ಸಿನಿಮಾ ನಟ-ನಟಿಯರನ್ನು ನೋಡಿ ಮತ ಹಾಕುತ್ತಾರೆಯೇ?

Posted by JAYAKIRANA Kirana on Saturday, 17 March 2012 | 0 comments | Leave a comment...


ಉಡುಪಿ-ಚಿಕ್ಕಮಗಳೂರಿನಲ್ಲಿ ಉಪ ಲೋಕಸಭಾ ಚುನಾವಣೆಯ ಕಾವು ದಿನ ದಿಂದ ದಿನಕ್ಕೆ ಏರುತ್ತಿದೆ. ಬಿಜೆಪಿ ಅಭ್ಯರ್ಥಿ ಹಾಗೂ ನಾಯಕರು ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್-ಜೆಡಿಎಸ್ ಪಕ್ಷ ರೋಡ್ ಶೋ ಮೊರೆ ಹೋಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಿನಿಮಾ ರಂಗದ ಖ್ಯಾತ ನಟಿ-ನಟರನ್ನು ತನ್ನತ್ತ ಸೆಳೆದಿದ್ದು ಭರ್ಜರಿ ಪ್ರಚಾರ ನಡೆಸುತ್ತಿದೆ.
ಇಲ್ಲಿ ಮತದಾರರನ್ನು ಓಲೈಸುವಲ್ಲಿ ರಾಜಕೀಯ ಪಕ್ಷಗಳು ಎಷ್ಟು ಯಶಸ್ವಿ ಯಾಗಿವೆ ಎನ್ನುವುದು ಚುನಾವಣೆಯ ಫಲಿತಾಂಶ ಬಂದ ಬಳಿಕವಷ್ಟೇ ತಿಳಿ ಯಲು ಸಾಧ್ಯ. ಆದರೆ ಸಿನಿಮಾ ನಟ-ನಟಿಯರನ್ನು ನೋಡಿ ಮತದಾರರು ಅಮೂಲ್ಯವಾದ ಮತ ಚಲಾಯಿಸುತ್ತಾ ರೆಯೇ ಎನ್ನುವುದು ಸದ್ಯದ ಪ್ರಶ್ನೆ. ಯಾಕೆಂದರೆ ಸಿನಿಮಾ ನಟ-ನಟಿಯರ ಚರಿತ್ರೆಯನ್ನು ಗಮನಿಸಿದರೆ ಯಾರೂ ಸಭ್ಯರೆಂದು ಅನಿಸುವುದಿಲ್ಲ. ಬಣ್ಣದ ಬದು ಕಿನ ಮಹಿಮೆಯಿಂದ ಎಲ್ಲರೂ ಒಂದಿ ಲ್ಲೊಂದು ಕಾರಣಕ್ಕೆ ಕೆಟ್ಟ ಹೆಸರನ್ನು ಪಡೆದಿರುತ್ತಾರೆ. ಇವರ ಸಿನಿಮಾಗಳನ್ನು ನೋಡಿ ಆನಂದಿಸುವ ಜನರು ಇವರು ಪ್ರಚಾರಕ್ಕೆ ಬಂದ ಮಾತ್ರಕ್ಕೆ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆಯೇ?
ಶಂಕರ್, ತೆಂಕನಿಡಿಯೂರು

ತೀರದ ಯಡ್ಡಿಯ ಅಧಿಕಾರ ದಾಹ

Posted by JAYAKIRANA Kirana on | 0 comments | Leave a comment...


ಡಿ.ವಿ.ಸದಾನಂದ ಗೌಡರು ಮುಖ್ಯ ಮಂತ್ರಿಯಾಗಿ ಈಗಾಗಲೇ ಆರೇಳು ತಿಂಗಳು ಕಳೆದಿವೆ. ಯಡಿಯೂರಪ್ಪರ ವರಿಂದಲೇ ಸದಾನಂದ ಗೌಡರಿಗೆ ಮುಖ್ಯ ಮಂತ್ರಿ ಸ್ಥಾನ ಲಭ್ಯವಾಗಿರುವುದು ಎಲ್ಲ ರಿಗೂ ತಿಳಿದಿರುವ ವಿಚಾರ. ಮೊದ ಲಿಗೆ ತ್ಯಾಗಮೂರ್ತಿಯಂತೆ ವರ್ತಿಸುತ್ತಿದ್ದ ಯಡಿಯೂರಪ್ಪ ದಿನಕಳೆದಂತೆ ಕಳೆದುಕೊಂಡ ಅಧಿಕಾರದ ಬಗ್ಗೆ ಚಿಂತಿತರಾಗಿ ಪಕ್ಷದ ಬಗ್ಗೆ ಕಿಂಚಿತ್ತೂ ಅಭಿಮಾನ ತೋರದೆ ತಾತ್ಸಾರದ ಮಾತುಗಳನ್ನಾಡುತ್ತಿದ್ದಾರೆ. ಅವರ ಬೆಂಬ ಲಿಗರು ಕೂಡಾ ಅವರನ್ನೇ ಅನುಸರಿಸುತ್ತಾ ತಮ್ಮ ಪಕ್ಷಕ್ಕೇ ಧಿಕ್ಕಾರ ಕೂಗುತ್ತಿದ್ದಾರೆ. ಅತಿಯಾದ ಅಧಿಕಾರ ದಾಹ ಯಡಿ ಯೂರಪ್ಪರನ್ನು ಈ ರೀತಿ ಆಡಿಸುತ್ತಿದೆ ಎಂಬುದು ಎಲ್ಲರೂ ತಿಳಿದಿರುವ ವಿಷಯವಾಗಿದೆ. ಆದ್ದರಿಂದ ಇನ್ನು ಮುಂದಾ ದರೂ ಯಡಿಯೂರಪ್ಪನವರು ಅಧಿಕಾರ ದಾಹವನ್ನು ಬಿಟ್ಟು ಪಕ್ಷದ ಏಳಿಗೆಗಾಗಿ ದುಡಿಯಲಿ ಎಂಬುದೇ ನನ್ನ ಅನಿಸಿಕೆ ಯಾಗಿದೆ.
ಆರಿಸ್ ಕೊಡಿನೀರು, ಪುತ್ತೂರು

ಕಾದಿದೆ ಗಂಡಾಂತರ!

Posted by JAYAKIRANA Kirana on | 0 comments | Leave a comment...


ಮಂಗಳೂರು ನಗರದ ಹೃದಯ ಭಾಗವಾದ ಪುರಭ ವನ ಬಳಿಯ ಯು.ಪಿ.ಮಲ್ಯ ಚತುಷ್ಪಥ ರಸ್ತೆಯ ಎರಡೂ ಬದಿಯಲ್ಲಿ ಹಂಪ್ಸ್ ಅನ್ನು ಕಾಟಾಚಾರಕ್ಕಾಗಿ ಅಳವಡಿಸಲಾ ಗಿದೆ. ಈ ರಸ್ತೆಯ ಇಕ್ಕೆಲಗಳಿಂದ ಸಾವಿರಾರು ವಿದ್ಯಾರ್ಥಿ ಗಳು, ರೈಲ್ವೇ ಪ್ರಯಾಣಿಕರು, ವೃದ್ಧರು, ಅಂಗವಿಕಲರು ರಸ್ತೆ ದಾಟುವಾಗ ಹಂಪ್ಸ್‌ನಲ್ಲಿ ವಾಹನಗಳು ನಿಧಾನವಾಗುತ್ತದೆ ಎಂದು ಭಾವಿಸಿದರೆ ಅದು ತಪ್ಪು. ವಾಹನಗಳು ಮಾಮೂ ಲಿಯಾಗಿ ಸಂಚರಿಸುವಂತೆ ಸಂಚರಿಸುತ್ತವೆ. ಇದರಿಂದಾಗಿ ಅಪಘಾತಗಳು ತಪ್ಪಿದ್ದಲ್ಲ. ಮೋಟಾರು ಸೈಕಲ್ ಕೂಡಾ ಯಾವುದೇ ಅಳುಕಿಲ್ಲದೆ ವೇಗವಾಗಿ ಸಾಗುತ್ತಿದ್ದು, ಇದರಿಂದ ರಸ್ತೆ ದಾಟುವವರಿಗೆ ತುಂಬಾ ತೊಂದರೆ ಆಗುತ್ತಿದೆ. ಸಮಸ್ಯೆ ಯನ್ನು ಸಂಬಂಧಪಟ್ಟವರು ಕಂಡೂ ಕಾಣದಂತಿದ್ದಾರೆ. ಇನ್ನಾ ದರೂ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಂಡು ಇಲ್ಲಿ ಪ್ರಯೋಜ ನಕಾರಿಯಾಗುವ ರೀತಿಯಲ್ಲಿ ಹಂಪ್ಸ್ ನಿರ್ಮಿಸಲಿ.
ಓರ್ವ ವಿದ್ಯಾರ್ಥಿ,  ಕೆನರಾ ಹೈಸ್ಕೂಲ್-ಡೊಂಗರಕೇರಿ

ಕೋಸೌವೇ ಪ್ರತಿಭಟನೆ ಕಾಂಗ್ರೆಸ್ ಪ್ರೇರಿತ

Posted by JAYAKIRANA Kirana on | 0 comments | Leave a comment...


ಪಕ್ಷಾತೀತವಾಗಿ ವರ್ತಿಸಬೇಕಾದ ಕೋಮು ಸೌಹಾರ್ದ ವೇದಿಕೆಯ ಇತ್ತೀಚೆ ಗಿನ ನಡೆಯೇ ವಿಚಿತ್ರವಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಪರವಾಗಿ ಕೋಮು ಸೌಹಾರ್ದ ವೇದಿಕೆ ಪ್ರಚಾರಕ್ಕೆ ನಿಂತಂತೆ ಕಾಣು ತ್ತಿದೆ. ತನ್ನ ಸಂಘಟನೆಯ ಹಣದಲ್ಲಿ ಬಿಜೆ ಪಿಗೆ ವಿರುದ್ದವಾಗಿ ಜಾಹೀರಾತು ನೀಡುತ್ತಿ ರುವುದನ್ನು ಗಮನಿಸಿದರೆ ಇದು ಸ್ಪಷ್ಟವಾಗು ತ್ತದೆ. ಸುನಿಲ್ ಕುಮಾರ್ ಅಲ್ಪಸಂಖ್ಯಾತರ ಬಗ್ಗೆ ಹೇಳಿದ ಮಾತನ್ನೇ ಅಸ್ತ್ರವಾಗಿ ಕೋಮು ಸೌಹಾರ್ದ ಸಂಘಟನೆಯ ಮೂಲಕ ಕಾಂಗ್ರೆಸ್ ಉಪಯೋಗಿಸುತ್ತಿರುವುದು ಆತಂಕದ ವಿಷಯ.
ಬಿಜೆಪಿ ಹಿಂದಿನಿಂದಲೂ ಹಿಂದುತ್ವದ ಅಜೆಂಡಾದ ಮೇಲೆ ಬೆಳೆದ ಪಕ್ಷ. ಹೀಗಿರು ವಾಗ ಅವರಿಂದ ಇಂತಹ ಮಾತುಗಳು ಸಾಮಾನ್ಯ. ಈ ಹಿಂದೆಯೂ ಇದೇ ರೀತಿಯ ಮಾತುಗಳು ಬಂದಿವೆ. ಹೀಗಿರುವಾಗ ಕೋಸೌ ವೇದಿಕೆ ಈಗ ಎದ್ದು ನಿಲ್ಲುವ ಅವಶ್ಯಕತೆ ಏನಿತ್ತು? ಇದನ್ನೆಲ್ಲಾ ಸ್ಪಷ್ಟವಾಗಿ ಗಮನಿಸಿದರೆ ಇಲ್ಲಿ ಕೈ ಪಾಳಯದ ಹಣದ ಮೂಟೆ ಕೆಲಸ ಮಾಡಿರುವುದು ತಿಳಿಯುತ್ತದೆ. ಹಿಂದಿ ನಿಂದಲೂ ಕೋಮು ಸೌಹಾರ್ದ ವೇದಿಕೆ ತನ್ನ ನೈಜ ಉದ್ದೇಶಕ್ಕಾಗಿ ಹೋರಾಟ ನಡೆಸಿದ ಉದಾಹರಣೆಗಳೇ ಇಲ್ಲ. ಕಲ್ಲಡ್ಕ ಭಟ್ಟರು ಕೋಮು ಪ್ರಚೋದನಕಾರಿ ಭಾಷಣ ಮಾಡಿ ದ್ದಾರೆ ಎಂದಾಗಲೂ ಇವರಿಂದ ಈ ಮಟ್ಟಿನ ಪ್ರತಿಭಟನೆ ವ್ಯಕ್ತವಾಗಿಲ್ಲ. ಹೀಗಿರುವಾಗ ಇಂದು ಇವರು ಪ್ರತಿಭಟಿಸುತ್ತಿರುವುದು ಕಾಂಗ್ರೆಸ್‌ನ ಹಣದ ಪ್ರಭಾವದಿಂದ ಎಂದರೆ ಖಂಡಿತಾ ತಪ್ಪಾಗದು.
ಬಿಜೆಪಿ ಅಲ್ಪ ಸಂಖ್ಯಾತ ವಿರೋಧಿ ಎನ್ನುವ ಕೋಸೌವೇಯ ಮುಖಂಡರು ಕಾಂಗ್ರೆಸ್ ಅಲ್ಪಸಂಖ್ಯಾತರಿಗಾಗಿ ಯಾವ ಕೆಲಸ ಮಾಡಿದೆ ಎನ್ನುವುದನ್ನು ತಿಳಿದು ಕೊಳು ವುದು ಒಳಿತು. ಇನ್ನೊಂದು ಅಂಶವನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬೇಕು. ಕೋಮು ಸೌಹಾರ್ದ ವೇದಿಕೆ ಇಲ್ಲಿಯ ತನಕ ಇಷ್ಟು ಪ್ರಮಾಣದ ಹಣವನ್ನು ಪ್ರತಿಭಟನಾ ಜಾಹೀ ರಾತಿಗಾಗಿ ವ್ಯಯಿಸಿದ್ದಿಲ್ಲ. ಇಷ್ಟೆಲ್ಲಾ ಖರ್ಚು ಮಾಡಲು ಇವರ ಬಳಿ ಹಣ ಇದೆಯೋ ಇಲ್ಲವೋ? ಆದರೆ ಇಂದು ಇವರು ಖರ್ಚು ಮಾಡುತ್ತಿರುವ ಹಣದ ಮೂಲ ಕಾಂಗ್ರೆಸ್ ಎನ್ನುವುದು ಸ್ಪಷ್ಟ. ಬಿಜೆಪಿ ಅಭ್ಯರ್ಥಿ ನೇರವಾಗಿ ತನ್ನ ಹೇಳಿಕೆಯನ್ನು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ತಾಕತ್ತಿದ್ದರೆ ನಮಗೆ ಹಿಂದುಗಳ ಮತ ಬೇಡವೆನ್ನಲಿ. ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರು ಒಂದು ಧರ್ಮದ, ಪಕ್ಷದ ಪರವಾಗಿ ಮಾತ ನಾಡಿದರೆ ಅದೇ ಅವರಿಗೆ ತಿರುಗಿ ಬಿದ್ದೀತು.
ಲೋಕೇಶ್ ರೈ, ಕುಂದಾಪುರ

ಉಪ್ಪಿನಂಗಡಿ ರಸ್ತೆ ದ್ವಿಪಥಗೊಳ್ಳಲಿ

Posted by JAYAKIRANA Kirana on | 0 comments | Leave a comment...


ಉಪ್ಪಿನಂಗಡಿ-ಶಿರಾಡಿ ರಸ್ತೆಯಲ್ಲಿ ಪ್ರತಿನಿತ್ಯವೆಂಬಂತೆ ರಸ್ತೆ ಅಪಘಾತಗಳು ನಡೆಯುತ್ತಿವೆ. ಈಗಾಗಲೇ ನೂರಾರು ಮಂದಿ ಅಪಘಾತದಲ್ಲಿ ಪ್ರಾಣ ತೆತ್ತಿದ್ದಾರೆ. ಇದಕ್ಕೆ ಕಾರಣ ತಿರುವು-ಮುರುವುಗಳಿಂದ ಕೂಡಿರುವ ರಸ್ತೆ ಹಾಗೂ ವಾಹನಗಳ ದಟ್ಟಣೆಯೇ ಆಗಿದೆ. ಈ ರಸ್ತೆಯನ್ನು ಭವಿಷ್ಯ ದಲ್ಲಿ ದ್ವಿಪಥವನ್ನಾಗಿ ಬದಲಿಸಿದರೆ ಜನರು ನೆಮ್ಮದಿಯಿಂದ ಸಂಚಾರ ನಡೆಸಬಹುದು. ಇನ್ನಾದರೂ ಹೆದ್ದಾರಿ ಪ್ರಾಧಿ ಕಾರ ಗಮನಿಸಲಿ.
ಕಿಶೋರ್, ಉಪ್ಪಿನಂಗಡಿ

ಬೃಹತ್ ವಾಹನಗಳಿಂದ ಸುಂಕ ವಸೂಲಿ ಮಾಡಿ

Posted by JAYAKIRANA Kirana on | 0 comments | Leave a comment...


ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ರಸ್ತೆ ಕಾಮಗಾರಿ ಭಾಗಶ: ಪೂರ್ಣಗೊಂಡಿದೆ. ಹೆದ್ದಾರಿ ಪೂರ್ತಿ ಯಾಗುವ ಮುನ್ನವೇ ಪಣಂಬೂರು ಹಾಗೂ ಎನ್‌ಐಟಿಕೆ ಬಳಿ ವಾಹನ ಸವಾರರಿಗೆ ಸುಂಕ ವಿಧಿಸಲು ಟೋಲ್‌ಗೇಟ್ ಸ್ಥಾಪನೆ ಮಾಡಲು ಕೇಂದ್ರ ಹೆದ್ದಾರಿ ಪ್ರಾಧಿಕಾರ ಮುಂ ದಾಗಿತ್ತು. ಆದರೆ ಸಾರ್ವಜನಿಕರ ಪ್ರತಿ ಭಟನೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಟೋಲ್‌ಗೇಟ್ ನಿರ್ಮಾಣವನ್ನು ಕೈಬಿಡಲಾಗಿದೆ. ನೂತನ ಚತುಷ್ಪಥ ರಸ್ತೆಗೆ ಬಹುಕೋಟಿ ರೂ. ಖರ್ಚು ಮಾಡಲಾಗಿದೆ. ರಸ್ತೆ ಹದಗೆಟ್ಟರೆ ಅದರ ನಿರ್ವಹಣೆ ನೋಡುವುದಕ್ಕೆ ಹಣ ಬೇಕು. ಹೀಗಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಇಂತಿಷ್ಟು ಸುಂಕ ಪಡೆಯುವುದು ತಪ್ಪಲ್ಲ. ಆದರೆ ದ್ವಿಚಕ್ರ, ತ್ರಿಚಕ್ರ ಇಲ್ಲವೇ ಲಘು ವಾಹನ ಸವಾರರಿಗೆ ಸುಂಕ ಹೊರೆಯಾಗಬಹುದು. ಇವುಗಳ ಸಂಚಾರದಿಂದ ರಸ್ತೆ ಹದಗೆಡುವ ಸಾಧ್ಯತೆಯೂ ಅಲ್ಪಸ್ವಲ್ಪ ಮಾತ್ರ. ಆದ್ದ ರಿಂದ ಬೃಹತ್ ವಾಹನಗಳಿಂದ ಮಾತ್ರ ಸುಂಕ ವಸೂಲಿ ಮಾಡಿದರೆ ಉತ್ತಮ.
ನಾಗೇಶ್, ಸುರತ್ಕಲ್

ಪೇಪರ್ ಕಟ್ಟಿಂಗ್ ಇಟ್ಟುಕೊಳ್ಳುವುದು ನಕ್ಸಲ್ ವಾದವೇ?

Posted by JAYAKIRANA Kirana on | 0 comments | Leave a comment...


ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಕ್ಸಲರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಮೇಲೆ ವಿಠಲ ಮಲೆ ಕುಡಿಯ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ ದ್ದರು. ಈ ವೇಳೆ ದಾಖಲಿಸಲಾದ ಎಫ್‌ಐಆರ್ ಪ್ರತಿಯಲ್ಲಿ ಮನೆಯಲ್ಲಿ ಭಗತ್‌ಸಿಂಗ್ ಪುಸ್ತಕ, ಕೆಲವೊಂದು ಪೇಪರ್ ಕಟ್ಟಿಂಗ್ ಸಿಕ್ಕಿದ್ದೇ ಬಂಧನಕ್ಕೆ ಕಾರಣ ಎನ್ನಲಾಗಿದೆ. ಮನೆಯಲ್ಲಿ ಭಗತ್‌ಸಿಂಗ್ ಪುಸ್ತಕ ಸಿಕ್ಕಿದ ಕೂಡಲೇ ನಕ್ಸಲರೊಂದಿಗೆ ನಂಟಿದೆ, ನಕ್ಸಲ್ ವಾದವನ್ನು ಬೆಂಬಲಿಸುತ್ತೀಯಾ ಎಂದು ಬಂಧಿಸುವುದು ಎಷ್ಟು ಸರಿ?
ಹಾಗಿದ್ದರೆ ಕಾಲೇಜುಗಳಲ್ಲಿ ಇತಿಹಾಸವನ್ನು ಅಧ್ಯಯನ ಮಾಡುವ ಎಲ್ಲಾ ವಿದ್ಯಾರ್ಥಿಗಳನ್ನು ಕೇಸು ಜಡಿದು ಜೈಲಿಗೆ ತಳ್ಳುವ ಧೈರ್ಯ ಪೊಲೀಸರಿಗಿದೆಯೇ? ಹೆಚ್ಚಿನ ಎಲ್ಲಾ ತರ ಗತಿಯ ಇತಿಹಾಸ ಪುಸ್ತಕದಲ್ಲಿ ಭಗತ್‌ಸಿಂಗ್‌ಗೆ ಸಂಬಂಧಿ ಸಿದ ಒಂದಾದರೂ ಪಾಠ ಇದ್ದೇ ಇರುತ್ತದೆ. ಇನ್ನು ಮನೆ ಯಲ್ಲಿ ಪತ್ರಿಕೆಗಳಲ್ಲಿ ಬಂದ ಅಂಕಣದ ಕಟ್ಟಿಂಗ್ ಇಟ್ಟದ್ದೇ ತಪ್ಪು ಎನ್ನುವುದು ಯಾವ ನ್ಯಾಯ? ಕೆಲವರಿಗೆ ಪತ್ರಿಕೆಗ ಳಲ್ಲಿ ಬರುವ ಉತ್ತಮ ಅಂಕಣಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಅವರನ್ನೆಲ್ಲಾ ಬಂಧಿಸಿ ನಕ್ಸಲರ ನಂಟು ಕಟ್ಟಿ ಪೊಲೀಸರು ಜೈಲಿಗೆ ತಳ್ಳುತ್ತಾರೆಯೇ? ಎಲ್ಲೋ ಕೆಲ ವೊಂದು ಯುವಕರು ನಮ್ಮ ವ್ಯವಸ್ಥೆಯ ವಿರುದ್ದ ಬೇಸತ್ತು ಎಡಪಂಥೀಯ ಧೋರಣೆಗಳಿಗೆ ಮರುಳಾಗಿ ನಕ್ಸಲರಾ ದರೆ ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ನೋಡುವುದು ಎಷ್ಟು ಸರಿ?
ಇಲ್ಲಸಲ್ಲದ ವಿಚಾರಗಳಿಗೆ ಪ್ರತಿಭಟಿಸುವ ವಿದ್ಯಾರ್ಥಿ ಸಂಘಟನೆಗಳು ಈ ವಿಚಾರವಾಗಿ ಮಾತ್ರ ಯಾಕೆ ಸುಮ್ಮ ನಿದೆ? ವಿಠಲ ಮಲೆಕುಡಿಯರಿಗೆ ನಕ್ಸಲರ ಜೊತೆ ನಂಟಿ ದೆಯೋ ಇಲ್ಲವೋ ಎನ್ನುವುದು ತನಿಖೆಗೆ ಬಿಟ್ಟ ವಿಚಾರ. ಆದರೆ ತನಿಖೆಯ ನೆಪದಲ್ಲಿ ಪೊಲೀಸರ ಹಿಂಸೆ ಮಾತ್ರ ಸಲ್ಲದು. ಇನ್ನಾದರೂ ಸತ್ಯ ಸಂಗತಿ ಪತ್ತೆ ಹಚ್ಚುವ ಕೆಲಸ ವಾಗಲಿ.
ಓರ್ವ ವಿದ್ಯಾರ್ಥಿ, ಮಂಗಳೂರು

ಪುರೋಹಿತರಿಗೆ ಹೆಣ್ಣು ಯಾಕೆ ಕೊಡುವುದಿಲ್ಲ?

Posted by JAYAKIRANA Kirana on | 0 comments | Leave a comment...


ಸಂಪ್ರದಾಯಸ್ಥ ಮನೆತನವನ್ನು ಹೊಂದಿರುವ ಬ್ರಾಹ್ಮಣರಿಗೆ, ಪುರೋ ಹಿತರಿಗೆ ಈಗಿನ ಕಾಲದಲ್ಲಿ ಹೆಣ್ಣು ಕೊಡುವುದಿಲ್ಲ. ಇದು ಸೋಜಿಗವ ಲ್ಲವೇ? ಸಮಾಜದಲ್ಲಿ ಗೌರವ, ಸಮ್ಮಾನ ಎಲ್ಲವನ್ನೂ ಪಡೆಯುವ ಇವರು ಮದುವೆಯ ವಿಚಾರಕ್ಕೆ ಬಂದರೆ ನೆಮ್ಮದಿ ಹೊಂದಿರುವುದಿಲ್ಲ. ಪುರೋ ಹಿತರಿಗೆ ಸ್ವಜಾತಿಯಲ್ಲಿ ಮದುವೆ ನಡೆಯುವ ಉದಾಹರಣೆಗಳು ಭಾರೀ ಅಪರೂಪವೇ ಸರಿ. ನಮ್ಮ ಪರಿಚಯದ ಅದೆಷ್ಟೋ ಮಂದಿಯದ್ದು ಇದೇ ಸಮಸ್ಯೆ. ಈಗಿನ ಕಾಲದಲ್ಲಿ ಬ್ರಾಹ್ಮಣರು ಕೂಡಾ ತಮ್ಮ ಮನೆಯ ಹೆಣ್ಮಕ್ಕಳಿಗೆ ಎಂಜಿನಿಯರಿಂಗ್, ಕಾನೂನು, ವೈದ್ಯಕೀಯ ಪದವಿ ಕಲಿಸು ತ್ತಿದ್ದಾರೆ. ಹೀಗಿರುವಾಗ ಅವರನ್ನು ಸಾಮಾನ್ಯ ಪುರೋಹಿತರಿಗೆ ಕೊಟ್ಟು ಮದುವೆ ಮಾಡಿದರೆ ಮನೆತನದ ಘನತೆಯ ಬಗ್ಗೆ ಪ್ರಶ್ನೆಯೂ ಅವರನ್ನು ಕಾಡುತ್ತದೆ.
ಇಷ್ಟೇ ಅಲ್ಲದೆ ಮನೆಯಿಂದ ಹೊರಗೆ ಹಾಸ್ಟೆಲ್, ಪಿ.ಜಿ.ಗಳಲ್ಲಿ ಉಳಿದು ಶಿಕ್ಷಣ ಪಡೆಯುವ ಹೆಣ್ಮಕ್ಕಳು ಕಲಿಕಾ ಅವಧಿಯಲ್ಲಿ ಅನ್ಯಜಾತಿಯ ಪ್ರೇಮ ವ್ಯವಹಾರ ಹೊಂದಿರುತ್ತಾರೆ. ಅವರು ಅನ್ಯ ಜಾತಿಯ ಹುಡುಗ ರನ್ನು ಮದುವೆಯಾದರೆ ಸಂಪ್ರದಾಯಸ್ಥ ಮನೆತನದ ಗಂಡು ಹುಡು ಗರಿಗೆ ಮಾತ್ರ ಹೆಣ್ಣು ಸಿಗುವುದಿಲ್ಲ. ಇದರಿಂದ ಬ್ರಾಹ್ಮಣರು ಕೀಳರಿಮೆಗೆ ಒಳಗಾಗುವುದೂ ಇದೆ. ಆದ್ದರಿಂದ ಈ ಬಗ್ಗೆ ನಮ್ಮ ಸಮಾಜವೇ ಎಚ್ಚ ರಗೊಳ್ಳಬೇಕು. ಇಂಥ ಸಮಸ್ಯೆಗೆ ಕಾರಣವೇನೆಂದು ಪರಿಶೀಲಿಸಬೇಕು. ಯಾಕೆಂದರೆ ಮದುವೆಯಾಗದೆ ಮನೆತನ, ಕುಟುಂಬ, ನಮ್ಮ ಸಮಾಜ ಬೆಳೆಯಲು ಸಾಧ್ಯವಿಲ್ಲ. ಸ್ವಜಾತಿಯಲ್ಲಿ ಹೆಣ್ಣುಮಕ್ಕಳು ಸಿಗಲಿಲ್ಲವೆಂದಾ ದರೆ ಅನ್ಯಜಾತಿಯ ಹೆಣ್ಮಕ್ಕಳನ್ನಾದರೂ ಮದುವೆಯಾಗಲು ಸಮಾಜ ಅನುಮತಿ ನೀಡಬೇಕಿದೆ.
ವಿನೀತ್ ಭಟ್.ಕೆ., ಉಡುಪಿ

ಭ್ರಷ್ಟಾಚಾರಿ ಪಿಡಿಒ

Posted by JAYAKIRANA Kirana on | 0 comments | Leave a comment...


ಬ್ರಹ್ಮಾವರದ ಹಾರಾಡಿ ಗ್ರಾಮ ಪಂಚಾಯತ್‌ನಲ್ಲಿ ಈಗಿ ರುವ ಪಿಡಿಒ ಬಹಳ ಭ್ರಷ್ಟರಾಗಿರುತ್ತಾರೆ. ಇವರು ಗ್ರಾಮವನ್ನು ಅಭಿವೃದ್ಧಿಪಡಿಸುವ ಬದಲು ಕೇವಲ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಬೈಕಾಡಿ, ಹಾರಾಡಿ, ಹೊನ್ನಾಳ, ಗಾಂಧಿನಗರ, ಕುಕ್ಕುಡೆ ಹಾಗೂ ಭದ್ರಗಿರಿ ಎಂಬ ಊರುಗಳು ಬರುತ್ತವೆ. ಇಲ್ಲಿನ ನಿವಾಸಿಗಳು ಬಡವರಾಗಿದ್ದು ಸಣ್ಣಪುಟ್ಟ ಕೆಲಸಗಳಿಗೆ ಪಂಚಾಯತ್‌ನ ಮೊರೆ ಹೋಗಬೇಕಾ ಗುತ್ತದೆ. ಆದರೆ ಇಲ್ಲಿನ ಪಿಡಿಓ ಸರ್ವಾಧಿಕಾರಿಯಂತೆ ವರ್ತಿ ಸುತ್ತಿರುವುದರಿಂದ ಗ್ರಾಮಸ್ಥರು ಸಣ್ಣಪುಟ್ಟ ಕೆಲಸಗಳಿಗೂ ಅಲೆ ದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನಹರಿಸಬೇಕಾಗಿ ವಿನಂತಿ.
ರಿಯಾಜ್, ಬೈಕಾಡಿ

ಹೆಜಮಾಡಿ ಚೆಕ್‌ಪೋಸ್ಟ್ ಬೀಗ ತೆರೆಯಿರಿ

Posted by JAYAKIRANA Kirana on | 0 comments | Leave a comment...


ರಾಷ್ಟ್ರೀಯ ಹೆದ್ದಾರಿಯ ಉಡುಪಿ ಜಿಲ್ಲೆಯ ಗಡಿಭಾಗವಾದ ಹೆಜಮಾಡಿ ಎಂಬಲ್ಲಿ ಹಿಂದೆ ಚೆಕ್ ಪೋಸ್ಟ್ ಒಂದು ಕಾರ್ಯಾಚರಿಸುತ್ತಿತ್ತು. ಆದರೆ ಇತ್ತೀ ಚಿನ ಕೆಲವು ವರ್ಷಗಳಿಂದ ಚೆಕ್‌ಪೋಸ್ಟ್ ಬಾಗಿಲು ಮುಚ್ಚಿಕೊಂಡಿರುವುದು ಅವ್ಯ ವಹಾರ, ಅಕ್ರಮ ದಂಧೆ ನಡೆಸುವವ ರಿಗೆ ವರದಾನವಾಗಿ ಪರಿಣಮಿಸಿದೆ. ಪ್ರತಿ ನಿತ್ಯ ಮರಸಾಗಣೆ, ಗೋಸಾಗಾಟ ನಡೆ ಯುತ್ತಿದೆ. ಇಲ್ಲಿ ಚೆಕ್‌ಪೋಸ್ಟ್ ಇಲ್ಲ ದಿದ್ದರೆ ಪರವಾಗಿಲ್ಲ, ಕೊನೇ ಪಕ್ಷ ಪೊಲೀಸ್ ಚೌಕಿಯನ್ನಾದರೂ ಸ್ಥಾಪಿ ಸಬಹುದಿತ್ತು. ಆದರೆ ಆ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡದೇ ಇರು ವುದರಿಂದ ದಂಧೆಕೋರರು ಕಾನೂ ನಿನ ಕೈಯಿಂದ ಪಾರಾಗುತ್ತಿದ್ದಾರೆ. ಹೆಜ ಮಾಡಿ ಚೆಕ್‌ಪೋಸ್ಟ್ ಅನ್ನು ಕೂಡಲೇ ತೆರೆಯಲು ಉಡುಪಿ ಎಸ್ಪಿ ಕ್ರಮ ಕೈಗೊ ಳ್ಳುವರೇ?
ಸುರೇಶ್, ಹೆಜಮಾಡಿ

ಬಜರಂಗಿ ನಾಪತ್ತೆ

Posted by JAYAKIRANA Kirana on | 0 comments | Leave a comment...


ಬಜರಂಗದಳದ ಕಾರ್ಯಕರ್ತರೊಬ್ಬರು ನಾಪತ್ತೆಯಾಗಿದ್ದಾರೆ ಹುಡುಕಿ ಕೊಡ್ತೀರಾ ಪ್ಲೀಸ್... ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಸಂಘಪರಿವಾರವನ್ನು ತಿಳಿಯದ ದಲಿತರು ಎಂಬ ಬರಹದೊಡನೆ ಕಾಣಿಸಿಕೊಂಡಿದ್ದ ‘ದಿ ಗ್ರೇಟ್’ ಬಜರಂಗಿಯೊಬ್ಬರು ನಂತರ ನಾಪತ್ತೆ ಯಾಗಿದ್ದಾರೆ. ಅವರನ್ನು ಹುಡುಕೋಣವೆಂದರೆ ಅವರ ಅಡ್ರೆಸ್ಸೂ ಇಲ್ಲ. ಅವರೇ ಪತ್ರಿಕೆಯಲ್ಲಿ ಬರೆದಿದ್ದ ಕೆಲವು ವಿಷಯಗಳ ಬಗ್ಗೆ ಚರ್ಚಿಸುವುದಿತ್ತು ಮಾರಾಯ್ರೇ... ಬಹುಶಃ ಪತ್ರಿಕೆಯ ಓದುಗರೊ ಬ್ಬರು ಹೇಳಿರುವಂತೆ ಅವರು ತಮ್ಮ ಷಂಡತನವನ್ನು ಸಾಬೀತುಪ ಡಿಸಿದಂತಾಯಿತೇ?
ಶಾಂತಿಪ್ರೇಮಿ, ನಾರಾವಿ

ಸರಕಾರ, ಪೊಲೀಸ್ ಇಲಾಖೆಯೇ ನಕ್ಸಲರನ್ನು ಸೃಷ್ಟಿಸುತ್ತಿದೆಯೇ?

Posted by JAYAKIRANA Kirana on | 0 comments | Leave a comment...


ಶಶಾಂಕ್ ಎಸ್.ಭಟ್, ಮಂಗಳೂರು
ಕೆಲವು ದಿನಗಳ ಹಿಂದೆ ಬೆಳ್ತಂಗಡಿ ಸಮೀಪದ ಕುತ್ಲೂರು ಎಂಬಲ್ಲಿ ಮೂರು ಮಂದಿಯನ್ನು ನಕ್ಸಲ್ ನಿಗ್ರಹ ದಳ ಬಂಧಿಸಿ ವಿಚಾರಣೆಯ ನೆಪದಲ್ಲಿ ಹಿಂಸೆ ನೀಡಿತು. ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜ್ ವಿದ್ಯಾರ್ಥಿ ವಿಠಲ, ಆತನ ಸೋದರ ಹಾಗೂ ತಂದೆಯನ್ನು ಪೊಲೀಸರು ಯಾವುದೋ ಪೂರ್ವ ದ್ವೇಷದಿಂದ ಬಂಧಿಸಿ ನಕ್ಸಲ್ ಸಂಚಿನಲ್ಲಿ ಸಿಲುಕಿಸಿದಂತಿದೆ. ಯಾಕೆಂದರೆ ವಿಠಲನ ಸಹಪಾಠಿಗಳೇ ಹೇಳುವಂತೆ ಆತ ಸಜ್ಜನ ವಿದ್ಯಾರ್ಥಿ, ನಕ್ಸಲ್ ಇಲ್ಲವೇ ಬೇರೊಂದು ಸಂಘಟನೆಯ  ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಂಡವನಲ್ಲ. ಹೀಗಿದ್ದರೂ ಪೊಲೀಸರು ಆತನಿಗೂ-ನಕ್ಸಲ್ ಸಂಘಟನೆಗೂ ಸಂಬಂಧ ವಿದೆ ಎನ್ನುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. 
ವಿಠಲ ಹಾಗೂ ಆತನ ಮನೆಮಂದಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ ಪೊಲೀಸರು ಆತನ ಬಳಿ ನಕ್ಸಲ್ ಸಾಹಿತ್ಯ ಸಿಕ್ಕಿದೆ ಎಂದು ಕಥೆ ಕಟ್ಟಿದ್ದಾರೆ. ಇಷ್ಟೇ ಅಲ್ಲದೆ ಆತನ ಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಕೂಂಬಿಂಗ್ ಹೆಸರಿನ ನಾಟಕವಾಡಿ ಪ್ರಕರಣವನ್ನು ಮತ್ತಷ್ಟು ಗಂಭೀರವೆಂಬಂತೆ ಬಿಂಬಿ ಸುವ ಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಇದೇ ನಾಟಕದ ಮುಂದುವ ರಿದ ಪ್ರಯೋಗವೇನೋ ಎಂಬಂತೆ ಕುತ್ಲೂರು, ಮಲವಂತಿಗೆ ಪ್ರದೇಶದಲ್ಲಿ ನಕ್ಸಲ್ ಸಾಹಿತ್ಯ, ಬಟ್ಟೆಬರೆ, ಬಂದೂಕು, ಊಟದ ಸಾಮಾಗ್ರಿ ಸಿಕ್ಕಿದೆ ಎಂದು ಹೇಳಲಾಗು ತ್ತಿದೆ. ಇದನ್ನೇ ನೆಪವಾ ಗಿಟ್ಟುಕೊಂಡು ನಕ್ಸಲ್ ನಿಗ್ರಹ ದಳ ಇಲ್ಲಿ ರಾಜ್ಯಮಟ್ಟದ ನಕ್ಸಲ್ ಕ್ಯಾಂಪ್ ನಡೆಯುತ್ತಿತ್ತು, ತಮಿಳ್ನಾಡು, ಆಂಧ್ರಪ್ರದೇಶದ ನಕ್ಸಲರೂ ಇಲ್ಲಿ ಭಾಗವಹಿಸಿದ್ದಾರೆ ಎಂದು ಕಣ್ಣಾರೆ ಕಂಡಂತೆ ಹೇಳುತ್ತಿ ರುವುದು ಆಶ್ಚರ್ಯ ಹುಟ್ಟಿಸುತ್ತಿದೆ. 
ಇದೇ ವೇಳೆ ಇಲ್ಲಿ ಕೂಂಬಿಂಗ್ ಕೈಗೊಂಡ ನಕ್ಸಲ್ ನಿಗ್ರಹ ದಳದ ಓರ್ವ ಸಿಬ್ಬಂದಿಯ ಎಡಭುಜಕ್ಕೆ ಗುಂಡು ತಗುಲಿದೆ ಎಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ನಕ್ಸಲರ ಜೊತೆ ಫೈರಿಂಗ್ ನಡೆ ದಿರುವುದು ನಿಜವೇ ಆದಲ್ಲಿ ಒಬ್ಬನೇ ಒಬ್ಬ ನಕ್ಸಲನಿಗೆ ಯಾಕೆ ಗುಂಡು ತಾಗಿಲ್ಲ? ನಮ್ಮ ಪೊಲೀಸರಿಗೆ ಗುರಿಯಿಟ್ಟು ಫೈರಿಂಗ್ ಮಾಡುವುದು ಗೊತ್ತಿಲ್ಲವೇ? ಪ್ರತೀಬಾರಿ ನಕ್ಸಲರ ಜೊತೆ ಮುಖಾ ಮುಖಿಯಾಗುವಾಗಲೂ ನಕ್ಸಲ್ ನಿಗ್ರಹ ದಳ, ಪೊಲೀಸ್ ಇಲಾಖೆ ಇದೇ ಸತ್ಯ(ಸುಳ್ಳು?)ವನ್ನು ಹೇಳಿಕೊಂಡು ಬಂದಿದ್ದಾರೆ. ಗಾಯ ಗೊಂಡ ನಕ್ಸಲರು ಆಮೇಲೆ ಏನಾಗುತ್ತಾರೆ, ಎಲ್ಲಿ ಹೋಗುತ್ತಾರೆ, ಸತ್ತರೇ ಎನ್ನುವುದೂ ತಿಳಿದುಬರುವುದಿಲ್ಲ. ಹಾಗಿದ್ದೂ ಇಲಾಖೆಯ ಹಿರಿಯ ಅಧಿಕಾರಿಗಳು ಅವರಿಗೂ ಗುಂಡೇಟು ತಗುಲಿದೆ ಎಂದೇ ಹೇಳುತ್ತಾರೆ. ಇದನ್ನು ಎಷ್ಟು ಸತ್ಯವೆಂದು ನಂಬಬೇಕು? 
ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸ್ ಇಲಾಖೆ ಕಳೆದ ಹಲವು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸು ತ್ತಿದ. ಕೆಲವು ಮಂದಿ ನಕ್ಸಲರು(?) ಗುಂಡೇಟಿಗೆ ಬಲಿಯಾಗಿದ್ದಾ ರೆಯೇ ವಿನ: ನಕ್ಸಲರನ್ನು ಸದೆಬಡಿಯಲು ಸಾಧ್ಯವಾಗಿಲ್ಲವೇಕೆ? ಸಾವಿರಾರು ಸಂಖ್ಯೆಯ ಪೊಲೀಸ್, ಎಎನ್‌ಎಫ್ ತಂಡಕ್ಕೆ ಬೆರಳೆ ಣಿಕೆಯ ಸಂಖ್ಯೆಯಲ್ಲಿರುವ ನಕ್ಸಲರನ್ನು ಹಿಮ್ಮೆಟ್ಟಿಸಲು ಸಾಧ್ಯವಾ ಗಿಲ್ಲ ಎಂದರೆ ಇದಕ್ಕೆ ಅರ್ಥವೇನು? ಇಲ್ಲಿ ನಕ್ಸಲರ ಹೆಸರು ಹೇಳಿ ಕೊಂಡು ಜನರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಇಲಾಖೆಗಳು ಮಾಡುತ್ತಿವೆಯೇ ಹೊರತು ಬೇರೇನೂ ಅಲ್ಲ. ಕುದ್ರೆಮುಖ ರಕ್ಷಿತಾ ರಣ್ಯ ವ್ಯಾಪ್ತಿ, ಪುಷ್ಪಗಿರಿ ಅರಣ್ಯ ವ್ಯಾಪ್ತಿಯಲ್ಲಿ ನಕ್ಸಲರ ಭಯ ಹುಟ್ಟಿಸಿ ಜನರನ್ನು ಒಕ್ಕಲೆಬ್ಬಿಸುವ ಯತ್ನ ಪರೋಕ್ಷವಾಗಿ ನಡೆಯುತ್ತಿರು ವಂತಿದೆ. ನಕ್ಸಲ್ ಕ್ಯಾಂಪ್, ಗುಂಡು ಹಾರಾಟ, ಚಲನ ವಲನ ಹೆಚ್ಚಿ ರುವ ಕಡೆ ಯಾರಾದರೂ ಮನೆ ಮಾಡಿ ಉಳಿಯುತ್ತಾರೆಯೇ? ಅಲ್ಲಿಯ ಭೂಮಿಯನ್ನು ಖರೀದಿಸುತ್ತಾರೆಯೇ? ಇದೇ ರೀತಿ ನಕ್ಸಲ್ ಪೀಡಿತ ಪ್ರದೇಶ ಎಂದು ಅರಣ್ಯ ವ್ಯಾಪ್ತಿಯ ಪ್ರದೇಶಗಳನ್ನು ಪಟ್ಟಿಯಲ್ಲಿ ಸೇರಿಸಿ ಅಲ್ಲಿ ವಿದ್ಯುತ್ ಯೋಜನೆ, ರೆಸಾರ್ಟ್, ಹೋಟೆಲ್ ಉದ್ಯಮ ಇಲ್ಲವೇ ಐಶಾರಾಮಿ ಅರಮನೆ ಕಟ್ಟಲು ಸರಕಾರ ಯೋಜನೆ ಹಾಕಿಕೊಂಡಂತಿದೆ. ಜನರಲ್ಲಿ ನಕ್ಸಲರು ಎಂದರೆ ರಾಕ್ಷಸರು ಎಂಬ ಚಿತ್ರಣ ಬಿಂಬಿಸಲಾಗುತ್ತಿದೆಯೇ ಹೊರತು ಅವರೂ ನಮ್ಮಂತೆ ಮನುಷ್ಯರು ಎಂದು ಸರಕಾರ ಯಾಕೆ ತಿಳಿದುಕೊಳ್ಳುವುದಿಲ್ಲ. ನಕ್ಸಲ್ ಹೆಸರಿನಲ್ಲಿ ನಡೆದಿರುವ ಎಷ್ಟೋ ಗುಂಡು ಹಾರಾಟ, ಕೊಲೆ, ದರೋಡೆ ಕೃತ್ಯದ ಹಿಂದೆಯೂ ಇಂಥದ್ದೇ ವ್ಯವಸ್ಥೆಯ ಪಾಲು ಇದ್ದಿರುವ ಸಾಧ್ಯ ತೆಯೂ ಇದೆ. ಕೆಲವು ವರ್ಷಗಳ ಹಿಂದೆ ಆಗುಂಬೆಯ ಬರ್ಕ ಣದಲ್ಲಿ ಹಾಗೂ ಇತ್ತೀಚೆಗೆ ಬೆಳ್ತಂಗಡಿ ಸಮೀಪದ ಬೆಳ್ಳೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಎಎನ್‌ಎಫ್ ಸಿಬ್ಬಂದಿಯೇ ಕೊಂದು ನಕ್ಸಲರ ತಲೆಗೆ ಕಟ್ಟಲು ನೋಡಿದ್ದರು. ಇಲ್ಲಿ ಕೊಂದ ವರ ವಿರುದ್ಧ ತನಿಖೆ ಯಾಕೆ ನಡೆಯಲಿಲ್ಲ? 
ವಿಠಲ ಆತನ ಸೋದರ, ತಂದೆಯಂತೆ ನಾಳೆ ನಕ್ಸಲ್ ಪೀಡಿತ ಪ್ರದೇಶಗಳ ಇತರರನ್ನೂ ನಕ್ಸಲರನ್ನಾಗಿ ಮಾಡಬಹುದು. ಅವರನ್ನೂ ಕೊಲೆಗೈದು ಇಲ್ಲವೇ ಬಂಧಿಸಿ ನಕ್ಸಲ್ ಸಾಹಿತ್ಯ ವನ್ನು ಪ್ರದರ್ಶಿಸಿ ಅವರೇ ಇವರು ಎನ್ನಬಹುದು. ಇದನ್ನೆಲ್ಲ ನಮ್ಮ-ನಿಮ್ಮಂಥ ಬುದ್ಧಿಜೀವಿಗಳು ನಂಬಬೇಕೇ? ನಕ್ಸಲರನ್ನು ಮಟ್ಟ ಹಾಕುವುದಾದರೆ ಒಮ್ಮೆಲೇ ಆ ಕೆಲಸ ಮಾಡಲಿ, ಇಲ್ಲ ವಾದರೆ ಅವರಷ್ಟಕ್ಕೆ ಬಿಡಲಿ. ಸುಮ್ಮನೆ ನಕ್ಸಲ್ ನಿಗ್ರಹ ಮಾಡು ತ್ತೇವೆ ಎಂದು ಜನರನ್ನು ಭೀತಿಗೊಳ ಪಡಿಸುವುದು ಬೇಡ. ನಕ್ಸ ಲರ ಹೆಸರಿನಲ್ಲಿ ಅಮಾಯಕರ ಶೋಷಣೆ ನಿಲ್ಲದಿದ್ದಲ್ಲಿ ನಾಳೆ ಕಾಡು ಬಿಡಿ, ನಾಡಿನ ಪ್ರeವಂತ ನಾಗರಿಕರೂ ಬದುಕುವುದಕ್ಕಾಗಿ ಬಂದೂಕು ಹಿಡಿಯುವುದು ಅನಿವಾರ್ಯವಾದೀತು.

ರಮ್ಯಾ ರೋಡ್ ಶೋ

Posted by JAYAKIRANA Kirana on | 0 comments | Leave a comment...


ಬಿಜೆಪಿಯ ಸುನಿಲ್ ಕುಮಾರ್ ಕೂಡ ಭಾಗವಹಿಸಿದ್ದರಂತೆ!
ಸಿನಿಮಾ ತಾರೆಗಳೆಂದರೆ ಜನರಿಗೆ ಅದೇನೋ ಕ್ರೇಜ್. ಅವರು ಪ್ರಚಾರ ಮಾಡುವ ಪಕ್ಷಕ್ಕೆ ಓಟು ಕೊಡದೇ ಇದ್ದರೂ, ‘ಸ್ಟಾರ್ಗಳನ್ನು ನೋಡಲೆಂದಾದರೂ ಜನ ಮುತ್ತಿಗೆ ಹಾಕು ತ್ತಾರೆ. ಆದರೆ ಇದನ್ನು ನಿರಾಕರಿಸುತ್ತಲೇ ನಮ್ಮ ಲಕ್ಕಿ ಸ್ಟಾರ್ ಇನ್ನೊಂದು ವಿಷಯ ಬಹಿರಂಗಪಡಿಸಿದ್ದಾರೆ. ಅದು ಬಿಜೆಪಿ ಕಾರ್ಯಕರ್ತರೂ ಜೈ ಅಂದಿರುವುದು!
ಹೌದು ಇದು ಮೊನ್ನೆ ತಾನೇ ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಪರ ಪ್ರಚಾರಕ್ಕೆಂದು ಹೋಗಿದ್ದಾಗ ನಡೆದ ಸಂಗತಿಯಂತೆ! ಅಲ್ಲಿ ಹೋಗಿದ್ದ ರಮ್ಯಾ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಿದ್ದರೆ, ಪಕ್ಷದ ಬೆಂಬಲವೋ ಅಥವಾ ತಮ್ಮ ನೆಚ್ಚಿನ ತಾರೆಯನ್ನು ನೋಡಿದ ಖುಷಿಯೋ, ಅಭಿಮಾನಿಗಳೂ ಚೀರುತ್ತಿದ್ದರಂತೆ!
ಹೀಗೆ ಉಡುಪಿ ಸಮೀಪದ ಕಾಪುವಿನಲ್ಲೂ ‘ಕೈ ಪಾರ್ಟಿ ನಾಯಕಿ ರಮ್ಯಾ ರೋಡ್ ಶೋ ನಡೆಸಿ ಓಪನ್ ಜೀಪ್‌ನಲ್ಲಿ ಅವರಿಗೆ ಕೈ ಬೀಸಿ ಬೀಸಿ ಸಾಕಾಗಿತಂತೆ. ಆದರೂ ಈ ಸಂದರ್ಭದಲ್ಲಿ ರಮ್ಯಾ ಒಂದು ಸಂಗತಿಯನ್ನು ಗಮನಿಸಿ ದ್ದಾರಂತೆ. ಅದು ಸ್ವತಃ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ತನ್ನ ರೋಡ್ ಶೋದಲ್ಲಿ ಭಾಗವಹಿಸಿರುವುದು!
ಹೌದಂತೆ. ಇದನ್ನು ರಮ್ಯಾ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿ ದ್ದಾರೆ. ಕಾಪು ಸಮೀಪ ನಾನು ರೋಡ್ ಶೋ ಮಾಡುತ್ತಿ ರುವಾಗ ಅದರಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಕಾರ್ಯಕ ರ್ತರೂ ಸೇರಿಕೊಂಡಿದ್ದರು ಎಂಬ ಕುತೂಹಲಕಾರಿ ಅಂಶ ವನ್ನು ಬಹಿರಂಗಪಡಿಸಿದ್ದಾರೆ.
ರಮ್ಯಾ ಬಾಯಲ್ಲಿ ತುಳು...
ಚುನಾವಣಾ ಪ್ರಚಾರದಲ್ಲಿ ರಮ್ಯಾ ಕರಾವಳಿ ಭಾಷೆ ತುಳುವಲ್ಲೇ ಮಾತನಾಡಿ ಅಭಿಮಾನಿಗಳು ಮತ್ತು ಕಾರ್ಯ ಕರ್ತರನ್ನು ಹುರಿದುಂಬಿಸಿದರಂತೆ. ‘ತುಳುನಾಡುದ ಪ್ರೀತಿದ ಜನಕುಲೆಗ್ ಎನ್ನ ಉಡಲ್ ದಿಂಜಿನ ಸೊಲ್ಮೆಲು ಎಂದೇ ಬರೆದುಕೊಟ್ಟ ತುಳು ಸಾಲುಗಳನ್ನು ಓದಿ ನಂತರ ಕಾರ್ಕಳ ದಲ್ಲಿ ಭಾಷಣ ಶುರು ಮಾಡಿದರಂತೆ.
ಸಾಮಾನ್ಯ ಕಾರ್ಯಕರ್ತೆಯಾಗಿ ಹೋದೆ
ಒಬ್ಬ ಗ್ಲಾಮರಸ್ ನಟಿಯನ್ನು ನೋಡಲು ಜನ ಭಾರೀ ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ಅವರು ಆಕೆಯದ್ದೇ ಪಕ್ಷಕ್ಕೆ ಓಟು ಹಾಕುತ್ತಾರೆ ಎನ್ನುವುದು ಗ್ಯಾರಂಟಿಯಿಲ್ಲ ಎಂದು ರಮ್ಯಾರನ್ನು ಉದ್ದೇಶಿಸಿ ಪವನ್‌ಜ ಮಾಡಿರುವ ಟ್ವೀಟ್‌ಗೆ ಲಕ್ಕಿ ಸ್ಟಾರ್ ರಮ್ಯಾ ಹೀಗೆ ಪ್ರತಿ ಪ್ರತಿಕ್ರಿಯೆ ನೀಡಿ ದ್ದಾರೆ. ‘ನಾನು ಒಬ್ಬ ಸಿನಿಮಾ ತಾರೆಯಾಗಿ ಅಲ್ಲಿಗೆ ಹೋಗ ಲಿಲ್ಲ. ನಾನು ಭಾರತದ ಪ್ರಜೆಯಾಗಿ, ಕಾಂಗ್ರೆಸ್ ಯುವ ಕಾರ್ಯಕರ್ತೆಯಾಗಿ ಹೋಗಿದ್ದೆ!

17-03-2012

Posted by JAYAKIRANA Kirana on | 0 comments | Leave a comment...


ವಯಸ್ಸಾಗಿದೆ
ವೃದ್ಧರೊಬ್ಬರು ವೈದ್ಯರ ಬಳಿಗೆ ಹೋಗಿ , ನನ್ನ ಎಡ ಕೈಯ ಕೀಲು ನೋಯುತ್ತಿದೆ ಎಂದರು. ವೈದ್ಯರು ಪರೀಕ್ಷಿಸಿ, ಏನಿಲ್ಲಾ ವಯಸ್ಸಾಗಿದೆಯಲ್ಲ. ಅದರಿಂದ ಹೀಗಾಗ್ತಿದೆ ಅಂದರು.
ಆದರೆ ವೈದ್ಯರ ಸಲಹೆಯಿಂದ ತೃಪ್ತರಾಗದ ವೃದ್ಧ- ಅಲ್ಲಾ ಡಾಕ್ಟ್ರೆ ನನ್ನ ಬಲ ಕೈಗೂ ಎಡ ಕೈಯಷ್ಟೇ ವಯಸ್ಸಾಗಿದೆಯಲ್ಲಾ ಅದು ನೋವಾಗ್ತಿಲ್ಲ. ಈ ಡಾಕ್ಟ್ರು ಅದೇನು ನೋಡ್ತಾರೋ ಏನೋ ಎಂದು ಗೊಣಗುತ್ತಾ ಹೊರನಡೆದರು.

ಹಿಡಿದಿವೆಯೇ?
ಎಪ್ಪತ್ತರ ಹರೆಯದ ವೃದ್ಧನೊಬ್ಬ ತನ್ನ ಪತ್ನಿಯನ್ನು ಪ್ರಶ್ನಿಸಿದ.
ನಾನು ಹದಿಹರೆಯದ ಸುಂದರ ಹುಡುಗಿಯರ ಹಿಂದೆ ಓಡಾಡುವುದನ್ನು ಕಂಡು ನಿನಗೆ ದುಃಖ ಆಗುತ್ತಾ?
ಆತನ ಪತ್ನಿ ಉತ್ತರಿಸಿದಳು,
ಖಂಡಿತವಾಗಿಯು ಇಲ್ಲ ಕಣ್ರೀ.. ಕಾರುಗಳನ್ನು ನಾಯಿಗಳು ಹಿಂಬಾಲಿಸುವುದನ್ನು ನಾನು ಕಂಡಿದ್ದೇನೆ. ಆದರೆ ಕಾರುಗಳನ್ನು ನಾಯಿಗಳು ಹಿಡಿದಿವೆಯೇ.......?

ಬಟ್ಟೆ ಇಲ್ಲ
ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ ನನ್ನ ಹೆಂಡತಿ ಕಾಣೆಯಾಗಿದ್ದಾಳೆ
ಪೊಲೀಸ್: ಎಷ್ಟು ದಿನದಿಂದ ಕಾಣೆಯಾಗಿದ್ದಾಳೆ, ಸುಮಾರು ಒಂದು ತಿಂಗಳಾಯ್ತು ಅನಿಸುತ್ತೆ
ಪೊಲೀಸ್: ಮತ್ತೆ ಇಷ್ಟು ದಿನ ಯಾಕೆ ಸುಮ್ಮನಿದ್ರಿ? ವ್ಯಕ್ತಿ: ಇಷ್ಟು ದಿನ ಬರೀ ಕನಸು ಅಂದುಕೊಂಡಿದ್ದೆ. ಆದರೆ, ಇವತ್ತು ನನಗೆ ಹಾಕಿಕೊಳ್ಳಲು ಯಾವುದೇ ಕ್ಲೀನ್ ಬಟ್ಟೆ ಇಲ್ಲ.

ಬ್ರದರ್!
ಒಬ್ಬ ಹುಡುಗ: ನಿನ್ನ ಡ್ರೆಸ್ ಕಲರ್ ಚೆನ್ನಾಗಿದೆ. ಹುಡುಗಿ: ಥ್ಯಾಂಕ್ಸ್ಸ್, ಹುಡುಗ: ನಿನ್ನ ಮೇಕಪ್ ಚೆನ್ನಾಗಿದೆ. ಹುಡುಗಿ:ಥ್ಯಾಂಕ್ಯೂ, ಹುಡುಗ:ನಿನ್ನ ಲಿಪ್‌ಸ್ಟಿಕ್ ಚೆನ್ನಾಗಿದೆ. ಹುಡುಗಿ: ಥ್ಯಾಂಕ್ಯೂ ಬ್ರದರ್! ಹುಡುಗ:(ಕೋಪದಿಂದ) ಆದರೆ, ನೀನು ಮಾತ್ರ ಸುಂದರಿಯಾಗಿ ಕಾಣಿಸ್ತಾನೇ ಇಲ್ಲ?

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)