪಡುಬಿದ್ರೆ
ರಾಜ್ಯದಲ್ಲಿರುವ ಶ್ರೀಮಂತ ದೇವಾಲಯಗಳು, ಮಠ, ಅನುವಂಶಿಕ ಆಡಳಿತದ ಸಾರ್ವಜನಿಕ ದೇವಾಲಯಗಳು, ಸರಕಾರವೇ ನಡೆಸುವ ಸಾರ್ವ ಜನಿಕ ದೇವಾಲಯಗಳಲ್ಲಿ ವಕ್ಫ್ ಬೋರ್ಡ್‌ನಿಂದ ಆಗಿರಬಹುದಾದ ಲಕ್ಷಾಂ ತರ ಕೋಟಿ ಅವ್ಯವಹಾರಕ್ಕೂ ಮೀರಿದ ಹಗರಣ ನಡೆಯುತ್ತಿದೆ. ಹಿಂದೂ ದೇವಾಲಯಗಳಲ್ಲಿ ನಾಚಿಗೆ ಮಾನ ಮರ‍್ಯಾದೆ ಬಿಟ್ಟು ಹಣ ಮಾಡುವ ವ್ಯಕ್ತಿ ಗಳು ಬಹಳಷ್ಟು ಇದ್ದಾರೆ. ದೇವರ ಹೆಸರಿನಲ್ಲಿ ಹೆದರಿಸಿ ಸಾರ್ವಜನಿಕ ಹಣ ವನ್ನು ತಾವೊಬ್ಬರೇ ನುಂಗುವ ತಿಮಿಂಗಿಲಗಳು ಸಾಕಷ್ಟಿವೆ. ದೇವರನ್ನು ಗರ್ಭ ಗುಡಿಯಲ್ಲಿಟ್ಟು ಭದ್ರವಾಗಿ ಬೀಗ ಹಾಕಿ ತಾವೇ ದೇವಾಂಶ ಸಂಭೂತರೆಂದು ತಿರುಗಾಡುವ ಲಂಪಟರು ಇದ್ದಾರೆ. ಸಾರ್ವಜನಿಕರಿಂದ ಒಟ್ಟಾಗುವ ಕೋಟ್ಯಂ ತರ ರೂ. ಹಣದಲ್ಲಿ ಸಮಾಜದ ಕೆಲವು ಸಂಸ್ಥೆಗಳಿಗೆ ಕಿಂಚಿತ್ ದೇಣಿಗೆ ನೀಡ ದಂತೆ ಮಾಡಿ ಅದನ್ನು ಮಾಧ್ಯಮಗಳಲ್ಲಿ ವಿಜೃಂಭಿಸುವಂತೆ ಹಾಕಿಸಿ ಇಡೀ ಸಮಾಜವನ್ನೇ ಉದ್ಧರಿಸುತ್ತಿರುವವರಂತೆ ತೋರಿಸಿಕೊಳ್ಳುತ್ತಿರುವ ಸಮಯಸಾ ಧಕ ವಂಚಕ ಧರ್ಮದರ್ಶಿಗಳೂ ಇದ್ದಾರೆ. ಇಂಥವರು ಸಮಾಜಕ್ಕೆ ನೀಡಿದ ಹಣದ ನೂರು ಪಟ್ಟು ಹಣವನ್ನು ತಾವೇ ನುಂಗುವುದನ್ನು ನೋಡುತ್ತಿದ್ದೇವೆ.
ರಾಜ್ಯದ ದೇವಾಲಯಗಳು ಕುಲಗೆಟ್ಟು ಹೋಗಿವೆ. ಕೋಟಿಗಟ್ಟಲೆ ಆದಾ ಯವಿರುವ ದೇವಾಲಯಗಳಲ್ಲಿ ಪೂಜೆಗಾಗಿ, ಆಡಳಿತಕ್ಕಾಗಿ ಹೊಡೆದಾಡಿಕೊ ಳ್ಳುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಬಡ ದೇವಾಲಯಕ್ಕೆ ಮುಖ ಸಹಾ ತೋರಿಸುವುದಿಲ್ಲ. ಅಂತಹ ಬಡ ದೇವಾಲಯಗಳಿಗೆ ಸಹಾಯ ಹಸ್ತ ನೀಡುವ ಗೋಜಿಗೆ ಹೋಗದಿರುವುದೇ ಹೆಚ್ಚು. ಕೋಟ್ಯಂತರ ರೂ ಆದಾಯವಿರುವ ದೇವಾಲಯಗಳನ್ನು ತಮ್ಮ ತಾತ ಮುತ್ತಾತ ಕಟ್ಟಿಸಿದ್ದು. ಅವರೇ ನಡೆಸಿದ್ದು ಎಂದು ಬೊಗಳೆ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರು ಬಂದು ಪೂಜೆ, ಕಾಣಿಕೆ, ಸೇವೆಗಳನ್ನು ಮಾಡಿಸುತ್ತಿರುವ ಬಹಿರಂಗ ಸತ್ಯವನ್ನು ಕಾಣುತ್ತಿದ್ದರೂ ನಮ್ಮ ಸ್ವಂತದ್ದು ಎನ್ನುವ ಲಂಪಟ ಧರ್ಮದರ್ಶಿಗಳು ಹೆಚ್ಚಾಗಿದ್ದಾರೆ. ಅದಕ್ಕೆ ಪುಷ್ಠಿ ನೀಡುತ್ತಿರುವ ಭ್ರಷ್ಟ ರಾಜಕಾರಣಿಗಳು ಸಹಾ ಕೈ ಜೋಡಿಸಿಕೊಂಡು ಸಾರ್ವಜನಿಕ ಹಣ ಒಬ್ಬ ವ್ಯಕ್ತಿ ಯಾ ಮನೆಯ ಪಾಲಾಗುವಂತೆ ಮಾಡುತ್ತಿರು ವುದನ್ನು ಸಹಾ ಕಂಡಿದ್ದೇವೆ.
ಸರಕಾರಿ ಪರಂಬೋಕು ಜಾಗದಲ್ಲಿರುವ ಸರಕಾರಿ ದೇವಸ್ಥಾನವನ್ನು ಲಂಚ ಇತರ ಆಮಿಷಕ್ಕೆ ಬಲಿಯಾಗಿ ಇಂತಹ ಪವಿತ್ರವಾದ ದೇವಾಲಯವನ್ನು ಸಹಾ ಖಾಸಗಿಯವರಿಗೆ ಮಾರುವ ಸರಕಾರ ಈ ಬಗ್ಗೆ ಗಮನ ಹರಿಸದೇ ಸಾರ್ವ ಜನಿಕರಿಗೆ ವಂಚನೆ ಮಾಡುತ್ತಿದೆ. ಹಿಂದೂ ಸಂಘಟನೆಗಳು ಸಹಾ ನಿರ್ವೀ ರ್ಯರಾಗಿ ನಿಂತಿವೆ. ಸಾರ್ವಜನಿಕ ಹಿಂದೂ ದೇವಾಲಯಗಳು ಕೇವಲ ಒಬ್ಬನ ಹಿತಾಸಕ್ತಿಗೆ ಒಳಗಾಗುವುದು ಸಹಾ ತುಂಬಾ ಅಪಾಯಕಾರಿ. ಇದ ರಿಂದ ನಿರಂಕುಶ ಪ್ರಭುತ್ವ ಹುಟ್ಟುಕೊಳ್ಳುತ್ತದೆ. ಹಿಂದೂ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ.
ಮಠಗಳಲ್ಲಿ ಅನೇಕ ಗಣ್ಯರೆನಿಸಿದ ವ್ಯಕ್ತಿಗಳು ತಮ್ಮ ಕಪ್ಪುಹಣವನ್ನು ಮಠ ದಲ್ಲಿ ಇಟ್ಟುಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳುವ ವಿದ್ಯಮಾನವನ್ನು ನೋಡುತ್ತಿದ್ದೇವೆ. ಸಾರ್ವಜನಿಕ ಹಣವನ್ನು ಮಠಾಧಿಪತಿಗಳು ಬೇಕುಬೇಕಾ ದಂತೆ ತಮ್ಮ ಪೂರ್ವಾಶ್ರಮದ ಕುಟುಂಬಕ್ಕೆ ಹಾಗೆಯೇ ಅವರ ಸಮೀಪವರ್ತಿ ಗಳಿಗೆ ನೀಡಿ ಪೋಷಿಸುತ್ತಿದ್ದಾರೆ. ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ಹಣ ಸಂಗ್ರಹಿಸಿ ಅವ್ಯವಹಾರ ನಡೆಸಲಾಗುತ್ತಿದೆ. ಮಠಕ್ಕೆ ಸಂಬಂಧಪಟ್ಟ ಭೂಮಿಯನ್ನು ಕೋಟ್ಯಂ ತರ ರೂಗಳಿಗೆ ಮಾರಾಟ ಮಾಡಿ ಮಜಾ ಉಡಾಯಿಸುವವರಿದ್ದಾರೆ. ಮಠ ಗಳಲ್ಲಿರುವ ಬೆಲೆಬಾಳುವ ಚಿನ್ನಾಭರಣಗಳು ಕಾಣೆಯಾಗುತ್ತಿವೆ. ಇಂತಹ ಅವ್ಯ ಹಾರಗಳೇ ಕೆಲವು ಲಕ್ಷ ಕೋಟಿಗಳಾಗಬಹುದು. ಆದರೂ ಸಹಾ ಇವುಗಳನ್ನು ಕಾನೂನಿನಿಂದ ಹೊರಗಿಡಲಾಗಿದೆ.
ನಿಜಾಮ ಅಖಂಡ ಭಾರತಕ್ಕೆ ಸವಾಲು ನೀಡಿದಂತೆ ಈ ಮಠಾಧಿಪತಿ ಗಳು ಸರಕಾರಕ್ಕೆ ಮಗ್ಗುಲಮುಳ್ಳಾಗುವುದು ಖಂಡಿತ. ಸರಕಾರ ಈ ಬಗ್ಗೆ ಈಗಲೇ ಜಾಗೃತಗೊಳ್ಳಬೇಕಾದುದು ಅನಿವಾರ್ಯ. ರಾಜ್ಯದ ಅನೇಕ ಮಠಾ ಧಿಪತಿಗಳು ಇದೀಗ ರಾಜಕೀಯ ಅಖಾಡಕ್ಕೆ ಇಳಿದಿರುವುದನ್ನು ನಾವು ನೋಡಿ ದ್ದೇವೆ. ಒಬ್ಬ ಮುಖ್ಯಮಂತ್ರಿ ಸರಕಾರಿ ಭೂಮಿಯನ್ನು ನುಂಗಿ ನೀರು ಕುಡಿ ದರೂ ಸಹಾ ಆತನೇ ನಮ್ಮ ಮುಖ್ಯಮಂತ್ರಿಯಾಗಬೇಕು ಎಂದು ಬೀದಿಗಿ ಳಿದ ಘಟನೆಯನ್ನು ನಾವು ಮರೆತಿಲ್ಲ. ಇದಕ್ಕೆ ಮೂಲಭೂತ ಕಾರಣ ಸರಕಾರದ ನಿಯಂತ್ರಣ ತಪ್ಪಿಸಿಕೊಳ್ಳುವುದು. ಜಾತಿ ರಾಜಕಾರಣ ಮಾಡುತ್ತಿರುವ ಮಠಾಧಿಪತಿ ಗಳು ಮುಂದೊಂದು ದಿನ ದೇಶದ ಆಡಳಿತವನ್ನು ತಮ್ಮ ಹಣದ ಬಲದಿಂದ ಪಡೆ ದುಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ. ಅಂತಹ ಸೌಕರ್ಯವನ್ನು ಸರಕಾರ ಮಠಾ ಧಿಪತಿಗಳಿಗೆ, ಧರ್ಮದರ್ಶಿಗಳಿಗೆ ಒದಗಿಸುತ್ತಿದೆ.
ಆನುವಂಶಿಕ ಆಡಳಿತದ ಸಾರ್ವಜನಿಕ ದೇವಾಲಯಗಳಲ್ಲಿ ಸಾರ್ವಜನಿಕರಿಂದ ಬಂದಂತಹ ಹಣದಿಂದ ತಮ್ಮ ತಾತ ಮುತ್ತಾತರಿಂದ ವಂಶಪಾರಂಪರ್ಯವಾಗಿ ತಿನ್ನುತ್ತಾ ಬಂದು ತಮ್ಮ ತಮ್ಮ ಮನೆಯನ್ನು ಉದ್ದಾರ ಮಾಡಿಕೊಂಡು ಬೇಕಾ ದಷ್ಟು ಹಣ, ಚಿನ್ನ ದೇವಳದ ಜಮೀನನ್ನು ನುಂಗಿ ತೇಗಿದ್ದಾರೆ. ಇದು ಕೆಲವು ಲಕ್ಷ ಕೋಟಿಗಳಾಗಬಹುದು. ವಂಶಪಾರಂಪರ್ಯ ಆಡಳಿತದಾರರ ಮನೆ ನಡೆಯುತ್ತಿ ರುವುದು ದೇವಾಲಯದ ಸಾರ್ವಜನಿಕ ನಿಧಿಯಿಂದಲೇ. ಇಲಾಖಾ ಕಾನೂನಿನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಇಲ್ಲಿಗೆ ಸಾರ್ವಜನಿಕ ವ್ಯವಸ್ಥಾಪನಾ ಸಮಿತಿ ರಚಿಸಲು ಅವಕಾಶ ನೀಡಿತ್ತು. ಆದರೆ ಈ ಭ್ರಷ್ಟ ಬಿಜೆಪಿ ಸರಕಾರ ಸಾರ್ವಜನಿಕ ಕಮಿಟಿ ರಚ ನೆಯನ್ನು ತೆಗೆದು ಆನುವಂಶಿಕ ಆಡಳಿತದಾರರಿಗೆ ಆಡಳಿತ ನಡೆಸಲು ಕಾನೂನಿನಲ್ಲಿ ಅವಕಾಶ ನೀಡಿದೆ. ಆದರೆ ಇದು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಹಾಗೂ ನಮ್ಮ ಸಂವಿಧಾನಕ್ಕೆ ವಿರೋಧವಾಗಿದೆ. ಇವರು ಸರಕಾರಕ್ಕೆ ಸಡ್ಡು ಹೊಡೆದು ಕೊಂಡು ಜೀವನ ನಡೆಸುತ್ತಿದ್ದಾರೆ. ಇವರನ್ನು ಮಟ್ಟ ಹಾಕಲು ಸರಕಾರ ಯಾವುದೇ ಕ್ರಮ ತೆಗೆ ದುಕೊಳ್ಳುತ್ತಿಲ್ಲ.
ಸಾರ್ವಜನಿಕ ಹಣ ಸಂಗ್ರಹವಾಗುತ್ತಿರುವ ಆನುವಂಶಿಕ ಆಡಳಿತ ನಡೆಸುತ್ತಿ ರುವ ಕೆಲವು ದೇವಾಲಯಗಳ ಧರ್ಮದರ್ಶಿಗಳು ತಮ್ಮದು ನಿರ್ದಿಷ್ಟ ಪಂಗಡದ ದೇವಾಲಯವೆಂದು ಸರಕಾರಕ್ಕೆ ಮನವಿ ಸಲ್ಲಿಸಿ ನಮ್ಮನ್ನು ಡಿನೋಟಿಫಿಕೇಶನ್ ಮಾಡಿ ಕಾನೂನಿನಿಂದ ಹೊರಹಾಕಬೇಕೆಂದು ಕೇಳಿಕೊಂಡ ನೂರಾರು ಪ್ರಸಂಗಗ ಳಿವೆ. ಇದಕ್ಕೆ ಮೂಲ ಕಾರಣ ದೇವಾಲಯದಲ್ಲಿರುವ ಕೋಟಿಗಟ್ಟಲೆ ಹಣವನ್ನು ಸರಕಾರದ ನಿಯಂತ್ರಣವಿಲ್ಲದೆ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುವ ವ್ಯವಸ್ಥಿತ ಜಾಲ ನಡೆಯುತ್ತಲೇ ಇದೆ. ಇದಕ್ಕೆ ಸರಕಾರ ಯಾವುದೇ ರೀತಿಯ ಕಡಿವಾಣ ವನ್ನು ಇದುವರೆಗೂ ಹಾಕಿಲ್ಲ. ಕಾನೂನಿನಲ್ಲಿ ತಿದ್ದುಪಡಿ ಸಹಾ ಮಾಡಿಲ್ಲ. ರಾಜ್ಯ ಧಾರ್ಮಿಕ ಪರಿಷತ್ತು ಅಥವಾ ಸರಕಾರದ ಸಚಿವರುಗಳ ಪ್ರಭಾವವನ್ನು ಬಳಸಿ ಕೊಂಡು ಇಂತಹ ಸಾರ್ವಜನಿಕ ದೇವಾಲಯಗಳು ಕಾನೂನಿಂದ ಹೊರಬರಲು ಪ್ರಯತ್ನಿಸುತ್ತಲೇ ಇವೆ. ಊರ ಸಾರ್ವಜನಿಕ ಆಕ್ಷೇಪಣೆಗಳಿಗೂ ಬೆಲೆ ಇಲ್ಲದಂ ತಾಗಿದೆ. ಈ ಡಿನೋಟಿಫಿಕೇಶನ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗ ಬೇಕು. ತಿದ್ದುಪಡಿ ಕಾನೂನಿನಲ್ಲಿ ಸಾರ್ವಜನಿಕವಾಗಿ ಹಣ ಬೀಳುವ ಯಾವುದೇ ರೀತಿ ದೇವಾಲಯಗಳು ಸಾರ್ವಜನಿಕ ದೇವಾಲಯಗಳಾಗುತ್ತವೆ ಎಂದು ತಿಳಿಸಲಾ ಗಿದೆ. ಅದನ್ನು ಸಾರ್ವಜನಿಕ ದೇವಾಲಯವೆಂದು ಧಾರ್ಮಿಕ ಪರಿಷತ್ತು ಘೋಷಿ ಸಬೇಕೆಂದು ಕಾನೂನಿದೆ. ಆದರೆ ಧಾರ್ಮಿಕ ಪರಿಷತ್ತು ಹಲ್ಲಿಲ್ಲದ ಹಾವಾಗಿದೆ. ಇದರ ರಿಮೋಟ್ ಕಂಟ್ರೋಲ್ ಇರುವುದು ಹಿಂದೂ ಸಂಘಟನೆಗಳ ಕೈಯಲ್ಲಿ. ಹಿಂದುಗಳೇ ಒಟ್ಟಾಗಿ ಸಾರ್ವಜನಿಕ ಹಿಂದುಗಳ ಪವಿತ್ರ ಕ್ಷೇತ್ರಗಳನ್ನು ನಾಶಪಡಿಸು ತ್ತಿದ್ದಾರೆ.

ಸಣ್ಣಪುಟ್ಟ ಸಮಸ್ಯೆಗೆ ಹೆದರದೆ ಆರೋಗ್ಯದತ್ತ ಗಮನ ಕೊಡಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೦. ಕಾಲೇಜು ವಿದ್ಯಾರ್ಥಿನಿ. ಹಾಸ್ಟೆಲ್ ನಲ್ಲಿದ್ದೇನೆ. ನನ್ನ ಮುಖದ ಪೂರ್ತಿ ದೊಡ್ಡ ಗಾತ್ರದ ಮೊಡವೆಗಳು ಏಳುತ್ತಿವೆ. ಇದರಿಂದ ನಾನು ಚಿಂತಿತಳಾಗಿದ್ದೇನೆ. ನಾನು ಆರೋಗ್ಯ ವಾಗಿದ್ದು, ಯಾವುದೇ ಸಮಸ್ಯೆಗಳಿಲ್ಲ. ಮೊಡವೆಗಳು ಹೆಚ್ಚೆಚ್ಚು ಬೆಳೆ ಯುವುದರಿಂದ ನನಗೆ ಹೊರಗಡೆ ಹೋಗಿ ಮುಖ ತೋರಿಸಲು ಅಸಹ್ಯವಾಗುತ್ತದೆ. ಈ ಬಗ್ಗೆ ನನ್ನ ಗೆಳತಿಯರಲ್ಲಿ ಕೇಳಿದರೆ ಬೇರೆ, ಬೇರೆ ಕಾರಣ ಹೇಳಿದರು. ಅದು ಸತ್ಯವೇ ಸುಳ್ಳೇ ದಯವಿಟ್ಟು ಉತ್ತ ರಿಸಿ. ನಾನು ವಾರಕ್ಕೊಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದ ರಿಂದ ಮುಖದಲ್ಲಿ ಮೊಡವೆ ಬೆಳೆಯುತ್ತದೆಯೇ? ನಾನು ಬಾಯ್ ಫ್ರೆಂಡ್ ಎಂದು ಯಾರನ್ನೂ ಹೊಂದಿಲ್ಲ. ಮುಖದ ಮೇಲೆ ಬಿದ್ದಿ ರುವ ಮೊಡವೆಗಳನ್ನು ನಾನು ಕೀಳುತ್ತೇನೆ. ಇದು ತಪ್ಪೇ? ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ನೀವು ಸುಮ್ಮನೆ ಹೆದರಿದ್ದೀರಿ. ಮೊಡವೆ ಹದಿಹರೆಯದ ವರಿಗೆ ಬೀಳುವುದು ಸಾಮಾನ್ಯ ಸಂಗತಿಯೇ ಹೊರತು ಇದೇನೂ ದೊಡ್ಡ ರೋಗವಲ್ಲ. ನಿಮ್ಮದು ಮೊಡವೆ ಬೀಳುವ ವಯಸ್ಸು. ಇದಕ್ಕೆ ಹಲವಾರು ಕಾರಣಗಳಿವೆ. ಹೆಚ್ಚಾಗಿ ಬಿಸಿಲಿನಲ್ಲಿ ಒಣಗಿದರೆ ಮುಖ ಬೆವರಿ ಅಲ್ಲಿಯೇ ಒಣಗಿ ಮೊಡವೆ ಏಳಬಹುದು. ಮುಖವನ್ನು ಆಗಾಗ್ಗೆ ಶುದ್ಧನೀರಿನಿಂದ ತಿಕ್ಕಿ ತೊಳೆಯಬೇಕು. ಮುಖದ ಆರೋ ಗ್ಯದ ಕಡೆಗೆ ಗಮನ ಕೊಡದಿದ್ದರೆ ಮೊಡವೆ ಬೀಳುತ್ತದೆ. ಸಾಮಾ ನ್ಯವಾಗಿ ಜಿಡ್ಡಿನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮೊಡವೆ ಬೀಳುತ್ತದೆ. ತೈಲದ ಅಂಶ ಹೊಂದಿರುವ ಚರ್ಮ ಹೊಂದಿರುವ ವರಲ್ಲಿ ಇದರ ಪ್ರಮಾಣ ಹೆಚ್ಚು. ಈ ಬಗ್ಗೆ ಚಿಂತಿಸುವುದು ಮತ್ತು ಮೊಡವೆ ಗಳನ್ನು ಆಗಾಗ ಚಿವುಟುವುದು ತಪ್ಪು. ಇದರಿಂದ ಮುಖದಲ್ಲಿ ಮೊಡವೆ ಮಾಯ ವಾದರೂ ಕಲೆ ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಮೊಡವೆ ಹಣ್ಣಾ ದಾಗ ಮಾತ್ರ ಅದನ್ನು ಕೀಳಬಹುದಾಗಿದೆ. ಮುಖಕ್ಕೆ ಬಿಸಿನೀರಿನ ಹಬೆ ಹಿಡಿದು ಸ್ವಚ್ಛ ವಸ್ತ್ರದಿಂದ ಮೊಡವೆಯೊಳಗಿದ್ದ ನೀರನ್ನು ಬೇರೆ ಕಡೆ ಪಸರಿಸದಂತೆ ಒರೆಸಿ ತೆಗೆಯಿರಿ. ಬಿಸಿಲಿಗೆ ಹೊರಗಡೆ ಹೋಗಿ ಮನೆಗೆ ಬಂದಾಗ ಶುದ್ಧ ವಾದ ನೀರಿನಿಂದ ಮುಖ ತೊಳೆಯುವುದನ್ನು ರೂಢಿ ಮಾಡಿ ಕೊಳ್ಳಿ. ಹೊರಗಡೆ ತೆರಳಿದಾಗ ಮತ್ತು ಮನೆಯಲ್ಲಿದ್ದಾಗಲೂ ಸಾಧ್ಯ ವಾದಷ್ಟು ಬಾರಿ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಮುಖಕ್ಕೆ ಸಾಬೂನು ಬಳಸುವುದು ಬೇಡ. ಇದರಿಂದ ಮುಖದ ತ್ವಚೆ ಶುಷ್ಕವಾಗುತ್ತದೆ. ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆ ಯಿರಿ, ಪರಿಣಾಮ ಖಂಡಿತಾ ಸಿಗಲಿದೆ. ಹೆಚ್ಚು ಬಿಸಿಲಿನಲ್ಲಿ ನಿಲ್ಲ ದಿರಿ. ಎಣ್ಣೆಯ ವಸ್ತುಗಳನ್ನು ತ್ಯಜಿಸಿ. ಹಸ್ತ ಮೈಥುನಕ್ಕೂ ಮೊಡವೆ ಗಳಿಗೂ ಯಾವುದೇ ಸಂಬಂಧವಿಲ್ಲ. ಹಸ್ತಮೈಥುನ ಎನ್ನುವುದು ಸಾಮಾನ್ಯ ಲೈಂಗಿಕ ಚಟುವಟಿಕೆ. ಹದಿಯರೆಯಕ್ಕೆ ಕಾಲಿಟ್ಟ ಗಂಡು-ಹೆಣ್ಣು ತಮ್ಮ ಲೈಂಗಿಕ ಬಯಕೆಯನ್ನು ನಿಗ್ರಹಿಸಲು ಜನನಾಂ ಗವನ್ನು ಕೈ, ಬೆರಳಿನ ಮೂಲಕ ಪ್ರಚೋದಿಸುತ್ತಾರೆ. ಇದನ್ನು ತಪ್ಪೆ ನ್ನಲಾಗದು. ಹಾಗೆಂದು ಇದು ಸರಿ ಎಂದು ಕೂಡಾ ಹೇಳಲಾ ಗದು. ಇದನ್ನು ಬಿಟ್ಟುಬಿಡುವುದು ಒಳ್ಳೆಯದು. ಇದರಿಂದ ದೇಹಾ ರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಕೀಳರಿಮೆ ಉಂಟಾ ಗುತ್ತದೆ. ಕೀಳರಿಮೆಯೇ ಒಂದು ದೊಡ್ಡ ರೋಗ. ಈಗ ಓದುವು ದರ ಕಡೆಗೆ ಗಮನಕೊಡಿ. ಹಾಗೆ ಮಾಡುವುದು ತಪ್ಪು ಎಂದು ಕೊರಗುತ್ತಾ ಕುಳಿತುಕೊಳ್ಳದಿರಿ. ಮುಖದ ಮೊಡವೆಗಳು ವಯ ಸ್ಸಾದಂತೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಈ ಬಗ್ಗೆ ಭಯ ಬೇಡ. ವೈದ್ಯರ ಸಲಹೆ ಮೇರೆಗೆ ಔಷಧಿ, ಕ್ರೀಂ ಪಡೆಯ ಬಹುದಾದರೂ ಇದು ಅಷ್ಟಾಗಿ ಪರಿಣಾಮ ಬೀರುವ ಸಾಧ್ಯತೆಗ ಳಿಲ್ಲ. ಹೀಗಾಗಿ ಈಗ ಹೇಳಿದಷ್ಟು ಮಾಡಿದರೆ ಸಾಕು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)