ಬಾಂಗ್ಲಾ-ಪಾಕ್ ಏಶ್ಯಾಕಪ್‌ಗಾಗಿ ಸೆಣಸಾಟ

Posted by JAYAKIRANA Kirana on Thursday, 22 March 2012 | 0 comments | Leave a comment...


ಢಾಕಾ: ಕ್ರಿಕೆಟಿನ ಶಿಶುಗಳೆಂದು ಕರೆಸಿಕೊಳ್ಳುತ್ತಿದ್ದ ಬಾಂಗ್ಲಾದೇಶ ಮೊದಲ ಸಲ ಏಶ್ಯಾಕಪ್‌ನ ಫೈನಲಿಗೆ ಪ್ರವೇಶಿಸಿದ್ದು, ಇಂದು ನಡೆಯಲಿರುವ ಫೈನಲಿನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ.
ಭಾರತ ಮತ್ತು ಶ್ರೀಲಂಕಾ ಆಘಾತಕಾರಿಯಾಗಿ ಹೊರಬಿದ್ದಿದೆ. ಬಾಂಗ್ಲಾ ವಿರುದ್ಧ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಡ ಧೋನಿ ಪಡೆ ಇದಕ್ಕೆ ತಕ್ಕ ಬೆಲೆ ತೆತ್ತಿದೆ. ಅದೇ ಲಂಕಾ ಮೊದಲ ಸಲ ಈ ಟೂರ್ನಿಯಲ್ಲಿ ಒಂದೂ ಗೆಲುವು ದಾಖಲಿಸದೆ ಮನೆ ದಾರಿ ಹಿಡಿದಿದೆ. ಲಂಕಾವನ್ನು ಮಣಿಸಿ ಫೈನಲಿಗೇ ರಿರುವ ಬಾಂಗ್ಲಾದಲ್ಲಿ ಭಾರೀ ಸಂಭ್ರಮ ಮನೆ ಮಾಡಿದ್ದು, ಆಟಗಾರರು ಕೂಡ ಫೈನಲಿನಲ್ಲಿ ಆಡಲು ಕಾತರಿಸಿದ್ದಾರೆ. ಸ್ವದೇಶದಲ್ಲೇ ಈ ಟೂರ್ನಿಯ ಫೈನಲ್ ಪಂದ್ಯ ನಡೆಯಲಿರುವ ಕಾರಣ ಬಾಂಗ್ಲಾಗೆ ಸ್ವದೇಶದ ಲಾಭವನ್ನು ಪಡೆಯುವ ಹೆಚ್ಚಿನ ಅವಕಾಶವಿದೆ.
ಬಾಂಗ್ಲಾ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಕೇವಲ ೨೧ ರನ್‌ಗಳಿಂದ ಸೋಲುಂಡಿತ್ತು. ಅದೂ ಗೆಲುವಿನ ಉತ್ತಮ ಅವಕಾಶವನ್ನು ಕಳಕೊಂಡು ಸೋಲಿನ ಕೂಪಕ್ಕೆ ಬಿದ್ದಿತ್ತು. ಫೈನಲಿನಲ್ಲಿ ಇದಕ್ಕೆ ಸೇಡು ತೀರಿಸಿಕೊಳ್ಳಲು ಬಾಂಗ್ಲಾ ಫೈನಲ್ ಪಂದ್ಯ ವೇದಿಕೆಯಾಗಬೇಕಾಗಿದೆ.
ಆದರೆ ೨೦೦೦ದ ಬಳಿಕ ಏಶ್ಯಾಕಪ್ ಪ್ರಶಸ್ತಿಯನ್ನು ಗೆಲ್ಲಲು ಹರಸಾಹಸ ಪಡುತ್ತಿರುವ ಪಾಕಿಸ್ತಾನ ಮತ್ತೆ ಪ್ರಶಸ್ತಿ ಗೆಲ್ಲಲು ಹವಣಿಸುತ್ತಿದೆ. ಮಿಸ್ಬ ಉಲ್ ಹಕ್ ಪಡೆ ಎರಡನೇ ಸಲ ಪ್ರಶಸ್ತಿಯನ್ನು ಗೆಲ್ಲುವ ಫೇವರಿಟ್ ತಂಡವಾಗಿದೆ. ಪಾಕ್‌ನ ಬ್ಯಾಟಿಂಗ್ ಪಾಳಯ ಬಲಿಷ್ಠವಾಗಿದೆ. ಆರಂಭಿಕರಾದ ಮಹಮ್ಮದ್ ಹಫೀಜ್ ಮತ್ತು ನಾಸೀರ್ ಜೆಮ್ಶೆಡ್ ಲೀಗ್‌ನಲ್ಲಿ ಉತ್ತಮ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಮಧ್ಯಮ ಸರದಿಯಲ್ಲಿ ಯೂನಿಸ್ ಖಾನ್ ಮತ್ತು ಉಮರ್ ಅಕ್ಮಲ್ ಉಪಯುಕ್ತ ದೇಣಿಗೆ ನೀಡಿ ತಂಡವನ್ನು ಆಧರಿಸಿದ್ದಾರೆ.
ಆದರೆ ಬಾಂಗ್ಲಾ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಇದುವರೆಗೆ ಉತ್ತಮ ಪ್ರದರ್ಶನವನ್ನೇ ನೀಡಿದೆ. ಬಾಂಗ್ಲಾ ಪ್ರಶಸ್ತಿ ಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುವುದರಲ್ಲಿ ಎರಡು ಮಾತಿಲ್ಲ. ಆದರೆ ಪಾಕ್‌ಗೆ ಗೆಲ್ಲಲೇಬೇಕಾದ ಅನಿವಾರ‍್ಯತೆ ಇದೆ.

ತವರಿನಲ್ಲಿ ಸೈನಾಗೆ ಭವ್ಯ ಸ್ವಾಗತ

Posted by JAYAKIRANA Kirana on | 0 comments | Leave a comment...


ಹೈದರಾಬಾದ್: ಸ್ವಿಸ್ ಓಪನ್ ಗ್ರ್ಯಾಂಡ್ ಪ್ರೀ ಗೆದ್ದುಕೊಂಡಿರುವ ಸೈನಾ ನೆಹ್ವಾಲ್ ಅವರನ್ನು ಹೈದರಾ ಬಾದ್‌ನಲ್ಲಿರುವ ಪುಲ್ಲೆಲಾ ಗೋಪಿ ಚಂದ್ ಅಕಾಡೆಮಿಯಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.
ಒಂದು ವರ್ಷದ ಬಳಿಕ ನಾನು ಪ್ರಮುಖ ಟೂರ್ನಮೆಂಟ್ ಒಂದನ್ನು ಗೆದ್ದುಕೊಂಡಿದ್ದೇನೆ. ಕಳೆದ ವರ್ಷ ನಾನು ಅಲ್ಲಿ ಗೆದ್ದಾಗ ಚೀನಾದ ಆಟಗಾ ರರಿರಲಿಲ್ಲ. ಇದರಿಂದ ಟೂರ್ನಿ ಸ್ವಲ್ಪ ಕಳೆಗುಂದಿತ್ತು. ಈ ವರ್ಷ ಚೀನಾದ ಅಗ್ರ ಆಟಗಾರರು ಭಾಗವಹಿಸಿದ ಕಾರಣ ನಾನು ಪ್ರಬಲ ಸ್ಪರ್ಧೆಯನ್ನು ಎದುರಿಸಿದೆ. ಫೈನಲಿನಲ್ಲಿ ನಾನು ಚೀನಾದ ಆಟಗಾರ್ತಿಯನ್ನು ಸೋಲಿ ಸಿರುವುದು ದೊಡ್ಡ ಸಾಧನೆ ಎಂದು ಸೈನಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಸ್ವಿಸ್ ಓಪನ್ ಗೆದ್ದ ಬಳಿಕ ನನಗೆ ಒಂದೂ ಟೂರ್ನಿ ಗೆಲ್ಲಲಾ ಗದಿರುವುದು ತುಂಬಾ ನಿರಾಶೆಯನ್ನು ಉಂಟು ಮಾಡಿತ್ತು. ನಾನು ಒಳ್ಳೆಯ ಫಾರ್ಮ್‌ನಲ್ಲಿದ್ದೆ. ಆದರೂ ಟೂರ್ನಿ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಫುಟ್ಬಾಲ್: ಅಂಗಣದಲ್ಲೇ ಕುಸಿದು ಬಿದ್ದು ಮೃತರಾದ ಯುವ ಆಟಗಾರ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಇಲ್ಲಿಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ‘ಎ ಡಿವಿಜನ್  ಟೂರ್ನಿಯ ಬುಧವಾರದ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿದೆ. ೨೮ರ ಹರೆಯದ ಸ್ಟ್ರೈಕರ್ ವೆಂಕಟೇಶ್ ಆಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣಬಿಟ್ಟ ಆಟಗಾರ.  ನಿನ್ನೆ ಸಂಜೆ ೩.೨೦ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ವೆಂಕಟೇಶ್ ಪ್ರತಿನಿಧಿಸಿದ ಬೆಂಗಳೂರು ಮಾರ್ಸ್ ತಂಡ ಎದುರಾಳಿ ಸೌತ್ ವೆಸ್ಟರ್ನ್ ರೈಲ್ವೆ ತಂಡದ ವಿರುದ್ಧ ೨-೦ ಅಂತರದಿಂದ ಮುನ್ನಡೆ ಸಾಧಿಸಿತ್ತು. ಅಂತಿಮ ಹಂತದಲ್ಲಿ ವೆಂಕಟೇಶ್ ಓಡಿ ಚೆಂಡನ್ನು ಡಿ ಬಾಕ್ಸ್‌ನತ್ತ ತಳ್ಳಿ ಹಿಂದಿರುವಾಗ ಮೈದಾನದಲ್ಲೇ ಕುಸಿದು ಬಿದ್ದರು. ಸಹ ಆಟಗಾರರು ಹಾಗೂ ಸಿಬ್ಬಂದಿ ಚಿಕಿತ್ಸೆ ಕರೆದೊಯ್ದರೂ ಫಲಕಾರಿಯಾಗಲಿಲ್ಲ.
ಸುಮಾರು ೧೦ ನಿಮಿಷಗಳ ಕಾಲ ವೆಂಕಟೇಶ್ ಮೈದಾನದಲ್ಲೇ ಬಿದ್ದಿದ್ದರು. ವೈದ್ಯರಿಗೂ ಅವರನ್ನು ಉಳಿಸಲಾಗದೆ ಆಸ್ಪತ್ರೆಗೆ ಸಾಗಿಸಲು ಅಂಬ್ಯಲೆನ್ಸ್ ವ್ಯವಸ್ಥೆಯೂ ಇಲ್ಲದೆ ಕುಡಿಯುವ ನೀರಿಗೂ ಪರದಾಡುವಂತಾಯಿತು. ಇದರಿಂದಾಗಿ ಆಯೋಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೆಂಕಟೇಶ್ ಕರ್ನಾಟಕದ ಬ್ರೆಜಿಲ್ ಎಂದೇ ಪ್ರಸಿದ್ಧವಾದ ಗೌತಮ್‌ಪುರದ ನಿವಾಸಿ. ಬಡ ಕುಟುಂಬದಿಂದಲೇ ಹುಟ್ಟಿ ಬೆಳೆದ ವೆಂಕಟೇಶ್ ಸಾವು ಈಗ ಅವರ ಕುಟುಂಬಕ್ಕೆ ತೀವ್ರ ಆಘಾತ ನೀಡಿದ್ದು, ರಾಜ್ಯ ಫುಟ್ಬಾಲ್ ಸಂಸ್ಥೆ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ.

ಕೊಹ್ಲಿ ಮೇಲೆ ಒತ್ತಡ ಹಾಕಬೇಡಿ: ಸಚಿನ್ ಸಲಹೆ

Posted by JAYAKIRANA Kirana on | 0 comments | Leave a comment...


ಮುಂಬೈ: ಉದಯೋನ್ಮುಖ ಆಟಗಾರ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ ಹಾಕದೆ ಅವರನ್ನು ಸ್ವಾಭಾ ವಿಕ ಆಟವಾಡುವಂತೆ ಪ್ರೇರೇಪಿಸ ಬೇಕೆಂದು ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. ಅವರು ಅತ್ಯುತ್ತಮ ಆಟ ಗಾರ. ಅವರ ಕ್ರಿಕೆಟ್ ಜೀವನ ಉನ್ನತಿ ಗೇರುತ್ತಿದೆ. ಆದರೆ ಅವರ ಮೇಲೆ ಒತ್ತಡ ಹಾಕಬಾ ರದು. ಅವರನ್ನು ಆಡಲು ಬಿಡಿ ಎಂದು ಸಚಿನ್ ಹೇಳಿದ್ದಾರೆ. ಇದೇ ವೇಳೆ ತಂಡ ಏಶ್ಯಾಕಪ್ ನಿಂದ ಹೊರ ಬಿದ್ದ ಬಗ್ಗೆ ಮಾತನಾಡಿದ ಸಚಿನ್, ನಾವು ಪ್ರತೀ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಕೆಲವು ಸಲ ಇದು ಸಾಧ್ಯವಾಗುತ್ತದೆ, ಮತ್ತೆ ಕೆಲವೊಮ್ಮೆ ಎದುರಾಳಿ ತಂಡ ನಮಗಿಂತ ಒಳ್ಳೆಯ ಕ್ರಿಕೆಟ್ ಆಡುತ್ತದೆ. ಬಾಂಗ್ಲಾ ಉತ್ತಮ ವಾಗಿ ಆಡಿದೆ. ಅವರಿಗೆ ಅದರ ಶ್ರೇಯಸ್ಸು ಸಲ್ಲಬೇಕಾ ಗಿದೆ ಎಂದು ಸಚಿನ್ ಅಭಿಪ್ರಾಯ ಪಟ್ಟಿದ್ದಾರೆ.

ಜಯಪ್ರಕಾಶ ಹೆಗ್ಡೆ ಕೈ ಹಿಡಿದ ಮತದಾರರು

Posted by JAYAKIRANA Kirana on | 0 comments | Leave a comment...


ಉಡುಪಿ: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಂದ ತೆರವಾದ ಪ್ರತಿಷ್ಟಿತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಬಿಜೆಪಿಯ ವಿ.ಸುನಿಲ್ ಕುಮಾರ್ ಅವರನ್ನು ೪೫ ಸಾವಿರಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸುವ ಮೂಲಕ ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆಯ ವರು ಅಭೂತಪೂರ್ವ ಜಯ ದಾಖ ಲಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆಯವರು ೩,೯೮,೭೨೩ ಮತಗಳನ್ನು ಪಡೆದರೆ, ಸುನಿಲ್ ಕುಮಾರ್ ಅವರು ೩,೫೨,೯೯೯ ಮತಗಳನ್ನು ಪಡೆದಿದ್ದಾರೆ. ೭೨,೦೮೦  ಮತಗಳನ್ನು ಗಳಿಸಿ ಜೆಡಿಎಸ್‌ನ ಎಸ್.ಎಲ್.ಭೋಜೇ ಗೌಡ ಅವರು    ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಂಯುಕ್ತ ಜನತಾದಳ(ಜೆಡಿಯು)ದ ಕೆ.ಭರತ್ ಅವರಿಗೆ ೪,೯೪೫ ಮತಗಳೂ, ಪ್ರಜಾಪ್ರಭುತ್ವದ ಪ್ರಜಾಕ್ರಾಂತಿ ಪಕ್ಷದ ಹುಣಸೂರು ಕೆ.ಚಂದ್ರಶೇಖರ್ ಅವರು ೩,೬೪೦ ಮತಗಳನ್ನು ಗಿಟ್ಟಿಸಿಕೊಂಡಿದ್ದಾರೆ.
 ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿದ್ದ ಹರಿ ಶ್ಯಾನುಭೋಗ್ ಕಟೀಲ್ ಅವರಿಗೆ ೬,೯೩೦ ಮತಗಳು, ಶ್ರೀನಿವಾಸ ಪೂಜಾರಿ- ೩,೨೯೩, ಎಚ್. ಸುರೇಶ್ ಪೂಜಾರಿ- ೨,೧೭೭, ಕೆ.ಜಯಪ್ರಕಾಶ್ ಹೆಗ್ಡೆ ಕೊಕ್ಕರ್ಣೆ- ೧,೭೫೫, ಅಸಾದುಲ್ಲಾ ಕಟಪಾಡಿ- ೧,೪೯೧, ದೀಪಕ್ ರಾಜೇಶ್ ಕುವೆಲ್ಲೊ- ೧,೪೨೯, ಶ್ರೀಧರ ಪೇದೆಮನೆ- ೧,೩೭೭, ವೆಂಕಟೇಶ್ ಎನ್.- ೧,೦೬೪ ಹಾಗೂ ರಿಯಾಝ್ ಅಹಮ್ಮದ್- ೯೨೧ ಮತಗಳು ಲಭಿಸಿವೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಹರಿ ಶ್ಯಾನುಭೋಗ್ ಅವರು ಜೆಡಿಯು ಮತ್ತು ಪ್ರಜಾಪ್ರಭುತ್ವದ ಪ್ರಜಾಕ್ರಾಂತಿ ಪಕ್ಷಗಳಿಗಿಂತಲೂ ಅಧಿಕ ಮತ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಕುಂಜಿಬೆಟ್ಟು ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲಲ್ಲಿ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಿಂದ ಆರಂಭಿಸಿ, ಕೊನೆಯ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮುನ್ನಡೆ ಕಾಯ್ದುಕೊಳ್ಳುತ್ತಲೇ ಇದ್ದುದು, ಅವರ ಗೆಲುವಿನ ಮುನ್ಸೂಚನೆಯನ್ನು ಆರಂಭದಲ್ಲೇ ಮೂಡಿಸಲು ಕಾರಣವಾಗಿತ್ತು.

ಎಚ್ಚರಿಕೆಯ ಘಂಟೆ

Posted by JAYAKIRANA Kirana on | 0 comments | Leave a comment...


ಉಡುಪಿ: ಉಪಚುನಾವಣೆ ಸೋಲು ಬಿಜೆಪಿಗೊಂದು ಎಚ್ಚರಿ ಕೆಯ ಘಂಟೆಯಾಗಿದೆ. ಅದು ಪ್ರತಿ ನಿಧಿಸುತ್ತಿದ್ದ ಹೆಚ್ಚಿನೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗಿಂತ ಕಡಿಮೆ ಮತ ಪಡೆದಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎಂಬುದರ ಸಂಕೇತವಾಗಿದೆ. ಅದರಲ್ಲೂ ಶಾಸಕ ರಘುಪತಿ ಭಟ್ ಕ್ಷೇತ್ರದಲ್ಲಿ  ಕಾಂಗ್ರೆಸ್ ಗಿಂತ ಸುಮಾರು ೧೨ ಸಾವಿರ ಮತ ಗಳು ಬಿಜೆಪಿಗೆ ಕಡಿಮೆಯಾಗಿವೆ. ಇದು ರಘುಪತಿ ಭಟ್‌ಗೆ ಆಗಿರುವ ಒಂದು ದೊಡ್ಡ ಹಿನ್ನಡೆ ಎಂದು ಹೇಳಬೇಕಾಗುತ್ತದೆ.
ಸೈಂಟ್ ಮೇರಿ ಮತ್ತು ಪದ್ಮಪ್ರಿಯಾ ಪ್ರಕರಣ ಪ್ರಭಾವ?
ಉಡುಪಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತಗಳು ಬಿಜೆಪಿಯಿಂದ ಕೈ ತಪ್ಪಲು ತಿಂಗಳ ಹಿಂದೆ ನಡೆದಿದ್ದ ಸೈಂಟ್ ಮೇರಿ ದ್ವೀಪದ ರೇವ್ ಪಾರ್ಟಿ ಮತ್ತು ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಸಾವಿನ ಪ್ರಕರಣ ಕಾರಣವೇ ಎಂಬ ಬಗ್ಗೆಯೂ ಜನರು ಮಾತಾಡುತ್ತಿದ್ದಾರೆ. ಈ ಎರಡು ಪ್ರಕರಣಗಳು ಬಿಜೆಪಿಯ ಮತಬ್ಯಾಂಕ್‌ಗೆ ಕನ್ನ ಕೊರೆದಿರುವ ಸಾಧ್ಯತೆ ಇದ್ದೇ ಇದೆ. ಜತೆಗೆ ಶಾಸಕ ರಘುಪತಿ ಭಟ್ ಅವರ ಕಾರ್ಯವೈಖರಿ  ಬಗ್ಗೆಯೂ ಜನರು ಅಸಮಾಧಾನ ಗೊಂಡಿದ್ದಾರೆ. ಅವೆಲ್ಲವೂ ಈಗ ಉಪಚುನಾವಣೆಯಲ್ಲಿ  ಪ್ರತಿಫಲನಗೊಂಡಿದೆ. ಎಲ್ಲರ ಪಾಪದ ಪಿಂಡವನ್ನು ಸುನಿಲ್‌ಕುಮಾರ್ ಹೊರುವಂತಾಗಿದೆ.

ಬಿಜೆಪಿ ಸೋಲಲ್ಲಿ ಬಂಟರ ಪಾತ್ರ?

Posted by JAYAKIRANA Kirana on | 0 comments | Leave a comment...


ಉಡುಪಿ: ಉಪಚುನಾವಣೆಯಲ್ಲಿ ಬಿಜೆಪಿ ಸೋಲುವಲ್ಲಿ ಬಂಟ ಸಮುದಾಯದ ಪಾತ್ರವಿದೆಯೇ ಎಂಬ ಪ್ರಶ್ನೆಯೊಂದು ಈಗ ಕೇಳಿ ಬರುತ್ತಿದ್ದು, ಇಲ್ಲ ಎಂದು ಹೇಳುವಂತಿಲ್ಲ. ಕರಾವಳಿಯಲ್ಲಿ ಒಂದು ಪ್ರಮುಖ ಸಮುದಾಯವಾಗಿರುವ ಬಂಟರಿಗೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡದಿರುವುದರಿಂದ ಸಹಜವಾಗಿಯೇ ಆ ಸಮುದಾಯ ಬಿಜೆಪಿ ಮೇಲೆ ಅಸಮಾಧಾನಗೊಂಡಿದೆ.
ಬೆಳಗಾವಿ ಬಂಟರ ಸಂಘವು ಈ ಹಿಂದೆಯೇ ಜಯಪ್ರಕಾಶ್ ಹೆಗ್ಡೆ ಅವರಿಗೆ ತಮ್ಮ ಬೆಂಬಲ ನೀಡಿತ್ತು. ಹೆಗ್ಡೆಯವರು ಬೆಳಗಾವಿ ಬಂಟರ ಸಂಘಕ್ಕೆ ಭೇಟಿ ಇತ್ತು ಮತ ಯಾಚಿಸಿದ್ದರು. ಆದರೆ ಬಂಟರ ಮತ ಸೆಳೆಯಲು ಬಿಜೆಪಿ ವಿಶೇಷವಾದ  ಯಾವುದೇ  ಪ್ರಯತ್ನ ಮಾಡಿರಲಿಲ್ಲ. ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಿದ್ದರೆ ಫಲಿತಾಂಶ ಇಷ್ಟು ಹೀನಾಯವಾಗುತ್ತಿರಲಿಲ್ಲ ಎಂಬ ಮಾತೂ  ಕೇಳಿ ಬರುತ್ತಿದೆ.
ಯಡಿಯೂರಪ್ಪ ಸಂಪುಟದಲ್ಲಿ ಬಂಟರಿಗೆ ಒಂದು ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹವನ್ನು ಆ ಸಮುದಾಯ ಬಿಜೆಪಿ ಮುಂದಿರಿಸಿತ್ತು.  ಹಾಲಾಡಿ ಶ್ರೀನಿವಾಸ ಶೆಟ್ಟರು ಸಚಿವರಾಗುವ ಎಲ್ಲ ಅರ್ಹತೆ, ಯೋಗ್ಯತೆ ಹೊಂದಿದ್ದರು. ಆದರೂ ಅವರಿಗೆ ಸಚಿವ ಸ್ಥಾನ ನೀಡದೆ ಸಹಜವಾಗಿಯೇ ಬಂಟರ ಮುನಿಸಿಗೆ ಬಿಜೆಪಿ ಒಳಗಾಗಿತ್ತು. ಸಾಲದ್ದಕ್ಕೆ ಉಡುಪಿಯಲ್ಲೂ  ಬಂಟ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಎಂಬ ಆರೋಪ  ಈ ಹಿಂದಿನಿಂದಲೇ ಇತ್ತು. ಹಿಂದೆ ಸುಧಾಕರ ಶೆಟ್ಟಿಯವರಿಗೆ ಟಿಕೆಟ್ ನಿರಾಕರಿಸಿ ರಘುಪತಿ ಭಟ್ಟರಿಗೆ ಟಿಕೆಟ್ ನೀಡಿದ್ದು, ಬೆಳೆಯುತ್ತಿದ್ದ ನಾಯಕ ಬೈಕಾಡಿ ಸುಪ್ರಸಾದ್ ಶೆಟ್ಟಿಯನ್ನು ಮೂಲೆಗೆ ತಳ್ಳಿದ್ದು ಮುಂತಾದವುಗಳು ಬಿಜೆಪಿಗೆ ಗರಿಷ್ಠ ಪ್ರಮಾಣದ ಮತಗಳು ಕಡಿಮೆಯಾಗುವಂತೆ ಮಾಡಿದೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.
ಸಾಲದ್ದಕ್ಕೆ ಸುನಿಲ್ ಕುಮಾರ್ ಮೇಲೆಯೂ ಕಾರ್ಯಕರ್ತರಿಗೆ ಅಸಮಾಧಾನವಿತ್ತು.  ಅವರು ಈಗೀಗ ಜನರಿಗೆ ಹತ್ತಿರವಾಗುತ್ತಿರಲಿಲ್ಲ ಮತ್ತು ಒಂದು ವರ್ಗದ ಕೋಪಕ್ಕೆ ತುತ್ತಾಗಿದ್ದರು. ತನ್ನ ಕ್ಷೇತ್ರದಲ್ಲಿಯೇ ಕಾಂಗ್ರೆಸ್‌ನಿಂದ ಕೇವಲ ಒಂದು ಸಾವಿರ ಮತಗಳನ್ನು ಮಾತ್ರವೇ ಅವರು ಹೆಚ್ಚುವರಿಯಾಗಿ ಪಡೆದಿದ್ದಾರಷ್ಟೆ. ಆದರೆ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯ ಕೋಟೆಯಂತಿರುವ ತನ್ನ ಕ್ಷೇತ್ರ ಕುಂದಾಪುರದಲ್ಲಿ ಬಿಜೆಪಿಗಿಂತ ೯ ಸಾವಿರ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಇದರಲ್ಲಿ ಬಂಟ ಮತಗಳು ಸಾಕಷ್ಟು ಸಂಖ್ಯೆಯಲ್ಲಿರುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮೋಸದಿಂದ ಸೋಲಿಸಲಾಗಿದೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಡುಪಿ-ಚಿಕ್ಕ ಮಗಳೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇ ಜಯಪ್ರಕಾಶ್ ಹೆಗ್ಡೆಯವರ ಗೆಲುವಿಗೆ ಕಾರಣವಾಗಿದೆ. ಆದರೆ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಮೋಸದಿಂದ ಸೋಲಿಸಲಾಗಿದೆ ಎಂದು ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿ ಆರೋಪಿ ಸಿದ್ದಾರೆ.
ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಏನನ್ನೂ ಸಾಧಿಸಲು ಸಾಧ್ಯವಿದೆಯೆನ್ನುವುದು ಚುನಾವಣೆಯ  ಫಲಿತಾಂಶದ ಮೂಲಕ ಸಾಬೀತಾಗಿದ್ದು, ಇದು ಮತದಾರರು ಕಲಿಸಿದ ಪಾಠವಾಗಿದೆ. ಇದೇ ಒಗ್ಗಟ್ಟು ಮುಂದುವರಿಸಬೇಕಾಗಿದೆ ಎಂದು ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆಯನ್ನು ಪರೋಕ್ಷವಾಗಿ ಒಪ್ಪಿಕೊಂಡ ಪೂಜಾರಿ, ನನ್ನ ಸೋಲಿಗೆ ಬಿಜೆಪಿ ಮುಖಂಡರು ಮಾಡಿದ ಮೋಸದ ತಂತ್ರವೇ ಕಾರಣ ಎಂದು ತಮ್ಮ ಹೇಳಿಕೆಗೆ ತೇಪೆ ಹಾಕಿದರು.
ಬಿಜೆಪಿಯಲ್ಲಿ ಅಶಿಸ್ತು ಮಿತಿಮೀರಿದ್ದು, ಮಂತ್ರಿಗಳ ಕಾಮಕಾಂಡ, ಅತ್ಯಾ ಚಾರ, ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದೇ ಸುನಿಲ್ ಕುಮಾರ್ ಸೋಲಿಗೆ ಕಾರಣವಾಗಿದೆ. ಈ ಮೂಲಕ ಮತದಾರರು, ಸರಕಾರ ಮಾಡುವ ತಪ್ಪಿಗೆ ಪಾಠ ಕಲಿಸಿದ್ದಾರೆ ಎಂದು ವಿಶ್ಲೇಷಿಸಿದ ಪೂಜಾರಿ ಇಷ್ಟಕ್ಕೂ ಕಾಂಗ್ರೆಸ್ ಗೆದ್ದ ಮಾತ್ರಕ್ಕೆ ಅಹಂ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇದನ್ನೇ ದುರುಪಯೋಗ ಪಡಿಸಿಕೊಂಡ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಜಾತಿ ರಾಜಕೀಯಕ್ಕೆ ಮುಂದಾದರು. ಆದರೆ ಮತದಾರರು ಜಾತಿ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಇಂತಹ ರಾಜಕಾರಣವನ್ನು ಯಾರೂ ಮಾಡಬಾರದು ಎಂದರು. ಆದರೆ ಮಂಗಳೂರು ಲೋಕಸಭಾ ಚುನಾವಣೆಯ ಸಂದರ್ಭ ಬಿಲ್ಲವ ಸಂಘಟ ನೆಯೊಂದು ತಮ್ಮ ಪರ ಮತ ಚಲಾಯಿಸುವಂತೆ ಕರಪತ್ರ ಹಂಚಿರುವ ಬಗ್ಗೆ ಪ್ರಶ್ನಿಸಿದಾಗ, ಉತ್ತರಿಸಲು ನಿರಾಕರಿಸಿದ ಪೂಜಾರಿ, ನಡೆದು ಹೋದ ವಿಷಯ ಈಗ ಪ್ರಸ್ತಾಪಿಸುವುದು ಬೇಡ ಎಂದು ಕೈತೊಳೆದರು.

ಸದನದಲ್ಲೇ ಬ್ಲೂಫಿಲ್ಮ್ ವೀಕ್ಷಿಸಿದ ಗುಜರಾತ್ ಬಿಜೆಪಿ ಶಾಸಕರು

Posted by JAYAKIRANA Kirana on | 0 comments | Leave a comment...


ಕರ್ನಾಟಕದ ನಂತರ ಗುಜರಾತ್ ಸರದಿ
ಅಹ್ಮದಾಬಾದ್: ಕರ್ನಾಟಕ ಅಡಳಿತರೂಢ ಬಿಜೆಪಿ ಪಕ್ಷದ ಸಚಿವರು ವಿಧಾನಸೌಧದಲ್ಲಿ ಬ್ಲೂಫಿಲ್ಮ್ ವೀಕ್ಷಿಸಿದ ಪ್ರಕರಣ ಬೆಳಕಿಗೆ ಬಂದು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ತತ್ತರಿಸುತ್ತಿರುವಾಗಲೇ ಗುಜರಾತ್‌ನ ಬಿಜೆಪಿ ಸಚಿವರು ಕೂಡಾ ಸದನದಲ್ಲಿ ಬ್ಲ್ಯೂಫಿಲ್ಮ್ ವೀಕ್ಷಿಸಿ ಮತ್ತೊಂದು ರಾದ್ದಾಂತಕ್ಕೆ ಕಾರಣ ರಾಗಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರಾದ ಶಂಕರ ಚೌಧರಿ ಮತ್ತು ಜೇಠಾ ಭಾರ್ವದ ವಿಧಾನಸೌಧದಲ್ಲಿ ಬ್ಲೂ ಫಿಲ್ಮ್ ವೀಕ್ಷಿಸುತ್ತಿರುವ ದೃಶ್ಯಗಳನ್ನು ಮಾಧ್ಯಮಗಳು ಬಹಿರಂಗಪಡಿಸಿವೆ.
ಘಟನೆ ನಡೆದ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಹೆಚ್ಚಿನ ಹಣಕಾಸಿನ ನೆರವು ನೀಡುವ ಕುರಿತಂತೆ ಚರ್ಚೆ ನಡೆಯುತ್ತಿತ್ತು.
ಶಾಸಕರು ಬ್ಲೂಫಿಲ್ಮ್ ವೀಕ್ಷಿಸುತ್ತಿರುವ ಬಗ್ಗೆ ಪತ್ರಕರ್ತರು ಸಭಾಪತಿಯ ಆಪ್ತ ಸಹಾಯಕರಿಗೆ ಮಾಹಿತಿ ನೀಡಿದಾಗ, ಮೊಬೈಲ್‌ನ್ನು ಸದನದಿಂದ ಹೊರಗಿಡುವಂತೆ ಆದೇಶಿಸಲಾಯಿತು. ಏತನ್ಮಧ್ಯೆ, ಸಭಾಪತಿಗಳು ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಶಾಸಕ ಶಂಕರ ಚೌಧರಿ ತಮ್ಮ ಐಪ್ಯಾಡ್ ಮೂಲಕ ಬ್ಲ್ಯೂಫಿಲ್ಮ್ ದೃಶ್ಯಗಳನ್ನು ಮತ್ತೊಬ್ಬ ಶಾಸಕ ಭಾರ್ವದ ಅವರಿಗೆ ತೋರಿಸುತ್ತಿದ್ದರು ಎಂದು ಹಿರಿಯ ಪತ್ರಕರ್ತ ಜನಕ ದವೆ ಆರೋಪಿಸಿದ್ದಾರೆ.

ನಕಲಿ ಮದ್ಯ ದಾಸ್ತಾನು: ಆರೋಪಿಗಳ ಸೆರೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಗೋವಾದಿಂದ ತಂದು ಕೇರಳಕ್ಕೆ ಸಾಗಾಟ ಮಾಡುವ ಉದ್ದೇಶದಿಂದ ಪಡೀಲ್‌ನಲ್ಲಿ ದಾಸ್ತಾನು ಇರಿಸಲಾಗಿದ್ದ ಮದ್ಯವನ್ನು ಪತ್ತೆ ಹಚ್ಚಿರುವ ಅಬಕಾರಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು ಪೆರಡಾಲ ಗ್ರಾಮದ ವಿಶ್ವನಾಥ ಯಾನೆ ವಸಂತ ಹಾಗೂ ಪುತ್ತೂರು ಮೊಗ್ರಾಲ್ ನಿವಾಸಿ ಅನಿಲ್ ಕುಮಾರ್ ಎಂಬ ವರೇ ಬಂಧಿತ ಆರೋಪಿಗಳು. ಇವರು ನಿನ್ನೆ ಬೆಳಿಗ್ಗೆ ಮೂರು ಲಕ್ಷ ಮೌಲ್ಯದ ಮದ್ಯ ವನ್ನು ಕೇರಳಕ್ಕೆ ಸಾಗಿಸುವ ಉದ್ದೇಶ ದಿಂದ ಗೋವಾ ದಿಂದ ರೈಲಿ ನಲ್ಲಿ ತಂದು ಪಡೀಲ್ ರೈಲ್ವೇ ಓವರ್‌ಬ್ರಿಡ್ಜ್ ಬಳಿ ದಾಸ್ತಾನು ಇಟ್ಟಿದ್ದರು. ಇದರ ಬಗ್ಗೆ ಮಾಹಿತಿ ಯರಿತ ಅಬಕಾರಿ ಪೊಲೀಸ ರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳ ಸಹಿತ ಮದ್ಯ ವನ್ನೂ ವಶಪಡಿಕೊಂಡಿದ್ದಾರೆ.

ಸಾಕ್ಷಿಗಳ ವಿಚಾರಿಸಿದ ಸೈನೆಡ್ ಕಿಲ್ಲರ್ ಮೋಹನ

Posted by JAYAKIRANA Kirana on | 0 comments | Leave a comment...


ಮಂಗಳೂರು: ಸರಣಿ ಕೊಲೆ ಆರೋಪಿ ಮೋಹನಕುಮಾರ ವಿಚಾರಣೆಗೆ ಸಂಬಂಧಿಸಿ ವಿಟ್ಲದ ಇಡ್ಕಿದುವಿನಿಂದ ನಾಪತ್ತೆಯಾಗಿದ್ದ ಹೇಮಾ ಯಾನೆ ಹೇಮಾವತಿಯ ಕುರಿತಂತೆ ಜಿಲ್ಲಾ ತ್ವರಿತಗತಿ ನ್ಯಾಯಾಲಯದಲ್ಲಿ ಬುಧವಾರ ಮೂವರ ಸಾಕ್ಯ್ಷ ದಾಖಲಿಸಲಾಯಿತು. ಹೇಮಾವತಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಮೀಮಾ ಡಿಸೋಜಾ ೨೦೦೯ರ ಎ.೨೨ರಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದ ಹೇಮಾವತಿ ರಾಜೀನಾಮೆಗೆ ಮದುವೆಯ ಕಾರಣವನ್ನು ಮೌಖಿಕವಾಗಿ ತಿಳಿಸಿದ್ದಳು ಎಂದು ನ್ಯಾಯಾಧಿಶರಿಗೆ ತಿಳಿಸಿದರು. 
ಹೇಮಾವತಿ ರಾಜೀನಾಮೆ ಪತ್ರದಲ್ಲಿ ಕಾರಣ ನಮೂದಿಸಿದ್ದರೇ ಎಂಬುದು ಮೋಹನಕುಮಾರನ ಪಾಟಿ ಸವಾಲಾಗಿತ್ತು.
ಪೂತ್ತೂರು ಎಸ್ಸಿಡಿಸಿಸಿ ಬ್ಯಾಂಕ್‌ನ ಗುಮಾಸ್ತೆ ಮೀನಾಕ್ಷಿ ಸಾಕ್ಷ್ಯ ಹೇಳಿದ್ದು, ಹೇಮಾವತಿ  ಕೆಲಸ ನಿರ್ವಹಿಸುತ್ತಿದ್ದ ಸಂಸ್ಥೆಯ ಖಾತೆ ನಮ್ಮ ಬ್ಯಾಂಕ್‌ನ ಶಾಖೆಯಲ್ಲಿದೆ. ಹೇಮಾವತಿಗೆ ಇಲ್ಲಿಂದಲೇ ವೇತನ ಪಾವತಿಯಾಗುತ್ತಿತ್ತು. ೨೦೦೯ರ ಎ.೨೨ರಂದು ತನ್ನ ಖಾತೆಯಿಂದ ಒಂದು ಸಾವಿರ ರೂ. ತೆಗೆದಿದ್ದಾಳೆ ಎಂದು ಮಾಹಿತಿ ನೀಡಿದರು.
ಮೋಹನಕುಮಾರ ಅಡವು ಇಟ್ಟಿದ್ದನೆನ್ನಲಾದ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಸೋನಾ ಬ್ಯಾಂಕ್‌ನಿಂದ ಪೋಲೀಸರು ಹೇಮಾವತಿಯ ಚಿನ್ನಾಭರಣ ವಶಪಡಿಸಿಕಂಡು ಮಹಜರು ನಡೆಸಿದ ಸಂದರ್ಭದಲ್ಲಿ ಪಂಚನಾಗಿ ಉಪಸ್ಥಿತರಿದ್ದ ಬಂಟ್ವಾಳ ಪೇರಾಜೆಯ ಹೊನ್ನಪ್ಪ, ಇಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದು,  ವಶಪಡಿಸಿಕೊಳ್ಳಲಾದ ಚಿನ್ನಾಭರಣ ಗುರುತಿಸಿದರು.  ಪಾಟಿ ಸವಾಲು ಎಸೆದ ಮೋಹನಕುಮಾರ  ಸೋನಾ ಬ್ಯಾಂಕ್ ಎಲ್ಲಿದೆ. ಎಷ್ಟೋತ್ತಿಗೆ ಬ್ಯಾಂಕ್‌ಗೆ ಬಂದಿದ್ದೀರಿ ಜೊತೆಯಲ್ಲಿ ಯಾರಿದ್ದರು ಎಂದು ಪ್ರಶ್ನಿಸಿದ್ದಲ್ಲದೆ, ಅಂದು ಮಹಜರು ನಡೆಸುವ ಸಂದರ್ಭದಲ್ಲಿ  ಆರೋಪಿಯನ್ನು (ಮೋಹನ್‌ಕುಮಾರ)  ಜೊತೆಯಲ್ಲಿ ಕರೆತಂದಿರಲಿಲ್ಲ ನಿವು ಸುಳ್ಳು ಹೇಳುತ್ತಿದ್ದೀರಿ ಎಂದು ಸವಾಲು ಎಸೆದ. ಇದನ್ನು ಹೊನ್ನಪ್ಪ ನಿರಾಕರಿಸಿದರು.
ಸರಕಾರಿ ವಿಶೇಷ ಅಭಿಯೋಜಕ ಚೆಯ್ಯಬ್ಬ ಬ್ಯಾರಿ ಸಾಕ್ಷಿದಾರರಿಗೆ ಪೂರಕ ಪ್ರಶ್ನೆಗಳನ್ನು ಕೇಳಿದರು.

ವಿಟ್ಲ: ಬಸ್‌ನಿಂದ ಎಸೆಯಲ್ಪಟ್ಟ ವ್ಯಕ್ತಿ ಗಂಭೀರ

Posted by JAYAKIRANA Kirana on | 0 comments | Leave a comment...


ವಿಟ್ಲ: ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟ ಪರಿಣಾಮ ಗಂಭೀರ ರೀತಿಯಲ್ಲಿ ಗಾಯಗೊಂಡ ಘಟನೆ ವಿಟ್ಲದ ಸಿಪಿಸಿಆರ್‌ಐ(ಚಂದಳಿಕೆ) ಎಂಬಲ್ಲಿ ಸೋಮವಾರ ನಡೆದಿದೆ.
ಪುತ್ತೂರು ಸಮೀಪದ ಚಿಕ್ಕಮು ಡ್ನೂರು ಗ್ರಾಮದ ವಸಂತ(೨೮) ಎಂಬವರೇ ಗಾಯಗೊಂಡವರು. ಪುತ್ತೂರಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ  ಬಸ್ಸಿನ ಚಾಲಕ ಹಠಾತ್ತನೇ ಬ್ರೇಕ್ ಹಾಕಿದ್ದರ ಪರಿಣಾಮ ಬಸ್ಸಿನ ಮೆಟ್ಟಲಲ್ಲಿ ನಿಂತಿದ್ದ ವ್ಯಕ್ತಿ ಬಸ್ಸಿನಿಂದ ರಸ್ತೆಗೆ ಎಸೆಯ ಲ್ಪಟ್ಟಿದ್ದರು.

ಮೂವರು ಮಕ್ಕಳೊಂದಿಗೆ ಗೃಹಿಣಿ ನೆರೆಮನೆಯಾತನ ಜೊತೆ ನಾಪತ್ತೆ?

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಗ್ರಾಮದ ನಿವಾಸಿ ಗೃಹಿಣಿಯೋರ್ವರು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.  ಉಮ್ಮರ್ ಎಂಬವರ ಪತ್ನಿ ಝಿನತ್(೨೮) ನಾಪತ್ತೆಯಾಗಿದ್ದು, ತನ್ನ ಮಕ್ಕಳಾದ ಮಹಮ್ಮದ್ ಹಾರಿಸ್(೧೦), ಹನ್ಸೀನಾ(೮), ಹಾಗೂ ಹಝ್‌ಮೀನಾ(೬) ಎಂಬವರನ್ನೂ ಜತೆಗೇ ಕರೆದೊಯ್ದಿದ್ದಾರೆ ಎನ್ನಲಾಗಿದೆ. ತನ್ನ ತಂದೆಯ ಮನೆಗೆ ಹೋಗಿ ಬರುವುದಾಗಿ ತೆರಳಿದ್ದು, ಅಲ್ಲಿಗೂ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದೇ ವೇಳೆ ನೆರೆಮನೆಯ ಯುವಕನೂ ಕಾಣೆಯಾಗಿದ್ದು, ಆತನ ಜೊತೆ ಮನೆ ತೊರೆದಿರಬೇಕೆಂದು ಶಂಕಿಸಲಾಗಿದೆ.

ಕೊಲೆ ಆರೋಪಿಗಳಿಗೆ ಜಾಮೀನು

Posted by JAYAKIRANA Kirana on | 0 comments | Leave a comment...


ಕಾಂತಾವರ: ಕಾರ್ಕಳ ಸಮೀಪದ ಕಾಂತಾವರ ಪರಂಪಾಡಿ-ಬಾರಾಡಿ ಎಂಬಲ್ಲಿ ಕಳೆದ ೨೦೧೧ರ ಸೆ.೧೬ರಂದು ನಡೆದಿದ್ದ ರಾಮ ಮೂಲ್ಯ(೬೫) ಕೊಲೆ ಪ್ರಕರಣದ ಆರೋಪಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ರಾಮ ಮೂಲ್ಯ ಅವರು ಅದೇ ಊರಿನ ಶೇಖರ ಮೂಲ್ಯ ಎಂಬಾತನ ಮನೆಗೆ ಬಂದು ಆತನ ಪತ್ನಿ ಮಾಲತಿಯ ಜೊತೆ ಅಸಭ್ಯವಾಗಿ ವರ್ತಿ ಸಿದ್ದ. ಇದರಿಂದ ಸಿಟ್ಟಿಗೆದ್ದ ಶೇಖರ ಮೂಲ್ಯ ಪತ್ನಿಯ ಜೊತೆ ಸೇರಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ರಾಮ ಮೂಲ್ಯರನ್ನು ಕೊಲೆಗೈದಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು.

ಕುಂದಾಪುರ: ಜುಗಾರಿಕೋರರ ಸೆರೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಕುಂದಾಪುರ ಸಮೀಪದ ಕರ್ಕುಂಜೆ ಗ್ರಾಮದ ಮನೆಯಲ್ಲಿ ಜುಗಾರಿ ನಿರತರಾಗಿದ್ದ ಹತ್ತು ಮಂದಿಯನ್ನು ಎಸ್.ಐ. ಜಾನ್ಸನ್ ಡಿಸೋಜಾ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ, ಗೋಪಾಲ, ಶಂಕರ, ಮಂಜ, ಅಶೋಕ್ ಕುಮಾರ್ ಶೆಟ್ಟಿ, ಸುಭಾಶ್ ಶೆಟ್ಟಿ, ಕರುಣಾಕರ ಶೆಟ್ಟಿ, ರತ್ನಾಕರ ಶೆಟ್ಟಿ, ವಿಘ್ನೇಶ್ವರ ಮಂಜ, ನಾರಾಯಣ ಶೆಟ್ಟಿ ಹಾಗೂ ಕಾಳಿಂಗ ಶೆಟ್ಟಿ ಬಂಧಿತ ಆರೋಪಿಗಳು. ಬಂಧಿತರಿಂದ ೧,೪೦,೩೬೦ ರೂ. ನಗದು ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರಾಧನಾಲಯ ಅಪವಿತ್ರ ಪ್ರಕರಣ: ಮತ್ತಿಬ್ಬರ ಬಂಧನ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಇಲ್ಲಿಯ ಮೀಪು ಗುರಿಯಲ್ಲಿರುವ ಆರಾಧನಾಲಯವನ್ನು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗ ಳನ್ನು ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಬಂಧಿಸಲ್ಪಟ್ಟಿರುವ ಒಟ್ಟು ಸಂಖ್ಯೆ ಮೂರಕ್ಕೇರಿದೆ. ತನಿಖೆ ನಡೆ ಸುತ್ತಿರುವ ವಿಶೇಷ ಪೊಲೀಸ್ ತಂಡವು ನಗರ ಇನ್ಸ್‌ಪೆಕ್ಟರ್ ಬಾಬು ಪೆರಿಂ ಗೊತ್ತ್   ಅವರ ನಿರ್ದೇಶಾನುಸಾರ ಯಶಸ್ವಿ ಕಾರ‍್ಯಾಚರಣೆ ನಡೆಸಿದೆ. ಕಾಸರಗೋಡು ಟಿಎಸ್ ಮುಹ ಮ್ಮದ್ ಜಾಬಿರ್ (೨೦) ಹಾಗೂ ಮೀಪುಗುರಿಯ ಶಿಹಾಬುಲ್ ಹಖ್ (೨೩) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದ್ದು, ರಿಮಾಂಡ್ ವಿಧಿಸಲಾ ಗಿದೆ. ಆರಾಧನಾಲಯ ಅಪವಿತ್ರ ಪ್ರಕರಣದಲ್ಲಿ ಒಟ್ಟು ಐದು ಮಂದಿ ಯನ್ನು ಆರೋಪಿಗಳನ್ನಾಗಿ ಗುರುತಿ ಸಲಾಗಿದೆ. ಸದ್ಯ ಮೂವರು ಬಂಧಿತ ರಾಗಿದ್ದು, ಉಳಿದ ಆರೋಪಿಗಳು ಸದ್ಯದಲ್ಲೇ ಬಲೆಗೆ ಬೀಳುವುದಾಗಿ ತನಿಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಬ್ರಹ್ಮಣ್ಯ: ವಿದ್ಯಾರ್ಥಿನಿ ಸಾವು; ತನಿಖೆಗೆ ಅಭಾವಿಪ ಆಗ್ರಹ

Posted by JAYAKIRANA Kirana on | 0 comments | Leave a comment...


ಮಂಗಳೂರು: ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿ ತಟದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕುಕ್ಕೆ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾ ಲಯದ ವಿದ್ಯಾರ್ಥಿನಿ ಪುಷ್ಪಾವತಿ ಸಾವಿನ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.  ಈ ಹಿಂದೆ ಕಾಲೇಜ್ ವಿದ್ಯಾರ್ಥಿಗಳಾದ ಉತ್ತಪ್ಪ, ಮೋಹಕ್ ಕುಮಾರ್ ಹಾಗೂ ಪೃಥ್ವಿ ಪೂಜಾರಿ ನಿಗೂಢ ಸಾವಿನ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಪುಷ್ಪಾವತಿ  ಪ್ರಕರಣದಲ್ಲೂ ಅದೇ ಪುನರಾವರ್ತನೆ ಯಾದಲ್ಲಿ ಉಗ್ರ ಪ್ರತಿಭಟನೆ ಅನಿ ವಾರ್ಯ ಎಂದು ಅಭಾವಿಪ ಹೇಳಿದೆ.

ಮೆಲ್ಕಾರ್: ಸಾಫ್ಟ್‌ವೇರ್ ಕಾಪಿರೈಟ್ ಪ್ರೊಟೆಕ್ಷನ್ ಫೋರ್ಸ್ ದಾಳಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬಂಟ್ವಾಳ ತಾಲೂಕಿನ ಮೆಲ್ಕಾರ್ ಹಾಗೂ ವಿವಿಧ ಕಡೆ ಸ್ಟುಡಿಯೋಗಳಿಗೆ ಸಾಫ್ಟ್‌ವೇರ್ ಕಾಪಿರೈಟ್ ಪ್ರೊಟೆಕ್ಷನ್ ಫೋರ್ಸ್‌ನ ಅಧಿಕಾರಿಗಳು ದಾಳಿ ನಡೆಸಿ ಕಂಪೆನಿ ಅನುಮತಿ ಪಡೆಯದೆ ಸಾಫ್ಟ್‌ವೇರ್ ಅಳವಡಿಸಿದ್ದನ್ನು ಪರಿಶೀಲಿಸಿ ಎಚ್ಚರಿಕೆ ನೀಡಿದ್ದಾರೆ.  ದಾಳಿಯನ್ನು ಅರಿತ ಹೆಚ್ಚಿನ ಸ್ಟುಡಿಯೋಗಳ ಮಾಲಕರು ಬೀಗ ಜಡಿದು ಮನೆಗೆ ತೆರಳಿದ್ದು ಕಂಡುಬಂತು. ಅನುಮತಿ ರಹಿತ ಸಾಫ್ಟ್‌ವೇರ್ ಬಳಸುತ್ತಿರುವ ಯಾವುದೇ ಸಂಸ್ಥೆಗೆ ದಾಳಿ ನಡೆಸಬಹುದು ಎಂದು ಅಧಿಕಾರಿ ಜಗದೀಶ ಅವರು ಹೇಳಿದ್ದಾರೆ. ಬಂಟ್ವಾಳ ನಗರ ಪೊಲೀಸರ ಸಹಕಾರ ದಿಂದ ಕಾರ್ಯಾಚರಣೆ ನಡೆದಿದೆ.

ಬೆಳ್ತಂಗಡಿ: ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬೆಳ್ತಂಗಡಿ ಸಮೀಪದ ನಾರಾವಿ-ಕುತ್ಲೂರಿನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗೋಪಾಲ ದೇವಾಡಿಗ(೪೦) ಎಂದು ಹೆಸರಿಸಲಾಗಿದೆ. ಮೃತರ ಪತ್ನಿ, ಮಕ್ಕಳು ದೂರವಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯವೆಸಗಿದ್ದಾರೆ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಕೈ ಗೆಲುವು: ಕಾರ್ಯಕರ್ತರ ಸಂಭ್ರಮ

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸುತ್ತಿರುವಂತೆ ಸುರತ್ಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹರ್ಷೊ ದ್ಘಾರ ಮುಗಿಲು ಮುಟ್ಟಿದೆ. ಸುರತ್ಕಲ್ ಜಂಕ್ಷನ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವನ್ನು ಆಚರಿಸಿ ದರು. ಸುರತ್ಕಲ್ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ವಿಜಯೋತ್ಸವದ ನೇತೃತ್ವವನ್ನು ವಹಿಸಿಕೊಂಡಿದ್ದರು. ನಾವು ಒಂದು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವು ನಮ್ಮ ಗೆಲುವು ಇಷ್ಟು ಅಂತರದಲ್ಲಿ ಇರುತ್ತದೆ ಎಂದು. ಆದರೆ ನಮ್ಮ ನಿರೀಕ್ಷೆಯನ್ನು ಮೀರಿದ ಗೆಲುವು ದೊರೆ ತಿದೆ. ಜನರಿಗೆ ಬಿಜೆಪಿ ಬಗ್ಗೆ ಜಿಗುಪ್ಸೆ ಬಂದಿದೆ. ಒಂದು ಒಳ್ಳೆ ಶಾಸಕ ಸಂಸ ದನನ್ನು ನೀಡಲು ಬಿಜೆಪಿಗೆ ಸಾಧ್ಯ ವಾಗಿಲ್ಲ. ಆದರೆ ಕಾಂಗ್ರೆಸ್ ನಿಜವಾದ ಜನನಾಯಕನನ್ನು ನೀಡಿದೆ ಹೀಗಾಗಿ ಗೆಲುವು ನಮ್ಮದೆ ಎಂದು ಕೊಂಡಿದ್ದೇವು ಅದಿಂದು ನಿಜವಾಗಿದೆ ಎಂದು  ವಿಜಯಕುಮಾರ್ ಶೆಟ್ಟಿ ತಿಳಿಸಿದರು. ವಿಜಯೋತ್ಸವದಲ್ಲಿ ಮೊದಿನ್ ಬಾವಾ ಉಪಸ್ಥಿತರಿದ್ದರು.

ರೈತರಿಗೆ ಒಂದು ಲಕ್ಷವರೆಗೆ ಬಡ್ಡಿರಹಿತ ಸಾಲ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಸಹಕಾರಿ ಸಂಸ್ಥೆಗಳಿಂದ ರೈತರು ಪಡೆಯುವ ಒಂದು ಲಕ್ಷ ರೂ.ವರೆಗಿನ ಕೃಷಿ ಸಾಲ ವನ್ನು ಬಡ್ಡಿ ರಹಿತವಾಗಿ ನೀಡುವ ಮಹತ್ವದ ನಿರ್ಧಾ ರವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ವಿಧಾನ ಸಭೆಯಲ್ಲಿ ಪ್ರಕಟಿಸಿದ್ದಾರೆ.
ವಿಧಾನ ಸಭೆಯಲ್ಲಿ ೨೦೧೨-೧೩ನೇ ಸಾಲಿನ ಕೃಷಿ ಆಯವ್ಯಯ ಮುಂಗಡ ಪತ್ರದಲ್ಲಿ ಈ ಪ್ರಸ್ತಾವನೆ ಯನ್ನು ಮಾಡಿರುವುದಲ್ಲದೆ ಅಲ್ಪಾವಧಿ  ಬೆಳೆ ಸಾಲಕ್ಕೆ ಮಾತ್ರ ಇದು ಸೀಮಿತವಾಗಿರುತ್ತದೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಒಂದು ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ ೩ರಷ್ಟಕ್ಕೆ ಸೀಮಿತಗೊಳಿಸಿದ್ದಾರೆ.
ಕಳೆದ ವರ್ಷ ೫೦ ಸಾವಿರದವರೆಗೆ ಈ ಸೌಲಭ್ಯ ದೊರೆಯುತ್ತಿತ್ತು. ಸಹಕಾರಿ ಸಂಸ್ಥೆಗಳ ಮೂಲಕ ಒಂದು ಲಕ್ಷಕ್ಕಿಂತ ಹೆಚ್ಚು ಮೂರು ಲಕ್ಷ ರೂ. ಗುರಿ ಮೀರದಂತೆ ಪಡೆಯುವ ಸಾಲಕ್ಕೆ ಶೇ.೧ರಷ್ಟು ಬಡ್ಡಿಯ ನ್ನು ಹಾಗೆಯೇ ಮುಂದುವರೆಸಿದ್ದಾರೆ.
ರೈತರುಗಳಿಗೆ ಸಾಲ ವಿತರಿಸಲು ಅನುಕೂಲವಾ ಗುವಂತೆ ಸಹಕಾರಿ ಸಂಸ್ಥೆಗಳಿಗೆ ೩೦೦ ಕೋಟಿ ರೂ.ಗಳ ಸಹಾಯಧನವನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿಯವರು ಪ್ರಸಕ್ತ ವರ್ಷವೂ ಹತ್ತು ಎಚ್‌ಪಿವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ರಮ ಮುಂದು ವರೆಸಿರುವುದಲ್ಲದೆ ೪೬೦೦ ಕೋಟಿ ರೂ. ಸಹಾಯ ಧನವನ್ನು ಇದಕ್ಕಾಗಿ ಒದಗಿಸಿದ್ದಾರೆ.
ರೈತರ ಸ್ವಸಹಾಯ ಗುಂಪುಗಳಿಗೆ ಶೇಕಡಾ ೪ ರಷ್ಟು ಬಡ್ಡಿ ದರದಲ್ಲಿ ಸಹಕಾರಿ ಸಂಘಗಳ ಮೂಲಕ ಸಾಲ ವಿತರಿಸುವ ಯೋಜನೆಯನ್ನು ಮುಂದು ವರೆಸಲು ೭೫೦ ಕೋಟಿ ರೂ. ಮೀಸಲಿರಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಯನ್ನು ಆಧರಿಸಿ ಜೀವನ ನಡೆಸುತ್ತಿರುವ ರೈತ ಮತ್ತು ಇತರ ಕುಟುಂಬಗಳ ಸಮಗ್ರ ಅಭಿವೃದ್ದಿಗಾಗಿ ಹೊಸ ಆಯಾಮ ಸೃಷ್ಠಿಸಲು ಒಟ್ಟಾರೆ ಕೃಷಿ ಮತ್ತು ಕೃಷಿ ಸಂಬಂಧಿಸಿದ ಚುಟುವಟಿಕೆಗಳಿಗಾಗಿ ೧೯೬೬೦ ಕೋಟಿ ರೂ. ಮೀಸಲಿಸಿದ್ದಾರೆ.
ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡ ಸಂದರ್ಭದಲ್ಲಿ ಅವರಿಗೆ ನೆರವು ನೀಡುವ ಉದ್ದೇಶದಿಂದ ಆವರ್ತ ನಿಧಿ ಮೊತ್ತವನ್ನು ೬೫೦ ಕೋಟಿ ರೂ.ಗಳಿಂದ ೧೦೦೦ ಕೋಟಿ  ರೂ. ಗಳಿಗೆ ಹೆಚ್ಚಿಸಿದ್ದಾರೆ.
ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ನೀರಾವರಿ ವಲಯಕ್ಕೆ ೧೦೫೦೦ ಕೋಟಿ ರೂ.ಗಳನ್ನು ಮೀಸಲಿರಿಸಿದ್ದು, ಇದರಿಂದ ನೀರಾವರಿ ಯೋಜನೆಗ ಳನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವು ದಾಗಿ ತಿಳಿಸಿದ್ದಾರೆ.
ಖುಷ್ಕಿ ಪ್ರದೇಶದ ಬೆಳೆ ಇಳುವರಿ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಭೂ ಚೇತನ ಯೋಜನೆಯನ್ನು ಭತ್ತ ಮತ್ತು ಕಬ್ಬಿನ ಬೆಳೆ ಬೆಳೆಯುವ ಪ್ರದೇಶಗಳಿಗೂ ವಿಸ್ತರಿಸುವುದರ ಮೂಲಕ ಶೇಕಡಾ ೩೦ರಷ್ಟು ಇಳುವರಿ ಹೆಚ್ಚಿಸುವ ಗುರಿ ಹೊಂದಿದ್ದಾರೆ. ಸಬ್ಸಿಡಿ ದರದಲ್ಲಿ ಬೀಜ ವಿತರಣೆಗೆ ನೂರು ಕೋಟಿ ರೂ.ಗಳ ಅನುದಾನ ನೀಡಿದ್ದು, ಇದರಿಂದ ೩೦ ಲಕ್ಷ ರೈತರಿಗೆ ಅನುಕೂಲ ವಾಗಲಿದೆ ಎಂದಿದ್ದಾರೆ.
ಕೃಷಿ, ತೋಟಗಾರಿಕೆ, ಪಶಸಂಗೋಪನೆ ವಿವಿ ಗಳಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಕನಿಷ್ಠ ಜ್ಞಾನ ಒದಗಿಸಲು ಮೂರು ತಿಂಗಳ ಅವಧಿಗೆ ನಿಯೋಜಿಸಲಾಗುವುದು. ಇಂತಹ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಗೆ ೧೫೦೦ ರೂ. ಗೌರವ ಧನ ನೀಡುವುದಾಗಿ ತಿಳಿಸಿದ್ದಾರೆ.

೧೪ ವರ್ಷದ ಪುತ್ರಿಗೆ ಗರ್ಭ: ದೂರು

Posted by JAYAKIRANA Kirana on | 0 comments | Leave a comment...


ನಾಗ್ಪುರ: ಪುತ್ರಿಯ ಮೇಲೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ೫೦ ವರ್ಷ ವಯಸ್ಸಿನ ತಂದೆ ಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಎರಡು ತಿಂಗಳು ಗರ್ಭಿಣಿಯಾಗಿ ದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಕಿಶೋರ್‌ಅಗರ್ ವಾಲ್ ತನ್ನ ಪತ್ನಿ ತೊರೆದು ಹೋದ ನಂತರ ೧೪ ವರ್ಷದ ಪುತ್ರಿಯ ಮೇಲೆ ಕಳೆದ ಐದು ವರ್ಷಗಳಿಂದ ನಿರಂತರ ವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಂಗಳವಾರದಂದು ಅಗರ್‌ವಾಲ್ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪುತ್ರಿಯನ್ನು ಕರೆದಿದ್ದಾನೆ. ಆದರೆ, ಪುತ್ರಿ ನಿರಾಕರಿ ಸಿದ್ದರಿಂದ ಕೋಪಗೊಂಡು ಹೊಟ್ಟೆಗೆ ಹೊಡೆದಿದ್ದಾನೆ. ಹೊಡೆತಕ್ಕೆ ತತ್ತರಿಸಿದ ಬಾಲಕಿ ನೋವನ್ನು ತಾಳಲಾರದೆ ಮನೆಯಿಂದ ಹೊರಗೆ ಬಂದು ನೆರೆಯ ಮನೆಯವರಿಗೆ ಸತ್ಯಾಂಶ ಬಹಿರಂಗಪಡಿಸಿದ್ದಾಳೆ.
ನೆರೆಮನೆಯವರು ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ
ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ಮಾಹಿತಿ ನೀಡಿದ ನಂತರ ಕೂಡಲೇ ನಂದನವನ ಪೊಲೀಸ್ ಠಾಣೆಗೆ ತೆರಳಿ ಆರೋಪಿ ತಂದೆಯ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸೋಲಿಗೆ ಕಾರಣ ಬಿಜೆಪಿ ಸರಕಾರ

Posted by JAYAKIRANA Kirana on | 0 comments | Leave a comment...


ಕಾಂಗ್ರೆಸ್ ಗೆಲುವಿಗೆ ಮುನ್ನುಡಿಯಾದ ಒಗ್ಗಟ್ಟಿನ ಕೆಲಸ
ಎಐಸಿಸಿಯಿಂದ ಹಿಡಿದು ಬೂತ್ ಮಟ್ಟದ ಕಾರ್ಯ ಕರ್ತರವರೆಗೂ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ, ಶ್ರಮಪಟ್ಟು ಕೆಲಸ ಮಾಡಿದ್ದರಿಂದಾಗಿ ಕಾಂಗ್ರೆಸ್ ಗೆದ್ದಿದೆ ಎಂದು ಮತ ಎಣಿಕೆಯ ಕೇಂದ್ರದಿಂದ ಜಯಪ್ರಕಾಶವಾದ ನಗೆಯೊಂದಿಗೆ ಹೋರಬಂದ ಹೆಗ್ಡೆಯವರು ನೀಡಿದ ಮೊದಲ ಪ್ರತಿಕ್ರಿಯೆಯಾದರೆ, ಸೋಲಿನ ಕಹಿಯೊಂದಿಗೆ ಕೇಂದ್ರದಿಂದ ನಿರ್ಗಮಿಸುವ ದಾರಿಯಲ್ಲಿ ಸೋಲಿಗೆ ಬಿಜೆಪಿ ಸರಕಾರ ಕಾರಣ ಎಂಬ ಯಾವುದೇ ಮುಚ್ಚುಮರೆ ಇಲ್ಲದೆ ಮುಕ್ತವಾದ ಅಭಿಪ್ರಾಯ ಕೊಟ್ಟವರು ಬಿಜೆಪಿಯ ಮಾರ್ಗದರ್ಶಕ, ಸಂಘ ಪರಿವಾರದ ಹಿರಿಯ ಮುಖಂಡರಾದ ಸೋಮ ಶೇಖರ ಭಟ್ ಅವರು.
 ಇವೆರಡೂ ಮಾತುಗಳು ನಿಜವೇ ಆಗಿದೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಐಕ್ಯತೆ ಮತ್ತು ಬಿಜೆಪಿ ಸರಕಾರದ ಹಗರಣಗಳ ಸರಮಾಲೆ ಬಿಜೆಪಿಯ ಸೋಲಿನಲ್ಲಿ ಮತ್ತು ಕಾಂಗ್ರೆಸ್‌ನ ಗೆಲುವಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಿತ್ತು ಎನ್ನುವುದರಲ್ಲಿ ಎರಡು ಮಾತೇ ಇಲ್ಲ.
 ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಟ ಏಳು ಮಂದಿ ಸಂಸತ್ ಸದಸ್ಯರ ಅಗತ್ಯವಿತ್ತು. ಸಂಖ್ಯಾಬಲದ ಕೊರತೆಯ ಕಾರಣಕ್ಕೇ ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರಕಾರವನ್ನು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ನಿಯಂತ್ರಿಸುತ್ತಿದೆ ಎಂಬುದು ಇದೀಗ ಗುಟ್ಟಾಗಿ ಏನೂ ಉಳಿದಿಲ್ಲ. ಮಮತಾ         ಬ್ಯಾನರ್ಜಿಯ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಸರಿಯಾದ ಉತ್ತರ ಕೊಡಬೇಕು ಎಂದಾದರೆ, ಕಾಂಗ್ರೆಸ್ ಪಕ್ಷಕ್ಕೆ  ಕನಿಷ್ಟ ವೆಂದರೂ ಇನ್ನು ಏಳು ಎಂಪಿಗಳ ಅಗತ್ಯವಿದೆ.
 ಈ ಕೊರತೆಯನ್ನು ಸರಿಯಾದ ರೀತಿಯಲ್ಲಿಯೇ ತುಂಬಿಸಲು ನಿರ್ಧರಿಸಿದ ಕಾಂಗ್ರೆಸ್ ಹೈಕಮಾಂಡ್, ಶತಾಯಗತಾಯ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆದ್ದೇ ಗೆಲ್ಲಬೇಕೆಂಬ ಹಠದಲ್ಲಿ ಈ ಬಾರಿ ತನ್ನೆಲ್ಲಾ ಶ್ರಮವನ್ನೂ ಈ ಮರು ಚುನಾವಣೆಗೆ ಹಾಕಿತ್ತು.
 ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ         ಅನು ಭವ, ಬ್ರಹ್ಮಾವರ ಕ್ಷೇತ್ರವನ್ನು ಉಡುಪಿ ಮತ್ತು ಕಾಪು ವಿಧಾ ನಸಭಾ ಕ್ಷೇತ್ರದ ಜೊತೆಗೆ ವಿಲೀನಗೊಳಿಸಿದ ಬಳಿಕ   ಕುಂದಾ ಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ವಿರುದ್ದ ಕಾಂಗ್ರೆಸ್  ಪಕ್ಷದಿಂದ ಸ್ಪರ್ಧಿಸಿ ಸೋಲು ಮತ್ತು ನೂತನವಾಗಿ ರಚನೆಗೊಂಡ ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರೂ ಕ್ಷೇತ್ರದ ಸಂಪರ್ಕ ಇಟ್ಟುಕೊಂಡ, ಮತದಾರರ ಜೊತೆ ನಿರಂತರ ಒಡನಾಟ ಇರಿಸಿಕೊಂಡ ಹೆಗ್ಗಳಿಕೆ ಹಾಗೂ ನಿರಂತರವಾಗಿ ಎರಡೂ ಸಲ ಸೋತ ಒಳ್ಳೆಯ ಮನುಷ್ಯ, ಮೌಲ್ಯಾಧಾರಿತ ರಾಜಕಾರಣಿ ಎಂಬ ಕೀರ್ತಿಗೆ ಪ್ರತಿಯಾಗಿ ಮತದಾರರ ನಡುವೆ ಇದ್ದ ಅನುಕಂಪದ ಅಲೆ. ಇವುಗಳೆಲ್ಲವುಗಳನ್ನೂ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ಜಯಪ್ರಕಾಶ್ ಹೆಗ್ಡೆಯವರಿಗೆ ಈ ಬಾರಿಯ ಲೋಕಸಭಾ ಅಭ್ಯರ್ಥಿತನದ ಬಿ ಫಾರಂನ್ನು ಗೆಲ್ಲುವ ವಿಶ್ವಾಸದಲ್ಲಿಯೇ ನೀಡಿತ್ತು. ಈ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಾಗುವ ಆಕಾಂಕ್ಷೆಯಲ್ಲಿದ್ದ ಮಾಜಿ ಸಂಸದರಾದ, ಎಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ, ಬಿ.ಎಲ್.ಶಂಕರ್ ಹಾಗೂ ಡಿ.ಕೆ.ತಾರಾದೇವಿ ಸಿದ್ದಾರ್ಥ ಇವರನ್ನು ಸಮಾಧಾನಪಡಿಸಿ ಹೆಗ್ಡೆಯವರನ್ನೇ ಆಯ್ಕೆ ಮಾಡಿದ್ದರು ಕಾಂಗ್ರೆಸ್ ಪಕ್ಷದ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ. ಜಯಪ್ರಕಾಶ್ ಹೆಗ್ಡೆಯವರ ಗೆಲು ವಿಗಾಗಿ ಕೇಂದ್ರ ಮಂತ್ರಿಗಳಾದ ಮುನಿಯಪ್ಪ, ಎಂ.ವೀರಪ್ಪ ಮೊಯಿಲಿ, ಎಐಸಿಸಿ  ನಾಯಕರುಗಳಾದ ಮಧುಸೂದನ್ ಮಿಸ್ತ್ರಿ, ಆಸ್ಕರ್ ಫೆರ್ನಾಂಡಿಸ್, ಜೆ.ಡಿ.ಸೀಲಂ, ಶಾಂತಾರಾಮ ನಾಯಕ್,      ಜನಾರ್ದನ ಪೂಜಾರಿ, ಕೆಪಿಸಿಸಿಯ ಮುಖಂಡರುಗಳಾದ ಸಿದ್ದರಾಮಯ್ಯ, ಮೋಟಮ್ಮ, ಡಾ.ಜಿ.ಪರಮೇಶ್ವರ್, ಕೆ.ಪಿ.ನಂಜುಂಡಿ, ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ, ಚಲನಚಿತ್ರ ನಟ- ನಟಿಯರಾದ ಉಮಾಶ್ರೀ, ರಮ್ಯಾ, ಭಾವನಾ, ಆದಿ ಲೋಕೇಶ್ ಸಹಿತ ಹಲವಾರು ಮಂದಿ ಮುಖಂಡರುಗಳು ಕ್ಷೇತ್ರದಾದ್ಯಂತ ಪ್ರಚಾರಕಾರ್ಯ ನಡೆಸಿದರು.
 ಹೈಕಮಾಂಡ್ ಅತ್ಯಂತ ವ್ಯವಸ್ಥಿತವಾಗಿ ಈ ಕೆಲಸ ಗಳನ್ನು ಮಾಡಿತ್ತು. ಒಂದೊಂದು ಕೆಲಸಕ್ಕೂ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಿ, ಅವರಿಂದ ಗೆಲ್ಲಲು ಏನೆಲ್ಲಾ ಕೆಲಸಗಳು ಆಗಬೇಕಿತ್ತೋ ಅವುಗಳನ್ನೆಲ್ಲಾ ಮಾಡಿಸಿತ್ತು. ಇದರ ಜೊತೆಗೆ ರಾಜ್ಯದ ಬಿಜೆಪಿ ಸರಕಾರದ ಹಗರಣಗಳ ಸರಮಾಲೆಯ ಬಗ್ಗೆ, ವಿಫಲ ಆಡಳಿತದ ಬಗ್ಗೆ,  ಬಿಜೆಪಿಯೊಳಗಿನ ಭಿನ್ನ ಮತ, ಒಡಕು, ಗೊಂದಲ ಇತ್ಯಾದಿಗಳನ್ನೆಲ್ಲವನ್ನೂ ಪ್ರಚುರ ಪಡಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾದರು.
 ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ ಇದ್ದಂತಹ ವರ್ಚಸ್ಸಾಗಲೀ, ಹೆಸರಾಗಲೀ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರಿಗೆ ಇರಲಿಲ್ಲ. ಒಂದು ಸಲ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಭಾಷಣ ಮಾಡಿಯೇ ಗೆದ್ದು ಶಾಸಕನಾದ ಅನುಭವ ಹೊರತು ಪಡಿಸಿದರೆ ಹೇಳಿಕೊಳ್ಳುವಂತಹ ಅನುಭವವೂ ಸುನಿಲ್‌ಗೆ ಇರಲಿಲ್ಲ. ಇವರ ಮೇಲಿದ್ದ ಕೆಲವೊಂದು ಗಂಭೀರ ಆರೋ ಪಗಳನ್ನು ಮತದಾರರ ಮನಸ್ಸಿಗೆ ಮುಟ್ಟಿಸುವ  ಕೆಲಸವನ್ನೂ ಕಾಂಗ್ರೆಸ್ ಸಮರ್ಥವಾಗಿಯೇ ಬೇರೆ ಮಾಡಿತ್ತು.
 ಇದಲ್ಲದೆ, ಎಷ್ಟೇ ಆರೋಪಗಳಿದ್ದರೂ ರಾಜ್ಯ ಬಿಜೆ ಪಿಯ ಪ್ರಭಾವೀ ನಾಯಕ, ಮಾಜಿ ಮುಖ್ಯಮಂತ್ರಿ  ಯಡಿ ಯೂರಪ್ಪ ಪ್ರಚಾರಕ್ಕೆ ಬಾರದೇ ಇದ್ದುದು, ಬಿಜೆಪಿ ಜಿಲ್ಲಾ ಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಪೂರ್ಣ ಮನಸ್ಸಿನಿಂದ ಕೆಲಸ ಮಾಡದೇ ಇದ್ದುದು, ಪಕ್ಷದ ಎಲ್ಲಾ ನಾಯಕರೂ ಈ ಹಿಂದಿನ ಚುನಾವಣೆಗೆ ಶ್ರಮಿಸಿದಷ್ಟು ಈ ಬಾರಿಯ ಚುನಾವಣೆಗೆ ಶಕ್ತಿ ಪ್ರಯೋಗ ಮಾಡದೇ ಇದ್ದುದು ಇತ್ಯಾದಿಗಳೂ ಸುನಿಲ್ ಸೋಲಿಗೆ ಕಾರಣವಾಯಿತು.
ಬಿಜೆಪಿ ಶಾಸಕರ ಪರೋಕ್ಷ ಪಾಲುದಾರಿಕೆಯಲ್ಲಿ ನಡೆದ ಮಲ್ಪೆಯ ರೇವ್‌ಪಾರ್ಟಿ, ಸದನದಲ್ಲಿ ಸಚಿವರು ನೀಲಿಚಿತ್ರ ವೀಕ್ಷಿಸಿ ಸಿಕ್ಕಿಬಿದ್ದದ್ದು, ಸ್ನೇಹಿತನ ಪತ್ನಿಯ ಮೇಲೆಯೇ ಸಚಿವ ಹಾಲಪ್ಪ ಅತ್ಯಾಚಾರ ನಡೆಸಿದ್ದು, ಸಚಿವ ರೇಣುಕಾ ಚಾರ್ಯ ಜಯಲಕ್ಷ್ಮಿಗೆ ಚುಂಬನ ನೀಡಿದ ಪ್ರಕರಣ, ಶಾಸಕ ಸಂಪಂಗಿ ಲಂಚ ಪಡೆದು ಸಿಕ್ಕಿಬಿದ್ದ ಪ್ರಕರಣ, ಗಣಿ ಹಗ ರಣದ ಆರೋಪದಲ್ಲಿ ಸಚಿವ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಟ್ಟಾ ಜಗದೀಶ್, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಜೈಲು ಪಾಲಾದುದು, ಹಲವು ಪ್ರಕರಣಗಳ ಆರೋಪಿಯಾಗಿ ಯಡಿಯೂರಪ್ಪನವರು ಜೈಲು ಪಾಲಾದ್ದು, ಸಚಿವ ಡಾ.ವಿ.ಎಸ್.ಆಚಾರ್ಯರ ಜನ ವಿರೋಧಿ ನೀತಿ, ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದ್ದು ಇತ್ಯಾದಿ ಅನೇಕಾನೇಕ ಪ್ರಕರಣಗಳು ಬಿಜೆಪಿಯನ್ನು ಮತದಾರರು ಈ ಸಲ ಕೈ ಬಿಡಲು ಕಾರಣವಾಯಿತು.
 ಜೆಡಿಎಸ್ ಪರಮೋಚ್ಚ ನಾಯಕರುಗಳಾದ ದೇವೇ ಗೌಡರು ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಸದಾ ನಂದ ಗೌಡರ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಎಸ್.ಎಲ್. ಭೋಜೇ ಗೌಡ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಚುನಾವಣಾ ಕಣಕ್ಕಿಳಿಸಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ,     ಬಿಜೆ ಪಿಯ ಸುನಿಲ್‌ಕುಮಾರ್ ಹಿಂದುತ್ವವನ್ನು ಮುಂದಿಟ್ಟುಕೊಂಡು, ಅಲ್ಪಸಂಖ್ಯಾತರ ಮತ ತನಗೆ ಬೇಕಾಗಿಲ್ಲ ಎಂದು ಬಹಿ ರಂಗವಾಗಿ ಹೇಳಿಕೊಂಡದ್ದು, ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ ದಿನಪತ್ರಿಕೆಯಲ್ಲಿ ಬಿಜೆಪಿ ಕಾಸು ಕೊಟ್ಟು ಬಿಜೆಪಿ ಪರವಾದ ಸುದ್ದಿಗಳನ್ನು ದಿನನಿತ್ಯ ಪ್ರಕಟವಾಗುವಂತೆ ಮಾಡಿದ್ದು, ಅಡ್ಡದಾರಿಯಲ್ಲಿ ಓಟಿಗಾಗಿ ಜಾತಿಗಳ ಸಮಾವೇಶವನ್ನು ನಡೆಸುವ ಮೂಲಕ ಹೊಲಸು ಜಾತಿ ರಾಜಕಾರಣ ಮಾಡಿದ್ದು ಇತ್ಯಾದಿಗಳೂ ಮತದಾರರು ಬಿಜೆಪಿ ಬಗ್ಗೆ ಅಸಹ್ಯಪಡಲು, ಆ ಮೂಲಕ ಬಿಜೆಪಿಯನ್ನು ಅಂತಿಮವಾಗಿ ತಿರಸ್ಕರಿಸಲು ಕಾರಣವಾಯಿತು.
 ಬಿಜೆಪಿಗೆ ತನ್ನ ಸೋಲಿನ ಬಗ್ಗೆ ಮೊದಲೇ ಅರಿವಿತ್ತು. ಅದೇ ಕಾರಣಕ್ಕೆ ಸುನಿಲ್ ಕುಮಾರ್ ಸಹಿತ ಬಿಜೆಪಿಯ     ಅನೇಕ ಮಂದಿ ಪ್ರಮುಖ ನಾಯಕರು, ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ತಲೆಯನ್ನೇ ಹಾಕದೆ ಶರಣಾಗತಿ ಘೋಷಿಸಿಬಿಟ್ಟಿತ್ತು.

ಕುಂದಾಪುರದಲ್ಲಿ ಮರುಕಳಿಸಿದ ಕಾಂಗ್ರೆಸ್ ವೈಭವ

Posted by JAYAKIRANA Kirana on | 0 comments | Leave a comment...


ಕುಂದಾಪುರ: ಇಂದಿರಾಗಾಂಧಿ,  ರಾಜೀವ ಗಾಂಧಿಯವರ ಕಾಲದಲ್ಲಿದ್ದ  ಕಾಂಗ್ರೆಸ್‌ನ ವಿಜಯದ  ವೈಭವವು ಸರಿಸುಮಾರು ಎರಡು ದಶಕಗಳ ನಂತರ ಮತ್ತೆ ಮರುಕಳಿಸಿದ  ಸಂಭ್ರಮ  ಕುಂದಾ ಪುರದಲ್ಲಿ ನಿನ್ನೆ ಕಂಡುಬಂದಿದೆ.
ಬಿಜೆಪಿಯ ರಭಸದಲ್ಲಿ ಛಿದ್ರ ಗೊಂಡು  ಸೋತು ಸತ್ತು ಮಲಗಿದಂ ತಹ ಕಾಂಗ್ರೆಸ್  ಸತತ ಸೋಲಿನ ನಂತರ  ಮತ್ತೆ ಫಿನೀಕ್ಸ್ ಪಕ್ಷಿಯಂತೆ  ಎದ್ದು ಕುಳಿತಿದೆ. ಹಾಗೇ ಕಾಂಗ್ರೆಸ್ ಸಮರ ಭೂಮಿಯ ಮಹಾದಂಡ ನಾಯಕನಾಗಿ  ಜಯಪ್ರಕಾಶ್ ಹೆಗ್ಡೆಯೆಂಬ ಸೇನಾನಿ ತೊಡೆ ತಟ್ಟಿ ನಿಂತಿದ್ದಾನೆ.
ಅಡ್ಡಡ್ಡ ಮಲಗಿಸಿದಂತಹ ದುರಹಂಕಾರ: ಇಂದಿರಾ ಕಾಂಗ್ರೆಸ್‌ನ ಪರವಾಗಿ ಒಂದು ಅಪರಿಚಿತ ಕಂಬ ನಿಲ್ಲಿಸಿದರೂ ಅದು ಅನಾಯಾಸವಾಗಿ ಗೆದ್ದು  ಬರುತ್ತದೆ ಎಂಬ ಪ್ರತೀತಿ ಕರಾ ವಳಿಯ ಮಟ್ಟಿಗೆ ಜನಜಿನಿತವಾಗಿತ್ತು. ಇಲ್ಲಿಂದ ಬೇರ‍್ಯಾವ ಪಕ್ಷಿಗಳಿಗೆ ಆಸ್ಪದವಿಲ್ಲದಂತೆ ಜಯಭೇರಿ ಬಾರಿಸುತ್ತಿದ್ದ ಕಾಂಗ್ರೆಸ್ ದಂಡ ನಾಯಕರಿಗೆ ತಾವು ಹೇಗಿದ್ದರೂ ಗೆದ್ದು ಬರುತ್ತೇವೆ ಎಂಬ ದುರಹಂಕಾರ ತಲೆಗೇರಿದ್ದು, ಅಂತಿಮ ವಾಗಿ ಬಿಜೆಪಿಯ ರೂಪದಲ್ಲಿ ಇಡೀ ಕಾಂಗ್ರೆಸ್ಸನ್ನೇ ಅಡ್ಡಡ್ಡ ಮಲಗಿಸಿ  ಬಿಟ್ಟಿತ್ತು.  ಚಕ್ಕು ಚದುರಿಹೋದ ಕಾರ‍್ಯಕರ್ತರು  ಅನಾಯಾಸವಾಗಿ  ಸಂಘಟನೆ ಸೇರಿ ಬಿಜೆಪಿಯ ತಳಪಾಯವನ್ನು  ಭದ್ರಗೊಳಿಸಿ ಬಿಟ್ಟರು. ಆದರೆ ಸೋಲಿನಲ್ಲಿಯೇ ಗೆಲುವನ್ನು ಕಂಡುಕೊಳ್ಳಬೇಕಾಗಿದ್ದ  ಕಾಂಗ್ರೆಸ್ ಸರದಾರರು  ಮಾತ್ರ ತಾನು ತನ್ನದು  ಎಂಬಲ್ಲಿಗೆ ಮಾತ್ರ ಸೀಮಿತವಾಗಿ ಹೋದದ್ದು ದುರಂತವೇ  ಸರಿ. ಇಂತಹ ಸಂದರ್ಭದಲ್ಲಿಯೇ ಜನತಾದಳದಲ್ಲಿ ಸಚಿವನಾಗಿ ಮಿಂಚಿ ತದನಂತರ  ಬ್ರಹ್ಮಾವರ ಕ್ಷೇತ್ರದಲ್ಲಿ ಪಕ್ಷೇತರನಾಗಿ  ಸ್ಪರ್ಧಿಸಿ ಯಶಸ್ಸುಗಳಿಸಿದ  ಜಯಪ್ರಕಾಶ್ ಹೆಗ್ಡೆ  ಕಾಂಗ್ರೆಸ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು  ಪ್ರತಿನಿಧಿಸಿದ್ದರು. ಆದರೆ ಎದುರಾಳಿಯಾಗಿದ್ದು ಹಾಲಾಡಿ ಶ್ರೀನಿವಾಸ ಶೆಟ್ಟಿಯೆಂಬ  ಬಿಜೆಪಿಯ ಮಹಾದಂಡ ನಾಯಕ. ಒಂದಷ್ಟು ಆಸೆ ಕೆರಳಿಸಿದ್ದ ಜಯಪ್ರಕಾಶ್ ಹೆಗ್ಡೆ ಹಾಲಾಡಿ ಎದುರು ಸದ್ದಿಲ್ಲದೆ ಸೋತು ಹೋದರು. ನಂತರ ತನ್ನ ನಸೀಬನ್ನು  ಇದೇ ಲೋಕಸಭಾ ಕ್ಷೇತ್ರದಲ್ಲಿ  ಡಿ.ವಿ.ಸದಾನಂದ ಗೌಡರೆದುರು ಪಣಕಟ್ಟಿ ಜೆ.ಪಿ ಅಲ್ಲಿಯೂ ನಿರಾಶರಾಗ ಬೇಕಾಯ್ತು. ಅವರ ಸತತ ಎರಡು ಸೋಲುಗಳು  ಸಹಜವಾಗಿ ಕಾಂಗ್ರೆಸ್ ಅನ್ನು ಮತ್ತೆ ಅಧ:ಪತನಕ್ಕೆ ತಳ್ಳಿಬಿಟ್ಟಿತು.
ಅಲ್ಲಿ ಮತ್ತೆ ತಾಂಡವವಾಡ ತೊಡಗಿತ್ತು ದುರಹಂಕಾರ. ಆದರೆ ಅದು ಪಾರ್ಟಿ ಬದಲಿಸಿ, ಬಿಜೆಪಿ  ಪಾಳಯದಲ್ಲಿ ನರ್ತನಗೈಯ್ಯತೊಡಗಿತ್ತು.  ಎಷ್ಟೆಲ್ಲಾ ಹಗರಣಗಳಾದರೂ  ಜರಗಿದ ಚುನಾವಣೆ ಹಾಗೂ ಉಪಚುನಾವಣೆ ಗಳಲ್ಲಿ ನಿರಂತರ  ಗೆಲುವು ಸಾಧಿಸುತ್ತಾ  ಹೋದ ಬಿಜೆಪಿ ಹೇಗಿದ್ದರೂ  ತಾವು ಗೆಲ್ಲುತ್ತೇವೆ  ಎಂದು ಒಂದಾನೊಂದು ಕಾಲದಲ್ಲಿ  ಕಾಂಗ್ರೆಸ್ ಮನೆಯಲ್ಲಿದ್ದ ದುರಹಂಕಾರವನ್ನು ಇಡೀಯಾಗಿ ಬಸಿದುಕೊಂಡು ಬಿಟ್ಟಿತು.
ಇದೀಗ ಅದೇ ದುರಹಂಕಾರ  ಉಡುಪಿ ಜಿಲ್ಲೆಯಲ್ಲಿ  ಬಿಜೆಪಿಯನ್ನು ನುಂಗಿಬಿಟ್ಟಿದೆ ಎಂದು ವಿಶ್ಲೇಷಿಸಲಾ ಗುತ್ತಿದೆ. ಆದರೆ ಎರಡೂ ಪಕ್ಷದವ ರಿಗೂ ಸೋಲೆಂಬುದು ಅದರ ಶವ ಪೆಟ್ಟಿಗೆಗೆ ಜಡಿಯಲಾಗುವ  ಅಂತಿಮ ಮೊಳೆ ಎಂದೇ ಪರಿಗಣಿಸಲಾಗಿತ್ತು. ಜೆಡಿಎಸ್‌ನ ಅಭ್ಯರ್ಥಿಯೂ ಕಾಂಗ್ರೆಸ್‌ನ ಆತಂಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ಸಲ್ಲಿಸಿಬಿಟ್ಟಿದ್ದರಿಂದ  ಸೋಲು ಗೆಲುವಿನ  ಲೆಕ್ಕಾಚಾರ ಎರಡೂ ಪಕ್ಷಗಳ ನಿದ್ದೆ ಯನ್ನು ಕೆಡಿಸಿಬಿಟ್ಟಿತು.  ಅಂತಿಮವಾಗಿ ಮತದಾರ ಮತ್ತೆ ಹಲವು ಸಮಯದ  ನಂತರ ಕೈಹಿಡಿದು ಬಿಟ್ಟಿದ್ದಾನೆ. ಮುಖ್ಯವಾಗಿ ಇದು ಕಾಂಗ್ರೆಸ್‌ನ ಗೆಲುವು ಹೌದಾದರೂ ಅದರಲ್ಲಿ ಹೆಚ್ಚಿನ ಶ್ರೇಯಸ್ಸು ಸಲ್ಲುವುದು ಜಯಪ್ರಕಾಶ್  ಹೆಗ್ಡೆಯವರಿಗೆ. ಕಾಂಗ್ರೆಸ್‌ನಿಂದ ತನ್ನ ಚೊಚ್ಚಲ  ಪ್ರಯತ್ನದಲ್ಲಿ ಎರಡು ಸಲ ಸತತ ಸೋಲಿನ ಕಹಿ  ಅನುಭವಿಸಿ ದರೂ ಕ್ಷೇತ್ರಕ್ಕೆ  ಬೆನ್ನು ಮಾಡದ ಜೆ.ಪಿ ನಿರಂತರವಾಗಿ, ಪಕ್ಷದ ಕಾರ‍್ಯಕರ್ತ ರೊಂದಿಗೆ ಇರಿಸಿಕೊಂಡಿದ್ದ  ಸಂಪರ್ಕ ಅಂತಿಮವಾಗಿ  ಅವರ ಭರ್ಜರಿ  ಗೆಲುವಿಗೆ  ಸಹಿ ಒತ್ತಿ ಬಿಟ್ಟಿದೆ. ಇದು ಇಲ್ಲಿಂದ ಸತತವಾಗಿ  ಗೆದ್ದು  ಕೇವಲ ಒಂದು ಸೋಲಿಗೆ  ಇಡೀ ಕ್ಷೇತ್ರವನ್ನು ಅಪೋಶನ ತೆಗೆದುಕೊಂಡವರಿಗೆ ಹಾಗೂ  ಗೆಲುವಿನ  ದುರಹಂಕಾರ ಶಾಶ್ವತ ಎಂದು ಭಾವಿಸಿದವರಿಗೆ ಪಾಠ ವಾಗುತ್ತದೆ.
ಇತಿಹಾಸ ಸೃಷ್ಟಿಸಿದ ಮೆರವಣಿಗೆ:
ನಭೂತೋ ನಭವಿಷ್ಯತ್ ಎಂಬಂತೆ ನಿನ್ನೆ ಜಯಪ್ರಕಾಶ್ ಹೆಗ್ಡೆಯವರ ಜಯಭೇರಿ ಬಾರಿಸಿದ  ಅಭಿಮಾನಿಗಳ ಮೆರವಣಿಗೆಯು ಕುಂದಾಪುರದಲ್ಲಿ ಇತಿಹಾಸ ಸೃಷ್ಟಿಸಿದೆಯೆನ್ನಲಾಗಿದೆ. ಉಡುಪಿ ಯಿಂದ ಕುಂದಾಪುರದತ್ತ ಹೊರಟಿದ್ದ ಮೆರವಣಿಗೆಯಲ್ಲಿ ಅಸಂಖ್ಯಾತ ವಾಹನಗಳು ಅಭಿಮಾನಿಗಳು ನೆರೆದು ಹೊಸ ಭಾಷ್ಯವನ್ನೇ ಸೃಷ್ಟಿಸಿತು.

ಪಾನಮತ್ತನಾಗಿ ರಸ್ತೆ ಬದಿ ಬಿದ್ದ ಮುಖ್ಯಶಿಕ್ಷಕ ಅಮಾನತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಿಫಾರಸು

Posted by JAYAKIRANA Kirana on | 0 comments | Leave a comment...


ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕುಂಬ್ರ ಎಂಬಲ್ಲಿ ಸೋಮವಾರ ಪಾನಮತ್ತನಾಗಿ ರಸ್ತೆ ಬದಿಯಲ್ಲಿ ಬಿದ್ದ ತಾಲೂಕಿನ ಸಜಂಕಾಡಿ ಹಿ. ಪ್ರಾ.ಶಾಲೆಯ ಮುಖ್ಯ ಗುರು ಶಾಂತಪ್ಪ ವಾಗ್ಮೋರೆ ಎಂಬವ ರನ್ನು ಕರ್ತವ್ಯದಿಂದ ಅಮಾನತುಗೊ ಳಿಸುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. 
ಮಾಣಿ ಮೈಸೂರು ರಾಜ್ಯ ಹೆದ್ದಾ ರಿಯ ಕುಂಬ್ರ ಪೇಟೆಯಲ್ಲಿ ಸೋಮ ವಾರ ಮಧ್ಯಾಹ್ನ ಸುಮಾರು ೨ ಗಂಟೆಯ ವೇಳೆಗೆ ಕುಡಿತದ ಅಮಲೇರಿ ತೂರಾಡುತ್ತಾ ಬಂದ ಶಾಂತಪ್ಪ ವಾಗ್ಮೋರೆ ರಸ್ತೆ ಬದಿಯಲ್ಲಿ ಬಿದ್ದು, ಅಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಂಜೆಯ ತನಕ ಮಲಗಿ ನಶೆ ಇಳಿದ ಬಳಿಕ ಎದ್ದು ಹೋಗಿದ್ದರು. ಈ ಹಿಂದೆ ಪಡು ವನ್ನೂರು ಗ್ರಾಮದ ಅಂಬಟೆಮೂಲೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ವಾಗ್ಮೋರೆ ಅವರನ್ನು ಪಾನಮತ್ತನಾಗಿ ಶಾಲೆಗೆ ಬರುವುದು ಹಾಗೂ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಸ್ಥಳೀ ಯರ ದೂರಿನ ಹಿನ್ನಲೆಯಲ್ಲಿ ಸಜಂಕಾಡಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕೆಗಳು ವರದಿ ಮಾಡಿತ್ತು.

ಬಜ್ಪೆ: ರಸ್ತೆಗೆ ಆಲದಮರ ಬಿದ್ದು ಸಂಚಾರ ಅಸ್ತವ್ಯಸ್ತ

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಂಗಳೂರು-ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಬಜ್ಪೆ ಸಮೀಪದ ಕರಂಬಾರು ಎಂಬಲ್ಲಿ ನಿನ್ನೆ ಮಧ್ಯಾಹ್ನ ಬೃಹತ್ ಗಾತ್ರದ ಆಲದ ಮರದ ಕೊಂಬೆ ಮುರಿದು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿತು.
ರಸ್ತೆ ಬದಿ ಬೆಳೆದು ನಿಂತಿದ್ದ ಆಲದ ಮರದ ಗೆಲ್ಲು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಹಠಾತ್ ಆಗಿ ಮುರಿದು ಬಿತ್ತು.  ಗೆಲ್ಲು ಮುರಿದು ರಸ್ತೆಗೆ ಬೀಳುವ ವೇಳೆ ವಿದ್ಯುತ್ ತಂತಿ ಕಂಬದ ಮೇಲೆ ಬಿದ್ದ ಪರಿಣಾಮ ತಂತಿ ತುಂಡಾಗಿ ರಸ್ತೆಗೆ ಬಿತ್ತು. ಕೂಡಲೇ ಮೆಸ್ಕಾಂಗೆ ಸಿಬ್ಬಂದಿ ಹಾಗೂ ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತಡೆಹಿಡಿದರು.
ಅರಣ್ಯ ಇಲಾಖೆ ಅಧಿಕಾರಿ ಜಿತೇಶ್ ನೇತೃತ್ವದಲ್ಲಿ ಸಿಬ್ಬಂದಿ ಮರದ ಗೆಲ್ಲನ್ನು ಕಟ್ಟರ್ ಮೆಷಿನ್ ಬಳಸಿ ತುಂಡು ಮಾಡಿ ಸುಗಮ ಸಂಚಾರಕ್ಕೆ ಸಹಕರಿಸಿದರು.

ಕೊಲೆಯತ್ನ: ಒಂಬತ್ತು ಮಂದಿಗೆ ಸಜೆ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಕಾರನ್ನು ಅಡ್ಡಗಟ್ಟಿ ವ್ಯಕ್ತಿಯನ್ನು ಮಾರಣಾಂತಿಕವಾಗಿ ಹಲ್ಲೆಗೈದು ಹತ್ಯೆಗೆ ಯತ್ನಿಸಿದ ಪ್ರಕರಣ ದಲ್ಲಿ ಒಂಭತ್ತು ಮಂದಿ ಆರೋಪಿಗಳಿಗೆ ಒಂಭತ್ತು ವರ್ಷ ಕಠಿಣ ಸಜೆ ವಿಧಿಸಲಾಗಿದೆ.
ಕಾಸರಗೋಡು ಜಿಲ್ಲಾ ವಿಭಾ ಗೀಯ ತ್ವರಿತ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ವಿವಿಧ ಕಾಯ್ದೆ ಗಳಡಿ ಶಿಕ್ಷೆ ಘೋಷಿಸಿರುವುದರಿಂದ ಆರೋಪಿಗಳು ಒಟ್ಟಿಗೆ ಕನಿಷ್ಠ ನಾಲ್ಕು ವರ್ಷ ಕಠಿಣ ಸಜೆ ಅನುಭವಿಸಬೇಕೆಂದು ನ್ಯಾಯಮೂರ್ತಿ ಕೆ. ಸೋಮರಾಜನ್ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳ ಮುಳಿಂಜ ನಿವಾಸಿ ಕರುಣಾಕರ ಭಂಡಾರಿ ಎಂಬವರೇ ಕ್ರೂರ ಹಲ್ಲೆಗೆ ಒಳಗಾದವರು. ಪ್ರಕರಣದಲ್ಲಿ ಉಪ್ಪಳ, ಮುಳಿಂಜ ನಿವಾಸಿಗಳಾದ ಸುಧಾಕರ, ರಾಮಚಂದ್ರ, ರಾಮಕೃಷ, ಸುಜಿತ್ ಕುಮಾರ್, ಭಾಸ್ಕರ, ಸುರೇಶ್, ಕೃಷ್ಣ, ನಾರಾಯಣ, ನವೀನ ಎಂಬವರನ್ನು ಆರೋಪಿಗಳನ್ನಾಗಿ ಗುರುತಿಸಿ ಮಂಜೇಶ್ವರ ಪೊಲೀಸರು ದೋಷ ರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿ ಗಣಿಸಿ ಈ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಸನ್ ಪರ ನ್ಯಾಯವಾದಿ ಸತ್ತಾರ್ ಹಾಗೂ  ಗಂಗಾಧರನ್ ಕುಟ್ಟಿಮತ್ತ್ ಹಾಜತಾಗಿದ್ದರು.

ಎಂಎಸ್‌ಇಝಡ್ ಪೈಪ್‌ಲೈನ್‌ಗೆ ಮುಕ್ಕ ನಾಗರಿಕರ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...


ಮುಲ್ಕಿ: ಎಂಎಸ್‌ಇಝಡ್ ವತಿಯಿಂದ ಮುಕ್ಕ ಸಮುದ್ರ ಬಳಿ ಪೈಪ್‌ಲೈನ್ ಕಾಮಗಾರಿಯು ನಡೆಯು ತ್ತಿದ್ದು ನಿನ್ನೆ ಮುಕ್ಕ ಮಲ್ಲಮಾರ್ ನಿವಾಸಿಗಳು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಸ್ಥಳಕ್ಕೆ ಠಾಣಾಧಿಕಾರಿ ಹಾಗೂ ಸಿಬಂದಿ ಬಂದು ಪರಿಸ್ಥಿತಿ ಹತೋಟಿಗೆ ತಂದರು. ಸ್ಥಳಕ್ಕೆ ಮಂಗಳೂರಿನ ತಹಶೀಲ್ದಾರರಾದ ರವಿಚಂದ್ರ ನಾಯಕ್ ಹಾಗೂ ಎಂಎಸ್‌ಇಝಡ್ ಸಂಜೀವ ಕರ್ಕೇರ ಬಂದು ಮಲ್ಲಮಾರ್ ನಿವಾಸಿ ಗಳಲ್ಲಿ ತನ್ನ ಬೇಡಿಕೆ ಈಡೇರಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಮದ್ಯ ಸಾಗಾಟ: ಮೂವರ ಸೆರೆ

Posted by JAYAKIRANA Kirana on | 0 comments | Leave a comment...


ಮಂಗಳೂರು : ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯಸಾಗಾಟ ಮಾಡುತ್ತಿದ್ದ ಮೂವರು ಆರೋಪಿ ಗಳನ್ನು ಅಬಕಾರಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ವಿಶ್ವನಾಥ್ ಯಾನೆ ವಸಂತ, ಪುತ್ತೂರು ಮೊಗ್ರಾಲ್‌ನ ಅನಿಲ್‌ಕುಮಾರ್ ಕೆ, ಕಾಸರಗೋಡು ಬೆದ್ರಡ್ಕದ ಮನೋಜ್ ಕುಮಾರ್ ವಿ.ಎನ್.  ಬಂಧಿತರು.

ಬೈಕ್ ಸ್ಕಿಡ್: ಸವಾರ ಗಾಯ

Posted by JAYAKIRANA Kirana on | 0 comments | Leave a comment...


ಪುತ್ತೂರು: ಬೈಕೊಂದು ಸ್ಕಿಡ್ ಆಗಿ ಸವಾರ ಪುತ್ತೂರು ತಾಲೂಕಿನ ಬಲ್ನಾಡು ನಿವಾಸಿ ಗಂಗಾಧರ್ ಎಂಬಾತ ಗಂಭೀರ ಗಾಯಗೊಂಡ ಘಟನೆ ಬುಧವಾರ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ನಡೆದಿದೆ.

ಕಾರು ಕಳವು

Posted by JAYAKIRANA Kirana on | 0 comments | Leave a comment...


ಪುತ್ತೂರು: ನಗರದ ವೆಂಕಟ್ರಮಣ ದೇವಾಲಯದ ಬಳಿ ನಿಲ್ಲಿಸಲಾಗಿದ್ದ ಮಾರುತಿ ಓಮ್ನಿ ಕಾರೊಂದು ಕಳವಾದ ಘಟನೆ ಬುಧವಾರ ಹಾಡಹಗಲೇ ನಡೆದಿದೆ. ಜೆಮ್ನಿ ಟೆಕ್ನಿಕಲ್‌ನ ಮಾಲಕ ಸಿ.ಎಸ್. ಕಾಮತ್ ಎಂಬವರಿಗೆ ಸೇರಿದ ಕೆ.ಎ. ೨೧ಎನ್ ೯೧೧೯ ನೋಂದ ಣಿಯ ಓಮ್ನಿ ಕಾರು ಕಳವಾಗಿದೆ.

ಮುಲ್ಕಿ ಬೈಪಾಸ್ ರದ್ದು: ಬಪ್ಪನಾಡಿನಲ್ಲಿ ರಂಗಪೂಜೆ

Posted by JAYAKIRANA Kirana on | 0 comments | Leave a comment...


ಮುಲ್ಕಿ: ಕಳೆದ ಮೂರು ವರ್ಷಗ ಳಿಂದ ಅವಿರತವಾಗಿ ಹೋರಾಟ ನಡೆಸುತ್ತಿದ್ದ ಮುಲ್ಕಿ ಬೈಪಾಸ್ ರಸ್ತೆಯ ವಿರೋಧಿ ಸಂಘಟನೆಯಾದ ಬಪ್ಪನಾಡು ಹಿತರಕ್ಷಣಾ ವೇದಿಕೆಯು ತಮ್ಮ ಹೋರಾಟಕ್ಕೆ ಜಯ ಸಿಕ್ಕ ಸಂತಸದಲ್ಲಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆಯ ಸೇವೆಯನ್ನು ಮಾರ್ಚ್ ೨೩ರಂದು ನೀಡಲು ನಿರ್ಧರಿಸಿದೆ.
ಸುರತ್ಕಲ್ ಕುಂದಾಪುರದ ನಡುವೆ ಹೆದ್ದಾರಿ ಇಲಾಖೆಯು ನಡೆಸಲು ಉದ್ದೇಶಿಸಿದ್ದ ಮುಲ್ಕಿ ಬೈಪಾಸ್ ರಸ್ತೆಯ ವಿರುದ್ಧ ೨೦೦೯ರ ಆರಂಭದಲ್ಲಿಯೇ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರು ಒಂದು ಗೂಡಿ ವೇದಿಕೆಯ ಮೂಲಕ ಬೆಂಬಿಡದೇ ಹೋರಾಟ ನಡೆಸಿದ್ದರು. ಆರಂಭದಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿ, ದೇವಳದ ರಥೋತ್ಸವಕ್ಕೆ ಧಕ್ಕೆಯಾಗಿ ಪಾರಂಪರಿಕ ಉತ್ಸವಕ್ಕೆ ಅಡಚಣೆ ಆಗುತ್ತದೆ ಎಂಬ ಉದ್ದೇಶದಿಂದಲೇ ಹೋರಾಟ ನಡೆಸಿದ್ದರು.
ಬೈಪಾಸ್ ರಚನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಅನೇಕ ಕುಟುಂಬವು ಇದರೊಂದಿಗೆ ಸೇರಿಕೊಂಡರು. ಅಲ್ಲದೇ ಅನೇಕ ಮನೆ ನಿವಾಸಿಗಳಿಗೂ ಈ ಹೋರಾಟವೇ ಆಸರೆ ಆಯಿತು. ಇದರೊಂದಿಗೆ ತಮ್ಮ ವ್ಯವಹಾರ ದೃಷ್ಠಿಯಿಂದ ಅಮೂಲ್ಯ ಆಸ್ಥಿ, ಕಟ್ಟಡಗ ಳನ್ನು ಉಳಿಸಿಕೊಳ್ಳುವ ಸ್ವಾರ್ಥಿಗಳಿಗೂ ಸಹ ಸಮಿತಿಯೇ ಅನಿವಾರ್ಯವಾಗಿ ನೆರಳಾಗಿ ಹೋಯಿತು.
ಹೋರಾಟದ ತೀವ್ರತೆಯಿಂದ ಅನೇಕ ಬಾರಿ ಸರ್ವೇ ಮಾಡಲು ಬಂದವರನ್ನು ಓಡಿಸುತ್ತಿದ್ದ ಗ್ರಾಮಸ್ಥರು ಒಂದು ಬಾರಿ ಅವರ ಉಪಕರಣವನ್ನೇ ಕಸಿದು ಮನೆಯಲ್ಲಿಟ್ಟಿದ್ದರು ಕೊನೆಗೆ ಅದು ಪೊಲೀಸ್ ಠಾಣೆಯ ಮೆಟ್ಟಿ ಲೇರಿತ್ತು. ಬಲವಂತವಾಗಿ ಪೊಲೀಸ್ ಬಲದಲ್ಲಿ ಸ್ಥಳೀಯ ಸರ್ವೇಯರ್ ಉದ್ದಟನ ತೋರಿದ್ದರಿಂದ ಜನರ ನಿಂದನೆಗೆ ಗುರಿ ಆಗಬೇಕಾಯಿತು. ಆ ನಂತರ ಬಿ.ಎಂ.ಆಸೀಫ್ ಅಧ್ಯಕ್ಷತೆ ಯಲ್ಲಿ ಮುಲ್ಕಿ ನಗರ ಪಂಚಾಯತ್ ಸಹ ಪಕ್ಷಭೇಧ ಮರೆತು ಸಂಪೂರ್ಣ ಬೆಂಬಲ ಸೂಚಿಸಿದ್ದರಿಂದ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಸ್ಥಳಕ್ಕೆ ಬಂದು ಯೋಜನೆಯ ವಿವಿಧ ಹಂತವನ್ನು ಜನರಲ್ಲಿ ತಿಳಿಸಿದರು.
ಸೇತುವೆ ರಚನೆ ಮಾಡಿದರೆ ಮತ್ತು ಪೇಟೆಯಲ್ಲಿನ ಕಟ್ಟಡ ಕೆಡವಿದರೆ ಯೋಜನೆಯು ವೆಚ್ಚದಾಯಕವಾ ಗುತ್ತದೆ ಬೈಪಾಸ್‌ಗೆ ಮಾತ್ರ ಕಡಿಮೆ ಖರ್ಚಾಗುತ್ತದೆ ಎಂದು ತಿಳಿಹೇಳಿದರು ಆ ಸಲಹೆಯನ್ನು ಸಮಿತಿ ಕೇಳದೆ ದೆಹಲಿಗೆ ತೆರಳಿ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡಿತು. ಈ ನಡುವೆ ಲೋಕಸಭಾ ಚುನಾವಣೆಯು ಬಂದು ಸಮಿತಿಯಲ್ಲಿದ್ದ ಬಿಜೆಪಿ ಪ್ರಮುಖರು ರಾಜಿನಾಮೆಯ ಬೆದರಿಕೆ ನೀಡಿದಾಗ ಕೊನೆಗೆ ನಳಿನ್‌ಕುಮಾರ್ ಕಟೀಲು ರವರು ಗೆದ್ದ ನಂತರ ಬಪ್ಪನಾಡು ದೇವಳದಲ್ಲಿಯೇ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯನ್ನು ಹೋರಾಟ ಗಾರರ ಮುಂದೆ ನಡೆಸಿದರು. ಬೈಪಾಸ್ ಚೆಂಡನ್ನು ಜಿಲ್ಲಾಧಿಕಾರಿಯ ಅಂಗಳಕ್ಕೆ ಕಳುಹಿಸಲಾಯಿತು.
ಜಿಲ್ಲಾಧಿಕಾರಿಗಳಾದ ಚೆನ್ನಪ್ಪಗೌಡರು ಸ್ವತಃ ಅಧಿಕಾರಿಗಳ ಪಡೆಯೊಂದಿಗೆ ಮುಲ್ಕಿ ಪೇಟೆಯಲ್ಲಿ ಕಟ್ಟಡ ಮತ್ತು ರಸ್ತೆಯ ಎಲ್ಲಾ ವಿಧದಲ್ಲೂ ಅಳತೆ ಮಾಡಿಕೊಂಡು ಸ್ಪಷ್ಟ ನಿರ್ಧಾರಕ್ಕೆ ಬಂದ ದ್ದರಿಂದ ಈಗ ಅಂಡರ್ ಪಾಸ್ ಹೈವೆಯ ನೀಲನಕ್ಷೆ ತಯಾರಾಗಿ ನಿಂತಿದೆ. ಬೈಪಾಸ್ ಬೇಕು ಎಂಬ ಸಣ್ಣ ಹೋರಾಟದ ಧ್ವನಿಯೂ ಸಹ ಜನರ ಬೆಂಬಲ ಇಲ್ಲದೇ ಕ್ಷಿಣವಾಯಿತು.
ಬೈಪಾಸ್ ವಿರುದ್ದ ಹೋರಾಟ ನಡೆಸಲು ಶ್ರೀದುರ್ಗಾಪರಮೇಶ್ವರಿಯೇ ಪ್ರೇರಣೆಯ ಶ್ರೀರಕ್ಷೆ ನೀಡಿದ್ದರಿಂದ ಶುಕ್ರವಾರ ನೀಡುವ ರಂಗಪೂಜೆಯ ಸೇವೆಯನ್ನು ಹರಕೆಯ ರೂಪವಾಗಿ ನೀಡುತ್ತಿದ್ದೇವೆ ಎಂದು ಸಮಿತಿಯ ಪ್ರಮುಖರೊಬ್ಬರು ಹೇಳಿದ್ದಾರೆ. ಕ್ಷೇತ್ರದಲ್ಲಿ ವಾರ್ಷಿಕ ಉತ್ಸವದ ವಿಶೇಷ ಪೂಜೆಯು ನಡೆಯುತ್ತಿರುವ ಈ ಸಂದರ್ಭದಲ್ಲಿ ರಂಗಪೂಜೆಯು ಸಹ ಮಹತ್ವ ಪಡೆದಿದ್ದು ಅದರಲ್ಲಿ ದೇವರ ಬಲಿಸೇವೆ, ಚಂಡೆ, ವಾದ್ಯ, ಸುಡುಮದ್ದು ಸೇವೆಯು ನಡೆಯಲಿದೆ.
ಅಧಿಕೃತವಾಗಿ ರದ್ದಾಗಿಲ್ಲ...
ಬೈಪಾಸ್ ರದ್ದುಗೊಂಡಿದೆ ಎಂದು ಹೇಳಿದ್ದರು ಹೆದ್ದಾರಿ ಅಧಿಕಾರಿಗಳು ಹೇಳುವಂತೆ ಮುಲ್ಕಿ ಬೈಪಾಸ್ ಯೋಜನೆಯಲ್ಲಿ ಅಧಿಕೃತವಾಗಿ ರದ್ದಾಗಿಲ್ಲ ಪ್ರತಿಭಟನೆಯ ಕಾವಿನಿಂದ ತಾತ್ಕಾಲಿಕ ರದ್ದಾಗಿದೆ.
ಆದರೆ ಮುಂದಿನ ೨೦ ವರ್ಷದಲ್ಲಿ ಇಲ್ಲಿ ಬೈಪಾಸ್ ರಚನೆ ಆಗಲೇಬೇಕು, ಆಗದಿ ದ್ದಲ್ಲಿ ವಾಹನ ದಟ್ಟಣೆಗೆ ಅನಾ ನುಕೂಲ ಆಗಲಿದೆ ಎಂದು ಪ್ರತಿಕ್ರಿ ಯಿಸುತ್ತಾರೆ.

ಮೀನಕಳಿಯ: ವಿದ್ಯಾರ್ಥಿ ನಾಪತ್ತೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಎಂಬಲ್ಲಿ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಸಂದೇಶ (೧೫) ಎಂದು ಹೆಸರಿಸಲಾಗಿದ್ದು, ಮೀನಕಳಿಯದಲ್ಲಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ. ಈತ ಮಾ. ೧೬ರಂದು ಟ್ಯೂಷನ್‌ಗೆಂದು ಹೋದವನು ಮತ್ತೆ ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದಾನೆಂದು ಪಣಂಬೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಶಬ್ದ ಮಾಲಿನ್ಯ: ಗ್ಯಾರೇಜ್‌ಗೆ ಬೀಗ

Posted by JAYAKIRANA Kirana on | 0 comments | Leave a comment...


ಮಂಗಳೂರು : ಶಬ್ದ ಮಾಲಿನ್ಯದ ಆರೋಪ ಎದುರಿಸುತ್ತಿದ್ದ ಮಣ್ಣಗುಡ್ಡೆ ಸಂಘನಿಕೇತನದ ಸಮೀಪ ಇರುವ  ಕಬ್ಬಿಣದ ಪರಿಕರಗಳನ್ನು ಸಿದ್ದಪಡಿಸುವ ಗ್ಯಾರೇಜ್‌ಗೆ ನಿನ್ನೆ ಪಾಲಿಕೆ ಆರೋಗ್ಯ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ತೆರಳಿ ಬೀಗ ಜಡಿದ್ದಾರೆ.
ಮಹೇಶ್ ಸುವರ್ಣ ಎಂಬವರ ಮಾಲಕತ್ವದ ಗ್ಯಾರೇಜ್‌ನಲ್ಲಿ ಶಬ್ದ ಮಾಲಿ ನ್ಯದಿಂದ  ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದರು. ಈ ಗ್ಯಾರೇಜ್ ಉದ್ಯಮ ಪರವಾನಿಗೆ ಹೊಂದಿಲ್ಲ ಎಂದು  ಸ್ಥಳೀಯರು ದೂರು ಸಲ್ಲಿಸಿದ್ದರು. ಉದ್ಯಮ ಪರವಾನಿಗೆ ಪಡೆಯದ ದೂರನ್ನು ಆಧರಿಸಿ ಮೂರು ಬಾರಿ ನೋಟಿಸ್ ನೀಡಿದರೂ. ಗ್ಯಾರೇಜ್ ಬಂದ್ ಮಾಡದ ಹಿನ್ನೆಲೆಯಲ್ಲಿ ನಿನ್ನೆ ಬೀಗ ಜಡಿಯಲಾಗಿದೆ ಎಂದು ಆರೋಗ್ಯ ಅಧಿಕಾರಿ  ರಘುನಾಥ್ ತಿಳಿಸಿದ್ದಾರೆ.

ಸರ ಅಪಹರಣ

Posted by JAYAKIRANA Kirana on | 0 comments | Leave a comment...


ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಎರಡು ಚಿನ್ನದ ಸರ ಅಪಹಿರಿಸಿದ ಘಟನೆ ನಿನ್ನೆ ಮಧ್ಯಾಹ್ನ ಗೋರಿಗುಡ್ಡೆ ಬಳಿ ಸಂಭವಿಸಿದೆ. ಈ ಬಗ್ಗೆ ಮಂಗ ಳೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.
ಸೋಮೇಶ್ವರದ ನಿವಾಸಿ ಚಂಚ ಲಾಕ್ಷಿ  ಎಂಬವರು ಕೆಲಸ ನಿಮಿತ್ತ  ನಗರದ ಗೋರಿಗುಡ್ಡೆಗೆ ಬಂದವರು ರಸ್ತೆಯ ಬದಿಯಲ್ಲಿ ನಡೆದು ಹೋಗು ತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಚಂಚಲಾಕ್ಷಿ ಅವರ ಕತ್ತಿನಲ್ಲಿದ್ದ ಕರಿಮಣಿಸರ ಹಾಗೂ ಮತ್ತೊಂದು ಸರವನ್ನು ಎಳೆದು ಪರಾರಿಯಾಗಿದ್ದಾರೆ.

ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವ ಬೆಳೆಯದು...

Posted by JAYAKIRANA Kirana on | 0 comments | Leave a comment...




ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆ ಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ.

ಭಾರತದಲ್ಲಿ ಸ್ವಾತಂತ್ರ್ಯದ ನಂತರ ವಂಶವಾಹಿ ಪ್ರಜಾಪ್ರಭುತ್ವ ಬೆಳೆದು ನಿಂತಿದೆ. ಆರಂಭದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ನಂತರ ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಬೆಳೆದಿದು, ಹಿಂದಿದ್ದ ರಾಜರ ಆಳ್ವಿಕೆಯನ್ನೇ ಹೋಲುತ್ತಿದೆ. ನೆಪಮಾತ್ರಕ್ಕೆ ಐದು ವರ್ಷಗಳಿ ಗೊಮ್ಮೆ (ಅಥವಾ ಅವಧಿಪೂರ್ವ) ಚುನಾವಣೆಗಳು ನಡೆಯುತ್ತಿದ್ದರೂ ಹೆಚ್ಚಿನ ಬದಲಾವಣೆ ಏನೂ ಕಂಡು ಬರುತ್ತಿಲ್ಲ. ತಮಿಳುನಾಡಿನಲ್ಲಿ ಜಯ ಲಲಿತಾ ಮತ್ತು ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡ ಕುಟುಂಬ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಒರಿಸ್ಸಾದಲ್ಲಿ ನವೀನ್ ಪಾಟ್ನಾಯಕ್, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ದಲ್ಲಿ ಮಾಯಾವತಿ ಮತ್ತು ಮುಲಾಯಂ ಸಿಂಗ್, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಬಾಳ ಠಾಕ್ರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳು ಬೆಳೆದು ನಿಂತಿವೆ. ಕುಟುಂಬ ಅಥವಾ ವ್ಯಕ್ತಿ ಕೇಂದ್ರಿತ ನೆಲೆಯನ್ನು ಮೀರಿ ಏಕೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಶಸ್ವಿ ಯಾಗುತ್ತಿಲ್ಲ? ಇದಕ್ಕೆ ಏನು ಕಾರಣ ಎಂಬ ಬಗ್ಗೆ ಭಾರತದಲ್ಲಿ ಚಿಂತನೆ ನಡೆಯುತ್ತಿಲ್ಲ.
ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಬೆಳವಣಿಗೆಗೆ ಸೈದ್ದಾಂತಿಕ ನೆಲೆ ಯಲ್ಲಿ ಪಕ್ಷಗಳು ಸಂಘಟಿತವಾಗಬೇಕು. ಎಲ್ಲಾ ಪಕ್ಷಗಳು ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಪಕ್ಷಗಳು ರೂಪುಗೊಂಡಿವೆ ಎಂದು ಹೇಳುತ್ತಿದ್ದರೂ ಆಂತರಿಕ ಪ್ರಜಾಪ್ರಭುತ್ವವನ್ನು ತಮ್ಮ ಪಕ್ಷಗಳಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ಪಕ್ಷಗಳಲ್ಲಿ ಕಾಟಾಚಾರಕ್ಕಾಗಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆ ದರೂ ಒಬ್ಬ ವ್ಯಕ್ತಿಯೇ ಅಥವಾ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತದ ರಾಜಕೀಯ ಪಕ್ಷಗಳ ದೌರ್ಬಲ್ಯ. ಇದಕ್ಕೆ ಆ ಕುಟುಂಬದ ಸದಸ್ಯರೇ ಕಾರಣ ಎಂದು ಹೇಳುವಂ ತಿಲ್ಲ. ಇದಕ್ಕೆ ಒಟ್ಟು ಭಾರತೀಯರ ಮನಸ್ಥಿತಿಯೇ ಕಾರಣ ಎನಿಸುತ್ತದೆ.
ಭಾರತೀಯ ರಾಜಕಾರಣಿಗಳಲ್ಲಿ ಅಧಿಕಾರದ ಲಾಲಸೆ ಹಾಗೂ ಗುಂಪು ಗಾರಿಕೆ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಅಧ್ಯಕ್ಷನಾಗಿರದ ಪಕ್ಷದಲ್ಲಿ ಆ ಪಕ್ಷವು ಚೂರು ಚೂರಾ ಗುವುದು ಭಾರತದ ರಾಜಕಾರಣದ ದುರಂತ. ಉದಾಹರಣೆಗೆ ಸೋನಿಯಾ ಗಾಂಧಿ, ರಾಜೀವ್ ಗಾಂಧಿ ನಿಧನದ ನಂತರ ರಾಜಕೀಯಕ್ಕೆ ಕೆಲ ವರ್ಷ ಗಳು ಬಂದಿರಲಿಲ್ಲ. ನೆಹರೂ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಚೂರು ಚೂರಾಗುವ ಭೀತಿ ಉಂಟಾಗಿತ್ತು ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸದಸ್ಯ ನಾಯಕ ಸ್ಥಾನದಲ್ಲಿದ್ದರೆ ಮಾತ್ರ ಕಾಂಗ್ರೆಸ್ ಒಟ್ಟಾಗಿ ಉಳಿಯುತ್ತದೆ. ಇಲ್ಲದೆ ಹೋದರೆ ಪಕ್ಷದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿ ಚೂರು ಚೂರಾ ಗುವ ಪರಿಸ್ಥಿತಿ ಇದೆ. ಇದಕ್ಕೆ ನಮ್ಮ ರಾಜಕಾರಣಿಗಳ ಅಧಿಕಾರದಾಹವೇ ಕಾರಣ.
ಇದೇ ಪರಿಸ್ಥಿತಿ ಇಂದು ಭಾರತೀಯ ಜನತಾ ಪಕ್ಷದಲ್ಲೂ ಇದೆ. ಅಲ್ಲಿ ಯಜಮಾನಿಕೆಯ ಸ್ಥಾನವನ್ನು ಸಂಘ ಪರಿವಾರ ಎಂಬ ಸಂವಿಧಾನಬಾ ಹಿರ ಶಕ್ತಿ ಪಡೆದುಕೊಂಡಿದೆ. ಸಂಘವು ತೇಪೆ ಹಾಕುತ್ತಿರುವ ಕಾರಣ ಬಿಜೆಪಿ ಎಂಬ ಪಕ್ಷವು ಒಂದಾಗಿ ಉಳಿದಿದೆ. ಇಲ್ಲದೆ ಹೋದರೆ ಅದು ಕೂಡ ಚೂರು ಚೂರಾಗಿ ಹೋಗುತ್ತದೆ. ಇನ್ನು ಉಳಿದ ಪ್ರಾದೇಶಿಕ ಪಕ್ಷ ಗಳ ಸ್ಥಿತಿಯೂ ಅಷ್ಟೇ. ಅಲ್ಲಿಯೂ ಒಂದು ಕುಟುಂಬದ ಕೈಯಲ್ಲಿ ಇರುವ ಪಕ್ಷ ಒಂದಾಗಿ ಉಳಿದಿದೆ ಮತ್ತು ಆ ಕುಟುಂಬಕ್ಕೆ ತಗ್ಗಿ ಬಗ್ಗಿ ನಡೆಯುವ ವ್ಯಕ್ತಿಗಳಿಗೆ ಮಾತ್ರ ಮಣೆ. ಇದಕ್ಕೆ ಅಪವಾದವಾಗಿ ಇರುವುದು ಇಂದು ಎಡ ಪಕ್ಷಗಳು ಮಾತ್ರ. ಆದರೆ ಎಡ ಪಕ್ಷಗಳಿಗೆ ಬಂಗಾಳ, ಕೇರಳ ಹೊರತು ಪಡಿಸಿದರೆ ಹೆಚ್ಚಿನ ಅಸ್ತಿತ್ವ ಇಲ್ಲ. ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾ ಪಕ್ಷವು ಅಧಿಕಾರದ ಕಚ್ಚಾಟದಿಂದಾಗಿಯೇ ಚೂರುಚೂರಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ನಮ್ಮ ರಾಜಕಾರಣಿಗ ಳಿಗೆ ಒಂದಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ಇಲ್ಲ.
ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶ ಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆ ಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢ ತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ. ಅದು ಗೊತ್ತಿದ್ದರೆ ಅಧಿಕಾರಕ್ಕಾಗಿ ಕಚ್ಚಾ ಡುವ, ಪಕ್ಷವನ್ನೇ ಚೂರು ಚೂರು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪರಿಹಾರವಾದರೂ ಏನು? ಪಕ್ಷಕ್ಕೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಾಗ ಪಕ್ಷದ ಸಿದ್ಧಾಂತವನ್ನು ವಿವರಿಸಿ ಸಿದ್ಧಾಂತವನ್ನು ಮೀರಿ ದರೆ ಪಕ್ಷದಿಂದ ಹೊರಹಾಕುವ ಸ್ಪಷ್ಟ ಧೋರಣೆಗಳನ್ನು ರಾಜಕೀಯ ಪಕ್ಷ ಗಳು ಹೊಂದಿದರೆ ಇಂಥ ಪರಿಸ್ಥಿತಿಯನ್ನು ಬಹುತೇಕ ತಡೆಯಬಹುದು. ಹೀಗೆ ಮಾಡಬೇಕಾದರೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಿದ್ಧಾಂತ ಇರಬೇಕಾಗುತ್ತದೆ. ಈಗ ಇರುವ ಯಾವ ರಾಜಕೀಯ ಪಕ್ಷಗಳಿಗೂ (ಎಡ ಪಕ್ಷಗಳನ್ನು ಹೊರತು ಪಡಿಸಿ) ಸ್ಪಷ್ಟ ಸಿದ್ಧಾಂತವೇ ಇಲ್ಲದಿರುವುದು ಭಾರ ತದ ಸಮಕಾಲೀನ ರಾಜಕೀಯದ ದುರಂತ. ಅಧಿಕಾರಕ್ಕಾಗಿ ಸಿದ್ಧಾಂತ ಗಳನ್ನು ಬಲಿಕೊಡುವ ರಾಜಕೀಯ ಪಕ್ಷಗಳೇ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದಾದರೂ ಹೇಗೆ?
ಭಾರತದ ರಾಜಕೀಯಕ್ಕೆ ತೃತೀಯ ರಂಗವೊಂದರ ಅವಶ್ಯಕತೆ ಇದೆಯೇ ಎಂದರೆ ಅಂಥ ಒಂದು ಅವಶ್ಯಕತೆ ಇದೆ ಎನಿಸುತ್ತದೆ. ಆದರೆ ಅಂಥ ತೃತೀಯ ರಂಗವೊಂದು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆ ಹೊಂದಿರ ಬೇಕು ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ಒಂದು ದೀರ್ಘಕಾಲೀನ ಪ್ರಣಾ ಳಿಕೆ ಹೊಂದಿರಬೇಕು. ಹಾಗಿರದೆ ಬರಿಯ ಅಧಿಕಾರಕ್ಕಾಗಿ ರೂಪುಗೊ ಳ್ಳುವ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಮತ್ತು ಹೆಚ್ಚು ಸಮಯ ಬಾಳುವುದಿಲ್ಲ. ತೃತೀಯ ರಂಗದಲ್ಲಿ ಒಟ್ಟುಗೂಡುವ ಪಕ್ಷಗಳಿಗೆ ದೀರ್ಘಕಾ ಲೀನ ಸೈದ್ದಾಂತಿಕ ಬದ್ಧತೆ ಇಲ್ಲದೆ ಹೋಗುವುದು, ಅಧಿಕಾರಕ್ಕಾಗಿ ಸಿದ್ಧಾಂ ತವನ್ನೂ ಮೀರಿ ತಮಗೆ ಒಪ್ಪಿಗೆಯಾಗದ ಸಿದ್ಧಾಂತದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವಾದಿ ಪ್ರವೃತ್ತಿ ತೋರುವುದೇ ಸಂಭಾವ್ಯ ತೃತೀಯ ರಂಗದ ಪಕ್ಷಗಳ ದೊಡ್ಡ ದೌರ್ಬಲ್ಯವಾಗಿದೆ. ಅವು ಆ ದೌರ್ಬಲ್ಯ ವನ್ನು ಮೀರಿ ನಿಂತರೆ ಅಂಥ ಒಂದು ತೃತೀಯ ರಂಗ ರೂಪುಗೊಳ್ಳಬ ಹುದು, ತನ್ನ ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ.
ಸದ್ಯದ ಭಾರತೀಯ ರಾಜಕೀಯವನ್ನು ಅವಲೋಕಿಸಿದರೆ ಆರೋಗ್ಯ ಕರ ಸೈದ್ದಾಂತಿಕ ನೆಲೆಗಟ್ಟಿನ ರಾಜಕೀಯ ಸ್ವಾತಂತ್ರ್ಯ ನಂತರದ ಆರು ದಶ ಕಗಳಲ್ಲಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ಒಂದು ಆರೋಗ್ಯಕರ ಸೈದ್ದಾಂತಿಕ ರಾಜಕೀಯ ಜಾಗೃತಿ ಬೆಳೆಯಲು ಇನ್ನು ಎಷ್ಟು ದಶಕಗಳು ಅಥವಾ ಶತಮಾನಗಳು ಬೇಕೋ ಊಹಿಸಲಾಗುವುದಿಲ್ಲ. ಭಾರತೀಯರು ಜಡ ಪ್ರವೃತ್ತಿಯವರಾಗಿರುವುದರಿಂದ ಮತ್ತು ಇಲ್ಲಿ ಯಾವುದೇ ಹೊಸ ಚಿಂತನೆಗಳಿಗೆ ಸ್ಥಾನ ಇಲ್ಲದಿರುವುದರಿಂದ ಯಾವುದೇ ಕ್ಷೇತ್ರದಲ್ಲೂ ಹೊಸ ತನ ತರುವುದು ಬಹಳ ಕಷ್ಟವಾಗಿದೆ. ಹೀಗಾಗಿ ಉಳಿದ ಕ್ಷೇತ್ರಗಳಂತೆ ರಾಜ ಕೀಯ ಕ್ಷೇತ್ರದಲ್ಲೂ ವಂಶವಾಹಿ ಪ್ರಜಾಪ್ರಭುತ್ವದಿಂದ ನಿಜವಾದ ಪ್ರಜಾಪ್ರ ಭುತ್ವದೆಡೆಗೆ ನಮ್ಮ ದೇಶ ಯಾವಾಗ ಪರಿವರ್ತನೆಯಾಗುವುದೋ ಹೇಳ ಲಾಗದು. ಅಲ್ಲಿಯವರೆಗೆ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸತನ ತರಲು ಸಾಧ್ಯವಿದೆ.

ಮುಳ್ಳನ್ನು ನೋಡಿ ಹಲಸಿನ ಹಣ್ಣನ್ನು ಬಿಸಾಡುವುದಿಲ್ಲ

Posted by JAYAKIRANA Kirana on | 0 comments | Leave a comment...




ಸರಿಯಾಗಿ ಕೈಕಾಲುಗಳನ್ನು ಬೆಂಡ್ ಮಾಡುವುದು ಕಲೆಯಾಗಿದೆ. ಅದಕ್ಕೆ ‘ಯೋಗ ಎಂದು ಹೆಸರು ಎಂದು ಇಖರವರು ಬರೆಯುತ್ತಾರೆ. ಆದರೆ ಈವತ್ತು ಹೆಚ್ಚಿನ ಡಾಕ್ಟರುಗಳು ಯೋಗ ಮತ್ತು ಪ್ರಾಣಾಯಾಮ ಮಾಡಿ ಎಂದು ರೋಗಿಗಳಿಗೆ ಸಲಹೆ ನೀಡುತ್ತಾರೆ. ಮತ್ತು ಜಗತ್ತಿನಾದ್ಯಂತ ಯೋಗಾಭ್ಯಾಸವು ಬಹಳ ಜನಪ್ರಿಯವಾಗಿದೆ. ಆದರೆ ಇಖರವರಿಗೆ ಮಾತ್ರ ಅದು ‘ಸರಿಯಿದ್ದ ಕೈಕಾಲನ್ನು ಬೆಂಡ್ ಮಾಡುವುದು ಉದ್ದೇಶ ಸ್ಪಷ್ಟ ಹಿಂದುಗಳನ್ನು ಹೀಯಾಳಿಸುವುದು.

ಎ.ವೆಂಕಟೇಶ ರಾವ್, ಪಡೀಲ್
ಮಾ. ೧೭ರ ಚಾವಡಿ ಅಂಕಣದಲ್ಲಿ ಪ್ರಕಟವಾದ ದೀಪಿಕಾ ಎಸ್.ಎನ್. ರವರು ಬರೆದ ಪತ್ರಕ್ಕೆ ಉತ್ತರ.
ದೀಪಿಕಾರವರೇ, ಇತರರ ಧರ್ಮಗಳನ್ನು ವಿಶ್ಲೇಷಿಸುವುದನ್ನು ಯಾರು ಬೇಕಾದರೂ ಮಾಡಬಹುದು ಎಂದಾಗ ಅದರಲ್ಲಿ ಇಖರವರು ಬರುತ್ತಾರೆ. ಹಾಗಿರುವಾಗ ಇಖರವರು ತಮ್ಮ ಲೇಖನದ ೪ನೇ ಪ್ಯಾರಾಗ್ರಾಪಿನಲ್ಲಿ ಬರೆದ ‘ಶರೀಯತ್ ಕಾನೂನಿನ ಬಗ್ಗೆ ಮಾತನಾಡಲು ಈ ಅನ್ಯರಿಗೆ ಅಧಿಕಾರ ಕೊಟ್ಟ ವರು ಯಾರು? ಎನ್ನುವ ಪ್ರಶ್ನೆಗೆ ನಿಮ್ಮ ಫ್ರೆಂಡ್ ದೀಪಿಕಾರವರು ಎಂದು ಹೇಳಬಹುದೇ? ನಿಮ್ಮ ಅಭಿಪ್ರಾಯದ ಪ್ರಕಾರ ಯಾರು ಬೇಕಾದರೂ ಶರೀಯ ತ್‌ನ್ನು ವಿಶ್ಲೇಷಿಸಬಹುದು. ಭಾರತದಲ್ಲಿ ಇಖರವರಿಗೊಂದು, ಪ್ರಭಾಕರ ಭಟ್ಟರಿ ಗೊಂದು ಕಾನೂನು ಇದೆಯೇ? ಅಥವಾ ಆರ್‌ಎಸ್‌ಎಸ್‌ನವರಿಗೆ ಬೇರೆಯೇ ಕಾನೂನು ಇದೆಯೇ? ಹಾಗಿರುವಾಗ ಪ್ರಭಾಕರ ಭಟ್ಟರು ಶರೀಯತ್ ಕೋರ್ಟಿನ ಫತ್ವಾವನ್ನು ಉಲ್ಲೇಖಿಸಿ ಇಂತಹ ಶರೀಯತ್ತು ನಿಮಗೆ ಬೇಕೇ? ಎಂದು ಮುಸ್ಲಿ ಮರನ್ನು ಕೇಳಿದಾಗ ಚೇಳು ಕಚ್ಚಿದವರಂತೆ ವರ್ತಿಸಿದ್ದು ಯಾಕೆ? ಪ್ರಭಾಕರ ಭಟ್ಟರು ಕೊಂಕುನುಡಿಯಲ್ಲಿ ಮಾತನಾಡಿದಾಗ ಒಬ್ಬ ಬಲಹೀನ ವ್ಯಕ್ತಿಯಂತೆ ನೊಂದುಕೊಳ್ಳುವುದಾದರೂ ಯಾಕೆ? ಎಂದು ನೀವು ನನ್ನನ್ನು ಕೇಳುವ ಬದ ಲಾಗಿ ಇಖರವರಿಗೆ ಕೇಳಬೇಕಾಗಿತ್ತು. ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ ಯಲ್ಲ ಬದಲಾಗಿ ಮುಸ್ಲಿಮರಲ್ಲಿ ಒಂದು ಸಣ್ಣ ಗುಂಪಿನವರಿಗೆ (ಇಖರನ್ನೂ ಸೇರಿಸಿ) ಆರ್‌ಎಸ್‌ಎಸ್‌ನವರು ವಿರೋಧಿಗಳು. ಹಾಗಾಗಿಯೇ ಅವರು ಆರ್‌ಎ ಸ್‌ಎಸ್‌ನವರನ್ನು ಚೆಡ್ಡಿಗಳು ಎಂದೂ ಕರೆಯುತ್ತಾರೆ. ಯಾಕೆಂದರೆ ಅವರ ಸಮಾಜದ್ರೋಹಿ ಚಟುವಟಿಕೆಗಳಿಗೆ ಆರ್‌ಎಸ್‌ಎಸ್ ಒಂದು ಅಡಚಣೆಯಾಗಿದೆ ಹಾಗಾಗಿ.
ನಾನು ಬರೆದ ಫೆ. ೨೬ರ ಪತ್ರದಲ್ಲಿ ‘ಬ್ರಾಹ್ಮಣರಿಂದ... ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಬರೆದ ನಮ್ಮ ಪತ್ರದ ಪ್ಯಾರಾಗ್ರಾಪ್ ಮತ್ತು ಲೈನುಗಳ ಸಂಖ್ಯೆಯನ್ನು ತಿಳಿಸಿ. ಯಾಕೆಂದರೆ ನಾನು ಈಗಾಗಲೇ ಅದನ್ನು ನಿರಾಕರಿಸಿದ್ದೇನೆ. ಹಾಗಾಗಿ ನೀವಾಗಿಯೇ ಆ ವಿವರಣೆಗಳನ್ನು ಕೊಡಬೇಕಾ ಗಿತ್ತು. ಹಾಗೆಯೇ ನಾನು ಬರೆದಿದ್ದೇನೆ ಎಂದು ನೀವು ಬರೆದ ‘ಮುಗ್ಧ ಪ್ರಾಣಿ ಗಳ ಕುತ್ತಿಗೆಯ ಮೇಲೆ... ಪ್ರಭಾಕರ ಭಟ್ಟರು ಹೇಳಿದ್ದು ಅದನ್ನೇ ಎಂದು ಬರೆ ದಿದ್ದೇನೆ ಎಂದಿದ್ದೀರಿ. ನನ್ನ ಪತ್ರವನ್ನು ಇನ್ನೊಮ್ಮೆ ಗಮನವಿಟ್ಟು ಓದಿ. ನನ್ನ ಸರಳವಾದ ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳಲು ಯಾಕೆ ಅಷ್ಟು ಚಡ ಪಡಿಸುತ್ತೀರಿ ಎಂದು ಗೊತ್ತಾಗುವುದಿಲ್ಲ. ಈ ವಿಷಯದಲ್ಲಿ ನೀವು ನನ್ನ ಮೇಲೆ ಮಾಡಿದ ಟಿಪ್ಪಣಿಗಳನ್ನು ನಾಳೆ ಬೆಳಗ್ಗಿನ ಚಹಾಕ್ಕೆ ತಿಂಡಿಯಾಗಿ ಉಪಯೋಗಿಸಿ ಸುಮ್ಮನೆ ನನ್ನ ತಲೆ ತಿನ್ನಬೇಡಿ. ಸರಿಯಾದ ಕೈಕಾಲುಗಳನ್ನು ಬೆಂಡ್ ಮಾಡು ವುದು ಕಲೆಯಾಗಿದೆ. ಅದಕ್ಕೆ ‘ಯೋಗ ಎಂದು ಹೆಸರು ಎಂದು ಇಖರವರು ಬರೆಯುತ್ತಾರೆ. ಆದರೆ ಈವತ್ತು ಹೆಚ್ಚಿನ ಡಾಕ್ಟರುಗಳು ಯೋಗ ಮತ್ತು ಪ್ರಾಣಾ ಯಾಮ ಮಾಡಿ ಎಂದು ರೋಗಿಗಳಿಗೆ ಸಲಹೆ ನೀಡುತ್ತಾರೆ. ಮತ್ತು ಜಗತ್ತಿನಾ ದ್ಯಂತ ಯೋಗಾಭ್ಯಾಸವು ಬಹಳ ಜನಪ್ರಿಯವಾಗಿದೆ. ಆದರೆ ಇಖರವರಿಗೆ ಮಾತ್ರ ಅದು ‘ಸರಿಯಿದ್ದ ಕೈಕಾಲನ್ನು ಬೆಂಡ್ ಮಾಡುವುದು. ಉದ್ದೇಶ ಸ್ಪಷ್ಟ ಹಿಂದುಗಳನ್ನು ಹೀಯಾಳಿಸುವುದು. ಅದೇ ರೀತಿ ಸಾಯಿಬಾಬಾರವರ ಬಗ್ಗೆ ಬರೆಯುತ್ತಾ, ಸಾಯಿಬಾಬಾ ದೇವರಲ್ಲ ಎಲ್ಲ ಡೋಂಗಿ ಎನ್ನುವಂತೆ ಫತ್ವಾ ಕೊಡುತ್ತಾರೆ. ಆದರೆ ದೇವರ ಪರಿಕಲ್ಪನೆಯಲ್ಲಿ ಹಿಂದುಗಳಿಗೆ, ಮುಸ್ಲಿಮರಿಗೆ ತುಂಬಾ ವ್ಯತ್ಯಾಸವಿದೆ ಅನ್ನುವುದು ಅವರ ಮನಸ್ಸಿಗೆ ಪಥ್ಯವಾಗುವುದಿಲ್ಲ. ಅವ ರೆಲ್ಲಾ ವಿವಾದಿತ ಮನುಷ್ಯರೆಂದು ನಿಮಗೆ ಹೇಳಿದವರು ಯಾರು? ಸಾಯಿಬಾ ಬಾರನ್ನು ಭೇಟಿ ಮಾಡಲು ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವ ರನ್ನೂ ಸೇರಿಸಿ ಅನೇಕ ಗಣ್ಯರು, ಚಿಂತಕರು ಹೋಗುತ್ತಾರೆ. ಅವರನ್ನು ಗೌರ ವಿಸುತ್ತಾರೆ. ಅವರು ಜಗತ್ತಿನಾದ್ಯಂತ ಮಾಡಿದ ಸಮಾಜ ಸೇವೆಯನ್ನು ಕೊಂಡಾ ಡುತ್ತಾರೆ. ಅದರಲ್ಲು ಆಂಧ್ರ ಪ್ರದೇಶದ ಕೆಲವು ಜಿಲ್ಲೆಗಳಿಗೆ ಹಾಗೂ ಮದ್ರಾಸಿಗೆ ನೀರಿನ ದಾಹವನ್ನು ತಣಿಸಿದ ಮಹಾನ್ ಪುರುಷ. ಅವರು ನಡೆಸುತ್ತಿದ್ದ ಧರ್ಮಾ ಸ್ಪತ್ರೆಗಳು, ಮಹಾವಿದ್ಯಾಲಯಗಳು, ಅವುಗಳ ಗುಣಮಟ್ಟ ನೋಡುವಾಗ ಒಬ್ಬ ವ್ಯಕ್ತಿಗೆ ಇಷ್ಟೆಲ್ಲಾ ಮಾಡಲು ಸಾಧ್ಯವೇ? ಎಂದು ಆಶ್ಚರ್ಯವಾಗುತ್ತದೆ. ಅವರು ಜಗತ್ತಿಗೆ ವಿದ್ಯಾವಂತರನ್ನು ತಮ್ಮ ವಿದ್ಯಾ ಸಂಸ್ಥೆಗಳ ಮೂಲಕ ಕೊಟ್ಟಿದ್ದಾರೆ. ಜೆಹಾ ದಿಗಳನ್ನಲ್ಲ. ಲಕ್ಷಾಂತರ ರೋಗಿಗಳ ಕಾಯಿಲೆಗಳನ್ನು ಅವರ ಧರ್ಮಾಸ್ಪತ್ರೆಗಳ ಮೂಲಕ ಗುಣಪಡಿಸಿ ಅವರಿಗೆ ಮರುಜೀವ ಕೊಟ್ಟಿದ್ದಾರೆ. ಕದ್ದ ದನಗಳಂತೆ ಕಸಾಯಿಖಾನೆಗಲ್ಲ. ಅಂತಹಾ ಮಹಾನ್ ಪುರುಷರನ್ನು ಬೆಳಿಗ್ಗೆ ಎದ್ದು ಚಹಾದ ಬದಲು ರಕ್ತ ಕುಡಿಯುವ ಒಬ್ಬ ಜೆಹಾದಿ ಲಾದೆನ್‌ಗೆ ಹೋಲಿಸುವುದೇ?
ಸಾಯಿಬಾಬಾರಲ್ಲಿ ಕೆಲವು ದೋಷಗಳಿರಬಹುದು. ಆದರೆ ಮುಳ್ಳನ್ನು ನೋಡಿ ಯಾರೂ ಹಲಸಿನ ಹಣ್ಣನ್ನು ಬಿಸಾಡುವುದಿಲ್ಲ. ಮುಳ್ಳನ್ನು ಬಿಸಾಡಿ ಹಣ್ಣನ್ನು ಸ್ವಾದಿಸುತ್ತಾರೆ. ಆದರೆ ಇಖರವರು ನೋಡಿದ್ದು ಅವರ ಮುಂಡಾಸು ಮಾತ್ರ. ಇಖರವರ ಎಲ್ಲಾ ಬರಹಗಳು ಹಾಳು ಅಂತ ನಾನು ಹೇಳುವುದಿಲ್ಲ. ಲಾದೆನ್ ಬಗ್ಗೆ ಅವರು ಬರೆದ ಬರಹ (೧೨.೫.೧೧) ಅರ್ಥಪೂರ್ಣವಾಗಿತ್ತು. ಅದೇ ರೀತಿ ಅವರು ಬರೆದ ಒಬ್ಬ ಮಿತ್ರನೊಡನೆ ಮಂಗಳೂರಿನಿಂದ ಉಳ್ಳಾಲಕ್ಕೆ ಬೈಕಿ ನಲ್ಲಿ ಪ್ರಯಾಣಿಸಿದ ಒಂದು ಬರಹ ತುಂಬಾ ಚೆನ್ನಾಗಿತ್ತು. ಹೀಗೆ ಹಲವು ಬರಹಗಳಿವೆ. ನಾನು ಮೊಸರಲ್ಲಿ ಕಲ್ಲು ಹೆಕ್ಕುತ್ತಿದ್ದೇನೆ ಅಷ್ಟೆ. ಅಂಕಣಕಾರರು ಏನು ಬೇಕಾದರೂ ಬರೆಯಬಹುದು ಎನ್ನುವ ನಿಮ್ಮ ವಾದಕ್ಕೆ ನನ್ನ ಸಮ್ಮತಿ ಇಲ್ಲ. ಅಂಕಣ ಬರಹಗಳು ವಿಷಯಾಧಾರಿತವಾಗಿರಬೇಕೇ ಹೊರತು ಒಂದು ನಿರ್ದಿಷ್ಟ ವ್ಯಕ್ತಿ. ಸಮೂಹ ಗುಂಪುಗಳನ್ನು ಹೀಯಾಳಿಸುವ ಮಾಧ್ಯಮವಾಗಿರಬಾರದು. ಅದು ಪೂರ್ವಾಗ್ರಹಪೀಡಿತವಾಗಿರಬಾರದು. ನಾನೂ ಕೊಂಕು ನುಡಿ, ವ್ಯಂಗ್ಯ ಎಲ್ಲಾ ಬರೆಯುತ್ತೇನೆ ಅಂದಿದ್ದೀರಾ. ನಿಜ, ಆದರೆ ನನ್ನದು ಕೇವಲ ಪ್ರತಿಕ್ರಿಯೆ ಹೊರತು ಅಪ್ರಚೋದಿತವಲ್ಲ. ಈಗಲಾದರೂ ತಲೆಗೆ ಹೊಕ್ಕಿತಾ? ಅಲ್ಲ ಬಾಲ ಹೊರಗುಂಟಾ? ನನ್ನ ಕಳೆದ ಮಾ. ೮ರ ಪತ್ರದ ಕೊನೆಯ ಐದು ಸಾಲು ಓದಿ.

ಗೆಳತಿಯ ಬಾಯ್‌ಫ್ರೆಂಡ್ ಹತ್ತಿರ ಬಾರದಂತೆ ನೋಡಿಕೊಳ್ಳಿ

Posted by JAYAKIRANA Kirana on | 0 comments | Leave a comment...


ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ಕಾಲೇಜು ವಿದ್ಯಾರ್ಥಿನಿ, ಗರ್ಲ್ಸ್ ಹಾಸ್ಟೆಲ್‌ನಲ್ಲಿ ಉಳಿದಿದ್ದೇನೆ. ನನ್ನ ರೂಂ ಮೇಟ್‌ಗೆ ಒಬ್ಬ ಬಾಯ್‌ಫ್ರೆಂಡ್ ಇದ್ದಾನೆ. ಅವನು ಬೇರೆ ಊರಿನವನು. ಅವರಿಬ್ಬರೂ ಬೇರೆ ಬೇರೆ ಜಾತಿಯ ವರಾಗಿರುವ ಕಾರಣ ಮದುವೆ ಮಾಡಿಕೊಳ್ಳುವುದಿಲ್ಲವಂತೆ. ಆದರೆ ಆತನ ಜತೆ ಮದುವೆಯಾಗುವವರೆಗೆ ಜತೆಯಾಗಿ ಇರುತ್ತೇವೆ ಎಂದು ನನ್ನ ಗೆಳತಿ ಹೇಳುತ್ತಾಳೆ. ಅವರು ಜತೆಯಲ್ಲಿ ಸುತ್ತಾಡುತ್ತಾರೆ. ಸಂಡೇ ಬೀಚ್, ಶಾಪಿಂಗ್ ಹೋಗುವಾಗ ಒಮ್ಮೊಮ್ಮೆ ನಾನು ಕೂಡಾ ಅವರ ಜತೆ ಹೋಗುತ್ತೇನೆ. ನನ್ನ ಗೆಳತಿ ಅವನ ಜತೆ ಈಗಾಗಲೇ ಸೆಕ್ಸ್ ನಡೆಸಿದ್ದಾಳೆ.
ನಾವು ಈ ಬಗ್ಗೆ ಚರ್ಚಿಸುವುದರಿಂದ ಇದನ್ನು ಆಕೆಯೇ ನನ್ನ ಬಳಿ ಹೇಳಿದ್ದಾಳೆ. ಎರಡು ಬಾರಿ ರಾತ್ರಿ ಆತನ ಜತೆ ತಿರುಗಾಡಲು ಹೋಗಿದ್ದು, ನಾನು ಕೇಳಿದಾಗ ಎಲ್ಲವನ್ನೂ ಹೇಳಿದ್ದಾಳೆ. ನಾನು ನೀವಿಬ್ಬರೂ ಫ್ರೆಂಡ್ಸ್ ಆಗಿರಿ, ಆದರೆ ಈ ರೀತಿ ವರ್ತಿಸುವುದು ಸರಿ ಯಲ್ಲ ಎಂದರೂ ಆಕೆ ಕೇಳುತ್ತಿಲ್ಲ. ನನಗೆ ತಿಳಿದಂತೆ ಅವಳ ಬಾಯ್ ಫ್ರೆಂಡ್ ಒಳ್ಳೆಯವನಲ್ಲ. ಅವನಿಗೆ ಇನ್ನೂ ಕೆಲವು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ. ನನ್ನ ಸಮಸ್ಯೆ ಏನೆಂದರೆ ಅವನು ನನ್ನ ಜತೆಯೂ ಕ್ಲೋಸ್ ಆಗಿರುವುದರಿಂದ ಮಾತಾಡುತ್ತಾ ನನ್ನ ಜೊತೆಯೂ ಸಲುಗೆ ಬೆಳೆಸುತ್ತಿದ್ದಾನೆ. ಆತ ನನ್ನ ಮೊಬೈಲ್‌ಗೂ ಪದೇ ಪದೇ ಮೆಸೇಜ್, ಕಾಲ್ ಮಾಡುತ್ತಾನೆ. ನಾವಿಬ್ಬರೂ ಒಮ್ಮೆ ಬೆಂಗಳೂರಿಗೆ ತಿರುಗಾಡಲು ಹೋಗೋಣ ಎನ್ನುತ್ತಾನೆ. ನನಗೆ ಆತನ ಸಲುಗೆ ಇಷ್ಟವಾಗುವುದಿಲ್ಲ. ಸಾರ್, ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಗೆಳತಿಗೆ ಸಹಾಯ ಮಾಡಲು ಹೋಗಿ ಸಮಸ್ಯೆಯಲ್ಲಿ ಬೀಳದಿರಿ. ಈಗಲೇ ಆತನ ಅಧಿಕಪ್ರಸಂಗ ನಿಲ್ಲಿಸಿದರೆ ಒಳಿತು. ಇಲ್ಲವೇ ಅದು ಮುಂದುವರಿದು ಮತ್ತೆ ನಿಮ್ಮ ಜೀವನವೇ ಸಮಸ್ಯೆಗೆ ಈಡಾಗಬಹುದು. ಕಾಲೇಜು ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಹರೆಯದ ಹುಡುಗಿಯರೇ ಹೀಗೆ. ಎಷ್ಟು ಬಾರಿ ಎಚ್ಚರಿಸಿದರೂ ಎಡವಿ ಬೀಳುತ್ತಾರೆ. ಆತ ಗೆಳತಿಯ ಬಾಯ್ ಫ್ರೆಂಡ್ ಎಂಬ ಸಲುಗೆ ಕೊಟ್ಟಿದ್ದು ಅತಿಯಾಯಿತು. ಇಲ್ಲಿ ಅವ ನಷ್ಟೇ ತಪ್ಪು ನಿಮ್ಮದೂ ಇದೆ. ನೀವು ಅವರ ಜತೆ ಸುತ್ತಾಡಿದ್ದು, ಅವನಿಗೆ ಸಲುಗೆ ಬೆಳೆಸಲು ಕಾರಣವೂ ಆಗಿದೆ. ಈಗ ಆತ ಅದನ್ನೇ ದುರುಪಯೋಗ ಪಡಿಸಲು ಯತ್ನಿಸುತ್ತಿದ್ದಾನೆ. ಆತನ ಉದ್ದೇಶ ಏನೇ ಆಗಿರಬಹುದು. ಆದರೆ ನೀವು ಮಾತ್ರ ನಿಮ್ಮ ಎಚ್ಚರದಲ್ಲಿ ರಲೇ ಬೇಕು. ನೀವು ಆತನ ಮೆಸೇಜ್ ನೋಡಿ ಮೌನವಾದರೆ ಆತ ಮುಂದುವರಿಯುವ ಸಾಧ್ಯತೆಯಿದೆ. ಆತನಿಗೆ ನೇರವಾಗಿ ಹೇಳಿ. ಆತನ ಬಗ್ಗೆ ನಿಮ್ಮ ಗೆಳತಿಗೆ ಎಲ್ಲವನ್ನೂ ವಿವರಿಸಿ. ಆಕೆ ನಿಮ್ಮ ಕ್ಲೋಸ್ ಫ್ರೆಂಡ್ ನಿಜವೇ ಆಗಿದ್ದಲ್ಲಿ ನಿಮ್ಮ ಮಾತನ್ನು ಕೇಳುತ್ತಾಳ. ಇಲ್ಲವೇ ಆಕೆಯನ್ನು ಆಕೆಯ ಪಾಡಿಗೆ ಬಿಡಿ. ನೀವು ಎಚ್ಚರದಿಂದ ಇರಿ.
ಸಾಧ್ಯವಾದಷ್ಟು ಬೇಗ ನಿಮ್ಮ ರೂಂ ಬದಲಿಸಿದರೆ ಸಮಸ್ಯೆ ಯಿಂದ ಮುಕ್ತಿ ಪಡೆದಂತೆ ಎನ್ನುವುದನ್ನು ತಿಳಿಯಿರಿ. ಆಕೆ ಏನು ಬೇಕಾದರೂ ಮಾಡಲಿ, ಎಲ್ಲಿ ಬೇಕಾದರೂ ಹೋಗಲಿ. ನಾವು ನಮ್ಮ ಎಚ್ಚರಿಕೆಯಿಂದ ಇದ್ದರೆ ಏನೂ ಆಗದು. ನೀವು ಹಾಸ್ಟೆಲ್ ನಲ್ಲಿ ಉಳಿದು ಕಲಿಯುತ್ತಿರುವುದು ನಿಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನಾದರೂ ಸಾಧಿಸಲಿಕ್ಕೆ ತಾನೇ? ಹಾಗಾದಲ್ಲಿ ನೀವು ಇಂತಹ ವಿಚಾರಕ್ಕೆ ಸುಮ್ಮನೆ ಮೂಗು ತೂರಿಸುವುದು, ಸಮಸ್ಯೆ ಮೈಗೆಳೆದುಕೊಳ್ಳುವುದು ಬೇಡ.

22-03-2012

Posted by JAYAKIRANA Kirana on | 0 comments | Leave a comment...


ಮೇಷ : ವ್ಯಾಪಾರದಲ್ಲಿ ಅಲ್ಪ ಲಾಭ ಇರುತ್ತದೆ.
ವೃಷಭ : ಅನಿರೀಕ್ಷಿತ ಪ್ರಯಾಣದಿಂದ ಬೇಸರ.
ಮಿಥುನ : ಮಕ್ಕಳಿಂದ ಹೆಚ್ಚಿನ ಸಹಕಾರ ಸಿಗುವುದಿಲ್ಲ.
ಕರ್ಕಾಟಕ : ಶುಭ ಕಾರ್ಯಗಳಿಗೆ ವಿಘ್ನಗಳು ಬರುತ್ತದೆ.
ಸಿಂಹ : ಮಕ್ಕಳಿಂದ ಹೆಚ್ಚಿನ ಹಣ ಖರ್ಚಾಗಲಿದೆ.
ಕನ್ಯಾ : ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ.
ತುಲಾ : ಉದ್ಯೋಗದಲ್ಲಿ ಸಣ್ಣ ಸಣ್ಣ ಸಮಸ್ಯೆಗಳು ಎದುರಾಗುತ್ತದೆ.
ವೃಶ್ಚಿಕ : ವೃತ್ತಿಯಲ್ಲಿ ಆಗಾಗ ವಂಚನೆ ತೋರಿ ಬರುತ್ತದೆ.
ಧನು : ಕುಟುಂಬದಲ್ಲಿ ಶಾಂತಿ ಇರುತ್ತದೆ.
ಮಕರ : ಹಣಕಾಸಿನ ಅಡಚಣೆ ತೋರಿ ಬರುತ್ತದೆ.
ಕುಂಭ : ವಿದ್ಯಾರ್ಥಿಗಳಿಗೆ ಶ್ರಮದಿಂದ ಫಲ ಇದೆ.
ಮೀನ : ಬಂಧುಗಳಿಂದ ತೊಂದರೆ ಇರುತ್ತದೆ.

22-03-2012

Posted by JAYAKIRANA Kirana on | 0 comments | Leave a comment...


ಕುತ್ತಾರಿನ ಪೆಟ್ರೋಲ್ ಪಂಪ್‌ವೊಂದಕ್ಕೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ೯೬೮೬೩೬೧೫೩೫
ಕುದ್ರೋಳಿ: ಫೋಟೋಶಾಪ್, ಕೋರಲ್‌ಡ್ರಾ ತಿಳಿದವರು ಬೇಕು ೯೨೪೨೮೮೭೪೩.
ವರ್ಕಾಡಿ: ಸಸ್ಯಾಹಾರಿ ಹೊಟೇಲಿಗೆ ವೇಟರ್ ಬೇಕು ೦೯೦೨೦೧೪೪೪೬೮.
ಮಂಗಳೂರು: ಲೇಡೀಸ್ ಸ್ಟಾಫ್ ಬೇಕು ೯೪೪೯೪೪೧೨೩೪.
ಮಂಗಳೂರು: ಆಫೀಸ್ ಕೆಲಸಕ್ಕೆ ಎಸೆಸೆಲ್ಸಿ ಪಾಸ್, ಫೈಲಾದವರು ಬೇಕು ೯೦೧೯೭೦೯೯೯೩.
ಮಲ್ಪೆ: ಹೊಟೇಲ್‌ಗೆ ಕುಕ್ ಬೇಕು ೭೮೯೯೧೨೦೯೯೮.
ಮಂಗಳೂರು: ಕಲರ್ ಲ್ಯಾಬ್‌ಗೆ ಗ್ರಾಫಿಕ್ ಡಿಸೈನರ್ ಮತ್ತು ಮ್ಯಾನೇಜರ್ ೨೪೪೦೮೦೩.
ಮಂಗಳೂರು: ಜೂಸ್‌ಮೇಕರ್, ಸಪ್ಲಾಯರ್ ಬೇಕು ೮೭೨೨೨೭೮೩೬೩.
ಮಂಗಳೂರು: ಟ್ಯುಟೋರಿಯಲ್ ಕೆಲಸಕ್ಕೆ ಲೇಡಿ ಸ್ಟಾಫ್ ಬೇಕು ೦೮೨೫೮-೨೬೧೦೬೦.
ಮಂಗಳೂರು: ಹೊಟೇಲ್‌ಗೆ ಕ್ಲೀನರ್, ಅಡುಗೆಯವರು, ತಿಂಡಿಯವರು ಬೇಕು ೮೧೦೫೬೭೦೫೩೮.
ಮಂಗಳೂರು: ಅತ್ತಾವರದ ಅಪಾರ್ಟ್ ಮೆಂಟ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೯೮೮೦೮೦೯೮೦೩.
ಹಂಪನಕಟ್ಟೆ: ಸೇಲ್ಸ್‌ಗರ್ಲ್ಸ್ ಬೇಕು ೯೯೧೬೮೨೩೯೯೪.
ಮೂಡಬಿದ್ರೆ: ಡಿಟಿಪಿ ತಿಳಿದಿರುವ ಯುವತಿ ಯರು ಬೇಕು ೯೮೪೪೪೯೮೦೯೮.
ಮೂಡಬಿದ್ರೆ: ಎಲೆಕ್ಟ್ರಿಕಲ್ ಪೈಪ್ ಕಟ್ಟಿಂಗ್‌ಗೆ ಜನ ಬೇಕು ೯೭೩೯೩೨೪೨೫೫.
ಸುರತ್ಕಲ್: ಬಾರ್‌ಗೆ ಜನ ಬೇಕು ೯೮೪೫೮೪೭೯೯೧.
ಕದ್ರಿ: ೪೦೭ & ಪಿಕಪ್‌ಗೆ ಡ್ರೈವರ್ ಬೇಕು ೯೪೪೮೪೮೪೭೯೯.
ಕಟೀಲು: ಮನೆ ಕೆಲಸಕ್ಕೆ ಹೆಂಗಸರು ಬೇಕು ೮೭೪೮೦೩೪೬೦೯.
ತೊಕ್ಕೊಟ್ಟು: ಬಾರ್&ರೆಸ್ಟೋರೆಂಟ್‌ಗೆ ವೇಟರ್ ಬೇಕು ೯೭೪೨೨೮೫೪೮೫.
ಮಂಗಳೂರು: ಕೊಟ್ಟಾರದ ಪೆಟ್ರೋಲ್ ಬಂಕ್‌ಗೆ ಯುವತಿಯರು ಬೇಕು ೯೪೮೦೪೩೮೭೩೩.
ಪಾಲಿಶ್ ಕೆಲಸಕ್ಕೆ ಜನ ಬೇಕಾಗಿದ್ದಾರೆ. ದೂ: ೯೪೪೮೦೫೨೨೯೧
ಕಂಕನಾಡಿ: ಡ್ರೈವರ್ ಬೇಕು ೯೧೪೧೫೮೨೦೧೯.
ಫಳ್ನೀರ್: ಸಂಸ್ಥೆಗೆ ಯುವತಿ ಬೇಕು ೯೧೪೧೮೫೦೬೩೨.
ಬಿಜೈ: ಲಾಡ್ಜ್‌ಗೆ ರೂಂ ಬಾಯ್ ಬೇಕು ೯೯೮೦೯೮೦೭೩೧.
ಮಂಗಳೂರು: ಆಫೀಸ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೮೯೦೪೨೧೧೯೯೮.
ಮೂಡಬಿದ್ರೆ: ಟೈಲರ್ ಅಂಗಡಿಗೆ ಟೈಲರ್ ಬೇಕು ೯೭೪೧೧೩೧೩೭೧.
ಮಂಗಳೂರು: ಮಿಲಾಗ್ರಿಸ್‌ನ ಸ್ಟುಡಿ ಯೋಗೆ ಯುವತಿ ಬೇಕು ೯೮೪೫೨೦೩೩೪೮.
ಸುರತ್ಕಲ್: ಟಯರ್ ಪಂಕ್ಚರ್ ಅಂಗಡಿಗೆ ಜನ ಬೇಕು ೯೮೪೫೧೨೧೬೩೧.
ಮಂಗಳೂರು: ಟೈಲರಿಂಗ್ ಶಾಪ್‌ಗೆ ಸ್ಟಿಚ್ಚಿಂಗ್ ಗೊತ್ತಿರುವ ಲೇಡಿ ಟೈಲರ್ ಬೇಕು ೯೫೯೧೦೪೫೮೮೧.

22-03-2012

Posted by JAYAKIRANA Kirana on | 0 comments | Leave a comment...


ಸಂತೋಷವಾಗಿಡಿ
ಪುರುಷರಿಗಿರುವ ಆಯ್ಕೆಗಳು:
ಮದುವೆಯಾಗಿ, ಆ ಮೂಲಕ ಒಬ್ಬ ಮಹಿಳೆಯನ್ನು ಸಂತೋಷವಾಗಿಡಿ ಅಥವಾ ಹಾಗೆ ಉಳಿದುಕೊಳ್ಳುವ ಮೂಲಕ ಹಲವು ಮಹಿಳೆಯರನ್ನು ಸಂತೋಷವಾಗಿಡಿ..!

ದ್ವೀಪ
ಟೀಚರ್: ‘ದ್ವೀಪ ಅಂದರೆ ಏನು? ವಿದ್ಯಾರ್ಥಿ: ಒಂದು ಭಾಗವನ್ನು ಬಿಟ್ಟು ಭೂಮಿಯ ಎಲ್ಲಾ ದಿಕ್ಕಿನಲ್ಲೂ ನೀರು ಸುತ್ತುವರೆದಿರುವುದನ್ನು ದ್ವೀಪ ಎಂದು ಕರೆಯಬಹುದು ಟೀಚರ್: ಒಂದು ಭಾಗ ಯಾವುದು? ವಿದ್ಯಾರ್ಥಿ: ಮೇಲಿನ ಭಾಗ!!!

ಕೈಯಲ್ಲಿತ್ತು!
ಟೀಚರ್: ಜಾರ್ಜ್ ವಾಷಿಂಗ್ಟನ್ ಕೇವಲ ತನ್ನ ತಂದೆಯ ಹಣ್ಣಿನ ಮರವನ್ನು ಕಡಿಯಲಿಲ್ಲ, ತನ್ನ ತಪ್ಪನ್ನು ಒಪ್ಪಿಕೊಂಡ ಕೂಡ. ಈಗ ಹೇಳಿ ಜಾರ್ಜ್ ಅನ್ನು ಆತನ ತಂದೆ ಯಾಕೆ ಶಿಕ್ಷಿಸಲಿಲ್ಲ? ಗುಂಡ: ಯಾಕೆಂದರೆ ಕೊಡಲಿ ಇನ್ನೂ ಜಾರ್ಜ್‌ನ ಕೈಯಲ್ಲಿ ಇತ್ತು!!!

ಯಶಸ್ವಿ
ನೀವು ಜೀವನದಲ್ಲಿ ಯಶಸ್ವಿಯಾಗಲು ಎರಡು ಅಂಶಗಳು ಅತೀ ಮುಖ್ಯ. ೧) ನಿಮ್ಮಲ್ಲಿ ಏನೂ ಇಲ್ಲದಾಗ ನಿಮ್ಮ ಜೀವನವನ್ನು ನಿಭಾಯಿಸುವ ಶೈಲಿ, ಮತ್ತು ೨) ನಿಮ್ಮಲ್ಲಿ ಎಲ್ಲವೂ ಇದ್ದಾಗ ನೀವು ವರ್ತಿಸುವ ರೀತಿ.

ನಿಯಮ
ಪರೀಕ್ಷೆ ಬಗ್ಗೆ ಇರುವ ನ್ಯೂಟನ್‌ನ ನಾಲ್ಕನೇ ನಿಯಮ.
ಆಂತರಿಕ ಹಾಗೂ ಬಾಹ್ಯ ಪರೀಕ್ಷೆಗಳು ಒಂದು ಪುಸ್ತಕದ ಮೇಲೆ ಸುಳಿದಾಡುವವರೆಗೂ ಅದರ ಮೇಲಿರುವ ಧೂಳಿನ ಕಣಗಳು ಹಾಗೆಯೇ ಇರುತ್ತದೆ.

ಸಾಧಿಸಿ
ಏನೂ ಸಾಧಿಸಿಲ್ಲ ಎಂದು ವ್ಯಥೆ ಪಡಬೇಡಿ. ಜೀವನದಲ್ಲಿ ಇನ್ನು ಸಾಧಿಸುವ ಬಗ್ಗೆ ಯೋಚಿಸಿ. ಆಗ ಬದುಕು ಸುಂದರವಾಗುತ್ತದೆ

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)