ಯುವತಿಯ ಕಡಿದು ಕೊಲೆ
Posted by JAYAKIRANA Kirana on Saturday, 24 March 2012 | 0 comments | Leave a comment...
ಮುಂಬಯಿ: ಅಪರಿಚಿತರು
೨೩ರ ಹರೆಯದ ಯುವತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಮುಂಬಯಿ ಉಪನಗರದಲ್ಲಿ ಕಳೆದ ಶುಕ್ರವಾರ ಸಂಭವಿಸಿದೆ.
ಹತ್ಯೆಗೀಡಾದ ನತದೃಷ್ಟೆಯನ್ನು
ಮಲಾಡ್‌ನ ನಿವಾಸಿ ಸೀಮಾ ಪರಾಬ್ ಎಂದು ಗುರುತಿಸಲಾಗಿದ್ದು, ಬೋರಿವಿಲಿಯ ಬ್ಯೂಟಿಪಾರ್ಲರ್‌ವೊಂದರಲ್ಲಿ
ಕೆಲಸ ನಿರ್ವಹಿಸುತ್ತಿದ್ದರು. ಬೆಳಗ್ಗಿನ ಜಾವ ೯ರ ವೇಳೆಗೆ ಕೆಲಸಕ್ಕೆ ತೆರಳುವ ವೇಳೆ ಈ ಘಟನೆ
ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎರಡು ಬಾರಿ ಹೊಟ್ಟೆಯ
ಭಾಗಕ್ಕೆ ತಿವಿದ ಅಪರಿಚಿತರು, ಭುಜಕ್ಕೆ ಹಾಗೂ ಕತ್ತನ್ನು ಕೊಯ್ದು ಪರಾರಿಯಾಗಿದ್ದಾರೆ.
ದಾರಿಹೋಕ ಜಾವೆದ್ ತಕ್ಷಣವೇ
ಸೀಮಾಳನ್ನು ಹತ್ತಿರದ ಸರ್ಕಾರಿ ಸ್ವಾಮ್ಯದ ಭಗವತಿ ಆಸ್ಪತ್ರೆಗೆ ದಾಖಲಿಸಿದ್ದು, ೧೧.೩೦ರ ವೇಳೆಗೆ ಮೃತಪಟ್ಟಿರುವುದಾಗಿ
ವೈದ್ಯರು ತಿಳಿಸಿದ್ದಾರೆ.
ಸೀಮಾಳ ತಂದೆ (೫೮)
ವಾಚ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಆಕೆಗೆ ಇಬ್ಬರು ಸಹೋದರಿಯರಿದ್ದರು. ಘಟನೆಗೆ ಸಂಬಂಧಿಸಿದಂತೆ
ಪಾರ್ಲರ್ ಸಿಬ್ಬಂದಿಗಳನ್ನು ವಿಚಾರಿಸಿದ ಪೊಲೀಸರು, ಇದೊಂದು, ಏಕಮುಖ ಪ್ರೇಮ ಪ್ರಕರಣವಾಗಿರಬೇಕೆಂದು
ಸಂಶಯ ವ್ಯಕ್ತಪಡಿಸಿದ್ದಾರೆ.


You can subscribe by e-mail to receive news updates and breaking stories.