ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ
ತುಳುವ ಮೂಲದ ಜನರಿಗೆ ಚಿನ್ನದ ಒಡವೆ ಧರಿಸುವುದು ನಿಷಿದ್ಧವಿತ್ತು. ಕರಿಮಣಿ ತೊಡುವ ಪರಿಕ್ರಮ ಈ ಸಮುದಾಯದಲ್ಲಿ
ಪ್ರಾರಂಭಗೊಂಡ ಬಳಿಕವೂ ಮಾಂಗಲ್ಯದ ಸಂಕೇತವಾಗಿ ‘ಒಂಟಿ ಕರಿಯಮಣಿ, ‘ಕಕ್ಕೆ ಕಾಯಿದ ಕರಿಮಣಿ, ‘ಬೊಲ್ಲಿದ
ಕಂಠಿಯನ್ನು ಉಪಯೋಗಿಸಲು ಪ್ರಾರಂಭಿಸಿದಂತೆ ತಿಳಿದುಬರುತ್ತದೆ.
ಮದುವೆಯು ಮಾನವ ಜೀವನದಲ್ಲೊಂದು
ಅತ್ಯಂತ ಮಹತ್ವ ಪೂರ್ಣ ಪ್ರತಿಜ್ಞಾ ಸಂಸ್ಕಾರ. ಸ್ತ್ರೀ ಪುರುಷರ ದೇಹ ಧರ್ಮ ಮತ್ತು ಮನೋಧರ್ಮಗಳ ಸಂಗಮ,
ಸಹಚರ‍್ಯೆ, ದಾಂಪತ್ಯದ ಮೂಲಧಾತು. ತುಳು ನಾಡಿನಲ್ಲಿ ಕೂಡು ಕುಟುಂಬದಲ್ಲಿ ಮಕ್ಕಳಾಟಿಕೆಯಲ್ಲಿ ಯಾವುದೇ
ರೀತಿಯ ಘನತರ ಹೊಣೆಗಾರಿಕೆ ಇಲ್ಲದೆ ದುಡಿಯುವ, ಉಣ್ಣುವ ಸ್ವಾತಂತ್ರ್ಯದ ಕೌಮಾ ರ್ಯವನ್ನು ಕಳೆದು ಯೌವ್ವನದ
ಹೊಸ್ತಿಲಲ್ಲಿ ವಿವಾಹ ಬಂಧನಕ್ಕೆ ಸಿಲುಕಿದ ಬಳಿಕ ಗಂಡು ಮತ್ತು ಹೆಣ್ಣು ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು
ಹೊತ್ತು ನಡೆಯುವುದು, ಆಗ ತಮ್ಮ ಕಾಲ ಮೇಲೆ ನಿಂತು ಮುಂದಿನ ಭವಿ ಷ್ಯವನ್ನು ಸ್ವಲ್ಪ ಮಟ್ಟಿಗಾದರೂ ರೂಪಿಸಿಕೊಂಡು,
ಜವಾಬ್ದಾರಿಯುತವಾಗಿ ಸಿಹಿ ಕಹಿಗಳ ಸಮ್ಮಿಶ್ರದಲ್ಲಿ ಬದುಕು ಸಾಗಿಸಬೇಕಾ ಗುತ್ತದೆ. ಮದುವೆಯಂತೂ ತನ್ನ
ಎಂದಿನ ಸಂಭ್ರಮವನ್ನು ಉಳಿಸಿ, ಬೆಳೆಸಿ ಕೊಂಡು ಬಂದಿದೆ. ಇತ್ತೀಚೆಗಿನ ದಿನಗಳಲ್ಲಿ ಈ ಸಮಾರಂಭವು ವೈಭವೋ
ಪೇತಗೊಂಡು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ಮತ್ತಷ್ಟು ಆಕರ್ಷಣೀ ಯವಾಗುತ್ತಿದೆ.
ಮದುವೆಯ ಧಾರ್ಮಿಕ ಪಾವಿತ್ರ್ಯತೆಯಿಂದ
ಮೆರೆದು ಸಾಮಾಜಿಕ ಗೌರವವನ್ನು ಉಳಿಸಿಕೊಳ್ಳುವಲ್ಲಿ ಪೂರಕವಾಗುವಂತೆ ಅನೇಕ ವಿಧಿ ವಿಧಾ ನಗಳಿಂದ ಪೋಷಿತವಾಗಿರುವುದು
ಲಾಗಾಯ್ತಿನಿಂದ ನಡೆದು ಬಂದ ಆಚ ರಣೆಗಳಿಂದ ವೇದ್ಯವಾಗುತ್ತದೆ. ೫೦ ವರ್ಷಗಳ ಮೊದಲು ತುಳುನಾಡಿನಲ್ಲಿ
ನಡೆಯುತ್ತಿದ್ದ ಮನೆಮದುವೆಯು ಅಗಾಧ ಜಾನಪದ ಮೌಲ್ಯವನ್ನಾಧರಿ ಸಿದೆ. ಆ ಕಾಲ ಘಟ್ಟದಲ್ಲಿ ತುಳು ಸಂಸ್ಕೃತಿಯ
ಮೇಲೆ ವೈದಿಕ ವಿಧಿ ವಿಧಾನ ಗಳ ಪ್ರಭಾವ ಅಷ್ಟಾಗಿ ಇರಲಿಲ್ಲ. ಇಲ್ಲಿ ವಿವೇಚಿಸ ತಕ್ಕ ವಿಚಾರಗಳು ಕೆಲವಿದೆ.
೧) ತುಳು ಪದ್ಧತಿಯ
ಮದುವೆಗಳಲ್ಲಿ ಗಂಡು ಹೆಣ್ಣಿಗೆ ಕರಿಮಣಿ ಕಟ್ಟುವ ಮತ್ತು ಹೂ ಹಾರ ಹಾಕಿಕೊಳ್ಳುವ ಪದ್ಧತಿ ಇರಲಿಲ್ಲ.
(ಉಡುಪಿ ತಾಲೂ ಕಿನ ನೆಯ್ಯಂಪಳ್ಳಿಯಲ್ಲಿರುವ ನಿವೃತ್ತ ಉಪಾಧ್ಯಾಯರಾದ ಮೆಣ್ಕ ಮಾಸ್ತ ರರ ಮದುವೆಯು ಇದೇ
ಕ್ರಮದಲ್ಲಿ ನೆರವೇರಿತ್ತು. ಈಗ ಅವರು ೯೦ನೇ ವಯಸ್ಸಿನಲ್ಲಿ ನಿಧನರಾಗಿರುವರು)
ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ
ತುಳುವ ಮೂಲದ ಜನರಿಗೆ ಚಿನ್ನದ ಒಡವೆ ಧರಿಸುವುದು ನಿಷಿದ್ಧವಿತ್ತು. ಕರಿಮಣಿ ತೊಡುವ ಪರಿಕ್ರಮ ಈ ಸಮುದಾಯದಲ್ಲಿ
ಪ್ರಾರಂಭಗೊಂಡ ಬಳಿಕವೂ ಮಾಂಗಲ್ಯದ ಸಂಕೇತ ವಾಗಿ ‘ಒಂಟಿ ಕರಿಯಮಣಿ, ‘ಕಕ್ಕೆ ಕಾಯಿದ ಕರಿಮಣಿ, ‘ಬೊಲ್ಲಿದ
ಕಂಠಿ ಯನ್ನು ಉಪಯೋಗಿಸಲು ಪ್ರಾರಂಭಿಸಿದಂತೆ ತಿಳಿದುಬರುತ್ತದೆ.
(ಉಡುಪಿ ತಾಲೂಕು ಮೂಳೂರಿನವರಾದ
ಶ್ರೀಮತಿ ಸೀತಾ ಚಂದು ಸಾಲ್ಯಾನ್‌ರವರ ಮದುವೆಯಲ್ಲಿ ಕರಿಮಣಿ ಕಟ್ಟಿರಲಿಲ್ಲ. ಹೂವಿನ ಹಾರ ಹಾಕಿದ್ದರು.
ಈಗ ೮೦ ವರ್ಷ ವಯಸ್ಸಿನ ಇವರಿಗೆ ಹದಿನೈದನೇ ಪ್ರಾಯ ದಲ್ಲಿ ವಿವಾಹವಾಗಿತ್ತು)
೨) ಅಣ್ಣ-ತಂಗಿಯರ ಮದುವೆ
ಮತ್ತು ಸೋದರ ಮಾವ ಮತ್ತು ಸೋದರಳಿಯನಿಗೆ ಒಂದೇ ದಿನ ಒಂದೇ ಮಂಟಪದಲ್ಲಿ ನಡೆಯುತ್ತಿರ ಲಿಲ್ಲ. ಅಂತಹ
ಸಂದರ್ಭಗಳಲ್ಲಿ ಬೇರೆ ಬೇರೆ ಚಪ್ಪರಗಳಲ್ಲಿ ಲಗ್ನ ನೆರವೇರಿ ಸುತ್ತಿದ್ದರು. ಕ್ರಮೇಣ ಅಣ್ಣ ತಂಗಿಯರ
ಮತ್ತು ಸೋದರ ಮಾವ, ಸೊಸೆ ಯರ ಮದುವೆ ಒಂದೇ ಮಂಟಪದಲ್ಲಿ ನಡೆಯಲು ಪ್ರಾರಂಭವಾಯಿತು.
೩) ಒಂದೇ ಲಗ್ನ ಮಂಟಪದಲ್ಲಿ
ಸಾಮೂಹಿಕ ವಿವಾಹಗಳು ನಡೆ ಯುತ್ತಿದ್ದವು (ಸುಮಾರು ೧೯೧೦ನೇ ಇಸವಿಯಲ್ಲಿ ಉಡುಪಿ ತಾಲೂಕು ಪಡುತೋಟ ಬೊಗ್ಗು
ಪೂಜಾರಿಯವರ ಸೋದರಳಿಯಂದಿರು ಮತ್ತು ಸೊಸೆಯಂದಿರಿಗೆ ಒಂಬತ್ತು ಜೋಡಿ ಧಾರೆಗಳು ನಡೆದಿರುವುದನ್ನು ಇಲ್ಲಿ
ಸ್ಮರಿಸಬಹುದು)
ಉಡುಪಿ ತಾಲೂಕು ಕಡೆಕಾರಿನಲ್ಲಿರುವ
ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿದ್ದ ಅಣ್ಣಯ ಕುಂದರ್ ರವರ ಪ್ರಾಯ ೬೮.
ಹಿರೆ ತಾಯಿ ಮಗಳು ಎಚ್ಚು ಮರಕಾಲ್ತಿ ದಂಪ ತಿಗಳು, ಕಪ್ಪೆಟ್ಟು ಮನೆಯಲ್ಲಿ ನಡೆದ ಹನ್ನೊಂದು ಜೋಡಿ ಧಾರೆಯಲ್ಲಿ
ಒಂದು ಜೋಡಿಯಾಗಿದ್ದರು. ಇಂತಹ ಸಮೂಹ ವಿವಾಹಗಳನ್ನು ಅವಲೋಕಿಸಿದರೆ ಇಂದು ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ,
ಕುದ್ರೋಳಿ ಮೊದಲಾದೆಡೆ ಜರಗುತ್ತಿರುವ ಸಾಮೂಹಿಕ ವಿವಾಹಗಳೂ ತುಳುನಾಡಿನ ಮೂಲ ಆಚರಣೆಯಿಂದಲೇ ಪ್ರಾಯಶಃ
ಪ್ರಚೋದಿತ ವಾಗಿರುವ ಸಾಧ್ಯತೆ ಇದೆ.
೪) ತುಳುನಾಡಿನ ಕೂಡು
ಕಟ್ಟಿನ ನಡವಳಿಕೆಯಂತೆ ಮನೆಯ ಗಂಡು ಮಕ್ಕಳಿಗೆ ವಿವಾಹವಾಗುವುದಿದ್ದರೆ ಮನೆತನದವರು ನಂಬಿ ಕೊಂಡು ಬಂದಿರುವ
ದೈವಗಳಿಗೆ ಕೋಲ ಕೊಟ್ಟು ಸಂತೃಪ್ತಿಪಡಿಸಿ ಅನುಗ್ರಹ ಪಡೆಯಬೇಕಿತ್ತು. ತುಳುವ ಮೂಲದ ಮನೆತನಗಳು ತಮ್ಮ
ದೈನಂದಿನ ಬದುಕಿನಲ್ಲಿ ಗದ್ದೆ ತೋಟಗಳ, ಪೈರು- ಫಸಲುಗಳ, ಹಟ್ಟಿ - ಕೊಟ್ಟಿಗೆಗಳ ರಕ್ಷಣೆಗೆ ದೈವಗಳೆಂಬ
ಅಗೋಚರ ಶಕ್ತಿಗಳನ್ನು ಆರಾ ಧಿಸಿ ಶರಣಾಗುತ್ತಿದ್ದರು. ವೈದಿಕ ಸಂಸ್ಕೃತಿಯಲ್ಲಿ ಗೆದ್ದವರು ಮಾತ್ರ ದೈವತ್ವಕ್ಕೇರಿ
ಆರಾಧನಾ ಪಟ್ಟ ಪಡೆಯುತ್ತಿದ್ದರು. ಆದರೆ ತುಳುವ ಸಂಸ್ಕೃತಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಒಂದು
ಸಿದ್ದಾಂತವನ್ನು ಸಾಧಿಸಿ ಕೊಂಡು, ಗತಿಸಿದರೂ ಅಂತಹವರನ್ನು ಶಕ್ತಿರೂಪದಲ್ಲಿ ನಂಬಿಕೊಂಡು ಬರುತ್ತಿದ್ದರು.
ದೈವಗಳು ಆ ವರ್ಗಕ್ಕೆ ಸೇರುತ್ತವೆ (ಉದಾ: ಜುಮಾದಿ, ಕಲ್ಕುಡ, ಪಂಜುರ್ಲಿ ಇತ್ಯಾದಿ) ಇಂತಹ ದೈವಗಳಿಗೆ
ನಡೆಯುವ ವಾರ್ಷಿಕ ಉತ್ಸವವೇ ಕೋಲ. ಈ ಕೋಲಗಳಲ್ಲಿ ವೃತ್ತಿಪರ ಗುಂಪಿನ ಜನರು ವೇಷ ಕಟ್ಟಿ ಕುಣಿದು ಮನರಂಜನೆ
ಒದಗಿಸುವರು. ಕೋಲವನ್ನು ಹರಕೆಯ ರೂಪದಲ್ಲಿ ಕೂಡಾ ಸಲ್ಲಿಸುತ್ತಿದ್ದರು. ಇಂತಹ ಸಂದರ್ಭಗಳಲ್ಲ್ಲಿ ಕೋಲ
ಮದುವೆಗಳು ಗಂಡಿನ ಮನೆಯಲ್ಲಿ ನಡೆಯುತ್ತಿತ್ತು. ಗಂಡಿನ ಮನೆ ಯಲ್ಲಿ ಜರಗುವ ಕೋಲ ಮದುವೆಯನ್ನು ಇಲ್ಲಿ
ಚರ್ಚಿಸಲಾಗಿದೆ.
ಮದಿಮೆಗ್ ಅಟ್ಟಣೆ
(ಮದುವೆಗೆ ತಯಾರಿ)
ಊರಲ್ಲಿ ಒಂದು ಮದುವೆಯ
ನಿಶ್ಚಯವಾಯಿತು ಎಂದರೆ ಊರ ಕೂಡುಕಟ್ಟಿನ ಸಮಾಜ ಬಾಂಧವರೆಲ್ಲರಿಗೂ ಗೌರವಪೂರ್ವಕ ಹೇಳಿಕೆ ನೀಡುತ್ತಿದ್ದರು.
ಕುಟುಂಬದವರಿಗೆ ಅದರಲ್ಲೂ ನೆಂಟರಿಗೆ ವಿಶೇಷ ಮರ್ಯಾದೆ ನೀಡಲಾಗುತ್ತಿತ್ತು. ಜೊತೆಗೆ ಇತರ ಸಮಾಜದ ಪ್ರತಿಷ್ಠಿತರನ್ನು
ಕೂಡಾ ಆಮಂತ್ರಿಸುತ್ತಿದ್ದರು. ಈಗಿನಂತೆ ಮುದ್ರಿತ ಆಮಂತ್ರಣ ಪತ್ರಿಕೆ ಆ ಕಾಲದಲ್ಲಿ ಚಾಲ್ತಿಗೆ ಬಂದಿರಲಿಲ್ಲ.
ಏನಿದ್ದರೂ ವೀಳ್ಯ ಗೌರವದೊಂದಿಗೆ ಬಾಯ್ದೆರೆ ಆಮಂತ್ರಣ. ಮದುವೆ ನಡೆಯುವ ಮನೆಗಳಲ್ಲಿ ಒಂದೆರಡು ದಿನಗಳ
ಮೊದಲು ಕಾಜಿಗಾರ‍್ತಿ (ಬಳೆಗಾರ್ತಿ)ಯನ್ನು ಮನೆಗೆ ಕರೆಸಿ ಮದುಮಗ ಳಿಗೆ, ಮನೆಯ ಮತ್ತು ನೆರೆಕರೆಯ ಹೆಣ್ಣು
ಮಕ್ಕಳಿಗೆ ಬಳೆ ಇಡಿಸುವ ಕೆಲ ಸವನ್ನು ಮಾಡುವರು. ಹೆಣ್ಣಿಗೆ ಮದುವೆ ಮುತ್ತೈದೆ ಭಾಗ್ಯ ನೀಡುವುದ ರಿಂದ
ಎಲ್ಲರಿಗೂ ಬಳೆ ತೊಡಿಸುವ ಕ್ರಮ ಮದುಮಗಳ ಮಾಂಗಲ್ಯಕ್ಕೆ ಆಶೀರ್ವಾದ ಕೋರುವ ಆಶಯವೂ ಆಗಿರಬಹುದು.
ಮನೆಯಲ್ಲಿ ಕೋಲ ಮತ್ತು
ಧಾರೆ ಮದುವೆ ನಡೆಯಲು ಪೂರ್ವ ಭಾವಿ ವ್ಯವಸ್ಥೆ ಆಗುತ್ತದೆ. ಇವನ್ನೆಲ್ಲ ನಿರ್ವಹಿಸಲು ಊರು ಮನೆಗಳಲ್ಲಿ
ನುರಿತ ಜನರಿರುವರು. ಮದುವೆಯ ಮೊದಲು ಸಮಾಜ ಬಾಂಧವರು ಮತ್ತು ಆಪ್ತೇಷ್ಟರು ಸೇರಿ ಮದುವೆಗೆ, ಅಡುಗೆಗೆ,
ಊಟದ ವ್ಯವಸ್ಥೆಗೆ ಬೇರೆ ಬೇರೆ ಚಪ್ಪರಗಳನ್ನು ಅಚ್ಚುಕಟ್ಟಾಗಿ ಅಲಂಕರಿಸುವರು. ಇತರ ಎಲ್ಲಾ ಸಲ ಕರಣೆಗಳಾದ
ಅಡುಗೆಯ ದವಸ, ಅಕ್ಕಿ, ಕಾಯಿ, ಬೆಲ್ಲ, ಕಾಯಪಲ್ಲೆ ಮೊದ ಲಾದವುಗಳನ್ನು ಅದಕ್ಕೆಂದೇ ಸಿದ್ದಪಡಿಸಿದ ಉಗ್ರಾಣದಲ್ಲಿ
ಶೇಖರಿಸಿಡು ವರು. ಈ ಎಲ್ಲಾ ಕೆಲಸದಲ್ಲಿ ಊರವರು ಮನೆಮಕ್ಕಳಂತೆ ಶ್ರಮಿಸುವರು. ಈ ತೆರನ ಹೊಂದಾಣಿಕೆ
ಅರ್ಥಪೂರ್ಣವಾಗಿರುವುದು. ಕೆಲಸದಲ್ಲಿ ಭಾಗ ವಹಿಸಿದವರಿಗೆ ಮೊದಲ ದಿನದ ‘ದೊಂಪದ ಉಣಸ್ (ಚಪ್ಪರ ಹಾಕಿ
ದುದಕ್ಕೆ ಊಟ) ಕೊಡುವುದು ಒಂದು ಗೌರವಪೂರ್ಣ ಸಂಪ್ರದಾಯವಾ ಗಿದೆ.