ಕ್ಯಾನ್ಸರ್ ರೋಗಿಗಳಿಗೆ ವರದಾನ... ಆದರೆ..

Posted by JAYAKIRANA Kirana on Friday, 16 March 2012 | 0 comments | Leave a comment...


ಮಾನವನಿಗೆ ರೋಗಗಳು ಹೇಳಿ ಕೇಳಿ ಬರುವುದಿಲ್ಲ. ಯಾವುದೇ ರೋಗ ಯಾವುದೇ ಸಂದರ್ಭದಲ್ಲಿ ಯಾರಿಗೂ ಬಾಧಿಸಬಹುದು. ಜೀವ ವನ್ನೇ ನಷ್ಟ ಮಾಡುವ ಭಯಂಕರ ರೋಗಗಳು ಎಂದೆನಿಸಿದ ಹೃದ ಯರೋಗ, ಕ್ಯಾನ್ಸರ್ ಇತ್ಯಾದಿಗಳ ನಿವಾರಣೆಗೆ ಲಕ್ಷಗಟ್ಟಲೆ ರೂಪಾಯಿ ಗಳ ಖರ್ಚಾಗುತ್ತದೆ. ಜೀವವನ್ನು ಉಳಿಸುವುದಕ್ಕೋಸ್ಕರವಾಗಿ ಜೀವ ಮಾನದ ಗಳಿಕೆಯನ್ನೇ ವ್ಯಯಿಸುವ ಬಡ ಕುಟುಂಬಗಳು, ರೋಗ ಉಲ್ಬಣಿಸಿ ಆಸ್ಪತ್ರೆಯಲ್ಲಿ ಸಾವು ಸಂಭವಿಸಿ ಮೃತದೇಹವನ್ನು ಪಡೆದು ಕೊಂಡು ಬರಬೇಕಾದರೆ ಮನೆಯಲ್ಲಿ ಅಳಿದುಳಿದ ಚಿನ್ನ, ಜಾಗ, ಮನೆ ಮಾರಾಟ ಮಾಡುವುದರೊಂದಿಗೆ ಸಮೀಪದ ಸಂಬಂಧಿಗಳಿಂದ, ಬಂಧು ಮಿತ್ರರಿಂದ ಕೊನೆಗೆ ಸಾರ್ವಜನಿಕರಿಂದ ಬಹಿರಂಗವಾಗಿ ಸಹಾಯ ಯಾಚಿಸುವ ದಯನೀಯ ಪರಿಸ್ಥಿತಿಯನ್ನು ನೋಡುವಾಗ ಖೇದವಾ ಗುತ್ತದೆ.
ದುಡ್ಡಿದ್ದರೆ ಸಾವಿನಿಂದ ಪಾರಾಗಬಹುದಿತ್ತು, ಇನ್ನೂ ಹತ್ತಾರು ವರ್ಷ ಗಳ ಕಾಲ ಬದುಕಬಹುದಿತ್ತು ಎಂದು ರೋಗಿಗೆ ಅಂತಿಮ ಹಂತದಲ್ಲಿ ಅನಿಸುವುದು, ಆತನ ಸಂಬಂಧಿಗಳು ಹೇಗಾದರೂ ಮಾಡಿ ಬದುಕಿಸ ಬೇಕು ಎಂದು ಹೆಣಗಾಡುವುದು ಅದೆಂತಹಾ ಶೋಚನೀಯ ಗಳಿಗೆ ಯಾಗಿರಬಹುದು ಯೋಚಿಸಿ.
ಬದುಕಿನಲ್ಲಿ ಚೆಲ್ಲಾಟವಾಡುವ ಹಣ, ಸಾವಿನಲ್ಲೂ ಪ್ರಭಾವಶಾಲಿ ಯಾಗಿರುವುದು ಕಂಡು ಬರುತ್ತದೆ. ತ್ಯಾಗ, ನಿಸ್ವಾರ್ಥ ಮನೋಭಾವನೆ ಯಿಂದ ಕಾರ್ಯ ನಿರ್ವಹಿಸಬೇಕಾದ ಆಧುನಿಕ ಧನ್ವಂತರಿಗಳನ್ನು ಹಣದ ಗಂಟಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವುದು ಕಂಡು ಬರುತ್ತದೆ. ಮಾರಕ ರೋಗಗಳನ್ನು ಹಣ ಮಾಡುವ ದಂಧೆಯಾಗಿ ಪರಿ ವರ್ತಿಸಿ ಕೋಟ್ಯಾಂತರ ಡಾಲರ್‌ಗಳನ್ನು ಬಾಚುವ ವ್ಯಾಪಾರಿಗಳು ಜಗ ತ್ತಿನಾದ್ಯಂತ ಕಂಡು ಬರುತ್ತಾರೆ. ಔಷಧಿಗಳ ಮೇಲೆ ‘ಪೇಟೆಂಟ್’ ಉಪ ಕರಣಗಳ ಮೇಲೆ ‘ಪೇಟೆಂಟ್’ ಪಡೆದು ಅಂತಿಮವಾಗಿ ಅಸಂಖ್ಯಾತ ಮಾನವ ಜೀವಗಳೇ ಈ ಪೇಟೆಂಟ್‌ಗೆ ಬಲಿಯಾಗುವುದು ಕಂಡು ಬರುತ್ತಿದೆ. ಔಷಧಿ, ಔಷಧೋಪಕರಣಗಳನ್ನು ತಯಾರಿಸುವ ಕಂಪೆನಿ ಗಳು ಮಾನವ ಜೀವದ ಮೇಲೆ ಚೆಲ್ಲಾಟವಾಡುವುದಕ್ಕೆ ಎಷ್ಟು ಕಾರಣ ವಾಗುತ್ತದೋ ಜನರನ್ನು ಆಳುವ ಸರಕಾರಗಳು ಅಷ್ಟೇ ಪ್ರಮುಖವಾದ ಪಾತ್ರವನ್ನು ಇದರಲ್ಲಿ ಪಡೆದಿರುತ್ತವೆ.
ಸರಕಾರ ಮತ್ತು ಔಷಧಿ ತಯಾರಿಕಾ ಸಂಸ್ಥೆಗಳು ಮಾನವನ ಜೀವ ನದ ಮೇಲೆ ಹೇಗೆ ಚೆಲ್ಲಾಟವಾಡುತ್ತಿವೆ ಎಂಬುದಕ್ಕೆ ಒಂದು ಉದಾ ಹರಣೆಯಾಗಿ ಒಂದು ಸುದ್ದಿ ನಮ್ಮ ದೇಶದ ಪತ್ರಿಕೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿತು. ಈ ಸುದ್ದಿ ನಿಜವಾಗಿಯೂ ಕಾರ್ಯರೂಪಕ್ಕೆ ಬಂದರೆ ನಮ್ಮ ದೇಶದ ಬಡ ಜನತೆಗೆ ಇದೊಂದು ವರದಾನವಾಗಿಬಿಡುತ್ತದೆ. ಆದರೆ ಈ ಸುದ್ದಿ ಸುದ್ದಿಯಾಗಿಯೇ ಉಳಿದು ಹೋದರೆ ಔಷಧಿ ತಯಾ ರಿಕಾ ಸಂಸ್ಥೆ ಮತ್ತು ಸರಕಾರ ಮಾನವ ಜೀವದ ಮೇಲೆ ನಡೆಸುವ ಚೆಲ್ಲಾಟಗಳನ್ನು ನಾವು ಕಣ್ಣಾರೆ ಕಂಡೂ ಸಹಿಸಿಕೊಳ್ಳುವಂತಹಾ ದೌರ್ಭಾ ಗ್ಯವಂತರಾಗುತ್ತೇವೆ.
ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಕ್ಯಾನ್ಸರ್ ಎಂಬ ಮಾರಕ ರೋಗದಿಂದ ಬಳಲುತ್ತಿದ್ದಾರೆ. ಸಾಕಷ್ಟು ಸಂಖ್ಯೆ ಸಾವುಗಳೂ ಈ ರೋಗದಿಂದ ಸಂಭವಿಸುತ್ತದೆ. ಈ ರೋಗದ ಹೆಸರು ಕೇಳಿದ ಕೂಡಲೇ ರೋಗಿಯು ಅರ್ಧ ಸತ್ತು ಹೋಗುತ್ತಾನೆ. ಬಡವನೊಬ್ಬ ನಿಗೆ ಈ ರೋಗ ಬಂದರೆ ಪೂರ್ತಿಯಾಗಿ ಸಾಯುವುದೇ ಮೇಲು ಎಂದು ಆತನಿಗೆ ಅನಿಸಿದರೆ ಆಶ್ಚರ್ಯವಲ್ಲ. ಯಾಕೆಂದರೆ ಇದರ ವಿರುದ್ಧ ಹೋರಾಟ ಮಾಡಿ ಜೀವದೊಂದಿಗೆ ಕೊನೆಗೆ ಚಿಕಿತ್ಸೆಗೆ ಬೇಕಾದ ದುಡ್ಡು ಸಾಲದೆ ಮನೆ ಮಂದಿಯನ್ನು ಸಾಲದ ಶೂಲಕ್ಕೆ ಒಡ್ಡಬೇಕಾದ ಪರಿಸ್ಥಿತಿ ಇದೆ. ಇಂತಹಾ ಕ್ಯಾನ್ಸ್‌ರ್ ರೋಗಿಗಳ ಪಾಲಿಗೆ ವರದಾನವಾಗುವಂತಹಾ ಒಂದು ಸುದ್ದಿ ಇದು. ‘ಕ್ಯಾನ್ಸರ್ ರೋಗಿಗಳಿಗೆ ಅತ್ಯುತ್ತಮ ಎನಿಸಿದ ನೆಕ್ಸಾವರ್ ಮಾತ್ರೆಗಳ ೧೨೦ ಮಾತ್ರೆಗಳ ಡಬ್ಬದ ಬೆಲೆ ೨.೮೪ ಲಕ್ಷದಿಂದ ರೂ. ೮,೮೮೦ಕ್ಕೆ ಇಳಿಕೆ ಯಾಗಲಿದೆ’.
ಈ ಸುದ್ದಿಗೆ ಪೂರಕವಾಗಿ ಇನ್ನೆರಡು ವಿಚಾರಗಳು ಏನೆಂದರೆ ಕೇಂದ್ರ ಸರ್ಕಾರಿ ಔಷಧ ನಿಯಂತ್ರಣ ಸಂಸ್ಥೆ ಇಂಡಿಯನ್ ಪೇಟೆಂಟ್ ಕಾಯಿದೆ ಸೆಕ್ಷನ್ ೮೪ರ ಅನ್ವಯ ಮಾತ್ರೆಗಳ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡುವಂತೆ ಆದೇಶಿಸಲಾಗಿದೆ ಎಂಬುದು ಒಂದಾದರೆ. ಜೈವಿಕ ತಂತ್ರ ಜ್ಞಾನ ಆಧರಿಸಿದ ನೆಕ್ಸಾವರ್ ಮಾತ್ರೆಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ ಬಹುರಾಷ್ಟ್ರೀಯ ಕಂಪನಿ ಬಾಯರ್‌ಗೆ ಇದರಿಂದ ಭಾರೀ ಏಟು ಬಿದ್ದಿದೆ ಎಂಬುದು ಇನ್ನೊಂದು.
ಈ ಎರಡು ವಿಚಾರಗಳಿಂದ ರೋಗಗಳು ಮತ್ತು ಅವುಗಳ ನಿಯಂತ್ರ ಣದ ಕುರಿತು ಸರಕಾರ ಮತ್ತು ಔಷಧಿ ಕಂಪೆನಿಗಳು ಯಾವ ರೀತಿಯಲ್ಲಿ ವ್ಯವಹರಿಸುತ್ತದೆ ಎಂಬುದು ತಿಳಿದು ಬರುತ್ತದೆ. ಔಷಧಿ ಕಂಪೆನಿಯು ಕಡಿಮೆ ದರದಲ್ಲಿ ಸಿಗುವ ಔಷಧಿಯ ಬೆಲೆಯನ್ನು ಆಕಾಶಕ್ಕೇರಿಸಿ ಅದೆಷ್ಟು ದುಡ್ಡು ಸಂಪಾದಿಸಿದೆ, ಅದರೊಂದಿಗೆ ಅದೆಷ್ಟು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂಬ ವಿಚಾರ ಒಂದಾದರೆ. ಈ ರೀತಿಯ ಔಷಧಿಗ ಳನ್ನು ಸರಕಾರಗಳು ಆದೇಶ ಹೊರಡಿಸುವ ಮೂಲಕ ಸ್ವದೇಶಿ ಕಂಪೆನಿ ಗಳಿಗೆ ಅಂತಹ ಔಷಧಿಗಳನ್ನು ತಯಾರಿಸಲು ಅನುಮತಿ ನೀಡಬಹುದು ಎಂಬುದು ಇನ್ನೊಂದು. ಹಾಗಾದರೆ ಜಗತ್ತಿನಲ್ಲಿ ಜನರನ್ನು ಕಾಡುತ್ತಿರು ವುದು ರೋಗವೋ ಅಥವಾ ಬೇರೆ ಯಾವುದೋ? ಎಂದು ಅನಿಸುತ್ತದೆ.
ಬಲ್ಲ ಮೂಲಗಳ ಪ್ರಕಾರ ಈಗಾಗಲೇ ನೆಕ್ಸಾವರ್ ಮಾತ್ರೆಗಳ ಬೆಲೆ ಇಳಿ ದುಹೋಗಿದೆ. ಸರಕಾರದ ಪ್ರಕಾರ ಇದರಿಂದಾಗಿ ಕ್ಯಾನ್ಸರ್‌ರೋಗಿಗಳಿಗೆ ವರದಾನವಾಗಿದೆ. ಆದರೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಲೋಕದ ಸ್ವಾರ್ಥಿಗಳಿಂದ ಮಂಗಮಾಯವಾಗಿಬಿಟ್ಟು ಇದರ ಜಾಗದಲ್ಲಿ ಇನ್ನೊಂದು ದುಬಾರಿ ಮಾತ್ರೆ ಕಾಣಿಸಿಕೊಂಡರೆ ಎಂಬ ಸಂಶಯವೂ ಬರುತ್ತದೆ. ಯಾಕೆಂ ದರೆ ಯಾವನೇ ರೋಗಿ ತನ್ನ ತಿಳುವಳಿಕೆಯಿಂದೆ ಯಾವುದೇ ಔಷಧಿ ಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೆಕ್ಸಾವರ್ ಕ್ಯಾನ್ಸರ್‌ಗೆ ಒಳ್ಳೆಯದು ಎಂದು ಆತ ಅದನ್ನು ಔಷಧಿ ಅಂಗಡಿಯಿಂದ ಪಡೆದು ಸೇವಿಸುವಂತಿಲ್ಲ. ಯಾವುದಾದರೊಂದು ವೈದ್ಯರು ಅದನ್ನು ಆತನಿಗೆ ಬರೆದುಕೊಡಬೇಕು. ಕಮೀಷನ್ ಆಧಾರಿತ ಸ್ವಾರ್ಥಿ ವೈದ್ಯರುಗಳು ಅಗ್ಗದ ಮಾತ್ರೆಗಳನ್ನು ‘ಹಿತ್ತಲ ಮದ್ದು’ ಎಂದು ಬಿಟ್ಟರೆ? ಜನಮಾನಸದಲ್ಲೂ ಕೆಲವೊಂದು ಮಾನಸಿಕತೆ ಗಳು ತುಂಬಿಕೊಂಡಿರುತ್ತವೆ. ಯಾವುದು ಅಗ್ಗವೋ ಅದು ಪರಿಣಾಮ ಕಾರಿ ಅಲ್ಲ ಎಂದು ನಾವು ಭಾವಿಸಿಕೊಂಡಿರುತ್ತೇವೆ.
ಒಂದು ಕಾಲದಲ್ಲಿ ‘ಫ್ಲೂ’ನಂತಹಾ ಜ್ವರಗಳೂ ಮಾರಕವಾಗಿದ್ದವು. ಮಲೇರಿಯಾ, ಪ್ಲೇಗ್ ಇತ್ಯಾದಿಗಳಿಂದ ಸಾಕಷ್ಟು ಸಾವುಗಳು ಸಂಭವಿಸುತ್ತಿ ದ್ದವು. ವೈದ್ಯಕೀಯ ಸಂಶೋಧನೆಗಳ ಪರಿಣಾಮವಾಗಿ ಇವೆಲ್ಲಾ ಈಗ ಭೀಕರ ರೋಗಗಳು ಎಂದು ಅನಿಸುತ್ತಿಲ್ಲ. ಈಗ ಭೀತಿ ಹುಟ್ಟಿಸುವ ಕ್ಯಾನ್ಸ ರ್‌ಗೂ ಪರಿಣಾಮಕಾರಿ ಅಗ್ಗದ ಔಷಧಿಗಳು ಬಳಕೆಗೆ ಬಂದರೆ ಮುಂದಿನ ದಿನಗ ಳಲ್ಲಿ ಕ್ಯಾನ್ಸರ್ ಎಂಬ ರೋಗಕ್ಕೂ ಯಾರೂ ಭೀತಿ ಪಡುವ ಅಗತ್ಯ ಬಾರದು. ಇತರ ಹುಣ್ಣುಗಳಂತೆ ಇದು ಒಂದು ಗುಣಪಡಿಬಹುದಾದ ಹುಣ್ಣು ಎಂಬ ಪರಿಸ್ಥಿತಿ ಬಂದೊದಗಬೇಕಾಗಿದೆ. ಮೊತ್ತ ಮೊದಲಿಗೆ ವೈದ್ಯಕೀಯ ಲಾಬಿಯಿಂದ ಈ ರೋಗ ಮುಕ್ತವಾಗಬೇಕಾಗಿದೆ.
ಇದೇ ರೀತಿ ಹೃದಯರೋಗಗಳು ಒಂದು ರೀತಿಯ ದುಡ್ಡು ಮಾಡುವ ದಂಧೆಯಾಗಿಬಿಟ್ಟಿದೆ. ಹೃದಯ ಭಾಗದ ಸಣ್ಣ ಪುಟ್ಟ ತೊಂದರೆಗಳಿಗೂ ಲಕ್ಷ ಲಕ್ಷ ಸುರಿಯಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಸಂಬಂಧ ಪಟ್ಟ ಸಲ ಕರಣೆಗಳು ದುಬಾರಿಯಾಗಿರುವ ಕಾರಣ ಈ ಅಪರೇಷನ್‌ಗಳು ದುಬಾರಿ ಯಾಗುತ್ತದೆ ಎಂಬ ಸಿದ್ಧ ಸಮಜಾಯಿಷಿ ಕೇಳಿ ಬರುತ್ತದೆ. ಈ ಸಲಕರಣೆ ಗಳನ್ನೂ ವಿದೇಶದಿಂದ ತರಬೇಕಾದ ಅನಿವಾರ‍್ಯತೆ ಇದೆ ಎಂದು ಹೇಳ ಲಾಗುತ್ತಿದೆ. ಇಂತಹಾ ಸಲಕರಣೆಗಳು ನಮ್ಮ ದೇಶದಲ್ಲೇ ಉತ್ಪಾದನೆಯಾ ದರೆ ಮುಂದಿನ ದಿನಗಳಲ್ಲಿ ಹೃದಯ ರೋಗವೂ ಅಷ್ಟೇನೂ ದೊಡ್ಡ ರೋಗ ಎಂದು ಅನಿಸಲಿಕ್ಕಿಲ್ಲ.
ಪ್ರತಿಯೊಂದು ರೋಗವೂ ವೈದ್ಯಕೀಯ ಲೋಕದ ಸ್ವಾರ್ಥಿಗಳಿಂದ, ವ್ಯಾಪಾರಿಗಳಿಂದ ಮುಕ್ತವಾಗಿಬಿಡಲಿ ಎಂದು ಹೇಳುವುದಕ್ಕಿಂತ ಮುಂಚಿತ ವಾಗಿ ಇಂತಹಾ ಮಾರಕ ರೋಗಗಳು ಯಾರಿಗೂ ಬಾರದೇ ಇರಲಿ ಎಂದು ಹಾರೈಸಬೇಕಾಗಿದೆ.

ಹಳದಿ ಕನ್ನಡಕ ಕಳಚಿದರೆ ಸತ್ಯಗೋಚರವಾಗುತ್ತದೆ

Posted by JAYAKIRANA Kirana on | 0 comments | Leave a comment...




ಬುರ್ಖಾದ ಸಮರ್ಥಕರಾಗಿದ್ದೂ ರಿಯಾನ ಎಂಬ ಹೆಣ್ಣು ಬುರ್ಖಾ ಧರಿಸಿದ್ದಾಗ ಬುರ್ಖಾ ಸಮರ್ಥಕರಾದ ಕೆಲ ಯುವಕರು ಅವಳಿಗೆ ಪೀಡನೆ ಕೊಡಲು ಶುರುಮಾಡಿದಾಗ ಇಖ ಬುರ್ಖಾ ಸಮರ್ಥಕರಿಗೆ ಬೆಂಬಲ ಕೊಡದೆ ರಿಯಾನಾಳಿಗೆ ಬೆಂಬಲ ಕೊಡುತ್ತಾರೆ. ಇದಲ್ಲವೇ ವಿಶೇಷ? ಇದಲ್ಲವೇ ಒಬ್ಬ ನೈಜ ಚಿಂತಕನ ಲಕ್ಷಣ?

ದೀಪಿಕಾ.ಎಸ್.ಎನ್, ಮುಲ್ಕಿ
ಮಾ ೮ರ ಚಾವಡಿಯಲ್ಲಿ ಪ್ರಕಟವಾದ ಎ. ವೆಂಕಟೇಶ್ ರಾವ್ ಪಡೀಲ್ ರವರ ‘ಇತರರ ಭಾವನೆಗಳನ್ನು ಗೌರವಿಸಬೇಕು’ ಎಂಬ ಬರಹಕ್ಕೆ ಪ್ರತಿಕ್ರಿಯೆ. ವೆಂಕಟೇಶರು ಅಂಕಣಕಾರರ ಅಧಿಕಾರ ವ್ಯಾಪ್ತಿ, ಸಂವಿಧಾನ ನೀಡಿರುವ ಸ್ವಾತಂ ತ್ರ್ಯದ ಬಗ್ಗೆ ತನ್ನ ಪತ್ರದ ಆದಿಯಲ್ಲೇ ಪ್ರಸ್ತಾಪಿಸಿದ್ದಾರೆ. ಆದರೆ ನನ್ನ ಅಭಿಪ್ರಾಯ ಪ್ರಕಾರ ಅವರ ಅಭಿಪ್ರಾಯದಲ್ಲಿ ಬಹಳಷ್ಟು ದೋಷಗಳಿವೆ. ನನ್ನ ಪ್ರಕಾರ ಯಾವುದೇ ಧರ್ಮದಲ್ಲಿ ಇರುವ ಮೂಢನಂಬಿಕೆ, ಕಂದಾಚಾರ, ವಾಮಾಚಾರ, ಅನ್ಯಾಯ, ಅಕ್ರಮ, ಶೋಷಣೆ, ವಂಚನೆ, ದಬ್ಬಾಳಿಕೆ ಮೊದಲಾದವುಗಳನ್ನು ಯಾರಿಗೆ ಬೇಕಾದರೂ ಟಿಪ್ಪಣಿ ಮಾಡಬಹುದು. ವಿಮರ್ಶೆ ಮಾಡಬಹುದು. ಖಂಡಿಸಲೂಬಹುದು. ಹೇಳಬೇಕಾದ ವೇದಿಕೆಯಲ್ಲಿ ಹೇಳಬೇಕಾದ ಶೈಲಿಯಲ್ಲಿ ಹೇಳಬೇಕಾದ ಸಮಯದಲ್ಲಿ ಎಂಥದನ್ನೂ ಹೇಳಬಹುದು. ಆದರೆ ಆರೆಸ್ಸೆಸ್ ಉಪ್ಪಿನಂಗಡಿಯಲ್ಲಿ ಭಾಷಣ ಮಾಡಿದಂಥಲ್ಲ. ಮೊದಲೇ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಆರ್‌ಎಸ್‌ಎಸ್ ಮಾತನಾಡುವಾಗ ಬಹಳ ಜಾಗ್ರತೆ ವಹಿಸಬೇಕಾದುದು ಅದರ ಕರ್ತವ್ಯವಾಗಿದೆ. ಅಂಥಾ ಯಾವ ಮುಂಜಾ ಗ್ರತೆ ಕ್ರಮವನ್ನೂ ವಹಿಸಿದೆ ಉದ್ರೇಕಕಾರಿಯಾಗಿ ಮಾತನಾಡಿದ್ದೇ ವಿವಾದ ಭುಗಿ ಲೇಳಲು ಕಾರಣ. ಆರೆಸ್ಸೆಸ್‌ನವರೂ ಇಖರಂತೆ ಯಾವುದಾದರೂ ಪತ್ರಿಕೆಯಲ್ಲಿ ಲೇಖನ ಬರೆದು ಟೀಕೆ ಟಿಪ್ಪಣಿ ಮಾಡಿದ್ದರೆ ಅದೆಲ್ಲ ದೊಡ್ಡ ವಿಷಯವೇ ಆಗು ತ್ತಿರಲಿಲ್ಲ.
ನಾನು ನನ್ನ ಹಿಂದಿನ ಪತ್ರದಲ್ಲಿ ಬ್ರಾಹ್ಮಣರಿಂದ ಹಿಂದುಗಳಿಗೆ ಮಾತ್ರ ನೋವಾಗಿದೆ. ನಿಮಗೆ ಯಾಕೆ ತಲೆಬಿಸಿ. ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ವೆಂಕಟೇಶ್‌ರವರು ಇಖರಲ್ಲಿ ಕೇಳಿದ್ದರೆಂದು ಬರೆದಿದ್ದೆ. ಅದಕ್ಕೆ ವೆಂಕ ಟೇಶ್‌ರವರು ತಾನು ಹಾಗೆ ಎಲ್ಲಿ ಬರೆದಿದ್ದೇನೆಂದು ಎರಡೆರಡು ಬಾರಿ ಓದಿದ ರಂತೆ. ವೆಂಕಟೇಶ್‌ರವರು ತನ್ನ ಮೊದಲ ಬರಹದಲ್ಲಿ ಮುಗ್ಧ ಪ್ರಾಣಿಗಳ ಕುತ್ತಿಗೆ ಮೇಲೆ ಪಿಟೀಲು ಬಾರಿಸುವ ಬದಲು ನಿಮ್ಮ ಕುತ್ತಿಗೆ ಮೇಲೂ ಪಿಟೀಲು ಬಾರಿಸಿ ನೋಡಿ. ಆಗ ಅದರ ಕಷ್ಟ ಗೊತ್ತಾಗುತ್ತೆ, ಪ್ರಭಾಕರ್ ಭಟ್ ಹೇಳಿದ್ದು ಅದನ್ನೇ ಎಂದಿದ್ದರು. ನಿಜ ಹೇಳಬೇಕೆಂದರೆ ಉಪ್ಪಿನಂಗಡಿಯಲ್ಲಿ ಭಟ್ಟರು ಆ ರೀತಿ ಪಿಟೀಲು ಬಗ್ಗೆ ಮಾತೇ ಆಡಿರಲಿಲ್ಲ. ಆದರೆ ಭಟ್ಟರು ಹಾಗೆ ಹೇಳಿದ್ದರೆಂದು ರಾವ್‌ರವರು ಹೇಳಿದ್ದರು. ಯಾಕೆ ಸುಳ್ಳು ಹೇಳುತ್ತಿದ್ದೀರಿ ಎಂದು ನನಗೆ ರಾವ್ ರೊಂದಿಗೆ ಪ್ರಶ್ನಿಸಬಹುದಾಗಿತ್ತು. ಆದರೆ ನಾನು ಹಾಗೆ ಪ್ರಶ್ನಿಸಲಿಲ್ಲ. ಯಾಕೆಂ ದರೆ ರಾವ್‌ರವರು ಪ್ರಭಾಕರ್ ಭಟ್ಟರ ಮಾತಿನ ಹಿಂದಿನ ಧ್ವನಿಯನ್ನು ಪ್ರಕಟಿತ ರೂಪಕ್ಕೆ ತಂದಿದ್ದಾರಷ್ಟೆ. ನಾನೂ ಹಾಗೆಯೇ ರಾವ್‌ರವರ ಮಾತಿನ ಹಿಂದಿ ರುವ ಧ್ವನಿಯನ್ನು ಮೂರ್ತರೂಪಕ್ಕೆ ತಂದಿದ್ದೆ. ಆದರೆ ಅದನ್ನು ಅರ್ಥಮಾಡಿ ಕೊಳ್ಳದ ರಾವ್ ತನ್ನ ಬರಹವನ್ನು ಎರಡೆರಡು ಬಾರಿ ಓದಿದರಂತೆ. ಇಷ್ಟು ಸಣ್ಣ ವಿಚಾರವನ್ನು ಅರ್ಥ ಮಾಡಿಕೊಳ್ಳದ ರಾವ್ ಬೇರೆ ಸಂಕೀರ್ಣ ವಿಚಾರಗಳನ್ನೆಲ್ಲ ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ?
‘ಇಖ ತನ್ನ ಸಮುದಾಯದವರಿಗೊಂದು ಮಾನದಂಡ ಮತ್ತು ಹಿಂದೂ ಧರ್ಮದ ಮುಖಂಡರಿಗೆ ಕೀಳು ಅಭಿರುಚಿಯ ಇನ್ನೊಂದು ಮಾನದಂಡ ಬಳ ಸುತ್ತಾರೆ’ ಎಂದು ಆರೋಪಿಸಿದ್ದಾರೆ. ಆದರೆ ಈ ವಿಷಯ ಸಂಪೂರ್ಣ ಸತ್ಯ ವಲ್ಲ. ಯೋಗಗುರು ರಾಮ್‌ದೇವ್, ನಿತ್ಯಾನಂದ ಸ್ವಾಮಿ, ಸಾಯೀಬಾಬಾ ಮೊದ ಲಾದ ವಿವಾದಿತ ಪುರುಷರನ್ನು ಇಖ ಅಣಕಿಸಿದ್ದಾರೆ. ಅದರಲ್ಲಿ ತಪ್ಪೇನು? ಅಸ ಹಜ ಏನು? ಇಂಥಾ ವಿವಾದಿತ ಪುರುಷರನ್ನು ದೇಶದ ಬಹುಪಾಲು ಜನರು ಖಂಡಿಸಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಬೆಂಬಲಿಸಿದ್ದಾರೆ. ರಾಮ್‌ದೇವ ರನ್ನು ವಿಮರ್ಶಿಸಿದರೆ ಹಿಂದೂ ಧರ್ಮವನ್ನು ಹೇಗೆ ಅಣಕಿಸಿದಂತಾಗುತ್ತದೆ? ಹಿಂದೆ ತಮಿಳುನಾಡಿನಲ್ಲಿ ಕಂಚಿ ಕಾಮಕೋಟಿ ಶ್ರೀಜಯೇಂದ್ರ ಸ್ವಾಮೀಜಿಯ ವರನ್ನು ಆಶ್ರಮದ ಅವ್ಯವಹಾರ ಸಂಬಂಧ ತಮಿಳುನಾಡು ಪೊಲೀಸರು ಬಂಧಿ ಸಿದಾಗ ಅದು ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂಬ ಕೂಗು ಒಂದು ಹಿತಾಸಕ್ತಿಯಿಂದ ಎಬ್ಬಿಸಲ್ಪಟ್ಟಿತ್ತು. ಆಗ ನಿಡುಮಾಮಿಡಿ ಶ್ರೀಚನ್ನಮಲ್ಲ ಸ್ವಾಮೀಜಿ ಯವರು ಕಂಚಿ ಸ್ವಾಮಿಯನ್ನು ಬಂಧಿಸಿದರೆ ಅದು ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂದಾಗುವುದು ಹೇಗೆ ಎಂದು ಪ್ರಶ್ನಿಸಿದ್ದರು. ರಾವ್‌ರವರೇ, ನಿಮಗೆ ತಲೆಗೆ ಹೋಯಿತಾ? ನಿಮ್ಮ ಇಂಥಾ ಬರಹಗಳು ಇಖರಂಥಾ ಮುಸ್ಲಿಂ ಅಂಕಣ ಕಾರರು ಯಾವ ಕಾರಣಕ್ಕೂ ಹಿಂದೂಗಳನ್ನು ವಿಮರ್ಶಿಸಬಾರದು ಎಂಬ ಸಂವಿ ಧಾನ ವಿರೋಧಿ ಬೇಡಿಕೆಯನ್ನು ತೀವ್ರವಾಗಿ ವ್ಯಕ್ತಪಡಿಸುವಂತಿದೆ. ಬರಹಕ್ಕೆ ಪೂರ ಕವಾಗಿ ವ್ಯಂಗ್ಯ, ಹಾಸ್ಯ ಬಳಸುವ ಹಕ್ಕು ಎಲ್ಲರಿಗೂ ಇದೆ. ನಿಮಗೂ ಇದೆ. ನೀವೂ ನಿಮ್ಮ ಬರಹಗಳಲ್ಲಿ ಯಥೇಚ್ಛ ಹಾಸ್ಯ, ವ್ಯಂಗ್ಯ, ಕೊಂಕು ನುಡಿಗಳನ್ನು ಬಳಸಿ ಲ್ಲವೇ? ನಿಮ್ಮ ಇಷ್ಟರವರೆಗಿನ ಬರಹಗಳನ್ನು ಇನ್ನೊಮ್ಮೆ ಎರಡೆರಡು ಸಲ ಓದಿ ನೋಡಿ. ಅದರಲ್ಲಿ ಎಷ್ಟು ಕೊಂಕು ನುಡಿಗಳಿಲ್ಲ. ವ್ಯಂಗ್ಯ ಮಾತುಗಳಿಲ್ಲ. ಪರಿಶೀಲಿಸಿ ನೋಡಿ. ಅಂಥಾ ಸಂದರ್ಭ ನಿಮ್ಮ ಬರಹಗಳಿಗೆ ಯಾರಾದರೂ ಆಕ್ಷೇಪ ವ್ಯಕ್ತಪ ಡಿಸಿದ್ದಾರೆಯೇ? ಇಖ ಕೊಂಕು ನುಡಿಗಳನ್ನು ಆಡಿದ ಮಾತ್ರಕ್ಕೆ ಒಬ್ಬ ಬಲಹೀನ ವ್ಯಕ್ತಿಯಂತೆ ನೊಂದುಕೊಳ್ಳುವುದು ಯಾಕೆ? ಇನ್ನೊಬ್ಬನಿಗೆ ಕೊಂಕು ನುಡಿಗಳನ್ನು ವ್ಯಂಗ್ಯ ಮಾತುಗಳನ್ನು ಪ್ರಯೋಗಿಸುವಾಗ ತಾನು ಇತರರಿಂದ ಅಂಥದ್ದನ್ನೇ ಸ್ವೀಕರಿ ಸಲು ಸಿದ್ಧರಿರಬೇಕಲ್ಲವೇ?
ಇನ್ನು ರಿಯಾನ ಎಂಬ ಹೆಣ್ಣಿನ ಬಗ್ಗೆ ಇಖ ಬರೆದ ಬರಹವನ್ನು ಮೆಚ್ಚಿದ್ದರೂ ಅಲ್ಲಿಯೂ ಹುಳುಕು ಹುಡುಕಿದ್ದೀರಿ. ಇಖ ರಿಯಾನಳಿಗೆ ಬೆಂಬಲ ಕೊಟ್ಟಿದ್ದರೂ ಅವರು ಬುರ್ಖಾ ಮುಸ್ಲಿಮರ ಸಂಪ್ರದಾಯ, ಬುರ್ಖಾ ಧಾರಣೆ ಮುಸ್ಲಿಮರಿಗೆ ಖಡ್ಡಾಯ ಎಂದು ಸಮರ್ಥಿಸಿದ್ದಾರೆ ಎಂದು ಆರೋಪಿಸಿದ್ದೀರಿ. ನಾನು ಹೇಳುತ್ತೇನೆ, ನೀವು ಇಲ್ಲಿಯೂ ಸಣ್ಣತನ ಪ್ರದರ್ಶಿಸಿದ್ದೀರಿ. ನನ್ನ ಪ್ರಕಾರ ಇಖ ಒಬ್ಬ ಬುರ್ಖಾ ವಿರೋಧಿ ಆಗಿದ್ದು, ಆ ಕಾರಣದಿಂದಾಗಿ ಅವರು ರಿಯಾನಾಳಿಗೆ ಬೆಂಬಲ ಕೊಟ್ಟಿ ದ್ದರೆ ಅದರಲ್ಲಿ ವಿಶೇಷ ಎನಿಸುವಂಥದ್ದು ಏನೂ ಇರುತ್ತಿರಲಿಲ. ಯಾಕೆಂದರೆ ಅವರಿಗೆ ಬುರ್ಖಾಧಾರಣೆ ಮೊದಲೇ ಇಷ್ಟವಿಲ್ಲದ ಕಾರ್ಯ, ಹಾಗಾಗಿ ಅವರು ಬುರ್ಖಾ ವಿರೋಧಿಗೆ ಬೆಂಬಲಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಇಖ ಬುರ್ಖಾದ ಸಮರ್ಥಕರಾಗಿದ್ದೂ ರಿಯಾನ ಎಂಬ ಹೆಣ್ಣು ಬುರ್ಖಾ ಧರಿಸಿದ್ದಾಗ ಬುರ್ಖಾ ಸಮರ್ಥಕರಾದ ಕೆಲ ಯುವಕರು ಅವಳಿಗೆ ಪೀಡನೆ ಕೊಡಲು ಶುರುಮಾಡಿದಾಗ ಇಖ ಬುರ್ಖಾ ಸಮರ್ಥಕರಿಗೆ ಬೆಂಬಲ ಕೊಡದೆ ರಿಯಾನಾಳಿಗೆ ಬೆಂಬಲ ಕೊಡು ತ್ತಾರೆ. ಇದಲ್ಲವೇ ವಿಶೇಷ? ಇದಲ್ಲವೇ ಒಬ್ಬ ನೈಜ ಚಿಂತಕನ ಲಕ್ಷಣ? ನೀವು ಯಾಕೆ ಅರ್ಥಮಾಡಿಕೊಳ್ಳಲಿಲ್ಲ? ರಾವ್‌ರವರೇ, ಒಬ್ಬ ಬ್ರಾಹ್ಮಣನಾಗಿದ್ದು ತನ್ನ ಸಮುದಾಯದ ಪಾರುಪತ್ಯವನ್ನು ಜಾತಿಪ್ರೇಮದಿಂದ ಕುರುಡನಾಗಿ ಸಮರ್ಥಿಸಿದ ನಿಮಗೂ ತನಗಿಷ್ಟವಿಲ್ಲದ ಕಾರ್ಯವೊಂದನ್ನು ಯಾವುದೋ ಮೂಲೆಯ ಹೆಣ್ಣೋ ರ್ವಳು ಮಾಡಿದಾಗ ಅವಳ ವ್ಯಕ್ತಿ ಸ್ವಾತಂತ್ರ್ಯವನ್ನು ಮನ್ನಿಸಿ ಅವಳಿಗೆ ಬೆಂಬಲ ಕೊಟ್ಟ ಇಖರಿಗೂ ವ್ಯತ್ಯಾಸ ಬಹಳವಿದೆ. ನಿಮ್ಮ ಹಳದಿ ಕನ್ನಡಕ ಕಳಚಿದರೆ ಅದು ನಿಮಗೆ ಗೋಚರವಾಗುತ್ತದೆ.

ಕೃತಕ ಗರ್ಭಧಾರಣೆಯಿಂದ ಮಗು ಪಡೆಯಬಹುದಾಗಿದೆ

Posted by JAYAKIRANA Kirana on | 0 comments | Leave a comment...


ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೮ರ ಹರೆಯದ ಯುವಕ. ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ನಾನು ಎಷ್ಟು ಪ್ರಯತ್ನ ಪಟ್ಟರೂ ಮಕ್ಕಳಾ ಗಿಲ್ಲ. ಇದರಿಂದ ನನಗೆ ಮತ್ತು ನನ್ನ ಪತ್ನಿಗೆ ನಿರಾಶೆಯಾಗಿದೆ. ವೈದ್ಯ ರಲ್ಲಿ ಪರೀಕ್ಷೆ ನಡೆಸಿದ ವೇಳೆ ನನ್ನಲ್ಲೇ ಸಮಸ್ಯೆ ಇರುವುದಾಗಿ ತಿಳಿದು ಬಂತು. ನಾವು ವಾರಕ್ಕೆ ನಾಲ್ಕು ಬಾರಿಯಂತೆ ಲೈಂಗಿಕ ಕ್ರಿಯೆ ನಡೆ ಸುತ್ತೇವೆ. ಆದರೆ ವೈದ್ಯಕೀಯ ಟೆಸ್ಟ್ ಪ್ರಕಾರ ನನ್ನ ವೀರ್ಯಾಣು ಫಲಪ್ರದವಾಗಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ವೈದ್ಯರು ನನಗೆ ಕೃತಕ ವೀರ್ಯ ಧಾರಣೆ ಮಾಡಿಸಿಕೊಳ್ಳಿ ಎಂದಿದ್ದಾರೆ. ನನಗೆ ವೀರ್ಯ ದಾನ ಮತ್ತು ವೀರ್ಯಬ್ಯಾಂಕ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ವಿನಂತಿ.
ಸಲಹೆ: ಮುಂದುವರಿದ ನಗರಗಳಲ್ಲಿ ವೀರ್ಯದಾನ ಮಾಡುವ ಬಹಳಷ್ಟು ಮಂದಿ ಪುರುಷರಿದ್ದಾರೆ. ಇವರು ದೃಢಕಾಯರಾಗಿದ್ದು, ಮಾನಸಿಕ ಆರೋಗ್ಯವಂತರಾಗಿರುತ್ತಾರೆ. ಏಡ್ಸ್, ವಿ.ಡಿ. ಹೆಪಟೈ ಟಿಸ್ ಇತ್ಯಾದಿ ರೋಗಗಳಿವೆಯೇ ಎಂದು ಪರೀಕ್ಷಿಸಿಕೊಂಡು ಯಾವುದೇ ರೋಗವನ್ನು ಹೊಂದಿರದವರಾಗಿರುತ್ತಾರೆ. ನಿಗದಿತ ಸಮಯದ ಅವಧಿಯಲ್ಲಿ ವೀರ್ಯದಾನಿ ಪುರುಷರು ತಮ್ಮ ವೀರ್ಯ ವನ್ನು ದಾನ ಮಾಡುತ್ತಾರೆ. ವೀರ್ಯ ಬ್ಯಾಂಕ್‌ಗಳಲ್ಲಿ ಇಂತಹ ದಾನಿಗಳ ವೀರ್ಯವನ್ನು ಸಂಸ್ಕರಿಸಿ, ವೀರ್ಯಾಣುಗಳನ್ನು ಬೇರ್ಪ ಡಿಸಿ, ಅವುಗಳನ್ನು ಸಣ್ಣ ನಳಿಕೆಗಳಲ್ಲಿ ಸೀಲ್ ಮಾಡಿ, ಹೆಸರು, ಸಂಖ್ಯೆ ಅಂಟಿಸಲಾಗುತ್ತದೆ. ನಂತರ ಅವುಗಳನ್ನು ದ್ರವೀಕರಿಸಿದ ನೈಟ್ರೋಜನ್ ಶೈತ್ಯಾಗಾರದಲ್ಲಿ ೧೯೬ ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಹೀಗೆ ಸಂಗ್ರಹಿಸಿದ ವೀರ್ಯಾಣುಗಳು ಸುಮಾರು ೩೦ ವರ್ಷಗಳ ಕಾಲ ಜೀವಂತ ವಾಗಿರುತ್ತದೆ. ಇಲ್ಲಿ ವೀರ್ಯ ದಾನಿಯನ್ನು ಎಲ್ಲಾ ಬಗೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ವೀರ್ಯವನ್ನು ಪಡೆಯಲಾಗುತ್ತದೆ. ಕೃತಕ ಗರ್ಭಧಾರಣೆಗೆ ಮುನ್ನ ಮಹಿಳೆಯು ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವೈದ್ಯಕೀಯ ತಪಾಸಣೆಯ ಮೂಲಕ ಯಾವುದೇ ರೋಗವಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು. ರೋಗವಿದ್ದರೆ ಅದನ್ನು ಗುಣಪಡಿಸಿ ನಂತರವಷ್ಟೇ ಕೃತಕ ಗರ್ಭ ಧಾರಣೆಗೊಳಪಡಿ ಸಬೇಕು. ಮಹಿಳೆಯ ಅಂಡಾಶಯವನ್ನು ಅಧ್ಯಯನ ಮಾಡುವ ಮೂಲಕ, ಸಾಮಾನ್ಯ ವಾಗಿ ಸ್ತ್ರೀಯರಲ್ಲಿ ೧೩ರಲ್ಲಿ ೧೬ನೇ ದಿನಗಳ ಒಳಗೆ ಅಂಡಾಣು ಉತ್ಪಾದನೆಯಾಗುವ ದಿನವನ್ನು ನಿಗದಿ ಪಡಿಸಲಾಗುತ್ತದೆ. ಅಂಡಾಣು ಒಡೆದ ದಿನವನ್ನು ಸ್ಕ್ಯಾನಿಂಗ್‌ನಲ್ಲಿ ಗಮನಿಸಿ, ಆ ವೇಳೆಯಲ್ಲಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಒಂದು ವೇಳೆ ಮಹಿಳೆಯ ಅಂಡೋತ್ಪಾದನೆ ಕುಂಠಿತಗೊಂಡಿದ್ದರೆ, ಮಾತ್ರೆ ಅಥವಾ ಚುಚ್ಚುಮದ್ದು ಕೊಟ್ಟು ಅಂಡಾಣು ಒಡೆಯುವಂತೆ ಮಾಡಲಾಗುತ್ತದೆ.
ಕೃತಕ ಗರ್ಭಧಾರಣೆಯ ವಿಧಾನ:
ಮಹಿಳೆಯಲ್ಲಿ ಅಂಡಾಣು ಉತ್ಪಾದನೆಯ ದಿನವನ್ನು ಸ್ಕ್ಯಾನಿಂಗ್ ಮೂಲಕ ಗಮನಿಸಿ, ಸಂಸ್ಕರಿಸಿದ ವೀರ್ಯವನ್ನು ವೀರ್ಯ ಬ್ಯಾಂಕ್ ನಿಂದ ಪಡೆದುಕೊಂಡು ಸಿರಿಂಜ್‌ನಲ್ಲಿ ತುಂಬಿಸಲಾಗುತ್ತದೆ. ಬಳಿಕ ನಳಿಕೆಯ ಮೂಲಕ ಅದನ್ನು ಮಹಿಳೆಯ ಗರ್ಭಕೋಶಕ್ಕೆ ಹಾಯಿ ಸಲಾಗುತ್ತದೆ. ಇದರಲ್ಲಿ ಯಾವುದೇ ನೋವುಂಟಾಗುವ ಸಂಭವ ವಿಲ್ಲ. ಮಹಿಳೆಯನ್ನು ಸುಮಾರು ೩೦ ನಿಮಿಷಗಳ ಕಾಲ ಮಲಗಿರು ವಂತೆ ಹೇಳಿ ನಂತರ ಮನೆಗೆ ಕಳುಹಿಸಲಾಗುತ್ತದೆ.
ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಇಲ್ಲಿ ವೀರ್ಯ ದಾನಿಯ ಹೆಸರನ್ನು ಯಾವುದೇ ಕಾರಣಕ್ಕೂ ಬಹಿ ರಂಗಪಡಿಸಲಾಗುವುದಿಲ್ಲ. ಗರ್ಭಧಾರಣೆಯ ಬಳಿಕ ವಿಶ್ರಾಂತಿ ಅನ ಗತ್ಯ. ಗಂಡ-ಹೆಂಡತಿಯ ನಡುವೆ ಲೈಂಗಿಕ ಕ್ರಿಯೆ ನಡೆಸುವುದಕ್ಕೂ ಇದು ಅಡ್ಡಿಯಾಗುವುದಿಲ್ಲ. ಒಂದೇ ಬಾರಿ ಗರ್ಭಧಾರಣೆ ಮಾಡು ವುದರಿಂದ ಗರ್ಭ ನಿಲ್ಲಬಹುದು. ಒಂದರಿಂದ ಆರು ತಿಂಗಳವರೆಗೆ ಕಾಯುವುದು ಅವಶ್ಯಕ. ಒಂದು ವೇಳೆ ಇದೂ ಸಾಧ್ಯವಾಗದೇ ಇದ್ದರೆ, ಮಹಿಳೆಯನ್ನು ಮತ್ತೊಮ್ಮೆ ಸಂಪೂರ್ಣ ತಪಾಸಣೆಗೆ ಒಳ ಪಡಿಸ ಬೇಕಾಗುತ್ತದೆ. ನೀವು ಇದು ಸಾಧ್ಯವೇ ಎಂದು ಇಬ್ಬರೂ ಚರ್ಚಿಸಿ. ಅಸಾಧ್ಯವಾದಲ್ಲಿ ದತ್ತು ಪಡೆಯುವುದೇ ಒಳ್ಳೆಯದು. ಹುಟ್ಟಿದ ಮಗುವನ್ನು ಕಾನೂನು ಪ್ರಕಾರ ದತ್ತು ಪಡೆಯುವುದರಿಂದ ಯಾವುದೇ ತೊಂದರೆಯಾಗದು.

17-03-2012

Posted by JAYAKIRANA Kirana on | 0 comments | Leave a comment...


  • ಮೇಷ : ಹಿತಶತ್ರುಗಳಿಂದ ತೊಂದರೆ ಇದೆ.
  • ವೃಷಭ : ಆದಾಯಕ್ಕಿಂತ ಖರ್ಚು ಜಾಸ್ತಿ ಆಗಲಿದೆ.
  • ಮಿಥುನ : ಕೆಲಸದಲ್ಲಿ ಹೆಚ್ಚಿನ ಉತ್ಸಾಹ ಇರುತ್ತದೆ.
  • ಕರ್ಕಾಟಕ : ಉದ್ಯೋಗದಲ್ಲಿ ಸಂತಸ ಇರುತ್ತದೆ.
  • ಸಿಂಹ : ಪಾಲುಗಾರಿಕೆ ವ್ಯಾಪಾರದಲ್ಲಿ ಲಾಭ
  • ಕನ್ಯಾ : ಮನೆಯ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ.
  • ತುಲಾ : ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
  • ವೃಶ್ಚಿಕ : ಹಣದ ವಿಚಾರದಲ್ಲಿ ವಾದ ವಿವಾದಗಳು ನಡೆಯುತ್ತದೆ.
  • ಧನು : ಅನಾವಶ್ಯಕ ತಿರುಗಾಟ ಇರುತ್ತದೆ.
  • ಮಕರ : ಹಿರಿಯ ಬಂಧುಗಳಿಗೆ ಅನಾರೋಗ್ಯ ಉಂಟಾಗುತ್ತದೆ.
  • ಕುಂಭ : ವಿಷ ಜಂತುಗಳಿಂದ ಅಪಾಯವಾಗುವ ಸಂಭವ ಇದೆ.
  • ಮೀನ : ಹಿಂದಿನ ಸಮಸ್ಯೆಗಳು ಬಗೆಹರಿಯುವುದು.

17-03-2012

Posted by JAYAKIRANA Kirana on | 0 comments | Leave a comment...

  1. ಮಂಗಳೂರು: ಆಫೀಸ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೮೯೦೪೨೧೧೯೯೮.
  2. ಮೂಡಬಿದ್ರೆ: ಟೈಲರ್ ಅಂಗಡಿಗೆ ಟೈಲರ್ ಬೇಕು ೯೭೪೧೧೩೧೩೭೧.
  3. ಮಂಗಳೂರು: ಮಿಲಾಗ್ರೀಸ್‌ನ ಸ್ಟುಡಿಯೋಗೆ ಯುವತಿ ಬೇಕು ೯೮೪೫೪೦೩೩೪೮.
  4. ಸುರತ್ಕಲ್: ಟಯರ್ ಪಂಕ್ಚರ್ ಅಂಗಡಿಗೆ ಜನ ಬೇಕು ೯೮೪೫೧೨೧೬೩೧.
  5. ಮಂಗಳೂರು: ಟೈಲರಿಂಗ್ ಶಾಪ್‌ಗೆ ಸ್ಟಿಚ್ಚಿಂಗ್ ಗೊತ್ತಿರುವ ಲೇಡಿ ಟೈಲರ್ ಬೇಕು ೯೫೯೧೦೪೫೮೮೧.
  6. ಕೊಟ್ಟಾರ: ಫರ್ನಿಚರ್ ಅಂಗಡಿಗೆ ಜನ ಬೇಕು ೯೩೪೨೨೫೬೪೯೪.
  7. ಮಂಗಳೂರು: ಬಲ್ಮಠ ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
  8. ಮಂಗಳೂರು: ಅಟೋಮೊಬೈಲ್ ಸಂಸ್ಥೆಗೆ ಯುವಕರು ಬೇಕು ೯೪೪೮೧೫೯೧೩೦.
  9. ಮಂಗಳೂರು: ಎಲೆಕ್ಟ್ರಿಕಲ್ ಶಾಪಿಗೆ ಜನ ಬಏಕು ೯೮೪೫೦೮೫೮೮೧.
  10. ಉಡುಪಿ: ಫೋರ್‌ವೀಲರ್ ಸರ್ವಿಸ್ ಸ್ಟೇಶನ್‌ಗೆ ಜನ ಬೇಕು ೯೪೮೧೫೦೮೭೭೭
  11. ಮಂಗಳೂರು: ರಿಯಲ್ ಎಸ್ಟೇಟ್ ಆಫೀಸ್‌ಗೆ ಲೇಡಿ ಸ್ಟಾಪ್ ಬೇಕು ೯೯೮೦೨೪೯೨೪೫.
  12. ಮಂಗಳೂರು: ಮಿನಿ ಆಫ್‌ಸೆಟ್ ಪ್ರಿಂಟರ್ ಬೇಕು ೨೨೧೧೦೫೦.
  13. ಅಳಕೆ: ಪೈಂಟ್ ಸಂಸ್ಥೆಗೆ ಕಂಪ್ಯೂಟರ್ ಎಕೌಂಟ್ಸ್ ಗೊತ್ತಿರುವ ಲೇಡಿ ಬೇಕು ೯೮೪೫೫೫೦೪೪೨.
  14. ಬೈಕಂಪಾಡಿ: ಸ್ಕ್ರೀನ್‌ಪ್ರಿಂಟರ್, ಕಂಪೋಸಿಟರ್ ಬೇಕು ೯೯೬೪೦೨೩೮೭.
  15. ಬಲ್ಮಠ: ಬುಕ್‌ಶಾಪ್‌ಗೆ ಡೆಲಿವರಿ ಬಾಯ್ಸ್ ಬೇಕು ೨೪೨೪೭೪೪
  16. ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಪ್ಲೈವುಡ್ ಟ್ರಿಪ್ ಮಾಡುವ ಡ್ರೈವರ್ ಬೇಕು ೯೮೪೫೮೫೦೫೦೦
  17. ಫಳ್ನೀರ್: ಬಟ್ಟೆ ಅಂಗಡಿಗೆ ಜನ ಬೇಕು ೯೧೪೧೮೫೦೬೩೨.
  18. ಮಂಗಳೂರು: ೨ ವೀಲರ್ ಗೊತ್ತಿದ್ದವರು ಬೇಕು ೯೮೪೫೦೮೦೬೬೯.
  19. ಕಟೀಲ್: ಸ್ಟುಡಿಯೋಗೆ ಜನ ಬೇಕು ೯೭೪೦೫೪೩೧೧೦.
  20. ಕುತ್ತಾರ್‌ಪದವು: ಟೈಲರ್ ಶಾಪ್‌ಗೆ ಲೇಡೀಸ್ ಟೈಲರ್ ಮತ್ತು ಫಿನಿಶಿಂಗ್‌ಗೆ ಯುವತಿಯರು ಬೇಕು ೯೪೮೦೩೪೭೬೯೯.
  21. ಮಂಗಳೂರು: ಕಾರು ಚಾಲಕ ಬೇಕು ೯೩೪೨೫೧೯೧೫೮.
  22. ಬೈಕಂಪಾಡಿ: ಕಂಪೋಸಿಟರ್ ಬೇಕು ೭೪೧೧೦೯೦೩೧೩.
  23. ಮಂಗಳೂರು: ಕಂಪೆನಿಗೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
  24. ಮಂಗಳೂರು: ಸ್ಟುಡಿಯೋಗೆ ಡಿಟಿಪಿ ಗೊತ್ತಿರುವ ಯುವಕರು ಬೇಕು ೯೮೪೫೨೦೩೩೪೮.
  25. ಮಂಗಳೂರು: ಬೇಕರಿಗೆ ಸೇಲ್ಸ್‌ಬಾಯ್ಸ್ & ಗರ್ಲ್ಸ್ ಬೇಕು ೯೪೪೮೨೩೯೯೨೯.
  26. ಮೂಡಬಿದ್ರೆ: ಹೊಟೇಲಿಗೆ ದೋಸೆವಾಲಾ ಹೆಲ್ಪರ್ ಬೇಕು ೯೮೪೫೯೮೨೬೨೫.
  27. ಕಾರ್ಕಳ : ವೇಟರ್ & ಕಿಚನ್ ಹೆಲ್ಪರ್ ಬೇಕು ೯೬೩೨೦೦೬೯೨೩.

ಬಾಂಗ್ಲಾ ಹುಲಿಗಳಿಗೆ ಶಿಕಾರಿಯಾದ ಭಾರತ

Posted by JAYAKIRANA Kirana on | 0 comments | Leave a comment...


ಮಿರ‍್ಪುರ್: ನಿನ್ನೆ ಬಾಂಗ್ಲಾದೇಶ ವಿರುದ್ಧ ಸಚಿನ್ ತೆಂಡೂಲ್ಕರ್ ಸಿಡಿಸಿದ ದಾಖಲೆಯ ನೂರನೇ ಶತಕದ ಸಂಭ್ರಮವು ಅಭಿಮಾನಿಗಳಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಒತ್ತಡದ ಪರಿಸ್ಥಿತಿಯಲ್ಲಿ ಶಕಿಬುಲ್ ಹಸನ್ ಹಾಗೂ ಮುಷ್ಫಿಕುರ್ ರಹೀಂ ನಡೆಸಿದ ವೀರಾವೇಶದ ಬ್ಯಾಟಿಂಗ್ ಪ್ರದರ್ಶನವು ಬಾಂಗ್ಲಾಗೆ ಐದು ವಿಕೆಟ್‌ಗಳ ರೋಚಕ ಗೆಲುವನ್ನು ತಂದುಕೊಡುವುದರೊಂದಿಗೆ ಸಚಿನ್ ದಾಖಲೆಯ ಆಟದ ಸಂತಸವನ್ನು ಮೊಟಕುಗೊಳಿಸಿದೆ. ಇದು ಭಾರತ ವಿರುದ್ಧ ಬಾಂಗ್ಲಾದ ಮೂರನೇ ಗೆಲುವು ಕೂಡ ಆಗಿದೆ.
ಪಂದ್ಯದಲ್ಲಿ ಟಾಸ್ ಸೋತು ಭಾರತ ಬ್ಯಾಟಿಂಗ್ ನಡೆಸಿತು. ನಿಗದಿತ ೫೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೨೮೯ ರನ್‌ಗಳ ಗುರಿಯನ್ನು ಬಾಂಗ್ಲಾಗೆ ನೀಡಿತು. ಸಚಿನ್ (೧೧೪) ತನ್ನ ಕ್ರಿಕೆಟ್ ಇತಿಹಾಸದ ನೂರನೇ ಶತಕ ಬಾರಿಸಿದರು. ಇದಕ್ಕಾಗಿ ಸಚಿನ್ ೧೪೭ ಎಸೆತಗಳನ್ನು ಬಳಸಿಕೊಂಡರು. ಗುರಿ ಬೆನ್ನತ್ತಿದ್ದ ಬಾಂಗ್ಲಾ ಮೊದಲಿಗೆ ಎಚ್ಚರಿಕೆ ಆಟವನ್ನು ಪ್ರದರ್ಶಿಸಿ ಅಂತಿಮ ಹಂತದಲ್ಲಿ ಸ್ಫೋಟಕದಂತೆ ಸಿಡಿದ ಪರಿಣಾಮ ೪೯.೨ ಓವರ್‌ಗಳಲ್ಲಿ ಆರು ವಿಕೆಟ್ ಕಳಕೊಂಡು ೨೯೩ ರನ್ ಗಳಿಸಿ ವಿಜಯಿ ಪತಾಕೆ ಹಾರಿಸಿತು. ಐದನೇ ವಿಕೆಟ್‌ಗೆ ನಾಸೀರ್ ಹುಸೈನ್ (೫೪) ಹಾಗೂ ರಹೀಂ (೪೬) ಜೋಡಿ ಕೇವಲ ಏಳು ಓವರ್‌ಗಳಲ್ಲಿ ಬರೊಬ್ಬರಿ ೬೪ ರನ್ ಕಲೆಹಾಕಿ ತಂಡವನ್ನು ಜಯದ ಬಾಗಿಲಿನ ಬಳಿ ನಿಲ್ಲಿಸಿದರು. ಅಂತಿಮ ನಾಲ್ಕು ಓವರ್‌ಗಳಲ್ಲಿ ಬಾಂಗ್ಲಾ ಗೆಲುವಿಗೆ ೩೭ ರನ್‌ಗಳ ಅಗತ್ಯವಿತ್ತು. ಆದರೆ ೪೮ನೇ ಓವರ್‌ನಲ್ಲಿ ಇರ್ಫಾನ್ ಪಠಾನ್ ಎರಡು ಸಿಕ್ಸ್ ಸಹಿತ ೧೭ ರನ್ ಬಿಟ್ಟುಕೊಟ್ಟಿದ್ದು, ಭಾರತದ ಸೋಲಿಗೆ ಪ್ರಮುಖವಾಯಿತು.
ಬಾಂಗ್ಲಾ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ೧೫ ಆಗುವಷ್ಟರಲ್ಲಿ ಐದು ರನ್ ಗಳಿಸಿದ್ದ ನಜೀಮುದ್ದೀನ್‌ಗೆ ವೇಗಿ ಪ್ರವೀಣ್ ಕುಮಾರ್ ಪೆವಿಲಿಯನ್ ದಾರಿ ತೋರಿಸಿದರು. ನಂತರ ಜುಹ್ರಲ್ (೫೩) ಹಾಗೂ ತಮೀಮ್ ದ್ವಿತೀಯ ವಿಕೆಟ್‌ಗೆ ೧೧೩ ರನ್‌ಗಳ ಎಚ್ಚರಿಕೆಯ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಈ ಜೊತೆಯಾಟಕ್ಕೆ ನಂತರ ಜಡೇಜಾ ಬ್ರೇಕ್ ಹಾಕಿದರು. ಆದರೆ ಆಕರ್ಷಕ ೭೦ ರನ್ ಸಿಡಿಸಿ ಆಡುತ್ತಿದ್ದ ತಮೀಮ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಆರಂಭವಾದದ್ದೇ ಬಾಂಗ್ಲಾದ ಅಬ್ಬರ. ಆ ನಂತರ ಎರಡು ಜೊತೆಯಾಟಗಳು ಟೀಮ್ ಇಂಡಿಯಾದ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದವು. ಯಾಕೆಂದರೆ ನಾಲ್ಕನೇ ವಿಕೆಟ್‌ಗೆ ಸವ್ಯಸಾಚಿ ಆಟಗಾರ ಶಕಿಬುಲ್ ಹಾಗೂ ಹೊಸೈನ್ ಜೋಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಧೋನಿ ಪಡೆಯ ಎಲ್ಲಾ ರಣತಂತ್ರಕ್ಕೆ ಸಮರ್ಥ ಉತ್ತರ ಕೊಟ್ಟ ಈ ಜೋಡಿ ೮.೫೦ ಸರಾಸರಿಯಲ್ಲಿ ೬೮ ರನ್ ಪೇರಿಸಿತು. ಆದರೆ ಕೇವಲ ೩೧ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಐದು ಬೌಂಡರಿಗಳ ನೆರವಿನಿಂದ ೪೯ ರನ್ ಗಳಿಸಿದ್ದ ಶಕಿಬುಲ್ ಈ ವೇಳೆ ನಿರ್ಗಮಿಸಿದಾಗ ಭಾರತ ನಿಶ್ವಿಂತೆಯ ಉಸಿರು ಬಿಟ್ಟಿತು. ಆದರೆ ಈ ಸಂತಸ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೊಸೈನ್‌ರನ್ನು ಕೂಡಿಕೊಂಡ ರಹೀಂ ಜೋಡಿ ಮತ್ತೆ ಭಾರತೀಯ ಬೌಲರ್‌ಗಳನ್ನು ದಂಡಿ ಸುವ ಕಾರ್ಯ ಕೈಗೆತ್ತಿಕೊಂಡರು. ಒಂದರ್ಥದಲ್ಲಿ ಇದು ಮ್ಯಾಚ್ ವಿನ್ನಿಂಗ್ ಜೊತೆಯಾಟವಾಗಿತ್ತು. ಅದರಲ್ಲೂ ರಹೀಂ ಕೇವಲ ೨೫ ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ ಅಜೇಯ ೪೬ ರನ್ ಸೂರೆಗೈದು ಬಾಂಗ್ಲಾಗೆ ವಿರೋಚಿತ ಗೆಲುವು ತಂದುಕೊಟ್ಟಾಗ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಭಾರತ ಪರ ಪ್ರವೀಣ್ ಮೂರು ವಿಕೆಟ್ ಪಡೆದರು.
ಈ ಮುಂಚೆ ಬ್ಯಾಟಿಂಗ್ ನಡೆಸಿದ್ದ ಭಾರತಕ್ಕೆ ಸಚಿನ್ ಹಾಗೂ ಕೊಹ್ಲಿ (೬೬) ದ್ವಿತೀಯ ವಿಕೆಟ್‌ಗೆ ನಿಧಾನಗತಿಯ ೧೪೮ ರನ್‌ಗಳ ಜೊತೆಯಾಟ ನಡೆಸಿದ್ದರು. ಅದರಲ್ಲೂ ಸಚಿನ್ ನಿಧಾನಗತಿಯ ಆಟಕ್ಕೆ ಮೊರೆಹೋದಾಗ ರನ್ ಸರಾಸರಿ ಅಲ್ಪ ಪ್ರಮಾಣದಲ್ಲಿತ್ತು. ನಂತರ ರೈನಾ ೩೮ ಎಸೆತಗಳಲ್ಲಿ ೫೧ ರನ್ ಸಿಡಿಸಿ ರನ್‌ಗತಿಗೆ ವೇಗ ನೀಡಿದರು. ಅಂತಿಮ ಹಂತದಲ್ಲಿ ಧೋನಿ ವೇಗದ ೨೧ ರನ್ ಸಿಡಿಸಿದ್ದು, ಭಾರತ ೨೮೯ರ ಮೊತ್ತವನ್ನು ದಾಖಲಿಸುವಂತಾಯಿತು.

ಸಿಂಗಲ್ಸ್‌ನಲ್ಲಿ ಶರಪೋವಾ ಸೆಮೀಸ್‌ಗೆ

Posted by JAYAKIRANA Kirana on | 0 comments | Leave a comment...


ಇಂಡಿಯನ್ ವೇಲ್ಸ್: ಫೈನಲ್‌ಗೇರಿದ ಸಾನಿಯಾ ಜೋಡಿ
ಕ್ಯಾಲಿಫೋರ್ನಿಯಾ: ಭಾರತದ ಸಾನಿಯಾ ಮಿರ್ಜಾ ಹಾಗೂ ರಶ್ಯಾದ ಎಲೆನಾ ವೆಸ್ನಿನಾ ಜೋಡಿ ಡಬಲ್ಸ್‌ನಲ್ಲಿ ಮತ್ತೊಮ್ಮೆ ತನ್ನ ಪ್ರತಾಪ ಮೆರೆದಿದೆ. ಇಂಡೋ-ರಶ್ಯನ್ ಜೋಡಿ ಇಲ್ಲಿ ನಡೆಯುತ್ತಿರುವ ಇಂಡಿಯನ್ ವೇಲ್ಸ್ ಟೆನಿಸ್ ಕೂಟದ ಫೈನಲ್‌ಗೇರುವ ಮೂಲಕ ಕೂಟ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದಾರೆ. ಅತ್ತ ಸಿಂಗಲ್ಸ್‌ನಲ್ಲಿ ರಶ್ಯಾದ ಮರಿಯಾ ಶರಪೋವಾ ಹಾಗೂ ಸರ್ಬಿಯಾದ ಆನಾ ಇವನೋವಿಕ್ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಜೆಕ್ ಗಣರಾಜ್ಯದ ಆಂಡ್ರಿಯಾ ಲೆವಕೊವಾ ಹಾಗೂ ಲೂಸಿಯಾ ಹೃದೆಕಾ ವಿರುದ್ಧ ೫-೭, ೭-೫ ಹಾಗೂ ೧೦-೩ರ ನೇರ ಹಾಗೂ ಕಠಿಣ ಹೋರಾಟದ ಮೂಲಕ ಗೆಲುವು ಇಂಡೋ-ರಶ್ಯನ್ ಜೋಡಿ ಗೆಲುವು ಸಾಧಿಸಿತು. ಜೆಕ್ ಜೋಡಿಗೆ ಹೋಲಿಸಿದರೆ ಸಾನಿಯಾ-ವೆಸ್ನಿನಾ ಜೋಡಿ ೪೨ ಬ್ರೇಕ್ ಪಾಯಿಂಟ್‌ಗಳ ಪೈಕಿ ೨೫ನ್ನು ಅಂಕವಾಗಿ ಪರಿವರ್ತಿಸಲು ಸಫಲರಾಗಿದ್ದರು. ಫ್ರಾನ್ಸ್‌ನ ಮರಿಯಾ ಬರ್ಟೊಲಿ ವಿರುದ್ಧ ೬-೩, ೬-೪ರ ನೇರ ಸುತ್ತಿನ ಜಯ ಸಾಧಿಸಿದ ಇವನೋವಿಕ್ ಹಾಗೂ ತನ್ನದೇ ದೇಶದ ಮರಿಯಾ ಕಿರಿಲೆಂಕೊಗೆ ೩-೬, ೭-೫ ಹಾಗೂ ೬-೨ರ ಅಂತರದ ಸೋಲುಣಿಸಿದ ಶರಪೋವಾ ಸೆಮೀಸ್‌ಗೆ ಲಗ್ಗೆ ಇಟ್ಟಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಹಣಾಹಣಿ ನಡೆಸುವ ಲೀಸೆಲ್ ಹಬ್ಬರ್ -ಲೀಸಾ ರೇಮಂಡ್ ಹಾಗೂ ಇವೆಟಾ ಬೆನೆಸೊವಾ-ಬಾರ್ಬೊರಾ ಜಾವ್ಲೊವಾ ನಡುವಣ ವಿಜೇತರನ್ನು ಇಂಡೋ-ರಶ್ಯನ್ ಜೋಡಿ ಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಬಂಟ್ವಾಳ ಪುರಸಭೆಯಲ್ಲಿ ಮಾರಾಮಾರಿ: ಕೈಕಟ್ಟಿ ಕುಳಿತ ಅಧಿಕಾರಿ

Posted by JAYAKIRANA Kirana on | 0 comments | Leave a comment...


ಬಂಟ್ವಾಳ: ಚೀಫ್ ಆಫೀಸರ್, ಅಸಿಸ್ಟೆಂಟ್ ಇಂಜಿನಿಯರ್, ಹೆಲ್ತ್ ಇನ್ಸ್‌ಪೆಕ್ಟರ್ ದೂರು ನೀಡಲು ಬಂದ ಸಾರ್ವಜನಿಕರಲ್ಲಿ ಕಾದಾಟಕ್ಕಿಳಿದ ಘಟನೆ ನಿನ್ನೆ ಇಲ್ಲಿನ ಪುರಸಭಾ ಕಾರ್ಯಾಲಯದಲ್ಲಿ ನಡೆಯಿತು. ಸಾರ್ವಜನಿಕರೊಂದಿಗೆ ಸರ್ಕಾರಿ ಕಚೇರಿಯಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿದೆ. ಘಟನಾ ಸ್ಥಳ ಕ್ಕಾಗಮಿಸಿದ ಬುಡಾ ಅಧ್ಯಕ್ಷ ಗೋವಿಂದ ಪ್ರಭು ಅವರು ಸಾರ್ವಜನಿಕರನ್ನು ಸಮಾಧಾನಿಸಿದ್ದು, ಇಂಜಿನಿಯರ್ ವರ್ತನೆಗೆ ಸಿಡಿಮಿಡಿ ಗೊಂಡರು.
ಪುರಸಭೆ ವ್ಯಾಪ್ತಿಯ ಪಾಣೆಮಂಗ ಳೂರು ಪೇಟೆ ಹಾಗೂ ಆಲಡ್ಕ ಆಸುಪಾಸಿನ ಚರಂಡಿ ಶುದ್ಧೀಕರಣ ಹಾಗೂ ರಸ್ತೆ ಬದಿಯ ತ್ಯಾಜ್ಯ ವಿಲೇ ವಾರಿಗೆ ಕ್ರಮ ಜರುಗಿಸುವಂತೆ ಒತ್ತಾ ಯಿಸಿ ಸಾರ್ವಜನಿಕರು ಮನವಿ ಸಲ್ಲಿ ಸಲು ಹೋದಾಗ ಈ ಘಟನೆ ನಡೆ ದಿದ್ದು, ಅಧಿಕಾರಿಗಳ ನಡುವಿನ ಮಾತಿನ ವರಸೆ ಕಚೇರಿಯ ಶಾಂತಿಯುತ ವಾತಾ ವರಣವನ್ನೇ ಕೆಡಿಸುವಂತೆ ಮಾಡಿತ್ತು. ಮುಖ್ಯಾಧಿಕಾರಿ ಆರ್.ವಿ.ಜತ್ತನ್ನ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ ಮೂಗು ತೂರಿಸಿದ ಸಹಾಯಕ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಸಾರ್ವ ಜನಿಕರನ್ನು ಹೀಯಾಳಿಸುವಂತೆ ವರ್ತಿಸಿದ್ದರೆನ್ನಲಾಗಿದೆ. ಕಚೇರಿಯಲ್ಲಿದ್ದ ಆರೋಗ್ಯ ನಿರೀಕ್ಷಕರಲ್ಲಿ ದೂರಿಕೊಂ ಡಾಗ, ಜೆಸಿಬಿಯಿಂದ ಕೆಲಸ ಮಾಡಿ ಸಬೇಕಾಗಿರುವುದರಿಂದ ಇಂಜಿನಿಯರ್ ವರದಿ ಕೊಡಬೇಕು ಎಂದರು. ನಿರೀ ಕ್ಷಕರ ಮಾತಿನ ಮಧ್ಯೆ ಬಾಯಿ ಹಾಕಿದ ಇಂಜಿನಿಯರ್ ಡಿಮೆಲ್ಲೋ ಅದು ನನ್ನ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಾರಿಗೊಂಡರು.
ವಿವಾದ ಕಚೇರಿಯೊಳಗಿದ್ದ ಚೀಫ್ ಆಫೀಸರ್ ಬಳಿಗೆ ಹೋಯಿತು. ಅವರು ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಇಂಜಿನಿಯರ್‌ಗೆ ಸೂಚಿ ಸಿದ್ದರೂ, ಇಂಜಿನಿಯರ್ ಮೇಲಧಿಕಾರಿ ಮಾತನ್ನು ಲೆಕ್ಕಿಸಲಿಲ್ಲ. ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕ ಹಾಗೂ ಇಂಜಿನಿಯರ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಅಧಿಕಾರಿಗಳ ಕೋಳಿ ಜಗಳ ಸಾರ್ವಜನಿಕರನ್ನು ಗೊಂದಲ ಕ್ಕೀಡು ಮಾಡಿತು.
ಅಧಿಕಾರಿಗಳ ಬೇಜವಾಬ್ದಾರಿತನವನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಇಂಜಿನಿಯರ್ ಡಿ’ಮೆಲ್ಲೋ ಅವರನ್ನು ಅಧಿಕಾರಿಗಳು ತರಾಟೆಗೆ ತೆಗೆದರು. ಅಷ್ಟರಲ್ಲಿ ಆಕ್ರೋಶರಾದ ಸಾರ್ವಜನಿಕರೂ ಇಂಜಿನಿಯರ್ ಮೇಲೆ ಮುಗಿಬಿದ್ದರು.
ಬುಡಾ ಅಧ್ಯಕ್ಷರಿಗೆ ದೂರು
ಘಟನಾ ಸ್ಥಳಕ್ಕೆ ಧಾವಿಸಿದ ಬುಡಾ ಅಧ್ಯಕ್ಷ ಗೋವಿಂದ ಪ್ರಭು ಅವರಿಗೆ ಸಹಾಯಕ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ. ಸಾರ್ವಜನಿಕರೊಂದಿಗೆ ಕಚೇರಿಯಲ್ಲಿ ಅಸಭ್ಯ ಹಾಗೂ ಅನುಚಿತ ವರ್ತಿಸಿದ ಇಂಜಿನಿಯರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸಾರ್ವಜನಿಕರ ದೂರಿನನ್ವಯ ಇಂಜಿನಿಯರ್‌ಗೆ ಸೌಜನ್ಯಯುತವಾಗಿ ವರ್ತಿಸುವಂತೆ ಗೋವಿಂದ ಪ್ರಭು ಸೂಚನೆ ನೀಡಿದರು. ಘಟನೆಯ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕವಾಗಿ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿರುವುದಾಗಿ ಪಾಣೆಮಂಗಳೂರು ಪೌರ ಸಮಿತಿಯ ಸಂಚಾಲಕ ಮುಸ್ತಫಾ ತಿಳಿಸಿದ್ದಾರೆ.

ಕರಾವಳಿ ಅಲೆಗೆ ಕೋರ್ಟ್ ತಡೆಯಾಜ್ಞೆ

Posted by JAYAKIRANA Kirana on | 0 comments | Leave a comment...


ಅಬೂಬಕ್ಕರ್ ವಿರುದ್ಧ ಮಾನಹಾನಿಕರ ವರದಿ
ಮಂಗಳೂರು: ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿಜೆಪಿ ರಾಷ್ಟ್ರೀಯ ಅಲ್ಪ ಸಂಖ್ಯಾತ ಮೋರ್ಚಾದ ಸದಸ್ಯ ಎನ್.ಬಿ. ಅಬೂಬಕ್ಕರ್ ವಿರುದ್ಧ ಯಾವುದೇ ಅವಹೇಳನಕಾರಿ ಹಾಗೂ ಮಾನಹಾನಿ ಕರ ಲೇಖನ ಪ್ರಕಟಿಸಬಾರದೆಂದು ಕರಾವಳಿ ಅಲೆ ಪತ್ರಿಕೆಯ ವಿರುದ್ಧ ಎರಡನೇ ಸಿವಿಲ್ ಜಡ್ಜ್ ನ್ಯಾಯಾ ಲಯ ತಾತ್ಕಾಲಿಕ ತಡೆಯಾಜ್ಞೆ ಜಾರಿ ಮಾಡಿದೆ.
ತನ್ನ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಲೇಖನಗಳನ್ನು ಪ್ರಕಟಿಸಿ ತನ್ನ ಸ್ಥಾನಮಾನಕ್ಕೆ ಧಕ್ಕೆ ಉಂಟು ಮಾಡಿ ದ್ದಾರೆಂದು ಅಬೂಬಕ್ಕರ್ ಅವರು ರೂ. ಎರಡು ಲಕ್ಷ ಪರಿಹಾರ ಹಾಗೂ ಶಾಶ್ವತ ಪ್ರತಿಬಂಧಕಾಜ್ಞೆ ಕೋರಿ ಕರಾವಳಿ ಅಲೆ ಪತ್ರಿಕೆ ಮತ್ತು ಬೈಕಂಪಾಡಿಯ ಬಿ. ಮಯ್ಯದಿ ಎಂಬವರ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿ ಈ ತಡೆಯಾಜ್ಞೆ ಜಾರಿ ಮಾಡಿದೆ.
ಕರಾವಳಿ ಅಲೆಯ ಮಾಲಕರಾದ ಬಿ.ವಿ. ಸೀತಾರಾಂ ಮತ್ತು ರೋಹಿಣಿ ಅವರ ಕುಳಾಯಿಯಲ್ಲಿರುವ ಮನೆಗೆ ನ್ಯಾಯಾಜ್ಞೆಯನ್ನು ಜಾರಿಗೊಳಿಸಲು ನ್ಯಾಯಾಲಯದ ಅಮೀನರು ತೆರಳಿದಾಗ ಮನೆಯಲ್ಲಿದ್ದುಕೊಂಡೂ ಇಲ್ಲವೆಂಬ ಪ್ರತಿಕ್ರಿಯೆ ನೀಡಲಾಯಿತು ಎಂದು ಅಬೂಬಕ್ಕರ್ ಸೋದರ ಉಸ್ಮಾನ್ ತಿಳಿಸಿದ್ದಾರೆ. ಅನಂತರ ಬೈಕಂಪಾಡಿಯ ಕಚೇರಿಗೆ ತೆರಳಿದಾಗ ಅಲ್ಲಿಯೂ ಬೀಗ ಜಡಿದು ಕಚೇರಿ ಬಂದಾಗಿದೆ ಎಂದು ಸುಳ್ಳು ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ವ್ಯಕ್ತಿಗಳ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಲೇಖನಗಳನ್ನು ಪ್ರಕಟಿಸುತ್ತಿರುವ ಹಾಗೂ ಕಾನೂನಿನ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವ ಕರಾವಳಿ ಅಲೆ ಪತ್ರಿಕೆಯ ವಿರುದ್ಧ ಕ್ರಿಮಿನಲ್ ಕೇಸು ಹೂಡುವುದಲ್ಲದೆ, ಅಗತ್ಯ ವಿರುವ ಅನ್ಯ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎನ್.ಬಿ. ಅಬೂ ಬಕ್ಕರ್‌ರವರ ಸಹೋದರ ಉಸ್ಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೂಡ್ಲುಗೆ ಟೋಪಿ ಇಟ್ಟ ಸುರೇಶ್ ಮಂಗಳೂರು

Posted by JAYAKIRANA Kirana on | 0 comments | Leave a comment...


ಸಬ್ಸಿಡಿ ಕೊಡಿಸುವುದಾಗಿ ಲಕ್ಷ ಪಡೆದ ಪೋಷಕ ನಟ
ಬೆಂಗಳೂರು : ಸ್ಟಾರ್ ನಟರುಗಳ ಜೊತೆ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದ ಸುರೇಶ್ ಮಂಗಳೂರು ತನ್ನ ಅವ್ಯವಹಾರಗಳಿಂದಾಗಿ ಸಿನಿಮಾ ರಂಗದ ಕೆಂಗಣ್ಣಿಗೆ ಗುರಿಯಾಗಿದ್ದು. ಸಬ್ಸಿಡಿಯ ಆಸೆ ಹುಟ್ಟಿಸಿ ಎರಡೂವರೆ ಲಕ್ಷ ಲಂಚ ಪಡೆದು ಸಿನಿಮಾ ನಿರ್ದೇಶಕರಿಗೆ ಟೋಪಿ ಹಾಕಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕನ್ನಡ ಚಿತ್ರ ರಂಗದ ಸಬ್ಸಿಡಿ ಸಲಹಾ ಸಮಿತಿಯ ಸದಸ್ಯರಾಗಿರುವ ಸುರೇಶ್ ಮಂಗಳೂರು ಮಕ್ಕಳ ಚಿತ್ರ ವಿಭಾಗದಿಂದ ಹೊರಗಿರುವ ಚಿತ್ರಕ್ಕೆ ಮಕ್ಕಳ ಚಿತ್ರ ವಿಭಾಗದಡಿ ೨೫ ಲಕ್ಷ ಸಬ್ಸಿಡಿ ನೀಡುವುದಾಗಿ ನಿರ್ಮಾಪಕರಿಂದ ಲಂಚ ಪಡೆದು ಬಳಿಕ ವಂಚಿಸಿದ್ದಾರೆಂದು ನಿರ್ಮಾಪಕ-ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರು ಆರೋಪಿಸಿದ್ದಾರೆ. ಲಂಚ ನೀಡಿದ್ದಕ್ಕೆ ಕೂಡ್ಲು ಅವರು ದಾಖಲೆಯನ್ನೂ ನೀಡಿದ್ದಾರೆ. ಮುಖ್ಯಮಂತ್ರಿ ಸಹಿ ಹಾಕುವ ಮುನ್ನವೇ ಸಬ್ಸಿಡಿ ಚಿತ್ರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ರಿಮೇಕ್ ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ಖೊತಾ ಹೊಡೆದ ಚಿತ್ರಗಳಿಗೆ ಸಬ್ಸಿಡಿ ನೀಡಿರುವ ವಿಚಾರ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಕಲಾತ್ಮಕ ಮತ್ತು ಕಾದಂಬರಿ ಆಧಾರಿತ ಚಿತ್ರಗಳಿಗೆ, ಮಕ್ಕಳ ಚಿತ್ರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆಯಾದರೂ ಈ ಬಾರಿ ಇಂತಹ ಚಿತ್ರಗಳನ್ನು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೂಡ್ಲು ರಾಮಕೃಷ್ಣ ಅವರು ‘ಬೆಟ್ಟಾದಾಪುರದ ದಿಟ್ಟ ಮಕ್ಕಳು’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು. ಆದರೆ ಸೆನ್ಸಾರ್ ಮಂಡಳಿ ಇದಕ್ಕೆ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ನೀಡಿರಲಿಲ್ಲ. ಇದು ಸಬ್ಸಿಡಿ ಪಡೆಯುವಲ್ಲಿ ಕೂಡ್ಲು ಅವರಿಗೆ ಬಹುದೊಡ್ಡ ಹೊಡೆತವನ್ನು ನೀಡಿತ್ತು. ಹೀಗಾಗಿ ಇವರು ಗುಣಾತ್ಮಕ ಚಿತ್ರಗಳ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಕೂಡ್ಲು ಅವರನ್ನು ಸಂಪರ್ಕಿಸಿದ ಸುರೇಶ್ ಮಂಗಳೂರು, ತಮಗೆ ಆರು ಲಕ್ಷ ನೀಡಿದರೆ ಸಲಹಾ ಸಮಿತಿ ಸದಸ್ಯರನ್ನು ಸೆಟಪ್ ಮಾಡಿಕೊಂಡು ನಿಮ್ಮ ಚಿತ್ರವನ್ನು ಮಕ್ಕಳ ಚಿತ್ರ ವಿಭಾಗದಲ್ಲಿ ಸೇರಿಸಿ ಸಬ್ಸಿಡಿ ದೊರಕಿಸಿ ಕೊಡುವುದಾಗಿ ತಿಳಿಸಿದ್ದರು. ಇದಕ್ಕೆ ಒಪ್ಪಿಕೊಂಡ ಕೂಡ್ಲು ಅವರು ತೀವ್ರ ಆರ್ಥಿಕ ಕೊರತೆಯ ನಡುವೆಯೂ ಎರಡೂವರೆ ಲಕ್ಷವನ್ನು ಹೊಂದಿಸಿ ಅದನ್ನು ಸುರೇಶ್ ಮಂಗಳೂರು ಅವರ ಖಾತೆಗೆ ಜಮೆ ಮಾಡಿದ್ದರು. ಆದರೆ ಸುರೇಶ್ ಮಂಗಳೂರು ಕೂಡ್ಲು ಅವರಿಗೆ ಸಬ್ಸ್ಸಿಡಿಯನ್ನು ದೊರಕಿಸಿ ಕೊಡಲೇ ಇಲ. ಹೀಗಾಗಿ ಇಡೀ ಅವ್ಯವಹಾರ ಬೆಳಕಿಗೆ ಬಂದಂತಾಗಿದೆ.
ಸುರೇಶ್ ಮಂಗಳೂರು ಕಿರುತೆರೆ ನಟರಾಗಿದ್ದರೂ ಇತ್ತೀಚಿನ ದಿನದಲ್ಲಿ ಸಿನಿಮಾ ರಂಗದಲ್ಲಿ ಪೋಷಕ ಪಾತ್ರದ ಮೂಲಕ ಸಾಕಷ್ಟು ಹೆಸರು ಪಡೆದಿದ್ದರು. ಸ್ಟಾರ್ ನಾಯಕರ ಜೊತೆಯೂ ಅಭಿನಯಿಸಿದ್ದರು. ಸಿನಿಮಾ ರಂಗದಲ್ಲಿ ಉತ್ತಮವಾದ ಹೆಸರನ್ನೂ ಹೊಂದಿದ್ದರು. ಆದರೆ ಇದೀಗ ತಮ್ಮ ಸಣ್ಣತನದಿಂದಾಗಿ ತಲೆತಗ್ಗಿಸುವಂತಾಗಿದೆ. ಕೂಡ್ಲು ಅವರು ತಾವು ಲಂಚ ನೀಡಿದ್ದನ್ನು ಬಹಿರಂಗ ಪಡಿಸಿರುವುದರಿಂದಾಗಿ ಈಗಾಗಲೇ ಸಬ್ಸಿಡಿ ಪಡೆದಿರುವ ಚಿತ್ರಗಳನ್ನೂ ಸಂಶ ಯದಿಂದ ನೋಡುವಂತಾಗಿದೆ. ಈ ಅವ್ಯವಹಾರವನ್ನು ತನಿಖೆ ನಡೆಸುವಂತೆ ಸಿನಿಮಾ ನಿರ್ದೇಶಕರು ನಿರ್ಮಾಪಕರು ಸರಕಾರವನ್ನು ಉತ್ತಾಯಿಸಿದ್ದಾರೆ.

ಯಾರು ಸಿ.ಎಂ. ಆಗಿರುತ್ತಾರೋ ಅವರಿಂದಲೇ ಬಜೆಟ್: ಯಡ್ಡಿ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ ೨೧ ರಂದು ಯಾರು ಮುಖ್ಯಮಂತ್ರಿಯಾಗಿ ರುತ್ತಾರೋ ಅವರು ೨೦೧೨-೧೩ ನೇ ಸಾಲಿನ ರಾಜ್ಯ ಮುಂಗಡ ಪತ್ರ ಮಂಡಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ಷ್ಮವಾಗಿ ನುಡಿದಿದ್ದಾರೆ
ಐದು ದಿನಗಳಿಂದ ಉತ್ತರ ಭಾರತ ಪ್ರವಾ ಸದಲ್ಲಿದ್ದ ಯಡಿಯೂರಪ್ಪ ನಿನ್ನೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಸದಾ ನಂದಗೌಡರೇ ಮುಂಗಡ ಮಂಡಿಸುತ್ತಾರೆ ಎಂದು ಸ್ಪಷ್ಟವಾಗಿ ಹೇಳಲು ನಿರಾಕರಿಸಿದರು. ಕಳೆದ ಒಂದು ವಾರದಿಂದ ನಾಯಕತ್ವ ಬದ ಲಾವಣೆಗೆ ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತಿನ ಹಿನ್ನೆಲೆಯಲ್ಲಿ ಈಗಾಗಲೇ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರದ ಮಾಜಿ ಸಚಿವ ಧನಂಜಯಕುಮಾರ್ ಸದಾನಂದಗೌಡರು ಬಜೆಟ್ ಮಂಡಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಸಾಲಿಗೆ ಯಡಿಯು ರಪ್ಪ ಸಹ ಸೇರಿಕೊಂಡು, ಅಂದು ಯಾರು ಮುಖ್ಯಮಂತ್ರಿಯಾಗಿರುತ್ತಾರೋ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ನಾನು ಮತ್ತೆ ಅಧಿಕಾರ ಕೊಡಿ ಎಂದು ದೆಹಲಿಯಲ್ಲಿ ವರಿಷ್ಠರ ಮನೆ ಬಾಗಿಲಿಗೆ ಹೋಗಿರಲಿಲ್ಲ. ರಾಜಸ್ಥಾನಕ್ಕೆ ಭೇಟಿ ನೀಡುವ ಬಹಳ ದಿನಗಳ ಬಯಕೆ ನೆರವೇರಿದೆ. ವಿವಿಧ ನ್ಯಾಯಾಲಯಗಳಲ್ಲಿ ತಮ್ಮ ಮೆಲಿರುವ ಮೊಕದ್ದಮೆಗಳು ಬಾಕಿ ಇರುವುದರಿಂದ ನಾನು ಚಿಕ್ಕಮಗಳೂರು ಉಪಚುನಾ ವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಲು ಆಗಿಲ್ಲ. ಆದರೆ, ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ. ಅವರ ಗೆಲುವಿಗಾಗಿ ವೈಷ್ಣೋದೇವಿ ಬಳಿ ಪ್ರಾರ್ಥನೆಯನ್ನೂ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್

Posted by JAYAKIRANA Kirana on | 0 comments | Leave a comment...


ಮಂಗಳೂರು: ಒಂದೆಡೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ವಿರೋಧಿ ಎಂದು ದೂರುತ್ತಾ ಬಂದಿ ರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ.ಜಿಲ್ಲೆಯಲ್ಲಿ ಮೃದು ಧೋರಣೆ ಅನುಸರಿಸುವಂತೆ ಕಂಡು ಬಂದಿದ್ದು, ಉಡುಪಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದೇ ಇದಕ್ಕೆ ಸಾಕ್ಷಿ ಯಾಗಿದೆ.
ನಿನ್ನೆ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುಸ್ಲಿಂಲೀಗ್‌ನ ರಾಜ್ಯ ಕಾರ್ಯದರ್ಶಿ ಅಹ್ಮದ್ ಜಮಾಲ್, ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಉಪ ಚುನಾವಣೆಯಲ್ಲಿ ಪಕ್ಷ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಹೆಗ್ಡೆಯವರು ಶಾಸಕರಾಗಿದ್ದಾಗ ಎಲ್ಲಾ ವರ್ಗದ ಜನರನ್ನೂ ಸಮಾನವಾಗಿ ಕಂಡಿದ್ದು ಕ್ಷೇತ್ರದ ಅಭಿವೃದ್ಧಿಗೂ ಶ್ರಮಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷ ಜಾತ್ಯತೀತ ಹಿನ್ನೆಲೆಯನ್ನು ಹೊಂದಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮೊದಲು ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದರೂ ಅದನ್ನು ಜಾರಿಗೆ ತಂದಿಲ್ಲ. ಇತ್ತೀಚೆಗೆ ಚುನಾವಣಾ ಪ್ರಚಾರಕ್ಕಾಗಿ ಉಡುಪಿಗೆ ಬಂದಿದ್ದ ಬಿಜೆಪಿ ರಾಜ್ಯಾದ್ಯಕ್ಷ ಈಶ್ವರಪ್ಪನವರು ಅಲ್ಲಾಹ್ ಮತ್ತು ಏಸು ನಮಗೆ ಆಗುವುದಿಲ್ಲ ಎಂದು ಅವ ಮಾನ ಕಾರಿಯಾದ ಹೇಳಿಕೆ ನೀಡಿದ್ದು ಬಿಜೆಪಿಗೆ ಮುಸ್ಲಿಮರ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ. ಈ ಕಾರಣದಿಂದಾಗಿ ಹೈಕಮಾಂಡ್ ನಿರ್ದೇಶನದಂತೆ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎನ್ನುವ ಸಬೂಬನ್ನೂ ಜಮಾಲ್ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಸ್ಮಾಯಿಲ್, ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದರೆ ಧೃಡತೆ ಎಂಬುವುದು ಇರುವುದಿಲ್ಲ. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದಾಗಲೇ ಜೈಲು ಸೇರಿದರೆ, ಉಮಾ ಭಾರತಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ ಜೈಲು ಸೇರಿದ್ದರು. ಅದಲ್ಲದೆ ಕಲ್ಯಾಣ್ ಸಿಂಗ್ ಅದೇ ದಾರಿಯಲ್ಲಿ ನಡೆದಿದ್ದರು. ಗುಜರಾತ್ ಮುಖ್ಯಮಂತ್ರಿ ಯವರ ಮೇಲೂ ಹಲವಾರು ಆರೋಪಗಳಿವೆ. ಅಲ್ಲದೆ ಈ ಪಕ್ಷದ ಮಂತ್ರಿಗಳು ನೀಲಿ ಚಿತ್ರ ವೀಕ್ಷಣೆ, ಅತ್ಯಾಚಾರದಂತಹ ಪ್ರಕರಣಗಳಲ್ಲಿ ಹೆಸರು ಗಳಸಿದ್ದು ಧನಂಜಯ ಕುಮಾರ್ ಸಂಸತ್ ಸದಸ್ಯರಾಗಿದ್ದಾಗ ಅಂತಹದ್ದೇ ಕೆಲಸಕ್ಕೆ ಕೈಹಾಕಿದ್ದರು ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮುಸ್ಲಿಂ ಲೀಗ್ ಮುಖಂಡರಾದ ಹಾಜಿ ಇಬ್ರಾಹಿಂ, ಎಂ.ಮಹಮ್ಮದ್ ಮತ್ತು ರಿಯಾಝ್ ಹರೇಕಳ ಉಪಸ್ಥಿತರಿದ್ದರು.

ವಿಟ್ಲ: ರಬ್ಬರ್ ತೋಟಕ್ಕೆ ಬೆಂಕಿ

Posted by JAYAKIRANA Kirana on | 0 comments | Leave a comment...


ವಿಟ್ಲ: ರಬ್ಬರ್ ತೋಟವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿ ಣಾಮ ತೋಟ ಸಂಪೂರ್ಣವಾಗಿ ಭಸ್ಮಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಎಣ್ಮಕಜೆ ಗ್ರಾಮದ ಮುಳಿಯಾಲ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ವಿಟ್ಲದ ಅಡ್ಯನಡ್ಕ ಸಮೀಪದ ಮುಳಿಯಾಲ ನಿವಾಸಿಯಾದ ಸೀತಾರಾಮ ಭಟ್ ಮತ್ತು ಲಕ್ಷ್ಮಿ ಎಂಬವರಿಗೆ ಸೇರಿದ ರಬ್ಬರ್ ತೋಟಕ್ಕೆ ನಿನ್ನೆ ಮಧ್ಯಾಹ್ನ ೨ ಘಂಟೆ ಸುಮಾರಿಗೆ ಬೆಂಕಿ ತಗುಲಿತ್ತು. ವಿಷಯ ತಿಳಿದ ಸೀತಾರಾಮ ಭಟ್ ಅವರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬರುವುದು ತಡವಾಗಿದ್ದರಿಂದ ಭಾಗಶಃ ತೋಟ ಭಸ್ಮಗೊಂಡಿದೆ. ಸೀತಾರಾಮ ಭಟ್ ಅವರ ೩.೫ ಎಕರೆಗಳಲ್ಲಿ ೨ ಎಕರೆ ಜಾಗದಲ್ಲಿದ್ದ ಅಂದಾಜು ೪೦೦ ರಬ್ಬರ್ ಗಿಡಗಳು ಹಾಗೂ ೨೦ರಷ್ಟು ತೆಂಗಿನ ಮರ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬೆಂಕಿ ಕಿಚ್ಚು ತೋಟ ಇಡೀ ಹರಡಿದ್ದು, ಅಗ್ನಿಶಾಮಕ ಸಿಬ್ಬಂದಿ ಅದನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೀತಾರಾಮ ಭಟ್ ಅವರು ಕಳೆದ ೫ ವರ್ಷಗಳಿಂದ ಇದನ್ನು ಬಾರಿ ಕಷ್ಟಪಟ್ಟು ಬೆಳೆಸಿದ್ದರು. ಘಟನಾ ಸ್ಥಳಕ್ಕೆ ಎಣ್ಮಕಜೆ ಗ್ರಾ.ಪಂ. ಸದಸ್ಯರಾದ ಐತಪ್ಪ ಕುಲಾಲ್ ಭೇಟಿ ನೀಡಿದ್ದಾರೆ. ಕಾರ‍್ಯಾಚರಣೆಯಲ್ಲಿ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿ ಸುಂದರ, ಸಿಬ್ಬಂದಿಯಾದ ರಾಜೇಶ್, ಕೃಷ್ಣಪ್ಪ, ಜಯ, ಶಿವಾಜಿ, ಆನಂದ ನಾಯ್ಕ್ ಭಾಗವಹಿಸಿದ್ದರು.

ತಂದೆಯ ಕೊಂದ ಪುತ್ರನ ಬಂಧನ

Posted by JAYAKIRANA Kirana on | 0 comments | Leave a comment...



ಉಪ್ಪಿನಂಗಡಿ: ಗ್ರಾಮದ ಪ್ರಥಮ ಪ್ರಜೆಯಾಗಿದ್ದ ವ್ಯಕ್ತಿಯೊಬ್ಬರು ಮನೆಯ ಬಗೆಗಿನ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ತನ್ನ ಮಗನಿಂದಲೇ ಕೊಲೆಯಾದ ಘಟನೆ ಯೊಂದು ಗೋಳಿತೊಟ್ಟು ಎಂಬಲ್ಲಿ ಕಳೆದ ರಾತ್ರಿ ನಡೆದಿದ್ದು, ಕೊಲೆ ಮಾಡಿದ ಮಗನನ್ನು ಬಂಧಿಸಲಾಗಿದೆ.
ಗೋಳಿತೊಟ್ಟು ಗ್ರಾ. ಪಂ.ನ ಮಾಜಿ ಅಧ್ಯಕ್ಷ,ಹಾಲಿ ಸದಸ್ಯರಾದ ಕೋಲ್ಪೆ ನಿವಾಸಿ ಸಂಜೀವ ಗೌಡ(೬೫) ಎಂಬವರನ್ನು ಇವರ ಪುತ್ರ ಗಂಗಾಧರ ಗೌಡ(೨೪) ಕತ್ತಿಯಿಂದ ಕಡಿದು ಕೊಲೆ ಮಾಡಿದ್ದು, ಆರೋಪಿಯನ್ನು ಉಪ್ಪಿ ನಂಗಡಿ ಪೊಲೀಸರು ಬಂಧಿಸಿದ್ದಾರೆ.
ಹಲವಾರು ವರ್ಷಗಳಿಂದ ನಿರಂ ತರವಾಗಿ ಗ್ರಾ. ಪಂ. ಸದಸ್ಯರಾಗಿದ್ದ ಇವರ ಮನೆಯಲ್ಲಿ ತಂದೆ ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮನೆಯಲ್ಲಿ ಮೂರು ಮಂದಿ ಹೆಣ್ಣು ಮಕ್ಕಳಿದ್ದು, ಇವರಿಗೆ ಮದುವೆ ಮಾಡುವ ಗೋಜಿಗೆ ಹೋಗದ ಸಂಜೀವ ಗೌಡ ಊರಿಗೆ ಉಪಕಾರಿ ಮನೆಗೆ ಮಾರಿಎಂಬ ಸ್ಥಿತಿಯಲ್ಲಿದ್ದರು. ಗುರುವಾರ ರಾತ್ರಿ ಇದೇ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ತಾರಕಕ್ಕೇರಿದ್ದು, ಮಗ ಗಂಗಾಧರ ಕತ್ತಿಯಿಂದ ತಂದೆಯ ಕುತ್ತಿಗೆ ಕಡಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ರಾಜಕೀಯವಾಗಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದ ಸಂಜೀವ ಗೌಡ ತನ್ನ ಮನೆಯ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದಾಗಿ ಮನೆಯ ಹೆಣ್ಣು ಮಕ್ಕಳು ಮದುವೆಯಾಗದೆ ಮನೆಯಲ್ಲಿಯೇ ಉಳಿಯು ವಂತಾಗಿತ್ತು. ಊರಿನ ಮಂದಿಗೆ ಉಪಕಾರ ಮಾಡಲು ಸದಾ ಸಿದ್ಧವಾಗಿರುತ್ತಿದ್ದ ಇವರ ವೈಖರಿಗೆ ಮನೆ ಮಂದಿ ರೋಸಿ ಹೋಗಿದ್ದರು ಎಂದು ತಿಳಿದುಬಂದಿದೆ.
ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನಿಂದ ಬಂದ ಇವರಿಗಿದ್ದ ಒಬ್ಬನೇ ಗಂಡು ಮಗ ಗಂಗಾಧರ ಮನೆಯ ಬಗೆಗೆ ತಂದೆಯ ಬೇಜವಾಬ್ದಾರಿ ಕುರಿತು ಹಲವಾರು ಬಾರಿ ಗಲಾಟೆ ಮಾಡಿದ್ದ. ಕೆಲವು ದಿನಗಳ ಹಿಂದೆಯಷ್ಟೇ ತಂದೆ ಮಗನ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಮರದ ತುಂಡಿನಿಂದ ಹೊಡೆದು ತಂದೆಗೆ ಗಾಯಗೊಳಿಸಿದ್ದ. ಪಿಕಪ್ ವಾಹನದಲ್ಲಿ ಚಾಲಕನಾಗಿ ಸೇರಿಕೊಂಡಿದ್ದ ಮಗರಾಯ ತನ್ನ ಜವಾಬ್ದಾರಿ ಮರೆತು ತಂದೆಯ ಬದುಕನ್ನೇ ಅಂತ್ಯಗೊಳಿಸಿದ. ಪರಿಣಾಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಎಎಸ್ಪಿ ಅನುಚೇತ್, ಉಪ್ಪಿನಂಗಡಿ ವೃತ್ತ ನಿರೀಕ್ಷಕ ವೈ.ಜಗದೀಶ್ ಭೇಟಿ ನೀಡಿದ್ದಾರೆ. ಉಪ್ಪಿನಂ ಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೋಲ ಉತ್ಸವಕ್ಕೆ ಮುಸ್ಲಿಮರ ಅಡ್ಡಿ

Posted by JAYAKIRANA Kirana on | 0 comments | Leave a comment...


ಪ್ರಕ್ಷುಬ್ದ ವಾತಾವರಣವನ್ನು ತಿಳಿಗೊಳಿಸಿದ ಪೊಲೀಸರು
ಮಂಗಳೂರು: ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿಯ ಸೇವಂತಿಗುಡ್ಡೆಯ ಮನೆಯಂಗಳದಲ್ಲಿ ಏರ್ಪಡಿಸಲಾಗಿದ್ದ ಕೋಲ ಉತ್ಸವಕ್ಕೆ ಕೆಲವು ಸ್ಥಳೀಯರು ತಡೆಯೊಡ್ಡಿದ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು, ಪೊಲೀಸರ ಆಗಮನದಿಂದಾಗಿ ಕೋಲ ಉತ್ಸವವನ್ನು ನಿಗದಿಗಿಂತ ಮೊದಲೇ ಮುಗಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು.
ಹಲವಾರು ವರ್ಷಗಳಿಂದ ಸೇವಂತಿಗುಡ್ಡೆಯ ತಮ್ಮ ಸ್ವಂತ ಜಾಗ ದಲ್ಲಿ ಗಿರಿಜಕ್ಕ ಎಂಬವರು ವಾಸವಿ ದ್ದರು. ಇವರಿಗೆ ಮೈಯಲ್ಲಿ ದೇವರ ದರ್ಶನ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ಮಂದಿ ಇವರ ಮನೆಗೆ ಭೇಟಿ ನೀಡುತ್ತಿದ್ದರು. ನಿನ್ನೆ ನೂತನವಾಗಿ ಮನೆಯಲ್ಲಿ ಪ್ರತಿಷ್ಠಾಪಿಸಲಾದ ದೈವದ ಕೋಲ ಉತ್ಸವವಿತ್ತು. ಸಂಜೆಯಿಂ ದಲೂ ಬ್ಯಾಂಡ್, ವಾದ್ಯ ಸಹಿತ ಉತ್ಸವ ಆರಂಭಗೊಂಡಿತ್ತು. ಇದ ರಿಂದ ಸ್ಥಳೀಯ ಕೆಲ ಮುಸ್ಲಿಂ ಮನೆಯವರು ಕೋಲ ನಡೆಯುತ್ತಿದ್ದ ಮನೆಗೆ ಆಗಮಿಸಿ ಉತ್ಸವ ನಡೆಸದಂತೆ ಹಾಗೂ ಬ್ಯಾಂಡ್‌ಗಳನ್ನು ಬಡಿಯದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ಭಕ್ತಾದಿಗಳು ತಮ್ಮ ಹಿತೈಷಿಗಳನ್ನು ಸ್ಥಳಕ್ಕೆ ಕರೆಸಿದ್ದರು. ತೊಕ್ಕೊಟ್ಟು, ಕುತ್ತಾರು ಹಾಗೂ ಇತರ ಭಾಗದಿಂದ ಆಗಮಿಸಿದ ತಂಡ ಹಾಗೂ ಸ್ಥಳದಲ್ಲಿ ಜಮಾಯಿಸಿದ್ದ ತಂಡಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಇತ್ತಂಡಗಳನ್ನು ಮಾತುಕತೆ ಮೂಲಕ ಶಾಂತಿಗೊಳಿಸಿ ಕೋಲ ಉತ್ಸವವನ್ನು ಬೇಗ ಮುಗಿಸುವಂತೆ ಆದೇಶಿಸಿದರು. ಅದರಂತೆ ತಡರಾತ್ರಿವರೆಗೆ ನಡೆ ಯಬೇಕಾಗಿದ್ದ ಉತ್ಸವ ರಾತ್ರಿ ೧೦.೦೦ ಗಂಟೆಗೆ ಮುಕ್ತಾಯಗೊಂಡಿತು. ಬಳಿಕ ಸೇರಿದ್ದ ಜನರನ್ನು ಮನೆಗೆ ತೆರಳುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದರಿಂದಾಗಿ ಜಮಾಯಿಸಿದ್ದ ಮಂದಿ ಜಾಗ ಖಾಲಿ ಮಾಡಿದ್ದರಿಂದಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು. ಕೋಲ ಉತ್ಸವಕ್ಕೆ ಪುರಸಭೆ ಮುಖ್ಯಾಧಿಕಾರಿಗಳಿಂದಲೂ ಮಹಿಳೆ ಗಿರಿಜಕ್ಕನವರು ಅನುಮತಿ ಪಡೆದಿದ್ದರೆಂದು ತಿಳಿದುಬಂದಿದೆ. ಆದರೆ ಮಹಿಳೆಯನ್ನು ಊರಿನಿಂದ ಹೊರಕಳುಹಿಸುವ ಹಿನ್ನೆಲೆಯಲ್ಲಿ ಈ ಹಿಂದೆ ಸ್ಥಳೀಯರಿಂದ ಸಹಿಯನ್ನು ಪಡೆದ ಸ್ಥಳೀಯ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದರೆನ್ನಲಾಗಿದೆ.

ಅಕ್ರಮ ದನಸಾಗಾಟ: ಓರ್ವನ ಬಂಧನ

Posted by JAYAKIRANA Kirana on | 0 comments | Leave a comment...


ಸುಳ್ಯ: ಕಾರಿನಲ್ಲಿ ಅಕ್ರಮವಾಗಿ ಎರಡು ದನ ಹಾಗೂ ಒಂದು ಕರು ವನ್ನು ಸಾಗಿಸುತ್ತಿದ್ದ ತಂಡವನ್ನು ತಡೆಹಿಡಿದ ಬಜರಂಗದಳ ಓರ್ವನನ್ನು ಸುಳ್ಯ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕಾಂತಮಂಗಿಲೆ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಅಜ್ಜಾವರ ನಿವಾಸಿ ಉಸ್ಮಾನ್ ಬಂಧಿತ. ನಾಲ್ವರ ತಂಡ ನಿನ್ನೆ ಕ್ವಾಲಿಸ್ ಕಾರಿನಲ್ಲಿ ಎರಡು ದನ ಹಾಗೂ ಕರುವೊಂದನ್ನು ಕೊಂಡೊಯ್ಯುತ್ತಿದ್ದ ಮಾಹಿತಿ ಪಡೆದ ಬಜರಂಗದಳ ಕಾಂತಮಂಗಿಲೆ ಸಮೀಪ ವಾಹನವನ್ನು ತಡೆಹಿಡಿದಿತ್ತು. ಈ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದರು. ಉಸ್ಮಾನ್ ಅನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಸುಳ್ಯ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೂವರು ಮಕ್ಕಳು ಪರಾರಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಹೊರರಾಜ್ಯದ ಇಬ್ಬರು ಮಕ್ಕಳ ಸಹಿತ ಮೂವರು ಕಂಕನಾಡಿಯಲ್ಲಿರುವ ಪ್ರಜ್ಞಾ ಸಲಹಾ ಕೇಂದ್ರದಿಂದ ಪರಾರಿಯಾದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಹಾರ ಮೂಲದ ಮುರಾರಿ(೧೪), ಆಂಧ್ರಪ್ರದೇಶ ಮೂಲದ ವೆಂಕಟೇಶ(೧೧) ಹಾಗೂ ಧಾರವಾಡ ಮೂಲದ ರಾಜು ಲಂಬಾಣಿ(೧೩) ನಾಪತ್ತೆಯಾದ ಬಾಲಕರು. ಬೀದಿ ಅಲೆಯುತ್ತಿದ್ದ ಈ ಮಕ್ಕಳನ್ನು ನಿನ್ನೆಯಷ್ಟೇ ಹಿಡಿದು ತಂದು ಪ್ರಜ್ಞಾ ಸಲಹಾ ಕೇಂದ್ರದ ವಶಕ್ಕೆ ನೀಡಲಾಗಿತ್ತು. ನಿನ್ನೆ ರಾತ್ರಿ ಊಟಮಾಡಿ ಮಲಗಿದ ಬಳಿಕ ಇವರು ನಾಪತ್ತೆಯಾಗಿದ್ದಾರೆ ಎಂದು ಪ್ರಜ್ಞಾ ಸಲಹಾ ಕೇಂದ್ರದ ಸಂಯೋಜಕಿ ಮರ್ಸಿ ದಿವ್ಯಾ ಪಿಂಟೊ ಕದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ರುವ ದೂರಿನಲ್ಲಿ ತಿಳಿಸಿದ್ದಾರೆ.

ಅಮಲಿನಲ್ಲಿದ್ದ ಯುವತಿಯ ರೇಪ್: ಭಾರತೀಯನಿಗೆ ೬ ವರ್ಷ ಜೈಲು

Posted by JAYAKIRANA Kirana on | 0 comments | Leave a comment...



ಮೆಲ್ಬೋನ್: ಬಾಡಿಗೆಗೆ ಕರೆದಿದ್ದ ಯುವತಿ ಅತಿಯಾಗಿ ಮದ್ಯ ಸೇವಿಸಿ ದ್ದನ್ನು ದುರುಪಯೋಗಪಡಿಸಿಕೊಂಡು ಅತ್ಯಾಚಾರ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಚಾಲಕ ನಿಗೆ ಆಸ್ಟ್ರೇಲಿಯಾದ ನ್ಯಾಯಾಲ ಯವೊಂದು ಆರು ವರ್ಷಗಳ ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಅಮೃತ ಪಾಲ್‌ಸಿಂಗ್ ಎನ್ನುವ ಭಾರತೀಯ ಮೂಲದ ಟ್ಯಾಕ್ಸಿ ಡ್ರೈವರ್ ೨೪ ವರ್ಷ ವಯಸ್ಸಿನ ಯುವತಿಯನ್ನು ತನ್ನ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ರೇಪ್ ಮಾಡಿರುವನೆಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಅತಿಯಾಗಿ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ತನ್ನ ಮನೆಗೆ ವಾಪಾಸಾಗಲು ಅಮೃತ ಪಾಲ್ ಸಿಂಗ್‌ನ ಟ್ಯಾಕ್ಸಿಯನ್ನು ಬಾಡಿಗೆ ಪಡೆದಿದ್ದಳು. ಆಕೆ ಕುಡಿದಿದ್ದನ್ನು ಗಮನಿಸಿದ ಸಿಂಗ್ ಆಕೆಯನ್ನು ಪರ್ತ್‌ನ ನಾರ್ತ್ ಲೇಕ್ ಸಮೀಪದ ಉದ್ಯಾನವನಕ್ಕೆ ಕರೆದೊಯ್ದು ರೇಪ್ ಮಾಡಿದನೆಂದು ಆಕೆ ಪೊಲೀಸರಿಗೆ ದೂರು ನೀಡಿದ್ದಳು.
ಯುವತಿಯೊಬ್ಬಳ ಸ್ನೇಹದ ದುರುಪಯೋಗ ಮತ್ತು ಆಕೆಯ ಭಾವನೆಗೆ ವಿರುದ್ಧವಾದ ನಡವಳಿಕೆಯನ್ನು ಸಿಂಗ್ ಕೈಗೊಂಡಿದ್ದ ಎಂದು ಅಲ್ಲಿನ ನ್ಯಾಯಾಲಯ ತೀರ್ಮಾನಿಸಿ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಬಿಜೆಪಿಗೆ ಸಂಘಟನೆಯೇ ಶಕ್ತಿ ಕಾಂಗ್ರೆಸ್‌ನ ಕೈ ಹಿಡಿಯುವವರಾರು?

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಪೈಪೋಟಿಯಲ್ಲಿದ್ದರೆ, ಜೆಡಿಎಸ್ ತನ್ನ ಅಸ್ತಿತ್ವ ತೋರಿಸಲು ಹೆಣಗಾಡುತ್ತಿರುವುದು ಸಾರ್ವಜನಿಕ ಸತ್ಯ.
ಪ್ರಮುಖ ರಾಜಕೀಯ ಪಕ್ಷಗಳಿಗೆ ಈ ಉಪಚು ನಾವಣೆ ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾದುದಲ್ಲ, ಬದಲಿಗೆ ಮುಂಬರುವ ವಿಧಾನ ಸಭಾ ಚುನಾವಣೆ ಯನ್ನೂ ಗಮನದಲ್ಲಿಟ್ಟುಕೊಂಡೇ ಹೋರಾಟ ಮುಂದುವರಿಸಿವೆ. ಈಗಿನ ಸೋಲು ಗೆಲುವು ನಮಗೆ ಮುಖ್ಯ ಅಲ್ಲವೇ ಅಲ್ಲ ಮುಂದಿನ ವಿಧಾನಸಭೆಯ ಚುನಾವಣೆಗೆ ಪಕ್ಷದ ನೆಲೆಯನ್ನು ಭದ್ರಪಡಿಸುವುದೇ ನಮ್ಮ ಗುರಿ ಎಂಬ ಜೆಡಿಎಸ್ ನಾಯಕರ ಮಾತೇ ಎಲ್ಲವನ್ನು ಸ್ಪಷ್ಟಪಡಿಸುತ್ತದೆ. ಈ ಉಪಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆಯ ಚುನಾವಣೆಯ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ರಾಜಕೀಯ ಪಕ್ಷಗಳ ನಾಯಕರದ್ದಾಗಿದೆ. ಆದುದರಿಂದಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯ ಕರು ಉಸಿರಾಡಲೂ ಪುರಸೊತ್ತು ಇಲ್ಲದಂತೆ ಪ್ರಚಾರ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಪುಟದ ಸಚಿವರಾಗಿದ್ದವರು ಹಾಗೂ ಅವರ ಬೆಂಬಲಿಗರು ಮಾಡಿರುವ ಹಗರಣ, ಪಕ್ಷದಲ್ಲಿ ಅವರಿಂದ ಉಂಟಾಗಿರುವ ಬಿಕ್ಕಟ್ಟು ಉಪಚುನಾ ವಣೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂಬು ದನ್ನು ಬಿಜೆಪಿ ನಾಯಕರು ನಂಬುತ್ತಾರೆ. ಇದೇ ಕಾರಣದಿಂದ ಬಿಜೆಪಿ ಚುನಾವಣೆಯ ಘೋಷಣೆ ಯಾಗುವ ಪೂರ್ವದಿಂದಲೇ ಸಂಘ ಪರಿವಾರದ ಸಹಾಯದಲ್ಲಿ ಪ್ರಚಾರ ಆರಂಭಿಸಿದೆ. ಸಂಘದ ಸಂಘಟಿತ ಪ್ರಚಾರ ಮಾತ್ರವೇ ಬಿಜೆಪಿಯನ್ನು ಕಾಪಾಡಬಲ್ಲದು. ಸಂಘದ ಸಂಘಟಿತ ಕಾರ್ಯಕರ್ತ ರು ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಸುತ್ತಿನ ಪ್ರಚಾರ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಅವರು ಪ್ರತಿಯೋರ್ವ ಮತದಾರರ ಮನೆಯನ್ನೂ ಮನವನ್ನು ತಲುಪಿ ಬಂದಿದ್ದಾರೆ. ಆದರೆ ಕಾಂಗ್ರೆಸ್ ಚುನಾವಣೆ ದಿನದವರೆಗೂ ಕ್ಷೇತ್ರದ ಅರ್ಧದಷ್ಟು ಮತದಾರರನ್ನು ತಲಪುವ ಕಾರ್ಯಕರ್ತ ಪಡೆಯ ನ್ನೂ ಹೊಂದಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ನಾಯಕರ ರೋಡ್ ಶೋ ಮಾತ್ರವೇ ಕಾಂಗ್ರೆಸ್‌ನ ಪ್ರಚಾರದ ಪ್ರಮುಖ ಆಧಾರ. ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಗೊಂದಲ ಮಾತ್ರವೇ ಕಾಂಗ್ರೆಸ್‌ನ್ನು ಕಾಪಾಡಬಲ್ಲುದು. ಇದರ ಹೊರತಾಗಿ ಜಾತಿ ಲೆಕ್ಕಾ ಚಾರದ ರಾಜಕೀಯ ಯಾರ ಕೈ ಹಿಡಿಯಲಿದೆ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿ ಹೋಗಿರುವ ಲಿಂಗಾಯತರು ಯಡಿಯೂರಪ್ಪರ ಕಾರಣದಿಂದಾಗಿ ಬಿಜೆಪಿಗೆ ಪಾಠ ಕಲಿಸಲಿದ್ದಾರೆ ಎಂದು ಪೂರ್ತಿಯಾಗಿ ಹೇಳಲಾಗದು. ಅರ್ಧದಷ್ಟು ಲಿಂಗಾಯತರು ಮನಸು ಬದಲಿಸಲೂಬಹುದು ಎಂಬುದನ್ನು ತಿರಸ್ಕರಿಸಲಾ ಗದು. ಬಿಲ್ಲವರು ಸುನಿಲ್‌ಕುಮಾರ್‌ಗೆ, ಬಂಟರು ಜಯಪ್ರಕಾಶ್ ಹೆಗ್ಡೆಗೆ ಒಲಿಯಲಿದ್ದಾರೆ ಎಂಬ ಲೆಕ್ಕಾಚಾರ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಲಿದೆ. ಒಕ್ಕಲಿಗರು ಹೆಚ್ಚಿನ ಪ್ರಮಾಣದಲ್ಲಿರುವ ಚಿಕ್ಕಮ ಗಳೂರು ಜಿಲ್ಲೆಯಲ್ಲಿ ಫಿಫ್ಟಿ ಫಿಫ್ಟಿ ಪ್ರಮಾಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಹಂಚಿಕೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಕ್ಕಲಿಗ ಮುಖ್ಯಮಂತ್ರಿಯಾಗಿರುವ ಅವಕಾಶಕ್ಕಾಗಿ ಕೃತಜ್ಞತಾ ರೂಪದ ಮತಗಳು ಬಿಜೆಪಿಗೆ ದಕ್ಕಲಿವೆ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅಭಿಮಾನ ಬಿಡಲಾ ಗದ ಒಕ್ಕಲಿಗರು ಜೆಡಿಎಸ್‌ಗೆ ತಮ್ಮ ನಿಷ್ಠೆ ತೋರಲಿ ದ್ದಾರೆ. ಕಾಂಗ್ರೆಸ್‌ಗೆ ಮಾತ್ರ ಒಕ್ಕಲಿಗ ಮತ ಸೆಳೆಯುವ ಶಕ್ತಿ ಕಾಣುತ್ತಿಲ್ಲ. ಹಿಂದುಳಿದ ವರ್ಗದವರು, ಪರಿಶಿ ಷ್ಠರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಆದರೆ ಈ ಮತದಾರರ ಮನಮುಟ್ಟುವ ಕಾರ್ಯಕರ್ತರ ಕೊರತೆಯನ್ನೂ ಕಾಂಗ್ರೆಸ್ ಎದುರಿಸು ತ್ತಿರುವುದರಿಂದ ಇವರು ಮತಗಟ್ಟಗೇ ಬಾರದಿದ್ದರೆ ಎಂಬ ಆತಂಕ ಕಾಂಗ್ರೆಸಿಗರಿಗೆ ಕಾಡದಿರದು. ತಮ್ಮ ಮತದಾರರನ್ನು ಕೈ ಹಿಡಿದು ಕರೆತರುವ ತಂಡ ಬಿಜೆಪಿ ಯಲ್ಲಿದೆ. ಕಾರ್ಯಕರ್ತರ ಶಕ್ತಿಯಲ್ಲದೇ ನಾಯಕರು ವರ್ಚಸ್ಸು ಈ ಉಪಚುನಾವಣೆಯಲ್ಲಿ ಕೆಲಸಕ್ಕೆ ಬಾರದಂತಾಗಿದೆ.
ಬಿಜೆಪಿ ಮನೋರಮಾ ಮಧ್ವರಾಜ್ ಬಂದು ದಾಗಲಿ, ಸಭಾಪತಿ ಜೆಡಿಎಸ್ ಸೇರಿದ್ದಾಗಲಿ ಚಲನಚಿತ್ರ ನಟರು ಬಂದು ರೋಡ್ ಶೋ ನಡೆಸಿದ್ದಾಗಲಿ ಚುನಾ ವಣೆಯ ಮೇಲೆ ನೇರ ಪರಿಣಾಮ ಬೀರುವ ಲಕ್ಷಣ ಗಳು ಕಾಣುತ್ತಿಲ್ಲ.
ಉಡುಪಿಯಲ್ಲಿ ಜೆಡಿಎಸ್ ಸಂಘಟನೆ ಏನೇನೂ ಸಾಲದು, ಅದರ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಕೇವಲ ಬೆಳಪು ಗ್ರಾಮಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ಅವರ ಕೆಲಸ ಏನೂ ಸಾಲದು. ಈ ಉಪಚುನಾವಣೆಯ ಬಳಿಕ ಅವರ ಅಧ್ಯಕ್ಷ ಹುದ್ದೆಗೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ.
ಮತದಾರರ ಮನದಲ್ಲಿ ಏನಿದೆ ಎಂಬುದು ಫಲಿತಾಂಶದ ದಿನವಷ್ಟೇ ತಿಳಿಯಲಿದೆ.

ಕರಾವಳಿಗೆ ಮುನಿಯಪ್ಪ ನೀಡಿದ ಕೊಡುಗೆ ಏನು: ಸಚಿವ ಅಶೋಕ್ ಪ್ರಶ್ನೆ

Posted by JAYAKIRANA Kirana on | 0 comments | Leave a comment...


ಕಾರ್ಕಳ: ಉಡುಪಿ-ಚಿಕ್ಕಮ ಗಳೂರು ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪರ ಉಸ್ತುವಾರಿ ವಹಿಸಿರುವ ಕೇಂದ್ರ ರೈಲ್ವೇ ಸಚಿವ ಬಜೆಟ್‌ನಲ್ಲಿ ಕರಾವಳಿ ಜನತೆಗೆ ನೀಡಿದ ಕೊಡುಗೆ ಏನೆಂಬುವುದನ್ನು ಬಹಿರಂಗ ಪಡಿಸಲೆಂದು ಗೃಹ ಸಚಿವ ಆರ್. ಅಶೋಕ್ ಸವಾಲೆಸೆದರು.
ಚುನಾವಣಾ ಅಂತಿಮ ಪ್ರಚಾರ ದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದೆಹಲಿಯಲ್ಲಿ ನಡೆದ ತಂದೂರ್ ಪ್ರಕರಣದಲ್ಲಿ ಕಾಂಗ್ರೆಸ್ ಭಾಗಿಯಾಗಿದ್ದರೆ, ಹೊರತು ಬಿಜೆಪಿಗರಲ್ಲ ಎಂಬುದನ್ನು ಕಾಂಗ್ರೆ ಸ್ಸಿಗರು ಅರಿತುಕೊಳ್ಳುವುದು ಒಳಿತು. ಕಾಂಗ್ರೆಸ್ ಮುಖಂಡರ ಹಗರಣ ಗಳನ್ನು ಬಯಲಿಗೆ ಎಳೆಯಲು ಮುಂದಾದರೆ, ರಾಮಾಯಣ, ಮಹಾ ಭಾರತಗಿಂತ ಉದ್ದವಿದೆ ಎಂದು ವ್ಯಂಗ್ಯ ವಾಡಿದರು.
ಬಿಜೆಪಿ ಶಾಸಕರು ಆಯ್ಕೆಗೊಂಡ ಕ್ಷೇತ್ರಗಳು ಸಂಪೂರ್ಣ ಅಭಿವೃದ್ಧಿ ಕಂಡಿದೆ ಎಂದರೆ, ಇತರ ಪಕ್ಷದಿಂದ ಆಯ್ಕೆಗೊಂಡವರು ಇದ್ಯಾವುದನ್ನು ಮಾಡದೇ ಕೇವಲ ಬಿಜೆಪಿಯ ಬಗ್ಗೆ ಮಾತ್ರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಅವರ ಜಾಯಮಾನವಾಗಿದೆ. ಅಭಿವೃದ್ಧಿಯ ರೂವಾರಿ ಸುನಿಲ್‌ಕುಮಾರ್ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಗೊಳಿಸಿ ಎಂದು ಇದೇ ಸಂದರ್ಭದಲ್ಲಿ ಅವರು ವಿನಂತಿಸಿದರು. ಚಿತ್ರ ನಟಿ ತಾರಾ, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಬೋಳ ಪ್ರಭಾಕರ ಕಾಮತ್ ಉಪಸ್ಥಿತರಿದ್ದರು.

ಗೃಹಿಣಿಗೆ ವರದಕ್ಷಿಣೆ ಕಿರುಕುಳ: ದೂರು

Posted by JAYAKIRANA Kirana on | 0 comments | Leave a comment...


ಮಂಗಳೂರು: ಹೆಚ್ಚಿನ ವರದಕ್ಷಿಣೆ ತರುವಂತೆ ಗೃಹಿಣಿಗೆ ಪತಿ ಮತ್ತಾತನ ಮನೆಮಂದಿ ಸೇರಿ ಕಿರುಕುಳ ನೀಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಕರ್ನಕಟ್ಟೆ ನಿವಾಸಿ ತರನುಮ್ (೨೫) ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಜ್ಪೆಯ ಬಿ.ಬಿ.ಕಂಪೌಂಡ್ ನಿವಾಸಿ ರಿಜ್ವಾನ್ ಶೇಖ್ ಎಂಬಾತನಿಗೆ ಈಕೆಯನ್ನು ಕೊಟ್ಟು ಕಳೆದ ೨೦೦೯ನೇ ಇಸವಿಯ ನವೆಂಬರ್ ೨೧ರಂದು ಮದು ವೆ ಮಾಡಿಸಲಾಗಿತ್ತು. ಈ ವೇಳೆ ಸಾಕಷ್ಟು ವರದಕ್ಷಿಣೆ ನೀಡಿದ್ದರು. ಆದರೆ ರಿಜ್ವಾನ್ ತನ್ನ ಪತ್ನಿಯೊಂದಿಗೆ ಕೇವಲ ೨೫ ದಿನ ಮಾತ್ರ ಇದ್ದು, ಬಳಿಕ ವಿದೇಶಕ್ಕೆ ತೆರಳಿದ್ದ. ಈ ವೇಳೆ ತರನುಮ್‌ಗೆ ಪತಿಯ ತಾಯಿ ಜೈಬುನ್ನೀಸ್, ಮೈದುನಂದಿರಾದ ಇಮ್ರಾನ್ ಆಲಿ ಶೇಖ್, ಸರ್ಫರಾಜ್, ಶೇಖ್ ಕರೀಂ ಹಾಗೂ ನಾದಿನಿ ರೆಹನಾ ಬಾನು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಹತ್ತು ಲಕ್ಷ ರೂ. ವರ ದಕ್ಷಿಣೆ ತರುವಂತೆ ಪೀಡಿಸಲಾರಂಭಿ ಸಿದರು ಎಂದು ದೂರಲಾಗಿದೆ.
೨೦೧೦ನೇ ಇಸವಿಯಲ್ಲಿ ತನ್ನ ತಮ್ಮ ಸರ್ಫರಾಜ್ ಮೂಲಕ ತರನುಮ್‌ರನ್ನು ವಿದೇಶಕ್ಕೆ ಕರೆಸಿಕೊಂಡ ರಿಜ್ವಾನ್ ಅಲ್ಲೂ ಆಕೆಗೆ ನಾನಾ ರೀತಿಯ ಕಿರು ಕುಳ ನೀಡಲು ತೊಡಗಿದ್ದ. ಇದರಿಂದ ತರನುಮ್ ಮರಳಿ ಊರಿಗೆ ಬಂದಿ ದ್ದರು. ಕದ್ರಿ ಠಾಣೆಯಲ್ಲಿ ವರದಕ್ಷಿಣೆ ದೂರನ್ನೂ ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಎರಡೂ ಮನೆಯವರನ್ನು ಕರೆಸಿ ಪಂಚಾತಿಕೆ ನಡೆಸಿದ್ದರು. ಆದರೆ ತರನುಮ್ ತಾಯಿ ಮನೆಯಲ್ಲಿ ಇರುವ ವೇಳೆ ರಿಜ್ವಾನ್ ಹೇಳದೆ ಕೇಳದೆ ವಿದೇ ಶಕ್ಕೆ ಹೋಗಿದ್ದು, ಇದನ್ನು ಕೇಳಲು ತಾಯಿ ಗುಂಜಾರು ಬಾನು ಜೊತೆ ಅತ್ತೆ ಮನೆಗೆ ಹೋದ ವೇಳೆ ಅತ್ತೆ, ಮೈದುನಂದಿರು ಹಾಗೂ ನಾದಿನಿ ಮತ್ತೆ ಕಿರುಕುಳ ಕೊಟ್ಟು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಈ ವೇಳೆ ತಮ್ಮ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಬಲವಂತವಾಗಿ ತೆಗೆದಿರುವ ಆರೋಪಿ ಗಳು ಬೈದು ಕೊಲೆ ಬೆದರಿಕೆ ಒಡ್ಡಿದ್ದಾಗಿ ತರನುಮ್ ಬಜ್ಪೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಯುವಕನ ಶವಪತ್ತೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ಬೀಚ್‌ನಲ್ಲಿ ಗುರುವಾರದಂದು sಸುಮಾರು ೨೬ ವರ್ಷದ ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ. ಬಿಳಿ ಬಣ್ಣ, ಉರುಟು ಮುಖ ಹೊಂದಿದ್ದಾರೆ. ಕಪ್ಪು ಬಣ್ಣದ ಟೀಶರ್ಟ್ ಮತ್ತು ಕಡು ಹಸಿರು ಬಣ್ಣದ ಬರ್ಮುಡಾ ಚಡ್ಡಿ ಧರಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ ಸೋಮೇಶ್ವರ ರುದ್ರಪಾದೆ ಬಳಿ ಶವ ಕಂಡು ಬಂದಿದ್ದು ಸಾರ್ವಜನಿಕರು ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದರು. ಯುವಕ ವಿಹಾರಕ್ಕೆಂದು ಬಂದು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರ ಬಹುದು ಅಥವಾ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀ ಸರು ಶಂಕಿಸಿದ್ದಾರೆ.

ಕಾರ್ಕಳಕ್ಕೆ ಬಂದ ಬಿಎಸ್‌ಎಫ್ ಪಡೆ

Posted by JAYAKIRANA Kirana on | 0 comments | Leave a comment...



ಕಾರ್ಕಳ: ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಚುನಾವಣೆಯ ಭದ್ರತೆಗಾಗಿ ಬಿಎಸ್‌ಎಫ್ ಪಡೆಯನ್ನು ನಿಯೋಜಿಸಿದ್ದು, ೩೦೦ ಮಂದಿ ಸಿಬ್ಬಂದಿ ಇಲ್ಲಿಗೆ ಆಗಮಿಸಿದ್ದಾರೆ.
ಮಲೆನಾಡು-ಕರಾವಳಿ ಪ್ರದೇಶ ಗಳನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಕ್ಸಲ್ ಪೀಡಿತ ಪ್ರದೇಶ ಒಳಗೊಂಡಿರುವು ದರಿಂದ ಹೆಚ್ಚಿನ ಭದ್ರತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ೮೧,೧೨೬ ಮಹಿಳೆಯರು, ೭೦,೧೧೪ ಪುರುಷರು ಸೇರಿದಂತೆ ಒಟ್ಟು ೧,೫೧,೧೪೦ ಮತದಾರರು ಇದ್ದಾರೆ. ೨೩ ಅತೀ ಸೂಕ್ಷ್ಮ ಮತಗಟ್ಟೆಗಳಿವೆ.
ನಕ್ಸಲ್ ಪ್ರದೇಶ ವ್ಯಾಪ್ತಿಯಲ್ಲಿ ಬಿಎಸ್‌ಎಫ್‌ನ ೩೦೦ ಸಿಬ್ಬಂದಿ ಹಾಗೂ ಎಎನ್‌ಎಫ್‌ನ ೩೦೦ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಡಿವೈಎಸ್ಪಿ, ಐವರು ಇನ್ಸ್‌ಪೆಕ್ಟರ್‌ಗಳು ೧೫ ಮಂದಿ ಎಸೈ, ೩೦೦ ಮಂದಿ ಪೊಲೀಸ್ ಸಿಬ್ಬಂದಿ ಯನ್ನು ಹೆಚ್ಚುವರಿಯಾಗಿ ನಿಯುಕ್ತಿ ಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಎಸ್‌ಎಫ್ ಸಿಬ್ಬಂದಿ ಮತದಾರ ರಲ್ಲಿ ಧೈರ್ಯ ತುಂಬುವ ಸಲುವಾಗಿ ವಿಸ್ತೃತ ಬಸ್ ನಿಲ್ದಾಣದಿಂದ ಅನಂತ ಶಯನ ದೇವಳ ತನಕ ರೂಟ್ ಮಾರ್ಚ್ ನಡೆಸಿದ್ದರು. ಇವರಿಗೆ ತಾಲೂಕು ವ್ಯಾಪ್ತಿಯ ಹೆಬ್ರಿ, ಅಜೆಕಾರು, ಗ್ರಾಮಾಂತರ, ನಗರ ಠಾಣಾಧಿಕಾರಿ ಗಳು ಹಾಗೂ ತರಬೇತುದಾರ ಎಸೈಗಳು ಸಾಥ್ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಆಯ್ಕೆ ಸಭೆ: ಬಿಜೆಪಿಗರು ಗೈರು

Posted by JAYAKIRANA Kirana on | 0 comments | Leave a comment...


ಮಂಗಳೂರು : ಮೇಯರ್ ಆಯ್ಕೆ ಪ್ರಕ್ರಿಯೆಯನ್ನೇ ಪ್ರಶ್ನಿಸಿ ನ್ಯಾಯಾಲ ಯದ ಮೆಟ್ಟಲೇರಿದ್ದ ಬಿಜೆಪಿಗರು ಇದೀಗ ತಮ್ಮ ನಿಲುವನ್ನು ಸಮರ್ಥಿಸುವ ನಿಟ್ಟಿನಲ್ಲಿ ನಿನ್ನೆ ನಡೆದ ಮಂಗಳೂರು ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಭೆಗೆ ಗೈರು ಹಾಜರಾಗಿದ್ದಾರೆ.
ಮೇಯರ್ ಆಯ್ಕೆ ದಿನವೇ ನಾಲ್ಕು ಸ್ಥಾಯಿ ಸಮಿತಿಗೆ ೨೮ ಸದಸ್ಯರ ಆಯ್ಕೆ ನಡೆದಿತ್ತು. ಈ ಪೈಕಿ ೨೧ ಮಂದಿ ಬಿಜೆಪಿ ಸದಸ್ಯರಾದರೆ ಏಳು ಮಂದಿ ಕಾಂಗ್ರೆಸ್ ಸದಸ್ಯರು. ನಗರ ಯೋಜನೆ, ಆರೋಗ್ಯ, ತೆರಿಗೆ ಹಣಕಾಸು ಮತ್ತು ಲೆಕ್ಕ ಪತ್ರ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷ ಆಯ್ಕೆಗೆ ನಿನ್ನೆ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೆ ಬಿಜೆಪಿಯ ನವೀನ್ ದೇವಾಡಿಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಗೈರು ಹಾಜರಾಗಿ ದ್ದರು. ನವೀನ್ ದೇವಾಡಿಗ ಹಾಜ ರಾಗಿದ್ದರೂ ಅವರು ಸಭೆಯ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲಿಲ್ಲ. ಸಭೆಗೆ ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದಿನ ೨೦ಕ್ಕೆ ಮುಂದೂಡಲಾಯಿತು.
ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಬಿಜೆಪಿಗರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಲೇರಿದ್ದರು, ಇದರ ವಿಚಾರಣೆ ಇಂದು ನಡೆಯಲಿದೆ. ಅದೇ ರೀತಿ ಮೇಯರ್ ಆಯ್ಕೆಗೆ ತಡೆ ಯಾಜ್ಞೆ ನೀಡದಂತೆ ಕಾಂಗ್ರೆಸಿಗರೂ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟ ಲೇರಿದ್ದರು. ಇದರ ವಿಚಾರಣೆ ಮುಂದಿನ ಮಂಗಳವಾರದಂದು ನಡೆಯಲಿದೆ. ಹೀಗಾಗಿ ನಿನ್ನೆ ನಡೆದ ಸ್ಥಾಯಿ ಸಮಿತಿ ಗಳ ಅಧ್ಯಕ್ಷರುಗಳ ಆಯ್ಕೆ ಸಭೆಗೆ ಬಿಜೆಪಿ ಗರು ಹಾಜರಾದರೆ ಅವರು ಮೇಯರ್ ಆಯ್ಕೆಯನ್ನು ಒಪ್ಪಿಕೊಂಡಂತಾಗುತ್ತದೆ. ಈ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸಿಗರು ಉಚ್ಚ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸುತ್ತಾರೆ ಆಗ ಬಿಜೆಪಿಗರು ಮತ್ತೊಮ್ಮೆ ಇಕ್ಕಟ್ಟಿಗೆ ಸಿಕ್ಕಿ ಕೊಂಡಂತಾಗುತ್ತದೆ ಎನ್ನುವ ಲೆಕ್ಕಾ ಚಾರವನ್ನು ಹಾಕಿಕೊಂಡ ಬಿಜೆಪಿಗರು ನಿನ್ನೆ ಸಭೆಗೆ ಗೈರು ಹಾಜರಾಗಿದ್ದರು.
ಬಿಜೆಪಿಗರ ಗೈರು ಹಾಜರಿಯಿಂದ ಕೋರಂ ಸಮಸ್ಯೆಯನ್ನು ಎದುರಾದ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಭೆಯನ್ನು ಮುಂದೂಡಿದೆ. ಮತ್ತೆ ಒಂದು ವಾರದೊಳಗೆ ಎರಡನೇ ಸಭೆ ನಡೆಯಲಿದ್ದು ಅದಕ್ಕೂ ಗೈರು ಹಾಜ ರಾದರೆ ಮತ್ತೆ ಎರಡು ದಿನದ ಅವಧಿ ಯಲ್ಲಿ ಕೊನೆಯ ಸಭೆ ನಡೆಯಲಿದ್ದು ಇದಕ್ಕೂ ಬಿಜೆಪಿಗರು ಗೈರಾದರೆ ಸ್ಥಾಯಿ ಸಮಿತಿ ಸದಸ್ಯತನದಿಂದ ಅವರ ಹೆಸರು ರದ್ದಾಗುತ್ತದೆ ಎನ್ನಲಾಗಿದೆ. ಒಂದು ವೇಳೆ ಹೀಗಾದರೆ ಮುಂದೆ ಮೇಯರ್ ವಿಶೇಷ ಸಭೆಯನ್ನು ಕರೆದು ಸ್ಥಾಯಿ ಸಮಿತಿ ಆಯ್ಕೆ ನಡೆಸುತ್ತಾರೆ.

ವಿದ್ಯುತ್ ಆಘಾತಕ್ಕೆ ಓರ್ವ ಬಲಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಉಡುಪಿ ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕ್ಲಾಸಿಕ್ ಡ್ರೈಕ್ಲೀನರ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಶಾಕ್‌ನಿಂದ ಮೃತಪಟ್ಟ ದುರ್ಘಟನೆ ನಿನ್ನೆ ನಡೆದಿದೆ.
ಮೃತರನ್ನು ಶಿರ್ವ ಸಮೀಪದ ಮಟ್ಟಾರು ನಿವಾಸಿ ಸದಾನಂದ ಕುಂದರ್ (೪೫) ಎಂದು ಗುರುತಿಸಲಾ ಗಿದೆ. ಇವರು ಬ್ರಾಯ್ಲರ್‌ನಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ಅಕಸ್ಮಾತಾಗಿ ಶಾಕ್ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಾವ ನಿಧನ

Posted by JAYAKIRANA Kirana on | 0 comments | Leave a comment...


ಸುಳ್ಯ: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಹಿರಿಯ ಸಹೋ ದರಿಯ ಪತಿ ನಿನ್ನೆ ಅಲ್ಪಕಾಲದ ಅಸೌಖ್ಯ ದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಚಿಲ್ಪಾರುವಿನಲ್ಲಿರುವ ಅವರ ಮನೆಗೆ ಮುಖ್ಯಮಂತ್ರಿಗಳು ನಿನ್ನೆ ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು.
ಹಿರಿಯ ಸಹೋದರಿ ರತ್ನಾವತಿ ಎಂಬವರ ಪತಿ ಚಿಲ್ಪಾರು ನಿವಾಸಿ ಪದ್ಮನಾಭ ಗೌಡ (೭೨) ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಗೆ ಬುಧವಾರ ದಾಖಲಿಸಲ್ಪಟ್ಟಿದ್ದರು. ನಿನ್ನೆ ಅವರು ಮೃತಪಟ್ಟಿದ್ದರು. ಅವರು ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಕಾಂಗ್ರೆಸ್‌ನ ಯಾವ ಸಾಧನೆಗಾಗಿ ಮತ ಹಾಕಬೇಕಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ

Posted by JAYAKIRANA Kirana on | 0 comments | Leave a comment...



 ಕಾಂಗ್ರೆಸ್ ಪಕ್ಷವು ಒಂದು ಸರ್ವಾಧಿಕಾರಿ ಧೋರಣೆಯ ಪಕ್ಷವೇ ಹೊರತು ಜನಮತಕ್ಕೆ ಮನ್ನಣೆ ನೀಡುವ, ಗುಂಪು ನಾಯಕತ್ವದ ಪಕ್ಷವಲ್ಲ. ಅಲ್ಲಿ ಏನು ನಡೆಯಬೇಕಿದ್ದರೂ ಅದು ಸೋನಿಯಾ ಗಾಂಧಿಯ ನೇರ ಮೂಗಿನ ಕೆಳಗೆ ನಡೆಯಬೇಕು. ಸಭೆ, ಚರ್ಚೆಗಳೆಲ್ಲ ಕೇವಲ ತೋರಿಕೆಗೆ ಮಾತ್ರ. ಅಲ್ಲಿ ಜಾರಿಗೆ ಬರುವುದೆಲ್ಲವೂ ಸೋನಿಯಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ಫಲಗಳು. ಇದೊಂದು ಪ್ರಜಾಪ್ರಭುತ್ವ ಪಕ್ಷ ಎಂದು ಹೇಳಲು ಕಿಂಚಿತ್ ಅರ್ಹತೆಯನ್ನೂ ಹೊಂದಿಲ್ಲ. ಇಂಥ ಕಾಂಗ್ರೆಸ್‌ಗೆ ನಾವು ಮತ ಹಾಕಬೇಕೇ ಎಂದು ಉಡುಪಿಯ ಜನತೆ ಪ್ರಶ್ನಿಸುತ್ತಿದ್ದಾರೆ.

ಸುದ್ದಿ ವಿಶ್ಲೇಷಣೆ
ನಾಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ ಇದೆ ಎಂದು ಹೇಳಲಾಗುತ್ತಿದೆಯಾದರೂ ಕಾಂಗ್ರೆಸ್‌ನ ಹೋರಾಟ ತುಂಬಾ ದುರ್ಬಲವಾಗಿದೆ ಎಂಬುದು ಸತ್ಯ. ಅದರ ಗುಂಪುಗಾರಿಕೆ, ಈ ಹಿಂದಿನ ಇಲ್ಲಿನ ಕಾಂಗ್ರೆಸ್ ಸಂಸದರ ವೈಫಲ್ಯ, ಅದು ಭ್ರಷ್ಟಾಚಾರಕ್ಕೆ ನೀಡುತ್ತಿರುವ ಪ್ರೋತ್ಸಾಹ ,ಭ್ರಷ್ಟಾಚಾರ ವಿರೋಧಿ ಹೋರಾಟ ಕೈಗೊಂಡಿದ್ದ ಬಾಬಾ ರಾಮ್‌ದೇವ್ ಮತ್ತು ಅಣ್ಣಾ ಹಜಾರೆ ಅವರ ಚಳವಳಿಯನ್ನು ಪೊಲೀಸ್ ಬಲ ಪ್ರಯೋಗಿಸಿ ಅದುಮಿಡಲು ಶ್ರಮಿಸಿದುದು, ಸೋನಿಯಾ ಬಿಗಿ ಹಿಡಿತದಲ್ಲಿರುವ ಆ ಪಕ್ಷ ಕಾಳಧನದ ಬಗ್ಗೆ ನಿರ್ಲಕ್ಷ್ಯ ತೋರಿ, ಭಾರತೀಯ ಸ್ವಿಸ್ ಬ್ಯಾಂಕ್ ಠೇವಣಿದಾರರಿಗೆ ಪರೋಕ್ಷವಾಗಿ ನೀಡುತ್ತಿರುವ ಪ್ರೋತ್ಸಾಹ, ಬೆಲೆಯೇರಿಕೆ ಮೂಲಕ ಬಡಜನರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟುವುದನ್ನು ಅನಿವಾರ್ಯವಾಗಿಸಿದುದು....ಮುಂತಾದವುಗಳೇ ಕಾಂಗ್ರೆಸ್‌ನ ಬಲುದೊಡ್ಡ ಸಾಧನೆಗಳ ಪಟ್ಟಿಯಲ್ಲಿ ಸೇರುವಂಥವುಗಳು. ಶತಮಾನದ ಇತಿಹಾಸ ಹೊಂದಿರುವ ಆ ಪಕ್ಷ ಚಿಲ್ಲರೆ ಕಾರಣ ಹಿಡ್ಕೊಂಡು ರಾಜಕೀಯ ಮಾಡುತ್ತಾ, ಅಲ್ಪಸಂಖ್ಯಾಕರ ತುಷ್ಟೀಕರಣ ಮಾಡುತ್ತಾ ರಾಜಕೀಯ ಲಾಭ ಮಾಡಲು ಯತ್ನಿಸುತ್ತಿರುವುದು ನಾಚಿಕೇಗೇಡಿನ ವಿಷಯ. ದೇಶವನ್ನು ಹಲವು ದಶಕಗಳ ಕಾಲ ಆಳಿರುವ ಕಾಂಗ್ರೆಸ್ ತನ್ನ ಮತಬ್ಯಾಂಕ್‌ಗಾಗಿ ಬಡತನವನ್ನು ಶಾಶ್ವತವಾಗಿ ಉಳಿಸಿಕೊಂಡು ಬಂದಿರುವುದು ಈಗಿನ ಪ್ರಬುದ್ಧ ಮತದಾರರಿಗೆ ತಿಳಿಯದ ವಿಷಯವೇನಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಈಗ ನಾಯಕನಿಲ್ಲದ ಪಕ್ಷ ಎಂದು ಹೇಳಲೇಬೇಕಾಗುತ್ತದೆ. ಸಿದ್ಧರಾಮಯ್ಯರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಹಿಂದುಮುಂದು ನೋಡುವುದಕ್ಕೆ ಅವರು ವಲಸಿಗ ಎಂಬುದಕ್ಕಿಂತಲೂ ಹೆಚ್ಚಾಗಿ ಅವರು ಸೋನಿಯಾರಿಗೆ ಆಪ್ತರಾಗಿಲ್ಲ ಎಂಬುದು ಮುಖ್ಯ ಕಾರಣ. ಉಡುಪಿಯ ಮಾಜಿ ಸಂಸದ ಆಸ್ಕರ್ ಫೆರ್ನಾಂಡಿಸ್ ಜನರಿಗಾಗಿ ಏನೂ ಮಾಡದಿದ್ದರೂ ಅವರೀಗಲೂ ಕಾಂಗ್ರೆಸ್‌ನಲ್ಲಿ ಓರ್ವ ಪ್ರಭಾವಿ ನಾಯಕ. ಯಾಕೆ ಗೊತ್ತಾ? ಅವರು ಸೋನಿಯಾ ಆಪ್ತರು ಮತ್ತು ಸೋನಿಯಾರಂತೆ ಕ್ರಿಶ್ಚಿಯನ್ ಆಗಿದ್ದಾರಲ್ಲಾ ಅದಕ್ಕೆ! ಪತ್ನಿ ಸಮೇತ ವೇದಿಕೆ ಹಂಚಿಕೊಂಡು ಏನೇನೋ ಹೇಳಿ ಹೋಗುವುದು ಬಿಟ್ಟರೆ ಆಸ್ಕರ್‌ಗೆ ಜನರ ನಡುವೆ ಇಳಿದು ನಾಲ್ಕು ಹೆಜ್ಜೆ ಹಾಕಲೂ ಆಗುವುದಿಲ್ಲ, ಅವರ ನೋವು ನಲಿವಿಗೆ ಸ್ಪಂದಿಸಲೂ ಆಗುವುದಿಲ್ಲ. ಸಿಕ್ಕಸಿಕ್ಕಲ್ಲಿ ಪತ್ನಿಯೊಂದಿಗೆ ಸುತ್ತಾಡುವ ಆಸ್ಕರ್ ಜನರಿಗೆ ಏನಾದರೂ ಮಾಡಿದ್ದರೆ ಈ ಚುನಾವಣೆಯ ಹೊತ್ತು ಜನರ ಮುಂದಿಡಬೇಕಿತ್ತು. ಅವರನ್ನು ಜನ ತಿರಸ್ಕರಿಸಿದರೂ ಕಾಂಗ್ರೆಸ್ ತಿರಸ್ಕರಿಸುವುದಿಲ್ಲ. ಯಾಕೆಂದರೆ ಅದಕ್ಕೆ ಸೋನಿಯಾ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷವು ಒಂದು ಸರ್ವಾಧಿಕಾರಿ ಧೋರಣೆಯ ಪಕ್ಷವೇ ಹೊರತು ಜನಮತಕ್ಕೆ ಮನ್ನಣೆ ನೀಡುವ, ಗುಂಪು ನಾಯಕತ್ವದ ಪಕ್ಷವಲ್ಲ. ಅಲ್ಲಿ ಏನು ನಡೆಯಬೇಕಿದ್ದರೂ ಅದು ಸೋನಿಯಾ ಗಾಂಧಿಯ ಮೂಗಿನ ನೇರ ನಡೆಯಬೇಕು. ಸಭೆ, ಚರ್ಚೆಗಳೆಲ್ಲ ಕೇವಲ ತೋರಿಕೆಗೆ ಮಾತ್ರ. ಅಲ್ಲಿ ಜಾರಿಗೆ ಬರುವುದೆಲ್ಲವೂ ಸೋನಿಯಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ಫಲಗಳು. ಇದೊಂದು ಪ್ರಜಾಪ್ರಭುತ್ವ ಪಕ್ಷ ಎಂದು ಹೇಳಲು ಕಿಂಚಿತ್ ಅರ್ಹತೆಯನ್ನೂ ಹೊಂದಿಲ್ಲ. ಇಂಥ ಕಾಂಗ್ರೆಸ್‌ಗೆ ನಾವು ಮತ ಹಾಕಬೇಕೇ ಎಂದು ಉಡುಪಿಯ ಜನತೆ ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್‌ನ ಪ್ರಜಾಪ್ರಭುತ್ವ ಪಕ್ಷವಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಯಾದುದು. ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾದುದು ಶಾಸಕರು. ಆದರೆ ಮೊಯಿಲಿ ಮುಖ್ಯಮಂತ್ರಿಯಾ ದುದು ಹೈಕಮಾಂಡ್ ಮೂಲಕ. ಅವರಿಗೆ ಕವರ್ ಮುಖ್ಯಮಂತ್ರಿ ಎಂಬ ಅಡ್ಡಹೆಸರು ಅಂಟಿ ಕೊಳ್ಳಲು ಕೂಡ ಕಾರಣ ಕಾಂಗ್ರೆಸ್‌ನ ಪ್ರಜಾಪ್ರಭುತ್ವ ವಿರೋಧಿ ನಿಲುವು. ನಾವು ಆರಿಸಿದ ಪ್ರತಿನಿಧಿಗಳಿಗೆ ಗೌರವ, ಬೆಲೆ ನೀಡಲಾಗದ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದೆಂದರೆ ಅದೊಂದು ಗುಲಾಮ ಗಿರಿಯಾಗುತ್ತದೆ ಎಂಬುದನ್ನು ಹೇಳಲೇ ಬೇಕಾಗಿದೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದ ಪಕ್ಷವಾಗಿದ್ದರೆ ಅದು ತನ್ನ ಮುಂದಿನ ಪ್ರಧಾನಿಯಾಗಿ ರಾಜಕೀಯಕ್ಕೆ ಸೂಕ್ತವಲ್ಲದ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡುತ್ತಿರಲಿಲ್ಲ. ರಾಹುಲ್ ಗಾಂಧಿಯ ಯಾವ ಸರ್ಕಸ್‌ಗಳಿಗೂ ಮತದಾರರು ಒಲಿಯುವುದಿಲ್ಲ ಎಂಬುದು ಇತ್ತೀಚೆಗೆ ನಡೆದಿರುವ ಐದು ರಾಜ್ಯಗಳ ಉಪಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಕಪಿಮುಷ್ಟಿಯಲ್ಲಿಯೇ ಇರಬೇಕು ಎಂಬ ಆಸೆ ಸೋನಿಯಾರಿಗೆ. ಅದನ್ನು ರಾಹುಲ್ ಮೂಲಕ ಸಾಧ್ಯವಾ ಗಿಸುವುದು ಕಷ್ಟ ಎಂದು ಅರಿತ ಸೋನಿಯಾ ಇದೀಗ ಮಗಳ ಗಂಡನನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ರಾಬರ್ಟ್ ವಾಧ್ರಾ ಎಂಬ ಉದ್ಯಮಿ, ಅದೂ ಕೂಡ ಹಲವು ಭ್ರಷ್ಟಾ ಚಾರಗಳಲ್ಲಿ ಇವರು ಪಾಲ್ಗೊಂಡಿದ್ದಾರೆ ಎಂಬ ಗುಸುಗುಸು ಇರುವ ಅಳಿಯ ನನ್ನು ರಾಜಕೀಯಕ್ಕೆ ಕರೆ ತರುವ ಮೂಲಕ ಕಾಂಗ್ರೆಸ್ಸನ್ನು ತನ್ನ ಸ್ವಂತದ ಆಸ್ತಿ ಮಾಡಿಕೊಳ್ಳಲು ಸೋನಿಯಾಳಿಗೆ ಬಲುದೊಡ್ಡ ಆಸೆ. ಅಂಥ ಕಾಂಗ್ರೆಸ್‌ನಲ್ಲಿ ಜನಪ್ರತಿನಿಧಿಗಳೆಲ್ಲ ಸೋನಿಯಾರ ಗುಲಾಮರಂತೆ. ಉಡುಪಿಯ ಸಂಸದ ಅಂಥ ಗುಲಾಮಗಿರಿಗೆ ಒಳಗಾಗಲು ನಾವು ಯಾಕೆ ಸಹಾಯ ಮಾಡಬೇಕು ಎಂದು ಪ್ರಶ್ನಿಸುವ ಸ್ವಾಭಿಮಾನಿ ಮತದಾ ರರು, ಕಾಂಗ್ರೆಸ್‌ಗೆ ಮತ ಹಾಕದಿರುವುದೇ ಒಳಿತು ಎಂದು ಹೇಳುತ್ತಿದ್ದಾರೆ.
ಇನ್ನು ಉಡುಪಿಯ ಅಭ್ಯರ್ಥಿಯ ಬಗ್ಗೆ. ಪಕ್ಷೇತರ ಅಭ್ಯರ್ಥಿಯಾಗಿ ಬ್ರಹ್ಮಾ ವರವನ್ನು ಆಳಿದ್ದ ಅವರೂ ಶುದ್ಧಹಸ್ತರು ಎಂದು ಹೇಳುವಂತಿಲ್ಲ. ಅವರ ಮೇಲೂ ಹಲವು ಆರೋಪಗಳ ಗುಸುಗುಸು ಸ್ಥಳೀಯವಾಗಿ ಕೇಳಿ ಬರುತ್ತಿದೆ. ರಾಜಕೀಯ ಪಕ್ಷವೆಂದರೆ ಅಲರ್ಜಿ ಎಂದು ಹೇಳುತ್ತಿದ್ದ ಅವರು, ತಾನು ಆಳಿದ್ದ ಬ್ರಹ್ಮಾ ವರ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡಣೆ ಸಂದರ್ಭದಲ್ಲಿ ಅತಂತ್ರವಾದಾಗ ಇವರೂ ಅತಂತ್ರರಾದರು. ನಿಜವಾಗಿಯೂ ಅವರನ್ನು ಜನರು ಮೆಚ್ಚುತ್ತಿದ್ದರೆ ಅವರು ಪರಿಸರದ ಯಾವ ಕ್ಷೇತ್ರದಿಂದ ಸ್ಪರ್ಧಿಸಿ ದರೂ ಗೆಲ್ಲಬೇಕಿತ್ತು. ತನಗೆ ಅಧಿಕಾರ ವಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವುದನ್ನು ಅವರು ಕಾಂಗ್ರೆಸ್‌ಗೆ ಸೇರುವ ಮೂಲಕ ತೋರಿಸಿದ್ದಾರೆ. ಕಾಂಗ್ರೆಸ್ ಮೂಲಕವಾ ದರೂ ಒಂದು ಸ್ಥಾನ ಬೇಕಾಗಿದೆ ಅವರಿಗೆ. ಆದರೆ ಉಡುಪಿ ಜನತೆ ಈ ಹಿಂದೆ ತಿರಸ್ಕರಿಸಿದಂತೆ ಈ ಬಾರಿಯೂ ಅವರನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು.
ಬಿಜೆಪಿಯನ್ನು ಕೋಮುಪಕ್ಷ ಎಂದು ಜರೆಯುತ್ತಿರುವ ಕಾಂಗ್ರೆಸ್, ತಾನು ಅಲ್ಪಸಂಖ್ಯಾಕರ ತುಷ್ಟೀಕರಣದಲ್ಲೇ ಲಾಭ ಪಡೆದುಕೊಳ್ಳುವುದನ್ನು ಕೋಮುವಾದ ಎಂದು ಹೇಳದಿದ್ದರೆ ತಪ್ಪಾಗುವುದಿಲ್ಲವೇ? ಉತ್ತಮ ಆಡಳಿತ ನೀಡುತ್ತಿದ್ದ ಯಡಿಯೂರಪ್ಪರನ್ನು ಲೋಕಾಯುಕ್ತರು ಮತ್ತು ರಾಜ್ಯಪಾಲರನ್ನು ಬಳಸಿ ಮೂಲೆಗೆ ತಳ್ಳಲು ಶ್ರಮಿಸಿದ ಕಾಂಗ್ರೆಸ್, ಅದೇ ಲೋಕಾಯುಕ್ತರ ವರದಿಯಲ್ಲಿ ಆರೋಪಿ ಎಂದು ಗುರುತಿಸಿದ್ದ ಎಸ್.ಎಂ. ಕೃಷ್ಣ, ಧರಂ ಸಿಂಗ್ ಮುಂತಾದವರು ಮತ್ತು ಕಾಮನ್‌ವೆಲ್ತ್ ಹಗರಣದಲ್ಲಿ ಭಾಗಿಯಾಗಿದ್ದ ಶೀಲಾ ದೀಕ್ಷಿತ್ ವಿರುದ್ಧ ಯಾವ ಕ್ರಮ ಕೈಗೊಂಡಿದೆ ಎಂಬ ಮತದಾರರ ಪ್ರಶ್ನೆಗೆ ಯಾವ ಉತ್ತರ ಸಿಕ್ಕೀತೋ?

ಪಡುಬಿದ್ರಿ ಬೈಪಾಸ್ ವಿರೋಧಿಗಳ ಚುನಾವಣಾ ಬಹಿಷ್ಕಾರ ಹಿಂದೆಗೆತ

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆಯನ್ನು ವಿರೋ ಧಿಸಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿದ ಸ್ಥಳೀಯರು ಕೊನೆಕ್ಷಣದಲ್ಲಿ ಬಹಿಷ್ಕಾರವನ್ನು ಹಿಂದಕ್ಕೆ ಪಡೆದು ಕೊಂಡಿದ್ದಾರೆ.
 ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆಗೆ ಮುಂದಾಗಿದ್ದ ಸರ್ಕಾರದ ಕ್ರಮವನ್ನು ವಿರೋಧಿಸಿ ಸುಮಾರು ೭೮ ಮನೆಯವರು ಚುನಾ ವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾನರ್ ಕೂಡಾ ಅಳವಡಿ ಸಲಾಗಿತ್ತು. ಆದರೆ ಕಾಂಗ್ರೆಸ್ ನಾಯಕರ ಸತತ ಸಂಧಾನದ ಬಳಿಕ ಗುರುವಾರ ರಾತ್ರಿ ಬಹಿಷ್ಕಾರವನ್ನು ಹಿಂದೆಗೆದು ಕೊಳ್ಳಲಾಯಿತು. ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ, ಕೇಂದ್ರ ಚೈಲ್ಡ್ ಲೇಬರ್ ಬೋರ್ಡ್ ಉಪಾಧ್ಯಕ್ಷ ನಝೀರ್ ಹುಸೇನ್ ಸಂಧಾನ ನಡೆಸಿದರು.
ಕೈರಂಪಣಿ ಫಂಡುಗಳ ಬಹಿಷ್ಕಾರ ಹಿಂದೆಗೆತ: ವಾರದ ಹಿಂದೆ ಯುಪಿಸಿಎಲ್ ಪರಿಹಾರ ದೊರಕದ ಪಡುಬಿದ್ರಿಯಿಂದ ಬಡಾ ಎರ್ಮಾಳು ತನಕದ ೬ ಕೈರಂಪಣಿ ಫಂಡುಗಳ ೩೦೨ ಕುಟುಂಬಗಳು ಚುನಾವಣಾ ಬಹಿಷ್ಕಾರ ಹೇಳಿಕೆ ನೀಡಿದ್ದು, ಪರಿಹಾರದ ಭರವಸೆ ದೊರೆತ ಹಿನ್ನೆಲೆಯಲ್ಲಿ ಬಹಿಷ್ಕಾರ ಹಿಂದೆಗೆದುಕೊಂಡಿದ್ದಾರೆ. ಶುಕ್ರವಾರ ಮೀನುಗಾರ ಮುಖಂಡರನ್ನು ಭೇಟಿ ಯಾದ ಮುಖ್ಯಮಂತ್ರಿ ಸದಾನಂದ ಗೌಡ ಯುಪಿಸಿಎಲ್ ಜತೆ ಚರ್ಚಿಸಲಾ ಗುವುದು ಎಂದು ಭರವಸೆ ನೀಡಿದರು.

ಹಾಯ್ ಉಡುಪಿ ಸಂಪಾದಕನಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...


ಉಡುಪಿ: ಉಡುಪಿಯಿಂದ ಪ್ರಕಟ ವಾಗುವ ಹಾಯ್ ಉಡುಪಿ ಮಾಸಿಕ ಪತ್ರಿಕೆಯ ಸಂಪಾದಕ ಉಡುಪಿಯ ಕಡಬೆಟ್ಟು ನಿವಾಸಿ ಪ್ರಕಾಶ್ ಪೂಜಾರಿ ಅವರಿಗೆ ಮೂಡುತೋನ್ಸೆ ಗ್ರಾಮದ ಬೆಂಗ್ರೆ ಎಂಬಲ್ಲಿ ಬಿಜೆಪಿ ಕಾರ್ಯಕರ್ತರ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕರ್ನಾಟಕ ಪತ್ರಕರ್ತರ ಯೂನಿ ಯನ್‌ನ ಜಿಲ್ಲಾಧ್ಯಕ್ಷರೂ, ಅಂಬ್ಯುಲೆನ್ಸ್ ಮಾಲಕರೂ, ಚಾಲಕರೂ, ಪ್ರಿಂಟಿಂಗ್ ಪ್ರೆಸ್ ಮಾಲಕರೂ ಆದ ಪ್ರಕಾಶ್ ಪೂಜಾರಿ ಅವರು ಕಳೆದ ಕೆಲವು ವರ್ಷಗಳಿಂದ ಹಾಯ್ ಉಡುಪಿ ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ. ಒಂದೊಂದು ಸಂಚಿಕೆಯನ್ನು ಒಂದೊಂದು ಊರಿನಲ್ಲಿ ಉಚಿತವಾ ಗಿಯೇ ವಿತರಿಸುತ್ತಿದ್ದ ಪ್ರಕಾಶ್ ಪೂಜಾರಿಯವರು, ಶುಕ್ರವಾರ ಸಂಜೆ ಬೆಂಗ್ರೆ ಪರಿಸರದಲ್ಲಿ ಉಚಿತವಾಗಿ ಪತ್ರಿಕೆ ವಿತರಿಸುತ್ತಿದ್ದಾಗ ಈ ಹಲ್ಲೆ ಪ್ರಕರಣ ನಡೆದಿದೆ.
ಹಾಯ್ ಉಡುಪಿ ಪತ್ರಿಕೆಯಲ್ಲಿ ಬಿಜೆಪಿಗೆ ವಿರುದ್ದವಾದ ಸುದ್ದಿಗಳಿವೆ ಎಂದು ಆರೋಪಿಸಿದ ಬಿಜೆಪಿ ಕಾರ್ಯ ಕರ್ತರು ಪ್ರಕಾಶ್ ಪೂಜಾರಿಯವರನ್ನು ದಿಗ್ಭಂಧನಕ್ಕೆ ಒಳಪಡಿಸಿ, ಅವಾಚ್ಯ ಶಬ್ದ ಗಳಿಂದ ಬೈದು, ಗಂಭೀರವಾಗಿ ಹಲ್ಲೆ ನಡೆಸಿದರು ಮತ್ತು ಜೀವ ಬೆದರಿಕೆ ಒಡ್ಡಿದರು. ಪತ್ರಿಕೆಯ ಪ್ರತಿಗಳನ್ನು ಮತ್ತು ಮೊಬೈಲ್ ಹ್ಯಾಂಡ್ ಸೆಟ್‌ನ್ನು ಬಲವಂತವಾಗಿ ಕಸಿದುಕೊಂಡರು ಎಂದೂ ದೂರಲಾಗಿದೆ. ಈ ಬಗ್ಗೆ ಗಾಯಾಳು ನೀಡಿದ ದೂರಿನ ಪ್ರಕಾರ ಬಿಜೆಪಿ ಕಾರ್ಯಕರ್ತರ ವಿರುದ್ದ ಮಲ್ಪೆ ಠಾಣೆಯ ಪೊಲೀಸರು ಮೊಕದ್ದಮೆ ಯನ್ನು ದಾಕಲಿಸಿಕೊಂಡಿದ್ದಾರೆ.

ಮನೆಗೆ ನುಗ್ಗಿ ನಗ-ನಗದು ಕಳವು

Posted by JAYAKIRANA Kirana on | 0 comments | Leave a comment...


ಮಂಗಳೂರು: ಮನೆಗೆ ನುಗ್ಗಿದ ಕಳ್ಳರು ಒಂದು ಲಕ್ಷ ರೂ. ನಗದು ಹಾಗೂ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಗೈದ ಘಟನೆ ನಿನ್ನೆ ಬೆಳಗ್ಗೆ ಕದ್ರಿ ಶಿವಬಾಗ್‌ನಲ್ಲಿ ನಡೆದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕದ್ರಿ ಶಿವಬಾಗ್ ನಿವಾಸಿ ಭರತ್ ಪೂಜಾರಿ ಎಂಬವರು ಬೆಳಗಿನ ವೇಳೆ ಮನೆಗೆ ಬೀಗ ಹಾಕಿ ಪೇಟೆಗೆ ತೆರಳಿದ್ದಾಗ ಅಡುಗೆ ಕೋಣೆಯ ಕಿಟಕಿಯ ಮೂಲಕ ಹಿಂಬಾಗಿಲು ತೆರೆದ ಕಳ್ಳರು ಕಪಾಟಿನ ಲಾಕರ್ ಮುರಿದು ೮೫.೩೨೦ಗ್ರಾಂ ಚಿನ್ನಾಭರಣ ಒಂದು ಲಕ್ಷ ನಾಲ್ಕು ಸಾವಿರ ರೂ. ನಗದು ಹಾಗೂ ೩೫೦೦ರೂ. ಮೌಲ್ಯದ ಒಂದು ಗ್ರಾಂ ಚಿನ್ನದ ಆಭರಣ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಕೇಸ್

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಣಿಪಾಲದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂ ಘಿಸಿ ರ‍್ಯಾಲಿ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಧಾನಸೌಧಕ್ಕೆ ಮುತ್ತಿಗೆ: ವಕೀಲರ ಸಂಘ ನಿರ್ಧಾರ

Posted by JAYAKIRANA Kirana on | 0 comments | Leave a comment...




ಬೆಂಗಳೂರು: ಸರಕಾರ ತಮ್ಮ ಬೇಡಿಕೆಗಳನ್ನು ಇದೇ ತಿಂಗಳ ೧೯ರೊಳಗಾಗಿ ಈಡೇರಿಸದಿದ್ದರೆ ೨೦ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಬೆಂಗಳೂರು ವಕೀಲರ ಸಂಘ ನಿರ್ಧರಿಸಿದೆ. ಬೇಡಿಕೆಗಳು ಈಡೇರುವವರೆಗೆ ನ್ಯಾಯಾಲಯದ ಕಲಾಪ ಬಹಿಷ್ಕಾರ ಮುಂದುವರಿಸಲು ಸಂಘ ನಿರ್ಧರಿಸಿದೆ. ವಿಧಾನಸೌಧ ಮುತ್ತಿಗೆಗೆ ರಾಜ್ಯದ ಎಲ್ಲ ಬಾರ್ ಕೌನ್ಸಿಲ್‌ಗಳ ವಕೀಲರು ಭಾಗವಹಿಸಲಿದ್ದಾರೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ನಿನ್ನೆ ನಡೆದ ವಕೀಲರ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಕೀಲರು ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಹಾಗೂ ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುರತ್ಕಲ್: ಗೃಹಬಂಧನದಲ್ಲಿರಿಸಿ ಬಾಲೆಯ ಅತ್ಯಾಚಾರ

Posted by JAYAKIRANA Kirana on | 0 comments | Leave a comment...


ಮಂಗಳೂರು: ಅಪ್ರಾಪ್ತ ಬಾಲಕಿ ಯನ್ನು ಅಕ್ರಮ ಗೃಹಬಂಧನದಲ್ಲಿರಿಸಿ ಹಲವು ದಿನಗಳ ಕಾಲ ಅತ್ಯಾಚಾರ ನಡೆಸಿರುವ ಘಟನೆ ಸುರತ್ಕಲ್ ಸಮೀ ಪದ ಬಾಳ ಎಂಬಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
ಮೂಲತ: ಕುಷ್ಟಗಿ ನಿವಾಸಿ ಬಾಳ ಶಾಲೆಯ ಬಳಿ ವಾಸ್ತವ್ಯ ಹೊಂದಿರುವ ಸಿದ್ದಪ್ಪ(೨೪) ಎಂಬಾತ ಪ್ರಕರಣದ ಆರೋಪಿ. ಈತ ತನ್ನ ರೂಮಿನ ಸಮೀಪದಲ್ಲೇ ವಾಸ್ತವ್ಯವಿದ್ದ ಹೂವಿನಹಡಗಲಿ ಮೂಲದ ೧೨ರ ಹರೆಯದ ವಾಲಕಿಯನ್ನು ಕಳೆದ ಫೆ. ೨೦ರಂದು ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯನ್ನು ನಿರಂತರ ಅತ್ಯಾಚಾರ ನಡೆಸಿದ್ದ ಆರೋಪಿ ಆಕೆಯನ್ನು ವಾಪಸ್ ಊರಿಗೆ ಕರೆತರದೆ ಕೊಲೆ ಬೆದರಿಕೆಯೊಡ್ಡಿ ತಮಿಳ್ನಾಡಿನ ಹೊಸೂರಿಗೆ ಕರೆದು ಕೊಂಡು ಹೋಗಿ ಅಲ್ಲಿ ಬಾಡಿಗೆ ಮನೆಯಲ್ಲಿ ಅಕ್ರಮ ಗೃಹಬಂಧನದಲ್ಲಿ ಇರಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.
ಫೆ.೨೬ರಿಂದ ಪ್ರತಿನಿತ್ಯ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಆರೋಪಿಯು ಮನೆಯಿಂದ ಹೊರಗೆ ಹೋಗುವಾಗ ಬಾಗಿಲಿಗೆ ಬೀಗ ಹಾಕಿ ಹೋಗುತ್ತಿದ್ದ. ಇದರಿಂದ ಬಾಲಕಿ ತಪ್ಪಿಸಿಕೊಂಡು ಬರುವ ಪ್ರಯತ್ನ ವಿಫಲ ವಾಗಿತ್ತು. ಬಾಲಕಿಯ ತಾಯಿ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು, ಇದನ್ನು ತಿಳಿದ ಆರೋಪಿ ಬಾಲಕಿಯನ್ನು ಮಾ.೧೫ರಂದು ಸುರತ್ಕಲ್ ಬಳಿ ಬಿಟ್ಟು ತಲೆಮರೆಸಿ ಕೊಂಡಿದ್ದಾನೆ. ಬಾಲಕಿ ಸುರತ್ಕಲ್ ಬಳಿಯ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಅರ್ಕುಳ: ನೇಣು ಬಿಗಿದು ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಅರ್ಕುಳ ಸಮೀ ಪದ ವಳಚ್ಚಿಲ್‌ಪದವು ಎಂಬಲ್ಲಿನ ನಿವಾಸಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿ ದ್ದಾರೆ. ಮೃತರನ್ನು ಹರಿಶ್ಚಂದ್ರ ಕೊಟ್ಟಾರಿ (೩೬) ಎಂದು ಹೆಸರಿಸಲಾಗಿದೆ. ಇವರು ಕಳೆದ ೫-೬ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆನ್ನಲಾ ಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕ್ಸಲ್ ಶಂಕೆ: ಮತ್ತೋರ್ವ ವಶಕ್ಕೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ನಕ್ಸಲರಿಗೆ ಸಹ ಕಾರ ನೀಡಿದ ಆರೋಪದ ಮೇಲೆ ಮತ್ತೋರ್ವ ಯುವಕನನ್ನು ಪೊಲೀಸ್ ತನಿಖಾದಳ ವಶಕ್ಕೆ ಪಡೆದುಕೊಂಡಿದೆ.
ಕೊಲ್ಲಿ ನಿವಾಸಿ ವಿಜಯ ಕಾಡ ಮನೆ ಬಂಧಿಸಲ್ಪಟ್ಟವನು. ಇತ್ತೀಚೆಗೆ ಮಲವಂತಿಗೆಯ ಉರ್ದ್ಯಾರು ಜಲ ಪಾತ ಎಂಬಲ್ಲಿ ನಕ್ಸಲ್ ಹಾಗೂ ಎಎನ್‌ಎಫ್ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ನಕ್ಸಲರ ಬಳಿ ಆಹಾರ ಸಾಮಾಗ್ರಿ ಪತ್ತೆಯಾಗಿತ್ತು. ನಕ್ಸಲರಿಗೆ ಆಹಾರ ಪೂರೈಸಲು ಸ್ಥಳೀ ಯರು ನೆರವು ನೀಡಿದ್ದಾರೆ ಎಂದು ನೀಡಿರಬಹುದು ಎಂಬ ಶಂಕೆಯ ಮೇಲೆ ಹಲವರನ್ನು ಗುರುತಿಸಲಾಗಿದೆ. ನಿನ್ನೆಯೂ ಕುತ್ಲೂರು ಪರಿಸರದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.
ಬಂಧಿತ ವಿಜಯ್ ಕಾಡಮನೆಯಿಂದ ನಕ್ಸಲರ ಬಗ್ಗೆ ಮಾಹಿತಿ ಪಡೆಯಲು ತನಿಖಾದಳ ಶ್ರಮಿಸುತ್ತಿದೆ.

ಬಜೆಟ್ ಮಂಡನೆಗೆ ಯಡ್ಡಿ ಸಿದ್ಧತೆ

Posted by JAYAKIRANA Kirana on | 0 comments | Leave a comment...



ಬೆಂಗಳೂರು: ಮತ್ತೆ ಮುಖ್ಯಮಂತ್ರಿ ಯಾಗುತ್ತೇನೆ ಎಂಬ ಆಶಾಭಾವದಲ್ಲಿ ರುವ ಬಿ.ಎಸ್. ಯಡಿಯೂರಪ್ಪ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡಿದ್ದಾರೆ.
ಮುಖ್ಯಮಂತ್ರಿ ಸದಾನಂದ ಗೌಡ ರಿಗೆ ಪರ್ಯಾಯವಾಗಿ ತನ್ನ ಬೆಂಬಲಿತ ಅಧಿಕಾರಿಗಳ ಮೂಲಕ ಬಜೆಟ್‌ನ ರೂಪರೇಷೆ ಸಿದ್ಧಪಡಿಸಿದ್ದಾರೆ. ಒಂದು ಲಕ್ಷ ಕೋಟಿ ರೂ. ಮುಂಗಡ ಪತ್ರ ಮಂಡಿಸುವ ಅವರ ಕನಸನ್ನು ನನಸಾಗಿ ಸುವ ಪ್ರಕ್ರಿಯೆ ಒಳಗಿಂದೊಳಗೆ ನಡೆ ಯುತ್ತಿದೆ.
ಸದಾನಂದ ಗೌಡರು ಮಾ.೨೧ ರಂದು ಬಜೆಟ್ ಮಂಡಿಸಲು ಸಜ್ಜಾಗಿ ದ್ದರೆ ಮಾ.೧೯ರಂದೇ ಸದಾನಂದ ಗೌಡರನ್ನು ಪದಚ್ಯುತಗೊಳಿಸಿ ತಾನು ಪಟ್ಟಕ್ಕೇರುವ ಆಸೆಯ ಕನಸನ್ನು ಯಡ್ಡಿ ಕಾಣುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮದೆ ಪ್ರತ್ಯೇಕ ಬಜೆಟ್ ಸಿದ್ದಪಡಿಸಿರುವ ಯಡ್ಡಿ ಮಂಡನೆಗೆ ಬೇಕಾದ ರಿಹರ್ಸಲ್ ಮಾಡುತ್ತಿದ್ದಾರೆ. ಅಡ್ವಾಣಿಯ ನಕಾರದ ನಡುವೆಯೂ ಪಕ್ಷದ ಇತರ ನಾಯಕರ ಮೇಲೆ ತನ್ನ ಒತ್ತಡ ತಂತ್ರವನ್ನು ಮುಂದು ವರಿಸಿರುವ ಯಡಿಯೂರಪ್ಪ ಮುಖ್ಯ ಮಂತ್ರಿಯಾಗುವುದು ಶತಸಿದ್ಧ ಎಂಬ ಸಂದೇಶವನ್ನು ತನ್ನವರ ನಡುವೆ ಹರಡಿದ್ದಾರೆ.

ಕಲ್ಲಡ್ಕ ಭಟ್‌ರನ್ನು ಸಮರ್ಥಿಸಿದ್ದೇ ಬ್ಯಾರಿ ಅಕಾಡೆಮಿ ಅಧ್ಯಕ್ಷರ ಕೊಲೆಯತ್ನಕ್ಕೆ ಕಾರಣ

Posted by JAYAKIRANA Kirana on | 0 comments | Leave a comment...



ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಂ ಉಚ್ಚಿಲ್ ಕೊಲೆಗೆ ಯತ್ನಿಸಿದ ನೈಜ ಆರೋಪಿಗಳು ಇನ್ನೂ ಬಂಧನವಾಗ ದಿದ್ದು ಈ ಹಿನ್ನೆಲೆಯಲ್ಲಿ ಕೃತ್ಯದ ಕಾರಣ ಇನ್ನೂ ನಿಗೂಢವಾಗಿದ್ದು ತನಿಖೆ ಮುಂದುವರಿದಿದೆ.
ಗುರುವಾರ ಮಧ್ಯಾಹ್ನ ಅಕಾಡೆ ಮಿಯ ಕಚೇರಿಗೆ ಬಂದಿದ್ದ ಇಬ್ಬರು ಮುಸುಕುಧಾರಿ ಯುವಕರು ಚೇಂಬ ರ್‌ನಲ್ಲಿದ್ದ ರಹೀಂರನ್ನು ತಲ್ವಾರಿನಿಂದ ಕಡಿದು ಪರಾರಿಯಾಗಿದ್ದರು. ಅವರ ಕೈ ತುಂಡಾಗಿದ್ದು, ಹೊಟ್ಟೆ ಮತ್ತು ಕುತ್ತಿಗೆಗೆ ಬಲವಾದ ಗಾಯವಾಗಿ, ಅಪಾಯದಿಂದ ಪಾರಾಗಿರುವ ರಹೀಂ ಸದ್ಯಕ್ಕೆ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ಚೇತರಿಸು ತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ರಹೀಂ ನಾಯಕರ ಪರವಾ ಗಿಯೇ ವಕಾಲತ್ತು ನಡೆಸುವ ಮೂಲಕ ಇತರ ಪಕ್ಷ ಮತ್ತು ಮುಸ್ಲಿ ಮರ ವಿರೋಧವನ್ನೂ ಕಟ್ಟಿಕೊಂಡಿ ದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕವಂತೂ ರಹೀಂ ಪಕ್ಷ ಹಾಗೂ ನಾಯಕರ ಪರವಾಗಿ ನಡೆಸುತ್ತಿದ್ದ ವಕಾಲತ್ತು ವಿರೋಧಿಗಳ ಪಾಲಿಗೆ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇವರು ತಿಂಗಳ ಹಿಂದೆ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಒಂದೆರಡು ದಿನಗಳಲ್ಲೇ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮಾಡಿದ್ದ ಭಾಷಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ವೇಳೆ ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸಿದ್ದ ಕಾರ್ಯಕ್ರಮದಲ್ಲಿ ರಹೀಂ, ಪ್ರಭಾಕರ್ ಭಟ್ ಪರವಾಗಿ ಮಾತನಾಡಿ ದ್ದರು. ಅದೇ ದಿನ ಅವರಿಗೆ ಬೆದರಿಕೆ ಕರೆಗಳು ಬಂದಿದ್ದು ಕಮಿಷನರ್‌ಗೆ ದೂರನ್ನೂ ನೀಡಲಾಗಿತ್ತು.
ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಬಜ್ಪೆ, ಬಂಟ್ವಾಳ ಹಾಗೂ ಇತರ ಕಡೆಗಳಲ್ಲಿ ರಹೀಂರಿಗೆ ಅವರ ಅಭಿಮಾನಿಗಳು ನಡೆಸಲುದ್ದೇಶಿಸಿದ್ದ ಸನ್ಮಾನದಂತಹ ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿತ್ತಲ್ಲದೆ ಅವರು ಈ ಊರುಗಳಿಗೆ ಆಗಮಿಸಿದರೆ ನೋಡಿಕೊಳ್ಳುತ್ತೇವೆ ಎನ್ನುವ ಧಮ್ಕಿಯನ್ನೂ ವಿರೋಧಿಗಳು ಹಾಕಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಗುರುವಾರ ರಹೀಂ ಮೇಲೆ ದಾಳಿ ನಡೆದ ಒಂದೆರಡು ಗಂಟೆಯಲ್ಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದರಾದರೂ ಅವರು ಕೆಲವು ದಿನಗಳ ಹಿಂದೆ ಕರೆ ಮಾಡಿ ಧಮ್ಕಿ ಹಾಕಿದ್ದವರು ಎನ್ನುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ.
ರಾಜಕೀಯದ ಜೊತೆಗೆ ಕೆಲವೊಂದು ವ್ಯವಹಾರಗಳನ್ನೂ ನಡೆಸುತ್ತಿದ್ದ ರಹೀಂ ಭೂವ್ಯವಹಾರದಲ್ಲೂ ತೊಡಗಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಒಂದೆರಡು ಬಾರಿ ವಿದೇಶಕ್ಕೂ ಹೋಗಿ ಬಂದಿದ್ದರು ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ. ಈ ವ್ಯವಹಾರದಲ್ಲಿ ವೈಮನಸ್ಸು ಹೊಂದಿರಬಹುದು ಎನ್ನಲಾಗಿದ್ದು, ಇದೇ ಕೊಲೆ ಯತ್ನಕ್ಕೆ ಕಾರಣವಾಗಿರಬ ಹುದು ಎನ್ನುವ ಸಂಶಯವೂ ಪೊಲೀಸರದ್ದಾಗಿದೆ. ರಹೀಂ ದಾಳಿಗೆ ಮುನ್ನ ಹಾಗೂ ನಂತರ ಆರೋಪಿಗಳು ನಡೆದುಕೊಂಡಿದ್ದ ರೀತಿಯನ್ನು ಗಮನಿಸಿದಾಗ ಆರೋಪಿಗಳಿಗೆ ಸುಪಾರಿ ನೀಡಿರಬಹುದು ಎನ್ನುವ ಸಂಶಯ ಪ್ರತ್ಯಕ್ಷದರ್ಶಿ ಗಳದ್ದಾಗಿದೆ. ಇದೆಲ್ಲವನ್ನು ಮುಂದಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್ ಕೊಲೆಗಡುಕರ ಪಕ್ಷ: ನಳಿನ್‌ಕುಮಾರ್ ಕಟೀಲ್

Posted by JAYAKIRANA Kirana on | 0 comments | Leave a comment...



ಉಡುಪಿ: ರಾಜಾರಾಮ್ ಶೇರ್ವೇಗಾರ್ ಕೊಲೆ ಪ್ರಕರಣದ ಆರೋ ಪಿಗೆ ಜೈಲಿನಿಂದ ಬಂದ ಬೆನ್ನಿಗೆ ಬ್ಲಾಕ್ ಅಧ್ಯಕ್ಷ ಪಟ್ಟವನ್ನು ನೀಡಿದ ಕಾಂಗ್ರೆಸ್ ಪಕ್ಷ ಕೊಲೆಗಡುಕರ ಪಕ್ಷ. ಬೆಲೆ ಏರಿಕೆ, ಆದರ್ಶ ಹಗರಣ, ೨ಜಿ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ ಇತ್ಯಾದಿಗಳು ಕೇಂದ್ರದ ಕಾಂಗ್ರೆಸ್ ಸರಕಾರದ ಸಾಧನೆಗಳು. ಬಿಜೆಪಿಯ ಯಡಿಯೂರಪ್ಪರಂತೆ ಕಾಂಗ್ರೆಸ್‌ನ ಶೀಲಾ ದೀಕ್ಷಿತ್, ಚಿದಂಬರಮ್ ಯಾಕೆ ರಾಜೀನಾಮೆ ನೀಡಿಲ್ಲ, ನೀಲಿ ಚಿತ್ರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ನಾಯಕ ತಿವಾರಿ ಪ್ರಕರಣದ ಬಗ್ಗೆ ಯಾಕೆ ಜಾಣ ಮೌನ ವಹಿಸುತ್ತಾರೆ ಎಂದು ಬಿಜೆಪಿ ನಾಯಕ, ಸಂಸದ ನಳಿನ್‌ಕುಮಾರ್ ರೈ ಕಟೀಲು ಪ್ರಶ್ನಿಸಿದ್ದಾರೆ.
ಉಡುಪಿ ಚಿತ್ತರಂಜನ್ ಸರ್ಕಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರ ಕಾರ್ಯಕ್ರಮದ ಸಮಾರೋಪ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಭೆಗಿಂತ ಮೊದಲು ಪಕ್ಷ ನಾಯಕರು ಹಾಗೂ ನೂರಾರು ಕಾರ್ಯಕರ್ತರು ರಾಜಾಂಗಣದಿಂದ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದರು. ಮುಖ್ಯಮಂತ್ರಿ ಸದಾನಂದ ಗೌಡರ ಗೌರವ ಉಳಿಸಲು ಮತ್ತು ಡಾ.ವಿ.ಎಸ್.ಆಚಾರ್ಯರ ಆತ್ಮದ ಶಾಂತಿಗಾಗಿ ಬಿಜೆಪಿಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದ ಚಲನಚಿತ್ರ ನಟ, ಬಿಜೆಪಿ ನಾಯಕ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಈ ಸಲದ ಚುನಾವಣಾ ಫಲಿತಾಂಶವು ಬರಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ತಿಳಿಸಿದರು.
 ಸಭೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಶಾಸಕರಾದ ಕೆ.ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ನಗರಸಭಾಧ್ಯಕ್ಷ ಕಿರಣ್‌ಕುಮಾರ್, ಬಿಜೆಪಿ ಜಿಲ್ಲಾದ್ಯಕ್ಷ ಉದಯಕುಮಾರ್ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಸುಧಾಕರ ಶೆಟ್ಟಿ, ಮುಖಂಡರುಗಳಾದ ಶೀಲಾ ಸಿ.ಶೆಟ್ಟಿ, ಶ್ಯಾಮಲಾ ಕುಂದರ್, ರವಿರಾಜ್ ಹೆಗ್ಡೆ, ಮಟ್ಟಾರ್ ರತ್ನಾಕರ ಹೆಗ್ಡೆ, ಮನೋಹರ ಕಲ್ಮಾಡಿ, ರತ್ನಾಕರ ಶೆಟ್ಟಿ, ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಹಳೆಯಂಗಡಿ ಗ್ರಾ.ಪಂ.ಮಾಜಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...



ಮುಲ್ಕಿ: ಯು.ಬಿ.ಯಂ.ಸಿ ಹಿರಿಯ ಪ್ರಾಥಮಿಕ ಶಾಲೆ ಹಳೆಯಂ ಗಡಿ ಶಾಲಾ ಸಂಚಾಲಕರಾದ ವಸಂತ್ ಬೆರ್ನಾಡ್ ಶಾಲೆಗೆ ಹಾಗೂ ಗ್ರಾ. ಪಂ. ಅಧ್ಯಕ್ಷರ ಅವಧಿಯಲ್ಲಿ ಗ್ರಾ.ಪಂ.ಗೆ ಮೋಸಮಾಡಿ ಮನೆತೆರಿಗೆ ರಶೀದಿಯನ್ನು ಪೋರ್ಜರಿ ಸೃಷ್ಠಿಸಿ ಅನಧಿಕೃತವಾಗಿ ಮಾಡಿ ಗ್ರಾಮಸ್ಥರಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಅವರ ಶಾಲೆ ಸಂಚಾಲಕ ಹುದ್ದೆ ಹಾಗೂ ಗ್ರಾ. ಪಂ. ಸದಸ್ಯತ್ವದಿಂದ ರದ್ದು ಮಾಡುವಂತೆ ನಿನ್ನೆ ಗ್ರಾ. ಪಂ. ಮುಂದೆ ಡೆನಿಯಲ್ ದೇವರಾಜ್ ಹಾಗೂ ಕೆಲವೇ ಜನರಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಉಸ್ತುವಾರಿ ವಹಿಸಿದ ಡೆನಿಯಲ್ ದೇವರಾಜ್‌ರವರು ಮಾಜಿ ಪಂಚಾಯತ್ ಅಧ್ಯಕ್ಷ ವಸಂತ್ ಬೆರ್ನಾಡ್‌ರವರು ಮಂಗಳೂರಿನ ಬಲ್ಮಠದ ಸಿ.ಎಸ್.ಐ ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿ ೩೬ಲಕ್ಷ ಮುಂಗಡ ಹಣವನ್ನು ಮುಸ್ಲಿಂ ವ್ಯಕ್ತಿಯಿಂದ ಪಡೆದು ಬಲ್ಮಠದ ಮುಸ್ಲಿಂ ಭಾಂದವರಿಗೆ ತೊಂದರೆ ಮಾಡಿರುತ್ತಾರೆ ಹಾಗೂ ಸಿ.ಎಸ್.ಐ ಚರ್ಚ್‌ನ ಜನನ ರಿಜಿಸ್ಟರ್, ಮರಣ ರಿಜಿಸ್ಟರ್ ಇತ್ಯಾದಿ ರಿಜಿಸ್ಟರ್‌ಗಳನ್ನು ಸಿ.ಎಸ್.ಐ ನ ಹಳೆಯಂಗಡಿ ಚರ್ಚ್‌ನ ಸಭಾಪಾಲಕರಿಗೆ ನೀಡುವಂತೆ ಬಿಷಪರು ಕೂಡಲೇ ಆದೇಶಿಸಬೇಕು. ಇದಕ್ಕೆ ಸ್ಪಂದಿಸದಿದ್ದಲ್ಲಿ ಇನ್ನು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಆರೋಪಗಳು ನಿರಾಧಾರ: ಬೆರ್ನಾರ್ಡ್
ಹಳೆವಿದ್ಯಾರ್ಥಿಗಳು ಎಂಬ ಶಿರೋನಾಮೆಯಲ್ಲಿ ನನ್ನ ವಿರುದ್ಧ ಡೆನಿಯಲ್ ದೇವರಾಜ್‌ರವರು ಹೊರಡಿಸಿದ ಆರೋಪಗಳು ನಿರಾಧಾರವಾಗಿದ್ದು, ಇದಕ್ಕೆ ಪ್ರತಿಭಟನೆ ಯಲ್ಲಿ ಬೆರಳೆಣಿಕೆಯಲ್ಲಿ ಭಾಗವಹಿಸಿದ ಜನಸಂಖ್ಯೆಯೇ ಸಾಕ್ಷಿ. ಜನಸೇವೆ ಮತ್ತು ಯೋಗ್ಯ ಆಡಳಿತವನ್ನು ಇಂತವರಿಂದ ನಾನು ಕಲಿಯಬೇಕಿಲ್ಲ. ಜನರ ಮಧ್ಯೆಯೇ ನನ್ನ ಜೀವನ, ಕಳೆದ ೧೫ ವರ್ಷಗಳಿಂದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ಗೌರವಗಳೇ ನಿರಂತರ ವಾಗಿ ನಾನು ಚುನಾಯಿಸಲು ಸಾಕ್ಷಿ. ನಾನು ಗ್ರಾ. ಪಂ. ಅಧ್ಯಕ್ಷನಾಗಿದ್ದಾಗಲೂ ಇವರು ಇಂತಹ ಅನೇಕ ಆರೋಪ ಹೊರಿಸಿ ಪ್ರತಿಭಟನೆ ನಡೆಸಿ ಯಾವುದೇ ಯಶಸ್ಸನ್ನು ಕಾಣದೆ ಹತಾಶರಾಗಿದ್ದರು. ಈಗ ಪುನಃ ಕಳೆದ ೩ ತಿಂಗಳಿನಿಂದ ಮತ್ತೊಮ್ಮೆ ಇಂತಹ ಪ್ರಯತ್ನಕ್ಕೆ ಕೈ ಸುಡುವುದು ಮಾತ್ರ ವಿನಃ ಬೇರೆ ಯಾವುದೇ ಸಾಧನೆ ನಡೆಸಲು ಇವರಿಂದ ಸಾಧ್ಯವಿಲ್ಲ. ಅಧಿಕಾರ ದುರುಪಯೋಗ ಮಾಡಿ ಚರ್ಚ್‌ನ ಟ್ರಸ್ಟ್‌ಗೆ ಮೋಸ ವಂಚನೆ ಮಾಡಿದ್ದು ಯಾರು ಎಂದು ಜನತೆಗೆ ತಿಳಿದಿದೆ. ಇವರ ತಂದೆ ಮುಖ್ಯೋಪಾಧ್ಯಾಯರಾಗಿದ್ದ ಸಂದರ್ಭದಲ್ಲಿ ಏಕಕಾಲದಲ್ಲಿ ಶಾಲಾ ಹೊಸಕಟ್ಟಡ(ಈಗಿನ ಆಂಗ್ಲ ಮಾಧ್ಯಮ ಶಾಲೆ) ಮತ್ತು ಪಡುಹಿತ್ಲುವಿನಲ್ಲಿ ದೊಡ್ಡ ಹಂಚಿನ ಮನೆ ಒಮ್ಮೆಲೆ ಮೇಲೆತ್ತಿ ನಿಂತಿದ್ದು ಜನತೆ ಮರೆತಿಲ್ಲ. ಶಾಲೆಗೆಂದು ವಂತಿಗೆ ರೂಪದಲ್ಲಿ ಸಂಗ್ರಹಿಸಿದ ಕೆಂಪುಕಲ್ಲು, ಸಿಮೆಂಟ್, ಹೆಂಚುಗಳು ಪಡುಹಿತ್ಲುಗೆ ಸಾಗಾಟವಾದದ್ದು ಯಾರ ಕಾಲದಲ್ಲಿ? ಅದು ಯಾಕೆ, ಶಾಲಾ ಶಿಕ್ಷಕರಾಗಿದ್ದುಕೊಂಡು ಫೋರ್ಜರಿ ಗೇಣಿ ಚೀಟಿ ಸೃಷ್ಟಿಸಿ ಚರ್ಚ್ ಟ್ರಸ್ಟನ ಎಕರೆಗಟ್ಟಲೆ ಭೂಮಿಗೆ ಡಿಕ್ಲರೇಶನ್ ಕೊಟ್ಟು ನುಂಗಿ ಹಾಕಿದ ಇಂತಹ ಹಿನ್ನೆಲೆ ಇರುವವರಿಂದ ನಾನೇನೂ ಕಲಿಯಬೇಕಾಗಿಲ್ಲ. ತಾಕತ್ತಿದ್ದರೆ ಚರ್ಚ್‌ಟ್ರಸ್ಟ್‌ನಿಂದ ಪಡೆದ ಡಿಕ್ಲರೇಶನ್ ಭೂಮಿಯನ್ನು ಟ್ರಸ್ಟ್‌ಗೆ ಹಿಂದೆ ಬಿಟ್ಟು ಇಂತಹ ಹೋರಾಟಕ್ಕೆ ಇಳಿಯಲಿ ಮತ್ತು ಇವರು ನನ್ನ ಮೇಲೆ ಹೊರಿಸಿರುವ ಆರೋಪಗಳನ್ನು ಸಾಬೀತುಪಡಿಸಿ ನನ್ನ ಸದಸ್ಯತ್ವವನ್ನು ರದ್ದು ಮಾಡಲಿ ಎಂದು ಹಳೆಯಂಗಡಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಹಾಗೂ ಯು.ಬಿ.ಯಂ.ಸಿ ಶಾಲೆಯ ಸಂಚಾಲಕರಾದ ಎಚ್.ವಸಂತ್ ಬೆರ್ನಾರ್ಡ್ ಪ್ರತಿಕ್ರಿಯಿಸಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)