ಯಡ್ಡಿ ಅಧಿಕಾರ ಕೇಳುವುದರಲ್ಲಿ ತಪ್ಪಿಲ್ಲ

Posted by JAYAKIRANA Kirana on Monday, 26 March 2012 | 0 comments | Leave a comment...


ಯಡಿಯೂರಪ್ಪ ಮತ್ತೆ ‘ಮುಖ್ಯ ಮಂತ್ರಿ ಸ್ಥಾನ ಕೊಡಿ’ ಎಂದು ಪಕ್ಷದ ವರಿಷ್ಠರಲ್ಲಿ ದುಂಬಾಲು ಬೀಳುತ್ತಿದ್ದಾರೆ. ಇದನ್ನು ಎಲ್ಲರೂ ತಪ್ಪೆಂದು ಹೇಳಿದರೂ ಸೂಕ್ತ ಸ್ಥಾನಮಾನ ಕೇಳುವುದೇ ಸರಿಯಲ್ಲ ಎನ್ನುವುದು ಅಸಾಧ್ಯ. ಯಾಕೆಂದರೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರಿದ್ದರೆ ಅದು ಯಡಿ ಯೂರಪ್ಪರ ನಾಯಕತ್ವದಿಂದಾಗಿ. ಪಕ್ಷವನ್ನು ಸಮ ರ್ಥವಾಗಿ ಮುನ್ನಡೆಸಿದ್ದರ ಫಲವಾಗಿ ಬಿಜೆಪಿ ಜಯ ಭೇರಿ ಬಾರಿಸಿತು. ಆದರೆ ನಂತರದ ದಿನಗಳಲ್ಲಿ ಡಿನೋಟಿಫಿಕೇಶನ್ ರಗಳೆಯಿಂದಾಗಿ ಯಡ್ಡಿ ಜೈಲು ಪಾಲಾಗಿದ್ದು ನಿಜ. ಇಲ್ಲಿ ಯಡಿಯೂರಪ್ಪ ಒಬ್ಬರೇ ಹಣ ಮಾಡಿದ್ದಲ್ಲ. ಪಕ್ಷದ ಅದೆಷ್ಟೋ ಮಂದಿ ಕೋಟ್ಯಂತರ ಮೌಲ್ಯದ ಅಕ್ರಮ ಸಂಪತ್ತು ಕೂಡಿ ಹಾಕಿದ್ದಾರೆ. ರಾಜ ಕೀಯಕ್ಕೆ ಸೇರುವ ಉದ್ದೇಶವೇ ಹಣ ಮಾಡುವುದು ಆಗಿರುವಾಗ ಯಡ್ಡಿ ಯನ್ನು ದೂಷಿಸಿ ಪ್ರಯೋಜನವೇನು? ಯಡಿಯೂರಪ್ಪರು ಮಾಡಿರುವ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ ಅವರನ್ನು ಪಕ್ಷದಿಂದ ಕೈಬಿಟ್ಟರೆ ರಾಜ್ಯದಲ್ಲಿ ಪಕ್ಷ ಸಂಘಟನೆ ಅಸಾಧ್ಯ. ಆದ್ದರಿಂದ ತಡಮಾಡದೆ ಯಡಿಯೂರಪ್ಪರಿಗೆ ಪಕ್ಷದಲ್ಲಿ ಮತ್ತೆ ಸೂಕ್ತ ಸ್ಥಾನ ಮಾನ ಕೊಡುವುದೇ ಲೇಸು.
 ಶ್ರೀಧರ ಆಚಾರ್ಯ, ಸಾಸ್ತಾನ

ಯೂಸುಫ್‌ಗೆ ಸಹಚರರಿಲ್ಲ
ನಿನ್ನೆಯ ಪತ್ರಿಕೆಯಲ್ಲಿ ’ಶಿಕ್ಷಕಿಯ ಮನೆಯಲ್ಲಿ ಸಿಕ್ಕಿಬಿದ್ದ ಮಾಡೂರ್ ಯೂಸುಫ್ ಸಹಚರ’ ಎಂಬ ವರದಿ ಪ್ರಕಟವಾಗಿತ್ತು. ಆದರೆ ಉಳ್ಳಾಲದ ಬಸ್ತಿಪಡ್ಪುವಿನ ಬದ್ರುದ್ದೀನ್‌ರಿಗೂ ಮಾಡೂರ್ ಯೂಸುಫ್‌ನಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ಯೂಸುಫ್‌ಗೆ ಯಾವುದೇ ಸಹಚ ರರೂ ಇಲ್ಲ. ಈಗವರು ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿರುವುದಿಲ್ಲ.
ಯೂಸುಫ್ ಸಹೋದರಿ ಮಾಡೂರು, ಕೋಟೆಕಾರು

ನಮ್ಮ ವ್ಯವಸ್ಥೆಯೇ ನಕ್ಸಲರನ್ನು ಸೃಷ್ಟಿಸುತ್ತಿದೆ!
ಇತ್ತೀಚೆಗೆ ಧಾರ್ಮಿಕ ಗುರು ರವಿಶಂಕರ್ ಅವರು, ‘ಸರ್ಕಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿ ಸುತ್ತಿವೆ’ ಎನ್ನುವ ಹೇಳಿಕೆ ನೀಡಿದ್ದರು. ಈ ಸುದ್ದಿ ಒಂದು ಹಂತಕ್ಕೆ ವಿವಾದವನ್ನೂ ಹುಟ್ಟು ಹಾಕಿತ್ತು. ಆದರೆ ಸರ್ಕಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿವೆ ಎನ್ನುವುದಕ್ಕಿಂತ ನಮ್ಮ ವ್ಯವಸ್ಥೆಯೇ ನಕ್ಸಲರನ್ನು ಸೃಷ್ಟಿಸುತ್ತಿದೆ ಎಂದರೆ ಖಂಡಿತಾ ತಪ್ಪಿಲ್ಲ. ನಮ್ಮ ಸರ್ಕಾರಿ ಶಾಲೆಗಳಿಗೆ ಒಬ್ಬ ಉತ್ತಮ ವಿದ್ಯಾ ರ್ಥಿಯನ್ನೂ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಹೀಗಿರು ವಾಗ ಎಡಪಂಥೀಯ ಧೋರಣೆಗಳನ್ನೇ ತಮ್ಮ ಜೀವಾಳ ಅಂದುಕೊಂಡಿರುವ ನಕ್ಸಲರನ್ನು ಸೃಷ್ಟಿ ಸಲು ಹೇಗೆ ಸಾಧ್ಯ? ಶಾಲೆಯ ಪಠ್ಯ ಪುಸ್ತಕಗ ಳಲ್ಲಿನ ವಿಚಾರಗಳನ್ನೇ ನಮ್ಮ ಇಂದಿನ ಯುವ ಜನಾಂಗ ಕಲಿಯಲು ಅತ್ತಿತ್ತ ನೋಡುವಾಗ ನಕ್ಸ ಲರ ಚಿತ್ರ-ವಿಚಿತ್ರ ಧೋರಣೆಗಳನ್ನು ಕಲಿಯುತ್ತಾ ರೆಯೇ? ಖಂಡಿತಾ ಇಲ್ಲ.
ಸರ್ಕಾರಿ ಶಾಲೆಗಳು ನಕ್ಸಲರನ್ನು ಸೃಷ್ಟಿಸುತ್ತಿದೆ ಎನ್ನುವ ಮೊದಲು ಧಾರ್ಮಿಕ ಮುಖಂಡರು ನಮ್ಮ ವ್ಯವಸ್ಥೆಯನ್ನು ತಿದ್ದುವ ಕೆಲಸ ಮಾಡಲಿ. ಶಿಕ್ಷಣ ವನ್ನು ಮುಗಿಸಿ ಕೆಲಸಕ್ಕಾಗಿ ಅಲೆಯುವ ಇಂದಿನ ಯುವ ಸಮುದಾಯವನ್ನು ಇನ್ನಿಲ್ಲದಂತೆ ಸತಾ ಯಿಸುವ ವಿಚಿತ್ರ ಮನೋಸ್ಥಿತಿಯಿಂದ ಸರಕಾರ ಹೊರಬರಲಿ. ಆಗ ಸ್ವತಃ ರವಿಶಂಕರ್ ಎಂಬ ಧಾರ್ಮಿಕ ಮುಖಂಡರಿಗೆ ನಕ್ಸಲರನ್ನು ಸೃಷ್ಟಿಸುತ್ತಿ ರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬ ಹುದು. ಬಹುಶಃ ಇವರು ಖಾಸಗಿ ಶಿಕ್ಷಣ ಸಂಸ್ಥೆ ಗಳತ್ತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ರೀತಿಯ ಹೇಳಿಕೆ ನೀಡಿರಲೂಬಹುದು. ಯಾವುದೇ ಉದ್ದೇಶವಿಲ್ಲದೆ ಇವರಿಂದಲೂ ಈ ರೀತಿಯ ಹೇಳಿಕೆ ಬರಲು ಸಾಧ್ಯವಿಲ್ಲ. ಇಂದಿನ ಯುವಕರು ನಕ್ಸಲರಾಗುತ್ತಿದ್ದಾರೆ ಎನ್ನುವ ಮೊದಲು ಇವರು ಯಾವ ಕಾರಣಕ್ಕಾಗಿ ನಕ್ಸಲರಾಗುತ್ತಿದ್ದಾರೆ ಎನ್ನುವ ಬಗ್ಗೆ ಚಿಂತನೆ ನಡೆಸುವುದು ಒಳ್ಳೆಯದಲ್ಲವೇ?
 ನೊಂದ ವಿದ್ಯಾರ್ಥಿ, ಮಂಗಳೂರು

ಸೇತುವೆಗೆ ತಡೆಗೋಡೆ ನಿರ್ಮಿಸಿ
ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ೫೦ ಕಿ.ಮೀ. ಧಾರಿಯ ಮಧ್ಯೆ ಮೂರ‍್ನಾ ಲ್ಕು ಸಣ್ಣಪುಟ್ಟ ಸೇತುವೆಗಳು ಸಿಗುತ್ತವೆ. ಆದರೆ ಈ ಸೇತುವೆಗಳಿಗೆ ತಡೆಗೋಡೆ ಮಾತ್ರ ಇನ್ನೂ ನಿರ್ಮಿಸಿಲ್ಲ. ಇದು ಹೊಸತಾಗಿ ಈ ರಸ್ತೆ ಯಲ್ಲಿ ವಾಹನ ಚಲಾಯಿಸುವವರಿಗೆ ಅಪಾಯ ತಂದೊಡ್ಡು ವುದಂತೂ ಗ್ಯಾರಂಟಿ. ಅಲ್ಲದೇ ಈ ರಸ್ತೆ ತಿರುವು-ಮುರುವಾಗಿದ್ದು, ರಾತ್ರಿಯ ವೇಳೆಯಲ್ಲಿ ಸಂಚಾರ ನಡೆಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಸೇತುವೆ ಯಿಂದ ವಾಹನಗಳು ಕೆಳಕ್ಕೆ ಉರುಳಿ ಬೀಳುವುದು ನಿಶ್ಚಿತ. ಇದೇ ಪರಿಸರದ ವರು, ಇಲ್ಲವೇ ಇದಕ್ಕೂ ಮೊದಲು ಒಂದೆರೆಡು ಬಾರಿ ಇಲ್ಲಿ ವಾಹನದಲ್ಲಿ ಸಂಚಾರ ನಡೆಸಿದವರಿಗೆ ಸೇತುವೆಯಿಂದ ತೊಂದರೆ ಯಾಗುವ ಸಾಧ್ಯತೆಯಿಲ್ಲ. ಆದರೆ ಹೊಸತಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿನ ೫೦ ಕಿ.ಮೀ. ರಸ್ತೆ ಉತ್ತಮವಾಗಿರುವಾಗ, ಇಲ್ಲಿನ ಸೇತುವೆಗೆ ತಡೆ ಗೋಡೆ ನಿರ್ಮಿಸಲು ಮಾತ್ರ ಸಂಬಂಧಪಟ್ಟವರು ಗಮನಹರಿಸಿಲ್ಲ ಯಾಕೆ? ಇನ್ನಾದರೂ ಸಂಬಂಧ ಪಟ್ಟವರು ಗಮನಿಸಲಿ.
 ಲೊಕೇಶ್ ಕುಲಾಲ್, ಸುರತ್ಕಲ್

ಚಪಾತಿ, ಪರೋಟ ಬೆಲೆ ಇಳಿಸಿ

Posted by JAYAKIRANA Kirana on | 0 comments | Leave a comment...


ರಾಜ್ಯ ಸರಕಾರ ಈ ಬಾರಿಯ ಬಜೆ ಟ್‌ನಲ್ಲಿ ಆಹಾರ ವಸ್ತುಗಳಾದ ಚಪಾತಿ ಮತ್ತು ಪರೋಟದ ಬೆಲೆಯನ್ನು ಇಳಿಕೆ ಮಾಡಿದೆ. ಆದರೆ ಎಲ್ಲಿಯೂ ಕ್ಯಾಂಟೀನ್, ಹೋಟೆಲ್‌ಗಳಲ್ಲಿ ಇವುಗಳ ಬೆಲೆ ಇಳಿಕೆ ಯಾಗಿರುವುದು ಮಾತ್ರ ಕಂಡುಬರುತ್ತಿಲ್ಲ. ಪ್ಲೇಟ್ ಒಂದಕ್ಕೆ ದುಬಾರಿ ಬೆಲೆಯನ್ನು ಪಡೆ ಯಲಾಗುತ್ತದೆ. ಹೀಗಾದರೆ ಬಜೆಟ್‌ನಲ್ಲಿ ಪರೋಟ ಬೆಲೆ ಇಳಿಸಿರುವುದು ಜಾರಿಯಾ ಗುವುದು ಎಲ್ಲಿ? ಇಂಥ ಅದೆಷ್ಟೋ ಬೆಲೆ ಇಳಿಕೆಗಳು ನಿಜಜೀವನದಲ್ಲಿ ಜಾರಿಯಾಗು ವುದಿಲ್ಲ. ಬಜೆಟ್‌ನಲ್ಲಿ ಘೋಷಣೆಯಾ ಗಿದ್ದು ಕೇವಲ ಬಾಯಿಮಾತಿಗೆ ಮಾತ್ರ ಎನ್ನು ವುದಕ್ಕೆ ಇದೇ ಸ್ಪಷ್ಟ ಉದಾಹರಣೆಯಾ ಗಿದೆ. ಬಶೀರ್, ಮಂಗಳೂರು

ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ?
ಇತ್ತೀಚಿನ ದಿನಗಳಲ್ಲಿ ರಾಜ ಕೀಯ ವಿದ್ಯಮಾನಗಳಂತೆಯೇ ಶಿಕ್ಷಣ ಕ್ಷೇತ್ರದ ಕೆಲವೊಂದು ಘಟ ನೆಗಳು ಕೂಡಾ ಆತಂಕ ಹುಟ್ಟಿ ಸುತ್ತಿವೆ. ದಿನನಿತ್ಯ ಪತ್ರಿಕೆಗಳಲ್ಲಿನ ವರದಿಗಳಲ್ಲಿ ಒಂದಾದರೂ ಶಿಕ್ಷಣ ಕ್ಷೇತ್ರದ ಕೆಟ್ಟ ವಿದ್ಯಮಾನಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಕೆಲವು ಕಾಲೇಜ್‌ಗಳಲ್ಲಿ ಶಿಕ್ಷಕರೇ ಅನೈತಿ ಕತೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾ ರ್ಥಿಗಳೇ ಸಂಘಟನೆ ಕಟ್ಟಿಕೊಂಡು ಬೀದಿ ಬೀದಿಯಲ್ಲಿ ಕಚ್ಚಾಡಿಕೊ ಳ್ಳುತ್ತಿದ್ದಾರೆ. ಇವಿಷ್ಟು ಕಾಲೇಜುಗಳ, ಶಾಲೆ ಗಳ ಹಣೆಬರಹವಾದರೆ ಇದೀಗ ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನಾಪತ್ರಿಕೆಗಳೇ ಬಹಿರಂಗ ಗೊಂಡಿವೆ. ಒಂದು ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ತನ್ನದೇ ಆದ ಘನತೆ, ಗೌರವವನ್ನು ಉಳಿಸಿ ಕೊಂಡಿತ್ತು. ಭಾರತದ ಕೆಲ ವಿಶ್ವವಿದ್ಯಾನಿಲ ಯಗಳಲ್ಲಿ ಶೈಕ್ಷಣಿಕ ಡಿಗ್ರಿಗಳನ್ನು ಪಡೆಯಲು ವಿದೇಶಿ ವಿದ್ಯಾರ್ಥಿಗಳು ಕೂಡ ಉತ್ಸು ಕರಾಗಿದ್ದರು. ಆದರೆ ಈಗೀಗ ಕಾಲವೇ ಬದಲಾದಂತೆ ಕಾಣುತ್ತಿದೆ. ಅದ ರಲ್ಲೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲೆ-ಕಾಲೇಜ್‌ಗಳನ್ನು ನಡೆಸಲು ಆರಂಭಿಸಿದ ನಂತರವಂತೂ ಶಿಕ್ಷಣ ಎನ್ನುವುದು ವ್ಯಾಪಾರದ ಸರಕಿನಂ ತಾಗಿದೆ. ಮಕ್ಕಳ ಭವಿಷ್ಯ, ಪ್ರತಿಭೆ ಎಲ್ಲವೂ ಹಣದ ಮುಂದೆ ನಗಣ್ಯ ವಾಗಿದೆ. ಹೀಗಿರುವಾಗ ನಮ್ಮ ಶಿಕ್ಷಣ ಪದ್ಧತಿ ಸಾಗುತ್ತಿರುವ ಹಾದಿಯ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಇಲ್ಲ ವಾದಲ್ಲಿ ಮುಂದಿನ ಪೀಳಿಗೆ ವಿದ್ಯಾ ಭ್ಯಾಸಕ್ಕಾಗಿ ಅನಿವಾರ್ಯ ಕಾರಣಗಳಿಂದ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಅವಲಂಭಿ ಸುವ ದಿನ ದೂರವಿಲ್ಲ.
 ಇಸ್ಮಾಯಿಲ್ ಆಲಿ, ತೊಕ್ಕೊಟ್ಟು

ವಿಚ್ಚೇದನ ಕೇಳುವ ಹಕ್ಕು ಗಂಡಿಗಿಲ್ಲವೇ?
ಒಂದು ಸಂಸಾರ ಎಂದ ಮೇಲ ಅಲ್ಲಿ ತರ‍್ಲೆ ತಾಪತ್ರಯಗಳು ಸಾಮಾನ್ಯ. ಈ ವೇಳೆ ಅತಿಯಾದರೆ ವಿಚ್ಚೇದನವೂ ಸಾಮಾನ್ಯ. ಆದರೆ ಇತ್ತೀಚೆಗಷ್ಟೇ ಹಿಂದೂ ವಿವಾಹ ಕಾಯ್ದೆಯ ತಿದ್ದುಪಡಿಗೆ ಕೇಂದ್ರ ಸರ್ಕಾರ ಅಂಗೀಕಾರ ನೀಡಿತ್ತು. ಈ ಕಾಯ್ದೆಯ ಪ್ರಕಾರ ಗಂಡಿನ ಭಾವ ನೆಗಳನ್ನು ತಿರಸ್ಕರಿಸಲಾಗಿದೆ. ಹೆಣ್ಣು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಗಂಡು ತಿರಸ್ಕರಿಸುವಂತಿಲ್ಲ. ಆದರೆ ಗಂಡು ಅರ್ಜಿ ಸಲ್ಲಿಸಿದರೆ ಹೆಣ್ಣು ತಿರಸ್ಕರಿಸಬಹುದು. ಈ ವಿಧೇಯಕ ಎಷ್ಟು ಸರಿ? ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಸಂಬಂಧವೇ ಅರ್ಥ ಕಳೆದುಕೊಳ್ಳುತ್ತಿದೆ. ಹೀಗಿರುವಾಗ ಇರುವ ನಿಯಮಗಳನ್ನೇ ಇನ್ನಷ್ಟು ತಿದ್ದಿ ಕುಟುಂಬ ಒಡೆಯುವ ವಿಧೇಯಕಗಳನ್ನು ಜಾರಿಗೆ ತರುವುದು ಸರಿಯಲ್ಲ. ಅದರಲ್ಲೂ ಕೇವಲ ಹೆಣ್ಣಿನ ಭಾವನೆಯೊಂದನ್ನೇ ಈ ಕಾಯ್ದೆ ಪುರಸ್ಕರಿಸುವುದು ಗಂಡಿನ ಭಾವನೆ ಗಳಿಗೆ ಬೆಲೆ ಇಲ್ಲದಂ ತಾಗಿದೆ. ಸಂಸಾರ ಎಂದ ಮೇಲೆ ಇಬ್ಬರೂ ಹೊಂದಾಣಿಕೆಯಿಂದಿರಬೇಕು. ಹೀಗಿರುವಾಗ ಒಂದೇ ದೃಷ್ಟಿಕೋನದಿಂದ ತನಗೆ ಅನ್ಯಾಯವಾಗಿದೆ ಎಂದು ಮಹಿಳೆ ಸಲ್ಲಿಸುವ ವಿಚ್ಚೇದನದ ಅರ್ಜಿಯನ್ನು ಮಾತ್ರ ಪುರಸ್ಕರಿಸುವುದು ಸರಿಯಲ್ಲ. ಕೆಲ ಸಂಸಾರದಲ್ಲಿ ಜಗಳ ನಡೆಯಲು ಮಹಿಳೆಯರೇ ಪ್ರಮುಖ ಕಾರಣವಾಗಿರುತ್ತಾರೆ. ಈ ವೇಳೆ ಗಂಡಿನ ಭಾವನೆಗಳಿಗೆ ಈ ವಿಧೇಯಕದ ಪ್ರಕಾರ ಬೆಲೆಯೇ ಇರುವುದಿಲ್ಲ. ಹಾಗಾಗಿ ಇನ್ನಾದರೂ ಇಂತಹ ಕಾಯ್ದೆಗಳನ್ನು ಜಾರಿಗೆ ತರುವುದು ಬೇಡ. ಈ ವಿಚಾರದಲ್ಲಿ ಗಂಡು-ಹೆಣ್ಣು ಇಬ್ಬರ ಭಾವನೆಗಳನ್ನೂ ಪುರ ಸ್ಕರಿಸುವಂತಾಗಲಿ.
 ಗಜಾನನ ಆರ್.ಕೆ, ಬೆಳ್ತಂಗಡಿ

ಬಿಲ್ಲವರೇ, ನಿಮಗೆ ಸ್ವಾಭಿಮಾನ ಕೆರಳುವುದು ಯಾವಾಗ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸೋಲು ಬಿಲ್ಲವ ಸಮುದಾಯವನ್ನು ಎಚ್ಚರಿಸಬೇಕಿದೆ. ಆರಂಭದಲ್ಲೇ ಜಾತ್ಯ ತೀತ, ಪ್ರಗತಿಪರರು ಎಂದು ಹೇಳಿ ಕೊಳ್ಳುವವರು ಸುನಿಲ್ ತಂದೆ ಬ್ರಾಹ್ಮಣ, ಆತ ಬಿಲ್ಲವನಲ್ಲ ಎಂದು ಹೇಳುವ ಮೂಲಕ ನೀಚ ಜಾತಿ ರಾಜಕಾರ ಣಕ್ಕೆ ನಾಂದಿ ಹಾಡಿದ್ದರು. ಹಿಂದೂ ಸಂಘ ಟನೆಗಳಲ್ಲಿ ಸಕ್ರಿಯರಾಗಿ ತೊಡಗಿ ಕೊಂಡಿದ್ದ ಸುನಿಲ್ ಆರಂಭದಿಂ ದಲೂ ಬಿಲ್ಲವ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದವರು. ಹೀಗಿರು ವಾಗ ಚುನಾವಣೆಯ ಸಂದರ್ಭ ದಲ್ಲಿ ಬಿಲ್ಲವರ ವೋಟು ಹಂಚಿ ಹೋಗುವಂತೆ ಮಾಡಲು ಸುನಿಲ್ ಬ್ರಾಹ್ಮಣ ಎಂದು ಅಪಪ್ರಚಾರ ಮಾಡ ಲಾಯಿತು. ಬಿಲ್ಲವರ ಏಳಿಗೆಯ ಬಗ್ಗೆ ಯೋಚಿ ಸುವ ಅಥವಾ ಹಾಗೆಂದು ತನ್ನನ್ನು ತಾನು ಕರೆಸಿಕೊಳ್ಳುವ ಬಿಲ್ಲವ ಮಹಾಮಂಡಲದ ನೀತಿಯ ಬಗ್ಗೆ ಯೋಚಿಸುವಾಗಲೇ ಬೇಸರ ವಾಗುತ್ತದೆ. ಇವರಿಗೆ ಕಾಂಗ್ರೆಸ್‌ನಲ್ಲಿ ಯಾರಾ ದರೂ ಬಿಲ್ಲವರು ಚುನಾವಣೆಗೆ ನಿಂತರೆ ಮಾತ್ರ ‘ಓಹೋ... ಇಂಥವ ಬಿಲ್ಲವ ಸಮು ದಾಯದವ, ಆತನನ್ನು ಗೆಲ್ಲಿಸಿ, ನಮ್ಮವರನ್ನು ಮೇಲಕ್ಕೆ ತನ್ನಿ’ ಎಂದು ಚುನಾವಣೆಯ ಸಂದ ರ್ಭದಲ್ಲಿ ಅಹೋ ರಾತ್ರಿ ಪ್ರಚಾರ ಮಾಡು ತ್ತಾರೆ. ಬೇರೆ ಪಕ್ಷದಲ್ಲಿ ಬಿಲ್ಲವ ಸಮುದಾಯದ ವ್ಯಕ್ತಿ ನಿಂತರೆ ಜಾತಿ ಸಂಘಗಳಿಗೆ ಆತ ಕಾಣು ವುದೇ ಇಲ್ಲ. ಇದಕ್ಕೆ ಕಾರಣ ಕೆಲವು ಬಿಲ್ಲವ ಮುಖಂಡರ ಗಾಂಧಿ ಕುಟುಂಬದ ಮೇಲಿನ ನಿಷ್ಠೆ. ಇಂದಿಗೂ ಸೋನಿಯಾ ಗಾಂಧಿಗಾಗಿ ಮಡೆಸ್ನಾನ ಮಾಡುವ ಪೂಜಾರಿ ಅವರು, ಬಿಲ್ಲವರ ಆತ್ಮಗೌರವದ ಬಗ್ಗೆ ಮಾತನಾಡು ವುದೇ ಇಲ್ಲ. ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾ ಣದ ಬಂಟ ಮುಖಂಡರಿದ್ದಾರೆ. ಅವರು ಪೂಜಾರಿಯವರಂತೆ ಹೇಳಿಕೆಗಳನ್ನು ಕೊಟ್ಟು ಕೀಳಾಗುತ್ತಾರೆಯೇ?
 ಪ್ರದೀಪ್ ಪೂಜಾರಿ, ಮುಲ್ಕಿ

27-03-2012

Posted by JAYAKIRANA Kirana on | 0 comments | Leave a comment...


ಇದೇನಾ ಪ್ರೀತಿ?
ಯಾರಾದರೂ ನಿಮ್ಮನ್ನು ಅಳುವಂತೆ ಮಾಡಿದರೆ, ನೀವು ಅವರನ್ನು ಎಷ್ಟು ಪ್ರೀತಿ ಮಾಡ್ತೀರಾ ಅಂತ ತಿಳಿಯುತ್ತೆ. ಯಾರಾದರೂ ನಿಮಗಾಗಿ ಅತ್ತರೆ ಅವರು ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಎಂಬುದು ತಿಳಿಯುತ್ತೆ.

ನಂಬಿಕೆ
ಒಂದು ಹುಡುಗಿ ಲವ್ ಮಾಡಬೇಕಾದರೆ ನೂರು ಸಲ ಕೇಳ್ತಾಳೆ. ನನಗೆ ಮೋಸ ಮಾಡಲ್ಲ ತಾನೇ? ಅಂತ. ಆದರೆ ಹುಡುಗ ಒಂದು ಸಲಾನೂ ಹಾಗೆ ಕೇಳೋದಿಲ್ಲ. ಯಾಕೆ ಗೊತ್ತಾ? ಅದೇ ಕಣ್ರೀ ನಂಬಿಕೆ

ಪುಟಗಳೇ ಇಲ್ಲ!
ಒಬ್ಬ ಕವಿ ಹೇಳ್ತಾನೆ ‘ಜೀವನ ಅನ್ನೋದು ಒಂದು ಕಾದಂಬರಿ ಇದ್ದ ಹಾಗೆ, ಪ್ರತೀ ದಿನವೂ ಒಂದು ಪುಟದಂತೆ. ಹಾಗಾಗಿ ಒಂದೊಂದು ಪುಟ ತುಂಬಾ ನೋವು ತರಿಸಿದರೂ ಕೆಲವೊಂದು ಪುಟಗಳು ಸಂತೋಷ ಕೊಟ್ಟೇ ಕೊಡುತ್ತೆ’ ಅಂತ. ಆದರೆ ಅವನಿಗೆ ಏನ್ ಗೊತ್ತು ‘ಕೆಲವರ ಜೀವನದ ಪುಟಗಳೇ ಅಳಿಸಿಹೋಗಿದೆ’ ಅಂತ.

ಸೀಕ್ರೆಟ್
ಜೀವನದ ಕೆಲವೊಂದು ಸೀಕ್ರೆಟ್‌ಗಳು
‘ಎಲ್ಲರೊಂದಿಗೂ ಬುದ್ದಿವಂತರಂತೆ ಮತ್ತು ಶ್ರೀಮಂತರಂತೆ ವರ್ತಿಸಿ’ ಆದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತ್ರ ಬಡವನಂತೆ ಮತ್ತು ಜವಬ್ದಾರಿ ಇಲ್ಲದವರಂತೆ ವರ್ತಿಸಿ. ಆಗಲೇ ಪ್ರೀತಿ ಅನ್ನೋದು ಸ್ವಾತಂತ್ರವಾಗೋದು.

ಐಡಿಯಾ
ಹುಡುಗಿ: ನನ್ನ ಮೊಬೈಲ್ ಮನೆಯಲ್ಲಿ ಅಮ್ಮನ ಹತ್ತಿರ ಇರುತ್ತೆ. ಹುಡುಗ: ನಾನು ಕಾಲ್ ಮಾಡಿದಾಗ ಅಮ್ಮ ತೆಗೆದರೆ?
ಹುಡುಗಿ: ತೆಗೆಯುವುದಿಲ್ಲ, ಯಾಕೆಂದರೆ ನಿನ್ನ ನಂಬರ್ ‘ಬ್ಯಾಟರಿ ಲೋ’ ಅಂತ ಸೇವ್ ಮಾಡಿದ್ದೇನೆ. ಆಗ ಅಮ್ಮ ನನ್ನನ್ನು ಕರೆದು ಚಾರ್ಜ್‌ಗೆ ಇಡಲಿಕ್ಕೆ ಹೇಳ್ತಾರೆ!ವಾಟ್ ಆನ್ ಐಡಿಯಾ

ಜಗತ್ತು
ಕೆಲವರಿಗೆ ಪ್ರೀತಿ ಅಂದ್ರೆ ಅನುಮಾನ, ಇನ್ನು ಕೆಲವರಿಗೆ ಇನ್ನಿಲ್ಲದ ಸಂಬಂಧ, ಮತ್ತೂ ಕೆಲವರಿಗೆ ಲೋಕಲ್ ಸೆಂಟಿಮೆಂಟ್, ಆದರೆ ಕೆಲವೊಂದು ಮುಗ್ಧ ಮನಸ್ಸುಗಳಿಗೆ ಅದೊಂದು ಪುಟ್ಟ ಜಗತ್ತು.

ನಮ್ಮ ಭಾಷೆ ಸೊರಗಿ ಹೋಗಿರುವುದಾದರೂ ಎಲ್ಲಿ?

Posted by JAYAKIRANA Kirana on | 0 comments | Leave a comment...



ನಮ್ಮ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸುವ ಹೊಣೆ ನಿಮ್ಮ ಮೇಲಿದೆ. ಆದ ಕಾರಣ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ಮಾತಾಡುವುದು ಅವಮಾನಕರ ಎಂಬುದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ಇಂಗ್ಲಿಷ್ ಬೆರೆಸಿ ಮಾತಾಡಿದರೆ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂಬ ಹುಸಿ ನಂಬಿಕೆಯನ್ನು ಬಿಡಿ

ಪ್ರಜಾ, ಮಂಗಳೂರು
ಇದು ಕನ್ನಡ ನಾಡು, ಕರ್ನಾಟಕ. ಇಲ್ಲಿನ ಜನ ಕನ್ನಡ ಭಾಷೆ ಮಾತಾಡುತ್ತಾರೆ ಎಂದು ಸಾಮಾನ್ಯ eನ ಹೇಳುತ್ತದೆ. ಇಲ್ಲಿ ಇತರೇ ಭಾಷೆ ಮಾತಾಡುವವರೂ ಇದ್ದಾರೆ ನಿಜ. ಆದರೆ ನಾವು ಕನ್ನಡ ಭಾಷೆ ಮಾತನಾಡುವವವರ ಬಗ್ಗೆ ಮಾತ್ರ ಒಂದಿಷ್ಟು ಚರ್ಚಿಸೋಣವೇ?
‘ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು, ಆಡಿದರೆ ಕನ್ನಡ ಮಾತಾಡಬೇಕು’ ಎಂದು ಹಾಡಿದರೆ ಸಾಲದು. ಅದನ್ನು ಎಷ್ಟರ ಮಟ್ಟಿಗೆ ನಾವು ಕಾರ್ಯಗತಗೊಳಿಸುತ್ತೇವೆ ಎಂಬುದು ಮುಖ್ಯ ವಾಗಿದೆ. ನಿಮಗೆ ಇಂಗ್ಲಿಷ್ ಕಲಿಯಬೇಕೇ? ಹಾಗಿದ್ದರೆ ಕನ್ನಡ ವಾಹಿನಿಯನ್ನು ನೋಡಿ, ಏಕೆಂದರೆ ಕನ್ನಡವಾಹಿನಿಯಲ್ಲಿ ಬರುವ ಅರ್ಥದಷ್ಟು ಕಾರ್ಯಕ್ರಮಗಳು ಇಂಗ್ಲಿಷ್ ಮಿಶ್ರಿತ ಭಾಷೆಯ ಲ್ಲಿದೆ ಎಂದರೆ ತಪ್ಪಾಗದು. ಕನ್ನಡವಾಹಿನಿಗಳಲ್ಲಿ ಬರುವ ಕಾರ್ಯ ಕ್ರಮಗಳ ನಿರ್ಮಾಪಕರು ಮತ್ತು ನಿರೂಪಕಿಯರು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬರುವ ಅತಿಥಿಗಳು ಆಡು ಭಾಷೆಯ ಬಗ್ಗೆ ಏನೇನೋ ಮಾತಾಡುತ್ತಾರೆ. ಅವರ ಕನ್ನಡ ಭಾಷೆಯ ಬಗ್ಗೆ ಹೇಳಬೇಕು ಎಂದರೆ ಅದರಷ್ಟು ಆತಂಕಕಾರಿ ಹಾಗೂ ಗಂಭೀರವಾದ ವಿಷಯ ಮತ್ತೊಂದಿಲ್ಲ.
ಅದೇ ರೀತಿ ಯಾವುದೇ ವೇದಿಕೆಯ ಕಾರ್ಯಕ್ರಮವನ್ನು ತೆಗೆದುಕೊಳ್ಳಿ. ಕಾರ್ಯಕ್ರಮ ಶುರುವಾದಾಗ, ಸ್ವಾಗತ ಕೋರು ವಾಗ, ಅವರಾಡುವ ಭಾಷೆ ಕನ್ನಡವೇ ಎಂದು ವಿಷಾದ ಪಡ ಬೇಕಾಗುತ್ತದೆ. ಸ್ವಾಗತಕ್ಕೆ ವೆಲ್ಕಮ್, ತೀರ್ಪುಗಾರರಿಗೆ ಜಡ್ಜಸ್, ಧನ್ಯವಾದಕ್ಕೆ ಬದಲಾಗಿ ಥ್ಯಾಂಕ್ಸ್ ಇವಿಷ್ಟೇ ಆಗಿದ್ದರೆ ಪರ ವಾಗಿರಲಿಲ್ಲ. ಆದರೆ ಅವರ ಮಾತಿನಲ್ಲಿ ಮುಕ್ಕಾಲುಪಾಲು ಇಂಗ್ಲಿಷ್ ಸೇರಿಕೊಂಡಿದ್ದು ಕಾಲು ಭಾಗ ಮಾತ್ರ ಕನ್ನಡವಾ ಗಿರುತ್ತದೆ. ಜೊತೆಗೆ ನಗೆಪಾಟಲು ಎಂದರೆ ಜಾಹೀರಾತಿನ ಬಿಡುವಿಗೆ ‘ಟೇಕ್ ಎ ಬ್ರೇಕ್’ ಎಂದು ನೋಡುಗರಿಗೆ ಹೇಳಿ ಬಿಡುತ್ತಾರೆ.
ಒಂದು ಆಶ್ಚರ್ಯಕರವಾದ ಸಂಗತಿ ಎಂದರೆ ಹೆಚ್ಚು ಕಲಿತಿರುವ ಗಂಡಸರು ಸಂದರ್ಶನಕ್ಕೆ ಬಂದಾಗ ಅವರುಗಳು ಗೃಹಿಣಿಯರು ಬೆರೆಸಿ ಮಾತಾಡುವಷ್ಟು ಇಂಗ್ಲಿಷನ್ನು ತಮ್ಮ ಭಾಷೆಯಲ್ಲಿ ಬೆರೆಸುವುದಿಲ್ಲ. ಆದರೆ ಇತ್ತೀಚೆಗೆ ಪ್ರಸಾರವಾ ಗುವ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಜ್ಯೋತಿಷಿಗಳು ಬಹಳ ಆತಂಕಕಾರಿಯಾಗಿ ಇಂಗ್ಲಿಷ್ ಬೆರೆಸಿ ಮಾತಾಡುತ್ತಾರೆ. ಇನ್ನು ಜನಸಾಮಾನ್ಯರತ್ತ ನೋಡಿದಾಗ ಸರಿಯಾಗಿ ಕನ್ನಡ ಬರೆಯಲು ಬರದವರು ದಿನನಿತ್ಯದ ವ್ಯವಹಾರದಲ್ಲಿ ಇಂಗ್ಲಿಷ್ ಬೆರೆಸದೆ ಮಾತಾಡುವುದೇ ಇಲ್ಲ. ಹೊರನಾಡಿನಲ್ಲಿ ಬೆಳೆಯುವ ಕನ್ನಡ ಮಕ್ಕಳಲ್ಲಿ ಇರುವ ಕನ್ನಡದ ಬಗ್ಗೆ ಅಭಿಮಾನ ಇಲ್ಲೇ ಕರ್ನಾಟ ಕದಲ್ಲಿ ಬೆಳೆಯುವ ಮಕ್ಕಳಲ್ಲಿ ಬರುವುದಿಲ್ಲ. ಇದೊಂದು ವಿಪ ರ್ಯಾಸದ ಸಂಗತಿ ಅಲ್ಲವೇ?
ಅದೇ ರೀತಿ ರಾಜಕಾರಣಿಗಳತ್ತ ಗಮನಿಸಿದಾಗ, ನಮ್ಮ ನೆರೆಯ ತಮಿಳರು ತಮ್ಮ ಮಾತೃಭಾಷೆಯ ಬಗ್ಗೆ ಅಷ್ಟೊಂದು ಅಭಿ ಮಾನ ಇಟ್ಕೊಂಡಿಲ್ಲ. ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿಕೊಂಡಿ ರುವ ಕರುಣಾನಿಧಿ ಅವರು ಎಂತಹ ಪರಿಸ್ಥಿತಿಯಲ್ಲೂ ತಮಿಳು ಬಿಟ್ಟು ಮತ್ತೊಂದು ಭಾಷೆ ಮಾತಾಡುವುದಿಲ್ಲ. ಆದರೆ ಕರ್ನಾ ಟಕದ ರಾಜಕಾರಣಿಗಳತ್ತ ನೋಡಿ, ಅವರಿಗೆ ಕನ್ನಡದಲ್ಲಿ ಒಂದೇ ಒಂದು ವಾಕ್ಯವನ್ನು ಇಂಗ್ಲಿಷ್ ಬೆರೆಸದೇ ಮಾತಾಡಲು ಬರು ವುದೇ ಇಲ್ಲ ಎಂಬುದು ಅತ್ಯಂತ ದುಃಖದ ಸಂಗತಿಯಾಗಿದೆ.
ತಮಿಳರು ಎಲ್ಲೇ ಇರಲಿ ತಮಿಳಿನಲ್ಲಿಯೇ ಮಾತನಾಡು ವುದು. ಮುಂಬೈನ ಮಾತುಂಗ ಮತ್ತು ಚೆಂಬೂರು ಪ್ರದೇಶಗ ಳಲ್ಲಿ ಸುಮಾರು ೪೦-೫೦ ವರ್ಷಗಳಿಂದ ವಾಸಿಸುತ್ತಿರುವ ತಮಿ ಳರು ತಮಿಳು ಬಿಟ್ಟು ಮತ್ತೊಂದು ಭಾಷೆ ಕಲಿತಿಲ್ಲ. ದೂರದ ರ್ಶನ ಮತ್ತು ಆಕಾಶವಾಣಿಗಳು ಒಂದೇ ಇದ್ದಾಗ ಅವುಗಳಲ್ಲಿ ಬರುವ ಹಿಂದಿ ಸಮಾಚಾರದ ವೇಳೆಯಲ್ಲಿ ಮದ್ರಾಸ್‌ನಲ್ಲಿ ತಮಿಳು ಭಾಷೆಯಲ್ಲಿ ಸಮಾಚಾರ ಬರುತ್ತಿತ್ತು ಗೊತ್ತೇ? ಅವರದು ಹೀಗೆ ಅತಿಯಾದ ಭಾಷಾ ಅಭಿಮಾನವಾದರೆ, ಮರಾಠಿಗರು ತಮ್ಮ ಮರಾಠಿಯ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಆದರೆ ಅದನ್ನು ಇತರರ ಮೇಲೆ ಹೇರುವುದಿಲ್ಲ. ಆದರೆ ಹತ್ತಾರು ವರ್ಷ ಇಂಗ್ಲೆಂಡ್, ಅಮೆರಿಕದಲ್ಲಿ ಇದ್ದು ಬಂದವರೂ ಕೂಡಾ ನಿರ ರ್ಗಳವಾಗಿ ಇಂಗ್ಲಿಷ್ ಬೆರಸದೆ ಮರಾಠಿಯಲ್ಲಿ ಮಾತಾಡಬ ಲ್ಲರು. ಮರಾಠಿ ಬರದೇ ಇರುವವರ ಬಳಿ ಹಿಂದಿಯಲ್ಲೋ, ಇಂಗ್ಲಿಷ್‌ನಲ್ಲೋ ಸಂಭಾಷಿಸುತ್ತಾರೆ. ಇನ್ನು ಹಿಂದಿ ಭಾಷಿಗ ರಲ್ಲೂ ಕೊಂಚ ದುರಭಿಮಾನ ಕಾಣಬಹುದು. ಹಿಂದಿ ಭಾಷಾ ಪ್ರದೇಶಗಳಲ್ಲಿ ಸರಕಾರದ ಎಲ್ಲಾ ಪತ್ರಗಳೂ, ಟೆಂಡರ್‌ಗಳು, ಫಾರಮ್ಮುಗಳು ಹಿಂದಿಯಲ್ಲೇ ಇರುತ್ತದೆ. ಮಹಾರಾಷ್ಟ್ರದಲ್ಲೂ ಹೀಗೆಯೇ ಇದೆ. ಇದು ಜನಸಾಮಾನ್ಯನಿಗೆ ತಿಳಿಯಲಿ ಎಂದು ಇರಲೂಬಹುದು. ಆದರೆ ಕರ್ನಾಟಕದಲ್ಲಿ ಮಾತ್ರ ಆ ತತ್ವವನ್ನು ಅನುಸರಿಸಿದರೆ ಇತರ ಭಾಷೆಯವರು ಬಿಡಿ, ಕನ್ನಡದವರೇ ಮೊದಲು ಅದನ್ನು ವಿರೋಧಿಸುತ್ತಾರೆ. ಇಂಗ್ಲಿಷ್ ಅನ್ನು ಅತೀ ಹೆಚ್ಚು ಬೆರೆಸಿ ಮಾತನಾಡುವವರು ನಾವು ಕನ್ನಡದವರು ಮಾತ್ರ ಎಂದು ಖಡಾಖಂಡಿತವಾಗಿ ಹೇಳಬಹುದು. ಆದ್ದರಿಂದ ಕನ್ನ ಡಿಗರೇ ನಿಮ್ಮಲ್ಲಿ ಕಳಕಳಿಯ ವಿನಂತಿಯೇನೆಂದರೆ, ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸುವ ಹೊಣೆ ನಿಮ್ಮ ಮೇಲಿದೆ. ಆದಕಾರಣ ಕನ್ನಡದಲ್ಲಿ ಮಾತಾಡಿ, ಕನ್ನಡದಲ್ಲಿ ಮಾತಾ ಡುವುದು ಅವಮಾನಕರ ಎಂಬುದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ಇಂಗ್ಲಿಷ್ ಬೆರೆಸಿ ಮಾತಾಡಿದರೆ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ ಎಂಬ ಹುಸಿ ನಂಬಿಕೆಯನ್ನು ಬಿಡಿ. ಆದಷ್ಟು ಇಂಗ್ಲಿಷ್ ಪದ ಬಳಸುವುದನ್ನು ಬಿಡಿ. ಕನ್ನಡಿಗರೇ, ನೀವು ಮಾತಾಡದೆ ಇದ್ದರೆ ಕನ್ನಡ ಭಾಷೆ ನಶಿಸಿ ಹೋಗುತ್ತಿದೆ, ಅದನ್ನು ಉಳಿಸಿ. ಸಿರಿಗನ್ನಡವನ್ನು ಗಲ್ಲಿಗೆ ಹಾಕಬೇಡಿ ಗೆಲ್ಲಿಸಿ, ಕನ್ನಡ ಕಸ್ತೂರಿ ಎಂದು ಅದನ್ನು ಡಬ್ಬಿಯಲ್ಲಿ ಇಡಬೇಡಿ, ಅದನ್ನು ಎಲ್ಲಡೆ ಪಸರಿಸಿ.

27-03-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಮೆಕ್ಯಾನಿಕ್, ಹೆಲ್ಪರ್ ಬೇಕು ೯೮೮೦೮೬೪೦೮೯.
ಕಾವೂರ್ ಮತ್ತು ಪಡುಬಿದ್ರೆ : ಕನ್ಸ್ಟ್ರಕ್ಷನ್ ಸೈಟ್‌ಗೆ ಸೂಪರ್‌ವೈಸರ್, ಕೂಲಿ ಕೆಲಸಕ್ಕೆ, ಸುಪರ್‌ವೈಸರ್ ಬೇಕು ೯೬೨೦೪೭೮೪೮೨.
ಉರ್ವಸ್ಟೋರ್ : ಶೋರೂಂಗೆ ಜನ ಬೇಕು ೯೯೮೦೩೪೧೦೩೪.
ಮಂಗಳೂರು : ಕಂಪ್ಯೂಟರ್‌ಬಲ್ಲ ಹುಡುಗಿಯರ ಬೆಕು ೯೦೩೬೪೮೯೦೪೦.
ಕಾರ್‌ಸ್ಟ್ರೀಟ್: ಹೊಟೇಲ್‌ಗೆ ಜನ ಬೆಕು ೯೪೮೨೯೬೯೫.
ಉರ್ವ ಮಾರ್ಕೆಟ್ : ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು : ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ : ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.
ಬೈಕಂಪಾಡಿ : ಮಾಂಸಾಹಾರಿ ಅಡುಗೆ ಯವರು ಮತ್ತು ಹೆಲ್ಪರ‍್ಸ್ ಬೇಕು ೯೯೮೦೨೬೭೮೮೪.
ಮಂಗಳೂರು :ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್ & ಬ್ಲೌಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೮೯೭೦೪೨೫೧೮೧.
ಹೂವಿನ ಬೊಕ್ಕೆ ಅಂಗಡಿಗೆ ಹುಡುಗಿಯರು ಬೇಕಾಗಿದ್ದಾರೆ. ೯೬೬೩೭೬೦೧೨೫
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೆ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.
ಕಂಕನಾಡಿ: ಸೇಲ್ಸ್‌ಗರ್ಲ್ಸ್, ಸೇಲ್ಸ್ ಬಾಯ್ ಮತ್ತು ಸ್ಟಿಚಿಂಗ್ ಗೊತ್ತಿದ್ದ ಹುಡುಗಿಯರು ಬೇಕು ೯೮೪೪೩೮೧೧೧೮.
ಕುಂಟಿಕಾನ :ಬೇಕರಿಗೆ ಹೆಲ್ಪರ್ ಕೆಲಸಕ್ಕೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು: ಲಾರಿ ಚಾಲಕರು ಬೇಕು ೮೦೯೫೩೪೦೪೫೮.
ಕಾವೂರು :ಬಾರ್‌ಗೆ ವೇಟರ್, ಕಿಚನ್ ಹೆಲ್ಪರ್, ಕ್ಲೀನರ್ ಬೇಕು ೦೮೨೪ ೨೪೮೧೭೦೪.
ಕುತ್ತಾರಿನ ಪೆಟ್ರೋಲ್ ಪಂಪ್‌ಗೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ೯೬೮೬೩೬೧೫೩೫
ಕುದ್ರೋಳಿ: ಫೋಟೋಶಾಪ್, ಕೋರಲ್ ಡ್ರಾ ತಿಳಿದವರು ಬೇಕು ೯೨೪೨೮೮೭೪೩.
ವರ್ಕಾಡಿ: ಸಸ್ಯಾಹಾರಿ ಹೊಟೇಲಿಗೆ ವೇಟರ್ ಬೇಕು ೦೯೦೨೦೧೪೪೪೬೮.
ಮಂಗಳೂರು: ಲೇಡೀಸ್ ಸ್ಟಾಫ್ ಬೇಕು ೯೪೪೯೪೪೧೨೩೪.
ಮಂಗಳೂರು: ಆಫೀಸ್ ಕೆಲಸಕ್ಕೆ ಎಸೆಸೆಲ್ಸಿ ಪಾಸ್, ಫೈಲಾದವರು ಬೇಕು ೯೦೧೯೭೦೯೯೯೩.
ಮಲ್ಪೆ: ಹೊಟೇಲ್‌ಗೆ ಕುಕ್ ಬೇಕು ೭೮೯೯೧೨೦೯೯೮.
ಮಂಗಳೂರು: ಕಲರ್ ಲ್ಯಾಬ್‌ಗೆ ಗ್ರಾಫಿಕ್ ಡಿಸೈನರ್ ಮತ್ತು ಮ್ಯಾನೇಜರ್ ೨೪೪೦೮೦೩.
ಮಂಗಳೂರು: ಜೂಸ್‌ಮೇಕರ್, ಸಪ್ಲಾ ಯರ್ ಬೇಕು ೮೭೨೨೨೭೮೩೬೩.

27-03-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತದೆ.
ವೃಷಭ : ವ್ಯಾಪಾರದಲ್ಲಿ ಉತ್ತಮ ರೀತಿಯಲ್ಲಿ ಪ್ರಗತಿಯಾಗುವುದು.
ಮಿಥುನ : ಮನೆಯಲ್ಲಿ ಮಕ್ಕಳಿಂದ ಕಿರಿಕಿರಿ ಇರುತ್ತದೆ.
ಕರ್ಕಾಟಕ : ಆಸ್ತಿ ಖರೀದಿಯಿಂದ ಲಾಭ ಇರುತ್ತದೆ.
ಸಿಂಹ : ಗಣ್ಯರ ಮತ್ತು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.
ಕನ್ಯಾ : ಮಕ್ಕಳಿಂದ ಮಾನಸಿಕ ನೆಮ್ಮದಿ ಇರುತ್ತದೆ.
ತುಲಾ : ದೂರ ಸಂಚಾರ ಮಾಡುತ್ತೀರಿ.
ವೃಶ್ಚಿಕ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.
ಧನು : ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗುತ್ತದೆ.
ಮಕರ : ಆದಾಯ ಕಡಿಮೆ ಇರುತ್ತದೆ.
ಕುಂಭ : ಮನೆ ನಿರ್ಮಾಣದ ಕೆಲಸವು ಪ್ರಗತಿಯಲ್ಲಿರುತ್ತದೆ.
ಮೀನ : ಉದ್ಯೋಗದಲ್ಲಿ ನೆಮ್ಮದಿ ಇರುವುದಿಲ್ಲ.

ಸ್ತನಗಳ ಗಾತ್ರಕ್ಕಿಂತ ಆರೋಗ್ಯ ಹೆಚ್ಚು ಗಮನ ಕೊಡಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ:ಊರು;ಬೇಡ
ಸಮಸ್ಯೆ: ನಾನು ೨೦ರ ಹರೆಯದ ಯುವತಿ. ೬೦ ಕೆ.ಜಿ. ತೂಕವಿ ದ್ದೇನೆ. ನನ್ನ ಸ್ತನಗಳು ದೊಡ್ಡ ಗಾತ್ರವನ್ನು ಹೊಂದಿಲ್ಲ. ನಾನು ನೋಡಲು ಆಕರ್ಷಕವಾಗಿದ್ದೇನೆ. ಆದರೆ ಸ್ತನಗಳ ಗಾತ್ರವೇ ನನ್ನನ್ನು ಮಾನಸಿಕ ಅಶಾಂತಿಗೆ ಈಡುಮಾಡಿದೆ. ನಾನು ಸ್ತನಗಳ ಗಾತ್ರವನ್ನು ಹೆಚ್ಚು ಮಾಡಲು ಸಾಧ್ಯವಿದೆಯೇ? ಸ್ತನಗಳ ಗಾತ್ರ ದೊಡ್ಡದಾಗಿರದಿ ದ್ದರೆ ಸೆಕ್ಸ್ ವೇಳೆ ಸುಖ ಸಿಗುವುದಿಲ್ಲ ಎನ್ನುತ್ತಾರೆ. ಇದು ನಿಜವೇ? ಮುಟ್ಟಿನ ಅವಧಿಯಲ್ಲಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸ್ತನ ಗಳು ಜೋತು ಬಿದ್ದಂತಾಗಿ ಹೆಚ್ಚು ನೋಯುತ್ತದೆ. ಇದಕ್ಕೆ ಕಾರಣ ಗಳೇನು? ನಾನು ಎರಡು ವರ್ಷಗಳ ಹಿಂದೆ ಒಂದೆರಡು ಸಾರಿ ವ್ಯಕ್ತಿ ಯೊಬ್ಬರ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದೇನೆ. ಹೀಗಾಗಿ ಭಯ ವಾಗುತ್ತಿದೆ. ನನಗೆ ವೈದ್ಯರ ಬಳಿ ಹೋಗಲು ಹೆದರಿಕೆ. ನನ್ನ ಸಮ ಸ್ಯೆಗೆ ಪರಿಹಾರವನ್ನು ತಿಳಿಸಬೇಕಾಗಿ ವಿನಂತಿ.
ಸಲಹೆ: ನೀವು ಹಿಂದೆ ವ್ಯಕ್ತಿಯೊಬ್ಬರ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದಕ್ಕೂ ಮುಟ್ಟಿನ ವೇಳೆ ಸ್ತನಗಳ ನೋವಿಗೂ ಸಂಬಂಧ ಕಲ್ಪಿ ಸಬೇಕಿಲ್ಲ. ಯಾಕೆಂದರೆ ಯಾವುದೇ ವಯಸ್ಸಿನ ಸ್ತ್ರೀಯರಲ್ಲಿಯೂ ಸ್ತನಗಳ ನೋವು ಕಾಣಿಸಿಕೊಂಡರೆ ಮೊದಲಿಗೆ ಸಂಶಯ ಬರು ವುದು ಸ್ತನ ಕ್ಯಾನ್ಸರ್‌ನ ಬಗ್ಗೆ. ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್‌ನ ಪ್ರಮಾಣ ಇಂದು ತುಂಬಾ ಹೆಚ್ಚಾಗಿದೆ. ಇದನ್ನು ಪ್ರಾರಂಭದಲ್ಲೇ ಕಂಡುಹಿ ಡಿದಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಕೆಲವೊಮ್ಮೆ ತಪ್ಪು ಕಲ್ಪನೆ ಕೂಡಾ ರೋಗ ಭಯಕ್ಕೆ ಕಾರಣವಾಗುತ್ತದೆ. ಸ್ತನಗಳ ನೋವು ಸಾಮಾನ್ಯವಾಗಿದ್ದು, ಈ ಬಗ್ಗೆ ಭಯಪ ಡುವ ಅಗತ್ಯವಿಲ್ಲ. ಸ್ತನದಲ್ಲಿ ಗಂಟಿನಂತಹ ರಚನೆ ಅನುಭವಕ್ಕೆ ಬಂದಲ್ಲಿ ಆಗ ವೈದ್ಯರ ಸಲಹೆ ಪಡೆಯಬೇಕಾದೀತು. ಆದರೆ ಸ್ತನದಲ್ಲಿ ನೋವು ರಹಿತ ಸಣ್ಣ, ಸಣ್ಣ ಗಂಟು ಗಳಿರುತ್ತವೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಸ್ತನಗಳ ನೋವು ಸಾಮಾನ್ಯ ವಾಗಿ ಮುಟ್ಟಿನ ಅವಧಿ ಮತ್ತು ಮುಟ್ಟಾ ಗುವ ಹಿಂದಿನ ಕೆಲವು ದಿನಗಳಲ್ಲಿ ಇರುತ್ತದೆ. ಇದು ತೆಳ್ಳಗಿರುವವರಿಗಿಂತ ಸ್ವಲ್ಪ ದಪ್ಪಗಿರುವವರಲ್ಲಿ ಹೆಚ್ಚು. ಸ್ತನಗಳು ಭಾರವಾಗು ವುದು ಸಾಮಾನ್ಯ. ಸ್ತನಗಳು ಸಾಮಾನ್ಯ ವಾಗಿ ಮೃದುವಾದಂತೆ, ಬಲ ಕಳೆದು ಕೊಂಡು ಜೋತು ಬಿದ್ದಂತೆ ಅನ್ನಿಸುತ್ತದೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ನೀವು ಪ್ರತಿದಿನ ಅರ್ಧ ಗಂಟೆಯ ಕಾಲ ನಡೆಯುವುದನ್ನು ರೂಢಿ ಮಾಡಿಕೊಳ್ಳಿ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೋವಿನಿಂದ ಮುಕ್ತಿ ಸಾಧ್ಯ. ಸ್ತನಗಳ ಮೇಲೆ ಸೂರ್ಯಕಾಂತಿ ಬೀಜದ ಎಣ್ಣೆ ಸವರುವುದು, ಕಾಫಿ, ಟೀ, ಕೂಲ್ ಡ್ರಿಂಕ್ಸ್‌ಗಳ ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಸ್ತನಗಳ ನೋವಿಗೂ, ಕಾಫಿ ಯಲ್ಲಿರುವ ಕೆಫಿನ್‌ಗೂ ನಿಕಟ ಸಂಬಂಧವಿದೆ. ಕೋಳಿ ಮೊಟ್ಟೆ, ವಿಟಮಿನ್-ಎ ಇರುವ ಕ್ಯಾರೆಟ್, ಸೀತಾಫಲ ಹಣ್ಣು ಸೇವನೆ ಉತ್ತಮ. ಸ್ತನಗಳ ನೋವಿಗೆ ಮನೆಯಲ್ಲೇ ಬಿಸಿನೀರನ್ನು ಬಾಟಲಿ ಯಲ್ಲಿ ತುಂಬಿ ಸ್ತನಗಳ ಮೇಲೆ ಒತ್ತಡ ಕೊಟ್ಟರೂ ಪರಿಣಾಮ ಸಾಧ್ಯ. ನೋವಿನ ಪ್ರಭಾವ ಮತ್ತೂ ಕಡಿಮೆಯಾಗದಿದ್ದರೆ ಮುಟ್ಟಿನ ಅವಧಿಯ ೩-೪ ದಿನಗಳ ಬಳಿಕ ತಜ್ಞ ಮಹಿಳಾ ವೈದ್ಯರ ಬಳಿ ಸೂಕ್ತ ತಪಾಸಣೆ ನಡೆಸಬೇಕು. ಇನ್ನು ಸೆಕ್ಸ್‌ನಲ್ಲಿ ಸಹಜವಾಗಿ ಸ್ತನಗಳ ಗಾತ್ರ ಪರಿಣಾಮ ಬೀರುತ್ತದೆ, ಯಾಕೆಂದರೆ ಸ್ತನಗಳು ಹೆಣ್ಣಿನ ಆಕ ರ್ಷಣೆಯನ್ನು ಹೆಚ್ಚಿ ಸುತ್ತದೆ. ಆದರೆ ಇದು ಗರ್ಭಧಾರಣೆ, ಮಗು ವನ್ನು ಪಡೆಯುವಲ್ಲಿ ಸಮಸ್ಯೆಯಾಗದು. ಸ್ತನದ ಗಾತ್ರದ ಬಗ್ಗೆ ಚಿಂತೆ ಬಿಟ್ಟುಬಿಡಿ. ಗಾತ್ರವನ್ನು ಹೆಚ್ಚಿಸಲು, ಕಡಿಮೆ ಮಾಡಲು ಸಾಧ್ಯವಿಲ್ಲ. ನಿಮ್ಮ ಸ್ತನಗಳಿಗೆ ಒಪ್ಪುವಂಥ ಪ್ಯಾಡೆಡ್ ಬ್ರೇಸಿಯರ್‌ಗಳು ಮಾರು ಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನು ಬಳಸಿನೋಡಿ.

ತುಳುನಾಡಿನ ವಿವಾಹ ಬಗ್ಗೆ ಆಸಕ್ತಿ ಹುಟ್ಟಲಿ

Posted by JAYAKIRANA Kirana on | 0 comments | Leave a comment...

ಜಯರಾಮ, ಮುಲ್ಕಿ
ಅಶೋಕ್ ಹಲಾಯಿಯವರು ನನ್ನ ಪತ್ರಕ್ಕೆ ದೀರ್ಘವಾದ ಉತ್ತರ ವನ್ನು ನೀಡಿದ್ದಾರೆ. ಈ ಪತ್ರದಲ್ಲೂ ಅವಸರ ಎದ್ದು ಕಾಣುತ್ತಿತ್ತೇ ಹೊರತು ಯಾವ ಅಧ್ಯಯನವೂ ಇಲ್ಲ. ಬನ್ನಂಜೆ ಬಾಬು ಅಮೀನ್‌ರವರ ಪುಸ್ತಕ ಓದಿ ಎಂದು ಎರಡೆರಡು ಬಾರಿ ನಾನು ವಿನಂತಿಸಿದ್ದೆ. ಆದರೆ ಅಷ್ಟು ತಾಳ್ಮೆ ಕೂಡಾ ನಿಮಗಿಲ್ಲ. ಕೂಡಲೇ ಪತ್ರ ಬರೆದಂತೆ ಕಾಣುತ್ತದೆ. ಮಾರ್ಗದರ್ಶಿ ಪುಸ್ತಕ ಯಾವುದು, ಎಲ್ಲಿದೆ ಎಂದು ಮತ್ತೆ ಮತ್ತೆ ಪ್ರಶ್ನಿಸಿದ್ದೀರಿ. ಯಾಕೆ ಹಲಾಯಿಯ ವರೇ ಅಷ್ಟೊಂದು ಕೋಪ, ಅವಸರ? 'ಪೂಜಾರಿಯವರ ಮೇಲಿನ ವ್ಯಾಮೋ ಹವೇ? ನಾನು ರಾಜಕೀಯ ಅದರಷ್ಟಕ್ಕೇ ಇರಲಿ ಎಂದದ್ದು ನಿಜ. ಆ ರಾಜ ಕೀಯದ ಕ್ಷಣಿಕ ಪ್ರಚಾರದ ಆಟಗಳನ್ನೂ ಕ್ಷೇತ್ರಕ್ಕೆ ತಂದಿದ್ದಾರಲ್ಲಾ? ಆ ಬಗ್ಗೆ ಪ್ರಶ್ನೆ ನನ್ನದು ಅಷ್ಟೆ. ಅದು ನಿಮಗೆ ವ್ಯಕ್ತಿ ನಿಂದೆಯಾಗಿ ಕಂಡಿದೆ. ಅವರೇನೊ ಅವರ ತಿಳುವಳಿಕೆಗೆ ಎಟಕಿದಂತೆ ಮಾಡಿಕೊಂಡು ಹೋಗಿದ್ದಾರೆ. ಆದರೆ 'ಪೂಜಾರಿ ಕ್ರಾಂತಿ ಪುರುಷ ಎಂದು ಅಟ್ಟಕ್ಕೇರಿಸಿದವರಿಗೆ ಅದು ಕ್ರಾಂತಿಯಲ್ಲ ಭ್ರಾಂತಿ ಎಂಬ ನನ್ನ ಮಾತು ವ್ಯಕ್ತಿ ನಿಂದೆಯಲ್ಲದೆ ವಿಮರ್ಶೆಯಾಗಿ ಕಂಡು ಬರಲು ಹೇಗೆ ಸಾಧ್ಯ? ಪೂಜಾರಿಯವರು ವಿಮರ್ಶೆಗೆ ಅತೀತರೇ?
ಗೆಲ್ಲಬೇಕೆಂಬ ತವಕ ನನಗಿದೆ ಎಂದಿದ್ದೀರಿ. ನಾನೇನು ಹಗ್ಗಜಗ್ಗಾಟಕ್ಕೆ ತೊಡಗಿಲ್ಲ. ನನ್ನ ಪ್ರಶ್ನೆ, ಮತ್ತು ಇತರ ಜಟಿಲತೆಗಳಿಗೆ ಉತ್ತರಿಸಲು ಸ್ವಲ್ಪವಾ ದರು ಅಧ್ಯಯನಶೀಲತೆ ಬೇಕು. ಅದು ನಿಮಗೆ ಇದೆ ಎಂದು ನಾನು ಭಾವಿ ಸಿದ್ದೆ. ಅದಕ್ಕಾಗಿ ನಿಮ್ಮ ಮೊದಲ ಪತ್ರ ನೋಡಿದ ನಂತರ, ಅದರಲ್ಲಿ ನನ್ನ ಬಗ್ಗೆ ಆಭಾಸ ಎಂಬಿತ್ಯಾದಿ ಪದಗಳು ಇದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದೆ, ಹಿರಿ ಯರು ಬರೆದ ಪುಸ್ತಕ ಓದಿ ಎಂದು ಹೇಳಿದೆ. ನಿಮ್ಮ ಎರಡನೇ ಪತ್ರದಲ್ಲೂ ಹಠಮಾರಿತನದ ಮನೋಭಾವನೆಯೇ ಕಾಣುತ್ತಿದೆ. ನನ್ನ ವಿಷಯಗಳನ್ನು ಅರ್ಥಮಾಡಿಕೊಳ್ಳಲಾರದೆ ನೀವು ವಿಷಯಾಂತರ ಎಂದಿದ್ದೀರಿ. ನನ್ನದೇ ಸರಿ ಎನ್ನುವವರಿಗೆ ಇತರರು ಹೇಳುವ ವಿಷಯಗಳು ಜಟಿಲ ಮತ್ತು ಕಷ್ಟ. ಮಾರ್ಚ್ ೧೦ರ ಪತ್ರದಲ್ಲಿ ನೀವು ಬರೆದ 'ಬರೆಯುವ ಮುನ್ನ ಸಾಧ್ಯತೆ, ಅಂಶಗಳನ್ನು, ಪರಿಕರಗಳನ್ನು ಸೂಕ್ಷ್ಮ ಮತ್ತು ವಿಶಾಲ ದೃಷ್ಟಿ ಈ ನೆಲೆಯಲ್ಲಿ ಚಿಂತಿಸಿ ಬರೆ ದರೆ ಅವಸರವಾಗುವುದಿಲ್ಲ. ಆಭಾಸವು ಬರುವುದಿಲ್ಲ ಎಂಬುದರ ಜತೆ ಯಾರಾದರೂ ಏನಾದರೂ ಬರೆದರೆ ಅದರಲ್ಲಿರುವ ವಿಚಾರಗಳ ಬಗ್ಗೆ ಯೋಚಿ ಸುವ ಅವರು ಏನು ಬರೆದಿದ್ದಾರೆ ಎಂದು ಅಧ್ಯಯನ ನಡೆಸಿ ಅರ್ಥಮಾಡಿಕೊ ಳ್ಳುವ ಅಗತ್ಯವೂ ಇದೆ ಎಂದು ನಿಮಗೆ ನಾನು ಈ ಸಂದರ್ಭದಲ್ಲಿ ಹೇಳ ಬಯ ಸುತ್ತೇನೆ.
ಕುದ್ರೋಳಿಯಲ್ಲಿ ವಿಧವೆಯರಿಗೆ ತಾಳಿ ವಿತರಣೆ ಎಂಬ ಸುದ್ದಿ ಕೇಳಿದ ಕೂಡಲೇ ತಾಳಿ ತುಳುನಾಡಿನಲ್ಲಿ ಹೇಗಿತ್ತು? ಎಲ್ಲಿತ್ತು? ಎಂಬ ಅಧ್ಯಯನಕ್ಕೆ ನಾನು ತೊಡಗಿದ್ದೆ, ಈ ಬಗ್ಗೆ ಸ್ಪಷ್ಟವಾದ ನಿಲುವು ತೆಗೆದುಕೊಂಡು ನಾನು ಕಂಡು ಕೊಂಡ ವಿಚಾರ ಬರೆದಿದ್ದೇನೆ. ಪೂರಕವಾಗಿ ನಮ್ಮ ವಿದ್ವಾಂಸರ, ವಿದೇಶಿ ಪ್ರವಾಸಿಗರ, ಕೆಲವು ಹಿರಿಯರ ಅಭಿಪ್ರಾಯಗಳನ್ನು ಆಧರಿಸಿ 'ವೈದಿಕ ತಾಳಿ, ಶೂದ್ರರ ಕಚ್ಚಾಟ ಎಂದು ಬರೆದೆ. ಹಲಾಯಿಯವರೇ ನನ್ನದೇನಿ ದ್ದರೂ ಪ್ರಾಚೀನ ಜನಪದ ಆಧ್ಯಯನ, ಬನ್ನಂಜೆ ಬಾಬು ಅಮೀನ್, ವಿದೇಶಿ ಪ್ರವಾಸಿಗರ ಸುತ್ತಲಿನ ಜ್ಞಾನ ಎಂದಿದ್ದೀರಿ. ನನಗೆ ಅಷ್ಟಾದರೂ ಜ್ಞಾನ, ಅಧ್ಯ ಯನಶೀಲತೆ ಇದೆ ಹಲಾಯಿಯವರೇ. ನಿಮಗಿರುವುದು ಯಾವುದರ ಜ್ಞಾನ?.
ಹಲಾಯಿಯವರೇ ನಾನು ವಿಶ್ವನಾಥ ಎಂಬವರಿಗೆ ಬರೆದ ಪತ್ರದಲ್ಲಿ ಜನಾ ರ್ದನ ಪೂಜಾರಿಯವರ ಮನಸ್ಸನ್ನು ಅಶೋಕ್ ಹಲಾಯಿಯಂತವರು ಒಲಿ ಸಬೇಕು ಎಂದು ಬರೆದದ್ದೇ ನೀವು ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣವಾ ಯಿತು. ವಿವಾಹಕ್ಕೆ ಬ್ರಾಹ್ಮಣ ಪುರೋಹಿತರನ್ನು ಕರೆಯಬಾರದು ಎಂಬ ಆಗ್ರ ಹವನ್ನು ನಾನು ಮಾಡಿದ್ದಲ್ಲ. 'ಬ್ರಾಹ್ಮಣೇತರ ಪದ್ದತಿಯ ವಿವಾಹವನ್ನು ಮಾಡಿ ಸುವಂತೆ ಮನವೊಲಿಸಿ ಎಂದು ಆಗ್ರಹಿಸಿದ್ದು ಅಷ್ಟೆ. ವೀಳ್ಯ ನಿಶ್ಚಿತಾರ್ಥದಲ್ಲಿ ಮಾತ್ರ ಎಂದು ನೀವು ಹೇಳಿದ್ದು ಎಂದಿದ್ದೀರಿ. ವೀಳ್ಯ ಎಲ್ಲೆಲ್ಲಾ ಪ್ರಾಮುಖ್ಯತೆ ಯನ್ನು ಪಡೆಯುತ್ತದೆ ಎಂದು ವೀಳ್ಯದ ಹಿಂದೆ ಹೋಗಿ ನೋಡಿ ನಿಮಗೆ ಗೊತ್ತಾಗುತ್ತೆ. ವೀಳ್ಯ ಬಿಟ್ಟು ತುಳುನಾಡಿನ ಯಾವ ಪದ್ದತಿಯೂ ಇಲ್ಲ.
ಕಾಲದ ಬದಲಾವಣೆಯ ಕಾರಣದಿಂದ ಹಳೆಯ ಕಾಲದಲ್ಲಿ ತುಳುನಾಡಿ ನಲ್ಲಿದ್ದ ಪದ್ಧತಿಯಂತೆ ಮದುವೆಯಾಗುವುದನ್ನು ಈಗಿನವರು ಒಪ್ಪಲಾರದ ಮನ ಸ್ಥಿತಿ ನಿರ್ಮಾಣವಾಗಿದೆ ಎಂದು ನನಗೆ ಗೊತ್ತಿದೆ. ಅದೇ ರೀತಿಯಲ್ಲಿ ವಿಧವೆ ಯರು ತಾಳಿ ಧರಿಸಬೇಕೆಂಬ ವಿಚಾರವನ್ನೂ ಹೆಚ್ಚಿನವರು ಒಪ್ಪಲಾರರು ಎಂಬ ಸತ್ಯವನ್ನು ಅರಿತು ಕೊಳ್ಳಬೇಕಾಗಿದೆ. ಪ್ರತಿಜ್ಞೆ ಮಾಡುವಾಗಿನ ಉಮೇದು ವಾಸ್ತವ ಎದುರಾದಾಗ ಇರುವುದಿಲ್ಲ. ರೂಪಕಲಾರವರು ಮುಂದಿನ ದಿನಗಳಲ್ಲಿ ಅದೆಷ್ಟು ಜನ ವಿಧವೆಯರು ತಾಳಿ ಕಟ್ಟಿಕೊಳ್ಳುತ್ತಾರೆ ನೋಡೋಣ ಎಂದದ್ದರಲ್ಲೂ ಅರ್ಥ ವಿದೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ ಬ್ರಾಹ್ಮಣೇತರರ ಪದ್ಧತಿ, ಕ್ರಮಗಳು ಏನು ಎಂಬುದನ್ನು. ಯಾರೋ ನಮ್ಮ ಮೇಲೆ ನಮಗೆ ತಿಳಿಯ ದಂತೆ ನಾಜೂಕಾಗಿ ಹೇರಿದ್ದನ್ನು ವಿರೋಧಿಸುವ (ಅಮಂಗಲೆ - ಸುಮಂಗಲೆ) ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಆರಂಭಿಸುವ ಬದಲು ನಮ್ಮಲ್ಲಿ ಏನಿತ್ತು ಎಂಬುದ ನ್ನಾದರೂ ತಿಳಿದುಕೊಳ್ಳಬೇಡವೇ? ನಿಮ್ಮ ಹಿರಿಯ ತಲೆಮಾರುಗಳಲ್ಲಿ ಇಲ್ಲದ ತಾಳಿ, ಹೂ ಹಾರವನ್ನು ನೀವು ತಿಳಿದೋ ತಿಳಿಯದೆಯೋ ಇಷ್ಟಪಟ್ಟಿದ್ದೀರಿ.
ನಿಮ್ಮ ಮುಂದಿನ ತಲೆಮಾರು ಡಿ.ಜೆ, ಕುಡಿತ, ಕುಣಿತ ಇತ್ಯಾದಿಗಳನ್ನು ತಿಳಿದೋ ತಿಳಿಯದೆಯೋ ಇಷ್ಟಪಡುತ್ತದೆ. ನಿಮಗ್ಯಾಕೆ ಅಸಮಾಧಾನ? ಇದು ಮದುವೆಯ ನವನವೀನ ಪದ್ದತಿ. ಸ್ವಲ್ಪ ಎಡ್ಜಸ್ಟ್ ಮಾಡಿಕೊಳ್ಳಿ. (ನನ್ನ ಹಿಂದಿನ ಪತ್ರದಲ್ಲಿ ಇದೆಲ್ಲವನ್ನು ಅವರವರ ಇಷ್ಟ ಎಂದು ನಾನು ಯಾಕೆ ಹೇಳಿದ್ದು ಎಂದರೆ ನೀವು ಪುರೋಹಿತರನ್ನು ಕರೆಸಿ ಮದುವೆ ಮಾಡಿಸುವುದು ಅವರವರ ಇಷ್ಟ ಎಂದು ಹೇಳಿದ್ದಕ್ಕೆ ಮಾತ್ರ. ಅದನ್ನು ನೀವು ಇಂತದ್ದೆಲ್ಲಾ ಡಂಬಾಚಾರ ನನಗೆ ಇಷ್ಟ ಎಂದು ತಪ್ಪಾಗಿ ಗ್ರಹಿಸಿದ್ದೀರಿ. ವಾಸ್ತವವಾಗಿ ನಾನು ಇದರ ವಿರೋಧಿಯೆ) ಡಿ.ಜೆ, ಕುಡಿತ, ಕುಣಿತ ಎಂಟ್ರಿ ಪಡೆದ ಈ ಸಂದರ್ಭದಲ್ಲಿ ನಿಮಗೆ ಅಸಮಾಧಾನ ವಾಗುತ್ತಿದೆ. ಅದೇ ರೀತಿ ಮದುವೆ ಮಾಡುವುದು ಅವರವರ ಜನಾಂಗದ ಹಿರಿ ಯರ (ಗುರ್ಕಾರರ) ಜವಾಬ್ದಾರಿಯಾಗಿದ್ದಾಗ ನಡುವೆ ಪುರೋಹಿತರು ನುಸು ಳುವಂತೆ ಮಾಡಿ ಅವರನ್ನು ಮೂಲೆ ಗುಂಪು ಮಾಡಿದ 'ಕ್ರಾಂತಿಕಾರಿಗಳ ಕಾಲ ಘಟ್ಟದಲ್ಲಿ ಆ ಹಿರಿಯರೆಷ್ಟು ನೊಂದಿರಬಹುದು ಎಂಬುದನ್ನೂ ಕಲ್ಪಿಸಿಕೊಳ್ಳಿ. ಇಂತಹಾ 'ಕ್ರಾಂತಿಗಳೂ ಅಂತಿಮವಾಗಿ ಸಾಗಿದ್ದು ಸುಲಿಗೆಕೋರರ ಕಡೆಗೆ ಎಂಬುದನ್ನು ಮರೆಯಬಾರದು.
'ಹೆಂಗಸರು ಗಂಡನ ಮಾತನ್ನು ಪಾಲಿಸಬೇಕು' ಇದೇ ಅವರಿಗೆ ಪರಮ ಧರ್ಮ ಸದಾಚಾರಶೀಲಳಾದ ಹೆಂಡತಿಯನ್ನು ಬಿಟ್ಟರೆ ಗಂಡನು ಧರ್ಮದಿಂದ ಪತಿತನಾಗುತ್ತಾನೆಂಬುದು ಇದರ ಅರ್ಥ ಎಂದು ನೀವು ಉಲ್ಲೇಖಿಸಿದ ವೈದಿಕ ಶ್ಲೋಕದ ಅರ್ಥವನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ 'ಹೆಂಗಸರು ಗಂಡನ ಮಾತನ್ನು ಪಾಲಿಸಬೇಕು ಮತ್ತು 'ಪರಮ ಧರ್ಮಸದಾಚಾರ ಶೀಲಳಾದ ಹೆಂಡತಿ ಎಂಬುದು ಏನನ್ನು ಸೂಚಿಸುತ್ತದೆ. 'ಮಾತು ಪಾಲಿಸುವುದು ಮತ್ತು 'ಸದಾಚಾರ ಹೆಂಗಸ ರಿಗೇ ಮೀಸಲೇ? ಇದೆಲ್ಲಾ ಪುರುಷ ಕೇಂದ್ರೀ ಕೃತವಲ್ಲವೇ? ತುಳುನಾಡಿನ ಅಳಿಯ ಸಂತಾನ ಕಟ್ಟು 'ಮಹಿಳೆಯನ್ನು ಕೇಂದ್ರೀಕರಿಸಲಾಗಿತ್ತು ತುಳುನಾಡಿನಲ್ಲಿ ಅಳಿಯ ಸಂತಾನ ಕಟ್ಟಿನ ಹಿನ್ನೆಲೆ ಉಳ್ಳ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿ ಯಲು ಮೂಲ ಕಾರಣ ಇದೇ ಆಗಿದೆ. ವೈದಿಕ ಸಂಸ್ಕೃತಿಯಲ್ಲಿ ಗಂಡ ಸತ್ತರೆ ವಿಧ ವೆಯ ತಾಳಿ ಇತ್ಯಾದಿಗಳನ್ನು ತೆಗೆದು, ಮಂಡೆ ಬೋಳಿಸಿ, ಆಕೆಯ ಮುಖ ವನ್ನು ಯಾರೂ ನೋಡಬಾರದು ಎಂದು ಭಾವಿಸುವ, ಮಠಕ್ಕೆ ಅಟ್ಟಿ ನಿರ್ಗತಿಕ ಜೀವನ ಕೊಡುವ ಸಂಪ್ರದಾಯ ತುಳುನಾಡಿನ ಬ್ರಾಹ್ಮಣೇತರರಲ್ಲಿ ಎಂದಿಗೂ ಇರಲಿಲ್ಲ. ಇಂತಹಾ ಅನೇಕ ವಿಚಾರಗಳನ್ನು ನಿಮ್ಮ ಪತ್ರದಾದ್ಯಂತ ಎತ್ತಿ ತೋರಿಸಿ ಚರ್ಚಿಸ ಬಹುದಾಗಿದೆ.
ಅದು ಯಾವುದನ್ನೂ ನಾನು ನಿಮ್ಮಲ್ಲಿ ಚರ್ಚಿಸ ಬಯಸುವುದಿಲ್ಲ. ಯಾಕೆಂ ದರೆ ಇದನ್ನೆಲ್ಲಾ ನಿಷ್ಪಕ್ಷಪಾತವಾಗಿ, ಮೊಂಡುತನವಿಲ್ಲದೆ ಗ್ರಹಿಸುವ ಮನಸ್ಸು ಬೇಕು. ತುಳುನಾಡಿನಲ್ಲಿ ನಡೆಯುತ್ತಿದ್ದ ಮದುವೆಯ ಬಗ್ಗೆ ಬನ್ನಂಜೆ ಬಾಬು ಅಮೀ ನ್‌ರವರು ಅಧ್ಯಯನ ನಡೆಸಿ ಬರೆದ ಪುಸ್ತಕದ ಭಾಗವನ್ನು ಜಯಕಿರಣ ಸಂಪಾ ದಕರು ಪ್ರಕಟಿಸುವ ಬಗ್ಗೆ ಹೇಳಿದ್ದಾರೆ. ಇದನ್ನು ಸ್ವಾಗತಿಸುತ್ತಾ. ಅದರಲ್ಲಿ ಬರುವ ವಿಚಾರಗಳನ್ನು ವಿಮರ್ಶೆ ಮಾಡಿ ಈಗಿನ ಕಾಲಕ್ಕೆ ತಕ್ಕಂತೆ ತುಸು ಬದಲಾವಣೆಗ ಳನ್ನು ಮಾಡಿ 'ಬ್ರಾಹ್ಮಣೇತರ ವಿವಾಹ ಪದ್ಧತಿಗೆ ಯುವ ಜನರು ಹೆಚ್ಚಿನ ಆದ್ಯತೆ ಯನ್ನು ನೀಡಲಿ.

‘ಸುಬ್ರಹ್ಮಣ್ಯೇಶ್ವರ’ ‘ಸುಬ್ರಹ್ಮಣ್ಯಸ್ವಾಮಿ’ಯಾದ!

Posted by JAYAKIRANA Kirana on | 0 comments | Leave a comment...

೧೮೬೧ನೇ ಇಸವಿಯಲ್ಲಿ ಆಗಿನ ಸ್ವಾಮಿ ವಿದ್ಯಾರಾಜರು ಕೊಲೆರಾ ರೋಗದಿಂದ ದೈವಾಧೀನರಾದುದರಿಂದ ಅವರ ನಂತರ ಅವರ ಸ್ಥಾನಕ್ಕೆ ವಿದ್ಯಾಪೂರ್ಣ ಸ್ವಾಮಿಗಳೆಂಬವರು ಆಡಳಿತೆಗೆ ಬಂದರು. ಇವರ ನೇಮಕ ಕೂಡ ಮುಂಚಿನ ಪದ್ಧತಿಯಂತೆ ಹೆಬ್ಬಾರರ ಒಪ್ಪಿಗೆ ಪ್ರಕಾರವೇ ನೇಮಕ ವಾಯಿತು. ಹಾಗೆ ನೇಮಿಸಲ್ಪಟ್ಟ ಹುಕುಂನಲ್ಲಿ ಸ್ವಾಮಿಯು ರೂ. ೫೬೦ ತಸ ದೀಕು ಸಿಕ್ಕುವ ಒಂದು ಮಠದ ಅಧಿಕಾರಿ ಎಂತಲೂ, ಊರಿನಲ್ಲಿ ಇತರ ಘನಹೊಂದಿದ ಮನುಷ್ಯರು ಇಲ್ಲವೆಂತಲೂ ಕಾಣಿಸಿ ಸ್ವಾಮಿಗಳಿಗೆ ನೇಮಕ ಮಾಡಿದ್ದು ಚೋದ್ಯವಾಗಿ ಕಾಣುತ್ತದೆ.
ಹೀಗೆ ಸ್ವಾಮಿಗಳಿಗೆ ಆಡಳಿತೆ ನೇಮಕವಾದರೂ ದೇವಳದ ಗರ್ಭಗೃಹದ ಒಳಗಿನ ಗುಪ್ತ ಭಂಡಾರದ ಬೀಗದ ಕೈಗಳು ಸ್ಥಳದ ಸ್ಮಾರ್ತರಾದ ಹೆಬ್ಬಾರರ ಸ್ವಾಧೀನವೇ ಇದ್ದವು. ಅಲ್ಲದೆ ಅವರ ೬ ಉಪಾಧಿಗಳು ಅವರಿಗೆ ಇದ್ದುದ ರಿಂದ ಸ್ವಾಮಿಗಳಿಗೆ ಪೂರ್ಣ ಒಳಗಿನ ಅಧಿಕಾರ ನಡೆಸಲು ಕಷ್ಟವಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ವಾಮಿಗಳು ಗರ್ಭಗೃಹದ ಒಳಗಿನ ಗುಪ್ತ ಭಂಡಾರದ ಬೀಗದ ಕೈಗಳನ್ನು ಹೆಬ್ಬಾರರಿಂದ ತನ್ನ ಸ್ವಾಧೀನ ಮಾಡಲು ಪ್ರಯತ್ನಿಸಿದ್ದ ರಿಂದ ಪುನಃ ಸ್ವಾಮಿಗಳಿಗೂ ಹೆಬ್ಬಾರರಿಗೂ ಮನಸ್ತಾಪ ಉಂಟಾಗಲೂ ಆರಂಭವಾಯಿತು. ಮತ್ತು ಅವರೊಳಗೆ ಜಗಳಗಳು ಆರಂಭವಾಯಿತು.
ಹೀಗೆ ಹೆಬ್ಬಾರರಿಗೂ ಸ್ವಾಮಿಗಳಿಗೂ ಮನಸ್ತಾಪವು ಹೆಚ್ಚಾದಂತೆ ಸ್ವಾಮಿ ಗಳು ಇವರ ಅಧಿಕಾರಗಳನ್ನು ಕಮ್ಮಿ ಮಾಡಿಸುತ್ತ ಬಂದು ಇವರು ದೇವ ಳದ ಊರ ಮೊಕ್ತೇಸರರಾಗಿದ್ದರೂ ಹೆಬ್ಬಾರ ಉದ್ಯೋಗಸ್ಥರೆಂದು ಮಾಡಿ ಅವರಿಗೆ ಹಿಂಸೆ ಕೊಡಲು ತೊಡಗಿದರು. ಈ ಸಂದರ್ಭದಲ್ಲಿ ಕೆಲವು ವ್ಯವ ಹರಣೆಗಳು ಕೂಡಾ ನಡೆದಿವೆ. ೧೮೭೬ರಲ್ಲಿ ಈ ಸ್ವಾಮಿಗಳು ಸ್ಮಾರ್ತರಾದ ಹೆಬ್ಬಾರರ ಮತದವರನ್ನು ತಮ್ಮ ಮಾಧ್ವಮತದವರಿಂದ ಕೆಳತರಗತಿಯವ ರೆಂದು ಮಾಡಲೋಸುಗ ತನಗೆ ಮಣೆ ಇಟ್ಟು ಗೌರವ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಗಳನ್ನು ತೆಗೆದುಕೊಂಡು ಹೆಬ್ಬಾರರ ಮೇಲೆ ರೂ. ೨೦೦ಕ್ಕೆ ಛಿ.s ೨೭೯ oಜಿ ೧೮೭೬ ಎಂಬ ಮಾನನಷ್ಟ ವ್ಯಾಜ್ಯವನ್ನು ಪುತ್ತೂರು ಡಿ.ಮು. ಕೋರ್ಟಿನಲ್ಲಿ ಮಾಡಿದರು. ಈ ವ್ಯಾಜ್ಯದಲ್ಲಿ ಸ್ವಾಮಿಗಳಿಗೆ ಅವಗುಣವಾ ಯಿತು. ಸ್ವಾಮಿಗಳ ಗಿಂಡಿಮಾಣಿಯೇ ಸ್ವಾಮಿಗಳ ಮಣೆ ಇಡುವವನೆಂದೂ ಆಡಳಿತೆ ನಡೆಸುವ ಹೆಬ್ಬಾರನೆಂಬವನು ಮಣೆ ಇಡುವ ಕಾರಣವಿಲ್ಲ ಎಂದು ತೀರ್ಮಾನವಾಯಿತು. ಸ್ವಾಮಿಗಳು ಇದರ ಮೇಲೆ ಮಾಡಿದ ಂ.S.ಓo. ೫೧೮/೧೮೭೮ರ ಸಬ್‌ಕೋರ್ಟು ಅಪೀಲಿನಲ್ಲೂ ಮೂಲ ತೀರ್ಮಾನವೇ ಖಾಯಂ ಆಯಿತು. ಈ ಪ್ರಕಾರದ ಮಾನನಷ್ಟ ವ್ಯಾಜ್ಯದಲ್ಲಿ ಸ್ವಾಮಿಗಳು ಸೋತು ಹೆಬ್ಬಾ ರರು ಗೆದ್ದುದರಿಂದ ಕೋಪದಿಂದ ಸ್ವಾಮಿಗಳು ಹೆಬ್ಬಾರರ ಎಲ್ಲಾ ಹೆಚ್ಚಿನ ಅಧಿಕಾರಗಳನ್ನು ತೆಗೆದುಹಾಕಿದರು. ಇದರಿಂದಾಗಿ ದೇವಳದ ಆಡಳಿತೆಗೋ ಸ್ಕರ ಸಿವಿ ವ್ಯಾಜ್ಯ ಒಂದನ್ನು ಹೆಬ್ಬಾರರು ಸ್ವಾಮಿಗಳ ಮೇಲೆ ಹೂಡಿದರು. ಇದರಲ್ಲಿ ಹೆಬ್ಬಾರರಿಗೆ ಲಿಮಿಟೇಶನ್ ಅಂದರೆ ವ್ಯಾಜ್ಯ ಮಾಡುವ ಅವಧಿ ದಾಟಿದ್ದರಿಂದ ಸ್ವಾಮಿಗಳಿಗೆ ಗುಣವಾಯಿತು.
ಈ ವಿದ್ಯಾಪೂರ್ಣ ಸ್ವಾಮಿಗಳು ಅದೇ ೧೮೮೨ರಲ್ಲಿ ಮೈಲಿಗೆ ರೋಗ ತಗಲಿ ಕಾಲವಾದರು ಎಂದು ತಿಳಿದುಬರುತ್ತದೆ. ಈ ಮೈಲಿಗೆ ರೋಗವು ಅದೇ ವರ್ಷದಲ್ಲಿ ಅಲ್ಲಿಯ ಪೂಜೆ ಮತ್ತು ತಂತ್ರಿಗಳ ಕುಟುಂಬಕ್ಕೂ ಅಲ್ಲದೆ ಇನ್ನಿತರ ಅನೇಕರಿಗೆ ಉಂಟಾಗಿ ಊರಿನಲ್ಲಿ ಹೆಚ್ಚಿನವರೆಲ್ಲಾ ಊರು ಬಿಟ್ಟು ಹೋಗಿದ್ದರೆಂದೂ, ದೇವಸ್ಥಾನದಲ್ಲಿ ಆಗ ಅಲ್ಲಿಯ ಮಣೆಗಾರ ರಾದ ಸ್ಥಳೀಯ ಸ್ಮಾರ್ತ ಶಿವ ಬ್ರಾಹ್ಮಣರಾದ ನೂಚಿಲ ಶ್ಯಾಮಣ್ಣ ಎಂಬ ಒಬ್ಬರು ಮಾತ್ರ ಸಾಧಾರಣ ೧೮೮೨ರ ಮಾರ್ಚಿ ತಿಂಗಳಿಂದ ಸಪ್ಟೆಂಬರ್ ತಿಂಗಳವರೆಗೆ ದೇವಸ್ಥಾನದ ಪೂಜೆ ವಗೈರೆ ಎಲ್ಲಾ ಕೆಲಸಗ ಳನ್ನು ಮಾಡಿಕೊಂಡಿದ್ದರೆಂದು ತಿಳಿದು ಬರುತ್ತದೆ.
ಸಾಧಾರಣ ೧೮೮೦-೮೨ರ ವರೆಗೆ ಈ ದೇವಸ್ಥಾನದ ಒಳಗೆ ಅಡಗಿ ಇರುವ ಶ್ರೀಸಿದ್ಧಿವಿನಾಯಕ ದೇವರ ವಿಗ್ರಹವು ಹೊರಗೆ ಈಗ ಮಠದ ವರಿಂದ ಆಕ್ರಮಿಸಲ್ಪಟ್ಟ ನರಸಿಂಹ ದೇವರ ಗುಡಿಯಲ್ಲಿ ಇದ್ದಿರಬೇ ಕೆಂದು ದೇವಳದ ವರ್ಗ ಊಳಿಗ ಪುಸ್ತಕದಲ್ಲಿ ವಿನಾಯಕ ದೇವರ ಅಮಾನತು ಎಂಬ ಹೆಸರಿನಿಂದ ಬರೆಯಲ್ಪಟ್ಟ ಲೆಕ್ಕದಿಂದ ತಿಳಿಯಬ ಹುದಾಗಿದೆ. ಸಾಧಾರಣ ೧೮೭೯ರಲ್ಲಿ ದೇವಸ್ಥಾನವನ್ನು ರಿಪೇರಿ ಮಾಡುವ ನೆವನದಿಂದ ಅನೇಕ ಕಡೆಗಳಿಂದ ಮರಮಟ್ಟು ವಗೈರೆ ಸಂಗ್ರಹಿಸುವ ಕೆಲಸದಲ್ಲಿ ಆಗಿನ ವಿದ್ಯಾಪೂರ್ಣರು ತುಂಬಾ ಪ್ರಯತ್ನಪಟ್ಟಿದ್ದಾರೆಂ ತಲೂ ಸಾಧಾರಣ ೧೮೮೦-೮೧ರಲ್ಲಿ ದೇವಸ್ಥಾನ ರಿಪೇರಿಯೊಂದಿಗೆ ವಿನಾಯಕ ದೇವರ ಗುಡಿಯಾದ ಈಗಿನ ನರಸಿಂಹ ಗುಡಿಯ ಹಿಂಬ ದಿಗೆ ಒಂದು ಕೋಣೆಯನ್ನು ಸೇರಿಸಿ ಅದನ್ನು ನರಸಿಂಹ ದೇವರ ಗರ್ಭಗುಡಿಯನ್ನಾಗಿ ಮಾಡಿಕೊಂಡರೆಂದೂ ಆ ಸಂದರ್ಭದಲ್ಲಿ ಒಬ್ಬಿ ಬ್ಬರು ಹೆಬ್ಬಾರರುಗಳು ದೇವಳದ ಒಳಗೆಯೇ ಮೃತಪಟ್ಟಿರುವರೆಂದು ತಿಳಿದು ಬರುತ್ತದೆ.
ಅದೇ ಸಮಯದಲ್ಲಿ ಈಗ ಮಠದ ಸ್ವಾಮಿಯವರು ವಾಸ್ತವ್ಯ ಇರುವ ಮಠದ ಅಡಿಸ್ಥಳವನ್ನು ಹೆಬ್ಬಾರ ಸುಬ್ರಾಯರೆಂಬವರಿಂದ ಪಡ ಕೊಂಡು ಅದರಲ್ಲಿ ಅವರ ವಸತಿ ಮಠವನ್ನು ಕೂಡಾ ಹಾಗೆ ಸಂಗ್ರ ಹಿಸಿದ ಮರದಿಂದಲೇ ಕಟ್ಟಿಸಿಕೊಂಡರೆಂದೂ ತಿಳಿದು ಬರುತ್ತದೆ. ಅಂತೂ ೧೮೮೦ರ ವರೆಗೆ ವಿನಾಯಕ ದೇವರು ತನ್ನ ಗುಡಿಯಲ್ಲೇ ಇದ್ದಿರಬಹು ದೆಂದು ತಿಳಿದು ಬರುತ್ತದೆ. ವಿನಾಯಕ ದೇವರ ವಿಗ್ರಹವನ್ನು ಸ್ಥಾನ ಚ್ಯುತಿಗೊಳಿಸಿದ್ದು, ದೇವಳದ ಸೊತ್ತುಗಳ ದುರುಪಯೋಗ, ದೇವ ಸ್ಥಾನದೊಳಗೆ ಹೆಬ್ಬಾರರ ಮರಣ ಇತ್ಯಾದಿ ದೋಷಗಳಿಂದಲೇ ಆಗ ಸುಬ್ರಹ್ಮಣ್ಯದಲ್ಲಿ ಮಹಾಮಾರಿ ರೋಗ ಬಂದು ಸ್ವಾಮಿಗಳು ಮತ್ತು ಆಸ್ರಣ್ಣರುಗಳು ಮೊದಲಾದವರ ಮರಣಗಳು ಸಂಭವಿಸಲು ಕಾರಣ ವಾಯಿತೆಂದು ಊಹಿಸಲೂ ಸಾಧ್ಯವಿದೆ.
೧೮೮೨ನೇ ಇಸವಿ ಸಪ್ಟಂಬರ್ ತಿಂಗಳು ಮರಣ ಹೊಂದಿದ ವಿದ್ಯಾ ಪೂರ್ಣರ ಸ್ಥಾನಕ್ಕೆ ವ್ಯಾಸತೀರ್ಥರೆಂಬ ಒಬ್ಬ ಸ್ವಾಮಿಗಳು ನೇಮಿಸಲ್ಪ ಟ್ಟರು. ಇವರು ದೇವಸ್ಥಾನದ ಆಡಳಿತೆಯನ್ನು ವಹಿಸಿಕೊಳ್ಳುವಾಗ ಇವ ರಿಗೆ ಬರೇ ೨೦-೨೨ ವರ್ಷ ಪ್ರಾಯ. ಆ ಸಮಯದಲ್ಲಿ ಇವರ ಅಣ್ಣ ರಾಮಕೃಷ್ಣ ಐತಾಳ ವ, ಆಚಾರ್ಯ ಎಂಬವರು ಇವರ ಮಠದಲ್ಲಿ ಏಜಂಟರಾಗಿದ್ದರು. ಈ ಸ್ವಾಮಿಗಳು ಸುಬ್ರಹ್ಮಣ್ಯದಿಂದ ಸಾಧಾರಣ ೧೦೮ ಮೈಲು ದೂರ ಇರುವ ಉಡುಪಿ ಹತ್ತಿರದ ಪಡಮುನ್ನೂರು ಮಾಗಣೆ ತೋಡಲೂರು ಗ್ರಾಮ ಎಂಬಲ್ಲಿಂದ ಬಂದವರು. ಇವರು ಸನ್ಯಾಸವಾದನಂತರ ಸುಬ್ರಹ್ಮಣ್ಯಕ್ಕೆ ಬಂದವರೆಂದು ತಿಳಿದುಬರುತ್ತದೆ. ಇವರು ವಿದ್ಯಾಪೂರ್ಣರ ಕಾಲದಲ್ಲೆ ಇಲ್ಲಿಗೆ ಬಂದರೆಂದು ತಿಳಿದುಬರು ತ್ತದೆ. ಇವರು ವಿದ್ಯಾಪೂರ್ಣರ ಕಾಲದಲ್ಲೆ ಇಲ್ಲಿಗೆ ಬಂದುಕೊಂಡಿದ್ದು, ದೇವಸ್ಥಾನದ ಎಲ್ಲಾ ವಿಚಾರಗಳನ್ನು ಅರಿತುಕೊಂಡವರಾಗಿದ್ದರು.
ಇವರು ದೇವಳದ ಆಡಳಿತೆಗೆ ಪ್ರವೇಶಿಸಿದೊಡನೆಯೇ ಆಗ ದೇವಳದ ಮೆನೇಜರಾಗಿದ್ದ ಸ್ಮಾರ್ತ ಶಿವ ಬ್ರಾಹ್ಮಣರಾದ ನೂಚಿಲ ಶ್ಯಾಮಣ್ಣ ಎಂಬವ ರನ್ನು ದೇವಸ್ಥಾನದಿಂದಲೇ ಹೊರ ಹಾಕಿದರು. ಆ ಮೇಲೆ ತನ್ನ ಜತೆ ಮೊಕ್ತೇಸರುಗಳಾದ ಎರಡು ಜನ ಆಸ್ರಣ್ಣರುಗಳನ್ನು ಅವರ ಮೊಕ್ತೇಸರಿಕೆ ಯಿಂದ ವಜಾ ಮಾಡಿಸಿದರು. ಹೇಗೆಂದರೆ ಒಬ್ಬರನ್ನು ಸ್ವಲ್ಪ ಹಣ ಕೊಟ್ಟು ರಾಜಿ ಅರ್ಜಿ ಕೊಡಿಸಿದ್ದೂ. ಮತ್ತೊಬ್ಬರ ಆಡಳಿತೆಯನ್ನು ಮೂವತ್ತು ವರ್ಷಕ್ಕೆ ತನ್ನ ಹೆಸರಿಗೆ ತಹನಾಮೆ ಬರೆಸಿಕೊಂಡು ಮೊಕ್ತೇಸರಿಕೆ ಹಕ್ಕನ್ನು ತನ್ನ ಸ್ವಾಧೀನ ಮಾಡಿಸಿಕೊಂಡದ್ದು ಆಗಿದೆ. ಇದರಿಂದಾಗಿ ಈ ವ್ಯಾಸ ತೀರ್ಥ ಸ್ವಾಮಿಗಳು ದೇವಳದಲ್ಲಿ ಏನು ಅನ್ಯಾಯವೆಸಗಿದರೂ ಇವರನ್ನು ಕೇಳುವವರಿಲ್ಲದಂತಾಗಿ ೧೮೮೩ರಿಂದ ಇವರು ಸರ್ವಾಧಿಕಾರಿಯಾಗಿ ಮೆರೆ ದರು. ಇವರ ಉದ್ಧಟತನಕ್ಕೆ ಹೆದರಿ ಆಗಿನ ದೇವಸ್ಥಾನದ ಕಮಿಟಿ ಮೆಂಬರ ರುಗಳು ಸಹಾ ಸುಬ್ರಹ್ಮಣ್ಯಕ್ಕೆ ಬರಲು ಹೆದರುತ್ತಿದ್ದರೆಂದು ತಿಳಿದು ಬರುತ್ತದೆ.
ಇವರು ಆಡಳಿತೆಗೆ ಪ್ರವೇಶಿಸುವವರೆಗೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಶ್ರೀಸುಬ್ರಹ್ಮಣ್ಯೇಶ್ವರನೆಂಬ ಹೆಸರಿತ್ತು. ಭಕ್ತಾದಿಗಳು ಸುಬ್ರಹ್ಮಣ್ಯೇಶ್ವರನೆಂಬ ಹೆಸರಿಂದಲೇ ಕಾಣಿಕೆಗಳನ್ನು ಸಲ್ಲಿಸುತಿದ್ದರು. ಈ ಸ್ವಾಮಿಗಳು ಆಡಳಿತೆಗೆ ಪ್ರವೇಶಿಸಿ ಸರ್ವಾಧಿಕಾರಿಯಾದ ನಂತರ ತನ್ನ ಮಠಕ್ಕೆ ಸುಬ್ರಹ್ಮಣ್ಯ ಮಠವೆಂದೂ ತನ್ನ ಹೆಸರು ಸುಬ್ರಹ್ಮಣ್ಯ ಸ್ವಾಮಿ ಎಂದೂ ಇರಿಸಿಕೊಂಡು ಶ್ರೀಸುಬ್ರಹ್ಮ ಣ್ಯೇ ಶ್ವರನಿಗೂ ಶ್ರೀಸುಬ್ರಹ್ಮಣ್ಯ ಸ್ವಾಮಿ ಎಂಬ ಹೆಸರನ್ನು ಇರಿಸಿ ಜನತೆಗೆ ಪ್ರಚಾ ರಪಡಿಸಿದರು. ಅಂದಿನಿಂದ ತನ್ನ ಹೆಸರೂ ಸುಬ್ರಹ್ಮಣ್ಯ ದೇವರ ಹೆಸರೂ ಒಂದೇ ರೀತಿಯಾದುದರಿಂದ ಶ್ರೀಸುಬ್ರಹ್ಮಣ್ಯ ಸ್ವಾಮಿಗೆಂದು ದೇವಸ್ಥಾನಕ್ಕೆ ಬಂದ ವಂತಿಗೆ ವರಾಡಗಳನ್ನು ಸುಬ್ರಹ್ಮಣ್ಯ ಸ್ವಾಮಿಯಾದ ತನಗೆ ಬಂದದ್ದೆಂದು ಮಾಡಿಕೊಂಡು ದೇವಸ್ಥಾನಕ್ಕೆ ಬರುತ್ತಿದ್ದ ವಂತಿಗೆ ವರಾಡಗಳ ಹೆಚ್ಚಿನ ಅಂಶವನ್ನು ತನ್ನದನ್ನಾಗಿ ಮಾಡಿಕೊಂಡರೆಂದು ತಿಳಿದು ಬರುತ್ತದೆ.

ಮಕ್ಕಳ ಆಟ ಮೈ ಸುಡುವ ತನಕ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಅಡುಗೆ ಕೋಣೆಯಲ್ಲಿ ಸಹೋದರರಿಬ್ಬರು ಆಟವಾಡುತ್ತಿದ್ದಾಗ ಓರ್ವ ಕುದಿಯುತ್ತಿದ್ದ ಎಣ್ಣೆ ಮೇಲೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.
ಬೋಳ ವಂಜರಕಟ್ಟೆಯ ಕೃಷ್ಣ ಎಂಬವರ ಮಗ ಸ್ವಾತಿಕ್(೯) ಎಂಬಾತ ಸುಟ್ಟ ಗಾಯ ಗಳೊಂದಿಗೆ ಆಸ್ಪತ್ರೆಗೆ ದಾಖಲಾದವನು. ಈತನ ಸಹೋದರ ಸುದೇಶ್(೧೫) ಎಂಬಾತನೊಂ ದಿಗೆ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಹಪ್ಪಳ ಕಾಯಿಸಿ ಬಿಸಿ ಎಣ್ಣೆ ಇದ್ದ ಬಾಣಲೆಯನ್ನು ನೆಲದ ಮೇಲೆ ಇರಿಸಲಾಗಿತ್ತು. ಸುದೇಶನ ಎಡವಟ್ಟಿಗೆ ಬಾಣಲೆ ಮಗುಚಿ ಬಿತ್ತೆನ್ನಲಾಗಿದೆ. ಅಲ್ಲಿಗೆ ಓಡಿ ಬಂದಿದ್ದ ಸ್ವಾತಿಕ್ ಅದರ ಮೇಲೆ ಬಿದ್ದು ಗಾಯಗೊಂಡಿದ್ದಾನೆ.

ಕಾಂಗ್ರೆಸ್ ನಡೆಸಿದ ಅಪಪ್ರಚಾರ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ

Posted by JAYAKIRANA Kirana on | 0 comments | Leave a comment...

ಮಹೇಂದ್ರ ಕುಮಾರ್
ಉಡುಪಿ: ರಾಜ್ಯದ ಬಿಜೆಪಿ ಸರಕಾರದ ದುರಾಚಾರದ ಆಡಳಿತದಿಂದ ಬೇಸತ್ತ ಮತದಾರರು ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಮತದಾರರು ನೀಡಿದ ತೀರ್ಪನ್ನು ಜೆಡಿಎಸ್ ಸ್ವಾಗತಿಸುತ್ತದೆ. ಕಾಂಗ್ರೆಸ್ ಜೆಡಿಎಸ್ ವಿರುದ್ದ ಬಹಳಷ್ಟು ಅಪಪ್ರಚಾರ ನಡೆಸಿದೆ. ಇದು ಪ್ರಜಾ ಪ್ರಭುತ್ವಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಜೆಡಿಎಸ್ ನಾಯಕ, ಉಡುಪಿ ಜಿಲ್ಲಾ ಜೆಡಿಎಸ್ ಉಸ್ತುವಾರಿ ಮಹೇಂದ್ರ ಕುಮಾರ್ ಹೇಳಿದ್ದಾರೆ.
 ಉಡುಪಿಯ ಖಾಸಗಿ ಹೊಟೇ ಲೊಂದರಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಜೆಡಿಎಸ್ ಅಭ್ಯರ್ಥಿ ಸೋಲಿಗೆ ಯಾರೂ ಹೊಣೆಯಲ್ಲ. ಜಿಲ್ಲಾದ್ಯಕ್ಷ ಸ್ಥಾನಕ್ಕೆ ದೇವಿಪ್ರಸಾದ್ ಶೆಟ್ಟಿ ನೀಡಿದ ರಾಜೀನಾಮೆಯನ್ನು ಜೆಡಿಎಸ್ ವರಿಷ್ಠ ಮಂಡಳಿ ಸ್ವೀಕಾರ ಮಾಡಿಲ್ಲ. ಮುಂದೆ ದೇವಿಪ್ರಸಾದ್ ನೇತೃತ್ವದಲ್ಲಿಯೇ ಪಕ್ಷದ ಸಂಘಟನೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ ಮಹೇಂದ್ರ ಅವರು, ದೇವಿಪ್ರಸಾದ್ ಶೆಟ್ಟಿ ಹಾಗೂ ಯು.ಆರ್.ಸಭಾಪತಿ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿ ಸೋತಾಗ ಈ ರೀತಿ ನಡೆಯುವುದು ಸಹಜ. ಭಾವನಾತ್ಮಕ ಹೇಳಿಕೆ ನೀಡದಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದರು. ಮುಂದೆ ಎಲ್ಲವೂ ಸರಿಹೋಗಲಿದೆ ಎಂದು ಸಮಜಾಯಿಷಿಕೆ ನೀಡಿದರು.
 ಲೋಕಸಭಾ ಚುನಾವಣೆಯ ಫಲಿತಾಂಶವು ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಸ್ಪಷ್ಟಪಡಿಸಿದ ಮಹೇಂದ್ರಕುಮಾರ್, ಸಂಘಟನಾತ್ಮಕ ತಪ್ಪುಗಳ ಅವಲೋಕನದ ಜೊತೆಗೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸುತ್ತಾ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಗೊಳಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ, ಪಕ್ಷದ ಸೋಲಿಗೆ ಅಲ್ಪಸಂಖ್ಯಾತರು ಕಾರಣ ಎಂದು ತಪ್ಪು ಹೇಳಿಕೆಯನ್ನು ನೀಡಿದ್ದೆ. ಈ ರೀತಿಯ ತಪ್ಪು ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು. ಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಲೂಯಿಸ್ ಲೋಬೋ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಯುವ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ರಿಝ್ವಾನ್ ಉಪಸ್ಥಿತರಿದ್ದರು.

ಬೈಕ್ ಕಳ್ಳರಿಬ್ಬರ ಸೆರೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಬೈಕ್‌ಗಳ್ಳರಿಬ್ಬರನ್ನು ಬೆಳ್ತಂಗಡಿ ಪೊಲೀಸರು ಆದಿತ್ಯವಾರ ಬಂಧಿಸಿದ್ದಾರೆ. ಮುಂಡಾಜೆ ಗ್ರಾಮದ ಶಾರದಾ ನಗರದ ಸತೀಶ್(೨೪) ಹಾಗೂ ಅದೇ ಗ್ರಾಮದ ಚಾಮುಂಡಿ ನಗರದ ಮೋಹನ(೨೪) ಎಂಬವರೇ ಪೊಲೀ ಸರ ಕೈಗೆ ಸಿಕ್ಕಿಬಿದ್ದವರು. ಬಂಧಿತರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇವರು ಆದಿತ್ಯವಾರ ಬೆಳಿಗ್ಗೆ ಲಾಯಿಲ ಗ್ರಾಮ ಪುತ್ರಬೈಲು ಎಂಬಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿ ದಾಗ ವಾಹನ ತಪಾಸಣೆ ಮಾಡುತ್ತಿದ್ದ ಇಲ್ಲಿನ ಎಸ್.ಐ.ಯೋಗಿಶ್ ಕುಮಾರ್ ಅವರು ಆರೋಪಿಗಳನ್ನು ನಿಲ್ಲಲು ಹೇಳಿದರು. ಆದರೆ ಆರೋಪಿಗಳು ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಅವರನ್ನು ಹಿಂಬಾಲಿಸಿ ಹಿಡಿದು ವಶಕ್ಕೆ ತೆಗೆದುಕೊಂಡರು. ಅನುಮಾನಾಸ್ಪದವಾಗಿ ಕಂಡ ಇವರಲ್ಲಿ ವಾಹನದ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ. ಹೆಚ್ಚಿನ ವಿಚಾರಣೆ ನಡೆಸಿದಾಗ ಈ ಮಾಹಿತಿಗಳು ಲಭ್ಯವಾದವು.
ಪೊಲೀಸ್ ಮಾಹಿತಿ ಪ್ರಕಾರ ಇವರಿಬ್ಬರಿಗೂ ಗಾಂಜಾದ ಚಟವಿದ್ದು ಅದಕ್ಕಾಗಿ ಅವರು ಅಲ್ಲಲ್ಲಿ ರಬ್ಬರ್ ಶೀಟ್‌ಗಳನ್ನು ಕಳವು ಮಾಡುತ್ತಿದ್ದರು. ರಬ್ಬರ್ ಶೀಟುಗಳನ್ನು ಸಾಗಿಸಲು ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ಇವರು ಪುತ್ತೂರು, ಉಪ್ಪಿನಂಗಡಿ, ಮೂಡಿಗೆರೆಗಳಿಂದ ಹೀರೋಹೊಂಡಾ ಬೈಕ್‌ಗಳನ್ನು ಕಳವುಗೈದಿದ್ದಾರೆ. ಇವರಲ್ಲಿ ಸತೀಶ್ ಎಂಬಾತ ಈ ಹಿಂದೆ ಎರಡು ಪ್ರಕರಣಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲಿಗೆ ಹೋಗಿಬಂದಿದ್ದ. ಈತ ಭಟ್ಕಳದಿಂದ ಒಂದು ಹಾಗೂ ಹೊನ್ನಾವರದಿಂದ ೨ ಬೈಕ್‌ಗಳನ್ನು ಕದ್ದಿದ್ದಾನೆ. ಮುಂಡಾಜೆ ಕೆಲ್ಲಾಜೆಯ ಅಯೂಬ್ ಎಂಬುವರ ಹೊಗೆ ಗೂಡಿನಿಂದ ಕದ್ದ ೭೬ ರಬ್ಬರ್‌ಶೀಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಮೂರು ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕದ್ದ ಬಕನ್ನು ಪೆಟ್ರೋಲ್ ಮುಗಿಯುವವರೆಗೆ ಕೊಂಡೊಯ್ದು ಅಲ್ಲೇ ಬಿಟ್ಟು ಹೋಗುವುದೂ ಇತ್ತು. ಸತೀಶ ಹೀರೋ ಹೊಂಡಾ ಬಕ್‌ನ ವಿಷಯದಲ್ಲಿ ಚಾಣಾಕ್ಷನಾಗಿದ್ದು ಬಕ್‌ಗಳನ್ನು ಸುಲಭವಾಗಿ ಕದಿಯುತ್ತಿದ್ದ. ಕೀ ಇಲ್ಲದೇ ವಯರ್‌ಗಳನ್ನು ಜೋಡಿಸಿ ಕ್ಷಣಾರ್ಧದಲ್ಲಿ ಕದಿಯಬಲ್ಲವನಾಗಿದ್ದ.
ಎಸ್‌ಐ ಯೋಗೀಶ್ ಕುಮಾರ್, ಪ್ರೊಬೆಷನರಿ ಎಸ್‌ಐ ಕಬ್ಬಾಳ್‌ರಾಜ್, ಸಿಬಂದಿಗಳಾದ ದಯಾನಂದ, ಸುಂದರ ಶೆಟ್ಟಿ, ಶಶಿಧರ, ಶಿವಾನಂದ, ವೆಂಕಟೇಶ್, ಕನಕರಾಜ್, ಪ್ರವೀಣ್, ಸದಾಶಿವ ಗೌಡ, ಚಾಲಕ ಕನಕರಾಜ್ ಕಾರ‍್ಯಾಚರಣೆಯಲ್ಲಿ ಪಾಲ್ಗೊಂಡರು.

ಆರೋಪಿಗಳ ಪತ್ತೆಗಾಗಿ ಕಾರ್ಡ್ ಚಳವಳಿ, ಪಂಜಿನ ಮೆರವಣಿಗೆ

Posted by JAYAKIRANA Kirana on | 0 comments | Leave a comment...

ಪಂಜಿಮೊಗರು ಜೋಡಿ ಕೊಲೆ
ಮಂಗಳೂರು: ಪಂಜಿಮೊಗರುವಿ ನಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದು ಎಂಟು ತಿಂಗಳು ಕಳೆದಿದ್ದು ಕೊಲೆಗಾರರನ್ನು ಬಂಧಿಸುವಲ್ಲಿ ವಿಫಲ ವಾಗಿರುವ ಪೊಲೀಸ್ ಇಲಾಖೆಯ ವಿರುದ್ಧ ನಿನ್ನೆ ಡಿವೈಎಫ್‌ಐ ಪ್ರತಿಭಟನೆ ನಡೆಸುವ ಮೂಲಕ ಕೊಲೆಯಾದ ತಾಯಿ, ಮಗಳನ್ನು ಮತ್ತೆ ಎದ್ದು ನಿಲ್ಲಿ ಸುವ ಪ್ರಯತ್ನ ಮಾಡಿದೆ. ೧೫ ದಿನಗಳಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಕಾರ್ಡ್ ಚಳವಳಿ ಮತ್ತು ಪಂಜಿನ ಮೆರವಣಿಗೆ ನಡೆಸುವ ಎಚ್ಚರಿಕೆಯನ್ನೂ ಸಂಘಟನೆ ನೀಡಿದೆ.
ನಿನ್ನೆ ಬೆಳಿಗ್ಗೆ ಪಂಜಿಮೊಗರು ವಿನಿಂದ ಪಾದಯಾತ್ರೆಯ ಮೂಲಕ ಹೊರಟ ಡಿವೈಎಫ್‌ಐ ಕಾರ್ಯಕರ್ತರು ಹಾಗೂ ಸ್ಥಳೀಯರು, ಮಧ್ಯಾಹ್ನ ಕಮಿಷನರ್ ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಫಿ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ರಝಿಯಾ ಮತ್ತು ಅವರ ಮಗಳು ಫಾತಿಮಾ ಝಿವಾರನ್ನು ಯಾವುದೇ ಭೂಗತ ಪಾತಕಿಗಳು ಹೊರದೇಶದಲ್ಲಿ ಕುಳಿತು ಕೊಲೆ ಮಾಡಿಸಿಲ್ಲ. ಆದರೂ ಹಾಡಹಗಲೇ ನಡೆದ ಕೊಲೆಯನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ಮಂಗಳೂರಿಗೆ ಪೊಲೀಸ್ ಕಮಿಷನರೇಟ್ ಬಂದ ಬಳಿಕ ಹಾಡಹಗಲೇ ಕೊಲೆಗಳು ನಡೆಯುತ್ತಿದ್ದು ಜನರು ಕಚೇರಿ, ಅಂಗಡಿಗಳಲ್ಲಿ ಕುಳಿತುಕೊಳ್ಳಲು ಹೆದರುತ್ತಿದ್ದಾರೆ. ಇದರಿಂದಾಗಿ ಜನರು ಇಲಾಖೆ ಮೇಲೆ ವಿಶ್ವಾಸ ಕಳೆದುಕೊ ಳ್ಳುತ್ತಿದ್ದು ಸ್ಥಳೀಯ ಪೊಲೀಸರಿಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗ ದಿದ್ದಲ್ಲಿ ಹಿರಿಯ ಅಧಿಕಾರಿಗಳು, ಸಿಓಡಿ ಅಥವಾ ಸಿಬಿಐಗೆ ವಹಿಸಲಿ ಎಂದ ಮುನೀರ್, ೧೫ ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ೧೫ ಸಾವಿರ ಕಾರ್ಡ್‌ಗಳನ್ನು ಗೃಹಮಂತ್ರಿಗೆ ಕಳುಹಿಸಲಾಗುವುದಲ್ಲದೆ, ನಗರದಲ್ಲಿ ಪಂಜಿನ ಮೆರವಣಿಗೆಯನ್ನೂ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ನಿನ್ನೆಯ ಪ್ರತಿಭಟನೆಗೆ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ಮತ್ತು ಎಸ್‌ಎಫ್‌ಐ ಬೆಂಬಲ ನೀಡಿತ್ತು.
ಪ್ರತಿಭಟನೆಯತ್ತ ತಲೆಹಾಕದ ಹಮೀದ್ ಕುಟುಂಬಸ್ಥರು!
ರಝಿಯಾ ಮತ್ತು ಫಾತಿಮಾ ಝಿವಾರ ಕೊಲೆ ನಡೆದ ಬಳಿಕ ಪೊಲೀ ಸರು ರಝಿಯಾರ ಗಂಡ ಹಮೀದ್ ರನ್ನು ಎತ್ತಾಕಿದ್ದರು. ಇದರಿಂದ ಕಂಗಾ ಲಾಗಿದ್ದ ಹಮೀದ್, ಪೊಲೀಸರು ತಮಗೆ ಮತ್ತು ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹರಿ ಹಾಯ್ದಿದ್ದರಲ್ಲದೆ ಮಂಪರು ಪರೀಕ್ಷೆ ಮಾಡುವಂತೆ ಸವಾಲು ಹಾಕಿದ್ದರು. ಇದಾದ ಬಳಿಕ ಪೊಲೀಸರು ಹಮೀದ್ ಮತ್ತು ಅವರ ಕುಟುಂ ಬಸ್ಥರ ವಿಚಾರಣೆಯನ್ನೇ ಬಿಟ್ಟಿದ್ದರು ಎನ್ನಲಾಗುತ್ತಿದೆ. ಆರಂಭದಲ್ಲಿ ಕೊಲೆಗಾರರನ್ನು ಬಂಧಿಸುವಂತೆ ಡಿವೈಎಫ್‌ಐ ಪ್ರತಿಭಟನೆ ನಡೆಸಿದಾಗ ಅದರಲ್ಲಿ ಭಾಗವಹಿಸಿದ್ದ ಹಮೀದ್ ಮತ್ತು ಕುಟುಂಬಸ್ಥರು ಒಂದೂವರೆ ತಿಂಗಳ ಹಿಂದೆ ಮನಪಾ ಎದುರು ನಡೆದ ಕಪ್ಪು ಬಾವುಟ ಪ್ರದರ್ಶನದತ್ತ ತಲೆಯನ್ನೂ ಹಾಕಿರಲಿಲ್ಲ. ನಿನ್ನೆ ನಡೆದ ಪ್ರತಿಭಟನೆಯಲ್ಲೂ ಅವರ ನೆರಳೂ ಕಾಣದಿರುವುದರ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ತುಂಬೆ ಡ್ಯಾಮ್ ವೀಕ್ಷಿಸಿದ ಮೇಯರ್

Posted by JAYAKIRANA Kirana on | 0 comments | Leave a comment...

ಮಂಗಳೂರು: ತುಂಬೆ ಅಣೆ ಕಟ್ಟಿನಲ್ಲಿ ನೀರಿನ ಪ್ರಮಾಣ ಕುಸಿತ ಗೊಂಡಿದ್ದು ಇದರಿಂದಾಗಿ ನಗರದಲ್ಲಿ ನೀರಿಗೆ ಬರ ಬರುವ ಆತಂಕ ಎದುರಾ ಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮೇಯ ರ್ ಗುಲ್ಜಾರ ಬಾನು ತುಂಬೆ ಅಣೆಕ ಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ನೀರಿನ ಪ್ರಮಾಣ ಕಡಿಮೆಯಾಗಿರು ವುದನ್ನು ಒಪ್ಪಿಕೊಂಡರಲ್ಲದೆ ೧೯೯೩ರಿಂದ ಇದುವರೆಗೆ ಇರುವ ನೀರಿನ ಪ್ರಮಾಣದ ಬಗ್ಗೆ ಎಲ್ಲಾ ವರದಿಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕಮಿಷನರ್ ಹರೀಶ್ ಕುಮಾರ್, ಅಣೆಕಟ್ಟಿನಲ್ಲಿ ನೀರು ಕಡಿಮೆ ಯಾಗಿದ್ದರೂ ಜನರು ಮಿತವಾಗಿ ಬಳಸಿದರೆ ಯಾವುದೇ ಸಮಸ್ಯೆ ಬಾರದು. ಅಷ್ಟಕ್ಕೂ ಸಮಸ್ಯೆ ಬಂದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುವುದು ಎಂದು ಅಭಯ ನೀಡಿದ್ದಾರೆ. ಅಲ್ಲದೆ ಎಂಆರ್‌ಪಿಎಲ್ ಮತ್ತು ಎಎಂಆರ್ ಅಣೆಕಟ್ಟಿನಿಂದ ಹೋಗುವ ನೀರನ್ನು ತಡೆಯುವ ಸಂಪೂರ್ಣ ಅಧಿಕಾರ ಜಿಲ್ಲಾಡಳಿತಕ್ಕೆ ಇದೆಯೆಂದು ಕಮಿಷನರ್ ಹೇಳಿದ್ದು ಇದು ಮುಂದಿನ ದಿನಗಳಲ್ಲಿ ಕೈಗಾರಿಕಾ ಕಂಪೆನಿಗಳಿಗೆ ಸರಬರಾಜಾಗುವ ನೀರಿಗೆ ಕಡಿವಾಣ ಬೀಳುವ ಸೂಚನೆಯೆಂದು ಬಿಂಬಿಸಲಾಗುತ್ತಿದೆ.

ಹೊಂಡಕ್ಕೆ ಬಿದ್ದ ಪಿಕಪ್

Posted by JAYAKIRANA Kirana on | 0 comments | Leave a comment...

ವಿಟ್ಲ: ಬಸ್‌ಗೆ ಸೈಡ್ ಕೊಡುವ ಭರದಲ್ಲಿ ಪಿಕಪ್ ವಾಹನವೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಗೋಳ್ತಮಜಲು ಸಮೀಪದ ಕುಂಟಿಪಾಪು ಎಂಬಲ್ಲಿ ನಿನ್ನೆ ನಡೆದಿದೆ.
ವಿಟ್ಲದಿಂದ ಕಲ್ಲಡ್ಕ ಮಾರ್ಗವಾಗಿ ಬಿ.ಸಿ. ರೋಡ್ ಕಡೆ ತೆರಳುತ್ತಿದ್ದ ಪಿಕಪ್ ಗೋಳ್ತಮಜಲು ಅಪಾಯಕಾರಿ ತಿರುವಿನಲ್ಲಿ ಖಾಸಗಿ ಬಸ್‌ಗೆ ಸೈಡ್ ಕೊಡುವ ಭರದಲ್ಲಿ ರಸ್ತೆ ಬದಿಯ ಮೋರಿಯ ಹೊಂಡಕ್ಕೆ ಬಿದ್ದಿದೆ. ಅದರ ಚಾಲಕ ಪವಾಡಸದೃಶ ಪಾರಾಗಿದ್ದಾನೆ.

ಸಕಲೇಶಪುರ: ಸ್ವಾಮಿಯಿಂದ ಬಾಲೆಗೆ ಗರ್ಭದಾನ!

Posted by JAYAKIRANA Kirana on | 0 comments | Leave a comment...

ಮಂಗಳೂರು: ವಂಚಕ ಸ್ವಾಮಿಯೊಬ್ಬ ೧೫ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಪೂಜೆ ನೆಪದಲ್ಲಿ ತನ್ನ ಮನೆಯಲ್ಲಿ ಇರಿಸಿಕೊಂಡು ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಸಕಲೇಶಪುರದ ಕಬ್ಬಿನಗದ್ದೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಬ್ಬಿನಗದ್ದೆ ಎಂಬಲ್ಲಿ ವಾಸವಾಗಿದ್ದ ಲವ(೨೩) ಎಂಬಾತ ತನ್ನ ಮನೆ ಸಮೀಪದ ಎಂಟನೇ ತರಗತಿ ಓದುತ್ತಿದ್ದ ೧೫ರ ಹರೆಯದ ಬಾಲಕಿಗೆ ಮಗು ಕರುಣಿಸಿದವನು. ಈತ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ನಂಬಿಸಿ ಜನರನ್ನು ನಂಬಿಸಿ ವಂಚಿಸುತ್ತಿದ್ದ ಎನ್ನಲಾಗಿದೆ. ಕಾವಿಧಾರಿಯಾಗಿ ಓಡಾಡುತ್ತಿದ್ದ ಈತ ಜನರಲ್ಲಿ ಭಯ ಹುಟ್ಟಿಸುತ್ತಿದ್ದ. ತನ್ನ ಮನೆ ಸಮೀಪದ ಬಾಲಕಿಯ ಮೇಲೆ ಕಣ್ಣು ಹಾಕಿದ್ದ ಆತ ಆಕೆಯ ದೈಹಿಕ ನ್ಯೂನತೆಯನ್ನೇ ಬಂಡವಾಳ ಮಾಡಿಕೊಂಡು 'ಆಕೆಯ ಮೈಮೇಲೆ ದೆವ್ವ ಆವರಿಸಿಕೊಂಡಿದೆ. ಆಷಾಢ ಮಾಸದಲ್ಲಿ ಆಕೆ ಮನೆಯಿಂದ ಹೊರಹೋಗಬಾರದು, ನನ್ನ ಸನ್ನಿಧಾನದಲ್ಲೇ ಆಕೆಯ ದೆವ್ವ ಬಿಡಿಸುತ್ತೇನೆ ಎಂದು ಆಕೆಯ ಮನೆಮಂದಿಯನ್ನು ನಂಬಿಸಿ ಬಾಲಕಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ.
ಕಳೆದ ವರ್ಷದ ಜುಲೈ ತಿಂಗಳ ಆರನೇ ತಾರೀಖಿನಿಂದ ಬಾಲಕಿಯನ್ನು ಹೆತ್ತವರು ಸ್ವಾಮಿಯ ಮನೆಯಲ್ಲೇ ಇರಿಸಿದ್ದು, ಪೂಜೆ ನೆಪದಲ್ಲಿ ಆತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ.
 ಬಾಲಕಿ ಗರ್ಭ ಧರಿಸಿದ್ದು ಅರಿವಾಗುತ್ತಲೇ ಆಕೆಯ ಗರ್ಭಪಾತಕ್ಕೂ ಮುಂದಾಗಿ ಆರೋಪಿ ಸಿಕ್ಕಿಬಿದ್ದಿದ್ದ. ಈ ವೇಳೆ ಊರಿನ ಜನರ ಮುಂದೆ ತಾನು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಸ್ವಾಮಿ ಲವನ ಮನೆಯವರು ಆತನನ್ನು ಬಚ್ಚಿಟ್ಟಿದ್ದಾರೆ ಎಂದು ದೂರಲಾಗಿದೆ. ದಿಕ್ಕು ಕಾಣದ ಬಾಲಕಿಯ ಹೆತ್ತವರು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಫೆ. ೨೪ರಂದು ಬಾಲಕಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ವಂಚಕ ಸ್ವಾಮಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಗದ್ದುಗೆ ಗುದ್ದಾಟ: ಏಪ್ರಿಲ್‌ನಲ್ಲಿ ಸಮಸ್ಯೆ ಪರಿಹಾರ

Posted by JAYAKIRANA Kirana on | 0 comments | Leave a comment...

ಸುರೇಶ ಕುಮಾರ್
ತುಮಕೂರು: ರಾಜ್ಯ ಬಿಜೆಪಿ ಯಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಏಪ್ರಿಲ್‌ನಲ್ಲಿ ಪೂರ್ಣ ವಿರಾಮ ಇಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ವಿಶ್ವಾಸವ್ಯ ಕ್ತಪಡಿಸಿದ್ದಾರೆ.
ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಕೇಂದ್ರ ವರಿಷ್ಠರ ಗಮನಕ್ಕೆ ತರಲಾಗಿದೆ, ರಾಜಕೀಯ ವಿದ್ಯಮಾನ ಗಳ ಬಗ್ಗೆ ಇತಿಶ್ರೀ ಹಾಡಲು ಪಕ್ಷದ ಹಿರಿಯರು ಹಾಗೂ ರಾಷ್ಟ್ರೀಯ ಮುಖಂಡರನ್ನು ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ರಾಜ್ಯದ ಪಕ್ಷದ ಹಾಗೂ ರಾಜ್ಯದಲ್ಲಾಗುತ್ತಿರುವ ಇಂತಹ ವಿದ್ಯಮಾನಗಳಿಗೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡರು ಏಪ್ರಿಲ್‌ನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಆಧುನಿಕ ತಂತ್ರಜ್ಞಾನ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಆಧುನಿಕ ತಂತ್ರ ಜ್ಞಾನ ಬಳಕೆ ಮಾಡಿಕೊಳ್ಳುವುದರ ಮೂಲಕ ಪದವಿಪೂರ್ವ ಪ್ರಶ್ನೆಪತ್ರಿಕೆಗಳ ಸೋರಿಕೆ ತಡೆಗಟ್ಟಲು ಕ್ರಮ ಜರುಗಿಸ ಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿಧಾನ ಸಭೆಯಲ್ಲಿ ಪ್ರಕಟಿಸಿದ್ದಾರೆ. ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಉಪನಾ ಯಕ ಟಿ.ಬಿ. ಜಯಚಂದ್ರ ಮಾಡಿದ ಪ್ರಸ್ತಾವಕ್ಕೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿ ಯವರು ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಮುಂದಿನ ದಿನ ಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾ ಗದಂತೆ ನೋಡಿಕೊಳ್ಳುವ ಭರವಸೆಯಿತ್ತರು.

ಯಶೋದಾ ಪ್ರಕರಣದ ವಿಚಾರಣೆ ಆರಂಭ

Posted by JAYAKIRANA Kirana on | 0 comments | Leave a comment...

ಮೋಹನಕುಮಾರ ವಿಚಾರಣೆ
ಮಂಗಳೂರು: ಸಯನೈಡ್ ಕಿಲ್ಲರ್ ಮೋಹನಕುಮಾರ ನಡೆಸಿರುವ ಸರಣಿ ಹತ್ಯಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮಂಗಳೂರು ತ್ವರಿತಗತಿ ನ್ಯಾಯಾಲಯದಲ್ಲಿ ಇಂದಿನಿಂದ ಮಡಂತ್ಯಾರಿನ ಬೊಗ್ರ ಪೂಜಾರಿ ಪುತ್ರಿ ಯಶೋದಾ ಎಂಬಾಕೆಯ ಸಾವಿನ ಕುರಿತು ಸಾಕ್ಷ ದಾಖಲಿಸುವ ಪ್ರಕ್ರಿಯೆ ಆರಂಭವಾಯಿತು.
ದೇವಸ್ಥಾನದಲ್ಲಿ ಪೂಜೆ ಇದೆ ಎಂದು ೨೦೦೯ರ ಸೆ.೨೩ರಂದು ಮಧ್ಯಾಹ್ನ ೧:೩೦ಕ್ಕೆ ಮನೆಯಿಂದ ಹೋದ ನನ್ನ ಪುತ್ರಿ ಯಶೋದಾ ಮರಳಿ ಬರಲಿಲ್ಲ ಎಂದು ಬೊಗ್ರ ಪೂಜಾರಿ ತಿಳಿಸಿದರು.
ಆಕೆ ಮನೆಯಿಂದ ಹೊgಗೆ ಹೋಗುವಾಗ ಮನೆಯಲ್ಲಿ ಇನ್ನೊಬ್ಬಳು ಪುತ್ರಿ ಸುಮಲತಾ ಮಾತ್ರ ಇದ್ದಳು. ಸಂಜೆ ನಾವು ಮನೆಗೆ ಬಂದಾಗ ಆಕೆ ಹೋಗಿರುವುದು ಗಮನಕ್ಕೆ ಬಂತು. ಪೂಜೆಗೆಂದು ಹೋದವಳು ಎರಡು ದಿನಗಳಾದರೂ ಮನೆಗೆ ಬಾರದಿದ್ದಾಗ ಬೇರೊಬ್ಬರ ಮೊಬೈ ಮೂಲಕ ಯಶೋಧಾಳ ಮೊಬೈಗೆ ಕರೆ ಮಾಡಿದಾಗ ಮೊಬೈಲನ್ನು ಆನಂದ ಎಂಬಾತ ರಿಸೀವ್ ಮಾಡಿ, ನಾನು ಯಶೋದಾಳನ್ನು ಮದುವೆಯಾಗಿದ್ದೇನೆ. ಎರಡು ದಿನ ಬಿಟ್ಟು ಮನೆಗೆ ಬರುತ್ತೇವೆ ಎಂದು ತಿಳಿಸಿದ್ದ ಆದರೆ ತಿಂಗಳಾದರೂ ಅವರು ಮನೆಗೆ ಬರಲಿಲ್ಲ ಎಂದು ತಿಳಿಸಿದರು. ಅವರಿಬ್ಬರು ಮದುವೆಯಾಗಿದ್ದಾರೆ ಎಂದು ನಂಬಿ ನಾವು ದೂರು ನೀಡಿರಲಿಲ್ಲ. ನಾಪತ್ತೆಯಾದ ಮರುದಿನ ಆಕೆಯನ್ನು ನನ್ನ ಸಹೋದರ ಜನಾರ್ದನ ಬಿ.ಸಿ.ರೋq ಬಳಿ ನೋಡಿದ್ದನಂತೆ. ಆ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ತಿಳಿಸಿದರು.
ಸುಮಾರು ಒಂದು ತಿಂಗಳ ಬಳಿಕ ಪತ್ರಿಕೆಗಳಲ್ಲಿ ಸಯನೈಡ್ ಹತ್ಯಾ ಪ್ರಕರಣದ ವರದಿಗಳು ಬಂದಾಗ ಅದರಲ್ಲಿ ನನ್ನ ಪುತ್ರಿ ಯಶೋದಾಳ ಭಾವಚಿತ್ರವೂ ಇತ್ತು. ಆಗ ಯಶೋದಾ ಹತ್ಯೆಯಾಗಿರುವುದು ಅರಿವಿಗೆ ಬಂತು ಎಂದು ತಿಳಿಸಿದರು.
ಕಣ್ಣೀರಿಟ್ಟ ತಂದೆ: ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುತ್ತಿದ್ದ ಬೊಗ್ರ ಪೂಜಾರಿ ಯಶೋದಾಳ ಭಾವಚಿತ್ರ ಗುರುತಿಸುವ ಸಂದರ್ಭ ಬಂದಾಗ ಭಾವ ಚಿತ್ರ ನೋಡಿ ದುಃಖ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಅವರನ್ನು ಆಸನದಲ್ಲಿ ಕುಳ್ಳಿರಿಸಿ ಸಾಕ್ಷಿ ಹೇಳಿಕೆಗಳನ್ನು ದಾಖಲು ಮಾಡಲಾಯಿತು.

ಬೈಕಿಗೆ ಅಡ್ಡಬಂದ ನಾಯಿ: ಸವಾರ ಮೃತ್ಯು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಬೈಕಿಗೆ ನಾಯಿ ಅಡ್ಡಬಂದ ಪರಿಣಾಮ ಬೈಕ್ ಸವಾರರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮಾಳ ಮುಳ್ಳೂರು ದರ್ಖಾಸು ಮನೆಯ ರಾಜು ದೇವಾಡಿಗ(೪೭) ಎಂಬವರು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು. ಮಾ. ೨೪ರ ರಾತ್ರಿ ೮.೧೫ರ ವೇಳೆಗೆ ರಾಜು ದೇವಾಡಿಗ ಹಾಗೂ ರಾಜು ದೇವಾಡಿಗ ಇವರಿಬ್ಬರು ಬೈಕ್‌ನಲ್ಲಿ ಬಜಗೋಳಿ ಕಡೆಗೆ ಬರುತ್ತಿದ್ದಾಗ ಕಡಾರಿ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ನಾಯಿಯೊಂದು ದಾಟಿತು. ಇದರಿಂದ ನಿಯಂತ್ರಣ ತಪ್ಪಿ ಬೈಕ್ ಸವಾರರಿಬ್ಬರು ಡಾಮರು ರಸ್ತೆಗೆ ಎಸೆಯಲ್ಪಟ್ಟರು. ಗಾಯಾಳುಗಳಿಬ್ಬರಿಗೆ ತಾಲೂಕು ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ತೀವ್ರ ತರದಲ್ಲಿ ಗಾಯಗೊಂಡಿದ್ದ ರಾಜು ದೇವಾಡಿಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ರವಿವಾರದಂದು ಮೃತಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.

ನೀರನ್ನು ಮಿತವಾಗಿ ಬಳಸಲು ಜಿಲ್ಲಾಧಿಕಾರಿ ಮನವಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ನೇತ್ರಾವತಿಯ ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿ ನೀರನ್ನು ಮಿತವಾಗಿ ಬಳಸುವಂತೆ ದ. ಕ. ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೃಷಿ ಚಟುವಟಿಕೆಗಳಿಗಾಗಿ ನದಿಯಿಂದ ಪಂಪ್‌ಗಳ ಮೂಲಕ ನೀರೆತ್ತದಂತೆ ಕೂಡ ಅವರು ಕೃಷಿಕರಲ್ಲಿ ಮನವಿ ಮಾಡಿದ್ದಾರೆ.

ಮನಪಾದಲ್ಲಿ ವಿರೋಧ ಪಕ್ಷದವರಿಲ್ಲದೆ ಬಜೆಟ್ ಮಂಡನೆಗೆ ಸಿದ್ಧತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿ ವಿರೋಧ ಪಕ್ಷದವರು ಮೇಯರ್ ಪಟ್ಟ ಗಿಟ್ಟಿಸಿದ್ದರೆ, ವಿರೋಧ ಪಕ್ಷವೇ ಈಗ ಆಡಳಿತ ಪಕ್ಷವಾಗಿದೆ. ಬಹುಮತ ಇರುವ ಬಿಜೆಪಿಯ ಅಸಹ ಕಾರ ಮುಂದುವರಿದಿದೆ. ನಾವು ವಿರೋಧ ಪಕ್ಷವಾಗಿ ಇರುತೇವೆ ಎಂದು ಹೇಳಿದ್ದ ಜೆಡಿಎಸ್, ಕಮ್ಯುನಿಸ್ಟ್ ಹಾಗೂ ಪಕ್ಷೇತರರು ಕಾಂಗ್ರೆಸ್‌ನೊಂದಿಗಿದ್ದಾರೆ, ಅಂದರೆ ಮನಪಾದ ಮುಂಬರುವ ಬಜೆಟ್‌ನ್ನು ವಿರೋಧ ಪಕ್ಷದವರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಇಲ್ಲದೆಯೇ ಮಂಡಿಸುವ ಸಿದ್ಧತೆ ನಡೆದಿದೆ.
ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರು ಮನಪಾ ಬಜೆಟ್ ಮಂಡಿಸುವುದು ವಾಡಿಕೆ. ಆದರೆ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಸುಗಮ ವಾಗಿ ನಡೆಯುವ ಬಗ್ಗೆ ಸಂದೇಹ ಇರುವುದರಿಂದ ಅಧ್ಯಕ್ಷರು ಇಲ್ಲದೆಯೇ ಬಜೆಟ್ ಮಂಡಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಈಗ ಬಜೆಟ್ ಮಂಡಿಸ ಲಿರುವವರು ಕಾಂಗ್ರೆಸಿಗರಾದರೂ ಅದು ಬಿಜೆಪಿಯ ಆಡಳಿತಕ್ಕೆ ಪೂರಕವಾದ ಬಜೆಟ್ ಆಗಿರಲಿದೆ ಎಂಬುದು ಗಮನಿಸ ಬೇಕಾದ ಅಂಶ. ಬಜೆಟ್ ಮಂಡನೆಗೂ ಪೂರ್ವದಲ್ಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಯ ಅನುಮತಿ ಪಡೆಯ ಬೇಕಾಗಿ ರುತ್ತದೆ. ಬಿಜೆಪಿಯ ಪ್ರವೀಣ ಮೇಯರ್ ಆಗಿದ್ದ ಅವಧಿಯಲ್ಲಿಯೆ ಬಿಜೆಪಿಯವರು ಚುನಾವಣೆಯ ಸಿದ್ಧತೆಯ ಬಜೆಟ್ ಸಿದ್ಧಪಡಿಸಿ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅನುಮೋದನೆ ಪಡೆದಿದ್ದರು. ಆದುದ ರಿಂದ ಕಾಂಗ್ರೆಸಿಗರಿಗೆ ಈ ಬಾರಿ ಬಜೆಟ್ ಮಂಡನೆ ತಲೆನೋವಿನ ವಿಷಯ ಆಗುತ್ತಲೇ ಇಲ್ಲ. ಲೆಕ್ಕ ಪತ್ರ ಸ್ಥಾಯಿ ಸಮಿತಿಯ ಅನುಮೋದನೆ ಪಡೆಯದೇ ಇದ್ದಿದ್ದರೆ ಹೊಸ ಸ್ಥಾಯಿ ಸಮಿತಿ ರಚನೆ ಯಾಗುವವರೆಗೂ ಕಾಯಲೇ ಬೇಕಾದ ಅನಿವಾರ್ಯತೆ ಇತ್ತು. ಆದರೆ ಕಾಂಗ್ರೆಸ್‌ನ ಅದೃಷ್ಟ ಚೆನ್ನಾಗಿದೆ ಎಲ್ಲವೂ ಅವರಿಗೆ ಅನಾಯಾಸವಾಗಿಯೇ ಸಿಗುತ್ತಿದೆ.
ಆಕಸ್ಮಿಕವಾಗಿ ಕಾಂಗ್ರೆಸ್‌ನ ಗುಲ್ಜಾ ರ್‌ಬಾನು ಮೇಯರ್ ಆಗಿ ಆಯ್ಕೆ ಯಾದ ಬಳಿಕ ಕಳೆದ ಮಾ.೧೬ರಂದು ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯ ಸಭೆ ಕರೆಯಲಾಗಿತ್ತು. ಆದರೆ ಅಂದಿನ ಸಭೆಗೆ ಬಿಜೆಪಿಯ ಸದಸ್ಯರು ಹಾಜ ರಾಗಿರಲಿಲ್ಲ. ಕೋರಂ ಕೊರತೆಯಾಗಿ ಸಭೆ ಮುಂದೂಡಲ್ಪಟ್ಟಿತ್ತು. ಮಾ.೨೪ ರಂದು ನಡೆದ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯ ಎರಡನೆ ಸಭೆಗೂ ಕೋರಂ ಕೊರತೆ ಸೃಷ್ಟಿಸಲಾಯಿತು. ಮತ್ತೆ ಸಭೆ ಮುಂದೂಡಲ್ಪಟ್ಟಿದೆ. ಎ.೨ರಂದು ನಡೆಯುವ ಮೂರನೆಯ ಸಭೆಯಲ್ಲೂ ಬಿಜೆಪಿಯ ಸದಸ್ಯರು ಹಾಜರಾಗದಿದ್ದರೆ, ಈಗಿರುವ ಸ್ಥಾಯಿ ಸಮಿತಿಯ ಸದಸ್ಯತ್ವ ರದ್ದಾಗುತ್ತದೆ. ಮುಂದಿನ ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ಮೈಸೂರು ಉಪವಿಭಾಗಿಯ ಆಯುಕ್ತರ ಉಪ ಸ್ಥಿತಿಯಲ್ಲಿಯೇ ನಡೆಯಬೇಕಿದೆ. ಆದರೆ ಸ್ಥಾಯಿ ಸಮಿತಿಯ ಸದಸ್ಯರ ಅಧ್ಯಕ್ಷರ ಆಯ್ಕೆಯವರೆಗೂ ಕಾಯದೆ ಮಾ.೩೦ರಂದು ಬಜೆಟ್ ಸಭೆ ನಡೆಸಿ ಮಾ.೩೧ರಂದು ಮನಪಾ ಪರಿಷತ್ ನಡೆಸಲಾಗುತ್ತದೆ ಎಂದು ಕಾಂಗ್ರೆಸಿಗರು ಹೇಳಿದ್ದು ಅದಕ್ಕಾಗಿ ನೋಟಿಸ್‌ನ್ನು ಈಗಾಗಲೇ ಸದಸ್ಯರಿಗೆ ನೀಡಿದ್ದಾರೆ.
ಪರಿಷತ್ ಸಭೆಗೂ ಬಿಜೆಪಿ ಯವರು ಬಾರದಿದ್ದರೂ ತೊಂದರೆ ಇಲ್ಲ. ಜೆಡಿಎಸ್, ಸಿಪಿಎಂ ಮತ್ತು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ನಾವು ಆಡಳಿತ ನಡೆಸುವಷ್ಟು ಶಕ್ತಿ ಪಡೆದಿದ್ದೇವೆ. ಇದರಿಂದ ಬಜೆಟ್ ಮಂಡನೆಗೆ ಯಾವ ಅಡೆತಡೆಯೂ ಆಗದು. ಲೆಕ್ಕಪತ್ರ ಸ್ಥಾಯಿ ಸಮಿತಿ ಯಿಂದ ಅನುಮೋದನೆ ಪಡೆದ ಬಜೆಟ್ ಸಭೆಯಲ್ಲಿ ಓದುವುದಷ್ಟೇ ಬಾಕಿ ಇದೆ. ಬಜೆಟ್ ಮಂಡನೆಯ ಅಧಿಕಾರ ಮೇಯರ್‌ಗೆ ಇರುವುದರಿಂದ ಮೇಯ ರರ ಅನುಮತಿ ಪಡೆದು ಯಾರು ಬೇಕಾದರೂ ಬಜೆಟ್ ಓದಬಹುದು ಎಂದು ಕಾಂಗ್ರೆಸ್ ಸದಸ್ಯರು ಅಧಿಕಾರ ಮತ್ತು ಕಾನೂನಿನ ಮಾತುಗಳನ್ನು ಆಡುತ್ತಿದ್ದಾರೆ. ಮೇಯರ್ ಆಯ್ಕೆ ಕಾನೂನು ಬಾಹಿರ ಎಂದು ಹೇಳುವ ಬಿಜೆಪಿ ಈಗಾ ಗಲೇ ಹೈಕೋರ್ಟ್ ಮೆಟ್ಟಿಲು ಏರಿದೆ. ನ್ಯಾಯ ತನ್ನ ಪg ವಾಗಿ ಬರು ತ್ತದೆ ಎಂಬ ವಿಶ್ವಾಸ ಬಿಜೆಪಿಗರಲ್ಲಿದೆ. ಅದಕ್ಕಾಗಿ ಆಡಳಿತಗಾ ರರೊಂದಿಗೆ ಅಸಹಕಾರ ಮುಂದು ವರಿದಿದೆ. ಮೇಯರ್ ಆಯ್ಕೆ ಪ್ರಕರಣ:
ತೀರ್ಪು ಎಪ್ರಿಲ್ ಮೂರಕ್ಕೆ
ಮನಪಾ ಮೇಯರ್ ಆಯ್ಕೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಿದ್ದು ನಿನ್ನೆ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ತೀರ್ಪನ್ನು ಎಪ್ರಿಲ್ ಮೂರಕ್ಕೆ ಕಾದಿರಿಸಲಾಗಿದೆ.
ಮನಪಾ ಮೇಯರ್ ಆಯ್ಕೆ ಸಂದರ್ಭ ಬಿಜೆಪಿ ಅಭ್ಯರ್ಥಿ ನೀಡಿದ್ದ ಜಾತಿ ಪ್ರಮಾಣ ಪತ್ರ ನಿಗದಿತ ಫಾರಂನಲ್ಲಿಲ್ಲದ ಕಾರಣ ಕಾಂಗ್ರೆಸ್‌ನ ಗುಲ್ಜಾರ ಬಾನು ಅನಿರೀಕ್ಷಿತವಾಗಿ ಮೇಯರ್ ಪಟ್ಟ ಅಲಂಕರಿಸಿದ್ದರು. ಇದರಿಂದ ಮುಖಭಂಗಕ್ಕೊಳಗಾಗಿದ್ದ ಬಿಜೆಪಿ ಮುಖಂಡರು ಚುನಾವಣಾಧಿಕಾರಿ ಮಾಡಿದ ಎಡವಟ್ಟಿನಿಂದ ಪಕ್ಷಕ್ಕೆ ಅನ್ಯಾಯವಾಗಿದೆ ಎಂದು ಕ್ಯಾತೆ ತೆಗೆದಿದ್ದಲ್ಲದೆ ಪ್ರಕರಣವನ್ನು ಹೈಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದರು.
ಇದೇ ವೇಳೆ ಕಾಂಗ್ರೆಸ್ ಪಕ್ಷವೂ ಅಧಿಕಾರಿಯ ಕ್ರಮವನ್ನು ಸಮರ್ಥಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು ನಿನ್ನೆ ಬೆಳಿಗ್ಗೆಯೇ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮುಗಿದಿದ್ದು ಸಂಜೆ ತೀರ್ಪು ಹೊರಬರುವ ನಿರೀಕ್ಷೆ ಇಡಲಾಗಿತ್ತು. ಆದರೆ ನ್ಯಾಯಾಧೀಶರು ತೀರ್ಪನ್ನು ಎಪ್ರಿಲ್ ಮೂರಕ್ಕೆ ಮುಂದೂಡಿದ್ದಾರೆ. ಕಾಂಗ್ರೆಸ್ ಪರವಾಗಿ ಅಶೋಕ್ ಹಾರ‍್ನಳ್ಳಿ ಮತ್ತು ಬಿಜೆಪಿ ಪರವಾಗಿ ಜಯಕುಮಾರ್ ವಾದಿಸಿದ್ದರು. ತೀರ್ಪು ಕಾಂಗ್ರೆಸ್ ಪರವಾಗಿ ಬರಲಿದೆ ಎಂದು ಮಾಜಿ ಮೇಯರ್ ಅಶ್ರಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೆರಿಗೆ ಕಳ್ಳ ಬಿಲ್ಡರ್‌ಗಳ ವಿರುದ್ಧ ಕಠಿಣ ಕ್ರಮ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರಿನ ಬಿಲ್ಡರ್‌ಗಳು ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಬಿಲ್ಡರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ, ಪಣಜಿ ಆದಾಯ ತೆರಿಗೆ ಮುಖ್ಯ ಆಯುಕ್ತ ದಿಲೀಪ್‌ಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಆದಾಯ ತೆರಿಗೆ ಸೇವಾ ಕೇಂದ್ರದ ಉದ್ಘಾಟನೆಯ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಆದಾಯ ತೆರಿಗೆ ಸಂಗ್ರಹದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದು ಕೆಲ ವರ್ಷಗಳಿಂದ ಗಮನಕ್ಕೆ ಬಂದಿದ್ದು ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಮಾಸಿಕ ವೇತನ ಪಡೆಯುವ ಅಧಿಕಾರಿಗಳು ಮತ್ತು ನೌಕರರು ಆದಾಯ ತೆರಿಗೆಯನ್ನು ಕ್ರಮವಾಗಿ ಸಲ್ಲಿಸುತ್ತಾರೆ. ಆದರೆ ಭಾರೀ ಬಿಲ್ಡರ್‌ಗಳು ನೆಪಗಳನ್ನು ಹೇಳಿ ತೆರಿಗೆ ಪಾವತಿಯ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಬೃಹತ್ ಪ್ರಮಾಣದ ಲಾಭ ಪಡೆಯುವ ಇವರು ತೆರಿಗೆ ಸಲ್ಲಿಕೆಯಿಂದ ದೂರ ಉಳಿಯುವುದಾದರೂ ಏಕೆ ಎಂದು ಅವರ ಪ್ರಶ್ನಿಸಿದರು.

ಕಂದಡ್ಕ ಅಪಘಾತ: ಚಾಲಕನ ವಿರುದ್ಧ ಕೇಸು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಗ್ಗಜಗ್ಗಾಟ ನಡೆಯುತ್ತಿದ್ದ ಸ್ಥಳದಲ್ಲಿ ಗುಂಪು ಸೇರಿದ್ದ ಜನರ ಮಧ್ಯಕ್ಕೆ ಪಿಕ್‌ಅಪ್ ನುಗ್ಗಿಸಿ ಇಬ್ಬರ ಸಾವಿಗೆ ಕಾರಣನಾದ ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪಿಕ್‌ಅಪ್ ಚಾಲಕ ದೇವದಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಮಧ್ಯೆ ಅಪಘಾತದಲ್ಲಿ ಮೃತಪಟ್ಟ ಯುವಕ ಮತ್ತು ಬಾಲಕಿಯ ಅಂತ್ಯ ಸಂಸ್ಕಾರ ನಡೆಸಲಾಯಿತು.
ಘಟನೆಯಲ್ಲಿ ಮೃತಪಟ್ಟ ಸುಳ್ಯ ಮುಂಡೂಕಜೆಯ ಯುವಕ ಗೋಪಾಲಕೃಷ್ಣ (೨೩), ಕಂದಡ್ಕದ ಪನ್ನೀರ್‌ಸೆಲ್ವಂ ಮತ್ತು ಸೆಲ್ವಿ ದಂಪತಿಗಳ ಪುತ್ರಿ ಸುಶ್ಮಿತಾ (೧೦) ರಿಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು.
ಘಟನೆಯಲ್ಲಿ ಸುಶ್ಮಿತಾ ಸ್ಥಳದಲ್ಲೇ ಮೃತರಾಗಿದ್ದರೆ ಗೋಪಾಲಕೃಷ್ಣ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು.

ಉಡುಪಿ: ಮಾ.೨೯, ೩೦ರಂದು ಕರೆಂಟಿಲ್ಲ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೇಮಾರಿನ ವಿದ್ಯುತ್ ಸ್ವೀಕರಣೆ ಕೇಂದ್ರದ ಶಕ್ತಿ ಪರಿವರ್ತಕ ಕೇಂದ್ರದಲ್ಲಿ ಮಾ.೨೯ಹಾಗೂ ೩೦ರಂದು ಕಾಮಗಾರಿ ನಡೆಯಲಿದ್ದು, ಅಂದು ಬೆಳಗ್ಗೆ ೧೦ಗಂಟೆಯಿಂದ ಸಂಜೆ ೫ಗಂಟೆಯವರೆಗೆ ಉಡುಪಿ ಜಿಲ್ಲಾದ್ಯಂತ ಅನಿಯಮಿತ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಹೆಣ್ಣುಮಗುವಿಗೆ ಜನ್ಮ: ಪತ್ನಿಯನ್ನು ಜೀವಂತ ದಹಿಸಿದ ಪತಿ ಮಹಾಶಯ

Posted by JAYAKIRANA Kirana on | 0 comments | Leave a comment...

ಬಹರಂಪುರ (ಪ.ಬಂಗಾಳ): ಮುರ್ಷಿದಾಬಾದ್ ಜಿಲ್ಲೆಯ ಖಾರ್‌ಗ್ರಾಮ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಒಂದರ ನಂತರ ಮತ್ತೊಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆಕೆಯನ್ನು ಜೀವಂತವಾಗಿ ದಹನ ಮಾಡಿದ ಹೃದಯ ವಿದ್ರಾಹಕ ಘಟನೆ ನಡೆದಿರಿವುದಾಗಿ ತಿಳಿದು ಬಂದಿದೆ.
೨೫ ವರ್ಷ ವಯಸ್ಸಿನ ರೂಪಾಲಿ ಬಿಬಿ ಎನ್ನುವ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಕುಟುಂಬದವರು ಹೆಣ್ಣು ಮಕ್ಕಳು ಹೆತ್ತಿದ್ದಕ್ಕಾಗಿ ಆಕ್ರೋಶ ವ್ಯಕ್ತಪಡಿಸಿ ಜೀವಂತವಾಗಿ ದಹಿಸಿದ್ದಾರೆ. ಆಕೆಯ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ತಮ್ಮ ಮಗಳಾದ ರೂಪಾಲಿ ಬಿಬಿಯನ್ನು ಜೀವಂತವಾಗಿ ದಹಿಸಿ ಹತ್ಯೆ ಮಾಡಲಾಗಿದೆ ಎಂದು ರೂಪಾಲಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ರೂಪಾಲಿ ಪತಿ ಮತ್ತು ಆತನ ಕುಟುಂಬದವರು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುಮಾ ಯೂನ್ ಕಬೀರ್ ಹೇಳಿದ್ದಾರೆ.

ಇಂದು ಅಕಾಡೆಮಿ ಚಾವಡಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಇಂದು ಮಧ್ಯಾಹ್ನ ೨:೩೦ಕ್ಕೆ ಅಕಾಡೆಮಿ ಚಾವಡಿಯಲ್ಲಿ ಕೂಟ-ಸನ್ಮಾನ, ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ತುಳು ರಂಗಭೂಮಿಯ ಬೆಳವಣಿಗೆ ಕುರಿತು ಸಂವಾದ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ವಹಿಸಲಿದ್ದಾರೆ. ಅತಿಥಿ ಗಳಾಗಿ ರಂಗಭೂಮಿ ನಿರ್ದೇಶಕ ಮನು ಇಡ್ಯ, ಕಲಾವಿದ ಆರ್.ಕೆ.ಉಳ್ಳಾಲ್, ನಾಟಕ ರಚನೆಗಾರ ಕೆ.ವಿ.ಶೆಟ್ಟಿ ಕದ್ರಿ, ಸಂಜೀವ ಎನ್.ಎಸ್. ಅಡ್ಯಾರ್, ಕಲಾ ವಿದೆ ರೋಹಿಣಿ ಜಗರಾಂ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ.ಶೆಟ್ಟಿ. ಸಂಘಟಕ ಲೀಲಾಧರ ಶೆಟ್ಟಿ, ಕಾಪು, ನಿರ್ದೇಶಕ ಜಗದೀಶ ಶೆಟ್ಟಿ ಕೆಂಚನಕೆರೆ ಭಾಗವಹಿಸ ಲಿದ್ದಾರೆ. ಹಿರಿಯ ಕಲಾವಿದ ಆರ್.ಕೆ. ಮಂಗಳೂರು ಅವರಿಗೆ ಚಾವಡಿ ಸನ್ಮಾನ ನಡೆಯಲಿದ್ದು, ಒರಿಯ ರ್ದೊರಿ ಅಸಲ್ ಬೆಳ್ಳಿಹಬ್ಬದ ಸಾಧನೆ ಗಾಗಿ ವಿಜಯ ಕುಮಾರ್ ಕೊಡಿ ಯಾಲ್ ಬೈಲ್‌ಗೆ 'ತುಳುನಾಡ್‌ದ ಬಿರ್ಸೆ' ಪುರಸ್ಕಾ ರ ಕೊಟ್ಟು ಗೌರವಿಸುವುದಾಗಿ ಪ್ರಕಟಣೆ ತಿಳಿಸಿದೆ.

ಮಾರುತಿ ಮುಕ್ಕ ತಂಡಕ್ಕೆ ನಂದಿನಿ ಟ್ರೋಫಿ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ನಂದಿನಿ ಫ್ರೆಂಡ್ಸ್ ಅರಂದ್ ಇದರ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಪಡು ಪಣಂಬೂರು ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ನಡೆಯಿತು. ಪಂದ್ಯಾಟವನ್ನು ಮುಲ್ಕಿ ಸೀಮೆ ಅರಸ ರಾದ ದುಗ್ಗಣ್ಣ ಸಾವಂತರು ಉದ್ಘಾ ಟಿಸಿದರು. ಫೈನಲ್ ಪಂದ್ಯದಲ್ಲಿ ಮಾರುತಿ ಮುಕ್ಕ ತಂಡವು ಫ್ರೆಂಡ್ಸ್ ಕೊಪ್ಪಲ ತಂಡವನ್ನು ಸೊಲಿಸಿ ನಂದಿನಿ ಟ್ರೋಫಿ, ೬,೬೬೬ ನಗದನ್ನು ಗೆದ್ದುಕೊಂಡಿತು ಮತ್ತು ಫ್ರೆಂಡ್ಸ್ ಕೊಪ್ಪಲ ತಂಡವು ನಂದಿನಿ ಟ್ರೋಫಿ ಹಾಗೂ ೪,೪೪೪ ನಗದನ್ನು ಪಡೆದುಕೊಂಡಿತು.
ಸಂಜೆ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ರಾಜೇಶ್ ಶೆಟ್ಟಿ, ಯಾದವ ದೇವಾಡಿಗ, ವಿನೋದ್ ಬೆಳ್ಳಾಯರು, ಮಹಾಬಲ ಸಾಲಿಯಾನ್ ಮತ್ತು ಜೀವನ್ ಪ್ರಕಾಶ್, ಪುರುಷೋತ್ತಮ ದೇವಾಡಿಗ ಮುಕ್ಕ, ಪ್ರೇಮನಾಥ್ ಸಾಲ್ಯಾನ್ ಅಗ್ಗಿದಕಳಿಯ, ರಾಘು ದೇವಾಡಿಗ, ಲಕ್ಷ್ಮಣ ದೇವಾಡಿಗ ಮತ್ತು ರೋಶನ್ ಉಪಸ್ಥಿತರಿದ್ದರು.

ಟ್ಯಾಲೆಂಟ್ ಮೀಲಾದ್ ಪ್ರಶಸ್ತಿ ಪ್ರದಾನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಟ್ಯಾಲೆಂಟ್ ಮೀಲಾದ್ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪುರಭವನದಲ್ಲಿ ನಡೆಯಿತು. ಪುತ್ತೂರು ಕಲ್ಲೇಗ ಜುಮಾ ಮಸೀದಿಯ ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು. ಐಜಿಪಿ ನಿಸಾರ್ ಅಹ್ಮದ್, ಸಂತ ಅಲೋಶಿಯಸ್ ಲೆಬೊರೇಟರಿ ಆಫ್ ಅಪ್ಲೈಡ್ ಬಯಾಲಜಿಯ ನಿರ್ದೇಶಕ ಫಾ.ಲಿಯೋ ಡಿಸೋಜ, ಖಲೀಲ್ ಅಹ್ಮದ್, ಅಹಿಂದ ಗೌರವಾಧ್ಯಕ್ಷ ವಾಸುದೇವ ಬೋಳೂರು, ಎ.ಹಖ್. ಅಸ್ಸಾದಿ, ಅಬ್ದುಲ್ ಖಾದರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ೧೯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ರಿಗೆ ಸನ್ಮಾನ ನಡೆಯಿತು. ಯು.ಬಿ. ಮಹಮ್ಮದ್ ಸ್ವಾಗತಿಸಿ, ಮಹಮ್ಮದ್ ಆಲಿ ಕಾರ್ಯಕ್ರಮ ನಿರೂಪಿಸಿದರು.
ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಮುಹಮ್ಮದ್ ಆರಿಫ್, ಮಂಗಳೂರಿಯನ್ ಡಾಟ್ ಕಾಂ ಮಾಲಕಿ ವಾಲೆಟ್ ಪಿರೇರಾ, ವಾರ್ತಾಭಾರತಿ ಪತ್ರಿಕೆಯ ವರದಿಗಾರ ಪುಷ್ಪರಾಜ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಮಚ್ಚೇಂದ್ರನಾಥ್ ಪಾಂಡೇಶ್ವರ್‌ಗೆ ಸನ್ಮಾನ

Posted by JAYAKIRANA Kirana on | 0 comments | Leave a comment...

ಮಂಗಳೂರು ಪುರಭವನದಲ್ಲಿ ನಡೆದ ಬಂಗಾರ‍್ದ ಕುರಲ್ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಚಿತ್ರಕ್ಕೆ ಸಂಭಾಷಣೆ ಬರೆದ ಹಿರಿಯ ನಾಟಕಕಾರ ಮಚ್ಚೇಂದ್ರನಾಥ ಪಾಂಡೇಶ್ವರ್ ಅವರನ್ನು ಸನ್ಮಾನಿಸಲಾಯಿತು. ರಾಮ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಜಯನಾಥ ಶೆಟ್ಟಿ, ಅಜಿತ್ ಕುಮಾರ್ ರೈ, ಡಾ. ಹನ್ಸರಾಜ್ ಆಳ್ವ ಉಪಸ್ಥಿತರಿದ್ದರು.

ಪಾರಾಮೌಂಟ್ ಎಕ್ಸೆಲೆನ್ಸಿಯಾ ಲಕ್ಸುರಿ ವಸತಿ ಸಮುಚ್ಚಯಕ್ಕೆ ನಾಳೆ ಶಿಲಾನ್ಯಾಸ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಾರಾಮೌಂಟ್ ರಿಯಾಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಪಂಪ್‌ವೆಲ್‌ನ ಫಿಶ್‌ರೀಸ್ ಕಾಲೇಜು ಹತ್ತಿರ ಹಮ್ಮಿಕೊಂಡಿರುವ ಪಾರ ಮೌಂಟ್ ಎಕ್ಸೆಲೆನ್ಸಿಯಾ ಲಕ್ಸುರಿ ವಸತಿ ಸಮುಚ್ಚಯ ಯೋಜನೆಗೆ ನಾಳೆ ಮಾ. ೨೮ರಂದು ಶಿಲಾನ್ಯಾಸ ನೆರ ವೇರಲಿದೆ.
ಐದು ಮಹಡಿಗಳ ಕಟ್ಟಡ ೮೫ ಡಿಲಕ್ಸ್ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಎರಡು ಮತ್ತು ಮೂರು ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ಹೊಂದಿದೆ. ಕಟ್ಟಡದ ನೆಲ ಮಹಡಿಯನ್ನು ವಾಹನ ಪಾರ್ಕಿಂಗ್‌ಗೆ ಮೀಸಲಿರಿಸಲಾಗಿದ್ದು, ಸ್ವಯಂ ಚಾಲಿತ ಲಿಫ್ಟ್, ಗ್ರಾನೈಟ್‌ನಿಂದ ನಿರ್ಮಿಸಲಾದ ವಿಶಾಲವಾದ ಲಾಬಿ, ಉತ್ತಮ ಜನರೇಟರ್ ವ್ಯವಸ್ಥೆಯ ಆಕರ್ಷಕ ವಿನ್ಯಾಸದೊಂದಿಗೆ ಯೋಜನೆ ನಿರ್ಮಾಣಗೊಳ್ಳಲಿದೆ.
ಬಜ್ಪೆಯ ಪ್ರಮುಖ ರಸ್ತೆಯಲ್ಲಿ ಕೈಗೊಂಡಿರುವ ಮೂರು ಲೇಔಟ್ ಯೋಜನೆಗಳು ಕಾರ್ಯರೂಪ ದಲ್ಲಿದ್ದು, ಸಂಸ್ಥೆಯ ಚೊಚ್ಚಲ ಜಂಟಿ ಯೋಜನೆಯಾದ ಕುಲಶೇಖರದ ವಸತಿ ಸಮು ಚ್ಚಯದ ಕಾರ್ಯ ಯೋಜನೆಯು ಮುಕ್ತಾಯ ಹಂತ ದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆ ಗೊಳ್ಳಲಿದೆ ಎಂದು ಸಂಸ್ಥೆಯ ಪಾಲು ದಾರರಾದ ಲುವಿಸ್ ಲೋಬೊ, ದೀಪಕ್ ಮೊಂತೇರೊ ಹಾಗೂ ರೊನಾಲ್ಡ್ ಮೊಂತೆರೊ ತಿಳಿಸಿದ್ದಾರೆ.

ಕೇಂದ್ರ ಸಚಿವ ಸ್ಥಾನದತ್ತ ಜಯಪ್ರಕಾಶ್ ಹೆಗ್ಡೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಜಯಪ್ರಕಾಶ್ ಹೆಗ್ಡೆಯವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಒದಗಿಸುವ ಪ್ರಯತ್ನಗಳು ನಡೆದಿವೆ.
ಬಿಜೆಪಿಯ ಬಲಿಷ್ಠ ನೆಲೆಯನ್ನು ಛಿದ್ರಗೊಳಿಸಿ ಭರ್ಜರಿ ಜಯ ಸಾಧಿಸಿದ ಜಯಪ್ರಕಾಶ್ ಹೆಗ್ಡೆ ಹಲವು ವರ್ಷಗಳ ಬಳಿಕ ಈ ಕ್ಷೇತ್ರ ಕಾಂಗ್ರೆಸ್‌ಗೆ ಒದಗಿಸಿದ್ದಾರೆ. ಕರಾವಳಿ, ಮಲೆನಾಡು ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಇದು ಸಕಾಲವಾಗಿದೆ ಎಂದು ನಂಬಿರುವ ಈ ಕ್ಷೇತ್ರದಲ್ಲಿ ಗೆಲುವಿಗೆ ಶ್ರಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹೆಗ್ಡೆಗೆ ಸಚಿವ ಸ್ಥಾನ ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಆಂದ್ರಪ್ರದೇಶದ ಜೈಪಾಲ್ ರೆಡ್ಡಿ ಕೂಡ ಹೆಗ್ಡೆಯವರ ನೆರವಿಗೆ ನಿಂತಿದ್ದಾರೆ.
ಪ್ರಸ್ತುತ ಸಂಸತ್ ಅಧಿವೇಶನ ಪೂರ್ಣಗೊಂಡ ಬಳಿಕ ಪ್ರಧಾನಿ ಮನ್‌ಮೋಹನ್ ಸಿಂಗ್ ಸಂಪುಟ ಪುನಾರಚಿಸಲಿದ್ದಾರೆ. ಈ ಸಂದರ್ಭದಲ್ಲಿ ಹೆಗ್ಡೆಯವರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇದೇ ಉದ್ದೇಶದಿಂದ ಕರ್ನಾಟಕದ ನಾಯಕರು ಜಯಪ್ರಕಾಶ್ ಹೆಗ್ಡೆಯವರನ್ನು ಸೋನಿಯಾ ಗಾಂಧಿಗೆ ಪರಿಚಯ ಮಾಡಿಸಿದ್ದು, ಅವರ ಸಾಧನೆಗಳ ವಿವರವನ್ನೂ ನೀಡಿದ್ದಾರೆ.
ರಾಜ್ಯದಲ್ಲಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ ಅನುಭವಿಯೂ ಆಗಿರುವ ಜಯಪ್ರಕಾಶ್ ಹೆಗ್ಡೆ, ಪಕ್ಷೇತರರಾಗಿ ಎರಡು ಬಾರಿ ವಿಧಾನ ಸಭೆ ಆಯ್ಕೆಯಾಗಿದ್ದಾರೆ. ಇವರಿಂದ ಪಕ್ಷದ ಸಂಘಟನೆಗೆ ಸಹಾಯ ಆಗಲಿದೆ. ಹೆಗ್ಡೆಯವರನ್ನು ಮಂತ್ರಿಯಾಗಿಸಿದರೆಮುಂದಿನ ವರ್ಷ ನಡೆಯಯಲಿರುವ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಸೋನಿಯಾ ಗಾಂಧಿಗೆ ಮನವರಿಕೆ ಮಾಡಿದ್ದಾರೆ.

ಕಾರ್ಕಳ: ರಬ್ಬರ್ ತೋಟಕ್ಕೆ ಬೆಂಕಿ; ನಾಲ್ಕು ಲಕ್ಷ ರೂ. ನಷ್ಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾರ್ಕಳ ಸಮೀಪದ ರಂಗನಪಲ್ಕೆ ಎಂಬಲ್ಲಿ ನಿನ್ನೆ ಸಂಜೆ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದು ನಾಲ್ಕು ಲಕ್ಷ ರೂ. ನಷ್ಟ ಸಂಭವಿಸಿದೆ.
ಸುಜೀರ್‌ಕುಮಾರ್ ಶೆಟ್ಟಿ ಎಂಬವರಿಗೆ ಸೇರಿರುವ ಸುಮಾರು ಐದು ಎಕ್ರೆಗೂ ಹೆಚ್ಚು ಜಾಗದಲ್ಲಿನ ರಬ್ಬರ್ ತೋಟಕ್ಕೆ ಬೆಂಕಿ ಆವರಿಸಿದ್ದು, ರಬ್ಬರ್ ಗಿಡಗಳು ಭಸ್ಮವಾಗಿವೆ. ರಸ್ತೆಯ ಬದಿ ಬೆಂಕಿ ಹಾಕಿದ್ದು, ಅದರಿಂದ ಕಿಡಿ ಹಾರಿ ತೋಟಕ್ಕೆ ಬೆಂಕಿ ಹಿಡಿದಿರಬೇಕೆಂದು ಶಂಕಿಸಲಾಗಿದೆ. ಕಾರ್ಕಳ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಸಿದ್ದಾಪುರ: ರಬ್ಬರ್ ತೋಟಕ್ಕೆ ಬೆಂಕಿ : ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರ್ಜಾಡಿಯ ರಬ್ವರ್ ತೋಟಕ್ಕೆ ನಿನ್ನೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ೨೦೦ಕ್ಕೂ ಅಧಿಕ ರಬ್ಬರ್ ಗಿಡಗಳು ನಾಶವಾದ ಘಟನೆ ನಡೆದಿದೆ. ಈ ತೋಟವು ಕೇರಳ ಮೂಲದ ಕೆರ್ಜಾಡಿ ರೋಯಿ ಎಂಬವರಿಗೆ ಸೇರಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.

ಸೋಮೇಶ್ವರ ನೂತನ ವ್ಯವಸ್ಥಾಪನಾ ಸಮಿತಿ ವಿರುದ್ಧ ಮೌನ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಭಕ್ತಾದಿಗಳಿಂದ ಆರಾಧಿಸಿಕೊಂಡು ಬಂದಿರುವ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆ ಕಾನೂನು ಬದ್ಧವಾಗಿರದೆ ದೇವಸ್ಥಾನಕ್ಕಾಗಿ ದುಡಿದಂತಹ ವ್ಯಕ್ತಿಗಳನ್ನು ಕಡೆಗಣಿಸಿ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳನ್ನು ಸಮಿತಿಗೆ ಆಯ್ಕೆ ಮಾಡಿರುವ ವಿರುದ್ಧ ನಿನ್ನೆ ದೇವಸ್ಥಾನದ ಪ್ರಾಂಗಣದಲ್ಲಿ ಸೋಮನಾಥ ದೇವಸ್ಥಾನ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಮೌನ ಪ್ರತಿಭಟನೆ ನಡೆಯಿತು.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಒಂಭತ್ತು ಸದಸ್ಯರುಳ್ಳ ಸಮಿತಿಯನ್ನು ಏಕಾಏಕಿ ನೇಮಕಗೊಳಿಸಲಾ ಗಿತ್ತ್ತು. ಆದರೆ ನಿಯಮಾವಳಿಯಂತೆ ಸಮಿತಿಗೆ ಒಂಭತ್ತು ಮಾಗಣೆಯ ಸುಮಾರು ೨೧೦ ಮಂದಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಅವರ‍್ಯಾರನ್ನೂ ಸಂದರ್ಶನಕ್ಕೆ ಕರೆ ಯದೆ, ಯಾವುದೇ ಮಾಹಿತಿಗಳನ್ನು ನೀಡದೆ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆ ಅಸಿಸ್ಟೆಂಟ್ ಕಮೀ ಷನರ್‌ರ ಸಂದರ್ಶನವನ್ನು ಎದುರಿಸದಿದ್ದರೂ ಹತ್ತು ಮಂದಿಗೆ ನಡೆದಿತ್ತು. ಆದರೆ ಇವರಲ್ಲಿ ಕೆಲವರು ದೇವಸ್ಥಾನಕ್ಕೆ ಸಂಬಂಧವೇ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ. ಈ ಆಯ್ಕೆಯನ್ನು ಸಂಬಂಧಪಟ್ಟ ದತ್ತಿ ಇಲಾಖೆಯ ಅಧಿಕಾರಿಗಳು ಅಸಿಂಧು ಗೊಳಿಸಿ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಿಕೊಳ್ಳಬಲ್ಲ ದಂತಹ ಕ್ಷೇತ್ರದ ಧಾರ್ಮಿಕತೆಯನ್ನು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವಂತಹ ರಾಜಕೀಯೇತರ ಧಾರ್ಮಿಕ ವ್ಯಕ್ತಿಗಳನ್ನು ಆರಿಸಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದ್ದಾರೆ.
ಹೋರಾಟ ಸಮಿತಿ ಅಧ್ಯಕ್ಷ ರಾಮದಾಸ್, ದೇವದಾಸ್ ಕೊಲ್ಯ, ಯೋಗೀಶ್ಕೊಲ್ಯ, ರವಿಶಂಕರ್, ಚಂದ್ರಶೇಖರ್ ಪೈಯಡ್ಕ, ಶೇಖರ್ ಮೊದಲಾದವರು ಭಾಗವಹಿಸಿದ್ದರು.
ಪ್ರತಿಭಟನಾ ಸಭೆಗೆ ಆಗಮಿಸಿದ ದತ್ತಿ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಸ್ತ ಯಾರ ಸೊತ್ತೂ ಅಲ್ಲ: ಎ.ಪಿ. ಉಸ್ತಾದ್ ಪ್ರಭಾವಿ ನಾಯಕ

Posted by JAYAKIRANA Kirana on | 0 comments | Leave a comment...

ಈಶ್ವರಮಂಗಲದಲ್ಲಿ ನಡೆದ ಸುನ್ನೀ ಸಮ್ಮೇಳನದಲ್ಲಿ ಝೈನಿ ವಾದ
ಪುತ್ತೂರು: ಸಮಸ್ತ ಯಾರ ಸೊತ್ತೂ ಅಲ್ಲ. ಸಮಸ್ತಕ್ಕೆ ಸಂಬಂಧಿಸಿದ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ. ಎ.ಪಿ.ಉಸ್ತಾದ್ ಅವರನ್ನು ಜನರು ಎಷ್ಟೇ ತೇಜೋವಧೆ ಮಾಡಲು ಯತ್ನಿಸಿದರೂ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಅವರು ಜಗತ್ತಿನ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ ಎಂದು ಎಂ.ಎಸ್. ಅಬ್ದುರ್ರಶೀದ್ ಝೈನಿ ಹೇಳಿದರು.
ಈಶ್ವರಮಂಗಲದಲ್ಲಿ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಸಂಘಟನೆಯ ನೇತೃತ್ವದಲ್ಲಿ ಆದಿತ್ಯವಾರ ರಾತ್ರಿ ನಡೆದ ಸುನ್ನೀ ಮಹಾ ಸಮ್ಮೇಳನ ಮತ್ತು ೧೦ಕೋಟಿ ಸಲಾತ್ ಸಮರ್ಪಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಶಂಸುಲ್ ಉಲಮಾರ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ ಅವರ ಕುಟುಂಬದ ಯಾವನೇ ಒಬ್ಬ ಸದಸ್ಯನನ್ನು ಇ.ಕೆ.ಸಮಸ್ತದಲ್ಲಿ ಕಾಣಲು ಸಾಧ್ಯವಿಲ್ಲ. ಅವರೆಲ್ಲರೂ ಎ.ಪಿ. ಉಸ್ತಾದ್ ಜೊತೆಗಿದ್ದಾರೆ ಎಂದು ಅವರು ಹೇಳಿದರು.
ಮುಖ್ಯ ಭಾಷಣ ಮಾಡಿದ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರು ನಮ್ಮಲ್ಲಿ ಸಂಘಟನೆಗಳು ಎಷ್ಟೇ ಇರಲಿ. ಆದರೆ ಧರ್ಮದ ವಿಚಾರದಲ್ಲಿ ಪರಸ್ಪರ ನಿಂದನೆ ಅವಹೇಳನ ಮಾಡು ವುದು ಸರಿಯಲ್ಲ. ಸಹಾಬಿ. ಔಲಿಯಾ ಗಳನ್ನು ಗೌರವಿಸುವುದು ನಮ್ಮ ಧರ್ಮ. ಅವರು ನಡೆಸುವ ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಕೈಜೋಡಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.
ಕುಂಬ್ರದ ಮರ್ಕಝುಲ್ ಹುದಾ ಅಧ್ಯಕ್ಷ ಉಸ್ಮಾನ್ ಹಾಜಿ ಮಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಪೂಕುಂಞಿ ತಂಙಳ್, ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಜಿ.ಎಂ.ಮಹಮ್ಮದ್ ಕಾಮಿಲ್ ಸಖಾಫಿ ಮಹಮ್ಮದ್ ಅಲಿ ಫೈಝಿ ಸಂಪ್ಯ, ಅಬ್ದುರ್ರಝಾಕ್ ಅಹ್ಸನಿ ಬನ್ನೂರು, ಮುಹಮ್ಮದ್ ಅಸ್ಸಖಾಫ್ ತಂಙಳ್ ಆದೂರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಸಮ್ಮೇಳನಕ್ಕೆ ಸಿದ್ಧತೆ
ಈಶ್ವರಮಂಗಲದಲ್ಲಿ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಸಂಘಟನೆಯ ನೇತೃತ್ವದಲ್ಲಿ ಆದಿತ್ಯವಾರ ರಾತ್ರಿ ಸುನ್ನೀ ಮಹಾ ಸಮ್ಮೇಳನ ಮತ್ತು ೧೦ ಕೋಟಿ ಸಲಾತ್ ಸಮರ್ಪಣೆ ಕಾರ್ಯಕ್ರಮ ನಡೆದ ಬೆನ್ನಲ್ಲೇ ಇದೀಗ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯವರು ಈಶ್ವರಮಂಗಲದಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದಾರೆ ಎಂಬ ಪ್ರಚಾರ ಹಬ್ಬಿದೆ.

ಕಂಕನಾಡಿಯಲ್ಲಿ ಕೃತಕ ನೆರೆಗೆ ಅಂಗಡಿ ಮಾಲಕರು ಕಂಗಾಲು!

Posted by JAYAKIRANA Kirana on | 0 comments | Leave a comment...

ಮಂಗಳೂರು: ಇನ್ನೂ ಮಳೆಗಾಲವೇ ಶುರುವಾ ಗಿಲ್ಲ. ಆದರೂ ನೆರೆ ಎಲ್ಲಿಂದ ಬರುತ್ತೆ ಎಂದು ತಲೆ ಕೆರೆದುಕೊಳ್ಳಬೇಡಿ. ಇದು ಮನಪಾ ನಿರ್ಲಕ್ಷ್ಯದಿಂದಾಗಿ ಸೃಷ್ಟಿಯಾದ ಕೃತಕ ನೆರೆ. ಇದರಿಂದಾಗಿ ಸ್ಥಳೀಯ ಅಂಗಡಿ, ವ್ಯಾಪಾರಿ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ನಷ್ಟವೂ ಉಂಟಾಗಿದೆ.
ಸುಮಾರು ೨೦ ವರ್ಷಗಳ ಹಿಂದೆ ಜಪ್ಪಿನ ಮೊಗರು, ಮಂಗಳಾದೇವಿ, ಸಸಿಹಿತ್ಲು ಮುಂತಾದ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಬೆಂದೂರ್‌ವೆಲ್‌ನ ರಸ್ತೆಯಡಿ ಯಲ್ಲಿ ೬೦೦ಎ.ಸಿ. ಗಾತ್ರದ ಸಿಮೆಂಟ್ ಪೈಪ್‌ಲೈನ್ ಅಳವಡಿಸಲಾಗಿತ್ತು. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನಿನ್ನೆ ಬೆಳಿಗ್ಗೆ ನಾಲ್ಕು ಗಂಟೆಗೆ ಪೈಪ್‌ಲೈನ್ ಒಡೆದು ನೀರು ಧಾರಾಕಾರವಾಗಿ ಹರಿದು ಪಕ್ಕದಲ್ಲಿರುವ ಅಂಗಡಿ ಹಾಗೂ ವ್ಯಾಪಾರಿ ಮಳಿಗೆಗಳಿಗೆ ನುಗ್ಗಿತ್ತು.
ಕೆಲವು ಗಂಟೆಗಳ ಬಳಿಕ ಪಾಲಿಕೆಯ ಅಧಿಕಾರಿ ಗಳಿಗೆ ಮಾಹಿತಿ ಲಭಿಸಿ ದುರಸ್ಥಿಗಾಗಿ ಸಿಬ್ಬಂದಿ ಸ್ಥಳಕ್ಕೆ ಬಂದರಾದರೂ ಪೋಲಾಗುತ್ತಿದ್ದ ನೀರನ್ನು ತಡೆಯಲು ಹರಸಾಹಸ ಪಡಬೇಕಾಯಿತು. ಅದೇ ವೇಳೆ ಅಂಗಡಿದಾರರೂ ಸ್ಥಳಕ್ಕೆ ಆಗಮಿಸಿದರಾದರೂ ಅದಾಗಲೇ ನೀರು ಮತ್ತು ಕೆಸರು ನುಗ್ಗಿದ ಕಾರಣ ಅಪಾರ ಪ್ರಮಾಣದ ನಷ್ಟವುಂಟಾಗಿತ್ತು. ಕೃತಕ ನೆರೆಯಿಂದಾಗಿ ಬಟ್ಟೆ, ಚಪ್ಪಲ್, ಪತ್ರಿಕೆ ಮಾರಾಟಗಾರರು ಅಪಾರ ನಷ್ಟ ಅನುಭವಿಸಬೇಕಾಯಿತು. ಪೈಪ್‌ಲೈನ್ ಸರಿಪಡಿಸುವ ಸಲುವಾಗಿ ನಿನ್ನೆ ದಿನವಿಡೀ ರಸ್ತೆಯನ್ನು ಬಂದ್ ಮಾಡಲಾಗಿದ್ದ ಕಾರಣ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.
ಹಿಂದೆಯೂ ನಡೆದಿತ್ತು
ಇದೇ ಸ್ಥಳದಲ್ಲಿ ಒಂದೂವರೆ ವರ್ಷದ ಹಿಂದೆ ರಸ್ತೆ ಕಾಮಗಾರಿ ನಡೆಸುವ ವೇಳೆ ಪೈಪ್‌ಲೈನ್ ಒಡೆದು ಕೃತಕ ನೆರೆ ಸೃಷ್ಟಿಯಾಗಿತ್ತು. ಅಂದು ಕೂಡಾ ಅಂಗಡಿಗಳು ಹಾಗೂ ವ್ಯಾಪಾರಿ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿತ್ತು. ಆದರೂ ಮನಪಾ ಅಧಿಕಾರಿಗಳು ಮುಂಜಾಗ್ರತೆ ಕೈಗೊಳ್ಳದೆ ಹರಕೆ ಸಂದಾಯ ಮಾಡುವ ರೀತಿಯಲ್ಲಿ ಕಾಮಗಾರಿ ನಡಸಿದ್ದ ಕಾರಣ ನಿನ್ನೆ ಮತ್ತೊಮ್ಮೆ ಸಮಸ್ಯೆ ಎದುರಾಗಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಪೈಪ್‌ಲೈನ್ ಒಡೆದರೂ ಮೇಯರ್ ಸ್ಥಳಕ್ಕೆ ಆಗಮಿಸುವಾಗ ೧೦.೩೦ ಕಳೆದಿದ್ದು ವಿಶೇಷವಾಗಿತ್ತು.

ಕುಡುಕ ನಿಗೂಢ ಸಾವು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಕೆದಿಂಜೆ ಎಂಬಲ್ಲಿ ಕುಡುಕನೊಬ್ಬ ನಿಗೂಢ ರೀತಿಯಲ್ಲಿ ಸಾವಿಗೀಡಾದ ಘಟನೆಸಂಭವಿಸಿದೆ.
ಕೃಷ್ಣ ಆಚಾರಿ(೫೫) ಘಟನೆಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾ ದವರು. ರವಿವಾರ ಮಧ್ಯಾಹ್ನದ ವೇಳೆಗೆ ಈ ಘಟನೆ ಸಂಭವಿಸಿದೆ. ನಂದಳಿಕೆಯ ಸರಳ ಸಾಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಎಂದಿನಂತೆ ವಿಪರೀತ ಮದ್ಯ ಸೇವಿಸಿ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ ಎದುರುಗಡೆಯಲ್ಲಿದ್ದ ಪತ್ನಿ ಹಾಗೂ ಮಕ್ಕಳನ್ನು ಬೈದ್ದಿದ್ದರು. ಮರ ಕೆಲಸಕ್ಕೆ ಉಪಯೋಗಿಸುವ ಉಳಿಯನ್ನು ಹಿಡಿದು ಬೆದರಿಸಲು ಮುಂದಾಗಿದ್ದರು. ಭಯಗೊಂಡಿದ್ದ ಮನೆಮಂದಿ ಆ ಸಂದರ್ಭದಲ್ಲಿ ಮನೆಯಿಂದ ಹೊರ ಓಡಿದ್ದರು. ಆಗ ಮನೆಯೊಳಗೆ ಪ್ರವೇಶಿ ಸಿದ ಕೃಷ್ಣ ಬಾಗಿಲು ಹಾಕಿದ್ದರೆಂದು ತಿಳಿದು ಬಂದಿದೆ.
ಸಂಜೆ ಸುಮಾರು ಆರರ ವೇಳೆಗೆ ಹೊರಗಿನಿಂದ ಮನೆಮಂದಿ ಕರೆದಾಗ ಒಳಗಿನಿಂದ ಯಾವುದೇ ಪ್ರತ್ಯುತ್ತರ ಕೇಳಿಬರಲಿಲ್ಲ. ಒಳಗಡೆಯಲ್ಲಿ ಅವರು ಮಗುಚಿ ಬಿದ್ದ ಸ್ಥಿತಿಯಲ್ಲಿ ಸಾವಿಗೀಡಾಗಿ ದ್ದಾರೆ.

ತಾ.ಪಂ. ನಿರ್ಣಯಕ್ಕೆ ಬೆಲೆ ಇಲ್ಲದಿದ್ದರೆ ಇಲ್ಲಿ ಕುಳಿತುಕೊಳ್ಳುವುದಾದರೂ ಯಾಕೆ?

Posted by JAYAKIRANA Kirana on | 0 comments | Leave a comment...

ಉಮೇಶ್ ನಾಯ್ಕ ಪ್ರಶ್ನೆ
ಉಡುಪಿ: ತಾ. ಪಂ. ಸದಸ್ಯನಾಗಿ ಆಯ್ಕೆಯಾದಂದಿನಿಂದ ಇಂದಿನವರೆಗೂ ಪ್ರತಿಯೊಂದು ಸಭೆಗೂ ತಪ್ಪದೇ ಹಾಜ ರಾಗಿದ್ದೇನೆ. ಪ್ರತಿ ತಿಂಗಳ ಸಾಮಾನ್ಯ ಸಭೆಯಲ್ಲೂ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಿರ್ಣಯಗಳನ್ನು ಬರೆಯುತ್ತೇವೆ. ಆದರೆ ಒಂದೇ ಒಂದು ನಿರ್ಣಯಗಳೂ ಅನುಷ್ಟಾನಗೊಳ್ಳುತ್ತಿಲ್ಲ. ನಮ್ಮ ನಿರ್ಣಯಗಳಿಗೆ ಬೆಲೆ ಇಲ್ಲ, ಗೌರವವಿಲ್ಲ, ಮರ್ಯಾದೆ ಇಲ್ಲ ಎಂದಾದರೆ ನಾವು ಇಲ್ಲಿಗೆ ಬರುವು ದಾದರೂ ಯಾಕೆ. ದಿನವೀಡೀ ಕುಳಿತು ತಿಂಡಿ ತಿಂದು, ಊಟ ಮಾಡಿ ಹೋಗೋದು ಮಾತ್ರ ಎಂದಾದರೆ ಏನು ಪ್ರಯೋಜನ. ನಿರ್ಣಯಗಳಿಗೆ ಬೆಲೆ ಇಲ್ಲವೆಂದಾದರೆ ಇನ್ನು ನುಂದೆ ತಾನು ತಾ.ಪಂ.ಸಾಮಾನ್ಯ ಸಭೆಗೆ ಬರಲಾರೆ ಎಂದು ವಿಷಾದ ಮತ್ತು ಆಕ್ರೋಶದಿಂದ ಗುಡುಗಿದವರು ತಾ.ಪಂ.ಸದಸ್ಯ ಉಮೇಶ್ ನಾಯ್ಕ. ಉಡುಪಿ ತಾ. ಪಂ.ನ ೯ನೇ ಸಾಮಾನ್ಯ ಸಭೆ ಯಲ್ಲಿ ಅವರು ಮಾತನಾ ಡುತ್ತಿದ್ದರು.
ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಮಾರ್ಜಿನನ್ನು ಆಕ್ರಮಿಸಿ ನಿರ್ಮಿಸಿದ ಸುಸಜ್ಜಿತವಾದ ಆರ್‌ಸಿಸಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಸಹ ನೀಡಲಾಗಿದೆ. ಇದನ್ನು ತೆರವು ಗೊಳಿಸಬೇಕೆಂದು ಈ ಹಿಂದೆಯೇ ನಿರ್ಣಯವಾಗಿದ್ದರೂ ಇನ್ನೂ ಸಹ ತೆರವುಗೊಳಿಸಿಲ್ಲ. ತಾನು ಕಳೆದ ಅನೇಕ ಸಭೆಗಳಲ್ಲಿ ಈ ವಿಷಯ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಕ್ರಮ ಕೈಗೊಳ್ಳಬೇಕಾದ ಬ್ರಹ್ಮಾವರ ವಿಶೇಷ ತಹಶೀಲ್ದಾರರು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಉಮೇಶ್ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿದರು.
 ಚೇರ್ಕಾಡಿ ಗ್ರಾ.ಪಂ.ವ್ಯಾಪ್ತಿಯ ಕಥೆ ಹೀಗಾದರೆ, ಕರ್ಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಧವೆಯೊಬ್ಬರು ತಟ್ಟಿ ಹಾಕಿ ನಿರ್ಮಿಸಿದ ತಾತ್ಕಾಲಿಕ ಗೂಡಂ ಗಡಿಯನ್ನು ರಸ್ತೆ ಮಾರ್ಜಿನಿನಲ್ಲಿದೆ ಎಂಬ ಕಾರಣ ಮುಂದಿಟ್ಟು ತೆರವು ಗೊಳಿಸಲಾಗಿದೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸಮಯ ಹಾಳು ಮಾಡಲಾರೆ ಎಂದು ಉಮೇಶ್ ನಾಯ್ಕ ಅವರು ಸ್ಪಷ್ಟಪಡಿಸಿದರು.
 ಈ ವಿಷಯ ಪ್ರಸ್ತಾಪ ಮಾಡಿದ ಕಾರಣಕ್ಕೆ ಅತಿಕ್ರಮಣ ಮಾಡಿದವರು ತನಗೆ ಮೊಬೈಲ್ ಕರೆ ಮಾಡಿ ಕೈ ಕಾಲು ಮುರಿಯುವುದಾಗಿ ಧಮ್ಕಿ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ ಉಮೇಶ್ ಅವರು, ಧಮ್ಕಿ ಹಾಕಿದವರಿಗೆ ತಾನು ಸದನದ ಮೂಲಕವೇ ಉತ್ತರ ನೀಡುವುದಾಗಿ ಹೇಳಿದರು.
 ಹಾರಾಡಿ ಗ್ರಾ. ಪಂ. ಪಿಡಿಓ ಅವರು ಕಚೇರಿಗೆ ಬೆಳಗ್ಗೆ ೧೧ ಗಂಟೆಗೆ ಬಂದು ಸಂಜೆ ೪ ಗಂಟೆಗೆ ನಿರ್ಗಮಿ ಸುತ್ತಾರೆ. ಯಾವುದೇ ಅಗತ್ಯಗಳಿಗೆ ಜನರಿಗೆ ಎನ್‌ಓಸಿ ೫೦೦ ರಿಂದ ೨೦೦೦ ರೂ.ವರೆಗೆ ಲಂಚ ಪಡೆದುಕೊಳ್ಳುತ್ತಾರೆ. ಇವರನ್ನೊಮ್ಮೆ ಇಲ್ಲಿಂದ ವರ್ಗಾವಣೆ ಮಾಡಿ, ಭಡ್ತಿ ಕೊಟ್ಟರೂ ಪರವಾಗಿಲ್ಲ. ಆದರೆ ಒಮ್ಮೆ ಹಾರಾಡಿಯಿಂದ ವರ್ಗಾಯಿಸಿ ಎಂದು ಕಳಕಳಿಯಿಂದ ವಿನಂತಿಸಿದ ಕೇಶವ ಕುಮಾರ್ ಅವರು, ತಾನಿದನ್ನು ಕಳೆದ ಹಲವಾರು ಸಮಾನ್ಯ ಸಭೆಗಳಲ್ಲಿ ಪ್ರಸ್ತಾಪ ಮಾಡುತ್ತಲೇ ಬಂದಿದ್ದೇನೆ. ಆದರೆ ಕ್ರಮ ಮಾತ್ರ ಆಗು ತ್ತಿಲ್ಲ ಎಂದು ಸಿಇಓ ಮಂಜುನಾಥಯ್ಯ ಹಾಗೂ ಅಧ್ಯಕ್ಷ ದೇವದಾಸ ಹೆಬ್ಬಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
 ತಾನು ತೆಂಗಿನಕಾಯಿ ಮುಟ್ಟಿ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಹಾರಾಡಿ ಗ್ರಾ.ಪಂ. ಪಿಡಿಓ ಅವರು ಲಂಚ ಪಡೆದ ಬಗ್ಗೆ ಸಾಕ್ಷಿದಾರರನ್ನೂ ಕರೆದುಕೊಂಡು ಬರಬಲ್ಲೆ ಎಂದು ಸವಾಲು ಹಾಕಿದ ಕೇಶವ ಕುಮಾರ್ ಅವರು, ಕನಿಷ್ಟ ಸಾಮಾಜಿಕ ನ್ಯಾಯ ಇದ್ದ ಪಕ್ಷದಲ್ಲಿ ಇನ್ನಾದರೂ ಪಿಡಿಓ ಅವರನ್ನು ಹಾರಾಡಿ ಗ್ರಾ.ಪಂ.ನಿಂದ ವರ್ಗಾವಣೆ ಮಾಡಿ ಎಂದು ಒತ್ತಾಯಿ ಸಿದರು. ಈ ಸಂದರ್ಭ ದಲ್ಲಿ ಇತರ ಕೆಲವು ಮಂದಿ ಸದ ಸ್ಯರು ಸಹ ಪಿಡಿಓ ಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಂಟ್ವಾಳ: ಗಾಯಾಳು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕ್‌ನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಂಟ್ವಾಳ ಸಮೀಪದ ರಾಮಲ್‌ಕಟ್ಟೆ ನಿವಾಸಿ ಮುಸ್ತಫಾ(೨೯) ನಿನ್ನೆ ಮೃತಪಟ್ಟಿದ್ದಾರೆ. ಅವರು ಸ್ನೇಹಿತ ನಝೀರ್ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಪುದು ಸಮೀಪ ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನೀರಿನ ವಿವಾದ: ಮಹಿಳೆಗೆ ಕಲ್ಲೆಸೆದು ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆ ಗ್ರಾಮದ ಐದು ಸೆಂಟ್ಸ್ ನಿವಾಸಿ ಬೇಬಿ (೩೮) ಎಂಬವರು ತಮ್ಮ ಮನೆ ಸಮೀಪದ ಸಾರ್ವಜನಿಕ ನಳ್ಳಿಯಿಂದ ನೀರನ್ನು ತರಲು ಹೋಗಿದ್ದ ವೇಳೆ ಸ್ಥಳೀಯ ಅರ್ಷಾದ್ ಎಂಬಾತ ಕಲ್ಲೆಸೆದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಅಜೆಕಾರು ಠಾಣಾ ಪೊಲೀಸರು ಪ್ರಕರಣ ದಾಖಲಿ ಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಲ್ಪೆ ದ್ವೀಪದಲ್ಲಿ ರೇವ್ ಪಾರ್ಟಿ: ಮಾ.೨೮-೨೯ರಂದು ವಿಚಾರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಫೆ. ಮೂರರಿಂದ ಐದರ ತನಕ ನಡೆದ ಅಂತಾರಾಷ್ಟ್ರೀಯ ಸಂಗೀತ ಉತ್ಸವ (ಸ್ಪ್ರಿಂಗ್ ಝೋಕ್)ದ ವಿಚಾರಣೆ ಮಾ. ೨೮, ೨೯ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ನಡೆಸಲಿದ್ದಾರೆ. ದೇಶ ವಿದೇಶಗಳಿಂದ ಯುವಕ ಯುವತಿಯರು ಆಗಮಿಸಿ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂತಹ ಘಟನೆ ನಡೆಸಲಾಗಿದೆ ಎಂದು ಆರೋಪವೆದ್ದಿತ್ತು. ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಚಾರಣೆ ನಡೆಯಲಿದ್ದು, ಮಾಹಿತಿ ಇರುವ ವ್ಯಕ್ತಿಗಳು ವಿಚಾರಣೆ ಸಮಯದಲ್ಲಿ ಲಿಖಿತ ಹಾಗೂ ಮೌಖಿಕ ಹೇಳಿಕೆ ನೀಡಬಹುದಾಗಿದೆ.

ರೇಗೊಗೆ ‘ಪ.ಗೋ ಪ್ರಶಸ್ತಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ‍್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತ ಸ್ಟೀವನ್ ರೇಗೊ ಅವರಿಗೆ 'ಪ.ಗೋ ಪ್ರಶಸ್ತಿ ನೀಡಿ ಗೌರವಿಸಲಾಯಿತು. 'ನಂದಿನಿ ಮಾಯವಾಗುವ ಮುನ್ನ ಎಂಬ ವರದಿ ರೇಗೊ ಅವರಿಗೆ ಈ ಪ್ರಶಸ್ತಿ ತಂದುಕೊಟ್ಟಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ ಕೋಟ್ಯಾನ್ ಸ್ಟೀವನ್‌ಗೆ ಪ್ರಶಸ್ತಿ ವಿತರಿಸಿದರು. ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕಾರ್ಯದರ್ಶಿ ಶ್ರೀನಿವಾಸ್ ಇಂದಾಜೆ, ಪ.ಗೋ. ಸಂಸ್ಕರಣಾ ಟ್ರಸ್ಟ್‌ನ ಕಾರ‍್ಯದರ್ಶಿ ಸಾವಿತ್ರಿ, ಗೋಪಾಲಕೃಷ್ಣ ಉಪಸ್ಥಿತರಿದ್ದರು. ಹರೀಶ್ ಬಂಟ್ವಾಳ ವಂದಿಸಿದರು. ರವೀಂದ್ರ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.

ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಖಾಸಗಿ ಬಸ್ ಡಿಕ್ಕಿ ಹೊಡೆದು ಪಾದಚಾರಿ ಗಾಯ ಗೊಂಡ ಘಟನೆ ಪುತ್ತೂರು ಪೇಟೆಯ ದರ್ಬೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ ಉಲ್ಲಾಸ್ ಗಾಯಗೊಂಡ ವರು. ಅವರು ದರ್ಬೆ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ ಹೊಡೆಯಿತೆಂದು ತಿಳಿದು ಬಂದಿದೆ.

ಬಸದಿ ಆಡಳಿತ ವಿವಾದ: ದಂಪತಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬಸದಿಯ ಆಡಳಿತ ವಿಚಾರದಲ್ಲಿ ದಂಪತಿಗೆ ನಾಲ್ವರು ಸೇರಿ ಕೊಂಡು ಹಲ್ಲೆ ನಡೆಸಿ ಜೀವಬೆದರಿಕೆ ಯೊಡ್ಡಿದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಜೈನರ ಪೇಟೆಯಲ್ಲಿ ಭಾನುವಾರ ಸಂಭವಿಸಿದೆ.
ಜೈನರ ಪೇಟೆಯ ನಿವಾಸಿ ಡಿ. ಕೃಷ್ಣ ರಾಜ್ ಅವರಿಗೆ ಜಗತ್ವಾಲ್ ಅರಿಗ, ಸುಕುಮಾರ್ ಕೆ., ವಿಜಯ. ಕೆ ಮತ್ತು ಧನ್ಯರಾಜ ಕೆ.ಎಂ ಎಂಬವರು ಸೇರಿಕೊಂಡು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ನರಿಮೊಗರಿನ ಮೇಲಿನ ಬಸದಿಗೆ ತಾನು ಆದಿತ್ಯವಾರ ಮಧ್ಯಾಹ್ನ ತನ್ನ ಪತ್ನಿ ಸುಜಾತಳೊಂದಿಗೆ ತೆರಳಿದ್ದಾಗ ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ತಡೆಯಲು ಬಂದ ತನ್ನ ಪತ್ನಿಯ ಮೇಲೆ ಕೂಡ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಕೃಷ್ಣರಾಜ್ ಆರೋಪಿಸಿದ್ದಾರೆ. ಬಸದಿ ಆಡಳಿತವನ್ನು ಬಿಟ್ಟುಕೊಡಬೇಕೆಂದು ತಗಾದೆ ಎತ್ತಿ ಮತ್ತು ಬಸದಿಗೆ ಬರ ಕೂಡದು ಎಂದು ಬೆದರಿಕೆಯೊಡ್ಡಿ ಆರೋಪಿಗಳು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಕೃಷ್ಣರಾಜ್ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಕಿ ಹಚ್ಚಿಕೊಂಡ ಯುವಕ

Posted by JAYAKIRANA Kirana on | 0 comments | Leave a comment...

ನವದೆಹಲಿ: ಚೀನಾ ಪ್ರಧಾನಿ ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ನವದೆಹಲಿಯಲ್ಲಿ ನಡೆದ ಟಿಬೆಟಿಯನ್ನರ ಪ್ರತಿಭಟನೆ ವೇಳೆ ಯುವಕನೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಪ್ರತಿಭಟನೆ ನಡೆಸುತ್ತಿದ್ದ ಯುವಕ ಬೆಂಕಿ ಹಚ್ಚಿಕೊಂಡು ಸಂಸತ್ ಭವನದತ್ತ ಓಡಿದ. ಈ ವೇಳೆ ಅಲ್ಲಿದ್ದ ಇತರ ಪ್ರತಿಭಟನಾಕಾರರು ಟಿಬೆಟ್ ಧ್ವಜ ಹಾಗೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಗಂಭೀರವಾಗಿ ಗಾಯಗೊಂಡಿ ರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾಕಾರನನ್ನು ಜಂಪಾ ಯಶಿ ಎಂದು ಗುರುತಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪ್ರತಿಭಟನೆಯನ್ನು ಸಂಘಟಿಸಿದವರು ತಿಳಿಸಿದ್ದಾರೆ. ಚೀನಾದ ಪ್ರಧಾನಿ ಹೂ ಜಿಂಟಾವೋ ಭಾರತ ಭೇಟಿಯನ್ನು ವಿರೋಧಿಸಿ ಟಿಬೆಟಿಯನ್ನರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಂಟಾವೋ ಭಾರತ ಭೇಟಿಯನ್ನು ವಿರೋಧಿಸಿ ಸಾವಿರದಷ್ಟು ಸೇರಿದ್ದ ಟಿಬೆಟಿಯನ್ನರು ಪ್ರತಿಭಟನೆ ನಡೆಸಿದರು. 'ಟಿಬೆಟ್ ಉರಿಯುತ್ತಿದೆ ಮತ್ತು 'ಟಿಬೆಟ್ ಚೀನಾದ ಭಾಗವಲ್ಲ ಎನ್ನುವಂತಹ ಬ್ಯಾನರ್‌ಗಳನ್ನು ಹಿಡಿಕೊಂಡು ಪ್ರತಿಭಟನಾಕಾರರು ಸಂಸತ್ ಭವನದ ಮುಂದೆ ಪ್ರತಿಭಟಿಸಿದರು.
ಚೀನಾ ಟಿಬೆಟನ್ನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ಟಿಬೆಟಿನ ೩೦ಕ್ಕೂ ಹೆಚ್ಚು ಮಂದಿ ಬೆಂಕಿ ಹಚ್ಚಿಕೊಂಡು ವಿರೋಧಿಸಿದ್ದರು. ಚೀನಾ ಟಿಬೆಟಿನಲ್ಲಿ ಆಡಳಿತ ನಡೆಸುವುದನ್ನು ದಲಾಯಿ ಲಾಮಾ ವಿರೋಧಿಸಿದ್ದರು. ಲಾಮಾ ಇಂತಹ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆಂದು ಬೀಜಿಂಗ್ ಆಡಳಿತ ಆರೋಪಿಸಿದೆ.

ರಾಜ್ಯ ವಕ್ಫ್ ಮಂಡಳಿಯಲ್ಲಿ ಎರಡು ಲಕ್ಷ ಕೋಟಿ ಅವ್ಯವಹಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯಲ್ಲಿ ಎರಡು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅವ್ಯವಹಾರ ನಡೆದಿದ್ದು, ಇದರಲ್ಲಿ ಹಿರಿಯ ನಾಯಕರಾದ ಇಬ್ರಾಹಿಂ, ರೋಷನ್‌ಬೇಗ್, ಹ್ಯಾರಿಸ್, ತನ್ವೀರ್ ಸೇಠ್, ರೆಹಮಾನ್ ಖಾನ್ ಸೇರಿದಂತೆ ಹಲವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಆಯೋಗ ಸರ್ಕಾರಕ್ಕೆ ವರದಿ ನೀಡಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿ ಅವರು ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಕೃಷ್ಣಾದಲ್ಲಿ ಭೇಟಿ ಮಾಡಿ ಈ ಕುರಿತು ವರದಿ ಸಲ್ಲಿಸಿದ್ದಾರೆ. ವಕ್ಫ್ ಮಂಡಳಿಗೆ ಸೇರಿದ ಎರಡು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಆಸ್ತಿ ಪಾಸ್ತಿ ದುರುಪಯೋಗವಾಗಿದೆ. ಇದರಲ್ಲಿ ಪ್ರಭಾವಿ ನಾಯಕರು ಶಾಮೀಲಾಗಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸುಮಾರು ಒಂದು ಸಾವಿರ ಪುಟಗಳಿಗೂ ಮಿಕ್ಕಿದ ಈ ವರದಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಅನ್ವರ್ ಮಾಣಿಪ್ಪಾಡಿ, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ವಕ್ಫ್ ಆಸ್ತಿಯನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರ ವರದಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಈ ವರದಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವುದಾಗಿ ನುಡಿದರು.
ಈ ಮಧ್ಯೆ ರಾಜ್ಯದ ವಕ್ಫ್ ಮಂಡಳಿಗೆ ಸೇರಿದ ಎರಡು ಲಕ್ಷ ಕೋಟಿ ರೂ. ಗಳಿಗೂ ಹೆಚ್ಚಿನ ಆಸ್ತಿ ಪಾಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ರೋಷನ್ ಬೇಗ್, ತನ್ವೀರ್ ಸೇಠ್, ಎನ್.ಎ.ಹ್ಯಾರಿಸ್ ಮತ್ತಿತರ ನಾಯಕರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು. ನಾವು ವಕ್ಫ್ ಮಂಡಳಿ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿಲ್ಲ. ಆದರೆ ವಿನಾ ಕಾರಣ ನಮ್ಮ ವಿರುದ್ಧ ಆರೋಪ ಮಾಡಲಾಗಿದೆ ಎಂದ ಅವರು, ಸದರಿ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಬಿಐ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ನಾವು ಯಾವುದೇ ರೀತಿಯ ತನಿಖೆಯನ್ನಾದರೂ ಎದುರಿಸುತ್ತೇವೆ ಎಂದ ಅವರು, ವಿಷಯಕ್ಕೆ ಸಂಬಂಧಿಸಿದಂತೆ ಯಾವ ಮಾಹಿತಿಯೂ ಇಲ್ಲದೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ವರದಿ ನೀಡಿದ್ದಾರೆ ಎಂದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)