ಸುಳ್ಳು ಆರೋಪ ಹೊರಿಸುವ ಕೆಲಸ ಬಿಟ್ಟುಬಿಡಿ

Posted by JAYAKIRANA Kirana on Friday, 30 March 2012 | 0 comments | Leave a comment...

ಪದಾಧಿಕಾರಿಗಳು, ಹಿಂದೂ ಸೇವಾ ಸಮಿತಿ, ಬಾರ್ದಿಲ, ಕಲ್ಲಾಡಿ, ಕುಪ್ಪೆಪದವು
ಮಾ.೨೩ರ ಜಯಕಿರಣ ಪತ್ರಿಕೆಯಲ್ಲಿ ಪ್ರಕಟವಾದ ಕುಪ್ಪೆ ಪದವು ಬಜರಂಗದಳ ಗಮನಿಸಲಿ ಎಂಬ ಪತ್ರಕ್ಕೆ ಪ್ರತಿಕ್ರಿಯೆ. ನೊಂದ ಮಹಿಳೆಯರು, ಕಲ್ಪಾಡಿ ಎಂಬ ಹೆಸರಿನಲ್ಲಿ ಜನ ಪ್ರಿಯ ಪತ್ರಿಕೆಯೊಂದರ ಅಮೂಲ್ಯವಾದ ಸ್ಥಳವಕಾಶವನ್ನು ಕಪೋಲಕಲ್ಪಿತ ಸುಳ್ಳು ಸುದ್ದಿಯನ್ನು ಪ್ರಕಟಿಸಲು ಬಳಸಿದ ಕೊಳಕು ಮನಸ್ಸಿನ ತಥಾಕಥಿತ ನೊಂದ ಮಹಿಳೆ ಎಂಬ ಗಂಡಸಿನ ಮನೋಸ್ಥಿತಿಗೆ ಧಿಕ್ಕಾರವಿರಲಿ. ಕಲ್ಲಾಡಿ ಪರಿಸರದಲ್ಲಿ ಪತ್ರದಲ್ಲಿ ಆರೋಪಿಸಲಾದಂತಹ ಘಟನೆಗಳು ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
ಕಲ್ಲಾಡಿಯ ಪರಿಸರದಲ್ಲಿ ಅಶಾಂತಿಯನ್ನು ಸೃಷ್ಟಿಸಿ ಸಹ ಜೀವನ ನಡೆಸುತ್ತಿರುವ ಎಲ್ಲಾ ನಾಗರಿಕರ ನಡುವೆ ಗೊಂದಲ ಮತ್ತು ಅಪನಂಬಿಕೆಯನ್ನು ಹುಟ್ಟು ಹಾಕಿ ವಿಕೃತ ಸಂತೋಷ ಪಡುವ ಮತ್ತು ತನಗಾದವರನ್ನು ತುಳಿದು ತಾನು ನಾಯಕ ನಾಗಿ ಮೆರೆಯಬೇಕೆಂದು ದುರಾಲೋಚನೆಯನ್ನು ಹೊಂದಿ ರುವ ತಿಳಿಗೇಡಿಗಳು ಮತ್ತು ಇಂತಹ ಅಸಂಬದ್ಧ ಆರೋಪ ಮಾಡಿದೆ. ಯಾವುದೇ ಊರಿನ ಅಭಿವೃದ್ಧಿಗೆ ಶ್ರಮಿಸುವುದಕ್ಕೆ ಅಥವಾ ಒಳ್ಳೆಯ ಕೆಲಸಗಳನ್ನು ಮಾಡಲು ಯಾವುದೇ ಸಂಘ ಟನೆಗೆ ಅಥವಾ ಅದರ ಸದಸ್ಯರಿಗೆ ಅವಕಾಶ ಇದೆ. ಆದರೆ ಸಮಾಜಘಾತುಕ ಕೃತ್ಯಗಳನ್ನು ಮಾಡುವ ಯಾವುದೇ ಸಂಘ ಟನೆ ಅಥವಾ ವ್ಯಕ್ತಿಗಳಿಗೆ ಅವಕಾಶ ನೀಡಬಾರದು. ತನಗಾಗದ ವರು ಊರಿನ ಜನರಿಗೆ ಪ್ರಯೋಜನವಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗ ಅದನ್ನು ಸಹಿಸದಂತಹ ವ್ಯಕ್ತಿಗಳು ಈ ರೀತಿ ಮೈ ಕೈ ತುರಿಸಿಕೊಳ್ಳುತ್ತಾರೆ ವಿನಹಃ ಒಳ್ಳೆಯ ಮನಸ್ಸಿ ನವರಾದರೆ ಅಂತಹವರೊಂದಿಗೆ ತಾವೂ ಕೈ ಜೋಡಿಸುತ್ತಾರೆ. ಸುಳ್ಳು ಅಪವಾದ ಹೊರಿಸಿದ ವ್ಯಕ್ತಿ ಮನೋರೋಗದಿಂದ ಬಳ ಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿವೆ. ಯಾಕೆಂದರೆ ಯಾವುದೇ ರೀತಿಯಲ್ಲೂ ಸಮಾಜ ಸೇವೆ ಮಾಡಲು ಅಥವಾ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸಲು ಪಂಚಾಯತ್ ಸದಸ್ಯ ಎಂಬ ಸರ್ಟಿಫಿಕೇಟ್‌ನ ಅಗತ್ಯವಿಲ್ಲ ಮತ್ತು ಗ್ರಾಮದ ಯಾವುದೇ ನಿವಾಸಿ ತನ್ನ ಗ್ರಾಮದ ಅಭಿವೃದ್ಧಿಗೆ ತನ್ನಿಂದ ಸಾಧ್ಯವಿರುವ ಕೊಡುಗೆ ನೀಡಬಹುದು ಎಂಬ ಕನಿಷ್ಟ eನವೂ ಇಲ್ಲವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳ ಪರವಾಗಿ ಮತ ಯಾಚಿಸುವ ಕಾರ್ಯಕರ್ತರು, ಅಂತಹ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ನಂತರ ಅಭಿವೃದ್ಧಿಗಾಗಿ ಜನ ಪ್ರತಿನಿಧಿಗಳ ಹೆಸರನ್ನು ಬಳಸುವುದು ತಪ್ಪು ಎಂದಾದರೆ ಸಾಮಾನ್ಯ ಕಾರ್ಯಕರ್ತನೋ, ಸದಸ್ಯನೋ ಒಬ್ಬ ಮಾಡಿದ ಕೆಲಸಗಳನ್ನು ಇದು ನಾನು ಮಾಡಿಸಿದ್ದು ಎಂದು ಬೊಗಳೆ ಬಿಟ್ಟು ತಾನು ದೊಡ್ಡ ನಾಯಕ ಎಂದು ಪೋಸು ನೀಡುವುದು ಸರಿಯೇ? ಇನ್ನು ಒಂಟಿ ಮಹಿಳೆಯರಿಗೆ ಕಿರುಕುಳ ಕೊಟ್ಟಿದ್ದರೆ ಅಂತಹ ನೊಂದ ಮಹಿಳೆಯರು ಕಿರುಕುಳ ಸಹಿಸಿಕೊಂಡದ್ದೇಕೆ? ಪ್ರತಿ ಭಟಿಸಬಹುದಿತ್ತಲ್ಲವೇ? ಅಥವಾ ಪತ್ರಿಕೆಯಲ್ಲಿ ಬರೆಯುವಾಗ ಕಿರುಕುಳ ಕೊಟ್ಟಂತಹ ವ್ಯಕ್ತಿಯನ್ನು ಹೆಸರಿಸಬಹುದಿತ್ತು. ಕಿರು ಕುಳವನ್ನು ಪ್ರತಿಭಟಿಸಲು ಅಥವಾ ಎದುರಿಸಲು ಹಲವಾರು ದಾರಿಗಳಿದ್ದವು. ಪೊಲೀಸ್ ಠಾಣೆಗೆ ದೂರು ನೀಡಬಹುದಿತ್ತು. ಅದನ್ನೆಲ್ಲಾ ಬಿಟ್ಟು ಪತ್ರಿಕೆಗೆ ಬರೆದುದರಲ್ಲಿ ನಿಗೂಢ ಉದ್ದೇಶ ಅಡಗಿದೆ ಎಂಬುವುದರಲ್ಲಿ ಸಂಶಯವಿಲ್ಲ. ನೊಂದ ಮಹಿಳೆ ಯರ ಹೆಸರಿನಲ್ಲಿ ಪತ್ರಿಕೆಗೆ ಸುಳ್ಳು ಪತ್ರವನ್ನು ಬರೆದವರು ಕೆಲವು ವಿಚಾರಗಳನ್ನು ಅರಿತುಕೊಳ್ಳಬೇಕಾಗಿದೆ.
ಅದೇನೆಂದರೆ ಕಲ್ಲಾಡಿಯ ಮರ್ಯಾದಸ್ಥ ಮಹಿಳೆಯರ ಹೆಸರನ್ನು ಕೆಡಿಸಲು ಪ್ರಯತ್ನಿಸಬೇಡಿ ಮತ್ತು ಕಲ್ಲಾಡಿ ಶಾಂತಿ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಾಡಬೇಡಿ. ಇಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದತೆಯಿಂದ ಬದುಕುತ್ತಿರುವಾಗ ಸಂಘಟನೆಗಳ ಸದಸ್ಯರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ವಿಕೃತ ಸಂತೋಷವನ್ನು ಪಡುವ ಕಿಡಿಗೇಡಿ ಕೆಲಸ ಮಾಡಬೇಡಿ. ಉರಿಯುವ ಮನೆಯ ಬೆಂಕಿ ಯಲ್ಲಿ ’ಬೀಡಿ’ ಹಚ್ಚುವ ಪ್ರಯತ್ನವನ್ನು ಯಾರಾದರೂ ಮಾಡಿ ದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ.

ಪಬ್ಲಿಕ್ ಟಿ.ವಿ ಹೀಗೇಕೆ?

Posted by JAYAKIRANA Kirana on | 0 comments | Leave a comment...

ಬೆಂಗಳೂರು ವಿಶ್ವವಿದ್ಯಾನಿಲಯವು ಪದವಿ ತರಗತಿಗಳಿಗೆ ಅಂಗೀ ಕರಿಸಿದ ಸಾಹಿತ್ಯ ಸಂಪದ ಕೃತಿಯಲ್ಲಿ ಸಬಿಹಾ ಭೂಮಿಗೌಡ ಅವರು ಬರೆದ ‘ಮಹಿಳೆ ಮತ್ತು ಕೋಮುವಾದ ಎಂಬ ಪಠ್ಯವಿದೆ. ಇದರ ವಿರುದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಂತಹ ಪ್ರತಿಗಾಮಿ ಸಂಘಟನೆಗಳು ಬೀದಿಗಿಳಿದಿವೆ. ಸಬಿಹಾರವರ ಈ ಪಠ್ಯದಲ್ಲಿ ಗುಜರಾತ್‌ನ ನರೇಂದ್ರ ಮೋದಿ ಎಂಬ ನರಹಂತಕನ ಸಾಮ್ರಾಜ್ಯದಲ್ಲಿ ಫ್ಯಾಸಿಸ್ಟರು ಮುಸ್ಲಿಂ ಮಹಿಳೆಯ ಮೇಲೆ ಎಸಗಿದ ಅಮಾನವೀಯ ದೌರ್ಜನ್ಯದ ಚಿತ್ರಣವಿದೆ. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಎಬಿವಿಪಿ, ಎಸ್‌ಎಫ್‌ಐ, ಓರ್ವ ಉಪನ್ಯಾಸಕಿ, ಮತ್ತು ವಿದ್ಯಾರ್ಥಿಯೋರ್ವರ ನಡುವೆ ಸಂವಾದ ಏರ್ಪಡಿಸಲಾಗಿತ್ತು. ಆದರೆ ನಿರೂ ಪಕಿ ಇಲ್ಲಿ ಎಸ್‌ಎಫ್‌ಐ ಮುಖ್ಯಸ್ಥರಿಗೆ ವಾದ ಮಂಡಿಸುವ ಅವಕಾಶವನ್ನೇ ನೀಡದೆ ಪಕ್ಷಪಾತಿಯಾಗಿ ವರ್ತಿಸಿ ಆ ಪಠ್ಯದ ಅಳವಡಿಕೆ ತಪ್ಪು ಎಂದು ಸಾಧಿಸಲು ವಿರೋಧಿ ಬಣಕ್ಕೆ ಧಾರಾಳ ಅವಕಾಶ ನೀಡುತ್ತಿದ್ದರು. ಈ ಸಂವಾದವನ್ನು ನೋಡಿದಾಗ ಮೂವರನ್ನು ಸೇರಿಸಿ ಒಬ್ಬರನ್ನು ಸೋಲಿಸ ಬೇಕು ಎಂದು ಮೊದಲೇ ತೀರ್ಮಾನಿಸಿದಂತಿತ್ತು. ಗುಜರಾತ್‌ನಲ್ಲಿ ನಡೆದ ಕರಾಳ ಘಟನೆಯನ್ನು ಪಠ್ಯಪುಸ್ತಕದಲ್ಲಿ ದಾಖಲಿಸುವುದು ವಿದ್ಯಾರ್ಥಿಗಳಲ್ಲಿ ಕೋಮುವಾದವನ್ನು ಬೆಳೆಸುತ್ತದೆ ಎಂದಾದರೆ ಘಜನಿ ಮಹಮ್ಮದ್, ಔರಂ ಗಜೇಬ್, ಟಿಪ್ಪುಸುಲ್ತಾನ್, ಮೊದಲಾದ ಅರಸರು ಹಿಂದೂಗಳಿಗೆ ಮಾಡಿ ದ್ದಾರೆಂಬ ಅನ್ಯಾಯದ ಅಂಶಗಳನ್ನು ಕೂಡಾ ಇತಿಹಾಸ ಪಠ್ಯಪುಸ್ತಕ ದಿಂದ ತೆಗೆದು ಹಾಕಬೇಕಲ್ಲವೇ?
ಪಠ್ಯ ಪುಸ್ತಕದಲ್ಲಿ ಆ ಪಾಠದ ಅಳವಡಿಕೆ ತಪ್ಪಲ್ಲ ಎಂದು ಎಸ್‌ಎಫ್‌ಐ ಮುಖ್ಯಸ್ಥ ವಾದಿಸುವಾಗ ಚರ್ಚೆಗೆ ಪೂರಕವಾಗಿ ಮಡೆಸ್ನಾನದಂತಹ ಅನಿಷ್ಟ ಪದ್ದತಿಯನ್ನು ವಿಶ್ಲೇಷಿಸುತ್ತಾರೆ. ಆದರೆ ನಿರೂಪಕಿ ಅದಕ್ಕೆ ಅವಕಾಶವನ್ನೇ ನೀಡದೆ ‘ಪಠ್ಯಪುಸ್ತಕದಲ್ಲಿ ಈ ಪಾಠ ಸರಿಯೋ? ತಪ್ಪೋ? ಎಂಬ ನನ್ನ ಪ್ರಶ್ನೆಗೆ ಉತ್ತರಿಸಿ ಎಂದು ರಚ್ಚೆ ಹಿಡಿಯುತ್ತಿರುವಾಗ ನನಗೆ ವಿದ್ಯಾರ್ಥಿಗಳಿಗೆ ಪ್ರಶ್ನಾಪತ್ರಿಕೆಯಲ್ಲಿ ನೀಡುತ್ತಿದ್ದ ಸರಿ/ತಪ್ಪು ಗುರುತಿಸುವ ಒಂದು ಅಂಕದ ಪ್ರಶ್ನೆ ನೆನಪಾಯಿತು. ಒಟ್ಟಾರೆ ಸಂವಾದದಲ್ಲಿ ಪಾಲ್ಗೊಂಡಿದ್ದ ನಾಲ್ವರಿಗಿಂತ ನಿರೂಪಕಿಯೇ ಹೆಚ್ಚಾಗಿ ಮಾತನಾಡಿದ್ದಾರೆ. ಪ್ರಾಯಶ: ಇಂತಹ ಸೂಕ್ಷ್ಮ ವಿಷಯಗಳನ್ನು ಅನುಭವಿ ರಂಗನಾಥ್‌ರವರೇ ನಿರ್ವಹಿಸುವುದು ಒಳಿತು.
ಅಬ್ದುಲ್ ಜಬ್ಬಾರ್, ಕಾಟಿಪಳ್ಳ

ಇಸ್ಪೀಟ್ ದಂಧೆಗೆ ದಾಳಿ ನಡೆಸಲು ಎಷ್ಟು ಹಣದ ವ್ಯವಹಾರ ಆಗಬೇಕು?
ಈ ಪ್ರಶ್ನೆಯನ್ನು ನಾನು ಕೇಳುತ್ತಿರು ವುದು ಪೊಲೀಸ್ ಇಲಾಖೆಗೆ. ಇಸ್ಪೀಟ್ ದಂಧೆ ನಡೆಯುತ್ತಿದೆ ಸ್ವಾಮಿ, ಕ್ರಮ ಕೈಗೊಳ್ಳಿ, ಹಲವು ಕುಟುಂಬಗಳು ಬೀದಿಗೆ ಬರುತ್ತಿವೆ ಎಂದು ಪಣಂಬೂರು ಪೊಲೀಸರಿಗೆ ಹೇಳಿ ದಾಗ ಪೊಲೀ ಸರಿಂದ ಬಂದ ಉತ್ತರವೇನು ಗೊತ್ತೆ?
‘ನಮಗೆ ಸಣ್ಣಪುಟ್ಟ ಇಸ್ಪೀಟ್ ಅಡ್ಡೆಗಳಿಗೆ ದಾಳಿ ಮಾಡುವುದು ಸಾಧ್ಯವಿಲ್ಲ. ಲಕ್ಷಾಂತರ ಹಣ ಇಸ್ಪೀಟ್‌ನಲ್ಲಿ ಹರಿಯುತ್ತಿದ್ದರೆ ದಾಳಿ ಮಾಡುತ್ತೇವೆ!
ಈ ಮಾತನ್ನು ಯಾಕೆ ಹೇಳಬೇಕಾಯಿ ತೆಂದರೆ ಜಯಕಿರಣದ ನಿನ್ನೆಯ ಸಂಚಿಕೆ ೩೦-೩-೨೦೧೨)ಯ ಮುಖಪುಟದಲ್ಲಿ ಮುಲ್ಕಿಯ ಲಿಂಗಪ್ಪಯಕಾಡಿನಲ್ಲಿ ನಡೆಯುತ್ತಿದ್ದ ಇಸ್ಪೀಟ್ ದಂಧೆಯ ಬಗ್ಗೆ ವರದಿ ಬಂದಿತ್ತು. ಭಾಗಶ: ಅಲ್ಲೂ ಇಸ್ಪೀಟ್ ದಂಧೆಯ ಬಗ್ಗೆ ದೂರಿ ಕೊಂಡವರಿಗೆ ಪೊಲೀಸರು ಇದೇ ಉತ್ತರ ನೀಡಿರಲಿಕ್ಕೂ ಸಾಕು. ನಾನು ಪಣಂಬೂರು ಪೊಲೀಸರಿಗೆ ದೂರಿದ್ದು, ಬೈಕಂಪಾಡಿಯ ಶಕ್ತಿಗೆ ಸಮೀಪವಿರುವ ಸಣ್ಣ ರೂಮೊಂದರಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಇಸ್ಪೀಟ್ ಆಟದ ಬಗ್ಗೆ. ಪುಟ್ಟ ರೂಮ್‌ನಲ್ಲಿ ನಡೆ ಯುವ ಈ ದಂಧೆಯಲ್ಲಿ ೧೦ಸಾವಿರಕ್ಕಿಂತ ಹೆಚ್ಚು ಹಣ ಇಟ್ಟು ಆಡುವವರಿಗೆ ರೂಮ್‌ನ ಒಳಗೆ ಪ್ರವೇಶವಿದೆ. ಅದಕ್ಕಿಂತ ಕಡಿಮೆ ಹಣ ಇಟ್ಟು ಆಡುವವರಿಗೆ ಹೊರಗೆ. ಇದನ್ನು ನಡೆಸುತ್ತಿರುವವರು ರೌಡಿ ಹಿನ್ನೆಲೆಯವರು. ಇವರ ಅಟಾಟೋಪ ಎಷ್ಟಿದೆ ಎಂದರೆ ಇಲ್ಲಿನ ಆಸುಪಾಸು ಅಪರಿಚಿತರು ವಾಹನ ನಿಲ್ಲಿಸುವ ಹಾಗೂ ಇಲ್ಲ. ಯಾರಾದರೂ ಅಪರಿಚಿ ತರು ಬಂದರೆ ಕೂಡಲೇ ಇಲ್ಲಿಗೆ ಮಾಹಿತಿ ಹೋಗಿ ರೂಮ್‌ನಲ್ಲಿ ಯಾರೂ ಇರದಂತೆ ನೋಡಿಕೊಳ್ಳಲಾಗುತ್ತಿದೆ.
ಇಲ್ಲಿಗೆ ಬಂದು ಇಸ್ಪೀಟ್ ದಂಧೆಯನ್ನು ನಿಲ್ಲಿಸಿದ ಏಕೈಕ ಗಂಡಸು ಪೊಲೀಸ್ ಅಧಿ ಕಾರಿ ಎಂದರೆ ಅದು ಪಣಂಬೂರಿನ ಡಿವೈ ಎಸ್ಪಿ ಗಿರೀಶ್ ಅವರು ಮಾತ್ರ. ಇಂದಿಗೂ ಇಲ್ಲಿನ ಜನ ಗಿರೀಶ್‌ರಂಥ ಪ್ರಾಮಾಣಿಕ ಅಧಿಕಾರಿಯನ್ನು ನೆನಪಿಸಿಕೊಳ್ಳುತ್ತಾರೆ. ಅವರ ನಂತರ ಪಣಂಬೂರು ಠಾಣೆಗೆ ಒಬ್ಬನೇ ಒಬ್ಬ ಗಂಡಸು ಬಂದಿಲ್ಲ. ಈ ಕೈಗಾರಿಕಾ ಪರಿಸರದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಂತೂ ಎಲ್ಲೆ ಮೀರಿದೆ. ಆದರೂ ಪೊಲಿಸರಿಗೆ ದೂರು ಕೊಟ್ಟರೆ ಅವರು ಏನು ಆಗಿಲ್ಲ ಎಂಬಂತೆ ಮಾತನಾಡುತ್ತಾರೆ. ನಮಗೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಹೋಗುವ ಮುನ್ನ ಒಮ್ಮೆ ಪೊಲೀಸರು ಇಲ್ಲಿಗೆ ದಾಳಿ ಮಾಡಿ ಸಂಬಂಧಪಟ್ಟವರ ಹಡೆಮುರಿ ಕಟ್ಟಿ. ಹಾಂ, ದಾಳಿ ಮಾಡುವ ಮುನ್ನ ಪಣಂ ಬೂರು ಪೊಲೀಸರಿಗೆ ಮಾತ್ರ ಯಾವುದೇ ಕಾರಣಕ್ಕೂ ಮಾಹಿತಿ ಕೊಡಬೇಡಿ!
ನಾಗರಿಕರು, ಚಿತ್ರಾಪುರ

ಸಂಬಂಧವೇ ಇಲ್ಲದವರು ಮಾಧ್ಯಮ ಚರ್ಚೆಗೆ ಬೇಕೆ?
ಇತ್ತೀಚಿನ ದಿನಗಳಲ್ಲಿ ಸುದ್ದಿ ಚಾನೆಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಲೋಕಲ್ ವಾಹಿನಿಗಳಿಂದ ಹಿಡಿದು ರಾಜ್ಯ ಮಟ್ಟದ ವಾಹಿನಿಗಳವರೆಗೂ ಇವುಗಳ ಅಬ್ಬರವಿದೆ. ಆದರೆ ಇವುಗಳ ಕಾರ್ಯಕ್ರಮಗಳು ಮಾತ್ರ ಯಾರಿಗೂ ಬೇಡ ಎನ್ನುವಂತಿದೆ. ಇತ್ತೀಚೆಗೆ ಸ್ಥಳೀಯ ಸುದ್ದಿ ವಾಹಿನಿ ಯೊಂದು ಒಂದು ವಿಚಾರದ ಕುರಿತಾಗಿ ಚರ್ಚೆ ಏರ್ಪ ಡಿಸಿತ್ತು. ಈ ಚರ್ಚೆಯಲ್ಲಿ ಸಮಾಜದ ಕೆಲ ವ್ಯಕ್ತಿಗಳು ಭಾಗವಹಿಸಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧವೇ ಇಲ್ಲದ, ಈ ಬಗ್ಗೆ ಸ್ವಲ್ಪವೂ ಗೊತ್ತಿಲ್ಲದ ವ್ಯಕ್ತಿಯೊಬ್ಬರನ್ನು ಆಹ್ವಾನಿಸಲಾಗಿತ್ತು. ಈ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಚರ್ಚೆ ಯಾಗುತ್ತಿದ್ದ ವಿಚಾರದ ಬಗ್ಗೆ ತಿಳಿದಿರುವುದು ಬಿಡಿ, ಈ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ. ಇದು ಕೇವಲ ಈ ಒಂದು ಕಾರ್ಯಕ್ರಮದಲ್ಲಿ ಮಾತ್ರವಲ್ಲ. ಬದಲಾಗಿ ಬಹುತೇಕ ಸುದ್ದಿವಾಹಿನಿಗಳ ಚರ್ಚಾ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿದೆ. ಚರ್ಚಾ ಕಾರ್ಯಕ್ರಮಗಳು ಕೂಡ ಜಾಹೀರಾತುಗಳಾಗಿ ಬದಲಾಗಿವೆ. ಕನ್ನಡದ ಸುದ್ದಿವಾ ಹಿನಿಯೊಂದು ಬಂಗಾರದಂಗಡಿಯ ಮಾಲಕನನ್ನು ಕುಳ್ಳಿ ರಿಸಿ ವಾರಕ್ಕೊಮ್ಮೆ ಚರ್ಚಿಸುತ್ತದೆ. ಆದರೆ ಇದರಿಂದ ಲಾಭವೇನೂ ಇಲ್ಲ. ಆ ವ್ಯಕ್ತಿಗಾಗಿಯೇ ಈ ಕಾರ್ಯ ಕ್ರಮವನ್ನು ರೂಪಿಸಿದಂತಿದೆ. ಚರ್ಚೆಗಳು ಆರೋಗ್ಯಕರ ವಾಗಿರಬೇಕೇ ವಿನಃ ಜಾಹೀರಾತನ್ನು ಬಿಂಬಿಸುವ ಕಾರ್ಯ ಕ್ರಮಗಳಾಗಿರಬಾರದು. ಇನ್ನಾದರೂ ಸಮಾಜದ ಕನ್ನಡಿ ಯಾದ ಮಾಧ್ಯಮಗಳು ಈ ಬಗ್ಗೆ ಚಿಂತಿಸಲಿ.
ಜೇಮ್ಸ್ ಡಿ’ಸೋಜಾ, ಕುಂದಾಪುರ

ದಲಿತರ ಏಳಿಗೆಗಾಗಿ ಶ್ರಮಿಸಿದ ರಾಜ್ಯ ಬಜೆಟ್
ಈ ವರ್ಷದ ರಾಜ್ಯ ಬಜೆಟ್‌ನಲ್ಲಿ ೨೦೦೫-೦೬ನೇ ಸಾಲಿನವರೆಗೆ ಪರಿಶಿಷ್ಟ ಜಾತಿ-ಪ.ಪಂಗಡದ ಅಭಿವೃದ್ಧಿ ನಿಗಮದಿಂದ ಪಡೆದಿರುವ ೨೫ ಸಾವಿರ ರೂ.ಗಳ ಕೃಷಿ ಸಂಬಂಧಿ ಸಾಲ ಮತ್ತು ಬಡ್ಡಿ ಮನ್ನಾ ಮಾಡಿರುವ ಮುಖ್ಯಮಂತ್ರಿಯವರ ದಲಿತ ಪರ ಕಾಳಜಿ ಮೆಚ್ಚುವಂ ಥದ್ದು. ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡ ಗಳ ರೈತರಿಗೆ ಈ ಹಿಂದೆ ದರಖಾಸ್ತು ಮೂಲಕ ಮಂಜೂ ರಾಗಿದ್ದ ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆ ೧೯೭೮ರ ಅನ್ವಯ ಮೂಲ ಎಸ್‌ಸಿಎಸ್ ರೈತರಿಗೆ ಯಾವುದೇ ನಿರ್ಬಂಧಗಳಿಲ್ಲದೇ ಮರು ಮಂಜೂರು ಮಾಡುವ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕು ಮತ್ತು ಪಿಟಿ ಸಿಎಲ್ ಕಾಯ್ಕೆ ಕಲಂ-೭ನ್ನು ರದ್ದುಪಡಿಸಬೇಕು. ಪರಿ ಶಿಷ್ಟ ಜಾತಿಃ ಪಂಗಡಗಳ ಫಲಾನುಭವಿಗಳ ಜಮೀನು ಗಳನ್ನು ಮಾರಾಟ ಮಾಡದಂತೆ ಶಾಶ್ವತವಾದ ನಿರ್ಬಂ ಧವನ್ನು ಮತ್ತೆ ಜಾರಿಗೆ ತರಬೇಕು. ಹೀಗಾದಲ್ಲಿ ಮಾತ್ರ ರಾಜ್ಯ ದಲಿತರ ಸಮುದಾಯದ ಜನರು ಭೂಮಿಯ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಸಲದ ರಾಜ್ಯ ಬಜೆಟ್ ದಲಿತ ಸಮುದಾಯಕ್ಕೆ ಒಂದಿ ಷ್ಟಾದರೂ ಕರುಣೆ ತೋರಿಸಿದ್ದಕ್ಕಾಗಿ ಮುಖ್ಯಮಂತ್ರಿಗ ಳಿಗೆ ಅಭಿನಂದನೆಗಳು.
ಕಿರಣ್ ಕುಮಾರ್, ಬೆಳ್ತಂಗಡಿ

ಬಿಎಸ್‌ಎನ್‌ಎಲ್ ಸೇವೆಯಲ್ಲಿ ಸುಧಾರಣೆ ತನ್ನಿ

Posted by JAYAKIRANA Kirana on | 0 comments | Leave a comment...

ಮಂಗಳೂರು ನಗರದ ಮಠದಕಣಿ-ಬೋಳೂರು ಪ್ರದೇಶದಲ್ಲಿ ಹಿಂದಿನ ಒಂದು ವರ್ಷದಿಂದ ಬಿಎಸ್‌ಎನ್‌ಎಲ್‌ನ ಬ್ರಾಡ್ ಬ್ಯಾಂಡ್ ಸೇವೆ ಎಷ್ಟೊಂದು ಚಂಚಲವಾ ಗಿದೆಯೆಂದರೆ ಅದು ಯಾವಾಗಲೂ ಎರಡು ನಿಮಿಷಕ್ಕಿಂತ ಹೆಚ್ಚಾಗಿ ನಿರಂತರ ಬಂದದ್ದೇ ಇಲ್ಲ. ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಹನ್ನೊಂದರವರೆಗೆ ಬ್ರಾಡ್‌ಬ್ಯಾಂಡ್‌ನ ಕಣ್ಣು ಮುಚ್ಚಾಲೆ ಯಾವ ಮಟ್ಟದ್ದೆಂದರೆ ಕೇವಲ ಎರಡು ನಿಮಿಷ ಬಂದು ಇಪ್ಪತ್ತು ನಿಮಿಷ ಮಾಯಾವಾಗಿ ಮತ್ತೆ ಎರಡು ನಿಮಿಷ ಬಂದು ಪುನಃ ೨೦ ನಿಮಿಷ ಮಾಯ. ವಿದ್ಯಾರ್ಥಿ ಗಳಾಗಲೀ, ಉದ್ಯೋಗಸ್ಥರಾಗಲೀ ಈ ಪ್ರದೇ ಶದಲ್ಲಿ ಇಂಟರ್‌ನೆಟ್ ಉಪಯೋಗಿಸಿದರೆ ಅವ ರಿಗೆ ಹುಚ್ಚು ಹಿಡಿಯುವುದು ಖಂಡಿತ. ಶೇರ್ ಮಾರ್ಕೆಟ್ ವ್ಯವಹಾರಿಗಳಿಗೆ ಇಲ್ಲಿ ಇಂಟರ್‌ನೆಟ್ ಸಂಪೂರ್ಣ ನಿರುಪಯುP. ಕಾರಣ ಹಗಲು ಹೊತ್ತಿ ನಲ್ಲಿ ಕನೆಕ್ಟಿವಿಟಿಯೇ ಇರುವುದಿಲ್ಲ. ಸರಕಾರಿ ರಜೆ ದಿನ ಹಾಗೂ ರವಿವಾರ ಹಗಲುರಾತ್ರಿ ಪೂರ್ತಿ ಇಂಟರ್‌ನೆಟ್ ಬಂದ್ ಇರುತ್ತದೆ. ತಿಂಗಳಿಗೆ ನಾನು ರೂ. ೯೦೦ ಬಿಲ್ ಕಟ್ಟುತ್ತಿದ್ದರೂ ನಿಜವಾಗಿ ಇಡೀ ತಿಂಗಳಲ್ಲಿ ಒಟ್ಟು ೫೦ ರೂಪಾಯಿಯ ಇಂಟರ್ ನೆಟ್ ಸಹಾ ಬಳಸಲು ಸಾಧ್ಯವಾಗುತ್ತಿಲ್ಲ. ಇಂತಹ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಯಾವ ಕರ್ಮಕ್ಕೆ? ಮಂಗಳೂರಿನಂತಹಾ ಹೈಫೈ ನಗರ ದಲ್ಲೇ ಬಿಎಸ್‌ಎನ್‌ಎಲ್ ಸೇವೆ ಇಷ್ಟೊಂದು ಕಳಪೆ ಯಾದರೆ ಇನ್ನು ಗ್ರಾಮೀಣ ಪ್ರದೇಶದಲ್ಲಿ ಅವರ ಸೇವೆ ಎಷ್ಟೊಂದು ಕೊಳಕಾಗಿರಬಹುದು.
ಈಗ ಎಲ್ಲರ ಮನೆಯಲ್ಲೂ ಎರಡು ಮೂರು ಮೊಬೈಲ್ ಫೋನ್‌ಗಳಿರುವುದರಿಂದ ಯಾರಿಗೂ ಲ್ಯಾಂಡ್‌ಲೈನ್ ಫೋನ್ ಬೇಡವೇ ಬೇಡ. ಕೇವಲ ಬ್ರಾಡ್‌ಬ್ಯಾಂಡ್ ಇಂಟರ್ ನೆಟ್‌ಗಾಗಿ ಮಾತ್ರ ಈಗ ಹೆಚ್ಚಿನವರ ಬಿಎಸ್‌ಎ ನ್‌ಎಲ್‌ನ ಕನೆಕ್ಷನ್ ತೆಗೆದು ಕೊಳ್ಳುವುದು. ಆದರೆ ಬೋಳೂರು,ಮಠದಕಣಿ ಪ್ರದೇಶದಲ್ಲಿ ಈ ಬ್ರಾಡ್ ಬ್ಯಾಂಡ್ ಕೇವಲ ಯಕಶ್ಚಿತ್ ಲ್ಯಾಂಡ್‌ಲೈನ್ ಫೋನಾಗಿ ಪರಿವರ್ತಿತವಾಗಿ ಗ್ರಾಹಕರಿಗೆ ಅನು ಪಯುಕ್ತವಾಗಿದೆ. ಖಾಸಗಿ ಇಂಟರ್‌ನೆಟ್ ಕಂಪೆ ನಿಗಳಲ್ಲಿ ಕನೆಕ್ಷನ್‌ಗಾಗಿ ವಿನಂತಿಸಿದರೆ, ಈ ಪ್ರದೇ ಶದಲ್ಲಿ ಬಿಎಸ್‌ಎನ್‌ಎಲ್ ಇರುವುದರಿಂದಾಗಿ ತಮಗೆ ಇಲ್ಲಿ ಸೇವೆಗೆ ಅವಕಾಶವಿಲ್ಲವಾಗಿದೆ ಎನ್ನುತ್ತಿದ್ದಾರೆ.
ಹಾಗಾಗಿ ಇದ್ದೂ ಇಲ್ಲದಂತಿರುವ ಬಿಎಸ್ ಎನ್‌ಎಲ್‌ನವರಲ್ಲಿ ನಾವು ವಿನಂತಿಸಿಕೊಳ್ಳು ವುದು ಇಷ್ಟೇ. ನೀವು ಈ ಪ್ರದೇಶದಲ್ಲಿ ದಯ ವಿಟ್ಟು ಸೇವೆ ನಿಲ್ಲಿಸಿದರೆ ಕನಿಷ್ಟ ಪಕ್ಷ ಖಾಸಗಿ ಕಂಪೆನಿಗಳ ಇಂಟರ್‌ನೆಟ್ ಸೇವೆ ಶುರುವಾಗಿ, ನಾವು ಅನುದಿನ ಸೈಬರ್ ಕೆಫೆಗೆ ಓಡುವುದು ತಪ್ಪಬಹುದು. ಸರಕಾರಿ ಸ್ವಾಮ್ಯದ ಬಿಎಸ್‌ಎ ನ್‌ಎಲ್‌ನಿಂದ ಸುಧಾರಣೆ ನಿರೀಕ್ಷಿಸುವುದು ವ್ಯರ್ಥ. ಕೆ.ರಮೇಶ್ ಪೂಜಾರಿ,
ಮಠದಕಣಿ, ಮಂಗಳೂರು

ಭಾರತಿ ಶಿಫ್‌ನ ಮ್ಯಾನೇಜರ್ ಮುಂದುವರಿಯಲಿ
ಖಾಸಗಿ ಕಂಪೆನಿಯ ಬಗ್ಗೆ ಮಾತನಾಡುವುದು ಸರಿ ಅಲ್ಲ ಎಂಬುದು ಗೊತ್ತಿದ್ದರೂ, ವ್ಯಕ್ತಿಯ ಉತ್ತಮ ಕಾರ್ಯಗಳಿಗಾಗಿ ಅವರ ಪರವಾಗಿ ಮಾತನಾಡುವಂ ತಾಗಿದೆ.
ಬೆಂಗ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತಿ ಶಿಪ್ ಯಾರ್ಡ್ ಬಂದಾಗ ಸ್ಥಳೀಯರಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂಬ ಭಯ ಇತ್ತು. ಈಗ ಅಂತಹ ಸಮಸ್ಯೆ ಕಾಣುತ್ತಿಲ್ಲ ಎಂದರೆ ಅದಕ್ಕೆ ಕಾರಣ ಶಿಪ್ ಯಾರ್ಡ್‌ನ ಮ್ಯಾನೇಜರ್ ಚಂದ್ರಶೇಖರ ಸುವರ್ಣರವರ ಪರಿಶ್ರಮ ಎಂದು ಹೇಳಬಹುದು.
ಚಂದ್ರಶೇಖರ ಸುವರ್ಣರವರು ಕಂಪೆನಿಗೆ ಮ್ಯಾನೇ ಜರ್ ಆದರೂ ಅವರು ಸ್ಥಳೀಯ ಜನರ ಸಮಸ್ಯೆಗಳಿಗೂ ಸ್ಪಂದಿಸುತ್ತಾ ಬಂದಿದ್ದಾರೆ. ಸ್ಥಳೀಯವಾಗಿ ಡ್ರೈನೇಜ್ ವ್ಯವಸ್ಥೆ, ಬೀದಿ ದೀಪ, ಕೆಲವು ಕಡೆಗಳಲ್ಲಿ ಮಾರ್ಗವನ್ನು ನಿರ್ಮಿಸಿ ಕೊಡುವಲ್ಲಿ ಶ್ರಮಿಸಿದ್ದಾರೆ. ಸ್ಥಳೀಯರ ಸಣ್ಣ-ಪುಟ್ಟ ಸಮ ಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇಂತಹ ಅಧಿಕಾರಿ ಸೇವಾ ನಿವೃತ್ತಿ ಘೋಷಿಸುತ್ತಿದ್ದಾರೆ. ಇವರು ಇದೇ ಸಂಸ್ಥೆ ಯಲ್ಲಿ ಇನ್ನಷ್ಟು ಸಮಯ ಮುಂದುವರಿಯಲಿ ಎಂಬುದು ನಮ್ಮ ಆಶಯ. ಚಂದ್ರಶೇಖರ ಸುವರ್ಣರವರು ನಮ್ಮೂ ರಿನವರೇ ಆಗಿದ್ದಾರೆ. ಮುಂದೆ ಬರುವ ಅಧಿಕಾರಿ ಬೇರೆ ರಾಜ್ಯದವರೂ ಆಗಿರಬಹುದು. ಆದುದರಿಂದ ಚಂದ್ರಶೇ ಖರವರು ಇನ್ನಷ್ಟು ದಿನ ಸೇವೆ ಸಲ್ಲಿಸಿ ಸ್ಥಳೀಯ ಸಮಸ್ಯೆ ಗಳನ್ನು ನಿವಾರಿಸಲು ಕಂಪೆನಿಯಿಂದ ಸಹಕಾರ ಪಡೆ ಯುಂತಾಗಲಿ ಎಂದು ಬಯಸುತ್ತೇವೆ. ಇದಕ್ಕಾಗಿ ಭಾರತಿ ಶಿಫ್ ಯಾರ್ಡ್‌ನ ಅಧ್ಯಕ್ಷ ವಿಜಯ ಕುಮಾರರನ್ನು ಆಗ್ರ ಹಿಸುತ್ತಿದ್ದೇವೆ.
ನಿವೃತ್ತ ಏರ್ ಮಾರ್ಷಲ್ ಆಗಿರುವ ಚಂದ್ರಶೇಖರ ಸುವರ್ಣರವರು, ಹಾಸನ ಸಕ್ಕರೆ ಕಾರ್ಖಾನೆಯ ಎಂ.ಡಿ. ಆಗಿ, ದ.ಕ. ಸಹಕಾರಿ ಸಂಘಗಳ ಉಪ ನಿರ್ದೇಶಕರಾ ಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯರ ಬಗ್ಗೆ ಗೊತ್ತಿರುವ ಇವರನ್ನು ಸಂಸ್ಥೆ ಬಳಸಿಕೊಳ್ಳಲಿ.
ಅಧ್ಯಕ್ಷರು, ಕುದ್ರೋಳಿ-ಬೆಂಗ್ರೆ ಹೋರಾಟ ಸಮಿತಿ

ರಸ್ತೆಬದಿ ಅನಧಿಕೃತ ಪಾರ್ಕಿಂಗ್!
ಮಂಗಳೂರಿನ ಟ್ರಾಫಿಕ್ ಪೊಲೀಸರು ಗಾಢನಿ ದ್ದೆಯಲ್ಲಿರುವಂತೆ ತೋರುತ್ತಿದೆ. ನಗರದ ವಿವಿಧ ಪ್ರಧಾನ ಮತ್ತು ಒಳರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಮಾಮೂ ಲಾಗಿದೆ. ಅದರಲ್ಲೂ ನಗರದ ಬಿಜೈ ಜಂಕ್ಷನ್‌ನಿಂದ ಕೆಎಸ್‌ಆರ್‌ಟಿಸಿ ಕಡೆ ಸಾಗುವ ಕಾಂಕ್ರೀಟ್ ರಸ್ತೆಯ ಎಡಬದಿಯಲ್ಲಿ ಬೈಕ್ ಮತ್ತು ಕಾರ್‌ಗಳನ್ನು ರಸ್ತೆಯನ್ನು ಆಕ್ರಮಿಸಿ ಕೊಂಡೇ ನಿಲ್ಲಿಸಿ ವಾಹನ ಸವಾರರಿಗೆ ಅಡ ಚಣೆ ಉಂಟು ಮಾಡುತ್ತಾರೆ. ಇಲ್ಲಿನ ಅಂಗಡಿ ಮಾಲ ಕರು, ಗ್ರಾಹಕರು ವಾಹನಗಳನ್ನು ನಿಲ್ಲಿಸಲು ಸೂಕ್ತ ವ್ಯವ ಸ್ಥೆಯೂ ಇಲ್ಲ. ಇದರಿಂದ ವಾಹನಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಬಂಧಪಟ್ಟವರು ಗಮನಿಸಲಿ.
ಗಿರೀಶ್, ಬಿಜೈ

ನಮ್ಮ ಸಂಘದ ಸದಸ್ಯನಲ್ಲ
ಮಾರ್ಚ್ ೨೮ರ ಪತ್ರಿಕೆಯಲ್ಲಿ ಪ್ರಕಟಗೊಂಡ ‘ಕನ್ಯಾನ ಕ್ಷೇತ್ರದ ಸ್ವಾಮಿಯವರಿಗೆ ಜೀವ ಬೆದರಿಕೆ ಎಂಬ ವರದಿಯಲ್ಲಿ ನಮ್ಮ ಸಂಘದ ಪ್ರಧಾನ ಕಾರ್ಯ ದರ್ಶಿ ಎಂದು ಹೇಳಿಕೆ ನೀಡಿರುವುದು ಓರ್ವ ಅನಧಿ ಕೃತ ವ್ಯಕ್ತಿಯಾಗಿದ್ದು, ಸಂಘದ ಸದಸ್ಯರಾಗಿರುವುದಿಲ್ಲ. ಅಲ್ಲದೇ ಸ್ವಾಮಿಯವರಿಗೆ ಬಂದ ಬೆದರಿಕೆ ಕರೆಯನ್ನು ನಾವು ಖಂಡಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗ ಳಲ್ಲಿ ರಕ್ಷಣೆ ನೀಡುವಂತೆ ಒತ್ತಾಯಿಸುತ್ತೇವೆ.
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪಾಣಾರ ಯಾನೆ ನಲಿಕೆ ಸಮಾಜ

ಸಂಘಪರಿವಾರ ಹಿಂದೂ ಸಮಾಜದ ಗುತ್ತಿಗೆ ಪಡೆದಿಲ್ಲ
ಸಂಘಪರಿವಾರ ಹಾಗೂ ಅದರ ಸಹಸಂಘಟನೆಗಳು ಮುಗ್ಧ, ಅಮಾಯಕ ಹಿಂದೂಗಳ ಗುತ್ತಿಗೆ ಪಡೆದವರಂತೆ ಆಡುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಗಲಭೆ, ದಾಂಧಲೆಯನ್ನು ನಡೆಸಿರುವ ಸಂಘ ಪರಿವಾರ ಪ್ರೇರಿತ ಶಕ್ತಿಗಳು ಈಗ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟು ಕಾರ್ಯಾಚರಣೆ ನಡೆಸುತ್ತಿರುವುದು ದುರದೃಷ್ಟಕರ. ಪಾರ್ಟಿ ನಡೆಸುವ ಲ್ಲೆಲ್ಲ ದಾಳಿ ಮಾಡಿ ಅಲ್ಲಿದ್ದವರಿಗೆ ಥಳಿಸಿ, ಎಚ್ಚರಿಕೆ ನೀಡುವ ಸಂಘ ಪರಿ ವಾರ ಶಕ್ತಿಗಳು ವಿದ್ಯಾರ್ಥಿಗಳ ಸ್ವಚ್ಛಂದ ಕಾಲೇಜ್ ಜೀವನದಲ್ಲ್ಲಿ ತೊಡಕ ನ್ನುಂಟು ಮಾಡುತ್ತಿವೆ. ಇವರ ಕೈಯಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿ ಸಲಾರದಷ್ಟು ನಮ್ಮ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆಯೇ? ಪೊಲೀಸ್ ವ್ಯವಸ್ಥೆಯೂ ಕೇಸರೀಕರಣಗೊಂಡರೆ ಜನಸಮಾನ್ಯರ ಪಾಡೇನು? ಇನ್ನಾ ದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಚಿಂತನೆ ನಡೆಸಲಿ.
ರಾಕೇಶ್, ಮಂಗಳೂರು

31-03-2012

Posted by JAYAKIRANA Kirana on | 0 comments | Leave a comment...

ಲಾಸ್ಟ್ ಗಿಫ್ಟ್
ಈ ಜಗತ್ತಿನ ಮಹಾ ಕುಡುಕ ಮತ್ತು ಧೂಮಪಾನಿಯೊಬ್ಬನ ನೊಂದ ನುಡಿ ಕುಡಿತ ಮತ್ತು ಸಿಗರೇಟ್ ಸೇದುವುದು ನನ್ನ ಹವ್ಯಾಸವಲ್ಲ. ಬದಲಾಗಿ ಇದು ನನ್ನ ಮೊದಲ ಪ್ರೇಯಸಿಯ ಕೊನೆಯ ಗಿಫ್ಟ್ ಅಷ್ಟೇ!

ಭಾವನೆ
ಒಂದು ಪುಟ್ಟ ಹೃದಯದ ನೈಜ ಭಾವನೆ ನನಗೆ ಯಾರ ಜೊತೆ ಹೇಗೆ ಮಾತನಾಡಬೇಕೆಂಬ ಜ್ಞಾನವಿಲ್ಲ. ಆದರೆ ನನ್ನ ಮನಸ್ಸು ಮಾತ್ರ ಎಂದಿಗೂ ಪರಿಶುದ್ದ. ಒಂದು ವೇಳೆ ನನ್ನ ಮಾತುಗಳು ನೋಯಿಸುವಂತಿದ್ದರೂ ಅಂತಹ ಉದ್ದೇಶ ನನ್ನಲ್ಲಿಲ್ಲ.

ತುಂಬಾ ಕಷ್ಟ
ಕೆಲವರು ನಿಲ್ಲಿಸಿ ಹೊಡಿತಾರೆ
ಕೆಲವರು ಮಲಗಿಸಿ ಹೊಡಿತಾರೆ, ಕೆಲವರು ಜೋರಾಗಿ ಹೊಡಿತಾರೆ
ಇನ್ನೂ ಕೆಲವರು ಬಗ್ಗಿಸಿ ಹೊಡಿತಾರೆ, ಆದರೆ ಏನ್ ಮಾಡಿದ್ರೂ ಹಳೇ ಬಜಾಜ್ ಸ್ಕೂಟರ್ ಸ್ಟಾರ್ಟ್ ಮಾಡೋದು ತುಂಬಾ ಕಷ್ಟ ಅಲ್ವಾ! ಏನೇನೋ ಯೋಚನೆ ಮಾಡಬೇಡಿ.

ಅದೃಷ್ಟ
ಪ್ರಪಂಚದಲ್ಲಿ ಉತ್ತಮ ವ್ಯಕ್ತಿಗಳನ್ನು ಭೇಟಿಯಾಗುವ ಮುನ್ನ ನಾವು ಹಲವಾರು ಕೆಟ್ಟವರನ್ನು ಭೇಟಿಯಾಗುತ್ತೇವೆ. ಹಾಗಾಗಿ ಕೊನೆಯಲ್ಲಿ ನಾವು ಎಷ್ಟು ಅದೃಷ್ಟವಂತರು ಎಂದು ನಮಗನಿಸುವುದು.

ಆತ್ಮವಿಶ್ವಾಸ
ದೇವರನ್ನು ಪಾರ್ಥಿಸುವುದರಿಂದ ದೈತ್ಯ ಬೆಟ್ಟ ಸಣ್ಣದಾಗಲು ಸಾಧ್ಯವಿಲ್ಲ, ಇದರಿಂದ ಸುಲಭವಾಗಿ ಹತ್ತಲು ಸಾಧ್ಯವಾಗಬಹುದು. ಆದರೆ ಜೀವನದ ಭಾರವನ್ನು ಕಡಿಮೆಗೊಳಿಸಲು ಕೇಳಬೇಡಿ ಬದಲಾಗಿ ಬೆನ್ನನ್ನು (ಆತ್ಮವಿಶ್ವಾಸ) ಗಟ್ಟಿಗೊಳಿಸಲು ಪ್ರಾರ್ಥಿಸಿ

ಚೊಂಬೆ!
ಹುಡುಗಿಯರಲ್ಲಿ ದೊಡ್ಡವರು ಚಿಕ್ಕವರು ಅಂತ ಏನು ಇಲ್ಲ, ಹುಡುಗಿ ಎಷ್ಟೇ ವಯಸ್ಸಿನವಳೇ ಆಗಿರಲಿ. ಅಕಸ್ಮಾತ್ತಾಗಿ ಅವಳು ಒಮ್ಮೆ ನಮ್ಮನ್ನು ನೋಡಿ ನಕ್ಕಳು ಎಂದರೆ ಹುಡುಗರ ಲೈಫ್ ಚೊಂಬೆ!

ವಾಪಾಸ್
ಹುಡುಗಿ: ನಾನು ಇವತ್ತು ನಿನ್ನ ಜೊತೆ ಬೈಕ್‌ನಲ್ಲಿ ಬರೋದನ್ನು ನನ್ನ ಅಪ್ಪ ನೋಡಿದರು, ಹುಡುಗ: ಹೌದಾ, ಅಮೇಲೆ ಏನಾಯ್ತು? ಹುಡುಗಿ: ಏನಿಲ್ಲ, ಮನೆಗೆ ಹೋದ ನಂತರ ಬಸ್ಸಿನ ಹಣ ವಾಪಾಸ್ ಕೇಳಿದ್ರು.

ಡೈವೋರ್ಸ್
ಸಂತಾ: ಬಟ್ಟೆ ಒಗೆಯುವ, ಅಡಿಗೆ ಮಾಡುವ ಹಾಗೂ ಕ್ಲೀನಿಂಗ್ ಕೆಲಸದಿಂದ ಮುಕ್ತಿ ಹೊಂದಲು ನಾನು ವಿವಾಹವಾದೆ. ಬಂತಾ: ಆದರೆ ನಾನು ಅದೇ ವಿಷಯಕ್ಕಾಗಿ ಡೈವೋರ್ಸ್ ತೆಗೆದುಕೊಂಡೆ!!!

31-03-2012

Posted by JAYAKIRANA Kirana on | 0 comments | Leave a comment...

ಸುಳ್ಯ : ಟೈಲರಿಂಗ್ ಅಂಗಡಿಗೆ ಲೇಡಿಸ್ ಟೈಲರ್ ಬೇಕು ೯೯೬೪೮೭೪೨೫೫.
ಬೈಕಂಪಾಡಿ : ಔಷಧಿ ತಯಾರಿಕಾ ಕಂಪೆನಿಯಲ್ಲಿ ಪ್ಯಾಕಿಂಗ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೦೨೨೮೩೭೮.
ಮಂಗಳೂರು : ಬಟ್ಟೆ ಅಂಗಡಿಗೆ ಜನ ಬೇಕು ೯೪೪೮೪೪೬೦೭೩
ಮಂಗಳೂರು : ಸಂಸ್ಥೆಗೆ ಯುವಕ ಯುವತಿಯರು ಬೇಕು ೯೪೪೮೩೨೮೮೩೩.
ಬೆಳ್ತಂಗಡಿ : ಸಂಸ್ಥೆಯೊಂದಕ್ಕೆ ಎಕೌಂಟ್ಸ್‌ಗೆ ಪದವೀಧರೆ ಬೇಕು ೯೪೮೩೫೦೦೪೯೫.
ಕೊಡಿಯಾಲ್‌ಬೈಲ್ : ಹೌಸ್‌ಕೀಪಿಂಗ್ ಕೆಲಸಕ್ಕೆ ಯುವಕರು ಬೇಕು ೯೯೬೪೫೪೦೫೪೪.
ಪಡೀಲ್ : ಹೋಂ ನರ್ಸ್ ಬೇಕು ೯೭೪೩೯೨೧೩೨೬.
ಮಂಗಳೂರು : ಮೆಡಿಕಲ್ ರೆಪ್ರಸೆಂಟೇಟಿವ್ ಬೇಕು ೯೭೪೩೩೯೦೭೯೭.
ಪಾಂಡೇಶ್ವರ : ಬೇಕರಿಗೆ ಯುವಕ, ಯುವತಿ ಯರು ಬೇಕು ೯೮೪೪೫೨೧೭೪೩.
ಮರೋಳಿ : ಲೈನ್ ಸೇಲ್‌ಗೆ ಓಮ್ನಿ ಡ್ರೈವರ್ ಬೇಕು ೯೩೪೧೭೫೮೫೦೦.
ಮಂಗಳೂರು : ಮೆಡಿಕಲ್ ಶಾಪಿಗೆ ಅನುಭ ವವುಳ್ಳ ಯುವಕ ಯುವತಿಯರು ಬೇಕು ೯೮೮೦೩೭೯೭೩೧.
ಮಂಗಳೂರು :ಮೆಕ್ಯಾನಿಕ್, ಹೆಲ್ಪರ್ ಬೇಕು ೯೮೮೦೮೬೪೦೮೯.
ಮಂಗಳೂರು:ಕಂಪ್ಯೂಟರ್ ಬಲ್ಲ ಹುಡುಗಿ ಯರು ಬೇಕು ೯೦೩೬೪೮೯೦೪೦.
ಕಾರ್‌ಸ್ಟ್ರೀಟ್: ಹೊಟೇಲ್‌ಗೆ ಜನ ಬೆಕು ೯೪೮೨೯೬೯೫.
ಉರ್ವ ಮಾರ್ಕೆಟ್ :ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು :ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ:ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.
ಬೈಕಂಪಾಡಿ: ಮಾಂಸಾಹಾರಿ ಅಡುಗೆ ಯವರು ಮತ್ತು ಹೆಲ್ಪರ‍್ಸ್ ಬೇಕು ೯೯೮೦೨೬೭೮೮೪.
ಮಂಗಳೂರು :ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್ & ಬ್ಲೌಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೮೯೭೦೪೨೫೧೮೧.
ಹೂವಿನ ಬೊಕ್ಕೆ ಅಂಗಡಿಗೆ ಹುಡುಗಿ ಯರು ಬೇಕಾಗಿದ್ದಾರೆ. ೯೬೬೩೭೬೦೧೨೫
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೆ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.
ಕಂಕನಾಡಿ: ಸೇಲ್ಸ್‌ಗರ್ಲ್ಸ್, ಸೇಲ್ಸ್ ಬಾಯ್ ಮತ್ತು ಸ್ಟಿಚಿಂಗ್ ಗೊತ್ತಿದ್ದ ಹುಡುಗಿಯರು ಬೇಕು ೯೮೪೪೩೮೧೧೧೮.
ಕುಂಟಿಕಾನ :ಬೇಕರಿಗೆ ಹೆಲ್ಪರ್ ಕೆಲಸಕ್ಕೆ ಜನ ಬೇಕು ೯೪೮೦೧೧೭೮೫೪.

31-03-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗ ರಂಗದಲ್ಲಿ ನೆಮ್ಮದಿ ನೆಮ್ಮದಿ ಇರುತ್ತದೆ.
ವೃಷಭ : ಕೆಲಸ ಕಾರ್ಯಗಳಲ್ಲಿ ಸಮಾಧಾನ ಇರುತ್ತದೆ.
ಮಿಥುನ : ಕೆಲವು ಸಮಸ್ಯೆಗಳು ಪರಿಹಾರವಾಗುತ್ತದೆ.
ಕರ್ಕಾಟಕ : ಹಣಕಾಸಿನ ಲಾಭದಲ್ಲಿ ಕೊರತೆ ಕಂಡು ಬರುತ್ತದೆ.
ಸಿಂಹ : ಕುಟುಂಬದವರಿಂದ ಸಹಕಾರ ಸಿಗುತ್ತದೆ.
ಕನ್ಯಾ : ಮಕ್ಕಳ ವಿಷಯದಲ್ಲಿ ಒತ್ತಡ ಇರುತ್ತದೆ.
ತುಲಾ : ಪ್ರಯಾಣದಲ್ಲಿ ನಷ್ಟವಾಗುತ್ತದೆ.
ವೃಶ್ಚಿಕ : ಸರಕಾರಿ ಕೆಲಸದಲ್ಲಿ ಲಾಭ ಇರುತ್ತದೆ.
ಧನು : ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರುತ್ತದೆ.
ಮಕರ : ಮಕ್ಕಳಿಂದ ಸಂತಸ ಇರುತ್ತದೆ.
ಕುಂಭ : ಮನೆ ನಿರ್ಮಾಣದ ಕೆಲಸವು ಪ್ರಗತಿಯಲ್ಲಿರುತ್ತದೆ.
ಮೀನ : ಹಣಕಾಸಿನ ಲಾಭವಾಗುತ್ತದೆ.

ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ಸೆನ್ಸಾರ್‌ನ ಅಗತ್ಯವಿದೆ

Posted by JAYAKIRANA Kirana on | 0 comments | Leave a comment...

ಜ್ಯೋತಿಷ್ಯ ಶಾಸ್ತ್ರವನ್ನು ಯಾರು ಎಷ್ಟೇ ಮೂಢನಂ ಬಿಕೆ ಎಂದರೂ ಪ್ರಪಂಚದಲ್ಲಿ ಶೇ. ಎಂಬತ್ತರಷ್ಟು ಜನ ಅದನ್ನು ವಿವಿಧ ರೀತಿಯಲ್ಲಿ ನಂಬುತ್ತಾರೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರ ವನ್ನು ದೂರುವವರು, ಹೀಗಳೆಯುವವರು ಆಂಗ್ಲ ಪತ್ರಿಕೆಗಳಲ್ಲಿ ವಿದೇಶಿ ಕಲ್ಪನೆಯ ಜ್ಯೋತಿಷ್ಯ ಶಾಸ್ತ್ರದ ಫಲಗಳ ಮೇಲೆ ಕಣ್ಣಾ ಡಿಸುವವರೇ ಆಗಿದ್ದಾರೆ. ಗ್ರಹಚಾರದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿಯ ನಂಬಿಕೆಯನ್ನು ಹೊಂದಿದ್ದಾರೆ.
ಅತೀ ಹೆಚ್ಚಿನ ಜನರು ನಂಬುವ ಯಾವುದೇ ವಿಚಾರವಿ ರಲಿ ಆ ಬಗ್ಗೆ ಮಾರ್ಗದರ್ಶನ ನೀಡುವ ಎಕ್ಸ್‌ಪರ್ಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಾರೆ. ಇದನ್ನೊಂದು ದಂಧೆ ಯನ್ನಾಗಿ ಪರಿವರ್ತಿಸಿ ಶ್ರೀಮಂತರಾದವರಿಗೇನೂ ಕಡಿಮೆ ಇಲ್ಲ. ಟಿವಿ ಚಾನೆಲ್‌ಗಳಲ್ಲಿ ತೋರಿಸಲಾಗುವ ಕೆಲವು ಪ್ರಖ್ಯಾತ ಜ್ಯೋತಿ ಷಿಗಳ ಹತ್ತು ಬೆರಳುಗಳಲ್ಲೂ ಬಂಗಾರದ ಉಂಗುರ, ಮೌಲ್ಯ ಯುತವಾದ ಹರಳಿನ ಉಂಗುರ. ಕತ್ತಿನಲ್ಲಿ ದಪ್ಪ ದಪ್ಪವಾದ ಚೈನ್, ಚಿನ್ನ-ಬೆಳ್ಳಿಯಿಂದ ಕಟ್ಟಲ್ಪಟ್ಟ ರುದ್ರಾಕ್ಷಿ, ಮುತ್ತಿನ ಮಾಲೆ ಗಳನ್ನು ಕಾಣಬಹುದಾಗಿದೆ. ಟಿ.ವಿ. ವಾಹಿನಿಗಳು ಜ್ಯೋತಿಷ್ಯ ಶಾಸ್ತ್ರವನ್ನು ಅತಿರಂಜಿತವಾಗಿ ಪ್ರಸಾರ ಮಾಡುವುದರಿಂದ ಅದು ಹಾದಿ ಬೀದಿಗಳಲ್ಲಿ, ಹೊಟೇಲು ಲಾಡ್ಜ್‌ಗಳಲ್ಲಿ ಬೋರ್ಡ್ ಹಾಕಿ ಕುಳಿತಿರುವ ಜ್ಯೋತಿಷ್ಯರಿಗೆ, ಮಂತ್ರವಾದಿಗಳಿಗೆ ವ್ಯಾಪಕವಾದ ಬೇಡಿಕೆಯನ್ನು ತಂದು ಕೊಡುತ್ತದೆ.
ಟಿವಿ ಚಾನೆಲ್‌ಗಳಲ್ಲಿ ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಜ್ಯೋತಿಷ್ಯದ ಫಲಾ ಫಲಗಳ ವಿವರಣೆ ಬರುತ್ತಿತ್ತು. ವಾರ ಅಥವಾ ದಿನಭವಿಷ್ಯಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮಗಳು ಈಗ ಬೆಳಗಿನ ಹೊತ್ತು ಗಂಟೆ ಗಟ್ಟಲೆ ಸಮಯವನ್ನು ಕೊಲ್ಲುತ್ತಿರುತ್ತದೆ. ಯಾವ ಚಾನೆಲ್ ತಿರುಗಿಸಿದರೂ ಓರ್ವ ಜ್ಯೋತಿಷಿ ಬಡಬಡಿಸುತ್ತಿರುವುದು ಕಂಡು ಬರು ತ್ತದೆ. ಇದರ ಅರ್ಥವನ್ನು ಬಹಳ ಸುಲಭವಾಗಿ ಊಹಿಸಬಹುದು. ಟಿಆರ್‌ಪಿ ರೇಟ್‌ಗಾಗಿ ಹಂಬಲಿಸುವ ಟಿವಿ ಚಾನೆಲ್‌ಗಳಿಗೆ ಜ್ಯೋತಿಷ್ಯ ವನ್ನು ವೀಕ್ಷಿಸುವ ಬಕ್ರಾಗಳು ಬಹಳಷ್ಟು ಮಂದಿ ಇದ್ದಾರೆ ಎಂಬುದು ತಿಳಿದಿದೆ. ಯುಗಾದಿ, ಸಂಕ್ರಾಂತಿ, ದೀಪಾವಳಿ ಇತ್ಯಾದಿ ಹಬ್ಬಗಳು ಜನ ವರಿ ಎಂಬ ಹೊಸ ವರ್ಷ, ಗ್ರಹಣಗಳು, ಅಮಾವಾಸ್ಯೆ ಹುಣ್ಣಿಮೆಗಳು, ರಾಶಿಯಿಂದ ರಾಶಿಗೆ ಗ್ರಹಗಳ ಪಲ್ಲಟ ಮತ್ತಿತರ ಪರ್ವ ದಿನಗಳಂದು ಅರ್ಧ ಅಥವಾ ಒಂದು ಗಂಟೆಯ ಜ್ಯೋತಿಷ್ಯ ಫಲದ ವಿವರಣೆಯನ್ನು ಹೆಚ್ಚಿನ ಚಾನೆಲ್‌ಗಳು ಪ್ರಸಾರಿಸುತ್ತವೆ. ಇಲ್ಲಿ ಹೇಳಲಾಗುವ ಪರಿಹಾರ ಕ್ರಮಗಳಿಗೆ ವೀಕ್ಷಕರು ಹಣ ಮತ್ತು ಸಮಯವನ್ನು ವ್ಯರ್ಥ ಮಾಡು ತ್ತಲೂ ಇದ್ದಾರೆ.
ಸರಳವಾದ ವಿವರಣೆ, ಫಲಗಳಿಂದ ಕೂಡಿದ್ದ ಇಂತಹಾ ಕಾರ್ಯ ಕ್ರಮಗಳು ಬರಬರುತ್ತಾ ಬಹಳಷ್ಟು ಕಠಿಣವಾದ ವೃತಗಳು, ಪೂಜೆ ಗಳು, ನಿಯಮಗಳನ್ನು ಜನರ ಮನಸ್ಸಿಗೆ ತುರುಕುವಲ್ಲಿಯವರೆಗೆ ಬಂದು ಬಿಟ್ಟಿದೆ. ಕ್ಲಿಷ್ಟವಾದ ಮಂತ್ರಗಳನ್ನು ದಿನದಲ್ಲಿ ಇಂತಿಷ್ಟು ಹೊತ್ತು, ಇಂತಿಷ್ಟು ಬಾರಿ ಪಠಣ ಮಾಡಬೇಕು ಎಂದು ಹೇಳಿಕೊಡಲಾಗುತ್ತಿದೆ. ಸುಖ ಶಾಂತಿ ಸಂಪಾದಿಸಬೇಕಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಕ್ರಮ ನಿಯಮಗಳನ್ನು ಪಾಲಿಸಬೇಕು ಎಂದು ವಿಸ್ತಾರವಾಗಿ ಹೇಳಿ ಕೊಟ್ಟು ವೀಕ್ಷಕರನ್ನು ಮಾನಸಿಕ ಭ್ರಾಂತಿಗೆ ಒಳಪಡಿಸುತ್ತಿರುವುದು ಕಂಡು ಬರುತ್ತದೆ.
ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಯಾವುದೋ ಒಂದು ಪರಿ ಹಾರಕ್ಕೆ ಸ್ಮಶಾನದಲ್ಲಿ ಕಾಡಿಗೆಯನ್ನು ಹೂತು ಬರಬೇಕು ಎಂದು ಹೇಳ ಲಾಯಿತು. ದೇವಸ್ಥಾನದಲ್ಲಿರುವ ಭಿಕ್ಷುಕರಿಗೆ ಇಂತಿಂತಹಾ ದವಸ, ಧಾನ್ಯ, ಆಹಾರವನ್ನು ಭಿಕ್ಷೆಯಾಗಿ ನೀಡಬೇಕು ಎಂದು ಉಪದೇಶಿಸಲಾಯಿತು. ಭಿಕ್ಷಾಟನೆಯನ್ನು ವಿರೋಧಿಸಬೇಕಾದ, ಭಿಕ್ಷೆ ಕೊಡುವುದು ಮತ್ತು ಪಡೆ ಯುವುದು ಅಪರಾಧ ಎಂದು ಪರಿಗಣಿಸಲ್ಪಡುವ ಈ ಕಾಲದಲ್ಲಿ ಭಿಕ್ಷಾಟಣೆ ಯನ್ನು ಪ್ರೋತ್ಸಾಹಿಸುವಂತಹಾ ಉಪದೇಶಗಳು ಜ್ಯೋತಿಷ್ಯರಿಂದ ಸಾರ್ವ ಜನಿಕವಾಗಿ ಕೇಳಿ ಬರುತ್ತಿರುವುದು ಕೇವಲ ಜ್ಯೋತಿಷ್ಯದ ಆಧಾರದಲ್ಲಿ ಜನ ರನ್ನು ಮುನ್ನಡೆಸುವ ಅಪಾಯಕಾರಿ ಬೆಳವಣಿಗೆಯ ಒಂದು ಸಣ್ಣ ಸ್ಯಾಂಪಲ್ ಅಷ್ಟೆ. ಸ್ಮಶಾನದಲ್ಲಿ ಕಾಡಿಗೆ ಹೂತು ಬರಬೇಕು ಎಂದು ಹೇಳುವ ಜ್ಯೋತಿ ಷ್ಯರುಗಳು ಗುಪ್ತವಾಗಿ ಅಮಾವಾಸ್ಯೆಯ ರಾತ್ರಿ ಸ್ಮಶಾನದಲ್ಲಿ ತಂತ್ರ, ಮಂತ್ರ ಗಳನ್ನು ಮಾಡಬೇಕು ಎಂದು ಹೇಳಲಾರರೇ? ಇಂತಹಾ ಬೆಳವಣಿಗೆಗಳು ಮುಂದೊಂದು ದಿನ ನರಬಲಿಯಂತಹಾ ಪಾಶವೀ ಕೃತ್ಯಕ್ಕೂ ಪ್ರೇರಣೆ ನೀಡಲು ಸಾಧ್ಯವಿದೆಯಲ್ಲವೇ?
ಜ್ಯೋತಿಷ್ಯರು ಹೇಳಿದರು ಎಂದು ನಿಧಿ ಪಡೆಯುವುದಕ್ಕಾಗಿ ಮಾಡುವ ಮಾಟ ಅಥವಾ ತಂತ್ರದಲ್ಲಿ ನರಬಲಿ ಕೊಡಬೇಕು ಎಂದು ಬಲಿ ನೀಡಿದ ಸಾಕಷ್ಟು ಪ್ರಕರಣಗಳು ದೇಶದಾದ್ಯಂತ ವರದಿಯಾಗಿದೆ. ನಮ್ಮ ರಾಜ್ಯದಲ್ಲಿ ಇಂತಹಾ ಅನೇಕ ಘಟನೆಗಳು ನಡೆದಿದೆ. ನಮ್ಮ ಜಿಲ್ಲೆಯಲ್ಲೂ ಇಂತಹ ಘಟನೆ ನಡೆದದ್ದು ನಮ್ಮ ಮನಸ್ಸಿನಿಂದ ಇಂದಿಗೂ ಅಳಿದು ಹೋಗಿಲ್ಲ. ಹಾಗಿರುವಾಗ ದೃಶ್ಯ ಮಾಧ್ಯಮಗಳಲ್ಲಿ ಇಂತಹಾ ಕೃತ್ಯಗಳಿಗೆ ಪ್ರೇರಕವಾಗು ವಂತಹುದಕ್ಕೆ ಬುನಾದಿಯಾಗುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿರು ವುದು ಅಪಾಯಕಾರಿಯಾಗಿದೆ.
ಜ್ಯೋತಿಷ್ಯ ಶಾಸ್ತ್ರ ಮಾನವನಿಗೆ ಒಳಿತು ಮಾಡುತ್ತದೆ ಎಂಬ ವಾದವನ್ನು ಒಂದೊಮ್ಮೆ ಒಪ್ಪಬಹುದಾದರೂ ಒಳಿತಿಗಿಂತ ಹೆಚ್ಚು ಕೆಡುಕು ಮಾಡುತ್ತದೆ ಎಂಬುದನ್ನು ನಿರಾಕರಿಸುವಂತಿಲ್ಲ. ಇದು ಮನುಷ್ಯನನ್ನು ಧಾರ್ಮಿಕ ಸಾತ್ವಿಕ ವ್ಯಕ್ತಿಯನ್ನಾಗಿ ಮಾಡಬಹುದು. ಅದೇ ರೀತಿ ತನ್ನ ಸ್ವಾರ್ಥಕ್ಕಾಗಿ ಇತರರಿಗೆ ಅಪಾಯವನ್ನು ಉಂಟು ಮಾಡುವುದನ್ನೂ ಜ್ಯೋತಿಷ್ಯ ಶಾಸ್ತ್ರವು ಪ್ರೇರೇಪಿ ಸುತ್ತದೆ. ತನ್ನ ಹಿತಾಸಕ್ತಿಯನ್ನು ಸಾಧಿಸಲು ಎಳ್ಳಿನಿಂದ ಹಿಡಿದು ಮತ್ತಿತರ ದೊಡ್ಡ ದೊಡ್ಡ ವಸ್ತುಗಳನ್ನು ದಾನ ಮಾಡಬೇಕು ಎಂದು ಹೇಳುತ್ತದೆ. ಅದೇ ರೀತಿ ದೊಡ್ಡ ದೊಡ್ಡ ಸಾಧನೆಗಳಲ್ಲಿ ಫಲವನ್ನು ಕಾಣಬೇಕಾದರೆ ಬಹಳಷ್ಟು ದೊಡ್ಡದಾದ ಯಾಗ, ಯಜ್ಞಾದಿಗಳನ್ನೂ ಮಾಡಬೇಕು ಎಂದು ಹೇಳುತ್ತದೆ. ರಾಜ್ಯದ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ, ರಾಜಕೀಯ ಶತ್ರುಗಳನ್ನು ಮಣಿಸುವುದಕ್ಕಾಗಿ ರಾಜಕಾರಣಿಗಳು ಯಾಗವನ್ನು ಮಾಡಿದ್ದು ನಮಗೆ ನೆನಪಿದೆ. ಇಷ್ಟಕ್ಕೆ ತೃಪ್ತಿಯಾಗದ ಮನುಷ್ಯ ಜ್ಯೋತಿಷ್ಯದ ಇನ್ನೊಂದು ಭಾಗವಾದ ವಾಮಾಚಾರಕ್ಕೂ ಮನಸ್ಸು ಮಾಡುವ ಸಾಧ್ಯತೆ ಇದೆ. ಅಪೂ ರ್ವವಾದ ಸಾಧನೆಯನ್ನು ಗಳಿಸಲು ‘ನರಬಲಿ ಕೊಡಬೇಕು ಎಂಬ ಪ್ರೇರೇ ಪಣೆಯಿಂದ ಕಂಡವರ ಮಕ್ಕಳನ್ನು ಬಲಿನೀಡುವ ಮನಸ್ಥಿತಿಗೂ ಜನರು ಬಂದು ಬಿಡಬಹುದು. ಹೇಗಾದರೂ ತಾನು ಐಶಾರಾಮದಿಂದ ಬದುಕ ಬೇಕು, ತನಗೆ ಎದುರು ಬಂದವರನ್ನು ನಿವಾರಿಸಿಬಿಡಬೇಕು ಎಂಬ ಸ್ವಾರ್ಥ ವನ್ನು ಹೊಂದಿದವರು ವಾಮಾಚಾರದ ಕ್ರಮವಾಗಿ ಗುಪ್ತವಾಗಿ ಜ್ಯೋತಿಷ್ಯ ರಿಂದ ನರಬಲಿಯ ಪ್ರೇರೇಪಣೆ ಪಡೆಯುವ ಸಾಧ್ಯತೆ ಇದೆ.
ಈ ಕಾರಣಕ್ಕಾಗಿ ಜನರ ಮನೆ ಮನೆಯನ್ನು, ಮನ ಮನವನ್ನು ಮುಟ್ಟಿ ರುವ ದೃಶ್ಯ ಮಾಧ್ಯಮಗಳಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಒಂದು ಸೆನ್ಸಾರನ್ನು ಅಳವ ಡಿಸಬೇಕಾದ ಅವಶ್ಯಕತೆ ಇದೆ. ಯಾವುದೇ ಜ್ಯೋತಿಷ್ಯ ಕಾರ್ಯಕ್ರಮವೂ ಮಿತಿ ಮೀರಿದ ಅವಧಿಯನ್ನು ತೆಗೆದುಕೊಳ್ಳಬಾರದು. ಪರಿಹಾರಗಳನ್ನು ಸೂಚಿಸುವ ಸಂದರ್ಭದಲ್ಲಿ ಅಸಹಜ, ಮತ್ತು ಅತಿಯಾದ ಮೂಢನಂಬಿಕೆ ಯನ್ನು ಹೊಂದಿರುವ ಪರಿಹಾರಗಳನ್ನು ಹೇಳಬಾರದು ಎಂಬ ನಿಯಮವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಈ ರೀತಿ ಮಾಡಿದರೆ ಜನರು ಜ್ಯೋತಿಷ್ಯ ಶಾಸ್ತ್ರವನ್ನು ಒಂದು ಉತ್ತಮ ಶಾಸ್ತ್ರ ಎಂದು ಸ್ವೀಕರಿಸ ಬಹುದು. ಇಲ್ಲದೇ ಹೋದರೆ ಅತಿಯಾದ ಮೂಢನಂಬಿಕೆಗಳಿಂದ ಸಂಭ ವಿಸುವ ಅಪಾಯದಿಂದ ಜಾಗೃತಿಗೊಂಡ ಜನರು ಜ್ಯೋತಿಷಿಗಳನ್ನು ಕಂಡ ಕಂಡಲ್ಲಿ ಹೊಡೆದೋಡಿಸುವ ಪರಿಸ್ಥಿತಿ ಬರಬಹುದು.
ಮಂಗಳೂರಿನಲ್ಲಿ ನಡೆದ ‘ನರಬಲಿಯ ಕಾರಣದಿಂದಾಗಿ ಜನರು ಜ್ಯೋತಿಷಿಗಳನ್ನು ಅಪನಂಬಿಕೆಯಿಂದ ನೋಡಿದ್ದು. ನಗರದ ಹೊಟೇಲು ಲಾಡ್ಜ್‌ಗಳಲ್ಲಿ ಝಂಡಾ ಹೂಡಿದ ಜ್ಯೋತಿಷಿಗಳು ಕೆಲವು ವಾರಗಳ ಕಾಲ ತಮ್ಮ ವ್ಯವಹಾರ ಸ್ಥಗಿತಗೊಳಿಸಿ ತಲೆ ತಪ್ಪಿಸಿಕೊಂಡದ್ದು ನಮಗೆ ನೆನಪಿರ ಬಹುದು.

ಪೂಜಾರಿ ಮಾಡಿದ್ದನ್ನು ಹೇಳಿಕೊಳ್ಳುವುದಿಲ್ಲ

Posted by JAYAKIRANA Kirana on | 0 comments | Leave a comment...

ಅಶೋಕ್ ಹಲಾಯಿ, ಬಂಟ್ವಾಳ
ಮಾ.೨೮ರ ಚಾವಡಿ ವಿಭಾಗದಲ್ಲಿ ಜನಾರ್ದನ ಪೂಜಾರಿಯವರ ಸಾಧನೆ ಏನು? ಎಂಬ ಪ್ರಶ್ನೆ ಎತ್ತಿದ ಲೋಕನಾಥ್‌ರ ಪತ್ರ ಪ್ರಕಟವಾಗಿತ್ತು. ಪತ್ರದ ಆರಂಭದಿಂದ ಕೊನೆ ತನಕ ಪೂಜಾರಿ ವಿರುದ್ಧವೇ ತನ್ನ ಸಿಟ್ಟನ್ನು ವ್ಯಕ್ತ ಪಡಿಸಿದ್ದರು.
ಜನಾರ್ದನ ಪೂಜಾರಿಯವರು ಮಂಗಳೂರು ಪ್ರದೇಶಕ್ಕೇನು ಮಾಡಿದ್ದ ರೆಂದು ಮಂಗಳೂರಿನಲ್ಲಿ ವಿಚಾರಿಸಿದಾಗ ಲೋಕನಾಥರಿಗೆ ತಲೆ ಕೆರೆದುಕೊ ಳ್ಳುವವರೇ ಸಿಕ್ಕಿದ್ದು ವಿಪರ್ಯಾಸ. ತಲೆ ಕೆರೆದುಕೊಳ್ಳುವವರಿಂದ ಮಾಹಿತಿ ಸಿಗದು. ತಲೆ ಖರ್ಚು ಮಾಡಿಕೊಂಡು ಹೇಳುವವರು ಲೋಕನಾಥರಿಗೆ ಸಿಗದೇ ಇದ್ದುದಕ್ಕೆ ನಾವೇನೂ ಮಾಡಲಾಗದು.
ಮಂಗಳೂರಿನ ಎಂಆರ್‌ಪಿಎಲ್ ಬರುವುದಕ್ಕೆ ಪೂಜಾರಿಯವರ ಕೆಲಸ ಇದೆ. ಶ್ರಮ ಇದೆ. ಈ ಬಗ್ಗೆ ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿಗಳಲ್ಲಿ ಅಥವಾ ಸರ್ಕಾರಿ ಹಿರಿಯ ಅಧಿಕಾರಿಗಳಲ್ಲಿ ಕೇಳಿ.
ಈಗ ಸ್ಥಾಪಿತವಾಗುತ್ತಿರುವ ಓಎನ್‌ಜಿಸಿ ಕೂಡ ಬರುವುದಕ್ಕೆ ಪೂಜಾರಿಯ ವರ ಪ್ರಯತ್ನ ಇದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂದೆ ಪೂಜಾ ರಿಯವರ ಶ್ರಮ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ವಿಚಾರಿಸಿ ನೋಡಿ. ನವ ಮಂಗಳೂರು ಬಂದರು ನಿರ್ಮಾಣದ ಕಾರ್ಯದಲ್ಲಿ ಪೂಜಾರಿಯವರ ಶ್ರಮ ಇದೆ. ಇದನ್ನು ಬಂದರು ಮಂಡಳಿಯ ಹಿರಿಯ ಅಧಿಕಾರಿಗಳಲ್ಲಿ ಕೇಳಿ.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ೬೦ ಸಾವಿರ ಜನರಿಗೆ ಸಾಲ ಮೇಳ ರೂಪಿಸಿ ರಿಕ್ಷಾ ಚಾಲಕರು ಮಾಲಕರಾದರು, ಲಾರಿ ಚಾಲಕರು ಲಾರಿ ಮಾಲಕ ರಾದರು, ಮೀನುಗಾರರಿಗೆ ಶಿಪ್ ಖರೀದಿಸಲು ಸಾಲ ನೀಡಿ ಅವರೂ ಯಜಮಾ ನರಾದರು. ಈ ಬಗ್ಗೆಯು ಸ್ಪಷ್ಟ ದಾಖಲೆ ಉದಾಹರಣೆ ನೀಡುವುದಕ್ಕೆ ಸಿದ್ಧ. ನಮ್ಮ ದೇಶದಲ್ಲಿ ಒಟ್ಟು ೨೫ ಕೋಟಿ ಬಡಜನರಿಗೆ ಬ್ಯಾಂಕಿನ ದಾರಿ ತೋರಿಸಿ ಅದರಲ್ಲಿ ಆರ್ಥಿಕ ಶಕ್ತಿ ಮತ್ತು ಸ್ವಾಭಿಮಾನ ಹುಟ್ಟಿಸಿದ್ದು ವಿತ್ತ ಸಚಿವರಾಗಿದ್ದ ಪೂಜಾರಿಯವರು.
ನೀವು ಅಂದುಕೊಂಡ ಹಾಗೆ ಸಾಲ ಮೇಳದ ದುರುಪಯೋಗವೇ ಹೆಚ್ಚು ಎಂಬುವುದಕ್ಕೆ ನನ್ನಲ್ಲಿ ಉತ್ತರ ಇದೆ. ಹಸು ತೆಗೆದುಕೊಳ್ಳುವ ಉದ್ದೇಶದಿಂದ ಬ್ಯಾಂಕ್‌ನಿಂದ ಸಾಲ ಪಡೆದು ಬೇರೆ ಉದ್ದೇಶಕ್ಕೆ. ಅಂದರೆ ಅನುತ್ಪಾದಕ ಕ್ಷೇತ್ರಕ್ಕೆ ಹಣ ಉಪಯೋಗಿಸಿದರೆ ನಷ್ಟ ಅಲ್ಲದೆ ಲಾಭ ಎಲ್ಲಿಂದ? ಸಾಲದ ದುಡ್ಡಿನಲ್ಲಿ ಕುಡಿದರೆ, ಲಾಟರಿ, ಜೂಜು ಕೋಳಿ ಅಂಕ ಇತ್ಯಾದಿಗೆ ಹೋದರೆ ಅದಕ್ಕೆ ಪೂಜಾರಿಯವರು ಕಾರಣವೇ? ತಲೆ ಕೆರೆದುಕೊಂಡರೆ ಸುಖ ಇಲ್ಲ. ಹೆಚ್ಚು ಕೆರೆದುಕೊಂಡರೆ ಗಾಯ ಆಗುತ್ತದೆ. ತಲೆ ಖರ್ಚು ಮಾಡಿಕೊಂಡು ಸಾಲದ ಹಣ ಉಪಯೋಗಿಸಿದವರು ಹಂತ ಹಂತವಾಗಿ ಉನ್ನತ ಸ್ಥಿತಿಗೆ ಬಂದಿದ್ದಾರೆ.
ಭೂ ಮಸೂದೆ ಕಾನೂನು ಜಾರಿಗೆ ಬಂದಾಗ ಕೆಲವು ಭೂಮಾಲಿಕ ರಿಗೂ ತೊಂದರೆ ಆದದ್ದು ಹೌದಾದರೂ ಗೇಣಿ ಸಮಸ್ಯೆ ನಿವಾರಿಸುವುದಕ್ಕೆ ಗೇಣಿದಾರರ ಪರವಾಗಿ ಉಚಿತ (ವಕೀಲರಾಗಿ) ವಾದಿಸಿದ ಜಿಲ್ಲೆಯ ಏಕೈಕ ನ್ಯಾಯವಾದಿ ಪೂಜಾರಿ. ನೀವು ಗೇಣಿದಾರರಾಗಿದ್ದರೆ ನಿಮ್ಮ ತಂದೆಯವರಿ ದ್ದರೆ ಅವರಲ್ಲಿ ಕೇಳಿ. ನನ್ನ ತಂದೆಯವರು ಗದ್ದೆಯನ್ನು ಗೇಣಿಗೆ ಕೊಟ್ಟು ಭೂ ಮಸೂದೆ ಕಾನೂನಿನಡಿಯಲ್ಲಿ ಕಳಕೊಂಡಾಗ ವಾದ ಮಾಡುವ ಸಂದರ್ಭ ದಲ್ಲಿ ಗೇಣಿಗೆ ಪಡಕೊಂಡವರು ಸುಳ್ಳು ದಾಖಲೆ ಸೃಷ್ಟಿಸಿ ಮೋಸ ಮಾಡಿ ಭೂಮಿ ತನ್ನದಾಗಿಸಿಕೊಂಡು ನನ್ನ ತಂದೆಗೆ ಅನ್ನವಿಲ್ಲದ ಸ್ಥಿತಿಗೆ ದೂಡಿದರೂ ಈ ಮಸೂದೆ ಒಕ್ಕಲು ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಿದ್ದು ಸತ್ಯ. ದನಿಗಳ ಆರ್ಭಟ, ಶೋಷಣೆ ಇತ್ಯಾದಿ ನಿಂತು ಹೋಯಿತು. ಕೆಲವು ಭೂ ಮಾಲಿಕರಿಗೆ ಅನ್ಯಾಯವಾಗಿದ್ದು ಸತ್ಯ. ಗೇಣಿ ಪಡಕೊಂಡ ಬಗ್ಗೆ ದಾಖಲೆಗಳು, ಕೆಲವು ಕಡೆ ಸುಳ್ಳು ದಾಖಲೆಗಳೂ ಸೃಷ್ಟಿಯಾದದ್ದು ಇವೆ. ನಮ್ಮ ತಂದೆಯವರ ಬಳಿ ಇಂತಹ ಸುಳ್ಳು ದಾಖಲೆ ಗೇಣಿದಾರ ನೀಡಿದ್ದು ಈಗಲೂ ನನ್ನಲ್ಲಿ ಇವೆ. ಉಚಿತವಾಗಿ ನ್ಯಾಯಾಲಯದಲ್ಲಿ ವಾದ ಮಡುವ ವಕೀಲರು ಬೇರೆ ಯಾರಿದ್ದಾರೆ ತೋರಿಸಿ ಲೋಕ ನಾಥರೇ?
ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿ ಯಾಗಿದ್ದಾಗ ಮಾಡಿದ ಸಾಧನೆ ಗಮನಿಸುವಂಥದ್ದು ಏನು? ಓರ್ವ ಮುಖ್ಯಮಂತ್ರಿ ಮಾಡಬಹುದಾದದನ್ನು ಮಾಡಿದ್ದಾರೆ. ಬಂಗಾರಪ್ಪರ ಹಾಗೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದು, ಎಸ್. ಎಂ. ಕೃಷ್ಣರ ಕಾಲದಲ್ಲಿದ್ದ ರಾಜ್ಯದ ಒಳ್ಳೆಯ ರಸ್ತೆಗಳು, ಕೈಗಾರಿಕಾ ಕ್ಷೇತ್ರ ಇತ್ಯಾದಿ ಗಣನೆಗೆ ತೆಗೆದುಕೊಂಡಾಗ ಮೊಯ್ಲಿಯವರು ಮಾಡಿದ್ದು ಕಡಿಮೆ ಅಂಥ ಅನಿಸುತ್ತದೆ. ನಮ್ಮೂರಲ್ಲಿ ಶಿಕ್ಷಣ ಸಂಸ್ಥೆ ಮೊಯ್ಲಿ ಕಾಲದಲ್ಲಿ ಆಗಿದೆ. ಅನಂತರದ ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ? ಹೀಗೆ ತುಲನೆ ಮಾಡಿದರೆ ಅದು ರಾಜಕೀಯ ಆಗುತ್ತದೆ. ಒಳ್ಳೆಯವರನ್ನು ಆರಿಸಿದರೆ ಒಳ್ಳೆಯ ಕೆಲಸ ಆಗುತ್ತದೆ.
ಪೂಜಾರಿಯವರು ಕೆಲಸ ಮಾಡಲಿಲ್ಲವೆಂದು ಹೇಳುವ ನಿಮ್ಮಲ್ಲಿ ಆ ನಂತರ ಬಂದ ಸಂಸದರು ಏನು ಮಾಡಿದ್ದಾರೆ? ಮಂಗಳೂರಿಗೆ ಕೋಮು ಗಲಭೆ ಬಿಟ್ಟರೆ ಬೇರೆ ಏನುಂಟು? ಹಲವು ಯುವಕರು ಜೈಲು ಸೇರಿದರು. ಕೆಲವು ಯುವಕರು ಕೊಲೆಯಾಗಿ ಹೋದರು.
ಓರ್ವ ರಾಜಕಾರಣಿಯನ್ನು ಟೀಕಿಸುವವರು ಇರುತ್ತಾರೆ. ಮೆಚ್ಚುವವರಿರುತ್ತಾರೆ. ಪೂಜಾರಿಯವರು ಭ್ರಷ್ಟರಲ್ಲ ಎಂಬುದು ಎಲ್ಲರಿಗೂ ಗೊತ್ತು. ತಲೆಬುಡವಿಲ್ಲದ ಮಾತು ಅಂತ ನೀವು ಹೇಳುತ್ತೀರಿ. ತಲೆಯಲ್ಲಿ ಮೆದುಳು ಇದ್ದವರಿಗೆ ಅದನ್ನು ಸರಿ ಯಾಗಿ ಉಪಯೋಗಿಸಿಕೊಂಡವರಿಗೆ ಪೂಜಾರಿಯವರ ಮಾತು ಪಥ್ಯ ಆಗು ತ್ತದೆ. ನೇರ ನುಡಿ ಹಲವರಿಗೆ ಇಷ್ಟವಾಗುವುದಿಲ್ಲ. ಎಲ್ಲರಿಗೂ ಇಷ್ಟವಾಗುವ ರೀತಿಯ ಮಾತಿನ ರಾಜಕಾರಣಿ ಶ್ರೇಷ್ಠ ಎಂದು ಹೇಳಲಾಗದು. ಭ್ರಷ್ಟರು ಇರಬ ಹುದು. ಚುನಾವಣೆ ಸಂದರ್ಭ ಮಲ್ಲಿಗೆ ಹಂಚಿದ್ದಾರೆಂದರೆ ನಿಮಗೆ ನಷ್ಟ ಆಗಿ ದೆಯೇ? ಲೋಡುಗಟ್ಟಲೆ ದುಡ್ಡು ಹಂಚಿ, ಬಾಟ್ಲಿ, ಕೋಳಿ ಮಾಂಸ ವಿತರಿಸಿದವ ರಿಗಿಂತ ಮಲ್ಲಿಗೆ ನೀಡಿದವರು ಉತ್ತಮವೆನಿಸುತ್ತದೆ.
ಪೂಜಾರಿಯವರು ಅಧಿಕಾರದಲ್ಲಿರುವಾಗ ಯಾವ ಕೆಲಸ ಮಾಡಿದ್ದಾರೋ ಅದನ್ನು ಹೇಳಿಕೊಂಡು ಹೋಗಲಿಲ್ಲ. ಸ್ವವರ್ಣನೆ ಮಾಡಿಲ್ಲ. ಆ ಕಾರಣದಿಂದ ಪೂಜಾರಿ ಏನೂ ಮಾಡಿಲ್ಲವೆಂದು ಭಾವಿಸುತ್ತಾರೆ. ಸಮುದಾಯ ಭವನಗಳು, ಶಿಕ್ಷಣ ಸಂಸ್ಥೆಗಳು, ಮುಂತಾದವುಗಳ ಹಿಂದೆ ಕೆಲವು ಧಾರ್ಮಿಕ ಕ್ಷೇತ್ರದ ನಿರ್ಮಾ ಣದ ಹಿಂದೆ ಪೂಜಾರಿಯವರ ಪಾತ್ರ ಇದೆ. ಅವರು ಹೇಳಿಕೊಳ್ಳುವುದಿಲ್ಲ. ನಿಮ್ಮಂ ಥವರಿಗೆ ಪೂಜಾರಿ ಲೋಕಸಭೆಯಲ್ಲಿದ್ದು, ಅನಂತರ ರಾಜ್ಯಸಭಾ ಸದಸ್ಯರಾಗಿದ್ದು ಮಾಡಿದ್ದೇನು? ಪ್ರಶ್ನಿಸುವುದಕ್ಕೆ ಉತ್ತೇಜನ ಸಿಗುತ್ತದೆ. ಲೋಕನಾಥರೇ ಸ್ವಲ್ಪ ಯೋಚಿಸಿ ತಲೆ ಕೆರೆದುಕೊಳ್ಳುವವರ ಸಂಗ ಮಾಡದೆ ತಲೆ ಖರ್ಚು ಮಾಡುವವರ ಸಂಗ ಮಾಡಿದರೆ ಹೆಚ್ಚಿನ ವಿಚಾರ ತಿಳಿಯುವುದಕ್ಕೆ ಸಾಧ್ಯ.

ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭಯಪಡಬಾರದು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೨ ವರ್ಷ. ಕಳೆದ ಎಪ್ರಿಲ್ ತಿಂಗಳಲ್ಲಿ ಮದು ವೆಯಾಗಿದ್ದೇನೆ. ನನ್ನ ಗಂಡ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡು ತ್ತಿದ್ದಾರೆ. ನನಗೆ ಮದುವೆಯ ನಂತರ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿಯಿದ್ದರೂ ಅದರಲ್ಲಿ ಸರಿಯಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ. ನಾನು ಪಿಯುಸಿ ತನಕ ವ್ಯಾಸಂಗ ಮಾಡಿದ್ದು, ಸೆಕ್ಸ್ ಬಗ್ಗೆ eನವಿದೆ. ನನಗೆ ಗಂಡನ ಜತೆ ಎಲ್ಲಾ ರೀತಿಯಲ್ಲಿ ಸೆಕ್ಸ್ ನಡೆಸಲು ಮನಸ್ಸಿದೆ. ಆದರೆ ಸಂಜೆಯಾಯಿತೆಂದರೆ ಸೆಕ್ಸ್ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನನ್ನವರು ನನ್ನ ಜೊತೆ ತುಂಬಾ ಚೆನ್ನಾಗಿ ವರ್ತಿಸುತ್ತಾರೆ. ನನಗೆ ಇಷ್ಟವಿಲ್ಲದಿ ದ್ದರೆ ಅವರು ಸೆಕ್ಸ್‌ಗೆ ಒತ್ತಾಯ ಮಾಡುವುದೂ ಇಲ್ಲ. ಆದರೆ ಪತ್ನಿ ಯಾಗಿ ನನಗೇ ಅವರ ಜೊತೆ ಸಹಕರಿಸಲು ಆಗುತ್ತಿಲ್ಲ ಎಂಬ ಕೊರಗು ಇದೆ. ರಾತ್ರಿ ನನ್ನವರು ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಾಗ ನನಗೆ ಅತಿಯಾದ ನೋವಿನಿಂದ ಯಾವುದೇ ಆನಂದ ಉಂಟಾಗುವುದಿಲ್ಲ. ಮದುವೆಯ ಪ್ರಥಮ ರಾತ್ರಿ ನೋವಿನಿಂದ ಸಮರ್ಪಕವಾಗಿ ಸೆಕ್ಸ್ ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ನನ್ನವರಿಗೆ ಬೇಸರ ಉಂಟಾ ಗಿದೆ. ಅಂದಿನಿಂದ ಪ್ರತಿದಿನವೂ ಸೆಕ್ಸ್ ಮಾಡುವಾಗ ನೋವುಂಟಾ ಗುತ್ತದೆ. ಮುಟ್ಟಿನ ಅವಧಿಯಲ್ಲಿ ನೋವಿನ ಪ್ರಮಾಣ ಹೆಚ್ಚಿರುತ್ತದೆ. ನಾನು ನನ್ನವರಲ್ಲಿ ಇವತ್ತು ಬೇಡ, ನಾಳೆ ಎಂದು ಹೇಳುತ್ತೇನೆ. ವೈದ್ಯರ ಬಳಿ ಈ ಬಗ್ಗೆ ಕೇಳಿದ್ದಕ್ಕೆ ಅವರು ಕೆಲವೊಂದು ಮಾತ್ರೆ ಬರೆದು ಕೊಟ್ಟು, ಇದು ಸರಿಯಾಗುತ್ತದೆ ಎಂದಿದ್ದರು. ಆದರೆ ಸಮಸ್ಯೆ ಮಾತ್ರ ಇದ್ದ ಹಾಗೆಯೇ ಇದೆ, ಪರಿಹಾರವಾಗಿಲ್ಲ. ನನಗೆ ಅತಿಯಾದ ನೋವಿನಿಂದ ಸೆಕ್ಸ್ ಮೇಲಿನ ಆಸಕ್ತಿ ಕಡಿಮೆಯಾಗತೊಡಗಿದೆ. ನನ್ನ ಸಮಸ್ಯೆಯು ಎಲ್ಲಾ ನವವಿವಾಹಿತರಲ್ಲಿಯೂ ಇರುತ್ತದೆಯೇ? ನನ್ನ ನೆರೆಮನೆಯಾಕೆ ಈ ಬಗ್ಗೆ ಕೇಳಿದ್ದಕ್ಕೆ ಇದಕ್ಕೆ ತುರ್ತಾಗಿ ಆಪರೇಷನ್ ನಡೆಸಬೇಕು ಎಂದಿದ್ದಾರೆ. ಇದರಿಂದ ನನಗೆ ಭಯ ಪ್ರಾರಂಭವಾಗಿದೆ. ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ಸಮಸ್ಯೆಯ ಬಗ್ಗೆ ಮೊದಲೇ ಸರಿಯಾಗಿ ಚಿಂತಿಸಿದ್ದರೆ ಈಗ ಸಮಸ್ಯೆ ಎದುರಿಸಬೇಕಾಗಿರಲಿಲ್ಲ. ಗಂಡನ ಜತೆ ಸಂಭೋಗದಲ್ಲಿ ಪಾಲ್ಗೊಳ್ಳುವಾಗ ನೋವುಂ ಟಾಗುತ್ತದೆ ಎಂದು ತಿಳಿಸಿದ್ದೀರಿ. ಇದಕ್ಕೆ ಹಲವಾರು ಕಾರಣಗಳಿರಬಹುದು. ಜನ ನಾಂಗದಲ್ಲಿನ ಸಣ್ಣ ಮಟ್ಟಿನ ಸೋಂಕಿನಿಂದಲೂ ಇಂತಹ ಸಮಸ್ಯೆ ಸಾಮಾನ್ಯ. ಆದರೆ ಗರ್ಭಕೋಶ ಜಾರಿರುವ ಸಮಯದಲ್ಲೂ ಸಂಭೋಗ ಪ್ರಕ್ರಿಯೆ ಯಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಯಾವುದೇ ಕಾರ ಣಕ್ಕೂ ಸಮಸ್ಯೆಯನ್ನು ನಿರ್ಲಕ್ಷಿಸುವ ಕೆಲಸ ಮಾಡಬೇಡಿ. ತಜ್ಞ ವೈದ್ಯರ ಬಳಿ ಸಮಾಲೋಚನೆ ನಡೆಸಿ, ಮುಕ್ತವಾಗಿ ಮಹಿಳಾ ವೈದ್ಯರಲ್ಲಿ ನಾಚಿಕೆ ಪಡದೆ ನಿಮ್ಮ ಸಮಸ್ಯೆಯನ್ನು ಹೇಳಿ ಪರಿಹಾರ ಪಡೆಯಿರಿ. ಜನನಾಂಗ ದ್ವಾರ ಹೊರ ಚಾಚಿರುವಂತಹ ಪಕ್ಷದಲ್ಲಿ ಸೆಕ್ಸ್ ವೇಳೆ ನೋವುಂಟಾಗುತ್ತದೆ. ಸಾಮಾನ್ಯ ಸಮಸ್ಯೆಯಾಗಿದ್ದರೆ ಸೆಕ್ಸ್‌ನಲ್ಲಿ ತೊಡ ಗುವಾಗ ಮೆಡಿಕಲ್‌ನಲ್ಲಿ ದೊರೆಯುವ ಜೆಲ್ಲಿ, ಕ್ರೀಂಗಳನ್ನು ಬಳಸ ಬಹುದಾಗಿದೆ. ಅಥವಾ ಸಂಭೋಗ ಆಸನವನ್ನು ನಿಮಗೆ ಅನುಕೂ ಲಕರವಾದ ರೀತಿಯಲ್ಲಿ ನೋವುಂಟಾಗದ ರೀತಿ ಬದಲಾಯಿಸಿದರೆ ಪರಿಹಾರ ಸಾಧ್ಯವಿದೆ. ಲೈಂಗಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಭಯ, ನಾಚಿಕೆ ಅನಗತ್ಯ. ನಾಚಿಕೆ ಪಟ್ಟರೆ ಸಮಸ್ಯೆಗಳು ಬೃಹತ್ತಾಗಿ ಕಾಡಬ ಹುದು. ನೀವು ಗಂಡನಿಗೆ ಸರಿಯಾದ ರೀತಿಯಲ್ಲಿ ಸುಖ ನೀಡಲಾ ಗುತ್ತಿಲ್ಲ ಎಂಬ ಚಿಂತೆಯನ್ನು ಬಿಟ್ಟುಬಿಡಿ. ಅವರ ಬಳಿ ಸಮಸ್ಯೆಯನ್ನು ಯಥಾವತ್ತಾಗಿ ವಿವರಿಸಿ, ಜತೆಯಲ್ಲೇ ಕುಳಿತು ಚಿಂತಿಸಿ ಪರಿಹಾರ ಕಂಡುಹಿಡಿಯಿರಿ. ಸಮಸ್ಯೆಯ ಬಗ್ಗೆ ಗಂಡನಿಗೆ ಬೇಸರ ಸಾಮಾನ್ಯ. ಎಲ್ಲಾ ಹೆಂಗಸರಲ್ಲೂ ಇಂತಹ ಸಮಸ್ಯೆ ಕಂಡು ಬರದೆ ಕೆಲವು ಮಂದಿಯಲ್ಲಿ ಮಾತ್ರ ಕಂಡು ಬರುತ್ತದೆ. ಮೊದಲ ಬಾರಿ ಸೆಕ್ಸ್ ನಡೆ ಸುವಾಗ ಸ್ವಲ್ಪ ಮಟ್ಟಿನ ನೋವು ಸಾಮಾನ್ಯವಾದರೂ ನಿರಂತರ ನೋವು ಕಂಡು ಬಂದಲ್ಲಿ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಿ, ಔಷಧೋಪಚಾರ ಪಡೆಯಬೇಕಾಗುತ್ತದೆ.

ಉಡುಪಿ ಆರ್‌ಟಿಓ ಕಚೇರಿಗೆ ಲೋಕಾಯುಕ್ತ ದಾಳಿ

Posted by JAYAKIRANA Kirana on | 0 comments | Leave a comment...

ಮಣಿಪಾಲ: ರಾಜ್ಯಾದ್ಯಂತ ನಿನ್ನೆ ಏಕಕಾಲದಲ್ಲಿ ಆರ್‌ಟಿಓ ಕಚೇರಿಗಳಿಗೆ ನಡೆದ ದಾಳಿ ವೇಳೆ ಆದಿ ಉಡುಪಿಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಓ)ಗೆ ಕೂಡ ದಾಳಿ ಮಾಡಿದ್ದು, ಪರಿಶೀಲನೆ ನಡೆಸಿ ಹಲವು ದಾಖಲೆ ಪತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಡುಪಿ ಲೋಕಾಯುಕ್ತ ನಿರೀಕ್ಷಕ ದಿನೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಿನ್ನೆ ದಾಳಿ ವೇಳೆ ಕಚೇರಿಯಲ್ಲಿ ಬ್ರೋಕರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿ ಹೋಗಿದ್ದರು ಎಂದು ತಿಳಿದುಬಂದಿದೆ. ದಾಳಿ ವೇಳೆ ಖಜಾನೆಯಲ್ಲಿದ್ದ ದಿನದ ನಗದು ಮೊತ್ತವನ್ನು ಪರಿಶೀಲಿಸಲಾಗಿದೆ. ಈ ವೇಳೆ ಹೆಚ್ಚುವರಿ ನಗದು ಪತ್ತೆಯಾಗಿಲ್ಲ. ಆದರೆ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.
ಸಾರ್ವಜನಿಕರು ಆರ್‌ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಬ್ರೋಕರ್‌ಗಳ ಹಾವಳಿ ಮತ್ತು ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು. ಸಾರ್ವಜನಿಕರು ನೇರವಾಗಿ ಆರ್‌ಟಿಓ ಕಚೇರಿಗೆ ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು. ಈ ವೇಳೆ ಅಧಿಕಾರಿಗಳು ಯಾವುದೇ ರೀತಿಯ ಲಂಚಕ್ಕೆ ಕೈಯೊಡ್ಡಿದರೆ ಲೋಕಾಯುಕ್ತಕ್ಕೆ ದೂರು ನೀಡಬೇಕು. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಆರ್.ಟಿ.ಒ. ಕಚೇರಿಗೆ ಲೋಕಾಯುಕ್ತ ದಾಳಿ

Posted by JAYAKIRANA Kirana on | 0 comments | Leave a comment...





ಮಂಗಳೂರು: ಆರ್.ಟಿ.ಓ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ದಿಢೀರ್ ದಾಳಿ ನಡೆಸಿ ಕಡತ ಗಳನ್ನು ಪರಿಶೀಲನೆ ನಡೆಸಿದ್ದಾರೆ. ಆರ್ಥಿಕ ನಿರ್ವಹಣೆಯಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲವಾದ ಕಾರಣ ಸಿಬ್ಬಂದಿ ನಿರಾಳತೆ ಉಸಿರು ಬಿಟ್ಟಿದ್ದಾರೆ.
ರಾಜ್ಯಾದ್ಯಂತ ಆರ್ಥಿಕ ನಿರ್ವಹಣೆ ಯನ್ನು ಹೊಂದಿರುವ ಕಚೇರಿಗಳ ಮೇಲೆ ತನಿಖಾ ದೃಷ್ಟಿಯನ್ನು ಬೀರಲು ಸೂಚನೆ ಬಂದಿರುವ ಹಿನ್ನೆಲೆ ಯಲ್ಲಿ ಈ ದಾಳಿ ನಡೆಸಿರುವುದಾಗಿ ಲೋಕಾಯುಕ್ತ ಅಧಿಕಾರಿ ಉದಯ ನಾಯಕ್ ಮತ್ತು ಎಸ್.ಪಿ ಜಗಮಯ್ಯ ಅವರು ತಿಳಿಸಿ ದ್ದಾರೆ. ಪ್ರತಿ ಕಚೇರಿಯಲ್ಲಿ ಸಿಬ್ಬಂದಿಯ ಕ್ಯಾಶ್ ಡಿಕ್ಲರೇಶನ್ ರಿಜಿಸ್ಟರ್ ಇದ್ದು ಇದರಲ್ಲಿ ಸಿಬ್ಬಂದಿ ಕಚೇರಿ ಪ್ರವೇಶಿಸುವ ಮುನ್ನ ತಮ್ಮ ಬಳಿ ಇರುವ ನಗದಿನ ವಿವರವನ್ನು ದಾಖಲು ಗೊಳಿಸಬೇಕು.
ಅದೇ ರೀತಿ ಕಚೆರಿ ಬಿಟ್ಟು ಹೋಗುವ ಮುನ್ನವೂ ಆ ಹೊತ್ತಿಗೆ ತಮ್ಮ ಬಳಿ ಇರುವ ನಗದಿನ ವಿವರವನ್ನು ಬರೆದಿಡ ಬೇಕಾಗುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅದಕ್ಕೆ ಸೂಕ್ತ ವಿವರಣೆ ಯನ್ನು ದಾಖಲುಗೊಳಿಸಬೇ ಕಾಗುತ್ತದೆ. ಹೀಗಾಗಿ ನಿನ್ನೆ ಲೋಕಾ ಯುಕ್ತ ಅಧಿಕಾರಿಗಳು ಈ ರಿಜಿಸ್ಟರ್ ಗಮನಿಸಿ ದ್ದರು. ಇದರಲ್ಲಿ ಕೇವಲ ಮೂವತ್ತು ರೂಪಾಯಿ ಮಾತ್ರ ವ್ಯತ್ಯಾಸ ಕಂಡು ಬಂದಿತ್ತು ಎಂದು ತಿಳಿದು ಬಂದಿದೆ. ಅದೇ ರೀತಿ ಇನ್ನಿತರ ಕೆಲವು ದಾಖಲೆ ಗಳನ್ನು ಅಧಿಕಾರಿಗಳು ಪರಿ ಶೀಲನೆ ನಡೆಸಿದ್ದು ಯಾವುದೇ ಲೋಪ ಕಂಡು ಬಂದಿಲ್ಲ ಎನ್ನಲಾಗಿದೆ.

ತೀಯಾ ಸಮಾಜದ ಜಮೀನು ಮಾರಾಟ ಯತ್ನ: ಕೋರ್ಟ್ ತಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ತಾಲೂಕಿನ ಮುಡಿಪು ಬಳಿ ತೀಯಾ ಸಮಾಜದ ಶಿಕ್ಷಣ ಸಂಸ್ಥೆ ಸ್ಥಾಪನೆಗೆಂದು ಮೀಸಲಿಟ್ಟಿದ್ದ ೧೦.೩೪ ಎಕ್ರೆ ಸ್ಥಳವನ್ನು ಸ್ಥಳೀಯ ರಾಷ್ಟ್ರೀಯ ಪಕ್ಷದ ಮುಖಂಡರೊಬ್ಬರ ಮಧ್ಯಸ್ಥಿಕೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿರುವ ನಾರಾಯಣ ಕರ್ತಪ್ಪ ನ್ಯಾಸ ಸಂರಕ್ಷಣಾ ಸಮಿತಿಯು ನ್ಯಾಯಾಲಯದ ಮೆಟ್ಟಿಲೇ ರಿದ್ದು, ಸದ್ಯ ಜಮೀನು ಮಾರಾಟಕ್ಕೆ ತಡೆ ತರುವಲ್ಲಿ ಯಶಸ್ವಿ ಯಾಗಿದೆ.
ತೀಯಾ ಸಮಾಜದ ಹಿರಿಯ ಮುಂದಾಳುವಾಗಿದ್ದ ದಿ. ನಾರಾಯಣ ಕರ್ತಪ್ಪನವರ ಸ್ಮರಣಾರ್ಥವಾಗಿ ಬಂಟ್ವಾಳ ತಾಲೂಕಿನ ಕುರ್ನಾಡಿನಲ್ಲಿ ಶಾಲೆ, ಕಾಲೇಜ್ ತಾಂತ್ರಿಕ ವಿದ್ಯಾಭ್ಯಾಸ, ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಉದ್ದೇಶದಿಂದ ೧೯೮೭ರಲ್ಲಿ ೧೦.೩೪ ಎಕ್ರೆ ಜಾಗವನ್ನು ಖರೀದಿಸಲಾಗಿತ್ತು. ಬಳಿಕ ಶಾಲೆ ನಿರ್ಮಾಣದ ವ್ಯವಸ್ಥೆ ಹಾಗೂ ಆಸ್ತಿಯನ್ನು ಅಭಿವೃದ್ಧಿಪಡಿಸಲೆಂದು ಸಮಾಜದ ಹಿರಿಯರಾದ ಚಂದ್ರಶೇಖರ ಪಾರ್ತಾಡಿ, ಮಂಜಪ್ಪ, ಜೆ.ಜಗನ್ನಾಥ್, ಜನಾರ್ದನ ಕಾಸರಗೋಡು, ಬಿ.ಎಂ. ಕಮಲಾಕ್ಷ ಮಂಜೇಶ್ವರ ಇವರನ್ನೊ ಳಗೊಂಡ ನಾರಾಯಣ ಕರ್ತಪ್ಪ ಎಜುಕೇಶನ್ ಟ್ರಸ್ಟ್ ರಚಿಸಲಾಗಿತ್ತು.
ಆದರೆ ಈಗ ಟ್ರಸ್ಟ್‌ನ ನಾಲ್ಕು ಮಂದಿ ಸದಸ್ಯರು ಮೃತರಾಗಿದ್ದು, ಉಳಿದ ಓರ್ವ ಟ್ರಸ್ಟಿ ಜನಾದನ ಕಾಸರಗೋಡು ಅವರು ಟ್ರಸ್ಟ್ ನಿಯಮಾನುಸಾರ ನಿವೃತ್ತಿ ಹೊಂದಿರುತ್ತಾರೆ. ಇದನ್ನು ಮನಗಂಡ ಸಮಾಜದ ಸ್ವಯಂಘೋಷಿತ ನಾಯಕರೊಬ್ಬರು ಸ್ಥಳೀಯ ಮುಖಂಡರ ಮುಖೇನ ಸದ್ರಿ ಸ್ಥಳವನ್ನು ಮುಸ್ಲಿಂ ವ್ಯಕ್ತಿಯೊಬ್ಬರಿಗೆ ೨೦.೭೦ ಕೋಟಿ ರೂ.ಗೆ ಮಾರಾಟ ಮಾಡಿದ್ದು, ಮುಂಗಡ ಹಣ ಪಡೆದಿರುವುದಾಗಿ ಸಮಿತಿ ಆರೋಪಿಸಿದೆ.
ತೀಯಾ ಸಮಾಜದ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯದ ಸಸಿಹಿತ್ಲು, ಕುದ್ರೋಳಿ, ಉಳ್ಳಾಲ ದೇವಸ್ಥಾನ ಹಾಗೂ ಕೇರಳ ರಾಜ್ಯದಲ್ಲಿನ ೧೫ ದೇವಸ್ಥಾನಗಳು ಬರುತ್ತಿದ್ದು, ಇವುಗಳ ಹಣಕಾಸಿನ ನೆರವಿನಿಂದ ಸದ್ರಿ ಆಸ್ತಿಯನ್ನು ಟ್ರಸ್ಟ್ ಖರೀದಿ ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದೀಗ ಸ್ವಾರ್ಥ ಹಿತಾಸಕ್ತಿಯಿಂದ ಈ ಜಮೀನನ್ನು ಮಾರಾಟ ಮಾಡಿರುವುದಕ್ಕೆ ಸಮಾಜ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಾರಾಯಣ ಕರ್ತಪ್ಪ ನ್ಯಾಸ ಸಂರಕ್ಷಣಾ ಸಮಿತಿ ಸದಸ್ಯರು ನ್ಯಾಯಾಲಯದಲ್ಲಿ ದಾವೆಯನ್ನು ದಾಖಲಿಸಿದ್ದು, ಜಮೀನು ಮಾರಾಟಕ್ಕೆ ತಡೆಯಾಜ್ಞೆ ದೊರೆತಿದೆ.

ಜಬ್ಬಾರ್ ಹಂತಕರಿಗೆ ಜೀವಾವಧಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಯುವ ಕಾಂಗ್ರೆಸ್ ಪೆರ್ಲ ಘಟಕ ಕಾರ್ಯದರ್ಶಿ ಯಾಗಿದ್ದ ಪೆರ್ಲ, ನಲ್ಕ ನಿವಾಸಿ ಅಬ್ದುಲ್ ಜಬ್ಬಾರ್(೨೬) ಎಂಬವರನ್ನು ಕಾರು ತಡೆದು ಬರ್ಬರವಾಗಿ ಇರಿದು ಕೊಲೆಗೈದ ಪ್ರಕರಣದ ಏಳು ಮಂದಿ ಆರೋಪಿಗಳಿಗೆ ಕಠಿಣ ಜೀವಾವಧಿ ಸಜೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿ ಎರ್ನಾಕುಳಂ ಸಿ.ಬಿ.ಐ ನ್ಯಾಯಾ ಲಯ ತೀರ್ಪು ನೀಡಿದೆ. ಯಾವುದೇ ಕಾರಣಕ್ಕೂ ಜೀವಾವಧಿಯ ಕಾಲಾವಧಿಯಾದ ೧೪ ವರ್ಷಗಳ ನಡುವೆ ಆರೋಪಿಗಳಿಗೆ ಶಿಕ್ಷೆಯಲ್ಲಿ ಸರಕಾರ ಕಡಿತ ನೀಡಬಾರದೆಂದೂ ಆದೇಶಿಸಲಾಗಿದೆ.
ಸಿ.ಪಿ.ಎಂ ಪಕ್ಷದ ಕುಂಬಳೆ ಏರಿಯಾ ಕಾರ್ಯದರ್ಶಿಯಾಗಿದ್ದ, ಪೆರ್ಲ ಕಾಟುಕುಕ್ಕೆ ನಿವಾಸಿ, ಎಸ್. ಸುಧಾಕರ ಮಾಸ್ತರ್, ಮೊಯ್ದೀನ್ ಕುಞಿ, ಪೆರ್ಲ ನಿವಾಸಿ, ನಡುಬೈಲು ಅಬ್ದುಲ್ಲ ಕುಞಿ, ರವಿ, ಬಾಲೂರು ಅಬ್ದುಲ್ ಬಶೀರ್, ಪೈವಳಿಕೆಯ ಬಶೀರ್, ಯಶವಂತ್ ಕುಮಾರ್ ಎಂಬವರಿಗೆ ಜೀವಾವಧಿ ಕಠಿಣ ಸಜೆ ವಿಧಿಸಲಾಗಿದೆ. ಇತರ ಆರೋಪಿಗಳಾದ ಪೈವಳಿಕೆಯ ಅಬ್ದುಲ ಅಜೀಜ್, ಉಮ್ಮರ್ ಫಾರೂಕ್, ರಾಧಾಕೃಷ್ಣ ಯಾನೆ ಕಿಟ್ಟು, ಗೋಪಾಲ ಯಾನೆ ರಾಜಗೋಪಾಲ, ಶಬೀರ್ ಎಂಬವರನ್ನು ಖುಲಾಸೆಗೊಳಿಸಲಾಗಿದೆ. ಅಶ್ರಫ್ ಹಸೈನಾರ್, ಅಬ್ದುಲ್ ರಜಾಕ್ ಎಂಬವರನ್ನು ಈ ಹಿಂದೆಯೇ ಮಾಫಿ ಸಾಕ್ಷಿಗಳನ್ನಾಗಿಸಲಾಗಿತ್ತು.

ಸುಳ್ಯ: ಸಮುದಾಯ ಅಭಿವೃದ್ಧಿ ಸಂಘದಲ್ಲಿ ಅವ್ಯವಹಾರ?

Posted by JAYAKIRANA Kirana on | 0 comments | Leave a comment...

ಸುಳ್ಯ: ಸಮುದಾಯ ಅಭಿವೃದ್ಧಿ ಸಂಘದಿಂದ ಕೋಳಿ ಫಾರಂ ಮಾಡಲು ಎಂದು ೧.೭ ಲಕ್ಷ ರೂ. ಸಹಾಯಧನ ವಾಗಿ ಪಡೆಯಲಾಗಿದೆ. ಆದರೆ ವಾಸ್ತವವಾಗಿ ಅಲ್ಲಿ ಕೋಳಿ ಫಾರಂ ಇಲ್ಲ. ಈ ಹಣದಿಂದ ಕೆಲವರಿಗೆ ಕಾರು ಗಳು ಬಂದಿವೆ. ಇಲ್ಲಿ ಅವ್ಯವಹಾರ ನಡೆದಿದೆ ಎಂದು ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ನ.ಪಂ. ಅಧ್ಯಕ್ಷೆ ಸುಮತಿ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ. ವಿಜಯಾ ಬ್ಯಾಂಕಿನಿಂದ ಘಟಕ ಸ್ಥಾಪನೆಗೆ ಗುಂಪಿನ ಹೆಸರಲ್ಲಿ ಸಾಲ ಪಡೆಯಲಾಗಿದೆ. ಅದೇ ಖಾತೆಗೆ ಸಹಾಯಧನವನ್ನೂ ಪಾವತಿಸಲಾಗಿದೆ. ಅಲ್ಲಿ ಕೋಳಿ ಫಾರಂ ಆರಂಭಿಸಿಲ್ಲದಿದ್ದರೆ ಅದನ್ನು ವಾಪಾಸ್ ಪಡೆಯಲಾಗುವುದು ಎಂದು ಸಮುದಾಯ ಅಭಿವೃದ್ಧಿ ಅಧಿಕಾರಿ ಚಂದ್ರಕುಮಾರ್ ಭರವಸೆ ನೀಡಿದರು.
ಆಶ್ರಯ ನಿವೇಶನವನ್ನು ಅಭಿವೃದ್ಧಿಪಡಿಸಿದ ರೀತಿ ಸರಿಯಾಗಿಲ್ಲ ಎಂದು ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಾಮ ನಿರ್ದೇಶಿತ ಸದಸ್ಯರೊಬ್ಬರಿಗೆ ಕಾಮಗಾರಿ ನಿರ್ವಹಿಸಿದ ಕಂಟ್ರಾಕ್ಟರ್ ಬೆದರಿಕೆ ಒಡ್ಡಿದ್ದರೂ ಪಂಚಾಯಿತಿ ಆಡಳಿತ ಏಕೆ ಮೌನವಾಗಿದೆ ಎಂದು ವಿರೋಧ ಪಕ್ಷದ ನಾಯಕರೂ ಆದ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದರು. ಬೆದರಿಕೆ ಕರೆ ಬಂದ ಬಗ್ಗೆ ಸದಸ್ಯರು ಪೊಲೀಸ್ ದೂರು ನೀಡಿದಾರೆ ಎಂದು ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಉತ್ತರಿಸಿದರು.
ಮುಖ್ಯ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿನ ಹಣ್ಣಿನ ಅಂಗಡಿಗಳನ್ನು ಇನ್ನೂ ತೆರವು ಮಾಡಿಲ್ಲ. ಆಡಳಿತ ಹಾಗೂ ವಿರೋಧ ಪಕ್ಷಗಳನ್ನು ಕಚ್ಚಾಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ವಿಧಾನ ಸೌಧದಂತೆ ಇಲ್ಲೂ ಅಧಿಕಾರಿಗಳು ಇಸ್ಪೀಟ್ ಆಟ ಆಡುತ್ತಾರಾ? ಹಣ್ಣಿನ ಅಂಗಡಿ ತೆರವು ಮಾಡಲು ಪೊಲೀಸ್ ರಕ್ಷಣೆ ಬೇಕಾ ಎಂದು ವೆಂಕಪ್ಪ ಗೌಡ ಪ್ರಶ್ನಿಸಿದರು.
ಎಸ್‌ಜೆಎಸ್‌ಆರ್‌ವೈ ಅವ್ಯವಹಾರ:
ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ೬ ವರ್ಷಗಳ ಹಿಂದೆ ಸಹಕಾರಿ ಸಂಘವೊಂದನ್ನು ಆರಂಭಿಸಿದ್ದು, ಅದರಲ್ಲಿ ೨.೮ ಲಕ್ಷ ರೂ. ಅವ್ಯವಹಾರ ಆಗಿದೆ. ಅದರ ಅಧ್ಯಕ್ಷ, ಕಾರ್ಯದರ್ಶಿ, ಅಥವಾ ಪದನಿಮಿತ್ತ ಅಧಿಕಾರಿಯ ಹತ್ತಿರ ಮಾಹಿತಿ ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಅಲ್ಲಿ ಠೇವಣಿ ಇಟ್ಟ ಹಣವನ್ನೂ ಹಿಂತಿರುಗಿಸುತ್ತಿಲ್ಲ ಎಂದು ಸದಸ್ಯೆ ಸರೋಜಿನಿ ದೂರಿದರು. ಸಂಘದ ಅಧ್ಯಕ್ಷೆ ನ.ಪಂ. ಸದಸ್ಯೆ ಜೂಲಿಯಾ ಈ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಪಿಗ್ಮಿ ಖಾತೆಯಿಂದ ಕೆಲವರು ಹೆಚ್ಚುವರಿ ಹಣ ಪಡೆದಿದ್ದಾರೆ. ಲೆಕ್ಕಪರಿಶೋಧಕರ ಸಲಹೆಯಂತೆ ಇದನ್ನು ಸಾಲ ಎಂದು ದಾಖಲಿಸಲಾಗಿದೆ. ಅದನ್ನು ವಸೂಲಿ ಮಾಡುತ್ತಿದ್ದೇವೆ ಎಂದು ಪದನಿಮಿತ್ತ ಅಧಿಕಾರಿ ಚಂದ್ರಕುಮಾರ್ ಹೇಳಿದರು. ಮೂರು ತಿಂಗಳೊಳಗೆ ಈ ವಿವಾದವನ್ನು ಪರಿಹರಿಸಿ. ಇಲ್ಲದಿದ್ದರೆ ತನಿಖೆಗೆ ಬರೆಯಬೇಕಾಗುತ್ತದೆ ಎಂದು ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಹೇಳಿದರು.

ಉಡುಪಿ: ಬಾಲಕಿ ಮತ್ತೆ ಪರಾರಿ

Posted by JAYAKIRANA Kirana on | 0 comments | Leave a comment...

ಉಡುಪಿ: ವೇಶ್ಯಾವಾಟಿಕೆಗೆ ಮಾರಾಟ ಮಾಡಲೆಂದು ಕರೆದು ಕೊಂಡು ಬಂದಿದ್ದ ಮಹಿಳೆಯೊಬ್ಬಳ ಕೈಯಿಂದ ತಪ್ಪಿಸಿಕೊಂಡು ಬಳಿಕ ಸಾರ್ವಜನಿಕರು ಹಾಗೂ ಪೊಲೀಸರ ನೆರವಿನಿಂದ ಬಾಲಕಿಯರ ಬಾಲ ಮಂದಿರಕ್ಕೆ ಸೇರಿದ್ದ ಬಾಲಕಿ ಶುಕ್ರವಾರ ಸಂಜೆ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಪತ್ತೆಯಾದ ವಿದ್ಯಮಾನ ನಡೆದಿದೆ.
ಗುರುವಾರ ಲಾಡ್ಜ್‌ನಿಂದ ತಪ್ಪಿಸಿ ಕೊಂಡು ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲ್ಪಟ್ಟಿದ್ದ ಬಾಲಕಿಯನ್ನು ಉಡುಪಿಯ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು. ಆದರೆ ನಿನ್ನೆ ಸಂಜೆ ಐದು ಗಂಟೆ ವೇಳೆಗೆ ಆಕೆ ಅಲ್ಲಿಂದ ತಪ್ಪಿಸಿ ಪರಾರಿಯಾಗಿದ್ದಳು. ಆದರೆ ಆರು ಗಂಟೆ ವೇಳೆ ಆಕೆ ಎಂಜಿಎಂ ಕಾಲೇಜಿನ ಬಳಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಸಾರ್ವಜನಿಕರು ಆಕೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಆಕೆಯನ್ನು ಮತ್ತೆ ಬಾಲ ಮಂದಿರಕ್ಕೆ ಸೇರ್ಪಡೆಗೊಳಿಸಿ ಬಿಗಿ ಭದ್ರತೆ ಒದಗಿಸಿದ್ದಾರೆ. ಬಾಲಕಿ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿದಾಗ, ಆಕೆ ಈ ಹಿಂದೆ ಕೂಡ ಇದೇ ರೀತಿ ತಪ್ಪಿಸಿಕೊಂಡು ಹೋಗಿದ್ದು, ಮತ್ತೆ ಪತ್ತೆಯಾಗಿದ್ದಳು ಎಂದು ತಿಳಿದುಬಂದಿದೆ. ಈ ಬಗ್ಗೆ ಆಕೆಯನ್ನು ವಿಚಾರಿಸಿದಾಗ ತಾನು ಮುಂಬೈಗೆ ಹೋಗಲು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ಹೇಳಿದ್ದು, ಈಗ ಆಕೆಯ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿವೆ.

ಯುವಜೋಡಿ ನಾಪತ್ತೆ: ದಾಖಲಾಗದ ದೂರು

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ವ್ಯಾಪ್ತಿಯಲ್ಲಿನ ಮುಸ್ಲಿಂ ಸಮುದಾಯದ ಯುವ ಜೋಡಿಯೊಂದು ನಾಪತ್ತೆ ಯಾಗಿರುವ ಸುದ್ದಿ ಪ್ರಚಲಿತದಲ್ಲಿದ್ದು, ಅವರಿಬ್ಬರು ಜೊತೆಯಾಗಿ ಪರಾರಿ ಯಾಗಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರದ ಯುವತಿ ಮತ್ತು  ಪುತ್ತೂರಿನ ಪಡೀಲು ನಿವಾಸಿ ಯುವಕ ಗುರುವಾರ ಸಂಜೆಯಿಂದ ನಾಪತ್ತೆಯಾ ಗಿದ್ದಾರೆ ಎಂಬ ಸುದ್ದಿ ಹರಡಿದೆ. ಯುವಕ ಮತ್ತು ಯುವತಿ ಪ್ರೀತಿಸುತ್ತಿ ದ್ದರೆನ್ನಲಾಗಿದೆ. ಆದರೆ ಪ್ರಕರಣದ ಬಗ್ಗೆ ಈ ತನಕ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

ಕಾರ್ಕಳ: ಅಪಘಾತದಲ್ಲಿ ಪುರಸಭಾ ಅಧ್ಯಕ್ಷೆ ಗಾಯ

Posted by JAYAKIRANA Kirana on | 0 comments | Leave a comment...



ಸಾಮಾನ್ಯ ಸಭೆ ರದ್ದು
ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಪುರಸಭಾ ಅಧ್ಯಕ್ಷೆ ಪ್ರತಿಮಾಮೋಹನ್ ರಾಣೆ ಅವರು ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.
ನಿನ್ನೆ ಬೆಳಿಗ್ಗೆ ಸುಮಾರು ೯ರ ವೇಳೆಗೆ ಕುಕ್ಕುಂದೂರು ಶ್ರೀದುರ್ಗಾ ಪರಮೇಶ್ವರಿ ದೇವಳಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿ ಸಿದೆ. ರಸ್ತೆಯ ಹೊಂಡ ತಪ್ಪಿಸಲು ಮುಂದಾಗುತ್ತಿದ್ದಂತೆ ಕಾರೊಂದು ಇವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ಸಾಮಾನ್ಯ ಸಭೆ ರದ್ದು: ಪುರಸಭಾ ಸಾಮಾನ್ಯ ಸಭೆಯು(ಇಂದು) ಶನಿವಾರದಂದು ಪ್ರವಾಸಿ ಬಂಗಲೆ(ಐಬಿ)ಯಲ್ಲಿ ನಿಗದಿಯಾಗಿತ್ತು. ಬಸ್ ನಿಲ್ದಾಣವನ್ನು ಬಂಡೀಮಠಕ್ಕೆ ಸ್ಥಳಾಂತರಿಸಿದ ಬಗ್ಗೆ ಆಡಳಿತ ಪಕ್ಷದ ಹಿರಿಯ ಸದಸ್ಯ, ಪುರಸಭಾ ಮಾಜಿ ಅಧ್ಯಕ್ಷ ಎಸ್.ಆರ್ ಸುಭೀತ್ ಕುಮಾರ್, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಅಶ್ಪಕ್, ಪುರಸಭಾ ಮಾಜಿ ಉಪಾಧ್ಯಕೆ ನಳಿನಿ ವಿಜೇಂದ್ರ ಆಚಾರ್ಯ ಅವರು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯ ನಡುವೆ ಹಳೆ ಪೇಟೆಯ ನಾಗರಿಕರು, ಬಸ್ ಪ್ರಯಾಣಿಕರು, ಬಸ್ ಏಜೆಂಟರು ನಗರ ಬಂದ್‌ಗೆ ಕರೆನೀಡಿ ಬಸ್ ನಿಲ್ದಾಣ ಸ್ಥಳಾಂತರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
ಇಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಇದೇ ವಿಚಾರವು ಚರ್ಚಾ ವಿಷಯವಾಗಲಿದ್ದು, ಭಾರೀ ಕೋಲಾಹಲಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿರುವ ಮಾಹಿತಿ ಅರಿತುಕೊಂಡ ಪುರಸಭಾ ಆಡಳಿತ ವರ್ಗವು, ಅಧ್ಯಕ್ಷೆ ಅವರು ಅಪಘಾತವೊಂದರಲ್ಲಿ ಗಾಯಗೊಂಡಿದ್ದಾರೆಂಬ ಕಾರಣವೊಡ್ಡಿ ಸಾಮಾನ್ಯ ಸಭೆಯನ್ನು ರದ್ದುಗೊಳಿಸಿರುವುದು ಅಥವಾ ಮುಂದೂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತಗೊಂಡಿದೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕರ ಉಸ್ತುವಾರಿಯಲ್ಲಿ ಸಾಮಾನ್ಯಸಭೆಯು ನಡೆಯುವ ನಿಯಾಮಾವಳಿ ಇದ್ದರೂ ಇದಕ್ಕೆ ಅವಕಾಶ ನೀಡದಿರುವುದರ ಕಾರಣವೇನೆಂದು ತಿಳಿದುಬಂದಿಲ್ಲ. ಅಪಘಾತದಲ್ಲಿ ಪುರಸಭಾ ಅಧ್ಯಕ್ಷೆ ಪ್ರತಿಮಾಮೋಹನ್ ರಾಣೆ ಅವರು ಗಾಯಗೊಂಡಿದ್ದರೂ ಇದುವರೆಗೆ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಮಂಜೇಶ್ವರ: ಪತ್ರಕರ್ತರಿಂದ ಪೊಲೀಸ್ ಠಾಣೆಗೆ ಮತ್ತಿಗೆ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಮಾಧ್ಯಮಂ ಮಂಜೇಶ್ವರ ವರದಿಗಾರ ಅನೀಸ್ ಉಪ್ಪಳ ಎಂಬವರ ಕಾರಿನಲ್ಲಿ ಗಾಂಜಾವಿರಿಸಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಮಂಜೇಶ್ವರ ಪೊಲೀಸರ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ಮಂಜೇಶ್ವರ ಪ್ರೆಸ್ ಕ್ಲಬ್ ನೇತೃತ್ವದಲ್ಲಿ ನಿನ್ನೆ ಮಂಜೇಶ್ವರ ಠಾಣೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಹೊಸಂಗಡಿ ಪೇಟೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಠಾಣಾ ಮುಂಭಾಗದಲ್ಲಿ ಪೊಲೀಸರು ತಡೆದರು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಮಂಗಳೂರು ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಇಡೀ ದೇಶದಾದ್ಯಂತ ಪತ್ರಕರ್ತ,ಮಾಧ್ಯಮ ಪ್ರತಿನಿಧಿಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ ಎಂದರು.
ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಮಾತನಾಡಿ ಮಾಧಮಂ ವರದಿಗಾರನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಪ್ರಕರಣಗಳ ಆರೋಪಿಗಳ ಸ್ಪಷ್ಟ ಮಾಹಿತಿ ಪೊಲೀಸರಿಗೆ ನೀಡಿದ್ದರೂ ಆರೋಪಿಗಳನ್ನು ಬಂಧಿಸಲು ಮಂಜೇಶ್ವರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಆರೋಪಿಗಳ ಬಂಧನ ತಕ್ಷಣ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಪತ್ರಕರ್ತರಾದ ಸೀದಿಕುಞ್ಞಿ ಕುಂಬಳೆ , ನಿಶಾಕಿರಣ್, ನವೀನ್ ಉಪ್ಪಳ, ರತನ್ ಹೊಸಂಗಡಿ, ರವಿ ಪ್ರತಾಪ್‌ನಗರ, ಹಿರಿಯ ಪತ್ರಕರ್ತೆ ಧನ್ಯಾ, ವಿವಿಧ ಸಾಮಾಜಿಕ ಕಾರ್ಯಕರ್ತರಾದ ಶಾಫಿ, ಸುಧಾಕರ್ ಶೆಟ್ಟಿ, ಮುಹಮ್ಮದ್, ಬಿ.ವಿ ರಾಜನ್, ಮುನೀರ್ ಉಪ್ಪಳ, ಇಕ್ಬಾಲ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.

ಪ್ರಾರ್ಥನೆಗೆ ತೆರಳಿದವರಿಗೆ ಹೆಜ್ಜೇನು ಕಡಿತ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಕಪ್ಪು ತಿಂಗಳ ವಿಶೇಷ ದಿನವಾದ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಲು ಬೆಳ್ತಂಗಡಿ ಹೋಲಿ ರಿಡಿಮರ್ ಚರ್ಚ್‌ನ ೨೫೦ಕ್ಕೂ ಹೆಚ್ಚು ಭಕ್ತಾಧಿಗಳು ಗಡಾಯಿಕಲ್ಲಿಗೆ ತೆರಳಿದ್ದ ಸಂದರ್ಭ ಹೆಜ್ಜೇನು ದಾಳಿ ನಡೆಸಿದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.
ಕಪ್ಪು ತಿಂಗಳ ೪೦ನೇ ದಿನವಾದ ಶುಕ್ರವಾರದಂದು ಬೆಳ್ತಂಗಡಿ ಚರ್ಚ್ ವ್ಯಾಪ್ತಿಯ ಭಕ್ತರು ಪ್ರಾರ್ಥನೆ ಸಲ್ಲಿಸಲು ನಡಗ್ರಾಮದಲ್ಲಿರುವ ರಾಷ್ಟ್ರೀಯ ಸ್ಮಾರಕ ಗಡಾಯಿ ಕಲ್ಲಿಗೆ ತೆರಳಿದ್ದರು. ಈ ಗಡಾಯಿಕಲ್ಲು ವನ್ಯಜೀವಿ ಅರಣ್ಯ ಇಲಾ ಖೆಯ ಅಧೀನದಲ್ಲಿದ್ದು, ಗುಡ್ಡ ಹತ್ತುವ ವೇಳೆ ಹೆಜ್ಜೇನುಗಳು ದಾಳಿ ನಡೆಸಿವೆ ಎನ್ನಲಾಗಿದೆ. ನೂರಕ್ಕೂ ಹೆಚ್ಚು ಮಂದಿಗೆ ಹಜ್ಜೇನು ಕಡಿದಿದ್ದು, ಅವರಲ್ಲಿ ಅರೇಳು ಮಂದಿಗೆ ಗಾಯಗಳಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಂಜೊಟ್ಟಿ ನಿವಾಸಿ ಮೋಳಿ ಮತ್ತು ಅವರ ಮಗ ಅಶ್ವಿನ್ ಎಂಬವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿದ್ದಾರೆ.

ಮೀನುಗಾರರಿಂದ ಮುಖ್ಯಮಂತ್ರಿ ಭೇಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಎಂಎಸ್‌ಇ ಝಡ್ ತನ್ನ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುವುದರಿಂದ ಮೀನುಗಾರರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳು ಮುಖ್ಯ ಮಂತ್ರಿಗಳನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ತಳವೂರಿರುವ ಹಲವಾರು ಕಾರ್ಖಾನೆಗಳು ಈಗಾಗಲೇ ತಮ್ಮ ವಿಷತ್ಯಾಜ್ಯವನ್ನು ಸಮುದ್ರಕ್ಕೆ ಬಿಡುತ್ತಿರುವುದರಿಂದ ಹಲವಾರು ರೀತಿಯ ಮೀನುಗಳ ಸಂತತಿ ನಾಶವಾಗಿದೆ. ಇದರಿಂದಾಗಿ ಇದನ್ನೇ ನಂಬಿಕೊಂಡಿದ್ದ ಮೀನು ಗಾರರ ಬದುಕಿಗೂ ಹೊಡೆತ ಬಿದ್ದಂ ತಾಗಿದೆ. ಹೀಗಿರುವಾಗ ಮತ್ತೆ ಹಲ ವಾರು ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸಮುದ್ರಕ್ಕೆ ವಿಸರ್ಜನೆ ಮಾಡಲು ಯೋಜನೆ ರೂಪಿಸುತ್ತಿದ್ದು ಇದೂ ಕಾರ್ಯಗತ ಆದರೆ ಮುಂದೆ ಮೀನುಗಾರರು ಜೀವನ ನಡೆಸುವುದೇ ದುಸ್ಥರವಾಗುತ್ತದೆ. ಜಿಲ್ಲೆಯವರೇ ಆದ ತಮಗೆ ನಮ್ಮ ಸಮಸ್ಯೆ ಅರ್ಥವಾಗು ತ್ತದೆಯಾಗುವುದರಿಂದ ತಮ್ಮನ್ನು ಭೇಟಿ ಮಾಡಿರುವುದಾಗಿ ಮೀನುಗಾರರ ಮುಖಂಡರು ತಿಳಿಸಿದ್ದಾರೆ. ಒಂದು ವೇಳೆ ಎಂಎಸ್‌ಇಝಡ್ ತನ್ನ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುವುದೇ ಆದರೆ ರಿಯಾಬಿಲಿಟಿ ಪ್ಯಾಕೇಜನ್ನು ಮೀನುಗಾರರಿಗೆ ನೀಡಬೇಕು ಎಂದು ಮೀನುಗಾರರು ಮುಖ್ಯಮಂತ್ರಿ ಯವರಲ್ಲಿ ವಿನಂತಿಸಿಕೊಂಡಿದ್ದಾರೆ.
ತಾನು ಪ್ರಸ್ತುತ ಬಜೆಟ್ ಮೀಟಿಂಗ್ ನಲ್ಲಿ ತೊಡಗಿರುವುದಿಂದ ಕೂಡಲೇ ಮುಖ್ಯ ಕಾರ್ಯ ದರ್ಶಿಯವರ ಬಳಿ ತಿಳಿಸಿ ಸಭೆ ನಡೆಸುವ ಭರವಸೆಯನ್ನು ಮುಖ್ಯ ಮಂತ್ರಿ ನೀಡಿದ್ದಾರೆಂದು ತಿಳಿದು ಬಂ ದಿದೆ.

ಮುಲ್ಕಿ: ನಗರಪಂಚಾಯತ್ ಸಭೆಯಲ್ಲಿ ಆಡಳಿತ ಪಕ್ಷದವರ ಮಾತಿನ ಚಕಮಕಿ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಸರಕಾರದ ವಿವಿಧ ಯೋಜನೆಗಳಲ್ಲಿ ಜಾಗ ಪಡೆದುಕೊಂಡಿ ರುವವರು ಇದನ್ನು ಮಾರಾಟ ಮಾಡು ತ್ತಿದ್ದು, ಫಲಾನುಭವಿಗಳ ಹಕ್ಕು ಪತ್ರ ಈ ಪಂಚಾಯತ್‌ನಿಂದ ನಾಪತ್ತೆ ಯಾಗಿದೆ. ಇದು ಹೇಗೆ ನಾಪತ್ತೆಯಾಗಿ ರುವುದು ಎಂದು ಮಾಜಿ ಅಧ್ಯಕ್ಷರೊ ಬ್ಬರು ಸಭೆಯಲ್ಲಿ ಪ್ರಶ್ನಿಸಿದಾಗ ಆಡಳಿತ ಪಕ್ಷದವರೊಳಗೆ ಜಟಾಪಟಿ ನಡೆದಿದ್ದು, ಬಿಜೆಪಿ ಸದಸ್ಯರು ಮಾತ್ರ ಮೂಕ ಪ್ರೇಕ್ಷಕ ರಾಗಿದ್ದರು.
ಜಾಗದ ಹಲವು ಮಂದಿ ಹಕ್ಕು ಪತ್ರವನ್ನು ಒಬ್ಬರಿಗೆ ಮಾರಾಟ ಮಾಡಿ ಜಾಗವನ್ನು ಮತ್ಯಾರಿಗೋ ಮಾರು ವಂಥ ದಂಧೆ ಹೆಚ್ಚಾಗುತ್ತಿವೆ. ಇದಕ್ಕೆ ಸೂಕ್ತ ಕ್ರಮ ರೂಪಿಸಿ ಕಡಿವಾಣವನ್ನು ಹಾಕ ಬೇಕಾಗಿದೆ. ಅಷ್ಟು ಮಾತ್ರವಲ್ಲದೇ ಈ ಹಿಂದೆ ತಮ್ಮ ಹಕ್ಕು ಪತ್ರವನ್ನು ಒತ್ತೆ ಇಟ್ಟು ನಗರ ಪಂಚಾಯತ್‌ನಿಂದ ಸಾಲ ಪಡೆದುಕೊಂಡ ಫಲಾನುಭವಿ ಗಳು ಸಾಲವನ್ನು ಮರುಪಾವತಿಸಿ ಹಕ್ಕು ಪತ್ರವನ್ನು ಹಿಂದೆ ಕೇಳಿದಾಗ ಹಕ್ಕು ಪತ್ರವು ನಗರ ಪಂಚಾಯತ್‌ನಲ್ಲಿ ಇಲ್ಲದೆ ಎಲ್ಲಿ ಹೋಯಿತು? ಇಲ್ಲಿ ಹಕ್ಕು ಪತ್ರ ಮಾರಾಟ ಮಾಡಲಾಗುತ್ತಿದೆಯೇ? ಎಂದು ಮಾಜಿ ಅಧ್ಯಕ್ಷರಾದ ಬಿ.ಎಮ್. ಅಸೀಫ್‌ರವರು ಪ್ರಶ್ನಿಸಿದರು. ಈ ಮಾತು ಹೇಳಿದಾಗ ಅರ್ಧಗಂಟೆಗಳ ಕಾಲ ಮಾತಿನ ಚಕಮಕಿ ನಡೆಯಿತು. ಆದರೆ ಬಿ.ಜೆ.ಪಿ ಸದಸ್ಯರುಗಳು ಮೂಕ ಪ್ರೇಕ್ಷಕರಂತೆ ಇದ್ದರು.
ಲಿಂಗಪ್ಪಯ್ಯಕಾಡಿನಲ್ಲಿ ಮನೆ ನಂ ಇಲ್ಲದ ೯೦ ಅಕ್ರಮ ಮನೆಗಳಿವೆ. ಅಷ್ಟು ಮಾತ್ರವಲ್ಲದೇ ಎರಡುವರೆ ಸೆಂಟ್ಸ್‌ಗಳಲ್ಲಿ ೨ ಮನೆಯನ್ನು ನಿರ್ಮಿಸಿ ಒಂದನ್ನು ಬಾಡಿಗೆ ನೀಡಿದ್ದು ಈ ಬಾಡಿಗೆದಾರರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಇಲ್ಲಿಯ ಪರಿಸರ ತೀರಾ ಕಲ್ಮಷವಾಗುತ್ತಿದ್ದು ಇಲ್ಲಿನ ಜನರು ಮಾರಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿದೆ.
ನೀರಿನ ಕೊರತೆಯಿರುವ ಸ್ಥಳಗಳಿಗೆ ಜಿಲ್ಲಾಧಿಕಾರಿಯವರನ್ನು ಕರೆತಂದು ಇಲ್ಲಿನ ವಸ್ತು ಸ್ಥಿತಿಯನ್ನು ವಿವರಿಸಿ ಮನವರಿಕೆ ಮಾಡಿಸಿದಾಗ ಮಾತ್ರ ತಿಳಿಯುತ್ತದೆ ಇಲ್ಲಿ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಯಾಗಲಿ ಮತ್ತು ಬಾವಿ, ವ್ಯವಸ್ಥೆ ಇಲ್ಲವಾಗಿದ್ದು ಇಂತವರು ಹೇಗೆ ಜೀವಿಸಲು ಸಾಧ್ಯ ಎಂದರು. ಆ ಬಳಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆ ವಿಮಲ ಪೂಜಾರಿ ಲಿಂಗಪ್ಪಯ್ಯಕಾಡಿನಲ್ಲಿ ಪರವಾನಿಗೆ ಇಲ್ಲದೆ ಅಕ್ರಮ ಗೋದಾಮು ಹಾಗೂ ಮನೆಗಳ ನಿರ್ಮಾಣವಾಗುತ್ತಿದೆ. ಇದರಿಂದ ಕೆಲವು ಮನೆಗಳಿಗೆ ಹಾದು ಹೋಗುವ ರಸ್ತೆಗಳು ಇಲ್ಲದಂತಾಗಿದ್ದು ಕೂಡಲೇ ಇಂತಹ ಗೋದಾಮು ಗಳನ್ನು ತೆರವು ಗೊಳಿಸಬೇಕು ಎಂಬ ಅಂಶದ ಬಗ್ಗೆ ಗಮನ ಸೆಳೆದರು.

ಸಾರಿಗೆ ಇಲಾಖೆಗೆ ಲೋಕಾಯುಕ್ತ ದಾಳಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರಿನ ಸಾರಿಗೆ ಇಲಾಖೆ(ಆರ್‌ಟಿಒ) ಕಚೇರಿಗೆ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಎಸ್ಪಿ ಜಗಮಯ್ಯನವರ್ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳು ಸಾರಿಗೆ ಇಲಾಖೆಯ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಯಾವುದೇ ಭ್ರಷ್ಟಾಚಾರ ಮತ್ತು ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿಲ್ಲ ಎಂದು ತಿಳಿದು ಬಂದಿದೆ. ಲೋಕಾಯುಕ್ತ ಇಲಾಖೆಯ ಡಿವೈಎಸ್ಪಿಗಳಾದ ಉದಯನಾಯಕ್, ದಿಲೀಪ್ ಕುಮಾರ್ ಮತ್ತು ಉಮೇಶ್ ಶೇಟ್ ಕಾರ್ಯಾಚರಣೆ ನಡೆಸಿದ್ದರು.

ಹೆಸರಿನ ವಿವಾದ: ಉರೂಸು ರದ್ದು

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಹೆಸರು ಸಂಬಂಧ ವಿವಾದದಿಂದಾಗಿ ಮಸೀದಿಯೊಂದರ ಉರೂಸು ಮಹೋತ್ಸವವೇ ರದ್ದುಗೊಂಡ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ.
ಇಲ್ಲಿನ ಮಳ್ಳಂಗೈ ಹಾಗೂ ಬಂದ್ಯೋಡು ಎಂಬಲ್ಲಿನ ಜಮಾಯತ್ ಗಳ ನಡುವಿನ ಸಂಘರ್ಷದಿಂದಾಗಿ ಮಳ್ಳಂಗೈ ಫಕೀರ್‌ವಲಿ ದರ್ಗಾ ಶರೀಫ್ ಉರೂಸು ಮಹೋತ್ಸವಕ್ಕೆ ಕುಂಬಳೆ ಪೊಲೀಸರು ತಡೆಯೊಡ್ಡಿದ್ದಾರೆ.
ಮಳ್ಳಂಗೈ ಫಕೀರ್‌ವಲಿ ದರ್ಗಾ ಶರೀಫ್ ಉರೂಸಿನ ಹೆಸರನ್ನು ಬಂದ್ಯೋಡು ಮಳ್ಳಂಗೈ ಫಕೀರ್‌ವಲಿ ದರ್ಗಾ ಶರೀಫ್ ಉರೂಸು ಎಂದು ನಾಮಕರಣ ಮಾಡುವ ಬಗ್ಗೆ ಒಂದೂ ವರೆ ವರ್ಷದ ಹಿಂದೆಯೇ ಎರಡು ಸಮಿತಿಗಳೂ ಸೇರಿ ಪರಸ್ಪರ ಒಪ್ಪಿಕೊಂ ಡಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ೩೫ ವರ್ಷಗಳಿಂದ ದೂರವಾಗಿದ್ದ ಎರಡೂ ಸಮಿತಿಗಳು ಈ ಬಾರಿ ಒಟ್ಟಾಗಿ ಉರೂಸು ಆಚರಿಸುವ ಬಗ್ಗೆ ತೀರ್ಮಾ ನಿಸಿದ್ದವು. ಆದರೆ ಈ ಬಾರಿ ಉರೂಸಿ ಗಾಗಿ ಫಲಕ, ಭಿತ್ತಿಪತ್ರ, ನೋಟಿಸುಗಳು ಮುದ್ರಣವಾಗಿದ್ದು, ಇದರಲ್ಲಿ ತೀರ್ಮಾ ನಕ್ಕೆ ವಿರುದ್ಧವಾಗಿ ಬಂದ್ಯೋಡು ಎಂಬ ಹೆಸರನ್ನು ಹೊರತುಪಡಿಸಿರುವುದನ್ನು ಮನಗಂಡ ಬಂದ್ಯೋಡು ಜಮಾ ಯತ್‌ನ ಮಂದಿ ರೋಷತಪ್ತರಾದರು. ಮರಳಿ ಬಂದ್ಯೋಡು ಎಂಬ ಹೆಸರನ್ನು ಸೇರ್ಪಡೆಗೊಳಿಸಬೇಕೆಂಬ ಇವರ ಬೇಡಿಕೆಯೂ ಈಡೇರದಾಯಿತು. ಪೊಲೀಸರ ಮಧ್ಯಸ್ತಿಕೆಯೂ ವಿಫಲ ವಾದ ಫಲವಾಗಿ ಪೊಲೀಸರು ಉರೂಸು ಕಾರ್ಯಕ್ರಮಗಳಿಗೆ ತಾತ್ಕಾಲಿಕ ತಡೆ ಹಾಕಿದ್ದಾರೆ. ಉರೂಸಿನ ಪೂರ್ವಭಾವಿ ಯಾಗಿ ಸ್ಥಾಪಿಸಲಾದ ಫಲಕ, ಭಿತ್ತಪತ್ರ ಗಳನ್ನು ತೆರವುಗೊಳಿಸಲಾಗಿದೆ.

ಒಣಹುಲ್ಲಿಗೆ ಬೆಂಕಿ: ಆತಂಕ

Posted by JAYAKIRANA Kirana on | 0 comments | Leave a comment...

ಮಂಗಳೂರು : ಕಿಡಿಗೇಡಿಗಳು ಒಣ ಹುಲ್ಲಿಗೆ ಹಚ್ಚಿದ ಬೆಂಕಿ ಆತಂಕ ಹುಟ್ಟಿಸಿದ ಘಟನೆ ನಿನ್ನೆ ಮಧ್ಯಾಹ್ನ ಪಣಂಬೂರು ಬಳಿ ನಡೆದಿದೆ.
ಪಣಂಬೂರು ಪೆಟ್ರೋಲ್ ಬಂಕ್ ಬಳಿಯ ಖಾಲಿ ಸ್ಥಳದಲ್ಲಿ ಬೆಳೆದಿದ್ದ ಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಹುಲ್ಲು ಒಣಗಿದ್ದ ಕಾರಣ ಬೆಂಕಿ ಒಮ್ಮೆಲೆ ಒಂದು ಎಕ್ರೆ ಪ್ರದೇಶ ದವರೆಗೆ ವಿಸ್ತರಿಸಿತ್ತು. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಮತ್ತು ಇನ್ನೊಂದು ಗ್ಯಾಸ್ ಟ್ಯಾಂಕರ್ ನಿಲುಗಡೆ ಇದ್ದ ಕಾರಣ ಬೆಂಕಿ ಆತಂಕಕ್ಕೆ ಕಾರಣ ವಾಗಿತ್ತು. ಈ ಬಗ್ಗೆ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು ಅವರು ಸಕಾಲದಲ್ಲಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿ ವಂಚಿಸಿದ ಪತ್ನಿಯಿಂದ ದೂರು

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಪ್ರೀತಿಸಿ ಮದುವೆ ಯಾದ ಯುವಕನೋರ್ವ ತನ್ನ ಹೆಂಡತಿ ಮತ್ತು ಮಗುವನ್ನು ತೊರೆದ ಘಟನೆ ಇಲ್ಲಿಗೆ ಸಮೀಪದ ಉಚ್ಚಿಲದ ಭಾಸ್ಕರ ನಗರದಲ್ಲಿ ಸಂಭವಿಸಿದೆ.
ಘಟನೆಯ ವಿವರ
ಕಾಪು ಸಮೀಪದ ಫಕೀರಣ ಕಟ್ಟೆಯ ನಿವಾಸಿ ಮಯ್ಯದಿಯವರ ಮಗ ಜಬ್ಬಾರ್ ಹುಸೇನ್(೨೩) ಮತ್ತು ಉಚ್ಚಿಲ ಭಾಸ್ಕರ ನಗರದ ನಿವಾಸಿ ಅಯೂಬ್ ಸಾಹೇ ಬರ ಮಗಳು ಹಾಜಿರಾ ಬಾನು(೨೦) ಸೋದರ ಸಂಬಂಧಿಗಳು. ಸಂಬಂ ಧದ ನೆಲೆಯಲ್ಲಿ ಜಬ್ಬಾರ್ ಉಚ್ಚಿದ ಹಾಜಿರಾ ಅವರ ಮನೆಗೆ ಆಗಾಗ ಬರುತ್ತಿದ್ದ. ಈ ಸಂದರ್ಭ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿ, ಇಬ್ಬರೂ ಮನೆಯವರ ವಿರೋಧಕ್ಕೆ ಹೆದರಿ ಹಾಸನಕ್ಕೆ ಪರಾರಿ ಆದರು. ಅಲ್ಲಿಯ ಮಸೀದಿಯೊಂದರಲ್ಲಿ ಇವರಿಬ್ಬರಿಗೂ ನಿಖಾವಾಗಿದೆ ಎಂದು ಹಾಜಿರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾಳೆ.
 ಮನೆಯಿಂದ ಪರಾರಿಯಾದ ಹಾಜಿರಾ ಮನೆಯಲ್ಲಿದ್ದ ತಾಯಿಯ ೨೦ಪವನ್ ಬಂಗಾರ ಕದ್ದೊಯ್ದಿದ್ದು, ಅದೇ ಚಿನ್ನವನ್ನು ಮಾರಿ ಅಲ್ಲಿ ಜೀವನ ಸಾಗಿಸುತ್ತಿದ್ದರು. ಇದೇ ವೇಳೆ ಹಾಜಿರಾ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಜಬ್ಬಾರ್, ಹಾಸನ ತೊರೆದು ಹಾಜಿರಾ ಳನ್ನು ಆಕೆಯ ತಾಯಿಯ ಮನೆಯಲ್ಲಿ ಬಿಟ್ಟು ತೆರಳಿದ್ದ. ಮನೆಗಾಗಮಿಸಿದ ಜಬ್ಬಾರ್ ನೇರವಾಗಿ ಹಾಜಿರಾಳ ತಾಯಿಯಲ್ಲಿ ವರದಕ್ಷಿಣೆ ರೂಪದಲ್ಲಿ ಎರಡು ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಯಲ್ಲಿ ಹಾಜಿರಾಳ ತಾಯಿಗೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಹಾಜಿರಾಳ ತಾಯಿ ಹಲ್ಲೆ ನಡೆಸಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಜಬ್ಬಾರ್ ಮೇಲೆ ಪ್ರಕರಣ ದಾಖಲಿಸಿದ್ದರು. ಘಟನೆಯ ನಂತರ ನಾಪತ್ತೆ ಯಾದ ಜಬ್ಬಾರ್, ಹೆಂಡತಿ ಮನೆಯತ್ತ ಮುಖ ಮಾಡಿಲ್ಲ. ಈತನ್ಮದ್ಯೆ ಹಾಜಿರಾಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗುವಿಗೆ ೪೦ದಿನ ಕಳೆದ ನಂತರ ಜಬ್ಬಾರ್‌ನ ಫಕೀರಣಕಟ್ಟೆಯ ಲ್ಲಿಯ ಮನೆಗೆ ಹೋಗಿ ತನ್ನನ್ನು ಮನೆ ಸೇರಿಸು ವಂತೆ ಒತ್ತಾಯಿಸಿದ್ದಾಳೆ. ಆಗ ಹೆಂಡತಿ ಮೇಲೆ ಹಲ್ಲೆ ಮಾಡಿ ಮನೆ ಯಿಂದ ಹೊರದಬ್ಬಿದ್ದ. ತನ್ನ ಮೇಲೆ ಗಂಡ ಹಲ್ಲೆ ನಡೆಸಿ ಮತ್ತು ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಹಾಜಿರಾಳು ಕಾಪು ಠಾಣೆಯಲ್ಲಿ ದೂರು ನೀಡಿದ್ದಾಳೆ.
ಗಂಡ ಬೇಡ: ನನ್ನಲ್ಲಿದ್ದ ೨೦ಪವನ್ ಚಿನ್ನಾಭರಣವನ್ನು ಕಸಿದುಕೊಂಡ ಹಾಗೂ ನಮ್ಮ ಮನೆಯವರಿಂದ ಇನ್ನಷ್ಟು ವರದಕ್ಷಿಣೆ ಹಣ ಬೇಡುವ ಗಂಡ ನನಗೆ ಬೇಡವೇ ಬೇಡ. ನನಗೆ ತಲಾಕ್ ನೀಡಿ, ನನ್ನ ಎಲ್ಲಾ ಚಿನ್ನಾ ಭರಣವನ್ನು ವಾಪಾಸು ನೀಡಲಿ. ನಾನು ನನ್ನ ಮಗುವಿನೊಂದಿಗೆ ಸುಖವಾಗಿರುತ್ತೇನೆ ಎಂದೂ ಹಾಜಿರಾ ಕಣ್ಣೀರು ಹಾಕುತ್ತಾಳೆ.
ಜಬ್ಬಾರ್ ಹುಸೇನ್ ರಾಜಾ ರೋಷವಾಗಿ ಪರಿಸರದಲ್ಲಿ ತಿರುಗು ತ್ತಿದ್ದರೂ, ಪಡುಬಿದ್ರಿ ಪೊಲೀಸ ರಾಗಲೀ ಕಾಪು ಪೊಲೀಸರಾಗಲೀ ತಲೆಕೆಡಿ ಕೊಳ್ಳದೆ, ಕರ್ತವ್ಯ ವಿಮುಖ ರಾಗಿದ್ದಾರೆ ಎಂದು ಪಡುಬಿದ್ರಿಯಲ್ಲಿ ಶುಕ್ರವಾರ ಸಂಜೆ ನಡೆದ ಪತ್ರಿಕಾಗೋ ಷ್ಠಿಯಲ್ಲಿ ಹಾಜಿರಾ ಆರೋಪಿಸಿದ್ದಾಳೆ. ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸ ದಿದ್ದರೆ, ಪೊಲೀಸ್ ವರಿಷ್ಠಾಧಿಕಾರಿಯ ವರಿಗೆ ದೂರು ನೀಡುವುದಾಗಿ ಹೇಳಿದ್ದಾಳೆ.

ಕೆಲಸಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್!

Posted by JAYAKIRANA Kirana on | 0 comments | Leave a comment...


ಬಂಟ್ವಾಳ: ಕೆಲಸದ ಒತ್ತಡಕ್ಕೆ ಹೆದರಿದ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಓರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೆತ್ನಿಸಿದ ಸಿಬ್ಬಂದಿಯನ್ನು ಶ್ರೀಸ ಕುಮಾರ ಎಂದು ಗುರುತಿಸಲಾಗಿದ್ದು, ಅಸ್ವಸ್ಥಗೊಂಡ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ನಗರದ ರಸ್ತೆಯ ಬದಿಯಲ್ಲಿ ಬಿದ್ದುಕೊಂಡ ಕುಮಾರರನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಿದರು.
ವಿಷ ಸೇವಿಸಿ ಅಸ್ವಸ್ಥಗೊಂಡಿರಬಹುದೆಂಬುದು ಸ್ಥಳೀಯರ ಗುಮಾನಿ. ಅತಿಯಾದ ಮದ್ಯ ಸೇವನೆಯೂ ಮತಿ ತಪ್ಪಿ ಬೀಳಲು ಕಾರಣ ಎನ್ನುವುದು ಇನ್ನೊಂದು ಆರೋಪ. ವೇಣೂರು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕುಮಾರ ಇತ್ತೀಚೆಗೆ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಸಾರ್ವಜನಿಕರ ದೂರುಗಳನ್ವಯ ಮೇಲಧಿಕಾರಿಗಳು ಹಲವು ಬಾರಿ ಬುದ್ದಿಮಾತು ಹೇಳುತ್ತಿದ್ದರು. ಫರಂಗಿಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ, ಕೊಣಾಜೆಯಲ್ಲಿ ಮನೆಯೊಂದಕ್ಕೆ ಅಕ್ರಮ ಪ್ರವೇಶಿಸಿ ದಾಂಧಲೆ ನಡೆಸಿದ ಆರೋಪಗಳಿಗೆ ಸಿಲುಕಿದ್ದ ಸಿಬ್ಬಂದಿ ಮೇಲೆ ಇಲ್ಲಿನ ದಲಿತ ಮುಖಂಡ ಓರ್ವರು ಪೊಲೀಸ್ ಹಿರಿಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಮೇಲಧಿಕಾರಿಗಳ ಸೂಚನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಕುಮಾರರನ್ನು ಕೆಲವು ದಿನಗಳ ಹಿಂದೆ ಸಮನ್ಸ್ ಜಾರಿಯ ಕೆಲಸ-ಕಾರ್ಯಗಳನ್ನು ವಹಿಸಿದ್ದರು. ಈ ಕೆಲಸ ತನಗೆ ಹೊರೆಯಾಗುತ್ತದೆ ಎನ್ನುವುದು ಸಿಬ್ಬಂದಿಯ ಆರೋಪ. ಇಲಾಖೆಯ ಮೇಲಧಿಕಾರಿಗಳಿಗೆ ರಾಜಕೀಯ ಒತ್ತಡ ತರುವ ಕೆಲಸಕ್ಕೂ ಇಳಿದಿದ್ದ ಕಾನ್ಸ್‌ಸ್ಟೇಬಲ್ ಕಸರತ್ತಿಗೆ ಮೇಲಧಿಕಾರಿಗಳು ಮಣಿದಿರಲಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಂಡ ಕುಮಾರ ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಅಸರ್ಮಪಕ ಕರ್ತವ್ಯ ನಿರ್ವಹಣೆ ಹಾಗೂ ಇಲಾಖೆಗೆ ಕೆಟ್ಟ ಅಭಿಪ್ರಾಯ ಮೂಡಿಸಿದ ಆರೋಪದಲ್ಲಿ ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಸರಣಿ ಅಪಘಾತಕ್ಕೆ ಇಬ್ಬರು ಗಂಭೀರ

Posted by JAYAKIRANA Kirana on | 0 comments | Leave a comment...


ಕಾರ್ಕಳ: ಇಲ್ಲಿಗೆ ಸಮೀಪದ ಸಾಣೂರು ಪುಲ್ಕೇರಿ ಬೈಪಾಸ್ ಬಳಿ ಯಲ್ಲಿ ಸಂಭವಿಸಿದ ಸರಣಿ ಅಪಘಾತ ವೊಂದರಲ್ಲಿ ಬೈಕ್ ಸವಾರರಿಬ್ಬರು ಗಂಭೀರ ರೀತಿಯಲ್ಲಿ ಗಾಯಗೊಂಡಿ ದ್ದಾರೆ.
ಕಾಬೆಟ್ಟು ಮಯ್ಯುದ್ದೀನ್(೪೦) ಮಾರ್ಕೆಟ್ ರಸ್ತೆಯ ಇಕ್ಬಾಲ್(೩೮) ಎಂಬವರು ಘಟನೆಯಲ್ಲಿ ಗಾಯಗೊಂ ಡವರು. ಇವರು ಸಾಣೂರು ಮಸೀದಿಯಲ್ಲಿ ನಮಾಜು ಮುಗಿಸಿ ಕಾರ್ಕಳ ಪೇಟೆ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿತ್ತೆನ್ನ ಲಾಗಿದೆ. ಮಾಹಿತಿ ತಿಳಿದ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.

ಕಾಪು: ವಿವಾಹಿತೆ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಡಪಾಡಿ ಸಮೀಪದ ಮೂಡಬೆಟ್ಟು-ಸುಭಾಷ್‌ನಗರ ನಿವಾಸಿ ಸೈದಾ(೨೨) ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಶಾನವಾಜ್ ಕಾಪು ಠಾಣೆಗೆ ದೂರಿದ್ದಾರೆ. ಮಾರ್ಚ್ ೨೭ರಂದು ಫಕೀರನಕಟ್ಟೆಯಲ್ಲಿರುವ ತಾಯಿಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಬೆಳ್ತಂಗಡಿ: ಮಹಿಳೆ ನಾಪತ್ತೆ : ಬೆಳ್ತಂಗಡಿ ಸಮೀಪದ ಪೆರಾಡಿ ಎಂಬಲ್ಲಿಂದ ಮಹಿಳೆ ನಾಪತ್ತೆಯಾಗಿ ರುವ ಬಗ್ಗೆ ಪೊಲೀಸರಿಗೆ ದೂರ ಲಾಗಿದೆ. ಮನೆಯಿಂದ ಮೂಡಬಿದ್ರೆಗೆ ಗೋಧಿ ಹುಡಿ ಮಾಡಿಸಲೆಂದು ಅತ್ತೆಗೆ ತಿಳಿಸಿ ತೆರಳಿದ್ದು, ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಪಲ: ಬಾವಿಗಿಳಿದ ವ್ಯಕ್ತಿ ಉಸಿರುಗಟ್ಟಿ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಡಪಾನ ತೆಗೆಯಲೆಂದು ಬಾವಿಗಿಳಿದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟು ಸಮೀಪದ ಕುಂಪಲ ಎಂಬಲ್ಲಿ ನಿನ್ನೆ ನಡೆದಿದೆ.
ಮೃತರನ್ನು ನಿಸಾರ್(೨೦) ಎಂದು ಹೆಸರಿಸಲಾಗಿದೆ. ಇವರು ಕುಂಪಲದಲ್ಲಿ ಬಾವಿಗೆ ರಿಂಗ್ ಹಾಕುವ ಕೆಲಸ ನಿರ್ವಹಿಸುತ್ತಿದ್ದು, ನಿನ್ನೆ ಸಂಜೆ ಕೆಲಸ ಮುಗಿದ ಬಳಿಕ ಪಕ್ಕದ ಮನೆಯ ವ್ಯಕ್ತಿಯೊಬ್ಬರು ತಮ್ಮ ಬಾವಿಯಲ್ಲಿ ಕೊಡಪಾನ ಬಿದ್ದಿದೆ, ತೆಗೆದುಕೊಡಿ ಎಂದಿದ್ದರಿಂದ ಬಾವಿಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಾವಿಯಲ್ಲಿ ಉಸಿರಾಟಕ್ಕೆ ಆಮ್ಲಜನಕದ ಕೊರತೆ ಇದ್ದಿದ್ದರಿಂದ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ನಿಸಾರ್ ಬಾವಿಗೆ ಇಳಿದು ಬಹಳ ಹೊತ್ತಾದರೂ ಮೇಲಕ್ಕೆ ಬಾರದೆ ಇದ್ದಿದ್ದ ರಿಂದ ಮತ್ತೋರ್ವ ಯುವಕನೂ ಬಾವಿಗೆ ಇಳಿದಿದ್ದು, ಅರ್ಧಭಾಗ ತಲುಪುತ್ತಿದ್ದಂತೆ ತಲೆಸುತ್ತು ಬಂದಂತಾಗಿ ವಾಪಸ್ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಸ್ತಿ ವಿವಾದ: ಮಹಿಳೆಯರಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರಿಗೆ ವ್ಯಕ್ತಿಯೋರ್ವರು ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕಿನ ಪಡ್ನೂರು ಎಂಬಲ್ಲಿ ನಡೆದಿದೆ.
ಪುತ್ತೂರಿನ ಸುಂದರಿ ಮತ್ತು ಅಪ್ಪಿ ಎಂಬವರಿಗೆ ಸ್ಥಳೀಯರಾದ ನಾರಾಯಣ ಪೂಜಾರಿ ಎಂಬವರು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಆಸ್ತಿ ವಿವಾದವೇ ಹಲ್ಲೆಗೆ ಕಾರಣ ಎಂದು ಆರೋಪಿಸಲಾಗಿದೆ.
ಸುಂದರಿ ಮತ್ತು ಅಪ್ಪಿ ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಪುತ್ತೂರು ನಗರ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳ್ಳಭಟ್ಟಿ: ಆರೋಪಿಗಳು ದೋಷಮುಕ್ತಿ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆ ಸಮೀಪ ೩ ವರ್ಷದ ಹಿಂದೆ ಪತ್ತೆಯಾಗಿದ್ದ ಕಳ್ಳಭಟ್ಟಿ ಸಾರಾಯಿ ಪ್ರಕರಣದ ಆರೋಪಿಗಳಿಬ್ಬರನ್ನು ಪುತ್ತೂರು ನ್ಯಾಯಾಲಯ ಖುಲಾಸೆಗೊಳಿಸಿದೆ.
ಬಡಗನ್ನೂರು ಗ್ರಾಮದ ಸೋಣಂಗಿರಿಯ ಸುಧೀರ್ ಮತ್ತು ಮೋದಿಕೆ ಎಂಬಲ್ಲಿನ ರಾಮಚಂದ್ರ ನಾಯ್ಕ ಆರೋಪದಿಂದ ಮುಕ್ತಗೊಂ ಡವರು. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಎ.ರಮಾನಾಥ ರೈ ಮತ್ತು ಕುಮಾರನಾಥ್ ವಾದಿಸಿದ್ದರು.

ವಂಚನೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಣ ನೀಡದೆ ವಂಚಿಸುತ್ತಿದ್ದಾರೆಂದು ವ್ಯಕ್ತಿಯೊಬ್ಬರು ಮಾರ್ಗದರ್ಶಿ ಚಿಟ್ ಫಂಡ್ ವಿರುದ್ಧ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ನಿವಾಸಿ ರಘುಚಂದ್ರ ಎಂಬವರು ಮಾರ್ಗದರ್ಶಿ ಚಿಟ್ ಫಂಡ್‌ನಲ್ಲಿ ಮೂರುಲಕ್ಷದ ಫಂಡ್ ಹೊಂದಿದ್ದರು. ಕಳೆದ ತಿಂಗಳು ಇವರು ೫೮ ಸಾವಿರ ಬಿಡ್ ಏರಿಸಿ ಈ ಫಂಡನ್ನು ಪಡೆದುಕೊಂಡಿದ್ದರು. ಕಂಪೆನಿಯ ನಿಯಮ ಪ್ರಕಾರ ಇವರಿಗೆ ೨.೪೨ ಲಕ್ಷ ಹಣ ಸಿಗಬೇಕಿತ್ತು. ಇದಕ್ಕಾಗಿ ರಘು ಚಂದ್ರ ಮೂರು ಜಾಮೀನನ್ನೂ ನೀಡಿ ದ್ದರು. ಕಂಪೆನಿ ಒಪ್ಪಂದದ ಪ್ರಕಾರ ಎಂಟು ದಿವಸದೊಳಗೆ ಇವರಿಗೆ ಫಂಡ್ ಮೊತ್ತ ನೀಡಬೇಕಾಗಿದ್ದರೂ ಇದೀಗ ತಿಂಗಳು ಕಳೆದರೂ ಕಂಪೆನಿ ಹಣ ನೀಡಿಲ್ಲ ಎಂದು ದೂರಿ ರಘುಚಂದ್ರ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಪತಿಯಿಂದ ಪತ್ನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಪತಿಯ ಹಲ್ಲೆ ಯಿಂದಾಗಿ ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ಉಪ್ಪಳ ಪ್ರತಾಪನಗರ ಎಂಬಲ್ಲಿ ಘಟನೆ ಸಂಭವಿಸಿದೆ. ಪ್ರತಾಪನಗರದ ದಿ. ಅಹಮ್ಮದ್ ಯೂಸಫ್ ಎಂಬವರ ಪುತ್ರಿ ಸಾಹಿರಾಬಾನು(೩೫) ಎಂಬಾ ಕೆಯೇ ಪತಿ ಹಾಗೂ ನಾದಿನಿಯ ದೌರ್ಜನ್ಯಕ್ಕೊಳಗಾದ ಗೃಹಿಣಿ. ಕ್ಷುಲ್ಲಕ ಕಾರಣಕ್ಕೆ ಜಗಳವೆಬ್ಬಿಸಿದ ಪತಿ ಫಿರ್ದೌಸ್ ನಗರದ ಮುಹಮ್ಮದ್ ಹನೀಫಾ ಹಾಗೂ ನಾದಿನಿ ಸೈಫುನ್ನಿಸಾ ಎಂಬವರು ಸೇರಿ ದೂಡಿ ಹಾಕಿದ ರೆಂದೂ, ನೆಲಕ್ಕೆ ಬಿದ್ದ ತನ್ನ ಉದರಕ್ಕೆ ಪತಿ ಬಲವಾಗಿ ಒದ್ದ ರೆಂದೂ ಇದೀಗ ಪ್ರಜ್ಙೆ ಕಂಡುಕೊಂಡಿರುವ ಸಾಹಿರಾ ಬಾನು ದೂರಿದ್ದಾರೆ. ಪೊಲೀ ಸರು ಕೇಸು ದಾಖಲಿಸಿದ್ದಾರೆ.

ಯಡ್ಡಿ ಉಪಾಹಾರ ಕೂಟಕ್ಕೆ ಬೆಂಬಲಿಗರೇ ಗೈರು!

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಗಣಿ ಹಗರಣ ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಅವರ ಕೊರಳಿಗೆ ಸುತ್ತಿಕೊಳ್ಳುತ್ತಿ ದ್ದಂತೆ ಅವರ ಬೆಂಬಲಿಗ ಶಾಸಕರು, ಸಚಿವರು ದೂರ ಸರಿಯುವ ಯತ್ನ ಮಾಡಿದ್ದಾರೆ.
ಗಣಿ ಮಾಲೀಕರಿಂದ ಯಡಿ ಯೂರಪ್ಪ ಕುಟುಂಬದ ಸಂಸ್ಥೆಗಳಿಗೆ ಹಣ ಸಂದಾಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದು ಅಗತ್ಯ ಎಂದು ಸಿಇಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. ಬಜೆಟ್ ಅಧಿವೇಶನದ ಕೊನೆ ದಿನವಾದ ನಿನ್ನೆ ಯಡಿ ಯೂರಪ್ಪ ಪಕ್ಷದ ಸಚಿವರು, ಶಾಸಕರಿಗೆ ತಮ್ಮ ರೇಸ್‌ಕೋರ್ಸ್ ನಿವಾಸದಲ್ಲಿ ಉಪಹಾರಕ್ಕೆ ಕರೆದಿದ್ದರು. ಸದಾನಂದಗೌಡ, ರಾಜ್ಯಾಧ್ಯಕ್ಷ ಈಶ್ವರಪ್ಪ, ಗೃಹ ಸಚಿವ ಅಶೋಕ್ ಸೇರಿದಂತೆ ಕೆಲವು ಸಚಿ ವರು ಶಾಸಕರು ಉಪಹಾರ ಕೂಟದಿಂದ ದೂರ ಉಳಿದರು. ಯಡಿಯೂರಪ್ಪನವರ ವಿರೋಧಿ ಗುಂಪು ಎಂದು ಬಿಂಬಿಸಿರುವ ಈಶ್ವರಪ್ಪ ಬಣ ಉಪಹಾರ ಕೂಟದಿಂದ ದೂರ ಉಳಿಯುವ ಸೂಚನೆ ನಿನ್ನೆಯೇ ದೊರೆತ್ತಿತ್ತು. ಆದರೆ ಅವರ ಬೆಂಬಲಿಗರು ನಿನ್ನೆಯ ಉಪಹಾರ ಕೂಟದಿಂದ ದೂರ ಉಳಿದಿದ್ದು, ಯಕ್ಷಪ್ರಶ್ನೆಯಾಗಿದೆ.
ಬಜೆಟ್ ಅಧಿವೇಶನ ಆರಂಭಗೊಂಡ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೊತೆ ೭೦-೭೫ ಶಾಸಕರು ರೆಸಾರ್ಟ್‌ನಲ್ಲಿ ಉಳಿದು, ಮುಖ್ಯಮಂತ್ರಿ ಸದಾನಂದಗೌಡರ ವಿರುದ್ಧ ಬಂಡಾಯ ಸಾರಿದ್ದರು. ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಸಿಇಸಿ ವರದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗುತ್ತಿದ್ದಂತೆ ಇದರಲ್ಲಿ ಬಹುತೇಕ ಶೇ. ೫೦ರಷ್ಟು ಶಾಸಕರು ಅವರಿಂದ ದೂರ ಸರಿದು, ಮುಖ್ಯಮಂತ್ರಿಯವರ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ.

ಬಿದರಿಯನ್ನು ಸದ್ದಾಂ, ಗಡಾಫಿಗೆ ಹೋಲಿಸಿದ ಹೈಕೋರ್ಟ್

Posted by JAYAKIRANA Kirana on | 0 comments | Leave a comment...

ಬೆಂಗಳೂರು: ನರಹಂತಕ ವೀರಪ್ಪನ್ ವಿಶೇಷ ಕಾರ್ಯಾಚರಣೆ ಪಡೆಯಲ್ಲಿ ಶಂಕರ್ ಬಿದರಿಯರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದೇ ಮುಳುವಾಗಿ ಬಿದರಿ ಪೊಲೀಸ್ ಮಹಾನಿರ್ದೇಶಕ ಸ್ಥಾನದಿಂದ ಕೆಳಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ರಾಜ್ಯ ಪೋಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಶಂಕರಬಿದರಿ ಅವರ ನೇಮಕಾತಿಯನ್ನು ಅನೂರ್ಜಿತಗೊಳಿಸಿ ಸಿಎಟಿ ನೀಡಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಅದೇ ಕಾಲಕ್ಕೆ ಎ.ಆರ್.ಇನ್‌ಫಾಂಟ್ ಅವರನ್ನು ಡಿಜಿಪಿ ಹುದ್ದೆಗೆ ನೇಮಕ ಮಾಡುವಂತೆ ಆದೇಶಿಸಿದೆ.
ನ್ಯಾಯಮೂರ್ತಿ ಎನ್.ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶ ನೀಡಿದ್ದು ಇದರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಲು ಶಂಕರ ಬಿದರಿ ನಿರ್ಧರಿಸಿದ್ದಾರೆ. ಶಂಕರ ಬಿದರಿ ಅವರನ್ನು ರಾಜ್ಯ ಪೋಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡುವ ಮುನ್ನ ಸರ್ಕಾರ ವಸ್ತುಸ್ಥಿತಿಯನ್ನು ಪರಿಶೀಲಿಸಿಲ್ಲ, ಬದಲಿಗೆ ತರಾತುರಿಯಲ್ಲಿ ಅವರನ್ನು ಡಿಜಿಪಿ ಹುದ್ದೆಗೆ ನೇಮಕಾತಿ ಮಾಡಿದೆ ಎಂದು ಹೇಳಿದ್ದ ಸಿಎಟಿ, ಈ ಹಿನ್ನೆಲೆಯಲ್ಲಿ ಬಿದರಿ ಅವರ ನೇಮಕಾತಿಯನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿತ್ತು.
ಈ ಆದೇಶದ ವಿರುದ್ದ ಹೈಕೋರ್ಟ್ ಮೊರೆ ಹೋಗಿದ್ದ ಬಿದರಿ ಪೋಲೀಸ್ ಮಹಾನಿರ್ದೇಶಕ ಹುದ್ದೆಗೆ ತಮ್ಮನ್ನು ನೇಮಕ ಮಾಡಿದ ಕ್ರಮ ಸರಿಯಾಗಿದೆ. ಹೀಗಾಗಿ ಸಹಜ ನ್ಯಾಯ ಪಾಲಿಸದೇ ಸಿಎಟಿ ನೀಡಿರುವ ತೀರ್ಪನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ವಾದ ವಿವಾದ ಆಲಿಸಿದ ವಿಭಾಗೀಯ ಪೀಠ ವೀರಪ್ಪನ್ ಕಾರ್ಯಾಚರಣೆಯಲ್ಲಿ ಬಿದರಿಯವರು ಆದಿವಾಸಿಗಳ ಮೇಲೆ ನಡೆಸಿರುವ ದೌರ್ಜನ್ಯವನ್ನು ಗಡಾಫಿ ಹಾಗೂ ಸದ್ದಾಂ ಹುಸೇನ್ ಅವರ ಮಾದರಿ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಂತಹ ದಬ್ಬಾಳಿಕೆಗಳು ನಡೆಯುತ್ತಿತ್ತು. ಅವು ಈಗಲೂ ನಡೆಯುತ್ತಿವೆ ಎಂದರೆ ಸಮಾಜ ತಲೆತಗ್ಗಿಸಬೇಕಾದ ವಿಚಾರ. ಇಂತಹ ಮನುಷ್ಯರು ಸಮಾಜದಲ್ಲಿ ಇರಬಾರದು. ಅದರೆ ಸಮಾಜದ ದುರಾದೃಷ್ಟ ಇಂತಹವರು ಇದ್ದಾರೆ. ಇವರಿಗೆ ಸಿಕ್ಕಿರುವ ಗೌರವ, ಪ್ರಶಸ್ತಿಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಸತ್ತ ಪೊಲೀಸರ ಬಗ್ಗೆ ಗೌರವವೂ ಇದೆ. ಆದರೆ ಆದಿವಾಸಿ ಹೆಣ್ಣುಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅತ್ಯಾಚಾರವನ್ನು ಸಹಿಸುವುದಿಲ್ಲ ಎಂದಿದೆ.

ಷೇರು ಕಂಪೆನಿ ಹೆಸರಲ್ಲಿ ವಂಚನೆ: ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...


ವಿಟ್ಲ: ವಿಟ್ಲದಲ್ಲಿ ಷೇರು ಕಂಪೆನಿಯ ಫ್ರಾಂಚೈಸಿಯಾಗಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ವಿಟ್ಲ ಪೊಲೀಸರು ಗುರುವಾರ ಕುದ್ದುಪದವು ಎಂಬಲ್ಲಿ ಬಂಧಿಸಿದ್ದು, ಈತ ಷೇರು ವ್ಯವಹಾರ ದಲ್ಲಿ ಹಲವರಿಗೆ ಒಂದು ಕೋಟಿ ೪೦ಲಕ್ಷ ರೂ. ವಂಚಿಸಿದ್ದಾನೆ ಎಂಬುದು ಬಹಿರಂಗಗೊಂಡಿದೆ.
ಕೇಪು ಗ್ರಾಮದ ಕುದ್ದುಪದವು ನಿವಾಸಿ ಮಹಮ್ಮದ್ ಅನ್ವರ್ ಬಂಧಿತ ಆರೋಪಿ. ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಈತ ಜೆಆರ್‌ಜಿ ಸೆಕ್ಯುರಿಟೀಸ್ ಲಿಮಿಟೆಡ್ ಎಂಬ ಹೆಸರಿನ ಷೇರು ಫ್ರಾಂಚೈಸಿ ಕಚೇರಿಯನ್ನು ಎರಡು ವರ್ಷಗಳ ಹಿಂದೆ ಆರಂಭಿಸಿ ಷೇರು ವ್ಯವಹಾರ ನಡೆಸುತ್ತಿದ್ದ. ಈ ಸಂದರ್ಭ ಆತ ಹಲವು ಮಂದಿಯಿಂದ ಹಣ ಸಾಲವಾಗಿ ಪಡೆದು, ಅದಕ್ಕೆ ಪ್ರತಿಯಾಗಿ ದ್ವಿಗುಣ ಮೊತ್ತದಲ್ಲಿ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದಿದ್ದ. ಇದೇ ರೀತಿಯಾಗಿ ಆತ ಕೆಲವರಿಂದ ಸಣ್ಣ ಮೊತ್ತದ ಸಾಲ ಪಡೆದು ಕೆಲವರಿಗೆ ಅದರ ಎರಡು ಪಟ್ಟು ಹಣ ನೀಡಿ ಅವರನ್ನೆಲ್ಲಾ ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದ. ಹಲವಾರು ಜನರಿಗೆ ಲಕ್ಷಾಂತರ ರೂ. ವಂಚಿಸಿ ಪಂಗನಾಮ ಹಾಕಿ ಜುಲೈ ತಿಂಗಳಲ್ಲಿ ಈತ ತನ್ನ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದ. ಕೆಲ ತಿಂಗಳ ಹಿಂದೆ ವಿಟ್ಲ ಕಸಬಾ ಗ್ರಾಮದ ಅಬ್ದುಲ್ ಕುಂಞ್ಞ ಎಂಬವರು ಈತನಿಂದ ೧೫ ಲಕ್ಷದ ಚೆಕ್ ಬೌನ್ಸ್ ಆಗಿತ್ತು ಎಂದು ಆರೋಪಿಸಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಹಲವು ಮಂದಿ ಈತನಿಗೆ ಲಕ್ಷಗಟ್ಟಲೆ ಹಣ ನೀಡಿ ಮೋಸ ಹೋಗಿದ್ದರು. ಇತ್ತೀಚೆಗೆಷ್ಟೇ ಈತನಿಂದ ೪ ಲಕ್ಷ ರೂ. ಮೋಸ ಹೋದ ಕಲ್ಲಡ್ಕದ ತಾಹಿರಾ ಎಂಬಾಕೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ವಿಟ್ಲ ಪೊಲೀಸ್ ಉಪನಿರೀಕ್ಷಕ ಎ.ಕೆ.ರಕ್ಷಿತ್ ನೇತೃತ್ವದ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕೇಪು ಗ್ರಾಮದ ಮೈರ ಎಂಬಲ್ಲಿ ಈತನ ಕಾರು ಅಪಘಾತಕ್ಕೀಡಾಗಿ ಗಂಭೀರ ವಾಗಿ ಗಾಯಗೊಂಡು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಬಳಿಕ ಈತ ಭೂಗತನಾಗಿದ್ದ. ಆತ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಗುಮಾನಿಯು ಕೂಡ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಗುರುವಾರ ರಾತ್ರಿ ಆತನನ್ನು ಕುದ್ದುಪದವು ಎಂಬಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಮನಪಾದಲ್ಲಿ ಜಟಾಪಟಿ

Posted by JAYAKIRANA Kirana on | 0 comments | Leave a comment...









ಮಂಗಳೂರು: ನೂತನ ಮೇಯರ್‌ಗೆ ಬಜೆಟ್ ಮಂಡಿಸುವ ಕಾತರ, ಅವಕಾಶ ಕಳೆದುಕೊಂಡಿದ್ದ ಬಿಜೆಪಿಗರಿಗೆ ಬಜೆಟ್ ತಡೆಯುವ ಅವಸರ, ಪಕ್ಷೇತರರಿಗೆ ಪರಿಷತ್ ನಲ್ಲೇನು ನಡೆಯುತ್ತದೆ ಎನ್ನುವ ಕುತೂಹಲ. ಇವೆಲ್ಲದರ ನಡುವೆ ಗಲಾಟೆಯೋ ಗಲಾಟೆ.
ಇದು ಮಂಗಳೂರು ಮಹಾ ನಗರ ಪಾಲಿಕೆಯ ೨೦೧೨-೧೩ನೇ ಸಾಲಿನ ಬಜೆಟ್ ಮಂಡನೆ ವೇಳೆ ಪರಿಷತ್‌ನಲ್ಲಿ ಕಂಡು ಬಂದ ಚಿತ್ರಣ.
ನಿಗದಿತ ಸಮಯದಲ್ಲಿ ಕಲಾಪ ಆರಂಭಗೊಂಡು ಮೇಯರ್ ಅವರು ಬಜೆಟ್ ಮಂಡನೆಗೆ ಮುಂದಾದಾಗ, ಮೇಯರ್ ಆಯ್ಕೆ ಪ್ರಕ್ರಿಯೆ ಬಗ್ಗೆ ನಾವು ಸಲ್ಲಿಸಿದ ಆಕ್ಷೇಪ ವಿಚಾರಣಾ ಹಂತದಲ್ಲಿರುವ ಕಾರಣ, ಈಗಿನ ಮೇಯರ್ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ. ಇದನ್ನು ನಾವು ಒಪ್ಪುವುದಿಲ್ಲ ಎಂದು ಬಿಜೆಪಿ ಕಾರ್ಪೋರೇಟರುಗಳು ಗದ್ದಲ ಎಬ್ಬಿಸಿದರು. ಹೀಗಾಗಿ ಬಜೆಟ್ ಮಂಡನೆ ಮಾಡಲು ಅಸಾಧ್ಯವಾದ ಕಾರಣ ಮೇಯರ್ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿದರು. ಬಳಿಕ ಮತ್ತೆ ಸಭೆ ಆರಂಭಗೊಂಡಾಗ ಕಾರ್ಪೊರೇಟರ್ ಅಬ್ದುಲ್ ಅಜೀಜ್ ಅವರು ಮಾತನಾಡಲೆಂದು ಎದ್ದು ನಿಂತಾಗ, ತಿಲಕ್‌ರಾಜ್ ಅವರು ಅಬ್ದುಲ್ ಅಜೀಜ್ ಅವರ ಕಡೆ ಕೈ ತೋರಿಸಿ ‘ನಿಮ್ಮದೇನು ಮಾತು ಸುಮ್ಮನೆ ಕುಳಿತುಕೊಳ್ಳಿ ಎಂದು ಸ್ವರ ಏರಿಸಿ ಹೇಳಿದ್ದರು. ಇದಕ್ಕೆ ಅಬ್ದುಲ್ ಅಜೀಜ್ ಅವರು ಆಕ್ಷೇಪ ಹಾಕಿದ್ದು ‘ನನ್ನನ್ನು ಸುಮ್ಮನಿರುವಂತೆ ಹೇಳಲು ನೀನು ಯಾರು? ಎಂದು ಪ್ರಶ್ನಿ ಸಿದ್ದರು. ಈ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಒಂದು ಹಂತದಲ್ಲಿ ತಾವು ಪರಿಷತ್‌ನಲ್ಲಿದ್ದೇವೆ ಎನ್ನುವುದನ್ನು ಮರೆತ ಇಬ್ಬರೂ ಹೊಡೆದಾಡುವ ಹಂತಕ್ಕೆ ಬಂದಿದ್ದರು. ಕೊನೆಗೆ ಎರಡೂ ಕಡೆಯವರ ಮಧ್ಯ ಪ್ರವೇಶದಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು. ಈ ಘಟನೆಗೆ ಸಾಕ್ಷಿಯಾಗಿದ್ದ ಮೇಯರ್ ಹಾಗೂ ಆಯುಕ್ತರು ಮೂಕ ಪ್ರೇಕ್ಷಕರಾಗಿಯೇ ಕುಳಿತಿದ್ದರು.
ಅಜೀಜ್ ಮತ್ತು ತಿಲಕ್ ಅವರ ಜಗಳ ವಿಶ್ರಾಂತಿಗೆ ಬರುತ್ತಿರುವಂತೆ ಮೇಯರ್ ತಾನು ೨೦೧೨-೨೦೧೩ನೇ ಸಾಲಿನ ಬಜೆಟ್ ಮಂಡಿಸುವುದಾಗಿ ಘೋಷಣೆ ಮಾಡುತ್ತಿರುವಂತೆ ಬಿಜೆಪಿಗರು ಧಿಕ್ಕಾರ ಎಂದು ಬೊಬ್ಬಿಡುತ್ತಾ ಸಭಾತ್ಯಾಗ ಮಾಡಿದರು. ಆದರೂ ಮೇಯರ್ ಬಜೆಟ್ ಮಂಡನೆ ಮಾಡಿ ಚರ್ಚೆಗೆ ಅವಕಾಶವನ್ನು ನೀಡಿದರು. ಚರ್ಚೆ ವೇಳೆ ಮಾತನಾಡಿದ ಪಕ್ಷೇತರ ಕಾರ್ಪೊರೇಟರ್ ಮರಿಯಮ್ಮ ಥೋಮಸ್, ಇಂದಿನ ಬಜೆಟ್ ಬಿಜೆಪಿಗರ ಮಗುವನ್ನು ಕಾಂಗ್ರೆಸ್ ಪೋಷಿಸುತ್ತಿರುವಂತಿದೆ. ಇಲ್ಲಿ ಕಾಂಗ್ರೆಸಿಗರ ಸ್ವಂತಿಕೆ ಇಲ್ಲ ಎಂದು ನೇರ ಆರೋಪವನ್ನು ಮಾಡಿದರು. ಇಂದಿನ ಬಜೆಟ್‌ಗೆ ಬಿಜೆಪಿಗರಿಗೆ ನಿಲ್ಲಬಹುದಿತ್ತು, ಯಾಕೆಂದರೆ ಇದು ಅವರು ಹುಟ್ಟಿಸಿದ ಮಗು ಎಂದು ಲೇವಡಿ ಮಾಡಿದರು. ಕಾನೂನು ಎನ್ನುವುದು ಬಿಜೆಪಿಗರ ಮೇಜಾರಿಟಿಯಲ್ಲಿಲ್ಲ ಬದಲಾಗಿ ಕಾನೂನಿನೊಳಗಿದೆ. ಅದನ್ನು ಮೊದಲು ಅವರು ತಿಳಿದುಕೊಳ್ಳ ಬೇಕಿದೆ ಎಂದು ಮರಿಯಮ್ಮ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಹರೀಶ್ ಕೆ. ಇವರು ಮೇಯರ್ ಕಮಲವನ್ನು ತಿರುಚಿ ಕೈ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದಿನ ಬಜೆಟನ್ನು ಮುಂದುವರಿಸಲಾಗಿದೆಯೇ ಹೊರತು ಅದರಲ್ಲಿ ವಿಶೇಷವನ್ನು ನೀಡಿಲ್ಲ ಎಂದರು. ಅಲ್ಲದೆ ಹಲವಾರು ಸಂಶಯಗಳು ಈ ಬಜೆಟ್‌ನಲ್ಲಿ ಉಳಿದಿದೆ ಎಂದರು. ಇದರ ಜೊತೆಗೆ ಕಾಂಗ್ರೆಸಿಗರೂ ಕೆಲ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸುವ ಬಗ್ಗೆ ಸಲಹೆ ನೀಡಿದರು. ಇದೆಲ್ಲವನ್ನೂ ಸ್ವೀಕರಿಸುವುದಾಗಿ ಮೇಯರ್ ತಿಳಿಸುವ ಮೂಲಕ ಬೇರಾವುದೇ ಗೊಂದಲ ನಡೆಯದೇ ಬಜೆಟ್ ಮಂಡಿಸಲ್ಪಟ್ಟಿತು.
ತಮ್ಮದೇ ಒಳ ಜಗಳದಿಂದ ಮೇಯರ್ ಸ್ಥಾನದ ಅವಕಾಶವನ್ನು ಕಳೆದುಕೊಂಡಿದ್ದ ಬಿಜೆಪಿಗರು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಗೆ ಗೈರು ಹಾಜರಾಗಿ ವಿನಾ ಕಾರಣ ಸಭೆ ಮುಂದೂಡಲು ಕಾರಣರಾಗಿದ್ದರೇ ಈ ಬಾರಿ ಬಜೆಟ್ ಮಂಡನೆಗೂ ವಿಘ್ನ ತರುವ ಹುನ್ನಾರ ನಡೆಸಿದರು. ಬಜೆಟ್ ಮಂಡಿಸಲು ತಮಗೆ ಅವಕಾಶ ಇರುವ ಬಗ್ಗೆ ತಿಳಿದು ತಮ್ಮದೇ ಬಜೆಟನ್ನು ರೂಪಿಸಿದ್ದರೂ ಅದನ್ನು ಮಂಡಿಸುವಲ್ಲಿ ಮತ್ತೇ ಪ್ರತಿಷ್ಠೆಯ ಪ್ರಶ್ನೆಗೆ ಬಿದ್ದ ಬಿಜೆಪಿಗರು ತಮಗಿದ್ದ ಮತ್ತೊಂದು ಅವಕಾಶವನ್ನೂ ಕಳೆದು ಕೊಂಡಿದ್ದರು. ಹೀಗಾಗಿ ಬಿಜೆಪಿಗರು ರೂಪಿಸಿದ ಬಜೆಟನ್ನು ಮೇಯರ್ ಮಂಡಿಸುವಂತಾಯಿತು.

ಬಜರಂಗದಳದಿಂದ ಕಸಾಯಿಖಾನೆಗೆ ಟೆಂಡರ್

Posted by JAYAKIRANA Kirana on | 0 comments | Leave a comment...





ಕಾನೂನು ಉಲ್ಲಂಘಿಸಿದ ಮನಪಾ
ಮಂಗಳೂರು: ಕುದ್ರೋಳಿ ಕಸಾಯಿಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ತಡೆಯಾಜ್ಞೆಯನ್ನು ನೀಡಿ ದ್ದರೂ ನಿಯಮ ಉಲ್ಲಂಘಿಸಿರುವ ಮನಪಾ ಮೂರು ತಿಂಗಳ ಅವಧಿಗೆ ಟೆಂಡರ್ ಕರೆದಿದ್ದು, ಬಜರಂಗದಳವೂ ಬಿಡ್‌ಗೆ ಅರ್ಜಿ ಸಲ್ಲಿಸಿದೆ. ಹೀಗಾಗಿ ಮತ್ತೊಮ್ಮೆ ಕೋಮು ಸೌಹಾರ್ದ ಕದಡುವ ಬಗ್ಗೆ ಆತಂಕ ಎದುರಾಗಿದೆ. ೨೦೦೯ರಿಂದ ಟೆಂಡರ್ ಕರೆಯದೇ ಉಳಿದಿದ್ದ ಕಸಾಯಿಖಾನೆಯನ್ನು ಇದೀಗ ಕೇವಲ ಮೂರು ತಿಂಗಳ ಅವ ಧಿಗೆ ಟೆಂಡರ್ ಕರೆಯುವ ಔಚಿತ್ಯದ ಬಗ್ಗೆ ಆರೋಗ್ಯಾಧಿಕಾರಿ ಬಳಿ ವಿಚಾರಿ ಸಿದರೆ ‘ಇದು ನಮ್ಮ ನಡುವಿನ ಅಡ್ಜೆಸ್ಟ್ ಮೆಂಟ್ ಎನ್ನುತ್ತಿದ್ದು. ಈ ಅಡ್ಜೆಸ್ಟ್ ಮೆಂಟ್ ಮತ್ತೊಂದು ಶಂಕೆಯನ್ನು ಹುಟ್ಟು ಹಾಕಿದೆ. ನಿರ್ವಹಣೆ ಮತ್ತು ಶುಚಿತ್ವದ ರೀತಿಯಲ್ಲಿ ಲೋಪ ಇರುವ ಕಾರಣದಿಂದ ಮತ್ತು ಸ್ಥಳೀಯವಾಗಿ ಕುದ್ರೋಳಿ ಕಸಾಯಿಖಾನೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ೨೦೦೬ರಲ್ಲಿ ಕುದ್ರೋಳಿ ಕಸಾಯಿಖಾನೆಗೆ ಅನುಮತಿ ತಡೆ ಹಿಡಿದ ಮಾಲಿನ್ಯ ನಿಯಂತ್ರಣ ಮಂಡಳಿ, ಮುಂದೆ ಪರವಾನಿಗೆ ನೀಡ ದಂತೆ ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು. ಹೀಗಾಗಿ ೨೦೦೬ರಲ್ಲಿ ಕುದ್ರೋಳಿ ಕಸಾ ಯಿಖಾನೆಯ ಪರವಾನಿಗೆ ರದ್ದಾಗಿತ್ತು. ಎರಡು ವರ್ಷ ಇಲ್ಲಿ ಅಧಿಕೃತವಾಗಿ ಕಸಾಯಿಖಾನೆ ನಡೆಯದ ಕಾರಣ ಆ ಬಳಿಕ ಕುದ್ರೋಳಿ ಕಸಾಯಿಖಾನೆಗೆ ಅನುಮತಿ ನೀಡುವಂತೆ ಮುಸ್ಲಿಮರಿಂದ ಒತ್ತಾಯ ಬಂದಿತ್ತು. ಅಲ್ಲದೆ ಇದನ್ನು ನಿರ್ವಹಣೆ ಮಾಡುವವರು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ವಾಗ್ದಾನ ಮಾಡಿದ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಸಾಯಿಖಾನೆಗೆ ಅನುಮತಿ ನೀಡಿತ್ತು. ಆದರೆ ಮತ್ತೆ ಹಿಂದಿನ ಸಮಸ್ಯೆಯೇ ಮುಂದುವರಿದ ಕಾರಣ ೨೦೦೯ ರಲ್ಲಿ ಕುದ್ರೋಳಿ ಕಸಾಯಿಖಾನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ತಡೆಯಾಜ್ಞೆ ನೀಡಿದ್ದಲ್ಲದೆ ಮಂಗಳೂರು ಮಹಾನಗರ ಪಾಲಿಕೆಗೂ ಈ ಬಗ್ಗೆ ನಿರ್ದೇಶನ ನೀಡಿತ್ತು. ಹೀಗಾಗಿ ಅಂದಿನಿಂದ ಈವರೆಗೆ ಯಾವುದೋ ಒಪ್ಪಂದ ಮಾದರಿಯಲ್ಲಿ ಇಲ್ಲಿ ಕಸಾಯಿಖಾನೆ ನಡೆಯುತ್ತಾ ಬಂದಿತ್ತು. ಇಲ್ಲಿನ ಕಸಾಯಿಖಾನೆ ಬಗ್ಗೆ ಈ ಹಿಂದಿನಿಂದ ಇದ್ದ ದೂರುಗಳು ನಿವಾರಣೆ ಆಗದ ಕಾರಣ ಮಾಲಿನ್ಯ ನಿಯಂತ್ರಣ ಮಂಡಳಿ ಈವರೆಗೆ ಅನುಮತಿಯನ್ನೂ ನೀಡಿರಲಿಲ್ಲ. ಹೀಗಾಗಿ ಕಸಾಯಿಖಾನೆಯನ್ನು ಪಚ್ಚನಾಡಿಗೆ ವರ್ಗಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿ ಅದಕ್ಕಾಗಿ ಜಾಗವನ್ನು ಕಾಯ್ದಿರಿಸಲಾಗಿತ್ತು. ಆದರೆ ಪಚ್ಚನಾಡಿಯ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದೂ ಸಾಧ್ಯವಾಗಿರಲಿಲ್ಲ. ಈ ನಡುವೆ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ತಡೆಯಾಜ್ಞೆ ಇರುವಾಗಲೂ ಮಂಗಳೂರು ಮಹಾನಗರ ಪಾಲಿಕೆ ಏಕಾಏಕಿಯಾಗಿ ಕುದ್ರೋಳಿ ಕಸಾಯಿಖಾನೆಗೆ ಟೆಂಡರ್ ಕರೆಯಲು ಮುಂದಾಗಿದೆ ಈ ಬಗ್ಗೆ ಜಾಹೀರಾತನ್ನೂ ನೀಡಿದೆ. ಇಂದು ಮಧ್ಯಾಹ್ನ ಟೆಂಡರ್ ಅರ್ಜಿ ಸಲ್ಲಿ ಸಲು ಅವಕಾಶವಿದ್ದು ಸಂಜೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಬಜರಂಗದಳವೂ ಪ್ರದೀಪ್ ಎಂಬವರ ಹೆಸರಿನಲ್ಲಿ ಟೆಂಡರ್ ಅರ್ಜಿ ಸಲ್ಲಿಸಲಿದೆ.
ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಗೆ ಮಾತ್ರ ಟೆಂಡರ್ ಕರೆಯಲಾಗಿದೆ ಇಷ್ಟು ಸಣ್ಣ ಅವಧಿಗೆ ಟೆಂಡರ್ ಕರೆಯುವ ಅವಶ್ಯಕತೆಯ ಬಗ್ಗೆಯೂ ಇದೀಗ ಪ್ರಶ್ನೆಗಳು ಎದ್ದಿವೆ. ಇತ್ತ ಬಿಡ್ಡ್‌ಗೆ ಅರ್ಜಿ ಸಲ್ಲಿಸಿರುವ ಬಜರಂಗದಳ ದೂರ ರ್ಜಿಯೊಂದನ್ನು ಸಲ್ಲಿಸಿದ್ದು, ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ತಡೆಯಾಜ್ಞೆ ಇದ್ದರೂ ಕುದ್ರೋಳಿ ಕಸಾಯಿಖಾನೆಗೆ ಟೆಂಡರ್ ಕರೆದಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಅದೇ ಕಸಾಯಿಖಾನೆಯನ್ನು ಪಚ್ಚನಾಡಿಗೆ ಸ್ಥಳಾಂತರಿಸುವ ಬಗ್ಗೆ ಆಕ್ಷೇಪ ಇಲ್ಲ ಎಂದು ಬಜರಂಗದಳ ತಿಳಿಸಿದೆ. ಬಜರಂಗದಳವೂ ಟೆಂಡರ್ ಅರ್ಜಿ ಸಲ್ಲಿಸಿರುವ ಕಾರಣ ಟೆಂಡರ್ ಕುತೂಹಲದಿಂದ ಕೂಡಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ರಘುಪತಿ ಭಟ್ ತನಿಖೆಗೆ ಕಾಂಗ್ರೆಸ್ ನಿಯೋಗ ಮನವಿ

Posted by JAYAKIRANA Kirana on | 0 comments | Leave a comment...


ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ನಡೆದ ರೇವ್‌ಪಾರ್ಟಿಯಲ್ಲಿ ಭಾಗಿಯಾದ ಶಾಸಕ ಕೆ.ರಘುಪತಿ ಭಟ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ಮುಖಂಡರ ನಿಯೋಗ ಗುರುವಾರ ತನಿಖಾಧಿಕಾರಿ ಜಯಂತಿ ಅವರನ್ನು ಭೇಟಿಯಾಗಿ ಸಲ್ಲಿಸಿದ ದೂರಿನಲ್ಲಿ ಒತ್ತಾಯಿಸಿದೆ.
 ಕಾಂಗ್ರೆಸ್ ಮುಖಂಡರುಗಳಾದ ಯತೀಶ್ ಕರ್ಕೇರ, ವೆರೋನಿಕಾ ಕರ್ನೇನಿಯೋ, ಡಾ.ಸುನಿತಾ ಶೆಟ್ಟಿ,     ದಯಾನಂದ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸುಭಾಶ್ ಕೊಳ, ರಮೇಶ್ ಕಾಂಚನ್ ಮೊದಲಾದವರನ್ನು ಒಳಗೊಂಡ ನಿಯೋಗ, ಗುರುವಾರ ಸಂಜೆ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಜಯಂತಿ ಅವರನ್ನು ಭೇಟಿಯಾಗಿ ರೇವ್‌ಪಾರ್ಟಿಯ ವೀಡಿಯೋ ದಾಖಲಾತಿ ಇರುವ ಸಿಡಿ ಸಹಿತವಾದ ಮನವಿಯನ್ನು ಸಲ್ಲಿಸಿದರು.
 ರೇವ್‌ಪಾರ್ಟಿ ನಡೆದ ಮೂರು ದಿನಗಳ ಕಾಲವೂ ಶಾಸಕ ರಘುಪತಿ ಭಟ್ ಅವರು ಸೈಂಟ್ ಮೇರೀಸ್ ಐಲ್ಯಾಂಡ್‌ಗೆ ಭೇಟಿ ಕೊಟ್ಟಿದ್ದಾರೆ. ಮಾತ್ರವಲ್ಲ, ಅಲ್ಲಿನ ಎಲ್ಲಾ ಉಸ್ತುವಾರಿಯನ್ನು ನೋಡಿಕೊಂಡಿದ್ದಾರೆ. ಆದುದರಿಂದ ಶಾಸಕ ಭಟ್ ಅವರನ್ನು ತನಿಖೆಗೆ ಗುರಿಪಡಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
 ರೇವ್‌ಪಾರ್ಟಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಂದ ೧,೫೦೦ ರೂ. ಮತ್ತು ಇತರರಿಂದ ೨,೫೦೦ ರೂ.ಗಳಂತೆ ಪ್ರವೇಶ ಶುಲ್ಕ ಪಡೆಯಲಾಗಿದೆ. ಮದ್ಯ, ಅಫೀಮು ಸಹಿತ ವಿವಿಧ ಅಮಲು ಪದಾರ್ಥಗಳನ್ನು ಬೇಕಾಬಿಟ್ಟಿ ವಿತರಿಸಲಾಗಿದೆ. ಕಾಮಕ್ರೀಡೆ ನಡೆದಿದೆ. ಇದಕ್ಕೆಲ್ಲವೂ ಶಾಸಕ ಭಟ್ ಅವರೇ ನೇರ ಹೊಣೆಗಾರರಾಗಿದ್ದಾರೆ. ಹಾಗಾಗಿ ಇದಕ್ಕೆ ಯಾವುದೇ ಅಧಿಕಾರಿಗಳನ್ನು ಬಲಿಪಶು ಮಾಡಬಾರದೆಂದು ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಶಾಸಕರು ಅಧಿಕಾರ ದುರುಪಯೋಗಪಡಿಸಿಕೊಂಡು ರೇವ್‌ಪಾರ್ಟಿ ನಡೆಸಲಾಗಿದೆ. ಇದಕ್ಕೆ ಯಾವುದೇ ಪೊಲೀಸ್ ಠಾಣೆಗಳಿಂದ ಪರವಾನಿಗೆ ಪಡೆದಿರಲಿಲ್ಲವೆಂದು ದೂರಿನಲ್ಲಿ ವಿವರಿಸಲಾಗಿದೆ.
 ರೇವ್‌ಪಾರ್ಟಿ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸರಕಾರದಿಂದ ನಿಯುಕ್ತಿಗೊಂಡು ಬುಧವಾರದಂದು ಬೆಳಗ್ಗೆ ಉಡುಪಿಗೆ ಆಗಮಿಸಿದ್ದ ಮೈಸೂರು ವಿಭಾಗದ ಆಯುಕ್ತೆ ಜಯಂತಿ ಅವರು ಮೊದಲಿಗೆ ಸೈಂಟ್ ಮೇರೀಸ್ ಐಲ್ಯಾಂಡ್‌ಗೆ ಭೇಟಿ ನೀಡಿದ್ದರು. ರೇವ್‌ಪಾರ್ಟಿ ನಡೆದು ಒಂದೂವರೆ ತಿಂಗಳು ಕಳೆದ ಬಳಿಕ ತನಿಖಾಧಿಕಾರಿಯವರು ಐಲ್ಯಾಂಡ್‌ಗೆ ಭೇಟಿ ನೀಡಿದ ಕಾರಣ ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಜಯಂತಿ ಅವರು ವಿಫಲರಾದರು.  ರೇವ್‌ಪಾರ್ಟಿ ಕೊನೆಗೊಂಡ ಬೆನ್ನಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಐಲ್ಯಾಂಡ್‌ನಲ್ಲಿ ಶುದ್ದೀಕರಣ ನಡೆಸಿದ್ದರಲ್ಲದೆ, ಈ ಸಂದರ್ಭದಲ್ಲಿ ಮದ್ಯದ ಬಾಟಲಿಗಳನ್ನು, ಕಾಂಡೋಮ್ ಇತ್ಯಾದಿಗಳನ್ನು ಸಂಗ್ರಹಿಸಿ ಬೆಂಕಿಕೊಟ್ಟು ನಾಶ ಮಾಡಿದ್ದರು. ಐಲ್ಯಾಂಡ್‌ಗೆ ತನಿಖೆಗಾಗಿ ಆಗಮಿಸಿದ ಜಯಂತಿ ಅವರು ಪ್ರವಾಸ ಬಂದವರಂತೆ ಚಿಪ್ಪುಗಳನ್ನು ಸಂಗ್ರಹಿಸಿದ್ದು ಬಿಟ್ಟರೆ ಸಾಧಿಸಿದ್ದು ಶೂನ್ಯವಾಗಿತ್ತು.  ರೇವ್‌ಪಾರ್ಟಿಯಲ್ಲಿ ನಡೆದ ಎಲ್ಲಾ ರೀತಿಯ ಅನೈತಿಕ ಚಟುವಟಿಕೆಗಳಿಗೆ ರಕ್ಷಣೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬೋರಲಿಂಗಯ್ಯ, ಸರ್ಕಲ್‌ಇನ್ಸ್‌ಪೆಕ್ಟರ್ ಗಿರೀಶ್, ಮಲ್ಪೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಅಬಕಾರಿ ಇಲಾಖೆಯ ಅಧಿಕಾರಿಗಳನ್ನೇ ತನ್ನೊಂದಿಗೆ ತನಿಖೆಗೆ ಕರೆದೊಯ್ದ ಜಯಂತಿಯವರು, ಇವರಿಂದಲೇ ರೇವ್‌ಪಾರ್ಟಿಯಲ್ಲಿ ಅನೈತಿಕವಾದುದೇನೂ ನಡೆದಿಲ್ಲ ಎಂಬ ಹೇಳಿಕೆಗಳನ್ನು ಪಡೆದುಕೊಂಡು ಕೈತೊಳೆದುಕೊಂಡರು.
 ತನಿಖೆಗಾಗಿ ತನಿಖಾಧಿಕಾರಿ ಉಡುಪಿಗೆ ಭೇಟಿ ಕೊಡಲಿರುವ ವಿಷಯವನ್ನು ಸಾಕಷ್ಟು ಮುಂಚಿತವಾಗಿ ಮಾಧ್ಯಮಗಳ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಅವಕಾಶವಿತ್ತಾದರೂ, ಈ ಕೆಲಸವನ್ನು ಮಾಡದೆ ಅಂತಿಮ ಘಳಿಗೆಯಲ್ಲಿ ಇದನ್ನು ಬಹಿರಂಗಪಡಿಸಿ ಸಾರ್ವಜನಿಕರು ಪೂರ್ವ ಸಿದ್ದತೆ ಮಾಡಿಕೊಂಡು ಹೇಳಿಕೆ ಕೊಡಲು ಅನುವಾಗದಂತೆ ಸರಕಾರ ನೋಡಿಕೊಂಡದ್ದು ಇತ್ಯಾದಿಗಳನ್ನೆಲ್ಲವನ್ನೂ ಗಮನಿಸಿದರೆ, ರೇವ್‌ಪಾರ್ಟಿ ಪ್ರಕರಣದ ತನಿಖೆ ಎಂಬುದನ್ನು ಸರಕಾರ ಕಾಟಾಚಾರಕ್ಕೆ ಎಂಬಂತೆ ಮಾಡಿದೆ ಎಂಬುದನ್ನು ಯಾರು ಬೇಕಾದರೂ ಹೇಳಬಹುದು, ಹಾಗಿತ್ತು ತನಿಖೆ ಪ್ರಹಸನ..

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)