ವಿಟ್ಲ: ವಿದ್ಯಾರ್ಥಿ ನಾಪತ್ತೆ; ಎರಡನೇ ಬಾರಿ ದೂರು

Posted by JAYAKIRANA Kirana on Wednesday, 14 March 2012 | 0 comments | Leave a comment...


ವಿಟ್ಲ: ವಿಟ್ಲದ ಅಳಿಕೆ ಸತ್ಯಸಾಯಿ ವಿಹಾರದ ೭ನೇ ತರಗತಿ ವಿದ್ಯಾರ್ಥಿ ಯೋರ್ವ ಕಳೆದ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದು, ಈತನ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಎರಡನೇ ಬಾರಿ ಪ್ರಕರಣ ದಾಖಲಾಗಿದೆ.
ಈತ ಮೂಲತಃ ಹಾವೇರಿ ಜಿಲ್ಲೆಯ ಸವಣೂರು ಹಳೆಮನೆ ನಿವಾಸಿ ಹಾಲಪ್ಪ ಅವರ ಪುತ್ರ ಸುರೇಶ್‌ಕುಮಾರ್ ಎಂಬಾತನೇ ನಾಪತ್ತೆಯಾದವ. ಈತನ ಬಗ್ಗೆ ಮಾಹಿತಿ ಸಿಕ್ಕಿದವರು ವಿಟ್ಲ ಠಾಣೆಗೆ ಅಥವಾ ಸ್ಥಳೀಯ ಪೊಲೀಸ್ ಠಾಣೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

ದಾರಿ ತಪ್ಪಿದರೆ ಸದಾನಂದ ಗೌಡರ ವಿರುದ್ಧವೂ ಹೋರಾಟ: ಕುಮಾರಸ್ವಾಮಿ

Posted by JAYAKIRANA Kirana on | 0 comments | Leave a comment...


ಉಡುಪಿ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಭಿವೃ ದ್ದಿಯ ಹೆಸರಿನಲ್ಲಿ ರಾಜ್ಯದ ಕೋಟ್ಯಂತರ ಮೊತ್ತದ ಸಂಪತ್ತು ಲೂಟಿ ಮಾಡಿತು. ಅಕ್ರಮವಾಗಿ ನಡೆದುಕೊಳ್ಳಲಾರಂಭಿಸಿತು. ಈ ಸಂದರ್ಭದಲ್ಲಿ ಜೆಡಿಎಸ್ ವಿರೋಧ ಪಕ್ಷವಾಗಿ ಯಡಿಯೂರಪ್ಪರ ವಿರುದ್ದ ಹೋರಾಟ ಆರಂಭಿಸಿತು. ಸದಾನಂದ ಗೌಡರೂ ದಾರಿ ತಪ್ಪಿ, ಕಾನೂನು ಬಾಹಿರ ಕ್ರಮಗಳಿಗೆ ಹೋದರೆ ಅವರ ವಿರುದ್ದವೂ ಹೋರಾಟ ನಡೆಸಲಾ ಗುತ್ತದೆ. ಸದಾನಂದ ಗೌಡರ ಬಗ್ಗೆ ಮೃದು ಧೋರಣೆ ತಾಳುವ ಪ್ರಶ್ನೆಯೇ ಇಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿ ದ್ದಾರೆ. ಉಡುಪಿಯ ಖಾಸಗಿ ಹೊಟೇಲಿನಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾv ನಾಡುತ್ತಿದ್ದರು.
 ಬಿಜೆಪಿ ಸರಕಾರದ ವಿರುದ್ದ ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ವಿರೋಧಪಕ್ಷ ವಾಗಿ ಕೆಲಸ ಮಾಡಲು ಕಾಂಗ್ರೆಸ್ ಪಕ್ಷ ಅಸಮರ್ಥವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ದೇಶದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಚರ್ಚೆ ಮಾಡದೆ, ಅನಗತ್ಯ ವಿಷಯಗಳನ್ನು ಚರ್ಚೆ ಮಾಡಿದೆ. ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಇವುಗಳೆಲ್ಲವೂ ಇದೀಗ ಜನರಿಗೆ ಗೊತ್ತಾಗಿದೆ. ಬಂಗಾರಪ್ಪನವರ ಅಭಿಮಾನಿ ಡಿ.ಆರ್.ರಾಜು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಯುವಕರ ಪಡೆ ದೊಡ್ಡ ಸಂಖ್ಯೆಯಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳಲಿದೆ ಎಂದು ಕುಮಾರಸ್ವಾಮಿ ಹೇಳಿದರು.
 ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ನಾಯಕರುಗಳಾದ ಮಧು ಬಂಗಾರಪ್ಪ, ಯು.ಆರ್.ಸಭಾಪತಿ, ದೇವಿಪ್ರಸಾದ್ ಶೆಟ್ಟಿ, ಗುಲಾಂ ಮುಹಮ್ಮದ್, ಎಂ.ಜಿ.ಹೆಗಡೆ, ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು ಮೊದಲಾದವರು ಉಪಸ್ಥಿತರಿದ್ದರು.
ರಾಧಿಕಾ ಮನೆಯಲ್ಲಿ ನಾಗಮಂಡಲ: ಕುಮಾರಸ್ವಾಮಿ ಪ್ರತ್ಯಕ್ಷ!
ಮಂಗಳೂರು: ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ನಾಗಮಂಡಲ ಪೂಜೆ ನೆರವೇರಿತು. ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣಾ ಪ್ರಚಾರ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ, ರಾತ್ರಿ ಪೂರ್ತಿ ನಡೆದ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಎರಡು ವರ್ಷಗಳ ಹಿಂದೆ ನಡೆದ ನಾಗಮಂಡಲದಲ್ಲೂ ಕುಮಾರಸ್ವಾಮಿ ಭಾಗವಹಿಸಿದ್ದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರರು ಹಾಜರಿದ್ದರು.

ಪಾಲೆಮಾರ್ ಕಚೇರಿಯಲ್ಲಿ ಐ.ಟಿ. ಅಧಿಕಾರಿಗಳು: ಬಿಜೆಪಿ ಮುಖಂಡರ ಕುಮ್ಮಕ್ಕು

Posted by JAYAKIRANA Kirana on | 0 comments | Leave a comment...


ಮಂಗಳೂರು: ದ.ಕ.ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ರಾದ ಕೃಷ್ಣ ಪಾಲೆ ಮಾರ್ ಕಚೇರಿಗೆ ನಿನ್ನೆ ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇದನ್ನೇ ದಾಳಿ ಎಂದು ಬಿಂಬಿಸಲು ಜಿಲ್ಲೆಯ ಕೆಲ ಬಿಜೆಪಿ ಮುಖಂಡರು ಮಾಧ್ಯ ಮಗಳ ಬೆನ್ನು ಬಿದ್ದ ಘಟನೆಯೂ ನಡೆಯಿತು. ಕೃಷ್ಣ ಪಾಲೇಮಾರ್ ಜಿಲ್ಲೆ ಯ ಬಿಜೆಪಿಯಲ್ಲಿ ಕಾಣಿಸಿಕೊಳ್ಳುವ ತನಕ ತಮ್ಮ ಬೇಳೆ ಬೇಯುವುದಿಲ್ಲ ಎಂದು ಅರಿತಿರುವ ಅಧಿಕಾರದ ಆಕಾಂಕ್ಷಿ ಬಿಜೆಪಿ ಮುಖಂಡರು ಇದಕ್ಕಾಗಿ ನೀಲಿ ಚಿತ್ರದ ಘಟನೆಯನ್ನು ಬಳಸಿಕೊಂಡಿದ್ದರು. ಆದರೆ ಪಾಲೇಮಾರ್ ನೀಲಿ ಚಿತ್ರದಲ್ಲಿ ಬಲಿಪಶುವಾಗಿದ್ದಾರೆ ಎಂದು ತಿಳಿದ ಅವರ ಆಪ್ತರು ಮಂಗಳೂರು ಹಾಗೂ ಸುರತ್ಕಲ್‌ನಲ್ಲಿ ಬೃಹತ್ ಸಭೆ ನಡೆಸಿ ಕೃಷ್ಣ ಪಾಲೇಮಾರ್‌ಗೆ ಬಹಿರಂಗ ಬೆಂಬಲ ಘೋಷಿಸಿದರು.
ಈ ಘಟನೆ ನೀಲಿ ಚಿತ್ರದ ವಿದ್ಯಮಾನವನ್ನು ಹಿಡಿದು ಪಾಲೇಮಾರ್ ರಾಜಕೀಯ ಭವಿಷ್ಯವನ್ನು ಮುಗಿಸ ಬಹುದು ಎಂದು ಕೊಂಡಿದ್ದ ಜಿಲ್ಲೆಯ ಕೆಲ ಬಿಜೆಪಿ ಮುಖಂಡರು ಐ.ಟಿ. ದಾಳಿಯ ಹಿಂದೆ ಸಂಚು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಶಾಸಕನ ಉದ್ಯಮ ಕಚೇರಿಗೆ ಐ.ಟಿ ಅಧಿಕಾರಿಗಳು ಫೈಲ್ ಪರಿಶೀಲನೆಗೆ ಬಂದರೆ ಅದನ್ನೇ ಐ.ಟಿ. ರೇಡು ಎಂದು ಬಿಂಬಿಸಿ ಎಂದು ಕೆಲ ಮಾಧ್ಯಮದವರ ಮೇಲೆ ಬಿಜೆಪಿ ಮುಖಂಡರು, ಅವರ ಆಪ್ತರು ಒತ್ತಡ ಹೇರಿದ ಪ್ರಸಂಗವೂ ನಡೆಯಿತು.
ಆದಾಯ ತೆರಿಗೆ ಅಧಿಕಾರಿಗಳು ಪ್ರತೀ ದಿನ ಒಂದೊಂದು ಉದ್ಯಮಿಗಳ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮಾಮೂಲು. ಅದರಂತೆ ನಿನ್ನೆ ನವಭಾರತ್ ವೃತ್ತದಲ್ಲಿರುವ ಪಾಲೆಮಾರ್‌ಗೆ ಸೇರಿದ ಲ್ಯಾಂಡ್‌ಲಿಂಕ್ಸ್ ಕಚೇರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೃಹತ್ ಸ್ವರೂಪದ ಉದ್ಯಮಿಗಳಿಂದ ಹಿಡಿದು ಸಣ್ಣ ಉದ್ಯಮಿಗಳ ತನಕ ಐ.ಟಿ ಅಧಿಕಾರಿಗಳ ಪರಿಶೀಲನೆ ಕಾರ‍್ಯಕ್ರಮ ನಡೆಯುತ್ತದೆ. ಇದನ್ನೇ ಮುಖ್ಯವಾಗಿಟ್ಟುಕೊಂಡು ಪಾಲೇಮಾರ್ ತೆರಿಗೆ ವಂಚನೆ ನಡೆಸಿದ್ದಾರೆ ಎಂದು ಬಿಂಬಿಸಿ ಅವರ ರಾಜಕೀಯ ಬದುಕಿನಲ್ಲಿ ಮುಜುಗರ ಸೃಷ್ಟಿಸುವುದು ಈ ಸಂಚಿನ ಮೂಲವಾಗಿದೆ ಎನ್ನುವುದು ಪಾಲೇಮಾರ್ ಆಪ್ತರ ಅಭಿಪ್ರಾಯ.

ಹಳೆಯಂಗಡಿ ಪಂಚಾಯತ್ ಮಾಜಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆಗೆ ಸಜ್ಜು

Posted by JAYAKIRANA Kirana on | 0 comments | Leave a comment...


ಮುಲ್ಕಿ: ಇಲ್ಲಿನ ಯು.ಬಿ.ಎಂ.ಸಿ ಶಾಲೆಯ ಜಮೀನನ್ನು ಕಬಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ ನಡೆಸಿದ್ದರಿಂದ ಲೋಕಾಯುಕ್ತ ಇಲಾಖೆಯು ಕಾನೂನು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಿ ಹಳೆಯಂಗಡಿ ಮಾಜಿ ಅಧ್ಯಕ್ಷರ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಯು.ಬಿ.ಎಂ.ಸಿ ಶಾಲೆಯ ಹಳೆವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕರಪತ್ರವನ್ನು ಹಳೆಯಂಗಡಿಯಲ್ಲಿ ಹಂಚಲಾಗುತ್ತಿದೆ.
ಈ ಪ್ರತಿಭಟನೆಯ ಕರಪತ್ರದಲ್ಲಿ ಅಧಿಕೃತವಾಗಿ ಪ್ರತಿಭಟನಾಕಾರರ ಹೆಸರು ಇಲ್ಲದಿದ್ದರೂ ಹಳೆಯ ವಿದ್ಯಾರ್ಥಿಗಳೊಂದಿಗೆ ಸುತ್ತಮುತ್ತಲಿನ ಸಸಿಹಿತ್ಲು, ಪಾವಂಜೆ, ಪಡುಪಣಂಬೂರು, ಕೊಕುಡೆ ಗ್ರಾಮಸ್ಥರು ಎಂದು ಮುದ್ರಿಸಲಾಗಿದೆ. ಮಾರ್ಚ್ ೧೬ರಂದು ಹಳೆಯಂಗಡಿ ಗ್ರಾ. ಪಂ.ನ ಮುಂಭಾಗದಲ್ಲಿ ಬೆಳಿಗ್ಗೆ ೯ರಿಂದ ೧ಗಂಟೆಯವರಗೆ ಧರಣಿ ಸತ್ಯಾಗ್ರಹದ ಪ್ರತಿಭಟನೆ ನಡೆಸುವ ಬಗ್ಗೆ ತಿಳಿಸಲಾಗಿದೆ.
ಮಾಜಿ ಪಂಚಾಯತ್ ಅಧ್ಯಕ್ಷ, ಹಾಲಿ ಸದಸ್ಯ ವಸಂತ್ ಬೆರ್ನಾರ್ಡ್ ಮೇಲೆ ಗಂಭೀರ ಆರೋಪಗಳ ಪಟ್ಟಿಯನ್ನೇ ಈ ನೋಟಿಸಿನಲ್ಲಿ ಹೇಳಿದ್ದು ಅದರಲ್ಲಿ ದೂರದ ಮಂಗಳೂರಿನವರೆಗೂ ವ್ಯಾಪಿಸಿರುವ ಹಲವಾರು ಹಗರಣಗಳನ್ನು ತಿಳಿಸಲಾಗಿದೆ. ಅಲ್ಲದೇ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದರಿಂದ ಅವರ ಸದಸ್ಯತನ ಹಾಗೂ ಶಾಲಾ ಸಂಚಾಲಕರ ಹುದ್ದೆಯಿಂದ ಅಮಾನತು ಮಾಡಬೇಕೆಂದೂ ಆಗ್ರಹಿಸಲಾಗಿದೆ.
ಪ್ರಸ್ತುತ ಈ ಕರಪತ್ರದ ಹಿನ್ನೆಲೆಯು ಸಹ ರಾಜಕೀಯ ಬಣ್ಣದಿಂದ ಕೂಡಿದ್ದು ಆರೋಪಕ್ಕೆ ಒಳಗಾಗಿರುವವರು ಸಹ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿದ್ದಾರೆ ಎನ್ನುವುದು ಈ ಕರಪತ್ರದ ಹಿನ್ನೋಟ ಆಗಿದೆ. ಹಳೆಯಂಗಡಿ ಗ್ರಾ. ಪಂ. ಸದಾ ಲೋಕಾಯುಕ್ತ ಸಹಿತ ಇನ್ನಿತರ ಇಲಾಖೆಗಳ ದೂರುಗಳು ಹಾಗೂ ಪ್ರತಿಭಟನೆಗಳ ತಾಣವಾಗುತ್ತಿದ್ದು ಶಾಲೆಯ ಸಂಚಾಲಕನ ಹುದ್ದೆಯ ವಿರುದ್ಧ ಪಂಚಾಯತ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಅವರು ಲೋಕಾಯುಕ್ತದಿಂದಲೇ ಕಾನೂನು ಕ್ರಮವನ್ನು ಕೈಗೊಳ್ಳಲು ಸೂಚನೆ ಪಡೆದಿರುವುದೇ ಪ್ರತಿಭಟನೆ ನಡೆಸಲು ಕಾರಣ ಎಂದು ತಿಳಿಸಲಾಗಿದೆ.
ಈ ಪ್ರತಿಭಟನೆಯ ಹಿಂದೆ ಹಾಗೂ ಮುಂದೆ ಯಾರು ಇದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿಯಬೇಕಾದರೆ ಶುಕ್ರವಾರದವರೆಗೆ ಕಾಯಬೇಕು ಅಷ್ಟೇ.

ಕಾರು ಅವಘಡ: ನಾಗರಾಜ್ ಶೆಟ್ಟಿ ಸ್ಪಷ್ಟನೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ತಮ್ಮ ಪುತ್ರ ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಡಿವೈಡರಿಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿ ಆತ ಇಬ್ಬರು ಹುಡುಗಿಯರನ್ನೂ ಕರೆ ದೊಯ್ದಿದ್ದ ಎಂದೆಲ್ಲ ಕೆಲವು ಪತ್ರಿಕೆಗಳು ಸುಳ್ಳು ಸುದ್ದಿ ಮಾಡಿರುವುದಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ನೋವು ವ್ಯಕ್ತಪಡಿಸಿದ್ದಾರೆ.
ತಮ್ಮ ಮಗ ಕಾರು ಚಲಾಯಿಸಿಲ್ಲ. ಆತ ನಗರದ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡುತ್ತಿದ್ದ ವೇಳೆ ಆತನ ಸ್ನೇಹಿತ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಬಾಂದೊಟ್ಟು ಗುತ್ತು ಸಾತ್ವಿಕ್ ರೈ ಬಂದು, ಅಜ್ಜಿಗೆ ಹುಷಾರಿಲ್ಲ. ಅವರನ್ನು ಎಜೆ ಆಸ್ಪತ್ರೆಗೆ ಕರೆತರ ಬೇಕಾಗಿದೆ ಎಂದು ಹೇಳಿ ಮಗನಿಂದ ಕಾರು ಪಡೆದುಕೊಂಡು ಹೋಗಿದ್ದನು. ಈ ವೇಳೆ ಪಾಲಿಟೆಕ್ನಿಕ್ ಬಳಿ ಸಿಕ್ಕಿದ ಚಿಕ್ಕಮ್ಮನ ಮಗಳನ್ನು ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಕಾರು ಮೇರಿ ಹಿಲ್ ಬಳಿ ಡಿವೈಡರ್‌ಗೆ ಡಿಕ್ಕಿಯಾಗಿದೆ. ಇದೀಗ ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ.
ಆದರೆ ತಮ್ಮ ಮಗ ಕಾರು ಅಪಘಾತದಲ್ಲಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾನೆಂದೆಲ್ಲ ಪ್ರಚಾರ ನಡೆದು ನೂರಾರು ದೂರವಾಣಿ ಕರೆಗಳು ಬರುತ್ತಿವೆ. ಅಲ್ಲದೆ ಆತನ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ. ಇದು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಘಟನೆ ನಡೆದಾಗ ತಾವು ಆಗುಂಬೆಯಲ್ಲಿ ಬಿಜೆಪಿ ಪ್ರಚಾರದಲ್ಲಿದ್ದು, ಈ ಬಗ್ಗೆ ಮಗನನ್ನು ತಕ್ಷಣವೇ ಸ್ನೇಹಿತನ ನೆರವಿಗೆ ಹೋಗುವಂತೆ ಸೂಚಿಸಿದ್ದೆ. ಮಗ, ಚಾಲಕ, ಸಹೋದರನ ಪುತ್ರ ಅಲ್ಲಿಗೆ ತೆರಳಿದ್ದ ವೇಳೆ ಯಾರೋ ಮೊಬೈಲ್‌ನಿಂದ ಫೊಟೋ ಕ್ಲಿಕ್ಕಿಸಿದ್ದು ಈ ಎಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದು ಅವರು ವಿವರಿಸಿದ್ದಾರೆ.

ಅಖಿಲ ಭಾರತೀಯ ವಾಕ್-ಶ್ರವಣ ಸಂಸ್ಥೆಯಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ವಾಕ್ ಮತ್ತು ಶ್ರವಣ ತರಬೇತಿಗಾಗಿ ಚಾಲ್ತಿಯಲ್ಲಿರುವ ಆರು ವರ್ಷಗಳ ಕೋರ್ಸ್‌ಗೆ ಪರ್ಯಾ ಯವಾಗಿ ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸುವ ರಿಹೆಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾ ಪ್ರಸ್ತಾವವನ್ನು ವಿರೋಧಿಸಿ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಬೀದಿಗಿಳಿದು ಪ್ರತಿಭಟನೆ ನಡೆಸಿದೆ.
ವಾಕ್ ಮತ್ತು ಶ್ರವಣ ಸಮಸ್ಯೆಯಿರುವವರಿಗೆ ತರಬೇತಿ ನೀಡಲು ಹಾಗೂ ಅದಕ್ಕೆ ಸಂಬಂಧಪಟ್ಟ ಸಲಕರಣೆಗಳನ್ನು ಮಾರಾಟ ಮಾಡುವ ಪರವಾನಿಗೆ ಪಡೆಯಲು ಆರು ವರ್ಷಗಳ ವಾಕ್ ಶ್ರವಣ ತರಬೇತಿ ಕೋರ್ಸ್ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ವಾಕ್ ಶ್ರವಣ ಸಲಕರಣೆಯ ಉತ್ಪಾದನಾ ಸಂಸ್ಥೆಗಳು ದುರಾಸೆಯಿಂದ ಸಾರ್ವಜನಿಕ ಹಿತವನ್ನೂ ಲೆಕ್ಕಿಸದೆ, ಚಾಲ್ತಿಯಲ್ಲಿರುವ ದೀರ್ಘ ಕೋರ್ಸ್‌ಗಳ ಬದಲಿಗೆ ೪, ೬ ಹಾಗೂ ೧೦ ತಿಂಗಳ ಅಲ್ಪಾವಧಿ ಕೋರ್ಸ್‌ಗಳನ್ನು ಆರಂಭಿಸಲು ಒತ್ತಡ ಹೇರುತ್ತಿದೆ. ಈ ಒತ್ತಡದ ಲಾಬಿಗೆ ಮಣಿದಂತೆ ಕಾಣುತ್ತಿರುವ ರಿಹೆಬಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ಅಲ್ಪಾವಧಿ ಕೋರ್ಸ್‌ಗಳಿಗೆ ಸಮ್ಮತಿ ನೀಡುವ ಲಕ್ಷಣ ಗೋಚರಿಸುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರಿಂದ ವಾಕ್‌ಶ್ರವಣ ತರಬೇತಿಯ ಗುಣಮಟ್ಟ ಕುಸಿಯುವುದಲ್ಲದೆ ಲಾಭಕೋರ ದಂಧೆಯಾಗಿ ಮಾರ್ಪಡುವ ಸಾಧ್ಯತೆಯೂ ಹೆಚ್ಚಿದೆ ಎಂದು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಂIISಊ) ಕಳವಳ ವ್ಯಕ್ತಪಡಿಸಿದೆ. ಸದ್ರಿ ಪ್ರಸ್ತಾಪವನ್ನು ವಿರೋಧಿಸಿ ಂIISಊ ಸಂಸ್ಥೆಯು ನಿನ್ನೆ ಬೆಳಿಗ್ಗೆ ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದು, ಇದರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸದಸ್ಯರು ಭಾಗವಹಿಸಿದ್ದರು. ಬಳಿಕ ಸಹಾಯಕ ಕಮೀಷನರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಈ ಮನವಿಯಲ್ಲಿ ವಾಕ್ ಶ್ರವಣ ತರಬೇತಿಗಾಗಿ ಅಲ್ಪಾವಧಿ ಕೋರ್ಸ್‌ಗಳನ್ನು ಜಾರಿಗೆ ತರದೆ ಈಗಿರುವ ಃಂSPಐ ಡಿಗ್ರಿಯನ್ನೇ ಮುಂದುವರಿಸುವ ಜೊತೆಗೆ ಈ ಬಗೆಗಿನ ಮುಂದಿನ ಮಾತುಕತೆಗೆ ಇಓಖಿ ವೈದ್ಯರನ್ನು ಕೈಬಿಟ್ಟು ವಾಕ್ ಶ್ರವಣ ವೃತ್ತಿಪರರನ್ನೇ ಕರೆಸಿಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ನೆಹರೂ ಭ್ರಷ್ಟಾಚಾರದ ಪಿತಾಮಹ: ಕಟೀಲ್

Posted by JAYAKIRANA Kirana on | 0 comments | Leave a comment...


ಕಾರ್ಕಳ: ಭ್ರಷ್ಟಾಚಾರದ ಪಿತಾಮಹ ಜವಾಹರ್ ಲಾಲ್ ನೆಹರು ಆಗಿದ್ದು, ದೇಶಕ್ಕೆ ಭ್ರಷ್ಟಾ ಚಾರವನ್ನು ಪರಿಚಯಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಆದುದರಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಳೆದುಕೊಂಡಿದ್ದಾರೆಂದು ಮಂಗ ಳೂರು ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಟೀಕಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಮುನಿ ಯಾಲಿನಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆ ಯನ್ನುದ್ದೇಶಿಸಿ ಅವರು ಮಾತಾನಾಡಿದರು.
ಬ್ರಹ್ಮಾವರದ ರಾಜರಾಮ್ ಸೇರ್ವೆಗಾರ್ ಅವರನ್ನು ಬರ್ಬರ ರೀತಿಯಲ್ಲಿ ಕೊಲೆಗೈದ ಪ್ರಮುಖ ವ್ಯಕ್ತಿಯೊಬ್ಬನಿಗೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಹುದ್ದೆಯನ್ನು ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕ್ರಿಮಿನಲ್ ಕೃತ್ಯಕ್ಕೆ ಪೋತ್ಸಾಹಿಸುತ್ತಿದ್ದಾರೆಯೇ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಅಲ್ಪಸಂಖ್ಯಾತರಾಗಿರುವ ಜಾರ್ಜ್ ಫೆರ್ನಾಂಡಿಸ್ ಅವರನ್ನು ರಕ್ಷಣಾಮಂತ್ರಿಯ ನ್ನಾಗಿಯೂ, ಅಬ್ದುಲ್ ಕಲಾಂ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಿರುವುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲವೆಂದು ತಿಳಿಸಿರುವ ನಳಿನ್‌ಕುಮಾರ್ ಅವರು ಇನ್ನಾದರೂ ಬಿಜೆಪಿಯ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಹೇಳುವುದನ್ನು ನಿಲ್ಲಿಸುವಂತೆ ಕಾಂಗ್ರೆಸ್ ಪಕ್ಷದವರಿಗೆ ಕಿವಿಮಾತನ್ನು ಹೇಳಿದರು.
ರಾಷ್ಟ್ರೀಯ ಹಿತ ವಿಚಾರಧಾರೆಯಾಗಿರುವ ಭಯೋತ್ಪಾದನೆ ವಿರುದ್ಧ, ನಕ್ಸಲ್ ವಿರುದ್ಧ ಸಂಸತ್‌ನಲ್ಲಿ ಪ್ರಸ್ತಾಪಿಸಲು ಯೋಗ್ಯ ವ್ಯಕ್ತಿಯಾಗಿರುವ ಯುವ ನಾಯಕ ಸುನಿಲ್‌ಕುಮಾರ್ ಅವರನ್ನು ಚುನಾಯಿಸಿ ಎಂದು ಇದೇ ಸಂದರ್ಭದಲ್ಲಿ ಮತದಾರದಲ್ಲಿ ವಿನಂತಿಸಿದರು.

ಇಂದು ಮೈಯ್ಯಾಸ್ ರಂಗಾವಳಿ ನಗೆ ನಾಟಕೋತ್ಸವ

Posted by JAYAKIRANA Kirana on | 0 comments | Leave a comment...


ಮಂಗಳೂರು: ಗುರು ಸಂಸ್ಥೆ ಹುಬ್ಬಳ್ಳಿ ವತಿಯಿಂದ ‘ಮೈಯಾಸ್ ರಂಗಾವಳಿ’ ಎಂಬ ನಗೆ ನಾಟ ಕೋತ್ಸವ ನಗರದ ಪುರಭವನದಲ್ಲಿ ಮಾ.೧೫ರಿಂದ ೧೭ರವರೆಗೆ ನಡೆಯ ಲಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಗುರು ಸಂಸ್ಥೆಯ ಧರ್ಮಣ್ಣ ಕಡೂರು ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೧೫ರಂದು ರಾಶಿಚಕ್ರ, ೧೬ರಂದು ಆಲ್ ದಿ ಬೆಸ್ಟ್ ಹಾಗೂ ೧೭ರಂದು ಒಂದ ಆಟ ಭಟ್ಟರದು ಎಂಬ ನಾಟಕಗಳು ಪ್ರತೀ ದಿನ ಸಂಜೆ ೬.೩೦ಕ್ಕೆ ಪ್ರದರ್ಶನಗೊಳ್ಳಲಿದೆ.
ನಾಟಕ ವೀಕ್ಷಿಸಲು ಬರುವ ರಂಗಪ್ರಿಯರಿಗೆ ಹೆಸರಾಂತ ಉದ್ಯಮ ಮೈಯ್ಯಾಸ್ ತಯಾರಿಕೆಯ ಸ್ವಾದಭರಿತ ತಿನಸುಗಳನ್ನು ಸವಿಯಲು ಉಚಿತವಾಗಿ ನೀಡಲಾಗುತ್ತದೆ. ಈ ನಗೆ ನಾಟಕೋತ್ಸವ ‘ಯೋಗ್ಯ ನಗು-ಆರೋಗ್ಯವಂತ ಆಹಾರ’ ಎಂಬ ಪರಿಕಲ್ಪನೆಯಲ್ಲಿ ನಡೆಯಲಿದೆ ಎಂದರು. ಅರುಣ್, ವಿನೋದ್, ನಾಗರಾಜ ಎಂ.ಜಿ. ರಘು, ಅಶ್ವತ್ಥ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.

ಕಂತಲೆ ಮೀನುಗಾರರಿಂದ ಚುನಾವಣಾ ಬಹಿಷ್ಕಾರ ಹಿಂತೆಗೆತ

Posted by JAYAKIRANA Kirana on | 0 comments | Leave a comment...


ಸಾಲ್ಯಾನ್ ಮನವಿ ಹಿನ್ನೆಲೆ
ಪಡುಬಿದ್ರಿ: ಯುಪಿಸಿಎಲ್ (ನಾಗಾರ್ಜುನ) ಕಂಪೆನಿಯ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಸ್ಥಳೀಯವಾಗಿ ಮೀನುಗಾರಿಕೆ ಮಾಡುತ್ತಿರುವ ಕಂತಲೆ ಮೀನು ಗಾರರರು ತೀವ್ರ ತೊಂದರೆ ಅನುಭ ವಿಸುತ್ತಿದ್ದು, ಕೂಡಲೇ ಪರಿಹಾರ ಹಣವನ್ನು ತಮಗೆ ಕೂಡಾ ನೀಡ ಬೇಕೆಂದು ಆಗ್ರಹಿಸಿ ಮಾ.೧೮ರಂದು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಉಪಚುನಾವಣೆಯನ್ನು ಬಹಿಷ್ಕರಿಸು ವುದಾಗಿ ಹೇಳಿದ್ದ ಪರಿಣಾಮ ಬುಧವಾರ ಮಾಜಿ ಸಚಿವ ವಸಂತ ಸಾಲ್ಯಾನ್ ಕಂತಲೆ ಮೀನುಗಾರರರನ್ನು ಉಚ್ಚಿಲ ಮಹಾಲಕ್ಷ್ಮಿ ಸಭಾಭವನದಲ್ಲಿ ಭೇಟಿಯಾಗಿ ಚುನಾವಣೆ ಬಹಿಷ್ಕಾರ ಕೈಬಿಡುವಲ್ಲಿ ಯಶಸ್ವಿ ಆಗಿದ್ದಾರೆ.
ಯಾವೊಬ್ಬ ರಾಜಕೀಯ ಮುಖಂಡರೂ ಕಂತಲೆ ಮೀನುಗಾರರ ಕಷ್ಟಗಳಿಗೆ ಸ್ಪಂದಿಸಿಲ್ಲ. ಬುಧವಾರ ಬೆಳಿಗ್ಗೆ ಮಾಜಿ ಮೀನುಗಾರಿಕಾ ಸಚಿವ ವಸಂತ ಸಾಲ್ಯಾನ್ ನಮ್ಮನ್ನು ಭೇಟಿಯಾಗಿ, ಚುನಾವಣೆಯ ಬಹಿಷ್ಕಾರವನ್ನು ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಮಾತಿಗೆ ಮನ್ನಣೆ ನೀಡಿದ್ದೇವೆ. ಚುನಾವಣೆಯ ನಂತರವೂ ನಮಗೆ ಪರಿಹಾರ ಸಿಗದಿದ್ದರೆ, ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ವಾಸು ಕರ್ಕೇರಾ ಹೇಳಿದ್ದಾರೆ.

ವಕೀಲರ ಮುಷ್ಕರ: ಮುಖ್ಯ ನ್ಯಾಯಮೂರ್ತಿ ಮಧ್ಯಪ್ರವೇಶ

Posted by JAYAKIRANA Kirana on | 0 comments | Leave a comment...



ಬೆಂಗಳೂರು: ವಕೀಲರ ಮುಷ್ಕರ ದಿಂದ ಕಕ್ಷಿದಾರರಿಗಾಗುವ ತೊಂದರೆ ಗಳನ್ನು ತಪ್ಪಿಸಿ, ಸುಗಮವಾಗಿ ನ್ಯಾಯಾ ಲಯದ ಕಲಾಪಗಳನ್ನು ನಡೆಸುವ ಉದ್ದೇಶದಿಂದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಂಜೀತ್ ಸೇನ್ ಮಧ್ಯಪ್ರವೇಶಿಸಿದ್ದಾರೆ.
ಪೊಲೀಸರ ದೌರ್ಜನ್ಯ ಹಾಗೂ ಮಾಧ್ಯಮದವರ ವರ್ತನೆ ಖಂಡಿಸಿ, ಕಳೆದ ಎರಡು ವಾರಗಳಿಂದ ವಕೀ ಲರು ಕಲಾಪಗಳನ್ನು ಬಹಿರಷ್ಕರಿಸಿ, ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಇದರಿಂದ ಕಕ್ಷಿದಾರರಿಗೆ ಒಂದಡೆ ತೊಂದರೆಯಾದರೆ ಮತ್ತೊಂದಡೆ ನ್ಯಾಯಾಲಯದ ಕಲಾಪಗಳು ವಕೀಲರು ಇಲ್ಲದೆ ಬಿಕೋ ಎನ್ನುತ್ತಿವೆ. ಮುಷ್ಕರ ನಿಲ್ಲಿಸುವಂತೆ ಸರ್ಕಾರ ಹಾಗೂ ಮುಖ್ಯ ನ್ಯಾಯಧೀಶರು ಕೆಲವಾರು ಬಾರಿ ಮಾಡಿಕೊಂಡ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯ ನ್ಯಾಯಮೂರ್ತಿಯವರು ಮುಷ್ಕರ ನಿರತ ವಕೀಲರ ಮೇಲೆ ಕಠಿಣಕ್ರಮ ಕೈಗೊಂಡಿರುವುದಲ್ಲದೆ ಎಲ್ಲಾ ನ್ಯಾಯಾಲಯದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿ ಸಿದ್ದಾರೆ.
ಕಲಾಪಗಳು ಸುಗಮವಾಗಿ ನಡೆಯಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕಲಾಪಕ್ಕೆ ಅಡ್ಡಿಯುಂಟು ಮಾಡುವ ವಕೀಲರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮುಷ್ಕರ ನಿರತ ಕೆಲವು ವಕೀಲರನ್ನು ಮುಂಜಾ ನೆಯೇ ತಮ್ಮ ವಶಕ್ಕೆ ತೆಗೆದುಕೊಂಡಿ ದ್ದಲ್ಲದೆ ಅಲ್ಲಿದ ಟೆಂಟ್ ಹಾಗೂ ಮೈಕ್‌ಗಳನ್ನು ಕಿತ್ತೆಸೆದಿದ್ದಾರೆ. ಅಷ್ಟೇ ಅಲ್ಲದೆ ವಕೀಲರುಗಳು ಗುಂಪು ಗುಂಪಾಗಿ ಸಭೆ ಸೇರಿ, ನಡೆಸುವುದಕ್ಕೂ ಅವಕಾಶ ನೀಡದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಪ್ರತಿ ಕೋರ್ಟ್ ಹಾಲ್‌ಗಳಲ್ಲೂ ಪೊಲೀಸರ ಕಣ್ಗಾವಲಿದ್ದು, ಕಲಾಪಗಳು ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಪುಡಿ ರೌಡಿಯಿಂದ ಕೊಲೆ ಯತ್ನ

Posted by JAYAKIRANA Kirana on | 0 comments | Leave a comment...

ವಿಟ್ಲ: ಪುಡಿ ರೌಡಿಯೋರ್ವ ಹಣದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿ ಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವಿಟ್ಲದ ಮಂಗಿಲಪದವು ಎಂಬಲ್ಲಿ ಮಂಗಳ ವಾರ ಸಂಜೆ ನಡೆದಿದ್ದು, ಈ ಸಂಬಂಧ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲದ ಕಂಬಳಬೆಟ್ಟು ನಿವಾಸಿ ರಮ್ಲ ಅವರ ಪುತ್ರ ಅಶ್ರಫ್ ಎಂಬಾತ ಗಂಭೀರ ರೀತಿಯಲ್ಲಿ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾನೆ.
ಈತನಿಗೆ ಮೂಲತಃ ಕೊಡಂಗಾಯಿ ನಿವಾಸಿ ಪ್ರಸ್ತುತ ಮಂಗಿಲಪದವು ನಿವಾಸಿ ಅಬ್ಬಾಸ್ ಅವರ ಪುತ್ರ ಸಾಧಿಕ್(೨೪) ಎಂಬಾತ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಸಾಧಿಕ್ ಹಾಗೂ ಅಶ್ರಫ್ ಎಂಬಾತನಿಗೆ ವ್ಯವಹಾರವೊಂದಕ್ಕೆ ಸಂಬಂಧಿಸಿ ಹಣದ ವಿಚಾರದಲ್ಲಿ ಕೆಲ ದಿನಗಳ ಹಿಂದೆ ಕಂಬಳಬೆಟ್ಟು ಎಂಬಲ್ಲಿ ಜಗಳವಾಗಿದ್ದವು. ಈ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಮಂಗಿಲ ಪದವು ಎಂಬಲ್ಲಿ ಸೇರಿದ್ದರು. ಅಲ್ಲಿಗೆ ಅಶ್ರಫ್ ಹಾಗೂ ಸಾಧಿಕ್ ಇಬ್ಬರು ಬಂದಿದ್ದರು. ಅಶ್ರಫ್ ಎಂಬಾತ ನೀರು ಕುಡಿಯುತ್ತಿದ್ದ ಸಂದರ್ಭ ಹಿಂಬದಿ ಯಿಂದ ಬಂದ ಆರೋಪಿ ಸಾಧಿಕ್ ಆತನ ಬೆನ್ನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಹಲ್ಲೆ ನಡೆಸಿದ್ದ. ಇದರ ಪರಿಣಾಮ ಅಶ್ರಫ್‌ನ ಹೊಟ್ಟ್ಟೆಯಿಂದ ರಕ್ತ ಚಿಮ್ಮುತ್ತಿದ್ದವು. ಪ್ರಜ್ಞಾಹೀನನಾಗಿ ಕೆಳಗಡೆ ಬಿದ್ದಿದ್ದ ಆತನನ್ನು ತಕ್ಷಣವೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಾಧಿಕ್‌ನನ್ನು ಅದೇ ದಿನ ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಈತ ಆಟೋಚಾಲಕನಾಗಿ ದುಡಿಯುತ್ತಿದ್ದ.
ವಿಟ್ಲದ ಮೇಗಿನಪೇಟೆ, ಬೊಬ್ಬೆಕೇರಿ, ಕೊಡಂಗಾಯಿ ಮುಂತಾದ ಕಡೆಗಳಲ್ಲಿ ನಡೆದಂತಹ ಹಲವು ಪ್ರಕರಣಗಳಲ್ಲಿ ಈತ ಪ್ರಮುಖ ರೂವಾರಿಯಾಗಿದ್ದ ಎಂದು ತಿಳಿದು ಬಂದಿದೆ. ಈತನ ವಿರುದ್ಧ ವಿಟ್ಲ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇದೀಗ ಮತ್ತೆ ಈತ ಪೊಲೀಸರ ಅತಿಥಿಯಾಗಿದ್ದಾನೆ.

ಮುಖ್ಯಮಂತ್ರಿಯಿಂದ ಸಾರ್ವಜನಿಕ ರಸ್ತೆ ಕಬಳಿಕೆ: ಶೆಟ್ಟಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದಲ್ಲಿ ರಾಜ್ಯ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ಸೇರಿದ ಕಟ್ಟಡಕ್ಕಾಗಿ ಹಲ ವಾರು ವರ್ಷಗಳಿಂದ ಸಾರ್ವಜ ನಿ ಕರು ಉಪಯೋಗಿಸುತ್ತಿದ್ದ ರಸ್ತೆ ಯನ್ನೇ ಕಬಳಿಸಲಾಗಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ.
ನಿನ್ನೆ ಕೊಟ್ಟಾರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಬಂಗ್ರ ಕೂಳೂರು ಗ್ರಾಮದ ಕೊಟ್ಟಾರ ಚೌಕಿಯಲ್ಲಿ ರಾ.ಹೆ.ಗೆ ತಾಗಿಕೊಂಡಿರುವ ಸ.ನಂ.೧೪/೭ಸಿ(ಪಿ೧)ರ ಪೈಕಿ ೧೪ ಸೆಂಟ್ಸ್ ಮತ್ತು ೧೪/೭ಸಿ(ಪಿ೨)ರ ಪೈಕಿ ೨ ಸೆಂಟ್ಸ್ ಜಾಗವನ್ನು ಎರಡು ವರ್ಷಗಳ ಹಿಂದೆ ಖರೀದಿಸಿರುವ ಡಿ.ವಿ.ಎಸ್. ಅಲ್ಲಿ ಆರು ಮಹಡಿಗಳ ಸಂಕೀರ್ಣ ಕಟ್ಟಿಸಿದ್ದು, ಇದಕ್ಕಾಗಿ ಪಕ್ಕದಲ್ಲೇ ಇರುವ ಆಕಾಶ ಭವನಕ್ಕೆ ಸಂಪರ್ಕ ಕಲ್ಪಿಸುವ ಆರು ಮೀ. ಅಗಲದ ರಸ್ತೆಯನ್ನೇ ಕಬಳಿಸ ಲಾಗಿದೆ ಎಂದು ಆರೋಪಿಸಿದ್ದಾರೆ.
ಸದ್ರಿ ಜಾಗದಲ್ಲಿ ೧೪ ಸೆಂಟ್ಸ್ ಚಂದ್ರಹಾಸ್ ಎಂಬವರಿಗೆ ಸೇರಿದ್ದು ಅವರು ಆರು ಮೀ.ರಸ್ತೆಯನ್ನು ಸಾರ್ವ ಜನಿಕರ ಉಪಯೋಗಕ್ಕಾಗಿ ಬಿಟ್ಟು ಕೊಟ್ಟಿದ್ದರು. ಜಾಗ ಖರೀದಿಸಿದ ಬಳಿಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದ ಭೂ ಪರಿವರ್ತನೆ ಆದೇಶ ಸಂಖ್ಯೆ ಸಿಡಿಎಸ್ ಎಲ್‌ಎನ್(೩) ಸಿಆರ್ ೧೭೫/೨೦೦೯-೧೦ ದಿ.೧೪.೭.೨೦೦೯ರ ನಕ್ಷೆಯಲ್ಲೂ ಸಾರ್ವಜನಿಕ ರಸ್ತೆಯನ್ನು ತೋರಿಸಲಾಗಿದೆ. ಆದರೆ ಈಗ ಅದೇ ರಸ್ತೆಯನ್ನು ಕಬಳಿಸ ಲಾಗಿರುವ ಕಾರಣ ಸಾರ್ವಜನಿಕರು ಸುತ್ತು ಬಳಸಬೇಕಾಗಿದೆ ಎಂದು ಕಿಡಿಕಾರಿದರು. ಸಾಮಾನ್ಯ ಜನರು ಸಣ್ಣ ಜಾಗದಲ್ಲಿ ಮನೆ ಕಟ್ಟಲು ಮುಂದಾದರೆ ಸೆಟ್‌ಬ್ಯಾಕ್‌ಗೆ ಜಾಗ ಬಿಡಲು ಸೂಚಿಸುವ ಮೂಡಾ ಅಧಿಕಾರಿಗಳು ಈ ಕಟ್ಟಡಕ್ಕಾಗಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದ್ದರೂ ಅದರ ಬಗ್ಗೆ ಮೌನವಾಗಿದ್ದಾರೆ. ಇದು ಸದಾನಂದ ಗೌಡರ ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದ ಶೆಟ್ಟರು, ಇದರ ವಿರುದ್ಧ ಲೋಕಾಯಕ್ತಕ್ಕೆ ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರೆಹಮಾನ್ ಕೊಲೆ: ಶಂಕಿತರು ಪೊಲೀಸರ ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗಾಂಜಾ ದಂಧೆ ನಡೆಸುತ್ತಿದ್ದ ಕಣ್ಣೂರಿನ ರೌಡಿಯನ್ನು ಕಡಿದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿ ರುವ ಪೊಲೀಸರು ಈಗಾಗಲೇ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.
ಗಾಂಜಾ ದಂಧೆ ಮತ್ತು ದಾದಾ ಗಿರಿಯ ಮೂಲಕ ರೌಡಿ ಲಿಸ್ಟ್‌ನಲ್ಲಿದ್ದ ಕಣ್ಣೂರು ಬೋರುಗುಡ್ಡೆ ನಿವಾಸಿ ಅಬ್ದುಲ್ ರಹ್‌ಮಾನ್ ಯಾನೆ ಚೆರಿಯ ಪುತ್ತನನ್ನು ಮೊನ್ನೆ ರಾತ್ರಿ ಐಸಂ ಸ್ಟೀಲ್ ಬಳಿ ಕಡಿದು ಕೊಲೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕಣ್ಣೂರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ರಹ್‌ಮಾನ್‌ಗೆ ಪರಿಚಿತರು ಕರೆ ಮಾಡಿದ ಕಾರಣ ಆತ ನಿಗದಿತ ಸ್ಥಳಕ್ಕೆ ಹೋಗಿದ್ದ. ಇದೇ ಸಂದರ್ಭ ಕೊಲೆಯನ್ನು ಮಾಡಲಾಗಿತ್ತು. ಇದನ್ನು ಗಮನಿಸಿದಾಗ ಈ ಕೃತ್ಯ ಪೂರ್ವ ನಿಯೋಜಿತ ಕೃತ್ಯ ಎಂಬು ದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಈಗಾಗಲೇ ರೌಡಿ ಪಟ್ಟ ಕಟಿ ಕೊಂಡಿದ್ದ ರಹ್‌ಮಾನ್ ಮೂರು ತಿಂಗಳ ಹಿಂದೆ ತನಗೆ ಎದುರು ನಿಂತನೆಂಬ ಕಾರಣಕ್ಕಾಗಿ ಸ್ನೇಹಿತ ಇಜಾಝ್ ಎಂಬವರ ಕೊಲೆಗೆ ಯತ್ನಿಸಿ ಜೈಲು ಶಿಕ್ಷೆ ಅನುಭವಿಸಿ ಮೂರು ದಿನಗಳ ಹಿಂದಷ್ಟೇ ಜಾಮೀ ನಿನ ಮೇಲೆ ಬಿಡುಗಡೆಗೊಂಡಿದ್ದನು. ಈತನ ಮೇಲೆ ದ್ವೇಷ ಕಟ್ಟಿಕೊಂಡಿದ್ದ ವಿರೋಧಿಗಳು ತಿರುಗಿ ಬೀಳುವ ಬಗ್ಗೆ ಅದಾಗಲೇ ಮಾಹಿತಿಯರಿತಿದ್ದ ಪೊಲೀಸರು ಸೋಮವಾರ ಸಹಿ ಹಾಕಲು ಠಾಣೆಗೆ ಹೋಗಿದ್ದ ಸಂದರ್ಭ ಒಂಟಿಯಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದ್ದರೂ ಹಂತಕರು ಚಾಲಾಕಿತನ ದಿಂದಲೇ ಮಂಗಳವಾರ ಆತನ ಕಥೆಯನ್ನು ಮುಗಿಸಿದ್ದರು. ಕೊಲೆಯ ಹಿಂದೆ ಇಜಾಝ್ ಕಡೆಯವರ ಕೈವಾಡ ಇರಬಹುದು ಎಂದು ಶಂಕಿಸಿದ್ದ ಪೊಲೀಸರು ಮೊನ್ನೆ ರಾತ್ರಿಯೇ ಅವರ ತಂದೆ, ಸಹೋದರರು ಹಾಗೂ ಇನ್ನೂ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.
ಕೆಲಸಕ್ಕೆ ಸೇರುವ ಮುನ್ನಾ ದಿನ...
ಈಗಾಗಲೇ ಕಾನೂನು ಬಾಹಿರ ದಂಧೆ ಹಾಗೂ ರೌಡಿಗಿರಿಯಿಂದ ವಿರೋ ಧಿಗಳ ಹಗೆ ಕಟ್ಟಿಕೊಂಡಿದ್ದ ರಹ್‌ಮಾನ್ ಎಲ್ಲವನ್ನೂ ಬಿಟ್ಟು ಒಳ್ಳೆಯ ವ್ಯಕ್ತಿ ಯಾಗಲು ಬಯಸಿದ್ದ. ಆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮುಸ್ಲಿಂ ಲೀಗ್ ಮುಖಂಡರೊಬ್ಬರನ್ನು ಭೇಟಿಯಾಗಿದ್ದ ಆತ ತನಗೊಂದು ಕೆಲಸ ಹುಡುಕಿ ಕೊಡುವಂತೆ ಕೇಳಿಕೊಂಡಿದ್ದರಿಂದ ಕೇರಳದ ಅಂಗಡಿಯೊಂದರಲ್ಲಿ ಕೆಲಸ ಗೊತ್ತು ಮಾಡಿದ್ದ ಮುಖಂಡ ಬುಧವಾರವೇ ಅಲ್ಲಿಗೆ ಹೋಗುವಂತೆ ತಿಳಿಸಿದ್ದರು ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ. ಅದಲ್ಲದೆ ಎರಡು ವರ್ಷಗಳ ಹಿಂದೆ ನಂದಾರ್ ಉರೂಸ್ ಸಂದರ್ಭ ನಡೆದ ಗ್ಯಾಂಗ್‌ವಾರ್ ಹಿನ್ನೆಲೆಯಲ್ಲಿ ಫರಂಗಿಪೇಟೆಗೆ ಬಂದಿದ್ದ ವಿರೋಧಿ ತಂಡ ರಹ್‌ಮಾನ್‌ನನ್ನು ಕಡಿದು ಕೊಲೆಗೆ ಯತ್ನಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಒಂದು ವರ್ಷ ಮನೆಯಲ್ಲೇ ಇದ್ದ. ಆ ವೇಳೆ ಆತನನ್ನು ಬದುಕಿಸಲು ಬರೋಬ್ಬರಿ ೩,೬೦,೦೦೦ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ. ಅಂದು ನಡೆದ ದಾಳಿಯಿಂದ ಕುಪಿತನಾಗಿದ್ದ ರಹ್‌ಮಾನ್ ಮರು ದಾಳಿ ನಡೆಸಲು ಸಮಯವನ್ನೂ ಕಾಯುತ್ತಿದ್ದ ಎನ್ನಲಾಗಿದೆ. ಆದರೆ ಪ್ರತೀಕಾರವನ್ನು ಕೈಬಿಡುವಂತೆ ವಿನಂತಿಸಿದ್ದ ಲೀಗ್ ಮುಖಂಡ ವಾರದಲ್ಲಿ ಎದುರಾಳಿಗಳನ್ನು ಕರೆಸಿ ರಾಜಿ ಪಂಚಾಯತಿಗೆ ನಡೆಸುವುದಲ್ಲದೆ ಕೊಲೆಗೆ ಯತ್ನಿಸಿದವರಿಂದಲೇ ನಿಗದಿತ ಮೊತ್ತವನ್ನೂ ಕೇಳಲು ಮುಂದಾಗಿದ್ದರು ಎನ್ನಲಾಗಿದ್ದು ಅದಕ್ಕೂ ಮೊದಲು ರಹ್‌ಮಾನ್‌ನನ್ನೇ ಮುಗಿಸಲಾಗಿರುವುದು ದುರದೃಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.

ಕಾಸಿಗಾಗಿ ಸುದ್ದಿ.... ಚುನಾವಣಾ ಭ್ರಷ್ಟಾಚಾರದ ಮತ್ತೊಂದು ಮುಖ

Posted by JAYAKIRANA Kirana on | 0 comments | Leave a comment...


 
ಜಾಹೀರಾತಿನ ಬದಲಾಗಿ ನಿರ್ದಿಷ್ಟ ಮೊತ್ತದ ಹಣ ಪಡೆದುಕೊಂಡು ಹಣ ಕೊಟ್ಟ ಪಕ್ಷಗಳ ಪರವಾಗಿ ಮತ್ತು ಅಭ್ಯರ್ಥಿಗಳ ಪರವಾಗಿ ಪತ್ರಿಕೆಗಳು ಸುದ್ದಿಗಳನ್ನು ಪ್ರಕಟಿಸುವುದು ಅಥವಾ ಖಾಸಗಿ ಟಿವಿ ಚಾನೆಲ್‌ಗಳು ಸುದ್ದಿಗಳನ್ನು, ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಭ್ರಷ್ಟಾಚಾರದ ಕಬಂಧಬಾಹುಗಳು ಯಾವುದನ್ನೂ ಬಿಟ್ಟಿಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ.
 
ಶ್ರೀರಾಮ ದಿವಾಣ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾರ್ಚ್ ೧೮ರಂದು ನಡೆಯಲಿರುವ ಮರು ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಕಾರ್ಯಕರ್ತರ ಸಭೆ, ಬಹಿರಂಗ ಸಾರ್ವಜನಿಕ ಸಭೆ, ಮನೆ ಮನೆ ಭೇಟಿ, ಪಾದಯಾತ್ರೆ, ರೊಡ್ ಶೋ ಇತ್ಯಾದಿಗಳು ಚುರುಕಿನಿಂದ ನಡೆಯುತ್ತಿವೆ. ಚುನಾವಣೆ ಘೋಷಣೆಯಾದ ದಿನದಿಂದ ಚುನಾವಣಾ ನೀತಿ ಸಂಹಿತೆಯೂ ಸಹಜವಾಗಿ ಜಾರಿಗೆ ಬಂದಿದೆ. ಈ ನೀತಿ ಸಂಹಿತೆಯ ಪ್ರಕಾರ ಯಾವನೇ ಅಭ್ಯರ್ಥಿ ಚುನಾವಣೆಗಾಗಿ ೪೦ ಲಕ್ಷ ರೂ.ಗಳಿಗಿಂತ ಅಧಿಕ ಹಣವನ್ನು ವೆಚ್ಚ ಮಾಡುವಂತಿಲ್ಲ.
ಚುನಾವಣಾ ನೀತಿ ಸಂಹಿತೆ ಏನೇ ಹೇಳಲಿ, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಇವರ ಬೆಂಬಲಿಗರು, ಪಕ್ಷಗಳ ನಾಯಕರು ನಡೆದುಕೊಳ್ಳುತ್ತಿರುವುದು ಗುಟ್ಟಾಗಿ ಏನೂ ಉಳಿದಿಲ್ಲ. ಪ್ರಮುಖ ಎರಡು ಪಕ್ಷಗಳು ಮಾಡುತ್ತಿರುವ ವೆಚ್ಚ ಕನಿಷ್ಟವೆಂದರೂ ನಾಲ್ಕು ಕೋಟಿ ರೂ. ೪೦ ಲಕ್ಷ ಎಲ್ಲಿ, ೪ ಕೋಟಿ ಎಲ್ಲಿ? ಇದು ಚುನಾವಣಾ ಆಯೋಗಕ್ಕಾಗಲೀ, ಚುನಾವಣಾ ವೀಕ್ಷಕರಿಗಾಗಲೀ ತಿಳಿದಿರದ ನಿಗೂಢ ರಹಸ್ಯವೇನೂ ಅಲ್ಲ. ರಾಜ ಕಾರಣಿಗಳು ರಂಗೋಲಿ ಒಳಗೆ ತೂರುವುದರಿಂದ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿ ಜಾಣಮೌನ ನೀತಿ ಅನು ಸರಿಸುತ್ತಾರೆ, ಅಷ್ಟೇ.
 
ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆ ಮತ್ತು ಸ್ಥಳೀಯ ಖಾಸಗಿ ಟಿವಿ ಚಾನೆಲ್‌ಗಳೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಅನಧಿ ಕೃತವಾಗಿ ಲಕ್ಷಾಂತರ ರೂ. ಪಡೆದು ತಮ್ಮ ಅಮೂಲ್ಯ ಪುಟಗಳಲ್ಲಿ ಮತ್ತು ಸಮಯಗಳಲ್ಲಿ ನಿರ್ದಿಷ್ಟ ಪಕ್ಷಗಳ, ಅಭ್ಯರ್ಥಿಗಳ ಪರವಾಗಿ ಸುದ್ದಿಗಳನ್ನು ಪ್ರಕಟಿಸಿ, ಪ್ರಸಾರ ಮಾಡುವ ಮೂಲಕ ಕಪ್ಪು ಹಣವನ್ನು ಸಂಗ್ರಹಿಸುತ್ತಿವೆ.
 
ಚುನಾವಣಾ ಭ್ರಷ್ಟಾಚಾರದಲ್ಲಿ ಅಕ್ಷರ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳೂ ತಮ್ಮ ತಮ್ಮ ಕೊಡುಗೆಗಳನ್ನು ನೀಡುತ್ತಿರುವುದು ಇತ್ತೀಚಿನ ಅತಿ ಕೆಟ್ಟ ಬೆಳವಣಿಗೆ. ಕಾಸಿಗಾಗಿ ಸುದ್ದಿ ಇದಕ್ಕೊಂದು ಸ್ಪಷ್ಟ ಉದಾಹರಣೆ. ಜಾಹೀರಾತಿನ ಬದಲಾಗಿ ನಿರ್ದಿಷ್ಟ ಮೊತ್ತದ ಹಣ ಪಡೆದುಕೊಂಡು ಹಣ ಕೊಟ್ಟ ಪಕ್ಷಗಳ ಪರವಾಗಿ ಮತ್ತು ಅಭ್ಯರ್ಥಿಗಳ ಪರವಾಗಿ ಪತ್ರಿಕೆಗಳು ಸುದ್ದಿಗಳನ್ನು ಪ್ರಕಟಿಸುವುದು ಅಥವಾ ಖಾಸಗಿ ಟಿವಿ ಚಾನೆಲ್‌ಗಳು ಸುದ್ದಿಗಳನ್ನು, ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಭ್ರಷ್ಟಾಚಾರದ ಕಬಂಧಬಾಹುಗಳು ಯಾವುದನ್ನೂ ಬಿಟ್ಟಿಲ್ಲ ಎನ್ನುವುದನ್ನು ತೋರಿಸಿಕೊಡುತ್ತದೆ.
ಅತೀ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವ ಪತ್ರಿಕೆ ಮತ್ತು ಸ್ಥಳೀಯ ಖಾಸಗಿ ಟಿವಿ ಚಾನೆಲ್‌ಗಳೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಅನಧಿಕೃತವಾಗಿ ಲಕ್ಷಾಂತರ ರೂ. ಪಡೆದು ತಮ್ಮ ಅಮೂಲ್ಯ ಪುಟಗಳಲ್ಲಿ ಮತ್ತು ಸಮಯಗಳಲ್ಲಿ ನಿರ್ದಿಷ್ಟ ಪಕ್ಷಗಳ, ಅಭ್ಯರ್ಥಿಗಳ ಪರವಾಗಿ ಸುದ್ದಿಗಳನ್ನು ಪ್ರಕಟಿಸಿ, ಪ್ರಸಾರ ಮಾಡುವ ಮೂಲಕ ಕಪ್ಪು ಹಣವನ್ನು ಸಂಗ್ರಹಿಸುತ್ತಿವೆ. ಇದೇ ಮಾಧ್ಯಮಗಳು ಕಪ್ಪು ಹಣದ ವಿರುದ್ದ ಜನಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತವೆ, ಕಪ್ಪು ಹಣದ ವಿರುದ್ದ ನಡೆಯುವ ಹೋರಾಟಕ್ಕೆ ಅಭೂತಪೂರ್ವ ಪ್ರಚಾರವನ್ನೂ ನೀಡುತ್ತವೆ ಎಂದರೆ ಆಶ್ಚರ್ಯವಾಗದೇ ಇರಲು ಸಾಧ್ಯವೇ? ಕಳೆದ ಕೆಲವು ದಿನಗಳಿಂದ ಪ್ರತಿ ದಿನ ನಾವು ಓದುವ ಒಂದೆರಡು ಪತ್ರಿಕೆಗಳು ಮತ್ತು ನಾವು ನೋಡುವ ಸ್ಥಳೀಯ ಒಂದೆರಡು ಖಾಸಗಿ ಟಿವಿ ಚಾನೆಲ್‌ಗಳು ಪ್ರಕಟ ಮಾಡುತ್ತಿರುವ ಸುದ್ದಿಗಳು, ಲೇಖನಗಳು, ಕಾರ್ಯಕ್ರಮಗಳು ಕಾಸು ಪಡೆದೇ ಮಾಡುತ್ತಿರುವ ಘನ ಕಾರ್ಯಗಳು ಎನ್ನುವುದಕ್ಕೆ ವಿಶೇಷ ಜ್ಞಾನದ ಅಗತ್ಯವೇನೂ ಇಲ್ಲ. ಓದುಗ ಮಹಾಶಯರು ಇದನ್ನೆಲ್ಲಾ ತಿಳಿದು ಕೊಳ್ಳದಷ್ಟು ಮೂರ್ಖ ಎಂದು ಪತ್ರಿಕೋದ್ಯಮಿಗಳು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ.ಅಧಿಕೃತವಾಗಿ ಜಾಹೀರಾತುಗಳು ಅಲ್ಲದ, ಇಂತಹ ಕಾಸು ಕೊಟ್ಟು ಪ್ರಕಟಿಸಿದ, ಪ್ರಸಾರ ಮಾಡಿದ ಸುದ್ದಿ, ಕಾರ್ಯಕ್ರಮಗಳು ಇದೀಗ ದಿನನಿತ್ಯ ಬರುತ್ತಿವೆ. ರಾಜಕೀಯ ಪಕ್ಷಗಳಿಗೆ ಇದಕ್ಕೆ ತಗಲಿದ ವೆಚ್ಚವನ್ನು ಯಾರು ತಾನೇ ಲೆಕ್ಕವಿಡುತ್ತಾರೆ? ಅಭ್ಯರ್ಥಿಗಳಿಗೆ ಬೇಕಾದಂತೆ ಎಲ್ಲವನ್ನೂ ೪೦ ಲಕ್ಷದೊಳಗೆ ತೋರಿಸಿಕೊಡುವ ಚಾಕಚಾಕ್ಯತೆ ಇರುವ ಸಿಎ ಪದವೀಧರರು ಬೇರೆ ಇದ್ದೇ ಇದ್ದಾರೆ. ಚುನಾವಣಾ ವೀಕ್ಷಕರಾಗಿ ನೇಮಕಗೊಂಡು ಕರ್ತವ್ಯದಲ್ಲಿರುವ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತು ಕರ್ತವ್ಯ ವಿಮುಖರಾಗುತ್ತಾರೆ. ಇವರಿಗೇನು ಬೇಕೋ ಅದನ್ನು ರಾಜಕೀಯ ಪಕ್ಷಗಳು ಕೊಟ್ಟು ಬಿಡುತ್ತಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ನಡೆಯುತ್ತಿರುವ ಇಂತಹ ಚುನಾವಣೆಗೆ ಜಯವಾಗಲೀ..

‘ಬ್ಯಾರಿ ಸಲ್ಲದ ಆರೋಪ ಬೇಡ

Posted by JAYAKIRANA Kirana on | 0 comments | Leave a comment...


 
ಹಿರಿಯ ಸಾಹಿತಿ ಎಂಬ ಬಿರುದಾಂಕಿತ ಅವರು ಟಿ.ವಿ.ಯ ಕಾರ್ಯಕ್ರಮದಲ್ಲಿ ನಡೆದುಕೊಂಡ ರೀತಿಯಂತೂ ಅವರ ಘನತೆಗೆ ಶೋಭೆ ತರು ವಂತದ್ದಲ್ಲ. ನಮ್ಮಂತಹ ಯುವ ಲೇಖಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬದಲು ಹೀಗೆ ಹೀಯಾಳಿಸುವುದು ನಿಜಕ್ಕೂ ಖೇದಕರ.
 
ಖಿರ್ಫ. ಎನ್, ಚೊಕ್ಕಬೆಟ್ಟು
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದ ಟಿವಿ ವಾಹಿನಿಯೊಂದರಲ್ಲಿ ಸಾರಾ ಅಬೂಬಕ್ಕರ್‌ರವರು ‘ಬ್ಯಾರಿ ಚಿತ್ರಕ್ಕೆ ಕಥೆ ಕೊಟ್ಟ ನನ್ನ ಬಗ್ಗೆ ಹಗುರವಾಗಿ ಮಾತಾಡಿರುವುದರ ಬಗ್ಗೆ ನನ್ನ ಪ್ರತಿಕ್ರಿಯೆ.
ಪ್ರಥಮವಾಗಿ, ಚಿತ್ರರಂಗಕ್ಕಾಗಿ ನೀಡುವ ಭಾರತ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಸ್ವರ್ಣ ಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇತಿ ಹಾಸ ನಿರ್ಮಿಸಿದ ‘ಬ್ಯಾರಿ ಚಿತ್ರ ತಂಡಕ್ಕೆ ಹಾಗೂ ಅದನ್ನು ನಿರ್ಮಿಸಿದ ನವ ತರುಣ ಅಲ್ತಾಫ್ ಹುಸೇನ್ ಇವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಕೆ.ಎಚ್. ಇರ್ಫಾನ್ ಚೊಕ್ಕಬೆಟ್ಟು ಎಂಬವನಾದ ನಾನು ಹುಟ್ಟು ಲೇಖಕ ನಲ್ಲ. ‘ಬೇರೊಬ್ಬರ ರೀತಿ ಹೆಸರು, ದುಡ್ಡಿಗೋಸ್ಕರ ಧರ್ಮಕ್ಕೆ ವಿರುದ್ಧವಾಗಿ ಬರೆದು ವಂಚಿಸುವ ಉದ್ದೇಶವೂ ನನಗಿಲ್ಲ. ಕಥೆ, ಕವನ ಬರೆಯುವುದು ನನ್ನದೊಂದು ಹವ್ಯಾಸವಷ್ಟೆ. ನಾನು ಬರೆದಿಟ್ಟ ಹಲವಾರು ಕಥೆ, ಕವನಗಳಲ್ಲಿ ಈ ಬ್ಯಾರಿಯೂ ಒಂದು. ಪುಕ್ಕಟೆ ಪ್ರಚಾರ ಪಡೆಯುವ ಸಲುವಾಗಿ ಸಾರಾ ಅಬೂಬಕ್ಕರ್‌ರವರು ಅವರ ಕಾದಂಬರಿಯನ್ನು ನಾನು ನಕಲು ಮಾಡಿದ್ದೇ ನೆಂದು ವಿನಾ ಕಾರಣ ಆರೋಪಿಸುತ್ತಿದ್ದಾರೆ. ಅವರ ಕಾದಂಬರಿಯನ್ನು ನಾನು ನಕಲು ಮಾಡುವುದಿರಲಿ ಅವರು ಯಾರೆಂದೇ ಮೊನ್ನೆ ಮೊನ್ನೆಯವರೆಗೂ ತಿಳಿದಿರಲಿಲ್ಲ. ಬ್ಯಾರಿ ಚಿತ್ರಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಷಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ನಂತರವೇ ಅವರು ಒಂದು ಹೆಣ್ಣೆಂದು ಗೊತ್ತಾ ದದ್ದು.
ಇದ್ದತ್ ಮದುವೆಯೆಂದರೆ ಒಂದು ಬಾರಿ ಅಥವಾ ಒಮ್ಮೆ ನಡೆಯುವ ಘಟನೆಯಲ್ಲ. ಈಗೀಗ ಮುಸ್ಲಿಂ ಸಮುದಾಯದಲ್ಲಿ ನಡೆಯುವ ಸಾಮಾನ್ಯ ಘಟನೆಯಂತೆ ಪರಿಣಮಿಸಿದೆ. ಅದೇ ರೀತಿ ನಮ್ಮ ಊರಿನಲ್ಲಿ ನಡೆದ ಒಂದು ಇದ್ದತ್ ಮದುವೆಯನ್ನು ಕಣ್ಣಾರೆ ಕಂಡು ಅದರ ಎಳೆಯನ್ನಿಡಿದು ನಾನು ಬರೆದಿರುವ ಸ್ವಂತ ಕಥೆಯಾಗಿರುತ್ತದೆ ಈ ‘ಬ್ಯಾರಿ. ಒಂದು ಮದುವೆಯಾದ ಗಂಡು-ಹೆಣ್ಣು ಕ್ಷಣದ ಕೋಪಕ್ಕೆ ನಿರಾಯಾಸವಾಗಿ ಹೇಳಲು ಬರುವ ‘ತಲಾಖ್ ಎಂಬ ಪದವನ್ನು ಮೂರು ಬಾರಿ ಹೇಳಿ ಬೇರೆ ಬೇರೆಯಾದಲ್ಲಿ ಮತ್ತೆ ಅವರು ಒಂದು ಗೂಡಲು ಇಸ್ಲಾಂ ಧರ್ಮದಲ್ಲಿ ಏನೆಲ್ಲಾ ಕಷ್ಟವಿದೆಯೆಂದು ಜನರಿಗೆ ತಿಳಿಸುವುದೇ ನನ್ನ ಮೂಲ ಉದ್ದೇಶವಾಗಿತ್ತು. ಅದೀಗ ‘ಬ್ಯಾರಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದರಿಂದ ಸಾರ್ಥಕಗೊಂಡಿದೆ ಎಂದೆನಿಸುತ್ತದೆ.
ಇಳಿ ವಯಸ್ಸಿನಲ್ಲಿ ಅರುಳೋ- ಮರುಳೋ ಎಂಬಂತೆ ಟಿವಿ ವಾಹಿನಿ ಯಲ್ಲಿ ಸಾರಾ ಅಬೂಬಕ್ಕರ್ ಅವರು ನನ್ನ ಕನ್ನಡ ಅರಿವಿನ ಬಗ್ಗೆ ಹಗುರ ವಾಗಿ ಮಾತನಾಡುವ ಮೊದಲು ಅವರು ಎಲ್ಲಿಂದ ವಲಸೆ ಬಂದವರೆಂದು ಅರಿತುಕೊಳ್ಳಬೇಕಿತ್ತು. ಸ್ವತಃ ಅವರ ಲೇಖನವನ್ನೇ ಇನ್ನೊಬ್ಬರ ಸಹಾಯ ದಿಂದ ಬರೆಯುವ ಅವರು ನಾನು ಕರ್ನಾಟಕದಲ್ಲೇ ಜನಿಸಿ ಇಲ್ಲಿಯೇ ವಿದ್ಯಾ ಭ್ಯಾಸ ಪೂರೈಸಿದವನೆಂದು ಅರಿತುಕೊಳ್ಳುವುದೊಳಿತು. ಪ್ರಪ್ರಥಮವಾಗಿ ನಿರ್ಮಾ ಣಗೊಂಡ ‘ಬ್ಯಾರಿ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿದ ಸಂಭ್ರಮದಲ್ಲಿರುವ ಇಡೀ ದ.ಕನ್ನಡ ಜಿಲ್ಲೆಯ ಜನರನ್ನು ನೋಡಿ ಇದರ ಏಳಿಗೆ ಸಹಿಸಲಾಗದೆ ಬ್ಯಾರಿ ಚಿತ್ರದ ಬಗ್ಗೆ ಸಲ್ಲದ ಆರೋಪವನ್ನು ಹೊರಿಸುತ್ತಲೇ ಇರುವ ಸಾರಾ ಅಬೂಬಕ್ಕರ್‌ರವರು ದಕ್ಷಿಣ ಕನ್ನಡ ಜಿಲ್ಲೆಯ ಬುದ್ದಿವಂತ ಜನರ ತಾಳ್ಮೆಯನ್ನು ಪರೀಕ್ಷಿಸದಿರುವುದೇ ಒಳಿತು. ಹಿರಿಯ ಸಾಹಿತಿ ಎಂಬ ಬಿರುದಾಂಕಿತ ಅವರು ಟಿ.ವಿ.ಯ ಕಾರ್ಯಕ್ರಮದಲ್ಲಿ ನಡೆದುಕೊಂಡ ರೀತಿಯಂತೂ ಅವರ ಘನತೆಗೆ ಶೋಭೆ ತರುವಂತದ್ದಲ್ಲ. ನಮ್ಮಂತಹ ಯುವ ಲೇಖಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬದಲು ಹೀಗೆ ಹೀಯಾಳಿಸುವುದು ನಿಜಕ್ಕೂ ಖೇದಕರ.
ಕೊನೆಯದಾಗಿ ಕರಾವಳಿಯ ಪುಟ್ಟ ಪ್ರದೇಶದಲ್ಲಿರುವ ಬ್ಯಾರಿ ಸಮುದಾಯದ ವರ ಕುರಿತ ಚಲನಚಿತ್ರವನ್ನು ನಿರ್ಮಿಸಿ ರಾಷ್ಟ್ರ ಪ್ರಶಸ್ತಿಯನ್ನು ತಂದು ಕೊಟ್ಟು ಬ್ಯಾರಿ ಜನಾಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಕಾರಣನಾದ ಅಲ್ತಾಪ್ ಹುಸೇನ್ ಇವರಿಗೆ ಮತ್ತೊಮ್ಮೆ ಅಭಿನಂದನೆಗಳು.

ಆಕೆಯನ್ನು ಲವ್ ಮಾಡಿ ಮದುವೆಯಾದರೆ ಸಮಸ್ಯೆಯಾಗುತ್ತದೆಯೇ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೮ ವರ್ಷ ವಯಸ್ಸು, ಮದುವೆಯಾಗಿಲ್ಲ. ನಾನು ನೋಡಲು ಚೆನ್ನಾಗಿದ್ದೇನೆ, ಒಳ್ಳೆಯ ಕೆಲಸವೂ ಇದೆ. ಕಾಲೇಜಿಗೆ ಹೋಗು ತ್ತಿದ್ದಾಗಲೂ ನನಗೆ ಅನೇಕ ಮಂದಿ ಹುಡುಗಿಯರು ಗೆಳತಿಯರಾ ಗಿದ್ದರು. ಆದರೆ ಯಾರನ್ನೂ ಪ್ರೀತಿಸಿಲ್ಲ. ಅವರೂ ನನ್ನನ್ನು ಪ್ರೀತಿಸು ವಂತೆ ಹೇಳಿರಲಿಲ್ಲ. ಆದರೆ ಇತ್ತೀಚೆಗೆ ಕಳೆದ ನಾಲ್ಕು ತಿಂಗಳಿನಿಂದ ನನ್ನನ್ನು ಒಬ್ಬಳು ಪ್ರೀತಿಸಲು ಒತ್ತಾಯಿಸುತ್ತಿದ್ದಾಳೆ. ಅವಳ ಜಾತಿ ಬೇರೆ. ನನ್ನ ನೆರೆಮನೆಯಲ್ಲಿ ಆಕೆಯ ಸಂಬಂಧಿಗಳ ಮನೆ ಇರುವುದರಿಂದ ಆಗಾಗ ಅಲ್ಲಿಗೆ ಬರುತ್ತಿದ್ದವಳು ನನ್ನ ಪರಿಚಯವಾಗಿ ಗೆಳೆತನ ಬೆಳೆಸಿ ದಳು. ಮಾತಾಡುತ್ತಾ ಕ್ಲೋಸ್ ಫ್ರೆಂಡ್ ಆಗಿದ್ದು, ಈಗ ನನ್ನನ್ನು ಮದು ವೆಯಾಗು ಎನ್ನುತ್ತಿದ್ದಾಳೆ. ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳು ತ್ತಿದ್ದು ನನಗೆ ಕೆಲವೊಮ್ಮೆ ಆಕೆಯ ವರ್ತನೆಯೂ ಹಿಡಿಸುವುದಿಲ್ಲ. ಆಕೆ ತುಂಬಾ ಚೆಲ್ಲು ಚೆಲ್ಲಾಗಿ ವರ್ತಿಸುತ್ತಾಳೆ ಮತ್ತು ಒಮ್ಮೆ ನಕ್ಕರೆ ಸಾಕು ಎಂತಹ ಹುಡುಗರ ಜತೆಯೂ ಸ್ನೇಹ ಬೆಳೆಸುತ್ತಾಳೆ. ಆಕೆಯನ್ನು ನಾನು ಲವ್ ಮಾಡಿ ಮದುವೆಯಾದರೆ ನನಗೆ ಸಮಸ್ಯೆಯಾಗುತ್ತದೆ ಎಂದು ಭಯ ಕಾಡುತ್ತದೆ. ಇನ್ನೊಂದು ಸಂಗತಿ ಎಂದರೆ ನನಗೆ ನನ್ನ ತಾಯಿ, ನನ್ನ ಅಕ್ಕ ಅಂದರೆ ಪ್ರಾಣ. ಅವರ ಮನಸ್ಸಿಗೆ ನೋವುಂಟು ಮಾಡಿ ನಾನು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆದರೆ ನಾನು ಈ ಹುಡುಗಿಯ ಸ್ನೇಹ ಬೆಳೆಸಿದರೆ ಎಲ್ಲಿ ಅವರನ್ನು ಕಳೆದುಕೊಳ್ಳುತ್ತೇನೋ ಎಂದು ಭಯವಾಗುತ್ತದೆ. ನಾನು ಇಷ್ಟರತನಕ ಯಾರನ್ನೂ ಪ್ರೀತಿಸಿಲ್ಲ. ನನಗೆ ಆಕೆಯ ವರ್ತನೆಯಿಂದ ಏನು ಮಾಡುವುದೆಂದೇ ತಿಳಿಯಲಿಲ್ಲ. ನನ್ನ ಮನಸ್ಸು ನಿಧಾನಕ್ಕೆ ಆಕೆಯ ಕಡೆ ವಾಲುತ್ತದೆ. ಅವಳು ನನ್ನನ್ನು ಒತ್ತಾಯ ಮಾಡಿದ್ದಕ್ಕೆ ನಾನು ಆಕೆಯನ್ನು ಪ್ರೀತಿ ಮಾಡುವುದಾಗಿ ಹೇಳಿದ್ದೇನೆ. ನಾನು ಈಗ ಆಕೆಯನ್ನು ಸ್ವೀಕರಿಸುವುದೋ, ಬಿಡುವುದೋ ಎಂಬ ದ್ವಂದ್ವದಲ್ಲಿ ಬಿದ್ದಿದ್ದೇನೆ. ಆಕೆಯ ಮನಸ್ಸು ತುಂಬಾ ಒಳ್ಳೆಯದು. ಆಕೆಯನ್ನು ನಾನು ಬದಲಾಯಿಸಲು ಸಾಧ್ಯವಿಲ್ಲವೇ? ನನಗೆ ಸರಿಯಾದ ಸಲಹೆ ನೀಡಿ.
ಸಲಹೆ: ನಿಮ್ಮ ಗೊಂದಲ ವಿಚಿತ್ರವಾಗಿದೆ. ಇಷ್ಟವಿಲ್ಲದವರು ಆಕೆಗೆ ಪ್ರೀತಿ ಮಾಡುತ್ತೇನೆ ಎಂದು ಹೇಳಿದ್ದೇಕೆ? ಆಕೆಗೆ ನಿಮ್ಮ ಸ್ವಭಾವ ಇಷ್ಟವಾಗಿರಬಹುದು. ಇದೇ ಕಾರಣಕ್ಕೆ ನಿಮ್ಮನ್ನು ಪ್ರೀತಿಸಲು ಮುಂದಾಗಿರುವ ಸಾಧ್ಯತೆಯಿದೆ. ನೀವು ಹುಡುಗಿಯರ ಜತೆ ಫ್ಲರ್ಟ್ ಮಾತ್ರ ಮಾಡುತ್ತಿದ್ದಿರೇ ಹೊರತು ಯಾರನ್ನೂ ಪ್ರೀತಿಸಲು ಸಿದ್ಧರಿಲ್ಲ. ಇದಕ್ಕೆ ನೀವು ಕೊಡುವ ಕಾರಣ ನನ್ನ ಜಾತಿ ಬೇರೆ ಮತ್ತು ನನಗೆ ಅಕ್ಕ, ತಾಯಿ ಎಂದರೆ ತುಂಬಾ ಇಷ್ಟ. ಇದನ್ನು ನಂಬಲು ಸಾಧ್ಯವೇ? ಯಾಕೆಂದರೆ ಎಲ್ಲರಿಗೂ ತಾಯಿ, ಅಕ್ಕ ಅಥವಾ ಮನೆಮಂದಿಯ ಮೇಲೆ ಮಮತೆ, ಪ್ರೀತಿ ಇದ್ದೇ ಇರುತ್ತದೆ. ಇದನ್ನು ನೀವು ಕಾರಣ ಕೊಡಲಾಗದು. ಆಕೆಯ ಜತೆ ಗೆಳೆತನ ಬೆಳೆಸಲು ಮನಸ್ಸಿದೆ, ಆದರೆ ಆಕೆಯ ಪ್ರೀತಿ, ಮದುವೆ ಇದೆಲ್ಲಾ ಬೇಡ. ನೀವು ಬೇರೆಯವರ ಜತೆ ಮಾತಾಡುವುದಿಲ್ಲವೇ? ಹಾಗೇ ಆಕೆಯೂ ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಮಾತಾ ಡುತ್ತಾಳೆ. ಇದರಲ್ಲಿ ತಪ್ಪೇನಿದೆ? ನೀವು ಒಂದೋ ಆಕೆಯನ್ನು ಪ್ರೀತಿಸಿ, ಇಲ್ಲವೇ ಬೇರೆ ಯಾರನ್ನಾದರೂ ಮದುವೆಯಾಗಿ. ನಿಮ್ಮ ಈ ಗುಣಗಳಿಂದ ಬೇರೆಯವರು ತಪ್ಪು ಅರ್ಥ ಕಲ್ಪಿಸುವುದು ತಪ್ಪುತ್ತದೆ. ಇನ್ನು ಪ್ರೀತಿಸಿ ಮದುವೆಯಾಗಲು ಜಾತಿಯ ಸಮ ಸ್ಯೆಯೇನೂ ದೊಡ್ಡದಲ್ಲ. ತಾಯಿಯು ಯಾವತ್ತೂ ಒಳ್ಳೆಯದನ್ನೇ ಹಾರೈಸುತ್ತಾರೆ. ನಿಮಗೆ ಆಕೆ ಬೇಕೇ, ಬೇಡವೇ ಎಂದು ನಿರ್ಧ ರಿಸಿ. ಬೇಡವಾದರೆ ಆಕೆಯನ್ನು ಈಗಲೇ ತಿರಸ್ಕರಿಸಿ. ಆಕೆ ಇಷ್ಟ ವಾದರೆ ಮನೆಯಲ್ಲಿ ತಿಳಿಸಿ ಆಕೆಯನ್ನು ವಿವಾಹವಾಗುವುದೇ ಒಳ್ಳೆಯದು. ಮಗ ಬೇರೆ ಹುಡುಗಿಯನ್ನು ಮದುವೆಯಾದ ಮಾತ್ರಕ್ಕೆ ತಾಯಿಯ ಕಣ್ಣಲ್ಲಿ ಕೆಟ್ಟವನಾಗುವುದಿಲ್ಲ, ಆದರೆ ಆಕೆಯನ್ನು ವಿಶ್ವಾ ಸಕ್ಕೆ ತಂದುಕೊಳ್ಳಿ. ಯಾವಾಗಲೂ ನಾವು ಇಷ್ಟಪಟ್ಟವರನ್ನು ವಿವಾ ಹವಾಗುವುದಕ್ಕಿಂತ ನಮ್ಮನ್ನು ಮನಸಾರೆ ಇಷ್ಟಪಟ್ಟು, ಪ್ರೀತಿಸು ತ್ತಿರುವವರನ್ನು ವಿವಾಹವಾಗುವುದೇ ಒಳ್ಳೆಯದು.

bhavishya

Posted by JAYAKIRANA Kirana on | 0 comments | Leave a comment...

ಮೇಷ : ಜಂಟಿ ವ್ಯಾಪಾರದಲ್ಲಿ ಲಾಭ ದೊರೆಯಲಿದೆ.
ವೃಷಭ : ಅಧಿಕಾರಿ ವರ್ಗದವರಿಂದ ಕಿರುಕುಳ ಇರುತ್ತದೆ.
ಮಿಥುನ : ವಿರೋಧಿಗಳ ಕುತಂತ್ರ ಹೆಚ್ಚಾಗುವುದು.
ಕರ್ಕಾಟಕ : ಕುಟುಂಬದ ಸದಸ್ಯರಿಗೆ ಅನಾರೋಗ್ಯ ಇರುತ್ತದೆ.
ಸಿಂಹ : ಶುಭ ಕೆಲಸಗಳು ವಿಂಬವಾಗಿ ನಡೆಯುತ್ತದೆ.
ಕನ್ಯಾ : ಗುರು ಹಿರಿಯರೊಡನೆ ವಾದ ವಿವಾದವಾಗುತ್ತದೆ.
ತುಲಾ : ಕೆಲಸ ಕಾರ್ಯಗಳು ವಿಳಂಬವಾಗಿ ನಡೆಯುತ್ತದೆ.
ವೃಶ್ಚಿಕ : ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವುದು.
ಧನು : ಮಾಡಿದ ಕೆಲಸಗಳು ಯಶಸ್ವಿಯಾಗಲಿದೆ.
ಮಕರ : ಭೂ, ವಾಹನ ಮತ್ತು ಆಭರಣ ಖರೀದಿಸುತ್ತೀರಿ.
ಕುಂಭ : ಮಕ್ಕಳಿಂದ ಚಿಂತೆಯನ್ನು ಅನುಭವಿಸುತ್ತೀರಿ.
ಮೀನ : ವ್ಯಾಪಾರ ವ್ಯವಹಾರದಲ್ಲಿ ನಷ್ಟವಾಗಲಿದೆ.

udyoga

Posted by JAYAKIRANA Kirana on | 0 comments | Leave a comment...

ಕುತ್ತಾರ್‌ಪದವು: ಟೈಲರ್ ಶಾಪ್‌ಗೆ ಲೇಡೀಸ್ ಟೈಲರ್ ಮತ್ತು ಫಿನಿಶಿಂಗ್‌ಗೆ ಯುವತಿಯರು ಬೇಕು ೯೪೮೦೩೪೭೬೯೯.
ಮಂಗಳೂರು: ಕಾರು ಚಾಲಕ ಬೇಕು ೯೩೪೨೫೧೯೧೫೮.
ಬೈಕಂಪಾಡಿ: ಕಂಪೋಸಿಟರ್ ಬೇಕು ೭೪೧೧೦೯೦೩೧೩.
ಮಂಗಳೂರು: ಕಂಪೆನಿಗೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಮಂಗಳೂರು: ಸ್ಟುಡಿಯೋಗೆ ಡಿಟಿಪಿ ಗೊತ್ತಿರುವ ಯುವಕರು ಬೇಕು ೯೮೪೫೨೦೩೩೪೮.
ಮಂಗಳೂರು: ಬೇಕರಿಗೆ ಸೇಲ್ಸ್‌ಬಾಯ್ಸ್ & ಗರ್ಲ್ಸ್ ಬೇಕು ೯೪೪೮೨೩೯೯೨೯.
ಮೂಡಬಿದ್ರೆ: ಹೊಟೇಲಿಗೆ ದೋಸೆವಾಲಾ ಹೆಲ್ಪರ್ ಬೇಕು ೯೮೪೫೯೮೨೬೨೫.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ವೇಟರ್ & ಕಿಚನ್ ಹೆಲ್ಪರ್ ಬೇಕು ೯೬೩೨೦೦೬೯೨೩.
ಮಂಗಳೂರು: ಹೊಟೇಲಿನ ಎಲ್ಲಾ ಕೆಲಸ ತಿಳಿದಿರುವ ಜನ ಬೇಕು ೯೪೮೨೯೬೯೫೩೧.
ಮಂಗಳೂರು: ಹರ್ಬಲ್ ಲೈಫ್ ಡಿಸ್ಟ್ರಿ ಬ್ಯೂಟರ್‌ಗೆ ಜನ ಬೇಕು ೯೯೦೨೧೯೨೬೨೩.
ಮಂಗಳೂರು: ಅಕ್ಕಿ ರೊಟ್ಟಿ ಕೆಲಸ ಗೊತ್ತಿರು ವವರು ಬೇಕು ೯೮೪೪೪೩೨೪೦೯.
ಮಂಗಳೂರು: ಗ್ಯಾಸ್ ಶಾಪ್‌ಗೆ ಲೇಡಿ ಸ್ಟಾಫ್ ಬೇಕು ೨೪೩೮೭೪೭
ಮಂಗಳೂರು: ರೈಲ್ವೆಯಲ್ಲಿ ಕೆಲಸಕ್ಕೆ ಜನ ಬೇಕು ೯೬೮೬೫೧೮೬೧೦.
ತಲಪಾಡಿ: ರಬ್ಬರ್ ಫ್ಯಾಕ್ಟರಿಗೆ ಎಕೌಂಟೆಂಟ್ ಬೇಕು ೯೩೪೨೦೪೫೧೪೦.
ಮಂಗಳೂರು: ಕ್ಯಾಂಟಿನ್‌ಗೆ ಹೆಲ್ಪರ್ ಬೇಕು ೯೯೭೨೯೩೧೦೬೭.
ಮೇರಿಹಿಲ್: ಹಿಟಾಚಿ ಮತ್ತು ಜೆಸಿಬಿಗೆ ಹೆಲ್ಪರ್‌ಬೇಕು ೯೬೩೨೮೫೬೦೬೯.
ಮೋರ್ಗನ್ಸ್‌ಗೇಟ್: ಕ್ಲೀನಿಂಗ್ ಕೆಲಸಕ್ಕೆ ಹೆಂಗಸರು ಬೇಕು ೯೮೮೦೮೦೯೮೦೩.
ಮಂಗಳೂರು: ಫಾಸ್ಟ್‌ಫುಡ್ ವೆಜ್ ಕ್ಲೀನರ್ ಮತ್ತು ಚಪಾತಿ ಮಾಡುವವರು ಬೇಕು ೯೪೪೮೪೯೫೬೦೦.
ಮಂಗಳೂರು: ಮೊಬೈಲ್‌ಶಾಪ್‌ಗೆ ಎಸೆಸ್ಸೆಲ್ಸಿ, ಪಿಯುಸಿ ಆದ ಯುವಕ ಯುವತಿ ಯರು ಬೇಕು ೯೪೪೮೧೭೭೦೦೬.
ನೀರುಮಾರ್ಗ: ವೆಲ್ಡರ್, ಫ್ಯಾಬ್ರಿಕೇಶನ್, ಡ್ರಿಲ್, ಡಿಸೈನ್ ಗೊತ್ತಿದ್ದವರು ಮತ್ತು ಹೆಲ್ಪರ‍್ಸ್ ಬೇಕು. ೯೩೪೨೪೧೦೬೫೯
ಮಂಗಳೂರು: ಹಾಸ್ಟೆಲ್‌ಗೆ ಅಡುಗೆ ಮಾಡಲು ಹೆಂಗಸು ಬೇಕು ೯೨೪೧೨೧೪೧೨೨
ಮಂಗಳೂರು: ಡಿಟಿಪಿ ಗೊತ್ತಿರುವ ಕನ್ನಡ ಟೈಪ್ ಮಾಡುವವರು ಬೇಕು ೯೪೪೮೨೫೪೯೭೬.
ಎಕ್ಕೂರು: ಡ್ರೈವರ್‌ಬೇಕು ೯೪೮೧೭೫೯೬೧೪.
ಮಂಕಿಸ್ಟ್ಯಾಂಡ್: ದ್ವಿಚಕ್ರ ಸರ್ವಿಸ್ ಸ್ಟೇಷನ್‌ಗೆ ಜನ ಬೇಕು ೯೦೦೮೨೨೨೩೬೧.
ಕಂಕನಾಡಿ: ಕ್ಯಾಂಟೀನ್‌ಗೆ ವೇಟರ್ ಮತ್ತು ಕೌಂಟರ್‌ಬಾಯ್ ಬೇಕು ೯೯೦೨೮೩೧೯೮೮.
ಮಂಗಳೂರು: ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು: ಹೊಟೇಲ್‌ಗೆ ಕುಕ್ ಬೇಕು ೯೦೧೯೭೦೯೧೯೧.
ಅತ್ತಾವರ: ರೈಲ್ವೆ ಸ್ಟೇಶನ್‌ಗೆ ಮೊಬೈಲ್ ಟೆಕ್ನಿಶಿಯನ್ ಬೇಕು ೯೬೨೦೪೧೭೨೮೬.

ಮತ್ತೇರಿಸುವ ಮುತ್ತಿನ ಸುತ್ತ ತಮಾಷೆಯ ಸಂಗತಿಗಳು

Posted by JAYAKIRANA Kirana on | 0 comments | Leave a comment...


 
ಪ್ರೀತಿಯನ್ನು ತೋರ್ಪ ಡಿಸಿಕೊಳ್ಳಲು ಗಂಡುಹೆಣ್ಣು ಕಂಡು ಕೊಂಡ ಅತ್ಯಂತ ಸಹಜವಾದ ಕ್ರಿಯೆ ಚುಂಬನ. ಮುತ್ತಿಡುವಾಗ ಪುರುಷರು ಕಲ್ಪನೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಆದರೆ, ಮಹಿಳೆಯರು ಇನ್ನಷ್ಟು ಬೇಕು ಎಂದು ಹಂಬಲಿಸುತ್ತಾರೆ.
 
ಮುತ್ತಿನಲ್ಲಿ ಮಧುವಿದೆ, ಪ್ರೀತಿ ಯಿದೆ, ಆಳವಾದ ಬಂಧವಿದೆ, ಕಂದಕ ಗಳನ್ನು ಸೇರಿಸುವ ಶಕ್ತಿಯಿದೆ. ಚುಂಬನದಲ್ಲಿ ಆಸೆಯ ಭಾವವಿದೆ, ತಮಾಷೆಯಿದೆ. ಆತ್ಮೀಯತೆಯಿಂದ ನೀಡುವ ಚುಂಬನದಲ್ಲಿ ಆರೋಗ್ಯದ ಗುಟ್ಟು ಕೂಡ ಅಡಗಿಕೊಂಡಿದೆ ಎಂದರೆ ನಂಬಲೇಬೇಕು.
ಮತ್ತೇರಿಸುವ ಮುತ್ತನ್ನು ಗಂಡು ಹೆಣ್ಣು ಇಂದು ನಿನ್ನೆ ಕಂಡುಕೊಂಡ ಸಂಗತಿಯಲ್ಲ. ಆಡಂ ಮತ್ತು ಈವ್ ಒಬ್ಬರಿಗೊಬ್ಬರು ಆಕರ್ಷಿತರಾದ ಕ್ಷಣ ದಿಂದ ಮುತ್ತು ಜಾಗತಿಕವಾಗಿ ಜಾರಿ ಯಲ್ಲಿದೆ. ಪ್ರೀತಿಯನ್ನು ತೋರ್ಪ ಡಿಸಿಕೊಳ್ಳಲು ಗಂಡುಹೆಣ್ಣು ಕಂಡು ಕೊಂಡ ಅತ್ಯಂತ ಸಹಜವಾದ ಕ್ರಿಯೆ ಚುಂಬನ. ಚುಂಬನದ ಜೊತೆ ಇನ್ನೂ ಅನೇಕ ಸಂಗತಿಗಳು ತಳಕು ಹಾಕಿ ಕೊಂಡಿವೆ.
ಪ್ಯಾಷನೇಟ್ ಆಗಿ ಒಂದು ನಿಮಿ ಷಗಳ ಕಾಲ ಗಂಡು ಹೆಣ್ಣಿನ ಅಧರ ಅಧರಗಳು ಕೂಡಿದರೆ ೨೬ ಕ್ಯಾಲೋರಿ ಸುಟ್ಟುಹೋಗಿರುತ್ತದೆ. ಸೋ, ಜಿಮ್‌ಗೆ ಹೋಗದೆಯೆ ಮುದ್ದಿನ ಸಂಗಾತಿಗೆ ಮುತ್ತಿಡುವ ಮುಖಾಂತರ ತೂಕವನ್ನು ಕೂಡ ಕಳೆದುಕೊಳ್ಳಬಹುದು. ಒಂದು ಸಮೀಕ್ಷೆಯ ಪ್ರಕಾರ ಕಿಸ್ ಕೊಡುವಾಗ ಶೇ.೩೭ರಷ್ಟು ಪುರುಷರು ಕಣ್ಣು ತೆರೆ ದಿರುತ್ತಾರೆ.
ಮುತ್ತಿಡುವಾಗ ಪುರುಷರು ಕಲ್ಪನೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಆದರೆ, ಮಹಿಳೆಯರು ಇನ್ನಷ್ಟು ಬೇಕು ಎಂದು ಹಂಬಲಿಸುತ್ತಾರೆ.
ಚುಂಬಿಸುವಾಗ ಅನೇಕ ಗಂಡಂದಿರು ಹೆಂಡತಿಯ ಕೂದಲು ಅಡ್ಡಬರುವುದನ್ನು ಇಷ್ಟಪಡುವುದಿಲ್ಲ.
ಚುಂಬನ ಕ್ರಿಯೆ ನಿರಂತರವಾ ಗಿದ್ದರೆ ಮುಖದ ಮೇಲೆ ನೆರಿಗೆಗಳು ಹೆಚ್ಚಾಗಿ ಬರುವುದಿಲ್ಲ. ಮುಖದಲ್ಲಿ ರುವ ಸ್ನಾಯುಗಳು ಚುಂಬಿಸುವಾಗ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.
ಪ್ರಾಚೀನ ಕಾಲದಲ್ಲಿ ಈಜಿಪ್ತರು ತುಟಿಯ ಬದಲು ಮೂಗಿನಿಂದ ಚುಂಬಿಸುತ್ತಿದ್ದರು.
ಹಲವಾರು ಶತಮಾನಗಳ ಹಿಂದೆ ಇಟಲಿಯಲ್ಲಿ ಯಾರಾದರೂ ಚುಂಬಿ ಸುವವರು ಸಿಕ್ಕುಬಿದ್ದರೆ ಮದುವೆ ಯಾ ಗಲೇಬೇಕಿತ್ತು.

sms

Posted by JAYAKIRANA Kirana on | 0 comments | Leave a comment...

ಮದುವೆ
ಬಂತಾನಿಗೆ ಯಾವುದಾದರೂ ಹುಡುಗಿಯನ್ನು ಪ್ರೀತಿಸಬೇಕು ಅಂತ ತುಂಬಾ ಆಸೆ. ಕೊನೆಗೂ ಒಂದು ಹುಡುಗಿಗೆ ಪ್ರಪೋಸ್ ಮಾಡಿದ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೇನೆ ನನ್ನನ್ನು ಮದುವೆಯಾಗ್ತೀಯ ಅಂತ ಕೇಳಿದ. ಆ ಹುಡುಗಿ ಬೇಸರದಿಂದ, ನಾನು ನಿನ್ನ ಮದುವೆಯಾಗಬಹುದಿತ್ತು. ಆದರೆ ಏನು ಮಾಡಲಿ ನಾನು ನಿನಗಿಂತ ಒಂದು ವರ್ಷ ದೊಡ್ಡವಳು ಎಂದಳು. ಸ್ವಲ್ಪವೂ ಬೇಸರಗೊಳ್ಳದ ಬಂತಾ ಹೇಳಿದ, ಪರವಾಗಿಲ್ಲ ಡಿಯರ್, ನಾನು ನಿನ್ನನ್ನು ಮುಂದಿನ ವರ್ಷ ಮದುವೆಯಾಗುತ್ತೇನೆ..!
 
ಪಂಚಮಿ..!
ಸಂತಾ : ನಿನಗೆ ಇಂಗ್ಲಿಷ್ ಗೊತ್ತೇನೋ.. ನನಗೆ ಒಂದು ಸಂದೇಹವಿದೆ. ಬಂತಾ: ಗೊತ್ತು.. ಯಾಕೆ, ಏನು ಸಂದೇಹ? ಸಂತಾ: ನಾಗ ಪಂಚಮಿಯ ವಿರುದ್ಧ ಪದ ಯಾವುದು? ಬಂತಾ: ತುಂಬಾ ಸಿಂಪಲ್ ಕಣೋ.. ನಾಗ ಡೊಂಟ್ ಪಂಚಮಿ..!
 
ಡಬ್ಬಲ್ ರೋಡಾ?!
ಹುಡುಗಿ: ಭಾರತದಿಂದ ಅಮೆರಿಕಾಕ್ಕೆ ಒಂದು ರಸ್ತೆ ಮಾಡಿಕೊಡು. ದೇವರು: ಅದು ತುಂಬಾ ಕಷ್ಟಾನಮ್ಮ.. ಬೇರೆನಾದ್ರೂ ಕೇಳು. ಹುಡುಗಿ: ಒಬ್ಬಳೇ ಹುಡುಗಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುವಂತೆ ಹುಡುಗರನ್ನು ಪರಿವರ್ತಿಸು. ದೇವರು: ಅಮೆ ರಿಕಾಕ್ಕೆ ಸಿಂಗಲ್ ರೋಡ್ ಬೇಕಾ? ಇಲ್ಲ ಡಬ್ಬಲ್ ರೋಡಾ?!
 
ಸರ್ಪ್ರೈಸ್
ಸಂತಾ: ನಾನು ಐದು ದಿನಗಳ ಕಾಲ ಮನೆಯಲ್ಲಿರೋಲ್ಲ.
ದೂರ ಪ್ರವಾಸ ಹೋಗಲಿದ್ದೇನೆ.
ಹೆಂಡತಿ: ಆಯ್ತು, ಆದ್ರೆ ನನಗೆ ಸರ್ಪ್ರೈಸ್ ಕೊಡಬೇಕೆಂದು ಮುಂಚಿತವಾಗಿ ಬರಬೇಡಿ. ಹಾಗೆಲ್ಲಾದರೂ ಬಂದಿದ್ದೇ ಆದರೆ ನಿಮಗೆ ಸರ್ಪ್ರೈಸ್ ಕಾದಿರುತ್ತದೆ..!
 
ಪೋಸ್ಟ್‌ಮ್ಯಾನ್!
ಗೋಪಿ: ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ?
ರವಿ: ಜನರ ಕಷ್ಟ ಸುಖಗಳನ್ನು ಹಂಚುತ್ತಾರೆ. ಗೋಪಿ: ಹಾಗಾದರೆ ಅವರು ಮಹಾ ವ್ಯಕ್ತಿಗಳೇ ಆಗಿರಬೇಕು.
ರವಿ: ಇಲ್ಲಪ್ಪ, ಅವರು ಪೋಸ್ಟ್‌ಮ್ಯಾನ್?
 
ಎಚ್ಚರ!
ಮಗುವಿನ ನಗು ಸತ್ತವರನ್ನೂ ಬದುಕಿಸುತ್ತೆ. ಆದ್ರೆ ಕಾಲೇಜ್ ಹುಡುಗಿಯರ ನಗು ಬದುಕಿರೋರನ್ನು ಸಾಯಿಸುತ್ತೆ. ಅದಕ್ಕೆ ಹೇಳೋದು ಕೂಸನ್ನು ನಂಬಿದರೂ ಪೀಸ್‌ನ ನಂಬ ಬಾರದು ಅಂತ!

ನಾಶದ ಅಂಚಿನಲ್ಲಿರುವ ನಂದಿಕೂರಿಗೆ ಕಂಬಳದ ಅಗತ್ಯವಿದೆಯೇ

Posted by JAYAKIRANA Kirana on | 0 comments | Leave a comment...

 
ನಂದಿಕೂರು ಮತ್ತು ಸುತ್ತಲಿನ ಜನರು ಯು.ಪಿ.ಸಿ.ಎಲ್‌ನಿಂದ ದಿನನಿತ್ಯ ಅನುಭವಿಸುತ್ತಿರುವ ಕಷ್ಟ ವೇದನೆಗಳಿಗೆ ಸ್ಪಂದಿಸದೆ ಕೇವಲ ಜನಪದ ಕ್ರೀಡೆ ಎಂಬ ನೆಪದಲ್ಲಿ ನಂದಿಕೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ಬಂದಂತಹ ಮುಖ್ಯಮಂತ್ರಿಗೆ ನಿಜವಾಗಿಯೂ ನಂದಿಕೂರಿನ ಜನರ ಬಗ್ಗೆ ಪ್ರೀತಿ ಅನುಕಂಪ ಇದ್ದಿದ್ದರೆ ಯುಪಿಸಿಎಲ್ ಬಗ್ಗೆ ಒಂದಾದರೂ ಮಾತನ್ನು ಎತ್ತಬಹುದಿತ್ತಲ್ಲವೇ?
 
ಕರುಣಾಕರ ಪೂಜಾರಿ, ಕಾಪು
ಮೊನ್ನೆ ಮೊನ್ನೆ ತಾನೆ ಜರಗಿದ ಅಡ್ವೆ-ನಂದಿಕೂರು ಜೋಡುಕೆರೆ ಕಂಬಳದಲ್ಲಿ ಕಂಬಳ ಕ್ರೀಡೆ ನೋಡಿ ಮನರಂಜನೆ ಪಡೆಯಲು ಕರ್ನಾಟಕದ ಘನವೆತ್ತ ಮುಖ್ಯಮಂತ್ರಿ ಬಂದಿರುವುದನ್ನು ನೋಡಿ ಇಂತಹ ಮುಖ್ಯಮಂತ್ರಿ ನಮ್ಮ ಮತ ಪಡೆದು ಜಯಗಳಿಸಿದವರೇ ಎಂದು ಆಶ್ಚರ್ಯವಾಗುತ್ತಿದೆ. ಸದಾನಂದ ಗೌಡರವರು ಲೋಕ ಸಭಾ ಸದಸ್ಯನಾಗಿದ್ದಾಗ ನಮ್ಮ ಪರಿಸರಕ್ಕೆ ಬಂದು ಕಾನೂನು ಬಾಹಿರವಾಗಿ ಕಾರ್ಯಾರಂಭಿಸಿದ ವಿವಾದಿತ ಜನವಿರೋಧಿ ಯುಪಿಸಿಎಲ್ ಕಂಪೆನಿಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಪರಿಸರ ಮಾಲಿನ್ಯ ಮಂಡ ಳಿಯ ಸಿನ್ಹಾರನ್ನು ಕರೆಸಿ ಅವರಿಂದ ಕಂಪೆನಿಯ ಬಗ್ಗೆ ವರದಿ ತರಿ ಸಿದ್ದಾರೆ. ಆದರೆ ವರದಿಯ ಸತ್ಯಾಂಶ ಎಲ್ಲಿ ಮಾಯವಾಯಿತು?
ತಜ್ಞರ ಸಮಿತಿಯೆಂಬ ಸಮಿತಿ ರಚಿಸಿ ಆ ಸಮಿತಿಯಲ್ಲಿದ್ದ ಪರಿಸರವಾದಿ ಇಬ್ಬರೂ ಸದಸ್ಯರನ್ನು ಸಮಿತಿಯಿಂದ ಕೈಬಿಟ್ಟಿದ್ದರು. ಈ ಸಂದರ್ಭದಲ್ಲಿ ಪೂಜ್ಯಾ ಪೇಜಾವರ ಸ್ವಾಮೀಜಿಯಿಂದ ಆ ಇಬ್ಬರನ್ನು ಸಮಿತಿಗೆ ಪುನಃ ಸೇರಿಸಲು ಒತ್ತಡ ಹೆಚ್ಚಿದಾಗ ನಂದಿ ಕೂರಿನ ಈ ಬಡಜನತೆಯ ನೋವು ಏನೆಂದು ತಿಳಿದುಕೊಳ್ಳುವ ಸೌಜನ್ಯವನ್ನು ತೋರದ ಗೌಡರು ನೇರವಾಗಿ ಆಗಿನ ಉಸ್ತುವಾರಿ ಸಚಿವ ವಿ.ಎಸ್ ಆಚಾರ್ಯರಿಗೆ ಬೆರಳು ತೋರಿಸಿ ಎಲ್ಲರಿಗೂ ಮೋಸ ಮಾಡಿದರು. ಇದೀಗ ನಂದಿಕೂರು ಮತ್ತು ಸುತ್ತಲಿನ ಜನರು ಯು.ಪಿ.ಸಿ.ಎಲ್ ಕಂಪೆನಿಯಿಂದ ದಿನನಿತ್ಯ ಅನುಭವಿಸುತ್ತಿ ರುವ ಕಷ್ಟ ವೇದನೆಗಳಿಗೆ ಸ್ಪಂದಿಸದೆ ಕೇವಲ ಜನಪದ ಕ್ರೀಡೆ ಎಂಬ ನೆಪದಲ್ಲಿ ನಂದಿಕೂರಿನಲ್ಲಿ ನಡೆದ ಕಂಬಳ ವೀಕ್ಷಿಸಲು ಬಂದಂ ತಹ ಮುಖ್ಯಮಂತ್ರಿಗೆ ನಿಜವಾಗಿಯೂ ನಂದಿಕೂರಿನ ಜನರ ಬಗ್ಗೆ ಪ್ರೀತಿ ಅನುಕಂಪ ಇದ್ದಿದ್ದರೆ ಯುಪಿಸಿಎಲ್ ಬಗ್ಗೆ ಒಂದಾದರೂ ಮಾತನ್ನು ಎತ್ತಬಹುದಿತ್ತು. ಯಾವ ಮಾತನ್ನೂ ಆಡದೆ ಕೇವಲ ಶ್ರೀಮಂತರ ಕೂಟಗಳಾದ ಇಂತಹ ಕ್ರೀಡೆಗಳಿಗೆ ಸರ್ಕಾರದಿಂದ ಒಂದು ಲಕ್ಷ ಅನುದಾನ ನೀಡುವುದು ಎಷ್ಟು ಸಮಂಜಸ? ಜನ ರಿಂದ ತೆರಿಗೆ ಮೂಲಕ ಸಂಗ್ರಹವಾದ ಹಣವನ್ನು ಇಂತಹ ಕ್ರೀಡೆಯ ಬದಲು ಬಡ ಗ್ರಾಮಗಳ ಉದ್ದಾರಕ್ಕೆ ನೀಡಿದ್ದರೆ ಅದೆಷ್ಟೋ ಬಡ ಜನರು ನೆಮ್ಮದಿಯ ಬದುಕು ಸಾಗಿಸುತ್ತಿ ದ್ದರೋ ಏನೋ? ಅದನ್ನು ಬಿಟ್ಟು ನಂದಿಕೂರು ಮತ್ತು ಸುತ್ತಲಿನ ಪರಿಸರ ಯುಪಿಸಿಎಲ್ ಕಂಪೆನಿಯಿಂದ ನಾಶದ ಅಂಚಿನಲ್ಲಿ ಇರುವುದನ್ನು ಗಮನಿಸಿದಾಗ ಇವರೇ ನಮ್ಮ ಮತ ಪಡೆದು ಆಯ್ಕೆಯಾದ ಮುಖ್ಯಮಂತ್ರಿಯೇ ಎಂಬ ಅನುಮಾನ ಕಾಡು ತ್ತದೆ. ಇಂತಹ ಕುಟಿಲ ರಾಜಕಾರಣಿಗಳಿಗೆ ಮತ ಹಾಕಿ ಅವ ರನ್ನು ಪ್ರೋತ್ಸಾಹಿಸುವ ನಮ್ಮೂರಿನ ಕೆಲವು ಜನರಿಗೆ ನಂದಿಕೂ ರಿನ ಜನರು ದಿನನಿತ್ಯ ಅನುಭವಿಸುತ್ತಿರುವ ತೊಂದರೆಗಳ ಅರಿ ವಾಗದಿರುವುದು ತುಂಬಾ ಬೇಸರದ ಸಂಗತಿ. ಕಂಬಳ ಸಮಿತಿ ಎಂದು ಸಮಿತಿ ರಚಿಸಿ ಕೋಟಿಗಟ್ಟಲೆ ಹಣ ವ್ಯಯಿಸಿ ಇಂತಹ ಕಂಬಳ ಕೂಟ ಏರ್ಪಡಿಸುವ ಇಂಥವರಿಗೆ ಇದರಿಂದ ಯಾವ ಲಾಭವಾಗುತ್ತದೋ ಆ ದೇವರಿಗೇ ಗೊತ್ತು. ಕೇವಲ ಸ್ವಂತ ಪ್ರತಿಷ್ಠೆಗಾಗಿ ಇಂತಹ ಕೂಟ ಏರ್ಪಡಿಸುತ್ತಾರಲ್ಲದೆ ನಂದಿಕೂ ರಿನ ಉದ್ದಾರಕ್ಕೆ ಅಲ್ಲ. ನಂದಿಕೂರಿನ ಜನರು ಇಷ್ಟೊಂದು ಸಮಸ್ಯೆಯಿಂದ ದಿನನಿತ್ಯ ಸಾಯುತ್ತಿರುವಾಗ ವರ್ಷಕ್ಕೊಮ್ಮೆ ನಡೆಯುವ ಈ ಮನೋರಂಜನೆಯ ಕಂಬಳ ನಮಗೆ ಅಗತ್ಯ ಇದೆಯೇ? ನಂದಿಕೂರಿನ ಜನರ ಪೌರುಷ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಸಾಧ್ಯವಾಗದ್ದನ್ನು ಸಾಧಿಸುವ ಛಲ ಈ ನಂದಿಕೂರಿನ ಜನರದ್ದು ಎಂದು ಕೊಂಡಾಡಿದ ಗುಣಪಾಲ ಕಡಂಬರೇ ನಿಮ್ಮನ್ನು ನೀವು ಪ್ರಶ್ನೆ ಹಾಕಿಕೊಳ್ಳಿ.
ಈ ಜನರಿಗೆ ತಮ್ಮ ಊರನ್ನು ರಕ್ಷಿಸುವ ಛಲ ಇಲ್ಲ ಎಂದು ಯಾವುದೇ ಪರವಾನಿಗೆ ಇಲ್ಲದೆಯೇ ಗೂಂಡಾ ಪಡೆ ಯನ್ನು ಬಳಸಿ ಕಾರ್ಯಾರಂಭಿಸಿದ ನಾಗಾರ್ಜುನ ಕಂಪೆನಿ ವಿರುದ್ದ ಕಂಬಳ ಸಮಿತಿಯು ಪ್ರತಿಭಟನೆಗಿಳಿದರೆ ಅದೆಷ್ಟೋ ಬಡ ಜನರ ಬಾಳು ನಂದಾದೀಪವಾಗುತ್ತಿತ್ತು. ತಾವು ನಂಬಿ ರುವ ಶ್ರೀದುರ್ಗಾ ಮಾತೆಯ ಕ್ಷೇತ್ರವೇ ಈ ಕಂಪೆನಿಯಿಂದ ಸಮಸ್ಯೆ ಎದುರಿಸುತ್ತಿರುವಾಗ ಇಂತಹ ಕ್ರೀಡೆಗೆ ರಾಜ್ಯದ ಮುಖ್ಯ ಮಂತ್ರಿಯನ್ನು ನಮ್ಮೂರಿಗೆ ಕರೆಸುವ ತಾಕತ್ತು ಈ ಸಮಿತಿಗೆ ಇದೆ. ಹೀಗಿರುವಾಗ ಈ ತಾಕತ್ತನ್ನು ಕಂಪೆನಿಯ ವಿರುದ್ದ ಪ್ರದ ರ್ಶಿಸಿ ತಮ್ಮ ಊರಿನ ಜೊತೆಗೆ ಸುತ್ತಲಿನ ಗ್ರಾಮಗಳ ಜನ ತೆಯೂ ನೆಮ್ಮದಿಯಾಗಿ ಈ ಊರಲ್ಲಿ ಬದುಕುವ ಹಾಗೆ ಪ್ರಯತ್ನಿಸಿ ಕಂಬಳ ಸಮಿತಿಯು ಇಷ್ಟೊಂದು ಪ್ರಮಾಣದಲ್ಲಿ ಇದರಲ್ಲಿ ತೊಡಗಿಕೊಂಡು ಈ ಒಂದು ಕ್ರೀಡೆಯ ಯಶಸ್ಸಿಗೆ ದುಡಿದದ್ದನ್ನು ನಾವು ಸ್ಮರಿಸಲೇ ಬೇಕು. ಇದೇ ರೀತಿಯ ಫಲ ವನ್ನು ನಮ್ಮೂರಿನ ರಕ್ಷಣೆಗೆ ಮುಡಿಪಾಗಿಟ್ಟು ನಂದಿಕೂರಿನ ಶ್ರೀದುರ್ಗಾಪರಮೇಶ್ವರಿ ಮಾತೆಯ ಕೃಪೆಗೆ ಪಾತ್ರರಾಗಿರಿ.

ಮಾವಿನಕಟ್ಟೆ-ಸರಪಾಡಿ ಹದಗೆಟ್ಟ ರಸ್ತೆ

Posted by JAYAKIRANA Kirana on | 0 comments | Leave a comment...

ಚುನಾವಣಾ ಪ್ರಚಾರ ಸಭೆಯಲ್ಲಿ ನಮ್ಮೂರ ಮುಖಂ ಡರ ಆಶ್ವಾಸನೆ ಒಂದೇ. ನಿಮ್ಮ ಊರಿಗೆ ಯಾವ ಸೌಕರ್ಯ ಬೇಕು ಹೇಳಿ? ನಾವು ಮಾಡಿಕೊಡುತ್ತೇವೆ. ಇದು ನಮ್ಮೂರ ಬಿಜೆಪಿ, ಕಾಂಗ್ರೆಸ್ ಮುಖಂಡರು ಹಳ್ಳಿಯ ಮುಗ್ಧ ಜನರ ಮನವೊಲಿಸಿ ಮತ ಪಡೆಯುತ್ತಿದ್ದ ಪರಿ. ಈಗ ಜನರಿಗೆ ತಿಳಿ ದಿದೆ ಇವರದ್ದು ಕೇವಲ ಆಶ್ವಾಸನೆ ಮಾತ್ರ, ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ ಎಂದು.
ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯಿಂದ ಸರಪಾಡಿ ಶರಭೇಶ್ವರ ದೇವಸ್ಥಾನದವರೆಗಿನ ಮಾರ್ಗವನ್ನು ನೋಡಿದರೆ ಈ ರಾಜಕಾರಣಿಗಳ ನರಿ ಬುದ್ಧಿ ಜನರಿಗೆ ಅರ್ಥವಾಗುತ್ತದೆ. ಡಾಮರ್ ಹಾಕಿರುವ ಈ ಮಾರ್ಗದಲ್ಲಿ ಈಗ ಉಳಿದಿರು ವುದು ಅಲ್ಪಸ್ವಲ್ಪ ಡಾಮರ್ ಮಾತ್ರ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಂತೂ ಹೋಗಲು ಸಾಧ್ಯವೇ ಇಲ್ಲ. ಧೂಳಿನಿಂದ ತುಂಬಿಹೋಗಿರುವ ಈ ಮಾರ್ಗದಲ್ಲಿ ಶಾಲಾ ಮಕ್ಕಳು ಸೈಕಲಿ ನಲ್ಲಿ ಹೋಗುತ್ತಿರುವುದನ್ನು ನೋಡಿದಾಗ ಹೆದರಿಕೆಯಾಗು ತ್ತದೆ. ಈ ಮಾರ್ಗದಲ್ಲಿರುವ ಗುಂಡಿಗಳಿಗೆ ಈಗ ಜೆಸಿಬಿಯಿಂದ ಮಣ್ಣು ಹಾಕುವ ಕೆಲಸ ಪ್ರಾರಂಭ ಮಾಡಿದ್ದಾರೆ. ಇದು ಯಾರನ್ನು ಮೆಚ್ಚಿಸಲು ಎನ್ನುವುದೇ ಗೊತ್ತಾಗುತ್ತಿಲ್ಲ.
ಧೂಳಿನಿಂದ ಕೂಡಿರುವ ಈ ಮಾರ್ಗವನ್ನು ಬಂಟ್ವಾಳ ಶಾಸಕರು ಹಾಗೂ ಸರಪಾಡಿ ಗ್ರಾಮ ಪಂಚಾಯತ್ ಅಧ್ಯ ಕ್ಷರು ಸರಕಾರದ ನೆರವಿನಿಂದ ಡಾಮರೀಕರಣಗೊಳಿಸಿ ಸಾರ್ವ ಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
ದುರ್ಗಾಪ್ರಸಾದ್, ಸರಪಾಡಿ

ಜನಾರ್ದನ ಪೂಜಾರಿ, ಸಿ.ಎಂ.ಇಬ್ರಾಹಿಂ ದಲಿತ ವಿರೋಧಿ ನಾಯಕರು

Posted by JAYAKIRANA Kirana on | 0 comments | Leave a comment...

ಹಿರಿಯ ರಾಜಕಾರಣಿ ಜನಾ ರ್ದನ ಪೂಜಾರಿಯವರು ಹಿಂದೆ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಸಮಯದಲ್ಲಿ ಮಂಗಳೂರಿನ ಕುದ್ರೋಳಿ ದೇವಸ್ಥಾನ ಒಂದನ್ನು ಭವ್ಯವಾಗಿ ಸುಂದರವಾಗಿ ಕಟ್ಟಿಸಿ ಕೊಟ್ಟಿದ್ದನ್ನು ಬಿಟ್ಟರೆ ದೀನ ದಲಿ ತರಿಗಾಗಲೀ, ಬಡಬಗ್ಗರಿಗಾಗಲಿ ಏನೊಂದೂ ಸಾಧನೆ ಮಾಡಿದ್ದು ಕಂಡುಬರುತ್ತಾ ಇಲ್ಲ. ದಲಿತ ವರ್ಗದವರನ್ನು ಕಂಡರೆ ಇವರಿಗೆ ಅಲರ್ಜಿಯಾಗುತ್ತಿತ್ತು.
ಹಿಂದೊಮ್ಮೆ ದೇವರ ಅಪ್ಪಣೆಯ ಮೇರೆಗೆ ಮಂಗ ಳೂರಿನ ಬಬ್ಬುಸ್ವಾಮಿ ದೇವಸ್ಥಾನ ಒಂದನ್ನು ಜೀರ್ಣೋ ದ್ಧಾರ ಮಾಡುವ ನಿಟ್ಟಿನಲ್ಲಿ ಭಕ್ತಾದಿ ದಲಿತರು ಊರಿಗಿ ಳಿದು ಮನೆ-ಮನೆಗೆ ತೆರಳಿ ಶ್ರೀಸ್ವಾಮಿಯ ಹೆಸರು ಹೇಳಿದಾ ಕ್ಷಣ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರೂ ಶಕ್ತಿಮೀರಿ ಧನ ಸಹಾಯ ಮಾಡಿದ್ದರು. ಆದರೆ ಜನಾರ್ದನ ಪೂಜಾ ರಿಯವರ ನಿವಾಸಕ್ಕೆ ದಲಿತರು ಹೋದಾಗ ದಲಿತರನ್ನು ನಿಂದನೆ ಮಾಡಿ ಬರಿಗೈಯ್ಯಲ್ಲಿ ವಾಪಸ್ ಕಳಿಸಿದ್ದಾರೆ. ಅಂದಿನಿಂದ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕಾಗದೆ, ಟೀಕೆ-ಟಿಪ್ಪಣಿ ಮಾಡುವುದರಲ್ಲೇ ಕಾಲ ಕಳೆಯುವಂತಾಗಿದೆ. ಇನ್ನೋರ್ವ ರಾಜಕಾರಣಿ ಸಿ.ಎಂ. ಇಬ್ರಾಹಿಂ ಕೂಡಾ ಸುಸಂಸ್ಕೃತ ವ್ಯಕ್ತಿಯಲ್ಲ. ಯಾವತ್ತೂ ಭಾಷಣದಲ್ಲಿ ಇವರ ಬಾಯಿಯಲ್ಲಿ ಒಳ್ಳೆಯ ಶಬ್ದಗಳು ಬರದೆ ಕೆಟ್ಟ ಅಸಹ್ಯವಾದ ಮಾತುಗಳಿಂದಲೇ ಟೀಕಿಸು ವುದನ್ನು ನಾವು ಟಿ.ವಿ. ಮುಖಾಂತರ ನೋಡಬಹುದು.
ಮೊನ್ನೆ ಉಡುಪಿಯಲ್ಲಿ ಕಾಂಗ್ರೆಸ್ ಸಮಾವೇಶವೊಂ ದರಲ್ಲಿ ದಲಿತರ ಎದುರೇ ದಲಿತರನ್ನು ನಿಂದಿಸಿದ್ದು ಆಕ್ರೋ ಶಗೊಂಡ ದಲಿತರು ಅವರ ಬಗ್ಗೆ ದೂರು ಕೂಡಾ ನೀಡಿರುತ್ತಾರೆ. ಇದರಿಂದಲೇ ಇವರು ದಲಿತ ವಿರೋ ಧಿಗಳೆಂದು ಊಹಿಸಬಹುದಾಗಿದೆ.
ಯು.ವಿಠಲ್ ಮಾಸ್ತರ್, ಭದ್ರಗಿರಿ-ಬೈಕಾಡಿ

ಚಿತ್ರತಾರೆಯರ ಕಪಟ ರಾಜಕಾರಣ

Posted by JAYAKIRANA Kirana on | 0 comments | Leave a comment...

ಚಿತ್ರರಂಗ ಮತ್ತು ಕಿರುತೆರೆ ನಟ ಮತ್ತು ನಟಿಯರಿಗೆ ಈಗ ರಾಜಕಾರಣದ ಖಯಾಲಿ ತುಂಬಾನೇ ಶುರುವಾದಂತಿದೆ. ರಾಜ ಕಾರಣಿಗಳೇನೋ ತಮ್ಮ ಪಕ್ಷಗಳಿಗೆ ಸ್ಟಾರ್‌ಗಳ ಗ್ಲಾಮರ್ ವರ್ಚ ಸ್ಸಿನಿಂದ ಮತಗಳಿಕೆಯ ಹುನ್ನಾರದಿಂದ ಪಕ್ಷಕ್ಕೆ ಸೇರ್ಪಡೆಗೊ ಳಿಸುತ್ತಾರೆ.
ಆದರೆ ಈ ನಟ-ನಟಿಯರು ತಾವು ಸೇರಲ್ಪಟ್ಟ ಪಕ್ಷದ ನಾಯಕರ ಮತ್ತು ಪಕ್ಷದ ಸಿದ್ಧಾಂತಕ್ಕೆ ಆಕರ್ಷಿತರಾಗಿ ಮತ್ತು ಜನಸೇವೆಗೋಸ್ಕರ ರಾಜಕೀಯ ಸೇರ್ಪಡೆಯನ್ನು ಸಮರ್ಥಿಸಿ ಹೇಳಿಕೆಗಳನ್ನು ನೀಡುತ್ತಾರೆ. ಚಿತ್ರರಂಗದಲ್ಲಿ ಸ್ಟಾರ್‌ಗಿರಿಯ ತುತ್ತ ತುದಿಯಲ್ಲಿರುವಾಗ ಜನಸೇವೆಯ ಹಂಬಲ ಬರದೆ ಯಾವುದೇ ಬೇಡಿಕೆಯಿಲ್ಲದಾಗ ಅದರ ನೆನಪಾಗುತ್ತದೆ.
ನಿಜ ಸ್ವರೂಪವೇನೆಂದರೆ ಬೇಡಿಕೆ, ಇಮೇಜ್ ಇಲ್ಲದಾಗ ಹಣದ ಮೂಲವು ಬಂದ್ ಆಗಿರುತ್ತದೆ. ಆಗ ಸುಲಭವಾಗಿ ರಾಜಕಾರಣ ಆಕರ್ಷಿಸಲ್ಪಡುತ್ತದೆ. ಅಧಿಕಾರದೊಂದಿಗೆ ಜನಪ್ರಿ ಯತೆ ಜೊತೆ ಇರುತ್ತದೆ. ತಾವಿರುವ ಪಕ್ಷ ಅಧಿಕಾರಕ್ಕೆ ಬಂದರೆ, ಯಾವುದಾದರೂ ಇಲಾಖೆ, ನಿಗಮ, ಮಂಡಳಿಗಳ ಅಧಿಕಾ ರವನ್ನು ಪಡೆಯುವ ಹುನ್ನಾರವಷ್ಟೇ. ನಿಜವಾದ ಸಮಾಜಸೇ ವೆಗೆ ರಾಜಕಾರಣ ಮಾತ್ರ ವೇದಿಕೆಯಲ್ಲ. ಇತರ ರಂಗದಲ್ಲಿ, ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಲ್ಲವೇ?
ಚಾಲ್ತಿಯಲ್ಲಿರುವ ನಟ ಕಂ ನಟಿ ರಾಜಕಾರಣಿಯಾಗಿ ಅಧಿ ಕಾರ ಅನುಭವಿಸಿ ಜನರನ್ನು ಉದ್ಧರಿಸಿದ್ದು ಅಷ್ಟಕ್ಕೇ ಇದೆ. ಇನ್ನು ರಾಜ ಕಾರಣದಲ್ಲಿ ತಮ್ಮ ನಟನಾ ಕೌಶಲ್ಯ ತೋರಿಸಿ ಜನರನ್ನು ಮರುಳು ಮಾಡುವುದು ಬೇಡ. ಚಿತ್ರರಂಗದವರು ರಾಜಕಾ ರಣ ಮಾಡಬಾರದೆಂದು ಹೇಳುತ್ತಿಲ್ಲ. ನಿಮ್ಮ ಸಾಮಾಜಿಕ ಕಾಳ ಜಿಯನ್ನು ಜನರೊಂದಿಗೆ ಬೆರೆತು ಅವರ ಕಷ್ಟ, ಸಮಸ್ಯೆ ಅರಿತು ಸ್ಪಂದಿಸಲು ಸಂಘಸಂಸ್ಥೆ ಮತ್ತು ಇತರೇ ಕ್ಷೇತ್ರಗಳ ಮೂಲಕ ಮಾಡಬಹುದು ಅಲ್ಲವೇ? ಅದು ಬಿಟ್ಟು ಫ್ಯಾಶನ್‌ಗಾಗಿ ಅಥವಾ ಕಪಟ ಜನಸೇವೆಯ ಅಗತ್ಯವಿಲ್ಲ.
ನವೀನ್‌ಚಂದ್ರ, ಕಂಕನಾಡಿ

ಹದಗೆಟ್ಟ ಕಾವೂರು-ಗಾಂಧಿನಗರ ಒಳರಸ್ತೆ

Posted by JAYAKIRANA Kirana on | 0 comments | Leave a comment...

ಕಾವೂರು ಸಮೀಪದ ಗಾಂಧಿನಗರ ಜಂಕ್ಷನ್‌ನಿಂದ ಒಳಗಿನ ವಸತಿ ಪ್ರದೇಶಕ್ಕೆ ಸಾಗುವಲ್ಲಿ ರಸ್ತೆಯ ಪರಿಸ್ಥಿತಿ ತೀರಾ ಹದ ಗೆಟ್ಟಿದೆ. ರಸ್ತೆಗೆ ಎಂದೋ ಡಾಮರೀಕರಣ ಮಾಡಲಾಗಿದ್ದು, ವಾಹನಗಳ ಓಡಾಟಕ್ಕೆ ಡಾಮರಿನ ಸುಳಿವೇ ಸಿಗದಂತಾಗಿದೆ.
ಸ್ಥಳೀಯ ಕಾರ್ಪೊರೇಟರ್ ಅವರು, ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರೂ ಅದು ಹುಸಿಯಾಗಿದೆ. ಇಲ್ಲಿ ಯವರೆಗೆ ರಸ್ತೆ ಡಾಮರೀಕರಣದ ಕಾಮ ಗಾರಿ ನಡೆದಿಲ್ಲ. ರಸ್ತೆಯಲ್ಲಿನ ಗುಂಡಿಯಿಂ ದಾಗಿ ರಿಕ್ಷಾ ಚಾಲಕರು, ದ್ವಿಚಕ್ರ ಸವಾ ರರು ಅನುಭವಿಸುವ ಯಾತನೆ ಅಷ್ಟಿಷ್ಟಲ್ಲ. ಗಾಂಧಿನಗರ ರಸ್ತೆಯನ್ನು ಮೇಲ್ದರ್ಜೆಗೇ ರಿಸಲು ನಾವು ಯಾರಲ್ಲಿ ಮನವಿ ಮಾಡ ಬೇಕು?
ಕಾರ್ಪೊರೇಟರ್ ಅವರು ಆಗಾಗ ಇಲ್ಲಿಗೆ ಭೇಟಿಕೊಡುವರೇ? ರಸ್ತೆ ದುರಸ್ಥಿ ಗಾಗಿ ಆಗ್ರಹಿಸಿ ಸ್ಥಳೀಯರು ಪ್ರತಿಭಟಿಸುವ ಮುನ್ನ ಸಂಬಂಧಪಟ್ಟವರು ಕಣ್ತೆರೆಯಲಿ.
ನಾಗರಿಕರು, ಗಾಂಧಿನಗರ

ಬಿಜೆಪಿಗರೇ, ಕಾಲೆಳೆಯಲು ಹೋಗದಿರಿ

Posted by JAYAKIRANA Kirana on | 0 comments | Leave a comment...

ಮಂಗಳೂರು ಮಹಾನಗರ ಪಾಲಿ ಕೆಯ ಆಡಳಿತ ಬಿಜೆಪಿ ಕೈತಪ್ಪಿ ಹೋಗಿದೆ. ಮೇಯರ್ ಆಗಿ ಆಯ್ಕೆಯಾಗಬೇಕಿದ್ದ ರೂಪಾ ಬಂಗೇರಾ ನಾಮಪತ್ರ ಕೊನೆಯ ಕ್ಷಣದಲ್ಲಿ ತಿರಸ್ಕೃತಗೊಂಡು ಕಾಂಗ್ರೆಸ್‌ನ ಗುಲ್ಜಾರ್ ಬಾನು ಆಯ್ಕೆಯಾಗಿದ್ದಾರೆ.
ಇದಕ್ಕೆ ಬಿಜೆಪಿಗರ ಆಂತರಿಕ ಕಚ್ಚಾಟ, ಪಕ್ಷದೊಳಗಿನ ಬಿಕ್ಕಟ್ಟು, ಗುಂಪುಗಾರಿಕೆಯೇ ಕಾರಣ ಎನ್ನುವುದು ಜಿಲ್ಲೆಯ ಜನರಿಗೆ ಸ್ಪಷ್ಟ ವಾಗಿ ತಿಳಿದಿದೆ. ಹೀಗಿದ್ದೂ ಬಿಜೆಪಿಗರು ಚುನಾ ವಣಾಧಿಕಾರಿ ಅನ್ಯಾಯವೆಸಗಿದ್ದಾರೆ ಎಂದು ಕೋರ್ಟಿಗೆ ಹೋಗಿರುವುದು ಖಂಡನೀಯ. ರಾಜಕೀಯ ನಡೆಸುವುದನ್ನು ತಿಳಿಯದ ಕೆಲವೊಂದು ಮರಿ ಪುಡಾರಿ ಗಳು ಬಿಜೆಪಿಯ ಮಾನವನ್ನು ಬೀದಿಗೆ ತಂದು ನಿಲ್ಲಿಸಿದ್ದೂ ಅಲ್ಲದೆ ಅಧಿಕಾರ ಹೋಯಿತೆಂಬ ಚಿಂತೆ ಯಲ್ಲಿ ಮೇಯರ್ ಅವರ ಕಾಲೆಳೆಯಲು ಮುಂದಾಗಿರುವುದು ಎಷ್ಟು ಸರಿ? ಮನಪಾ ವ್ಯಾಪ್ತಿಯಲ್ಲಿ ಈಗಾಗಲೇ ಅದೆಷ್ಟೋ ಕಾಮ ಗಾರಿಗಳು ಅರ್ಧಕ್ಕೇ ಬಾಕಿಯಾಗಿವೆ. ಇವಕ್ಕೆ ಮರುಜೀವ ತುಂಬುವ ಕೆಲಸ ಆಗ ಬೇಕಿದೆ. ಇದನ್ನು ಮೇಯರ್ ಮಾಡಿಕೊಂಡು ಹೋಗಲಿ. ಮುಂದಿನ ಬಾರಿ ಮತ್ತೆ ಮೇಯರ್ ಆಯ್ಕೆಯ ಕಸರತ್ತು ನಡೆಯು ವಾಗ ಬಿಜೆಪಿಗರೇ ರಾಜಕೀಯ ನಡೆಸಿ ಗದ್ದುಗೆ ಗೇರಲಿ. ಈಗ ನ್ಯಾಯಯುತವಾಗಿ ಮೇಯರ್ ಆಗಿರುವವರನ್ನು ತಡೆಯುವುದು ಸಮಂಜಸ ವಲ್ಲ. ಬಿಜೆಪಿ ಮೊದಲು ತನ್ನ ಕಚ್ಚಾಟ ನಿಲ್ಲಿಸಲಿ.
ಸಮದ್, ಬಂದರ್

ಹಾರ್ನ್ ಮಾಡಿ

Posted by JAYAKIRANA Kirana on | 0 comments | Leave a comment...

ಜಿಲ್ಲೆಯ ಕೆಟ್ಟುಹೋದ ಪ್ರಧಾನ ರಸ್ತೆ ಹಾಗೂ ಒಳರಸ್ತೆಗಳ ವಿರುದ್ಧ ಯುವಕರ ಸಂಘಟನೆಯೊಂದು ಹಾರ್ನ್ ಮಾಡಿ ಆಂದೋಲನಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಮಾರ್ಚ್ ೨೩ರಂದು ನಡೆ ಯಲಿರುವ ಈ ಪ್ರತಿಭಟನೆಗೆ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಮಾತ್ರವಲ್ಲದೆ ನಾಗರಿಕರೂ ಬೆಂಬಲ ನೀಡಬೇಕು. ಕೆಟ್ಟುಹೋದ ರಸ್ತೆ ಗಳ ಪರಿಸ್ಥಿತಿಯ ಅರಿವಿದ್ದೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸುಮ್ಮನಾ ಗಿದ್ದಾರೆ. ಜನರ ಪ್ರಾಣದ ಬಗ್ಗೆ ಅವರಿಗೆ ಯಾವುದೇ ಚಿಂತೆಯಿಲ್ಲ. ಎಡ ಪದವು, ಕಿನ್ನಿಗೋಳಿ, ಪಕ್ಷಿಕೆರೆ ರಸ್ತೆಯಲ್ಲಿ ಡಾಮರು ಮಾಯವಾಗಿ ಗುಂಡಿ ಗಳು ಮೇಲೆದ್ದಿದ್ದರೆ, ಬಿಕರ್ನಕಟ್ಟೆ ಬಳಿ ಫ್ಲೈ ಓವರ್ ಕಾಮಗಾರಿ ಅರ್ಧಕ್ಕೇ ನಿಂತಿದೆ. ಇವೆಲ್ಲವೂ ವಾಹನ ಸವಾರರಿಗೆ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದು, ಜನಪ್ರತಿನಿಧಿಗಳನ್ನು ಹಾರ್ನ್ ಮಾಡಿ ಎಚ್ಚರಿಸುವುದು ಅನಿವಾರ್ಯವಾ ಗಿದೆ. ಐದು ನಿಮಿಷಗಳ ಕಾಲ ರಸ್ತೆ ತಡೆ ಮಾಡಿ ಹಾರ್ನ್ ಹಾಕುವ ಆಂದೋಲನ ಎಲ್ಲೆಡೆ ನಡೆಯಲಿ. ಸಾಮಾಜಿಕ ಸಂಘಟನೆಗಳು ಈ ವಿಶಿಷ್ಟ ಪ್ರತಿಭಟನೆಗೆ ಬೆಂಬಲ ಕೊಡಲಿ.
ರಾಕೇಶ್, ಪೊಳಲಿ

ಕರ್ನಾಟಕ ಧಾರ್ಮಿಕ ಪರಿಷತ್ತು ಬೇಕೇ

Posted by JAYAKIRANA Kirana on | 0 comments | Leave a comment...

ಹೆಚ್ಚಿನ ಉತ್ಪತ್ತಿ ಇರುವ ದೇವಾಲಯಗಳನ್ನು ‘ಎ ಗ್ರೇಡ್ ದೇವಾಲಯಗಳೆಂದು ಪರಿಗಣಿಸಿ ಪತ್ರಿಕೆಗಳ ಮುಖಾಂತರ ಆಡ ಳಿತ ಮಂಡಳಿಗೆ ಆಸಕ್ತಿ ಇರುವವರ ಅರ್ಜಿಯನ್ನು ಆಹ್ವಾನಿಸಿ ವಿಚಾರಣೆ ನಡೆಸಿ ಅದರಲ್ಲಿ ಪ್ರತೀ ದೇವಾಲಯಗಳಿಗೆ ಒಂಬತ್ತು ಮಂದಿಯನ್ನು ಆರಿಸಿ ಆಡಳಿತ ಮಂಡಳಿಯನ್ನು ರಚಿಸಬೇಕು. ಈ ಬಾರಿ ಕೊಲ್ಲೂರು, ಸುಬ್ರಹ್ಮಣ್ಯ ಮೊದಲಾದ ದೇವಾಲಯಗ ಳಿಂದ ಆಸಕ್ತಿ ಉಳ್ಳವರಿಂದ ಅರ್ಜಿಯನ್ನು ಕರೆಯಲಾಗಿತ್ತು. ನೂರಾರು ಜನ ಅರ್ಜಿಯನ್ನು ಸಲ್ಲಿಸಿದ್ದರು. ಧಾರ್ಮಿಕ ಪರಿ ಷತ್ತು ಅರ್ಜಿದಾರರನ್ನು ಕರೆದು ಪರಿಶೀಲಿಸದೇ ಆರ್.ಎಸ್.ಎಸ್ ನಾಯಕನ ಆದೇಶದ ಮೇರೆಗೆ ಪಟ್ಟಿಯನ್ನು ತಯಾರಿಸಿ ಧಾರ್ಮಿಕ ದತ್ತಿ ಆಯುಕ್ತರಿಗೆ ಆದೇಶ ನೀಡಲು ಕಳುಹಿಸಿ ಕೊಡಲಾಗಿದೆ. ನಾಯಕನೇ ತೀರ್ಮಾನಿಸುವುದಾದರೆ ಗೌರವಾನ್ವಿತ ಧಾರ್ಮಿಕ ಪರಿಷತ್ತಿನ ಸದಸ್ಯರ ಕೆಲಸವೇನು?
ಮಾನ ಕಳೆದುಕೊಂಡು ಆ ಹುದ್ದೆಯಲ್ಲಿ ಅವರು ಇರ ಬೇಕೇ? ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೃಷ್ಣ ಪ್ರಸಾದ್ ಅಡ್ಯಂತಾಯರು ಈ ಹಿಂದೆ ಆಡಳಿತ ಮೊಕ್ತೇಸರರಾ ಗಿದ್ದರು. ಒಂದು ಅವಧಿಯ ನಂತರ ಅರ್ಜಿಯನ್ನು ಕರೆಯಲಾ ಗಿತ್ತು. ನೂರಾರು ಅರ್ಜಿಗಳು ಬಂದಿತ್ತು. ಹಿಂದಿನ ಆಡಳಿತ ಮೊಕ್ತೇಸರನಾದ ನಾನು ಅರ್ಜಿ ಸಲ್ಲಿಸಿದ್ದೆ. ಅರ್ಜಿದಾರರನ್ನು ವಿಚಾ ರಿಸದೆಯೇ ಮುಖ್ಯಮಂತ್ರಿಗಳಿಂದ ಅಡ್ಯಂತಾಯರು ಒಂಬತ್ತು ಜನರ ಪಟ್ಟಿಯನ್ನು ಧಾರ್ಮಿಕ ದತ್ತಿ ಆಯುಕ್ತರಿಗೆ ಕಳುಹಿಸಿ ಆದೇಶ ಮಾಡಿ ಅಧಿಕಾರ ಹಿಡಿದರು. ಇದರಿಂದ ನ್ಯಾಯ ವಂಚಿತ ನಾನು ಮತ್ತು ಮಾಜಿ ಶಾಸಕರಾದ ಅಪ್ಪಣ್ಣ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲು ಹತ್ತಿದೆವು. ಅಡ್ಯಂತಾಯರು ಕಳಂ ಕಿತ ವ್ಯಕ್ತಿ. ಹಣದ ಅವ್ಯವಹಾರ, ಜನಗಳಿಗೆ ನೀಡಿದ ಬ್ಯಾಂಕ್ ಚೆಕ್ಕು ಹಣ ಇಲ್ಲದೆ ಹಿಂತಿರುಗಿದ ಬಗ್ಗೆ ಕೇಸುಗಳಿವೆ. ಲೋಕಾ ಯುಕ್ತದಲ್ಲಿ ಕೇಸು ತನಿಖೆಗೆ ಬಾಕಿ ಇದೆ. ಅವರನ್ನು ನೇಮಕ ಮಾಡಿದ್ದು ಸರಿಯಲ್ಲವೆಂದು ವಾದಿಸಿದಾಗ ನ್ಯಾಯಾಲಯ ಅವರ ಸಹಿತ ಒಂಬತ್ತು ಮಂದಿಯನ್ನು ಆಡಳಿತ ಮಂಡಳಿಯಿಂದ ಕಿತ್ತು ಹಾಕಿತು. ಆಡಳಿತಾಧಿಕಾರಿಗಳ ನೇಮಕವಾಯಿತು. ಈಗ ಧಾರ್ಮಿಕ ದತ್ತಿ ಕಾಯಿದೆ ತಿದ್ದುಪಡಿಯಾಗಿ ರಾಜ್ಯದ ಪ್ರಥಮ ದರ್ಜೆ ದೇವಾಲ ಯಗಳಿಗೆ ಆಡಳಿತ ಮಂಡಳಿಯ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಆದರೆ ಅರ್ಜಿದಾರರನ್ನು ವಿಚಾರಿಸದೆ, ತಮ್ಮ ನಾಯಕನ ಮಾತು ಮೀರಲಾರದೆ ಕೊಲ್ಲೂರಿಗೆ ಅದೇ ಕಳಂಕಿತ ಅಡ್ಯಂತಾಯ, ಸುಬ್ರಹ್ಮಣ್ಯಕ್ಕೆ ತನ್ನ ಸಂಬಂಧಿಗಳನ್ನು ನೇಮಿಸುವಂತೆ ಪಟ್ಟಿ ತಯಾರಿಸಿ ಧಾರ್ಮಿಕ ದತ್ತಿ ಆಯುಕ್ತರಿಗೆ ಕಳು ಹಿಸಲಾಗಿದೆ ಎಂದು ತಿಳಿದು ಬಂದಿದೆ.
ಹಾಗಾದರೆ ಅರ್ಜಿಯನ್ನು ಯಾಕೆ ಆಹ್ವಾನಿಸಬೇಕು? ಕಾನೂ ನನ್ನು ಕೈಗೆತ್ತಿಕೊಳ್ಳುವ ನಾಯಕನ ವಿರುದ್ದ ಮಾತನಾಡುವ ವರಿಲ್ಲವೇ? ಧಾರ್ಮಿಕ ಪರಿಷತ್ತು ಯಾಕೆ? ಮರ್ಯಾದೆ ಇಲ್ಲದ ಜಾಗದಿಂದ ಅವರು ಹೊರಬರಲಿ. ಮತ್ತೊಮ್ಮೆ ಕಳಂಕಿತ ವ್ಯಕ್ತಿ ಗಳನ್ನು ನೇಮಿಸಿದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್

ಟ್ರಾಫಿಕ್ ಪೊಲೀಸರ ಕೆಲಸ ನಿಮಗ್ಯಾಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿರ್ವಹಣೆ ಗಾಗಿ ಮತ್ತು ಅಪರಾಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರತ್ಯೇಕ ವ್ಯವ ಸ್ಥೆಯಿದೆ. ಕಮೀಷನರೇಟ್ ಬರುವುದಕ್ಕೂ ಮೊದಲು ಈ ರೀತಿಯ ವ್ಯವಸ್ಥೆ ಇತ್ತು. ಆದರೆ ಟ್ರಾಫಿಕ್ ಠಾಣೆಯ ಪೊಲೀಸರು ಮಾಡಬೇಕಾದ ಕೆಲಸವನ್ನು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಬೇಕಾದ ಪೊಲೀಸರು ಮಾಡುತ್ತಿದ್ದಾರೆ. ನಗರದಲ್ಲಿ ಅದೆಷ್ಟೋ ಹತ್ಯೆ ಪ್ರಕರಣ, ನಾಪತ್ತೆ, ಕಳ್ಳತನ ಮುಂತಾದ ಪ್ರಕರ ಣಗಳ ಆರೋಪಿಗಳ ಪತ್ತೆಯೇ ಬಾಕಿಯಿದೆ. ಕೈಯಲ್ಲಿ ಹತ್ತು ವರ್ಷ ಕಳೆ ದರೂ ಮುಗಿಯದಷ್ಟು ಪ್ರಕರಣಗಳಿವೆ. ಆದರೆ ನಗರದ ಠಾಣೆಯೊಂದರ ಮಹಿಳಾ ಎಸ್‌ಐ ಒಬ್ಬರು ಬೀದಿ ಬದಿಯಲ್ಲಿ ನಿಂತು ವಾಹನಗಳನ್ನು ನಿಲ್ಲಿಸಿ ಕೇಸು ಜಡಿಯುತ್ತಿದ್ದಾರೆ. ಇವರ ಈ ಕೆಲಸವನ್ನು ನಾನು ತಪ್ಪೆನ್ನುತ್ತಿಲ್ಲ. ಆದರೆ ತಮ್ಮ ವ್ಯಾಪ್ತಿಗೆ ಬರುವ ಕೆಲಸವನ್ನು ಮಾಡುವುದನ್ನು ಬಿಟ್ಟು ಟ್ರಾಫಿಕ್ ಪೊಲೀ ಸರ ಕೆಲಸ ಮಾಡುವ ಅನಿವಾರ್ಯತೆ ಇವರಿಗೆ ಏನಿತ್ತು? ಮಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆಗೆ ಪ್ರತ್ಯೇಕ ತಂಡವಿದೆ. ಅದೂ ಅಲ್ಲದೇ ದಿನದ ೨೪ ಗಂಟೆಯೂ ನಾಲ್ಕೈದು ಟ್ರಾಫಿಕ್ ನಿಯಂತ್ರಣ ವಾಹನಗಳು ನಗರವನ್ನು ಸುತ್ತು ಹೊಡೆಯುತ್ತಿರುತ್ತದೆ. ಹೀಗಿರುವಾಗ ತಮ್ಮ ಕೆಲಸ ಬಿಟ್ಟು ಇವರಿಗೆ ಕೇಸು ಜಡಿಯುವ ಉಸಾಬರಿ ಯಾಕೆ? ಇವರೇ ಎಲ್ಲಾ ಕೆಲಸ ಮಾಡುವು ದಾದರೆ ಟ್ರಾಫಿಕ್ ಪೊಲೀಸರು ಯಾಕೆ? ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಬಗೆ ಹರಿಯದ ಅವೆಷ್ಟೋ ಪ್ರಕರಣಗಳು ಇನ್ನೂ ಹಾಗೆ ಇವೆ. ಅದಕ್ಕೆಲ್ಲಾ ತಾರ್ಕಿಕ ಅಂತ್ಯ ಕಾಣಿಸುವ ಬದಲು ಟ್ರಾಫಿಕ್ ಪೊಲೀಸರ ಕೆಲಸ ನಿಮಗೆ ಬೇಕೇ?
ವಿನ್ಯಾಸ್ ಆರ್.ಶೆಟ್ಟಿ, ಜೆಪ್ಪು

Page1

Posted by JAYAKIRANA Kirana on | 0 comments | Leave a comment...

Page2

Posted by JAYAKIRANA Kirana on | 0 comments | Leave a comment...

Page3

Posted by JAYAKIRANA Kirana on | 0 comments | Leave a comment...

Page4

Posted by JAYAKIRANA Kirana on | 0 comments | Leave a comment...

Page5

Posted by JAYAKIRANA Kirana on | 0 comments | Leave a comment...

Page6

Posted by JAYAKIRANA Kirana on | 0 comments | Leave a comment...

Posted by JAYAKIRANA Kirana on | 0 comments | Leave a comment...

ನಿವೃತ್ತಿಯಲ್ಲೂ ವೈಯಕ್ತಿಕ ಘನತೆ ಎತ್ತಿ ಹಿಡಿದ ದ್ರಾವಿಡ್

Posted by JAYAKIRANA Kirana on | 0 comments | Leave a comment...




ಟೆಸ್ಟ್‌ನಲ್ಲಿ ದ್ರಾವಿಡ್‌ರ ಇನ್ನೊಂದು ಕುತೂಹಲಕಾರಿ ಸಾಧನೆ ಎಂದರೆ ಒಟ್ಟು ೨೭,೦೦೨ ಚೆಂಡುಗಳನ್ನು ಎದುರಿಸಿದ ಏಕೈಕ ಬ್ಯಾಟ್ಸ್‌ಮೆನ್ ಎನ್ನುವುದು. ಈ ಮೂಲಕ ಡಾನ್ ಬ್ರಾಡ್ಮನ್‌ರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಟೆಸ್ಟ್‌ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೂಡ ವಾಲ್ ಹೆಸರಿನಲ್ಲಿದೆ. ವಿದೇಶದಲ್ಲಿ ಟೆಸ್ಟ್ ಆಡಿದ ಎಲ್ಲಾ ರಾಷ್ಟ್ರಗಳ ಎದುರು ಸೆಂಚುರಿ ಬಾರಿಸಿದ ಏಕೈಕ ಆಟಗಾರ

ಕಳೆದ ಶುಕ್ರವಾರ ವಿಶ್ವ ಕ್ರಿಕೆಟ್‌ಗೆ ಅದರಲ್ಲೂ ಆಟವನ್ನು ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುವ ಭಾರತೀಯ ಅಭಿಮಾನಿಗಳ ಪಾಲಿಗೆ ಅದೊಂದು ಬ್ಲ್ಯಾಕ್ ಫ್ರೈಡೆಯಾಗಿತ್ತು. ಯಾಕೆಂದರೆ ಕ್ರಿಕೆಟ್ ಲೋಕದಲ್ಲಿ ‘ದಿ ವಾಲ್ ಎಂಬ ಉಪನಾಮದಿಂದ ಗುರುತಿಸಲ್ಪಡುವ ರಾಹುಲ್ ದ್ರಾವಿಡ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ದೂರಸರಿದಿದ್ದಾರೆ. ಬಹುಶಃ ಒಂದರ್ಥದಲ್ಲಿ ನಿವೃತ್ತಿಯ ತೀರ್ಮಾನವು ದ್ರಾವಿಡ್‌ರ ಒಲ್ಲದ ತೀರ್ಮಾನವಾಗಿತ್ತು ಎಂಬುದು ಅವರು ನಡೆಸಿದ ಪತ್ರಿಕಾಗೋಷ್ಠಿಯ ವೇಳೆಯಲ್ಲಿಯೇ ಎಲ್ಲರಿಗೆ ತಿಳಿ ಯಿತು. ಆದರೆ ಆ ಸಮಯದಲ್ಲಿ ಅದು ಅವರಿಗೆ ಸರಿಯಾದ ದಾರಿಯೇ ಆಗಿತ್ತು ಎಂಬುದು ದ್ರಾವಿಡ್‌ರ ಅಭಿಮತ. ಕಳೆದ ಆಸ್ಟ್ರೇಲಿಯಾ ವಿರುದ್ಧ ಭಾರತ ೪-೦ಯ ಹೀನಾಯ ಅಂತರದಿಂದ ವೈಟ್‌ವಾಶ್ ಆದಾಗ ಎಲ್ಲರ ವಕ್ರದೃಷ್ಟಿ ಸಚಿನ್, ಸೆಹ್ವಾಗ್, ಗಂಭೀರ್, ದ್ರಾವಿಡ್ ಮೇಲೆ ಬೀರಿತು. ಅದರಲ್ಲೂ ದ್ರಾವಿಡ್ ಹೆಚ್ಚಾಗಿಯೇ ಅಭಿಮಾನಿಗಳ ಕೋಪಕ್ಕೆ ತುತ್ತಾ ದರು. ಅದರ ಪರಿಣಾಮವೇ ದ್ರಾವಿಡ್ ತನ್ನ ೧೬ ವರ್ಷಗಳ ಅತ್ಯದ್ಭುತ ಕ್ರಿಕೆಟ್ ಜೀವನದಿಂದ ದೂರಸರಿದಿದ್ದು. ೧೯೯೬ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ದ್ರಾವಿಡ್ ತನ್ನ ಕೊನೆ ಪಂದ್ಯವನ್ನು ೨೦ ೧೨ರ ಜನವರಿ ೨೪ರಂದು ಆಸೀಸ್ ವಿರುದ್ಧ ಆಡಿದ್ದರು. ನಿವೃತ್ತಿಯ ಮೂಲಕ ದ್ರಾವಿಡ್ ತನ್ನ ಘನತೆಯನ್ನು ಕಾಯ್ದುಕೊಂಡರು ಎಂದು ಹೇಳಬಹುದು. ಯಾಕೆಂದರೆ ಒಂದು ವೇಳೆ ದ್ರಾವಿಡ್ ಇನ್ನೂ ಟೆಸ್ಟ್‌ನಲ್ಲಿ ಮುಂದುವರೆದು ಅಲ್ಲಿ ವಿಫಲವಾಗಿದ್ದರೆ ಅದು ಅವರ ವೈಭವಪೂರ್ಣ ಕ್ರಿಕೆಟ್ ಬದುಕಿಗೆ ಚ್ಯುತಿ ತರುವ ಸಾಧ್ಯತೆಯಿತ್ತು. ಆದರೆ ದ್ರಾವಿಡ್ ಅಂತಹ ಅಪಾಯವನ್ನು ಎದುರಿಸುವ ಪ್ರಮೇಯಕ್ಕೆ ಹೋಗಲಿಲ್ಲ. ಇನ್ನು ಅವರ ಆಟದ ಬಗ್ಗೆ ಹೇಳುವುದಾದರೆ ಆಪತ್ತಿನ ಕಾಲದಲ್ಲಿ ದ್ರಾವಿಡ್ ತಂಡದ ಪರ ಯಾವೆಲ್ಲಾ ಅದ್ಭುತ ಜೊತೆಯಾಟದಲ್ಲಿ ಭಾಗಿಯಾಗಿದ್ದರು ಎಂಬುದನ್ನು ತಿಳಿಸುವುದು ಬಹುಶಃ ಕಠಿಣವಾಗಬಹುದು. ಯಾಕೆಂದರೆ ಲೆಕ್ಕಕ್ಕೆ ಸಿಗಲಾರದ ಜೊತೆಯಾಟವನ್ನು ಅವರು ನಡೆಸಿದ್ದರು. ಅದರಲ್ಲಿ ಮುಖ್ಯವಾಗಿ ಕಾಣಿಸಿ ಕೊಳ್ಳುವುದೇ ೨೦೦೧ರಲ್ಲಿ ಆಸೀಸ್ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯ. ಪಂದ್ಯದಲ್ಲಿ ಭಾರತ ಆಸೀಸ್ ಬೌಲರ್‌ಗಳ ಅಬ್ಬರಕ್ಕೆ ಸಿಲುಕಿ ಫಾಲೋ ಆನ್‌ಗೆ ಸಿಲುಕಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತದ ದಾಂಡಿಗರು ಪೆವಿಲಿಯನ್ ಹಾದಿ ಹಿಡಿಯುವ ಲಕ್ಷಣ ತೋರಿಸಿದರು. ಆಗ ಕಣಕ್ಕಿಳಿದದ್ದೇ ದ್ರಾವಿಡ್ ಹಾಗೂ ಲಕ್ಷ್ಮಣ್ ಜೋಡಿ. ಈ ಜೋಡಿ ೩೭೬ ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಆಪತ್ತಿನಿಂದ ಪಾರು ಮಾಡಿದ್ದೇ ಅಲ್ಲದೆ ಅಚ್ಚರಿಯ ರೀತಿಯಲ್ಲಿ ಭಾರತ ಟೆಸ್ಟ್ ಗೆದ್ದು ಕೊಡಲು ನೇರ ಪಾತ್ರ ವಹಿಸಿದ್ದರು.
ದ್ರಾವಿಡ್ ಇನ್ನೊಂದು ದಾಖಲೆಯ ಆಟವನ್ನು ನಡೆಸಿದ್ದರು. ಸತತ ಮೂರು ಟೆಸ್ಟ್ ಸರಣಿಗಳಲ್ಲಿ ಡಬಲ್ ಸೆಂಚುರಿ ಬಾರಿಸಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ‘ದಿ ವಾಲ್’ ಹೆಸರಿಗಿದೆ. ಇದಕ್ಕಿಂತ ಮುಂಚೆ ಡಾನ್ ಬ್ರಾಡ್ಮನ್ ಈ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಆದರೆ ಆಸೀಸ್ ವಿರುದ್ಧ ಅವರು ಪ್ರದರ್ಶಿಸಿದ ಆಟ ಬಹುಶಃ ಅವರ ಅತ್ಯದ್ಭುತ ಆಟಗಲ್ಲಿ ಒಂದಾಗಿರಬಹುದು. ಅದಾವುದೆಂದರೆ ಟೆಸ್ಟ್ ಪಂದ್ಯವೊಂದ ರಲ್ಲಿ ೨೩೩ ಹಾಗೂ ೭೨ ರನ್ ಸಿಡಿಸಿ ೨೩ ವರ್ಷಗಳ ನಂತರ ಕಾಂಗರೂಗಳ ನೆಲದಲ್ಲಿ ಭಾರತಕ್ಕೆ ಟೆಸ್ಟ್ ಪಂದ್ಯ ಗೆದ್ದುಕೊಡಲು ಕಾರಣವಾಗಿದ್ದು. ಇದು ದ್ರಾವಿಡ್ ಆಟಕ್ಕೆ ಕೇವಲ ಉದಾಹರಣೆ ಅಷ್ಟೇ. ಇಂತಹ ಅನೇಕ ಆಟಗಳು ಭಾರತೀಯರ ಕಣ್ಮನದಲ್ಲಿ ಇನ್ನೂ ಅಜರಾಮರವಾಗಿ ಉಳಿದಿದೆ. ಆದರೆ ಇಂತಹ ಮಹಾನ್ ಆಟಗಾರ ನಿವೃತ್ತಿ ನಿರ್ಧಾರ ತೆಗೆದು ಕೊಳ್ಳಲು ಬಿಸಿಸಿಐ ನೇರ ಕಾರಣ ಹೊಂದಿದೆ ಎನ್ನುವ ಆರೋಪವನ್ನು ತಳ್ಳಿ ಹಾಕುವಂತಿಲ್ಲ. ಜೊತೆಗೆ ಧೋನಿ ಮಾತನ್ನು ನಾವು ಮರೆಯ ಬಾರದು. ಯಾಕೆಂದರೆ ಆಸೀಸ್ ವಿರುದ್ಧ ಟೆಸ್ಟ್ ವೈಟ್‌ವಾಶ್‌ಗೆ ಹಿರಿಯ ಆಟಗಾರರೇ ನೇರ ಹೊಣೆ ಎಂದು ಧೋನಿ ಬೊಟ್ಟು ಮಾಡಿದ್ದರು. ದ್ರಾವಿಡ್‌ಗೆ ಈ ಮಾತು ಬೇಸರ ಮೂಡಿಸಿರಬಹುದು. ಧೋನಿ ಮಾತಿನಲ್ಲಿ ಸತ್ಯ ಅಡಗಿ ದ್ದರೂ ಕ್ರಿಕೆ ಟ್‌ನಲ್ಲಿ ಏರುಪೇರು ಪ್ರತೀ ಆಟಗಾರನ ಜೀವನದಲ್ಲಿ ಸಾಮಾನ್ಯ. ಅದೇ ವಿಫಲತೆಯನ್ನು ಮುಂದಿಟ್ಟು ದೂಷಿಸುವುದು ತಪ್ಪು. ಆಸಿಸ್ ಸರಣಿಯ ಮುಂಚೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ರಾವಿಡ್ ಭಾರತ ಪರ ಅತೀ ಹೆಚ್ಚಿನ ರನ್ ಸ್ಕೋರರ್ ಆಗಿ ಮೂಡಿಬಂದಿದ್ದರು. ಆ ಸರಣಿಯಲ್ಲಿ ಉಳಿದೆಲ್ಲಾ ದಾಂಡಿಗರು ತೀವ್ರ ವೈಫಲ್ಯ ಅನುಭವಿಸಿದ್ದರೂ ದ್ರಾವಿಡ್ ಮಾತ್ರ ಅದಕ್ಕೆ ವ್ಯತಿರಿಕ್ತವಾಗಿದ್ದರು. ಕೇವಲ ಧೋನಿ ಅಲ್ಲದೆ ಹೆಚ್ಚಿನ ಎಲ್ಲಾ ಮಾಜಿ ಆಟಗಾರರು ತಂಡದಲ್ಲಿರುವ ಹಿರಿ ಆಟಗಾರರಿಗೆ ಖೋಕ್ ನೀಡಬೇಕೆಂದು ಆಗ್ರಹಿಸಿದ್ದನ್ನು ನಾವಿಲ್ಲಿ ನೆನಪಿ ಸಿಕೊಳ್ಳಬಹುದು. ಇನ್ನು ಏನಿದ್ದರೂ ದ್ರಾವಿಡ್ ಕ್ರಿಕೆಟ್ ಅಂಗಣದಲ್ಲಿ ಆಡು ವುದನ್ನು ನೋಡಲು ಸಾಧ್ಯವಿಲ್ಲ. ಅಲ್ಲಿಗೆ ಕ್ರಿಕೆಟ್ ಇತಿಹಾಸ ಕಂಡ ಅತ್ಯದ್ಭುತ ಆಟಗಾರನ ಯುಗಾಂತ್ಯವಾದಂತಾಗಿದೆ. ನಿವೃತ್ತಿಯ ನಂತರ ಹೆಚ್ಚಾಗಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದಾಗಿ ಅವರು ಈಗಾಗಲೇ ಹೇಳಿಕೆ ನೀಡಿದ್ದು, ಅಲ್ಲವರು ಇನ್ನಷ್ಟು ನೆಮ್ಮದಿಯನ್ನು ಕಾಣಲಿ ಎನ್ನುವುದೇ ಅಭಿಮಾನಿಗಳ ಆಶಯ.

ಬಹುಮಾನ ಗಳಿಸಲು ಬೇಕು; ಅಳವಡಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ?

Posted by JAYAKIRANA Kirana on | 0 comments | Leave a comment...


ದೈವಾರಾಧಕ, ಪೆರ್ಮುದೆ
ಜಯಕಿರಣ ಚಾವಡಿ ವಿಭಾಗದಲ್ಲಿ ತಾಳಿಯ ವಿಚಾರವಾಗಿ ನಡೆಯು ತ್ತಿರುವ ಚರ್ಚೆಯನ್ನು ಬಹಳಷ್ಟು ಕುತೂಹಲದಿಂದ ಓದುತ್ತಿದ್ದೇನೆ. ಈ ಬಗ್ಗೆ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. 
ತಾಳಿಯ ವಿಚಾರವಾಗಿ ಹುಟ್ಟಿಕೊಂಡ ವಿವಾದದ ಮೂಲ ಯಾವುದೇ ಆಗಿರಲಿ. ಆದರೆ ಈ ಚರ್ಚೆಯಲ್ಲಿ ತುಳುನಾಡಿನ ಆಚರಣೆ, ಸಂಪ್ರದಾಯಗಳ ಅಳವಡಿಕೆಯ ಸಾಧ್ಯಾಸಾಧ್ಯತೆಗಳು ಚರ್ಚೆಯಾಗುತ್ತಿರುವುದು ಬಹಳಷ್ಟು ಸಂತ ಸದ ಸಂಗತಿಯಾಗಿದೆ. ಜಯರಾಮ ಮುಲ್ಕಿಯವರು ಹಿಂದೆ ಇದ್ದ ಈಗ ‘ಹೊಸತು’ ಎಂದು ಅನಿಸುವ ವಿಚಾರವನ್ನು ಎತ್ತಿರುವುದಕ್ಕೆ ಮತ್ತು ಇದಕ್ಕೆ ಪೂರಕವಾಗಿ ರೂಪಕಲಾ, ವಿಶ್ವನಾಥ್, ಅಶೋಕ್ ಮೊದಲಾದವರು ಪ್ರತಿಕ್ರಿ ಯಿಸುತ್ತಿರುವುದು ಅಭಿನಂದನಾರ್ಹ. ತುಳುನಾಡಿನ ಸಾಕಷ್ಟು ವಿಚಾರಗಳು ಮರೆತು ಮಣ್ಣುಪಾಲಾಗುತ್ತಿರುವ ಈ ಸಂದರ್ಭದಲ್ಲಿ ಇಂತಹಾ ಒಂದು ಚರ್ಚೆಯ ಅಗತ್ಯವಿತ್ತು ಎಂದು ನನಗೆ ಅನಿಸುತ್ತಿದೆ. ಈ ಮೂಲಕ ತುಳುನಾಡಿನ ಸಂಪ್ರ ದಾ ಯಕ್ಕೆ ಕವಿದ ಧೂಳನ್ನು ಒರಸುವ ಪ್ರಯತ್ನ ನಡೆಯಲಿ.
ಜಯರಾಮ ಮುಲ್ಕಿಯವರು ಉಲ್ಲೇಖಿಸಿದ ಬನ್ನಂಜೆ ಬಾಬು ಅಮೀನ್ ರವರ ಪುಸ್ತಕ ನನ್ನಲ್ಲಿದೆ. ಅದನ್ನು ಈ ಮೊದಲೊಮ್ಮೆ ಓದಿದ್ದು ಅದನ್ನು ಮತ್ತಷ್ಟು ಸ್ಪಷ್ಟಪಡಿಸಲು ಮತ್ತೊಮ್ಮೆ ತೆರೆದು ಓದಿದೆ. ಈ ಪುಸ್ತಕವು ತುಳುನಾ ಡಿನ ಜಾನಪದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಉಲ್ಲೇಖಿತವಾದ ಇಂದಿರಾ ಹೆಗ್ಡೆಯವರ ಪುಸ್ತಕದ ಭಾಗವನ್ನೂ ಓದಿದೆ. ಇದು ಒಂದು ಸಮುದಾಯದ ಆಚರಣೆಗಳ ಅಧ್ಯಯನದ ಪುಸ್ತಕವಾದರೂ ತುಳುನಾಡಿನ ಮದುವೆ ಮತ್ತಿ ತರ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿಗಳನ್ನು ಒದಗಿಸುತ್ತದೆ. ಇಂತಹಾ ವಿದ್ವಾಂಸರ ಚಿಂತನೆಗಳನ್ನು ಕೇಂದ್ರೀಕೃತವಾದ ನಮ್ಮ ಆಚರಣೆಗಳು ಬಳಕೆಗೆ ಬರಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ನಮ್ಮಲ್ಲಿ ದಿನೇ ದಿನೇ ಅದ್ದೂರಿಯ ಕಡೆ ಸಾಗುತ್ತಿರುವ ಮದುವೆಗಳನ್ನು ನಿಯಂತ್ರಿಸುವ ದೃಷ್ಟಿಯಿಂದಲೂ ಇದು ಪೂರಕವಾಗುತ್ತದೆ. ಯಾವುದೇ ದುಂದು ವೆಚ್ಚ ಇಲ್ಲದ ಸರಳ ಸುಂದರ ವಿವಾಹ ತುಳುನಾಡಿನಲ್ಲಿ ನಡೆಯುತ್ತಿತ್ತು ಎಂಬುದು ತಿಳಿದು ಬರುತ್ತದೆ.
ಅಶೋಕ್ ಹಲಾಯಿಯವರು ವೀರರಾಣಿ ಅಬ್ಬಕ್ಕ, ಚೆನ್ನಮ್ಮ, ಒನಕೆ ಓಬವ್ವ ಮೊದಲಾದವರ ಚಿತ್ರಣ ಗಮನಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಇದರಲ್ಲಿ ತುಳುನಾಡಿನ ವಿಶಿಷ್ಠವಾದ ಪ್ರತ್ಯೇಕ ಸಂಪ್ರದಾಯವನ್ನು ಅಭ್ಯಸಿಸಬೇ ಕಾದರೆ ಚೆನ್ನಮ್ಮ ಮತ್ತು ಒನಕೆ ಓಬವ್ವರನ್ನು ಬದಿಗಿಟ್ಟು ವೀರರಾಣಿ ಅಬ್ಬಕ್ಕನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ. ಉಳಿದ ಈರ್ವರು ವೀರಮಹಿ ಳೆಯರು ತುಳುನಾಡಿನ ಸಂಸ್ಕೃತಿಯ ವ್ಯಾಪ್ತಿಗೆ ಒಳಪಡುವುದಿಲ್ಲ. ವಿದೇಶಿ ಬರ ಹಗಾರರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗುವುದಿಲ್ಲ ಎಂಬ ಅಶೋಕ ಹಲಾಯಿ ಯವರ ಅಭಿಪ್ರಾಯ ಅಷ್ಟೊಂದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ರಾಣಿ ಅಬ್ಬಕ್ಕನ ಬಗ್ಗೆ ನಮ್ಮಲ್ಲಿ ಸಾಕಷ್ಟು ಕಪೋಲ ಕಲ್ಪಿತ ಕತೆ ಗಳು ಇದ್ದರೂ ಆ ಕಾಲದಲ್ಲಿ ಉಳ್ಳಾಲಕ್ಕೆ ಬಂದು ಆಕೆಯ ಚಟುವಟಿಕೆಗಳನ್ನು, ಆಕೆಯ ವ್ಯಕ್ತಿತ್ವ, ರೂಪ, ಗುಣ, ಅಂದಿನ ಜನರ ಕೆಲವು ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ, ಮನಮುಟ್ಟುವಂತೆ ಬರಹದ ಮೂಲಕ ದಾಖಲೆ ಮಾಡಿದವನು ಓರ್ವ ವಿದೇಶಿ ಪ್ರವಾಸಿ. ಈ ಆಧಾರದಲ್ಲಿ ಒಂದು ರೇಖಾಚಿತ್ರವೂ ರಚನೆಯಾ ಗಿದ್ದು ಈಗ ಅದು ಲಭ್ಯವಿದೆ. ಭಾರತಕ್ಕೆ ಪ್ರವಾಸ ಮಾಡಿದ ವಿದೇಶಿ ಪ್ರವಾಸಿಗರ ಹಲವಾರು ಟಿಪ್ಪಣಿಗಳು, ಪುಸ್ತಕಗಳಿಂದ ನಮ್ಮ ಇತಿಹಾಸವನ್ನು ತಿಳಿದುಕೊ ಳ್ಳಲು ಸಾಧ್ಯವಿದೆ. ತುಳುನಾಡಿನ ವಿವರ ಉಳ್ಳ ಇಂತಹಾ ಹಲವಾರು ಪ್ರವಾಸಿ ಗ್ರಂಥಗಳು ಪ್ರಪಂಚದ ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಅಡಗಿ ಕುಳಿತಿದೆ ಇದರ ಹುಡುಕಾಡುವಿಕೆ ನಡೆಯಬೇಕು. ನಾವೇನು ಎಂಬ ವಿಚಾರ ಅದರಲ್ಲಿ ಅಡಕವಾಗಿದೆ. ತುಳುನಾಡಿನಲ್ಲಿ ನಡೆಸಲಾಗುತ್ತಿದ್ದ ಮದುವೆ ಇತ್ಯಾದಿ ಕ್ರಮಗಳು ಈಗಿನವರಿಗೆ ಅಪರಿಚಿತ. ಮುಂದೆ ಇಂತಹಾ ಒಂದು ಕ್ರಮಗಳು ಮರೆತೇ ಹೋಗಬಹುದಾಗಿದೆ. ಅದಕ್ಕಾಗಿ ಈಗ ತಲೆಎತ್ತಿ ಸದೃಢವಾಗುತ್ತಿರುವ ಜಾತಿ ಸಂಘಟನೆಗಳು ಪ್ರಯತ್ನಿಸಬೇಕಾದ ಅವಶ್ಯಕತೆ ಇದೆ. ಇದು ಅಸಾಧ್ಯ ಎಂದೇ ನಲ್ಲ. ಯಾಕೆಂದರೆ ನಮ್ಮಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನೂ ದೀಪ ಬೆಳ ಗಿಸುವ ಮೂಲಕ ಆರಂಭಿಸುವ ಪದ್ದತಿ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಳಸೆಯಲ್ಲಿ ಅಕ್ಕಿ ಇಟ್ಟು ಅದರ ಮೇಲೆ ತೆಂಗಿನ ಕೊಂಬು ಅರಳಿಸಿ ಇಡುವ ಮೂಲಕ ಕೆಲವು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಾಗುತ್ತಿದೆ. ಇದು ನಮ್ಮ ಪ್ರಾದೇಶಿಕ ಸಂಸ್ಕೃತಿ ಎಂದು ಬಿಂಬಿಸಲಾಗುತ್ತಿದೆ. ಇದೊಂದು ಹೊಸ ವಿಧಾನವೂ ನಮ್ಮ ಸಂಸ್ಕೃತಿಯ ಛಾಪು ಮೂಡಿಸುವ ಕ್ರಮವೂ ಆಗಿ ಪ್ರಸಿದ್ಧಿಗೆ ಬರುತ್ತಿದೆ. ಬಂಟ, ಬಿಲ್ಲವ, ಕುಲಾಲ ಇತ್ಯಾದಿ ಇತ್ಯಾದಿ ಜಾತಿ ಸಂಘಟನೆಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮದುವೆ, ಹುಟ್ಟುಹಬ್ಬ ಇತ್ಯಾದಿ ಇತ್ಯಾದಿ ಕಾರ್ಯಕ್ರಮ ಗಳು ನಮ್ಮ ನಮ್ಮ ಜಾತಿಯಲ್ಲಿ ಹೀಗಿತ್ತು ಎಂದು ಪ್ರದರ್ಶನ ಮಾಡಿ ಬಹುಮಾನ ಗಿಟ್ಟಿಸುವುದನ್ನು ಕಾಣಬಹುದಾಗಿದೆ. ಸ್ಪರ್ಧೆಗಳಲ್ಲಿ ಬಹುಮಾನ ಬರಬೇಕಾದರೆ ಅದು ವಾಸ್ತವ, ಅದಕ್ಕೊಂದು ಅರ್ಥವಿದೆ ಎಂದು ತೀರ್ಪುಗಾರರಿಗೆ ಅನಿಸಬೇಕು. ನಮ್ಮ ಸಂಸ್ಕೃತಿಯ ಪ್ರದರ್ಶನದಲ್ಲಿ ಒಂದು ಅರ್ಥವಿದೆ ಎಂದು ತೀರ್ಪುಗಾರರಿಗೆ ಅನಿಸಿದೆ. ಹಾಗಿರುವಾಗ ಅದನ್ನು ನಮ್ಮ ನಮ್ಮ ಜಾತಿಗಳ ಕಾರ್ಯಕ್ರಮಗಳಲ್ಲಿ ಅಳವಡಿಸಲು ತೊಂದರೆ ಏನು? ಇವುಗಳು ಹಳೆ ಸಂಪ್ರದಾಯವಾದರೂ ‘ಹೊಸ ಸ್ಟೈಲ್’ ಎಂಬಂತೆ ನಮ್ಮ ಯುವಕರ ಮನಮುಟ್ಟುವಂತೆ ಮಾಡಬೇಕಾಗಿದೆ.
ಈಗಿನ ತುಳುನಾಡಿನ ಎಲ್ಲಾ ಪಂಗಡಗಳಲ್ಲಿ ವಿದ್ವಾಂಸರು, ಸಂಶೋಧಕರು ಇದ್ದಾರೆ. ಇವರೆಲ್ಲಾ ಒಟ್ಟು ಸೇರಿ ಲಭ್ಯ ಮಾಹಿತಿಗಳನ್ನು ಕಲೆಹಾಕಿಕೊಂಡು ಹೀಗಿತ್ತು.. ಇನ್ನು ಮುಂದೆ ಹೀಗಾಗಬೇಕು ಎಂಬ ಒಂದು ರೂಪುರೇಷೆಯನ್ನು ಹಾಕಿ ಕೊಂಡು ತಮ್ಮ ತಮ್ಮ ಜಾತಿ ಸಂಘಟನೆಗಳ ಸಭೆ ಸಮಾರಂಭಗಳಲ್ಲಿ ಜನರಿಗೆ ತಿಳುವಳಿಕೆಯನ್ನು ನೀಡಬೇಕು ಹಾಗೆ ಮಾಡಿದರೆ ನೂರರಲ್ಲಿ ಹತ್ತು ಮಂದಿಯಾ ದರೂ ಅದನ್ನು ಪಾಲಿಸಲು ಸಾಧ್ಯವಿದೆ. ತುಳುನಾಡಿನಲ್ಲಿ ಬ್ರಾಹ್ಮಣೇತರರ ಮದುವೆ ಯಾವ ರೀತಿ? ಅದರ ಕ್ರಮ ಏನು? ಎಂಬ ಅಶೋಕ್ ಹಲಾಯಿಯಂತವರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಉತ್ತರದಾಯಿತ್ವವನ್ನು ಆಯಾ ಜಾತಿ ಸಂಘಟನೆ ಗಳು ಮಾಡಬೇಕಾಗಿದೆ. ಮಾನವ ಬದಲಾವಣೆಯನ್ನು ಸದಾ ಬಯಸುವುದ ರಿಂದ ಈಗಿರುವ ವೈದಿಕ ಪದ್ಧತಿಯ ವಿವಾಹವು ಮುಂದಿನ ದಿನಗಳಲ್ಲಿ ಬದಲಾ ಗಲೂಬಹುದು. ಅದು ಯಾವ ರೀತಿ ಎಂದು ತುಳುನಾಡಿನಲ್ಲಿರುವ ವಿವಿಧ ಪಂಗ ಡಗಳು ಸಂಘಟನಾತ್ಮಕವಾದ ಮಾರ್ಗದರ್ಶನ ಮಾಡಬೇಕು.
ವಿಶ್ವನಾಥ್‌ರವರು ಶೇಂದಿ ತೆಗೆಯುವ ಬಿಲ್ಲವ, ಎಣ್ಣೆ ತೆಗೆಯುವ ಗಾಣಿಗ, ಮಡಿಕೆ ಮಾಡುವ ಕುಂಬಾರ ಇತ್ಯಾದಿ ಪಂಗಡಗಳನ್ನು ಮಾಡಿ ನಿಮ್ಮ ನಿಮ್ಮೊಳಗೆ ಹೊಡೆದಾಡಿ ಎಂದು ದೇವರು ಮಾಡಿಲ್ಲ, ಪುರೋಹಿತ ಶಾಹಿಗಳು ಮಾಡಿದ್ದಾರೆ ಎಂದಿದ್ದಾರೆ. ಜಾತಿ ಪದ್ದತಿಗಳು ಅವರವರು ಮಾಡುವ ಉದ್ಯೋಗದಿಂದ ಬಂದಿ ರುವುದು ತಿಳಿದು ಬರುತ್ತದೆ. ಇದು ಒಂದು ಕಾಲದಲ್ಲಿ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿತ್ತು. ‘ಹೊಡೆದಾಡಿ ಸಾಯಿರಿ ಎಂದೇ? ಎಂದು ಈಗಿನ ಕಾಲದಲ್ಲಿ ಪ್ರಶ್ನಿಸಲು ಆಗುವುದಿಲ್ಲ. ಈಗ ಎಲ್ಲವೂ ಬದಲಾವಣೆ ಆಗಿದೆ. ಯಾವ ಕೆಲಸವನ್ನು ಯಾರೂ ಮಾಡಬಹುದು. ಶೇಂದಿ ಅಂದರೆ ಅಮಲು ಪದಾರ್ಥ ತೆಗೆಯವ ಕೆಲಸ ವಿಜಯಮಲ್ಯ ಮಾಡುತ್ತಿದ್ದಾನೆ. ಆತ ಬಿಲ್ಲವನಲ್ಲವಲ್ಲ. ವ್ಯಾಪಾರ ವಾಣಿಜ್ಯ ವ್ಯವಹಾರವನ್ನು ಜಯಸುವರ್ಣರವರು ಮಾಡುತ್ತಿದ್ದಾರೆ ಅವರು ವೈಶ್ಯರಲ್ಲವಲ್ಲ. ದೇಶ ಆಳುವ ಕೆಲಸದಲ್ಲಿ ಪೂರಕವಾಗಿ ಜನಾದನ ಪೂಜಾರಿ, ವಿನಯ ಕುಮಾರ್ ಸೊರಕೆಯವರೂ ಕಾರ್ಯ ಮಾಡಿದ್ದಾರೆ ಅವರು ಕ್ಷತ್ರಿಯರಲ್ಲ. ಇವರನ್ನೆಲ್ಲಾ ನೀನು ಕೊಂಕಣಿ, ನೀನು ಬಿಲ್ಲವ ಈ ಕೆಲಸ ಯಾಕೆ ಮಾಡಿದ ಎಂದು ಯಾವ ಪುರೋಹಿತ ಪ್ರಶ್ನಿಸಿದ್ದಾನೆ? ಯಾವಾಗಲೂ ಸಾಮಾಜಿಕ ಹಿತದೃಷ್ಟಿಯಿಂದ ಸಕಾ ರಾತ್ಮಕವಾಗಿ ಯೋಚಿಸಬೇಕೆಂಬುದು ನನ್ನ ಅಭಿಪ್ರಾಯವಾಗಿದೆ.
ರೂಪಕಲಾರವರು ‘ರಿಜಿಸ್ಟರ್ಡ್ ಮದುವೆ’ಯ ರೀತಿಯಲ್ಲಿ ಮದುವೆ ಮಾಡಿ ಕೊಳ್ಳಬಹುದು ಎಂದು ಹೇಳಿದ್ದಾರೆ. ಆದರೆ ತುಳುನಾಡಿನಲ್ಲಿ ಬ್ರಾಹ್ಮಣೇತರರ ಪುರೋಹಿತ ರಹಿತ ಮದುವೆಗಳ ಮೇಲೆ ಈ ರೀತಿಯ ಭಾವನೆ ಹೊಂದುವುದು ಸರಿಯಲ್ಲ. ತುಳುನಾಡಿನಲ್ಲಿ ತಾಳಿ ಮಾತ್ರವಲ್ಲ ಹಾರ ಹಾಕಿಕೊಳ್ಳುವ ಸಂಪ್ರದಾ ಯವೂ ಇರಲಿಲ್ಲ ಎಂಬುದು ಸಂಶೋಧಕ ವಿದ್ವಾಂಸರ ಅಭಿಪ್ರಾಯವಾಗಿದೆ. ನಮ್ಮಲ್ಲಿ ಜ್ಯೋತಿಷ್ಯ ಹೇಳುತ್ತಿದ್ದದ್ದು ಬ್ರಾಹ್ಮಣನಲ್ಲ. ಬಲ್ಯಾಯ ಎಂಬುದನ್ನೂ ಗಮ ನಿಸಬೇಕು. ಹಾಗಿರುವಾಗ ನಾವು ಮರೆತು ಹೋದ ಸಂಪ್ರದಾಯಗಳನ್ನು ಮತ್ತೆ ನೆನಪಿಸಿಕೊಂಡು ವ್ಯಾಪಕಗೊಳಿಸುವ ಅಗತ್ಯವಿದೆ. ಆಡಂಬರ ರಹಿತ ನಮ್ಮದೇ ಆದ ಸತ್‌ಸಂಪ್ರದಾಯಗಳ ಪುನರುಜ್ಜೀವನಕ್ಕೆ ಜಯಕಿರಣ ಚಾವಡಿಯಲ್ಲಿ ನಡೆ ಯುತ್ತಿರುವ ತಾಳಿ ಬಗೆಗಿನ ಚರ್ಚೆ ನಾಂದಿಯಾಗಲಿ ಎಂದು ಬಯಸುತ್ತೇನೆ.

ಸೆಕ್ಸ್‌ಗಿಂತ ಆರೋಗ್ಯ ಮುಖ್ಯ ಎನ್ನುವುದು ಅರಿವಿರಲಿ

Posted by JAYAKIRANA Kirana on | 0 comments | Leave a comment...


ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ವಿವಾಹಿತ ವ್ಯಕ್ತಿ. ನನ್ನ ಮದುವೆಯಾಗಿ ೧೨ ವರ್ಷಗಳಾಯಿತು. ನನಗೂ-ನನ್ನಾಕೆಗೂ ಸೆಕ್ಸ್‌ನಲ್ಲಿ ಆಸಕ್ತಿಯಿದೆ. ನಮಗೆ ಒಬ್ಬಳೇ ಮಗಳು. ನನ್ನ ಸಮಸ್ಯೆಯೇನೆಂದರೆ ನನಗೆ ಚಿಕ್ಕಂ ದಿನಲ್ಲಿ ಹೃದಯದ ಖಾಯಿಲೆ ಇತ್ತು. ಇದಕ್ಕಾಗಿ ಪ್ರಾರಂಭದಲ್ಲೇ ಚಿಕಿತ್ಸೆ ಪಡೆದಿದ್ದೇನೆ. ವೈದ್ಯರು ಏನೂ ಸಮಸ್ಯೆಯಿಲ್ಲ ಎಂದಿದ್ದಾರೆ. ಆದರೆ ನನಗೆ ಈಗಲೂ ಕೆಲವು ಬಾರಿ ಸ್ವಲ್ಪಮಟ್ಟಿಗೆ ಎದೆನೋವು ಕಾಣಿಸಿ ಕೊಳ್ಳುತ್ತದೆ. ಈ ಬಗ್ಗೆ ಚಿಂತಿಸಿದಲ್ಲಿ ಎದೆಬಡಿತ ಹೆಚ್ಚಾಗಿ ಎದೆ ಮತ್ತಷ್ಟು ಭಾರವಾದಂತೆ ಅನಿಸುತ್ತದೆ. ನನಗೆ ಹೆಚ್ಚು ಭಾರ ವನ್ನು ಎತ್ತಲು ಆಗುವುದಿಲ್ಲ. ಲೈಂಗಿಕ ಕ್ರಿಯೆಯ ವೇಳೆ ಎದೆಯಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ನನಗೆ ಭಯವಾಗುತ್ತಿದೆ. ಹೃದಯಾಘಾತವಾಗುತ್ತಿದೆ ಎಂದು ಮೊದಲೇ ತಿಳಿಯಲು ಸಾಧ್ಯವೇ? ನನ್ನ ಸಮಸ್ಯೆ ಇದೇ ರೀತಿಯದ್ದಾಗಿರಬ ಹುದೇ? ನನಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಎದೆಬಡಿತ ಹೆಚ್ಚು ವುದು ಯಾಕೆ? ನನಗೆ ಸರಿಯಾದ ಸಲಹೆಯನ್ನು ಕೊಡಿ.
ಸಲಹೆ: ನೀವು ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಲು ಶಕ್ತರಾಗಿ ದ್ದೀರಿ. ಆದರೆ ಹೃದಯದ ಸಮಸ್ಯೆಗಳ ಬಗೆಗೆ ಎಚ್ಚರಿಕೆ ಅಗತ್ಯ. ಸಣ್ಣ ಪ್ರಾಯದಲ್ಲಿ ಹೃದಯ ಸಂಬಂಧಿ ಸಮಸ್ಯೆ ಇದ್ದು, ಅದಕ್ಕಾಗಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದಿದ್ದರೆ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಹೃದಯವು ನಮ್ಮ ದೇಹದ ಅತಿಮುಖ್ಯವಾದ ಅಂಗ. ಇದು ಸತತವಾಗಿ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಜೀವಕ್ಕೇ ಅಪಾಯ. ಲೈಂಗಿಕ ಕ್ರಿಯೆ ಯಲ್ಲಿ ತೊಡಗುವ ವೇಳೆ ಎದೆ ಬಡಿತ ಸಾಮಾನ್ಯವಾಗಿ ಹೆಚ್ಚುತ್ತದೆ. ಆದರೆ ಇದಕ್ಕೂ-ಹೃದಯ ಸಂಬಂಧಿ ಖಾಯಿಲೆಗೂ ಸಂಬಂಧ ಇರಲಿಕ್ಕಿಲ್ಲ. ಆಗಾಗ ಎದೆಯ ಭಾಗ ದಲ್ಲಿ ನೋವು ಕಂಡು ಬರುತ್ತಿದ್ದರೆ, ನಿರ್ಲಕ್ಷ್ಯ ವಹಿಸುವುದೂ ಸರಿಯಲ್ಲ. ಹೃದಯ ಸಂಬಂಧಿ ರೋಗದ ಲಕ್ಷಣವಾಗಿರುವ ಸಾಧ್ಯತೆಯೂ ಇದೆ. ಯಾವುದಕ್ಕೂ ಸೆಕ್ಸ್ ನಲ್ಲಿ ಸಂಯಮದಿಂದ ವರ್ತಿಸಿ. ಲೈಂಗಿಕ ಕ್ರಿಯೆಯಲ್ಲಿ ಮುನ್ನಲಿವು(ಸೆಕ್ಸ್ ಮುಂಚಿನ ಆಟ) ಕಡಿಮೆ ಮಾಡಿ. ಯಾಕೆಂದರೆ ಇದರಿಂದ ಆಯಾಸಗೊಳ್ಳುವುದು ಜಾಸ್ತಿ. ಎದೆನೋವು ಕಂಡು ಬಂದಲ್ಲಿ ಸ್ವಲ್ಪ ಹೊತ್ತು ವಿರಾಮ ಮಾಡಿ ಬಳಿಕ ಮುಂದುವರಿಯಿರಿ. ಆಯಾಸವಾಗುತ್ತಿದ್ದರೂ ಲೆಕ್ಕಿಸದೆ ಸೆಕ್ಸ್ ನಡೆಸುವುದು ಬೇಡ. ಇನ್ನು ಹೃದಯಾಘಾತದ ಬಗ್ಗೆ ಮಾಹಿತಿ ಕೇಳಿದ್ದೀರಿ. ಹೃದಯಾಘಾತ ಆಗುತ್ತದೆ ಎನ್ನುವುದು ಕೆಲವೊಂದು ಸಾಮಾನ್ಯ ಲಕ್ಷಣಗಳ ಮೂಲಕ ತಿಳಿಯಲು ಸಾಧ್ಯವಿದೆ. ಎದೆ ಯಲ್ಲಿ ನೋವು ಕಾಣಿಸುವುದು, ಬೆವರುವುದು, ಎದೆಬಡಿತದಲ್ಲಿ ವ್ಯತ್ಯಾಸ, ತಲೆ ಸುತ್ತು ಬರುವುದು, ಪ್ರಜ್ಞೆ ಕಳೆದುಕೊಳ್ಳುವುದು ಇವು ಹೃದಯಾಘಾತವಾಗುವ ಪ್ರಮುಖ ಲಕ್ಷಣಗಳಾಗಿವೆ. ಕೆಲವರಿಗೆ ಎದೆಯ ನಿರ್ದಿಷ್ಟ ಭಾಗದಲ್ಲಿ ನೋವು ಕಂಡುಬಂದರೆ ಕೆಲವರಲ್ಲಿ ಎದೆ ಭಾರವಾದಂತೆ ಅನಿಸಬಹುದು, ಎದೆಯಲ್ಲಿ ತಳಮಳ ಆರಂ ಭವಾಗಬಹುದು ಮತ್ತು ಕೈ, ಕಾಲುಗಳು ತಣ್ಣಗಾಗುವ ಅನುಭ ವವೂ ಉಂಟಾಗುವ ಸಾಧ್ಯತೆಯಿರುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ಜತೆಯಲ್ಲಿರುವವರಿಗೆ ತಿಳಿಸಬೇಕು. ತಡ ಮಾಡದೆ ಕೂಡಲೇ ವೈದ್ಯರ ಬಳಿ ಹೋಗಬೇಕಾದ್ದು ಅವಶ್ಯಕ. ವಿಳಂಬವಾದರೆ ಜೀವಕ್ಕೇ ಅಪಾಯ ಬರುವ ಸಾಧ್ಯತೆಯಿದೆ. ಗಾಬರಿ ಪಡುವುದು ಬೇಡ. ಹೆಚ್ಚು ಎಣ್ಣೆ ಸೇರಿಸದ ಸಮಯೋಚಿತ ಆಹಾರ ಸೇವನೆ, ಔಷಧಿಗಳ ನಿರಂತರ ಬಳಕೆ, ಆಯಾಸ ತರಿ ಸದ ವ್ಯಾಯಾಮದಿಂದ ಹೃದಯದ ಕಾಯಿಲೆಯಿಂದ ದೂರವಿ ರಲು ಸಾಧ್ಯವಿದೆ. ಸೆಕ್ಸ್ ಜೀವನದ ಪ್ರಮುಖ ಕ್ರಿಯೆಯಾದರೂ ಜೀವಕ್ಕಿಂತ ಮುಖ್ಯವಲ್ಲ. ಸೆಕ್ಸ್‌ನಲ್ಲಿ ಇನ್ನಿತರ ವಿಧಾನಗಳನ್ನು ಪರಿ ಚಯಿಸಿಕೊಂಡಲ್ಲಿ ಸಮಸ್ಯೆಯಿರದು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)