ಗಾಂಜಾ ದಂಧೆ: ಕಡಿದು ಕೊಲೆ

Posted by JAYAKIRANA Kirana on Tuesday, 13 March 2012 | 0 comments | Leave a comment...





ಸ್ನೇಹಿತರೇ ಕೊಲೆಯಲ್ಲಿ ಭಾಗಿ?
ಮಂಗಳೂರು: ಎರಡು ತಿಂಗಳ ಹಿಂದೆ ಮಾರಿಪಳ್ಳದಲ್ಲಿ ಕೊಲೆಗೀಡಾಗಿದ್ದ ಗಾಂಜಾ ದಂಧೆಯ ಪ್ರಮುಖ ರೂವಾರಿಯ ಆಪ್ತ ಸ್ನೇಹಿತನನ್ನು ಕಡಿದು ಕೊಲೆ ಮಾಡಿರುವ ಘಟನೆಯೊಂದು ನಿನ್ನೆ ರಾತ್ರಿ ಕಂಕನಾಡಿ ಠಾಣಾ ವ್ಯಾಪ್ತಿಯ ಕಣ್ಣೂರಿನಲ್ಲಿ ನಡೆದಿದ್ದು, ಇದರ ಹಿಂದೆ ಸ್ನೇಹಿತರ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಕಣ್ಣೂರು ಬೋರುಗುಡ್ಡೆ ನಿವಾಸಿ ಹಸನಬ್ಬ ಎಂಬವರ ಮಗ ಅಬ್ದುಲ್ ರಹ್‌ಮಾನ್ ಯಾನೆ ಸಣ್ಣ ಪುತ್ತ(೨೪) ಎಂಬಾತನೇ ಕೊಲೆಗೀಡಾದವ. ಈತ ನಿನ್ನೆ ಸಂಜೆ ಕಣ್ಣೂರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಎನ್ನಲಾಗಿದೆ. ಮುಸ್ಸಂಜೆಯ ಬಾಂಗ್ ಆದ ಹಿನ್ನೆಲೆ ಯಲ್ಲಿ ಆಟವನ್ನು ನಿಲ್ಲಿಸಲಾಗಿದ್ದು ಅದೇ ವೇಳೆ ರಹ್‌ಮಾನ್‌ನ ಮೊಬೈಲ್ ರಿಂಗಿಣಿಸಿದೆ. ಅದು ತನ್ನ ಸ್ನೇಹಿತರ ಕರೆ ಎಂದು ಇತರರಲ್ಲಿ ಹೇಳಿದ್ದನು ಎನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಆತನ ಜೊತೆ ಗಿದ್ದ ಸ್ನೇಹಿತರು ಮಸೀದಿಗೆ ಹೋಗಿದ್ದು ರಹ್‌ಮಾನ್ ನೇರವಾಗಿ ಐಸಂ ಸ್ಟೀಲ್ ಬಳಿ ಹೋಗಿದ್ದನು ಎನ್ನಲಾಗಿದೆ. ಕೆಲವೇ ಹೊತ್ತಿನಲ್ಲಿ ಆತನ ಕೊಲೆ ಸುದ್ಧಿ ಬಂದಿತ್ತು. ಆತನನ್ನು ತಲ್ವಾರಿನಿಂದ ಕಡಿದು ಕೊಲೆ ಮಾಡಲಾ ಗಿದೆ. ಆತನ ಮೊಬೈಲ್‌ಗೆ ಕರೆ ಮಾಡಿದ ಸ್ನೇಹಿತರೇ ನಿಗದಿತ ಸ್ಥಳಕ್ಕೆ ಬರ ಹೇಳಿ ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಕೊಲೆ ನಡೆದ ಸ್ಥಳಕ್ಕೆ ಆತ ಹೋಗುವ ಅಗತ್ಯವೇ ಇರಲಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವುದು ಸಾಬೀತಾಗಿದೆ.
ಕೊಲೆಗಾರರು ಯಾರು?
ರಹ್‌ಮಾನ್ ಗಾಂಜಾ ವ್ಯವಹಾರ ದಲ್ಲಿ ನಿರತನಾಗುವ ಮೂಲಕ ಸ್ನೇಹಿತರಿಂದಲೇ ದ್ವೇಷ ಕಟ್ಟಿಕೊಂಡಿದ್ದ. ಎರಡು ತಿಂಗಳ ಹಿಂದೆ ಈತ ತನ್ನ ಸ್ನೇಹಿತ ಇಜಾಝ್ ಎಂಬಾತನನ್ನೇ ಕಡಿದು ಕೊಲೆ ಮಾಡಲು ಯತ್ನಿಸಿದ್ದ. ಒಂದು ತಿಂಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದ್ದ ಇಜಾಝ್ ಪ್ರಾಣಾಪಾಯದಿಂದ ಪಾರಾಗಿದ್ದನಾದರೂ ಇಂದಿಗೂ ನಡೆದಾಡಲಾಗದ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾನೆ. ಇಜಾಝ್ ಗ್ಯಾಂಗ್ ಕಟ್ಟಿಕೊಳ್ಳದ ಕಾರಣ ಕೊಲೆ ಕೃತ್ಯದಲ್ಲಿ ಆತನ ಕೈವಾಡ ಇರಲು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರ ವಾದವಾಗಿದೆ. ಆದರೆ ಕೊಲೆಯಲ್ಲಿ ಸ್ನೇಹಿತರೇ ಶಾಮೀಲಾಗಿದ್ದು ಸ್ಪಷ್ಟವಾಗಿರುವ ಹಿನ್ನೆಲೆ ಯಲ್ಲಿ ಅವರು ಯಾರು? ಯಾಕಾಗಿ ಕೊಲೆ ಮಾಡಿರಬಹುದು ಎನ್ನುವುದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣ ವಾಗಿದೆ.
ಗಾಂಜಾದ ಕೊಂಡಿಯಂತೆ
ಕೊಲೆಗೀಡಾದ ರಹ್‌ಮಾನ್ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೆ ಆತನ ತಂದೆ ಕಣ್ಣೂರಿ ನಲ್ಲಿ ಹೋಟೆಲ್ ಹೊಂದಿದ್ದಾರೆ. ರಹ್‌ಮಾನ್ ಕೂಲಿ ಕೆಲಸದ ಜೊತೆಗೆ ಗಾಂಜಾ ವ್ಯವಹಾರವನ್ನೂ ಮಾಡು ತ್ತಿದ್ದು ಅದನ್ನು ಕಾಲೇಜ್ ವಿದ್ಯಾರ್ಥಿ ಗಳಿಗೆ ಪೂರೈಸುತ್ತಿದ್ದ ಎನ್ನಲಾಗಿದೆ. ಜನವರಿಯಲ್ಲಿ ಗಾಂಜಾ ಉದ್ಯಮದ ಪ್ರಮುಖ ಕೊಂಡಿ ಯಾಗಿದ್ದ ಮಾರಿ ಪಳ್ಳದ ನೂರುದ್ದೀನ್ ಕೊಲೆಗೀ ಡಾಗಿದ್ದು ರಹ್‌ಮಾನ್ ಇದೇ ನೂರುದ್ದೀನ್‌ನ ಆಪ್ತ ಎನ್ನಲಾಗುತ್ತಿದೆ. ಎರಡು ವರ್ಷಗಳ ಹಿಂದೆ ನಂದಾರ್‌ನಲ್ಲಿ ನಡೆದ ಉರೂಸ್ ಸಂದರ್ಭ ನಡೆದ ಗ್ಯಾಂಗ್‌ವಾರ್ ಹಿನ್ನೆಲೆಯಲ್ಲಿ ರಹ್‌ಮಾನ್ ಮೇಲೆ ಫರಂಗಿಪೇಟೆಯಲ್ಲಿ ಮುಗಿಬಿದ್ದಿದ್ದ ತಂಡ ತಲ್ವಾರಿನಿಂದ ಕಡಿದು ಕೊಲೆಗೆ ಯತ್ನ ನಡೆಸಿದ್ದು ಕೆಲವು ದಿನ ಸಾವು ಬದುಕಿ ನೊಂದಿಗೆ ಹೋರಾಡಿದ್ದ ರಹ್‌ಮಾನ್ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದ ಎನ್ನುವುದನ್ನು ಸ್ಥಳೀಯರು ನೆನಪಿಸುತ್ತಾರೆ.
ಎರಡು ದಿನದ ಹಿಂದೆ ಜೈಲಿನಿಂದ ಬಂದಿದ್ದ
ಗಾಂಜಾ ವ್ಯವಹಾರದ ಮೂಲಕ ತನ್ನನ್ನು ತೊಡಗಿಸಿಕೊಂಡಿದ್ದ ರಹ್ ಮಾನ್ ಕಣ್ಣೂರಿನಲ್ಲಿ ಡಾನ್‌ನಂತೆ ಮೆರೆದಾಡುತ್ತಿದ್ದ ಕಾರಣ ಈತನ ತಂಟೆಗೆ ಯಾರೂ ಹೋಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಆದರೆ ಆತನ ಆಪ್ತ ಸ್ನೇಹಿತನೇ ಆಗಿದ್ದ ಇಜಾಝ್ ಯಾವುದೋ ಮನಸ್ತಾಪದಿಂದಾಗಿ ರಹ್‌ಮಾನ್ ಮೇಲೆ ಕೈಹಾಕಿದ್ದ. ಇದರಿಂದ ಅವಮಾನಗೊಂಡಿದ್ದ ರಹ್‌ಮಾನ್ ಸೇಡು ತೀರಿಸಲು ಸಮಯ ಕಾಯುತ್ತಿದ್ದು ಕಳೆದ ವರ್ಷ ಡಿಸೆಂಬರ್ ೩೦ರಂದು ಇಜಾಝ್‌ನನ್ನು ಕಡಿದು ಕೊಲೆ ಮಾಡಲು ಯತ್ನಿಸಿದ್ದ. ಈ ಕೃತ್ಯಕ್ಕೆ ಮುಸ್ತಫಾ ಎಂಬಾತನೂ ಸಾಥ್ ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದ ಈತ ಎರಡು ದಿನಗಳ ಹಿಂದಷ್ಟೇ ಷರತ್ತು ಬದ್ಧ ಜಾಮೀನಿನಲ್ಲಿ ಹೊರಬಂದಿದ್ದ. ಮೊನ್ನೆ ತಂದೆಯೊಡನೆ ಕಂಕನಾಡಿ ಠಾಣೆಗೆ ಸಹಿ ಹಾಕಲು ಬಂದಿದ್ದ ಈತನಿಗೆ ಪೊಲೀ ಸರೂ ಎಚ್ಚರಿಕೆ ನೀಡಿದ್ದರು ಎನ್ನಲಾಗುತ್ತಿದೆ. ಆದರೆ ಸ್ನೇಹಿತರ ಕರೆಯೇ ಆತನ ಪಾಲಿಗೆ ಮುಳ್ಳಾಯಿತು.

ಯುವತಿ ಅಪಹರಿಸಿದ ಯುವಕನ ಗೆಳೆಯರಿಗೆ ಚೂರಿ ಇರಿತ

Posted by JAYAKIRANA Kirana on | 0 comments | Leave a comment...




ಉಪ್ಪಿನಂಗಡಿ: ನಿಶ್ಚಿತಾರ್ಥವಾಗಿದ್ದ ಯುವತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಅಪಹರಿಸಿದ್ದನೆನ್ನಲಾದ ಯುವಕನ ಗೆಳೆಯರಿಬ್ಬರಿಗೆ ಯುವತಿಯ ತಂದೆ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ಮಧ್ಯಾಹ್ನ ನಡೆದಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪಿನಂಗಡಿಯ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಚಿಕನ್ ಸೆಂಟರ್ ಮಾಲಕ ರಿಯಾಝ್(೩೦) ಮತ್ತು ಗಾಂಧಿಪಾರ್ಕ್ ಯು.ಕೆ. ಹಾರೂನ್ ಎಂಬವರ ಪುತ್ರ ಉಪ್ಪಿನಂಗಡಿಯ ಕರ್ನಾಟಕ ಸ್ಟೋರ್ ಮಾಲಕ ತೌಸೀಫ್(೩೦) ಹಲ್ಲೆಗೊಳಗಾದವರು. ಇವರಿಗೆ ಉಪ್ಪಿನಂಗಡಿಯ ನ್ಯಾಷನಲ್ ಮುಹಮ್ಮದ್ ಎಂಬವರು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಘಟನೆ ಹಿನ್ನಲೆ
ನ್ಯಾಷನಲ್ ಮುಹಮ್ಮದ್ ಅವರ ಪುತ್ರಿ ಹನ್ನತ್ ಬಾನು ಮತ್ತು ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿ ಚಿಕನ್ ಸೆಂಟರ್ ನಡೆಸುತ್ತಿರುವ ಶಬೀರ್ ಎಂಬವರು ಕಳೆದ ೪ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿ ದ್ದರು. ಈ ನಡುವೆ ಮಹಮ್ಮದ್ ಅವರು ತನ್ನ ಪುತ್ರಿಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಯುವಕನೊಂದಿಗೆ ನಿಶ್ಚಿತಾರ್ಥ ನಡೆಸಿದ್ದರು. ಇದರಿಂದ ಹತಾಶೆಗೊಂಡ ಶಬೀರ್ ಸೋಮವಾರ ಆಕೆಯನ್ನು ತನ್ನೊಂದಿಗೆ ಕರೆದೊಯಿದ್ದ. ಮನೆಯಿಂದ ತನ್ನ ಸಂಬಂಧಿ ರವೂಫ್ ಎಂಬ ಯುವಕನೋರ್ವನೊಂದಿಗೆ ಕಾರ್ಪೋರೇಶನ್ ಬ್ಯಾಂಕ್‌ಗೆ ಬಂದ ಹನ್ನತ್ ಬಾನುವನ್ನು ಸ್ವಿಫ್ಟ್ ಕಾರಿನಲ್ಲಿ ಪ್ರೇಮಿ ಶಬೀರ್ ಆಕೆಯನ್ನು ಕರೆದುಕೊಂಡು ಹೋಗಿದ್ದ ಎಂದು ಆರೋಪಿಸ ಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರ ನೀಡಿರುವ ನ್ಯಾಷನಲ್ ಮಹಮ್ಮದ್ ಅವರು ತನ್ನ ಮಗಳನ್ನು ಅಪಹರಿಸಿರುವುದಾಗಿ ಆರೋಪಿಸಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿ ಮಗಳ ಅಪಹರಣ ಪ್ರಕರಣದಲ್ಲಿ ಶಬೀರ್ ಅವರಿಗೆ ಸಹಕಾರ ನೀಡಿದ್ದಾರೆ ಎಂದು ಮಂಗಳವಾರ ರಿಯಾಝ್ ಮತ್ತು ತೌಸೀಫ್ ಅವರಿಗೆ ನ್ಯಾಷನಲ್ ಮಹಮ್ಮದ್ ಅವರು ಚಾಕುವಿನಿಂದ ಇರಿದು ಮಾರಣಾಂತಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಬಳಿಕ ನ್ಯಾಷನಲ್ ಮಹಮ್ಮದ್ ಅವರು ಪೊಲೀಸರಿಗೆ ಶರಣಾಗಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಇವರನ್ನು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಇರಿಸಲಾಗಿದೆ.

ಸುಳ್ಯ ಎಪಿಎಂಸಿ: ಬಿಜೆಪಿ ಬಹುಮತ

Posted by JAYAKIRANA Kirana on | 0 comments | Leave a comment...


ಸುಳ್ಯ: ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಆಡಳಿತ ಮಂಡಳಿಗೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ೧೩ ಸ್ಥಾನಗಳ ಪೈಕಿ ೭ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡರೆ, ಕಾಂಗ್ರ್ರೆಸ್, ಜೆ.ಡಿ.ಎಸ್, ಪಕ್ಷೇತರರ ಮೈತ್ರಿಕೂಟವಾದ ಕೃಷಿಕರ ಪ್ರಗತಿ ರಂಗ ೬ ಸ್ಥಾನಗಳನ್ನು ಗೆದ್ದುಕೊಂಡಿದೆ.
ಕಳೆದ ಬಾರಿಯ ಚುನಾವಣೆ ಯಲ್ಲಿ ಕೂಡಾ ಬಿಜೆಪಿ ೭ ಸ್ಥಾನಗಳನ್ನು ಮತ್ತು ಕಾಂಗ್ರೆಸ್ ೬ ಸ್ಥಾನಗಳನ್ನು ಗೆದ್ದು ಕೊಂಡಿತ್ತು. ನಂತರ ಸದಸ್ಯರೊಬ್ಬರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಸೋತು ಬಿಜೆಪಿ ಗೆದ್ದು ತನ್ನ ಸ್ಥಾನಗಳನ್ನು ೮ಕ್ಕೇರಿಸಿತ್ತು.
ಜಯಪ್ರಕಾಶ್ ರೈ ಸೋಲು:
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಅಮರ ಮುಡ್ನೂರು ಕ್ಷೇತ್ರದಲ್ಲಿ ಬಿಜೆಪಿ ತೊರೆದು ಪ್ರಗತಿ ರಂಗದ ನೇತೃತ್ವವಹಿಸಿ ಸ್ಪರ್ಧಿಸಿದ್ದ ಎನ್. ಜಯಪ್ರಕಾಶ್ ರೈ ಪರಾಭವಗೊಂಡರು. ಬಿಜೆಪಿ ಅಭ್ಯರ್ಥಿ ರಾಧಾಕೃಷ್ಣ ಬೊಳ್ಳೂರು ೯೪೧ ಮತಗಳನ್ನು ಪಡೆದರೆ ಜಯಪ್ರಕಾಶ್ ರೈ ೬೯೩ ಮತ ಪಡೆದರು.
ವರ್ತಕರ ಕ್ಷೇತ್ರ: ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ವರ್ತಕರ ಕ್ಷೇತ್ರದಲ್ಲಿ ಪ್ರಗತಿರಂಗದ ಆದಂ ಕುಂಞಿ ಕಮ್ಮಾಡಿ ೮೩ ಮತ ಪಡೆದು ವಿಜಯಿಯಾದರು. ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭಿನಂದನ್ ನಾಯರ್ ೨೮ ಮತ್ತು ಎಸ್.ಡಿ.ಪಿ.ಐ. ಅಭ್ಯರ್ಥಿ ಮಮ್ಮಾಲಿ ೫೮ ಮತ ಪಡೆದರು. ಸಹಕಾರಿ ಕ್ಷೇತ್ರದಲ್ಲಿ ಪ್ರಗತಿರಂಗದ ಕಳಂಜ ವಿಶ್ವನಾಥ ರೈ ೮೯ ಮತಗಳಿಸಿ ವಿಜಯಿಯಾದರು. ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶೈಲೇಶ್ ಅಂಬೆಕಲ್ಲು ೫೭ ಮತ ಪಡೆದರು.
ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಸೀತಾನಂದ ಬೇರ್ಪಡ್ಕ ೮೮೪ ಮತ ಪಡೆದು ವಿಜಯಿಯಾದರು. ಪ್ರಗತಿ ರಂಗದ ಸುಬ್ಬಪ್ಪ ಬಾರಿಕೆ ೪೪೪ ಮತ ಪಡೆದರು. ಐವತ್ತೊಕ್ಲು ಕ್ಷೇತ್ರದಲ್ಲಿ ಬಿಜೆಪಿಯ ಲಿಗೋಧರ ಆಚಾರ್ಯ ೮೬೪ ಮತ ಪಡೆದು ಜಯಗಳಿಸಿದರು. ಪ್ರಗತಿ ರಂಗದ ಬಾಲಕೃಷ್ಣ ಮಣಿಯಾಣಿ ೪೨೬ ಮತ ಪಡೆದರು. ಗುತ್ತಿಗಾರು ಕ್ಷೇತ್ರದಲ್ಲಿ ಪ್ರಗತಿರಂಗದ ಅಭ್ಯರ್ಥಿ, ಗ್ರಾ.ಪಂ. ಅಧ್ಯಕ್ಷ ಪರಶುರಾಮ ಚಿಲ್ತಡ್ಕ ೫೮೦ ಮತ ಪಡೆದು ವಿಜಯಿಯಾದರು. ಬಿಜೆಪಿಯ ಬಿ.ಕೆ. ಬೆಳ್ಯಪ್ಪ ಗೌಡ ೫೧೭ ಮತ ಪಡೆದರು.
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಗತಿರಂಗದ ಸತೀಶ್ ಕೂಜುಗೋಡು ೧೦೫೦ ಮತ ಪಡೆದು ವಿಜಯಿಯಾದರು. ಬಿಜೆಪಿಯ ಕೆ.ಸಿ.ಹಿಮ್ಮತ್ ೬೫೬ ಮತ ಪಡೆದರು. ಎಡಮಂಗಲ ಕ್ಷೇತ್ರದಲ್ಲಿ ಪ್ರಗತಿರಂಗದ ಅಭ್ಯರ್ಥಿ, ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ ೯೯೦ ಮತ ಪಡೆದು ಜಯಗಳಿಸಿದರು. ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ನಡ್ಕ ೯೩೮ ಮತ ಪಡೆದು ಪರಾಜಿತರಾದರು. ಬೆಳ್ಳಾರೆ ಕ್ಷೇತ್ರದಲ್ಲಿ ಪ್ರಗತಿರಂಗದ ಶ್ರೀರಾಂ ಪಾಟಾಜೆ ೯೯೪ ಮತ ಪಡೆದು ಜಯಭೇರಿ ಬಾರಿಸಿದರು. ಬಿಜೆಪಿಯ ಮೋನಪ್ಪ ತಂಬಿನಮಕ್ಕಿ ೮೧೮ ಮತ ಪಡೆದರು. ಅಜ್ಜಾವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಎ.ರಾಮಚಂದ್ರ ೯೭೬ ಮತ ಪಡೆದು ಜಯಗಳಿಸಿದರು. ಪ್ರಗತಿರಂಗದ ಕೆ.ಆರ್.ತೇಜಕುಮಾರ್ ೭೩೪ ಮತ ಪಡೆದರು. ಕಣದಿಂದ ನಿವೃತ್ತಿ ಘೋಷಿಸಿದ್ದ ಸದಾನಂದ ನಾಯಕ್ ೨೮ ಮತ ಪಡೆದರು. ಅರಂತೋಡು ಕ್ಷೇತ್ರದಲ್ಲಿ ಬಿಜೆಪಿಯ ವಾರಿಜಾ ಕುರುಂಜಿ ೧೦೫೩ ಮತ ಪಡೆದು ಭರ್ಜರಿ ವಿಜಯ ಸಾಧಿಸಿದರು. ಪ್ರಗತಿರಂಗದ ಡಿ.ಎಸ್.ಯಮುನಾ ೬೯೦ ಮತ ಗಳಿಸಿದರು. ಜಾಲ್ಸೂರು ಕ್ಷೇತ್ರದಲ್ಲಿ ಬಿಜೆಪಿಯ ಶಂಕರ್ ಪೆರಾಜೆ ೮೪೩ ಮತ ಪಡೆದು ವಿಜಯಿಯಾದರು. ಪ್ರಗತಿರಂಗದ ಮೋಹನ್ ೪೧೮ ಮತ ಪಡೆದರು. ದೇವಚಳ್ಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಎಪಿಎಂಸಿಯ ಮಾಜಿ ಉಪಾಧ್ಯಕ್ಷ ಜಯರಾಮ ಹಾಡಿಕಲ್ಲು ೮೯೭ ಮತ ಪಡೆದು ವಿಜಯಿಯಾಗಿದ್ದಾರೆ. ಪ್ರಗತಿ ರಂಗದ ಮಿತ್ರ ದೇವ ಮಡಪ್ಪಾಡಿ ೫೮೯ ಮತ ಪಡೆದರು.

‘ಸೋಲು ನಿರೀಕ್ಷಿಸಿದ್ದೆ’
ಸುಳ್ಯ: ನಾನೊಬ್ಬ ಕ್ರೀಡಾಪಟು, ಕ್ರೀಡಾಸ್ಪೂರ್ತಿಯಿಂದ ಚುನಾವಣೆ ಯನ್ನು ಎದುರಿಸಿದ್ದೇನೆ. ಸುಳ್ಯ ಎಪಿಎಂಸಿ ಚುನಾವಣೆಯಲ್ಲಿ ಸೋಲು ನಿರೀಕ್ಷಿಸಿದ್ದೆ. ಎನ್.ಎ.ರಾಮಚಂದ್ರ ರಂತೆ ಕಾದು ಕುಳಿತಿದ್ದರೆ ನನಗೂ ಟಿಕೆಟ್ ಸಿಗುತ್ತಿತ್ತು. ಮತ್ತೆ ಅಧಿಕಾರ ಪಡೆಯುತ್ತಿದ್ದೆ. ಆದರೆ ಸರ್ವಾಧಿಕಾರ, ಸಂವಿಧಾನಕ್ಕೆ ಬೆಲೆ ಇಲ್ಲದ ಪಕ್ಷದಿಂದ ಎದ್ದು ಬಂದವ. ಮತ್ತೆ ನಮ್ಮ ಸಾಮರ್ಥ್ಯವನ್ನು ತೋರಿಸುತ್ತೇವೆ. ಹೀಗೆಂದದ್ದು ಎಪಿಎಂಸಿಯ ಮಾಜಿ ಅಧ್ಯಕ್ಷ ಬಿಜೆಪಿ ತೊರೆದು ಮೈತ್ರಿಕೂಟ ರಚಿಸಿ ಅಮರ ಮೂಡ್ನೂರು ಕ್ಷೇತ್ರದಿಂದ ಪರಾಜಿತ ರಾದ ಎನ್.ಜಯಪ್ರಕಾಶ್ ರೈ.
ಮಂಗಳವಾರ ಮತ ಎಣಿಕೆ ಬಳಿಕ ನಡೆದ ಮೈತ್ರಿಕೂಟದ ಸಭೆಯಲ್ಲಿ ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. ನಾನು ಮತದಲ್ಲಿ ಸೋತಿರಬಹುದು. ಆದರೆ ಸಿದ್ಧಾಂತದಲ್ಲಿ ಗೆದ್ದಿದ್ದೇನೆ. ನಾಲ್ಕು ಮೀಸಲು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು. ಅಲ್ಲಿ ಸೋತದ್ದು ನೋವು ತಂದಿದೆ. ಆದರೆ ಅಲ್ಲಿ ಮತದಾನವೇ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ನಮ್ಮ ಕಾರ್ಯಕರ್ತರು ಅಲ್ಲಿ ಕೆಲಸ ಮಾಡಿದ್ದು ಸಾಕಾಗಲಿಲ್ಲ. ಮುಂದಿನ ನಗರ ಪಂಚಾಯಿತಿ ಹಾಗೂ ಎಂಎಲ್‌ಎ ಚುನಾವಣೆಯಲ್ಲಿ ಮೈತ್ರಿಕೂಟ ಖಂಡಿತಾ ಗೆಲ್ಲುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆ ಬಿಜೆಪಿಗೆ ಭ್ರಮನಿರಸನವಾಗಿದೆ. ಚೊಕ್ಕಾಡಿ ಸಹಕಾರಿ ಸಂಘದಲ್ಲಿ ಎಲ್ಲಾ ಸ್ಥಾನ ಗೆದ್ದ ಅದು ಇಲ್ಲೂ ಎಲ್ಲಾ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಒಕ್ಕೂಟ ರಚಿಸಿದ್ದರಿಂದ ೬ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇಲ್ಲದಿದ್ದರೆ ಸಾಧ್ಯವಿರಲಿಲ್ಲ. ಜಯಪ್ರಕಾಶ್ ರೈ ಸೋತಿದ್ದು ನನಗೂ ತುಂಬಾ ನೋವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಹೇಳಿದರು.
ಕಾಂಗ್ರೆಸ್ ಸಹಕಾರ ಇಲ್ಲದಿದ್ದರೆ ಇಲ್ಲಿ ಜೆಡಿಎಸ್‌ಗೆ ಒಂದೂ ಸ್ಥಾನ ಸಿಗುತ್ತಿರ ಲಿಲ್ಲ. ಮೈತ್ರಿಯಿಂದಾಗಿ ಒಂದು ಸ್ಥಾನ ಪಡೆದೆವು ಎಂದು ಜೆಡಿಎಸ್‌ನ ವಿಜೇತ ಅಭ್ಯರ್ಥಿ ಜಾಕೆ ಮಾಧವ ಗೌಡ ಕೃತಜ್ಞತೆ ಸಲ್ಲಿಸಿದರು.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ಪ್ರೀತಿಸಿದಾತ ಅಪಹರಿಸಿದ!

Posted by JAYAKIRANA Kirana on | 0 comments | Leave a comment...


ಉಪ್ಪಿನಂಗಡಿ: ಇಲ್ಲಿನ ಉದ್ಯಮಿಯೋರ್ವರ ಪುತ್ರಿಯನ್ನು ಸ್ಥಳೀಯವಾಗಿ ಉದ್ಯಮ ನಡೆಸುತ್ತಿದ್ದ ಯುವಕನೋರ್ವ ಅಪಹರಿಸಿದ ಘಟನೆ ಸಂಭವಿಸಿದೆ.
ಉಪ್ಪಿನಂಗಡಿಯ ನ್ಯಾಷನಲ್ ಮುಹಮ್ಮದ್ ಎಂಬವರ ಪುತ್ರಿಯನ್ನು ಉಪ್ಪಿನಂಗಡಿಯ ಪೃಥ್ವಿ ಶಾಪಿಂಗ್ ಮಾಲ್‌ನಲ್ಲಿ ಚಿಕನ್ ಸೆಂಟರ್ ನಡೆಸುತ್ತಿರುವ ಶಬೀರ್ ಕೆಂಪಿ ಎಂಬಾತ ಕಳೆದ ೪ ವರ್ಷಗಳಿಂದ ಪ್ರೀತಿಸುತ್ತಿದ್ದು, ಇದರ ಮಧ್ಯೆ ಈಕೆಯನ್ನು ಸೌದಿ ಅರೇಬಿಯಾದ ಉದ್ಯೋಗಿಗೆ ಕಳೆದ ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಲಾಗಿತ್ತು. ಇದನ್ನು ತಿಳಿದುಕೊಂಡ ಶಬೀರ್ ಇದೀಗ ಪ್ರೀತಿಸುತ್ತಿದ್ದಾಕೆಯನ್ನು ಮದುವೆಯಾಗಲು ಮುಂದಾಗಿ ಅಪಹರಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಮನೆಯಿಂದ ತನ್ನ ಸಂಬಂಧಿ ಯುವಕನೋರ್ವನೊಂದಿಗೆ ಕಾರ್ಪೋ ರೇಶನ್ ಬ್ಯಾಂಕ್‌ಗೆ ಬಂದಾಕೆಯನ್ನು ಸ್ವಿಫ್ಟ್ ಕಾರಿನಲ್ಲಿ ಅಪಹರಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಯುವತಿ ಹನ್ನತ್ ಭಾನು ಎಂಬಾಕೆಯನ್ನು ನೆರೆಮನೆಯ ಶಬೀರ್ ಕಳೆದ ೪ ವರ್ಷಗಳಿಂದ ಪ್ರೀತಿಸುತ್ತಿದ್ದು, ತಮ್ಮ ಮೊಬೈಲ್ ಫೋನ್ ಮುಖಾಂತರ ಹಾಗೂ ಕಾಲೇಜು ಪಕ್ಕದಲ್ಲಿ ನೇರ ಮಾತುಕತೆ ನಡೆಯುತ್ತಿತ್ತು. ಈತನ ಪ್ರೀತಿಯನ್ನು ಯುವತಿಯ ಮನೆಮಂದಿ ಮಾತ್ರ ವಿರೋಧಿಸುತ್ತಿದ್ದರು ಎಂದು ಶಬೀರ್ ಕುಟುಂಬ ಇದೀಗ ಹೇಳುತ್ತಿದ್ದಾರೆ.
ಪ್ರೀತಿ ಪ್ರೇಮದ ಬಗ್ಗೆ ತಿಳಿದುಕೊಂಡ ಕುಟುಂಬಸ್ಥರು ಯುವತಿ ಕಡೆಯವರಲ್ಲಿ ಎರಡು ಬಾರಿ ಮಾತುಕತೆ ನಡೆಸಿದ್ದು, ಇವರು ಇದಕ್ಕೆ ಒಪ್ಪಲಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಪ್ರೀತಿಸಿದ ಯುವಕ ಶಬೀರ್ ಯುವತಿಯ ತಂದೆಯಲ್ಲಿ ಪದೇಪದೇ ಮನವಿ ಮಾಡಿಕೊಂಡಿದ್ದು ನನ್ನ ಜೀವನವನ್ನು ಈಕೆಗೆ ಮುಡಿಪಾಗಿಟ್ಟಿದ್ದೇನೆ. ನನಗೆ ಮದುವೆ ಮಾಡಿಕೊಡಿ ಎಂದು ಕೋರಿಕೊಂಡಿದ್ದ ಎಂದು ಈತನ ಗೆಳೆಯರು ಪತ್ರಿಕೆಗೆ ತಿಳಿಸಿದ್ದಾರೆ. ಆದರೆ ಇದಕ್ಕೆ ಒಪ್ಪದೆ ಇವರು ಬೇರೆ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದು ಈ ಅಪಹರಣಕ್ಕೆ ಕಾರಣ ಎಂದು ಹೇಳಲಾಗಿದೆ.         ಪ್ರೀತಿಸಿದ ಯುವತಿ ತನಗೆ ದಕ್ಕುವುದಿಲ್ಲ ಎಂದು ತಿಳಿದುಕೊಂಡ ಈತ, ಈಕೆ ತನ್ನ ಸಂಬಂಧಿಯೋರ್ವರ ಜೊತೆ ಬ್ಯಾಂಕ್‌ಗೆ ಬಂದ ವೇಳೆ ಕಾರಿನಲ್ಲಿ ಅಪಹರಿಸಿದ್ದಾನೆ ಎಂಬುವುದನ್ನು ಈತನ ಕುಟುಂಬಸ್ಥರು ದೃಢಪಡಿಸಿದ್ದಾರೆ.
ಕಳೆದ ಶುಕ್ರವಾರದಂದು ಶಬೀರ್ ಕಡೆಯಿಂದ ಮಾತುಕತೆಗೆಂದು ಮನೆ ಕಡೆಗೆ ಬಂದಿದ್ದರು. ಆ ವೇಳೆ ನಾವು ಮನೆಯಲ್ಲಿ ಇರಲಿಲ್ಲ ಎಂದು ಈಕೆಯ ಅಣ್ಣ ರಶೀದ್ ತಿಳಿಸಿದ್ದಾರೆ. ಈಕೆಯ ಜೊತೆ ಹೋದ ರವೂಫ್ ಎಂಬಾತನಿಗೆ ಶಬೀರ್‌ನ ಗೆಳೆಯನೋರ್ವ ಡ್ರಾಪ್ ಕೇಳಿದ್ದು ಆ ವೇಳೆ ಯುವತಿಯನ್ನು ಅಪಹರಿಸಿದ್ದಾರೆ ಎಂಬ ವಿಚಾರವನ್ನು ಈಕೆಯ ಜೊತೆಗಿದ್ದ ಸಂಬಂಧಿ ರವೂಫ್ ತಿಳಿಸಿದ್ದಾರೆ. ಮನೆ ಮಂದಿ ಇದೀಗ ಉಪ್ಪಿನಂಗಡಿ ಠಾಣೆಗೆ ಯುವತಿ ನಾಪತ್ತೆಯಾಗಿದ್ದಾಳೆ ಎಂಬ ದೂರನ್ನು ನೀಡಿದ್ದಾರೆ.

ಚಿತ್ರ ನಿರ್ಮಾಪಕನ ಅಪಹರಣ: ಸುರತ್ಕಲ್, ಸುಳ್ಯ,ಕಾಸರಗೋಡು ನಿವಾಸಿ ಸಹಿತ ನಾಲ್ವರ ಬಂಧನ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಸಿನೆಮಾ ನಿರ್ಮಾ ಪಕನನ್ನು ಅಪಹರಿಸಿ ಬಿಡುಗಡೆಗಾಗಿ ೨೦ ಲಕ್ಷ ರೂ. ಬೇಡಿಕೆಯಿರಿಸಿದ ಪ್ರಕರಣದಲ್ಲಿ ಕಾಸರಗೋಡು, ಸುರತ್ಕಲ್ ಹಾಗೂ ಸುಳ್ಯ ನಿವಾಸಿಗಳ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಕೇರಳದ ಎರ್ನಾಕುಳಂ ಜಿಲ್ಲೆಯ ತ್ರಿಕ್ಕಾಕರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಲಯಾಳಂನ ಚಿತ್ರ ನಿರ್ಮಾ ಪಕರಾದ ಕೊಲ್ಲಂ ಜಿಲ್ಲೆಯ ಕೊಟ್ಟಾರ ಕೆರೆ ಮಾಂಗೋಡು ನಿವಾಸಿ ತಾಜು ದ್ದೀನ್(೩೨) ಎಂಬವರನ್ನು ಅಪಹರಿಸಿದ ಆರು ಮಂದಿಯ ತಂಡ ಬಳಿಕ ಇವರ ಬಿಡುಗಡೆಗೆ ೨೦ ಲಕ್ಷ ರೂ. ಬೇಡಿಕೆಯಿ ರಿಸಿದ ಪ್ರಕರಣದಲ್ಲಿ ನಾಲ್ವರನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ. ಇವರನ್ನು ಪಾಲ್ಘಾಟ್ ಜಿಲ್ಲೆಯ ಚಿಟ್ಟೂರು ನಿವಾಸಿ ಸಂಜನ್(೩೨), ಕಾಸರಗೋಡು ವಿದ್ಯಾನಗರ ಮುಟ್ಯತ್ತೋಡಿಯ ಸುಕು ಮಾರ್(೩೫), ಮಂಗಳೂರು ಸುರತ್ಕಲ್ ಕೃಷ್ಣಾಪುರದ ಅಲ್ ಬದ್ರಿಯಾ ಮಸೀದಿ ಬಳಿ ನಿವಾಸಿ ಫಾರೂಕ್ (೨೧), ಸುಳ್ಯ ದುಗ್ಗಲಡ್ಕದ ಸುಬೈರ್(೨೬) ಎಂದು ಗುರುತಿಸಲಾಗಿದೆ. ಅಪಹರಣಕ್ಕೆ ನೇತೃತ್ವ ವಹಿಸಿದ್ದ ಇರ್ಫಾನ್ ಹಾಗೂ ಮಹಿಳೆ ಯೊಬ್ಬಳು ಇನ್ನೂ ತಲೆಮರೆಸಿಕೊಂಡಿ ದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತ್ರಿಕ್ಕಾಕೆರೆ ಸಹಾಯಕ ಪೊಲೀಸ್ ಆಯುಕ್ತ ಬಿಜೋ ಅಲೆಕ್ಸಾಂಡರ್ ನೇತೃತ್ವದಲ್ಲಿ ತನಿಖೆ ನಡೆದಿದೆ.
ಘಟನೆ ವಿವರ: ಕಳೆದ ಶನಿವಾರ ಮುಂಜಾನೆ ೩.೩೦ರ ವೇಳೆಗೆ ತಿರು ವನಂತಪುರ ತಂಬಾನೂರಿ ಲಾಡ್ಜ್‌ನಲ್ಲಿ ವಾಸವಿದ್ದ ತಾಜುದ್ದೀನರ ಕೊಠಡಿಗೆ ಪರಿಚಯಸ್ಥರಂತೆ ನಟಿಸಿ ಬಂದ ಆರೋಪಿಗಳು ಅವರನ್ನು ಬಲವಂತ ವಾಗಿ ಅವರದ್ದೇ ಕಾರಿನಲ್ಲಿ ಹಾಕಿ ಕೊಂಡೊಯ್ದಿದ್ದರು. ಬಿಡಬೇಕಿದ್ದಲ್ಲಿ ಎರಡು ಲಕ್ಷ ರೂ. ನೀಡಬೇಕೆಂದು ಅಪಹರಣಕಾರರು ಬೇಡಿಕೆಯನ್ನಿ ಟ್ಟಿದ್ದರು. ಕಾರು ತಿರುವನಂತಪುರಕ್ಕೆ ತಲುಪಿದಾಗ ಪ್ರಥಮ ಆರೋಪಿ ಇರ್ಫಾನ್ ಹಾಗೂ ತಂಡದಲ್ಲಿದ್ದ ಮಹಿಳೆ ಇಳಿದು ಉಳಿದ ಅಪಹರಣಕಾರರು ತಾಜುದ್ದೀನ್‌ನೊಂದಿಗೆ ಎರ್ನಾಕುಳಂಗೆ ಪ್ರಯಾಣ ಬೆಳೆಸಿದ್ದರು. ತಾಜುದ್ದೀನರ ಮಿತ್ರನಾದ ಎರ್ನಾಕುಳಂನ ಸಂಜಯ ಎಂಬವರಿಗೆ ಫೋನಾಯಿಸಿ ಹಣದೊಂದಿಗೆ ಎಚ್.ಎಂ.ಟಿ. ಜಂಕ್ಷನ್ ಬಳಿ ನಿಲ್ಲುವಂತೆ ತಿಳಿಸಲಾಯಿತು. ತಾಜುದ್ದೀನರ ದೂರವಾಣಿ ಕರೆಯ ಬಗ್ಗೆ ಶಂಕಿತನಾದ ಸಂಜಯ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಹಾಯಕ ಆಯುಕ್ತ ನೇತೃತ್ವದ ಪೊಲೀಸರು ಆರೋಪಿಗಳನ್ನು ದಸ್ತಗಿರಿಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ಮಾಪಕ ತಾಜುದ್ದೀನ್‌ರನ್ನು ಬಂಧಮುಕ್ತಗೊಳಿಸಲಾಯಿತು.

ಬಿಜೆಪಿ ಮುಖಂಡನ ಪುತ್ರನ ಕಾರು ಅಪಘಾತ

Posted by JAYAKIRANA Kirana on | 0 comments | Leave a comment...



ಯುವತಿಯರಿಗೆ ಗಾಯ
ಮಂಗಳೂರು: ಬಿಜೆಪಿ ಮುಖಂಡರೊಬ್ಬರ ಪುತ್ರನ ಕಾರು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿರುವ ಘಟನೆ ನಿನ್ನೆ ಮೇರಿಹಿಲ್ ಬಳಿ ಸಂಭವಿಸಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಯುವತಿಯರು ಗಾಯಗೊಂ ಡಿದ್ದಾರೆನ್ನಲಾಗಿದೆ.
 ನಗರದ ಕಾಲೇಜೊಂದರಲ್ಲಿ ಕಲಿಯುತ್ತಿರುವ ಬಿಜೆಪಿ ಮುಖಂಡರ ಪುತ್ರ ನಿನ್ನೆ ಸಂಜೆ ಇಬ್ಬರು ಯುವತಿಯರೊಂದಿಗೆ ಬೋಂದೆಲ್ ಕಡೆಗೆ ತನ್ನ ರಿಟ್ಜ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ತನ್ನ ಅತಿವೇಗದ ಚಾಲನೆ ಯಿಂದಾಗಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆಯಲ್ಲಿ ಉರುಳಿಬಿದ್ದಿತು. ಘಟನೆಯಿಂದಾಗಿ ಕಾರಿನ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಆ ಭಾಗದಲ್ಲಿ ಕುಳಿತಿದ್ದ ಇಬ್ಬರು ಯುವತಿಯರು ಗಂಭೀರ ಗಾಯ ಗೊಂಡಿದ್ದಾರೆನ್ನಲಾಗಿದೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಕಡೆ ಅಪಘಾತವಾದರೆ ಪೊಲೀಸರು ಮಾಹಿತಿಯಿದ್ದರೂ ತಡವಾಗಿ ಆಗಮಿಸುತ್ತಾರೆ. ಆದರೆ ನಿನ್ನೆ ಬಿಜೆಪಿ ಮುಖಂಡನ ಪುತ್ರನ ಕಾರು ಎಂದು ಮಾಹಿತಿ ಸಿಕ್ಕ ಕೂಡಲೇ ಏಳು ನಿಮಿಷಗಳಲ್ಲೇ ಸ್ಥಳಕ್ಕೆ ಆಗಮಿಸಿದ ಕಾವೂರು ಪೊಲೀಸರು ಕಾರನ್ನು ತಕ್ಷಣ ಕೊಂಡೊಯ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಪಘಾತದ ಕುರಿತು ಠಾಣೆಯಲ್ಲಿ ಯಾವುದೇ ಮಾಹಿತಿ ಯಿಲ್ಲದಿರುವುದು ಬಿಜೆಪಿ ಮುಖಂಡನ ಪ್ರಭಾವವೆಂದು ತಿಳಿದುಬಂದಿದೆ.

ಪುತ್ತೂರು: ತಂಡದಿಂದ ಯುವಕನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...


ಪುತ್ತೂರು: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಯುವಕನೊಬ್ಬನಿಗೆ ತಂಡ ವೊಂದು ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಚಂದ್ರಶೇಖರ್ ಎಂಬವರ ಪುತ್ರ ಹರೀಶ್(೩೦) ಹಲ್ಲೆಗೊಳಗಾದ ಯುವಕ. ತಾನು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಸುಮಾರು ೨೦ ಮಂದಿ ಯಷ್ಟಿದ್ದ ತಂಡ ದರ್ಬೆ ಎಂಬಲ್ಲಿ ಬೈಕ್‌ನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ತೀವ್ರತರಹದ ಹಲ್ಲೆ ನಡೆಸಿ ಕಲ್ಲುಗಳನ್ನು ಎಸೆದು ಬೈಕಿಗೆ ಹಾನಿ ಮಾಡಿರುವುದಾಗಿ ಹರೀಶ್ ದೂರು ನೀಡಿದ್ದಾರೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮಹಿಳೆಯ ಕರಿಮಣಿ ಸರ ಎಗರಿಸಿದ ಅಪರಿಚಿತರು

Posted by JAYAKIRANA Kirana on | 0 comments | Leave a comment...


ಮಂಗಳೂರು: ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬೈಕ್‌ನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ಎಗರಿಸಲು ಯತ್ನಿಸಿದ ಘಟನೆ ಬೋಂದೆಲ್‌ನ ಮಹಾತ್ಮ ನಗರದಲ್ಲಿ ನಿನ್ನೆ ನಡೆದಿದೆ. ಈ ವೇಳೆ ಕರಿಮಣಿ ಸರದ ಒಂದು ಎಳೆ ಮಾತ್ರ ಕಳ್ಳನ ಪಾಲಾಗಿದೆ.
ಬೋಂದೆಲ್ ಮಹಾತ್ಮ ನಗರ ನಿವಾಸಿ ವತ್ಸಲಾ ಕಾಮತ್ ಮಧ್ಯಾಹ್ನದ ವೇಳೆ ಚರ್ಚ್ ರಸ್ತೆಯ ಬಳಿ ನಡೆದುಕೊಂಡು ಮನೆ ಕಡೆ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರಲ್ಲಿ ಒಬ್ಬಾತ ಮೊಬೈಲ್‌ನಲ್ಲಿ ಮಾತಾಡುವಂತೆ ನಟಿಸುತ್ತಾ ಒಮ್ಮೆಲೇ ವತ್ಸಲಾ ಅವರ ಸಮೀಪಕ್ಕೆ ಬಂದು ಕುತ್ತಿಗೆಗೆ ಕೈಹಾಕಿ ಕರಿಮಣಿ ಸರ ಎಳೆದ. ಈ ವೇಳೆ ವತ್ಸಲಾ ಅವರು ಯುವಕನ ಕೈ ಹಿಡಿದು ಪ್ರತಿಭಟಿಸಿದ್ದು, ಕರಿಮಣಿ ಸರ ತುಂಡಾದ ಕಾರಣ ಏಳು ಪವನ್ ತೂಕದ ಕರಿಮಣಿ ಸರದಲ್ಲಿ ಒಂದೂವರೆ ಪವನ್‌ನಷ್ಟು ತೂಕದ ಒಂದು ಎಳೆ ಮಾತ್ರ ಆತನ ಕೈಗೆ ಸಿಕ್ಕಿದೆ. ಬಳಿಕ ಇಬ್ಬರೂ ಬೈಕ್‌ನಲ್ಲಿ ಪರಾರಿಯಾದರೆನ್ನಲಾಗಿದೆ.

ಕೊಲೆ ವದಂತಿಗೆ ಕಂಗಾಲಾದ ಪೊಲೀಸರು!

Posted by JAYAKIRANA Kirana on | 0 comments | Leave a comment...


ಸುರತ್ಕಲ್: ಮಲಗಿದ್ದಲ್ಲೇ ಮೃತ್ಯು
ಸುರತ್ಕಲ್: ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತ ಪಟ್ಟಿರುವ ಘಟನೆ ಸುರತ್ಕಲ್ ತಡಂಬೈಲ್‌ನಲ್ಲಿ ನಡೆದಿರುವುದು ನಿನ್ನೆ ಬೆಳಗ್ಗೆ ಬೆಳಕಿಗೆ ಬಂದಿದೆ. ಆದರೆ ಇದು ಕೊಲೆ ಎಂಬ ಗಾಳಿಸುದ್ದಿ ಹಬ್ಬಿದ್ದು, ಸ್ಥಳೀಯರು ಹಾಗೂ ಪೊಲೀಸರು ಕಂಗಾಲಾಗಿದ್ದರು.
ಶಕ್ತಿನಗರದ ಫ್ಲಾಟ್‌ನಲ್ಲಿ ಕಾವಲುಗಾರನಾಗಿ ದುಡಿಯು ತ್ತಿದ್ದ ನೇಪಾಳದ ಮಾನ್ ಬಹುದ್ದೂರ್ ಬಿ.ಕೆ ಯಾನೇ ಮನೋಜ್ ಎಂಬಾತನೇ ಮೃತಪಟ್ಟ ವ್ಯಕ್ತಿ. ಶಕ್ತಿನಗರದಲ್ಲೇ ಬಾಡಿಗೆ ಮನೆಯಲ್ಲಿದ್ದ ಮನೋಜ್ ಭಾನುವಾರ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತಡಂಬೈಲ್‌ಗೆ ಬಂದಿ ದ್ದ. ರಾತ್ರಿ ಇಲ್ಲಿನ ಬಾರ್‌ನಲ್ಲಿ ಕಂಠಪೂರ್ತಿ ಕುಡಿದವ ಇಲ್ಲಿನ ಮಹಮ್ಮಾಯಿ ದೇವಸ್ಥಾನದ ಬಳಿ ಮಲಗಿದ್ದ ಬೆಳಗ್ಗೆ ಯಾದರೂ ಏಳದಿರುವುದನ್ನು ಗಮನಿಸಿದ ಸ್ಥಳೀಯರು ಎಬ್ಬಿಸಲು ಪ್ರಯತ್ನಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಬೈಕ್ ಸವಾರ ಮೃತ್ಯು

Posted by JAYAKIRANA Kirana on | 0 comments | Leave a comment...


ವಿಟ್ಲ: ಕಲ್ಲಕಟ್ಟ ಎಂಬಲ್ಲಿ ಶನಿವಾರ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಗಂಭೀರ ರೀತಿಯಲ್ಲಿ ಗಾಯಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಸೋಮವಾರ ಮೃತಪಟ್ಟಿ ದ್ದಾರೆ.
ವಿಟ್ಲ ಮೂಡ್ನೂರು ಗ್ರಾಮ ಮಾಡತ್ತಡ್ಕ ಸಮೀಪದ ಕಲುವಾಜೆ ನಿವಾಸಿ ಕೂಸಪ್ಪ ಮೃತಪಟ್ಟವರು. ಇವರು ವ್ಯಾಪಾರಸ್ಥರಾಗಿದ್ದು, ವಿಟ್ಲ ದಿಂದ ತನ್ನ ಅಂಗಡಿಗೆ ಮಾರಾಟ ಕ್ಕೆಂದು ಲಾಲಿಗಳನ್ನು ತೆಗೆದುಕೊಂಡು ತೆರಳುತ್ತಿದ್ದ ಸಂದರ್ಭ ಮೇಗಿಪೇಟೆ ಶಾಲೆ ಬಳಿಯಿರುವ ಕಲ್ಲಕಟ್ಟ ಅಪಾಯ ಕಾರಿ ತಿರುವಿನಲ್ಲಿ ಇವರ ಬೈಕ್ ನಿಯಂ ತ್ರಣ ಕಳೆದು ಈ ಘಟನೆ ಸಂಭವಿ ಸಿದೆ.
ತಲೆಗೆ ಗಂಭೀರ ರೀತಿಯಲ್ಲಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ತಕ್ಷಣ ಸ್ಥಳೀಯರು ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ಲಭ್ಯವಾಗದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಿನ್ನೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಪಾನಮತ್ತನಾಗಿದ್ದ ವ್ಯಕ್ತಿ ಮೃತ್ಯು

Posted by JAYAKIRANA Kirana on | 0 comments | Leave a comment...


ಪುತ್ತೂರು: ಪುತ್ತೂರಿನ ಬಸ್ ನಿಲ್ದಾಣದ ವಠಾರದಲ್ಲಿ ಪಾನಮತ್ತನಾಗಿ ತೂರಾಡುತ್ತಿದ್ದ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಬಸ್ ನಿಲ್ದಾಣದ ಬಳಿ ಫುಟ್ ಪಾತ್‌ನಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಪುತ್ತೂರು ಪೇಟೆಯ ಹೊರ ವಲಯದ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ ನಿವಾಸಿ ಮಹಾಬಲ ರೈ(೩೨) ಮೃತಪಟ್ಟ ವ್ಯಕ್ತಿ. ಉಪ್ಪಿನಂಗಡಿ ನಿರಾಲ ಬಾರ್‌ನಲ್ಲಿ ಉದ್ಯೋಗಿಯಾಗಿದ್ದ ಮಹಾಬಲ ರೈ ಅವರು ಭಾನುವಾರ ಪುಳಿಂಕೆದಡಿ ಎಂಬಲ್ಲಿ ನಡೆಯಲಿದ್ದ ತನ್ನ ಪತ್ನಿಯ ಸಹೋದರಿಯ ಸೀಮಂತ ಕಾರ್ಯಕ್ರಮಕ್ಕೆಂದು ಹೊರಟು ಬಂದಿದ್ದರು ಎನ್ನಲಾಗಿದ್ದು, ಬಳಿಕ ಪುತ್ತೂರಿನಲ್ಲಿ ಪಾನಮತ್ತರಾಗಿ ಅತ್ತಿತ್ತ ತಿರುಗಾಡುತ್ತಿದ್ದರು. ರಾತ್ರಿ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಕಾಂಚನ್ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ಕೊಲೆ: ಮತ್ತೊಬ್ಬ ಸೆರೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಕಾಂಚನ್ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್‌ರಾಜ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಉಳ್ಳಾಲ ಮಂಚಿಲದ ಫಯಾಝ್ (೨೪) ಎಂಬಾತನೇ ಬಂಧಿತ ಆರೋಪಿ ಯಾಗಿದ್ದು ಈತನ ಬಂಧನದೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂ ತಾಗಿದೆ. ಉಳ್ಳಾಲದಲ್ಲಿ ರಿಕ್ಷಾ ಚಾಲಕನಾಗಿ ರುವ ಫಯಾಝ್‌ನನ್ನು ಇಂದು ಬೆಳಿಗೆ ತೊಕ್ಕೊಟ್ಟಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾ ಯಿತು. ಕಾಂಚನ್ ಟೆಕ್ಸ್‌ಟೈಲ್ಸ್ ಮಳಿಗೆಗೆ ನುಗ್ಗಿ ದಿನೇಶ್‌ರಾಜ್‌ರನ್ನು ಮಾರಕಾಯುಧ ಗಳಿಂದ ಕಡಿದ ನಾಲ್ವರಲ್ಲಿ ಈತನೂ ಪ್ರಮುಖ ಆರೋಪಿ ಎನ್ನಲಾಗಿದೆ.
ನಿನ್ನೆಯಷ್ಟೇ ಬಂಧಿತನಾಗಿದ್ದ ಬೆಂಗಳೂರಿನ ಗಂಗಾಧರ ನಗರದ ಹಾಜಿನಗರ ನಿವಾಸಿ ಸಯ್ಯದ್ ಅಝೀಝ್ (೨೪) ಫಯಾಝ್‌ನ ಸಂಬಂಧಿ ಎಂದು ಹೇಳಲಾಗಿದೆ.
ಫೆ.೧೪ರಂದು ರಾತ್ರಿ ೮:೩೦ರ ಸುಮಾರಿಗೆ ನಾಲ್ವರು ಕಾಂಚನ್ ಟೆಕ್ಸ್‌ಟೈಲ್ಸ್ ಮಳಿಗೆಗೆ ನುಗ್ಗಿ ದಿನೇಶ್ ರಾಜ್ ತಲವಾರಿನಿಂದ ಕಡಿದು ಪರಾರಿಯಾಗಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಏಳು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದು ಇವರಲ್ಲಿ ಮೂವರು ಉಳ್ಳಾಲ ಪರಿಸರದವರೇ ಆಗಿದ್ದಾರೆ. ಇನ್ನುಳಿದ ಆರೋಪಿಗಳೂ ಸ್ಥಳೀ ಯರೇ ಆಗಿದ್ದಾರೆ ಎಂಬ ಮಾಹಿತಿ ಪೊಲೀಸ ರಿಂದ ಲಭ್ಯವಾಗಿದೆ. ಬಂದರ್ ಇನ್ ಸ್ಪೆಕ್ಟರ್ ವಿನಯ್ ಗಾಂವಕರ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ಚುನಾವಣಾ ಪ್ರಚಾರದ ವೇಳೆ ಹಲ್ಲೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಕಾಂಗ್ರೆಸ್ ಪಕ್ಷದ ಪರ ಮಾರುತಿ ಓಮ್ನಿಯಲ್ಲಿ ಮೈಕ್‌ನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಇಬ್ಬರು ಯುವಕರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಲಕ ದಿನೇಶ್‌ರೊಂದಿಗೆ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದ ಗೋಳಿಯಂಗಡಿ ಸಮೀಪ ಮೈಕ್‌ನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಬಿಜೆಪಿ ಪಕ್ಷದವರ ಬೈಕ್ ರ‍್ಯಾಲಿ ಬರುತ್ತಿತ್ತು ಎನ್ನಲಾಗಿದೆ. ಈ ಸಂದರ್ಭ ನಾಲ್ಕರಿಂದ ಐದು ಮಂದಿಯ ತಂಡ ಕಾರನ್ನು ಅಡ್ಡಗಟ್ಟಿ ಮೈಕ್ ಕಸಿದುಕೊಂಡಿದ್ದಲ್ಲದೆ ಕಾರಿಗೆ ಅಳವಡಿಸಿದ ಬ್ಯಾನರ್ ಕಿತ್ತು ಹಾಕಿ ಕಾರಿನೊಳಗಿದ್ದ ಕಾರ‍್ಯಕರ್ತರಾದ ಲಕ್ಷ್ಮಿಕಾಂತ ಹಾಗೂ ರಾಜ ಎಂಬವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆಂದು ಪ್ರದೀಪ್ ಮೊಗವೀರ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಣವಾಗದ ಖಾಯಿಲೆ: ಯುವಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಗುಣವಾಗದ ಕಾಯಿಲೆ ಯಿಂದ ಮಾನಸಿಕವಾಗಿ ನೊಂದಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಕ್ರೆ ಬಳಿ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ನಕ್ರೆಯ ಬೋಪಾಡಿ ಕೃಷ್ಣ(೩೭) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವನೆಂದು ತಿಳಿದುಬಂದಿದೆ. ಮುಂಬೈಯಲ್ಲಿ ದುಡಿಯುತ್ತಿದ್ದ ಈತ ಅನಾರೋಗ್ಯದ ನಿಮಿತ್ತ ಇತ್ತೀಚೆಗೆ ಊರಿಗೆ ಹಿಂತಿರುಗಿ, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದ ಸಂದರ್ಭದಲ್ಲಿ ಕಾಯಿಲೆ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಮಾನಿಸಿಕವಾಗಿ ನೊಂದಿದ್ದ ಆತ ಮನೆಯ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Posted by JAYAKIRANA Kirana on | 0 comments | Leave a comment...

ಕಾರ್ಕಳ: ನಗರದ ಮೂರು ಮಾರ್ಗ ಎಂಬಲ್ಲಿ ಕಟ್ಟಡದಿಂದ ಬಿದ್ದು ಕಾರ್ಮಿಕನೊರ್ವ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಸಂಭವಿದೆ.

ಹಾವೇರಿ ಮೂಲದ ರಾಜ ಯಾನೆ ರಜತ್ ಸಾಹೇಬ್(೨೪) ಮೃತಪಟ್ಟ ದುರ್ದೈವಿ. ಕಟ್ಟಡವೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾನೆಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಉಡುಪಿ: ಸರಕಾರಿ ಬಸ್ ಸಿಬ್ಬಂದಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗೆ ಖಾಸಗಿ ಬಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ಸಿನ ಚಾಲಕ ವಸಂತ ಛಲವಾದಿ, ನಿರ್ಮಾಹಕ ಸಂಗಮೇಶ ಉದಲಿ ಮೇಲೆ ಖಾಸಗಿ ಬಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ.

ರವಿ ಪೂಜಾರಿ ಹೆಸರಲ್ಲಿ ಬೆದರಿಕೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ರವಿ ಪೂಜಾರಿ ಸಹಚರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ತನ್ನ ಮೊಬೈಲ್‌ಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಉಡುಪಿ ಪ್ರವಾಸಿ ಮಂದಿರದ ಚಂದ್ರಹಾಸ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ. ಕರೆ ಮಾಡಿರುವ ವ್ಯಕ್ತಿಯು ತಾನು ರವಿ ಪೂಜಾರಿ ಸಹಚರನೆಂದು ಹೇಳಿಕೊಂಡಿದ್ದು, ನಿಮ್ಮ ಜಾಗವು ಮಾರಾಟವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಹಣದಲ್ಲಿ ನಮಗೂ ಪಾಲು ಕೊಡಬೇಕು ಎಂದು ಗದರಿಸಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಕಟಪಾಡಿ: ಮನೆಗೆ ನುಗ್ಗಿ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ-ಏಣಗುಡ್ಡೆ ಎಂಬಲ್ಲಿನ ನಿವಾಸಿ ರವಿರಾಜ ಶೆಟ್ಟಿಯವರ ಮನೆಗೆ ನುಗ್ಗಿದ ಕಳ್ಳರು ನಗ-ನಗದು ಕಳವುಗೈದ ಘಟನೆ ನಡೆದಿದೆ. ೨೦,೦೦೦ ರೂ. ನಗದು, ೫೫,೦೦೦ ರೂ. ಮೌಲ್ಯದ ಬೆಳ್ಳಿಯ ಸಾಮಾಗ್ರಿ, ದೈವದ ಕಾರ್ಯಕ್ರಮಕ್ಕೆಂದು ಇಟ್ಟಿದ್ದ ೧೫,೦೦೦ ರೂ. ನಾಗದೇವರಿಗೆ ಇಟ್ಟಿದ್ದ ೫,೦೦೦ ರೂ. ಹಾಗೂ ಬೆಳ್ಳಿ ಸೊತ್ತುಗಳನ್ನು ಕಳವುಗೈದಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಮೂರು ತಿಂಗಳಿಗೊಮ್ಮೆ ಏಣಗುಡ್ಡೆಯ ಮನೆಗೆ ಬರುತ್ತಿದ್ದ ರವಿರಾಜ ಶೆಟ್ಟಿಯವರು ಮಾ. ಒಂಬತ್ತರಂದು ಮನೆಗೆ ಬಂದಾಗ ಮನೆಯ ಬಾಗಿಲು ಮುರಿದು ಕಳ್ಳತನ ನಡೆಸಿದ್ದು ಬೆಳಕಿಗೆ ಬಂದಿದೆ.

ಕೋಳಿ ಪದಾರ್ಥ ಕೇಳಿದ್ದಕ್ಕೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಊಟಕ್ಕೆ ಕುಳಿತ್ತಿದ್ದ ವೇಳೆ ಕೋಳಿ ಪದಾರ್ಥ ಬಡಿಸುವಂತೆ ಹೇಳಿದ್ದಕ್ಕೆ ಆಕ್ಷೇಪ ಎತ್ತಿದ ಇಬ್ಬರು ವ್ಯಕ್ತಿಗಳು ವ್ಯಕ್ತಿಯ ನಾಲ್ಕು ಹಲ್ಲು ಮುರಿದ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ನಡೆದಿದೆ. ಸುಳ್ಯ ದಬ್ಬಡ್ಕದ ಗಿರೀಶ್ ಎಂಬವರ ಹಲ್ಲು ಮುರಿಯಲಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲ್ಮಕಾರಿನ ಬಾಳೆ ಬೈಲುಹೊಳೆ ಬದಿ ಈ ಭಾಗದ ಮಂದಿ ಗುಳಿಗ ದೈವ್ವಕ್ಕೆ ಅಗೇಲು ಮಾಡಲಾಗಿತ್ತು ಎನ್ನಲಾಗಿದೆ. ಊಟದ ವೇಳೆ ಗಿರೀಶ್ ಕೋಳಿ ಪದಾರ್ಥ ಬಡಿಸುವಂತೆ ಹೇಳಿದ್ದರೆನ್ನಲಾಗಿದೆ. ಅದರಂತೆ ಅವರು ಬಡಿಸಲು ಮುಂದಾದಾಗ ಹರಿಯಪ್ಪ ಗೌಡ ಮತ್ತು ಅನಂತಶಯನ ಆಕ್ಷೇಪ ವ್ಯಕ್ತಪಡಿಸಿ ಗಿರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ಗಿರೀಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಟಿಪಳ್ಳ: ಬಾರ್ ಸಿಬ್ಬಂದಿ ನಾಪತ್ತೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಕಾಟಿಪಳ್ಳದ ಒಂದನೇ ಬ್ಲಾಕ್‌ನ ನಿವಾಸಿ ಸುರೇಶ್ ಎಲ್. ಶೆಟ್ಟಿ (೫೧) ಎಂಬವರು ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದೆ. ಅವರು ಕಾಟಿಪಳ್ಳದ ಬಾರ್‌ವೊಂ ದರಲ್ಲಿ ಮೇಲ್ವಿಚಾರಕರಾಗಿ ದುಡಿಯು ತ್ತಿದ್ದು, ಮಾ. ೯ರಂದು ರಾತ್ರಿ ಗಣೇಶ್ ಪುರದಲ್ಲಿ ನಡೆಯುತ್ತಿದ್ದ ಕೋಲಕ್ಕೆ ಹೋಗುವುದಾಗಿ ಹೋದ ವರು ವಾಪಸಾಗಿಲ್ಲ. ಬಲಕೈಯಲ್ಲಿ 'ಎಸ್ ಎಂಬ ಇಂಗ್ಲೀಷ್‌ನಲ್ಲಿ ಬರೆದಿ ರುವ ಹಚ್ಚೆ ಇದ್ದು, ಮಾಹಿತಿ ಸಿಕ್ಕಿದವರು ಸುರತ್ಕಲ್ ಪೊಲೀಸ್ ಠಾಣೆ (೨೨೨೦೫೪೦)ಯನ್ನು ಸಂಪರ್ಕಿಸಲು ಕೋರಲಾಗಿದೆ.

ಶಾಲಾ ಬಾಲಕ ನಾಪತ್ತೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ಚಾಪತ್ತಿಮಾರು ನಿವಾಸಿಯಾದ ವಿದ್ಯಾರ್ಥಿಯೊಬ್ಬ ಕಳೆದ ೧೮ ದಿನಗಳ ಹಿಂದೆ ನಾಪತ್ತೆಯಾಗಿರುವ ಬಗ್ಗೆ ತಡ ವಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಇಲ್ಲಿನ ಅಬ್ದುಲ್ಲಾ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್(೧೫) ನಾಪತ್ತೆ ಯಾದ ಬಾಲಕ. ಈತ ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಫೆ. ೨೪ರಂದು ಮನೆಯಿಂದ ಶಾಲೆಗೆಂದು ಹೊರಟು ಹೋದಾತ ಬಳಿಕ ನಾಪತ್ತೆ ಯಾಗಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.
ಈತನ ಕುರಿತು ಮಾಹಿತಿ ಸಿಕ್ಕಿದಲ್ಲಿ ಸಂಪ್ಯ ಠಾಣೆಗೆ ಮಾಹಿತಿ ನೀಡುವಂತೆ ಅಥವಾ ಮೊಬೈಲ್:೯೦೧೯೯೬೪೭೮೨ಗೆ ಮಾಹಿತಿ ನೀಡುವಂತೆ ಸಂಪ್ಯ ಠಾಣಾಧಿಕಾರಿ ನಂದ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಲ್ಲೆ ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಬಾಡಿಗೆ ನೀಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಶನಿವಾರ ಹಲ್ಲೆ ನಡೆಸಿದ್ದ ಕಾರು ಚಾಲಕನನ್ನು ಸಂಪ್ಯ ಠಾಣಾಧಿಕಾರಿ ನಂದಕುಮಾರ್ ನೇತೃತದ ಪೊಲೀಸ್ ತಂಡ ಸೋಮ ವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.

ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಪ್ರವೀಣ್ ಶೆಟ್ಟಿ ಬಂಧಿತ ಆರೋಪಿ. ಈತ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಶನಿವಾರ ಸಂಜೆ ಬಾಡಿಗೆ ವಿಚಾರದಲ್ಲಿ ಇಲ್ಲಿನ ಭರಣ್ಯ ನಿವಾಸಿ ಸೋಮಶೇಖರ್ ಎಂಬವರಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು.

ಮಾಧ್ವ ವೈಷ್ಣವ ಸ್ವಾಮಿಗಳಿಂದ ದೇವಳಕ್ಕಾದ ಲೋಪದೋಷಗಳು

Posted by JAYAKIRANA Kirana on | 0 comments | Leave a comment...

ಧರ್ಮ ಭ್ರಷ್ಟಾಚಾರ
ಶ್ರೀಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇದರ ಸಂಶೋಧನಾತ್ಮಕ ಐತಿಹಾಸಿಕ ಹಿನ್ನೆಲೆ ಮತ್ತು ಮರೆಯಾದ ಸಿದ್ದಿವಿನಾಯಕ ದೇವರು.

ತಾ. ೧೫-೫-೧೯೫೬ರಂದು ಶ್ರೀಗಳವರು ಹಂಗಾರಕಟ್ಟೆ ಹತ್ತಿರ ಇರುವ ಸ್ಮಾರ್ತ ಸಂಪ್ರದಾಯದ ಬಾಳಕುದುರು ಮಠದಲ್ಲಿ ಸನ್ಮಾನಿತರಾಗಿ ಆ ವರ್ಷದ ಶ್ರೀಶಂಕರ ಜಯಂತೀ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಅನುಗ್ರಹ ಭಾಷಣ ಮಾಡಿ ಅಲ್ಲಿಂದ ಬೀಳ್ಕೊಂಡ ಶ್ರೀಗಳವರು ಸಾಲಿಗ್ರಾಮಕ್ಕೆ ತಾ. ೧೬ರಂದು ಚಿತ್ತೈಸಿದರು. ಅಲ್ಲಿ ಗುರು ನರಸಿಂಹ ದೇವರ ದರ್ಶನ ಮಾಡಿ ಸ್ಮಾರ್ತ ಸಂಪ್ರದಾಯದ ಕೂಟ ಮಹಾ ಜಗ ತ್ತಿನ ಶಿಷ್ಯ ವರ್ಗದವರಾದ ಕೋಟ ಬ್ರಾಹ್ಮಣರಿಂದ ಹೆಚ್ಚಿನ ಸನ್ಮಾನವನ್ನು ಪಡೆದು ಅಲ್ಲಿಯ ಅವರ ಸಮಾಜದ ವಾಣೀ ವಿಲಾಸ ಸಂಸ್ಕೃತ ಶಾಲೆಗೆ ಸಂದರ್ಶನವಿತ್ತು ಅಲ್ಲಿಯ ವಿದ್ವಾಂಸರನ್ನು ಅನುಗ್ರಹಿಸಿ ಕುಂದಾಪುರಕ್ಕೆ ತೆರಳುವವರಾದರು.
ಹಾಗೆಯೆ ಕುಂದಾಪುರ ತಾಲೂಕಿನಲ್ಲಿ ಕೆಲವು ಸ್ಥಳಗಳನ್ನು ಸಂದ ರ್ಶಿಸಿಕೊಂಡು ಅಲ್ಲಿಂದ ಪುನಃ ಹಿಂತಿರುಗಿ ಪುತ್ತೂರು ತಾಲೂಕಿನ ಮಹಾ ಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದರು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋಟ, ಶಿವಳ್ಳಿ, ಹವೀಕ, ಸ್ಥಾನಿಕಶಿವ ಬ್ರಾಹ್ಮಣ, ದೇಶಸ್ಥ, ಕರಾಡ, ಚಿತ್ಪಾವನರೆಂಬ ಬ್ರಾಹ್ಮಣ ಪಂಗಡಗಳು ತಮ್ಮೊಳಗೆ ಭೇದಭಾವನ್ನು ಕಟ್ಟಿಕೊ ಳ್ಳದಂತೆ ಮಾಡಲು ಸಹಭೋಜನ ಸಂತರ್ಪಣೆಯನ್ನು ಮಾಡಿಸಿದರು. ಈ ಸಂದರ್ಭದಲ್ಲಿ ಶ್ರೀಸುಬ್ರಹ್ಮಣ್ಯದಿಂದ ಶ್ರೀಗಳವರೆಗೆ ಆಮಂತ್ರಣವು ಬಂದಿದ್ದರೂ ಮಳೆಗಾಲವು ಆರಂಭಿಸಿದ ಕಾರಣ ಅವರು ಪರಿವಾರ ಸಮೇತ ಸುಬ್ರಹ್ಮಣ್ಯಕ್ಕೆ ಬರಲು ಅನಾನುಕೂಲವೆಂದು ಕಂಡು ಬಂದದ್ದರಿಂದ ಶ್ರೀಸುಬ್ರಹ್ಮಣ್ಯದ ಪ್ರಯಾಣವನ್ನು ನಿಲ್ಲಿಸಬೇಕಾಯಿತು.
ಈ ರೀತಿ ಜಿಲ್ಲೆಯ ಹೆಚ್ಚಿನ ಎಲ್ಲಾ ಸ್ಥಳಗಳಲ್ಲಿ ಸಂಚರಿಸಿ ವಿಜೃಂಭ ಣೆಯ ಸ್ವಾಗತವನ್ನು ಪಡೆದುಕೊಂಡು ಶ್ರೀಜಗದ್ಗುರುಗಳವರು ಪುತ್ತೂ ರಿಂದ ಕೊಡಗಿನ ಮಡಿಕೇರಿಗೆ ತೆರಳುವವರಾದರು. ಉಡುಪಿಯ ಮಾಧ್ವರು ಮಾತ್ರ ಜಗದ್ಗುರು ಮಠದ ಗೌರವಕ್ಕೆ ಅನುಗುಣವಾದ ರೀತಿಯ ಆಮಂ ತ್ರಣವನ್ನು ಕೊಡದೇ ಇದ್ದುದರಿಂದ ಉಡುಪಿಯನ್ನು ಸಂದರ್ಶಿಸುವ ಸಂದರ್ಭವು ಶ್ರೀಗಳವರಿಗೆ ಒದಗಲಿಲ್ಲ. ಇವರ ಸಂಚಾರ ಕಾಲದಲ್ಲಿ ಮೈಸೂರು ಸರಕಾರದವರು ಇವರಿಗೂ ಇವರ ಪರಿವಾರದವರಿಗೂ ಶೃಂಗೇರಿ ಮಠದ ಗೌರವಕ್ಕೆ ತಕ್ಕುದಾದ ಯೋಗ್ಯ ಪೋಲಿಸ್ ಗೌರವ ರಕ್ಷಣೆಯನ್ನು ಕೊಟ್ಟಿದ್ದರು. ಈ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೃಂಗೇರಿಯ ಈಗಿನ ಜಗದ್ಗುರುಗಳವರ ವಿಜಯ ಯಾತ್ರೆಯು ಶಾಂತ ರೀತಿಯಿಂದ ವೈಭವ ಪೂರಿತವಾಗಿ ನಡೆಯಿತು. ಇವರ ವಿಜಯ ಯಾತ್ರೆಯಿಂದ ಶ್ರೀಶೃಂಗೇರಿ ಮಠಕ್ಕೆ ಸಾಧಾರಣ ಎರಡು ಮೂರು ಶತಮಾನಗಳಿಂದ ಬಿಟ್ಟುಹೋದ ಕನ್ನಡ ಜಿಲ್ಲೆಯ ಸಂಪರ್ಕವು ಪುನಃ ವ್ಯವಸ್ಥಿತ ರೀತಿಯಲ್ಲಿ ನೆಲೆಗೊಂಡಿತು.
ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರು ಪರಂಪರಾಂ
ಶುಭಂ ಭದ್ರಂ ಮಂಗಳಂ
ಶ್ರೀಸುಬ್ರಹ್ಮಣ್ಯ ಮಠದ ಮಾಧ್ವ ವೈಷ್ಣವ ಸ್ವಾಮಿಗಳು
ಇವರಿಂದ ದೇವಳಕ್ಕೆ ಒದಗಿದ ಲೋಪದೋಷಗಳು
ಈ ಸುಬ್ರಹ್ಮಣ್ಯ ಮಠವು ದೇವಳದ ಹೊರ ಅಂಗಣದ ಮೂಡು ಆಗ್ನೇಯ ಮೂಲೆಯಲ್ಲಿದೆ. ಇದರ ಸರ್ವೆ ನಂಬ್ರವು ೮೨-೨ ಆಗಿರು ತ್ತದೆ. ಕ್ರಿಸ್ತ ಶಕ ೧೯೦೫ನೇ ಇಸವಿಯ ಸೆಟ್ಲ್‌ಮೆಂಟಿನ ಪ್ರಕಾರ ಮುಂಚಿನ ಈ ಮಠದ ಅಡಿಸ್ಥಳದ ಮೂಲಿ ವರ್ಗವನ್ನು ಪರಿಶೀಲಿಸಿ ನೋಡುವಾಗ ಈ ಸರ್ವೆ ನಂಬ್ರ ೮೨-೨ ಸ್ಥಾನಿಕ ಸ್ಮಾರ್ತ ಬ್ರಾಹ್ಮಣ ಇಂಜಾಡಿ ಕೃಷ್ಣಯ್ಯ ವರ್ಗದಲ್ಲಿ ಹೆಬ್ಬಾರ ಸುಬ್ರಾಯರ ಕುಡ್ತಲೆಗೆ ಸೇರಿದ್ದಾಗಿ ಇತ್ತೆಂದು ತಿಳಿದು ಬರುತ್ತದೆ. ಇದರ ವಿಸ್ತೀರ್ಣ ಬರೇ ೨೪ ಸೆಂಟ್ಸು ಮಾತ್ರ. ಶ್ರೀ ಸುಬ್ರಹ್ಮಣ್ಯ ದೇವಸ್ತಾನವು ಸ. ನಂಬ್ರ ೮೨-೧ರಲ್ಲಿದೆ. ಇದು ಪರಂ ಬೋಕು ಸ್ಥಳವಾಗಿದೆ. ಈ ಪರಂಬೋಕು ಸ್ಥಳದಲ್ಲಿ ದೇವಸ್ಥಾನವೂ ಅದರ ಹೊರ ಅಂಗಣವೂ ಸೇರಿದೆ. ಈಗ ಈ ಮಾಧ್ವ ಮಠದ ಸ್ವಾಮಿ ಗಳ ಆರಾಧ್ಯ ದೇವರಾದ ಸಂಪುಟ ನರಸಿಂಹ ದೇವರು ದೇವಸ್ಥಾನದ ಪರಂಬೋಕು ಸ್ಥಳದಲ್ಲಿ ಅಂದರೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಒಳ ಅಂಗಣದ ಆಗ್ನೇಯ ಮೂಲೆಯಲ್ಲಿ ಇರುವ ಗುಡಿಯಲ್ಲಿದೆ. ಒಂದು ಸ್ವತಂತ್ರ ಮಠದ ದೇವರು ಒಂದು ಸಾರ್ವಜನಿಕ ದೇವಸ್ಥಾನದ ಒಳ ಅಂಗಣದ ಗುಡಿಗೆ ಹೇಗೆ ಮತ್ತು ಏಕೆ ಬಂತು?
ಈ ಮಠದಲ್ಲಿ ಅಣ್ಣ ತಮ್ಮಂದಿರಿಬ್ಬರು ಸ್ವಾಮಿಗಳಾಗಿದ್ದುಕೊಂಡು ದೇವಳದ ಒಳ ಅಂಗಣದ ಆಗ್ನೇಯ ಮೂಲೆಯಲ್ಲಿರುವ ಗುಡಿಯಲ್ಲಿ ಇರಿಸಲ್ಪಟ್ಟ ತಮ್ಮ ವಠಾರದಲ್ಲಿದ್ದ ಸಂಪುಟ ನರಸಿಂಹ ದೇವರ ಅರ್ಚಕ ತನವನ್ನು ಮಾಡುತ್ತಾರೆ. ಈ ಮಠದ ಮೆನೇಜರರೂ ಸ್ವಾಮಿಗಳಾದ ಅಣ್ಣನೇ ಆಗಿರುತ್ತಾರೆ. ಈ ಮಠವನ್ನು ಮಠವೆಂದು ಹೇಳುವ ಬದಲು ಒಂದು ಕುಟುಂಬದ ಮನೆಯೆಂದು ಹೇಳಿದರೂ ತಪ್ಪಾಗಲಾರದು.
ಅತಿ ಪೂರ್ವದಲ್ಲಿ ಅಂದರೆ ೧೮ನೇ ಶತಮಾನದ ಆದಿಯಲ್ಲಿ ಈ ಮಠದವರಿಗೆ ಸ್ವಂತ ಮಠವು ಶ್ರೀಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇದ್ದಿಲ್ಲವೆಂದೂ ಈ ಸ್ವಾಮಿಗಳು ತಮ್ಮ ಉಡುಪಿಯ ಮಾಧ್ವರನ್ನು ಕೂಡಿಕೊಂಡು ಸುಬ್ರಹ್ಮಣ್ಯಕ್ಕೆ ಚಂಪಾ ಷಷ್ಠಿಯ ಸಮಯ ಉತ್ಸವಕ್ಕೆ ಬಂದು ಕ್ಷೇತ್ರದಲ್ಲಿ ರುವ ಭಿಕ್ಷುಕ ಮಠದಲ್ಲಿ ಉಳಿದುಕೊಂಡು ಉತ್ಸವ ಮುಗಿದ ನಂತರ ಹೋಗುತ್ತಿದ್ದರೆಂದು ಗುರುವಂಶ ಕಾವ್ಯದ ಆಧಾರದಿಂದ ತಿಳಿದು ಬರು ತ್ತದೆ. ೧೮ನೇ ಶತಮಾನದ ಆದಿಯಲ್ಲಿ ಆಗಿನ ಶೃಂಗೇರಿ ಜಗದ್ಗುರುಗ ಳಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳು ಶ್ರೀಸುಬ್ರಹ್ಮಣ್ಯಕ್ಕೆ ಚಿತ್ತೈ ಸಿದ ಸಮಯ ತಾವು ಗಲಾಟೆ ಎಬ್ಬಿಸಿ ಅವಮಾನಿತರಾಗಿ ಹೋದ ಮಾಧ್ವ ಸ್ವಾಮಿಗಳೊಬ್ಬರು. ತನ್ನ ಸ್ಥಾನವನ್ನು ಸುಬ್ರಹ್ಮಣ್ಯದಲ್ಲಿ ಸ್ಥಿರಪಡಿ ಸಲು ಅನುಕೂಲವಾಗುವಂತೆ ಆಗಿನ ಪಾಳೆಗಾರರ ಬಲ್ಲಾಳ ರಾಯರ ಒಪ್ಪಿಗೆ ಪಡೆದು ಸುಬ್ರಹ್ಮಣ್ಯದ ಹತ್ತಿರ ಇರುವ ಸಂಕೇತ ಕುಕ್ಕೆ ಗ್ರಾಮದ ಇಂಜಾಡಿಯಲ್ಲಿ ಮಠವೊಂದನ್ನು ಕಟ್ಟಿಕೊಂಡು ಕುಳಿತರೆಂದೂ ತಿಳಿದು ಬರುತ್ತದೆ. ಕೆಲವು ಸಮಯದ ನಂತರ ಅಂದರೆ ಸಾಧಾರಣ ೧೯ನೇ ಶತಮಾನದ ಆದಿಯಲ್ಲಿ ಆಗಿನ ಸ್ವಾಮಿಗಳು ಇಂಜಾಡಿಯಲ್ಲಿದ್ದ ತನ್ನ ಮಠವು ಸುಟ್ಟು ಹೋಯಿತೆಂಬ ನೆವನದಿಂದ ಸುಬ್ರಹ್ಮಣ್ಯನ ಆಗಿನ ಆಡಳಿತೆದಾರರಾದ ಸ್ಮಾರ್ತ ಶಿವ ಬ್ರಾಹ್ಮಣರಾದ ಹೆಬ್ಬಾರರ ಸ್ನೇಹ ವನ್ನು ಬೆಳೆಸಿಕೊಂಡು ಅವರ ಆಶ್ರಯವನ್ನು ಪಡೆದು ದೇವಸ್ಥಾನದ ಅಷ್ಟೋತ್ತರ ಉಪಾದಿಯೊಂದನ್ನು ವಹಿಸಿಕೊಂಡು ದೇವಸ್ಥಾನದ ಪೌಳಿಯ ಆಗ್ನೇಯ ಮೂಲೆಯಲ್ಲಿ ವಿನಾಯಕ ದೇವರ ಗುಡಿಯ ಎದುರಲ್ಲಿ ತನ್ನ ಕೈ ಪೂಜೆಯ ನರಸಿಂಹ ಸಾಲಿಗ್ರಾಮ ಇರುವ ಸಂಪುಟವನ್ನು ಇಟ್ಟುಕೊಂಡು ವಾಸಿಸಲು ಆರಂಭಿಸಿದರೆಂದೂ ಹಾಗೆ ದೇವಳದ ಉದ್ಯೋ ಗವನ್ನು ಮಾಡುತ್ತಿದ್ದ ಮಾಧ್ವ ಸ್ವಾಮಿಗಳು ಕಡುಮಾಧ್ವರಾದ ಮೈಸೂರು ದಿವಾ ಪೂರ್ಣಯ್ಯನವರ ಕೃಪೆಗೆ ಪಾತ್ರರಾಗಿದ್ದಾರೆಂದೂ ತಿಳಿದು ಬರುತ್ತದೆ. ಹಾಗೆ ಅವರ ವಿನಾಯಕ ಗುಡಿಯ ಎದುರಲ್ಲಿ ನರಸಿಂಹ ದೇವರ ಸಂಪುಟವನ್ನು ಇಟ್ಟು ಪೂಜಿಸಿಕೊಂಡು ಬಂದುದರಿಂದ ಆ ಅಂಬ ಲಕ್ಕೆ ನರಸಿಂಹ ಅಂಬಲವೆಂಬ ಹೆಸರು ಕಾಯಂ ಆಗಿ ನಿಂತಿತು. ಇವರ ಮಠವೂ, ಇವರ ಗುಡಿಯೂ ಅದಕ್ಕೆ ಮೊದಲು ದೇವಸ್ಥಾನದ ಹೊರಗೆ ಸಾಧಾರಣ ಅರ್ಧ ಮೈಲು ದೂರದಲ್ಲಿ ಇದ್ದುದರಿಂದ ಇವರು ಒಬ್ಬ ದೊಡ್ಡ ಸಂಸ್ಥಾನವಂದಿಕರೆಂಬ ಹೆಸರನ್ನು ಇರಿಸಿಕೊಂಡದ್ದಾಗಿದೆ. ಇವರು ಸನ್ಯಾಸಿಗ ಳಾಗಿದ್ದು ದರಿಂದ ಇವರಿಗೆ ದೇವಸ್ಥಾನದ ಮರು ಮರ್ಯಾದೆ ಕೊಟ್ಟು ಪರ್ವಕಾಲಗಳಲ್ಲಿ ಆಮಂತ್ರಣ ಕೊಡುತ್ತಿದ್ದರು. ಈ ರೀತಿಯ ಮರ್ಯಾದೆ ಗಳನ್ನೆಲ್ಲಾ ತನ್ನ ಹಕ್ಕಿನದೆಂದು ಮಾಡಿಕೊಂಡು ದೇವಳದ ಆಡಳಿತೆಗೆ ಪ್ರವೇಶಿ ಸುವವರಾದರು. ಹೀಗಿರುವ ಸಂದರ್ಭದಲ್ಲಿ ಶ್ರೀಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಬಂದ ಶಿವಶಂಕರ ಬ್ರಹ್ಮಚಾರಿ ಎಂಬವರಿಂದ ಆಗಿನ ಸ್ವಾಮಿಗಳ ಶಿಷ್ಯ ವರ ದರಾಜ ಸ್ವಾಮಿಗಳೆಂಬವರು ಸ್ವರ್ಣಕ್ರಿಯೆ ಅಂದರೆ ಚಿನ್ನ ಮಾಡುವ ಕ್ರಮ ಕಲಿತು ಚಿನ್ನ ಮಾಡುತ್ತಾ ತಮ್ಮ ಹೆಸರಲ್ಲಿ ನಾಣ್ಯಗಳನ್ನು ಮಾಡಲು ಕ್ರಮ ಕಲಿತು ಚಿನ್ನ ಮಾಡುತ್ತಾ ತಮ್ಮ ಹೆಸರಲ್ಲಿ ನಾಣ್ಯಗಳನ್ನು ಮಾಡಲು ಆರಂಭಿ ಸಿದರೆಂದೂ ಈ ವಿಷಯವು ಸರಕಾರಕ್ಕೆ ತಿಳಿದೊಡನೆ ಸರಕಾರದ ದಲಾ ತರು ಬಂದು ಇವರನ್ನು ವಿಚಾರಿಸುವಾಗ ಈ ಶಿಷ್ಯ ಸ್ವಾಮಿಗಳು ಕೊಡಗಿಗೆ ಹತ್ತಿರ ಇರುವ ರಾಮನಾಥಪುರ ಎಂಬಲ್ಲಿಗೆ ಓಡಿಹೋಗಿ ಅಲ್ಲಿ ಕೆಲವು ಕಾಲ ಇದ್ದು ಅಲ್ಲಿ ಇರುವ ಒಂದು ಸುಬ್ರಹ್ಮಣ್ಯ ದೇವಸ್ಥಾನವನ್ನು ತಮ್ಮದನ್ನಾಗಿ ಮಾಡಿಕೊಂಡು ಅಲ್ಲಿಯೇ ಇದ್ದರೆಂದು ತಿಳಿದುಬರುತ್ತದೆ.
ಇದಕ್ಕೆ ದೃಷ್ಟಾಂತವಾಗಿ ಈಗಲೂ ಈ ಮಾಧ್ವ ಮಠಕ್ಕೆ ರಾಮನಾಥಪು ರದಲ್ಲಿ ಒಂದು ಸುಬ್ರಹ್ಮಣ್ಯ ದೇವಸ್ಥಾನ ಇರುವುದನ್ನು ಕಾಣಬಹುದು. ಈ ಸುಬ್ರಹ್ಮಣ್ಯದಂತೆ ಷಷ್ಠಿ ಸಮಯದಲ್ಲಿ ಅಲ್ಲಿ ಉತ್ಸವಗಳು ಈಗಲೂ ನಡೆಯು ತ್ತವೆ. ಈಗಲೂ ಆ ಸಮಯದಲ್ಲಿ ಈ ಮಠದವರ ಕಡೆಯಿಂದ ಯಾರಾದ ರೊಬ್ಬರು ಅಲ್ಲಿಗೆ ಹೋಗುತ್ತಾರೆ. ಇಲ್ಲಿ ಸಂಪಾದಿಸಿದ ಹಣದಿಂದ ಆ ದೇವ ಸ್ಥಾನಕ್ಕೆ ಬೇಕಾದ ಬೆಳ್ಳಿ ಪಾಲಕಿ ವಗೈರೆ ಅನೇಕ ಸೊತ್ತುಗಳನ್ನು ಇಲ್ಲಿ ಮಾಡಿ ಸಿರುವುದು ತಿಳಿದುಬರುತ್ತದೆ. ಮಾಧ್ವ ಬ್ರಾಹ್ಮಣರಲ್ಲಿ ಅವರವರ ಮಠಗಳ ಪದ್ಧತಿ ಪ್ರಕಾರ ಮಠಗಳ ತಾರತಮ್ಯವನ್ನು ತೋರಿಸುವುದಕ್ಕೆ ಅವರು ಹಾಕಿ ಕೊಳ್ಳುವ ಗೋಪೀನಾಮ ಮತ್ತು ಮುದ್ರೆಗಳಲ್ಲಿ ವ್ಯತ್ಯಾಸಗಳಿವೆ. ಅವರವರ ಮುದ್ರೆನಾಮಗಳಿಂದ ಅವರು ಇಂತಹ ಮಠದ ಶಿಷ್ಯರೆಂದು ಗುರುತಿಸಬ ಹುದಾಗಿದೆ. ಆ ಪ್ರಕಾರ ಈ ದೇವಳದಲ್ಲಿ ಈಗ ಪೂಜೆ ಮತ್ತು ತಂತ್ರ ಮಾಡುವ ಆಸ್ರಣ್ಣರುಗಳು ಸೋದೆ ಮಠದ ಶಿಷ್ಯರಾಗಿದ್ದರೂ, ಈ ಮಠದ ಸ್ವಾಮಿಗಳು ಈ ದೇವಸ್ಥಾನದ ಆಡಳಿತೆ ತಮಗೆ ಬಂದ ನಂತರ ಆಸ್ರಣ್ಣ ರಿಗೂ ಆಡಳಿತೆ ಸನದು ಸಿಕ್ಕುವಂತೆ ಮಾಡಿಸಿ ಅವರ ಮನಸ್ಸನ್ನು ಒಲಿಸಿ ಮುದ್ರೆಯನ್ನು ಒತ್ತಾಯದಿಂದ ಕೊಡಿಸಿದರೆಂದೂ ತಿಳಿದು ಬರುತ್ತದೆ.

ಮುಸ್ಲಿಮರನ್ನು ಸ್ವಾಭಿಮಾನದಿಂದ ಬದುಕಲು ಬಿಡಿ

Posted by JAYAKIRANA Kirana on | 0 comments | Leave a comment...


ಮುಸ್ಲಿಮರನ್ನು ಓಟ್ ಬ್ಯಾಂಕಾಗಿ ಮಾತ್ರ ಬಳಸುತ್ತಿರುವ ಕೆಲವು ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ನೀಡಿದ ಸವಲತ್ತು, ಸ್ಥಾನಮಾನ, ಹುದ್ದೆಗಳು ಶೂನ್ಯ. ಜಿಲ್ಲೆಯಲ್ಲಿ ಯಾವುದೇ ಮುಸ್ಲಿಂ ಯುವಕ ಜನಪ್ರಿಯನಾದಾಗ, ರಾಜಕೀಯವಾಗಿ ಮೇಲೇರಲು ಪ್ರಯತ್ನಿಸಿದಾಗ ಅವರನ್ನು ಮುಗಿಸಿ ಮತ್ತೊಬ್ಬನಿಗೆ ಮಣೆ ಹಾಕುವ ಸ್ವಜನ ಪಕ್ಷಪಾತಿಗಳು ಇದುವರೆಗೂ ಈ ಜಿಲ್ಲೆಯ ಒಬ್ಬನೇ ಒಬ್ಬ ಮುಸ್ಲಿಮನನ್ನು ರಾಜಕೀಯವಾಗಿ ಮೇಲೇರಲು ಬಿಟ್ಟಿಲ್ಲ.

ಎಂ.ಅನ್ವರ್ ರೀಕೋ, ಮಂಗಳೂರು
ಬೈಕಂಪಾಡಿಯ ಗ್ರಾಮೀಣ ಪರಿಸರದಲ್ಲಿ ಸಾಮಾನ್ಯ ಮಧ್ಯಮ ಕುಟುಂಬ ದಲ್ಲಿ ಜನಿಸಿ ಕಷ್ಟಪಟ್ಟು ಶಿಕ್ಷಣ ಪಡೆದು ಇಂಜಿನಿಯರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಸರಳ ಸಜ್ಜನ ಯುವಕ ಎನ್.ಬಿ. ಅಬೂಬಕ್ಕರ್. ಇವರು ವೃತ್ತಿ ಜೀವನದೊಂದಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಜನಾನುರಾಗಿ, ಬೈಕಂಪಾಡಿ ಜುಮ್ಮಾ ಮಸೀದಿ ಅಧ್ಯಕ್ಷ ರಾಗಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ತನ್ನ ಹುಟ್ಟೂರಿನ ಅಭಿವೃದ್ಧಿಗೆ ಅವಿಸ್ಮರಣೀಯ ಕೊಡುಗೆ ನೀಡಿದವರು. ಇವರ ಪ್ರತಿಭೆ, ಕಾರ್ಯದಕ್ಷತೆ ಪ್ರಾಮಾ ಣಿಕತೆಯನ್ನು ಮನಗಂಡ ಕರ್ನಾಟಕ ರಾಜ್ಯ ಸರಕಾರ ಇವರಿಗೆ ಪ್ರತಿಷ್ಠೆಯ 'ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮ'ದ ಅಧ್ಯಕ್ಷತೆಯನ್ನು ನೀಡಿದ್ದು ಆ ಜವಾಬ್ದಾರಿಯಲ್ಲಿ ಅವರು ನಿರೀಕ್ಷೆಗೂ ಮೀರಿದ ಪ್ರಗತಿಯನ್ನು ಸಾಧಿಸಿ ಜನಪ್ರಿಯತೆಯ ಶಿಖರ ಏರುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಏಳಿಗೆ, ಜನಪ್ರಿಯತೆ ಹಾಗೂ ರಾಜಕೀಯ ಮೇಲೇರಿಕೆಯನ್ನು ಕಂಡು ಸಹಿ ಸದ ಕೆಲವು ವ್ಯಕ್ತಿಗಳು ಅವರ ತೇಜೋವಧೆಗೆ ವ್ಯವಸ್ಥಿತ ಸಂಚು ನಡೆಸುತ್ತಿರು ವುದು ಅತ್ಯಂತ ಖಂಡನೀಯ.
ಮುಸ್ಲಿಮರನ್ನು ಓಟ್ ಬ್ಯಾಂಕಾಗಿ ಮಾತ್ರ ಬಳಸುತ್ತಿರುವ ಕೆಲವು ರಾಜ ಕೀಯ ಪಕ್ಷಗಳು ಮುಸ್ಲಿಮರಿಗೆ ನೀಡಿದ ಸವಲತ್ತು, ಸ್ಥಾನಮಾನ, ಹುದ್ದೆಗಳು ಶೂನ್ಯ. ಜಿಲ್ಲೆಯಲ್ಲಿ ಯಾವುದೇ ಮುಸ್ಲಿಂ ಯುವಕ ಜನಪ್ರಿಯನಾದಾಗ, ರಾಜ ಕೀಯವಾಗಿ ಮೇಲೇರಲು ಪ್ರಯತ್ನಿಸಿದಾಗ ಅವರನ್ನು ಮುಗಿಸಿ ಮತ್ತೊಬ್ಬನಿಗೆ ಮಣೆ ಹಾಕುವ ಸ್ವಜನ ಪಕ್ಷಪಾತಿಗಳು ಇದುವರೆಗೂ ಈ ಜಿಲ್ಲೆಯ ಒಬ್ಬನೇ ಒಬ್ಬ ಮುಸ್ಲಿಮನನ್ನು ರಾಜಕೀಯವಾಗಿ ಮೇಲೇರಲು ಬಿಟ್ಟಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ಮೇಲೆ ಬಂದರೂ ಸಹ ಅವರನ್ನು ರಾಜಕೀಯ ಸಮಾಧಿಗೆ ಸೇರಿಸಲಾಗಿದೆ.
ಮುಖ್ಯವಾಗಿ ಕಾಂಗ್ರೆಸ್‌ನ ಈ ಮತಾಂಧ ತತ್ವಕ್ಕೆ ಬೇಸತ್ತ ಜಿಲ್ಲೆಯ ಮುಸ್ಲಿಮ್ ಸಮುದಾಯ ಕಾಂಗ್ರೆಸ್ಸಿನಿಂದ ದೂರವಾದ ಕಾರಣದಿಂದಲೇ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಲ್ಲದೆ ನಾಶದ ಅಂಚನ್ನು ತಲುಪಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಸಮುದಾಯಕ್ಕೆ ಒಂದು ನಿರ್ದಿಷ್ಟ ನಿಲವು ನೀಡಲು ನಿರ್ಧ ರಿಸಿದ ಎನ್.ಬಿ.ಅಬೂಬಕ್ಕರ್ ಧೈರ್ಯದಿಂದ ಭಾರತೀಯ ಜನತಾ ಪಕ್ಷ ಸೇರಿ ದರು. ಬಿಜೆಪಿಗೆ ಮುಸ್ಲಿಮರು ಹೆದರಬಾರದು, ಕಾಂಗ್ರೆಸ್ಸಿಗಿಂತ ಬಿಜೆಪಿ ಮುಸ್ಲಿ ಮರ ಪಾಲಿಗೆ ಸದಾ ಉತ್ತಮ ಆಯ್ಕೆ ಎಂದು ಸಾರಿದರು. ಇವರ ಈ ನಿಲುವು ಮುಸ್ಲಿಮರಿಗೆ ನವ ಉತ್ಸಾಹ ತುಂಬಿ ಮುಸ್ಲಿಮ್ ಯುವಕರು ಬಿಜೆಪಿಗೆ ಒಲವು ತೋರಿಸಿದರು. ಇದರ ಫಲವಾಗಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸುರತ್ಕಲ್ ಕ್ಷೇತ್ರದಲ್ಲಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾ ಯವಾಗಿ ಸೋತು ಸುಣ್ಣವಾಯಿತು.
ಆ ನಂತರದ ಬೆಳವಣಿಗೆಗಳಲ್ಲಿ ಅಬೂಬಕ್ಕರ್‌ರವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅಭಿವೃ ದ್ದಿಯ ಹೊಸ ಆಯಾಮವನ್ನೇ ಪ್ರಾರಂಭಿಸಿದರು. ಕಾಂಗ್ರೆಸ್‌ನ ಅಧಿಕಾರದ ಅವಧಿಯಲ್ಲಿ ಈ ನಿಗಮಕ್ಕೆ ಬರುತ್ತಿದ್ದ ಹಣವನ್ನು ನಿಜವಾದ ಅರ್ಹ ಫಲಾ ನುಭವಿಗಳಿಗೆ ನೀಡದೆ ಬಂಧು, ಬಳಗ, ಬೆಂಬಲಿಗರಿಗೆ ಹಂಚಿ ದೋಚುತ್ತಿದ್ದ ಜನರು ಈಗ ನಿರಾಶರಾಗಿದ್ದಾರೆ. ಅಬೂಬಕ್ಕರ್‌ರ ಅವಧಿಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಸಹಸ್ರಾರು ಮುಸ್ಲಿಂ ಮಹಿಳೆಯರು ಹಾಗೂ ನಿರುದ್ಯೊಗಿ ಯುವ ಕರು ಇದರ ಲಾಭ ಪಡೆದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಸಿನ ನಿಜ ಬಣ್ಣ ಬಯಲಾಗಿ ಅವರು ಕಂಗಾಲಾಗಿದ್ದಾರೆ.
೨೦೦೯ ಫೆಬ್ರವರಿ ತಿಂಗಳಲ್ಲಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎನ್.ಬಿ. ಅಬೂಬಕ್ಕರ್‌ವರು ತಮ್ಮ ಅವಧಿಯ ಎರಡನೆ ವರ್ಷದಲ್ಲಿ ಒಂದು ಲಕ್ಷದ ನಲುವತ್ತು ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ೨೩೫ ಕೋಟಿಗೂ ಅಧಿಕ ಸಾಲ ಸೌಲಭ್ಯ ನೀಡಿದ್ದಾರೆ. ೩೦ ಜಿಲ್ಲೆಗಳಲ್ಲಿ ನಿಗಮದ ಪ್ರತ್ಯೇಕ ಕಚೇರಿ ತೆರೆದು ದಾಖಲೆಯ ೪೦ ಕೋಟಿ ಮರುಪಾವತಿಯನ್ನು ದೊರಕಿಸಿದ್ದಾರೆ. ದಳ್ಳಾ ಳಿಗಳ ಹಾವಳಿ ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಮುಖ್ಯಮಂತ್ರಿ ಗಳು ಹಾಗೂ ರಾಜ್ಯ ಸರ್ಕಾರ ಎನ್. ಬಿ. ಅಬೂಬಕ್ಕರ್‌ರವರ ಕಾರ್ಯದಕ್ಷತೆ ಯನ್ನು ಪ್ರಶಂಶಿಸಿ ಪ್ರೋತ್ಸಾಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಫಲವಾಗಿ ಇಂದು ಮುಸ್ಲಿಮ್ ಸಮುದಾಯ ಕಾಂಗ್ರೆಸ್ಸಿನಿಂದ ದೂರವಾಗುತ್ತಿದ್ದು, ಅಬೂಬ ಕ್ಕರ್‌ರವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಜನರ ಪ್ರಾಮಾಣಿಕ ಮುಸ್ಲಿಂ ಯುವ ಕನ ರಾಜಕೀಯ ಅಭಿವೃದ್ದಿಯನ್ನು ಸಹಿಸದ ಜಿಲ್ಲೆಯ ಕಾಂಗ್ರೆಸ್ ಧುರೀಣರು ಕೆಲವು ಮುಸ್ಲಿಂ ಯುವಕರನ್ನೇ ಬಳಸಿಕೊಂಡು ಸಮುದಾಯದಲ್ಲಿ ಒಡಕು ಮೂಡಿ ಸಲು ಹಾಗೂ ಕೋಮು ಸಾಮರಸ್ಯ ಹಾಳು ಮಾಡಲು ಹೊರಟಿರುವುದು ವಿಷಾ ದನೀಯ. ಇನ್ನಾದರೂ ಕಾಂಗ್ರೆಸ್ಸಿನವರು ಇಂತಹ ಹೇಯ ಕೃತ್ಯ ಮಾಡದೆ, ಮುಸ್ಲಿ ಮರ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕು. ಇಲ್ಲ ದಿದ್ದರೆ ಈಗಾಗಲೇ ಜಿಲ್ಲೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಮುಂದಿನ ಚುನಾವಣೆಗಳಲ್ಲಿ ಠೇವಣಿ ಕಳಕೊಳ್ಳುವುದು ನಿಶ್ಚಿತ. ಕೊನೆಯದಾಗಿ ಕಾಂಗ್ರೆಸ್ ನವರಿಗೆ ಒಂದು ವಿನಂತಿ. ಪಕ್ಷದ ಹೆಸರಿನಲ್ಲಿ ರಾಜಕೀಯ ಮಾಡಿ, ಆದರೆ ಮುಸ್ಲಿಂ ಒಗ್ಗಟ್ಟನ್ನು ಒಡೆದು ಅವರನ್ನು ವಂಚಿಸಿ ಸಮಾಧಿಯ ಮೇಲೆ ಅಧಿಕಾ ರದ ಬಂಗಲೆ ಕಟ್ಟಲು ಪ್ರಯತ್ನಿಸಬೇಡಿ. ದಯವಿಟ್ಟು ಮುಸ್ಲಿಮರನ್ನು ಸ್ವಾಭಿಮಾ ನದೊಂದಿಗೆ ಬದುಕಲು ಬಿಡಿ.

ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೨೦ ವರ್ಷದ ಯುವತಿ. ಖಾಸಗಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಎಣ್ಣೆಕಪ್ಪು ಬಣ್ಣವನ್ನು ಹೊಂದಿದ್ದು ಆಕರ್ಷಕವಾಗಿದ್ದೇನೆ. ನನ್ನ ಒಂದೇ ಒಂದು ಸ್ವಭಾವವೆಂದರೆ ಜಗಳ ಗಂಟಿತನ. ಇದನ್ನು ಎಷ್ಟೇ ಪ್ರಯತ್ನಪಟ್ಟರೂ ನನ್ನಿಂದ ಬಿಡಲಾಗು ತ್ತಿಲ್ಲ. ಈ ಕಾರಣಕ್ಕಾಗಿ ನಾನು ಯಾರನ್ನು ಎಷ್ಟೇ ಇಷ್ಟಪಟ್ಟರೂ ಅವರು ನನ್ನ ಸ್ವಭಾವದಿಂದ ದೂರವಾಗಿಬಿಡುತ್ತಾರೆ. ಈಗೀಗ ನನಗೆ ಈ ಸಮಸ್ಯೆ ಹೆಚ್ಚಾಯಿತು ಎಂದು ಅನಿಸುತ್ತದೆ. ಕಾಲೇಜಿನಲ್ಲಿ ತುಂಬಾ ಓದಲು, ಬರೆಯಲು ಇದ್ದ ದಿನ ನನ್ನನ್ನು ನಾನೇ ಕಂಟ್ರೋಲ್ ಮಾಡಲಾಗುತ್ತಿರಲಿಲ್ಲ. ಆಗ ನನ್ನ ಗೆಳತಿಯರ ಮೇಲೆ ರೇಗಾಡು ತ್ತೇನೆ. ಈ ಕಾರಣಕ್ಕಾಗಿ ನನ್ನ ಸ್ನೇಹಿತೆಯರು ನನ್ನಿಂದ ಬೇಗನೆ ದೂರವಾಗಿಬಿಡುತ್ತಿದ್ದರು. ನನ್ನ ಜತೆ ಯಾರೂ ಸ್ನೇಹ ಬೆಳೆಸುವು ದಿಲ್ಲ. ಅವರಿಗೆ ನನ್ನ ವರ್ತನೆ ಇಷ್ಟವಾಗುವುದಿಲ್ಲವಂತೆ. ನನಗೆ ಮನೆ ಯಲ್ಲಿ ಯಾವುದಕ್ಕೂ ಕೊರತೆಯಿಲ್ಲ. ನನಗೆ ಚಿಕ್ಕಂದಿನಿಂದಲೂ ತುಂಬಾ ಹಠಮಾರಿ ಸ್ವಭಾವ ಎಂದು ಮನೆಯಲ್ಲಿ ಹೇಳುತ್ತಾರೆ. ಯಾರೊಂದಿಗೆ ಮಾತಾಡಬೇಕಾದರೂ ನನ್ನ ಮಾತಿಗೆ ಎದುರಾಡಿ ದರೆ ಬೇಗನೆ ಕೋಪ ಬರುತ್ತದೆ. ಕೆಲವೊಮ್ಮೆ ನನ್ನ ಕೋಪಕ್ಕೆ ಕಾರ ಣಗಳಿರುವುದಿಲ್ಲ. ಮನೆಯಲ್ಲಿ ನನ್ನನ್ನು ಎಲ್ಲರೂ ತುಂಬಾ ಇಷ್ಟಪ ಡುತ್ತಾರೆ. ಆದರೆ ನನಗೆ ಎಲ್ಲರೊಂದಿಗೆ ಬೆರೆಯಲು ಮನಸ್ಸು ಬರು ವುದಿಲ್ಲ. ನನಗೆ ಸರಿ ಹೊಂದುವವರು ಯಾರೂ ಸಿಗುತ್ತಿಲ್ಲ. ನನಗೆ ಇದೇ ಚಿಂತೆಯಾಗಿದೆ. ಸಾರ್. ನನ್ನ ವರ್ತನೆಯನ್ನು ಬದಲಿಸಿಕೋ ಎಂದು ಅಮ್ಮ ಹೇಳುತ್ತಾರೆ, ಆದರೆ ಅದು ಹೇಗೆಂದೇ ತಿಳಿಯುತ್ತಿಲ್ಲ. ದಯವಿಟ್ಟು ಪರಿಹಾರ ತೋರಿಸಿ.
ಸಲಹೆ: ಓದುಗರ ಸಮಸ್ಯೆಗೆ ಸಲಹೆ ನೀಡುವುದು ನಮ್ಮ ಉದ್ದೇಶವೇ ಹೊರತು ಅವರ ಹೆಸರು, ವಿಳಾಸ, ಬಹಿರಂಗ ಪಡಿಸುವುದಿಲ್ಲ. ಎಲ್ಲರಲ್ಲಿಯೂ ಕೋಪಿಸಿಕೊ ಳ್ಳುವುದು, ಕಾರಣ ಇಲ್ಲದೆ ರೇಗಾಡುವುದು ವಯಸ್ಸಿಗೆ ಅನುಗುಣವಾಗಿ ಸಾಮಾನ್ಯ ವಾಗಿ ಕಂಡುಬರುವ ಮಾನಸಿಕ ಸಮಸ್ಯೆ. ನೀವು ಇದಕ್ಕೆ ಸಿಕ್ಕಿ ಒದ್ದಾಡುತ್ತಿದ್ದೀರಿ. ಈ ವೇಳೆ ನಿಮಗೆ ಸರಿ, ತಪ್ಪು ಆಲೋಚಿಸುವ ಶಕ್ತಿಯಿಲ್ಲ. ನಿಮ್ಮದೇ ತಪ್ಪೆಂದು ಹೇಳುತ್ತಿಲ್ಲ. ಈ ಹರೆಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ಇದೇ ಸಮಸ್ಯೆಯನ್ನು ಹೊಂದಿರುತ್ತಾರೆ. ಪ್ರೀತಿ, ಪ್ರೇಮ ಎಂದು ತಲೆಕೆಡಿಸಿಕೊಳ್ಳುವ ಮಕ್ಕಳು ತಮ್ಮ ಆಯ್ಕೆ ಸರಿಯೇ ಎಂದು ತಿಳಿ ಯದೆ ಮೋಸಕ್ಕೀಡಾಗುವುದೂ ಸಾಮಾನ್ಯ. ನಿಮ್ಮ ಬಣ್ಣ ನೋಡಿ ಯಾರೂ ನಿಮ್ಮಿಂದ ದೂರವಾಗುತ್ತಿಲ್ಲ ಎನ್ನುವುದು ನಿಮಗೇ ತಿಳಿ ದಿದೆ. ಸಮಸ್ಯೆಯೆಂದರೆ ಹಠಮಾರಿ ಸ್ವಭಾವ, ಮೊಂಡುತನ ಮಾತ್ರ. ಇದರ ಬಗ್ಗೆ ಚಿಂತೆ ಬೇಡ. ಇನ್ನೂ ಒಂದೆರಡು ವರ್ಷ ಕಳೆದಾಗ, ಜವಾಬ್ದಾರಿ ಎನ್ನುವುದೇನೆಂದು ತಿಳಿದಾಗ ಇವೆಲ್ಲವೂ ಸರಿಯಾ ಗುತ್ತದೆ. ಸಾಧ್ಯವಾದರೆ ನಿಮ್ಮ ವ್ಯಕ್ತಿತ್ವ ಬದಲಾಯಿಸಿ. ಆಗ ನಿಮಗೆ ಹೆಚ್ಚಿನ ಫ್ರೆಂಡ್ಸ್ ಸಿಗುತ್ತಾರೆ.
ವ್ಯಾಸಂಗದ ದಿನಗಳನ್ನು ಖುಷಿಯಿಂದ ಕಳೆಯಿರಿ. ಕೋಪ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಇರಲಿ. ಮನೆಯಲ್ಲಿ ಚೆನ್ನಾಗಿರಿ. ಪ್ರೀತಿ, ಪ್ರೇಮ ಸದ್ಯಕ್ಕೆ ಬೇಡ. ಶಿಕ್ಷಣ ಮುಗಿಯಲಿ. ಏನಿದ್ರೂ ಹಾಯ್, ಬಾಯ್ ಫ್ರೆಂಡ್‌ಶಿಪ್ ಒಳ್ಳೆಯದು. ಯಾಕೆಂದರೆ ಯಾರನ್ನೂ ನೋಡಿದ ಕೂಡಲೇ ಒಳ್ಳೆಯವರು ಎನ್ನಲು ಸಾಧ್ಯವಿಲ್ಲ. ತಾಯಿ, ತಂದೆಯನ್ನೇ ಅಥವಾ ನಿಮ್ಮ ಫ್ಯಾಮಿಲಿ ಸದಸ್ಯರನ್ನೇ ಬೆಸ್ಟ್ ಫ್ರೆಂಡ್ ಎಂದುಕೊಳ್ಳಿ. ಆಗ ಬೇರೇನೂ ಸಮಸ್ಯೆ ಎದುರಾಗುವುದಿಲ್ಲ. ಮಾನ ಸಿಕ ತೊಳಲಾಟದಿಂದ ಮುಕ್ತರಾಗಲು ಬೆಳಗ್ಗಿನ ಜಾಗಿಂಗ್, ವಾಕಿಂಗ್, ಯೋಗಾಭ್ಯಾಸ, ದೇವರ ಧ್ಯಾನ ಸಹಕಾರಿ. ಪ್ರಯತ್ನಿಸಿ ನೋಡಿ.

bhavishya

Posted by JAYAKIRANA Kirana on | 0 comments | Leave a comment...

ಮೇಷ : ಮಾನಸಿಕ ಸಂತೋಷ ಇರುತ್ತದೆ.
ವೃಷಭ : ಮಕ್ಕಳು ಪ್ರೀತಿ ವಿಶ್ವಾಸದಿಂದ ಇರುತ್ತದೆ.
ಮಿಥುನ : ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲ ಇರುತ್ತದೆ.
ಕರ್ಕಾಟಕ : ದೈವೀಕ ಕಾರ್ಯದಲ್ಲಿ ಆಸಕ್ತಿ ಕಡಿಮೆಯಾಗುವುದು.
ಸಿಂಹ : ರಕ್ತದ ಒತ್ತಡ ಜಾಸ್ತಿಯಾಗುವ ಸಾಧ್ಯತೆ ಇದೆ.
ಕನ್ಯಾ : ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ತುಲಾ: ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಒತ್ತಡ ಇರುತ್ತದೆ.
ವೃಶ್ಚಿಕ : ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.
ಧನು: ಧರ್ಮ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ.
ಮಕರ : ವಿರೋಧಿಗಳಿಂದ ಸಮಸ್ಯೆ ಎದುರಾಗುತ್ತದೆ.
ಕುಂಭ: ಕುಟುಂಬದಲ್ಲಿ ವಾದ ವಿವಾದ ಇರುತ್ತದೆ.
ಮೀನ : ಪ್ರಯಾಣದಲ್ಲಿ ತೊಂದರೆಯಾಗುತ್ತದೆ.

udyoga

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಾರು ಚಾಲಕ ಬೇಕು ೯೩೪೨೫೧೯೧೫೮.
ಬೈಕಂಪಾಡಿ: ಕಂಪೋಸಿಟರ್ ಬೇಕು ೭೪೧೧೦೯೦೩೧೩.
ಮಂಗಳೂರು: ಕಂಪೆನಿಗೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
ಮಂಗಳೂರು: ಸ್ಟುಡಿಯೋಗೆ ಡಿಟಿಪಿ ಗೊತ್ತಿರುವ ಯುವಕರು ಬೇಕು ೯೮೪೫೨೦೩೩೪೮.
ಮಂಗಳೂರು: ಬೇಕರಿಗೆ ಸೇಲ್ಸ್‌ಬಾಯ್ಸ್ & ಗರ್ಲ್ಸ್ ಬೇಕು ೯೪೪೮೨೩೯೯೨೯.
ಮೂಡಬಿದ್ರೆ: ಹೊಟೇಲಿಗೆ ದೋಸೆವಾಲಾ ಹೆಲ್ಪರ್ ಬೇಕು ೯೮೪೫೯೮೨೬೨೫.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ವೇಟರ್ & ಕಿಚನ್ ಹೆಲ್ಪರ್ ಬೇಕು ೯೬೩೨೦೦೬೯೨೩.
ಮಂಗಳೂರು: ಹೊಟೇಲಿನ ಎಲ್ಲಾ ಕೆಲಸ ತಿಳಿದಿರುವ ಜನ ಬೇಕು ೯೪೮೨೯೬೯೫೩೧.
ಬಜಪೆ: ಪಿಯುಸಿ ಕಲಿತಿರುವ ೨೫ ವರ್ಷ ದೊಳಗಿನವರು ಪಾರ್ಟ್ ಟೈಮ್ ಕೆಲಸಕ್ಕೆ ಬೇಕು ೮೯೭೦೪೨೩೧೯೫.
ಮಂಗಳೂರು: ಹರ್ಬಲ್ ಲೈಫ್ ಡಿಸ್ಟ್ರಿ ಬ್ಯೂಟರ್‌ಗೆ ಜನ ಬೇಕು ೯೯೦೨೧೯೨೬೨೩.
ಮಂಗಳೂರು: ಅಕ್ಕಿ ರೊಟ್ಟಿ ಕೆಲಸ ಗೊತ್ತಿರು ವವರು ಬೇಕು ೯೮೪೪೪೩೨೪೦೯.
ಮಂಗಳೂರು: ಗ್ಯಾಸ್ ಶಾಪ್‌ಗೆ ಲೇಡಿ ಸ್ಟಾಫ್ ಬೇಕು ೨೪೩೮೭೪೭
ಮಂಗಳೂರು: ರೈಲ್ವೆಯಲ್ಲಿ ಕೆಲಸಕ್ಕೆ ಜನ ಬೇಕು ೯೬೮೬೫೧೮೬೧೦.
ತಲಪಾಡಿ: ರಬ್ಬರ್ ಫ್ಯಾಕ್ಟರಿಗೆ ಎಕೌಂಟೆಂಟ್ ಬೇಕು ೯೩೪೨೦೪೫೧೪೦.
ಮಂಗಳೂರು: ಕ್ಯಾಂಟಿನ್‌ಗೆ ಹೆಲ್ಪರ್ ಬೇಕು ೯೯೭೨೯೩೧೦೬೭.
ಮೇರಿಹಿಲ್: ಹಿಟಾಚಿ ಮತ್ತು ಜೆಸಿಬಿಗೆ ಹೆಲ್ಪರ್‌ಬೇಕು ೯೬೩೨೮೫೬೦೬೯.
ಮೋರ್ಗನ್ಸ್‌ಗೇಟ್: ಕ್ಲೀನಿಂಗ್ ಕೆಲಸಕ್ಕೆ ಹೆಂಗಸರು ಬೇಕು ೯೮೮೦೮೦೯೮೦೩.
ಮಂಗಳೂರು: ಫಾಸ್ಟ್‌ಫುಡ್ ವೆಜ್ ಕ್ಲೀನರ್ ಮತ್ತು ಚಪಾತಿ ಮಾಡುವವರು ಬೇಕು ೯೪೪೮೪೯೫೬೦೦.
ಮಂಗಳೂರು: ಮೊಬೈಲ್‌ಶಾಪ್‌ಗೆ ಎಸೆಸ್ಸೆಲ್ಸಿ, ಪಿಯುಸಿ ಆದ ಯುವಕ ಯುವತಿ ಯರು ಬೇಕು ೯೪೪೮೧೭೭೦೦೬.
ನೀರುಮಾರ್ಗ: ವೆಲ್ಡರ್, ಫ್ಯಾಬ್ರಿಕೇಶನ್, ಡ್ರಿಲ್, ಡಿಸೈನ್ ಗೊತ್ತಿದ್ದವರು ಮತ್ತು ಹೆಲ್ಪರ‍್ಸ್ ಬೇಕು. ೯೩೪೨೪೧೦೬೫೯
ಮಂಗಳೂರು: ಹಾಸ್ಟೆಲ್‌ಗೆ ಅಡುಗೆ ಮಾಡಲು ಹೆಂಗಸು ಬೇಕು ೯೨೪೧೨೧೪೧೨೨
ಮಂಗಳೂರು: ಡಿಟಿಪಿ ಗೊತ್ತಿರುವ ಕನ್ನಡ ಟೈಪ್ ಮಾಡುವವರು ಬೇಕು ೯೪೪೮೨೫೪೯೭೬.
ಎಕ್ಕೂರು: ಡ್ರೈವರ್‌ಬೇಕು ೯೪೮೧೭೫೯೬೧೪.
ಮಂಕಿಸ್ಟ್ಯಾಂಡ್: ದ್ವಿಚಕ್ರ ಸರ್ವಿಸ್ ಸ್ಟೇಷನ್‌ಗೆ ಜನ ಬೇಕು ೯೦೦೮೨೨೨೩೬೧.
ಕಂಕನಾಡಿ: ಕ್ಯಾಂಟೀನ್‌ಗೆ ವೇಟರ್ ಮತ್ತು ಕೌಂಟರ್‌ಬಾಯ್ ಬೇಕು ೯೯೦೨೮೩೧೯೮೮.
ಮಂಗಳೂರು: ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು: ಹೊಟೇಲ್‌ಗೆ ಕುಕ್ ಬೇಕು ೯೦೧೯೭೦೯೧೯೧.
ಅತ್ತಾವರ: ರೈಲ್ವೆ ಸ್ಟೇಶನ್‌ಗೆ ಮೊಬೈಲ್ ಟೆಕ್ನಿಶಿಯನ್ ಬೇಕು ೯೬೨೦೪೧೭೨೮೬.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)