ಸ್ವಾಗತ ಸಮಿತಿಗೆ ಇಂಥವರೇ ಬೇಕು
Posted by JAYAKIRANA Kirana on Monday, 12 March 2012 | 0 comments | Leave a comment...
ಮಾರ್ಚ್ ಹನ್ನೊಂದರ ಪತ್ರಿಕೆಯ ನಿಮ್ಮಿಂದ ವಿಭಾಗದಲ್ಲಿ ಹಸನ್ ಮಲ್ಲೂರು ಹೆಸರಿನಲ್ಲಿ ಪ್ರಕಟಗೊಂಡ 'ಸ್ವಾಗತ ಸಮಿತಿಗೆ ಇಂಥವರು ಬೇಕಾ? ಎಂಬ ಬರಹಕ್ಕೆ ಪ್ರತಿಕ್ರಿಯೆ. ಸದ್ರಿ ನನ್ನ ಹೆಸರಿನಲ್ಲಿ ಪ್ರಕಟವಾದ ಈ ಬರಹಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ನನ್ನ ಹೆಸರನ್ನು ದುರ್ಬಳಕೆ ಮಾಡಲು ಕೆಲ ಹಿತಾಸಕ್ತಿಗಳು ಈ ಬರಹವನ್ನು ಪತ್ರಿಕೆಯಲ್ಲಿ ನೀಡಿರುತ್ತಾರೆ. ನಾನು ಮಲ್ಲೂರು ಸಅದಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು, ಎಲ್ಲಾ ಸುನ್ನಿ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸು ತ್ತಿದ್ದೇನೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹಾಗೂ ಮಲ್ಲೂರು ಸಅದಿಯವರ ಬಾಂಧವ್ಯಕ್ಕೆ ಹುಳಿಹಿಂಡಲು ಪ್ರಯತ್ನಿಸಿರುವರು. ಜಿಲ್ಲೆಯ ಕುಗ್ರಾಮ ವಾಗಿ ಗುರುತಿಸಿಕೊಳ್ಳುತ್ತಿದ್ದ ಮಲ್ಲೂರಿನಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಗ ಳನ್ನು ಕಟ್ಟಿ ಬೆಳೆಸಿ ಸುನ್ನತ್ ಜಮಾತ್‌ಗಾಗಿ ಮಲ್ಲೂರು ಸಅದಿಯವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ.
ಈ ಸಂಸ್ಥೆಯಲ್ಲಿ ನಮ್ಮ ಮನೆಯ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಸಂಸ್ಥೆ ಕರ್ನಾಟಕದಲ್ಲಿ ಅಭಿಮಾನದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಎಪ್ರಿಲ್ ಹನ್ನೊಂ ದರಂದು ನೆಹರೂ ಮೈದಾನದಲ್ಲಿ 'ಮಾನವೀಯತೆಯ ಜಾಗೃತಿಗಾಗಿ ಎಂಬ ಘೋಷ ಣೆಯೊಂದಿಗೆ ಮಾನವತಾ ಮಹಾ ಸಂಗಮ ನಡೆಯಲಿದ್ದು, ಇದು ಬಹಳ ದೊಡ್ಡ ಸಂಗಮವಾದುದರಿಂದ ಇದರ ಕಾರ್ಯನಿರ್ವಹಣೆಗೆ ಕ್ರಿಯಾಶೀಲ, ಪ್ರಾಮಾಣಿಕರೇ ಬೇಕಾಗಿರುತ್ತಾರೆ. ಇಂಥದ್ದೊಂದು ಸ್ವಾಗತ ಸಮಿತಿಯಲ್ಲಿ ಜನರಲ್ ಕನ್ವೀನರ್ ಆಗಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ಇವರು ಇದ್ದರೆ ಸಮ್ಮೇಳನವು ಐತಿಹಾಸಿಕವಾಗ ಲಿದೆಯೆಂಬುದು ಕರ್ನಾಟಕದ ಸುನ್ನಿ ಮಕ್ಕಳಿಗೆ ತಿಳಿದ ಸಂಗತಿ ತಾನೇ. ಆದುದರಿಂದ ಸ್ವಾಗತ ಸಮಿತಿಗೆ ಇಂಥವರೇ ಬೇಕು.
ಹಸನ್ ಬಾವಾ, ಮಲ್ಲೂರು

















You can subscribe by e-mail to receive news updates and breaking stories.