26-03-2012

Posted by JAYAKIRANA Kirana on Sunday, 25 March 2012 | 0 comments | Leave a comment...

ನೆನಪು
ನೋಡಬೇಡ ಅಂದ್ರೂ ಕಣ್ಣು ನೋಡುತ್ತೆ, ಮಾತನಾಡಬೇಡ ಅಂದ್ರೂ ನಾಲಿಗೆ ಮಾತನಾಡಿಸುತ್ತೆ, ಕೇಳೋದು ಬೇಡ ಅಂದ್ರೂ ಕಿವಿ ಕೇಳುತ್ತೆ, ಎಸ್‌ಎಮ್‌ಎಸ್ ಮಾಡಬೇಡ ಅಂದ್ರೂ ದಿನಾಲೂ ನಿಮ್ಮ ನೆನಪು ನನ್ನನ್ನು ಕಾಡುತ್ತೆ.

ಗ್ಯಾಸ್ ಟ್ರಬಲ್
ಗುಂಡ ಆಟೋಗ್ರಾಫ್ ಪುಸ್ತಕವನ್ನು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ, ಆಗ ಅದರಲ್ಲಿ ತನ್ನ ರಾಶಿಯನ್ನು ಬರೆಯಬೇಕಿತ್ತು. ಗುಂಡನಿಗೆ ಇಂಗ್ಲಿಷ್‌ನಲ್ಲಿ ಇದರ ಅರ್ಥ ಗೊತ್ತಿರಲಿಲ್ಲ, ಆಗ ಅವನು ಹಿಂದಿನ ಪುಟ ನೋಡಿದ, ಅದರಲ್ಲಿ ಅದರ ಎದುರಿಗೆ ಇಂಗ್ಲಿಷ್‌ನಲ್ಲಿ ಕ್ಯಾನ್ಸರ್ ಎಂದು ಬರೆದಿತ್ತು. ಆಗ ಗುಂಡ ಗ್ಯಾಸ್ ಟ್ರಬಲ್ ಎಂದು ಬರೆದ!

ಸಿಂಗಲ್!
ಆತನ ಪತ್ನಿ ಸತ್ತುಹೋದಳು.
ಕೂಡಲೇ ಆತ ಗೆಳೆಯನಲ್ಲಿ ಹೇಳಿದ ಲ್ಯಾಪ್ ಟಾಪ್ ತಾ
ಅದಕ್ಕೆ ಗೆಳೆಯ ಅಚ್ಚರಿ ವ್ಯಕ್ತಪಡಿಸುತ್ತಾ...ಯಾಕೆ?
ಆತ ಅಂದ ಫೇಸ್‌ಬುಕ್‌ನಲ್ಲಿ ಇನ್ನು ಮುಂದೆ ನಾನು ಸಿಂಗಲ್ ಎಂದು ಬರೆದುಬಿಡಬೇಕು ಅದಕ್ಕೆ!

ಶ್ರೀಮಂತಿಕೆ
ಶ್ರೀಮಂತಿಕೆ ಅಂದರೆ ಏನೂ ಅಂತ ಸಿರಿವಂತನಲ್ಲಿ ಕೇಳಬೇಡಿ, ಬಡವನಲ್ಲಿ ಕೇಳಿ. ಪ್ರೀತಿ ಅಂದರೆ ಏನೂ ಅಂತ ಪ್ರೀತಿಸುವವನಲ್ಲಿ ಕೇಳಬೇಡಿ, ಪ್ರೀತಿಸಿ ಸೋತವನಲ್ಲಿ ಕೇಳಿ.

ಪತ್ರಿಕೆ
ಶಿಕ್ಷಕ: ನಮ್ಮ ದೇಶದಲ್ಲಿ ತುಂಬಾ ಜನಪ್ರಿಯ ಪತ್ರಿಕೆ ಯಾವುದು?
ಗುಂಡ: ಅದೇ ಸಾರ್ ಲಗ್ನ ಪತ್ರಿಕೆ!

ಕಣ್ಣೀರು
ಜೀವನದಲ್ಲಿ ನಿಮ್ಮನ್ನು ಪ್ರೀತಿಸುವ ಮನಸ್ಸು ಅದೆಷ್ಟೋ ಇರಬಹುದು. ಆದರೆ ನಿಮ್ಮನ್ನು ಪ್ರೀತಿಸುವ ಸಾವಿರಾರು
ಮನಸ್ಸಲ್ಲಿ ನಿಮ್ಮ ಕಷ್ಟವನ್ನು,
ನಿಮ್ಮ ಕಣ್ಣೀರನ್ನು ಹಾಗೂ ನಿಮ್ಮ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡು ಯಾರು ನಿಮಗೋಸ್ಕರ ಜೀವಕ್ಕೆ ಜೀವ ಕೊಟ್ಟು ಪ್ರೀತಿಸ್ತಾರೋ ಅದು ನಿಜವಾದ ಪ್ರೀತಿ.

ನೀರು ಪೋಲಾಗದಂತೆ ಎಚ್ಚರವಹಿಸಿ

Posted by JAYAKIRANA Kirana on | 0 comments | Leave a comment...

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶ ಗಳಿಗೆ ನೀರು ಪೂರೈಸುವ ಮೂಲವಾದ ತುಂಬೆ ನೇತ್ರಾವತಿ ನದಿಯ ನೀರಿನ ಒಳಹರಿವು ಕ್ಷೀಣಿಸಿರುವುದರಿಂದ ಕಿಂಡಿ ಅಣೆಕಟ್ಟಿನ ನೀರು ಶೇಖರಣೆಯ ಮಟ್ಟವು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂದಿನ ದಿವಸಗಳಲ್ಲಿ ಮಳೆ ಪ್ರಾರಂಭವಾಗುವವರೆಗೆ ಮಹಾನಗರಪಾಲಿಕೆ ವತಿಯಿಂದ ನೀರು ವಿತರಣೆಯಲ್ಲಿ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಾರ್ವಜನಿಕರು ಸಹಕರಿಸಲು ಕೋರಿದೆ. ಇದಲ್ಲದೆ ಮಹಾನಗರಪಾಲಿಕೆಯ ಮಹಾಜನತೆಯಲ್ಲಿ ನೀರನ್ನು ಪೋಲಾ ಗದಂತೆ ಆದಷ್ಟು ನೀರಿನ ಬಳಕೆಯಲ್ಲಿ ಮಿತವ್ಯಯ ಮಾಡಲು ಕೋರಿದೆ. ಮೇಲಿನ ಪರಿಸ್ಥಿತಿಯನ್ನು ಸಾರ್ವಜನಿಕರು ಮನಗಂಡು ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ವಿನಂತಿ.
ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ, ಮಂಗಳೂರು

ಆಗಬೇಕಿದ್ದೇ ಆಯಿತು!
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಲೇ ಬೇಕಿತ್ತು, ಹಾಗೇ ಆಯಿತು. ಯಾಕೆಂ ದರೆ ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಅರೆಬೆತ್ತಲೆ ವಿದೇಶಿ ಮಹಿಳೆ ಯರ ಜೊತೆ ಕುಣಿದ ಉಡುಪಿ ಶಾಸಕರನ್ನು ನೋಡಿಯೇ ಜನರು ದೃಢ ನಿರ್ಧಾರ ತಳೆದಿದ್ದರು. ಯಾವಾಗ ಬಿಜೆಪಿ ಜನಪ್ರತಿನಿಧಿಗಳು, ಮುಖ್ಯಮಂತ್ರಿ, ಉಡುಪಿ ಜಿಲ್ಲಾಧಿಕಾರಿಯವರು ರೇವ್ ಪಾರ್ಟಿ ಎನ್ನುವ ಅಶ್ಲೀಲ ಸಂಸ್ಕೃತಿಯನ್ನು 'ತಪ್ಪೇನಲ್ಲ, ಸರಿ' ಎಂಬರ್ಥದ ಮಾತನ್ನಾಗಿ ಸಮರ್ಥಿಸಿದರೋ ಅಂದೇ ಜನರು ನೀಚ ಬಿಜೆಪಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹೆಚ್ಚಿನ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಅಸ್ತಿತ್ವದ ಲ್ಲಿದ್ದರೂ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಗಳಿಸಿತು. ಇದು ಉಡುಪಿ ಜಿಲ್ಲೆಯ ಜನರ ಆಕ್ರೋ ಶದ ಸಂಕೇತ. ಅನಿಷ್ಟ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಜೆಪಿಗರು ಪ್ರೋತ್ಸಾಹಿಸಿ ಮಾಧ್ಯಮಗಳೆದುರು ಮಾತ ನಾಡಿದ್ದರ ಪ್ರತಿಫಲ. ರೇವ್‌ಪಾರ್ಟಿಯನ್ನು ಆಯೋ ಜಿಸಿ ಜನರಿಂದ ಉಗಿಸಿಕೊಂಡ ಉಡುಪಿಯ ಒಬ್ಬ ಜಿಲ್ಲಾಧಿಕಾರಿಯನ್ನು ಅಂದೇ ಬೇರೆಡೆ ವರ್ಗಾವಣೆ ಮಾಡಿರುತ್ತಿದ್ದರೆ ಬಿಜೆಪಿಗೆ ಇಂದು ಈ ಸ್ಥಿತಿ ಬರು ತ್ತಿತ್ತೇ? ಆಗುವುದೆಲ್ಲ ಒಳ್ಳೆಯದಕ್ಕೆ. ಉಡುಪಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಸೋಲಿನಿಂದ ಪಾಠ ಕಲಿಯುವರೇ?
ನೊಂದ ಬಿಜೆಪಿ ಕಾರ್ಯಕರ್ತ, ಮೂಡುಬೆಳ್ಳೆ

ಪ್ರತಿಭಟನೆಗಳ ಮನವಿ ಪತ್ರಗಳು ಏನಾಗುತ್ತಿವೆ?
ಜಿಲ್ಲಾಧಿಕಾರಿ ಕಚೇರಿಯ ಮುಂದೆ ತಿಂಗಳಿಗೆ ಕಡಿಮೆಯೆಂ ದರೂ ಇಪ್ಪತ್ತರಿಂದ ಮೂವತ್ತು ಪ್ರತಿ ಭಟನೆಗಳು ನಡೆಯುತ್ತವೆ. ಪ್ರತಿಭಟಿ ಸಿದ ಸಂಘಟನೆಗಳ ಮುಖಂಡರು ತಮ್ಮ ಮನವಿಯನ್ನು ಜಿಲ್ಲಾಧಿಕಾರಿ ಗಳ ಮುಖಾಂತರ ಮುಖ್ಯಮಂ ತ್ರಿಗೋ ಇಲ್ಲವೇ ಪ್ರಧಾನ ಮಂತ್ರಿಗೋ ಸಲ್ಲಿಸುತ್ತಾರೆ.
ಆದರೆ ಈ ರೀತಿಯ ಮನವಿ ಗಳು ಸಂಬಂಧ ಪಟ್ಟವರಿಗೆ ತಲುಪುತ್ತ ದೆಯೇ ಎನ್ನುವುದು ಈಗಿರುವ ಪ್ರಶ್ನೆ. ಜಿಲ್ಲಾ ಧಿಕಾರಿ ಕಛೇರಿಯಲ್ಲಿ 'ಸ್ವೀಕರಿಸಿದ್ದೇವೆ ಎನ್ನುವ ಮುದ್ರೆ ಒತ್ತುತ್ತಾರೆಯೇ ವಿನಃ ಇಲ್ಲಿ ಪ್ರತಿಭಟಿಸಿದ ಸಮಸ್ಯೆಗಳಿಗೆ ಯಾವುದಕ್ಕೆಲ್ಲಾ ಪರಿಹಾರ ಸಿಕ್ಕಿದೆ? ದೇಶಾದ್ಯಂತ ದಿನದಲ್ಲಿ ಹೆಚ್ಚೆಂದರೂ ನೂರಕ್ಕೂ ಹೆಚ್ಚು ಪ್ರತಿಭ ಟನೆಗಳು ನಡೆಯುವಾಗ ಇವೆಲ್ಲಾ ಸಂಬಂ ಧಪಟ್ಟವರ ಕೈ ಸೇರುವುದರಲ್ಲಿ ಅನುಮಾ ನವಿದೆ. ಒಂದು ವೇಳೆ ಈ ಮನವಿ ಪತ್ರ ಗಳು ಕೈ ಸೇರಿದ್ದರೆ ನಮ್ಮ ಜಿಲ್ಲೆಯ ಅರ್ಧ ದಷ್ಟಾದರೂ ಸಮಸ್ಯೆಗಳು ಬಗೆಹರಿಯು ತ್ತಿತ್ತೋ ಏನೋ? ಇನ್ನು ನಮ್ಮ ಸಂಘಟ ನೆಗಳು ಮೊದಲಿನ ಸಮಸ್ಯೆಗಳು ಇತ್ಯರ್ಥ ವಾಗುವ ಮುನ್ನವೇ ಇನ್ನೊಂದು ಪ್ರತಿ ಭಟನೆಗೆ ಸಜ್ಜಾಗುತ್ತವೆ. ಹಿಂದಿನ ಮನವಿ ಪತ್ರಗಳು ಕಸದ ಬುಟ್ಟಿ ಸೇರಿದರೂ ಇವರಿಗೆ ಇದರ ಅಗತ್ಯವಿಲ್ಲ. ಕಾರಣ ವಿಷ್ಟೇ, ಇವೆಲ್ಲಾ ತೋರಿಕೆಯ ಮತ್ತು ಪ್ರಚಾರದ ಪ್ರತಿಭಟನೆಗಳು.
ಸ್ವಾತಂತ್ರ್ಯ ಭಾರತದಲ್ಲಿ ಪ್ರತಿಭಟ ನೆಗಳ ನೈಜ ಮೌಲ್ಯ ಕುಸಿಯಲು ಇದೂ ಒಂದು ಕಾರಣ ಎನ್ನಬಹುದು. ಇನ್ನಾ ದರೂ ಸಂಘಟನೆಗಳು ಇತ್ತ ಗಮನ ಹರಿಸಲಿ. ತಾವು ಮಾಡಿದ ಪ್ರತಿಭಟನೆಗಳಿಂದ ತಾವು ಕಂಡುಕೊಂಡ ಸಾರ್ಥಕತೆ ಏನು ಎನ್ನು ವುದನ್ನು ಕಂಡುಕೊಳ್ಳಲಿ. ಅದೇ ರೀತಿ ಜಿಲ್ಲಾ ಧಿಕಾರಿಗಳು ಕೂಡ ಇತ್ತ ಗಮನ ಹರಿಸಿ. ಪ್ರತಿಭಟನಕಾರರ ಮನವಿಗಳನ್ನು ಸಂಬಂ ಧಪಟ್ಟವರಿಗೆ ತಲುಪಿಸಲಿ.
ವಿನ್ಯಾಸ್ ಆರ್.ಶೆಟ್ಟಿ, ಜೆಪ್ಪು

ರಾ.ಹೆದ್ದಾರಿಯ ಇಕ್ಕೆಲಗಳಲ್ಲಿ ಮರ ಬೆಳೆಸೋಣ
ಹಿಂದೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾಲು ಮರಗಳು ಬೆಳೆದು ನಿಂತಿತ್ತು. ಇದರಿಂದ ವಾತಾವರಣ ತಂಪಾಗಿತ್ತಲ್ಲದೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶುದ್ಧ ಗಾಳಿ ಸಿಗುತ್ತಿತ್ತು. ಆದರೆ ಈಗ ಹೆದ್ದಾರಿ ವಿಸ್ತರಣೆಯ ನೆಪದಲ್ಲಿ ಬೃಹತ್ ಮರಗಳನ್ನು ಕಡಿದು ಉರು ಳಿಸಲಾಗಿದೆ. ನೂರಾರು ವರ್ಷಗಳಷ್ಟು ಹಳೆಯ ಮರಗಳು ಇಂದು ಉಳಿ ದಿಲ್ಲ. ಇದರಿಂದ ರಸ್ತೆಯಲ್ಲಿ ಸಂಚರಿಸುವಾಗ ಬಿಸಿಗಾಳಿ ಬೀಸುತ್ತದೆ. ವಾತಾ ವರಣ ಕಲುಷಿತಗೊಂಡಿದೆ. ಆದ್ದರಿಂದ ನೂತನ ರಸ್ತೆಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸಲು ಸಾಮಾಜಿಕ ಸಂಘಟನೆಗಳು ಮುಂದಾಗಬೇಕಿದೆ. ಜನರು ಒಗ್ಗಟ್ಟಾಗಿ ಮನಸ್ಸು ಮಾಡಿದರೆ ಇದು ಕಷ್ಟವೇನಲ್ಲ. ಸ್ವಚ್ಛ ಪರಿಸರ ನಮ್ಮ ಹಕ್ಕು. ಅದನ್ನು ಪಡೆಯುವಲ್ಲಿ ಪ್ರಯತ್ನ ಪಡಬೇಕಾದವರೂ ನಾವೇ ಅಲ್ಲವೇ?
ರಾಮಚಂದ್ರ, ಸುರತ್ಕಲ್

ಪವರ್‌ಕಟ್ ಮಾಡಬೇಡಿ
ಕಾರ್ಕಳ ತಾಲೂಕಿನ ಅಜೆಕಾರು ಪರಿಸರದಲ್ಲಿ ವಾರದ ಹೆಚ್ಚಿನ ದಿನಗಳಲ್ಲಿ ರಾತ್ರಿಯ ವೇಳೆ ಅನಿಯಮಿತವಾಗಿ ಪವರ್ ಕಟ್ ಮಾಡಲಾಗುತ್ತದೆ. ಮೆಸ್ಕಾಂಗೆ ಫೋನ್ ಮಾಡಿ ವಿಚಾ ರಿಸಿದರೆ ಸಮರ್ಪಕ ಮಾಹಿತಿಯನ್ನೂ ಕೊಡುವುದಿಲ್ಲ. ಇದ ರಿಂದ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ನಗರ ಪ್ರದೇಶದಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗವುದೆಂದು ಹೇಳಿದ್ದ ಇಂಧನ ಸಚಿವೆ ಈಗ ಸುಮ್ಮನಿದ್ದಾರೆ. ಅಡುಗೆ ಅನಿಲದ ಗಲಾಟೆಯಲ್ಲಿ ಸಚಿವೆಗೆ ವಿದ್ಯುತ್ ಸಮಸ್ಯೆ ಕಾಣುತ್ತಿಲ್ಲವೋ ಏನೋ? ಇಂಧನ ಸಚಿ ವರು ನಮ್ಮ ಸಮಸ್ಯೆಯತ್ತ ಗಮನಿಸಿ, ರಾತ್ರಿಯ ವೇಳೆ ಅಜೆ ಕಾರು ಪರಿಸರದಲ್ಲಿ ವಿದ್ಯುತ್ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ಸುಕನ್ಯಾ, ಅಜೆಕಾರ್

ಮೊಬೈಲ್ ನಿಷೇಧ ಎಷ್ಟು ದಿನ?
ಇತ್ತೀಚೆಗೆ ಸಚಿವ ಲಕ್ಷ್ಮಣ್ ಸವದಿ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ವೀಕ್ಷಿಸಿದ್ದು ದೊಡ್ಡ ಸುದ್ದಿಯಾಯಿತು. ಸವದಿ ಹೇಳಿ ಕೆಯಂತೆ ಇನ್ನಿಬ್ಬರು ಸಚಿವರ ಮೇಲೂ ಆರೋಪ ಹೊರಿಸ ಲಾಯಿತು. ಈಗ ಸದನ ಸಮಿತಿ ವಿಚಾರಣೆ ನಡೆದು ಸವದಿ ಯನ್ನು ಮಾತ್ರ ಆರೋಪಿ ಎಂದು ಪರಿ ಗಣಿಸಿದೆ. ಇದೇ ವೇಳೆ ಸದನದೊಳಗೆ ಮೊಬೈಲ್ ನಿಷೇಧ ಮಾಡಬೇಕು ಎಂದು ಸಮಿತಿ ತಿಳಿಸಿದೆ. ಆದರೆ ಈ ಆದೇಶ ಎಷ್ಟು ದಿನ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂ ದರೆ ಸದನದೊಳಗೆ ಮೊಬೈಲ್ ಎಲ್ಲರೂ ಬಳಸುತ್ತಾರೆ. ಕಲಾಪ ನಡೆಯುವ ವೇಳೆ ಮೊಬೈಲ್ ನಲ್ಲಿ ಆಟವಾಡುತ್ತಲೇ ಸಮಯ ಕಳೆಯುವ ಅದೆಷ್ಟೋ ಸಚಿ ವರು ಇದ್ದಾರೆ. ಇವರಿಗೆ ಸದನ ವೆಂದರೆ ಮಾವನ ಮನೆಯಿದ್ದಂತೆ. ಸದನ ದೊಳಗೆ ಮೊಬೈಲ್ ಬಳಕೆ ನಿಷೇಧಿಸುವ ಬದಲು ಜಾಮರ್ ಅಳವಡಿಸಿದರೆ ಒಳ್ಳೆಯದು.
ರವಿಪ್ರಕಾಶ್, ಕೆಸರ್‌ಗದ್ದೆ

ಏರ್‌ಪೋರ್ಟ್ ರಸ್ತೆ ಸರಿಪಡಿಸಿ
ಜಿಲ್ಲೆಯ ವಿಮಾನ ನಿಲ್ದಾಣವನ್ನು ಮಂಗ ಳೂರು ನಗರದಿಂದ ಸಂಪರ್ಕಿಸಲು ಅನೇಕ ಕೂಡು ರಸ್ತೆಗಳಿವೆ. ಆದರೆ ಅದರಲ್ಲಿ ದೇರೆಬೈಲ್ ಮೂಲಕ ಸಾಗುವ ರಸ್ತೆ ಸ್ವಲ್ಪ ಹತ್ತಿರವಾಗುತ್ತದೆ. ಹಾಗಾಗಿ ಹೆಚ್ಚಿನವರು ಇದೇ ರಸ್ತೆಯ ಮೂಲಕ ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಾರೆ. ಆದರೆ ಇಲ್ಲಿನ ರಸ್ತೆಯ ಸ್ಥಿತಿ ನೋಡಿದರೆ ವಾಹನ ಸವಾ ರರು ಇತರೇ ಪರ್ಯಾಯ ರಸ್ತೆಯನ್ನು ಅವಲಂ ಭಿಸುವುದು ಅನಿವಾರ್ಯವೆನಿಸುತ್ತದೆ. ಲ್ಯಾಂಡ್ ಲಿಂಕ್ಸ್ ಕ್ರಾಸ್ ತನಕ ರಸ್ತೆಗೆ ಕಾಂಕ್ರಿಟೀಕರಣ ಮಾಡ ಲಾಗಿದ್ದರೂ ಅಲ್ಲಿಂದ ಮುಂದೆ ಹೋದರೆ ರಸ್ತೆಯ ದುರಾವಸ್ಥೆಯ ದರ್ಶನವಾಗುತ್ತದೆ. ಬಹುಶಃ ಈ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಕೈಗೆತ್ತಿ ಕೊಂಡು ಒಂದೆರಡು ವರ್ಷಗಳೇ ಆಗಿವೆ. ಆದರೆ ರಸ್ತೆ ಮಾತ್ರ ಇಲ್ಲಿಯವರೆಗೆ ಪೂರ್ತಿಯಾಗಿಲ್ಲ. ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಜಿಲ್ಲೆಯ ಪ್ರಮುಖ ರಸ್ತೆಯ ಸ್ಥಿತಿಯೇ ಹೀಗಾದರೆ ಉಳಿದ ರಸ್ತೆಗಳ ಸ್ಥಿತಿ ಹೇಗಿರಬೇಡ? ವಿಮಾನ ನಿಲ್ದಾಣ ದಿಂದ ಹೊರಬರುವ ಕೆಂಜಾರು ರಸ್ತೆಯ ಪರಿಸ್ಥಿತಿ ಹೇಳಿದಷ್ಟೂ ಮುಗಿಯದು. ಇಲ್ಲಿನ ರಸ್ತೆಗಳಲ್ಲಿ ಡಾಮರು ಮಾಯವಾಗಿ ಆಳೆತ್ತರದ ಗುಂಡಿಗಳು ಕಂಡುಬರುತ್ತಿವೆ. ಇನ್ನಾದರೂ ಪಾಲಿಕೆ, ಸಂಬಂ ಧಪಟ್ಟ ಇಲಾಖೆ ಇತ್ತ ಗಮನಹರಿಸಲಿ.
ಅಶ್ವಿನ್, ಯೆಯ್ಯಾಡಿ

ಹಿಂದುತ್ವ ಒಂದೇ ಎಲ್ಲದಕ್ಕೂ ಉತ್ತರವಲ್ಲ
ಇತ್ತೀಚೆಗೆ ಉಡುಪಿ-ಚಿಕ್ಕಮಗಳೂರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೀನಾಯವಾಗಿ ಸೋಲು ಕಂ ಡರು. ಇದಕ್ಕೆ ಕಾಂಗ್ರೆಸ್‌ನ ಉತ್ತಮ ಆಡ ಳಿ ತವಾಗಲೀ ಅಥವಾ ಬಿಜೆಪಿಯ ಕೆಲ ವಿದ್ಯ ಮಾನಗಳಾಗಲೀ ಕಾರಣ ಎನ್ನುವುದು ಕೇವಲ ಮೇಲ್ನೋಟದ ರಾಜಕೀಯ ವಿಮ ರ್ಶೆಗಳಷ್ಟೇ.
ಇವೆಲ್ಲಕ್ಕಿಂತ ಹೆಚ್ಚಾಗಿ ಸುನಿಲ್ ಕುಮಾರ್ ಸೋತದ್ದು ತನ್ನ ಅತಿಯಾದ ಹಿಂದುತ್ವದ ಪ್ರೀತಿಯಿಂದ! ಸುನಿಲ್ ಒಬ್ಬರೇ ಅಲ್ಲ. ಹೆಚ್ಚಿನ ಬಿಜೆಪಿಗರು ಒಂದು ಮಾತನ್ನು ಅರಿತುಕೊ ಳ್ಳಲಿ. ಹಿಂದುತ್ವ ಎನ್ನುವುದು ಒಂದು ಜೀವನ ವಿಧಾನವಷ್ಟೇ. ಅದಕ್ಕೆ ತನ್ನದೇ ಆದ ಸನಾತನ ಇತಿಹಾಸವಿದೆ. ಆದರೆ ನಿಮ್ಮಂತಹ ಕೆಲ ರಾಜಕಾ ರಣಿಗಳಿಂದಾಗಿ ಹಿಂದುತ್ವ ಎನ್ನುವುದು ಬಿಜೆಪಿ ಎಂಬ ರಾಜಕೀಯ ಪಕ್ಷದ ಹಿಡನ್ ಅಜೆಂಡಾ ಎನ್ನುವಂತಾಗಿದೆ. ಬಿಜೆಪಿ ಯಲ್ಲಿರುವವರೆಲ್ಲರೂ ಹಿಂದುಗಳು ಎಂಬ ಭಾವನೆ ಹಲವರಲ್ಲಿದೆ. ಹೀಗಿರುವಾಗ ನನಗೆ ಹಿಂದುಗಳ ಮತವೊಂದೇ ಸಾಕು ಎಂದು ಎದೆ ತಟ್ಟಿ ಹೇಳುವ ಸುನಿಲ್‌ಕುಮಾರ್ ಗೆಲ್ಲು ವುದಾದರೂ ಹೇಗೆ? ತನ್ನ ಧರ್ಮದ ಮೇಲಿನ ಪ್ರೀತಿ ಸಹಜವಾದದ್ದೇ. ಆದರೆ ಎಲ್ಲದಕ್ಕೂ ಅದೇ ಉತ್ತರವಾ ಗಬಾರದು. ಸುನಿಲ್ ಕುಮಾ ರ್‌ರವರ ಸೋಲು ದೊಡ್ಡದಲ್ಲ. ಆದರೆ ನಿಮ್ಮ ರಾಜಕೀಯದ ಮಧ್ಯೆಯೂ ಹಿಂದುತ್ವವನ್ನು ಬಳಸಿಕೊಂಡಿದ್ದು ತಪ್ಪು. ಧರ್ಮವನ್ನು ಧರ್ಮವಾಗಿಯೇ ಉಳಿಯಲು ಬಿಟ್ಟು ಬಿಡಿ. ಅದರ ಮಧ್ಯೆ ರಾಜಕೀಯವನ್ನು ಎಳೆದು ತಂದು ಅಪವಿತ್ರಗೊಳಿಸದಿರಿ. ಒಂದು ವೇಳೆ ನಿಮ್ಮ ಮಾತನ್ನು ಉಡುಪಿ-ಚಿಕ್ಕ ಮಗ ಳೂರು ಲೋಕಸಭಾ ಕ್ಷೇತ್ರದ ಸಮಸ್ತ ಹಿಂದೂ ಬಾಂಧವರು ಒಪ್ಪಿದ್ದರೆ ನೀವು ಗೆಲ್ಲುತ್ತಿದ್ದಿರಿ. ಯಾಕೆಂದರೆ ಅಷ್ಟರ ಮಟ್ಟಿಗೆ ಅಲ್ಲಿ ಹಿಂದುಗಳ ಪ್ರಾಬಲ್ಯವಿದೆ. ಆದರೆ ಜಾತ್ಯತೀತ ರಾಷ್ಟ್ರದಲ್ಲಿ ನಿಮ್ಮ ಮಾತು ಒಪ್ಪುವಂಥದ್ದಲ್ಲ. ನಿಮ್ಮ ಮಾತಿ ನಿಂದ ತಲೆ ತಗ್ಗಿಸಿದ ಹಿಂದೂ ಸಮಾಜ ಅನಿ ವಾರ್ಯವಾಗಿ ನಿಮ್ಮನ್ನು ಸೋಲಿಸಿದೆ. ಇಲ್ಲ ವಾದರೆ ಬಿಜೆಪಿಗೆ ಇಲ್ಲಿ ಗೆಲ್ಲುವುದು ಕಷ್ಟದ ಕೆಲಸವಾಗಿರಲಿಲ್ಲ. ಇನ್ನಾದರೂ ಹಿಂದುತ್ವವನ್ನು ನಿಮ್ಮ ಧರ್ಮ ಇಲ್ಲವೇ ಜೀವನ ವಿಧಾನ ಅಂದು ಕೊಳ್ಳಿ. ಅದನ್ನು ಎಂದಿಗೂ ರಾಜಕೀಯಕ್ಕೆ ಎಳೆದು ತರಬೇಡಿ. ನಿಮ್ಮ ಒಂದು ಮಾತು ಜನಾಭಿಪ್ರಾಯವನ್ನೇ ಬದಲಿಸಬಹುದು. ಇದನ್ನು ನೆನಪಿಟ್ಟುಕೊಂಡು ಸಭ್ಯ ರಾಜಕಾರಣಿಯಾಗಿರಿ.
ಧ್ವನಿ, ಮಂಗಳೂರು

ಸರಕಾರಕ್ಕೆ ಜನರೇ ಪಾಠ ಕಲಿಸಬೇಕಾಗಿದೆ

Posted by JAYAKIRANA Kirana on | 0 comments | Leave a comment...


ತೈಲ ಬೆಲೆ ಹೆಚ್ಚಳ, ತೆರಿಗೆ ಹೆಚ್ಚಳ, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ನಿರಂತರ ಕಾಟ ಕೊಡುವ ಭ್ರಷ್ಟ ಸರಕಾರಕ್ಕೆ ಜನ ಪಾಠ ಕಲಿಸಬೇಕು. ಅದರಲ್ಲೂ ಸಿಕ್ಕಿದ್ದಕ್ಕೆಲ್ಲಾ ಪ್ರತಿಭಟನೆ, ಹೋರಾಟ ಮಾಡುವವರು ಅವಶ್ಯಕ ವಸ್ತುಗಳ ವಿಚಾರದಲ್ಲಿ ತೀರಾ ನಿರ್ಲಕ್ಷ್ಯ ವಹಿಸುವುದು ಕಂಡುಬರುತ್ತಿದೆ.

ಶಕೀಲಾ ಅರಾ, ಮಂಗಳೂರು
ಇಂದು ದೇಶಾದ್ಯಂತ ಅವಶ್ಯಕ ವಸ್ತುಗಳ ಬೆಲೆಯೇರಿಕೆ ಅತೀ ಗರಿಷ್ಟ ರೂಪಕ್ಕೆ ತಲುಪಿರುವ ಬಿಸಿ ಒಂದೆಡೆ. ಮೋಟಾರು ಸೈಕಲ್, ಸ್ಕೂಟರ್ ಇತ್ಯಾದಿ ಬಳಸುವ ಜನಸಾಮಾನ್ಯರು ಅವುಗಳನ್ನು ಬೇಲಿಗಿಡುವ ಪರಿಸ್ಥಿತಿ ಮತ್ತೊಂದೆಡೆ. ಪ್ರಯಾ ಣವೂ ದುಬಾರಿ, ಖರೀದಿಯೂ ದುಬಾರಿಯಾದರೆ ಬದುಕು ಹೇಗಾದೀತು? ತೈಲ ಬೆಲೆ ನಿಯಂತ್ರಣವನ್ನು ಕೇಂದ್ರ ಸರಕಾರ ಕೈಬಿಟ್ಟು ತೈಲ ಕಂಪೆನಿಗಳಿಗೆ ಎಲ್ಲ ಅಧಿಕಾರಗಳನ್ನು ಹಸ್ತಾಂ ತರಿಸುವುದರೊಂದಿಗೆ ಜನರ ಬದುಕು ಸ್ಥಿತಿಯ ಮೇಲೆ ಅಪಾರ ಹಾನಿ ಬಂದೆರಗಿದೆಯೆನ್ನಬಹುದು. ಈಗ ದರ ಹೆಚ್ಚಳಕ್ಕೆ ಡಾಲರ್ ಮುಂದೆ ರೂಪಾಯಿಯ ಮೌಲ್ಯ ಕುಸಿತವನ್ನು ಕಾರಣವಾಗಿ ತೈಲ ಕಂಪೆನಿಗಳು ಸೂಚಿಸುತ್ತಿವೆ. ಹಿಂದಿಗಿಂತ ಹೆಚ್ಚು ಹಣ ನೀಡಿ ಅವು ಕಚ್ಛಾ ತೈಲಗಳನ್ನು ಖರೀದಿಸ ಬೇಕಾಗಿದೆಯಂತೆ. ನಿಜ, ಈ ವರ್ಷದ ಆರಂಭದಲ್ಲಿ ನಲ್ವತ್ತು ರೂಪಾಯಿ ಚಿಲ್ಲ ರೆಗೆ ಅಮೇರಿಕದ ೧ ಡಾಲರನ್ನು ಪಡೆಯಬಹುದಾಗಿದ್ದರೆ ಈಗ ೫೦ ರೂಪಾಯಿ ಬೆಲೆ ವ್ಯಯಿಸಬೇಕಾಗಿದೆ. ಇಷ್ಟು ಹಣವನ್ನು ತೈಲ ಕಂಪೆನಿಗಳು ಹಿಂದಿಗಿಂತ ಅಧಿಕ ಪಾವತಿಸಬೇಕಾಗು ತ್ತದೆ. ಆದರೆ ಡಾಲರ್‌ನೆದುರು ರೂಪಾಯಿ ಕುಸಿದದ್ದಕ್ಕೆ ಜನ ಸಾಮಾನ್ಯ ಹೇಗೆ ಹೊಣೆಯಾಗುತ್ತಾನೆ? ಜಾಗತೀಕರಣವನ್ನು ಕೊರಳಿಗೆ ಬಿಗಿದುಕೊಂಡು ಉದಾರೀಕರಣವೆಂದು ಭ್ರಷ್ಟಾಚಾ ರಕ್ಕೆ ಸಾಧ್ಯತೆ ಹೆಚ್ಚಿಸಿದ ತಪ್ಪು ನಡೆಗಳ ಪರಿಣಾಮ ಅದು. ಆ ತಪ್ಪನ್ನು ಜನಸಾಮಾನ್ಯರಿಂದ ಕಿತ್ತು ಸರಿಪಡಿಸುವ ಕಾರ್ಪೋ ರೇಟ್ ಯತ್ನ ಅನಾಹುತವನ್ನು ಸೃಷ್ಟಿಸುತ್ತಿದೆ. ಮುಖ್ಯವಾಗಿ ತೈಲದರ ಹೆಚ್ಚಳವೊಂದೇ ದೇಶದ ಪ್ರಜೆಗಳನ್ನು ನಲುಗಿಸಲು ಸಾಕು.
ಹಾಲು, ಹಣ್ಣು, ಹಂಪಲು, ತರಕಾರಿ, ಬೇಳೆ ಕಾಳುಗಳ ಬೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರ ಏರಿಕೆ! ಟೊಮೆಟೋ ಸಾರು ಮಾಡಿ ಅನ್ನ ಹೊಟ್ಟೆಗಿಳಿಸೋಣವೆಂದರೆ ದಿನಾಲೂ ಅದರ ರೇಟು ಹೆಚ್ಚುತ್ತಿದೆ. ಉತ್ತರ ಭಾರತದಲ್ಲಿ ಹಬ್ಬದ ಸಡಗರ ಇರುವುದರಿಂದ ಅವಶ್ಯಕ ವಸ್ತುಗಳ ದರ ಹೆಚ್ಚಳ ಸಂಭವಿಸಿತೆಂದು ಕೇಂದ್ರ ಸರಕಾರ ಸಬೂಬು ಹೇಳಿದೆ. ವಾಸ್ತ ವದಲ್ಲಿ ಈ ಸರಕಾರದ ಕೈಯಲ್ಲಿ ಯಾವ ನಿಯಂತ್ರಣವೂ ಇಲ್ಲ. ವ್ಯವಸ್ಥೆಯಲ್ಲಿ ನಿಯಂತ್ರಣ ಕಾಪಾಡಲು ಸಾಧ್ಯವಿಲ್ಲದವರಿಗೆ ದೇಶವನ್ನು ಆಳುವ ಉಸಾಬರಿ ಯಾಕೆ? ಅವಶ್ಯಕ ವಸ್ತುಗಳ ಬೆಲೆಯೇರಿಕೆಗೆ ಇಂಧನ ಬೆಲೆ ಹೆಚ್ಚಳವನ್ನು ವ್ಯಾಪಾರಿಗಳು ಸೂಚಿ ಸುತ್ತಾರೆ. ಸಾಗಾಟ ವಹಿವಾಟು ದುಬಾರಿಯಾಗಿರುವುದೊಂದೇ ಬೆಲೆ ಹೆಚ್ಚಳಕ್ಕೆ ಕಾರಣವೆನ್ನಬೇಕಾಗಿಲ್ಲ. ಮಧ್ಯವರ್ತಿಗಳ ಲಾಭ ಬಡುಕತನವೂ ಇದಕ್ಕೆ ಕಾರಣವಾಗಿದೆ. ತೈಲ ಕಂಪೆನಿಗೂ ನಷ್ಟ! ವ್ಯಾಪಾರಿಗಳಿಗೂ ನಷ್ಟ. ಎಲ್ಲರಿಗೂ ಲಾಭವಾಗಬೇಕು. ಇದನ್ನು ಪ್ರಜೆಗಳ ರಕ್ತದಿಂದ ಹೀರುವ ಇಂದಿನ ಮಾನಸಿಕ ಸ್ಥಿತಿಯ ಕ್ರೌರ್ಯಕ್ಕೆ ಮದ್ದು ಕಂಡುಹುಡುಕದೆ ಉಳಿಗಾಲವಿಲ್ಲ. ತೈಲಗಳ ಬೆಲೆ ಹೆಚ್ಚಿದರೆ ಮನುಷ್ಯ ತಿನ್ನುವ ವಸ್ತುಗಳ ಬೆಲೆ ಎಲ್ಲಿದ್ದೀತು? ಇಂತಹ ಒಂದು ವಾತಾವರಣ ಹುಟ್ಟುಹಾಕುವವರು ಪಾರ್ಲಿ ಮೆಂಟಿನಲ್ಲೇಕೆ ಕೂತುಕೊಳ್ಳಬೇಕು? ಬರೇ ಭ್ರಷ್ಟಾಚಾರ ಮಾಡು ವುದಕ್ಕಾ? ಭ್ರಷ್ಟಾಚಾರಗಳಿಂದ ಹಣ ವಸೂಲಿ ಮಾಡಿ ತೈಲ ಕಂಪೆನಿಗಳ ನಷ್ಟ ಭರಿಸಿ ಎಂದು ಬೆಲೆಯೇರಿಕೆಯಿಂದ ತತ್ತರಿಸಿ ಸಾಯುವ ಮೊದಲು ಜನರು ರಾಜಕಾರಣಿಗಳಿಗೆ ಪಾಠ ಹೇಳು ವುದು ಅವಶ್ಯಕವಾಗಿದೆ.
ತೈಲ ವಹಿವಾಟನ್ನು ತೈಲ ಕಂಪೆನಿಗಳಿಗೆ ಬಿಟ್ಟು ಕೊಡಲು ತೈಲ ವಹಿವಾಟಿನಲ್ಲಿ ಖಾಸಗಿಗಳನ್ನು ತಂದು ನಿಲ್ಲಿಸಲು ಈ ದೇಶದ ಜನರು ಖಂಡಿತಾ ಹೇಳಿಲ್ಲ. ಸಾರ್ವಜನಿಕ ಉದ್ದಿಮೆ ಯಾಗಿ ಸರಕಾರ ನಿಯಂತ್ರಣದಲ್ಲಿರಬೇಕಾಗಿದ್ದ ಈ ಉದ್ಯಮಗ ಳನ್ನು ಜನರ ಹಕ್ಕಿನಿಂದ ದೂರ ಇಟ್ಟಿರುವ ಆಡಳಿತಗಾರರು ಅಪರಾಧಿಗಳು. ನಷ್ಟದ ಲೆಕ್ಕಗಳನ್ನು ಹೇಳಿ ತೆರಿಗೆ, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲಗಳ ದರವನ್ನು ಹೆಚ್ಚಿಸಿ ಜನರ ಬದು ಕನ್ನು ನರಕ ಮಾಡುವುದಲ್ಲ. ಒಂದರಲ್ಲಿ ನಷ್ಟವಾದರೆ ಇನ್ನೊಂ ದರ ಲಾಭವನ್ನು ಬಳಸಿ ಸರಿ ಮಾಡುವುದಾದರೆ ಅದು ಸರ ಕಾರ. ಈ ಹೊಣೆಯನ್ನು ಮರೆತಿರುವ ಇಂದಿನ ಆಡಳಿತಗಾ ರರು ಅಕ್ಷಮ್ಯರಾಗಿದ್ದಾರೆ. ಆಗಾಗ ತೈಲ ಬೆಲೆ ಹೆಚ್ಚಳ, ತೆರಿಗೆ ಹೆಚ್ಚಳ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯ ರಿಗೆ ನಿರಂತರ ಕಾಟ ಕೊಡುವ ಭ್ರಷ್ಟ ಸರಕಾರಕ್ಕೆ ಜನ ಪಾಠ ಕಲಿಸಬೇಕು. ಅದರಲ್ಲೂ ಸಿಕ್ಕಿದಕ್ಕೆಲ್ಲಾ ಪ್ರತಿಭಟನೆ, ಹೋರಾಟ ಮಾಡುವವರು ಅವಶ್ಯಕ ವಸ್ತುಗಳ ವಿಚಾರದಲ್ಲಿ ತೀರಾ ನಿರ್ಲಕ್ಷ್ಯ ವಹಿಸುವುದು ಕಂಡುಬರುತ್ತಿದೆ. ಜನ ತಿನ್ನಲಿಕ್ಕಿಲ್ಲದೆ, ಉಣ್ಣಲಿಕ್ಕಿ ಲ್ಲದೆ ಸತ್ತು ಮಣ್ಣಾಗಬಾರದೆಂದು ಹೋರಾಟಗಾರರಿಗೇಕೆ ಅನ್ನಿ ಸುತ್ತಿಲ್ಲ?

ಸೀನಿಯರ್ ಹಗ್ಗದ ಕೋಣಗಳ ಯಜಮಾನರು

Posted by JAYAKIRANA Kirana on | 0 comments | Leave a comment...

ಸುರತ್ಕಲ್ ಮುತ್ತಯ್ಯ ಶೆಟ್ರು ಮತ್ತು ಕೃಷ್ಣಪ್ಪ ಪೂಜಾರಿಯವರು
೧೯೮೨ರಲ್ಲಿ ಬೊಳಂತೂರು ಎರಡನೇ ಕಂಬಳದಂದು ಮಾಧವ ಪ್ರಭುಗಳು ಅಗ್ಗಿದ ಕಳಿಯ ನಾರಾಯಣ ದೇವಾಡಿಗರ ಕೊಕ್ಕೆ ಕೋಣವನ್ನು ತಮ್ಮದಕ್ಕೆ ಜೊತೆ ಹಾಕಿ ಓಡಿಸಿದರು.
ಇದು ಸುರತ್ಕಲ್ ಕಂಬಳದಲ್ಲಿ ಪಾಕಬೆಟ್ಟಿನ ಕೋಣಗಳೊಂ ದಿಗೆ ಸ್ಪರ್ಧೆಯಲ್ಲಿ ಸರಿಸಾಟಿಯಾದ ಕಾರಣ ಬಹುಮಾನವು ಉಭ ಯರಿಗೂ ಹಂಚಬೇಕಾಯಿತು. ಅಂದು ಇವುಗಳ ಓಟದಲ್ಲಿ ಬಹಳ ಸುಧಾರಣೆಯಾಗಿತ್ತು.
ಕೊಡಂಗೆ ಗರಡಿಮನೆ ಸುಂದರ ಪೂಜಾರಿ
ಅಡ್ಡ ಹಲಗೆಯ ಓಟದಲ್ಲಿ ಉತ್ತಮವಾದವುಗಳು ಇವರ ಕೋಣಗಳು. ಇವರ ಕಣೆ ಹಲಿಗೆಯ ಕೋಣಗಳು ಯಶ ಸ್ಸಿನ ದಾರಿಯಲ್ಲಿವೆ. ಕೀಲು ಕುದುರೆಗಳಂತೆ ಇವರ ಅಡ್ಡ ಹಲಿಗೆಯ ಕೋಣಗಳ ಓಟ ತಾಳಬದ್ಧವಾಗಿದ್ದು, ನೋಡು ವವರ ಕಣ್ಮನ ತುಂಬುತ್ತಿತ್ತು. ಇವುಗಳ ಜತೆ ಶುದ್ಧವಾಗಿತ್ತು. ಸಾಕಣೆಯಲ್ಲಿ ಕೊರತೆ ಇಲ್ಲದೆ ಕೋಣಗಳು ಓಡುವಾಗ ಇವುಗಳೆರಡರ ಹೆಜ್ಜೆಗಳು ಹಿಂದುಮುಂದಾಗುವುದನ್ನು ಕಾದು ನೋಡಿದರೂ ಗುರುತಿಸಲಾಗದಷ್ಟು ಸರಿಯಾದ ಹೆಜ್ಜೆಯ ಜೊತೆಯೋಟ ಇವುಗಳ ವಿಶೇಷತೆ.
ಹಲಗೆಯನ್ನೇರಿದ ಜಾಕಿಗೆ ಇವುಗಳನ್ನು ಓಡಿಸುವುದು ನಿರಾಯಾಸವಾಗಿತ್ತು. ಕೋಣಗಳ ಓಟಕ್ಕೆ ಬಿಡುವ ಗಂತಿ ನಲ್ಲಿ 'ಹಾ! ಬುಡಿ ಎಂದು ಹೇಳುವಾಗ ಕೋಣಗಳು ತಮ್ಮ ಬಾಲವು ಜೋಕಿಗೆ ಸಿಗದಂತೆ ಅಗಲಕ್ಕೆ ಹೋಗುವುದಿದೆ. ಆ ರೀತಿಯಲ್ಲಿ ಓಡಿದರೆ ಒಮ್ಮೊಮ್ಮೆ ಜೋಕಿಯು ಕೆಳಕ್ಕೆ ಬೀಳು ವುದುಂಟು. ಸರಿಯಾಗಿ ಓಟಕ್ಕೆ ಸಿದ್ಧವಾದರೆ ಜೋಕಿಗೆ ತ್ರಾಸವಿಲ್ಲ. ಕೊಡಂಗೆ ಸುಂದರ ಪೂಜಾರಿಯವರ ಕೋಣ ಗಳು ತುಂಬಾ ಪಳಗಿಸಲ್ಪಟ್ಟವುಗಳಾಗಿದ್ದು ಜಿಲ್ಲೆಯಲ್ಲಿ ಇವು ಗಳಿಗೆ ಒಳ್ಳೆಯ ಹೆಸರಿತ್ತು. ಇವರು ಎರಡು ಜೊತೆ ಓಟದ ಕೋಣಗಳನ್ನು ಪೋಷಿಸಿ, ಅಡ್ಡ ಹಲಗೆ ಮತ್ತು ಕಣೆಹಲಿ ಗೆಯ ಕೋಣಗಳೆಂದು ಕಂಬಳಕ್ಕೆ ತರುತ್ತಾರೆ. ಬೊಳಂ ತೂರು, ಆಳದಂಗಡಿ, ಬಜಗೋಳಿ ಕಂಬಳಗಳಲ್ಲಿ ಒಂದನೇ ಬಹುಮಾನವನ್ನು, ಮಿಜಾರು ಕಂಬಳದಲ್ಲಿ ದ್ವಿತೀಯ ಬಹು ಮಾನವನ್ನೂ ಪಡೆದಿರುತ್ತಾರೆ.
ಸುರತ್ಕಲ್ ಮುತ್ತಯ ಶೆಟ್ರು
ಇವರು ಸೀನಿಯರ್ ಹಗ್ಗದ ಕೋಣಗಳನ್ನು ಹಾಗೂ ಜ್ಯೂನಿಯರ್ ಹಗ್ಗದ ಕೋಣಗಳನ್ನೂ ಕಟ್ಟಿ, ಹಲವು ಕಂಬ ಳಗಳಲ್ಲಿ ಬಹುಮಾನ ಪಡೆದವರಾಗಿದ್ದಾರೆ. ಇವರಲ್ಲಿರುವ ಅಡ್ಡ ಹಲಗೆಯ ಕೋಣಗಳು ಒಳ್ಳೆಯ ಸಾಕಣೆಯಿಂದಿದ್ದು, ನೋಡುವವರಿಗೆ ಸಂತಸವನ್ನುಂಟು ಮಾಡುತ್ತವೆ. ಇವು ೧೯೮೨ರಲ್ಲಿ ದ್ವಿತೀಯ ಬಹುಮಾನವನ್ನು ಪಡೆದವುಗಳು. ಓಟದ ವೇಳೆ ಮುತ್ತದ ಕೋಣವು ಸ್ವಲ್ಪ ಉಪಟಳವನ್ನು ಕೊಡುತ್ತಿತ್ತು. 'ಹಾ ಬುಡಿ' ಎಂದೊಡನೆ ಜಾಕಿಯ ಕೈಯಿಂದ ಬಾಲವನ್ನು ತಪ್ಪಿಸಲು ಚಡಪಡಿಸುತ್ತದೆ. ಹಲವು ವೇಳೆ ಬಾಲತಪ್ಪಿ, ಜಾಕಿ ಕೆಳಗುರುಳುತ್ತಾನೆ. ಬರೇ ಕೋಣಗಳೇ ಮಂಜೊಟ್ಟಿಗೆ ಬರುವುದಿದೆ. ಇವು ಸರಾಗವಾಗಿ ಓಡಿದರೆ ಬಹುಮಾನ ಇವುಗಳ ಪಾಲೇ.
ಸುರತ್ಕಲ್ ಕೃಷ್ಣಪ್ಪ ಪೂಜಾರಿ
ಇವರಲ್ಲಿಯೂ ಅಡ್ಡ ಹಲಗೆಯ ಓಟದ ಕೋಣಗ ಳಿದ್ದವು. ಇವರ ಕೋಣಗಳು ಹಾಗೂ ಸುರತ್ಕಲ್ ಮುತ್ತಯ್ಯ ಶೆಟ್ಟರ ಕೋಣಗಳು ಕಂಬಳಕ್ಕೆ ಇಳಿದಾಗ ಎರಡೂ ಜೊತೆ ಗಳನ್ನು ಪ್ರೇಕ್ಷಕರು ಗುರುತಿಸಲಾರದೆ ತಬ್ಬಿಬ್ಬಾಗುತ್ತಿದ್ದರು. ಎರಡು ಜೊತೆಗಳೂ ಉತ್ತಮ ಸಾಕಣೆಯಿಂದಿದ್ದು, ನೋಡುವಾಗ ಒಂದಕ್ಕೊಂದು ಸಮೀಪದ ಹೊಂದಾಣಿ ಕೆಗಳಿಂದ ಕೂಡಿತ್ತು. ಕೃಷ್ಣಪ್ಪ ಕೋಟ್ಯಾನರ ಕೋಣಗಳು ೧೯೮೨ರ ಮಿಜಾರು ಕಂಬಳದಲ್ಲಿ ಕೊಡಂಗೆ ಮನೆ ಸುಂದರ ಪೂಜಾರಿಯವರ ಕೋಣಗಳನ್ನು ಗೆದ್ದಿವೆ. ಹಲವು ಕಂಬ ಳಗಳಲ್ಲಿ ಸುಂದರ ಪೂಜಾರಿಯವರ ಕೋಣಗಳಿಂದ ಸೋಲನ್ನುಂಡ ಈ ಕೋಣಗಳು ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಈ ಕಂಬಳದಲ್ಲಿ ತಮ್ಮ ಓಟದ ರಭಸವನ್ನು ಹೆಚ್ಚಿಸಿ ಜಯಗಳಿಸಿದವು.
ನೆಲ್ಲಿಕಾರು ಜಿನರಾಜ ಜೈನ್
ಇವರ ಕೋಣಗಳು ಅಡ್ಡ ಹಲಗೆಯಲ್ಲಿ ಹೊಸಜೊತೆ, ಎರಡು ಜೊತೆ ಓಟದ ಕೋಣಗಳ ಯಜಮಾನರಿವರು. ಇವರ ಹೊಸ ಜೊತೆಯು ಪ್ರಪ್ರಥಮವಾಗಿ ಮಿಜಾರು ಕಂಬಳದಲ್ಲಿ ಅಡ್ಡ ಹಲಗೆಯಲ್ಲಿ ಸ್ಪರ್ಧೆಗೆ ಇಳಿದವು. ಅಂತೆಯೇ ದ್ವಿತೀಯ ಬಹುಮಾನವನ್ನೂ ಪಡೆದವು. ಈ ಕೋಣಗಳು ಅವರಲ್ಲಿ ಕಂಬಳದ ಕುರಿತು ಆಸಕ್ತಿ ಹುಟ್ಟಿ ಸಿದೆ. ಜಿನರಾಜ ಜೈನ್‌ರವರು ಸದಾ ಲವಲವಿಕೆಯಿಂದ ಇರುವ ವ್ಯಕ್ತಿಯಾಗಿದ್ದರು.
 (ಮುಂದಿನವಾರ : ಕಾಡಬೆಟ್ಟು ನಾರಾಯಣ ರೈ)

ನೆನಪೆಂಬ ಕಣಜ ಹೀಗಿದೆ ಗೆಳತೀ...

Posted by JAYAKIRANA Kirana on | 0 comments | Leave a comment...

ಅದೊಂದು ಸುಂದರ ಪರಿಶುದ್ಧ ಮನಸ್ಸು ಕಣೇ. ಆದರೆ ಸವಿಯೋಕೆ ಇನ್ನೊಂದು ಮನಸ್ಸಿರಬೇಕಿತ್ತೆಂಬ ಯೋಚನೆ. ತಕ್ಷಣ ಏನೋ ಬರೆಯಬೇಕೆಂಬ ಮನಸ್ಸು ಪುಸ್ತ ಕದ ಪುಟ ಹುಡುಕಿದಾಗ ಖಾಲಿ ಪುಟ ಸಿಗದಿದ್ದದ್ದೂ ವಿಶೇಷ. ಇದೇ ರೀತಿ ಅದೆಷ್ಟೊ ವರುಷಗಳಿಂದಲೂ ಹುಡುಕುತ್ತಿತ್ತು ನಿನ್ನ ಹೃದ ಯಾನಾ ಅನಾಮಿಕ. ನೀ ಇಲ್ಲಿಯವರೆಗೂ ಸಿಗದಿದ್ದದ್ದು ಅದಕ್ಕಿಂತಲೂ ವಿಶೇಷ. ಅದೆಷ್ಟೋ ಯೋಜನೆಯ ಸುತ್ತ್ತ ಒಂದು ಮನಸ್ಸಿದ್ದರೆ ಹೇಳಲು ಅನೇಕ ಪ್ರಯತ್ನಗಳು ಈ ಪಯಣದ ನಡುವೆ ಅರಿವಾಗಿದ್ದು, ಕನಸು ಬೇರೇನೆ ನನಸು ಬೇರೆ ಎಂಬ ಸತ್ಯಾಂಶ. ತಿದ್ದಿ ಸಲಹೋ ಪ್ರೀತಿಯೊಂದು ಜೊತೆಯಿರಬೇಕಿತ್ತೆಂಬ ಹಂಬಲ.
ಒಂಟಿ ಜೀವನದ ಹಿತ ಸುಖವಾದಾಗ ಯಾವುದೂ ಬೇಡ ಎನ್ನುವುದು ಈ ತಿರುವಿನ ನೀತಿಯಾ ದರೆ, ಅದೊಂದು ಕಾಲವಿತ್ತು. ಮನಸ್ಸು ಅಂದ ಹಾಗೆ. ಜಗತ್ತು ಇದೆಯೆಂಬ ಭ್ರಮೆಯ ಯುಗ. ಕ್ರಮೇಣ ಹಿತವಾದ್ದು ನಷ್ಟವಾದಾಗ ಎಲ್ಲಾನೂ ಕೈಬಿಟ್ಟು ಹೋಯಿತೆಂಬ ನಿಶ್ಚಲ ಅನುಭವ. ಪ್ರೀತಿ ಬೇಕು, ಬೇಕೆಂಬ ಹಂಬಲದ ಮನಸ್ಸಿಗೆ ಬ್ರೇಕ್ ಕೊಟ್ಟದ್ದು ಗೆಳೆಯ - ಗೆಳತಿಯ ಲವ್ ಸ್ಟೋರಿ. ಪ್ರತಿ ನಿತ್ಯವೂ ಯಾವುದೇ ಚಿಂತೆ, ದುಃಖವಿಲ್ಲದೆ ಸ್ವಾತಂತ್ರ್ಯದಿಂದ ಹಾರಾಡುತ್ತಿತ್ತು ಅವರ ಪ್ರತಿ ಕ್ಷಣಗಳು. ಎಲ್ಲೋ ಹೊರಟಿದ್ದ ಅವನ ಹಾದೀನ ತಿದ್ದಿ ತೀಡಿ ಒಂದು ಸುಂದರ ಲೋಕಕ್ಕೆ ಕರೆತಂದ ಅವಳ ಪ್ರಯತ್ನ ಮೆಚ್ಚುವಂತದ್ದು. ಇದು ಹೀಗೆಯೇ ಶಾಶ್ವತವಾಗಿರಲೆಂಬ ಅಪೇಕ್ಷೆಯು ನನ್ನದಾಗಿದ್ದರೆ ಅವನ ಕನಸುಗಳೆಲ್ಲವೂ ಗರಿಬಿಚ್ಚಿ ಕುಣಿದಾಡಿದಂತಿತ್ತು ಆ ಕಾಲದಿ.
ಆಗಲೂ ನನ್ನ ಮನಸ್ಸು ಹಾಗೆಯೇ ಇರಬೇಕೆಂಬ ಸ್ವಾರ್ಥದಾಸೆಗೆ ಮನಸ್ಸೊಮ್ಮೆ ಇಳಿಯಲೆತ್ನಿಸಿ ದ್ದರೆ ಒಂದು ಚಿಕ್ಕ ವಿಷಯಕ್ಕೆ ಅವಳ ಮಾತು ಕಡಿಮೆಯಾಗಿ ನಂಬಿಕೆ ಮುರಿದು ಬಿದ್ದು ಹುಚ್ಚನಾಗದೆ ನಾನೆನೆಯದ ಹಾದಿಗೆ ಇವನು ಬಂದು ನಿಂತಾಗ... ನೆನಪಾದದ್ದು ನನ್ನ ಈವನದ ಬೆಸ್ಟ್ ಫ್ರೆಂಡ್ ನೀನು ಕಣೇ. ಯಾಕೊ ನಿನ್ನ ಮೌನಕ್ಕೊಂದಿಷ್ಟು ಕಾರಣ ಗೊತ್ತಾಗುತ್ತಿದ್ರೆ ಈಗಲೂ ಸುಖವಾಗುತ್ತಿದ್ದೆ. ಅದೇನೇ ನನ್ನ ಕೈಗೆ ಸಿಕ್ಕರೂ ನೀನಿಲ್ಲದೆ ಸವಿಯಲು ಮನಸ್ಸು ಒಪ್ಪುತ್ತಿಲ್ಲ. ಏನೇ ಆದರೂ ನಿನ್ನನ್ನು ಒಂದಿಷ್ಟು ದೂರೋ ಸ್ಥಿತಿ ಬಂದರೂ ಮರು ಕ್ಷಣ ಕಣ್ಣುಗಳು ಒಂದು ಬಿಂದು ಹನಿ ನೀರನ್ನು ಉಡು ಗೊರೆಯಾಗಿ ನೀಡುವುದುಂಟು. ನಿನ್ನ ಹೆಸರಿನ ರೀತಿ ಮನಸ್ಸಿಗೆ ಮುದ ನೀಡುವ ಮಾತುಗಳು. ನಿನ್ನಿಂದ ಕೇಳಿ ಬರುತ್ತಿದ್ದ ಕಾಲ ಕಳೆದು ನಿನ್ನನ್ನು ಕಳೆದುಕೊಂಡು ಪಾಪಿಯಾದೆನಲ್ಲ ಎಂಬ ಹೆಗ್ಗಳಿಕೆ. ಅದೇನೇ ಅಂದರು ನೀನಿಲ್ಲದೆ ಬದುಕಿನಲ್ಲಿ ಗೆಳತಿ ನನ್ನನ್ನು ಜೀವಕ್ಕಿಂತ ಹಚ್ಚು ಪ್ರೀತಿಸೋ ಹೃದಯಾನ ಬದಿಗಿಟ್ಟು ಈ ಮನಸ್ಸು ಹೇಳುತಿದೆ. ನೀ ತಿದ್ದೋ ಈ ಹೃದಯ ಬೇರ‍್ಯಾರಿಂದಲೂ ಸರಿಯಾಗಲೊಲ್ಲದು. ಭರವಸೆಯ ಮಾತುಗಳು ಸುತ್ತೆಲ್ಲಾ ತಿರುಗಾಡಿದೆ, ಈಗಲೂ ಮನ ಸ್ಸೊಂದು ಸ್ವಾರ್ಥದ ಹಠದೊಂದಿಗೆ ಮೌನಿಯಾ ಗಿದೆ.
ಈ ಥರ 'ನನ್ಜೊತೆ ಮಾತಿಲ್ಲದೆ ನೀ ಸುಖ ವಾಗಿರುತ್ತೀ ಎನ್ನುವುದಾದರೆ ಅದಕ್ಕೂ ರೆಡಿ ಯಾಗಿ ಹೀಗೇ ಕಾಲ ಕಳೆಯುವ' ನೆನಪಿಸು ಗೆಳತೀ ನಮ್ಮ ಸ್ನೇಹ ತುಂಬಿದ ಗೆಳತನಕ್ಕೆ ಏಳು ವರ್ಷವಾದದ್ದು, ಮರೆಯಲಾಗುತ್ತಿಲ್ಲ ನೀನಂದ ಬುದ್ದಿ ಮಾತು, ಬೈಗಳು, ಮರು ಕಳಿಸದೆ ಕಳೆದು ಹೋದ ಸಂತೋಷದ ದಿನಗಳು. 'ಸುಖವಾಗಿರು' ಅನ್ನೋದು ಯಾವತ್ತೂ ನಿನ್ನ ಬಗ್ಗೆ ನನ್ನಲ್ಲಿರೋ ಅನುಕಂಪದ ಮಾತು.
ಪ್ರಶೂ...

ನಮ್ಮನ್ನು ಹೆತ್ತ ಜೀವದ ಹೆಸರು ತಾಯಿ

Posted by JAYAKIRANA Kirana on | 0 comments | Leave a comment...


ಹಿಂದೆ ಕಪ್ಪು ಹುಡುಗಿಯರನ್ನು ಕೀಳಾಂದಾಜಿಸುವ ಫೇರ್ ಎಂಡ್ ಲವ್ಲಿ ಜಾಹೀರಾತಿನ ವಿರುದ್ಧ ಮಹಿಳಾ ಸ್ವಯಂ ಸೇವಾ ಸಂಸ್ಥೆಯೊಂದು ಕಾನೂನು ಮೊರೆ ಹೋಗಿ ಜಯ ಗಳಿಸಿತ್ತು. ಈ ರೀತಿ ಎಷ್ಟು ಮಂದಿ ಮಾಡುತ್ತಾರೆ?

ಚಂದ್ರಶೇಖರ, ಮಂಗಳೂರು
೨೪ರ ಶನಿವಾರದ ಆರ‍್ಕೆ ದಿನಚರಿಯಲ್ಲಿ ಅಂಕಣಗಾರರು ಈ ಬಾರಿ ಗಂಭೀರವಾದ ವಿಷಯದ ಬಗ್ಗೆ ಗಮನ ಸೆಳೆದಿದ್ದಾರೆ. ವೊಡಾಫೋನ್ ಜಾಹೀ ರಾತು ಶೀಲ-ಅಶ್ಲೀಲಗಳ ತೆಳು ಪರದೆಯ ಬಗ್ಗೆ ಯೋಚಿಸುವಂತಾಗುತ್ತದೆ. ಯೋಚಿಸಿ ನೋಡಿ, ೮೦ರ ದಶಕದಲ್ಲಿ ರಿಶಿಕಪೂರ್ ಹಾಗೂ ಡಿಂಪಲ್ ಖನ್ನಾಳ 'ಬಾಬ್ಬಿ' ಸಿನಿಮಾ ಬಂದಾಗ ಯುವ ಜನಾಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಸಿತ್ತು. ಇದಕ್ಕೆ ಕಾರಣ ಚಿತ್ರದಲ್ಲಿನ ಒಂದು ಹಾಡು 'ಹಮ್ ತುಮ್ ಏಕ್ ಕಮ್‌ರೇ ಮೇ ಬಂದ್ ಹೋ...ಚಾವಿ ಖೋ ಜಾಯೆ'
ನೀನು ಮತ್ತು ನಾನು ಒಂದು ಕೋಣೆಯಲ್ಲಿ ಸಿಕ್ಕಿಬಿದ್ದರೆ ಮತ್ತು ಆ ಕೋಣೆಯ ಬೀಗದ ಕೀ ಕಳೆದು ಹೋದರೆ ಏನಾಗುತ್ತದೆ... ಎನ್ನುವ ಅರ್ಥದಿಂದ ಆರಂಭ ವಾಗುವ ಹಾಡು ಆಗಿನ ಯುವ ಜನಾಂಗದ ಗಮನ ಸೆಳೆದದ್ದು ಮಾತ್ರವಲ್ಲ ಇವತ್ತಿಗೂ ಆಗಿನ ಮಂದಿ ಗುನುಗುಣಿಸುತ್ತಾರೆ. ಇದಕ್ಕೆ ಕಾರಣ ಆ ಹಾಡು ಅಶ್ಲೀ ಲತೆಯ ಎಲ್ಲೆ ಮೀರದೆ ಇದ್ದದ್ದು. ಈಗಿನ 'ಮರ್ಡರ್' ಚಿತ್ರದ ಹಾಡೊಂದೇ ಸಾಕು, ಹಾಡಿನಲ್ಲೇ ರಸಿಕತೆಯ ಪರದೆ ಮೀರಿ ಹಾಡು ಕೇಳುವುದೇ ಬೇಡ ಅನ್ನಿಸುತ್ತದೆ. ಆದರೆ ನೆನಪಿಡಿ ಸದಾ ಸಾಮಾಜಿಕ ಚಿಂತನೆಗಳ ಬಗ್ಗೆ ಯೋಚನೆ ಮಾಡುವ ಮಹೇಶ್ ಭಟ್ ಅವರ ಈ ಚಿತ್ರ ಅವರ ಸೋದರಳಿಯ ಇಮ್ರಾನ್ ಹಶ್ಮಿಗೊಂದು ಹೊಸ ಇಮೇಜು ಸೃಷ್ಟಿಸಿತು ಅಂತೆ! ಕೋಟಿ ಕೋಟಿ ಗಲ್ಲಾ ಪೆಟ್ಟಿಗೆಯಲ್ಲಿ ದೋಚಿಯು ಬೇರೆ ಎಂದು ವಿವರಣೆ ಕೊಡುತ್ತಾರೆ ಬಾಲಿವುಡ್ ಸಿನಿಮಾ ನಿರ್ಮಾಪಕರು. ನಾನು ಹೇಳಲು ಹೊರಟಿರುವ ಬರಹದ ಉದ್ದೇಶ ಇದೇ, ಕಾಮ ಎನ್ನುವುದು ಇಂದು ಮಾರುಕಟ್ಟೆಯಲ್ಲಿ ಸರಕು. ಅದರ ಮೂಲ ಕವೇ ಎಲ್ಲವನ್ನೂ ಮಾರಲಾಗುತ್ತದೆ. ಶೀಲ-ಅಶ್ಲೀಲತೆಗೆ ವ್ಯತ್ಯಾಸವಿಲ್ಲದಂತೆ.
ಇಂದಿನ ಯುವ ಜನಾಂಗಕ್ಕೆ ಮೈ ತುಂಬಾ ಬಟ್ಟೆ ಧರಿಸಿ ಎಂದರೆ ನಾವು ಓಬೀರಾಯನ ಕಾಲದವರು ಎಂದು ಕಾಣುತ್ತದೆ. ಹುಡುಗಿಯರು ಮೈ ತುಂಬಾ ಬಟ್ಟೆ ಧರಿಸುತ್ತಾರೆ, ಆದರೆ ಅದರಲ್ಲಿ ಅಂಗಾಂಗಳೆಲ್ಲವೂ ಎದ್ದು ಕಾಣುತ್ತಿರುತ್ತವೆ!
ವೊಡಾಫೋನ್ ಜಾಹೀರಾತಿಗೆ ಬನ್ನಿ, ಅಲ್ಲಿ ಪುಟ್ಟ ಮಕ್ಕಳ ಮನಸಿನಲ್ಲೂ ಪ್ರೀತಿಯನ್ನು ಬಲವಂತವಾಗಿ ಬಿತ್ತುವಂತೆ ಮಾಡುತ್ತಿದ್ದಾರೆ. ಇದನ್ನು ನೋಡಿ ವೊಡಾಫೋನ್ ತಂದುಕೊಡಿ ಎಂದು ಪುಟ್ಟ ಮಕ್ಕಳು ಬಲವಂತ ಪಡಿಸಿದರೂ ಅಚ್ಚರಿಯಿಲ್ಲ. ಹಿಂದೆ ೮ಪಿಎಂ ವಿಸ್ಕಿಯ ಜಾಹೀರಾತು ಬರುತಿತ್ತು. ಯಶಸ್ವಿಯಾ ದವರ ಕೈಯ್ಯಲ್ಲಿ ೮ಪಿಎಂ ವಿಸ್ಕಿ. (ಇವತ್ತಿಗೂ ಇದನ್ನು ಸಿಗ್ನೇಚರ್ ವಿಸ್ಕಿ ಕಂಪೆ ನಿಯ ಜಾಹೀರಾತಿನಲ್ಲಿ, ಹೇವಾರ್ಡ್ ಬಿಯರ್ ಜಾಹೀರಾತಿನಲ್ಲಿ ಕಂಡು ಬರು ತ್ತದೆ) ಅಂದರೆ ಯಶಸ್ವಿಯಾಗಬೇಕೋ ೯೦ಯೋ, ಕ್ವಾರ್ಟರ್ ಬಾಟಲಿಯೋ ಕುಡಿಯಿರಿ. ಯಶಸ್ಸು ನಿಮ್ಮ ಹಿಂದೆ ಬರುತ್ತದೆ ಎಂದು ಯಾರೂ ಬೇಕಾದರೂ ಅರ್ಥೈಸಬಲ್ಲ. ಜಾಹೀರಾತಿನ ಗುಣಮಟ್ಟದ ಬಗ್ಗೆ ಅಗಾಗ ಈ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಂಸ್ಥೆ ಏನಾದರೂ ತಕರಾರು ಇದ್ದರೆ ನಮಗೆ ದೂರು ಕೊಡಿ ಎನ್ನುತ್ತದೆ. ಆದರೆ ಯಾವ ರೀತಿಯ ಕ್ರಮ ಜರುಗಿಸುತ್ತದೋ ಎನ್ನುವುದು ಇನ್ನೂ ಗೊತ್ತಿಲ್ಲ.
ಹಿಂದೆ ಕಪ್ಪು ಹುಡುಗಿಯರನ್ನು ಕೀಳಾಂದಾಜಿಸುವ ಫೇರ್ ಎಂಡ್ ಲವ್ಲಿ ಜಾಹೀರಾತಿನ ವಿರುದ್ಧ ಮಹಿಳಾ ಸ್ವಯಂ ಸೇವಾ ಸಂಸ್ಥೆಯೊಂದು ಕಾನೂನು ಮೊರೆ ಹೋಗಿ ಜಯ ಗಳಿಸಿತ್ತು. ಈ ರೀತಿ ಎಷ್ಟು ಮಂದಿ ಮಾಡುತ್ತಾರೆ? ಶೀಲ-ಅಶ್ಲೀಲತೆಗಳ ಬಗ್ಗೆ ವ್ಯಾಪಕ ಚರ್ಚೆ ಮಾಡುವ ಮಾಧ್ಯಮಗಳೇ ಸದನ ದಲ್ಲಿ ನೀಲಿ ಚಿತ್ರದ ಸುದ್ದಿ ಕೊಡುತ್ತಾ ನೀಲಿ ಚಿತ್ರವನ್ನೇ ಮುಜುಗರವಾಗು ವಂತೆ ತೋರಿಸುತ್ತಿಲ್ಲವೇ? ನೀವೇ ಗಮನಿಸಿ ರಿಮೋಟ್‌ನಿಂದ ಚಾನೆಲ್ ಬದ ಲಾಯಿಸುವ ಸಂದರ್ಭ ತುಂಬು ಜವ್ವನೆಯ ಹುಡುಗಿಯ ಚಿತ್ರ ಕಾಣಿಸಿಕೊಂ ಡರೆ ತಕ್ಷಣ ಆ ಚಾನೆಲನ್ನು ಕೆಲ ಕ್ಷಣವಾದರೂ ದಿಟ್ಟಿಸುತ್ತೇವೆ.
ಚಾನೆಲ್ಲುಗಳಲ್ಲಿ, ಮಾಧ್ಯಮಗಳಲ್ಲಿ ಇರುವವರು ಮಾರಾಟವಾಗುತ್ತದೆ ಎಂಬ ಏಕೈಕ ಕಾರಣದಿಂದ ನೈತಿಕತೆಗಳನ್ನು ಬದಿಗಿಟ್ಟು ಇಂಥ ಜಾಹೀರಾತು, ಸಿನಿಮಾ ಗಳನ್ನು ಪ್ರದರ್ಶಿಸುವ ಮುನ್ನ ತಮ್ಮ ಸ್ವಂತ ಪುಟ್ಟ ಮಕ್ಕಳ ಬಗ್ಗೆ ಯೋಚಿಸುವಂ ತಾಗಬೇಕು. ಎಕ್ಸ್‌ಪ್ರೆಸ್ ಬಸ್ಸು ಚಾಲಕನೊಬ್ಬ ತನ್ನ ಕುಟುಂಬದ ಚಿತ್ರವನ್ನು ಬಸ್ಸಿನ ಡ್ಯಾಶ್‌ಬೋರ್ಡಿನಲ್ಲಿ ಇಟ್ಟುಕೊಂಡ ಹಾಗೆ. ಆರ‍್ಕೆಯವರ ಕಾಳಜಿಯ ಬಗ್ಗೆ ಮೆಚ್ಚುಗೆ ಯಾಯಿತು. ಚರ್ಚೆಗೆ ಇದೊಂದು ವೇದಿಕೆಯಾಗಲಿ.
ಯಾಕೆಂದರೆ ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ಅಷ್ಟೇ ಅಲ್ಲ ನಮ್ಮನ್ನು ಹೆತ್ತು ಹೊತ್ತ ಜೀವದ ಹೆಸರು ತಾಯಿ. ಆಕೆ ಅಪ್ಪಟ ಹೆಣ್ಣು ಮಗಳು!

ಸಕಾರಣವಿಲ್ಲದೆ ಶಂಕೆ ಪಡುವುದು ಜಾಣತನವಲ್ಲ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೭ ವರ್ಷ. ಎರಡು ವರ್ಷದ ಹಿಂದೆ ಮದು ವೆಯಾಗಿದ್ದೇನೆ. ನನ್ನ ಹಾಗೂ ಗಂಡನ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ನಾವು ವಾರಕ್ಕೆ ನಾಲ್ಕೈದು ಬಾರಿ ಸೇರು ತ್ತೇವೆ. ಈ ವೇಳೆ ನನಗೆ ಆನಂದ ಸಿಗುತ್ತದೆ. ಆದರೆ ನನ್ನ ಪತಿ ಮಗು ಪಡೆಯಲು ಇಚ್ಛಿಸುತ್ತಿಲ್ಲ. ಕೇಳಿದರೆ ಈಗ ಬೇಡ ಎನ್ನು ತ್ತಾರೆ. ಕಾರಣ ಕೇಳಿದರೆ ಸಾಲ ತುಂಬಾ ಇದೆ. ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ನನಗೆ ತಿಳಿದಂತೆ ಅವರಿಗೆ ಅಂತಹ ಸಾಲ ಯಾವುದೂ ಇಲ್ಲ. ಅವರು ಬೇಕೆಂದೇ ಹೀಗೆ ಹೇಳುತ್ತಿ ದ್ದಾರೆ ಎಂದು ನನಗನಿಸುತ್ತಿದೆ. ಸೆಕ್ಸ್‌ನಲ್ಲೂ ಅಷ್ಟೇ, ಪ್ರಾರಂಭದಲ್ಲಿ ಆಸಕ್ತಿ ತೋರಿಸುತ್ತಿದ್ದವರು ಈಗ ನನ್ನ ಒತ್ತಾಯಕ್ಕೇನೋ ಎಂಬಂತೆ ಸೇರುತ್ತಾರೆ. ನನಗೆ ಇದರಿಂದ ಪರಿಪೂರ್ಣ ತೃಪ್ತಿ ಸಿಗುತ್ತಿಲ್ಲ. ಆದರೂ ನಾನು ಅವರ ಮನಸ್ಸಿಗೆ ಬೇಸರವಾಗದಂತೆ ಸುಮ್ಮನಿ ದ್ದೇನೆ. ನನ್ನ ಗಂಡನಿಗೆ ಸಮಾಜದಲ್ಲಿ ಒಳ್ಳೆಯ ಮರ್ಯಾದೆ ಇದೆ. ಕೆಲವು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು, ಫ್ರೆಂಡ್ಸ್, ಪಾರ್ಟಿ ಎಂದು ಸಮಯವನ್ನು ಕಳೆಯುತ್ತಾರೆ. ಅವರಿಗೆ ಫ್ರೆಂಡ್ಸ್ ಇದ್ದರೆ ಸಮಯ ಹೋದುದೇ ಗೊತ್ತಾಗದು. ನನ್ನ ನೆನಪೇ ಇರುವುದಿಲ್ಲ. ಕುಡಿತದ ಅಭ್ಯಾಸವೂ ಇದೆ. ಹಿಂದೆ ಜಾಸ್ತಿ ಕುಡಿಯುತ್ತಿದ್ದರೆ ಮದು ವೆಯಾದ ಬಳಿಕ ಕಡಿಮೆ ಮಾಡಿದ್ದಾರೆ. ನನ್ನೊಂದಿಗೆ ಸೇರುವಾಗ ಸಾಮಾನ್ಯವಾಗಿ ಕಾಂಡೋಂ ಬಳಸುತ್ತಾರೆ. ಬೇಡ ಎಂದು ಹೇಳಿ ದರೆ ನನ್ನನ್ನೇ ಶಂಕೆಯಿಂದ ನೋಡುತ್ತಾರೆ. ಅವರಿಗೆ ಬೇರೆ ಸಂಬಂಧ ಇದೆಯೇ ಎಂದು ನನಗನಿಸುತ್ತದೆ. ನಾನು ಈ ಬಗ್ಗೆ ಅವರಲ್ಲಿ ಕೇಳಿಲ್ಲ. ನಾನೇನು ಮಾಡಲಿ? ಅವರನ್ನು ವೈದ್ಯರಲ್ಲಿಗೆ ಕರೆದೊಯ್ದು ಸಮಾಲೋಚನೆ ನಡೆಸಿ ಎಂದು ನನ್ನ ಸ್ನೇಹಿತೆ ಹೇಳುತ್ತಾರೆ. ಅಲ್ಲಿ ಹೇಳುವ ಮಾತನ್ನು ಇವರು ಕೇಳಬಹುದೇ?
ಸಲಹೆ: ನಿಮ್ಮವರು ಸೆಕ್ಸ್ ವಿಚಾರದಲ್ಲಿ ನಿಮ್ಮ ಜತೆ ವಿಮುಖರಾಗಲು ಏನಾ ದರೂ ಬಲವಾದ ಕಾರಣವಿರಲೇಬೇಕು. ನಿಮ್ಮ ಗಂಡ ಪರ ಸಂಬಂಧದ ಬೆನ್ನು ಬಿದ್ದಿರಬಹುದು. ಅಥವಾ ಬೇರೇನಾದರೂ ಕಾರಣವಿರಬೇಕು. ಸುಮ್ಮನೆ ಚಿಂತೆ ಮಾಡದಿರಿ. ಬದಲಾಗುತ್ತಿ ರುವ ವರ್ತನೆಯ ಬಗ್ಗೆ ಅವರಲ್ಲೇ ಕೇಳಿ ತಿಳಿಯಿರಿ. ಇಲ್ಲವೇ ಮನೆಯ ಹಿರಿಯರ ಜತೆ ಈ ಬಗ್ಗೆ ಸಮಾಲೋಚನೆ ನಡೆಸಿ. ಅವರ ಸಮಸ್ಯೆಗೆ ಮಗು ಬೇಡ ಎನ್ನುವುದೇ ಕಾರಣವೇ ಅಥವಾ ಬೇರೆ ಕಾರಣವಿದೆಯೇ ಎಂದು ತಿಳಿದುಕೊಳ್ಳಿ. ಗಂಡನ ಪ್ರೀತಿ ಯಿಲ್ಲದೆ ಮಗು ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದರೆ ನಾಳೆ ಆ ಮಗುವನ್ನು ಸಾಕುವ ಜವಾಬ್ದಾರಿ ನಿಮ್ಮೊಬ್ಬರ ತಲೆ ಮೇಲೆ ಬೀಳುತ್ತದೆ. ದಂಪತಿ ಜತೆ ಸೇರಿ ಮಕ್ಕಳು ಬೇಕೇ, ಬೇಡವೇ ಎಂದು ತೀರ್ಮಾನಿಸುವುದು ಉತ್ತಮ. ಯಾವುದಕ್ಕೂ ತಾಳ್ಮೆ ಕಳೆದುಕೊಳ್ಳದಿರಿ. ಗಂಡನ ಪರ ಸಂಬಂಧದ ಬಗ್ಗೆ ಯಾರೋ ಹೇಳಿದರೆ ನಂಬದಿರಿ. ಸಾಧ್ಯವಾದರೆ ಕಣ್ಣಾರೆ ನೋಡಿ ನಂತರ ತೀರ್ಮಾನಿಸಿ. ಪರ ಸಂಬಂಧ ಹೊಂದಿದ್ದರೂ ವಿಚಲಿತಗೊ ಳ್ಳದಿರಿ. ನಿಮ್ಮ ಗಂಡನನ್ನು ನಿಮ್ಮ ಕಡೆ ಹೇಗೆ ಒಲಿಸಿಕೊಳ್ಳಲು ಸಾಧ್ಯ ಎಂಬುದನ್ನು ತಿಳಿಯಿರಿ. ವೈದ್ಯರ ಬಳಿ ಕರೆದುಕೊಂಡು ಹೋಗಿ. ಕೆಲವೊಮ್ಮೆ ಮಾನಸಿಕ ಚಿಂತೆಯಿಂದಲೂ ಹೀಗಾಗುವ ಸಾಧ್ಯತೆಗಳಿವೆ. ಸಮಾಜದಲ್ಲಿ ಹೆಚ್ಚಿನ ಒಡನಾಟ ಇಟ್ಟುಕೊಂಡಿ ರುವ ಗಂಡಸರು ಮನೆ, ಪತ್ನಿ, ಮಕ್ಕಳ ಮೇಲೆ ನಿರಾಸಕ್ತಿ ತಾಳು ವುದು ಸಾಮಾನ್ಯ. ಗಂಡ ಕೆಲಸ ಮುಗಿಸಿ ನೇರ ಮನೆ ಸೇರು ವಂತೆ ಮಾಡಬಹುದಾದ ಕಲೆ ಹೆಣ್ಣಿಗೆ ತಿಳಿದಿರಬೇಕು.

26-03-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ.
ವೃಷಭ : ಕುಟುಂಬದಲ್ಲಿ ಭಿನ್ನಾಭಿಪ್ರಾಯ ಕಡಿಮೆಯಾಗುತ್ತದೆ.
ಮಿಥುನ : ವ್ಯಾಪಾರ ವ್ಯವಹಾರದಲ್ಲಿ ಹಣಕಾಸಿನ ಲಾಭವಾಗುತ್ತದೆ.
ಕರ್ಕಾಟಕ : ಆಸ್ತಿಯ ಬಗ್ಗೆ ವಾದ ವಿವಾದಗಳಾಗುತ್ತದೆ.
ಸಿಂಹ : ವ್ಯಾಪಾರದಲ್ಲಿ ಒಳ್ಳೆಯ ಪ್ರಗತಿಯಾಗುವುದು.
ಕನ್ಯಾ : ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಅನುಕೂಲ ಇರುತ್ತದೆ.
ತುಲಾ : ವಿವಾಹ ಮುಂತಾದ ಶುಭ ಕೆಲಸಗಳು ನಡೆಯುತ್ತದೆ.
ವೃಶ್ಚಿಕ : ವಾಹನ, ಯಂತ್ರಗಳಿಂದ ನಷ್ಟ ಉಂಟಾಗುತ್ತೆದೆ.
ಧನು : ಉದ್ಯೋಗದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ.
ಮಕರ : ಕೆಲಸ ಕಾರ್ಯಗಳಲ್ಲಿ ಸಫಲತೆ ಇರುತ್ತದೆ.
ಕುಂಭ : ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ.
ಮೀನ : ಮನೆಯಲ್ಲಿ ಅನಾವಶ್ಯಕ ವಿಷಯದಲ್ಲಿ ಜಗಳವಾಗಲಿದೆ.

26-03-2012

Posted by JAYAKIRANA Kirana on | 0 comments | Leave a comment...

ಉರ್ವ ಮಾರ್ಕೆಟ್ : ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು : ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ : ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.
ಬೈಕಂಪಾಡಿ : ಮಾಂಸಾಹಾರಿ ಅಡುಗೆ ಯವರು ಮತ್ತು ಹೆಲ್ಪರ‍್ಸ್ ಬೇಕು ೯೯೮೦೨೬೭೮೮೪.
ಮಂಗಳೂರು :ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್ & ಬ್ಲೌಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೮೯೭೦೪೨೫೧೮೧.
ಹೂವಿನ ಬೊಕ್ಕೆ ಅಂಗಡಿಗೆ ಹುಡುಗಿಯರು ಬೇಕಾಗಿದ್ದಾರೆ. ೯೬೬೩೭೬೦೧೨೫
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೆ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.
ಕಂಕನಾಡಿ: ಸೇಲ್ಸ್‌ಗರ್ಲ್ಸ್, ಸೇಲ್ಸ್ ಬಾಯ್ ಮತ್ತು ಸ್ಟಿಚಿಂಗ್ ಗೊತ್ತಿದ್ದ ಹುಡುಗಿಯರು ಬೇಕು ೯೮೪೪೩೮೧೧೧೮.
ಕುಂಟಿಕಾನ :ಬೇಕರಿಗೆ ಹೆಲ್ಪರ್ ಕೆಲಸಕ್ಕೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು: ಲಾರಿ ಚಾಲಕರು ಬೇಕು ೮೦೯೫೩೪೦೪೫೮.
ಕಾವೂರು :ಬಾರ್‌ಗೆ ವೇಟರ್, ಕಿಚನ್ ಹೆಲ್ಪರ್, ಕ್ಲೀನರ್ ಬೇಕು ೦೮೨೪ ೨೪೮೧೭೦೪.
ಕುತ್ತಾರಿನ ಪೆಟ್ರೋಲ್ ಪಂಪ್‌ಗೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ೯೬೮೬೩೬೧೫೩೫
ಕುದ್ರೋಳಿ: ಫೋಟೋಶಾಪ್, ಕೋರಲ್ ಡ್ರಾ ತಿಳಿದವರು ಬೇಕು ೯೨೪೨೮೮೭೪೩.
ವರ್ಕಾಡಿ: ಸಸ್ಯಾಹಾರಿ ಹೊಟೇಲಿಗೆ ವೇಟರ್ ಬೇಕು ೦೯೦೨೦೧೪೪೪೬೮.
ಮಂಗಳೂರು: ಲೇಡೀಸ್ ಸ್ಟಾಫ್ ಬೇಕು ೯೪೪೯೪೪೧೨೩೪.
ಮಂಗಳೂರು: ಆಫೀಸ್ ಕೆಲಸಕ್ಕೆ ಎಸೆಸೆಲ್ಸಿ ಪಾಸ್, ಫೈಲಾದವರು ಬೇಕು ೯೦೧೯೭೦೯೯೯೩.
ಮಲ್ಪೆ: ಹೊಟೇಲ್‌ಗೆ ಕುಕ್ ಬೇಕು ೭೮೯೯೧೨೦೯೯೮.
ಮಂಗಳೂರು: ಕಲರ್ ಲ್ಯಾಬ್‌ಗೆ ಗ್ರಾಫಿಕ್ ಡಿಸೈನರ್ ಮತ್ತು ಮ್ಯಾನೇಜರ್ ೨೪೪೦೮೦೩.
ಮಂಗಳೂರು: ಜೂಸ್‌ಮೇಕರ್, ಸಪ್ಲಾ ಯರ್ ಬೇಕು ೮೭೨೨೨೭೮೩೬೩.
ಮೂಡಬಿದ್ರೆ: ಟ್ಯುಟೋರಿಯಲ್ ಕೆಲಸಕ್ಕೆ ಲೇಡಿ ಸ್ಟಾಫ್ ಬೇಕು ೦೮೨೫೮-೨೬೧೦೬೦.
ಮಂಗಳೂರು: ಹೊಟೇಲ್‌ಗೆ ಕ್ಲೀನರ್, ಅಡುಗೆಯವರು, ತಿಂಡಿಯವರು ಬೇಕು ೮೧೦೫೬೭೦೫೩೮.
ಮಂಗಳೂರು: ಅತ್ತಾವರದ ಅಪಾರ್ಟ್ ಮೆಂಟ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೯೮೮೦೮೦೯೮೦೩.
ಹಂಪನಕಟ್ಟೆ: ಸೇಲ್ಸ್‌ಗರ್ಲ್ಸ್ ಬೇಕು ೯೯೧೬೮೨೩೯೯೪.

ಬೈಕ್ ಟೈರ್ ಸಿಡಿದು ಸವಾರ ಮೃತ್ಯು

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಚಲಿಸುತ್ತಿದ್ದ ಬೈಕಿನ ಟೈರ್ ಸಿಡಿದು ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ತುಂಬೆ ರಾವಲ್‌ಕಟ್ಟೆ ಎಂಬಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಸಂಭವಿಸಿದೆ.
ಫರಂಗಿಪೇಟೆ ನಿವಾಸಿ ಮುಸ್ತಾಫ(೨೯) ಮೃತಪಟ್ಟವರು. ಮಂಗಳೂರಿನ ರೀಗಲ್ ಪ್ಯಾಲೇಸ್‌ನಲ್ಲಿ ಡಿಟಿಪಿ ಸೆಂಟರ್ ಅನ್ನು ಹೊಂದಿರುವ ಮುಸ್ತಾಫ ಕೆಲಸದ ನಿಮಿತ್ತ ಮಂಗಳೂರಿಗೆ ಆಗಮಿಸುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಬೈಕಿನ ಹಿಂಬದಿ ಟಯರ್ ಫ್ಲಾಟ್ ಆಗಿದ್ದು ಟಯರ್ ಸ್ಫೋಟಕ್ಕೆ ಕಾರಣ ವಾಯಿತು. ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರಾಗಿದ್ದರು. ಘಟನೆ ವೇಳೆ ಹಿಂಬದಿ ಕುಳಿತಿದ್ದ ಸಹ ಸವಾರ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ವಿಟ್ಲ: ರೈತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

Posted by JAYAKIRANA Kirana on | 0 comments | Leave a comment...

ಬಜೆಟ್‌ನಲ್ಲಿ ವಂಚನೆ ಆರೋಪ
ವಿಟ್ಲ: ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಕೊಳೆರೋಗ ಹಾಗೂ ರೈತರ ಸಾಲ ಮನ್ನಾ ಪ್ಯಾಕೇಜ್‌ಗಳನ್ನು ಘೋಷಣೆ ಮಾಡದೆ ರೈತರಿಗೆ ವಂಚಿಸಿದೆ. ಈ ಕೂಡಲೇ ಸರ್ಕಾರ ಅದನ್ನು ಜಾರಿಗೆ ತರದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ರೈತರು ಏಪ್ರಿಲ್ ೨ರಂದು ಸಾಮೂಹಿಕ ಆತ್ಮಹತ್ಯೆ ಮಾಡು ವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ವಿಟ್ಲದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಸಮಿತಿ ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಈ ಭಾಗದ ರೈತರು ಅಡಿಕೆ, ಕಾಳು ಮೆಣಸು, ಭತ್ತ ಮುಂತಾದ ಬೆಳೆಗಳಿಗೆ ಪ್ರಾಕೃತಿಕ ವಿಕೋಪಗಳಿಂದ ಹಾಗೂ ಅತಿವೃಷ್ಠಿಯಿಂದ ಬೆಳೆನಾಶ ಹೊಂದಿ, ರೈತರು ಕೃಷಿ ಅಭಿವೃದ್ಧಿಗೆ ಪಡೆದ ಸಾಲವನ್ನು ಮರು ಪಾವತಿಸಲು ವಿಫಲರಾಗಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವಿ ಕೂಡ ಸಲ್ಲಿಸಿದ್ದರೂ ಮುಖ್ಯಮಂತ್ರಿಗಳು ಸಾಲಮನ್ನಾ ಯೋಜನೆಗಳನ್ನು ಮಾತ್ರ ಇದುವರೆಗೂ ಜಾರಿಗೆ ತರಲಿಲ್ಲ ಎಂದು ಅವರು ಆರೋಪಿಸಿದರು. ಈ ಸಾಲಿನ ಬಜೆಟ್ ಅನುಷ್ಠಾನ ಮಾರ್ಚ್ ೩೧ರೊಳಗೆ ಇರಲಿದ್ದು, ಈ ಕೂಡಲೇ ಸರ್ಕಾರ ಬಜೆಟ್‌ನಲ್ಲಿ ಕೃಷಿಕರ ಸಂಪೂರ್ಣ ಸಾಲಮನ್ನಾ ಕೊಡಲಿ. ಇಲ್ಲವೇ ತಕ್ಷಣವೇ ಎಲ್ಲಾ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಹೊಸ ಸಾಲವಾಗಿ ನವೀಕರಿಸಲಿ. ಇಲ್ಲವಾದಲ್ಲಿ ಇದೇ ರೀತಿಯಾಗಿ ರೈತ ಶೋಷಣೆ ಬಜೆಟ್ ಅನುಷ್ಠಾನಕ್ಕೆ ಮಂದುವರಿದಲ್ಲಿ ಏಪ್ರಿಲ್ ೨ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಲಿದ್ದು, ಇದಕ್ಕೆ ನೇರ ಹೊಣೆ ಸರಕಾರವೇ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಇದರ ರಾಜ್ಯ ಸಮಿತಿ ಸದಸ್ಯ ಸಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾ ಸಂಘಟಕ ಕಾರ್ಯದರ್ಶಿ ಬಿ.ಶ್ರೀಧರ್ ಶೆಟ್ಟಿ ಬೈಲುಗುತ್ತು, ಪ್ರಗತಿಪರ ಕೃಷಿಕ ರಾಘವ ಪೂಜಾರಿ ಎಚ್, ವಿಟ್ಲ ಕಸಬಾ ಗ್ರಾಮ ರೈತ ಮುಖಂಡ ಎಂ.ಕೆ ಮೂಸಾ ಉಪಸ್ಥಿತರಿದ್ದರು.

ಉಡುಪಿ: ನಗ-ನಗದು ವಂಚಿಸಿ ಪರಾರಿ

Posted by JAYAKIRANA Kirana on | 0 comments | Leave a comment...

ಉಡುಪಿ: ಅಂಕೋಲಾದ ವ್ಯಕ್ತಿ ಯೊಬ್ಬರನ್ನು ಕೆಎಂಸಿ ಆಸ್ಪತ್ರೆಗೆಂದು ಕರೆದುಕೊಂಡು ಬಂದು ಮಣಿಪಾಲದ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ಕೊಂಡ ಅಪರಿಚಿತ ವ್ಯಕ್ತಿಯೋರ್ವ ಮೋಸದಿಂದ ನಗ-ನಗದು ಪಡೆದು ಕೊಂಡು ಪರಾರಿಯಾದ ಪ್ರಕರಣ ನಡೆದಿದೆ.
ಅಂಕೋಲಾ ತಾಲೂಕಿನ ಶಿರಕುಳಿ ಗ್ರಾಮದ ನಾಗರಾಜ ನಾಯಕ್(೫೪) ಎಂಬವರೇ ವಂಚನೆಗೆ ಒಳಗಾದವರಾ ಗಿದ್ದಾರೆ. ನಾಗರಾಜ್ ಅವರನ್ನು ಡಾ. ರಾಹುಲ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕೆಎಂಸಿ ಆಸ್ಪತ್ರೆಗೆಂದು ಮಣಿಪಾಲಕ್ಕೆ ಕರೆದುಕೊಂಡು ಬಂದು ಜನನಿ ಲಾಡ್ಜ್‌ನಲ್ಲಿ ಕೊಠಡಿ ಪಡೆದು ಕೊಂಡಿದ್ದರು. ಕೊಠಡಿ ಪಡೆದುಕೊಂಡ ಬಳಿಕ ನಾಗರಾಜ್ ಅವರಲ್ಲಿ ಮಾತನಾಡುತ್ತಾ, ಆಪರೇಷನ್ ಥಿಯೇಟರ್‌ಗೆ ಹೋಗುವಾಗ ಮೈಮೇಲೆ ಏನೂ ಇರಬಾರದು ಎಂದು ಹೇಳಿ ನಂಬಿಸಿ, ೨೦ ಗ್ರಾಮ್ ತೂಕದ ಉಂಗುರ ಮತ್ತು ಸರ, ೨ ಮೊಬೈಲ್ ಹ್ಯಾಂಡ್ ಸೆಟ್, ೨ ಸಾವಿರ ರೂ. ನಗದು ಹಣವನ್ನು ಪಡೆದುಕೊಂಡು ಪರಾರಿಯಾಗುವ ಮೂಲಕ ಡಾ.ರಾಹುಲ್ ವಂಚಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನಾಗರಾಜ್ ನೀಡಿದ ದೂರಿನ ಪ್ರಕಾರ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಮೊಕದ್ದಮೆ ದಾಖಲಾಗಿದೆ.

ಚರ್ಚೆಗೆ ಗ್ರಾಸವಾದ ಕೋಟಿ ಸ್ವಲಾತ್ ಕಾರ್ಯಕ್ರಮ

Posted by JAYAKIRANA Kirana on | 0 comments | Leave a comment...

ಸಲಫಿಗಳ ಪ್ರಶ್ನೆಗೆ ಸುನ್ನಿಗಳ ಪೈಪೋಟಿಯುತ ಸವಾಲ್
ಪುತ್ತೂರು: ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ಸಲಫಿಗಳ 'ದಿ ಲೈಟ್ ಎಕ್ಸಿಬಿಷನ್ ಆನ್ ಇಸ್ಲಾಂ ಸಮಾವೇಶ ದಲ್ಲಿ ಸಲಫಿಗಳು ಸುನ್ನಿಗಳಿಗೆ ಧರ್ಮದ ಆಚಾರ ವಿಚಾರಕ್ಕೆ ಸಂಬಂಧಿಸಿದಂತೆ ನೂರಾರು ಪ್ರಶ್ನೆಗಳ ಸುರಿಮಳೆಗೈದಿದ್ದು, ಇದಕ್ಕೆ ಉತ್ತರ ನೀಡುವಲ್ಲಿ ಸುನ್ನೀ ಸಂಘಟನೆಗಳೆರಡರ ನಡುವೆ ಪೈಪೋಟಿ ಆರಂಭಗೊಂಡಿದೆ. ಆದರೆ ಎಲ್ಲಾ ವೇದಿಕೆಗಳು ಸವಾಲಿಗಷ್ಟೇ ಸೀಮಿತ ವಾಗಿ ಪರಸ್ಪರ ನಿಂದನೆಯಲ್ಲಿ ತೊಡಗಿ ರುವುದು ಪ್ರಜ್ಞಾವಂತ ಮುಸ್ಲಿಂ ಸಮುದಾ ಯಕ್ಕೆ ತೀವ್ರ ನೋವುಂಟು ಮಾಡಿದೆ. ಈಶ್ವರಮಂಗಲದಲ್ಲಿ ಆದಿತ್ಯವಾರ ನಡೆದ ಹತ್ತು ಕೋಟಿ ಸಲಾತ್ ಕಾರ್ಯಕ್ರಮ ಮುಸ್ಲಿಂ ಧಾರ್ಮಿಕ ವಲಯದಲ್ಲಿ ಚರ್ಚೆ ಗೆ ಗ್ರಾಸವಾಗಿದೆ.
ಸೃಷ್ಠಿಕರ್ತನಾದ ಅಲ್ಲಾನೊಬ್ಬನೇ ಮುಸ್ಲಿಮರಿಗೆ ಆರಾಧಕ. ಆತನನ್ನು ಬಿಟ್ಟರೆ ಬೇರಾವ ಪೂಜೆಯೂ ಇಲ್ಲ. ಗೋರಿ ಪೂಜೆ ಮುಸ್ಲಿಂ ಸಂಪ್ರದಾಯದಲ್ಲಿಲ್ಲ. ಮಿಲಾದುನ್ನಬಿ ಕೇವಲ ರೋಡ್ ಶೋ, ಬಾಬಾಗಳಿಗೆ ಸಾಷ್ಟಾಂಗ, ಮೌಲೂದ್, ಖುತುಬಿಯತ್, ಮೊದಲಾದ ಇಸ್ಲಾ ಮಿನಲ್ಲಿಲ್ಲದ ಆಚರಣೆಗಳನ್ನು ಇಲ್ಲಿನ ಜನಸಾಮಾನ್ಯರ ಮೇಲೆ ಹೇರುವ ಮೂಲಕ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಧರ್ಮ ಪ್ರಚಾರಕರೆಂದು ಹೇಳಿ ಕೊಂಡು ಕೆಲವರು ಮೂಢನಂಬಿಕೆ ಗಳನ್ನು ಬಿಂಬಿಸುವ ಮೂಲಕ ಸಮು ದಾಯದ ಜನತೆಯನ್ನು ವಂಚಿಸುತ್ತಿದ್ದಾರೆ ಎಂಬಿತ್ಯಾದಿ ನೂರಾರು ಪ್ರಶ್ನೆಗಳನ್ನು ಎತ್ತಿ ಸುನ್ನಿಗಳಿಗೆ ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಯಾಗಿ ಪುತ್ತೂರಿನ ಸುನ್ನೀ ಸಂಘಟನೆಗಳಾದ ಎಸ್ಸೆಸ್ಸೆಫ್ ಮತ್ತು ಎಸ್ಕೆಎಸ್ಸೆಸ್ಸೆಫ್ ಸಂಘಟನೆಗಳು ಸಲಫಿಗಳಿಗೆ ಉತ್ತರ ನೀಡಲು ನಾ ಮುಂದು..ತಾ ಮುಂದು ಎಂದು ಸಮಾವೇಶಗಳನ್ನು ಪೈಪೋಟಿಯುತವಾಗಿ ನಡೆಸಲು ಆರಂಭಿಸಿದ್ದಾರೆ.
ದಿ ಲೈಟ್ ಎಕ್ಸಿಬಿಷನ್ ಆನ್ ಇಸ್ಲಾಂ ಕಾರ್ಯಕ್ರಮ ನಡೆದ ಸ್ಥಳದಲ್ಲೇ ಸುನ್ನಿ ಸಂಘಟನೆಗೆ ಸೇರಿದ ಎಸ್ಸೆಸ್ಸೆಫ್ ಸಂಘಟನೆಯವರು ಶನಿವಾರ ಸಂಜೆ ಸಮಾವೇಶ ನಡೆಸಿ ಸಲಫಿಗಳ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸಿದ್ಧ. ನಿಮ್ಮ ಕೂದಲು ಕೊಂಕಲು ನಾವು ಬಿಡುವುದಿಲ್ಲ. ನಿಮಗೆ ರಕ್ಷಣೆ ಕೊಡುತ್ತೇವೆ. ನೀವು ತಾಕತ್ತಿದ್ದರೆ ವೇದಿಕೆಗೆ ಬಂದು ಮುಖಾಮುಖಿ ಚರ್ಚೆಗೆ ಸಿದ್ದರಾಗಿ ಎಂದು ಮರು ಸವಾಲು ಹಾಕಿದ್ದರು. ಆದಿತ್ಯವಾರ ಈಶ್ವರಮಂಗಲದಲ್ಲಿ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಸಂಘಟನೆಯ ವತಿಯಿಂದ ನಡೆದ ಸುನ್ನೀ ಮಹಾ ಸಮ್ಮೇಳನ ಹಾಗೂ ೧೦ ಕೋಟಿ ಸ್ವಲಾತ್ ಸಮರ್ಪಣೆ ಕಾರ್ಯಕ್ರಮ ಮುಸ್ಲಿಂ ಸಮುದಾಯದಲ್ಲಿ ಚರ್ಚಾಸ್ಪದ ವಿಚಾರವಾಗಿ ಪರಿಣಮಿಸಿದೆ. ಸಲಾತ್ ಸಮರ್ಪಣೆ ಎಂಬುವುದೇ ಇಸ್ಲಾಮಿನಲ್ಲಿ ಇಲ್ಲ. ಸಲಾತ್ ಹೇಳಿದ ಮರುಕ್ಷಣದಲ್ಲೇ ಮದೀನ ಸನ್ನಿಧಿಗೆ ತಲುಪುತ್ತದೆ ಎನ್ನುವುದು ಮುಸ್ಲಿಮರ ವಿಶ್ವಾಸ ಮತ್ತು ನಂಬಿಕೆ. ಆದರೆ ಸಲಾತ್ ಅನ್ನು ಒಟ್ಟುಗೂಡಿಸಿ ಸಮರ್ಪಣೆ ಮಾಡಲು ಸಾಧ್ಯವೇ ಇಲ್ಲ ಎಂದು ಮುಸ್ಲಿಂ ಧಾರ್ಮಿಕ ಗುರುಗಳೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾದಿಯ ಹೆಸರು ಕೇಳಿದ ಮರುಕ್ಷಣವೇ ಸಲಾತ್ ಹೇಳುವುದು ಮುಸ್ಲಿಮರಿಗೆ ಕಡ್ಡಾಯವೂ ಆಗಿದ್ದು, ಸಲಾತ್‌ಗೆ ಸಂಖ್ಯೆಯ ಲೆಕ್ಕಾಚಾರವಿಲ್ಲ ಎಂದು ಧರ್ಮ ಗುರುಗಳೊಬ್ಬರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಈಶ್ವರಮಂಗಲದಲ್ಲಿ ಆಯೋಜಿಸಿದ ೧೦ ಕೋಟಿ ಸಲಾತ್ ಕಾರ್ಯಕ್ರಮವು ಇದೀಗ ಸಮುದಾಯದಲ್ಲೇ ಚರ್ಚೆಗೆ ಕಾರಣವಾಗಿದ್ದು, ಅರ್ಥವಾಗದಂತಿರುವ ಆ ಕಾರ್ಯಕ್ರಮ ಮುಸ್ಲಿಂ ಸಮುದಾಯವನ್ನು ಗೊಂದಲಕ್ಕೀಡು ಮಾಡಿದೆ.
 ಎಸ್ಸೆಸ್ಸೆಫ್ ಸಂಘಟನೆಯ ಸಮಾವೇಶ ಕಾರ್ಯಕ್ರಮಗಳು ಮುಂದುವರಿಯುತ್ತಿದ್ದಂತೆಯೇ ಇನ್ನೊಂಡೆದೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯವರು ಕೂರ್ನಡ್ಕದಲ್ಲಿ ಸಮಾವೇಶ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. ಸುನ್ನೀ ಸಂಘಟನೆಯ ಈ ಎರಡು ಗುಂಪುಗಳ ನಡುವೆ ಮತ್ತೆ ಪೈಪೋಟಿಯುತ ಕಾರ್ಯಕ್ರಮಗಳು ಆರಂಭಗೊಂಡಿರುವುದು ಆಶ್ಚರ್ಯದ ಬೆಳವಣಿಗೆಯಾಗಿದೆ.
ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಸಲಫಿ ಬೆಂಬಲಿಗರು ಅತೀ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಅವರು ಎತ್ತಿದ ಕೈ ಎಂಬುದನ್ನು ದಿ ಲೈಟ್ ಎಕ್ಸಿಬಿಷನ್ ಆನ್ ಇಸ್ಲಾಂ ಕಾರ್ಯಕ್ರಮದ ಮೂಲಕ ಸಾಬೀತುಪಡಿಸಿದ್ದಾರೆ. ಇಲ್ಲಿ ಸುನ್ನೀ ಸಂಘಟನೆ ಪ್ರಬಲವಾಗಿದ್ದರೂ ಅದರೊಳಗಿನ ಎರಡು ಗುಂಪುಗಳ ನಡುವಿನ ಪೈಪೋಟಿಯುತ ಸಮರದಿಂದಾಗಿ ಗೊಂದಲ ಮುಂದುವರಿದಿದೆ ಎಂದು ಸಮುದಾಯದ ಮಂದಿಯೇ ಹೇಳಿಕೊ ಳ್ಳುತ್ತಿದ್ದಾರೆ.

ನೇತ್ರಾವತಿ ನದಿ ತಿರುವಿನ ಪರವಾಗಿ ಪೇಜಾವರಶ್ರೀ

Posted by JAYAKIRANA Kirana on | 0 comments | Leave a comment...

ಮಂಗಳೂರು: ದ.ಕ. ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಹರಿದು ಹೋಗುವ ನೇತ್ರಾ ವತಿ ನದಿಯನ್ನು ಬರಿದು ಮಾಡಿಸುವಲ್ಲಿ ರಾಜಕಾರಣಿಗಳು ಮಾತ್ರವಲ್ಲ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಕೂಡ ಪೂರಕ ಅಭಿಪ್ರಾಯ ವನ್ನೇ ಹೊಂದಿದ್ದಾರೆ ಎಂಬ ವಿಷಯವೀಗ ಬಹಿರಂಗ ಗೊಂಡಿದೆ. ಬಯಲು ಸೀಮೆಗೆ ನೇತ್ರಾವತಿಯ ನೀರು ಬಳಸಲು ತನ್ನದೇನೂ ಅಭ್ಯಂತರ ಇಲ್ಲ ಎಂದು ಪೇಜಾವರ ಶ್ರೀ ಬಹಿರಂಗವಾಗಿಯೇ ಹೇಳಿದ್ದಾರೆ.
ತುಮಕೂರಿನಲ್ಲಿ ನಾಗರಿಕ ವೇದಿಕೆ ಹಾಗೂ ಕೃಷ್ಣ ಮಂದಿರ ವತಿಯಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ಮಾತನಾಡಿದ ಪೇಜಾವರಶ್ರೀ ಬಯಲು ಸೀಮೆಗೆ ನೇತ್ರಾವತಿ ನದಿಯ ನೀರು ಹರಿಸುವ ಸಂಬಂಧವಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹಗ್ಗಡೆಯವರೊಂ ದಿಗೆ ಮಾತನಾಡುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ಡಿ.ವಿ. ಸದಾನಂದ ಗೌಡರು ನೇತ್ರಾವತಿ ನದಿಗೆ ಪೂರಕ ಅಭಿಪ್ರಾಯವನ್ನೇ ಹೊಂದಿದ್ದಾರೆ ಎಂಬುದು ಬಜೆಟ್ ತೋರಿಸಿಕೊಟ್ಟಿದೆ. ನೇತ್ರಾವತಿ ನದಿ ತಿರುವು ಯೋಜನೆಗಾಗಿಯೇ ೪೦೦ ಕೋ. ರೂ.ಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ತವರಿಗೆ ಬಂದಾಗ ನೇತ್ರಾವತಿ ನದಿ ತಿರುವು ವಿರೋಧಿಸಿ ಮಾತನಾಡುವ ಡಿ.ವಿ. ಸದಾನಂದ ಗೌಡರು ಬೆಂಗಳೂರಿನಲ್ಲಿದ್ದಾಗ ನೇತ್ರಾವತಿ ತಿರುವಿಗೆ ಪೂರಕವಾಗಿಯೇ ಕಾರ್ಯನಿರ್ವಹಿಸುತ್ತಾರೆ ಎಂಬುದು ಬಜೆಟ್ ನಿರೂಪಿಸಿದೆ.
ಆದುದರಿಂದ ಪೇಜಾವರಶ್ರೀಯವರು ಡಿ.ವಿ. ಸದಾನಂದ ಗೌಡರನ್ನು ಭೇಟಿಯಾಗಿ ಮಾತನಾಡಲೇ ಬೇಕಾದ ಆವಶ್ಯಕತೆ ಇರಲಿಕ್ಕಿಲ್ಲ. ಆದರೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಮನ ಒಲಿಸುವುದು ಪೇಜಾವರ ಶ್ರೀಗೆ ಸುಲಭ ಸಾಧ್ಯವಾಗಲಿಕ್ಕಿಲ್ಲ ಎಂದೆನಿಸುತ್ತದೆ. ನೇತ್ರಾವತಿ ನದಿ ನೀರಿನ ಕಾರಣಕ್ಕಾಗಿ ಕರ್ನಾಟಕ ಇಬ್ಬಾಗ ಆಗುವುದು ಬೇಡ ಎಂದು ಕೂಡ ಪೇಜಾವರ ಶ್ರೀ ಹೇಳಿದ್ದು ನೇತ್ರಾವತಿಯನ್ನು ತಿರುವು ಮಾಡಲೇ ಬೇಕು ಎಂಬ ವಿಷಯದಲ್ಲಿ ಅವರೆಷ್ಟು ಆಸಕ್ತರಾಗಿದ್ದಾರೆ ಎಂಬುದು ಪ್ರತಿಬಿಂಬಿಸುತ್ತದೆ.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟರು ನೇತ್ರಾವತಿ ನದಿ ತಿರುವು ವಿರೋಧಿಸಲು ಇತ್ತೀಚೆಗೆ ಪಕ್ಷಾತೀತ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದು ತಮ್ಮ ಹೋರಾಟಕ್ಕೆ ಬೆಂಬಲ ಪಡೆಯಲು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗುತ್ತೇವೆ, ಪೇಜಾವರ ಶ್ರೀಯವರನ್ನೂ ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಪೇಜಾವರ ಶ್ರೀ ಇವರ ಗುಂಪಿನಿಂದ ಹೊರಗೆ ಇರುವುದನ್ನು ಬಹಿರಂಗ ಪಡಿಸಿದ್ದಾರೆ.

ಶಿಕ್ಷಕಿಯ ಮನೆಯಲ್ಲಿ ಸಿಕ್ಕಿಬಿದ್ದ ಮಾಡೂರು ಯೂಸುಫ್ ಸಹಚರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೊಲೆಯತ್ನ ಹಾಗೂ ಹಲವು ಪ್ರಕರಣಗಳಲ್ಲಿ ಭಾಗಿ ಯಾಗಿರುವ ಬಂಧಿತ ಮಾಡೂರು ಯೂಸುಫ್ ಸಹಚರನೆನ್ನಲಾದ ಉಳ್ಳಾಲ ಬಸ್ತಿಪಡ್ಪುವಿನ ಬದ್ರುದ್ದೀನ್ ಎಂಬಾತ ಶಿಕ್ಷಕಿಯ ಮನೆಯಲ್ಲಿ ಸಿಕ್ಕಿ ಬಿದ್ದು ಉಳ್ಳಾಲ ಪೊಲೀಸರ ವಶದಲ್ಲಿ ದ್ದಾನೆ.
ಉಳ್ಳಾಲ ಎಸ್‌ಕೆಎಸ್ ಆಸ್ಪತ್ರೆ ಬಳಿ ಯಿರುವ ವಿವಾಹಿತೆ ಶಿಕ್ಷಕಿ ಮನೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಏಕಾಂಗಿಯಾಗಿದ್ದ ಶಿಕ್ಷಕಿ ಮನೆಯಲ್ಲಿ ಸಿಕ್ಕಿಬಿದ್ದಿರುವ ಆರೋಪಿ ಬದ್ರುದ್ದೀನ್ ಮಕ್ಕಳನ್ನು ಟ್ಯೂಷನ್‌ಗೆ ಕೊಂಡೊಯ್ದಿರುವುದಾಗಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಹೇಳಿರುವುದಾಗಿ ತಿಳಿದುಬಂದಿದೆ. ಆರೋಪಿ ಈ ಹಿಂದೆ ಉಚ್ಚಿಲದ ಬಿಜೆಪಿ ಮುಖಂಡನ ಕೊಲೆಯತ್ನಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಯಾಗಿದ್ದಾನೆ. ಅಲ್ಲದೆ ಭೂಗತ ನಂಟು ಹೊಂದಿದ್ದ ಮಾಡೂರು ಯೂಸುಫ್ ಸಹಚರನೆಂದು ಗುರುತಿಸಿಕೊಂಡಿದ್ದನು. ಇತ್ತೀಚೆಗೆ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವೂ ಈತನ ಮೇಲಿದೆ. ಉಳ್ಳಾಲ ಇನ್ಸ್‌ಪೆಕ್ಟರ್ ಮಂಜುನಾಥ ಶೆಟ್ಟಿ ಆರೋಪಿ ಪರ ನಿಂತು ಪ್ರಕರಣ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಬಜರಂಗದಳದ ಕಾರ‍್ಯಕರ್ತರು ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಿರುವುದಾಗಿ ತಿಳಿದುಬಂದಿದೆ.

ಮಂಜೇಶ್ವರ: ಬಸ್ ಡಿಕ್ಕಿ; ಬೈಕ್ ಸವಾರ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಬೈಕಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಜೇಶ್ವರ ಗೋವಿಂದ ಪೈ ಕಾಲೇಜು ಬಳಿ ನಿನ್ನೆ ನಡೆದಿದೆ. ಉಪ್ಪಳದ ಹಿದಾ ಯತ್ ನಗರದ ಮುನೀರ್(೨೬) ಮೃತರು. ಇತ್ತೀಚೆಗಷ್ಟೇ ದುಬೈಯಿಂದ ಊರಿಗೆ ಮರಳಿದ್ದ ಮುನೀರ್ ಬೈಕಿನಲ್ಲಿ ಮನೆ ಕಡೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಮುನೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳೇ ಅಪಘಾತ ನಡೆಸುತ್ತಿರುವುದು ಜಾಸ್ತಿಯಾಗುತ್ತಿದ್ದು, ಇವೆಲ್ಲದಕ್ಕೂ ಚಾಲಕರ ಬೇಜವಾಬ್ದಾರಿ ಚಾಲನೆಯೇ ಕಾರಣವೆಂದು ಸಾರ್ವ ಜನಿಕರು ಆರೋಪಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನ ನೀಡಿ ಯಡ್ಡಿ ತೃಪ್ತಿಪಡಿಸಲು ವರಿಷ್ಠರ ಚಿಂತನೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಧಿಕಾರಕ್ಕಾಗಿ ಪಟ್ಟು ಹಿಡಿದಿರುವ ಬಿ.ಎಸ್.ಯಡಿಯೂರಪ್ಪರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡಿ ತೃಪ್ತಿ ಪಡಿಸಲು ಬಿಜೆಪಿಯ ಕೇಂದ್ರ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ.
ಯಡ್ಡಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಕ್ಕೆ ಎಲ್.ಕೆ. ಅಡ್ವಾಣಿ ಸಹಿತ ಪಕ್ಷದ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಎರಡೂ ಬಣಗಳನ್ನು ಒಂದು ಗೂಡಿಸಿ ರಾಜ್ಯ ಬಿಜೆಪಿಯಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ವರಿಷ್ಠರು ಹೊರಟಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಅಲ್ಲದಿದ್ದರೂ ರಾಜ್ಯಾಧ್ಯಕ್ಷ ಸ್ಥಾನ ಬೇಕು ಎನ್ನುವ ಯಡಿಯೂರಪ್ಪರಿಗೆ ಕೆಲವು ಷರತ್ತುಗಳನ್ನು ವಿಧಿಸಿ ನಾಯಕತ್ವ ನೀಡುವ ಸಾಧ್ಯತೆ ಇದೆ. ಮುಂದಿನ ವಿಧಾನ ಸಭೆ ಚುನಾವಣೆಗಾಗಿ ಪಕ್ಷವನ್ನು ಸಜ್ಜುಗೊಳಿಸಬೇಕಾದರೆ ರಾಜ್ಯ ಬಿಜೆಪಿಯಲ್ಲಿಯ ಗೊಂದಲ ಸರಿಪಡಿಸಲೇ ಬೇಕು ಎಂದು ಕೊಂಡಿರುವ ವರಿಷ್ಠರು, ಸರಕಾರದಲ್ಲಿ ಯಡ್ಡಿಯ ಹಸ್ತಕ್ಷೇಪ ತಪ್ಪಿಸಲು ಪ್ರಮುಖ ನಿರ್ಧಾರ ಕೈಗೊಳ್ಳುವ ಒಂಬತ್ತು ಸದಸ್ಯರಿರುವ ಕೋರ್ ಕಮಿಟಿ ರಚಿಸುವ ಚಿಂತನೆಯ್ನೂ ನಡೆಸಿದ್ದಾರೆ.
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ರಾಜ್ಯ ಬಿಜೆಪಿ ನಾಯಕರನ್ನು ದೆಹಲಿಗೆ ಕರೆದು ಅಂತಿಮ ಚರ್ಚೆ ನಡೆಸುವ ಸಾಧ್ಯತೆ. ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಈಶ್ವರಪ್ಪರಿಗೆ ಡಿ.ವಿ.ಸದಾನಂದ ಗೌಡರ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ.
 ಮುಂದಿನ ವಿಧಾನ ಸಭೆ ಚುನಾವಣೆಯ ಬಳಿಕ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಪಡೆಯಬೇಕೆಂದಿದ್ದರೆ ರಾಜ್ಯಾಧ್ಯಕ್ಷನಾಗಿ ಮುಂದುವರಿಯಲೇಬೇಕು ಎಂಬುದು ಯಡಿಯೂರಪ್ಪರವರ ಚಿಂತನೆ.

ತಮಿಳುನಾಡಿಗೆ ನೀರು ಬಿಟ್ಟರೆ ಉಗ್ರ ಹೋರಾಟ: ಪರಮೇಶ್ವರ್

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯುವಂತೆ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮುಖ್ಯಮಂತ್ರಿ ಯವರನ್ನು ಅವರನ್ನು ಒತ್ತಾಯಿಸಿ ದ್ದಾರೆ.
ರಾಜ್ಯದಲ್ಲಿ ಬರಗಾಲ, ಕುಡಿಯು ವ ನೀರಿಗೆ ಸಾಕಷ್ಟು ತೊಂದರೆ ಉಂಟಾ ಗಿದೆ. ಇಂತಹ ಸಂದರ್ಭದಲ್ಲಿ ತಮಿಳು ನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರು ವುದು ಸರಿ ಅಲ್ಲ. ರಾಜ್ಯದ ರೈತರ ಹಿತಾಸಕ್ತಿ ಬದಿಗೊತ್ತಿ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು. ಈ ಸಂಬಂಧ ಚರ್ಚಿಸಲು ತುರ್ತಾಗಿ ಸರ್ವಪಕ್ಷಗಳ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ರೈತರೇ ಬರಗಾಲದಿಂದ ಬಳಲು ತ್ತಿದ್ದಾರೆ. ಕುಡಿಯುವ ನೀರಿನ ಅಭಾ ದಿಂದ ತೊಂದರೆಗೀಡಾಗಿದ್ದಾರೆ. ಇಂತ ಹ ಸಂದರ್ಭದಲ್ಲಿ ಯಾವುದೇ ಕಾರಣ ಕ್ಕೂ ತಮಿಳುನಾಡಿಗೆ ನೀರು ಬಿಡಬಾ ರದು. ಒಂದು ವೇಳೆ ಅಲ್ಲಿನ ಒತ್ತಡಕ್ಕೆ ಮಣಿದು ಸರ್ಕಾರ ನೀರು ಬಿಡುಗಡೆ ಮಾಡಿದರೆ ಉಗ್ರ ಹೋರಾಟ ನಡೆಸುವು ದಾಗಿ ಅವರು ಎಚ್ಚರಿಕೆ ನೀಡಿದರು.

ಕುಂದಾಪುರ: ಮಟ್ಕಾ ದಂಧೆ; ಓರ್ವನ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ನೂತನ ಬಸ್ ನಿಲ್ದಾಣದ ಬಳಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ಕೋಡಿ ನಿವಾಸಿ ಪುನೀತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆತನಿಂದ ನಗದು ಹಾಗೂ ಆಟಕ್ಕೆ ಬಳಸಿದ ಪರಿಕರ ವಶಪಡಿಸಿಕೊಳ್ಳಲಾಗಿದೆ.

ಶಿಶುಪಾಲನ ವಧೆ ಮಾಡಿದಂತೆ ಮತದಾರರಿಂದ ಬಿಜೆಪಿಗೆ ಶಿಕ್ಷೆ: ಮೊಲಿ

Posted by JAYAKIRANA Kirana on | 0 comments | Leave a comment...

ಉಡುಪಿ: ನೂರ ಒಂದನೇ ತಪ್ಪು ಮಾಡಿದಾಗ ಶಿಶುಪಾಲನನ್ನು ಶ್ರೀಕೃಷ್ಣ ಸುದರ್ಶನ ಚಕ್ರ ಉಪಯೋಗಿಸಿ ವಧೆ ಮಾಡಿದಂತೆ ರಾಜ್ಯದ ಬಿಜೆಪಿ ಸರಕಾರದ ದುರಾಡಳಿತದಿಂದ ಬೇಸತ್ತು ಮತ ದಾರರು ಮತದಾನವೆಂಬ ಸುದರ್ಶನ ಚಕ್ರ ಉಪಯೋಗಿಸಿ ಬಿಜೆಪಿಯನ್ನು ಸೋಲಿಸಿದ್ದಾರೆ ಎಂದು ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಲಿ ಹೇಳಿದ್ದಾರೆ.
ಉಡುಪಿಯ ಕಲ್ಸಂಕ ರೋಯಲ್ ಗಾರ್ಡನ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆದಿತ್ಯ ವಾರ ನಡೆದ ಕಾಂಗ್ರೆಸ್ ಕಾರ್ಯ ಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಆಡಳಿತ ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭೆಗೆ ನಡೆದ ಮರು ಚುನಾವಣೆಯ ಫಲಿತಾಂಶ ಶಾಪಗ್ರಸ್ತವಾಗಲು ನೀಡಿದ ಮುನ್ನುಡಿ ಎಂದು ತಿಳಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾ ಮಯ್ಯ ಅವರು, ಬಜೆಟ್ ಮೂಲಕ ಬಿಜೆಪಿ ಸರಕಾರ ರಾಜ್ಯವನ್ನು ೧.೨೦ ಸಾವಿರ ಕೋಟಿ ರೂ. ಸಾಲಗಾರ ರಾಜ್ಯ ವನ್ನಾಗಿ ಮಾಡಿದೆ ಎಂದು ಟೀಕಿಸಿದರು.
ಬಿಜೆಪಿಯವರಲ್ಲಿ ಪಾಪದ ದುಡ್ಡಿದೆ. ಮಕ್ಕಳಿಗೆ ಚಾಕಲೇಟ್ ವಿತರಿಸಿ ದಂತೆ ಜಾತಿ ಸಂಘಟನೆಗಳಿಗೆ ಬಿಜೆಪಿ ಹಣ ವಿತರಿಸಿದೆ ಎಂದು ಆರೋಪಿಸಿದ ಮಾಜಿ ಕೇಂದ್ರ ಮಂತ್ರಿ ಸಿ.ಎಂ. ಇಬ್ರಾಹಿಂ ಅವರು, ಜೆಡಿಎಸ್ ಪಕ್ಷವನ್ನು ಚುನಾವಣಾ ಕಣಕ್ಕಿಳಿಸುವ ಮೂಲಕ ಬಿಜೆಪಿ ಭೋಜೇಗೌಡರ ತಿಥಿ ಮಾಡಿದೆ ಎಂದು ವ್ಯಂಗ್ಯವಾಡಿದರು.
ಕಾರ್ಯಕರ್ತರನ್ನು ಹಾಗೂ ಮತದಾರರನ್ನು ವಿಶ್ವಾಸಕ್ಕೆ ತಗೊಂಡು ನಾಯಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಮುಂದಿನ ಚುನಾ ವಣೆಯನ್ನು ಎದುರಿಸಬೇಕಾಗಿದೆ ಎಂದು ದೇಶಪಾಂಡೆ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕೃತಜ್ಞತೆ ಸಲ್ಲಿಸಿ ಮಾತನಾಡಿದ ನೂತನ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು, ಮತದಾರರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಸೋಮವಾರ ಬೆಳಗ್ಗೆ ಸಂಸತ್ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದಾಗಿ ಹೇಳಿದರು.

ಸುರೇಶ್ ವಿರುದ್ದ ಕೂಡ್ಲು ಲೋಕಾಯುಕ್ತಕ್ಕೆ ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಟ ಸುರೇಶ್ ಮಂಗಳೂರು ಮಕ್ಕಳ ಚಿತ್ರ ವಿಭಾಗ ದಡಿ ೨೫ಲಕ್ಷ ರೂ. ಸಬ್ಸಿಡಿ ನೀಡು ವುದಾಗಿ ತನ್ನಿಂದ ೨.೫೦ ಲಕ್ಷ ರೂ. ಪಡೆದಿರುವುದು ನಿಜ. ಈ ವಿಚಾರ ವಿಡಿಯೋದಲ್ಲಿ ದಾಖಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು ನೀಡಿ ದ್ದೇನೆ. ಅಲ್ಲದೆ ಕಮೀಷನರ್ ಅವರಿ ಗೂ ಪ್ರತ್ಯೇಕ ದೂರು ಕೊಟ್ಟಿದ್ದೇನೆ ಎಂದು ನಿರ್ಮಾಪಕ ನಿರ್ದೆಶಕ ಕೊಡ್ಲು ರಾಮಕೃಷ್ಣ ತಿಳಿಸಿದ್ದಾರೆ.
ಸುರೇಶ್ ಮಂಗಳೂರು ಸಬ್ಸಿಡಿ ಹಣ ದೊರಕಿಸಿಕೊಡಲು ತನ್ನಿಂದ ಹಣ ಪಡೆದಿದ್ದರು. ಆದರೆ ಆಗ ಹಣ ವನ್ನು ಸಿನಿಮಾದಲ್ಲಿನ ಅಭಿನಯಕ್ಕಾಗಿ ಪಡೆದಿರುವುದಾಗಿ ಸುರೇಶ್ ಹೊಸ ವರಸೆ ಆರಂಭಿಸಿದ್ದಾರೆ. ಸುರೇಶ್‌ಗೆ ಅಭಿನಯಕ್ಕೆ ೨.೫೦ ಲಕ್ಷ ರೂ. ನೀಡಲು ಅವರೇನು ಮಹಾನ್ ಕಲಾವಿದರೇ ಎಂದು ಪ್ರಶ್ನಿಸಿರುವ ಕೂಡ್ಲು, ಹೆಚ್ಚೆಂದರೆ ಅವರಿಗೆ ದಿನಕ್ಕೆ ಐದು ಸಾವಿರ ನೀq ಬಹುದಷ್ಟೇ ಎಂದು ತಿಳಿಸಿದರು.
ನಾನು ೩೦ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿದ್ದೇನೆ. ೨೨ ಸಿನಿಮಾ ಮಾಡಿದ್ದೇನೆ. ಇದರಲ್ಲಿ ೧೪ ಕಾದಂಬರಿ ಆಧರಿತ ಸಿನಿಮಾ. ಮೂರು ಬಾರಿ ರಾಜ್ಯ ಪ್ರಶಸ್ತಿ ಬಂದಿದೆ.
ಆರು ಸಿನಿಮಾವನ್ನು ನಾನೇ ನಿರ್ಮಿಸಿದ್ದೇನೆ. ಸಿನಿಮಾ ರಂಗದಲ್ಲಿ ತನಗೆ ಪ್ರತ್ಯೇಕ ಸ್ಥಾನಮಾನ ಇರುವಾಗ ಸುರೇಶ್‌ರಂತಹ ನಟರಿಗೆ ದೊಡ್ಡ ಮೊತ್ತದ ಹಣ ಸಂದಾಯ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸಬ್ಸಿಡಿ ಕಮಿಟಿಯಲ್ಲಿರುವ ಶಿವರಾಂ ಅವರಿಗೆ ಒಂದು ಲಕ್ಷ, ಉಳಿದ ಸದಸ್ಯರಿಗೂ ಹಣ ನೀಡಬೇಕಾಗಿದೆ. ಒಟ್ಟು ಐದು ಲಕ್ಷ ಕೆಡಿ. ಮಕ್ಕಳ ಚಿತ್ರದಡಿ ೨೫ ಲಕ್ಷ ಕೊಡುವುದಾಗಿ ತಿಳಿಸಿದರು. ಅಷ್ಟು ಹಣ ಕೊಡಲು ನಿಮ್ಮಿಂದ ಸಾಧ್ಯ ಇಲ್ಲ ಎಂದು ನಾನು ಅವರಲ್ಲಿ ಹೇಳಿದ್ದೆ. ಆಗ ಅವರು ಸಬ್ಸಿಡಿ ಸಮಿತಿ ಸದಸ್ಯರ ನಿರ್ಧಾ ರವೇ ಅಂತಿಮ ಎಂದರು.
ಸಬ್ಸಿಡಿ ಕೊಡುವುದಾಗಿ ಹಣ ಪಡೆದು ಈಗ ಅದಕ್ಕಾಗಿ ಹಣ ಪಡೆದಿಲ್ಲ ಎನ್ನುತ್ತಾರೆ. ಸುರೇಶ್ ಮಂಗಳೂರು ವರ್ತನೆ ಯಿಂದ ಸಿನಿಮಾರಂಗಕ್ಕೆ ಮತ್ತು ಸಬ್ಸಿಡಿ ಸಲಹಾ ಸಮಿತಿಗೆ ಕೆಟ್ಟ ಹೆಸರು ಬಂದಿದೆ. ಗಾಂಧಿನಗರದಲ್ಲಿ ಅವರನ್ನು ಯಾವ ಚಿತ್ರದಲ್ಲೂ ನಿರ್ಮಾಪಕರು ಅವಕಾಶ ನೀಡದಿರಲು ತೀರ್ಮಾನಿಸಿ ದ್ದಾರೆಂದು ಕೂಡ್ಲು ಪತ್ರಿಕೆಗೆ ತಿಳಿಸಿದ್ದಾರೆ.

ಮಾನ ಉಳಿಸಿಕೊಂಡ ಆಸ್ಕರ್

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಂಗ್ರೆಸ್ ಪಾಲಿನ ರಾಷ್ಟ್ರೀಯ ನಾಯಕರೆನಿಸಿರುವ ಆಸ್ಕರ್ ಫೆರ್ನಾಂಡಿಸ್ ತಮ್ಮ ಮಾನ ಉಳಿಸಿಕೊಂಡಿದ್ದಾರೆ. ಕಳೆದ ಎರಡು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವವೇ ಕಾಣೆಯಾಗುವ ಸ್ಥಿತಿ ಕಂಡಿದ್ದ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮೊದಲ ಬಾರಿ ಹುರುಪಿನ ನಗೆ ಬೀರಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯ ಗೆಲುವು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಈ ಗೆಲುವು ಸ್ಥಳೀಯ ಕಾಂಗ್ರೆಸಿಗರಿಗೆ ಮಾತ್ರವಲ್ಲದೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಆಸ್ಕರ್ ಫೆರ್ನಾಂಡಿಸ್‌ರಿಗೂ ಜೀವದಾನ ನೀಡಿದೆ ಎಂದು ಹೇಳಲಾಗುತ್ತಿದೆ.
ಎಂಬಂತೆ ದೆಹಲಿಯ ವರಿಷ್ಠರು ಆಸ್ಕರ್‌ಗೆ ಕೊಟ್ಟಿದ್ದ ಎಚ್ಚರಿಕೆ ಫಲ ಪಡೆದಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರಷ್ಟೇ ನಿಮಗೆ ದೆಹಲಿಯಲ್ಲಿ ಸ್ಥಾನಮಾನ ಎಂದು ಸೋನಿಯಾ ಮೇಡಂ ಆಸ್ಕರ್ ಕಿವಿ ಹಿಂಡಿ ಕಳುಹಿಸಿದ್ದರು. ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನೂ ಆಸ್ಕರ್‌ರಿಗೇ ವಹಿಸಿದ್ದರು. ಅದೃಷ್ಟ ವಶಾತ್ ಮತ ದಾರರು ಆಸ್ಕರರ ಮಾನ ಉಳಿಸಿ ದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಯವರ ಗೆಲುವಿನಲ್ಲಿ ಆಸ್ಕರ್‌ರ ಪಾಲುದಾರಿಕೆ ಅಲ್ಲಗಳೆಯುವಂತಿಲ್ಲವಾ ದರೂ ಆಸ್ಕರ್ ಒಬ್ಬರೇ ಗೆಲುವಿನ ಸೂತ್ರದಾರಿ ಎನ್ನಲಾಗದು. ಆದರೆ ದೆಹಲಿಯ ನಾಯಕರಿಗೆ ಈಗ ಆಸ್ಕರ್ ಓರ್ವರೇ ಗೆಲುವಿನ ಸೂತ್ರಧಾರಿಯಾಗಿ ಕಾಣುತ್ತಿದ್ದಾರೆ. ಆದುದರಿಂದ ಕಾಂಗ್ರೆಸಿಗರ ರಾಷ್ಟ್ರೀಯ ನಾಯಕ ಆಸ್ಕರ್ ಫೆರ್ನಾಂಡಿಸ್‌ರಿಗೆ ದೆಹಲಿಯ ಸ್ಥಾನಮಾನ ಗಟ್ಟಿಯಾಗಿದೆ. ಜನಾರ್ದನ ಪೂಜಾರಿಯ ಕಾಲೆಳೆಯಲು ಇನ್ನಷ್ಟು ದಿನ ಅವರು ದೆಹಲಿಯಲ್ಲಿ ವಿರಾಜ ಮಾನರಾಗಿರಬಹುದು.
ಉಪಚನಾವಣೆಯ ಫಲಿತಾಂಶ ವನ್ನು ಹೀಗೂ ವಿಶ್ಲೇಷಿಸುವವರೂ ಇದ್ದಾರೆ. ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ, ಬಿಜೆಪಿ ಸೋತಿದೆ. ತನ್ನದೆ ಆದ ಆಂತರಿಕ ಕಾರಣದಿಂದ ಬಿಜೆಪಿ ಸೋಲುವಂತಾಯಿತು. ಅದರ ಲಾಭ ಕಾಂಗ್ರೆಸ್ ಪಡೆದುಕೊಂಡಿತೇ ಹೊರತು ಕಾಂಗ್ರೆಸ್‌ಗೆ ಗೆಲ್ಲುವ ಸಾಮರ್ಥ್ಯ ಈ ಕ್ಷೇತ್ರದಲ್ಲಿ ಇನ್ನೂ ಬಂದಿಲ್ಲ ಎಂದು ಬಿಜೆಪಿಯ ಕಾರ್ಯಕರ್ತರು ಹೇಳುತ್ತಾರೆ.
ಕಾಂಗ್ರೆಸ್ ಗೆಲುವಿನಲ್ಲಿ ಪಕ್ಷದ ಅಭ್ಯರ್ಥಿಯ ವರ್ಚಸ್ಸಿನ ಪಾಲುದಾರಿಕೆ ಯನ್ನೂ ಅಲ್ಲಗಳೆಯುವಂತಿಲ್ಲ. ಪಕ್ಷದ ಹಿರಿಯ ನಾಯಕ ಸಿದ್ಧರಾಮಯ್ಯ ನವರೇ ಮಾದ್ಯಮಗಳ ಎದುರು ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮನೋರಮಾ ಮದ್ವರಾಜ್ ಬಿಜೆಪಿಯ ಪಾಳಯಕ್ಕೆ ಹೋಗಿದ್ದು ಕಾಂಗ್ರೆಸ್‌ಗೆ ನಷ್ಟವನ್ನೇನೂ ಮಾಡಿಲ್ಲ. ಮಾತ್ರವಲ್ಲ ಬಿಜೆಪಿಗೆ ಲಾಭವನ್ನೂ ತಂದಿಲ್ಲ. ಸಭಾಪತಿಯ ಕತೆಯೂ ಇದಕ್ಕಿಂತ ಭಿನ್ನವೇನಲ್ಲ.
ಒಟ್ಟು ಬೆಳವಣಿಗೆಯ ಲಾಭ ಸಿಕ್ಕಿದ್ದು ಮಾತ್ರ ಆಸ್ಕರ್ ಫೆರ್ನಾಂಡಿಸ್‌ರಿಗೆ. ಈ ಬೆಳವಣಿಗೆ ಜನಾರ್ದನ ಪೂಜಾರಿಯವರ ದೆಹಲಿ ಯಾತ್ರೆಯ ಕನಸನ್ನು ಇನ್ನಷ್ಟು ದೂರ ಮಾಡಲಿದೆ. ಜನಾರ್ದನ ಪೂಜಾರಿಯವರು ಕೂಡ ಪ್ರಾಮಾಣಿಕ ಪ್ರಯತ್ನ ನಡೆಸಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿ ದ್ದಾದರೆ ಆಸ್ಕರ್ ಹಾಗೂ ಮೊಯ್ಲಿಯ ದೆಹಲಿ ಪಾರುಪತ್ಯವನ್ನು ಪಂಕ್ಚರ್ ಮಾಡಬಹುದು ಎಂದೆನ್ನುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಸರಕಾರಿ ಬಸ್ ಡಿಕ್ಕಿ: ಕಾರು ಜಖಂ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸರಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡ ಘಟನೆ ಕಡಬ ಸಮೀಪದ ಸೈಂಟ್ ಜೋಕಿಮ್ಸ್ ಚರ್ಚ್ ಬಳಿ ನಿನ್ನೆ ನಡೆದಿದೆ.
ಕುಟ್ರುಪ್ಪಾಡಿ ಗ್ರಾಮದ ಕೇಪುಡೇಲು ನಿವಾಸಿ ವಿಠಲ ಎಂಬವರ ಪುತ್ರ ಧರ್ಣಪ್ಪ(೨೩) ಎಂಬಾತ ಸರಕಾರಿ ಬಸ್ ಬರುತ್ತಿರುವುದನ್ನು ಕಂಡು ಏಕಾಏಕಿ ರಸ್ತೆಯ ಮಧ್ಯೆ ಅಡ್ಡಬಂದು ಸಾವಿಗೆ ಯತ್ನಿಸಿದ್ದ. ಇದನ್ನು ಕಂಡು ಗಲಿಬಿಲಿಗೊಂಡ ಬಸ್ ಚಾಲಕ ಬಸ್ಸನ್ನು ಎಡಬದಿಗೆ ತಿರುಗಿಸಿದ್ದು, ಕಾರಿಗೆ ಡಿಕ್ಕಿ ಹೊಡೆದಿದೆ. ಯುವಕ ಪಾನಮತ್ತನಾಗಿದ್ದು, ಪ್ರೇಮ ವೈಫಲ್ಯದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಬ್ಲೂಫಿಲಂ ವರದಿ ಇಂದು ಮಂಡನೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಶ್ರೀಶೈಲಪ್ಪ ಬಿರದೂರು ನೇತೃತ್ವದ ವಿಚಾರಣಾ ಸಮಿತಿಯ ವರದಿಯನ್ನು ಸ್ಪೀಕರ್‌ಗೆ ನೀಡಿದ್ದು, ಇಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಆರೋಪಿಗಳೆಂದು ಹೆಸರಿಸಿ ರುವ ಮೂವರು ಶಾಸಕರಿಗೆ ವರದಿ ಸಲ್ಲಿಕೆಯಾಗುವವರೆಗೆ ಸದನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇಂದು ವರದಿ ಮಂಡನೆಯಾಗುವ ಸಂದರ್ಭ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ನಡೆಯುವ ಸಾಧ್ಯತೆಗಳಿವೆ.

ಬಂಟ್ವಾಳ: ೧೬ ಮಂದಿ ಜುಗಾರಿಕೋರರ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲಾಯಿಬೆಟ್ಟು ಎಂಬಲ್ಲಿ ಜುಗಾರಿ ನಿರತ ೧೬ ಮಂದಿಯನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಆರೋಪಿಗಳನ್ನು ಮಯ್ಯದ್ದಿ, ಯಾಕೂಬ್, ಮಹಮ್ಮದ್ ಶರೀಫ್, ರಫೀಕ್, ರಿಯಾಝ್, ಉಸ್ಮಾನ್, ಸುರೇಶ, ನಾರಾಯಣ, ಪದ್ಮರಾಜ, ಸಿದ್ದಿಕ್, ಅಜೀಜ್, ಇಕ್ಬಾಲ್, ಇಬ್ರಾಹಿಂ, ಇಸ್ಮಾಯಿಲ್, ಮನ್ಸೂರ್ ಹಾಗೂ ಮುಸ್ತಫಾ ಎಂದು ಹೆಸರಿಸಲಾಗಿದೆ. ಇವರಿಂದ ಒಟ್ಟು ೬೫,೪೭೦ ರೂ.ವಶಪಡಿಸಿಕೊಳ್ಳಲಾಗಿದೆ.

ಎಬಿವಿಪಿ ಮುಖಂಡನ ಹಲ್ಲೆಗೆ ಖಂಡನೆ

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲದ ಜಂಕ್ಷನ್ ಬಳಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಹಿರಿಯ ನಾಯಕ ಹಾಗೂ ಹಲವಾರು ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಪದ್ಮಶಾಲಿ ಸಮಾಜದ ಕ್ರೀಯಾಶೀಲ ಯುವಕ ಶ್ರೀಕೃಷ್ಣ ಇವ ರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ದ್ದು, ಖಂಡನೆಯ ಎಂದು ಪದ್ಮಶಾಲಿ ಸಮಾಜ ಸೇವಾ ಸಮಿತಿ ವಿಟ್ಲ ಘಟಕ ಹೇಳಿದೆ. ಕ್ಷುಲ್ಲಕ ಕಾರಣಕ್ಕೆ ಮಾರ್ಚ್ ೨೦ರಂದು ವಿಟ್ಲ ಖಾಸಗಿ ಬಸ್ ನಿಲ್ದಾ ಣದ ಬಳಿ ಸ್ಥಳೀಯ ೧೫ ಯುವಕರ ತಂಡ ಹಲ್ಲೆ ನಡೆಸಿ ಮೊಬೈಲ್ ಹಾಗೂ ನಗದು ಅಪಹರಿಸಿ ಗೂಂಡಾಗಿರಿ ನಡೆಸಿದವರಿಗೆ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದೇ ಇದ್ದಲ್ಲಿ ನೇಕಾರರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Posted by JAYAKIRANA Kirana on | 0 comments | Leave a comment...

ಬಜ್ಪೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಇದರ ಗಿಡಿಗೆರೆ ಕಟೀಲು ಗ್ರಾಮ ಶಾಖೆಯ ಬೃಹತ್ ಸಮಾವೇಶ ಇತ್ತೀಚೆಗೆ ನಡೆಯಿತು. ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವಿಪ್ರಸಾದ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಎಂ.ದೇವದಾಸ್, ಕೃಷ್ಣ ಎಕ್ಕಾರ್, ಕೃಷ್ಣಾನಂದ.ಡಿ, ಗಿರಿಯಪ್ಪ ಗಿಡಿಗೆರೆ, ಶೇಖರ್ ಹೆಜಮಾಡಿ, ಎಂ.ವಿ ಪದ್ಮನಾಭ, ಶೇಖರ್ ಚಿಲಿಂಬಿ, ರುಕ್ಮಯ ಗಿಡಿಗೆರೆ ಉಪಸ್ಥಿತರಿದ್ದರು.

ತುಳು ಸಿನಿಮಾಗಳನ್ನು ಪ್ರೋತ್ಸಾಹಿಸಲು ಡಾ.ಹನ್ಸರಾಜ್ ಕರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ತುಳು ಭಾಷೆಯಲ್ಲಿ ತಯಾರಾಗುವ ಸಿನಿಮಾಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ. ತುಳುವಿನಲ್ಲಿ ನಿರ್ಮಾಣಗೊಂಡ ರಾಮ್‌ಶೆಟ್ಟಿಯವರ 'ಬಂಗಾರ‍್ದಕುರಲ್' ತುಳು ಚಿತ್ರ ಸೂಪ ರ್‌ಹಿಟ್ ಆಗಲಿ, ಈ ಚಿತ್ರದ ಮೂಲಕ ತುಳು ಭಾಷೆ, ಸಂಸ್ಕೃತಿ ದೇಶ ವಿದೇಶ ಗಳಲ್ಲಿ ಮತ್ತಷ್ಟು ಪಸರಿಸುವಂತಾಗಲಿ ಎಂದು ಖ್ಯಾತ ವೈದ್ಯ ವಿನಯ ನರ್ಸಿಂಗ್ ಹೋಮ್‌ನ ಆಡಳಿತಾ ಧಿಕಾ ರಿ ಡಾ.ಹನ್ಸರಾಜ್ ಆಳ್ವ ಹೇಳಿ ದರು. ಮಂಗಳೂರು ಪುರಭವನ ದಲ್ಲಿ ನಡೆದ ಆನಂದ ಫಿಲಂಸ್‌ನ ಅಡ್ಯಾರ್ ಮಾಧವ ನಾಯ್ಕ್ ಅರ್ಪಿಸುವ ರಾಮ್‌ಶೆಟ್ಟಿ ನಿರ್ದೇಶನದ ಬಂಗಾರ‍್ದ ಕುರಲ್ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾ ಡಿದರು.
 ೩೦ವರ್ಷಗಳ ಬಳಿಕ ತುಳು ಚಿತ್ರ ನಿರ‍್ಮಿಸಿದ ಸಂತೃಪ್ತಿ ನನ್ನಲ್ಲಿದೆ ಹಿಂದಿ ಚಿತ್ರದ ಗುಣಮಟ್ಟದಲ್ಲಿ 'ಬಂಗಾರ‍್ದ ಕುರಲ್' ಮೂಡಿ ಬಂದಿದೆ ಎಂದು ನಿರ್ದೇಶಕ ರಾಮ್ ಶೆಟ್ಟಿ ತಿಳಿದರು. ಸಮಾರಂಭದಲ್ಲಿ ಮಾಜಿ ಸಚಿವ ಅಮg ನಾಥ ಶೆಟ್ಟಿ, ಫೆಸಿಲಿಟಿಸ್ ಸಂಸ್ಥೆಯ ಮುಖ್ಯಸ್ಥ ಅಜಿತ್‌ಕುಮಾರ್ ರೈ ಮಾಲಾಡಿ, ಎ.ಸದಾನಂದ ಶೆಟ್ಟಿ ಶ್ರೀ ಭೂತನಾಥೇಶ್ವರ ದೇವಸ್ಥಾನದ ವಿಜಯ ನಾಥ ವಿಠಲ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಉದ್ಯಮಿ ನಗ್ರಿಗುತ್ತು ರೋಹಿತ್ ಶೆಟ್ಟಿ, ವಿಲಾಸ್ ನಾಯಕ್ ಉಪಸ್ಥಿತರಿದ್ದರು.
ಸಂಗೀತ ನಿರ್ದೇಶಕ ವಿ. ಮನೋಹರ್, ನಟ ಶಿವಧ್ವಜ್, ನಾಯಕಿಯರಾದ ಪಾಕೀ ಹೆಗ್ಡೆ, ನಮೃತಾ ಹೆಗ್ಡೆ, ಜಗದೀಶ್ ಶೆಟ್ಟಿ ಸರ್ವಾಣಿ, ಜಗನ್ನಾಥ ಶೆಟ್ಟಿ ಬಾಳ, ದೀಪಕ್ ಶೆಟ್ಟಿ, ಶಿವರಾಜ್ ಶೆಟ್ಟಿ ಅಡ್ಯಾರ್‌ಗುತ್ತು, ಜಯರಾಮ ಶೇಖ, ತಮ್ಮ ಲಕ್ಷ್ಮಣ್ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ, ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಸುರತ್ಕಲ್‌ನಲ್ಲಿ ಜೆಡಿಎಸ್ ಸಭೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರಕ್ಕೊಳಪಟ್ಟ ಮಂಗ ಳೂರು ಮಹಾನಗರ ಪಾಲಿಕೆ ವಾರ್ಡ್ ನಂಬ್ರ ಒಂದರಲ್ಲಿ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆರ್.ಧನ್‌ರಾಜ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು. ಉತ್ತರ ವಿಧಾನಸಭಾ ಕ್ಷೇತ್ರ ದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕುರಿತು ಚರ್ಚೆ ನಡೆಯಿತು. ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಪಕ್ಷ ಸಂಘಟಿಸಲು ಬೂತ್‌ಮಟ್ಟದಿಂದಲೇ ಕಾರ್ಯಕರ್ತರನ್ನು ಸೇರಿಸಿ ಕೆಲಸ ಮಾಡಲು ಯೋಜನೆ ರೂಪಿಸ ಲಾಗುವುದು ಎಂದು ಆರ್.ಧನರಾಜ್ ತಿಳಿಸಿದರು. ಸುರತ್ಕಲ್‌ನಲ್ಲಿ ಬೃಹತ್ ಮಟ್ಟದ ಸಭೆಯನ್ನು ಆಯೋಜಿಸ ಲಾಗುವುದು ಎಂದವರು ತಿಳಿಸಿದರು. ಸಭೆಯಲ್ಲಿ ಜನತಾದಳ ಜಾತ್ಯತೀತ ದ.ಕ.ಜಿಲ್ಲಾ ಕಾರ್ಯದರ್ಶಿ ಪಿ.ಹೆಚ್. ಎಂ. ರಫೀಕ್, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎನ್., ಸ್ಥಳೀಯ ನಾಯಕರಾದ ಅಹ್ಮದ್ ಬಾವ ಮುಕ್ಕ, ಹುಸೈನ್ ಮುಕ್ಕ, ಪುರಂದರ ಉಪಸ್ಥಿತರಿದ್ದರು.

ವರ್ಷಾವಧಿ ಮಾರಿಪೂಜೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಶ್ರೀ ಮಾರಿ ಕಾಂಬಾ ದೇವಸ್ಥಾನ ಅಡುಮರೋಳಿ, ಮಂಗಳೂರು ಇಲ್ಲಿ ತಾ.೦೩. ೪.೨೦೧೨ರಿಂದ ಮೊದಲ್ಗೊಂಡು ತಾ.೬.೪.೨೦೧೨ರ ವರೆಗೆ ಶ್ರೀ ಕ್ಷೆತ್ರದ ವಾರ್ಷಿಕ ಜಾತ್ರೆ ಮಾರಿಪೂಜೆ ಹಾಗೂ ಶ್ರೀ ಕೋರ‍್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ ನೇಮೋತ್ಸವವು ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ಹೃದಯ ಖಾಯಿಲೆಯಿಂದ ನಲುಗುವ ಬಾಲಕನಿಗೆ ನೆರವು ನೀಡುವಿರಾ?

Posted by JAYAKIRANA Kirana on | 0 comments | Leave a comment...

ಮಂಗಳೂರು: ಅದೊಂದು ಪುಟ್ಟ ಕುಟುಂಬ. ಸಂಸಾರದ ನೊಗಹೊತ್ತ ಮನೆಯ ಯಜಮಾನ ದುಡಿ ದರಷ್ಟೇ ಆ ಮನೆಯಲ್ಲಿ ತುತ್ತು ಅನ್ನಕ್ಕೆ ಬರಗಾಲ ಬಾರದು. ಆದರೀಗ ಆ ಮನೆಗೆ ವಿಧಿಯ ಕ್ರೂರದೃಷ್ಟಿ ಬಿದ್ದಿದೆ. ಏನೂ ಅರಿಯದ ಮೂರರ ಹರೆಯದ ಬಾಲಕ ಹೃದಯ ಖಾಯಿಲೆಯಿಂದ ನಲುಗಿ ಹಾಸಿಗೆ ಹಿಡಿದಿದ್ದರೆ, ಮನೆಯ ಯಜಮಾನ ಕಂಡ-ಕಂಡಲ್ಲಿ ಸಾಲ ಮಾಡಿ ಸುಸ್ತಾಗಿದ್ದಾನೆ. ಹೇಗಾದರೂ ಮಾಡಿ ತನ್ನ ಮಗನನ್ನು ಸಾವಿನಿಂದ ಪಾರು ಮಾಡಬೇಕೆಂಬ ಛಲ ಹೊತ್ತಿರುವ ಆತ ಸಹಾಯಕ್ಕಾಗಿ ಸಹೃದಯಿ ದಾನಿಗಳಲ್ಲಿ ಅಂಗಲಾಚುತ್ತಿದ್ದಾರೆ.
ಪುತ್ತೂರು ಸಮೀಪದ ಪಾಲ್ತಾಡಿ-ಹಿರೇಬಂಡಾಡಿ ಕೋನಾಡಿ ಮನೆಯ ನಿವಾಸಿ ಶರೀಫ್ ಹಾಗೂ ಕೌಸರ್ ಬಾನು ದಂಪತಿಯ ಪುತ್ರ ಮೂರರ ಹರೆಯದ ಮೊಹಮ್ಮದ್ ಮುನಿಫ್‌ಗೆ ಅದ್ಹೇಗೋ ಹೃದಯ ಖಾಯಿಲೆ ತಗುಲಿದೆ. ಅಂಗನವಾಡಿಯಲ್ಲಿ ಮಕ್ಕಳೊಂದಿಗೆ ಆಟವಾಡಿಕೊಂಡಿರ ಬೇಕಿದ್ದ ಮುನಿಫ್ ಹಾಸಿಗೆಗೆ ಒರಗಿ ನೋವನ್ನು ತಡೆಯಲಾ ರದೆ ಬಿಕ್ಕಳಿಸುತ್ತಿದ್ದಾನೆ. ಒಮೇಗಾ ಆಸ್ಪತ್ರೆಯಲ್ಲಿ ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧೋಪಚಾರ ಮಾಡಿರುವ ಹೆತ್ತವರು ಕಷ್ಟದಲ್ಲೇ ದಿನದೂಡುತ್ತಿದ್ದಾರೆ.
ಮುನಿಫ್‌ನ ಪರೀಕ್ಷೆ ನಡೆಸಿರುವ ವೈದ್ಯರು ಹೃದಯ ಸರ್ಜರಿ ಅವಶ್ಯವಾಗಿ ಮಾಡಲೇಬೇಕೆಂದೂ ಅದಕ್ಕಾಗಿ ಅಂದಾಜು ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಖರ್ಚು ತಗಲುತ್ತದೆ ಎಂದಿರುವುದನ್ನು ಕೇಳಿ ಶರೀಫ್ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಈಗಾಗಲೇ ಮಗುವಿನ ಚಿಕಿತ್ಸೆಗಾಗಿ ಸಾಲ ಮಾಡಿರುವ ಶರೀಫ್ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಪತ್ರಿಕೆಯ ಓದುಗರು, ದಾನಿಗಳು, ಸಂಘ-ಸಂಸ್ಥೆಗಳು ಕಣ್ತೆರೆದು ಈ ಬಡ ಕುಟುಂಬವನ್ನೊಮ್ಮೆ ನೋಡಿದಲ್ಲಿ ನೊಂದಿರುವ ಜೀವಗಳು ಒಂದಿಷ್ಟು ಸಾಂತ್ವನ ಪಡೆಯಬಹುದು. ಆಸ್ಪತ್ರೆಯಲ್ಲಿ ಮಲಗಿರುವ ಮುನಿಫ್ ಹೊಸಜೀವನ ನೋಡಬಹುದು.
ಪತ್ರಿಕೆಯ ಓದುಗರು, ದಾನಿಗಳು ಮುನಿಫ್‌ಗೆ ನೆರವು ಸಲ್ಲಿಸಲು ಉಪ್ಪಿನಂಗಡಿಯ ಸ್ಟೇಟ್‌ಬ್ಯಾಂಕ್ ಶಾಖೆಯ ಲ್ಲಿನ ಖಾತೆ ನಂಬ್ರ ೩೨೨೩೧೪೪೬೦೨೪ ಬಳಸಬಹುದಾಗಿದೆ. ಖುದ್ದಾಗಿ ಭೇಟಿ ಮಾಡಿ ಸಹಾಯ ಸಲ್ಲಿಸಲು ಇಚ್ಛಿಸುವವರು ಕೋನಾಡಿ ಮನೆ, ಹೀರೇಬಂಡಾಡಿ ಗ್ರಾಮ, ಪಾಲ್ತಾಡಿ ಅಂಚೆ-ಪುತ್ತೂರು ಇಲ್ಲಿ ಭೇಟಿ ನೀಡಬಹುದು. ಮುನಿಫ್ ಹೆತ್ತವರನ್ನು ೮೪೯೪೮೫೮೬೮೭ ನಂಬರಿನಲ್ಲಿ ಸಂಪರ್ಕಿಸಲು ಕೋರಲಾಗಿದೆ.
ಜಯಕಿರಣ ಮನವಿ
ಮೊಹಮ್ಮದ್ ಮುನಿಫ್‌ಗೆ ಸಹಾಯಹಸ್ತ ಚಾಚುವರೇ ಪತ್ರಿಕೆಯ ಓದುಗರು, ಸಹೃದಯಿ ದಾನಿಗಳಲ್ಲಿ 'ಜಯಕಿರಣ ಪತ್ರಿಕೆ ಮನವಿಯನ್ನು ಮಾಡಿದೆ.

ಯುಪಿಎ ಕಿವುಡ ಹಾಗೂ ಮೂಕ ಸರ್ಕಾರ

Posted by JAYAKIRANA Kirana on | 0 comments | Leave a comment...

ಅಣ್ಣಾ ಹಜಾರೆ ಕಿಡಿ
ನವದೆಹಲಿ: ಜನರ ಧ್ವನಿಗೆ ಆಡಳಿತಾರೂಢ ಯುಪಿಎ ಸರ್ಕಾರದ ಸ್ಪಂದನೆ ಇಲ್ಲ. ಸರ್ಕಾರಕ್ಕೆ ಜನರ ಸಂಕಷ್ಟ ಗೊತ್ತಿಲ್ಲ ಇದು ಭ್ರಷ್ಟಾಚಾರ ವಿರೋಧಿ ಆಂದೋಲನ ಹೋರಾಟಗಾರ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಕಿಡಿ.
ಭಾನುವಾರ ಸಾಮಾಜಿಕ ಕಾರ್ಯಕರ್ತರ ರಕ್ಷಣೆಗೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಉಪವಾಸ ಕೈಗೊಂಡ ಸಂದರ್ಭದಲ್ಲಿ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಮಾತನಾಡಿದರು.
ಅಣ್ಣಾ ಹಜಾರೆ ನಿನ್ನೆ ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ ೧೧ಗಂಟೆಗೆ ಒಂದು ದಿನದ ಉಪವಾಸ ಸತ್ಯಾಗ್ರಹ ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ವಿರುದ್ಧ ಹೋರಾಡುವ ಸಾಮಾಜಿಕ ಕಾರ್ಯ ಕರ್ತರ ರಕ್ಷಣೆಗೆ ಕಿವುಡ ಹಾಗೂ ಮೂಕ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಗಣಿ ಮಾಫಿಯಾಕ್ಕೆ ಬಲಿಯಾದ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್‌ಗೆ ನ್ಯಾಯ ಒದಗಿಸಿ ಕೊಡಬೇಕು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಅಣ್ಣಾ ಒತ್ತಾಯಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರಬೇಕಾದರೆ ಹತ್ಯೆಗೊಳಗಾದ ಸಾಮಾಜಿಕ ಕಾರ್ಯಕರ್ತರ ಕುಟುಂಬ ಮತ್ತು ಮೃತ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಅವರ ಕುಟುಂಬ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕಾರು ಕಮರಿಗೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮೂರುಕಾವೇರಿಯ ಮಾರಡ್ಕ ಮಾರಿಗುಡಿ ಬಳಿ ಮಾರುತಿ ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಳದ ಕಮರಿಗೆ ಬಿದ್ದ ಘಟನೆ ನಿನ್ನೆ ಸಂಭವಿಸಿದೆ. ಹತ್ತು ಅಡಿ ಆಳವಿರುವ ಕಮರಿಗೆ ಕಾರು ಬಿದ್ದಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ್ಯರಾಗಿ ಪಾರಾಗಿದ್ದಾರೆ.

ನೀರಲ್ಲಿ ಮುಳುಗಿ ಕ್ಲೀನರ್ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೆಳ್ತಂಗಡಿ ಸಮೀಪದ ನೆರಿಯ ಎಸ್ಟೇಟ್‌ನ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಕ್ಲೀನರ್ ನೀರಲ್ಲಿ ಮುಳುಗಿ ದಾರುಣ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಎಂ.ಎಂ.ಸುರೇಂದ್ರನ್(೩೮) ಎಂದು ಹೆಸರಿಸಲಾಗಿದೆ. ಇವರು ಮೂರ್ಛೆ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ.

ದೇರೆಬೈಲ್: ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇಲ್ಲಿಗೆ ಸಮೀಪದ ದೇರೆಬೈಲ್-ಕೊಂಚಾಡಿ ಎಂಬಲ್ಲಿಂದ ಕಳೆದ ಎರಡು ದಿನಗಳ ಹಿಂದೆ ನಿವಾಸಿ ಕೃಷ್ಣಪ್ಪ(೪೦) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಸ್ಥಳೀಯ ಗುಡ್ಡೆಯಲ್ಲಿ ಪತ್ತೆಯಾಗಿದೆ. ಕಳೆದ ೨೩ರಂದು ಮನೆ ಯಲ್ಲಿ ಪತ್ನಿಯ ಜೊತೆ ಜಗಳವಾಡಿದ್ದ ಕೃಷ್ಣಪ್ಪರು ಒಂದು ಸಾವಿರ ರೂ. ಪಡೆದು ನಾಪತ್ತೆಯಾಗಿದ್ದರು.

ಮುಸ್ಲಿಮರು ಪತ್ನಿಗೆ ಹೊಡೆಯಿರಿ

Posted by JAYAKIRANA Kirana on | 0 comments | Leave a comment...

ಪುಸ್ತಕವೊಂದರಲ್ಲಿ ಉಲ್ಲೇಖ
ಲಂಡನ್: ಮುಸ್ಲಿಮರು ತಮ್ಮ ಪತ್ನಿಯನ್ನು ಕೈಯಿಂದ ಅಥವಾ ಕೋಲಿ ನಿಂದ ಹೊಡೆಯಬಹುದು, ಇಷ್ಟೇ ಅಲ್ಲದೆ ಆಕೆಯ ಕಿವಿಯನ್ನು ಹಿಡಿದು ಎಳೆಯಬಹುದು ಎನ್ನುವುದು ಮದುವೆ ಯಾದ ಮುಸ್ಲಿಮರಿಗಾಗಿ ಬಿಡುಗಡೆ ಯಾದ ಪುಸ್ತಕದಲ್ಲಿ ಬರೆಯಲಾಗಿದ್ದು, ಇದೀಗ ಹೆಚ್ಚಿನ ವಿವಾದವನ್ನು ಉಂಟು ಮಾಡಿದೆ.
೧೬೦ ಪುಟಗಳ 'ಎ ಗಿಫ್ಟ್ ಫಾರ್        ಮುಸ್ಲಿಂ ಕಪಲ್ ಪುಸ್ತಕದಲ್ಲಿ ಈ ವಿಷ ಯವಿದೆ. ಇದನ್ನು ನವವಿವಾಹಿತರಿಗೆ ಹಾಗೂ ಕಳೆದ ಹಲವು ವರ್ಷಗಳಿಂದ ಜತೆಯಾಗಿರುವ ದಂಪತಿಗೆ ಅರ್ಪಿಸ ಲಾಗಿದೆ. ಈ ಪುಸ್ತಕವನ್ನು ಇಸ್ಲಾಂ ವಿಧ್ವಾಂಸ ಮೌಲವಿ ಅಶ್ರಫ್ ಅಲಿ ತನ್ವಿ ಎಂಬವರು ಬರೆದಿದ್ದಾರೆ.
ಈ ಪುಸ್ತಕದಲ್ಲಿ ಮದುವೆಗೆ ಸಂಬಂಧಪಟ್ಟ ವಿಷಯ ಮತ್ತು ಮದುವೆ ಬಳಿಕದ ಸಂಬಂಧಗಳ ಕುರಿತಾಗಿದೆ. ವಿವಾಹ ವಿಚ್ಛೇದನ ಮತ್ತು ಇದಕ್ಕೆ ಕಾರಣಗಳನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ. ಪತ್ನಿಯನ್ನು ಬಲ ಅಥವಾ ಆಕೆಯನ್ನು ಬೆದರಿಸಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಪುಸ್ತಕದ ಮೊದಲ ಪುಟದಲ್ಲೇ ಬರೆಯಲಾಗಿದೆ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ.
ಪತಿಯ ಎಲ್ಲಾ ಆಸೆಗಳನ್ನು ಪತ್ನಿ ಯಾದವಳು ಈಡೇರಿಸಬೇಕು ಮತ್ತು ಯಾವತ್ತೂ ಸುಂದರವಾಗಿ ಕಾಣುವಂತೆ ಆಕೆ ಇರಬೇಕು. ಕೆನಡಾದಲ್ಲಿ ಪ್ರಜ್ಞಾವಂತ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ ಬಳಿಕ ಈ ಪುಸ್ತಕ ಬೆಳಕಿಗೆ ಬಂದಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ಹೊರ ವಲಯದ ಚಿಕ್ಕಮುಡ್ನೂರು ಗ್ರಾಮದ ಕೃಷ್ಣ ನಗರ ನಿವಾಸಿ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ತಾಲೂಕಿನ ರಾಗಿದ ಕುಮೇರು ಶಾಲೆಯ ಶಿಕ್ಷಕಿ ಸ್ವರ್ಣಲತಾ ಎಂಬವರ ಮನೆಯಿಂದ ಕಳ್ಳತನ ನಡೆದಿದೆ.
ಶುಕ್ರವಾರ ರಾತ್ರಿ ಸ್ವರ್ಣಲತಾ ಮತ್ತು ಅವರ ಪುತ್ರಿ ಮಲಗಿದ್ದು, ಶನಿವಾರ ಬೆಳಗ್ಗೆ ಎದ್ದು ನೋಡಿದಾಗ ಮನೆಯೊಳಗಿನ ಕೋಣೆಯೊಂದರಲ್ಲಿದ್ದ ಕಪಾಟಿನ ಬಾಗಿಲು ಮುರಿದು ೧೫ ಪವನ್ ಚಿನ್ನಾಭರಣ ಮತ್ತು ರೂ.೭೫೦೦ ನಗದನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ.೨.೨೭ ಲಕ್ಷ ಎಂದು ಅಂದಾಜಿಸಲಾಗಿದೆ.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾದರೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.

ವಿದೇಶಿ ಮದ್ಯ: ರೇಣುಕಾಚಾರ್ಯ ತನಿಖೆಗೆ ಕೋರ್ಟ್ ಆದೇಶ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಕೋರಿಕೆ ಮೇರೆಗೆ ವಿದೇಶಿ ಮದ್ಯದ ಬಾಟಲಿ ಗಳನ್ನು ತಂದು, ಕಚೇರಿಯಲ್ಲಿ ದಾಸ್ತಾನು ಮಾಡಲಾಗಿತ್ತು ಎಂದು ಬಂಧಿತ ಅಬಕಾರಿ ಉಪ ಆಯುಕ್ತ ಎಲ್.ಎನ್. ಮೋಹನ್‌ಕುಮಾರ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ವಿಶೇಷ ಕೋರ್ಟ್, ಸಚಿವರ ವಿರುದ್ಧ ತನಿಖೆಗೆ ಆದೇಶಿಸಿದೆ.
ಜೆ.ಸಿ. ರಸ್ತೆಯಲ್ಲಿರುವ ಅಬಕಾರಿ ಉಪ ಆಯುಕ್ತರ ಕಚೇರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಉಪ ಆಯುಕ್ತರ ಕಚೇರಿಗಳಲ್ಲಿ ಶೋಧ ನಡೆಸಿದ್ದರು.
ಪೂರ್ವ ವಿಭಾಗದ ಉಪ ಆಯುಕ್ತ ಮೋಹನ್‌ಕುಮಾರ್ ಕಚೇರಿಯಲ್ಲಿ ೨೪ ಲೀ. ವಿದೇಶಿ ಮದ್ಯ ಮತ್ತು ೨೭,೨೦೦ ರೂಪಾಯಿ ನಗದು ಸಿಕ್ಕಿತ್ತು.
ಮೋಹನ್‌ಕುಮಾರ್ ಕಚೇರಿ ಯಲ್ಲಿ ದೊರೆತ ಮದ್ಯದ ಬಾಟಲಿಗಳ ಮೌಲ್ಯ ಲಕ್ಷ ರೂಪಾಯಿಗೂ ಹೆಚ್ಚು ಆಗಿದ್ದು, ಉಳಿದ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖೆಗೆ ವರದಿ ಕಳುಹಿಸಲು ನಿರ್ಧರಿಸಿದ ಲೋಕಾ ಯುಕ್ತ ಪೊಲೀಸರು, ಮೋಹನ್ ಕುಮಾರ್ ಅವರನ್ನು ಬಂಧಿಸಿದ್ದರು. ಪ್ರಾಥಮಿಕ ತನಿಖೆಯ ವೇಳೆ, ಅವು ಪ್ರಭಾವಿ ವ್ಯಕ್ತಿಗಳಿಗಾಗಿ ನೀಡಲು ತಂದಿದ್ದ ಮದ್ಯದ ಬಾಟಲಿಗಳು ಎಂದು ಆರೋಪಿ ಅಧಿಕಾರಿ ಉತ್ತರಿಸಿದ್ದರು. ಅವರ ಹೇಳಿಕೆಯನ್ನು ಮಹಜರು ವರದಿಯಲ್ಲಿ ದಾಖಲಿಸಲಾಗಿತ್ತು.
ಪ್ರಾಥಮಿಕ ತನಿಖೆ ಪೂರ್ಣಗೊಳಿ ಸಿದ ಬೆಂಗಳೂರು ನಗರ ಲೋಕಾ ಯುಕ್ತ ಡಿವೈಎಸ್‌ಪಿ ಎಸ್. ಗಿರೀಶ್ ಮತ್ತು ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಅವರಿದ್ದ ತಂಡ, ರಾತ್ರಿ ಆರೋಪಿ ಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಿದ್ದರು. ಅಲಿಯವರೆಗೂ ಸುಮ್ಮನೆ ಇದ್ದ, ಮೋಹನ್‌ಕುಮಾರ್, ನ್ಯಾಯಾಧೀಶ ಸುಧೀಂದ್ರ ರಾವ್ ಅವರನ್ನು ನೋಡುತ್ತಿದ್ದಂತೆ ಗಳಗಳನೆ ಅತ್ತರು.
ಆರೋಪಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಷ್ಟೊಂದು ವಿದೇಶಿ ಮದ್ಯದ ಬಾಟಲಿಗಳನ್ನು ಏಕೆ ಕಚೇರಿಯಲ್ಲಿ ತಂದಿಡಲಾಗಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಉಪ ಆಯುಕ್ತ, ನಮ್ಮ ಇಲಾಖೆ ಸಚಿವರಾದ ರೇಣುಕಾಚಾರ್ಯ ಅವರು ವಿದೇಶಿ ಮದ್ಯ ತಂದು ಕೊಡುವಂತೆ ಸೂಚಿಸಿದ್ದರು. ಅವರಿಗಾಗಿ ಮದ್ಯದ ಅಂಗಡಿಗಳಿಂದ ತರಿಸಿ, ಕಚೇರಿಯಲ್ಲಿ ದಾಸ್ತಾನು ಇರಿಸಿದ್ದೆ. ಇತರೆ ಕೆಲ ಅಬಕಾರಿ ಅಧಿಕಾರಿಗಳೂ ಸಚಿವರಿಗೆ ಕೊಡಲು ನನ್ನ ಬಳಿ ಮದ್ಯದ ಬಾಟಲಿ ನೀಡಿದ್ದರು ಎಂದು ವಿವರಿಸಿದರು.
ಆರೋಪಿ ನೀಡಿದ ಹೇಳಿಕೆಯನ್ನು ದೂರನ್ನಾಗಿ ಪರಿಗಣಿಸುವಂತೆ ನಿರ್ದೇಶನ ನೀಡಿದ ನ್ಯಾಯಾಧೀಶರು, ರೇಣುಕಾಚಾರ್ಯ ವಿರುದ್ಧವೂ ತನಿಖೆ ನಡೆಸುವಂತೆ ಇನ್‌ಸ್ಪೆಕ್ಟರ್ ನರಸಿಂಹಮೂರ್ತಿ ಅವರಿಗೆ ಆದೇಶಿಸಿದರು. ನ್ಯಾಯಾಲಯದ ಆದೇಶದಂತೆ ಸಚಿವರ ವಿರುದ್ಧವೂ ತನಿಖೆ ನಡೆಸಿ, ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ಮೋಹನ್‌ಕುಮಾರ್ ಅವರನ್ನು ಏಪ್ರಿಲ್ ೩೦ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.

ಮಂಜೇಶ್ವರ: ಎಸ್.ಸಿ. ಕಾಲನಿಗೆ ಸಿಐ ಭೇಟಿ

Posted by JAYAKIRANA Kirana on | 0 comments | Leave a comment...

ಮಂಜೇಶ್ವರ: ಹೊಸಂಂಗಡಿ ಪೇಟೆ ಸಮೀಪದ ಅಂಗಡಿಪದವು ಶಾಂತಿನಗರ ಪರಿಶಿಷ್ಟ ಕಾಲನಿಗೆ ಸ್ಪೆಷಲ್ ಮೊಬೈಲ್ ಸ್ಕೋಡ್ ನೇತೃತ್ವದ ಸಿ.ಐ ಭೆಟಿಯು ನಿನ್ನೆ ನಡೆಯಿತು. ಪಂಚಾ ಯತ್ ಸದಸ್ಯ ನಾಗೇಶ್ ಅಧ್ಯಕ್ಷತೆಯಲ್ಲಿ ಕುಂಬಳೆ ವೃತ್ತ ನಿರೀಕ್ಷಕ ರಂಜಿತ್ ಉದ್ಘಾಟಿಸಿದರು. ಕಾಲನಿಯಲ್ಲಿ ವಾಸಿ ಸುವ ಜನತೆಯ ಸಮಸ್ಯೆಗಳನ್ನು ತಿಳಿ ಯಲು ಹಾಗೂ ಪರಿಹಾರವನ್ನು ಕಂಡು ಕೊಳ್ಳಲು ಈ ಭೇಟಿಯನ್ನು ಆಯೋ ಜಿಸಲಾಗಿದೆಯೆಂದರು ಪಂಚಾಯತ್ ಅಧ್ಯಕ್ಷೆ ಫಾತಿಮತ್ ಝಹುರಾ, ಕಾರ್ಯದರ್ಶಿ ಸುಕುಮಾರ್, ವಿ.ಇ.ಒ ಸುಜಿತ್, ಮಂಜೇಶ್ವರ ಕೃಷಿ ಅಧಿಕಾರಿ ಸರಸ್ವತಿ, ಅಡಿಶನಲ್ ಸಬ್ ಇನ್ಸ್‌ಪೆಕ್ಟರ್ ಸುರೇಂದ್ರನ್, ಚಂದ್ರ ಶೇಕರ್, ಸ್ಪೆಷಲ್ ಮೊಬೈಲ್ ಸ್ಕೋಡ್ ಅಡೀಶನಲ್ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್, ಪೊಲೀಸರಾದ ಪ್ರಸಾದ್ ಮೊದಲಾದವರು ಉಪಸ್ಥಿತರಿ ದ್ದರು. ಕಾಲನಿ ನಿವಾಸಿಗಳು ಸಮಸ್ಯೆ ಗಳಾದ ಕುಡಿಯುವ ನೀರಿನ ಕೊರತೆ, ವಸತಿ ಕೊರತೆ ಸೇರಿ ದಂತೆ ವಿವಿಧ ಅಳಲನ್ನು ಹೇಳಿಕೊಂಡರು. ಕಾಲನಿ ಜನತೆಯ ಸಮಸ್ಯೆ ಹಾಗೂ ದೂರುಗಳಗೆ ಸಿ.ಐ ಪರಿಹಾರದ ಭರವಸೆ ನೀಡಿದರು.

ಮಟ್ಕಾ ದಾಳಿ: ಓರ್ವ ಬಂಧನ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಇಲ್ಲಿನ ಕಸಬಾ ಹೊಸ ಬಸ್ ನಿಲ್ದಾಣ ಬಳಿ ನಡೆಯು ತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ.
ಕೋಡಿ ಕಸಬಾದ ಪುನೀತ್ (೨೧) ಬಂಧಿತ. ಉಳಿದ ಹಲವರು ಈ ವೇಳೆ ಪರಾರಿಯಾಗಿದ್ದಾರೆ. ಆರೋಪಿಯಿಂದ ಆಟಕ್ಕೆ ಬಳಸಿದ್ದ ಹಣ ರೂಪಾಯಿ ೭೬೦/-, ಮಟ್ಕಾ ಚೀಟಿ ವಶಪಡಿಸಿ ಕೊಂಡಿದ್ದಾರೆ.

ಪಿಕಪ್ ಮೇಲೆರಗಿ ಇಬ್ಬರು ಬಲಿ

Posted by JAYAKIRANA Kirana on | 0 comments | Leave a comment...

ಸುಳ್ಯದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ
ಸುಳ್ಯ: ಕಂದಡ್ಕದಲ್ಲಿ ನಡೆ ಯುತ್ತಿದ್ದ ಹಗ್ಗಜಗ್ಗಾಟ ಸ್ಪರ್ಧೆ ಯನ್ನು ವೀಕ್ಷಿಸುತ್ತಿದ್ದ ಜನರ ಮೇಲೆ ಎರಗಿದ ಪಿಕಪ್ ವಾಹನ ಇಬ್ಬರನ್ನು ಬಲಿ ತೆಗೆದುಕೊಂಡಿದೆ.
ಸ್ಥಳೀಯ ನವಚೇತನ ಯುವಕ ಮಂಡಲದ ಆಶ್ರಯದಲ್ಲಿ ಭಾನುವಾರ ಸಂಜೆ ತಾಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಂದಡ್ಕ ಸೇತುವೆ ಬಳಿ ಇರುವ ಹೊಳೆಯ ಬದಿ ಸಣ್ಣ ಮೈದಾನದಲ್ಲಿ ಸ್ಪರ್ಧೆ ನಡೆಯುತ್ತಿತ್ತು. ಇಲ್ಲಿ ವೀಕ್ಷಕರಿಗೆ ನಿಂತುಕೊಳ್ಳಲು ಸಾಕಷ್ಟು ಸ್ಥಳಾವ ಕಾಶವಿಲ್ಲದೆ ಹೆಚ್ಚಿನ ಜನರು ಸುಳ್ಯ ಸುಬ್ರಹ್ಮಣ್ಯ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದರು.
ಅಂತಿಮ ಸುತ್ತಿನ ಸ್ಪರ್ಧೆ ನಡೆಯಲು ಬಾಕಿ ಇತ್ತು. ಈ ಮೊದಲು ಸಮಾರೋಪ ಸಮಾರಂಭ ನಡೆಸಿ ಬಳಿಕ ಫೈನಲ್ ಪಂದ್ಯ ನಡೆಸು ವುದೆಂದು ಸಮಾರಂಭಕ್ಕೆ ಸಿದ್ಧತೆ ನಡೆಸು ತ್ತಿದ್ದ ವೇಳೆ ಸಂಜೆ ೬ ಗಂಟೆಗೆ ಸುಳ್ಯ ಕಡೆಯಿಂದ ಬಂದ ಮಹೀಂದ್ರಾ ಪಿಕ್ ಅಪ್ ವಾಹನವೊಂದು ರಸ್ತೆ ಬಲ ಬದಿ ಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು.
ಕಂಬ ಮುರಿದು ಸೇರಿದ್ದ ಜನರ ಮೇಲೆ ಬಿದ್ದು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಮಧ್ಯೆ ವಾಹನದ ಅಡಿಯಲ್ಲಿ ವ್ಯಕ್ತಿಯೊಬ್ಬರ ಆಕ್ರಂದನ ಕೇಳಿದಾಗ ಅದನ್ನು ಸರಿಸಿ ನೋಡಿದಾಗ ಯುವಕ ಹಾಗೂ ಬಾಲಕಿಯೊಬ್ಬಳು ಅದರಡಿಗೆ ಸಿಕ್ಕಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಿಬ್ಬರು ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಗಾಯಗೊಂಡ ಯುವಕನನ್ನು ಸ್ಥಳೀಯ ಮಂಡೋಕಜೆ ನಿವಾಸಿ ಜನಾರ್ದನ ಮಣಿಯಾಣಿಯವರ ಪುತ್ರ ಗೋಪಾಲಕೃಷ್ಣ(೨೨) ಎಂದು ಗುರುತಿಸಲಾಗಿದೆ. ಇವರು ಸುಳ್ಯದ ಮಾರುತಿ ಶೋರೂಮ್‌ನಲ್ಲಿ ಉದ್ಯೋಗಿಯಾಗಿದ್ದರು. ಮೃತ ಬಾಲಕಿ ಸ್ಥಳೀಯ ನಿವಾಸಿ ಪನ್ನೀರ್‌ಸೆಲ್ವಂ ಎಂಬವರ ಪುತ್ರಿ ಸುಷ್ಮಿತಾ(೧೨). ದೊಡ್ಡತೋಟ ಸರ್ಕಾರಿ ಶಾಲೆಯ ೫ನೇ ತರಗತಿ ವಿದ್ಯಾರ್ಥಿನಿ. ಈಕೆ ನವೋದಯ ಪರೀಕ್ಷೆಗೆ ಹಾಜರಾಗಿ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಪಂದ್ಯಾಟ ವೀಕ್ಷಣೆಗೆ ನಿಂತಿದ್ದಳು. ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಲೆ ಮೇಲೆ ಬಿದ್ದು ಸ್ಥಳೀಯ ಗೀತಾ, ವೆಂಕಪ್ಪ ಗೌಡ, ಅಮರ ಮೂಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಸೇರಿದಂತೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕ್‌ಪ್ ವಾಹನ ಕಂದಡ್ಕ ನಿವಾಸಿ ಸೆಲ್ವನಾಯಕಂ ಎಂಬವನಿಗೆ ಸೇರಿದ್ದು, ಹೊಸದಾಗಿ ಚಾಲನೆ ಕಲಿಯುತ್ತಿದ್ದ ಯುವಕ ಇದನ್ನು ಚಲಾಯಿಸಿದ್ದು ಅಪ ಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ಬಳಿಕ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭವನ್ನು ರದ್ದುಪಡಿಸಲಾಯಿತು. ರಾತ್ರಿ ಏರ್ಪಡಿಸಿದ್ದ ಮನೋರಂಜನಾ ಕಾರ್ಯಕ್ರಮಗಳನ್ನೂ ರದ್ದುಪಡಿಸಲಾಯಿತು.

ಬಾವಿಯಲ್ಲಿ ಒಸರುತ್ತಿದ್ದ ತೈಲಕ್ಕೆ ಬೆಂಕಿ

Posted by JAYAKIRANA Kirana on | 0 comments | Leave a comment...

ಎಸ್‌ಇಝಡ್ ಆವಾಸದೊಳಗಿರುವ ಗ್ರೆಗರಿಗೆ ಮತ್ತೊಂದು ಸಂಕಟ
ಮಂಗಳೂರು: ಎಂಎಸ್ ಇಝಡ್‌ಗೆ ಭೂಮಿ ಕೊಡೆನೆಂದು ಎದೆಯೊಡ್ಡಿ ನಿಂತಿದ್ದ ಬಾಳ- ಕಳವಾರಿನ ಗ್ರೆಗರಿ ಪತ್ರಾವೋ ಅವರಿಗೆ ಮತ್ತೊಂದು ವಿಘ್ನ ಎದುರಾಗಿದ್ದು, ಅವರ ಮನೆಯ ಕುಡಿಯುವ ನೀರಿನ ಬಾವಿಯಲ್ಲಿ ಒಸರುತ್ತಿದ್ದ ತೈಲಕ್ಕೆ ಬೆಂಕಿ ತಗುಲಿ ತೋಟ ಭಸ್ಮಗೊಂಡ ಘಟನೆ ನಡೆದಿದೆ. ಬಾವಿಯಲ್ಲಿ ನೀರು ಒಸರುವ ಜಾಗಕ್ಕೆ ಬಿದ್ದಿರುವ ಬೆಂಕಿಯ ಕಿಡಿಯೊಂದು ಆರಿ ಹೋಗುವ ಬದಲು ಧಗಧಗನೇ ಉರಿಯುತ್ತಿದೆ. ಎಂಆರ್‌ಪಿಎಲ್‌ನಿಂದ ಸೋರಿಕೆಯಾಗಿರುವ ಪೆಟ್ರೋಲಿಯಂ ಅಂಶಗಳು ಕುಡಿಯುವ ನೀರಿನ ಬಾವಿಯಲ್ಲಿ ಒಸರಿಕೊಂಡು ಬಂದು ಕಪ್ಪು ಮಡ್ಡಿಯಂತಹ ರೀತಿಯಲ್ಲಿ ಶೇಖರಣೆ ಆಗುತ್ತಿದೆ. ಹೀಗಾಗಿ ಬಾವಿಗೆ ಬಿದ್ದಿರುವ ಬೆಂಕಿಯ ಕಿಡಿ ಕೆನ್ನಾಲಿಗೆಯನ್ನು ಚಾಚಿ ಸುತ್ತಲಿನ ಮರಗಿಡಗಳನ್ನು ಭಸ್ಮಮಾಡಿದೆ. ಹೀಗಿದ್ದರೂ ಬೆಂಕಿ ನಂದಿಸಲು ಅವಕಾಶ ಮಾಡಿ ಕೊಡದ ಗ್ರೆಗರಿ ಈ ಘಟನೆಯನ್ನು ಎಂಆರ್‌ಪಿಎಲ್‌ನ ಅವಾಂತರವನ್ನು ಜಿಲ್ಲಾಡಳಿತ, ಮತ್ತು ಜನ ಪ್ರತಿನಿಧಿಗಳು ನೋಡಲಿ ಎಂದು ಹಠ ಹಿಡಿದು ಆತಂಕವನ್ನೂ ಸೃಷ್ಟಿಸಿದರು.
 ಗ್ರೆಗರಿ ಪತ್ರಾವೋ ಅವರ ತಮ್ಮ ಅಲ್ವಿನ್ ಪತ್ರಾವೋ ಎಂದಿನಂತೆ ತೋಟಕ್ಕೆ ನೀರು ಬಿಡಲೆಂದು ನಿನ್ನೆ ಮುಂಜಾನೆ ಬಾವಿ ಹತ್ತಿರ ಬಂದಿದ್ದರು. ಕಳೆದ ನಾಲ್ಕು ದಿನದಿಂದ ಬಾವಿ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿರುವುದರಿಂದ ಅದನ್ನು ಕುಡಿಯಲು ಅಸಾಧ್ಯವಾಗಿತ್ತು. ಹೀಗಾಗಿ ಈ ದಿನ ಬಾವಿ ನೀರನ್ನು ಪೂರ್ತಿಯಾಗಿ ಖಾಲಿ ಮಾಡಬೇಕು ಎಂದುಕೊಂಡಿದ್ದರು.
ಅದರಂತೆ ಡೀಸೆಲ್ ಪಂಪನ್ನು ಬಾವಿಗೆ ಅಳವಡಿಸಿ ಅದನ್ನು ರನ್ ಮಾಡಿದ್ದರು. ಪಂಪ್ ರನ್ ಮಾಡುವಾಗ ಸಹಜವಾಗಿ ಹಾರುವ ಬೆಂಕಿ ಕಿಡಿ ಬಾವಿಗೆ ಹಾರಿರುವುದನ್ನು ಅವರು ಗಮನಿಸದೆ ನೀರು ಬರುತ್ತದೋ ಇಲ್ಲವೋ ಎಂದು ನೋಡಲು ಪೈಪ್ ಇದ್ದ ಸ್ಥಳಕ್ಕೆ ನಡೆದಿದ್ದರು.
 ಪಂಪ್ ರನ್ ಆಗುತ್ತಿದ್ದರೂ, ನೀರು ಬಾರದೇ ಇರುವುದನ್ನು ಗಮನಿಸಿ ಅಲ್ವಿನ್ ಅವರು ಮತ್ತೇ ಬಾವಿ ಬಳಿ ಬಂದಾಗ ಬಾವಿಯಲ್ಲಿ ಬೆಂಕಿ ಕೆನ್ನಾಲಗೆ ಚಾಚಿಕೊಂಡು ಉರಿಯುತ್ತಿತ್ತು ನೋಡು ನೋಡುತ್ತಿರುವಂತೆ ಅದು ವ್ಯಾಪಕವಾಗಿ ಹರಡಿ ಸ್ಥಳೀಯ ಮರಗಿಡಗಳಿಗೆ ಹತ್ತಿಕೊಂಡಿತ್ತು. ಒಮ್ಮೆಗೆ ನೋಡುವಾಗ ತೈಲ ಬಾವಿಗೆ ಬೆಂಕಿ ಬಿದ್ದ ಅನುಭವವನ್ನು ಉಂಟು ಮಾಡಿತ್ತು. ಇದನ್ನು ಗಮನಿಸಿದ ಅಲ್ವಿನ್ ಅವರು ಭಯದಿಂದ ಮನೆಗೆ ಓಡಿ ಬಂದು ಗ್ರೆಗರಿ ಅವರಿಗೆ ಸುದ್ದಿ ಮುಟ್ಟಿಸಿದರು. ಮನೆ ಮಂದಿ ತೋಟಕ್ಕೆ ಬಂದಾಗ ಸ್ಥಾವರಕ್ಕೆ ಬೆಂಕಿ ಹತ್ತಿಕೊಂಡಿದೆಯೇನೋ ಎನ್ನುವಂತಹ ಸ್ಥಿತಿಯಲ್ಲಿ ಬೆಂಕಿ ಉರಿಯುತ್ತಿತ್ತು. ತಕ್ಷಣ ಗ್ರೆಗರಿ ಅವರು ಎಂಆರ್‌ಪಿಎಲ್ ಸಂಸ್ಥೆಯ ಸೆಕ್ಯೂರಿಟಿ ಆಫೀಸರ್ ಮೇಜರ್ ಎ.ಪಿ ಸಿಂಗ್ ಹಾಗೂ ಸುರತ್ಕಲ್ ಪೊಲೀಸರಿಗೂ ಮಾಹಿತಿ ನೀಡಿದರು. ಬಾವಿಯ ಸುತ್ತಲಿನ ಮರಗಿಡಗಳು ಬೆಂಕಿಗೆ ಕರಟಿ ಹೋದ ಬಳಿಕ ಬೆಂಕಿ ತಹಬದಿಗೆ ಬಂದಿತ್ತಾ ದರೂ ಬಾವಿಯಲ್ಲಿ ಒಸರುತ್ತಿದ್ದ ತೈಲದ ಅಂಶದಿಂದಾಗಿ ಬಾವಿಯೊಳಗೆ ಬೆಂಕಿ ಚೆಂಡಾಟ ಆಡುತ್ತಲೇ ಇತ್ತು. ಬಾವಿಯೊಳಗೆ ಅಲ್ಲಲ್ಲಿ ಬೊಗ್ಗೆಗಳು ಏಳುತ್ತಿದ್ದು ಒಂದು ರೀತಿಯ ಜಿಡ್ಡು ತೈಲ ಒಸರುತ್ತಿದ್ದವು. ಹೀಗಾಗಿ ಬೆಂಕಿ ಒಮ್ಮೊಮ್ಮೆ ಅಧಿಕವಾಗಿ ಇನ್ನೊಮ್ಮೆ ನಿಧಾನವಾಗಿ ಉರಿಯುತ್ತಿತ್ತೆ ವಿನಃ ಅದು ನಂದಿಹೋಗಲು ಕೇಳುತ್ತಿರಲಿಲ್ಲ.
ಎಂಆರ್‌ಪಿಎಲ್‌ನ ಯಾವುದೋ ಒಂದು ಭಾಗದಿಂದ ತೈಲದ ಅಂಶ ಸೋರಿಕೆಯಾಗಿದ್ದು, ಅದು ಭೂಮಿಯಲ್ಲಿ ಹೀರಲ್ಪಟ್ಟು ಅಂತರ್ಜಲ ಸೇರಿಕೊಂಡ ಕಾರಣ ಹೀಗಾಗಿದೆ ಎಂದು ಗ್ರಗರಿ ತಿಳಿಸಿದ್ದಾರೆ. ಇಲ್ಲವಾದರೆ ತೈಲ ಶೇಖರ ಣೆಯ ಟ್ಯಾಂಕನ್ನು ಶುದ್ದೀಕರಿಸಿ ಆ ನೀರನ್ನು ಭೂಮಿಗೆ ಬಿಟ್ಟ ಕಾರಣ ಅದು ಭೂಮಿಯಲ್ಲಿ ಹೀರಲ್ಪಟ್ಟು ಹೀಗಾಗಿರ ಬಹುದಾದರೂ ತೈಲ ಸೋರಿಕೆಯ ಕಾರಣದಿಂದ ಹೀಗಾಗಿರುವ ಸಾಧ್ಯತೆಯೇ ಅಧಿಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಘಟನೆ ನಡೆದ ಒಂದು ತಾಸಿನ ಬಳಿಕ ಸ್ಥಳಕ್ಕೆ ಬಂದ ಸೆಕ್ಯೂರಿಟಿ ಆಫಿಸರ್ ಎಪಿ ಸಿಂಗ್, ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಾನು ಮೇಲಧಿಕಾರಿಗೆ ತಿಳಿಸಿದ್ದೇನೆ. ಘಟನೆಗೆ ಕಾರಣ ಏನು ಎನ್ನುವುದನ್ನು ನಾನು ಮಾತ್ರ ವಿಶ್ಲೇಷಿಸಲು ಸಾಧ್ಯ ಇಲ್ಲ ಎಂದು ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಬಂದ ಸುರತ್ಕಲ್ ಪೊಲೀಸರು ಫೈಯರ್ ಸರ್ವಿಸನ್ನು ಕರೆಸಿಕೊಂಡರೂ ಗ್ರೆಗರಿ ಮಾತ್ರ ಬೆಂಕಿನಂದಿಸಲು ಬಿಡೆ ಎಂದು ಹಠ ಹಿಡಿದರು. ಎಂಎಆರ್‌ಪಿಎಲ್ ಗುಜರಿ ಕಂಪನಿ ಅಲ್ಲ ಅದು ಹೈಟೆಕ್ ಕಂಪನಿ ಎಂದು ಜಿಲ್ಲಾಡಳಿತವೂ ಜಿಲ್ಲಾ ಪ್ರತಿನಿಧಿಗಳೂ ಹೇಳುತ್ತಿದ್ದಾರೆ. ಆದರೆ ಎಂಆರ್‌ಪಿಎಲ್ ಎಂತಹ ಗುಜರಿ ಕಂಪನಿ ಎನ್ನುವುದನ್ನು ಈ ಘಟನೆ ಮೂಲಕ ಅವರೂ ನೋಡಲಿ ಎಂದು ಗ್ರೆಗರಿ ತಿಳಿಸಿದರು. ನನಗೂ ಪರಿಹಾರ ಮೊತ್ತ ಸಿಕ್ಕಿದೆ ಎಲ್ಲರಂತೆ ನಾನೂ ಊರು ಬಿಟ್ಟು ದೊಡ್ಡ್ಟ ಪಟ್ಟಣದಲ್ಲೇ ನೆಲೆಸಬಹುದು. ಆದರೆ ನನಗೆ ಆ ಆಸೆ ಇಲ್ಲ. ನನ್ನ ಭೂಮಿಯಲ್ಲೆ ಬದುಕ ಬೇಕು ಎನ್ನುವ ಆಸೆ ಇದೆ. ಇಂದು ನನ್ನ ಬಾವಿಯಲ್ಲಿ ಬೆಂಕಿ ಬಿದ್ದಿದೆ, ನನ್ನ ತೋಟ ಸುಟ್ಟು ಹೋಗಿದೆ. ಆದರೆ ನಾಳೆ ಈ ಕಂಪನಿಯ ನಿರ್ಲಕ್ಷ್ಯತನದಿಂದ ಇಡೀ ಜಿಲ್ಲೆಗೆ ಬೆಂಕಿ ಬೀಳುತ್ತದೆ. ಜಿಲ್ಲೆಯೇ ಸುಟ್ಟು ಹೋಗುತ್ತದೆ ಆಗ ನಾವು, ನಮ್ಮ ತಲೆಮಾರುಗಳೇ ಕರಟಿ ಹೋಗುತ್ತದೆ ಅಲ್ಲವೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಬೆಳಗ್ಗೆ ಹತ್ತಿಕೊಂಡಿದ್ದ ಬೆಂಕಿ ಮಧ್ಯಾಹ್ನವಾದರೂ ನಂದಲೇ ಇಲ್ಲ ಕೊನೆಗೆ ಗ್ರೆಗರಿ ಅವರ ಮನವೊಲಿಸಿದ ಪೊಲೀಸ್ ಎಸ್.ಐ ಅಗ್ನಿಶಾಮಕ ದಳದವರ ನೆರವಿನೊಂದಿಗೆ ಬೆಂಕಿ ನಂದಿಸಿದರು.
ಹೀಗಿದ್ದರೂ ಬಾವಿಯಲ್ಲಿ ತೈಲದ ಅಂಶ ಒಸರುತ್ತಲೇ ಇದ್ದವು. ಎಂಆರ್‌ಪಿಎಲ್ ಮೇಲ್ಮಟ್ಟದಲ್ಲಿದ್ದು ಬಾವಿ ಕೆಳ ಮಟ್ಟದಲ್ಲಿರುವ ಕಾರಣ ಭೂಮಿಗೆ ಹೀರಲ್ಪಟ್ಟಿರುವ ತೈಲದ ಅಂಶ ಬಾವಿಯಲ್ಲಿ ಗೋಚರವಾಗುತ್ತಿದೆ. ಕಳೆದ ವರುಷ ಇಂತಹ ಅನುಭವ ಕುತ್ತೆತ್ತೂರಿನ ಕೆಲ ಮನೆಗಳ ಬಾವಿಯಲ್ಲಿ ಕಂಡು ಬಂದಿದ್ದವು. ಆದರೆ ಆ ಪ್ರಮಾಣ ಮಾತ್ರ ಸ್ವಲ್ಪವೇ ಇದ್ದವು. ಘಟನೆ ಬಗ್ಗೆ ಗ್ರೆಗರಿಯವರು ಯಾವುದೇ ದೂರು ನೀಡಿಲ್ಲ.

ಪೊಲೀಸರ ವಿರುದ್ಧ ತಿರುಗಿ ಬಿದ್ದ ದಲಿತರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಯಾವುದೇ ಮಾಹಿತಿಯನ್ನು ನೀಡದೆ ದಲಿತರ ಕುಂದು ಕೊರತೆ ಪರಿಶೀಲನಾ ಸಭೆಯನ್ನು ಏಕಾಏಕಿ ರದ್ದು ಮಾಡಿರುವುದರಿಂದ ಆಕ್ರೋಶಗೊಂಡ ದಲಿತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿನ್ನೆ ನಡೆದಿದೆ.
ದಲಿತರ ಕುಂದುಕೊರತೆ ಪರಿಶೀಲನಾ ಸಭೆಯು ಪ್ರತಿ ತಿಂಗಳ ಮೊದಲ ಭಾನುವಾರ ಎಸ್.ಪಿ ಕಚೇರಿಯಲ್ಲಿ ಹಾಗೂ ಕೊನೆ ಭಾನುವಾರ ಕಮಿಷನರೇಟ್ ವ್ಯಾಪ್ತಿಯ ಸಭೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆಯುತ್ತದೆ. ಇದರಲ್ಲಿ ಏನೇ ಬದಲಾವಣೆ ಇದ್ದರೂ ಮುಂಚಿತವಾಗಿ ತಿಳಿಸಲಾಗುತ್ತದೆ. ನಿನ್ನೆ ಕೊನೆಯ ಭಾನುವಾರ ಪೊಲೀಸ್ ಆಯುಕ್ತರ ಕಚೇರಿ ಯಲ್ಲಿ ಕಮೀಷನರೇಟ್ ವ್ಯಾಪ್ತಿಯ ದಲಿತರ ಕುಂದುಕೊರತೆ ಪರಿಶೀಲನಾ ಸಭೆ ನಡೆಯಲಿತ್ತು. ಇದಕ್ಕಾಗಿ ದಲಿತರು ದೂರದೂರಿನಿಂದ ಬಂದಿದ್ದರು. ಆದರೆ ಇಲ್ಲಿ ಬಂದ ಬಳಿಕ ಇಂದಿನ ಸಭೆ ರದ್ದಾಗಿದೆ ಎನ್ನುವ ಮಾಹಿತಿ ದಲಿತರಿಗೆ ತಿಳಿಸಲಾಯಿತು. ಇದರಿಂದ ಆಕ್ರೋಶಗೊಂಡ ದಲಿತರು ಸಭೆಯನ್ನು ರದ್ದುಗೊಳಿಸಿದರೆ ಮುಂಚಿತವಾಗಿ ತಿಳಿಸಬೇಕು ನಾವು ಹಲವಾರು ಕಾರ್ಯಕ್ರಮಗಳನ್ನು ಬಿಟ್ಟು ಈ ಸಭೆಗೆ ಆಗಮಿಸಿದ್ದೆವು. ಕೊನೆ ಕ್ಷಣದಲ್ಲಿ ಸಭೆ ಇಲ್ಲ ಎನ್ನುವುದು ಸರಿಯಲ್ಲ ಎಂದು ಪೊಲೀಸರನ್ನು ತರಾಟೆಗೆ ತೆಗೆದು ಕೊಂಡರು. ಹೀಗಾಗಿ ಪೊಲೀಸರು ಮತ್ತು ದಲಿತರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಆಕ್ರೋಶ ಗೊಂಡ ಎಸಿಪಿ ಟಿ.ಆರ್ ಜಗನ್ನಾಥ್ ಅವರು ನೀವು ಇಲ್ಲಿಂದ ತೆರಳದೆ ಇದ್ದರೆ ಬಂಧಿಸುವುದಾಗಿ ದಲಿತರಿಗೆ ಬೆದರಿಕೆ ಒಡ್ಡಿದರು. ಇದು ದಲಿತರನ್ನು ಮತ್ತಷ್ಟು ಕೆರಳಿಸಿದ್ದು ನೀವು ಬಂಧಿಸುವುದಾದರೆ ನಾವು ಅದಕ್ಕೂ ಸಿದ್ದ ಎಂದು ಪಟ್ಟು ಹಿಡಿದು ಕುಳಿತರು. ಕೊನೆಗೆ ಇನ್ಸ್‌ಪೆಕ್ಟರ್ ತಿಲಕ್ ಚಂದ್ರ ಅವರು ದಲಿತ ನಾಯಕರನ್ನು ಡಿಸಿಪಿ ಮುತ್ತುರಾಯ್ ಅವರ ಬಳಿ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು.
ಮಾಧ್ಯಮದವರನ್ನು ದೂರ ಇಟ್ಟು ಸುಮಾರು ಒಂದು ತಾಸು ಮಾತುಕತೆ ನಡೆಸಲಾಗಿದ್ದು. ಮುಂದಿನ ಭಾನುವಾರ ಇಂದು ರದ್ದಾದ ಸಭೆ ನಡೆಸುವ ಭರವಸೆಯನ್ನು ಡಿಸಿಪಿ ದಲಿತರಿಗೆ ನೀಡಿದರೆಂದು ತಿಳಿದು ಬಂದಿದೆ.
ಒಂದು ಮೂಲದ ಪ್ರಕಾರ ದಲಿತರ ಕುಂದುಕೊರತೆ ಪರಿಶೀಲನಾ ಸಭೆಯನ್ನು ಮಾಧ್ಯಮದವರನ್ನು ದೂರ ಇಟ್ಟು ನಡೆಸುವ ಹುನ್ನಾರದ ಕಾರಣದಿಂದ ನಿನ್ನೆ ಸಭೆಯನ್ನು ರದ್ದು ಪಡಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಪ್ರತಿ ಸಭೆಯಲ್ಲೂ ಪೊಲೀಸರ ವಿರುದ್ಧ ಮಾಡಲಾಗುವ ಆರೋಪ, ಪೊಲೀಸರ ತಪ್ಪುಗಳನ್ನು ಮಾಧ್ಯಮದವರು ಎತ್ತಿ ಹಿಡಿಯುವ ಕಾರಣದಿಂದ ಮುಜುಗರಕ್ಕೀಡಾಗಿರುವ ಪೊಲೀಸರು ಇದನ್ನು ತಪ್ಪಿಸಲು ದಲಿತ ಕೇರಿಯಲ್ಲಿ ಸಭೆ ನಡೆಸುವ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)