ಉಚ್ಚಿಲ: ಪೊಲ್ಯ ಕಾಡಿಗೆ ಬೆಂಕಿ

Posted by JAYAKIRANA Kirana on Saturday, 10 March 2012 | 0 comments | Leave a comment...


ಪಡುಬಿದ್ರಿ: ಇಲ್ಲಿಗೆ ಸಮೀಪದ ಉಚ್ಚಿಲ ಬಡಾ ಗ್ರಾಮದ ಪೊಲ್ಯ ಎಂಬಲ್ಲಿ ಕಾಡಿಗೆ ಬೆಂಕಿ ಬಿದ್ದ ಪರಿಣಾಮ ಸ್ಥಳೀಯರಲ್ಲಿ ಕೆಲ ಕಾಲ ಆತಂಕ ವ್ಯಕ್ತವಾಯಿತು. ಶುಕ್ರವಾರ ಮಧ್ಯಾಹ್ನ ಪೊಲ್ಯ ಅನಿತಾ ಶೆಟ್ಟಿ ಕುಟುಂಬಿಕರಿಗೆ ಸೇರಿದ ಕಾಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿ ದ್ದಾರ. ಉಡುಪಿ ಅಗ್ನಿ ಶಾಮಕ ದಳ ಹಾಗೂ ಎಲ್ಲೂರಿನ ಲ್ಯಾಂಕೋ ಕಂಪೆನಿಯ ತೇಜೇಶ್ವರ್ ಅವರ ಅಗ್ನಿ ಶಾಮಕ ತಂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನು ತಹಬಂದಿಗೆ ತಂದಿದೆ.

ಕೊಲೆಯತ್ನ: ಆರೋಪಿಯ ಬಂಧನ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ನಲ್ಲೂರು ಮೂಡುಬೆಟ್ಟು ಎಂಬಲ್ಲಿ ಕುಡಿತದ ಅಮಲಿನಲ್ಲಿ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣೂರು ಮೂಲದ ಗೋಪಿನಾಥ ನಾಯರ್(೫೩) ಎಂಬಾತ ಬಂಧಿತ ಪತಿ. ಈತ ತನ್ನ ಪತ್ನಿ ಬಿಂದು ಎಂಬಾಕೆಯನ್ನು ಮನೆಯ ಕೋಣೆ ಯೊಂದರಲ್ಲಿ ಕತ್ತಿಯಿಂದ ಕಡಿದು ಗಾಯಗೊಳಿಸಿ ಪರಾರಿಯಾಗಿದ್ದನು. ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಫಾರ್ಮ್ ಫಾರೆಸ್ಟ್ರಿ ಹಣದ ದುರುಪಯೋಗ: ಕೋಟಿ ಕೋಟಿ ಲೂಟಿ ಮಾಡುತ್ತಿದೆ ಇರಾ ಗ್ರಾ.ಪಂ.

Posted by JAYAKIRANA Kirana on | 0 comments | Leave a comment...

ಮಂಗಳೂರು: ಫಾರ್ಮ್ ಫಾರೆಸ್ಟ್ರಿ ಗಾಗಿ ಕಾಯ್ದಿರಿಸಿದ ಮೊತ್ತವನ್ನು ಸುವರ್ಣ ಗ್ರಾಮ ಕಾಮಗಾರಿಗೆ ಬಳಸಿ ಕೊಂಡು ಕೋಟ್ಯಂತರ ರುಪಾಯಿ ಅವ್ಯವಹಾರ ನಡೆಸಿರುವ ಪ್ರಕರಣ ಬಂಟ್ವಾಳ ತಾಲೂಕು ಇರಾ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಫಾರ್ಮ್ ಫಾರೆಸ್ಟ್ರಿಗೆ ಮೀಸಲಿರಿ ಸಿರುವ ಅನುದಾನ ಮತ್ತು ಸುವರ್ಣ ಗ್ರಾಮದ ಅನುದಾನವನ್ನೂ ಒಂದೇ ಕಾಮಗಾರಿಗೆ ಬಳಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಫಾರ್ಮ್ ಫಾರೆಸ್ಟ್ರಿಯ ಉದ್ದೇಶ ಕ್ಕಾಗಿ ಕೆಐಎಡಿಬಿ ನೀಡಿ ಮೊತ್ತವನ್ನು ಅದೇ ಉದ್ದೇಶಕ್ಕಾಗಿ ಬಳಸಿಕೊಳ್ಳು ವಂತೆ ಜಿಲ್ಲಾಧಿಕಾರಿ ಹಲವಾರು ಬಾರಿ ಆದೇಶ ನೀಡಿದ್ದರೂ, ಗ್ರಾಮ ಪಂಚಾ ಯತ್ ಮಾತ್ರ ಜಿಲ್ಲಾಧಿಕಾರಿಗಳ ಆದೇಶ ವನ್ನು ಉಲ್ಲಂಘಿಸಿ ಕ್ರಿಯಾ ಯೋಜನೆ ಯನ್ನು ತಯಾರಿಸಿ ೮೦ ಲಕ್ಷದ ಕಾಮ ಗಾರಿಯನ್ನು ನಡೆಸಿರುವುದು ಬೆಳಕಿಗೆ ಬಂದಿದೆ.
ಇರಾ ಗ್ರಾಮ ಪಂಚಾಯತ್‌ಗೆ ಸೇರಿದ್ದ ೨೦.೮೧ ಎಕ್ರೆ ಸ್ಥಳವನ್ನು ೨೦೦೮ರಲ್ಲಿ ಕೆಐಎಡಿಬಿ ಭೂಸ್ವಾಧೀನಗೊಳಿಸಿತ್ತು. ಸೆಂಟ್ಸ್‌ಗೆ ೧೦ ಸಾವಿರದಂತೆ ಒಟ್ಟು ೨.೮೧ ಕೋಟಿ ಮೊತ್ತವನ್ನು ಪರಿಹಾರವಾಗಿ ಇರಾ ಗ್ರಾಮ ಪಂಚಾಯತ್‌ಗೆ ಕೆಐಎಡಿಬಿ ನೀಡಿತ್ತು. ಈ ಮೊತ್ತವನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಸ್ಥಳವನ್ನು ಖರೀದಿಸಿ ಫಾರ್ಮ್ ಫಾರೆಸ್ಟ್ರಿ ನಿರ್ಮಿಸುವುದಕ್ಕಾಗಿಯೇ ಬಳಸಬೇಕೆಂದು ವಿಶೇಷ ಭೂ ಸ್ವಾಧೀನಾಧಿಕಾರಿಯವರು ಹಣ ಮಂಜೂರಾತಿ ಜೊತೆ ಆದೇಶವನ್ನು ನೀಡಿದ್ದರು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಈ ಬಗ್ಗೆ ವಿವರಣೆಯನ್ನು ಕೋರಿದ್ದರು. ಹೀಗಾಗಿ ಜಿಲ್ಲಾಧಿಕಾರಿಗಳು ಪಂಚಾಯತ್‌ಗೆ ಆದೇಶ ನೀಡಿ ಈ ಮೊತ್ತವನ್ನು ಫಾರ್ಮ್ ಫಾರೆಸ್ಟ್ರಿಗೆ ಬಳಸುವಂತೆ ಆದೇಶ ನೀಡಿದ್ದರು. ಕೆಐಎಡಿಬಿ ಬಿಡುಗಡೆ ಮಾಡಿದ ಮೊದಲ ಹಂತದ ಪರಿಹಾರ ಮೊತ್ತದಲ್ಲಿ ಅಂದಿನ ಅಧ್ಯಕ್ಷರು ೨.೯೨ ಎಕ್ರೆ ಸ್ಥಳವನ್ನು ೨.೯೨ ಲಕ್ಷ ಹಣವನ್ನು ನೀಡಿ ಖರೀದಿಸಿದ್ದರು. ಆದರೆ ಈ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅಂದಿನ ಅಧ್ಯಕ್ಷರು ಮತ್ತೆ ಈ ಪ್ರಯತ್ನದಲ್ಲಿ ಮುಂದು ವರಿಯದೇ ಕೈ ಬಿಟ್ಟಿದ್ದರಲ್ಲದೆ, ನಾನು ಅವ್ಯವಹಾರ ನಡೆಸಿದ್ದೇನೆ ಎಣಿಸಿದರೆ ಆ ಭೂಮಿಯನ್ನು ನನಗೆ ನೀಡಿ ಅಷ್ಟು ಹಣವನ್ನು ನಾನು ನೀಡುತ್ತೇನೆ ಎಂದಿದ್ದರು. ಈ ನಡುವೆ ಗ್ರಾಮಪಂಚಾಯತ್‌ಗೆ ಹೊಸದಾಗಿ ಅಧಿಕಾರಕ್ಕೆ ಬಂದ ತಂಡ ಫಾರ್ಮ್‌ಫಾರೆಸ್ಟ್ರಿ ಹಣವನ್ನು ಪಂಚಾಯತ್ ವ್ಯಾಪ್ತಿಯ ಕಾಮಗಾರಿಗೆ ಬಳಸಿಕೊಳ್ಳಲು ತೀರ್ಮಾನಿಸಿತ್ತು. ಇದಕ್ಕಾಗಿ ಕ್ರಿಯಾ ಯೋಜನೆಯನ್ನೂ ತಯಾರಿ ಸಿತ್ತು. ವಿಶೇಷ ಎಂದರೆ ಈ ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಿದ ಬಹುತೇಕ ಕಾಮಗಾರಿಗಳು ಸುವರ್ಣಗ್ರಾಮ ಯೋಜನೆಯಲ್ಲಿನ ಕ್ರಿಯಾ ಯೋಜನೆಯಲ್ಲೂ ಅಡಕವಾಗಿತ್ತು. ಹೀಗಿದ್ದರೂ ಫಾರ್ಮ್ ಫಾರೆಸ್ಟ್ರಿ ಮೊತ್ತವನ್ನು ಬಳಿಸಿಕೊಳ್ಳಲು ಮುಂದಾದ ಪಂಚಾಯತ್ ಕ್ರಿಯಾ ಯೋಜನೆಯನ್ನು ಅನುಮೋದನೆಗೆ ಕಳುಹಿಸಿತ್ತು. ಆದರೆ ಅದಕ್ಕಿಂತ ಮೊದಲು ಈ ಮೊತ್ತವನ್ನು ಬೇರೆ ಕೆಲಸಕ್ಕೆ ಬಳಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಅನುಮತಿ ಕೇಳಿದ್ದರು. ಇದಕ್ಕೆ ಉತ್ತರಿಸಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಫಾರ್ಮ್ ಫಾರೆಸ್ಟ್ರಿ ಆದೇಶವನ್ನು ಪರಿಶೀಲಿಸಿ ಅದರಂತೆ ನಡೆಯುವಂತೆ ತಿಳಿಸಿದ್ದರು. ಹೀಗಿದ್ದರೂ ಪಂಚಾಯತ್ ಮಾತ್ರ ಫಾರ್ಮ್ ಫಾರೆಸ್ಟ್ರಿಯ ಹಣದಲ್ಲಿ ೮೦ ಲಕ್ಷವನ್ನು ವಿವಿಧ ಕಾಮಗಾರಿಗೆ ಬಳಸಿಕೊಂಡು ಇನ್ನು ಉಳಿದ ಹಣವನ್ನೂ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ವಾಸ್ತವವಾಗಿ ಈ ಕೆಲಸವನ್ನು ಸುವರ್ಣ ಗ್ರಾಮ ಯೋಜನೆ ಅಡಿಯಲ್ಲೂ ನಡೆಸಲಾಗಿದೆ ಹೀಗಾಗಿ ಒಂದೇ ಕೆಲಸಕ್ಕೆ ಎರಡು ಬಿಲ್ ಮಾಡಿದಂತಾಗಿದೆ. ಈಗಾಗಲೇ ಮಾಡಲಾಗಿರುವ ಕೆಲಸದಲ್ಲಿ ಹೆಚ್ಚಿನ ಕೆಲಸ ಅನುಪಯುಕ್ತವಾಗಿರುವಂತಹುದು ಎಂದು ಸ್ಥಳಿಯರು ದೂರಿದ್ದಾರೆ. ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪಿಡಿಓ ಪಂಚಾಯತ್‌ನಲ್ಲಿ ಅವ್ಯವಹಾರ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳಿಯರಾದ ಇಬ್ರಾಹಿಂ ಎಂಬವರು ಮಾಹಿತಿ ಹಕ್ಕು ಕಾಯ್ದೆ ಮೂಲಕ ಕೆಲ ಮಾಹಿತಿಗಳನ್ನು ಕೇಳಿದಾಗ ಈ ಎಲ್ಲಾ ವಿಚಾರ ಬೆಳಕಿಗೆ ಬಂದಿದೆ. ಹೀಗಿದ್ದರೂ ಕೆಲ ಮುಖ್ಯ ಮಾಹಿತಿಗಳನ್ನು ನೀಡಲಾಗದೆ ಪಿಡಿಓ ಅವರು ಸುದೀರ್ಘ ರಜೆ ಹಾಕಿ ತೆರಳಿದ್ದರೆ ಕಾರ್ಯದರ್ಶಿ ಉತ್ತರ ನೀಡಲಾಗದೆ ತಡಪಡಿಸುತ್ತಿದ್ದರು. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿ ತಿಂಗಳು ಉರುಳಿದರೂ ಪಂಚಾಯತ್ ಮಾಹಿತಿ ನೀಡರಲಿಲ್ಲ. ಈ ಕಾರಣದಿಂದ ಇಬ್ರಾಹಿಂ ಅವರು ಮಾಹಿತಿ ಹಕ್ಕು ಪ್ರಾಧಿಕಾರದ ಮೊರೆ ಹೋಗಿದ್ದಾರೆ. ಕೆಐಎಡಿಬಿಗೆ ನೀಡಿದ ಸ್ಥಳ ಎಷ್ಟು? ಅದಕ್ಕಾಗಿ ಸ್ವೀಕರಿಸಿದ ಮೊತ್ತ ಎಷ್ಟು? ಅದನ್ನು ಯಾವುದಕ್ಕೆ ಬಳಸಲಾಗಿದೆ? ಸುವರ್ಣ ಗ್ರಾಮ ಯೋಜನೆ ಅಡಿ ಕೈಗೊಂಡಿರುವ ಕಾಮ ಗಾರಿಗಳು ಯಾವುವು? ಈ ಬಗ್ಗೆ ಮಾಹಿತಿ ಕೇಳಿದ್ದರೂ ಉತ್ತರ ದೊರೆತಿರಲಿಲ್ಲ.
ಪಂಚಾಯತ್‌ಗೆ ನೀಡುವ ಅನುದಾನವನ್ನು ಸೂಚಿತ ಕೆಲಸಗಳಿಗೆ ಮಾತ್ರ ವಿನಿಯೋಗಿಸಬೇಕು, ಇಲ್ಲವಾದರೆ ಬೇರೆ ಕೆಲಸ ಮಾಡುವುದಾದರೆ ಈ ಬಗ್ಗೆ ಅನುಮತಿಯನ್ನಾದರೂ ಪಡೆಯಬೇಕು. ಆದರೆ ಇರಾ ಪಂಚಾಯತ್ ಇದ್ಯಾವು ದನ್ನೂ ನಡೆಸದೇ ಫಾರ್ಮ್ ಫಾರೆಸ್ಟ್ರಿಗಾಗಿ ಮೀಸಲಿರಿಸಿದ ಕೋಟಿಯ ಲೆಕ್ಕಾಚಾರದಲ್ಲಿರುವ ಹಣವನ್ನು ಬೇರೆ ಕೆಲಸಗಳಿಗೆ ಉಪಯೋಗಿಸಿ ಅವ್ಯವಹಾರ ನಡೆಸಿದ್ದಾರೆಂದು ಇಬ್ರಾಹಿಂ ದೂರಿದ್ದಾರೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ ಅವ್ಯವಹಾರವನ್ನು ಬಯಲಿಗೆ ತರುವಂತೆ ಅವರು ಒತ್ತಾಯಿಸಿದ್ದು ಇಲ್ಲವಾದರೆ ಉಳಿದ ಹಣವೂ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವ ಆತಂಕವನ್ನು ಇಬ್ರಾಹಿಂ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದಾಗಿ ವಿಧಾನಸೌಧ ಕಾಮಸೌಧವಾಗಿದೆ: ಹರಿಪ್ರಸಾದ್

Posted by JAYAKIRANA Kirana on | 0 comments | Leave a comment...


ಉಡುಪಿ: ಸಾಂಸ್ಕೃತಿಕ ರಾಷ್ಟ್ರೀಯ ತೆಯ ಬಗ್ಗೆ ಮಾತನಾಡುವ ಬಿಜೆಪಿ ಮಂತ್ರಿಗಳು ಹಣೆಗೆ ಪವಿತ್ರವಾದ ಕುಂಕುಮವನ್ನಿಟ್ಟುಕೊಂಡು ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ. ಬಿಜೆಪಿಯಿಂದಾಗಿ ಈ ಮೂಲಕ ವಿಧಾನ ಸೌಧ ಕಾಮ ಸೌಧವಾಗಿದೆ. ಉಡುಪಿ ಸಂಸದರಾಗಿದ್ದ ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಮಲ್ಪೆಯಲ್ಲಿ ರೇವ್ ಪಾರ್ಟಿಗೆ ಅನುಮತಿ ನೀಡಿದ್ದಾರೆ. ಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಅವರು ಹೇಳಿದ್ದಾರೆ.
 ಉಡುಪಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
 ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕೇವಲ ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಂಟಕ್ಕೂ ಅಧಿಕ ಕೇಸು ಹಾಕಿಸಿಕೊಂಡಿದೆ. ಕಾಂಗ್ರೆಸ್ ಕಳೆದ ೬೫ ವರ್ಷಗಳಿಂದ ಆಡಳಿತದಲ್ಲಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ೬೫ ಪ್ರಕರಣಗಳನ್ನು ಪಟ್ಟಿ ಮಾಡಿದರೆ ತಾನು ಜೀವನಪೂರ್ತಿ ಮುಖ್ಯಮಂತ್ರಿ ಸದಾನಂದ ಗೌಡರ ಗುಲಾಮನಾಗಿರ‍್ತೇನೆ ಎಂದು ಹರಿಪ್ರಸಾದ್ ಸವಾಲು ಹಾಕಿದರು.
 ಮೂರ್ತೆದಾರರಿಗೆ ಪುನರ್ವಸತಿ ಕಾರ್ಯಕ್ರಮ ಹಮ್ಮಿಕೊಳ್ಳದೆ, ಮೂರ್ತೆ ದಾರಿಕೆಯನ್ನು ನಿಷೇಧ ಮಾಡಿದ ಪಕ್ಷ ಬಿಜೆಪಿಯಾಗಿದೆ. ಬಡವರಿಗೆ, ಜನ ಸಾಮಾನ್ಯರಿಗೆ ನೀಡಲು ಸರಕಾರದ ಬಳಿ ಹಣವಿಲ್ಲ, ಆದರೆ ಮಠಕ್ಕೆ ಕೊಡಲು ಹಣವಿದೆ. ಸರಕಾರ ನಡೆಸಲು ಅರ್ಹತೆ ಇಲ್ಲದ ಪಕ್ಷ ಬಿಜೆಪಿ. ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಿಲ್ಲ. ಸದಾನಂದ ಗೌಡರು ಹಂಗಾಮಿ ಮುಖ್ಯಮಂತ್ರಿಯಂತಿದ್ದಾರೆ. ಇದೊಂದು ತ್ರಿಶಂಕು ಸರಕಾರ ಎಂದು ಮಾಜಿ ರಾಜ್ಯಸಭಾ ಸದಸ್ಯರೂ ಆದ ಹರಿಪ್ರಸಾದ್ ವ್ಯಂಗವಾಡಿದರು. ಪತ್ರಿಕಾ ಗೋಷ್ಟಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾದ ಮಂಗಳೂರಿನ ಪಿ.ವಿ.ಮೋಹನ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ಬೋಸ್‌ರಾಜ್, ವೆಂಕಟರಾವ್ ಘೋರ್ಪಡೆ, ಬೆಂಗಳೂರಿನ ಮಾಜಿ ಮೇಯರ್ ರಾಮಚಂದ್ರಪ್ಪ ಹಾಗೂ ದಿನೇಶ್ ಚಿಕ್ಕಮಗಳೂರು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬಂಡಾಯ: ನಾಯಕತ್ವ ಬದಲಾವಣೆಗೆ ಸದಸ್ಯರ ಪಟ್ಟು

Posted by JAYAKIRANA Kirana on | 0 comments | Leave a comment...



ಮಂಗಳೂರು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಬಂಡಾಯದ ಲಕ್ಷಣಗಳು ಕಂಡು ಬಂದಿದ್ದು, ಕಳೆದ ಕೆಲ ಅವಧಿಯ ಸರ್ವಾಧಿಕಾರಿ ನಾಯಕತ್ವ ಆಡಳಿ ತಕ್ಕೆ ಅಂತ್ಯ ಹಾಡಲು ಸದಸ್ಯರು ಮುಂದಾಗಿದ್ದು ಚುನಾ ವಣೆಗೆ ಹೊಸ ನಾಯಕನನ್ನು ಕಣಕ್ಕಿಳಿಸಲು ಸಿದ್ದರಾಗಿದ್ದಾರೆ.
ಮುಂದಿನ ಎಪ್ರಿಲ್‌ನಲ್ಲಿ ನಡೆಯಲಿರುವ ಚುನಾವಣೆ ಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವ ಸದಸ್ಯರ ಒಂದು ಬಣ ತಮ್ಮ ನಡುವಿನ ಸಮರ್ಥ ನಾಯಕನನ್ನು ಕಣಕ್ಕಿಳಿಸಲು ಸಿದ್ದರಾಗಿದ್ದು. ಚುನಾವಣೆ ರಹಿತವಾಗಿ ನಾಯಕತ್ವವನ್ನು ಬದಲಾವಣೆ ಮಾಡಿಕೊಡುವ ಮೂಲಕ ಹೊಸಬರಿಗೆ ಅವ ಕಾಶ ನೀಡುವಂತೆ ಬಂಡಾಯ ಎದ್ದಿರುವ ಸದಸ್ಯರು ಈಗಿನ ಜಿಲ್ಲಾಧ್ಯಕ್ಷರಲ್ಲಿ ಕೇಳಿಕೊಂಡಿದ್ದಾರೆ. ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಎರಡು ಸಾವಿರದಷ್ಟು ಸದಸ್ಯ ಬಲವನ್ನು ಹೊಂದಿದ್ದರೂ ಕಳೆದ ಕೆಲ ಸಮಯದಿಂದ ಅಧ್ಯಕ್ಷ ಸ್ಥಾನ ಮಾತ್ರ ಒಬ್ಬರ ಹಿಡಿತದಲ್ಲಿ ಇರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ದ,ಕ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಹಿತ ಹಲವಾರು ಕಾರ್ಯಕ್ರಮವನ್ನು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾದ ತೀರ್ಮಾನದ ಮೂಲಕ ನಡೆಸಿದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದಲ್ಲದೆ ಸರ್ವ ಸದಸ್ಯರ ಸಭೆ, ಸಮಿತಿ ಸಭೆಗಳನ್ನೂ ನಡೆಸದೇ ಸಾಹಿತ್ಯ ಪರಿಷತ್‌ನ ಲೆಕ್ಕ ಪತ್ರವನ್ನೂ ನೀಡದೆ ಸಾಹಿತ್ಯ ಪರಿಷತ್ತನ್ನು ತಮಗೆ ಬೇಕಾದಂತೆ ನಡೆಸಿಕೊಂಡು ಹೋಗುತ್ತಿದ್ದಾರೆಂಬ ಆರೋಪ ಸದಸ್ಯರಿಂದ ವ್ಯಕ್ತವಾಗುತ್ತಲೇ ಇದ್ದವು. ಇದಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಾಗಲೂ ಅರ್ಜಿ ಯನ್ನು ತಮ್ಮ ಕಚೇರಿಗೆ ಆಹ್ವಾನಿಸಿ ಅಲ್ಲಿ ತಾವೋಬ್ಬರೆ ತೀರ್ಮಾನ ಮಾಡಿ ಪ್ರಶಸ್ತಿ ನೀಡುತ್ತಿದ್ದರು. ಈ ಸಂದರ್ಭ ದಲ್ಲೂ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳು ತ್ತಿರಲಿಲ್ಲ ಎನ್ನುವ ಆರೋಪವೂ ಇತ್ತು. ಈ ನಡುವೆ ಸದಸ್ಯರು ಹಲವಾರು ಬಾರಿ ಮಹಾ ಸಭೆಯನ್ನು ಕರೆಯುವಂತೆ ವಿನಂತಿಸಿಕೊಂಡಿದ್ದರೂ ಸಭೆಯನ್ನು ಕರೆದಿರಲಿಲ್ಲ. ಹೀಗಾಗಿ ಇದೇ ರೀತಿ ಇನ್ನೂ ಮುಂದುವರಿ ಯುವುದು ಉತ್ತಮ ಲಕ್ಷಣ ಅಲ್ಲ ಎಂದುಕೊಂಡ ನಾವು ನಾಯಕತ್ವ ಬದ ಲಾವಣೆಗೆ ಮುಂದಾಗಿರುವುದಾಗಿ ಬಂಡಾಯ ಎದ್ದಿರುವ ಸದಸ್ಯರು ತಿಳಿಸಿದ್ದಾರೆ. ಮುಂದಿನ ಎಪ್ರಿಲ್‌ನಲ್ಲಿ ನಡೆಯಲಿರುವ ಚುನಾ ವಣೆ ಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈವರೆಗೆ ಹೋಬಳಿ, ತಾಲೂಕು ಮಟ್ಟದ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ಮಾಡಿರುವ ಸರ್ವೋತ್ತಮ ಅಂಚನ್ ಅವರನ್ನು ಈ ಬಾರಿ ನಾವು ಅಭ್ಯರ್ಥಿಯಾಗಿ ಕಣಕ್ಕಿಳಿಸು ತ್ತಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದರು. ನಾವು ಯಾರಿಗೂ ಸ್ಪರ್ಧೆ ಒಡ್ಡುತ್ತಿಲ, ಯಾರನ್ನೂ ಅಪವಾದಗಳಿಗೂ ಗುರಿ ಮಾಡುತ್ತಿಲ್ಲ ಬದಲಾಗಿ ನಾಯಕತ್ವ ಬದಲಾವಣೆಯನ್ನು ಬಯಸುತ್ತಿರುವುದಾಗಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನ ಪ್ರತಿ ಎರಡು ಇಲ್ಲವೇ ಮೂರು ವರುಷಗಳಿಗೊಮ್ಮೆ ಬದಲಾಗಬೇಕು ಎನ್ನುವ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ಹಲವಾರು ವರುಷದಿಂದ ನಾಕತ್ವ ಬದಲಾಗಿಲ್ಲ ಸದಸ್ಯರಿಗೆ, ಸಮಿತಿಗೂ ಮನ್ನಣೆ ಸಿಗುತ್ತಿಲ್ಲ ಈ ಕಾರಣದಿಂದಾಗಿ ಈ ಬಾರಿ ಯಾದರೂ ನಾಯಕತ್ವವನ್ನು ಬದಲುಗೊಳಿಸಲು ಮುಂದಾ ಗಿರುವುದಾಗಿ ಪುನರೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭುವನಾಭಿರಾಮ ಉಡುಪ, ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ, ಗಣೇಶ್ ಅಮೀನ್ ಸಂಕಮಾರ್, ಎಂ.ಜಿ ಹೆಗ್ಡೆ, ಮೋಹನ್ ರಾಜ್, ದೀಪಕ್ ಪೆರ್ಮುದೆ, ಎನ್.ಪಿ ಶೆಟ್ಟಿ ಉಪಸ್ಥಿತರಿದ್ದರು.

ಗುಲ್ಜಾರ್‌ಬಾನು ಆಯ್ಕೆ ಬಿಜೆಪಿಗೆ ಪೂರಕವೇ?

Posted by JAYAKIRANA Kirana on | 0 comments | Leave a comment...


ಮಂಗಳೂರು: ಬಿಜೆಪಿಯ ಬಹು ಮತದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನ ಗುಲ್ಜಾರ್ ಬಾನು ಮೇಯರ್ ಆಗಿದ್ದರೂ ಅದು ಬಿಜೆಪಿಗೆ ಪೂರಕವೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯು ತ್ತಿದೆ.
ರಾಜ್ಯದಲ್ಲಿ ಎಲ್ಲಿಯೂ ಇಲ್ಲದಷ್ಟು ಮುಸ್ಲಿಂ ಬೆಂಬಲ ಬಿಜೆಪಿಗೆ ಸುರತ್ಕಲ್ ವಲಯದಲ್ಲಿದೆ. ಕೃಷ್ಣಾಪುರದ ಮುಸ್ಲಿಂ ಬಾಹುಳ್ಯವಿರುವ ವಾರ್ಡ್‌ನಲ್ಲಿ ಕಳೆದ ಮನಪಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯೋರ್ವರು ವಿಜಯಿಯಾ ಗಿದ್ದಾರ ಎಂಬುದನ್ನು ಗಮನಿಸಿದರೆ ಬಿಜೆಪಿಗೆ ಮುಸ್ಲಿಮರ ಬೆಂಬಲ ಅಂದಾ ಜಿಸಬಹುದು. ಇದು ಸಾಧ್ಯವಾಗಿದ್ದು ಪಾಲೇಮಾರ್‌ರಿಂದ. ಈಗ ಮೇಯರ್ ಆಗಿ ಆಯ್ಕೆಯಾಗಿರುವ ಗುಲ್ಜಾರ್ ಬಾನು ಕೂಡ ಸುರತ್ಕಲ್ ವಲಯದವರೇ ಆಗಿದ್ದಾರೆ. ಸುರತ್ಕಲ್ ವಲಯದ ಕಾರ್ಪೊರೇಟರ್‌ಗಳು ಗುಲ್ಜಾರ್ ಬಾನು ರಿಗೆ ಆಡಳಿತದಲ್ಲಿ ಸಹಕರಿಸಿದರೆ ಇದರ ಪರಿಣಾಮ ಮುಸ್ಲಿಂ ಮತದಾರರ ಮೇಲೆ ಖಂಡಿತ ವಾಗಿಯೂ ಬೀರು ತ್ತದೆ. ಇದರ ಪ್ರತಿಫಲ ಬಿಜೆಪಿಗೆ ದೊರೆ ಯುತ್ತದೆ ಎಂಬ ವಿಶ್ಲೇಷಣೆ ಮಂಗ ಳೂರು ರಾಜಕೀಯ ವಲಯದಲ್ಲಿ ನಡೆ ಯುತ್ತಿದೆ.
ಕೃಷ್ಣ ಪಾಲೇಮಾರ್ ಬೆಂಬಲಿತ ಸುರತ್ಕಲ್ ವಲಯದ ಬಿಜೆಪಿ ಕಾರ್ಪೊ ರೇಟರ್‌ಗಳಿಗೆ ರೂಪಾ ಡಿ. ಬಂಗೇರ ರಾಗಲಿ ಶಾಂತಾ ಅವರಾಗಲಿ ಮೇಯರ್ ಆಗಿ ಆಯ್ಕೆಯಾಗುವುದು ಬೇಕಾಗಿರಲಿಲ್ಲ. ಇಬ್ಬರ ಆಯ್ಕೆಗೆ ನೇರ ವಿರೋಧ ವ್ಯಕ್ತಪಡಿ ಸಿದ್ದರೂ ಪಕ್ಷದ ನಾಯಕರು ಅವರ ವಿರೋಧಕ್ಕೆ ಬೆಲೆ ಕೊಟ್ಟಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸುರತ್ಕಲ್ ವಲಯ ದವರಿಗೆ ಮೇಯರ್ ಪಟ್ಟ ಕೊಡಬಾ ರದು ಎಂದು ಬಿಜೆಪಿಯ ನಾಯಕರು ಮೊದಲೇ ತೀರ್ಮಾನಿಸಿದ್ದರು. ಬಿಜೆಪಿ ನಾಯಕರ ಎರಡೂ ಆಕಾಂಕ್ಷೆಗಳೂ ಈಡೇರಲಿಲ್ಲ. ವಿರೋಧ ಪಕ್ಷದವರಾ ದರೂ ಸರಿ ಎಂದಿನಂತೆ ಮತ್ತೆ ಸುರತ್ಕಲ್ ವಲಯದವರೇ ಮೇಯರ್ ಆಗಿದ್ದಾರೆ ಎಂಬ ಹರ್ಷ ಸುರತ್ಕಲ್ ವಲಯದ ಪಾಲೇಮಾರ್ ಬೆಂಬಲಿತ ಕಾರ್ಪೊ ರೇಟರ್‌ಗಳಲ್ಲಿದೆ. ಮಾತ್ರವಲ್ಲ ನಮಗೆ ಬೇಡದವರು ಮೇಯರ್ ಆಗಲಿಲ್ಲವಲ್ಲ ಎಂಬ ಹರ್ಷವೂ ಇದೆ. ಇವೆಲ್ಲ ಗುಲ್ಜಾರ್ ಬಾನುರವರ ಆಡಳಿತಕ್ಕೆ ಪೂರಕ ವಾತಾವರಣ ಒದಗಿಸಬಲ್ಲದು ಎಂಬುದು ಈಗಿನ ಪರಿಸ್ಥಿತಿ ತೋರ್ಪ ಡಿಸುತ್ತಿದೆ. ಜನಾರ್ದನ ಪೂಜಾರಿ ಪಕ್ಕಾ ಬೆಂಬಲಿಗರ ಬಳಗದಲ್ಲಿ ಕಾಣಿಸಿ ಕೊಳ್ಳುವ ಗುಲ್ಜಾರ್‌ಬಾನು ಎರಡನೆ ಬಾರಿ ಕಾರ್ಪೊರೇಟರ್ ಆಗಿದ್ದೇ ಒಂದು ಸಾಹಸ. ಈಗ ಮೇಯರ್ ಪಟ್ಟದ ಅದೃಷ್ಟ ತೆರೆದಿಟ್ಟಿದೆ. ಗುಲ್ಜಾರ್ ಬಾನುಗೆ ಮನಪಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲೇ ಬಾರದು ಎಂಬ ಒತ್ತಡ ಸುರತ್ಕಲ್ ವಲಯದ ಕಾಂಗ್ರೆಸಿಗರಿಂದ ಬಂದಿತ್ತು. ಆದರೆ ಜನಾರ್ದನ ಪೂಜಾರಿಯವರ ಕಾರಣದಿಂದಾಗಿ ಅವರಿಗೆ ಟಿಕೆಟ್ ಸಿಕ್ಕಿತ್ತು. ಸ್ಪರ್ಧೆಗೆ ಇಳಿದಿದ್ದರೂ ಅವರನ್ನು ಸೋಲಿಸಲೇಬೇಕು ಎಂಬ ಷಡ್ಯಂತ್ರ ಮುಸ್ಲಿಂ ವಲಯದಲ್ಲೇ ಇತ್ತು. ಅವರಿಗೆ ಎದುರಾಗಿ ನಾಲ್ವರು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಅಂದಿನ ಬೆಳವಣಿಗೆ ನೋಡು ವಾಗ ಗುಲ್ಜಾರ್ ಬಾನು ಗೆಲುವು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಫಲಿತಾಂಶ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಗುಲ್ಜಾರ್ ಬಾನು ಗೆದ್ದು ಬಂದಿದ್ದರು. ಗುಲ್ಜಾರ್‌ಬಾನುರವರನ್ನು ಗೆಲ್ಲಿಸಿದ ಮತ ದಾರರು ಈಗ ಹೆಮ್ಮೆ ಪಡುತ್ತಿರಬಹುದು.

ಬಿಜೆಪಿ ನರ್ಸಿಂಗ್ ಹೋಮ್‌ನಲ್ಲಿ ಡಿ.ವಿ.-ಯಡ್ಡಿ ಮಧ್ಯೆ ಆಪರೇಶನ್: ಮಧು ಬಂಗಾರಪ್ಪ ವ್ಯಂಗ್ಯ

Posted by JAYAKIRANA Kirana on | 0 comments | Leave a comment...


ಉಡುಪಿ: ಇನ್ನು ಮುಂದೆ ಆಪರೇಶನ್ ಕಮಲ ನಡೆಯಲ್ಲ. ಅದರ ಬದಲಾಗಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಯಡಿಯೂರಪ್ಪನವರನ್ನು ಸದಾನಂದ ಗೌಡರು ಪರಸ್ಪರ ಆಪರೇಶನ್ ಮಾಡಲಿ ದ್ದಾರೆ. ಇದು ಸಹ ಬಿಜೆಪಿ ನರ್ಸಿಂಗ್ ಹೋಮ್‌ನಲ್ಲಿ ನಡೆಯಲಿದೆ ಎಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ವ್ಯಂಗ್ಯವಾಡಿದ್ದಾರೆ.
ಉಡುಪಿಯ ಖಾಸಗಿ ಹೊಟೇಲಿ ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡು ತ್ತಿದ್ದರು.
ಬಿಜೆಪಿ ಜೊತೆಗೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಅಪ ಪ್ರಚಾರ ಮಾಡೋದು ಬೇಡ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ ಮಧು, ಕಾಂಗ್ರೆಸ್‌ಗಿಂತಲೂ ಹೆಚ್ಚು ಬಿಜೆಪಿಯನ್ನು ಸೋಲಿಸಬೇಕೆಂ ಬುದೇ ಜೆಡಿಎಸ್ ಉದ್ದೇಶವಾಗಿದೆ. ಕಾಂಗ್ರೆಸ್‌ನವರು ಸಾಧ್ಯವಿದ್ದರೆ ತಮ್ಮ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗಲಿ ಎಂದು ಸವಾಲು ಹಾಕಿದರು. ಬಿಲ್ಲವ ಯುವಕರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ. ಬಿಜೆಪಿಯಲ್ಲಿರುವ ಹೆಚ್ಚಿನ ಬಿಲ್ಲವ ಯುವಕರೂ ಈ ಹಿಂದೆ ಬಂಗಾರಪ್ಪನವರ ಜೊತೆಗೆ ಬಿಜೆಪಿಗೆ ಸೇರಿ ದವರು. ಈಗ ಬಿಲ್ಲವ ಯುವಕರಿಗೆ ಬಿಜೆಪಿ ತಮ್ಮನ್ನು ಯೂಸ್ ಮಾಡಿದೆಯಷ್ಟೇ ಹೊರತು ತಮ್ಮ ಅಭಿವೃದ್ದಿಗಾಗಿ ಯಾವ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲವೆಂಬುದು ಅರಿವಾಗಿದೆ. ಅಲ್ಪಸಂಖ್ಯಾತರೂ ಜೆಡಿಎಸ್ ಕಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
 ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಭ್ರಷ್ಟಾಚಾರ ಹಾಗೂ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿವೆ. ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಮಧು, ಬಂಗಾರಪ್ಪನವರ ಮೇಲೆ ಕಾಂಗ್ರೆಸ್‌ನವರೇ ಸಿಬಿಐ ಮೂಲಕ ಮೂರು ಕೇಸು ಹಾಕಿಸಿದ್ರು. ಬಂಗಾರಪ್ಪನವರು ಹೆದರದೇ ಹೋರಾಡಿದರು. ಬಳಿಕ ನ್ಯಾಯಾಲಯದಲ್ಲಿ ಬಂಗಾರಪ್ಪನವರು ಆರೋಪ ಮುಕ್ತರಾದರು. ಕೇಸು ಹಾಕಿಸೋದು, ಆಟ ಆಡಿಸೋದು ಕಾಂಗ್ರೆಸ್‌ನವರ ಕೆಲ್ಸ. ಬಂಗಾರಪ್ಪನವರು ಆಡಳಿತದಲ್ಲಿರುವಾಗ ಜನರಿಗೆ ಕೊಟ್ಟಂತಹ ಉತ್ತಮ ಜನಪರ ಕಾರ್ಯ ಕ್ರಮಗಳನ್ನು ಆ ಬಳಿಕ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರಗಳಿಗೆ ನೀಡಲಾಗಿಲ್ಲ ಎಂದು ಹೇಳಿದರು.
 ಐದು ರಾಜ್ಯಗಳಲ್ಲಿ ನಡೆದ ಮಿನಿ ಮಹಾಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಮೆಲುಗೈ ಪಡೆದುಕೊಂಡಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮತದಾರರು ತಿರಸ್ಕರಿಸಿದ್ದಾರೆ. ಈ ಪಕ್ಷಗಳನ್ನು ಇನ್ನು ಮುಂದೆ ರಾಷ್ಟ್ರೀಯ ಪ್ರಾದೇಶಿಕ ಪಕ್ಷಗಳು ಎಂದು ಕರೆಯುವ ಪರಿಸ್ಥಿತಿ ಬರಲಿದೆ. ಉತ್ತರ ಪ್ರದೇಶದ ಫಲಿತಾಂಶವೇ ಕರ್ನಾಟಕದಲ್ಲಿ ಮರುಕಳಿಸಲಿದೆ ಎಮದು ಮಧು ವಿಶ್ವಾಸ ವ್ಯಕ್ತಪಡಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕ, ಹಕ್ಕು ಭಾದ್ಯತಾ ಸಮಿತಿಯ ಮುದ್ದುಹನುಮೇಗೌಡ ಅವರು ಮಾತನಾಡಿ, ಬಜೆಟ್ ಅನ್ನೋದು ಸರಕಾರದ ಮುಖ್ಯ ಕಾರ್ಯಕ್ರಮ. ಬಜೆಟ್ ಹೇಗಿರಬೇಕು ಎಂಬ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ. ಅದರ ಬದಲು ಬಜೆಟ್ ಯಾರು ಮಂಡಿಸ್ತಾರೆ ಎಂಬುದೇ ಚರ್ಚೆಯ ವಿಷಯವಾಗಿದೆ. ನೈತಿಕವಾಗಿ ಅದಃಪತನಗೊಂಡಿರುವ ಬಿಜೆಪಿ ಸರಕಾರ ಅಂತರಿಕ ಕಲಹದಿಂದಾಗಿ ರಾಜ್ಯವನ್ನು ಪ್ರಪಾತಕ್ಕೆ ತಳ್ಳಿದೆ ಎಂದು ದೂರಿದರು. ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಮುಖಂಡರುಗಳದ ಮಾಜಿ ಶಾಸಕ ಯು.ಆರ್.ಸಭಾಪತಿ, ಗೋವಿಂದರಾಜ್, ಭಗವಾನ್‌ದಾಸ್, ಜಗದೀಶ್, ರತನ್‌ಕುಮಾರ್, ರಾಜಣ್ಣ, ರಾಜೇಶ್ ಸುವರ್ಣ ಆದಿಉಡುಪಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾಕ್ರಾಂತಿ ಪಕ್ಷದ ಕ್ಯಾಪ್ಟನ್ ಆಗಲು ಯಡ್ಡಿಗೆ ಆಹ್ವಾನ!

Posted by JAYAKIRANA Kirana on | 0 comments | Leave a comment...


ಉಡುಪಿ: ಕೇವಲ ಎರಡು ತಿಂಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದ ಪ್ರಜಾಪ್ರಭುತ್ವದ ಪ್ರಜಾಕ್ರಾಂತಿ ಪಕ್ಷ (ಜಾತ್ಯತೀತ ವಾದ) ಎಂಬ ರಾಜ ಕೀಯ ಪಕ್ಷದ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹುಣಸೂರು ಕೆ.ಚಂದ್ರ ಶೇಖರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ತಮ್ಮ ಪಕ್ಷಕ್ಕೆ ಕ್ಯಾಪ್ಟನ್ ಆಗಿ ಬಂದು ಸೇರಿಕೊಳ್ಳುವಂತೆ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರ ವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಹೋರಾ ಟದ ಮೂಲಕ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ಯಡಿಯೂರಪ್ಪನವರನ್ನು ಏಣಿಯಾಗಿ ಬಳಸಿಕೊಂಡೇ ಮೇಲೆ ಬಂದ ಕೆಲ ವರು ಈಗ ತಾವು ಮೇಲೇರಿದ ಏಣಿ ಯನ್ನೇ ತುಳಿಯುತ್ತಿದ್ದಾರೆ. ಇದ ರಿಂದಾಗಿ ನೊಂದಿರುವ ಯಡಿಯೂ ರಪ್ಪನವರು ರಾಜಕೀಯ ಸನ್ಯಾಸದ ಮಾತಾಡುತ್ತಿದ್ದಾರೆ ಎಂದು ಚಂದ್ರ ಶೇಖರ್ ಅಭಿಪ್ರಾಯಪಟ್ಟರು.
ತಮ್ಮ ಪಕ್ಷಕ್ಕೆ ರಾಜ್ಯದಲ್ಲಿ ೫೫ ಲಕ್ಷ ಮಂದಿ ಸದಸ್ಯರಿದ್ದಾರೆ. ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದಲ್ಲಿ ೨.೮೬ ಲಕ್ಷ ಮಂದಿ ಸದಸ್ಯರಿದ್ದಾರೆ. ನಾವೆಲ್ಲಾ ಬ್ಯಾಟ್ಸ್‌ಮೆನ್‌ಗಳಾಗಿದ್ದು, ನಮ್ಮಲ್ಲಿ ಕ್ಯಾಪ್ಟನ್ ಇಲ್ಲ. ಯಡಿ ಯೂರಪ್ಪನವರು ಕ್ಯಾಪ್ಟನ್ ಆಗಿ ಬಂದು ಗುರುಸ್ಥಾನವನ್ನು ತುಂಬಬೇಕೆಂದು ಮನವಿ ಮಾಡಿಕೊಂಡರು.ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾ ವಣೆಯಲ್ಲಿ ೮೦ ಸಾವಿರ ಮತಗಳ ಅಂತರ ದಿಂದ ಗೆದ್ದು ಬರುವುದಾಗಿ ಚಂದ್ರ ಶೇಖರ್ ತಿಳಿಸಿದರು. ಪತ್ರಿಕಾಗೋಷ್ಟಿ ಯಲ್ಲಿ ಪಕ್ಷದ ನಾಯಕರಾದ ಅಶೋಕ್ ಕುಮಾರ್ ಗುಲ್ವಾಡಿ, ರವೀಂದ್ರ ಬೈಲೂರು ಹಾಗೂ ಸುಧೀರ್ ಉಪಸ್ಥಿತರಿದ್ದರು.

ಚುನಾವಣೆ ಬಹಿಷ್ಕರಿಸಿದ ಮೀನುಗಾರರಿಗೆ ಪರಿಹಾರದ ಭರವಸೆ: ಜೆಡಿಎಸ್

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಯುಪಿಸಿಎಲ್ (ನಾಗಾರ್ಜುನ) ಕಂಪೆನಿಯಿಂದ ತೊಂದರೆಗೊಳಪಟ್ಟು ಪರಿಹಾರ ದೊರಕದ್ದರಿಂದ ಬೇಸತ್ತು ಚುನಾವಣಾ ಬಹಿಷ್ಕಾರ ಮಾಡಿದ್ದ ಎರ್ಮಾಳು ಕೈರಂಪಣಿ ಫಂಡಿನ ಮೀನುಗಾರರನ್ನು ಶುಕ್ರವಾರ ಜೆಡಿಎಸ್ ನಾಯಕ ಜಮೀರ್ ಅಹ್ಮದ್ ಭೇಟಿ ಮಾಡಿ ಪರಿಹಾರದ ಭರವಸೆ ನೀಡಿದರು.
ಪಡುಬಿದ್ರಿ, ಎರ್ಮಾಳಿನ ಆರು ಕೈರಂಪಣಿ ಫಂಡುಗಳ ೩೦೨ ಕುಟುಂ ಬಗಳು ಯುಪಿಸಿಎಲ್ ಕಂಪೆನಿಯಿಂದ ಪರಿಹಾರ ದೊರಕದೆ ಚುನಾವಣಾ ಬಹಿಷ್ಕಾರ ಘೋಷಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಎರ್ಮಾಳು ಮೀನುಗಾರ ಮುಖಂಡರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಚುನಾ ವಣೆ ಮುಗಿದ ತಕ್ಷಣ ಯುಪಿಸಿ ಎಲ್‌ನಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶುಕ್ರವಾರ ಪಕ್ಷ ಮುಖಂಡ ಜಮೀರ್ ಅಹ್ಮದ್‌ರನ್ನು ಮೀನುಗಾರರಲ್ಲಿಗೆ ಕಳುಹಿಸಿ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರಲ್ಲದೆ ಕರಾವಳಿಯ ಕಡಲ್ಕೊರೆತಕ್ಕೆ ಶಾಶತ ತಡೆಗೋಡೆಗೆ ಜೆಡಿಎಸ್ ಪ್ರಥಮ ಆದ್ಯತೆ ನೀಡಲಿದೆ ಎಂದು ಘೋಷಿಸಿದರು. ಮುಖ್ಯವಾಗಿ ಅಲ್ಪಸಂಖ್ಯಾತರ iತಗಳತ್ತ ಗಮನ ಕೇಂದ್ರಿಕರಿಸಿರುವ ಜೆಡಿಎಸ್ ಪಕ್ಷವು ಪಕ್ಷದ ಅಲ್ಪಸಂಖ್ಯಾತ ಮುಖಂಡರ ಜತೆ ಕಾಪು ಕ್ಷೇತ್ರದ ಬೆಳಪು, ಫಕೀರ್ಣಕಟ್ಟೆ, ಭಾಸ್ಕರನಗರ, ಹೆಜಮಾಡಿ, ಕಂಚಿನಡ್ಕ, ಪಡುಬಿದ್ರಿ, ಕಟಪಾಡಿ, ಮಜೂರು ಸಹಿತ ಹೆಚ್ಚಿನ ಮಸೀದಿಗಳಿಗೆ ತೆರಳಿ ಶುಕ್ರವಾರ ಮತಯಾಚಿಸಿದರು.

ಮೂಡಬಿದ್ರೆ ಪುರಸಭಾಧ್ಯಕ್ಷ-ಉಪಾಧ್ಯಕ್ಷೆ ನಡುವೆ ಮಾತಿನ ಚಕಮಕಿ!

Posted by JAYAKIRANA Kirana on | 0 comments | Leave a comment...


ಮೂಡಬಿದ್ರೆ : ಶುಕ್ರವಾರ ನಡೆದ ಮೂಡಬಿದ್ರೆ ಪುರಸಭೆಯ ಮಾಸಿಕಾ ಧಿವೇಶನದಲ್ಲಿ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷರ ನಡುವೆಯೇ ಮಾತಿನ ಚಕಮಕಿ ನಡೆದ ಪ್ರಸಂಗ ನಡೆದಿದೆ.
ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರನ್ನು ಹಾಕಿಲ್ಲ, ಅಧ್ಯಕ್ಷರಿಗೆ ಮಾತ್ರ ಸ್ವಾತಂತ್ರ್ಯ- ಅಧಿಕಾರ ಇರುವುದಾ? ಉಪಾದ್ಯಕ್ಷರಿಗೆ ಇಲ್ಲವಾ? ಎಂದು ಉಪಾಧ್ಯಕ್ಷೆ ರಮಣಿ ಅವರು ಪ್ರಸ್ತಾಪ ಮಾಡಿದ್ದರು.
ಈ ಸಂದರ್ಭದಲ್ಲಿ ಗರಂ ಆದ ಅಧ್ಯಕ್ಷ ರತ್ನಾಕರ ದೇವಾಡಿಗ ಚಿವರು  ನೀವು ಆ ರೀತಿಯೆಲ್ಲಾ ಮಾತಾಡ ಬಾರದು, ನಾನೇನು ನಿಮ್ಮ ಹೆಸರು ಹಾಕ ಬೇಡಿ ಅಂತ ಹೇಳಿಲ್ಲ, ನೀವು ಕಾರ್ಯಕ್ರಮಕ್ಕೆ ಬರುವುದಿಲ್ಲ ಅಂತ ಹೇಳಿದ ಮೇಲೆ ನಿಮ್ಮ ಹೆಸರನ್ನು ಬಳಸಿಕೊಳ್ಳಲಾಗಿಲ್ಲವೆಂದರಲ್ಲದೆ, ಸಂಬಂಧಪಟ್ಟ ಅಧಿಕಾರಿ ಕೆಂಪರಾಜು ಅವರನ್ನು ಕರೆಸಿ ಯಾಕೆ ಇವರ ಹೆಸರು ಹಾಕಿಲ್ಲ ? ಎಂದು ಪ್ರಶ್ನಿಸಿದರು.
ಆ ಸಂದರ್ಭದಲ್ಲಿ ಕೆಂಪರಾಜು ಅವರು ಅವರು ಕಾರ್ಯಕ್ರಮಕ್ಕೆ ಬರು ವುದಿಲ್ಲವೆಂದು ಹೇಳಿದ್ದಾರೆ ಎಂದು ಉತ್ತರಿಸಿದರು.
ಈ ವೇಳೆ ಮಾತನಾಡಿದ ರಮಣಿ ‘ತಾನು ಕಾರ್ಯಕ್ರಮಕ್ಕೆ ಬಾರದಿದ್ದರೂ ತನ್ನ ಹೆಸರನ್ನು ಹಾಕಬೇಕಿತ್ತು’ ಎಂದು ತಮ್ಮ ತರ್ಕ ಮುಂದುವರಿಸಿದರು.
ವಿಷಯವೇ ಅಲ್ಲದ ಈ ವಿಷಯ ಪ್ರಸ್ತಾಪವಾದದ್ದು ಆಡಳಿತಾರೂಢ ಅಧ್ಯಕ್ಷ - ಉಪಾಧ್ಯಕ್ಷರ ನಡುವೆಯೇ ಈ ಮಾತಿನ ಚಕಮಕಿ ನಡೆದದ್ದನ್ನು ಕಂಡ ವಿಪಕ್ಷಿಯರು ಮಾತ್ರ ಈ ವಿವಾದವನ್ನು ಚೇಂಬರ್‌ನಲ್ಲಿ ಕಳಿತು ಪರಿಹರಿಸಿಕೊಳ್ಳಿ, ಅಜೆಂಡಾಕ್ಕೆ ಸಂಬಂಧಿಸಿ ಸಭೆ ನಡೆ ಯಲಿ ಎಂದು ಹೇಳಿದ ಬಳಿಕ ಸಭೆ ಮತ್ತೆ ಮುಂದುವರಿಯಿತು.

ಉದ್ಯೋಗದ ಹೆಸರಿನಲ್ಲಿ ಇಸ್ರೇಲ್‌ಗೆ ರವಾನೆ: ಉಡುಪಿ ಯುವತಿಯ ರಕ್ಷಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉದ್ಯೋಗದ ಹೆಸರಿನಲ್ಲಿ ದೂರದ ಇಸ್ರೇಲ್‌ಗೆ ಸಾಗಣಿಯಾಗಿದ್ದ ಉಡುಪಿ ಮೂಲದ ಯುವತಿಯೊಬ್ಬಳನ್ನು ಅಲ್ಲಿನ ಸರ್ಕಾರವೇ ಪತ್ತೆ ಹಚ್ಚಿ ಆಕೆಯನ್ನು ಸುರಕ್ಷಿತವಾಗಿ ಮೈಸೂರಿನ ಒಡನಾಡಿ ಸೇವಾಸಂಸ್ಥೆಗೆ ತಂದು ಒಪ್ಪಿಸಿದೆ. ೨೭ ವರ್ಷದ ಸಬೀನಾ ಡಿಸಿಲ್ವಾರ್ (ಹೆಸರು ಬದಲಾಯಿಸಲಾಗಿದೆ) ಹೊರ ದೇಶದಲ್ಲಿ ಏಳು ವರ್ಷ ಸಂಕಷ್ಟ ಅನುಭವಿಸಿ ಈಗಷ್ಟೇ ಬಿಡುಗಡೆಯಾಗಿ ಭಾರತಕ್ಕೆ ಬಂದಿಳಿದಿದ್ದಾಳೆ. ಇಸ್ರೇಲ್ ಸರ್ಕಾರ ಇಂತಹ ಸಾಗಣಿಯನ್ನು ಗಂಭೀರವಾಗಿ ಪರಿಗಣಿಸಿ ಡಿಸಿಲ್ವಾರ್‌ಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಮಾಲೀಕನ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಂಡು ಆತನನ್ನು ಜೈಲುಗಟ್ಟಿದೆ. ಅಲ್ಲದೆ ಆಕೆಗೆ ಆತನಿಂದ ೪೩ ಸಾವಿರ ಡಾಲರ್ ಹಣವನ್ನು ಡಿಸಿಲ್ವಾರ್ ಕೊಡಿಸುವ ಮೂಲಕ ಪ್ರಕರಣಕ್ಕೆ ಮಾನವೀಯ ಸ್ಪರ್ಶವನ್ನೂ ನೀಡಿದೆ.

ಜಿಲ್ಲಾಧಿಕಾರಿ ಆದೇಶ, ಈಡೇರಿದ ಸ್ವಂತ ಶಾಲಾ ಕಟ್ಟಡದ ಕನಸು

Posted by JAYAKIRANA Kirana on | 0 comments | Leave a comment...


ಮಂಗಳೂರು: ಊರಿನ ಮಕ್ಕಳು ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಇತರ ಊರಿಗೆ ಅಲೆದಾಡಬಾರದು ಎನ್ನುವ ಉದ್ದೇಶದಿಂದ ಸ್ಥಳೀಯರು ಪ್ರಯತ್ನ ಪಟ್ಟು ಸರಕಾರಿ ಜಾಗದಲ್ಲಿ ಆರಂಭಿಸ ಲಾಗಿದ್ದ ಕಟ್ಟಡ ಕಾಮಗಾರಿಗೆ ಸ್ಥಳೀಯ ರೊಬ್ಬರು ಅಡ್ಡಗಾಲಿಕ್ಕಿದ್ದಲ್ಲದೆ ಪ್ರಕರಣ ವನ್ನು ನ್ಯಾಯಾಲಯದ ಮೆಟ್ಟಿಲೇರು ವಂತೆ ಮಾಡಿದ್ದರು. ನಾಲ್ಕು ವರ್ಷಗಳ ಸ್ಥಳೀಯರ ನಿರಂತರ ಹೋರಾಟದ ಫಲವಾಗಿ ಇದೀಗ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಗ್ರಾಮಸ್ಥರಲ್ಲಿ ಹೊಸ ಉತ್ಸಾಹವನ್ನೇ ಉಂಟು ಮಾಡಿದೆ.
ಇದು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಶಾಲೆಯೊಂದರ ಕಥೆ. ಈ ಗ್ರಾಮದ ಮಕ್ಕಳ ಪ್ರಾಥಮಿಕ ಶಿಕ್ಷಣದ ಉದ್ದೇಶದಿಂದ ಸ್ಥಳೀಯರು ಐದು ವರ್ಷಗಳ ಹಿಂದೆ ಒಂದರಿಂದ ನಾಲ್ಕನೇ ತರಗತಿಯನ್ನು ಆರಂಭಿಸಲಾ ಗಿತ್ತು. ಆರಂಭದಲ್ಲಿ ಸ್ಥಳೀಯ ಮದ್ರಸಾ ಹಾಗೂ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದ್ದ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಬೇಕೆನ್ನುವ ಉದ್ದೇಶದಿಂದ ನಡುಪದವು ಎಂಬಲ್ಲಿ ನಾಲ್ಕು ವರ್ಷ ಗಳ ಹಿಂದೆ ಸರಕಾರಿ ಜಾಗವನ್ನು ಗುರು ತಿಸಿ ದಾನಿಗಳ ಸಹಕಾರದಿಂದ ಕಟ್ಟಡ ಕಾಮಗಾರಿಯನ್ನೂ ಆರಂಭಿಸ ಲಾಗಿತ್ತು.
ಅದೇ ವೇಳೆ ಸ್ಥಳೀಯರೊಬ್ಬರು ಜಾಗ ತನ್ನದ್ದೆಂದು ತಕರಾರು ತೆಗೆದು ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿ ಲೇರುವಂತೆ ಮಾಡಿದ್ದರು. ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ಪ್ರಕರಣ ಇತ್ಯರ್ಥದ ಹೊಣೆ ಯನ್ನು ದ.ಕ. ಜಿಲ್ಲಾಧಿಕಾರಿಗೆ ವಹಿಸಲಾ ಯಿತು. ಈ ಸಂದರ್ಭದಲ್ಲಿ ಶಾಲಾಭಿ ವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಸ್ಥಳೀಯರು ನಿರಂತರವಾಗಿ ಓಡಾಟ ನಡೆಸಿದ್ದರು. ಇದರ ಫಲವಾಗಿ ಬುಧವಾರದಂದು ಜಿಲ್ಲಾಧಿಕಾರಿ ಚೆನ್ನಪ್ಪ ಗೌಡರು, ಪ್ರಸ್ತುತ ಕಟ್ಟಡ ಇರುವ ಜಾಗವು ಸರಕಾರದ್ದೆಂದು ಅಂತಿಮ ನಿರ್ಧಾರಕ್ಕೆ ಬಂದು ಶಾಲೆಗೆ ೪೦ ಸೆನ್ಸ್ ಜಾಗದ ಜೊತೆಗೆ ಸ್ಥಗಿತಗೊಂಡಿದ್ದ ಕಟ್ಟಡ ಕಾಮಗಾ ರಿಯನ್ನು ಮುಂದು ವರಿಸು ವಂತೆ ಆದೇಶ ಹೊರಡಿಸಿದ್ದರು. ಇದರಿಂದ ಪುಳಕಿತರಾದ ಸ್ಥಳೀಯ ಯುವಕರು ಬುಧವಾರ ರಾತ್ರಿಯೇ ಅರ್ಧಕ್ಕೆ ನಿಂತಿದ್ದ ಕಟ್ಟಡಕ್ಕೆ ಕಂಗಿನ ಮರಗಳು, ತೆಂಗಿನ ಗರಿಗಳು ಹಾಗೂ ಟಾರ್ಪಾಲಿನ್ ಬಳಸಿ ತಾತ್ಕಾ ಲಿಕವಾಗಿ ಮಾಡಿನ ವ್ಯವಸ್ಥೆಯನ್ನು ಮಾಡಿದ್ದರು. ನಿನ್ನೆಯೇ ಮದರಸ ಮತ್ತು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಯನ್ನು ನೂತನ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು ಉದ್ಘಾಟನೆಯನ್ನು ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷರಾದ ಚಂದ್ರಹಾಸ ಆಳ್ವ ನೆರವೇರಿಸಿದ್ದಾರೆ. ಈ ಸಂದ ರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಹಮ್ಮದ್, ತಾ.ಪಂ. ಸದಸ್ಯರಾದ ಫಾತಿಮಾ ಹೈದರ್, ಕೊಣಾಜೆ ಗ್ರಾ.ಪಂ. ಸದಸ್ಯ ನಝರ್ ಶಾ, ಕೈರಂಗಳ ಗ್ರಾ.ಪಂ. ಸದಸ್ಯ ನಾಸಿರ್, ಸ್ಥಳೀಯ ಮುಖಂಡರಾದ ಇಬ್ರಾಹಿಂ ಹಾಜಿ, ಹೈದರ್, ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಕಮಿಷನರೇಟ್‌ನಲ್ಲಿ ಮಹಿಳಾ ದಿನಾಚರಣೆ

Posted by JAYAKIRANA Kirana on | 0 comments | Leave a comment...



ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ನಲ್ಲಿ ಶೇಕಡ ೯೫ ಮಹಿಳೆಯರೇ ಇದ್ದು, ಮಹಿಳೆ ಯರದ್ದೇ ಪ್ರಾಬಲ್ಯ. ಈ ಪ್ರಾಬಲ್ಯವನ್ನು ಸಿಸಿಬಿ ವಿಭಾಗ ಮತ್ತು ಪಿಸಿಆರ್ ಚಾಲನೆಯಲ್ಲೂ ತೋರಿಸಬೇಕೆಂದು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಮಂಗಳೂರಿನಲ್ಲಿ ನೂತನ ಪೊಲೀಸ್ ಕಮಿಷನರೇಟ್‌ನಲ್ಲಿ ಮಾರ್ಚ್ ೮ರಂದು ವಿಭಿನ್ನವಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪೊಲೀಸ್ ಇಲಾಖೆಯ ಒಂದೇ ವಿಭಾಗಕ್ಕೆ ಸೇವೆ ಮೀಸಲಿರಿಸದೇ ಎಲ್ಲಾ ವಿಭಾಗಗಳಲ್ಲಿಯೂ ತಮ್ಮ ಸಾಮರ್ಥ್ಯ ವನ್ನು ತೋರಿಸಬೇಕೆಂದ ಅವರು, ಎಲ್ಲರೂ ಪೊಲೀಸ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಇಲಾಖೆಗೆ ಸೇರಿದ್ದರೂ ವಾರ್ಷಿಕ ಕ್ರೀಡಾಕೂಟದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಕೊರತೆಯ ಬಗ್ಗೆಯೂ ಗಮನ ಸೆಳೆದರು.
ಪ್ರಜ್ಞಾ ಕೌನ್ಸಿಲಿಂಗ್‌ನ ನಿರ್ದೇಶಕ ರಾದ ಹಿಲ್ಡಾ ರಾಯಪ್ಪನ್ ಅವರು ಮಾತನಾಡಿ ಮಹಿಳೆಯರು ಸಮಸ್ಯೆ ಗಳೊಂದಿಗೆ ಇಲಾಖೆಯನ್ನು ಸಂಪರ್ಕಿಸಿ ದಾಗ ಸೂಕ್ತ ರೀತಿಯ ಸ್ಪಂದನ ಅಗತ್ಯ ಎಂದರು. ನಮ್ಮ ಸಾಮಾಜಿಕ ವ್ಯವಸ್ಥೆ ಯಲ್ಲಿ ಪೊಲೀಸ್ ಇಲಾಖೆ ಮತ್ತು ಮಹಿಳೆಯರ ನಡುವೆ ಸೌಹಾರ್ದ ಸಂಬಂಧದ ಅಗತ್ಯ ವನ್ನು ಪ್ರತಿಪಾದಿಸಿದರು.
ರೋಶನಿ ನಿಲಯದ ಅಸಿಸ್ಟೆಂಟ್ ಪ್ರೊಫೆಸರ್ ವಿನುತಾ ಅವರು ಮಹಿಳೆ ಯರ ಆರೋಗ್ಯ ಮತ್ತು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಮಹಿಳಾ ಪೊಲೀಸ್ ಠಾಣೆಯ ಕಲಾವತಿ ಅವರು ಕಾರ್ಯಕ್ರಮ ಸಂಯೋಜಿಸಿದರು. ಡಿಸಿಪಿ ಧರ್ಮಯ್ಯ ಮತ್ತು ಎಸಿಪಿ ಸುಬ್ರ ಹ್ಮಣ್ಯ ಅವರು ಉಪಸ್ಥಿತರಿದ್ದರು.

ಸಮಸ್ಯೆಗಳ ಮಧ್ಯೆ ವಿದ್ಯಾಭ್ಯಾಸ ಕಚೇರಿ!

Posted by JAYAKIRANA Kirana on | 0 comments | Leave a comment...


ಮಂಜೇಶ್ವರ: ಇಲ್ಲಿನ ನಯಾ ಬಜಾರಿನಲ್ಲಿ ಉಪಜಿಲ್ಲಾ ವಿದ್ಯಾಭ್ಯಾಸ ಕಚೇರಿ ಸ್ಥಾಪಿತವಾಗಿ ವರ್ಷ ಹಲ ವಾದರೂ ಅದಕ್ಕೆ ಈವರೆಗೆ ಆವರಣ ಗೋಡೆ ಭಾಗ್ಯ ಕೂಡಿ ಬಾರದಿರು ವುದು ಮಾತ್ರ ವಿಶೇಷವಾಗಿದೆ.
ಮಂಜೇಶ್ವರ ಉಪಜಿಲ್ಲಾ ವಿದ್ಯಾ ಭ್ಯಾಸ ಕಚೇರಿಯು ಹಲವು ವರ್ಷಗಳ ಕಾಲ ಕೈಕಂಬದಲ್ಲಿನ ಬಾಡಿಗೆ ಕಟ್ಟಡ ವೊಂದರಲ್ಲಿ ಕಾರ್ಯಾ ಚರಿಸುತಿತ್ತು. ಆ ಬಳಿಕ ಮಂಜೇಶ್ವರ ಬ್ಲಾಕ್ ಪಂಚಾ ಯತ್ ವತಿಯಿಂದ ಕಟ್ಟಡವೊಂದನ್ನು ನಿರ್ಮಿಸಿ ೨೦೦೪ರ ಜುಲೈ ೧೬ರಂದು ಅಂದಿನ ಸ್ಥಳೀಯಾ ಡಳಿತ ಸಚಿವರಿಂದ ಉದ್ಘಾಟನೆ ಗೊಂಡಿತ್ತು.
ಆದರೆ ರಾಷ್ಟ್ರೀಯ ಹೆದ್ದಾರಿ ಪಕ್ಕ ದಲ್ಲೇ ಇರುವ ಈ ಕಚೇರಿಗೆ ಇವರೆಗೆ ಆವರಣ ಗೋಡೆ ಕಟ್ಟುವ ಗೋಜಿಗೆ ಅಧಿಕೃತರು ಹೋಗಿಲ್ಲ. ಕೇವಲ ಕಾಟಾ ಚಾರಕ್ಕಾಗಿ ಈ ಕಟ್ಟಡ ಕಟ್ಟಿ ಕೈ ತೊಳೆದು ಕೊಂಡಿರುವ ಅಧಿಕೃತರ ಕ್ರಮದಿಂದಾಗಿ ಕಚೇರಿ ಸಿಬ್ಬಂದಿ ಸಮಸ್ಯೆ ಎದುರಿಸು ವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ದಲ್ಲೇ ಇರುವ ಈ ಕಚೇರಿಗೆ ಎರಡು ಬಾರಿ ಬಾಗಿಲು ಒಡೆದು ಕಳ್ಳರು ಲಗ್ಗೆ ಇಟ್ಟಿದ್ದರು. ಸುತ್ತಲು ಕಾಡು ಪೊದೆಗ ಳಿಂದ ಅವೃತ್ತವಾಗಿರುವ ಇಲ್ಲಿ ನಿಶಾ ಚರಿಗಳ ಕಾಟವೂ ತಪ್ಪಿದಲ್ಲ ಎನ್ನುತಾರೆ ಇಲ್ಲಿನ ಸಿಬ್ಬಂದಿವರ್ಗ.
 ಒಂದೆಡೆ ಕಳ್ಳರ ಕಾಟ ಇನ್ನೊಂದೆಡೆ ನಿಶಾಚರಿಗಳ ಕಾಟ ಹೀಗಿರುವಾಗಲೇ ಇದೀಗ ಹೆದ್ದಾರಿ ಚತುಷ್ಪಥ ಯೋಜನೆಯಲ್ಲಿ ಉಪಜಿಲ್ಲಾ ವಿದ್ಯಾಭ್ಯಾಸ ಕಚೇರಿಯ ಮುಂಭಾಗದ ಸ್ಥಳ ಹೆದ್ದಾರಿ ಪಾಲಾಗಲಿದ್ದು ಇದು ಈಗಾಗಲೇ ಅಧಿಕಾರಿಗಳು ಗುರುತು ಹಾಕಿ ಹೋಗಿದ್ದಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಈಗಾಗಲೇ ಧೂಳಿನ ಹಾರಾಟ ವಿಪರೀತವಾಗಿದ್ದು ಇನ್ನು ಹೆದ್ದಾರಿ ಅಗಲವಾದ ಬಳಿಕ ಕಚೇರಿಯಲ್ಲಿ ಕೆಲಸ ನಿರ್ವಹಿಸುವುದೇ ಕಷ್ಟ ವಾಗಲಿದೆ. ಅಧಿಕೃತರು ಇನ್ನಾದರೂ ಎಚ್ಚೆತ್ತು ಈ ಕಚೇರಿಯ ಸಮಸ್ಯೆ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ.

ಗೈಲ್ ಗ್ಯಾಸ್ ಪೈಪ್‌ಲೈನ್ ವಿರುದ್ಧ ಚಳವಳಿ: ಮಾಜಿ ಸಚಿವ ಚೆರ್ಕಳಂ

Posted by JAYAKIRANA Kirana on | 0 comments | Leave a comment...

 
ಮಂಜೇಶ್ವರ: ಕೊಚ್ಚಿ-ಮಂಗ ಳೂರು ಗೈಲ್ ಗ್ಯಾಸ್ ಪೈಪ್‌ಲೈನ್ ವಿರುದ್ಧ ವ್ಯಾಪಕ ಚಳವಳಿ ನಡೆಸಲಾಗು ವುದೆಂದು ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲಾ ಹೇಳಿದರು.
ಜನವಾಸ ಹಾಗೂ ಕೃಷಿ ಭೂಮಿ ಯ ಮೂಲಕ ಹಾದು ಹೋಗುವ ಈ ಪೈಪ್‌ಲೈನನ್ನು ಅಳವಡಿಸದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಒತ್ತಡ ಹೇರಲಾಗುವುದೆಂದು ಇವರು ಹೇಳಿದರು. ಕಾಸರಗೋಡು ಮುನಿಸಿಪಲ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜರಗಿದ್ದ ಗ್ಯಾಸ್‌ಲೈನ್ ಸಂತ್ರಸ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಪೈಪ್‌ಲೈನ್ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಜನಸಾಂದ್ರತೆಯಿರುವ ಕೇರಳ ರಾಜ್ಯದಲ್ಲಿ ಈ ಅಪಾಯಕಾರಿ ಪೈಪ್‌ಲೈನ್ ಅಳವಡಿಸದಂತೆ ಸರಕಾರದ ಗಮನ ತರುವುದಾಗಿ ಹೇಳಿದರು.
ಕಾಸರಗೋಡು ಶಾಸಕ ನೆಲ್ಲಿಕುನ್ನು ಅಧ್ಯಕ್ಷತೆ ವಹಸಿದ್ದರು. ಖಾಸಗಿ ಕಂಪೆನಿಗಳ ಲಾಭಕ್ಕಾಗಿ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಡಬಾರದೆಂದು ಅವರು ಎಚ್ಚರಿಸಿದರು. ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಗ್ಯಾಸ್ ಪೈಪ್‌ಲೈನ್ ವಿರುದ್ಧ ಚಳವಳಿ ಘೋಷಿಸಿದರು. ಹೋರಾಟ ಸಮಿತಿಯ ಎರ್ನಾಕುಳಂ ಸಂಚಾಲಕ ಸಲಾಂ, ಯುಡಿಎಫ್ ಸಂಚಾಲಕ ಗಂಗಾಧರನ್ ನಾಯರ್, ಮೊದಲಾದವರು ಭಾಗವಹಿಸಿದ್ದರು.

ಯಡ್ಡಿಗೆ ನಾಯಕತ್ವ ನೀಡುವ ಪ್ರಶ್ನೆಯೇ ಇಲ್ಲ: ಹೈಕಮಾಂಡ್

Posted by JAYAKIRANA Kirana on | 0 comments | Leave a comment...



ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಹೋದರೂ ಸರಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡುವ ಪ್ರಶ್ನೆಯೇ ಇಲ್ಲ ಎಂಬ ಕಠಿಣ ನಿಲುವನ್ನು ಪಕ್ಷದ ವರಿಷ್ಠರು ಕೈಗೊಂಡಿದ್ದಾರೆ.
ಸದಾನಂದಗೌಡರ ಸರ್ಕಾರಕ್ಕೆ ಕುತ್ತು ಬರುವುದಾದರೆ ಅದಕ್ಕೂ ಸಿದ್ಧ. ಯಡಿಯೂರಪ್ಪ ಅವರನ್ನು ಮಾತ್ರ ಮತ್ತೆ ಮುಖ್ಯಮಂತ್ರಿ ಮಾಡುವುದು ಸಾಧ್ಯವೇ ಇಲ್ಲ ಎಂಬ ಸ್ಪಷ್ಟ ಸಂದೇಶ ವನ್ನು ವರಿಷ್ಠರು ರವಾನಿಸಿದ್ದಾರೆ.
ಭ್ರಷ್ಟಾಚಾರ ಆರೋಪದಿಂದ ಉತ್ತರಾಖಂಡ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿವೆ. ಅಲ್ಲಿ ಆರೋಪ ಬಂದ ತಕ್ಷಣ ಮುಖ್ಯಮಂತ್ರಿಯಾಗಿದ್ದ ಬಿ.ಸಿ.ಖಂಡೂರಿ ಅವರನ್ನು ಬದಲಾ ವಣೆ ಮಾಡಿದರೂ ಜನ ಚುನಾವಣೆ ಯಲ್ಲಿ ಮನ್ನಣೆ ನೀಡಲಿಲ್ಲ. ಆದರೆ, ಬದಲಾವಣೆ ಮಾಡಿದೆವು ಎನ್ನುವ ಕಾರಣಕ್ಕೆ ಕಾಂಗ್ರೆಸ್‌ಗೆ ಸಮನಾದ ಸಂಖ್ಯೆ ದೊರೆತಿದೆ.
ಕರ್ನಾಟಕದಲ್ಲೂ ಪಕ್ಷಕ್ಕೆ ಹೋಗಿರುವ ವರ್ಚಸ್ಸು ಮುಂದಿನ ಒಂದು ವರ್ಷದಲ್ಲಿ ಮರು ಪಡೆದು ಪಕ್ಷ ಅಧಿಕಾರಕ್ಕೆ ತರುವ ಹೊಣೆಗಾರಿಕೆಯಿದೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಜನರ ದೃಷ್ಟಿಯಲ್ಲಿ ಕಳಂಕಿತರಾಗಲು ಸಾದ್ಯವಿಲ್ಲ. ಯಾವುದೇ ಒಂದು ಪಕ್ಷ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ಸಮುದಾಯ ಓಲೈಕೆ ಮಾಡಿದರೆ ಇತರೆ ಸಮುದಾಯಗಳ ವಿರೋಧವೂ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಅಭಿವೃದ್ಧಿ ಮೂಲಕವೇ ಜನರ ವಿಶ್ವಾಸ ಗಳಿಸಬೇಕು. ಆ ಕೆಲಸ ಸದಾನಂದಗೌಡರ ಸರ್ಕಾರ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಮಾಡಲಿ ಎಂದು ತಾಕೀತು ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಹೈಕೋರ್ಟ್ ಎಫ್‌ಐಆರ್ ರದ್ದುಗೊಂಡಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಸಿ ತನಿಖೆ ಸೇರಿದಂತೆ ಇನ್ನೂ ಹಲವಾರು ಪ್ರಕರಣಗಳು ಇರುವುದರಿಂದ ದಿಢೀರ್ ಎಂದು ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಾಗದು ಎಂದು ವರಿಷ್ಠರು ನಿಷ್ಠುರವಾಗಿಯೇ ಹೇಳಿದ್ದಾರೆ.
ಗೋವಾ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಗಡ್ಕರಿ ಮತ್ತು ಪಕ್ಷದ ಹಿರಿಯ ನಾಯಕರು ಅಲ್ಲೇ ಇದ್ದ ಸಂದರ್ಭದಲ್ಲೇ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಕರೆಸಿಕೊಂಡು, ಯಡಿಯೂರಪ್ಪ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಉಡುಪಿ-ಚಿಕ್ಕ ಮಗಳೂರು ಉಪ ಚುನಾವಣೆ ಹಾಗೂ ಬಜೆಟ್ ಮಂಡನೆ ಬಗ್ಗೆ ಹೆಚ್ಚು ಗಮನ ನೀಡಿ ಎಂದು ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸದಾನಂದಗೌಡ ಹಾಗೂ ಈಶ್ವರಪ್ಪ ಅವರು ಪೂರ್ವನಿಯೋಜಿತ ಕಾರ್ಯಕ್ರಮಗಳನ್ನು ರದ್ದುಪಡಿಸಿ ವರಿಷ್ಠರ ಸೂಚನೆ ಮೇರೆಗೆ ದಿಢೀರ್ ಗೋವಾಗೆ ತೆರಳಿದ್ದರು.
ವರಿಷ್ಠರು ನಿರ್ಧಾರದ ಮಾಹಿತಿ ತಿಳಿಯುತ್ತಿದ್ದಂತೆ ಯಡಿಯೂರಪ್ಪ ಬೆಂಬಲಿಗರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಹಾಗೂ ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ತಕ್ಷಣ ಗೋವಾಗೆ ತೆರಳಿ ಅಧ್ಯಕ್ಷರ ಮನವೊಲಿಸುವ ಪ್ರಯತ್ನ ಮಾಡಿದರು.
ಬಜೆಟ್ ಮಂಡಿಸುವುದೇ ನನ್ನ ಗುರಿ: ಡಿ.ವಿ.
ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಪಟ್ಟು ಹಿಡಿದು ಕುಳಿತಿರುವ ಈ ಸಂದರ್ಭದಲ್ಲಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದಿರುವ ಮುಖ್ಯಮಂತ್ರಿ ಸದಾನಂದಗೌಡ, ಮಾರ್ಚ್ ೨೧ ರಂದು ಬಜೆಟ್ ಮಂಡಿಸುವುದೇ ನನ್ನ ಗುರಿ ಎಂದು ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಉಡುಪಿ-ಚಿಕ್ಕಮಗಳೂರು ಚುನಾವಣೆ ಗೆಲ್ಲುವುದು ಹಾಗೂ ಬಜೆಟ್ ಉತ್ತಮ ಬಜೆಟ್ ಮಂಡಿಸುವುದು ಸದ್ಯದ ಸವಾಲು. ಅದನ್ನು ನಿಭಾಯಿಸಬೇಕಿದೆ ಎಂದು ತಿಳಿಸಿದರು. ಮಾರ್ಚ್ ೧೧ರಂದು ಯಡಿಯೂರಪ್ಪ ಅವರ ಬೆಂಬಲಿಗರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಸಚಿವ ಬಸವರಾಜ ಬೊಮ್ಮಾಯಿ ತಮ್ಮನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ನನಗೆ ಅಂದು ಪೂರ್ವನಿಯೋಜಿತ ಕಾರ್ಯಕ್ರಮ ನಿಗದಿಯಾಗಿದೆ. ಆದರೂ ಸಮಯಾವಕಾಶ ದೊರೆತರೆ ಒಂದು ಗಳಿಗೆ ಸಮಾರಂಭಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದರು.

ಯಡ್ಡಿಗೆ ಅಧಿಕಾರ, ಅಡ್ವಾಣಿಯ ವಿರೋಧ: ರಾಜಕೀಯ ನಿವೃತ್ತಿಯ ಬೆದರಿಕೆ

Posted by JAYAKIRANA Kirana on | 0 comments | Leave a comment...


 
ಬೆಂಗಳೂರು: ಬಿ.ಎಸ್.ಯಡಿಯೂರಪ್ಪರಿಗೆ ಯಾವುದೇ ಅಧಿಕಾರ ನೀಡಬಾರದು ಎಂದು ಹೇಳಿರುವ ಎಲ್.ಕೆ. ಅಡ್ವಾಣಿ, ಯಡ್ಡಿಗೆ ಆಧಿಕಾರ ನಿಡಿದ್ದೇ ಆದರೆ ತಾನು ರಾಜಕೀಯ ನಿವೃತ್ತಿ ಪ್ರಕಟಿಸುವುದಾಗಿ ಎಚ್ಚರಿಸಿದ್ದಾರೆ.
ನನ್ನ ನಿವೃತ್ತಿ ಬಯಸುವುದಾದರೆ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಮಾಡಿ ಎಂದು ಕಟುವಾಗಿಯೇ ಹೇಳಿರುವ ಅಡ್ವಾಣಿಗೆ ಬೆಂಬಲಿಸಿರುವ ಪಕ್ಷದ ಹಿರಿಯ ಮುಖಂಡರಾದ ಸುಷ್ಮಾ ಸ್ವರಾಜ್, ಅರುಣ್ ಜೆಟ್ಲಿ ಹಾಗೂ ಅನಂತಕುಮಾರ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ನಿರ್ಧಾರ ಡಿ.ವಿ. ಸದಾನಂದ ಗೌಡರ ಅಧಿಕಾರ ವನ್ನು ಅಭಾದಿತಗೊಳಿಸಿದೆ.
ಕಾನೂನು ಹೋರಾಟದಲ್ಲಿ ಜಯಗಳಿಸಿರುವ ಯಡಿ ಯೂರಪ್ಪರಿಗೆ ಮತ್ತೆ ಮುಖ್ಯ ಮಂತ್ರಿಯಾಗಿ ನೋಡಲು ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಕೆಲವು ನಾಯಕರು ಪ್ರಯತ್ನ ಪಟ್ಟಿದ್ದರು. ಆದರೆ ಆಡ್ವಾಣಿ ಇದಕ್ಕೆ ಸಮ್ಮತಿಸಲಿಲ್ಲ. ಇದಕ್ಕಾಗಿ ಸಂಸದಿಯ ಮಂಡಳಿಯಸಭೆ ಕರೆಯಲು ಅನುಮತಿ ನೀಡಲಿಲ್ಲ.
ಇದಕ್ಕೂ ಮಿಗಿಲಾಗಿ ಕೆಲವು ಕಾನೂನು ತಜ್ಞರು ಯಡಿಯೂರಪ್ಪರ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದೂ ವರಿಷ್ಠರಿಗೆ ಸಲಹೆ ನೀಡಿದ್ದಾರೆ. ತಜ್ಞರ ಈ ಸಲಹೆಯೂ ಯಡ್ಡಿಯ ಮುಖ್ಯಮಂತ್ರಿಯ ಹಾದಿಗೆ ಅಡ್ಡಿಯಾಗಿದೆ ಎಂಬ ಸತ್ಯವನ್ನು ಖುದ್ದು ನಿತಿನ್ ಗಡ್ಕರಿಯೇ ಗೋವಾದಲ್ಲಿ ಕರ್ನಾಟಕದ ರಾಜಕೀಯ ನಾಯಕರಿಗೆ ತಿಳಿಸಿದ್ದಾರೆ. ಡಿ.ವಿ.ಸದಾನಂದ ಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿ ಎಂದು ಯಡಿಯೂರಪ್ಪ ಹಾಗೂ ಅವರ ಅಭಿಮಾನಿಗಳಿಗೆ ಕಿವಿಮಾತು ಹೇಳಿರುವ ಗಡ್ಕರಿ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗು ತ್ತದೆ ಎಂದು ಬಸವರಾಜ್ ಬೊಮ್ಮಾಯಿಯ ಮೂಲಕ ಎಚ್ಚರಿಕೆಯ ಸಂದೇಶವನ್ನು ಗಡ್ಕರಿ ನೀಡಿದ್ದಾರೆ. ಸದಾನಂದ ಗೌಡರ ವಿರುದ್ಧ ಅಪಸ್ವರ ಎತ್ತಿದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಶ್ವರಪ್ಪರಿಗೆ ಅಧಿಕಾರ ನೀಡಲಾಗಿದೆ. ಒಳ್ಳೆಯ ಆಡಳಿತ ನೀಡಿ, ಲೋಕಸಭೆಯ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಳ್ಳಿ, ಒಳ್ಳೆಯ ಬಜೆಟ್ ನೀಡಿ, ರಾಜ್ಯಸಭೆಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಕಳುಹಿಸಿ ಎಂದು ಡಿ.ವಿ. ಸದಾನಂದ ಗೌಡರಿಗೆ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)