ಮಂಗಳೂರು: ತುಳು ನಾಟಕ ರಂಗದ ‘ತೆಲಿಕೆದ ಬೊಳ್ಳಿ ದೇವ ದಾಸ್ ಕಾಪಿಕಾಡ್ ಹಾಗೂ ‘ಕುಸೇಲ್ದರಸೆ ನವೀನ್ ಡಿ ಪಡೀಲ್ ಮತ್ತೆ ಒಂದಾಗಿದ್ದಾರೆ. ೮೦ರ ದಶಕದ ಹಿಟ್ ನಾಟಕ ‘ಗಂಟೇತಾಂಡ್ ಬದಲಾವಣೆಯೊಂದಿಗೆ ‘ತೆಲಿಕೆದ ಬೊಳ್ಳಿ ಆಗಿ ತುಳುವರನ್ನು ರಂಜಿ ಸಲು ಬರುತ್ತಿದೆ. ಹಿಂದೆ ಗಂಟೇತಾಂಡ್ ನಾಟಕದಲ್ಲಿ ಒಂದಾಗಿ ನಟಿಸಿದ್ದ ಜಿಲ್ಲೆಯ ಖ್ಯಾತ ಕಲಾವಿದರು ಮತ್ತೆ ಹಿರಿತೆರೆಯಲ್ಲಿ ಜತೆಯಾಗಿರುವುದು ಚಿತ್ರದ ವಿಶೇಷವೂ ಹೌದು.
ದೇವದಾಸ್ ಕಾಪಿಕಾಡ್ ಮತ್ತು ನವೀನ್ ಡಿ ಪಡೀಲ್ ಜೋಡಿ ತುಳು ನಾಟಕರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಹಾಸ್ಯಜೋಡಿ ಯಾಗಿ ಜನಮನ ಗೆದ್ದಿದ್ದ ಜೋಡಿ ನಂತರದ ದಿನಗಳಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯದಿಂದಾಗಿ ಕೆಲವು ಕಾಲ ದೂರವಾಗಿದ್ದರು. ಆದರೆ ಇದೀಗ ‘ತೆಲಿಕೆದ ಬೊಳ್ಳಿ ಚಿತ್ರದ ಮೂಲಕ ಒಂದಾಗಿ ಕಾಣಿಸಿಕೊಂಡು ಸಿನಿಪ್ರಿಯರಿಗೆ ಹಾಸ್ಯ ರಸದೌತಣ ನೀಡಲು ತಯಾರಾಗಿದ್ದಾರೆ.
ನಗರದ ಹೊರವಲಯದ ವಾಮಂಜೂರಿನಲ್ಲಿ ಚಿತ್ರದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದ್ದು, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಪಾಲ್ಗೊಂಡಿದ್ದಾರೆ. ಕಾಪಿಕಾಡ್ ಜೊತೆ ತಮ್ಮ ಹಳಸಿದ ಸ್ನೇಹದ ಪುಟಗಳನ್ನು ಕಿತ್ತೊಗೆದಿರುವು ದಾಗಿ ಹೇಳಿರುವ ಪಡೀಲ್ ಅವರು, ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಕಾಪಿಕಾಡ್‌ರ ಜೊತೆಗಿನ ಒಡನಾಟ ಖುಷಿ ತಂದಿದೆ ಎಂದಿದ್ದಾರೆ.
ಹಿರಿಯ ಕಲಾವಿದರಾದ ಲಕ್ಷ್ಮಣ ಕುಮಾರ್ ಮಲ್ಲೂರು, ‘ವೀರ ಮದಕರಿ ಖ್ಯಾತಿಯ ಗೋಪಿನಾಥ್ ಭಟ್, ಡಿ.ಎಸ್.ಬೋಳೂರು, ದಿನೇಶ್ ಅತ್ತಾವರ್, ತಿಮ್ಮಪ್ಪ ಕುಲಾಲ್, ಸುಜಾತ ಶಕ್ತಿನಗರ, ಸುರೇಶ್ ಕುಲಾಲ್, ‘ಆಯೆ ಸುಬಗೆ ಖ್ಯಾತಿಯ ಸಂದೀಪ್ ಶೆಟ್ಟಿ, ಪ್ರದೀಪ್ ಆಳ್ವ, ಹರೀಶ್ ವಾಸು ಶೆಟ್ಟಿ ಮತ್ತಿತರರ ಜೊತೆಗೆ ಆಶ್ರಿತಾ ಶೆಟ್ಟಿ ಹಾಗೂ ವೈಶಾಲಿ ಶೆಟ್ಟಿ ನಾಯಕಿಯ ರಾಗಿ ನಟಿಸುತ್ತಿದ್ದಾರೆ. ಕಾಪಿಕಾಡ್ ಪುತ್ರ ಅರ್ಜುನ್ ಮೊದಲ ಬಾರಿ ನಾಯಕನಾಗಿ ಸಿನಿಮಾರಂಗಕ್ಕೆ ಎಂಟ್ರಿ ಪಡೆದಿದ್ದಾರೆ. ‘ಪಂಚಮವೇದ ಖ್ಯಾತಿಯ ಪಿ.ಹೆಚ್.ವಿಶ್ವನಾಥ್ ನಿರ್ದೇಶನ ಸಿನಿಮಾಕ್ಕೆ ಇರಲಿದ್ದು, ಸುಧೀರ್ ಕಾಮತ್ ಹಾಗೂ ಶರ್ಮಿಳಾ ದೇವದಾಸ್ ಕಾಪಿಕಾಡ್ ಸಿನಿಮಾ ನಿರ್ಮಾಣದ ಜಬಾವ್ದಾರಿ ಯನ್ನು ಹೊತ್ತಿದ್ದಾರೆ. ಆರ್.ಮಂಜು ನಾಥ್ ಕ್ಯಾಮೆರಾ ಹಿಡಿದಿದ್ದು, ಗುರುಕಿರಣ್ ಚಿತ್ರಕ್ಕೆ ಸಂಗೀತ ನೀಡಿ ದ್ದಾರೆ. ಮುಂದಿನ ಅಗಸ್ಟ್ ತಿಂಗಳ ಹೊತ್ತಿಗೆ ಸಿನಿಮಾ ಥಿಯೇಟರ್‌ಗೆ ಕಾಲಿಡಲಿದೆ.
ಒಂದು ತಿಂಗಳ ಕಾಲ ಬಂದಲೆ, ವಾಮಂಜೂರು, ಸಿದ್ಧಕಟ್ಟೆ ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದ್ದು ತುಳುಚಿತ್ರ ಪ್ರೇಮಿಗಳಿಗೆ ಹೊಸ ಪರಿಕಲ್ಪನೆಯ ಚಿತ್ರವನ್ನು ನೀಡಲಿ ದ್ದೇವೆ. ನವಿರಾದ ಪ್ರೇಮಕತೆಯೊಂ ದಿಗೆ ನೈಜ ಹಾಸ್ಯದ ಮನೋರಂಜನೆ ಯೊಂದಿಗೆ ಉತ್ತಮ ಸಂದೇಶವನ್ನು ಸಾರುವ ಕತೆ ‘ತೆಲಿಕೆದ ಬೊಳ್ಳಿ ಸಿನಿ ಮಾದಲ್ಲಿ ಮೂಡಿಬರಲಿದೆ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.
Tagged with
lnews
ಸುಳ್ಯ: ಪೇಟೆಗೆ ಬಂದಿದ್ದ ಯುವಕರ ಮೇಲೆ ಅಪರಿಚಿತರು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕನಕಮಜಲಿನಲ್ಲಿ ಗುರುವಾರ ಸಂಜೆ ನಡೆದಿದೆ.
ಕನಕಮಜಲು ಗ್ರಾಮದ ಅಕ್ಕಿಮಲೆ ನಿವಾಸಿಗಳಾದ ಶೇಖರ ಮತ್ತು ಗಿರಿಧರ ಎಂಬವರು ಪೇಟೆಗೆ ಬಂದು ಮನೆಗೆ ಹಿಂತಿರುಗುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಯಾರದು ಎಂದು ಇವರನ್ನು ಪ್ರಶ್ನಿಸಿದ್ದಾರೆ. ನೀವು ಯಾರು ಎಂದು ಇವರು ಅಪರಿಚಿತರನ್ನು ಮರು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಅವರು ತಮ್ಮ ಬಳಿ ಇದ್ದ ತಲವಾರಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಇವರು ಕೈಯಿಂದ ತಡೆದಿದ್ದು, ಕೈಗಳಿಗೆ ಗಾಯಗಳಾಗಿದೆ. ಘಟನೆ ಬಳಿಕ ಅಪರಿಚಿತರು ಬೈಕನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಗಾಯಾಳುಗಳು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೇ ಪರಿಸರದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಯುವಕರು ರಬ್ಬರ್ ಸ್ಕ್ರ್ಯಾಪ್ ಕಳವು ಮಾಡುವ ಕೃತ್ಯದಲ್ಲಿ ತೊಡಗಿದ್ದು, ಅವರೇ ಈ ಕೃತ್ಯ ಮಾಡಿರಬೇಕೆಂದು ಶಂಕಿಸಲಾಗಿದೆ.
ಹಲ್ಲೆ ನಡೆಸಿದ ಆರೋಪಿಗಳ ಫೋಟೊವನ್ನು ಹಲ್ಲೆಗೊಳ ಗಾದವರು ತಮ್ಮ ಮೊಬೈಲ್
ಮೂಲಕ ಕ್ಲಿಕ್ಕಿಸಿದ್ದು, ಇದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರಿಗೆ ನೆರವಾಗಲಿದೆ.
Tagged with
cnews,
feature
ಸುಳ್ಯ: ಜಮೀನು ವಿವಾದಕ್ಕೆ ಸಂಬಂಧಿಸಿ ಹಲ್ಲೆ ನಡೆದು ಇಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ಕಸಬಾ ಗ್ರಾಮದ ಓಡಬಾಯಿ ಎಂಬಲ್ಲಿ ಗುರುವಾರ ನಡೆದಿದೆ.
ಓಡಬಾಯಿ ಎಂಬಲ್ಲಿ ಅಬ್ದುಲ್ ರಹಿಮಾನ್(೨೩) ಎಂಬವರ ಜಮೀನಿನಲ್ಲಿ ಮೋಹನ್(೩೭) ಎಂಬವರು ಗ್ಯಾರೇಜ್‌ನ್ನು ನಡೆಸುತ್ತಿದ್ದು, ಆ ಜಮೀನನ್ನು ಕೇರಳದ ಸುಬಗನ್ ಮತ್ತು ಅವರ ಪತ್ನಿ ರಾಜಲಕ್ಷ್ಮಿ ಎಂಬವರಿಗೆ ಮಾರಾಟ ಮಾಡಿದ್ದರು. ಆದರೆ ಅಲ್ಲಿ ಗ್ಯಾರೇಜು ನಡೆಸುವವರು ಖಾಲಿ ಮಾಡದೇ ಇರುವುದರಿಂದ ಅವರು ಪೂರ್ತಿ ಹಣವನ್ನು ನೀಡಿರಲಿಲ್ಲ. ಗ್ಯಾರೇಜ್‌ನ್ನು ಖಾಲಿ ಮಾಡುವಂತೆ ಮೋಹನ್‌ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಅವರು ಖಾಲಿ ಮಾಡಿರಲಿಲ್ಲ.
ಈ ವಿಚಾರವಾಗಿ ಅವರೊಳಗೆ ಮಾತಿನ ಚಕಮಕಿ ಕೂಡಾ ನಡೆದಿತ್ತು ಎನ್ನಲಾಗಿದೆ.ಗುರುವಾರ ಹತ್ತಿರದ ಕ್ಯಾಂಟೀನ್‌ನಲ್ಲಿ ಚಹಾ ಕುಡಿಯುತ್ತಿದ್ದ ಅಬ್ದುಲ್ ರಹಿ ಮಾನ್‌ರನ್ನು ಮೋಹನ್ ಗ್ಯಾರೇಜಿಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಎನ್ನಲಾ ಗಿದೆ. ಗಾಯಗೊಂಡ ಅಬ್ದುಲ್ ರಹಿಮಾನ್ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಮೋಹನ್ ವಿರುದ್ಧ ದೂರು ನೀಡಿದ್ದಾರೆ. ಮೋಹನ್ ಕೂಡಾ ಆಸ್ಪತ್ರೆ ದಾಖಲಾಗಿ ತನ್ನ ಮೇಲೆ ಅಬ್ದುಲ್ ರೆಹಮಾನ್ ಹಲ್ಲೆ ನಡೆಸಿದ್ದಾಗಿ ದೂರು ನೀಡಿದ್ದಾರೆ.
Tagged with
cnews,
feature
ಮಹಿಳೆಯಿಂದ ವೇಶ್ಯಾವಾಟಿಕೆಗೆ ತಳ್ಳಲು ಯತ್ನ
ಉಡುಪಿ: ಮುಂಬೈಯಿಂದ ಉಡುಪಿಗೆ ಅಪಹರಿಸಿ ಕರೆತಂದ ೧೩ರ ಹರೆಯದ ಬಾಲಕಿಯನ್ನು ವೇಶ್ಯಾವಾ ಟಿಕೆಗೆ ದೂಡಲು ಯತ್ನಿಸಿದ ಮಹಿಳೆ ಸಹಿತ ಬಾಲಕಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿ ರುವ ಘಟನೆ ನಿನ್ನೆ ಸಂಜೆ ಏಳು ಗಂಟೆ ಹೊತ್ತಿಗೆ ಇಂದ್ರಾಳಿಯಲ್ಲಿ ಜರಗಿದೆ.
ಲಾಡ್ಜಿನಲ್ಲಿದ್ದ ಬಾಲಕಿ ಮಹಿಳೆ ಯಿಂದ ತಪ್ಪಿಸಿ ಇಂದ್ರಾಳಿ ಪೆಟ್ರೋಲ್ ಪಂಪ್ ಬಳಿ ರಸ್ತೆಬದಿಯಲ್ಲಿ ಸಂಶಯಾ ಸ್ಪದವಾಗಿ ಓಡುತ್ತಿದ್ದ ವೇಳೆ ಸಂಶಯ ಗೊಂಡ ಸಾರ್ವಜನಿಕರು ಬಾಲಕಿಯನ್ನು ಹಿಡಿದು ಪ್ರಶ್ನಿಸಿದಾಗ ವಿಷಯ ಬಹಿರಂ ಗಗೊಂಡಿದೆ. ತನ್ನನ್ನು ಪರಿಚಯದ ಆಂಟಿಯೊಬ್ಬರು ಮುಂಬೈಯಿಂದ ಇಲ್ಲಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಲು ಯತ್ನಿಸುತ್ತಿದ್ದರು. ಇದರಿಂದ ಹೆದರಿ ನಾನು ಅವರ ಕೈಯಿಂದ ತಪ್ಪಿಸ ಲೆತ್ನಿಸಿದೆ ಎಂದು ಹಿಂದಿ ಭಾಷೆಯಲ್ಲಿ ಅಲವತ್ತುಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರ ಸಂಖ್ಯೆ ಜಾಸ್ತಿಯಾಗುತ್ತಲೇ ಇತ್ತು. ಆ ಹೊತ್ತಿಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತಲೇ ಸ್ಥಳಕ್ಕೆ ಧಾವಿ ಸಿದ್ದರು. ಅಷ್ಟರಲ್ಲಿ ನೈಟಿ ಹಾಕಿದ ಹೆಂಗಸೊಬ್ಬಳು ಸ್ಥಳಕ್ಕೆ ಓಡಿಬರುತ್ತಿದ್ದು, ಪೊಲೀಸರನ್ನು ಕಾಣುತ್ತಿದ್ದಂತೆ ಆಕೆ ರೈಲ್ವೇ ಬ್ರಿಡ್ಜ್ ನಿಂದ ಕೆಳಗೆ ಹಾರಿ ರೈಲ್ವೇ ಟ್ಯ್ರಾಕಿನಲ್ಲಿ ಓಡಿ ಪರಾರಿಯಾಗಲು ಯತ್ನಿಸಿದ್ದಳು. ಸಾರ್ವಜನಿಕರು ಬೆನ್ನಟ್ಟಿ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ಮಣಿಪಾಲ ಪೊಲೀಸರು ಇಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾ ರಿಸಿದಾಗ ಬಾಲಕಿ ಮುಂಬೈ ಶಿವಾ ಜಿನಗರದ ಶ್ವೇತಾ(೧೩) ಎಂದು ಹೆಸರನ್ನು ಹೇಳಿದ್ದಾಳೆ. ಹಾಗೂ ಆಕೆಯನ್ನು ಕರೆತಂದಿರುವ ಆಂಟಿ ನವರತ್ನ(೩೮) ಎಂದು ಗುರುತಿಸಿದ್ದಾಳೆ.
ಮನೆ ಕೆಲಸದಲ್ಲಿಂದ ಕರೆತಂದಿದ್ದಳು
ಮುಂಬೈ ಶಿವಾಜಿನಗರದ ದಿ.ರಾಜಕುಮಾರ್ ಎಂಬವರ ಮಗಳು ಶ್ವೇತಾ. ತಂದೆ ತೀರಿಹೋದ ಬಳಿಕ ಬಡತನದಿಂದ ಕಂಗೆಟ್ಟಿದ್ದ ಕುಟುಂಬದ ಆಧಾರಕ್ಕಾಗಿ ಶ್ವೇತಾಳ ತಾಯಿ ಆಕೆ ಯನ್ನು ಮನೆ ಕೆಲಸಕ್ಕೆ ಸೇರಿಸಿದ್ದಳು. ಆ ಮನೆಗೆ ಭೇಟಿ ಕೊಡುತ್ತಿದ್ದ ನವರತ್ನ ಎಂಬಾಕೆ ಮನೆಮಾಲೀಕೆಯ ಪರಿಚಯಸ್ಥಳಾಗಿದ್ದಳು. ಬುಧವಾರದಂದು ಶ್ವೇತಾ ಕೆಲಸ ನಿರ್ವಹಿಸುತ್ತಿದ್ದ ಮನೆಗೆ ಭೇಟಿ ನೀಡಿದ್ದ ನವರತ್ನ ಮನೆ ಮಾಲಕಿಯೊಂದಿಗೆ ಶ್ವೇತಾಳನ್ನು ಸುತ್ತಾಡಿಸಿ ಕರೆದುಕೊಂಡು ಬರುತ್ತೇನೆಂದು ಹೇಳಿ ಅಪಹರಿಸಿದ್ದಳು. ಬಳಿಕ ಮುಂಬೈಯಿಂದ ಗುರುವಾರ ಬೆಳಿಗ್ಗೆ ಬಂದಿಳಿದ ನವರತ್ನ ಬಾಲಕಿ ಯೊಂದಿಗೆ ಮಣಿಪಾಲದಲ್ಲಿ ಲಾಡ್ಜ್‌ವೊಂದನ್ನು ಮಾಡಿ ನೆಲೆಸಿದ್ದರು. ಸಂಜೆಯಾಗುತ್ತಿದ್ದಂತೆ ಬಾಲಕಿ ಅಲ್ಲಿಂದ ತಪ್ಪಿಸಿದ್ದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಮಣಿಪಾಲ ಪೊಲೀಸರು ಬಾಲಕಿಯಿಂದ ಮಾಹಿತಿ ಕಲೆ ಹಾಕಿ ವಿಚಾರಣೆ ಮುಂದುವರಿಸಿದ್ದಾರೆ. ನವರತ್ನ ಬಾಲಕಿಯನ್ನಿರಿಸಿರುವ ಲಾಡ್ಜಿನಲ್ಲಿ ಇನ್ನಿಬ್ಬರು ಮಹಿಳೆಯರು ಇರುವ ಬಗ್ಗೆ ತಿಳಿದುಬಂದಿದೆ.
Tagged with
cnews,
feature
ಗಾಲೆ: ಸ್ಪಿನ್ನರ್ ರಂಗನಾ ಹೆರಾಥ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ೭೫ ರನ್‌ಗಳ ಸೋಲುಂಡಿದೆ.
ಗೆಲುವಿಗೆ ೩೪೦ ರನ್‌ಗಳ ಗೆಲುವಿನ ಗುರಿಯನ್ನು ಪಡೆದಿದ್ದ ಇಂಗ್ಲೆಂಡ್‌ನ ಆರು ವಿಕೆಟ್ ಕಬಳಿಸಿದ ಹೆರಾಥ್ ಪಂದ್ಯದಲ್ಲಿ ಒಟ್ಟು ೧೨ ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ನಾಲ್ಕನೇ ದಿನದ ಟೀ ವಿರಾಮದ ಸ್ವಲ್ಪ ಹೊತ್ತಿನಲ್ಲೇ ೨೬೪ ರನ್‌ಗಳಿಗೆ ಆಲೌಟ್ ಆಯಿತು.
ಇನ್ನೊಬ್ಬ ಸ್ಪಿನ್ನರ್ ಸೂರಜ್ ರಾಂಧಿವ್ ಎರಡು ಇನ್ನಿಂಗ್ಸ್‌ನಲ್ಲಿ ಒಟ್ಟು ಆರು ವಿಕೆಟ್ ಕಬಳಿಸಿ ಸರಿಯಾದ ಜತೆ ನೀಡಿದರು. ಎರಡು ಪಂದ್ಯಗಳ ಕಿರು ಸರಣಿಯಲ್ಲಿ ಲಂಕಾ ೧-೦ ಮುನ್ನಡೆ ಸಾಧಿಸಿದೆ. ಪ್ರವಾಸಿಗಳ ಪರವಾಗಿ ಜೋನಾಥನ್ ಟ್ರಾಟ್ ೧೧೨ ರನ್ ಸಿಡಿಸಿದರು. ಆದರೆ ಕೇವಲ ೧೨ ರನ್‌ಗಳಿಗೆ ಅಂತಿಮ ಐದು ವಿಕೆಟ್ ಕಳಕೊಂಡ ಇಂಗ್ಲೆಂಡ್ ನಿರಾಶೆ ಉಂಟುಮಾಡಿತು.
ಟ್ರಾಟ್ ೨೬೬ ಎಸೆತಗಳಲ್ಲಿ ೧೦ ಬೌಂಡರಿಯೊಂದಿಗೆ ತನ್ನ ಏಳನೇ ಶತಕ ಸಿಡಿಸಿ, ರಾಂಧಿವ್ ಎಸೆತದಲ್ಲಿ ದಿಲ್ಶಾನ್ ಹಿಡಿದ ಆಕರ್ಷಕ ಕ್ಯಾಚ್‌ಗೆ ಬಲಿಯಾದರು. ೪೧ ರನ್ ಮಾಡಿದ ಮ್ಯಾಟ್ ಪ್ರಿಯೊರ್ ಟ್ರಾಟ್‌ಗೆ ಸರಿಯಾದ ಜತೆ ನೀಡಿದರು. ಇವರಿಬ್ಬರು ಐದನೇ ವಿಕೆಟಿಗೆ ೮೧ ರನ್ ಪೇರಿಸಿದರು. ಆದರೆ ಇದರ ಬಳಿಕ ಲಂಕಾ ಬೌಲರ್‌ಗಳು ಪ್ರಾಬಲ್ಯ ಸಾಧಿಸಿ ಗೆಲುವನ್ನು ತಮ್ಮ ಕಡೆಗೆ ವಾಲಿಸಿಕೊಂಡರು.
Tagged with
tnews
ಮಂಗಳೂರು: ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ದಿ| ಮುಲ್ಕಿ ಸೋಮಪ್ಪ ಸುವರ್ಣ ಸ್ಮಾರಕ ಮಂಗ ಳೂರು ವಿ.ವಿ. ಅಂತರ್ ಸರಕಾರಿ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಹಾಗೂ ಅತಿಥೇಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ದ್ವಿತೀಯ ಸ್ಥಾನ ಗಳಿಸಿದೆ.
ಎನ್.ಐ.ಟಿ.ಕೆ ಮೈದಾನ ಇಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು ೧೪ ಕಾಲೇಜಿನ ತಂಡಗಳು ಭಾಗವಹಿಸಿ ದರು. ಅಂತಿಮ ಪಂದ್ಯಾಟದಲ್ಲಿ ಕೋಟ ಪಡುಕೆರೆ ತಂಡವು ೭ ವಿಕೆಟ್ ನಷ್ಟ ದೊಂದಿಗೆ ೪೭ ರನ್‌ಗಳನ್ನೂ, ಹಳೆ ಯಂಗಡಿ ತಂಡವು ೬ ವಿಕೆಟ್ ನಷ್ಟ ದೊಂದಿಗೆ ೩೫ ರನ್‌ಗಳನ್ನು ಗಳಿಸಿತು. ಸರಣಿ ಶ್ರೇಷ್ಟ್ರ ಆಟಗಾರನಾಗಿ ಹಳೆಯಂಗಡಿಯ ರೂಪೇಶ್‌ರವರು ಆಯ್ಕೆಯಾಗಿದ್ದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಎನ್.ಐ.ಟಿ.ಕೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಶಿವರಾಮ್, ಲಯನ್ಸ್ ವಲಯ ಅಧ್ಯಕ್ಷರಾದ ಚಂದ್ರ ಶೇಖರ್ ನಾನಿಲ್, ಕಾಲೇಜು ಅಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ಎಚ್.ವಸಂತ್ ಬೆರ್ನಾಡ್ ಭಾಗವಹಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಎಂ. ವಿಶ್ವನಾಥ್ ಭಟ್ ವಹಿಸಿದ್ದರು. ಉಪನ್ಯಾಸಕರಾದ ಜಗದೀಶ್ ಬಾಳ ಸ್ವಾಗತಿಸಿ ದೈಹಿಕ ಶಿಕ್ಷಣ ಬೋಧಕರಾದ ಪ್ರವೀಣ್ ಕುಮಾರ್ ವಂದಿಸಿದರು.
Tagged with
lnews,
tnews
ಬ್ರಿಡ್ಜ್‌ಟೌನ್: ವೆಸ್ಟ್‌ಇಂಡೀಸ್‌ನ ಕ್ರಿಕೆಟಿಗ ರಯಾನ್ ಹಿಂಡ್ಸ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಮೆಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾದ ಹಿಂಡ್ಸ್‌ನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ವಿಂಡೀಸ್ ಪರ ೧೫ ಟೆಸ್ಟ್ ಹಾಗೂ ೧೪ ಏಕದಿನ ಪಂದ್ಯಗಳನ್ನು ಆಡಿರುವ ಹಿಂಡ್ಸ್ ಕಳೆದ ತಿಂಗಳು ೨೮ರ ಹರೆಯದ ಮಹಿಳೆಯನ್ನು ಅತ್ಯಾಚಾರ ಮಾಡಿರು ವುದಾಗಿ ದೂರು ದಾಖಲಾಗಿದೆ. ಹಿಂಡ್ಸ್ ಬಾರ್ಬಡೋಸ್ ತಂಡದ ಕಪ್ತಾನನಾಗಿ ದ್ದರು. ಹಿಂಡ್ಸ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದು, ೭,೫೦೦ ಬಾರ್ಬ ಡೋಸ್ ಡಾಲರ್ ಮೊತ್ತದ ಜಾಮೀನಿ ನೊಂದಿಗೆ ಬಿಡುಗಡೆ ಹೊಂದಿದ್ದಾರೆ.
Tagged with
tnews
ನವದೆಹಲಿ: ನಾನು ಕ್ರಿಕೆಟ್ ಆಡಲು ಸಚಿನ್ ತೆಂಡೂಲ್ಕರ್ ಪ್ರಮುಖ ಕಾರಣ ಎಂದು ಟೀಂ ಇಂಡಿಯಾದ ಉದ ಯೋನ್ಮುಖ ಆಟಗಾರ ವಿರಾಟ್ ಕೊಹ್ಲಿ ಹೇಳಿದ್ದು, ಶತಕಗಳ ಶತಕ ಬಾರಿಸಿದ ಮಾಸ್ಟರ್ ಬ್ಲಾಸ್ಟರ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಆಡಳಿತ ಸಚಿನ್‌ರನ್ನು ಸನ್ಮಾನಿಸಲು ಆಯೋಜಿ ಸಿದ್ದ ಕಾರ‍್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ಬಾಲ್ಯದಲ್ಲಿಯೇ ನಾನು ಸಚಿನ್ ಆಟಕ್ಕೆ ಮಾರುಹೋಗಿದ್ದು, ಅವರಂತೆ ಆಗಲು ಬಯಸಿದ್ದೆ. ನಾನು ಕ್ರಿಕೆಟ್ ಆಡಲು ಪ್ರಮುಖ ಕಾರಣವೇ ಅವರು. ನಾನಷ್ಟೇ ಅಲ್ಲ, ಭಾರತದ ಯುವ ಆಟಗಾರರು ಅವರಿಂದಾಗಿಯೇ ಕ್ರಿಕೆಟ್ ಆಡಲು ಆರಂಭಿಸಿದ್ದಾರೆನ್ನುವುದು ನನ್ನ ಅಭಿಪ್ರಾಯ.
ಅವರನ್ನು ನಿಜ ಜೀವನ ದಲ್ಲಿ ಭೇಟಿಯಾಗುವುದು ನನ್ನ ಕನಸಾಗಿತ್ತು. ಈಗ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವ ರೊಂದಿಗೆ ಇರುವುದು ಶ್ರೇಷ್ಠವೆ ನಿಸುತ್ತದೆ ಎಂದು ಕೊಹ್ಲಿ ತಿಳಿಸಿದರು.
Tagged with
tnews
ಜೋಹನ್ಸ್‌ಬರ್ಗ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಇಂದು ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಏಕೈಕ ೨೦-೨೦ ಪಂದ್ಯದಲ್ಲಿ ಆಡಲಿದ್ದು, ಭಾರತೀಯರು ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ ೧೫೦ನೇ ವರ್ಷಾಚರಣೆಗಾಗಿ ಈ ೨೦-೨೦ ಪಂದ್ಯ ನಡೆಯಲಿದೆ.
ಬಲಿಷ್ಠ ೨೦-೨೦ ತಂಡದೊಂದಿಗೆ ಟೀಂ ಇಂಡಿಯಾ ಜೋಹನ್ಸ್‌ಬರ್ಗ್ ನಲ್ಲಿ ಬಂದಿಳಿದಿದೆ. ಆದರೆ ವೀರೇಂದ್ರ ಸೆಹ್ವಾಗ್ ಮತ್ತು ಜಹೀರ್ ಖಾನ್ ಮಾತ್ರ ಈ ಪಂದ್ಯದಲ್ಲಿ ಆಡುತ್ತಿಲ್ಲ. ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗೆ ತೆರಳಿರುವ ಸಚಿನ್ ಕೂಡ ಅಲಭ್ಯರಾಗಿದ್ದಾರೆ. ದ. ಆಫ್ರಿಕಾ ಈಗಷ್ಟೇ ನ್ಯೂಜಿಲೆಂಡ್ ಪ್ರವಾಸದಿಂದ ಮರಳಿದ್ದು, ಅಲ್ಲಿ ೨೦-೨೦ ಪಂದ್ಯಗಳನ್ನು ಆಡಿದ ಎಂಟು ಮಂದಿ ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಟೆಸ್ಟ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಜಾಕಸ್ ಕ್ಯಾಲೀಸ್‌ಗೆ ಈ ಪಂದ್ಯದಲ್ಲಿ ವಿಶೇಷ ಸನ್ಮಾನವಿರುವ ಕಾರಣ ಅವರು ಆಡಲಿದ್ದಾರೆ.
ಈ ಪಂದ್ಯದಲ್ಲಿ ಕ್ಯಾಲೀಸ್ ಫೌಂಡೇಶನ್‌ಗೆ ಕ್ರಿಕೆಟ್ ಸೌತ್ ಆಫ್ರಿಕಾ ನೆರವಾಗಲಿದೆ. ಆದರೆ ಕ್ಯಾಲೀಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವರಾಜ್ ಸಿಂಗ್ ಅವರ ಫೌಂಡೇಶನ್‌ಗೆ ನೆರವು ನೀಡುವುದಾಗಿ ಘೋಷಿಸಿದ್ದಾರೆ. ದ. ಆಫ್ರಿಕಾ ತಂಡವನ್ನು ಜೋಹನ್ ಬೋಥಾ ಮುನ್ನಡೆಸಲಿದ್ದು, ಕಪ್ತಾನ ಎಬಿ ಡಿವಿಲಿಯರ್ಸ್ ಮತ್ತು ಉಪಕಪ್ತಾನ ಹಶಿಮ್ ಅಮ್ಲಾಗೆ ವಿಶ್ರಾಂತಿ ನೀಡಲಾಗಿದೆ. ಆತಿಥೇಯ ತಂಡ ಹೊಸ ಮುಖಗಳಿಗೆ ಅವಕಾಶವನ್ನು ನೀಡಿದೆ.
Tagged with
tnews
ನವದೆಹಲಿ: ಡೋವ್ ಕೆಮಿಕಲ್ ಪ್ರಾಯೋಜಕತ್ವ ವಿವಾದಕ್ಕೆ ಸಂಬಂದಿ ಸಿದಂತೆ ಲಂಡನ್ ಒಲಿಂಪಿಕ್ಸ್ ನಿಂದ ಹೊರಗುಳಿಯಲು ಸರಕಾರ ಅಥ್ಲೆಟಿಕ್ಸ್ ಗಳಿಗೆ ಸೂಚಿಸಿಲ್ಲ ಎಂದು ಕ್ರೀಡಾ ಸಚಿವ ಅಜಯ್ ಮಕೇನ್ ತಿಳಿಸಿದ್ದಾರೆ.
ಡೋವ್ ಕೆಮಿಕಲ್ಸ್‌ಗೆ ಸಂಬಂಧ ಪಟ್ಟಂತೆ ಲಂಡನ್ ಒಲಿಂಪಿಕ್ಸ್‌ಗೆ ಬಹಿಷ್ಕಾರ ಹಾಕುವಂತೆ ನಾವು ಅಥ್ಲೆಟಿಕ್ಸ್ ಗಳಿಗೆ ಸೂಚಿಸಿಲ್ಲ ಎಂದು ಮಕೇನ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಹಾಗೂ ಡೋವ್ ಕೆಮಿಕಲ್ಸ್ ಕಂಪೆನಿ ನಡುವೆ ಪ್ರಾಯೋಜಕತ್ವ ಬಗ್ಗೆ ಒಪ್ಪಂದ ನಡೆದಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಹಾಗೂ ಲಂಡನ್ ಒಲಿಂಪಿಕ್ಸ್‌ನ ಆಯೋಜಕ ಸಮಿತಿ ಪ್ರಾಯೋಜಕತ್ವದಿಂದ ಡೋವ್‌ನ್ನು ಹೊರಗಿಡಲು ಹಿಂಜರಿದಿದ್ದಾರೆ. ಆದರೆ ಈ ಬಗ್ಗೆ ಇಂಗ್ಲೆಂಡ್ ಸರಕಾರ ಪ್ರತಿಕ್ರಿಯೆ ನೀಡಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಎಲ್ಲಾ ರಾಷ್ಟ್ರಗಳಲ್ಲಿ ಜಾಗೃತಿಯನ್ನು ಮೂಡಿಸುವ ಅಭಿಯಾನವನ್ನು ನಡೆಸಲಾಗುತ್ತದೆ ಎಂದು ಹೇಳಿದೆ. ಐಓಸಿಯ ಇತರ ಕೆಲವು ರಾಷ್ಟ್ರಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಕೇನ್ ಹೇಳಿದ್ದಾರೆ.
Tagged with
tnews
ನವದೆಹಲಿ: ಮಲೇಶಿಯನ್ ಗ್ರ್ಯಾನ್ ಪ್ರೀಯಲ್ಲಿ ಭಾರತದ ಡ್ರೈವರ್ ನರೈನ್ ಕಾರ್ತಿಕೇಯನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಫಾರ್ಮುಲಾ ವನ್ ಚಾಂಪಿಯನ್ ಸೆಬಸ್ಟಿನ್ ವೆಟಲ್‌ಗೆ ದಂಡ ಹೇರುವ ಸಾಧ್ಯತೆಯಿದೆ.
ಎಚ್‌ಆರ್‌ಟಿಯ ಕಾರ್ತಿಕೇ ಯನ್‌ರನ್ನು ಮೂರ್ಖನೆಂದು ಕರೆದಿರುವ ವೆಟಲ್, ರೇಸ್‌ನ ವೇಳೆ ಕಾರ್ತಿಕೇಯನ್‌ಗೆ ಮಧ್ಯ ಬೆರಳು ತೋರಿಸಿ ವಿವಾದ ಉಂಟು ಮಾಡಿದ್ದರು. ರೇಸ್ ಬಳಿಕ ಮಾತನಾಡಿದ್ದ ವೆಟಲ್, ಕೆಲವು ಸಾಮಾನ್ಯ ರಸ್ತೆಗಳಲ್ಲಿ ಕೆಲವು ಮೂರ್ಖರು ಚಾಲನೆ ಮಾಡುತ್ತಿರುತ್ತಾರೆ. ಇಲ್ಲಿ ಕೂಡ ಅಂತಹ ಒಬ್ಬ ಮೂರ್ಖ ಇದ್ದಾನೆ ಎಂದು ವೆಟಲ್ ಬಿಬಿಸಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
ಮಲೇಶಿಯನ್ ಗ್ರ್ಯಾನ್ ಪ್ರೀಯ ೪೬ನೇ ಲ್ಯಾಪ್‌ನಲ್ಲಿ ಕಾರ್ತಿಕೇಯನ್ ಮತ್ತು ವೆಟಲ್ ಕಾರು ಪರಸ್ಪರ ಡಿಕ್ಕಿ ಹೊಡೆದಿತ್ತು. ಆದರೆ ಇತರ ಕೆಲವು ಡ್ರೈವರ್‌ಗಳಾದ ಪೌಲ್ ಡಿ ರೆಸ್ಟಾ ಮತ್ತು ನಿಕೊ ಹುಲ್ಕನ್‌ಬೆರ್ಗ್ ಕಾರ್ತಿಕೇಯನ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.
Tagged with
tnews
ಹೈದರಾಬಾದ್: ದೇಶದ ನಾಲ್ಕು ದಕ್ಷಿಣ ರಾಜ್ಯಗಳ ಪೈಕಿ ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ ಎನ್ನುವ ಆಘಾತಕಾರಿ ವರದಿಯನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಬಹಿರಂಗಪಡಿಸಿದೆ.
ಎನ್‌ಸಿಆರ್‌ಬಿ ಸಂಗ್ರಹಿಸಿದ ಮಾಹಿತಿ ಪ್ರಕಾರ, ಆಂಧ್ರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರಮ ಪ್ರಕಾರವಾಗಿ ೧೨೫೭, ೧೧೮೯ ಮತ್ತು ೧೩೬೨ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದಲ್ಲಿ ಆಂಧ್ರದಲ್ಲಿ ಎರಡು ಪಟ್ಟುಗಳಷ್ಟು ಅಪರಾಧಗಳು ದಾಖಲಾಗಿವೆ.
ಆಂಧ್ರದಲ್ಲಿ ೪೫೬೨ ಮಹಿಳಾ ಲೈಂಗಿಕ ಕಿರುಕುಳ ದಾಖಲಾದರೆ, ಕರ್ನಾಟಕದಲ್ಲಿ ಕೇವಲ ೮೩ ಹಾಗೂ ತಮಿಳುನಾಡಿನಲ್ಲಿ ೫೩೭ ಕೇಸುಗಳು ದಾಖಲಾಗಿವೆ. ಅಲ್ಲದೆ ಕರ್ನಾಟಕ ರಾಜ್ಯ ಮಹಿಳೆಯರಿಗೆ ಸೂಕ್ತ ರಕ್ಷಣೆ ಡುತ್ತಿದ್ದು, ಅತೀ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಡೆದಿರುವ ಬಗ್ಗೆ ಮಾಹಿತಿಗಳು ಸರಕಾರದಿಂದ ಲಭಿಸಿದೆ ಎಂದು ಅದು ತಿಳಿಸಿದೆ.
Tagged with
nnews
ಬೆಂಗಳೂರು: ಗೋವಾ ರಾಜ್ಯದಲ್ಲಿ ಬಿಜೆಪಿ ಸರಕಾರ ಗದ್ದುಗೆಗೆ ಏರುತ್ತಿದ್ದಂತೆ, ಪೆಟ್ರೋಲ್ ಬೆಲೆಯನ್ನು ಗಣನೀಯವಾಗಿ ಇಳಿಸಿರುವುದು ಕರ್ನಾಟಕ ರಾಜ್ಯಕ್ಕೂ ವರದಾನವಾಗಿದೆ.
ರಾಜ್ಯದಲ್ಲಿ ಗಗನಕ್ಕೇರಿದ ಪೆಟ್ರೋಲ್ ಬೆಲೆಯನ್ನು ಇಳಿಸಲು ಸರಕಾರ ಚಿಂತನೆ ನಡೆಸುತ್ತಿದ್ದೆ. ಈ ಹಿಂದೆ ವಿಧಿಸುತ್ತಿದ್ದ ಶೇ.೨೫ ವ್ಯಾಟ್ ಹಾಗೂ ಇತರೆ ಶೇ.೫ರಷ್ಟು ಎಂಟ್ರಿ ತೆರಿಗೆಯನ್ನು ತೆಗೆದು ಹಾಕಲಿದೆ ಎಂದು ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲ್ ಡೀಲರ‍್ಸ್ ಎಸೋಸಿಯನ್‌ನ ಅಧ್ಯಕ್ಷ ಭೂಷಣ್ ನಾರಂಗ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ವೊಂದಕ್ಕೆ ೭೩.೫೧ರಷ್ಟಿದ್ದು, ವ್ಯಾಟ್ ಹಿಂಪಡೆದೇ ಆದಲ್ಲಿ ಪೆಟ್ರೋಲ್ ರೂ. ೫೮ಕ್ಕೆ ಗ್ರಾಹಕರನ್ನು ತಲುಪಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಮೆಟ್ರೋ ನಗರಗಳು ಗೋವಾ ಸರಕಾರದ ಹಾದಿಯನ್ನು ತುಳಿದದ್ದೇ ಆದಲ್ಲಿ, ಪೆಟ್ರೋಲ್ ಬೆಲೆಯನ್ನು ಲೀಟರ್‌ವೊಂದಕ್ಕೆ ೧೫ರಷ್ಟು ಇಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Tagged with
feature,
snews
ಕಾಸರಗೋಡು: ಯುವಕನೋರ್ವ ನಿಗೂಢವಾಗಿ ನಾಪತ್ತೆಯಾ ಗಿದ್ದು, ಯುವಕನನ್ನು ಅಪಹರಣಗೈಯಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಬಾಯಾರು ಸುನ್ನಾಡ ಎಂಬಲ್ಲಿನ ಹಮೀದ್ ಅವರ ಪುತ್ರ, ಕಾಲೇಜು ವಿದ್ಯಾರ್ಥಿಯಾಗಿದ್ದ ನೌಫಲ್ (೨೦) ಎಂಬಾತನೇ ನಿಗೂಢವಾಗಿ ನಾಪತ್ತೆಯಾಗಿರುವಾತ. ಈ ಬಗ್ಗೆ ಸಂಬಂಧಿಕರು ನೀಡಿರುವ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಯಾರು ಪೇಟೆ ಗೆಂದು ಹೇಳಿ ಮೊನ್ನೆ ಸಾಯಂಕಾಲ ಮನೆಯಿಂದ ಹೊರಟಿದ್ದ ಎನ್ನಲಾಗಿದೆ. ಹೀಗೆ ತೆರಳಿದ್ದ ಈತ ಅಲ್ಪ ಹೊತ್ತಿನ ಬಳಿಕ ಸಹೋದರಿಗೆ ಹಾಗೂ ಮಿತ್ರರಿಗೆ ದೂರವಾಣಿ ಸಂದೇಶ ಕಳುಹಿಸಿ ತನ್ನನ್ನು ಯಾರೋ ಬಲವಂತವಾಗಿ ಮಾರುತಿ ಓಮ್ನಿ ವ್ಯಾನಿನಲ್ಲಿ ಹಾಕಿ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದ.
ಆದರೆ ಈತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅಪ ಹರಣ ಬಗ್ಗೆ ನಿಗೂಢತೆ ಸೃಷ್ಟಿಯಾಗಿದೆ. ಪೊಲೀಸರು ವಿಸ್ತೃತ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈತನ ಮೊಬೈಲ್ ಟವರ್‌ನ ಇರುವಿಕೆಯ ವ್ಯಾಪ್ತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
Tagged with
cnews
ಮಂಗಳೂರು: ಗ್ರೆಗರಿ ಪತ್ರಾವೋ ಅವರ ಬಾವಿಯಲ್ಲಿ ಪೆಟ್ರೊಲಿಯಂ ಅಂಶ ಪತ್ತೆಯಾಗಿರುವ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಂಆರ್‌ಪಿ ಎಲ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಪೆಟ್ರೊಲಿಯಂ ಅಂಶ ಕಂಡು ಬಂದಿರುವ ಬಾವಿಯ ನೀರನ್ನು ಈ ಕೂಡಲೇ ಖಾಲಿ ಮಾಡುವಂತೆ ಮತ್ತು ಘಟನೆಗೆ ಕಾರಣವಾಗಿರುವ ಅಂಶವನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕಂಪೆನಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ಪೆಟ್ರೊ ಲಿಯಂ ಅಂಶ ಸೇರ್ಪಡೆಯಾ ಗಿರುವ ಬಾವಿ ನೀರನ್ನು ಖಾಲಿ ಮಾಡಲು ಅಧಿಕಾರಿಗಳು ಸೂಕ್ತ ವ್ಯವಸ್ಥೆಯೊಂ ದಿಗೆ ಬಂದಿದ್ದರಾದರೂ ಅವರಿಂದ ಬಾವಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಲು ಸಾಧ್ಯವಾಗಿಲ್ಲ. ಬಾವಿಯಲ್ಲಿನ ನೀರು ಈ ಹಿಂದಿಗಿಂತ ಮತ್ತಷ್ಟು ಜಿಗುಟಾಗಿದ್ದು ಪೆಟ್ರೋಲಿಯಂ ಅಂಶ ಒಸರುತ್ತಲೇ ಇದೆ ಎಂದು ತಿಳಿದು ಬಂದಿದೆ. ಹೀಗಾಗಿ ಒಂದು ಟ್ಯಾಂಕರಿ ನಷ್ಟು ನೀರನ್ನು ಮಾತ್ರ ಖಾಲಿ ಮಾಡಿ ಕೊಂಡೊಗಿರುವ ಅಧಿಕಾರಿಗಳು ಇಂದು ಮತ್ತೆ ಬರುವುದಾಗಿ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಬಾವಿಯಲ್ಲಿ ಪೆಟ್ರೋಲಿಯಂ ಅಂಶ ಒಸರುತ್ತಲೇ ಇದ್ದರೂ ಇದರ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ಪೆಟ್ರೋಲಿಯಂ ಸಾಗಾಟದ ಪೈಪ್ ತೂತು ಬಿದ್ದಿದ್ದು ಇದರಿಂದಾಗಿ ಸೋರಿಕೆಯಾಗುತ್ತಿರುವ ಪೆಟ್ರೋಲಿಯಂ ಅಂತರ್ಜಲವನ್ನು ಸೇರಿರಬೇಕು ಎಂದು ಶಂಕಿಸಲಾಗಿದೆ. ಆದರೆ ಇದನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಬಗ್ಗೆ ನುರಿತ ಇಂಜಿನಿಯರನ್ನು ಕರೆತರುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ಗ್ರೆಗರಿ ತಿಳಿಸಿದ್ದಾರೆ.
Tagged with
lnews
ಮಂಗಳೂರು: ಬಡ ಮಹಿಳೆಯ ಮನೆಗೆ ಡೋರ್ ನಂಬ್ರ ನೀಡುವ ಸಲುವಾಗಿ ಐದು ಸಾವಿರ ಲಂಚಕ್ಕೆ ಕೈಚಾಚಿದ ಕೊಣಾಜೆ ಗ್ರಾಮ ಪಂಚಾ ಯತ್ ಪಿಡಿಓ ಮತ್ತು ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೊಣಾಜೆ ಗ್ರಾಮದ ನಿವಾಸಿ ಸಾರಿಕಾ ಎಂಬವರು ಸರಕಾರಿ ಜಾಗದಲ್ಲಿ ಕಟ್ಟಿಸಿದ್ದ ಮನೆಗೆ ಡೋರ್ ನಂಬ್ರ ನೀಡುವಂತೆ ಒಂದೂವರೆ ವರ್ಷದ ಹಿಂದೆಯೇ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಡೋರ್ ನಂಬ್ರ ನೀಡುವುದು ಸರಕಾರಿ ನಿಯಮದ ಉಲ್ಲಂಘನೆಯಾಗಿದ್ದ ಕಾರಣ ಸಾರಿಕಾರವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇತ್ತೀಚೆಗೆ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ನೂತನ ನಿಯಮವನ್ನು ಸರಕಾರ ಜಾರಿಗೆ ತಂದಿದ್ದರಿಂದ ಖುಷಿಯಾದ ಸಾರಿಕಾ ಎರಡನೇ ಬಾರಿ ಡೋರ್ ನಂಬ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಅರ್ಜಿಯನ್ನು ಓಕೆ ಎಂದ ಕಾರ್ಯದರ್ಶಿ ಅಬೂಬಕ್ಕರ್ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ಸಾವಿತ್ರಿ, ಐದು ಸಾವಿರ ಲಂಚವನ್ನು ನೀಡಿ ಕೈ ಬಿಸಿ ಮಾಡಿದರೆ ಡೋರ್ ನಂಬ್ರ ನೀಡಲು ಸೈ ಎಂದಿದ್ದರೆನ್ನಲಾಗಿದೆ.
ಇದರಿಂದ ಕಂಗಾಲಾದ ಸಾರಿಕಾ ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದರೂ ಅಧಿಕಾರಿಗಳ ಮನ ಕರಗಿರಲಿಲ್ಲ. ಕೊನೆಗೆ ಮಾತುಕತೆ ನಡೆಸಿದ ಬಳಿಕ ಮೂರು ಸಾವಿರ ನೀಡುವುದಾಗಿ ಸಾರಿಕಾ ತಿಳಿಸಿದ್ದರಿಂದ ಅಧಿಕಾರಿ ಅಂತಿಮ ಮುದ್ರೆ ಹಾಕಿ ನಿನ್ನೆಯೇ ಹಣ ನೀಡಬೇಕೆಂದು ಡೆಡ್‌ಲೈನ್ ಹಾಕಿದ್ದರು ಎನ್ನಲಾಗುತ್ತಿದೆ.ಎಲ್ಲಕ್ಕೂ ಓಕೆ ಎಂದ ಸಾರಿಕಾ ನೇರವಾಗಿ ಮಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದು ಅಧಿಕಾರಿಗಳ ಜನಸೇವೆಯ ಹಕೀಕತ್ತು ಬಿಚ್ಚಿಟ್ಟಿದ್ದರು. ಧ್ವನಿ ಮುದ್ರಕ ಮತ್ತು ಹಣಕ್ಕೆ ರಾಸಾಯನಿಕ ಹಾಕಿದ ಲೋಕಾಯುಕ್ತರು ಅದನ್ನು ಸಾರಿಕಾರ ಕೈಗಿತ್ತು ಅಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದರು. ಮಹಿಳೆ ಆ ಕೆಲಸವನ್ನು ಮಾಡುತ್ತಿದ್ದಾಗಲೇ ಲೋಕಾಯುಕ್ತರು ದಾಳಿ ನಡೆಸಿ ಇಬ್ಬರು ಆಧಿಕಾರಿಗಳನ್ನು ರೆಡ್‌ಹ್ಯಾಂಡಾಗಿ ಸೆರೆಹಿಡಿದು ಕೇಸು ಜಡಿದಿದ್ದಾರೆ.
Tagged with
lnews
ಪುತ್ತೂರು: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿನ ನಿವಾಸಿಯೊಬ್ಬರು ತನ್ನ ಸ್ವಾಧೀನದಲ್ಲಿದ್ದ ಸರಕಾರಿ ಭೂಮಿಗೆ ಅಳವಡಿಸಲಾಗಿದ್ದ ಬೇಲಿಯನ್ನು ಕಿತ್ತೆಸೆದು ಆ ಜಾಗವನ್ನು ಕಬಳಿಸಿರುವ ಕುರಿತು ಶಾಸಕಿ ಸೇರಿದಂತೆ ನಾಲ್ವರ ವಿರುದ್ದ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಎಂಬಲ್ಲಿನ ನಿವಾಸಿ ಮಾನ ಪಾಟಾಳಿ ಎಂಬವರು ದೂರು ದಾರರಾಗಿದ್ದು, ಅವರು ಪ್ರಸ್ತುತ ಪುತ್ತೂರು ಶಾಸಕಿಯಾ ಗಿರುವ ಮಲ್ಲಿಕಾಪ್ರಸಾದ್, ಪುತ್ತೂರಿನ ದರ್ಬೆ ನಿವಾಸಿ ಕೃಷ್ಣ ತಿಲಕ ಭಂಡಾರಿ, ಅವರ ಕೂಲಿ ಕೆಲಸದಾಳುಗಳಾದ ಮೇನಾಲ ಬಾಲಕೃಷ್ಣ ರೈ ಹಾಗೂ ಚಿಮಣಿಗುಡ್ಡೆ ವೆಂಕಪ್ಪ ನಾಯ್ಕ ಎಂಬವರ ವಿರುದ್ದ ದೂರು ನೀಡಿದ್ದಾರೆ.
ತಾನು ನೆಟ್ಟಣಿಗೆ ಮುಡ್ನೂರು ಗ್ರಾಮದ ಸರ್ವೆ ನಂಬ್ರ ೪೪೦-೧ಎ೨ಬಿಪಿ೧ರಲ್ಲಿ ೫೭ ಸೆಂಟ್ಸ್ ಸ್ಥಳವನ್ನು ಅಕ್ರಮ ಸಕ್ರಮ ಮಂಜೂರಾತಿ ಪಡೆದು ವಾಸ್ತವ್ಯ ಹೊಂದಿದ್ದು, ಈ ಸ್ಥಳಕ್ಕೆ ಲಗ್ತಿಯಲ್ಲಿರುವ ೮೦ ಸೆಂಟ್ಸ್ ಸ್ಥಳವನ್ನು ಸ್ವಾಧೀನತೆಯಿಂದ ಅನುಭವಿಸಿಕೊಂಡು ಬಂದಿದ್ದೇನೆ. ಈ ಸ್ಥಳದ ಸುತ್ತಲೂ ಭದ್ರತೆಗಾಗಿ ನಿರ್ಮಿಸಿದ್ದ ಹಳೆಯದಾದ ಮುಳ್ಳಿನ ಬೇಲಿಯನ್ನು ತೆರವುಗೊಳಿಸಿ ಹೊಸದಾಗಿ ತಂತಿ ಬೇಲಿಯನ್ನು ಅಳವಡಿಸಿದ್ದು, ಇದನ್ನು ಆರೋಪಿಗಳು ಕಿತ್ತೆಸೆದು ಅದು ನಮ್ಮ ಕುಮ್ಕಿ ಜಾಗವೆಂದು ಹೇಳುತ್ತಾ ಸರಕಾರಿ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಸಿದ್ದಾರೆ.
ಆ ಸ್ಥಳವು ಸದ್ರಿಯವರ ಕುಮ್ಕಿ ಸ್ಥಳವಲ್ಲ. ಅದು ಸರಕಾರಿ ಸ್ಥಳವಾಗಿದ್ದು, ಆ ಜಾಗವನ್ನು ಕಬಳಿಸುವ ಇರಾದೆ ಯಿಂದಲೇ ಬೇಲಿಯನ್ನು ಕಿತ್ತುತೆಗೆದು ಕಬ್ಬಿಣದ ತಂತಿ ಮತ್ತು ಕಂಬವನ್ನು ಕೊಂಡೊಯ್ದಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದರೂ ಸರಿಯಾದ ತನಿಖೆ ನಡೆದಿಲ್ಲ ಎಂದು ಮಾನ ಪಾಟಾಳಿ ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಜೊತೆಗೆ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
Tagged with
lnews
ಮೂಡಬಿದ್ರೆ: ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಜಲ್ಲಿ, ಜಲ್ಲಿ ಹುಡಿಗಳನ್ನು ಸಾಗಿಸುತ್ತಿದ್ದ ೧೨ ಟಿಪ್ಪರ್‌ಗಳನ್ನು ಬುಧವಾರ ಮೂಡಬಿದ್ರೆ ತಹಶೀಲ್ದಾರ್ ಮುರಳೀಧರ್‌ಅವರು ವಶಕ್ಕೆ ತೆಗೆದುಕೊಂಡು ದಂಡ ಹಾಕಿ ಬಿಟ್ಟಿದ್ದಾರೆ.
ಅಳಿಯೂರು, ಬೋರುಗುಡ್ಡೆ, ಮಾಂಟ್ರಾಡಿ, ಹೌದಾಲು ಮುಂತಾದ ಕಡೆಗಳಲ್ಲಿರುವ ಜಲ್ಲಿ ಕ್ರಷರ್‌ನಿಂದ ಅಕ್ರಮವಾಗಿ ಅಧಿಕ ಭಾರದ ಜಲ್ಲಿಗಳನ್ನು ಈ ಟಿಪ್ಪರ್‌ಗಳು ದಿನಂಪ್ರತಿ ಶಿರ್ತಾಡಿ-ಮೂಡಬಿದ್ರೆ ರಸ್ತೆಯಾಗಿ ಮಂಗಳೂರು ತಲುಪುತ್ತಿತ್ತು.
ಖಾಲಿ ಟಿಪ್ಪರ್‌ಗಳು ಕೆಲವು ಸಂದರ್ಭಗಳಲ್ಲಿ ಮಿತಿಮೀರಿದ ವೇಗದಿಂದ ಚಲಿಸುತ್ತಿದ್ದುದರಿಂದ ಶಾಲಾ ಮಕ್ಕಳು, ಪ್ರಯಾಣಿಕರು, ಸಾರ್ವಜನಿಕರ ಸಂಚಾ ರಕ್ಕೂ ಭೀತಿ ಉಂಟಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟವರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಟಿಪ್ಪರ್‌ಗಳಲ್ಲಿ ಅಧಿಕವಾಗಿ ಜಲ್ಲಿ ಹುಡಿಗಳನ್ನು ಸಾಗಿಸುತ್ತಿದ್ದ ಹಿಂಬದಿಗೆ ಯಾವುದೇ ಪ್ಲಾಸ್ಟಿಕ್ ಅಥವಾ ಬೇರೆ ವಸ್ತುಗಳನ್ನು ಮುಚ್ಚದೆ ಕೊಂಡೊಯ್ಯು ತ್ತಿದ್ದರಿಂದ ಟಿಪ್ಪರ್ ಹಿಂದೆ ಕೆಲವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗುತ್ತಿದೆ. ಟಿಪ್ಪರ್‌ನಿಂದ ಜಲ್ಲಿ ಹುಡಿಗಳು ಹಿಂಬದಿ ವಾಹನ ಸವಾರರ ಕಣ್ಣಿಗೆ ಬಿದ್ದು ಸಮಸ್ಯೆ ಉಂಟುಮಾಡಿದ ಉದಾಹರಣೆಗಳೂ ಇದೆ.
ಇದೂ ಅಲ್ಲದೆ ಶಿರ್ತಾಡಿ-ಬೋರುಗುಡ್ಡೆ- ಮೂಡಬಿದ್ರೆ ರಸ್ತೆಯಲ್ಲಿ ದಿನಂಪ್ರತಿ ಟಿಪ್ಪರ್‌ಗಳು ಹೆಚ್ಚು ಬಾರಿ ಓಡಾಟನಡೆಸುವುದರಿಂದ ಈ ಭಾಗದ ರಸ್ತೆಗಳೆಲ್ಲಾ ಸಂಪೂರ್ಣ ಹಾಳಾಗಿದ್ದು ಈ ಬಗ್ಗೆಯೂ ಸಾರ್ವಜನಿಕರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಹಿಂದೊಮ್ಮೆ ಇದೇ ತಹಶೀಲ್ದಾರ್ ಅವರು ಅಧಿಕ ಭಾರದ ಜಲ್ಲಿ ಸಾಗಾಟ ನಡೆಸುತ್ತಿದ್ದ ಟಿಪ್ಪರ್‌ಗಳನ್ನು ವಶಕ್ಕೆ ತೆಗೆದುಕೊಂಡು ಎಚ್ಚರಿಸಿದ್ದರು. ಆದರೆ ಟಿಪ್ಪರ್‌ಗಳ ಓಡಾಟ ಕಡಿಮೆಯಾಗದ ಕಾರಣ ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ಅವರು ಶನಿವಾರ ೧೨ ಟಿಪ್ಪರ್‌ಗಳನ್ನೂ ವಶಪಡಿಸಿ ದಂಡನೆವಿಧಿಸಿದ್ದಾರೆ. ಬೋರುಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ರೋಬೋ ಜಲ್ಲಿ ಕ್ರಷರ್ ಒಂದರಿಂದಲೇ ಅಧಿಕ ಟಿಪ್ಪರ್‌ಗಳು ಓಡಾಡುವುದರಿಂದ ಈ ಭಾಗದ ರಸ್ತೆಗಳು ಹಾಳಾಗಲು ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
Tagged with
cnews
ಸುಳ್ಯ: ಕೊಡಿ ಯಾಲ್‌ಬೈಲಿನ ಮಹಾತ್ಮಾಗಾಂಧಿ ಮಲ್ನಾಡ್ ಪ್ರೌಢ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಥೋಮಸ್ ಫ್ರಾನ್ಸಿಸ್(೧೪) ಕಳೆದ ಭಾನುವಾರದಿಂದ ನಾಪತ್ತೆಯಾಗಿದ್ದಾನೆ.
ಶಾಲೆ ಸಮೀಪದ ವಸತಿಗೃಹ ದಿಂದ ಟ್ಯಟೋರಿಯಲ್‌ಗೆ ಹೋಗುವು ದಾಗಿ ಹೇಳಿ ಹೋದವ ಮತ್ತೆ ಬರಲಿಲ್ಲ ಎನ್ನಲಾಗಿದೆ. ಈ ಕುರಿತು ಬಾಲಕನ ತಂದೆ ದೇವಚಳ್ಳ ಗ್ರಾಮದ ಮಾವಿನ ಕಟ್ಟೆಯ ಸಾಧು ಥೋಮಸ್ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಭಾನುವಾರ ರಾತ್ರಿ ಸುಳ್ಯ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬಾಲಕ ಮಲಗಿದ್ದು, ಬೆಳಿಗ್ಗೆ ಅಲ್ಲಿರಲಿಲ್ಲ ಎಂದು ಬಸ್ ಕ್ಲೀನರ್ ತಿಳಿಸಿದ್ದಾನೆ ಎನ್ನಲಾಗಿದೆ.
Tagged with
missing
ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯವ್ಯಾಪಿ ಕರೆಕೊಟ್ಟಿರುವ ಕಳಂಕಿತ ವಿಟಿಯು ಕುಲಪತಿ ಡಾ. ಮಹೇಶ ಪ್ಪರವರನ್ನು ವಜಾಗೊಳಿಸುವಂತೆ ನಡೆಸಿದ ಪ್ರತಿಭಟನಾ ರ‍್ಯಾಲಿಯು ಮಂಗಳೂರಿನ ಹಂಪನಕಟ್ಟೆಯಿಂದ ಪ್ರಾರಂಭವಾಗಿ ಜಿಲ್ಲಾಧಿಕಾರಿ ಕಚೇರಿ ತನಕ ಯಶಸ್ವಿಯಾಗಿ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ನೂರಾರೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದಿರೆ ಮಾತನಾಡಿ ಯಾವುದೇ ವಿಶ್ವವಿದ್ಯಾಲಯದ ಕುಲಪತಿಗಳಾಗ ಬೇಕಾದರೆ ಕನಿಷ್ಠ ನಾಲ್ಕು ಜನರಿ ಗಾದರೂ ಪಿಹೆಚ್‌ಡಿ ಮಾರ್ಗದರ್ಶಕ ರಾಗಿ ಕೆಲಸ ಮಾಡಿದ ಅನುಭವವಿ ರಬೇಕು. ಆದರೆ ಡಾ. ಮಹೇಶಪ್ಪರ ವರಿಗೆ ಈ ಯಾವುದೇ ಅನುಭವಗಳು ಇಲ್ಲ. ೧೯೯೨ರಿಂದ ಯಾವುದೇ ಅಂತಾ ರಾಷ್ಟ್ರೀಯ ಪ್ರಬಂಧವನ್ನು ಮಂಡನೆ ಮಾಡಿಲ್ಲ. ದೇಶಕ್ಕೆ ಬೇಕಾದ ವಿದ್ಯಾವಂತ ಇಂಜಿನಿಯರಿಂಗ್ ಸಮು ದಾಯವನ್ನು ತಯಾರು ಮಾಡುವ ವಿ.ವಿ.ಯ ಕುಲಪತಿ ಸ್ಥಾನ ಅತ್ಯಂತ ಪವಿತ್ರವಾಗಿದ್ದು, ಆ ಸ್ಥಾನಕ್ಕೆ ಬರುವ ವ್ಯಕ್ತಿಗಳು ಕಳಂಕರಹಿತರಾಗಬೇಕು. ಆದರೆ ಈಗಾಗಲೇ ಪ್ರಸ್ತುತ ಕುಲಪತಿ ಡಾ. ಮಹೇಶಪ್ಪ ಬಗ್ಗೆ ಹಲವಾರು ಗಂಭೀರ ಸ್ವರೂಪದ ಆರೋಪಗಳಿದ್ದು, ಈ ಸ್ಥಾನಕ್ಕೆ ಅವರು ಅರ್ಹರಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಸಹಸಂಚಾಲಕ ಮಹೇಶ್ ಮಾತನಾಡಿ ಕುಲಪತಿ ಶೋಧನಾ ಸಮಿತಿ, ರಾಜ್ಯಪಾಲರು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಕೊಟ್ಟಿರುವ ಡಾ. ಮಹೇಶಪ್ಪರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದರ ಮೂಲಕ ಇವರು ಯಾವುದೇ ಹೆಚ್ಚಿನ ಹಣಕಾಸಿನ ವ್ಯವಹಾರವನ್ನು ಮಾಡದಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಕ್ರಮ ಕೈಗೊಳ್ಳದ ಸರ್ಕಾರ ಮತ್ತು ರಾಜ್ಯಪಾಲರ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ನಗರ ಸಂಘಟನಾ ಕಾರ್ಯದರ್ಶಿ ವಿನಯ್ ಹೊರಟ್ಟಿ, ಕಾರ್ಯದರ್ಶಿ ಚಿನ್ಮಯ್ ರೈ, ಸುಜಿತ್, ಜಗದೀಶ್, ಅನೀಶ್, ಮಿಥೆಲ್, ಸಂತೋಷ್, ಶರತ್, ಯತೀಶ್ ಕುಮಾರ್, ಸೂರಜ್, ಜಯರಾಮ್, ಪ್ರಮೋದ್, ವಿಘ್ನೇಶ್, ಮುಂತಾದವರು ವಹಿಸಿದ್ದರು.
Tagged with
lnews
ಮುಲ್ಕಿ: ಮುಂಬೈ ಪೊಲೀಸರು ನಿನ್ನೆ ಮುಲ್ಕಿಯ ಚಿತ್ರಾಪು ಕಂಡರಬೆಟ್ಟು ನಿವಾಸಿ ವಿಶ್ವನಾಥ್ ಶೆಟ್ಟಿ ಯಾನೆ ಶೀನು ಎಂಬಾತನನ್ನು ಬಂಧಿಸಿದ್ದಾರೆ. ಮುಂಬೈ ಯಲ್ಲಿ ಜ್ಯುವೆಲ್ಲರಿ ದರೋಡೆ ವೇಳೆ ಗುಂಡು ಹಾರಿಸಿ ಒಬ್ಬನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಈತನ ಬಂಧನ ನಡೆದಿದೆ ಎಂದು ಹೇಳಲಾಗುತ್ತಿ ದೆಯಾದರೂ ಈತನ ಬಂಧನದ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
ಮುಂಬೈಯಲ್ಲಿ ಜ್ಯುವೆಲ್ಲರಿ ದರೋಡೆ ಪ್ರಕರಣದ ಹಿಂದೆ ಭೂಗತ ಪಾತಕಿ ರವಿಪೂಜಾರಿ ತಂಡವಿದೆ ಎಂದು ಮುಂಬೈ ಪೊಲೀಸರು ಶಂಕಿಸಿ ಶೀನುವನ್ನು ಬಂಧಿಸಿದ್ದಾರೆ ಎನ್ನಲಾ ಗುತ್ತಿದೆ.
ಸ್ಥಳೀಯರು ಮಾತ್ರ ಶೀನು ಅಮಾಯಕ ಎಂದಿದ್ದಾರೆ. ಈ ನಡುವೆ ಮುಂಬೈ ಪೊಲೀಸರು ರವಿಪೂಜಾರಿ ಸಹಚರ ಕಲಿ ಯೋಗೀಶನ ಹಳೆಯಂಗಡಿಯಲ್ಲಿರುವ ಮನೆಗೂ ಬಂದು ಆತನ ತಮ್ಮ ಗಣೇಶನ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ. ಮುಲ್ಕಿ ಪೊಲೀಸರೂ ಗಣೇಶನಿಗೆ ಕರೆ ಮಾಡಿ ತಕ್ಷಣ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದರಾದರೂ ಗಣೇಶ ಮನೆಯಲ್ಲಿ ಶುಭ ಕಾರ‍್ಯವಿದೆ. ಸಂಜೆ ಬಂದು ಹೋಗುತ್ತೇನೆ ಎಂದಿದ್ದ ಎನ್ನಲಾಗಿದೆ. ಆದರೆ ಸಂಜೆ ವೇಳೆಗೆ ಮುಂಬೈ ಪೊಲೀಸರು ಮನೆಗೆ ಬಂದಾಗ ಗಣೇಶ ವೃತ್ತಿ ಸಂಬಂಧ ಹೊರಗೆ ಹೋಗಿದ್ದ ಎನ್ನಲಾಗಿದೆ.
ಗಣೇಶನನ್ನು ಕೂಡಲೇ ನಮ್ಮನ್ನು ಭೇಟಿಯಾಗುವಂತೆ ಹೇಳಿ, ವಿಚಾರಿಸಿ ಬಿಡುತ್ತೇವೆ, ಕೇಸಿನಲ್ಲಿ ಫಿಕ್ಸ್ ಮಾಡುವುದಿಲ್ಲ ಎಂದು ಮುಂಬೈ ಪೊಲೀಸರು ಗಣೇಶನ ಮನೆಯವರನ್ನು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.
ಯಾವುದೇ ಪಾತಕ ಲೋಕದಲ್ಲಿ ಗುರುತಿಸಿಕೊಳ್ಳದ ಗಣೇಶನನ್ನು ಸಿಸಿಬಿ ಪೊಲೀಸರು ತಮಗೆ ವಹಿಸಿದ ಕೇಸಿನಲ್ಲಿ ಯಾವುದೇ ಪಾತಕಿ ಸಿಗದಿದ್ದಾಗ ಅಂತಿಮವಾಗಿ ಗಣೇಶನನ್ನು ಹಿಡಿದು ಆರೋಪಿಯನ್ನಾಗಿ ಫಿಕ್ಸ್ ಮಾಡುತ್ತಿದ್ದರು. ಪೊಲೀಸರ ದಿಸೆಯಿಂದಾಗಿ ಮಾಡೇ ಇಲ್ಲದ ಪಾತಕಕ್ಕೆ ತಲೆ ಕೊಡಬೇಕಾಗಿ ಬಂದ ಗಣೇಶ ತನ್ನ ಸೋದರ ರವಿ ಪೂಜಾರಿ ಸಹಚರ ಎನ್ನುವ ಏಕೈಕ ಕಾರಣದಿಂದ ತಲೆತಪ್ಪಿಸಿಕೊಂಡು ತಿರುಗುವಂತಾಗಿದೆ. ಇಲ್ಲಿಯ ತನಕ ಬೆಂಗಳೂರು ಪೊಲೀಸರು ಕಿರಿಕ್ ಮಾಡುತ್ತಿದ್ದರೆ ಇದೀಗ ಮುಂಬೈ ಪೊಲೀಸರು ಗಣೇಶನ ಹಿಂದೆ ಬಿದ್ದಿದ್ದು ಮುಂದಿನ ದಿನಗಳಲ್ಲಿ ಗಣೇಶನೂ ಭೂಗತನಾದರೂ ಅಚ್ಚರಿಪಡಬೇಕಿಲ್ಲ ಎಂದು ಗಣೇಶನ ಆಪ್ತರು ತಮ್ಮ ಆಕ್ರೋಶವನ್ನು ಪತ್ರಿಕೆಯಲ್ಲಿ ತೋಡಿಕೊಂಡಿದ್ದಾರೆ.ಪೊಲೀಸರು ಸಾಕ್ಷಿ ಪುರಾವೆ ಸಮೇತ ಬಂದರೆ ಆತನ ಬಗ್ಗೆ ಸಂಶಯ ವ್ಯಕ್ತಪಡಿಸಿಬಹುದು. ಇಲ್ಲದೆ ಹೋದರೆ ಪೊಲೀಸರು ಹೇಳುವ ಮಾತನ್ನು ನಂಬುವುದಾದರೂ ಹೇಗೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Tagged with
lnews
ವಿಟ್ಲ: ಗದ್ದೆಯೊಂದರಲ್ಲಿ ಜುಗಾರಿ ಆಟದಲ್ಲಿ ನಿರತ ಏಳು ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕುಂಡಡ್ಕ ಅರ್ಕಳತೋಟ ಎಂಬಲ್ಲಿ ಜುಗಾರಿ ಆಡುತ್ತಿದ್ದ ಕುಂಡಡ್ಕ ನಿವಾಸಿಗಳಾದ ಶಿವರಾಮ, ಸೇಸಪ್ಪ ಮೂಲ್ಯ, ಆನಂದ, ಸುರೇಶ, ತಿಮ್ಮಪ್ಪ, ಕಾಪುಮಜಲುವಿನ ಸುರೇಶ ಹಾಗೂ ಲಕ್ಷ್ಮಣ ಶೆಟ್ಟಿ ಎಂಬವರನ್ನು ಬಂಧಿಸಲಾಗಿದೆ.
Tagged with
cnews
ಬಂಟ್ವಾಳ: ಇದೊಂದು ಸಹೋ ದರತ್ವ ಹಾಗೂ ಮಾನ ವೀಯತೆ ಸಾರಿದ ಘಟನೆ! ಯುವ ಜನತೆಗೆ ಶಾಂತಿ ಪಾಠವನ್ನು ಕಲಿಸಿದ ಈ ಪ್ರಕರಣ ನಡೆದದ್ದು, ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ. ಅಸೌಖ್ಯದಿಂದಾಗಿ ಹಾಸಿಗೆ ಬಿದ್ದಿದ್ದ ಹಿಂದು ವ್ಯಕ್ತಿ ಯೋರ್ವರನ್ನು ಮಂಗಳೂರಿನ ಹಿದಾಯತ್ ಫೌಂಡೇಶನ್ ಎನ್ನುವ ಮುಸ್ಲಿಂ ಸಮು ದಾಯದ ಪ್ರತಿಷ್ಠಿತ ಸಂಘಟನೆಯೊಂ ದು ಆಸ್ಪತ್ರೆಗೆ ಸೇರಿಸಿ, ವೈದ್ಯಕೀಯ ಸೌಲಭ್ಯ ಕಲ್ಪಿಸಿ ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಪುದು ಗ್ರಾಮದ ಸುಜೀರ್, ದೈಯಡ್ಕ ಎಂಬಲ್ಲಿನ ಕೃಷ್ಣಪ್ಪ ಕುಲಾಲ್ ಅವರ ಮಗ ನಾದ ಚಂದ್ರಹಾಸ ಎಂಬ ವರು ಕಳೆದ ಎರಡು ವರ್ಷಗಳಿಂದ ಕ್ಷಯ ಖಾಯಿಲೆಯಿಂದ ಬಳಲು ತ್ತಿದ್ದರು. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೂರೈಸಲಾಗಿದ್ದರೂ, ಫಲಕಾರಿ ಯಾಗಿರಲಿಲ್ಲ. ಔಷಧಿಗೆ ತಗಲಿದ್ದ ಏಳು ಸಾವಿರವನ್ನು ಹೆಂಡತಿ ಶಾರದಾ ತನ್ನ ಬಳಿ ಇದ್ದ ಸರವನ್ನು ಅಡವಿಟ್ಟು ಕಟ್ಟಿ ದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ಸ್ಥಳೀಯ ವೈದ್ಯರು ಸೂಚಿಸಿದ್ದರೂ, ಚಂದ್ರಹಾಸ ಹಾಗೂ ಶಾರದಾ ದಂಪತಿ ಕುಟುಂಬವೇನೂ ಸ್ಥಿತಿವಂತರಲ್ಲ. ಸ್ಥಳೀಯರು, ಸಂಬಂಧಿಕರು, ಪರಿಚಯಸ್ಥರು ನೆರವಿಗೆ ಬಂದರೂ ಹಣಕಾಸಿನ ತೊಡಕಿ ನಿಂದಾಗಿ ವಿಶೇಷ ವೈದ್ಯಕೀಯ ಸೌಕರ್ಯ ಒದಗಿಸಲು ಸಾಧ್ಯವಾಗಿರಲಿಲ್ಲ. ಕಳೆದ ಸೋಮವಾರ ಸಂಜೆ ಚಂದ್ರಹಾಸರಿಗೆ ವಿಪರೀತ ಎದೆನೋವು ಕಾಣಿಸಿತು. ಕ್ಷಯ ತೀವ್ರವಾಗಿ ಬಾಧಿಸಿತು. ಹತ್ತಿರದ ಮನೆಯವರು ಅವರನ್ನು ಫರಂಗಿ ಪೇಟೆಯ ಖಾಸಗಿ ಕ್ಲಿನಿಕ್‌ಗೆ ಕರೆದುತಂದು, ಪ್ರಥಮ ಚಿಕಿತ್ಸೆ ಒದಗಿಸಿದ್ದರು. ರಕ್ತದ ಒತ್ತಡ ಏರುಪೇರಾದ ಕಾರಣ ಕೂಡಲೇ ಮಂಗಳೂರು ಆಸ್ಪತ್ರೆಗೆ ಸಾಗಿಸಬೇಕಾಗಿ ವೈದ್ಯರು ಸೂಚಿಸಿದಾಗ, ಚಂದ್ರಹಾಸರ ಕುಟುಂಬ ಕಂಗಾಲಾಯಿತು. ಕೈಯಲ್ಲಿ ಕಾಸಿಲ್ಲದ ಅವರು ಪೇಚಾಟಕ್ಕೆ ಬಿದ್ದರು. ಆಗ ನೆರೆಕೆರೆಯ ಮುಸ್ಲಿಂ ವ್ಯಕ್ತಿ ಓರ್ವ ಹಿದಾಯತ್ ಫೌಂಡೇಶನ್‌ನ ಟ್ರಸ್ಟಿ ಟಿ.ಕೆ.ಅಬ್ದುಲ್ ಬಶೀರ್ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದರು. ಆಸ್ಪತ್ರೆಗೆ ಧಾವಿಸಿದ ಫೌಂಡೇಶನ್‌ನ ಕಾರ್ಯಕರ್ತರು ಚಂದ್ರಹಾಸರನ್ನು ಕೂಡಲೇ ದೇರಳಕಟ್ಟೆ ಯೇನಪೋಯ ಆಸ್ಪತ್ರೆಗೆ ಸಾಗಿಸಿದರು. ಈಗ ಚಂದ್ರಹಾಸ ಆಸ್ಪತ್ರೆಯ ನಿಗಾ ಘಟಕದಲ್ಲಿದ್ದಾರೆ. ವೈದ್ಯಕೀಯ ವೆಚ್ಚವನ್ನು ಹಿದಾಯತ್ ಫೌಂಡೇಶನ್ ವತಿಯಿಂದ ಭರಿಸಲಾಗುವುದಾಗಿ ಸಂಘಟಕರು ತಿಳಿಸಿದ್ದಾರೆ.
ಹೆಸರಿಗೆ ಮಾತ್ರ ಜಾತಿ ಸಂಘಟನೆ
ಬಂಟ್ವಾಳ ಪರಿಸರದಲ್ಲಿ ಕುಲಾಲ ಸಂಘಟನೆಯ ಅತಿರಥ ಮಹಾರಥರಿದ್ದರೂ ಕೇವಲ ಪ್ರಚಾರಕ್ಕೆ ಮಾತ್ರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿರುವ ಹಿಂದೂ ಸಂಘಟನೆಗಳಿಗೂ ಸಂಕಷ್ಟದಲ್ಲಿ ಬೀಳುವ ಹಿಂದೂಗಳು ಕಾಣುವುದಿಲ್ಲ. ವೇದಿಕೆಯಲ್ಲಿ, ಮಾಧ್ಯಮಗಳಲ್ಲಿ ಒಂದಿಷ್ಟು ಜಾಗ ಸಿಗುತ್ತದೆ ಎಂದಾದರೆ ಏನೂ ಮಾಡುವುದಕ್ಕೂ ಸಿದ್ದರಾಗಿರುವ ಜಾತಿ ಸಂಘಟನೆಯ ಮುಖಂಡರು ಇನ್ನಾದರೂ ತಮ್ಮ ಸಮುದಾಯದ ಬಗ್ಗೆ ನೈಜ ಕಾಳಜಿ ವಹಿಸಲು ಎನ್ನುವ ಆಗ್ರಹ ಕುಲಾಲ ಸಮುದಾಯದಿಂದ ಕೇಳಿ ಬಂದಿದೆ.
Tagged with
lnews
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಬೆಳ ವಣಿಗೆಗಳಿಂದ ಅಸಮಾಧಾನ ಗೊಂಡಿ ದ್ದ ಪಕ್ಷದ ಕಾರ್ಯಕರ್ತರು ಇತ್ತೀಚೆಗೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ತಮ್ಮ ಆಕ್ರೋಶ ವನ್ನು ಹೊರಗೆಡಹಿದ್ದಾರೆ.
ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆ ಜಿಲ್ಲಾ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಪದ್ಮ ನಾಭ ಕೊಟ್ಟಾರಿಯೋರ್ವರು ಅಂದಿನ ಸಭೆಯ ಪ್ರಮುಖ ನಾಯಕ ರಾಗಿ ದ್ದುದರಿಂದ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅವರನ್ನೇ ಜವಾಬ್ದಾರನ್ನಾಗಿಸಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಕೊಟ್ಟಾರಿಯವರನ್ನು ತರಾಟೆಗೆ ತೆಗೆದು ಕೊಂಡರು. ಕಾರ್ಯಕರ್ತರ ಒಂದೊಂದು ಪ್ರಶ್ನೆಗೂ ಕೊಟ್ಟಾರಿ ಉತ್ತರ ಕೊಡುತ್ತ ಬಸವಳಿದು ಹೋಗಿ ದ್ದರು. ಮೇಯರ್ ಆಯ್ಕೆಯಲ್ಲಿ ಎಡವಿ ದ್ದು, ಪಕ್ಷದ ಸಂಘಟನೆಯನ್ನು ನಿರ್ಲ ಕ್ಷಿಸಿದ್ದು, ಕಾರ್ಯಕರ್ತರ ಅಭಿಪ್ರಾ ಯಗಳಿಗೆ ಮನ್ನಣೆ ನೀಡದಿರುವುದು ಇವೆಲ್ಲ ಆಕ್ರೋಶದ ರೂಪದಲ್ಲಿ ವ್ಯಕ್ತ ವಾದ ಪ್ರಶ್ನೆಗಳಾಗಿದ್ದವು. ಪದ್ಮನಾಭ ಕೊಟ್ಟಾರಿಯವರಿಗೆ ತಾನು ಹೊಣೆಗಾ ರನೇ ಅಲ್ಲದ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿತ್ತು. ಜಿಲ್ಲೆಯ ಇತರ ನಾಯಕರ ತಪ್ಪು ನಿರ್ಧಾರಗಳಿಂದ ಉಂಟಾಗಿದ್ದ ಎಡವಟ್ಟುಗಳನ್ನು ಸಮರ್ಥಿಸಿಕೊಳ್ಳ ಲಾಗದಂತಹ ಸ್ಥಿತಿಗೆ ಕೊಟ್ಟಾರಿ ತಲುಪಿ ದ್ದರು. ಮೇಯರ್ ಆಯ್ಕೆಯ ವಿಷಯ ದಲ್ಲಿ ಪಕ್ಷದ ನಾಯಕರ ಹಠಮಾರಿತನದ ನಿಲುವುಗಳಿಂದಾಗಿ ಎಡವಟ್ಟು ಸಂಭವಿ ಸಿದೆ. ನಾಯಕರು ಅಧಿಕಾರಕ್ಕೆ ಹಾತೊರೆ ಯುತ್ತಿದ್ದಾರೆಯೇ ಹೊರತು ಪಕ್ಷದ ವರ್ಚಸ್ಸಿನ ಬಗ್ಗೆ ಯೋಚಿಸುತ್ತಿಲ್ಲ. ಹಿರಿಯ ನಾಯಕರೂ ಕೂಡ ಈ ಬೆಳ ವಣಿಗೆಯ ಬಗ್ಗೆ ಗಮನ ಹರಿಸದಿ ರುವುದು, ನಾಯಕರ ಮಾತು ಆದತೆ ಪಡೆಯುತ್ತಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ ಇದನ್ನು ಸುಧಾ ರಿಸುವುದು ಹೇಗೆ ಮತ್ತು ಯಾವಾಗ ಎಂಬಿತ್ಯಾದಿ ಪ್ರಶ್ನೆಗಳು ತೂರಿ ಬಂದಿ ದ್ದವು.
ಮೇಯರ್ ಆಯ್ಕೆಯ ಅವಾಂತ ರದ ಹಿಂದೆಯೇ, ಉಡುಪಿ-ಚಿಕ್ಕಮ ಗಳೂರು ಲೋಕಸಭಾ ಕ್ಷೇತ್ರದ ಉಪಚು ನಾವಣೆಯಲ್ಲಿ ಸೋಲು ಕೂಡ ಅಂದಿನ ಸಭೆಯಲ್ಲಿದ್ದವರ ಆಕ್ರೋಶಕ್ಕೆ ಕಾರಣ ವಾಗಿತ್ತು. ಪಕ್ಷಕ್ಕಾಗಿ ಎಲ್ಲ ತ್ಯಾಗ ಮಾಡಿ ದುಡಿಯುವ ಕಾರ್ಯಕರ್ತರಿದ್ದರೂ ನಾಯಕರ ತಪ್ಪುಗಳಿಂದಾಗಿ ಪಕ್ಷ ಹೀನಾಯ ಸ್ಥಿತಿಗೆ ತಲುಪುವಂತಾಗಿದೆ. ದ.ಕ. ಜಿಲ್ಲೆಯಲ್ಲಿ ಪಕ್ಷ ಈಗ ನಾಲ್ಕು ಹೋಳುಗಳಾಗಿವೆ. ಕಾಂಗ್ರೆಸ್‌ನಂತೆಯೇ ಇಲ್ಲಿಯೂ ಗುಂಪು ರಾಜಕೀಯ ಆರಂಭವಾಗಿದೆ. ಗುಂಪು ರಾಜಕೀಯ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಜಿಲ್ಲೆಯಲ್ಲಿ ಪಕ್ಷ ಕಾಂಗ್ರೆಸ್‌ನಂತೆಯೇ ಅಧಃಪತನದತ್ತ ಸಾಗಲಿದೆ ಎಂಬ ಎಚ್ಚರಿಕೆಯನ್ನೂ ಅಂದಿನ ಸಭೆಯಲ್ಲಿದ್ದವರು ನೀಡಿದ್ದಾರೆ.
Tagged with
lnews
ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾ ಗಲಿದೆ ಎಂದು ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನ ಸಭೆಯಲ್ಲಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಯು.ಟಿ. ಖಾದರ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸಂಬಂಧ ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಕೂಡ, ಇದನ್ನು ಕಡ್ಡಾಯ ಗೊಳಿಸಲು ಈಗಾಗಲೇ ಹಂತ ಹಂತ ವಾಗಿ ಆದೇಶಗಳನ್ನು ಹೊರಡಿಸಲಾ ಗಿದೆ. ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದಾರೂ ತನ್ನ ಪಾಲು ಎಷ್ಟು, ರಾಜ್ಯದ ಪಾಲು ಎಷ್ಟು ಎಂದು ನಿಗದಿ ಪಡಿಸಿದ ಕಾರಣ ನಾವು ಅನುಷ್ಠಾನಗೊ ಳಿಸಲು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲೇ ಪ್ರಸ್ತಾವ ಮಾಡಿ ರುವುದರಿಂದ ಸಂಪುಟ ಸಭೆಯಲ್ಲಿ ಮಂಡಿಸಿ, ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಲಾಗುವುದು ಎಂದರು. ಈ ನಿರ್ಧಾರದಿಂದ ರಾಜ್ಯ ಸರ್ಕಾರದ ಮೇಲೆ ವಾರ್ಷಿಕ ೨೪೦೦ ಕೋಟಿ ರೂ. ಹೊರೆ ಬೀಳಲಿದ್ದು, ಇದರಲ್ಲಿ ಶೇಕಡ ೬೫ರಷ್ಟನ್ನು ಕೇಂದ್ರ ಭರಿಸಲಿದೆ. ಉಳಿದಿದ್ದನ್ನು ರಾಜ್ಯ ಸರ್ಕಾರ ತುಂಬಲಿದೆ ಎಂದು ತಿಳಿಸಿದರು.
Tagged with
snews
ಮಂಗಳೂರು: ನಿಲ್ಲಿಸಿದ್ದ ಕಾರಿನ ಗ್ಲಾಸ್ ಕಟ್ ಮಾಡಿ ಕಾರಿನಲ್ಲಿದ್ದ ೩.೫ ಲಕ್ಷ ರೂ. ಅಪಹರಿಸಿದ ಘಟನೆ ನಿನ್ನೆ ವೆಲೆನ್ಸಿಯಾದ ಸ್ಟೇಟ್‌ಬ್ಯಾಂಕ್ ಬಳಿ ನಡೆದಿದೆ.
ಪಾರ್ಕಿಂಗ್ ಸ್ಥಳದಲ್ಲಿ ಪಳ್ನೀರ್ ಗುಲ್ಶನ್ ಅಪಾರ್ಟ್‌ಮೆಂಟ್ ನಿವಾಸಿ ಖಮರುದ್ದೀನ್ ಎಂಬವರು ತಮ್ಮ ರಿಡ್ಝ್ ಕಾರನ್ನು ಪಾರ್ಕ್ ಮಾಡಿ ಬ್ಯಾಂಕ್‌ಗೆ ಹೋಗಿದ್ದು ೧೫ ನಿಮಿಷಗಳಲ್ಲಿ ಬ್ಯಾಂಕ್ ನಿಂದ ಹೊರಗೆ ಬಂದಿದ್ದರೆನ್ನಲಾಗಿದೆ. ಅಷ್ಟೋತ್ತಿನಲ್ಲಿ ಅವರ ಕಾರಿನ ಚಾಲಕನ ಬದಿಯ ಗ್ಲಾಸ್ ಒಡೆದು ಕಾರಿನ ಎದುರಿನ ಸೀಟ್‌ನಲ್ಲಿ ಇಟ್ಟಿದ್ದ ೩.೫ ಲಕ್ಷ ರೂ.ಗಳಿದ್ದ ಬ್ಯಾಗ್‌ನ್ನು ಅಪಹರಿಸ ಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾ ಗಿದೆ. ಖಮರುದ್ದೀನ್ ಮೆಡಿಸಿನ್ ವ್ಯಾಪಾ ರಿಯಾಗಿದ್ದು, ವ್ಯವಹಾರಕ್ಕೆ ಸಂಬಂಧಿ ಸಿದ ಹಣ ಬ್ಯಾಂಕ್‌ಗೆ ಕಟ್ಟಲು ಬಂದಿದ್ದ ರು ಎಂದು ಹೇಳಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Tagged with
cnews,
lnews
ಪುತ್ತೂರು: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಸಂಪ್ಯ ಪೊಲೀಸರು ಐವರನ್ನು ಬಂಧಿಸಿದ ಘಟನೆ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಕುರುಡ ಕಟ್ಟೆಯಿಂದ ವರದಿಯಾಗಿದೆ.
ಬಲ್ನಾಡು ಗ್ರಾಮದ ಚನಿಲದ ರಾಜೇಶ್ ನಾಯ್ಕ, ರಾಮಣ್ಣ ಪೂಜಾರಿ, ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ನಿಡ್ಯಾಲದ ಮೋನಪ್ಪ ಗೌಡ, ಹೊನ್ನಪ್ಪ ಗೌಡ, ಮತ್ತು ಕೋಡಂದೂರಿನ ಆಲ್ಬರ್ಟ್ ಡಿಸೋಜಾ ಬಂಧಿತ ಆರೋ ಪಿಗಳು. ಸಂಪ್ಯ ಠಾಣೆಯ ಎಸ್.ಐ. ನಂದಕುಮಾರ್ ಮತ್ತು ಸಿಬ್ಬಂದಿ ಈ ಕಾರ್ಯಾ ಚರಣೆ ನಡೆಸಿದ್ದರು. ಆಟಕ್ಕೆ ಬಳಸಿದ ರೂ.೫ ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎ.ಎಸ್.ಐ ಚೆಲುವಯ್ಯ, ಸಿಬಂದಿ ಗಂಗಾಧರ, ರಮೇಶ್, ಹರೀಶ್, ಉದಯ ಮತ್ತು ವಸಂತ ಕಾರ್ಯಾ ಚರಣೆಯಲ್ಲಿ ಸಹಕರಿಸಿದ್ದರು.
Tagged with
cnews,
lnews
ಪುತ್ತೂರು: ರಾಜ್ಯದ ಗಡಿ ಪ್ರದೇಶದಲ್ಲಿರುವ ಕರ್ನೂರು-ಗಾಳಿಮುಖ ರಸ್ತೆ ಮತ್ತು ಮೇನಾಲ ಮೆಣಸಿನಕಾನ ರಸ್ತೆಯ ಅಭಿವೃಧ್ದಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಎ. ೧೦ರೊಳಗೆ ಈ ಎರಡೂ ಕಾಮಗಾರಿಗಳನ್ನು ಆರಂಭಿಸುವುದಾಗಿ ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಚೇರಿಯ ಎದುರು ನಡೆಸಲುದ್ದೇಶಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಮ ಪಕ್ಕಳ ಕರ್ನೂರು ತಿಳಿಸಿದ್ದಾರೆ.
ಸಂಬಂಧಪಟ್ಟ ಇಲಾಖೆ ಎ.೧೦ರೊಳಗೆ ಕಾಮಗಾರಿ ಪ್ರಾರಂಭಿಸದಿ ದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದವರು ತಿಳಿಸಿದ್ದಾರೆ.
Tagged with
lnews
ಮಂಗಳೂರು: ಪೈರೇಟೆಡ್ ಸಾಫ್ಟ್ ವೇರ್ ಉಪಯೋಗಿಸುತ್ತಿ ದ್ದಾರೆಂದು ಆರೋಪಿಸಿ ಬಹುರಾ ಷ್ಟ್ರೀಯ ಕಂಪ್ಯೂಟರ್ ಸಾಫ್ಟ್‌ವೇರ್ ಸಂಸ್ಥೆಗಳು ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ಬಲದೊಂ ದಿಗೆ ನಡೆಸಿದ ದಾಳಿಯನ್ನು ಖಂಡಿಸಿ ಕರಾವಳಿ ಕರ್ನಾಟಕ ಕಂಪ್ಯೂಟರ್ ಬಳಕೆದಾರರ ಸಂಘದ ವತಿಯಿಂದ ದಿ.೨೯-೩-೨೦೧೨ ರಂದು ನಗರದ ವುಡ್ ಲ್ಯಾಂಡ್ಸ್ ನಲ್ಲಿ ತುರ್ತುಸಭೆ ಕರೆಯಲಾಗಿದೆ.
ಕಂಪ್ಯೂಟರ್ ಸಾಕ್ಷರರ ಸಂಖ್ಯೆ ಹೆಚ್ಚಿರುವ ಕರಾವಳಿ ಪ್ರದೇಶದಲ್ಲಿ ಅನೇಕ ಮುದ್ರಣ, ಡಿ.ಟಿ.ಪಿ, ಪ್ರಕಾಶನ , ಫೋಟೊ ಸ್ಟುಡಿಯೋಗಳು ಹಾಗೂ ಚಿಕ್ಕ ಪುಟ್ಟ ಪತ್ರಿಕೆಗಳು ಕಂಪ್ಯೂಟರ್ ಉಪಯೋಗಿಸಿ ತಮ್ಮ ಮುದ್ರಣ ಕಾರ‍್ಯಗಳನ್ನು ಕೈಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಹುರಾಷ್ಟ್ರೀಯ ಕಂಪ್ಯೂಟರ್ ಸಾಫ್ಟ್‌ವೇರ್ ಸಂಸ್ಥೆಗಳು ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಪ್ಯೂಟರ್ ಬಳಕೆದಾರರ ಮೇಲೆ ನಕಲು ಪೈರೇಟೆಡ್ ಸಾಫ್ಟ್‌ವೇರ್ ಉಪಯೋಗಿಸುತ್ತಿದ್ದೀರಿ ಎಂದು ದಾಳಿ ನಡೆಸಲಾಗಿತ್ತು. ಇದರಿಂದ ಸಣ್ಣ ಪುಟ್ಟ ಕಂಪ್ಯೂಟರ್ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದೆ. ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲು ಸಭೆಯನ್ನು ಕರೆಯಲಾಗಿದೆ ಎಂದು ಕರಾವಳಿ ಕರ್ನಾಟಕ ಕಂಪ್ಯೂಟರ್ ಬಳಕೆದಾರರ ಸಂಘದ ಉಪಾಧ್ಯಕ್ಷ ಮೋಹನ್ ದಾಸ್ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tagged with
lnews
ಪಡುಬಿದ್ರಿ: ಉದ್ಯಾವರದ ನಿವಾಸಿ ಹರೀಶ್ ಸಾಲ್ಯಾನ್(೩೮) ಎಂಬವರು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಇದರಿಂದ ಹೊರಬರಲಾಗದೆ ಮನೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ಪ್ರಕರಣ ದಾಖಲಾಗಿದೆ.
Tagged with
cnews,
death

ಮಂಜೇಶ್ವರ: ವಿದ್ಯಾರ್ಥಿನಿಯೋರ್ವಳ ತಂದೆಗೆ ಫೋನಾಯಿಸಿ ಬೆದರಿಕೆಯೊಡ್ಡಿ ಹಣ ಪಡೆಯಲು ಯತ್ನಿಸಿದ ನಾಲ್ವರ ತಂಡದಲ್ಲಿನ ಒರ್ವನನ್ನು ಮಂಜೇಶ್ವರ ಪೋಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಈ ಸಂದರ್ಭ ಜೊತೆಗಿದ್ದ ಮೂವರು ಓಡಿ ಪರಾರಿಯಾಗಿದ್ದಾರೆ. ವಾಮಂಜೂರು ನಿವಾಸಿ ಅಬ್ದುಲ್ಲ ಎಂಬವರ ಪುತ್ರ ಯಾಕೂಬ್(೨೫) ಬಂಧಿತ ಯುವಕ. ಓಡಿ ಪರಾರಿಯಾದ ಅಬ್ಬಾಸ್ ಸೇರಿದಂತೆ ಕಂಡಲ್ಲಿ ಗುರುತು ಪತ್ತೆ ಹಚ್ಚಬಹುದಾದ ಇನ್ನೋರ್ವನ ಮೇಲೆ ಮಂಜೇಶ್ವರ ಪೋಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ೧೧ ಘಂಟೆ ಸುಮಾರಿಗೆ ಹೊಸಂಗಡಿಯಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯೂ ಬಂದ್ಯೋಡು ಅಡ್ಕದ ನಿವಾಸಿ ಹಾಗೂ ಹೊಸಂಗಡಿಯ ಅನ್ಯ ಕೋಮಿನ ಯುವಕನೊಂದಿಗೆ ಕಳೆದ ಸೋಮವಾರ ಮಾತುಕತೆಯಲ್ಲಿದ್ದ ವೇಳೆ ಈ ನಾಲ್ವರ ತಂಡ ಒಟ್ಟಿಗೆ ಫೋಟೊ ತೆಗೆಸಿ ಬಳಿಕ ಬಿಡುಗಡೆಗೊಳಿಸಿದ್ದರು. ಬಳಿಕ ಯುವತಿಯ ತಂದೆಗೆ ಈ ತಂಡ ಫೋನಾಯಿಸಿ ಹಣ ಕೇಳಿದ್ದಲ್ಲದೆ ಹಣ ನೀಡದಿದ್ದಲ್ಲಿ ಈ ಫೋಟೊವನ್ನು ಪತ್ರಿಕೆಗಳಿಗೆ ನೀಡುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಈ ತಂಡ ೨ ಲಕ್ಷ ರೂ. ಕೇಳಿರುವುದಾಗಿ ಯುವತಿಯ ತಂದೆ ಪೋಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಪೋಲೀಸರ ಆದೇಶದಂತೆ ಹಣ ನೀಡುವೂ ದಾಗಿ ತಂಡದಲ್ಲಿ ಹೇಳಿದ್ದು ಇದರಂತೆ ತಂಡವು ನಿನ್ನೆ ಬೆಳಿಗ್ಗೆ ಹೊಸಂಗಡಿ ಪೇಟೆಯಲ್ಲಿನ ಅಂಗಡಿ ಯೊಂದರ ಸಮೀಪ ಬರುವಂತೆ ಸೂಚಿಸಲಾ ಗಿತ್ತು. ಯುವತಿಯ ತಂದೆ ಹಣ ನೀಡುತ್ತಿದ್ದ ವೇಳೆ ಪೋಲೀಸರು ಕಾರ್ಯಾಚರಿಸಿದ್ದು ಒರ್ವನನ್ನು ಬಂಧಿಸಿದ್ದು ಈ ಸಂದರ್ಭ ಇತರ ಮೂವರು ಪಾರಾಗಿದ್ದಾರೆನ್ನಲಾಗಿದೆ.
ಆರೋಪಿಗಳನ್ನು ಬಂಧಿಸಿದ್ದು ಹೀಗೆ: ಹಣ ಕೇಳಿದ ಬಗ್ಗೆ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದ ಯುವತಿಯ ತಂದೆ ಪೋಲೀಸ್ ನಿರ್ದೇಶದಂತೆ ಹಣ ನೀಡಲು ತಯಾರಾಗಿದ್ದರು. ಹಣ ನೀಡಲು ಹೊಸಂಗಡಿಯ ಅಂಗಡಿಯೊಂದರ ಸಮೀಪ ಬರುವಂತೆ ಸೂಚಿಸಿದ್ದು ಇದರಂತೆ ಮಂಜೇಶ್ವರ ಸಬ್ ಇನ್ಸ್‌ಪೆಕ್ಟರ್ ತಂಡ ಹೇಳಿದ ಸಮಯಕ್ಕಿಂದ ತುಸು ಮೊದಲೇ ಫರ್ದಾ ಧರಿಸಿ ಸ್ಥಳದಲ್ಲಿದ್ದರು. ಹಣ ನೀಡುತ್ತಿದ್ದ ವೇಳೆ ಫರ್ದಾ ಧರಿಸಿದ್ದ ಎಸ್.ಐ ರಾಜೇಶ್ ನಾಲ್ವರನ್ನು ಹಿಡಿಯಲು ಯತ್ನಿಸಿದ್ದು ಈ ಸಂದರ್ಭ ರಿವಾಲ್ವರ್ ತೋರಿಸಿ ಯಾಕೂಬ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆಯುತ್ತಿದ್ದ ವೇಳೆ ಸಮೀಪದ ಅಂಗಡಿಯೊಂದರಿಂದ ಸಾಮಾನು ಖರೀದಿಸಲು ಬಂದಿದ್ದ ಪೊಸೋಟ್ ನಿವಾಸಿ ಮಹ್ಮೂದ್ ಹಾಜ ಎಂಬವರ ಪುತ್ರ ಬಿ.ಎಂ ಸಹೀರ್ (೧೭) ಎಂಬಾತನನ್ನು ಠಾಣೆಗೆ ಕೊಂಡೊಯ್ದು ಚೆನ್ನಾಗಿ ತಳಿಸಿ ಬಳಿಕ ಬಿಡುಗಡೆ ಗೊಳಿಸಿದ್ದರು. ಮಂಜೇಶ್ವರ ಪೋಲೀಸರ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಸಹೀರ್ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಎಸ್.ಐ ನೇತೃತ್ವದ ಪೋಲೀಸರ ತಂಡ ತನ್ನ ಮೇಲೆ ಯದ್ವಾ ತದ್ವಾ ಹೊಡೆದಿದ್ದಾರೆಂದು ದೂರಿದ್ದಾನೆ. ಪೋಲೀಸರ ದೌರ್ಜನ್ಯವನ್ನು ಪ್ರತಭಟಿಸಿ ಸ್ಥಳೀಯರ ನೇತೃತ್ವದಲ್ಲಿ ನಿನ್ನೆ ಸಂಜೆ ಹೊಸಂಗಡಿ ಪೇಟೆಯಲ್ಲಿ ಬಾರೀ ಪ್ರತಿಭಟನೆ ನಡೆಯಿತು.
Tagged with
cnews
ಕಾಸರಗೋಡು: ಸಂಚರಿಸುತ್ತಿದ್ದ ಬಸ್ಸಿನಿಂದ ಹೊರಕ್ಕೆಸೆಯಲ್ಪಟ್ಟು ಮಹಿಳೆ ಗಂಭೀರ ಜಖಂಗೊಂಡಿದ್ದಾಳೆ.
ಕುಂಬಳೆ ಬಸ್ ನಿಲ್ದಾಣ ಸಮೀಪ ನಿನ್ನೆ ಮಧ್ಯಾಹ್ನ ಘಟನೆ ಸಂಭವಿಸಿದೆ. ಗಂಭೀರ ಸ್ವರೂಪದ ಗಾಯಗಳುಂ ಟಾದ ಕುಂಬಳೆ ಬತ್ತೇರಿಯ ಜಯಪ್ರಕಾಶರ ಪತ್ನಿ ಶಶಿಕಲಾ(೨೯) ಎಂಬವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಶಶಿಕಲಾ ಕುಂಬಳೆಗೆ ಪ್ರಯಾಣಿಸುತ್ತಿದ್ದರು. ಆದರೆ ಆತುರಾತುರವಾಗಿ ಬಂದ ಬಸ್ ಕುಂಬಳೆ ಬಸ್‌ಸ್ಟಾಂಡಿನೊಳಗಡೆ ಹೋಗದೆ ರಸ್ತೆ ಬದಿಯಲ್ಲೇ ಪ್ರಯಾ ಣಿಕರನ್ನಿಳಿಸಿತ್ತು.
ಶಶಿಕಲಾರು ಇಳಿಯುವಷ್ಟರಲ್ಲಿ ಬಸ್ ಹೊರಟೇ ಬಿಟ್ಟಿತ್ತು. ಇಳಿಯುವ ಆತುರದಲ್ಲಿ ಆಯ ತಪ್ಪಿದ ಅವರು ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದಿದ್ದರು. ಘಟನೆ ಬಗ್ಗೆ ಬಸ್ ಚಾಲಕ ಮುಲ್ಲಪ್ಪ ಎಂಬಾತನ ವಿರುಧ್ಧ ಕೇಸು ದಾಖಲಿಸಲಾಗಿದೆ.
Tagged with
lnews
ಬಂಟ್ವಾಳ: ತಹಶೀಲ್ದಾರರಿಂದ ಅಂಬೇಡ್ಕರ್‌ಗೆ ಅವಮಾನವಾಗಿದೆ ಎಂದು ಆರೋಪಿಸಿದ ದಲಿತ ಸಂಘ ಟಕರು ನಿನ್ನೆ ತಾಲೂಕು ಕಚೇರಿಯಲ್ಲಿ ನಡೆದ ಅಂಬೇಡ್ಕರ್ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಬಹಿಷ್ಕರಿ ದ್ದಾರೆ. ಡಾ|| ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ೧೨೨ನೇ ಜನ್ಮ ದಿನಾಚರಣೆ ಪ್ರಯುಕ್ತ ನಿನ್ನೆ ಪ್ರಭಾರ ತಹಶೀಲ್ದಾರ್ ರವಿಚಂದ್ರ ನಾಯಕ್ ಅವರು ಸಭೆ ಕರೆದಿದ್ದರು. ಸಭೆಗೆ ಹಾಜರಾದ ದಲಿತ ಸಂಘಟಕರು ಕಳೆದ ವರ್ಷ ನಡೆದ ೧೨೧ನೇ ಅಂಬೇಡ್ಕರ್ ದಿನಾಚರಣೆ ಸಭೆಯಲ್ಲಿ ತಹಶೀಲ್ದಾರ್ ರವಿಚಂದ್ರ ನಾಯಕ್ ಅವರು ಅಂಬೇಡ್ಕರನ್ನು ಅಲಕ್ಷಿಸಿ ಮಾತನಾ ಡಿದ್ದರು. ಘಟನೆಯನ್ನು ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದ್ದರೂ, ಅವರು ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದ ದಲಿತ ಮುಖಂಡರು ಸಭೆಗೆ ತಹಶೀಲ್ದಾರ್ ಅಧ್ಯಕ್ಷತೆ ವಹಿಸ ಬಾರದೆಂದು ತಾಕೀತು ಮಾಡಿದ್ದು, ಸಭೆಯನ್ನು ಬಹಿಷ್ಕರಿ ಸಿದರು.
ಪೂರ್ವತಯಾರಿ ಸಭೆಗೆ ದಲಿತ ಸಮುದಾಯದವರನ್ನು ಹೊರತು ಬೇರೆಯಾರನ್ನೂ ಆಹ್ವಾನಿಸಿರಲಿಲ್ಲ. ತಾಲೂಕು ಮಟ್ಟದ ಇಲಾಖಾಧಿಕಾರಿ ಗಳನ್ನು ಕರೆದಿರಲಿಲ್ಲ ಎಂದು ಆರೋಪಿ ಸಿದ ಡಾ|| ಅಂಬೇಡ್ಕರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಭಾನು ಚಂದ್ರ ಕೃಷ್ಣಾಪುರ ಅವರು, ಎ.೧೪ರಂದು ತಾ. ಪಂ. ಎಸ್ ಜೆಎಸ್ ಆರ್‌ವೈ ಸಭಾಂU ಣದಲ್ಲಿ ನಡೆಯಲು ಉದ್ದೇಶಿಸಲಾದ ಅಂಬೇಡ್ಕರ್ ಜನ್ಮ ದಿನಾಚರಣೆ ಸಭಾರಂಭದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ. ದಲಿತ ಮುಖಂq ರಾದ ಶೇಷಪ್ಪ ಬೆದ್ರ ಕ್ಕಾಡು, ಹೊನ್ನಪ್ಪ ಕುಂದರ್ ಮತ್ತಿತರು ಈ ಸಂದರ್ಭದಲ್ಲಿದ್ದರು.
Tagged with
lnews
ಪಡುಬಿದ್ರಿ: ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಯು ರಾಜ್ಯಾದ್ಯಂತ ಇರುವ ಮಸೀದಿ, ಮದ್ರಸ, ದರ್ಗಾಗಳನ್ನು ಸರ್ಕಾರದ ತೆಕ್ಕೆಗೆ ತಂದು ಕೇಸರೀಕರಣಗೊಳಿಸುವ ಹುನ್ನಾರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಎಮ್.ಪಿ.ಮೊಯಿದಿನಬ್ಬ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧಕ್ಷ ಅನ್ವರ್ ಮಣಿಪಾಡಿ ನಂಬಿಕೆ ಯೋಗ್ಯರಲ್ಲವಾಗಿದ್ದು, ಯಾವುದೋ ಬೈಠಕ್‌ನಲ್ಲಿ ಕುಳಿತು ವರದಿ ತಯಾರಿಸಿದ್ದು, ರಾಜ್ಯದ ಅಲ್ಪಸಂಖ್ಯಾತರು ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕಾಗಿದೆ. ಆಯೋಗವು ಅಲ್ಪಸಂಖ್ಯಾತರು ಇರುವ ಸಮುದಾಯದ ಏಳಿಗೆಗೆ ಸರ್ಕಾರಕ್ಕೆ ವರದಿ ನೀಡಿ ಎಲ್ಲಾ ವಕ್ಫ್ ಸೊತ್ತುಗಳನ್ನು ಸರ್ಕಾರದ ಸ್ವಾಧೀನತೆಗೊಳಪಡಿಸುವ ಕುತಂತ್ರ ಇದರಲ್ಲಿ ಅಡಗಿದೆ ಎಂದೂ ಎಮ್.ಪಿ. ಮೊಯಿದಿನಬ್ಬ ಆರೋಪಿಸಿದ್ದಾರೆ.
Tagged with
lnews
ಮಂಗಳೂರು: ಸಯನೈಡ್ ಕಿಲ್ಲರ್ ಮೋಹನಕುಮಾಮಾರ ನಡೆಸಿರುವನೆನ್ನಲಾದ ಸರಣಿ ಹತ್ಯಾ ಪ್ರಕರಣದ ವಿಚಾರಣೆ ಮಹಜರು ನಡೆಸಲಾದ ಚಿನ್ನ ಸಕಾಲಕ್ಕೆ ಬಾರದಿದ್ದುರಿಂದ ಮುಂದುಡಲ್ಪಟ್ಟ ಘಟನೆ ಮಂಗಳೂರು ತ್ವರಿತಗತಿ ನ್ಯಾಯಾ ಲಯದಲ್ಲಿ ನಿನ್ನೆ ನಡೆಯಿತು. ಮಡ್ಯಂತಾರಿನ ಯಶೋದಾ ಚಿನ್ನವನ್ನು ಮೋಹನಕುಮಾರ ಅಡವಿಟ್ಟಿದ್ದ ಚಿನ್ನ ವಶಪಡಿಸಿಕೊಂಡ ಬಗ್ಗೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ತ್ವರಿತಿಗತಿ ನ್ಯಾಯಾಲಯದಲ್ಲಿ ನಡೆದಿತ್ತು. ನ್ಯಾಯಾಽಶರ ಎದುರು ಚಿನ್ನ ಗುರುತಿಸಬೇಕಾಗಿದ್ದು, ಆ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದಾಗಿ ಸಕಾಲಕ್ಕೆ ಚಿನ್ನ ನ್ಯಾಯಾಲಯಕ್ಕೆ ತರಲಾಗಿರಲಿಲ್ಲ ಚಿನ್ನಕ್ಕಾಗಿ ಸ್ವಲ್ಪ ಸಮಯ ಕಾದ ನ್ಯಾಯಾಽರರು ಬಳಿಕ ವಿಚಾರಣೆಯನ್ನು ಮುಂದುಡಿದರು.
ಇಂದಿನ ವಿಚಾರಣೆ ಆರಂಭದಲ್ಲಿ ಯಶೋದಾಳ ಜೊತೆಯಲ್ಲಿ ಮೋಹನಕುಮಾರ ವಾಸವಾಗಿದ್ದನೆನ್ನಲಾದ ಹಾಸನದ ಗಣೇಶ ಲಾಡ್ಜ್‌ನ ಸ್ವಾಗತಕಾರ ಲೋಕೇಶ ಎಂಬಾತ ಮೋಹನಕುಮಾರನನ್ನು ಗುರುತಿಸಿ ಈತ ಶಶಿಧರ ಪೂಜಾರಿ ಎಂಬ ಹೆಸರಿನಲ್ಲಿ ಯುವತಿಯೊಂದಿಗೆ ತಮ್ಮ ಲಾಡ್ಜ್‌ನಲ್ಲಿದ್ದುದಾಗಿ ಮಾಹಿತಿ ನೀಡಿದ.
Tagged with
lnews
ಪಡುಬಿದ್ರಿ: ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಉಪಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ತಾತ್ಕಾಲಿಕವಾಗಿದ್ದು, ಮತದಾರರು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಶಾಸಕರಾಗಿದ್ದ ಸಮಯದಲ್ಲಿ ಮಾಡಿದ ದುರಹಂಕಾರದ ವರ್ತನೆಗಳಿಂದ ರೋಸಿ ಹೋಗಿದ್ದು, ಅವರ ನೆಗೆಟಿವ್ ಮತಗಳನ್ನು ಪಡೆಯುವ ಅವಕಾಶ ಕಾಂಗ್ರೆಸ್‌ಗೆ ಲಭಿಸಿದ್ದೇ ವಿನಃ ಫಲಿ ತಾಂಶ ಕಾಂಗ್ರೆಸ್ ಪರವೂ ಅಲ್ಲ. ಜಯಪ್ರಕಾಶ್ ಹೆಗ್ಡೆಯವರ ವೈಯಕ್ತಿಕ ವರ್ಚಸ್ಸಿನಲ್ಲಿ ಗೆದ್ದಿಲ್ಲ ಎಂದು ಉಡುಪಿ ಜೆಡಿಎಸ್ ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಪಡುಬಿದ್ರಿಯಲ್ಲಿ ನಡೆದ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಮುಸ್ಲಿಮ್ ಸಂಘ ಟನಾ ನಾಯಕರ ವಿರುದ್ಧ ನೂರಾರು ಕೇಸುಗಳನ್ನು ಹಾಕಿದ್ದರು. ಈಗಲೂ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಮರನ್ನು ಮೇಲಕ್ಕೆ ಬರದಂತೆ ಉಪಾಯವಾಗಿ ದಮನಿಸಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಮೊಸಳೆ ಕಣ್ಣೀರು ಹಾಗೂ ದಮನಕಾರಿ ನೀತಿಯು ಈ ದೇಶದ ಭವಿಷ್ಯತ್‌ಗೆ ಗಂಡಾಂತರ ಕಾರಿಯಾಗುತ್ತದೆ. ಏನಿದ್ದರೂ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಭಾರೀ ಸೋಲಿನ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಮುಂದಕ್ಕೆ ನೂತನ ಮಾದರಿಯಲ್ಲಿ ಪಕ್ಷವನ್ನು ಪುನರ್‌ಸಂಘಟನೆ ಮಾಡಿ ಬಿರುಗಾಳಿಯಂತೆ ಮುಂಬರುವ ಚುನಾವಣೆಗಳಲ್ಲಿ ಎದ್ದು ಬರುವನೆಂದು ಹಾಗೂ ರಾಜ್ಯದಲ್ಲಿ ಕುಮಾರಸ್ವಾಮಿ ಯವರ ನೇತೃತ್ವದ ಜನಪರ ಆಡಳಿತ ಮತ್ತೊಮ್ಮೆ ಬರಲಿದೆಯೆಂದು ಗುಲಾಂ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕರಾದ ದೇವಿಪ್ರಸಾದ್ ಶೆಟ್ಟಿ, ಮಹೇಂದ್ರಕುಮಾರ್, ಶಾಲಿನಿ ಶೆಟ್ಟಿ, ಲೂಯಿಸ್ ಲೋಬೋ, ಪ್ರದೀಪ್ ಜಿ, ವಾಸುದೇವ ರಾವ್ ಇದ್ದರು.
Tagged with
lnews
ಮಂಗಳೂರು: ಆಲಂಪಾಡಿ ಉಸ್ತಾದ್‌ರವರ ಅನುಸ್ಮರಣೆ ಸಮ್ಮೇಳನವು ಇಂದು ಕಾಸರಗೋಡಿನ ಆಲಂಪಾಡಿ ಯತೀಂಖಾನ್ ವಠಾರದಲ್ಲಿ ಇಂದು ಸಂಜೆ ೪.೩೦ಕ್ಕೆ ಜರಗಲಿದೆ. ಈ ಕಾರ‍್ಯಕ್ರಮವನ್ನು ಆಟಕೋಯ ತಂಙಳ್ ಉದ್ಘಾಟಿಸ ಲಿದ್ದು ಬೇಕಲ ಉಸ್ತಾದ್, ಪೇರೋಡ್ ಉಸ್ತಾದ್ ಮೊದಲಾದ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
Tagged with
briefs
ಮಂಗಳೂರು: ಎರಡು ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಗಾಯಗೊಂಡ ಘಟನೆ ಮಣಿಪಾಲ ಸಮೀಪದ ಲಕ್ಷ್ಮೀಂದ್ರನಗರದಲ್ಲಿ ನಿನ್ನೆ ನಡೆದಿದೆ. ಕಾಂತಾವರ ನಿವಾಸಿ ಗೋಪಾಲ ನಾಯ್ಕ ಎಂಬವರು ನಿನ್ನೆ ಮುಂಜಾನೆ ತಮ್ಮ ಅಕ್ಕನ ಮಗ ಶೇಖರ ನಾಯ್ಕ ಎಂಬವರ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮುಂಭಾಗದಿಂದ ಬಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಶೇಖರ್ ಅವರು ಗಾಯಗೊಂಡಿದ್ದಾರೆ.
Tagged with
lnews
ಮಂಗಳೂರು: ವಿವಿಧ ಕಂಪೆನಿಗಳ ವಿಷ ತ್ಯಾಜ್ಯವನ್ನು ಸಮು ದ್ರಕ್ಕೆ ಬಿಡಲು ಹುನ್ನಾರ ನಡೆಸಿರುವ ಎಂಎಸ್‌ಇಝಡ್ ವಿರುದ್ಧ ಮತ್ತೊಂದು ಪ್ರತಿಭಟನೆ ನಡೆಸಲು ಪಣಂಬೂರು ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ತೀರ್ಮಾನಿಸಿದೆ. ಬುಧವಾರ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿದ ಮೀನುಗಾರರು ತಮ್ಮ ಮುಂದಿನ ಕಾರ್ಯಯೋಜನೆ ಬಗ್ಗೆ ಸ್ಥೂಲ ಯೋಜನೆ ರೂಪಿಸಿದ್ದಾರೆ.
ಬುಧವಾರ ಮುಂಜಾನೆ ಚಿತ್ರಾಪುರ ದೇವಸ್ಥಾನದಲ್ಲಿ ಸಭೆ ಸೇರಿದ ಮೀನುಗಾರರು ಮೊದಲಾಗಿ ಚಿತ್ರಾಪುರ ದೇವಿಗೆ ಪೂಜೆ ಅರ್ಪಿಸಿ ಬಳಿಕ ಸಮುದ್ರ ತೀರದಲ್ಲಿ ಸಭೆ ಸೇರಿ ಈವರೆಗೆ ನಡೆದಿ ರುವ ಘಟನೆಗಳ ಬಗ್ಗೆ ಅವಲೋಕನ ನಡೆಸಿದರು ಸಭೆಯಲ್ಲಿ ವಿವಿಧ ಕಡೆಯಿಂದ ಬಂದಿರುವ ಮೊಗವೀರರು ಭಾಗವಹಿಸಿದ್ದರು.
ವರುಷದ ಹಿಂದೆ ಎಂಎಸ್ ಇಝಡ್ ತ್ಯಾಜ್ಯ ವಿಸರ್ಜನೆಗಾಗಿ ಪೈಪ್ ಅಳವಡಿಸಲು ಬಂದಿದ್ದ ಬಾರ್ಜನ್ನು ಕರಾವಳಿಯ ಎಲ್ಲಾ ಮೀನುಗಾರರು, ಮೀನುಗಾರ ಸಂಘಟನೆಗಳು ಒಂದಾಗಿ ಹಿಮ್ಮೆಟ್ಟಿಸಿದ್ದರು. ಆದರೆ ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಕಂಪೆನಿ ಜೊತೆ ಮಾತುಕತೆ ನಡೆಸಿದ ಒಂದು ಭಾಗದ ಮೀನುಗಾರರು ತಮ್ಮನ್ನು ತಾವೇ ಮೀನುಗಾರರ ಮುಖಂಡರು ಎಂದು ಪರಿಚಯಿಸಿಕೊಂಡು ಕೇವಲ ಒಂದು ವರ್ಗಕ್ಕೆ ಸೀಮಿತವಾದ ಪರಿಹಾರಕ್ಕೆ ಅಸ್ತು ಎಂದಿದ್ದರು. ಅಲ್ಲದೆ ಈ ಪರಿಹಾರವನ್ನು ತಾವೇ ಪಡೆದು ಕೊಂಡು ಸುಮ್ಮನಿದ್ದಾರೆ. ಇದರಿಂದಾಗಿ ಒಂದು ಕಡೆ ಮೀನುಗಾರರ ಸಂಘಟನೆ ಒಡೆದು ಹೋಗುವ ಹಂತಕ್ಕೆ ಬಂದಿದ್ದರೆ ಇನ್ನೊಂದು ಕಡೆ ಮೀನುಗಾರ ಸಮು ದಾಯದ ಹೆಸರಿನಲ್ಲಿ ಪರಿಹಾರವನ್ನು ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಪಡೆದುಕೊಳ್ಳುವಂತಾಗಿದೆ ಎಂಬ ಆರೋಪ ಮೀನುಗಾರರಿಂದ ಕೇಳಿಬಂದಿದೆ. ಮುಕ್ಕ ಸಸಿಹಿತ್ಲು ಭಾಗದ ಕೆಲ ಮೊಗವೀರರು ತಾವು ಮಾತ್ರ ಪರಿಹಾರ ಧನವನ್ನು ಪಡೆದುಕೊಂಡು ಸುಮ್ಮನಿದ್ದಾರೆ. ಅಲ್ಲದೆ ಇಲ್ಲಿನ ಕೆಲ ಮೊಗವೀರ ಸಂಘಟನೆಗಳೂ ಲಕ್ಷ ಲಕ್ಷ ಪರಿಹಾರವನ್ನು ಪಡೆದುಕೊಂಡಿದೆ. ವಾಸ್ತವವಾಗಿ ಎಂಎಸ್‌ಇಝಡ್ ತ್ಯಾಜ್ಯ ಸಸಿಹಿತ್ಲು, ಮುಕ್ಕದ ಮೀನುಗಾರರ ಕಾಲ ಬುಡದಲ್ಲಿ ವಿಸರ್ಜನೆಯಾಗುತ್ತಿದೆ ಎನ್ನುವುದನ್ನು ಅವರು ಮರೆತ್ತಿದ್ದಾರೆ. ಹಾಗೆಂದು ನಾವು ಮರೆಯುವಂತಿಲ್ಲ, ಯಾಕೆಂದರೆ ವಿಷ ತ್ಯಾಜ್ಯದ ಪರಿಣಾಮ ನಾಳೆ ಇಡೀ ಕರಾವಳಿ ಮುತ್ತಲಿದೆ ಎಂಬ ಅಭಿಪ್ರಾಯ ಮೀನುಗಾರರದ್ದು. ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಸಮಸ್ತ ಮೊಗವೀರ ಸಂಘಟನೆಗಳ ಸಭೆಯನ್ನು ಕರೆಯಬೇಕು. ಎಂಎಸ್‌ಇಝಡ್ ತ್ಯಾಜ್ಯದಿಂದ ಮೀನಿನ ಸಂತತಿ ನಾಶವಾಗಿ ಮೀನುಗಾರಿಕೆಗೆ ತೊಡಕಾಗುವ ಕಾರಣ ಮೀನುಗಾರರಿಗೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಮನೆಗೊಂದು ಉದ್ಯೋಗದ ಬೇಡಿಕೆ ಮೀನುಗಾರರಿಂದ ಇತ್ತಾದರೂ ಈ ಬಾರಿ ಉದ್ಯೊಗ ಭರವಸೆಯನ್ನು ಅವರು ಕೈ ಬಿಟ್ಟಿದ್ದು, ಒಂದಾ ಶಾಶ್ವತ ಪರಿಹಾರ ನೀಡಬೇಕು ಇಲ್ಲವಾದರೆ ಸಾಂಪ್ರದಾಯಿಕ ಮೀನುಗಾರಿಕೆ ನಶಿಸುವ ಕಾರಣ ಯಾಂತ್ರೀಕೃತ ಮೀನುಗಾರಿಕೆ ನಡೆಸಲು ತಲಾ ಹತ್ತು ಮಂದಿ ಮೊಗವೀರರಿಗೆ ಒಂದರಂತೆ ಬೋಟ್ ನೀಡಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಲು ಮೀನುಗಾರರ ಮುಖಂಡರು ಬುಧವಾರ ಬೆಂಗಳೂರಿಗೆ ತೆರಳಿದ್ದು ಇಂದು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರದೆ ಇದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಖಚಿತ ಎಂದು ಸಾಂಪ್ರಾದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
Tagged with
lnews
ಕಾರ್ಕಳ: ಹೆಬ್ರಿ ಸಮೀಪದ ನಾಡ್ಪಾಲು ಅರ್ಬಿ ಬೊಟ್ಟುಕಂಬಳ ಎಂಬಲ್ಲಿ ವಿದ್ಯುತ್ ಆಘಾತಕ್ಕೆ ವೃದ್ಧರೊಬ್ಬರು ದಾರುಣ ರೀತಿಯಲ್ಲಿ ಸಾವಿಗೀಡಾಗಿದ್ದಾರೆ.
ದಯಾನಂದ ಪೂಜಾರಿ(೬೩) ಎಂಬವರು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು. ನಿನ್ನೆ ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಬೂದು ಪೂಜಾರಿ, ಗೋಪಾಲ ಪೂಜಾರಿ ಯೊಂದಿಗೆ ದಯಾನಂದ ಪೂಜಾರಿ ಅವರು ಅರ್ಬಿ ಬೊಟ್ಟುಕಂಬಳದ ಪ್ರಭಾಕರ ಹೆಗ್ಡೆಯವರ ತೋಟದ ಕೆಲಸಕ್ಕೆ ಹೋಗಿದ್ದರು. ಅಲ್ಯುಮಿ ನಿಯಂ ಪೈಪ್ ಸಹಾಯದಿಂದ ಅಡಿಕೆ ಕೊಯ್ದು, ಮತ್ತೊಂದು ಅಡಿಕೆ ಮರದತ್ತ ಅಲ್ಯುಮಿನಿಯಂ ಪೈಪ್‌ನ್ನು ಎತ್ತಿ ಕೊಂಡುಹೋಗುತ್ತಿದ್ದಾಗ ಮೇಲ್ಬಾಗ ದಲ್ಲಿ ಹಾದೂ ಹೋಗಿರುವ ವಿದ್ಯುತ್ ತಂತಿಗೆ ತಗಲಿ ಈ ಘಟನೆ ಸಂಭವಿಸಿದೆ.
Tagged with
lnews
ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆಗಾಗಿ ನಿನ್ನೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಚುನಾವಣಾ ಕಣ ರಂಗೇರು ವಂತೆ ಮಾಡಿದೆ.
೧೯೫೦ ಸದಸ್ಯರನ್ನು ಹೊಂದಿರುವ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಪ್ರದೀಪ ಕುಮಾರ್ ಕಲ್ಕೂರ ಕಾರ್ಯನಿರ್ವಹಿಸು ತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಪ್ರಥಮ ಬಾರಿಗೆ ನಡೆದ ಚುನಾವಣೆ ಯಲ್ಲಿ ಸ್ಪರ್ದಿಸಿದ್ದ ಕಲ್ಕೂರ ನಿರಾಳ ವಾಗಿ ಜಯಸಾದಿಸಿದ್ದು ಇದಕ್ಕೆ ಕಸಾಪದ ಮಾಜಿ ರಾಜ್ಯಾಧ್ಯಕ್ಷರಾಗಿರುವ ಹರಿಕೃಷ್ಣ ಪುನರೂರು ಬೆಂಬಲವೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು.
ಆದರೆ ಈ ಬಾರಿ ಕಲ್ಕೂರ ಅವರ ಮೇಲೆ ಅವ್ಯವಹಾರದ ಆರೋಪಗಳು ಕೇಳಿ ಬಂದಿದ್ದು ಇದೇ ವೇಳೆ ಕಸಾಪ ಅಧ್ಯಕ್ಷರ ಬದಲಾವಣೆಯ ಬೇಡಿಕೆ ಯೂ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ಈ ಬೇಡಿಕೆಗೆ ಸ್ಪಂಧಿಸಿರುವ ಹರಿಕೃಷ್ಣ ಪುನರೂರು, ಕಲ್ಕೂರ ವಿರುದ್ಧ ಸರ್ವೋತ್ತಮ್ ಆಂಚನ್‌ರನ್ನು ಕಣಕ್ಕಿಳಿಸಿದ್ದು ನಿನ್ನೆ ನಾಮಪತ್ರವನ್ನೂ ಸಲ್ಲಿಸಲಾಗಿದೆ. ಅವರು ಮಾತ್ರವಲ್ಲದೆ ಮಹೇಶ್ ನಾಯಕ್ ಮತ್ತು ಹರೀಶ್ ಎಂಬವರೂ ನಾಮ ಪತ್ರ ಸಲ್ಲಿಸಿರುವ ಕಾರಣ ಪ್ರಸ್ತುತ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮುಂದಿನ ತಿಂಗಳು ನಡೆಯುವ ಚುನಾ ವಣೆ ಕುತೂಹಲಕ್ಕೆ ಕಾರಣವಾಗಿದೆ.
Tagged with
lnews
ಉಪ್ಪಿನಂಗಡಿ: ಉಪ್ಪಿನಂಗಡಿ, ನೆಲ್ಯಾಡಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸು ತ್ತಿದ್ದ ಫ್ರೆಂಡ್ಸ್ ಹ್ಯಾಪಿ ಗಿಪ್ಟ್ ಸ್ಕೀಮ್ನ ತಂಡ ಇದೀಗ ಜನತೆಗೆ ವಂಚನೆ ಮಾಡಿದೆ ಎಂಬ ಆರೋಪಕ್ಕೆ ಒಳಗಾಗಿದೆ.
ಸುಮಾರು ೨೨೫ ಮಂದಿ ಸದಸ್ಯ ರನ್ನು ಹೊಂದಿರುವ ಈ ಸ್ಕೀಮ್‌ನ ಮಾಲಕ ಜಾರಿಗೆ ಬೈಲು ನಿವಾಸಿ ಹಮೀದ್. ಒಬ್ಬ ವ್ಯಕ್ತಿ ೫೦೦೦ ಸಾವಿರ ಹಣ ಕಟ್ಟಬೇಕು. ಇದರಲ್ಲಿ ಲಕ್ಕಿಡ್ರಾ ಕೂಡಾ ಇದ್ದು, ಬೈಕ್, ಗಾಡ್ರೇಜ್, ಅಲ್ಟೋ ಕಾರು ಹಾಗೂ ೫೦ ಸಾವಿರ ನಗದು ಹಣದ ಆಕರ್ಷಕ ಬಹುಮಾನ ಗಳಿವೆ. ಆದರೆ ಇದೀಗ ಈ ಸ್ಕೀಮ್ ಕೊನೆಯ ಹಂತದಲ್ಲಿದ್ದು, ೫ ಸಾವಿರ ಕಟ್ಟಿದ ಬಡ ಹಾಗೂ ಬೀಡಿ ಕಟ್ಟಿ ಜೀವನ ಮಾಡುತ್ತಿರುವ ಹಲವಾರು ಮಂದಿಗೆ ಕೇವಲ ೧ ಸಾವಿರ ರೂ. ಮೌಲ್ಯದ ವಸ್ತು ನೀಡಿದ ಈ ತಂಡ ಒಬ್ಬೊಬ್ಬರಿಗೆ ಕನಿಷ್ಠ ೪ ಸಾವಿರ ಹಣ ವಂಚನೆ ಮಾಡಿದೆ. ಈ ಮೂಲಕ ಲಕ್ಷಾಂತರ ರೂ ಜೇಬಿಗೆ ಇಳಿಸಿರುವುದಾಗಿ ತಿಳಿದು ಬಂದಿದೆ.
ನೆಕ್ಕಿಲಾಡಿ ನಿವಾಸಿ ಸಹರಾ ರಫೀಕ್ ಎಂಬವರು ಈ ಬ್ಲೇಡ್ ಕಂಪೆನಿ ವಿರುದ್ಧ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
Tagged with
lnews
ಕಾರ್ಕಳ: ನೀರು ಎಳೆಯುತ್ತಿದ್ದಾಗ ಹಗ್ಗ ತುಂಡರಿಸಿದ ಪರಿಣಾಮ ಮಹಿಳೆ ಯೊಬ್ಬರು ಬಾವಿಗೆ ಬಿದ್ದ ಘಟನೆ ಪೆರ್ವಾಜೆ ಪತ್ತೊಂಜಿಕಟ್ಟೆ ಎಂಬಲ್ಲಿ ಸಂಭವಿಸಿದೆ.
ಪತ್ತೊಂಜಿಕಟ್ಟೆ ಅಶೋಕ್ ಶೆಟ್ಟಿ ಅವರ ಪತ್ನಿ ವಂದನಾ ಶೆಡ್ತಿ(೨೭) ಎಂಬ ವರು ಘಟನೆಯಲ್ಲಿ ಜೀವಾಪಾಯದಿಂದ ಪಾರಾದವರು.
ಮಹಿಳೆಯನ್ನು ರಕ್ಷಿಸಲು ಗಣೇಶ್ ಶೆಟ್ಟಿ(೫೬) ಅವರು ಬಾವಿಗೆ ಇಳಿದರಾ ದರೂ, ಅನಾರೋಗ್ಯ ಪೀಡಿತರಾದು ದರಿಂದ ಮೇಲಕ್ಕೆ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿದ್ದ ಇಬ್ಬರನ್ನೂ ಮೇಲಕ್ಕೆ ತೆಗೆದು ಜೀವರಕ್ಷಿಸಿದ್ದಾರೆ.
Tagged with
lnews
ಜಾತಿ ರಾಜಕಾರಣ ಮಾಡಲು ಹೊರಟು ಕಾವಲಿಯಿಂದ ಒಲೆಗೆ ಬಿದ್ದಂ ತಾಗುತ್ತಿದೆ ಯಡ್ಡಿ ಪರಿಸ್ಥಿತಿ.
ಹೇಗಾದರೂ ಮಾಡಿ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಶತಪ್ರ ಯತ್ನ ಮಾಡುತ್ತಿದ್ದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಹೊಳೆದ ಹೊಸ ಉಪಾಯ ಜಾತಿ ರಾಜಕಾರಣ. ತಾನಿಲ್ಲದಿದ್ದರೆ ರಾಜ್ಯದ ಒಂದು ಪ್ರಮುಖ ಸಮುದಾಯವಾಗಿರುವ ಲಿಂಗಾಯತರ ಮತಗಳು ಬಿಜೆಪಿಗೆ ದಕ್ಕುವುದೇ ಇಲ್ಲ ಎಂಬಂತಹ ಪರಿಸ್ಥಿತಿಯ ಚಿತ್ರಣ ನಿರ್ಮಿಸಲು ಮುಂದಾದರು. ಆದರೆ ಈಗ ಅದುವೇ ಅವರಿಗೆ ಮುಳುವಾಗುವ ಲಕ್ಷಣ ಕಂಡು ಬರುತ್ತಿದೆ. ಅವರ ಉಪಾಯವೇ ಅವರಿಗೆ ಅಪಾಯ ವಾಗುವ ಸಾಧ್ಯತೆ ಗೋಚರಿಸುತ್ತಿದೆ.
ನಿನ್ನೆ ಮೊನ್ನೆಯವರೆಗೂ ಕರ್ನಾಟಕದ ಓರ್ವ ಪ್ರಮುಖ ಮತ್ತು ಪ್ರಭಾವಶಾಲಿ ಬಿಜೆಪಿ ನಾಯಕ ಎಂದು ಗುರುತಿಸಿಕೊಂಡಿದ್ದ, ಮಾಧ್ಯಮಗಳಿಂದಲೂ ಹಾಗೆಯೇ ಬಿಂಬಿಸಲ್ಪಟ್ಟಿದ್ದ ಅವರು ಇದೀಗ ಲಿಂಗಾಯತರ ನಾಯಕರಾಗಿ ಗುರುತಿಸಿಕೊಳ್ಳುವ ಮಟ್ಟಕ್ಕೆ ತಲುಪಿದ್ದಾರೆ. ಇದು ಅವರಿಗೊಂದು ದೊಡ್ಡ ಹಿನ್ನಡೆಯೆಂದೇ ಹೇಳ ಬೇಕಾಗುತ್ತದೆ. ಬಿಜೆಪಿ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದೂ ಅಲ್ಲ, ಓರ್ವ ವ್ಯಕ್ತಿಗೂ ಸೇರಿದ್ದಲ್ಲ. ಅದು ಇಡೀ ಸಮಾಜ-ದೇಶವನ್ನು ಪ್ರತಿನಿಧಿಸುವ ಪಕ್ಷ ಎಂದು ಅವರ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಹೇಳಿರುವುದು ಕೂಡ ಯಡಿ ಯೂರಪ್ಪನವರ ಹೊಸ ವರಸೆಯನ್ನು ಗಮನಿಸಿಯೇ ಇರಬೇಕು.
ಯಡಿಯೂರಪ್ಪನಿಗೆ ಮತ್ತೆ ಮುಖ್ಯ ಮಂತ್ರಿ ಸ್ಥಾನ ಕೊಡಿ ಎಂದು ಆಗ್ರಹಿಸಿ ದಿಲ್ಲಿಗೆ ಹೋಗಿದ್ದ ನಿಯೋಗದಲ್ಲಿ ಮತ್ತು ಅವರ ಸುತ್ತಮುತ್ತ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಹೆಚ್ಚಿನ ನಾಯಕರು ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು ಎಂಬುದನ್ನು ಬಿಜೆಪಿ ಹೈಕಮಾಂಡ್ ಗಮನಿಸಿದಂತಿದೆ. ಅದೇ ಕಾರಣಕ್ಕಾಗಿ ಯಡಿಯೂರಪ್ಪ ಪರ ಲಾಬಿ ತುಂಬಾ ದುರ್ಬಲವಾದಂತಿದೆ. ಯಡಿ ಯೂರಪ್ಪ ಪಕ್ಷದಿಂದ ಹೊರ ಹೋದರೆ ಬಿಜೆಪಿಗಾಗುವ ಹಾನಿಯನ್ನು ಅಂದಾಜಿಸಲು ಹೊರಟಿರುವುದು ಕೂಡ ಇದೇ ಕಾರಣಕ್ಕಾಗಿ. ಲಿಂಗಾಯತರನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಪರೋಕ್ಷ ಪ್ರಯತ್ನವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂ ಡಿರುವ ಪಕ್ಷದ ರಾಷ್ಟ್ರೀಯ ನಾಯಕರು, ಯಾವುದೇ ಕಾರಣಕ್ಕೂ ಅವರಿಗೆ ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡದಿರಲು ನಿರ್ಧರಿಸಿದಂತಿದೆ.
ಹಾಗೆ ನೋಡಿದರೆ ಯಡಿಯೂರಪ್ಪ ಪರ ಎಂದು ಗುರುತಿಸಿಕೊಂಡು ರೆಸಾರ್ಟ್ ಹೋಗಿದ್ದ ಶಾಸಕರೆಲ್ಲರೂ ನಿಜವಾಗಿಯೂ ಅವರ ಪರವಾಗಿ ಗಟ್ಟಿಯಾಗಿ ನಿಲ್ಲುವವರಲ್ಲವಂತೆ. ಯಾವ್ಯಾವುದೋ ಕಾರಣಗಳಿಗಾಗಿ ಯಡಿಯೂರಪ್ಪನನ್ನು ಭೇಟಿಯಾಗಲು ಹೋಗಿದ್ದ ಶಾಸಕರನ್ನು ಮನೆಯಿಂದ ಹೊರಗೆ ಹೋಗಗೊಡದೆ ಒಂದು ರೀತಿಯ ಬಲವಂತವಾಗಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಇದೂ ಕೂಡ ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಂತಿದೆ. ಇದು ಯಡಿಯೂರಪ್ಪ ತನ್ನ ವರ್ತನೆಯಲ್ಲಿ ಕಿಂಚಿತ್ತೂ ಬದಲಾವಣೆ ಮಾಡಿಕೊಂಡಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಪಕ್ಷದ ಕಾರ್ಯಕರ್ತರೇ ಹೇಳುವಂತಾಗಿದೆ.
ಜಾತಿ ರಾಜಕೀಯ ಮಾಡಿ ಕರ್ನಾಟಕದಲ್ಲಿ ಒಂದು ಭದ್ರ ರಾಜಕೀಯ ನೆಲೆ ಕಾಣುವುದು ಸಾಧ್ಯವಿಲ್ಲದ ಮಾತು. ಜಾತಿ ರಾಜಕೀಯಕ್ಕೆ ದೀರ್ಘಾಯುಷ್ಯವೂ ಇಲ್ಲ. ಬಿಜೆಪಿ ಅದಕ್ಕೆ ಆಸ್ಪದ ಕೊಡುವುದೂ ಇಲ್ಲ. ಹಾಗಿದ್ದರೂ ಯಡಿಯೂರಪ್ಪ ಹೀಗ್ಯಾಕೆ ಮಾಡಿದರು ಎಂಬ ಪ್ರಶ್ನೆ ಮೂಡದೆ ಇರುವುದಿಲ್ಲ. ಬಹುಷಃ ಅವರಿಗೆ ಸಲಹೆ ನೀಡಿದ ಅವರ ಬೆಂಬಲಿಗರು ಎಡವಿರಬೇಕು. ಒಂದೊಮ್ಮೆ ಜಾತಿ ರಾಜಕೀಯದ ಕಸರತ್ತಿಗೆ ಹೋಗದೆ ಎಲ್ಲ ಜಾತಿಯ ಪ್ರಮುಖ ನಾಯಕರನ್ನೂ ತನ್ನೊಂದಿಗೆ ಸೇರಿಸಿಕೊಂಡು ದಿಲ್ಲಿಗೆ ಹೋಗಿ ಲಾಬಿ ಮಾಡಿದ್ದರೆ ಏನಾದರೂ ಲಾಭವಾಗುತ್ತಿತ್ತೋ ಏನೋ? ಲಾಭವಾಗುವ ಸಾಧ್ಯತೆ ತುಂಬಾ ಕಡಿಮೆ ಇತ್ತು. ಯಾಕೆಂದರೆ ಯಡಿಯೂರಪ್ಪ ಇಟ್ಟಿದ್ದ ತಪ್ಪು ಹೆಜ್ಜೆಗಳು ಸಾಕಷ್ಟಿವೆ. ಪ್ರತಿಯೊಂದು ತಪ್ಪು ಹೆಜ್ಜೆಯೂ ಪಕ್ಷದ ರಾಷ್ಟ್ರೀಯ ನಾಯಕರ ಕೋಪಕ್ಕೆ ಕಾರಣವಾಗಿತ್ತು. ಅದರಲ್ಲೂ ಜಾತಿ ರಾಜಕಾರಣದ ಹೆಜ್ಜೆ ಯಡಿಯೂರಪ್ಪನಿಗೆ ತಿರುಗುಬಾಣವಾಗಿದೆ ಎಂದು ಹೇಳಲೇಬೇಕಾಗಿದೆ. ಒಂದೊಮ್ಮೆ ಪಕ್ಷ ಮುಂದಿನ ಬಾರಿ ಅಧಿಕಾರಕ್ಕೇರಿದರೂ ಜಾತಿ ಪ್ರತಿನಿಧಿ ಎಂದು ಗುರುತಿಸಿಕೊಂಡಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೇರುವುದು ಕಷ್ಟ ಎಂಬಂತಹ ಪರಿಸ್ಥಿತಿ ಈಗಿದೆ.
ಯಡಿಯೂರಪ್ಪನವರು ಅಧಿಕಾರ ಪಡೆಯಲು ಮಾಡಿರುವ ಕಸರತ್ತುಗಳೆಲ್ಲವೂ ಅವರಿಗೆ ದುಬಾರಿಯಾಗಿದೆ. ಅವರ ಪರಿಸ್ಥಿತಿಯನ್ನು ಮತ್ತಷ್ಟು ಕಂಗಾಲಾಗಿಸಿದೆ. ಒಂದೊಮ್ಮೆ ಅವರು ಒಂದಿಷ್ಟು ಕಾಲ ಮೌನವಾಗಿರುತ್ತಿದ್ದರೆ ಅವರ ಮೇಲೆ ಪಕ್ಷದ ನಾಯಕರಿಗೆ ಅನುಕಂಪ ಮೂಡುತ್ತಿತ್ತು, ಅವರ ಮೇಲೆ ಗೌರವ ಹೆಚ್ಚುತ್ತಿತ್ತು. ಆದರೆ ಯಡಿಯೂರಪ್ಪ ಹಾಗೆ ಮಾಡಲೇ ಇಲ್ಲ. ಅವರ ಪಕ್ಷವನ್ನೇ ಹೈಜಾಕ್ ಮಾಡಲು ನೋಡಿದರು. ರಾಷ್ಟ್ರೀಯ ನಾಯಕರಿಗೇ ಸವಾಲು ಹಾಕಿದರು. ಪಕ್ಷಕ್ಕೆ ಮುಜುಗರವಾಗುವಂತೆ ವರ್ತಿಸಿದರು. ತನಗೆ ತಾಳ್ಮೆ ಎಂದರೇನೆಂದೇ ಗೊತ್ತಿಲ್ಲ ಎಂಬಂತೆ ನಡೆದಾಡಿದರು. ಇವೆಲ್ಲವುಗಳ ಪರಿಣಾಮ ಸದ್ಯಕ್ಕೆ ದೊಡ್ಡ ಶೂನ್ಯ. ಯಡಿಯೂರಪ್ಪ ಸ್ಥಿತಿ ಕಾವಲಿಯಿಂದ ಒಲೆಗೆ ಬಿದ್ದಂತೆ!
Tagged with
vishleshane
ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರ. ಇದು ಯಾರದೋ ಆರೋಪವಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವ್ಯಂಗ್ಯೋಕ್ತಿ.
ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರು ಹಾಗೂ ತಮ್ಮ ಬೆಂಬಲಿಗ ಶಾಸಕರ ಜತೆ ಹರಟುತ್ತಿದ್ದ ಅವರು, ಇಂತಹ ಸರ್ಕಾರ ಮುಂದುವರಿದರೆ ಬಿಜೆಪಿ ರಾಜ್ಯದಲ್ಲಿ ವಿನಾಶದ ಅಂಚಿಗೆ ತಲುಪಿ ವಿಭಜನೆಯಾಗುತ್ತದೆ ಎಂದು ಹೇಳುವ ಮೂಲಕ ಸದಾನಂದಗೌಡರ ಸರ್ಕಾರ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಶಾಸಕರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಬಿಜೆಪಿ ಶಾಸಕರ ಮಾತಿಗೆ ಮನ್ನಣೆ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಶಾಸಕರ ಸಭೆ ನಡೆಸುತ್ತೇನೆ. ತಿಂಡಿ, ಊಟಕ್ಕೆ ಕರೆಯುತ್ತೇನೆ. ಯಾರೂ ತಡೆಯಲು ಸಾಧ್ಯವಿಲ್ಲ. ಮಾರ್ಚ್ ೩೦ರಂದು ಶಾಸಕರನ್ನು ತಿಂಡಿಗೆ ಕರೆದಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಆದವರು ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸಚಿವರು ಶಾಸಕರನ್ನು ಕರೆದು ಚರ್ಚಿಸಬೇಕು. ಔತಣಕೂಟ ಏರ್ಪಡಿಸುವುದು ಸಂಪ್ರದಾಯ. ಆದರೆ, ಇಲ್ಲಿ ಊಟವಿರಲಿ, ತಿಂಡಿಯೂ ಇಲ್ಲ. ಹೀಗಾದರೆ ಸರ್ಕಾರ ಸುಸೂತ್ರವಾಗಿ ನಡೆಯುವುದು ಹೇಗೆ? ಎಂದು ಪ್ರಶ್ನಿಸಿದರು.
ಇಲ್ಲಿ ಡಿ.ವಿ.ಸದಾನಂದಗೌಡರ ತಪ್ಪಿಲ್ಲ. ಇವರನ್ನು ನಿಯಂತ್ರಿಸುತ್ತಿರುವವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಅವರ ಅಣತಿ ಪ್ರಕಾರ ಸರ್ಕಾರ ನಡೆಯುತ್ತಿದೆ. ಪ್ರಮುಖ ತೀರ್ಮಾನಗಳು ಅವರ ಇಚ್ಚೆಯಂತೆ ಕೈಗೊಳ್ಳಲಾಗುತ್ತಿದೆ. ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಧರ್ಮಸಿಂಗ್ ಅವರನ್ನು ಹೀಗೆಯೇ ಆಡಿಸಿ ಕೊನೆಗೆ ಯಾವ ಗತಿ ಕಾಣಿಸಿದರು ಎಂಬುದನ್ನು ಸದಾನಂದಗೌಡರು ಮರೆತಂತಿದೆ. ಸದಾನಂದಗೌಡರು ತಾವು ಮುಖ್ಯಮಂತ್ರಿಯಾಗಿದ್ದು ಹೇಗೆ ಎಂಬುದನ್ನು ಮರೆತು ಅಧಿಕಾರದಲ್ಲಿ ಉಳಿದುಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅದಕ್ಕೆ ತಕ್ಕಂತೆ ನಡವಳಿಕೆ ತೋರುತ್ತಿದ್ದಾರೆ ಎಂದು ಹೇಳಿದರು.
ಬಜೆಟ್ ನಂತರ ವರಿಷ್ಠರು ಯಾವುದಾದರೊಂದು ತೀರ್ಮಾನ ಕೈಗೊಳ್ಳಲೇಬೇಕು. ನಾನೂ ಏಪ್ರಿಲ್ ೧೦ ರವರೆಗೂ ಕಾಯುತ್ತೇನೆ. ಆ ನಂತರ ನನ್ನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನೇರವಾಗಿಯೇ ಮನದಾಳದ ಇಂಗಿತ ವ್ಯಕ್ತಪಡಿಸಿದರು.
Tagged with
snews
ಬೆಂಗಳೂರು: ಬಿಜೆಪಿ ಶಾಸಕರಾಗಿದ್ದೂ ನಿರಂತರ ಬಂಡಾಯಗಾರನಾಗಿರುವ ಮೈಸೂ ರಿನ ಚಾಮರಾಜ ಕ್ಷೇತ್ರದ ಶಾಸಕ ಶಂಕರ ಲಿಂಗೇಗೌಡ ಬುಧವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾದರು.
ಸದಾನಂದಗೌಡರು ಇರುವವರೆಗೆ ನಾನು ಬಿಜೆಪಿಯಲ್ಲಿರುತ್ತೇನೆ. ಅವರು ಸ್ವಚ್ಚಾರಿತ್ರ್ಯ ಉಳ್ಳವರು, ಪ್ರಾಮಾಣಿಕರು, ಹಿಂದಿನವರು ಪಕ್ಷಕ್ಕೆ ಸಮಾಧಿ ಕಟ್ಟಿದ್ದಾರೆ ಎಂಬ ಅವರ ಮಾತುಗಳು ಯಡಿಯೂರಪ್ಪ ಬೆಂಬಲಿಗರನ್ನು ಕೆರಳಿಸಿತು. ಶೂನ್ಯವೇಳೆಯಲ್ಲಿ ಮಹದೇವ ಪ್ರಸಾದ್, ಅಂಬೇಡ್ಕರ್ ಅಭಿವೃದ್ಧಿ ನಿಗದಮಡಿ ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳ ಆಯ್ಕೆ ಕುರಿತು ಪ್ರಸ್ತಾಪಿಸಿ ಅದಕ್ಕೆ ಬೆಂಬಲ ವಾಗಿ ಮಾತನಾಡಲು ಸಿದ್ದರಾಮಯ್ಯ ಎದ್ದು ನಿಂತಾಗ, ಶಂಕರಲಿಂಗೇಗೌಡರು ಎದ್ದು ನಿಂತು ಮೈಸೂರಿನಲ್ಲಿಯೂ ಇದೇ ರೀತಿ ಬೇಕಾಬಿಟ್ಟಿ ಹಂಚಲಾಗಿದೆ. ಶಾಸಕರಿಗೆ ಗೌರವ ಕೊಡುತ್ತಿಲ್ಲ ಎಂದು ಒಂದೇ ಸಮನೆ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ, ಶಂಕರಲಿಂಗೇಗೌಡರಿಗೂ ನನಗೂ ಒಪ್ಪಂದ ಆಗಿದೆ. ನಾನು ನಿಂತಾಗ ಅವರು ನಿಲ್ಲಬೇಕು ಅಂತ. ನನ್ನ ಜತೆ ಇನ್ನೂ ಒಂದು ಒಪ್ಪಂದ ಮಾಡಿಕೊಂಡಿದ್ದು ಅದು ಯಡಿಯೂರಪ್ಪ ವಿರುದ್ಧ ಕೆಂಡಕಾರುವುದು ಎಂದರು.
ಶಂಕರಲಿಂಗೇಗೌಡರು ಮಾತು ಮುಂದುವರಿಸುತ್ತಲೇ ಇದ್ದಾಗ, ಶಂಕರಲಿಂಗೇಗೌಡರೇ ಕುಳಿತುಕೊಳ್ಳಿ ಎಂದು ಎರಡು ಮೂರು ಬಾರಿ ಹೇಳಿದರು. ಕೇಳದಿದ್ದಾಗ, ನೀವು ಮುಂದಿನ ಬಾರಿ ಗೆಲ್ಲಬೇಕೋ ಬೇಡವೋ ಎಂದರು. ಆಗ ಶಂಕರಲಿಂಗೇಗೌಡರು, ನಾನ್ಯಾಕೆ ಗೆಲ್ಲಲ್ಲ. ಗೆದ್ದೇ ಗೆಲ್ತೀನಿ. ಎಲ್ಲಿದ್ದರೂ ಗೆಲ್ತೀನಿ ಎಂದರು.
ಅದಕ್ಕೆ ಸಿದ್ದರಾಮಯ್ಯ, ಎಲ್ಲೂ ಹೋಗಬೇಡಿ. ಬಿಜೆಪಿಯಲ್ಲೇ ಇರಿ ಎಂದು ಹೇಳಿದರು. ಆಗ ಶಂಕರಲಿಂಗೇಗೌಡರು, ನಾನು ಸದಾನಂದಗೌಡರು ಬಿಜೆಪಿಯಲ್ಲಿ ಇರುವವರೆಗೂ ಇರುತ್ತೇನೆ. ಅವರು ಪ್ರಾಮಾಣಿಕರು. ಹಿಂದೆ ಇದ್ದವರು ಪಕ್ಷಕ್ಕೆ ಸಮಾಧಿ ಕಟ್ಟಿ ಹೋಗಿದ್ದಾರೆ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಶಂಕರಲಿಂಗೇಗೌಡರಿಗೆ ಏನೋ ಹೇಳಲು ಹೋದಾಗ, ಅವರ ವಿರುದ್ಧವೂ ತಿರುಗಿಬಿದ್ದ ಗೌಡರು, ನಾನು ಮಾತನಾಡಲು ಹಕ್ಕಿಲ್ಲವೇ? ಯಾಕೆ ತಡೆಯುತ್ತೀರಿ ಎಂದು ಜಗಳಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ವಿಷಯಾಂತರಗೊಳ್ಳುತಿರುವುದನ್ನು ಅರಿತ ಸ್ಪೀಕರ್ ವಿಷಯಕ್ಕೆ ತೆರೆ ಎಳೆದರು.
Tagged with
snews
ಬಂಟ್ವಾಳ: ಬಂಟ್ವಾಳದಲ್ಲಿ ಪತ್ತೆ ಹಚ್ಚಲಾದ ನಕಲಿ ಮದ್ಯ ಜಾಲ ಪ್ರಕರಣದ ತನಿಖೆ ಮುಂದುವರಿಸುತ್ತಿರುವ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ನಿನ್ನೆ ಕೇರಳಕ್ಕೆ ಧಾವಿಸಿದ್ದಾರೆ. ಆರೋಪಿ ಗಳು ನೀಡಿದ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರ ತಂಡ ಮತ್ತಿಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದೆ.
ಪ್ರಮುಖ ಆರೋಪಿ ತ್ರಿಶೂರ್ ಮೂಲದ ಅನ್ಸಿಫ್, ಉಪ್ಪಳದ ಅಬೂಬಕ್ಕರ್ ರಿಯಾಝ್ ಹಾಗೂ ಭೋಜ ಭಂಡಾರಿ ಎಂಬವರನ್ನು ನಿನ್ನೆ ಇಲ್ಲಿನ ಜೆಎಂಎಫ್‌ಸಿಗೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ರಿಯಾಝ್ ಹಾಗೂ ಭೋಜ ಭಂಡಾರಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಮುಖ ಆರೋಪಿ ಅನ್ಸಿಫ್‌ಗೆ ಮಾ.೩೧ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಪುತ್ತೂರಿನ ಪ್ರೀತಿಪಾಲ್ ರೈ ಎಂಬವರು ಗೋವಾದಿಂದ ಅಕ್ರಮವಾಗಿ ಮದ್ಯ ವನ್ನು ತರಿಸಿ ಭೋಜ ಭಂಡಾರಿಯ ನೆರವು ಪಡೆದು ಕೇರಳದ ಶರೀಫ್ ಎಂಬವನ ಮೂಲಕ ಕೇರಳ ರಾಜ್ಯಕ್ಕೆ ಮಾರಾಟ ಮಾಡಲಾಗಿದ್ದು, ಈ ಸುಳಿವು ಅನ್ವಯ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಕುಮಾರ್ ನೇತೃತ್ವದ ಪೊಲೀಸರು ಕಾಸರಗೋಡು, ಬಂದಿಯೋಡು ಹಾಗೂ ಕುಂಬ್ಳೆ ಮತ್ತಿತರ ಕಡೆಗಳಲ್ಲಿ ಜಾಲಾಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಗಳನ್ನು ಬಾಯಿ ಬಿಡಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದು, ಶೆರೀಫ್ ಬಂದಿಯೋಡು ಮೂಲ ದವನು ಎಂದು ತಿಳಿದುಬಂದಿದೆ. ಆತನ ಮನೆ ಹಾಗೂ ವಹಿವಾಟು ಸ್ಥಳಗಳಿಗೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ದ್ದಾರೆ. ಪೊಲೀಸ್ ಕಾರ್ಯಾ ಚರಣೆಯಿಂದ ಎಚ್ಚೆತ್ತುಕೊಂಡ ಆರೋಪಿಗಳಿಬ್ಬರು ತಲೆ ಮರೆಸಿಕೊಂ ಡಿದ್ದಾರೆ. ಸುಮಾರು ೬ ಲಕ್ಷ ಮೌಲ್ಯದ ನಕಲಿ ಮದ್ಯ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಂಟ್ವಾಳ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮದ್ಯ ವ್ಯಾಪಾರಸ್ಥರಿಗೆ ನಡುಕ ಉಂಟು ಮಾಡಿದೆ. ಬಂಟ್ವಾಳದ ಕೆಲವೆಡೆ ನಡೆಸ ಲಾಗುತ್ತಿದ್ದ ನಕಲಿ ಮದ್ಯ ವಹಿವಾಟಿಗೂ ತಕ್ಕಮಟ್ಟಿನ ನಿಯಂತ್ರಣ ಬಿದ್ದಿದೆ. ನಕಲಿ ಮದ್ಯ ಮಾರಾಟ ಹಾಗೂ ಸಾಗಾಟ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಅಬಕಾರಿ ಅಧಿಕಾರಿಗಳು ವಿಫಲರಾಗಿ ದ್ದರು. ಹಿಂದೆ ಕರ್ತವ್ಯದಲ್ಲಿದ್ದ ಠಾಣಾಧಿಕಾರಿ ಮಹಮ್ಮದ್ ರಫೀಕ್ ಮೇಲೂ ನಕಲಿ ಮದ್ಯ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿಲ್ಲ ಎನ್ನುವ ಆರೋಪವೂ ಇಲಾಖಾ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಎಸ್.ಐ. ಮಹೇಶ್ ಪ್ರಸಾದ್ ನಡೆಸಿದ ಯಶಸ್ವಿ ಕಾರ್ಯಾಚರಣೆ ಸಾರ್ವಜನಿಕ ವಲಯ ದಲ್ಲಿ ಭರವಸೆಯನ್ನು ಮೂಡಿಸಿದೆ. ಪೊಲೀಸ್ ಇಲಾಖೆಯ ಮೇಲಧಿಕಾರಿ ಗಳ ಮೆಚ್ಚುಗೆಗೂ ಕಾರಣವಾಗಿದೆ.
Tagged with
lnews
ವಿಟ್ಲ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಉಪ್ಪಿನಂಗಡಿಯ ರಝಾಕ್ ಎಂಬವರಿಗೆ ಸೇರಿದ ಲಾರಿಯನ್ನು ಕರೈ ಪುತ್ತುಮೋನು ಎಂಬವರ ಮನೆ ಮುಂದೆ ನಿಲ್ಲಿಸಲಾಗಿತ್ತು. ತಡರಾತ್ರಿ ಸುಮಾರು ೧೨ ಗಂಟೆಯ ಸಮಯಕ್ಕೆ ಲಾರಿ ಹೊತ್ತಿ ಉರಿಯುವ ಶಬ್ದ ಕೇಳಿಸಿದ ಮನೆಯವರು ಎಚ್ಚರಗೊಂಡು ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಲಾರಿಯ ಮುಂಭಾಗ ಸಂಪೂರ್ಣ ಬೆಂಕಿ ಗಾಹುತಿಯಾಗಿದೆ.
Tagged with
lnews
ಪಡುಬಿದ್ರಿ: ಕಾಪುವಿನ ಮಾರಿ ಪೂಜೆಗೆ ಆಗಮಿಸಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗಿಳಿದು ಮರಕ್ಕೆ ಗುದ್ದಿದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದ್ದು, ಈ ಘಟನೆಯಲ್ಲಿ ೨೦ ಜನ ಕೂಲಿ ಕಾರ್ಮಿಕರು ಸಣ್ಣಪುಟ್ಟ ಗಾಯ ದೊಂದಿಗೆ ಪಾರಾಗಿದ್ದಾರೆ.
ಕಾರ್ಕಳ ಪಯ್ಯಾರಿನ ಪಾದೆಕಲ್ಲು ಎಂಬಲ್ಲಿಯ ಕೂಲಿ ಕಾರ್ಮಿಕರು ಬುಧ ವಾರ ಬೆಳಿಗ್ಗೆ ಕಾಪು ಮಾರಿ ಪೂಜೆಗೆ ಲಾರಿಯಲ್ಲಿ ಆಗಮಿಸಿದ್ದರು. ದೇವರ ದರ್ಶನ ಮಾಡಿ ಹಿಂತಿರುಗುತ್ತಿದ್ದಾಗ, ಕಾಪು ಬಳುಯ ಮಜೂರು ಪಂಜಿ ತ್ತೂರು ಗುತ್ತು ಎಂಬಲ್ಲಿಯ ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಚರಂಡಿಗಿಳಿದಿದೆ. ಈ ಸಂದರ್ಭ ಮರವೊಂದಕ್ಕೆ ಗುದ್ದಿ ಲಾರಿಯಲ್ಲಿದ್ದ ಕೂಲಿ ಕಾರ್ಮಿಕರು ಗಾಯದೊಂದಿಗೆ ಪಾರಾಗಿದ್ದಾರೆ.
Tagged with
lnews
ಪುತ್ತೂರು: ರಿಕ್ಷಾದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡು ರಿಕ್ಷಾ ಸಂಪೂರ್ಣವಾಗಿ ಹಾನಿಗೊಳಗಾದ ಘಟನೆ ಬುಧವಾರ ಸಂಜೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ಎಂಬಲ್ಲಿ ಸಂಭವಿಸಿದೆ.
ಇಲ್ಲಿಗೆ ಸಮೀಪದ ಮುಂಡ್ಯ ನಿವಾಸಿ ಅಬ್ದುಲ್ ಕುಂಞಿ ಎಂಬವರಿಗೆ ಸೇರಿದ ರಿಕ್ಷಾ ಸಂಪೂರ್ಣವಾಗಿ ಸುಟ್ಟುಹೋಗಿದೆ. ಪ್ರಯಾಣಿಕರು ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Tagged with
lnews
ಕಾರ್ಕಳ: ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಮುಡಾರು ಎಂಬಲ್ಲಿ ಸಂಭವಿಸಿದೆ.
ಮುಡಾರು ದರ್ಖಾಸು ಮನೆಯ ಕೂಕ್ರ ಶೆಟ್ಟಿ ಎಂಬವೆರು ಹೃದಯ ಸಂಬಂಧಿ ಕಾಯಿಲೆಯಿಂದ ನೊಂದು ಕೃತ್ಯ ಎಸಗಿದ್ದಾರೆನ್ನಲಾಗಿದೆ.
Tagged with
cnews,
death