ಕೋರಾಪತ್ (ಒಡಿಶಾ): ಹಿಂಸಾಚಾರದಿಂದ ಹಿಂದೆ ಸರಿಯುವಂತೆ ಬಂಡುಕೋರರಿಗೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆದೇಶ ನೀಡಿದ ಒಂದು ಗಂಟೆಯೊಳಗಾಗಿ ಒಡಿಶಾ ಆಡಳಿತ ಪಕ್ಷವಾದ ಬಿಜೆಡಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಶಾಸಕನ್ನು ಇಂದು ನಸುಕಿನ ವೇಳೆ ಅಪಹರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಹರಿಸಲ್ಪಟ್ಟ ಶಾಸಕ ಝಿನ ಹಿಕಾಕ ಲಕ್ಷ್ಮಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಕೋರಾಪತ್‌ನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಂಧೂಕುಧಾರಿಗಳ ೫೦ರ ತಂಡವೊಂದು ಅವರ ವಾಹನವನ್ನು ಟೋಯಾಪತ್ ಬಳಿ ನಿಲ್ಲಿಸಿ ಅಪಹರಿಸಿದೆ ಎಂದು ಕೋರಾಪತ್‌ನ ಎಸ್‌ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಅಂಗರಕ್ಷಕ (ಪಿಎಸ್‌ಪೊ) ಹಾಗೂ ಶಾಸಕನ ಚಾಲಕನ್ನು ಬಿಟ್ಟ ಬಂಡುಕೋರರರು, ಹಿಕಾಕನನ್ನು ಹತ್ತಿರದ ದಟ್ಟಾರಣ್ಯಕ್ಕೆ ಕರೆದೊಯ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆ ಬಗ್ಗೆ ಪಿಎಸ್‌ಪೊ ಹಾಗೂ ಚಾಲಕ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶಾಸಕನ ಪತ್ತೆಗಾಗಿ ಪೊಲೀಸರು ಶೋಧಕಾರ್ಯಪ್ರಾರಂಭಿಸಿದ್ದಾರೆ.
ಮಾರ್ಚ್ ೧೪ರಂದು ಕಂದಾಮಲ್‌ನಿಂದ ಇಬ್ಬರು ಇಟೆಲಿ ಪ್ರಜೆಗಳನ್ನು ಮಾವೋವಾದಿಗಳು ಅಪಹರಿಸಿದ್ದು, ಹತ್ತು ದಿನಗಳ ಬಳಿಕ ಬೆಳಕಿಗೆ ಬಂದಿತ್ತು. ಬಿಕ್ಕಟ್ಟು ಶಮನಕ್ಕೆ ಮಾತುಕತೆಗಳು ಮುಂದುವರಿದಿದೆ.
ವಿದೇಶಿ ತಂಪುಪಾನೀಯಗಳ
ಅಬ್ಬರದ ಮಧ್ಯೆ ನೈಸರ್ಗಿಕ ಪಾನೀಯ ಎಳನೀರು ಸೆಕೆಗಾಲದಲ್ಲಿ ಹೆಚ್ಚೆಚ್ಚು ಮಾರಾಟವಾಗುತ್ತಿದೆ. ನಗರದ
ಅನೇಕ ಕಡೆಗಳಲ್ಲಿ ತಳ್ಳುಗಾಡಿಯ ಮೂಲಕ ಎಳನೀರು ಮಾರಾಟ ಮಾಡುವವ ರನ್ನು ಕಾಣಬಹುದಾಗಿದೆ. ಆದರೆ ಎಳನೀರು
ವ್ಯಾಪಾರಿಗಳು ತಮ್ಮ ತಳ್ಳು ಗಾಡಿಗಳನ್ನು ರಸ್ತೆಗೆ ಹತ್ತಿರವಾಗಿಟ್ಟು ವ್ಯಾಪಾರ ಮಾಡುವುದು ಸರಿಯಲ್ಲ.
ಇದರಿಂದ ಹೆಚ್ಚಿನವರು ವಾಹನವನ್ನು ರಸ್ತೆಯ ಮಧ್ಯೆಯೇ ನಿಲ್ಲಿಸಿ ತಮ್ಮ ದಾಹ ತೀರಿಸಿಕೊಳ್ಳುತ್ತಾರೆ.
ಇದ ರಿಂದ ಇತರೇ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ಕೆಲವರು ವಾಹನಗಳಿಂದ ಇಳಿಯದೆ
ಅದರಲ್ಲೇ ಕುಳಿತು ಉದಾಸೀನ ಪ್ರದ ರ್ಶಿಸುತ್ತಾರೆ. ಇದು ಕೂಡ ವಾಹನ ದಟ್ಟನೆಗೆ ಕಾರಣವಾಗುತ್ತಿದೆ. ಮತ್ತೆ
ಕೆಲವು ಕಡೆಗಳಲ್ಲಿ ಎಳನೀರು ಕುಡಿಯು ವರಿಗೂ ವಾಹನ ತಾಗಿ ಅಪಘಾತ ಸಂಭವಿಸುವ ಸಂಭವ ವಿರುತ್ತದೆ. ಏಕೆಂದರೆ
ರಸ್ತೆಗೂ ಇವರ ತಳ್ಳುಗಾ ಡಿಗೂ ಹೆಚ್ಚಿನ ವ್ಯತ್ಯಾಸ ಇರುವು ದಿಲ್ಲ. ಹಾಗಾಗಿ ರಸ್ತೆಗೆ ತಾಗಿ ಕೊಂಡೇ
ನಿಂತಿರಬೇಕಾದ ಅನಿವಾ ರ್ಯತೆಯಿರುತ್ತದೆ. ಆದ್ದರಿಂದ ಇನ್ನಾದರೂ ಎಳನೀರು ವ್ಯಾಪಾರಿ ಗಳು ಇತ್ತ ಗಮನಹರಿಸಲಿ.
ನಿಮ್ಮ ತಳ್ಳುಗಾಡಿಗಳನ್ನು ಆದಷ್ಟು ರಸ್ತೆ ಯಿಂದ ದೂರವಿರಿಸಿರಿ. ಇಲ್ಲವೇ ಸಾಕಷ್ಟು ಜನರು ನಿಂತುಕೊಳ್ಳಲು
ಸ್ಥಳಾವಕಾಶವಿರುವ ಕಡೆಗಳಲ್ಲಿ ಇಡಿ. ಇದರಿಂದ ನಿಮ್ಮ ವ್ಯವಹಾರಕ್ಕೂ ಯಾವುದೇ ರೀತಿಯಲ್ಲಿ ತೊಂದರೆ ಯಾಗುವುದಿಲ್ಲ.
ಜನಸಮಾನ್ಯರಿಗೂ ತೊಂದರೆಯಿಲ್ಲ.
ಸಂಕೇತ್ ನಾಯಕ್, ಕಂಕನಾಡಿ
ಮಂಗಳೂರು ನಗರದ ಪದವಿನಂಗಡಿ
ಯಲ್ಲಿರುವ ಗೇರುಬೀಜದ ಕಾರ್ಖಾನೆ ಯೊಂದ ರಿಂದ ದಟ್ಟವಾದ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಪ್ರಕೃತಿಗೆ
ಹಾನಿಯುಂಟು ಮಾಡುವ ಹೊಗೆ ನಮ್ಮ ಪ್ರದೇಶಕ್ಕೆ ನಿರಂತರವಾಗಿ ಈ ಕಾರ್ಖಾನೆಯಿಂದ ಹೊರಬಿಡುತ್ತಿದ್ದಾರೆ.
ಕಾರ್ಖಾ ನೆಯ ಹೊಗೆಯಿಂದಾಗಿ ಪರಿಸರದ ಜನರಿಗೆ ಹಾಗೂ ಪ್ರಕೃತಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಈಗಾಗಲೇ
ಹಲವಾರು ಮಂದಿ ಈ ಹೊಗೆಯಿಂ ದಾಗಿ ಅನಾರೋಗ್ಯಕ್ಕೆ ಬಲಿ ಬಿದ್ದಿದ್ದಾರೆ. ಬೀಳು ತ್ತಲೇ ಇದ್ದಾರೆ. ಅದರಲ್ಲೂ
ಮಕ್ಕಳು ಹಾಗೂ ವಯೋ ವೃದ್ಧರ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರು ತ್ತಲಿದೆ. ಬೆಳಗ್ಗಿನ ಜಾವದಲ್ಲಿ ಇಲ್ಲಿನ
ಪರಿಸರ ಕಾಣದ ರೀತಿಯಲ್ಲಿ ಕಪ್ಪು ಹೊಗೆ ಈ ಪರಿಸರವನ್ನೆಲ್ಲ ತುಂಬಿ ಕೊಂಡಿದೆ. ವಾಯು ಮಾಲಿನ್ಯ ತಡೆಯುವಲ್ಲಿ
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಇಲ್ಲಿ ಬಂದು ಪರಿಶೀಲನೆ ನಡೆಸಿದಲ್ಲಿ ಅವರಿಗೂ
ಅದರ ಪ್ರತ್ಯಕ್ಷದರ್ಶನವಾಗಬಹುದು. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಶೀಘ್ರವೇ
ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಿ ಪರಿಸರದ ಜನತೆಗೆ ಹಾಗೂ ಪ್ರಕೃತಿಗೆ
ಒಳಿತಾಗುವಂತೆ ಸಹ ಕರಿಸುವಿರೆಂದು ಆಶಿಸುತ್ತೇವೆ.
ಇಲ್ಲವಾದಲ್ಲಿ ಇದಕ್ಕೆ
ಸಂಬಂಧಪಟ್ಟ ಅಧಿಕಾ ರಿಗಳ ಹಾಗೂ ಕಾರ್ಖಾನೆಯ ಆಡಳಿತದ ವಿರುದ್ಧ ಧರಣಿ ನಡೆಸಲು ಪರಿಸರದ ಜನತೆ ನಿರ್ಧರಿಸಿದ್ದಾರೆ.
ಜನಾರ್ದನ ಶೆಟ್ಟಿ,
ಪದವಿನಂಗಡಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರು ಅಧಿಕಾರದಿಂದ ಕೆಳಕ್ಕಿಳಿದು ಜೈಲಿಗೂ ಹೋಗಿಬಂದರು. ಆದರೆ ಇದೀಗ ಮತ್ತೆ ಎದ್ದು ನಿಂತು 'ಅಧಿಕಾರ ಕೊಡಿ' ಎಂದು ದೆಹಲಿಗೆ ಅಲೆದಾಡುತ್ತಿದ್ದಾರೆ. ಹೋದಲ್ಲಿ, ಬಂದಲ್ಲಿ ತಮ್ಮದೇ ಬೆಂಬಲಿಗರ ಗುಂಪು ಕಟ್ಟಿಕೊಂಡು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಯಡಿಯೂರಪ್ಪ ತಾವೇ ರಾಜ್ಯದ ಮುಖ್ಯಮಂತ್ರಿ ಎಂದು ಭಾವಿಸಿರುವಂತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೇ, ಬೇಡವೇ ಎಂದು ನಿರ್ಧರಿಸುವುದು ರಾಜ್ಯದ ಮತದಾರರೋ ಇಲ್ಲ ಪಕ್ಷದ ಹೈಕಮಾಂಡೋ ಎಂಬ ಪ್ರಶ್ನೆಗೆ ಉತ್ತರಿ ಸುವವರಾರು? ಯಾಕೆಂದರೆ ಸದ್ಯದ ಸ್ಥಿತಿಯಲ್ಲಿ ರಾಜಕೀಯ ನಾಯಕರು ತಾವು ಆಡಿದ್ದೇ ಆಟ ಎಂದು ತಿಳಿದಿದ್ದಾರೆ. ತಾವು ಬೇಕೆಂದಾಗ ಹೋಗಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಅದೇನು ಅವರ ಮನೆಯ ಕುರ್ಚಿಯೇ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಧಿಕಾರವೇ ಇಲ್ಲದಂತಾಗಿದೆ. ಬಿಜೆಪಿ ಹೈಕಮಾಂಡ್, ಕೇಂದ್ರದ ನಾಯಕರು ದುರ್ಬಲರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?
ರಾಜೇಶ್, ಬ್ರಹ್ಮಾವರ
ಮಾರ್ಚ್ ೨೧ರ ಜಯಕಿರಣ ಪತ್ರಿಕೆಯ 'ನಿಮ್ಮಿಂದ ವಿಭಾಗದಲ್ಲಿ ಪ್ರಕಟವಾಗಿದ್ದ ಕುಪ್ಪೆಪದವು ಬಜರಂಗದಳ ಗಮನಿಸಲಿ ಎಂಬ ಬರಹಕ್ಕೆ ಪ್ರತಿಕ್ರಿಯೆ.
ಕುಪ್ಪೆಪದವು ಗ್ರಾ.ಪಂ. ವ್ಯಾಪ್ತಿಯ ಕಿಲೆಂಜಾರು ಗ್ರಾಮದ ಅಭಿವೃದ್ಧಿಯನ್ನು ಸಹಿಸದ ಕೆಲವು ದುಷ್ಟ ವ್ಯಕ್ತಿಗಳು ನೊಂದ ಮಹಿಳೆಯರು ಕಲ್ಲಾಡಿ ಎಂಬ ಹೆಸರಿನಲ್ಲಿ ಬಜರಂಗದಳದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಕುಪ್ಪೆಪದವು ಬಜರಂಗದಳ ನಡೆಸುತ್ತಿರುವ ಸಮಾಜಮುಖಿ ಕಾರ್ಯವನ್ನು ನೋಡಲಾಗದ ಕೆಲವು ವ್ಯಕ್ತಿಗಳು ಸದುದ್ದೇಶಗಳಿಗೆ ಉಪ ಯೋಗಿಸಬೇಕಾದ ಪತ್ರಿಕೆಯಲ್ಲಿ ಮಹಿಳೆಯರ ಹೆಸರನ್ನು ದುರುಪಯೋಗಪಡಿಸುತ್ತಿದ್ದಾರೆ. ನಾವು ಯಾವುದೇ ಕೆಟ್ಟ ಕೆಲಸಗಳನ್ನು ಅಥವಾ ಯಾರಿಗೂ ಕಿರುಕುಳವನ್ನು ನೀಡಿಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ಜಿಲ್ಲಾ ಪಂಚಾಯತ್ ಸದಸ್ಯರ ಹೆಸರು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಒಂದು ವೇಳೆ ಮಹಿಳಾ ಸದಸ್ಯರಿಗೆ ಬಜರಂಗದಳ ಕಿರುಕುಳ ನೀಡಿದ್ದರೆ ಅದನ್ನು ನೇರವಾಗಿ ಸಂಘಟನೆ ಗಮನಕ್ಕೆ ತರಬಹುದಿತ್ತು. ಹಾಗಾಗಿ ಇನ್ನಾದರೂ ಇಂತಹ ದುಷ್ಟ ಬುದ್ದಿಯನ್ನು ಬಿಟ್ಟು ಒಳ್ಳೆಯ ಕೆಲಸಗಳಿಗೆ ಕೈಜೋಡಿಸಿ.
ಸಂಚಾಲಕರು, ಬಜರಂಗದಳ, ಶ್ರೀರಾಮ ಶಾಖೆ, ಕುಪ್ಪೆಪದವು
ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಹಕರು ಎಲ್ಲರಿಗಿಂತ ಹೆಚ್ಚು ಅನ್ಯಾಯ, ಶೋಷಣೆಗೆ ತುತ್ತಾಗು ತ್ತಿದ್ದಾರೆ. ಆಹಾರ ವಸ್ತುವೇ ಇರಲಿ, ಇನ್ನಿತರ ಅಗತ್ಯ ಸಾಮಾ ಗ್ರಿಯೇ ಇರಲಿ. ಇಲ್ಲಿ ಗ್ರಾಹಕರಿಗೆ ತೂಕ ಮತ್ತು ಬೆಲೆಯಲ್ಲಿ ವ್ಯತ್ಯಾ ಸವನ್ನು ಮಾಡಿ ವಂಚಿಸಲಾಗು ತ್ತದೆ. ಈ ಬಗ್ಗೆ ಗ್ರಾಹಕರು ನೇರ ವಾಗಿ ಖರೀದಿ ಮಾಡುವಲ್ಲಿ ಹೋಗಿ ಚರ್ಚೆ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿ ದರೂ ಗ್ರಾಹಕರ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಗ್ರಾಹಕರು ತಾವು ಗ್ರಾಹಕ ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಸಿದರೂ ಸಾವಕಾಶವಾಗಿ 'ಆಯಿತು, ಹೋಗಿ' ಅನ್ನುತ್ತಾರೆ. ಯಾಕೆಂದರೆ ಇಂದಿನ ಕಾಲದಲ್ಲಿ ಸಮಯ ಮತ್ತು ಕೋರ್ಟ್‌ನಲ್ಲಿ ದೂರು ದಾಖಲಿಸಿ ಕಾಯುವಷ್ಟು ವ್ಯವಧಾನ ಯಾರಲ್ಲಿಯೂ ಇರುವುದಿಲ್ಲ. ಇದನ್ನೇ ಗ್ರಾಹಕರನ್ನು ಶೋಷಿಸಲು ಮಾನದಂಡವನ್ನಾಗಿ ಮಾಡಿಕೊ ಳ್ಳಲಾಗುತ್ತಿದೆ. ಆದ್ದರಿಂದ ಗ್ರಾಹಕರಿಗೆ ಸ್ಥಳದಲ್ಲೇ ನ್ಯಾಯ ಸಿಗುವಂತಾಗಬೇಕು. ಇದಕ್ಕಾಗಿ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತಾರದೇ ಇದ್ದಲ್ಲಿ ಗ್ರಾಹಕರು ಅನುಭವಿಸುವ ಶೋಷಣೆ ನಿಯಂತ್ರಣಕ್ಕೆ ಬಾರದು.
ಆಲಿ, ಮುಕ್ಕ
ಮುಹಿಯುದ್ದೀನ್ ಜುಮಾ ಮಸೀದಿ ಕೆರೆಬಳ್ಳಿ-ಸಿದ್ದಕಟ್ಟೆ ಇದರ ಸಭಾಂಗಣದಲ್ಲಿ ಕಳೆದ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ನಡೆದ ದಫ್ ಸ್ಪರ್ಧೆ ರಣರಂಗವಾಗಿ ಕೊನೆಗೊಂಡಿತು. ದಫ್ ತಂಡಗಳನ್ನು ಸಂಪೂರ್ಣವಾಗಿ ವಂಚಿಸಿದ ಸಂಘಟಕರು ತಮ್ಮದೇ ಆದ ದಫ್ ತಂಡ ಗಳನ್ನು ಸ್ಪರ್ಧಿಸುವಂತೆ ಮಾಡಿ ಅದಕ್ಕೇ ಬಹುಮಾನ ನೀಡಿದರು. ಅಲ್ಲದೆ ನಿಯಮ ಪ್ರಕಾರ ೧೪+೧=೧೫ ನಿಮಿಷಗಳ ಕಾಲ ಅವಕಾಶ ಆದರೆ ಕೆಲವು ತಂಡಗಳಿಗೆ ೧೧ ನಿಮಿಷ ಹಾಗೂ ಇನ್ನು ಕೆಲವು ತಂಡಗಳಿಗೆ ೧೩ ನಿಮಿಷ ಹಾಗೆಯೇ ತಮ್ಮದೇ ತಂಡವಾದ ಸಿದ್ದಕಟ್ಟೆ ತಂಡಕ್ಕೆ ೨೦ ನಿಮಿಷ ಕಾಲಾವಕಾಶ ನೀಡಿದರು. ಈ ಬಗ್ಗೆ ಕಾರ್ಯಕ್ರಮದಲ್ಲಿ ವಂಚಿತರಾದ ದಫ್ ತಂಡಗಳು ಪ್ರಶ್ನಿಸಿದಾಗ ಆ ತಂಡಕ್ಕೆ ನ್ಯಾಯವು ಕೊಡದೆ, ಸಮಾಧಾನವೂ ಹೇಳದೆ ದಫ್ ತಂಡದ ವಿದ್ಯಾರ್ಥಿಗಳನ್ನು ಹೊಡೆದೋಡಿಸಿದ ಸಿದ್ದಕಟ್ಟೆ ಗೂಂಡಾ ಗಳೇ ಇದು ನ್ಯಾಯವೇ? ಇದು ಪ್ರವಾದಿ ಪ್ರೇಮವೇ?
ನೊಂದ ದಫ್ ವಿದ್ಯಾರ್ಥಿ, ಶಾಂತಿನಗರ
ಉಡುಪಿ-ಚಿಕ್ಕಮಗಳೂರು ಉಪಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯ ವಾಗಿ ಸೋಲನ್ನು ಅನುಭವಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ವೈಯಕ್ತಿಕ ವರ್ಚಸ್ಸು ಹಾಗೂ ಬಿಜೆಪಿಗರ ನೀಚ ರಾಜಕೀಯ ದಿಂದಾಗಿ ಕಾಂಗ್ರೆಸ್ ಭಾರೀ ಮತಗಳೊಂದಿಗೆ ಗೆಲುವು ದಾಖಲಿಸಿಕೊಂಡಿದೆ. ಇದನ್ನು ನೋಡಿ ದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಅವಳಿ ಜಿಲ್ಲೆಗಳಲ್ಲಿ ಬಲ ಕಳೆದುಕೊಂಡು ದುರ್ಬಲ ವಾಗಿರುವುದು ಸ್ಪಷ್ಟವಾಗುತ್ತದೆ. ಚುನಾವಣೆ ಬಂದಾಗ ಮಾತ್ರ ಹಿಂದುತ್ವದ ಮಾತಾಡುವ ಬಿಜೆಪಿಗರು ಉಳಿದಂತೆ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಸಂಸ್ಕೃ ತಿಯ ಏಜೆಂಟರಂತೆ ವರ್ತಿಸುವ ಸಂಘ ಪರಿವಾರದ ನಾಯಕರು ಉಡುಪಿ ಯಲ್ಲಿ ಬೆತ್ತಲೆ ರೇವ್ ಪಾರ್ಟಿ ನಡೆದಾಗ, ಸದನ ದಲ್ಲಿ ಶಾಸಕರು ನೀಲಿ ಚಿತ್ರ ವೀಕ್ಷಿಸಿದಾಗ ಮಾತಾಡಲಿಲ್ಲ. ಇದರ ಪರಿಣಾಮ ವನ್ನು ಲೋಕಸಭಾ ಉಪಚುನಾವಣೆಯಲ್ಲಿ ಅನು ಭವಿಸಿದ್ದಾರೆ.
ಜನರು ಬಿಜೆಪಿ ಪಕ್ಷ ಮತ್ತದರ ನಾಯಕರಿಂದ ರೋಸಿಹೋಗಿ ಅನಿವಾರ್ಯವಾಗಿ ಕಾಂಗ್ರೆಸ್ ಕಡೆ ವಾಲಿದ್ದಾರೆ. ಇದು ಬಿಜೆಪಿಗರಿಗೆ ಎಚ್ಚರಿಕೆಯ ಕರೆ ಗಂಟೆ. ಯಾಕೆಂದರೆ ಅವಳಿ ಜಿಲ್ಲೆಯಲ್ಲಿ ಕೆಲಸ ಮಾಡದ ಶಾಸಕರು, ಸಂಸದರನ್ನು ಜಿಲ್ಲೆಯ ಜನರು ತಿರಸ್ಕರಿಸುವತ್ತ ಒಲವು ತೋರುತ್ತಿದ್ದಾರೆ.
ಇದು ಉತ್ತಮ ಬೆಳವಣಿಗೆಯೂ ಆಗಿದೆ. ಸಂಘಪರಿವಾರದ ಕಾರ್ಯ ಕರ್ತರು ತನ್ನ ಹಿಂದಿದ್ದಾರೆ, ತಾನು ಏನು ಮಾಡಿದರೂ ನಡೆಯುತ್ತದೆ, ಕೆಲಸ ಮಾಡದಿದ್ದರೂ ಪ್ರಶ್ನಿಸುವವರು ಯಾರೂ ಇಲ್ಲ ಎಂದುಕೊಳ್ಳುವ ಜನಪ್ರತಿನಿಧಿ ಗಳಿಗೂ ಮುಂದೆ ಸುನಿಲ್ ಕುಮಾರ್‌ಗೆ ಆಗಿರುವ ಹೀನಾಯ ಸೋಲು ಕಾಯುತ್ತಿದೆ.
ಪರಮೇಶ್ವರ, ಕೋಟ
ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಕಳಪೆ ಹಾಸ್ಯವನ್ನೇ ವೈಭವೀಕರಿಸು ವುದನ್ನು ಕಾಣುತ್ತೇವೆ. ತಮಿಳು, ತೆಲುಗು ಬಾಷೆಗಳ ಚಿತ್ರಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸುವ ವೇಳೆ ಇಂಥ ಅಪಹಾಸ್ಯ ವನ್ನೂ ಸಿನಿಮಾದಲ್ಲಿ ತುರುಕುತ್ತಾರೆ. ಇದರಿಂದ ಥಿಯೇಟರ್‌ನೊಳಗೆ ಕುಳಿತು ಸಿನಿಮಾ ನೋಡಲು ಹೇಸಿಗೆ ಯಾಗುತ್ತದೆ. ಇಂಥ ಹಾಸ್ಯದ ಡೈಲಾಗ್ ಗಳು ಬಂದಾಗ ಒಂದು ವರ್ಗಕ್ಕೆ ಸೇರಿದ ಪ್ರೇಕ್ಷಕರು ಬೇಕೆಂದೇ ಕೀಟಲೆ ಮಾಡುತ್ತಾರೆ. ಅಸಭ್ಯವಾಗಿ ನಡೆದು ಕೊಳ್ಳುವುದೂ ಇದೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲೂ ಹೆಣ್ಣುಮಕ್ಕಳನ್ನು ಕೀಳಂದಾಜಿಸುವ ದೃಶ್ಯಗಳು, ಡೈಲಾಗ್ ಗಳು ಇದ್ದೇ ಇರುತ್ತವೆ. ಇದನ್ನು ನಿರ್ದೇ ಶಕರು ಸಿನಿಮಾಗಳಲ್ಲಿ ಯಾಕಾಗಿ ಸೇರಿ ಸುತ್ತಾರೋ ತಿಳಿಯದು. ಆದರೆ ಇದು ಸ್ವಸ್ಥ ಸಮಾಜದ ಮೇಲೆ ಕೆಟ್ಟ ಪರಿಣಾ ಮವನ್ನು ಬೀರುತ್ತದೆ. ಹೆಣ್ಮಕ್ಕಳನ್ನು ತಪ್ಪಾಗಿ ಅರ್ಥೈಸುವುದಕ್ಕೆ ಇದು ಪರೋಕ್ಷ ಪ್ರೋತ್ಸಾಹ ನೀಡುತ್ತದೆ. ಆದ್ದರಿಂದ ಸಿನಿಮಾಗಳಲ್ಲಿ ಅಶ್ಲೀಲ ದೃಶ್ಯಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.
ನಾಗವೇಣಿ, ಪುತ್ತೂರು
ಇತ್ತೀಚಿಗೆ ಮಂಗಳೂರು ಲೋಕಸಭಾ ಸಂಸದರಾದ ನಳಿನ್‌ಕುಮಾರ್ ಕಟೀಲು ಅವರು ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆಯ ಪ್ರಚಾರ ಸಂದರ್ಭ ದಲ್ಲಿ ಭಾರತ ದೇಶದ ಮಾಜಿ ಪ್ರಧಾನಿ ಯಾದ ಜವಾಹಾರ್‌ಲಾಲ್ ನೆಹರೂ ಅವರ ಬಗ್ಗೆ ಭ್ರಷ್ಟಾಚಾರದ ಪಿತಾಮಹ ಎಂದು ಕರೆದಿರುವುದು ಖಂಡನೀ ಯವಾದುದು.
ಒಬ್ಬ ಸಂಸದರಾಗಿ ಇವರು ಆಡಿರುವ ಮಾತುಗಳು ಶುದ್ಧ ತಪ್ಪು. ಇವರು ಸಾಧ್ಯವಾದರೆ ಈಗಿನ ಬಿಜೆಪಿ ಸರಕಾರದ ಎಷ್ಟು ಸಚಿವರು ಜೈಲಿ ನಲ್ಲಿದ್ದಾರೆ, ಭ್ರಷ್ಟಾಚಾರ ಮಾಡಿ ದ್ದಾರೆ ಎಂಬುದನ್ನು ಮೊದಲು ಜನರಿಗೆ ತಿಳಿಸಿ ಬಳಿಕ ಕಾಂಗ್ರೆಸ್‌ನ ಮಾಜಿ ದಿವಂಗತ ಪ್ರಧಾನಿಯ ಬಗ್ಗೆ ಇಲ್ಲ-ಸಲ್ಲದ ಹೇಳಿಕೆ ಕೊಡುವುದು ಒಳ್ಳೆ ಯದು ಎಂದು ನನ್ನ ನಂಬಿಕೆ ಟೀಕಿಸು ವಾಗ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಟೀಕೆ ಮಾಡಬೇಕೇ ಹೊರತು ತೀರಾ ಕೆಳ ಮಟ್ಟಕೆ ಇಳಿದು ಟೀಕೆ ಮಾಡಬೇಡಿ.
ಜಿ.ಎ.ಶಂಸುದ್ದೀನ್, ಅಜ್ಜಿನಡ್ಕ
ಹೆಸರು;ಬೇಡ: ಊರು;ಕುಂದಾಪುರ
ಸಮಸ್ಯೆ: ನಾನು ೨೩ ವರ್ಷ ಪ್ರಾಯದ ಯುವತಿ. ಮದುವೆಯಾಗಿ ಒಂದೂವರೆ ವರ್ಷ ಕಳೆಯಿತು. ನನ್ನ ಪತಿ ಮುಂಬೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಾವು ಮದುವೆಯಾಗಿ ಒಂದು ವರ್ಷ ಮಗು ಪಡೆಯುವುದು ಬೇಡ ಎಂದುಕೊಂಡಿದ್ದೆವು. ಇದಕ್ಕಾಗಿ ಗರ್ಭ ನಿರೋಧಕಗಳನ್ನು ಬಳಸುತ್ತಿದ್ದೆವು. ನಾನು ಒಂದು ವರ್ಷ ಅವರ ಜತೆ ಮುಂಬೈಯಲ್ಲೇ ಇದ್ದೆ. ಗರ್ಭಿಣಿಯಾದ ಬಳಿಕ ಊರಿಗೆ ಹಿಂತಿರುಗಿದ್ದೇನೆ. ನನ್ನವರು ಅಲ್ಲಿಯೇ ಇದ್ದಾರೆ. ನಾನು ಮೂರು ತಿಂಗಳ ಗರ್ಭಿಣಿ. ನನಗೆ ಯಾವ ರೀತಿಯ ಎಚ್ಚರಿಕೆಯ ಕ್ರಮ ಪಾಲಿಸಬೇಕೆಂದು ತಿಳಿದಿಲ್ಲ. ಇದರಿಂದ ನನಗೆ ಹುಟ್ಟುವ ಮಗುವಿನ ಬಗ್ಗೆ ಭಯವಾಗುತ್ತಿದೆ. ಹೀಗಾಗಿ ನಾನು ಎಲ್ಲಿಗೂ ಹೋಗುವುದಿಲ್ಲ. ಗರ್ಭವತಿಯಾಗಿರುವಾಗ ಬಾಕಿ ದಿನಗಳಿಗಿಂತ ಯಾವ ರೀತಿ ಎಚ್ಚರಿಕೆಯಿಂದ ಇರಬೇಕು ಎಂದು ನನಗೆ ಅಗತ್ಯ ಮಾಹಿತಿ ಕೊಡಿ.
ಸಲಹೆ: ನೀವು ಗರ್ಭವತಿಯಾಗೀದ್ದೀರಿ ಎಂದು ತಿಳಿದ ತಕ್ಷಣ ಸುಮ್ಮನೆ ಕೂರುವುದಲ್ಲ. ನೀವು ಇನ್ನೊಂದು ಜೀವಕ್ಕೆ ಭೂಮಿಯ ಬೆಳಕನ್ನು ತೋರಿಸುವ ಹೊಣೆಯನ್ನು ಹೊತ್ತಿದ್ದೀರಿ. ಹೀಗಾಗಿ ನೀವು ಈಗಿಂದಾಗಲೇ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾದ್ದು ಅತ್ಯಗತ್ಯ.
೧. ಗರ್ಭಿಣಿ ಎಂದು ತಿಳಿದ ಕೂಡಲೇ ಆರೋಗ್ಯ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಬೇಕು. ೨. ರಕ್ತದೊತ್ತಡ, ತೂಕ ಮತ್ತು ಎತ್ತರ, ಐರನ್ ಮತ್ತು ಪೋಲಿಕ್ ಆಸಿಡ್ ಗುಳಿಗೆ, ಟಿ.ಟಿ. ಚುಚ್ಚುಮದ್ದು, ಮೂತ್ರ ಹಾಗೂ ರಕ್ತ ಪರೀಕ್ಷೆಗಾಗಿ ಹೆರಿಗೆಗೆ ಮೊದಲು ಮೂರು ಬಾರಿ ಡಾಕ್ಟರ್ ಅವರಿಂದ ತಪಾಸಣೆ ನಡೆಸಬೇಕು.
೩. ಶಕ್ತಿವರ್ಧಕ ಆಹಾರವನ್ನು ಸೇವಿಸಬೇಕು. ಗೋಧಿ, ಅನ್ನ, ಗಂಜಿ, ಸಕ್ಕರೆ, ಬೆಲ್ಲ ಹಾಗೂ ಪೌಷ್ಠಿಕಾಂಶಯುಕ್ತ ಹಾಲು, ಮೊಸರು, ಮೊಟ್ಟೆ, ಮೊಳಕೆ ಬರಿಸಿದ ಕಾಳು, ಸೊಯಾಬೀನ್, ಮಾಂಸ, ಮೀನು ಉತ್ತಮ.
೪. ಹಸಿರು ಸೊಪ್ಪು, ತರಕಾರಿಗಳಾದ ಟೊಮೇಟೋ, ಕ್ಯಾರೆಟ್, ಕ್ಯಾಬೇಜ್, ಮಾವಿನ ಹಣ್ಣು, ಬಾಳೆ ಹಣ್ಣು, ಸೀಬೆ ಹಣ್ಣು ಸೇವನೆ ಒಳ್ಳೆಯದು.
೫. ಕಬ್ಬಿಣ ಮತ್ತು ಪೋಲಿಕ್ ಆಸಿಡ್ ಅಂಶವಿರುವ ಮಾತ್ರೆಗಳನ್ನು ನೂರು ದಿನ ಗಳವರೆಗೆ ಪ್ರತಿದಿನ ಒಂದು ಗುಳಿಗೆಯನ್ನು ಸೇವಿಸಿರಿ. ಅಯೋಡೈಸ್ಡ್ ಉಪ್ಪನ್ನೇ ಬಳಸಿರಿ.
೬. ಪ್ರತಿದಿನ ಸ್ನಾನವನ್ನು ಮಾಡುವ ಮೂಲಕ ಸ್ವಚ್ಚತ ಕಾಪಾಡಿಕೊಳ್ಳಬೇಕು. ಹೆರಿಗೆ ಅಥವಾ ತುರ್ತು ಸಂದರ್ಭದಲ್ಲಿ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳ ಬಗ್ಗೆ ಮೊದಲೇ ತಿಳಿದುಕೊಂಡಿರಿ.
೭. ವಿಶ್ರಾಂತಿ, ಹೆರಿಗೆಯ ಆಸ್ಪತ್ರೆ, ಅಲ್ಲಿಗೆ ಹೋಗುವ ದಾರಿ ಮೊದಲೇ ತಿಳಿಯಿರಿ.
ಗರ್ಭಿಣಿ ಸ್ತ್ರೀಯರು ಈ ಅವಧಿಯಲ್ಲಿ ಹಲವು ಮುನ್ನೆಚ್ಚರಿಕೆಯನ್ನು ಪಾಲಿಸಬೇಕು.
೧. ಉಪವಾಸ ವೃತ, ಭಾರವಾದ ವಸ್ತುಗಳನ್ನು ಎತ್ತುವುದು, ಆಸ್ಪತ್ರೆ, ಆರೋಗ್ಯ ಕೇಂದ್ರಕ್ಕೆ ಸಕಾಲದಲ್ಲಿ ಹೋಗದಿರುವುದನ್ನು ಮಾಡಲೇಬಾರದು.
೨. ಧೂಮಪಾನ, ಮದ್ಯಪಾನ ಮಾಡಬಾರದು.
೩. ಸಾಧ್ಯವಾದಷ್ಟು ಹೊರಗಡೆಯ ಆಹಾರದ ಬದಲಿಗೆ ಮನೆಯಲ್ಲೇ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯದು. ಇವಿಷ್ಟನ್ನು ನೀವು ಸರಿಯಾಗಿ ಪಾಲಿಸಿರಿ. ಅದೇ ರೀತಿ ಸಾಧ್ಯವಾದಷ್ಟು ಮನಸ್ಸನ್ನು ನೆಮ್ಮದಿಯಿಂದ ಇರಿಸಿಕೊಳ್ಳಿ. ಸಣ್ಣಪುಟ್ಟ ಕಾರಣಕ್ಕೆ ಜಗಳ ಆಡುವುದಾಗಲೀ, ಮಾನಸಿಕ ಯಾತನೆ ಪಡುವುದಾಗಲೀ ಬೇಡ. ಇದರಿಂದ ಹುಟ್ಟುವ ಮಗುವಿಗೆ ತೊಂದರೆ ಆಗುವ ಸಾಧ್ಯತೆಯೂ ಇದೆ. ಅವರಿವರು ಹೇಳಿದ ಮದ್ದಿನ ಬಗ್ಗೆ ನಿಮ್ಮ ಕುಟುಂಬದ ವೈದ್ಯರಲ್ಲಿ ಸರಿಯಾದ ಸಲಹೆ ಪಡೆಯದೆ ಬಳಸಲು ಹೋಗಬೇಡಿ. ವೈದ್ಯರನ್ನು ಕಾಲಕಾಲಕ್ಕೆ ಅವಶ್ಯಕವಾಗಿ ಭೇಟಿ ಮಾಡುತ್ತಿರಿ. ಸಮಸ್ಯೆ, ಸಂದೇಹಗಳ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯುವುದು ಅತ್ಯಗತ್ಯ.
ಜಯಕ್ರಷ್ಣ ಪುತ್ರನ್, ಕಾರ್ಕಳ
ಹಿರಿಯರು ಕಷ್ಟಪಟ್ಟು ಗಳಿಸಿದ ಅಧಿಕಾರವನ್ನು ಉಳಿಸಿ ಕೊಳ್ಳಲಾಗದ ಬಿಜೆಪಿಗೆ ಶನಿಕಾಟ ಆರಂಭವಾಗಿದೆ ಎಂದರೆ ತಪ್ಪಾಗಲಾರದು. ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಮಹತ್ವದ ಬೆಳವಣಿಗೆಯಿಂದಲೇ ಇದು ಬಹಿರಂಗಗೊಂಡಿದ್ದರೆ, ಕೆಲವು ದಿನಗಳ ಹಿಂದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇದು ಸಾಬೀತಾಗಿದೆ.
ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್‌ನ ಅಧಿಕಾರದಿಂದ ಕಂಗಾಲು ಆದ ಜನತೆ ಜಾತಿ, ಧರ್ಮ ನೋಡಿ ಬಿಜೆಪಿಗೊಂದು ಅವಕಾಶ ಕೊಡೋಣ ಎಂದು ಬಿಜೆಪಿಯ ಮೇಯರ್ ಅವರನ್ನು ಅಧಿಕಾರಕ್ಕೆ ತಂದು ಕೂರಿಸಿದರು. ಆದರೆ ಇಂದು ಬಿಜೆಪಿಯ ಮಾಜಿ ಮೇಯರ್‌ಗಳ ಆಸ್ತಿಯನ್ನೊಮ್ಮೆ ನೋಡಿ, ಮೇಯರ್ ಆಗುವ ಮೊದಲು ಇದ್ದ ಆಸ್ತಿಗೂ ಆನಂತರದ ಆಸ್ತಿಗೂ ವ್ಯತ್ಯಾಸ ನೋಡಿದರೆ ಬಿಜೆಪಿಯ ಭ್ರಷ್ಟಾಚರ ಬಟಾಬಯಲಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಬಜರಂಗದಳ ದನದ ವಿಷಯವನ್ನು ಹಿಡಿದುಕೊಂಡು ನಿತ್ಯ ಗಲಾಟೆ ಮಾಡುತಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಕಸಾಯಿಖಾನೆಯವರೊಂದಿಗೆ ಡೀಲ್ ಮಾಡಿಕೊಂಡಂತಿದೆ. ಕೆಲ ಬಜರಂಗಿಗಳು ತಮಗೆ ಹಫ್ತಾ ಕೊಡದ ಹೋಟೆಲ್‌ಗೆ ದಾಳಿ ಮಾಡುತ್ತಾರೆ. ಉಡುಪಿ ಯಲ್ಲಿ ಬಹಿರಂಗ ನಂಗನಾಚ್‌ಗೆ ಬೆಂಬಲ ಕೊಡುತ್ತಾರೆ. ಕಾಂಗ್ರೆ ಸ್‌ನ ಲೋಪದೋಷವನ್ನು ಪಟ್ಟಿ ಮಾಡುತ್ತಿದ್ದ ಬಿಜೆಪಿ ಅಧಿಕಾರ ಸಿಕ್ಕನಂತರ ತನ್ನ ಸ್ವಂತ ಅಭಿವೃದ್ಧಿಯ ಜಪ ಮಾಡಿತು. ಪ್ರತಿಯೊ ಬ್ಬರೂ ಅಧಿಕಾರಕ್ಕಾಗಿ ಹಾತೊರೆದರು. ಯಡಿಯೂರಪ್ಪ ನಿತ್ಯ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಆರ್‌ಎಸ್‌ಎಸ್‌ಗೆ ಬಹಿ ರಂಗ ಧಮ್ಕಿ ಹಾಕಿದರೂ ಆರೆಸ್ಸೆಸ್ ಹಲ್ಲಿಲ್ಲದ ಹಾವಿನಂತಾಗಿದೆ. ಸಂಸ್ಕೃತಿ, ಮಾತೆಯರು ಎಂದು ಹೇಳುತ್ತಿರುವವರು ಹಾಲಪ್ಪ, ರೇಣುಕಾಚಾರ‍್ಯ, ಸವದಿ, ಸಂಪಂಗಿ ಯಂತಹ ಭ್ರಷ್ಟರಿಗೆ ಮಣೆ ಹಾಕು ತ್ತಿದೆ.
ಕಾಂಗ್ರೆಸ್‌ನ ಆಡಳಿತದಲ್ಲಿದ್ದ ಅದೇ ಹೊಂಡ ತುಂಬಿದ ರಸ್ತೆ ಬಿಜೆಪಿ ಆಡಳಿತದಲ್ಲೂ ಮುಂದು ವರಿದಿದೆ. ಕಾಂಗ್ರೆಸ್ ಬಡವರ ಮೇಲಿನ ಕಾಳಜಿ ಯಿಂದ ಕಡಿಮೆ ದರದಲ್ಲಿ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿ ಮೂಲಕ ಕೊಡುತ್ತಿತ್ತು. ಬಿಜೆಪಿ ಅದನ್ನೂ ಕಸಿದು ಕೊಂಡಿತು. ಬಿಜೆಪಿ ರೈತನ ಜಮೀನನ್ನು ಸೆಜ್, ದೊಡ್ಡ ದೊಡ್ಡ ಕಂಪೆನಿಗಳಿಗೆ ಕೊಡುವ ಮೂಲಕ ರೈತರ, ಜನಸಾಮಾನ್ಯರ ವಿರೋಧ ಕಟ್ಟಿಕೊಂಡಿತು.
ಈಗ ಹೇಳಿ ಬಿಜೆಪಿಗೆ ಮತ ಹಾಕಬೇಕು ಎನ್ನುವುದಕ್ಕೆ ನಿಮ್ಮಲ್ಲಿ ಒಂದಾದರೂ ಕಾರಣ ಇದೆಯೇ?
ಅದೇ ರೀತಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲು ಬಹುತೇಕ ಮಂದಿಯ ನಿರೀಕ್ಷೆ ಆಗಿತ್ತು. ಖುದ್ದು ಸುನಿಲ್ ಕುಮಾರ್‌ಗೆ ಕೂಡಾ ಗೆಲ್ಲುವುದರ ಬಗ್ಗೆ ವಿಶ್ವಾಸವಿರಲಿಲ್ಲ. ದಕ್ಷಿಣ ಭಾರತದ ಮೊದಲ ಬಿಜೆಪಿ ಸರ ಕಾರದ ಅಧ:ಪತನ ಬಳ್ಳಾರಿಯ ಉಪಚುನಾವಣೆಯಿಂದಲೇ ಆರಂಭವಾಗಿದೆ. ಸರಕಾರ ರಚನೆಗೆ ಬೆಂಬಲವಾಗಿ ನಿಂತಿದ್ದ ಶ್ರೀರಾಮುಲು ಬಳಗವನ್ನು ಬಿಜೆಪಿ ಯೂಸ್ ಎಂಡ್ ಥ್ರೋ ಮಾಡಿದಾಗಲೇ ಬಿಜೆಪಿ ಹೆಚ್ಚು ದಿನ ಬಾಳುವುದಿಲ್ಲ ಎನ್ನುವುದು ಶತಸಿದ್ಧವಾಗಿತ್ತು. ಇನ್ನು ಸುನಿಲ್ ಕುಮಾರ್ ಸೋಲು ಖಂಡಿತಾ ಜಯಪ್ರಕಾಶ್ ಹೆಗ್ಡೆಯವರಿಂದ ಆಗಿದ್ದಲ್ಲ. ಕಾಂಗ್ರೆಸ್ ಇದರಿಂದ ಬೀಗುವ ಅಗತ್ಯವೂ ಇಲ್ಲ. ಯಾಕೆಂದರೆ ಒಂದು ಕಾಲಕ್ಕೆ ಇದೆಲ್ಲ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಬಿಜೆಪಿ ಇದನ್ನು ವಶಪಡಿಸಿಕೊಂಡ ನಂತರ ಕಾಂಗ್ರೆಸ್ ಕಂಗಾ ಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಲವು ಅವಕಾಶಗಳನ್ನು ಬಿಜೆಪಿಯೇ ಕೊಟ್ಟಿತು. ಆದರೆ ಕಾಂಗ್ರೆಸಿಗರು ಎಚ್ಚೆತ್ತುಕೊಳ್ಳಲಿಲ್ಲ. ಈ ಉಪ ಚುನಾವಣೆಯ ಲ್ಲಿಯೂ ಅಷ್ಟೇ. ಸುನಿಲ್ ಕುಮಾ ರನ ವೈಯಕ್ತಿಕ ಇಮೇಜು ಅವರನ್ನು ಸೋಲಿ ಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸುನಿಲ್ ಕುಮಾರ್ ಮೊದಲ ಬಾರಿಗೆ ಶಾಸಕನಾದಾಗ ಅವರ ತಲೆ ಭುಜದಲ್ಲಿರಲಿಲ್ಲ. ಉಗ್ರ ಹಿಂದುತ್ವದ ಭಾಷಣ ಮಾಡಿದರೆ ಗೆಲ್ಲ ಬಹುದು ಎಂದುಕೊಂಡ ಸುನಿಲ್, ಗೋಪಾಲ್ ಭಂಡಾರಿ ಎದುರು ಸೋತಾಗಲೇ ತನ್ನ ತಪ್ಪನ್ನು ಅರಿತುಕೊಳ್ಳಬೇಕಿತ್ತು. ಅದರೆ ಸುನಿಲ್‌ಗೆ ಆ ತಾಳ್ಮೆ ಇರಲಿಲ್ಲ.
ಪದ್ಮಪ್ರಿಯಾ ಪ್ರಕರಣದಲ್ಲಿ ಅನಗತ್ಯವಾಗಿ ಮೂಗು ತೂರಿ ಸಲು ಹೋದ ಸುನಿಲ್ ಇದಕ್ಕೆ ತಕ್ಕ ಶಾಸ್ತಿ ಕಂಡಿದ್ದಾರೆ. ಸುನಿಲ್‌ಗೆ ಇನ್ನೂ ವಯಸ್ಸಿದೆ. ರಾಜಕೀಯದಲ್ಲಿ ಇನ್ನಷ್ಟು ಮೇಲೇರಬಹುದು, ಆದರೆ ನಯ, ವಿನಯವಂತಿಕೆ, ಪ್ರಾಮಾ ಣಿಕತೆ, ಕೆಲಸ ಮಾಡುವ ಛಲ ರೂಢಿಸಿಕೊಳ್ಳಬೇಕಷ್ಟೇ. ಸುನಿಲ್ ವಿರುದ್ಧ ಗೆದ್ದ ಜಯಪ್ರಕಾಶ್ ಹೆಗ್ಡೆಯವರು ಒಂದು ಕಾಲದಲ್ಲಿ ಸೋಲಿನ ಹೊಡೆತಗಳನ್ನೇ ತಿಂದವರು. ಆದರೂ ನಿರಂತ ರವಾಗಿ ಮತದಾರನೊಂದಿಗೆ ಸಂಪರ್ಕ, ಸಮಸ್ಯೆಗೆ ಸ್ಪಂದಿಸುತ್ತಿದ್ದ ರೀತಿ ಅವರನ್ನು ಗೆಲ್ಲಿಸಿಬಿಟ್ಟಿದೆ. ಅವರಿಂದ ಸುನಿಲ್ ಕುಮಾರ್ ಪಾಠ ಕಲಿಯುವುದು ಬೇಕಾದಷ್ಟಿದೆ.
ಪ್ರಾಮಾಣಿಕತೆ
ಸರ್ದಾರ್ ಪಾಕ್ ಪ್ರವಾಸದ ಲ್ಲಿದ್ದ. ಆತ ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಕಾರ್ಮಿಕರು ಕೆಲಸದಲ್ಲಿ ವ್ಯಸ್ಥವಾಗಿದ್ದರು. ಓರ್ವ ಗುಂಡಿ ಯನ್ನು ಅಗೆಯುತ್ತಿದ್ದರೆ ಮತ್ತೋರ್ವ ಅದನ್ನು ತುಂಬಿ ಸುತ್ತಿದ್ದ. ಆಗ ಅಚ್ಚರಿಗೊಂಡ ಸರ್ದಾರ್ ಅವರಲ್ಲಿ ಈ ಬಗ್ಗೆ ಕೇಳಿದಾಗ ಕಾರ್ಮಿಕರ ಪ್ರತ್ಯುತ್ತರ ಹೀಗಿತ್ತು.
'ನಾವು ಗಾರ್ಡನಿಂಗ್ ಕೆಲಸದವರು. ಆದರೆ ಗಿಡ ನೆಡುವವನು ರಜೆಯಲ್ಲಿದ್ದಾನೆ. ಹಾಗಾಗಿ ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ
ಅಭ್ಯಾಸ
ಆಕೆ: ಬೆರಳು ಕಚ್ಚುವ ದುರಭ್ಯಾಸ ನಿನಗಿತ್ತು ಅಲ್ವಾ? ಈಗ ಯೋಗದಿಂದ ಆ ಸಮಸ್ಯೆಯಿಂದ ಮುಕ್ತಿ ಪಡೆದಿದ್ದೀಯಾ?
ಇನ್ನೊಬ್ಬಾಕೆ: ಅದರ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಈಗ ನಾನು ನನ್ನ ಕಾಲಿನ ಬೆರಳನ್ನೂ ಕೂಡ ಕಚ್ಚಲು ಶುರುಮಾಡಿದ್ದೇನೆ !!!!!
ಬಾರಿಸು
ನ್ಯಾಯಾಧೀಶ ಸಣ್ಣ ಹುಡುಗನಲ್ಲಿ
'ನಿನ್ನ ಹೆತ್ತವರು ಈಗ ಡೈವೋರ್ಸ್ ತೆಗೆದುಕೊಂಡು ದೂರ ವಾಗಿದ್ದಾರೆ. ನೀನೀಗ ತಾಯಿಯ ಜೊತೆ ಇರಲು ಬಯಸುತ್ತೀಯಾ?
ಹುಡುಗ: ಇಲ್ಲ, ತಾಯಿ ನನಗೆ ಹೊಡೆಯುತ್ತಾಳೆ.
ನ್ಯಾಯಾಧೀಶ: ಹಾಗಾದರೆ ತಂದೆ ಜೊತೆ ಅಲ್ವಾ?
ಹುಡುಗ: ಇಲ್ಲ, ತಂದೆ ಕೂಡ ಹೊಡೆಯುತ್ತಾರೆ.
ನ್ಯಾಯಾಧೀಶ: ಮತ್ತೆ ಯಾರ ಜೊತೆ ಇರುತ್ತೀಯಾ?
ಹುಡುಗ: ಭಾರತೀಯ ಕ್ರಿಕೆಟ್ ತಂಡದ ಜೊತೆ. ಯಾಕೆಂದರೆ ಅವರು ಯಾರಿಗೂ ಹೊಡೆಯುವುದಿಲ್ಲ!!
ಕರ್ನಾಟಕ ವಿಧಾನ ಸಭೆಯಲ್ಲಿ ಕಲಾಪ ನಡೆಯು ತ್ತಿರುವಾಗ ನೀಲಿ ಚಿತ್ರವನ್ನು ನೋಡಿದ ವಿಚಾರದಲ್ಲಿ ನಡೆದ ರಾದ್ದಾಂತಗಳು ನಮಗೆಲ್ಲರಿಗೂ ತಿಳಿದಿದೆ. ಇದೇ ರೀತಿಯಾಗಿ ಇತ್ತೀಚೆಗೆ ಗುಜರಾತಿನ ವಿಧಾನ ಸಭೆಯಲ್ಲೂ ಇಂತಹದೇ ಘಟನೆ ನಡೆದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಅದು ಕರ್ನಾಟಕದಲ್ಲಿ ನಡೆದ ರಾದ್ಧಂತದಂತೆ ತೀವ್ರತೆಯನ್ನು ಪಡೆಯ ದಿದ್ದರೂ 'ಕಾಮಾತುರರಿಗೆ ಯಾವುದೇ ಭಯ ಲಜ್ಜೆ ಇಲ್ಲ' ಎಂಬುದನ್ನು ತೋರಿಸಿಕೊಟ್ಟದೆ. ಕರ್ನಾಟಕದಲ್ಲಿ ನಡೆದ ಈ ಪ್ರಕರಣದಿಂದ ದೇಶಾದ್ಯಂತ ಶಾಸಕರು ಬುದ್ದಿ ಕಲಿಯಬೇಕಾಗಿತ್ತು ಆದರೆ ಇದೇನೂ ದೊಡ್ಡ ವಿಷಯವೇ ಅಲ್ಲ ಎಂಬಂತೆ ವರ್ತಿಸಿರುವುದು ಕಂಡು ಬರುತ್ತದೆ.
ಇತ್ತೀಚೆಗೆ ಯುವ ಜನರು ತಮ್ಮ ರೋಮ್ ಮಾಡಲ್‌ಗಳು ಎಂದು ಭಾವಿಸುವಂತವರ ಸಾಲಿಗೆ ಸೇರಿದ ನಟಿಮಣಿಯೋರ್ವಳ ಲಿಪ್ ಸ್ಟಿಕ್ ಸವರಿದ ತುಟಿಗಳಿಂದ ಕೆಲವು ಆಣಿಮುತ್ತುಗಳು ಉದುರಿದವು. ನಮ್ಮ ದೇಶದಲ್ಲಿ ವಯಸ್ಕರ ಚಿತ್ರಗಳನ್ನು ಟಿವಿ ಛಾನೆಲ್‌ಗಳಲ್ಲಿ ತೋರಿಸುವುದಕ್ಕೆ ಏನೂ ಅಡ್ಡಿ ಇಲ್ಲ. ಯಾಕೆಂದರೆ ನಮ್ಮ ಜನರು ಮತ್ತು ಯುವ ಜನತೆ ಇಂತಹಾ ಚಿತ್ರಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸಾಧಾರಣವಾಗಿ ಯುವ ಜನರ ಕೈಯಲ್ಲಿರುವ ಅತ್ಯಾಧುನಿಕ ಮೊಬೈಲ್ ಫೋನುಗಳಲ್ಲಿ ನೀಲ ಚಿತ್ರಗಳು ಇದ್ದೇ ಇರುತ್ತವೆ. ಅವುಗಳನ್ನು ಅವರು ಕದ್ದು ಮುಚ್ಚಿ ನೋಡುತ್ತಿರುತ್ತಾರೆ. ಹಾಗಿರುವಾಗ ಟಿವಿ ಛಾನೆಲ್‌ಗಳಲ್ಲಿ ಮಡಿವಂತಿಕೆ ತೋರಿಸುವುದು ಯಾಕೆ? ಎಂಬ ಧಾಟಿಯಲ್ಲಿದ್ದ ಈಕೆಯ ಮಾತುಗಳು ಏನನ್ನೂ ಸೂಚಿಸುತ್ತಿವೆ.
ನಮ್ಮ ದೇಶದ ಎಲ್ಲಾ ವ್ಯವಸ್ಥೆಗಳಲ್ಲಿ ರಾಸಲೀಲೆ ಹಾಸು ಹೊಕ್ಕಾಗಿ ರುವಂತೆ ನಮಗೆ ಕಂಡು ಬರುತ್ತಿದೆ. ಕೆಲವೊಂದು ಕಡೆ ಬಹಿ ರಂಗವಾದರೆ, ಮತ್ತೆ ಕೆಲವು ಕಡೆ ಮುಚ್ಚಿ ಹೋಗುತ್ತದೆ. ಕಾಮಾತುರರು, ಕೀಚಕರು ಎಲ್ಲೆಡೆ ಕಂಡು ಬರುವುದಾದರೂ ಯಾಕೆ? ನಮ್ಮ ಯುವ ಜನರನ್ನು ಕಾಮಾತುರರನ್ನಾಗಿ ಮಾಡುವ ಅಂಶಗಳಾದರೂ ಯಾವುವು? ಎಂಬುದರ ಕಡೆಗೆ ದೃಷ್ಟಿ ಹಾಯಿಸಿದರೆ ಭವಿಷ್ಯದ ದಿನಗಳಲ್ಲಿ ಈ ರಾಸಲೀಲೆಗಳ ಹಾಡುಹಗಲೇ ನಡು ರಸ್ತೆಯಲ್ಲಿಯೇ ನಡೆದುಬಿಟ್ಟರೂ ಆಶ್ಚರ್ಯವಿಲ್ಲ ಎಂದು ಅನಿಸುತ್ತದೆ.
ಭಾರತ ದೇಶದಲ್ಲಿ ಸ್ತ್ರೀಯರನ್ನು ಗೌರವಯುತವಾಗಿ ಕಾಣಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ಸ್ತ್ರೀಯನ್ನು ಅಷ್ಟೇ ಕೀಳಾಗಿ ಬಿಂಬಿಸುವುದು ಕಂಡು ಬರುತ್ತದೆ. ಮೈತುಂಬಾ ಬಟ್ಟೆ ಹೊದ್ದುಕೊಂಡಿರುವ ಸ್ತ್ರೀಯರನ್ನು ನಮ್ಮ ಆಧುನಿಕ ಮಾಧ್ಯಮಗಳು ತೋರಿಸಲು ಬಯಸುವುದೇ ಇಲ್ಲ. ಯಾವುದೇ ಟಿವಿ ವಾಹಿನಿಗಳಲ್ಲಿ ಒಂದಷ್ಟು ಸ್ತ್ರೀ ಪುರುಷರು ಸೇರಿಕೊಂಡು ಯಾವುದಾದರೂ ಒಂದು ಕಾರ್ಯಕ್ರಮವನ್ನು ಕೊಡುತ್ತಿದ್ದರೆ. ಅದರಲ್ಲಿ ಹೆಚ್ಚಿನ ಗಂಡಸರು ಮೈಮುಚ್ಚಿಕೊಳ್ಳುವ ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಸೂಟು, ಬೂಟು, ಕೋಟು, ಟೈ, ಹ್ಯಾಟು ಇಷ್ಟನ್ನು ಧರಿಸಿದ ಗಂಡಸಿನ ಮುಖ ಮತ್ತು ಕೈಬೆರಳುಗಳು ಮಾತ್ರ ಕಾಣಿಸುತ್ತವೆ. ಆದರೆ ಮಹಿಳೆ? ಆಕೆಯ ಉಂಗುಷ್ಟದಿಂದ ಹಿಡಿದು ನೆತ್ತಿಯವರೆಗೆ ಎಲ್ಲವನ್ನೂ ಕಲಾತ್ಮಕವಾಗಿ (?) ಕಾಣಿಸಲಾಗುತ್ತದೆ. ಕೆಲವು ಕಡೆದ ಮಹಿಳೆಯ ದೇಹವನ್ನು ಎಷ್ಟು ತೋರಿಸಲು ಸಾಧ್ಯವಾಗುತ್ತದೋ ಅಷ್ಟನ್ನೂ ತೋರಿಸಲಾಗುತ್ತದೆ. ಇದೇಕೆ ಹೀಗೆ? ಗಂಡಸರನ್ನು ಈ ರೀತಿ ಯಾಕೆ ತೋರಿಸಬಾರದು? ಎಂದು ಓರ್ವರು ಪ್ರಶ್ನಿಸಿದಾಗ ಗಂಡಸರಲ್ಲಿ ತೋರಿಸುವಂತಹಾ ಸೌಂದರ್ಯ ವಾದರೂ ಏನಿದೆ. ಅದನ್ನು ತೋರಿಸಿದರೆ ನೋಡುವವರಾದರೂ ಯಾರು? ಎಂಬ ಕುಚೋದ್ಯವಾದ ಉತ್ತರವೂ ಕೇಳಿ ಬಂದಿತ್ತು.
ನಮ್ಮ ಸಿನಿಮಾಗಳಲ್ಲಿ ಗಂಡು ಹೆಣ್ಣನ್ನು ತೋರಿಸುವ ವಿಧಾನವೂ ಬದಲಾಗಿದೆ. ಹಳೆ ಕಾಲದ ಸಿನಿಮಾವನ್ನು ನೋಡಿದಾಗ ಮೈತುಂಬಾ ಬಟ್ಟೆ ಧರಿಸಿದ ನಟಿಯರು ಕಂಡು ಬರುತ್ತಾರೆ. ಇತ್ತೀಚಿನ ಚಿತ್ರಗಳನ್ನು ನೋಡಿದರೆ ಹೀರೋ ಟಿಪ್ ಟಾಪ್ ಡ್ರೆಸ್ ಹಾಕಿಕೊಂಡಿರುತ್ತಾನೆ. ಹೀರೋ ಯಿನ್ ಇನ್ನು ಈಕೆಯಲ್ಲಿ ತೋರಿಸಲಾದ ಜಾಗವೇ ಇಲ್ಲವೇನೋ ಎನ್ನು ವಂತಹಾ ಉಡುಗೆಯನ್ನು ತೊಟ್ಟಿರುತ್ತಾಳೆ! ದಶಕಗಳ ಹಿಂದೆ ಹಾಲಿವುಡ್ ನಟಿಯೋರ್ವಳನ್ನು ಪತ್ರಕರ್ತನೊಬ್ಬನು 'ನಿಮ್ಮ ಚಿತ್ರದಲ್ಲಿ ನೀವು ಸದಾ ಎದೆಯ ಭಾಗದಲ್ಲಿ ಬಟ್ಟೆಯನ್ನು ಕಡಿಮೆ ಧರಿಸಿಕೊಂಡಿರುತ್ತೀರಲ್ಲಾ ಯಾಕೆ?' ಎಂದಾಗ ಆಕೆ 'ನಮ್ಮ ನಿದೇರ್ಶಕರು ಪ್ರತಿಯೊಂದು ದೃಶ್ಯದಲ್ಲೂ ಅಂದರೆ ಸುಖ ಮತ್ತು ದುಃಖದ ಸನಿವೇಶದಲ್ಲೂ ಎದೆಯನ್ನು ತೋರಿಸಿಕೊಂಡಿರಲೇ ಬೇಕು' ಎಂದು ಹೇಳುತ್ತಾರೆ ಎಂದಿದ್ದಳು. ಇದೀಗ ನಮ್ಮ ಭಾರತೀಯ ಚಿತ್ರಗಳಲ್ಲೂ ಕಾಣಿಸಿಕೊಂಡಿದೆ ಎಂದರೂ ತಪ್ಪಾಗಲಾರದು.
ಹೆಣ್ಣನ್ನು ವ್ಯಾಪಾರದ, ಪ್ರಚಾರದ ಸರಕಾಗಿ ದೃಷ್ಯ ಮಾಧ್ಯಮಗಳು ಚಿತ್ರೀಕರಿಸಿದ ಪರಿಣಾಮವನ್ನು ಈಗ ನಾವು ಎಲ್ಲಾ ಕಡೆಗಳಲ್ಲೂ ಕಾಣುತ್ತಿದ್ದೇವೆ. ನಗರದ ಬೀದಿ ಬೀದಿಗಳಲ್ಲಿ, ಹೈ ಸೊಸೈಟಿ ಮತ್ತು ತಾವು ಹೈಸೊಸೈಟಿಯವರು ಎಂದು ತೋರಿಸಿಕೊಳ್ಳುವವರ ಮನೆ ಮನೆಗಳಲ್ಲಿ ಗಂಡು ಹುಡುಗರು ಮೈ ತುಂಬಾ ಏನಾದರೂ ಉಡುಗೆಯನ್ನು ಧರಿಸಿಕೊಂಡಿದ್ದರೆ. ಹೆಣ್ಣು ಮಕ್ಕಳ ಉಡುಗೆಗಳು ಆದಷ್ಟೋ ಚಿಕ್ಕದು ಮತ್ತು ಚೊಕ್ಕದು (?) ಆಗಿರುತ್ತದೆ. ಅದನ್ನು ನೋಡುವುದಕ್ಕೆ ಮುಜುಗರವಾದರೂ ಕಣ್ಣು ಮುಚ್ಚಿಕೊಂಡಿರಬೇಕು ಈ ಬಗ್ಗೆ ಏನಾದರೊಂದು ಹೇಳಿದರೆ 'ಅದನ್ನು ನೋಡುವ ನಮ್ಮ ದೃಷ್ಟಿ ಸರಿ ಇಲ್ಲ' ಎಂಬ ಪ್ರತಿಕ್ರಿಯೆ ತಟ್ಟನೆ ಬರುತ್ತದೆ.
ಹೈಸ್ಕೂಲ್ ಹುಡುಗಿಯ ಪ್ರೇಮಪ್ರಕರಣದ ಚಿತ್ರವೊಂದು ನಮ್ಮ ಸಮಾ ಜದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದು ನಮಗೆ ಗೊತ್ತಿದೆ. ಇದು ನಮ್ಮ ಹೈಸ್ಕೂಲು ಹುಡುಗ ಹುಡುಗಿಯರ ಮನಸ್ಸಿನಲ್ಲಿ ಯಾವ ರೀತಿಯ ಚಿತ್ತಾರವನ್ನು ಬಿಡಿ ಸಬಹುದು ಎಂದು ಆಲೋಚಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಒಂದು ರೀತಿ ಜಾಹೀರಾತು ಮಾಧ್ಯಮಗಳಲ್ಲಿ ಕಂಡು ಬರುತ್ತದೆ. ಮೊಬೈಲ್ ಫೋನಿನ ಈ ಜಾಹೀರಾತು ಹೈಸ್ಕೂಲ್‌ಗಿಂತಲೂ ಕೆಳಗಿನ ಎಲಿ ಮೆಂಟರಿ ಶಾಲೆಯ ಹುಡುಗ - ಹುಡುಗಿಯರಲ್ಲಿ ಮನಸ್ಸಿನಲ್ಲಿ ಚಿತ್ತಾರವನ್ನು ಬಿಡಿಸುವ ಜಾಹೀರಾತು. ಇದರಲ್ಲಿ ಬರುವ ನಾಯಿ ಮನೆಯಲ್ಲಿ ಕುಳಿತ ಹುಡುಗನನ್ನು ಎಳೆದು ತಂದು ದಾರಿಯಲ್ಲಿ ಸೈಕಲೇರಿ ಹೋಗುತ್ತಿರುವ ಹುಡುಗಿಯನ್ನು ನೋಡು ಎಂದು ಹೇಳುತ್ತದೆ!
ಕಾಮ, ಪ್ರೇಮ ಇತ್ಯಾದಿಗಳ ಬಗ್ಗೆ ಯುವಜನತೆಗೆ ಸಕಾರಾತ್ಮಕ ಭಾವನೆಗಳನ್ನು ಹುಟ್ಟಿಸಬೇಕಾದ ಚಲನಚಿತ್ರ, ಟಿವಿ ಮುಂತಾದ ಮಾಧ್ಯಮಗಳು ಅವರನ್ನು ಕಾಮಾತುರರನ್ನಾಗಿಸಿ ಬಿಡುವ ವ್ಯವಸ್ಥೆ ಎಲ್ಲಾ ಕಡೆಗಳಲ್ಲಿ ಕಂಡು ಬರುತ್ತದೆ. ಜನರಿಂದ ಚುನಾಯಿತನಾದ ಜವಾಬ್ದಾರಿಯುತ ವ್ಯಕ್ತಿಗಳೂ ಈ ವಿಷ ವರ್ತುಲಕ್ಕೆ ಸಿಲುಕಿ ತನ್ನ ಮಾನ, ಸ್ಥಾನವನ್ನು ಕಳೆದುಕೊಳ್ಳುತ್ತಿರುವಾಗ ಇನ್ನೂ ಮನಸ್ಸನು ಬಲಿಯದ, ಬುದ್ದಿ ಬೆಳೆಯದ ಎಳೆಯ ಹುಡುಗರ ಪಾಡೇನು?
ಕಾಮಾತುರರರನ್ನು ಸೃಷ್ಟಿಸುವ ಮೂಲ ಬೀಜವನ್ನು ಗುರುತಿಸಿ ತಡೆಗಟ್ಟುವ ಪ್ರಯತ್ನವನ್ನು ಮಾಡುವ ಬದಲು ಕಾಮಾತುರರನ್ನು ತಡೆಯುವ ವ್ಯರ್ಥ ಪ್ರಯತ್ನ ಮಾಡಲು ಸಾಧ್ಯವೇ?
ಹೆಂಗಸರು ಗಂಡನ ಮಾತನ್ನು ಪಾಲಿಸಬೇಕು. ಇದೇ ಅವರಿಗೆ ಪರಮಧರ್ಮ ಸದಾಚಾರಶೀಲಳಾದ ಹೆಂಡತಿಯನ್ನು ಬಿಟ್ಟರೆ ಗಂಡನು ಧರ್ಮದಿಂದ ಪತಿತನಾಗುತ್ತಾನೆಂಬುದು ಇದರ ಅರ್ಥ. ಹೋಮ ಹವಿಸ್ಸು ಇಲ್ಲದ್ದರೂ ಸತಿ ಪತಿ ಧರ್ಮದ ಹಾದಿಯಲ್ಲಿ ನಡೆದರೆ ಅದೇ ದೊಡ್ಡ ಹೋಮ. ಮದುವೆಯಾಗಿ ನಾಲ್ಕು ತಿಂಗಳಲ್ಲಿ ಹೆಂಡತಿಯನ್ನು ಕೈಬಿಟ್ಟು ಇನ್ನೊಂದು ಹೆಣ್ಣಿನೊಂದಿಗೆ ಸಖ್ಯ ಬೆಳೆಸಿ ಮೊದಲು ಹೆಂಡತಿಯ ಕಣ್ಣೀರಿಗೆ ಕಾರಣನಾಗುವ ಅಧರ್ಮಿ ಗಂಡಸರು ನಮ್ಮಲ್ಲಿ ಬಹಳಷ್ಟು ಇದ್ದಾರೆ. ದುಡ್ಡಿಗಾಗಿಯೇ ಮದುವೆಯಾಗುವವರಿದ್ದಾರೆ. ಗಂಡ ಹೆಂಡತಿಯರು ಮನಃಸಾಕ್ಷಿ ಮತ್ತು ಧರ್ಮದ ತಳಹದಿಯಲ್ಲಿ ಸಂಸಾರಸ್ಥರಾದರೆ ಸಕಲವೂ ವೃದ್ಧಿಯಾಗುತ್ತದೆ.
ಅಶೋಕ್ ಹಲಾಯಿ, ಬಂಟ್ವಾಳ
ವೈದಿಕರಲ್ಲಿ ಶೂದ್ರರಲ್ಲಿ ತಾಳಿ ಶ್ರೇಷ್ಠವೇ ಆಗಿದೆ. ಯಾವ ಜಾತಿ ತಾಳಿಗೆ ಅಂಟಿಕೊಂಡಿಲ್ಲ. ಎಲ್ಲರಲ್ಲೂ ಇರುವ (ಮದುವೆಯಾದ) ಶುಭ ಲಕ್ಷಣದ ಆಭರಣವದು. ಅದನ್ನು ಮಂಗಳ ಸೂತ್ರ ಅಂತಲೂ ಕರೆಯುತ್ತಾರೆ.
ಭಾರತೀಯರಲ್ಲಿ ವಿವಾಹ ಒಂದು ಸಂಸ್ಕಾರ. ಮದುವೆ ಆಚರಣೆ ಅಲ್ಲವೇ ಅಲ್ಲ. ಮನುಷ್ಯನ ಬದುಕಿನಲ್ಲಿ ಗ್ರಹಸ್ಥನಾಗುವ ಹಂತವೇ ಮದುವೆ. ನಿರ್ಣಾಯಕ ಹೆಣ್ಣು, ಗಂಡು ಪರಸ್ಪರ ಒಂದಾಗುವುದಕ್ಕೆ ಸಾಮಾಜಿಕ ಒಪ್ಪಿಗೆ ಪಡೆಯುವ ಒಪ್ಪಿಗೆಯೇ ಮದುವೆ. ಬೇರೆ ಬೇರೆ ಜಾತಿ ಧರ್ಮಗಳಲ್ಲಿ ಮದುವೆಯ ವಿಧ ವಿಧಾನಗಳು ಬೇರೆ ಬೇರೆ ಇವೆ. ತುಳುನಾಡಿನ ಹಿಂದೂ ಸಮಾಜದಲ್ಲಿ ನಡೆಯುವ ಮದುವೆ ಆಚರಣೆ ಅಲ್ಲ. ಹೊರ ನೋಟದ ವಿದೇಶ ಬರಹಗಾರರಿಗೆ ಅಥವಾ ಅಧ್ಯಯನಕಾರರಿಗೆ ಜನಪದ ಜೀವನ ವಿಧಾನದಲ್ಲಿ 'ಮದುವೆ ಎಂಬುದನ್ನು ಪ್ರತ್ಯೇಕ ಅಧ್ಯಯನ ನಡೆಸದ ಜನ ಜೀವನ ವಿಧಾನವನ್ನು ಒಟ್ಟು ಅಭ್ಯಸಿಸುವಾಗ ಮದುವೆ ಆಚರಣೆ ಅಥವಾ ಜನಪದ ಆಚರಣೆ ಅಂತ ಉಲ್ಲೇಖ ಇರಬಹುದಲ್ಲದೆ. ವಾಸ್ತವವಾಗಿ ಹಬ್ಬ ಹರಿದಿನದ ಆಚರಣೆಯಂತೆ ಮದುವೆ ಆಚರಣೆಯಾಗುವುದಿಲ್ಲ. ಮದುವೆ ಆದವರು ಮದುವೆಯ ದಿನವೆಂದು ಆಚರಿಸಬಹುದಷ್ಟೆ.
ಮದುವೆಗೆ ಪುರೋಹಿತರು ಅನಿವಾರ‍್ಯವೆಂದು ನಾನು ಹೇಳಿಲ್ಲ. ಪುರೋಹಿತರಿಲ್ಲದೆ ಮದುವೆ ಆಗುತ್ತದೆ. ಹೋಮ ಇಲ್ಲದೆ ನಡೆಯುತ್ತದೆ. ದೀಪ ಒಂದನ್ನು ಬೆಳಗಿಸಿ ಅದರ ಸಾಕ್ಷಿಯಾಗಿ ಕರಿಮಣಿ ಕಟ್ಟುವುದು, ಹೂ ಹಾರ ಇತ್ಯಾದಿ ಸರಳವಾಗಿ ನಡೆದ ಮದುವೆಯನ್ನು ನಾನು ನೋಡಿದ್ದೇನೆ. ಹೋಮ ನಡೆಸಿ ಗಂಟೆಗಟ್ಟಲೆ ವಧು -ವರರನ್ನು ಕೂರಿಸಿ ಮಂತ್ರ ಉಚ್ಚರಿಸಿ ಆದ ಮದುವೆಯನ್ನೂ ನೋಡಿದ್ದೇನೆ. ಮಂತ್ರ ಉಚ್ಚರಣೆ ಕಷ್ಟ ಆದವರಿಗೆ ಮಂತ್ರ ಹೇಳಲೇ ಬೇಕೆಂಬ ಒತ್ತಡ ಇಲ್ಲ. ಕೈ ಮುಗಿದರೆ ಸಾಕು. ಯಾ ಮಂತ್ರ ಹೇಳದಿದ್ದರೂ ಮನಃಸಾಕ್ಷಿಯಾಗಿ ಗಂಡ - ಹೆಂಡತಿ ಜೀವಿಸಬೇಕು.
ಸ್ತ್ರೀ ಭಿ. ಭರ್ತೃವಚಃ ಕಾರ್ಯಂ ಏಷ ಧರ್ಮಃ ಪರಃ ಸ್ತ್ರೀಯಾಃ|
ಸದ್ವೃತ್ತಚಾರಿಣೀಂ ಪತ್ನೀಂತ್ಯಕ್ತ್ವಾ ಪತತಿ ಧರ್ಮತಃ||
- ಯಾಜ್ಞ ವಲ್ಕಸಂಹಿತಾ.
ಹೆಂಗಸರು ಗಂಡನ ಮಾತನ್ನು ಪಾಲಿಸಬೇಕು. ಇದೇ ಅವರಿಗೆ ಪರಮಧರ್ಮ ಸದಾಚಾರಶೀಲಳಾದ ಹೆಂಡತಿಯನ್ನು ಬಿಟ್ಟರೆ ಗಂಡನು ಧರ್ಮದಿಂದ ಪತಿತ ನಾಗುತ್ತಾನೆಂಬುದು ಇದರ ಅರ್ಥ. ಹೋಮ ಹವಿಸ್ಸು ಇಲ್ಲದ್ದರೂ ಸತಿ ಪತಿ ಧರ್ಮದ ಹಾದಿಯಲ್ಲಿ ನಡೆದರೆ ಅದೇ ದೊಡ್ಡ ಹೋಮ. ಮದುವೆಯಾಗಿ ನಾಲ್ಕು ತಿಂಗಳಲ್ಲಿ ಹೆಂಡತಿಯನ್ನು ಕೈಬಿಟ್ಟು ಇನ್ನೊಂದು ಹೆಣ್ಣಿನೊಂದಿಗೆ ಸಖ್ಯ ಬೆಳೆಸಿ ಮೊದಲು ಹೆಂಡತಿಯ ಕಣ್ಣೀರಿಗೆ ಕಾರಣನಾಗುವ ಅಧರ್ಮಿ ಗಂಡಸರು ನಮ್ಮಲ್ಲಿ ಬಹಳಷ್ಟು ಇದ್ದಾರೆ. ದುಡ್ಡಿಗಾಗಿಯೇ ಮದುವೆಯಾಗುವವರಿದ್ದಾರೆ. ಗಂಡ ಹೆಂಡತಿಯರು ಮನಃಸಾಕ್ಷಿ ಮತ್ತು ಧರ್ಮದ ತಳಹದಿಯಲ್ಲಿ ಸಂಸಾ ರಸ್ಥರಾದರೆ ಸಕಲವೂ ವೃದ್ಧಿಯಾಗುತ್ತದೆ.
ಮದುವೆಯಲ್ಲಿನ ಡಂಬಾಚಾರ, ಮದರಂಗಿ, ಕುಡಿತ, ಕುಣಿತ ಅವರವರ ಇಷ್ಟವೆಂದು ನೀವು ಹೇಳುತ್ತೀರಿ. ಇದನ್ನು ಮಾಡುವುರಿಂದ ಆ ಮನೆಯ ಸುತ್ತ ಮುತ್ತಲಿನವರಿಗೆ ಇಡೀ ರಾತ್ರಿ ಇವರ ಕುಣಿತದಿಂದ ನಿದ್ದೆ ಇಲ್ಲ. ಪರೀಕ್ಷೆಗೆ ಓದುವವರಿಗೆ ಚಿಕ್ಕ ಮಕ್ಕಳಿಗೆ, ಎದೆನೋವು ಇರುವ ಪ್ರಾಯಸ್ಥರಿಗೆ ಎಲ್ಲರಿಗೂ ಉಪದ್ರಕಾರಿ. ಇನ್ನೊಂದು ಕುಡಿತ. ಯುವ ಸಮುದಾಯದವನ್ನು ಮದರಂಗಿ ಹೆಸರಲ್ಲಿ ದುರಾಭ್ಯಾಸಕ್ಕೆ ದೂಡುವ ಪ್ರಕ್ರಿಯೆ. ಸ್ವಸ್ಥ ಸಮಾಜ ಕಟ್ಟುವ ಬದಲು ಕುಡುಕ ಸಮಾಜ ಸೃಷ್ಠಿ ಮಾಡುವ ಇಂತಹವುಗಳು ಅನಿವಾರ‍್ಯವಲ್ಲ. ಕುಡಿತ, ಕುಣಿತ, ಯಾವುದೂ ಇಲ್ಲದೆ ಮದುವೆಯಾಗುವುದಿಲ್ಲವೇ? ನನ್ನ ಮದುವೆಯಲ್ಲಿ ಕುಡಿತ, ಕುಣಿತ, ಡಿಜೆ ಸೌಂಡ್ಸ್ ಎಂಥದ್ದೂ ಇರಲಿಲ್ಲ. ನನಗೇನೂ ಆಗಲಿಲ್ಲ. ತಾಳಿ ಇರಬೇಕು. ಹೂ ಹಾರ ಇರಬೇಕು. ಹಿರಿಯರು ಇರಬೇಕು. ಬಂಧುಗಳೆಲ್ಲರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರೆ ಎಲ್ಲಿ ನಷ್ಟ ಆಗುತ್ತದೆ. ನೀವು ಹೇಳಿದ ಮಾರ್ಗದರ್ಶಿ ಪುಸ್ತಕ ಯಾವುದು? ಮದುವೆ ಹೀಗೆ ಇತ್ತು ಎಂಬ ನಿರ್ದೇಶನ ನೀಡಬಹುದಾದ ಪುಸ್ತಕ ಯಾವುದು? ತುಳುನಾಡಿನ ಪ್ರಾಚೀನ ಮದುವೆಗಳ ಪರಿಕರಗಳು ಇಂಥವು ಎಂದು ತಿಳಿಸಿಕೊಡುವ ಪುಸ್ತಕ ಯಾವುದು ಹೇಳಿ.
ನಮ್ಮ ತುಳುನಾಡಿನ ಜನ ಜೀವನ, ಆಚಾರ, ವಿಚಾರ ಸಂಸ್ಕೃತಿ ಇತ್ಯಾದಿ ಅಧ್ಯಯನ ನಡೆಸಿದ ವಿದೇಶಿ ಪ್ರವಾಸಿಗರ ಗ್ರಂಥಗಳಿಗೆ ಬೆಲೆ ಇಲ್ಲವೆಂದು ನಾನು ಹೇಳಿಲ್ಲ. ಅದೊಂದೇ ಮಾನದಂಡವಲ್ಲವೆಂದಿದ್ದು. ತಾಳಿಯ ವಿಚಾರವಾಗಿ ವಿದೇಶಿ ಬರಹಗಾರರ ಅಧ್ಯಯನ ಗ್ರಂಥದಲ್ಲಿ ತುಳುನಾಡಿನ ಮದುವೆಯಲ್ಲಿ ತಾಳಿ ಇರಲಿಲ್ಲ ಎಂಬುದು ಆ ಕ್ಷಣವೇ ತಾಳಿ ಇಲ್ಲದೆ ಮದುವೆ ನಡೆಯುತ್ತಿತ್ತು ಎಂಬ ಸ್ಪಷ್ಟ ನಿರ್ಧಾರಕ್ಕೆ ಬರುವುದು ಸರಿಯಲ್ಲ ವೆಂದಿದ್ದು ನಾನು. ಬೇರೆ ಬೇರೆ ಸಾಧ್ಯತೆಗಳಿತ್ತಾ? ಬೇರೆ ಬೇರೆ ಜಾತಿ ಪಂಗಡಗಳಲ್ಲಿ ತಾಳಿ ಕಟ್ಟಿ ವಿವಾಹವಾದ ಕುರುಹುಗಳು ೨೦೦ ವರ್ಷದ ಪೂರ್ವದಲ್ಲಿ ತುಳುನಾಡಿನಲ್ಲಿ ಇತ್ತಾ ಎಂಬುದನ್ನು ಅಧ್ಯಯನ ನಡೆಸಬೇಕಾಗುತ್ತದೆ. ಒಂದೇ ಗ್ರಂಥದ ಆಧಾರವಿಟ್ಟು ವಾದ ಮಾಡುವುದರಲ್ಲಿ ಗಟ್ಟಿತನವಿಲ್ಲ ಎಂದದ್ದು ನಾನು.
ನಿಮ್ಮ ಮೊದಲ ಎರಡೂ ಪತ್ರವನ್ನು ಓದಿ ಅರ್ಥಮಾಡಿಕೊಂಡು ಉತ್ತರ ನೀಡಿದ್ದೇನೆ ನಿಮ್ಮ ಪತ್ರದಲ್ಲಿನ ವಿಚಾರ, ಹಿನ್ನೆಲೆ, ಗ್ರಹಿಕೆ, ಬಳಸಿದ ಶಬ್ದಗಳು, ಪೂರಕ ವಿಚಾರಗಳು, ಆಗ್ರಹಗಳು, ಅವಸರಗಳು ವಿಷಯ ಪಲ್ಲಟಗಳು ಅಥವಾ ವಿಷಯಾಂತರಗಳು, ನಾನೇ ಗೆಲ್ಲುವ ತವಕ, ಪ್ರಶ್ನೆಗಳು ಅದರಲ್ಲಿನ ಜಟಿಲ ನೀತಿಗಳು, ತಂತ್ರಗಳು, ಆರೋಪಗಳು ಎಲ್ಲವನ್ನೂ ಅರ್ಥಮಾಡಿಕೊಂಡೇ ಉತ್ತರಿಸುವುದಕ್ಕೆ ತೊಡಗಿದ್ದು ಜಯರಾಮರೇ. ನಿಮ್ಮ ಮೇಲೆ ಆರೋಪವೇನು ಮಾಡಿದ್ದೇನೆ? ಅದರಿಂದ ಲಾಭವೇನಾದರೂ ಇದೆಯೇ? ವ್ಯಕ್ತಿ ನಿಂದೆ ಬರಹದಲ್ಲಿ ಇರಬಾರದು ಎಂದಿದ್ದು ನಿಮಗೆ ಆರೋಪವಾಗಿ ಕಾಣುತ್ತದೆ. ನಿಮ್ಮ ಎರಡನೆಯ ಪತ್ರದ ಕೊನೆಯ ಸಾಲಿನಲ್ಲಿ ಪೂಜಾರಿಯವರ ಬಗ್ಗೆ ಬರೆದ ಉಲ್ಲೇಖ ವ್ಯಕ್ತಿ ನಿಂದನೆಯಾಗಿ ಕಾಣುತ್ತದೆ. ಚಾವಡಿಯಲ್ಲಿ ಯಾರನ್ನೂ ನಿಂದಿಸದೆ, ವಿಷಯದ ಬಗ್ಗೆ ಮಾತ್ರ ವಾದ ಮಂಡನೆ ಮಾಡಬೇಕಾಗುತ್ತದೆ. ವೈಯಕ್ತಿಕವಾಗಿ ಓರ್ವರ ಬಗ್ಗೆ ವಾದ ಮಾಡುವುದಾದರೆ ನಾನು ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ತಾಳಿ, ಅಮಂಗಲೆ, ಸುಮಂಗಲೆ, ಶೋಷಣೆ ಇದರ ಬಗ್ಗೆ ನೀವು ಅಭಿಪ್ರಾಯ ವ್ಯಕ್ತಪಡಿಸಿದರೆ ನನ್ನ ಅಭಿಪ್ರಾಯ ಬರೆಯುವುದಕ್ಕೆ ಸಿದ್ದನಾಗಿಯೇ ಇದ್ದೇನೆ.
ಮೇಷ : ಪ್ರಯಾಣದಲ್ಲಿ ಕಷ್ಟ ನಷ್ಟ ಉಂಟಾಗುತ್ತದೆ.
ವೃಷಭ : ಧಾರ್ಮಿಕ ಕಾರ್ಯಗಳಿಗೆ ಅಡಚಣೆಯಾಗುವುದು.
ಮಿಥುನ : ವಿದ್ಯಾರ್ಥಿಗಳಿಗೆ ಅಲಸ್ಯ ಹೆಚ್ಚಾಗಲಿದೆ.
ಕರ್ಕಾಟಕ : ಗಣ್ಯ ವ್ಯಕ್ತಿಗಳಿಂದ ಸಹಕಾರ ಇರುತ್ತದೆ.
ಸಿಂಹ : ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ಕನ್ಯಾ : ಕೆಲಸ ಕಾರ್ಯಗಳಿಗಾಗಿ ಅಲೆದಾಟ ನಡೆಸುತ್ತೀರಿ.
ತುಲಾ : ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ.
ವೃಶ್ಚಿಕ : ವ್ಯಾಪಾರದಲ್ಲಿ ಪ್ರಗತಿ ಕಡಿಮೆ ಇರುತ್ತದೆ.
ಧನು : ಹಣಕಾಸಿನ ಅನುಕೂಲ ಇರುತ್ತದೆ.
ಮಕರ : ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ.
ಕುಂಭ : ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿ ಇರುತ್ತದೆ.
ಮೀನ : ಉದ್ಯೋಗದಲ್ಲಿ ತೊಂದರೆ ಉಂಟಾಗಲಿದೆ.
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೇ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.
ಕಂಕನಾಡಿ: ಸೇಲ್ಸ್‌ಗರ್ಲ್ಸ್, ಸೇಲ್ಸ್ ಬಾಯ್ ಮತ್ತು ಸ್ಟಿಚಿಂಗ್ ಗೊತ್ತಿದ್ದ ಹುಡುಗಿಯರು ಬೇಕು ೯೮೪೪೩೮೧೧೧೮.
ಕುಂಟಿಕಾನ : ಬೇಕರಿಗೆ ಹೆಲ್ಪರ್ ಕೆಲಸಕ್ಕೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು: ಲಾರಿ ಚಾಲಕರು ಬೇಕು ೮೦೯೫೩೪೦೪೫೮.
ಕಾವೂರು :ಬಾರ್‌ಗೆ ವೇಟರ್, ಕಿಚನ್ ಹೆಲ್ಪರ್, ಕ್ಲೀನರ್ ಬೇಕು ೦೮೨೪ ೨೪೮೧೭೦೪.
ಕುತ್ತಾರಿನ ಪೆಟ್ರೋಲ್ ಪಂಪ್‌ವೊಂದಕ್ಕೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ೯೬೮೬೩೬೧೫೩೫
ಕುದ್ರೋಳಿ: ಫೋಟೋಶಾಪ್, ಕೋರಲ್‌ಡ್ರಾ ತಿಳಿದವರು ಬೇಕು ೯೨೪೨೮೮೭೪೩.
ವರ್ಕಾಡಿ: ಸಸ್ಯಾಹಾರಿ ಹೊಟೇಲಿಗೆ ವೇಟರ್ ಬೇಕು ೦೯೦೨೦೧೪೪೪೬೮.
ಮಂಗಳೂರು: ಲೇಡೀಸ್ ಸ್ಟಾಫ್ ಬೇಕು ೯೪೪೯೪೪೧೨೩೪.
ಮಂಗಳೂರು: ಆಫೀಸ್ ಕೆಲಸಕ್ಕೆ ಎಸೆಸೆಲ್ಸಿ ಪಾಸ್, ಫೈಲಾದವರು ಬೇಕು ೯೦೧೯೭೦೯೯೯೩.
ಮಲ್ಪೆ: ಹೊಟೇಲ್‌ಗೆ ಕುಕ್ ಬೇಕು ೭೮೯೯೧೨೦೯೯೮.
ಮಂಗಳೂರು: ಕಲರ್ ಲ್ಯಾಬ್‌ಗೆ ಗ್ರಾಫಿಕ್ ಡಿಸೈನರ್ ಮತ್ತು ಮ್ಯಾನೇಜರ್ ೨೪೪೦೮೦೩.
ಮಂಗಳೂರು: ಜೂಸ್‌ಮೇಕರ್, ಸಪ್ಲಾಯರ್ ಬೇಕು ೮೭೨೨೨೭೮೩೬೩.
ಮೂಡುಬಿದ್ರೆ: ಟ್ಯುಟೋರಿಯಲ್ ಕೆಲಸಕ್ಕೆ ಲೇಡಿ ಸ್ಟಾಫ್ ಬೇಕು ೦೮೨೫೮-೨೬೧೦೬೦.
ಮಂಗಳೂರು: ಹೊಟೇಲ್‌ಗೆ ಕ್ಲೀನರ್, ಅಡುಗೆಯವರು, ತಿಂಡಿಯವರು ಬೇಕು ೮೧೦೫೬೭೦೫೩೮.
ಮಂಗಳೂರು: ಅತ್ತಾವರದ ಅಪಾರ್ಟ್ ಮೆಂಟ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೯೮೮೦೮೦೯೮೦೩.
ಹಂಪನಕಟ್ಟೆ: ಸೇಲ್ಸ್‌ಗರ್ಲ್ಸ್ ಬೇಕು ೯೯೧೬೮೨೩೯೯೪.
ಮೂಡಬಿದ್ರೆ: ಡಿಟಿಪಿ ತಿಳಿದಿರುವ ಯುವತಿ ಯರು ಬೇಕು ೯೮೪೪೪೯೮೦೯೮.
ಮೂಡಬಿದ್ರೆ: ಎಲೆಕ್ಟ್ರಿಕಲ್ ಪೈಪ್ ಕಟ್ಟಿಂಗ್‌ಗೆ ಜನ ಬೇಕು ೯೭೩೯೩೨೪೨೫೫.
ಸುರತ್ಕಲ್: ಬಾರ್‌ಗೆ ಜನ ಬೇಕು ೯೮೪೫೮೪೭೯೯೧.
ಕದ್ರಿ: ೪೦೭ & ಪಿಕಪ್‌ಗೆ ಡ್ರೈವರ್ ಬೇಕು ೯೪೪೮೪೮೪೭೯೯.
ಕಟೀಲು: ಮನೆ ಕೆಲಸಕ್ಕೆ ಹೆಂಗಸರು ಬೇಕು ೮೭೪೮೦೩೪೬೦೯.
ತೊಕ್ಕೊಟ್ಟು: ಬಾರ್&ರೆಸ್ಟೋರೆಂಟ್‌ಗೆ ವೇಟರ್ ಬೇಕು ೯೭೪೨೨೮೫೪೮೫.
ಹರಿಕೃಷ್ಣ ಪುನರೂರು ಆರೋಪ
ಮಂಗಳೂರು: ಸದಾ ಒಂದ ಲ್ಲೊಂದು ಒಂದು ಕಾರಣಕ್ಕೆ ಸುದ್ದಿ ಯಲ್ಲಿರುವ ಉಡುಪಿ ಜಿಲ್ಲೆಯ ಕೊಲ್ಲೂರಿನ ಮೂಕಾಂಬಿಕ ದೇವಾ ಲಯ ಮತ್ತೆ ವಿವಾದದಲ್ಲಿದೆ. ಇಲ್ಲಿ ಕೃಷ್ಣ ಪ್ರಸಾದ್ ಅಡ್ಯಂತಾಯರನ್ನು ಹಲವರ ವಿರೋಧದ ನಡುವೆಯೂ ಆಯ್ಕೆ ಮಾಡಿರುವುದರ ಹಿನ್ನೆಲೆಯನ್ನು ಹರಿಕೃಷ್ಣ ಪುನರೂರು ಕೆದಕಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಕೊಲ್ಲೂರು ದೇವಾ ಲಯದ ಮಾಜಿ ಆಡಳಿತ ಮೊಕ್ತೇಸ ರರೂ ಆಗಿರುವ ಹರಿಕೃಷ್ಣ ಪುನರೂರು ಕೃಷ್ಣ ಪ್ರಸಾದ್ ಅಡ್ಯಂತಾಯರ ಆಯ್ಕೆಯ ಹಿಂದೆ ಕಲ್ಲಡ್ಕ ಹೈಕ ಮಾಂಡ್ ಕೆಲಸ ಮಾಡಿರುವುದನ್ನು ಮಾಹಿತಿ ಹಕ್ಕಿನ ವರದಿಯ ಆಧಾ ರದಲ್ಲಿ ಬಹಿರಂಗಪಡಿಸಿದ್ದಾರೆ.
ಕೊಲ್ಲೂರು ದೇವಳದಿಂದ ೨೦೦೭ರಿಂದ ೨೦೧೨ರ ಅವಧಿಯಲ್ಲಿ ಸುಮಾರು ಒಂದು ಕೋಟಿಯ ಸಹಾಯಧನವನ್ನು ಪ್ರಭಾಕರ ಭಟ್ ಅವರ ಉಸ್ತುವಾರಿಯ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಮತ್ತು ದೇವಿ ವಿದ್ಯಾ ಕೇಂದ್ರ ಪುಣಚಕ್ಕೆ ನೀಡಿರುವುದು ಬೆಳಕಿಗೆ ಬಂದಿದೆ.
ಅವಳಿ ಜಿಲ್ಲೆಯಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಹಲವು ವಿದ್ಯಾ ಸಂಸ್ಥೆಗಳಿದ್ದರೂ ಕಲ್ಲಡ್ಕ ಭಟ್ಟರ ಕೃಪೆಗೆ ಪಾತ್ರರಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ಅಡ್ಯಂತಾಯ ಭಾರೀ ಮೊತ್ತದ ದೇಣಿಗೆಯನ್ನು ಕೊಲ್ಲೂರು ದೇವಳದ ವತಿಯಿಂದ ನೀಡಲಾಗಿದೆ ಎಂದು ಹರಿಕೃಷ್ಣ ಪುನರೂರು ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿದ್ದಾರೆ.
ಉಸ್ತುವಾರಿಯ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಮತ್ತು ದೇವಿ ವಿದ್ಯಾ ಕೇಂದ್ರ ಪುಣಚಕ್ಕೆ ನೀಡಿರುವುದು ಬೆಳಕಿಗೆ ಬಂದಿದೆ. ಅವಳಿ ಜಿಲ್ಲೆಯಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಹಲವು ವಿದ್ಯಾ ಸಂಸ್ಥೆಗಳಿದ್ದರೂ ಕಲ್ಲಡ್ಕ ಭಟ್ಟರ ಕೃಪೆಗೆ ಪಾತ್ರರಾಗಬೇಕೆಂಬ ಏಕಮಾತ್ರ ಉದ್ದೇಶದಿಂದ ಅಡ್ಯಂತಾಯ ಭಾರೀ ಮೊತ್ತದ ದೇಣಿಗೆಯನ್ನು ಕೊಲ್ಲೂರು ದೇವಳದ ವತಿಯಿಂದ ನೀಡಲಾಗಿದೆ ಎಂದು ಹರಿಕೃಷ್ಣ ಪುನರೂರು ಪತ್ರಿಕಾ ಹೇಳಿಕೆ ಮೂಲಕ ಆರೋಪಿಸಿದ್ದಾರೆ. ನೂರಾರು ಜನರು ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಸಂದರ್ಶನ ನಡೆಯದೆ ನೇಮಕಾತಿ ನಡೆದಿದೆ ಎಂದಿರುವ ಹರಿಕೃಷ್ಣ ಪುನರೂರು ನ್ಯಾಯಕ್ಕಾಗಿ ಕಾನೂನು ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಸುಳ್ಯ: ಇಲ್ಲಿನ ನಾಯಿಮರಿಗಾಗಿ ನಡೆದ ಜಗಳ ತಾರಕಕ್ಕೇರಿ ಎರಡು ಮನೆಯವರು ಹೊಡೆದಾಡಿಕೊಂಡಿರುವ ಘಟನೆ ಸುಳ್ಯದ ಆರಂತೋಡುವಿನ ಕಳುಬೈಲು ಎಂಬಲ್ಲಿ ನಿನ್ನೆ ನಡೆದಿದೆ.
ಕಳುಬೈಲು ನಿವಾಸಿ ಅನಂತೇಶ್ವರ ಎಂಬವರ ಮನೆಯಲ್ಲಿ ನಾಯಿಮರಿ ಯೊಂದಿತ್ತು. ಇವರ ಪಕ್ಕದ ಮನೆಯಲ್ಲಿರುವ ಜಗದೀಶ ಎಂಬವರ ಪತ್ನಿ ಕುಸುಮಾವತಿಯವರ ಮನೆಯಲ್ಲಿ ನಾಯಿಯೊಂದು ನಾಲ್ಕು ಮರಿಗಳನ್ನಿಟ್ಟಿತ್ತು. ಅದರಲ್ಲಿ ಒಂದು ನಾಯಿ ಮರಿ ಕಾಣೆಯಾಗಿ ಕೇವಲ ಮೂರು ಮಾತ್ರ ಇದ್ದವು. ಇದರಿಂದ ಸಂಶಯಗೊಂಡ ಕುಸುಮಾವತಿ ಅನಂತೇಶ್ವರನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅದು ತಮ್ಮ ನಾಯಿ ಮರಿ ಎಂದು ವಾಗ್ವಾದಕ್ಕಿಳಿದಿದ್ದರು. ಆದರೆ ಅನಂತೇಶ್ವರ ವಿರಾಜಪೇಟೆಯಿಂದ ತಾನು ತಂದಿರುವ ನಾಯಿ ಮರಿಯೆಂದು ವಾದಿಸತೊಡಗಿದ್ದರು. ಇಬ್ಬರ ಜಗಳ ತಾರಕಕ್ಕೇರಿ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತು. ಈ ಕುರಿತು ಸಂಪಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಟ್ಲ: ವ್ಯಕ್ತಿಯೊಬ್ಬ ಕೇವಲ ೨೫ ರೂಪಾಯಿಗಾಗಿ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅಳಿಕೆ ಗ್ರಾಮದ ಮುಳಿಯ ನಿವಾಸಿ ಮಾಂಕು ಅವರ ಪುತ್ರ ರವಿ ಎಂಬ ವರೇ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಅದೇ ಗ್ರಾಮದ ನಿವಾಸಿ ರಾಮ. ಈತನ ಸಂಬಂಧಿಯಿಂದ ರವಿ ಕೆಲ ದಿನಗಳ ಹಿಂದೆ ೨೫ ರೂಪಾಯಿ ಸಾಲವನ್ನು ಪಡೆದಿದ್ದರು. ಗುರುವಾರ ದಂದು ರವಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿ ರಾಮ ಅವರನ್ನು ತಡೆದು ನಿಲ್ಲಿಸಿ 'ತನ್ನ ಚಿಕ್ಕಪ್ಪನಿಂದ ನೀನು ಪಡೆದುಕೊಂಡಿದ್ದ ೨೫ ರೂಪಾಯಿ ಸಾಲ ಯಾವಾಗ ಕೊಡುತ್ತಿಯಾ ಎಂದು ಬೆದರಿಸಿ ಅವ ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಅವರ ತಲೆಯ ಎಡ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ರವಿ ಗಂಭೀರವಾಗಿ ಗಾಯ ಗೊಂಡು ದಾರಿ ಮಧ್ಯೆ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆ ದಾಖಲು ಮಾಡಿದರು.
ಈ ಘಟನೆ ಸಂಬಂಧಿಸಿ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಅವರು ಆರೋಪಿಯನ್ನು ಬಂಧಿಸಿ ಮಂಗ ಳೂರು ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದ್ದು, ಆರೋಪಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು: ಮನೆಯ ಎದುರು ಮಲ ಬೀಸಾಡಿ, ಯುವತಿ ಹಾಗೂ ಆಕೆಯ ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಂದ್ರ ಹೊನ್ನಾವರ ಎಂಬಾತ ಗುರುವಾರ ರಾತ್ರಿ ಪಡುತೋನ್ಸೆ ಗ್ರಾಮದ ಕೋಡಿಬೆಂಗ್ರೆಯ ಚಂದ್ರಯ್ಯ ಎಂಬವರ ಮನೆ ಮುಂದೆ ಬಂದು ಮಲ ಬೀಸಾಡಿದ್ದು, ಇದನ್ನು ಚಂದ್ರಯ್ಯ ಅವರ ಮಗಳು ರಾಧಿಕಾ ಎಂಬವರು ಪ್ರಶ್ನಿಸಿದಾಗ, ನಾಳೆ ನಿನ್ನೆ ಮನೆ ಒಳಗೆ ಬೀಸಾಡುತ್ತೇನೆ ಮತ್ತು ನಿನಗೆ ತಿನ್ನಿಸುತ್ತೇನೆ ಎಂದು ಗದರಿಸಿದ್ದು, ಈ ಬಗ್ಗೆ ವಿಚಾರಿಸಲು ಚಂದ್ರಯ್ಯ ಮತ್ತು ಅವರ ಪತ್ನಿ ಬಂದಾಗ ಇತರ ಆರೋಪಿಗಳಾದ ಹರೀಶ, ಮಾಧವಕೃಷ್ಣ, ಚಿತ್ರಾಕ್ಷಿ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಚಂದ್ರಯ್ಯಗೆ ಹಲ್ಲೆ ನಡೆಸಿದಲ್ಲದೆ, ರಾಧಿಕಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಐಡಿಗೆ ದೂರು
ಬೆಂಗಳೂರು: ತಮಿಳು ಚಿತ್ರನಟಿ ರಂಜಿತಾ ಜೊತೆ ರಾಸಲೀಲೆ ನಡೆಸಿ ಪ್ರಚಾರದಲ್ಲಿರುವ ನಿತ್ಯಾನಂದ ಸ್ವಾಮಿ ಓರ್ವ ಸಲಿಂಗಕಾಮಿಯಾಗಿದ್ದು, ಆಶ್ರ ಮದ ಪುರುಷ ಭಕ್ತರ ಜೊತೆ ಪ್ರಕೃತಿ ವಿರುದ್ಧ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂದು ಮುಂಬೈಯ ಐಟಿಐ ವಿದ್ಯಾರ್ಥಿ ಯೋರ್ವ ಸಿಐಡಿ ಅಧಿಕಾರಿಗಳಿಗೆ ದೂರು ನೀಡಿದ್ದು, ನಿತ್ಯಾನಂದ ಸ್ವಾಮಿಯ ಕುತ್ತಿಗೆಗೆ ಮತ್ತೆ ಉರುಳು ಬಿಗಿಯುವ ಸಾಧ್ಯತೆಗಳಿವೆ ಎನ್ನಲಾ ಗುತ್ತಿದೆ.
ನಿತ್ಯಾನಂದ ಸ್ವಾಮಿ ಬಿಡದಿಯ ಆಶ್ರಮದಲ್ಲಿ ತನ್ನ ಭಕ್ತರ ಜೊತೆ ನಡೆಸಿರುವ ಲೈಂಗಿಕ ಕ್ರಿಯೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಮಹತ್ವದ ದಾಖಲೆಗಳು ಲಭಿಸಿದ್ದು, ಅದರ ಆಧಾರದಲ್ಲಿ ನಿತ್ಯಾನಂದ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಗಳಿವೆ ಎಂದು ನಂಬಲಾಗಿದೆ. ನಿತ್ಯಾನಂ ದನ ಆಶ್ರಮದಲ್ಲಿದ್ದ ಜಮುನಾರಾಣಿ ಎಂಬಾಕೆ ನಿತ್ಯಾನಂದನ ಸೆಕ್ಸ್ ಹಗರಣ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾ ಗಿದ್ದು, ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಜಮುನಾರಾಣಿ ನಿತ್ಯಾ ನಂದನ ಆಶ್ರಮಕ್ಕೆ ಬರುತ್ತಿದ್ದ ಭಕ್ತರ ಜೊತೆ ಗುಪ್ತ ಒಪ್ಪಂದವೊಂದನ್ನು ನಡೆಸುತ್ತಿದ್ದು, ಇದರನ್ವಯ ಅವರನ್ನು ಲೈಂಗಿಕ ಕ್ರಿಯೆಗೆ ಒಳಪಡಿಸುತ್ತಿದ್ದುದು ಬೆಳಕಿಗೆ ಬಂದಿತ್ತು.
ಇದೀಗ ನಾಪತ್ತೆಯಾಗಿರುವ ಜಮುನಾರಾಣಿ ವಿದೇಶದಲ್ಲಿ ತಲೆಮರೆಸಿಕೊಂಡಿರಬೇಕೆಂದು ಸಿಐಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಬಿಡದಿಯ ಆಶ್ರಮದಲ್ಲಿ ತನ್ನ ಭಕ್ತರಿಗೆ ತಾಂತ್ರಿಕ ಸೆಕ್ಸ್‌ಗೆ ಒತ್ತಡ ಹೇರುತ್ತಿದ್ದ ನಿತ್ಯಾನಂದ ಮಹಿಳಾ ಭಕ್ತರನ್ನು ಆಶ್ರಮದ ಶಯ್ಯಾಗೃಹವಲ್ಲದೆ ವಾರಣಾಸಿಯ ಫ್ಲಾಜಾ ಹೋಟೆಲ್‌ನಲ್ಲೂ ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸುತ್ತಿದ್ದ ಬಗ್ಗೆ ದಾಖಲೆಗಳಿವೆ ಎಂದು ನಿತ್ಯಾನಂದ ಕಾರು ಚಾಲಕ ಲೆನಿನ್ ಕರುಪ್ಪನ್ ವಿಚಾರಣೆಯ ಸಂದರ್ಭ ಸಿಐಡಿ ತಂಡಕ್ಕೆ ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಈತನ ಹೇಳಿಕೆಯಂತೆ ನಿತ್ಯಾನಂದ ಮೇಲೆ ಅತ್ಯಾಚಾರ, ವಂಚನೆ, ಸಲಿಂಗಕಾಮದ ಆರೋಪ ಹೊರಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಸಿಐಡಿ ತನಿಖಾದಳದ ಮುಖ್ಯಸ್ಥ ರೂಪ್‌ಕುಮಾರ್ ದತ್ತಾ ತಿಳಿಸಿದ್ದಾರೆ.
ತನ್ನ ಆಶ್ರಮದಲ್ಲಿ ಸ್ವಯಂಸೇವಕರಾಗಿ ಸೇರ್ಪಡೆಗೊಳ್ಳುವ ಯುವಕರಿಗೆ ಹಲವು ನಿಬಂಧನೆಗಳನ್ನು ವಿಧಿಸುತ್ತಿದ್ದ ಎನ್ನಲಾಗಿದ್ದು, ಪ್ರಾರಂಭದಲ್ಲೇ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಅವರಿಗೆ ಯಾವುದೇ ರೋಗಗಳಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದ. ನಂತರ ಅವರಿಗೆ ಆಶ್ರಮದಲ್ಲಿ ಸೆಕ್ಸ್ ದೃಶ್ಯಗಳನ್ನು ತೋರಿಸಲಾಗುತ್ತಿತ್ತು ಎಂದು ಹೇಳಿರುವ ಲೆನಿನ್, ಇದರಿಂದ ಲೈಂಗಿಕ ಕಾಮನೆಗಳನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯ ಎಂಬುದಾಗಿ ಭಕ್ತರನ್ನು ನಂಬಿಸಿ ವಂಚಿಸಲಾಗುತ್ತಿತ್ತು ಎಂದು ಹೇಳಿದ್ದಾನೆ. ತನ್ನ ಆಶ್ರಮದಲ್ಲಿ ನಡೆಯುತ್ತಿದ್ದ ಗುಪ್ತ ವ್ಯವಹಾರಗಳ ಬಗ್ಗೆ ಭಾರೀ ಮುಂಜಾಗ್ರತೆ ವಹಿಸುತ್ತಿದ್ದ ನಿತ್ಯಾನಂದ ಭಕ್ತರನ್ನು ತಾಂತ್ರಿಕ ಸೆಕ್ಸ್‌ಗೆ ಪ್ರೇರಣೆ ನೀಡಲು ಜಮುನಾದೇವಿಯನ್ನು ಬಳಸುತ್ತಿದ್ದ ಎಂಬ ಬಗ್ಗೆ ಲೆನಿನ್ ಆರೋಪ ಪಟ್ಟಿಯಲ್ಲಿ ಹೇಳಿದ್ದಾನೆ. ಮುಂಬೈಯ ಐಟಿಐ ವಿದ್ಯಾರ್ಥಿ ಜತೆ ನಿತ್ಯಾನಂದ ಸಲಿಂಗಕಾಮ ನಡೆಸಿದ್ದಕ್ಕೆ ಸಾಕ್ಷಿಯಾಗಿ ಸಿಐಡಿ ಪೊಲೀಸರಿಗೆ ಅನೇಕ ಮಾಹಿತಿ ಲಭಿಸಿದ್ದು, ಇದೇ ಆಧಾರದಲ್ಲಿ ನಿತ್ಯಾನಂದ ಮೇಲೆ ಮತ್ತೊಂದು ಚಾರ್ಜ್‌ಶೀಟ್ ಹಾಕಲಾಗಿದೆ. ದೇಶವೂ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ನಿತ್ಯಾನಂದ ಮತ್ತೆ ಭಕ್ತರನ್ನು ತನ್ನತ್ತ ಸೆಳೆಯಲು ಸಾಹಸ ಪಡುತ್ತಿರುವಂತೆಯೇ ಸಿಐಡಿ ಪೊಲೀಸರು ಮತ್ತೊಮ್ಮೆ ಆತನ ಹಿಂದೆ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಾರ್ಕಳ: ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಬೆಟ್ಟು ಶಾಲಾ ಬಳಿಯ ನಿವಾಸಿ ಖಾದರ್ ಎಂಬವರ ಮಗಳು ಮಣಾಲ್ (೧೮) ಹಾಗೂ ಕೌಡೂರು ನಿವಾಸಿ ಜಯಂತಿ ಎಂಬವರ ಮಗಳು ಅಕ್ಷತಾ(೧೬) ನಾಪತ್ತೆಯಾದವರು. ಪ್ರತ್ಯೇಕ ಎರಡು ನಾಪತ್ತೆ ಪ್ರಕರಣಗಳು ದಾಖಲಾಗಿವೆ.
ಚೆನ್ನೈ: ತನ್ನ ಪ್ರಿಯತಮನ ನಿಗೂಢ ಸಾವಿನಿಂದಾಗಿ ತನಿಖೆ ಎದುರಿಸಬೇಕಾಗಿ ರುವ ಐಟಂ ಗರ್ಲ್ ಅಲ್ಫೋನ್ಸಾ ಚೆನ್ನೈ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಡನ್ ಆಗಿ ಎಸ್ಕೇಪ್ ಆಗಿದ್ದಾಳೆ. ಆಕೆ ಹೈದರಾ ಬಾದಿನ ರಹಸ್ಯ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿ ಸಿದ್ದಾರೆ.
ಪ್ರಿಯಕರ ವಿನೋದ್ ನಿಗೂಢವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಫೋನ್ಸಾ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಈ ಬಗ್ಗೆ ವಿನೋದ ಬಂಧುಮಿತ್ರರು ಪೊಲೀ ಸರಿಗೆ ದೂರು ನೀಡಿದ್ದರು. ವಿನೋದ ಅವರದು ಹತ್ಯೆಯೇ ಅಥವಾ ಆತ್ಮಹ ತ್ಯೆಯೇ ಎಂದು ಪೊಲೀಸರು ವಿಚಾರಣೆ ಮಾಡುತ್ತಿದ್ದರು. ಅಷ್ಟರಲ್ಲಾಗಲೆ ಅಲ್ಫೋನ್ಸಾ ಎಸ್ಕೇಪ್ ಆಗಿದ್ದಾಳೆ.
ತನ್ನನ್ನು ಎಲ್ಲಿ ಪೊಲೀಸರು ಬಂಧಿಸು ತ್ತಾರೋ ಎಂಬ ಭಯದ ಕಾರಣ ಅಲ್ಫೋನ್ಸಾ ಮುಂಜಾಗ್ರತೆಯಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಫೋನ್ಸಾ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಫೋನ್ಸಾ ರಹಸ್ಯ ಸ್ಥಳಕ್ಕೆ ಎಸ್ಕೇಪ್ ಆಗಿದ್ದಾರೆ ಎನ್ನುತ್ತವೆ ಮೂಲಗಳು.
ಮಂಗಳೂರು: ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಭೋಜೇಗೌಡರು ಹೀನಾ ಯ ಸೋಲು ಅನುಭವಿಸಿದ್ದು ಇದಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿಯವರನ್ನು ಪಕ್ಷ ದಿಂದಲೇ ಉಚ್ಚಾಟಿಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಹಿಂದೆಯೂ ಎರಡು ಬಾರಿ ಪಕ್ಷಕ್ಕೆ ರಾಜೀನಾಮೆ ನೀಡಿ ತದನಂತರ ಪಕ್ಷದ ಒತ್ತಡಕ್ಕೆ ಮಣಿದು ಜಿಲ್ಲಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದು ಅಧ್ಯಕ್ಷ ಹುದ್ದೆ ಪಡೆದು ಪಕ್ಷವನ್ನು ಮತ್ತಷ್ಟು ಅಧಃಪತನದತ್ತ ಕೊಂಡೊ ಯ್ದಿದ್ದರು. ಇದೀಗ ಮತ್ತೆ ರಾಜೀನಾಮೆ ಯ ನಾಟಕವಾಡುವ ದೇವಿಪ್ರಸಾದ್ ಶೆಟ್ಟಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ನೀಡಬಾರದು. ಪಕ್ಷ ಸಂಘ ಟನೆಯ ಬದಲು ಪಾರ್ಟಿಫಂಡ್‌ನಲ್ಲೇ ಜೀವನ ನಡೆಸುವ ದೇವಿಪ್ರಸಾದ್‌ರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಉಡುಪಿಯ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್‌ನ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ದಾರೆ. ಪಕ್ಷ ಹೀನಾಯ ಸೋಲಿಗೆ ಅಲ್ಪಸಂಖ್ಯಾತರು ಮತ ಹಾಕಲಿಲ್ಲ ಎಂದು ಅಲ್ಪಸಂಖ್ಯಾತರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡಿರುವುದಕ್ಕೆ ಜೆಡಿಎಸ್ ಮುಖಂಡ ಯು.ಆರ್.ಸಭಾಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆಯ ವಿಫಲತೆಯಿಂದ ಅಭ್ಯರ್ಥಿ ಭೋಜೇಗೌಡ ಸೋತಿದ್ದಾರೆ. ಅವರ ಸೋಲಿಗೆ ಅಲ್ಪಸಂಖ್ಯಾತರನ್ನು ಹೊಣೆಯಾಗಿಸುವುದು ಬೇಡ ಎಂದು ಸಭಾಪತಿ ತಿಳಿಸಿದ್ದಾರೆ. ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನಾತ್ಮಕವಾಗಿ ಬಲಾಢ್ಯವಾಗಿತ್ತು. ಯಾವಾಗ ದೇವಿಪ್ರಸಾದ್ ಶೆಟ್ಟಿ ಆ ಪಕ್ಷಕ್ಕೆ ವಕ್ಕರಿಸಿದರೋ ಆ ನಂತರ ಪಕ್ಷದಲ್ಲಿದ್ದ ನಿಷ್ಠಾವಂತ ಕಾರ್ಯಕರ್ತರು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಜಿಗಿದರು.
ಈ ಹಿಂದೆ ಬೆಳಪುವಿನಲ್ಲಿ ಪಂದ್ಯಾಟ ನಡೆಸಿ ಆ ಪಂದ್ಯಾಟಕ್ಕೆ ಜೆಡಿಎಸ್‌ನ ರಾಷ್ಟ್ರೀಯ ನಾಯಕ ದೇವೇಗೌಡರನ್ನು ಆಹ್ವಾನಿಸಿ ಅವರಿಗೆ ತನ್ನಲ್ಲಿದ್ದ ಅಲ್ಪಸ್ವಲ್ಪ ಸಂಘಟನಾ ಚಾತುರ್ಯತೆಯನ್ನು ತೋರ್ಪಡಿಸಿ ಜೆಡಿಎಸ್ ಪಕ್ಷಕ್ಕೆ ಜಿಗಿದು, ತದನಂತರ ಆ ಪಕ್ಷದಲ್ಲಿ ಜಿಲ್ಲಾಧ್ಯಕ್ಷ ಹುದ್ದೆ ಪಡೆದು ತನಗೆ ಬೇಕಾದಂತೆ ಪದಾಧಿಕಾರಿಗಳನ್ನು ಸೇರಿಸಿ ರಾಜಕೀಯ ಮಾಡುತ್ತಾ ಬಂದಿರುವ ದೇವಿಪ್ರಸಾದ್ ಶೆಟ್ಟಿಯಿಂದ ಯಾವುದೇ ಸಂಘಟನೆ, ಪಕ್ಷದ ಬೆಳವಣಿಗೆ ಆಗಲಿಲ್ಲ.
ಕೇವಲ ಬೆಳಪು ಗ್ರಾಮಕ್ಕೆ ಮಾತ್ರ ಸೀಮಿತರಾಗಿದ್ದ ದೇವಿಪ್ರಸಾದ್ ಶೆಟ್ಟಿ ಚುನಾವಣೆಗಳು ಬಂದಾಗಲೆಲ್ಲಾ ಪಕ್ಷದಿಂದ ಬರುತ್ತಿದ್ದ ಪಾರ್ಟಿಫಂಡ್‌ಗಳನ್ನು ಸರಿಯಾಗಿ ವಿನಿಯೋಗಿಸದೆ ಜೇಬಿಗೆ ತುರುಕಿಸುತ್ತಿದ್ದರೆಂದು ಅದೇ ಪಕ್ಷದ ಕಾರ್ಯಕರ್ತರು ದೂರಿಕೊಂಡಿದ್ದಾರೆ. ಈ ಬಾರಿಯೂ ಭೋಜೇಗೌಡರಿಂದ ಲಕ್ಷಾಂತರ ಹಣ ಪೀಕಿಸಿದ ದೇವಿ, ರಾಜ್ಯ ಘಟಕದಿಂದ ಬಂದ ಹಣವನ್ನು ಬೂತ್ ಮಟ್ಟದ ಕಾರ್ಯಕರ್ತರಿಗೂ ವಿತರಿಸದೆ ಆ ಹಣದಿಂದ ಮತ್ತಷ್ಟು ದುಂಡಗಾಗಿದ್ದಾರೆಂದು ಕಾರ್ಯಕರ್ತರು ವ್ಯಂಗ್ಯವಾಡುತ್ತಿದ್ದಾರೆ.
ಸಭಾಪತಿಗೆ ಅಧ್ಯಕ್ಷ ಹುದ್ದೆ?
ಉಡುಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದೇವಿಪ್ರಸಾದ್ ಶೆಟ್ಟಿ ನೀಡಿದ ರಾಜೀನಾಮೆಯನ್ನು ಜೆಡಿಎಸ್ ರಾಜ್ಯ ಘಟಕ ಅಂಗೀಕರಿಸಿ ಅವರ ಸ್ಥಾನಕ್ಕೆ ಮಾಜಿ ಶಾಸಕ ಯು.ಆರ್. ಸಭಾಪತಿಯನ್ನು ನೇಮಿಸಬೇಕೆಂದು ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಯು.ಆರ್.ಸಭಾಪತಿ ಹೋರಾಟಗಾರ, ಚಿಂತಕ, ಸಾಮಾಜಿಕ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿ ಕೊಂಡವರು. ಈ ಹಿಂದೆ ಮೂರ್ತೆದಾರರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಯಶಸ್ಸು ಸಾಧಿಸಿದವರು. ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ, ಸೇವಾದಳದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದವರು. ಪಕ್ಷ ಸಂಘಟನೆಯಲ್ಲಿ ಅವರದ್ದು ಎತ್ತಿದ ಕೈ. ಇತ್ತೀಚೆಗೆ ಜೆಡಿಎಸ್ ಸೇರಿರುವ ಸಭಾಪತಿಯವನ್ನು ಜೆಡಿಎಸ್‌ನ ಜಿಲ್ಲಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದರೆ ಪಕ್ಷ ಮತ್ತೆ ಹಿಂದಿನ ವರ್ಚಸ್ಸು ಪಡೆಯಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷರ ಕಾರು, ಕಚೇರಿ, ವಾಕಿಟಾಕಿ ದುರುಪಯೋಗ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಈ ಅವ ಧಿಯ ಕೊನೆಯ ಮೇಯರ್ ಆಯ್ಕೆ ಗೊಂಡು ಅಧಿಕಾರ ಸ್ವೀಕರಿಸಿ ಸ್ಥಾಯಿ ಸಮಿತಿ ಸದಸ್ಯರ ನೇಮಕವಾಗಿದ್ದರೂ, ಈ ಹಿಂದಿನ ಸ್ಥಾಯಿ ಸಮಿತಿ ಅಧ್ಯಕ್ಷರು ಗಳು ಅಧಿಕಾರ ಬಿಟ್ಟುಕೊಡದೆ ಸರಕಾರದ ಸೊತ್ತನ್ನು ದುರುಪಯೋಗ ಪಡಿಸಿಕೊ ಳ್ಳುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
೨೦೧೧-೧೨ನೇ ಸಾಲಿನ ಸ್ಥಾಯಿ ಸಮಿತಿಯ ಅಧಿಕಾರಾವಧಿಯು ಫೆಬ್ರವರಿ ಅಂತ್ಯಕ್ಕೆ ಮುಕ್ತಾಯ ಗೊಂಡಿತ್ತು. ಹೀಗಾಗಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೆ ಹೊಸ ಸದಸ್ಯ ರನ್ನು ನೇಮಕ ಮಾಡಲಾಗಿತ್ತು. ಈ ದಿನಾಂಕದಿಂದ ಹಿಂದಿನ ಸ್ಥಾಯಿ ಸಮಿತಿಯು ಅಧಿಕಾರದಲ್ಲಿ ಮುಂದು ವರಿಯಲು ಅವಕಾಶ ಇರುವು ದಿಲ್ಲ. ಹೀಗಿದ್ದರೂ ಈ ಹಿಂದಿನ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರುಗಳೂ ಕೂಡಾ ಇಂದಿನವರೆಗೂ ಸ್ಥಾಯಿ ಸಮಿತಿಯ ಅಧ್ಯಕ್ಷರ ಕಚೇರಿಯನ್ನು, ಸರಕಾರದ ಕಾರು, ವಾಕಿಟಾಕಿಯನ್ನು ಬಳಸು ತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇವರು ಈ ಅವಧಿಗೆ ಸದಸ್ಯರ ಅರ್ಹತೆಯನ್ನೇ ಹೊಂದಿಲ್ಲವಾಗಿರು ವಾಗ ಅಧ್ಯಕ್ಷರ ಅಧಿಕಾರವನ್ನು ಬಳಸುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮುಂದಿನ ಅವಧಿಗೆ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಕಳೆದ ಮಾರ್ಚ್ ೧೭ರಂದು ಸಭೆ ಕರೆಯಲಾಗಿತ್ತು. ಆದರೆ ಇದಕ್ಕೆ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. ಈ ನಿಟ್ಟಿನಲ್ಲಿ ಮುಂದಿನ ಅವಧಿಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಇಂದು ಮತ್ತೆ ಸಭೆ ನಡೆಯಲಿದ್ದು ಈ ಬಾರಿಯೂ ಬಿಜೆಪಿ ಸದಸ್ಯರು ಗೈರು ಹಾಜರಾಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಡೆದ ಒಂದು ವಾರದೊಳಗೆ ಸ್ಥಾಯಿ ಸಮಿತಿ ಸದಸ್ಯರು ಸಭೆ ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಆರಿಸುವುದು ಕ್ರಮ. ಈ ಪ್ರಕ್ರಿಯೆ ನಡೆದಿದ್ದರೂ ಕಳೆದ ಸ್ಥಾಯಿ ಸಮಿತಿ ಸಭೆಗೆ ಬಿಜೆಪಿ ಸದಸ್ಯರು ಗೈರು ಹಾಜರಾದ ಕಾರಣ ಕೋರಂ ಅಭಾವ ಎದುರಾಗಿ ಸಭೆ ಮುಂದೂಡಲ್ಪಟ್ಟಿತ್ತು. ಹೀಗಾಗಿ ಇಂದು ಮತ್ತೆ ಸಭೆ ನಡೆಯಲಿದೆ. ಇಂದು ಬಿಜೆಪಿ ಸದಸ್ಯರು ಹಾಜರಾದರೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯುತ್ತದೆ ಇಲ್ಲವಾದರೆ ಮತ್ತೆ ಸಭೆ ಮುಂದೂಡಲ್ಪಡುತ್ತದೆ. ಇಂದಿನ ಸಭೆಗೆ ಹಾಜರಾಗುವಂತೆ ಶಾಸಕ ಯೋಗೀಶ್ ಭಟ್ ತಿಳಿಸಿದರೂ ಮೋನಪ್ಪ ಭಂಡಾರಿ ಖ್ಯಾತೆ ತೆಗೆದಿದ್ದಾರಂತೆ. ಹೀಗಾಗಿ ಸಭೆಗೆ ಭಾಗವಹಿಸಿ ಅಧಿಕಾರ ಪಡೆಯುವ ಮನಸ್ಸು ಬಿಜೆಪಿ ಸದಸ್ಯರಲ್ಲಿ ಇದ್ದರೂ, ಬಿಜೆಪಿ ನಾಯಕರ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಅತಂತ್ರರಾಗಿದ್ದಾರೆ. ಇರುವುದು ಒಂದು ವರುಷದ ಅವಧಿ ಅದರಲ್ಲೂ ಒಂದು ತಿಂಗಳು ಕಳೆದು ಹೋಗಿದೆ, ಇನ್ನು ದೊರೆಯುವ ಹನ್ನೊಂದು ತಿಂಗಳ ಅವಕಾಶ ಪಡೆಯೊಣ ಎಂದರೆ ಅದಕ್ಕೂ ಕಲ್ಲು ಹಾಕುತ್ತಿದ್ದಾರೆ. ಇನ್ನು ಎರಡು ಸಭೆ ಬಳಿಕವಾದರೂ ನಾವು ಸ್ಥಾಯಿ ಸಮಿತಿ ಸಭೆಗೆ ಹಾಜರಾಗಲೇಬೇಕು. ಆದರೆ ಅಷ್ಟರಲ್ಲಿ ತಿಂಗಳು ಎರಡು ಕಳೆದಿರುತ್ತದೆ. ಅಲ್ಲೂ ಅಧಿಕಾರದ ಎರಡು ತಿಂಗಳು ನಷ್ಟ ಆದಂತೆ ಅದರ ಬದಲು ಇಂದಿನ ಸಭೆಗೆ ಹಾಜರಾದರೆ ಉತ್ತಮ ಅಲ್ಲವೆ? ಎನ್ನುವುದು ಬಿಜೆಪಿಯಿಂದ ಸ್ಥಾಯಿ ಸಮಿತಿಗೆ ಆಯ್ಕೆಯಾದ ಸದಸ್ಯರ ಮಾತು. ಇದು ಸತ್ಯವಾದರೂ ಕೇಳಿಸಿಕೊಳ್ಳುವ ಬಿಜೆಪಿಯ ಕಿವಿಗಳು ಬ್ಯುಸಿಯಾಗಿವೆ ಎನ್ನುವುದು ಬಿಜೆಪಿ ಕಾರ್ಪೊರೇಟರುಗಳ ಅಂಬೋಣ
ಪ್ರೇಮಿಯೊಂದಿಗೆ ಪೊಲೀಸ್ ವಶಕ್ಕೆ
ಮಂಗಳೂರು: ಸುಳ್ಯ ಸಮೀಪದ ಪಾಜಪಳ್ಳ ಎಂಬಲ್ಲಿಂದ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರೇಮಿಯೊಂದಿಗೆ ನಗರದ ಹಂಪನಕಟ್ಟೆಯ ಲಾಡ್ಜ್‌ನಲ್ಲಿ ಪತ್ತೆಯಾಗಿದ್ದಾಳೆ. ಬಂದರು ಠಾಣಾ ಪೊಲೀಸರು ಪ್ರೇಮಿಗಳನ್ನು ವಶಕ್ಕೆ ಪಡೆದುಕೊಂಡು ಬಳಿಕ ಸುಳ್ಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಫರ್ಜಾನಾ(೨೩) ಎಂಬಾಕೆ ನಾಪತ್ತೆಯಾಗಿದ್ದ ಬಗ್ಗೆ ಸುಳ್ಯ ಪೊಲೀಸರಿಗೆ ದೂರಲಾಗಿತ್ತು. ಆಕೆಯನ್ನು ಕಳೆದ ಏಳು ವರ್ಷಗಳಿಂದ ಪಾಜಪಳ್ಳ ನಿವಾಸಿ ಟಿಂಬರ್ ವ್ಯಾಪಾರಿ ಹಾಜಿ ಇಸಾಕ್ ಸಾಹಿಬ್ ಎಂಬವರ ಪುತ್ರ ಇಲಿಯಾಸ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಆತನ ಜೊತೆಯಲ್ಲಿಯೇ ಮನೆ ತೊರೆದಿರಬೇಕೆಂದು ಶಂಕಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಜೋಡಿ ಮಂಗಳೂರಿಗೆ ತೆರಳಿದ್ದನ್ನು ಖಚಿತಪಡಿಸಿ ಶೋಧಕಾರ್ಯ ಕೈಗೊಂಡಿದ್ದರು. ಕಳೆದ ಅನೇಕ ವರ್ಷಗಳಿಂದ ಇಲಿಯಾಸ್ ಫರ್ಜಾನಾಳನ್ನು ಮದುವೆಯಾ ಗುವುದಾಗಿ ನಂಬಿಸಿ ವಂಚಿಸುತ್ತಲೇ ಬಂದಿದ್ದು, ಅನೇಕ ಬಾರಿ ಜೊತೆಯಾಗಿ ಪರಾರಿಯಾಗಿದ್ದರು. ಆದರೆ ನಂತರ ಮದುವೆಗೆ ಹಿಂದೇಟು ಹಾಕುತ್ತಿದ್ದ ಎಂದು ದೂರಲಾಗಿತ್ತು. ನಾಪತ್ತೆಯಾದ ಫರ್ಜಾನಾ ತನ್ನ ಮನೆಗೆ ಕರೆ ಮಾಡಿ ತಾನು ಮಂಗಳೂರಿನ ಲಾಡ್ಜ್‌ನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ಸುಳ್ಯ ಪೊಲೀಸರು ಬಂದರ್ ಠಾಣಾ ಪೊಲೀಸರ ಸಹಾಯ ಪಡೆದಿದ್ದರು. ಬಂದರ್ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದು ಸುಳ್ಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪಾಕ್ ಧ್ವಜ ಹಾರಾಟ
ಬೆಂಗಳೂರು: ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ನಿಜವಾದ ಅಪರಾ ಧಿಗಳನ್ನು ವ್ಯವಸ್ಥಿತವಾಗಿ ಬಚ್ಚಿಟ್ಟು ಹಿಂದೂ ಕಾರ್ಯಕರ್ತನ್ನು ಬಂಧಿಸಿ ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ.
ಬೆಂಗಳೂರು: ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ನಿಜವಾದ ಅಪರಾ ಧಿಗಳನ್ನು ವ್ಯವಸ್ಥಿತವಾಗಿ ಬಚ್ಚಿಟ್ಟು ಹಿಂದೂ ಕಾರ್ಯಕರ್ತನ್ನು ಬಂಧಿಸಿ ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ.
೨೦೦೩ರಲ್ಲಿ ತಾಲೂಕಿನ ದೇವರಹಿಪ್ಪರಗಿ ಗ್ರಾಮ ದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯ ಕ್ರಮದಲ್ಲಿ ಪ್ರಚೋದನಾ ಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಿಂದಗಿ ನ್ಯಾಯಾ ಲಯದಲ್ಲಿ ಗುರುವಾರ ನಡೆದ ವಿಚಾ ರಣೆ ನಂತರ ಅವರು ಸುದ್ದಿಗಾರರೊಂ ದಿಗೆ ಮಾತನಾ ಡಿದರು.
ಪಾಕಿಸ್ತಾನದ ಧ್ವಜವನ್ನು ಹಿಂದೂಗಳು ಸುಟ್ಟು ಹಾಕುತ್ತಾರೆ ಹೊರತು, ದೇಶದಲ್ಲಿ ಪಾಕಿಸ್ತಾನ ಧ್ವಜ ಹಾರಿಸುವುದಿಲ್ಲ. ಪ್ರಕರಣಕ್ಕೆ ಸಂಬಂ ಧಿಸಿ ಪೊಲೀಸರು ಬಂಧಿಸಿದ ಹಿಂದೂ ಕಾರ್ಯಕರ್ತರು ನಿರಪರಾಧಿಗಳು. ಅವರ ಮೇಲೆ ಎರಡು ಮೊಕದ್ದಮೆ ಗಳಿದ್ದು ಒಂದರಲ್ಲಿ ಜಾಮೀನು ಸಿಕ್ಕಿದೆ. ಇನ್ನೊಂದರಲ್ಲಿ ಜಾಮೀನು ದೊರ ಕುತ್ತದೆ ಎಂಬ ಭರವಸೆಯಿದೆ. ಬಂಧಿತ ಹಿಂದೂ ಕಾರ್ಯಕರ್ತರು ನಿಜವಾ ಗಿಯೂ ನಿರಪರಾಧಿಗಳು. ಅವರು ನಿರಪರಾಧಿಗಳೆಂಬುದಕ್ಕೆ ತಮ್ಮ ಹತ್ತಿರ ಸಾಕಷ್ಟು ಸಾಕ್ಷಿ-ಪುರಾವೆಗಳಿವೆ. ಅವರಿಗೆ ಖಂಡಿತವಾಗಿಯೂ ನ್ಯಾಯ ದೊರ ಕುತ್ತದೆ. ಅವರು ದೋಷಮುಕ್ತರಾಗಿ ಹೊರಬರುತ್ತಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಯಾವುದೇ ಆಧಾರವಿಲ್ಲದೇ ಪಾಕಿಸ್ತಾನ ಧ್ವಜವನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಹಾರಿಸಿದ್ದಾರೆ ಎಂದು ಆರೋಪಿಸಿದ್ದು ಖಂಡನಿಯವಾಗಿದೆ. ಸಂಘಟನೆ ಮೇಲೆ ಆರೋಪ ಮಾಡಿ, ಗೂಬೆ ಕೂಡಿಸುವ ಷಡ್ಯಂತ್ರ ನಡೆದಿದೆ. ಆದ್ದರಿಂದ ಸಂಘಟನೆಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕು ವುದಾಗಿ ತಿಳಿಸಿದರು.
ಬಿಜೆಪಿ ಹಿಂದುತ್ವದ ಮುಖವಾಡ ಹಾಕಿಕೊಂಡು ದತ್ತ ಪೀಠಕ್ಕೆ ಮಾಡಿದ ದ್ರೋಹದಿಂದ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಈ ಚುನಾ ವಣೆ ಫಲಿತಾಂಶ ಮುಂಬರುವ ಚುನಾವಣೆಯ ದಿಕ್ಸೂಚಿಯಾಗಿದೆ. ಬಿಜೆಪಿಯವರು ದತ್ತ ಪೀಠವನ್ನು ರಾಜಕೀಯವಾಗಿ ಬಳಸಿಕೊಂಡರು. ಆದರೆ ದತ್ತ ಗುಹೆ ಬಿದ್ದು ಮೂರು ವರ್ಷಗಳು ಗತಿಸಿವೆ. ಅವರಿಂದ ದುರಸ್ಥಿ ಕಂಡಿಲ್ಲ. ಹಾಗಾಗಿ ದತ್ತಾ ತ್ರೇಯನ ಶಾಪದಿಂದ ಬಿಜೆಪಿಗೆ ಹಿನ್ನಡೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಸರಗೋಡು: ಚಲಿಸುತ್ತಿದ್ದ ಕಾರು ತಾಂತ್ರಿಕ ದೋಷದಿಂದಾಗಿ ಹೊತ್ತಿ ಉರಿದ ಘಟನೆ ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದೆ. ಚೆಮ್ನಾಡ್ ನಿವಾಸಿ ಶಾಫಿ ಎಂಬವರು ತನ್ನ ಅಪೆಲ್ ಎಕ್ಸ್ ಟ್ರಾ ಕಾರಿನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಬೆಂಕಿ ಕಾರಿಗೆ ಆವರಿಸುವುದನ್ನು ಕಂಡು ಶಾಫಿ ಕಾರಿನಿಂದ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ನ ಕಂಡು ಬಂದ ತೊಂದರೆಯೇ ಕಾರಣವೆನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸುವಾಗ ಕಾರು ಶೇ.೫೦ ರಷ್ಟು ಸುಟ್ಟಾಗಿತ್ತು.
ಮಂಗಳೂರು: ಬಂಟ್ವಾಳ ಲೊರೆಟ್ಟೋ ಪದವಿಗೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆ ಕಾರ್ಯಕರ್ತರು ಮೊಡಂಕಾಪು ಬಳಿ ಪಿಕಪ್ ವಾಹನವನ್ನು ಅಡ್ಡಗಟ್ಟಿ ಆರೋಪಿಗಳಿಗೆ ಥಳಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಲೊರೆಟ್ಟೋ ಪದವು ನಿವಾಸಿ ಅಶೋಕ್ ಡಿಸೋಜಾ ಮತ್ತು ಎಡ್ವರ್ಡ್ ಸುನೀಲ್ ಪಿರೇರಾ ಎಂಬವರು ಪಿಕಪ್ ವಾಹನದಲ್ಲಿ ನಲ್ಕೆಮಾರ್‌ನಿಂದ ಲೊರೆಟ್ಟೋ ಪದವಿಗೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಹಿಂದೂ ಸಂಘಟನೆಯ ಕಾರ್ಯಕರ್ತರು ಮೊಡಂಕಾಪು ಬಳಿ ಕಾದು ಕುಳಿತು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಆರೋಪಿಗಳಿಗೆ ಥಳಿಸಿದ್ದಾರೆ. ಆರೋಪಿಗಳು ಪಿಕಪ್ ವಾಹನದಲ್ಲಿ ನಾಲ್ಕು ದನಗಳನ್ನು ಅಕ್ರಮವಾಗಿ ಅಮಾನುಷ ರೀತಿಯಲ್ಲಿ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಶೋಕ್ ಡಿಸೋಜಾ ಈ ಹಿಂದೊಮ್ಮೆ ದನ ಸಾಗಾಟ ಮಾಡಿ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದು ಒದೆ ತಿಂದಿದ್ದ, ಆ ಸಂದರ್ಭದಲ್ಲೂ ಈತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಈತನ ಮನೆಯಿಂದ ಹಲವಾರು ದನಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದಲ್ಲದೆ ಇನ್ನೂ ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲ: ಪ್ರವಾದಿ(ಸ.ಅ) ಅವರ ಪುಣ್ಯ ಕೇಶದ ಬಗ್ಗೆ ಕೆಲವರು ವೇದಿಕೆ ಕಟ್ಟಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಏಪ್ರಿಲ್ ೧೧ರಂದು ಎಸ್‌ಎಸ್‌ಎಫ್ ವತಿಯಿಂದ ಮಂಗಳೂ ರಿನಲ್ಲಿ ನಡೆಯಲಿರುವ 'ಮಾನವತಾ ಮಹಾ ಸಂಗಮ ಇದರ ಪ್ರಚಾರಾರ್ಥ ವಾಗಿ ಎಸ್‌ಎಸ್‌ಎಫ್ ಮಾಣಿ ಸೆಕ್ಟರ್ ವತಿಯಿಂದ ಗಡಿಯಾರ ಎಂಬಲ್ಲಿ ಗುರುವಾರ ಸಂಜೆ ಬೃಹತ್ ಸುನ್ನೀ ಸಮಾವೇಶ ನಡೆಯಲಿದೆ. ಶುಕ್ರವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅಬ್ದುಲ್ ರಶೀದ್ ಸಖಾಫಿ ಕುಟ್ಯಾಡಿ, ಹಾಗೂ ಮುಹಮ್ಮದಾಲಿ ಸಖಾಫಿ ವೆಳ್ಳಿಯಾಡ್ ಮುಖ್ಯ ಪ್ರಭಾಷಣ ಮಾಡಲಿದ್ದು, ವೇದಿಕೆಯಲ್ಲಿ ಫಝಲ್ ಕೋಯಮ್ಮ ತಂಙಳ್ ಕೂರತ್, ಮಾಣಿ ಉಸ್ತಾದ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಬುಲ್ ರಶೀದ್ ಸಖಾಫಿ, ಅಬ್ದುರ್ರಹ್ಮಾನ್ ಸಖಾಫಿ ಕಾಂತಡ್ಕ, ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಮುಸ್ತಾಫ ಕೊಡಪದವು, ಸಲೀಂ ಮಾಣಿ ಉಪಸ್ಥಿತರಿದ್ದರು.
ಕಾಸರಗೋಡು: ಮತೀಯ ಹಾಗೂ ಜಾತೀಯ ಸಂಘರ್ಷಗಳಿಂದ ತತ್ತರಿಸಿದ್ದ ಕಾಸರಗೋಡು ಪ್ರದೇಶ ಸ್ವಲ್ಪ ದಿನಗಳಿಂದ ಶಾಂತ ಸ್ಥಿತಿಯ ಲ್ಲಿದ್ದು, ಆದರೆ ಅದನ್ನು ತಡೆಯಲಾರದ ಮಂದಿ ನಿನ್ನೆ ಮತ್ತೆ ಧರ್ಮವನ್ನು ನಿಂದಿಸಿದ ವಾಕ್ಯಗಳನ್ನು ಖಾಸಗಿ ವ್ಯಕ್ತಿ ಯೊಬ್ಬರ ಮನೆಗೋಡೆಯಲ್ಲಿ ಬರೆದು ಮತ್ತೆ ಗಲಭೆಗೆ ಹೊಂಚು ಹಾಕಿರುವ ಘಟನೆ ನಡೆದಿದೆ.
ಕಾಸರಗೋಡು ನಗರದ ಫೋರ್ಟ್ ರಸ್ತೆಯ ಸಾಗರಕಟ್ಟೆ ನಿವಾಸಿ ಅಸ್ಲಾಂ ಎಂಬವರ ಮನೆಯ ಗೋಡೆ ಯಲ್ಲಿ ಧರ್ಮವನ್ನು ಅವಹೇ ಳನಗೈದ ಬರಹವನ್ನು ಕಿಡಿಗೇಡಿಗಳು ಬರೆದಿ ದ್ದಾರೆ. ಘಟನೆಗೆ ಸಂಬಂಧಿಸಿ ಅಸ್ಲಾಂ ಸ್ಥಳೀಯ ನಿವಾಸಿ ಕಾರ್ತಿಕ್ ಎಂಬಾ ತನ ವಿರುದ್ಧ ದೂರನ್ನು ದಾಖಲಿಸಿ ದ್ದಾರೆ. ಅಸ್ಲಾಂ ಅವರ ಮನೆಯ ಗೋಡೆಯಲ್ಲಿ ಹಿಂದೂ ವಿರೋಧಿ ವಾಕ್ಯಗಳನ್ನು ಬರೆದು ಸ್ವತಃ ಸ್ಥಳದಲ್ಲಿ ಹಾಕಲಾಗಿದ್ದ ಕೇಸರಿ ಧ್ವಜವನ್ನು ಉರಿಸಿ ಹಾಕಿರುವ ಕಾರ್ತಿಕ್ ಬಹು ದೊಡ್ಡ ಗಲಭೆಯನ್ನು ನಡೆಸುವ ಹುನ್ನಾರ ನಡೆಸಿದ್ದನು ಎಂದು ಆರೋಪಿಸಲಾಗಿದೆ.
ರಾಜಕೀಯ ಚೆಂಡು ಕಾಂಗ್ರೆಸ್ ಅಂಗಳದಲ್ಲಿ
ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ೪ ಅವಧಿಯಲ್ಲಿ ನಿರಂತರವಾಗಿ ಸೋಲು ಅನುಭವಿಸಿದ ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕಿ ಶಕುಂ ತಳಾ ಶೆಟ್ಟಿ ಅವರನ್ನು ಪಕ್ಷದ ಅಭ್ಯರ್ಥಿ ಯಾಗಿ ನಿಲ್ಲಿಸಿ ಗೆಲುವು ಸಾಧಿಸುವ ಪ್ರಯತ್ನವೊಂದರ ಕುರಿತು ಪಕ್ಷದ ನಾಯಕರು ಚಿಂತನೆ ನಡೆಸುತ್ತಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಸ್ವಾಭಿಮಾನಿ ವೇದಿಕೆಯ ವತಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಕುಂತಳಾ ಶೆಟ್ಟಿ ಅವರು ೨೫ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ಗಮನ ಸೆಳೆದಿದ್ದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಗುಂಪುಗಾರಿಕೆ, ಬಣ ರಾಜಕೀಯ ಇರುವುದರಿಂ ದಾಗಿಯೇ ಶಕುಂತಳಾ ಶೆಟ್ಟಿ ಹೆಸರು ಹೆಚ್ಚು ಪ್ರಸ್ತಾಪದಲ್ಲಿದೆ. ಕಳೆದ ಎರಡು ವರ್ಷದ ಹಿಂದೆಯೇ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಶಕುಂತಳಾ ಶೆಟ್ಟಿಯವರಿಗೆ ಪಕ್ಷಕ್ಕೆ ಸೇರುವಂತೆ ಆಫರ್ ನೀಡಿದ್ದರು. ನೀವು ಪಕ್ಷಕ್ಕೆ ಬನ್ನಿ, ಇಲ್ಲಿ ಪಕ್ಷವನ್ನು ಎಲ್ಲರೂ ಸೇರಿ ಸಂಘಟಿಸೋಣ. ನಿಮ್ಮನ್ನು ಪಕ್ಷದಲ್ಲಿ ಪ್ರೊಜೆಕ್ಟ್ ಮಾಡಿ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಸ್ಪರ್ಧೆ ಗಿಳಿಸಿ ಗೆಲ್ಲಿಸಿಕೊಡುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದಿ ದ್ದರು. ಆದರೆ ಶಕುಂತಳಾ ಶೆಟ್ಟಿ ಈಗಲೇ ತಾನು ಪಕ್ಷಕ್ಕೆ ಸೇರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಅವಕಾಶ ನೀಡಿದರೆ ಬರುತ್ತೇನೆ ಎಂದು ಹೇಳಿದ ಕಾರಣ ಹೇಮನಾಥ ಶೆಟ್ಟಿ ಅವರು ಆ ಪ್ರಸ್ತಾಪವನ್ನು ಕೈಬಿಟ್ಟು ಸುಮ್ಮನಾಗಿದ್ದರು. ಮಾತ್ರವಲ್ಲದೆ ಆ ಬಳಿಕ ಹೇಮನಾಥ ಶೆಟ್ಟಿಯವರು ಸ್ವತಃ ಸ್ಪರ್ಧಿಸುವ ನಿಟ್ಟಿ ನಲ್ಲಿ ತಯಾರಿಯಲ್ಲಿ ತೊಡಗಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಎಲ್ಲಾ ಪಕ್ಷಗಳಲ್ಲಿ ಎಲ್ಲಾ ಕಡೆ ಇರುವಂತೆ ಇಲ್ಲಿ ಕಾಂಗ್ರೆಸ್‌ನೊ ಳಗೆ ಭಿನ್ನಮತ ಗುಂಪುಗಾರಿಕೆ ಇರು ವುದು ಸಹಜ. ಈ ಕಾರಣಕ್ಕಾಗಿಯೇ ನಾವು ಶಕುಂತಳಾ ಶೆಟ್ಟಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದೆವು. ಅವರು ಪಕ್ಷಕ್ಕೆ ಬಂದರೆ ಇಲ್ಲಿನ ಗುಂಪುಗಾರಿಕೆ ಹೋಗುತ್ತದೆ. ಮಾತ್ರವಲ್ಲದೆ ಅವರನ್ನು ಮುಂದಿನ ವಿಧಾನ ಸಭಾ ಚುನಾವಣೆ ಯಲ್ಲಿ ಸ್ಪರ್ಧೆಗಿಳಿಸಿ ಗೆಲುವು ಸಾಧಿಸಬ ಹುದೆನ್ನುವ ವಿಶ್ವಾಸವಿದೆ. ಆದರೆ ಅವರು ಪಕ್ಷಕ್ಕೆ ಬಂದು ಪಕ್ಷವನ್ನು ಸಂಘಟಿಸುವ ಕೆಲಸ ಮೊದಲು ಮಾಡಬೇಕು ಎಂದಿದ್ದಾರೆ.
ಇಲ್ಲಿ ಭಿನ್ನಮತ-ಗುಂಪುಗಾರಿಕೆ ಇಲ್ಲದಿದ್ದರೆ ಶಕುಂತಳಾ ಶೆಟ್ಟಿಯವರ ಅಗತ್ಯವೇನಿದೆ? ಅವರು ಅದನ್ನು ಸರಿ ಯಾಗಿ ಅರ್ಥ ಮಾಡಿಕೊಂಡು ಪಕ್ಷಕ್ಕೆ ಬಂದು ಪಕ್ಷ ಸಂಘಟನೆಯಲ್ಲಿ ತೊಡಗ ಬೇಕು ಎಂಬ ಹೇಮನಾಥ ಶೆಟ್ಟಿ ಅವರ ತರ್ಕ. ಈ ಆಶಯದ ಹಿಂದೆ ಚುನಾ ವಣೆ ವೇಳೆಗೆ ಅವರು ಪಕ್ಷಕ್ಕೆ ಬಂದರೆ ಪಕ್ಷದ ಕಾರ್ಯಕರ್ತರು ಒಪ್ಪಲು ಸಾಧ್ಯವಿಲ್ಲ ಎಂಬ ಸ್ಪಷ್ಟತೆ ಅಡಗಿದೆ. ತಾನು ಪಕ್ಷಕ್ಕಾಗಿ ಬಹಳಷ್ಟು ಖರ್ಚು ಮಾಡಿ ಕಳೆದ ೫ ವರ್ಷದ ಅವಧಿಯಲ್ಲಿ ಪಕ್ಷವನ್ನು ಸಂಘಟಿಸಿದ್ದೇನೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಮುಂದಿನ ಬಾರಿ ಸ್ಪರ್ಧಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ಶಕುಂತಳಾ ಶೆಟ್ಟಿಯವರನ್ನು ಕಾಂಗ್ರೆಸ್‌ಗೆ ಸೆಳೆದು ಅವರನ್ನು ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧೆಗಿಳಿಸಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿಯವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೆಲವು ನಾಯಕರು ಪಕ್ಷದ ಮುಖಂಡರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಇದೆ.
ಮಂಗಳೂರು: ಜಾಗೋ ಭಾರತ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಹಾರ್ನ್ ಪ್ರತಿಭಟನೆ ಕೆಲ ಕಡೆ ಅತ್ಯಂತ ಯಶಸ್ವಿಯಾಗಿ ನಡೆದರೆ ಇನ್ನು ಕೆಲವು ಕಡೆ ಈ ಪ್ರತಿಭಟನೆ ಬರ್ನ್ ಆಗಿದೆ.
ಗ್ರಾಮೀಣ ಪ್ರದೇಶದಲ್ಲಿ ಹಾರ್ನ್ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನೂರಾರು ವಾಹನಗಳು ಒಂದೇ ಸಮಯದಲ್ಲಿ ಒಂದೇ ಕಡೆ ನಿಂತು ಹಾರ್ನ್ ಬಾರಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದರು. ಇನ್ನು ನಗರ ವ್ಯಾಪ್ತಿಯಲ್ಲಿ ಹಾರ್ನ್ ಬಾರಿಸುವ ಗೋಜಿಗೆ ಹೋಗದೆ ವಾಹ ನಗಳು ಸಾಗುತ್ತಿದ್ದವು. ಪ್ರತಿಭಟನೆ ನಡೆದ ಜಾಗದಲ್ಲಿ ಎಲ್ಲಾ ವಾಹನಗಳು ಒಮ್ಮೆಲೆ ಹಾರ್ನ್ ಬಾರಿಸಿದ ಕಾರಣ ಕೆಲವರಿಗೆ ಇದು ಕಿರಿಕಿರಿ ಅನಿಸಿ ಅವರು ತಮ್ಮ ವಾಹನದ ಹಾರ್ನನ್ನು ಸ್ಥಗಿತಗೊಳಿಸಿ ದರೆ ಇನ್ನು ಕೆಲವರು ಕಿವಿ ಮುಚ್ಚಿ ಕೊಂಡಿದ್ದರು. ಆದರೆ ಮುಖ್ಯವಾಗಿ ಈ ಹಾರ್ನ್ ಯಾರ ಕಿವಿ ಮುಟ್ಟ ಬೇಕಿತ್ತೋ ಅವರು ಮಾತ್ರ ಯುಗಾದಿ ರಜೆಯನ್ನು ಸವಿಯುತ್ತಾ ಮನೆಯಲ್ಲೇ ಉಳಿದಿದ್ದರು. ರಸ್ತೆ ದುರಸ್ಥಿ ಬಗ್ಗೆ ಗಮನ ಕೊಡ ಬೇಕಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮಾತ್ರ ಅಪ್ಪಿತಪ್ಪಿಯೂ ಈ ಹೊತ್ತಿನಲ್ಲಿ ರಸ್ತೆ ಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಒಂದು ಕಡೆ ಪ್ರತಿಭಟನೆ ನಡೆಸ ಬೇಕು ಎನ್ನುವ ನಿಜ ಕಾಳಜಿಯಲ್ಲಿ ಬಂದವರು ಬಹುತೇಕ ಮಂದಿ ಇದ್ದರೆ ಇನ್ನು ಕೆಲವರು ಪ್ರತಿಭಟನೆಯ ಮೋಜು ಸವಿಯಲು ಬಂದವರು ಇದ್ದರು. ನಿನ್ನೆಯ ಪ್ರತಿಭಟನೆ ಪ್ರಚಾರದ ದೃಷ್ಟಿಯಲ್ಲಿ ಈವರೆಗೆ ನಡೆದ ಎಲ್ಲಾ ಪ್ರತಿಭಟನೆಗಿಂತಲೂ ಭಿನ್ನವಾಗಿತ್ತು. ಪ್ರತಿ ಭಟನೆ ಬಗ್ಗೆ ಪ್ರಚಾರ ನೀಡಲು ಸಾಕಷ್ಟು ಹಣವನ್ನು ವ್ಯಯ ಮಾಡಲಾಗಿತ್ತು. ಈ ಮೂಲಕವಾದರೂ ಜನ ಜಾಗೃತಿ ಆಗಲಿ ಮತ್ತು ಹೀಗೊಂದು ಪ್ರತಿಭಟನೆ ನಡೆ ಯುತ್ತಿದೆ ಗಮನಿಸಿ ಎನ್ನುವ ಎಚ್ಚರಿಕೆ ಯನ್ನು ಜಿಲ್ಲಾಡಳಿತಕ್ಕೆ ನೀಡುವ ಉದ್ದೇಶದಿಂದ ಪ್ರಚಾರ ಕೈಗೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮಂಗಳೂರು: ನಾಗರಿಕರ ಹಿತದೃಷ್ಟಿಯಿಂದ ಕಾವೂರಿನ ಆನಂದ ನಗರದಲ್ಲಿ ಸ್ಮಶಾನ ನಿರ್ಮಾಣಕ್ಕೆ ಮುಂದಾಗಿರುವ ಮಂಗಳೂರು ಮಹಾನಗರಪಾಲಿಕೆ ಕ್ರಮ ಸರಿಯಲ್ಲ ಎಂದು ಆನಂದನಗರ ಕಾಪಿಗುಡ್ಡೆಯ ನಾಗರಿಕ ಹಿತರಕ್ಷಣಾವೇದಿಕೆ ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ವೇದಿಕೆ ಅಧ್ಯಕ್ಷ ಕೆ.ವಿ.ಶಿವದಾಸ್, ಪರಿಶಿಷ್ಠ ಜಾತಿಯವರಿಗಾಗಿ ಕಾದಿರಿಸಲಾದ ೧.೫೦ ಎಕ್ರೆ ಸ್ಥಳದಲ್ಲಿ ಅದೇ ಪಂಗಡದವರಿಗಾಗಿ ಸ್ಮಶಾನ ನಿರ್ಮಿಸಲು ಪಾಲಿಕೆ ಮುಂದಾಗಿದ್ದು, ಈಗಾಗಲೇ ಆವರಣ ಗೋಡೆಯ ಕಾಮಗಾರಿಯೂ ಆರಂಭಗೊಂಡಿದೆ. ಮುರ್ಖಯ ರಸ್ತೆಯ ಪಕ್ಕದಲ್ಲೇ ಈ ಸ್ಥಳವು ಇರುವುದರಿಂದ ಇಲ್ಲಿ ಎಲ್ಲಾ ಧರ್ಮೀಯರ ಸುಮಾರು ೭೦೦ಮನೆಗಳಿವೆ. ಎರಡು ಪ್ರಾಥಮಿಕ ಶಾಲೆಗಳು, ಮಸೀದಿ ಇದೆ, ಈಗಾಗಲೆ ಪಂಜಿಮೊಗರು ಮತ್ತು ಬೋಳೂರಿನಲ್ಲಿ ಸ್ಮಶಾನದ ಅಗತ್ಯವಿಲ್ಲ. ಆದ್ದರಿಂದ ಪಾಲಿಕೆ ಸ್ಮಶಾನ ನಿರ್ಮಾಣದ ಕೆಲಸವನ್ನು ಕೈಬಿಡದಿದ್ದರೆ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿ, ಕೋಶಾಧಿಕಾರಿ ರೋಜಲಿನ್ ಸಲ್ದಾನ, ಸದಸ್ಯರಾದ ಎಡ್ವರ್ಡ್ ಸೀಕ್ವೇರಾ, ಎ.ರಹಿಮಾನ್ ಮೊದಲಾದವರಿದ್ದರು.
ಕಾಸರಗೋಡು: ಮಂಜೇಶ್ವರ ಮಾರಾಟ ತೆರಿಗೆ ಚೆಕ್‌ಪೋಸ್ಟ್‌ನ ಮಾರಾಟ ತೆರಿಗೆ ಅಧಿಕಾರಿಯೊಬ್ಬರು ನಿನ್ನೆ ರಾತ್ರಿ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಜೇಶ್ವರ ಮಾರಾಟ ತೆರಿಗೆ ಚೆಕ್ ಪೋಸ್ಟ್‌ನ ಮಾರಾಟ ತೆರಿಗೆ ಅಧಿ ಕಾರಿ ನೀಲೇಶ್ವರ ನಿವಾಸಿ ಹರೀಂದ್ರ ನಾಥ್ ಎಂಬವರು ಹೊಸಂಗಡಿಯಲ್ಲಿ ರುವ ಅಶೋಕ ಲಾಡ್ಜ್‌ನಲ್ಲಿ ನಿನ್ನೆ ಸಂಜೆ ರೂಮ್ ಮಾಡಿಕೊಂ ಡಿದ್ದು, ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದು ಬೆಳಕಿಗೆ ಬಂದಿದೆ.
ಮಂಗಳೂರು: ಸುರೇಶ್ ಮೋಟಾರ‍್ಸ್ ಸಂಸ್ಥೆಯ ಮಾಲಕ ಸಂಜೀವ ಸಾಲ್ಯಾನ್ ಅಲ್ಪಕಾಲದ ಅಸೌಖ್ಯದಿಂದ ನಾಗುರಿ ಗುಡ್ಡತೋಟದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ನಾಲ್ವರು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ದುಡಿದಿದ್ದ ಇವರು, ಭಗವತಿ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿ ಯೂ ಸೇವೆ ಸಲ್ಲಿಸಿದ್ದರು.
ಮಂಗಳೂರು: ಉಡುಪಿ ನ್ಯಾಯಾಲಯದ ಬಳಿ ಇರುವ ಪೈ ಇಂಟರ್‌ನ್ಯಾಷನಲ್ ಇಲೆಕ್ಟ್ರಾನಿಕ್ಸ್‌ನಿಂದ ಕಳವು ಮಾಡಿದ ಆರೋಪಿಯನ್ನು ಉಡುಪಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ.
ನೇಪಾಳ ಮೂಲದ ಕೃಷ್ಣ ಯಾನೆ ಕಿಶನ್ ರೊಕಾಯ ಎಂಬಾತನೇ ಕಳವು ಮಾಡಿದ ಆರೋಪಿ. ಈತ ತನ್ನ ಸಹಚರರೊಂದಿಗೆ ಸೇರಿ ಪೈ ಇಲೆಕ್ಟ್ರಾನಿಕ್ಸ್‌ನಲ್ಲಿ ಮಾ. ೧೯ರಂದು ಕಳವು ಮಾಡಿದ್ದ. ಈತನನ್ನು ಬೆಂಗಳೂರಿನ ನೆಲಮಂಗಳದಲ್ಲಿ ಬಂಧಿಸಿ, ಒಂದು ಲ್ಯಾಪ್‌ಟಾಪ್, ಆರು ಡಿಜಿಟಲ್ ಕ್ಯಾಮರಾ, ಮೂರು ಮೊಬೈಲ್ ಫೋನ್, ಬ್ಯಾಟರಿ, ಇಯರ್‌ಫೋನ್ ಸಹಿತ ೮೫ ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ಇನ್ನು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಬೋರಲಿಂಗಯ್ಯ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆ ನಡೆದಿದೆ.
ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ-ವಿಕಾಸನ ಗರ ಎಂಬಲ್ಲಿ ನಿನ್ನೆ ಮುಂಜಾನೆ ಆವೆ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದ ಘಟನೆ ನಿನ್ನೆ ನಡೆದಿದೆ. ಲಾರಿ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆಯ ಬದಿ ಮಗುಚಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮುಲ್ಕಿ: ಪಿಕ್ ಪಾಕೆಟಿಂಗ್ ಹಾಗೂ ಇತರ ವಂಚನೆ ಪ್ರಕಣಗಳಲ್ಲಿ ಭಾಗಿಯಾಗಿರುವ ಮಹಿಳೆಯೊಬ್ಬಳು ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪದ ಕಾರ್ನಾಡು ರಿಕ್ಷಾ ಪಾರ್ಕ್ ಬಳಿ ಸಂಭವಿಸಿದೆ.
ಅನಿತಾ ಡಿ'ಸೋಜಾ ರಿಕ್ಷಾ ಚಾಲ ಕನಿಗೆ ಹಲ್ಲೆಗೈದ ಆರೋಪಿ. ಈಕೆ ನಿನ್ನೆ ಕಾರ್ನಾಡು ರಿಕ್ಷಾ ಪಾರ್ಕಿನಲ್ಲಿ ರುವ ಸತೀಶ್ ಭಂಡಾರಿ ಎಂಬವರ ರಿಕ್ಷಾದಲ್ಲಿ ಗ್ರೈಂಡರ್ ಅನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ರಿಕ್ಷಾ ಚಾಲಕ ಸತೀಶ್ ಅವರಿಗೆ ಬಾಡಿಗೆ ಎಂದು ರೂ.೧೦೦ ನೀಡಿ ಚಾಲಕನಿಂದ ರೂ.೩೦ ಚಿಲ್ಲರೆ ಪಡೆದಿದ್ದಳು. ಬಳಿಕ ಅವರು ಪಾರ್ಕಿಗೆ ವಾಪಸ್ಸಾದ ನಂತರ ಅಲ್ಲಿಗೆ ಓಡಿಬಂದ ಅನಿತಾ ತಾನು ರೂ.೫೦೦ ನೀಡಿರು ವುದಾಗಿ ಉಳಿದ ಹಣವನ್ನು ವಾಪಸ್ಸು ನೀಡುವಂತೆ ಗದರಿಸಿದಲ್ಲದೆ ಹಲ್ಲೆ ಯನ್ನು ನಡೆಸಿದ್ದಳು. ಇದನ್ನು ತಡೆ ಯಲು ಬಂದ ಯಶೋಧರ ಚಿತ್ರಾಪು ಮತ್ತು ಕಿಲ್ಪಾಡಿಯ ರಾಜು ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನೆರೆದ ಸಾರ್ವಜನಿಕರಿಗೂ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಮುಲ್ಕಿ ಪೊಲೀಸರು ಮಹಿಳೆಯನ್ನು ಸಮಾಧಾನಗೊಳಿಸಲು ಯತ್ನಿಸಿದರಾ ದರೂ ಆಕೆ ತನ್ನ ಚಾಳಿಯನ್ನು ಬಿಡದೆ ಎಸ್.ಐ ಸುನಿಲ್ ಪಾಟೀಲ್ ಅವರಿಗೂ ಬೈದು ಹಲ್ಲೆಗೆ ಮುಂದಾಗಿದ್ದಳು. ಮುಲ್ಕಿ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆಯಿಂದಾಗಿ ಅನಿತಾಳನ್ನು ಠಾಣೆಗೆ ಕರೆದೊಯ್ಯಲು ಪೊಲೀಸರಿಗೆ ಕಷ್ಟವಾಯಿತು. ಘಟನೆಯನ್ನು ಖಂಡಿಸಿ ರಿಕ್ಷಾ ಚಾಲಕರು ಹಾಗೂ ಮಾಲಕರು ರಿಕ್ಷಾ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಮಹಿಳೆಯ ರಗಳೆಯೇ ಬೇಡವೆಂಬ ನಿಟ್ಟಿನಲ್ಲಿ ಮುಲ್ಕಿ ಇನ್ಸ್‌ಪೆಕ್ಟರ್ ಬಶೀರ್ ಅಹಮ್ಮದ್ ತಾನೇ ಹಣ ನೀಡಿ ಅನಿತಾಳನ್ನು ತಣ್ಣಗಾಗಿಸಿದರು. ಈ ವಿಷಯ ತಿಳಿದ ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ಎಂ.ಎ ರಹೀಮಾನ್ ಕಾರ್ನಾಡ್, ಗೋಪಾಲ ಶಿಮಂತೂರ್, ದಲಿತ ಮುಖಂಡರಾದ ವಿಶು ಕುಮಾರ್ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದರು. ಮಾತ್ರವಲ್ಲದೆ ಕೂಡಲೇ ಆಕೆಯನ್ನು ಬಂಧಿಸಬೇಕಾಗಿ ಎ.ಸಿ.ಪಿ ಪುಟ್ಟ ಮಾದಯ್ಯ ಅವರಲ್ಲಿ ವಿನಂತಿಸಿದರು.
ಅನಿತಾ ಡಿ'ಸೋಜಾ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಪಿಕ್ ಪಾಕೆಟ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿ ಶಿಕ್ಷೆ ಅನುಭವಿಸಿದ್ದಳು. ಇದರೊಂದಿಗೆ ಹಲವು ವಂಚನೆ ನಡೆಸಿರುವ ದೂರುಗಳು ಜಿಲ್ಲೆಯಾದ್ಯಂತ ವಿವಿಧ ಠಾಣೆಗಳಲ್ಲಿವೆ. ಕ್ಷೀರಸಾಗರ ಬಳಿಯಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈಕೆ ಅಲ್ಲಿಯೂ ಹಲವು ತಿಂಗಳಿನಿಂದ ಬಾಡಿಗೆ ನೀಡದಿರುವ ಕುರಿತು ಮನೆಮಾಲಕರು ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮುಲ್ಕಿ ಪೆಟ್ರೋಲ್ ಪಂಪ್‌ನಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾಗಿರುವ ಕುರಿತು ದೂರೊಂದು ಕೇಳಿಬಂದಿದೆ. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕರು ವಿಶು ಕುಮಾರ್ ಈ ಜಾತಿ ನಿಂದನೆ ಯನ್ನು ತೀವ್ರವಾಗಿ ಖಂಡಿಸಿ ಕೂಡಲೇ ಕೇಸು ದಾಖಲಿಸುವಂತೆ ಒತ್ತಾಯಿ ಸಿದ್ದಾರೆ.
ಬೆಂಗಳೂರು: ಮಂತ್ರಿಮಂಡಲ ವನ್ನು ಪುನರ್ ರಚಿಸಲು ಮುಖ್ಯಮಂತ್ರಿ ಸದಾನಂದ ಗೌಡ ನಿರ್ಧರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನಿನ್ನೆ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಹಿರಿಯ ಮುಖಂಡರ ಸಭೆಯಲ್ಲಿ ಸಂಪುಟವನ್ನು ಪುನರ್ ರಚಿಸಿ ಈ ಮೂಲಕ ಕೆಲವು ಅನರ್ಹ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲು ಸಭೆ ನಿರ್ಧರಿಸಿದೆ. ಪಕ್ಷದ ಆದೇಶದಂತೆ ಸದಾನಂದ ಗೌಡರು ಪ್ರಸಕ್ತ ಅಧಿವೇಶನ ಮುಗಿಯುತ್ತಿದ್ದಂತೆ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಮಂತ್ರಿಮಂಡಲದಲ್ಲಿ ೧೧ ಸ್ಥಾನಗಳು ಖಾಲಿಯಿದ್ದು, ಖಾಲಿಯಿರುವ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ. ಪಕ್ಷದ ನಿಷ್ಠಾವಂತ ಹಿರಿಯ ಸದಸ್ಯರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಇದರ ಜೊತೆಗೆ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ. ೫೬ ನಿಗಮ ಮಂಡಳಿಗೆ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅಧ್ಯಕ್ಷರನ್ನು ನೇಮಿಸಲು ಪಕ್ಷ ನಿರ್ಧರಿಸಿದೆ. ಕಾರ್ಯಕರ್ತರಿಗೆ ಈ ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬ್ಲೂಫಿಲಂ ಹಗರಣದಲ್ಲಿ ಸಿಲುಕಿದ ಇಬ್ಬರಿಗೆ ಮತ್ತೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳಿವೆ. ಲಕ್ಷ್ಮಣ್ ಸವದಿಯನ್ನು ಹೊರತುಪಡಿಸಿ ಕೃಷ್ಣ ಪಾಲೇಮಾರ್ ಮತ್ತು ಸಿ.ಸಿ.ಪಾಟೀಲ್ ಅವರಿಗೆ ಮತ್ತೆ ಸಚಿವರಾಗುವ ಅವಕಾಶ ಇದೆ. ಬ್ಲೂಫಿಲಂ ವೀಕ್ಷಣೆಗೆ ಸಂಬಂಧಿಸಿ ಸದನದ ಸಮಿತಿ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಹಾಲಾಡಿ, ಅಂಗಾರಗೆ ಸ್ಥಾನ?
ಸಚಿವ ಸಂಪುಟದ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿ.ಟಿ.ರವಿ, ಅಪ್ಪಚ್ಚು ರಂಜನ್, ಶಿವಣ್ಣ, ಶಂಕರ ಲಿಂಗೇಗೌಡ, ಎಂ. ಶ್ರೀನಿವಾಸ್ ಮೊದಲಾದವರು ಪ್ರಮುಖರಾಗಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಅಂಗಾರ, ಉಡುಪಿ ಜಿಲ್ಲೆಯ ಹಾಲಾಡಿ ಶ್ರೀನಿವಾಸ ಶೆಟ್ಟರೂ ಸಚಿವ ಸಂಪುmಕ್ಕೆ ಸೇರಲಿರುವ ಪ್ರಮುಖರು ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಡಾ. ವಿ.ಎಸ್.ಆಚಾರ್ಯ ನಿಧನದಿಂದಾಗಿ ಉಡುಪಿ ಜಿಲ್ಲೆಯಿಂದ ತೆರವಾಗಿರುವ ಸಚಿವ ಸ್ಥಾನವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಗಲಿಗೆ ಬೀಳಲಿದೆ. ಈಗ ಮಂತ್ರಿಮಂಡಲದಲ್ಲಿರುವ ಐವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುವುದು. ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ.
ಕುಂದಾಪುರ: ಒಂದಲ್ಲಾ ಎರಡೆರಡು ಬಾರಿ ಅದೂ ನೂರು ಒಂದಷ್ಟು ಮತಗಳಿಂದಲ್ಲಾ ಸಾವಿರಾರು ಮತಗಳಿಂದ ಸೋತು ನೆಲಕಚ್ಚಿ ಮತ್ತೆಂದೂ ಮೇಲೇಳಲಾಗದಂತಹ ಸ್ಥಿತಿಯಲ್ಲಿ ದ್ದರೂ ಮತ್ತೆ ಹಠ ಬಿಡದ ತ್ರಿವಿಕ್ರಮನಂತೆ ಸೋತ ಅದೇ ನೆಲದಲ್ಲಿ ಮಗದೊಮ್ಮೆ ಸ್ಪರ್ಧಿಸಿ ಸೋಲನ್ನೇ ಸೋಲಿಸಿ ಫಿನೀಕ್ಸ್‌ನಂತೆ ಎದ್ದು ನಿಂತಿ ರುವ ಜಯಪ್ರಕಾಶ್ ಹೆಗ್ಡೆಯವರ ರಣತಂತ್ರ ರಾಜಕೀಯ ಪಡಸಾಲೆಯಲ್ಲಿ ಭಾರೀ ಕೋಲಾ ಹಲವನ್ನೇ ಉಂಟು ಮಾಡಿದೆ.
ಜನತಾದಳ ಸರ್ಕಾರವಿದ್ದಾಗ ಮೀನುಗಾರಿಕಾ ಸಚಿವನಾಗಿ ತನ್ನ ಛಾಪನ್ನು ಮುದ್ರಿಸಿದ ಜೆ.ಪಿ ದಳದ ತೆನೆ ಹೊತ್ತ ಮಹಿಳೆ ಯಾವಾಗ ಕೇಸರಿ ಕಮಲವನ್ನು ತನ್ನ ಮುಡಿಯಲ್ಲಿ ಸಿಲುಕಿಸಿ ಕೊಂಡಳೋ ಒಂದಷ್ಟು ಅಸಹನೆಯಿಂದ ಜೆಡಿಎಸ್ ಮನೆಯಿಂದ ಹೊರಗೆಬಿದ್ದು ಬ್ರಹ್ಮಾ ವರದ ವಿಧಾನ ಸಭಾ ಕ್ಷೇತ್ರದ ಘಟಾನುಘಟಿ ಗಳೆದುರು ಪಕ್ಷೇತರನಾಗಿ ಸ್ಪರ್ಧಿಸಿಯೂ ಗೆದ್ದು ಬಂದಿದ್ದರು. ತದನಂತರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳಿಲ್ಲದೆ ತಡಕಾಡು ತ್ತಿದ್ದ ಕುಂದಾಪುರದ ಕಾಂಗ್ರೆಸ್ ಮನೆ ಜೆ.ಪಿಯವರನ್ನು ಅನಾಮತ್ತಾಗಿ ಸೆಳೆದುಕೊಂಡು ವಿಧಾನಸಭಾ ಕ್ಷೇತ್ರಕ್ಕೆ ನೂಕಿ ಬಿಟ್ಟಿತ್ತು. ಅದಾಗ ಸಂಪೂರ್ಣ ನೆಲಕ್ಕಚ್ಚಿ ಹೋದಂತಹ ಕಾಂಗ್ರೆಸ್ ಗಂಟಲಲ್ಲಿ ಒಂದೆರಡು ಅಮೃತಬಿಂದು ಸಿಂಚನವಾಗಿದ್ದರೂ ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಬಿಜೆಪಿಯ ಸಾಮ್ರಾಟ್ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೆದುರು ಜೆ.ಪಿ ಇನ್ನಿಲ್ಲದಂತೆ ಎಡವಿಬಿಟ್ಟಿದ್ದರು. ಇನ್ನೂ ಕಾಂಗ್ರೆಸ್, ಜೆ.ಪಿ ಕತೆ ಮುಗಿಯಿತು ಎಂದು ಕಾರ‍್ಯಕರ್ತರು ನಿಟ್ಟುಸಿರಿಡುವಾ ಗಲೇ ಮತ್ತೆ ಇದೇ ಉಡುಪಿ ಲೋಕಸಭಾ ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡರೆದುರು ಸ್ಪರ್ಧಿಸಿದ ಜೆ.ಪಿ ಮತ್ತೆ ಕಾಂಗ್ರೆಸ್ ಮನೆಯಲ್ಲಿ ಆಸೆಯ ಹಣತೆ ಹಚ್ಚಿದರು. ಆದರೆ ಫಲಿತಾಂಶ ಘೋರವಾಗಿತ್ತು. ಸಾವಿರಾರು ಮತಗಳ ಅಂತರದಲ್ಲಿ ಆಸೆಯ ಹಣತೆ ನಿಶ್ಶಬ್ದವಾಗಿ ಆರಿಹೋಗಿತ್ತು. ಗೆಲುವಿನ ಕುದುರೆಯೇರಿದ ಬಿಜೆಪಿಯ ನಾಗಾಲೋಟದೆದುರು ಇನ್ಯಾರೂ ಸರಿಸಮಾನರಾಗಲಾರರು ಎಂದು ಕರಾವಳಿ ಕಾಂಗ್ರೆಸ್‌ನ ಮನೆ ಎನ್ನುವುದು ಸಾಕ್ಷಾತ್ ಸೂತಕದ ಮನೆಯೇ ಆಗಿಹೋಗಿತ್ತು.
ಅಷ್ಟರಲ್ಲಿಯೇ ಮತ್ತೆ ಮಗ್ಗಲು ಬದಲಿಸಿದ ಉಡುಪಿ ಲೋಕಸಭಾ ಕ್ಷೇತ್ರ ಉಪಚುನಾವಣೆಯ ರಂಗಲ್ಲಿ ಲಕಲಕಿಸ ತೊಡಗಿತ್ತು. ವಿಜಯದ ಅಫೀ ಮನ್ನು ತಿಂದಂತಹ ಬಿಜೆಪಿಯ ಪರವಾಗಿ ಕಾರ್ಕ ಳದ ಸುನೀಲ್ ಅಖಾಡದಲ್ಲಿಳಿದು ತೊಡೆ ತಟ್ಟಿದರೆ ಕಾಂಗ್ರೆಸ್ ಮನೆಯಿಂದ ಮತ್ತೆ ಹೊರಬಿದ್ದ ಹೆಸರು ಇದೇ ಜಯಪ್ರಕಾಶ್ ಹೆಗ್ಡೆಯವರದ್ದು. ಅಬ್ಬಾ, ಎರಡು ಸತತ ಸೋಲು, ಅದೂ ಸಾವಿರಾರು ಮತಗಳಿಂದ ಏನಾಗುತ್ತದೋ ಕಾಂಗ್ರೆಸ್ ಇಡೀ ಪಾಳಯದಲ್ಲಿ ಆತಂಕದ ನಿಟ್ಟುಸಿರು. ಕೊನೆಗೂ ಮತ ದಾರ ತನ್ನ ತೀರ್ಪನ್ನಿತ್ತಿದ್ದಾನೆ. ಫಿನಿಕ್ಸ್ ಮತ್ತೆ ತನ್ನ ಗರಿಗಳನ್ನು ಸೆಟೆಸಿ ನಿಂತಿದೆ. ಕಳೆದು ಕೊಂಡದನ್ನು ಕಳೆದುಕೊಂq ಲ್ಲಿಯೇ ಹುಡುಕು ಎಂಬ ಘಟವಾಣಿ ಜೆ.ಪಿಯವರ ಪಾಲಿಗೆ ನಿಜವಾ ಗಿದೆ. ಇಲ್ಲೊಂದು ಮಾತು ಹೇಳಲೇಬೇಕು, ಸತತ ಸೋಲಿನ ನಂತರ ಖುದ್ದು ಮನೆಯವರೇ ರಾಜಕಾ ರಣದಿಂದ ಹಿಂದೆ ಸರಿಯುವಂತೆ ಹೇಳಿದಾಗ ಜೆ.ಪಿ.ಯವರ ಒಂದು ಮಾತನ್ನು ಇಲ್ಲಿ ಹೇಳಲೇ ಬೇಕು. 'ನಾನು ಎರಡೆರಡು ಸಲ ಸೋತಿದ್ದೇನೆ ನಿಜ. ಆದರೆ ನಾನು ಗೆದ್ದು ಬರುವಂತೆ ಲಕ್ಷಾಂತರ ಜನರು ಮತಹಾಕಿದ್ದಾರಲ್ಲಾ ಅವರಿಗಾಗಿಯಾದರೂ ನಾನು ಸ್ಪರ್ಧಿಸಲೇ ಬೇಕಲ್ಲವೇ? ಮತದಾರ ಬದಲಾಗಲು ಇನ್ನೇನು ಬೇಕು..?





































