ಕಾಂಗ್ರೆಸ್ ಜಯಭೇರಿ

Posted by JAYAKIRANA Kirana on Tuesday, 20 March 2012 | 0 comments | Leave a comment...


ಬಿಜೆಪಿಗೆ ಹೀನಾಯ ಸೋಲು
ಮಂಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾ ವಣೆಯ ಮತ ಎಣಿಕೆ ಆರಂಭಿಕ ಸುತ್ತಿನಿಂದಲೇ ಮುನ್ನಡೆಯಲ್ಲಿದ್ದಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ೧೩ನೇ ಸುತ್ತಿನವರೆಗೂ ಮುನ್ನಡೆ ಕಾಯ್ದು ಕೊಂಡಿದ್ದರು. ಜಯಲಕ್ಷ್ಮಿ ಜಯಪ್ರಕಾಶ್ ಹೆಗ್ಡೆಯವರ ಮಡಿಲಿಗೆ ಸಹಜವಾಗಿಯೇ ಒಲಿದಿತ್ತು.
೧೩ನೇ ಸುತ್ತು ಮುಗಿಯುವ ಹೊತ್ತಿಗೆ ಜಯಪ್ರಕಾಶ್ ಹೆಗ್ಡೆ ೩,೫೨,೨೪೧ ಮತಗಳನ್ನು ಪಡೆದಿದ್ದರೆ. ಬಿಜೆಪಿಯ ಸುನಿಲ್ ಕುಮಾರ್ ೩,೦೭,೦೧೭ ಮತಗಳನ್ನು ಪಡೆದಿದ್ದರು. ಹತ್ತನೇ ಸುತ್ತಿನ ಬಳಿಕ ಹೆಗ್ಡೆ ೪೫,೨೨೪ ಮತಗಳ ಭರ್ಜರಿ ಅಂತರವನ್ನು ಕಾಯ್ದುಕೊಂಡು ವಿಜಯಮಾಲೆ ಯನ್ನು ಧರಿಸಿದ್ದಾರೆ.
ಉಡುಪಿಯ ಕುಂಜಿಬೆಟ್ಟುನಲ್ಲಿ ರುವ ಟಿ.ಎ. ಪೈ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ಇಂದು ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾದಾಗ ಮೊದಲಿಗೆ ಎರಡು ಅಂಚೆ ಮತಗಳು ಸುನಿಲ್‌ಕುಮಾರರಿಗೆ ಮುನ್ನಡೆ ಒದಗಿಸಿದ್ದು ಬಿಟ್ಟರೆ ಪ್ರತಿ ಹಂತದಲ್ಲೂ ಜಯಪ್ರಕಾಶ್ ಹೆಗ್ಡೆ ತಮ್ಮ ಗೆಲವಿನ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೆ ಸಾಗಿದ್ದರು.
ಸದಾನಂದ ಗೌಡರಿಗೆ ಮುಖಭಂಗ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಅಸ್ತಿತ್ವಕ್ಕೆ ಸವಾಲು ಹಾಕಿದ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಪ್ರತಿಷ್ಠೆಯ ವಿಚಾರವಾಗಿತ್ತು.ಆದರೆ ಚಿಕ್ಕಮಗಳೂರು ತರಿಕೆರೆ, ಬೀರೂರು ಕ್ಷೇತ್ರದಲ್ಲಿ ಸುಮಾರು ೧.೨೦ಲಕ್ಷದಷ್ಟು ಲಿಂಗಾಯಿತ ಮತದಾರರ ಪೈಕಿ ಬಹುತೇಕರು ಯಡಿಯೂರಪ್ಪ ಅವರನ್ನು ಬೆಂಬಲಿಸುವವರಾಗಿದ್ದರು. ಆದರೆ ಪಕ್ಷ ಸೋಲಿನ ದವಡೆಗೆ ಸಿಲುಕಿ ಗೌಡರೀಗ ಮುಖಭಂಗಕ್ಕೀಡಾಗಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ಆಗಮಿಸದೆ ತಟಸ್ಥವಾಗಿ ಉಳಿದಿದ್ದರು. ಆದರೆ ಸದಾನಂದ ಗೌಡ ಇದಕ್ಕಾಗಿ ಪ್ರತ್ಯೇಕ ಕಾರ್ಯತಂತ್ರವನ್ನು ರೂಪಿಸಿ ಲಿಂಗಾಯಿತ ಮತದಾರರ ಮನವೊಲಿಸುವಲ್ಲಿ ಕಾರ್ಯತಂತ್ರ ರೂಪಿಸಿದ್ದರು. ಆದರೆ ಈ ಭಾಗದಲ್ಲಿ ಬಿಜೆಪಿಗೆ ಮತಗಳು ಹರಿದು ಬರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಈ ಹಿಂದೆ ಬ್ರಹ್ಮಾವರ ವಿಧಾನ ಸಭಾಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಇದೀಗ ಮುಖ್ಯಮಂತ್ರಿ ಸದಾನಂದ ಗೌಡರಿಂದ ತೆರವಾದ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಎದುರು ಗೆಲುವು ಸಾಧಿಸಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದಾರೆ.ಈ ಬಾರಿಯ ಉಪ ಚುನಾವಣೆಯಲ್ಲಿ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ಮತದಾರರು ಪಕ್ಷ ಬೇದ ಮರೆತು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯನ್ನು ಬೆಂಬಲಿಸಿದ್ದಾರೆ.

ಸುನಿಲ್ ಸೋಲಿಗೆ ‘ಪದ್ಮಪ್ರಿಯಾ’ ಕಾರಣ! 

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸೋಲಲು ಕಾರಣಗಳನ್ನು ಮತದಾರರೇ ಹೇಳುತ್ತಿದ್ದಾರೆ. ಪದ್ಮಪ್ರಿಯಾ ನಿಗೂಢ ಸಾವು ಪ್ರಕರಣ, ರೇವ್‌ಪಾರ್ಟಿ, ನಾಗಾರ್ಜುನ ಸಂತ್ರಸ್ತರ ಸಮಸ್ಯೆ ಇವೇ ಇತ್ಯಾದಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಜನರು ಮತ ಚಲಾಯಿಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷದಲ್ಲಿನ ಆಂತರಿಕ ಗೊಂದಲವೂ ಕ್ಷೇತ್ರದ ಮತದಾರರ ಮೇಲೆ ಅಲ್ಪಸ್ವಲ್ಪ ಪ್ರಭಾವ ಬೀರಿದ್ದು, ಜನರು ಬಿಜೆಪಿ ಸಹವಾಸವೇ ಸಾಕು ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸಿ ಜಯಪ್ರಕಾಶ್ ಹೆಗ್ಡೆ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗೋಪಾಲ ಭಂಡಾರಿ ಎದುರು ಚುನಾವಣೆಗೆ ಸ್ಪರ್ಧಿಸಿದ್ದಾಗ ಜನರು ಜಾತಿ-ಬೇಧ ಮರೆತು ಸುನಿಲ್ ಪರ ನಿಂತಿದ್ದರು. ಸುನಿಲ್ ನಾಮಪತ್ರ ಸಲ್ಲಿಸುವ ದಿನ ಜನರು ಪ್ರವಾಹೋಪಾದಿಯಲ್ಲಿ ಸುನಿಲ್‌ನನ್ನು ಹಿಂಬಾಲಿಸಿ ಕಾರ್ಕಳದಲ್ಲಿ ನೂತನ ಇತಿಹಾಸ ಬರೆದಿದ್ದರು. ಅದೇ ರೀತಿ ಸುನಿಲ್ ದಾಖಲೆ ೩೫ ಸಾವಿರಕ್ಕೂ ಅಧಿಕ ಮತಗಳಿಂದ ಗೋಪಾಲ ಭಂಡಾರಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಗೆದ್ದ ಬಳಿಕ ಸುನಿಲ್ ತಮ್ಮ ಕ್ಷೇತ್ರದ ಮತದಾರರನ್ನು ಕಡೆಗಣಿಸುತ್ತಾ ಸಾಗಿದ್ದೇ ಕಳೆದ ವಿಧಾನಸಭಾ ಚುನಾವಣೆ ಮತ್ತು ಈಗಿನ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಲು ಕಾರಣ ಎಂದು ಅಂದಾಜಿಸಲಾಗುತ್ತಿದೆ.
ಬಜರಂಗದಳ ರಾಜ್ಯ ಸಂಚಾಲಕರಾಗಿದ್ದ ಸುನಿಲ್ ಕುಮಾರ್‌ರ ‘ರಫ್ ಆಂಡ್ ಟಫ್ ಸ್ವಭಾವ ಗೆದ್ದ ಬಳಿಕ ಕಾರ್ಯಕರ್ತರು, ಮತದಾರರ ಎದುರು ಪುನರಾವರ್ತನೆಯಾದಾಗ ಸಹಜವಾಗೇ ಕಾರ್ಕಳ ಕ್ಷೇತ್ರದ ಮತದಾರರ ಮುನಿಸಿಗೆ ಕಾರಣವಾಗಿತ್ತು. ಇದೇ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುನಿಲ್‌ರನ್ನು ಸೋಲಿಸಬೇಕು ಎಂದು ಅಂದಾಜಿಸುವಷ್ಟರಲ್ಲಿ ಉಡುಪಿ ಶಾಸಕ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ದೆಹಲಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಇಲ್ಲಿ ರಘುಪತಿ ಭಟ್ಟರ ಆತ್ಮೀಯ ಸುನಿಲ್ ಕುಮಾರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಪದ್ಮಪ್ರಿಯಾ ಸಾವಿಗೆ ಸುನಿಲ್ ಕುಮಾರ್ ಕೈವಾಡವೂ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿತ್ತು. ಕಳೆದ ವಿಧಾನಸಭಾ ಚುನಾವಣೆ ಮತ್ತು ಇಂದಿನ ಲೋಕಸಭಾ ಚುನಾವಣೆಯಲ್ಲಿ ಸುನಿಲ್ ವಿರುದ್ಧ ಪ್ರಚಾರದಲ್ಲಿ ಪದ್ಮಪ್ರಿಯಾ ಪ್ರಕರಣವನ್ನು ಕಾಂಗ್ರೆಸಿಗರು ಪ್ರಮುಖ ಅಸ್ತ್ರವನ್ನಾಗಿ ಬಳಸಿದ್ದರು ಎನ್ನುವುದು ಗಮನಾರ್ಹ ಅಂಶ.
ಪದ್ಮಪ್ರಿಯಾ ಪ್ರಕರಣದ ಜೊತೆಗೆ ಬಿಜೆಪಿಗರಿಗೆ ಉಡುಪಿಯ ಮಲ್ಪೆ ಬೀಚ್‌ನಲ್ಲಿ ನಡೆದ ವಿದೇಶಿಯರ ರೇವ್ ಪಾರ್ಟಿಯೂ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಕೆಯಾಗಿತ್ತು. ಮಲ್ಪೆಯಲ್ಲಿ ನಡೆದಿದ್ದ ರೇವ್ ಪಾರ್ಟಿ, ಬಹಿರಂಗ ಕಾಮಕೇಳಿಯನ್ನು ಕಾಂಗ್ರೆಸಿಗರು ಪರಿಣಾಮಕಾರಿಯಾಗಿ ಬಳಸಿದ್ದೇ ಆಳುವ ಪಕ್ಷ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಪದ್ಮಪ್ರಿಯಾ ಸಾವು, ರೇವ್‌ಪಾರ್ಟಿ, ನಾಗಾರ್ಜುನ ವಿರೋಧಿ ಹೋರಾಟದಲ್ಲಿ ಪ್ರದರ್ಶಿಸಿದ ಆರಂಭ ಶೂರತ್ವ ಇವೆಲ್ಲ ಸುನಿಲ್ ಸೋಲಿಗೆ ಪ್ರಮುಖ ಕಾರಣ ಎನ್ನುವುದು ನಿರ್ವಿವಾದ.

ಜೆಡಿಎಸ್‌ಗೆ ಲಾಭ ಇಲ್ಲ

ಜೆಡಿಎಸ್ ಸ್ಪರ್ಧೆ ಭವಿಷ್ಯದಲ್ಲಿ ಪಕ್ಷದ ಸಂಘಟನೆಯ ಉದ್ದೇಶದ್ದಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜುಗೊಳಿಸುವ ಉದ್ದೇಶದಿಂದಲೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಸಿತ್ತು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಏರಿತ್ತು. ಅಲ್ಲಿ ಎಸ್ಪಿ ಅಧಿಕಾರಕ್ಕೆ ಬಂದಿದ್ದು ಇಲ್ಲಿಯ ಜೆಡಿಎಸ್ ನಾಯಕರಲ್ಲೂ ಹುರುಪು ಮೂಡಿಸಿತ್ತು. ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ತಿರಸ್ಕರಿಸುತ್ತಾರೆ ಎಂಬ ಭಾವನೆಯೊಂದಿಗೆ ದೇವೇಗೌಡ ಹಾಗೂ ಎಚ್.ಡಿ.ಕುಮಾರ್‌ಸ್ವಾಮಿ ಹತ್ತು ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದು ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ್ದರು. ಅವರ ಮುಂದಿನ ಉದ್ದೇಶ ಏನಾಗುತ್ತದೋ ಗೊತ್ತಿಲ್ಲ. ಆದರೆ ಈಗಿನ ಫಲಿತಾಂಶ ಜೆಡಿಎಸ್‌ಗೆ ಪೂರಕವಾಗಿ ಬಂದಿಲ್ಲ ಎಂದೆನಿಸುತ್ತದೆ.

ಹೆಗ್ಡೆಯನ್ನು ಕೈ ಹಿಡಿದ ಬಂಟರು
ಮಂಗಳೂರು: ಕಳೆದ ಲೋಕ ಸಭಾ ಚುನಾವಣೆಯಲ್ಲಿ ೨೬ ಸಾವಿರ ಮತಗಳ ಅಂತರದಿಂದ ಪರಾಭವ ಗೊಂಡಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿನ ಹಿಂದೆ ಬಂಟರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಭಾವದಿಂದ ೨೪ ಸಾವಿರ ಮತಗಳಿಂದ ಬಿಜೆಪಿ ಮುನ್ನಡೆ ಸಾಧಿಸಿತ್ತು. ಆದರೆ ಈ ಬಾರಿ ಬಂಟ ಸಮಾಜ ಬಾಂಧವರು ಪಕ್ಷ ಮರೆತು ಜಯಪ್ರಕಾಶ್ ಹೆಗ್ಡೆಯವರ ಬೆಂಬಲಕ್ಕೆ ನಿಂತರು. ಅಲ್ಲದೆ ಕರಾವ ಳಿಯ ಮೊಗವೀರ ಸಮಾಜದವರು ಹೆಗ್ಡೆಗೆ ಬೆಂಬಲ ಸೂಚಿಸಿದ್ದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು. ರೇವು ಪಾರ್ಟಿ, ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ ಯುಪಿಸಿಎಲ್ ಸಂಸ್ಥೆಗೆ ಬಿಜೆಪಿ ನೀಡಿದ ಬೆಂಬಲ ಎಲ್ಲವೂ ಈ ಬಾರಿಯ ಚುನಾ ವಣೆಯಲ್ಲಿ ಬಿಜೆಪಿಗೆ ಮುಳುವಾಯಿತು.
ಮುಂಬಾಯಿ, ಬೆಂಗಳೂರು ಸಹಿತ ದೂರದ ಊರುಗಳಲ್ಲಿ ನೆಲೆಸಿ ರುವ ಬಂಟರು ಚುನಾವಣೆಯ ವೇಳೆ ಊರಿಗೆ ಆಗಮಿಸಿ ಮತದಾನದಲ್ಲಿ ಭಾಗವಹಿಸಿರುವುದು ಮತ್ತು ಕಾಂಗ್ರೆಸ್‌ನ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಿರುವುದು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು.

ಯಡ್ಡಿ ಪ್ರಭಾವ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಭಾಗವಹಿಸಬೇಕೆ, ಬೇಡವೇ ಎಂಬ ಗೊಂದಲದಲ್ಲೇ ದಿನ ದೂಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದ್ದಾರೆ ಎಂದೆನಿಸುತ್ತದೆ.
ಉಡುಪಿ ಜಿಲ್ಲಾವ್ಯಾಪ್ತಿಯಲ್ಲಿ ಯಡಿಯೂರಪ್ಪರ ಪ್ರಭಾವವೇನೂ ಇಲ್ಲ. ಇಲ್ಲಿ ನಾಯಕತ್ವಕ್ಕಿಂತ ಆರ್‌ಎಸ್ಸೆಸ್ ಪ್ರಾಮುಖ್ಯತೆ ಪಡೆದಿದೆ. ಆದರೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಯಡಿಯೂರಪ್ಪರ ಪ್ರಾಬಲ್ಯ ಇದೆ. ಬಿರೂರಿನಲ್ಲಿ ಶೆ.೩೦ರ ಪ್ರಮಾಣದಲ್ಲಿ ವೀರಶೈವ ಮತದಾರರಿದ್ದಾರೆ ಇಲ್ಲಿ ಯಡಿಯೂರಪ್ಪರ ಅಗತ್ಯ ಇತ್ತು ಎಂಬುದು ಸಾಬೀತಾಗಿದೆ.
ಸಂಘ ಪರಿವಾರದ ಸಹಕಾರದಿಂದ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದ್ದ ಡಿ.ವಿ.ಸದಾನಂದ ಗೌಡ ಹಾಗೂ ಈಶ್ವರಪ್ಪ ಸಂಘದ ಕಾರ್ಯಕರ್ತರ ದಂಡು ಫೀಲ್ಡ್‌ಗೆ ಇಳಿಸಿದ್ದರು. ಸಂಘ ಪರಿವಾರದ ಕಾರ್ಯಕರ್ತರ ಕಾರ್ಯ ವೈಖರಿ ಕಾಂಗ್ರೆಸಿಗರನ್ನು ದುಗುಡಕ್ಕೆ ದೂಡಿತ್ತು. ಬಿ.ಎಸ್. ಯಡಿಯೂರಪ್ಪ ಅನಿವಾರ್ಯರಲ್ಲ ಎಂದು ಸಾಬೀತು ಪಡಿಸುವುದೇ ಡಿ.ವಿ.ಸದಾನಂದ ಗೌಡ ಹಾಗೂ ಈಶ್ವರಪ್ಪರ ಉದ್ದೇಶವಾಗಿತ್ತು. ಈ ಉದ್ದೇಶದಲ್ಲಿ ಅವರು ವಿಫಲರಾಗಿದ್ದಾರೆ.

ದಾಖಲೆಯಾಗಿ ಉಳಿದ ಆಸ್ಕರ್ ಗೆಲುವು

Posted by JAYAKIRANA Kirana on | 0 comments | Leave a comment...


ಮಂಗಳೂರು: ಕಾಂಗ್ರೆಸ್ಸಿನ ಆಸ್ಕರ್ ಫೆರ್ನಾಂಡಿಸ್ ಸಾಧಿಸಿದ ೧,೫೯,೯೬೯ ಮತಗಳ ಅಂತರದ ಗೆಲುವಿನ ದಾಖಲೆ ಇಂದಿಗೂ ಅಳಿಯದೆ ಉಳಿದಿದೆ.
೧೯೮೦ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಡಾ. ವಿ.ಎಸ್. ಆಚಾರ್ಯರನ್ನು ಆಸ್ಕರ್ ದಾಖಲೆ ಅಂತರದಿಂದ ಸೋಲಿಸಿದ್ದರು. ಐದು ಬಾರಿಯ ಗೆಲುವಿನ ಸರದಾರ ಆಸ್ಕರ್ ೧೯೯೮ರಲ್ಲಿ ೫೬,೫೬೭ ಮತಗಳ ಅಂತರದಿಂದ ಸೋತಿದ್ದರು.
ಉಡುಪಿ ಲೋಕಸಭೆ ಕ್ಷೇತ್ರದಲ್ಲಿ ೧೯೮೪ರಲ್ಲಿ ಗರಿಷ್ಟ ಶೇ. ೭೧.೯೪ ಮತದಾನವಾಗಿದ್ದರೆ, ೧೯೫೭ರಲ್ಲಿ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕನಿಷ್ಟ ಶೇ. ೫೨.೩೮ ಮತದಾನವಾಗಿತ್ತು.
ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವಾದ ಬಳಿಕ ೨೦೦೯ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶೇ. ೬೮.೪೭ ಮತದಾನವಾಗಿತ್ತು. ಡಿ.ವಿ. ಸದಾನಂದ ಗೌಡರು ೨೭,೦೧೮ ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಈ ಬಾರಿಯ ಮರು ಚುನಾವಣೆಯಲ್ಲಿ ಶೇ. ೬೮.೧೦ ಮತದಾನವಾಗಿದೆ.

ಆಸ್ಕರ್‌ಗೆ ಗೆಲುವು ಅನಿವಾರ್ಯವಾಗಿತ್ತು

Posted by JAYAKIRANA Kirana on | 0 comments | Leave a comment...


ಮಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ತಾನು ಸಂಸದನಾಗಿ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳದೆ ಹೋದರೆ ಅದು ಅವರ ಪಾಲಿನ ರಾಜಕೀಯ ಹಿನ್ನಡೆ ಎಂದೇ ಲೆಕ್ಕಾಚಾರ ಹಾಕಲಾಗುತ್ತಿದೆ.
ಡಿ.ವಿ.ಸದಾನಂದ ಗೌಡರಂತೆಯೇ ಕಾಂಗ್ರೆಸ್‌ನ ಆಸ್ಕರ್ ಫೆರ್ನಾಂಡಿಸ್‌ರಿಗೂ ಕೂಡ ಇದು ಪ್ರತಿಷ್ಠೆಯ ಚುನಾವಣೆಯೇ ಆಗಿತ್ತು. ಕಳೆದ ನಾಲ್ಕು ಅವಧಿಗಳಿಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ಆಸ್ಕರ್ ಫೆರ್ನಾಂಡಿಸ್‌ಗೆ ತನ್ನ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ನ್ನು ಗಟ್ಟಿಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲದೆ ಇದ್ದರೆ ಆಸ್ಕರ್ ಫೆರ್ನಾಂಡಿಸ್‌ರ ರಾಜಕೀಯ ಭವಿಷ್ಯಕ್ಕೂ ಮಾರಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೆಹಲಿ ರಾಜಕಾರಣ ಮಾಡಲು ನಿಮಗೆ ಆಸ್ಪದ ಇಲ್ಲ ಎಂಬ ನೇರ ಸಂದೇಶವನ್ನೇ ಕಾಂಗ್ರೆಸ್ ಹೈಕಮಾಂಡ್ ಆಸ್ಕರರಿಗೆ ನೀಡಿತ್ತು. ಇದೇ ಕಾರಣದಿಂದ ಆರಂಭದಿಂದಲೂ ಕ್ಷೇತ್ರದಲ್ಲೆ ಇದ್ದ ಆಸ್ಕರ್ ತನು, ಮನ ಹಾಗೂ ಧನದ ಶ್ರಮ ವಹಿಸಿದ್ದರೂ ಪ್ರತಿ ಬೂತ್‌ಮಟ್ಟದಲ್ಲೂ ಕಾರ್ಯಕರ್ತರನ್ನು ಮತದಾರರನ್ನು ಸಂತೃಪ್ತಗೊಳಿಸಲು ವ್ಯವಸ್ಥೆ ಮಾಡಿದ್ದರು. ಇದರ ಪರಿಣಾಮ ಫಲಿತಾಂಶದ ರೂಪದಲ್ಲಿ ಬಂದಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ರಾಜ್ಯ ಸರಕಾರ ನಿರ್ಜೀವ: ಖಾದರ್ ಆರೋಪ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಧಿಕಾರಕ್ಕಾಗಿ ಕಿತ್ತಾಟ, ಸಭೆ ಸಮಾರಂಭದಲ್ಲಿ ಭಾಗವ ಹಿಸುವ ಪೈಪೋಟಿ, ದಿಲ್ಲಿ ಪ್ರವಾಸ, ಗುಂಪುಗಾರಿಕೆ ಇವುಗಳಲ್ಲೇ ನಿರತ ವಾಗಿರುವ ಬಿಜೆಪಿ ಸರಕಾರ ರಾಜ್ಯದ ಜನತೆಯ ಪಾಲಿಗೆ ನಿರ್ಜೀವವಾಗಿದೆ ಎಂದು ಶಾಸಕ ಯು.ಟಿ ಖಾದರ್ ಆರೋಪಿಸಿದ್ದಾರೆ.
ಜನೋಪಯೋಗಿಯಾದ ಬಜೆಟ್ ಮಂಡನೆ ಮಾಡುವ ಬಗ್ಗೆ ಚಿಂತನೆ ಮಾಡುವ ಬದಲು ಯಾರು ಬಜೆಟ್ ಮಂಡನೆ ಮಾಡಬೇಕು? ಎಂಬ ಆಂತರಿಕ ಕಚ್ಚಾಟ ಬಿಜೆಪಿಯಲ್ಲಿ ಆರಂಭ ಗೊಂಡಿದೆ .ಇವರಿಂದ ನಾವು ಎಂತಹ ಬಜೆಟ್ ನಿರೀಕ್ಷಿಸಲು ಸಾಧ್ಯ ಎನ್ನುವ ಆತಂಕವನ್ನು ಖಾದರ್ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯಕ್ಕೆ ನಬಾರ್ಡ್ ಯೋಜನೆ ಬಿಡುಗಡೆಗೊಂಡಿದೆ. ಆದರೆ ಅನುಷ್ಠಾನವಾಗುತ್ತಿಲ್ಲ, ರಾಜ್ಯಕ್ಕೆ ಶಾಲೆ ಕಾಲೇಜಿನ ಅವಶ್ಯಕತೆ ಇದೆ ಆ ಬಗ್ಗೆ ಕೆಲಸವಾಗಿಲ್ಲ, ಒಂದೇ ಒಂದು ಹೊಸ ಪಡಿತರ ಕಾರ್ಡು ವಿತರಣೆ ಆಗಿಲ್ಲ, ಕರೆಂಟ್ ಬರ ನೀಗಿಲ್ಲ, ಆಶ್ರಯ ಯೋಜನೆ ಕೆಲಸ ನಿಲ್ಲಿಸಿದೆ. ಹೀಗೆ ಸಾಲು ಸಾಲು ಲೋಪಗಳು ಇದ್ದರೂ ರಾಜ್ಯ ಸರಕಾರ ಮಾತ್ರ ಬಿಂದಾಸ್ ಆಗಿದೆ ಎಂದು ಖಾದರ್ ಲೇವಡಿ ಮಾಡಿದರು. ಬಿಜೆಪಿಯವರಿಗೆ ಜನಪರ ಕಾಳಜಿ ಎನ್ನುವುದು ಇಂದಿಗೂ ಹುಟ್ಟಿಲ್ಲ ಅವರು ತಮ್ಮ ತಮ್ಮ ಸ್ವ ಹಿತವನ್ನು ಸಾಧಿಸುವುದರಲ್ಲೇ ಮೈ ಮರೆತ್ತಿದ್ದಾರೆ ಹೀಗಾಗಿ ರಾಜ್ಯಕ್ಕೆ ಇಂತಹ ಸ್ಥಿತಿ ಬಂದಿದೆ, ಬಿಜೆಪಿ ಹೈಕಮಾಂಡ್ ಆದರೂ ಎಚ್ಚರ ವಹಿಸಬೇಕಿತ್ತು ಆದರೆ ಇವರದ್ದು ಮುಗಿಯದ ರಾಮಾಯಣ ಎಂದು ಅವರೂ ಸುಮ್ಮನಿದ್ದಾರೆ ಎಂದು ಖಾದರ್ ತಿಳಿಸಿದರು.
ಕಾಂಗ್ರೆಸಿಗರೂ ಬ್ಲೂ ಫಿಲಂ ನೋಡಿರುವ ಬಗ್ಗೆ ಬಿಜೆಪಿ ಶಾಸಕರು ಆರೋಪಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ತಪ್ಪು ಯಾರೇ ಮಾಡಿದರೂ ಅದು ಅಪರಾಧ ಅಪರಾಧವೇ ಅದಕ್ಕೆ ಪಕ್ಷದ ಪರ ಎನ್ನುವ ನಿಲುವಿಲ್ಲ. ಹೀಗಾಗಿ ಕಾಂಗ್ರೆಸಿಗರೂ ತಪ್ಪು ಮಾಡಿದ್ದರೂ ಅದು ತಪ್ಪೇ ಆದರೆ ಆರೋಪ ಮಾಡುವವರು ಸೂಕ್ತ ದಾಖಲೆಯನ್ನು ಇಟ್ಟುಕೊಂಡು ಆರೋಪ ಮಾಡಲಿ, ಆಗ ಅವರ ಮಾತಿಗೆ ಮೌಲ್ಯ ಇರುತ್ತದೆ ಎಂದು ಖಾದರ್ ಅವರು ತಿಳಿಸಿದರು.

ಬಿಜೆಪಿಗೆ ಗೆಲುವು: ಗುಪ್ತವರದಿ

Posted by JAYAKIRANA Kirana on | 0 comments | Leave a comment...

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ
ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಜಯಮಾಲೆ ಧರಿಸುವ ಸಾಧ್ಯತೆ ಇದೆ. ಮಾರ್ಚ್ ೧೮ ರಂದು ಮತದಾನ ನಡೆದಿತ್ತು.
ರಾಜ್ಯ ಗುಪ್ತದಳ ಇಲಾಖೆಗೆ ತಲುಪಿರುವ ವರದಿಗಳ ಪ್ರಕಾರ ಬಿಜೆಪಿ ಗೆಲವು ಸಾಧಿಸಿದರೂ ಗೆಲುವಿನ ಅಂತರ ಕಡಿಮೆ ಇರುತ್ತದೆ. ಅಬ್ಬಬ್ಬಾ ಎಂದರೆ ಭಾಜಪ ಅಭ್ಯರ್ಥಿ ಸುನಿಲ್ ಕುಮಾರ್ ೧೫-೧೮ ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು.
ಗುಪ್ತಚರ ವರದಿಗಳು ಹೀಗಿದ್ದರೂ ಕೂಡ ಬಿಜೆಪಿಗೆ ತಳಮಳ ಇದ್ದೇಇದೆ. ವಿಧಾನಸಭೆಯಲ್ಲಿ ಮೂವರು ಸಚಿವರು ನೀಲಿ ಚಿತ್ರ ನೋಡಿದ ಪ್ರಕರಣದಿಂದಾಗಿ ಮಹಿಳಾ ಮತದಾರರ ಕೋಪವನ್ನು ಬಿಜೆಪಿ ಎದುರಿಸಬೇಕಾಗತ್ತೆ ಎಂಬ ಭಯ ಪಕ್ಷವನ್ನು ಕಾಡುತ್ತಿದೆ.
ಅಲ್ಲದೆ, ಬಿ.ಎಸ್ ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಪರವಾಗಿ ಚುನಾವಣಾ ಪ್ರಚಾರ ಮಾಡಲಿಲ್ಲ. ಇದರ ಜತೆಗೆ ಯಡಿಯೂರಪ್ಪ ನಿಷ್ಠ ವೀರಶೈವ ಮತದಾರರಿಗೂ ಕೋಪ ಇರುವುದರಿಂದ ನಿಖರ ಫಲಿತಾಂಶ ಹೇಳಲು ಕಷ್ಟ ಎನ್ನಲಾಗಿದೆ. ಈ ಮಧ್ಯೆ, ತಾವೇ ನಡೆಸಿದ ಸಮೀಕ್ಷೆ ಪ್ರಕಾರ ಜೆಡಿಎಸ್ ಅಭ್ಯರ್ಥಿ ಭೋಜೆಗೌಡರು ವಿಜಯಶಾಲಿ ಆಗಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪತ್ರಕರ್ತರ ಯೂನಿಯನ್‌ನ ರಾಜ್ಯಾದ್ಯಕ್ಷರು ಉಡುಪಿಗೆ

Posted by JAYAKIRANA Kirana on | 0 comments | Leave a comment...

ಉಡುಪಿ: ಹಾಯ್ ಉಡುಪಿ ಮಾಸಿಕದ ಸಂಪಾದಕರೂ, ಕರ್ನಾಟಕ ಜನಪರ ವೇದಿಕೆಯ ಸದಸ್ಯರೂ ಆದ ಪ್ರಕಾಶ್ ಪೂಜಾರಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಮೂಲ್ಯ ಸೊತ್ತುಗಳನ್ನು ಸುಲಿಗೆ ಮಾಡಿದ ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಕರ್ನಾಟಕ ಜನಪರ ವೇದಿಕೆಯು ಮಾ.೨೦ರಂದು ಸಂಜೆ ೪ ಗಂಟೆಗೆ ಎಸ್‌ಪಿ ಕಚೇರಿ ಮುಂದೆ ನಡೆಸಲಿರುವ ಪ್ರತಿಭಟನಾ ಧರಣಿಯಲ್ಲಿ, ಕರ್ನಾಟಕ ಪತ್ರಕರ್ತರ ಯೂನಿಯನ್(ರಿ) ಇದರ ರಾಜ್ಯಾಧ್ಯಕ್ಷರೂ, ಬೆಳಗಾವಿಯ ಗಡಿ ಕನ್ನಡಿಗ ದಿನ ಪತ್ರಿಕೆಯ ಸಂಪಾದಕರೂ ಆದ ಎಂ.ಬಿ.ಶಿವಪೂಜಿ ಹಾಗೂ ರಾಜ್ಯ ಉಪಾಧ್ಯಕ್ಷರೂ, ಉತ್ತರ ಕನ್ನಡ ಜಿಲ್ಲೆಯ ಆಚಾರ ವಾರ ಪತ್ರಿಕೆಯ ಸಂಪಾ ದಕರೂ ಆದ ಗೌರೀಶ ಶಾಸ್ತ್ರೀ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಹುಲಿ ದಾಳಿಗೆ ಓರ್ವ ಗಾಯ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಬೆಳ್ತಂಗಡಿ ಸೂರ‍್ಯ ಎಂಬಲ್ಲಿ ಹುಲಿ ದಾಳಿಗೆ ಒಳಗಾದ ಯುವಕನೊಬ್ಬ ಕಾರ್ಕಳದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾನೆ.
ಶೇಖರ್(೩೪) ಎಂಬಾತ ಘಟನೆ ಯಲ್ಲಿ ಗಾಯಗೊಂಡವನು. ಸಂಜೆ ೪ರ ವೇಳೆಗೆ ಮನೆ ಸಮೀಪದ ಹಾಡಿ ಯೊಂದರಲ್ಲಿ ಈತನ ಮೇಲೆ ದಾಳಿ ನಡೆಸಿದ ಹುಲಿ ಕೆಳ ತುಟಿಯನ್ನು ಸಂಪೂರ್ಣವಾಗಿ ಕಿತ್ತುಹಾಕಿದೆ.

ಮಗನಿಗೆ ನೋಡಿದ ಹುಡುಗಿ ಮೇಲೆ ಅಪ್ಪನಿಂದ ಅತ್ಯಾಚಾರ

Posted by JAYAKIRANA Kirana on | 0 comments | Leave a comment...

ಉಲ್ಲಾಸನಗರ(ಮಹಾರಾಷ್ಟ್ರ): ತನ್ನ ಮಗನಿಗೆ ಮದುವೆ ಮಾಡಲು ನಿಶ್ಚಯಿಸಿದ ಹುಡುಗಿಯ ಮೇಲೆಯೇ ಕಾಮುಕ ನೋರ್ವ ಅತ್ಯಾಚಾರ ಎಸಗಿದ ಆತಂಕಕಾರಿ ಘಟನೆ ಮಹಾ ರಾಷ್ಟ್ರದ ಉಲ್ಲಾಸ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ೧೨ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯನ್ನು ಕಲ್ಯಾಣ್‌ನ ರೋಹಿದಾಸ್ ನಗರ ನಿವಾಸಿ ಅಬ್ದುಲ್ ಶೇಖ್(೪೨) ಎಂದು ಗುರುತಿಸಲಾಗಿದೆ.
ಕೆಲವು ಸಮಯದ ಹಿಂದೆ ಶೇಖ್ ಬಾಲಕಿಯ ಮನೆಯವರನ್ನು ಸಂಪರ್ಕಿಸಿ ತನ್ನ ೧೫ ವರ್ಷ ಪ್ರಾಯದ ಮಗನ ಮದುವೆಯ ಮಾತುಕತೆ ನಡೆಸಿದ್ದ.
ಎರಡೂ ಕಡೆಯವರು ೫ ವರ್ಷದ ಬಳಿಕ ಮದುವೆ ನೆರವೇರಿಸಲು ಒಪ್ಪಿಕೊಂಡಿದ್ದರು. ಮಗನನ್ನು ಭೇಟಿ ಮಾಡಿಸುವುದಾಗಿ ಬಾಲಕಿಯನ್ನು ಶೇಖ್ ಪುಸಲಾಯಿಸಿ ಲಾಡ್ಜ್‌ಗೆ ಕರೆದು ಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಅವಳನ್ನು ಮನೆಯ ಹತ್ತಿರ ಬಿಟ್ಟು ಪರಾರಿಯಾಗಿದ್ದ. ಬಾಲಕಿಯ ಕಿರಿಯ ಸಹೋದರಿಯು ತನ್ನ ಅಕ್ಕ ಶಾಲೆಗೆ ಹಾಜರಾಗಿಲ್ಲ ಎಂದು ತಾಯಿಗೆ ತಿಳಿಸಿದಾಗ, ಈ ಬಗ್ಗೆ ತಾಯಿ ಆಕೆಯಲ್ಲಿ ಪ್ರಶ್ನಿಸಿದಾಗ ವಿಷಯ ಬಹಿರಂಗವಾಯಿತು. ಬಳಿಕ ತಾಯಿ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು ಲಾಡ್ಜ್‌ನ ದಾಖಲೆಗಳನ್ನು ಪರಿಶೀಲಿಸಿ ಶೇಖ್ ನೀಡಿದ ಮೊಬೈಲ್ ಫೋನ್ ನಂಬ್ರದ ಆಧಾರದಲ್ಲಿ ಆತನನ್ನು ಬಂಧಿಸಿದರು.

ನಾಪತ್ತೆಯಾಗಿದ್ದ ವಿವಾಹಿತೆ ಪತ್ತೆ: ಪ್ರಿಯಕರನ ಬಂಧಿಸದ ಪೊಲೀಸರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೂರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಚೆನ್ನೈನಲ್ಲಿ ಇದ್ದು ವಾಪಸ್ಸಾಗಿದ್ದಾಳೆ. ಆದರೆ ಉಳ್ಳಾಲ ಠಾಣೆಯಲ್ಲಿ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಅತನನ್ನು ಬಂಧಿಸುವಲ್ಲಿ ಮೀನಾಮೇಷ ಎನಿಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಉಳ್ಳಾಲಬೈಲು ನಿವಾಸಿ ಮೂರು ಮಕ್ಕಳ ತಾಯಿ ಸುನಿತಾ ಎಂಬಾಕೆ ತನ್ನ ಮೂರು ಮಕ್ಕಳೊಂದಿಗೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ವಿದೇಶದಲ್ಲಿರುವ ಪತಿ ಪೀಟರ್ ಎಂಬವರು ಊರಿಗೆ ವಾಪಸ್ಸಾಗುವ ಸಮಯದಲ್ಲಿಯೇ ಬೆಳೆದು ನಿಂತ ಮಕ್ಕಳೊಂದಿಗೆ ಸುನಿತಾ ಪರಾರಿಯಾಗಿದ್ದಳು. ಇದೇ ವೇಳೆ ಪತಿ ಕಳುಹಿಸಿದ್ದ ರೂ.೧೩ ಲಕ್ಷ ಹಣ ಹಾಗೂ ೨೫ ಪವನ್ ಚಿನ್ನಾಭರಣವೂ ನಾಪತ್ತೆಯಾಗಿತ್ತು. ಈ ಬಗ್ಗೆ ಪೀಟರ್ ಅವರು ಪತ್ನಿ ನಾಪತ್ತೆ ದೂರು ದಾಖಲಿಸುವಾಗ ಉಲ್ಲೇಖಿಸಿದ್ದರು. ಇದೇ ವೇಳೆ ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆಗಿರುವ ರಾಜೇಶ್ ಎಂಬಾತನೂ ನಾಪತ್ತೆಯಾಗಿದ್ದು, ಆತನೇ ಮಹಿಳೆಯನ್ನು ಅಪಹರಿಸಿದ್ದಾನೆಂದು ದೂರನ್ನು ದಾಖ ಲಿಸಿದ್ದರು. ಅದರಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ವಾರದ ಹಿಂದೆ ಸುನಿತಾ ಮಕ್ಕಳೊಂದಿಗೆ ವಾಪಸ್ಸಾಗಿದ್ದಳು ಆದರೆ ಪತಿಯೊಂದಿಗೆ ತೆರಳಲು ನಿರಾಕರಿಸಿದ್ದಾಳೆ. ನಿನ್ನೆ ಉಳ್ಳಾಲ ಠಾಣೆಯಲ್ಲಿ ಪ್ರಕರಣದ ವಿಚಾರಣೆಗೆಂದು ಸುನಿತಾ ಹಾಗೂ ಪೀಟರ್ ಅವರನ್ನು ಕರೆಯಲಾಗಿತ್ತು. ಆದರೆ ಹಣದೊಂದಿಗೆ ಕುಟುಂಬವನ್ನೇ ಕಳೆದುಕೊಂಡಿರುವ ಪೀಟರ್ ಅವರಿಗೆ ನ್ಯಾಯ ಒದಗಿಸಿ ಕೊಡಬೇಕಾದ ಪೊಲೀಸ್ ಇನ್ಸ್‌ಪೆಕ್ಟರ್ ನಾಪತ್ತೆಯಾಗಿದ್ದ ಮಹಿಳೆ ಪರವಾಗಿಯೇ ನಿಂತಿದ್ದರೆಂದು ತಿಳಿದುಬಂದಿದೆ. ಅಲ್ಲದೆ ಕಾವೂರಿನಲ್ಲಿ ಅನೈತಿಕ ಸಂಬಂಧಕ್ಕೆ ಸಂಬಂಧಿಸಿ ಹಾಗೂ ಉಳ್ಳಾಲ ಠಾಣೆಯಲ್ಲಿ ಬೇರೊಂದು ಪ್ರಕರಣ ವಿದ್ದು ಒಟ್ಟು ಮೂರು ಪ್ರಕರಣಗಳನ್ನು ಹೊತ್ತ್ತುಕೊಂಡಿರುವ ಮಹಿಳೆಯ ಪ್ರಿಯಕರನೆನಿಸಿಕೊಂಡ ಬಸ್ ಕಂಡಕ್ಟರ್ ರಾಜೇಶನ ಸುಳಿವಿದ್ದರೂ ಪೊಲೀಸರು ಈವರೆಗೆ ಬಂಧಿಸ ದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಸುನಿತಾ ತನ್ನಲ್ಲಿದ್ದ ಹಣವನ್ನೂ ಆತನಿಗೆ ನೀಡಿರುವುದು ವಿಚಾರಣೆ ವೇಳೆ ಆಕೆಯಿಂದಲೇ ತಿಳಿದು ಬಂದಿದೆ. ನ್ಯಾಯ ದೊರಕದ ಹಿನ್ನೆಲೆಯಲ್ಲಿ ಕಮೀಷನರ್ ಅವರ ಮೊರೆ ಹೋಗಲು ದೂರುದಾರರು ನಿರ್ಧರಿಸಿರುವ ಬಗ್ಗೆಯೂ ತಿಳಿದುಬಂದಿದೆ.

ಎರಡನೇ ಮದುವೆ: ವ್ಯಕ್ತಿ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ದಾಂಪತ್ಯದಲ್ಲಿ ವಿರಸ ಹೊಂದಿದ ವ್ಯಕ್ತಿಯೋರ್ವರು ಎರಡನೇ ಮದುವೆಯಾಗಿದ್ದರಿಂದ ಬೇಸತ್ತ ಅವರ ಪತ್ನಿ ಉಳ್ಳಾಲ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮಾಡೂರು ನಿವಾಸಿ ಸುರೇಖಾ ಮತ್ತು ಉಳ್ಳಾಲ ಸುಭಾಸ್ ನಗರದ ನಿವಾಸಿ ಜಯಾನಂದ ಪೂಜಾರಿ ಎಂಬವರ ವಿವಾಹವು ೧೫ ವರ್ಷಗಳ ಹಿಂದೆ ನಡೆದಿತ್ತು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಕಳೆದ ಕೆಲವು ಸಮಯಗಳಿಂದ ಇವರ ದಾಂಪತ್ಯದಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸುರೇ ಖಾರವರು ತಮ್ಮ ತಾಯಿ ಮನೆ ಯಲ್ಲಿಯೇ ವಾಸವಿದ್ದರು.
ಜಯಾನಂದರವರು ಹಲವು ಬಾರಿ ಮನೆಗೆ ಬರುವಂತೆ ಕರೆದರೂ ಸುರೇಖಾ ಅದಕ್ಕೆ ಸ್ಪಂದಿಸದ ಹಿನ್ನೆಲೆ ಯಲ್ಲಿ ಐದು ತಿಂಗಳ ಹಿಂದೆ ಜಯಾನಂದ ಮುಡಿಪುವಿನ ಯುವತಿ ಜೊತೆ ಎರಡನೇ ಮದುವೆಯಾಗಿದ್ದರು. ಇದರಿಂದ ತನಗೆ ಮತ್ತು ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಸುರೇಖಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸೋಮವಾರದಂದು ಜಯಾನಂದ ರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂ ಡಿರುತ್ತಾರೆ.

ಮಣಿಪಾಲ: ಕಳವು ಆರೋಪಿಗೆ ಸಜೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿರುವ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಸಜೆ ಹಾಗೂ ಹತ್ತು ಸಾವಿರ ರೂ ದಂಡ ವಿಧಿಸಿದ್ದಾರೆ.
ಸುಭಾಷ್ ನಗರ ನಿವಾಸಿ ಸುದರ್ಶನ್ (೨೭) ಬಂಧಿತ. ಈತ ೨೦೦೫ರಲ್ಲಿ ಫೆ.೨ ರಂದು ಕಿಟ್ಪಾಡಿಯ ದಿ.ವಾದಿರಾಜ ಭಟ್ ಎಂಬವರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸುದರ್ಶನ್ ನನ್ನು ಬಂಧಿಸಲಾಗಿತ್ತು. ಇದೀಗ ವಿಚಾರಣೆ ಕೈಗೆತ್ತಿಗೊಂಡಿರುವ ನ್ಯಾಯಾಲಯ ಎರಡು ವರ್ಷ ಸಜೆ ಹಾಗೂ ಹತ್ತು ಸಾವಿರ ದಂಡ ವಿಧಿಸಿದೆ. ಸರಕಾರಿ ಅಭಿಯೋಜಕರಾಗಿ ಶಾಂತಾಭಾಯಿ ವಾದಿಸಿದ್ದರು. ನ್ಯಾಯಾಧೀಶರಾದ ಮಂಜೇಗೌಡ ತೀರ್ಪನ್ನು ನೀಡಿದ್ದಾರೆ. ಆರೋಪಿ ವಿನೋದ್ ಶೆಟ್ಟಿಗಾರ್ ಹತ್ಯಾ ಪ್ರಕರಣದ ಆರೋಪಿ ಮುತ್ತಪ್ಪನ ಸಹೋದರನಾಗಿದ್ದಾನೆ.

ಓದಲು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಪರೀಕ್ಷೆಗೆ ಓದಲು ಹೇಳಿದಕ್ಕೆ ಎಂಟನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ನಿನ್ನೆ ಸಂಭವಿಸಿದೆ. ಕೊರಂಗ್ರಪ್ಪಾಡಿ ತೀಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸದಾನಂದ ಶೆಟ್ಟಿ ಎಂಬವರ ಪುತ್ರ ಮನೋಜ್ (೧೩) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಪರೀಕ್ಷೆಗೆ ಓದದೇ ಆಟ ವಾಡುತ್ತಿದ್ದ ಸಂದರ್ಭದಲ್ಲಿ ತಾಯಿ ಓದಲು ಹೇಳಿದ್ದಕ್ಕೆ ಮನೆ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.

ಪುತ್ತೂರು: ಲಾರಿ ಪಲ್ಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುತ್ತೂರು ಸಮೀಪದ ನೀರಕಟ್ಟೆ ಎಂಬಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಜೋಳದ ಮೂಟೆ ಹೊತ್ತು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಚಾಲಕ-ಕ್ಲೀನರ್ ಗಾಯಗೊಂಡ ಘಟನೆ ನಿನ್ನೆ ನಡೆದಿದೆ. ಚಾಲಕ ಹಾಸನದ ರಿಜ್ವಾನ್ ಮತ್ತು ಕ್ಲೀನರ್ ಹಾಸನದ ಸಂದೀಪ್ ಗಾಯಗೊಂಡವರು.

ಸುಳ್ಯ ತಾಲೂಕಿಗೆ ರಾಷ್ಟ್ರೀಯ ನೈರ್ಮಲ್ಯ ಪ್ರಶಸ್ತಿ

Posted by JAYAKIRANA Kirana on | 0 comments | Leave a comment...

ಸುಳ್ಯ: ಸುಳ್ಯ ತಾಲೂಕಿನಲ್ಲಿ ನೈರ್ಮಲ್ಯ ಮತ್ತು ಸ್ವಚ್ಚತಾ ಕಾರ್ಯ ಕ್ರಮದ ಅನುಷ್ಠಾನದಲ್ಲಿ ಸಾಧಿಸಿದ ಸಾಧನೆಗಾಗಿ ತಾಲೂಕಿಗೆ ರಾಷ್ಟ್ರೀಯ ನೈರ್ಮಲ್ಯ ಪ್ರಶಸ್ತಿ ಬಂದಿದೆ. ಮಾ.೨೧ರಂದು ರಾಷ್ಟ್ರಪತಿಯವರು ಪ್ರಶಸ್ತಿ ವಿತರಣೆ ಮಾಡಲಿದ್ದು, ಇದರ ಸ್ವೀಕಾರಕ್ಕೆ ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್ ಮತ್ತು ತಾ.ಪಂ.ಪ್ರಭಾರ ಇ.ಒ. ಮಲ್ಲೇಸ್ವಾಮಿ ದೆಹಲಿಗೆ ತೆರಳಲಿದ್ದಾರೆ. ಈ ಪ್ರಶಸ್ತಿಯ ಜತೆಗೆ ತಾ.ಪಂ.ಗೆ ೨೦ ಲಕ್ಷ ರೂ ವಿಶೇಷ ಅನುದಾನ ದೊರೆಯಲಿದೆ.

ಯುವಕನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು : ಬಲ್ಮಠ ಜ್ಯೂಸ್ ಜಂಕ್ಷನ್ ಬಳಿಯ ಏಕಮುಖ ಸಂಚಾರ ರಸ್ತೆಯಲ್ಲಿ ಬೈಕನ್ನು ತಳ್ಳಿಕೊಂಡು ಹೋಗು ತ್ತಿದ್ದ ಯುವಕನ ಮೇಲೆ ಯುವಕರಿಬ್ಬರು ಹಲ್ಲೆ ನಡೆಸಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಅಳಪೆ ನಿವಾಸಿ ದಿನೇಶ್ ಎಂಬ ವರು ಬಲ್ಮಠ ರಸ್ತೆಯಲ್ಲಿರುವ ಪುಲ್ಲರ್ಟನ್ ಬ್ಯಾಂಕಿಗೆ ಬಂದವರು ತಮ್ಮ ಕೆಲಸವನ್ನು ಮುಗಿಸಿ ಹಿಂದಿರು ಗುವ ವೇಳೆ ಏಕ ಮುಖ ಸಂಚಾರ ರಸ್ತೆಯಲ್ಲಿ ತಮ್ಮ ಬೈಕನ್ನು ತಳ್ಳಿಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿ ನಿಂದ ಬೈಕಿನಲ್ಲಿ ಬಂದ ಯುವಕರಿಬ್ಬರು ಬೈಕ್ ನಿಲ್ಲಿಸಿ ಏಕಮುಖ ಸಂಚಾರ ರಸ್ತೆಯಲ್ಲಿ ಬರುತ್ತಿರುವ ಬಗ್ಗೆ ಪ್ರಶ್ನಿಸಿ ದಿನೇಶ್ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ದಿನೇಶ್ ಅವರು ಮಾತನಾಡಿದ್ದು ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು.
ಒಂದು ಹಂತದಲ್ಲಿ ಅಕ್ರೋಶ ಗೊಂಡ ಯುವಕರು ದಿನೇಶ್ ಅವರಿಗೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಲ್ಲದೆ ಅವರ ಬಟ್ಟೆಯನ್ನು ಹರಿದು ಹಾಕಿ ಕತ್ತಿನಲ್ಲಿದ್ದ ಚಿನ್ನದ ಚೈನನ್ನು ಎಳೆದು ತುಂಡು ಮಾಡಿ ಪರಾರಿ ಯಾಗಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ದಿನೇಶ್ ಅವರು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಬಸ್‌ನಲ್ಲಿ ಪರ್ಸ್ ಕಾಣೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಸರ್ವಿಸ್ ಬಸ್‌ನಲ್ಲಿ ವ್ಯಕ್ತಿಯೋರ್ವರ ದಾಖಲೆ ಪತ್ರಗಳಿದ್ದ ಪರ್ಸ್ ನಾಪತ್ತೆಯಾಗಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ. ಆದಿತ್ಯವಾರ ಮಧ್ಯಾಹ್ನ ಕಟೀಲಿನಿಂದ ಹಳೆಯಂಗಡಿ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪದ್ಮನಾಭ ಎಂಬವರು ಸುರತ್ಕಲ್‌ನಲ್ಲಿ ಇಳಿದು ಪರ್ಸ್ ಪರಿಶೀಲಿಸಿದಾಗ ನಾಪತ್ತೆಯಾಗಿತ್ತು. ಈ ಬಗ್ಗೆ ಬಸ್ ಸಿಬ್ಬಂದಿಯಲ್ಲಿ ವಿಚಾರಿಸಿದರೂ ಪರ್ಸ್ ಪತ್ತೆಯಾಗಲಿಲ್ಲ. ದ್ವಿಚಕ್ರ ವಾಹನದ ರೆಕಾರ್ಡ್ಸ್, ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿದಂತೆ ಅಮೂಲ್ಯ ದಾಖಲೆಪತ್ರಗಳನ್ನು ಕಳೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುರತ್ಕಲ್: ಅತ್ಯಾಚಾರಿ ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಾಳದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅವಳ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪಿ ಕುಷ್ಟಗಿರಿಯ ಸಿದ್ದಪ್ಪ (೨೪) ಎಂಬಾತ ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ತಾನು ವಾಸವಾಗಿದ್ದ ಮನೆಯ ಎದುರು ವಾಸಿಸುತ್ತಿದ್ದ ಹಡಗಲಿ ಮೂಲದ ೧೨ ವರ್ಷದ ಬಾಲಕಿಯನ್ನು ಫೆ. ೨೦ರಂದು ಮೈಸೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ತಮಿಳುನಾಡಿನ ಹೊಸೂರಿಗೆ ಹೋಗಿ ಬಾಡಿಗೆ ಮನೆಯಲ್ಲಿ ಇರಿಸಿದ್ದ ಎನ್ನಲಾಗಿದೆ. ಫೆ. ೨೬ರ ನಂತರ ಬಾಲಕಿ ಮೇಲೆ ಪ್ರತಿನಿತ್ಯ ಅತ್ಯಾಚಾರ ಎಸಗಿ ಮಾ.೧೫ರಂದು ಸುರತ್ಕಲ್‌ನಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದ.

ಪಾದಾಚಾರಿಗೆ ಬೈಕ್ ಢಿಕ್ಕಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ಬೈಕ್ ಢಿಕ್ಕಿ ಹೊಡೆದ ಘಟನೆ ನಿನ್ನೆ ಸಂಜೆ ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ನಡೆದಿದೆ. ಪಾದಾಚಾರಿಗೆ ಗಂಭೀರವಾದ ಗಾಯಗಳಾ ಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿ ಲಾಗಿದೆ.
ಮಂಗಳೂರು ನಿವಾಸಿ ಮಂಜು ನಾಥ ಎಂಬವರು ಜ್ಯೂಸ್ ಜಂಕ್ಷನ್ ಬಳಿ ರಸ್ತೆ ದಾಟಲೆಂದು ನಿಂತಿದ್ದ ವೇಳೆ, ರುಮಾನುದ್ದಿನ್ ಎಂಬಾತ ಅತೀ ವೇಗ ದಿಂದ ಬೈಕ್ ಚಲಾಯಿಸಿಕೊಂಡು ಬಂದು ಮಂಜುನಾಥ್ ಅವರಿಗೆ ಢಿಕ್ಕಿ ಹೊಡೆದಿದ್ದ. ಪರಿಣಾಮ ಮಂಜುನಾಥ್ ಅವರು ರಸ್ತೆಗೆಸೆಯಲ್ಪಟ್ಟು ಅವರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ : ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಪಕ್ಕದ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಸಮೀಪದ ಕೊಳದ ಪೇಟೆ ಎಂಬಲ್ಲಿ ನಿನ್ನೆ ನಡೆದಿದೆ.

ರೈಲು ಡಿಕ್ಕಿ: ಯುವಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಳ್ಳಾಲ-ತೊಕ್ಕೊಟ್ಟು ರೈಲು ನಿಲ್ದಾಣಗಳ ನಡುವಿನ ರೈಲು ಹಳಿಯಲ್ಲಿ ನಿನ್ನೆ ಮುಂಜಾನೆ ರೈಲು ದಾಟುತ್ತಿದ್ದ ಅಮರನಾಥ(೩೬) ಎಂಬವರು ಆಕಸ್ಮಿಕವಾಗಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೂಲತ: ಉತ್ತರ ಪ್ರದೇಶದವರಾದ ಇವರು, ಮಂಗಳೂರಿನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಅವರ ಬಲಗೈ ಮತ್ತು ಬಲಗಾಲು ತುಂಡರಿಸಲ್ಪಟ್ಟಿದ್ದು, ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ಯವ್ಯಸನಿ ಆತ್ಮಹತ್ಯೆ : ಮದ್ಯವ್ಯಸನಕ್ಕೆ ತುತ್ತಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದ್ರೆ ಸಮೀಪದ ಮೂಡುಮಾರ್ನಾಡು-ತಂಡ್ರಕೆರೆ ಎಂಬಲ್ಲಿ ನಡೆದಿದೆ. ಮುಖೇಶ್(೨೫) ಆತ್ಮಹತ್ಯೆ ಮಾಡಿಕೊಂಡವರು. ಇವರು ಮದ್ಯವ್ಯಸನದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು ಎನ್ನಲಾಗಿದೆ.

ಸುರತ್ಕಲ್: ಅಕ್ರಮ ಗೋವಾ ಮದ್ಯ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಕ್ರಮವಾಗಿ ಸಾಗಾಟ ಮಾಡಲು ಇಡಲಾಗಿದ್ದ ಗೋವಾ ಮದ್ಯದ ಬಾಟಲಿಗಳನ್ನು ಅಬಕಾರಿ ದಳದ ಪೊಲೀಸರು ಸುರತ್ಕಲ್ ಸಮೀಪದ ಅಗರಮೇಲು ಎಂಬಲ್ಲಿಂದ ನಿನ್ನೆ ವಶಕ್ಕೆ ತೆಗೆದುಕೊಂಡಿದ್ದಾರೆ.
ಸುಮಾರು ೫೦,೦೦೦ ರೂ.ಬೆಲೆಯ ೨೬೪ ಲೀ.ಗೋವಾ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ನಿನ್ನೆ ನಸುಕಿನ ಮೂರು ಗಂಟೆಯ ಸುಮಾರಿಗೆ ದಾಳಿ ನಡೆಸಲಾಗಿದ್ದು, ಈ ವೇಳೆ ಆರೋಪಿಗಳಾದ ಕಾಸರಗೋಡು-ಚೌಕಿಯ ಆದಿಲ್ ಮತ್ತು ಪ್ರವೀಣ್ ಎಂಬವರು ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ಜಂಟಿ ಆಯುಕ್ತ ಕೆ.ಸಿ.ಹರಿದಾಸ ಮತ್ತು ಉಪ ಆಯುಕ್ತ ಬಿ.ವಿ.ಹೂವಪ್ಪ ಗೌಡ ಅವರ ನಿರ್ದೇಶನದಲ್ಲಿ ಅಧೀಕ್ಷಕ ಹೆಚ್.ಪುಟ್ಟಸ್ವಾಮಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್: ಸಾವು : ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ಸಮೀಪದ ಕೆಎಸ್‌ಆರ್‌ಟಿಸಿ ಬಳಿಯ ಲಾಂಡ್ರಿ ಅಂಗಡಿಯಲ್ಲಿ ನಿನ್ನೆ ನಡೆದಿದೆ. ಮೃತರನ್ನು ಪಳ್ಳಿ ನಿವಾಸಿ ಸದಾನಂದ ಕುಂದರ್(೪೫) ಎಂದು ಹೆಸರಿಸಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕೋಣಿ: ಕಾರ್ ಡಿಕ್ಕಿಯಾಗಿ ಯುವಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪದ ಕೋಣಿ ಗ್ರಾಮ ಪಂಚಾಯತ್ ಕಚೇರಿ ಬಳಿ ರಸ್ತೆ ದಾಟುತ್ತಿದ್ದ ಕಂದಾವರ-ಸಾಂತಾವರ ನಿವಾಸಿ ಯುವಕ ಗೋಪಾಲ ಶೇರೇಗಾರನಿಗೆ ಕಾರ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಕೋಟೇಶ್ವರ ಚಿಪ್ಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್-ರಿಕ್ಷಾ ಡಿಕ್ಕಿ: ಮಹಿಳೆಗೆ ಗಾಯ

Posted by JAYAKIRANA Kirana on | 0 comments | Leave a comment...

ಉಳ್ಳಾಲ: ನಿಂತಿದ್ದ ಬಸ್ಸಿಗೆ ಅಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಪ್ರಯಾಣಿಕ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುತ್ತಾರು ಸಮೀಪದ ಬಗಂಬಿಲ ನಿವಾಸಿ ಫೌಝಿಯಾ ಎಂಬವರೇ ಗಾಯಗೊಂಡ ಪ್ರಯಾಣಿಕರಾಗಿದ್ದಾರೆ. ಇವರು ನಿನ್ನೆ ಮಧ್ಯಾಹ್ನ ಅಟೋರಿ ಕ್ಷಾದಲ್ಲಿ ಕುತ್ತಾರ್‌ಗೆ ಪ್ರಯಾಣಿಸುತ್ತಿದ್ದರು. ರಿಕ್ಷಾ ಮದನಿನಗರ ತಲುಪಿದಾಗ ಎದುರಿನಿಂದ ಹೋಗುತ್ತಿದ್ದ ಎನ್.ಎಸ್.ಬಸ್ ನಿಂತಿದ್ದು ಅದೇ ವೇಳೆ ಚಾಲಕ ನಿಯಂತ್ರಣ ಕಳೆದು ಕೊಂಡ ಕಾರಣ ರಿಕ್ಷಾ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಮುಖಕ್ಕೆ ಗಂಭೀರ ವಾಗಿ ಗಾಯಗೊಂಡಿರುವ ಫೌಝಿಯಾರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಚಾಲಕ ಬಾವಾಕ ಎಂಬವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ಅಪರಿಚಿತ ಮೃತದೇಹ ಪತ್ತೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಅಪರಿಚಿತ ಮದ್ಯ ವ್ಯಸನಿ ವ್ಯಕ್ತಿಯೊಬ್ಬರ ಮೃತದೇಹ ನಿನ್ನೆ ಬೆಳಿಗ್ಗೆ ವಿಟ್ಲ ಸಮೀಪದ ಮಾಣಿ ಜಂಕ್ಷನ್ ಬಳಿ ಸ್ಥಳೀಯರಿಗೆ ಪತ್ತೆಯಾಗಿದ್ದು, ಅದರ ವಾರೀಸುದಾರರು ಬರದ ಹಿನ್ನೆಲೆಯಲ್ಲಿ ಅದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
 ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್ ಬಳಿಯ ಮೈದಾನವೊಂದರಲ್ಲಿ ಅಲ್ಲಿಯ ಸ್ಥಳೀಯರಿಗೆ ಮೃತ ದೇಹ ನಿನ್ನೆ ಪತ್ತೆಯಾಗಿತ್ತು. ಅವರು ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿ ದರು. ಅವರು ಸ್ಥಳಕ್ಕೆ ಬಂದು ಶವವನ್ನು ಪರಿಶೀಲಿಸಿದಾಗ ಆ ವ್ಯಕ್ತಿ ವಿಪರೀತ ಮದ್ಯ ಸೇವಿಸಿ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಗೆ ಸುಮಾರು ೫೫ ವರ್ಷ ಪ್ರಾಯವಾಗಿದೆ. ನಿನ್ನೆ ಸಂಜೆವರೆಗೂ ಮೃತ ವ್ಯಕ್ತಿಯ ವಾರೀಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಶವವನ್ನು ಮಹಜರು ಮಾಡಲಾಯಿತು. ಈ ಮೃತ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕಳೆದ ಎರಡು ದಿನಗಳಿಂದ ಮಾಣಿ, ಬುಡೋಳಿ, ಸುತ್ತಮುತ್ತ ಅಲೆದಾಡುತ್ತಿದ್ದ ಎನ್ನಲಾ ಗಿದೆ. ಭಾನುವಾರ ರಾತ್ರಿ ಈತ ಇದೇ ಮೈದಾನದಲ್ಲಿ ವಿಪರೀತ ಮದ್ಯ ಸೇವಿಸಿ ಅಲ್ಲಿಯೇ ತಂಗಿದ್ದ ಎನ್ನಲಾಗಿದೆ. ಆತ ಮಲಗಿದ್ದ ಸ್ಥಳದಲ್ಲಿ ನೀರಿನ ಬಾಟಲಿ ಗಳು ಸಿಕ್ಕಿದೆ ಹೊರತು ಬೇರೆ ಯಾವುದೇ ಪುರಾವೆಗಳು ಪೊಲೀ ಸರಿಗೆ ಲಭ್ಯವಾಗಿಲ್ಲ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮೃತ ವ್ಯಕ್ತಿಯ ಸಂಬಂಧಿಕರ ಹುಡುಕಾಟದಲ್ಲಿದ್ದಾರೆ.

ಪಾಲೇಮಾರ್ ನಿರ್ದೋಷಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಪ್ರಕರಣದಲ್ಲಿ ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್ ಹಾಗೂ ಸಿ.ಸಿ.ಪಾಟಿಲ್ ನಿರ್ದೋಷಿ ಎಂದು ವರದಿ ನೀಡಿರುವ ಸದನ ಸಮಿತಿ, ಲಕ್ಷ್ಮಣ್ ಸವದಿಯನ್ನು ದೋಷಿ ಎಂದು ಪರಿಗಣಿಸಿ ಅವರಿಗೆ ಎಚ್ಟರಿಕೆ ನೀಡುವಂತೆ ಸಲಹೆ ಮಾಡಿದೆ.
ಅಶ್ಲೀಲ ವಿಡಿಯೋ ವೀಕ್ಷಿಸಿದ ಲಕ್ಷ್ಮಣ್ ಸವದಿ ತಾನು ಸಿಕ್ಕಿ ಬೀಳುವ ಆಪಾಯ ಅರಿತು ಅದರಿಂದ ಪಾರಾಗಲು ಪಾಲೇಮಾರ್ ಸಹ ಅಶ್ಲೀಲ ದೃಶ್ಯ ವೀಕ್ಷಿಸಿದ್ದಾರೆ, ಅವರೇ ನನಗೆ ಮೊಬೈಲ್ ಕೊಟ್ಟಿದ್ದು ಎಂದು ಆರೋಪಿಸಿದ್ದರು. ಆದರೆ ಈ ಪ್ರಕರಣಕ್ಕೂ ಪಾಲೇಮಾರರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸದನ ಸಮಿತಿ ತಿಳಿಸಿದೆ.
ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ಬಿಜೆಪಿ ಶಾಸಕ ಶ್ರೀಶೈಲಪ್ಪ ಬಿದರೂರು ನೇತೃತ್ವದ ಸದನ ಸಮಿತಿ ವಿಧಾನಸಭೆಯ ಅಧ್ಯಕ್ಷ ಕೆ.ಜಿ. ಬೋಪಯ್ಯರಿಗೆ ವರದಿಯ ವಿವರ ಸಲ್ಲಿಸಿದ್ದು, ಲಕ್ಷ್ಮಣ್ ಸವದಿ ಅಶ್ಲೀಲ ವಿಡಿಯೋ ವೀಕ್ಷಿಸಿ ಸದನದ ಘನತೆಗೆ ಚ್ಯುತಿ ತಂದಿರುವುದು ಸಾಬೀತಾಗಿದೆ. ಈ ತಪ್ಪಿಗಾಗಿ ಅವರಿಗೆ ಎಚ್ಚರಿಗೆ ನೀಡಬೇಕು ಎಂದು ತಿಳಿಸಿದೆ. ವಿಡಿಯೋ ದೃಶ್ಯ ವೀಕ್ಷಿಸುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದ ಸುದ್ದಿವಾಹಿನಿಗಳ ಸಿಬ್ಬಂದಿಗೆ ನೀತಿಪಾಠ ಹೇಳಿಕೊಡುವಂತೆ ಶಿಫಾರಸು ಮಾಡಿರುವ ಸಮಿತಿ, ಸದನಕ್ಕೆ ಬರುವ ಪ್ರವೇಶಪತ್ರ ನೀಡುವಾಗಲೇ ಸದನದಲ್ಲಿ ಯಾವ ದೃಶ್ಯ ಸೆರೆ ಹಿಡಿಯಬೇಕು ಯಾವುದನ್ನು ಸೆರೆ ಹಿಡಿಯಬಾರದು ಎಂಬುದರ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಿಳಿಸಿದೆ.
ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿರುವ ಮೊಬೈಲ್ ಫೋನನ್ನು ಸದನಕ್ಕೆ ತರುವುದನ್ನು ನಿಷೇಧಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ತರಬೇತಿ ನೂತನ ಕಟ್ಟಡಕ್ಕಾಗಿ ಎಬಿವಿಪಿ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿಯ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸಿ ಎ.ಬಿ. ವಿ.ಪಿ ವಿಟ್ಲ ತಾಲೂಕು ವತಿಯಿಂದ ಇಲ್ಲಿಯ ಖಾಸಗಿ ಬಸ್ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನಾ ಮೆರ ವಣಿಗೆ ನಡೆಯಿತು.
 ವಿಟ್ಲದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಉನ್ನತೀಕರಣ ಕ್ಕಾಗಿ ಕೇಂದ್ರ ಸರ್ಕಾರವು ಪಿ.ಪಿ.ಪಿ ಯೋಜನೆ ಮಾಡಿ ಸಂಸ್ಥೆಯ ಐ.ಎಂ.ಸಿ ಸೊಸೈಟಿಗೆ ೨.೫ ಕೋಟಿ ಬಡ್ಡಿ ರಹಿತ ಸಾಲವನ್ನು ನೀಡಿದ್ದು, ಈ ಅನು ದಾನದಲ್ಲಿ ಸಂಸ್ಥೆಗೆ ಅಗತ್ಯವಿರುವ ಯಂತ್ರೋಪಕರಣಗಳು, ಪೀಠೋಪಕರಣಗಳ ಖರೀದಿಗೆ ಮತ್ತು ಹೊಸ ವೃತ್ತಿಗಳನ್ನು ಆರಂಭಿಸಲು ಅವಕಾಶವಿದೆ. ಆದರೆ ವಿಟ್ಲ ಕೈಗಾರಿಕೆ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಯಾವುದೇ ಹೊಸ ವೃತ್ತಿಯನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ ಪಿ.ಪಿ.ಪಿ ಯೋಜನೆಯ ಸದುಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎ.ಬಿ.ವಿ.ಪಿ ಜಿಲ್ಲಾ ಸಂಚಾಲಕರಾದ ನವೀನ್ ರಾಜ್ ಬೆದ್ರೋಡಿ ಹಾಗೂ ರಾಜ್ಯ ಕಾರ‍್ಯಕಾರಿಣಿ ಸದಸ್ಯ ರವಿ ಮಾಣಿಲ ಈ ಸಂದರ್ಭ ಮಾತನಾಡಿದರು. ಬಳಿಕ ಪ್ರತಿಭಟನಾಕಾರರು ವಿಟ್ಲದ ನಾಡಕಚೇರಿಗೆ ತೆರಳಿ ಉಪತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಯತೀಶ್ ಎಚ್. ಅನಂತಾಡಿ, ನಿಕಟ ಪೂರ್ವ ತಾಲೂಕು ಸಂಚಾಲಕ ವಿನಯ ಆಲಂಗಾರು, ಕಾಲೇಜು ಪ್ರಮುಖ್ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಕಿರಣ್‌ರಾಜ್ ಎಂ..ಸಿ, ನಾಗೇಶ್, ದಿವ್ಯ, ಪುಷ್ಪ ದೀಪಿಕಾ, ಗುಲಾಬಿ, ಅಶೋಕ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ಟೈಟ್ ಮಾಸ್ಟ್ರು ದಾರಿಯಲ್ಲಿ ಬಿದ್ದರು

Posted by JAYAKIRANA Kirana on | 0 comments | Leave a comment...

ಸರ್ಕಾರಿ ಶಾಲೆಯ ಶಿಕ್ಷಕನ ಅವಾಂತರ
ಪುತ್ತೂರು: ವಿದ್ಯಾರ್ಥಿಗಳಿಗೆ ದಾರಿ ತೋರುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾದ ಶಿಕ್ಷಕನೊಬ್ಬ ಪಾನಮತ್ತನಾಗಿ ನಡು ದಾರಿಯಲ್ಲಿ ಬಿದ್ದ ಘಟನೆ ಸೋಮವಾರ ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕುಂಬ್ರ ಎಂಬಲ್ಲಿ ನಡೆದಿದೆ. ಸಜಂಕಾಡಿ ಶಾಲೆಯ ಮುಖ್ಯಗುರು ಶಾಂತಪ್ಪ ಎಂಬಾತನೇ ಅತಿಯಾಗಿ ಮದ್ಯ ಸೇವಿಸಿ ರಸ್ತೆಯಲ್ಲಿ ಬಿದ್ದ ಶಿಕ್ಷಕ. ಕುಂಬ್ರ ಪೇಟೆ ಯಲ್ಲಿ ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆಯ ವೇಳೆಗೆ ಕುಡಿತದ ಅಮಲೇರಿ ತೂರಾಡುತ್ತಿದ್ದ ಶಿಕ್ಷಕ ಮದ್ಯದ ನಶೆ ಏರಿ ಬಳಿಕ ರಸ್ತೆ ಬದಿಯಲ್ಲಿ ಬಿದ್ದರೆಂದು ತಿಳಿದುಬಂದಿದೆ. ಮಾಸ್ಟ್ರು ಟೈಟ್ ಎಂದು ತಿಳಿದ ಸ್ಥಳೀಯರು ಅವರನ್ನು ಎಬ್ಬಿಸುವ ಪ್ರಯತ್ನ ನಡೆಸಿದರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು ಅದಾವುದರ ಗೋಜು ಇಲ್ಲದೆ ರಸ್ತೆ ಬದಿಯಲ್ಲಿ ಬಿದ್ದಲ್ಲಿ ನಿದ್ದೆಹೋದರೆಂದೂ, ಸಂಜೆಯ ತನಕ ಅಲ್ಲೇ ಬಿದ್ದುಕೊಂಡಿದ್ದ ಶಿಕ್ಷಕ ನಶೆ ಇಳಿದ ಬಳಿಕ ಎದ್ದು ಹೋಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಹಿಂದೆ ಪಡುವನ್ನೂರು ಗ್ರಾಮದ ಅಂಬಟೆಮೂಲೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಶಾಂತಪ್ಪ ಅವರನ್ನು ಪಾನಮತ್ತನಾಗಿ ಶಾಲೆಗೆ ಬರುವುದು ಹಾಗೂ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸಜಂಕಾಡಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಅಲ್ಲಿಯೂ ತನ್ನ ಹಿಂದಿನ ಚಾಳಿಯನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದು, ಮಕ್ಕಳಿಗೆ ಮಾದರಿಯಾಗಬೇಕಾದ ಶಿಕ್ಷಕರೇ ಹೀಗಾದರೆ ಇವರಿಂದ ಪಾಠ ಹೇಳಿಸಿಕೊಂಡ ಮಕ್ಕಳ ಭವಿಷ್ಯ ಏನಾಗಬಹುದು ಎಂಬುದು ಸ್ಥಳೀಯರ ಪ್ರಶ್ನೆ. ಈ ಶಿಕ್ಷಕ ಕಡಿದು ತೂರಾಡಿ ನಡು ದಾರಿಯಲ್ಲಿ ಬೀಳುವ ಮೂಲಕ ಶಿಕ್ಷಕ ವೃತ್ತಿಯ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ. ಟೈಟ್ ಮಾಸ್ಟ್ರು ದಾರಿಯಲ್ಲಿ ಬಿದ್ದರು ಎಂದು ಸಾರ್ವಜನಿಕರು ವ್ಯಂಗ್ಯವಾಡುವಂತೆ ಮಾಡಿದರು ಎಂಬುವುದೇ ಅವರ ಸಾಧನೆ.

ಕುಮಾರಧಾರ ನದಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವಪತ್ತೆ

Posted by JAYAKIRANA Kirana on | 0 comments | Leave a comment...

ಸಾವಿನ ಸುತ್ತ ಸಂಶಯದ ಹುತ್ತ
ಉಪ್ಪಿನಂಗಡಿ: ಕುಮಾರಧಾರಾ ನದಿಯಲ್ಲಿ ಯುವತಿಯ ಶವವೊಂದು ಸೋಮವಾರ ರಾತ್ರಿ ದೊರೆತ್ತಿದ್ದು, ಇದು ಶಾಂತಿಗೋಡು ಗ್ರಾಮದ ಪಜಿರೋಡಿ ನಿವಾಸಿ ಸಂಕು ಮುಗೇರ ಎಂಬವರ ಪುತ್ರಿ ಪುಷ್ಪಾ (೨೦)ಎಂಬವರ ಮೃತ ದೇಹ ಎಂದು ಗುರುತಿಸಲಾಗಿದೆ.
ಆದಿತ್ಯವಾರ ೧೧ ಗಂಟೆಯಿಂದ ಈಕೆ ಮನೆಯಿಂದ ನಾಪತ್ತೆಯಾಗಿದ್ದು, ನಿನ್ನೆ ಕುಮಾರಧಾರಾ ನದಿಯಲ್ಲಿ ವರಕಡಮ ಸಮೀಪ ಈಕೆಯ ಶವ ಪತ್ತೆಯಾಗಿದೆ. ಈಕೆ ಸುಬ್ರಹ್ಮಣ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಈ ಸಾವಿನ ಬಗ್ಗೆ ಇದೀಗ ಹಲವು ಸಂಶಯಗಳು ಉಂಟಾಗಿದೆ. ಈ ಹಿಂದೆ ಈಕೆ ಲಾಡ್ಜ್ ಒಂದರಲ್ಲಿ ಯುವಕನೊಂದಿಗೆ ಸಿಕ್ಕಿಬಿದ್ದು ಕಾಲೇಜಿನಿಂದ ಅಮಾನತುಗೊಂಡಿದ್ದಳು ಎಂಬ ಸುದ್ದಿಯಿದೆ. ಸ್ಥಳೀಯ ಮಹಿಳೆಯೊಂದಿಗೆ ಬೆರೆಯುತ್ತಿದ್ದ ಆಕೆ ದಾರಿತಪ್ಪಿದ್ದು,ಕೆಲವು ಯುವಕರ ಜತೆ ತಿರುಗಾಡುತ್ತಿದ್ದಳು. ಈಕೆಗೆ ಓರ್ವ ಪ್ರೇಮಿ ಇರುವ ಬಗ್ಗೆ ತಿಳಿದುಬಂದಿದೆ. ಕಳೆದ ಕೆಲವು ಸಮಯದಿಂದ ವಿದ್ಯಾರ್ಥಿನಿಯೊಬ್ಬಳನ್ನು ಯುವಕನೊಬ್ಬ ಕೆಯ್ಯುರು ಗ್ರಾಮದ ಕಣಿಯಾರು ಮಲೆ ರಕ್ಷಿತಾರಣ್ಯಕ್ಕೆ ಕರೆದೊಯ್ದು ಮಜಾ ಉಡಾಯಿಸುತ್ತಿದ್ದ ಬಗ್ಗೆ ಮಾಡವು ಪರಿಸರದಲ್ಲಿ ಸುದ್ದಿಯಾಗಿತ್ತು. ಈ ನಡುವೆ ಯುವತಿಯೊಬ್ಬಳನ್ನು ಹಾಡಿಗೆ ಕರೆದೊಯ್ದು ಮಜಾ ಉಡಾಯಿಸುತ್ತಿದ್ದಾಗ ಸ್ಥಳೀಯರು ಯುವಕನನ್ನು ಥಳಿಸಿ ಪ್ರಶ್ನಿಸಿದ್ದರು. ಆದರೆ ಆತ ಆ ವೇಳೆ ಆಕೆ ತನ್ನ ಸಹೋದರಿ ಎಂದು ಹೇಳಿ ತಪ್ಪಿಸಿಕೊಂಡಿದ್ದ. ಕೆಲವು ಸಮಯದ ಬಳಿಕ ಮತ್ತೆ ಆ ಜೋಡಿಯ ಸವಾರಿ ಮುಂದುವರಿದಿತ್ತು. ಇದೇ ಯುವತಿ ಆಕೆಯೇ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈಕೆಯ ಸಾವಿಗೆ ಆತ್ಮಹತ್ಯೆ ಕಾರಣವೇ ಅಥವಾ ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆಯೇ ಎನ್ನುವ ವಿಚಾರ ಪೊಲೀಸರ ತನಿಖೆಯ ನಂತರವೇ ಬೆಳಕಿಗೆ ಬರಲಿದೆ. ಪ್ರಸ್ತುತ ಈಕೆಯ ಶವ ಕುಮಾರಧಾರ ನದಿಯ ಮಧ್ಯ ಭಾಗದಲ್ಲಿದ್ದು, ಅಲ್ಲಿಂದ ಶವ ತರಲು ಕಷ್ಟ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಕಡಬ ಠಾಣೆಯ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಶಾಂತಿಗೋಡು ಗ್ರಾಮದ ಯುವಕರು ಶವ ಮೇಲೆತ್ತಲು ಹರಸಾಹಸಪಡುತ್ತಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ಇನ್ನಷ್ಟೇ ತಿಳಿದುಬ ರಬೇಕಾಗಿದೆ.

ನಾಪತ್ತೆಯಾಗಿದ್ದ ವರ ಪತ್ತೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಮದುವೆ ಹತ್ತಿರವಾಗುತ್ತಿದ್ದಂತೆ ನಾಪತ್ತೆ ಯಾಗಿದ್ದ ಮದುವೆ ಗಂಡು ಮನೆಗೆ ಹಿಂತಿರುಗಿರುವ ಘಟನೆ ವರದಿಯಾಗಿದೆ.
ಉಬರಡ್ಕದ ಹರಿಶ್ಚಂದ್ರರಿಗೆ ದಿಡು ಪೆಯ ಹುಡುಗಿಯೊಂದಿಗೆ ಮದುವೆ ನಿಗದಿಯಾಗಿತ್ತು. ಜ.೨೫ರಂದು ಮದುವೆ ನಡೆಯಬೇಕಿತ್ತು. ಆದರೆ ಜ.೨೧ರಿಂದ ಹರಿಶ್ಚಂದ್ರ ನಾಪತ್ತೆಯಾಗಿದ್ದ. ಇದ ರಿಂದಾಗಿ ಮದುವೆ ನಿಂತು ಹೋಗಿತ್ತು. ಇದೀಗ ಆತ ಮನೆಗೆ ಹಿಂತಿರುಗಿದ್ದಾನೆ. ಮದುವೆಗೆ ತನ್ನಲ್ಲಿ ಹಣ ಇಲ್ಲದ ಕಾರಣ ಊರು ಬಿಟ್ಟು ಹೋಗಿ, ಕಾಸರಗೋ ಡಿನಲ್ಲಿ ಹೋಟೆ ಲೊಂದರಲ್ಲಿ ಕೆಲಸ ಮಾಡುತ್ತಿದ್ದುದಾಗಿ ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಉಡುಪಿ: ದಾವೆದಾರನಿಗೆ ಜೀವ ಬೆದರಿಕೆ

Posted by JAYAKIRANA Kirana on | 0 comments | Leave a comment...

ಉಡುಪಿ: ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರ ಮಾಲಕತ್ವದ ಮಲ್ಪೆಯಲ್ಲಿರುವ ರಾಜ್ ಫಿಷ್‌ಮಿಲ್‌ನ ಪರಿಸರ ಮಾಲಿನ್ಯದ ವಿರುದ್ದ ಹೈಕೋರ್ಟ್ ಮೆಟ್ಟಿಲು ಹತ್ತಿದ ಕೊಳ ನಿವಾಸಿ ಕರುಣಾಕರ ಸಾಲ್ಯಾನ್(೩೭) ಅವರಿಗೆ ಕಿದಿಯೂರು ಯಶೋಧರ ಅಮೀನ್ ಎಂಬವರು ಜೀವ ಬೆದರಿಕೆ ಹಾಕಿದ ಪ್ರಕರಣ ಆದಿತ್ಯವಾರ ನಸುಕಿನ ಸಮಯ ೨.೨೩ಕ್ಕೆ ನಡೆದಿದೆ.
ರಾಜ್ ಫಿಶ್‌ಮಿಲ್‌ನಿಂದಾಗಿ ಪರಿಸರ ಮಾಲಿನ್ಯವಾಗಿದೆ ಮತ್ತು ನದಿಗೆ ಫಿಶ್‌ಮಿಲ್‌ನ ನೀರು ಬಿಡುವುದರಿಂದಾಗಿ ನದಿ ಕಲುಷಿತವಾಗಿದೆ ಎಂದು ಕರುಣಾಕರ ಸಾಲ್ಯಾನ್‌ರವರು ದಾವೆ ಹೂಡಿದ್ದರು. ಮೊದಲು ಹೂಡಿದ ದಾವೆ ರಾಜಿಯಿಂದ ಮುಕ್ತಾಯವಾಗಿತ್ತು ಎನ್ನಲಾಗಿದೆ. ದಾವೆ ಒಂದು ಬಾರಿ ರಾಜಿಯಿಂದ ಇತ್ಯರ್ಥಗೊಂಡ ಬಳಿಕ ಮತ್ತೆ ಕರುಣಾಕರ ಸಾಲ್ಯಾನ್‌ರವರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು ಎನ್ನಲಾಗಿದೆ.
ಮತ್ತೆ ಹೈಕೋರ್ಟ್ ಮೆಟ್ಟಿಲು ಹತ್ತಿದ ಕಾರಣಕ್ಕೆ ಕರುಣಾಕರ ಅವರ ಮೊಬೈಲ್‌ಗೆ ಕರೆ ಮಾಡಿದ ಯಶೋಧರ ಅಮೀನ್ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕರುಣಾಕರ ನೀಡಿದ ದೂರಿನ ಆಧಾರದಲ್ಲಿ ಆರೋಪಿ ಯಶೋಧರ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಬಂಟ್ವಾಳ: ದಲಿತ ದೌರ್ಜನ್ಯ ಪ್ರಕರಣ; ಎಸ್ಪಿಗೆ ದೂರು

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ದಲಿತ ಕುಟುಂಬಗಳ ಮೇಲೆ ಜಾತಿ ನಿಂದನೆ, ಕಿರುಕುಳ ಹಾಗೂ ದೌರ್ಜನ್ಯವೆಸಗಲಾಗುತ್ತಿರುವ ಪ್ರಕರಣಗಳ ಕುರಿತು ತನಿಖೆ ನಡೆಸಲು ಸರಪಾಡಿ ಗ್ರಾಮದ ಪೆರ್ಲ-ಬೀಯ ಪಾದೆ, ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಸಿದ್ದು ಎಂಬವರು ಮಂಗಳೂರು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
 ಸರಪಾಡಿ ಗ್ರಾಮದ ಬೀಯಪಾದೆ ನಿವಾಸಿ ಚಂದ್ರಹಾಸ ಪೂಜಾರಿ ಎಂಬವರು ದಲಿತ ಕುಟುಂಬಗಳಿಗೆ ಸೇರಿದವರ ವಿರುದ್ಧ ಹಳೆಯ ದ್ವೇಷ ಸಾಧಿಸುತ್ತಿದ್ದು, ಜಾತಿಯ ಹೆಸರನ್ನು ಮುಂದಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿರುತ್ತಾರೆ. ಮನೆಯ ಮೇಲೆ ಕಲ್ಲು ತೂರಾಟ ನಡೆಸ ಲಾಗುತ್ತಿದ್ದು, ಜೀವ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ. ಪ್ರಕರಣದ ಕುರಿತು ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಪ್ರಸಾದ್ ಅವರಿಗೆ ದೂರು ನೀಡಿ ದ್ದರೂ, ಅವರು ದೂರು ನೀಡಿದ ವರನ್ನೇ ಬಾಯಿ ಮುಚ್ಚಿಸಿದ್ದರೆಂದು ಸಿದ್ದು ಆರೋಪಿಸಿದ್ದಾರೆ.
 ದಲಿತ ಸಮಾಜದವರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣಗಳನ್ನು ಕೂಲಂಕಷ ತನಿಖೆ ನಡೆಸುವಂತೆ ಆಗ್ರಹಿಸಿದ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಿನ್ನೆ ಠಾಣೆಗೆ ಜಮಾಯಿಸಿದ್ದು, ಠಾಣಾಧಿಕಾರಿಯ ಮುಂದೆ ತಮಗಾದ ಶೋಷಣೆಯನ್ನು ಮನವರಿಕೆ ಮಾಡಿ ದ್ದರು. ಆದರೂ ಠಾಣಾಧಿಕಾರಿ ಯವರು ದಲಿತ ಸಂಘಟಕರ ದೂರನ್ನು ಸ್ವೀಕರಿಸಲು ಒಪ್ಪಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಯಿಂದ ಬೇಸತ್ತ ದಲಿತ ಸಂಘಟಕರು ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ.
 ದಲಿತ ಯುವಕ ಸಂಘದ ಅಧ್ಯಕ್ಷ ಸಿದ್ದು, ಕಾರ್ಯದರ್ಶಿ ಜನಾರ್ದನ ನೀಡಿದ ದೂರಿನನ್ವಯ ದಲಿತರ ಮೇಲಾದ ದೌರ್ಜನ್ಯ ಪ್ರಕರಣಗಳ ಕುರಿತು ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಎಸ್ಪಿ ಕಚೇರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಉನ್ನತಾಧಿಕಾರಿಗಳ ಸೂಚನೆ ಬಂದ ಬಳಿಕ ಪ್ರಕರಣದ ದೂರನ್ನು ಸ್ವೀಕರಿಸಿದ ಠಾಣಾಧಿಕಾರಿ ತನಿಖೆಯನ್ನು ಮುಂದುವರಿಸಿದರು.

ತಂಗಿಗೆ ವಂಚಿಸಿದಾತನನ್ನು ಅಪಹರಿಸಿದ ಅಣ್ಣಂದಿರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಯುವಕನನ್ನು ಯುವತಿಯ ಸಹೋ ದರರೇ ಅಪಹರಿಸಿ ಮದುವೆ ಮಾಡಲು ಯತ್ನಿಸಿರುವ ಘಟನೆ ನಿನ್ನೆ ಕದ್ರಿಯಲ್ಲಿ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಯುವಕನ ಮೊಬೈಲ್ ನೆಟ್‌ವರ್ಕ್ ಆಧರಿಸಿ ಅಪಹರಣಕಾರರನ್ನು ಒಂದು ತಾಸಿನೊಳಗೆ ಬಂಧಿಸಿ ದ್ದಾರೆ.
ಬೋಳಾರ ನಿವಾಸಿ ತಿಲಕ್‌ರಾಜ್ ಎಂಬಾತ ಆರು ವರುಷದ ಹಿಂದೆ ಐಸಿಐಸಿಐ ಬ್ಯಾಂಕಿನಲ್ಲಿ ದುಡಿಯುತ್ತಿದ್ದ. ಈ ಸಮಯದಲ್ಲಿ ಇದೇ ಬ್ಯಾಂಕಿನಲ್ಲಿ ದುಡಿಯುತ್ತಿದ್ದ ಬೆಂಗರೆಯ ಯುವತಿಯ ಜೊತೆ ಈತನಿಗೆ ಪ್ರೀತಿ ಉಂಟಾಗಿತ್ತು. ಕಳೆದ ಆರು ವರುಷದಿಂದ ಇಬ್ಬರ ಪ್ರೇಮ ವ್ಯವಹಾರ ನಡೆಯುತ್ತಿತ್ತು. ಇವರ ಪ್ರೀತಿ ವಿಚಾರ ಯುವತಿ ಮನೆಯಲ್ಲೂ ತಿಳಿದಿತ್ತು. ಮನೆ ಮಂದಿ ಒಪ್ಪಿಗೆಯನ್ನೂ ನೀಡಿದ್ದರು. ಆದರೆ ಯುವಕ ಮಾತ್ರ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದ. ಈ ನಡುವೆ ಯುವಕ ಐಸಿಐಸಿಐ ಬ್ಯಾಂಕನ್ನು ಬಿಟ್ಟು ಎಚ್‌ಡಿಎಫ್‌ಸಿ ಬ್ಯಾಂಕಿಗೆ ಸೇರಿದ್ದ. ಅಲ್ಲದೆ ಯುವತಿ ಜೊತೆ ಮಾತು ಕತೆಯನ್ನೂ ಕಡಿಮೆ ಮಾಡಿದ್ದ. ಇದರಿಂದ ನೊಂದ ಯುವತಿ ತನ್ನ ಸಹೋದರರ ಬಳಿ ನೋವನ್ನು ತೋಡಿಕೊಂಡಿದ್ದಳು. ಯುವಕ ವಿನಾ ಕಾರಣ ಮದುವೆಯನ್ನು ನಿರಾಕರಿಸುತ್ತಿರುವ ಕಾರಣ ಅಕ್ರೋಶಗೊಂಡ ಯುವತಿಯ ಸಹೋದರರು ಯುವಕನನ್ನು ಅಪಹರಿಸಿ ಮದುವೆ ಮಾಡಲು ಯೋಜನೆ ರೂಪಿಸಿದ್ದರು. ನಿನ್ನೆ ಮಧ್ಯಾಹ್ನ ಎಚ್‌ಡಿಎಫ್‌ಸಿ ಬ್ಯಾಂಕಿಗೆ ಬಂದಿದ್ದ ಯುವತಿಯ ಸಹೋದರರಾದ ಉದಯ್, ಪ್ರವೀಣ್ ಮತ್ತು ದೀಪಕ್ ಎಂಬವರು ತಿಲಕ್‌ರಾಜ್‌ನನ್ನು ಸಂಬಂಧಿ ಕರು ಬಂದಿದ್ದಾರೆ ಎಂದು ಬ್ಯಾಂಕಿನಿಂದ ಹೊರಗೆ ಕರೆಸಿ ಆತನಿಗೆ ಹಲ್ಲೆ ನಡೆಸಿ ಬಳಿಕ ರಿಕ್ಷಾದಲ್ಲಿ ಅಪಹರಿಸಿದ್ದರು.
ಇದನ್ನು ಬ್ಯಾಂಕ್ ಸಿಬ್ಬಂದಿ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ನಗರದಲ್ಲಿ ನಾಕಾ ಬಂಧಿ ಹಾಕಿ ತನಿಖೆ ನಡೆಸಿದ್ದರು. ಬ್ಯಾಂಕ್ ಸಿಬ್ಬಂದಿ ರಿಕ್ಷಾವನ್ನು ಗುರುತಿಸಿದ್ದು, ರಿಕ್ಷಾ ನಂಬರನ್ನು ಪತ್ತೆ ಹಚ್ಚಿ ಅದರ ಚಾಲಕನನ್ನು ವಿಚಾರಿಸಿದಾಗ ತಾನು ಅವರನ್ನು ಪಡೀಲ್‌ನಲ್ಲಿ ಇಳಿ ಸಿರುವುದಾಗಿ ತಿಳಿಸಿದ್ದ. ಅಲ್ಲದೆ ತಿಲಕ್ ರಾಜ್ ಮೊಬೈಲ್ ಕೂಡಾ ಪಡೀಲ್ ನೆಟ್‌ವರ್ಕ್ ತೋರಿಸುತ್ತಿದ್ದು, ಕೂಡಲೇ ಪೊಲೀಸರು ಆರೋಪಿಗಳ ಮನೆ ಪತ್ತೆ ಹಚ್ಚಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ತಂಗಿಗೆ ತಿಲಕ್ ವಂಚಿಸಿದ್ದೇ ಅಪಹರಣಕ್ಕೆ ಕಾರಣ ಎಂದು ಆರೋಪಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಆರ್‌ಪಿಎಲ್: ರಾಸಾಯನಿಕ ವಿಷಾನಿಲಕ್ಕೆ ಇಬ್ಬರು ಬಲಿ

Posted by JAYAKIRANA Kirana on | 0 comments | Leave a comment...

ಸುರತ್ಕಲ್ : ಡಾಮರು ಟ್ಯಾಂಕ್ ಮುಚ್ಚಳವನ್ನು ತೆಗೆಯುತ್ತಿದ್ದ ವೇಳೆ ಟ್ಯಾಂಕಿನಿಂದ ಹೊರ ಬಂದ ರಾಸಾಯನಿಕದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ನಿನ್ನೆ ಮುಂಜಾನೆ ಎಂಆರ್‌ಪಿಎಲ್ ಬಿಟುಮಿನ್ ಗೇಟ್ ಬಳಿ ಇರುವ ಸಿಆರ್‌ಎಂಬಿ ಘಟಕದಲ್ಲಿ ಸಂಭವಿಸಿದೆ.
ಮೃತರನ್ನು ತಮಿಳುನಾಡು ಮೂಲದವರಾದ ಜನಶೇಖರ ಅಣ್ಣನ್ ಮತ್ತು ಮಾರಿಮುತ್ತು ಎಂದು ಗುರುತಿಸಲಾಗಿದೆ. ಮೃತರು ಒಂದೇ ಟ್ಯಾಂಕರಿನಲ್ಲಿ ಚಾಲಕ ಮತ್ತು ಕ್ಲೀನರ್ ಆಗಿ ದುಡಿಯುತ್ತಿದ್ದರು. ಕ್ಲಿನಿಂಗ್‌ಗಾಗಿ ಟ್ಯಾಂಕರ್‌ನ ಟ್ಯಾಂಕ್‌ನ ಮುಚ್ಚಳ ತೆಗೆಯುತ್ತಿದ್ದಂತೆ ರಾಸಾಯನಿಕ ಅನಿಲ ಒಮ್ಮೆಲೆ ಹೊರಬಂದ ಪರಿಣಾಮ ಸ್ಮೃತಿ ತಪ್ಪಿ ಇಬ್ಬರೂ ಟ್ಯಾಂಕ್‌ನ ಒಳ ಭಾಗಕ್ಕೆ ಬಿದ್ದಿದ್ದು, ಟ್ಯಾಂಕಿನ ಒಳ ಭಾಗದ ಉಷ್ಣತೆಗೆ ಬೆಂದುಹೋಗಿ ಮೃತ ಪಟ್ಟಿದ್ದಾರೆ.
ಅಂಬಲ್ ಟ್ರಾನ್ಸ್‌ಪೋರ್ಟ್ ಕಂಪನಿಗೆ ಸೇರಿದ ಟ್ಯಾಂಕರಿನಲ್ಲಿ ಚಾಲಕನಾಗಿ ದುಡಿಯುತ್ತಿರುವ ಜನಶೇಖರ ಅಣ್ಣನ್ ಮತ್ತು ಕ್ಲೀನರ್ ಆಗಿರುವ ಮಾರಿ ಮುತ್ತು ಸೋಮ ವಾರ ಬೆಳಗ್ಗೆ ೬.೩೦ರ ಸುಮಾರಿಗೆ ಡಾಮರು ತುಂಬಿಸಲೆಂದು ಎಂಆರ್ ಪಿಎಲ್ ಬಿಟುಮಿನ್ ಗೇಟ್ ಬಳಿ ಸಿಆರ್‌ಎಂಬಿ ಡಾಮಾರು ಘಟಕಕ್ಕೆ ಬಂದಿದ್ದರು. ಹಾಗೆಯೇ ಟ್ಯಾಂಕನ್ನು ಸಿದ್ದಗೊಳಿಸಲು ಟ್ಯಾಂಕ್‌ನ ಮುಚ್ಚಳವನ್ನು ತೆಗೆದಿಡುವ ಉದ್ದೇಶದಿಂದ ಮೊದಲು ಚಾಲಕ ಜನಶೇಖರ ಅಣ್ಣನ್ ಟ್ಯಾಂಕ್‌ನ ಮೇಲ್ಭಾಗಕ್ಕೆ ತೆರಳಿ ಮುಚ್ಚಳ ಕಳಚಿದ್ದರು. ಈ ಸಮಯದಲ್ಲಿ ಟ್ಯಾಂಕ್‌ನಲ್ಲಿ ಶೇಖರಣೆಯಾಗಿದ್ದ ರಾಸಾಯನಿಕ ವಿಷಾನಿಲ ಒಮ್ಮೆಲೆ ಹೊರಬಂದಿದ್ದು ಅದನ್ನು ಸೇವಿಸಿದ ಜನಶೇಖರ ಅಣ್ಣನ್ ಸ್ಮೃತಿ ಕಳೆದುಕೊಂಡು ಟ್ಯಾಂಕ್‌ನ ಒಳಭಾಗಕ್ಕೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಕ್ಲೀನರ್ ಮಾರಿಮುತ್ತು ಕೂಡಾ ಟ್ಯಾಂಕ್‌ನ ಮೇಲ್ಭಾಗಕ್ಕೆ ತೆರಳಿ ಇಣುಕಿ ನೋಡಿದ್ದ, ಹೀಗಾಗಿ ಮಾರಿ ಮುತ್ತಿಗೂ ವಿಷಾನಿಲ ಸೋಕಿ ಅವರೂ ಸ್ಮೃತಿಕಳೆದುಕೊಂಡು ಟ್ಯಾಂಕ್ ಒಳಭಾಗಕ್ಕೆ ಬಿದ್ದದ್ದ. ಟ್ಯಾಂಕ್‌ನ ಒಳಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಅನಿಲ ಶೇಖರಣೆ ಆಗಿದ್ದು ಅದು ಹೆಚ್ಚು ಉಷ್ಣತೆಯನ್ನು ಹೊಂದಿದ್ದ ಕಾರಣ ಇಬ್ಬರೂ ಟ್ಯಾಂಕ್ ಒಳಗಡೆನೇ ಮೃತಪಟ್ಟಿದ್ದರು. ಇವರಿಬ್ಬರನ್ನು ರಕ್ಷಿಸಲೆಂದು ಸ್ಥಳೀಯ ರೊಬ್ಬರು ಪ್ರಯತ್ನಿಸಿದ್ದು, ಅವರು ರಾಸಾಯನಿಕದ ಘಾಟಿಗೆ ಟ್ಯಾಂಕಿನಿಂದ ಕೆಳ ಭಾಗಕ್ಕೆ ಬಿದ್ದ ಕಾರಣ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಇವರಿಂದಾಗಿ ಇಬ್ಬರು ಟ್ಯಾಂಕ್ ಒಳಗಿರುವ ವಿಷಯ ಬೆಳಕಿಗೆ ಬರಲು ಸಾಧ್ಯವಾಗಿದೆ.
ಘಟನೆ ಬಗ್ಗೆ ಇಲ್ಲಿನ ಸೂಪರ್‌ವೈಸರ್ ವೆಂಕಟೇಶ್ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಡಾಮರು ಸಾಗಾಟದ ವೇಳೆ ಹಲವು ದಿನಗಳ ಕಾಲ ತೀರಾ ಒತ್ತಡದಲ್ಲಿ ಟ್ಯಾಂಕ್‌ನಲ್ಲಿರುವ ಕಾರಣ ಅದೊಂದು ರೀತಿಯ ರಾಸಾಯನಿಕವನ್ನು ಹೊರ ಸೂಸುತ್ತದೆ. ಹೀಗಾಗಿ ಡಾಮರು ಖಾಲಿ ಮಾಡಿದ ಬಳಿಕ ಟ್ಯಾಂಕ್ ಮುಚ್ಚಲವನ್ನು ಹಲವಾರು ಗಂಟೆಗಳ ಕಾಲ ತೆರೆದಿಡ ಬೇಕಾಗುತ್ತದೆ. ಹೀಗೆ ಮಾಡಿದಾಗ ರಾಸಾಯನಿಕ ಗಾಳಿಯಲ್ಲಿ ಸೇರಿ ಬಿಡುತ್ತದೆ. ಆದರೆ ಜನಶೇಖರ್ ಮತ್ತು ಮಾರಿಮುತ್ತು ಅವರು ಡಾಮರು ಖಾಲಿ ಮಾಡಿದ ಬಳಿಕವೂ ಟ್ಯಾಂಕ್ ಮುಚ್ಚಳ ಹಾಕಿ ಸೋಮವಾರ ಮುಂಜಾನೆಯಷ್ಟೇ ಅದನ್ನು ತೆರೆದ ಕಾರಣ ಅದು ಒಮ್ಮೆಲೇ ಆಮ್ಲಜನಕವನ್ನು ಹೀರಿಕೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ವೆನ್ಲಾಕ್ ಶವಾಗಾರದಲ್ಲಿ ಇರಿಸಲಾಗಿದ್ದು. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವವನ್ನು ಮನೆಮಂದಿಗೆ ಬಿಟ್ಟುಕೊಡಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಿಆರ್‌ಬಿ ಎಂದರೆ ಕ್ರಮ್ ರಬ್ಬರ್ ಮೋಡಿಫೈಡ್ ಬಿಂಡರ್ ಅಂದರೆ ಡಾಮರಿಗೆ ರಬ್ಬರ್ ಮಿಶ್ರಣ ಮಾಡುವ ಘಟಕ. ಎಂಆರ್‌ಪಿಎಲ್‌ನಿಂದ ಸಂಸ್ಕರಣಗೊಳ್ಳುವ ಪೆಟ್ರೊಲಿಯಂ ಕಚ್ಚಾ ತೈಲದ ಡಾಮರನ್ನು ಬೇರ್ಪಡಿಸಿ ಬಿಟುಮಿನ್ ಘಟಕದಲ್ಲಿ ಶೇಖರಿಸಿಡುತ್ತಾರೆ ಬಳಿಕ ಇದನ್ನು ಸಿಆರ್‌ಎಂಬಿ ಘಟಕದಲ್ಲಿ ರಬ್ಬರ್‌ನೊಂದಿಗೆ ಮಿಶ್ರಣ ಮಾಡುತ್ತಾರೆ.ಹೀಗೆ ಮಿಶ್ರಣವಾದ ಡಾಮರನ್ನು ಟ್ಯಾಂಕರ್ ಮೂಲಕ ಕಳುಹಿಸಲಾಗುತ್ತದೆ. ಆದರೆ ಈ ಮಿಶ್ರಣ ರಾಸಾಯನಿಕ ವಿಷಾನಿಲವನ್ನೂ ಸೂಸುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ತಿಳಿದು ಬಂದಿದೆ.

ಪೈ ಇಂಟರ್‌ನ್ಯಾಷನಲ್‌ನಿಂದ ಲಕ್ಷಾಂತರ ಮೌಲ್ಯದ ಸೊತ್ತು ಕಳವು

Posted by JAYAKIRANA Kirana on | 0 comments | Leave a comment...

ಸೆಕ್ಯುರಿಟಿ ಗಾರ್ಡ್‌ಗಳ ಕೃತ್ಯ
ಉಡುಪಿ: ಉಡುಪಿಯ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಬಳಿಯಿರುವ ಪೈ ಇಂಟರ್‌ನ್ಯಾಷನಲ್‌ನ ಶೆಟರ್‌ನ ಬೀಗ ಮುರಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡಿದ ಪ್ರಕರಣ ಆದಿತ್ಯವಾರ ರಾತ್ರಿ ನಡೆದಿದ್ದು, ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
೫ ಲ್ಯಾಪ್‌ಟಾಪ್, ೨೦ಕ್ಕೂ ಅಧಿಕ ಕ್ಯಾಮರಾಗಳು ಮತ್ತು ೧೭ ಕ್ಯಾಮರಾಗಳನ್ನು ಕಳ್ಳರು ದೋಚಿದ್ದಾರೆ ಎಂದು ಪೈ ಇಂಟರ್‌ನ್ಯಾಷನಲ್ ಉಡುಪಿ ಶಾಖೆಯ ಮ್ಯಾನೇಜರ್ ದೂರಿದ್ದಾರೆ.
ಕಳ್ಳರು ಒಳಗೆ ಪ್ರವೇಶಿಸುವುದು, ಅಮೂಲ್ಯ ಸೊತ್ತುಗಳನ್ನು ಕಳವು ಮಾಡುವುದು ಇತ್ಯಾದಿಗಳೆಲ್ಲವೂ ಸಂಸ್ಥೆಯ ಒಳಗಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಇದನ್ನು ವೀಕ್ಷಿಸಿದ್ದು, ಕಳ್ಳರು ಯಾರು ಎಂಬುದನ್ನು ಗುರುತಿಸಲಾಗಿದೆ.
ಪೈ ಇಂಟರ್‌ನ್ಯಾಷನಲ್ ಸಂಸ್ಥೆಯ ಸೆಕ್ಯುರಿಟಿ ಗಾರ್ಡ್ ಆಗಿ ಆದಿತ್ಯವಾರ ಕರ್ತವ್ಯದಲ್ಲಿದ್ದ ಯುವಕನೇ ಕಳವು ಕೃತ್ಯ ನಡೆಸಿರುವುದು ಸ್ಪಷ್ಟವಾಗಿದೆ.
ಆದಿತ್ಯವಾರ ಕರ್ತವ್ಯದಲ್ಲಿದ್ದ ಈತ ಸೋಮವಾರ ನಾಪತ್ತೆಯಾಗಿದ್ದ. ಈತನೊಂದಿಗೆ ಇನ್ನೋರ್ವ ವ್ಯಕ್ತಿಯೂ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಸಂತೆಕಟ್ಟೆ ಕಲ್ಯಾಣಪುರದ ಸೆಕ್ಯುರಿಟಿ ಏಜೆನ್ಸಿ ಯೊಂದರ ಮೂಲಕ ಪೈ ಇಂಟರ್‌ನ್ಯಾಷನಲ್‌ಗೆ ಕಾವಲುಗಾರನಾಗಿ ಬಂದಿದ್ದನು. ಆದರೆ ಇವನ ಬಗ್ಗೆ ಸೆಕ್ಯುರಿಟಿ ಏಜೆನ್ಸಿಗೂ ಹೆಚ್ಚಿನ ಮಾಹಿತಿ ಇಲ್ಲವೆನ್ನಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸೆಕ್ಯುರಿಟಿ ಏಜೆನ್ಸಿ ಸಂಸ್ಥೆಯ ಮಾಲಕ ಸುರೇಶ್ ಎಂಬವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
 ಕಳ್ಳತನ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಬೋರ ಲಿಂಗಯ್ಯ, ಹೆಚ್ಚುವರಿ ಎಸ್‌ಪಿ ಎಂ.ವಿ.ವೆಂಕಟೇಶಪ್ಪ, ಡಿವೈಎಸ್‌ಪಿ ಡಾ.ಪ್ರಭುದೇವ ಬಿ.ಮಾನೆ, ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ಭೇಟಿ ನೀಡಿ ಸ್ಥಳ ಪರಿಶೋಧನೆ ನಡೆಸಿ ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ. ಬೆರಳಚ್ಚು ತಜ್ಞರು ಸ್ಥಳ ಪರಿಶೀ ಲನೆ ನಡೆಸಿ ಕಳ್ಳರ ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಕಳ್ಳರ ಬಂಧನ

Posted by JAYAKIRANA Kirana on | 0 comments | Leave a comment...

ಮುಲ್ಕಿ: ಕಾರ್ನಾಡಿನ ಮನೆಯೊಂದರಿಂದ ನಗದು ಹಾಗೂ ಇತರ ಸಾಮಗ್ರಿಗಳನ್ನು ಕಳವು ಮಾಡಿದ್ದ ಇಬ್ಬರನ್ನು ಕಳ್ಳತನಕ್ಕೆ ಉಪಯೋಗಿಸಿದ ಕಾರಿನ ಸಹಿತ ಬಂಧಿಸಲಾಗಿದೆ.
ಕಾರ್ನಾಡಿನ ಕೆ.ಎಚ್. ಮುನೀರ್ ಎಂಬವರು ಫೆ.೧೨ರಂದು ಸಂಬಂಧಿಕರ ಮನೆಗೆ ತೆರಳಿದ್ದು, ಫೆ. ೧೪ರಂದು ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಎಟಿಎಂ, ನಗದು ಹಾಗೂ ಚಿನ್ನಾಭರಣ ಕಳವಾಗಿರುವುದಾಗಿ ದೂರು ದಾಖಲಾಗಿತ್ತು. ಇದರ ಬಳಿಕ ಚಿನ್ನಾಭರಣಗಳು ಬಟ್ಟೆಬರೆ ಮಧ್ಯೆ ಪತ್ತೆಯಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಮುಲ್ಕಿ ಪೊಲೀಸರು ಮುಡಿಪು ಚರ್ಚ್ ಗ್ರೌಂಡ್‌ನ ಮಹಮದ್ ರಫೀಕ್ ಮತ್ತು ಮುಡಿಪು ಜೋಸೆಫ್ ಚರ್ಚ್ ಬಳಿಯ ಮಹಮದ್ ಹಫೀಜ್ ಎಂಬವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಹಮದ್ ರಫೀಕ್ ಈ ಹಿಂದೆ ಕೂಡ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಹಾಗೂ ಇತರ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದಾನೆ. ಹಫೀಜ್ ಒಂದು ಬಸ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಅತಿಯಾದ ಖರ್ಚು ಹಾಗೂ ದುರಾಭ್ಯಾಸ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ.

ಮತ್ತೆ ಜೆಡಿಎಸ್-ಬಿಜೆಪಿ ಸರಕಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಡಿಯೂರಪ್ಪ ಮುಖ್ಯಮಂತ್ರಿ ಪಟ್ಟಕ್ಕಾಗಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ನಡೆಸುತ್ತಿರುವಂತೆಯೇ ಜೆಡಿಎಸ್ ರಂಗಕ್ಕಿಳಿಯಲು ಸಿದ್ಧತೆ ನಡೆಸುತ್ತಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ.
ಯಡಿಯೂರಪ್ಪ ಪರ ಇರುವ ಸುಮಾರು ೭೦ ಶಾಸಕರು ಇಂದಿನ ಕೋರ್ ಕಮಿಟಿಯ ತೀರ್ಮಾನಕ್ಕೆ ಬದ್ಧರಾಗದಿದ್ದರೆ ಅವರನ್ನು ಅಮಾನತು ಮಾಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ರಾಜ್ಯಸಭೆಗೆ ಸ್ಪರ್ಧಿಸಿದ್ದ ಪುಟ್ಟಸ್ವಾಮಿಯ ಅಮಾನತು ಯಡಿಯೂರಪ್ಪಗೆ ಸಂದೇಶ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಕೂಡಾ ಇಂಥ ಅವಕಾಶವನ್ನೇ ಕಾಯುತ್ತಿದ್ದು ಅಮಾನತು ಮಾಡಿದರೆ ವಚನಭ್ರಷ್ಟ ಡಿ.ವಿ ವಿರುದ್ಧ ಸಮರ ಸಾರಿ ಚುನಾವಣೆಗೆ ಇಳಿಯುತ್ತಾರೆ. ಅನುಕಂಪದ ಆಧಾರದಲ್ಲಿ ಜನ ತಮಗೆ ಬೆಂಬಲ ಕೊಡಬಹುದು ಎಂಬ ಅಲೋಚನೆಯಲ್ಲಿ ಯಡಿಯೂರಪ್ಪ ನವರಿದ್ದಾರೆ. ವಚನಭ್ರಷ್ಟತೆಯ ವಿಷಯವನ್ನಿಡಿದು ವೋಟು ಕೇಳಿ ಯಶಸ್ವಿಯಾಗಿರುವ ಅನುಭವವೇ ಯಡಿಯೂರಪ್ಪ ಬಳಿ ಇದ್ದು ಈ ಮೂಲಕ ವರಿಷ್ಠರಿಗೆ ಸಡ್ಡು ಹೊಡೆಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಸಚಿವ ಬಾಲಚಂದ್ರ ಜಾರಕಿಹೊಳಿ ಯಡಿಯೂರಪ್ಪ ಬೆಂಬಲಿಗರು ಸರಕಾರದಿಂದ ಹೊರಬಂದರೆ ಸಹಕಾರ ಕೊಡಲು ಜೆಡಿಎಸ್ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಜಾರಕಿಹೊಳಿ ಮೂಲತ: ಜನತಾದಳದವರೇ ಆಗಿದ್ದು ಅವರೊಂದಿಗೆ ಕುಮಾರಸ್ವಾಮಿಯೂ ಸಂಪರ್ಕದಲ್ಲಿದ್ದಾರೆ. ಅವಕಾಶವಾದದ ರಾಜಕಾರಣದಲ್ಲಿ ಎತ್ತಿದ ಕೈ ಅನ್ನಿಸಿಕೊಂಡಿರುವ ಕುಮಾರಸ್ವಾಮಿ, ದೇವೇಗೌಡರು ಈಗಾಗಲೇ ಸದಾನಂದ ಗೌಡರಿಗೆ ಆತ್ಮೀಯರಾಗಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ದೇವೇಗೌಡ ಒಕ್ಕಲಿಗ ಸಂಘಟನೆಯನ್ನೂ ಅಖಾಡಕ್ಕಿಳಿಸಿದ್ದು ಡಿ.ವಿ.ಗೂ ಜಾತಿ ಸಂಘಟನೆಯ ಬೆಂಬಲವಿದೆ ಎಂದು ತೋರಿಸಲು ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ವಾಸ್ತವವಾಗಿ ತುಳುನಾಡಿನ ಒಕ್ಕಲಿಗರ ಜೊತೆ ಅಷ್ಟೇನೂ ಬಾಂಧವ್ಯ ಇಟ್ಟುಕೊಳ್ಳದ ಕನ್ನಡ ಒಕ್ಕಲಿಗರು ಈ ವಿಷಯದಲ್ಲಿ ಡಿ.ವಿ ಬೆಂಬಲಕ್ಕೆ ನಿಂತಿದ್ದಾರೆ. ಹೀಗೆ ನಿಲ್ಲಲು ದೇವೇ ಗೌಡರು ಕಾರಣ ಎಂದು ತಿಳಿದುಬಂದಿದೆ.
ತಾನಿಲ್ಲದೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಿಲ್ಲ ಎನ್ನುವ ದೃಷ್ಟಿಯಿಂದಲೇ ಈ ಬಾರಿಯ ಉಡುಪಿ-ಲೋಕಸಭಾ ಚುನಾವಣೆಯಲ್ಲಿ ಸುನಿಲ್ ಕುಮಾರ್ ಅವರನ್ನು ಸೋಲಿಸಲು ಬಿಜೆಪಿ ಒಂದು ಬಣ ಶಾಸಕ ಜೀವರಾಜ್ ಹಾಗೂ ಬಿಜೆಪಿ ಶಾಸಕ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ‍್ಯ ನಿರ್ವಹಿಸಿದೆ ಎನ್ನಲಾಗುತ್ತಿದೆ. ಬೆಳಗಾವಿಯ ಬಾಲಚಂದ್ರ ಜಾರಕಿಹೊಳಿಯವ ರಂತವರು ಡಿ.ವಿ. ಸದಾನಂದ ಗೌಡರ ಪರ ನಿಲ್ಲುವ ಸ್ಥಿತಿ ಬಂದರೂ ಕರಾವಳಿಯ ಶಾಸಕರು ಡಿ.ವಿ ಬೆಂಬಲಕ್ಕೆ ನಿಲ್ಲದಿರುವುದು ದುರಂತ ಎಂದು ಕಾಂಗ್ರೆಸ್‌ನ ಶಾಸಕ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಇದೇ ಮಾತನ್ನು ಅತ್ತ ಸುಳ್ಯದಲ್ಲಿ ಕಾಂಗ್ರೆಸ್ ಮುಖಂಡ ವೆಂಕಪ್ಪಗೌಡರೂ ಹೇಳಿದ್ದು ತಮ್ಮವರ ಪರವೇ ಕರಾವಳಿ ಶಾಸಕರು ನಿಲ್ಲದಿರುವುದು ದುರಂತ ಎಂದಿದ್ದಾರೆ.

ಯಡ್ಡಿ ವಿರುದ್ಧ ಶಿಸ್ತು ಕ್ರಮ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಬಿಜೆಪಿ ವರಿಷ್ಠರು, ಅಧಿಕಾರಕ್ಕಾಗಿ ಯಡಿಯೂರಪ್ಪ ಇದೇ ರೀತಿ ಬಂಡಾಯದ ಬಾವುಟ ಹಾರಿಸಲು ಮುಂದಾದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಯಡಿಯೂರಪ್ಪರ ಒತ್ತಡ ಮತ್ತು ಅವರ ಯಾವುದೇ ಬೇಡಿಕೆಗಳಿಗೆ ಮಣಿಯದ ವರಿಷ್ಠರು ಮೊದಲ ಹಂತದಲ್ಲಿ ಅವರ ಬೆಂಬಲಿಗರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿಯವರ ರಾಜಕೀಯ ಕಾರ‍್ಯದರ್ಶಿಯಾಗಿದ್ದ ಯಡಿಯೂರಪ್ಪ ಬೆಂಬಲಿಗರಾಗಿದ್ದ ಪುಟ್ಟಸ್ವಾಮಿ ಅವರನ್ನು ನಿನ್ನೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸೂಚಕರಾದ ೧೦ ಬಿಜೆಪಿ ಶಾಸಕರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ಇವರೆಲ್ಲರೂ ಯಡಿಯೂರಪ್ಪರ ಕಟ್ಟಾ ಬೆಂಬಲಿಗ ಶಾಸಕರು. ಇವರಿಗೆ ಈಗಾಗಲೇ ಶೋಕಾಸ್ ನೋಟೀಸ್ ನೀಡಿರುವುದಲ್ಲದೆ ಅವರಿಂದ ಉತ್ತರ ಬರುತ್ತಿದ್ದಂತೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಸದಸ್ಯತ್ವದಿಂದಲೇ ಅನರ್ಹಗೊಳಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆದಿದೆ. ಜತೆಗೆ ಬಹಿರಂಗವಾಗಿ ಪಕ್ಷದ ವಿರುದ್ಧ ಹೇಳಿಕೆ ನೀಡುವಂತಹ ಶಾಸಕರು ಮತ್ತು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲು ಅನುಮತಿ ನೀಡುವಂತೆ ವರಿಷ್ಠರನ್ನು ರಾಜ್ಯಘಟಕ ಕೋರಿದೆ. ರಾಜ್ಯಾಧ್ಯಕ್ಷ ಈಶ್ವರಪ್ಪ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರಿಗೆ ಪತ ಬರೆದು ಸಚಿವ ರೇಣುಕಾಚಾರ್ಯ ಶಾಸಕರಾದ ಹರೀಶ್ ಮತ್ತು ಸುರೇಶ್ ಗೌಡರ ವಿರುದ್ಧ ಕ್ರಮ ಜರಗಿಸಲು ಅನುಮತಿ ಕೋರಿದ್ದಾರೆ. ಅವರಿಂದ ಉತ್ತರ ಬರುತ್ತಿದ್ದಂತೆ ಈ ಮೂವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಯಡಿಯೂರಪ್ಪರ ಬೆಂಬಲಿಗರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ನಂತರ ಯಡಿಯೂರಪ್ಪ ಅವರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಅವರ ಬಣದಲ್ಲಿರುವ ಶಾಸಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನು ಈ ಬಣ ಆರಂಭಿಸಿದೆ.

ಜಾತಿ ರಾಜಕೀಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಬಿಕ್ಕಟ್ಟು ಜಾತಿ ರಾಜಕೀಯದ ಸ್ವರೂಪ ಪಡೆದಿದ್ದು ಒಕ್ಕಲಿಗ ಹಾಗೂ ಲಿಂಗಾಯತ ಸ್ವಾಮಿಜಿಗಳು ತಮ್ಮ-ತಮ್ಮ ಜಾತಿ ನಾಯಕರ ಪರ ಹೋರಾಟಕ್ಕೆ ಇಳಿದಿದ್ದಾರೆ.
ಒಕ್ಕಲಿಗ ಸಮುದಾಯದ ಸ್ವಾಮಿಗಳು ಡಿ.ವಿ.ಸದಾನಂದ ಗೌಡರ ಬೆಂಬಲಕ್ಕೆ ನಿಂತಿದ್ದು, ಮಂಗಳವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತ್ಯೇಕ ಪ್ರತಿಕ್ರಿಯೆ ನೀಡಿರುವ ಲಿಂಗಾಯತ ಸ್ವಾಮಿಗಳು ಯಡಿಯೂರಪ್ಪರಿಗೆ ಅಧಿಕಾರ ಒದಗಿಸುವಂತೆ ಒತ್ತಾಯಿಸಲು ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ. 
ಯಡಿಯೂರಪ್ಪ ಬಣದಲ್ಲಿರುವ ಒಕ್ಕಲಿಗ ಸಮುದಾಯದ ಶಾಸಕರು ರೆಸಾರ್ಟ್‌ನಿಂದ ಹಿಂದಿರುಗದಿದ್ದರೆ ಇಂತಹ ಶಾಸಕರ ನಿವಾಸದ ಎದುರು ಸಮುದಾಯದ ಜನರೊಂದಿಗೆ ಧರಣಿ ನಡೆಸುವುದಾಗಿ ಒಕ್ಕಲಿಗ ಸಂಘಟನೆಗಳ ನಾಯಕರು ಎಚ್ಚರಿಸಿದ್ದಾರೆ. ಒಕ್ಕಲಿಗ ಸಂಘಟನೆಯ ನಾಯಕರಾದ ನೀಲಕಂಠೆ ಗೌಡ, ದೇವೇಗೌಡ, ಕಾಳೇಗೌಡ, ರಮೇಶ್ ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಬಳಿಕ ಪಕ್ಷದ ರಾಜ್ಯ ಅಧ್ಯಕ್ಷ ಈಶ್ವರಪ್ಪರನ್ನೂ ಭೇಟಿಯಾಗಿರುವ ಒಕ್ಕಲಿಗರ ನಿಯೋಗ ಸದಾನಂದ ಗೌಡರನ್ನು ಅಧಿಕಾರದಿಂದ ಇಳಿಸಲೇಬಾರದು. ಬಿಜೆಪಿಯ ಹೈಕಮಾಂಡ್‌ಗೆ ಇಲ್ಲಿಯ ಸ್ಥಿತಿಯ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದೆ. ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಅಚಲ ಗೊಳಿಸುವ ಉದ್ದೇಶದ ಮಹತ್ವದ ಒಕ್ಕಲಿಗ ನಾಯಕರ ಸಭೆ ಇಂದು ನಡೆಯಲಿದ್ದು, ಈ ಸಭೆಯಲ್ಲಿ ಒಕ್ಕಲಿಗ ಮಹಾಗುರು ಬಾಲಗಂಗಾಧರನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂಬುದು ಈ ಸಂದರ್ಭದಲ್ಲಿ ಮಹತ್ವದ ಅಂಶ ಎನಿಸಿದೆ. ಒಕ್ಕಲಿಗರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ನಿನ್ನೆ ಬಾಲಗಂಗಾಧರನಾಥ ಸ್ವಾಮಿಜಿ ಆರೋಪಿಸಿದ್ದರು.

ರಾಜ್ಯಸಭೆ ಚುನಾವಣೆ: ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ವರಿಷ್ಠರಿಗೆ ಸೆಡ್ಡು ಹೊಡೆದ ಯಡ್ಡಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯ ಸಭಾ ಚುನಾ ವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ವಿರುದ್ಧವಾಗಿ ಯಡಿ ಯೂರಪ್ಪ ತಮ್ಮ ಆಪ್ತ ಬಿ.ಜೆ.ಪುಟ್ಟ ಸ್ವಾಮಿ ಅವರನ್ನು ಕಣಕ್ಕಿಳಿಸುವ ಮೂಲಕ ಸೆಡ್ಡು ಹೊಡೆದಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ರಾಮಕೃಷ್ಣ ಮತ್ತು ಬಸವರಾಜ ಪಾಟೀಲ್ ಸೇಡಂ ಅವರು ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಬಿ.ಜೆ. ಪುಟ್ಟ ಸ್ವಾಮಿ ಏಕಾಂಗಿಯಾಗಿ ಬಂದು ನಾನು ಬಿಜೆಪಿಯ ಮೂರನೇ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದು ಚುನಾ ವಣಾ ಕಣ ರಂಗೇರಿದೆ.
ಪುಟ್ಟಸ್ವಾಮಿ ನಾಮಪತ್ರಕ್ಕೆ ಬಿಜೆಪಿಯ ೧೦ ಶಾಸಕರು ಸೂಚಕರಾಗಿ ಸಹಿ ಮಾಡಿದ್ದು ಒಂದೊಮ್ಮೆ ಪಕ್ಷದ ಬಿ ಫಾರಂ ಅವರಿಗೆ ದೊರೆಯದಿದ್ದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯಲಿದ್ದು, ಆಗ ಚುನಾವಣೆ ಅನಿವಾರ್ಯ. ಜತೆಗೆ ಬಿಜೆಪಿಯ ಬಣಗಳ ಶಕ್ತಿ ಪ್ರದರ್ಶನಕ್ಕೆ ಅಖಾಡ ಸಜ್ಜಾಗು ವುದಂತೂ ಖಂಡಿತ.
ನಾಯಕತ್ವಕ್ಕಾಗಿ ಪಟ್ಟು ಹಿಡಿದಿರುವ ಯಡಿಯೂರಪ್ಪ ಬಜೆಟ್ ಅಷ್ಟೇ ಆಲ್ಲದೆ ರಾಜ್ಯಸಭೆ ಚುನಾವಣೆಯಲ್ಲೂ ಪಕ್ಷದ ವರಿಷ್ಠರಿಗೆ ನುಂಗಲಾರದ ತುತ್ತಾಗಿದ್ದು ಇದೀಗ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುವುದೋ ಎಂಬ ಕುತೂಹಲ ಮೂಡಿಸಿದೆ. ಬಿಜೆಪಿಯ ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸವರಾಜ ಪಾಟೀಲ್ ಸೇಡಂ ಅವರ ಪರ ಯಡಿಯೂ ರಪ್ಪ ಅವರಿಗೆ ಒಲವು ಇದ್ದು ಅಡ್ವಾಣಿ ಶಿಫಾರಸ್ಸಿನ ಮೇರೆಗೆ ಮೊದಲ ಅಭ್ಯರ್ಥಿ ಯಾಗಿರುವ ರಾಮಕೃಷ್ಣ ಅವರ ಬಗ್ಗೆ ಅಸಮಾಧಾನ ಇರುವ ಕಾರಣ ಇದೀಗ ತಮ್ಮ ಆಪ್ತ ಪುಟ್ಟಸ್ವಾಮಿ ಕಣಕ್ಕಿಳಿಸಿದ್ದು ಚುನಾವಣೆ ಹಂತಕ್ಕೆ ಹೋದರೆ ಬಿಜೆಪಿಯ ಅಧಿಕೃತ ಮೊದಲ ಅಭ್ಯರ್ಥಿಯನ್ನೇ ಸೋಲಿಸಿ ಕೇಂದ್ರದ ವರಿಷ್ಠರಿಗೆ ಬುದ್ಧಿ ಕಲಿಸುವ ತಂತ್ರ ಯಡಿಯೂರಪ್ಪ ಅವರದ್ದಾಗಿದೆ.
ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮಾರ್ಚ್ ೩೦ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ನಿನ್ನೆ ಮೊದಲಿಗೆ ರಾಜ್ಯಸಭೆಯ ಉಪಸಭಾಪತಿ ಕೆ.ರೆಹಮಾನ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಅಭ್ಯರ್ಥಿಗಳಾಗಿ ಬಸವರಾಜಪಾಟೀಲ್ ಸೇಡಂ ಹಾಗೂ ರಾಮಕೃಷ್ಣ ನಾಮಪತ್ರ ಸಲ್ಲಿಸಿದರು.
ಆ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ ಜತೆಗೂಡಿ ಬಂದ ಉದ್ಯಮಿ ಹಾಲಿ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಆ ನಂತರ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ ಪುಟ್ಟ ಸ್ವಾಮಿ, ನಾಮಪತ್ರ ಸಲ್ಲಿಸಿದ್ದರು. ಉಳಿದಂತೆ ವೆಂಕಟೇಶಗೌಡ, ವೆಂಕಟೇಶ್ ಎಂಬುವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಅವರ ನಾಮಪತ್ರಕ್ಕೆ ಸೂಚಕರ ಹೆಸರು ಇರಲಿಲ್ಲ. ಆದರೆ, ಪುಟ್ಟಸ್ವಾಮಿ ನಾಮಪತ್ರಕ್ಕೆ ಯಡಿಯೂರಪ್ಪ ಬೆಂಬಲಿಗ ಸದಸ್ಯರಾದ ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ, ಜಗದೀಶ್ ಮಟ್ಟೆಗುಡ್ಡ, ಕರಡಿ ಸಂಗಣ್ಣ, ಡಾ. ಹೇಮಚಂದ್ರ ಸಾಗರ್, ದುರ್ಯೋಧನ ಐಹೋಳೆ, ಲಕ್ಷ್ಮಣ್ ಸವದಿ, ರಾಮಣ್ಣ ಲಮಾಣಿ, ಚಿಕ್ಕನಗೌಡ, ಸುರೇಶ್ ಮಾರಿಹಾಳ್ ಹಾಗೂ ಜಿ. ಶಿವಣ್ಣ ಸಹಿ ಹಾಕಿದ್ದಾರೆ.

‘ಸಿ.ಎಂ. ಸ್ಥಾನ ನೀಡದಿದ್ದರೆ ಪ್ರತ್ಯೇಕ ಶಾಸಕಾಂಗ ಸಭೆ’

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಸದಾನಂದಗೌಡರನ್ನು ಅಧಿಕಾರದಿಂದ ಕೆಳಗಿಳಿಸಿ, ತಮಗೆ ಮರಳಿ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಪ್ರತ್ಯೇಕ ಶಾಸಕಾಂಗ ಸಭೆ ಕರೆದು ಹೊಸ ನಾಯಕನ ಆಯ್ಕೆ ಮಾಡಲಾಗುವುದು ಎಂದು ಯಡಿಯೂರಪ್ಪ ಬಿಜೆಪಿಯ ದೆಹಲಿ ವರಿಷ್ಠರಿಗೆ ಬೆದರಿಕೆಯೊಡ್ಡಿದ್ದಾರೆ.
ಇಂದು ಸಂಜೆಯೊಳಗೆ ತಮ್ಮ ನಿರ್ಧಾರವನ್ನು ಪ್ರಕಟಿಸದಿದ್ದರೆ ಶಾಸಕಾಂಗ ಸಭೆ ನಡೆಸಿ, ನಾಯಕ ನಾನೇ ಎಂದು ಘೋಷಿಸಿಕೊಳ್ಳುವುದರ ಜೊತೆ ರಾಜ್ಯಪಾಲರಿಗೂ ತಮಗಿರುವ ಬೆಂಬಲ ಪತ್ರವನ್ನು ನೀಡುವುದಾಗಿ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಈ ನಿರ್ಧಾರದಿಂದ ರಾಜ್ಯ ಬಿಜೆಪಿ ವಿಭಜನೆಯತ್ತ ಸಾಗಿದೆ. ಒಂದೆಡೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ ಮಾಡುವು ದರ ಜೊತೆಗೆ ರಾಜ್ಯ ಸಭಾ ಚುನಾವಣೆಯಲ್ಲೂ ತಮ್ಮ ಅಭ್ಯರ್ಥಿಯನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದಾರೆ. ಯಡಿಯೂರಪ್ಪ ಅವರ ಬೆದರಿಕೆಗೆ ಮಣಿಯದ ಪಕ್ಷದ ವರಿಷ್ಠರು ಸದ್ಯಕ್ಕೆ ಸದಾನಂದಗೌಡರ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿ ಸುವುದರ ಜೊತೆಗೆ ಯಡಿಯೂರಪ್ಪನವರಿಗೆ ಯಾವುದೇ ಅಧಿಕಾರ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಾಗಪುರದಲ್ಲೂ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಏಕ ಕಾಲಕ್ಕೆ ಇಂತಹ ಹೇಳಿಕೆಯನ್ನು ನೀಡುವು ದರ ಮೂಲಕ ಯಡಿಯೂರಪ್ಪ ಅವರನ್ನು ಕೆರಳಿಸಿದ್ದಾರೆ. ದೆಹಲಿಯಲ್ಲಿ ತಮ್ಮ ವಿರುದ್ಧ ಹೇಳಿಕೆ ಬರುತ್ತಿದ್ದಂತೆ ಯಡಿಯೂರಪ್ಪ ನಗರದ ಹೊರವಲಯದ ರೆಸಾರ್ಟ್‌ನಲ್ಲಿ ತಮ್ಮ ಬೆಂಬಲಿಗರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ, ಬೆಂಬಲಿಗರ ಸಂಖ್ಯೆಯನ್ನು ೮೦ಕ್ಕೆ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಇದೇ ಕಾಲಕ್ಕೆ ಯಡಿಯೂರಪ್ಪ ಬಣದ ಗಾತ್ರವನ್ನು ಕುಗ್ಗಿಸಿ ಇಪ್ಪತ್ತೈದು ಮೂವತ್ತು ಮಂದಿ ಶಾಸಕರೊಂದಿಗೆ ಅವರು ಹೊರಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಬಿಜೆಪಿ ನಾಯಕರೂ ಪ್ರತಿ ತಂತ್ರ ರೂಪಿಸಿ, ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ಉಳಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಗಡ್ಕರಿ ಹೇಳಿಕೆಗೂ ಮುನ್ನ ಸಂಧಾನದ ಮೂಲಕ ಯಡಿಯೂರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಲ್ಲದೆ ಮಾತುಕತೆಗೆ ಆಹ್ವಾನ ನೀಡಿದ್ದರು. ರಾಷ್ಟ್ರೀಯ ಅಧ್ಯಕ್ಷರ ಆಹ್ವಾನವನ್ನು ನಯವಾಗಿ ತಳ್ಳಿ ಹಾಕಿದ ಯಡಿಯೂರಪ್ಪ ನಾನೊಬ್ಬನೇ ನಿಮ್ಮನ್ನು ಭೇಟಿಯಾಗಲು ಬರುವುದಿಲ್ಲ. ಸಮಯ ನೀಡಿ, ನಮ್ಮೆಲ್ಲ ೭೦ ಶಾಸಕರ ಜೊತೆಗೂಡಿಯೇ ಬರುತ್ತೇನೆ. ನಂತರ ನೀವು ಸಾರ್ವಜ ನಿಕವಾಗಿ ಒಂದು ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿ. ಒಳಗೊಂದು ಹೊರಗೊಂದು ಬೇಡ ಎಂದು ಕಡ್ಡಿ ಮುರಿದಂತೆ ತಿಳಿಸಿದರು.
ಇಂದು ಸಂಜೆ ವೇಳೆಗೆ ತಮ್ಮ ನಿರ್ಧಾರ ಪ್ರಕಟಿಸಿ, ನಿಮಗೆ ಶಾಸಕಾಂಗ ಸಭೆ ಕರೆಯುವಂತೆ ೭೦ ಶಾಸಕರ ಸಹಿಯುಳ್ಳ ಪತ್ರವನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ ಮರಳಿ ಸಿಎಂ ಆಗುವ ವಿಷಯದಲ್ಲಿ ಕಟ್ಟು ನಿಟ್ಟಿನ ಧೋರಣೆ ತಳೆದಿರುವ ಯಡಿಯೂರಪ್ಪ ತುರ್ತು ಶಾಸಕಾಂಗ ಸಭೆ ನಡೆಸಿ ನೂತನ ನಾಯಕನನ್ನು ಆಯ್ಕೆ ಮಾಡಬೇಕು,ಇಲ್ಲವೇ ನಾವೇ ಪ್ರತ್ಯೇಕ ಶಾಸಕಾಂಗ ಸಭೆ ನಡೆಸುತ್ತೇವೆ ಎಂದು ಬೆದರಿಕೆಯೊಡ್ಡಿದರು.

ಬಿಜೆಪಿಯವರೇಕೆ ಸುಮ್ಮನಿದ್ದಾರೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಅಲ್ಲಿ ಯಡಿಯೂರಪ್ಪನವರು ಇಡೀ ಸರಕಾರ ವನ್ನೇ ಹೈಜಾಕ್ ಮಾಡುತ್ತಿರುವಾಗ ಕರಾವಳಿಯ ಸಂಸದ ರಾಗಲೀ, ಶಾಸಕರಾಗಲೀ ಯಾಕೆ ಡಿ.ವಿ. ಸದಾನಂದ ಗೌಡರ ಪರವಾಗಿ ಮಾತನಾಡುತ್ತಿಲ್ಲ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಶ್ನಿಸಿದೆ. ಸುಳ್ಯದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಎಂ.ವೆಂಕಪ್ಪ ಗೌಡರು, ಸದಾನಂದ ಗೌಡರನ್ನು ಕೆಳಗಿಳಿಸುವ ಹುನ್ನಾರ ನಡೆಯುತ್ತಿದೆ. ಬಿಜೆಪಿಯ ಬೆಳವಣಿಗೆಗಳನ್ನೆಲ್ಲ ನೋಡುತ್ತಿರುವ ಜನ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದು ನಿಶ್ಚಿತ ಎಂದರು. ಸದಾನಂದ ಗೌಡರು ಮುಖ್ಯಮಂತ್ರಿಯಾದಾಗ ಇಲ್ಲಿನವರು ಎಂದು ಹೆಮ್ಮೆಪಟ್ಟೆವು. ಆದರೆ ಇಲ್ಲಿಗೆ ಯಾವುದೇ ಅನುದಾನ ನೀಡುವಲ್ಲಿ ಅವರು ವಿಫಲರಾಗಿದ್ದಾರೆ. ಆದರೂ ಭ್ರಷ್ಟಾಚಾರಿ ಯಡಿಯೂರಪ್ಪ ನವರಿಗಿಂತ ಸದಾನಂದ ಗೌಡರು ಆಗಬಹುದು ಎಂದವರು ಹೇಳಿದರು. ಶಾಸಕ ಅಂಗಾರರು ಕೋಟಿ ಕೋಟಿ ರೂ.ಗಳ ಅನುದಾನ ಘೋಷಣೆ ಮಾಡುತ್ತಿದ್ದಾರೆ. ಆದರೆ ರಸ್ತೆ ಡಾಮರೀಕರಣಕ್ಕೆಂದು ಹಾಕಿದ ಜಲ್ಲಿಯೂ ವಾಪಾಸ್ ಹೋಗುತ್ತಿದೆ. ಹಾಗಾದರೆ ಶಾಸಕರ ಹಣ ಎಲ್ಲಿದೆ ಎಂದು ವೆಂಕಪ್ಪ ಗೌಡರು ಪ್ರಶ್ನಿಸಿದರು. ಪಿ.ಎಸ್.ಗಂಗಾಧರ್, ಪರಶುರಾಮ ಚಿಲ್ತಡ್ಕ, ದಿನೇಶ್ ಅಂಬೆಕಲ್ಲು, ಸುರೇಶ್ ಎಂ.ಎಚ್., ಶಿವರಾಮ ರೈ, ಎನ್.ಎಸ್. ವೆಂಕಪ್ಪ ಗೌಡ, ಬೆಟ್ಟ ಜಯರಾಮ ಭಟ್, ಶೀನ ಪಾಲಡ್ಕ ಮೊದಲಾದವರು ಇದ್ದರು.

ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಾಯ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ಫಲವಾಗಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಕ್ಷಣವೇ ಮಧ್ಯೆ ಪ್ರವೇಶಿಸಿ ವಿಧಾನಸಭೆಯನ್ನು ವಿಸರ್ಜಿಸುವಂತೆ ಪ್ರದೇಶ ಕಾಂಗ್ರೆಸ್ ಒತ್ತಾಯಿಸಿದೆ.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಕೆ.ರೆಹಮಾನ್ ಖಾನ್ ಅವರು ತಮ್ಮ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸುದ್ಧಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.
ತಮ್ಮನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿ ಯಡಿಯೂರಪ್ಪ ಅವರು ಐವತ್ತೆಂಟು ಶಾಸಕರ ಜತೆಗೂಡಿ ಗೋಲ್ಡನ್ ಪಾಮ್ ರೆಸಾರ್ಟ್‌ಗೆ ಹೋಗಿದ್ದಾರೆ. ತಮಗೆ ಅಧಿಕಾರ ನೀಡದಿದ್ದರೆ ಸರ್ಕಾರ ಬೀಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಗೆ ಬಹುಮತ ಎಂಬುದೇ ಇಲ್ಲ. ಬಹುಮತವೇ ಇಲ್ಲ ಎಂದ ಮೇಲೆ ಸರ್ಕಾರ ಅಸ್ತಿತ್ವದಲ್ಲಿರುವುದು ಹೇಗೆ ಎಂದೂ ಅವರು ಪ್ರಶ್ನಿಸಿದರು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)