ತೆಲಿಕೆದ ಬೊಳ್ಳಿಸಿನಿಮಾಕ್ಕೆ ಮಾ.೨೮ರಂದು ಮುಹೂರ್ತ

Posted by JAYAKIRANA Kirana on Wednesday, 21 March 2012 | 0 comments | Leave a comment...


ಬಾಳ
ಕಾಪಿಕಾಡ್ ಸಿನಿಮಾ ಮಾಡುತ್ತಾ ರಂತೆ ಎಂಬ ಗುಸುಗುಸು ಕೇಳಿ ಬಂದು ಕೆಲವು ತಿಂಗಳಾಗಿವೆ. ಇದೀಗ ಅದು ಸುದ್ದಿಯ ಸಾಲಿಗೆ ಸೇರುತ್ತಿದೆ. ಕಾಪಿಕಾಡ್ ಅವರ ತುಳು ಸಿನಿಮಾ ‘ತೆಲಿಕೆದ ಬೊಳ್ಳಿ’ಯ ಚಿತ್ರೀಕರಣಕ್ಕೆ ಮಾ. ೨೮ರಂದು ಸಿದ್ಧಕಟ್ಟೆಯಲ್ಲಿ ಮುಹೂರ್ತ ನಡೆಯಲಿದೆ. ತುಳು ಸಿನಿಮಾಪ್ರಿಯರಿಗೆ, ನಾಟಕಾಭಿ ಮಾನಿಗಳಿಗೆ ಇದೊಂದು ಸಂತಸದ ಸಂಗತಿ.
ನಿಮ್ಮ ಸಂತೋಷ ಇಷ್ಟಕ್ಕೇ ನಿಲ್ಲಬೇಕೆಂದಿಲ್ಲ. ನೀವು ಸಂಭ್ರಮಿ ಸಬೇಕಾದ ಸಂಗತಿ ಬೇರೆಯಿದೆ. ಈ ಸಿನಿಮಾದಲ್ಲಿ ತುಳು ನಾಟಕರಂಗದ ನಾಲ್ವರು ಪ್ರಧಾನ ಹಾಸ್ಯ ಕಲಾವಿದರು ಒಂದಾಗಲಿದ್ದಾರೆ. ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್ ಮತ್ತು ದೇವದಾಸ್ ಕಾಪಿಕಾಡ್ ತೆಲಿಕೆದ ಬೊಳ್ಳಿ ಸಿನಿಮಾದಲ್ಲಿ ಹಾಸ್ಯದ ಹೊಳೆಯನ್ನೇ ಹರಿಸಲಿದ್ದಾರೆ. ದೀರ್ಘಕಾಲದ ಬಳಿಕ ಪ್ರಮುಖ ಕಲಾವಿದರು ಜತೆಯಾಗಿ ದುಡಿಯಲಿದ್ದಾರೆ. ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ತೆಲಿಕೆದ ಬೊಳ್ಳಿ ಸಿನಿಮಾದಲ್ಲಿ ಮತ್ತೂ ಒಂದು ವಿಶೇಷತೆಯಿದೆ. ತುಳು ಚಿತ್ರರಂಗದ ಮೇರುನಟನಾಗಿ ಗುರುತಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಾಡ್ ಅವರು ನಾಯಕ ನಟನಾಗಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಉತ್ತಮ ಡ್ಯಾನ್ಸರ್ ಕೂಡ ಆಗಿರುವ ಅವರಿಗೆ ಈಗಾಗಲೇ ಕನ್ನಡ ಸಿನಿಮಾರಂಗದಿಂದ ಅವಕಾಶ ಬಂದಿತ್ತಾದರೂ ತುಳು ಚಿತ್ರದ ಮೂಲಕವೇ ಬೆಳ್ಳಿ ತೆರೆಗೆ ಪ್ರವೇಶಿಸ ಬೇಕು ಎಂಬ ಮಹದಾಸೆಯಿಂದ ಈ ಸಿನಿಮಾಕ್ಕಾಗಿ ಕಾದು ಕುಳಿತಿದ್ದರು. ಇದೀಗ ಅವರ ಆಸೆ ಈಡೇರಿದೆ, ಕನಸು ನನಸಾಗುತ್ತಿದೆ.
ಇನ್ನು ನಾಯಕಿ ಯಾರು ಎಂಬ ವಿಷಯ. ಹಾಗೆ ನೋಡಿದರೆ ಇದರಲ್ಲಿ ಇಬ್ಬರು ನಾಯಕಿಯರಿದ್ದಾರೆ ಎಂದು ಹೇಳಬಹುದು. ಆದರೂ ಪ್ರಮುಖ ನಾಯಕ ನಟಿಯಾಗಿ ಅರ್ಜುನ್ ನೊಂದಿಗೆ ನಟಿಸಲಿರುವವರು ದಕ್ಷಿಣ ಕನ್ನಡ ಮೂಲದ ಮುಂಬಯಿಯ ಮಾಡೆಲ್ ಆಶ್ರಿತ ಶೆಟ್ಟಿ. ಮತ್ತೊಬ್ಬ ಮಾಡೆಲ್ ವೈಶಾಲಿ ಶೆಟ್ಟಿ ಅವರು ದ್ವಿತೀಯ ನಾಯಕಿಯಾಗಿ ಅಭಿನಯಿಸಲಿದ್ದಾರೆ. ನಾಯಕ ನಟ ಅರ್ಜುನ್ ಎದುರು ಖಳ ನಟನ ಪಾತ್ರದಲ್ಲಿ ‘ಆಯೆ ಸುಬಗೆ’ ಖ್ಯಾತಿಯ ಸಂದೀಪ್ ಶೆಟ್ಟಿ ಕಾಪು ಅಭಿನಯಿಸು ತ್ತಿದ್ದಾರೆ.
ದೇವದಾಸ್ ಅವರ ನಾಟಕ ಸಿನಿಮಾ ಆಗುತ್ತಿರುವುದು ಇದು ಮೊದಲಲ್ಲ. ಅವರ ‘ಬಲೇ ಚಾ ಪರ‍್ಕ’ ನಾಟಕವು ‘ಸತ್ಯ ಓಲುಂಡು’ ಹೆಸರಲ್ಲಿ ಸಿನಿಮಾ ಆಗಿತ್ತು. ರಂಗ ನಟ ಸದಾಶಿವ ಸಾಲ್ಯಾನ್ ಅವರು ಆರೂರು ಪಟ್ಟಾಭಿ ಅವರ ನಿರ್ದೇಶನ ದಲ್ಲಿ ಸತ್ಯ ಓಲುಂಡು ಸಿನಿಮಾವನ್ನು ನಿರ್ಮಿಸಿದ್ದರು. ತೆಲಿಕೆದ ಬೊಳ್ಳಿ ಸಿನಿಮಾದ ನಿರ್ಮಾಪಕ ಸುಧೀರ್ ಕಾಮತ್ ಅವರು. ಕನ್ನಡದ ಪಂಚಮ ವೇದ ಖ್ಯಾತಿಯ ಪಿ. ಎಚ್. ವಿಶ್ವ ನಾಥ್ ಅವರು ನಿರ್ದೇಶಿಸಲಿದ್ದಾರೆ. ತೆಲಿಕೆದ ಬೊಳ್ಳಿಯಲ್ಲಿ ಒಟ್ಟು ೫ ಹಾಡುಗಳಿದ್ದು, ಮೂರು ಹಾಡು ಗಳಿಗೆ ಕಾಪಿಕಾಡ್ ಅವರ ಸಾಹಿತ್ಯ ವಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಅವರು ತೆಲಿಕೆದ ಬೊಳ್ಳಿಗೆ ಸಂಗೀತ ನೀಡಿದ್ದಾರೆ. ಚಿತ್ರದ ಸಾಹಸ ದೃಶ್ಯಗಳಿಗೆ ರವಿವರ್ಮ ಅವರ ನಿರ್ದೇಶನವಿದೆ.

ಹಾಸ್ಯ ಸಂಗಮ
ಪಡೀಲ್, ಕಾಪಿಕಾಡ್ , ವಾಮಂಜೂರು ಮತ್ತು ಬೋಳಾರ್ ಈ ಹಿಂದೆ ಜತೆಯಾಗಿಯೇ ದುಡಿದಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಪಡೀಲ್, ಅರವಿಂದ್ ಬೇರೆ-ಬೇರೆಯಾಗಿದ್ದರು. ಬಳಿಕ ಪಡೀಲ್ ಮತ್ತು ಬೋಳಾರ್ ಅವರು ಕೊಡಿಯಾಲ್‌ಬೈಲ್ ಅವರ ‘ಒರಿಯರ್ದೊರಿ ಅಸಲ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿದೆ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿ. ಇದೀಗ ಅವರಿಬ್ಬರೂ ಮತ್ತೆ ಕಾಪಿಕಾಡ್‌ರೊಂದಿಗೆ ಸೇರಿದ್ದಾರೆ. ಹಾಗೆಂದು ಅವರ ನಡುವೆ ದೊಡ್ಡಮಟ್ಟದ ಯಾವುದೇ ಸಮಸ್ಯೆ ಇದ್ದಂತಿರಲಿಲ್ಲ. ಅದನ್ನು ಪಡೀಲ್ ಅವರೇ ಒಪ್ಪಿಕೊಳ್ಳುತ್ತಾರೆ. ಕಾಪಿಕಾಡ್ ಅವರ ಚಾ ಪರ‍್ಕ ತಂಡದ ೨೫ನೇ ವರ್ಷದ ಕಾರ್ಯಕ್ರಮದಲ್ಲಿ ಪಡೀಲ್ ಉಪಸ್ಥಿತರಿದ್ದರು. ಅವರನ್ನು ವೇದಿಕೆಗೆ ಕರೆದು ಕಾಪಿಕಾಡ್ ಗೌರವಿಸಿದ್ದರು ಕೂಡ. ಪಡೀಲ್ ಅವರು ಕಾಪಿಕಾಡ್ ಮತ್ತು ಸುಧೀರ್ ಕಾಮತ್ ಅವರು ಕೇಳಿಕೊಂಡಾಗ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳುವುದಾದರೂ ಹೇಗೆ ಸಾಧ್ಯ. ಆದ್ದರಿಂದಲೇ ಅವರು ಒಪ್ಪಿಕೊಂಡಿರಬೇಕು. ಅದೇನೇ ಇದ್ದರೂ ಇದೀಗ ಈ ಕಲಾವಿದರು ಒಂದು ಸಿನಿಮಾದಿಂದಾಗಿ ಮತ್ತೆ ಒಂದಾಗಿರುವುದು ತುಳು ಚಿತ್ರರಂಗ ಮತ್ತು ರಂಗಭೂಮಿಗೆ ಹೊಸ ಸಂಚಲನ ಉಂಟು ಮಾಡಲಿದೆ ಎಂಬುದಂತೂ ನಿರ್ವಿವಾದ ಸಂಗತಿ. ಒರಿಯರ್ದೊರಿ ಸಿನಿಮಾಕ್ಕೆ ಸಿಕ್ಕಿದಂಥ ಪ್ರೇಕ್ಷಕ ಬೆಂಬಲ ಈ ಸಿನಿಮಾಕ್ಕೂ ಸಿಗಲಿದೆ ಎಂಬ ನಿರೀಕ್ಷೆ ಎಲ್ಲೆಡೆ ಮೂಡಿದೆ. ಒಂದು ದಶಕದ ಬಳಿಕ ನವೀನ್ ಡಿ. ಪಡೀಲ್ ಅವರ ಸ್ನೇಹ ಸಂಪಾದಿಸಿದ ಕಾಪಿಕಾಡ್ ಅವರಿಂದ ಒಂದು ಉತ್ತಮ ಸಿನಿಮಾ ತುಳು ಚಿತ್ರರಂಗಕ್ಕೆ ಸಿಗಲಿ ಎಂಬ ಹಾರೈಕೆ ತುಳು ಚಿತ್ರಪ್ರೇಮಿಗಳದ್ದು.

ಮೀನು ಮಾರ್ಕೆಟ್‌ನಂತಾದ ವೆನ್‌ಲಾಕ್ ಆಸ್ಪತ್ರೆ

Posted by JAYAKIRANA Kirana on | 0 comments | Leave a comment...


ಜಿಲ್ಲಾಸ್ಪತ್ರೆಯಾದ ವೆನ್‌ಲಾಕ್ ಮೀನು ಮಾರ್ಕೆಟ್‌ಗಿಂತಲೂ ಕಡೆ ಯಾಗಿದೆ. ಆಸ್ಪತ್ರೆಗೆ ಭೇಟಿಕೊಡುವ ರೋಗಿಗಳು ಎಲ್ಲೆಂದರಲ್ಲಿ ಕುಳಿತು ಕೊಂಡು, ಊಟ ಮಾಡಿಕೊಂಡು, ಮಲಗಿಕೊಂಡು ನಿದ್ದೆ ಮಾಡುವುದು ಕಂಡುಬರುತ್ತದೆ. ಇದನ್ನು ನೋಡಿದರೆ ಇದೆಂಥ ಆಸ್ಪತ್ರೆ ಎಂದೆನಿಸದೇ ಇರದು. ಸದಾ ಗದ್ದಲದಿಂದ ಕೂಡಿರುವ ಇಲ್ಲಿ ಆಸ್ಪತ್ರೆಗೆ ಇರಬೇಕಾದ ಯಾವ ಲಕ್ಷ ಣವೂ ಗೋಚರಿಸುವುದಿಲ್ಲ. ಇಲ್ಲಿ ರಿಸೆ ಪ್ಷನಿಸ್ಟ್‌ನಿಂದ ಹಿಡಿದು ವೈದ್ಯರವರೆಗೆ ಎಲ್ಲರ ಕೈಯಲ್ಲಿ ಇಂತಿಷ್ಟು ಹಣ ನೀಡಿ ದರೆ ಮಾತ್ರ ರೋಗಿ ಜೀವಂತವಾಗಿ ರುತ್ತಾನೆ. ಆಸ್ಪತ್ರೆಯಲ್ಲಿ ಶುಚಿತ್ವದ ಕಡೆಗೂ ಗಮನ ಕೊಡುವುದಿಲ್ಲ. ರಾಜ್ಯ ಆರೋಗ್ಯ ಸಚಿವರು ಇಲ್ಲಿಗೊಮ್ಮೆ ಭೇಟಿಕೊಟ್ಟರೆ ಒಳ್ಳೆಯದು.
ಸುರೇಶ್, ಮಂಗಳೂರು

ಪ್ರೇಮಿಗಳಿಗೆ ರಕ್ಷಣೆ ನೀಡಿ

Posted by JAYAKIRANA Kirana on | 0 comments | Leave a comment...


ಕಾಪು ಬೀಚ್‌ನಲ್ಲಿ ವಾರದ ಶನಿವಾರ ಮತ್ತು ಆದಿತ್ಯವಾರದಂದು ಸಂಜೆಯ ವೇಳೆ ಅಸಂಖ್ಯ ಮಂದಿ ಪ್ರವಾಸಿಗರು ಸೇರುತ್ತಾರೆ. ಇವರಲ್ಲಿ ನವ ದಂಪತಿ, ಪ್ರೇಮಿಗಳ ಸಂಖ್ಯೆ ಹೆಚ್ಚು. ಇಲ್ಲಿ ಬೀಚ್ ನಲ್ಲಿ ಮದ್ಯ ಮಾರಾಟ ಮಾಡುವ ಬಾರ್ ಇರು ವುದರಿಂದ ಕುಡುಕರ ಉಪಟಳ ಜಾಸ್ತಿ. ಕುಡಿದು ಬೀಚ್‌ಗೆ ಬರುವ ಪುಂಡರು ಅಲ್ಲಿರುವ ಜೋಡಿ ಯನ್ನು ಪೊಲೀಸರಂತೆ ವಿಚಾರಿಸುವುದು, ಬೆದ ರಿಕೆಯೊಡ್ಡುವುದು, ಅಮಾಯಕರಂತೆ ಕಂಡು ಬಂದರೆ ನಗ-ನಗದು ಕೊಡುವಂತೆ ಪೀಡಿಸು ವುದೂ ನಡೆಯುತ್ತಿದೆ. ಇಲ್ಲಿನ ದ್ವೀಪಸ್ತಂಭ ಹಾಗೂ ಅದರ ಸುತ್ತಲಿನ ಬಂಡೆಗಳ ಮೇಲೆ ಕುಡುಕರು, ಕಾಮುಕರೇ ಹೆಚ್ಚಿರುತ್ತಾರೆ. ಇಲ್ಲಿ ಪೊಲೀಸ್ ಸಿಬ್ಬಂದಿ, ಭದ್ರತಾ ವ್ಯವಸ್ಥೆ ಯಾವುದೂ ಇಲ್ಲ. ಇಲ್ಲಿ ವಾರಾಂ ತ್ಯದ ದಿನಗಳಲ್ಲಿ ಪ್ರೇಮಿಗಳಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀಚ್‌ನಲ್ಲಿ ಮದ್ಯ ಸೇವನೆ, ಕಾಮುಕರ ಉಪಟಳ ವನ್ನು ನಿಯಂತ್ರಿಸಲು ಇನ್ನಾದರೂ ಮುಂದಾಗು ವರೇ? ನೀತಾ ಹರೀಶ್, ಮಲ್ಪೆ

ಸೆಕ್ಯೂರಿಟಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಿ

Posted by JAYAKIRANA Kirana on | 0 comments | Leave a comment...


ಮಂಗಳೂರಿನ ಆಕ್ಷನ್ ಸೆಕ್ಯೂರಿಟಿ ಮತ್ತು ಜನರಲ್ ಸಂಸ್ಥೆಯ ಹೆಸರಿನಲ್ಲಿ ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾಯತ್, ಜಂಟಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಉದ್ಯೋಗ ಖಾತರಿ ಯೋಜನೆ, ಮಹಿಳಾ ಮತ್ತು ಕಲ್ಯಾಣ ಇಲಾಖೆಗಳಲ್ಲಿ ಕಂಪ್ಯೂಟರ್ ಆಪರೇಟರ್, ಡ್ರೈವರ್, ಆಟೆಂಡರ್, ಭದ್ರತಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಯಾಗಿ ಎರಡು ಮೂರು ವರ್ಷಗ ಳಿಂದ ಕೆಲಸ ಮಾಡುತ್ತಿದ್ದೇವೆ.
ನಮ್ಮ ತಿಂಗಳ ವೇತನ ಸರಕಾರದಿಂದ ಎಲ್ಲಾ ತೆರಿಗೆ ಸೇರಿ (ಪಿಎಫ್ ೧೩.೬೧%, ಇಎಸ್‌ಐ ೪.೭೫% ಹಾಗೂ ಸೇವಾ ತೆರಿಗೆ ೧೦.೩೦%) ೫,೨೦೦ಕ್ಕಿಂತ ಮೇಲಿನ ಮೊತ್ತದಲ್ಲಿ ಆಕ್ಷನ್ ಸೆಕ್ಯೂರಿಟಿ ಸಂಸ್ಥೆಗೆ ಪಾವತಿಯಾಗುತ್ತಿದೆ. ಆದರೆ ನಮಗೆ ಎಲ್ಲಾ ತೆರಿಗೆಯನ್ನು ಕಡಿತಗೊಳಿಸಿ ೩,೦೦೦, ೩,೫೦೦ರ ಒಳಗೆ ವೇತನ ನೀಡುತ್ತಿ ದ್ದಾರೆ. ನಾವು ಆಕ್ಷನ್ ಸೆಕ್ಯೂರಿಟಿ ಮತ್ತು ಜನ ರಲ್ ಸಂಸ್ಥೆಯವರಲ್ಲಿ ಕೇಳಿದರೂ ಕೂಡಾ ಈವರೆಗೆ ಪಿಎಫ್, ಇಎಸ್‌ಐ ನಂಬ್ರವಾಗಲಿ, ಕಡಿತಗೊಳಿಸಿದ ಮಾಸಿಕ ಚಲನ್ ಆಗಲಿ ನೀಡಿಲ್ಲ. ಸಂಬಳವನ್ನು ಕೇಳಿದಾಗ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಪಿಎಫ್, ಇಎಸ್‌ಐ ನಂಬರ್ ಕೇಳಿದಾಗ ಸುಳ್ಳು ಸುಳ್ಳು ಕಾರಣ ಹೇಳಿ ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಹೆದರಿಸುತ್ತಿರುವುದಲ್ಲದೆ ಭದ್ರತಾ ಸಿಬ್ಬಂದಿ ಯನ್ನು ೧೨ ಗಂಟೆ ದುಡಿಸಿ ಸಂಬಳ ಕೇಳಿ ದಾಗ ಮೈಮೇಲೆ ಕೈಹಾಕಿ ಹಲ್ಲೆ ನಡೆಸುತ್ತಾರೆ.
ಕಾರ್ಮಿಕ ಕಾಯ್ದೆಯ ಅನ್ವಯ ಪಿಎಫ್, ಇಎಸ್‌ಐ ಕಡಿತಗೊಳಿಸಿದರೂ ತಿಂಗಳಿಗೆ ಆರು ಸಾವಿರದ ಬದಲು ೪೦೦೦ದ ಒಳಗೆ ಸಂಬಳ ಸರಿಯಾದ ಸಮಯವಿಲ್ಲದೆ, ಯಾವುದಾದರೂ ಒಂದು ದಿನ ಕೊಡುತ್ತಿದ್ದಾರೆ. ಮೂರು ವರ್ಷ ಗಳಿಂದ ದುಡಿದ ಪಿಎಫ್, ಇಎಸ್‌ಐ ಮಾಸಿಕ ಮೊತ್ತವನ್ನಾದರೂ ಹಿಂದಿರುಗಿಸಿ ಕೊಡಬೇ ಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿ ಕೊಳ್ಳುತ್ತಿದ್ದೇವೆ.
ಸ್ವಚ್ಛತಾ ಸಿಬ್ಬಂದಿಗೆ ಇಎಸ್‌ಐ ಬದಲು ಎಲ್‌ಐಸಿ ಮಾಡುತ್ತೇವೆ ಎಂದು ತಿಂಗಳಿಗೆ ರೂ. ೭೫ ರೂ.ನಂತೆ ಕಡಿತಗೊಳಿಸುತ್ತಿದ್ದರು. ಆದರೆ ಈವರೆಗೂ ಎಲ್‌ಐಸಿ ಪಾಲಿಸಿ ನೀಡಿರುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಲ್ಲಿ ನಾವು ವಿನಂತಿ ಮಾಡುವುದೇನೆಂದರೆ ಈ ಸಂಸ್ಥೆಯ ಪಿಎಫ್, ಇಎಸ್‌ಐ, ಸರ್ವಿಸ್ ಟ್ಯಾಕ್ಸ್, ಲೈಸೆನ್ಸ್ ಇಲ್ಲದಿ ದ್ದಲ್ಲಿ ನಮ್ಮ ತಿಂಗಳ ವೇತನದಿಂದ ಕಡಿತಗೊ ಳಿಸಿದ ಮೊತ್ತವನ್ನು ಬಡ್ಡಿ ಸಮೇತ ಹಿಂದಿರು ಗಿಸಿ ಸಿಗುವಂತೆ ಮಾಡಬೇಕು. ನಮಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಪತ್ರಿಕೆಯ ಮೂಲಕ ವಿನಮ್ರವಾಗಿ ಪ್ರಾರ್ಥಿಸಿ ಕೊಳ್ಳುತ್ತಿದ್ದೇವೆ.
 ನೊಂದ ಹೊರಗುತ್ತಿಗೆ ಆಧಾರದ ನೌಕರರು, ಮಂಗಳೂರು

ಸಾಣೂರಿನ ಅಪಾಯಕಾರಿ ರಸ್ತೆ ಡಾಮರೀಕರಣ

Posted by JAYAKIRANA Kirana on | 0 comments | Leave a comment...


ಕಾರ್ಕಳ ಸಮೀಪದ ಸಾಣೂರಿನಲ್ಲಿ ರಾಜ್ಯ ಹೆದ್ದಾರಿಗೆ ಹೊಸದಾಗಿ ಡಾಮರೀಕರಣ ಮಾಡ ಲಾಗಿದೆ. ಇದರಿಂದ ವಾಹನ ಸವಾರರು ನೆಮ್ಮದಿ ಯಿಂದ ಸಂಚಾರ ನಡೆಸಲು ಸಾಧ್ಯವಾಗಿದೆಯಾ ದರೂ ರಸ್ತೆಯ ಬದಿ ಆಳವಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಎದುರು-ಬದುರಾಗಿ ವಾಹನಗಳು ಸಾಗುವಾಗ ದ್ವಿಚಕ್ರ ಸವಾರರು ರಸ್ತೆ ಯನ್ನು ಬಿಟ್ಟು ಕೆಳಕ್ಕಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ದ್ವಿಚಕ್ರ ಸವಾರರ ಪ್ರಾಣಕ್ಕೂ ಕಂಟಕ ತಪ್ಪಿದ್ದಲ್ಲ. ನೂತನ ರಸ್ತೆ ಡಾಮರೀಕರಣದ ವೇಳೆ ವೈeನಿಕ ಕ್ರಮಗಳನ್ನು ಪಾಲಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಲೋಕೋಪ ಯೋಗಿ ಇಲಾಖೆ ಕೂಡಲೇ ಗಮನಹರಿಸಬೇಕು. ರಸ್ತೆಯ ಅಂಚನ್ನು ಸರಿಪಡಿಸಿ ದ್ವಿಚಕ್ರ ಸವಾರರ ಪ್ರಾಣ ಉಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳುವರೇ?
 ಹರೀಶ್, ಸಾಣೂರು

ವಸತಿಗೃಹದವರಿಗೆ ಎಚ್ಚರಿಕೆ ಕೊಡಿ

Posted by JAYAKIRANA Kirana on | 0 comments | Leave a comment...


ಕೊಡಿಬೆಟ್ಟು ಗ್ರಾಮ ಪಂಚಾ ಯತ್‌ಗೆ ಸಂಬಂಧಪಟ್ಟ ಓಂತಿಬೆಟ್ಟು ಸರ್ಕಲ್‌ನಲ್ಲಿ ಕೆಲವು ವಸತಿ ಗೃಹ ಗಳಿದ್ದು ಇದರಲ್ಲಿ ಹಲವಾರು ಜನರು ವಾಸಮಾಡಿಕೊಂಡಿದ್ದಾರೆ. ಇವರು ಗಳು ತಮ್ಮ ದೈನಂದಿನ ಕಸ -ತ್ಯಾಜ್ಯ ವನ್ನು ಇಲ್ಲಿಯೇ ಹತ್ತಿರದಲ್ಲಿರುವ ಅಂಗನವಾಡಿಯ ಹತ್ತಿರ ಹಾಕುತ್ತಿ ದ್ದಾರೆ.
ಇದರಿಂದ ಮಕ್ಕಳ ಆರೋಗ್ಯಕ್ಕೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಗ್ರಾಮ ಪಂಚಾಯತ್‌ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ. ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಯಲ್ಲಿ ಸುಮಾರು ಮೂರು ವರ್ಷದಿಂದ ಮನವಿ ಮೂಲಕ ಹೋರಾಟ ನಡೆಸಿದ ಪರಿಣಾಮ ಇದೀಗ ಉತ್ತಮ ಫಲಿತಾಂಶ ಲಭಿಸಿದೆ.
ಇನ್ನು ಮುಂದೆ ಪ್ರತೀ ವಸತಿಗೃಹ ದವರು ತಮ್ಮ ದೈನಂದಿನ ಕಸ-ತ್ಯಾಜ್ಯ ಗಳನ್ನು ಅವರ ಕಟ್ಟಡದ ಬಳಿಯೇ ಕಸದ ತೊಟ್ಟಿ ಇಡಬೇಕು. ನಂತರ ಸೂಕ್ತ ವಿಲೇವಾರಿ ಮಾಡಬೇಕು ಮತ್ತು ಪಕ್ಕದಲ್ಲಿರುವ ಅಂಗಡಿಯವರಿಗೆ ಕೂಡಾ ಎಚ್ಚರಿಕೆ ನೀಡಬೇಕು.
ಅದನ್ನು ಮೀರಿ ಅಂಗನವಾಡಿ ಬಳಿ ಕಸ-ತ್ಯಾಜ್ಯವನ್ನು ಎಸೆದರೆ ಇವರುಗಳ ವಿರುದ್ಧ ದೂರು ನೀಡಿ ಸೂಕ್ತ ಪರಿ ಹಾರ ಲಭಿಸುವ ತನಕ ಠಾಣೆಯ ಮುಂದೆ ಪ್ರತಿಭಟಿಸುತ್ತೇವೆ.
 ದೇಜಪ್ಪ ಕರ್ಕೇರ, ಸಂಚಾಲಕರು, ದಸಂಸ-ಹಿರಿಯಡ್ಕ

ನೊಂದವರ ಸಮಾವೇಶ

Posted by JAYAKIRANA Kirana on | 0 comments | Leave a comment...


ಇತ್ತೀಚೆಗೆ ನಿಮ್ಮಿಂದ ವಿಭಾಗದಲ್ಲಿ ವಿನ್ಯಾಸ್, ಮಂಗಳೂರು ಎಂಬವರು ಬರೆದ ‘ಎಸ್‌ಡಿಪಿಐ ಶ್ರೀಮಂತಿಕೆಯ ಸಮಾವೇಶವೇ’ ಎಂಬ ಬರಹಕ್ಕೆ ಪ್ರತಿ ಕ್ರಿಯೆ. ಎಸ್‌ಡಿಪಿಐಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಬಂದವರು ಯಾರೂ ಇಲ್ಲ. ಇಲ್ಲಿನ ಭ್ರಷ್ಟ ರಾಜ ಕೀಯ ಬೇಡ ಎಂದ ಜನರು ಈಗ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾ ಜನರ, ನ್ಯಾಯದ ಪರವಾಗಿ ಹಾಗೂ ಜನಪರ ಹಿತಾಸಕ್ತಿಯ ರಾಜಕೀಯ ಪಕ್ಷವಾಗಿದೆ. ಮಂಗಳೂರಿನಲ್ಲ್ಲಿ ನಡೆದ ಸಮಾವೇಶಕ್ಕೆ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಸಂಗ್ರಹಿಸಿದ ಹಣ ದಿಂದಲೇ ಕಟೌಟ್, ಫ್ಲೆಕ್ಸ್ ಅನ್ನು ಹಾಕ ಲಾಗಿತ್ತು. ಇದು ಶ್ರೀಮಂತಿಕೆಯ ಸಮಾ ವೇಶ ಅಲ್ಲ, ಬದಲಾಗಿ ನೊಂದವರ, ದಲಿತರ ಸಮಾವೇಶವಾಗಿದೆ.
 ನಿಸಾರ್, ಬಿ.ಸಿ.ರೋಡ್

ಬಜೆಟ್‌ನಿಂದ ಜನಸಾಮಾನ್ಯರಿಗೆ ಲಾಭವಿಲ್ಲ

Posted by JAYAKIRANA Kirana on | 0 comments | Leave a comment...


ರಾಜ್ಯ ಅಥವಾ ಕೇಂದ್ರ ಸರ ಕಾರ ಮಂಡಿಸುವ ವಾರ್ಷಿಕ ಬಜೆಟ್ ನಿಂದ ಸಾಮಾನ್ಯ ಜನರಿಗೆ ಯಾವುದೇ ಲಾಭ ಇಲ್ಲ. ಬಸ್, ರೈಲು ಸೇವೆಯ ದರ, ದಿನಬಳಕೆಯ ಸೊತ್ತುಗಳ ದರ ವನ್ನು ಏಕಾಏಕಿ ಏರಿಸಲಾಗುತ್ತದೆ. ಆದರೆ ಅದೇ ಬಜೆಟ್‌ನಲ್ಲಿ ರೈತರಿಗೆ ಕೃಷಿ ಸಾಲ, ಉಚಿತ ಸೌಲಭ್ಯಗಳನ್ನು ಸರಕಾರ ಘೋಷಿಸುತ್ತದಾದರೂ ಅದು ಜಾರಿಗೆ ಬರುವುದಿಲ್ಲ. ಒಂದು ವೇಳೆ ಜಾರಿಗೆ ಬಂದರೂ ಅದಾಗಲೇ ಹಲವು ತಿಂಗಳು ಕಳೆದಿರುತ್ತದೆ. ಇದ ರಿಂದ ಜನಸಾಮಾನ್ಯರಿಗೆ ಯಾವುದೇ ಲಾಭವಾಗುವುದಿಲ್ಲ. ಎಲ್ಲೋ ಒಂದು ಕಡೆ ಬಜೆಟ್ ಮಂಡಿಸಿ ಸರಕಾರ ಸುಮ್ಮನೆ ಕೂತರೆ, ಜನರೂ ಬಜೆಟ್ ನಲ್ಲಿ ಏನಿತ್ತು ಎಂದು ಪತ್ರಿಕೆ, ಚಾನೆಲ್ ಅನ್ನು ನೋಡಿ ಸುಮ್ಮನಾಗುತ್ತಾರೆ. ಇದರಿಂದ ಬಜೆಟ್‌ನಿಂದ ಯಾರಿ ಗೆಷ್ಟು ಲಾಭ ಎನ್ನುವುದೇ ತಿಳಿಯು ವುದಿಲ್ಲ. ಸರಕಾರ ಬಜೆಟ್ ಮಂಡಿಸಿ ದರಷ್ಟೇ ಸಾಲದು, ಅದರ ಬದಲು ಬಜೆಟ್‌ನಲ್ಲಿ ಮಂಡಿಸಿರುವ ವಿನೂ ತನ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಕೊಡಲಿ.
ಶ್ರೀಧರ ಆಚಾರ್ಯ, ಸಾಸ್ತಾನ

ಉಡುಪಿ-ಕಾರ್ಕಳ ಸರಕಾರಿ ಬಸ್ ಒದಗಿಸಿ

Posted by JAYAKIRANA Kirana on | 0 comments | Leave a comment...


ಉಡುಪಿಯಿಂದ ಕಾರ್ಕ ಳಕ್ಕೆ ಮೂಡುಬೆಳ್ಳೆ ಮಾರ್ಗ ವಾಗಿ ಕಾರ್ಕಳಕ್ಕೆ ಸಂಚರಿ ಸಲು ಸರ್ವಿಸ್ ಬಸ್ ಸೌಲಭ್ಯ ವಿದೆ. ಆದರೆ ದಿನದ ಹೆಚ್ಚಿನ ಅವಧಿಯಲ್ಲಿ ಈ ಬಸ್‌ಗಳು ಸಂಚಾರ ನಡೆಸುವುದಿಲ್ಲ. ಗಂಟೆ ಗೊಮ್ಮೆ ಮಾತ್ರ ಬಸ್‌ಗಳು ಇರುವ ಕಾರಣ ಪ್ರತೀ ಟ್ರಿಪ್ ಕೂಡಾ ಪ್ರಯಾಣಿಕರಿಂದ ಕಿಕ್ಕಿರಿದು ತುಂಬು ತ್ತದೆ. ಉಡುಪಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿ ರುವ ದೃಶ್ಯ ಮಾಮೂಲಿಯಾಗಿದೆ. ಆದ್ದರಿಂದ ಈ ರೂಟ್‌ನಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಖಾಸಗಿ ಬಸ್‌ಗಳ ಓಡಾಟ ಕಷ್ಟಸಾಧ್ಯವಾದರೆ ಇಲ್ಲಿ ಸರಕಾರಿ ಬಸ್‌ಗಳನ್ನಾದರೂ ಸಂಚಾ ರಕ್ಕೆ ಒದಗಿಸಬೇಕು. ಉಡುಪಿ-ಮೂಡುಬೆಳ್ಳೆ-ಬೈಲೂರು-ಕಾರ್ಕಳ ರೂಟ್ ನಲ್ಲಿ ಪ್ರಯಾಣಿಕರ ದಟ್ಟಣೆ ಇದ್ದು, ಮುಂಜಾನೆ ಹಾಗೂ ಸಂಜೆಯ ವೇಳೆ ಸರಕಾರಿ ಬಸ್‌ಗಳನ್ನು ಓಡಿಸುವುದರಿಂದ ಸಮಸ್ಯೆಯನ್ನು ಪರಿಹರಿಸಬಹು ದಾಗಿದೆ.
ಸುನೀತಾ ಎಂ, ಮೂಡುಬೆಳ್ಳೆ

ಗುರುಪುರ ರಸ್ತೆ ವಿಸ್ತರಣೆ ಯಾವಾಗ?

Posted by JAYAKIRANA Kirana on | 0 comments | Leave a comment...


ಮಂಗಳೂರು ಹೊರವಲಯದ ಗುರುಪುರದಲ್ಲಿ ರಸ್ತೆಯ ವಿಸ್ತೀರ್ಣ ತೀರಾ ಕಿರಿದಾಗಿದ್ದು, ವಾಹನಗಳು ಸಂಚಾರ ನಡೆಸುವಾಗ ಸಮಸ್ಯೆ ಎದುರಾ ಗುತ್ತಿದೆ. ಎರಡು ಘನ ವಾಹನಗಳು ಒಮ್ಮೆಲೇ ಸಂಚರಿಸಲು ಇಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ. ಇದರಿಂದ ಅನೇಕ ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭ ವಿಸುತ್ತಲೇ ಇವೆ. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ರಸ್ತೆಯಂಚಿಗೆ ವಿಸ್ತರಿ ಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ, ದ್ವಿಪಥ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಿಂದ ಸುಗಮ ವಾಹನ ಸಂಚಾರ ಸಾಧ್ಯ ವಾಗುತ್ತಿದೆ. ಆದರೆ ಗುರುಪುರದಲ್ಲಿ ಮಾತ್ರ ಇನ್ನೂ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಮಂಗಳೂರು-ಮೂಡಬಿದ್ರೆ ನಡುವೆ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆಯಾಗಿರುವ ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಎಕ್ಸ್‌ಪ್ರೆಸ್, ಸರ್ವಿಸ್ ಬಸ್‌ಗಳು ಇದೇ ದಾರಿ ಯನ್ನು ಬಳಸಿ ಸಾಗುತ್ತಿವೆ. ಹೀಗಾಗಿ ದಿನದಲ್ಲಿ ಅನೇಕ ಬಾರಿ ಗುರುಪುರ ಪೇಟೆಯಲ್ಲಿ ಸಂಚಾರದಟ್ಟಣೆ ಉಂಟಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಇಲ್ಲಿನ ರಸ್ತೆಯನ್ನು ಆದಷ್ಟು ಶೀಘ್ರವಾಗಿ ವಿಸ್ತಾರಗೊಳಿಸಿ, ಮೇಲ್ದರ್ಜೆಗೇರಿಸ ಬೇಕಾಗಿ ವಿನಂತಿ.
ರಾಕೇಶ್, ಮೂಡುಬಿದ್ರೆ

ವಾಮಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಲಿ

Posted by JAYAKIRANA Kirana on | 0 comments | Leave a comment...


ಕದ್ರಿ ಸಮೀಪದ ಬಾರೆಬೈಲ್ ಎಂಬಲ್ಲಿ ಕೆಲವು ಸಮಯದ ಹಿಂದೆ ವಾಮಾಚಾರದ ದುರುದ್ದೇಶ ಕ್ಕಾಗಿ ಬಿಹಾರ ಮೂಲದ ಬಾಲಕಿಯನ್ನು ಬಲಿಪ ಡೆದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ಆದ್ದ ರಿಂದ ಮುಗ್ಧ ಬಾಲಕಿಯನ್ನು ಹತ್ಯೆಗೈದ ಆರೋಪಿ ಗಳಿಗೆ ಕಾನೂನಿನಡಿಯಲ್ಲಿ ತಕ್ಕ ಶಿಕ್ಷೆಯನ್ನು ವಿಧಿಸ ಬೇಕು. ವಾಮಾಚಾರ, ಮಾಟ, ಮಂತ್ರದ ಮೂಲಕ ಮುಗ್ಧ ಜನರನ್ನು ದೌರ್ಜನ್ಯಕ್ಕೆ ಈಡು ಮಾಡುವ ಪ್ರಕರಣಗಳು ಸಮಾಜಕ್ಕೆ ಆತಂಕಕಾರಿಯಾಗಿದೆ.
 ಇಂಥ ಪ್ರಕರಣಗಳನ್ನು ಮರುಕಳಿಸಲು ಬಿಡ ಬಾರದು. ನಗರದೆಲ್ಲೆಡೆ ಇಂಥ ಅನೇಕ ಮಂದಿ ವಾಮಾಚಾರಿಗಳು ನೆಲೆಸಿದ್ದು, ಪೊಲೀಸರು ಇವರ ಬಗ್ಗೆ ಕಣ್ಣಿಡಬೇಕು.
 ಅರುಣ್ ಕುಮಾರ್, ನಂತೂರು

ಶ್ರೀನಿವಾಸ ಆಸ್ಪತ್ರೆಯವರೇ ಗಮನಿಸುವಿರಾ?

Posted by JAYAKIRANA Kirana on | 0 comments | Leave a comment...


ಮುಕ್ಕ ಆಸುಪಾಸಿನ ಜನತೆಗೆ ಶ್ರೀನಿವಾಸ ಆಸ್ಪತ್ರೆ ಆರಂಭವಾದಾಗ ತುಂಬಾ ಸಂತ ಸವಾಗಿತ್ತು. ಎ.ಜೆ ಆಸ್ಪತ್ರೆಗೆ ಅಡ್ಮಿಟ್ಟಾಗಿ ಹಣ ಮತ್ತು ಜೀವ ಎರಡನ್ನೂ ಕಳೆದುಕೊಳ್ಳುವುದ ಕ್ಕಿಂತ ಶ್ರೀನಿವಾಸ ಆಸ್ಪತ್ರೆಯಲ್ಲಿ ಬದುಕುವುದು ಸುಲಭ ಎಂದು ಅನ್ನಿಸಿತ್ತು.
ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಆಸ್ಪತ್ರೆ ನೂರು ಎಕರೆ ಜಾಗದಲ್ಲಿ ವ್ಯಾಪಿಸಿ ಸುತ್ತಮು ತ್ತಲಿನ ಜಮೀನಿಗೆ ಭಾರೀ ಬೆಲೆ ಬರುವಂತೆ ಮಾಡಿದ್ದು ಬಿಟ್ಟರೆ ವೈದ್ಯಕೀಯ ಸೇವೆ ಮಂಗ ಳೂರಿನ ಇತರ ಆಸ್ಪತ್ರೆಗಳಿಗಿಂತ ಭಿನ್ನವಾಗಿಲ್ಲ. ಮಂಗಳೂರಿನ ಆಸ್ಪತ್ರೆಯಲ್ಲಿ ಇಲ್ಲದ ವಿಶೇಷತೆ ಯೊಂದಿದೆ. ಅದೇನೆಂದರೆ ಮಲೇರಿಯಾ, ಡೆಂಗ್ಯೂ ಉತ್ಪಾದನಾ ಕೇಂದ್ರ. ಶ್ರೀನಿವಾಸ ಆಸ್ಪ ತ್ರೆಯ ಸುತ್ತಮುತ್ತ ಇನ್ನೂ ಕಾಮಗಾರಿ ನಡೆ ಯುತ್ತಿರುವುದರಿಂದ ಕೊಳಚೆ ನೀರು ಹೇರ ಳವಾಗಿ ಸಂಗ್ರಹವಾಗುತ್ತಿದೆ. ಆಸ್ಪತ್ರೆಯ ಸುತ್ತ, ಅನತಿ ದೂರದಲ್ಲಿಯೇ ಸರಿಯಾದ ಡ್ರೈನೇಜ್ ವ್ಯವಸ್ಥೆಯಿಲ್ಲದೆ ಇರುವುದರಿಂದ ಇಲ್ಲಿಗೆ ಸಾಮಾನ್ಯ ಜ್ವರಕ್ಕೆಂದು ಅಡ್ಮಿಟ್ ಆದವರಿಗೆ ಮಲೇರಿಯಾ ರೋಗ ಬರುವುದು ಶತಸಿದ್ಧ. ಕೆಲವೇ ಕಿ.ಮೀ ದೂರದಲ್ಲಿ ಮನಪಾದ ಆರೋ ಗ್ಯಾಧಿಕಾರಿಗಳು ಇದ್ದರೂ ಇವರು ಇತ್ತ ತಲೆ ಹಾಕಿಯೂ ಮಲಗಿದಂತಿಲ್ಲ. ಮಲಗಿದರೂ ದೊಡ್ಡವರ ಉಸಾಬರಿ ತಮಗೇಕೆ ಎಂದು ಸುಮ್ಮನಿದ್ದಿರಬೇಕು. ಬೇರೆ ಕಟ್ಟಡವಾಗಿದ್ದರೆ ಪರ ವಾಗಿಲ್ಲ. ಆದರೆ ಶ್ರೀನಿವಾಸದಂತಹ ಸಕಲ ವ್ಯವ ಸ್ಥೆಯೊಂದಿರುವ ಆಸ್ಪತ್ರೆ ಹೀಗೆ ಇರಬಾರದು. ಆಸ್ಪತ್ರೆಯ ಆವರಣದಲ್ಲೇ ಧೂಳನ್ನು ಕೇಳು ವುದೇ ಬೇಡ.
ವಿಶಾಲವಾದ ಜಾಗವಿದ್ದರೂ ಹಸಿರು ಬೆಳೆಸಿ ಆಹ್ಲಾದಕರ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಬಹುದಿತ್ತು. ಅದನ್ನೂ ಮಾಡಿಲ್ಲ. ಕಟ್ಟಡವನ್ನು ನೋಡಿದಾಗ ಓಬೀರಾಯನ ಕಾಲದ ಭೂತ ಬಂಗಲೆಯಂತೆ ಕಾಣುತ್ತದೆ. ಶ್ರೀನಿವಾಸ ಆಸ್ಪತ್ರೆಯ ಆಡಳಿತ ಮಂಡಳಿಯ ವರು ಕೇವಲ ವ್ಯಾವಹಾರಿಕ ಉದ್ದೇಶದಿಂದ ನೋಡದೆ ಗಂಭೀರವಾಗಿ ಆಲೋಚನೆ ಮಾಡಿ.
ಅಲಕ್ ನಿರಂಜನ್, ಸುರತ್ಕಲ್

ಹಿಂದೂ ಧರ್ಮದ ಅವನತಿಗೆ ಕಾರಣರು ಯಾರು?

Posted by JAYAKIRANA Kirana on | 0 comments | Leave a comment...



ದೇವರು, ಧರ್ಮ ಇದೇ ಮುಂತಾದ ವಿಷಯಗಳ ತಪ್ಪು ಮಾಹಿತಿಯನ್ನು ಸಮಾಜದೆದುರು ಇಟ್ಟು ಯುವ ಪೀಳಿಗೆಯನ್ನು ಧರ್ಮದಿಂದ ದೂರ ಕರೆದೊಯ್ಯಲಾಗುತ್ತಿದೆ. ಹಿಂದುಗಳು ಮಾತ್ರ ಧರ್ಮದ ವಿಷಯದಲ್ಲಿನ ಅeನದಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಪಯಶಸ್ಸು ಹೊಂದುತ್ತಿದ್ದಾರೆ.

ರಮೇಶ ನಾಯಕ
ನಗುವುದು ಮತ್ತು ಇತರರನ್ನು ನಗಿಸುವುದರಿಂದ ಮನು ಷ್ಯನ ಆಯುಷ್ಯ ಹೆಚ್ಚುತ್ತದೆ ಎಂಬ ಮಾತು ಇದೆ. ಆದರೆ ನಗಿಸುವ, ಹಾಸ್ಯದ ವಿಷಯ, ವಸ್ತುಗಳು ಅದರ ಪರಿಧಿಯನ್ನು ದಾಟಿದಾಗ ಅದು ಹಾಸ್ಯ ಎನಿಸುವುದಿಲ್ಲ. ಅದರ ಹೊರತು ಅದು ಅಪಹಾಸ್ಯವಾಗುತ್ತದೆ.
ಈಗೀಗ ಕೆಲವೊಂದು ಚಾನೆಲ್‌ಗಳು ಹಾಸ್ಯವನ್ನು ಮಿತಿ ಮೀರಿ ಪ್ರಸಾರಪಡಿಸುವುದು ಕಂಡುಬರುತ್ತದೆ. ನಮ್ಮ ಸಂಸ್ಕೃ ತಿಯ ಕಟ್ಟುನಿಟ್ಟನ್ನು ದಾಟಿ, ಧರ್ಮದ ಆಚಾರ-ವಿಚಾರಗ ಳನ್ನು ಮರೆತು ವೀಕ್ಷಕರನ್ನು ಮೆಚ್ಚಿಸಲು ಹಾಸ್ಯವನ್ನು ಬಳಸಲಾ ಗುತ್ತದೆ. ಆದರೆ ಇದು ಕೆಲವೊಂದು ವೀಕ್ಷಕರಿಗೆ ನೋಡಲು ಅಸಹ್ಯವಾಗುವ ರೀತಿಯಲ್ಲಿರುತ್ತದೆ.
ನಮ್ಮ ನಾಡಿನ ಮಹಾಪುರುಷರು ನೀಡಿದಂತಹ ಸಾತ್ವಿಕ ಭಜನೆಗಳನ್ನು, ಮಾನವ ಜೀವನಕ್ಕೆ ಪೂರಕವಾದ ಜ್ಞಾನ ಸಾಹಿತ್ಯ ಭಂಡಾರಗಳನ್ನು ಮತ್ತು ಕಾಡು ಜನರಲ್ಲಿರುವ ಧರ್ಮಾ ಭಿಮಾನ, ಜ್ಞಾನ, ಗೌರವ, ದೇಶಪ್ರೇಮ ಇಂತಹ ವಿಚಾರಗ ಳನ್ನು ನಮ್ಮ ವಾಹಿನಿಗಳು ಗೌರವಿಸುವುದಿಲ್ಲ ಅಥವಾ ಗೌರ ವಿಸುವುದನ್ನು ಕಂಡರೆ ಅವರಿಗೆ ಆಗುವುದೇ ಇಲ್ಲ ಎಂಬಂತೆ ಕಾರ್ಯಕ್ರಮಗಳನ್ನು ಪ್ರಸಾರ ಪಡಿಸುತ್ತಾರೆ.
ನಮ್ಮ ವಾಹಿನಿಗಳಿಗೆ ಧರ್ಮದ ಮತ್ತು ಭಾರತ ದೇಶದ ಸಂಸ್ಕೃತಿಯ ಆಚರಣೆಯನ್ನು-ಮೂಢನಂಬಿಕೆ ಎಂದು ಬಿಂಬಿ ಸದಿದ್ದರೆ ಇವರು ಮಾಡಿದ ಕೆಲಸಕ್ಕೆ ತೃಪ್ತಿ ಸಿಗುವುದಿಲ್ಲವೋ ಅಥವಾ ಇಂತಹ ಆಚರಣೆಗಳನ್ನು ವಿಡಂಬನೆ ಮಾಡಿದರೆ ತಮ್ಮ ವಾಹಿನಿಯ ಪ್ರಚಾರ ಜಾಸ್ತಿಯಾಗುತ್ತದೆ ಎಂಬ ಭಾವ ನೆಯೋ? ಇನ್ನು ಇದನ್ನು ನೋಡುವ ಮಹಾನುಭಾವರು ಇದನ್ನು ನೋಡಿ ತಮ್ಮ ಜೀವನ ಸಾರ್ಥಕವಾಯಿತೆಂಬಂತೆ, ಹಲ್ಲು ಕಿಸಿ ದುಕೊಂಡು ಅದರ ಬಗ್ಗೆ ಚರ್ಚೆಯಲ್ಲಿ ತೊಡಗಿರುತ್ತಾರೆ. ಆದರೆ ನಮ್ಮ ದೇಶದ ಬಗ್ಗೆ ಚರ್ಚಿಸಬೇಕೆಂದು ಇವರ ಮನಸ್ಸಿಗೆ ಬರು ವುದೇ ಇಲ್ಲ!
ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಂಸ್ಕೃತಿಯು ಅವನತಿಯತ್ತ ಸಾಗುತ್ತಿದೆ. ನಮ್ಮ ಸಂಸ್ಕೃತಿಯು ನಶಿಸಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚುತ್ತಿದೆ.
ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣ ಪದ್ಧತಿಯಿತ್ತು. ಹಾಗಾಗಿ ಋಷಿಮುನಿಗಳು ತಮ್ಮ ಅಶ್ರಮಗಳ ಮೂಲಕ ಬೋಧ ನೆಯನ್ನು ಕೊಡುತ್ತಿದ್ದರು. ಇದರಿಂದಾಗಿ ಸುಸಂಸ್ಕೃತ ಪೀಳಿಗೆ ನಿರ್ಮಾಣವಾಗಿ ಈ ಪೀಳಿಗೆಯು ಧರ್ಮಪಾಲನೆ ಮಾಡುತ್ತಿತ್ತು. ಇದರ ಪರಿಣಾಮ ಸ್ವರೂಪವಾಗಿ ಧರ್ಮದ ಶಕ್ತಿ ಹೆಚ್ಚುತ್ತಿತ್ತು. ಆದರೆ ಇಂದು ನಿಧರ್ಮಿ ಶಿಕ್ಷಣ ಪ್ರಣಾಲಿಕೆಯಿಂದಾಗಿ ಸಮಾ ಜವು ಧರ್ಮಶಿಕ್ಷಣದಿಂದ ವಂಚಿತವಾಗಿರಬೇಕಾಗಿದೆ. ದೇವರು, ಧರ್ಮ ಇದೇ ಮುಂತಾದ ವಿಷಯಗಳ ತಪ್ಪು ಮಾಹಿತಿಯನ್ನು ಸಮಾಜದೆದುರು ಇಟ್ಟು ಯುವ ಪೀಳಿಗೆಯನ್ನು ಧರ್ಮದಿಂದ ದೂರ ಕರೆದೊಯ್ಯಲಾಗುತ್ತಿದೆ. ಹಿಂದುಗಳು ಮಾತ್ರ ಧರ್ಮದ ವಿಷಯದಲ್ಲಿನ ಅeನದಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಪಯಶಸ್ಸು ಹೊಂದುತ್ತಿದ್ದಾರೆ. ವಾಹಿನಿಗಳಲ್ಲಿ ಪ್ರಸಾರಗೊಳ್ಳುವ ಅಶ್ಲೀಲ, ಸಂಸ್ಕತಿಹೀನ ಕಾರ್ಯಕ್ರಮಗಳು ಹಾಗೂ ಭೋಗ ವಾದ ಮತ್ತು ಭಯೋತ್ಪಾದನೆ ಇರುವ ಚಲನಚಿತ್ರಗಳ ಪ್ರಭಾವ ಕ್ಕೊಳಗಾಗಿ ಇಂದಿನ ಯುವಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುತ್ತಾ ಅದರ ಆಚರಣೆ ಮಾಡುತ್ತಿದೆ. ಪರಿಣಾಮ ಸ್ವರೂಪವಾಗಿ ನೈತಿಕ ಮೌಲ್ಯಗಳನ್ನು ತುಳಿಯ ಲಾಗುತ್ತಿದೆ. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಕೀಳ ರಿಮೆ ಎನಿಸುತ್ತಿದೆ. ದೇವರಿಗೆ ನಮಸ್ಕಾರ ಮಾಡುವುದು, ನಾಮ ಸ್ಮರಣೆ ಮಾಡುವುದು, ದೇವಸ್ಥಾನಕ್ಕೆ ಹೋಗುವುದು ಇವೆಲ್ಲ ವನ್ನು ಕಡಿಮೆ ಎಂದು ಪರಿಗಣಿಸಲಾಗುತ್ತಿದೆ. ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ದೊಡ್ಡಸ್ಥಿಕೆಯ ಲಕ್ಷಣ ಎಂದು ಪರಿಗಣಿಸ ಲಾಗುತ್ತಿದೆ. ಹೀಗಾಗಿ ಮಾತೃಭಾಷೆ ಮತ್ತು ರಾಷ್ಟ್ರಭಾಷೆಯಲ್ಲಿ ಮಾತ ನಾಡಲು ಕೀಳರಿಮೆ ಎನಿಸುತ್ತಿದೆ. ಪ್ರಾಚೀನ ಭಾಷೆಯಾದ ಸಂಸ್ಕೃತವೆಂದೋ ಲೋಪ ವಾಗುತ್ತಾ ಹೋಗುತ್ತಿದೆ. ಆದ್ದರಿಂದ ಹಿಂದೂ ರಾಷ್ಟ್ರವಾದ ಭಾರತ ಇದರ ಬಗ್ಗೆ ಚಿಂತಿಸುವುದು ಅಗತ್ಯ. ಆ ನಿಟ್ಟಿನಲ್ಲಿ ನಾವೆಲ್ಲ ಕೂಡಲೇ ಕಾರ್ಯತತ್ಪರವಾಗಬೇಕಿದೆ.

ಕಾಸರಗೋಡು: ಪ್ರತಿಭಟನೆಯಲ್ಲಿ ಹಿಂಸಾಚಾರ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಕೇರಳದಲ್ಲಿ ಪಿಂಚಣಿ ವಯೋಮಿತಿಯನ್ನು ಏರಿಸಿದ ಸರಕಾರದ ನೀತಿಯನ್ನು ಪ್ರತಿ ಭಟಿಸಿ ನಿನ್ನೆ ಬೆಳಿಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಎಡಪಕ್ಷಗಳು ನಡೆಸಿದ ಮಾರ್ಚ್ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಘೋಷಣೆ ಕೂಗುತ್ತಾ ಜಿಲ್ಲಾ ಧಿಕಾರಿ ಕಚೇರಿ ಆವರಣಕ್ಕೆ ನುಸುಳಲು ಯತ್ನಿಸಿದ ಕಾರ‍್ಯಕರ್ತರನ್ನು ಪೊಲೀ ಸರು ತಡೆಯಲೆತ್ನಿಸಿದಾಗ ಮೆರ ವಣಿಗೆಯ ಹಿಂಬದಿಯಲ್ಲಿದ್ದ ಕಾರ‍್ಯ ಕರ್ತರು ಒಂದೇ ಸಮನೆ ಕಲ್ಲೆಸೆಯ ತೊಡಗಿದರು. ಹತೋಟಿಗೆ ಬಾರದೆ ಕಲ್ಲೆಸೆತ ತೀವ್ರಗೊಂಡಾಗ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಸಿಡಿಸಿದರು. ಅಲ್ಲದೆ ಆಕಾಶಕ್ಕೆ ಗುಂಡು ಹಾರಿಸಲಾಯಿತು. ಲಾಠಿ ಪ್ರಹಾರದಲ್ಲಿ ಡಿವೈಎಫ್‌ಐ ಸಂಘಟನೆಯ ಮುಖಂ ಡರಾದ ರವೀಂದ್ರನ್, ಮಣಿಕಂಠ ಸಹಿತ ೨೫ರಷ್ಟು ಕಾರ‍್ಯಕರ್ತರು ಗಾಯ ಗೊಂಡಿದ್ದಾರೆ. ಕಲ್ಲೆಸೆತ ಹಾಗೂ ಹಲ್ಲೆಗೊಳ ಗಾಗಿ ಪೊಲೀಸರು ಸಣ್ಣಪುಟ್ಟ ಗಾಯಗೊಂಡಿದ್ದರೆ, ಡಿಫಿ ಕಾರ‍್ಯ ಕರ್ತರಲ್ಲಿ ಕೆಲವರ ಸ್ಥಿತಿ ಗಂಭೀರವಾ ಗಿದೆ ಎನ್ನಲಾಗಿದೆ. ಡಿವೈಎಫ್‌ಐ, ಎಐವೈಎಫ್, ಆರ್‌ವೈಎಫ್ ಸಂಘಟನೆಗಳು ಸಂಯುಕ್ತವಾಗಿ ಕಲೆಕ್ಟ್ರೇಟ್‌ಗೆ ಮುತ್ತಿಗೆ ಹಾಕಿದ್ದವು. ಎಎಸ್‌ಪಿ ಶಿಬು ಅವರನ್ನು ಸುತ್ತುವರಿದು ಅವರ ಅಂಗಿಯಲ್ಲಿದ್ದ ನಕ್ಷತ್ರ ಚಿಹ್ನೆಗಳನ್ನು ಹರಿದು ಹಾಕಲಾಗಿದ್ದು, ೧೦೦ರಷ್ಟು ಕಾರ‍್ಯಕರ್ತರ ವಿರುದ್ಧ ಕೇಸು ದಾಖಲಿಸಿ, ತನಿಖೆ ನಡೆಯುತ್ತಿದೆ.

ಸೀ ಫುಡ್ ಹೆಸರಿನಲ್ಲಿ ಕೋಟ್ಯಂತರ ಪಂಗನಾಮ

Posted by JAYAKIRANA Kirana on | 0 comments | Leave a comment...

ವಂಚಕ ಪರಾರಿ
ಮಂಗಳೂರು: ಸೀ ಫುಡ್ ಹೆಸರಿನಲ್ಲಿ ನಗರದ ಹಲವಾರು ಉದ್ಯಮಿಗಳನ್ನು ಮುಂಡಾ ಮೋಚಿದ ವಂಚಕ ಊರು ತೊರೆದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಂಚಕ ನಿಂದ ಪಂಗನಾಮ ಹಾಕಿಸಿಕೊಂ ಡಿರುವ ಮಂದಿ ಪೊಲೀಸ್ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ನಗರದ ಹೊರವಲಯದ ಕುಲಶೇಖರ ನಿವಾಸಿ ಪೌಲ್ ಎಡಪಳ್ಳಿ ಫ್ರಾನ್ಸಿಸ್(೫೨) ಎಂಬಾತನೇ ಕೋಟ್ಯಂ ತರ ರೂಪಾಯಿ ವಂಚಿಸಿ ಪರಾರಿ ಯಾಗಿರುವಾತ. ನಗರದ ಬಂದರಿನಲ್ಲಿ ಸಾಗರ್ ಸೀ ಫುಡ್ ಎಂಬ ಕಚೇರಿ ಯನ್ನು ಹೊಂದಿದ್ದ ಈತ ಗುಜರಾತ್, ಮಹಾರಾಷ್ಟ್ರದಿಂದ ಒಣಮೀನು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಹಿಂದೆ ಬಾವಾ, ಇಸ್ಮಾಯಿಲ್ ನಡೆಸು ತ್ತಿದ್ದ ಸಾಗರ್ ಸೀ ಫುಡ್ ಸಂಸ್ಥೆಯನ್ನು ತಿಂಗಳಿಗೆ ೩೨ ಸಾವಿರ ರೂ. ಬಾಡಿ ಗೆಯ ಆಧಾರದಲ್ಲಿ ಪಡೆದಿದ್ದ ಪೌಲ್ ಅಲ್ಲಿ ಮೀನು ಮಾರಾಟದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಎನ್ನಲಾಗಿದೆ.
ತನ್ನ ವ್ಯವಹಾರಕ್ಕೆ ಕುಲಶೇಖರ ಸಮೀಪದ ಮರ್ಸಿಲಿನ್ ಫೆರ್ನಾಂಡಿಸ್ ಎಂಬ ಮಹಿಳೆಯನ್ನು ಪಾಲುದಾರರ ನ್ನಾಗಿ ಮಾಡಿಕೊಂಡಿದ್ದ ವಂಚಕ ಆಕೆಗೂ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವುದು ಇದೀಗ ಬೆಳಕಿಗೆ ಬಂದಿದೆ. ಆಕೆಯಲ್ಲಿ ಪಾಲು ದಾರಿಕೆ ಒಪ್ಪಂದದ ಪ್ರಕಾರ ೪೦ ಲಕ್ಷ ರೂ. ಪಡೆದುಕೊಂಡಿದ್ದ ವಂಚಕ ಅದನ್ನು ವ್ಯವಹಾರದಲ್ಲಿ ತೊಡಗಿಸಿದ್ದು, ಆಕೆಗೆ ಲಾಭಾಂಶದಲ್ಲಿ ಶೇ. ೪೦ರಷ್ಟು ನೀಡುವುದಾಗಿ ಹೇಳಿದ್ದ. ಇಷ್ಟು ಮಾತ್ರ ವಲ್ಲದೆ ಲಾಭಾಂಶವನ್ನು ಮೊದಲ ಎರಡು ವರ್ಷ ಪಡೆಯದೆ, ನಂತರದ ವರ್ಷದಿಂದ ಪಡೆಯಬಹುದು ಎಂಬುದಾಗಿ ಒಪ್ಪಂದ ಮಾಡಿಸಿದ್ದ. ಒಂದು ವೇಳೆ ಕಂಪೆನಿಯನ್ನು ಎರಡು ವರ್ಷಕ್ಕಿಂತ ಮೊದಲೇ ತೊರೆದರೆ ೨೦ ಲಕ್ಷ ಹಣವನ್ನು ಕಟ್ ಮಾಡುವುದಾಗಿ ಹೇಳಿದ್ದ ವಂಚಕನ ಮಾತಿಗೆ ಮರ್ಸಿ ಲಿನ್ ಅವರು ಒಪ್ಪಿದ್ದರು. ಆ ಬಳಿಕ ಮತ್ತೆ ಮರ್ಸಿಲಿನ್ ಅವರಲ್ಲಿ ಎರಡು ಶೇ. ಬಡ್ಡಿಯ ಆಧಾರದಲ್ಲಿ ೨೦ ಲಕ್ಷ ಪಡೆದು ವಂಚನೆ ಎಸಗಿದ್ದಾನೆ ಎನ್ನಲಾ ಗಿದೆ.
ಇಷ್ಟು ಮಾತ್ರವಲ್ಲದೆ ವಂಚಕ ಪೌಲ್ ಮರ್ಸಿಲಿನ್ ಅವರ ಮಗಳ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯಿಂದ ೧.೦೫ ಲಕ್ಷ ರೂ.ವನ್ನು ಇನ್ನೋರ್ವ ಪುತ್ರ ಜೋಯ್‌ಲಿನ್ ಫೆರ್ನಾಂಡಿಸ್ ಅಲಿಯಾಸ್ ದಿಲ್ಲು ಮೂಲಕ ಪಡೆದು ಅದನ್ನೂ ಹಿಂತಿರುಗಿಸದೆ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ನಕಲಿ ಕರಾರು ಪತ್ರ ತಯಾರಿಸಿ ಇದೇ ರೀತಿ ಆರೋಪಿಯು ಹಲವಾರು ಮಂದಿಗೆ ಸುಮಾರು ನಾಲ್ಕು ಕೋ. ರೂ ಅಧಿಕ ವಂಚಿಸಿದ್ದಾನೆ ಎನ್ನಲಾ ಗಿದ್ದು, ವಂಚನೆಗೆ ಒಳಗಾದವರು ಪೊಲೀಸ್ ಠಾಣೆ ಮೆಟ್ಟಿಲೇರುವ ಸಿದ್ಧತೆ ಯಲ್ಲಿದ್ದಾರೆ.
ಉಳ್ಳಾಲ ನಿವಾಸಿ ಅಬ್ದುಲ್ ಅಜೀಜ್ ಎಂಬವರಿಂದ ೧೫ ಲಕ್ಷ ರೂ.ವನ್ನು ಒಂದು ವಾರದ ಅವಧಿಗೆ ಸಾಲ ಎಂದು ಪಡೆದುಕೊಂಡಿದ್ದ ಆರೋಪಿ ಪೌಲ್ ವಂಚನೆ ಎಸಗಿದ್ದು, ತಾನು ಅಂಗಡಿಯ ಬಾಡಿಗೆ ಕಟ್ಟದೇ ಇದ್ದುದರಿಂದ ಮಾಲಕರು ಅಂಗಡಿಗೆ ಬೀಗ ಜಡಿದ ಪರಿಣಾಮ ವಂಚಕ ತಲೆಮರೆಸಿಕೊಂಡಿದ್ದಾಗಿ ಪತ್ರಿಕೆಗೆ ಬಂದ ಮಾಹಿತಿಯಿಂದ ತಿಳಿದಿದೆ.
ವಂಚಕ ಪೌಲ್ ಇದೇ ರೀತಿ ಮರ್ಸಿಲಿನ್ ಡಿ ಸೋಜಾರ ಪುತ್ರ ದಿಲ್ಲು ಫೆರ್ನಾಂಡಿಸ್ ಹೆಸರನ್ನು ಫೈನಾನ್ಸ್‌ವೊಂದರ ಫಂಡ್‌ನಲ್ಲಿ ನೊಂದಾಯಿಸಿ ಅಲ್ಲಿ ೪೦ ಲಕ್ಷ ರೂ. ವಂಚನೆ ನಡೆಸಿರುವುದು ಬಯಲಾಗಿದೆ. ಇಷ್ಟು ಮಾತ್ರವಲ್ಲದೆ ಹಂಪನಕಟ್ಟೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಮಹಿಳೆಯೊಬ್ಬರ ಮನೆಯ ದಾಖಲೆಪತ್ರಗಳನ್ನು ತನ್ನ ಮನೆಯ ದಾಖಲೆಪತ್ರಗಳೊಂದಿಗೆ ಇಟ್ಟು ೮೫ ಲಕ್ಷ ರೂ. ಸಾಲ ಪಡೆದು ಇದೀಗ ತಲೆಮರೆಸಿಕೊಂಡಿದ್ದಾಗಿ ದೂರುಗಳು ಕೇಳಿಬರುತ್ತಿವೆ. ವಂಚಕ ಪೌಲ್ ಇದೇ ರೀತಿ ನಾನಾ ಕಡೆ ಹಲವು ರೀತಿಯಲ್ಲಿ ವಂಚನೆ ಎಸಗಿರುವ ಬಗ್ಗೆ ಪತ್ರಿಕೆಗೆ ಮಾಹಿತಿ ದೊರೆತಿದ್ದು, ವಂಚನೆಗೊಳಗಾ ದವರು ಪೊಲೀಸರ ಮೊರೆ ಹೋಗಲು ಮುಂದಾಗಿದ್ದಾರೆ. ಈ ನಡುವೆ ವಂಚಕ ಮಾತ್ರ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದು, ಕೇರಳ ರಾಜ್ಯದಲ್ಲಿ ತಲೆಮರೆಸಿದ್ದಾನೆ ಎನ್ನಲಾಗುತ್ತಿದೆ.

ಹಾಲಾಡಿ, ಲಾಲಾಜಿ, ಭಟ್ಟರ ಎದೆಯಲ್ಲಿ ಹೆಚ್ಚಿದ ನಡುಕ

Posted by JAYAKIRANA Kirana on | 0 comments | Leave a comment...



ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ
ಉಡುಪಿ: ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರ ಗಳಿದ್ದು, ಇದರಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದ್ದು, ಈ ಬಾರಿಯ ಚುನಾ ವಣೆಯ ವಿಶೇಷಗಳಲ್ಲಿ ಒಂದು ಮತ್ತು ಬಹಳ ಮುಖ್ಯವಾದುದು.
ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದ ಶಾಸಕರಿದ್ದು, ಉಳಿದ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಇದ್ದಾರೆ.
ಕಾಂಗ್ರೆಸ್‌ನ ಗೋಪಾಲ ಭಂಡಾರಿ ಯವರು ಪ್ರತಿನಿಧಿಸುವ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗಿಂತ ೧,೩೧೨ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇಲ್ಲಿ ಸುನಿಲ್‌ಕುಮಾರ್ ಪಡೆದ ಮತ ೫೩,೮೭೯ ಮತ್ತು ಜಯಪ್ರಕಾಶ್ ಹೆಗ್ಡೆ ಪಡೆದ ಮತಗಳು ೫೨,೫೬೭.
ಇದೇ ರೀತಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಸುನಿಲ್ ಕುಮಾರ್ ಜಯಪ್ರಕಾಶ್ ಹೆಗ್ಡೆಯ ವರಿಗಿಂತ ಅಧಿಕ ಮತಗಳನ್ನು ಪಡೆದಿ ದ್ದಾರೆ. ಇಲ್ಲಿ ಬಿಜೆಪಿ ಶಾಸಕರೇ ಇದ್ದ ಕಾರಣ ಇದು ವಿಶೇಷವೇನೂ ಅಲ್ಲ. ಇಲ್ಲಿ ಸುನಿಲ್‌ಕುಮಾರ್ ಪಡೆದ ಮತಗಳು ೪೧,೮೨೭ ಮತ್ತು ಜಯ ಪ್ರಕಾಶ್ ಹೆಗ್ಡೆ ಪಡೆದ ಮತಗಳು ೩೯,೭೦೫. ಬಿಜೆಪಿ, ಕಾಂಗ್ರೆಸ್‌ಗಿಂತ ೨,೧೨೨ ಮತಗಳನ್ನು ಅಧಿಕ ಪಡೆದಿದೆ.
 ಉಳಿದಂತೆ ಆರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷ ಮೇಲುಗೈ ಪಡೆದಿರುವುದು ಬಿಜೆಪಿ ಯಲ್ಲಿ ತೀವ್ರ ತಳಮಳಕ್ಕೆ ಕಾರಣ ವಾಗಿದೆ. ಇಲ್ಲೆಲ್ಲಾ ಬಿಜೆಪಿಯವರೇ ಶಾಸಕರಾಗಿರುವುದು ಇದಕ್ಕೆ ಕಾರಣ ವಾಗಿದೆ.
ಆಡಳಿತ ವಿರೋಧಿ ಅಲೆ ಇಲ್ಲೆಲ್ಲಾ ಇರುವುದು ಸ್ಪಷ್ಟವಾಗಿದ್ದು, ಇದು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿಯೂ ಆಗಬಹುದು ಎನ್ನುವುದು ಬಿಜೆಪಿಯೊಳಗೆ ಕಂಪನ ಮೂಡಿಸಲು ಮೂಲವಾಗಿದೆ.
 ಕಳೆದ ಮೂರು ಚುನಾವಣೆಗಳಲ್ಲಿಯೂ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆದ್ದು ಬರುತ್ತಲೇ ಪಾರಮ್ಯ ಮೆರೆಯುತ್ತಲೇ ಬಂದಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಬಿಜೆಪಿ ಮತ್ತು ಹಾಲಾಡಿಯವರ ಲೆಕ್ಕಾಚಾರ ತಲೆಕೆಳಗಾಗಿದೆ. ಶ್ರೀನಿವಾಸ ಶೆಟ್ಟಿಯವರು ಇಲ್ಲಿ ಪ್ರತಿ ಮನೆಗೂ ಎಂಬಂತೆ ಭೇಟಿ ನೀಡಿ ಸುನಿಲ್ ಕುಮಾರ್ ಅವರಿಗೆ ಮತ ನೀಡುವಂತೆ ಕಳಕಳಿಯಿಂದ ಮನವಿ ಮಾಡಿದ್ದಾರೆ. ಆದರೆ ಮತದಾರರು ಮಾತ್ರ ಈ ಬಾರಿ ಹಾಲಾಡಿಯವರ ವಿನಂತಿಗೆ ಬೆಲೆ ಕೊಡಲಿಲ್ಲ. ನಮ್ಮ ಮತ ಬಿಜೆಪಿಗಲ್ಲ, ನಿಮಗೆ ಮಾತ್ರ ಎಂಬ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ. ಇಲ್ಲಿ ಬಿಜೆಪಿಗಿಂತ ೯,೧೧೧ ಮತಗಳನ್ನು ಕಾಂಗ್ರೆಸ್ ಹೆಚ್ಚು ಪಡೆದಿದೆ. ಕಾಂಗ್ರೆಸ್- ೬೩,೫೫೦. ಬಿಜೆಪಿ- ೫೪,೪೩೯. ಇದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿವರ ಗೆಲುವೆಂದೇ ಹೇಳಲಾಗುತ್ತಿದೆ.
 ಉಡುಪಿಯಲ್ಲಿ ಕಾಂಗ್ರೆಸ್ ಪಡೆದ ಮತಗಳು ೬೩,೨೪೭. ಬಿಜೆಪಿ ಪಡೆದ ಮತಗಳು ೫೧,೮೨೪. ಇಲ್ಲಿ ೧೧,೪೨೩ ಮತಗಳನ್ನು ಬಿಜೆಪಿಗಿಂತ ಕಾಂಗ್ರೆಸ್ ಹೆಚ್ಚುವರಿಯಾಗಿ ಪಡೆದಿದೆ. ಈ ಬದಲಾವಣೆ ಇಲ್ಲಿನ ಶಾಸಕ ಬಿಜೆಪಿಯ ಕೆ.ರಘುಪತಿ ಭಟ್ಟರಲ್ಲಿ ನಡುಕ ಹುಟ್ಟಿಸಿದೆಯಾದರೆ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಅವರಲ್ಲಿ ಮಂದಹಾಸ ಮೂಡಿಸಿದೆ.
 ಕಾಪು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆಯವರು ೫೦,೪೫೦ ಮತಗಳನ್ನು ಪಡೆದು, ೪೫,೧೭೧ ಮತಗಳನ್ನು ಪಡೆದ ಸುನಿಲ್ ಕುಮಾರ್ ಅವರಿಗಿಂತ ೫,೨೭೯ ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದರಿಂದಾಗಿ ಕಳೆದ ಎರಡು ಬಾರಿಯೂ ಬಿಜೆಪಿಯ ಲಾಲಾಜಿ ಆರ್.ಮೆಂಡನ್ ಅವರಿಂದ ಸೋಲುಂಡ ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ಅವರಲ್ಲಿ ಮತ್ತೆ ಶಾಸಕರಾಗುವ ಹೊಸ ಕನಸು ಸೃಷ್ಟಿಸಿದೆ. ಶೃಂಗೇರಿಯಲ್ಲಿ ಕಾಂಗ್ರೆಸ್‌ಗೆ- ೪೭,೪೯೬ ಮತ್ತು ಬಿಜೆಪಿಗೆ- ೪೧,೭೪೩. ಅಂತರ- ೫,೭೫೩. ಮೂಡಿಗೆರೆಯಲ್ಲಿ ಕಾಂಗ್ರೆಸ್- ೪೦,೯೪೯ ಮತ್ತು ಬಿಜೆಪಿ- ೩೨,೧೩೬. ಅಂತರ- ೮,೮೧೩. ತರಿಕೆರೆಯಲ್ಲಿ ಕಾಂಗ್ರೆಸ್- ೪೦,೭೫೯ ಮತ್ತು ಬಿಜೆಪಿ- ೩೧,೯೭೮. ಅಂತರ- ೮,೭೮೧.

Page1

Posted by JAYAKIRANA Kirana on | 0 comments | Leave a comment...

Page2

Posted by JAYAKIRANA Kirana on | 0 comments | Leave a comment...

Page3

Posted by JAYAKIRANA Kirana on | 0 comments | Leave a comment...

Page4

Posted by JAYAKIRANA Kirana on | 0 comments | Leave a comment...

Page5

Posted by JAYAKIRANA Kirana on | 0 comments | Leave a comment...

Page6

Posted by JAYAKIRANA Kirana on | 0 comments | Leave a comment...

ವಿವಾಹಿತೆ ಪ್ರಿಯಕರನೊಂದಿಗೆ ಪರಾರಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ‘ನಿಮ್ಮೊಂದಿಗೆ ಬದುಕಲು ಇಷ್ಟವಿಲ್ಲ. ನಾನು ಇಷ್ಟಪಟ್ಟ ವನೊಂದಿಗೆ ಬದುಕಲು ಮಕ್ಕಳನ್ನು ಕೂಡಿ ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ೩೪ರ ಹರೆಯದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಪರಾರಿ ಯಾಗಿದ್ದಾರೆ.
ಕುಂಬಳೆ ಠಾಣಾ ವ್ಯಾಪ್ತಿಯ ನಯಾ ಬಜಾರ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ, ಕೂಲಿ ಕಾರ್ಮಿಕನ ಪತ್ನಿ ತನ್ನ ೧೦ ವರ್ಷ ಪ್ರಾಯದ ಗಂಡು ಹಾಗೂ ಎಂಟರ ಹರೆಯದ ಹೆಣ್ಣು ಮಗುವಿನ ಜತೆ ಪತಿಯನ್ನು ತೊರೆದಿದ್ದಾಳೆ. ಈ ಬಗ್ಗೆ ಪತಿ ನೀಡಿದ ದೂರಿನನ್ವಯ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದು, ಮಾ. ೧೭ರಿಂದ ತನ್ನ ಪತ್ನಿ ಹಾಗೂ ಮಕ್ಕಳು ನಾಪತ್ತೆಯಾಗಿರು ವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮನೆ ಬಿಟ್ಟು ತೆರಳುವ
ವೇಳೆ ಮಹಿಳೆ ಬರೆದಿಟ್ಟಿದ್ದ ಪತ್ರವು ಲಭಿಸಿದ್ದು, ಅದರಲ್ಲಿ ಗಂಡನೊಂದಿಗೆ ಬಾಳಲು ಇಷ್ಟವಿಲ್ಲದ ಕಾರಣ ಪ್ರಿಯಕರನೊಂದಿಗೆ ಹೋಗಿರುವುದಾಗಿ ಉಲ್ಲೇಖಿಸಲಾಗಿದೆ. ಪರಾರಿಯಾದ ಮಹಿಳೆಯ ಕುಟುಂಬ ಈ ಹಿಂದೆ ವಾಸವಿದ್ದ ಇದೇ ಪ್ರದೇಶದ ಯುವಕನೋರ್ವನೂ ಕಳೆದ ಕೆಲ ದಿನಗಳಿಂದ ನಾಪತ್ತೆಯಾ ಗಿರುವುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಯುವಕನೊಂದಿಗೆ ಈಕೆ ಪರಾರಿಯಾ ಗಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಆರೋಪಿಗಳ ಸೆರೆಗೆ ಒತ್ತಾಯಿಸಿ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಹಾಯ್ ಉಡುಪಿ ಸಂಪಾದಕರಿಗೆ ಹಲ್ಲೆ
ಉಡುಪಿ: ಹಾಯ್ ಉಡುಪಿ ಮಾಸಿಕದ ಸಂಪಾದಕರಾದ ಪ್ರಕಾಶ್ ಪೂಜಾರಿಯವರ ಮೇಲೆ ಹಲ್ಲೆ ನಡೆಸಿ, ಅಮೂಲ್ಯ ಸೊತ್ತುಗಳನ್ನು ಸುಲಿಗೆ ಮಾಡಿದ ಬಿಜೆಪಿ ಕಾರ್ಯಕರ್ತರನ್ನು ಯಾವುದೇ ರಾಜಕೀಯ ಒತ್ತಡಗಳಿಗೂ ಒಳಗಾಗದೆ ಬಂಧಿಸಬೇಕೆಂದು ಒತ್ತಾ ಯಿಸಿ ಕರ್ನಾಟಕ ಜನಪರ ವೇದಿಕೆ ಮಂಗಳವಾರ ಜಿಲ್ಲಾ ಪೊಲೀಸ್ ಅಧೀ ಕ್ಷಕರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿತು.
 ಕರ್ನಾಟಕ ಜನಪರ ವೇದಿಕೆಯ ಸಂಚಾಲಕ ಶ್ರೀರಾಮ ದಿವಾಣ, ದಸಂಸ ನಾಯಕರಾದ ಜಯನ್ ಮಲ್ಪೆ, ಗಣೇಶ್ ನೆರ್ಗಿ ಹಾಗೂ ಸುಂದರಿ ಪುತ್ತೂರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಪತ್ರಕರ್ತರ ಯೂನಿಯನ್ ರಾಜ್ಯಾಧ್ಯಕ್ಷ ಬೆಳಗಾವಿಯ ಎಂ.ಬಿ.ಶಿವಪೂಜಿ, ಉಪಾಧ್ಯಕ್ಷ ಹೊನ್ನಾವರದ ಗೌರೀಶ್ ಶಾಸ್ತ್ರೀ, ಉತ್ತರ ಕನ್ನಡ ಜಿಲ್ಲಾ ಉಪಾಧ್ಯಕ್ಷ ಭಟ್ಕಳದ ಶಂಕರ ನಾಯಕ್, ದಸಂಸ ಪ್ರಮುಖರಾದ ಯುವರಾಜ್ ಪುತ್ತೂರು, ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ರಸೂಲ್ ಕಟಪಾಡಿ, ಪ್ರಮುಖರಾದ ವಿನೋದಾ ನಾಯ್ಕ, ಮೊಹಮ್ಮದ್ ಹಂದಟ್ಟು, ವಿಲ್ಫಿ ಶಂಕರಪುರ, ಹಾಯ್ ಉಡುಪಿ ಸಂಪಾದಕ ಪ್ರಕಾಶ್ ಪೂಜಾರಿ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.
 ಧರಣಿಯ ಬಳಿಕ ಎಸ್‌ಪಿ ಡಾ.ಬೋರಲಿಂಗಯ್ಯ ಅವರನು ಭೇಟಿಯಾದ ಪ್ರತಿಭಟನಾ ನಿರತರು, ಎಸ್‌ಪಿಯವರಿಗೆ ಮನವಿ ಸಲ್ಲಿಸಿದರು. ಪ್ರಕಾಶ್ ಪೂಜಾರಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕ್ಯಾಮರಾ, ಸ್ಕೂಟರ್ ಮತ್ತು ೨ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಬಲವಂತವಾಗಿ ಸುಲಿಗೆ ಮಾಡಿದ ಆರೋಪಿಗಳನ್ನು ಯಾವುದೇ ರಾಜಕೀಯ ಒತ್ತಡಗಳಿಗೂ ಒಳಗಾಗದೆ ಕೂಡಲೇ ಬಂಧಿಸುವಂತೆ ಪ್ರತಿಭಟನಾಕಾರರು ಎಸ್‌ಪಿಯವರನ್ನು ಒತ್ತಾಯಿಸಿದರು.
ಘಟನೆ ನಡೆದ ದಿನ ರಾತ್ರಿ ಗಾಯಾಳು ಪ್ರಕಾಶ್ ಪೂಜಾರಿಯವರು ನೀಡಿದ ದೂರು ಸ್ವೀಕರಿಸದೆ, ಆರೋಪಿಗಳೊಂದಿಗೆ ರಾಜಿಯಾಗುವಂತೆ ಒತ್ತಡ ಹಾಕಿದ ಮಲ್ಪೆ ಠಾಣೆಯ ಪೊಲೀಸ್ ಸಿಬ್ಬಂದಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪ್ರತಿಭಟನಾಕಾರರು ಎಸ್‌ಪಿಯವರನ್ನು ಆಗ್ರಹಿಸಿದರು.
 ಮನವಿ ಸ್ವೀಕರಿಸಿ, ಪ್ರತಿಭಟನಾಕಾರರ ಅಹವಾಲನ್ನು ಕೇಳಿಸಿಕೊಂಡ ಎಸ್‌ಪಿ ಡಾ.ಬೋರಲಿಂಗಯ್ಯ ಅವರು, ಯಾವುದೇ ರೀತಿಯ ರಾಜಕೀಯ ಒತ್ತಡಕ್ಕೂ ಒಳಗಾಗದೆ ಕೆಲವೇ ದಿನಗಳ ಒಳಗೆ ಆರೋಪಿಗಳನ್ನು ಬಂಧಿ ಸುವುದಾಗಿ ಭರವಸೆ ನೀಡಿದರು.

ತಟಸ್ಥ ನಿಲುವಿಗಂಟಿದ ಕರಾವಳಿ ಶಾಸಕರು

Posted by JAYAKIRANA Kirana on | 0 comments | Leave a comment...

ಬಿಜೆಪಿಯಲ್ಲಿ ನಾಯಕತ್ವ ವಿವಾದ
ಮಂಗಳೂರು: ತಾನು ಮುಖ್ಯ ಮಂತ್ರಿ ಪಟ್ಟಕ್ಕೆ ಏರಲೇ ಬೇಕು ಎಂಬ ಹಠಕ್ಕೆ ಬಿದ್ದು ಹೋರಾಡುತ್ತಿರುವ ಯಡಿಯೂರಪ್ಪ ಬಿಜೆಪಿಯಲ್ಲಿ ತಳಮಳವನ್ನುಂಟು ಮಾಡಿದ್ದಾರೆ. ಡಿ.ವಿ. ಸದಾನಂದ ಗೌಡರನ್ನು ಪದ ಚ್ಯುತಗೊಳಿಸಲೇಬೇಕು ಎಂದು ಯಡ್ಡಿ ಪರ ಶಾಸಕರು ಹೋರಾಡುತ್ತಲೇ ಇದ್ದಾರೆ. ರಾಜ್ಯದ ಬಹುತೇಕ ಶಾಸ ಕರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟು ಜಿದ್ದಿನ ರಾಜಕೀಯಕ್ಕೆ ರಂಗು ಮೂಡಿಸುತ್ತಿದ್ದರೆ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಶಾಸಕರು ತಮ್ಮಷ್ಟಕ್ಕೆ ತಾವು ತಮ್ಮ ಕ್ಷೇತ್ರದಲ್ಲಿ ಓಡಾಡಿ ಅಭಿವೃದ್ಧಿ ಕಾರ್ಯ ಕ್ರಮಗಳಲ್ಲಿ ಭಾಗಿಯಾಗುವ ಇಲ್ಲವೇ ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸುವ ಕಾರ್ಯದಲ್ಲಿ ನಿನ್ನೆಯವರೆಗೂ ನಿರತರಾಗಿದ್ದರು. ಬೆಂಗಳೂರಿನಲ್ಲಿ ನಿನ್ನೆಯವರೆಗೂ ರೆಸಾರ್ಟ್ ರಾಜಕೀಯ ನಡೆಯುತ್ತಿದ್ದರೆ, ಇಂದಿನ ಬಜೆಟ್ ಅದಿವೇಶನದಲ್ಲಿ ಭಾಗವಹಿಸಲು ಇಲ್ಲಿಯ ಶಾಸಕರು ಹೊರಟಿದ್ದು ಸೋಮವಾರ ರಾತ್ರಿ ಮತ್ತೆ ಕೆಲವರು ಮಂಗಳವಾರ ಮಧ್ಯಾಹ್ನದ ಬಳಿಕ ತೆರಳಲಿದ್ದಾರೆ.
ದ.ಕ. ಹಾಗೂ ಉಡುಪಿ ಜಿಲ್ಲೆಗಳು ಬಿಜೆಪಿಯ ಶಕ್ತಿ ಕೇಂದ್ರಗಳೆನಿಸುತ್ತವೆ. ಇಲ್ಲಿನ ನಾಯಕರು ತಳೆಯುವ ನಿರ್ಧಾರ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುತ್ತದೆ. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಕರಾವಳಿಯ ಶಾಸಕರು ತಾಳ್ಮೆ ಹಾಗೂ ತಟಸ್ಥ ನಿಲುವಿನ ಪ್ರತಿಕ್ರಿಯೆಯನ್ನೇ ನೀಡುತ್ತ ಬಂದಿದ್ದಾರೆ. ಈ ಹಿಂದೆ ಯಡಿಯೂರಪ್ಪರ ವಿರುದ್ಧ ಶಾಸಕರು ಬಂಡಾಯ ಎದ್ದಾಗಲೂ ಕರಾವಳಿಯ ಶಾಸಕರು ಆದದ್ದಾಗಲಿ ನೋಡೋಣ ಎಂಬ ನಿಲುವು ಪ್ರದ ರ್ಶಿಸಿದ್ದರು. ಈಗಲೂ ಅಂತಹದ್ದೇ ಪ್ರ್ರತಿಕ್ರಿಯೆ ನೀಡಿದ್ದಾರೆ.
ಕರಾವಳಿಯ ಶಾಸಕರದ್ದು ವ್ಯಕ್ತಿಗಿಂತ ಪಕ್ಷ ನಿಷ್ಠೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ನಡೆಯುತ್ತಾರೆ. ಕರಾವಳಿಯವರೇ ಮುಖ್ಯಮಂತ್ರಿಯಾಗಿದ್ದರೂ ಅವರ ಪರವಾಗಿ ನಿಲ್ಲ್ಲದೆ ಪಕ್ಷದ ಬೆಳವಣಿಗೆಗೆ ಬದ್ಧರಾಗಿ ಸಾಗುವ ನಿಲುವು ಪ್ರದರ್ಶಿಸಿದ್ದಾರೆ. ಕರಾವಳಿಯ ಶಾಸಕರು ರೆಸಾರ್ಟ್ ರಾಜಕೀಯಕ್ಕೆ ಒಗ್ಗಿಕೊಂಡವರೇ ಅಲ್ಲ ಎಂಬ ಆದರ್ಶ ಮೆರೆದಿದ್ದಾರೆ.
 ಸೋಮವಾರ ಯೋಗೀಶ್ ಭಟ್, ಪಾಲೇಮಾರ್, ಮಲ್ಲಿಕಾ ಪ್ರಸಾದ್, ಅಂಗಾರ ತಮ್ಮ ಕ್ಷೇತ್ರದ ಪ್ರಗತಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ. ರಘು ಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಲಾಲಾಜಿ ಮೆಂಡನ್ ಪಕ್ಷದ ಕಾರ್ಯ ಕರ್ತರ ಅಹವಾಲು ಆಲಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಪಾಲೇಮಾರ್ ಈಗ ರಿಲ್ಯಾಕ್ಸ್

Posted by JAYAKIRANA Kirana on | 0 comments | Leave a comment...

ಮಂಗಳೂರು: ತನ್ನದಲ್ಲದ ತಪ್ಪಿಗೆ ಸಚಿವ ಸ್ಥಾನ ತ್ಯಜಿಸಬೇಕಾಗಿ ಬಂದ ಕೃಷ್ಣ ಪಾಲೇಮಾರರು ಈಗ ಮತ್ತೆ ಸಚಿವರಾಗುವ ಅವಕಾಶಗಳು ತೆರೆದು ಕೊಂಡಿವೆ.
ಸದನದಲ್ಲಿ ಅಶ್ಲೀಲ ವಿಡಿಯೋ ದೃಶ್ಯ ವೀಕ್ಷಿಸಿದ ವೃಥಾ ಆರೋಪಕ್ಕೆ ಒಳಗಾಗಿದ್ದ ಪಾಲೇಮಾರರು ನಿಷ್ಪಕ್ಷಪಾತ ತನಿಖೆಗೆ ಆಸ್ಪದ ನೀಡುವ ಉದ್ದೇಶದಿಂದ ಆಕ್ಷಣದಲ್ಲಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಅವರ ವಿರೋಧಿ ಬಳಗ ಪಾಲೇಮಾರರ ರಾಜಕೀಯ ಕತೆ ಇಲ್ಲಿಗೆ ಮುಗಿಯಿತು ಎಂದೇ ಬಿಂಬಿ ಸಿತ್ತು. ಆದರೆ ಪರಿಸ್ಥಿತಿ ಬದಲಾಗಿದೆ. ಸದನದಲ್ಲಿ ಅಶ್ಲೀಲ ವಿಡಿಯೋ ದೃಶ್ಯ ವೀಕ್ಷಿಸಿದ ಪ್ರಕರಣದಲ್ಲಿ ಪಾಲೇ ಮಾರರು ನಿರ್ದೋಷಿ ಎಂದು ಬಿಜೆಪಿ ಶಾಸಕ ಶ್ರೀಶೈಲಪ್ಪ ಬಿದರೂರು ನೇತೃತ್ವದ ಸದನ ಸಮಿತಿ ಸ್ಪಷ್ಟವಾಗಿ ಹೇಳಿದೆ. ಮಾತ್ರ ವಲ್ಲ ಲಕ್ಷ್ಮಣ ಸವದಿ ತಾನು ಪ್ರಕರಣ ದಲ್ಲಿ ಸಿಲುಕಿಕೊಂಡಾಗ ತಾನೋ ರ್ವನೇ ಇದರಲ್ಲಿ ಭಾಗಿಯಲ್ಲ ಎಂದು ಹೇಳಿ ಪ್ರಕರಣದಿಂದ ಪಾರಾಗುವ ಉದ್ದೇಶ ದಿಂದ ಪಾಲೇಮಾರರ ಮೇಲೆ ಸುಳ್ಳು ಆರೋಪ ಮಾಡಿದ್ದರು ಎಂದು ಕೂಡ ಸದನ ಸಮಿತಿ ಸ್ಪಷ್ಟಪಡಿಸಿದೆ.
ಪಾಲೇಮಾರರಿಗೆ ತಾನು ನಿರ್ದೋಷಿ ಎಂಬ ಬಗ್ಗೆ ಆತ್ಮ ವಿಶ್ವಾಸ ಇದ್ದುದ ರಿಂದಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಧೈರ್ಯ ತೋರಿದ್ದರು. ಆದರೆ ಅವರ ಅಂದಿನ ಪ್ರತಿಕ್ರಿಯೆಯನ್ನು ಲೇವಡಿ ಮಾಡಿದವರೇ ಹೆಚ್ಚು. ವಿರೋಧ ಪಕ್ಷಗಳಿಗಿಂತ ದ.ಕ. ಜಿಲ್ಲೆಯ ಬಿಜೆಪಿಯ ನಾಯಕರೇ ಪಾಲೇಮಾರರ ಬಗ್ಗೆ ನಿರ್ಲಕ್ಷಿತ ಭಾವ ತೋರಿದ್ದು ವ್ಯಕ್ತವಾಗುತ್ತಿತ್ತು. ಅವರ ಪರವಾಗಿ ನಿಂತ ಸ್ಥಳೀಯ ಕಾರ್ಪೋರೇಟರ್‌ಗಳು ಹಾಗೂ ಸ್ಥಳೀಯ ಕಾರ್ಯಕರ್ತರಿಗೂ ಬಿಜೆಪಿಯ ನಾಯಕರು ಬೆದರಿಸುವ ಎಚ್ಚರಿಕೆ ನೀಡಿದ್ದರು. ಈಗ ಪಾಲೇಮಾರ್ ನಿರ್ದೋಷಿಯಾಗಿದ್ದಾರೆ. ಬಜೆಟ್ ಮಂಡನೆಯ ಬಳಿಕ ನಡೆಯುವ ಸಚಿವ ಸಂಪುಟ ಪುನಾರಚನೆಯಲ್ಲಿ ಅವರು ದ.ಕ. ಜಿಲ್ಲೆಯ ಪ್ರತಿನಿಧಿಯಾಗಿ ಮತ್ತೆ ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ತಮ್ಮನ್ನು ಹೀಯಾಳಿಸಿದ ಹಾಗೂ ನಿರ್ಲಕ್ಷಿಸಿ ದವರಿಗೆ ಜಿಲ್ಲೆಯ ಅಭಿವೃದ್ಧಿ ರೂಪದಲ್ಲಿ ಯಾವ ರೀತಿ ಉತ್ತರ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ರೌಡಿ ಸುಲೈಮಾನ್ ಹಂತಕರಿಗೆ ಜಾಮೀನು

Posted by JAYAKIRANA Kirana on | 0 comments | Leave a comment...

ಕಾರ್ಕಳ: ರೌಡಿ ಬಂಗ್ಲಗುಡ್ಡೆ ಸುಲೈಮಾನ್ ಹತ್ಯೆಗೈದ ನಾಲ್ವರು ಆರೋಪಿಗಳಿಗೆ ಕಾರ್ಕಳ ನ್ಯಾಯಾ ಲಯ ಜಾಮೀನು ನೀಡಿದೆ.
ಪ್ರವೀಣ, ಸೋಮು, ವಿಶ್ವನಾಥ್ ಕೋಡಿಕೆರೆ, ಮಾಡೂರು ಶಿವರಾಜ್ ಎಂಬ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇವರು ಕೆಲ ತಿಂಗಳ ಹಿಂದೆ ಸುಲೈಮಾನ್‌ನನ್ನು ಕಡಿದು ಹತ್ಯೆ ಗೈದಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾಗಿರುವ ಭರತ್ ಹಾಗೂ ಓರ್ವ ಮಹಿಳೆ ಇನ್ನೂ ಪತ್ತೆಯಾಗಿಲ್ಲ.

ಕಲಾಪ ಬಹಿಷ್ಕಾರ ಕೈಬಿಟ್ಟ ವಕೀಲರು

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮಾ.೨ರಂದು ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸು ವಂತೆ ಒತ್ತಾಯಿಸಿ ನ್ಯಾಯಾಲಯ ಕಲಾಪ ಬಹಿಷ್ಕರಿಸುತ್ತಿದ್ದ ವಕೀಲರು ಪ್ರತಿಭಟನೆ ಕೈಬಿಡುವ ನಿರ್ಧಾರ ಕೈಗೊಂಡಿದ್ದಾರೆ.
ನಿನ್ನೆಯೂ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರನ್ನು ಭೇಟಿ ಮಾಡಿದ ಸಚಿವ ಅಶೋಕ್, ಎಸ್. ಸುರೇಶ್ ಕುಮಾರ್ ಈ ಬಗ್ಗೆ ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ ಅವರ ವರದಿ ಆಧರಿಸಿ ಶಿಸ್ತು ಕ್ರಮ ಕೈಗೊ ಳ್ಳುವುದಾಗಿ ಭರವಸೆ ನೀಡಿದರು.

ಪ್ರೀತಿಸಿ ವಂಚಿಸಿದ ಕೊನೆಗೆ ಕೆಲಸವನ್ನೇ ಕಳೆದುಕೊಂಡ!

Posted by JAYAKIRANA Kirana on | 0 comments | Leave a comment...

ಮಂಗಳೂರು: ಪ್ರೀತಿಸಿದ ಯುವತಿಗೆ ಕೈ ಕೊಟ್ಟು ಕೊನೆಗೆ ಯುವತಿಯ ಅಣ್ಣಂದಿರಿಂದ ಅಪಹಣರಕ್ಕೆ ಒಳಗಾಗಿದ್ದ ತಿಲಕ್ ರಾಜ್ ಇದೀಗ ಕೆಲಸವನ್ನೇ ಕಳೆದುಕೊಂಡಿದ್ದಾನೆ.
ಆರು ವರುಷದಿಂದ ಬೆಂಗರೆ ನಿವಾಸಿ ಯುವತಿಯನ್ನು ಪ್ರೀತಿಸಿ ಮದುವೆಯ ವಿಷಯ ಬಂದಾಗ ನೆಪ ಹೇಳುತ್ತಾ ಕಾಲ ಕಳೆಯುತ್ತಿದ್ದ ತಿಲಕ್‌ರಾಜ್‌ಗೆ ಬುದ್ದಿ ಕಲಿಸಲು ಮುಂದಾಗಿದ್ದ ಯುವತಿಯ ಅಣ್ಣಂದಿರು ಆತನನ್ನು ಆತ ದುಡಿಯುತ್ತಿದ್ದ ಬ್ಯಾಂಕಿನಿಂದಲೇ ಅಪಹರಿಸಿದ್ದರು. ಇದೀಗ ಈ ಘಟನೆ ತಿಲಕ್‌ರಾಜ್ ದುಡಿಯುತ್ತಿದ್ದ ಬ್ಯಾಂಕಿಗೆ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿದ ಬ್ಯಾಂಕ್ ಆಡಳಿತ ಮಂಡಳಿ ತಿಲಕ್‌ರಾಜ್‌ನನ್ನು ಕೆಲಸದಿಂದ ವಜಾ ಮಾಡಿದೆ ಎಂದು ತಿಳಿದುಬಂದಿದೆ. ಯುವತಿಯ ಅಣ್ಣಂದಿರು ಆತನಿಗೆ ಸಾಕಷ್ಟು ಬಾರಿ ತಿಳಿ ಹೇಳಿದ್ದರೂ ಅದನ್ನು ಆತ ಕಡೆಗಣಿ ಸಿದ್ದೇ ಅಪಹರಣಕ್ಕೆ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ಪೊಲೀಸರು ಬರುವುದು ಒಂದು ತಾಸು ತಡವಾಗಿದ್ದರೂ ತಿಲಕ್‌ರಾಜ್‌ನ ಮದುವೆ ನಡೆದು ಹೋಗುವುದರಲ್ಲಿತ್ತು ಎಂದು ತಿಳಿದುಬಂದಿದೆ. ವಿಶೇಷ ಎಂದರೆ ಅಪಹರಿಸಿದವರೂ ಅಪಹರಣಕ್ಕೆ ಒಳಗಾದವನೂ ಇಬ್ಬರೂ ಬಜರಂಗಿಗಳಾಗಿದ್ದಾರೆ.

ಮುಖ್ಯಮಂತ್ರಿ ಮುಂಗಡ ಪತ್ರ ಮಂಡಿಸಲು ಅಭ್ಯಂತರವಿಲ್ಲ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮುಖ್ಯಮಂತ್ರಿ ಸದಾನಂದಗೌಡರು ಇಂದು ವಿಧಾನಸಭೆ ಯಲ್ಲಿ ಮುಂಗಡ ಪತ್ರ ಮಂಡಿಸಲು ತಮ್ಮ ಅಭ್ಯಂತರವಿಲ್ಲ ಎಂದು ಯಡಿಯೂರಪ್ಪ ಬಣ ಇಂದಿಲ್ಲಿ ಸ್ಪಷ್ಟಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾ ಡಿದ ಸಚಿವ ಬಸವರಾಜ್ ಬೊಮ್ಮಾಯಿ ಸುಮಾರು ೭೦ಕ್ಕೂ ಹೆಚ್ಚು ಶಾಸಕರು ಬಿ.ಎಸ್.ಯಡಿಯೂರಪ್ಪ ಜತೆಗಿದ್ದಾರೆ. ವರಿಷ್ಠರಿಗೆ ಸಂಖ್ಯಾಬಲ ತೋರಿಸುವ ನಿಟ್ಟಿನಲ್ಲಿಯೇ ರೆಸಾರ್ಟ್ ವಾಸ್ತವ್ಯ ಹೂಡಿರುವುದಾಗಿ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯವರು ನಾಳೆ ಮುಂಗಡ ಪತ್ರ ಮಂಡಿಸಲು ವಿರೋಧ ವ್ಯಕ್ತಪಡಿಸಬಾರದು ಎಂದು ನಾಯಕರು ಸಲಹೆ ಮಾಡಿದ್ದಾರೆ. ಅದರಂತೆ ನಡೆದುಕೊಳ್ಳುತ್ತೇವೆ. ಜೊತೆಗೆ ನಾವು ಸದನದಲ್ಲಿ ಭಾಗವಹಿಸುವ ಬಗ್ಗೆಯು ಬೆಳಿಗ್ಗೆ ವಿಚಾರ ಮಾಡುವುದಾಗಿ ತಿಳಿಸಿದರು.
ಸಚಿವರುಗಳು ಮಾತ್ರ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆದರೆ ಬೆಂಬಲಿಗ ಸಚಿವರು ಇದರಿಂದ ದೂರ ಉಳಿಯಲಿದ್ದಾರೆ.
ಯಡಿಯೂರಪ್ಪ ಅವರನ್ನು ಬೆಂಬಲಿಸಿ, ಶಾಸಕರ ಸಂಖ್ಯಾಬಲ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ಬಗ್ಗೆ ವರಿಷ್ಠರು ಸ್ಪಷ್ಟ ನಿರ್ಧಾರ ಕೈಗೊ ಳ್ಳಲಿದ್ದಾರೆ.
ನಾವು ಪಕ್ಷ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿಲ್ಲ. ನಮ್ಮ ಬೇಡಿಕೆ ಈಡೇರಿಸುವಂತೆ ಪಕ್ಷದ ನಾಯಕರ ಮನವೊಲಿಸುತ್ತಿದ್ದೇವೆ ಎಂದರು.

ವರಿಷ್ಠರ ಬೆದರಿಕೆಗೆ ಮಣಿದ ಯಡಿಯೂರಪ್ಪ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವರಿಷ್ಠರ ಬೆದರಿಕೆಗೆ ಮಣಿದ ಯಡಿಯೂರಪ್ಪ ಅವರಿಗೆ ಮಾ. ೩೦ರ ನಂತರ ಅಧಿಕಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಯಡಿಯೂರಪ್ಪರಿಗೆ ಮತ್ತು ಮುಖ್ಯಮಂತ್ರಿ ಸ್ಥಾನ ನೀಡದಂತೆ ಯಾವುದಾದರೂ ಹುದ್ದೆ ನೀಡುವ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರಲ್ಲೇ ವಿಭಿನ್ನ ನಿಲುವು ಹೊಂದಿದ್ದಾರೆ. ದೆಹಲಿಯ ಪ್ರಮುಖ ನಾಯಕರು ಶೇ. ಐವತ್ತಷ್ಟು ಯಡಿಯೂರಪ್ಪರ ಪರವಾಗಿಯೇ ನಿಂತಿದ್ದರೆ ಉಳಿದವರು ಗೌಡರ ಪರ ಇದ್ದಾರೆ. ಹೀಗಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಯಡಿಯೂರಪ್ಪರಿಗೆ ಅಧಿಕಾರ ನೀಡಬೇಕೆಂದು ಸಮರ್ಥಿಸಿಕೊಳ್ಳುವವರಷ್ಟೇ ಅದನ್ನು ಅಷ್ಟೇ ಮಂದಿ ವಿರೋಧಿಸುವವರೂ ಇದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಮಧ್ಯ ಪ್ರವೇಶಿಸಿ ತಾತ್ಕಾಲಿಕ ಶಮನ ನೀಡಿದೆ. ಯಡಿಯೂರಪ್ಪ ಮಾತ್ರ ತಮ್ಮ ಪಟ್ಟು ಬಿಡದೆ ಮಾ. ೩೦ರವರೆಗೆ ಕಾಯಲು ತೀರ್ಮಾನಿಸಿದ್ದಾರೆ.

ಫೇಸ್‌ಬುಕ್ ಅವಾಂತರ: ವಿದ್ಯಾರ್ಥಿಗಳಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಫೇಸ್‌ಬುಕ್‌ನಲ್ಲಿ ತಮ್ಮನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾನೆ ಎಂದು ಆರೋಪಿಸಿ ವಿದ್ಯಾರ್ಥಿಗಳ ತಂಡವೊಂದು ಯುವಕನೊಬ್ಬನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ನಿನ್ನೆ ಬೆಳಿಗ್ಗೆ ವಿಟ್ಲ ಪೇಟೆಯಲ್ಲಿ ನಡೆದಿದ್ದು, ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಮಹೇಶ್‌ಕುಮಾರ್, ಯುವರಾಜ್, ಗುರುರಾಜ್, ಸಂತೋಷ, ಚರಣ್ ಬಂಧಿತ ಆರೋಪಿಗಳು.
ವಿಟ್ಲದ ಬೊಬ್ಬೆಕೇರಿ ನಿವಾಸಿ ಶ್ರೀಕೃಷ್ಣ (೨೨) ಎಂಬಾತನೇ ಗಂಭೀರ ರೀತಿಯಲ್ಲಿ ಗಾಯಗೊಂಡು ಮಂಗ ಳೂರು ಆಸ್ಪತ್ರೆಗೆ ದಾಖಲಾದವರು. ಕಳೆದ ಕೆಲ ದಿನಗಳಿಂದ ಶ್ರೀಕೃಷ್ಣ ಹಾಗೂ ವಿಟ್ಲ ಕಾಲೇಜಿನ ವಿದ್ಯಾ ರ್ಥಿಗಳ ನಡುವೆ ವೈಮನಸ್ಸಿತ್ತು. ಶ್ರೀಕೃಷ್ಣ ಸೋಮವಾರ ಫೇಸ್‌ಬುಕ್‌ನಲ್ಲಿ ತಮ್ಮನ್ನು ಅವಹೇಳನಕಾರಿಯಾಗಿ ನಿಂದಿಸಿದ್ದಾನೆ ಎಂದು ಆರೋಪಿಸಿ ಶ್ರೀಕೃಷ್ಣ ವಿಟ್ಲದ ಎಂಪಾರ್ ಮಾಲ್ ಬಳಿಯಲ್ಲಿರುವ ಬ್ಯಾಂಕ್‌ವೊಂದರಿಂದ ಹೊರಬರುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳ ತಂಡ ಆತನಿಗೆ ಹಲ್ಲೆ ನಡೆಸಿತ್ತು. ಘಟನೆ ವಿಷಯ ತಿಳಿದ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಹಾಗೂ ಸಿಬ್ಬಂದಿ ಸೇರಿದ್ದ ಗುಂಪನ್ನು ಚದುರಿ ಸಿದರು. ಈ ಸಂದರ್ಭ ಐವರು ವಿದ್ಯಾರ್ಥಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಹಲ್ಲೆಕೋರರ ತಂಡದಲ್ಲಿ ಮಹೇಶ್‌ಕುಮಾರ್, ಯುವರಾಜ್, ಗುರುರಾಜ್, ಸಂತೋಷ್, ಚರಣ್, ಮಹೇಶ್ ಕನ್ಯಾನ, ಸುಶಾಂತ್, ಯುವರಾಜ್, ಸುನೀಲ್, ಹೇಮಂತ್, ತಾರನಾಥ್ ಹಾಗೂ ಇತರ ಅನೇಕರ ತಂಡ ಶ್ರೀಕೃಷ್ಣನಿಗೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಆರೋಪಿಸಿ ಈ ಬಗ್ಗೆ ಹತ್ತು ಮಂದಿ ವಿದ್ಯಾರ್ಥಿಗಳ ವಿರುದ್ಧ ಆತ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾನೆ. ವಿಟ್ಲ ಪೊಲೀಸರು ಬಂಧಿಸಿದ್ದ ಐವರು ವಿದ್ಯಾರ್ಥಿಗಳು ನಿನ್ನೆ ಸಂಜೆಯೇ ವಿಟ್ಲ ಠಾಣೆಯಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಶ್ರೀಕೃಷ್ಣ ಹಾಗೂ ವಿಟ್ಲ ಕಾಲೇಜಿನ ವಿದ್ಯಾರ್ಥಿ ಗಳು ಈ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು. ಕ್ಷುಲ್ಲಕ ವಿಚಾರಕ್ಕೆ ಇವರ ನಡುವೆ ಪರಸ್ಪರ ವೈಮನಸು ಉಂಟಾಗಿತ್ತು ಎನ್ನಲಾಗಿದೆ.
ಪ್ರತಿದೂರು: ಬೊಬ್ಬೆಕೇರಿ ನಿವಾಸಿ ಶ್ರೀಕೃಷ್ಣ ಎಂಬಾತ ನಮಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಟ್ಲ ಸ್ಥಳೀಯ ಕಾಲೇಜಿನ ವಿದ್ಯಾರ್ಥಿಗ ಳಾದ ತಾರನಾಥ ಹಾಗೂ ಹೇಮಂತ್ ಎಂಬವರು ವಿಟ್ಲ ಠಾಣೆಗೆ ಪ್ರತಿದೂರು ನೀಡಿದ್ದಾರೆ.

ಡಿಜಿಪಿ ವರದಿ: ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಜನಾರ್ದನ ರೆಡ್ಡಿಯವರನ್ನು ಕೋರ್ಟ್‌ಗೆ ಹಾಜರುಪಡಿಸುವ ಸಂದರ್ಭದಲ್ಲಿ ಮಾಧ್ಯಮ-ವಕೀಲರ ಮಧ್ಯೆ ಸಂಘರ್ಷ ತಾರಕಕ್ಕೆ ಏರುವುದಕ್ಕೆ ಕೇಂದ್ರ ವಿಭಾಗದ ಡಿಸಿಪಿ ಡಾ. ಜಿ. ರಮೇಶ್ ಅವರ ಅಜಾಗರುಕತೆಯೇ ಕಾರಣ ಎಂದು ಸಿಐಡಿ ಡಿಜಿಪಿ ಆರ್.ಕೆ. ದತ್ತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಈ ವರದಿ ಆಧರಿಸಿ ತುರ್ತು ಕ್ರಮ ಕೈಗೊಂಡಿರುವ ಸರ್ಕಾರ ಡಿಸಿಪಿ ರಮೇಶ್, ಹಲಸೂರು ಗೇಟ್ ಉಪವಿಭಾಗದ ಎಸಿಪಿ ಜಿತೇಂದ್ರನಾಥ್ ಅವರನ್ನು ಎತ್ತಂಗಡಿ ಮಾಡಿದೆ. ಈ ಮೂಲಕ ಕಳೆದ ೧೮ ದಿನಗಳಿಂದ ವಕೀಲರು ನಡೆಸುತ್ತಿದ್ದ ಮುಷ್ಕರ ತಾರ್ಕಿಕ ಅಂತ್ಯ ಕಾಣುವ ಹಂತ ತಲುಪಿದೆ.
ಇದಕ್ಕಿಂತ ಮುಖ್ಯವಾಗಿ ವರದಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಕರ್ತವ್ಯ ನಿರ್ವಹಣೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಮಿರ್ಜಿ ಖುದ್ದು ಹಾಜರಿದ್ದರೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆಂಬ ಗಂಭೀರ ಆರೋಪ ವರದಿಯಲ್ಲಿದೆ.
ಹಲಸೂರು ಗೇಟ್‌ಉಪ ವಿಭಾಗದ ಎಸಿಪಿ ಜಿತೇಂದ್ರನಾಥ್ ಸಿಸಿಬಿಗೆ ವರ್ಗಾವಣೆಗೊಂಡಿದ್ದರೆ ಸೆಂಟ್ರಲ್ ವಿಭಾಗದ ಡಿಸಿಪಿ ರಮೇಶ್ ಈಶಾನ್ಯ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

ಬಿಜೆಪಿ ಸಂಘರ್ಷ ಅಧಿವೇಶನದ ಮೇಲೆ ಪರಿಣಾಮ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬಿಜೆಪಿಯಲ್ಲಿ ನಡೆದಿ ರುವ ಆಂತರಿಕ ಸಂಘರ್ಷಗಳು ನಿನ್ನೆಯ ವಿಧಾನಸಭಾ ಅಧಿವೇಶನದ ಮೇಲೆ ಪರಿಣಾಮ ಬೀರಿದ್ದು, ಸಚಿವರು, ಶಾಸ ಕರು ಸೇರಿದಂತೆ ಬಿಜೆಪಿಯ ೫೭ ಮಂದಿ ಮಾತ್ರ ವಿಧಾನಸಭೆಯ ಕಲಾಪದಲ್ಲಿ ಭಾಗಿಯಾಗಿದ್ದರು.
ಪಕ್ಷದಲ್ಲಿನ ಆಂತರಿಕ ಗೊಂದಲ ಗಳ ಕರಿಛಾಯೆಯ ನಡುವೆಯೇ ಆರಂಭವಾದ ವಿಧಾನಮಂಡಲದ ಅಧಿ ವೇಶನದಲ್ಲಿ ಯಡಿಯೂರಪ್ಪ ಬಣದ ಇಬ್ಬರು ಸಚಿವರು, ಮೂವರು ಶಾಸಕರು ಮಾತ್ರ ಭಾಗವಹಿಸಿದ್ದು, ಉಳಿದಂತೆ ತಟಸ್ಥ ಹಾಗೂ ಆರ್.ಎಸ್.ಎಸ್‌ನ ಶಾಸಕರು ಸದನದಲ್ಲಿ ಭಾಗಿಯಾಗಿದ್ದರು.
ಇಂದಿನ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಸೇರಿ ದಂತೆ ೧೩ ಮಂದಿ ಸಚಿವರು ಪಾಲ್ಗೊಂ ಡಿದ್ದರು. ಉಳಿದಂತೆ ಬಿಜೆಪಿಯ ೪೪ ಮಂದಿ ಶಾಸಕರು ವಿಧಾನಸಭಾ ಅದಿ ವೇಶನದಲ್ಲಿ ಹಾಜರಿದ್ದರು.
ಮುಖ್ಯಮಂತ್ರಿ ಸೇರಿದಂತೆ ಸಚಿ ರಾದ ಸುರೇಶ್‌ಕುಮಾರ್, ಜಗದೀಶ್ ಶೆಟ್ಟರ್, ಸಿ.ಎಂ.ಉದಾಸಿ, ಗೋವಿಂದ ಕಾರಜೋಳ, ಆರ್.ಅಶೋಕ್, ಬಿ.ಎನ್. ಬಚ್ಚೇಗೌಡ, ರವೀಂದ್ರನಾಥ್, ವರ್ತೂರ್ ಪ್ರಕಾಶ್, ರಾಮದಾಸ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂದ್ ಅಸ್ನೋಟಿಕರ್, ಎ.ನಾರಾಯಣಸ್ವಾಮಿ, ಬಾಲಚಂದ್ರ ಜಾರಕಿಹೊಳಿ, ಸಿ.ಪಿ. ಯೋಗೇಶ್ವರ್.
ಬಿಜೆಪಿ ಒಟ್ಟು ಶಾಸಕರ ಸಂಖ್ಯೆ ೧೧೯ ಆಗಿದ್ದು, ಇಂದಿನ ಕಾಲಾಪದಲ್ಲಿ ೫೭ ಶಾಸಕರು ಮಾತ್ರ ಪಾಲ್ಗೊಂಡಿದ್ದು, ಉಳಿದೆಲ್ಲ ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪನವರು ಜೊತೆ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ.
ಇಂದಿನ ಕಲಾಪದಲ್ಲಿ ಭಾಗಿಯಾದ ಶಾಶಕರು, ಸಚಿವರ ಪೈಕಿ ಐದು ಮಂದಿ ಯಡಿಯೂರಪ್ಪನವರ ಜತೆ ಗುರುತಿಸಿ ಕೊಂಡವರು ಸೇರಿದ್ದಾರೆ. ಸೂಚನೆಯ ಮೇರೆಗೆ ಈ ಐದು ಮಂದಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.
ಆದರೆ ಬಳ್ಳಾರಿ ಶಾಸಕರು ಕಲಾಪ ದಲ್ಲಿ ಭಾಗವಹಿಸಲಿಲ್ಲ.

ಗಣೇಶ್ ಆಚಾರ್ಯ ನಿಧನ

Posted by JAYAKIRANA Kirana on | 0 comments | Leave a comment...

ಹಳೆಯಂಗಡಿ: ಇಲ್ಲಿನ ದುರ್ಗಾ ಪರಮೇಶ್ವರಿ ಮಠದ ಬಳಿಯ ನಿವಾಸಿ ಗಣೇಶ್ ಅಚಾರ್ಯ(೫೨) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಪ್ರಥಮ ರಾಜ್ಯ ಪ್ರಶಸ್ತಿ ವಿಜೇತ ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಮಾಜಿ ಅಧ್ಯಕ್ಷ, ಪ್ರಸ್ತುತ ಸಲಹಾ ಸಮಿತಿಯ ಸದಸ್ಯರಾ ಗಿದ್ದು, ಉತ್ತಮ ವಾಲಿಬಾಲ್ ಆಟಗಾರ, ವಾಲಿಬಾಲ್ ತೀರ್ಪುದಾರರಾಗಿದ್ದರು. ಜನತಾ ದಳ ಕಾರ್ಯಕರ್ತರಾಗಿದ್ದು ತಾಲೂಕು ಪಂಚಾಯತಿನ ಮಾಜಿ ಸದಸ್ಯರಾಗಿದ್ದರು. ತಾಯಿ, ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಚಿನ್ನಾಭರಣ ಕಳವು: ದಂಪತಿ ಬಂಧನ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ತಾಲೂಕಿನ ಗುರು ವಾಯನಕೆರೆ ಸಮೀಪದ ಮನೆ ಯೊಂದರಿಂದ ಚಿನ್ನಾಭರಣ ಕಳವು ಗೈದಿದ್ದ ದಂಪತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿಯ ಪರಮೇಶ್ವರ ಎಂಬವರ ಮನೆಯಿಂದ ಮಾ. ಎಂಟರಂದು ಸುಮಾರು ನಾಲ್ಕು ಪವನ್ ತೂಕದ ಸರ ಹಾಗೂ ಒಂದು ಪವನ್ ತೂಕದ ಸರವನ್ನು ಕಳವುಗೈಯ್ಯಲಾಗಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದಾಗ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಮೂಲತಃ ತಮಿಳುನಾಡಿನ ನಿವಾಸಿ ಪ್ರಸ್ತುತ ಹಾಸ ನದ ಚನ್ನಪಟ್ಟಣದಲ್ಲಿ ವಾಸವಾಗಿರುವ ರಾಜಾ ಅಲಿಯಾಸ್ ನಾಗರಾಜ ಗೌಡ (೩೪) ಹಾಗೂ ಆತನ ಪತ್ನಿ ಅಂಬಿಕಾ ಅಲಿಯಾಸ್ ಪುಷ್ಪಾ (೨೪) ಎಂಬವರನ್ನು ವಿಚಾರಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಆರೋಪಿಗಳು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಹಾಸನದ ಬ್ಯಾಂಕ್‌ವೊಂದರಲ್ಲಿ ಅಡವಿಟ್ಟಿದ್ದರು.

ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ತಂದೆ -ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬೆದರಿಸಲು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿ ಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಚೇತನ್ (೨೩) ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ. ೧೪ರಂದು ಈತ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ

ಯುವತಿಯರು ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಬ್ರಹ್ಮಾವರ ಸಮೀಪದ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್‌ಕಟ್ಟೆಯ ಸುಮತಿ ಎಂಬವರ ಪುತ್ರಿ ರಮ್ಯಾ (೧೮) ಹಾಗೂ ಮೊಳಹಳ್ಳಿ ಗ್ರಾಮದ ಇಂದ್ರಜಯ ಎಂಬವರ ಪುತ್ರಿ ಗೌತಮಿ(೧೮) ಕಾಣೆಯಾದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾ.೧೫ರಂದು ಬೆಳಗ್ಗೆ ಜನಗಣತಿ ಕೆಲಸಕ್ಕೆ ಕುಂದಾಪುರಕ್ಕೆ ಹೊಗುತ್ತೇವೆ ಎಂದು ತೆರಳಿದವರು ರಾತ್ರಿ ಹತ್ತು ಗಂಟೆಗೆ ಪೋನ್‌ಮಾಡಿ ಬೆಂಗ ಳೂರಿನಲ್ಲಿ ಇರುವುದಾಗಿ ಸುಮತಿಗೆ ತಿಳಿಸಿದ್ದರು. ಅದರ ಬಳಿಕ ಇವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಟ್ಯಾಂಕರ್ ಡಿಕ್ಕಿ: ಗಾಯಾಳು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಕಂಪಾಡಿ ಬಳಿ ಟ್ಯಾಂಕರೊಂದು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 'ಬಯ್ಯ' ಎಂದು ಕರೆಯಲ್ಪಡುತ್ತಿದ್ದ ಈ ಮೃತ ವ್ಯಕ್ತಿಯ ವಾರೀಸುದಾರರು ಇದ್ದಲ್ಲಿ ಪಣಂಬೂರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

ಅಧ್ಯಕ್ಷರ ಪರ ಹೇಳಿಕೆ, ಕಾರ್ಯದರ್ಶಿಗೆ ದಿಗ್ಬಂಧನ

Posted by JAYAKIRANA Kirana on | 0 comments | Leave a comment...

ಹರೇಕಳ ಪಂಚಾಯತ್‌ಗೆ ಡಿಫಿ ಮುತ್ತಿಗೆ

 

ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದಾಗಲೇ ಪೊಲೀಸರು ಪಿಡಿಓ ವಿವೇಕಾನಂದ ರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಪಿಡಿಓ, ತಾನು ಸಭೆಯಲ್ಲಿದ್ದು ಕೆಲವೇ ನಿಮಿಷಗಳಲ್ಲಿ ಬರುವುದಾಗಿ ತಿಳಿಸಿದ್ದರು. ಅವರನ್ನು ೧.೩೦ರವರೆಗೆ ಕಾದರೂ ಬರಲಿಲ್ಲ. ಪ್ರತಿಬಾರಿ ಕರೆ ಮಾಡಿದಾಗಲೂ ಬರುತ್ತ ಇರುವುದಾಗಿ ರೀಲು ಬಿಡುತ್ತಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಮಸ್ಯೆಯ ಬಗ್ಗೆ ಚರ್ಚೆ ಮುಗಿದ ಬಳಿಕ ಆಕ್ರೋಶದಿಂದಲೇ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಇಂದೇ ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ಹೇಳಿದರು. ಮುಂದುವರಿಸಿದ ಅವರು ಪ್ರತಿಯೊಬ್ಬರಿಗೂ ಕುಡಿಯುವ ನೀರು ನೀಡಬೇಕಾಗಿದ್ದು ಆಡಳಿತಗಾರರ ಕರ್ತವ್ಯವಾಗಿದೆ. ತಾಲೂಕು ಅಧಿಕಾರಿಗಳು ಹರೇಕಳದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಪ್ರತೀ ಕಾರ್ಯಕ್ರಮದಲ್ಲೂ ಭಾಗವಹಿಸುವ ಶಾಸಕರು ಹರೇಕಳದಲ್ಲಿರುವ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಜಿ.ಪಂ. ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಸಿಲ್ಲ ಎಂದು ಕಿಡಿಕಾರಿದರು.

 

ಮಂಗಳೂರು: ಹರೇಕಳದಲ್ಲಿ ಕಳೆದ ಕೆಲವು ದಿನಗಳಿಂದ ಕಾಡುತ್ತಿ ರುವ ನೀರಿನ ಸಮಸ್ಯೆಯನ್ನು ಕಡೆಗಣಿ ಸಿದ್ದ ಆಡಳಿತಗಾರರು ಮತ್ತು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ನಿನ್ನೆ ಪಂಚಾಯತ್ ಕಾರ್ಯದರ್ಶಿಗೆ ದಿಗ್ಬಂಧನ ಹಾಕಿದರು.

ಕಳೆದ ಒಂದು ತಿಂಗಳಿಂದ ಹರೇಕಳ ಗ್ರಾಮ ನ್ಯೂಪಡ್ಪು, ಬಾವಲಿ ಗುರಿ, ಮಲಾರ್ ಕೋಡಿ, ಕೊಜ ಪಾಡಿ ಸೈಟ್, ನಾಗಮೂಲೆ ದಲಿತ ಕಾಲನಿ, ಬೈತಾರ್, ಮಲೆಕೆದು ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇದೇ ವೇಳೆ ನೀರು ಸರಬರಾಜು ಮಾಡುವವರು ತಮಗೆ ಬೇಕಾದವರಿಗೆ ನೀರು ಪೂರೈಕೆ ಮಾಡುತ್ತಿದ್ದು ತೋಟಕ್ಕೂ ನೀಡು ತ್ತಿದ್ದಾರೆ ಎನ್ನಲಾಗುತ್ತಿದೆ. ಗ್ರಾಮಸಭೆ ಮತ್ತು ಪಂಚಾಯತ್‌ಗೆ ಸಂಬಂಧ ಪಟ್ಟ ಕಾರ್ಯಕ್ರಮ ಇದ್ದರೆ ಆ ದಿನ ನೀರು ಪೂರೈಕೆ ಸಮರ್ಥವಾಗಿ ರುತ್ತದೆ. ಇದರ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ನೀಡಿದ್ದು ಪ್ರಯೋ ಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿನ್ನೆ ಡಿವೈಎಫ್‌ಐ ನೇತೃತ್ವ ದಲ್ಲಿ ಪಂಚಾಯತ್‌ಗೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಪಿಡಿಓ ಮತ್ತು ಅಧ್ಯಕ್ಷರು ಬಾರದೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಆರಂ ಭದಲ್ಲೇ ಎಚ್ಚರಿಸಿದ್ದರು. ಈ ಹಿನ್ನೆಲೆ ಯಲ್ಲಿ ಪೊಲೀಸರು ಅಧ್ಯಕ್ಷರು ಮತ್ತು ಪಿಡಿಓಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅರ್ಧ ಗಂಟೆ ಕಳೆದರೂ ಸಂಬಂಧಪಟ್ಟವರು ಬಾರದ ಕಾರಣ ಡಿಫಿ ಮುಖಂಡ ರಫೀಕ್ ಮತ್ತು ಇತರರು ಕಾರ್ಯದರ್ಶಿ ಅಬೂಬ ಕ್ಕರ್ ಅವರನ್ನು ಸಂಪರ್ಕಿಸಿ ಸಂಬಂ ಧಪಟ್ಟವರಿಗೆ ಕರೆ ಮಾಡಿ ಬರಲು ತಿಳಿಸುವಂತೆ ಮನವಿ ಮಾಡಿದರು.

ಆ ವೇಳೆ ಅಬೂಬಕ್ಕರ್ ಕರೆ ಮಾಡುವ ಬದಲು ಅಧ್ಯಕ್ಷರ ಪರವಾ ಗಿಯೇ ಮಾತನಾಡಿದರು. ಇದರಿಂದ ಆಕ್ರೋಶಗೊಂಡ ಮುಖಂಡರು ಗ್ರಾಮಸ್ಥರ ಜೊತೆ ಸೇರಿ ಪಂಚಾ ಯತ್ ಕಚೇರಿಯ ಬಾಗಿಲ ಬಳಿ ಕುಳಿತು ಕಾರ್ಯದರ್ಶಿಗೆ ದಿಗ್ಬಂಧನ ಹಾಕಿ ಧಿಕ್ಕಾರ ಘೋಷಣೆ ಕೂಗಿ ದರು. ಈ ಸಂದರ್ಭ ಪರಿಸ್ಥಿತಿ ಕೈತ ಪ್ಪುವ ಲಕ್ಷಣ ಕಂಡು ಬಂದ ಕಾರಣ ಪೊಲೀಸರು ಮಧ್ಯೆ ಪ್ರವೇಶಿಸಿ ಮುಖಂ ಡರ ಮನವೊಲಿಸುವ ಯತ್ನ ಮಾಡಿ ದ್ದಲ್ಲದೆ ಗ್ರಾಮಸ್ಥರು ಪಂಚಾಯತ್ ನೊಳಗೆ ಪ್ರವೇಶಿಸದಂತೆ ತಡೆದರು.

೧೨.೩೦ರ ವೇಳೆಗೆ ಆಡಳಿತ ಪಕ್ಷದ ಮೂವರು ಸದಸ್ಯರು ಸ್ಥಳಕ್ಕೆ ಆಗಮಿಸಿ ರೀಲು ಬಿಡಲು ಆರಂಭಿಸಿದಾಗ ಗ್ರಾಮ ಸ್ಥರು ಅವರ ವಿರುದ್ಧವೇ ಹರಿಹಾ ಯ್ದರು. ೧.೧೫ರ ವೇಳೆಗೆ ಅಧ್ಯಕ್ಷರು ಆಗಮಿಸಿದಾಗ ಪ್ರತಿಭಟನಾಕಾರರು ಅವರ ವಿರುದ್ದವೂ ಧಿಕ್ಕಾರ ಕೂಗಿದರು. ಬಳಿಕ ಡಿಫಿ ಮುಖಂಡರು ಅವರ ಜೊತೆ ಮಾತುಕತೆ ನಡೆಸಿದಾಗ ರಾಜ ಕೀಯ ಮೇಳೈಸಿ ಮಾತಿನ ಚಕಮ ಕಿಯೂ ನಡೆಯಿತು. ಕೊನೆಗೆ ಪೊಲೀ ಸರು ಮತ್ತು ಡಿಫಿ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಎಲ್ಲರನ್ನೂ ಸಮಾಧಾನ ಪಡಿಸಿ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಉತ್ತರಿ ಸಿದ ಅಧ್ಯಕ್ಷರು ನಾಳೆ ತುರ್ತು ಸಭೆ ಕರೆಯುವುದು ಹಾಗೂ ಅದಕ್ಕೂ ಮೊದಲು ಇರುವ ನೀರಲ್ಲೇ ಗ್ರಾಮಸ್ಥರಿಗೆ ಸಮಾನವಾಗಿ ಹಂಚುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಮುಖಂಡರು ಮುಂದಿನ ಮಂಗಳ ವಾರದೊಳಗೆ ನೀರು ಸಮಸ್ಯೆ ಬಗೆಹರಿ ಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವು ದಾಗಿ, ಆ ವೇಳೆ ಅನಾಹುತ ನಡೆದರೆ ಪಂಚಾಯತ್ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿದ್ದರಿಂದ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡರಾದ ಇಸ್ಮಾಯಿಲ್, ರಫೀಕ್, ಇಮ್ರಾನ್, ಗ್ರಾಮಸ್ಥರಾದ ಸುಂದರ ಪೂಜಾರಿ, ನೇಮು ಮುಖಾರಿ, ಆನಂದ ಸಾಲ್ಯಾನ್, ರುಕಿಯಾ, ಸಕೀನಾ, ಸುಮತಿ, ಯಮುನಾ ಉಪಸ್ಥಿತರಿದ್ದರು.

ಕಾಸರಗೋಡು: ಆಹಾರ ಪೂರೈಕೆ ಗೋದಾಮಿಗೆ ವಿಜಿಲೆನ್ಸ್ ದಾಳಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಇಲ್ಲಿನ ಕಾಪರೇಟಿವ್ ಮಾರ್ಕೆಟಿಂಗ್ ಆಂಡ್ ಪ್ರೊಸೆಸ್ಸಿಂಗ್ ಸೊಸೈಟಿ (ಕೆಬಿಎಂಪಿ) ನಾಗರಿಕ ಆಹಾರ ಪೂರೈಕೆ ಗೋದಾಮಿಗೆ ವಿಜಿಲೆನ್ಸ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ವಿಜಿಲೆನ್ಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನಾಯರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ರೇಷನ್ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋ ಪದ ಮೇಲೆ ರಾಜ್ಯದೆಲ್ಲೆಡೆ ದಾಳಿ ನಡೆ ಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿರುವ ಗೋದಾಮಿಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀ ಲಿಸಲಾಗಿದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದುದು ನಿಜ ಎನ್ನುವ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ. ಈ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ತಾಯಿ-ಮಗು ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ನಾಗುರಿ ಯಲ್ಲಿ ವಾಸವಾಗಿದ್ದ ಹನುಮಂತ ಎಂಬವರ ಪತ್ನಿ ನಾಗರತ್ನಮ್ಮ ಯಾನೆ ಸುಮಿತ್ರಾ(೨೧)ಎಂಬಾಕೆ ಒಂದೂವರೇ ವರ್ಷದ ಮಗು ಶಿವಕುಮಾರ್ ನಾಪತ್ತೆ ಯಾಗಿರುವುದಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಸರಿಹಾಳ ದವರಾಗಿದ್ದಾರೆ. ಮಾ.೪ರಂದು ಮಧ್ಯಾಹ್ನ ಮನೆಗೆ ದಿನಬಳಕೆಯ ವಸ್ತುಗಳನ್ನು ತರಲು ಸ್ಟೇಟ್ ಬ್ಯಾಂಕ್ ಬಳಿಯ ಮಾರುಕಟ್ಟೆಗೆ ತೆರಳಿದ್ದು ಮರಳಿ ಬಂದಾಗ ಪತ್ನಿ ಹಾಗೂ ಮಗು ಕಾಣೆಯಾಗಿದ್ದರು. ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಅವರಿಬ್ಬರು ಸುರತ್ಕಲ್ ಕೃಷ್ಣಾಪುರದಲ್ಲಿ ವಾಸವಾಗಿದ್ದ ಬೆಳಗಾವಿ ಮೂಲದ ಶಿವು ಎಂಬಾತನೊಂದಿಗೆ ಹೋಗಿದ್ದನ್ನು ಶಿವಪ್ಪ ಎಂಬವರು ನೋಡಿದ್ದಾರೆ ಎಂಬುದು ತಿಳಿಯಿತು. ಬೆಳಗಾವಿಯಲ್ಲಿ ಹುಡುಕಿದರೂ ಅವರು ಸಿಕ್ಕಿಲ್ಲ ಎಂದು ಹನುಮಂತ ದೂರಿನಲ್ಲಿ ತಿಳಿಸಿದ್ದಾರೆ.

ಪೈಪ್‌ಲೈನ್ ಅಳವಡಿಕೆಗೆ ನಾಡ ಮೀನುಗಾರರ ಪ್ರತಿಭಟನೆ ಸಿದ್ಧತೆ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಮುಕ್ಕ ಪರಿಸರದಲ್ಲಿ ಎಂಎಸ್‌ಇಝಡ್ ವತಿಯಿಂದ ಸಮು ದ್ರಕ್ಕೆ ಹಾಕಲ್ಪಡುವ ಪೈಪ್‌ಲೈನ್‌ನಿಂದಾಗಿ ಮೀನುಗಾರರು ತೀವ್ರ ತರದ ತೊಂದರೆಯನ್ನು ಅನುಭವಿಸಬೇಕಾ ಗುತ್ತದೆ ಎಂಎಸ್‌ಇಝಡ್ ಸಂಸ್ಥೆಯ ವರು ತನ್ನ ವ್ಯಾಪ್ತಿಯೊಳಗೆ ಬರುವ ಉದ್ದಿಮೆಗಳ ಪಟ್ಟಿಯನ್ನು ಬಹಿ ರಂಗಗೊಳಿಸದೆ ಕೇವಲ ೨ ಅಥವಾ ೩ ಉದ್ದಿಮೆಯ ತ್ಯಾಜ್ಯದ ವಿವರವನ್ನು ನೀಡಿ ನಿಜಾಂಶಗಳನ್ನು ಮುಟ್ಟಿದ್ದು ಮೀನುಗಾರರಿಗೆ ಮೋಸವೆಸಗುವ ಹುನ್ನಾರ ನಡೆಯುತ್ತಿದೆ.
 ಎಂಎಸ್‌ಇಝಡ್ ಎಲ್ಲಾ ಉದ್ದಿಮೆಗಳ ತ್ಯಾಜ್ಯ ಒಟ್ಟಾಗಿ ಸಮುದ್ರ ಸೇರಿದಲ್ಲಿ ಮೀನುಗಾರಿಕೆ ಮಾಡುವ ಹಾಗೂ ಆ ಪ್ರದೇಶದ ಮೀನು ತಿನ್ನುವ ಜನರು ಭಯಾನಕ ಕಾಯಿಲೆಗೆ ತುತ್ತಾ ಗುವ ಸಂಭವ ಹೆಚ್ಚಿದೆ. ಇದರಿಂದಾಗಿ ಈ ಪರಿಸರದ ಸುಮಾರು ೧೦ ಸಾವಿರ ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುವುದರಿಂದ ಅಭಿವೃ ದ್ದಿಯ ಹೆಸರಿನಲ್ಲಿ ಇಷ್ಟು ಕುಟುಂಬಗಳು ಬೀದಿಪಾಲಾಗುವ ಸಂಭವವನ್ನು ತಪ್ಪಿಸುವ ಅಗತ್ಯವಿದೆ. ಈ ಪ್ರಯುಕ್ತ ಎಂಎಸ್‌ಇಝಡ್ ಸಂಸ್ಥೆಯವರು ಮೀನುಗಾರರ ಕುಟುಂಬಸ್ಥರಿಗೆ ಉದ್ಯೋಗ ಹಾಗೂ ಪರಿಹಾರ ಮೊತ್ತ ವನ್ನು ಮಂಜೂರು ಮಾಡದೆ ಪೈಪ್‌ಲೈನ್ ಹಾಕುತ್ತಿರುವುದು ನಾಡದೋಣಿ ಮೀನುಗಾರಿಕೆಯನ್ನು ನಂಬಿರುವಂತಹ ಮೀನುಗಾರರ ಸಮುದಾಯಕ್ಕೆ ಅನ್ಯಾಯವೆಸಗುತ್ತಿದ್ದಾರೆ.
ಈ ವಿಷಯದ ಮನವಿಯನ್ನು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್‌ರವರಿಗೆ ಸಲ್ಲಿಸಿದ್ದು ಅವರು ಜಿಲ್ಲಾಧಿಕಾರಿಗೆ ಈ ಪತ್ರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿ ರುತ್ತಾರೆ. ಆದರೆ ಸಂಸ್ಥೆಯವರು ಇಷ್ಟರ ವರೆಗೆ ಯಾವುದೇ ಸಭೆಯನ್ನು ಕರೆ ಯದೆ ಪೈಪ್‌ಲೈನ್ ಅಳವಡಿಕೆಗೆ ಮುಂದಾಗಿರುವುದಕ್ಕೆ ಯತೀಶ್ ಬೈಕಂಪಾಡಿ ಉಗ್ರ ಹೋರಾಟ ಮಾಡು ವುದಾಗಿ ತಿಳಿಸಿದ್ದಾರೆ.

ಸಮಾಜಸೇವಕಿ ರಾಧಾದಾಸ್ ಮೇಲೆ ಅಟ್ಯಾಕ್?

Posted by JAYAKIRANA Kirana on | 0 comments | Leave a comment...

ಕುಂದಾಪುರ: ಸಮಾಜಸೇವಕಿ ಜೆಡಿಎಸ್ ಪಕ್ಷದ ಕಾರ‍್ಯಕರ್ತೆ ಕುಂಭಾ ಶಿಯ ರಾಧಾದಾಸ್ ಮೇಲೆ ಚುನಾ ವಣಾ ದಿನ ರಾತ್ರಿ ಮನೆಯ ಸಮೀಪ ಹಲ್ಲೆ ನಡೆಸಲಾಗಿದೆ ಎಂದು ನಿನ್ನೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಜರಗಿದ್ದು ಪ್ರಕರಣದ ಹಿಂದೆ ಹಲವು ಊಹಾ ಪೋಹಗಳು ಸದ್ದು ಮಾಡುತ್ತಿವೆ.

ಹಲ್ಲೆಗೊಳಗಾಗಿ ಆಸ್ಪತ್ರೆಯ ಮಂಚದ ಮೇಲೆ ಮಲಗಿರುವ ರಾಧಾ ದಾಸ್ ಪೊಲೀಸರಲ್ಲಿ ದೂರಿಕೊಂಡ ಪ್ರಕಾರ ಚುನಾವಣಾ ದಿನ ತಾನು ಜೆಡಿಎಸ್ ಪರ ಚುನಾವಣಾ ಪ್ರಕ್ರಿಯೆ ಗಳಲ್ಲಿ ಪಾಲ್ಗೊಂಡಿದ್ದು, ಸಂಜೆ ೭ರ ಸುಮಾರಿಗೆ ಮನೆಗೆ ಬಂದಾಗ ಫ್ರಿಡ್ಜ್ ಹಾಳಾಗಿದ್ದು, ಅದನ್ನು ರಿಪೇರಿ ಮಾಡು ವವನನ್ನು ಸಂಪರ್ಕಿಸಲು ಮನೆಯ ಅನತಿ ದೂರದಲ್ಲಿರುವ ರಸ್ತೆಯಲ್ಲಿ ಸಾಗುತ್ತಿದ್ದೆ. ಆ ಸಂದರ್ಭದಲ್ಲಿ ಮಾರುತಿ ಕಾರೊಂದು ೨-೩ ರೌಂಡ್ ಹಾಕಿ ತನ್ನ ಬಳಿಗೆ ಬಂದು ನಿಂತಿತ್ತು. ಅದ ರಿಂದ ಇಳಿದ ಸಂತೋಷ್ ದೇವಾ ಡಿಗ, ಸುನಿಲ್ ಹಾಗೂ ಸುಮಂತ್ ಎಂಬವರು 'ಎನೇ ರಂ ... ನೀನು ರಾಮಕೃಷ್ಣ ಹೇರ್ಳಾರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುತ್ತೀಯಾ ಎಂದು ತೀರಾ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದರಲ್ಲದೆ ಕೈಯಲ್ಲಿ ದೊಣ್ಣೆಯಿಂದ ಒಂದೇ ಸಮನೆ ಹಲ್ಲೆ ಮಾಡಿ ನಿನ್ನ ಮಗನನ್ನು ನೋಡಿ ಕೊಳ್ಳುತ್ತೇವೆ ಎಂದೆನ್ನುತ್ತಾ ಮತ್ತೆ ಮತ್ತೆ ಹಲ್ಲೆ ಮಾಡಿ ತಾನು ಜ್ಞಾನ ತಪ್ಪಿ ಉರುಳಿದಾಗ ಸತ್ತು ಹೋದೆನೆಂದು ಭಾವಿಸಿ ಜಾಗ ಖಾಲಿ ಮಾಡಿದರು. ತುಂಬಾ ಸಮಯದ ನಂತರ ಆ ದಾರಿಯಾಗಿ ಕಾರಿನಲ್ಲಿ ಸಾಗುತ್ತಿದ್ದ ಜಗನ್ನಾಥ ಹಾಗೂ ಪದ್ಮಿನಿ ಎನ್ನು ವವರು ತನ್ನ ನರಳಾಟ ಕೇಳಿ ಮನೆಗೆ ತಲುಪಿಸಿ ಹೋಗಿದ್ದಾರೆ ಎನ್ನುವುದು ರಾಧಾ ದಾಸ್ ದೂರಿನ ಸಾರಾಂಶ. ರಾಧಾದಾಸ್ ಹಾಗೂ ರಾಮಕೃಷ್ಣ ಹೇರ್ಳೆ ಯವರ ನಡುವಿನ ಶೀತಲ ಸಮರ ಇಂದು ನಿನ್ನೆಯದಲ್ಲ. ಒಬ್ಬರನ್ನೊಬ್ಬರು ಹಣಿಯಲೆತ್ನಿಸುವ ಅವರ ಮಹಾಭಾರತ ಸಮರ ಇಡೀ ಕುಂಭಾಶಿ ಪರಿಸರ ದಲ್ಲಿಯೇ ಕುಖ್ಯಾತಿ ಗಳಿಸಿದೆ. ಈ ಮಹಾಭಾರತ ಸಮರದ ಮುಂದಿನ ಅಂಗವಾಗಿ ನಿನ್ನೆ ನರಳಾಡುತ್ತಾ ಸರ್ಕಾರಿ ಆಸ್ಪತ್ರೆಯ ಮೇಲೆ ಮಲಗಿರುವ ರಾಧಾದಾಸ್ ಬೇಕೆಂದೇ ಹೇರ್ಳೆಯವರ ಹೆಸರನ್ನು ಬಳಸಿದ್ದಾರೆಂದು ಆರೋಪಿಸಲಾ ಗುತ್ತಿದೆ. ವಿಚಿತ್ರವೆಂದರೆ ತನ್ನ ಮೇಲೆ ಭಾನುವಾರ ರಾತ್ರಿ ಭೀಕರ, ಮಾರ ಣಾಂತಿಕ ಹಲ್ಲೆಯಾಗಿದೆಯೆಂದು ಬಣ್ಣಿಸಿ ಹೇಳುವ ರಾಧಾದಾಸ್‌ರ ಜಾಗದಲ್ಲಿ ಬೇರೆ ಯಾವ ಗಾಯಾಳು ಆಗಿದ್ದರೂ ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುತ್ತಿದ್ದರು. ಆದರೆ ಎರಡು ದಿನದ ತನಕ ಅಷ್ಟೂ ನೋವನ್ನು ಸಹಿಸಿ ಕೊಂಡ ರಾಧಾದಾಸ್ ನಿನ್ನೆ ತಾನೇ ಆಸ್ಪತ್ರೆಗೆ ಬಂದು ಮಲಗಿರುವುದರ ಹಿಂದೆ ಯಾರನ್ನೋ ಹಣಿ ಯುವ ಷಡ್ಯಂತ್ರವಿದೆಯೆಂದು ಪಿಸು ಗುಡಲಾಗುತ್ತಿದೆ.

ಸಭಾಪತಿ ಭೇಟಿ:

ತನ್ನ ಪಕ್ಷದ ಕಾರ‍್ಯಕರ್ತೆಯೆಂಬ ನೆಲೆಯಲ್ಲಿ ನಿನ್ನೆ ಕುಂದಾಪುರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಭಾಪತಿ ಸಾಂತ್ವನ ಹೇಳಿದರಲ್ಲದೆ ಧನಸಹಾಯವನ್ನು ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು. ಒಂದೊಮ್ಮೆ ಕಾಂಗ್ರೆಸ್ ಅಂಗಳದಲ್ಲಿ ಚಿಮ್ಮುತ್ತಿದ್ದ ರಾಧಾದಾಸ್‌ರ ಮೇಲೆ ಜರಗಿದ ಹಲ್ಲೆ ಪ್ರಕರಣದ ಹಿಂದೆ ಹಲವು ಪ್ರಶ್ನೆಗಳು ಉದ್ಭವಿ ಸಿದ್ದು ಪೊಲೀಸರ ಸಮರ್ಪಕ ತನಿಖೆಯಿಂದಷ್ಟೇ ಸತ್ಯ ಬೆಳಕಿಗೆ ಬರಬಹುದೆನ್ನಲಾಗುತ್ತಿದೆ.

ಮುಖ್ಯಮಂತ್ರಿ ಪರ ನಿಂತ ಮಂಗಳೂರು ಒಕ್ಕಲಿಗರ ಸಂಘ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಲಿಂಗಾಯತರು ನಿಂತಿದ್ದು, ಅದಕ್ಕೆ ಎದುರಾಗಿ ಹಾಲಿ ಸಿಎಂ ಪರ ಒಕ್ಕಲಿಗ ಗೌಡ ಸಮುದಾಯ ನಿಂತಿದೆ. ಇದಕ್ಕೆ ನಿನ್ನೆ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯೇ ನಿದರ್ಶನವಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಒಕ್ಕಲಿಗ ಗೌಡರ ಸೇವಾ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಗೌಡ, ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಅವರ ವಿರುದ್ಧ ಮಾತನಾಡಿಲ್ಲ. ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಕೆಲವು ಶಾಸಕರೇ ಅವರ ಬಗ್ಗೆ ಆರೋಪ ಮಾಡುತ್ತಿದ್ದು ಇದರಿಂದಾಗಿ ಸರಿಯಾಗಿ ಆಡಳಿತ ನಡೆಸುವುದೂ ಮುಖ್ಯಮಂತ್ರಿಗೆ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.
ಸದಾನಂದ ಗೌಡರು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಜನರಿಂದ ಮತ ಪಡೆದು ಆಯ್ಕೆಯಾದವರು. ಅವರಿಗೆ ಮುಖ್ಯಮಂತ್ರಿ ಪದವಿ ಸಿಕ್ಕಿರುವುದು ನಾಯಕತ್ವ ಗುಣದಿಂದಾಗಿದೆಯೇ ಹೊರತು ಯಡಿಯೂರಪ್ಪರಂತೆ ಮೊಂಡು ತನ, ಭ್ರಷ್ಟಾಚಾರ, ಬ್ಲ್ಯಾಕ್‌ಮೇಲ್ ತಂತ್ರದಿಂದ ಸಿಕ್ಕಿಲ್ಲ. ಹೀಗಿರುವಾಗ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಡಿಯೂರಪ್ಪ ಷಡ್ಯಂತ್ರ ರೂಪಿಸಿದ್ದು ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಲೋಕಯ್ಯ ಗೌಡ ವ್ಯಂಗ್ಯವಾಡಿದ್ದಾರೆ.
ಈ ಬಾರಿಯ ಮುಂಗಡ ಪತ್ರವನ್ನು ಸದಾನಂದ ಗೌಡರೇ ಮಂಡಿಸಲಿದ್ದು ದಿವಂಗತ ಮಂತ್ರಿ ವಿ.ಎಸ್.ಆಚಾರ್ಯರವರ ಆಶಯವೂ ಇದೇ ಆಗಿದೆ. ಅದು ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವ್ಯಾನ್‌ಗೆ ರೈಲು ಡಿಕ್ಕಿ: ೧೫ ಮಂದಿ ಮೃತ್ಯು

Posted by JAYAKIRANA Kirana on | 0 comments | Leave a comment...

ನವದೆಹಲಿ: ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಮಥುರಾ-ಕಾಸ್‌ಗಂಜ್ ಎಕ್ಸ್‌ಪ್ರೆಸ್ ರೈಲು ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ೧೫ ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.

ಮದು ರೈಲ್ವೆ ಸ್ಟೇಶನ್ ಬಳಿಯಿರುವ ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ರೈಲು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತಕ್ಕೀಡಾದ ವ್ಯಾನ್‌ನಲ್ಲಿ ೧೭ ಮಂದಿ ಪ್ರಯಾಣಿಕರು ಪ್ರಯಾಣಿಸು ತ್ತಿದ್ದರು ಎಂದು ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ೧೫ಮಂದಿ ಸ್ಥಳದಲ್ಲಿ ಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

ಮಾನವರಹಿತ ಕ್ರಾಸಿಂಗ್ ಬಳಿ ರೈಲು ಸಾಗುತ್ತಿರುವುದನ್ನು ನೋಡಿ ಯೂ ವ್ಯಾನ್ ಚಾಲಕ ನಿರ್ಲಕ್ಷ್ಯ ತೋರಿ ರೈಲು ಹಳಿ ದಾಟಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿದೆ ಎಂದು ದೆಹಲಿ ರೈಲ್ವೆ ಮೂಲಗಳು ತಿಳಿಸಿವೆ.

ಕಾಲ್‌ಸೆಂಟರ್ ಉದ್ಯೋಗಿಯ ಅತ್ಯಾಚಾರವೆಸಗಿ ಹತ್ಯೆ ಇಬ್ಬರಿಗೆ ಗಲ್ಲು

Posted by JAYAKIRANA Kirana on | 0 comments | Leave a comment...

ಪುಣೆ: ಕಾಲ್‌ಸೆಂಟರ್ ಉದ್ಯೋಗಿ ಯೊಬ್ಬಳ ಸಾಮೂಹಿಕ ಅತ್ಯಾಚಾರ ಗೈದು ಕೊಲೆ ಮಾಡಿದ್ದ ಆರೋಪಿಗಳಿ ಬ್ಬರಿಗೆ ಇಲ್ಲಿನ ಸೆಷನ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

೨೦೦೭ರಲ್ಲಿ ನವಂಬರ್ ಒಂದ ರಂದು ವಿಪ್ರೋ ಬಿಪಿಓದ ಉದ್ಯೋಗಿ ಯಾಗಿದ್ದ ೨೬ ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಬಳಿಕ ಹತ್ಯೆಗೈದಿ ದ್ದರು. ವಿಪ್ರೋದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಪುರುಷೋತ್ತಮ್ ಬೊರಾಟೆ (೨೮) ಮತ್ತು ಆತನ ಸಹಚರ ಪ್ರದೀಪ್ ಕೊಕಟೆ(೨೬) ಮಹಿಳೆಯನ್ನು ಬಿಪಿಓಗೆ ಕರೆತರುವ ನೆಪದಲ್ಲಿ ಅತ್ಯಾಚಾರವೆಸಗಿ ಹತ್ಯೆಗೈದಿದ್ದರು. ಆದರೆ ೨೯ ಸಾಕ್ಷಿಗಳ ವಿಚಾರಣೆ ಹಾಗೂ ಹತ್ತಿರದ ಸಾಕ್ಷಿಗ ಳನ್ನು ಪರಿಗಣಿಸಿ ಇವರಿಬ್ಬರು ಅಪರಾಧಿಗಳೆಂದು ಕೋರ್ಟ್ ಶನಿವಾರ ತೀರ್ಪು ನೀಡಿತ್ತು. ಗೋರಕಾಪುರ ದಿಂದ ಬಂದಿದ್ದ ಮಹಿಳೆ ತನ್ನ ಸೋದರಿ ಹಾಗೂ ಬಾವನೊಂದಿಗೆ ಪುಣೆಯಲ್ಲಿ ವಾಸವಾಗಿದ್ದಳು. ೨೦೦೬ ರಲ್ಲಿ ಆಕೆ ವಿಪ್ರೋದ ಕಾಲ್‌ಸೆಂಟರ್‌ಗೆ ಉದ್ಯೋಗಕ್ಕೆ ಸೇರಿದ್ದಳು. ಪುಣೆಯ ಸ್ಥಳಗಳ ಸರಿಯಾದ ಪರಿಚಯವಿಲ್ಲದ ಆಕೆಯನ್ನು ಟ್ಯಾಕ್ಸಿ ಚಾಲಕ ಬಿಪಿಓಗೆಂದು ಬೇರೆಡೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತನ ಸಹಚರನೊಂದಿಗೆ ಸೇರಿ ಅತ್ಯಾಚಾರ ಮಾಡಿ ಆಕೆಯ ಶಾಲ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದರು.

ವಿದ್ಯಾರ್ಥಿನಿ ಕೈಹಿಡಿದಾತನ ಸೆರೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಸ್ಥಳೀಯ ಕಾಲೇಜೊಂ ದರ ವಿದ್ಯಾರ್ಥಿನಿ ಯೊಬ್ಬಳ ಕೈ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯೊಬ್ಬನನ್ನು ವಿಟ್ಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪುಣಚ ಗ್ರಾಮದ ನಿವಾಸಿ ಪ್ರಕಾಶ್ ಪಾಠಾಳಿ(೨೮) ಬಂಧಿತ ಆರೋಪಿ.

ಪುತ್ತ ಕೊಲೆ: ಮೂವರಿಗೆ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗಾಂಜಾ ದಂಧೆ ಯ ಕೊಂಡಿ ಚೆರಿಯ ಪುತ್ತ ಯಾನೆ ಅಬ್ದುಲ್ ರಹ್‌ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿ ಗಳನ್ನು ಕಂಕನಾಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇಸ್ಮಾಯಿಲ್, ಝಾಕಿರ್ ಮತ್ತು ಇಮ್ರಾನ್ ಎಂಬವರೇ ಬಂಧಿತ ಆರೋಪಿಗಳಾಗಿದ್ದು ಎಲ್ಲರೂ ಕಣ್ಣೂರು ನಿವಾಸಿಗಳಾಗಿದ್ದಾರೆ. ಇದೇ ತಿಂಗಳ ೧೩ರಂದು ರಾತ್ರಿ ಚೆರಿಯ ಪುತ್ತನನ್ನು ಕಣ್ಣೂರು ಚೆಕ್‌ಪೋಸ್ಟ್ ಸಮೀಪದ ಐಸಂ ಸ್ಟೀಲ್ ಬಳಿ ತಲ್ವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕ್ರಿಕೆಟ್ ಆಡುತ್ತಿದ್ದ ಪುತ್ತನನ್ನು ಆತನ ಸ್ನೇಹಿತರೇ ಮೊಬೈಲ್‌ಗೆ ಕರೆ ಮಾಡಿ ನಿಗದಿತ ಸ್ಥಳಕ್ಕೆ ಕರೆಸಿಕೊಂ ಡಿದ್ದರು. ಇದನ್ನು ಗಮನಿಸಿದಾಗ ಕೃತ್ಯದ ಹಿಂದೆ ಸ್ನೇಹಿತರೇ ಇರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಕೊಲೆ ಗೂ ಮುನ್ನ ಬಂದ ಕರೆಯ ಬಗ್ಗೆ ತನಿಖೆ ನಡೆಸಿದ್ದ ಕಂಕನಾಡಿ ಇನ್ಸ್‌ಪೆಕ್ಟರ್ ರವೀಶ್ ನೇತೃತ್ವದ ತಂಡ ಕೊಲೆಗೆ ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ಫರಂಗಿಪೇಟೆಯಲ್ಲಿ ಬಂಧಿಸಿದ್ದರು. ಆರೋಪಿಗಳ ಪೈಕಿ ಇಸ್ಮಾಯಿಲ್ ಇಜಾಝ್‌ನ ತಂದೆಯಾಗಿ ದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

ಆಪ್ತ ಸ್ನೇಹಿತನಾಗಿದ್ದ ಇಜಾಝ್ ತನ್ನ ಮೇಲೆ ಕೈ ಮಾಡಿದ ಎನ್ನುವ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ಇದೇ ಪುತ್ತ, ಇಜಾಝ್‌ನನ್ನು ಕಡಿದು ಕೊಲೆಗೆ ಯತ್ನಿಸಿದ್ದನು. ಒಂದು ತಿಂಗಳು ಆಸ್ಪತ್ರೆಯಲ್ಲಿದ್ದ ಇಜಾಝ್ ಈಗಲೂ ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾನೆ. ಈ ಕಾರಣದಿಂದಾಗಿ ಪುತ್ತನನ್ನು ಮುಗಿಸಲು ಆತನ ತಂದೆ ಇಸ್ಮಾಯಿಲ್ ಒಳಸಂಚು ರೂಪಿಸಿದ್ದು ಅದಕ್ಕಾಗಿ ಆತನ ಜೊತೆ ದ್ವೇಷ ಹೊಂದಿದ್ದ ಸ್ನೇಹಿತರನ್ನೇ ಬಳಸಿದ್ದರು ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ರಾಗಿರುವ ಮೂವರೂ ಕೊಲೆಗೆ ಸಂಚು ರೂಪಿಸಿದವರಾಗಿದ್ದು ಕೊಲೆ ಯಲ್ಲಿ ನೇರವಾಗಿ ಶಾಮೀಲಾದವ ರಿಗಾಗಿ ಪೊಲೀಸರು ಬಲೆ ಬೀಸಿದ್ದು ಒಂದೆರಡು ದಿನಗಳಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸುವ ವಿಶ್ವಾಸ ದಲ್ಲಿದ್ದಾರೆ. ಬಂಧಿತರನ್ನು ನಿನ್ನೆ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ೧೪ ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೋಹನ್‌ಕುಮಾರ್ ಮತ್ತೊಂದು ಸುತ್ತಿನ ವಿಚಾರಣೆ ಆರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೈನೈಡ್ ನೀಡಿ ಯುವತಿಯರನ್ನು ಹತ್ಯೆ ನಡೆಸಿದ ಪ್ರಕರ ಣದ ಆರೋಪಿ ಮೋಹನ್‌ಕುಮಾರ್‌ನ ಮತ್ತೊಂದು ಸುತ್ತಿನ ವಿಚಾರಣೆ ಮಂಗ ಳೂರು ತ್ವರಿತಗತಿ ನ್ಯಾಯಾಲಯದಲ್ಲಿ ನಿನ್ನೆಯಿಂದ ಆರಂಭಗೊಂಡಿದೆ.

ಈಗಾಗಲೇ ಮೂರು ಪ್ರಕರಣಗಳ ಸಾಕ್ಷಿ ದಾಖಲಿಸಿಕೊಂಡಿರುವ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರು ನಿನ್ನೆಯಿಂದ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಹೇಮಾ ಯಾನೆ ಹೇಮಾವತಿ ಸಾವಿನ ಪ್ರಕರಣದ ಕುರಿತಂತೆ ವಿಚಾರಣೆ ಆರಂಭಿಸಿದರು. ಘಟನೆಗೆ ಸಂಬಂಧಿಸಿದಂತೆ ೪೨ಮಂದಿ ಸಾಕ್ಷ್ಯ ನುಡಿಯಲಿದ್ದು, ನಿನ್ನೆ ನಾಲ್ವ ರು ಸಾಕ್ಷ್ಯ ಹೇಳಿದರು.

೨೦೦೯ರ ಎ.೨೨ರಂದು ಮೈಸೂ ರಿನ ಕೀರ್ತಿ ಲಾಡ್ಜ್‌ನಲ್ಲಿ ಸುಧಾಕರ ಗೌಡ ಎಂಬ ಹೆಸರಿನಲ್ಲಿ ತಂಗಿದ್ದ ಮೋಹನ್‌ಕುಮಾರ್ ಹೇಮಾಳನ್ನು ತನ್ನ ಪತ್ನಿ ಎಂದು ಪರಿಚಯಿಸಿದ್ದ. ಇವರಿಬ್ಬರೂ ರೂಂ ನಿಂದ ಹೊರಗೆ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಮೋಹನ್‌ಕುಮಾರ್ ಒಬ್ಬನೆ ರೂಂಗೆ ಹಿಂದಿರುಗಿದ್ದ ಎಂದು ಕೀರ್ತಿ ಲಾಡ್ಜ್‌ನ ಕ್ಯಾಶಿಯರ್ ಮಹೇಶ ವಿವರ ನೀಡಿದರು.

ಇದಕ್ಕೆ ಪಾಟಿ ಸವಾಲು ಹಾಕಿದ ಮೋಹನ್‌ಕುಮಾರ್ ಇದೇ ಮಹಿಳೆ ನಿಮ್ಮ ಲಾಡ್ಜ್‌ಗೆ ಬಂದಿದ್ದಲು ಎಂದು ಪೊಲೀಸರು ಪೊಟೊ ತೋರಿಸಿದ್ದಾ ರೆಯೇ ಎಂದು ಪ್ರಶ್ನಿಸಿದ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾ ಣದ ಸ್ವಚ್ಛತಾ ಸಿಬ್ಬಂದಿ ಸಣ್ಣಲಿಂಗ, ಮೈಸೂರು ಮಹಾನಗರ ಪಾಲಿಕೆಯ ಶ್ಮಶಾನದಲ್ಲಿ ಶವ ದಫನ ಮಾಡುವ ವೆಂಕಟರಮಣ ಸಂತೋಷ್ ಇಂದು ಸಾಕ್ಷ್ಯ ನುಡಿದರು.

ವಿದ್ಯಾರ್ಥಿನಿಯರಿಗೆ ಲಾರಿ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಲೇಜು ಬಿಟ್ಟು ಮನೆಗೆ ತೆರಳಲೆಂದು ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಯರಿಗೆ ಲಾರಿ ಡಿಕ್ಕಿ ಹೊಡೆದಿದ್ದು ಇಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.

ನಿನ್ನೆ ಸಂಜೆ ಅಡ್ಯಾರು ಸಹ್ಯಾದ್ರಿ ಕಾಲೇಜು ಬಿಟ್ಟ ಬಳಿಕ ಐವರು ವಿದ್ಯಾರ್ಥಿನಿಯರು ಬಸ್ಸಿಗಾಗಿ ಕಾಯುತ್ತಿದ್ದರು. ಅದೇ ವೇಳೆ ಚಾಲಕನ ನಿಯಂತ್ರಣ ಇಲ್ಲದೆ ಬಂದ ಲಾರಿಯೊಂದು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮವಾಗಿ ನಾಗಲಕ್ಷ್ಮಿ ಮತ್ತು ಜೆನಿಫರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಮ್ಮಿಂಜೆ ಹಲ್ಲೆ ಪ್ರಕರಣ: ಆರೋಪಿಗಳ ಖುಲಾಸೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮರೀಲ್ ಎಂಬಲ್ಲಿ ೬ ವರ್ಷದ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಮೂವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಿದೆ.

ಕೆಮ್ಮಿಂಜೆಯ ಮರೀಲು ನಿವಾಸಿ ಲೂಯಿಸ್ ಡಿಸೋಜಾ, ಮರಿಯಾ ಡಿಸೋಜಾ, ಸಿಸಿಲಿಯಾ ಡಿಸೋಜಾ ಆರೋಪದಿಂದ ಮುಕ್ತಗೊಂಡವರು.

ಆರೋಪಿಗಳು ಸ್ಥಳೀಯ ನಿವಾಸಿ ಆಂತೋನಿ ಡಿಸೋಜಾ ಎಂಬವರಿಗೆ ೨೦೦೫ರಂದು ಹಲ್ಲೆ ನಡೆಸಿದ್ದರೆಂಬ ಆರೋಪವಿತ್ತು. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು

ಆರೋಪಿಯ ಪರವಾಗಿ ನ್ಯಾಯ ವಾದಿಗಳಾದ ಮನೋಹರ್ ಕೆ.ವಿ., ಮಂಜುನಾಥ್ ಎನ್.ಎಸ್., ಅನೂಪ್ ಮಾಡಾವು, ದೀಪಕ್ ಬೊಳುವಾರು ವಾದಿಸಿದ್ದರು.

ದನದ ಮಾಂಸ: ಇಬ್ಬರ ಬಂಧನ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ನಲ್ಲಿರುವ ಚಿಕನ್ ಸೆಂಟರಿಗೆ ದಾಳಿ ನಡೆಸಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ, ದನದ ಮಾಂಸ ಹಾಗೂ ಫ್ರೀಜರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಬ್ಬಾಸ್ ಮತ್ತು ಮುಸ್ತಾಫ ಎಂಬಿಬ್ಬರನ್ನು ಬಂಧಿಸಿದ ಪೊಲೀಸರು ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಯಡ್ಡಿ ವಿರುದ್ಧದ ಎಫ್‌ಐಆರ್ ರದ್ದು ಪ್ರಶ್ನಿಸಿ ಬಾಷಾ ಸುಪ್ರೀಂ ಕೋರ್ಟ್‌ಗೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದ ಸುಳಿಗೆ ಸಿಕ್ಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಕೀಲ ಸಿರಾಜಿನ್ ಬಾಷಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪನವರ ಯಾವುದೇ ಪಾತ್ರವಿಲ್ಲ. ರಾಜಕೀಯ ದುರುದ್ದೇ ಶದಿಂದ ಆರೋಪ ಹೊರಿಸಲಾಗಿದೆ. ಅಲ್ಲದೇ ಅವರ ಮೇಲಿನ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿತ್ತು.

ಹೈಕೋರ್ಟ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಸರಿಯಲ್ಲ, ಯಡಿಯೂರಪ್ಪ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಿದ್ದು, ಸಿಇಸಿ ತನಿಖೆ ವರದಿ ಜಾರಿಯಲ್ಲಿದೆ ಎಂದು ಬಾಷಾ ಸುಪ್ರೀಂ ಕೋರ್ಟ್‌ಗೆ ನೀಡಿದ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸದೆ ಮೇಲ್ನೋಟಕ್ಕೆ ಯಡಿಯೂರಪ್ಪ ಅವರ ಮೇಲಿನ ಆರೋಪಗಳು ಸುಳ್ಳು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ನ್ಯಾಯಮೂರ್ತಿಗಳಿಗೆ ಸಾಕಷ್ಟು ಆಧಾರ ಸಿಕ್ಕಿಲ್ಲದ ಕಾರಣ ಹೈಕೋರ್ಟ್ ಆದೇಶ ಈ ರೀತಿ ಬಂದಿರುವ ಸಾಧ್ಯತೆ ಇದೆ ಬಾಷಾ ವಾದಿಸಿದ್ದಾರೆ.

21-03-2012

Posted by JAYAKIRANA Kirana on | 0 comments | Leave a comment...

ಸೀಕ್ರೆಟ್
ಒಂದು ವೇಳೆ ನಿಮಗೆ ತಿಳಿಹೇಳಲು ವಿಫಲವಾದರೆ ಕಡಿಮೆ ಪಕ್ಷ ಅವರನ್ನು ಗೊಂದಲಕ್ಕೆ ಸಿಲುಕಿಸಿ. ಇದು ಯಾವ ಕಲೆಯೆಂದು ನಿಮಗೆ ತಿಳಿದಿದೆಯೇ? ಲಾ ಆಫ್ ಆನ್ಸರಿಂಗ್ ಇನ್ ಎಕ್ಸಾಮ್!!!

ಹೊರಳಾಟ
ರೋಗಿ ಸಂಸತಾ ನೆಲದ ಮೇಲೆ ಹೊರಳಾಡುತ್ತಿರುವುದನ್ನು ನೋಡಿದ ಬಂತಾ ಕೇಳಿದ ಬಂತಾ: ಯಾಕೆ ಹೊರಳಾ ಡುತ್ತಿಯಾ? ಸಂತಾ: ವೈದ್ಯರು ಔಷಧವನ್ನು ಚೆನ್ನಾಗಿ ಕಲಕಿ ತೆಗೆಯಲು ಹೇಳಿದ್ದರು. ಆದರೆ ಮರೆತು ಬಿಟ್ಟೆ. ಅದಕ್ಕೇ ಔಷಧ ಕುಡಿದ ಮೇಲಾದರೂ ಹೊಟ್ಟೆಯಲ್ಲಿ ಕಲಕಲಿ ಅಂತಾ ಹೊರಳಾಡುತ್ತಿದ್ದೇನೆ?

 ಸಲಹೆ
ನಿಮ್ಮ ಟೂತ್ ಬ್ರಶನ್ನು ಗರ್ಲ್ ಫ್ರೆಂಡನ್ನು ಉಪಚರಿಸಿದಂತೆ ನೋಡಿಕೊಳ್ಳಬೇಕು. ಇತರರು ಬಳಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಕೂಡದು. ಅಲ್ಲದೆ ಪ್ರತೀ ಮೂರು ತಿಂಗಳಿಗೊಮ್ಮೆ ಬದಲಾಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು..!

ತಂದೆ ಸೇಫ್
ಗರ್ಭಿಣಿ ಮಹಿಳೆ ಜ್ಯೋತಿಷಿ ಬಳಿ ಹೋಗಿ ತನ್ನ ಹುಟ್ಟಲಿರುವ ಮಗುವಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾಳೆ. ಜ್ಯೋತಿಷಿ: ನಿಮಗೆ ಮಗು ಹುಟ್ಟುತ್ತಿದ್ದಂತೆ ಮಗುವಿನ ತಂದೆ ಸತ್ತು ಹೋಗುತ್ತಾರೆ. ಮಹಿಳೆ: ಥ್ಯಾಂಕ್ಸ್ ಗಾಡ್ ನನ್ನ ಗಂಡನಿಗೇನೂ ಆಗದು!?

ನಂಬರ್ ಕೊಡು
ಹುಡುಗಿ: ಮದುವೆಗೆ ಉಂಗುರ ಕೊಡ್ತೀರಾ ತಾನೆ?
ಹುಡುಗ: ಮೊದಲು ಫೋನ್ ನಂಬರ್ ಕೊಡು ಪ್ರಿಯೆ!

ಕಾಗದದ ಚೀಲ ಬಳಕೆಯಾಗಲಿ

Posted by JAYAKIRANA Kirana on | 0 comments | Leave a comment...

ಮಣ್ಣಿನ ಫಲವತ್ತತೆಯನ್ನು ಉಳಿಸುವ ಉದ್ದೇಶ ಹಾಗೂ ಅಂತರ್ಜಲ ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಚೀಲವನ್ನು ನಿಷೇಧಿಸ ಲಾಗಿದೆ. ಇದನ್ನು ಸರಿಯೆಂದು ಹೇಳಬ ಹುದಾದರೂ ಅಂಗಡಿಗಳಲ್ಲಿ ಸಾಮಾನು ಖರೀದಿಸುವಾಗ ಇಲ್ಲವೇ, ಯಾವುದಾದರೂ ವಸ್ತು ತೆಗೆದುಕೊಳ್ಳುವಾಗ ಕೊಂಡೊ ಯ್ಯುವುದು ಸಮಸ್ಯೆಯಾಗುತ್ತಿದೆ. ಕಾಗದದ ರಸ್ಕಿನ್ ಬ್ಯಾಗ್‌ಗಳನ್ನು ತಯಾರಿಸುವ ಘಟ ಕಗಳನ್ನು ಹೆಚ್ಚೆಚ್ಚು ಸ್ಥಾಪಿಸಿದ್ದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಸರಕಾರ ಅದಕ್ಕೆ ಸೂಕ್ತ ಪ್ರೋತ್ಸಾಹ ಕೊಡುತ್ತಿಲ್ಲ. ಹೀಗಾಗಿ ಪ್ಲಾಸ್ಟಿಕ್ ನಿಷೇಧ ದಿಂದ ಸಮಸ್ಯೆ ಆರಂಭವಾಗಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಕಾಗದದ ಚೀಲ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗಾವಕಾಶವನ್ನೂ ಒದಗಿಸಿಕೊಡಲು ಶ್ರಮಿಸಬೇಕಾಗಿ ವಿನಂತಿ.
ನಾಗರಾಜ, ಸಂತೆಕಟ್ಟೆ

ನೈಜ ನಕ್ಸಲರನ್ನು ಹಿಡಿಯಿರಿ

Posted by JAYAKIRANA Kirana on | 0 comments | Leave a comment...

ಸರಕಾರ ಹಾಗೂ ಪೊಲೀಸ್ ಇಲಾಖೆ ನಕ್ಸಲರನ್ನು ಹಿಡಿ ಯುವ ಭರದಲ್ಲಿ ಅಮಾಯಕ ಯುವಕರನ್ನು ಹಿಂಸಿಸುತ್ತಿದೆ. ಇತ್ತೀಚೆಗೆ ಕುತ್ಲೂರಿನ ವಿದ್ಯಾರ್ಥಿ ವಿಠಲ ಎಂಬಾತನನ್ನು ಹಿಡಿದು ಹಿಂಸಿಸುತ್ತಿರುವ ಎಎನ್‌ಎಫ್ ಸಾವಿರ ಸುಳ್ಳನ್ನು ಹೇಳಿ ನಕ್ಸಲ್ ನಂಟನ್ನು ಸಾಬೀತುಪಡಿಸಲು ಯತ್ನಿಸುತ್ತಿದೆ. ವಿಠಲನ ಮನೆ ಕಾಡಿನಲ್ಲೇ ಇರುವುದರಿಂದ ಅವನಿಗೆ ಮತ್ತಾತನ ಮನೆಯವ ರಿಗೆ ನಕ್ಸಲರ ಪರಿಚಯ ಇದ್ದಿರಲೂಬಹುದು. ಆದರೆ ಇದನ್ನೇ ನೆಪವನ್ನಾಗಿಟ್ಟುಕೊಂಡು ಭಾರೀ ಸಾಧನೆ ಮಾಡಿ ದಂತೆ ಪೊಲೀಸ್ ಇಲಾಖೆ ಬೀಗುತ್ತಿರುವುದು ನಾಚಿಗೇಡಿನ ಸಂಗತಿ. ಕುತ್ಲೂರಿನ ವಿಠಲ ಸಮಾಜ, ರಾಜಕೀಯ ದ್ವಂದ್ವಕ್ಕೆ ತಲೆಬಾಗಿ ನಕ್ಸಲ್ ಮನೋಸ್ಥಿತಿಯನ್ನು ಮೆಚ್ಚಿಕೊಂಡಿರಬ ಹುದು. ಆದರೆ ಆತನಿಗಿನ್ನೂ ೧೯ ವರ್ಷ ಪ್ರಾಯ. ಆತನನ್ನು ಕೌನ್ಸಿಲಿಂಗ್ ನಡೆಸಿ ಮತ್ತೆ ಸಾಮಾನ್ಯ ವಿದ್ಯಾರ್ಥಿಯಂತೆ ಪರಿವರ್ತಿಸಬಹುದು. ಹಾಗೆ ಮಾಡುವು ದನ್ನು ಬಿಟ್ಟು ಆತನನ್ನು ಜೈಲಿನಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟು ವಿಚಾರಣೆ ನಡೆಸುವುದು ಎಲ್ಲಿಯ ನ್ಯಾಯ? ಇದರಿಂದ ಆತನ ಮನೋಸ್ಥಿತಿ ಮತ್ತೆ ಬದಲಾಗಲು ಸಾಧ್ಯವಿದೆಯೇ? ಅದೇ ರೀತಿ ಕೆಲವೊಂದು ರಾಷ್ಟ್ರೀಯ ಪತ್ರಿಕೆ, ಸುದ್ದಿ ವಾಹಿನಿಗಳು ವಿಠಲನ ಮೇಲಿನ ಆರೋಪ ಇನ್ನೂ ದೃಢಪಟ್ಟಿರದಿದ್ದರೂ ಆತನನ್ನು ನಕ್ಸಲ್ ಎಂದೇ ಜನರಲ್ಲಿ ಬಿಂಬಿಸುವ ಕೆಲಸ ಮಾಡುತ್ತಿವೆ. ಇದು ಖಂಡಿತಾ ಸರಿಯಲ್ಲ. ವಿಠಲನಿಗೆ ನಕ್ಸಲ್ ಎಂಬ ಹಣೆಪಟ್ಟಿ ಅಂಟಿಸದೆ ಆದಷ್ಟು ಶೀಘ್ರವಾಗಿ ಬಿಡುಗಡೆಗೊಳಿಸಿ ಕೌನ್ಸಿಲಿಂಗ್ ನಡೆಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿ.
ಹೆಚ್.ಸುರೇಶ್, ನಾವುಂದ

ಮಲೇರಿಯಾ ತಾಣವಾದ ನಿಲ್ದಾಣ

Posted by JAYAKIRANA Kirana on | 0 comments | Leave a comment...

ನಗರದ ಸರ್ವಿಸ್ ಬಸ್ ನಿಲ್ದಾಣ ಸಮೀಪ ಟೆಂಪೋ ಪಾರ್ಕ್ ಮಾಡು ವಲ್ಲಿ ಗೂಡಂಗಡಿಗಳಲ್ಲಿ ಎಳನೀರು ಮಾರಾಟ ಮಾಡುತ್ತಾರೆ. ಇಲ್ಲಿನ ಸಮಸ್ಯೆ ಯೇನೆಂದರೆ ಎಳನೀರಿನ ಸಿಪ್ಪೆ ಮತ್ತಿತರ ತ್ಯಾಜ್ಯವನ್ನು ಅಲ್ಲೇ ರಾಶಿಹಾಕು ತ್ತಾರೆ. ಇದರಿಂದ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಪರಿಸರದಲ್ಲಿ ಅಂಗಡಿ ಹೊಂದಿದ್ದವರು ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಬೇಕಾ ಗಿದೆ. ಎಳನೀರಿನ ಸಿಪ್ಪೆಯನ್ನು ಬೇರೆಡೆ ವಿಲೇವಾರಿ ಮಾಡಲು ಮನಪಾ ಅಗತ್ಯ ಕ್ರಮ ಕೈಗೊಳ್ಳಬೇಕು. ಮನಪಾ ಆರೋಗ್ಯ ಅಧಿಕಾರಿಗಳ ತಂಡ ಇಲ್ಲಿ ಸಿಪ್ಪೆ ಎಸೆಯುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಾ ನಗರಪಾಲಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಬೇಕಿದ್ದ ಆರೋಗ್ಯ ಇಲಾಖೆ ಚಕಾರವೆತ್ತುತ್ತಿಲ್ಲ. ಇನ್ನಾದರೂ ನಗರದೊಳಗಿರುವ ಮಲೇರಿಯಾ ತಾಣಗಳ ಬಗ್ಗೆ ಇವರು ಎಚ್ಚರವಾಗುವರೇ?
ರಿಯಾಝ್, ಮಂಗಳೂರು

ಯಡಿಯೂರಪ್ಪಗೆ ಕುರ್ಚಿಯ ಹುಚ್ಚೇ?

Posted by JAYAKIRANA Kirana on | 0 comments | Leave a comment...

ಸದಾ ಅಧಿಕಾರಕ್ಕಾಗಿ ಹೋರಾಡುವ ವ್ಯಕ್ತಿ ಯಾರೆಂದು ಪ್ರಶ್ನೆ ಕೇಳಿದರೆ ಅದಕ್ಕೆ ಯಡಿಯೂ ರಪ್ಪ ಎಂದು ನಿರಾಯಾಸವಾಗಿ ಉತ್ತರ ಕೊಡ ಬಹುದು. ಯಾಕೆಂದರೆ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾದ ನಾಯಕರಲ್ಲಿ ಯಡಿಯೂ ರಪ್ಪರೂ ಒಬ್ಬರು. ಕುರ್ಚಿಗಂ ಟಿಕೊಂಡೇ ಕುಳಿತಿರುವ ಇವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ಸದ್ಯ ರಾಜಕೀಯದ ಸ್ಥಿತಿಗತಿಗಳೇ ವಿವರಿಸುತ್ತವೆ.
ಒಮ್ಮೆ ಅಧಿಕಾರ ಪಡೆದು ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆಸಿ ಕುರ್ಚಿಯಿಂದ ಕೆಳಕ್ಕಿಳಿದು ಜೈಲು ಸೇರಿದ ಯಡ್ಡಿ, ಈಗ ಜನರ ಮನೋಸ್ಥಿತಿ ಹೇಗಿದೆ ಎಂಬುದನ್ನು ತಿಳಿಯದೆ ಏಕಾಏಕಿ ಮತ್ತೆ ಕುರ್ಚಿಗೇರಲು ಸಿದ್ಧತೆ ನಡೆಸು ತ್ತಿರುವುದು ನಾಚಿಕೆಗೇಡು. ಕುರ್ಚಿಯ ಹುಚ್ಚು ಬಿಡದಿದ್ದರೆ ಮುಂದೆ ರಾಜ್ಯದ ಮತದಾರರೇ ಚುನಾವಣೆಯ ಸಮಯದಲ್ಲಿ ಹುಚ್ಚು ಬಿಡಿಸ ಲಿರುವುದು ಖಂಡಿತ.
ನಾಗೇಶ್ ಕೆ., ಪುತ್ತೂರು

ಮಾವಿನಕಟ್ಟೆ-ಐವರ್ನಾಡು ರಸ್ತೆ ಅಧೋಗತಿ

Posted by JAYAKIRANA Kirana on | 0 comments | Leave a comment...

ಕೊಳ್ತಿಗೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿಂದ ಸುಳ್ಯ-ಐವರ್ನಾಡು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಅಂಗಡಿ ಮಳಿಗೆಗಳು, ಅಂಗನವಾಡಿ, ಪ್ರಾಥಮಿಕ ಶಾಲೆಗಳು ಸಿಗುತ್ತವೆ. ಶಾಲಾ ಮಕ್ಕಳು, ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆ ಸುವುದರಿಂದ ರಸ್ತೆ ದುರಸ್ತಿ ಕಾಣದೇ ಇರುವುದು ಆತಂಕಕ್ಕೆ ಕಾರಣವಾ ಗಿದೆ. ಈಗೀಗ ರಾಜ್ಯದ ಬಹುತೇಕ ಹಳ್ಳಿ ಪ್ರದೇಶಗಳು ಅಭಿವೃದ್ಧಿ ಕಾಣು ತ್ತಿದ್ದು, ಮಣ್ಣಿನ ರಸ್ತೆಗಳೂ ಡಾಮರು ಭಾಗ್ಯವನ್ನು ಕಂಡಿವೆ. ಹೀಗಿದ್ದರೂ ಈ ರಸ್ತೆಯತ್ತ ಯಾರೂ ಗಮನಿಸಿಲ್ಲ. ಚುನಾವಣೆ ಬಂದಾಗ ಪ್ರಚಾರಕ್ಕೆ ಬರುವ ಜನಪ್ರತಿನಿಧಿಗಳು ಆಮೇಲೆ ಕಾಣಲು ಸಿಗುವುದಿಲ್ಲ.
ಗ್ರಾಮಸ್ಥರು, ಕೊಳ್ತಿಗೆ

ಗ್ರಾಹಕರನ್ನು ಸುಲಿಯುವ ಕ್ಯಾಂಟೀನ್

Posted by JAYAKIRANA Kirana on | 0 comments | Leave a comment...

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿರುವ ಕ್ಯಾಂಟೀನ್ ಒಂದು ಬೆಳಗ್ಗಿನ ಉಪಹಾರಕ್ಕೆ ಹೆಸರು ಪಡೆ ದಿದೆ. ಇಲ್ಲಿ ಬಸ್ ಸಿಬ್ಬಂದಿಯಿಂದ ಹಿಡಿದು ಸಾರ್ವ ಜನಿಕರವರೆಗೆ ಎಲ್ಲರೂ ಬರುತ್ತಾರೆ. ನಾನು ಕಳೆದ ಕೆಲವು ವರ್ಷಗಳಿಂದ ಈ ಕ್ಯಾಂಟೀನ್‌ನ ಗ್ರಾಹಕನೂ ಹೌದು. ಹಿಂದೆ ಮಿತದರದಲ್ಲಿ ಶುಚಿ-ರುಚಿಯಾದ ಆಹಾರ ಸಿಗುತ್ತಿದ್ದ ಇಲ್ಲೀಗ ಗ್ರಾಹಕರನ್ನು ಸುಲಿಯುವುದು ನಡೆ ಯುತ್ತಿದೆ. ಜನಸಾಮಾನ್ಯರ ಕೈಗೆಟುಕುವಂತಿದ್ದ ತಿಂಡಿಯ ದರವನ್ನು ದುಪ್ಪಟ್ಟು ಏರಿಸಲಾಗಿದೆ. ಈ ಬಗ್ಗೆ ಕೇಳಿದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಸಬೂಬು ಹೇಳುತ್ತಾರೆ. ಇಷ್ಟೇ ಅಲ್ಲದೆ ಇಲ್ಲಿ ತಿಂಡಿಯ ಜೊತೆ ಚಿಕ್ಕದಾದ ತಟ್ಟೆಯಲ್ಲಿ ನೀಡುವ ಸಾಂಬಾರು, ಚಟ್ನಿ, ತೊವ್ವೆಗೂ ವಿಪರೀತ ಹಣ ತೆಗೆದುಕೊಳ್ಳುತ್ತಾರೆ. ಬನ್ಸ್ ಪ್ಲೇಟ್ ಒಂದರ ಬೆಲೆ ೧೬ ರೂ. ಇದರ ಜೊತೆ ಚಿಕ್ಕ ಪ್ಲೇಟ್‌ನಲ್ಲಿ ಸಾಂಬಾರು ಕೊಡುತ್ತಾರೆ. ಆದರೆ ಸಾಂಬಾರು ಬದಲಿಗೆ ಚಟ್ನಿ ತೆಗೆದುಕೊಂಡರೆ ೧೮ ರೂ. ಕೊಡಬೇಕು. ತೊವ್ವೆ ತೆಗೆದುಕೊಂಡಲ್ಲಿ ಬರೋಬ್ಬರಿ ೨೪ ರೂ. ಕೊಡಬೇಕು. ಇದು ಮಂಗಳೂರಿನ ಯಾವ ಪ್ರಸಿದ್ಧ ಹೋಟೆಲ್‌ಗಳಿಗೂ ಕಡಿಮೆಯಿಲ್ಲದ ದರ. ಹೀಗಾದರೆ ಇದನ್ನು ಕ್ಯಾಂಟೀನ್ ಎಂದು ಕರೆಯುವುದಾದರೂ ಹೇಗೆ? ಇಲ್ಲಿ ತಿಂಡಿಯ ಬೆಲೆ ಏರಿಸಿದ್ದಾರೆಯೇ ವಿನ: ಅದರ ಗುಣಮಟ್ಟವನ್ನು ಹೆಚ್ಚಿಸಿಲ್ಲ. ತಿಂಡಿಯ ಜೊತೆಗೆ ತೊವ್ವೆ, ಚಟ್ನಿಯಲ್ಲೂ ಹಣ ಮಾಡುವ ಇಂಥ ಕ್ಯಾಂಟೀನ್‌ಗೆ ಹೋಗುವ ಮುನ್ನ ಗ್ರಾಹಕರು ತಮ್ಮ ಜೇಬನ್ನು ಒಮ್ಮೆ ಮುಟ್ಟಿ ಖಚಿತಪಡಿಸಿಕೊಳ್ಳುವುದು ಒಳಿತು.
ಬಾರೀಶ್, ಮಾಂಟ್ರಾಡಿ

ಉದುರಿದ ಕ್ರಿಕೆಟ್ ಗೋಡೆ

Posted by JAYAKIRANA Kirana on | 0 comments | Leave a comment...

ರಾಹುಲ್ ದ್ರಾವಿಡ್‌ನವರು ಜಗತ್ತು ಕಂಡ ಒಬ್ಬ ಅದ್ಭುತ ಟೆಕ್ನಿಕಲ್ ಬ್ಯಾಟ್ಸ್‌ಮನ್ ಹಾಗೂ ಯಾವುದೇ ತರಹದ ಬೌಲಿಂಗ್ ಅನ್ನು ಎದು ರಿಸುವ ಸಾಮರ್ಥ್ಯವನ್ನು ಹೊಂದಿರುವ ಆಟ ಗಾರ. ಅದೇ ರೀತಿ ಟೆಸ್ಟ್ ಎಂಬ ಅನೇಕ ಕಠಿಣ ಸವಾಲಿನ ಪಂದ್ಯದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ ಒಬ್ಬ ಪ್ರತಿಭಾವಂತ. ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಕೊಂಚ ಮಟ್ಟಿಗೆ ಎಡವಟ್ಟಾಗಿದ್ದರೂ ಟೆಸ್ಟ್‌ನಲ್ಲಿ ಅವರ ಸಾಮರ್ಥ್ಯಕ್ಕೆ ಯಾವುದೇ ಕೊರತೆಗಳು ಅಡ್ಡ ಬಂದಿಲ್ಲ. ದ್ರಾವಿಡ್‌ನವರು ತಾಳ್ಮೆಯ, ವಿಶ್ವಾ ಸದ ಆಟಗಾರನಾಗಿದ್ದುಕೊಂಡು ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಜನರ ಕನಸು-ಮನಸ್ಸಿನಲ್ಲಿಯೂ ಅಚ್ಚರಿಯನ್ನು ಹುಟ್ಟುಹಾಕಿದವರು. ಆದರೆ ವಿಪ ರ್ಯಾಸದ ಸಂಗತಿಯೇನೆಂದರೆ ರಾಹುಲ್ ದ್ರಾವಿಡ್ ಅವರು ಕ್ರಿಕೆಟ್ ನಿವೃತ್ತಿಯನ್ನು ಘೋಷಿ ಸುತ್ತಾರೆಂದು ತಿಳಿದೂ ತಿಳಿಯದಂತೆ ಬಿಸಿ ಸಿಐ ತಡೆಯುವ ಪ್ರಯತ್ನವನ್ನು ಮಾಡದಿರು ವುದಾಗಿದೆ.
ಕಮಾಲ್, ಕಡಬ-ಕಳಾರ

ಹಳೆಯಂಗಡಿಯಲ್ಲಿ ನೀರಿನ ಕೊರತೆ

Posted by JAYAKIRANA Kirana on | 0 comments | Leave a comment...

ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾವಂಜೆ, ಸಸಿಹಿತ್ಲು ಹಾಗೂ ಹಳೆ ಯಂಗಡಿ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಪಂಚಾ ಯತ್‌ನ ಪಂಪ್‌ಗಳು ಸರಿಯಾಗಿ ಕಾರ್ಯ ನಿರ್ವ ಹಿಸದ ಕಾರಣ ಬೇಸಿಗೆ ಕಾಲ ಪ್ರಾರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಹಳೆಯಂಗಡಿ ಪೇಟೆ ಪ್ರದೇಶದಲ್ಲಿ ಹಾಗೂ ಇಂದಿರಾ ನಗರದ ವಾಸ್ತವ್ಯದ ಮನೆಗಳ ಎದುರು ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಉಲ್ಭಣಿಸುವ ಭೀತಿ ಎದುರಾಗಿದೆ.
ಆದುದರಿಂದ ಸಂಬಂಧಪಟ್ಟವರು ಸದ್ರಿ ಮೇಲಿನ ಎರಡು ಪ್ರಮುಖ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ನ್ಯಾಯಕ್ಕಾಗಿ ಪ್ರತಿ ಭಟನೆ ಮಾಡುವ ಕಾಲ ದೂರವಿಲ್ಲ.
ಡೇನಿಯಲ್ ದೇವರಾಜ್, ಹಳೆಯಂಗಡಿ

ಹೆಣ್ಮಕ್ಕಳ ಹೆತ್ತವರು ಜಾಗೃತರಾಗಬೇಕಿದೆ

Posted by JAYAKIRANA Kirana on | 0 comments | Leave a comment...

ಅಪ್ರಾಪ್ತ ಹಿಂದೂ ಹೆಣ್ಮಕ್ಕಳನ್ನು ವಿವಿಧ ಆಸೆ, ಆಮಿಷವೊಡ್ಡಿ ಮತಾಂ ತರ ಮಾಡುವ, ಪ್ರೀತಿ ಪ್ರೇಮದ ನೆಪ ದಲ್ಲಿ ಯಾಮಾರಿಸಿ ಲೈಂಗಿಕ ದಂಧೆಗೆ ಬಳಸಿಕೊಳ್ಳುವ ಷಡ್ಯಂತ್ರ ನಡೆಯು ತ್ತಿದೆ. ಇದಕ್ಕಾಗಿ ಶಾಲೆ ಕಾಲೇಜ್‌ಗಳಿಗೆ ತೆರಳುವ ಹಿಂದೂ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿ ಕೊಳ್ಳಲಾಗುತ್ತಿರು ವುದು ತೀರಾ ಕಳವಳಕಾರಿ ಸಂಗತಿ. ಇತ್ತೀಚೆಗೆ ನಡೆಯುತ್ತಿರುವ ಹಿಂದೂ ಯುವತಿಯರ ನಾಪತ್ತೆ ಪ್ರಕರಣ, ಲೈಂಗಿಕ ಅತ್ಯಾಚಾರ, ಬ್ಲೂಫಿಲಂ, ಕೊಲೆ ಮತ್ತಿತರ ಘಟನೆಗಳ ಹಿಂದೆ ಇಂಥದ್ದೇ ಕಾರಣ ಇರುವುದು ಸ್ಪಷ್ಟ ವಾಗುತ್ತಿದೆ.
ಆದ್ದರಿಂದ ಈ ಬಗ್ಗೆ ಹೆಣ್ಮಕ್ಕಳ ಹೆತ್ತವರು ಜಾಗೃತರಾಗಬೇಕಾಗಿದೆ. ಶಾಲೆ ಕಾಲೇಜ್‌ಗೆಂದು ತೆರಳುವ ಹೆಣ್ಮ ಕ್ಕಳು ಯಾವುದೋ ಅನ್ಯಮತೀಯನ ಮನೆಯಲ್ಲೋ, ಪಾರ್ಕ್‌ಬೀಚ್‌ನಲ್ಲೋ ಮಜಾ ಉಡಾಯಿಸುವಾಗ ಸಿಕ್ಕಿಬಿದ್ದ ಮೇಲೆ ಕುಟುಂಬದ ಮಾನ ಮರ್ಯಾದೆ ಹೋಯಿತೆಂದು ಬೊಬ್ಬೆ ಹಾಕುವ ಬದಲು ಈಗಿಂದೀಗಲೇ ಎಚ್ಚೆ ತ್ತರೆ ಒಳ್ಳೆಯದಲ್ಲವೇ? ಹಿಂದೂ ಹೆಣ್ಮ ಕ್ಕಳು ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಧಾವಂ ತದಲ್ಲಿ ದೇಶಿಯ ಆಚಾರ ವಿಚಾರ ಮರೆ ಯುತ್ತಿದ್ದಾರೆ. ಸ್ವಾತಂತ್ರ್ಯವಿದೆ ಎಂದು ಬೇಕಾಬಿಟ್ಟಿ ವರ್ತಿಸುವುದರ ಪರಿಣಾ ಮವೇ ಇದು. ಹಿಂದೂ ಸಂಘಟನೆ ಗಳು ಹಿಂದೂಗಳಲ್ಲಿ ಜಾಗೃತಿ ಮೂಡಿ ಸಲಿ.
ಸೋಮಶೇಖರ್ ಕೆ, ಬಂಟ್ವಾಳ

ರಸ್ತೆ ದುರವಸ್ಥೆ ಸರಿಪಡಿಸಿ

Posted by JAYAKIRANA Kirana on | 0 comments | Leave a comment...

ಬಿಜೈ ನ್ಯೂರೋಡ್‌ನ ಏಳನೇ ಅಡ್ಡರಸ್ತೆಯೊಂದು ಕೆಪಿಟಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತವೆ. ಆದರೆ ರಸ್ತೆಯ ದುರವಸ್ಥೆ ಸಹಿಸಲಸಾಧ್ಯ. ಬಹಳಷ್ಟು ಮನೆಗಳು, ವಸತಿ ಸಮುಚ್ಛಯಗಳು ಇರುವ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸರ್ಕಲ್ ಮಾಡಿಯೇ ಸಂಚರಿಸಬೇಕು. ಇನ್ನು ರಿಕ್ಷಾದ ವರು ಇಲ್ಲಿ ಬರಲು ನಿರಾಕರಿಸುತ್ತಾರೆ. ಅದು ಅವರ ತಪ್ಪಲ್ಲ ಬಿಡಿ. ಅವರಿಗೆ ವಾಹನದ ಕಾಳಜಿ ಇರುವಂತದ್ದೆ. ಏರು-ತಗ್ಗುಗಳೊಂದಿಗೆ ಡಾಮರು ಕಿತ್ತು ಕಲ್ಲು-ಮಣ್ಣು ತುಂಬಿರುವ ರಸ್ತೆಯಲ್ಲಿ ಸಂಚರಿಸಲು ಭಯ ಪಡಲೇಬೇಕು.
ವೃದ್ಧರನ್ನು, ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಾದ ಸಂದರ್ಭ ದಲ್ಲಿ ರಿಕ್ಷಾ ಚಾಲಕರು ನಿರಾಕರಿಸಿದರೆ ಏನು ಮಾಡಬೇಕು? ಇನ್ನು ಈ ಕ್ಷೇತ್ರದ ಕಾರ್ಪೊರೇಟರ್ ಈ ರಸ್ತೆಗೆ ಬಂದಿದ್ದಾರೋ ಇಲ್ಲವೋ? ಎಲ್ಲಾ ಗೊತ್ತಿದ್ದೂ ನಿರ್ಲಕ್ಷ್ಯ ತೋರುವುದೇಕೆ? ನಗರದ ಎಲ್ಲಾ ಹೆಚ್ಚಿನ ಮಾರ್ಗಗಳು, ಅಡ್ಡರಸ್ತೆ ಗಳೂ ಕಾಂಕ್ರಿಟೀಕರಣ ಮತ್ತು ಡಾಮರೀಕರಣಗೊಂಡಿರುವಾಗ ಹೆದ್ದಾರಿಗೆ ಹತ್ತಿರದ ಸಂಪರ್ಕ ರಸ್ತೆಯ ಬಗ್ಗೆ ಅಸಡ್ಡೆಯೇಕೆಂದೇ ತಿಳಿಯುತ್ತಿಲ್ಲ. ಇನ್ನು ಎರಡು ತಿಂಗಳಲ್ಲಿ ಮಳೆ ಪ್ರಾರಂಭವಾದರೆ ಇಲ್ಲಿಯ ಜನರ ಸ್ಥಿತಿ ದೇವರೇ ಬಲ್ಲ.
ಸಂತೋಷ್ ಡಿಮೆಲ್ಲೋ, ಮಂಗಳೂರು

ಕಿರುಕುಳಕ್ಕೆ ಭಯ ಪಡದಿರಿ

Posted by JAYAKIRANA Kirana on | 0 comments | Leave a comment...

ವರದಕ್ಷಿಣೆ ಕೊಡಲಿಲ್ಲ, ಕಡಿಮೆಯಾಯಿತು ಎಂಬ ಕಾರಣಕ್ಕೆ ಹೆಣ್ಣುಮ ಕ್ಕಳಿಗೆ ಪತಿಮನೆಯವರು ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿರುವ ಘಟ ನೆಗಳು ಆಗಾಗ ಬೆಳಕಿಗೆ ಬರುತ್ತಿವೆ. ಇಲ್ಲಿ ಹೆಣ್ಮಕ್ಕಳು ವಿದ್ಯಾವಂತರಾಗಿದ್ದರೆ ಇಂಥ ದೌರ್ಜನ್ಯವನ್ನೂ ವಿರೋಧಿಸಿ ಮೆಟ್ಟಿ ನಿಲ್ಲುತ್ತಾರೆ. ಆದರೆ ಅವಿದ್ಯಾವಂ ತರು, ದುರ್ಬಲರು ಮಾತ್ರ ಕಿರುಕುಳಕ್ಕೆ ಹೆದರಿ ಪ್ರಾಣತ್ಯಾಗವನ್ನು ಮಾಡು ತ್ತಾರೆ. ಆದರೆ ಇಂದು ಸಮಾಜದಲ್ಲಿ ಹೆಣ್ಮಕ್ಕಳ ದೌರ್ಜನ್ಯವನ್ನು ಖಂಡಿಸುವ ಅವೆಷ್ಟೋ ಸಂಘಟನೆಗಳಿವೆ. ಅವುಗಳ ನೆರವನ್ನು ಪಡೆದುಕೊಂಡು ದೌರ್ಜನ್ಯ ವನ್ನು ವಿರೋಧಿಸಬಹುದು. ಹೆಣ್ಣು ಇಂದು ಅಬಲೆಯಲ್ಲ. ಆಕೆ ಎಲ್ಲಾ ಕ್ಷೇತ್ರ ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಹೀಗಿರುವಾಗ ವರದಕ್ಷಿಣೆ ಕಿರುಕುಳದಂಥ ಪ್ರಕರಣಗಳಿಗೆ ಭಯ ಪಡುವುದೇಕೆ?
ನಿಶಾ, ಬ್ರಹ್ಮಾವರ

ಪ್ರಕರಣದ ನೈಜಾಂಶ ತಿಳಿದುಕೊಳ್ಳಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಕದ್ರಿ ಠಾಣಾ ವ್ಯಾಪ್ತಿಯ ಎರಡು ಕಡೆ ಮಸಾಜ್ ಸೆಂಟರ್‌ಗಳ ಮೇಲೆ ದಾಳಿ ಮಾಡಿದ ಪೊಲೀ ಸರು ಬಂಧಿತರ ಭಾವಚಿತ್ರಗಳನ್ನು ಮಾಧ್ಯಮ, ಟಿ.ವಿಯಲ್ಲಿ ಪ್ರಸಾರ ಮಾಡಿ, ಹೊಟ್ಟೆಪಾಡಿಗಾಗಿ ದುಡಿವ ಹೆಣ್ಣುಮ ಕ್ಕಳ ಮೇಲೆ ವೇಶ್ಯಾವಾಟಿಕೆ ಕೇಸ್ ದಾಖಲಿಸಿ ಜೈಲಿಗಟ್ಟಿ ರುವ ರೀತಿ ಬಹಳ ಬೇಸರ ತರುವಂಥದ್ದಾಗಿದೆ. ಜನಸಾ ಮಾನ್ಯರಿಗೆ ರಕ್ಷಣೆ ನೀಡುವಂಥ ಪೊಲೀಸರೇ ಈ ರೀತಿ ಯಾದರೆ ಹೇಗೆ? ಏಕೆಂದರೆ ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಯುವ ಮುನ್ನವೇ ಬಂಧಿತರನ್ನು ಆರೋ ಪಿಗಳ ಸ್ಥಾನದಲ್ಲಿರಿಸಿದರೆ ಹೇಗೆ?
ಮೆಸಾಜ್ ಸೆಂಟರಲ್ಲಿ ಸೆಕ್ಸ್ ನಡೆಯುತ್ತಿದೆ ಎಂದು ಸುದ್ದಿ ಹರಡಿದ ಕೂಡಲೇ ಅಂಗಡಿ ಫೊಟೋ, ಮಾಲೀಕನ ಫೊಟೋ, ಕೆಲಸಕ್ಕಿರುವ ಹುಡುಗಿಯರ ಫೊಟೋ ತೆಗೆದು ಪತ್ರಿಕೆ, ಟಿವಿ ಚಾನೆಲ್‌ಗಳಲ್ಲಿ ದೊಡ್ಡ ವಿಷಯ ಮಾಡಿ ಹಾಕುತ್ತಾರೆ. ಇದನ್ನು ಓದಿದ ಜನರೂ ಹೆಚ್ಚಾಗಿ ಇದನ್ನು ಸತ್ಯವೆಂದೇ ನಂಬಿಬಿಡುತ್ತಾರೆ. ಆದರೆ ಅದರ ನೈಜಾಂಶವೆ ನೆಂದು ಮತ್ತೆ ತಿಳಿಸಿದರೂ ಪ್ರಯೋಜನವಿಲ್ಲದಂತಾಗು ತ್ತದೆ. ಆದ್ದರಿಂದ ಸುದ್ದಿ ಮಾಧ್ಯಮಗಳಿಗೆ ನನ್ನ ವಿನಂತಿ ಏನೆಂದರೆ, ನೀವು ಯಾವುದೇ ಸುದ್ದಿಯನ್ನು ಪ್ರಕಟಿಸು ವಾಗ ಮೊದಲಿಗೆ ಸರಿಯಾದ ವಿಷಯವನ್ನು ತಿಳಿದುಕೊಳ್ಳಿ. ಅದೇ ರೀತಿ ಹೆಣ್ಣುಮಕ್ಕಳಿಗೆ ಸಂಬಂಧಪಟ್ಟ ವಿಚಾರವಾ ದರೆ ನೂರು ಬಾರಿ ಯೋಚಿಸಿ ನಂತರ ತೀರ್ಮಾಣ ಕೈಗೊಳ್ಳುವುದೊಳಿತು. ಯಾಕೆಂದರೆ ಹೆಣ್ಣುಮಕ್ಕಳನ್ನು ಇಂದಿಗೂ ಸಮಾಜದಲ್ಲಿ ಅಬಲೆಯರೆಂದು ಶೋಷಿಸಿ ಖುಷಿ ಪಡುವ ಪೊಲೀಸರು, ಜನಸಾಮಾನ್ಯರು ಹೆಚ್ಚಿನ ಸಂಖ್ಯೆ ಯಲ್ಲಿ ಇದ್ದಾರೆ.
ನೊಂದ ಮಹಿಳೆ, ಮಂಗಳೂರು

ಪ್ರಳಯ... ಪ್ರಳಯ... ಪ್ರಳಯ... ೨೦೧೨ರ ಸಂಭವ ನಿಜಾನಾ?

Posted by JAYAKIRANA Kirana on | 0 comments | Leave a comment...

ಉಮಾನಾಥ್ ಕುಮಾರ್, ಕೋಡಿಕಲ್-ಮಂಗಳೂರು
ಬ್ರಹ್ಮಾಂಡ ಹುಟ್ಟು ಮತ್ತು ಅಂತ್ಯ ಬಗ್ಗೆ ತಿಳಿದುಕೊ ಳ್ಳಲು ದಶಕಗಳಿಂದ ಆವಿಷ್ಕಾರ, ಸಂಶೋಧನೆಗಳು ಹೈಟೆಕ್ ಕಂಪ್ಯೂಟರ್ ಮೂಲಕ ನಡೆಯುತ್ತಿದ್ದು, ಇಷ್ಟರತನಕ ಅದರ ಶೇ.೧ರಷ್ಟು ಭಾಗ ಮಾತ್ರ ಸಾಧ್ಯವಾಗಿರುವುದನ್ನು ಮೂಲ ವೊಂದು ತಿಳಿಸಿದೆ. ೧೫ ಬಿಲಿಯನ್ ವರ್ಷಗಳ ಹಿಂದೆ ಭಾರೀ ರಾಸಾಯನಿಕ ಗೋಳವೊಂದು ತೀವ್ರ ಗುರುತ್ವಾರ್ಷಣೆಗೆ ಸಿಲುಕಿ ಬಿಗ್ ಬ್ಯಾಗ್ ಚದುರಿಕೆ, ನಕ್ಷತ್ರಗಳ ಸೃಷ್ಟಿ, ಗ್ಯಾಲಕ್ಸಿ ಗಳ ರೂಪು-ರಚನೆ, ಸೂಪರ್‌ನೋವಾದಂತಹ ನಕ್ಷತ್ರಗಳ ಸ್ಫೋಟದಿಂದಾಗಿ ಗ್ರಹಗಳ ಸೃಷ್ಟಿ, ಆಕಾಶ ಕಾಯಗಳು ಮಾತ್ರ. ಸಾವು-ಹುಟ್ಟು ಸಹಜವೇ ಎಂಬ ಸಂದೇಹವನ್ನು ವ್ಯಕ್ತಪಡಿ ಸಿದೆ. ವಿಸ್ಮಯ ಗೋಳಾಕಾರದ ಖಗೋಳ ಎಂಬ ಅಗೋಚರ ಗ್ರಾವಿಟಿ ಶಕ್ತಿ ಅದರ ಆಚೆಗೇನಿರಬಹುದು? ತಲೆಕೆಡಿಸಿಕೊ ಳ್ಳುವ ಮೊದಲು ನಮ್ಮ ಶ್ರೀಮಂತ ಪ್ರಥ್ವಿಯ ಬಗ್ಗೆ ಅರಿತು ಗೊಳ್ಳುವ ಅವಶ್ಯಕತೆಯಿದೆ. ಇಪ್ಪತ್ತರ ಶತಮಾನದ ಹಿಂದೆ ಅಂದರೆ ತೊಂಬತ್ತರ ದಶಕದ ಹಿಂದೆ ಅಂದರೆ ತೊಂಬತ್ತರ ದಶಕದ ಹಿಂದೆ ಜಲಪ್ರಳಯ ಆದಿನ ಈದಿನ ಸಂಭವ ಬಗ್ಗೆ ಅಸ್ಟ್ರಾಲಜಿ ತಂಡಗಳು ವಿಭಿನ್ನ ಹೇಳಿಕೆ ನೀಡಿ ಜೀವರಾಶಿಗೆ ವಿದ್ಯುತ್‌ನಂತಹ ಶಾಕ್ ನೀಡಿದ್ದರೂ ಪ್ರಳಯ ಘಟಿಸಿಲ್ಲ.
ಪ್ರಸ್ತುತ ೨೦ನೇ ಶತಮಾನ ದಾಟಿ ೨೧ನೇ ಶತಕಕ್ಕೆ ಪಾದಾ ರ್ಪಣೆಯಲ್ಲಿದ್ದೇವೆ. ಇದಕ್ಕಿದ್ದಂತೆ ಮತ್ತೆ ಪ್ರಳಯ ಸುದ್ದಿ ಕೇಳಿಬರುತ್ತಿದೆ. ಅದೇ ರಾಗದಲ್ಲಿ ಅತೀ ಮಾನವ ಎನ್ನುವ ವರು ಗುಡುಗುತ್ತಿದ್ದಾರೆ. ೨೦೧೨ರ ಡಿಸೆಂಬರ್ ತಿಂಗಳ ೨೧ರ ಮಧ್ಯರಾತ್ರಿ ಪ್ರಳಯ ಒಂದು ಗುಂಪು ಭವಿಷ್ಯ ನುಡಿದರೆ ಅಂದು ಪಶ್ಚಿಮ ಮತ್ತು ಪೂರ್ವದ ಭಾಗಗಳು ಮಾತ್ರ ಮುಳುಗುತ್ತದೆ. ಶೇ.೫೦ರಷ್ಟು ಜೀವಿಗಳು ಉಳಿಯುತ್ತಾರೆಂಬುದು ಮತ್ತೊಂದು ಗುಂಪು ಹೇಳಿದೆ. ಈ ನಡುವೆ ಕುತೂಹಲವೆಂದರೆ ಅದೆಲ್ಲವನ್ನು ತಳ್ಳಿಹಾಕಿ ಮಾನವ ಮೇಲೆ ಕನಿಕರ ತೋರಿ ಎರಡು ವರ್ಷ ಮುಂದೂಡಿ ೨೦೧೪ ಪ್ರಳಯ ಖಚಿತವೆಂದು ಶತಾಯುಷಿ ಹಿಮಾ ಲಯದ ಸನ್ಯಾಸಿಯೊಬ್ಬ ಟಿ.ವಿ.ಯಲ್ಲಿ ಪ್ರತ್ಯಕ್ಷನಾಗಿ ಭವಿಷ್ಯ ನುಡಿ ದಿದ್ದು, ಇನ್ನೊಂದು ಕಡೆ ಗಮನಿಸಿದರೆ ಅಂತ್ಯದ ಬಗ್ಗೆ ಹದಿನೈದರ ಶತಮಾನದ ಫ್ರಾನ್ಸ್‌ನ ಮಹಾದಾರ್ಶನಿಕ ನಾಸ್ಟ್ರಾಡಾಮಾಸ್ ಗ್ರಂಥದ ಉಲ್ಲೇಖ ಮತ್ತು ಮಾಯಾನ್ ಕ್ಯಾಲೆಂಡರ್ ಉಲ್ಲೇಖ ಭಿನ್ನ, ಭಿನ್ನ ಅಂಕೆ-ಸಂಖ್ಯೆ ಪುರಾವೆಗಳು ಪ್ರಳಯವನ್ನು ಕವಲು ಒಡೆದಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯಾವುದನ್ನು ನಂಬ ಬೇಕು. ಯಾವುದನ್ನು ಬಿಡಬೇಕು ಜನರೇ ಕೊಂಚ ಯೋಚಿಸಿ ನೋಡಬೇಕಿದೆ. ಆದರೆ ಇಪ್ಪತ್ತನೇ ಶತಮಾನದ ಹಿಂದೆ ಭಗವಂ ತನು ಭಕ್ತರಿಗೆ ತನ್ನ ಎರಡೂವರೆ ಬೆರಳು ತೋರಿಸಿ ಅದೃಶ್ಯನಾಗಿ ದನಂತೆ. ಬಹುಶಃ ಅದನ್ನು ತಪ್ಪಾಗಿ ತಿಳಿದುಕೊಂಡಿರಬೇಕು. ಅದರರ್ಥ ೨೦೦೦ನೇ ಇಸವಿಯಲ್ಲಿ ಪ್ರಳಯ ಪ್ರಚಾರ ಮಾಡಿಯಾ ಗಿತ್ತು. ಅದೆಷ್ಟೋ ಕಡೆ ಅಂದು ಮನೆ-ಮಠ ಬಿಟ್ಟು ಜನರು ಗುಡ್ಡೆ-ಪರ್ವತ ಅಂಚಿನಲ್ಲಿ ಅವಿತು ಜಾಗರಣ ಕೂತಿದ್ದರು. ಆದರೆ ಆದಿನ ಪ್ರಥ್ವಿಯು ತನ್ನ ದಿಕ್ಕು ಬದಲಿಸಿಲ್ಲ. ಸೂರ್ಯನು ಪೂರ್ವದ ದಿಗಂತದಲ್ಲೇ ಉದಯಿಸಿದಾಗ ಇಡೀ ಜೀವರಾಶಿ ನಿಟ್ಟುಸಿರು ಬಿಡು ವಂತಾಗಿತ್ತು. ರವಿಯನ್ನು ಸುತ್ತಲು ಗಂಟೆಗೆ ಸಾವಿರಾರು ಕಿ.ಮೀ. ವೇಗದಲ್ಲಿ ಪರಿಭ್ರಮಣೆಯಲ್ಲಿರುವ ಪ್ರಥ್ವಿಯು ಆ ದಿನ ಸಡನ್ ಬ್ರೇಕ್ ಹಾಕಿ ಪಶ್ಚಿಮದಿಂದ ಪೂರ್ವಕ್ಕೆ ಉರುಳುತ್ತಿದ್ದರೆ ಅಲ್ಲಿಗೆ ಕಥೆ ಮುಗಿಯುತ್ತಿತ್ತೋ ಏನೋ? ಮಹಾಪ್ರಕೃತಿಯು ಇಷ್ಟೊಂದು ಜೀವದಾನ ಪ್ರಾಪ್ತಿಸಿದಾಗ ಹುಳು ಮಾನವನ ಕೊಡುಗೆ ಈ ಶತಮಾನದೊಳಗೆ ಸಾಧ್ಯವಿದೆಯೇ? ಬಹಳ ಹಳೆಯ ಕಾಲ ಗಮನಿಸಿವಾಗ ವಿಕಾಸಗೊಳ್ಳುತ್ತ ಆಧ್ಯಾತ್ಮಿಕತೆ ತೊರೆದು ಮಾನವ ವಿeನದ ಯುಗಕ್ಕೆ ಪ್ರವೇಶಿಸಿದ್ದಾನೆ. ೧,೪೦೦ರ ಶತಮಾನ ಅಂತ್ಯಕ್ಕೆ ಸಮುದ್ರ ವಿಶ್ವಪರ್ಯಟನಕ್ಕೆ ತೊಡಗಿ ಭೂಖಂಡಗಳಲ್ಲಿ ವಸಾ ಹತು ಸ್ಥಾಪಿಸಿದ ಮಾನವ ವ್ಯಾಪಾರ ಮಳಿಗೆ ಬಂಡವಾಳ ಹುಟ್ಟು ಹಾಕಿದ. ಅಭಿವೃದ್ಧಿ ಮುಂದುವರಿಯುತ್ತಾ ೧,೮೦೦ನೇ ಶತಮಾನ ದಲ್ಲಿ ಭೂಗರ್ಭದಿಂದ ಪೆಟ್ರೋಲಿಯಂ ಸಂಪತ್ತು ಹೀರಿಕೊ ಳ್ಳಲು ಶಕ್ತನಾದ. ಕೈಗಾರಿಕಾ ಕ್ರಾಂತಿ ಎಬ್ಬಿಸಿ ಎಗ್ಗಿಲ್ಲದಂತೆ ತಂತ್ರ eನ ಎಲ್ಲೆಡೆ ಹರಿದು ಸ್ಪರ್ಧಾತ್ಮಕ ಯುಗ ಪಂಚಾಂಗ ಹಾಕಿ ಇತಿಹಾಸ ಸ್ಥಾಪಿಸಿದ. ೧೯೦೦ನೇ ಶತಮಾನಕ್ಕೆ ಆಧುನಿಕ ವಿeನ ತಂತ್ರeನದ ಶಕೆ ಆರಂಭ. ವಿಮಾನ ಹಾರಿಸಲು ಯಶಸ್ಸು ಕಂಡ. ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಾ ಯುದ್ಧಕ್ಕೆ ವಿವಿಧ ಮಾರಾಕಾಸ್ತ್ರ, ಬೃಹತ್ ನೌಕೆ ಸಬ್‌ಮೆರಿನ್‌ಗಳ ತಯಾರಿ, ಸೇನೆಗೆ ಪ್ರತ್ಯೇಕ ಬಜೆಟ್ ಉನ್ನತ ತರಬೇತಿ ಕೈಗಾರಿಕೆಗಳು, ಅಣುವಿ ದ್ಯುತ್ ಸ್ಥಾವರಗಳು ತಲೆಎತ್ತಿತ್ತು. ಜನಸಂಖ್ಯೆ ಬೆಳವಣಿ ಗೆಯಿಂದ ಅರಣ್ಯ ಲೂಟಿ ನಡೆಯಿತು. ಇದಕ್ಕಿದ್ದಂತೆ ವ್ಯಾಪಾರ ಮತ್ತು ಅತಿಕ್ರ ಮಣದ ವಿಚಾರ ೧೯೩೨ರಲ್ಲಿ ಪ್ರಥಮ ಮಹಾಸಮರ ನಡೆದು ಯುದ್ಧಾಸ್ತ್ರಗಳು ಅಭಾದಿಂದ ಸ್ಥಗಿತಗೊಂಡಿತು.

ಅರ್ಥ ಕಳೆದುಕೊಳ್ಳುತ್ತಿರುವ ಜಾತ್ಯತೀತತೆ

Posted by JAYAKIRANA Kirana on | 0 comments | Leave a comment...





ಜಾತಿ ಎನ್ನುವುದು ಭಾರತೀಯ ಸಮಾಜದಲ್ಲಿ ಮತ್ತೆ ನಮ್ಮ ಬದುಕಿನ ಬೇರೆ ಬೇರೆ ಆಯಾಮಗಳ ಬಗೆಗಿನ ತೀರ್ಮಾನಗಳ ಮಧ್ಯೆ ಎಂಟ್ರಿ ಹೊಡೆಯುವ ಪರಿಣಾಮವಾಗಿ ನಾವು ಜಾತ್ಯತೀತತೆಯ ಪರಿಕಲ್ಪನೆಯನ್ನು ಸಂಕುಚಿತವಾದ ರೀತಿಯಲ್ಲಿ ಬಳಸುವ, ಅದರ ಆಳ ಅಗಲವನ್ನು ಕುಬ್ಜಗೊಳಿಸುವ ಕೆಲಸವನ್ನು ತಿಳಿದೂ ಮಾಡುತ್ತಿರುತ್ತೇವೆ

ಇಂಗ್ಲಿಷ್‌ನ ಸೆಕ್ಯುಲ್ಯಾರಿಝಂ ಎನ್ನುವ ಪದ ಆಯಾ ಹೊತ್ತಿಗೊ ದಗುವಂತೆ ಅರ್ಥೈಸುವಲ್ಲಿರುವ ಮುಖ್ಯ ಕಾರಣ ಇತರೆ ಭಾಷೆಗಳಲ್ಲಿ [ಕನ್ನಡವನ್ನೊಳಗೊಂಡು] ಸಾರ್ವತ್ರಿಕವಾಗಿ ಸಲ್ಲಬಹುದಾದ ಸ್ವೀಕೃತವಾದ ಏಕಮಾತ್ರ ಪದವಿಲ್ಲ. ಕನ್ನಡದಲ್ಲಂತೂ ಜಾತ್ಯತೀತತೆ ಎನ್ನುವ ಪದವನ್ನು ಧರ್ಮ ನಿರಪೇಕ್ಷತೆ, ಮತಾತೀತತೆ ಎಂತಲೂ ಕರೆಯುವುದಿದೆ. ಅತ್ಯಂತ ಜಟಿಲವಾಗಿರುವ ಜಾತಿ ಹಾಗೂ ಧರ್ಮದಂತಹ ವಿಷಯಗಳಲ್ಲಿ ಸಡಿ ಲತೆಯನ್ನು ಕಂಡುಕೊಳ್ಳುವ ಮಾರ್ಗವಾಗಿ ಜಾತ್ಯತೀತತೆ ಪರಿಕಲ್ಪನೆ ಬೆಳೆದುಬಂದಿದೆ. ಸರಳವಾಗಿ ಹೇಳುವುದಾದರೆ ಧರ್ಮ ಮತ್ತು ಜಾತಿ ಯಂಥ ವಿಷಯಗಳನ್ನು ಕುರಿತು ಅತ್ಯಂತ ಯತಾರ್ಥವಾಗಿ ವ್ಯವಹರಿ ಸುವ ಮನ:ಸ್ಥಿತಿಯೇ ಜಾತ್ಯತೀತತೆ. ಅನೇಕ ಶತಮಾನಗಳಿಂದಲೂ ಧರ್ಮದ ಹೊಟ್ಟೆಯೊಳಗೆ ಬೆಚ್ಚಗೆ ಕುಳಿತು ಕಾವು ಕಂಡ ನಂಬುಗೆಗಳು, ಸಂಪ್ರದಾಯಗಳ ಬೇರುಗಳು ಸಡಿಲುಗೊಂಡು, ನಡುಕ ಉಂಟಾಗು ವಲ್ಲಿ ಈ ಜಾತ್ಯತೀತ ಮನೋಭಾವವೇ ಕಾರಣ. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾತ್ಯತೀತತೆ ಎನ್ನುವ ಪದ ಆಯಾ ದೇಶಗಳಲ್ಲಿ ಕೋಮು ಗಲಭೆಗಳು ಘಟಿಸಿದಾಗ ಬಳಕೆಯಾಗುವ ಪದವಾಗಿ ತನ್ನ ಸಂಕುಚಿತ ಸೀಮಿತವನ್ನು ಉಳಿಸಿಕೊಂಡಿದೆ ಎನ್ನುವಂತಾಗಿದೆ.
ಅನೇಕ ಸಂದರ್ಭಗಳಲ್ಲಿ ಈ ಜಾತ್ಯತೀತತೆಯ ಪರಿಕಲ್ಪನೆಯನ್ನು ಪಾಶ್ಚಾತೀಕರಣಕ್ಕೆ ಸಂವಾದಿ ಎನ್ನುವ ಹಾಗೆ ಬಳಸುವುದೂ ಇದೆ. ಆದರೆ ಎರಡೂ ಬೇರೆ ಬೇರೆ ಕಲ್ಪನೆಗಳೇ. ಜಾತ್ಯತೀತತೆ ಎನ್ನುವುದು ಧರ್ಮ ಮತ್ತು ಜಾತಿಯನ್ನು ಧಿಕ್ಕರಿಸುವ ಬಗ್ಗೆ ಮಾತನಾಡುವುದಲ್ಲ, ಬದಲಾಗಿ ತನ್ನಂತೆ ಪರರ ಬಗೆದೊಡೆ ಕೈಲಾಸ ಕಣ್ಣ ಮುಂದೆಯೇ ಎಂದು ಪ್ರತಿ ಪಾದಿಸುವ ಮನೋಭಾವ. ಹಾಗೆ ನೋಡಿದರೆ ಈ ಜಾತ್ಯತೀತತೆಗೆ ಒಂದು ಅಗಾಧವಾದ ಶಕ್ತಿಯಿದೆ. ಅದು ಕೇವಲ ವೇದಿಕೆಯ ಉಪ ಭೋಗದ ವಿಷಯವಾಗಿ, ಚರ್ಚೆ ಮತ್ತು ಸಂವಾದದ ಸರಕಾಗಿ ಉಳಿದಿ ರುವ ಹಿನ್ನೆಲೆಯಲ್ಲಿಯೇ ಅದರ ತಾಕತ್ತಿನ ಅರಿವು ನಮಗೆ ಸರಿಯಾಗಿ ಗ್ರಹಿಕೆಯಾಗುತ್ತಿಲ್ಲ. ಇದನ್ನು ಬಳಸಿ ಒಂದು ಸಮುದಾಯವನ್ನು ಕೇವಲ ಧಾರ್ಮಿಕ ಸಾಮರಸ್ಯದ ತಳಹದಿಯ ಮೇಲೆ ಕಟ್ಟುವ ಕೆಲಸ ಮಾತ್ರವ ಲ್ಲದೇ ಅದನ್ನು ಔಚಿತ್ಯಪೂರ್ಣವಾಗಿ ರೂಪಿಸುವಲ್ಲಿಯೂ ಇದು ನೆರವಾ ಗುತ್ತದೆ. ಅದು ಗಾಂಧೀಜಿಯವರ ರಾಮರಾಜ್ಯ, ಪ್ಲೇಟೊನ ಆದರ್ಶ ರಾಜ್ಯ, ಥಾಮಸ್ ಮೋರ‍್ನ ಯುಟೊಪಿಯಾಕ್ಕೆ ತುಂಬಾ ಹತ್ತಿರವಾದ ಸಮುದಾಯವನ್ನು ಕಟ್ಟುವಲ್ಲಿ ಈ ಜಾತ್ಯತೀತತೆಯ ಶಕ್ತಿ ನೆರವಾಗುತ್ತದೆ. ಈ ಪರಿಕಲ್ಪನೆಯನ್ನು ಬಳಸುವಾಗಲೆಲ್ಲಾ ನಾವು ಬಹುತೇಕವಾಗಿ ಹಿಂದು-ಮುಸ್ಲಿಂ, ಧಾರ್ಮಿಕ ಸಮೂಹಗಳನ್ನು ಮೀರಿ, ಹೊರತುಪಡಿಸಿ ಚಿಂತಿ ಸುವುದೇ ಇಲ್ಲ. ಜಾತ್ಯತೀತತೆ ಎನ್ನುವುದು ಧರ್ಮ, ಜಾತಿ, ಭಾಷೆ, ಪ್ರಾದೇ ಶಿಕತೆಯನ್ನು ಮೀರಿ ಅನ್ವಯ, ಅಳವಡಿಕೆಯಾಗುವ ಅವಶ್ಯಕತೆಯಿದೆ.
ಜಾತಿ ಎನ್ನುವುದು ಭಾರತೀಯ ಸಮಾಜದಲ್ಲಿ ಮತ್ತೆ ನಮ್ಮ ಬದು ಕಿನ ಬೇರೆ ಬೇರೆ ಆಯಾಮಗಳ ಬಗೆಗಿನ ತೀರ್ಮಾನಗಳ ಮಧ್ಯೆ ಎಂಟ್ರಿ ಹೊಡೆಯುವ ಪರಿಣಾಮವಾಗಿ ನಾವು ಜಾತ್ಯತೀತತೆಯ ಪರಿಕಲ್ಪನೆಯನ್ನು ಸಂಕುಚಿತವಾದ ರೀತಿಯಲ್ಲಿ ಬಳಸುವ, ಅದರ ಆಳ ಅಗಲವನ್ನು ಕುಬ್ಜ ಗೊಳಿಸುವ ಕೆಲಸವನ್ನು ತಿಳಿದೂ ಮಾಡುತ್ತಿರುತ್ತೇವೆ. ಹಾಗಾದಾಗ ಜಾತ್ಯ ತೀತತೆ ಎನ್ನುವ ಪದ ಹುಳ ತಿಂದ ಕಟ್ಟಿಗೆಯಂಥಾಗುತ್ತದೆ. ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ತಳ ಊರಿದ ಈ ಕಲ್ಪನೆಯನ್ನು ವಸ್ತುನಿಷ್ಠ ಹಿನ್ನೆಲೆಯಲ್ಲಿ ಅರಿಯುವ ಅವಶ್ಯಕತೆಯಿದೆ. ಜಾತಿಯ ಸೆಳಕಿ ನೊಂದಿಗೆ ಜಾತ್ಯತೀತತೆ ಎನ್ನುವ ಪದ ಪ್ರಯೋಗ ಮಾಡುವಾತ ಆ ಪದಕ್ಕೂ ನ್ಯಾಯ ಕೊಡಲಾರ. ಅಂತೆಯೇ ತನ್ನ ಜೊತೆಗಿರುವ ಜನಸ ಮೂಹಕ್ಕೂ ಕೂಡಾ. ಇನ್ನು ಕೆಲ ವಿದೇಶಿ ಚಿಂತಕರು ಭಾರತೀಯ ನೆಲ ದಲ್ಲಿ ಜಾತ್ಯತೀತತೆ ಎನ್ನುವುದು ಸಾಧ್ಯವೇ ಇಲ್ಲ, ಯಾಕೆಂದರೆ ಇಲ್ಲಿ ವೃತ್ತಿ ಮತ್ತು ಪ್ರವೃತ್ತಿ ಎರಡೂ ಒಂದೇ ಆಗಿಲ್ಲ ಎನ್ನುವುದಿದೆ. ಅಂದರೆ ಆಚರಣೆ ಮತ್ತು ಅನುಸರಣೆಯ ಮಧ್ಯೆ ಇಲ್ಲಿ ತುಂಬಾ ಅಂತರಗಳಿವೆ ಎಂದು ಹೇಳುವವರಿದ್ದಾರೆ.ಅತಿ ಮುಖ್ಯವಾಗಿ ಆಯಾ ರಾಷ್ಟ್ರೀಯ ನೆಲೆಯಲ್ಲಿ ಜಾತ್ಯತೀತತೆ ಎನ್ನುವುದು ಅರ್ಥೈಸುವಂತಾದರೂ ಅದರ ಮೂಲ ಆಶಯ ಮಾತ್ರ ಧರ್ಮ, ಜಾತಿ, ಜನಾಂಗ, ಭಾಷೆಗಳಿಗೆ ಸಂಬಂಧಿಸಿರುವ ಉದಾರ ಮನೋಭಾವವೇ ಆಗಿರಬೇಕೇ ಹೊರತು ಮೂಲ ಆಶಯದಿಂದ ವ್ಯತಿ ರಿಕ್ತವಾಗಿ ಜಾತ್ಯತೀತತೆಯ ವ್ಯಾಖ್ಯಾನವೇ ವಿಭಿನ್ನವಾಗುವುದು ವಿಪರ್ಯಾಸ.
ಭಾರತವನ್ನು ನಾವು ಗಣನೆಗೆ ತೆಗೆದುಕೊಂಡಾಗ ಇಲ್ಲಿರುವ ಧರ್ಮ ಗಳು, ಭಾಷೆಗಳು, ವೇಷ- ಭೂಷಣಗಳು, ಆಹಾರ ಪದ್ಧತಿಗಳು, ಹಬ್ಬ ಹರಿದಿನಗಳು, ಜಾತ್ರೆಗಳು ಈ ನೆಲದ ಬದುಕಿನಲ್ಲಿ ಸ್ವಾಭಾವಿಕವಾಗಿಯೇ ಜಾತ್ಯತೀತತೆಯ ಗುಣಗಳನ್ನು ಸಂಪೋಷಿಸಿಕೊಂಡು ಬರುವಲ್ಲಿ ಕಾರಣ ವಾಗಿವೆ. ಈ ಗುಣಕ್ಕೆ ಧಕ್ಕೆ ಬಂದಾಗಲೆಲ್ಲಾ ಬದುಕು ಭಯವಾಗಿ ಕಾಡುವು ದಿದೆ. ಬದುಕಿನ ರಿಕ್ತತೆಯನ್ನು ಮೀರಿಯೂ ಕೂಡಿ ಬದುಕುವ ತಹತಹಿ ಕೆಗೆ ತೊಡಕಾಗುವ ಶಕ್ತಿಗಳನ್ನು ಸಹಿಸದಿರುವ ಗುಣ ಈ ಮಣ್ಣಿನಲ್ಲಿಯೇ ಇದೆ. ನಾವು ಅಭಿವೃದ್ಧಿ ಹೊಂದುತ್ತಿರುವ ಮಾರ್ಗಗುಂಟ ಆಧುನೀಕರಣ ಹೊಂದುವ ಹಂಬಲದವರಾದರೆ ಆ ದಿಶೆಯಲ್ಲಿ ನೆರವಾಗುವ ಬಹುತೇಕ ಸಂಸ್ಥೆಗಳನ್ನು ಜಾತ್ಯತೀತ ನೆಲೆಯಲ್ಲಿಯೇ ಪ್ರತಿಷ್ಠಾಪನೆ ಮಾಡುವ ಜರೂರತ್ತಿದೆ.
ನಮ್ಮ ಮಕ್ಕಳು ನೆರೆಮನೆಯ ಹುಡುಗರೊಂದಿಗೆ ಕೂಡಿ ಆಡುವಾಗ ಅವರು ಹೀಗೆ, ಹಾಗೆ ಅದನ್ನು ತಿಂತಾರೆ, ಇದನ್ನು ತಿಂತಾರೆ ಎಂದು ಮಕ್ಕಳ ಕಿವಿಯಲ್ಲಿ ಪಿಸುಗುಡುವ ಪಿಚಕಾರಿಗಳಾಗದೇ ಒಂದು ಮಗು ಇನ್ನೊಂದು ಮಗುವಿಗಿಂತಾ ಯಾವುದೇ ರೀತಿಯಲ್ಲೂ ಭಿನ್ನವಾಗಲಾ ರದು ಎನ್ನುವ ಉದಾರತೆಯಿಂದ ಆರಂಭವಾಗುವ ಪಾಠ, ಶಾಲೆ-ಕಾಲೇ ಜುಗಳು, ನಮ್ಮ ನೌಕರಶಾಹಿ ವ್ಯವಸ್ಥೆಗಳು, ವಿಶ್ವವಿದ್ಯಾಲಯಗಳನ್ನೊಳ ಗೊಂಡು ನಮ್ಮ ದೈನಂದಿನ ಬದುಕನ್ನು ತನ್ನಿಷ್ಟದಂತೆ ರೂಪಿಸಹೊರಟ ಸಮೂಹ ಮಾಧ್ಯಮಗಳವರೆಗೂ ಮುಂದುವರೆಯಬೇಕು. ಹೀಗೆ ಸಮಾ ಜದ ಎಲ್ಲ ಸ್ತರದ ಸಂಘ-ಸಂಸ್ಥೆಗಳು ಜಾತ್ಯತೀತತೆಯ ನೆಲೆಯಲ್ಲಿಯೇ ಮೈದಳೆದು, ಕಾರ್ಯ ನಿರ್ವಹಿಸುವಂತಾಗಬೇಕು. ಈ ಮುಂಚಿನ ಧಾರ್ಮಿಕ ಭಿನ್ನತೆಗಳನ್ನು ಸಾರೂಪ್ಯಗೊಳಿಸುವಲ್ಲಿಯೇ ಜಾತ್ಯತೀತತೆಯ ಗುಣದ ಅಗಮ್ಯ ಶಕ್ತಿ ಅಡಗಿದೆ ಎಂದು ಸಮಾಜಶಾಸ್ತ್ರಜ್ಞರು ಹೇಳಿರುವುದಿದೆ. ಜಾತ್ಯಾ ತೀತತೆಯ ಸ್ಥಾಪನೆಯಲ್ಲಿ ಧಾರ್ಮಿಕ ಸಂಗತಿಗಳು ಸಮಾಜದಲ್ಲಿಯ ಮಿಕ್ಕ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸುವ ಬದಲಾಗಿ ಅವುಗಳ ಮುಕ್ತ, ಸ್ವಾಯತ್ತ ಕಾರ್ಯ ನಿರ್ವಹಣೆಯಲ್ಲಿ ತೊಡಕಾಗದಿರುವಂತೆ ವ್ಯವಹರಿಸುವುದು ಕೂಡಾ ಅಷ್ಟೇ ಮುಖ್ಯವಾದುದು. ಆ ಮೂಲಕ ಜಾತಿ ಧರ್ಮಗಳ ಪ್ರಭುತ್ವವನ್ನು ತಕ್ಕ ಮಟ್ಟಿಗಾದರೂ ಕಡಿಮೆ ಮಾಡಬಹುದು. ಜಾತ್ಯತೀತತೆ ಎನ್ನುವುದು ಒಂದು ಬಲವಂತದ ಹೇರಿಕೆ ಇಲ್ಲವೇ ಕಷ್ಟದ ಆಯ್ಕೆಯಾಗದೇ ಒಂದು ಬೃಹತ್ ಸಮಷ್ಠಿಯ ಇಷ್ಟವಾಗಬೇಕು.
* ವರ್ತಮಾನ

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)