ಈಶ್ವರಪ್ಪ, ಸದಾನಂದ ಗೌಡರಿಗೂ ಆಹ್ವಾನ
ಬೆಂಗಳೂರು: ಮತ್ತೆ ಅಧಿಕಾರ ಬಯಸಿ ಹೋರಾಡುತ್ತಿರುವ ಯಡಿಯೂರಪ್ಪ ಬಜೆಟ್ ಅಧಿವೇಶನದ ಕೊನೆಯ ದಿನ ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಚಹಾಕೂಟ ಏರ್ಪಡಿಸಿದ್ದು ಇದಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಈಶ್ವರಪ್ಪ ಸೇರಿದಂತೆ ಪಕ್ಷದ ಎಲ್ಲ ಸಚಿವರು, ಶಾಸಕರಿಗೆ ಖುದ್ದಾಗಿ ಆಹ್ವಾನ ನೀಡಿದ್ದಾರೆ.
ಅಧಿವೇಶನ ಮುಗಿದ ಬಳಿಕ ಅಧಿಕಾರ ನೀಡುವ ಬಗ್ಗೆ ಯೋಚಿಸುತ್ತೇವೆ ಎಂದು ಪಕ್ಷದ ವರಿಷ್ಠರು ಹೇಳಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಲ ಪ್ರದರ್ಶನದ ಇನ್ನೊಂದು ತಂತ್ರ ರೂಪಿಸಿದ್ದಾರೆ. ಈ ಚಹಾ ಕೂಟದಲ್ಲಿ ಹೆಚ್ಚಿನ ಶಾಸಕರನ್ನು ಕಲೆ ಹಾಕಿ ತನ್ನ ಶಕ್ತಿ ತೋರಿಸುವುದು ಇವರ ಉದ್ದೇಶವಾಗಿದೆ.
ಈ ಸಭೆಗೆ ಪಕ್ಷದ ಸಂಸದರನ್ನೂ ಆಹ್ವಾನಿಸಿದ್ದಾರೆ. ಕಳೆದ ಮೂರು ತಿಂಗಳುಗಳಲ್ಲಿ ಇಂತಹ ಆರು ಸಭೆಗಳನ್ನು ಯಡಿಯೂರಪ್ಪ ಕರೆದಿದ್ದು, ವರಿಷ್ಠರಿಂದ ಸ್ಪಷ್ಟ ಭರವಸೆ ಸಿಗುವವರೆಗೂ ಶಕ್ತಿ ಪ್ರದರ್ಶನ ಮುಂದುವರಿಸಲಿದ್ದಾರೆ. ಈಗ ಎ.೧೧ಗಡುವು ನೀಡಿರುವ ಯಡಿ ಯೂರಪ್ಪ ಅದರ ಬಳಿಕ ನನ್ನ ದಾರಿ ನನಗೆ ನಿಮ್ಮ ದಾರಿ ನಿಮಗೆ ಎಂದಿದ್ದಾರೆ.
Tagged with
snews
ವೈದ್ಯಕೀಯ ಕೋರ್ಸ್ ಮುಗಿಸಿದವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಕಡ್ಡಾಯ
ಬೆಂಗಳೂರು: ವೈದ್ಯಕೀಯ ಕೋರ್ಸುಗಳನ್ನು ಮುಗಿಸಿದ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಒಂದು ವರ್ಷ ಕಾಲ ಕಡ್ಡಾಯವಾಗಿ ಸೇವೆ ಸಲ್ಲಿಸಲು ಸುಗ್ರೀವಾಜ್ಞೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಿಧಾನ ಸೌಧದಲ್ಲಿ ಪ್ರಕಟಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಶರಣಗೌಡ ಪಾಟೀಲ್, ಸುನೀಲ್ ವಿ. ಹೆಗ್ಡೆ, ಡಾ|| ಸಾರ್ವಭೌಮ ಬಗಲಿ ಅವರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು ಎಂಬಿಬಿಎಸ್ ಹಾಗೂ ಪಿಜಿ ಕೋರ್ಸು ಮುಗಿಸಿದ ವಿದ್ಯಾರ್ಥಿಗಳು ಇನ್ನು ಮುಂದೆ ಕಡ್ಡಾಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು. ಸರ್ಕಾರಿ ವೆಚ್ಚದಲ್ಲಿ ಅಧ್ಯಯನ ಮಾಡಿ, ನಮ್ಮ ಆಸ್ಪತ್ರೆಗಳಲ್ಲೇ ಕೆಲಸ ಮಾಡಲು ಹಿಂದೇಟು ಹಾಕುವ ಇಂತಹ ವೈದ್ಯರನ್ನು ಹಿಡಿದಿಡುವ ಸಲುವಾಗಿ ಸರ್ಕಾರ ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುವುದು.
ರಾಜ್ಯದಲ್ಲಿ ವೈದ್ಯರ ಕೊರತೆ ಅಗಾಧವಾಗಿದೆ. ಅದನ್ನು ನಿವಾರಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂ ಡಿದೆ. ಇತ್ತೀಚೆಗೆ ಆರು ನೂರು ಮಂದಿ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಸಿದರೆ ಅಂತಿಮ ವಾಗಿ ಸೇವೆಗೆ ಹಾಜರಾ ದವರು ಕೇವಲ ಐವತ್ತೇಳು ಮಂದಿ ಮಾತ್ರ ಎಂದರು.
Tagged with
snews
ಮಂಗಳೂರು: ಸೆಂಟ್ರಲ್ ಸಿನೆಮಾಸ್ ಅರ್ಪಿಸುವ ಕಾಪಿಕಾಡ್-ಪಡೀಲ್ ಜೊತೆಯಾಗಿ ನಟಿಸಿರುವ ತುಳು ಚಲನಚಿತ್ರ ‘ತೆಲಿಕೆದ ಬೊಳ್ಳಿ’ ಚಿತ್ರಕ್ಕೆ ನಿನ್ನೆ ವಾಮಂಜೂರು ಬಳಿಯ ಬಂದಲೆಯಲ್ಲಿ ಮುಹೂರ್ತ ನೆರವೇರಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಶುಭ ಹಾರೈಸಿದರು. ಯಶಸ್ವಿ ‘ಗಂಟೆತಾಡ್’ ನಾಟಕವನ್ನು ಆಧರಿಸಿ ಚಿತ್ರ ನಿರ್ಮಿಸಲಾಗುತ್ತಿದ್ದು, ತ್ರಿಕೋನ ಪ್ರೇಮ ಕಥೆ ಹೊಂದಿದೆ. ಉತ್ತಮ ಸಂದೇಶವನ್ನು ನೀಡಲಿರುವ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನೀಡಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಹೇಳಿದರು.
ಬಹುತೇಕ ಗಂಟೆತಾಂಡ್ ತಂಡವೇ ಇಲ್ಲಿಯೂ ಮುಂದುವರಿಯಲಿದ್ದು, ಪುತ್ರ ಅರ್ಜುನ್ ಕಾಪಿಕಾಡ್ ನಾಯಕ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಥಮವಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ ಎಂದರು. ಚಿತ್ರಕ್ಕೆ ನಿರ್ದೇಶನ ನೀಡುತ್ತಿರುವ ಖ್ಯಾತ ನಿರ್ದೇಶಕ ಪಂಚಮವೇದ ಖ್ಯಾತಿಯ ಪಿ.ಎಚ್. ವಿಶ್ವನಾಥ್, ಕನ್ನಡದಲ್ಲಿ ತಾನು ೧೫ ಚಿತ್ರಗಳನ್ನು ನಿರ್ದೇಶಿಸಿದ್ದೇನೆ, ತುಳು ನನಗೆ ಪ್ರಥಮ ಅನುಭವ. ತುಳು ಚಿತ್ರಕ್ಕೆ ನಿರ್ದೇಶನ ನೀಡುತ್ತಿದ್ದೇನೆ ಎಂದು ಕೊಂಡಿರಲಿಲ್ಲ. ಕಥೆ ಚೆನ್ನಾಗಿದೆ, ಸದಭಿರುಚಿಯ ಚಿತ್ರ. ಉತ್ತಮ ಚಿತ್ರ ನೀಡುತ್ತೇವೆ ಎಂದರು.
ಮಂಗಳೂರಿನ ವಾಮಂಜೂರು ಹಾಗೂ ಸುತ್ತಮುತ್ತ ಪರಿಸರ, ಸಿದ್ದಾಪುರಗಳಲ್ಲಿ ಒಂದೇ ಶೆಡ್ಯೂಲ್‌ನಲ್ಲಿ ೩೫ ದಿನಗಳ ಚಿತ್ರೀಕರಣ ನಡೆದು ಮೇ ಅಥವಾ ಜೂನ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಗುರುಕಿರಣ್ ಪ್ರಥಮವಾಗಿ ತುಳುಚಿತ್ರಕ್ಕೆ ಸಂಗೀತ ನೀಡಲಿದ್ದು, ನಾಲ್ಕು ಹಾಡುಗಳನ್ನು ಹೊಂದಿದೆ.
ಕುಸಲ್ದರಸೆ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಡಿ.ಎಸ್. ಬೋಳೂರು, ಲಕ್ಷ್ಮಣ ಕುಮಾರ್ ಮಲ್ಲೂರ್, ರಮಾ ಬಿ.ಸಿ. ರೋಡ್, ಗೋಪಿನಾಥ್ ಭಟ್, ಸಾಯಿಕೃಷ್ಣ, ತಿಮ್ಮಪ್ಪ ಕುಲಾಲ್, ಸದಾಶಿವ ಅಮೀನ್, ಸತೀಶ್ ಬಂದಲೆ, ಸುರೇಶ್ ಕುಲಾಲ್, ರಿಚರ್ಡ್ ಪಿಂಟೊ, ಸಂದೀಪ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ದಿನೇಶ್ ಅತ್ತಾವರ, ಪ್ರದೀಪ್ ಆಳ್ವ, ಪಾಂಡುರಂಗ ಅಡ್ಯಾರ್, ರಾಘವೇಂದ್ರ, ಕಾರಂತ, ನವೀನ್ ಹರೇಕಳ, ಕರುಣಾಕರ ಸರಿಪಲ್ಲ, ನರೇಂದ್ರ ಕೆರೆಕಾಡ್, ಸುಜಾತ, ಮೋನಿಕಾ ತಾರಾ ತಂಡದಲ್ಲಿದ್ದು, ನಾಯಕಿಯಾಗಿ ಮುಂಬೈಯ ಆಶ್ರಿತಾ ಶೆಟ್ಟಿ, ವೈಶಾಲಿ ಶೆಟ್ಟಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಆರ್. ಮಂಜುನಾಥ್, ಛಾಯಾಗ್ರಾಹಣ ಬಿಎನ್. ಕೆಂಪರಾಜ್ ಸಂಕಲನ, ಮಲ್ಲಿಕಾರ್ಜುನ ಮೇಕಪ್, ಶಾಂತರಾಮ್ ಉಡುಪುಗಳು, ರಾಜು ಕಲೆ, ನೀರ್ನಳ್ಳಿ ಹರಿಣಿ ಸಹ ನಿರ್ದೇಶನ, ಮದನ್ ಹರಿಣಿ ನೃತ್ಯವಿದೆ.
ಸುಧೀರ್ ಕಾಮತ್ ಹಾಗೂ ಶರ್ಮಿಳಾ ದೇವದಾಸ್ ಕಾಪಿಕಾಡ್ ಚಿತ್ರದ ನಿರ್ಮಾಪಕರು.
Tagged with
lnews
ಸುಬ್ರಹ್ಮಣ್ಯ: ಕಾಲೇಜ್ ವಿದ್ಯಾರ್ಥಿನಿ ಸಾವು ಪ್ರಕರಣ ಬಯಲು
ಉಪ್ಪಿನಂಗಡಿ: ಸುಬ್ರಹ್ಮಣ್ಯ ಕಾಲೇಜಿನ ವಿದ್ಯಾರ್ಥಿನಿ ಪುಷ್ಪಾ ನಿಗೂಢ ಸಾವಿನ ಹಿನ್ನೆಲೆ ಬಯಲಾಗಿದೆ. ಆಕೆಯ ಮಾಜಿ ಪ್ರಿಯಕರ ರಮೇಶ(೨೮) ಎಂಬಾತನೇ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಕುಮಾರಧಾರಾ ನದಿಗೆ ಎಸೆದಿದ್ದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ರಮೇಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಸಮೀಪದ ಶಾಂತಿಗೋಡುವಿನ ಸಂಕು ಎಂಬವರ ಪುತ್ರಿ ಪುಷ್ಪಾ ಸುಬ್ರಹ್ಮಣ್ಯದಲ್ಲಿ ಕಾಲೇಜ್ ಓದುತ್ತಿದ್ದಳು. ಅಲ್ಲೇ ಪೆಯಿಂಗ್ ಗೆಸ್ಟ್ ಒಂದರಲ್ಲಿ ಉಳಿದು ವ್ಯಾಸಂಗ ಮಾಡುತ್ತಿದ್ದಳು. ಆದರೆ ಕಳೆದ ಮಾರ್ಚ್ ೧೮ರಂದು ಆಕೆ ನಿಗೂಢವಾಗಿ ನಾಪತ್ತೆಯಾಗಿದ್ದು, ೧೯ರಂದು ಆಕೆಯ ಮೃತದೇಹ ಶಾಂತಿಗೋಡು ಬಳಿಯ ವಳಕಡಮೆ ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಪತ್ತೆಯಾಗಿತ್ತು. ಆಕೆಯ ಮೈಮೇಲೆ ಗಾಯಗಳಿದ್ದು, ಕೊಲೆ ಎಂಬ ಶಂಕೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆಕೆಯ ದೂರದ ಸಂಬಂಧಿ ರಮೇಶನ ಮೇಲೆ ಶಂಕೆ ಉಂಟಾಯಿತು.
ರಮೇಶ ಹಾಗೂ ಪುಷ್ಪಾ ಕಳೆದ ಮೂರು ವರ್ಷಗಳಿಂದ ಅನ್ಯೋನ್ಯ ಸಂಬಂಧ ಹೊಂದಿದ್ದರು. ರಮೇಶ ಐಟಿಐ ಓದಿದ್ದು, ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಪುಷ್ಪಾಳ ಓದಿಗೆ ಆತನೇ ಸಹಾಯ ಮಾಡುತ್ತಿದ್ದ. ಈ ನಡುವೆ ಪುಷ್ಪಾ ಇನ್ನೊಬ್ಬನ ಜೊತೆ ಗುಪ್ತವಾಗಿ ಪ್ರೇಮ ವ್ಯವಹಾರ ಶುರುವಿಟ್ಟುಕೊಂಡಿದ್ದು, ರಮೇಶನಿಂದ ದೂರವಾಗುತ್ತಾ ಬಂದಿದ್ದಳು. ಇದರಿಂದ ಕೆಲಸ ತೊರೆದಿದ್ದ ಆತ ಉಪಾಯವಾಗಿ ಪುಷ್ಪಾಳನ್ನು ನದಿ ಕಿನಾರೆಗೆ ಬರಮಾಡಿಕೊಂಡ. ಬಳಿಕ ಅವರಿಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಕಂಡಿಡುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಬದಲಾಗಿದೆ. ಆರೋಪಿಯ ಮನೆಯಿಂದ ಪುಷ್ಪಾಳ ಬ್ಯಾಗ್, ಮೊಬೈಲ್, ಶಾಲು ಹಾಗೂ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Tagged with
cnews,
feature
ಕುಂದಾಪುರ: ಮದುವೆಯ ಸಮ್ಮಾನ ಊಟ ಮುಗಿಸಿ ಮಿನಿ ಬಸ್‌ನಲ್ಲಿ ಹಿಂತಿರುಗುತ್ತಿದ್ದವರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾ ಭರಣಗಳನ್ನು ದರೋಡೆಗೈದ ಘಟನೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಜರಗಿದೆ.
ಮಿನಿ ಬಸ್ ಚಾಲಕನ ಸಹಿತ ವಯಸ್ಸಾದ ಮಹಿಳೆಯರ ಮೇಲೂ ಹಲ್ಲೆಗೈಯ್ಯಲಾಗಿದ್ದು ಗಾಯಾಳುಗಳು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊನ್ನೆ ಭಾನುವಾರ ಕುಂದಾ ಪುರ ಕೋಡಿ ನಿವಾಸಿ ವಧುವಿಗೆ ನೇರಳಕಟ್ಟೆ ಮುಕ್ಕೋಡು ಎಂಬಲ್ಲಿನ ವರನೊಂದಿಗೆ ಮೂರಣಕಟ್ಟೆ ದೇವಸ್ಥಾನದಲ್ಲಿ ವಿವಾಹ ಜರಗಿದ್ದು, ಆ ಸಂಬಂಧ ವರನ ಮನೆಯಲ್ಲಿ ನಡೆದಿದ್ದ ಸಮ್ಮಾನ ಊಟ ಸಮಾ ರಂಭಕ್ಕೆ ವಧುವಿನ ಕಡೆಯವರು ಮಿನಿ ಬಸ್‌ನಲ್ಲಿ ತೆರಳಿದ್ದರು. ಔತಣ ಮುಗಿದು ಕೋಡಿಗೆ ತೆರಳಲು ಮಿನಿ ಬಸ್‌ನಲ್ಲಿ ಹಿಂತಿರುಗುತ್ತಿದ್ದಾಗ ಕೋಡಿಯವರೇ ಆದ ದೇವ ಮತ್ತು ಅಣ್ಣಪ್ಪ ಎಂಬವರು ತಮ್ಮ ಬೈಕಿನಲ್ಲಿ ಮುಂದೆ ಸಾಗುತ್ತಿದ್ದಾಗ ನೇರಳಕಟ್ಟೆಯ ತಿರುವಿನಲ್ಲಿ ಇನ್ನೊಂದು ಬೈಕಿನಲ್ಲಿ ಬರುತ್ತಿದ್ದ ಸ್ಥಳೀಯರಾದ ಹರೀಶ್ ದೇವಾಡಿಗ ಹಾಗೂ ಆತನ ಸ್ನೇಹಿತ ಸೈಡ್ ಕೊಡುವ ವಿಚಾರದಲ್ಲಿ ದೇವ ಮತ್ತು ಅಣ್ಣಪ್ಪನೊಂದಿಗೆ ವಾಗ್ವಾದ ನಡೆಸುತ್ತಲೇ ತಮ್ಮ ಸ್ನೇಹಿತರಿಗೆ ಮೊಬೈಲ್ ಮೂಲಕ ಕರೆಸಿ ಇಬ್ಬರ ಮೇಲೆ ಹಲ್ಲೆ ನಡೆಸತೊಡಗಿದರೆನ್ನಲಾಗಿದೆ. ಅದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಮಿನಿ ಬಸ್‌ನಲ್ಲಿದ್ದವರು ಏನು ಎತ್ತ ಎಂದು ವಿಚಾರಿಸುತ್ತಿರುವಾಗಲೇ ಮಿನಿಬಸ್‌ನ ಮೇಲೆ ಮುಗಿಬಿದ್ದ ಕಿಡಿಗೇಡಿಗಳು ಮರದ ಸೋಂಟೆಯಿಂದ ಗಾಜುಗಳನ್ನು ಪುಡಿಗೈದಿದ್ದಾರೆನ್ನಲಾಗಿದೆ. ಹೆಂಗಸರು, ಮಕ್ಕಳೆನ್ನದೆ ಎಲ್ಲರ ಮೇಲೂ ತಮ್ಮ ಪ್ರತಾಪ ತೋರಿದ ದುರುಳರು ಕೆಲವು ಮಹಿಳೆಯರ ಪರ್ಸನ್ನು ಹಾರಿಸಿದ್ದಾರಲ್ಲದೆ ಕೆಲವರಿಂದ ಕುತ್ತಿಗೆಯ ಸರ, ಕೈಬಳೆಗಳನ್ನು ಸೆಳೆದೊಯ್ದಿದ್ದಾರೆಂದು ದೂರಲಾ ಗಿದೆ. ಬೇಬಿ ಎಂಬವರಿಂದ ಚಿನ್ನದ ಸರ, ಪ್ರವೀಣಾ ಎಂಬವರಿಂದ ಕೈಬಳೆಗಳು, ಶಾಂತಾ ಎಂಬ ಮಹಿಳೆಯಿಂದ ನಗದನ್ನು ಅಪಹರಿಸಿದ್ದಾರೆ ಎಂದು ದೂರ ಲಾಗಿದೆ. ಮಿನಿಬಸ್ ಚಾಲಕ ನಾರಾಯಣ(೫೨) ಎಂಬವರು ಹಲ್ಲೆಕೋರರಿಂದ ಭೀಕರ ಹಲ್ಲೆಗೊಳಗಾಗಿದ್ದು ಅವರ ಸಹಿತ ಪ್ರವೀಣಾ(೨೪), ಮಿಣಕಾ(೪೮), ಮುತ್ತು(೬೨),ಶಾಂತಾ(೫೩), ಬೇಬಿ(೪೩) ಎಂಬ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದ್ದು ಗಾಯಾಳುಗಳು ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಕೆಂದೆ ಕಾಲುಕೆರೆದು ಜಗಳ ಮಾಡಿ ಆ ಮೂಲಕ ಪ್ರಯಾಣಿಕರ ಮೊಬೈಲ್, ಚಿನ್ನಾಭರಣಗಳನ್ನು ಎಗರಿಸುವ ತಥಾಕಥಿತ ದರೋಡೆಕೋರರ ಗುಂಪು ಈ ಪರಿಸರದಲ್ಲಿ ವ್ಯಾಪಕವಾಗಿ ತಲೆಯೆತ್ತುತ್ತಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿರುವುದೇ ಈ ಅಪಾಪೋಲಿಗಳಿಗೆ ವರದಾನವಾಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣದ ಸಂಬಂಧ ಹರೀಶ್ ದೇವಾಡಿಗ , ರಾಘು, ಸುರೇಶ, ಸಂತೋಷ ಸೇರಿದಂತೆ ಮತ್ತಿತರರ ಮೇಲೆ ದೂರು ನೀಡಲಾಗಿದೆ.
Tagged with
cnews,
feature
ಮಂಗಳೂರು: ಕಳೆದ ಆರು ವರ್ಷಗಳಿಂದ ಚಿಟ್‌ಫಂಡ್ ಹೆಸರಲ್ಲಿ ಹಣ ಸಂಗ್ರಹಿಸಿದ್ದ ರಿಕ್ಷಾ ಚಾಲಕ ನೋರ್ವ ದಿಢೀರ್ ನಾಪತ್ತೆಯಾಗಿದ್ದು ಇದರಿಂದ ಕಂಗಾಲಾಗಿರುವ ಜನರು ನಿನ್ನೆ ವಂಚಕನ ಮನೆಗೆ ಮುತ್ತಿಗೆ ಹಾಕಿದರು.
ಡೋಂಗರಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ನಗರದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ನರೇಂದ್ರ ಕಾಮತ್ ಎಂಬಾತ ಆರು ವರ್ಷಗಳ ಹಿಂದೆ ಚಿಟ್‌ಫಂಡ್ ವ್ಯವಹಾರ ಆರಂಭಿಸಿದ್ದ. ಮನೆ ಮನೆಯಿಂದ ಹಣ ಸಂಗ್ರಹಿಸುತ್ತಿದ್ದ ಈತ ಆರಂಭದಲ್ಲಿ ಉತ್ತಮವಾಗಿ ವ್ಯವಹಾರ ನಡೆಸಿದ್ದರಿಂದ ಜನರು ವಿಶ್ವಾಸ ತಾಳಿದ್ದರು. ಹೀಗೆ ಪ್ರತಿಯೊಬ್ಬರೂ ೨೦ರಿಂದ ೩೦ ಸಾವಿರ ಹಣವನ್ನು ಈತನಿಗೆ ನೀಡಿದ್ದು ಕೋಟಿಗೂ ಮಿಕ್ಕಿದ ಹಣ ಸಂಗ್ರಹಿಸಿದ್ದ ವಂಚಕ ಕೆಲವು ಮಂದಿಗೆ ಲಕ್ಷ ಮೌಲ್ಯದ ಚೆಕ್ ನೀಡಿದ್ದ. ಆದರೆ ಇದ್ದಕ್ಕಿಂದ್ದಂತೆ ಆತ ನಾಪತ್ತೆಯಾಗಿದ್ದು ಇದರಿಂದ ಕಂಗಾಲಾದ ಜನರು ನಿನ್ನೆ ವಂಚಕನ ಮನೆಗೆ ಮುತ್ತಿಗೆ ಹಾಕಿದ್ದರು. ಆದರೆ ಅದಾಗಲೇ ಆತನ ಮನೆಗೂ ಬೀಗ ಜಡಿಯಲಾಗಿದ್ದು ಪತ್ತೆಯಾಗಿದೆ. ಆದರೂ ಯಾರೂ ದೂರು ನೀಡಿಲ್ಲ ಎಂದು ಬಂದರ್ ಪೊಲೀಸರು ತಿಳಿಸಿದ್ದಾರೆ.
Tagged with
cnews,
feature
ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಕಳೆದ ತಿಂಗಳು ನಡೆದ ರೇವ್ ಪಾರ್ಟಿಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸರಕಾರದಿಂದ ನಿಯುಕ್ತಿಗೊಂಡಿದ್ದ ಮೈಸೂರು ವಿಭಾಗದ ಆಯುಕ್ತರಾದ ಜಯಂತಿ ಅವರು ಇಂದು ಬೆಳಗ್ಗೆ (ಬುಧವಾರ) ಉಡುಪಿಗೆ ಆಗಮಿಸ ಲಿದ್ದು, ತನಿಖೆ ಆರಂಭಿಸಲಿದ್ದಾರೆ.
ಬೆಳಗ್ಗೆ ಐಲ್ಯಾಂಡ್‌ಗೆ ಭೇಟಿ ನೀಡಿ ಸ್ಥಳ ಪರಿಶೋಧನೆ ನಡೆಸಲಿರುವ ತನಿಖಾಧಿಕಾರಿ ಜಯಂತಿಯವರು, ಮಧ್ಯಾಹ್ನ ೩ ಗಂಟೆಗೆ ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿರುವ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಸಾರ್ವ ಜನಿಕರಿಂದ ದೂರುಗಳನ್ನು ಸ್ವೀಕರಿ ಸಲಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಬೆಳಗ್ಗೆ ೧೧ ಗಂಟೆಗೆ ಮತ್ತೆ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ರೇವ್‌ಪಾರ್ಟಿಯ ಬಗ್ಗೆ ದೂರು ಕೊಡಲು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಆಸಕ್ತರಿಗೆ ಮೌಖಿಕವಾಗಿಯೂ ದೂರು ನೀಡಲು ಅವಕಾಶವಿದೆ ಎನ್ನಲಾಗಿದೆ.
ಮಲ್ಪೆ ರೇವ್‌ಪಾರ್ಟಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರು ಸಮರ್ಥನೆ ಮಾಡಿಕೊಂಡಿ ದ್ದರು. ಈ ಬಗ್ಗೆ ಕಳೆದ ಸದನದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ ಚಂದ್ರ ಶೆಟ್ಟಿ, ವಿಧಾನಸಭಾ ಸದಸ್ಯರಾದ ಗೋಪಾಲ ಭಂಡಾರಿ ಮೊದಲಾದವರು ವಿಷಯ ಪ್ರಸ್ತಾಪ ಮಾಡಿದ್ದರು. ಸಿದ್ದರಾಮಯ್ಯ, ಮೋಟಮ್ಮ, ಶ್ರೀ ರಾಮುಲು ಮುಂತಾದವರು ಸರಕಾರದ ಪ್ರವಾಸೋದ್ಯಮ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ವಿರೋಧ ಪಕ್ಷಗಳಿಂದ, ಸಾರ್ವಜನಿಕರ ಭಾರೀ ಪ್ರತಿಭಟನೆಯ ಬಳಿಕ ಸರಕಾರ ರೇವ್ ಪಾರ್ಟಿ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮೈಸೂರು ವಿಭಾಗದ ಆಯುಕ್ತರಾದ ಜಯಂತಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಫೆಬ್ರವರಿ ೩,೪ ಮತ್ತು ೫ರಂದು ಮೂರು ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ಸೇಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಅಂತಾರಾಷ್ಟ್ರೀಯ ಸಂಗೀತ ಮತ್ತು ಕಲಾ ಉತ್ಸವ (ಸ್ಪ್ರಿಂಗ್ ಝೂಕ್) ಎಂಬ ಹೆಸರಿನಲ್ಲಿ ಬಹಿರಂಗ ನಂಗಾನಾಚ್ ನಡೆದಿತ್ತು. ಮೊದಲ ದಿನವಾದ ಫೆ.೩ರಂದು ಬೆಳಗ್ಗೆ ಐಲ್ಯಾಂಡ್‌ಗೆ ಹೋಗುವ ಮೊದಲೇ ಮಲ್ಪೆಯ ಬೋಟ್ ನಿಲುಗಡೆಯ ಸ್ಥಳದಲ್ಲೇ ಅಮಲು ಪದಾರ್ಥಗಳನ್ನು ಸೇವಿಸಿದ ವಿದೇಶಿ ಜೋಡಿಗಳು ಅರೆ ಬೆತ್ತಲೆ ನೃತ್ಯ ಮಾಡಿದ್ದರು. ಮಲ್ಪೆಗೆ ಬರುವಾಗಲೇ ತಮ್ಮ ತಮ್ಮ ಬ್ಯಾಗ್‌ಗಳಲ್ಲಿ ತಂದಿದ್ದ ಗಾಂಜಾವನ್ನು ಕೆಲವರು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಹಾಕಿ ಇತರರಿಗೆ ಮಾರಾಟ ಮಾಡಿದ್ದರು. ಇವುಗಳನ್ನೆಲ್ಲ ಖಾಸಗಿ ಟಿವಿ ಚಾನೆಲ್‌ಗಳು ಚಿತ್ರೀಕರಿಸಿದ್ದವು. ಪತ್ರಿಕಾ ಛಾಯಾಗ್ರಾಹಕರು ಛಾಯಾಚಿತ್ರ ತೆಗೆದಿದ್ದರು. ಈ ಬಗ್ಗೆ ವರದಿ ಕೂಡ ಪ್ರಕಟವಾಗಿತ್ತು.
ಮಧ್ಯಾಹ್ನ ಐಲ್ಯಾಂಡ್ ಪ್ರವೇಶಿಸಿದ ಜೋಡಿಗಳು ಬಾಡಿಗೆ ಕೊಟ್ಟು ಟೆಂಟ್‌ಗಳಲ್ಲಿ ಉಳಕೊಂಡಿದ್ದರು ಮತ್ತು ರಾತ್ರಿ ಹೊತ್ತು ಮದ್ಯ ಸೇವಿಸಿದ್ದು ಅಲ್ಲದೆ, ಸಾಂಸ್ಕೃತಿಕ ಉತ್ಸವ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಎಲ್ಲರೆದುರೇ ನಾಚಿಕೆಯೇ ಇಲ್ಲದೆ ತೀರ ಅಶ್ಲೀಲವಾಗಿ ವರ್ತಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಶಾಸಕ ಕೆ.ರಘುಪತಿ ಭಟ್ ಹಾಗೂ ಶಾಸಕರ ಬೆಂಬಲಿಗರು ಈ ಉತ್ಸವದ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.
ಉಡುಪಿಯ ಕೆ.ಎಂ.ಮಾರ್ಗದ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ೩ ಡಬ್ಲ್ಯೂ ಕಾನ್ಸೆಪ್ಟ್ ಎಂಬ ಸಂಸ್ಥೆಯ ಗಿರೀಶ್ ಶೆಟ್ಟಿ ಎಂಬವರ ಹೆಸರಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಂದ ನೇರವಾಗಿ ಈ ರೇವ್ ಪಾರ್ಟಿಗೆ ಪರವಾನಿಗೆ ಪಡೆಯಲಾಗಿತ್ತು. ಗಿರೀಶ್ ಶೆಟ್ಟಿ ಅವರು ಶಾಸಕ ಭಟ್ ಅವರ ಕ್ಲಾಸ್‌ಮೇಟ್ ಎನ್ನಲಾಗಿದೆ.
ಉತ್ಸವ ಹೊರತುಪಡಿಸಿ ಇನ್ನಾವುದೇ ಕಾನೂನು ಬಾಹಿರ ಕಾರ್ಯ ಕ್ರಮದಲ್ಲಿಯೂ ಇಲಾಖಾ ಲೋಗೋವನ್ನು ಉಪಯೋಗಿಸಿ ಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಕಳೆದ ವರ್ಷದ ಡಿಸೆಂಬರ್ ೨೩ರಂದು ರಾಜ್ಯ ಪ್ರವಾಸೋದ್ಯಮ ನಿರ್ದೇಶನಾಲಯದ ನಿರ್ದೇಶಕರು ಉತ್ಸವದಲ್ಲಿ ಪ್ರವಾಸೋದ್ಯಮ ಇಲಾಖೆಯ ಲೋಗೋವನ್ನು ಉಪಯೋಗಿಸಲು ಅನುಮತಿಯನ್ನು ನೀಡಿದ್ದರು. ಗಿರೀಶ್ ಶೆಟ್ಟಿಯವರು ಡಿ.೮ರಂದು ಉತ್ಸವದಲ್ಲಿ ಲೋಗೋವನ್ನು ಉಪಯೋಗಿ ಸಲು ಅನುಮತಿ ಕೋರಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಬರೆದಿದ್ದರು.
Tagged with
lnews
ಗದ್‌ಚಿರೋಲಿ: ನಕ್ಸಲರು ಸಿಡಿಸಿದ ನೆಲಬಾಂಬ್‌ನಿಂದಾಗಿ ಬಸ್‌ನಲ್ಲಿ ಕರ್ತವ್ಯದ ನಿಮಿತ್ತ ಮಹಾರಾಷ್ಟ್ರದ ಗಟ್ಟಾ ಸಮೀಪದ ಪುಶ್ತೋಲ ಪ್ರದೇಶಕ್ಕೆ ತೆರಳುತ್ತಿದ್ದ ೧೧ ಮಂದಿ ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದು ಹಾಗೂ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮಹಾರಾಷ್ಟ್ರದ ಗಡ್ಚಿರೋಲಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಕಾರ‍್ಯಾಚರಣೆ ನಡೆಸಿ ಮೃತ ಶರೀರಗಳನ್ನು ಹಾಗೂ ಗಾಯಾಳು ಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಾಂಬ್ ಸ್ಫೋಟದಿಂದಾಗಿ ಬಸ್ ಸಂಪೂರ್ಣ ಛಿದ್ರಗೊಂಡಿದ್ದರೆ ಪ್ರದೇಶದ ನಾಗರಿಕರ ಮನೆಗಳಿಗೂ ಹಾನಿಯಾಗಿದೆ. ಹಲವು ನಾಗರಿಕರು ಘಟನೆಯಲ್ಲಿ ಗಾಯಗೊಂಡಿರುವ ಕುರಿತು ಸ್ಥಳೀಯ ಪೊಲೀಸ್ ಇಲಾಖೆ ವರದಿ ನೀಡಿದೆ. ೧೯೨ ಬೆಟಾಲಿಯನ್ ಪಡೆಗೆ ಸೇರಿದ ಯೋಧರ ಹತ್ಯೆ ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳದಲ್ಲಿ ಕೂಂಬಿಂಗ್ ಕಾರ‍್ಯಾಚರಣೆ ಆರಂಭಗೊಂಡಿದ್ದು, ತಡರಾತ್ರಿವರೆಗೂ ಮುಂದುವರಿದಿದೆ.
Tagged with
nnews
೨೦೧೧-೧೨ನೇ ಸಾಲಿನ ರಾಷ್ಟ್ರೀಯ ಹಾಗೂ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಆಟಗಳಲ್ಲಿ ಪ್ರಶಸ್ತಿ ಗಳಿಸಿದ ಎಸ್‌ಡಿಎಂ ಕಾಲೇಜಿನ ಕ್ರೀಡಾತಂಡ. ಈ ವೇಳೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ಶಿಕ್ಷಣ ಸಂಸ್ಥೆಗಳ ಕಾರ‍್ಯದರ್ಶಿ ಡಾ.ಬಿ ಯಶೋವರ್ಮ, ಕ್ರೀಡಾ ಸಂಸ್ಥೆಗಳ ಕಾರ್ಯದರ್ಶಿ ಪ್ರೋ.ಬಾಲಭಾಸ್ಕರ್ ಹಾಗೂ ಹಲವರು ಉಪಸ್ಥಿತರಿದ್ದರು.
Tagged with
tnews
ಗಾಲ್: ನಿರೀಕ್ಷೆಯಂತೆ ಗಾಲ್ ಟೆಸ್ಟ್ ಕುತೂಹಲ ಘಟ್ಟಕ್ಕೆ ಸಾಗಿದ್ದು, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಂಕಾ ೨೧೪ ರನ್‌ಗೆ ಆಲೌಟಾಗುವ ಮೂಲಕ ೩೪೦ ರನ್ ಗುರಿಯನ್ನು ಆಂಗ್ಲರಿಗೆ ನೀಡಿದೆ. ಆಂಗ್ಲರ ಪರ ಗ್ರೇಮ್ ಸ್ವಾನ್ ಆರು ವಿಕೆಟ್ ಪಡೆದರು. ಮೂರನೇ ದಿನದಂತ್ಯಕ್ಕೆ ಪ್ರವಾಸಿಗಳು ಉತ್ತಮ ಸ್ಥಿತಿಯಲ್ಲಿದ್ದು, ಗೆಲುವಿಗೆ ಇನ್ನೂ ೨೨೯ ರನ್‌ಗಳ ಅಗತ್ಯವಿದೆ. ಒಟ್ಟಿನಲ್ಲಿ ಎರಡೂ ತಂಡಕ್ಕೂ ಗೆಲುವು ಸಾಧಿಸುವ ಉತ್ತಮ ಅವಕಾಶವಿದೆ.
ಎರಡನೇ ದಿನದಂತ್ಯಕ್ಕೆ ೮೪ ರನ್‌ಗೆ ಐದು ವಿಕೆಟ್ ಕಳಕೊಂಡಿದ್ದ ಲಂಕಾ ಅಂತಿಮವಾಗಿ ೮೪.೩ ಓವರ್‌ಗಳಲ್ಲಿ ೨೧೪ ರನ್‌ಗೆ ಸರ್ವಪತನಗೊಂಡಿದ್ದು, ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ ೧೧೧ ರನ್ ಗಳಿಸಿದೆ. ಜೊನಾಥನ್ ಟ್ರಾಟ್ ಹಾಗೂ ಕೆವಿನ್ ಪೀಟರ್ಸನ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಂಕಾ ಪರ ರಂಗನಾ ಹೇರಾತ್ ಎರಡು ವಿಕೆಟ್ ಪಡೆದರು.
೧೭ ರನ್ ಗಳಿಸಿದ್ದ ಚಾಂದಿಮಾಲ್ ನಿನ್ನೆ ಆಟ ಮುಂದುವರೆಸಿದ್ದು, ಉತ್ತಮ ಹೋರಾಟ ನೀಡುವ ಇಶಾರೆ ತೋರಿದರು. ಆದರೆ ೩೧ ರನ್ ಗಳಿಸುವ ವೇಳೆಗೆ ಪನೇಸರ್ ಎಸೆತಕ್ಕೆ ಪೆವಿಲಿಯನ್ ದಾರಿ ಹಿಡಿದರು. ರಾಂದಿವ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಕೆಲಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮೆನ್ ಪ್ರಸನ್ನ ಜಯವರ್ಧನೆ ಅಜೇಯ ೬೧ ರನ್ ಸಿಡಿಸಿದ್ದು, ತಂಡಕ್ಕೆ ವರದಾನವಾಯಿತು. ಈ ಮೂಲಕ ಲಂಕಾ ೩೪೦ರ ಗುರಿಯನ್ನು ಆಂಗ್ಲರಿಗೆ ನೀಡಿತು. ವೆಲಗೇದರ (೧೩) ಹಾಗೂ ಲಕ್ಮಲ್ (೧೩) ಕೂಡ ಜಯವರ್ಧನೆಗೆ ಉತ್ತಮ ಸಾಥ್ ನೀಡಿದರು.
ಇನ್ನು ೩೪೦ರ ಗುರಿ ಬೆನತ್ತಲು ಆರಂಭಿಸಿದ ಇಂಗ್ಲೆಂಡ್‌ಗೆ ಹೇರಾತ್ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ ೪೮ ಆಗುವಷ್ಷರಲ್ಲಿ ಇಬ್ಬರೂ ಆರಂಭಿಕರಾದ ಸ್ಟ್ರಾಸ್ ಹಾಗೂ ಕುಕ್ ವಿಕೆಟ್ ಕಳೆದುಕೊಂಡರು. ಆದರೆ ಈ ವೇಳೆ ಜೊತೆ ಗೂಡಿದ ಪೀಟರ್ಸನ್ (೨೯) ಹಾಗೂ ಟ್ರಾಟ್ (೪೦) ಜೋಡಿ ಮೂರನೇ ವಿಕೆಟ್‌ಗೆ ಅಜೇಯ ೬೩ ರನ್‌ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್ ಗೆಲುವಿಗೆ ಪಣತೊಟ್ಟಿದ್ದಾರೆ.
Tagged with
tnews
ಸಂತೋಷ್ ಸುವರ್ಣ, ಮೂಡಬಿದ್ರೆ
ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಮೂಡ ಬಿದ್ರೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಮೂಲ ಸೌಕರ್ಯಗ ಳನ್ನು ಒದಗಿಸುವಲ್ಲಿ ಇಲ್ಲಿನ ರಾಜಕಾರಣಿಗಳು ವಿಫಲವಾಗಿರು ವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿವೆ.
ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರ, ಪಾರ್ಕಿಂಗ್‌ಗೆ ತೀವ್ರ ಸಮಸ್ಯೆ ಎದುರಾಗಿದೆ. ಆದರೂ ನಮ್ಮ ರಾಜಕಾರಣಿಗಳು, ಜನಪ್ರತಿನಿಧಿಗಳು ಬೈಪಾಸ್ ರಚನೆಗೆ ಬೆನ್ನು ಹಿಡಿದು ಕೆಲಸ ಮಾಡುತ್ತಿಲ್ಲ. ಕಾರ್ಕಳ, ಪುತ್ತೂರು ಮತ್ತು ಮೂಡಬಿದ್ರೆಗೆ ಏಕಕಾಲದಲ್ಲಿ ಬೈಪಾಸ್ ಮಂಜೂ ರಾಗಿತ್ತು. ಆದರೆ ಬೈಪಾಸ್ ಕೆಲಸ ಬಾಕಿ ಉಳಿದಿರುವುದು ಮೂಡಬಿದ್ರೆಯಲ್ಲಿ ಮಾತ್ರ ಎಂದಾದರೆ ಇಲ್ಲಿನ ಜನಪ್ರತಿನಿಧಿ ಗಳು ಎಷ್ಟು ಆಲಸಿಗಳು ಎನ್ನುವುದನ್ನು ತೋರಿಸುತ್ತದೆ, ಬೈಪಾಸ್ ರಚನೆಗಿರುವ ಎಡರು-ತೊಡರುಗಳನ್ನು ಪರಿಹರಿ ಸುವ ಬದಲು ಈ ಸಮಸ್ಯೆಯನ್ನೇ ಜನರ ಮುಂದೆ ಬಿಂಬಿಸಿ ಪೊಳ್ಳು ಭರವಸೆ ನೀಡಲಾಗುತ್ತಿದೆ. ಇನ್ನು ಇಲ್ಲಿ ದಿನದಿಂದ ದಿನಕ್ಕೆ ಫ್ಲಾಟ್‌ಗಳ ಸಂಖ್ಯೆ ಹೆಚ್ಚಾಗಿ ಡ್ರೈನೇಜ್ ಸಮಸ್ಯೆ ಎದು ರಾಗಿದೆ. ೧೦ ವರ್ಷಗಳಿಂದ ಒಳಚರಂಡಿ ಯೋಜನೆಯ ಬೇಡಿಕೆ ಈಡೇರಲಿಲ್ಲ ಎಂದರೆ ಮೂಡುಬಿದ್ರೆ ಅಭಿವೃದ್ಧಿಯ ಜತೆಗೆ ಸಮಸ್ಯೆಗಳು ಅದೇ ರೀತಿ ಬೆಳೆಯಲು ಜನಪ್ರತಿನಿಧಿಗಳು ಪ್ರೋತ್ಸಾಹ ಕೊಟ್ಟಂತಾಗಿದೆ. ಇಲ್ಲಿನ ಮಾರ್ಕೆಟ್ ಕೂಡ ಎರಡು ವರ್ಷದಿಂದ ಸಮಸ್ಯೆಯಲ್ಲಿದೆ. ಕಾರ್ಕಳದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದರೆ ಮೂಡಬಿದ್ರೆ ಮಾರ್ಕೆಟ್ ಸ್ಥಿತಿ ನೋಡಿ ದರೆ ವಾಕರಿ ಬರುತ್ತದೆ.
ಮೂಡಬಿದ್ರೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಸಾವಿ ರಾರು ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಆದರೆ ಬಡವಿದ್ಯಾರ್ಥಿಗಳ ಅನುಕೂಲಕ್ಕೆ ಬೇಕಾಗಿ ಇಲ್ಲಿಗೆ ಇದುವರೆಗೂ ಸರಕಾರಿ ಡಿಗ್ರಿ ಕಾಲೇಜು ಮಂಜೂರಾಗಿಲ್ಲ. ನಗರದೊಳಗೆ ಸರಕಾರಿ ಪಿಯುಸಿ ಕಾಲೇಜು ಬರುವುದಕ್ಕೂ ಇಲ್ಲಿನ ರಾಜಕಾರಣಿಗಳು ಅಡ್ಡಿಪಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾಜಿ ಸಚಿವ ಅಮರನಾಥ್ ಶೆಟ್ಟಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಯಾದರೆ ಶಾಸಕ ಅಭಯಚಂದ್ರ ಅವರು ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ. ಮೂಡಬಿದ್ರೆಯ ಅಭಿ ವೃದ್ಧಿಯಲ್ಲಿ ಕೆಲಸ ಮಾಡುವ ಈ ಇಬ್ಬರು ನಾಯಕರು ಖಾಸಗಿ ಕಾಲೇಜುಗಳ ಹಂಗಿನಲ್ಲಿರುವಾಗ ಇವರ ಅವಧಿಯಲ್ಲಿ ಮೂಡ ಬಿದ್ರೆಗೆ ಸರಕಾರಿ ಕಾಲೇಜನ್ನು ಜನ ನಿರೀಕ್ಷೆ ಮಾಡುವುದು ಮೂರ್ಖತನವಾದೀತು. ಹಾಗಾಗಿ ಈ ಇಬ್ಬರು ನಾಯಕರು ಖಾಸಗಿ ಕಾಲೇಜು ಹುದ್ದೆಗೆ ರಾಜೀನಾಮೆ ನೀಡಿ ಮೂಡಬಿದ್ರೆ ನಗರವನ್ನು ಕೇಂದ್ರೀಕರಿಸಿ ಸರಕಾರಿ ಪಿಯುಸಿ ಮತ್ತು ಡಿಗ್ರಿ ಕಾಲೇಜನ್ನು ಮಂಜೂರು ಮಾಡಿ ಬಡಮಕ್ಕಳ ಶಿಕ್ಷಣಕ್ಕೆ ಅನು ಕೂಲ ಮಾಡಿಕೊಡಬೇಕಾಗಿದೆ. ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವುದರಿಂದ, ಕಡಲಕೆರೆಗೆ ಮೀನು ಬಿಡುವು ದರಿಂದ ಮೂಡಬಿದ್ರೆ ಅಭಿವೃದ್ಧಿಯಾಗುವುದಿಲ್ಲ.
Tagged with
bahiranga
ಸಮಸ್ಯೆ: ನನ್ನ ವಯಸ್ಸು ೨೮. ನನಗೆ ಮುಂದಿನ ಎಪ್ರಿಲ್ ತಿಂಗಳಲ್ಲಿ ಮದುವೆ ನಡೆಯಲಿದೆ. ನನ್ನನ್ನು ಮದುವೆಯಾಗುವ ಹುಡುಗಿ ನೋಡಲು ಚೆನ್ನಾಗಿದ್ದಾಳೆ. ನಾನು ಖಾಸಗಿ ಸಂಸ್ಥೆಯಲ್ಲಿ ಉತ್ತಮ ನೌಕರಿಯಲ್ಲಿದ್ದೇನೆ. ಆದರೆ ನಾನು ಎಲ್ಲ ಹುಡುಗರಂತೆ ಹೆಣ್ಣುಮಕ್ಕಳ ಸಂಗವನ್ನು ಇಷ್ಟರವರೆಗೆ ಮಾಡಿಲ್ಲ. ಕಾಲೇಜಿನಲ್ಲಿರುವಾಗಲೂ ನಾನು ಕಲಿಯುವುದರ ಕಡೆ ಗಮನ ಕೊಡುತ್ತಿದ್ದೆನೇ ವಿನಃ ಪ್ರೀತಿ-ಪ್ರೇಮ ಎಂದು ಸಮಯ ಹಾಳು ಮಾಡಿಲ್ಲ. ನನ್ನನ್ನು ಇಬ್ಬರು ಹುಡುಗಿಯರು ಪ್ರೀತಿಸಲು ಮುಂದೆ ಬಂದಿದ್ದರೂ ನಾನು ಅವರಿಗೆ ಒಪ್ಪಿಗೆ ಕೊಟ್ಟಿರಲಿಲ್ಲ. ಇದರಿಂದ ನನಗೆ ಸೆಕ್ಸ್ ಬಗ್ಗೆ ಅಷ್ಟೇನೂ ಜ್ಞಾನವಿಲ್ಲ. ನಾನು ಪುಸ್ತಕ ಓದಿ ಕೆಲವು ಅಂಶವನ್ನು ತಿಳಿದಿದ್ದೇನೆ. ಆದರೂ ನನ್ನಲ್ಲಿ ಇನ್ನೂ ಗೊಂದಲವಿದೆ. ನಾನು ಒಂದು ವೇಳೆ ಸೆಕ್ಸ್ ಮಾಡಲು ವಿಫಲನಾದರೆ ಏನು ಮಾಡುವು ದೆಂದು ಭಯವಾಗುತ್ತದೆ. ಸೆಕ್ಸ್ ಮಾಡಬೇಕಾದರೆ ಹೆಣ್ಣುಮಕ್ಕಳು ಉದ್ರೇಕಗೊಂಡಿರಬೇಕು ಎಂದು ಹೇಳುತ್ತಾರೆ. ಆದರೆ ಹೆಣ್ಣನ್ನು ಯಾವ ರೀತಿ ಉದ್ರೇಕ ಪಡಿಸುವುದು ಮತ್ತು ಆಕೆ ಎಷ್ಟು ಹೊತ್ತಿನಲ್ಲಿ ಉದ್ರೇಕಕ್ಕೆ ಒಳಪಡುತ್ತಾಳೆ ಎನ್ನುವುದು ತಿಳಿದಿಲ್ಲ. ನಾನು ಇದನ್ನು ತಿಳಿಯಲು ಏನು ಮಾಡಲಿ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಪ್ರಥಮ ಬಾರಿ ಸೆಕ್ಸ್ ಅರ್ಥಾತ್ ಸಂಭೋಗದ ಬಗ್ಗೆ ಗೊಂದಲ, ಪ್ರಶ್ನೆಗಳು ಇರುವುದು ಸಹಜ. ಇದನ್ನು ನಿಮ್ಮಂತೆ ಸಕಾಲದಲ್ಲಿ ಪರಿಹರಿಸಿಕೊಂಡಲ್ಲಿ ಮುಂದೆ ಯಾವುದೇ ಸಮಸ್ಯೆಯಾಗದು. ಆದರೆ ಬಹಳಷ್ಟು ಮಂದಿ ಇದನ್ನು ಮುಚ್ಚಿಟ್ಟು ತಪ್ಪು ಮಾಡುತ್ತಾರೆ. ಮೊದಲ ಬಾರಿ ಸಂಭೋಗದಲ್ಲಿ ಸಾಮಾನ್ಯವಾಗಿ ಸ್ತ್ರೀ ಭಾವಪ್ರಾಪ್ತಿ ಹೊಂದುವುದು ವಿರಳ. ಹೀಗಾಗಿ ಸ್ತ್ರೀಯರು ನಿರಾಶರಾಗಿ ಸಂಭೋಗ ಕ್ರಿಯೆಯ ಬಗ್ಗೆ ಉದಾಸೀನ ತಾಳಬಹುದು. ಇನ್ನು ಲೈಂಗಿಕ ಕ್ರಿಯೆಯ ಸಂದರ್ಭ ಪುರುಷ ಬೇಗನೆ ಉದ್ರೇಕಗೊಳ್ಳುತ್ತಾನಾದರೂ, ಸ್ತ್ರೀಗೆ ಈ ಸ್ಥಿತಿಯನ್ನು ತಲುಪಲು ಕೆಲವು ಸಮಯ ಹಿಡಿಯುತ್ತದೆ. ಹೀಗಾಗಿ ಸಂಭೋಗಕ್ಕೂ ಮುನ್ನ ಪುರುಷ ತನ್ನ ಕೈಬೆರಳು ಗಳಿಂದ ಸ್ತ್ರೀಯ ಜನನಾಂಗ, ಭಗಾಂಕುರವನ್ನು ತೀಡುವುದು ಅವಶ್ಯ. ಆರಂಭದ ಕೆಲವು ದಿನ ಸಂಭೋಗ ತೃಪ್ತಿಕರವಾಗದಿದ್ದರೆ ದಂಪತಿ ಧೃತಿಗೆಡಕೂಡದು. ಸ್ತ್ರೀಯರು ಬೇಸರ ವ್ಯಕ್ತಪಡಿಸಬಾರದು ಎನ್ನುತ್ತಾರೆ ಲೈಂಗಿಕ ವಿeನಿಗಳು. ಕೆಲವು ಹೆಣ್ಣಮಕ್ಕಳಲ್ಲಿ ಮೊದಲ ಬಾರಿ ಸೆಕ್ಸ್ ಮಾಡುವಾಗ ನೋವುಂಟಾಗುವುದೂ ಇದೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ಡಿಸ್ಟಾರೆಯೂನಿಯಾ’ ಎಂದು ಕರೆಯುತ್ತಾರೆ. ಇದಕ್ಕೆ ಪ್ರಾರಂಭದಲ್ಲೇ ಕಾರಣಗಳನ್ನು ತಿಳಿದು ಪರಿಹರಿಸಬೇಕು. ಸಂಭೋಗಕ್ಕೂ ಮುನ್ನ ಸ್ತ್ರೀ ಸಾಕಷ್ಟು ಉತ್ತೇಜಿತಳಾಗದಿದ್ದರೆ, ಪುರುಷನ ಜನನಾಂಗ ಪ್ರವೇಶ ಸುಲಭವಾಗುವಂತೆ ಸ್ತ್ರೀ ಜನನಾಂಗ ಸ್ರವಿಸದಿದ್ದಲ್ಲಿ ಜನನಾಂಗಗಳು ಶುಷ್ಕವಾಗಿರುತ್ತದೆ. ಇದರಿಂದ ಸ್ತ್ರೀ ಹೆಚ್ಚಿನ ನೋವನ್ನು ಅನುಭವಿಸುತ್ತಾಳೆ. ಇನ್ನೂ ಕೆಲವು ಮಂದಿ ಸ್ತ್ರೀಯರು ಉತ್ತೇಜಿತರಾ ಗಿದ್ದರೂ ಅವರ ಜನನಾಂಗದಲ್ಲಿ ಪುರುಷ ಜನನಾಂಗದ ಜಾರುವಿಕೆಗೆ ಅಗತ್ಯವಿರುವಷ್ಟು ದ್ರವ ಸ್ರವಿಕೆಯಾಗುವುದಿಲ್ಲ. ಈ ವೇಳೆ ಸೆಕ್ಸ್ ಅತೀವ ನೋವು ತರುತ್ತದೆ. ಆದರೆ ಇದನ್ನೇ ಒಂದು ಸಮಸ್ಯೆಯೆಂದು ಭಾವಿಸಬೇಕಿಲ್ಲ. ಸೆಕ್ಸ್‌ಗೂ ಮುನ್ನ ಸಾಕಷ್ಟು ಸಮಯವನ್ನು ಸೆಕ್ಸ್ ಮುಂಚಿನ ಆಟ(ಮುನ್ನಲಿವು)ದಲ್ಲಿ ತೊಡಗಿಕೊಳ್ಳಬೇಕು. ಈ ವೇಳೆ ಹೆಣ್ಣು ತಯಾರಾಗುತ್ತಾಳೆ. ಆಕೆಯ ದೇಹದಲ್ಲಿ ಕೆಲವು ಭಾಗವನ್ನು ಸ್ಪರ್ಶಿಸಿದಲ್ಲಿ ಬಲುಬೇಗನೆ ಕಾಮೋತ್ತೇಜನ ಪಡೆಯುತ್ತಾಳೆ. ಇದನ್ನು ಗಂಡು ಅರಿತಿರಬೇಕು. ಆಕೆಯನ್ನೇ ಕೇಳುವ ಮೂಲಕ ಇಂಥ ಭಾಗಗಳು ಯಾವುವು ಎನ್ನುವುದನ್ನು ತಿಳಿದುಕೊಂಡರೆ ಒಳ್ಳೆಯದು. ಇನ್ನು ಜನನಾಂಗದ ಶುಷ್ಕ ಪರಿಸ್ಥಿತಿಯನ್ನು ಕಡಿಮೆ ಮಾಡಲು ಮೆಡಿಕಲ್ ಸ್ಟೋರ್‌ಗಳಲ್ಲಿ ಜೆಲ್ಲಿ ಲಭ್ಯವಿದೆ. ವೈದ್ಯರ ಸೂಚನೆಯ ಮೇರೆಗೆ ಇದನ್ನು ಬಳಸುವುದು ಒಳ್ಳೆಯದು. ಇನ್ನು ತೆಂಗಿನ ಎಣ್ಣೆಯನ್ನೂ ಬಳಸಿ ನೋಡಬಹುದು. ಇದರಿಂದ ಜನನಾಂಗ ತೇವಗೊಂಡು ಲೈಂಗಿಕ ಕ್ರಿಯೆ ಸಮರ್ಪಕವಾಗಿ ನಡೆಯುತ್ತದೆ. ಕೆಲವು ಮಂದಿ ಸ್ತ್ರೀಯರಲ್ಲಿ ಸಂಭೋಗದ ನಂತರ ನೋವು, ತುರಿಕೆ ಇತ್ಯಾದಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಜನನಾಂಗಗಳಲ್ಲಿನ ಅಧಿಕ ಘರ್ಷಣೆಯೇ ಕಾರಣವಾಗಿರುತ್ತದೆ. ಈ ಸಮಸ್ಯೆ ನಂತರದ ದಿನಗಳಲ್ಲಿ ಸರಿಯಾಗಲಿದೆ. ಕೆಲವು ಸ್ತ್ರೀಯರ ಯೋನಿಪಟಲ ದಪ್ಪ ಆಗಿರುವ ಕಾರಣ ಪುರುಷ ಜನನಾಂಗ ಪ್ರವೇಶದ ವೇಳೆ ಅದು ಅಡ್ಡಿಯಾಗುವ ಕಾರಣ ನೋವು ಅನುಭವಿಸುವ ಸಾಧ್ಯತೆಗಳಿವೆ. ಇದು ನಿಧಾನವಾಗಿ ಸರಿಹೋಗುವ ಸಮಸ್ಯೆಯಾದುದರಿಂದ ಚಿಂತಿಸುವ ಅಗತ್ಯವಿಲ್ಲ. ಇಂಥ ಸಮಸ್ಯೆ ತುಂಬಾ ಸಮಯ ಕಳೆದರೂ ನಿವಾರಣೆಯಾಗದಿದ್ದರೆ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅವಶ್ಯ.
Tagged with
gupta
ಕರ್ನಾಟಕದ ಮುಸ್ಲಿಮ್ ಸಮುದಾಯದ ಮಸೀದಿ, ಮದ್ರಸ, ದಫನ ಭೂಮಿ, ಇತ್ಯಾದಿ ಧಾರ್ಮಿಕ ಕೇಂದ್ರವನ್ನು ಲೂಟಿ ಅಥವಾ ಅಕ್ರಮ ವಾಗಿ ಪಡೆದು ಕರ್ನಾಟಕ ರಾಜ್ಯದ ಮುಸ್ಲಿಮರನ್ನು ವಂಚಿಸಿದ ಖದೀಮರನ್ನು ಸುಮ್ಮನೆ ಬಿಡಬಾರ ದೆಂದು ಈ ಮೂಲಕ ಸನ್ಮಾನ್ಯ ಮಂತ್ರಿ ಸದಾನಂದ ಗೌಡರಲ್ಲಿ ವಿನಂತಿ ಮಾಡುತ್ತಿದ್ದೇನೆ.
ಕರ್ನಾಟಕ ರಾಜ್ಯದಲ್ಲಿ ಎಷ್ಟೋ ಮಸೀದಿಗಳು, ಮದ್ರಸಗಳು, ಕಟ್ಟಡಗಳು ಹಣವಿಲ್ಲದೆ ಅರ್ಧ ಹಂತದಲ್ಲಿ ನಿಂತಿದ್ದು ಎಲ್ಲರಿಗೂ ತಿಳಿದ ವಿಷಯ, ಮಸೀದಿಯ ಗುರುಗಳಿಗೆ, ಮುಹದ್ದೀನ್‌ಗಳಿಗೆ, ಸದರ್‌ಗಳಿಗೆ, ಧಾರ್ಮಿಕ ಶಿಕ್ಷಕ-ಶಿಕ್ಷಕಿಯರಿಗೆ ಸಂಬಳ ಕೊಡಲು ಪರದಾಡುವುದು ನೋಡಿದರೆ ಅದರ ಬೇಸರ ಹೇಳಿ ಸುಖವಿಲ್ಲ. ಅರ್ಧದಲ್ಲಿ ನಿಂತ ಕಟ್ಟಡವನ್ನು ಪೂರ್ತಿಗೊಳಿಸಲು ಆಹೋ ರಾತ್ರಿ ಕಷ್ಟ ಪಡುವ ಮುಸ್ಲಿಂ ಸಹೋದರರನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತಿದೆ. ಇದನ್ನೆಲ್ಲಾ ನೋಡುತ್ತಿರುವ ಮುಸ್ಲಿಂ ನೇತಾರರೆಂದು ಹೇಳಿಕೊಳ್ಳುವವರಿಗೆ ವಕ್ಫ್‌ನ ೨.೫೦ ಲಕ್ಷ ಕೋಟಿಯನ್ನು ನುಂಗಲು ಮನಸ್ಸು ಹೇಗೆ ಬಂತು? ಇವರು ನನ್ನ ಲೆಕ್ಕದಲ್ಲಿ ಮನುಷ್ಯರಲ್ಲ ಎಂದು ಹೇಳಬೇಕಾಗುತ್ತದೆ.
ಹಿಂದು ಸಹೋದರರು, ನೇತಾರರಿಗಾದರೂ ತಮ್ಮ ಕ್ಷೇತ್ರದ ಹಣವನ್ನು ದುರುಪಯೋಗಪಡಿಸುವಾಗ ದೇವರ ಭಯವಿರುತ್ತದೆ. ಆದರೆ ಮುಸ್ಲಿಮ ರಾದ ನೇತಾರರಿಗೆ ಇವರಷ್ಟು ಭಯವಿಲ್ಲದೇ ಇರುವುದು ಖೇದಕರ. ಲೂಟಿ ಮತ್ತು ಅಕ್ರಮ ಮಾಡಿದ ವಕ್ಫ್‌ನ ಸೊತ್ತನ್ನು ಒಂದು ಪೈಸೆ ಬಿಡದೆ ಅದು ವಕ್ಫ್ ಬೋರ್ಡಿಗೆ ತಿರುಗಿ ಪಡೆಯುತ್ತೇನೆ ಎಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ಮುಸ್ಲಿಮರು ಸ್ವಾಗತಿಸಬೇಕು. ಮಾತ್ರವಲ್ಲ ತಪ್ಪಿತಸ್ಥರ ಮೇಲೆ ಯಾವ ಶಿಫಾರಸ್ಸಿಗೆ ಬಲಿಯಾಗದೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ ವಿಷಯವನ್ನು ಕೂಡಾ ಹೇಳಿದ ಮುಖ್ಯಮಂತ್ರಿ ಸದಾನಂದ ಗೌಡರನ್ನು ಶ್ಲಾಘಿಸುತ್ತೇನೆ. ನನಗೆ ವಿನಂತಿ ಮಾಡಲಿಕ್ಕೆ ಇರುವುದೇನೆಂದರೆ ಸನ್ಮಾನ್ಯ ಮುಖ್ಯಮಂತ್ರಿಯವರು ಸಚಿವ ಸಂಪುಟ ವಿಸ್ತರಣೆ ಮಾಡುವಾಗ ವಕ್ಫ್ ಖಾತೆಯನ್ನು ತಮ್ಮಲ್ಲೇ ಇಟ್ಟು ಕೊಂಡು ತಮ್ಮ ನೇತೃತ್ವದಲ್ಲಿ ಯಾವ ಏರಿಯಾಕ್ಕೆ ಎಷ್ಟೆಷ್ಟು ಹಣ ಸಲ್ಲಬೇಕು ಎಂಬುದಕ್ಕೆ ಪ್ರತೀ ಸ್ಥಳಕ್ಕೆ ಮೇಲಧಿಕಾರಿಯವರನ್ನು ನೇಮಿಸಿ ವರದಿ ಬಂದ ನಂತರ ತಮ್ಮ ಖಾತೆಯಿಂದ ಹಣ ಬಿಡುಗಡೆಗೊಳಿಸಬೇಕು. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇರುವಾಗ ವಕ್ಫ್ ಬೋರ್ಡ್‌ನ್ನು ತನ್ನ ಸ್ವಂತ ಮನೆಯಲ್ಲಿ ಆಡಳಿತ ನಡೆಸಿದ ಹಾಗೆ ದುರುಪಯೋಗ ಮಾಡುತ್ತಾ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇವರ ಗುಟ್ಟೆಲ್ಲಾ ರಟ್ಟಾಯಿತು.
ಇನ್ನಾದರೂ ಎಲ್ಲಾ ಮುಸ್ಲಿಮರು ಎಚ್ಚೆತ್ತುಕೊಂಡು ಬಿಜೆಪಿ ಪರ ನಿಂತು ವಕ್ಫ್ ಬೋರ್ಡಿನಿಂದ ಬರುವ ಹಣವನ್ನು ಮಸೀದಿ, ಮದ್ರಸಗಳಿಗೆ ಉಪಯೋಗ ವಾಗುವಂತೆ ಮಾಡಬೇಕೆಂದು ಎಲ್ಲಾ ಮುಸ್ಲಿಮರಲ್ಲಿ ವಿನಂತಿ ಮಾಡುತ್ತೇನೆ. ಇತ್ತೀಚೆಗೆ ಸುನಿಲ್ ಕುಮಾರ್‌ರವರು ‘ಮುಸ್ಲಿಮರ ಮತ ನನಗೆ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ಸಿಗರು ಪ್ರತೀ ಮುಸ್ಲಿಮರ ಮನೆಯಲ್ಲಿ ಹೋಗಿ ಹೇಳಿ ಮತವನ್ನು ಯಾಚಿಸಿ ಜಯಪ್ರಕಾಶ್ ಹೆಗ್ಡೆಯವರಿಗೆ ಜಯವಾಗು ವಂತೆ ಮಾಡಿದ್ದಾರೆ. ಇಂತಹ ಸುಳ್ಳು ಪ್ರಚಾರ ಮಾಡಿ ಮತ ಯಾಚನೆ ಮಾಡುವುದಕ್ಕಿಂತ ಭಿಕ್ಷೆ ಬೇಡಿದ ಹಾಗೆ ಕಾಲಿಗೆ ಬಿದ್ದು ಮತ ಯಾಚಿಸಬಹುದಿತ್ತು. ಒಂದು ವೇಳೆ ಸುನೀಲ್ ಕುಮಾರ್‌ರವರು ಇಂತಹ ಪದವನ್ನು ಉಪಯೋಗಿ ಸದಿದ್ದರೆ ಸುಳ್ಳು ಪ್ರಚಾರ ಮಾಡಿದವರ ಹೆಸರು ನನ್ನ ಕೈಯಲ್ಲಿ ಇದೆ. ಸಂದರ್ಭ ಬಂದರೆ ಸಾಬೀತುಪಡಿಸುತ್ತೇನೆ. ಮುಸ್ಲಿಮರು ವಿಧಾನ ಸಭಾ ಚುಣಾವಣೆಗೆ ಒಂದು ವರ್ಷ ಇದ್ದರೂ ಈಗಲೇ ತಮ್ಮ ನಿರ್ಧಾರವನ್ನು ಬಿಜೆಪಿ ಪರವಾಗಿ ಮನಸ್ಸಿನಲ್ಲಿ ಇಟ್ಟು ಕೊಳ್ಳಬೇಕೆಂಬುದು ನನ್ನ ವಿನಂತಿಯಾಗಿದೆ.
ಟಿ. ಇಸ್ಮಾಯಿಲ್, ಮಂಗಳೂರು
Tagged with
chavadi
ನಮ್ಮ ಸುತ್ತಮುತ್ತ ಇರುವ ಜನರನ್ನು ಗಮನಿಸಿದಾಗ ಬೇರೆ ಬೇರೆ ವಿಧದ ಖಾಯಿಲೆಯಿಂದ ಬಳಲುತ್ತಿರುವುದನ್ನು ಕಾಣಬಹುದು. ಅದು ಮಧುಮೇಹವಿರಬಹುದು, ರಕ್ತದೊತ್ತಡ ಅಥವಾ ಹೃದಯಾಘಾತ ವಾಗಿರಬಹುದು. ಆದರೂ ಅವರು ಕಾಯಿಲೆಯಿಂದ ನರಳುತ್ತಿರುವವರಂತೆ ಭಾಸವಾಗುವುದಿಲ್ಲ. ಕೆಲವರಿಗೆ ಅರುವತ್ತು ವರ್ಷ ವಯಸ್ಸಾಗಿದ್ದರೂ ಪಾದರಸದಂತೆ, ಹರೆಯದವರ ಹಾಗೆ ಚುರುಕಿನಿಂದ ಜೀವನ ಸಾಗಿಸು ತ್ತಿರುತ್ತಾರೆ. ಕೆಲವರು ಅತಿಯಾದ ಮಾನಸಿಕ ಒತ್ತಡ ತರುವ ಕೆಲಸಗಳನ್ನು ಸಹ ಆತಂಕ ತಂದುಕೊಳ್ಳದೇ ಹಸನ್ಮುಖದಿಂದ, ಸಹನಾಶೀಲರಾಗಿ ನಿಭಾಯಿಸುತ್ತಿರುತ್ತಾರೆ. ಇವರೆಲ್ಲರೂ ನೆಮ್ಮದಿಯ ಜೀವನ ನಡೆಸುವವರು ಅಥವಾ ಆರೋಗ್ಯವಂತ ವ್ಯಕ್ತಿಗಳು ಎಂದು ಹೇಳಬಹುದು. ಹಾಗಾಗಿ ನೆಮ್ಮದಿಯ ಜೀವನದ ಆಥವಾ ಸಮಗ್ರ ಆರೋಗ್ಯದ ಗುಟ್ಟೇನು? ಎಂದು ಚಿಂತನೆ ನಡೆಸಿದಾಗ ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನಿಕಟ ಸಂಬಂಧ ಇದೆ ಎನ್ನುವುದು ಅರಿವಿಗೆ ಬರುತ್ತದೆ. ಯಾರು ಒಳ್ಳೆಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುತ್ತಾರೋ ಅಂಥವರು ಹಲವು ಖಾಯಿಲೆಗಳಿಂದ ದೂರವಿರಬಲ್ಲರು. ಅಂತವರು ಸಹಜವಾಗಿ ಬರುವ ಖಾಯಿಲೆಗಳ ತೀವ್ರತೆಯನ್ನು ಆದಷ್ಟು ಕಡಿಮೆಗೊಳಿಸಲು ಶಕ್ತರಾಗುತ್ತಾರೆ. ಮಾತ್ರವಲ್ಲ. ನಾವು ಮೈಗೂಡಿಸಿಕೊಂಡ ಜೀವನ ಶೈಲಿಯಿಂದ ಎಲ್ಲಾ ರೋಗ ರುಜಿನಗಳ ಮತ್ತು ಕಷ್ಟಗಳ ನಡುವೆಯೂ ತಮಗೂ ಮತ್ತು ತಮ್ಮ ಕುಟುಂಬಕ್ಕೂ ಹೊರೆಯಾಗದೇ, ಉಪಯುಕ್ತ ಜೀವನ ನಡೆಸಬಲ್ಲರು ಎಂದರೆ ಅದು ಅತಿಶಯೋಕ್ತಿಯಲ್ಲ.
ಜೀವನ ಶೈಲಿ ಎಂದರೇನು?
ಸುಮಾರು ಅರವತ್ತೈದು ವಯಸ್ಸಿನ ಶಂಕರ್ ತಮ್ಮ ಸ್ನೇಹಿತ ಚಂದ್ರುವನ್ನು ಸಲಹೆಗಾಗಿ ನನ್ನ ಬಳಿ ಕರೆತಂದಿದ್ದರು. ಚಂದ್ರು ಅಸಿಸ್ಟೆಂಟ್ ಇಂಜಿನಿಯರ್ ಆಗಿದ್ದವರು. ಇನ್ನೂ ನಲವತ್ತೆರೆಡು ವರ್ಷ ಅಷ್ಟೇ. ಈಗಾ ಗಲೇ ಹಲವು ಡಾಕ್ಟರ್ ಬಳಿ ಹೋಗಿ ಬಂದಿದ್ದರೂ ಅವರ ತೊಂದರೆಗೆ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಪರಿಹಾರಕ್ಕಾಗಿ ಕರೆದುಕೊಂಡು ಬಂದಿದ್ದರು. ಚಂದ್ರುವನ್ನು ಕುರಿತು ತೊಂದರೆ ಏನೆಂದು ಕೇಳಿದೆ, ಅದಕ್ಕೆ ಅವರು ಅಯ್ಯೋ ಡಾಕ್ಟ್ರೇ, ಅದೇನು ಹೇಳಬೇಕು ಅಂತ ನನಗೇ ಗೊತ್ತಾಗ್ತಾ ಇಲ್ಲ. ಈಗ ಸುಮಾರು ಎರಡು ವರ್ಷ ಅಗಿರಬಹುದು. ಒಂದಲ್ಲಾ ಒಂದು ತೊಂದರೆ. ಐ ಯಾಮ್ ಫೆಡ್ ವಿತ್ ಮೀಟಿಂಗ್ ಡಾಕ್ಟರ‍್ಸ್ ಎನ್ನುತ್ತಾ ಖಾಯಿಲೆಯ ಬಗ್ಗೆ ಹೇಳತೊಡಗಿದರು. ‘ಎರಡು ವರ್ಷಗಳ ಹಿಂದೆ ನನಗೆ ಎದೆ ನೋವು ಕಾಣಿಸಿಕೊಂಡಾಗ ಹೃದಯ ರೋಗ ತಜ್ಞರಲ್ಲಿ ಹೋಗಿ ತೋರಿಸಿದೆ. ಅವರು ಪರೀಕ್ಷೆ ಮಾಡಿ ಏನೂ ಖಾಯಿಲೆ ಇಲ್ಲ ಎಂದು ಹೇಳಿ ಮಾತ್ರೆಗಳನ್ನು ಬರೆದು ಕೊಟ್ಟರು. ಹದಿನೈದು ದಿನಗಳ ಬಳಿಕ ಪುನಃ ಎದೆ ನೋವು ಕಾಣಿಸಿಕೊಂಡಾಗ ಮತ್ತೆ ಅವರು ಏನೂ ಇಲ್ಲ ಸ್ವಲ್ಪ ವರಿ ಮಾಡ್ತೀರಾ, ಅದನ್ನು ಬಿಟ್ಟು ಬಿಡಿ, ಎಲ್ಲಾ ಸರಿ ಹೋಗುತ್ತೆ ಎಂದು ಮತ್ತೆ ಕೆಲವು ಮಾತ್ರೆಗಳನ್ನು ಬರೆದುಕೊಟ್ಟರು. ಸುಮಾರು ಎರಡು ವಾರಗಳ ನಂತರ ಅವರಲ್ಲಿ ಪುನಃ ಹೋದೆ. ಅದೇ ಮಾತ್ರೆಗಳನ್ನು ಪುನಃ ಬರೆದು ಕೊಟ್ಟರು. ನನಗ್ಯಾಕೋ ಸರಿ ಕಾಣದೆ ಮತ್ತೊಬ್ಬ ಹೃದಯ ತಜ್ಞರ ಹತ್ತಿರ ಹೋದೆ. ಆವರೂ ಒಂದು ಇ.ಸಿ.ಜಿ ಮಾಡಿ ಏನೋ ಸ್ವಲ್ಪ ಬದಲಾವಣೆ ಇದೆ. ಆದರೆ ಅದೇನೂ ತೊಂದರೆ ಇಲ್ಲ ಅಂತ ಹೇಳಿ ಕೆಲವು ಮಾತ್ರೆಗಳನ್ನು ಬರೆದು ಕೊಟ್ಟರು. ಹೀಗೆ ಇಷ್ಟರ ವರೆಗೆ ಸುಮಾರು ೧೦-೧೫ ಡಾಕ್ಟರುಗಳಾಗಿರಬಹುದು. ಆವಾಗ್ಲಿಂದ ಈ ತನಕ ಒಮ್ಮೊಮ್ಮೆ ಎದೆ ನೋವು ಬರುತ್ತೆ. ಒಮ್ಮೆ ತಲೆ ನೋವು ಬರುತ್ತೆ. ಇತ್ತೀಚೆಗೆ ಗ್ಯಾಸ್ಟ್ರಿಕ್ಸ್ ಆಗಿ ಬಿಟ್ಟಿದೆ. ಏನನ್ನೂ ತಿನ್ನೋದಕ್ಕೆ ಆಗೋಲ್ಲ. ಏನು ಮಾಡುವುದಕ್ಕೂ ಮನಸ್ಸೇ ಬರೋಲ್ಲ ಎಂದು ತೊಂದರೆಗಳನ್ನು ಹೇಳಿದರು. ಎಲ್ಲವನ್ನೂ ಆಲಿಸಿದ ನಂತರ ಅವರನ್ನು ಪರೀಕ್ಷೆ ಮಾಡಿದೆ. ದೈಹಿಕವಾಗಿ ಯಾವ ರೋಗ ಚಿಹ್ನೆಗಳೂ ಕಂಡು ಬರಲಿಲ್ಲ. ಆದರೆ ಚಂದ್ರು ಅತೀ ಸೂಕ್ಷ್ಮ ಸ್ವಭಾವದ ವ್ಯಕ್ತಿ ಎಂಬುದು ಸಾಬೀತಾಯಿತು. ಅವರ ಲಕ್ಷ್ಯ ಪೂರ್ಣ ದೈಹಿಕ ತೊಂದರೆಗಳಿಗೇ ಸೀಮಿತವಾಗಿತ್ತು.
ಈ ರೀತಿಯ ಹಲವು ದೈಹಿಕ ತೊಂದರೆಗಳಿಂದಾಗಿ ಅವರ ಮನಸ್ಸು ಖಿನ್ನತೆಗೊಳಗಾಗಿತ್ತು. ಇದರ ಮೂಲ ಎಲ್ಲಿ ಎಂಬುದನ್ನು ತಿಳಿಯಲು ಮುಂದಾದಾಗ ಅವರ ಪತ್ನಿಯನ್ನು ಕೇಳಿದಾಗ ತಿಳಿದು ಬಂದದ್ದೇನೆಂದರೆ ಚಂದ್ರು ಇತರರೊಂದಿಗೆ ಹೆಚ್ಚು ಬೆರೆಯದ ವ್ಯಕ್ತಿ. ಅವರ ಪಾಡಿಗೆ ಅವರಿದ್ದವರು. ಬೇರೆ ಪ್ರಪಂಚ ಅನ್ನೋದೆ ಇವರಿಗೆ ಗೊತ್ತಿಲ್ಲ. ಸಂಜೆ ಆಫೀಸಿನಿಂದ ಮನೆಗೆ ಬಂದೊಡನೆಯೇ ಹೋಗಿ ಮಲಗಿ ಕೊಳ್ಳುತ್ತಾರೆ. ಪತ್ನಿ, ಮಕ್ಕಳ ಬಳಿ ಮಾತಿಲ್ಲ. ಹೊರಗಡೆ ತಿರುಗಲೂ ಹೋಗುವುದಿಲ್ಲ. ಇನ್ನೂ ಹೆಚ್ಚು ಹೇಳಿದ್ರೆ ಬುಸ್ ಅಂತ ಕೋಪ ಬಂದು ಬಿಡುತ್ತೆ ಎಂದು ಆಕೆ ತನ್ನ ಪತಿಯ ಸ್ವಭಾವದ ಬಗ್ಗೆ ಹೇಳಿದರು. ಒಟ್ಟಿನಲ್ಲಿ ಚಂದ್ರು ಒಂಟಿ ಜೀವಿಯಾಗಿದ್ದರು. ಯಾವ ಹವ್ಯಾಸಗಳೂ ಇರಲಿಲ್ಲ. ಬೇರೆಯವರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಅಭ್ಯಾಸ ಇರಲಿಲ್ಲ. ಹಾಸ್ಯಪ್ರಜ್ಞೆ ಸೊನ್ನೆ ಆಗಿತ್ತು.
ಏಕತಾನತೆ ಜೀವನದಿಂದ ಅವರಲ್ಲುಂಟಾಗುವ ಒತ್ತಡಗಳು ಹೊರಹೋಗ ಲಾರದೇ ದೈಹಿಕವಾಗಿ ನಾನಾ ರೂಪದಲ್ಲಿ ಕಾಣಿಸಿಕೊಂಡಿವೆ ಎಂಬುವುದನ್ನು ಚಂದ್ರು ದಂಪತಿಗಳಿಗೆ ತಿಳಿಸಿ ಹೇಳಿದೆ. ಅದರಿಂದ ಚಂದ್ರುವಿನ ಮನಸ್ಸು ತನ್ನ ಸಣ್ಣ ಸಣ್ಣ ಚಿಹ್ನೆಗಳನ್ನೂ ಸಹ ದೊಡ್ಡದಾಗಿ ಎಣಿಸುತ್ತದೆ. ಹಾಗಾಗಿ ಪ್ರತೀ ದಿನವೂ ಒಂದಿಲ್ಲೊಂದು ತೊಂದರೆಯಿಂದ ನರಳುತ್ತಿದ್ದಾರೆ ಎಂದು ವಿವರಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಶಂಕರ್ ಅರವತ್ತೈದು ವರ್ಷವಾದರೂ ಅವರ ಅರೋಗ್ಯದ ಗುಟ್ಟನ್ನು ಕೇಳಿದೆ. ಅದಕ್ಕೆ ಅವರು ‘ನೋಡಿ, ನನಗೆ ಡಯಾಬಿಟೀಸ್ ಇದೆ. ರಕ್ತದೊತ್ತಡ ಇದೆ. ಆರು ತಿಂಗಳಲ್ಲಿ ಎದೆ ನೋವೂ ಬಂದಿತ್ತು. ಅದಕ್ಕೆಲ್ಲಾ ಔಷಧ ನಡೀತಿದೆ. ಆದರೆ ನಾನು ದಿನವೂ ಬೆಳಿಗ್ಗೆ ಎದ್ದು ನಾಲ್ಕು ಕಿ.ಮೀ ನಡೆಯುತ್ತೇನೆ. ಸಾಯಂಕಾಲ ಯಾವುದಾದ್ರೂ ಕಾರ್ಯಕ್ರಮ ಇದ್ದರೆ ಅಲ್ಲಿಗೆ ಹೋಗುತ್ತೇನೆ. ಸ್ನೇಹಿತರೊಂದಿಗೆ ವಾರದಲ್ಲಿ ಒಮ್ಮೆಯಾದರೂ ಹರಟೆ ಹೊಡೆಯುತ್ತೇನೆ. ಮನೇಲಿ ನನಗೆ ನನ್ನ ಹೆಂಡತಿ ಒಳ್ಳೇ ಸ್ನೇಹಿತೆ. ಮಕ್ಕಳೂ ಅಷ್ಟೇ. ನನಗೆ ಕೆಟ್ಟ ಚಟಗಳಾವುದೂ ಇಲ್ಲ. ಯಾರಾದ್ರೂ ಏನನ್ನಾದರೂ ಹೇಳಿದರೆ ಅದು ನನಗೆ ಉಪಯೋಗ ಇದೆ ಅನಿಸಿದ್ರೆ ತೆಗೆದುಕೊತೇನೆ. ಅದಿಲ್ಲದಿದ್ರೆ ನಕ್ಕು ಬಿಡ್ತೇನೆ. ಅಥವಾ ಅದಕ್ಕೆ ಲಕ್ಷ್ಯ ಕೊಡೋದೇ ಇಲ್ಲ. ಹಾಗಾಗಿ ಮನಸ್ಸಿಗೆ ಟೆನ್ಶನ್ ಹೆಚ್ಚಾಗೋದಿಲ್ಲ. ಮನಸ್ಸಿನ ನೆಮ್ಮದಿ ಕೆಡೋದಿಲ್ಲ ಎಂದು ತಮ್ಮ ಅನಿಸಿಕೆಗಳನ್ನು ಹೇಳಿದರು.
ಇವೆಲ್ಲದರ ಬಳಿಕ ನಾನು ಚಂದ್ರುವಿಗೆ ನೀವು ಮನೋ ದೈಹಿಕ ಖಾಯಿಲೆ ಯಿಂದ ಬಳಲುತ್ತಿದ್ದೀರಿ ಇದರ ನಿವಾರಣೆಗೆ ದೈನಂದಿನ ‘ಜೀವನ ಶೈಲಿ ರೂಢಿಸಿಕೊಳ್ಳುವುದು ಬಹುಮುಖ್ಯ ಎಂದೆ. ಅವರಿಗೆ ದಿನವೂ ಬೆಳಿಗ್ಗೆ ನಾಲ್ಕು ಕಿ.ಮೀ ನಡಿಗೆ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು. ನಗುವುದು ಮತ್ತು ನಗಿಸುವುದು ಎಂಬ ಮೂರು ಮಾತ್ರೆಗಳ ಜೊತೆಗೆ ಮಾನಸಿಕ ಆತಂಕವನ್ನು ಮತ್ತಿ ಖಿನ್ನತೆಯನ್ನು ಹೋಗಲಾಡಿಸಲು ಒಂದು ಔಷಧ ಮಾತ್ರೆಯನ್ನು ಬರೆದುಕೊಟ್ಟೆ. ಒಂದು ತಿಂಗಳು ಕಳೆದು ಚಂದ್ರು ಬಂದು ನನಗೆ ಈಗ ನೂರಕ್ಕೆ ಎಪ್ಪತ್ತು ಭಾಗ ಗುಣವಾಗಿದೆ ಸಾರ್ ಎಂದು ಹೇಳಿದಾಗ ‘ಅದರ ಗುಟ್ಟನ್ನು ಸ್ವಲ್ಪ ಹೇಳ್ತೀರಾ? ಎಂದು ಪುನಃ ಪ್ರಶ್ನಿಸಿದೆ. ಅದಕ್ಕೆ ಚಂದ್ರು ‘ಡಾಕ್ಟ್ರೇ ನಾನು ದಿನಾ ಎರಡು ಕಿ.ಮೀ ನಡೀತೇನೆ. ಎಲ್ಲರತ್ರ ಕೂತ್ಕೊಂಡು ಮಾತನಾಡುತ್ತೇನೆ. ನನ್ನ ಜೀವನ ಶೈಲಿಯನ್ನು ತಾವು ಹೇಳಿದ ಹಾಗೆ ಬದಲಾಯಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡುತ್ತಾ ಇದ್ದೇನೆ. ಅದೇ ನನಗೆ ಹೆಚ್ಚು ಉಪಯೋಗ ಆಗಿದೆ ಅಂತ ಅನಿಸುತ್ತೆ ಅಂದರು.
ಡಾ.ಶ್ರೀಧರ್ ಕೆ.ಆರ್
Tagged with
lekhana
ಮಂಗಳೂರು: ಕಾಸರಗೋಡಿನ ಮುಂಡಿತ್ತಡ್ಕ ಸಮೀಪ ಮರ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಮನೆ ಮಗುಚಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಗು ಕ್ಷೇತ್ರ ವಠಾರದ ನಿವಾಸಿ ಅಶೋಕ್ ಪೂಜಾರಿ ಅವರ ಪತ್ನಿ ಯಮುನಾ (೩೯) ಗಾಯೊಂಡವರಾಗಿದ್ದು, ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಅವರ ಪುತ್ರ ಲೋಹಿತ್ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
Tagged with
lnews
ಮಂಗಳೂರು: ಬೈಕಂಪಾಡಿ ಅಂಗರಗುಂಡಿಯಲ್ಲಿ ವ್ಯಕ್ತಿಯೊಬ್ಬರು ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ನಿನ್ನೆ ಮುಂಜಾನೆ ನಡೆದಿದೆ.
ಕೇರಳ ನಿವಾಸಿ ತಂಕಪ್ಪ (೫೩) ಎಂಬವರು ಅಂಗರಗುಂಡಿ ರೈಲು ಹಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ತಂಕಪ್ಪ ಅವರು ರೈಲು ಸಾಗುವಾಗ ಹಳಿಗೆ ತೀರಾ ಹತ್ತಿರದಲ್ಲಿ ನಿಂತಿರುವುದರಿಂದ ಗಾಳಿಯ ರಭಸಕ್ಕೆ ಇವರು ರೈಲಿಗೆ ತಾಕಿರಬೇಕು ಎಂದು ಶಂಕಿಸಲಾಗಿದೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶವ ಮಹಜರು ನಡೆಸಿ ಕುಟುಂಬಿಕರಿಗೆ ಬಿಟ್ಟು ಕೊಡಲಾಗಿದೆ.
Tagged with
cnews
ನಿನ್ನೆ ಬೆಳಿಗ್ಗೆ ಸೆಂಟ್ರಲ್ ಮಾರು ಕಟ್ಟೆಯ ಮೂರನೇ ಅಡ್ಡರಸ್ತೆಯಲ್ಲಿ ಸುಮಾರು ೫೦ ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಡಲಾಗಿದೆ. ವಾರಿಸುದಾರರು ಬಂದರ್ ಠಾಣೆ (೦೮೨೪)೨೨೨೦೫೧೬ನ್ನು ಸಂಪರ್ಕಿಸಬಹುದಾಗಿದೆ.
Tagged with
cnews
ಕಾರ್ಕಳ: ಮಾನಸಿಕವಾಗಿ ನೊಂದಿದ್ದ ಮಧ್ಯವಯಸ್ಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಎರ್ಲಪ್ಪಾಡಿ ಎಂಬಲ್ಲಿ ಸಂಭವಿಸಿದೆ.
ಎರ್ಲಪ್ಪಾಡಿ ಕಜಕಿಗುಡ್ಡೆಯ ಶೇಖರ್ ಸಫಲಿಗ(೪೬) ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವರು.
Tagged with
cnews
ಕಾಸರಗೋಡು: ಅಮಿತ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಬ್ಬರು ಗಂಭೀರ ಜಖಂಗೊಂಡಿದ್ದಾರೆ. ಗಾಯಾಳು ಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ.
ಮಂಜೇಶ್ವರ ಸಿರಾಜುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿಯರಾದ, ಅಬ್ದುಲ್ಲಾರ ಪುತ್ರಿ ಆಯಿಷಾ(೧೪), ಆದಂ ಕುಞಿಯವರ ಪುತ್ರಿ ಆಯಿಷತ್ ರೇಷ್ಮಾ(೧೪) ಗಾಯಗೊಂಡವರು. ಮಂಜೇಶ್ವರ ಪೊಲೀಸರು ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ.
Tagged with
cnews
ಪುತ್ತೂರು: ಬನ್ನೂರು ಗ್ರಾಮದ ಕುಂಟ್ಯಾನ ಎಂಬಲ್ಲಿರುವ ಸದಾಶಿವ ದೇವಾಲಯದಿಂದ ಕಳ್ಳರು ಕಾಣಿಕೆ ಡಬ್ಬಿ ಕಳವು ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ದೇವಾಲಯದ ಒಳನುಗ್ಗಿದ ಕಳ್ಳರು ಕಛೇರಿಯ ಬಾಗಿಲು ಮುರಿದು ಅಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ದ್ದಾರೆ. ಮಾತ್ರವಲ್ಲದೆ ದೇವಾಲಯದ ಗರ್ಭಗುಡಿ ಪ್ರವೇಶಿಸುವ ಪ್ರಯತ್ನ ನಡೆಸಿ ಗರ್ಭಗುಡಿಯ ಬಾಗಿಲಿಗೆ ಹಾನಿ ಯುಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Tagged with
lnews
ಕಾರ್ಕಳ: ನಗರದ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರು ಜಂಗಿಕುಸ್ತಿಗಿಳಿದ ಘಟನೆ ನಿನ್ನೆ ಮಧ್ಯಾಹ್ನ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ಪಿ) ವೆಂಕಟೇಶ್ವರಪ್ಪ ಅವರು ನಿನ್ನೆ ಮಧ್ಯಾಹ್ನ ಸುಮಾರು ಒಂದರ ವೇಳೆಗೆ ಕಾರ್ಕಳ ಡಿವೈಎಸ್ಪಿ ಕಚೇರಿಗೆ ಆಗಮಿಸಿದ್ದರು. ಇವರ ಆಗಮನದ ಮಾಹಿತಿ ತಿಳಿದ ಪೊಲೀಸ್ ವೃತ್ತನಿರೀಕ್ಷಕ ವೆಲೆಂಟಿನ್ ಡಿಸೋಜಾ ಅವರು ಕೂಡಾ ಡಿವೈಎಸ್ಪಿ ಕಚೇರಿಗೆ ತೆರೆಳಿದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಎಎಸ್ಪಿ ವೆಂಕಟೇಶ್ವರಪ್ಪ ಹಾಗೂ ಪಿಸಿಐ ವೆಲೆಂಟಿನ್ ಡಿಸೋಜಾ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು. ತಾರಕಕ್ಕೇರಿದ ಏರುಧ್ವನಿ ಪರಿಸರದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅವರಿಬ್ಬರು ಜಂಗಿಕುಸ್ತಿಗೆ ಮುಂದಾಗಿರುವುದನ್ನು ಕಂಡು ಸಮಾಧಾನ ಪಡಿಸಲು ಡಿವೈಎಸ್ಪಿ ಜಯಂತಶೆಟ್ಟಿ ಅವರು ಮುಂದಾಗಿ ವಿಫಲರಾಗಿ ಕಚೇರಿಯಿಂದಲೇ ಹೊರನಡೆದರು. ನೋಡಿಕೊಳ್ಳುತ್ತೇನೆ ಎನ್ನುವುದರೊಂದಿಗೆ ಅವರಿಬ್ಬರು ತಮ್ಮ ಬಲ ತೋರ್ಪಡಿಸಿ ತಾವೇ ಸಮಾಧಾನಗೊಂಡರು. ಮಧ್ಯಾಹ್ನದ ವೇಳೆಗೆ ಪೊಲೀಸ್ ಅಧಿಕಾರಿಗಳಿಬ್ಬರ ನಡುವೆ ನಡೆದಿರುವ ಜಂಗಿಕುಸ್ತಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.
ಬೆಂಗಳೂರು ಮೂಲದ ಎಎಸ್ಪಿ ವೆಂಕಟೇಶ್ವರಪ್ಪ ಅವರು ಕೆಲ ತಿಂಗಳೊ ಳಗಾಗಿ ನಿವೃತ್ತರಾಗಲಿದ್ದಾರೆ. ತನ್ನ ಕರ್ತವ್ಯ ಅವಧಿಯ ಕೊನೆಯ ಹುಟ್ಟುಹಬ್ಬವನ್ನು ಆಚರಿಸಿದ ರೀತಿ ವಿಭಿನ್ನವಾಗಿತ್ತು. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಪೊಲೀಸ್ ಇಲಾಖಾ ಕಚೇರಿಗಳಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಸಿಹಿತಿಂಡಿ ನೀಡಿ ಕೃತರ್ಥಾರಾಗಿದ್ದರು.
ಉಡುಪಿ ನಗರ ಠಾಣಾಧಿಕಾರಿಯಾಗಿದ್ದ ಗಿರೀಶ್ ಎಂಬವರೊಂದಿಗೆ ಎಎಸ್ಪಿ ವೆಂಕಟೇಶ್ವರಪ್ಪ ಅವರು ಇದೇ ತರದಲ್ಲಿ ವರ್ತಿಸಿ ಸುದ್ದಿಗೆ ಗ್ರಾಸವಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ದಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಖಾಕಿ ವಸ್ತ್ರ ಧರಿಸಿ ಕಾನೂನು ಪರಿಪಾಲಿಸಬೇಕಾಗಿದ್ದ ಪೊಲೀಸ್ ಅಧಿಕಾರಿಗಳೇ ಹೀಗಾದರೆ ಹೇಗೆ ಎಂಬುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
Tagged with
lnews
ಸುಳ್ಯ: ಮರ್ಕಂಜ ಗ್ರಾಮದ ಕಟ್ಟೆಕೋಡಿ ಎಂಬಲ್ಲಿ ವೆಂಕಟ್ರಮಣ ಗೌಡ(೬೨) ಎಂಬವರ ಮೃತದೇಹ ಅವರ ಕೆರೆಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.
ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ವೆಂಕಟರಮಣ ಗೌಡ ರಾತ್ರಿ ಮದ್ಯದ ಅಮಲಿನಲ್ಲಿ ಕೆರೆಗೆ ಬಿದ್ದಿರ ಬೇಕೆಂದು ಶಂಕಿಸಲಾಗಿದೆ.
ಆದರೆ ಕೆರೆಯಲ್ಲಿ ಕೇವಲ ಎರಡು ಅಡಿ ಮಾತ್ರ ನೀರು ಇತ್ತು ಎನ್ನಲಾಗಿದ್ದು, ಕೆರೆಯಲ್ಲಿದ್ದ ಕಲ್ಲಿಗೆ ತಲೆ ತಾಗಿ ಸಾವು ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Tagged with
lnews
ಪುತ್ತೂರು: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇವಿನಗರ ಜನತಾ ಕಾಲೋನಿಯ ನಿವಾಸಿಯಾದ ಚನಿಯ ಕೊರಗರ ಪುತ್ರಿ , ಕೆಯ್ಯೂರು ಪದವಿಪೂರ್ವ ಕಾಲೇಜಿನ ೯ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಆದಿವಾಸಿ ಕೊರಗ ಸಮುದಾಯದ ಗೀತಾಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ವರದಿಯ ವಿಳಂಬದ ಕುರಿತು ಜಿಲ್ಲಾ ಪಂಚಾಯತ್ ಸದಸ್ಯ ಪಕೀರ ಅವರು ಮಂಗಳವಾರ ನಡೆದ ಪುತ್ತೂರು ತಾಲೂಕು ಪಂಚಾಯತ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾ. ಪಂ. ಅಧ್ಯಕ್ಷ ಶಂಭು ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಪಕೀರ ಅವರು ಗೀತಾಳ ಸಂಶಯಾಸ್ಪದ ಸಾವಿನ ಪ್ರಕರಣ ನಡೆದು ಮೂರು ತಿಂಗಳು ಕಳೆಯಿತು. ಇನ್ನೂ ವರದಿ ಬಂದಿಲ್ಲ ಎಂದರೆ ಏನರ್ಥ ಎಂದು ಅಸಮಾಧಾನ ವ್ಯಕ್ತಪಡಿಸದರು. ವರದಿ ಏನಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.
ಪಕೀರ ಅವರ ಪ್ರಶ್ನೆಗುತ್ತರಿಸಿದ ಸಮಾಜ ಕಲ್ಯಾಣಾಧಿಕಾರಿ ಸಣ್ಣೇ ಗೌಡರು ಗೀತಾ ಸಾವಿನ ಪ್ರಕರಣ ಪೊಲೀಸ್ ತನಿಖೆಯಲ್ಲಿದೆ. ಇಲಾಖೆಗೆ ಇನ್ನೂ ಮರಣೋತ್ತರ ಪರೀಕ್ಷೆಯ ವರದಿ ತಲುಪಿಲ್ಲ ಎಂದರು. ನಾವು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಪಟ್ಟವರಿಗೆ ವರದಿ ಒಪ್ಪಿಸಿದ್ದೇವೆ ಎಂದು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದರು.
ಅಧಿಕಾರಿಗಳ ಉತ್ತರದಿಂದ ತೃಪ್ತರಾಗದ ಪಕೀರ ಅವರು ಮರಣೋತ್ತರ ಪರೀಕ್ಷೆಯ ವರದಿಯನ್ನು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ತರಿಸಿಕೊಳ್ಳುವಲ್ಲಿ ವಿಳಂಬಿಸಿದರೆ ವರದಿ ಬದಲಾವಣೆಯಾಗಿ ಆತ್ಮಹತ್ಯೆ ಪ್ರಕರಣ ದಾಖಲಾಗುವ ಮತ್ತು ಆರೋಪಿಗಳು ಬಚಾವ್ ಆಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಗೀತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಮುಂದಿನ ತಾಲೂಕು ಪಂಚಾಯತ್ ಸಭೆಯಲ್ಲಿ ಗೀತಾ ಸಾವಿನ ಕುರಿತು ಮರಣೋತ್ತರ ವರದಿ ಮತ್ತು ತನಿಖೆಯ ವರದಿ ಒಪ್ಪಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವು ದೆಂದು ತೀರ್ಮಾನಿಸಲಾಯಿತು.ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಸಂಕು ಮೊಗೇರರ ಪುತ್ರಿಯಾದ ಸುಬ್ರಹ್ಮಣ್ಯ ಕಾಲೇಜಿನ ವಿದ್ಯಾರ್ಥಿನಿ ಪುಷ್ಪಾ ಅವರ ಅಸಹಜ ಸಾವಿನ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಈ ಪ್ರಕರಣ ಪೊಲೀಸ್ ತನಿಖೆಯಲ್ಲಿದೆ ಎಂದು ಹೇಳಿ ಅಧ್ಯಕ್ಷ ಶಂಭು ಭಟ್ ಅದಕ್ಕೆ ತೆರೆ ಎಳೆದರು.
Tagged with
lnews
ಮೂಡಬಿದ್ರೆ: ಇಲ್ಲಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶೌಚಾಲಯದ ಪುರುಷರ ವಿಭಾಗದಲ್ಲಿ ಕೆಲವು ಅಶ್ಲೀಲ ಬರಹಗಳು, ಕೋಮು ಭಾವನೆ ಕೆರಳಿಸುವಂತಹ ಬರಹಗಳು ಗೋಡೆ ಹಾಗೂ ಬಾಗಿಲುಗಳಲ್ಲಿ ಕಾಣುತ್ತಿದ್ದು, ಸಭ್ಯ ನಾಗರಿಕರಿಗೆ ಮುಜುಗರ ಉಂಟು ಮಾಡುತ್ತಿದೆ. ಶೌಚಾಲಯದೊಳಗೆ ಹೋಗಿ ಕುಳಿತ ಕೆಲ ‘ಉಂಡಾಡಿ ಗುಂಡಗಳ ತಲೆಗೆ ಈ ರೀತಿಯ ಪ್ರಾಸಬದ್ಧ ಅಶ್ಲೀಲ ಸಾಹಿತ್ಯ ಬರೆಯಲು ಅದು ಹೇಗೆ ತಲೆಗೆ ಹೋಗುತ್ತದೋ ಗೊತ್ತಿಲ್ಲ. ಆದರೆ ಕೆಲವೆಡೆ ಬರೆದ ಬರಹಗಳು ಎಂತವನನ್ನೂ ಕೆರಳಿಸುವಂತೆ ಮಾಡುತ್ತದೆ.
ಎಲ್ಲವೂ ಸೆಕ್ಸ್ ಬರಹಗಳು, ಮತ್ತೆ ಕೆಲವು ಹುಡುಗಿಯರ ಹೆಸರು ಹಾಗೂ ಮೊಬೈಲ್ ನಂಬರ್‌ಗಳು, ಇನ್ನು ಕೆಲವೆಡೆ ಅಶ್ಲೀಲ ಚಿತ್ರಗಳನ್ನು ಬರೆದಿ ರುವ ಈ ವಿಚಿತ್ರ ಕಲಾವಿದರಿಗೆ ಇದ ರಿಂದ ಅದೇನು ಲಾಭ ಸಿಗುತ್ತದೋ ಅದೂ ಗೊತ್ತಿಲ್ಲ. ಇಷ್ಟೇ ಅಲ್ಲದೆ ಇಲ್ಲಿನ ರಾಜಕಾರಣಿಯೊಬ್ಬರ ಹೆಸರನ್ನೂ ಸೇರಿಸಿ ಆ ಹೆಸರಿನ ಮೂಲಕ ಇನ್ನೊಂದು ಸಮುದಾಯಕ್ಕೆ ಸಂಬಂಧ ಕಲ್ಪಿಸಿ ಬರೆದಿರುವುದರಿಂದ ಕೋಮು ಸಂಘರ್ಷದ ಭಾವನೆ ಉಂಟಾಗು ವಂತೆ ಮಾಡಿದ್ದಾರೆ.
ಈ ರೀತಿಯ ಅಸಭ್ಯರು ಯಾರು ಎನ್ನುವುದನ್ನು ಶೌಚಾಲಯವನ್ನು ನೋಡಿಕೊಳ್ಳುವವರಿಗೂ ಗೊತ್ತಾಗು ವುದಿಲ್ಲ. ಇದನ್ನು ಬರೆದವರಿಗೆ ಮಾತ್ರ ಗೊತ್ತಿದೆಯೇ ವಿನಹ ಇನ್ಯಾರಿಗೂ ಗೊತ್ತಾಗುವುದಿಲ್ಲ. ಮೂಡಬಿದ್ರೆಯಲ್ಲಿ ಶೌಚಾಲಯ ವಿಶಾಲವಾಗಿ ಮತ್ತು ಶುಚಿಯಾಗಿಯೇ ಇದೆ. ಆದರೆ ಶುಚಿಯಾಗಿರುವ ಶೌಚಾಲಯದೊಳಗೆ ಇಂತಹ ಅಶುಚಿಗೊಳಿಸುವಂತಹ ಬರೆದ ದಂಡಪಿಂಡಗಳು ಯಾರು ಎಂಬುವುದೇ ತಿಳಿದು ಬಾರದ ಸಂಗತಿ.
ಶೌಚಾಲಯ ಹತ್ತಿರವಿದ್ದರೂ ಪಕ್ಕದ ಪ್ರಯಾಣಿಕರ ತಂಗುದಾಣದ ಬಳಿ ಇರುವ ಗೋಡೆಗೆ ಮೂತ್ರ ವಿಸರ್ಜನೆ ಮಾಡುವ ಇನ್ನೊಂದು ವರ್ಗವಿದೆ. ಇಂತವರಿಗೂ ಸಂಬಂಧ ಪಟ್ಟವರು ಒಂದೆರಡು ಬಾರಿ ಕೇಸು ಹಾಕಿ ಎಚ್ಚರಿಕೆ ನೀಡಿದರೆ ಎಲ್ಲ ದುರ್ನಾ ತಗಳೂ ತನ್ನಷ್ಟಕ್ಕೇ ಮಾಯವಾಗುತ್ತದೆ. ಇದಕ್ಕಿಂತಲೂ ಶೌಚಾಲಯದಲ್ಲಿ ಈ ರೀತಿಯ ಅಶ್ಲೀಲ ಸಾಹಿತ್ಯ ಬರೆದ ಮಹಾಶಯ ಒಮ್ಮೆಯಾದರೂ ಪೊಲೀಸರಿಂದ ಸನ್ಮಾನಗೊಳ್ಳಲೇಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
Tagged with
lnews
ಬೆಂಗಳೂರು: ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳನ್ನು ಪಡೆಯಬಯಸುವವರು ಇನ್ನು ಮುಂದೆ ಅರ್ಜಿಗಾಗಿ ಪರದಾಡುವ ಬದಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡು ವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿಧಾನ ಸಭೆಯಲ್ಲಿ ಪ್ರಕಟಿಸಿದರು.
ಫಲಾನುಭವಿಗಳಾಗಿರುವವರ ಪೈಕಿ ಹಲವರು ಭೋಗಸ್ ಎಂಬ ಕಾರಣಕ್ಕಾಗಿ ಪರಿಶೀಲನಾ ಕಾರ್ಯ ನಡೆದಿತ್ತು. ಹೀಗಾಗಿ ಒಂದಷ್ಟು ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ನ.ಲ. ನರೇಂದ್ರಬಾಬು ಅವರ ಪ್ರಸ್ತಾವಕ್ಕೆ ಉತ್ತರಿಸಿದರು.
ವಿವಿಧ ಕಾರಣಗಳಿಗಾಗಿ ಯಾರಾದರೂ ಫಲಾನುಭವಿ ಗಳು ತಮ್ಮ ಅರ್ಹತೆ ಕಳೆದುಕೊಂಡಿದ್ದರೆ ಮತ್ತೆ ಅದನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳೆಲ್ಲರಿಗೂ ಈ ಯೋಜನೆಯ ಲಾಭ ಸಿಗಬೇಕು. ಯಾವ ಕಾರಣಕ್ಕೂ ಅರ್ಜಿ ಕೊಟ್ಟವರನ್ನು ಅಲೆದಾಡಿಸುವ ಕೆಲಸ ನಡೆಯಬಾರದು. ಇದನ್ನು ತಾವು ಸಹಿಸುವುದಿಲ್ಲ.
ಸದ್ಯಕ್ಕೆ ಈ ಯೋಜನೆಯಡಿ ೯೩,೩೮೧ ಅರ್ಜಿಗಳು ಬಂದಿದ್ದು ಈ ಪೈಕಿ ೯೦೩೬ ಮಂದಿಗೆ ಮಾಸಾಶನ ನೀಡಲು ಮಂಜೂರಾತಿ ನೀಡಲಾಗಿದೆ.೧೯೩೨೨ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಎಪ್ಪತ್ತು ಸಾವಿರದಷ್ಟು ಅರ್ಜಿಗಳು ಉಳಿದುಕೊಂಡಿದ್ದು ಇದರ ಶೀಘ್ರ ವಿಲೇವಾರಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
Tagged with
snews
ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ ವಿದೇಶ ಮದ್ಯ ಸಹಿತ ಆರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕರ್ನಾಟಕ ಸಕಲೇಶ್‌ಪುರದ ಕಣಜನಹಳ್ಳಿ ನಿವಾಸಿ ಪ್ರವೀಣ (೩೩) ಎನ್ನಲಾಗಿದೆ. ನಿನ್ನೆ ಬೆಳಗ್ಗೆ ಮಂಗಳೂರಿನಿಂದ ಹೊರಟ ಕುರ್ಲಾ ಎಕ್ಸ್‌ಪ್ರೆಸ್ ರೈಲುಗಾಡಿ ಕಾಸರ ಗೋಡಿಗೆ ತಲುಪುತ್ತಿದ್ದಂತೆ ಪ್ರವೀಣ ಬ್ಯಾಗ್‌ನೊಂದಿಗೆ ಕೆಳಗಿಳಿದಿದ್ದ. ಶಂಕಿv ರಾದ ರೈಲ್ವೇ ಪೊಲೀಸರು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿತ್ತು. ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.
Tagged with
ಸುಳ್ಯ: ಬೆಳ್ಳಾರೆ ಗ್ರಾಮ ಪಂಚಾಯತ್‌ನ ಹಳೆ ಕಚೇರಿ ಕಟ್ಟಡದ ಎದುರಿಗೆ ಇದ್ದ ಧ್ವಜಸ್ಥಂಭವನ್ನು ಕೆಡವಲಾಗಿದ್ದು, ಅದನ್ನು ಅಂಗಲದಲ್ಲಿ ಅನಾಥವಾಗಿ ಬಿಡಲಾಗಿದೆ.
ಗ್ರಾಮ ಪಂಚಾಯಿತಿ ಕಚೇರಿಗೆ ಹೊಸದಾಗಿ ಕಟ್ಟಡವನ್ನು ಕಟ್ಟಿದ್ದು, ಅದರ ಎದುರು ಹೊಸದಾಗಿ ಧ್ವಜಸ್ಥಂಭವನ್ನು ಕಟ್ಟಲಾಗಿದೆ. ಆ ಸಂದರ್ಭ ಹಳೆಯ ಕಚೇರಿ ಕಟ್ಟಡದ ಎದುರಿದ್ದ ಧ್ವಜಸ್ಥಂಭವನ್ನು ಕೆಡವಲಾಗಿದೆ. ಮತ್ತದನ್ನು ಅಂಗಲದ ಮೂಲೆಯಲ್ಲಿ ರಾಶಿ ಹಾಕಲಾಗಿದೆ. ರಾಷ್ಟ್ರೀಯ ಚಿಹ್ನೆ ಹೊಂದಿರುವ ಧ್ವಜಸ್ಥಂಭವನ್ನು ಈ ರೀತಿ ಅನಾಥವಾಗಿ ಎಸೆಯುವುದು ಗೌರವಸೂಚಕವಲ್ಲ ಎಂದು ಸ್ಥಳೀಯರು ದೂರಿದ್ದಾರೆ.
Tagged with
lnews
ಮಂಗಳೂರು: ಉಪ ಚುನಾವಣೆ ಯಲ್ಲಿ ಜಯಪ್ರಕಾಶ ಹೆಗ್ಡೆಯ ಗೆಲುವು ಕರ್ನಾಟಕದ ಕಾಂಗ್ರೆಸ್‌ನ ಯೋಚನಾ ಸರಣಿಯನ್ನೇ ಬದಲಿಸಿದೆ. ಅಹಂ ತೊರದು ನಾಯಕರು ಒಂದಾಗಿದ್ದಾರೆ. ಒಂದಾಗದಿದ್ದರೆ ಕಾಂಗ್ರೆಸ್‌ಗೆ ಅದರ ಮೂಲಕ ತಮಗೆ ಉಳಿಗಾಲವೇ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡಿ ದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೆನಿಸಿದವರು ತಾವೂ ದುಡಿದಿದ್ದಾರೆ. ಪಕ್ಷದ ಕಾರ್ಯಕರ್ತ ರನ್ನೂ ದುಡಿಸಿದ್ದಾರೆ ಇದರ ಪರಿಣಾಮ ಪಕ್ಷಕ್ಕೆ ಮತಗಳ ಹರಿವಿನ ಪ್ರಮಾಣ ಹೆಚ್ಚಾಯಿತು. ಇದರೊಂದಿಗೆ ಜಯ ಪ್ರಕಾಶ್‌ರಂತಹ ಒಳ್ಳೆಯ ಅಭ್ಯರ್ಥಿ ಕಣದಲ್ಲಿ ಇರುವುದು ಪೂರಕವಾಗಿ ಪರಿಣಮಿಸಿತು. ಈ ಗೆಲುವಿನ ಪೂರ್ಣ ಲಾಭ ಪಡೆಯಲು ಸಜ್ಜಾಗಿರುವ ಕಾಂಗ್ರೆಸಿಗರು ದೆಹಲಿಯಲ್ಲಿ ಸೋನಿಯಾ ಮೇಡಂ ಮನೆ ಬಾಗಿಲಿಗೆ ಹೋಗಿ ತಮ್ಮ ಸಾಧನೆಯನ್ನು ಹೇಳಿಕೊಳ್ಳುತ್ತಿದ್ದಾರೆ.
ಕಳೆದ ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಯ ಬಳಿಕ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ಸರಣಿಯನ್ನೇ ಅನುಭವಿಸಿದೆ. ಕೆಪಿಸಿಸಿ ನಾಯಕತ್ವ ಬದಲಾದರೂ ಪಕ್ಷದ ಸ್ಥಿತಿಗತಿಯಲ್ಲಿ ಬದಲಾವಣೆ ಆಗಿರಲಿಲ್ಲ. ಈಗ ಬಿಜೆಪಿಯಲ್ಲಿ ಒಡಕಿನ ಸರದಿ, ಈ ಸಮಯದಲ್ಲಿ ಕಾಂಗ್ರೆಸ್‌ಗೆ ಒಂದು ಗೆಲುವು ಬೇಕಿತ್ತು. ಅದರಲ್ಲೂ ಕಳೆದ ಕರ್ನಾಟಕದ ಕರಾವಳಿಯಲ್ಲಿ ಪ್ರಭಲ ಕೋಟೆ ಸ್ಥಾಪಿಸಿಕೊಂಡಂತಿದ್ದ ಬಿಜೆಪಿಗೆ ಹೊಡೆತ ನೀಡಲೇ ಬೇಕಿತ್ತು. ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿಯ ಗೆಲುವು ಬಿಜೆಪಿಯ ಹೆಬ್ಬಾಗಿಲನ್ನೇ ಕಾಂಗ್ರೆಸಿಗರು ಕೆಡವಿದ್ದಾರೆ.
ಈ ಗೆಲುವನ್ನು ಮುಂದಿನ ಚುನಾವಣೆಯ ಹಾದಿಯನ್ನಾಗಿಸಲು ಕಾಂಗ್ರೆಸ್ ನಾಯಕರು ಸಕಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
Tagged with
lnews
ಮಂಗಳೂರು: ಮನಪಾ ವ್ಯಾಪ್ತಿಯ ಬೋಳೂರಿನಲ್ಲಿರುವ ಹಿಂದೂ ರುದ್ರಭೂಮಿ ಶಿಥಿಲಾವಸ್ಥೆ ಯಲ್ಲಿದ್ದು ತಕ್ಷಣವೇ ದುರಸ್ಥಿಪಡಿಸು ವಂತೆ ಒತ್ತಾಯಿಸಿ ನಿನ್ನೆ ದಸಂಸ (ಡಾ.ಅಂಬೇಡ್ಕರ್ ವಾದ) ಜಿಲ್ಲಾಧಿ ಕಾರಿಗೆ ಮನವಿ ಮಾಡಿ ಆಗ್ರಹಿ ಸಿದೆ.
ಈ ರುದ್ರಭೂಮಿ ಮಂಗಳೂರು ಮಾತ್ರವಲ್ಲದೆ ಇತರ ಊರಿನವರಿಗೂ ಉಪಕಾರಿಯಾಗಿದೆ. ಆದರೂ ರುದ್ರ ಭೂಮಿಯ ಬಗ್ಗೆ ಮನಪಾ ಅಧಿಕಾರಿ ಗಳು ನಿರ್ಲಕ್ಷ್ಯ ಭಾವನೆ ತಾಳಿದ್ದಾರೆ. ಕಳೆದ ಐದು ವರ್ಷಗಳಿಂದ ರುದ್ರ ಭೂಮಿಯ ಮಾಡಿಗೆ ಅಳವಡಿಸಲಾ ಗಿದ್ದ ತಗಡು ತೂತು ಬಿದ್ದಿದ್ದರೂ ಅಧಿ ಕಾರಿಗಳು ಗಮನ ಹರಿಸಿಲ್ಲ. ಇದರಿಂ ದಾಗಿ ಮಳೆಗಾಲದಲ್ಲಿ ಹೆಣ ಸುಡಲು ಕಷ್ಟವಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪಾಲಿಕೆಯ ಕಮೀಷನರ್ ಮತ್ತು ಮೇಯರ್ ಸ್ಥಳಕ್ಕೆ ಆಗಮಿಸಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ದ್ದರೂ ಇದುವರೆಗೂ ಕಾಮಗಾರಿ ನಡೆಸಿಲ್ಲ ಎಂದು ದಸಂಸ ನೀಡಿರುವ ಮನವಿಯಲ್ಲಿ ವಿವರಿಸಿದೆ.
Tagged with
lnews
ಬೆಂಗಳೂರು: ಮತ್ತೆ ಮುಖ್ಯಮಂತ್ರಿಯಾಗಲು ಶತ ಪ್ರಯತ್ನ ನಡೆಸುತ್ತಿರುವ ಯಡಿಯೂರಪ್ಪರಿಗೆ ರಾಜ್ಯ ರಾಜಕೀಯದಿಂದಲೇ ದೂರು ಇರಿಸುವ ಉದ್ದೇಶದಿಂದ ಪಕ್ಷದ ಕೇಂದ್ರಿಯ ಸಮಿತಿಯಲ್ಲಿ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಕೇಂದ್ರ ಸಮಿತಿಯ ಮೂಲಕ ಪಕ್ಷದ ಸಂಘಟನೆಗೆ ಯಡಿಯೂರಪ್ಪರ ಪ್ರಯೋಜನ ಪಡೆಯುವ ಬಗ್ಗೆ ನಿತಿನ್ ಗಡ್ಕರಿ ಅಲೋಚಿಸಿದ್ದು, ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಯಾವುದಾದರೂ ರಾಜ್ಯದ ಹೊಣೆಗಾರಿಕೆ ವಹಿಸುವ ಸಾಧ್ಯತೆ ಇದೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಬಳಿಕ ಈ ಪ್ರಕಟನೆ ಹೊರಬೀಳುವ ಸಾಧ್ಯತೆ ಇದೆ.
ಡಿ.ವಿ.ಸದಾನಂದ ಗೌಡರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರಿಗೆ ತೊಂದರೆ ನೀಡುವುದು ಸರಿ ಅಲ್ಲ. ಈಶ್ವರಪ್ಪ ಕೂಡ ಪಕ್ಷದ ಸಂಘಟನೆಗೆ ಪೂರಕ ಕೆಲಸ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಅವರನ್ನು ಅಧಿಕಾರದಿಂದ ತೆಗೆಯುವುದು ಬೇಡ ಎಂದು ತೀರ್ಮಾನಿಸಿರುವ ಬಿಜೆಪಿ ವರಿಷ್ಠರು ಯಡಿಯೂರಪ್ಪರನ್ನು ಸಮಾಧಾನ ಪಡಿಸಲು ಕೇಂದ್ರಿಯ ಹುದ್ದೆ ನೀಡಲು ಯೋಚಿಸಿದ್ದಾರೆ. ಆದರೆ ಈ ವಿಷಯದಲ್ಲಿ ಯಡಿಯೂರಪ್ಪರ ಅಭಿಪ್ರಾಯ ಸ್ಪಷ್ಟವಾಗಿಲ್ಲ. ಬಜೆಟ್ ಅಧಿವೇಶನದ ಬಳಿಕ ರಾಜ್ಯದ ನಾಯಕರನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ ಬಳಿಕ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿಯೇ ಡಿ.ವಿ. ಸದಾನಂದ ಗೌಡರು ತಮ್ಮ ಸಂಪುಟವನ್ನು ಪುನಾರಚಿಸುವ ಇಲ್ಲವೆ ವಿಸ್ತರಿಸುವ ಸಾಧ್ಯತೆ ಇದೆ. ಇದೇ ಉದ್ದೇಶದಿಂದ ವರಿಷ್ಠರು ಡಿ.ವಿ. ಸದಾನಂದ ಗೌಡ ಹಾಗೂ ಈಶ್ವರಪ್ಪರನ್ನು ಮಾ.೩೧ಕ್ಕೆ ದೆಹಲಿಗೆ ಆಹ್ವಾನಿಸಿದ್ದಾರೆ. ಇವರಿಬ್ಬರೂ ತಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ದೆಹಲಿಗೆ ತೆರಳಲಿದ್ದು, ಆಗಲೇ ಮಾತುಕತೆ ನಡೆಯಲಿದೆ.
Tagged with
snews
ಪಣಜಿ: ಇದು ಕರ್ನಾಟಕದ ಬಿಜೆಪಿ ಸರ್ಕಾರ ಮಾಡಿದ್ದಲ್ಲ. ಬದಲಿಗೆ ನೆರೆಯ ಗೋವಾದಲ್ಲಿ ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಆ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ವ್ಯಾಟನ್ನು ಶೂನ್ಯಕ್ಕೆ ಇಳಿಸಲಾಗಿದೆ.
ಇದರಿಂದಾಗಿ ಅಲ್ಲಿ ಇನ್ನು ಮುಂದೆ ಪೆಟ್ರೋಲ್ ಬೆಲೆ ಲೀಟರಿಗೆ ೧೧ ರೂ. ನಷ್ಟು ಇಳಿಕೆಯಾಗಲಿದೆ. ಅಂದರೆ ಅಕ್ಕಪಕ್ಕದ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕಿಂತ ೨೦ ರುಪಾಯಿ ಕಡಿಮೆ ಯಾಗಿದೆ!
ಸೋಮವಾರ ಬಿಜೆಪಿ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಮನೋಹರ್ ಪಾರಿಕರ್, ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಶೇ.೦.೧ಕ್ಕೆ ಇಳಿಸಲಾಗಿದೆ. ಇದರಿಂದಾಗಿ ೬೫ ರೂ. ಇದ್ದ ಪೆಟ್ರೋಲ್ ಬೆಲೆ ೫೪ ರೂ.ಗೆ ಇಳಿಯ ಲಿದೆ ಎಂದು ಘೋಷಿಸಿದರು. ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ ೧೦೦ ಕೋಟಿ ರೂ. ಹೊರೆಯಾಗಲಿದೆ.
ಇದಲ್ಲದೆ ಹಾಲಿ ಇರುವ ಅಡುಗೆ ಅನಿಲದ ಬೆಲೆಯನ್ನೇ ಮುಂದಿನ ೫ ವರ್ಷಗಳ ಕಾಲ ಕಾಯ್ದುಕೊಳ್ಳಲಾ ಗುವುದು. ಒಂದು ವೇಳೆ ಕೇಂದ್ರ ಸರ್ಕಾರ ಎಲ್‌ಪಿಜಿ ಬೆಲೆಯನ್ನು ಏರಿಸಿ ದರೂ, ಆ ಹೊರೆಯನ್ನು ಸರ್ಕಾರವೇ ಹೊತ್ತುಕೊಳ್ಳಲಿದೆ ಎಂದೂ ಘೋಷಿಸಿದರು.
Tagged with
nnews
ಗಾಲ್: ಇಲ್ಲಿ ನಡೆಯುತ್ತಿರುವ ಲಂಕಾ ಹಾಗೂ ಪ್ರವಾಸಿ ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಮೊದಲ ಪಂದ್ಯವು ಕುತೂಹಲ ಘಟ್ಟಕ್ಕೆ ತಲುಪಿದೆ.
ರಂಗನಾ ಹೇರಾತ್ ಆರರ ದಾಳಿಗೆ ದಿಕ್ಕಾಪಾಲಾದ ಆಂಗ್ಲ ಪಡೆ ಅಲ್ಪ ಮೊತ್ತಕ್ಕೆ ಕುಸಿದಿದ್ದು, ಈ ಮೂಲ ಕ ಲಂಕಾ ಒಟ್ಟಾರೆಯಾಗಿ ಪಂದ್ಯದಲ್ಲಿ ೨೦೯ ರನ್‌ಗಳ ಮುನ್ನಡೆ ಯನ್ನು ಸಾಧಿ ಸಿದೆ. ನಂತರ ಬ್ಯಾಟಿಂಗ್ ನಡೆಸಿದ ಲಂಕಾ ಪರ ಚಾಂದಿಮಾಲ್ (೧೭) ಹಾಗೂ ರಾಂದೀವ್ (೨) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದು ಕೊಂಡಿ ದ್ದಾರೆ.
ದ್ವಿತೀಯ ದಿನಮೊದಲ ದಿನ ದಂತ್ಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ ೨೮೯ ರನ್ ಗಳಿಸಿದ್ದ ಲಂಕಾ ಅಂತಿಮವಾಗಿ ೩೧೮ ರನ್‌ಗಳಿಗೆ ಸರ್ವಪತನ ಕಂಡಿತು. ಜಯವರ್ಧನೆ ೧೮೦ ರನ್ ಗಳಿಸಿದರು. ಆಂಡರ್ಸನ್ ಐದು ವಿಕೆಟ್ ಪಡೆದರು. ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಆಂಗ್ಲ ಆತಿಥೇಯ ಸ್ಪಿನ್ನರ್ ರಂಗನಾ ಹೇರಾತ್ ಸ್ಪಿನ್ ಮೋಡಿಗೆ ಸಿಲುಕಿ ಕೇವಲ ೧೯೩ ರನ್‌ಗೆ ಸರ್ವಪತನಗೊಂಡು ೧೨೫ ರನ್‌ಗಳ ಹಿನ್ನೆಡೆ ಕಂಡಿತು. ಹೇರಾತ್ ಆರು ವಿಕೆಟ್ ಪಡೆದರು. ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ ಕೂಡ ಬ್ಯಾಟಿಂಗ್ ವೈಫಲ್ಯ ಕಂಡಿತು. ಮುಖ್ಯವಾಗಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅಬ್ಬರಕ್ಕೆ ದ್ವಿತೀಯ ದಿನದಂತ್ಯಕ್ಕೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ೮೪ ರನ್ ಗಳಿಸಿದೆ. ಸ್ವಾನ್ ಐದು ವಿಕೆಟ್ ಪಡೆದರು. ಆಂಗ್ಲ ತಂಡ ಇನ್ನೂ ರನ್ ಖಾತೆ ತೆರೆಯದೆ ಇದ್ದಾಗ ಅಲೆಸ್ಟರ್ ಕುಕ್‌ಗೆ ಚಾಂದಿಮಾಲ್ ಪೆವಿಲಿಯನ್ ಹಾದಿ ತೋರಿಸಿದರು. ಟ್ರಾಟ್ (೧೨) ತಂಡಕ್ಕೆ ಆಸರೆಯಾಗಲಿಲ್ಲ. ಆದರೆ ಉತ್ತಮ ಲಯದಲ್ಲಿದ್ದ ಸ್ಟ್ರಾಸ್ (೨೬) ವಿಕೆಟನ್ನು ಹೇರಾತ್ ಪಡೆದು ಲಂಕಾಗೆ ಮುನ್ನಡೆ ಒದಗಿಸಿದರು. ಇಯಾನ್ ಬೆಲ್ (೫೨) ನಂತರ ಬಂದ ಸ್ಟುವರ್ಟ್ ಬ್ರಾಡ್ (೨೮) ಹಾಗೂ ಸ್ವಾನ್ (೨೪) ಜೊತೆ ಕ್ರಮಾವಾಗಿ ೩೦ ಹಾಗೂ ೩೫ ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂ ಡು ಮೊತ್ತವನ್ನು ೨೦೦ರ ಸನಿಹ ಕೊಂಡೊಯ್ದರು.
ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಲಂಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಮೊತ್ತ ೧೪ ಆಗು ವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳಕೊಂಡಿತು. ಸಂಗಾಕ್ಕರ(೧೪) ಹಾಗೂ ಜಯ ವರ್ಧನೆ (೫) ಕೂಡ ತಂಡಕ್ಕೆ ಆಸರೆಯಾಗಲಿಲ್ಲ.
ಸಮರ ವೀರ(೩೬) ದೊಡ್ಡ ಮೊತ್ತದತ್ತ ದೃಷ್ಟಿ ಹರಿಸಲಿಲ್ಲ. ಅದರಲ್ಲೂ ಸ್ವಾನ್ ಎಸೆತ ವನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ದಾಂಡಿಗರು ವಿಫಲರಾದರು.
Tagged with
tnews
ದೆಹಲಿ: ಪ್ರತಿಷ್ಟಿತ ಐದನೇ ಆವೃತ್ತಿಯ ಐಪಿಎಲ್ ಕೂಟಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಡೆಕ್ಕನ್ ಚಾರ್ಜರ‍್ಸ್ ತಂಡಕ್ಕೆ ಆಘಾತಕಾರಿ ಸುದ್ದಿ ಲಭಿಸಿದೆ. ಈ ತಿಂಗಳ ಆರಂಭದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳ ಗಾಗಿದ್ದ ವೇಗಿ ಇಶಾಂತ್ ಶರ್ಮಾ ಈಗ ಕೂಟ ದಿಂದಲೇ ಹೊರಬಿದ್ದಿದ್ದಾರೆ.
ಕೊನೆ ವರ್ಷದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಶಾಂತ್ ಶಸ್ರ್ರಚಿಕಿತ್ಸೆಯನ್ನು ಮುಂದೂಡಿದ್ದರು. ಆದರೀಗ ಚಿಕಿತ್ಸೆಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯ ಲಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಇಶಾಂತ್ ಶಸ್ತ್ರಚಿಕಿತ್ಸೆಯ ಸ್ಟಿಚ್ ಅನ್ನು ಮುಂದಿನ ತಿಂಗಳ ಎರಡು ಅಥವಾ ಮೂರರಂದು ತೆಗೆಯ ಲಾಗುವುದೆಂದು ಹೇಳಲಾಗಿದೆ.
Tagged with
tnews
ಮಿಯಾಮಿ (ಫ್ಲೊರಿಡಾ): ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮಿಯಾಮಿ ಓಪನ್‌ನಲ್ಲಿ ಭಾರತ ಡಬಲ್ ಖುಷಿ ಕಂಡಿದೆ. ಕೂಟದ ಡಬಲ್ಸ್ ವಿಭಾಗದಲ್ಲಿ ಕ್ರಮವಾಗಿ ಮಹೇಶ್ ಭೂಪತಿ-ರೋಹನ್ ಬೋಪಣ್ಣ ಹಾಗೂ ಲಿಯಾಂಡರ್ ಪೇಸ್-ರೆಡೆಕ್ ಸ್ಪೆಪ್ನೆಕ್ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿ ಸುವ ಮೂಲಕ ಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಅಚ್ಚರಿಯ ಫಲಿ ತಾಂಶವೆಂದರೆ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಸ್ವಿಜ್‌ನ ರೋಜರ್ ಫೆಡರರ್ ಸೋಲುಣ್ಣುವ ಮೂಲಕ ಕೂಟದಿಂದ ಹೊರಬಿದ್ದರು.
ಸ್ಪೇಯ್ನ್‌ನ ಮಾರ್ಸೆಲ್ ಗ್ರೊನೊ ಲರ‍್ಸ್ ಹಾಗೂ ರಫೆಲ್ ನಡಾಲ್ ಜೋಡಿ ವಿರುದ್ಧ ೬-೪, ೬-೩ರ ಅಂತರದಲ್ಲಿ ಗೆಲುವು ದಾಖಲಿಸಿದ ಭೂಪತಿ-ಬೋಪಣ್ಣ ಜೋಡಿ ಕೂಟದಲ್ಲಿ ಮುನ್ನಡೆ ದರು. ಬ್ರಿಟಿಷ್ ಆಟಗಾರರಾದ ಕೊಲಿನ್ ಫ್ಲೆಮಿಂಗ್ ಹಾಗೂ ರೊಸ್ ಹಚಿನ್ಸ್‌ಗೆ ೬-೪, ೬-೩ರ ನೇರ ಅಂತರದಲ್ಲಿ ಸೋಲಿಸುವ ಮೂಲಕ ಪೇಸ್ ಹಾಗೂ ಜೆಕ್ ಆಟಗಾರ ಸ್ಪೆಪ್ನೆಕ್ ಕ್ವಾರ್ಟರ‍್ಸ್‌ಗೆ ಪ್ರವೇಶಿಸಿದ್ದಾರೆ. ಇನ್ನು ಅಚ್ಚರಿಯ ಫಲಿ ತಾಂಶ ಎಂದರೆ ಅಮೆರಿಕಾದ ಆಂಡಿ ರಾಡಿಕ್ ವಿರುದ್ಧ ೬-೪ ಹಾಗೂ ೬-೩ರ ಅಂತರದಲ್ಲಿ ಸೋತ ಮಾಜಿ ನಂಬರ್ ವನ್ ಆಟಗಾರ ಫೆಡರರ್ ಕೂಟದಿಂದ ಹೊರನಡೆದರು. ಈ ಮೂಲಕ ಸತತ ೧೬ ಪಂದ್ಯಗಳ ಜಯದ ದಾಖಲೆಯನ್ನು ಹೊಂದಿದ್ದ ಫೆಡರರ್ ನಿನ್ನೆಯ ಸೋಲಿನ ಕಾರಣ ಅದನ್ನು ಮುರಿದುಕೊಂಡರು.
Tagged with
tnews
ವೆಲ್ಲಿಂಗ್ಟನ್: ಕೇನ್ ವಿಲಿಯಮ್ಸನ್ ದಾಖಲಿಸಿದ ಅಜೇಯ ಶತಕದ ನೆರವಿನಿಂದ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾನಲ್ಲಿ ಅಂತಿಮಗೊಳಿಸಲು ಆತಿಥೇಯ ನ್ಯೂಜಿ ಲ್ಯಾಂಡ್ ಸಫಲವಾಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ನಿರಾಶೆ ಅನುಭವಿಸಿದರೂ ಟೆಸ್ಟ್ ಸರಣಿ ಯನ್ನು ದಕ್ಷಿಣ ಆಫ್ರಿಕಾ ೧-೦ ಯಿಂದ ಗೆದ್ದುಕೊಳ್ಳುವಲ್ಲಿ ಸಫಲ ವಾಗಿದೆ. ಅತ್ತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೊರ್ಕೆಲ್ ಪ್ರದರ್ಶಿಸಿದ ಮಾರಕ ಬೌಲಿಂಗ್ ದಾಳಿ ವ್ಯರ್ಥಗೊಂಡಿತ್ತಾದರೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರ ರಾದರು.
ಗೆಲ್ಲಲು ೩೮೮ ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಕಿವೀಸ್ ಒಂದು ಹಂತದಲ್ಲಿ ಮೊರ್ಕೆಲ್‌ರ ಏಕಾಂಗಿ ಬೌಲಿಂಗ್ ಅಬ್ಬರಕ್ಕೆ ಸಿಲುಕಿ ೮೩ ರನ್‌ಗೆ ಐದು ವಿಕೆಟ್ ಕಳಕೊಂಡು ಸೋಲಿನ ಭೀತಿಗೆ ಸಿಲುಕಿದ್ದರೂ ಕೇನ್ ವಿಲಿಯಮ್ಸನ್ (೧೦೨) ಸಿಡಿಸಿದ ಅಜೇಯ ಶತಕವು ತಂಡವನ್ನು ಸೋಲಿ ನಿಂದ ಪಾರು ಮಾಡಿತು. ವ್ಯಾನ್ ವಿಕ್ (೩೯) ಕೂಡ ವಿಲಿಯಮ್ಸನ್‌ಗೆ ಉತ್ತಮ ಸಾಥ್ ನೀಡಿದರು. ಪರಿಣಾಮ ತಂಡ ಪಂದ್ಯ ಮುಕ್ತಾಯದ ವೇಳೆಗೆ ಆರು ವಿಕೆಟ್ ನಷ್ಟಕ್ಕೆ ೨೦೦ ರನ್ ಗಳಿಸಿತ್ತು. ಮೊರ್ಕೆಲ್ ಆರು ವಿಕೆಟ್ ಪಡೆದರು.
ಪೀಟರ್ಸನ್ (೧೫೬) ಹಾಗೂ ಡ್ಯುಮಿನಿ (೧೦೩) ದಾಖಲಿಸಿದ ಶತಕದ ನೆರವಿನಿಂದ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌ನಲ್ಲಿ ೪೭೪ ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಅತ್ತ ಫಿಲ್ಯಾಂಡರ್ ದಾಳಿಗೆ ಸಿಲುಕಿದ ಕಿವೀಸ್ ಕೇವಲ ೨೭೫ ರನ್‌ಗಳಿಗೆ ಆಲೌಟಾಗಿ ಆಫ್ರಿಕಾಗೆ ೧೯೯ ರನ್‌ಗಳ ಹಿನ್ನೆಡೆಯನ್ನು ಕಂಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ ೧೮೯ ರನ್‌ಗೆ ಡಿಕ್ಲೇರ್ ಘೋಷಿಸುವ ಮೂಲಕ ಕಿವೀಸ್ ಗೆಲುವಿಗೆ ೩೮೮ ರನ್‌ಗಳ ಬೃಹತ್ ಮೊತ್ತ ವನ್ನು ನಿಗದಿಪಡಿಸಿತು.
Tagged with
tnews
ಮಂಗಳೂರು: ಮೂಲಭೂತ ಸೌಕರ್ಯ ವನ್ನು ನೀಡುವಂತೆ ಒತ್ತಾ ಯಿಸಿ ಕೋಡಿಕೆರೆಯಲ್ಲಿರುವ ಎಂಎಸ್‌ಇಝಡ್ ಪುನರ್ವಸತಿ ಕಾಲನಿ ನಿವಾಸಿಗಳು ನಿನ್ನೆ ತಮ್ಮ ಕಾಲನಿಯಲ್ಲಿ ಎಂಎಸ್ ಇಝಡ್ ವಿರುದ್ಧ ಪ್ರತಿಭಟನೆ ನಡೆಸಿದರು. ತಮ್ಮ ಜಾಗವನ್ನು ಪಡೆಯುವಾಗ ಸೂಕ್ತ ಸೌಲಭ್ಯವನ್ನು ನೀಡಿ ಪುನ ರ್ವಸತಿಯನ್ನು ಕಲ್ಪ್ಪಿಸಿಕೊಡುವ ಬಗ್ಗೆ ಎಂಎಸ್‌ಇಝಡ್ ನೀಡಿರುವ ಭರವಸೆ ಯನ್ನು ಅದು ಮರೆತಿದ್ದು, ಇಂದು ಯಾವುದೇ ಸೌಕರ್ಯ ಇಲ್ಲದೆ ಇಲ್ಲಿನ ನಿವಾಸಿಗಳು ಬವಣೆ ಪಡುವಂತಾಗಿದೆ. ಈ ಬಗ್ಗೆ ಎಂಎಸ್‌ಇಝಡ್‌ನ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿರುವುದಾಗಿ ಕಾಲನಿ ನಿವಾಸಿಗಳು ತಿಳಿಸಿದ್ದಾರೆ.
ಕುಡಿಯುವ ನೀರು, ರಸ್ತೆ, ಚರಂಡಿ ಮುಂತಾದ ಅಗತ್ಯ ಸೌಲಭ್ಯವನ್ನು ನೀಡಲು ಕಂಪೆನಿ ಈವರೆಗೆ ಮನಸ್ಸು ಮಾಡಿಲ್ಲ, ಇವರ ನಿರ್ಲಕ್ಷ್ಯತನದ ಪರಿ ಣಾಮವನ್ನು ನಾವಿಂದು ಎದುರಿಸು ತ್ತಿದ್ದೇವೆ. ಅದು ಗಂಭೀರ ಸ್ಥಿತಿಯನ್ನು ತಲುಪುವ ಮುನ್ನ ನಾವು ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದು ಕಾಲನಿ ನಿವಾಸಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈವರೆಗೆ ನಾವು ಎಂಎಸ್‌ಇಝಡ್ ಅಧಿಕಾರಿಗಳ ಜೊತೆ ಮಾತನಾಡುತ್ತಾ ಬಂದಿದ್ದೇವೆ ಅವರು ಭರವಸೆ ನೀಡು ತ್ತಲೇ ಬಂದಿದ್ದಾರೆ. ಆದರೆ ಈವರೆಗೆ ಯಾವುದೇ ಭರವಸೆ ಈಡೆರಿಸಿಲ್ಲ. ಈಡೇರಿಸ ಬೇಕು ಎನ್ನುವ ವ್ಯವಧಾ ನವೂ ಅವರಿಗಿಲ್ಲ. ಹೀಗಾಗಿ ನಾವೇ ಬೀದಿಗಿಳಿ ದಿದ್ದೇವೆ ಇಂದಿನ ಪ್ರತಿಭಟನೆಗೆ ಸೂಕ್ತ ಸ್ಪಂದನೆ ದೊರೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
Tagged with
lnews
ಗದ್‌ಚಿರೋಲಿ: ನಕ್ಸಲರು ಸಿಡಿಸಿದ ನೆಲಬಾಂಬ್‌ನಿಂದಾಗಿ ಬಸ್‌ನಲ್ಲಿ ಕರ್ತವ್ಯದ ನಿಮಿತ್ತ ಮಹಾರಾಷ್ಟ್ರದ ಗಟ್ಟಾ ಸಮೀಪದ ಪುಶ್ತೋಲ ಪ್ರದೇಶಕ್ಕೆ ತೆರಳುತ್ತಿದ್ದ ೧೧ ಮಂದಿ ಸಿಆರ್‌ಪಿಎಫ್ ಯೋಧರು ಬಲಿಯಾಗಿದ್ದು ಹಾಗೂ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮಹಾರಾಷ್ಟ್ರದ ಗಡ್ಚಿರೋಲಿ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಹೆಲಿಕಾಪ್ಟರ್ ಮೂಲಕ ಕಾರ‍್ಯಾಚರಣೆ ನಡೆಸಿ ಮೃತ ಶರೀರಗಳನ್ನು ಹಾಗೂ ಗಾಯಾಳು ಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಾಂಬ್ ಸ್ಫೋಟದಿಂದಾಗಿ ಬಸ್ ಸಂಪೂರ್ಣ ಛಿದ್ರಗೊಂಡಿದ್ದರೆ ಪ್ರದೇಶದ ನಾಗರಿಕರ ಮನೆಗಳಿಗೂ ಹಾನಿಯಾಗಿದೆ. ಹಲವು ನಾಗರಿಕರು ಘಟನೆಯಲ್ಲಿ ಗಾಯಗೊಂಡಿರುವ ಕುರಿತು ಸ್ಥಳೀಯ ಪೊಲೀಸ್ ಇಲಾಖೆ ವರದಿ ನೀಡಿದೆ. ೧೯೨ ಬೆಟಾಲಿಯನ್ ಪಡೆಗೆ ಸೇರಿದ ಯೋಧರ ಹತ್ಯೆ ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳದಲ್ಲಿ ಕೂಂಬಿಂಗ್ ಕಾರ‍್ಯಾಚರಣೆ ಆರಂಭಗೊಂಡಿದ್ದು, ತಡರಾತ್ರಿವರೆಗೂ ಮುಂದುವರಿದಿದೆ.
Tagged with
nnews
ಉಡುಪಿ: ವ್ಯಾಗನರ್ ಕಾರು ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಎಂಜಿಎಂ ಕಾಲೇಜು ಬಳಿ ಸಂಭವಿಸಿದೆ.
ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಬೈಕ್‌ಗೆ, ಎಂಜಿಎಂ ಕಾಲೇಜು ಬಳಿಯ ರಸ್ತೆ ಬದಿಯಲ್ಲಿರುವ ಗೋಕುಲದಾಸ್ ಪೈ ಎಂಬವರ ಮನೆಯಿಂದ ಗೋಕುಲ ದಾಸ್ ಪೈ ಅವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದಿದೆ.
ಇದರಿಂದಾಗಿ ಬೈಕ್‌ನಿಂದ ಎಸೆಯಲ್ಪಟ್ಟ ಹಿಂಬದಿ ಸವಾರ ಮಲ್ಪೆ ನಿವಾಸಿ ಚೇತನ್(೨೪) ಎಂಬವರು ಸ್ಥಳದಲ್ಲಿಯೇ ಮೃತಪಟ್ಟರೆ, ಸವಾರ ನಾಗರಾಜ್ ಎಂಬವರು ಗಂಭೀರವಾಗಿ ಗಾಯಗೊಂಡರು.
ಗಾಯಾಳು ನಾಗರಾಜ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಪ್ರಕರಣದ ಬಗ್ಗೆ ಕುಂಜಿಬೆಟ್ಟಿನ ಹಾಲಿನ ವ್ಯಾಪಾರಿ, ದೊಡ್ಡಣಗುಡ್ಡೆಯ ಶೇಖರ ಪೂಜಾರಿ ನೀಡಿದ ದೂರಿನ ಪ್ರಕಾರ ಉಡುಪಿ ನಗರ ಠಾಣೆಯ ಪೊಲೀಸರು ಕಾರು ಚಾಲಕ ಗೋಕುಲದಾಸ್ ಪೈ ವಿರುದ್ದ ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
Tagged with
cnews
ಕಾಸರಗೋಡು: ಆಟೋ ರಿಕ್ಷಾಕ್ಕೆ ಮೀನು ಸಾಗಿಸುವ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಇಲೆಕ್ಟ್ರೀಶಿಯನ್ ವೃತ್ತಿಯ ಮಧ್ಯವಯಸ್ಕರೋರ್ವ ದಾರುಣವಾಗಿ ಮೃತಪಟ್ಟಿದ್ದಾರೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆಗೆ ಇಲ್ಲಿನ ಚೆರ್ಕಳ ಸಂತೋಷ್‌ನಗರ ಎಂಬಲ್ಲಿ ಭಾರೀ ದುರ್ಘಟನೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಕಾಸರಗೋಡು ಬಳಿಯ ಪೈಕ ಬಾಲಡ್ಕ ನಿವಾಸಿ ಟಿ.ಎಂ. ಮುಹಮ್ಮದ್(೪೨) ಎಂದು ಗುರುತಿಸಲಾಗಿದೆ.
ಮುಹಮ್ಮದ್ ನಿನ್ನೆ ಅಪರಾಹ್ನ ಕೆಲಸ ಮುಗಿಸಿ ಅಟೋರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ರಿಕ್ಷಾವು ಸಂತೋಷ್‌ನಗರ ಬಳಿಗೆ ತಲುಪುತ್ತಿದ್ದಂತೆ ಎದುರು ಬದಿಯಿಂದ ಬೇರೊಂದು ವಾಹನವನ್ನು ಹಿಂದಿಕ್ಕಿ ಅತಿ ವೇಗದಲ್ಲಿ ಬಂದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾಕ್ಕೆ ಬಡಿದಿತ್ತು.
ಢಿಕ್ಕಿಯ ರಭಸಕ್ಕೆ ಆಟೋದಿಂದ ಕೆಳಕ್ಕೆ ಬಿದ್ದ ಮುಹಮ್ಮದರನ್ನು ಸ್ಥಳೀ ಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಆಟೋ ರಿಕ್ಷಾ ಚಾಲಕ ಹಾಗೂ ಮತ್ತೋರ್ವ ಪ್ರಯಾಣಿಕನನ್ನು ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮುಹಮ್ಮದ್ ಅವರು ಬಾಲಡ್ಕದ ಅಬ್ದುಲ್ ರಹಿಮಾನ್-ಉಮ್ಮಾಲಿಮ್ಮ ದಂಪತಿಯರ ಪುತ್ರನಾ ಗಿದ್ದಾರೆ. ಪತ್ನಿ ನಸೀಮಾ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದಾರೆ. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.
Tagged with
cnews
ಬಂಟ್ವಾಳ: ಗೋವಾದಿಂದ ಸಾಗಿಸಲಾಗುತ್ತಿದ್ದ ಸುಮಾರು ೬ ಲಕ್ಷ ರೂ. ಮೌಲ್ಯದ ಮದ್ಯವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ವಶಪಡಿಪಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡು ವಾಹನಗಳು, ೪೮ ಬಾಟಲುಗಳ ೪೧೦ ಬಾಕ್ಸ್‌ಗಳಲ್ಲಿದ್ದ ೧೯,೬೮೦ ಬಾಟಲ್ ಮದ್ಯವನ್ನು ವಶಪಡಿಸಿ ಕೊಂಡ ಪೊಲೀಸರು ಮೂವರನ್ನು ಬಂಧಿಸಿದರು. ಬೆಳಿಗ್ಗೆ ಗ್ರಾಮಾಂತರ ಠಾಣಾ ಉಪನಿರೀಕ್ಷಕ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ವಗ್ಗ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬೆಳ್ತಂಗಡಿ ಕಡೆಯಿಂದ ಅತೀ ವೇಗವಾಗಿ ಬಂದ ಆಲ್ಟೊ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಕಾರು ನಿಲ್ಲಿಸದೆ ಪರಾರಿಯಾಗಿತ್ತು. ತಕ್ಷಣ ಪೊಲೀಸರು ಜೀಪಿನಲ್ಲಿ ಕಾರನ್ನು ಬೆನ್ನಟ್ಟಿದ್ದು ಮಣಿಹಳ್ಳ ಎಂಬಲ್ಲಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಕಾರು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮತ್ತು ಜೀಪಿಗೆ ಹಾನಿಯಾಗಿದೆ.
ಈ ಸಂದರ್ಭ ಕಾರಿನಲ್ಲಿದ್ದ ತ್ರಿಶೂರು ಜಿಲ್ಲೆಯ ಚಾವಕಾಡು ತಾಲೂಕಿನ ಎಡಕ್ಕಾರು ಗ್ರಾಮದ ನಿವಾಸಿ ಅನ್ಸಿಫ್ ಮತ್ತು ಕಾಸರಗೋಡು ಜಿಲ್ಲೆಯ ಉಪ್ಪಳ ಪೈವಳಿಕೆ ನಿವಾಸಿ ಅಬೂಬಕ್ಕರ್ ರಿಯಾಜ್‌ರನ್ನು ಬಂಧಿಸಲಾಗಿದೆ. ಬಂಧಿತ ಅನ್ಸಿಫ್ ನೀಡಿದ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆ ಕುಕ್ಕಳ ಒಳಬೈಲು ಎಂಬಲ್ಲಿ ನಿವಾಸಿ ಭೋಜ ಭಂಡಾರಿ ಎಂಬವರಿಗೆ ಸೇರಿದ ಜಮೀನಿಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ಕೂಡಾ ಆಲ್ಟೋ ಕಾರೊಂದರಲ್ಲಿ ೩೦ ಬಾಕ್ಸ್ ಬ್ರಾಂಡಿ ಹಾಗೂ ಜಮೀನಿನಲ್ಲಿ ಉದುಗಿಡಲಾಗಿದ್ದ ೩೫೦ ಬಾಕ್ಸ್ ಬ್ರಾಂಡಿ ಪತ್ತೆಯಾಗಿದ್ದು, ಭೋಜ ಭಂಡಾರಿಯವರನ್ನು ದಸ್ತಗಿರಿ ಮಾಡಲಾಗಿದೆ. ಈ ಬ್ರಾಂಡಿಗಳನ್ನು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲು ದಾಸ್ತಾನಿರಿಸಿಕೊಂಡಿ ರುವುದಾಗಿ ತಿಳಿದು ಬಂದಿದೆ. ಪುತ್ತೂರಿನ ಪ್ರೀತಿಪಾಲ್ ರೈ ಎಂಬವರು ಗೋವಾದಿಂದ ಅಕ್ರಮವಾಗಿ ಮದ್ಯವನ್ನು ತರಿಸಿ ಭೋಜ ಭಂಡಾರಿಯವರ ಮೂಲಕ ದಾಸ್ತಾನಿರಿಸಿ ಕೇರಳದ ಶರೀಫ್ ಎಂಬವನ ಮೂಲಕ ಕೇರಳ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬುದಾಗಿ ಬಂಧಿತರು ಬಾಯಿ ಬಿಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಗುರುವಾರ ಸಂಜೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಘಟನೆಯ ಕುರಿತು ವಿವರಣೆ ನೀಡಿದರು.
Tagged with
cnews
ಕಾರ್ಕಳ: ನೀರು ತರಲೆಂದು ಹೋಗಿದ್ದ ಮಹಿಳೆಯೊಬ್ಬರಿಗೆ ಯುವಕ ನೊಬ್ಬ ಹಲ್ಲೆಗೈದ ಘಟನೆ ಅಜೆಕಾರು ಎಂಬಲ್ಲಿ ಸಂಭವಿಸಿದೆ.
ಮಾರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಐದು ಸೆಂಟ್ಸ್ ಕಾಲನಿಯ ನಿವಾಸಿ ಬೇಬಿ ಮೂಲ್ಯ(೩೮) ಹಲ್ಲೆ ಗೊಳಗಾದವರು. ಮನೆ ಸಮೀಪ ದಲ್ಲಿರುವ ಸಾರ್ವಜನಿಕ ನಳ್ಳಿ ನೀರಿನ ಪೈಪ್‌ನಿಂದ ನೀರು ತರಲೆಂದು ಹೋಗಿ ದ್ದಾಗ ಸ್ಥಳೀಯ ನಿವಾಸಿ ಹರ್ಷದ್(೨೦) ಎಂಬಾತ ಅಲ್ಲಿಗೆ ಬಂದು ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿ ರುವ ದೂರಿನಲ್ಲಿ ಆರೋಪಿಸ ಲಾಗಿದೆ.
Tagged with
cnews
ನವದೆಹಲಿ: ತನ್ನ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಸೋನಿಯಾ ಗಾಂಧಿಯೇ ಹತ್ಯೆ ಮಾಡಿಸಿರುವ ಬಗ್ಗೆ ಶಂಕೆಯಿದೆ ಎಂದು ಜನತಾ ಪಾರ್ಟಿಯ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದ ರ್ಶನದಲ್ಲಿ ದೊಡ್ಡ ಬಾಂಬ್ ಸ್ಫೋಟಿಸಿ ದ್ದಾರೆ.ಎಲ್‌ಟಿಟಿಇ ಉಗ್ರರಿಗೆ ತರಬೇತಿ ನೀಡಿರುವ ಪ್ಯಾಲೆಸ್ತೇನ್‌ನ ಹಮಾಸ್ ಎಂಬ ಗುಂಪಿನೊಂದಿಗೆ ಸೋನಿಯಾಗೆ ನಿಕಟ ಸಂಬಂಧವಿದೆ.
ಹೀಗಾಗಿ ಆಕೆಗೆ ಎಲ್‌ಟಿಟಿಇ ಮೇಲೆ ಒಲವು. ಎಲ್‌ಟಿಟಿಇ ಪರ ಯುಪಿಎ ನಿಲುವಿಗೆ ಸೋನಿಯಾ ಕಾರಣ ಎಂದು ಸ್ವಾಮಿ ಏಶ್ಯನ್ ಟ್ರಿಬ್ಯೂನ್‌ಗೆ ನೀಡಿದ ಸಂದರ್ಶನದಲ್ಲಿ ಮಹತ್ತರ ಆರೋಪ ಮಾಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಲಂಕಾದಲ್ಲಿದ್ದ ತಮಿಳು ಯುವಕರನ್ನು ರಾಷ್ಟ್ರಕ್ಕೆ ಆಹ್ವಾನಿಸಿದ ಬಳಿಕ ಭಾರತದಲ್ಲಿ ಕೂಡ ಎಲ್‌ಟಿಟಿಇ ತನ್ನ ಚಟುವಟಿಕೆಯನ್ನು ಆರಂಭಿಸಿತ್ತು. ಲಂಕಾ ಸರಕಾರ ವಿರುದ್ಧ ಎಲ್‌ಟಿಟಿಇಯನ್ನು ಎತ್ತಿಕಟ್ಟಿದ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
Tagged with
nnews