ಕ್ರಿಕೆಟ್ ಪಂದ್ಯಾಟ ವೇಳೆ ಯುವಕನಿಗೆ ಹಲ್ಲೆ

Posted by JAYAKIRANA Kirana on Sunday, 1 April 2012 | 0 comments | Leave a comment...

ವಿಟ್ಲ: ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ.
ಕೇರಳ ಮೂಲದ ಉಂಬೈ ಎಂಬಾತನೇ ಗಂಭೀರವಾಗಿ ಹಲ್ಲೆಗೊ ಳಗಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಕೇರಳದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳು ಆರೋಪಿಸಿದ್ದಾನೆ. ಕನ್ಯಾನದಲ್ಲಿ ಶನಿವಾರ ರಾತ್ರಿ ಮ್ಯಾಕ್ಸಿನ್ ಗೋಳಿಕಟ್ಟೆ ಎಂಬ ಸಂಘಟನೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ವನ್ನು ಆಯೋಜಿಸಿತ್ತು. ಈ ಪಂದ್ಯಾಟ ವನ್ನು ವೀಕ್ಷಿಸಲೆಂದು ಉಂಬೈ ತನ್ನ ಸ್ನೇಹಿತನ ಜತೆ ಬಂದಿದ್ದ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಆರೋಪಿಗಳಾದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬ ವರು ಕೂಡ ಬಂದಿದ್ದರು. ಈ ಇಬ್ಬರ ತಂಡದ ನಡುವೆ ಈ ಹಿಂದೆಯೂ ಜಗಳವಾಗಿ ದ್ದವು. ಈ ಬಗ್ಗೆ ಕೇರಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮೂವರ ತಂಡ ಉಂಬೈನೊಂದಿಗೆ ಜಗಳ ತೆಗೆದು ಆತನಿಗೆ ಯದ್ವಾತದ್ವಾ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಉಂಬೈಯನ್ನು ಸ್ಥಳೀಯರು ಮಂಗ ಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬ ಮೂವರ ಮೇಲೆ ಪ್ರಕರಣ ದಾಖ ಲಾಗಿದೆ.

ವೇದಿಕೆ ಕೆಳಗೆ ಧರಣಿ ಕುಳಿತ ಪ್ರಾಧ್ಯಾಪಕ!

Posted by JAYAKIRANA Kirana on | 0 comments | Leave a comment...

ವಿದ್ಯಾರ್ಥಿಗಳ ವಿದಾಯಕೂಟದಲ್ಲಿ ಅವಮಾನ
ಬಂಟ್ವಾಳ: ವಿದ್ಯಾರ್ಥಿಗಳ ವಿದಾಯ ಕೂಟ ಕಾರ್ಯಕ್ರಮದಲ್ಲಿ ಮುನಿಸಿ ಕೊಂಡು ಹಿರಿಯ ಪ್ರಾಧ್ಯಾಪಕರೋರ್ವರು ವೇದಿಕೆಯ ನೆಲದ ಮೇಲೆ ಧರಣಿ ಕುಳಿತು ಪ್ರತಿಭಟಿಸಿದ ಸ್ವಾರಸ್ಯಕರ ಘಟನೆಯೊಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭವಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ವಿದಾಯ ಕೂಟ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಾದ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕುತ್ತಾ ಮಾತನಾಡುತ್ತಿದ್ದರು. ಈ ಸಂದರ್ಭ ಅನಿಸಿಕೆ ವ್ಯಕ್ತಪಡಿಸಿದ ಅಂತಿಮ ಪದವಿ ವಿದ್ಯಾರ್ಥಿಯೋರ್ವ ಕಾಲೇಜು ಅಭಿವೃದ್ಧಿಗೆ ವಿದ್ಯಾರ್ಥಿ-ಉಪನ್ಯಾಸಕ ವರ್ಗದ ಪರಸ್ಪರ ಹೊಂದಾ ಣಿಕೆಯ ಅಗತ್ಯ ಇದೆ. ನಮ್ಮ ಕಾಲೇಜಿನ ಅಭಿವೃದ್ಧಿ ಕುಂಠಿತಕ್ಕೆ ಹಿಂದೆ ಪ್ರಾಂಶುಪಾಲರಾಗಿದ್ದ ಡಾ. ಕೃಷ್ಣಪ್ಪ ಮಡಿವಾಳ ಅವರೇ ಕಾರಣ. ಅವರು ಪ್ರಾಂಶುಪಾಲರ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾನೂನು ಸಂಘರ್ಷ ವನ್ನು ಎದುರಿಸಬೇಕಾದ ಅನಿವಾರ್ಯವೂ ಒದಗಿತ್ತೆಂದು ಆರೋಪಿಸಿದರು.
ವಿದ್ಯಾರ್ಥಿಯ ಮಾತು ಕೇಳಿದ ಮಾಜಿ ಪ್ರಾಂಶುಪಾಲ ಹಾಗೂ ಹಾಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಕೃಷ್ಣಪ್ಪ ಮಡಿವಾಳ ಅವರು ಸಿಡಿಮಿಡಿಗೊಂಡರು. ವಿದ್ಯಾರ್ಥಿ ಹೇಳಿಕೆಗೆ ತೀವ್ರ ಖಂಡನೆ ಸೂಚಿಸಿದರು. ಇಷ್ಟಕ್ಕೆ ಸಮಾಧಾನಗೊಳ್ಳದ ಅವರು ವೇದಿಕೆಯ ಕೆಳಭಾಗ ನೆಲದ ಮೇಲೆ ಕುಳಿತು ವಿದ್ಯಾರ್ಥಿಗೆ ಧಿಕ್ಕಾರ ಕೂಗಿದರು. ಪ್ರಾಧ್ಯಾಪಕರ ವಿರುದ್ಧ ಹೇಳಿಕೆ ನೀಡಿದ ವಿದ್ಯಾರ್ಥಿ ಮೇಲೆ ಕ್ರಮ ಜರುಗಿಸದ ಪ್ರಾಂಶುಪಾಲರಿಗೂ ಧಿಕ್ಕಾರ ಹೇಳಿದರು. ಮಡಿವಾಳರ ಸಿಟ್ಟು ಇಡೀ ಸಭಾಂಗಣವನ್ನೇ ಬೆಚ್ಚಿ ಬೀಳಿಸಿದರೆ, ಕೆಲವು ವಿದ್ಯಾರ್ಥಿಗಳಿಗೆ ವ್ಯಂಗ್ಯವಾಗಿ ಕಂಡಿತು. ನೆಲದ ಮೇಲೆಯೇ ಕುಳಿತು ತಮ್ಮ ಆಕ್ರೋಶವನ್ನು ಪ್ರದರ್ಶಿಸಿದ್ದ ಮಡಿವಾಳರನ್ನು ಸಮಾಧಾನಗೊಳಿಸಲು ಉಪನ್ಯಾಸಕರು ತ್ರಾಸಪಡಬೇಕಾಯಿತು. ಕೊನೆಗೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ವಿದ್ಯಾರ್ಥಿಯ ಮನವೊಲಿಸಿದ್ದು, ಆತ ಕ್ಷಮೆಯಾಚಿಸಿದ್ದರಿಂದ ಪ್ರಕರಣ ಇತ್ಯರ್ಥಗೊಂಡಿತು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧ್ಯಾಪಕ ಡಾ| ಕೃಷ್ಣಪ್ಪ ಮಡಿವಾಳ ಅವರು ಘಟನೆಗೆ ಪ್ರಾಂಶುಪಾಲರೇ ಕಾರಣ ಎಂದು ಆರೋಪಿಸಿದ್ದಾರೆ. ನಾನು ಪ್ರಾಂಶುಪಾಲನಾಗಿದ್ದ ಅವಧಿಯಲ್ಲಿ ತುಂಬಾ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿದ್ದೆ. ಈಗಿನವರು ಯಾವುದಕ್ಕೂ ಏನೂ ಶಿಸ್ತು ಕ್ರಮ ಜರುಗಿಸುವುದಿಲ್ಲ. ಇದರಿಂದ ಕಾಲೇಜು ಅಭಿವೃದ್ಧಿಯಾಗಲು ಸಾಧ್ಯವೇ? ಆದರೂ ಎಲ್ಲಾ ಅವ್ಯವಸ್ಥೆಯನ್ನು ನನ್ನ ಮೇಲೆ ಹಾಕಲಾಗುತ್ತಿದೆ. ನನ್ನನ್ನು ಅವಮಾನಿಸಲೆಂದು ಈ ಘಟನೆ ವ್ಯವಸ್ಥಿತವಾಗಿಯೇ ನಡೆದಿದ್ದು, ವಿದ್ಯಾರ್ಥಿಗಳ ವಿದಾಯಕೂಟಕ್ಕೆ ನಾನು ಭಾಗ ವಹಿಸಲು ಆಸಕ್ತಿ ತೋರಿಸಿರಲಿಲ್ಲ. ಆದರೂ ಕೆಲವು ಆಪ್ತ ವಿದ್ಯಾರ್ಥಿಗಳ ಒತ್ತಾಯಕ್ಕೆ ಕಾರ್ಯಕ್ರಮಕ್ಕೆ ಹೋದೆ. ವಿದ್ಯಾರ್ಥಿ ನೀಡಿದ ಹೇಳಿಕೆ ನನ್ನನ್ನು ಅವಮಾನಕ್ಕೀಡುಮಾಡಿದ್ದು, ಧರಣಿ ಕುಳಿತುಕೊಳ್ಳುವುದು ಅನಿವಾರ್ಯವಾ ಗಿತ್ತೆಂದವರು ನೋವನ್ನು ತೋಡಿಕೊಂಡಿದ್ದಾರೆ.

ದೋಣಿ ಇನ್ನೂ ನಾಪತ್ತೆ

Posted by JAYAKIRANA Kirana on | 0 comments | Leave a comment...

ಉಡುಪಿ: ದೋಣಿ ವಿಹಾರ ಕೇಂದ್ರದ ಫಲಕಕ್ಕೆ ನಾಲ್ಕು ವರ್ಷ
ಉಡುಪಿ: ಕರ್ನಾಟಕ ಅರಣ್ಯ ಇಲಾಖೆಯ ಯೋಜನೆ ಯೊಂದು ಕೇವಲ ಫಲಕದಲ್ಲಷ್ಟೇ ಅನುಷ್ಠಾನಗೊಂಡ ಪ್ರಸಂಗವೊಂದು ನಾಲ್ಕು ವರ್ಷಗಳ ಬಳಿಕ ಇದೀಗ ಬಹಿರಂಗೊಂಡಿದೆ.
ಅರಣ್ಯ ಇಲಾಖೆಯ ಕುಂದಾಪುರ ವಿಭಾಗವು ಕುಂದಾಪುರ ವಲಯ ವ್ಯಾಪ್ತಿಯ ಜಾಲಾಡಿ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ- ೧೭ರ ಪಕ್ಕದ ನದಿಯೊಂದರಲ್ಲಿ ದೋಣಿ ವಿಹಾರ ಕೇಂದ್ರವೊಂದನ್ನು ಆರಂಭಿಸುವುದಾಗಿ ೨೦೦೭-೦೮ರ ಸಾಲಿನಲ್ಲಿ ಘೋಷಿಸಿತ್ತು.
ಹೀಗೆ ಘೋಷಣೆ ಮಾಡಿದ್ದು ಕೇವಲ ಬಾಯಿ ಮಾತಿನಲ್ಲಷ್ಟೇ ಅಲ್ಲ, ಅದ್ದೂರಿ ಸಮಾರಂಭದಲ್ಲಿ. ಜಾಲಡಿಯ ವಿಶಾಲವಾದ ಗದ್ದೆಯಲ್ಲಿ ನಿರ್ಮಿಸಿದ ಭಾರೀ ವೇದಿಕೆಯಲ್ಲಿ. ನೂರಾರು ಜನರ ಸಮ್ಮುಖದಲ್ಲಿ. ಸಚಿವರು, ಅರಣ್ಯ ಇಲಾಖೆಯ ಬಹುತೇಕ ಎಲ್ಲಾ ಅಧಿಕಾರಿಗಳು ಹಾಗೂ ಉಡುಪಿ ಮತ್ತು ಕುಂದಾಪುರದ ಪತ್ರಕರ್ತರಿದ್ದರು
ಸಮಾರಂಭದಂದು ಕಾಂಡ್ಲಾ ವೀಕ್ಷಣಾ ಪಥ ಹಾಗೂ ದೋಣಿ ವಿಹಾರ ಕೇಂದ್ರ-ಜಾಲಾಡಿ ಎಂಬ ಫಲಕ ಅನಾವರಣಗೊಂಡಿತು. ಕಾಂಡ್ಲಾ ವನವೇನೋ ಇದೆ. ಆದರೆ ದೋಣಿ ಮಾತ್ರ ನಾಲ್ಕು ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ. ಕೇಂದ್ರ ಪುರಸ್ಕೃತ ಕಾಂಡ್ಲಾ ಯೋಜನೆಯಡಿಯಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸ ಲಾಗುತ್ತಿದೆ ಎಂದು ನಾಮಫಲಕದಲ್ಲಿ ಹೇಳಲಾಗಿದೆ. ಆದರೆ ಈ ಯೋಜನೆಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬಿತ್ಯಾದಿ ವಿಷಯಗಳನ್ನು ಪ್ರಕಟಿಸಲಾಗಿಲ್ಲ.
ಜಾಲಾಡಿಯಲ್ಲಿ ಹೇಗೆ ದೋಣಿ ವಿಹಾರ ಕೇಂದ್ರದ ಬಗ್ಗೆ ಮಾಹಿತಿ ಫಲಕವಿದೆಯೋ, ಅದೇ ರೀತಿ ಅರಣ್ಯ ಇಲಾಖೆಯ ಕಡತಗಳಲ್ಲಿಯೂ ದೋಣಿ ವಿಹಾರ ಕೇಂದ್ರದ ಬಗ್ಗೆ, ಇದಕ್ಕೆ ತಗಲಿದ ಮತ್ತು ಪ್ರತಿವರ್ಷ ಮಾಡುತ್ತಿರುವ ವೆಚ್ಚದ ಬಗ್ಗೆಯೂ ಕಡತಗಳಲ್ಲಿ ದಾಖಲಾಗದೇ ಇರಲು ಸಾಧ್ಯವಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಕಾಂಡ್ಲಾ ಪಥದಲ್ಲಿ, ದೋಣಿ ವಿಹಾರ ಯಾವ ನದಿಯಲ್ಲಿ ನಡೆಯಬೇಕಾಗಿತ್ತೋ ಆ ನದಿಯಲ್ಲಿ ಎಷ್ಟು ನೀರು ಹರಿದಿದೆಯೋ, ಹಾಗೆಯೇ ಇಲ್ಲಿ ಇಲ್ಲದ ದೋಣಿ ವಿಹಾರಕ್ಕಾಗಿಯೂ ನೀರಿನ ಬದಲಾಗಿ ಹಣ ಹರಿದಿರಬಹುದು!

ಬಜ್ಪೆ: ದರೋಡೆಗೆ ಸ್ಥಳೀಯನೇ ಸೂತ್ರಧಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಾಡಹಗಲೇ ಮನೆಯಲ್ಲಿದ್ದ ಒಂಟಿ ಯುವತಿ ಯನ್ನು ಕಟ್ಟಿಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ವೇಳೆ ದರೋಡೆ ಕೃತ್ಯಕ್ಕೆ ಸ್ಥಳೀಯನೇ ಸಂಚು ರೂಪಿ ಸಿರುವುದು ಬಹಿರಂಗಗೊಂಡಿದೆ. ಬಂಧಿತರನ್ನು ಬಜ್ಪೆ ಪಡುಪೆರಾರ್ ನಿವಾಸಿ ಚೇತನ್, ಪಶ್ಚಿಮ ಬಂಗಾಲದ ಕೃಷ್ಣ ಬಿಲಾಲ್ ಮತ್ತು ಬಚ್ಚು ಮೆಂಡನ್ ಎಂದು ಗುರುತಿಸ ಲಾಗಿದೆ. ಕಳೆದ ತಿಂಗಳು ೨೭ರಂದು ಬೆಳಗ್ಗೆ ೧೧.೩೦ರ ವೇಳೆಗೆ ಬಜ್ಪೆ ಠಾಣಾ ವ್ಯಾಪ್ತಿಯ ಪಡುಪೆರಾರ್ ಗ್ರಾಮದ ಸುಂಕದಕಟ್ಟೆ ಎಂಬಲ್ಲಿರುವ ಸರೋಜ ಸಾಲ್ಯಾನ್ ಎಂಬವರ ಮನೆಯಲ್ಲಿ ದರೋಡೆ ಕೃತ್ಯ ನಡೆದಿತ್ತು. ಅಂದು ಬೆಳಗ್ಗೆ ಸರೋಜ ಮತ್ತು ಅವರ ಮಗಳು ರಚನಾ ಮನೆಯಿಂದ ಹೊರಗೆ ಹೋಗಿದ್ದು ಸರೋಜ ಅವರ ಅಕ್ಕನ ಮಗಳು ಗೀತಾ ಮಾತ್ರವೇ ಮನೆಯಲ್ಲಿದ್ದರು.
ಅದೇ ಸಮಯವನ್ನು ಉಪಯೋಗಿಸಿಕೊಂಡ ಆರೋಪಿಗಳು ಮನೆಯ ಹಿಂಬಾಗಿಲಿನಿಂದ ಒಳ ಪ್ರವೇಶಿಸಿ ಗೀತಾ ಅವರ ಕೈಕಾಲುಗಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ
ಕಪಾಟಿನಲ್ಲಿದ್ದ ೧೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ದ್ದರು. ಪ್ರಕರಣವನ್ನು ದಾಖಲಿಸಿದ್ದ ಬಜ್ಪೆ ಪೊಲೀಸರು ತನಿಖೆಯನ್ನು ತೀವ್ರ ಗೊಳಿಸಿದ್ದರು. ಇದೇ ವೇಳೆ ಆರೋಪಿಗಳ ಬಗ್ಗೆ ಮಾಹಿತಿ ದೊರಕಿದ ಹಿನ್ನೆಲೆ ಯಲ್ಲಿ ಅವರು ಇರುವ ಜಾಡನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ಚೇತನ್ ಸ್ಥಳೀಯನಾಗಿದ್ದು ಆತನ ಮೇಲೆ ಈಗಾಗಲೇ ಸಣ್ಣಪುಟ್ಟ ಕೇಸುಗಳೂ ಠಾಣೆಯಲ್ಲಿ ದಾಖಲಾಗಿವೆ. ಆತ ಹಿಂದೆ ಮುಂಬೈಯಲ್ಲಿ ಕೆಲಸದಲ್ಲಿದ್ದು ಆ ಸಂದರ್ಭ ಇನ್ನಿಬ್ಬರು ಆರೋಪಿಗಳ ಪರಿಚಯವಾಗಿತ್ತು. ಇದೇ ಪರಿಚಯ ದರೋಡೆ ನಡೆಸುವವರೆಗೂ ಮುಂದುವರಿದಿದ್ದು ಈಗ ಜೈಲು ಸೇರಲು ಕಾರಣವಾಗಿದೆ.
ಪ.ಬಂ.ಕ್ಕೆ ಹೋಗಿದ್ದರೆ ಬಂಧನ ಕಷ್ಟವಾಗುತ್ತಿತ್ತು: ಕಮಿಷನರ್
ಆರೋಪಿಗಳು ಪಶ್ಚಿಮ ಬಂಗಾಲದವರೆನ್ನುವ ಮಾಹಿತಿ ಲಭಿಸಿದ ಕೂಡಲೇ ಅಲ್ಲಿನ ಪೊಲೀಸ್ ಇಲಾಖೆಗಳಿಗೆ ಬೆರಳಚ್ಚು ವರದಿಯನ್ನು ಕಳುಹಿಸಲಾಗಿತ್ತು. ಅಲ್ಲದೆ ವಿಶಾಖ ಪಟ್ಟಣ ಪೊಲೀಸರಿಂದಲೂ ಸಹಕಾರ ಯಾಚಿಸಲಾಗಿದ್ದು ಅವರಿಂದ ಸಂಪೂರ್ಣ ಸಹಕಾರವೂ ದೊರೆತ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನ ಸಾಧ್ಯವಾಗಿದೆ. ಒಂದು ವೇಳೆ ಆರೋಪಿಗಳು ಪಶ್ಚಿಮ ಬಂಗಾಲಕ್ಕೆ ಹೋಗಿದ್ದರೆ ಬಂಧನ ಕಷ್ಟವಾಗುತ್ತಿತ್ತಲ್ಲದೆ ದರೋಡೆಗೊಳಪಟ್ಟ ಚಿನ್ನಾಭರಣ ಗಳು ಸಿಗುತ್ತಿರಲಿಲ್ಲ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮನೆಮಂದಿ
ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸರೋಜ ಸಾಲ್ಯಾನ್ ಕುಟುಂಬಸ್ಥರಿಗೆ ಭಾಗವಹಿಸಲು ಅನುಮತಿ ನೀಡಿದ್ದು ವಿಶೇಷವಾಗಿತ್ತು. ಇದನ್ನು ಸಮರ್ಥಿಸಿದ ಕಮಿಷನರ್, ಆರೋಪಿಗಳ ಬಂಧನದಿಂದ ದರೋಡೆಗೊಳಗಾದ ಮನೆಯವರು ಸಂತಸಗೊಂಡಿದ್ದು ಪತ್ರಿಕಾಗೋಷ್ಟಿಯಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದರು ಎಂದರು. ಇದೇ ಸಂದರ್ಭ ಸರೋಜ ಅವರು ಬಜ್ಪೆ ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ಮತ್ತು ತಂಡಕ್ಕೆ ೨೫ ಸಾವಿರ ಹಾಗೂ ಅಪರಾಧ ಪತ್ತೆದಳದ ಕಾನ್‌ಸ್ಟೇಬಲ್ ಜಯಾನಂದ ಅವರಿಗೆ ಎರಡು ಸಾವಿರ ನಗದು ಬಹುಮಾನ ಘೋಷಿಸಿದರು.
ಈ ಕಾರ್ಯಾಚರಣೆಯಲ್ಲಿ ಡಿಸಿಪಿ ಮುತ್ತುರಾಯ್, ಡಿಸಿಪಿ ಅಪರಾಧ ವಿಭಾಗದ ಧರ್ಮಯ್ಯ ಮತ್ತು ಎಸಿಪಿ ಪುಟ್ಟಮಾದಯ್ಯ ಅವರ ಮಾರ್ಗ ದರ್ಶನದಲ್ಲಿ ಇನ್ಸ್‌ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದಲ್ಲಿ ಎಸ್‌ಐ ಅನಂತ ಮುರ್ಡೇಶ್ವರ, ಎಎಸ್‌ಐ ಶಂಕರ್, ಸಿಬ್ಬಂದಿ ಜಯಾನಂದ, ಬಸವರಾಜ್, ಸತೀಶ್ ಮತ್ತು ಸಂತೋಷ ಭಾಗವಹಿಸಿದ್ದರು.

ರಾಗಿಣಿ ಜೊತೆ ಲೂಸ್ ಮಾದ ‘ಚೆಲ್ಲಾಟ’

Posted by JAYAKIRANA Kirana on | 0 comments | Leave a comment...

ದುಬೈ ಕನ್ನಡ ಸಂಘಕ್ಕೆ ಪೀಕಲಾಟ
ಬೆಂಗಳೂರು: ರಾಗಿಣಿ ಅನ್ನೋ ನೀಳಕಾಯದ ಸುಂದರಿ ಕನ್ನಡ ಚಿತ್ರ ರಂಗದಲ್ಲಿ ಓಡಾಡಿದ ಕಡೆಯೆಲ್ಲ ಗಾಸಿಪ್ ಇದ್ದಿದ್ದೇ. ಸುದೀಪ್ ಜೊತೆ ಗಪ್‌ಚುಪ್ ಆಗಿದ್ದ ಸ್ನೇಹ ಒಂದೊಮ್ಮೆ ಗಾಂಧಿನಗರದ ಮಂದಿಯ ಬಾಯ ಲ್ಲೆಲ್ಲ ಹರಿದಾಡತೊಡಗಿದಾಗ ರಾಗಿಣಿ ಸೊಲ್ಲೆತ್ತದೆ ಕಿಚ್ಚನ ಸಂಗದಿಂದ ದೂರ ವಾಗಿ ವಿವಾದಕ್ಕೆ ತೆರೆ ಎಳೆದದ್ದು ಹಳೇ ಸುದ್ದಿ. ಆದ್ರೆ ಈಗ ಇದೇ ಸುಂದರಿ ಕನ್ನಡದ ಲೂಸ್ ನಟ ಎಂದೇ ಹೆಸರು ಪಡೆದಿರುವ ಯೋಗಿ ಯ ಜೊತೆ 'ಚೆಲ್ಲಾಟ'ವಾಡುತ್ತಿರುವ ಸುದ್ದಿ ಗಾಂಧಿನಗರದಲ್ಲಿ ಚಾಲ್ತಿ ಯಲ್ಲಿದೆ.
ಎರಡು ವಾರಗಳ ಹಿಂದೆ ದುಬೈ ಕನ್ನಡ ಸಂಘದವರು ಕನ್ನಡ ಚಿತ್ರ ರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರ ಕಾರ್ಯಕ್ರಮವನ್ನು ಅಲ್ಲಿ ಆಯೋಜಿ ಸಿದ್ದರು. ಜೊತೆಗೆ ಜನರಿಗೆ ಒಂದಿಷ್ಟು ಮನರಂಜನೆಯೂ ಇರಲಿ ಲೂಸ್ ಮತ್ತು ರಾಗಿಣಿಯನ್ನೂ ವಿಶೇಷವಾಗಿ ಆಹ್ವಾನಿಸಿದ್ದರು.
ಇವರಿಗೆ ಸಂಗೀತ ನಿರ್ದೇಶಕರ ಟೀಂ ಜೊತೆ ದುಬೈಗೆ ಹೋಗು ವಲ್ಲಿಂದ ಹಿಡಿದು ಅಲ್ಲಿ ತಿನ್ನೋಕೆ-ಉಳಿಯೋಕೆ ಎಲ್ಲದಕ್ಕೂ ಐಷಾರಾಮಿ ವ್ಯವಸ್ಥೆ ಕಲ್ಪಿಸಿದ್ದರು. ಅದರಂತೆ ನಿರ್ದಿಷ್ಟ ದಿನದಂದು ಈ ಜೋಡಿ ದುಬೈಗೆ ಹಾರಿಯೂಬಿಟ್ಟಿತ್ತು. ಆದರೆ ಅಲ್ಲಿ ಕಾರ್ಯಕ್ರಮದ ದಿನ ಈ ಜೋಡಿ ನಡೆದುಕೊಂಡ ರೀತಿ ಖುದ್ದು ಕಾರ್ಯಕ್ರಮ ಸಂಘಟಕರಿಗೇ ಪೀಕಲಾಟವನ್ನುಂಟು ಮಾಡಿತ್ತು ಎನ್ನುವುದೇ ಲೇಟೆಸ್ಟ್ ಸುದ್ದಿ.
ಕಾರ್ಯಕ್ರಮ ನಡೆಯುವಾಗ ಸಂಘಟಕರು ಭಾರೀ ಮುತುವರ್ಜಿಯಿಂದ ಜೋಡಿಯನ್ನು ವೇದಿಕೆಗೆ ಆಹ್ವಾನಿಸಿದ್ದರೆ ಲೂಸ್ ಜೊತೆ ಕುಳಿತಿದ್ದ ರಾಗಿಣಿ ಅದಕ್ಕೂ ನಿರಾಕರಿಸಿದ್ದಳು. ಆ ಬಳಿಕ ಅದ್ಹೇಗೋ ಸಂಘಟಕರ ಒಪ್ಪಿಗೆಯ ಮೇರೆಗೆ ವೇದಿಕೆ ಹತ್ತಿದ್ದ ಜೋಡಿ ಒಂದಿಷ್ಟು ಹೊತ್ತು ವೇದಿಕೆಯಲ್ಲಿದ್ದು, ಬಳಿಕ ಶಾಪಿಂಗ್ ನೆಪದಲ್ಲಿ ಅಲ್ಲಿಂದ ಹೊರಬಿದ್ದಿತ್ತು ಎಂದು ಹೇಳಲಾಗಿದೆ. ರಾತ್ರಿ ಲೂಸ್ ಹಾಗೂ ರಾಗಿಣಿಗೆ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಪ್ರತ್ಯೇಕ-ಪ್ರತ್ಯೇಕ ರೂಂ ಅನ್ನೂ ಕಾಯ್ದಿರಿಸಲಾಗಿತ್ತಂತೆ. ಮಧ್ಯರಾತ್ರಿಯ ಸಮಯ ಹೋಟೆಲ್‌ಗೆ ಬಂದ ಇವರು ತಮ್ಮ ರೂಂಗಳನ್ನು ಹೊಕ್ಕಿದವರೇ, ಮತ್ತೆ ಏನೋ ನೆನಪಾದವರಂತೆ ಹೊರಗೆ ಬಂದು ಒಂದೇ ರೂಂನಲ್ಲಿ ಉಳಿದು ಕೊಂಡರು ಎಂದು ಹೇಳಲಾಗಿದೆ.
ಮರುದಿನವೂ ಶಾಪಿಂಗ್, ಪಾರ್ಟಿ ಎಂದು ಓಡಾಡಿಕೊಂಡಿದ್ದ ಜೋಡಿ ಎರಡು ದಿನವನ್ನು ಸಂಘಟಕರ ಖರ್ಚಿನಿಂದ ಅದೇ ಹೋಟೆಲ್‌ನಲ್ಲಿ ಭರ್ಜರಿಯಾಗಿ ಕಳೆದು ಬೆಂಗಳೂರಿಗೆ ಮರಳಿದೆಯಂತೆ. ಇಷ್ಟೂ ಸಾಲದೆಂಬಂತೆ ಈಗೀಗ ಹೋದಲ್ಲಿ, ಬಂದಲ್ಲಿ ಜೊತೆಯಾಗಿಯೇ ಓಡಾಡಿಕೊಂಡಿರುವ ಈ ಜೋಡಿ ಕೆಲವು ದಿನಗಳ ಹಿಂದೆ ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ವೇಳೆ ಬಜ್ಪೆ ಏರ್‌ಪೋರ್ಟ್‌ನಲ್ಲೂ ಜೊತೆಯಾಗಿಯೇ ಕೈ-ಕೈ ಹಿಡಿದು ಕಂಡುಬಂದಿತ್ತು. ಕೆಲವು ಸಮಯದ ಹಿಂದೆ ಕನ್ನಡ ಚಿತ್ರರಂಗದ ನವನಟಿಯೊಬ್ಬಳ ಜೊತೆ ಸಾಕಷ್ಟು ಮುಂದುವರಿದಿದ್ದ ಲೂಸ್ ಬಳಿಕ ಆಕೆಯನ್ನು ಅರ್ಧದಲ್ಲೇ ಕೈಬಿಟ್ಟಿದ್ದ ಸುದ್ದಿ ಇನ್ನೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ರಾಗಿಣಿ ಜೊತೆ ಸದ್ಯ ಬಂಗಾರಿ ಚಿತ್ರದಲ್ಲಿ ನಟಿಸುತ್ತಿರುವ ಲೂಸ್‌ಗೆ ಚಿತ್ರದಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯವನ್ನು ನಿರ್ದೇಶಕರು ಒದಗಿಸಿದ್ದು, ರಾಗಿಣಿ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿರುವುದೂ ನಡೆದಿದೆ. ಇದೆಲ್ಲ ಚಿತ್ರದ ಅವಶ್ಯಕತೆ ಎಂದು ರಾಗಿಣಿ ರಾಗ ಎಳೆದಿದ್ದರೂ ಇದರ ಹಿಂದೆ ಬೇರೆಯೇ ಕಾರಣ ಇದೆ ಎಂದು ಆಡಿಕೊಳ್ಳುತ್ತಿದ್ದಾರೆ ಬಲ್ಲವರು.
ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟ-ನಟಿ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ವಿದೇಶಕ್ಕೆ ತೆರಳಿದ್ದ ವೇಳೆ ಸಂಘಟಕರಿಗೆ ಕ್ಯಾರೇ ಅನ್ನದೆ ತಮ್ಮದೇ ಇಷ್ಟದಂತೆ ನಡೆದುಕೊಂಡಿರುವುದು ಟೀಕೆಗೆ ಗುರಿಯಾಗಿದೆ ಮಾತ್ರವಲ್ಲದೆ ಸಂಘಟಕರ ಮುಜುಗರಕ್ಕೂ ಕಾರಣವಾಗಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ಇವರನ್ನು ವಿದೇಶಕ್ಕೆ ಕರೆಸಿಕೊಂಡಿರುವ ಪುಣ್ಯಾತ್ಮರು ಸಾಕಪ್ಪಾ ಸಾಕು ಚಿತ್ರರಂಗದವರ ಸಹವಾಸ ಎಂದು ತಲೆಬಿಸಿ ಮಾಡಿಕೊಂಡಿದ್ದಾರಂತೆ.

ಎಸ್‌ಸಿ-ಎಸ್‌ಟಿ ಸಭೆಯಲ್ಲಿ ಆಕ್ರೋಶ

Posted by JAYAKIRANA Kirana on | 0 comments | Leave a comment...

ನಕ್ಸಲ್ ಪಟ್ಟಕ್ಕೆ ಭಗತ್‌ಸಿಂಗ್ ಪುಸ್ತಕಗಳೇ ಆಧಾರ
ಮಂಗಳೂರು: ಮನೆಯಲ್ಲಿದ್ದ ಪ್ಲೇಟು. ಚೊಂಬು, ಸಕ್ಕರೆ, ಚಾಹುಡಿ, ಕಾಫಿಹುಡಿ, ಭಗತ್ ಸಿಂಗ್‌ರ ಚರಿತ್ರೆ ಇರುವ ಪುಸ್ತಕಗಳನ್ನೇ ಆಧಾರವಾಗಿಟ್ಟು ಕೊಂಡು ಬೆಳ್ತಂಗಡಿಯ ಲಿಂಗಣ್ಣ ಮತ್ತು ಅವರ ಪುತ್ರ ವಿಠಲರನ್ನು ನಕ್ಸಲ್ ನಿಗ್ರಹ ದಳ ಬಂಧಿಸಿದೆ. ಮನೆಯಲ್ಲಿ ಸಕ್ಕರೆ, ಚಾಹುಡಿ, ಭಗತ್ ಸಿಂಗ್ ಬಗೆ ಗಿನ ಪುಸ್ತಕ ಇಡುವುದೇ ಅಪರಾಧವೇ? ಇದು ನಿನ್ನೆ ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ ನಡೆದ ದಲಿತ ಕುಂದು-ಕೊರತೆಗಳ ಸಭೆಯಲ್ಲಿ ಮುಖಂಡರಿಂದ ಕೇಳಿ ಬಂದ ಪ್ರಶ್ನೆಗಳು. ಸಭೆಯ ಆರಂಭದಲ್ಲೇ ದಲಿತ ಹಕ್ಕುಗಳ ಹೋರಾಟ ಸಮಿತಿಯ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶೇಖರ್, ನಕ್ಸಲ್ ನಿಗ್ರಹದಳದ ಕಾರ್ಯಾಚರಣೆ ವಿರುದ್ಧ ಹರಿಹಾಯ್ದರಲ್ಲದೆ ಪೊಲೀಸ್ ಇಲಾಖೆಗೂ ಸವಾಲು ಹಾಕಿದರು. ಎಎನ್‌ಎಫ್ ಪ್ರಕಾರ ಭಗತ್ ಸಿಂಗ್ ಬಗೆಗಿನ ಪುಸ್ತಕ ನಕ್ಸಲ್ ಸಾಹಿತಿಯಾಗುವುದಾದರೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿವಿಧ ನಾಯಕರ ಬಗ್ಗೆ ಬರುವ ಲೇಖನಗಳನ್ನು ಸಂಗ್ರಹಿಸುವವರಿದ್ದು ಅವರೆಲ್ಲರೂ ನಕ್ಸಲರೇ ಎಂದು ಪ್ರಶ್ನಿಸಿದ ಶೇಖರ್, ಗಾಂಧೀಜಿಯವರ ಬಗೆಗಿನ ಪುಸ್ತಕ ಓದಿದ ಕೂಡಲೇ ಆತ ಗಾಂಧಿಯಾಗುವುದಿಲ್ಲ ಎನ್ನುವುದನ್ನು ಪೊಲೀಸ್ ಇಲಾಖೆ ಅರಿತುಕೊಳ್ಳಬೇಕು ಎನ್ನುವ ಸಲಹೆ ನೀಡಿದರಲ್ಲದೆ ಸಿಆರ್‌ಇ ಸೆಲ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚೆಯ ಸಂದರ್ಭದಲ್ಲೇ ಎಸ್‌ಪಿಯವರು ಜಿಲ್ಲೆಯಲ್ಲಿ ನಕ್ಸಲರು ಇದ್ದಾರಾ, ಇಲ್ಲವಾ ಎಂದು ಪ್ರಶ್ನಿಸಿದ್ದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಎಸ್‌ಪಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಪ್ರಶ್ನೆ ನೀವು ನಮ್ಮಲ್ಲಿ ಕೇಳುವುದಾದರೆ ನೀವು ಇಲ್ಲಿ ಕುಳಿತುಕೊಳ್ಳಿ, ನಾವು ಅಲ್ಲಿ ಕೂರುತ್ತೇವೆ ಎಂದಾಗ ಅಡಿಷನಲ್ ಎಸ್‌ಪಿ ಪ್ರಭಾಕರ್ ಕೆರಳಿದ್ದೂ ನಡೆಯಿತು.
ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಿ
ಸಭೆಯಲ್ಲಿ ಮಾತನಾಡಿದ ಶೇಖರ್, ನಕ್ಸಲ್ ನಿಗ್ರಹದಳದ ಪೊಲೀಸರು ಲಿಂಗಣ್ಣ ಮತ್ತು ವಿಠಲ ಅವರ ಮೇಲೆ ನಕ್ಸಲ್ ಪಟ್ಟ ಕಟ್ಟಿ ಬಂಧಿಸಿ ದೌರ್ಜನ್ಯ ಎಸಗಿದ್ದಾರೆ. ಈ ಸಂದರ್ಭ ಸಿಆರ್‌ಇಸೆಲ್‌ನವರೂ ಮಧ್ಯಪ್ರವೇಶಿಸಿಲ್ಲ ಎಂದು ಆರೋಪಿಸಿದರು. ಅವರ ಆರೋಪಕ್ಕೆ ಉತ್ತರ ನೀಡಿದ ಇಲಾಖೆಯ ಎಸ್‌ಪಿ ಸರ್ವೋತ್ತಮ್ ಪೈ, ದೌರ್ಜನ್ಯದ ಬಗ್ಗೆ ನಮಗೆ ಯಾವುದೇ ರೀತಿಯ ದೂರು ಬಂದಿಲ್ಲ. ಅಲ್ಲದೆ ಇದರ ಬಗ್ಗೆ ಬಂಧನಕ್ಕೊಳಗಾದವರು ನ್ಯಾಯಾಧೀಶರಿಗೂ ದೂರು ನೀಡಿಲ್ಲ. ಆದರೂ ದೌರ್ಜನ್ಯ ನಡೆದಿದೆಯೆಂದಾರೆ ಮಾನವ ಹಕ್ಕು ಅಯೋಗಕ್ಕೆ ದೂರು ನೀಡಬಹುದು ಎನ್ನುವ ಸಲಹೆ ನೀಡಿದರು.

ವಿಜಯವಾಣಿ ನೂತನ ಕನ್ನಡ ದಿನಪತ್ರಿಕೆಗೆ ಚಾಲನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ವಿಆರ್‌ಎಲ್ ಬಳಗದ ನೂತನ ದಿನಪತ್ರಿಕೆ ವಿಜಯವಾಣಿಗೆ ಕೂಳೂರು ವಿಆರ್‌ಎಲ್ ಕಾಂಪ್ಲೆಕ್ಸ್‌ನಲ್ಲಿರುವ ಪತ್ರಿಕೆ ಕಚೇರಿಯಲ್ಲ್ಲಿ ನಿನ್ನೆ ಚಾಲನೆ ನೀಡಲಾಯಿತು.
ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತೊಂದು ದಾಖಲೆ ಸ್ಥಾಪಿಸಿದ್ದ ವಿಜಯಕರ್ನಾಟಕ ಪತ್ರಿಕೆಯನ್ನು ಹುಟ್ಟು ಹಾಕಿ ಆನಂತರ ಟೈಮ್ಸ್ ಕಂಪೆನಿಗೆ ಮಾರಿದ್ದ ವಿಜಯ ಸಂಕೇಶ್ವರ ಐದು ವರ್ಷಗಳ ನಂತರ ಮತ್ತೆ ಮಾಧ್ಯಮ ರಂಗಕ್ಕೆ ಬಂದಿದ್ದು, ಹೊಸತೊಂದು ಆಶಯದೊಂದಿಗೆ 'ವಿಜಯವಾಣಿ' ಎನ್ನುವ ನೂತನ ಪತ್ರಿಕೆಯನ್ನು ಹುಟ್ಟು ಹಾಕಿದ್ದಾರೆ.
ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ ಬರುತ್ತದೆ ಎನ್ನುವ ಸುದ್ದಿಯೇ ಕನ್ನಡ ಪತ್ರಿಕೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಓದುಗರು ಕುತೂಹಲದಿಂದ ಪತ್ರಿಕೆಯ ಆರಂಭಕ್ಕೆ ಕಾಯುತ್ತಿದ್ದರು. ಇದೀಗ ಪತ್ರಿಕೆ ಎಪ್ರಿಲ್ ಒಂದರಂದೇ ತನ್ನ ಅಸ್ತಿತ್ವಕ್ಕೆ ನಾಂದಿ ಹಾಡಿದೆ.
ಅಂದ ಹಾಗೆ ಮಂಗಳೂರಿನಲ್ಲಿ ವಿಜಯವಾಣಿಯ ಉದ್ಘಾಟನೆಯನ್ನು ಮಾಡಿದವರು ವಿಜಯ ಸಂಕೇಶ್ವರವರ ಒಂದು ಕಾಲದ ಗೆಳೆಯ ಹಳೆಯಂಗಡಿಯ ಹಿರಿಯ ಉದ್ಯಮಿ, ಪಂಚವಟಿಯ ಶಾಂತಾರಾಮ್ ಶೆಟ್ಟಿ, ಉಳಿದಂತೆ ಸುಬ್ರಹ್ಮಣ್ಯ ವಿದ್ಯಾ ಪ್ರಸನ್ನ ತೀರ್ಥ ಸ್ವಾಮಿಜಿ, ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್‌ನ ಮುಖ್ಯಸ್ಥ ಸುಧೀರ್ ಘಾಟೆ, ವಿಜಯವಾಣಿ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ವಾಗ್ಳೆ ಹಾಗೂ ಶಾಸಕ ಕೃಷ್ಣ ಜೆ. ಪಾಲೇಮಾರ್ ಪತ್ರಿಕೆಗೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎನ್ನುವ ವಿಶ್ವಾಸವನ್ನು ಪತ್ರಿಕಾ ಬಳಗ ವ್ಯಕ್ತಪಡಿಸಿದೆ. ಕನ್ನಡ ಪತ್ರಿಕೋದ್ಯಮಕ್ಕೆ ವಿಜಯವಾಣಿ ಪತ್ರಿಕೆ ಹೊಸತನದ ಸ್ಪರ್ಶ ನೀಡಲಿ ಎಂದು ಜಯಕಿರಣ ಪತ್ರಿಕೆಯೂ ಹಾರೈಸುತ್ತದೆ.

ಟಿಪ್ಪರ್ ಲಾರಿಗಳ ಆರ್ಭಟಕ್ಕೆ ಮಾಸಿಹೋದ ಡಾಮರ್ ರಸ್ತೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಡಾಮರೀಕರಣ ವಾಗಿದ್ದ ಇಲ್ಲಿಯ ಪಂಜಿನಡ್ಕ, ಮೊಲೊಟ್ಟು, ಕಕ್ವ ಈ ರಸ್ತೆಯು ಲಾರಿಗಳ ಆರ್ಭಟದಿಂದ ಸಂಪೂ ರ್ಣವಾಗಿ ಹಾಳಾಗಿದ್ದು, ರಸ್ತೆಗೆ ಡಾಮರೀಕರಣ ನಡೆದಿದೆ ಎನ್ನುವುದಕ್ಕೆ ಕುರುಹುಗಳೇ ಇಲ್ಲದಂತಾಗಿದೆ.
ಮಟ್ಟು ಹಾಗೂ ಕಕ್ವ ಗ್ರಾಮಗಳ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿ ಸುವ ಭರಾಟೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಮಾತ್ರ ವಲ್ಲದೆ ರಸ್ತೆಯ ಇಕ್ಕೆಲಗಳಲ್ಲಿ ಮೋರಿಗೆ ನಿರ್ಮಿಸಲಾದ ಗೋಡೆ ಟಿಪ್ಪರ್ ಲಾರಿಗಳ ಆರ್ಭಟಕ್ಕೆ ಧ್ವಂಸವಾಗಿದ್ದು ಕುಡಿಯುವ ನೀರಿನ ಪೈಪ್ ಒಡೆದರೂ ಈ ಭಾಗದ ಕಿಲ್ಪಾಡಿ ಗ್ರಾ. ಪಂ. ಕಂಡೂ ಕಾಣದಂತೆ ವರ್ತಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿಕಾರಿಬೆಟ್ಟ್ಟು, ಬಾನೊಟ್ಟು ಈ ರಸ್ತೆಗಳಲ್ಲಿ ಹೊಗೆ ದಂಧೆಯು ಹೆಚ್ಚಾಗಿ ನಡೆಯುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ಹಲವು ಬಾರಿ ಗ್ರಾಮ ಸಭೆಗಳಲ್ಲಿ ದೂರು ನೀಡಲಾ ಗಿದ್ದರೂ ರಸ್ತೆಯಲ್ಲಿ ಮಣ್ಣು ಹಾಗೂ ಹೊಗೆಯ ಲಾರಿಗಳು ಪ್ಲಾಸ್ಟಿಕ್ ಹೊದಿಕೆ ಯನ್ನು ಮುಚ್ಚದೆ ಈ ಭಾಗದಲ್ಲಿ ಸಂಚರಿಸುವುದರಿಂದ ಇಲ್ಲಿಯ ಗ್ರಾಮ ಸ್ಥರಿಗೆ ರಸ್ತೆ ಹಾಳಾಗುವುದು ಮಾತ್ರವಲ್ಲದೆ ರಸ್ತೆಯಲ್ಲಿ ಮಿತಿಮೀರಿದ ವೇಗದಿಂದ ಚಲಾಯಿಸುವುದರಿಂದ ಪಾದಚಾರಿ ಗಳಿಗೆ ಭಾರೀ ಸಮಸ್ಯೆಯಾಗುತ್ತಿದೆ.
ಇಲ್ಲಿಯ ಸಮೀಪದ ಗ್ರಾಮದ ಮೊಲೊಟ್ಟುನ ಬಳಿ ಖಾಸಗಿ ಸ್ಥಳ ದಿಂದ ದಿನಕ್ಕೆ ೧೫೦ರಂತೆ ಮಣ್ಣು ತೆಗೆಯಲು ಸ್ಥಳ ಬಾಡಿಗೆಯನ್ನು ನೀಡ ಲಾಗುತ್ತಿದೆ ಎಂದು ಸ್ಥಳೀಯರಿಂದ ಮಾತು ಕೇಳಿ ಬರುತ್ತಿದೆ. ಈ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಟಿಪ್ಪರ್ ಲಾರಿಗಳ ಸಂಚಾರವನ್ನು ನಿಲ್ಲಿಸಿ ಗುತ್ತಿಗೆದಾರರಾದ ಜೋಯಲ್ ಎಂಬವರನ್ನು ತರಾಟೆಗೆ ತೆಗೆದುಕೊಡ ಘಟನೆ ನಡೆದಿದ್ದು ಮಾತ್ರವಲ್ಲದೆ ಧೂಳು ಏಳದಂತೆ ಈ ರಸ್ತೆಗಳಿಗೆ ಟ್ಯಾಂಕರಿನಿಂದ ನೀರು ಸಿಂಪಡಿಸುವಂತೆ ಹೇಳಿದ್ದಾರೆ. ಇದಕ್ಕೆ ಗುತ್ತಿಗೆದಾರರು ಇದು ರಾಷ್ಟ್ರೀಯ ಹೆದ್ದಾರಿಯಲ್ಲವೆಂದು ಉಢಾಪೆಯ ಉತ್ತರವನ್ನು ನೀಡಿದಾಗ ಗ್ರಾಮಸ್ಥರು ಹಾಗೂ ಗುತ್ತಿಗೆದಾರರ ನಡುವೆ ಜಟಾಪಟಿ ನಡೆಯಿತು. ಮುಂದೆ ಯಥಾಸ್ಥಿತಿ ಮುಂದುವರಿದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಆದರೆ ಸ್ಥಳೀಯರ ಮಾತಿಗೆ ಬೆಲೆ ಇಲ್ಲದಂತೆ ವರ್ತಿಸಿದ ಗುತ್ತಿಗೆದಾರರು ಯಾವುದೇ ಭೀತಿಯಿಲ್ಲದೆ ಮಣ್ಣನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ಗ್ರಾ. ಪಂ. ಅಧ್ಯಕ್ಷರಲ್ಲಿ ಕೇಳಿದಾಗ, ಈ ವಿಷಯದ ಬಗ್ಗೆ ಸರಿಯಾದ ಮಾಹಿತಿ ತಿಳಿದಿಲ್ಲ, ಒಂದು ವೇಳೆ ಆಗಿದ್ದಲ್ಲಿ ಗ್ರಾಮಸ್ಥರು ಒಟ್ಟಾಗಿ ಮೊದಲಿನ ದಿನವೇ ವಿರೋಧಿಸಿ ಮನವಿಯನ್ನು ನೀಡಿದ್ದರೆ ರಸ್ತೆಯ ಹಾಳಾಗದಂತೆ ತಡೆಯಬಹುದಿತ್ತು. ರಸ್ತೆ ಹಾಳುಗೆಡವಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಏನೇ ಆದರೂ ಗ್ರಾಮಸ್ಥರು ಒಗ್ಗಟ್ಟಾಗಿ ವಿರೋಧಿಸಬೇಕು ಎನ್ನುವ ಮಾತು ಕೇಳಿಬರುತ್ತಿದೆ.

ವಾರದಲ್ಲಿ ಸಂಪುಟ ವಿಸ್ತರಣೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ತಮ್ಮ ಸಂಪುಟವನ್ನು ಈ ವಾರದಲ್ಲಿಯೇ ವಿಸ್ತರಿಸುವ ಸಾಧ್ಯತೆ ಇದೆ. ಈಶ್ವರಪ್ಪರ ಜೊತೆಗೂಡಿ ವರಿಷ್ಠರೊಂದಿಗೆ ಚರ್ಚಿಸಿ ಹೆಸರುಗಳನ್ನು ಅಂತಿಮಗೊಳಿಸಲಿದ್ದಾರೆ. ಪ್ರಾತಿನಿಧ್ಯ ಇಲ್ಲದ ಜಿಲ್ಲೆಗಳಿಗೆ, ಜಾತಿಗಳಿಗೆ ಹಾಗೂ ಪಕ್ಷದ ಹಿರಿಯರಿಗೆ ಸಂಪುಟದಲ್ಲಿ ಆಧ್ಯ ತೆ ನೀಡಲಿದ್ದಾರೆ. ಸಂಪುಟ ಪುನಾರಚನೆಗೆ ಪೂರ್ಣ ಅಧಿಕಾರವನ್ನು ಪಕ್ಷದ ವರಿಷ್ಠರು ಡಿ.ವಿ.ಸದಾನಂದ ಗೌಡರಿಗೆ ಪೂರ್ಣ ಅಧಿಕಾರ ನೀಡಿದ್ದಾರೆ. ಆದರೆ ಬ್ಲೂ ಫಿಲ್ಮಂ ಹಗರಣದಲ್ಲಿ ಸಿಲುಕಿ ಕ್ಲೀನ್ ಚೀಟ್ ಪಡೆದಿರುವ ಸಿ.ಸಿ. ಪಾಟೀಲ್ ಹಾಗೂ ಕೃಷ್ಮ ಪಾಲೇಮಾರರನ್ನು ಸಂಪುಟಕ್ಕೆ ಸೇರಿಸುವ ಬಗ್ಗೆ ವರಿಷ್ಠರ ಅನುಮತಿ ಬಾಕಿ ಇದೆ. ಬ್ಲೂ ಫಿಲ್ಮಗೆ ಸಂಬಂಧಿಸಿದ ಸದನ ಸಮಿತಿಯ ವರದಿ ಇನ್ನೂ ಸದನದಲ್ಲಿ ಚರ್ಚೆಗೆ ಬಾಕಿ ಇರುವುದರಿಂದ ಅವರನ್ನು ಈಗಲೇ ಮಂತ್ರಿ ಮಾಡುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಪುಟದಲ್ಲಿ ೧೧ಸ್ಥಾನಗಳು ಖಾಲಿ ಇದ್ದು ಒಂಬತ್ತನ್ನು ಮಾತ್ರ ಭರ್ತಿ ಮಾಡಲಿದ್ದಾರೆ. ಸಿ.ಟಿ. ರವಿ, ಅಪ್ಪಚ್ಚು ರಂಜನ್, ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸೊಗಡು ಶಿವಣ್ಣ, ಅಪ್ಪು ಪಟ್ಟಣಶೆಟ್ಟಿ ಇವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.

ಕಾಂಗ್ರೆಸ್‌ನಲ್ಲೀಗ ರಮ್ಯ ಚೈತ್ರ ಕಾಲ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಗೆಲುವು ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿಸಿದೆ ಎಂಬುದು ಗೊತ್ತಿರುವ ವಿಷಯವೇ. ಇದೇ ಹುಮ್ಮಸ್ಸಿನಲ್ಲಿ ಕಾಂಗ್ರೆಸ್, ಪಕ್ಷ ಗಟ್ಟಿಗೊಳಿಸುವ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇನ್ನೊಂದು ಕಡೆಯಲ್ಲಿ ವರ್ಚಸ್ವಿ ನಾಯಕರ ಬಳಕೆಯ ಪ್ರಯತ್ನವೂ ನಡೆದಿದೆ. ಸಂಘಟನೆಗೆ ಗ್ಲಾಮರ್ ರೂಪವೂ ನೀಡಲಾಗುತ್ತಿದೆ.
ಕಾಂಗ್ರೆಸ್ ನಡಿಗೆ ಜನರ ಬಳಿಗೆ ಹೋದ ಕಾಂಗ್ರೆಸ್ ನಾಟಕವನ್ನು ನೋಡಿದವರಿಗೆ ಮತ್ತೊಂದು ಪ್ರಸಂಗ ಕಾದಿದೆ 'ಕಾಂಗ್ರೆಸ್‌ಗೆ ಬನ್ನಿ, ಬದಲಾ ವಣೆ ತನ್ನಿ' ಎಂಬ ಹೆಸರಿನ ನೂತನ ಕಥಾವಸ್ತುವಿನೊಂದಿಗೆ ಕಾಂಗ್ರೆಸ್ ನಾಯಕರು ಬರುತ್ತಿದ್ದಾರೆ. ಇದೇ ಸಮಯದಲ್ಲಿ ಕಥಾ ಪ್ರಸಂಗದ ಪ್ರಚಾರಕ್ಕೆ ಚಲನ ಚಿತ್ರ ನಟಿ ರಮ್ಯಾರನ್ನು ಎದುರಿಗೆ ಬಿಟ್ಟಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ. ರಮ್ಯಾರನ್ನು ಯುವ ಹಾಗೂ ಮಹಿಳಾ ಮತದಾರರನ್ನು ಸೆಳೆಯುವ ಟ್ರಂಪ್ ಕಾರ್ಡ್ ಆಗಿ ಬಳಸುವ ಪ್ರಯತ್ನಗಳು ನಡೆಯುತ್ತಿವೆ. ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ರಮ್ಯಾ ಮಾಡಿದ ಮೋಡಿ ಮತಗಳಾಗಿ ಪರಿವರ್ತಿತವಾದವೋ ಇಲ್ಲವೋ ಎಂಬುದು ಬೇರೆ ಮಾತು. ಆದರೆ ಆಕೆಯನ್ನು ನೋಡಲು ಸೇರುತ್ತಿದ್ದ ಅಭಿಮಾನಿಗಳ ಕಾರಣದಿಂದಾಗಿ ಕಾಂಗ್ರೆಸ್ ನಾಯಕರಿಗೆ ಭಾಷಣ ಮಾಡಲು ಹುಮ್ಮಸ್ಸು ಮೂಡಿದ್ದಂತೂ ಸತ್ಯ. ಇಲ್ಲೊಂದು ವಿಷಯ ನೆನಪಿಗೆ ಬರುತ್ತದೆ. ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಸಂಪುಟದಲ್ಲಿ ಅನಂತ್‌ನಾಗ್ ಸಚಿವರಾಗಿದ್ದರು. ಜೆ.ಎಚ್.ಪಟೇಲ್‌ರು ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ಅನಂತ್‌ನಾಗ್ ಉಪಸ್ಥಿತಿ ಇರುತ್ತಿತ್ತು. ಇದೇಕೆ ಹೀಗೆ ಎಂದು ಪಟೇಲ್‌ರಿಗೆ ಪ್ರಶ್ನಿಸಿದರೆ ಅನಂತ್‌ನಾಗ್ ಹೀರೋ ಅವ ಇದ್ದರೆ ಬಹಳಷ್ಟು ಜನರು ಸಭೆಗೆ ಬರುತ್ತಾರೆ ಎಂಬ ನೇರ ಉತ್ತರ ಸಿಕ್ಕಿತ್ತು ಪಟೇಲ್‌ರಿಂದ. ಆದರೆ ಕಾಂಗ್ರೆಸ್ ರಾಜಕಾರಣಿಗಳು ಇಂತಹ ಸತ್ಯವನ್ನು ಈಗ ಒಪ್ಪಿಕೊಳ್ಳಲು ಸಿದ್ದರಿಲ್ಲದೆ ಇರಬಹುದು ಆದರೆ ಜನರನ್ನು ಸೇರಿಸುವ ಗ್ಲಾಮರ್‌ನ ಬಳಕೆ ನಡೆಯುತ್ತಲೇ ಇದೆ. ರಮ್ಯಾಳ ಮೂಲಕ ಯುವ ಮತದಾರನನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ ಎನ್ನುತ್ತಿದ್ದಾರೆ ಕಾಂಗ್ರೆಸಿಗರು. ಬಿಜೆಪಿಯ ಈಗಿನ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್‌ನ ಕರೆಗೆ ಮತದಾರರು ಓಗೊಡುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ಗಟ್ಟಿ ನಿಲುವು ಪ್ರದರ್ಶಿಸಬೇಕಾಗಿದೆ.
ರಮ್ಯಾಳನ್ನು ಒಬ್ಬಂಟಿಯಾಗಿ ಪ್ರಚಾರಕ್ಕೆ ಬಿಡುವ ಇಲ್ಲವೆ, ಸಾಮೂಹಿಕ ಕಾರ್ಯಕ್ರಮದ ಭಾಗವಾಗಿ ಆಕೆಯನ್ನು ಬಳಕೆ ಮಾಡುವ ಎರಡೂ ಪ್ರಯತ್ನಗಳೂ ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಉಪ ಚುನಾವಣೆಯ ಫಲಿತಾಂಶದ ಬಳಿಕ ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿರುವ ದೈವ ದೇವಸ್ಥಾನಗಳಲ್ಲಿ ಹರಿಕೆ ತೀರಿಸಲು ಬಂದಿದ್ದ ರಮ್ಯಾ ದೈವಭಕ್ತ ಮತದಾರರ ಗಮನ ಸೆಳೆದಿದ್ದಾರೆ. ಮುಖ್ಯವಾಗಿ ಕರಾವಳಿಯ ದೈವಗಳಲ್ಲಿ ಭಾರೀ ಶಕ್ತಿ ಇದೆ ಎಂದು ರಮ್ಯಾ ಹೇಳಿದ್ದು ಕರಾವಳಿಯ ಭಕ್ತ ಮತದಾರರಲ್ಲೂ ಮೋಡಿ ಮಾಡಿದಂತಾಗಿದೆ. ಮುಖ್ಯವಾಗಿ ಮಹಿಳೆಯರು ರಮ್ಯಳ ಬಗ್ಗೆ ಅಭಿಮಾನ ಮೂಡಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯ ಕಾಂಗ್ರೆಸಿಗರದ್ದು. ಕರಾವಳಿಯ ಜನತೆ ಗ್ಲಾಮರ್ ಹಿಂದೆ ಬೀಳುವುದು ಕಡಿಮೆ, ಆದರೆ ರಮ್ಯಾ ಹಿಂದೆ ಬಿದ್ದಿದ್ದಾರೆ ಎಂಬ ಮನೋಭಾವ ಕಾಂಗ್ರೆಸ್‌ನಲ್ಲಿ ಮೂಡಿದೆ. ಇದರ ಲಾಭ ಬೇಗ ಬೇಗ ಪಡೆಯಬೇಕೆನ್ನುವ ಮನೋಭಾವವೂ ಮುಖಂಡರಿಗಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)